← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

D

dab — ಕ್ರಿ ಮೆಲ್ಲ ತಟ್ಟು
dabble — ಕ್ರಿ ಕಯ್ಹಾಕು (ಕೆರೆಯ ದಂಡೆಯಲ್ಲಿ ಕುಳಿತು ನೀರಿಗೆ ಕಯ್ಹಾಕಿದ), ಕಯ್ಹಚ್ಚು
daft — ಗು ಹೆಡ್ಡು, ಹುಚ್ಚು (ಹುಚ್ಚು ಹುಡುಗ)
dagger — ನಾ ಇರಿಯುವ ಕತ್ತಿ
dainty — ಗು ಸವಿಯಾದ, ಅಂದವಾದ, ನವು ರಾದ
dairy — ನಾ ಹಾಲಿನಂಗಡಿ
dais — ನಾಜಗಲಿ (ಆವತ್ತಿನ ಕೂಟದಲ್ಲಿ ಜಗಲಿಯ ಮೇಲೆ ನಿಂತು ಮಾತನಾಡಿ ದವರಲ್ಲಿ ನಾನೂ ಒಬ್ಬ)
dale — ನಾ ಕಣಿವೆ
dally — ಕ್ರಿ ಅಡ್ಡಾಡು, ಹೊತ್ತುಕಳೆ
dam — ನಾ ಮಡೆ (ಗದ್ದೆಯ ಪಕ್ಕದಲ್ಲೀ ನೀರು ನಿಲ್ಲಿಸಲು ಒಂದು ಮಡೆ ಇತ್ತು), ಅಣೆ (ಅಣೆಕಟ್ಟು), ಕಟ್ಟು, ಒಡ್ಡು (ಮಳಲೊಡ್ಡು; ಒಡ್ಡು ಹಾಕು) ನಾ ಎರವು (ಹೋಗದಿದ್ದರೆ ನಿನ್ನ ಜೀವಕ್ಕೆ ಎರವಾದೀತು), ಅಳಿವು
damn — ಕ್ರಿ ಹೀಗಳೆ, ತೆಗಳು (ಆತ ಎಲ್ಲರನ್ನೂ ತೆಗಳುತ್ತಿದ್ದಾನೆ), ಸೂರುಳಿಸು
damp smell — ಗು ಕುಮುಟು (ಕುಮುಟು ನಾತ)
dampen — ಕ್ರಿ 1 ನೆನೆಸು 2 ತಗ್ಗಿಸು (ಉಲಿ ತಗ್ಗಿಸು)
dampness — ನಾನನೆಹ,ಈರ (ಗುಡಿಸಲಿನ ನೆಲಕ್ಕೆ ಈರ ಬಂದಿದೆ),ತಡಿ (ತಡಿಯಾಗು; ತಡಿಮಣ್ಣು)
damsel — ನಾ ಕೊಡವಿ, ಹುಡುಗಿ, ಕೊಡ ಗೂಸು
dance — ನಾಕುಣಿತ (ಆಕೆಯ ಕುಣಿತ ನೋಡಲು ನೂರಾರು ಮಂದಿ ಸೇರಿದ್ದರು),ಕೂತು (ಕೂತಾಡು; ಗುಡಿಯಲ್ಲಿ ಕೂತು ನಡೆಯುತ್ತಿದೆ)
dance — ಕ್ರಿ ನಲಿ (ಹುಚ್ಚೆದ್ದು ನಲಿಯುವ ಹುಡುಗ; ನಲಿದಾಡು - ಆತ ಹದುಳದಿಂದ ನಲಿದಾಡುತ್ತಿದ್ದಾನೆ), ಕುಣಿ (ಕುಣಿದಾಡು), ಕುಣಿಹ, ಕಾಲಾಟ, ಎರಲು, ಪೇರಣಿ
dancer — ನಾ ಪಾಣ, ಪಾಣ್ಬೆ
dandle — ಕ್ರಿ ಮುದ್ದಿಸು (ಕೆಲಸಕ್ಕೆ ಹೋಗುವ ಮೊದಲು ಆಕೆ ಮಗುವನ್ನು ತುಸು ಹೊತ್ತು ಮುದ್ದಿಸಲು ಮರೆಯಲಿಲ್ಲ)
dandruff — ನಾತಲೆಹೊಟ್ಟು,ಜೊಂಡು (ತಲೆಯಲ್ಲಿ ಜೊಂಡು ತುಂಬಿದೆ),ಹೆಡಸು (ತಲೆಯ ಹೆಡಸಿಗೆ ಯಾವುದೋ ಎಣ್ಣೆ ಹಚ್ಚಿದ್ದಾಳೆ)
danger — ನಾ ಕುತ್ತ (ಅವರೊಂದು ಕುತ್ತದ ಕೆಲಸ ಹಿಡಿದಿದ್ದಾರೆ)
dangle — ಕ್ರಿ ಸೋರು, ನೇಲು (ಕೊರಳಲ್ಲಿ ನೇಲುವ ಹೂಮಾಲೆ; ನೇತಾಡು), ಬಳಲು (ಗೆಲ್ಲಿನಿಂದ ಬಳಲುವ ಮಾವಿನ ಕಾಲಿುಗಳು; ಬಳಲು ಮುಡಿ), ಅಸಿ,ಜೋಲು (ಜೋತಾಡು; ಜೋಲಾಡು; ಜೋತುಬೀಳು; ಗೆಲ್ಲಿನಿಂದ ಜೋಲುವ ಹುಡುಗ)
dank — ಗು ತಡಿ, ನೆನೆದ (ಮಳೆಗೆ ನೆನೆದ ಕೂದಲು)
dapper — ಗು ಸೂಟಿ, ಚುರುಕು, ಚೊಕ್ಕಟ
dapple — ಗು ಬೊಟ್ಟುಬೊಟ್ಟಾಗಿರುವ
dare — ಕ್ರಿ ಆರು, ಹೊರೆಯೇರು, ಇದಿರಿಸು
daring — ನಾ ಆರ್ಪು (ಆತನ ಆರ್ಪನ್ನು ಎಲ್ಲರೂ ಹೊಗಳುತ್ತಿದ್ದರು; ಈಗ ಆರ್ಪುಗುಂದಿ ಮನೆಯಲ್ಲೇ ಕುಳಿತಿದ್ದಾನೆ), ಪೆಟ್ಟು (ಪೆಟ್ಟು ವೇಳು)
dark room — ನಾಕತ್ತಲೆ ಕೋಣೆ
dark-blue — ನಾ ಕಾಗು (ಕಾಗಿನ ಬಟ್ಟೆ; ಕಾಗಿನ ಸೀರೆ)
darkness — ನಾ ಮಬ್ಬು, ಕಾವಳ (ಕಾವಳ ಕವಿದಿದೆ; ಕಾವಳಿಸು), ಗಾವಳ, ಕತ್ತಲೆ (ಕತ್ತಲಿಸು - ಕತ್ತಲಿಸುತ್ತಿದೆ, ಒಳಗೆ ಬನ್ನಿ; ಕತ್ತಲಿಡು; ಕತ್ತಲೆ ಮನೆ; ಕಗ್ಗತ್ತಲೆ)
darkness (after sunset) — ನಾ ಮುಂಗತ್ತಲೆ
dark-red — ಗು ಎರೆ (ಎರೆಮಣ್ಣು; ಎರೆಗದ್ದೆ),ಕರ್ಗೆಂಪು
darling — ನಾ ನಲ್ಲ, ನಲ್ಲೆ
darn — ಕ್ರಿ ಎಳೆತುಂಬು (ಬಟ್ಟೆ ಹರಿದ ಕಡೆ ಎಳೆತುಂಬಿಸಬೇಕು)
dart — ನಾ ಅಂಬು, ಕಣೆ
dart — ಕ್ರಿ ಪಕ್ಕನೆ ಎಸೆ, ಪಕ್ಕನೆ ಸರಿ
dash — ನಾಅಡ್ಡಗೆರೆ
dash — ಕ್ರಿ ತಾಗು, ಅಪ್ಪಳಿಸು, ಎಸೆ, ಓಡಿ ಹೋಗು
dash against — ಕ್ರಿ ಪಳಂಕು, ಪಳಂಚು
dashing — ಗು ಚುರುಕು
dastard — ನಾ ಹೇಡಿ, ಪುಕ್ಕ, ಕೂಳ, ಹೊಲ್ಲ
data — ನಾ ತಿಳಿಹ
date — ನಾ 1 ತೇದಿ (ಇಪ್ಪತ್ತಾರನೇ ತೇದಿ) 2 ಉತ್ತುತ್ತೆ (ಉತ್ತುತ್ತೆಲಿುಂದ ಮಾಡಿದ ಸಿಹಿತಿಂಡಿ)
daub — ಕ್ರಿ ಹಚ್ಚು (ಎಣ್ಣೆಹಚ್ಚು) ನಾಮಗಳು, ಅಣುಗಿ
daunt — ಕ್ರಿ ಹೆದರಿಸು, ಅಡ್ಡಿಮಾಡು
dauntless — ಗು ಹೆದರದ, ಪಟ್ಟುಹಿಡಿವ
dawdle — ಕ್ರಿ ಅಡ್ಡಾಡು, ಅಲೆದಾಡು
dawn — ನಾ ಹಿಂಗತ್ತಲೆ, ಸುಸಿಲು (ಸುಸಿಲಲ್ಲಿ ಎದ್ದು ತುಂಬಾ ಚಳಿಯಾಗುತ್ತಿದ್ದರೂ ಹೊಳೆಗೆ ಮೀಯಲು ಹೋದ), ಪೊಗಸು (ಮುದುಕ ಈಗಲೋ, ಬಯ್ಗೆಯೋ, ನಾಳೆ ಪೊಗಸೋ ಬಂದಾನು), ಮುಂಬೆಳಗು
dawn — ಕ್ರಿ ಪರೆ, ಹರೆ (ಬೆಳಕು ಹರೆಯಿತು)
day — ನಾ ನಾಳು (ಈ ನಾಳು ಯಾರೂ ಬರ ಲಿಲ್ಲ), ಹೊತ್ತು (ಒಂದು ಹೊತ್ತು)
day labourer — ನಾ ಕೂಲಿ (ಕೂಲಿ ಕೆಲಸ; ಕೂಲಿ ಮಾಡು; ಕೂಲಿಕಾರ,ಚಂಗೂಲಿ)
day-after-tomorrow — ನಾ ನಾಡಿದು
day-before-yesterday — ನಾ ಮೊನ್ನೆ
daybook — ನಾ ಊಳಿಗ (ಎಲ್ಲವನ್ನೂ ಊಳಿಗದಲ್ಲಿ ಬರೆದಿದ್ದೇನೆ)
daybreak — ನಾ ನಸುಕು (ನಸುಕಿನಲ್ಲಿ ಎದ್ದು ಹೊಲಕ್ಕೆ ನಡೆದ; ನಸುಕು ಹರಿ),ಪೊಳ್ತಡೆ, ಹೊತ್ತಾರೆ (ಹೊತ್ತಾರೆ ಏಳುವವರು)
daydream — ನಾಹಗಲುಗನಸು, ಎಚ್ಚರ ಗನಸು
daylight — ನಾ ಹಗಲು
daytime — ನಾಹಗಲು (ಹಗಲಿರುಳು; ಹಗಲು ಗಳ್ಳ),ಎಡೆಹೊತ್ತು
day-to-day — ಗು ಅಂದಂದಿನ (ಅಂದಂದಿನ ಕೆಲಸವನ್ನು ಅಂದಂದೇ ಮಾಡಿ ಮುಗಿಸ ಬೇಕು)
daze — ಕ್ರಿ ತಬ್ಬಿಬ್ಬಾಗು, ಬೇಳುವೆಗೊಳ್ಳು
dazzle — ಕ್ರಿ ಕಣ್ಣುಕುಕ್ಕು, ಕೋರಯ್ಸು (ಕಣ್ಣು ಕೋರಯ್ಸುವ ಸೀರೆ)
dead — ಗು ಉಸಿರಿಲ್ಲದ, ಸತ್ತ, ಬಳಕೆಯ ಲ್ಲಿಲ್ಲದ (ಬಳಕೆಯಲ್ಲಿಲ್ಲದ ನುಡಿಗಳು ಬರಹದಲ್ಲಿ ಮಾತ್ರ ಉಳಿದಿರುತ್ತವೆ)
deaden — ಕ್ರಿ 1 ಮರಕಟ್ಟು, ಜೋಮುಹಿಡಿ 2 ಉಲಿತಡೆ
deadline — ನಾಗಡು (ಗಡುವು - (ಮೂರು ತಿಂಗಳ ಗಡುವು)
deadlock — ನಾಬಿಕ್ಕಟ್ಟು (ಮಾತುಕತೆಯಲ್ಲಿ ಬಿಕ್ಕಟ್ಟುಂಟಾಗಿದೆ)
deaf — ಗು ಪೊಟ್ಟು (ಪೊಟ್ಟ), ಕಿವುಡು (ಕಿವುಡ; ಕಿವುಡಿ), ಕೆಪ್ಪು (ಕೆಪ್ಪ, ಕೆಪ್ಪಿ)
deafen — ಕ್ರಿ 1 ಕಿವುಡಾಗು, ಕಿವುಡುಬೀಳು 2 ಉಲಿಗೆ ತಡೆಹಾಕು
deal — ನಾ 1 ಹರದು (ಹರದುಗೆಯ್ಯು) 2 ಗುಟ್ಟಿನ ಒಪ್ಪಂದ
dealer — ನಾ ಹರದ (ಹರದನ ಕಯ್ಯಲ್ಲಿ ಪಡಿಲಿುಲ್ಲದಿದ್ದರೆ ಹೇಗೆ?)
