Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
I
ice — ನಾಮಂಜುಗಡ್ಡೆ, ನೀರ್ಗಲ್ಲು
iceberg — ನಾ ಮಂಜುಗುಡ್ಡೆ (ಹಡಗು ಮಂಜುಗುಡ್ಡೆಗೆ ಬಡಿದು ಮುಳುಗಿತು), ಮಂಜುಬಂಡೆ, ನೀರ್ಗಲ್ಲ ಬಂಡೆ
icon — ನಾ ಅಡರ್ಪು, ತಿಟ್ಟ
iconoclast — ನಾ ಅಡರ್ಪಳಿಪ
icy water — ನಾ ಆಲಿನೀರು
idea — ನಾ 1 ಎಣಿಕೆ (ನನ್ನದೊಂದು ಎಣಿಕೆ ಲಿುತ್ತು), ಅನಿಸಿಕೆ 2 ಹಂಚಿಕೆ, ಹೂಟ 3 ಹುರುಳು
ideal — ಗು ತಕ್ಕ, ಒಳ್ಳೆಯ, ಬದ್ದಿನ, ಮೆಚ್ಚಿಕೆಯ
identical — ಗು ಒಂದೇ ಬಗೆಯ, ಅದುವೇ ಆದ
identify — ಕ್ರಿ ಗುರುತಿಸು, ಗುರುತುಹಿಡಿ (ಅವರನ್ನು ಯಾರಿಗೂ ಗುರುತಿಸಲಾಗ ಲಿಲ್ಲ), ಕುರುಪಿಡು
identity — ನಾ 1 ಗುರುತು (ಏನಾದರೂ ಗುರುತು ಹೇಳಿ) 2 ಬೇರಲ್ಲದಿಕೆ, ಒಂದೇ ಆಗಿರುವಿಕೆ
ideology — ನಾ ಎಣ್ಣುವ ಪಾಂಗು
idiom — ನಾ ನುಡಿಗಟ್ಟು, ಬಳಕೆಯ ಮಾತು
idiomatic — ಗು ಬಳಕೆತಪ್ಪದ (ಆತನದು ಬಳಕೆತಪ್ಪದ ಬರಹ)
idiosyncrasy — ನಾ ತನ್ಪಾಂಗು
idiot — ನಾ ತಿಳಿಗೇಡಿ, ಹೆಡ್ಡ
idiotic — ಗು ಹೆಡ್ಡು (ತಾನೊಂದು ಹೆಡ್ಡು ಕೆಲಸ ಮಾಡಿಬಿಟ್ಟೆನೆಂದು ಬೇಸರಿಸುತ್ತಿದ್ದಾನೆ), ಪೆದ್ದು (ಪೆದ್ದುಮಾತು)
idle — ಕ್ರಿ ನಾಂಬು (ನಾಂಬ), ಅಲಸು (ಅಲಸದೆ ಓದು; ಅಲಸಿಕೆ; ಅಲಸಿ; ಅಲಸುಗಾರ)
idle — ಗು 1 ಪೊಳ್ಳು, ಬರಡು 2 ಮಯ್ಗಳ್ಳ (ಮಯ್ಗಳ್ಳ ಕೆಲಸಗಾರರು), ಕೆಲಸವಿಲ್ಲದ
idle talk — ನಾಹರಟೆ (ಹರಟೆಕೊಚ್ಚು; ಹರಟೆಹೊಡೆ; ಹರಟೆಗಾರ) ನಾ ಅಲವರಿಕೆ (ಅಲವರಿಕೆಯಲ್ಲಿ ಆತನನ್ನು ಮೀರಿಸುವವರಿಲ್ಲ)
idler — ನಾ ಸೋಮಾರಿ (ಸೋಮಾರಿತನ; ಸೋಮಾರಿಕಟ್ಟೆ), ಮಯ್ಗಳ್ಳ
idol — ನಾ ಅಡರ್ಪು, ಗೊಂಬೆ
idolater — ನಾ ಅಡರ್ಪು ಕೊಂಡಾಡುಗ
igneous — ಗು ಕಿಚ್ಚಿನ, ಕಿಚ್ಚಿರುವ
ignite — ಕ್ರಿ 1 ಹೊತ್ತು (ಇದ್ದಕ್ಕಿದ್ದಂತೆ ಕೂಡಿಹಾಕಿದ್ದ ಕಟ್ಟಿಗೆ ಹೊತ್ತಿಕೊಂಡಿತು), ಉರಿಹತ್ತು 2 ಪಸಿಲಿುಸು
ignition — ನಾ ಉರಿತ, ಉರುಪು
ignoble — ಗು ಕೀಳ್ಮಟ್ಟದ, ಹೊಲ್ಲ
ignominious — ಗು ನಾಚುಗೆಯ, ಒಚ್ಚಿಯ, ಕುಚ್ಚಣೆಯ
ignorance — ನಾ ಮರವಿ (ಅವನ ಮರವಿ ಯನ್ನು ನೀಗಲಾರೆ), ಅರಿಯಮಿಕೆ, ಅರಿ ಯಮೆ (ಆತನ ಅರಿಯಮೆ ಅವನನ್ನು ಮುಳುಗಿಸಿತು)
ignorant — ಗು ಅರಿವಿಲಿ, ಮೊದ್ದು, ತಿಳಿಗೇಡಿ, ಮೆದಗ
ignore — ಕ್ರಿ ಮೂಗಿರಿ, ಕಡೆಗಣಿಸು (ಇದನ್ನು ಕಡೆಗಣಿಸಬೇಡಿ)
iguana — ನಾಉಡು
ilk — ನಾ ಬಗೆ (ಈ ಬಗೆಯ ಮಂದಿ)
ill — ಗು ಕೆಟ್ಟ, ಬೇನೆಯ, ಬೇನೆಬಿದ್ದ
ill will — ನಾ ಹಗೆತನ, ಎದುರುನೆಲೆ, ಅಸುರು
illegal — ಗು ಕಟ್ಟಲೆತಪ್ಪಿದ
illegible — ಗು ಓದಲಾಗದ
illegitimate — ಗು ಕಟ್ಟಲೆತಪ್ಪಿದ
ill-humour — ನಾಕಸರು
illiterate — ಗು ಬರಹ ಬಾರದ, ಓದು ಬಾರದ (ಓದು ಬಾರದವರು ನೂರಕ್ಕೆ ಅಯ್ವತ್ತ ಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ)
illness — ನಾ ಬೇನೆ (ಅವನು ಯಾವುದೋ ಬೇನೆಲಿುಂದ ಬಳಲುತ್ತಿದ್ದಾನೆ), ಕುತ್ತ (ಕುತ್ತ ಹಿಡಿದ ಹುಡುಗ)
ill-treat — ಕ್ರಿ ತೊಂದರೆ ಕೊಡು, ನೋಲಿುಸು
illuminate — ಕ್ರಿ ಬೆಳಗು (ಇಡೀ ಆಟದ ಬಯಲನ್ನು ಹೊನಲು ಬೆಳಕಿನಿಂದ ಬೆಳಗಿ ದ್ದಾರೆ) ನಾ ಬೆಳಕು (ಬೆಳಕು ಚೆಲ್ಲು)
illusion — ನಾ ಮಟ್ಟ (ಮಟ್ಟಮಾಯ), ಮಚ್ಚು (ಮಚ್ಚುಗೊಳಿಸು), ಕನ್ನಡ (ಇದೆಲ್ಲ ಬರೀ ಕನ್ನಡ, ನನ್ನದೂ ಅಲ್ಲ ನಿನ್ನದೂ ಅಲ್ಲ), ತೊಳಲಿಕೆ
illustrate — ಕ್ರಿ ಎತ್ತುಗೆ ಕೊಡು, ತಿಟ್ಟವಿಟ್ಟು ಬರೆ
illustration — ನಾ ಎತ್ತುಗೆ, ತಿಟ್ಟ
illustrator — ನಾ ತಿಟ್ಟಗಾರ
illustrious — ಗು ಹೆಸರಾಂತ (ಕೆಲವರು ಹೆಸರಾಂತ ಬರಹಗಾರರನ್ನು ಕರೆಸಿದ್ದೇವೆ), ಹೆಸರುವಾಸಿ (ಹೆಸರುವಾಸಿಯಾದ ಆಟ ಗಾರ)
image — ನಾ ಅಡರ್ಪು (ಇದು ಆ ಮರದ ಅಡರ್ಪು), ಎಣಿಕೆ, ಬದ್ದು
imagery — ನಾ 1 ನೆನಸು 2 ಮರೆಹುರುಳಿನ ಮಾತು
imaginable — ಗು ನೆನಸಬಲ್ಲ, ಗಿರಬಲ್ಲ
imaginary — ಗು ನನಸಲ್ಲದ, ನೆನಸು
imagination — ನಾ ಗೆತ್ತುದು, ನೆನಸಿಕೆ
imagine — ಕ್ರಿ ನೆನಸು, ಗಿರು (ನಂಟರನ್ನು ಹಗೆಗಳೆಂದು ಗೆತ್ತವನು)
imbalance — ನಾ ಏರುಪೇರು (ಎಲ್ಲೂೀ ತುಸು ಏರುಪೇರಾಗಿದೆ)
imbecile — ನಾ ಹೆಡ್ಡ, ತಿಳಿಗೇಡಿ, ಹುಟ್ಟು ದಡ್ಡ
imbibe — ಕ್ರಿ ಕುಡಿ (ಕಳ್ಳುಕುಡಿ), ಹೀರಿಕೊಳ್ಳು, ಅಳವಡಿಸಿಕೊಳ್ಳು
imbroglio — ನಾ ತೊಡಕು, ಬಿಕ್ಕಟ್ಟು
imbue — ಕ್ರಿ 1 ಬಣ್ಣತುಂಬು, ಒಳಹೊಗಿಸು 2 ಮನಗಾಣಿಸು, ಕಲಿಸು
imitate — ಕ್ರಿ ಅಣಕಿಸು (ಅವನು ನನ್ನನ್ನು ಅಣಕಿಸುತ್ತಿದ್ದಾನೆ), ಹಾಗೇ ಮಾಡು
imitation — ನಾ ಅಣಕ, ಹಾಗೇ ಮಾಡುವಿಕೆ, ಮಾರ್ಪು
immaculate — ಗು ಚೊಕ್ಕ, ಚೊಕ್ಕಟ, ಮಡಿ, ಕುಂದಿಲ್ಲದ, ಅಣ್ಣೆ
immanent — ಗು ಒಳನೆಲೆಸಿದ, ಎಲ್ಲಡೆ ಇರುವ
immaterial — ಗು ಅರಿದಲ್ಲದ, ನನಸಲ್ಲದ
immature — ಗು ಎಳಸು (ಅಷ್ಟೂಂದು ಎಳಸು ಕಾಲಿುಗಳನ್ನು ಕೊಯ್ದು ತಂದಿದ್ದಾರೆ), ಬಲಿತಿಲ್ಲದ, ಮುಗಿಸದ
immeasurable — ಗು ಅಳೆಯಲಾಗದ, ಎಲ್ಲಲಿುಲ್ಲದ
immediacy — ನಾ ನೇರನಂಟು, ಬೇಕಾದುದು ಗು 1 ನೆರೆಯ, ನೇರ 2 ತಡವಿಲ್ಲದ (ತಡವಿಲ್ಲದ ಕಾಣ್ಕೆ)
immediately — ಗು ಕಟ್ಟನೆ (ಕರೆದೊಡನೆ ಕಟ್ಟನೆ ಬಂದ), ತಟ್ಟನೆ (ತಟ್ಟನೆ ಕೆಳಗೆ ಹಾರಿದ), ತಡವಿಲ್ಲದೆ (ತಡವಿಲ್ಲದೆ ಬಂದ), ಒಡನೆ (ಅವನು ಹೇಳಿದೊಡನೆ ಬಂದು ಕೆಲಸ ಮಾಡಿಕೊಡುತ್ತಾನೆ)
immemorial — ಗು ತುಂಬಾ ಹಿಂದಿನ, ನೆನಪಿನಾಚೆಯ
immense — ಕ್ರಿ ಬಾರೀ ದೊಡ್ಡ, ಅಳತೆಗೆ ಸಿಗದ
immerse — ಕ್ರಿ ಅದ್ದು (ನೀರಿನಲ್ಲಿ ಅದ್ದಿದ ಸೀರೆ ಕೆಟ್ಟುಹೋಲಿುತು), ಆಳು (ಹಲವು ಮನೆಗಳು ನೆರೆ ಬಂದು ನೀರಿನಲ್ಲಿ ಆಳಿ ದುವು), ಮುಳುಗು (ದೋಣಿ ಕಡಲಲ್ಲಿ ಮುಳುಗಿಹೋಲಿುತು)
immersion — ನಾ ಅದ್ದಿಕೆ, ಅದ್ದುಗೆ
immigration — ನಾ ವಲಸೆ (ವಲಸೆಹೋಗು; ವಲಸೆಗಾರ), ಗುಳೆ (ಗುಳೆಹೋಗು)
imminent — ಗು ಕೂಡಲೆೀ ನಡೆಯಲಿರುವ, ಹತ್ತಿರ ಬಂದ
immiscible — ಗು ಬೆರೆಯದ (ನೀರಿನೊಂದಿಗೆ ಬೆರೆಯದ)
immobile — ಗು ಮಿಡುಕದ, ಕಂದದ, ಗಟ್ಟಿ (ಗಟ್ಟಿಮಾಡು; ಗಟ್ಟಿಗೂಟ)
immoderate — ಗು ತಡೆಲಿುಲ್ಲದ, ಹತೋಟಿ ತಪ್ಪಿದ, ಮೇರೆಮೀರಿದ
immodest — ಗು 1 ಸಿಗ್ಗಿಲ್ಲದ, ತಕ್ಕುದಲ್ಲದ 2 ಕಡುಪಿನ, ಎದೆಗಾರಿಕೆಯ
immolate — ಕ್ರಿ ಕೋರಲು ಕೊಡು (ಮಾರಿ ಗುಡಿಯಲ್ಲಿ ಒಂದು ಕೋಣನನ್ನು ಕೋರಲು ಕೊಡಲಾಗಿತ್ತು; ತನ್ಕೋರಲು)
immoral — ಗು ನಡತೆಗೆಟ್ಟ
immortal — ಗು 1 ಬರ್ದಿಲ, ಸಾವಿಲ್ಲದ 2 ಹೆಸರಾಂತ
immovable (be) — ಕ್ರಿ ಮರವಡು; ಮರ ಸಲ್ಲು (ಆತನ ಕಾಲುಗಳು ಮರಸಂದಿವೆ)
immovable — ಗು 1 ಕದಲದ, ಗಟ್ಟಿಮಾಡಿದ 2 ಬಿಟ್ಟುಕೊಡದ, ತಲೆವಾಗದ, ತಲ್ಲಣ ಗೊಳ್ಳದ (ತಲ್ಲಣಗೊಳ್ಳದಿಕೆ)
immune — ಗು ಕಾಪುಪಡೆದ (ಆತ ಸಿಡುಬು ಬೇನೆಗೆ ಕಾಪು ಪಡೆದಿದ್ದಾನೆ)
