← Ch 9  ·  Contents  ·  Ch 11 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

L

label — ನಾ ಗುರುತು
labial — ಗು ತುಟಿಯ (ತುಟಿಯುಲಿ)
laborious — ಗು ತೊಂದರೆಯ, ತುಂಬಾ ದುಡಿ ಯಬೇಕಾಗುವ (ತುಂಬಾ ದುಡಿಯಬೇಕಾ ಗುವ ಕೆಲಸ)
labour — ನಾ1 ದುಡಿಮೆ, ದುಡಿತ, ಗೆಯ್ಮು 2 ಹೆರಿಗೆನೋವು
labour — ಕ್ರಿ ದುಡಿ (ದುಡಿದವನಿಗೆ ಕೂಲಿ ಸಿಕ್ಕಿಲ್ಲ)
labourer — ನಾ ಕೂಲಿ, ಕೂಲಿಗಾರ
labyrinth — ನಾ 1 ಸಿಕ್ಕುದಾರಿ, ತೊಡಕಿನ ದಾರಿ 2 ತೊಡಕು, ಗೊಂದಲ 3 ಒಳಕಿವಿ
lac — ನಾ ಅರಗು
lace — ನಾ 1 ಹಗ್ಗ (ಕೆರದ ಹಗ್ಗ) 2 ಹೆಣಿಗೆ ಪಟ್ಟಿ
lacerate — ಕ್ರಿ 1 ಬಿಗಿ, ಸಿಗಿ, ಗಾಸಿಗೊಳಿಸು, ಬೇಗುದಿಗೊಳಿಸು
lack — ನಾ ಕೊರತೆ, ಇಲ್ಲದಿಕೆ
lack — ಕ್ರಿ ಇಲ್ಲದಿರು, ಸಾಲದಾಗು
lackadaisical — ಗು ಬಳಲಿದ (ಬಳಲಿದಂತೆ ತೋರುವ), ಹುರುಳುಗುಂದಿದ
lackey — ನಾ ತೊತ್ತಿಗ, ಅಡಿಯ
laconic — ಗು ಚುಟುಕಾದ, ಅಡಕವಾದ
lacquer — ನಾ ಮೆರುಗೆಣ್ಣೆ ನಾ ಮೊಲೆಯೂಡಿಕೆ, ಹಾಲೂಡಿಕೆ
lactic — ಗು ಹಾಲಿನ
lacuna — ನಾ ತೆರಪು, ಬಿಟ್ಟೆಡೆ, ಬಿಡುಕು
ladder — ನಾ ಇಂಚಿ (ಇಂಚಿ ಹಾಕಿಕೊಂಡು ಮರ ಹತ್ತುತ್ತಿದ್ದಾನೆ), ಏಣಿ (ಏಣಿಯನ್ನು ತಂದು ಮರಕ್ಕೆ ಹತ್ತಿದರು)
lade — ಕ್ರಿ 1 ಹೇರು 2 ತೋಡು, ಮೊಗೆ
laden — ಗು ಹೇರಿದ (ಹೇರಿದ ಕತ್ತೆ)
ladle — ನಾ ಅಗಪೆ (ಮರದ ಅಗಪೆ; ಗೆರಟೆ ಲಿುಂದ ಮಾಡಿದ ಅಗಪೆ), ಸವುಟು (ಸವುಟಿ ನಲ್ಲಿ ಬಳಸು),ಪುಟ್ಟು, ಕಯ್ವಟ್ಟಲು
lag — ಕ್ರಿ 1 ಹಿಂದೆ ಬೀಳು, ಹಿಂದೆನಿಲ್ಲು 2 ಸೊರಗು
lagoon — ನಾ ಕಡಲ್ಕೂಳ
lair — ನಾಪಣೆ (ಹುಲಿಯ ಪಣೆ), ಗವಿ
laity — ನಾ ಮಂದಿ, ನಾಡಾಡಿ
lake — ನಾ ಕೆರೆ, ಕೊಳ 2 ಕಡುಕೆಂಪು
lamb — ನಾ ಆಡಿನಮರಿ
lambent — ಗು ಬೆಡಗಿನ, ಮಿನುಗುವ, ಅಲು ಗುವ,
lame — ಗು ಮೋಟು (ಮೋಟುಕಾಲು; ಮೋಟು ಮರ; ಬಾಲ ಮೋಟಾದ ಎತ್ತು), ಕುಂಟು (ಕುಂಟುಕಾಲು; ಕುಂಟೆತ್ತು; ಕುಂಟ, ಕುಂಟಿ), ಹೆಳವು (ಹೆಳವ - ಒಂದು ಕಾಲಿಲ್ಲದ ಹೆಳವ)
lament — ನಾ ಗೋಳು (ಆಕೆಯ ಗೋಳನ್ನು ನೋಡಲಾರೆ; ಗೋಳಾಡು; ಗೋಳಿಡು; ಗೋಳಾಟ)
lament — ಕ್ರಿ ಹಲುಬು (ಹಲುಬುತ್ತಿರುವ ಹೆಂಗಸು; ಹಲುಬಾಟ), ಅಳು (ಅಳುವ ಮಕ್ಕಳ ಕಣ್ಣೀರೊರಸಿದಳು)
lamina — ನಾ ತಿಳುಹಾಳೆ, ಹೆರೆ (ಕಡತದ ಹೊದಿಕೆಯ ಮೇಲೆ ತೆಳುಹೆರೆಯನ್ನು ಕೂರಿಸ ಲಾಗಿದೆ)
lamp — ನಾ ಸೊಡರು (ಸೊಡರು ಹೊತ್ತಿಸು; ಸೊಡರು ಹಬ್ಬ; ಮಿಂಚೊಡರು), ಬೆಳಕು (ಮೇಣಬೆಳಕು)
lampblack — ನಾಕಾಡಿಗೆ (ಕಣ್ಣಿಗೆ ಕಾಡಿಗೆ ಹಚ್ಚು)
lampoon — ನಾ ದಾಳಿಬರಹ, ಗೇಲಿಬರಹ
lance — ನಾ ಈಟಿ ನಾ ಈಟಿಕೆ
land — ನಾ ನೆಲ (ಜವುಗು ನೆಲ; ಉಳದೇ ಇರುವ ನೆಲ; ನೆಲ ಇರುವವನಿಗೆ ಯಾರೂ ಸಾಲ ಕೊಡುತ್ತಾರೆ), ನಾಡು
land breeze — ನಾಕರೆಗಾಳಿ (ಕರೆಗಾಳಿ ಬಿಸಿಯಾಗಿದೆ)
landholder — ನಾ ನೆಲದೊಡೆಯ, ಹಿಡುವಳಿ ದಾರ
landing place — ನಾ ಇಳಿವೆಡೆ, ನಿಲ್ಲಡೆ
landmark — ನಾನೆಲಗುರುತು (ನಿಮ್ಮೂರ ನೆಲಗುರುತೇನಾದರೂ ಇದ್ದರೆ ಹೇಳಿ)
landmine — ನಾ ನೆಲಮದ್ದು, ನೆಲಗುಂಡು (ಕಾಡುಹೊಲಗಳಲ್ಲಿ ಹುದುಗಿಸಿಟ್ಟಿದ್ದ ನೆಲ ಗುಂಡಿಗೆ ಸಿಕ್ಕಿ ಹಲವರು ಕಯ್ಕಾಲು ಕಳೆದು ಕೊಂಡರು)
landscape — ನಾ ನೆಲಗಾಣ್ಕೆ
landslide — ನಾ ನೆಲಜಾರಿಕೆ (ನೆಲಜಾರಿಕೆಗೆ ಸಿಕ್ಕಿ ಹಲವರು ಸತ್ತರು), ನೆಲಸರಿತ
lane — ನಾ ಓಣಿ (ಮದುವೆಯಲ್ಲಿ ಓಣಿಯವರಿ ಗೆಲ್ಲ ತೆಂಗಿನಕಾಲಿು ಸಿಕ್ಕಿತು) ಗೊಂದಿ (ಸಂದಿಗೊಂದಿ - ಕಳ್ಳ ಸಂದಿಗೊಂದಿಗಳ ಲ್ಲಲ್ಲೂೀ ಹೋಗಿ ಅಡಗಿದ್ದಾನೆ)
language — ನಾನುಡಿ (ಒಳನುಡಿ; ಕನ್ನಡ ನುಡಿ; ಆಡುನುಡಿ; ನುಡಿಗಲಿಸು)
languid — ಗು ಸೊರಗಿದ, ದಣಿದ, ಬಳಲಿದ, ಚುರುಕಿಲ್ಲದ
languish — ಕ್ರಿ ಸೊರಗು (ಅವರು ಸೊರಗಿ ಸಾಯುತ್ತಿದ್ದಾರೆ), ಕೊರಗು, ಕುಗ್ಗಿಹೋಗು
languor — ನಾ ನಲುವು, ಬಳಲಿಕೆ
lankey — ಗು ಸಣಕಲು, ಉದ್ದ, ಬಡಕಲು, ತೆಳು
lantern — ನಾ ಸೊಡರುಗೂಡು, ಕಯ್ಬೆಳಕು (ಸುರಂಗದೊಳಗೆ ಹೋಗಲು ಕಯ್ಬೆಳಕು ಬೇಕು)
lap — ನಾ ಸೋಗಿಲು (ತಾಲಿುಯ ಸೋಗಿಲಲ್ಲಿ ಮಲಗಿದ ಮಗು), ಉಡಿ (ಉಡಿತುಂಬು), ಮಡಿಲು
lap — ಕ್ರಿ 1 ನೆಕ್ಕು, ತಟ್ಟು (ಅಲೆಗಳು ಕರೆಯನ್ನು ತಟ್ಟುತ್ತಿದ್ದುವು) 2 ಮಡಿಸು, ಹೊದೆಸು, ಮುಚ್ಚು
lapel — ನಾ ಮುಮ್ಮಡಿಕೆ