dear — ಗು 1 ಅಣುಗ (ಅಣುಗ ಮಗ, ಅಣುಗಾಳು) 2 ಬೆಲೆಬಾಳುವ
dearness — ನಾ 1 ನಲ್ಮೆ, ಅಕ್ಕರೆ 2 ಹೆಚ್ಚಿನ ಬೆಲೆ
dearth — ನಾ ಬರ, ಗೊಟ್ಟು
death — ನಾ ಮಣ್ಮಳಿ (ಮಣ್ಮಳಿಯಾಗು; ಮಣ್ಮಳಿಹೋಗು), ಸಾವು (ಸಾವಡಸು; ಸಾವುನೋವು), ಬೋಳ, ಬರ್ದು (ಬರ್ದುಗೆ), ಬೀಕಲು (ಅವರೊಳಗೆ ಯಾರೂ ಬೀಕ ಲಾಗಿಲ್ಲ),ಒಗೆತ
debacle — ನಾ 1 ದೊಡ್ಡ ಸೋಲು 2 ದೊಡ್ಡ ನೆರೆ
debar — ಕ್ರಿ ಹೊರಹಾಕು, ತಡೆ
debase — ಕ್ರಿ ಕೀಳುಗಳೆ, ಕೀಳುಮಾಡು
debauch — ಕ್ರಿ ಹೊರಬರು, ಬಯಲಾಗು
debaucher — ನಾ ಕುಡುಕ
debility — ನಾ ನಲುವು, ಸೊರಗಿಕೆ ನಾ ಕಸಕಡ್ಡಿ, ಮುರುಕುಚೂರು, ಕಲ್ಲುಮುಳ್ಳು
debt — ನಾ ಸಾಲ (ಸಾಲ ಕೊಡು, ಸಾಲ ತೀರಿಸು),ಕಡ (ಕಡ ಸಿಗುವುದಾದರೆ ಆತ ಏನನ್ನೂ ಕೊಂಡುಕೊಂಡಾನು; ಮುಂಗಡ, ಕಯ್ಗಡ)
debtor — ನಾ ಕಡಗಾರ,ಸಾಲಿಗ
debut — ನಾ ಮೊದಲಕಾಣ್ಕೆ
decade — ನಾ ಹತ್ತುಸೂಳು
decadence — ನಾಇಳಿಕೆ (ಆತನ ಆಳ್ವಿಕೆಯ ಇಳಿಕೆ ತೊಡಗಿದೆ)
decamp — ಕ್ರಿ ಓಡಿಹೋಗು, ತಲೆಮರೆಸಿ ಕೊಳ್ಳು
decant — ಕ್ರಿ ಮೆಲ್ಲಎರೆ, ಬಸಿ
decapitate — ಕ್ರಿ ತಲೆಕಡಿ
decay — ಕ್ರಿ ಅಳುಗು (ಅಳುಗಿದ ಅನ್ನ), ಹಳಸು (ಹಳಸಿದ ಹಿಟ್ಟು; ಹಳಸಲು - ಹಳಸಲನ್ನ), ಹುಳಿ (ಹುಳಿತ ಹಲಿಗೆ), ಕೊಳೆ (ಕೊಳೆತು ನಾರುವ ನೀರು)
decayed — ಗು ಕುಂಬು (ಕುಂಬುಮರ)
decease — ಕ್ರಿ ಸಾಯು, ತೀರಿಹೋಗು
decedent — ನಾ ಸತ್ತವನು
deceit — ನಾ ಮಂಕು (ಮಂಕು ಮಾಡು; ಮಂಕುಗೊಳಿಸು; ಮಂಕುಬೂದಿ ಎರಚು), ಮೋಸ (ಮೋಸ ಹೋಗು, ಮೋಸ ಮಾಡು, ಮೋಸಗೊಳ್ಳು), ತೋಹು (ತೋಹಿಗೆ ಸಿಲುಕಿದ ಮೊಲ; ತೋಹಿಡು; ತೋಹುಗ), ತೆತ್ತು (ತೆತ್ತುತನ), ಚದಿ (ಚದಿ ಮಾಡು); ಚದುಪು (ಚದುಪಿಸು), ಪಿತ್ತ ಲಾಟ, ಕೆಯ್ತ (ಕೋಡಗನ ಕೆಯ್ತ, ಸೂಳೆ ಗೆಯ್ತ; ಆತನ ಕೆಯ್ತದಿಂದಾಗಿ ಹಲವರು ನೊಂದಿದ್ದಾರೆ), ಮಚ್ಚು (ಮಚ್ಚುಮದ್ದು ಎಂದು ಕೊಟ್ಟದ್ದು ಹುಚ್ಚುಮದ್ದಾಯಿತು), ಪಳಾಳ, ಪೊರಟೆ, ಉಕ್ಕಿವ (ಉಕ್ಕಿವದಿಂದ ಗೆದ್ದವನು), ಪತ್ತುವಳಿ, ಎಂಗಿ (ಎಂಗಿ ಹಾಕು)
deceive — ಕ್ರಿ ಅಟಮಟಿಸು, ಆಳವಾಡು, ಉಕ್ಕೆ ವಿಸು, ಕಯ್ಕೊಡು, (ಆತ ನನಗೆ ಕಯ್ಕೊಟ್ಟ), ಕಣ್ಣುಕಟ್ಟು, ಮೆಳ್ಪಡಿಸು
decennial — ಗು ಹತ್ತನೇ ಸೂಳಿನ
decent — ಗು ಸಲುವಳಿಯ, ಹದನಾದ, ತಕ್ಕಮೆಯ
deception — ನಾ ಮೋಸ, ತೋಹು, ಚದಿ, ಉಕ್ಕಿವ, ಮುಸುಳು, ಕುಲ್ಲಿ
decide — ಕ್ರಿ ತೀರ್ಮಾನಿಸು, ತರಿಸಲಗೆಯ್ಯು
deciduous — ಗು ಎಲೆ ಕಳಲುವ (ಇದು ಚಳಿ ಗಾಲದಲ್ಲಿ ಎಲೆ ಕಳಲುವ ಮರ)
decision — ನಾ ತರಿಸಲು,ತೀರ್ಮಾನ (ಕೊನೆ ಗೂ ನಿಮ್ಮ ತೀರ್ಮಾನವೇನೆಂದು ತಿಳಿಸಿಲ್ಲ),ತೀರ್ಪು (ತೀರ್ಪುಗಾರ), ಗೊತ್ತು (ಗೊತ್ತು ವಳಿ)
decisive — ಗು ತೀರ್ಮಾನಿಸುವ, ಮನಗಾಣಿ ಸುವ
deck — ನಾ ಹಡಗಿನ ಅರೆ (ಮೇಲಿನ ಅರೆ, ಕೆಳಗಿನ ಅರೆ)
deck — ಕ್ರಿ ಉಡು, ತೊಡು
declaration — ನಾ ಹೇಳಿಕೆ, ಅರಿಕೆ
declare — ಕ್ರಿ ತೊಳಲು (ಬೇಡುವುದೆಲ್ಲವನ್ನೂ ಕೊಡುತ್ತೇನೆಂದು ತೊಳಲಿದವನು), ಹೇಳಿಕೆ ಕೊಡು
declination — ನಾ 1 ಇಳಿಜಾರು, ಇಳುಕಲು 2 ಅಲ್ಲಗಳೆತ
decline — ಕ್ರಿ 1 ಒಪ್ಪದಿರು (ಅವನ ಮಾತಿಗೆ ನಾನು ಒಪ್ಪಲಿಲ್ಲ) 2 ಬಾಗು, ಕಂತವಾಗಿರು
declivity — ನಾ ಇಳಿಜಾರು, ಕಂತ
decoct — ಕ್ರಿ ಕುದಿಸಿ ಇಂಗಿಸು (ಈ ಸೊಪ್ಪು ಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಇಂಗಿಸ ಬೇಕು)
decoction — ನಾಕಟ್ಟು (ತೊಗರಿ ಬೇಳೆಯ ಕಟ್ಟು; ಹುರುಳಿ ಕುದಿಸಿದ ಕಟ್ಟು)
decompose — ಕ್ರಿ ಕೊಳೆತುಹೋಗು
decompress — ಕ್ರಿ ಒತ್ತಡ ತೆಗೆ
decontrol — ಕ್ರಿ ಅಂಕೆ ತೆಗೆ ಕ್ರಿ ಪರಿ (ಪರಿವಡಿಸು), ಅಂದವಿಸು, ಸೀವು
decorated — ಗು ಕೆಯ್ದಿ (ಕೆಯ್ದಿ ಕೋಣೆ)
decoration — ನಾ ಪಣ್ಣುಗೆ
decorum — ನಾ ನೀರತೆ, ಹದನು
decoy — ನಾ ದೀವ (ದೀವದ ಬೇಟೆ), ತೋಹು
decrease — ಕ್ರಿ ಕುಂದು (ಕುಂದಿದ ತೊರೆ),ಕುಗ್ಗು (ಅದಟು ಕುಗ್ಗಿದ ಪಡೆಯಿಲ),ತವು (ತವದ ಮೆಚ್ಚುಗೆ), ತವುಂಕು
decree — ನಾ ತೀರ್ಪು, ಸೆಲವು (ಸೆಲವಿಕ್ಕು), ಬೆಸ (ಬೆಸಸು)
decrepit — ಗು ಸವಕಳಿ, ಸವಕಲು, ಹರುಕು ಮುರುಕು
decry — ಕ್ರಿ ಹೀಗಳೆ (ಎಲ್ಲರೂ ಆತನನ್ನು ಹೀಗಳೆಯುತ್ತಿದ್ದಾರೆ), ತೆಗಳು
decumbent — ಗು ಕೆಳಗೆ ಬಿದ್ದಿದ್ದ (ಕೆಳಗೆ ಬಿದ್ದಿದ್ದ ಕಟ್ಟಿಗೆಯನ್ನು ಎತ್ತಿಕೊಂಡು ಹೋದ)
dedicate — ಕ್ರಿ ಮುಡಿಪಾಗಿಡು (ಈ ತೋಟ ವನ್ನು ಅವಳ ನೆನಪಿಗಾಗಿ ಮುಡಿಪಾಗಿರಿಸಿ ದ್ದಾನೆ)
deduce — ಕ್ರಿ ತೀರ್ಮಾನಕ್ಕೆ ಬರು (ಅವನು ಹಣವನ್ನು ಹಿಂದಕ್ಕೆ ಕೊಡಲಿಕ್ಕಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದರು)
deduct — ಕ್ರಿ ಕಳೆ, ಮುರಿದುಕೊಳ್ಳು
deduction — ನಾ ಕಳಹ
deed — ನಾ ಕೆಲಸ, ಕೆಚ್ಚಿನ ಕೆಲಸ
deem — ಕ್ರಿ ಓರು, ಉನ್ನಿಸು, ತೀರ್ಮಾನಿಸು
deep — ಗು 1 ಕಡು (ಕಡುಕೆಂಪು, ಕಡುಹಸುರು) 2 ಆಳದ (ಆಳದ ಕೆರೆ)
deepen — ಕ್ರಿ ಆಳ ಹೆಚ್ಚಿಸು
deep place — ನಾ ಕೊಳ್ಳ (ಹಾದಿಯಲ್ಲಿ ಮುಳ್ಳಿಡಿದ ಕೊಳ್ಳವಿದೆ),ಗುಂಪು (ನೀರ ಗುಂಪು)
deer — ನಾಎರಳೆ,ಹುಲ್ಲ (ಹುಲ್ಲಗಳನ್ನು ಕೊಂದವನು ಸೆರೆಸಿಕ್ಕಿದ್ದಾನೆ), ಉಳೆ (ನಿನ್ನೆ ಉಳೆಗಳ ಹಿಂಡೇ ಬಂದಿತ್ತು)
deface — ಕ್ರಿ ಕೆಡಿಸು, ಅಳಿಸು
defalcation — ನಾ ತಪ್ಪುಬಳಕೆ, ಸೋರಿಕೆ
defamation — ನಾ ಕೊಂಡೆಯ, ತಳ್ಳಿ
defame — ಕ್ರಿ ಕೊಂಡಿಸು (ಆತನನ್ನು ಕೊಂಡಿಸಿ ನಿಮಗೇನಾಗಬೇಕಾಗಿದೆ?), ಹೆಸರು ಕೆಡಿಸು
default — ಕ್ರಿ ತೀರಿಕೆಯಲ್ಲಿ ತಪ್ಪು, ಮಾತು ತಪ್ಪು
defeat — ನಾ ಸೋಲುವೆ, ಸೋಲ್ಮ (ನಿಮಗೆ ಸೋಲ್ಮಲಿುಲ್ಲ),ಪಾಟಿ (ಆತನ ಪಾಟಿ ಯನ್ನು ಯಾರೂ ನೆನೆಸಿರಲಿಲ್ಲ),ಮುರಿತ, ಮುರಿಪು
defeat — ಕ್ರಿ (ಆ) ಸೋಲು (ಕಾಳಗದಲ್ಲಿ ಸೋತುಹೋದ) (ಮಾ) ಚಾಳಿಸು (ಅರಸ ನನ್ನು ಚಾಳಿಸಿ ತಾನೇ ಅರಸನಾದ), ಸೋಲಿಸು
defect — ನಾ ಕಸುಟು,ಕುಂದು (ಕುಂದಕ; ಕುಂದಿಡು; ಕುಂದುಕೊರತೆ; ಕುಂದುಗಳೆ; ಕುಂದುಗೆ),ಕುತ್ತ,ಕೋಡಿ (ಕೋಡಿಗಳೆ),ಕೊರೆ (ಕೊರತೆ - ಅವಳಲ್ಲಿ ಏನು ಕೊರತೆಲಿುದೆ?),ತಗುಸಿ (ನಿಮ್ಮ ಬರಹ ದಲ್ಲೂಂದು ತಗುಸಿಯಿದೆ), ಹೋಕು (ಹೋಕಿಲ್ಲದ ಕೆಲಸ), ಮುರುಕು
defend — ಕ್ರಿ 1 ಕಾಯು (ಕಾಪಾಡು) 2 ಬೆಂಬಲಿಸು, ಸರಿತೋರಿಸು
defense — ನಾ ಕಾಹು, ಕಾವಲು
defer — ಕ್ರಿ 1 ಮುಂದೂಡು, ತಳ್ಳು 2 ತಲೆ ಬಾಗು, ಒಪ್ಪಿಕೊಳ್ಳು
deference — ನಾ ಮಣಿತ, ತಕ್ಕಮೆ
defiance — ನಾ ಇದಿರೇಳುಹ, ಒಟ್ಟಿತನ
deficiency — ನಾ ಕಡಿಮೆ (ತಂದದ್ದು ಕಡಿಮೆ ಯಾಯಿತು), ಅರಕೆ (ಅವರ ಬಾಳುವೆ ಯಲ್ಲೇನೋ ಅರಕೆಯಾಗಿರಬೇಕು), ಕೊರತೆ (ಕೊರತೆಯಿಲ್ಲದ; ಕುಂದು ಕೊರತೆ); ಕೊರೆ (ಕೊರೆಬೀಳು; ಕೊರೆ ಯಕ್ಕಿ), ತವಿಲು (ತವಿಲಾಗು),ತೊಳ್ಳೆ
defilement — ನಾ ಎಂಜಲು (ಎಂಜಲಿಸು; ಎಂಜಲೆಲೆ; ಎಂಜಲುಗುಂಡಿ; ಹಾಲು ಕರುವಿನ ಎಂಜಲು),ಹೊಲೆ (ಹೊಲೆಗೆಡು; ಹೊಲೆಮನೆ)
define — ಕ್ರಿ 1 ಎಲ್ಲೆ ತೋರಿಸು 2 ಹುರುಳು ತಿಳಿಸು ಗು 1 ಕಂಡಿತ (ಅವನು ಕಂಡಿತ ಬಂದಾನು) 2 ಸರಿಯಾದ
definition — ನಾ ಹುರುಳು (ಆ ಪದದ ಹುರುಳೇನೆಂದು ಹೇಳಲು ಯಾರಿಗೂ ಬರುವುದಿಲ್ಲ)
deflate — ಕ್ರಿ ಗಾಳಿತೆಗೆ, ಕಡಿಮೆಮಾಡು
deflect — ಕ್ರಿ ದಾರಿತಪ್ಪು, ಓಲು (ಓಲಿದ ಗುರಿ; ಓಲುವಿಕೆ), ಬಾಗು, ಓರೆಯಾಗು
deflection — ನಾ ಬಳವು, ಬಾಗುಹ
defoliate — ಕ್ರಿ ಸೊಪ್ಪುಕಳೆ
deforest — ಕ್ರಿ ಕಾಡುಕಡಿ
deform — ಕ್ರಿ ಕೊಂಕು (ಕೊಂಕಿದ ಕಾಲು), ಅಂದಗೆಡು (ಅಂದಗೆಟ್ಟ ಮೋರೆ; ಅಂದ ಗೇಡಿ)
deformed — ಗು ಸೊಟ್ಟ (ಸೊಟ್ಟ ಕಯ್; ಸೊಟ್ಟ ಗೆರೆ; ಸೊಟ್ಟ ಮೋರೆ)
defraud — ಕ್ರಿ ಮೋಸಮಾಡು, ಎಡ್ಡು ಮಾಡು
defray — ಕ್ರಿ ಬೆಲೆತೆರು
deft — ಗು ಚುರುಕು (ಚುರುಕು ಬೆರಳು)
defunct — ಗು ಬಳಸದ (ಬಳಸದ ಕಟ್ಟಡ), ನಿಂತುಹೋದ, ತೀರಿದ, ಸತ್ತ
degenerate — ಕ್ರಿ ಇದಿರಿಸು, ಹೊರೆಯೇರು, ಆರು
degrade — ಕ್ರಿ ಮಟ್ಟ ಕೆಳಗಾಗು, ಮುದಿಪು ಕೆಡು
degraded — ಗು ಕಳಪೆ (ಕಳಪೆ ಅಕ್ಕಿ)
degree — ನಾ 1 ಮಟ್ಟ, ಹಂತ 2 ಪಟ್ಟ (ಕಲಿಕೆಯ ಪಟ್ಟ)
dehumidify — ಕ್ರಿ ತೇವಕಳೆ (ಈ ಕೋಣೆಯ ಗಾಳಿಯಿಂದ ತೇವಕಳೆಯಲಾಗುತ್ತದೆ)
dehydrate — ಕ್ರಿ ಒಣಗಿಸು, ತೇವಕಳೆ
deify — ಕ್ರಿ ಕಡವನಾಗಿಸು
deign — ಕ್ರಿ ಕನಿಕರಿಸು
deity — ನಾ ಕಡವ, ದೇವರು
deject — ಕ್ರಿ ಕೊರಗು, ಎದೆಗುಂದು (ಎದೆಗುಂದಿ ದವನಾಗಿ ತಲೆಯ ಮೇಲೆ ಕಯ್ಹೊತ್ತು ಕುಳಿತಿದ್ದ)
delay — ನಾ ತಡ (ತಡಮಾಡಿ ಬರು; ತಡ ವಾಗು), ತಗಹು (ತಗಹಿನಲ್ಲಿ ಸಿಲುಕು), ತಮ್ಮಡ (ತಮ್ಮಡವಾಗು), ಮಸಲು (ಮಸ ಲಾಗು), ತಳುಗು
delay — ಕ್ರಿ ಹೊತ್ತುಮಾಡು, ತಡಮಾಡು, ನೀಡಿರು (ನೀಡಿರದೆ ಬಂದ)
delectable — ಗು ಒಸೆವ, ನೊಚ್ಚಗಿನ, ಸೊಗ ಸಾದ, ತುಂಬಾ ಸವಿಯಾದ
delegate — ನಾ ಅಡರ್ಪು (ನಮ್ಮ ಅಡರ್ಪಾಗಿ ಈತ ನಿಮ್ಮೊಂದಿಗೆ ಬರುತ್ತಾನೆ)