immunity — ನಾ 1 ಕಾಪು 2 ಬಿಡುಗಡೆ (ಇವತ್ತಿನ ಕೆಲಸಕ್ಕೆ ಆತ ಬಿಡುಗಡೆ ಪಡೆದಿ ದ್ದಾನೆ)
immunology — ನಾ ಕಾಪರಿಮೆ
immure — ಕ್ರಿ ಕೂಡಿಹಾಕು, ಸೆರೆಗಟ್ಟು
immutable — ಗು ಬದಲಾಗದ, ಮಾರ್ಪಡದ
imp — ನಾ ತುಂಟ ಮಗು ನಾ ಅಪ್ಪಳಿಕೆ, ನಾಟುಗೆ
impair — ಕ್ರಿ ಕೆಡಿಸು, ಹಾಳುಮಾಡು, ಕುಂದಿಸು, ಉಡುಗಿಸು
impale — ಕ್ರಿ 1 ಕುತ್ತಿರಿಸು 2 ಪಂಜೆಯಾಗಿಸು
impalpable — ಗು ಮುಟ್ಟಲಾಗದ, ಸುಳುವಾಗಿ ತಿಳಿಯದ
impart — ಕ್ರಿ 1 ತಿಳಿಹೇಳು, ಹೇಳಿಕೊಡು 2 ಪಾಲುಕೊಡು, ಕೊಡು
impartial — ಗು ನೇರ್ಪಾದ, ಬದಿಹಿಡಿಯದ
impasse — ನಾ ಬಿಕ್ಕಟ್ಟು, ಪಾರಾಗಲಾಗದೆಡೆ
impassioned — ಗು ಮಿಡುಕಿನ, ತಾಗುಳದ, ಕೆರಳಿದ, ಗೀಳಿನ
impassive — ಗು ನೋವರಿಯದ, ತಣ್ಣಗಿರುವ
impatience — ನಾ ಸಿಡಿಮಿಡಿ (ಸಿಡಿಮಿಡಿ ಗೊಳ್ಳು - ಆತ ಯಾವಾಗಲೂ ಸಿಡಿಮಿಡಿ ಗೊಳ್ಳುತ್ತಿರುತ್ತಾನೆ), ಉರುಟುತನ, ಕರುಪು
impatient — ಗು 1 ತಾಳ್ಮೆಲಿುಲ್ಲದ, ಸಿಡುಕಿನ 2 ಹಾತೊರೆಯುವ, ಕೊಸರಿಕೆಯ
impeach — ಕ್ರಿ ತಪ್ಪುಹೊರಿಸು, ಮದಿಪು ಕೆಡಿಸು
impeccable — ಗು ಕುಂದಿಲ್ಲದ, ತಪ್ಪಿಲ್ಲದ
impecunious — ಗು ಬಡ, ಹಣವಿಲ್ಲದ
impede — ಕ್ರಿ ಕಾಲ್ಗಡಿಸು, ತಗರು (ತೋಡಿ ಗೊಂದು ಕಟ್ಟ ಹಾಕಿ ನೀರನ್ನು ತಗರಿದ್ದಾರೆ), ತಡೆಯೊಡ್ಡು, ಅಡ್ಡಿಮಾಡು
impediment — ನಾ ಇಡರು, ಎಡರು (ಎಡರು ತೊಡರು; ಎಡರ್ಪಡು), ತಗವೆ, ತೊಡಕು (ತೊಡಕುಬೀಳು), ಅಡ್ಡಿ (ಅಡ್ಡಿಮಾಡು; ಅಡ್ಡಿಹೇಳು)
impel — ಕ್ರಿ 1 ಹುರಿದುಂಬಿಸು, ಒತ್ತಾಲಿುಸು 2 ಮುನ್ನೂಕು, ತಳ್ಳು, ದೂಡು
impending — ಗು ಒಡನೆಯೇ ನಡೆಯಲಿರುವ, ಹತ್ತಿರಬಂದ, ಬಂದೆರಗಲಿರುವ
impenetrable — ಗು ಒಳಹೊಗಲಾಗದ, ಅರಿಯಲಾಗದ
imperative — ಗು 1 ಕಡ್ಡಾಯದ, ಒತ್ತಾ ಯದ, ಒತ್ತಂಬದ 2 ತರಾತುರಿಯ
imperceptible — ಗು ತಿಳಿಯಲಾಗದ, ಕಾಣ ಲಾಗದ, ತೀರಾ ಚಿಕ್ಕ
imperfect — ಗು ಮುಗಿಸದ, ಕುಂದು ಕೊರತೆ ಗಳಿರುವ
imperfection — ನಾ ಕೊರತೆ, ತಗುಸಿ, ಕುಂದು
imperial — ಗು ಪೇರರಸನ, ಮೇಲಳವಿರುವ
imperil — ಕ್ರಿ ಕುತ್ತಿಗೆ ಈಡುಮಾಡು, ಕುತ್ತಿ ಗೊಡ್ಡು ಗು ಸೊಕ್ಕಿನ, ಮುರುಕಿನ, ಹಿಡಿತದಲ್ಲಿರಿಸಿಕೊಳ್ಳುವ
impermeable — ಗು ಒಳಬಿಡದ, ಒಳ ತೂರದ (ಒಳತೂರದಿಕೆ)
impersonal — ಗು ಒಬ್ಬನ ಕುರಿತಲ್ಲದ, ಒಬ್ಬನಾಗಿಲ್ಲದ
impersonate — ಕ್ರಿ ಮಾರಾಳಾಗು
impertinence — ನಾ ಮಂದೆವಾಳ, ತಲೆ ಹರಟೆ
impertinent — ಗು 1 ತಕ್ಕುದಲ್ಲದ 2 ತಲೆಹರಟೆಯ, ಸೊಕ್ಕಿನ
imperturbable — ಗು ತಣ್ಣಗಿರುವ, ನೆಮ್ಮದಿ ಕೆಡದ
impervious — ಗು 1 ಕಿವಿಗೊಡದ (ಯಾರ ಮಾತಿಗೂ ಕಿವಿಗೊಡದವನು) 2 ಒಳಹೊಗ ಲಾಗದ
impetuous — ಗು ದುಡುಕುವ, ಉರವಣೆಯ
impetus — ನಾ 1 ಬಿಣಿತೆ, ಉರುಬೆ 2 ಹುರಿ (ಹುರಿದುಂಬಿಸು)
impiety — ನಾ ನಂಬಿಕೆಲಿುಲ್ಲದಿಕೆ, ನಂಬಿಕೆ ಯಳಿವು
impinge — ಕ್ರಿ 1 ಹೊಡೆ, ತಾಗು 2 ಒತ್ತುವರಿ ಮಾಡು
impish — ಗು ತುಂಟ (ತುಂಟ ಹುಡುಗ)
implacable — ಗು ತಣಿಸಲಾಗದ, ನೆಮ್ಮದಿ ಗೊಳಿಸಲಾಗದ
implant — ಕ್ರಿ 1 ಒಳಸೇರಿಸು, ನಡು 2 ನಾಟು (ನನಗೆ ನಾಟುವಂತೆ ಹೇಳಲು ತಿಳಿಯುವು ದಿಲ್ಲ)
implausible — ಗು ಒಪ್ಪಲಾಗದ, ಸರಿಕಾಣದ, ಆಗಲಾರದ
implement — ನಾ ಕೆಯ್ದ (ಮರ ಕೊಯ್ಯುವ ಕೆಯ್ದ)
implement — ಕ್ರಿ ನಡೆಸು, ನೆರವೇರಿಸು (ನೀವು ಹೇಳಿದ ಕೆಲಸವನ್ನು ನೆರವೇರಿಸುವ ಹೊಣೆ ನನ್ನದು)
implicate — ಕ್ರಿ ತೊಡರಿಸು, ಸಿಕ್ಕಿಸು (ಕಳ್ಳತನ ದಲ್ಲಿ ಆತ ನಿಮ್ಮನ್ನೂ ಸಿಕ್ಕಿಸುವ ಹಾಗಿದೆ), ಒಳಪಡಿಸು
implication — ನಾ 1 ಒಳಪೊರುಳು 2 ತೊಡಕು, ಸಿಕ್ಕು
implicit — ಗು ಅಡಗಿರುವ, ನೇರವಲ್ಲದ
implode — ಕ್ರಿ ಒಳಸಿಡಿಸು
implore — ಕ್ರಿ ಮೊರೆಲಿುಡು, ಅಂಗಲಾಚು (ಏನಾದರೂ ಮಾಡಿರೆಂದು ಅಂಗಲಾಚಿದ)
imply — ಕ್ರಿ ಹೊಳೆಸು, ಸುಳಿವು ಕೊಡು ಗು ಒರಟು, ಮದಿಪು ಕೊಡದ, ಒಯ್ಯಗನಲ್ಲದ
impolitic — ಗು ಅರಿವಿಲ್ಲದ, ಸರಿ-ತಪ್ಪು ತಿಳಿ ಯದ
import — ಕ್ರಿ ತರಿಸು (ಹೊರನಾಡಿನಿಂದ ತರಿಸಿದ ಬಟ್ಟೆ)
importance — ನಾ ಪೆರ್ಮೆ, ಹೆಚ್ಚುಗಾರಿಕೆ, ಆಸುರ
important — ಗು ಅರಿದು (ಅರಿದಾದ ಕನ್ನಡ ನುಡಿ)
impose — ಕ್ರಿ 1 ಹೇರು, ಹೊರಿಸು (ನಮ್ಮ ಮೇಲೆ ಇನ್ನಷ್ಟು ತೆರಿಗೆ ಹೊರಿಸಿದ್ದಾರೆ) 2 ಮೋಸಮಾಡು
imposing — ಗು ತುಂಬಾ ದೊಡ್ಡ, ಗಟ್ಟಿಯಾದ
imposition — ನಾ ಹೇರಿಕೆ
impossible — ಗು ಅರಿದು (ಹೋಗಲು ಅರಿದಾದುದು; ಆತನು ಮಾಡಹೊರಟಿರು ವುದು ಅರಿದು ಕೆಲಸ), ಮಾಡಲಾಗದ, ತಾಳಲಾಗದ, ತೆತ್ತದು
impost — ನಾ 1 ತೆರಿಗೆ 2 ಕುಂದದ ತುದಿ
impostor — ನಾ ಆಳಿಗ, ತೋಹುಗ, ಮೋಸ ಗಾರ
imposture — ನಾ ಮೋಸ, ಉಕ್ಕಿವ, ಚದುಪು
impotent — ಗುಹೆಣ್ಣಿಗ, ಅಳ್ಳು
impound — ಕ್ರಿ 1 ಕೂಡಿಹಾಕು 2 ಮುಟ್ಟು ಗೋಲು ಹಾಕು
impoverish — ಕ್ರಿ ಬಡತನ ತರು, ಸೊಪ್ಪಿಸು, ಸೊರಗಿಸು
impracticable — ಗು ಮಾಡಲಾಗದ, ನಡೆಸ ಲಾಗದ (ನಡೆಸಲಾಗದಿಕೆ)
impregnable — ಗು ಗೆಲ್ಲಲಾಗದ, ಬಿಟ್ಟು ಕೊಡದ, ಹತೋಟಿಗೆ ತರಲಾಗದ
impregnate — ಕ್ರಿ 1 ಬಸಿರುಮಾಡು 2 ತುಂಬು, ತಿಳಿಹೇಳು
impress — ಕ್ರಿ 1 ಮನಗಾಣಿಸು, ಮೆಚ್ಚುಗೆ ಪಡೆ 2 ಅಚ್ಚೊತ್ತು
impression — ನಾ 1 ಅಚ್ಚು (ಅಚ್ಚುಹಾಕು, ಅಚ್ಚೊತ್ತು), ಉಂಡಿಗೆ (ಉಂಡಿಗೆಯೊತ್ತು) 2 ಅನಿಸಿಕೆ, ಎಣಿಕೆ
impressionable — ಗು ಕಯ್ಗಯ್ಯಬಲ್ಲ, ಒಲಿಸಬಲ್ಲ
impressive — ಗು ಮನತಟ್ಟುವ, ನಾಟುವ
imprint — ಕ್ರಿ ಅಚ್ಚೊತ್ತು, ಮನದಟ್ಟು ಮಾಡು
imprison — ಕ್ರಿ ಅಡೆ (ಕಳ್ಳರನ್ನು ಇನ್ನೂ ಅಡೆಯಲಾಗಿಲ್ಲ), ಸೆರೆಹಿಡಿ, ಸೆರೆಗಟ್ಟು
improbable — ಗು ಆಗಲಾರದ, ನಡೆಯ ಲಾರದ, ಇರಲಾರದ ಗು ಮುನ್ನೋರದ, ಮುನ್ನೇರ್ಪಾ ಡಿಲ್ಲದ,
improper — ಗು ತಕ್ಕುದಲ್ಲದ, ತಪ್ಪು, ತರ ವಲ್ಲದ
impropriety — ನಾ ಒಚ್ಚಯ,ಹೊಲ್ಲ (ಹೊಲ್ಲಗು; ಹೊಲ್ಲನುಡಿ)
improve — ಕ್ರಿ ತಿದ್ದು (ಆತನ ಬರಹವನ್ನು ತಿದ್ದಿ ಕೊಟ್ಟಿದ್ದೇನೆ), ಒಳ್ಳೆಯದಾಗಿಸು, ಮೇಲೆೀರಿಸು
improvident — ಗು ಮುನ್ನೆಣಿಕೆಲಿುಲ್ಲದ, ದುಂದುಗಾರಿಕೆಯ
improvise — ಕ್ರಿ ಮುನ್ನೋರದೆ ಆಡು
imprudent — ಗು ದುಡುಕುವ, ಎಚ್ಚರಿಕೆ ಲಿುಲ್ಲದ
impudent — ಗು ಸೊಕ್ಕಿನ, ಸಿಗ್ಗಿಲ್ಲದ, ಮಲೆವ
impulse — ನಾ 1 ಉರವಣೆ (ಅವನು ಉರವಣೆಯಲ್ಲಿ ಏನೋ ಹೇಳಿದ) 2 ಮುನ್ನುಗ್ಗುವ ಉರುಬು, ಒತ್ತರ
impunity — ನಾ ಹೊರತುಪಡಿಕೆ
impure — ಗು ಮಾಸಲು (ಬಟ್ಟೆ ಮಾಸಲಾ ಗಿದೆ),ಹೊಲೆ, ಹೊಲಸು (ಹೊಲಸು ನೀರು)
impurity — ನಾ ಕಲುಹೆ (ಆ ಕೊಳದ ನೀರಿ ನಲ್ಲಿ ಕಲುಹೆಲಿುದೆ, ಕೊಳೆ, ಕಿಣಿ (ಹಲ್ಲಿನ ಕಿಣಿ)
impute — ಕ್ರಿ ದೂರು, ತಪ್ಪುಹೊರಿಸು, ನೆಮ್ಮಿಸು (ಇಷ್ಟೂಂದು ತಪ್ಪುಗಳನ್ನು ನನ್ನ ಮೇಲೆ ನೆಮ್ಮಿಸುವುದು ಸರಿಯೇ?)