lapet — ನಾ ಕಿರುಮಡಿಕೆ
lapidary — ನಾ ಬೆಲೆಕಲ್ಲು ಕುಟಿಗ
lapse — ಕ್ರಿ 1 ತಪ್ಪಿಹೋಗು, ಬಿಟ್ಟುಹೋಗು 2 ಹಿಂದೆಸರಿ, ಕೊನೆಗೊಳ್ಳು 3 ಕಳೆ (ಹೊತ್ತುಕಳೆ)
lapwing — ನಾ ಕೊಟ್ಟುಗ
larceny — ನಾ ಕಳವು, ಕಳ್ಳತನ ನಾ ಕೂಡಿಡುವ ಕೋಣೆ, ಗೂಡು
large — ಗು ಹೇರ್- (ಹೇರಡವಿ, ಹೇರಾನೆ, ಹೇರಾಳು; ಹೇರೂರು; ಹೇರೊಡಲು), ಹೆರ್- (ಹೆರ್ಬೊಗೆ), ಹೆಬ್- (ಹೆಬ್ಬಂಡೆ; ಹೆಬ್ಬುಲಿ), ದೊಡ್ಡ
largeness — ನಾ ಬಿಮ್ಮು (ಬಿಮ್ಮುಗೆಡು; ಬಿಮ್ಮಳಿ)
largesse — ನಾ ಕಾಣಿಕೆ, ದೊಡ್ಡ ಕೊಡುಗೆ
lariat — ನಾ ಉದ್ದಹಗ್ಗ (ಆಕಳನ್ನು ಹಿಡಿದು ತರಲು ಉದ್ದಹಗ್ಗವನ್ನು ಬಳಸುತ್ತಾರೆ)
lark — ಕ್ರಿ ಕುಣಿದಾಡು, ನಲಿದಾಡು
larva — ನಾ ಮರಿಹುಳು
larynx — ನಾ ಗಂಟಲಗೂಡು
lash — ಕ್ರಿ ಕಟ್ಟಿಹಾಕು, ಬಿಗಿ
lassitude — ನಾ ಬಳಲಿಕೆ
last — ಗು ಕಡೆಗೆ, ಕಡೆ (ಕಡೆಯ ಕರು), ಕೊನೆಗೆ (ಊಟಕ್ಕೆ ಕೊನೆಗೆ ಬಂದವರು), ಉಕ್ಕಡ (ಉಕ್ಕಡ ಹೊಲ; ಉಕ್ಕಡ ಮನೆ)
lasting — ಗು ಬಾಳಿಕೆಯ, ಬಾಳುವ, ಒರ್ಪಿನ (ಒರ್ಪಿನ ಸೀರೆ)
latch — ನಾತಾಳು, ಅಗುಳಿ (ಬಾಗಿಲಿನ ಅಗುಳಿ), ಚಿಲುಕ, ಕೂಚುಗೋಲು
late — ಗು 1 ತಡವಾದ, ಹೊತ್ತು ಮೀರಿದ 2 ಮಡಿದ, ತೀರಿದ
latent — ಗು ಹುದುಗಿರುವ
lateral — ನಾ ಬದಿಯ
latex — ನಾ ಹಾಲು (ಹಾಲೆ ಮರದ ಹಾಲು, ಎಕ್ಕೆ ಗಿಡದ ಹಾಲು), ಸೊನೆ (ಗೇರುಬೀಜದ ಸೊನೆ)
lather — ನಾ ನೊರೆ, ಬುರುಗು
latitude — ನಾ 1 ಹರವು 2 ತಡೆಲಿುಲ್ಲದಿರು ವುದು
latrine — ನಾ ತಳ್ಳುವೆಡೆ, ಕಳೆವೆಡೆ
laud — ಕ್ರಿ ಹೊಗಳು
laudable — ಗು ಹೊಗಳತಕ್ಕ, ಮೆಚ್ಚತಕ್ಕ
laugh — ಕ್ರಿ ನಗು (ನಗುತ್ತಾ ಮಾತನಾಡು)
laugh at — ಕ್ರಿ ಗೇಲಿಮಾಡು
laugh merrily — ಕ್ರಿ ಗಹಗಹಿಸು (ಗಹಗಹಿಸಿ ನಗು) ನಾ ನಗೆ (ನಗೆಗೀಡಾಗು; ನಗೆ ಗೇಡು; ನಗೆಪಾಟಲು; ನಗೆಹನಿ; ನಗೆಬರಹ; ನಗೆಯಾಡು)
launch — ಕ್ರಿ 1 ಎಸೆ, ಹಾರಿಸು 2 ತೇಲಿಬಿಡು, ತೊಡಗು (ನಾವೊಂದು ಹೊಸ ಕೂಟವನ್ನು ತೊಡಗಿದ್ದೇವೆ)
launder — ಕ್ರಿ ಮಡಿಮಾಡು (ನಿಮ್ಮ ಸೀರೆ ಗಳನ್ನು ಮಡಿಮಾಡಲು ಕೊಟ್ಟಿದ್ದೇನೆ), ತೊಳೆ, ಒಗೆ (ಬಟ್ಟೆ ಒಗೆದು ಹಾಕು)
laundry — ನಾ ಅಗಸನಂಗಡಿ
laureate — ಗು ಮುದಿಪು ಪಡೆದ
laurel — ನಾ ಗೆಲವು, ಮುದಿಪು
lava — ನಾ ಕರಗುಕಲ್ಲು (ಉರಿಬೆಟ್ಟದಿಂದ ಕರಗುಕಲ್ಲು ಹರಿದು ಬರುತ್ತಿತ್ತು)
lavatory — ನಾ ತಳ್ಳುವೆಡೆ, ತೊಳೆಯುವೆಡೆ
lave — ಕ್ರಿ ತೊಳೆ, ಮೀಯು
lavish — ಕ್ರಿ ಹೇರಳ ಕೊಡು, ಹೇರಳ ಹಣ ಬಳಸು
lavish — ಗು ಹೇರಳ (ಮಗಳ ಮದುವೆಗೆ ಹೇರಳ ಹಣ ಚೆಲ್ಲುತ್ತಿದ್ದಾರೆ)
law — ನಾ ಕಟ್ಟಲೆ, ಗೊತ್ತು
lawful — ಗು ಕಟ್ಟಲೆತಪ್ಪದ (ನಮ್ಮದೆಲ್ಲ ಕಟ್ಟಲೆತಪ್ಪದ ಕೆಲಸ)
lawless — ಗುಪುಂಡು, ಕಟ್ಟಲೆ ಮೀರಿದ, ಹತೋಟಿಗೆ ಸಿಗದ
lawn — ನಾ ಅಡುವಲ, ಹುಲ್ಲುಹಾಸು (ಮನೆ ಯುದುರು ಹುಲ್ಲುಹಾಸು ಬೆಳೆಸಿದ್ದಾರೆ)
law-suit — ನಾ ಕಟ್ಟಲೆ (ಒಂದು ಕೊಲೆಯ ಕಟ್ಟಲೆ)
lawyer — ನಾ ಕಟ್ಟಲೆಯರಿಗ
lax — ಗು ಸಡಿಲು (ಸಡಿಲಾಗು; ಸಡಿಲುಬಿಡು), ಜಾಳು (ಜಾಳಾಗು)
laxative — ಗು ಹೊರಕಡೆಯಾಗಿಸುವ
lay — ಕ್ರಿ 1 ಮಡಗು (ಮಡಗಿದ ಹಾಗಿರು; ಕಾಲು ಮಡಗಲು ಎಡೆಲಿುಲ್ಲ), ಒಡ್ಡು (ಅವನು ಒಡ್ಡಿದ ಬಲೆಗೆ ಸಿಲುಕಿದ ಹಕ್ಕಿ), ಇಡು (ಮರದ ನೆಳಲಲ್ಲಿ ಇಟ್ಟ ಹೊರೆ; ಮೊಟ್ಟೆ ಲಿುಡು) 2 ಉರುಳಿಸು, ತಳ್ಳು
lay aside — ಕ್ರಿ ಬದಿಗಿಡು, ಉಳಿತಾಯ ಮಾಡು
lay bare — ಕ್ರಿ ಮುಚ್ಚಿಡದಿರು, ಹೊರಹಾಕು
lay claim — ಕ್ರಿ ಹಕ್ಕು ಕೇಳು
lay down — ಕ್ರಿ ಬಿಟ್ಟುಕೊಡು, ಕೆಳಹಾಕು off ಕ್ರಿ ಕೆಲಸದಿಂದ ತೆಗೆ
layer (thin) — ನಾ ಹೊರೆ (ಹಾವಿನ ಹೊರೆ; ಹೊರಿಕೆ - ನೀರುಳ್ಳಿಯ ಹೊರಿಕೆ; ಹೊರಿಗೆ)
layer — ನಾ 1 ಪಸೆ (ಪೂವಸೆ, ತಳಿರ್ವಸೆ), ಹದಿ (ಕಲ್ಲಿನ ಹದಿ; ಹಾಲಿನ ಹದಿ; ಹದಿಕಟ್ಟು) 2 ಮಡಿಕೆ
layman — ನಾ ನಾಡಾಡಿ
layout — ನಾ ಹರಡಿದ ಬಗೆ, ಕಟ್ಟಿದ ಬಗೆ, ಪರಿಜು, ಪಾಂಗು
laziness — ನಾ ತೆವಳೆ, ಅಲಸು
lazy person — ನಾ ಸೋಂಬ (ಸೋಂಬತನ; ಸೋಂಬೇರಿ), ಮಯ್ಗಳ್ಳ (ಮಯ್ಗಳ್ಳತನ), ಜೋಬ,ಕೆಲಸಗಳ್ಳ,ಅಲಸುಗಾರ, ಚಲ್ಲ (ಚಲ್ಲತನ), ಸುಳಿ
lea — ನಾ ಹುಲ್ಲುಗಾವಲು
leach — ಕ್ರಿ ಕರಗಿಸಿ ತೆಗೆ
lead — ಕ್ರಿ ನೋಳು (ನೋಳ್ದುಕೊಳ್ಳು, ನೋಳ್ಪು), ಕರೆದೊಯ್ಯು, ಮುಂದಿರು
