← Ch 2  ·  Contents  ·  Ch 4 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

C

cab — ನಾ ಬಂಡಿ, ಗಾಡಿ
cabal — ನಾ ಒಳಸಂಚು, ಹೂಟ
cabbage — ನಾ ಕೋಸುಗಡ್ಡೆ
cabin — ನಾ 1 ಗುಡಿಸಲು 2 ಕೋಣೆ
cabinet — ನಾ ಅರೆವರಸೆ
cable — ನಾ 1 ಹೊರಜಿ (ತೇರೆಳೆಯುವ ಹೊರಜಿ) 2 ಮುಚ್ಚುಕಂಬಿ
cache — ನಾ ಬಚ್ಚು (ಬಚ್ಚಿಟ್ಟುದು), ಬಯ್ಕೆ (ಅಡಗಿಸಿಟ್ಟ ಬಯ್ಕೆ)
cachet — ನಾ ಸೋಹೆ, ಗುರುತು, ಕುರುಹು
cackle — ಕ್ರಿ ಕೀರು, ಚೀರು
cactus — ನಾಕಳ್ಳಿ (ಕಳ್ಳಿಗಿಡ, ಕಳ್ಳಿಹಾಲು)
cadaver — ನಾ ಹೆಣ (ಹೆಣ ಹೊರುವವರು ಸುಡುಗಾಡಿನ ಕಡೆಗಾಗಿ ನಡೆದರು)
cadaverous — ಗು ಬಿಳಿಚಿದ (ಹೆಣದ ಹಾಗೆ ಬಿಳಿಚಿದ ಮೋರೆ)
cafe — ನಾ ತಿಂಡಿಮನೆ (ಆತನಿಗೆ ದಿನಕ್ಕೊಮ್ಮೆ ಯಾದರೂ ತಿಂಡಿಮನೆಗೆ ಹೋಗಬೇಕು)
cage — ನಾ ಜಿಂಜಿರಿ (ಜಿಂಜಿರಿ ಹೂಡು), ಬೋನು (ಬೋನಿನೊಳಗೆ ಬಿದ್ದ ಇಲಿ), ಬೋರ (ಆನೆ ಹಿಡಿಯಲು ಬೋರ ಇರಿಸಿದ್ದಾರೆ)
cajole — ಕ್ರಿ ಮರುಳುಮಾಡು, ಒಲಿಸು (ಆಕೆ ಯನ್ನು ಒಲಿಸುವುದು ಹೇಗೆ?)
calamity — ನಾ ಅಳಿವು, ಕೇಡು (ಕೇಡು ಗಾಲ), ತತ್ತು
calculate — ಕ್ರಿ ಲೆಕ್ಕಹಾಕು, ಎಣಿಸು ನಾ ನಾಳುತೋರ್ಪು
calf (male) — ನಾಹೋರಿ (ಹೋರಿ ಕರು; ಎಮ್ಮೆವೋರಿ)
calf — ನಾ ಪೆಯ್ಯ (ಹಾಲು ಪೆಯ್ಯನ ಎಂಜ ಲಲ್ಲವೇ?), ಅಂಬೆ (ನಮ್ಮ ಅಂಬೆ ಅಂಗಳದಲ್ಲಿ ಕುಣಿದಾಡುತ್ತಿದೆ), ಕರು (ಕರುಹಾಕು; ಕೆಚ್ಚಲಕರು),ಕೀಳು (ಕೀಳು ಬಿಡದೆ ಹಸುವನ್ನು ಹೇಗೆ ಕರೆಯಲಿ?), ಕಂದು (ಕಂದುಹಾಕು)
caliber — ನಾ ಒಳಳತೆ, ಒಳಪರಿಚೆ
call — ಕ್ರಿ ಕರೆ (ಆ ಹುಡುಗನನ್ನು ಕರೆ), ಕೂಗು (ಎಶ್ಟು ಕೂಗಿದರೂ ಅವಳಿಗೆ ಕೇಳಿಸುವು ದಿಲ್ಲ)
calligraphy — ನಾ ಅಂದದ ಕಯ್ಬರಹ
call-loan — ನಾ ಕರೆಸಾಲ
callosity — ನಾನಾಳಿ (ಹೊರೆಗಳನ್ನು ಹೊತ್ತು ಬೆನ್ನಲ್ಲಿ ನಾಳಿ ಬಿದ್ದಿದೆ),ಕೇಮ
callous — ಗು ಪಟ್ಟು (ಪಟ್ಟುಕಟ್ಟು),ಜಡ್ಡು (ಜಡ್ಡುಗಟ್ಟು), ದಡ್ಡು (ದಡ್ಡುಗಟ್ಟು; ದಡ್ಡುಬೀಳು)
callow — ಗು ಪಾಡಿಲ್ಲದ
calm — ಕ್ರಿ ಅಡಗು (ಅವನ ಸದ್ದಡಗಿದೆ)
calm — ಗು ನೆಮ್ಮದಿಯ (ನೆಮ್ಮದಿಯಾಗಿರುವ), ಅಲ್ಲಾಡದ
calumny — ನಾಕೋಳು, ತಳ್ಳಿಮಾತು
calve — ಕ್ರಿ ಈಯು (ಈಯುವ ಆಕಳು)
calved (cow) — ನಾ ಕಂತಿ (ಎಳಗಂತಿ, ಕಡೆ ಗಂತಿ)
camel — ನಾ ಒಂಟೆ
camouflage — ಕ್ರಿ ಮರೆಮಾಡು
camp — ನಾ ಪಾಳೆಯ (ಪಾಳೆಯ ತೆಗೆ; ಪಾಳೆಯವಿಕ್ಕು), ಬೀಡು (ಬೀಡು ಬಿಡು; ಬೀಡಾಗು), ಬೀಡಿಕೆ (ಗವ್ಡರ ಹತ್ತಿರ ಬೀಡಿಕೆಗೆ ನೆಲ ಕೇಳಬೇಕಾಯಿತು)
camphor — ನಾಪನ್ನೆ
canal — ನಾ ಉದ್ದಿ (ಗದ್ದೆಯ ಬದಿಯ ಉದ್ದಿ ಯಲ್ಲಿ ನೀರು ಬಿಟ್ಟಿದ್ದಾರೆ),ಕಾಲುವೆ (ಗಿಡ ಮರಗಳಿಗೆ ನೀರು ಬಿಡಲು ಕಾಲುವೆಗಳಿವೆ)
canard — ನಾ ಸುಳ್ಳುಕತೆ
cancel — ಕ್ರಿ ಇಲ್ಲವಾಗಿಸು, ನೀಗು, ತೆಗೆದು ಹಾಕು
cancellation — ನಾ ನೀಗಾಣಿಕೆ
cancer — ನಾಏಡಿಹುಣ್ಣು
candid — ಗು ನೇರ (ನೇರ ಮಾತು) ಮುಚ್ಚು ಮರೆಯಿಲ್ಲದ
candidate — ನಾ ಹುರಿಯಾಳು (ಇನ್ನೂ ಮೂವರು ಹುರಿಯಾಳುಗಳು ಕಣದ ಲ್ಲಿದ್ದಾರೆ)
candle — ನಾ ಮೇಣಬೆಳಕು
candour — ನಾ ನೇರ್ಮೆ
candy — ನಾಕಲ್ಲುಸಕ್ಕರೆ
cane — ನಾ ಬೆತ್ತ, ಹಬ್ಬೆ (ಹಬ್ಬೆಗಿಡ)
canine — ಗು ನಾಯಿಯ
canny — ಗು ಚುರುಕು (ಚುರುಕು ಹುಡುಗಿ), ಸುಟಿ
canon — ನಾ ಕಟ್ಟಳೆ
canopy — ನಾ ಮೇಲ್ಕಾಪು, ಮೇಲ್ಕಟ್ಟು
cant — ಗು ಓರೆ (ಓರೆನೋಟ), ಮಾಲ (ಮಾಲ ನುಡಿ)
cantankerous — ಗು ಜಗಳಗಂಟ ನಾ ತಿಂಡಿಮನೆ
canter — ನಾ ಮೆಲ್ನಡೆ, ಸುಳುನಡೆ
canticle — ನಾ ಕಿರುಹಾಡು
canto — ನಾ ಪಸುಗೆ
canvas — ನಾ ನಾರುಬಟ್ಟೆ, ಕೊಡಿಬಟ್ಟೆ
canvass — ಕ್ರಿ ಬೆಂಬಲಕೋರು (ಹುರಿಯಾಳು ಗಳು ಮನೆಮನೆಗೆ ಹೋಗಿ ಬೆಂಬಲ ಕೋರುತ್ತಿದ್ದರು)
canyon — ನಾ ಆಳಕಣಿವೆ
cap — ನಾ ಕೊಪ್ಪೆ (ಕಂಬಳಿಯ ಕೊಪ್ಪೆ; ಕಯ್ಗೊಪ್ಪೆ) ಗೋಟೆ
capability — ನಾ ಗುಣ್ಮೆ, ಅಳವು (ಈ ಕೆಲಸ ಅವನ ಅಳವಿನಲ್ಲಿಲ್ಲ), ಪುರುಳು (ಒಡಲ ಪುರುಳು)
capable — ಗು ಅಳವುಳ್ಳ, ಮಾಡಬಲ್ಲ
capable person — ನಾ ಆಟಾಳು (ಆತ ನೊಬ್ಬ ಆಟಾಳೆಂದು ನನಗೆ ಮೊದಲೆೀ ಗೊತ್ತಿತ್ತು)
capacious — ಗು ತೆರವುಳ್ಳ, ಹರಹುಳ್ಳ
capacity — ನಾ 1 ಅಳವು, ಜಾಣ್ಮೆ 2 ಹರಹು
caper — ಕ್ರಿ ನೆಗೆದಾಡು
capillary — ನಾ ಕಿರುಕೊಳವೆ
capital — ನಾ 1 ಇಡುಗಂಟು (ಎಂಟು ನೂರರ ಇಡುಗಂಟು ಅವನ ಬಳಿ ಇದೆ) 2 ಪೆರ್ಪೊಳಲು
capitulate — ಕ್ರಿ ಬಿಟ್ಟುಕೊಡು, ಸೋಲೊಪ್ಪು
capsize — ಕ್ರಿ ಮಗುಚು (ಹೆಚ್ಚು ಮಂದಿಯನ್ನು ತುಂಬಿಕೊಂಡು ಹೋಗುತ್ತಿದ್ದ ಓಡ ಹೊಳೆ ಯಲ್ಲಿ ಮಗುಚಿತು), ಅಡಿಮೇಲಾಗು, ತಲೆ ಕೆಳಗಾಗು
capsule — ನಾ 1 ಬಿತ್ತೊರೆ 2 ಮದ್ದೊರೆ
captain — ನಾ ಮುಂದುಗ, ಮೇಲಾಳು (ಮೇಲಾಳ್ತನ)
caption — ನಾತಲೆಬರಹ (ನಿಮ್ಮ ಬರಹ ಕ್ಕೊಂದು ಒಳ್ಳೆ ತಲೆಬರಹ ಬೇಕು)
captive — ನಾ ಸೆರೆಯಾಳು
capture — ಕ್ರಿ ಸೆರೆಹಿಡಿ (ಕಳ್ಳತನ ಮಾಡಿದವ ರಲ್ಲಿ ಮೂವರನ್ನು ಸೆರೆಹಿಡಿಯಲಾಗಿದೆ)
car — ನಾ ಬಂಡಿ
caramel — ನಾ ಸುಟ್ಟಸಕ್ಕರೆ
caravan — ನಾ ದಾರಿಗತಂಡ
carbon — ನಾ ಕರಿ
carbuncle — ನಾ ಕುರು (ಆತನ ಬೆನ್ನಿನಲ್ಲಿ ಒಂದು ಕುರು ಎದ್ದಿದೆ)
carcass — ನಾ ಹೆಣ
card (cotton) — ಕ್ರಿ ಹಿಂಜು (ಹತ್ತಿ ಹಿಂಜು), ಸಸಿ (ಸಸಿದ ಹತ್ತಿ)
cardamom — ನಾಏಲಕ್ಕಿ
cardboard — ನಾ ರಟ್ಟು
cardinal — ಗು ಮೊತ್ತಮೊದಲನೆಯ, ಅರಿದು
care — ನಾ ಆರಯ್ಕೆ (ಮಕ್ಕಳ ಆರಯ್ಕೆಗೆ ಒಬ್ಬಳು ಮುದುಕಿಲಿುದ್ದಾಳೆ), ಜೋಕೆ (ಜೋಕೆ ಮಾಡು, ಜೋಕೆಯಾಗಿರು), ಜೋಪಾನ, ಸರಕು (ಸರಕುಗೊಳ್ಳು), ಎಚ್ಚರಿಕೆ
careen — ಕ್ರಿ ಮಗುಚು, ಬಗ್ಗು, ಮಾಲು
careful — ಗು ಎಚ್ಚರಿಕೆಯ ಗು ಎಚ್ಚರಗೇಡಿ
caress — ಕ್ರಿ ಮುದ್ದಾಡು, ಮಯ್ದಡವು
caretaker — ನಾ ಕಾವಲುಗಾರ
cargo — ನಾ ಹೇರು, ಹೇರಿಗೆ (ಹೇರಿಗೆಯ ನ್ನಿನ್ನೂ ಇಳಿಸಬೇಕಿದೆ)
caricature — ನಾ ಪೇರಣಕ
caries — ನಾ ಹಲ್ಲುಹುಳುಕು
carnage — ನಾ ಕಗ್ಗೊಲೆ
carnival — ನಾ ಹಬ್ಬ (ಹಬ್ಬಕ್ಕೆ ಮೂರು ಹೊಸ ಸೀರೆ ಬಂದಿದೆ)
carol — ನಾ ನಲಿವಿನ ಹಾಡು (ನಲಿವಿನ ಹಾಡು ಹಾಡುತ್ತ ಬಂದವರು)
carp — ಕ್ರಿ ತಪ್ಪು ಹುಡುಕು carpenter’s plane ನಾ ಹತ್ತರಿ (ಹತ್ತರಿ ಹಿಡಿ; ಹತ್ತರಿಹೊಡೆ)
carpentry — ನಾ ಮರಗೆಲಸ
carpet — ನಾ ನೆಲಹೊದಿಕೆ (ಈ ನೆಲಹೊದಿಕೆಗೆ ಎಷ್ಟು ಕೊಟ್ಟಿರಿ?), ಜಾಡಿ
carpus — ನಾ ಮಣಿಕಟ್ಟು
carry on — ಕ್ರಿ ಮುಂದುವರಿಸು
carry — ಕ್ರಿ ಮೋರು (ಕಟ್ಟಿಗೆಯನ್ನು ತಲೆಯ ಮೇಲೆ ಮೋರಿದರು), ಹೊರು (ಮಣ್ಣು ಹೊರುವವರು; ಹೊತ್ತುಹಾಕು), ಒಯ್ಯು (ತಂಗಾಳಿ ತನಿಗಂಪನ್ನು ಒಯ್ಯುತ್ತ ಬೀಸಿತು; ಕೊಂಡೊಯ್ಯು; ಕೊಂಡುಹೋಗು)
carry-bag — ನಾ ಒಯ್ಚೀಲ
cart — ನಾ ಬಂಡಿ (ಬಂಡಿಹೊಡೆ; ಎತ್ತಿನ ಬಂಡಿ; ಬಂಡಿಹೋಕ), ಕೊಲ್ಲಾರ (ಎತ್ತಿನ ಕೊಲ್ಲಾರ)
cart bottom — ನಾಚಟ್ಟು (ಬಂಡಿಯ ಚಟ್ಟು)
cartoon — ನಾ ಅಲ್ಲಣಿತಿಟ್ಟ, ಚಲ್ಲತಿಟ್ಟ
cartridge — ನಾ 1 ಒರೆಗುಂಡು 2 ಹಿಡಿಗೆ
carve — ಕ್ರಿ ಕೆತ್ತು (ಹಲಿಗೆಯ ಅಂಚನ್ನು ಯಾರೋ ಕೆತ್ತಿದ್ದಾರೆ; ಕೆತ್ತನೆ - ಕೆತ್ತನೆ ಕೆಲಸ; ಕೆತ್ತಿಗೆ - ಕೆತ್ತಿಗೆ ಸರಪಳಿ), ಕೊರೆ
cascade — ನಾ ಅಬ್ಬಿ, ಕಿರುಜೋಗು
case — ನಾ 1 ಪೆಟ್ಟಿಗೆ, ಒರೆ 2 ಆಗುಗೆ, ಆಗುಹ 3 ಕಟ್ಟಲೆ
case — ಕ್ರಿ ಕೆತ್ತು, ಒಳಗೊಳ್ಳು, ಹೊಚ್ಚು
casette — ನಾ ನುಡಿತಟ್ಟೆ
cash — ನಾ ಕಾಸು (ಕಾಸಿದ್ದರೆ ಎಲ್ಲಿಗೂ ಹೋಗ ಬಹುದು)
cashew — ನಾ ಗೇರು (ಗೇರುಬೀಜ; ಗೇರು ಮರ, ಗೇರುಹಣ್ಣು; ಗೇರೆಣ್ಣೆ)
cashier — ಕ್ರಿ ತೆಗೆದುಹಾಕು (ಆತನನ್ನು ಕೆಲಸ ದಿಂದ ತೆಗೆದುಹಾಕಿದ್ದಾರೆ)
casket — ನಾ ಚಿಕ್ಕಪೆಟ್ಟಿಗೆ
cassava — ನಾ ಮರಗೆಣಸು
cassock — ನಾ ನೀಳಂಗಿ
cast (metal) — ನಾಎರಕ (ಎರಕ ಹೊಯಿದು ಮಾಡಿದ ಗಿಂಡಿ)
cast — ನಾ ಪಾಣತಂಡ
cast iron — ನಾ ತಂಡವಾಳ
cast — ಕ್ರಿ 1 ಹೊಯ್ಯು (ಎರಕ ಹೊಯ್ಯು) 2 ಎಸೆ (ಮಣೆಯನ್ನೆತ್ತಿ ಹೊರಗೆಸೆದ), ಬೀರು (ಬೀರುಗುಂಡು; ಮುಗಿಲು ನೀರನ್ನು ಬೀರು ತ್ತಿದೆ)
castigate — ಕ್ರಿ ಜಂಕಿಸು, ಗಜರು ನಾ ಅರಮನೆ, ಕೋಟೆಮನೆ
castor oil plant — ನಾಹರಳು (ಹರಳೆಣ್ಣೆ),ಅವುಡಲ
castrate — ಕ್ರಿ ಹಿಡಿಕುಬಡಿ
casual — ಗು ಒಮ್ಮೊಮ್ಮೆ ನಡೆವ, ಹಮ್ಮಿ ಕೊಳ್ಳದ
casualty — ನಾ ಗಾಸಿಗೊಂಡವರು, ಗಾಯಾಳು (ಗಾಯಾಳುಗಳ ಕೋಣೆ)
cat — ನಾಬೆಕ್ಕು (ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ್ತಿದೆ),ಕೊತ್ತಿ (ಕೊತ್ತಿ ಇಲಿ ಯೊಂದಿಗೆ ಆಡುತ್ತಿದೆ)
cat (male) — ನಾಬಾವುಗ
catapult — ನಾಕವಣೆ (ಕವಣೆಯಲ್ಲಿ ಎಸೆದ ಕಲ್ಲು)
cataract — ನಾಕಣ್ಪರೆ
catarrh — ನಾನೆಗಡಿ
catastrophe — ನಾ ಅಳಿವು
catch — ಕ್ರಿ (ಆ) ಸಿಲುಕು (ಮರಗೂಡಿನಲ್ಲಿ ಸಿಲುಕಿದ ಹುಲಿ), ಸಿಕ್ಕು (ಬಲೆಗೆ ಸಿಕ್ಕಿದ ಮೀನು; ಇರುಬೆಗೆ ಸಿಕ್ಕಿದ ಹುಲಿ), ಸಿಗು (ಆತ ನನ್ನ ಕಯ್ಗೆ ಸಿಗಲಿಲ್ಲ; ಜೇಡನ ಬಲೆ ಯೊಳಗೆ ಸಿಕ್ಕ ಹಾತೆ), ತೊಡರು (ಕಾಲಿಗೆ ತೊಡರಿದ ಬಳ್ಳಿ) (ಮಾ) ಹಿಡಿ (ಹಿಡಿದೆಳೆ; ಹಿಡಿದೆತ್ತು; ಸೆರೆಹಿಡಿ)
catch fire — ಕ್ರಿ ಹೊತ್ತು, ಹಿಡಿ (ಬೆಂಕಿಹಿಡಿ)
catch-word — ನಾ ಹಿಡಿನುಡಿ, ಸೆಳೆನುಡಿ
catchy — ಗು ಮನಸೆಳೆವ
category — ನಾ ಗುಂಪು, ಬಗೆ
cater — ಕ್ರಿ ಒದಗಿಸು (ಊಟ ಒದಗಿಸು)
caterpillar — ನಾಕಂಬಳಿಹುಳ
catgut — ನಾಕರುಳುಹುರಿ
cattle — ನಾ ಆಕಳು (ಆಕಳುಮಂದೆ),ಗಂಟಿ (ಗಂಟಿಯನ್ನು ಅಟ್ಟಿಕೊಂಡು ಮೇಯಿಸಲು ಹೋದ), ನಡೆ
cattle-pound — ನಾದೊಡ್ಡಿ (ಆಕಳ ದೊಡ್ಡಿ)
cauldron — ನಾಕೊಪ್ಪರ, ದೊಡ್ಡಹಂಡೆ
cause — ಕ್ರಿ ಮಾಳು (ಮಾಳಿದವನು)
cause — ನಾ ಸಲುವು (ಅವನ ಸಲುವಾಗಿ ಹೋದೆ), ಓಸುಗ, ಓಸ್ಕರ (ನಿನಗೋಸ್ಕರ ಮೂರು ಮಾವಿನ ಹಣ್ಣುಗಳನ್ನು ತಂದಿ ದ್ದೇನೆ), ಕತ (ನಿನ್ನ ಕತದಿಂದ ಬದುಕಿದೆನು), ದೂಸರು (ನಿನ್ನೊಡನೆ ಮಾತನಾಡಿದ ದೂಸ ರಿಂದ ನನಗೆ ಈ ಸಂಕಟ ಬಂತು)
causelessly — ಗು ಸುಮ್ಮಗೆ (ಅವನು ಸುಮ್ಮಗೆ ಇಲ್ಲಿಗೆ ಬಂದು ಹೋದ), ನಿರ್ನೆರ (ನಿರ್ನೆರ ಬಂದ), ಕೆಮ್ಮನೆ
causeway — ನಾ ಒಡ್ಡುದಾರಿ, ಏರುದಾರಿ
caustic — ಗು ಸೊಡ, ಕೊರೆವ
cauterize — ಕ್ರಿ ಕಾವು ಕೊಡು (ನಿಮ್ಮ ಕಾಲಿಗೆ ಕುತ್ತಿದ ಮುಳ್ಳು ತೆಗೆಯುವ ಮೊದಲು ಸೂಜಿಗೆ ಕಾವು ಕೊಡಬೇಕು)
caution — ನಾಜೋಕೆ (ಜೋಕೆಮಾಡು; ಜೋಕೆಯಿಂದಿರು), ಎಚ್ಚರಿಕೆ (ಎಚ್ಚರಿಕೆ ಹೇಳು)
cavalry — ನಾ ಕುದುರೆ ಪಡೆ