inability — ನಾ ಅಳವಿಲ್ಲದಿಕೆ, ನಲುವು
inaccessible — ಗು ಎಟುಕದ, ಸಿಗದ, ತಲುಪಲಾಗದ
inaccurate — ಗು ತಪ್ಪು, ಸರಿಯಲ್ಲದ
inaction — ನಾ ಮಾಡದಿರುವಿಕೆ, ಮಯ್ಗಳ್ಳತನ
inadequate — ಗು ಸಾಕಾಗದ, ತಕ್ಕುದಲ್ಲದ
inadmissible — ಗು ಎಡೆಕೊಡಲಾಗದ
inadvertent — ಗು ಗಮನಕೊಡದ, ಕಣ್ಣು ತಪ್ಪಿದ
inalienable — ಗು ಮಾರೆಡೆಗೊಳಿಸಲಾಗದ
inane — ಗು 1 ಮುಟ್ಟಾಳ, ದಡ್ಡ 2 ಪೊಳ್ಳು, ಬರಿದು
inanimate — ಗು ಉಸಿರಿಲ್ಲದ
inapplicable — ಗು ಸರಿಹೊಂದದ
inappreciable — ಗು ಮೆಚ್ಚಲಾಗದ
inappropriate — ಗು ತಕ್ಕುದಲ್ಲದ, ಸರಿ ಯಲ್ಲದ (ಸರಿಲಿುಲ್ಲದಿಕೆ) ಗು ಪಳಗದ, ತಕ್ಕುದಲ್ಲದ
inarticulate — ಗು 1 ಮೂಕ 2 ತಿಳಿಸಲಾಗದ
inattentive — ಗು ಗಮನಕೊಡದ
inaudible — ಗು ಕೇಳಿಸದ, ಕಿವಿಗೆ ಬೀಳದ
inaugurate — ಕ್ರಿ ತೊಡಗುಹ ನಡೆಸು, ತೆರೆ
inauguration — ನಾ ತೊಡಗುಹ
inauspecious — ಗು ಕೇಡಿನ
inborn — ಗು ಹುಟ್ಟು (ಹುಟ್ಟುಕುರುಡ, ಹುಟ್ಟು ಕಿವುಡ, ಹುಟ್ಟುಚಾಳಿ, ಹುಟ್ಟುಮಚ್ಚೆ)
inbuilt — ಗು ಒಳಕಟ್ಟಿದ
incalculable — ಗು ಎಣಿಕೆಗೆ ಮೀರಿದ, ಮುನ್ನೆಣಿಸಲಾಗದ
incandescent — ಗು ಕಾದುಬೆಳಗುವ, ಬಿಳಿ ಕಾಂಕೆಯ
incantation — ನಾ ಮಾಟನುಡಿ
incapable — ಗು ಕಯ್ಯಲ್ಲಗದ, ಅಳವಿಲ್ಲದ, ಮಾಡಲಾರದ
incapacitate — ಕ್ರಿ ಅಳವು ಕೆಡಿಸು
incarcerate — ಕ್ರಿ ಸೆರೆಲಿುಡು, ಕೂಡಿಹಾಕು
incarnate — ಗು ಮಯ್ದಾಳಿದ, ಮಯ್ವುತ್ತ (ಮಯ್ವೆತ್ತ ಕೆಚ್ಚು)
incendiary — ಗು ಕಿಚ್ಚಿಡುವ, ದೊಂಬಿ ಎಬ್ಬಿಸುವ
incense — ನಾ ಕಂಪುಹೊಗೆ, ನರುಹೊಗೆ, ಊದುಕಡ್ಡಿ
incense — ಕ್ರಿ ರೇಗಿಸು, ಕೆರಳಿಸು
incentive — ನಾ ಹೆಳೆ (ಅಲ್ಲಿಗೆ ಹೋಗುವು ದಕ್ಕೆ ಅವನಿಗೊಂದು ಹೆಳೆ ಬೇಕಾಗಿತ್ತು), ನೆವ
incentive — ಗು ಹುರಿದುಂಬಿಸುವ
inception — ನಾ ತೊಡಗುಹ
incessant — ಗು ನಿಲ್ಲದ (ನಿಲ್ಲದಿಕೆ), ಎಡೆ ಬಿಡದ (ಎಡೆ ಬಿಡದ ಮಳೆ)
inch — ನಾ ಹೆಬ್ಬೆರಳು (ಒಂದು ಹೆಬ್ಬೆರಳು ಅಗಲ)
inchoate — ಗು ತೊಡಗಿದ (ಆಗ ತಾನೇ ತೊಡಗಿದ ಕೆಲಸ), ಬೆಳೆಯದ
incidence — ನಾ 1 ಕಯ್ಗಯ್ಕೆ 2 ಆಗುಹ
incidental — ಗು ಹಮ್ಮಿಕೊಳ್ಳದ, ಒಮ್ಮೊಮ್ಮೆ ನಡೆವ ಕ್ರಿ ಸುಡು (ಸುಟ್ಟುಹಾಕು), ಕಿಚ್ಚಿಡು (ಬಡವರ ಗುಡಿಸಲುಗಳಿಗೆಲ್ಲ ಕಿಚ್ಚಿಟ್ಟರು), ಬುಗ್ಗಿಮಾಡು
incipient — ಗು ಹೊರ ಬರತೊಡಗಿದ (ಹೊರ ಬರತೊಡಗಿದ ಮೊಳಕೆ), ಕಾಣಿಸತೊಡಗಿದ
incise — ಕ್ರಿ ಕೆತ್ತು, ಕೊರೆ
incisive — ಗು ಕೊರೆವ, ಹರಿತ, ಕೋರೆ, ಕೂರು (ಕೂರ್ಗತ್ತಿ), ಚುರುಕು (ಚುರುಕು ಕಣ್ಣು)
incite — ಕ್ರಿ ಎತ್ತಿಕಟ್ಟು, ಕೆರಳಿಸು
inclement — ಗು ಬಿರು (ಬಿರುಗಾಳಿ) ಬಿರುಸು, ಕನಿಕರವಿಲ್ಲದ
inclination — ನಾ 1 ಒಲವು 2 ಇಳಿತ
incline — ನಾಇಳಿತ,ವಾಟ (ಇಲ್ಲಿ ನೆಲ ತುಸು ವಾಟವಾಗಿದೆ)
incline — ಕ್ರಿ ಒರಗು, ಬಾಗಿರು
include — ಕ್ರಿ ಉಳ್ಳಿಡು (ನನ್ನನ್ನುಳ್ಳಿಟ್ಟ ಕೂಟ), ಒಳಗೊಳ್ಳು, ಅಡಕಗೊಳ್ಳು
inclusive — ಗು ಒಳಗೊಂಡ, ಒಟ್ಟಾರೆಯ
incognito — ಗು ಮಾರ್ಪುಹೆಸರಿನ
incoherent — ಗು ಹೊಂದಿಕೊಳ್ಳದ
incombustible — ಗು ಉರಿಯದ, ಕಿಚ್ಚು ಹಿಡಿಯದ
income — ನಾ ಹುಟ್ಟುವಳಿ
incoming — ಗು ಒಳಬರುವ, ಬರಲಿರುವ
incommunicado — ಗು ತಲುಪಲಾಗದ, ಮುಟ್ಟಲಾಗದ, ತಲುಪಲು ಬಿಡದ
incomparable — ಗು ಹೋಲಿಸಲಾಗದ, ಎಣೆಲಿುಲ್ಲದ, ದೊರೆಲಿುಲ್ಲದ
incompatible — ಗು ಹೊಂದಿಕೊಳ್ಳದ, ಒಟ್ಟಾಗಿರದ
incompetent — ಗು ಆರದ, ತಗದ, ಅಳ ವಿಲ್ಲದ
incomplete — ಗು ಅರಕೆ (ಅರಕೆ ಕಟ್ಟಡ), ಅರೆಬರೆ (ಅರೆಬರೆ ಕೆಲಸ), ಮುಗಿಯದ, ಸರಿಲಿುಲ್ಲದ
incomprehensible — ಗು ತಿಳಿಯದ, ಅರಿ ಯಲಾಗದ
inconceivable — ಗು ನೆನೆಸಲಾಗದ, ನಂಬ ಲಾಗದ
inconclusive — ಗು ಮುಗಿಯದ, ತೀರ್ಮಾನಕ್ಕೆ ಬಾರದ, ಕೊನೆಗೊಳ್ಳದ (ಕೊನೆಗೊಳ್ಳದಿಕೆ)
incongruous — ಗು ಹೊಂದಿಕೊಳ್ಳದ, ತಕ್ಕು ದಲ್ಲದ
inconsequential — ಗು ಅರಿದಲ್ಲದ, ಲೆಕ್ಕಕ್ಕೆ ಬಾರದ ಗು ಚಿಕ್ಕ, ಅರಿದಲ್ಲದ (ಅರಿದಲ್ಲದ ಕೆಲಸ)
inconsiderate — ಗು ಮುನ್ನೆಣಿಕೆಲಿುಲ್ಲದ, ಮದಿಪುಕೊಡದ
inconsistent — ಗು ಮಾರ್ಪಾಡಾಗುವ, ಹೊಂದಿಕೊಳ್ಳದ, ಒಂದೇ ಬಗೆಯದಲ್ಲದ
inconsolable — ಗು ಹದುಳಿಸಲಾಗದ, ಎದೆಯೊಡೆದ
inconspicuous — ಗು ಚಿಕ್ಕದಾದ, ಕಾಣಿಸದ, ಎದ್ದುಕಾಣದ, ಗಮನ ಸೆಳೆಯದ
incontinent — ಗು ಹತೋಟಿಲಿುಲ್ಲದ, ಕಟ್ಟು ಪಾಡಿಲ್ಲದ,
incontrovertible — ಗು ಎದುರಿಸಲಾಗದ, ತಪ್ಪುತೋರಿಸಲಾಗದ
inconvenient — ಗು ಹದುಳವಿಲ್ಲದ, ಸುಳು ವಿಲ್ಲದ, ತೊಂದರೆಯ, ತಕ್ಕುದಲ್ಲದ
inconvertible — ಗು ಬದಲಿಸಲಾಗದ, ಮಾರಲಾಗದ
incorporate — ಕ್ರಿ ಒಟ್ಟುಸೇರಿಸು, ಒಂದಾ ಗಿಸು, ಒಳಸೇರಿಸು
incorrect — ಗು ತಪ್ಪು (ತಪ್ಪು ಮಾತು)
incorrupt — ಗು ನೇರ್ಮೆಯ, ಲಂಚ ಕೇಳದ, ಅಡ್ಡಿಕ್ಕಲಾಗದ
increase — ನಾ ಬೆಳವಿಗೆ, ಬಳುವಳಿಕೆ, ಹುಲುಸು (ಹುಲ್ಲು ಹುಲುಸಾಗಿ ಬೆಳೆದಿದೆ), ಹೊಂಪುಳಿ (ಹೊಂಪುಳಿಯಾಗು; ಹೊಂಪುಳಿ ಗೊಳ್ಳು), ಹೆಚ್ಚಳ, ಹೆಚ್ಚುಗೆ (ಅರಿವಿನ ಹೆಚ್ಚುಗೆ), ಬರ್ದು (ಬರ್ದುಗ), ಉಬ್ಬರ (ಹೊಟ್ಟೆಯುಬ್ಬರ; ನೀರುಬ್ಬರ; ಉಬ್ಬರಿಸು), ಏರುತ, ಏರಿಕೆ, ಸುರ್ವು (ಸುರ್ವುಗೊಳ್ಳು; ಸುರ್ವುಗೆಡು)
increase — ಕ್ರಿ ಹೆಚ್ಚು (ಕಡಲುಕ್ಕಿ ನೀರು ಹೆಚ್ಚಿದೆ; ಹೆಚ್ಚಳಿಸು), ಒತ್ತೇರು, ಸೆಡೆ (ತುಂಬಿಸಿ ತುಂಬಿಸಿ ಚೀಲ ಸೆಡೆದಿದೆ), ಹುಲಿಸು (ಹುಲಿಸಿ ದಪ್ಪಗಾಗಿರುವ ಮರ), ಒದಗು (ಈ ಅಕ್ಕಿ ಅನ್ನ ಮಾಡಿದರೆ ಒದಗುತ್ತದೆ), ದಳ್ಳಿಸು (ದಳ್ಳಿಸಿದ ಬೆಂಕಿ), ಕೆರಳು (ಹುಣ್ಣು ಕೆರಳಿದೆ), ಸಾಗು, ಕೊಸರು (ಕೊಸರಿದ ಕಿನಿಸು), ಮೊಗೆ (ಮೊಗೆದ ಬೆಳಕು)
incredible — ಗು ನಂಬಲಾಗದ
incredulous — ಗು ನಂಬಲಾರದ, ಅರೆಮರಿಕೆ ಲಿುರುವ, ನಚ್ಚಿರುವ
increment — ನಾ ಏರಿಕೆ (ಸಂಬಳದಲ್ಲಿ ಏರಿಕೆ), ಹೆಚ್ಚಳ
incriminate — ಕ್ರಿ ತಪ್ಪುಹೊರಿಸು
incubate — ಕ್ರಿ ಕಾವುಕೊಡು
incubator — ನಾಕಾವುಬುಟ್ಟಿ
incubus — ನಾ ಕೆಟ್ಟ ಕನಸು, ಕಾಡುವ ಹೊರೆ
inculcate — ಕ್ರಿ ಒತ್ತಿಹೇಳು, ತಿರುತಿರುಗಿ ಹೇಳು
inculpate — ಕ್ರಿ ತಪ್ಪುಹೊರಿಸು ನಾ ಹೊಣೆಗಾರ, ಮೇಲಾಳು
incur — ಕ್ರಿ ಈಡಾಗು, ಗುರಿಯಾಗು, ತಂದು ಕೊಳ್ಳು
incurable — ಗು ಮಾಣಿಸಲಾಗದ, ಮಾಜಿಸ ಲಾಗದ, ತಿದ್ದಲಾಗದ (ತಿದ್ದಲಾಗದಿಕೆ)
indebted — ಗು 1 ಸಾಲಪಡೆದ 2 ಹಂಗಿನ, ಒದವಿಪಡೆದ
indecent — ಗು ಹದನಲ್ಲದ, ಸಲುವಳಿ ಮೀರಿದ, ತರವಲ್ಲದ
indecisive — ಗು ತೀರ್ಮಾನಿಸಲಾಗದ, ಮುಗಿಸ ಲಾಗದ, ಕಂಡಿತವಲ್ಲದ
indecorous — ಗು ಹದಗೆಟ್ಟ, ಹೇಸಿಗೆಯ
indefatigable — ಗು ಬಳಲದ, ದಣಿವರಿ ಯದ
indefensible — ಗು ಬೆಂಬಲಿಸಲಾಗದ, ಕಾಯಲಾಗದ, ಸರಿಯೆನ್ನಲಾಗದ
indefinite — ಗು ಕಂಡಿತವಲ್ಲದ
indelible — ಗು ಅಳಿಸಲಾಗದ (ಅಳಿಸಲಾಗದ ಬರಹ)
indemnify — ಕ್ರಿ ಕಳೆತತುಂಬು, ಮುನ್ಗಾಪು ಪಡೆ
indent — ಕ್ರಿ 1 ಕಕ್ಕ ಕೆತ್ತು, ಒಳತಳ್ಳು 2 ಬೇಡಿಕೆ ಸಲ್ಲಿಸು
indentation — ನಾಒಳಚಾಚುವಿಕೆ
independence — ನಾ ಬಿಡುಗಡೆ (ಹೊರಗಿ ನವರ ಆಳ್ವಿಕೆಲಿುಂದ ಬಿಡುಗಡೆ ಸಿಗಬೇಕಾ ಗಿದೆ), ಈಳಿಗೆ, ಬೇಟ
independent — ಗು ಇಡುಕು (ಇಡುಕು ಬರಹ), ತಮ್ಮಾಳ್ವಿಕೆಯ
indescribable — ಗು ಕೊಗೆಯಲಾಗದ
indestructible — ಗು ಅಳಿಸಲಾಗದ
indeterminate — ಗು ಕಂಡಿತವಲ್ಲದ, ಕೊನೆ ಗಾಣದ, ನೆಲೆಗೊಳ್ಳದ (ನೆಲೆಗೊಳ್ಳದಿಕೆ)
index — ನಾ ಸುಟ್ಟುಗೆ (ಬರಹ ಸುಟ್ಟುಗೆ, ನುಡಿಸುಟ್ಟುಗೆ)
index finger — ನಾಸುಟ್ಟುಂಬೆ, ತೋರು ಬೆರಳು
indicate — ಕ್ರಿ ತೋರಿಸು (ತೋರಿಸಿ ಕೊಡು - ಒಂದು ತಪ್ಪನ್ನು ತೋರಿಸಿಕೊಟ್ಟಿದ್ದೇನೆ), ತಿಳಿಸು, ಸುಟ್ಟು
indication — ನಾ ತೋರಿಕೆ, ಗುರುತು (ಅವನು ಬಂದಿದ್ದನೆಂಬುದಕ್ಕೆ ಗುರುತೇನಾದರೂ ಇದೆಯೇ?)