lead off — ಕ್ರಿ ತೊಡಗು, ಮೊದಲು ಮಾಡು
lead on — ಕ್ರಿ ತಪ್ಪುದಾರಿಗೆಳೆ, ಮರುಳು ಮಾಡು, ಸೆಳೆ
leader — ಗು 1 ತೂಕದ, ಚುರುಕಿಲ್ಲದ, ಮಂಕಾದ, ಮಬ್ಬುಕವಿದ
leader — ನಾಮುಂದಾಳು,ಮುಂಚ (ಬಿಲ್ಗರ ರಲ್ಲಿ ಮುಂಚನೆನಿಸಿದವನು), ಮುಂದುಗ, ಮೇಟಿ
leader (animal) — ನಾ ಸಲಗ (ಸಲಗಾನೆ; ಸಲಗ ಕೋಣ)
leadership — ನಾ ಮುಂದಾಳುತನ
leaf — ನಾ ಓಲೆ (ತಾಳೆಮರದ ಓಲೆ), ಎಲೆ (ಎಲೆಹಾಕು; ವೀಳೆಯದೆಲೆ, ಮಾವಿನ ಮರದ ಎಲೆ)
leaf axel — ನಾಎಲೆಕಂಕುಳು
leafage — ನಾ ಸೊಪ್ಪು, ತೊಪ್ಪಲು, ಗುಬರು
leafless — ಗು ಬೋಳು (ಬೋಳು ಮರ)
leaflet — ನಾ 1 ಎಳೆ ಎಲೆ 2 ಮಡಿಯೋಲೆ
league — ನಾ ಕೂಟ (ಒಕ್ಕೂಟ), ತಂಡ (ನಮ್ಮ ತಂಡದಲ್ಲಿ ಹತ್ತು ಮಂದಿ ಇದ್ದರು)
leak — ಕ್ರಿ 1 ಸೋರು (ಸೋರುವ ಮಾಡು; ಸೋರುಹ, ಸೋರಿಕೆ), ಜೋರು (ಜೋರು ಗಟ್ಟು; ಜೋರಿಡು)
lean (be) — ಕ್ರಿ ನವೆ (ತಾಲಿುಲಿುಲ್ಲದೆ ಮಗು ನವೆಯುತ್ತಿದೆ), ಬಚ್ಚು (ಮಗು ಬಚ್ಚಿ ಹೋಗಿದೆ) ಕ್ರಿ ಕೆಂದು (ಗೋಡೆಗೆ ಕೆಂದಿ ಕುಳಿತಿ ದ್ದರು), ನೆಮ್ಮು (ಮರವನ್ನು ನೆಮ್ಮಿ ನಿಂತ), ಆನು (ಮರಕ್ಕೆ ಆಂತು ನಿಲ್ಲು), ಮಾಲು (ಹಿಂದೆ ಮುಂದೆ ಮಾಲಿ ನಡೆಯುತ್ತಿದ್ದ), ಒರಗು (ಒರಗುದಿಂಬು),ಒಗ್ಗು
lean — ಗು ಬಡ (ಬಡಕಲು; ಬಡನಡು), ಸಳ್ಳೆ
leaning — ನಾ ಒಲವು (ಅವನ ಒಲವು ನಿಮ್ಮ ಕಡೆಗಿದೆ)
leap — ಕ್ರಿ ನೆಗೆ (ನೆಗೆದೇಳು; ನೆಗೆದೋಡು; ನೆಗೆತ), ಮಿಡಿ (ಮಿಡಿಯುವ ಕುದುರೆ), ಮೀಟು (ಮೀಟು ಮೀನು), ಕುಪ್ಪು (ಕುಪ್ಪಿ ಕುಪ್ಪಿ ನಲಿದಾಡುವ ಕರಡಿಗಳು), ಕೊಣಕು (ಕೊಣಕಿಡು; ಕೊಣಕುವ ಕುದುರೆ)
leap down — ಕ್ರಿ ದುಮುಕು (ಮಕ್ಕಳು ಕೆರೆಗೆ ದುಮುಕಿದರು)
learn — ಕ್ರಿ ಕಲಿ (ನಾನು ಕಲಿತ ಹಾಡು; ಕಲಿಕೆ, ಕಲ್ಪಿ, ಕಲಿತ, ಕಲ್ಮ)
learned man — ನಾ ಕಲಿ, ತಿಳಿವಿಗ
lease — ನಾ ಅಳವೆ (ತನ್ನ ಗದ್ದೆತೋಟಗಳನ್ನು ಅಳವೆಗೆ ಕೊಟ್ಟು ಮನೆಯಲ್ಲಿ ಕುಳಿತಿದ್ದಾನೆ), ಗುತ್ತಿಗೆ (ಗುತ್ತಿಗೆಗೆ ಕೊಟ್ಟ ಹೊಲ)
leash — ನಾ ಮಿಳಿ, ಮಿಣ್ಣಿ (ತೊಗಲ ಮಿಣ್ಣಿ - ನಾಲಿುಯನ್ನು ಕಚ್ಚದಂತೆ ಹಿಡಿದುಕೊಳ್ಳಲು ತೊಗಲ ಮಿಣ್ಣಿಲಿುದೆ)
leather — ನಾತೊಗಲು (ತೊಗಲಪಟ್ಟಿ; ತೊಗಲುಬಾವಲಿ),ಚಕ್ಕಳ (ಚಕ್ಕಳದ ಮೆಟ್ಟು; ಚಕ್ಕಳದ ಹಕ್ಕಿ; ಚಕ್ಕಳಗೊಂಬೆ)
leather strap — ನಾಬಾರು (ತೊಗಲಿನ ಬಾರು; ಬಾರುಕೋಲು)
leave — ನಾ ಸೆಲವು (ಸೆಲವು ಪಡೆ), ಬೀಡು, ಬಿಡುವು (ಮೂರು ತಿಂಗಳಿಗೆ ಬಿಡುವು ಪಡೆದಿದ್ದೇನೆ; ಆತನಿಗೆ ಬಿಡುವಿಲ್ಲದ ಕೆಲಸ), ಕೊರೆನಾಳು
leave — ಕ್ರಿ 1 ಬಿಡು (ಮನೆ ಬಿಟ್ಟು ಹೋದ ವನು), ತೊರೆ (ಎಲ್ಲವನ್ನೂ ತೊರೆದವನು), ತೊಲಗು
leaven — ನಾ ಹುದುಗು ಹಿಟ್ಟು
lecher — ನಾ ಹಾದರಿಗ
lecture — ನಾ ಪೆರ್ಮಾತು (ಪೆರ್ಮಾತು ಕೊಡು; ಇವತ್ತು ಆತನದೊಂದು ಪೆರ್ಮಾತಿದೆ)
lecturer — ನಾ ಪೆರ್ಮಾತುಗ, ಪೆರ್ಮಾತುಗಾರ
ledge — ನಾಬಡು, ಚುಂಚು (ಮನೆಯ ಚುಂಚು)
ledger — ನಾ ಕೊಡುಕೊಳು ಕಡತ
lee — ನಾ ಗಾಳಿಮರೆ ನಾ ಅಟ್ಟೆ,ಇಂಬುಳ (ಇಂಬುಳ ತುಂಬಿದ ಕಾಡುದಾರಿ)
leer — ನಾ ಎಡ್ಡನೋಟ, ಕುಡಿನೋಟ, ಓರೆ ನೋಟ
lees — ನಾ ಕದಲು, ಗಸಿ, ಚರಟ (ತುಪ್ಪದ ಚರಟ)
left — ಗು ಎಡ (ಎಡಗಡೆ, ಎಡಗೈ, ಎಡಗಾಲು;ಎಡಚ)
leftover — ಗು ಉಳಿದ, ಮಿಕ್ಕ
leg — ನಾಕಾಲು (ಮುಂಗಾಲು; ಹಿಂಗಾಲು; ಕಾಲಿಗೆ ಬೀಳು; ಕಾಲೆಳೆ)
legacy — ನಾ ಹಿರೀಕರ ಕೊಡುಗೆ
legal — ಗು ಕಟ್ಟಲೆಯ
legalize — ಕ್ರಿ ಕಟ್ಟಲೆಯಾಗಿಸು
legend — ನಾ ಕಟ್ಟುಕತೆ, ನಂಬಿದ ಕತೆ
legerdemain — ನಾ 1 ಕಯ್ಚಳಕ 2 ಮೋಸ, ಚದಿ
legible — ಗು ಓದಬಲ್ಲ (ಆತನ ಕಯ್ಬರಹ ಓದಬಲ್ಲ ಬರಹವಾಗಿರಲಿಲ್ಲ)
legion — ನಾ ಪಡೆ, ದೊಡ್ಡ ಗುಂಪು
legislate — ಕ್ರಿ ಕಟ್ಟಲೆ ಮಾಡು
legislator — ನಾ ಕಟ್ಟಲೆಗ
legitimate — ಗು ಕಟ್ಟಲೆತಪ್ಪದ, ಸರಿಯಾದ
leisure — ನಾತೆರವು (ತೆರವಾಗು), ನಿಲುವು, ಬಿಡುವು (ಬಿಡುವಿಲ್ಲದ ಕೆಲಸ)
leisurely — ಗು ತೆಪ್ಪಗೆ (ತೆಪ್ಪಗೆ ಕುಳಿತಿದ್ದಾನೆ), ಒಯ್ಯನೆ (ಒಯ್ಯನೆ ಬರುತ್ತಿದ್ದಾನೆ)
lemon — ನಾ ಇಲಿಮಿಂಚಿ, ಈಳೆ
lend — ಕ್ರಿ ಕಡಕೊಡು, ಎರವು ಕೊಡು
length — ನಾ ನೀಳ್ಪು, ನಿಡುಪು (ಈ ಹೆಬ್ಬಾವಿನ ನಿಡುಪು ಎಶಾ್ಟಗಬಹುದು?), ನಿಡಿದು (ಆನೆಗಳ ನಿಡಿದು ಹನ್ನೆರಡು ಅಡಿ), ಉದ್ದ (ಮೂರಡಿ ಉದ್ದದ ಹಗ್ಗ)