cave — ನಾ ಗವಿ (ಹುಲಿ ಗವಿಯೊಳಗೆ ಬಿದ್ದು ಕೊಂಡಿದೆ),ತೊರೆ (ಬೆಟ್ಟದ ದೊಡ್ಡ ತೊರೆ ಯಲ್ಲಿ ಒಂದು ತೋಳ ಮನೆಮಾಡಿದೆ)
caveat — ನಾ ಅಡ್ಡಿ, ಎಚ್ಚರಿಕೆ
cavern — ನಾನೆಲಗವಿ
caviar — ನಾ ಮೀನುಮೊಟ್ಟೆ
cavil — ನಾ ಬೇಡದ ಅಡ್ಡಿ ನಾ ತೊಳ್ಳೆ (ಈ ಬಂಡೆಯಲ್ಲಿ ಒಂದು ತೊಳ್ಳೆಯಿದೆ), ಟೊಳ್ಳೆ (ಟೊಳ್ಳೆಹೋಗು; ಆತನ ಕಣ್ಣು ಟೊಳ್ಳೆ)
cavort — ಕ್ರಿ ಕುಣಿದಾಡು
cease — ಕ್ರಿ ಸಾವಗಿಸು, ನಿಲ್ಲು (ಮಳೆ ನಿಂತಿದೆ; ನಿಂತುಹೋಗು), ಅರು, ತೀರು (ತೀರಿದ ಅಡಿಗೆ)
ceaselessly — ಗು ಎಡೆಯಿಲ್ಲದೆ (ಆಕೆಯ ಕುಣಿತ ಎಡೆಯಿಲ್ಲದೆ ನಡೆಯುತ್ತಿತ್ತು), ಕೊನೆಯಿಲ್ಲದೆ
cede — ಕ್ರಿ ಬಿಟ್ಟುಕೊಡು
ceiling — ನಾ ಮುಚ್ಚಿಗೆ (ಮುಚ್ಚಿಗೆ ಮನೆ)
celebrate — ಕ್ರಿ ನೆರವೇರಿಸು
celebrated — ಗು ಹೆಸರಾಂತ, ಹೆಸರುಪಡೆದ
celestial — ಗು ಬಾನಿನ
celibacy — ನಾ ಮದುವೆಯಾಗದಿರುವಿಕೆ
cell — ನಾ ಕಿರುಕೋಣೆ
cell (empty) — ನಾ ತೊಟ್ಟೆ (ಜೇನು ತೊಟ್ಟೆ; ತೊಟ್ಟೆಕಟ್ಟು)
cellar — ನಾ ನೆಲಮನೆ
cemetery — ನಾಸುಡುಗಾಡು (ಸುಡುಗಾಡಿಗೆ ಹೋದ ಹೆಣ; ಆತನಿಗೆ ಸುಡುಗಾಡಿನಲ್ಲಿ ಕಟ್ಟಿಗೆ ಹೊರುವ ಕೆಲಸ)
censure — ಕ್ರಿ ಪರೆ,ತೆಗಳು (ಎಶ್ಟು ತೆಗಳಿದರೂ ಅವನಿಗೆ ಬೇಸರ ಇಲ್ಲ)
census — ನಾ ಆಳೆಣಿಕೆ (ಹತ್ತಾಂಡುಗಳಿಗೊಮ್ಮೆ ನಮಗೆ ಆಳೆಣಿಕೆಯ ಕೆಲಸ ಬರುತ್ತದೆ)
cent — ನಾ ನೂರು
centenary — ನಾ ನೂರರ ಹಬ್ಬ (ನಮ್ಮ ಶಾಲೆಯ ನೂರರ ಹಬ್ಬ ನಾಳೆಲಿುಂದ ಮೊದಲಾಗುತ್ತದೆ)
centipede — ನಾ ಜರಿ, ಬಂಡಿಹುಳ
central — ಗು ನಟ್ಟ (ನಟ್ಟಡವಿ, ನಟ್ಟಿರುಳು), ನಡು (ನಡುಹಲ್ಲು; ನಡುತೂತು; ನಡು ಮನೆ)
centre — ನಾ ನಡುವೆ (ನಾನು ನಡುವೆ ಕುಳಿ ತಿದ್ದೆ)
century — ನಾ ನೂರು, ನೂರಾಂಡು
cereal — ನಾ ಕಾಳು
cerebellum — ನಾಕಿರಿಮಿದುಳು
cerebrum — ನಾಮೇಲ್ಮಿದುಳು
certainly — ಗು ಕಂಡಿತ (ಕಂಡಿತ ಈಗ ಮಳೆ ಬರುತ್ತದೆ),ನನಸು,ನಿಕ್ಕುವ, ನನ್ನಿ
certify — ಕ್ರಿ ಸರಿಯೆನ್ನು, ನನ್ನಿಯೆನ್ನು
cess — ನಾ ಕಿರುತೆರಿಗೆ (ತೆರಿಗೆಯೊಂದಿಗೆ ಕಿರು ತೆರಿಗೆಯನ್ನೂ ಕಟ್ಟಬೇಕು)
cessation — ನಾಸಯ್ಪು (ಸಯ್ಪಿಡು), ಸಯ್ತು,ನಿಲುವು,ತಡಹು, ನಿಲುಗಡೆ, ಉರುಪು
cession — ನಾ ಸೋಲೊಪ್ಪಿಗೆ, ಬಿಟ್ಟುಕೊಡು ವಿಕೆ
cesspit — ನಾ ಗಬ್ಬುಗುಂಡಿ
chafe — ಕ್ರಿ 1 ಕನಲು (ಕನಲಿದ ಅರಸು) 2 ತರಿ (ತರಿದ ಮರ)
chaff — ನಾ ಹೊಟ್ಟು (ಒಲೆಗೆ ಹೊಟ್ಟು ತುಂಬ ಬೇಕು; ಹೊಟ್ಟುಕುಟ್ಟು; ಬತ್ತದ ಹೊಟ್ಟು)
chagrin — ನಾ ಕಳಲಿಕೆ
chain — ನಾ 1 ಸರಪಳಿ (ಆನೆಯ ಕಾಲಿಗೆ ಸರಪಳಿ ಬಿಗಿದಿದ್ದಾರೆ),ದಳ್ದಳಿ 2 ವರಸೆ, ಸಾಲು
chair — ನಾ ನಾಲ್ಕಾಲಿಗೆ, ಏರ್ವಣೆ
chairman — ನಾ ಮೇಲಾಳು (ಮೇಲಾಳು ಇನ್ನೂ ಬಂದಿಲ್ಲ) ನಾ ಕುದುರೆಗಾಡಿ
chalk — ನಾ ಸುಣ್ಣದ ಕಡ್ಡಿ
challange — ನಾ ಪೋಟಿಕರೆ
chamber — ನಾಕೋಣೆ
chameleon — ನಾಗೋಸುಂಬೆ, ತೊಂಡೆ (ತೊಂಡೆಕೇತ)
champ — ಕ್ರಿ ಜಗಿ (ಮೆಣಸನ್ನು ಕಚಕಚನೆ ಜಗಿದು ನುಂಗಿದ)
champion — ನಾ ಗೆಲ್ಲುಗ
chance — ನಾ ಅಮಗ, ತೆರಹು (ಆತನಿಗೆ ಒಳ್ಳೇ ತೆರಹು ಸಿಕ್ಕಿದೆ)
chandelier — ನಾ ತೂಗುಬೆಳಕು
change — ನಾ 1 ಮಾರ್ಪಾಡು (ಮನೆಯಲ್ಲಿ ನಾವೂ ತುಸು ಮಾರ್ಪಾಡು ಮಾಡಿಕೊಂಡಿ ದ್ದೇವೆ), ಮಾರ್ಪಾಟು, ಮಾರ್ಪು (ಮಾರ್ಪು ಗೊಳ್ಳು; ಮಾರ್ಪಾಗು) 2 ಚುಂಗಡಿ (ಆ ಅಂಗಡಿಯಲ್ಲಿ ಯಾವಾಗ ಹೋದರೂ ಚುಂಗಡಿ ಸಿಗುವುದಿಲ್ಲ), ಚಿಲ್ಲರೆ (ಚಿಲ್ಲರೆ ಹಣ)
change — ಕ್ರಿ 1 ಮಾರು, ಮಾರ್ಪಡು (ಮಾರ್ಪಡಿಸು; ಮಾರ್ಪಾಗು) 2 ಮುರಿಸು (ನೂರು ರುಪಾಯಿಯನ್ನು ಮುರಿಸಿ ತಂದೆ)
channel — ನಾ ಕಡಗು (ಬಾಳೆಗಿಡಕ್ಕೆ ಕಡಗಿ ನಲ್ಲಿ ನೀರು ಹರಿಯುತ್ತದೆ), ಮಡವಾಲಿು (ಕಾಲುವೆಲಿುಂದ ಗದ್ದೆಗೆ ನೀರು ಹರಿಸಲು ಮಡವಾಯಿಗಳಿರುತ್ತವೆ),ಕಾಲುವೆ(ಕಡ ಲ್ಗಾಲುವೆ; ಕಾಲ್ವಾಯಿ)
chant — ಕ್ರಿ ಹಾಡು, ನುಡಿಹಾಡು
chaos — ನಾ ಗಡಿಬಿಡಿ, ಗೊಂದಲ, ತಬ್ಬಿಬ್ಬು
chaotic — ಗು ತಬ್ಬಿಬ್ಬಾದ, ಕವ್ವರೆ
chapter — ನಾ ಪಸುಗೆ
char — ಕ್ರಿ ಕಂದು (ಕರ್ರನೆ ಕಂದಿದ ಮೈ)
character — ನಾನಡತೆ (ಅವನ ನಡತೆ ಸರಿಯಿಲ್ಲ)
characteristic — ನಾ ಪರಿಚೆ (ಈ ಹಕ್ಕಿಯ ಪರಿಚೆಗಳು ಯಾವುವು?), ಗುರುತು
charcoal — ನಾ ಇದ್ದಿಲು (ಇದ್ದಿಲು ಮಸಿ ಯಿಂದ ಹಲ್ಲುಜ್ಜುತ್ತಾನೆ), ಇಜ್ಜಲು,ಕರಿ (ಕೆಂಡಕ್ಕೆ ನೀರೆರೆದರೆ ಕರಿ ಸಿಗುತ್ತದೆ)
charge — ನಾ 1 ಬೆಲೆ 2 ಹಳಿವು 3 ಹೊಣೆ
charge — ಕ್ರಿ ಮೇಲೆ ಬೀಳು, ದಾಳಿಮಾಡು
chariot — ನಾ ತೇರು (ತೇರಬೀದಿ; ತೇರಾಗು; ತೇರಾಳು; ತೇರುಹಬ್ಬ)
charity — ನಾಅರ (ಅರಮಗ; ಅರಗುಲಿ; ಅರವಟಿಗೆ)
charlatan — ನಾ ಹುಸಿಯರಿಗ
charm — ನಾ ಮುದ್ದುತನ, ನಣ್ಪು,ಹೊನಹು (ಹೊನಹುಗಾರ್ತಿ), ಗಾಡಿ (ಗಾಡಿವಡೆ; ಗಾಡಿವೆರು; ಗಾಡಿಕಾರ್ತಿ)
charm — ಗು ಸೊಂಪು (ಸೊಂಪಾಗಿ ಬೆಳೆ; ಸೊಂಪುಗಾರ; ಸೊಂಪುಗೆಡು), ಸೊಗಸು (ಸೊಗಸುಗಾತಿ; ಸೊಗಸುಗಾರ), ಹಸನು, ಇರ್ಮೆ, ಒಲವರ (ಒಲವರಗೊಳ್ಳು), ಮುದ್ದು (ಮುದ್ದುಗ; ಮುದ್ದುಗಾತಿ; ಮುದ್ದುನಗೆ; ಮುದ್ದುನುಡಿ), ನೆಟ್ಟಿ, ಒಪ್ಪ (ಒಪ್ಪಗೆಡು; ಒಪ್ಪಗುಂದು)
chary — ಗು ಎಚ್ಚರಿಕೆಯ
chase — ಕ್ರಿ ಸೋವು (ಆ ನಾಯಿಯನ್ನು ಸೋವ ಬೇಕಿತ್ತು), ಅಟ್ಟು (ಅಟ್ಟಿ ಬರುವ ಕರಡಿ), ಬೆನ್ನಟ್ಟು (ಬೆನ್ನಟ್ಟಿ ಹಿಡಿ), ತೂಳು (ಆತ ನನ್ನು ಕಣದಿಂದ ತೂಳಿದರು), ಸರವು (ಬೆಕ್ಕನ್ನು ನಾಲಿು ಸರವುತ್ತಿದೆ), ಅರೆಯಟ್ಟು (ಅವನು ನನ್ನನ್ನು ಯಾಕೆ ಹೀಗೆ ಅರೆಯಟ್ಟು ತ್ತಾನೆ?), ಎಬ್ಬಟ್ಟು, ತೂರು (ಕೋತಿಗಳ ನ್ನೆಲ್ಲ ತೂರಿ ಬಂದ), ತಗುಳು
chasm — ನಾ ಕಮರಿ (ಆಕಳು ಕಮರಿಗೆ ಬಿದ್ದಿದೆ), ಕೊರಕಲು (ಗುಡ್ಡದಿಂದ ನೀರು ಹರಿದು ಕೊರಕಲಾಗಿದೆ)
chassis — ನಾ ಅಡಿಗಟ್ಟು
chaste — ಗು ಸಿಗ್ಗಿನ
chasten — ಕ್ರಿ ಕಿಳ್ಪಡಿಸು, ಅಡಗಿಸು, ಅಣಗಿಸು
chastise — ಕ್ರಿ ಹೊಡೆದು ಸರಿಪಡಿಸು ಕ್ರಿ ಹರಟು, ಹರಟೆಹೊಡೆ
chatter — ನಾತೊಂಡು (ತೊಂಡುಗೆಡೆವ ಗಿಳಿಹಿಂಡು),ಕೀಸರ (ಕೀಸರಿಡು; ಈ ಹೆಂಗಸರ ಕೀಸರ ಮುಗಿಯುವುದೇ ಇಲ್ಲ)
cheap — ಗು ಅಗ್ಗ (ಆ ಅಂಗಡಿಯಲ್ಲಿ ಬೆಲೆ ಅಗ್ಗ),ಇಳಿಬೆಲೆ, ಇಕ್ಕಲು, ಉರಟಿ (ಉರಟಿ ಬೆಲೆ; ಉರಟಿ ಮಾತು)
cheat — ನಾ ಎಡ್ಡ, ಆಳಿಗ
cheat — ಕ್ರಿ ಅಟಮಟಿಸು, ಆಳವಾಡು, ಉಕ್ಕೆವಿಸು, ಕಯ್ಕೊಡು, ಕಣ್ಣುಕಟ್ಟು
check — ಕ್ರಿ ಸರಿನೋಡು
cheek — ನಾ ಕೆನ್ನೆ (ಕೆನ್ನೆಯಲ್ಲಿ ಕಯ್ಯಿಟ್ಟು ಮೇಲೆ ನೋಡಿದ),ಕೆಕ್ಕೆ, ಬುಗ್ಗಿ (ಬುಗ್ಗಿ ಹೊಯ್ಕೊಳ್ಳು),ಕದಪು,ಕವಟೆ, ಪನ್ನೆ
cheer — ನಾ ಹದುಳ (ಹದುಳಿರು; ಹದುಳಿಸು - ಇತ್ತೀಚೆಗೆ ಆಕೆ ತುಂಬಾ ಹದುಳಿಸಿ ದ್ದಾಳೆ), ಗೆಲುವು (ಗೆಲುವಾಗಿರು - ಇವತ್ತು ಆಕೆ ಗೆಲುವಾಗಿದ್ದಾಳೆ)
chef — ನಾ ಅಟ್ಟುಳಿಗ
chemist — ನಾ ಮದ್ದುಗ
cheque — ನಾ ಕಾಸೋಲೆ (ಎರಡು ಸಾವಿರ ರುಪಾಯಿಯ ಕಾಸೋಲೆ ಕಳಿಸಿದ್ದಾರೆ)
cherish — ಕ್ರಿ 1 ನೆನಪಿನಲ್ಲಿರಿಸು 2 ಕಾಪಾಡು
chest ( — ನಾ 1 ಎದೆ ಎದೆಗೂಡು; ಎದೆ ಗುಂಡಿಗೆ),ಗುಂಡಿಗೆ (ಗುಂಡಿಗೆ ನೋವು),ತೆಗಲೆ (ಆತನ ತೆಗಲೆಗೆ ಗುದ್ದಿದ) 2 ಪೆಟ್ಟಿಗೆ
chew — ಕ್ರಿ ಅಗಿ (ಚೆನ್ನಾಗಿ ಅಗಿದು ತಿನ್ನಬೇಕು), ಜಗಿ (ಜಗಿದು ತಿನ್ನು), ನೆವರು (ನೆವರಿ ಕೊಂಡಿರು), ಮೆಲ್ಲು (ಮಗು ಏನನ್ನೋ ಮೆಲ್ಲುತ್ತಿದೆ), ಅವುಡು
chew the cuds — ಕ್ರಿ ಇಪ್ಪೆಹಾಕು, ನಮುಲು (ನಮುಲುಹಾಕು), ಮೆಲುಕಾಡಿಸು (ಆಕಳು ಮೆಲುಕಾಡಿಸುತ್ತಿದೆ)
chicken — ನಾ ಕೋಳಿಮರಿ
chicken pea — ನಾ ಕಡಲೆ
chide — ಕ್ರಿ ಬಾಲಿು ಮಾಡು, ಜಬ್ಬರಿಸು
chief — ನಾ ಮೇಲಾಳು, ಮೊದಲಿಗ
chief — ಗು ಮಲ್ಯ (ಮಲ್ಯ ಕೆಲಸ), ಮಲ್ಲ (ಮಲ್ಲ ಮಾತು; ಮಲ್ಲಂತಿಗೆ)ಮೊದಲಿನ (ಮೊದಲಿನ ಎಡೆ)
chieftain — ನಾಪಾಳೆಯಗಾರ, ಮೊದಲಿಗ
chiffon — ನಾ ತೆಳುಬಟ್ಟೆ
child — ನಾ ಪಿಳ್ಳೆ, ಹಸುಳೆ, ಹಯ್ (ಹಯ್ದ; ಹಯ್ಕಳು) ಮಗು (ಮೊಲೆಯುಣ್ಣುವ ಎಳೇ ಮಗು; ಮಕ್ಕಳು; ಮಕ್ಕಳಾಟಿಗೆ; ಮಕ್ಕಳು ಮರಿ), ಕುಟ್ಟಿ,ಕುತ್ತಿ (ಕುತ್ತಿಮರಿ; ಮರಿ ಕುತ್ತಿ),ಕಂದ (ತೊಟ್ಟಿಲ ಕಂದ; ಕಣ್ಣು ತೆರೆಯದ ಕಂದ)
childhood — ನಾ ಕೂಸುತನ,ಎಳವೆ
chill — ಕ್ರಿ ತಣ್ಣಗಾಗಿಸು, ತಣಿಸು (ಚನ್ನಾಗಿ ತಣಿಸಿಟ್ಟ ಹಾಲು ಕೆಡುವುದಿಲ್ಲ)
chimerical — ಗು ಮಚ್ಚಿನ, ಕನಸಿನ
chimney — ನಾಹೊಗೆನಳಿಗೆ,ಇಲ್ಲಾರ ಕಂಡಿ
chin — ನಾಗದ್ದ (ಅವನ ಗದ್ದದ ಮೇಲೆ ಒಂದು ಮಚ್ಚೆಯಿದೆ)
chink — ನಾ ಕಂಡಿ (ಬೆಳಕಂಡಿ; ಕಣ್ಣುಗಂಡಿ; ಕಂಡಿಹಲ್ಲು), ಕಿಂಡಿ (ಕಳ್ಳಕಿಂಡಿ; ಬೆಳ ಕಿಂಡಿ), ಕನ್ನ (ಮನೆಗೆ ಕನ್ನ ಕೊರೆದು ಕಳ್ಳ ಒಳನುಗ್ಗಿದ; ಕನ್ನಗತ್ತಿ)
chip — ನಾಕೆತ್ತೆ (ಮರದ ಕೆತ್ತೆ; ಕೆತ್ತೆ ಕೆತ್ತಿ ಮರ ಸತ್ತುಹೋಯಿತು), ಬಾಳುಕ (ಬಾಳೆ ಕಾಯಿಯ ಬಾಳುಕ) chip ; ಕ್ರಿ ಕೆತ್ತು (ಬಡಗಿ ಹಲಿಗೆಯ ಮೇಲೆ ತನ್ನ ಹೆಸರನ್ನು ಕೆತ್ತುತ್ತಿದ್ದಾನೆ ಕೆತ್ತಿಗೆ)
chirping — ನಾ ಬೆಜ್ಜೆ (ಹಕ್ಕಿಗಳ ಬೆಜ್ಜೆ)
chisel — ನಾ ಚಾಣ (ಹಲಿಗೆಯ ಬದಿಯಲ್ಲಿ ಚಾಣದಿಂದ ಗೆರೆ ಎಳೆದ), ಸೀರಣ, ಕೀಸುಳಿ (ಕೀಸುಳಿಯಲ್ಲಿ ಕೀಸಿ ಕೋಲು ತೆಳ್ಳ ಗಾಯಿತು), ಉಳಿ (ಆತ ಉಳಿಯಿಂದ ಹಲಿಗೆ ಕೆತ್ತುತ್ತಿದ್ದಾನೆ)
chit — ನಾ ತುಂಡೊಲಿ (ನಿಮ್ಮ ಮದ್ದನ್ನು ಒಂದು ತುಂಡೊಲಿಯಲ್ಲಿ ಬರೆದು ಕೊಡುತ್ತೇನೆ) ನಾ ಹರಟೆ (ನಿಮ್ಮ ಹರಟೆ ಮುಗಿ ಯುವುದೇ ಇಲ್ಲ; ಹರಟೆ ಕೊಚ್ಚು)
chivalry — ನಾ ಅದಟು, ಎದೆಗಾರಿಕೆ, ಮದಿಪು (ಮದಿಪಿನಲ್ಲಿ ಆತ ಯಾರಿಗೂ ಹಿಂದಿಲ್ಲ)
choice — ನಾಆಯ್ಕು (ನಮ್ಮ ಆಯ್ಕೆಯನ್ನು ನಾವಾಗಲೇ ತಿಳಿಸಿದ್ದೇವೆ; ಆಯ್ಕು ಮಾಡು)
choke — ನಾಸೆರೆಬಿಗಿತ
choke — ಕ್ರಿ ಉಸಿರುಕಟ್ಟು (ಬಟ್ಟೆಗಳ ಅಡಿಗೆ ಸಿಕ್ಕಿಕೊಂಡ ಮಗು ಉಸಿರುಕಟ್ಟಿ ಸತ್ತು ಹೋಯಿತು)
choose — ಕ್ರಿ ಆಯಿಸು, ಆರಿಸು (ಆತನನ್ನು ಆರಿಸಿದ್ದು ತೊಂದರೆಯಾಗಿದೆ), ಹೆಕ್ಕು
chop — ಕ್ರಿ ಕೊತ್ತು (ಕೊತ್ತಿ ತುಂಡುಮಾಡು), ಕೊಚ್ಚು (ಸಪ್ಪುಕೊಚ್ಚು), ಕಡಿ
chop off — ಕ್ರಿ ಸವರು (ಆ ಮರದ ಗೆಲ್ಲುಗಳ ನ್ನೆಲ್ಲ ಸವರಿಬಿಡು)
chopstick — ನಾ ಅಟ್ಟುಗ (ಅಟ್ಟುಗಗಳನ್ನು ಬಳಸಿ ತಿನ್ನುತ್ತಿದ್ದಾನೆ)
choral reef — ನಾಹವಳದಿಣ್ಣೆ
chord — ನಾ ಬೀವು (ಬೀವು ಮಾಡು)
chorus — ನಾ ಸುವ್ವಲೆ, ಸುವ್ವಿ (ಸುವ್ವಿ ಹೇಳು)
choultry — ನಾ ಹಕ್ಕೆಮನೆ
chowrie — ನಾ ಸೀಗುರಿ (ಸೀಗುರಿಯಿಕ್ಕು; ಸೀಗುರಿಬೀಸು)
christen — ಕ್ರಿ ಹೆಸರಿಡು (ನಿಮ್ಮ ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ?; ಹೆಸರಿಡುವ ಹಬ್ಬ)
chromatic — ಗು ಬಣ್ಣದ, ಹೊಗರಿನ
chronic — ಗು 1 ಹಳೆಯ 2 ಮರುಕಳಿಸುವ (ಮರುಕಳಿಸುವ ಹೊಟ್ಟೆನೋವು)
