Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
Q
quack — ನಾ ಸೋಗುಮಾಂಜುಗ, ಸೋಗರಿಗ
quadrangle — ನಾ ನಾಲ್ಮೂಲೆ
quadrant — ನಾ ಕಾಲಾಳಿ, ಕಾಲುಬಳಸಿ
quadrilateral — ನಾ ನಾಲ್ಬದಿಯ, ನಾಲ್ಮೂ ಲೆಯ
quadruple — ನಾ ನಾಲ್ಕಲಿಗ
quadruple — ಗು ನಾಲ್ಮಡಿ, ನಾಲ್ವಡಿ
quaff — ಕ್ರಿ ಗಟಗಟನೆ ಕುಡಿ
quagmire — ನಾ ಕೆಸರು, ಜವುಗು (ಜವುಗು ನೆಲ; ಜವುಗೇಳು)
quail — ನಾ ಬುರುಲಿ (ಹೆಬ್ಬುರುಲಿ)
quail — ಕ್ರಿ ಬೆದರಿ ಹಿಮ್ಮೆಟ್ಟು, ಹೆದರಿ ಮುದುಡು
quaint — ಗು ಎಲ್ಲರಂತಿಲ್ಲದ
quake — ಕ್ರಿ ನಡುಗು, ಅದುರು (ಆಕೆ ನಡೆಯು ವಾಗ ನೆಲ ಅದುರುತ್ತದೆ)
qualification — ನಾ ಪಳಗಿಕೆ (ಕೆಲಸಕ್ಕೆ ಬೇಕಾದ ಪಳಗಿಕೆ ಅವನಲ್ಲಿರಲಿಲ್ಲ)
quality — ನಾ ಪರಿಚೆ, ಮಟ್ಟ
qualm — ನಾ 1 ಕಸಿವಿಸಿ, ಮಳ್ಗುಗೆ, ಓಕರಿಕೆ 2 ಅಳುಕು
quandry — ನಾ ಇಕ್ಕಟ್ಟು, ಬಿಕ್ಕಟ್ಟು, ತೊಡಕು
quantity — ನಾ ಅಳವಿ
quarantine — ನಾ ಬೇರ್ಪಡಿಕೆ (ಬೇನೆ ಹರಡ ದಂತೆ ಬೇರೆ ನಾಡಿನಿಂದ ಬಂದವರನ್ನು ಬೇರ್ಪಡಿಕೆಯಲ್ಲಿರಿಸಿದ್ದಾರೆ)
quarrel — ನಾ ಜಗಳ (ಜಗಳ ಹಚ್ಚು, ಜಗಳಾಡು, ಜಗಳಗಂಟ), ತೋಟಿ (ಅಣ್ಣ ತಮ್ಮಂದಿರೊಳಗೆ ತೋಟಿ ನಡೆದಿದೆ), ಕಿತ್ತಾಟ (ಕಿತ್ತಾಡು), ಪೆಳಕು
quarrel — ಕ್ರಿ ಹೆಣಗು (ಹೆಣಗಾಡು - ಹೆಣ ಗಾಡುತ್ತಿರುವ ಹುಡುಗರು), ಕಡಿದಾಡು, ಉರುಡು (ಉರುಡಾಟ) ಗು ಜಗಳಗಂಟ, ಜಗಳ ಕ್ಕೇಳುವ
quarry — ನಾ ಪಣೆ (ಕಲ್ಪಣೆ)
quarter — ಕ್ರಿ 1 ನಾಲ್ಕಗಿಸು 2 ಎಡೆಗೊಡು, ನೆಲೆಗೊಡು
quarter — ಗು ಗಿದ್ದ,ಕಾಲು (ಮೂರುಕಾಲು; ಒಕ್ಕಾಲು, ಮುಕ್ಕಾಲು; ಕಾಲುವಾಸಿ)
quartz — ನಾ ಬೆಣಚುಕಲ್ಲು