lengthen — ಕ್ರಿ ನಿಗುಚು (ಚಿನ್ನದ ಗಟ್ಟಿಯನ್ನು ಕಾಸಿ ನಿಗುಚುತ್ತಿದ್ದಾನೆ), ನೀಡು, ಸಾಗು (ಸಾಗುಬಡಿ)
lenient — ಗು ಬಿರುಸಲ್ಲದ, ತಾಳ್ಮೆಯ, ಕನಿ ಕರದ
lens — ನಾ ಸೇರ್ಕನ್ನಡಿ (ಬಿಸಿಲಿಗೆ ಸೇರ್ಕನ್ನಡಿ ಹಿಡಿದು ಬೆಂಕಿ ಮಾಡಿದ)
leopard — ನಾಚಿರತೆ,ಕಿರುಬ
leprosy — ನಾತೊನ್ನು ನಾ ಗಾಸಿ (ಕಯ್ಗೆ ಗಾಸಿ ಮಾಡಿಕೊಂಡಿ ದ್ದಾನೆ)
less — ಗು ಕಡಿಮೆ (ಅವನು ತುಸು ಕಡಿಮೆ ಕೊಟ್ಟ), ಕಮ್ಮಿ
lessen — ಕ್ರಿ ಕೊರೆ, ಕಡಿಮೆಯಾಗು, ಇಳಿಸು, ಕುಗ್ಗಿಸು, ಕೊರತೆ ಬೀಳು, ಮಟ್ಟಾಗು
lesson — ನಾ 1 ಕಲಿತ, ಕಲ್ಪಿ 2 ತೆಗಳಿಕೆ
let — ಕ್ರಿ ಬಿಡು (ನೀರು ಬಿಡು; ಬಿಟ್ಟುಬಿಡು; ಕಾಲಿುಬಿಡು; ಹೋಗಬಿಡು), ಎಡೆಗೊಡು
lethal — ಗು ಕೊಲ್ಲಬಲ್ಲ (ಕೊಲ್ಲಬಲ್ಲ ನಂಜು)
lethargy — ನಾಜೊಂಪು (ಆತ ಜೊಂಪಿನ ಲ್ಲಿದ್ದಾನೆ)
letter — ನಾ 1 ಓಲೆ (ಸುತ್ತೋಲೆ; ಕಟ್ಟೋಲೆ; ಓಲೆಕಾರ) 2 ಬರಿಗೆ (ಕನ್ನಡಕ್ಕೆ ಒಟ್ಟು 31 ಬರಿಗೆಗಳಿದ್ದರೆ ಸಾಕು)
letter box — ನಾ ಅಂಚೆಗೂಡು
lettered — ನಾ ಅರಿವಿಗ
letup — ನಾ ಬಿಗಿಕಳೆತ, ಮಾಂದು, ಉರುಕು, ಬಿಡುವು
level — ನಾ ಮಟ್ಟ (ಮಟ್ಟಗೊಳಿಸು, ಮಟ್ಟ ಗೋಲು; ಮಟ್ಟಹಲಿಗೆ; ಮಟ್ಟಸ - ಮಟ್ಟಸ ಮಾಡು), ತಟ್ಟು (ಗುಡ್ಡ ಕಡಿದು ತಟ್ಟು ಮಾಡು; ಸಮತಟ್ಟು)
level — ಕ್ರಿ ಗೋರು (ಗದ್ದೆ ಗೋರು; ಗೋರು ಮಣೆ)
level ground — ನಾತಪ್ಪಲು (ಬೆಟ್ಟದ ತಪ್ಪಲು),ಮಾಳ
lever — ನಾ ಹೆದ್ದ (ತೇರು ಮುಂದೆಹೋಗು ವಂತೆ ಹೆದ್ದದಿಂದ ಮೀಟುತ್ತಾರೆ), ಸನ್ನೆ (ಸನ್ನೆಕೋಲು)
lever — ಕ್ರಿ ಮೀಟು (ಗುದ್ದಲಿಲಿುಂದ ಮೀಟು; ಮೀಟುಗೋಲು)
leveret — ನಾ ಮೊಲದ ಮರಿ
levity — ನಾ ಹುಡುಗಾಟಿಕೆ, ಬೆಡಗು, ತಕ್ಕು ದಲ್ಲದ ನಲಿವು
levy — ನಾ ಹೇರಿದ ತೆರಿಗೆ, ಒತ್ತಾಯದ ಪಡೆ ಸೇರ್ಪಡೆ
lexicographer — ನಾ ನೆರಕೆಗಾರ
lexicon — ನಾ ಪದನೆರಕೆ (ಈ ಪದನೆರಕೆಯಲ್ಲಿ ಹತ್ತು ಸಾವಿರ ಪದಗಳಿವೆ)
liability — ನಾ ಹೊಣೆ (ಹೊಣೆಗಾರಿಕೆ, ಹೊಣೆ ಗಾರ), ಸಾಲ, ಹೊರೆ
liaison — ನಾ 1 ಕೊಡುಕೊಳೆ, ಪತ್ತುಗೆ 2 ಕಟ್ಟಲೆ ತಪ್ಪಿದ ಕೂಡಿಕೆ
liar — ನಾ ಸುಳ್ಳುಗಾರ, ಹುಸಿಗ
libation — ನಾ ಬೇಳುವೆ ನಾ ಮದಿಪುಕಳೆವ ಬರಹ, ತಪ್ಪುಹೊರಿಕೆ
libelous — ಗು ಮದಿಪುಕಳೆವ
liberal — ಗು 1 ಕೊಡುಗಯ್ಯ, ತಾಳ್ಮೆಯ, ತಿದ್ದಿಕೊಳ್ಳಬಲ್ಲ 2 ಉಕ್ಕಂದ, ಹೆಗ್ಗಳ
liberate — ಕ್ರಿ ಬಿಡಿಸು (ಸೆರೆಲಿುಂದ ಬಿಡಿಸು; ಬಿಡುಗಡೆ)
libertine — ನಾಮಿಂಡ, ಹಾದರಿಗ, ಸವಿಗಾರ
liberty — ನಾ 1 ನೆಸೆ (ನೆಸೆಕೊಟ್ಟರೆ ಹಸೆ ಕದ್ದುಕೊಂಡು ಹೋದ) 2 ಬಿಡುಗಡೆ (ಇವತ್ತು ನಮ್ಮ ನಾಡಿಗೆ ಬಿಡುಗಡೆ ದೊರೆತ ದಿನ)
library — ನಾ ಕಡತಮನೆ
license — ನಾ ಸೆಲವು (ಅವನಿಗೆ ಮಣ್ಣೆಣ್ಣೆ ಮಾರಲು ಸೆಲವು ಸಿಕ್ಕಿದೆ), ಒಪ್ಪಿಗೆ
licentious — ಗು ಕಟ್ಟಲೆಮೀರಿದ, ಕಟ್ಟುಪಾಡು ಮೀರಿದ, ಹಾದರ ನಡೆಸುವ
licit — ಗು ಕಟ್ಟಲೆತಪ್ಪದ, ಒಪ್ಪಿಗೆ ಪಡೆದ
lick — ಕ್ರಿನಂಜು (ಊಟಕ್ಕೆ ನಂಜಿಕೊಳ್ಳಲು ಉಪ್ಪಿನಕಾಲಿು), ನಕ್ಕು (ಹಸುಳೆಯ ನಕ್ಕುವ ಹುಲ್ಲ)
lick the wound — ಕ್ರಿ ತೆಕ್ಕು (ಬೆಕ್ಕು ತೆಕ್ಕುತ್ತ ಕುಳಿತಿದೆ)
lid — ನಾ ಮುಚ್ಚಳ (ಬಾವಿಯ ಮುಚ್ಚಳ; ಮುಚ್ಚಳದ ಬೆಲೆ), ಮುಚ್ಚಿಗೆ, ಮುಸುಂಬೆ, ಉಡುಗೆ, ಪುದೆ
lie — ನಾ ಸುಳ್ಳು (ಸುಳ್ಳಾಡು. ಸುಳ್ಳುಹೇಳು; ಸುಳ್ಳುಗಾರ), ನೂಳು (ನೂಳ; ನೂಳು ಹೇಳು), ಬುರುಡೆ (ಬುರುಡೆ ಬಿಡು), ಪುಸಿ (ಪುಸಿಯಾಡು; ಹೆಬ್ಬುಸಿ), ಹುಸಿ (ಹುಸಿ ನುಡಿ), ಜಲ್ಲಿ (ಜಲ್ಲಿಹೊಡೆ), ಕಟ್ಟುಕ
lie — ಕ್ರಿ ಬೊಂಕು (ಆಕೆ ನನ್ನೊಡನೆ ಬೊಂಕು ತ್ತಿದ್ದಾಳೆ)
lie down — ಕ್ರಿ ಪಡು (ಪಟ್ಟಿರು), ಮಲಗು, ಅಡ್ಡಾಗು (ಮಂಚದ ಮೇಲೆ ಅಡ್ಡಾಗಿ ದ್ದಾನೆ), ಒರಗು
lie hidden — ಕ್ರಿ ಮರಸುಂದು (ಮರಸುಂದಿದ ಹಗೆಗಳು)
lie in wait — ಕ್ರಿ ಹೊಂಚು (ಹೊಂಚಿ ಕುಳಿತ ವರು)
lie with — ಕ್ರಿ ಸುಂದು
life — ನಾ ಬಾಳು (ಬಾಳುಗೇಡಿ; ಬಾಳುಮಾಡು); ಬಾಳ್ವಿಕೆ; ಬಾಳ್ಮೆ, ಬದುಕು (ಬದುಕು ಹಸನಾ ಗಿದೆ), ಇರವು (ತಿರಿದುಣ್ಣುವ ಇರವು), ಇರಿಕೆ, ಉಳಿವು (ನಮ್ಮ ಸಾವು ಉಳಿವುಗಳು ನಿಮ್ಮ ಕಯ್ಯಲ್ಲಿದೆ), ಉಸಿರು (ಉಸಿರಿಲ್ಲದ ಒಡಲು), ಒಗತನ (ಒಗತನ ಮಾಡು)
lifeless — ಗು ಉಸಿರಿಲ್ಲದ, ಮಡಿದ