chubby — ಗು ಕಿರುಂಡೆಗ (ಕಿರುಂಡೆಗ ಮಗು)
chuck — ಕ್ರಿ ಎಸೆ, ಬಿಸಾಡು, ಒಗೆ
chuckle — ನಾ ಮೆಲುನಗೆ
chum — ನಾ ಅಚ್ಚುಗೆಳೆಯ
chunk — ನಾ ಕೊರಡು (ಮರದ ಕೊರಡು)
churlish — ಗು ಒರಟು (ಒರಟು ಹುಡುಗ)
churn — ಕ್ರಿ ಕಡೆ (ಮೊಸರು ಕಡೆ; ಕಡೆಗೋಲು;ಕಡೆತ), ಕಯ್ (ಕಯ್ಕೋಲು, ಕಯ್ಸಳೆ)
cincture — ನಾ ನಡುಕಟ್ಟು
cinder — ನಾ ಕೆಂಡ (ಬೆಂಕಿಯ ಕೆಂಡ; ತೆರೆದ ಕೆಂಡದ ಮೇಲಿಟ್ಟ ಕಾಲು ಸುಟ್ಟಿತು)
cipher — ನಾ ಸೊನ್ನೆ, ಸುಳಿ, ಮುಚ್ಚರು
circle — ನಾ ಆಳಿ, ಗುಡಿ (ಗುಡಿಕಟ್ಟು - ಆತನ ಸುತ್ತಲೂ ಗುಡಿಕಟ್ಟಿ ನಿಂತರು), ಬಳಸಿ (ಕಲ್ಲಿನ ಸುತ್ತ ಒಂದು ಬಳಸಿಯನ್ನು ಬಿಡಿಸು ತ್ತಿದ್ದಾರೆ)
circuit — ನಾ ಸುತ್ತು, ಸುತ್ತುವಿಕೆ
circuitous — ಗು ಬಳಸು (ಬಳಸುದಾರಿ)
circular — ನಾಸುತ್ತೋಲೆ (ನಮಗೆಲ್ಲ ಒಂದು ಸುತ್ತೋಲೆ ಬಂದಿದೆ)
circulate — ಕ್ರಿ ಹರಡು, ಸುತ್ತಾಡು
circumference — ನಾ ಸುತ್ತಳತೆ
circumlocution — ನಾ ಬಳಸುನುಡಿ
circumscribe — ಕ್ರಿ ಒಳಗೊಳ್ಳು, ಸುತ್ತುವರಿ, ಬಳಸು
circumspect — ಗು ಎಚ್ಚರಿಕೆಯ (ಎಚ್ಚರಿ ಕೆಯ ಹೇಳಿಕೆ)
circumstance — ನಾ ಪಾಡ, ನೆಲೆ, ಪಾಡು (ಆತನ ಪಾಡು ಚನ್ನಾಗಿಲ್ಲ), ಸುತ್ತುಮುತ್ತು ಕ್ರಿ ತಪ್ಪಿಸಿಕೊಳ್ಳು, ಸುತ್ತಿ ಹೋಗು
cistern — ನಾ ತೊಟ್ಟಿ (ತೊಟ್ಟಿಯಲ್ಲಿ ಮಳೆ ನೀರು ತುಂಬಲು ಬಿಟ್ಟಿದ್ದೇವೆ)
citadel — ನಾ ಕೋಟೆ
cite — ಕ್ರಿ ಎತ್ತಿಹೇಳು (ಅವನ ಮಾತನ್ನು ಇಲ್ಲಿ ಎತ್ತಿಹೇಳಬೇಕಾಗಿದೆ)
citizen — ನಾ ನಾಡಿಗ
city — ನಾಪೊಳಲು (ಪೊಳಲಿಗ; ಪೊಳಲಿಚ), ಹೊಳಲು (ದೂರದ ಹೊಳಲಿಗೆ ಹೋಗು ತ್ತಿದ್ದೇವೆ)
civet — ನಾ ಪುಣುಗು (ಪುಣುಗು ಬೆಕ್ಕು)
civic — ಗು ಹೊಳಲಿನ
civilian — ನಾ ಪೊಳಲಿಗ
civility — ನಾ ಒಳ್ಳೆಯ ನಡತೆ
civilize — ಕ್ರಿ ಪೊಳಲಿಗನಾಗಿಸು
claim — ಕ್ರಿ ಹಕ್ಕಿನಿಂದ ಕೇಳು
clamber — ಕ್ರಿ ಹಿಡಿದು ಹತ್ತು
clamour — ನಾ ರಂಪ (ರಂಪ ಎಬ್ಬಿಸು; ರಂಪ ಮಾಡು)
clamp — ನಾ ಪತ್ತುಗೆ, ಇರುಕುಗೆ
clan — ನಾ ಬುಡಕಟ್ಟು
clandestine — ಗು ಕಳ್ಳಾಟಿಕೆಯ, ಗುಟ್ಟಿನ (ಅವರದೊಂದು ಗುಟ್ಟಿನ ಕೂಟ ವಾರ ಕ್ಕೊಮ್ಮೆ ಸೇರುತ್ತದೆ)
clap — ಕ್ರಿ ತಟ್ಟು (ಕಯ್ತಟ್ಟು), ಕಯ್ವೊಯ್ಯು (ಕಯ್ವೊಯ್ದು ನಗು)
clapping — ನಾಚಪ್ಪಾಳೆ (ಚಪ್ಪಾಳೆ ಹೊಡೆ; ಚಪ್ಪಾಳೆ ತಟ್ಟು), ಚಪ್ಪಳೆ (ಚಪ್ಪಳಿಕ್ಕು)
clarify — ಕ್ರಿ ತಿಳಿಗೊಳಿಸು
clarity — ನಾ ತೆಳ್ಪು
clash — ನಾ ತಿಕ್ಕಾಟ (ಅಲ್ಲಿಗೆ ಹೋದರೆ ಅವನೊಡನೆ ನಿಮಗೆ ತಿಕ್ಕಾಟವಾಗದೆ ಇರಲಿ ಕ್ಕಿಲ್ಲ)
clash — ಕ್ರಿ 1 ಡಿಕ್ಕಿಹೊಡೆ 2 ಎದುರಿಸು
clasp — ನಾಕುಣಿಕೆ (ಎಮ್ಮೆಗಳನ್ನು ಕಟ್ಟಿಹಾಕುವ ಕುಣಿಕೆ ಹಗ್ಗ), ಕೊಳಿಕೆ, ಕೊಂಡಿ (ಬೀಗದ ಕೊಂಡಿ)
clasp — ಕ್ರಿ ಬಿಗಿಹಿಡಿ
class — ನಾ ತರಗತಿ (ಆ ಹುಡುಗ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ), ತಂಡ
classification — ನಾ ಹಂಚಿಕೆ
classmate — ನಾ ಒಡನೋದಿ
clause — ನಾ ಕಿರುಸೊಲ್ಲು
claw — ಕ್ರಿ ಪರಚು (ಉಗುರುಗಳಿಂದ ಪರಚು)
clay — ನಾ ಚೇಡಿ, ಜೇಡಿ (ಜೇಡಿಮಣ್ಣು; ಗೋಡೆಗೆ ಜೇಡಿ ಬಳಿದಿದ್ದರು), ಸೀರು (ಸೀರುಮಣ್ಣು), ಅಡುಸು, ಆವೆ (ಆವೆ ಮಣ್ಣು - ಆವೆಮಣ್ಣಿನ ಹೊಂಡ), ಕಂಪ
clean — ಗು ಮಡಿ (ಮಡಿಕೋಲು; ಮಡಿಬಟ್ಟೆ; ಮಡಿಯುಡು), ಚೊಕ್ಕ (ಚೊಕ್ಕಮಾಡು; ಚೊಕ್ಕತನ, ಚೊಕ್ಕಟ - ಚೊಕ್ಕಟಗೊಳಿಸು), ತೇಟೆ (ತೇಟೆ ನೀರು), ಪೊಚ್ಚ (ಪೊಚ್ಚ ಪೊಸ), ಹಸನು (ಹಸನು ಬಟ್ಟೆ)
cleanse — ಕ್ರಿ ಚೊಕ್ಕಟಗೊಳಿಸು, ಮಡಿಮಾಡು
clear (be) — ಕ್ರಿ ನೆಗೆ, ತಳಿ (ನೀರು ತಳಿ ಲಿುತು), ತಿಳಿ (ತಿಳಿದ ನೀರು; ತಿಳಿಗೊಳ; ತಿಳಿನೀರು)
clear — ಗು ತೆಳು (ತೆಳುನೀರು; ತೆಳ್ಗನ್ನಡ; ತೆಳುನೋಟ)
clearance — ನಾತೀರುವಳಿ, ತೀರುವೆ ಕ್ರಿ ಬಗಿ (ಬಗಿದು ತೋಡು), ಹೋಳು (ಹೋಳಿದ ಹಲಿಗೆ), ಸೀಳು (ಸೀಳಾಗು; ಸೀಳಿದ ನಾಲಿಗೆ)
cleaver — ನಾ ಕಂಡಲಿ, ತಡಿಕತ್ತಿ
clemency — ನಾ ಕನಿಕರ
clench — ಕ್ರಿ ಒತ್ತಿಹಿಡಿ
clerk — ನಾ ಬರೆಗ (ಅವನಿಲ್ಲಿ ಬರೆಗ)
clever man — ನಾ ಆಯಗಾರ, ಹೊಲಬಿಗ (ಹೊಲಬಿಗನ ಹೊರೆಯಲ್ಲಿರಬೇಕು), ಕಯ್ಗಾರ (ಕಯ್ಗಾರಿಕೆ - ಆತ ಯಾವುದೋ ಕಯ್ಗಾರಿಕೆ ನಡೆಸುತ್ತಿದ್ದಾನೆ)
cleverness — ನಾಕಯ್ಮು,ತಕ್ಕು
cliche — ಗು ಹಳಸಲು (ಹಳಸಲು ಮಾತು)
client — ನಾ ಕೊಳ್ಳುಗ
cliff — ನಾಕಮರಿ
climate — ನಾ ಹವೆಯಳವು, ಹವೆಯಳತೆ
climb — ಕ್ರಿ ಅಡರು (ತುದಿವರೆಗೆ ಅಡರಿದ ಬಳ್ಳಿ; ಮರಕ್ಕೆ ಅಡರು), ಏರು (ಏರಿ ಹೋಗು; ಏರಿಬರು), ಹತ್ತು (ಮರಕ್ಕೆ ಹತ್ತು)
climber — ನಾ ಏರುಗ, ಹತ್ತುಗ
clinch — ಕ್ರಿ ಮುಕ್ತಾಯಗೊಳಿಸು, ಕೊನೆ ಗಾಣಿಸು
cling — ಕ್ರಿ ಅಂಟಿಕೊಳ್ಳು (ಅವನಿಗೆ ಅಂಟಿ ಕೊಂಡು ಕುಳಿತಿದ್ದಳು), ಸೇರಿರು
clinic — ನಾ ಮದ್ದುಮನೆ
clip — ನಾ ಹಿಡಿಗೆ
clip — ಕ್ರಿ ತುಂಡಿಸು, ಸವರು
clippers — ನಾ ಹೆರೆಗತ್ತರಿ
clique — ನಾ ಒಳಬಳಗ, ಸಂಚುಕೂಟ
cloak — ನಾ 1 ಹೊರ ಅಂಗಿ 2 ಮುಸುಕು
clobber — ಕ್ರಿ ಜಡಿ, ಸದಕು, ಹೊಯ್ಯು
clock — ನಾ ಹೊತ್ತಳಕ
clockwise — ನಾಎಡತಿರುವು
clod — ನಾ ಹೆಟ್ಟೆ,ಹೆಂಟೆ (ಮಣ್ಣಿನ ಹೆಂಟೆ; ಹೆಂಟೆಕೊಡಲಿ)
clog — ನಾ ಅಡ್ಡಿ (ಅಡ್ಡಿಯಾಗು)
clog — ಕ್ರಿ ಅಡೆ (ಬಚ್ಚಲು ಅಡೆದುಕೊಂಡಿದೆ), ತೊಡರು
close — ಕ್ರಿ 1 ಇಕ್ಕು (ಕದವಿಕ್ಕು; ಎವೆಯಿಕ್ಕು), ಮುಚ್ಚು (ಮುಚ್ಚಳ ಮುಚ್ಚು) 2 ಕೊನೆ ಗಾಣು, ಮುಗಿ 3 ಹತ್ತಿರ ಬರು, ಸಾರೆಬರು
closely — ಗು ಪಳ್ಳೆ (ಪಳ್ಳೆ ತಕ್ಕಯ್ಸು)
closet — ನಾ 1 ನೆಮ್ಮದಿಯೆಡೆ, ಕಳೆವೆಡೆ 2 ಕಿರುಕೋಣೆ
closure — ನಾ ಮುಗಿತ, ಮುಕ್ತಾಯ
clot — ನಾಕರಣೆ (ನೆತ್ತರ ಕರಣೆ)
clot — ಕ್ರಿ ಹೆಪ್ಪುಗಟ್ಟು (ಆತನಿಗೆ ಪೆಟ್ಟಾದರೆ ನೆತ್ತರು ಹೆಪ್ಪುಗಟ್ಟುವುದಿಲ್ಲ)
cloth — ನಾಅರಿವೆ (ಉಟ್ಟ ಅರಿವೆ),ಅಡೆ (ನೀರಡೆ, ಅಡೆಕಟ್ಟು),ಉಟ್ಟಿಗೆ
cloth (piece) — ನಾ ಗುಡ್ಡೆ
clothe — ಕ್ರಿ ಬಟ್ಟೆತೊಡಿಸು, ಉಡಿಸು ನಾಜವಳಿ (ಜವಳಿಯ ಮಳಿಗೆ; ಜವಳಿಯಂಗಡಿ), ಉಡುಪು (ಆತನ ಉಡುಪು ಕೊಳೆಯಾಗಿದೆ),ಕೊರೆ (ಉಡು ಗೊರೆ),ತುಡಿಗೆ, ತೊಡುಗೆ (ಉಡುಗೆ ತೊಡುಗೆ; ತೊಡುಗೊರೆ)
cloud — ನಾ ಮುಗಿಲು (ಬಿಳಿಯ ಮುಗಿಲು; ಮುಗಿಲು ಮುಟ್ಟು; ಕಾರ್ಮುಗಿಲು; ಮುಗಿಲ ಕಿಚ್ಚು; ಬೆಳ್ಮುಗಿಲು),ಮೋಡ (ಮೋಡ ಕವಿ; ಮೋಡ ಹಾಕು; ಮೋಡಗತ್ತಲೆ)
clown — ನಾ ಕಡ್ಡ (ಕಡ್ಡಾಗು; ಕಡ್ಡ ಮಾಡು), ಕೋಡಂಗಿ (ಆತನಿಗೆ ಬಯಲಾಟದಲ್ಲಿ ಕೋಡಂಗಿಯ ಪಾಂಗು)
club — ನಾ 1 ಕೂಟ (ಇಲ್ಲಿ ವಾರಕ್ಕೊಮ್ಮೆ ಅವರು ಕೂಟ ಕೂಡುತ್ತಾರೆ) 2 ಕಂಬಿ (ಕಂಬಿಗ; ಕಂಬಿಯಲ್ಲಿ ಹೊಡೆ), ಗುದಿಗೆ (ಗುದಿಗೆ ಹೊಯ್ಲು; ಕಬ್ಬಿಣದ ಕಟ್ಟು ಹಾಕಿದ ಗುದಿಗೆ)
clue — ನಾ ಸುಳಿವು (ದಾರಿಯಲ್ಲಿ ನಮಗೆ ಯಾರ ಸುಳಿವೂ ಕಾಣಿಸಲಿಲ್ಲ), ಜಾಡು (ಕಣ್ಜಾಡು; ಜಾಡುಹಿಡಿದು ಮುಂದುವರಿಯುತ್ತಿದ್ದೇವೆ)
clump — ನಾ ಗಂಟಿಕೆ, ತೋಪು (ಮಾವಿನ ಮರಗಳ ತೋಪು)
clumsily — ಗು ಅಡ್ಡಾದಿಡ್ಡಿ (ಆತ ಅಡ್ಡಾದಿಡ್ಡಿ ನಡೆಯುತ್ತಿದ್ದಾನೆ)
cluster — ನಾಗೊಂಚಲು (ಹೂಗೊಂಚಲು), ಗೊಂಡೆ, ಕೊಂಡೆ, ತೊಂಗೆ (ಮಾವಿನ ಹಣ್ಣಿನ ತೊಂಗೆ),ತೊಂಬೆ (ಕೆಂಪು ಹೂಗಳ ತೊಂಬೆ), ತೊಡಂಬೆ (ಹೂಮೊಗ್ಗುಗಳ ತೊಡಂಬೆ)
clutch — ನಾ ಬಿಗಿಹಿಡಿತ
clutch — ಕ್ರಿ ಕದುಬು, ತುಡುಕು, ಕಸಿ
clutter — ನಾ ಗಲಿಬಿಲಿ, ಚಲ್ಲಾಪಿಲ್ಲಿ
coach — ಕ್ರಿ ಕಲಿಸು, ಪಳಗಿಸು
coagulate — ಕ್ರಿ ಹೆಪ್ಪುಕಟ್ಟು, ಗರಣೆಕಟ್ಟು
coal — ನಾಇದ್ದಲು(ಕಲ್ಲಿದ್ದಲು)
coal (glowing) — ನಾ ಕೆಂಡ (ಕೆಂಡಗಣ್ಣು; ಕೆಂಗೆಂಡ; ಕೆಂಡದ ಮೇಲಿನ ಕುಣಿತ),ತಣಲು
coalesce — ಕ್ರಿ ಒಟ್ಟುಗೂಡು, ಒಂದಾಗು
coarse — ಗು ಉರುಟು (ಉರುಟು ಬಟ್ಟೆ, ಉರುಟು ಕೂದಲು), ಒರಟು (ಒರಟು ಕೈ)
coast — ನಾಕರಾವಳಿ, ಕಡಲಕರೆ
coat — ನಾ ಮೇಲಂಗಿ
coat (of mail) — ನಾ ಅವುತೆ (ಮಯ್ಯವುತೆ)
coat — ಕ್ರಿ ಹಚ್ಚು, ಬಳಿ (ಎಣ್ಣೆ ಬಳಿದುಕೊಂಡ)
coax — ಕ್ರಿ ಒಲಿಸು, ಒಡಂಬಡಿಸು
cobble — ನಾ ಉರುಟುಕಲ್ಲು (ಕಾಲುಹಾದಿಗೆ ಉರುಟುಕಲ್ಲು ಹಾಸಿದ್ದಾರೆ)
cobble — ಕ್ರಿ ಮೆಟ್ಟು ಹೊಲಿ, ಮೆಟ್ಟು ಸರಿ ಪಡಿಸು
cobbler — ನಾ ಮೆಟ್ಟುಗಾರ
cobweb — ನಾ ಜೇಡನ ಬಲೆ (ಮನೆಯಲ್ಲಿ ಎಲ್ಲಾ ಕಡೆಯೂ ಜೇಡನ ಬಲೆ ನೇತಾಡು ತ್ತಿದೆ)
cock — ನಾಹುಂಜ
cockle — ನಾ ಸುಕ್ಕು (ಸುಕ್ಕುಗಟ್ಟಿದ ಮೋರೆ)
cockpit — ನಾ ಹೋರಾಟದ ಕಳ
cockroach — ನಾಅಕ್ಕಳೆ, ಜಿರಳೆ,ಹಾತೆ (ಹಾತೆಹುಳ)
coconut — ನಾತೆಂಗು (ತೆಂಗಿನಕಾಯಿ; ತೆಂಗಿನ ಮರ)
coconut (dried) — ನಾತರಳು,ಕೊಬ್ಬರಿ (ಕೊಬ್ಬರಿ ದೋಸೆ; ಕೊಬ್ಬರಿ ಎಣ್ಣೆ)
coconut (tender) — ನಾ ಸೀಯಾಳ (ಕೆಂದಾಳಿ ಮರದಿಂದ ಎರಡು ಸೀಯಾಳ ತೆಗೆಯಲಿ), ಎಳನೀರು
coconut fibre — ನಾಕತ್ತ (ಕತ್ತದಿಂದ ಮಾಡಿದ ಹಗ್ಗ)
coconut shell — ನಾಗೆರಟೆ (ಗೆರಟೆಯ ಬೆಂಕಿ ಹೆಚ್ಚು ಕಾವು ಕೊಡುತ್ತದೆ) ನಾ ತೆರಳೆ ಹುಳದ ಗೂಡು
coddle — ಕ್ರಿ ಮಯ್ದಡವು, ಮುದ್ದುಮಾಡು
code — ನಾ ಗುಟ್ಟುಬರಹ
codicil — ನಾ ಒಪ್ಪಂದಕ್ಕೆ ಸೇರ್ಪಡೆ
coerce — ಕ್ರಿ ಒತ್ತಾಯಿಸು, ಕಡ್ಡಾಯ ಮಾಡು
coexist — ಕ್ರಿ ಒಟ್ಟಿಗಿರು, ಕೂಡಿರು
coffer — ನಾ ಹಣಪೆಟ್ಟಿಗೆ
coffin — ನಾ ಹೆಣಪೆಟ್ಟಿಗೆ
cog — ನಾ ಗಾಲಿಹಲ್ಲು (ಈ ಗಾಲಿಯ ಎರಡು ಹಲ್ಲುಗಳು ಮುರಿದಿವೆ)
cogent — ನಾ ನಂಬಬಲ್ಲ, ಮನವರಿಕೆಯಾದ
cogitate — ಕ್ರಿ ಆರಯ್ಯು (ಸಾಕಶ್ಟು ಹೊತ್ತು ಆರಯ್ದು ತನ್ನ ಹೇಳಿಕೆ ಕೊಟ್ಟ)
cognate — ಗು ನಂಟಿನ (ಬಿಳಿ ಮತ್ತು ಬೆಳ್ಳಗೆ ಎಂಬವೆರಡು ನಂಟಿನ ಪದಗಳು)
cognizance — ನಾ ಅರಿವು, ತಿಳುವಳಿಕೆ, ಗುರುತು
cohabit — ಕ್ರಿ ಪುದುವಾಳು
coherent — ಗು 1 ಅಂಟಿಕೊಂಡಿರುವ 2 ಸುಳುವಾದ
cohesion — ನಾ ಸೇರಿಕೆ (ಅವರೊಳಗೆ ಸೇರಿಕೆ ಯಿಲ್ಲ), ಹೊದ್ದಿಗೆ
coil — ನಾ ಸುರುಳಿ (ಸುರುಳಿ ಸುತ್ತಿ ಮಲಗಿದ ಹಾವು)
coil — ಕ್ರಿ ಸುರುಟು (ಸುರುಟು ಕಿವಿ), ಸುರುಳು, ತೆಕ್ಕೆಗಟ್ಟು (ತೆಕ್ಕೆಗಟ್ಟಿದ ಹಾವು; ತೆಕ್ಕೆ ತುರುಬು), ನಿಲುಂಬು
coil (of cloth) — ನಾಸಿಂಬಿ (ಸಿಂಬಿಯ ಮೇಲಿರಿಸಿದ ಕೊಡ)
coin — ಕ್ರಿ ಬೆಟ್ಟು (ಬೆಟ್ಟಿದ ಕಾಸು)
coinage — ನಾಕಮ್ಮಟ
coincide — ಕ್ರಿ ಒಂದಾಗಿರು, ಒಂದಿಗಿರು, ಸಮನಾಗಿರು
coir — ನಾಕಾತಿ (ಹುರಿಗಾತಿ),ಕದವೆ,ಗುಂಜು, ಕತ್ತ
coition — ನಾ ಸುಂದು
cold — ನಾ 1 ತಣ್ಣಸ, ತಣಸು (ನೆಲಕ್ಕೆ ತಣಸು ಬಂದಿದೆ), ತಂಡಿ, ಕೋಟ, ಕೊಡತ, ಕುಳಿರು (ಕುಳಿರ್ವೆಟ್ಟ; ಚಳಿಗಾಲದ ಕುಳಿರು), ಅಗ್ಗರ (ಅನ್ನ ಆರಿ ಅಗ್ಗರವಾಗಿದೆ), ಕೋಟ (ಚಳಿಯ ಕೋಟ) 2 ನೆಗಡಿ (ಆತನಿಗೆ ಮಳೆಗೆ ನೆನೆದು ನೆಗಡಿಯಾಗಿದೆ)