delegation — ನಾ ಅಡರ್ಪುತಂಡ
delete — ಕ್ರಿ ಹೊಡೆದುಹಾಕು, ತೆಗೆದುಹಾಕು, ಅಳಿಸು (ಬರೆದುದನ್ನು ಅಳಿಸು)
deleterious — ಗು ಗಾಸಿಗೊಳಿಸುವ, ತೊಂದರೆಯ
deliberate — ಕ್ರಿ ಮಾತುಕತೆನಡೆಸು, ಕೇಣ ಮಾಡು
deliberate — ಗು ಓರಿದ, ಉನ್ನಿಮಾಡಿದ (ಆತ ಸಾಕಷ್ಟು ಉನ್ನಿಮಾಡಿ ನಡೆಸಿಕೊಟ್ಟ ಕೆಲಸ)
deliberately — ಗು ಒಯ್ಯನೆ (ಕೆಳಗೆ ಇಳಿಯು ತ್ತಿರುವಾಗ ಆತ ಒಯ್ಯನೆ ಜಾರಿದ)
deliberation — ನಾ ಕೀಣ (ಕೀಣ ನಡೆಸು), ಕೇಣ (ಕೇಣ ಮಾಡಿ ಹೇಳು)
delicate — ಗು ನವುರು (ಆಕೆಯ ನವುರು ಕೂದಲಿಗೆ ಈ ಎಣ್ಣೆ ಹಿಡಿಸುವುದಿಲ್ಲ)
delicious — ಗು ತನಿ (ತನಿಬೆಲ್ಲ, ತನಿಹಾಲು; ತನಿಜೇನು; ತನಿಹಣ್ಣು)
delight — ನಾ ಸೊಗಸು (ಸೊಗಸು ಪಡೆ),ನಲಿವು (ನಲಿವಿನಿಂದ ಕುಣಿ),ಒಚ್ಚತ (ಒಚ್ಚತಗೊಂಡು ಉಲಿವ ಕೋಗಿಲೆ) ಕ್ರಿ ಒಸೆ (ಅವನು ನಿಮಗೆ ಒಸೆದಿ ದ್ದಾನೆ), ನಲವೆರು
delimit — ಕ್ರಿ ಎಲ್ಲೆಕಟ್ಟು, ಗಡುವಿಡು
delinquent — ನಾ 1 ತಪ್ಪಿದವ 2 ಸೆರೆಗ
delirium — ನಾ ಅರವುರ, ಪಸಿಯಿಸುಗೆ
deliver — ಕ್ರಿ 1 ತಲಪಿಸು (ಈ ಕಟ್ಟನ್ನು ಅವರಿಗೆ ತಲಪಿಸಬೇಕು), ಮುಟ್ಟಿಸು, ಒಯ್ಯು (ಇದನ್ನು ಅವರಲ್ಲಿಗೆ ಒಯ್ಯುವುದು ಯಾರು?) 2 ಹೆರು (ಗಂಡು ಮಗುವನ್ನು ಹೆತ್ತವಳು)
deliverance — ನಾ ಬಿಡುಗಡೆ, ಎತ್ತುಗಡೆ
delivery — ನಾ 1 ತಲಪಿಸುವುದು 2 ಬೆಸಲು (ಬೆಸಲಾಗು), ಸೂಲು (ಸೂಲಗಿತ್ತಿ; ಸೂಲ ಮನೆ; ಸೂಲ್ಮುಲುಕು; ಸೂಲಿಸು), ಹೆರಿಗೆ (ಹೆರಿಗೆ ಮನೆ)
dell — ನಾ ಚಿಕ್ಕ ಕಣಿವೆ
delouse — ಕ್ರಿ ಸೀರು, ಈರು (ಆಕೆ ತನ್ನ ಕೂದಲನ್ನು ಈರುತ್ತಿದ್ದಾಳೆ)
delta — ನಾ ನಡುಗಡ್ಡೆ
delude — ಕ್ರಿ ಮರುಳುಮಾಡು (ಅವನು ಹಲವರನ್ನು ಮರುಳುಮಾಡಿ ಹಣ ದೋಚಿ ದ್ದಾನೆ), ದಾರಿತಪ್ಪಿಸು
deluge — ನಾ 1 ದೊಡ್ಡನೆರೆ, ದೊಡ್ಡಮಳೆ 2 ನುಗ್ಗಾಟ
delusion — ನಾ ಮರುಳು (ಮರುಳಾಗು; ಮರುಳುಮಾಡು),ಮಚ್ಚು (ಮಚ್ಚುಮದ್ದು)
delve — ಕ್ರಿ ಅರಸು, ಆರಯ್ಯು
demand — ನಾ ಬೇಡಿಕೆ (ಬೇಡಿಕೆ-ನೀಡಿಕೆ), ಕೋರಿಕೆ (ನಿಮ್ಮ ಕೋರಿಕೆಯೇನೆಂಬುದನ್ನು ಅವರಿಗೆ ತಿಳಿಸಿ
demarcate — ಕ್ರಿ ಎಲ್ಲೆಕಟ್ಟು, ಎಲ್ಲೆ ಗುರುತಿಸು
demean — ಕ್ರಿ ಕೀಳಾಗಿಸು
demeanour — ನಾ ನಡತೆ
demented — ಗು ಹುಚ್ಚು, ಅರಿವುಕೆಟ್ಟ
demerit — ನಾಕುಂದು, ಕೊರತೆ
demi- — ಗು ಅರೆ, ಕಡಿಮೆಯ
demise — ನಾ ಅಳಿವು, ಸಾವು
demit — ಕ್ರಿ ಕೆಲಸ ತೊರೆ, ಕೆಲಸ ಬಿಟ್ಟುಕೊಡು
demobilize — ಕ್ರಿ ಪಡೆಬಿಡು (ಪಡೆ ಬಿಟ್ಟಮೇಲೆ ಆತ ಮನೆಗೆ ಹಿಂದಿರುಗಿದ)
democracy — ನಾ ಆಳಾಳ್ವಿಕೆ, ಮಂದಿ ಯಾಳ್ವಿಕೆ
demolish — ಕ್ರಿ ಕೆಡವು (ಹಳೇ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುತ್ತಿದ್ದಾರೆ), ಉರುಳಿಸು
demon — ನಾಪೇತು, ಹೇದೆ, ಹೇಕುಳಿ,ಚಾತ (ಕುಟ್ಟಿಚಾತ), ಮಬ್ಬಿಗ, ಸಿಗ್ಗಿಗ
demonstrate — ಕ್ರಿ ತೋರಿಸಿಕೊಡು, ತೋರ್ಪಡಿಸು
demoralize — ಕ್ರಿ 1 ಗೊಂದಲಗೊಳಿಸು 2 ಎದೆಗುಂದಿಸು
demur — ಕ್ರಿ ಹಿಂಜರಿ, ಹಿಮ್ಮೆಟ್ಟು, ಅಡ್ಡಿಹೇಳು
demure — ಗು ಸಿಗ್ಗಿನ, ತಣಿಯ
den — ನಾ ಗವಿ, ತೊರೆ
denial — ನಾ ಅಲ್ಲಗಳೆತ
denigrate — ಕ್ರಿ ಕೊಂಡಿಸು, ಹಳಿ, ಹೆಸರು ಕೆಡಿಸು
denizen — ನಾ ನೆಲಸುಗ
denominate — ಕ್ರಿ ಹೆಸರಿಸು ನಾ 1 ಹೆಸರು 2 ಬಗೆ, ಪಂಗಡ
denote — ಕ್ರಿ ತೋರಿಸು, ಗುರುತಿಸು, ಹುರು ಳಾಗಿರು
denounce — ಕ್ರಿ ಹಳಿ, ತೆಗಳು, ತಪ್ಪು ಹೊರಿಸು
dense (be) — ಕ್ರಿ ಕಿಕ್ಕಿರಿ (ಕಿಕ್ಕಿರಿದಿರುವ ಗುಡಿಸಲುಗಳು), ತಿಣಿ
dense — ನಾ ಹೆಡ್ಡ, ಗಾಂಪ
dense — ಗು ದಟ್ಟ (ದಟ್ಟವಾದ ನೆರಳು, ದಟ್ಟ ಕೂದಲು; ದಟ್ಟಕತ್ತಲೆ; ದಟ್ಟಯಿಸು), ಪಪ್ಪಕ, ಪಂಪಕ (ಪಂಪಕವಾದ ಗಿಡಬಳ್ಳಿ ಗಳು), ಅಡುವು (ಸಸಿಗಳು ಅಡುವಾಗಿರ ಬಾರದು)
density — ನಾ ತಿಣ್ಮೆ
dent — ಕ್ರಿ ನಗ್ಗು (ಕೆಳಗೆ ಬಿದ್ದು ಕೊಡ ನಗ್ಗಿ ಹೋಗಿದೆ)
dental — ಗು ಹಲ್ಲಿನ (ಹಲ್ಲಿನ ಸವೆತ)
dentifrice — ನಾ ಹಲ್ಲುಪುಡಿ
dentist — ನಾ ಹಲ್ಲುಮಾಂಜುಗ
dentistry — ನಾ ಹಲ್ಲರಿಮೆ
denture — ನಾ ಇಟ್ಟಹಲ್ಲು, ಕಟ್ಟುಹಲ್ಲು
denude — ಕ್ರಿ ಬತ್ತಲೆಯಾಗು, ಬಟ್ಟೆಬಿಚ್ಚು, ಸುಗಿ, ಸುಲಿ
denunciation — ನಾ ತಪ್ಪು ಹೊರಿಸುವಿಕೆ, ತೆಗಳಿಕೆ
deny — ಕ್ರಿ ಅಲ್ಲಗಳೆ (ನೀನು ನನ್ನ ಮಾತನ್ನು ಅಲ್ಲಗಳೆಯಬಾರದು), ಸವೆಗಳೆ
deodorize — ಕ್ರಿ ನಾತಕಳೆ, ಕಂಪುಕಳೆ
depart — ಕ್ರಿ 1 ತೊಲೆ (ತೊಲಗು - ನೀವಿಲ್ಲಿ ನಿಲ್ಲದೆ ತೊಲಗಿ ಎಂದರು), ತೆರಳು (ಅವನ ಲ್ಲಿಂದ ಆಗಲೆೀ ತೆರಳಿದ್ದ), ಹೊರಟು ಹೋಗು, ಕಾಲುಕೀಳು (ಅವನು ಹೆದರಿ ಅಲ್ಲಿಂದ ಕಾಲುಕಿತ್ತ) 2 ಸರಿ (ಪಕ್ಕಕ್ಕೆ ಸರಿ)
departed — ಗು 1 ಹೊರಟುಹೋದ 2 ತೀರಿಹೋದ
department — ನಾ ಕವಲು
department store — ನಾ ಕವಲಂಗಡಿ
departure — ನಾಹೋಗುಹ (ಈ ಗಾಡಿಯ ಹೋಗುಹ ಎಷ್ಟು ಹೊತ್ತಿಗೆ?),ತೆರಳಿಕೆ, ಬಿಡುವುದು, ಹೊರಡುಹ
depend — ಕ್ರಿ ನಂಬಿರು (ನಾವೆಲ್ಲರೂ ನಿಮ್ಮನ್ನೇ ನಂಬಿದ್ದೇವೆ), ನೆಚ್ಚು (ಆತನನ್ನು ನೆಚ್ಚಿ ಇಲ್ಲಿಗೆ ಬಂದು ತಪ್ಪು ಮಾಡಿದೆವು)
dependable — ಗು ನಂಬಿಗಸ್ತ, ನಂಬಬಲ್ಲ, ನಂಬತಕ್ಕ (ಆತ ನಂಬತಕ್ಕ ಆಳಲ್ಲ), ತೇಳಿದ
dependent — ನಾಹೊರಕುಳಿ (ನಿಮಗೆ ಹೊರಕುಳಿಗಳೆಷ್ಟು ಮಂದಿ?)
deplete — ಕ್ರಿ ಬರಿದುಮಾಡು, ಬರಿದಾಗು
deplore — ಕ್ರಿ ಹಲುಬು, ಗೋಳಾಡು
deploy — ಕ್ರಿ ಚದರಿನಿಲ್ಲು, ಹರಡಿನಿಲ್ಲು (ಪಡೆ ಯನ್ನು ಚದರಿನಿಲ್ಲಿಸಿದ)
deport — ಕ್ರಿ 1 ಹೊರಹಾಕು (ಆತನನ್ನು ನಾಡಿ ನಿಂದ ಹೊರಹಾಕಲಾಗಿದೆ), ಹೊರಗಟ್ಟು 2 ನಡೆದುಕೊಳ್ಳು
deportment — ನಾ ನಡತೆ
depose — ಕ್ರಿ ಕೆಳಗಿಳಿಸು (ಎಲ್ಲ ಸೇರಿ ಅರಸ ನನ್ನು ಕೆಳಗಿಳಿಸಿದರು)
deposit — ನಾ1 ಮುಂಗಡ (ಮುಂಗಡವಾಗಿ ಇನ್ನೂರು ರುಪಾಲಿು ಕೊಟ್ಟಿದ್ದೆ) 2 ಇಡು ಗಂಟು (ಅವನ ಇಡುಗಂಟು ಎµ್ಟದೆ?), ಇಡುಗೆ
deposit — ಕ್ರಿ ಬಚ್ಚು (ಅವನಿಗೆ ತಿಳಿಯದ ಹಾಗೆ ಇದನ್ನು ಬಚ್ಚಲು ನಿಮ್ಮಿಂದಾದೀತೋ?; ಬಚ್ಚಿಡು), ಇರಿಸು
deposition — ನಾ ಬರೆದ ಹೇಳಿಕೆ
depraved — ಗು ನಡತೆಗೆಟ್ಟ, ಕೆಟ್ಟುಹೋದ
deprecate — ಕ್ರಿ ಒಪ್ಪದಿರು, ಇದಿರಾಡು ಕ್ರಿ ಬೆಲೆ ಇಳಿ
depreciation — ನಾ ಇಳಿತಾಯ, ಸವೆಕಳಿ (ನೀವು ಸವೆಕಳಿ ಹಾಕಿದ್ದು ಯಾವ ಲೆಕ್ಕ ದಲ್ಲಿ?)
depredation — ನಾ 1 ಸುಲಿಗೆ, ಕೊಳ್ಳೆ 2 ಬೇಸರ, ಕೆಡುಹ
depress — ಕ್ರಿ 1 ತಗ್ಗಿಸು, ಬೆಲೆ ತಗ್ಗಿಸು 2 ಕೊರಗಿಸು, ಅಳಲಿಸು
depression — ನಾ1 ಕುಸಿತ (ಮನೆಯೆದುರು ಕುಸಿತ ಕಾಣಿಸುತ್ತದೆ) 2ತಗ್ಗು (ತಗ್ಗುನೆಲ; ತಗ್ಗುಗದ್ದೆ), ಹಳ್ಳ (ಹಳ್ಳಬೀಳು)
deprive — ಕ್ರಿ ತಪ್ಪಿಸು (ಅವನಿಗೆ ಹಣ ಸಿಗದ ಹಾಗೆ ತಪ್ಪಿಸಿದ್ದು ಯಾರು?), ಕಸಿದುಕೊಳ್ಳು
depth — ನಾಆಳ (ಮೀನುಗಳು ಆಳದಲ್ಲಿ ಮುಳುಗಿದುವು),ಗುಣ್ಪು (ಕೊಳಚೆ ನೀರಿ ನಲ್ಲಿ ಗುಣ್ಪಿದ್ದರೆ ಗೊತ್ತಾಗುವುದಿಲ್ಲ), ಗುಂಬು
deputation — ನಾ ಅಡರ್ಪು
depute — ಕ್ರಿ ಬದಲಿ ಕಳಿಸು (ನಿಮ್ಮ ಕೂಟಕ್ಕೆ ಅವರು ನನ್ನನ್ನು ಬದಲಿ ಕಳಿಸಿದ್ದಾರೆ)
deputy — ನಾ ಬದಲಾಳು, ನೆರವಿಗ
derail — ಕ್ರಿ ಹಳಿತಪ್ಪು, ದಾರಿಗೆಡು
deranged — ಗು ತಲೆಕೆಟ್ಟ, ಕೆದರಿದ
derelict — ಕ್ರಿ 1 ಗಮನ ತಪ್ಪು 2 ತೊರೆ (ಆತ ಕೆಲಸವನ್ನು ಅಲ್ಲೇ ತೊರೆದು ಹೋಗಿದ್ದ)
deride — ಕ್ರಿ ಕೊಕ್ಕರಿಸು, ಅಣಕಿಸು (ಅವನು ಯಾವಾಗಲೂ ನನ್ನನ್ನು ಅಣಕಿಸುತ್ತಿರು ತ್ತಾನೆ)
derivative — ನಾ ಪಡೆದ, ತೆಗೆದ
derive — ಕ್ರಿ (ಆ) ಪಡೆ, ಹುಟ್ಟು (ಮಾ) ತೆಗೆ
dermatology — ನಾ ತೊಗಲರಿಮೆ
derogatory — ಗು ಹೆಸರು ಕೆಡಿಸುವ, ಕೀಳು ಮಾಡುವ
desalinate — ಕ್ರಿ ಉಪ್ಪುಕಳೆ (ಅಲ್ಲಿ ಕಡಲನೀರಿನಿಂದ ಉಪ್ಪುಕಳೆದು ಅದನ್ನು ಕುಡಿಯಲು ಬಳಸುತ್ತಾರೆ)
descend — ಕ್ರಿ ಇಳಿ (ಕೆರೆಗೆ ಇಳಿ; ನೀರಿಳಿಯದ ಗಂಟಲು), ತೆಂಗು
descent — ನಾಇಳಿಕೆ, ಇಳಿತ, ತೆಂಗುಹ
describe — ಕ್ರಿ ಕೊಗೆ (ಆತ ಎಲ್ಲವನ್ನೂ ಚನ್ನಾಗಿ ಕೊಗೆದಿದ್ದಾನೆ; ಕೊಗೆತ)
descriptive — ಗು ಕೊಗೆಯುವ (ಕೊಗೆಯುವ ಸೊಲ್ಲರಿಮೆ)
descry — ಕ್ರಿ ಕಾಣು, ಕಾಣಿಸು (ಆತನಿಗೆ ಎಷ್ಟು ದೂರ ಇರುವಾಗಲೂ ಕಾಣಿಸುತ್ತದೆ), ತುಬ್ಬು
desert — ನಾಮರಳುಗಾಡು (ಮರಳುಗಾಡಿನಲ್ಲಿ ಸಾಗಲು ಒಂಟೆ ಬೇಕು)
desert — ಕ್ರಿ ಕಲಿ್ಬುಡು (ಅವನು ನನ್ನನ್ನು ನಡು ನೀರಿನಲ್ಲಿ ಕಲಿ್ಬುಟ್ಟ), ಬಿಟ್ಟುಹೋಗು
deserving — ಗು ತಕ್ಕ (ಈ ಕೆಲಸಕ್ಕೆ ಅವನೇ ತಕ್ಕ ಹುಡುಗ)
desiccate — ಕ್ರಿ ಇಂಗಿಸು, ಬತ್ತಿಸು (ಹಾಲು ಬತ್ತಿಸಿ ಪಡೆದ ಹಾಲಿನ ಹುಡಿ)
desideratum — ನಾ ಬೇಕಾದುದು, ಬಯಸಿ ದುದು
design — ನಾ ಈಡು, ಹಮ್ಮುಗೆ, ಹಂಚಿಕೆ
design — ಕ್ರಿ ಹಮ್ಮಿಕೊಳ್ಳು
designate — ಕ್ರಿ 1 ಹೆಸರಿಸು, ಹೆಸರಿಡು 2 ಗೊತ್ತುಮಾಡು, ಆರಿಸು
designation — ನಾ ಕೆಲಸ (ಅವನು ಯಾವ ಕೆಲಸದಲ್ಲಿದ್ದಾನೆ?)