lift — ನಾಎತ್ತುಗ (ಅವರ ಮನೆಗೆ ಎತ್ತುಗದಲ್ಲಿ ಹೋಗಬೇಕು) ಕ್ರಿ ಎತ್ತು (ಎತ್ತರಿಸು), ಏರಿಸು, ನಿಗುಚು
lift up — ಕ್ರಿ ನೆಗಹು (ಅವನ ತಲೆಯನ್ನು ಕಯ್ಯಲ್ಲಿ ಹಿಡಿದು ನೆಗಹಿದ)
ligament — ನಾ ಕಟ್ಟು (ಮೂಳೆಕಟ್ಟು)
ligature — ನಾ ಕಟ್ಟು, ನೂಲು, ಎಳೆ
light — ನಾ ಬೆಳಕು (ಬೆಳಕುಹಾಕು)
light — ಕ್ರಿ ಉರಿಸು, ಕನಿಸು (ಸೊಡರು ಕನಿಸು), ಹೊತ್ತಿಸು, ಬೆಳಗು (ಹಾದಿ ಬೆಳಗು), ಕತ್ತು
light — ಗು ಹಗುರ (ಹಗುರತನ; ಹಗುರ ಕಟ್ಟ; ಹತ್ತಿಯಷ್ಟು ಹಗುರ; ಹಗುರ ಮಾಡು)
lighten — ಕ್ರಿ ಹಗುರಗೊಳಿಸು, ಹೊರೆಲಿುಳಿಸು
lighthouse — ನಾ ಕಡಲಬೆಳಕು (ಕಡಲಬೆಳಕು ಇಲ್ಲಿಗೂ ಕಾಣಿಸುತ್ತದೆ)
lightning — ನಾಮಿಂಚು (ಮಿಂಚು ಮಿಂಚು ತ್ತಿದೆ; ಗೊಂಚಲ್ಮಿಂಚು)
ligneous — ಗು ಮರದ, ಮರದಂತಿರುವ
like — ಕ್ರಿ ಮೆಚ್ಚು (ಎಲ್ಲರೂ ಮೆಚ್ಚಿದ ಕೆಲಸ), ಒಲ್ಲು (ಒಲ್ಲದವರು; ಮೇಕೆ ಒಲ್ಲದ ಗಿಡ), ಒಲಿ (ಅವನಿಗೆ ಒಲಿದವಳು; ಒಲಗಾರ)
likelihood — ಗು -ಬಹುದಾದ (ಆಗಬಹು ದಾದ, ಮಾಡಬಹುದಾದ)
liken — ಕ್ರಿ ಹೋಲಿಸು, ಹೋಲಿಕೆ ಕಾಣು
likeness — ನಾ ಸಾಟಿ, ತೊಣೆ, ಪಾಸಟಿ (ಪಾಸಟಿಗಳು ಒಬ್ಬರೂ ಇಲ್ಲ), ಪಾಟಿ (ಪಾಟಿಲಿುಲ್ಲದ), ಮಾರ್ಪಡಿ, ದೊರೆ (ಆತನ ದೊರೆ ಯಾರು?; ದೊರೆಗೆಡಿಸು; ದೊರೆಗೆ ಬರು; ದೊರೆಲಿುಲ್ಲದ ಬಂಗಾರ)
liking — ನಾ ಅಕ್ಕರೆ, ಒಲವು, ಮೆಚ್ಚುಗೆ
lilt — ನಾ ಇಂಪಾದ ಹಾಡು
limb — ನಾ ಕಯ್ಕಾಲು (ಕಯ್ಕಾಲು ಸರಿಯಾ ಗಿದ್ದರೆ ಎಲ್ಲದರೂ ಗೆಯ್ದು ಬದುಕ ಬಹುದು)
limit — ನಾ ಎಲ್ಲ (ಎಲ್ಲಕಟ್ಟು; ಎಲ್ಲಕಲ್ಲು), ಗಡು (ಗಡುವಿಡು; ಗಡುವು - ಇವತ್ತಿಗೆ ಅವನು ಕೊಟ್ಟ ಗಡುವು ಮುಗಿಯುತ್ತದೆ), ಗಡಿ (ನಾಡಿನ ಗಡಿ), ಪಳು, ಮಟ್ಟು (ಈ ದಿನದ ಮಟ್ಟಿಗೆ, ಮಟ್ಟು ಮೀರು; ಮಟ್ಟು ತಿಳಿಯದೆ ಮಾತನಾಡಬಾರದು)
limit — ಕ್ರಿ ಹದ್ದಿನಲ್ಲಿಡು, ತಡೆಹಾಕು
limitation — ನಾ ಎಲ್ಲಕಟ್ಟು (ಇದರ ಎಲ್ಲ ಕಟ್ಟು ಎಂತಹದು?)
limn — ಕ್ರಿ ಬಣ್ಣಹಚ್ಚು, ತಿಟ್ಟಬರೆ
limp — ಕ್ರಿ ಕುಂಟು (ಕುಂಟುತ್ತಾ ಹೋಗು ತ್ತಿದ್ದಾನೆ), ದುಂಟು (ದುಂಟಾಡು)
limp — ಗು ಬಾಡಿದ, ಬಳಲಿದ, ಬಡಕಲಾದ ಗು ತಿಳಿ (ತಿಳಿನೀರು), ಸಿಲುವು (ಸಿಲುವು ನೀರು)
linchpin — ನಾಕಡಾಣಿ (ಕಡಾಣಿ ಸವೆದು ತುಂಡಾಗಿ ಗಾಲಿ ಕೆಳಗೆ ಜಾರಿತು)
line — ನಾ ಸಾಲು (ಸಾಲಾಗಿ ಕುಳಿತುಕೊಳ್ಳಿ), ಕೇಳಿ, ಗೀರು (ಗೀರಂಚು; ಗೀರುಬಳೆ), ಗೀಟು (ತಪ್ಪಾದುದನ್ನು ಗೀಟು ಹಾಕಿ ತೋರಿಸಿ), ವರಿಸೆ (ಎಲ್ಲರನ್ನೂ ವರಿಸೆಯಾಗಿ ನಿಲ್ಲಿಸಿದರು), ಓರಣ (ಓರಣಗೆಡು), ಗೆರೆ (ಗೆರೆ ಎಳೆ; ಗೆರೆಹಾಕು), ತರ (ಬೆಳ್ಳಕ್ಕಿಗಳು ಒಂದೇ ತರದಲ್ಲಿ ಹಾರುತ್ತಿದ್ದುವು)
lineage — ನಾ ಬಳಿ (ಬಳಿಯ ಬಳ್ಳಿಯ ಕುಡಿ ಯಾಗಿ ಬೆಳೆದ), ಅಳಿ (ಅಳಿ ನೋಡಿ ಹೆಣ್ಣು ತರಬೇಕು),ತಲಹು (ತಲಹು ಹಿಡಿ)
linen — ನಾ ನಾರುಬಟ್ಟೆ (ನಾರುಬಟ್ಟೆ ಬೇಗ ಒಣಗುವುದಿಲ್ಲ)
linger behind — ಕ್ರಿ ಅಮರು (ಹಿಂದಿನವರು ಯಾಕೋ ಅಮರುತ್ತಿದ್ದಾರೆ)
lingua franca — ನಾ ಬೆರೆಕೆನುಡಿ, ಕೊಂಡಿ ನುಡಿ (ಹಲವು ನುಡಿಗಳಿರುವ ನಾಡಿಗೆ ಒಂದು ಕೊಂಡಿನುಡಿ ಬೇಕಾಗುತ್ತದೆ)
linguist — ನಾ ನುಡಿಯರಿಗ, ಸೊಲ್ಲರಿಮೆ ಯರಿಗ
linguistic — ನಾ ನುಡಿಯ, ಸೊಲ್ಲರಿಮೆಯ
linguistics — ನಾ ನುಡಿಯರಿಮೆ
liniment — ನಾ ನೋವಿನೆಣ್ಣೆ
lining — ನಾ ಒಳಪಸೆ (ಉಡುಪಿನ ಒಳಪಸೆ)
link — ನಾಗೊಣಸು (ಸರಪಳಿಯ ಗೊಣಸು), ಕೊಂಡಿ, ಕುಣಿಕೆ
link — ಕ್ರಿ ಸೇರಿಸು, ಕೂಡಿಸು, ಗಂಟುಹಾಕು
linkage — ನಾ ಸೇರಿಕೆ (ಗೊಣಸುಗಳ ಸೇರಿಕೆ ಸರಿಯಾಗಿಲ್ಲ)
linotype — ನಾ ಸಾಲಚ್ಚು
linseed — ನಾ ನಾರಗಸೆ (ನಾರಗಸೆ ಎಣ್ಣೆ)
lint — ನಾ ನವುರು ಬಟ್ಟೆ, ಬಟ್ಟೆಚೂರು
lintel — ನಾ ಹಾಸುಮರ, ಹಾಸುಗಲ್ಲು (ಬಾಗಿಲಿನ ಮೇಲಿರುವ ಹಾಸುಗಲ್ಲು)
lip (lower) — ನಾ ಅವುಡು (ಆಕೆ ಯಾವಾ ಗಲೂ ಅವುಡು ಕಚ್ಚುತ್ತಿರುತ್ತಾಳೆ)
lip — ನಾಒದಡು (ಒದಡು ಒಣಗಿದೆ),ತುಟಿ (ತುಟಿತೆರೆ; ತುಟಿಬಿಚ್ಚು), ಕೆಳದುಟಿ
lipstick — ನಾ ತುಟಿಬಣ್ಣ (ಆಕೆ ತುಟಿಬಣ್ಣ ಹಚ್ಚಿಕೊಂಡಿದ್ದಾಳೆ)
liquefy — ಕ್ರಿ ಕರಗು
liquid — ನಾ ನೀರು (ಬೆಣ್ಣೆ ಕರಗಿ ನೀರಾಗಿದೆ; ನೀರುಬೆಲ್ಲ) ಕ್ರಿ ಕೊನೆಗಾಣಿಸು, ಮುಗಿಸಿಬಿಡು, ಕೊಲ್ಲು 2 ಮುಚ್ಚು
liquidize — ಕ್ರಿ ನೀರುಮಾಡು, ನೀರಾಗು