cold — ಗು ತಂಪು (ತಂಪು ಬೆಟ್ಟ), ತಣ್ (ತಣ್ಗಂಪು; ತಣ್ಣೀರು), ತಣ್ಣಗೆ (ತಣ್ಣ ಗಾಗು), ಚಳಿ (ಚಳಿಗಾಲ, ಚಳಿಹತ್ತು; ಚಳಿ ಹಿಡಿ; ಚಳಿನಾಡು; ಚಳಿಬೆಟ್ಟ)
cold storage — ನಾ ಕುಳಿರ್ವನೆ
colic — ನಾ ಹೊಟ್ಟೆನೋವು (ಹೊಟ್ಟೆನೋವಿ ನಿಂದ ನರಳುತ್ತಿದ್ದಾನೆ)
collaborate — ಕ್ರಿ ಕೂಡಿಗೆಯ್ಯು
collapse — ನಾ ಕುಸಿತ
collapse — ಕ್ರಿ 1 ಜರಿ (ಇಡೀ ಗುಡ್ಡವೇ ಜರಿದು ಬಿದ್ದಿದೆ), ಕುಸಿ (ಮನೆ ಕುಸಿಯಿತು) 2 ಮಡಚು (ಮಡಚುವ ಗುಡಾರ)
collapsible — ಗು ಮಡಚಬಲ್ಲ
collar — ನಾ ಕುತ್ತಿಗೆಪಟ್ಟಿ
collate — ಕ್ರಿ ಸಾವಗಿಸು
colleague — ನಾ ಒಡಗೆಯ್ಯುಗ ಕ್ರಿ ನೆರಸು (ಬಿದ್ದ ಹಣ್ಣುಗಳನ್ನೆಲ್ಲ ಒಂದೆಡೆ ನೆರಸಿದರು), ನೆರೆಪು, ಕಲೆಹಾಕು, ಆಯು (ಕೆಳಗೆ ಉದುರಿದ್ದ ಹಣ್ಣುಗಳನ್ನು ಆಯಬೇಕು), ಒಟ್ಟವಿಸು
collection — ನಾ ಎತ್ತುವಳಿ (ಎತ್ತುವಳಿಯ ಕೆಲಸ),ಸೇರುವೆ (ಅಲ್ಲಿ ಎಲ್ಲರ ಸೇರುವೆ ಯಾಗಿದೆ),ಕಲೆತ
collective farming — ನಾ ಕೂಡೊಕ್ಕಲು
collide — ಕ್ರಿ ಡಿಕ್ಕಿ ಹೊಡೆ, ತಾಗು
colloquial — ನಾ ಆಡುನುಡಿ (ನಮ್ಮ ಆಡು ನುಡಿಯಲ್ಲಿ ಹೇಳಿದರೆ ನಿಮಗೆ ಗೊತ್ತಾ ಗದು), ಆಡುಮಾತು
collusion — ನಾ ಒಳಸಂಚು (ಒಳಸಂಚು ಮಾಡು)
collyrium — ನಾ ಕಾಡಿಗೆ (ಕಾಡಿಗೆ ಬೊಟ್ಟು; ಕಾಡಿಗೆಯಿಡು)
colonize — ಕ್ರಿ ವಲಸೆ ಹೋಗು, ಗುಳೆಹೋಗು
colony — ನಾ ನೆಲಸೆ (ಅವರ ನೆಲಸೆಯಲ್ಲಿ ಇನ್ನೂರು ಮನೆಗಳಿದ್ದುವು)
colony — ನಾ ವಲಸೆ ಊರು
colossal — ಗು ಬಾರೀ ದೊಡ್ಡ
colour — ನಾ ಪೊಗರು (ಹಸುರು ಪೊಗರು), ಹೊಗರು, ಕಿಗ್ಗು, ಒರಪು (ಮಯ್ಯೊರಪು)
column — ನಾ1 ನೀಟಸಾಲು 2 ಕುಂದ
comb — ನಾ ಸೀರಣಿಗೆ, ಬಾಚಣಿಗೆ (ಬಾಚಣಿಗೆ ಹಲ್ಲು),ಸಿಕ್ಕಟಿಗೆ, ಸಿಕ್ಕಣಿಗೆ (ಸಿಕ್ಕಣಿಗೆಯಲ್ಲಿ ಕೂದಲು ಬಿಡಿಸುತ್ತಿದ್ದಾಳೆ),ಹಣಿಗೆ
comb — ಕ್ರಿ ಬಾಚು (ತಲೆಬಾಚು), ಈರು (ಸೀರಣಿಗೆಯಿಂದ ಸೀರುಗಳನ್ನು ಈರು), ಸೀರು
combat — ನಾ ಹೋರಾಟ, ಕಾಳಗ
combination — ನಾ ಸೇರಿಕೆ, ಒಂದುಗೆ
combine — ಕ್ರಿ ಒಂದಾಗು (ಆ ಕೆಲಸದಲ್ಲಿ ಇಬ್ಬರೂ ಒಂದಾಗಿದ್ದಾರೆ), ಸೇರು
combustible — ಗು ಉರಿಯಬಲ್ಲ (ಇದು ತುಂಬಾ ಹೊತ್ತು ಉರಿಯಬಲ್ಲ ಕಟ್ಟಿಗೆ)
combustion — ನಾ ಸುಡುವಿಕೆ
come — ಕ್ರಿ ಬರು
come about — ಕ್ರಿ ಉಂಟಾಗು
come back — ಕ್ರಿ ಹಿಂದಿರುಗು
come down — ಕ್ರಿ ಎರಗು (ಹದ್ದು ಆತನ ಬೆನ್ನಿನ ಮೇಲೆ ಎರಗಿದ್ದನ್ನು ನೋಡಿದೆ), ಕೆಳಗಿಳಿ
come forth — ಕ್ರಿ ಹೊಮ್ಮು (ಹೊರ ಹೊಮ್ಮು)
come forward — ಕ್ರಿ ಮುಂದಾಗು, ಮುಂದೆ ಬರು
come out — ಕ್ರಿ ಹೊರಬರು, ಬಯಲಾಗು (ಅವನ ಗುಟ್ಟು ಬಯಲಾಯಿತು)
come together — ಕ್ರಿ ಒಡವರು
come under — ಕ್ರಿ ಒಳಪಡು, ಒಳಗಾಗು
comedian — ನಾ ನಗೆಗಾರ
comely — ಗು ಸೊಗಸಾದ, ಅಂದವಾದ, ಗಾಡಿವೆತ್ತ
comet — ನಾಬಾಲಚುಕ್ಕಿ, ಕೊಳ್ಳಿ
comfort — ಕ್ರಿ ಹದುಳಗೊಳಿಸು
comic — ಗು ನಗಿಸುವ (ನಗಿಸುವ ಕತೆಗಳು)
coming — ನಾ ಬರ (ಬರವು; ಅವನು ಬಂದ ಬರ)
comma — ನಾ ಅರೆತಡೆ (ಈ ಸೊಲ್ಲಿನ ನಡುವೆ ಒಂದು ಅರೆತಡೆ ಇರಿಸಬೇಕಾಗಿತ್ತು)
command — ನಾ ಕಟ್ಟಲೆ (ಕಟ್ಟಲೆಯಿಡು) ನಾ ನೆನಸುಗೆ
commence — ಕ್ರಿ ಕಯ್ಹಚ್ಚು; ಕಯ್ಹಾಕು, ಮೊಗಸು (ಮನೆಕಟ್ಟಲು ಮೊಗಸಿದ್ದಾನೆ), ಒಡರು (ದೊಡ್ಡದೊಂದು ಕೆಲಸವನ್ನು ಒಡರಿದವನು), ತೊಡಗು (ಆತ ಬರು ವಾಗ ಆಕೆ ಎಮ್ಮೆ ಕರೆಯಲು ತೊಡಗಿ ದ್ದಳು), ನಿಲುಕು (ಕೆಲಸಕ್ಕೆ ನಿಲುಕು)
commend — ಕ್ರಿ 1 ಮೆಚ್ಚು, ಹೊಗಳು 2 ಒಪ್ಪಿಸು (ಎಲ್ಲವನ್ನು ಮಗನಿಗೆ ಒಪ್ಪಿಸಿ ಆತ ಕಾµಗೆ ತೆರಳಿದ)
commendation — ನಾ ಮೆಚ್ಚೋಲೆ (ಅವನ ಹತ್ತಿರ ಅರಸನ ಮೆಚ್ಚೋಲೆಯಿದೆ)
commensurate — ಗು ತಕ್ಕ (ಇದು ಅವನ ತಿಳುವಳಿಕೆಗೆ ತಕ್ಕ ಕೆಲಸ)
comment — ನಾ ಹೇಳಿಕೆ (ಈ ಆಗುಹದ ಕುರಿತು ಒಂದು ಹೇಳಿಕೆ ಕೊಡಿ)
commerce — ನಾ ಕೊಳುಕೊಡೆ
commingle — ಕ್ರಿ ಒಟ್ಟು ಬೆರೆ, ಒಟ್ಟು ಸೇರು
commiserate — ಕ್ರಿ ಕನಿಕರಿಸು
commission — ನಾ 1 ತರಗು 2 ಕಡಿತ
commit — ಕ್ರಿ 1 ಸೆರೆಹಿಡಿ 2 ಒಪ್ಪಿಕೊಳ್ಳು, ಮಾತುಕೊಡು
commodious — ಗು ಎಡೆಯಿರುವ
common man — ನಾನಾಡಾಡಿ
commotion — ನಾಕದರು, ಗದ್ದಲ
communicate — ಕ್ರಿ ತಿಳಿಸು, ಹೇಳು
communication — ನಾ ಅರಿವು ಕೊಡು ಕೊಳೆ
community — ನಾ ಕೂಟ (ಒಕ್ಕೂಟ), ಸೇರುವೆ
commutation — ನಾ 1 ಕೊಡುಕೊಳೆ, ಮಾರ್ಪು 2 ಕಡಿತ
compact — ಗು ಅಡಕ (ಈ ಪೆಟ್ಟಿಗೆಗೆ ಅಡಕ ವಾದುದು ಬೇಕು; ಅಡಕವಾದ ಜಾಗ), ದಟ್ಟ
companion — ನಾಕೇಳ (ಕೆಳದಿ; ಕೆಳೆಯ), ಒಡನಾಡಿ (ಒಡನಾಟ; ಒಡನಾಡು),ಹತ್ತಿಗ,ತಹಿಕಾರ
companionship — ನಾ ಗೆಣೆ (ಗೆಣೆಯ; ಗೆಣೆಗಾರ; ಗೆಣೆತನ)
company — ನಾ ಸೇರುವೆ (ಸೇರುವೆಯಾಗು), ಒಡನಾಟ (ಕಳ್ಳನ ಒಡನಾಟ ಒಳ್ಳೆಯದಲ್ಲ)
comparative — ಗು ಹೋಲಿಕೆಯ
compare — ಕ್ರಿ ಸರಿನೋಡು, ಸರಿಯಿಕ್ಕು, ಹೋಲಿಸು (ಇವೆರಡನ್ನು ಹೋಲಿಸಿ ನೋಡಿ ಹೇಳಿ)
comparison — ನಾಹೋಲಿಕೆ (ಅವೆರಡ ರೊಳಗೆ ತುಸುವೂ ಹೋಲಿಕೆಯಿಲ್ಲ), ಗಡೆ
compass — ನಾ ಕಯ್ವಾರ
compassion — ನಾ ಕನಿಕರ (ಕನಿಕರಿಸು; ಕನಿಕರವಿಲ್ಲದವನು), ಮರುಕ (ಮರುಕ ವಿಲ್ಲದ ಹೆಂಡತಿ), ಕಕ್ಕುಲಾತೆ, ಕಕ್ಕುಲತೆ (ಒಡಲ ಕಕ್ಕುಲತೆ), ಅರುಳು (ಅರುಳು ದೋರು), ಎರಕ
compassionate (be) — ಕ್ರಿ ಎದೆಕರಗು, ಕನಿಕರಿಸು
compatible — ಗು ಹೊಂದುವ, ಹೊಂದಿಕೆ ಯಾಗುವ
compatriot — ನಾ ಒನ್ನಾಡಿಗ (ನಾವಿಬ್ಬರೂ ಒನ್ನಾಡಿಗರು)
compeer — ನಾ 1 ಒಡನಾಡಿ 2 ಸಾಟಿ, ಎಣೆ (ಅವನಿಗೆ ಎಣೆ ಯಾರೂ ಇಲ್ಲ)
compel — ಕ್ರಿ ಒತ್ತಾಯಿಸು, ಕಡ್ಡಾಯ ಮಾಡು
compensate — ಕ್ರಿ ಸರಿದೂಗಿಸು, ಕಳೆತ ತುಂಬು
compete — ಕ್ರಿ ಸೆಣಸು (ಸೆಣಸುಗ), ಹೊಣರು (ಹೊಣಕೆ; ಚನ್ನಾಗಿ ಹೊಣರುವ ಹುಡುಗ), ಹುರುಡಿಸು
competent — ಗು ತಕ್ಕ, ಚೆಚ್ಚರಿಕೆಯ, ಬಲ್ಲ, ಆರ್ಪ ನಾ ಪೋಟಿ (ಪೋಟಿಗಾರ), ಪಂತ (ಪಂತಕಟ್ಟು; ಪಂತಗಾರ; ಪಂತ ವೊಡ್ಡು), ಮೇಕು, ಮೇಲಾಟ (ಮೇಲಾಟ ನಡೆಸು; ಮೇಲಾಟಗಾರ), ಹುರುಡು, ಏರಾಟ (ಏರಾಟಿಕೆ)
competitor — ನಾ ಪೋಟಿಗಾರ, ಪಂತಗಾರ
compile — ಕ್ರಿ ಒಟ್ಟುಗೂಡಿಸು
complacent — ಗು ನೆಮ್ಮದಿಯ
complain — ಕ್ರಿ ಮೊರೆಯಿಡು, ಗೊಣಗು, ದೂರು (ದೂರಿಡು - ಆತ ನಿಮ್ಮಲ್ಲಿ ದೂರಿಡಲು ಬಂದಿದ್ದಾನೆ)
complement — ಕ್ರಿ ನೆರಪು, ಮುಗಿಸು
complete — ಕ್ರಿ ಮುಡಿ (ಮುಡಿಗೊಳ್ಳು - ಮುಡಿಗೊಂಡ ಕೆಲಸ), ಎರು, ನೆರವೇರು (ಆತನ ಮಾತು ನೆರವೇರಲಿಲ್ಲ), ನೆರಪು (ಆತ ನೆರಪದೆ ಇರಲಾರ), ಮುಗಿ (ಕೆಲಸವೆಲ್ಲ ಮುಗಿಯಿತು), ಕೊನೆಗೊಳ್ಳು, ತುಂಬು (ತುಂಬುವೆರೆ)
complete — ಗು ನೆರೆ (ನೆರೆನಂಬು; ನೆರೆ ಗೆಲ್ಲ; ನೆರೆದಿಂಗಳು; ನೆರೆಯರಿವು), ಎರು (ಎರ್ತ)
completely — ಗು ಸಲೆ (ಸಲೆ ಸೋತವರು),ಮಿಗೆ (ಮಿಗೆ ನುಡಿಯ ಬಲ್ಲಾತ; ಮಿಗೆ ಹೋಗುವವನು),ಇರವಾರ (ಕೆಲಸ ಇರವಾರ ಕೆಟ್ಟು ಹೋಯಿತು), ತವೆ (ತವೆ ತುಂಬಿದ ನೆರೆಯಲ್ಲಿ ಕೆಲವು ಮನೆಗಳು ಮುಳುಗಿದುವು)
completeness — ನಾ ನೆರತೆ, ನೆರವು (ನೆರ ವೇರಿಸು), ನೆರವಣಿಗೆ (ಓದಿನ ನೆರವಣಿಗೆ)
completion — ನಾ ಮುಗಿತ; ಮುಗಿತಾಯ; ಮುಕ್ತಾಯ (ಮುಕ್ತಾಯ ಹಾಡು), ತೀರಿಕೆ
complex — ಗು ತೊಡಕಿನ
complexion — ನಾ ತೋರ್ಪು, ಪೊಗರು
complicated — ಗು ತೊಡಕಿನ, ಸಿಕ್ಕಲು (ಆತನದು ತುಂಬಾ ಸಿಕ್ಕಲು ಬರಹ)
compliment — ನಾ ಮೆಚ್ಚಿಕೆ, ಮೆಚ್ಚುಗೆ, ಹೊಗಳಿಕೆ, ಹಾರಯ್ಕೆ
comply — ಕ್ರಿ ಒಪ್ಪಿಕೊಳ್ಳು, ಒಪ್ಪಿಗೆಯ್ಯು
component — ನಾ ಅಡಕ
compose — ಕ್ರಿ ಕಟ್ಟು (ಕತೆಕಟ್ಟಿ ಹೇಳು)
composition — ನಾ ಒಡ್ಡವ
compost — ನಾ ಕಲಸೆಟ್ಟೆ
composure — ನಾ ನೆಮ್ಮದಿ
compound — ನಾ 1 ಒಂದುಗೆ, ಕೂಡಿಕೆ 2 ಜೋಡುಪದ, ಕೂಡುಪದ
compounded interest — ನಾ ಮಾರ್ಬಡ್ಡಿ
compounder — ನಾ ಮದ್ದುಕಲಪುಗ
comprehend — ಕ್ರಿ 1 ತಿಳಿದುಕೊಳ್ಳು 2 ಒಳಗೊಳ್ಳು
comprehension — ನಾ ತಿಳುವಳಿಕೆ
compress — ಕ್ರಿ ಹದಿಗಿಸು (ಎಲ್ಲವನ್ನೂ ಪೆಟ್ಟಿಗೆಯೊಳಗೆ ಹದಿಗಿಸಿ ತುಂಬಿಸಿದರು), ಕುಗ್ಗಿಸು (ಮಯ್ಯನ್ನು ಕುಗ್ಗಿಸಿ ಒಳಗೆ ಹೋದ), ಅಡಕಮಾಡು, ಇರುಕು (ಇರುಕಿ ತುಂಬು)
compressed — ಗು ಅಡಕ (ಅಡಕ ಕೋಣೆ), ದಾಟು (ದಾಟು ಕತೆ)
comprise — ಕ್ರಿ ಒಳಗೊಳ್ಳು (ಇದು ಎರಡು ಕತೆಗಳನ್ನೊಳಗೊಂಡಿದೆ)
compromise — ನಾ ಕೊಡುಕೊಳುಗೆ
compulsion — ನಾಕಡ್ಡಾಯ (ಅಲ್ಲಿಗೆ ಹೋಗುವುದನ್ನು ಕಡ್ಡಾಯ ಮಾಡಲಾಗಿದೆ),ಒತ್ತಾಯ (ಒತ್ತಾಯ ಮಾಡಿ ಹೇಳು; ಒತ್ತಾ ಯಿಸು)
compunction — ನಾ ತಪ್ಪೆಸಗಿದರಿಮೆ
compute — ಕ್ರಿ ಎಣಿಸು, ಲೆಕ್ಕಹಾಕು
comrade — ನಾ ಗೆಳೆಯ, ಒಡನಾಡಿ
con — ಕ್ರಿ 1 ಆಳವಾಡು, ಅಟಮಟಿಸು 2 ಕಲಿ, ತಿಳಿ ಗು ಒಳಬಾಗಿದ (ಒಳಬಾಗಿದ ಕನ್ನಡಿ)
conceal — ಕ್ರಿ (ಆ) ಹುದುಗು (ಅವನೆಲ್ಲೂೀ ಹುದುಗಿದ್ದಾನೆ), (ಮಾ) ಬಚ್ಚು (ಅದನ್ನು ಅವನಿಗೆ ತಿಳಿಯದ ಹಾಗೆ ಬಚ್ಚಬೇಕು; ಬಚ್ಚಿಡು), ಮಾಜು (ಅದನ್ನು ಎಲ್ಲೂ ಮಾಜಲಾರೆವು; ಮರೆಮಾಜು)
concealment — ನಾ ಮರೆ (ಮರೆಮಾಡು; ಮರೆಯಾಗು; ಮರೆಯಲ್ಲಿ ನಿಲ್ಲು)
concede — ಕ್ರಿ ಬಿಟ್ಟುಕೊಡು, ಒಪ್ಪು, ಎಡೆ ಗೊಡು
conceit — ನಾ ಹಮ್ಮು (ಅವನ ಹಮ್ಮು ಮುರಿಯಬೇಕು; ಹಮ್ಮಿಕೆ; ಹಮ್ಮಿಗ), ಹೆಮ್ಮೆ (ಹೆಮ್ಮೆಪಡು; ಹೆಮ್ಮೆಗಾರ; ಹೆಮ್ಮೆ ಹೆಚ್ಚಾಯಿತು), ಹೆಕ್ಕಳ (ಹೆಕ್ಕಳಿಕೆ; ಹೆಕ್ಕಳಿಸು)
conceited — ಗು ಅಟ್ಟ (ಅಟ್ಟವಿರು)
conceivable — ಗು ನಂಬತಕ್ಕ, ನೆನೆಸಬಲ್ಲ
conceive — ಕ್ರಿ 1 ನೆನೆಸು 2 ಬಸಿರು ನಿಲ್ಲು, ಬಸಿರಾಗು
concentrate — ಕ್ರಿ ನಡುವಿಗೆ ತರು, ಒಂದೆಡೆ ತರು
concentric — ಗು ಒನ್ನಡುವಿನ (ಒನ್ನಡುವಿನ ಆಳಿಗಳು)
concept — ನಾ ಎಣಿಸಿಕೆ, ಎಣಿಕೆ
concern — ನಾ 1 ಬೇವಸ, ತಲ್ಲಣ, ಕಳವಳ, ಎದೆಗುದಿ 2 ನಂಟು
concern — ನಾ ಕಳಕಳಿ (ಕಳಕಳಿಸು), ಗೋಜು (ಆಕೆಯ ಗೋಜಿಗೆ ಹೋಗಬೇಡ), ಗೊಡವೆ (ತಡಮಾಡುವವನ ಗೊಡವೆ ಬೇಡ; ಗೊಡವೆಗೊಳ್ಳು)
concert — ನಾ ಒಪ್ಪಂದ
concerted — ಗು ಒಂದುಗೂಡಿದ, ಒಟ್ಟು ಸೇರಿದ
concession — ನಾ 1 ತಳ್ಳುಪಡಿ, ತರಗು 2 ಎಡೆಗೊಡುವಿಕೆ
conciliate — ಕ್ರಿ 1 ನೆಮ್ಮದಿಗೊಳಿಸು 2 ಗೆಡೆಗೊಳ್ಳು, ಗೆಡೆಮಾಡು
concise — ಗು ಅಡಕ (ಅಡಕವಾಗಿ ಹೇಳು; ಅಡಕಗೊಳಿಸು)
conclave — ನಾ ಗುಟ್ಟುಕದೆತ