quash — ಕ್ರಿ 1 ಚಚ್ಚು, ಜಜ್ಜು 2 ಅಡಗಿಸು 3 ಬದಿಗೆ ಸರಿಸು, ತೆಗೆದುಹಾಕು
quaver — ಕ್ರಿ ನಡುಗು (ನಡುಗುವ ಉಲಿ)
quay — ನಾ ಇಳಿವೆಡೆ (ಹಡಗಿನ ಇಳಿವೆಡೆ)
queasy — ಗು ಹೊಟ್ಟೆತೊಳಸುವ, ಓಕರಿಕೆಯ
queen — ನಾ ಅರಸಿ
queer — ಗು ಎಲ್ಲರಂತಿಲ್ಲದ, ಅದುಹಿನ (ಅದುಹಿನ ಮುದುಕ)
quell — ಕ್ರಿ ಅಡಗಿಸು, ತುಳಿದುಹಾಕು (ಅರಸ ನನ್ನು ಎದುರಿಸಹೊರಟವರನ್ನೆಲ್ಲ ತುಳಿದು ಹಾಕಲಾಲಿುತು)
quench — ಕ್ರಿ ನೊಂದು (ಒಲೆಯಲ್ಲಿ ಬೆಂಕಿ ನೊಂದಿಹೋಗಿದೆ), ಅಣೆ (ಅಣೆದುಹೋದ ಸೊಡರು), ಆರು (ಬಾಯಾರಿಕೆ ಆರುವಷ್ಟು ನೀರು ಕುಡಿದ)
querrulous — ಕ್ರಿ ಗೊಣಗುವ, ದೂರಿಡುವ, ಸಿಡುಕಿನ
query — ಕ್ರಿ ಕೇಳು (ಅವನು ಏನೋ ಕೇಳು ತ್ತಿದ್ದಾನೆ)
quest — ನಾ ಹುಡುಕಾಟ (ಸೊಮ್ಮಿನ ಹುಡು ಕಾಟದಲ್ಲಿ ಅವನು ಎಲ್ಲಲ್ಲಿಗೋ ಹೋಗಿ ಬಂದ)
question — ನಾ ಕೇಳ್ವಿ (ನೀನು ಕೇಳಿದ ಕೇಳ್ವಿ)
question — ಕ್ರಿ ಕೇಳು (ಮೊದಲು ಕೇಳಿದುದಕ್ಕೆ ಮಾರ್ನುಡಿ ಕೊಡು)
questionable — ಗು ನಂಬಲಾಗದ (ನಿನ್ನೆ ಬಂದುದು ನಂಬಲಾಗದ ಸುದ್ದಿ), ಕೇಳ್ವಿ ಗೊಳಪಡುವ
questionnaire — ನಾ ಕೇಳ್ವಿಕಂತೆ (ಅವ ರೊಂದು ಕೇಳ್ವಿಕಂತೆಯನ್ನು ಕೊಟ್ಟು ಕಳಿಸಿದ್ದಾರೆ), ಕೇಳ್ವಿಪಟ್ಟಿ (ಆತನ ಕೇಳ್ವಿಪಟ್ಟಿ ತುಂಬಾ ಉದ್ದ ಇದೆ)
queue — ನಾ ಸರತಿಸಾಲು, ವರಸೆ (ಗಾಡಿಗಳ ವರಸೆ)
quibble — ಕ್ರಿ 1 ಮಾತು ಹೊರಳಿಸು 2 ಚಿಲ್ಲರೆ ಅಡ್ಡಿಯೆತ್ತು
quick — ಗು ಚುರುಕು (ಚುರುಕುತನ; ಅವನ ಕಣ್ಣು ಚುರುಕಾಗಿದೆ), ಚಾಗ (ಚಾಗಚಾಗ ಹೊರಡಿ), ಚೆಚ್ಚರ (ಚೆಚ್ಚರ ನುಡಿ)