indicator — ನಾ ತೋರಡ
indict — ಕ್ರಿ ತಪ್ಪುಹೊರಿಸು ಗು 1 ಬದಿಹಿಡಿಯದ 2 ಕಳಕಳಿಲಿುಲ್ಲದ, ಗೊಡವೆಲಿುಲ್ಲದ 3 ಕಳಪೆ, ಒಳ್ಳೆಯದಲ್ಲದ
indigenous — ಗು ನಾಡಿನ, ಊರಿನ
indigent — ಗು ಬಡ, ಪಂಜೆ, ಇಲ್ಲದ
indigestion — ನಾಅರವೆ (ಅರವೆಲಿುಂದ ನರಳುತ್ತಿದ್ದಾನೆ), ಅಳ್ಕಮೆ, ಕೋವೆ
indignation — ನಾ ಪದರು (ಪದರಾಡು; ಅವನು ಪದರಿನಿಂದ ಹಾಗೆ ಹೇಳಿರಬೇಕು)
indignity — ನಾ ಕೆಕ್ಕಸ, ಅಗ್ಗಳೆಕಳೆತ
indirect — ಗು ನೇರವಲ್ಲದ, ಸುತ್ತು ಬಳಸುವ
indiscreet — ನಾ ಎಚ್ಚರಿಕೆಲಿುಲ್ಲದ, ಅರಿ ವಿಲ್ಲದ
indiscriminately — ಗು ಆಯ್ಕೆ ಮಾಡದೆ, ಮನಬಂದಂತೆ, ಕಣ್ಣುಮುಚ್ಚಿ
indispensable — ಗು ಬೇಕಾಗಿರುವ, ಬಿಡ ಲಾಗದ, ಕಡೆಗಣಿಸಲಾಗದ
indisposed — ಗು 1 ಮಯ್ಯೊಳಿತಿಲ್ಲದ 2 ಒಪ್ಪದ, ಒಲವಿಲ್ಲದ
indisputable — ಗು ಅಲ್ಲಗಳೆಯಲಾಗದ
indistinct — ಗು ಮಸುಕು, ಮಬ್ಬು
indite — ಕ್ರಿ ಕಟ್ಟಿ ಬರೆ (ಅವನೇ ಒಂದು ಕತೆ ಕಟ್ಟಿ ಬರೆಯುತ್ತಿದ್ದಾನೆ)
individual — ನಾ ಒಬ್ಬ, ಒಂಟಿಗ
individuality — ನಾ ಒಂಟಿಗತನ
indivisible — ಗು ತುಂಡಿಸಲಾಗದ, ಪಾಲು ಮಾಡಲಾಗದ
indolent — ಗು ಮಯ್ಗಳ್ಳತನದ, ಸೋಂಬ ತನದ
indomitable — ಗು ಸೋಲದ, ಬಗ್ಗದ, ಪಟ್ಟುಹಿಡಿವ
indoor — ಗು ಕಟ್ಟಡದೊಳಗಿನ
indubitable — ಗು ಅಲಿ್ಬುಲ್ಲದ, ಕಂಡಿತವಾದ
induce — ಕ್ರಿ 1 ಒಲಿಸು, ಒಪ್ಪಿಸು 2 ಬರಿಸು (ವಾಕರಿಕೆ ಬರಿಸು), ಉಂಟುಮಾಡು, ಆಗಿಸು
induct — ಕ್ರಿ ಒಳಸೇರಿಸು, ಪಡೆಗೆ ಸೇರಿಸು
indulge — ಕ್ರಿ ತೆವಲು ತಣಿಸು, ಹಂಬಲ ತಣಿಸು
indulgence — ನಾ ಸಲಿಗೆ (ನಾಲಿುಗೆ ಸಲಿಗೆ ಕೊಟ್ಟುದು ಹೆಚ್ಚಾಲಿುತು)
indulgent — ಗು ತೆವಲು ತಣಿಸುವ, ತಾಳಿ ಕೊಳ್ಳುವ
indurat — ಗುಗಡಸು (ಗಡಸಾಗು) ಗು ಮಯ್ಮುರಿದು ಕೆಲಸ ಮಾಡುವ, ಕಡಗುವ, ನೇರ್ಪಿನ
industry — ನಾ ಕಯ್ಗಾರಿಕೆ (ಆ ಊರಲ್ಲಿ ಹೊಸ ಹೊಸ ಕಯ್ಗಾರಿಕೆಗಳನ್ನು ತೊಡಗಿ ದ್ದಾರೆ)
inebriate — ಕ್ರಿ ಕುಡಿದು ಸೊಕ್ಕು, ತಲೆಗೇರು
inedible — ಗು ತಿನ್ನಲಾಗದ (ತಿನ್ನಲಾಗದ ಗಡ್ಡೆ)
ineffable — ಗು ನುಡಿಯಲಾಗದ, ಮಾತಿಗೆ ಸಿಕ್ಕದ, ಮಾತಿಗೆ ಮೀರಿದ
inefficient — ಗು ಅಳವಿಲ್ಲದ (ಅಳವಿಲ್ಲ ದಿಕೆ), ಜಾಣ್ಮೆಲಿುಲ್ಲದ
inelegant — ಗು ಒಪ್ಪವಿಲ್ಲದ, ಮಾಟವಿಲ್ಲದ
ineligible — ಗು ತಕ್ಕವನಲ್ಲದ, ಹೊಂದದ
inept — ಗು 1 ಹೊಂದಿಕೆಯಾಗದ, ತಕ್ಕುದಲ್ಲದ 2 ಹೆಡ್ಡು (ಹೆಡ್ಡು ಕೆಲಸ), ಜಾಣ್ಮೆ ತೋರದ
inequality — ನಾ ದೊರೆಲಿುಲ್ಲದಿಕೆ, ಓರೆ ಲಿುಲ್ಲದಿಕೆ
inequitable — ಗು ನೇರ್ಮೆಲಿುಲ್ಲದ, ನೆಲೆ ತಪ್ಪಿದ, ಬದಿಹಿಡಿದ
inert — ಗು ಚುರುಕಿಲ್ಲದ, ಮದಡು, ಮಂಕು ಹಿಡಿದ, ಹಂದಲಾಗದ, ಹಂದಾಡದ
inertia — ನಾ 1 ಸೋಂಬತನ, ಮಯ್ಗಳ್ಳತನ 2 ತಾನಾಗಿ ಹಂದದ
inestimable — ಗು ತೀರ್ಮಾನಿಸಲಾಗದ, ಬೆಲೆ ಕಟ್ಟಲಾಗದ,
inevitable — ಗು ತಪ್ಪಿಸಲಾಗದ, ನಡೆಯ ದಿರದ
inexact — ಗು ಸರಿಯಲ್ಲದ, ನನ್ನಿಯಲ್ಲದ
inexcusable — ಗು ತಾಳಲಾರದ, ಹಳಿಯ ದಿರಲಾಗದ
inexhaustible — ಗು 1 ಬಳಸಿ ಮುಗಿಯದ, ಮುಗಿಸಲಾಗದ 2 ದಣಿವರಿಯದ (ದಣಿ ವರಿಯದ ಕೆಲಸಗಾರರು)
inexorable — ಗು ಬಗ್ಗದ, ಕನಿಕರವಿಲ್ಲದ
inexpensive — ಗು ಅಗ್ಗದ
inexplicable — ಗು ತಿಳಿಸಲಾಗದ, ಬಿಡಿಸಿ ಹೇಳಲಾಗದ
inexpressible — ಗು ಹೇಳಲಾಗದ, ಮಾತಿಗೆ ಮೀರಿದ
inextricable — ಗು ತಪ್ಪಿಸಿಕೊಳ್ಳಲಾಗದ, ಪಾರುಮಾಡಲಾಗದ, ಬಗೆಹರಿಸಲಾಗದ
infallible — ಗು ತಪ್ಪುಮಾಡದ, ತಪ್ಪದ, ನಂಬಬಲ್ಲ
infamous — ಗು ಹೆಸರುಕೆಟ್ಟ
infancy — ನಾ ಹಸುಳೆತನ, ಎಳೆತನ
infant — ನಾಕೂಸು (ಗಂಡುಕೂಸು, ಹೆಣ್ಣು ಕೂಸು), ಹಸುಳೆ ನಾ ಹಸುಳೆಕೊಲೆ
infantry — ನಾ ಕಾಲಾಳು ಪಡೆ
infatuation — ನಾ ಮರುಳು (ಮರುಳಾಗು), ಮುಟ್ಟಾಳುತನ
infect (by worms) — ಕ್ರಿ ಹುಳಿ (ಬೆಳೆಗಳೆಲ್ಲ ಹುಳಿತಿವೆ; ಹುಳುಕು - ಹುಳುಕು ಹಲ್ಲು; ಹುಳುಕಲು)
infect — ಕ್ರಿ ಸೋಕು, ಸೊಂಕು
infectious — ಗು ಸೋಕಬಲ್ಲ, ಹಬ್ಬುವ, ಹರಡುವ (ಹರಡುವ ಕುತ್ತ), ದಳೆ (ದಳೆ ಕುತ್ತ)
infer — ಕ್ರಿ 1 ತೀರ್ಮಾನಿಸು, ಒಣರು 2 ಸುಳಿವು ಕೊಡು
inference — ನಾ 1 ತೀರ್ಮಾನ 2 ಸುಳಿವು
inferior — ಗು ತರಪು, ಬೀಳು (ಬೀಳುನೆಲ, ಬೀಳುಬಿದ್ದ ನೆಲ), ಎಡ (ಆ ಕುದುರೆ ಇದಕ್ಕಿಂತ ಎಡ), ಕೀಳ್- (ಕೀಳ್ತರ, ಕೀಳಾಳು, ಕೀಳುಮಾತು; ಕೀಳುತನ; ಕೀಳ್ಮೆ), ಮಟ್ಟ (ಮಟ್ಟಬೆಳ್ಳಿ; ಮಟ್ಟತರ)
inferiority complex — ನಾಕೀಳರಿಮೆ (ಆತ ಕೀಳರಿಮೆಲಿುಂದ ಬಳಲುತ್ತಿದ್ದ)
inferno — ನಾ ದೊಡ್ಡ ಬೆಂಕಿ
infertile — ಗು ಬರಡು, ಗೊಡ್ಡು
infest — ಕ್ರಿ ಮುತ್ತಿಕೊಳ್ಳು, ತುಂಬಿಕೊಳ್ಳು
infidel — ನಾ ನಂಬದವನು
infighting — ನಾ ಒಳಜಗಳ
infiltrate — ಕ್ರಿ ಒಳಹರಿ, ನುಸುಳು (ಒಳ ನುಸುಳು)
infinite — ಗು ಎಲ್ಲಲಿುಲ್ಲದ, ಕೊನೆಲಿುಲ್ಲದ, ಅಳೆಯಲಾಗದ
infinitesimal — ಗು ತೀರಚಿಕ್ಕ
infirm — ಗು ಗಟ್ಟಿಲಿುಲ್ಲದ, ಅಸಳೆ, ಬಲ್ಮ ಗುಂದಿದ
inflame — ಕ್ರಿ 1 ಕೆರಳಿಸು 2 ಹೊತ್ತಿಸು
inflammable — ಗು ಹೊತ್ತಬಲ್ಲ, ಕೆರಳಬಲ್ಲ
inflammation — ನಾ1 ಉರಿಯೂತ 2 ಉರಿ, ಸುಡುಹ
inflate — ಕ್ರಿ ಉಬ್ಬಿಸು, ಹೆಕ್ಕಳಿಸು (ಹೆಕ್ಕಳ), ಹಿಗ್ಗಿಸು, ಬೆಲೆಯೇರಿಸು
inflation — ನಾ ಉಬ್ಬರ (ಹಣದುಬ್ಬರ), ಹೆಕ್ಕಳ, ಹೆಚ್ಚಳ
inflect — ಕ್ರಿ ಬಾಗಿಸು, ಮಾರ್ಪಡಿಸು ನಾ ಮಾರ್ಪು (ಪದಗಳ ಮಾರ್ಪು), ಬಾಗು, ಬಾಗುಹ
inflexible — ನಾ ಬಗ್ಗದ, ಜಗ್ಗದ
inflict — ಕ್ರಿ 1 ಹೇರು, ಹೊರಿಸು 2 ಏಟು ಕೊಡು
influence — ನಾ ಕಯ್ವಾಡ (ಇದರಲ್ಲಿ ಆತನ ಕಯ್ವಾಡವಿರುವ ಹಾಗೆ ಕಾಣಿಸುತ್ತದೆ)
influence — ಕ್ರಿ ಕಯ್ಗಯ್ಯು (ನನ್ನ ಮೇಲೆ ಆತ ಕಯ್ಗಯ್ಯಲಾರ), ನಾಟು
influx — ನಾ ಒಳಹರಿವು
inform — ಕ್ರಿ ಅರುಹು (ಇದನ್ನು ಅವರಿಗೆ ಅರುಹಬೇಕು), ತಿಳುಹು, ತಿಳಿಸು, ಹೇಳು (ನೀವೇ ಹೋಗಿ ಅವರಿಗೆ ಹೇಳಿಬನ್ನಿ)
informal — ಗು ಕಟ್ಟಲೆಗೊಳಪಡದ
informant — ನಾ ಅರಿವುಕೊಡುಗ
information — ನಾ ಅರಿವು, ತಿಳುವಳಿಕೆ, ಸುದ್ದಿ, ಒಸಗೆ
infrequent — ಗು ಒಮ್ಮೊಮ್ಮೆ (ಒಮ್ಮೊಮ್ಮೆ ಸಿಗುವ ಕೆಲಸ)
infringe — ಕ್ರಿ ಮೀರು, ಮುರಿ (ಕಟ್ಟಲೆ ಮುರಿ)
infuriate — ಕ್ರಿ ರೇಗಿಸು, ಕೆರಳಿಸು
infuse — ಕ್ರಿ 1 ತುಂಬು (ಅದಪು ತುಂಬು) 2 ಊರಿಸು, ನೆನೆಹಾಕು
ingenious — ಗು ಜಾಣತನದ (ಜಾಣತನದ ಹಮ್ಮುಗೆ)