conclude — ಕ್ರಿ ಕೊನೆಗಾಣಿಸು, ಮುಗಿಸು (ಮಾಡಲು ತೊಡಗಿದುದನ್ನು ಮುಗಿಸಿಬಿಡಿ)
conclusion — ನಾ ಕಡೆನುಡಿ, ಹಿನ್ನುಡಿ (ಅವ ರೊಂದು ಹಿನ್ನುಡಿ ಬರೆದು ಕೊಟ್ಟಿದ್ದಾರೆ), ತೀರ (ತೀರಗಡೆ), ತೀರಮೆ, ತೀರಿಕೆ, ತೀರ್ಮಾನ (ನಿಮ್ಮ ತೀರ್ಮಾನ ಹೇಳಿ), ತೀರ್ಕಣೆ (ತೀರ್ಕಣಿಸು; ತೀರ್ಕಣೆಗೆಯ್ಯು), ಮುಡಿವು, ಮುಚ್ಚಕ
concoct — ಕ್ರಿ ಹುಟ್ಟಿಸಿ ಹೇಳು, ಕತೆಕಟ್ಟು
concomitant — ಗು ಒಡಹೋಗುವ, ಮೂಡಿ ಬರುವ
concord — ನಾ ಒಕ್ಕಟ್ಟು (ಒಕ್ಕಟ್ಟಿನಲ್ಲಿರು), ಹೊದ್ದಿಕೆ, ಹೊಂದಿಕೆ (ಅವರೊಳಗೆ ಹೊಂದಿಕೆಯಿದೆ), ಒಪ್ಪಂದ (ನಮ್ಮೊಳಗಿನ ಒಪ್ಪಂದವನ್ನು ಅವನೇ ಮೊದಲು ಕೆಡಿಸಿದ)
concourse — ನಾ ಗುಂಪು, ನೆರವಿ, ಸಂದಣಿ, ಕೂಡಲು
concrete — ಗು ಗಟ್ಟಿ, ನನಸು (ನನಸು ಎತ್ತುಗೆ)
concur — ಕ್ರಿ ಒಮ್ಮು (ನೀವೆಂದುದಕ್ಕೆಲ್ಲ ಅವನು ಒಮ್ಮುತ್ತಾನೆ), ಒಡಂಬಡು, ಒಪ್ಪು
concurrent — ಗು ಒಟ್ಟೊಟ್ಟಿಗೆ (ಅವರು ಒಟ್ಟೊಟ್ಟಿಗೆ ಬಂದರು)
concussion — ನಾ ಹೊಡೆತ, ಪೊಳಪು (ತಲೆಯ ಪೊಳಪು)
condemn — ಕ್ರಿ ಹೀಗಳೆ, ತೆಗಳು, ತಪ್ಪು ಹೊರಿಸು
condense — ಕ್ರಿ ಇಂಗಿಸು (ಕಬ್ಬಿನ ಹಾಲನ್ನು ಇಂಗಿಸಿ ಬೆಲ್ಲ ಮಾಡುತ್ತಾರೆ), ಗಟ್ಟಿಮಾಡು
condign — ಗು ತಕ್ಕ
condiment — ನಾ ನರೆ (ನರೆಲಿುಕ್ಕಿದ ತಿನಿಸು)
condition — ನಾ1 ಗೊತ್ತುಪಾಡು (ಅವನ ಗೊತ್ತುಪಾಡು ಹೇಗಿದೆಯೆಂದು ತಿಳಿಯದು) 2 ಬೇಕಾದ್ದು, ಬೇಡಿಕೆ ಕ್ರಿ ಮರುಕ ಹೇಳು, ಮರುಕ ತೋರಿಸು
condone — ಕ್ರಿ ಗಮನಿಸದಿರು
conducive — ಗು ಉಂಟುಮಾಡಬಲ್ಲ
conduct — ನಾನೆಗಳ್ತೆ, ನಡತೆ (ನಡತೆಗೆಡು; ಆತನ ನಡತೆ ಚನ್ನಾಗಿಲ್ಲ), ನಡವಳಿಕೆ, ತೋಜಿ
conduct — ಕ್ರಿ 1 ನಡೆಸು, ಸಂಬಾಳಿಸು (ಸಂಬಾ ಳಿಸಿಕೊಂಡು ಹೋಗು) 2 ಕಳುಹಿಸು
conductor — ನಾ ದಾರಿತೋರುಗ, ನಡೆಸುಗ
conduit — ನಾ ನೀರ ಕೊಳವೆ, ಕಾಲುವೆ
confabulate — ಕ್ರಿ ಹರಟು, ಕೂಡಿನುಡಿ
confection — ನಾ ಸಿಹಿತಿಂಡಿ
confectionery — ನಾ ಸಿಹಿಯಂಗಡಿ
confederacy — ನಾ ಒಕ್ಕೂಟ, ನಾಡಕೂಟ
confer — ಕ್ರಿ 1 ಕೊಡು, ಬೀರು 2 ಮಾತುಕತೆ ನಡೆಸು
conference — ನಾ ಮಾತುಕತೆ
confess — ಕ್ರಿ ತಪೊ್ಪಪ್ಪಿಕೊಳ್ಳು
confidant — ನಾ ನಂಬಿಗಸ್ತ
confide — ಕ್ರಿ ನಂಬು (ಅವರು ನಿಮ್ಮನ್ನು ನಂಬುವುದಿಲ್ಲ)
confidence — ನಾನಂಬಿಕೆ (ನನಗೆ ಆತನಲ್ಲಿ ನಂಬಿಕೆಯಿಲ್ಲ),ನಂಬುಗೆ (ನಂಬುಗೆಗೆಡು), ಅಂಕೆ, ನೆಮ್ಮುಗೆ
confidential — ಗು 1 ಗುಟ್ಟಿನ (ಗುಟ್ಟಿನ ಮಾತು; ಗುಟ್ಟಿನ ಹೇಳಿಕೆ) 2 ನಂಬಿಕೆಯ
configuration — ನಾ 1 ಅಟ್ಟಣೆ, ಏರ್ಪಾಡು 2 ಪರಿಜು
confine — ಕ್ರಿ 1 ಇರುಕು (ಆತನನ್ನು ಒಂದು ಕೋಣೆಯೊಳಗೆ ಇರುಕಿದ್ದಾರೆ),ಕಿರು (ಕೆತ್ತ ಹುಡುಗರು) 2 ಮಲಗಿದಲ್ಲಾಗು
confined place — ನಾಇಕ್ಕಟ್ಟು (ಇಕ್ಕಟ್ಟಿನ ಕೋಣೆ)
confinement — ನಾ ಸೆರೆ (ಸೆರೆಹಿಡಿ; ಸೆರೆ ಸಿಕ್ಕು; ಸೆರೆಯಾಳು)
confirm — ಕ್ರಿ ಗಟ್ಟಿಮಾಡು, ನನ್ನಿಮಾಡು
confiscate — ಕ್ರಿ ಮುಟ್ಟುಗೋಲು ಹಾಕು
conflagration — ನಾ ಪೇರುರಿ, ದೊಡ್ಡ ಬೆಂಕಿ
conflict — ನಾತಿಕ್ಕಾಟ (ಅಣ್ಣತಮ್ಮಂದಿರ ನಡುವೆ ತಿಕ್ಕಾಟವಿದೆ)
conflict — ಕ್ರಿ ಹೋರಾಡು, ಇದಿರಿಸು
confluence — ನಾ 1 ಕೂಡಲು (ಮೂರು ಹೊಳೆಗಳ ಕೂಡಲಲ್ಲಿ ಒಂದು ಗುಡಿಯಿದೆ), ಕೂಟ (ಹೊಳೆಗಳ ಕೂಟ) 2 ದೊಡ್ಡ ಗುಂಪು
conform — ಕ್ರಿ ಒಪ್ಪು, ಪುದುವಾಗು, ವಾಡಿಕೆ ತಪ್ಪದಿರು
conformity — ನಾ ಒಪ್ಪಾರಿ
confound — ಕ್ರಿ ಬೆರಗಾಗು, ಗೊಂದಲಿಸು
confront — ಕ್ರಿ ಇದಿರಿಸು, ಎದುರಾಗು
confuse — ಕ್ರಿ ಬೆಚ್ಚಳಿಸು, ಸೂಗರಿಸು, ಕಂಗೆಡು (ಅಳಿದುಳಿದ ಜನ ಕಂಗೆಟ್ಟು ಇಲ್ಲಿಗೆ ಬಂದಿ ದ್ದಾರೆ; ಕಂಗೆಡಿಸು)
confused — ಗು ತಿಕ್ಕಲು (ತಿಕ್ಕಲಾಟ), ಕವ್ವರೆ (ಕವ್ವರೆಗೊಳ್ಳು), ಕಕ್ಕಾಬಿಕ್ಕಿ
confusion — ನಾ ಬೆಪ್ಪು (ಬೆಪ್ಪುತನ; ಬೆಪ್ಪ), ಗಡಿಬಿಡಿ (ಅವನಿಗೆ ಯಾವಾಗಲೂ ಗಡಿ ಬಿಡಿ), ಪೇತು, ಮಟ, ಕುಳ, ತಾರುಮಾರು, ತಡ (ತಡಬಡಿಸು), ಕಾಹುರತೆ, ಗೊಂದಲ (ಗೊಂದಲ ಗೆಡಹು; ಗೊಂದಲಗೊಳ್ಳು; ಗೊಂದಲಿಸು), ತಾಳು (ತಾಳೂ ತಟ್ಟೂ ಹೊಡೆ), ತತ್ತರ (ತತ್ತರದಿಂದ ಹುಲ್ಲಗಳು ದಿಕ್ಕು ದಿಕ್ಕಿಗಳಿಗೋಡಿದುವು; ತತ್ತರಗೊಳ್ಳು; ತತ್ತರಿಸು), ತಬ್ಬಿಬ್ಬು (ತಬ್ಬಿಬ್ಬಾಗು - ನಿಮ್ಮ ಕೇಳ್ವಿಲಿುಂದ ಆತ ತಬ್ಬಿಬ್ಬಾಗಿದ್ದಾನೆ) ಕ್ರಿ ಅಲ್ಲಗಳೆ, ತಪ್ಪುಹಚ್ಚು
congeal — ಕ್ರಿ ಹೆಪ್ಪುಗೊಳ್ಳು, ಹೆಪ್ಪುಗಟ್ಟು, ಹೆರು (ಹೆತ್ತ ತುಪ್ಪ, ಹೆತ್ತ ಮೊಸರು), ಗಡ್ಡೆಕಟ್ಟು
congenial — ಗು ಮೆಚ್ಚುಗೆಯ, ಹೊಂದಿಕೆ ಯಾಗುವ
congenital — ಗು ಹುಟ್ಟಿನ, ಹುಟ್ಟಿನಿಂದ ಬಂದ (ಅವನದು ಹುಟ್ಟಿನಿಂದ ಬಂದ ಬೇನೆ)
congest — ಕ್ರಿ ಕಿಕ್ಕಿರಿ, ಇಡಿಕಿರಿ
conglomerate — ಗು ಉರುಟಾದ, ಒಟ್ಟಾದ
congratulate — ಕ್ರಿ ನಲ್ಮೆಹೇಳು
congregate — ಕ್ರಿ 1 ಒಟ್ಟುಸೇರು 2 ಮುದ್ದೆ ಮಾಡು
conjecture — ನಾತೋರಿಕೆ (ನನ್ನ ತೋರಿಕೆ ಯೇನೆಂಬುದನ್ನು ಹೇಳಿಬಿಡುತ್ತೇನೆ), ಅನಿಸಿಕೆ
conjoin — ಕ್ರಿ ಕೂಡಿಸು, ಒಂದುಮಾಡು
conjugal — ಗು ಒಪ್ಪಿಗೆಯಾಗುವ, ಹೊಂದಿಕೆ ಯಾಗುವ, ತಕ್ಕ (ಅವನಿಗೆ ತಕ್ಕ ಹೆಂಡತಿ)
conjuring — ಗು ಮೋಡಿ (ಮೋಡಿಗಾರ; ಮೋಡಿ ಮಾಡು)
connect — ಕ್ರಿ ಅಮರು (ಬಿಗಿಯಾಗಿ ಅಮರಿದ ತೋಳುಗಳು), ತರು (ತತ್ತುದು; ತತ್ತ ತೊಲೆಗಳು), ಕೂಡಿಸು (ಎರಡು ತುಂಡು ಗಳನ್ನು ಒಟ್ಟಿಗೆ ಕೂಡಿಸಬೇಕು)
connection — ನಾ ಪತ್ತುಗೆ (ಪತ್ತುಗೆಗೊಳ್ಳು; ಪತ್ತುಗೆ ಕೆಡು), ಹತ್ತುಗೆ, ತಳ್ಳಿ (ನನಗೆ ಅವ ನೊಂದಿಗೆ ಯಾವ ತಳ್ಳಿಯೂ ಇಲ್ಲ), ತಗಹು (ತಗಹು ತಪ್ಪು)
connubial — ಗು ಮದುವೆಯ
conquer — ಕ್ರಿ ಗೆದಿ, ಹತ್ತಿಕ್ಕು, ಗೆಲ್ಲು (ಗೆದ್ದ ಎತ್ತು ಯಾರದು?),
conquest — ನಾ ಗೆಲುವು
consanguinity — ನಾ ನೆತ್ತರನಂಟು
conscientious — ಗು ಎಚ್ಚರಿಕೆಯ, ಸಯ್ದ
conscious (be) — ಕ್ರಿ ಮಿಡುಕು (ಮೋರೆಗೆ ನೀರು ತಳಿದಾಗ ಆತ ಮಿಡುಕತೊಡಗಿದ),ತೆಪ್ಪರಿಸು (ತೆಪ್ಪತ್ತುಕೊಳ್ಳು)
consciousness — ನಾ ಎಚ್ಚರ (ಎಚ್ಚರ ತಪ್ಪು), ಅರಿವು
consecutive — ಗು ಒಂದರ ಮೇಲೊಂದು (ತೊಂದರೆಗಳು ಒಂದರ ಮೇಲೊಂದಾಗಿ ಬರುತ್ತಾ ಇವೆ)
consensus — ನಾ ಹೊಂದಾಣಿಕೆ (ಅವ ರೊಳಗೆ ಹೊಂದಾಣಿಕೆಯಾಗಿಲ್ಲ)
consent — ನಾಒಪ್ಪಿತ (ಒಪ್ಪಿತದ ಮಾತನ್ನು ತಪ್ಪಿಸಬಾರದು), ಒಪ್ಪಿಗೆ
consent — ಕ್ರಿ ಒಡಂಬಡು (ಒಡಂಬಡಿಕೆ), ಒಪ್ಪು (ನೀವಂದುದನ್ನು ಆತ ಒಪ್ಪಿದ ಹಾಗಿತ್ತು; ಒಪ್ಪಿಕೊಳ್ಳು; ಒಪ್ಪಿತ; ಒಪ್ಪಿಗೆ)
conservative — ನಾ ಮಾರ್ಪಾಡಿಗೆ ಒಪ್ಪ ದವನು, ಮಾರ್ಪಾಡೆದುರಿ
conserve — ಕ್ರಿ ಕಾಪಾಡು, ಉಳಿಸು
consider — ಕ್ರಿ ಬಗೆ (ಬಗೆದಂತೆ ಹೇಳು), ಓರು (ಎಲ್ಲವನ್ನೂ ಓರಿ ನೋಡಿದ ಮೇಲೆ ಅವನು ಒಪ್ಪಿಕೊಳ್ಳುತ್ತಾನೆ),ಕಣಿಸು (ಕಡೆ ಗಣಿಸು), ಉನ್ನಿಸು (ನಿನ್ನೊಡನೆ ಹೇಳ ಬೇಕೆಂದು ಉನ್ನಿಸುತ್ತಿದ್ದೆ), ಉಂಕಿಸು
considerable — ಗು 1 ಸಾಕಶ್ಟು 2 ಅರಿದು (ಅರಿದಾದ ಕೆಲಸ)
consideration — ನಾ ಅಳವು (ಅದು ನನ್ನ ಅಳವಿಗೆ ಬರಲಿಲ್ಲ), ಕೀಣ
consign — ಕ್ರಿ ತಲಪಿಸು, ಮುಟ್ಟಿಸು
consist — ಕ್ರಿ ಕೂಡಿರು, ಒಳಗೊಳ್ಳು (ಇದು ಮೂರು ಹಣ್ಣುಗಳನ್ನೊಳಗೊಂಡಿದೆ)
consistent — ಗು 1 ಒಮ್ಮುವ, ಹೊಂದಿ ಕೊಳ್ಳುವ 2 ಮಾರ್ಪಡದ
console — ಕ್ರಿ ಹದುಳಿಸು
consolidate — ಕ್ರಿ ಒಂದಾಗು, ಗಟ್ಟಿಯಾಗು, ಅಳವು ಹೆಚ್ಚು (ಹೆಚ್ಚಿಸು) ನಾಹೊಂದಿಕೆ, ಹೊಂದಾಣಿಕೆ (ಅವರೊಳಗೆ ಹೊಂದಾಣಿಕೆಯಾಗದು)
consonant — ನಾ ಮುಚ್ಚುಲಿ
consort — ನಾ ಒಡನಾಡಿ, ಗಂಡ, ಹೆಂಡತಿ
conspicuous — ಗು ಎದ್ದುಕಾಣುವ (ಅವ ನದು ಎದ್ದುಕಾಣುವ ನಡತೆ), ಗಮನ ಸೆಳೆವ
conspiracy — ನಾಹೂಟ (ಹೂಟಹೂಡು), ಒಳಸಂಚು
constable — ನಾ ಕಾಪಿಗ (ಕೊಲೆಗಾರನನ್ನು ಹಿಡಿಯಲು ಕಾಪಿಗರು ಹೋಗಿದ್ದಾರೆ)
constant — ಗು ಮಾರ್ಪಡದ
constellation — ನಾ ಅರಿಲ್ಕೂಟ (ನಾಯಿಯ ಹಾಗೆ ಕಾಣಿಸುವ ಅರಿಲ್ಕೂಟ)
consternation — ನಾ ಬೆಚ್ಚಿಕೆ, ಕಡು ಬೆದರಿಕೆ
constituent — ನಾ ಕಡಿಗೆ
constitute — ಕ್ರಿ ಕಟ್ಟು, ಒಟ್ಟುಸೇರಿಸು
constitution — ನಾ 1 ಮಯ್ಪಣ್ಣುಗೆ (ಅವನ ಮಯ್ಪಣ್ಣುಗೆಗೆ ಈ ಮದ್ದು ನಾಟುವುದಿಲ್ಲ) 2 ಇಟ್ಟಳ (ಇಟ್ಟಳ ಹೇಗಿದೆಯೆಂದು ನೋಡಲು ಆಟಿಗೆಯನ್ನು ಬಿಚ್ಚಿಹಾಕಿದ)
constrain — ಕ್ರಿ 1 ಸೆರೆಯಿಡು 2 ಒತ್ತಾಯಿಸು
constrict — ಕ್ರಿ ಅಗಲಕಿರಿದಾಗಿಸು, ಎಲ್ಲೆಕಟ್ಟು
construct — ಕ್ರಿ ಸಮೆ, ಕಟ್ಟು (ಮನೆ ಕಟ್ಟು)
construction — ನಾ 1 ಕಟ್ಟಡ, ಕಟ್ಟೋಣ 2 ಸೊಲ್ಲಿಟ್ಟಳ
construe — ಕ್ರಿ ಬಿಡಿಸಿ ಹೇಳು, ತಿಳಿಸಿ ಹೇಳು
consult — ಕ್ರಿ ಅರಿವು ಪಡೆ, ಮಾತುಕತೆ ನಡೆಸು
consume — ಕ್ರಿ ಬಳಸು, ನುಂಗು, ಹಾಳು ಮಾಡು
consumer — ನಾಬಳಕೆಗಾರ, ಬಳಸುಗ
consummate — ಕ್ರಿ ನೆರವೇರಿಸು
consumption — ನಾಬಳಕೆ (ನಮ್ಮಲ್ಲಿ ಇತ್ತೀಚೆಗೆ ಸಿಹಿತಿಂಡಿಗಳ ಬಳಕೆ ಹೆಚ್ಚಾಗಿದೆ)
contact — ಕ್ರಿ ಸೋಕು (ಬೆನ್ನಿಗೆ ಏನೋ ಸೋಕಿದ ಹಾಗಾಲಿುತು), ಅಣೆ (ಗೋಡೆಗೆ ಅಣೆದು ನಿಂತಿದ್ದ), ತಗಲು (ಆತನ ಕಯ್ ನನ್ನ ಕಯ್ಗೆ ತಗಲಿತು), ಮುಟ್ಟು (ಮುಟ್ಟಲು)
contagious — ಗು ಸೋಕಬಲ್ಲ (ಸೋಕು ಬೇನೆ)
contain — ಕ್ರಿ ಹಿಡಿ (ಹಿಡಿಸು - ಇದರಲ್ಲಿ ಹಿಡಿಸುವಶ್ಟು ಅಕ್ಕಿ ಕೊಡಿ), ಒಳಗೊಳ್ಳು
contamination — ನಾ ಸೊಗಡು (ಅವಳ ಸೊಗಡಿನಿಂದ ಅವನೂ ಬೇನೆಬಿದ್ದ)
contemn — ಕ್ರಿ ಕೀಳುಮಾಡು, ಆಳಿಮಾಡು, ಏವಯಿಸು
contemplate — ಕ್ರಿ ಉನ್ನು, ಆಳವಾಗಿ ನೆನೆ
contemporary — ಗು ಒಂದೇ ಸೂಳಿನ, ಒಟ್ಟಿಗಿರುವ
contempt — ನಾ ಕೀಟು (ಕೀಟುನುಡಿ), ಆಳಿ (ಆಳಿಮಾಡು), ಇಳಿಕೆ (ಇಳಿಕೆಗೆಯ್ಯು), ಏವ (ಏವಯಿಸು), ಏಳಿದ (ಏಳಿದ ನುಡಿ), ಕುಚ್ಚಣೆ, ನದುಳು
contemptuous — ಗು ಇಳಿಕೆಗೆಯ್ಯುವ, ಆಳಿಮಾಡುವ, ಕೊಬ್ಬಿದ, ಬೀಗುವ
contend — ಕ್ರಿ ಹೋರಾಡು, ಇದಿರಿಸು
content — ನಾಒಳಪಿಡಿ, ಪರಿವಿಡಿ
content — ಗುತಣಿದ (ತಣಿದ ಊರವರು)
contention — ನಾ ಜಗಳ, ತೋಟಿ ನಾ ಪೋಟಿ (ಪೋಟಿಗಾರ), ಹೋಟಿ, ಪೊಣರ್ಕೆ
contest — ಕ್ರಿ ಸೆಣಸು (ಇವತ್ತಿನ ಓಟದಲ್ಲಿ ಸೆಣಸುವವರು ನೂರು ಮಂದಿ ಇದ್ದಾರೆ), ಪೊಣರು
context — ನಾ ಕುಳ್ಳಿಹ (ಪದಗಳ ಹುರುಳು ಬೇರೆ ಬೇರೆ ಕುಳ್ಳಿಹಗಳಲ್ಲಿ ಬೇರೆ ಬೇರಾ ಗಿರುತ್ತವೆ)
contiguity — ನಾಅಳವು (ನಮ್ಮ ಅಳವಿನ ಲ್ಲಿರುವವರು)
contiguous (be) — ಕ್ರಿ ಕದೆ (ಒಂದ ಕ್ಕೊಂದು ಕದೆದಿರುವ ಮನೆಗಳ ಸಾಲು)
continent — ನಾ ಪೆರ್ನೆಲ