quicklime — ನಾ ಸುಟ್ಟಸುಣ್ಣ ಗು ಸರಕ್ಕನೆ (ಸರಕ್ಕನೆ ಹಿಂದಿರುಗಿ ದರು), ಅಣಿಯರ (ಅಣಿಯರ ಬಂದು ಕಂಡ), ಜಗ್ಗನೆ, ತಟ್ಟನೆ, ಕೆಕ್ಕನೆ, ಬೆಚ್ಚರ (ಬೆಚ್ಚರಿಕೆ), ಮಣಕ್ಕನೆ, ಪಣ್ಣನೆ, ಒಲ್ಲನೆ, ತಟ್ಟನೆ (ತಟ್ಟನೆ ಮೇಲೆದ್ದ), ಒತ್ತಂಬರ (ಒತ್ತಂಬರ ನಡೆಲಿುರಿ)
quickness — ನಾ ಸರಗು,ಅಸು (ಅಸುವಿನಲ್ಲಿ ಕೆಲಸ ಮುಗಿಸಿದ)
quicksand — ನಾ ಕಳ್ಳುಸುಕು, ಹೂಳುಸುಬು
quiescent — ಗು ಕದಲದ, ಹಂದದ, ಉಲಿ ಯದ
quietly — ಗು ಸುಮ್ಮಗೆ (ಸುಮ್ಮಗಿರು)
quill — ನಾ 1 ದೊಡ್ಡಗರಿ, ಮುಳ್ಳು (ಮುಳ್ಳು ಹಂದಿಯ ಮುಳ್ಳು) 2 ಗರಿಬರಿಗೆ
quilt — ನಾ ಬೊಂತೆ, ಕವುದಿ (ಕವುದಿಯನ್ನು ಹೊದ್ದಾತ), ದಟ್ಟ (ದಟ್ಟವೊಂದನ್ನು ಹಾಸಿ ಮಲಗಿದ), ಹಾಸಿಗೆ, ಮೆತ್ತೆ
quintessence — ನಾ ಸೊಗಡು, ತಿರುಳು, ನಲ್ಲತ್ತುಗೆ
quintet — ನಾ ಅಯ್ಮಡಿ
quip — ನಾ ಚುಚ್ಚುನುಡಿ, ಹೊರಳುನುಡಿ
quirk — ನಾ ತಿರುಪು, ಮೋಡಿ
quirt — ನಾ ಬಾರುಗೋಲು, ಚಾಟಿ
quit — ಕ್ರಿ ನೀಗು,ಉಳಿ (ಮುನಿದು ಉಳಿದ ನಲ್ಲ),ತೊರೆ, ಬಿಡು
quite — ಗು ಸಲೆ (ಸಲೆ ಸೋತವರು), ತವೆ (ತವೆ ತುಂಬಿದ ನೆರೆ), ಆರ, ತುಂಬಾ, ಸಾಕಷ್ಟು
quiver — ನಾ 1 ಮೂಡಿಗೆ, ದೊಣೆ 2 ನಡುಕ
quiver — ಕ್ರಿ ಬಾರು, ಪೊಡರು (ಹೇಡಿಗಳೆಲ್ಲ ಪೊಡರುತ್ತಿದ್ದರು; ಪೊಡರ್ಕೆ), ನಡುಗು
quiz — ನಾ ಒರೆತ (ಅರಿವೊರೆತ), ಕೇಳ್ವಿಕಂತೆ (ಕೇಳ್ವಿಕಂತೆಯ ಪೋಟಿ)
quorum — ನಾ ಬೇಕಾದೆಣಿಕೆ
quota — ನಾ ಹಸುಗೆ (ನನಗೆ ನನ್ನ ಹಸುಗೆ ಲಿುನ್ನೂ ದೊರೆತಿಲ್ಲ), ಪಾಲು
quotation — ನಾ ಎತ್ತುಗೆ (ಈ ಎತ್ತುಗೆ ಯಾರ ಬರಹದ್ದು?)
quotation mark — ನಾ ಎತ್ತುಗೆ ಗುರುತು
quote — ಕ್ರಿ ಎತ್ತಿಹೇಳು (ಒಂದು ಮಾತನ್ನು ಅವರು ಎತ್ತಿಹೇಳಿದ್ದಾರೆ)
quotient — ನಾ ಬಗೆದೊರೆತ