liquor — ನಾ 1 ನೀರು 2 ಕಳ್ಳು (ಕಳ್ಳು ಕುಡಿ), ಈಡಿ
lisp — ನಾತೊದಲು (ತೊದಲ್ನುಡಿ, ತೊದಲು ಮಾತು)
lisp — ಕ್ರಿ ತಟ್ಟಿಸು (ತಟ್ಟಿಸಿ ಮಾತನಾಡು), ಗೊಜಗು
lissome — ಗು ಬಳುಕುವ, ಬಾಗುವ
list — ನಾ ಪಟ್ಟಿ, ವರಸೆ
list — ಕ್ರಿ 1 ಪಟ್ಟಿಮಾಡು 2 ಮಾಲು (ಹಡಗು ಎಡಬದಿಗೆ ಮಾಲಿದೆ)
listen — ಕ್ರಿ ಆಲಯ್ಸು (ಅವನ ಕೇಳಿಕೆಯನ್ನು ಆಲಲಿ್ಸುದರು), ಆಲಿಸು, ಕೇಳು (ಹೇಳುವು ದನ್ನು ಕೇಳು)
listless — ಗು ದಣಿದ, ಚುರುಕಿಲ್ಲದ
literacy — ನಾ ಬರಹದರಿವು
literate — ಗು ಬರಹಬಲ್ಲ (ಈ ಊರಲ್ಲಿ ಬರಹಬಲ್ಲ ಮಂದಿ ಹೆಚ್ಚಿಲ್ಲ)
literature — ನಾ 1 ಬರಹಗಾರಿಕೆ 2 ನಲ್ಬರಹ
lithe — ಗು ಬಳುಕುವ, ಬಾಗುವ
llithopress — ನಾ ಕಲ್ಲಚ್ಚು
litter — ನಾ 1 ಕಸ (ಎಲ್ಲ ಕೋಣೆಗಳಲ್ಲೂ ಕಸ ತುಂಬಿದೆ) 2 ಚಟ್ಟ (ಹೆಣ ಹೊರಲು ಚಟ್ಟ ಬಂದಿದೆ) 3 ಸೂಳುಮರಿ
little — ಗು ಚಿಕ್ಕ (ಚಿಕ್ಕ ಊರು; ಚಿಕ್ಕ ಹುಡುಗಿ), ಪುಟ್ಟ (ಪುಟ್ಟ ಹಕ್ಕಿ, ಪುಟ್ಟ ಮಗು), ಕುತ್ತು (ಕುತ್ತಡಿ; ಕುತ್ತೆಸಳು), ಕಿರು (ಕಿರುಗತ್ತಿ), ಕಿತ್ (ಕಿತ್ತುಸಿರು)
little finger — ನಾ ಕಿರುಬೆರಳು
littoral — ಗು ಕಡಲಕರೆಯ (ಕಡಲಕರೆಯ ಗುಡಿಸಲುಗಳು)
live — ಕ್ರಿ ಬಾಳು (ಯಾರಿಗೂ ತೊಂದರೆ ಕೊಡದೆ ಬಾಳಿದವನು), ಬದುಕು (ಹೊರೆಹೊತ್ತು ಬದುಕುವವನು)
live coal — ನಾ ಕೆಂಡ (ಕೆಂಡಗಣ್ಣು; ಕೆಂಡ ರೊಟ್ಟಿ), ತಣಲು
livelihood — ನಾ ಬಾಳಿಕೆ (ಅವರ ಬಾಳಿಕೆಗೆ ಕಾಡೇ ನೆಲೆಮನೆ), ಬಾಳ್ವಿಕೆ, ಬಾಳುವೆ (ಬಾಳುವೆಗೆಡು), ಬಾಳ್ತನ
liveliness — ನಾ ಮಿಡುಕು (ಮಿಡುಕುಗುಂದು)
lively — ಗು ಚುರುಕು, ಮಿಡುಕುವ ಕ್ರಿ ಹುರಿದುಂಬಿಸು (ಆಕೆ ಎಲ್ಲರನ್ನೂ ಹುರಿದುಂಬಿಸುತ್ತಿದ್ದಾಳೆ)
livery — ನಾ 1 ತೊತ್ತುಡುಪು 2 ಕುದುರೆಯಾರಯ್ಕೆ
livid — ಗು 1 ಕನಿಪೆಕಟ್ಟಿದ (ಪೆಟ್ಟು ತಗಲಿ ಕನಿಪೆಕಟ್ಟಿದ ಬೆರಳು), ನೆತ್ತರು ಕಟ್ಟಿದ 2 ಬಿಳಿಚಿದ (ಸಿಟ್ಟಿನಿಂದ ಬಿಳಿಚಿದ ಮೋರೆ)
living — ಗು ಬದುಕಿರುವ, ಬಳಕೆಯಲ್ಲಿರುವ (ಬಳಕೆಯಲ್ಲಿರುವ ನುಡಿ)
lizard — ನಾ ಹಲ್ಲಿ
load — ನಾಹೊರೆ (ತಲೆಹೊರೆ; ಹೊರೆ ಕಟ್ಟು),ಪೆಂಟೆ, ಪೆಂಡೆ
load — ಕ್ರಿ ಹೇರು (ಕತ್ತೆಯ ಬೆನ್ನ ಮೇಲೆ ಹೇರಿದ ಸರಕು), ಮೋಪು
loaded — ಗು ಒಳಹುರುಳಿರುವ
loaf — ಕ್ರಿ ಅಲೆದಾಡು, ಹೊತ್ತುಕಳೆ, ಮಯ್ಗಳ್ಳ ನಾಗಿರು
loafer — ನಾ ಸೋಂಬ, ಮಯ್ಗಳ್ಳ, ಉಂಡಾಡಿ
loam — ನಾ ಕಳಿಮಣ್ಣು, ಕಡುಮಣ್ಣು
loan — ನಾಕಡ (ಕಯ್ಗಡ; ಮುಂಗಡ),ಎರವು (ಎರವು ಕೊಡು),ಕಯ್ಬದಲು
loathe — ಕ್ರಿ ಹೇಸು, ರೋಸು, ಹೇವರಿಸು
lob — ಕ್ರಿ ಎತ್ತರಕ್ಕೆ ಹೊಡೆ
lobby — ನಾ ಪಡಸಾಲೆ
lobby — ಕ್ರಿ ಒಲಿಸು, ಸೆಳಕೊಳ್ಳು
lobe — ನಾ ಹಲ್ಲ (ಕಿವಿಯ ಹಲ್ಲ), ಹಾಲೆ
lobster — ನಾಕಡಲೆೀಡಿ
local — ಗು ಊರೊಳಗಿನ
locality — ನಾ ನೆಲೆ, ಎಡೆ
locate — ಕ್ರಿ 1 ಗುರುತಿಸು, ನೆಲೆಯರಿ 2 ನೆಲೆಗೊಳಿಸು, ಇರಿಸು
location — ನಾ ನೆಲೆ, ತಾಹೆ, ಇರುವೆಡೆ
loch — ನಾ 1 ಕೊಳ 2 ಕಡಲಕಾಲುವೆ
lock — ನಾ 1 ಕುರುಳು (ಕೊಂಕುಗುರುಳು; ಮಂಡೆಯ ಕುರುಳು) 2 ಬಿಯ್ಯಗ, ಬೀಗ (ಮನೆಗೆ ಬೀಗ ಹಾಕಿ ಬಂದಿದ್ದೇನೆ) 3 ಕಟ್ಟೆ (ಕಾಲುವೆಯ ಕಟ್ಟೆ)
locker — ನಾ ಬೀಗದ ಗೂಡು, ಬೀಗದ ಕೋಣೆ
lockup — ನಾ ಸೆರೆಮನೆ ಗು ಹಂದುವ, ಓಡುವ
locomotive — ನಾ ಉಗಿಬಂಡಿ
locust — ನಾ ಮಿಡಿತೆ
locution — ನಾ ಮಾತು, ಮಾತಿನ ಬಗೆ
lodestar — ನಾ ಬಡಗಚುಕ್ಕಿ
lodge — ಕ್ರಿ ತಂಗು (ಹೋಟೆಲಿನಲ್ಲಿ ತಂಗಿದರು; ತಂಗುದೊಡ್ಡಿ; ತಂಗುಮನೆ)
lodging — ನಾಬಿಡಾರ, ಬಿಡದಿ, (ಬಿಡದಿ ಬಿಡು; ಬಿಡದಿ ಮನೆ)
loft — ನಾಅಟ್ಟ (ಅಟ್ಟಕ್ಕೆ ಹತ್ತಿ ಅಡಗಿ ಕುಳಿತ)
lofty — ಗು 1 ಎತ್ತರದ 2 ದೊಡ್ಡಸ್ತಿಕೆಯ, ಮೇಲರಿಮೆಯ, ಮಲೆಯುವ, ಮಲೆಪಿನ
log — ನಾ ದಿಮ್ಮಿ (ಮರದ ದಿಮ್ಮಿ), ಕುಂಟೆ (ಒಲೆಗೊಂದು ಕುಂಟೆ ಹಾಕಿದರೆ ಎಷ್ಟು ಹೊತ್ತೂ ಉರಿಯುತ್ತಿರುತ್ತದೆ),ಕೊಂಟು
log — ಕ್ರಿ 1 ಬರೆದಿಡು 2 ಕಡಿ (ಮರ ಕಡಿದು ದಿಮ್ಮಿಗಳನ್ನು ಉರುಳಿಸಿದ)
loggerhead — ನಾ ದಡ್ಡ
loin — ನಾ ಸೊಂಟ (ಮುದುಕಿಯ ಸೊಂಟ ಮುರಿದಿದೆ), ನಡು, ಟೊಂಕ (ಟೊಂಕ ಕಟ್ಟು)
loiter — ಕ್ರಿ ಅಡ್ಡಾಡು, ಅಲೆದಾಡು, ಮೆಲ್ಲ ನಡೆ
loll — ಕ್ರಿ ಅಲಸಿನಲ್ಲಿ ಎರಗಿರು
lone — ಗು ಒಂಟಿ (ಒಂಟಿಕೊಂಬು; ಒಂಟಿ ದೋಳು - ಒಂಟಿದೋಳಿನ ಮುದುಕಿ; ಒಂಟೆತ್ತು; ಒಂಟಿಗ)