continent — ಗು ಅಂಕೆತಪ್ಪದ
contingency — ನಾ ಮುಂಗಾಣದ ಮುಟ್ಟು ವಳಿ, ಮುಂಗಾಣದ ಆಗುಹ
continual — ಗು ಆಗಾಗ ನಡೆವ, ಬಿಡದೆ ನಡೆವ
continuation — ನಾ 1 ಮರಳಿ ತೊಡಗುಹ 2 ನಿಲ್ಲದಿಕೆ
continue — ಕ್ರಿ ಸಾಗು (ಮೆರವಣಿಗೆ ಮುಂದಕ್ಕೆ ಸಾಗಲಿ), ಮುಂದುವರಿ (ನಿಮ್ಮ ಕೆಲಸ ಮುಂದುವರಿಯಲಿ; ಮುಂದುವರಿಸು)
continuous — ಗು ನಿಲ್ಲದ, ಮುಗಿಯದ, ಎಡೆಬಿಡದ
contort — ಕ್ರಿ ಉರುಗು, ಮುರುಕು (ಮಯ್ಯನ್ನು ಮುರುಕಿ ಕುಳಿತಿದ್ದಾಳೆ), ಮುಡುಕು
contour — ನಾಏರಿಳಿತ, ಉಬ್ಬುತಗ್ಗು
contraband — ನಾ ಕಳ್ಳಸಾಗಣೆ
contraception — ನಾ ಬಸಿರುತಡೆ
contract — ನಾ ಮುಗ್ತೆ (ಮುಗ್ತೆ ಕೆಲಸ), ಒಪ್ಪಂದ (ಒಪ್ಪಂದಕ್ಕೆ ಬರು; ಒಪ್ಪಂದ ಮಾಡಿಕೊಳ್ಳು), ಗುತ್ತಿಗೆ
contract — ಕ್ರಿ ಸುಕ್ಕು (ಸುಕ್ಕುಗಟ್ಟು), ಸುರುಟು, ಮುರುಟು, ಜುಣುಗು (ಜುಣುಗು ಕಿವಿ), ಮುದುಡು (ಮುದುಡಿದ ಹೂವಿನ ಎಸಳು ಗಳು), ಮುದುರು
contraction — ನಾ ಸೇಡು (ಸೇಡುಗೊಳ್ಳು - ತಣ್ಣೀರನ್ನು ಮುಟ್ಟಿ ಆಕೆಯ ಕಯ್ ಸೇಡುಗೊಂಡಿದೆ; ಸೇಡುಹಿಡಿ - ಮಳೆಯ ಹೊಡೆತದಿಂದ ಅವಳ ಕಯ್ಗಳು ಸೇಡುಹಿಡಿ ದಿದ್ದುವು)
contradict — ಕ್ರಿ ಅಲ್ಲಗಳೆ
contradiction — ನಾ ಅಡ್ಡನುಡಿ (ಎಲ್ಲ ದಕ್ಕೂ ಅವನ ಅಡ್ಡನುಡಿಯಿದ್ದೇ ಇದೆ)
contrary — ಗು ಮರು (ಮರುವಕ್ಕ, ಮರು ಮಾತು), ಮಾರು (ಮಾರೆಣಿಕೆ) ಇದಿರಿನ
contrast — ನಾ ಮಾರ್ಪು, ಗೆಂಟು (ಅವೆರಡರ ನಡುವೆ ಗೆಂಟು ತುಂಬಾ ಇದೆ)
contravene — ಕ್ರಿ 1 ಕಟ್ಟಳೆ ಮೀರು, ಕಟ್ಟಳೆ ತಪ್ಪು 2 ಒಪ್ಪದಿರು, ಎದುರಾಡು
contribution — ನಾಕೊಡುಗೆ (ನಿಮ್ಮ ಕೊಡುಗೆ ಯಾವಾಗ ಸಿಗುತ್ತದೆ?),ವಂತಿಗೆ (ಗುಡಿಗೆ ವಂತಿಗೆ ಕೊಡಬೇಕಂತೆ)
contrite — ಗು ತಪೊ್ಪಪ್ಪಿದ
contrivance — ನಾ ಚೂಟಿ (ಆತನು ಮಾಡಿ ಕೊಂಡಿರುವ ನೀರೆತ್ತುವ ಚೂಟಿ ಚನ್ನಾಗಿದೆ)
contrive — ಕ್ರಿ ಕಂಡುಹಿಡಿ, ಮಾಡಿಕೊಳ್ಳು
contriver — ನಾ ಹಂಚಿಕೆಗಾರ
control — ನಾ ಹಿಡಿತ (ಅವನ ಹಿಡಿತದಿಂದ ತಪ್ಪಿಸಿಕೊಳ್ಳಬಲ್ಲವರು ಯಾರು?), ಅಂಕೆ (ಆತ ಎಲ್ಲರನ್ನೂ ತನ್ನ ಅಂಕೆಯೊಳಗೆ ಇರಿಸಿಕೊಂಡಿದ್ದಾನೆ),ಈಲು (ಆ ನಾಲಿು ಮೇಲೆ ಅವನಿಗೆ ಈಲು ಇದೆ)
control — ಕ್ರಿ ಉಡುಕಿಸು
controversy — ನಾ ಜಗಳ, ಮಾರ್ಪಗೆತ
contumacious — ಗು ಮೊಂಡು, ಹಟಮಾರಿ
conundrum — ನಾ ಒಗಟು
convene — ಕ್ರಿ ಬರಹೇಳು, ಒಟ್ಟುಸೇರಿಸು ನಾ ಹದುಳ
convenient — ಗು ತಕ್ಕ, ಹೊಂದುವ, ಒಪ್ಪುವ
convention — ನಾ 1 ಇರುಸರಿಕೆ 2 ಒಪ್ಪಂದ, ಒಡಂಬಡಿಕೆ
converge — ಕ್ರಿ ಒಂದೆಡೆ ಸೇರು (ಹಳೆ ಕಲಿಗ ರೆಲ್ಲಒಂದೆಡೆ ಸೇರಿದ್ದಾರೆ)
conversation — ನಾ ಸೂಳು (ಸೂಳು ನುಡಿ, ಸೂಳುಮಾತು), ಒಡನುಡಿ (ಅವರೊಳಗೆ ಒಡನುಡಿ ನಡೆಯುತ್ತಿದೆ), ಕೂಡುಮಾತು
converse — ಕ್ರಿ ಮಾತನಾಡು, ಒಡನುಲಿ
convert — ಕ್ರಿ ಮಾರ್ಪಡಿಸು
convertible — ಗು ಮಾರ್ಪಡಿಸಬಲ್ಲ
convex — ಗು ಹೊರಬಾಗಿನ, ಉಬ್ಬಿದ
convex mirror — ನಾ ಉಬ್ಬುಗನ್ನಡಿ
convey — ಕ್ರಿ 1 ತಿಳಿಸು (ನಿಮ್ಮ ಅನಿಸಿಕೆ ಗಳನ್ನು ನಾನು ಅವನಿಗೆ ತಿಳಿಸಿದ್ದೇನೆ) 2 ಸಾಗಿಸು
conveying — ನಾ ಒಯ್ಯಿಕೆ
convict — ನಾ ಸೆರೆಯಾಳು, ತಪ್ಪುಗಾರ
conviction — ನಾ 1 ಗಟ್ಟಿ ನಂಬಿಕೆ (ನಿಮಗೆ ಕೊಟ್ಟದ್ದು ತಿರುಗಿ ಬಂದೀತೆಂಬ ಗಟ್ಟಿ ನಂಬಿಕೆ ಆತನಿಗಿದೆ 2 ತಪ್ಪಿತ(ನೆಂಬ) ತೀರ್ಪು
convince — ಕ್ರಿ ಮನದಟ್ಟು ಮಾಡು, ಮನ ವರಿಕೆ ಮಾಡು, ಮನಗಾಣಿಸು
convivial — ಗು ಹಬ್ಬದ, ಹಿಗ್ಗುವ
convocation — ನಾ ಕೂಟ, ಸೇರಿಕೆ
convoy — ನಾ ಕಾವಲುಪಡೆ (ತವರುಮನೆಗೆ ಹೊರಟವಳಿಗೆ ಕಾವಲುಪಡೆಯಿತ್ತು), ಬೆಂಗಾವಲು
convulsion — ನಾ ಸೆಳವು, ಸೆಟೆತ (ಸೆಟೆತ ದಿಂದ ಅವನ ಮಯ್ ಬಿಲ್ಲಿನ ಹಾಗೆ ಬಾಗಿದೆ)
cooing — ನಾ ಬಗ್ಗು, ಬಗ್ಗಣೆ (ಹಕ್ಕಿಗಳ ಬಗ್ಗಣೆ)
cook — ನಾ ಅಟ್ಟುಳಿಗ (ಮದುವೆಗೆ ಹತ್ತು ಮಂದಿ ಅಟ್ಟುಳಿಗರನ್ನು ಗೊತ್ತುಮಾಡಿ ದ್ದಾರೆ),ಅಡಬಳ
cook — ಕ್ರಿ (ಆ) ಬೇಯು (ಚೆನ್ನಾಗಿ ಬೆಂದ ಅನ್ನ) (ಮಾ) ಸಮೆ, ಅಡು (ಮನೆಯಲ್ಲಿ ಅಟ್ಟ ಅಡುಗೆ; ಅಟ್ಟಿಕ್ಕು)
cooking — ನಾಅಡುಗೆ (ಇನ್ನೂ ಆಕೆಯ ಅಡುಗೆ ಮುಗಿದಿಲ್ಲ)
cool — ಕ್ರಿ ತಣಿ, ಆರು (ನೆಲದ ಬಿಸಿ ಆರಿತು), ಕೋಡು (ಕೋಡುವ ನೀರು; ಕೋಡು ಗಟ್ಟು), ಕುಳಿರು
cool — ಗು ತಂ- (ತಂಗಾಳಿ, ತಂಗೊಳ), ತಣ್- (ತಣ್ಣೀರು, ತಣ್ಣೆಲರು, ತಣ್ಣೆಳಲು), ತಣ್ಣಗೆ (ತಣ್ಣಗಾಗು; ತಣ್ಣಗಿರು)
coolness — ನಾತಂಪು (ತಂಪುಮಾಡು; ತಂಪಿನ ಮನೆ)
co-operation — ನಾ ಒಬ್ಬುಳಿ (ಒಬ್ಬುಳಿ ಯಾಗಿ ಕೆಲಸಮಾಡು)
co-ordinate — ಕ್ರಿ ನೆಲೆಗೊಳಿಸು, ಹೊಂದಿಸು
cope — ಕ್ರಿ ಸಂಬಾಳಿಸು, ತೂಗಿಸು (ತೂಗಿಸಿ ಕೊಂಡು ಹೋಗು)
copious — ಗು ಹೇರಳ (ಅವನ ಹತ್ತಿರ ಹೇರಳ ಹಣ ಇದೆ), ತುಂಬ (ತುಂಬ ಕೊಟ್ಟಿದ್ದಾನೆ)
copper — ನಾ ಕಿಸುವೊನ್ನು, ಚಂಬು (ಚಂಬು ಕುಟಿಗ)
copper plate — ನಾ ಕಿಸುವಲಗೆ,ಚಪೊ್ಪೀಡು (ಚಪೊ್ಪೀಡಿನಲ್ಲಿ ಬರೆದ ಬರಹ)
copper vessel — ನಾಚಂಬು (ಚಂಬಿನ ಲ್ಲಿರಿಸಿದ ನೀರು), ತಂಬಿಗೆ (ಕಾಲು ತೊಳೆಯಲು ತಂಬಿಗೆಯಲ್ಲಿ ನೀರು ತಂದು ಕೊಟ್ಟರು)
copra — ನಾಕೊಬ್ಬರಿ (ಹಸಿಕೊಬ್ಬರಿ; ಒಣ ಕೊಬ್ಬರಿ; ಕೊಬ್ಬರಿ ಎಣ್ಣೆ),ಗಿಟಕು
copse — ನಾ ಕಿರುಕಾಡು, ಕುರುಚಲು ಕಾಡು, ಪೊದೆಕಾಡು,
copulate — ಕ್ರಿ ಕೇ,ಕೆಂದು
copy — ಕ್ರಿ ಎತ್ತಿಬರೆ (ಯಾರದೋ ಬರಹವನ್ನು ಎತ್ತಿಬರೆದಿದ್ದಾನೆ)
coquetry — ನಾ ಕೊನಬು (ಕೊನಬುಗಾರ್ತಿ, ಕೊನಬುತೋರು), ಬೆಡಗು (ಬೆಡಗಿನ ನಡಿಗೆ), ಒಲಪು (ಒಲಪುಗಾತಿ), ಮುರುಕು ನಾಹವಳ, ಕೆಂಗುಡಿ
cord — ನಾ ಹಗ್ಗ, ಹುರಿ
cordial — ಗು ಎದೆತುಂಬಿದ (ಎದೆತುಂಬಿದ ಬೀಳ್ಕೊಡುಗೆ)
cordon — ನಾ ಬಳಸು ಕಾವಲು
core — ನಾ ಚೇಗು (ಮರದ ಚೇಗು), ತಿರುಳು, ಹಂಬೆ (ಬಾಳೆಯ ಹಂಬೆ), ಮೊಳೆ (ಹುಣ್ಣಿನ ಮೊಳೆ)
cork — ನಾಬೆಂಡು (ಬೆಂಡು ಕಟ್ಟಿಕೊಂಡು ಈಜಲು ಕಲಿತ), ಬೆಣೆ,ಬಿರಡೆ,ಗಿಡುಕು
corn — ನಾ1 ಕಲ್ಲೊತ್ತು, ಒತ್ತುಗಂಟು 2ಕಾಳು
corn-bin — ನಾಕಳಂಜಿ,ಕೊಮ್ಮೆ
corner — ನಾ ಮೂಲೆ (ಮೂಲೆಗೆ ನೂಕು; ಮೂಲೆಗಲ್ಲು; ಮೂಲೆಗುಂಪಾಗು), ಗೋಟು, ಗೊಂಟು (ಗೊಂಟುಸೇರು), ಕಟ (ಕಟಬಾಯಿಯಲ್ಲಿ ಸುರಿಯುವ ಜೊಲ್ಲು), ಕುಣಿಕೆ (ಕಣೆಕುಣಿಕೆ)
cornerstone — ನಾ ಮೂಲೆಗಲ್ಲು
coronet — ನಾ ಇಂಡೆ (ಹೂವಿನ ಇಂಡೆ)
corpse — ನಾ ಹೆಣ (ಹೆಣ ಎತ್ತು; ಹೆಣಬೀಳು)
corpulent — ಗು ತೋರ, ಕೊಬ್ಬಿದ, ದಪ್ಪ
corpuscle — ನಾ ಕಿರುತುಣುಕು
correct — ಕ್ರಿ ಸರಿಪಡಿಸು (ತಪ್ಪನ್ನು ಸರಿಪಡಿಸ ಬೇಕು), ತಿದ್ದು
correct — ಗು ಸರಿ (ಸರಿಯಾದ ದಾರಿ, ಸರಿ ಗೊಳಿಸು), ನೇಟು (ನೇಟುಸುದ್ದಿ)
correction — ನಾತಿದ್ದಿಕೆ,ತಿದ್ದುಪಡಿ, ಸರಿ ಪಡಿಕೆ
corregendum — ನಾತಿದ್ದೋಲೆ (ಕಡತದ ಕೊನೆಯಲ್ಲೊಂದು ತಿದ್ದೋಲೆಯನ್ನೂ ಕೊಡಬೇಕಾಗಿದೆ)
correlate — ಕ್ರಿ ತೊಡರಿಸು, ನಂಟು ತೋರಿಸು
correspond — ಕ್ರಿ 1 ಓಲೆಯೋಡಿಸು, ಓಲೆ ಕಳಿಸು 2 ಹೊಂದಿಕೊಳ್ಳು
correspondence — ನಾ 1 ಹೊಂದಿಕೆ, ಒಪ್ಪಂದ 2 ಓಲೆ
correspondent — ನಾ 1 ಹೊಂದಿಗೆ 2 ಓಲೆಗ 3 ಸುದ್ದಿಗಾರ (ನಮ್ಮ ಕೂಟಕ್ಕೆ ಒಬ್ಬ ಸುದ್ದಿಗಾರನೂ ಬಂದಿದ್ದ)
corridor — ನಾಓಣಿ (ಕುಂಬಾರರ ಓಣಿ)
corrigible — ಗು ತಿದ್ದಬಲ್ಲ (ತಪ್ಪು ಮಾಡಿ ದರೂ ತಿದ್ದಬಲ್ಲ ಹುಡುಗ)
corroborate — ಕ್ರಿ ಗಟ್ಟಿಮಾಡು, ನನ್ನಿಮಾಡು, ಬೆಂಬಲಿಸು
corrode — ಕ್ರಿ 1 ಕಿಲುಬು (ಹಿತ್ತಾಳಿ ಬಟ್ಟಲಲ್ಲಿ ಮಜ್ಜಿಗೆ ಕಿಲುಬುತ್ತದೆ), ತುಕ್ಕುಹಿಡಿ 2 ಕೊರೆ (ಕೊರೆತ - ಕಡಲ ಕೊರೆತದಿಂದಾಗಿ ಹಲವು ತೆಂಗಿನ ಮರಗಳು ಕೆಳಗುರುಳಿವೆ)
corrugate — ಕ್ರಿ ಸುಕ್ಕುಗಟ್ಟು, ಮಡಿಕೆ ಬೀಳು
corrupt — ಕ್ರಿ ಲಂಚಕೊಡು, ಅಡ್ಡಿಕ್ಕು
corrupt — ಗು ಲಂಚ ತಿನ್ನುವ, ಸಯ್ಯಗ, ಅಡ ನಾಡಿ, ನಡತೆಗೆಟ್ಟ
corruption — ನಾ 1 ಲಂಚ 2 ಕೊಳೆತ, ಕೆಡುಕು
cortege — ನಾ 1 ಮೆರವಣಿಗೆ 2 ತೊತ್ತಿಗರ ತಂಡ
cosmetics — ನಾ ಅಂದಗೆಯ್ಯುಗೆ
cost — ನಾ ಬೆಲೆ (ಕೊಂಡ ಬೆಲೆ; ಅತ್ತೆ ಒಡೆದ ಮಡಿಕೆಗೆ ಬೆಲೆ ಇಲ್ಲ)
cost — ಕ್ರಿ ಬೆಲೆಬೀಳು,ತಗಲು (ಆ ಕೆಲಸಕ್ಕೆ ಅಯ್ನೂರು ರುಪಾಯಿ ತಗಲುತ್ತದೆ)
costly — ಗು ಬೆಲೆಬಾಳುವ (ಆಕೆಗೆ ತುಂಬಾ ಬೆಲೆಬಾಳುವ ಸೀರೆ ತಂದಿದ್ದ)
costume — ನಾ ಉಡುಪು ಗು ಹದುಳದ, ಒಳ್ಪಿನ
cot — ನಾ 1 ಮಂಚ 2 ಬದೆ, ಚಾಟು
cote — ನಾ ಗುಡಿಸಲು, ಕಿರುಹಟ್ಟಿ
co-tenancy — ನಾಕೂಡೊಕ್ಕಲು
coterie — ನಾ ಕೆಳೆಕೂಟ, ಒಕ್ಕೂಟ
cottage — ನಾ ಗುಡಿಸಲು (ಹೊಳೆಯ ಬದಿ ಯಲ್ಲಿ ಒಂದು ಗುಡಿಸಲು ಕಟ್ಟಿ ತನ್ನ ಬರವಣಿಗೆಯನ್ನು ನಡೆಸುತ್ತಿದ್ದ)
cotton — ನಾ ಅರಳೆ (ಹಾಸಿಗೆಯ ಅರಳೆ; ಅರಳೆಯ ಗಿಡ),ಹತ್ತಿ (ಹತ್ತಿಕಾಳು; ಹತ್ತಿಗಿಡ)
cotton — ಕ್ರಿ 1 ಕೆಳೆಗೊಳ್ಳು, ಒಪ್ಪು 2 ತಿಳಿದಿರು, ಎಚ್ಚತ್ತುಗೊಳ್ಳು
cotyledon — ನಾ ಬಿತ್ತಿನ ಎಲೆ
couch — ನಾ ಹೊರಸು (ಮಗುವನ್ನು ಹೊರಸಿನ ಮೇಲೆ ಮಲಗಿಸಿದಳು)
couch — ಕ್ರಿ 1 ಸೊಲ್ಲಿಡು 2 ಅಡಗಿರು
cough — ಕ್ರಿ ಕೆಮ್ಮು (ಕೆಮ್ಮಿ ಗಂಟಲು ಸರಿಮಾಡಿಕೊಂಡ; ಕೆಮ್ಮಲು)
counsel — ಕ್ರಿ ಅರಿವು ಕೊಡು, ತಿಳಿಹೇಳು (ಕೆಲಸದ ಕುರಿತು ಆತ ತಿಳಿಹೇಳುತ್ತಿದ್ದಾನೆ)
count — ಕ್ರಿ ಕಣಕಿಸು, ಎಣಿಸು (ಆಕಳು ಕಾಯುವ ಹುಡುಗನಿಗೆ ಅವನ್ನು ಎಣಿಸಲು ಬರುವುದಿಲ್ಲ), ಎಣ್ಣು
countdown — ನಾಇಳಿಯುಣಿಕೆ
countenance — ನಾ 1 ಮೋರೆ, ಮೋರೆಯ ನುಡಿತ 2 ಒಪ್ಪಿಗೆ, ಬೆಂಬಲ
counter — ನಾಮುಂಗಟ್ಟೆ (ಮುಂಗಟ್ಟೆಯಲ್ಲಿ ಕುಳಿತು ಹಣ ಎಣಿಸುತ್ತಿದ್ದ)
counter — ಕ್ರಿ ಎದುರಿಸು, ಅಡ್ಡಿನುಡಿ, ಅಲ್ಲ ಗಳೆ, ಎಣೆಯೊಡ್ಡು
counteract — ಕ್ರಿ ಮಲೆ, ಮಾರು
counterfeit money — ನಾ ಕಳ್ಳಹಣ (ಕಳ್ಳ ಹಣ ಕೊಡಲು ಹೋಗಿ ಸಿಕ್ಕಿಬಿದ್ದ), ಸುಳ್ಳು ಹಣ, ಪುಸಿವಣ
countermand — ಕ್ರಿ ಮಾರ್ಬೆಸ (ಹಿಂದಿನವರ ಸೆಲವನ್ನು ತಿದ್ದುವ ಮಾರ್ಬೆಸವನ್ನು ಹೊರಡಿ ಸಿದ್ದಾರೆ)
countersign — ಕ್ರಿ ಒಪ್ಪಿಗೆಯ ಒಪ್ಪಹಾಕು
counting — ನಾ ಎಣಿಕೆ (ಎಣಿಕೆಗೆಡು; ಎಣಿಕೆ ತಪ್ಪು; ಎಣಿಕೆ ಹಾಕು - ಕುರಿಗಳ ಎಣಿಕೆ ಹಾಕುತ್ತಿದ್ದ)
country — ನಾ ನಾಡು (ಕನ್ನಡ ನಾಡು; ನಾಡ ಗುಡಿ; ನಾಡತಕ್ಕ; ನಾಡನುಡಿ; ನಾಡಹಬ್ಬ; ನಾಡಹಾಡು), ಪಾಳೆಯ (ಪಾಳೆಯಗಾರ)
county — ನಾ ಕಂಪಣ
coup — ನಾ ಹೊಡೆತ, ತಾಗಿಕೆ
couple — ಗುಎಡ (ಎಡವಕ್ಕಿ),ಎಣೆ (ಎಣೆ ಕಟ್ಟು; ಎಣೆಗುಬ್ಬಿ), ಗೆಡೆ (ಗೆಡೆವಕ್ಕಿ)
coupling — ನಾ ಜೋಡಿಕೆ