designedly — ಗು ಬೇಕೆಂದೇ (ಅವನು ಬೇಕೆಂದೇ ಅಲ್ಲಿಗೆ ಹೋಗಿದ್ದಾನೆ)
desirable — ಗು ಪಡೆಯಬಹುದಾದ, ಒಪ್ಪ ಬಲ್ಲ
desire — ನಾ ಹಂಬಲ (ಆತನಿಗೆ ಮನೆಯ ಹಂಬಲ),ತೆವಲು (ಹೊಗೆ ಸೇದುವ ತೆವಲು),ಬಯಕೆ (ಆತನ ಬಯಕೆ ತೀರ ಲಿಲ್ಲ),ಮುಗುಸು (ನಿಮ್ಮ ಮುಗುಸೇನು ಹೇಳಿ), ಅಳಿಪು, ಎರವು, ಕಡ್ಡಿ (ಕಡ್ಡಿಕಾರ), ಕಡುಗು, ನಸೆ (ನಸೆಯ ಮಾತು, ನಸೆಗಾರ) ಕ್ರಿ ಹಾರಯ್ಸು (ಎಲ್ಲರಿಗೂ ಒಳ್ಳೆಯ ದನ್ನೇ ಹಾರಯ್ಸಿದೆ; ಹಾರಯ್ಕೆ), ಹಾರು, ಬಯಸು (ಬೇರೆಯವರ ಕೇಡನ್ನು ಬಯಸ ದಿರು), ಕಡುಗು, ಕೋರು (ಕೋರಿಡು; ಕೋರಿಕೆ), ಅಲವರಿಸು, ಆಟಿಸು (ನೆಗಳ್ತೆ ಗಾಟಿಸಿ ಏನೇನೋ ಮಾಡುತ್ತಿದ್ದಾನೆ), ಎಳಸು (ಕಂಡದ್ದೆಲ್ಲ ಬೇಕೆಂದು ಎಳಸುವ ಹುಡುಗ), ಒಲ್ಲು (ಕೇಳಲೊಲ್ಲೆ), ಪದೆ (ಎಲ್ಲಿಗೋ ಹೋಗಬೇಕೆಂದು ಪದೆದಿ ದ್ದಾನೆ)
desist — ಕ್ರಿ ಮಾಣು (ಮಾವಿನ ಮರ ಮಾಣದೆ ಸವಿಯನ್ನು ಕೊಡುತ್ತದೆ), ತಡೆದುಕೊಳ್ಳು, ಮಾಡದಿರು, ತಡೆಹಿಡಿ, ಹಿಂದೆಗೆ
desolate — ಗು ಹಾಳುಬಿದ್ದ, ಯಾರೂ ಇಲ್ಲದ, ಬಿಟ್ಟುಹೋದ
despair — ನಾ ಸಿಡಿ (ಸಿಡಿಮಿಡಿಗೊಳ್ಳು), ಸೆಡೆ (ಸೆಡೆವಡೆ), ಅಳುಕು
despair — ಕ್ರಿ ಮುಂಗೆಡು (ತನ್ನ ಕೆಲಸ ನಡೆಯುವುದಿಲ್ಲವೆಂದು ಮುಂಗೆಟ್ಟು ಎಲ್ಲೂ ಹೋಗದೆ ಕುಳಿತಿದ್ದಾನೆ), ಎದೆಗುಂದು, ನಂಬಿಕೆಯಳಿ
desperate — ಗು ಕಟ್ಟಲೆತಪ್ಪಿದ, ನಂಬಿಕೆ ಯಳಿದ
despicable — ಗು ಕುಚ್ಚಣೆಯ, ಅಳಿ ಗೊಳಿಸುವ
despise — ಕ್ರಿ ಆಳಿಗೊಳ್ಳು (ನಿನ್ನ ಕೆಲಸ ಅವರನ್ನು ಆಳಿಗೊಳಿಸಿದೆ), ಕಡೆಗಣಿಸು, ಜಂಕಿಸು (ಜಂಕಿಸಿ ಮಾತನಾಡು)
despite — ನಾ ಹೊಟ್ಟೆಕಿಚ್ಚು, ಕುಚ್ಚಣೆ
despoil — ಕ್ರಿ ಕೊಳ್ಳೆಹೊಡೆ, ದೋಚು
despond — ಕ್ರಿ ನಂಬಿಕೆಯಳಿ, ಎದೆಗುಂದು
dessert — ನಾ ಸಿಹಿ ಉಣಿಸು, ಇನ್ನುಣಿಸು (ಊಟದ ಕೊನೆಗೆ ಇನ್ನುಣಿಸು ಕೊಟ್ಟರು)
destination — ನಾತಲಪುದಾಣ, ಗುರಿ
destine — ಕ್ರಿ ತರಿಸಲ್ಲು, ಗೊತ್ತುಪಡಿಸು
destiny — ನಾ ಹಣೆಬರಹ
destitute — ನಾ ಪಂಜೆ, ಇಲ್ಲದವನು, ಕಡು ಬಡವ, ಬದಗ, ಕೀಳಾಳು
destitution — ನಾ ಇಲ್ಲದತನ
destroy — ಕ್ರಿ (ಆ) ಸಮೆ (ಸಮೆದ ಗಾಲಿ), ಅಳರು (ಸಿಡಿಲು ಬಿದ್ದ ಮರ ಅಳರಿದೆ), ಪುಚ್ಚಳಿ (ಬಿರುಗಾಳಿಗೆ ಸಿಲುಕಿ ಪುಚ್ಚಳಿದ ಬಾಳೆಯ ತೋಟ) (ಮಾ) ಸಮಯಿಸು, ಅಲೆಮಾಡು (ನಾಡನ್ನೆಲ್ಲ ಅಲೆಮಾಡು ತ್ತಿದ್ದಾರೆ), ಅಸಗಳಿ, ಒಕ್ಕಳಿಸು, ತವಳಿಸು (ಮಕ್ಕಳು ಬಟ್ಟೆಗಳನ್ನೆಲ್ಲ ತವಳಿಸಿಕೊಂಡಿ ದ್ದಾರೆ), ಹಾಳುಮಾಡು, ಕೆಡಿಸು (ಅಂದಗೆಡಿಸು, ನಾಣ್ಗೆಡಿಸು), ಮುಳುಗಿಸು (ನಾಡನ್ನೇ ಮುಳುಗಿಸಿದವರು), ಜರುಗು, ಮಳ್ಗು
destroyer — ನಾ ಅಳಿಪ (ಆತನೊಬ್ಬ ಈ ಊರಿನ ಅಳಿಪ), ಕೆಡಿಕ (ಬಾಳ್ಗೆಡಿಕ)
destruction — ನಾಚಟ್ಟು (ಅದು ಚಟ್ಟಾ ಯಿತು; ಅವನನ್ನು ಚಟ್ಟು ಮಾಡಿದರು),ಬೀಸರ (ಬೀಸರಹೋಗು), ಮುಳುವು (ಅವಳ ಚೆಲುವೇ ಅವಳಿಗೆ ಮುಳುವಾಗಿದೆ),ಮುರಿವು,ಕೂರ್ಪು (ಆತನ ಕೂರ್ಪನ್ನು ನೋಡ ಲಾಗುವುದಿಲ್ಲ),ಕೆಡುಹ
desuetude — ನಾ ಬಳಕೆಯಲ್ಲಿಲ್ಲದುದು
desultory — ಗು ತಗಹುತಪ್ಪಿದ, ಹೊಂದಿ ಕೊಳ್ಳದ
detach — ಕ್ರಿ ಬೇರ್ಪಡಿಸು, ಕಳಚು (ಕತ್ತಿಯ ಹಿಡಿಯನ್ನು ಕಳಚಿಟ್ಟಿದ್ದಾರೆ), ಬಿಡಿಸು
detail — ನಾಆಯ (ಆಯವರಿತು ಮಾತನಾಡ ಬೇಕು)
detail — ಕ್ರಿ ಕೊಗೆ (ಎಲ್ಲವನ್ನೂ ಕೊಗೆದು ಹೇಳಿದ)
detain — ಕ್ರಿ ತಡೆ (ತಡೆಹಿಡಿ - ಆತನನ್ನು ಎರಡು ತಿಂಗಳುಗಳಿಗೆ ತಡೆಹಿಡಿದಿದ್ದರು), ಉಳಿಸಿಕೊಳ್ಳು, ಸೆರೆಯಲ್ಲಿಡು
detection — ನಾ ತುಬ್ಬು (ತುಬ್ಬಾಗು; ತುಬ್ಬು ಮಾಡು; ತುಬ್ಬುಹಚ್ಚು)
detective — ನಾ ತುಬ್ಬುಗಾರ (ತುಬ್ಬುಗಾರಿಕೆ)
detente — ನಾ ಹಗೆತನ ಕುಂದಿಸು
detention — ನಾ ಸೆರೆ (ಅವರಿಬ್ಬರೂ ಸೆರೆಯ ಲ್ಲಿದ್ದಾರೆ), ತಡೆಹಿಡಿತ
deter — ಕ್ರಿ ಹಿಂತೆಗೆ, ಹಿಂಜರಿ, ತಡೆ (ಅಲ್ಲಿಗೆ ಹೋಗದ ಹಾಗೆ ನನ್ನನ್ನು ಹೆದರಿಸಿ ತಡೆ ದಿದ್ದರು)
detergent — ಗು ಮಡಿಮಾಡುವ, ತೊಳೆ ಯುವ
deteriorate — ಕ್ರಿ ಹದಗೆಡು (ಅವನ ಗೊತ್ತು ಪಾಡು ಹದಗೆಟ್ಟಿದೆ) ಕ್ರಿ ಕೆಡುಕು ಹೆಚ್ಚು
determination — ನಾ ಪಟ್ಟು (ಆತ ತನ್ನ ಪಟ್ಟನ್ನು ಸಡಿಲಿಸಲಿಲ್ಲ), ತರಿಸಲು
determine — ಕ್ರಿ ತರಿಸಲಿಸು,ಗೊತ್ತುಪಡಿಸು, ಕಂಡುಹಿಡಿ, ನಿವರು
deterrent — ಗು ತಡೆಯುವ
detest — ಕ್ರಿ ಹೇಸು (ಅಲ್ಲಿಗೆ ಹೋಗಲು ಆತ ಹೇಸುತ್ತಾನೆ)
detonate — ಕ್ರಿ ಸಿಡಿಸು
detour — ನಾ ಬಳಸುದಾರಿ (ಮುಂದೆ ಒಂದು ಬಳಸುದಾರಿಯಿದೆ), ಸುತ್ತುದಾರಿ
detract — ಕ್ರಿ ದಾರಿತಪ್ಪಿಸು (ಅವನನ್ನು ಹೀಗೆ ದಾರಿತಪ್ಪಿಸಿದ್ದು ಯಾವುದು?)
detriment — ನಾ ಎರವು, ಕೇಡು
devalue — ಕ್ರಿ ಬೆಲೆತಗ್ಗಿಸು
devastate — ಕ್ರಿ ಅಳಿಸು, ಹಾಳುಮಾಡು, ಹಾಳುಗೆಡವು
develop — ಕ್ರಿ ತನಿ (ಚನ್ನಾಗಿ ತನಿದಿರುವ ಕಬ್ಬು), ಬೆಳೆ (ಬೆಳೆದ ತೆನೆ), ಸಾಗು (ಸಾಗಿಸು - ಹೊಲವನ್ನು ಸಾಗಿಸು)
development — ನಾ1 ಬೆಳವಣಿಗೆ (ಸರಿ ಯಾಗಿ ಮಗುವಿನ ಬೆಳವಣಿಗೆಯಾಗಿಲ್ಲ), 2 ಏಳಿಗೆ, ಬೇಳು
deviate — ಕ್ರಿ ದಾರಿತಪ್ಪು, ಬದಿಗೆ ತಿರುಗು
deviation — ನಾಬಳಸುದಾರಿ, ಅಡ್ಡದಾರಿ (ಹುಡುಗ ಅಡ್ಡದಾರಿ ಹಿಡಿದಿದ್ದಾನೆ)
device — ನಾ ಸೂಟಿ,ಚೂಟಿ (ನೀರೆತ್ತಲು ಆತ ನೊಂದು ಚೂಟಿಯನ್ನು ಮಾಡಿಕೊಂಡಿ ದ್ದಾನೆ)
devil — ನಾ ಮರಳು (ಮರಳುಗಳ ತಂಡ), ಗಾಳಿಗ (ಗಾಳಿಗನ ತೊಂದರೆ), ಗುಮ್ಮ (ಗುಮ್ಮನನ್ನು ಕರೆಯುತ್ತೇನೆಂದು ಮಕ್ಕಳನ್ನು ಹೆದರಿಸಬಾರದು), ಗುಮ್ಮಡಿ
devious — ಗು ಬಳಸು, ಸುತ್ತುವ, ಮೋಸದ, ಚದಿಯ
devise — ನಾ ಹಮ್ಮುಗೆ
devoid — ಗು ಇಲ್ಲದ, ಟೊಳ್ಳು
devolve — ಕ್ರಿ ದಾಟಿಸು, ಒಪ್ಪಿಸು (ಕೆಲಸಗಳ ನ್ನೆಲ್ಲ ಇನ್ನೊಬ್ಬನಿಗೆ ಒಪ್ಪಿಸಿ ಬಂದಿದ್ದಾನೆ)
devote oneself — ಕ್ರಿ ತಲೆಕೊಡು
devotee — ನಾ ಮೊರೆಗ, ಹಿಂಬಾಲಕ
devotion — ನಾ ಮುಡಿಪು, ಮೆಚ್ಚು, ಮೊರೆ, ಬೇಡಿಕೆ, ನೇರ್ಪು
devour — ಕ್ರಿ ಮುಕ್ಕು, ಗಬಗಬನೆ ತಿನ್ನು, ಹಾಳು ಮಾಡು
dew — ನಾಮಂಜು (ಮಂಜು ಮುಸುಕಿ ಮುಂದೆ ಹೋಗಲು ದಾರಿ ಕಾಣಿಸುವುದಿಲ್ಲ),ಇಬ್ಬನಿ (ಇಬ್ಬನಿ ಬಿದ್ದು ಒದ್ದೆಯಾಗಿದೆ)
dewdrop — ನಾ ಇಬ್ಬನಿ
dexterity — ನಾ ಕಯ್ಚಳಕ (ಕಯ್ಚಳಕ ಬಾಯ್ಚಳಕಗಳಿಂದ ಸಾಕಶ್ಟು ಹಣ ಮಾಡಿದ)
dextral — ಗು ಬಲಮುರಿ
diabolic — ಗು ಮರುಕವಿಲ್ಲದ, ಕೇಡಿನ
diadem — ನಾ ಹಣೆಪಟ್ಟಿ
diagnose — ಕ್ರಿ ಕುತ್ತ ತಿಳಿ, ಕುತ್ತ ಒರೆ
diagnosis — ನಾ ಕುತ್ತದೊರೆತ
dialect — ನಾ ಆಡುನುಡಿ, ಒಳನುಡಿ (ಕನ್ನಡಕ್ಕೆ ಕರಾವಳಿ ಮತ್ತು ಒಳನಾಡುಗಳೆಂಬ ಎರಡು ಮಲ್ಲ ಒಳನುಡಿಗಳಿವೆ)
dialogue — ನಾ ಮಾತುಕತೆ, ಸೂಳುನುಡಿ (ಇಬ್ಬರ ನಡುವಿನ ಸೂಳುನುಡಿ)
diameter — ನಾಅಡ್ಡಳತೆ,ಅಡ್ಡಗಲ (ಈ ಗಾಲಿಯ ಅಡ್ಡಗಲ ಎµ್ಟದೆ?)