loneliness — ನಾ ಬಿಡಿತನ, ಒಂಟಿತನ, ಒಂಟಿಗತನ
lonely — ಗು ಒಂಟಿ (ಒಂಟಿಗ; ಒಂಟಿಗಾರ; ಒಂಟಿಗಿತ್ತಿ)
long — ಗು ನೀಟ (ನೀಟ ಬಿದಿರು, ನೀಟಸಾಲು; ನೀಟಬೀಳು; ಕಾಲನ್ನು ನೀಟಾಗಿಸು), ನಿಟ್ಟು (ನಿಟ್ಟುಸಿರು, ನಿಟ್ಟೆಲುಬು, ನಿಟ್ಟಿರುಳು, ನಿಟ್ಟೋಟ); ನಿಡು (ನಿಡುಗೊರಲು, ನಿಡುದೋಳು, ನಿಡುಮೂಗು, ನಿಡುಬೆರಳು, ನಿಡುಮರ, ನಿಡುವೊಡಲು); ನಿಡಿದು, ನೀಳ (ನೀಳನಾಲಿಗೆ, ನೀಳಗಡ್ಡ), ಚಲ್ಲ (ಚಲ್ಲ ಗಣ್ಣು), ಜಂಬು (ಜಂಬುಹುಲ್ಲು), ಕೂಲು (ಕೂಲುಬಲೆ), ಕೋಲು (ಕೋಲುಬಲೆ; ಕೋಲುಳಿ), ದಾಟು (ದಾಟುಹೊಲಿಗೆ, ದಾಟುಕಾಲು)
long for — ಕ್ರಿ ಹಾರಯ್ಸು (ನಿಮ್ಮ ಬರವನ್ನು ಹಾರಯ್ಸುತ್ತಿದ್ದೇವೆ), ಎಳಸು, ಹಂಬಲಿಸು (ಆತ ಹಲವನ್ನು ಹಂಬಲಿಸುತ್ತ ಕುಳಿತಿದ್ದ), ತೇರಲಿುಸು
long jump — ನಾ ಉದ್ದನೆಗೆತ (ಉದ್ದ ನೆಗೆತ ದಲ್ಲಿ ನಿಮ್ಮ ಹುಡುಗ ಮುಂದಿದ್ದಾನೆ)
long pepper — ನಾ ಬಯಸಿ (ಮದ್ದಿಗೆ ತುಸು ಬಯಸಿ ಬೇಕಾಗಿತ್ತು) wave ನಾ ನಿಟ್ಟಲೆ
longevity — ನಾ ನಿಡುಬಾಳ್ವೆ
longhand — ನಾ ಕಯ್ಬರಹ (ಆತ ತನ್ನ ಓಲೆ ಗಳನ್ನೆಲ್ಲ ಕಯ್ಬರಹದಲ್ಲೀ ಬರೆದುಕೊಡು ತ್ತಿದ್ದ)
longing — ನಾ ಬೇಟ (ಬೇಟಗಾರ), ಹಂಬಲ (ಹಂಬಲಿಸು)
longwinded — ಗು ಬೇಸರಿಸುವಷ್ಟು ಉದ್ದದ
look — ನಾ ನೋಟ, ಅಂದ, ಚೆಲುವು
look — ಕ್ರಿ (ಆ) ಕಾಣು (ನನಗೆ ಕಂಡ ಹಣ್ಣು), ಕಾಣಿಸು, ತೋರು (ಮಾ) ನೋಡು (ಮುನಿದು ನೋಡಿದ ನೋಟ)
look after — ಕ್ರಿ ಆರಯ್ಸು (ಆರಯ್ಕು; ಮಗು ವಿನ ಆರಯ್ಕು ಮಾಡುವ ತಾಲಿು), ಪಾರು (ಪಾರುಪತ್ಯ), ಹಾರು (ಹಾರವ)
look down — ಕ್ರಿ ಕಡೆಗಣಿಸು (ಅವನನ್ನು ಎಲ್ಲರೂ ಕಡೆಗಣಿಸುತ್ತಾರೆ)
look forward — ಕ್ರಿ ಎದುರುನೋಡು (ನೀವು ಬರುವುದನ್ನೇ ಎದುರುನೋಡುತ್ತಿದ್ದೇನೆ)
look slyly — ಕ್ರಿ ಹಣಿಕು (ಹಣಿಕಿನೋಡು; ಹಣಿಕಿಕ್ಕು; ಹಣಿಕಿಹಾಕು)
lookout — ನಾ ಕಾವಲೆಡೆ (ಈ ಕಾವಲೆಡೆಯಲ್ಲಿ ಕಾವಲುಗಾರನೊಬ್ಬನೂ ಇಲ್ಲ), ಕಾವಲು ಗಾರ
loom — ನಾ ಮಗ್ಗ (ಬಟ್ಟೆ ನೇಯುವ ಮಗ್ಗ)
loom — ಕ್ರಿ ಮಬ್ಬಾಗಿ ತೋರು, ಬೆದರಿಸು
loop — ನಾಕುಣಿಕೆ (ಕುಣಿಕೆ ಹಗ್ಗ),ಕುಳಿಕೆ
loophole — ನಾ 1 ಪಾರುಗಂಡಿ, ತಪ್ಪಿಸುವ ದಾರಿ 2 ಕಿಂಡಿ, ತೂತು
loose — ಗು ಸಳ್ಳಕ (ಕೂದಲು ಸಳ್ಳಕ ಬಿದ್ದಿದೆ), ಜಂಗಳ, ಜೋಲು (ಜೋಲುಗರುಳು; ಜೋಲುದೊಗಲು), ಅಳ್ಳೆ (ಅಳ್ಳಕ - ಬಳೆ ಅಳ್ಳಕವಾಗಿದೆ; ಅಳ್ಳಗೆ - ಅಳ್ಳಗೆ ಮಾಡಿದ ಅನ್ನ), ಬಿಡಿ (ಬಿಡಿಕಟ್ಟಿಗೆ, ಬಿಡಿಹೂವು; ಬಿಡಿಮುತ್ತು)
loosen — ಕ್ರಿ ಬಿಚ್ಚು (ಬಿಚ್ಚಿದ ತಲೆಗೂದಲು; ಬಿಚ್ಚೋಲೆ), ಉಚ್ಚು (ಹೆರೆ ಉಚ್ಚಿದ ಹಾವು; ಉಚ್ಚಾಟ),ಕಳೆ (ಕಳೆದ ಚಿಲುಕ; ಗಳಿ ಲಿುಸು), ಕಳಚು (ಕೀಲು ಕಳಚಿತು) ಗೆಬ್ಬು
loot — ಕ್ರಿ ಕೊಳ್ಳೆಹೊಡೆ, ಸೂರೆಮಾಡು, ದೋಚು (ಎಲ್ಲವನ್ನೂ ದೋಚಿಕೊಂಡು ಹೋದರು)
lop — ಕ್ರಿ 1 ಕಡಿ, ಸವರು (ಮರದ ಗೆಲ್ಲು ಗಳನ್ನೆಲ್ಲ ಸವರಿದ್ದಾನೆ), ತುಂಡರಿಸು 2 ಜೋಲು (ಜೋತುಬೀಳು)
lope — ಕ್ರಿ ದಾಪುಗಾಲಿಗ್ಗು, ನೆಗೆನೆಗೆದು ಓಡು
lopsided — ಗು ಏರುಪೇರು, ಸರಿತೂಗದ ಗು ತುಂಬಾ ಹರಟುವ (ತುಂಬಾ ಹರಟುವ ಹುಡುಗ)
lord — ಕ್ರಿ ಮೇಲಾಳಿಕೆ ನಡೆಸು (ಆತ ಎಲ್ಲರ ಮೇಲೂ ಮೇಲಾಳಿಕೆ ನಡೆಸುತ್ತಿದ್ದಾನೆ)
lore — ನಾ ಕಲಿಕೆ, ತಿಳಿವು, ನಂಬಿಕೆ
lose — ಕ್ರಿ ಕಳೆ (ಕಳೆದುಕೊಳ್ಳು - ಅವನು ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡ; ಸಾಲಗಳೆ; ಹೊತ್ತುಕಳೆ), ಸೋಲು, ಕೆಡಿಸು
loss — ನಾ ಹೋಗುಹ,ಕಳಿ, ಕಳೆತ, ಕಳಿವು (ಕಳಿವುಳಿವು)
lost — ಗು ಕಾಣೆ (ಕಾಣೆಯುತ್ತು)
lot — ನಾ 1 ಸಯ್ಪು (ನಮ್ಮ ಸಲಿ್ಪುನಲ್ಲಿ ಯಾವುದು ಬರುತ್ತದೆಯೋ ಅದಷ್ಟೀ ನಮ್ಮದು) 2 ನೆಲೆ (ಮನೆ ಕಟ್ಟಲು ನೆಲೆ) 2 ತಂಡ (ಹುಡುಗರ ತಂಡ)
lot — ಗು ತುಂಬಾ, ಒಟ್ಟಾರೆ
lotion — ನಾ ನೀರುಮದ್ದು
lottery — ನಾ ಆಯ್ಕೆ (ತೆರಹಿನ ಆಯ್ಕೆ; ಸಲಿ್ಪುನ ಆಯ್ಕೆ)
lotus — ನಾತಾವರೆ (ಆ ಕೊಳದ ತಾವರೆ ಹೂಗಳು ಚನ್ನಾಗಿವೆ)
loud — ಗು 1 ಗಟ್ಟಿ (ಗಟ್ಟಿಯಾಗಿ ಓದು), ದೊಡ್ಡ (ದೊಡ್ಡ ಸದ್ದು), ಕಟ್ (ಕಟ್ಟು ಲುಹು), ಕಡು (ಕಡುಸಿಡಿಲು) 2 ಎದ್ದು ಕಾಣುವ, ಕಣ್ಣುಕುಕ್ಕುವ
loud cry — ನಾಆರ್ಬಟೆ
loudspeaker — ನಾ ಉಲಿಯೇರು, ಉಲಿ ಹೆಚ್ಚುಕ
lounge — ಕ್ರಿ 1 ಒಯ್ಯನಿರು, ಅಲಸು