courage — ನಾ ಹುರಿ (ಹುರಿದುಂಬು; ಹುರಿ ಮಾಡು; ಹುರಿಯುೀರು), ಪನ್ನತಿಕೆ, ಮೊನೆ (ಮೊನೆಗಾರ), ಎದೆಗಾರಿಕೆ (ಅವನೆದುರು ನಿಂತು ಮಾತನಾಡುವ ಎದೆಗಾರಿಕೆ ಇವನಿ ಗಿಲ್ಲ), ಹೊರೆ (ಹೊರೆಕುಂದು, ಹೊರೆ ಯುೀರು), ಕಡ್ಡ, ಕೆಚ್ಚು (ಕೆಚ್ಚೆದೆ; ಕೆಚ್ಚು ಗಟ್ಟು), ಗುಂಡಿಗೆ (ಗಟ್ಟಿ ಗುಂಡಿಗೆಯವನು), ಗುಂಡೆ, ಒಟ್ಟಜೆ
courageous — ನಾ ಎದೆಗಾರ (ಎದೆಗಾರ ನಾಗಿ ಮುಂದೆ ನಡೆ), ಮೊನೆಗಾರ
courier — ನಾ ಒಯ್ಯುಗ
course — ನಾ 1 ತೆರ (ಎಲ್ಲಾ ತೆರದಲ್ಲೂ ಹೇಳಿನೋಡಿದೆ), ಪಾಯ (ತರುವಾಯ) 2 ಹಾದಿ (ನೀರು ಹರಿಯುವ ಹಾದಿಯಲ್ಲೀ ಮುಂದೆ ಹೋಗಬೇಕು)
court — ನಾ 1 ತೊಟ್ಟಿ (ಎಲ್ಲರೂ ನಡುತೊಟ್ಟಿ ಯಲ್ಲಿ ಸೇರಿದ್ದರು) 2 ಮೊರೆಮನೆ (ಮೊರೆ ಮನೆಯಲ್ಲಿ ನಮ್ಮದೊಂದು ಕಟ್ಟಲೆ ನಡೆ ಯುತ್ತಿದೆ)
courteous — ಗು ಕನಿಕರವುಳ್ಳ, ಒದಗುವ, ಹೊಲಬನರಿತ
courtier — ನಾ ಹೊಗಳುಗ ಗು ಅಗ್ಗಳೆಯುಳ್ಳ
cove — ನಾಒಳಬಾಗು (ಹಡಗನ್ನು ಕಡಲಿನ ಒಳಬಾಗಿಗೆ ತರಬೇಕಾಗಿದೆ)
covenant — ನಾ ಒಪ್ಪಂದ (ಅವರೊಳಗೆ ಇನ್ನೂ ಒಪ್ಪಂದ ಆಗಿಲ್ಲ)
cover — ನಾ ಗವಸಣಿಕೆ (ಬಿಲ್ಲಿನ ಗವಸಣಿಕೆ; ಗಮಸಣಿಕೆ ತೊಡಿಸು), ಹುದುಗ (ಹುದು ಗಲು), ಹೊದಿಕೆ (ಮೇಲುಹೊದಿಕೆ; ಮನೆಯ ಹೊದಿಕೆ), ಕುಂಟರಿಕೆ (ಆನೆಯ ಮೇಲೆ ಹಾಕಿದ ಕುಂಟರಿಕೆ), ರಟ್ಟು (ರಟ್ಟು ಹಾಕಿದ ಹೊತ್ತಗೆ)
cover — ಕ್ರಿ ಹುದಿ (ಉಪ್ಪಿನಲ್ಲಿ ಹುದಿದಿರುವ ಮಾವಿನಕಾಯಿಗಳು), ಮುಚ್ಚು (ಬೆಕ್ಕಿನ ಉಗುರು ಮುಚ್ಚಿಕೊಂಡಿದೆ), ಕವಿ (ಮೋಡ ಕವಿದ ಬಾನು), ಮುಕರು (ಜೇನುನೊಣ ಗಳು ಮುಕರಿಕೊಂಡಿದ್ದುವು), ಮುಸುಕು (ಮೋಡ ಮುಸುಕಿದ ಬಾನು), ಹೊದೆ (ಕಾವಿಯ ಹೊದೆದು ಹೋದಾತ), ಪುದೆ, ಹೊದ್ದುಕೊಳ್ಳು, ಕುವರು (ನೆಲವೆಲ್ಲ ಕರಿಯಿಂದ ಕುವರಿತ್ತು), ಹೊಚ್ಚು (ಬಳ್ಳಿಗಳು ಹೊಚ್ಚಿದ ಮನೆ)
covering — ನಾಮುಚ್ಚಿಗೆ (ಮನೆಯ ಮುಚ್ಚಿಗೆ)
coverlet — ನಾ ಹಾಸಿಗೆ ಬಟ್ಟೆ
covert — ಗು ಗುಟ್ಟಾದ, ಅಡಗಿಸಿಟ್ಟ
covet — ಕ್ರಿ ಹಂಬಲಿಸು, ಬಯಸು
cow (uncalved) — ನಾ ಕಡಸು
cow — ನಾ ಆವು (ಆವಿಗೆ ಕರು ಬಿಡಬೇಕು),ಆಕಳು, ತುರು (ತುರುಮಂದೆ; ತುರುಮಾಳ; ತುರುಗಾಡು; ತುರುಹಟ್ಟಿ, ತುರುಕರು)
coward — ನಾ ಪುಕ್ಕ (ಪುಕ್ಕತನ; ಪುಕ್ಕಲು; ಪುಕ್ಕು), ಪೋಟ (ಕಾಳಗದಿಂದ ಓಡಿಬರುವ ಪೋಟ), ಅಂಜುಬುರುಕ, ಅಂಜುಗುಳಿ, ಹಂದೆ (ಅರಸನ ಮಗನಾದರೂ ಹಂದೆ ಯಾಗಿದ್ದಾನೆ; ಹಂದಿಗ),ಹೇಡಿ (ಹೇಡಿತನ)
cowdung — ನಾ ಸಗಣಿ (ಮೋರೆಗೆಲ್ಲ ಆತ ಸಗಣಿಯ ಸುಟ್ಟ ಬೂದಿ ಹಚ್ಚಿಕೊಂಡ), ಅಡೆ (ಅಡೆಕುಣಿ, ಅಡೆತಿಪ್ಪೆ), ಏರು, ಎರುಬು (ಎರುಬಿನ ಹುಳ),ಹೆಂಡೆ (ನಿಮ್ಮ ಮನೆಯ ಮುಂದೆ ಒಂದಿಷ್ಟು ಹೆಂಡೆ ಬಿದ್ದಿದೆ)
cowdung (dried) — ನಾ ಮೂಡಲು, ಬೆರಣಿ (ಬೆರಣಿಯ ಬೆಂಕಿ),ಕುರುಳು (ಕುರುಳಿನ ಬೆಂಕಿ; ಒಲೆ ಮಗ್ಗುಲಲ್ಲಿರಿಸಿದ ಕುರುಳು)
cowdung (fresh) — ನಾ ತೊಪ್ಪೆ (ತೊಪ್ಪೆ ತಟ್ಟು; ತೊಪ್ಪೆ ಹಾಕು; ದಾರಿಯಲ್ಲಿ ಹಸು ತೊಪ್ಪೆ ಹಾಕಿದೆ)
cower — ಕ್ರಿ ಬಗ್ಗಿ ನಿಲ್ಲು (ಅವರೆದುರು ಆತ ಯಾವಾಗಲೂ ಹೆದರಿಕೆಲಿುಂದ ಬಗ್ಗಿ ನಿಲ್ಲು ತ್ತಾನೆ), ಮುದುಕು (ಹೆದರಿ ಮುದುಕು)
cowherd — ನಾ ತುರುಕಾರ, ತುರುಗಾಹಿ, ಹಟ್ಟಿಕಾರ
cowpen — ನಾ ಹಟ್ಟಿ (ತುರುಹಟ್ಟಿ;ಹಟ್ಟಿ ಕೊಟ್ಟಗೆ), ದೊಡ್ಡಿ (ದೊಡ್ಡಿಯಲ್ಲಿ ಕೂಡಿ ಹಾಕು)
cowry — ನಾ ಚಿಪ್ಪು
coxcomb — ನಾ ಮುಟ್ಟಾಳ, ತಿಳಿಗೇಡಿ
coy — ಗು ನಾಚುವ
cozen — ಕ್ರಿ ಆಳವಾಡು, ಉಕ್ಕೆವಿಸು
crab — ನಾಏಡಿ, ಎಸಡಿ,ನಳ್ಳಿ
crack — ನಾಇಂಡೆ,ಬಿರುಕು (ಗೋಡೆಯ ಮೇಲೆ ಬಿರುಕು ಕಾಣಿಸುತ್ತದೆ, ಇಡುಪು, ಬೀಟೆ (ಬೀಟೆಬೀಳು; ಬೀಟೆ ಬಿರಿ), ಬೀಡೆ (ಬೀಡೆಬಿರಿ), ಬೀಡು (ಬೀಡುಬಿಡು; ಹಲಿಗೆ ಬೀಡುಬಿಟ್ಟಿದೆ), ಆಣೆ (ಆಣೆಬಿಡು; ಆಣಿಸು; ಹಸಿಗಡಿಗೆ ಬಿಸಿಲಿನಲ್ಲಿ ಇಟ್ಟರೆ ಆಣಿಸು ತ್ತದೆ), ಓಟೆ (ಗಡಿಗೆಗೆ ಓಟೆಬಿದ್ದಿದೆ)
crack — ಕ್ರಿ ಬಿರಿ (ಎದೆಬಿರಿ; ದಾಳಿಂಬ ಬಿರಿ ಬಿಟ್ಟಿದೆ), ಹಿಳಿ (ಬಿಸಿಲಿಗೆ ಹಲಿಗೆ ಹಿಳ್ಳನೆ ಹಿಳಿಲಿುತು)
cracked — ಗು ಒಡಕು (ಒಡಕುದೋಣಿ; ಒಡಕು ಹರವಿ)
cracking (of fingers) — ನಾ ನಟಿಕೆ (ಆತ ಕೆಲಸವಿಲ್ಲದೆ ಬೆರಳಿನ ನಟಿಕೆ ತೆಗೆಯುತ್ತ ಕುಳಿತಿದ್ದಾನೆ; ನಟಿಕೆ ಮುರಿ)
cradle — ನಾ ತೊಟ್ಟಿಲು (ತೊಟ್ಟಿಲು ತೂಗು; ತೊಟ್ಟಿಲ ಕೂಸು; ತೊಟ್ಟಿಲಿಗೆ ಹಾಕು)
craft — ನಾ 1 ಚೆಚ್ಚರಿಕೆಯ ಕೆಲಸ, ಜಾಣ್ಮೆಯ ಕೆಲಸ, ಚುರುಕಿನ ಕೆಲಸ 2 ಹಡಗು
craftiness — ನಾ 1 ಆಳಿ (ಆಳಿಗೊಳ್ಳು; ಆಳಿಗೊಳಿಸುವವನು) 2 ಚೆಚ್ಚರಿಕೆ
crafty — ಗು ಅಜ್ಜ (ಅಜ್ಜಗಳ್ಳ)
crag — ನಾ ಸರಿಗಲ್ಲು ಕ್ರಿ (ಆ) ಅಡಸು (ಮೂಗಿನಲ್ಲಿ ಸಿಂಬಳ ಅಡಸಿಕೊಂಡಿದೆ) (ಮಾ) ಅದುಮು (ಚನ್ನಾಗಿ ಅದುಮಿ ತುಂಬಿಸಬೇಕು), ಅದಕು, ತುರುಕು (ತೂತಿನೊಳಗೆ ಹತ್ತಿ ತುರುಕಿದ), ಒತ್ತಿತುಂಬು
cramp — ನಾಸೆಡೆತ, ಸೆಳೆತ
cramp — ಕ್ರಿ ಕೊಕ್ಕೆಕಟ್ಟು (ಚಳಿಗೆ ಕಾಲು ಕೊಕ್ಕೆಕಟ್ಟಿದೆ)
crane — ನಾ1 ಕೊಕ್ಕರೆ, ಕುಕ್ಕು 2 ಎತ್ತುಗ (ಗಾಡಿಯನ್ನು ಎತ್ತುಗದಲ್ಲಿ ಎತ್ತಿ ಹಡಗಿ ನಲ್ಲಿ ಹಾಕಿದರು)
crane — ಕ್ರಿ ನಿಲುಕಿಸು (ಕುತ್ತಿಗೆ ನಿಲುಕಿಸಿ ನೋಡುತ್ತಿದ್ದಾನೆ)
cranium — ನಾ ತಲೆಬುರುಡೆ, ಎಲುದಲೆ
crank — ನಾ 1 ಅರೆಹುಚ್ಚ 2 ತಿರುಕಾವು
crash — ನಾ 1 ಕುಸಿತ 2 ದಪ್ಪ ಬಟ್ಟೆ, ಒರಟು ಬಟ್ಟೆ
crash — ಕ್ರಿ ಕುಸಿ (ಕುಸಿದುಬೀಳು)
crass — ನಾ ಪೆದ್ದು, ಮಂಕು, ಮುಟ್ಟಾಳ, ಹೆಡ್ಡ
crate — ನಾ ಚಟ್ಟ (ಕಡತಗಳನ್ನೆಲ್ಲ ಒಂದು ಚಟ್ಟದಲ್ಲಿ ತುಂಬಿಸಿ ಕಳಿಸಿದ್ದಾರೆ), ಅಡೆ ಪೆಟ್ಟಿಗೆ
crater — ನಾ 1 ಉರಿಮಲೆಯ ಬಾಯಿ 2 ಗುಂಡಿ
cravat — ನಾ ಕೊರಳ ಪಟ್ಟಿ
crave — ಕ್ರಿ 1 ಹಂಬಲಿಸು (ಹಸಿವೆಯಿಂದ ಹಂಬಲಿಸುತ್ತ ಕುಳಿತಿದ್ದ; ಹಂಬಲಿಕೆ) 2 ಬೇಡು
craven — ನಾ ದೊಡ್ಡ ಹೇಡಿ, ಅಂಜುಬುರುಕ
craving — ನಾ ಅಬ್ಬರ (ಆಕೆಗೆ ಸಿಹಿತಿಂಡಿಯ ಅಬ್ಬರವಿದೆ)
craw — ನಾ ನೆರವಿ, ಗುಂಪು (ಗುಂಪು ಕಟ್ಟು - ಹಕ್ಕಿಗಳು ಗುಂಪುಕಟ್ಟಿ ಬಂದಿವೆ)
crawl — ಕ್ರಿ ಅಂಬೆಗಾಲಿಡು, ಅಂಬಳಿಕ್ಕು, ತೆವಳು (ತೆವಳಿ ಬರುವ ಮಗು)
crayon — ನಾ ಬಣ್ಣದ ಸುಣ್ಣಕಡ್ಡಿ
craze — ನಾಹುಚ್ಚು, ಗೀಳು
crazy — ಗು 1 ಒಡೆದ, ಬಿರುಕುಬಿಟ್ಟ 2 ಹುಚ್ಚುಹಿಡಿದ
creak — ಕ್ರಿ ಕಿರುಗುಟ್ಟು (ಕಿರುಗುಟ್ಟುವ ಗಾಲಿ)
cream — ನಾ 1 ಕೆನೆ (ಕೆನೆ ಮೊಸರು; ಕೆನೆ ಕಟ್ಟು; ಕೆನೆಹಾಲು), ನಿಡಿ (ಮೊಸರ ಮೇಲಿನ ನಿಡಿ), ಹದಿ 2 ಅಣ್ಣೆತುಂಡು
crease — ನಾ ನಿರಿ, ನಿರಿಗೆ, ಮಡಿಕೆ
create — ಕ್ರಿ ಹುಟ್ಟಿಸು, ಉಂಟುಮಾಡು
creative — ಗು ಉಂಟುಮಾಡಬಲ್ಲ
creator — ನಾ ಹುಟ್ಟಿಸಿದವನು, ಕಡವರು, ದೇವರು
creature — ನಾ ಉಸಿರುಗ
credentials — ನಾ ಅರಿವೋಲೆ
credible — ಗು ನಂಬತಕ್ಕ, ನಂಬಿಕೆಯ, ಸಯ್ದ
credit — ನಾ 1 ಸಾಲ (ಸಾಲಕೊಳ್ಳು; ಸಾಲಕ್ಕೆ ಕೊನೆಯಿಲ್ಲ; ಸಾಲಮಾಡಿದವ ತೀರಿಸಿ ಸಾಯಲಾರ), ಕಡ (ಕಯ್ಗಡ; ಮುಂಗಡ; ಕಡಬಡ್ಡಿ) 2 ನಂಬಿಕೆ 3 ಒಳ್ಳೆನಡತೆ
creditable — ಗು ಹೊಗಳತಕ್ಕ
creditor — ನಾ ಸಾಲಗಾರ, ಸಾಲಿಗ (ಮನೆ ಯೆದುರು ಸಾಲಿಗ ಬಂದು ಕುಳಿತಿದ್ದಾನೆ), ಸಾಲವಣಿಗ
credulous — ಗು ಯಾರನ್ನೂ ನಂಬುವ, ಎಲ್ಲ ವನ್ನೂ ನಂಬುವ
creed — ನಾ ನಂಬಿಕೆಯ ನುಡಿ
creek — ನಾ ತೋಡು, ಹಳ್ಳ ಕ್ರಿ ತೆವಳು (ಮಗು ತೆವಳುತ್ತಾ ಬರುತ್ತಿದೆ; ಎಳೆಯ ಮಕ್ಕಳ ತೆವಳಾಟ)
creep in — ಕ್ರಿ ನುಸುಳು (ಅಷ್ಟು ಚಿಕ್ಕ ತೂತಿ ನೊಳಗೆ ಅದು ನುಸುಳಿದ್ದು ಹೇಗೆ?), ನುಗ್ಗು (ಆಕಳು ಬೇಲಿ ನುಗ್ಗಿತು), ನೊಳೆ
creeper — ನಾಬೀಳು,ಹಂಬು (ಹಂಬುಕಳ್ಳಿ; ಹಂಬುಗರಿಕೆ)
cremate — ಕ್ರಿ ಹೆಣಸುಡು
cremation ground — ನಾ ಸೊಡಲೆ, ಸುಡು ಗಾಡು
crescent — ನಾ ಹೆರೆ (ಆವತ್ತು ಇರುಳು ಹೆರೆಯ ಬೆಳಕಿತ್ತು; ಹೆರೆಕಾಣು)
crest — ನಾಕೊಟ್ಟು (ನವಿಲಿನ ಕೊಟ್ಟು)
crevice — ನಾ ಬಿರುಕು, ಕೊರಕಲು (ಬೀಗದ ಕಯ್ ಕೊರಕಲಿನೊಳಗೆ ಬಿದ್ದಿದೆ)
crew — ನಾ ತಂಡ (ದಾರಿ ಸರಿಮಾಡಲು ಒಂದು ತಂಡ ಬಂದಿದೆ)
crewel — ನಾ ಅಣ್ಣೆನೂಲು
crib — ನಾ ತೊಟ್ಟಿಲು 2 ಹಟ್ಟಿ, ತೀನಿತೊಟ್ಟಿ 3 ಗುಡಿಸಲು
crick — ನಾ ಕುತ್ತಿಗೆಸೆಡೆತ
cricket — ನಾಚಿಮ್ಮುಂಡಿ (ಚಿಮ್ಮುಂಡಿ ಹುಳ; ಚಿಮ್ಮುಂಡಿಯ ಗದ್ದಲ)
crier — ನಾ ಕೂಗುಗ (ಆತನಿಗೆ ಕೂಗುಗನ ಕೆಲಸ)
crime — ನಾಸೆರಗು (ಸೆರಗು ಮಾಡಿ ಓಡಿ ಹೋದ)
criminal — ನಾ ಸೆರಗ
crimp — ಕ್ರಿ ನೆರಿಗೆಬರಿಸು, ಸುಕ್ಕುಬರಿಸು
crimson — ಗು ಕಡುಕೆಂಪು
cringe — ಕ್ರಿ ಅಂಜಿನಡುಗು, ತಗ್ಗುಬಗ್ಗು
crinkle — ಕ್ರಿ ಸುಕ್ಕುಗಟ್ಟು
crinoline — ನಾ ಪೆಡಸು ಬಟ್ಟೆ
cripple — ನಾ ಹೆಳವ (ಕಯ್ಯಿಲ್ಲದ ಹೆಳವ; ಹೆಳವಿ; ಹೆಳವುಗೊಳ್ಳು),ಮುರುಕ (ಕಾಲ್ಮುರುಕ; ಕಯ್ಮುರುಕ)
crisis — ನಾ ತರಿಸಲಾಗುವ ಹೊತ್ತು
crisp — ಗು ಉದುರು (ಉದುರು ರೊಟ್ಟಿ), ಕಟಕು (ಕಟಕು ಹಪ್ಪಳ), ಗರಗು (ಗರಗಾ ಗಿರುವ ಹೊಸ ಬೆಲ್ಲ), ಗರಿಮುರಿ
criterion — ನಾ ಒರೆಗಲ್ಲು
criticize — ಕ್ರಿ 1 ತಪ್ಪು ತೋರಿಸು 2 ಕಣ್ಣರಸು, ಒರೆದುನೋಡು 3 ತೆಗಳು
croak — ಕ್ರಿ ಅರಚು (ಕಪ್ಪೆಯ ಹಾಗೆ ಅರಚು), ಗೊಣಗು
crocodile — ನಾ ಮೊಸಳೆ (ಮೊಸಳೆ ಮಡು)
croft — ನಾ ಕಿರುತೋಟ
crone — ನಾ ಹಣ್ಣುಹಣ್ಣು ಮುದುಕ
crony — ನಾ ಕಟ್ಟಳವಿಗ
crook — ನಾ 1 ತಿರುವು 2 ಬಾಗಿದ ಕೋಲು 3 ಕಳ್ಳ, ಮೋಸಗಾರ
crooked — ಗು ಅಟ್ಟೆ (ಅಟ್ಟೆಗಾಲು; ಅಟ್ಟೆ ಕೋಲು), ಉರುವು (ಉರುವು ಮುಸುಡು), ಉರುಗು (ಉರುಗು ಗದ್ದೆ; ಉರುಗು ಗೋಣು), ಎಡವಟ್ಟು (ಎಡವಟ್ಟು ದಾರಿ), ಕೊಂಕು (ಕೊಂಕುನುಡಿ; ಕೊಂಕುನಗೆ), ಕೊಕ್ಕೆ (ಕೊಕ್ಕೆನುಡಿ; ಕೊಕ್ಕೆಮೂಗು), ಕೊಗ್ಗ (ಕೊಗ್ಗನುಡಿ), ಕೊಂಗು (ಕೊಂಗಾಟ), ಕೂಚಿ, ಕೋಚು (ಕೋಚು ದಾರಿ), ಕಡು (ಕಡು ಬಿಲ್ಲು), ಕೋರೆ (ಓರೆಕೋರೆ; ಕೋರೆನೋಟ), ಕುಡು (ಕುಡುಗುರುಳು, ಕುಡುಗೋಲು; ಕುಡುಹುಬ್ಬು), ಡೊಂಕು (ಡೊಂಕು ಬಾಲ; ಅಂಕುಡೊಂಕು - ಅಂಕು ಡೊಂಕಾದ ಕೋಲು), ಸೊಟ್ಟ (ಸೊಟ್ಟ ಕಾಲು, ಸೊಟ್ಟ ಗೆರೆ), ಸೊತ್ತು, ಚೊತ್ತು (ಚೊತ್ತು ಕಾಲು), ಚೊಟ್ಟು (ಚೊಟ್ಟು ಕಾಲು), ಸೊಟ್ಟಗೆ (ಆಕೆ ಹೂ ಮುಡಿದದ್ದು ಸೊಟ್ಟಗಾಗಿದೆ)
crookedness — ನಾ ಬಿಂಕು (ಆತನ ಬಿಂಕು ಹೆಚ್ಚಾಗಿದೆ) ನಾ ಪಯಿರು (ಮಳೆಯಿಲ್ಲದೆ ಪಯಿರೆಲ್ಲ ಒಣಗಿಹೋಗಿದೆ), ಬೆಳೆ (ಹತ್ತಿ ಬೆಳೆ; ಬೆಳೆಮಾಡು; ಬೆಳೆಕೊಯ್ಯು), ಕೆೈ (ಉದ್ದಿನ ಕೆೈ)
cropper — ನಾ ಬೀಳುಹ, ಸೋಲು
cross — ನಾ ಕಲಸುತಳಿ
cross — ಕ್ರಿ ಹಾಯು (ದೋಣಿಯಿಂದ ಹೊಳೆ ಹಾದು ಆಚೆ ಕಡೆ ಮುಟ್ಟಿದ; ಹಾಯ್ಗಡ; ಹಾದುಹೋಗು), ಕಡೆ (ಹೊಳೆಯನ್ನು ಕಡೆ), ದಾಟು (ಹಳ್ಳ ದಾಟು)
crossbar — ನಾ ಅಡ್ಡಗೆರೆ, ಅಡ್ಡಕಂಬಿ
crossbeam — ನಾ ಅಡ್ಡಹೆಟ್ಟಿಗೆ
cross-eye — ನಾ ಕೋಸುಕಣ್ಣು