ingenuity — ನಾ ಜಾಣ್ಮೆ, ಕೂರರಿವು
ingenuous — ಗು 1 ಬಿಚ್ಚುಮನದ, ಮುಚ್ಚು ಮರೆಲಿುಲ್ಲದ 2 ಮೊದ್ದುತನದ
inglorious — ಗು ನಾಚಿಗೆಯ, ಮದಿಪು ಕೆಟ್ಟ
ingot — ನಾ ಪಾಳ (ಚಿನ್ನದ ಪಾಳ), ಗಟ್ಟಿ
ingredient — ನಾ ಅಡಕ (ಈ ಸಿಹಿತಿಂಡಿಯ ಅಡಕ ತಿಳಿಸಿ)
ingrained — ಗು 1 ನೆಲಸಿದ, ಬೇರು ಬಿಟ್ಟ
ingratiate — ಕ್ರಿ ಮೆಚ್ಚಿಸು, ನಂಬಿಕೆಗಳಿಸು
ingress — ನಾ ಪುಗಿಲು, ಹೊಗುತೆ
inhabit — ಕ್ರಿ ಪಳ್ಳಿರು, ನೆಲಸು (ಆ ಮರಳು ಗಾಡಿನಲ್ಲೂ ಹಲವರು ನೆಲಸಿದ್ದಾರೆ), ಒಕ್ಕಲಾಗು, ಬೀಡುಬಿಡು
inhale — ಕ್ರಿ ಉಸಿರೆಳೆ
inherent — ಗು ಹುಟ್ಟಿನಿಂದ ಬಂದ, ಒಳಗಿನ ಕ್ರಿ ಮರುಪಡೆ
inherited land — ನಾ ಕಾಣಾಚಿ
inhibit — ಕ್ರಿ ತಡೆ, ಅಡ್ಡಿಪಡಿಸು
inhibition — ನಾ ಹಿಂಜರಿಕೆ (ಆಕೆಗೆ ಹಿಂಜರಿಕೆ ಯುೀನಿಲ್ಲ)
inhuman — ಗು ಕನಿಕರವಿಲ್ಲದ, ಮರುಕವಿಲ್ಲದ
inimical — ಗು ಹಗೆತನದ, ಇದಿರಿಸುವ, ನಲ್ಮ ತೋರದ
inimitable — ಗು ಎಣೆಲಿುಲ್ಲದ, ಅಣಕಿಸ ಲಾಗದ
iniquity — ನಾ ಕೇಡು, ತಪ್ಪು
initial — ಕ್ರಿ ಕಿರುಒಪ್ಪ ಹಾಕು
initial — ಗು ಮೊದಲಿನ (ಮೊದಲಿನ ಕೆಲಸ), ತೊಡಗಿದ
initiate — ಕ್ರಿ 1 ಬಳಕೆಗೆ ತರು, ಹುಟ್ಟುಹಾಕು 2 ಒಳಸೇರಿಸು
initiative — ನಾ 1 ತೊಡಗಿಕೆ 2 ಮಾರ್ಪಿನ ಒಲವು
inject — ಕ್ರಿ ಒಳತುಂಬು, ಒಳಸೇರಿಸು
injection — ನಾ ಚುಚ್ಚುಮದ್ದು (ಮಗು ಚುಚ್ಚು ಮದ್ದಿಗೆ ಹೆದರುತ್ತದೆ)
injudicious — ಗು ತಿಳಿವಿಲ್ಲದ, ತಪ್ಪಾದ
injunction — ನಾ ಸೆಲವು, ತಡೆಯಾಣೆ
injurious — ಗು ತೊಂದರೆಯ, ಕೆಡುಕಿನ, ಗಾಯಗೊಳಿಸಬಲ್ಲ
injury — ನಾ ಗಾಯ (ಗಾಯಗೊಳ್ಳು; ಗಾಯ ವಾಗು)
ink — ನಾಮಸಿ (ಮಸಿಕಡ್ಡಿ; ಮಸಿಕುಡಿಕೆ)
ink stand — ನಾ ಕುಳ್ಳಿ
inkling — ನಾ ಸುಳಿವು, ಕುರುಹು, ತಿಳಿವು
inland — ಗು ಒಳನಾಡಿನ (ಒಳನಾಡಿನ ಸಾರಿಗೆ)
inlet — ನಾ 1 ಕಡಲಚಾಚು 2 ಹೊಗು ಹಾದಿ
inmate — ನಾ ಒಡನಿರುವವನು, ಒಡತಂಗುಗ
innate — ಗು ಹುಟ್ಟಿನ, ಒಳಗಿನ
inner — ಗು ಒಳ (ಒಳಗಿವಿ, ಒಳಗುದಿ, ಒಳ ಗಣ್ಣು)
innocent — ಗು ತಪ್ಪುಮಾಡದ, ಕೆಡುಕು ಮಾಡದ, ಮೋಸಮಾಡದ
innocuous — ಗು ತೊಂದರೆ ಕೊಡದ ನಾ ಹೊಸ ಹಮ್ಮುಗೆ, ಮಾರ್ಪು
innuendo — ನಾ ಮುಚ್ಚುಮರೆಯ ನುಡಿ, ಓರೆ ಮಾತು
innumerable — ಗು ಎಣಿಸಲಾಗದ, ಲೆಕ್ಕ ವಿಲ್ಲದ
innundation — ನಾ ಮುಳುಗಡೆ
inoffensive — ಗು ಕೆಡುಕು ಮಾಡದ, ತೊಂದರೆ ಕೊಡದ
inopportune — ಗು ಹೊತ್ತುತಪ್ಪಿದ, ಒದಗದ
inordinate — ಗು ಎಲ್ಲಮೀರಿದ, ಅಳತೆ ಮೀರಿದ, ಓರಣಕೆಟ್ಟ
input — ನಾ ಒಳಸೇರಿಕೆ, ಒಳಗಿಕ್ಕುಕೆ
inquire — ಕ್ರಿ ಕೇಳಿತಿಳಿ, ಅರಸು
inquiry — ನಾಅರಕೆ (ಅರಸುವವನ ಅರಕೆ)
inquisitive — ಗು ಕೆದಕುವ (ಆತನದು ಕೆದಕುವ ಪರಿಚೆ), ಅರಿವೊಲವಿನ
inroad — ನಾ 1 ದಿಡೀರ್ದಾಳಿ 2 ಒತ್ತುವರಿ
insane — ಗು ಹುಚ್ಚುಹಿಡಿದ, ತಲೆಕೆಟ್ಟ
insatiable — ಗು ತಣಿಸಲಾಗದ, ಕೆಟ್ಟೆಳಸಿನ
inscribe — ಕ್ರಿ ಬರೆ, ಕೆತ್ತು (ಹೆಸರು ಕೆತ್ತು), ಕೊರೆ
inscription — ನಾ ಬರೆಹ (ಕೆತ್ತಿದ ಬರೆಹ), ಕಲ್ಬರಹ
inscrutable — ಗು ತಿಳಿಯಲಾಗದ, ಬಿಡಿಸ ಲಾಗದ
insect — ನಾಪೂಚಿ, ಹುಳ
insecticide — ನಾ ಪೂಚಿಯಳಿಕ
insecure — ಗು ನೆಚ್ಚಿಕೆಲಿುಲ್ಲದ, ಕುಸಿಯಬಲ್ಲ
insensible — ಗು ಮಿಡುಕದ, ತೆಪ್ಪರಿಸದ
inseparable — ಗು ಬೇರ್ಪಡಿಸಲಾಗದ, ಬಿಡಿಸ ಲಾಗದ
insert — ಕ್ರಿ ಸೆಕ್ಕು (ಸೆಕ್ಕಿಡು), ಎಡೆಗಲಿಸು, ತುರುಬು (ಹೂವನ್ನು ತುರುಬು), ತೂರಿಸು, ತುರುಕು, ನುಗ್ಗಿಸು
insertion — ನಾ ಸೆಕ್ಕೆ
inset — ನಾ ತೂರಿಕೆ
insidious — ಗು ಎರಡೆಣಿಸುವ, ಮೋಸದ
insight — ನಾ ಒಳನೋಟ, ಅರಿವು ನಾ ಗುರುತು
insignificant — ಗು ಕುರುಕ, ಚುಲಕ
insincere — ಗು ಮೋಸದ, ಚದಿಯ
insinuate — ಕ್ರಿ ನುಸುಳಿಸು, ಸುತ್ತುಬಳಸಿ ತಿಳಿಸು
insipid — ಗು ಸಪ್ಪೆ, ಸಪ್ಪಗೆ (ಸಪ್ಪಗಾಗು), ಸಪ್ಪಟೆ, ಚಪ್ಪೆ
insist — ಕ್ರಿ ಒತ್ತಿಹೇಳು, ಪಟ್ಟುಹಿಡಿ
insolence — ನಾ ತೊಂಡು (ತೊಂಡುನಡೆ; ತೊಂಡುನುಡಿ), ಸೊಕ್ಕು
insolent (be) — ಕ್ರಿ ಮಲೆ (ಮಲೆಪು)
insoluble — ಗು 1 ಕರಗದ 2 ಬಿಡಿಸಲಾಗದ, ಬಗೆಹರಿಸಲಾಗದ
insolvent — ಗು ಸಾಲತೀರಿಸಲಾಗದ
insomnia — ನಾ ಒರಗದಿರುವಿಕೆ
insorption — ನಾಒಳಹೀರಿಕೆ
inspect — ಕ್ರಿ ಒರೆದುನೋಡು, ಎಚ್ಚರದಿಂದ ನೋಡು
inspector — ನಾ ಒರೆಗ
inspire — ಕ್ರಿ 1 ಉಸಿರೆಳೆ 2 ಕಡಗು
instability — ನಾ ಕದಲಿಕೆ, ಅಲುಗುವಿಕೆ, ನೆಲೆಗೊಳ್ಳದಿರುವಿಕೆ
install — ಕ್ರಿ ಅಳವಡಿಸು, ಇರಿಸು, ನೆಲೆ ಗೊಳಿಸು, ಅನುಗೊಳಿಸು
instalment — ನಾ ಕಂತು,ಗಡ (ಸಾಲವನ್ನು ಹನ್ನೆರಡು ಗಡಗಳಲ್ಲಿ ತೀರಿಸಬೇಕಾಗಿದೆ)
instance — ನಾ 1 ಎತ್ತುಗೆ 2 ಮೆಟ್ಟಲು (ಮೆಟ್ಟಲು ಮೆಟ್ಟಲಾಗಿ ಮುಂದುವರಿಯ ಬೇಕು)
instant — ನಾ ಚಿಟಿಕೆ (ಒಂದು ಚಿಟಿಕೆಯಲ್ಲಿ ಎಲ್ಲ ಮುಗಿಲಿುತು)
instantly — ಗು ಕೂಡಲೆೀ
instep — ನಾ ಮೇಲಡಿ
instigate — ಕ್ರಿ ಎತ್ತಿಕಟ್ಟು, ಚುಚ್ಚಿಕೊಡು (ಅವನಿಗೆ ಯಾರೋ ಚುಚ್ಚಿಕೊಟ್ಟಿರಬೇಕು)
instill — ಕ್ರಿ 1 ಹನಿಹನಿಯಾಗಿ ತುಂಬು 2 ನಾಟುವಂತೆ ತಿಳಿಸು
instinct — ನಾ ಹುಟ್ಟೊಲವು, ಜಾಣ್ಮೆ
institute — ನಾ ಕಲಿಮನೆ (ಕಲಿಮನೆಗೆ ಇವತ್ತು ಬಿಡುವಿದೆ)
instruct — ಕ್ರಿ ಕಲಿಸು, ಕಲ್ಪಿಸು
instruction — ನಾ ಕಲಿಕೆ ನಾ ಕಲಿಸುಗ
instrument — ನಾ ಮುಟ್ಟು
insubordinate — ಗು ಸೆಲವು ಮೀರುವ, ಬಾಗದ, ತಿರುಗಿ ಬೀಳುವ
insufferable — ಗು ಮಲೆಪಿನ, ತಡೆಯ ಲಾಗದ
insular — ಗು 1 ನಡುಗುಡ್ಡೆಯ 2 ಸಣ್ಣಮನದ
insulate — ಕ್ರಿ ಬೇರ್ಪಡಿಸು, ಮುಚ್ಚು (ಮುಚ್ಚು ಕಂಬಿ), ಹೊದಿಸು
insult — ನಾ ಕೆಕ್ಕಸ (ಆತ ಕೆಕ್ಕಸ ನುಡಿದ)
insuperable — ಗು ಅರಿದಾದ, ಪಾರಾಗ ಲಾಗದ, ಅಣಿಸಲಾಗದ
insurance — ನಾ ಮುನ್ಗಾಪು (ನಮ್ಮ ಮನೆಗೆ ಮುನ್ಗಾಪು ಕೊಂಡುಕೊಂಡಿದ್ದೇವೆ)
insurgent — ಗು ಎದುರುನಿಲ್ಲುವ, ತಿರುಗಿ ಬೀಳುವ
insurmountable — ಗು ದಾಟಲಾಗದ, ತಪ್ಪಿಸಲಾಗದ
insurrection — ನಾ ಎದುರು ನಿಲ್ಲುವುದು, ತಿರುಗಿಬೀಳುವಿಕೆ
intact — ಗು ಗಾಸಿಕೊಳ್ಳದ, ಒಡೆಯದ, ತುಂಡಾಗದ
intangible — ಗು ಮುಟ್ಟಲಾಗದ, ತಿಳಿಯ ಲಾಗದ
integer — ನಾ ಇಡೀ, ತುಂಡಿಸದ, ಇಡೀ ಅಂಕೆ
integral — ಗು ಬೇಕಾಗುವ (ಮುಗಿಸಲು ಬೇಕಾಗುವ), ಇಡೀ