diary — ನಾ ನಾಳ್ಕಡತ, ನಾಳ್ಬರಪ ನಾ ಕಿನಿಸುಮಾತು, ಸಿಟ್ಟಿನ ಮಾತು
dice — ನಾ ಪಗಡೆ (ಪಗಡೆಯಾಟ)
dictate — ಕ್ರಿ 1 ಹೇಳಿಬರೆಸು (ಅವನ ಬರಹ ಗಳೆಲ್ಲ ಹೇಳಿಬರೆಸಿದವು) 2 ಕಟ್ಟಲೆಯಿಡು
dictator — ನಾ ಕಟ್ಟಾಣ್ಮ
diction — ನಾ ಮಾತುಗಾರಿಕೆ, ಬರಹಗಾರಿಕೆ
dictionary — ನಾ ಪದನೆರಕೆ
dictum — ನಾ ನಾಣ್ಣುಡಿ, ಗಾದೆಮಾತು
didactic — ಗು ಕಲಿಕೆಯ
didactics — ನಾ ಕಲಿಕೆಯರಿಮೆ
die — ಕ್ರಿ ಸಾಯು (ಸತ್ತುಹೋಗು, ಸಾಯಬಡಿ), ಸಲ್ಲು (ಆತ ಸಂದ ಬಳಿಕ), ಬರ್ದು (ಬರ್ದಿದ ಹುಡುಗ; ಬರ್ದಿಲ), ಮಡಿ (ಮಡಿದವರು; ಮಡುಹು; ಮಡಿಲಿುಸು), ಅದ್ದು, ಹೊಂದು (ಮರಳಿ ಹುಟ್ಟಿ ಮರಳಿ ಹೊಂದಿ ತೊಳಲಿ ದವನು; ಆತನಿಗೆ ಹುಟ್ಟೂ ಇಲ್ಲ ಹೊಂದೂ ಇಲ್ಲ), ತೀರು (ತೀರಿಹೋಗು; ತೀರಿ ಕೊಳ್ಳು)
diet — ನಾ ತಿನಿಸು, ತೀನಿ, ಕಟ್ಟಳೆಯ ತಿನಿಸು
differ — ಕ್ರಿ (ಆ) ಬೇರೆಯಾಗಿರು, ಹೋಲದಿರು (ಮಾ) ಒಪ್ಪದಿರು
difference — ನಾ ಗೆಂಟು (ನಮ್ಮ ನಿಮ್ಮೊಳಗೆ ಗೆಂಟಿಲ್ಲ), ಬೇರ್ಪಡುಗೆ
different — ಗು ಬೇರೆ (ಬೇರೊಬ್ಬರು ಬಂದಿ ದ್ದಾರೆ; ಅವನದು ಬೇರೆಯೇ ಹೇಳಿಕೆ)
differentiate — ಕ್ರಿ ಬೇರ್ಪಡಿಸು (ಅವೆರಡನ್ನು ಬೇರ್ಪಡಿಸಿ ತೋರಿಸಿರಿ), ಗಂಟು ಕಾಣಿಸು
difficult — ಗು ತೊಡಕಿನ (ಅವನಿಗೆ ತುಂಬಾ ತೊಡಕಿನ ಕೆಲಸ ಕೊಟ್ಟಿದ್ದಾರೆ), ಕಟ್ (ಕಟ್ಟೆಸಕ), ಗೊಡ್ಡ, ಸುಬ್ಬಲು, ಸಿಕ್ಕಲು (ಸಿಕ್ಕಲು ಬರಹ)
difficulty — ನಾತೊಂದರೆ, ತೊಡಕು (ಯಾವ ತೊಡಕೂ ಆತನನ್ನು ಹಿಂದೆಗೆಯುವಂತೆ ಮಾಡಲಿಲ್ಲ), ಇರಕಟ್ಟು
diffidence — ನಾ ನಂಬುಕೆಯಳಿತ, ಸಿಗ್ಗು
diffuse — ಕ್ರಿ ಹರಡು, ಚದುರು
dig — ಕ್ರಿ ತೋಡು (ಬಾವಿ ತೋಡು; ತೋಡು ದಾರಿ; ತೋಡುದೋಣಿ), ಅಗೆ (ಗುದ್ದಲಿ ಯನ್ನೆತ್ತಿ ಅಗೆಯತೊಡಗಿದ), ಹದಿ, ಕಪ್ಪು (ಅವನು ಕಪ್ಪಿದ ಹೊಂಡದಲ್ಲಿ ಅವನೇ ಬಿದ್ದ), ಕುಳಿ (ಒಂದು ಗುಂಡಿಯನ್ನು ಕುಳಿ ಯುತ್ತಿದ್ದಾನೆ)
dig up — ಕ್ರಿ ಕೆದಕು (ಮಣ್ಣನ್ನು ಗುದ್ದಲಿಯಿಂದ ಕೆದಕಿ ಸಡಿಲು ಮಾಡಬೇಕು), ಗಬ್ಬರಿಸು, ಗೂರು (ಗೂರಾಡು; ಎತ್ತು ಕೊಂಬುಗಳಿಂದ ಮಣ್ಣನ್ನು ಗೂರಿಹಾಕಿದೆ)
digest — ನಾ ತಿರುಳು (ಬರಹದ ತಿರುಳನ್ನು ಮೊದಲಿಗೆ ಕೊಟ್ಟಿದ್ದಾರೆ)
digest — ಕ್ರಿ ಅರಗು (ತಿಂದದ್ದು ಅರಗಲಿಲ್ಲ), ಅಕ್ಕು (ತಿಂದದ್ದು ಅಕ್ಕದೆ ಸತ್ತ), ಕರಗು (ಬೆಳಗ್ಗಿನ ತಿಂಡಿ ಕರಗಿಲ್ಲ)
digestible — ಗು ಅರಗಬಲ್ಲ
digestion — ನಾಅರಮೆ (ಅರಮೆಯಾಗು), ಅರವೆ, ಅರಗುಹ, ಅಕ್ಕುಗೆ
digging — ನಾ ಅಗತೆ (ಅಗತೆಮಾಡಿದ ಹೊಲ),ಅಗೆತ
digit — ನಾ 1 ಬೆರಳು 2 ಅಂಕೆ
digital — ಗು ಅಂಕೆಯ
dignified — ಗು ಅಗ್ಗಳೆಯುಳ್ಳ, ಅಗ್ಗಳಿಕೆಯ
dignity — ನಾ ಅಗ್ಗಳೆ (ಆತ ತನ್ನ ಅಗ್ಗಳೆಯನ್ನು ಎಲ್ಲಿಯೂ ಉಳಿಸಿಕೊಳ್ಳಬಲ್ಲ), ಹಿರಿಮೆ, ಪೆಂಪು
digress — ಕ್ರಿ ದಾರಿತಪ್ಪು (ಆತನ ಹೇಳಿಕೆ ದಾರಿತಪ್ಪುತ್ತಿದೆ), ಸರಿ
dike — ನಾಮಡೆ (ತೋಡಿಗೊಂದು ಚಿಕ್ಕ ಮಡೆ ಕಟ್ಟಿದ್ದಾರೆ),ಕಟ್ಟೆ (ಅಡ್ಡಗಟ್ಟೆ; ಕಟ್ಟೆಕಟ್ಟು; ಕಟ್ಟೆಯೊಡೆ)
dilapidated — ಗು ಹಾಳುಬಿದ್ದ (ಹಾಳುಬಿದ್ದ ಮನೆ)
dilate — ಕ್ರಿ ಹಿಗ್ಗು, ಉಬ್ಬು, ಕಿಸಿ ಗು ತಡಮಾಡುವ, ಮೆಲ್ಲಗಿನ
dilemma — ನಾಇಕ್ಕಟ್ಟು (ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿದ್ದಾನೆ)
diligent — ಗು ದುಡಿಯುವ, ಕೆಲಸದಲ್ಲಿ ಗಮನವಿರುವ, ಕಡಗುವ
diluted — ಗು ತಿಳಿ (ತಿಳಿಬಣ್ಣ; ತಿಳಿಮಜ್ಜಿಗೆ; ತಿಳಿಸಾರು), ತೆಳು (ತೆಳುಮಜ್ಜಿಗೆ)
dim — ಕ್ರಿ ಮಾಸು (ಮಾಸಿದ ಬೆಳಕು; ಮಾಸಿದ ಬರಹ), ಮಸುಳು (ತಾರೆಗಳು ಮಸುಳು ತ್ತಿವೆ; ಮಸುಳಿಸು), ಮಳಲು (ಮಳಲಿದ ಕಣ್ಣುಗಳು)
dim — ಗು ಮಸುಕು (ಮಸುಕು ಬಣ್ಣ), ಮಬ್ಬು (ಮಬ್ಬುಗತ್ತಲೆ; ಮಬ್ಬುಗಣ್ಣು), ಮಂಕು (ಮಂಕಾಗು), ಬಾನಲು (ಬೆವರಿನಿಂದ ಬಾನಲಾದ ಬೊಟ್ಟು),ಮಂಜು (ನೆರೆಮನೆ ಮುದುಕಿಯ ಕಣ್ಣು ಮಂಜಾಗಿದೆ), ಮಳ (ಮಳಮಳಿಸು)
dimension — ನಾಉದ್ದಳತೆ (ಉದ್ದಳತೆ ಕಂಡುಹಿಡಿ),ಆಯ (ಮನೆಯ ಆಯ ವೆಶ್ಟೆಂದು ಅಳೆದು ನೋಡಲಿ), ಹರವು
diminish — ಕ್ರಿ ಕಡಿಮೆಯಾಗು, ಕಿರಿದಾಗು, ಕುಗ್ಗು (ಆತನ ಹೊಟ್ಟೆ ತುಸು ಕುಗ್ಗಿದೆ), ತುಡುಕು, ತುಟ್ಟಿಸು (ತುಟ್ಟಿಸಿದ ಅಳವು), ಕೊರೆ (ಕೊರೆದ ಹಣ), ಕುಂದು (ಕುಂದಿದ ಬೆಳಕು), ಉಡುಗು (ಬೆಳಗ್ಗಿನಿಂದ ನೆರೆ ಉಡುಗತೊಡಗಿದೆ)
diminutive — ಗು ತೀರ ಚಿಕ್ಕ, ಚೀಕು
dimple — ನಾ ಕೆನ್ನೆಕುಳಿ, ಗದ್ದಕುಳಿ
din — ನಾ ಗದ್ದಲ (ಇಲ್ಲಿ ಗದ್ದಲ ಹೆಚ್ಚು)
dine — ಕ್ರಿ ಊಟಮಾಡು, ಉಣ್ಣು
ding — ಕ್ರಿ ಗಂಟೆಹೊಡೆ
dingle — ನಾ ಆಳಕಣಿವೆ
dingy — ಗು ಮಾಸಲು, ಕೊಳಕು
dining room — ನಾ ಉಣುಮನೆ, ಉಂಬೊಳ
dinner — ನಾಊಟ (ಊಟಕ್ಕೆ ಮೂವರನ್ನು ಬರಹೇಳಿದ್ದೇನೆ), ಪಂಡ, ಪಂಡಿಕೆ
dint — ನಾ 1 ಬಿಣಿತೆ, ಒತ್ತರ 2 ನಗ್ಗು (ತಂಬಿಗೆ ಕೆಳಗೆ ಬಿದ್ದು ಅದರಲ್ಲಿ ನಗ್ಗು ಕಾಣಿಸುತ್ತಿದೆ)
dip — ನಾ ಇಳಿಜಾರು
dip — ಕ್ರಿ ಮುಳುಗು (ಹಕ್ಕಿ ನೀರಲ್ಲಿ ಮುಳುಗಿ ಮೀನು ಹಿಡಿಲಿುತು; ಮುಳುಗಿಸಿ ತೆಗೆ - ಇದನ್ನು ಹಾಲಲ್ಲಿ ಮುಳುಗಿಸಿ ತೆಗೆಯ ಬೇಕು)
diphtheria — ನಾ ಗಂಟಲುನೋವು
diplomacy — ನಾ ಆಳ್ವಿಕೆಯ ಚೆಚ್ಚರಿಕೆ
dipping — ನಾತೋಕುಳಿ
dire — ಗು ಅಗುರ್ವ, ತಲ್ಲಳಿಸುವ, ಮಲ್ಲಳಿಸುವ
direct — ಕ್ರಿ ನಡೆಸು, ದಾರಿತೋರಿಸು
direct — ಗು ನೇರ (ನೇರ ಮನೆಯ ಮುಂದು ಗಡೆ ಹುಳಿಮರ ಇದೆ)
direction — ನಾ 1 ಪೊಲ (ಪೊಲ ತಿಳಿಯದೆ ಕಕ್ಕಾಬಿಕ್ಕಿಯಾದ), ಗೊಂಟು (ಮೂಡಣ ಗೊಂಟು), ತಟ್ಟು (ತೆಂಕಣ ತಟ್ಟು; ಪಡು ವಣ ತಟ್ಟು) 2 ಪಾರುಪತ್ಯ
directive — ನಾ ತಿಳುವಳಿಕೆ (ಅವರಿಂದ ತಿಳುವಳಿಕೆ ಪಡೆಯಲು ಇಲ್ಲಿವರೆಗೂ ಬರ ಬೇಕಾಯಿತು)
directory — ನಾಕಯ್ಪಿಡಿ
dirigible — ಗು ನಡೆಸಬಲ್ಲ, ಅಂಕೆಯೊಳಗಿರಿಸ ಬಲ್ಲ
dirk — ನಾ ಕುತ್ತುಬಾಳು (ಅವನನ್ನು ಕುತ್ತುಬಾಳಿ ನಲ್ಲಿ ಕುತ್ತಿ ಕೊಂದರು)
dirt — ನಾ ಸೆದಗೆ (ಅವನ ಕೋಣೆಯಲ್ಲಿ ಸೆದಗೆ ತುಂಬಿತ್ತು), ಮುರಿಕಿಲು, ಸತ್ತೆ (ಸತ್ತೆ ಹುಲ್ಲು), ಹೊಲಸು (ಹೊಲಸು ನಾರುವ ಹೆಣ), ಕಿಸುಕುಳ (ಕತ್ತೆ ಕಿಸುಕುಳ ತಿನ್ನ ದಿದ್ದೀತೇ?)
dirty — ಕ್ರಿ ಮಾಸು (ಮಾಸಿದ ಮೋರೆಗಳು; ಮಾಸಿದ ಬಟ್ಟೆಗಳನ್ನೆಲ್ಲ ಅಗಸನಿಗೆ ಕೊಡಿ)
dirty — ಗು ಮಾಸಲು (ಮಾಸಲು ಬಟ್ಟೆ), ಕೊಳಕು (ಕೊಳಕು ಮೋರೆ) ನಾ ತಡೆ, ಅಳವಿಲ್ಲದಿಕೆ
disable — ಕ್ರಿ ಹೆಳವುಗೊಳಿಸು, ಕೆಡಿಸು
disadvantage — ನಾ ಕೊರತೆ, ತೊಂದರೆ, ಹಿನ್ನಡೆ, ಹಿಂತೆಗೆತ
disaffection — ನಾ ಅಸುರು, ಮೆಚ್ಚದಿಕೆ
disagree — ಕ್ರಿ ಒಪ್ಪದಿರು, ಹೋಲದಿರು, ಬೇರಾಗಿರು
disagreeableness — ನಾ ಕಿಸುರು (ಮನ ಸ್ಸಿನ ಕಿಸುರನ್ನು ಹೋಗಲಾಡಿಸು), ಕಿತ್ತಡ
disagreement — ನಾ ಜಗಳ, ಮರುಬಗೆತ
disallow — ಕ್ರಿ ತಳ್ಳಿಹಾಕು (ನನ್ನ ಮಾತನ್ನು ತಳ್ಳಿಹಾಕಿದರು)
disappear — ಕ್ರಿ ಮಾಯು (ಆ ಹಣ್ಣುಗಳೆಲ್ಲ ಮಾದುಹೋದುದು ಹೇಗೆ?),ಕಣ್ಮರೆ ಯಾಗು, ಮರೆಯಾಗು, ಕಾಣದಾಗು
disappoint — ಕ್ರಿ ಕಳಲು (ಅವರ ಮಾತಿನಿಂದ ಕಳಲಿದವರು ಹಲವರಿದ್ದಾರೆ), ಬಗೆಗುಂದು
disapprobation — ನಾ ಒಪ್ಪದಿಕೆ, ಮೆಚ್ಚದಿಕೆ
disapprove — ಕ್ರಿಒಪ್ಪದಿರು, ಮೆಚ್ಚದಿರು
disarm — ಕ್ರಿ ಕಸುವು ಕೆಡಿಸು
disarrange — ಕ್ರಿ ಏರ್ಪಾಡು ಕೆಡಿಸು, ನಿರುಗೆ ಕೆಡಿಸು
disarray — ಗು ತಾರುಮಾರು, ಅಡ್ಡಾದಿಡ್ಡಿ
disassemble — ಕ್ರಿ ಬಿಚ್ಚಿಹಾಕು
disassociate — ಕ್ರಿ ಬೇರಾಗು, ಬೇರ್ಪಡು
disaster — ನಾ ಕೇಡು (ಕೇಡುಗಾಲ; ಆಗ ದವರಿಗೆ ಕೇಡುಂಟಾಗುವ ಹಾಗೆ ಮಾಡಿದ)
disavow — ಕ್ರಿ ಹೊಣೆತಪ್ಪಿಸು, ಹೊಣೆಯಾಗ ದಿರು
disband — ಕ್ರಿ ಕೂಟಮುರಿ
disbelieve — ಕ್ರಿ ನಂಬದಿರು, ನಚ್ಚದಿರು
disburse — ಕ್ರಿ ಹಣಕೊಡು (ಕೆಲಸದವರನ್ನೆಲ್ಲ ಹಣಕೊಟ್ಟು ಕಳಿಸಿದೆ)
disc — ನಾ ತಟ್ಟೆ (ಉಲಿತಟ್ಟೆ)
discard — ಕ್ರಿ ಬಿಟ್ಟುಬಿಡು, ತೆಗೆದುಹಾಕು
discern — ಕ್ರಿ ತಿಳಿ, ಗುರುತಿಸು, ಬೇರ್ಪಡಿಸು
discharge — ಕ್ರಿ 1 ಹರಿ (ಆತನ ಸಾಲ ಇನ್ನೂ ಹರಿದಿಲ್ಲ), ತೀರಿಸು (ಕಡ ತೀರಿಸು) 2 ಬಿಡು (ಅವನನ್ನು ನಿನ್ನೆಯೇ ಸೆರೆಲಿುಂದ ಬಿಟ್ಟಿದ್ದಾರೆ; ಬಿಡುಗಡೆ ಮಾಡು), ಚಿಗಿ (ಪಗಡೆ ಚಿಗಿ)
disciple — ನಾ ಹಿಂಬಾಲಕ, ಕಲಿಗ (ಇವರೆಲ್ಲ ಆತನ ಕಲಿಗರು), ಗುಡ್ಡ
discipline — ಕ್ರಿ ಪಳಗಿಸು, ಹಿಡಿತದಲ್ಲಿಡು
disclaim — ಕ್ರಿ ತನ್ನದಲ್ಲವೆನ್ನು, ಒಪ್ಪದಿರು, ಹಕ್ಕುಬಿಡು
disclaimer — ನಾ ಅಲ್ಲಗಳೆತ
disclose — ಕ್ರಿ ಹೊರಗೆಡಹು (ಅವರ ಗುಟ್ಟ ನ್ನೆಲ್ಲ ಅವನು ಹೊರಗೆಡಹಿದ), ತಿಳಿಯ ಪಡಿಸು
disclosure — ನಾ ದೋವಿಲು, ದೋಹಿಲು (ಆತ ತಾನು ಮಾಡಿದ್ದನ್ನೆಲ್ಲ ದೋಹಿಲು ಮಾಡಿದ್ದಾನೆ), ಬಯಲು (ಬಯಲುಮಾಡು; ಬಯಲಾಗು)
discolour — ಕ್ರಿ (ಆ) ಬಣ್ಣ ಬದಲಾಗು, ಕಂದು (ಮಾ) ಬಣ್ಣಕೆಡಿಸು