louse — ನಾಹೇನು, ಉಣ್ಣಿ, ಉಣುಗು
louse — ಕ್ರಿ ಸೀರು (ಆಕೆ ತನ್ನ ಮಗಳ ಕೂದಲನ್ನು ಸೀರುತ್ತಿದ್ದಾಳೆ)
lousy — ಗು ಕೊಳಕು, ಹೇಸಿಗೆಯ
love — ನಾಆರುಮೆ,ಒಲುಮೆ (ಒಲುಮೆಯ ನೋಟ),ಕೂರ್ಮೆ, ಕೂರ್ಪು (ಕೂರ್ಪವನು),ಮುಚ್ಚಟೆ (ಮುಚ್ಚಟೆಯ ಮಾತು; ಮುಚ್ಚಟೆ ಲಿುಂದ ಬೆಳೆಸು), ಅರು (ಅರುಗೊಳ್ಳು), ಅರ್ತಿ, ಅಕ್ಕಜ (ಅವನನ್ನು ಅಕ್ಕಜ ಮಾಡ ಬೇಡ), ಅಕ್ಕರೆ (ಅಕ್ಕರೆಲಿುಂದ ಮಗುವಿನ ಮಯ್ದಡವಿದಳು), ಕೂರು (ಕೂರೂಟ), ಕಾದಲು, ಕಾದಲ್ಮ
love — ಕ್ರಿ ಒರಲು (ಒರಲಿದ ನಲ್ಲ), ಓ (ಅವನನ್ನು ಓತು ಸಾಕಿದಳು), ಅಳುಗು (ಅಳುಗುವ ನಲ್ಲ)
lovely — ಗು ಚಂದದ, ಸೊಗಸಾದ, ಹಸನಾದ
lover — ನಾ ನಲ್ಲ, ನಲ್ಲ,ಅರ್ತಿಕಾರ ಕ್ರಿ ಕರೆ (ಆಕಳು ಕರೆಯುತ್ತಿದೆ)
low — ಗು ತಗ್ಗು (ತಗ್ಗುಗದ್ದೆ, ತಗ್ಗುನೆಲ; ತಗ್ಗಾದ ಮನೆ), ಕುಸುಕು (ಕುಸುಕು ಬಾಗಿಲು), ಕೀಳು (ಕೀಳುಮಾಡು; ಕೀಳಾಗು; ಕೀಳ್ತನ)
low (be) — ಕ್ರಿ ತಗ್ಗು (ತಗ್ಗಿ ನಡೆ; ತಗ್ಗಿಬೀಳು)
low ground — ನಾ ಹಗ್ಗು (ಹಗ್ಗಿನಲ್ಲಿ ಕಾಲಿಟ್ಟು ಕಾಲು ಉಳುಕಿತು), ಕುಂದಿ (ಆನೆಗುಂದಿ), ತಗ್ಗು (ನೆಲದಲ್ಲಿ ಅಲ್ಲಲ್ಲಿ ತಗ್ಗುಗಳಿದ್ದುವು)
low tide — ನಾಇಳಿತ (ಕಡಲ ಇಳಿತ)
low water — ನಾಇಳಿನೀರು
lower — ಕ್ರಿ ಅಕ್ಕುಳಿಸು (ಮುನಿಸನ್ನು ಅಕ್ಕುಳಿಸಿ ಕೊಳ್ಳು), ತಗ್ಗಿಸು, ಕೆಳಗಿಳಿಸು, ಇಳಿಸು
lower lip — ನಾ ಕೀಳ್ತುಟಿ
loyal — ಗು ನಂಬತಕ್ಕ, ನಂಬಿಕೆಯ
loyalty — ನಾ ನಂಬಿಕೆ
lubber — ನಾ ಕೋಡಂಗಿ
lubricant — ನಾಕೀಲೆಣ್ಣೆ
lucent — ಗು ಬೆಳಗುವ, ಆಚೆ ಕಾಣಿಸುವ
lucid — ಗು 1 ಹೊಳೆಯುವ, ಆಚೆಕಾಣಿಸುವ, ತಿಳಿಯಾದ 2 ತಿಳಿಯುವ
lucifer — ನಾ ಮುಂಜಾವಿನರಿಲು
luck — ನಾ ಹಣೆಬರಹ (ಅವನ ಹಣೆಬರಹ ಚನ್ನಾಗಿಲ್ಲ), ಸಯ್ಪು
lucrative — ಗು ಹಣತರುವ, ಪಡಪಾಗುವ
lucre — ನಾ ಪಡಪು
ludicrous — ಗು ನಗೆಗೀಡಾಗುವ, ಗೇಲಿಯಾದ
lug — ಕ್ರಿ ಎಳೆ, ಹೊರು
luggage — ನಾ ಗಂಟುಮೂಟೆ
lugubrious — ಗು ಅಳು ಮೋರೆಯ, ಮರು ಗುವ
lukewarm — ಗು ಉಗುರುಬಿಸಿ (ಉಗುರುಬಿಸಿ ನೀರು)
lull — ಕ್ರಿ ಒರಗಿಸು, ನೆಮ್ಮದಿಗೊಳಿಸು
lullaby — ನಾ ಜೋಗುಳ (ಜೋಗುಳ ಹಾಡು)
lumbago — ನಾಸೊಂಟನೋವು, ಬೆನ್ನಬೇನೆ ನಾ ಹಳೇ ತಟ್ಟುಮುಟ್ಟು
lumber — ಕ್ರಿ ಒಡ್ಡೊಡ್ಡಾಗಿ ನಡೆ, ತಡವರಿಸು
lumberjack — ನಾ ಮರಕಡಿಗ
luminary — ನಾ 1 ಮಿಂಚುಗೆ 2 ದೊಡ್ಡವರು, ಹೊಗಳಪಟ್ಟವರು, ಪೊಗಳ
luminous — ಗು ಹೊಳೆಯುವ, ತಿಳಿಯಾದ
lump — ನಾ ತೆರಳೆ (ಊಟದ ತೆರಳೆ; ತೆರಳೆ ಗಟ್ಟು), ಹೆಂಟೆ (ಮಣ್ಣಿನ ಹೆಂಟೆ), ಕರಣೆ (ಹಿಂಡಿಯ ಕರಣೆ), ಗರಣೆ, ಪೆಂಟೆ (ಪೆಂಟೆ ಗಟ್ಟು; ಪೆಂಟೆಬೆಲ್ಲ), ಮುದ್ದೆ (ರಾಗಿಮುದ್ದೆ, ಬೆಲ್ಲದ ಮುದ್ದೆ; ಮುದ್ದೆಮಾಡು), ಹಳಿ (ಕಲ್ಲುಸಕ್ಕರೆ ಹಳಿ), ಹಳುಕು, ಗಟ್ಟಿ (ಬಂಗಾರದ ಗಟ್ಟಿ),ಗಡ್ಡೆ (ಮಂಜುಗಡ್ಡೆ; ಗಡ್ಡೆಕಟ್ಟು)
lunacy — ನಾ ಹುಚ್ಚು, ಹೇಕುಳಿ
lunar — ಗು ತಿಂಗಳ (ತಿಂಗಳ ಬೆಳಕು), ಹರೆಯ (ಹರೆಯ ಅಂಬು)
lunatic — ನಾ ಹುಚ್ಚ, ಹೇಗ, ಮರುಳ
lunch — ನಾ ಊಟ (ನಡುಹಗಲ ಊಟ)
lunch box — ನಾ ಕಟ್ಟೂಟ
lunch — ಕ್ರಿ ಉಣ್ಣು, ಊಟಮಾಡು
lung — ನಾ ಉಸಿರುಕ
lunge — ಕ್ರಿ ಚುಚ್ಚು, ತಿವಿ (ಒಮ್ಮೆಲೆೀ ತಿವಿ)
lurch — ಕ್ರಿ ತತ್ತರಿಸು, ಮುಗ್ಗರಿಸು, ಒಮ್ಮೆಲೆ ಹೊರಳು
lure — ಕ್ರಿ ಸೆಳೆ (ಸೆಳೆತ)
lurid — ಗು ಹೊಳೆಯುವ (ಹೊಗೆಯ ನಡುವೆ ಹೊಳೆಯುವ ಕಿಚ್ಚು), ಬೆಚ್ಚಿಸುವ
lurk — ಕ್ರಿ ಹೊಂಚು (ಹೊಂಚಿ ಕುಳಿತ ಬೆಕ್ಕು; ಹೊಂಚಿಕೆ, ಹೊಂಚುಹಾಕು; ಹೊಂಚಿ ನೋಡು)
luscious — ಗು ಸವಿಯಾದ, ಗಮಗಮಿಸುವ
lush — ಗು ಹುಲುಸು (ಹುಲುಸಾಗಿ ಬೆಳೆದ ಹುಲ್ಲುಗಾವಲು)
lust — ನಾಮಿಂಡು,ಮಸೆ,ದೂಲೆ
luster — ನಾ ಪೊಗರು, ಮೆರುಗು (ಬಟ್ಟೆಲಿುಂದ ಉಜ್ಜಿ ಮೆರುಗು ಕೊಡು), ಕದರು, ತೊಳಪು, ಹೊಳಪು (ಬೆಳ್ಳಿಯ ಹೊಳಪು; ಹೊಳೆತ; ಹೊಳಪೇರು)
lusty — ಗು ದಪ್ಪಮಯ್ಯ, ಗಟ್ಟಿಮುಟ್ಟಾದ, ಬಲಿತ
luxuriant — ಗು ಹುಲುಸಾದ, ಸೊಂಪಾದ (ಸೊಂಪಾದ ಬೆಳೆ) ಗು ಸೊಗಸಾದ, ಪದಪಿನ, ಬೆಲೆ ಬಾಳುವ
lying down — ನಾ ಪಡಲು (ಪಡಲಿಡು - ಪಡಲಿಟ್ಟಿರುವ ಕುದುರೆಗಳು), ಪಕ್ಕೆ (ಪಕ್ಕೆಮನೆ; ಹಕ್ಕಿಯ ಪಕ್ಕೆ)
lynx-eyed — ಗು ಚುರುಕು ಕಣ್ಣಿನ
lyric — ನಾ ಬೇಗುದಿಯ ಹಾಡು