integrate — ಕ್ರಿ ಒಂದುಗೂಡಿಸು, ಇಡಿಯಾ ಗಿಸು, ಬೇರ್ಪಡಿಕೆ ಕಳೆ
integration — ನಾ ಒಂದುಗೂಡುವಿಕೆ, ಒಂದಾ ಗುವಿಕೆ
intellect — ನಾ ತಿಬ್ಬಳಿ (ಆತನಲ್ಲಿ ಒಳ್ಳೇ ತಿಬ್ಬಳಿಲಿುದೆ), ಅರಿವು, ಅರಿವ ಬಲ್ಮ
intelligence — ನಾ 1 ಕಲಿಯುವ ಬಲ್ಮ, ಕಲಿವಳವು 2 ಸುದ್ದಿ, ಗುಟ್ಟು
intelligent — ಗು ಕಲಿವಳವುಳ್ಳ, ಚುರುಕು
intelligible — ಗು ತಿಳಿಯಬಲ್ಲ, ತಿಳಿಯಾದ, ಹುರುಳರಿವ
integrity — ನಾ ನಾಣ್ಯ, ನೆರತೆ
intemperate — ಗು ಮಸಗುವ, ಕುಡುಕನಾದ
intend — ಕ್ರಿ ಬಯಸು, ಈಡಿರಿಸು, ಅಂದು ಕೊಳ್ಳು,
intense — ಗು ಕಡು (ಕಡುಮುಳಿಸು, ಕಡು ಕೇಡು, ಕಡುಬಡವ, ಕಡುಬಿಸಿಲು), ಬಿರುಸು (ಬಿರುಸು ಗಾಳಿಮಳೆ)
intensify — ಕ್ರಿ ಕಡುಮೆಗೊಳಿಸು, ಬಿರುಸು ಗೊಳಿಸು ನಾ ಕಡುಹು, ಕಡುಮೆ
intent — ನಾ ಬಯಕೆ, ಈಡು
intent — ಗು ಗಟ್ಟಿಮಾಡಿದ, ಕೊಸರುವ, ಎಣಿಕೆಯ
intention — ನಾ ಅಳಬು (ಅವನು ಹಾಗೆ ಹೇಳಿದುದರ ಅಳಬೇನು?), ಎನುಹ, ಎಣಿಕೆ (ಏನೋ ಎಣಿಕೆ ಹಾಕಿ ಬಂದಿದ್ದಾನೆ)
intentional — ಗು ಬೇಕೆಂದೇ ಮಾಡಿದ, ತಿಳಿದು ಮಾಡಿದ
inter — ಕ್ರಿ ಹೂಳು, ಹುಗಿ
intercede — ಕ್ರಿ ನಡುವೆ ಬರು
intercept — ಕ್ರಿ ತಡೆಯೊಡ್ಡು, ತಡೆಹಿಡಿ
interchange — ಕ್ರಿ ಅದಲುಬದಲು ಮಾಡು, ಮಾರು
intercom — ನಾ ಒಳಪತ್ತುಗೆ (ಅವರೊಡನೆ ಒಳಪತ್ತುಗೆಯಲ್ಲಿ ಮಾತನಾಡಿದೆ)
intercourse — ನಾ ಕೊಡುಕೊಳೆ, ಮಾರ್ಪು
interest — ನಾ 1 ಹಕ್ಕು, ಪಾಲು 2 ನೆಮ್ಮದಿ, ಸೆಲೆ 3 ಕಳಕಳಿ, ಅರಕೆ 4 ಬಡ್ಡಿ (ಸಾಲಪಡೆದುದಕ್ಕೆ ಬಡ್ಡಿ; ಮಾರ್ಪಡ್ಡಿ - ಬಡ್ಡಿಯ ಮೇಲೆ ಅವರಿಗೆ ಮಾರ್ಪಡ್ಡಿ ಬೇರೆ ಕೊಡಬೇಕು)
interest (in grain) — ನಾ ಹೊಲಿ (ಅವರು ಹೊಲಿಗೆ ಅಕ್ಕಿ ಕೊಡುತ್ತಾರೆ)
interesting — ಗು ಮನಸೆಳೆವ, ಗಮನಸೆಳೆವ
interfere — ಕ್ರಿ ತಲೆಹಾಕು, ನಡುವೆ ಬರು
interim — ನಾ ನಡುವಿನ ಹೊತ್ತು
interim — ಗು ತುಸುಹೊತ್ತಿಗೆ
interior — ನಾ ಒಳನಾಡು
interject — ಕ್ರಿ ಒಳಸೇರಿಸು, ನಡುವೆ ಸೇರಿಸು
interjection — ನಾ 1 ನಡುಸೇರಿಕೆ 2 ಬೆರಗು ನುಡಿ
interlace — ಕ್ರಿ ಹೆಣೆ, ಸೇರಿಕೊಳ್ಳು
interlap — ಕ್ರಿ ಅಡ್ಡಹಾಯು, ಒಂದರ ಮೇಲೊಂದು ಕೂರು
interleaf — ನಾ ನಡುಹಾಳೆ, ಎಡೆಹಾಳೆ
interlinear — ಗು ಗೆರೆಗಳ ನಡುವಿನ (ಗೆರೆಗಳ ನಡುವಿನ ಬರಹ ನನ್ನದು)
interlock — ಕ್ರಿ ಒಟ್ಟಿಗೆ ಸೇರಿಸು, ಒಂದ ಕ್ಕೊಂದು ಕೂಡಿಸು ನಾ ಸೂಳುನುಡಿ
interloper — ನಾ ಹಕ್ಕಿಲ್ಲದೆ ಹೊಕ್ಕವನು, ನಡುವೆ ತಲೆಹಾಕುವವನು
interlude — ನಾ ಬಿಡುವು (ಬಿಡುವಿನಲ್ಲಿ ಹೊರಗೆ ಬಂದ), ಬಿಡುವಿನ ಹಾಡು
intermarriage — ನಾ ಬೆರೆಕೆ ಮದುವೆ
intermediary — ನಾ ನಡುವಿಗ, ನಡುವೆ ಬರುವವನು
intermediate — ಗು ನಡುವಣ
interment — ನಾ ಹುಗಿತ, ಹೂಳುವಿಕೆ (ಹೆಣ ಹೂಳುವಿಕೆ ಇನ್ನೂ ನಡೆದಿಲ್ಲ)
intermezzo — ನಾ ಬಿಡುವಿನ ಹಾಡು
interminable — ಗು ಕೊನೆಲಿುಲ್ಲದ, ಮುಗಿ ಯದ
intermingle — ಕ್ರಿ ಒಟ್ಟುಸೇರು, ಬೆರೆ
intermission — ನಾ ಬಿಡುವು
intermittent — ಗು ತಡೆತಡೆದು ಬರುವ, ಎಡೆಬಿಟ್ಟು ನಡೆಯುವ
intermix — ಕ್ರಿ ಒಟ್ಟುಬೆರೆ, ಕಲೆ, ಒಂದಾಗು
intern — ನಾ ಕಲಿಕೆಯವನು
intern — ಕ್ರಿ ಕೂಡಿಡು
internal — ಗು ಒಳಾಳ್ವಿಕೆಯ, ಒಳಗಿನ, ಒಳ ಗಡೆಯ
internalize — ಕ್ರಿ ಒಳಮಾಡು
international — ಗು ನಾಡುನಡುವಿನ
internecine — ಗು ಒಬ್ಬನನ್ನೊಬ್ಬ ಕೊಲ್ಲುವ, ಒಳಜಗಳದ
internet — ನಾ ನಡುಬಲೆ
interpolate — ಕ್ರಿ ನಡುವೆ ಸೇರಿಸು, ಒಳ ತೂರಿಸು
interpose — ಕ್ರಿ ನಡುವೆ ಸೇರಿಸು, ನಡುವೆ ಮಾತೆತ್ತು, ನಡುವೆ ಬರು, ಅಡ್ಡಿಮಾಡು
interpret — ಕ್ರಿ ಬಿಡಿಸಿ ಹೇಳು (ಈ ಮಾತನ್ನು ಬಿಡಿಸಿ ಹೇಳಿ), ನುಡಿಮಾರು
interpreter — ನಾ ಇನ್ನುಡಿಗ, ನುಡಿಮಾರುಗ (ಅವರು ತಮ್ಮೊಂದಿಗೆ ಒಬ್ಬ ನುಡಿಮಾರುಗ ನನ್ನೂ ಕರೆತಂದಿದ್ದರು)
interrogate — ಕ್ರಿ ಕೇಳಿತಿಳಿ, ಕೇಳ್ವಿಕೇಳು
interrogative — ನಾ ಕೇಳ್ವಿ
interrupt — ಕ್ರಿ ಎಡೆವರಿ (ಎಡೆವರಿಯದೆ ಮಿಂಚು ಮಿಂಚುತ್ತಿದೆ), ತಡೆ, ಅಡ್ಡಿಮಾಡು ಕ್ರಿ ಅಡ್ಡಹಾಯು, ಅಡ್ಡ ತುಂಡಿಸು
intersperse — ಕ್ರಿ ಅಲ್ಲಲ್ಲಿ ಚೆಲ್ಲು
interstice — ನಾ ಬಿರುಕು, ಬೀಡು, ಕೊರಕಲು
intertwine — ಕ್ರಿ ಹೆಣೆ,ತೆತ್ತು (ತೆತ್ತಿ ಕೊಂಡಿರುವ ಹಾವುಗಳು)
interval — ನಾ ಎಡೆ (ಎಡೆಬಿಡದೆ; ಎಡೆದೆರಪು; ಎಡೆದೆರಹು - ಎಡೆದೆರಹಿಲ್ಲದೆ ಕೆಲಸ ಮಾಡು),ತೆರವು (ತೆರವು ದೊರೆತಾಗಲೆಲ್ಲ ಬರೆಯುತ್ತಿದ್ದೆ),ಬಿಡಿಕೆ, ಬಿಡಿತೆ
intervene — ಕ್ರಿ ಅಡ್ಡಿಮಾಡು, ನಡುವೆ ಬರು
interview — ನಾ ಕಾಣ್ಮೆ
intestine — ನಾ ಕೊಡಲೆ, ಕರುಳು (ದೊಡ್ಡ ಕರುಳು; ಸಣ್ಣ ಕರುಳು)
intimacy — ನಾ ಅಚ್ಚು (ಅಚ್ಚುಮೆಚ್ಚು), ಸಲಿಗೆ (ನಮ್ಮೊಳಗೆ ಸಲಿಗೆಲಿುಲ್ಲ)
intimate — ಗು ಪಚ್ಚುಗೆಯ, ಹತ್ತಿರದ, ಸಲಿಗೆಯ
intimation — ನಾ ತಿಳಿವು, ಹೇಳಿವು
intimidation — ನಾ ಬೆದರಿಕೆ (ನಿಮ್ಮ ಬೆದರಿಕೆಗೆ ನಾವು ಯಾರೂ ಹೆದರುವುದಿಲ್ಲ)
intolerable — ಗು ತಡೆಯಲಾಗದ, ತಳೆಯ ಲಾಗದ, ಎಗ್ಗಿನ, ಕಿತ್ತಡದ (ಕಿತ್ತಡದ ಕಾಣ್ಕೆ)
intolerance — ನಾಕಿಸುರು (ಕಿಸುರಿನಿಂದಾಗಿ ಆತ ಯಾರೊಂದಿಗೂ ಹೊಂದಿಕೊಳ್ಳಲಾರ)
intone — ಕ್ರಿ ಹಾಡಾಡು, ಎಸೆನುಡಿ
intoxicate — ಕ್ರಿ ಸೊಕ್ಕು (ಸೊಕ್ಕಿದ ಆನೆ; ಸೊಕ್ಕಿ ನಡೆಯುವಾತ)
intractable — ಗು ಅಸಕೊಳ್ಳಲಾಗದ, ಪಳ ಗಿಸಲಾಗದ, ಮೊಂಡು (ಈ ನಾಲಿು ಬರೀ ಮೊಂಡು)
intransigent — ಗು ಒಪ್ಪದ, ಬಿಟ್ಟುಕೊಡ ಲಾಗದ, ಪಟ್ಟುಬಿಡದ
intransitive — ಗು ಒರ್ಪಾಲ್ಗೂಳ್ಳುವ (ಇದು ಒರ್ಪಾಲ್ಗೂಳ್ಳುವ ಎಸಕಪದ)
intrepid — ಗು ಹೆದರದ, ಅಂಜದ, ಕೆಚ್ಚಿನ
intricate — ಗು ಸಿಕ್ಕುಸಿಕ್ಕಾದ, ತೊಡಕಿನ
intrigue — ನಾಸಂಚು, ಒಳಸಂಚು
intrinsic — ಗು ಒಳಗಿನ, ಪರಿಚೆಯ
introduce — ಕ್ರಿ 1 ಗುರುತು ಮಾಡಿಸು 2 ಮುಂದಿಡು, ಮುಂಗಾಣಿಸು, ಮೊದಲು ಮಾಡು 3 ಬಳಕೆಗೆ ತರು
introduction — ನಾ 1 ಮುನ್ನೋಟ 2 ಗುರುತು (ಗುರುತು ಮಾಡಿಸು) ನಾ ಒಳನೋಟ (ತನಗೆ ಏನನಿಸುತ್ತಿದೆಯೆಂಬುದನ್ನು ತಿಳಿಯಲು ಒಳನೋಟ ಹರಿಸಿದ)
introvert — ನಾ ಒಳಸೇರುವ, ಸಿಗ್ಗಿನ, ಬೆರೆ ಯದ (ಯಾರೊಂದಿಗೂ ಬೆರೆಯದಾತ)
intrude — ಕ್ರಿ ಒಳನುಗ್ಗು, ಹೇಳದೆ ಬರು, ತಲೆಹಾಕು (ಅವನು ಯಾಕೆ ಇಲ್ಲಿ ತಲೆಹಾಕ ಬೇಕು?)