discoloured — ಗು ಬಾನಲು (ಬಾನಲು ಬಟ್ಟೆ)
discomfit — ಕ್ರಿ ತಡೆ, ಸೋಲಿಸು, ಕಸಿವಿಸಿ ಗೊಳ್ಳು
discomfort — ನಾಇರುಸುಮುರುಸು (ಆತ ನಿಗೆ ಅಲ್ಲಿ ಕುಳಿತುಕೊಳ್ಳಲು ಇರುಸುಮುರು ಸಾಗುತ್ತಿದೆ) ನಾ ಕಸಿವಿಸಿ, ಹದುಳ ಕೆಡಿಕೆ
discompose — ಕ್ರಿ ನೆಮ್ಮದಿ ಕೆಡಿಸು
disconcert — ಕ್ರಿ ನೆಮ್ಮದಿ ಕೆಡಿಸು, ಅದಟು ಕೆಡಿಸು
disconnect — ಕ್ರಿ ಬೇರ್ಪಡಿಸು (ಗಾಡಿಯಿಂದ ಗಾಲಿಗಳನ್ನು ಬೇರ್ಪಡಿಸಿ ಇರಿಸಿದ್ದಾರೆ), ಎಣೆ ಗಳೆ
disconsolate — ಗು ಹದುಳಿಸಲಾಗದ, ಸೊಮ್ಮುಗೆಟ್ಟ
discontent — ಗು ತಣಿಯದ
discontinue — ಕ್ರಿ ನಿಲ್ಲಿಸು (ಹಣ ಕೊಡ ದಿದ್ದರೆ ಹಾಲು ಕೊಡುವುದನ್ನು ನಿಲ್ಲಿಸಿಬಿಡಿ)
discord — ನಾ 1 ಜಗಳ, ಮರುಬಗೆತ 2 ಗವುರು, ಸಪ್ಪಳ
discordant — ಗು ಒಪ್ಪದ, ಮರುಬಗೆಯುವ, ಹೊಂದಿಕೆಯಾಗದ
discount — ನಾ ತಳ್ಳುಪಡಿ (ತಳ್ಳುಪಡಿ ಎಷ್ಟು ಕೊಡುತ್ತೀರಿ?),ತರಗು (ತರಗಿನ ಅಂಗಡಿ)
discountenance — ಕ್ರಿ ನಾಚಿಸು, ಸಿಗ್ಗಾಗಿಸು
discourage — ಕ್ರಿ ಹೊರೆಗುಂದಿಸು, ಮೊನೆ ಕೆಡಿಸು, ತಡೆ, ಎದೆಗುಂದಿಸು
discourse — ನಾ ಮಾತುಕತೆ, ಸೂಳು, ಪೇರೊರೆ
discourteous — ಗು ಕೆಟ್ಟ ಪಾಂಗಿನ, ಹೊಲಬು ತಪ್ಪಿದ
discover — ಕ್ರಿ ಕಂಡುಹಿಡಿ, ಆರಯ್ದು ತಿಳಿ
discreet — ಗು ಎಚ್ಚರಿಕೆಯ, ಅರಿವುಳ್ಳ
discrepancy — ನಾ ಹೊಂದಿಕೆಯಾಗದಿರು ವಿಕೆ, ಹೋಲಿಕೆ ತಪ್ಪಿರುವುದು
discrete — ಗು ಬೇರೆಯಾದ, ಬಿಟ್ಟುಬಿಟ್ಟಿರುವ
discretion — ನಾ ಎಚ್ಚರಿಕೆ, ತಿಳಿವು, ಕಣ್ಪರಿ, ಕಣ್ಮಲೆ
discriminate — ಕ್ರಿ ಬೇರ್ಪಡಿಸು, ಬೇರೆ ಮಾಡು, ಬದಿಹಿಡಿ
discursive — ಗು ಸುತ್ತಾಡುವ, ಓರಣ ತಪ್ಪಿದ
discuss — ಕ್ರಿ ಮಾತುಕತೆ ನಡೆಸು, ಆರಯ್ಯು
discussion — ನಾ ಮಾತುಕತೆ, ಆರಯ್ಕೆ
disdain — ಕ್ರಿ ಕೀಳುಮಾಡು, ಜರೆ
disease — ನಾಬೇನೆ, (ಅವನ ಬೇನೆಗೆ ಮದ್ದಿಲ್ಲ), ಕುತ್ತ (ಅವನ ಕುತ್ತ ಏನೆಂದು ಯಾರಿಗೂ ಗೊತ್ತಾಗಿಲ್ಲ)
disembark — ಕ್ರಿ ಕೆಳಗಿಳಿ, ತಲಪು, ಹೊರೆ ಯಿಳಿಸು
disembarrass — ಕ್ರಿ ಸಿಕ್ಕು ಬಿಡಿಸು, ತೊಂದರೆ ತಪ್ಪಿಸು
disembody — ಕ್ರಿ ಮಲಿ್ಬುಡು, ಮಲಿ್ಬುಟ್ಟು ಹೋಗು
disengage — ಕ್ರಿ ಬೇರ್ಪಡಿಸು
disentangle — ಕ್ರಿ ಹಿಂಜು (ಹತ್ತಿ ಹಿಂಜು), ಸಿಕ್ಕು ಬಿಡಿಸು
disfavour — ಕ್ರಿ ಒಪ್ಪದಿರು, ಮೆಚ್ಚದಿರು
disfigure — ಕ್ರಿ ಪಾಂಗು ಕೆಡಿಸು, ಪರಿಜು ಕೆಡಿಸು
disfranchise — ಕ್ರಿ ಹಕ್ಕು ತೆಗೆ, ಹಕ್ಕು ಕಳೆ
disgorge — ಕ್ರಿ ವಾಕರಿಸು, ಕಕ್ಕು, ಕಾರು
disgrace — ನಾ ಒಚ್ಚಿ (ಒಚ್ಚಿಯಿಂದ ಆತ ಕಂಗಾಲಾಗಿದ್ದಾನೆ; ಒಚ್ಚಯ), ಕೆಟ್ಟಹೆಸರು (ಅಲ್ಲಿಗೆ ಹೋದರೆ ನಿಮಗೆ ಕೆಟ್ಟಹೆಸರು ಬರುತ್ತದೆ), ಎಗ್ಗು
disgruntled — ಗು ತಣಿಯದ, ನಂಬಿಕೆ ಯಳಿದ
disguise — ಕ್ರಿ ಮರೆಮಾಚು (ತನ್ನನ್ನು ಮರೆ ಮಾಚಿಕೊಳ್ಳಲು ಮೀಸೆ ಬೋಳಿಸಿದ್ದಾನೆ), ಗುರುತು ತಪ್ಪಿಸು ನಾ ಹೇಸಿಕೆ, ಹೇಸಿಗೆ (ಹಂದಿ ಮೇಲೆ ಕೂತವನಿಗೆ ಏನು ಹೇಸಿಗೆ?), ಹೇವ (ಹೇವ ಗೇಡಿ), ಚಿಟ್ಟು (ಚಿಟ್ಟುಹಿಡಿ; ತಲೆ ಚಿಟ್ಟು ಹಿಡಿದು ಹೋಲಿುತು),ಅವಚರ
disgust — ಕ್ರಿ ರೋಸು (ರೋಸಿಕೊಳ್ಳು; ರೋಸಿ ಹೋಗು), ಹೇಸು (ಯಾವುದಕ್ಕೂ ಹೇಸ ದವನು)
dish — ನಾ ಮರಿಗೆ
disharmony — ನಾ ಮರುಬಗೆತ, ಜಗಳ
dishearten — ಕ್ರಿ ಎದೆಗೆಡು (ಎಡರುಗಳೆಶ್ಟು ಬಂದರೂ ಎದೆಗೆಡಬೇಡ), ಎದೆಗುಂದು (ಕರೆದವರಾರೂ ಬಾರದಿದ್ದುದನ್ನು ಕಂಡು ಆತ ಎದೆಗುಂದಿದ), ಎದೆಗಳೆ, ಎದೆಬಿರಿ (ನೆನೆದರೆ ಎದೆಬಿರಿಯುತ್ತದೆ)
dishevel — ಕ್ರಿ ಕೆದರು (ಕೆದರಿದ ಕೂದಲು), ನಲುಗು, ಸುಕ್ಕುಗಟ್ಟು
dishonest (be) — ಕ್ರಿ ಎಡರು (ಹಣ ಸಂದಾಯ ಮಾಡುವುದರಲ್ಲಿ ಆತ ಎಡರಿ ದ್ದಾನೆ), ಮೋಸಮಾಡು, ಸುಳ್ಳುಹೇಳು
dishonesty — ನಾಬಿಂಕು (ಬಿಂಕಿನಲ್ಲಿ ಆತ ನನ್ನು ಮೀರಿಸುವವರಿಲ್ಲ)
dishonour — ನಾ ಸಿಗ್ಗು, ನಾಚುಗೆ, ಒಚ್ಚಿ, ಕೆಟ್ಟಹೆಸರು, ಆಳಿ (ಆಳಿಗೊಳಿಸು)
dishonour — ಕ್ರಿ ಕೀಳುಗೆಯ್ಯು, ಗೀಳುಮಾಡು, ಇಳಿಕೆಗೆಯ್ಯು
dishwasher — ನಾತಟ್ಟೆತೊಳೆಗ (ಆಕೆಯ ಬಳಿ ಒಂದು ತಟ್ಟೆತೊಳೆಗ ಇದೆ)
disillusion — ಕ್ರಿ ತಪ್ಪರಿವು ಕಳೆ
disincline — ಕ್ರಿ ಒಪ್ಪದಿರು, ಒಲವಿಲ್ಲದಿರು
disinfect — ಕ್ರಿ ಕೊಳೆತೆಗೆ, ಸೋಂಕು ಕಳೆ
disintegrate — ಕ್ರಿ ಒಡೆದುಹೋಗು, ಪುಡಿ ಪುಡಿಯಾಗು, ಇಡಿ
disinterested — ಗು ಬದಿಹಿಡಿಯದ, ಒಲ ವಿಲ್ಲದ
disjoin — ಕ್ರಿ ಬೇರ್ಪಡಿಸು
disjoint — ಕ್ರಿ ಕೀಲುತಪ್ಪು, ತುಂಡಾಗು
dislike — ಕ್ರಿಅಸುರು (ಆತನನ್ನು ನೀನು ಅಷ್ಟೂಂದು ಅಸುರುವುದೇಕೆ?),ಹೇಸು, ಸೇರದಿರು (ನನಗೆ ಈ ತಿಂಡಿ ಸೇರುವು ದಿಲ್ಲ)
dislocate — ಕ್ರಿ ಪೀಕು (ಗಾಡಿಯ ಗಾಲಿ ಪೀಕಿದೆ), ಜಾಗ ತಪ್ಪಿಸು, ನಿರುಗೆ ಕೆಡಿಸು
dislodge — ಕ್ರಿ ನೆಲೆತಪ್ಪಿಸು
disloyal — ಗು ನಂಬದ, ನಂಬಿಕೆಯಳಿದ
dismal — ಗು ಮಂಕುಕವಿದ, ಕೊರಗುವ
dismantle — ಕ್ರಿ ಕಳಚಿಹಾಕು
dismay — ಕ್ರಿ ಎದೆಗುಂದು, ಕೆಚ್ಚಳಿ
dismiss — ಕ್ರಿ 1 ತೆಗೆದುಹಾಕು, ತಳ್ಳಿಹಾಕು 2 ಚದರಿಸು
dismissal — ನಾ ತಳ್ಳುಪಡಿ,ತಳ್ಪಡಿ
dismount — ಕ್ರಿ ಬೇರ್ಪಡಿಸು, ಕೆಳಗಿಳಿ, ಕೆಳ ಗಿಳಿಸು
disobey — ಕ್ರಿ ಸೆಲವುಮೀರು
disoblige — ಕ್ರಿ ಒದಗದಿರು
disorder — ನಾ ತಾರುಮಾರು (ತಾರುಮಾರು ಮಾಡುವವರನ್ನು ಯಾರು ನಂಬುತ್ತಾರೆ?)
disown — ಕ್ರಿ ಒಡೆತನ ಬಿಡು
disparage — ಕ್ರಿ ಹೀಗಳೆ (ಆ ರೀತಿ ನೀನು ಎಲ್ಲರನ್ನೂ ಹೀಗಳೆದರೆ ಹೇಗೆ?), ಜರೆ
disparity — ನಾ ಎಣೆಗೆಡುಹ, ತೊಣೆಗೆಡುಹ
dispassionate — ಗು ನೆಮ್ಮದಿಯ, ಕೆರಳದ
dispatch — ನಾಸಾಗಣೆ,ಅಂಪಕ (ಈ ಕಡತಗಳ ಅಂಪಕವಾಗಬೇಕಿದೆ) ಕ್ರಿ ಸಾಗಹಾಕು (ಈ ಕಟ್ಟುಗಳನ್ನು ಇವತ್ತೇ ಸಾಗಹಾಕಬೇಕು), ಕಳುಹಿಸು
dispel — ಕ್ರಿ ಓಡಿಸು, ಚದರಿಸು
dispensable — ಗು ಕೊಡಬಹುದಾದ, ಬಿಡ ಬಲ್ಲ
dispensary — ನಾ ಮದ್ದಿನಮನೆ
dispense — ಕ್ರಿ 1 ಕೊಡು, ಹಂಚು, ಕಲಸಿ ಕೊಡು (ಇಲ್ಲಿ ಮದ್ದನ್ನು ಕಲಸಿಕೊಡು ತ್ತಾರೆ) 2 ಹೊರತುಪಡಿಸು
disperse — ಕ್ರಿ ಚದುರು (ಹಕ್ಕಿಗಳೆಲ್ಲಾ ಚದುರಿ ಹೋದುವು), ಹರೆ (ಕತ್ತಲೆ ಹರೆದು ಬೆಳಗಾಯಿತು)
dispirited — ಗು ಎದೆಗುಂದಿದ, ಕೊರಗುವ, ಹೊರೆಗುಂದಿದ
displace — ಕ್ರಿ ಕದಲಿಸು (ಆತನನ್ನು ಇಲ್ಲಿಂದ ಕದಲಿಸಬಲ್ಲವರು ಯಾರು?), ತಪ್ಪಿ ಇರಿಸು
display — ನಾ ನಿರಿಗೆ, ತೋರಿಕೆ
display — ಕ್ರಿ ಮಸಗು (ಮಾವಿನ ಮರದಲ್ಲಿ ಮಸಗುತ್ತಿರುವ ಬಲ್ಸೋನೆಯ ಸೋನೆ), ಮೆರೆ (ಮೆರೆಸು; ಮೆರವಣಿಗೆ), ಹೇರು
displeasure — ನಾ ಕಂಗು (ಕಂಗಾಗು; ಕಂಗು ಮಾಡು)
displume — ಕ್ರಿ ಗರಿತೆಗೆ, ಗರಿಕಳಚು
disport — ಕ್ರಿ ಆಡು, ಚಲ್ಲವಾಡು, ಜಕ್ಕುಳಿಸು
dispose — ಕ್ರಿ 1 ಸಾವಗಿಸು, ಹೂಡು 2 ಕಂಡಿಸು, ತೀರ್ಮಾನಿಸು, ಬಗೆಹರಿಸು
disposition — ನಾ 1 ಏರ್ಪಾಡು 2 ಕೊಡು, ಮಾರು 3 ಒಲವು (ಮನಸ್ಸಿಗೆ ಬಂದ ಕೂಡಲೇ ಮಾಡಿಬಿಡುವ ಒಲವು ಆತ ನದು), ನಡತೆ
dispossess — ಕ್ರಿ ಒಡೆಕಸಿ, ಹೊರಹಾಕು
dispraise — ಕ್ರಿ ಹಳಿ, ಹೀಗಳೆ, ಜರೆ
disproportionate — ಗು ಹಾಳಿತ ತಪ್ಪಿದ, ಹಾಳಿತ ಮೀರಿದ
disprove — ಕ್ರಿ ತಪ್ಪು ತೋರಿಸು, ತಪ್ಪೆಂದು ತೋರಿಸು
dispute — ಕ್ರಿ 1 ಬಕ್ಕುಡಿಗೆಯ್ಯು, ಜಗಳಾಡು, ಇದಿರಿಸು 2 ನಚ್ಚುಮಾಡು, ನಚ್ಚುಪಡು
disqualify — ಕ್ರಿ ತಕ್ಕುದಲ್ಲವೆನ್ನು, ತಕ್ಕು ದಲ್ಲದಂತೆ ಮಾಡು, ಹೊರಗಿಡು
disquiet — ನಾ ಬೇವಸ, ತಲ್ಲಣ, ಕಳವಳ
disquisition — ನಾ ಆರಯ್ತ, ಪೇರೊರೆ
disregard — ನಾಕೀಟು, ಪಳಿವು
disregard — ಕ್ರಿ ಕಡೆಗಣಿಸು (ನನ್ನ ಮಾತನ್ನು ಕಡೆಗಣಿಸಬೇಡ)
disrepute — ನಾ ಕೆಟ್ಟಹೆಸರು, ಒಚ್ಚಿ
disrespect — ನಾ ತಕ್ಕಮೆಯಲ್ಲದಿಕೆ
disrobe — ಕ್ರಿ ಬಟ್ಟೆಕಳಚು, ಬಟ್ಟೆಬಿಚ್ಚು, ಉಡುಪು ತೆಗೆ
disrupt — ಕ್ರಿ ಒಡೆದುಹಾಕು, ನಡುವೆ ಬರು, ತಡೆಯೊಡ್ಡು
dissatisfy — ಕ್ರಿ ತಣಿಯದಿರು, ಒಲಿಯದಿರು
dissect — ಕ್ರಿ ಕೊಯ್ಯು, ಕೊಯ್ದು ಒರೆ
dissemble — ಕ್ರಿ ಅಡಗಿಸು, ಸೋಗು ಹಾಕು
disseminate — ಕ್ರಿ ಹೊರಗೆಡಹು, ಸುತ್ತ ಹರಡು
dissension — ನಾಒಪ್ಪದಿರುವಿಕೆ, ಒಡಕು (ಮಾತುಕತೆಯಲ್ಲಿ ಅವರೊಳಗೆ ಒಡಕು ಮೂಡಿರುವುದು ಕಂಡುಬಂತು), ಜಗಳ
dissent — ಕ್ರಿ ಒಪ್ಪದಿರು
dissertation — ನಾ ಪೇರೊರೆ, ಪೆರ್ಬರಹ
disservice — ನಾ ಕೆಡುಕು, ತೊಂದರೆ
dissever — ಕ್ರಿ ತುಂಡಿಸು ನಾ ಒಪ್ಪದಿರುವಿಕೆ
dissident — ನಾಒಪ್ಪದವರು
dissimilar — ಗು ಹೋಲಿಕೆಯಿಲ್ಲದ, ಹೋಲದ
dissipate — ಕ್ರಿ ಚೆಲ್ಲು, ಬೀರು, ಇಲ್ಲವಾಗಿಸು, ಹಾಳುಮಾಡು (ಎಲ್ಲ ಹಾಳುಮಾಡಿದರು)
dissociate — ಕ್ರಿ ಬೇರ್ಪಡು, ಒಡಗೂಡದಿರು
dissolute — ನಾ ತಲೆಹೋಕ (ಆ ತಲೆಹೋಕ ನನ್ನು ಕರೆದದ್ದು ಯಾರು?)