crossing — ನಾ ದಾಟುವ ಜಾಗ, ಕಡವು
cross-road — ನಾ ಅಡ್ಡಹಾದಿ (ಈ ದಾರಿ ಯಾಗಿ ತುಸು ದೂರ ಹೋಗಿ ಬಲಕ್ಕಿರುವ ಅಡ್ಡಹಾದಿ ಹಿಡಿಯಬೇಕು
cross-road — ನಾ ಕವಲು ದಾರಿ
cross-section — ನಾಸೀಳುನೋಟ
cross-stitch — ನಾ ಅಡ್ಡಹೊಲಿಗೆ
crossword (puzzle) — ನಾ ನುಡಿವತ್ತು
crotch — ನಾ ತುದಿನೆಡಿಗೆ
crouch — ಕ್ರಿ ಕುನಿದಿರು (ನಾಲಿು ಮೇಲಕ್ಕೆ ಹಾರಲು ಕುನಿದಿತ್ತು), ತಗ್ಗಿಬಗ್ಗಿ ನಿಲ್ಲು
croup — ನಾ ಗೂರಲು ಕೆಮ್ಮು
crow — ನಾ ಕಾಗೆ
crowbar — ನಾ ಹಾರೆ
crowd — ನಾ ಸಂದಣಿ (ಸಂದಣಿಸು; ಸಂದಣಿ ಗೊಳ್ಳು), ಇಟ್ಟಣ, ಇಟ್ಟಳ, ಗುಂಪು (ಗುಂಪುಕೂಡು; ಗುಂಪುಕಟ್ಟು; ಗುಂಪು ಸೇರು), ಗುಂಡು (ಹುಡುಗರ ಗುಂಡು), ತಿಂತಿಣಿ (ತಿಂತಿಣಿಗೊಳ್ಳು; ತಿಂತಿಣಿಸು), ದೊಂದಣಿ, ನೆರವಿ (ನೆರವಿಗ; ನೆರವಣಿಗೆ), ಪುದುವು, ಮಲ್ಲಳಿ (ಮಲ್ಲಳಿಗೊಳ್ಳು), ಅಟ್ಟುಳಿ, ಇರುಬೆ (ಮದುವೆಮನೆಯ ಇರುಬೆ), ಗೊಂದಳ (ಹಬ್ಬದ ಗೊಂದಳ), ತುರುಗ, ದಟ್ಟು (ದಾರಿಯಲ್ಲೆಲ್ಲ ಓಟಗಾರರ ದಟ್ಟು;>ದಟ್ಟಣಿಸು; ದಟ್ಟಣೆ), ಮೊಗ್ಗರ
crowd — ಕ್ರಿ ಇಟ್ಟಣಿಸು (ಇಟ್ಟಣಿಸಿದ ಹೆಂಗಸರು), ಇಡಿ (ನೀರಾನೆಗಳು ಇಡಿವ ಎಡೆ; ಇಡಿಕಿರಿ), ಕಿಕ್ಕಿರಿ (ಎಲ್ಲರೂ ಒಂದೇ ಕಡೆ ಕಿಕ್ಕಿರಿದಿದ್ದರು), ತುಕ್ಕು (ತುಕ್ಕುವ ಎಳೆದುಂಬಿಗಳ ಬಳಗ), ತಿಣಿ (ತಿಣುಕು; ತಿಣುಕಾಡು), ತಿಂತಿಣಿಸು, ಹಿಂಡುಗೂಡು
crown — ನಾ 1 ನೆತ್ತಿ (ನೆತ್ತಿಗೇರು, ನೆತ್ತಿ ಯಲ್ಲಿ ಹೊರು) 2 ಮುದಿಪು (ಇವತ್ತು ಗೆದ್ದಿರುವುದು ಆತನಿಗೊಂದು ಮುದಿಪು), ಅಡ್ಡಿ
crucial — ಗು ಮಲ್ಲ, ತರಿಸಲಾದ
crucible — ನಾಕೋವೆ (ಕೋವೆಯಲ್ಲಿ ಕರಗಿಸಿದ ಬೆಳ್ಳಿ)
crude — ಗು ಒರಟು (ಒರಟು ಬಟ್ಟೆ)
cruel — ಗು ಮರುಕವಿಲ್ಲದ, ನೋಯಿಸುವ
crumb — ನಾ ಅವಡು, ನುಚ್ಚು
crumble — ಕ್ರಿ ಮುದುಡು, ಮುದುರು, ಇಡಿ (ಮುಟ್ಟಿದರೆ ಇಡಿಯುವ ಗೋಡೆಗಳು)
crumple — ಕ್ರಿ 1 ನೆರಿಗೆ ಬೀಳು 2 ಮುರಿದು ಬೀಳು, ಕುಸಿ
crunch — ಕ್ರಿ ಜಗಿ (ಅವನು ಜಗಿಯುವುದು ಇಲ್ಲಿವರೆಗೆ ಕೇಳಿಸುತ್ತಿದೆ), ಅಗಿ
cruse — ನಾ ಮಣ್ಣಿನ ಮಡಿಕೆ
crush — ನಾನೂಕುನುಗ್ಗಲು (ಈ ನೂಕು ನುಗ್ಗಲಿನಲ್ಲಿ ಹೋಗುವುದು ಹೇಗೆ?) ಕ್ರಿ (ಆ) ನುರಿ (ನುರಿದ ಕೊರಡು; ನುರುಗು), ನುಗ್ಗು (ನುಗ್ಗೊತ್ತು), ನಗ್ಗು, ನಜುಗು (ನಜುಗಿದ ಹಣ್ಣುಗಳು) (ಮಾ) ಸದೆ (ಸದೆಬಡಿ), ಕಿವುಚು (ಕಿವುಚು ರೊಟ್ಟಿ), ಬಗ್ಗುಬಡಿ, ಹೊಸೆ (ಹೂವನ್ನು ಹೊಸೆದು ಹಾಕಿದ), ಚಚ್ಚು (ಕೋಪದಿಂದ ಮಗುವನ್ನು ಚಚ್ಚಿದಳು; ಚಚ್ಚುಮಳೆ), ಜಜ್ಜು (ಜಜ್ಜಿ ಹಾಕು; ಜಜ್ಜುಗಾಯ; ಜಜ್ಜಡಿಕೆ)
crushed — ಗು ನಜ್ಜು (ನಜ್ಜುಗುಜ್ಜು), ಅಜ್ಜು (ಅಜ್ಜುಗುಜ್ಜು; ಅಜ್ಜುಗುಜ್ಜು ಮುದುಕ), ತೊತ್ತುಳಿ (ತೊತ್ತುಳಿ ಮಾಡು), ನುಚ್ಚು (ನುಚ್ಚುನೂರು; ನುಚ್ಚು ನುಸಿ), ನುಸಿ (ನುಸಿ ಗಣೆ), ನೂರು
crust — ನಾ ಹಕ್ಕಳೆ (ಹಕ್ಕಳೆಯಾಗಿ ಬರು; ಹಕ್ಕಳೆಯೇಳು)
crutch — ನಾಊರುಗೋಲು (ಊರುಗೋ ಲಿಲ್ಲದೆ ಆತನಿಗೆ ನಡೆಯಲು ಬರುವುದಿಲ್ಲ)
crux — ನಾ ತೊಡಕು
cry — ನಾ ಉಲುಹು (ಅವನ ಉಲುಹನ್ನು ಕೇಳಿ ಓಡಿ ಬಂದೆ), ಉಬ್ಬು (ಉಬ್ಬಟೆ; ಮಕ್ಕಳ ಉಬ್ಬು), ಜಡಿಪ (ಕೋಗಿಲೆಯ ಜಡಿಪ), ಬಗ್ಗಣೆ (ಹಕ್ಕಿಗಳ ಬಗ್ಗಣೆ)
cry — ಕ್ರಿ ಅಳು (ಅತ್ತು ಅತ್ತು ಕಣ್ಣುಗಳು ಬಾಡಿವೆ), ಒಳರು (ಹೆದರಿ ಒಳರು ತ್ತಿದ್ದಾರೆ), ಉಲಿ (ಉಲಿಯುವ ಕುರಿ ಹಿಂಡು), ಕೇಗು (ಕೇಗಿ ಕುಣಿವ ನವಿಲು), ಕುರಲು, ಕತ್ತು (ಕತ್ತುವ ಕಪ್ಪೆಗಳು), ಕುಕಿಲು (ಕುಕಿಲುವ ಕೋಗಿಲೆ), ಬಗ್ಗಿಸು (ಬಗ್ಗಿಸುವ ಹಕ್ಕಿ)
cry aloud — ಕ್ರಿ ಅಬ್ಬರಿಸು (ಅಬ್ಬರಿಸಿ ಹೇಳು), ಆರು (ಆರುವ ಮಲ್ಲರು)
cry out — ಕ್ರಿ ಸಾರು (ಸಾರಿ ಹೇಳು; ಊರಿಡೀ ಸಾರು), ಊಳು (ಕವಕ್ಕವ ಎಂದು ಊಳುವ ಕಾಗೆ; ಊಳಿಡು - ಊಳಿಡುವ ನಾಲಿು), ಒರಲು (ಅಯ್ಯಾ ಅಯ್ಯಾ ಎಂದು ತುಂಬಾ ಹೊತ್ತಿನಿಂದ ಒರಲುತ್ತಿದ್ದಾನೆ), ಕುವಿ (ನೀರಲ್ಲಿ ಮುಳುಗಿ ಕುವಿದರೆ ಯಾರಿಗೆ ಕೇಳಿಸೀತು?), ಕೂಗು (ಕೂಗಿಹೇಳು, ಕೋಗಿಲೆ ಕೂಗಿ ಕರೆಯುತ್ತಿದೆ; ಕೂಗಾಡು, ಕೂಗುಹಾಕು; ಕೂಗಿಡು; ಕೂಗಳತೆ - ಅವರ ಮನೆ ಕೂಗಳತೆಯಲ್ಲಿದೆ)
cry with joy — ಕ್ರಿ ಕೆಲೆ (ಒಂದಕ್ಕೊಂಬತ್ತು ನುಡಿದು ಕಣ್ಣು ಕೆಂಚನೆ ಮಾಡಿ ಕೆಲೆಯು ವವರು
cryfish — ನಾಮುಳ್ಳುನಳ್ಳಿ
crying (aloud) — ನಾ ರಚ್ಚೆ (ರಚ್ಚೆಹಿಡಿ - ಮಗು ರಚ್ಚೆಹಿಡಿದು ಅಳುತ್ತಿದೆ), ರಂಪ, ಆರ್ಬು (ಆರ್ಬಟೆ; ಬೊಬ್ಬೆಯಾರ್ಬಟೆ)
cryptic — ಗು ಗುಟ್ಟಿನ, ಗುಂಬದ (ಗುಂಬದ ಹೇಳಿಕೆ)
crystal — ನಾಹರಳು (ಹರಳುಕಟ್ಟು),ಹೆರೆ (ಉಪ್ಪಿನ ಹೆರೆ)
cub — ನಾ ಮರಿ (ಹುಲಿಯ ಮರಿ)
cubic foot — ನಾ ಸಲೆಯಡಿ
cubit — ನಾಮೊಳ (ಎರಡು ಗೇಣಿಗೆ ಒಂದು ಮೊಳ; ಮೊಳಹಾಕು)
cuckoo — ನಾ ಕುಕಿಲು (ಕುಕಿಲಿಡು; ಕುಕಿಲು ಮರೆಯಲ್ಲಿ ಕುಳಿತು ಹಾಡುತ್ತಿದೆ)
cucumber — ನಾ ಸವುತೆ (ಸವುತೆಕಾಯಿ)
cud — ನಾ ಮೆಲುಕು (ದನ ಮೆಲುಕುಹಾಕುತ್ತ ಮಲಗಿದೆ)
cuddle — ಕ್ರಿ ಅಪ್ಪು, ಮುದ್ದಾಡು (ಮಗುವನ್ನು ಮುದ್ದಾಡುತ್ತಿದ್ದಾಳೆ)
cudgel — ನಾತಡಿ (ತಡಿಕೋಲು), ದೊಣ್ಣೆ (ದೊಣ್ಣೆ ಹಿಡಿದು ಬಂದವರನ್ನು ಕಂಡು ಬೆದರಿದೆವು),ಕುಣಿಲು
cue — ನಾ ಸುಳಿವು (ಸುಳಿವು ಕೊಡು), ಸೋಹೆ, ಕುರುಹು
cuff — ಕ್ರಿ ಗುಮ್ಮು (ಬೆನ್ನಿಗೆ ಗುಮ್ಮಿದಾಗ ಆತ ಕೆಳಗೆ ಬಿದ್ದ), ಗುದ್ದು (ಗುದ್ದುಹಾಕು; ಗುದ್ದಾಡು; ಗುದ್ದಿದ ಗುದ್ದು; ಗುದ್ದರಿಸು)
cuisine — ನಾ ಅಡಿಗೆಯ ಬಗೆ
cul-de-sac — ನಾ ತಡೆ ಓಣಿ
culinary — ಗು ಅಡಿಗೆಯ, ಅಡಿಗೆಮನೆಯ
cull — ಕ್ರಿ ಆಯು, ಹೆಕ್ಕು
culminate — ಕ್ರಿ ಕೊನೆಗೊಳ್ಳು
culpable — ಗು ತೆಗಳತಕ್ಕ, ಹಳಿಯತಕ್ಕ
culprit — ನಾ ತಪ್ಪುಗಾರ ನಾ ಸಾಗು (ಸಾಗುಮಾಡು; ಸಾಗುಬೀಳು), ಸಾಗುವಳಿ (ಸಾಗುವಳಿ ಮಾಡು; ಸಾಗುವಳಿಗಾರ), ನಾಟಿ (ನಾಟಿ ಇನ್ನೂ ಮುಗಿದಿಲ್ಲ), ಕುಮರಿ (ಕಾಡಿನ ಕುಮರಿ), ಆರಂಬ (ಆರಂಬಗಾರ; ನಾವೆಲ್ಲ ಆರಂಬದಿಂದ ಬದುಕುವುದು; ಕಾಡಾರಂಬ; ನೀರಾರಂಬ), ಒಕ್ಕಲತನ
culture — ನಾ 1 ಸಾಗುವಳಿ, ಆರಂಬ 2 ಬೆಳವಣಿಗೆ 3 ಪೊಳಲಿಗತನ
culvert — ನಾಅಡಿಗಾಲುವೆ
cumber — ಕ್ರಿ ಅಡ್ಡಿಮಾಡು, ತಡೆ, ತೊಂದರೆ ಕೊಡು
cumbersome — ಗು ತೊಂದರೆಯ
cumulate — ಕ್ರಿ ಒಟ್ಟು, ಕುಪ್ಪೆಹಾಕು
cumulative — ಗು ಹೆಚ್ಚುತ್ತಾ ಹೋಗುವ, ಕೂಡುವ
cumulus — ನಾ ದಟ್ಟಮೋಡ
cunning — ನಾ ಗನ್ನ (ಗನ್ನದ ಕಾಳಗದಲ್ಲಿ ಆತ ಸೋತ)
cunning — ಗು 1 ಸಂಚಿನ, ಗುಟ್ಟಿನ 2 ಚೆಚ್ಚರಿಕೆಯ
cup — ನಾ ಕಿಣ್ಣ,ಗಿಣ್ಣಲು (ಒಂದು ಗಿಣ್ಣಲು ಕಾಣೆಯಾಗಿದೆ)
cup (of leaves) — ನಾ ದೊನ್ನೆ (ದೊನ್ನೆ ತುಂಬ ತುಪ್ಪ)
cup (of palms) — ನಾ ಬಗಸೆ (ಕಯ್ಯ ಬಗಸೆ, ಬಗಸೆ ಹಿಡಿ), ಬೊಗಸೆ (ಬೊಗಸೆತುಂಬ ನೀರು)
cupboard — ನಾ ಓಡೆ, ಅಂಕಣ, ಅರೆವರಸೆ, ಪತ್ತಿಗೆ, ಕದಹು (ಪೆರ್ಗದಹು; ಮುಚ್ಚು ಗದಹು)
cupola — ನಾ ಕುಲುಮೆ
curative — ನಾ ಮದ್ದು
curb — ಕ್ರಿ ತಡೆಹಿಡಿ
curd — ನಾ ಮೊಸರು (ಹೆಪ್ಪು ಹಾಕಿದ ಹಾಲು ಮೊಸರಾಗಿದೆ),ಕಳಲು (ತಣ್ಣಗಿನ ಕಳಲು)
curdle — ಕ್ರಿ ಹೆಪ್ಪುಕಟ್ಟು, ಹೆರು (ಹೆತ್ತ ಹಾಲಿನ ಕೆನೆ)
curdling agent — ನಾನೆರವು (ನೆರವು ಹಾಕು),ಹೆಪ್ಪು (ಹೆಪ್ಪಿಡು; ಹಾಲಿಗೆ ಹೆಪ್ಪು ಹಾಕು)
cure — ಕ್ರಿ 1 ಮಾಣಿಸು, ಮಾಜಿಸು (ಹುಣ್ಣಿಗೆ ಮದ್ದುಹಚ್ಚಿ ಮಾಜಿಸಿದ್ದಾರೆ) 2 ಕೆಡದಂತೆ ಮಾಡು
curfew — ನಾ ಊರಡಗುಹ
curious — ಗು 1 ಅರಕೆಯ 2 ಹೊಸ ಬಗೆಯ
curl — ನಾ ಸುಕ್ಕು (ಸುಕ್ಕುಕುರುಳು; ಸುಕ್ಕು ಕೂದಲು), ಮುರಿಕೆ, ಸುರುಳಿ
curly — ಗು ಗುಗ್ಗುರಿ (ಗುಗ್ಗುರಿಗೊಳ್ಳು; ಗುಗ್ಗುರಿ ಕೂದಲು), ಗುಂಗುರು (ಗುಂಗುರು ತಲೆ), ಸುಳಿ (ಹುಬ್ಬುಗಳ ನಡುವಿನ ಸುಳಿ; ಸುಳಿ ಗುರುಳು; ಸುಳಿಯೆಲೆ), ಜುಂಜುರು (ಜುಂಜುರು ತಲೆ)
curmudgeon — ನಾ ಕೆಟ್ಟನಡತೆಯವನು
currency — ನಾ ಸಲುವಳಿ (ಸಲುವಳಿಯಾಗು; ಸಲುವಳಿ ಮಾತು)
current — ನಾಒಳ್ಕು,ಹರಿವು (ನೀರಿನ ಹರಿವು; ಮಿಂಚಿನ ಹರಿವು)
current — ಗು ಬಳಕೆಯಲ್ಲಿರುವ, ಇರುವ, ಸಲ್ಲುವ (ಸಲ್ಲುವ ಕಾಸು; ಸಲ್ಲದ ಕಾಸು)
curriculum — ನಾ 1 ಕಲಿಕೆಯ ಹರವು
curse — ಕ್ರಿ ಉಸುರಿಡು
cursive — ಗು ಕೂಡು (ಕೂಡುಬರಹ)
cursory — ಗು ಗಡಿಬಿಡಿಯ, ಅಸವಸದ
curt — ಗು ಬಿಗುಮಾನದ
curtail — ಕ್ರಿ ಕಡಿಮೆಮಾಡು, ಮೊಟಕು ಗೊಳಿಸು ನಾ ತೆರೆ (ತೆರೆ ಬಟ್ಟೆ; ತೆರೆ ಹಿಡಿ; ತೆರೆಸೀರೆ; ತೆರೆಬೀಳು; ತೆರೆಮರೆ; ಎಲ್ಲ ತೆರೆಮರೆಯಲ್ಲೀ ನಡೆಯುತ್ತಿದೆ), ಕವ್ವರ, ದಡ್ಡಿ, ಮುಸುಂಬು
curve — ನಾ ಬಾಗು (ಬಿಲ್ಲಿನ ಬಾಗು), ಕೊಂಕು ಗೆರೆ, ಮುರು (ಮುರುದಲೆ), ತಿರುವು (ತಿರುವುಮುರುವು; ಬಿಲ್ತಿರುವು)
curved — ಗುಕೋಸು (ಕೋಸು ಗೋಡೆ), ಕೊಲ್ಲಿ (ಕೊಲ್ಲಿ ನೋಟ)
cushion — ನಾ ಮೂಡಾವೆ,ಕವುಳುಡೆ (ಕವು ಳುಡೆಯ ಮೇಲೆ ತಲೆಯಿರಿಸಿ ಮಲಗಿದ)
cusp — ನಾ ಚೂಪುತುದಿ
cuspidor — ನಾ ಕಾಳಂಚಿ (ಕಾಳಂಚಿಯಲ್ಲೇ ಉಗಿಯಿರಿ)
custody — ನಾ 1 ಕಾಹು (ಮಗುವಿನ ಕಾಹನ್ನು ಅದರ ತಂದೆಗೆ ಕೊಟ್ಟಿದ್ದಾರೆ) 2 ಸೆರೆ (ಆತ ಸೆರೆಯಲ್ಲಿದ್ದಾನೆ)
custom — ನಾ ಬಳಕೆ,ವಾಡಿಕೆ (ಇವತ್ತು ನಾವು ಅಲ್ಲಿಗೆ ಹೋಗುವುದು ವಾಡಿಕೆ), ಅಡಕು,ಅಡಿವಜ್ಜೆ, ನಡಪಡಿಕೆ, ನಡವಳಿಕೆ, ಹದನು
customer — ನಾ ಕೊಳ್ಳುಗ
cut — ನಾಕಾಟು (ಕೊಡಲಿಯ ಕಾಟು),ಕಡಿತ (ಮಯ್ಗಡಿತ)
cut — ಕ್ರಿ ಸವರು (ಮರದ ರೆಂಬೆಗಳನ್ನು ಸವರು), ನೇರು (ನೇರಿದ ಮೂಗು), ತರಿ (ತರಿದ ರೆಂಬೆಗಳು), ತಿರಿ (ತಿರಿದ ತಲೆ), ಅರಿ (ಕಳ್ಳನ ಮೂಗನ್ನು ಅರಿದರು), ಅಡಚು, ಮೋಚು, ಪಚ್ಚಿಕ್ಕು, ಕೊಯ್ಯು (ಗರಗಸ ದಿಂದ ಮರ ಕೊಯ್ಯುತ್ತಿದ್ದಾರೆ), ಕುಯ್ಯು (ಕುಯಿಲು - ಕುಯಿಲಾಳು), ಹೊಳಚು, ಕಡಿ (ಕಡಿಯಕ್ಕಿ, ಕಡಿನುಚ್ಚು), ಕೊರೆ (ತರಕಾರಿ ಕೊರೆದು ಬೇಯಿಸಿದರು)
cut (into pieces) — ಕ್ರಿ ಕೊಚ್ಚು (ಕೊಚ್ಚು ಕತ್ತಿ; ಚಿಕ್ಕ ಚಿಕ್ಕ ತುಂಡುಗಳಾಗಿ ಕೊಚ್ಚಿ ಹಾಕಿದರು), ಕಿಮುಳು
cut (stone) — ಕ್ರಿ ಕಟಿ (ಉಪ್ಪಾರರು ಕಲ್ಲು ಗಳನ್ನು ಕಟಿಯುತ್ತಿದ್ದರು)
cut thin — ಕ್ರಿ ಚಿವ್ವು (ಸೀಸದ ಕಡ್ಡಿಯನ್ನು ಚಿವ್ವು)
cutaneous — ಗು ತೊಗಲಿನ
cute — ಗು 1 ಮುದ್ದಾದ, ಅಂದದ 2 ಜಾಣ, ಸುಟಿ
cutting — ನಾಕೊಯ್ತ,ಕೊರೆತ, ಕೊಚ್ಚಿಕೆ
cycle — ನಾಸುತ್ತು (ಮೂರು ಸುತ್ತು ಮುಗಿ ಯಿತು)
cyclone — ನಾ ಸುಟ್ಟುರೆ (ಸುಟ್ಟುರೆ ಗಾಳಿ), ಸುಂಟರ (ಸುಂಟರಗಾಳಿ), ಸುಳಿಗಾಳಿ
cyclostyle — ನಾಕೊರೆಯಚ್ಚು (ನಿಮ್ಮ ಬರಹವನ್ನು ಕೊರೆಯಚ್ಚು ಮಾಡಿಸಿ ಕೊಂಡು ಬಂದಿದ್ದೇನೆ)
cylinder — ನಾಉರುಳೆ (ನೀರುರುಳೆ)
cynic — ನಾಜರೆಗ (ಆತನೊಬ್ಬ ಜರೆಗನೆಂದು ಎಲ್ಲರಿಗೂ ಗೊತ್ತಿದೆ)