intuition — ನಾ ಒಳ ಅರಿವು, ನೇರ ಅರಿವು
inundate — ಕ್ರಿ ನೆರೆಬರು, ಮುಳುಗಿ ಹೋಗು
inundation — ನಾ ಮುಳುಗಡೆ
inure — ಕ್ರಿ ಬಳಕೆಯಾಗು
invade — ಕ್ರಿ ಎತ್ತಿಹೋಗು, ಮುತ್ತಿಗೆ ಹಾಕು
invalid — ಗು 1 ಸೊಪ್ಪಿದ, ಕುತ್ತದ 2 ಸರಿ ಲಿುಲ್ಲದ, ಕೆಟ್ಟುಹೋದ, ಬಳಕೆತಪ್ಪಿದ
invaluable — ಗು ಬೆಲೆಕಟ್ಟಲಾಗದ
invariable — ಗು ಮಾರ್ಪಡದ, ನೆಲೆನಿಂತ
invasion — ನಾ ಮುತ್ತಿಗೆ, ಒಳನುಗ್ಗಿಕೆ
invective — ನಾ ಕೆಕ್ಕಸ, ಬಯ್ಗಳು, ಪಳಿವು
inveigle — ಕ್ರಿ ಮರುಳುಮಾಡು, ಮನವೊಲಿಸು
invent — ಕ್ರಿ ಕಂಡುಹಿಡಿ, ಹುಟ್ಟಿಸು
inventory — ನಾ ಪಟ್ಟಿ (ಪಟ್ಟಿಮಾಡು)
inverse — ಗು ತಿರುಗುಮುರುಗು, ಮಾರು
invert — ಕ್ರಿ ಮಗುಚು, ಕವುಚು (ಬಟ್ಟಲನ್ನು ಕವುಚಿ ಇರಿಸಿದಳು)
inverted — ಗು ಬೋರಲು
invest — ಕ್ರಿ 1 ಹೂಡು (ಹಣಹೂಡು), ತೊಡಗಿಸು 2 ಬಟ್ಟೆತೊಡು, ಉಡು
investigate — ಕ್ರಿ ಆರಯ್ಯು (ಎಲ್ಲವನ್ನೂ ಆರಯ್ದು ತಿಳಿಯಬೇಕು)
investigator — ನಾ ಅರಸಿಗ (ಅರಸಿಗರು ಇಲ್ಲಿಗೂ ಬಂದಿದ್ದರು)
investment — ನಾ ಹೂಡಿಕೆ, ತೊಡಗಿಕೆ
inveterate — ಗು ನೆಲೆನಿಂತ, ಬಳಕೆಯಾದ
invidious — ಗು ಹೊಟ್ಟೆ ಉರಿಸಬಲ್ಲ, ಪೆಡಸು
invigilate — ಕ್ರಿ ಕಾವಲಿರು, ಕಣ್ಣಿಟ್ಟಿರು
invigorate — ಕ್ರಿ ಅಳವುಹೆಚ್ಚಿಸು, ಬಲ್ಮ ಹೆಚ್ಚಿಸು ಗು ಗೆಲ್ಲಲಾಗದ
inviolable — ಗು ಮೀರಲಾಗದ, ಮೀರ ಬಾರದ, ಕೆಡಿಸಬಾರದ
invisible — ಗು ಕಣ್ಮರೆ, ಕಾಣದ (ಇಲ್ಲಿ ಕಾಣದ ಕಯ್ಗಳು ಕೆಲಸಮಾಡಿವೆ)
invitation — ನಾಹೇಳಿಕೆ,ಕರಹ, ಕರೆ (ಕರೆಯೋಲೆ); ಕರೆತ, ಬಿರ್ದು
invite — ಕ್ರಿ ಕರೆ (ಕರೆಕಳಿಸು; ಕರೆತರು), ಬರ ಮಾಡು
inviting — ಗು ಮನಸೆಳೆವ
invoice — ನಾ ಬೆಲೆಪಟ್ಟಿ
invoke — ಕ್ರಿ ಬೇಡು, ಕೋರು, ಮೊರೆಲಿುಡು
involuntary — ಗು ತಿಳಿಯದೆ ಮಾಡಿದ, ಅಂಕೆಯಲ್ಲಿಲ್ಲದ, ಹತೋಟಿಯಲ್ಲಿಲ್ಲದ
involve — ಕ್ರಿ ತೊಡಕು (ಅವರ ಕೆಲಸದಲ್ಲಿ ಇವನೂ ತೊಡಕಿಕೊಂಡಿದ್ದಾನೆ; ತೊಡ ಕಿಸು), ತೊಡಗು (ಎಲ್ಲರೂ ಕೆಲಸದಲ್ಲಿ ತೊಡಗಿದ್ದಾರೆ), ಒಳಗೊಳ್ಳು
inward — ಗು ಒಳಗಿನ, ಒಳಗಿರುವ
iota — ನಾ ಬಾರೀ ಕಡಿಮೆ
irascible — ಗು ಕೆರಳುವ, ರೇಗುವ
irate — ಗು ಸಿಟ್ಟಿಗೆದ್ದ (ಸಿಟ್ಟಿಗೆದ್ದ ಮಂದಿ)
ire — ನಾ ಸಿಟ್ಟು, ಮುನಿಸು (ಅವನ ಮುನಿಸು ಈಗ ನನ್ನ ಮೇಲಿದೆ)
iris — ನಾ ಕಣ್ಪೊರೆ, ಪಾಪೆ
irksome — ಗು ಬೇಸರಿಸುವ, ತಲೆಚಿಟ್ಟು ಹಿಡಿಸುವ (ಅವನದೊಂದು ತಲೆಚಿಟ್ಟು ಹಿಡಿಸುವ ಕೆಲಸ)
iron — ನಾಕಬ್ಬಿಣ,ಕಾರ್ಬೊನ್ನು
irony — ನಾ ಅಣಕಾಟ,ಕಟಕಿ (ಕಟಕಿ ಮಾತು)
irrational — ಗು ತಕ್ಕುದಲ್ಲದ, ನೇರ್ಪಲ್ಲದ, ಕಟ್ಟಲೆತಪ್ಪಿದ
irreconcilable — ಗು ಹೊಂದಲಾಗದ, ಹೊಂದಾಣಿಕೆಲಿುಲ್ಲದ, ಒಟ್ಟು ಸೇರದ
irrecoverable — ಗು ಮರಳಿ ಪಡೆಯಲಾಗದ, ತಿದ್ದಲಾಗದ, ಸರಿಪಡಿಸಲಾಗದ
irredeemable — ಗು ಹಿಂದೆ ತರಲಾಗದ, ಹಣಪಡೆಯಲಾಗದ (ಅವರ ಹೂಡಿಕೆ ಗಳೆಲ್ಲ ಹಣಪಡೆಯಲಾಗದ ಹೂಡಿಕೆ ಗಳು), ಸರಿಪಡಿಸಲಾಗದ
irrefutable — ಗು ಅಲ್ಲಗಳೆಯಲಾಗದ
irregular — ಗು ಕಟ್ಟಲೆಮೀರಿದ, ನೇರವಲ್ಲದ, ಒಂದೇ ತರವಿಲ್ಲದ ಗು ತಕ್ಕುದಲ್ಲದ (ನಿಮ್ಮದು ತಕ್ಕುದಲ್ಲದ ಹೇಳಿಕೆ)
irresistible — ಗು ತಡೆಯಲಾಗದ, ಬಲ್ಮಯ, ಎದುರಿಸಲಾಗದ
irresolute — ಗು ತೀರ್ಮಾನಿಸದ (ಯಾವುದನ್ನೂ ಸರಿಯಾಗಿ ತೀರ್ಮಾನಿಸದ ಹುಡುಗ), ಹಿಂಜರಿ ಯುವ, ಹಿಮ್ಮೆಟ್ಟುವ
irresponsible — ಗು ಹೊಣೆಗೇಡಿ (ಹೊಣೆ ಗೇಡಿ ಹುಡುಗ)
irrevocable — ಗು ಕೊನೆಯ (ಇದು ನಮ್ಮ ಕೊನೆಯ ತೀರ್ಮಾನ), ಮಾರ್ಪಡಿಸಲಾಗದ
irrigate — ಕ್ರಿ ನೀರುಹಾಲಿುಸು, ನೀರೊದಗಿಸು
irritable — ಗು ಸಿಡುಕಿನ, ರೇಗುವ
irritate — ಕ್ರಿ ಕೆರಳಿಸು, ನೋಲಿುಸು (ತಾಲಿು ಯನ್ನು ನೋಲಿುಸುವ ಮಗ)
island — ನಾ ಗಂಟೆ, ನಡುಗುಡ್ಡೆ (ಈ ಕಡಲಿನಲ್ಲಿ ಹಲವು ನಡುಗುಡ್ಡೆಗಳಿವೆ), ಕುರವ, ಕುದುರು (ಹೊಳೆಯ ನಡುವಿನ ಕುದುರು), ತೆವರು
isle — ನಾ ನಡುಗುಡ್ಡೆ, ಕುದುರು (ಅವರ ಮನೆ ಒಂದು ಕುದುರಿನಲ್ಲಿದೆ)
islet — ನಾ ಕಿರುಕುದುರು
isolate — ಕ್ರಿ ಬೇರ್ಪಡಿಸು, ಬೇರೆ ಮಾಡು
isolation — ನಾ ಒಂಟಿತನ, ಬೇರ್ಪಡಿಕೆ (ಆತ ನನ್ನು ಬೇರ್ಪಡಿಕೆಯಲ್ಲಿರಿಸಿದ್ದರು)
issue — ನಾ 1 ಮಗು 2 ಹರಿವು 3 ಹಂಚಿಕೆ 4 ಹೋಬಳು, ಕೋಡಿ
issue — ಕ್ರಿ ಹೊರಬಿಡು, ಒದಗಿಸು
isthmus — ನಾ ನೆಲಸಾರ, ನೆಲಕೂಡಿಕೆ
itch — ನಾ ನವೆ (ನವೆ ಹತ್ತು, ನವೆಯಾಗು), ನಸೆ, ಕಜ್ಜಿ, ತುರಿ (ತುರಿಸು; ತುರಿಕಜ್ಜಿ), ತುರಿಕೆ, ತಿಂಡಿ, ತಿಮರ (ತಿಮರ ತುರಿಸಿದರೆ ಅರಸಿನ ಹಾಗೆ ಅನಿಸುತ್ತದೆ), ನುಲಿ, ಕಸರು (ಕತ್ತಿನ ಕಸರು), ಸಾಲೆ (ಬೆವರುಸಾಲೆ)
itch — ಕ್ರಿತುರಿಸು, ಕಡಿ (ಆತನಿಗೆ ಬೆನ್ನು ಕಡಿಯು ತ್ತಿದೆ)
itching — ನಾಕೊಡೆತ,ತುರಿತ,ದೂಲೆ, ತೀಟೆ (ನಾಲಿಗೆಯ ತೀಟೆ)
itching plant — ನಾತುರಿಚೆ (ಈ ತೋಟ ದಲ್ಲಿ ತುರಿಚೆ ಗಿಡಗಳು ತುಂಬಾ ಇವೆ)
item — ನಾ ಬಗೆ (ಊಟಕ್ಕೆ ಎರಡು ಬಗೆಯ ಸಿಹಿತಿಂಡಿಗಳನ್ನು ಮಾಡಿದ್ದರು)
itenary — ನಾ 1 ದಾರಿ 2 ನಡೆಪಾಡಿನ ಹಮ್ಮುಗೆ
itinerant — ನಾ ಅಲೆಮಾರಿ
ivory — ನಾ ನಿಗ್ಗವ (ನಿಗ್ಗವದ ಕರಂಡಕ), ಪನೆ jab — ಕ್ರಿ ಇರಿ, ಕುತ್ತು, ಗುದ್ದು
jabber — ನಾ ಬಡಬಡಿಕೆ, ಹುರುಳಿಲ್ಲದ ಮಾತು
jack — ನಾಎತ್ತುಗ
jackal — ನಾ ನರಿ
jackass — ನಾ 1 ಗಂಡು ಕತ್ತೆ 2 ಹೆಡ್ಡ, ದಡ್ಡ
jacket — ನಾ 1 ನಡುವಂಗಿ 2 ಹಾಳೆ ಹೊದಿಕೆ, ಹೊರಹೊದಿಕೆ
jackfruit — ನಾಹಲಸು (ಹಲಸಿನ ಹಣ್ಣು)
jackpot — ನಾ ಕೂಡುವ ಒಡ್ಡ (ಕೂಡುವ ಒಡ್ಡ ಹತ್ತುಸಾವಿರಕ್ಕೆ ಮುಟ್ಟಿದೆ)
jade — ನಾ ನಸುಹಸಿರು
jaded — ಗು 1 ಬಳಲಿದ, ದಣಿದ (ದಣಿದ ಮೋರೆ) 2 ಸಿಡಿಯಾದ, ತಣಿದ
jaggary — ನಾ ಬೆಲ್ಲ (ಬೆಲ್ಲದ ಸವಿ; ಬೆಲ್ಲ ದಚ್ಚು; ಬೆಲ್ಲದುಂಡೆ)
jagged — ಗು ಕರಕು, ಗರಕು (ಬಾಗಿಲಿನ ಅಂಚು ಗರಕಾಗಿದೆ)
jail — ನಾ ಸೆರೆಮನೆ
jam — ನಾ 1 ನೂಕುನುಗ್ಗಲು, ಇರುಕು 2 ಬೆರಟಿ (ಹಲಸಿನ ಹಣ್ಣಿನ ಬೆರಟಿ)
jam — ಕ್ರಿ 1 ಜಜ್ಜು, ಅಮುಕು, ಹಿಸುಕು 2 ಕಿಕ್ಕಿ, ತಿಂತಿಣಿಸು 3 ಆಪು ಹಾಕು, ಬೆಣೆ ಹೊಡೆ
jamb — ನಾ ಬಾಗಿಲ ನಿಲುವು, ಬಾಗಿಲ ಬದಿ
jangle — ಕ್ರಿ ಕೂಗಾಡು, ಕಿರಿಚಾಡು, ಜಗಳಾಡು
janitor — ನಾ ಕಂಬಿಗ
jar — ಕ್ರಿ 1 ಕುಲುಕು, ಕಿರುಗುಟ್ಟಿಸು 2 ಜಗಳಾಡು
jargon — ನಾ ಕೀಸರ, ತೊಂಡು
jaundice — ನಾ 1 ಅರಸಿನಕುತ್ತ 2 ಕರುಬಿನ ಕಹಿ
jaunt — ನಾ ಕಿರುನಡೆಪಾಡು