dissolve — ಕ್ರಿ ಕರಗು (ನೀರಿನಲ್ಲಿ ಉಪ್ಪು ಕರಗಿದೆ), ನೀರಾಗು, ಕಾಣೆಯಾಗು
dissuade — ಕ್ರಿ ತಡೆ (ಮಾಡದಂತೆ ತಡೆ), ತಪ್ಪಿಸು
distance — ನಾ ಎಡೆ (ಎಡೆಬಿಡದೆ), ತೆರಪು (ಎರಡು ಮನೆಗಳ ನಡುವೆ ತೆರಪು ಎµ್ಟದೆ?)
distant — ಗು 1 ಗೆಂಟು (ಗೆಂಟಾಗು; ಗೆಂಟಿಸು; ಗೆಂಟುಹೋಗು; ಗೆಂಟ)
distaste — ನಾ ಅಸುರಿಕೆ, ಹೇಸಿಕೆ
distend — ಕ್ರಿ 1 ನೀಡು (ಕಲಿ್ನುೀಡು, ಕಾಲು ನೀಡು), 2 ಬಾತುಕೊಳ್ಳು, ಬಾತುಹೋಗು
distil — ಕ್ರಿ 1 ಚೊಕ್ಕಮಾಡು, ಅಣ್ಣೆಮಾಡು 2 ತೊಟ್ಟಿಕ್ಕು
distinct — ಗುಪಂಗಡ (ಪಂಗಡವಾದವರು), ಬೇರೆ
distinction — ನಾ ಹಿರಿಮೆ, ಗೆಂಟು
distinguish — ಕ್ರಿ 1 ಗೆಂಟುತೋರಿಸು, ಹಂಚು 2 ಹೆಸರುಮಾಡು
distort — ಕ್ರಿ (ಆ) ಉರುಗು (ಉರುಗಿಸು - ಆತ ಮೋರೆಯನ್ನು ಉರುಗಿಸುತ್ತಿದ್ದ) (ಮಾ) ಮುರುಕು (ಮೋರೆಯನ್ನು ಮುರು ಕದೆ ಹಾಡುತ್ತಿದ್ದಾಳೆ), ಮುಡುಕು
distract — ಕ್ರಿ ಮನತಿರುಗಿಸು, ಗೊಂದಲ ಗೊಳಿಸು
distraught — ಗು ಗೊಂದಲಿಸಿದ, ಗೊಂದಲ ಗೊಂಡ, ಬೇಗುದಿಗೊಂಡ
distress — ನಾಕಳವಳ, ಬೇಗುದಿ (ಬೇಗುದಿ ಗೊಳ್ಳು), ಕರಮರೆ
distress — ಕ್ರಿ ಅಲವರು, ಅಲವತ್ತುಕೊಳ್ಳು (ಯಾಕೆ ನೀವು ಅಲವತ್ತುಕೊಳ್ಳುತ್ತಿದ್ದೀರಿ?), ಅಳುಕು (ಆಕೆ ಮನೆಲಿುಂದ ಹೊರಗೆ ಬರಲು ಅಳುಕುತ್ತಿದ್ದಾಳೆ), ಕುದಿ (ಎದೆಗುದಿ; ಬೇಗುದಿ), ತತ್ತು
distribute — ಕ್ರಿ ಹಂಚು (ಮಗು ತಿಂಡಿಯನ್ನು ಎಲ್ಲರಿಗೂ ಹಂಚಿ ತಿನ್ನುತ್ತಿದೆ; ಹಂಚಿಕೆ)
distributor — ನಾ ಹಂಚುಗ (ಮನೆಮನೆಗೂ ಹಂಚುಗರನ್ನು ಕಳಿಸಿದ್ದಾರೆ)
district — ನಾಕಂಪಣ
distrust — ನಾ ನಂಬಿಕೆಯಳಿವು, ನಚ್ಚು (ಆತ ನಿಗೆ ನಿಮ್ಮ ಮೇಲೆ ನಚ್ಚಿದೆ)
disturb — ಕ್ರಿ ತೊಂದರೆ ಕೊಡು, ಗೊಂದಲ ಗೊಳಿಸು
disunite — ಕ್ರಿ ಗೊಂದಲಗೊಳಿಸು, ಎಡೆವರಿ, ಗದ್ದಲಮಾಡು
disuse — ನಾ ಬಳಕೆಯಿಲ್ಲದಿಕೆ
ditch — ನಾ ಅಗಳು (ಎತ್ತು ಅಗಳು ಹಾರಿ ತೋಟಕ್ಕೆ ನುಗ್ಗಿದೆ),ಕಣಿ (ಕೋಟೆಯ ಸುತ್ತಲೂ ಕಣಿಯಿದೆ)
dither — ಕ್ರಿ ಪಸಿಯಿಸು, ಗೊಂದಲಿಸು (ಗೊಂದ ಲಿಸುವ ಹುಡುಗ)
ditto — ನಾ ಅದೇ
diurnal — ಗು ಹಗಲು ಹೊತ್ತಿನ
dive — ಕ್ರಿ ಅಗುಳು (ಕೊಳದೊಳಕ್ಕೆ ಅಗುಳಿ ನೀರಲ್ಲಿ ಮುಳುಗಿದ)
diver — ನಾಮುಳುಕ, ಅಗುಳುಗ (ಅಗಳುಗ ನೀರಲ್ಲಿ ಮುಳುಗಿ ಮೂರು ಕೊಡಗಳನ್ನು ಹೊರಗೆ ತಂದಿದ್ದಾನೆ)
diverge — ಕ್ರಿ ಕವಲಾಗು, ಸೀಳು, ಬೇರಾಗು, ಬೇರ್ಪಡು
diverse — ಗು ಬಗೆಬಗೆಯ (ಬಗೆಬಗೆಯ ತಿಂಡಿ ಗಳು), ತರತರದ (ಆತನ ಅಂಗಡಿಗೆ ತರ ತರದ ಸೀರೆಗಳು ಹೊಸದಾಗಿ ಬಂದಿವೆ) ನಾಬದಲಿಕೆ (ಹೆದ್ದಾರಿಗೆ ಇಲ್ಲೊಂದು ಬದಲಿಕೆಯಿದೆ)
divert — ಕ್ರಿ 1 ಬದಿಗೆ ತಿರುಗು 2 ಜಕ್ಕುಳಿಸು, ಚಲ್ಲವಾಡು
divest — ಕ್ರಿ ತಪ್ಪಿಸು, ಕಸಿದುಕೊಳ್ಳು, ತೊರೆ, ಉಗಿ, ಬಿಚ್ಚು
divide — ಕ್ರಿ 1 ಉಗಿ (ಉಗಿಬಗಿ ಮಾಡು_ ಎಕ್ಕು (ಎಕ್ಕಿದ ಹತ್ತಿ), ಪಸು (ಪಸುಗೆ), ಪಚ್ಚು (ಪಚ್ಚಾಳು; ಪಚ್ಚಿಕೊಂಡುಣ್ಣು), ಹಂಚು (ಹಂಚಿಕೊಡು; ಇವನ್ನು ನಿಮ್ಮೊಳಗೆ ಸರಿಯಾಗಿ ಹಂಚಿಕೊಳ್ಳಿ), ತುಂಡಿಸು, ಹಿರಿ 2 ಬಗೆ (25ನ್ನು 5ರಿಂದ ಬಗೆದರೆ ಎಷ್ಟು ಸಿಗುತ್ತದೆ?)
dividend — ನಾಒಡ್ಡು
divination — ನಾ ಕಣಿ (ಕಣಿ ಹೇಳು)
divine — ಗು ಕಡವನ, ಮೊರೆಗನ
divisible — ಗು 1 ಹಂಚಬಲ್ಲ, ಪಾಲುಮಾಡ ಬಲ್ಲ 2 ಬಗೆಯಬಲ್ಲ
division — ನಾ 1 ತೊಳೆ (ಹಲಸಿನ ತೊಳೆ), ಪಸುಗೆ, ಹಂಚಿಕೆ, ಪಾಲು (ಪಾಲುಪಟ್ಟಿ; ಪಾಲಾಗು - ನಮ್ಮೊಳಗಿನ್ನೂ ಪಾಲಾಗಿಲ್ಲ), ಹಸಿಗೆ (ಹಸಿಗೆ ಪಟ್ಟಿ), ಹದಿಕೆ 2 ಬಗೆತ
divorce — ನಾ ಮದುವೆ ಒಡೆತ, ಬೇರ್ಪಡಿಕೆ
divulge — ಕ್ರಿ ಬಯಲುಮಾಡು (ನಿಮ್ಮ ಗುಟ್ಟನ್ನು ಆತ ಬಯಲುಮಾಡಿದ್ದಾನೆ)
dizzy (be) — ಕ್ರಿ ತಲೆತಿರುಗು (ತಲೆತಿರುಗಿ ಬೀಳು)
do — ಕ್ರಿ ಒಡರು (ಆತನೊಡರಿದ ಕೆಲಸಗಳು; ಒಡರಿಸು),ಮಾಡು, ಗೆಯ್ಯು (ಕೆಲಸಗೆಯ್ಯು; ಮದ್ದುಗೆಯ್ಯು)
doable — ಗು ಮಾಡಬಲ್ಲ (ಮಾಡಬಲ್ಲ ಕೆಲಸ)
docile — ಗು ಕಲಿಸಬಲ್ಲ, ತಿದ್ದಬಲ್ಲ
dock — ನಾಹಡಗುಕಟ್ಟೆ,ಗೋದಿ
docket — ನಾ ಕೆಲಸದ ಪಟ್ಟಿ
doctor — ನಾ 1 ತಿಳಿವಿಗ 2 ಬೇನೆಮಾಂಜುಗ, ಮಾಂಜುಗ
doctrine — ನಾ ಅರಿವು, ಕಲಿತ, ಕಟ್ಟುಪಾಡು
document — ನಾ ಬರೆಗುರುತು
dodder — ಕ್ರಿ ನಡುಗು, ತಲೆಯಾಡು
dodge — ಕ್ರಿ ತಪ್ಪಿಸಿಕೊಳ್ಳು (ತಾಯಿಯ ಕಯ್ಯಿಂದ ತಪ್ಪಿಸಿಕೊಂಡು ಅಟ್ಟವೇರಿ ಕುಳಿತಿದ್ದಾನೆ), ನುಣುಚಿಕೊಳ್ಳು
doer — ನಾ ಮಾಡುಗ
doff — ಕ್ರಿ ತೆಗೆ, ತೆಗೆದುಹಾಕು
dog — ನಾನಾಯಿ, (ನಾಯಿಪಾಡು; ನಾಯಿಮರಿ)
dog-fly — ನಾತೊಣಚೆ
dogged — ಗು ಹಟಮಾರಿ
dogma — ನಾ ನಂಬಿಕೆ, ಅಲ್ಲಗಳೆಯಲಾಗದ ಹೇಳಿಕೆ
doing — ನಾಮಾಡುಹ, ಮಾಟ,ಗೆಯ್ತ
doldrums — ನಾ ಗಾಳಿತಗ್ಗಿಕೆ, ಕೊರಗು
dole — ನಾ ಅರಹಣ, ಅರಕೊಡುಗೆ
doleful — ಗು ಕೊರಗುವ, ಮರುಗುವ
doll — ನಾ ಬೊಂಬೆ (ಬೊಂಬೆಯಾಟ)
dolorous — ಗು ಕೊರಗುವ, ನೋಯುವ
dolt — ನಾ ಪೆದ್ದ, ದಡ್ಡ, ಹೆಡ್ಡ
dome — ನಾ ದುಂಡುಮಾಡು (ಎಲ್ಲರನ್ನೂ ದುಂಡುಮಾಡಿನ ಕೆಳಗೆ ಸೇರಲು ಹೇಳಿ ದ್ದರು) ಗು ಮನೆಬಳಕೆಯ
domesticate — ಕ್ರಿ ಪಳಗಿಸು (ಆತ ಮನೆ ಯಲ್ಲಿ ಸಾಕಲು ಪಳಗಿಸಿದ ಒಂದು ತೋಳ ವನ್ನು ತಂದಿದ್ದಾನೆ)
domicile — ನಾ ಮನೆ, ಒಕ್ಕಲು, ಇಕ್ಕೆ
dominance — ನಾಮೇಲುಗಯ್ (ಎಲ್ಲದ ರಲ್ಲೂ ಆತನದೇ ಮೇಲುಗಯ್)
dominate — ಕ್ರಿ ಆಳು, ಹಿಡಿತದಲ್ಲಿರಿಸು (ಆತ ಎಲ್ಲರನ್ನೂ ಹಿಡಿತದಲ್ಲಿರಿಸಿಕೊಂಡಿದ್ದಾನೆ)
dominie — ನಾ ಕಲಿಸುಗ, ಕಲ್ಲಾಯ್ತ
dominion — ನಾ ಆಳ್ಕೆ, ಆಳ್ತನ
don — ಕ್ರಿ ಉಡು
donate — ಕ್ರಿ ಕೊಡುಗೆ ಕೊಡು
donation — ನಾಕೊಡುಗೆ (ಕೊಡುಗೆ ನೀಡು; ಹೋಳಿಹಬ್ಬಕ್ಕೆ ನಿಮ್ಮ ಕೊಡುಗೆ ಬಂದಿಲ್ಲ)
donkey — ನಾ ಕತ್ತೆ
donor — ನಾ ಕೊಡುಗ
doodle — ಕ್ರಿ ಗೀಚು, ಹೊತ್ತುಕಳೆ
doom — ನಾ 1 ಅಳಿವು 2 ತೀರ್ಪು
door — ನಾ ದಿಡ್ಡಿ (ದಿಡ್ಡಿಬಾಗಿಲು - ಮನೆಯ ಹಿಂದಿನ ದಿಡ್ಡಿಬಾಗಿಲು), ಬಾಗಿಲು (ಬಾಗಿಲು ಹಾಕದೆ ಎಲ್ಲಿಗೋ ಹೋಗಿದ್ದ), ಕದ (ಕದ ವಿಕ್ಕು), ಕದಹು, ಪಡಿ (ಬಾಗಿಲ ಪಡಿ), ಹಡಿ (ಹಡಿಗೆ ಅಡ್ಡವಾಗಿರಿಸಿದ ಅಗುಳು)
door keeper — ನಾ ಕಂಬಿಗ (ಅವರ ಮನೆ ಯೆದುರು ಯಾವಾಗಲೂ ಇಬ್ಬರು ಕಂಬಿ ಗರು ನಿಂತಿರುತ್ತಾರೆ)
door sill — ನಾ ಅಡಿಪಟ್ಟೆ (ಆ ಬಾಗಿಲಿನ ಅಡಿಪಟ್ಟೆ ತುಸು ಎತ್ತರವಾಯಿತು)
doormat — ನಾಕಾಲೊರಸು (ಕಾಲೊರಸಿನಲ್ಲಿ ಕಾಲುಗಳನ್ನು ಒರಸಿ ಒಳಗೆ ಬನ್ನಿ), ಕಾಲ್ಚಪೆ
dope — ನಾ ಮತ್ತುಮದ್ದು, ಸೊಕ್ಕುಮದ್ದು (ಆತನಿಗೆ ಹಾಲಿನಲ್ಲಿ ಸೊಕ್ಕುಮದ್ದು ಹಾಕಿ ಕೊಟ್ಟಿದ್ದರು)
dormant — ಗು ಒರಗಿದ, ಚುರುಕಿಲ್ಲದ
dormitory — ನಾ ಪಕ್ಕೆ (ಪಕ್ಕೆಮನೆ), ತಂಗು ದಾಣ (ಹುಡುಗರನ್ನು ತಂಗುದಾಣದಲ್ಲಿ ಸೇರಿಸಿದ್ದೇವೆ)
dorsal — ಗು ಹಿಂಬದಿಯ, ಹಿಂದಿನ
dot — ನಾಚುಕ್ಕೆ (ಚುಕ್ಕೆ ಇಡು; ಚುಕ್ಕೆ ಹಾಕು)
dote — ಕ್ರಿ ಮುದ್ದುಮಾಡು
double — ಗು ಇಪ್ಪಟ್ಟು (ಇಪ್ಪಟ್ಟು ದೋಸೆ), ಇಮ್ಮಡಿ
doubt — ನಾ ಅರೆ (ಅರೆಮರಿಕೆ - ಆತನಿಗೆ ನಿನ್ನ ಕುರಿತಾಗಿ ತುಸು ಅರೆಮರಿಕೆಲಿುದೆ, ಅರೆಮರೆ ನುಡಿ), ನಚ್ಚು (ನಚ್ಚುಮಾತು), ಅಯ್ಬು, ಇಟಕು
douche — ನಾ ನೀರುಚಿಮ್ಮುಗೆ
dough — ನಾ ಕಣಕ (ಮೊದಲಿಗೆ ಕಣಕವನ್ನು ಕುಟ್ಟಿ ಚನ್ನಾಗಿ ನಾದಿ ಇರಿಸಬೇಕು), ನಾದಿದ ಹಿಟ್ಟು
doughty — ಗು ಕೆಚ್ಚೆದೆಯ, ಕೂರು
douse — ಕ್ರಿ 1 ತೋಲಿುಸು 2 ನಂದಿಸು (ಬೆಂಕಿಯ ಮೇಲೆ ನೀರು ಚೆಲ್ಲಿ ನಂದಿಸಿದ)
down — ನಾ 1 ಬಯಲು 2 ನವುರು ಗರಿ, ನವುರು ಕೂದಲು
downcast — ಗು ಕೊರಗುವ
downfall — ನಾ ಪಾಟಿ (ಆತನ ಪಾಟಿಯನ್ನು ಯಾರೂ ಗಮನಿಸಲಿಲ್ಲ), ಅಳಿವು
downpour — ನಾಸುರಿಮಳೆ, ಜಡಿಮಳೆ (ಜಡಿಮಳೆಗೆ ಸಿಕ್ಕಿ ಒದ್ದೆಯಾದೆವು)
downtrodden — ಗು ದಬ್ಬಾಳಿಕೆಗೆ ಒಳಗಾದ