jaunty — ಗು ಹಿಗ್ಗಿನಲ್ಲಿರುವ, ಒಯ್ಯಾರದ
jaw — ನಾಅವುಡು, ದವಡೆ (ದವಡೆಗೆ ಬಲಿ ಯಾಗು; ದವಡೆ ಹಲ್ಲು)
jealous (be) — ಕ್ರಿ ಕರುಬು (ನಿನ್ನ ಏಳಿಗೆ ಯನ್ನು ನೋಡಿ ಕರುಬುವವರಿದ್ದಾರೆ) ಗು ಎಚ್ಚರಿಕೆಲಿುಂದ (ಎಚ್ಚರಿಕೆ ಲಿುಂದ ಕಾಯು)
jealousy — ನಾ ಪುರುಡು (ಪುರುಡು ಮಾತು), ನಂಜು (ನಂಜುನುಡಿ),ಹುರುಡು
jeer — ಕ್ರಿ ಅಣಕಿಸು, ಎಕ್ಕರಿಸು, ಹೀಗಳೆ, ಗೇಲಿ ಮಾಡು, ಜರೆ (ಜರೆದಾಡು)
jejune — ಗು ತಣಿಸದ, ಮೆಚ್ಚುಗೆಯಾಗದ
jeopardize — ಕ್ರಿ ಕುತ್ತಕ್ಕೆ ಸಿಲುಕಿಸು, ಇಕ್ಕಟ್ಟಿಗೆ ತಳ್ಳು
jeopardy — ನಾ ದೊಡ್ಡ ಕುತ್ತ, ಗೊಡ್ಡ, ತತ್ತು
jerk — ಕ್ರಿ 1 ಎಳೆ, ಜಗ್ಗು, ತಳ್ಳು 2 ಸರಕ್ಕನೆ ಸರಿ
jerkin — ನಾ ನಡುವಂಗಿ
jerky — ಗು ನಿಂತುನಿಂತು (ನಿಂತುನಿಂತು ಹೋಗು)
jerry-built — ಗು ಕಳಪೆ (ಕಳಪೆ ಕಟ್ಟಡ)
jest — ಕ್ರಿ ಅಣಕಿಸು, ಗೇಲಿಮಾಡು
jester — ನಾ ಕೋಡಂಗಿ, ನಗೆಗಾರ
jet — ನಾ ಚಿಮ್ಮುಗೆ
jet — ಕ್ರಿ ಚಿಮ್ಮು
jet — ಗು ಕಡು (ಕಡುಕಪ್ಪು)
jetsam — ನಾ ಕಡಲಿನ ಕಸಕಡ್ಡಿ
jettison — ಕ್ರಿ ಹೊರಗೆಸೆ (ಮುಳುಗುತ್ತಿರುವ ಹಡಗಿನಿಂದ ಎಲ್ಲವನ್ನೂ ಹೊರಗೆಸೆಯು ತ್ತಿದ್ದರು)
jetty — ನಾ ಬಂದರು ಕಾಪು, ದಂಡೆ
jewel — ನಾ ಒಡವೆ
jeweller — ನಾ ಒಡವೆ ಹರದ
jib — ಕ್ರಿ ಮುಂದೆಹೋಗದಿರು, ಬೆಚ್ಚಿನಿಲ್ಲು
jiggle — ಕ್ರಿ ಕುಣಿ, ಹಾರಾಡು
jigsaw — ನಾ ಕಿರುಗರಗಸ
jilt — ಕ್ರಿ ನಂಬಿಕೆಕಳೆ (ಮದುವೆಯಾಗುತ್ತೇನೆಂದ ವನು ನಂಬಿಕೆಕಳೆದ)
jingle — ಕ್ರಿ ಕಿಣಿಕಿಣಿ ಉಲಿ (ಕುಣಿತದ ಕಿಣಿಕಿಣಿ ಉಲಿ ಕೇಳಿಸುತ್ತಿದೆ)
jitter — ಕ್ರಿ ತಳಮಳಿಸು, ದಿಗಿಲುಗೊಳ್ಳು
jive — ಕ್ರಿ ದೊಡ್ಡದುಮಾಡು, ದಾರಿತಪ್ಪಿಸು ನಾ ಕೆಲಸ (ಕೆಲಸಕ್ಕೆ ಸೇರು; ಕೆಲಸವಿಲ್ಲದೆ ತಿರುಗು), ಹೋರೆ (ಬಾಳು ಸಾಗಿಸಲು ಒಂದು ಹೋರೆ ಬೇಕು), ಊಳಿಗ (ಊಳಿಗ ದವ, ಊಳಿಗಿತ್ತಿ)
jockey — ಕ್ರಿ ಮೋಸಮಾಡು, ತಿಂದುಹಾಕು
jocular — ಗು ನಗಿಸುವ, ಗೆಲುವು ತುಂಬಿದ
jocund — ಗು ಹದುಳಿರುವ, ಹಿಗ್ಗುವ, ಕನಿ ಕರಿಸುವ
jog — ಕ್ರಿ 1 ಅಲುಗಿಸು, ಕುಲುಕು, ತಳ್ಳು 2 ಒಯ್ಯನೆ ನಡೆ
joggle — ಕ್ರಿ ಕುಲುಕು
join — ಕ್ರಿ (ಆ) ಬೆರೆ (ನೀರು ಬೆರೆತ ಹಾಲು), ನೆರೆ (ಹಲವು ಮಂದಿ ನೆರೆದ ಕೂಟ), ಕಲೆ (ಮೂವರೂ ಅಲ್ಲಿ ಕಲೆತಿದ್ದಾರೆ), ಕೂಡು (ಒಗ್ಗೂಡು), ಸೇರು (ಸೇರ್ಪಡು; ಸೇರ್ಪಡೆ), ಕಚ್ಚು, ಕೆಚ್ಚು (ಕೆಚ್ಚುಗಟ್ಟು; ಕಡಿದ ನೂಲನ್ನು ಕೆಚ್ಚು), ಕದೆ, ತೊಡರು (ಕಾಲಿಗೆ ತೊಡರಿದ ಬೀಳಲು), ಪುದು (ಪುದುಗೊಳ್ಳು; ಪುದು ಬಾಳು), ಹೊದ್ದು (ಮಾ) ಪೊಸಲಿುಸು (ಹೂಗಳನ್ನು ಪೊಸಲಿುಸು), ಕಲೆ (ಕಲೆ ಹಾಕು), ಹೂಡು, ನಿರಿ (ಕಯ್ಗಳನ್ನು ನಿರಿದಿ ದ್ದಾಳೆ), ಜೋಡಿಸು, ನೆರಹು (ಬಹಳ ಹಣ ನೆರಹಿದ್ದಾನೆ), ಒಟ್ಟು (ಒಟ್ಟಿದ ಕಟ್ಟಿಗೆ; ಒಟ್ಟಯ್ಸು), ಕೂರಿಸು, ತರು (ತತ್ತು ಉದ್ದ ಮಾಡಿದ್ದಾನೆ), ಕೂಡಿಸು, ತೆತ್ತಿಸು, ಮುಗಿ (ಕಯ್ಮುಗಿ)
join together — ಕ್ರಿ ಮಡು (ಮಟ್ಟ ತುಂಡು ಗಳು), ಒಟ್ಟುಗೂಡು
joining — ನಾ ಪತ್ತಿಗೆ (ಪತ್ತಿಗೆಯ ಆರಂಬ), ಮದ (ಮದಮಕ್ಕಳು; ಮದುವೆ), ಈಡು, ಕೂಡಿಕೆ, ತೋಡು (ಕೂಡಿ ತೋಡಾದ ಹಕ್ಕಿ ಗಳು), ಜೋಡಣೆ, ಹೂಟ (ಹೂಟದ ಎತ್ತು), ಮಡುಹ
joint — ನಾಗಿಣ್ಣು (ಬಿದಿರ ಗಿಣ್ಣು),ಮೊಣ (ಮೊಣಕಾಲು, ಮೊಣಕೈ),ಜಂಟಿ (ಜಂಟಿಹಾಕು; ಜಂಟಿಸು),ಗಣಿಕೆ (ಕಬ್ಬಿನ ಗಣಿಕೆ), ಗಂಟು
joint-family — ನಾ ಕೂಡೊಕ್ಕಲು
joist — ನಾ ಅಡ್ಡತೊಲೆ
joke — ನಾ ನಗುನುಡಿ (ಎಲ್ಲರೂ ಒಂದೊಂದು ನಗುನುಡಿ ಹೇಳಿ), ನಗೆವಳಿ
joke — ಕ್ರಿ ನಗಿಸು, ಗೇಲಿಮಾಡು
joker — ನಾನಗೆಗಾರ,ಕೋಡಂಗಿ
jolly — ಗು ಗೆಲುವಿನ, ನಗಿಸುವ
jolt — ಕ್ರಿ 1 ಎತ್ತಿಹಾಕು, ಕುಲುಕು 2 ಬೆಚ್ಚಿಸು
jostle — ಕ್ರಿ 1 ತಳ್ಳು, ನೂಕು 2 ಹೋರಾಡು, ಸೆಣಸು
jot — ನಾ ತುಸು, ಕೊಂಚ
jot — ಕ್ರಿ ಗುರುತು ಹಾಕಿಕೊಳ್ಳು, ಅಡಕವಾಗಿ ಬರೆ ನಾ 1 ನಾಳ್ಕಡತ 2 ನಡವಳಿ ಬರಪ 3 ಸುದ್ದಿಹಾಳೆ, ಗಡುಕಡತ
journalism — ನಾ ಸುದ್ದಿಗಾರಿಕೆ
journalist — ನಾ ಸುದ್ದಿಗಾರ
journey — ನಾ ನಡೆಪಾಡು
jovial — ಗು ಗೆಲುವಿನ, ಚಲ್ಲಡುವ
jowl — ನಾ ಕೆಳದವಡೆ
joy — ನಾಒಸಗೆ (ಒಸಗೆ ಬೀರು), ನಲಿವು, ಹಿಗ್ಗು, ಹಿಗ್ಗಣೆ
jubilant — ಗು ಹಿಗ್ಗಿದ, ಗೆದ್ದು ಮೆರೆಯುವ
jubilee — ನಾ ಹಬ್ಬ, ಮೆರೆತ
judge — ನಾ ತೀರ್ಪುಗಾರ
judgment — ನಾ ತೀರ್ಪು (ನಿಮ್ಮಿಬ್ಬ ರೊಳಗಿನ ತೋಟಿಗೆ ಇವತ್ತು ತೀರ್ಪು ಕೊಡಲಿದ್ದಾರೆ), ಕಣ್ಪರಿ
judicious — ಗು ಸರಿ-ತಪ್ಪು ತಿಳಿದ, ಹುರು ಳರಿತ
juggernaut — ನಾ ಬಲ್ಮ, ತಡೆಹಿಡಿಯಲಾಗದ ಅಳವು
juggle — ಕ್ರಿ ಕಣ್ಕಟ್ಟು ಮಾಡು, ಮೋಸಮಾಡು, ಮರುಳು ಮಾಡು
jugglery — ನಾ ಕಣ್ಕಟ್ಟು
jugular — ಗು ಕುತ್ತಿಗೆಯ, ಗಂಟಲಿನ
juice — ನಾಎಸರು (ಕಿತ್ತಳೆ ಹಣ್ಣಿನ ಎಸರು),ಚಾರು
juice (of plants) — ನಾಹಾಲು (ಕಳ್ಳಿಯ ಹಾಲು; ಎಕ್ಕದ ಹಾಲು),ಸೊನೆ
jumble — ಕ್ರಿ ತಾರುಮಾರು ಬೆರೆಸು
jump — ಕ್ರಿ ಕುಪ್ಪಳಿಸು (ಕಾಲುಗಳನ್ನು ಕಟ್ಟಿ ಕೊಂಡು ಕುಪ್ಪಳಿಸುತ್ತಿದ್ದಾನೆ), ನೆಗೆ (ನೆಗೆದು ಕೊಂಡು ಬರು), ಗುದಿ (ಕಾಲುಗಳನ್ನು ನೆಲಕ್ಕೆ ಗುದಿಯುತ್ತಿದ್ದ), ತುಳ್ಳು (ತುಳ್ಳಾಡಿ ತುಳ್ಳಾಡಿ ಮುಳ್ಳಿನ ಮೇಲೆ ಬಿದ್ದ), ಊಂಕು (ಊಂಕಿಡು), ಅವ್ವಳಿಸು, ಎಗರು (ಎಗ ರಾಡು; ಆಕೆ ಮಾತನಾಡಿಸಿದವರ ಮೇಲೆ ಎಗರಾಡುತ್ತಾಳೆ), ಜಿಗಿ (ಜಿಗಿದಾಡು), ಹಾರು (ಹಾರುಗುಪ್ಪೆ), ಕುಂಜು, ಕಿಪ್ಪರಿ, ಒಗೆ, ತೆಬ್ಬು
jumping — ನಾಎಗರಿಕೆ
junction — ನಾಕೂಡಲು (ನದಿಗಳ ಕೂಡಲು; ಕೂಡಲುಗೊಳ್ಳು), ಒಚ್ಚವಡಿ
juncture — ನಾ 1 ಕೂಡಲು 2 ತಿರುಗುವೆಡೆ, ತರಿಸಲಾಗುವ ಹೊತ್ತು
jungle — ನಾ ಪಳುವ (ಪಳುವ ಕಿಚ್ಚು; ಪಳು ವಳಲು), ಉಡುವೆ, ಕಾಡು cultivation ನಾ ಕುಮರಿ
junior — ಗು ಕಿರಿಯ, ಕೆಳಗಿನ
junk — ನಾ ಕಸಕಡ್ಡಿ, ಪಳದು 2 ಹಳೇ ಹಡಗು
jurisdiction — ನಾ 1 ತೀರ್ಪುಗಾರಿಕೆ 2 ತೀರ್ಪುಗಾರಿಕೆಯ ಹರಹು
jurisprudence — ನಾ ಕಟ್ಟಲೆಯರಿಮೆ
jurist — ನಾ ಕಟ್ಟಲೆಯರಿಗ
juror — ನಾ ತೀರ್ಪುಗಾರ
jury — ನಾ ತೀರ್ಪುಗಾರರ ಕೂಟ
just — ಗು ಸರಿಯಾದ, ಕಟ್ಟಲೆತಪ್ಪದ
justice — ನಾ 1 ಕಟ್ಟಲೆಯುಳಿಕೆ 2 ನೇರ್ಪು 3 ಸರಿಪಡಿಕೆ, ಮೊರೆ
justify — ಕ್ರಿ ಸರಿದೋರಿಸು, ಸಲುವು ಕೊಡು, ಮುಳಿಕೊಡು
jut out — ಕ್ರಿ ಚಾಚು (ಒಂದು ಗೆಲ್ಲು ಬಲಗಡೆಗೆ ಚಾಚಿದೆ)
juvenile — ಗು ಎಳೆಹರೆಯದ
juxtapose — ಕ್ರಿ ಕೆಲಕೆಲದಲ್ಲಿಡು