downturn — ನಾ ಇಳಿತ (ಆತನ ಹರದಿಕೆ ಇಳಿತದಲ್ಲಿದೆ) ನಾ ಪೆಣ್ಪಣ, ಪೆಂದಕ್ಕು
doze — ಕ್ರಿ ಜೂಗರಿಸು (ಹಗಲೆಲ್ಲಾ ಜೂಗರಿ ಸುತ್ತಾ ಕುಳಿತಿದ್ದ), ಮಂಪರು ಹತ್ತು, ತೂಗು (ತೂಕಡಿಸು; ತೂಗಿಬೀಳು - ಆತ ನನ್ನ ಮೇಲೆ ತೂಗಿಬೀಳುತ್ತಿದ್ದ)
dozen — ನಾ ಹನ್ನೆರಡು
drab — ಗು ಸಪ್ಪೆ, (ಈ ಸಲದ ಹಬ್ಬ ಬರೀ ಸಪ್ಪೆ), ಮಂಕು
draft — ನಾ 1 ಕರಡುಬರಹ 2 ಗಾಳಿಹರಿವು
drag — ಕ್ರಿ ಎಳೆ, ಜಗ್ಗು (ಬಾವಿಲಿುಂದ ನೀರು ಜಗ್ಗುತ್ತಿದ್ದೆ)
draggle — ಕ್ರಿ ಮಾಸಲುಗೊಳಿಸು (ಸೀರೆಯನ್ನು ನೆಲದಲ್ಲಿ ಉದ್ದಕ್ಕೂ ಎಳೆದು ಮಾಸಲು ಗೊಳಿಸಿದ್ದಾಳೆ)
drain — ನಾ ಬಚ್ಚಲು (ಬಚ್ಚಲಲ್ಲಿ ಹರಿವ ನೀರು),ಕೆಸರಿಗೆ
drain — ಕ್ರಿ ಬರಿದಾಗು, ಕಳೆ
drainpipe — ನಾ ಬಚ್ಚಲಕೊಳವೆ
drain-water — ನಾ ಗಜ್ಜು
drama — ನಾ ಆಡುಗಬ್ಬ
drape — ಕ್ರಿ ಹೊದಿಸು, ಇಳಿಬಿಡು, ತೂಗುಹಾಕು
draper — ನಾ ಬಟ್ಟೆಮಾರಾಳಿ, ಬಟ್ಟೆ ಹರದ
drapery — ನಾಜವಳಿ, ಅರಿವೆ (ಮದುವೆಗೆ ಅರಿವೆ ಕೊಳ್ಳಲು ಅಂಗಡಿಗೆ ಹೋಗುತ್ತಿ ದ್ದಾರೆ)
drastic — ಗು ಕರಕಟ, ಬಿರುಸಿನ, ಉರುಬಿನ
draw — ಕ್ರಿ 1 ಸೆಳೆ (ಸೆಳೆಗತ್ತಿ; ಅವಳ ಕಯ್ಯಿಂದ ಕೋಲನ್ನು ಸೆಳೆದುಕೊಂಡ), ಈರು 2 ಬಿಡಿಸು
draw near — ಕ್ರಿ ಅಣೆ (ಹತ್ತಿರ ಬಾರೆಂದು ಅಣೆಯಲು ಹೇಳಿದಳು)
draw out — ಕ್ರಿ ಒರೆ (ಕತ್ತಿಯನ್ನು ಒರೆದ)
draw together — ಕ್ರಿ ಕಿಕ್ಕಿರಿಸು
draw up — ಕ್ರಿ ಸೇದು (ಆಕೆ ಇಡೀ ದಿವಸ ಬಾವಿಲಿುಂದ ನೀರು ಸೇದಬೇಕಾಗಿತ್ತು)
drawback — ನಾಕೊರತೆ (ನಿಮ್ಮ ಹಂಚಿಕೆ ಯಲ್ಲಿ ಒಂದು ಕೊರತೆಲಿುದೆ)
drawl — ಕ್ರಿ ಎಳೆದುಹೇಳು (ಎಳೆದು ಹೇಳುವ ಮಾತು), ಮೆಲ್ಲನುಡಿ
dread — ಕ್ರಿ ಬೆದರು (ಬೆದರಿಕೆ), ಅಂಜು (ಅಂಜಿಕೆ)
dreadful — ಗು ಅಂಜಿಸುವ, ದಿಗಿಲುಗೊಳಿಸುವ
dream — ನಾಕನ, ಕನಸು (ಕನಸುಕಾಣು; ಕನಸು ಕಟ್ಟು; ಕನಸುಗಾರ)
dream — ಕ್ರಿ ಕನವರಿಸು (ಮಗು ಕನವರಿಸಿ ನಗು ತ್ತಿದೆ)
dreamer — ನಾ ಕನಸುಗಾರ
dreary — ಗು ಹಾಳುಸುರಿಯುವ, ಮಂಕು ಕವಿದ, ಕಳೆಗೆಟ್ಟ
dredge — ಕ್ರಿ ಹೂಳೆತ್ತು (ಈ ಕೆರೆಯಿಂದ ಹೂಳೆತ್ತಬೇಕಾಗಿದೆ)
dregs — ನಾ ಹೆಟ್ಟ (ಹರಳೆಣ್ಣೆ ಹೆಟ್ಟ),ಬಗ್ಗಡ (ತೆಂಗಿನೆಣ್ಣೆಯ ಬಗ್ಗಡ), ಗಸಿ (ತುಪ್ಪದ ಗಸಿ),ಮಡ್ಡಿ (ಎಣ್ಣೆಯ ಮಡ್ಡಿ)
drench — ಕ್ರಿ ಒದ್ದೆಯಾಗು, ನೆನೆ (ತೇವದಲ್ಲಿ ನೆನೆ; ನೆನೆಹಾಕು), ತೋಯು (ಮಳೆಗೆ ತೊಯ್ದು ಬಂದಿದ್ದಾನೆ)
dress — ನಾ ಉಡುಪು (ಹೊಸ ಉಡುಪು ತೊಟ್ಟು ಬಂದ),ಉಡೆ (ಸಡಿಲಿದ ಉಡೆ; ಹೊಸ ಬಟ್ಟೆಯ ಉಡೆ)
dress — ಕ್ರಿ 1 ತೊಡು (ಉಡುಪು ತೊಡು), ಸುತ್ತು (ಸೀರೆ ಸುತ್ತು) 2 ಮದ್ದುಹಚ್ಚು (ಗಾಯಕ್ಕೆ ಮದ್ದುಹಚ್ಚಿ ಬಟ್ಟೆ ಕಟ್ಟು) 2 ಸಸಿ (ಹತ್ತಿಯನ್ನು ಸಸಿ; ಸಸಿದ ಹತ್ತಿ), ಎಕ್ಕು (ಎಕ್ಕಿದರಲೆ)
dressing cotton — ನಾ ಎಕ್ಕಿಕೆ (ಗಾಸಿಗೆ ಎಕ್ಕಿಕೆ ಇಟ್ಟು ಬಟ್ಟೆಯಿಂದ ಕಟ್ಟಿದಳು)
dribble — ಕ್ರಿ ತೊಟ್ಟಿಕ್ಕು, ಸುರಿ (ಜೊಲ್ಲು ಸುರಿ) ಗು ತರಗು (ತರಗೆಲೆ), ಗೋಟು (ಗೋಟಡಿಕೆ), ಗೋಡು, ಮಕ್ಕಿ (ಮಕ್ಕಿಗದ್ದೆ)
drift — ಕ್ರಿ ತೇಲಿಹೋಗು, ಅಲೆದಾಡು
drill — ಕ್ರಿ ತುರುವು (ತುರುವಿ ತೂತು ಮಾಡು), ಕೊರೆ
drink — ನಾ ಕುಡಿಗೆ (ಬಂದವರಿಗೆ ಮೊದಲು ಕುಡಿಗೆ ಕೊಡಿ)
drink — ಕ್ರಿ ಕುಡಿ (ನೀರು ಕುಡಿ)
drink (noisily) — ಕ್ರಿ ಸುರಿ (ಅಂಬಲಿ ಸುರಿ)
drinkable — ಗು ಕುಡಿಯುವ (ಕುಡಿಯುವ ನೀರು), ಕುಡಿಯತಕ್ಕ
drinking — ನಾಕುಡಿತ, ಕುಡು (ಕುಡು ನೀರು)
drip — ಕ್ರಿ ಸೋರು (ಮನೆಯ ಮಾಡು ಸೋರು ತ್ತಿದೆ), ಇರಿವಿಡು, ತೊಟ್ಟು (ಕಣ್ಣಿನಿಂದ ನೀರು ತೊಟ್ಟುತ್ತಿದೆ), ತೊಟ್ಟಿಕ್ಕು, ಹನಿ (ಹನಿಹನಿಯಾಗಿ ಬೀಳುವ ನೀರು; ಹನಿ ನೀರಾವರಿ)
dripping — ನಾತೋಕುಳಿ
drip-stone — ನಾಹನಿಗಲ್ಲು
drive — ಕ್ರಿ ಬಿಡು, ನಡೆಸು
drive away — ಕ್ರಿ ಅಟ್ಟು (ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಅಟ್ಟಿದರು), ಓಡಿಸು
drive in (nail) — ಕ್ರಿ ಜಡಿ (ಮೊಳೆ ಜಡಿ)
drive off — ಕ್ರಿ ಸೋವು (ಗದ್ದೆಯಿಂದ ಹಕ್ಕಿ ಗಳನ್ನು ಸೋವಬೇಕಿತ್ತು)
drivel — ಕ್ರಿ 1 ಜೊಲ್ಲು ಸುರಿ, ಸಿಂಬಳ ಸುರಿ 2 ತೊದಲು
driver — ನಾ ಓಡಿಸುಗ, ನಡೆಸುಗ
drizzle , — ನಾ ಪಾರುಂಬನಿ ತೂರಲು, ಸೋನೆ (ಸೋನೆಯ ಜಿನುಗು; ಸೋನೆ ಮಳೆ) ತಂದಲು, ತೂಪರು, ತುಂತುರು (ತುಂತುರು ಮಳೆ; ತುಂತುರು ಹನಿ)
drizzle — ಕ್ರಿ ಜಿನುಗು (ಮಳೆ ಜಿನುಗುತ್ತಿದೆ; ಜಿನುಗುನೀರು), ತೂರು (ತೂರುವ ಮಳೆ), ಹನುಕು (ಮಳೆ ಹನುಕಲು ತೊಡಗಿತು)
drone — ನಾ 1 ಗಂಡು ಜೇನುಹುಳ 2 ಮಯ್ಗಳ್ಳ, ಸೋಂಬ
droop — ಕ್ರಿ ನಲುಗು (ನಲುಗಿದ ಉಡುಪು), ಜೋಲು (ಜೋಲಾಡು; ಜೋಲುಗಿವಿ; ಜೋಲುಮೋರೆ), ಬಾಡು (ಬಾಡಿದ ಗಿಡ)
drop — ನಾತೊಟ್ಟು (ನೀರಿನ ತೊಟ್ಟು), ತಟಕು (ಬಾಲಿುಗೆ ಒಂದು ತಟಕು ಹಾಲೆರೆದರು), ಹನಿ (ಹನಿಕು; ಹನಿಗಣ್ಣು; ಹನಿಮಳೆ)
drop — ಕ್ರಿ ಕಳಲು (ಕಳಲುತ್ತಿರುವ ಹಣ್ಣು), ಸೋರು (ನಮಗೆ ಸೋರುವ ಮನೆ ಬೇಡ), ತೊಟ್ಟು (ತೊಟ್ಟಿಕ್ಕು - ಮಳೆಗೆ ಮಾಡಿ ನಿಂದ ನೀರು ತೊಟ್ಟಿಕ್ಕುತ್ತಿದೆ), ಕೆಡೆ (ಕೆಡೆವ ನೀರಿನ ಹನಿಗಳು), ಉದುರು (ಮರದಿಂದ ಉದುರಿ ಬಿದ್ದ ಹಣ್ಣು)
dropsy — ನಾ ಮಯ್ಬಾವು
dross — ನಾ ಕಸ, ಮಡ್ಡಿ
drought — ನಾ ಬರ (ಬರದ ನಾಡಿನಿಂದ ಬಂದ ವರು; ಬರಗಾಲ; ಬರಗೆಡು; ಬರಸಿಡಿಲು; ಬರಹು), ಅರ (ಈ ಸಲದ ಅರದಲ್ಲಿ ತುಂಬಾ ಜನ ಸತ್ತರು), ಕಗ್ಗಾರು
drove — ನಾ ಮಂದೆ (ಅಲ್ಲಿ ದನಗಳು ಮಂದೆ ಯಾಗಿ ನಿಂತಿವೆ), ಹಿಂಡು
drown — ಕ್ರಿ ಮುಳುಗು (ಮುಳುಗಿ ಸಾಯು)
drowse — ಕ್ರಿ ತೂಕಡಿಸು (ತರಗತಿಯಲ್ಲಿ ತೂಕಡಿಸುವ ಹುಡುಗ)
drub — ಕ್ರಿ 1 ಹೊಡೆ (ಕೋಲಿನಲ್ಲಿ ಹೊಡೆ) 2 ಸೋತುಹೋಗು
drudgery — ನಾ ಬದಗು (ಬದಗು ಗೆಯ್ಯು)
drug — ನಾ ಮದ್ದು (ಮದ್ದರೆ; ಮದ್ದುಹಾಕು)
druggist — ನಾ ಮದ್ದುಗ
drugstore — ನಾ ಮದ್ದಿನಂಗಡಿ
drum — ನಾತಮ್ಮಟೆ (ತಮ್ಮಟೆ ಹೊಡೆಯುತ್ತ ಊರೂರು ಅಲೆಯುತ್ತಿದ್ದ),ಪರೆ (ಪರೆ ಗುಟ್ಟು), ಹರೆ ನಾ1 ನುಗ್ಗೆ (ನುಗ್ಗೆ ಹೂವಿನ ತಾಳು; ನುಗ್ಗೆ ಕೋಡು) 2 ಕುಣಿಲು (ಕುಣಿಲು ಹಿಡಿದು ತಮ್ಮಟೆ ಬಡಿದ)
drunkard — ನಾಕುಡುಕ (ಕುಡುಕನ ಹೆಂಡತಿ)
dry leaf — ನಾ ಪಳಗ, ತರಗೆಲೆ
dry — ಕ್ರಿ ತಾರು (ತಾರಿದ ಗದ್ದೆ), ಬರೆ (ಬರೆತ ಬಾಯಿ), ಅರು (ಅರತ ಎದೆ; ಅರತ ಉಸಿರು; ಅರು ಕೆರೆ), ಅಂಬು, ಅದುರು (ನೀರಿಲ್ಲದೆ ಬಿಸಿಲಿಗೆ ಬೆಳೆ ಅದುರಿತು), ಒಣಗು (ಒಣಗಿದ ಕಾಯಿ), ಒಣಗಿಲು
dry — ಗು ಒಣ (ಒಡಗಿಡ, ಒಣದೊಗಲು; ಒಣಕೆಮ್ಮು; ಒಣಹುಲ್ಲು; ಒಣಕು), ತಾರಡಿ,ಗಾರು (ಗಾರಾಗು; ಗಾರುಗೆಡು), ತರಗು (ತರಗೆಲೆ; ತರಗಾಗು) ತರಳು (ತರಳು ಹಣ್ಣು; ತರಳು ತೆಂಗಿನ ಕಾಯಿ), ಬರಲು (ಬರಲುಕಡ್ಡಿ; ಬರಲು ಕೊಂಬೆ), ಇಂಗಲು, ಕೀಚು (ಕೀಚು ಕೀಚಾದ ಗಿಡ ಗಳು)
dry rot — ನಾಒಣಕೊರೆತ
dry soil — ನಾ ಪುಣಜಿ
dry twigs — ನಾ ಪುರಲೆ (ಪುರಲೆ ಸವ್ದೆ)
dry up — ಕ್ರಿ ಬತ್ತು (ಬಿಸಿಲಿಗೆ ನೀರು ಬತ್ತಿ ಹೋಗಿದೆ; ಬತ್ತೆಮ್ಮೆ), ಅಟ್ಟು (ಅಟ್ಟುಪ್ಪು), ಆರು (ಬಾಯಾರು), ಇಮರು (ಆ ನೀರು ಅಲ್ಲಿಯುೀ ಇಮರಿಕೊಂಡಿದೆ), ಇಂಗು (ಇಂಗದ ಬೆವರು; ಇಂಗಿಹೋಗು), ಇಗರು (ಇಗರಿದ ಕೆರೆ), ಕಟ್ಟೆಹೋಗು
dryness — ನಾಆರಿಕೆ,ಬತ್ತುಗೆ
dual — ಗು ಇಬ್ಬಗೆ (ಹೊನಲನ್ನು ಇಬ್ಬಗೆ ಮಾಡುವ ಕಡಲು), ಇಬ್ಬರ
dub — ಕ್ರಿ 1 ಹೆಸರಿಸು 2 ನುಣುಪಾಗಿಸು, ಚಪ್ಪಟೆ ಮಾಡು 3 ಮಾತು ಬದಲಿಸು
dubious — ಗು ನಂಬಲಾಗದ (ನಂಬಲಾಗದ ಸುದ್ದಿ)
duck — ನಾ ಬಾತುಕೋಳಿ
duck — ಕ್ರಿ ಬಗ್ಗು, ಬಾಗು, ತಲೆತಗ್ಗಿಸು, ಮುಳುಗು
duckweed — ನಾಪಾಚಿ
duct — ನಾ ಕೊಳವೆ
ductile — ಗು ಬಗ್ಗಿಸಬಲ್ಲ, ಎಳೆಯಬಲ್ಲ
dudgeon — ನಾ ಸಿಟ್ಟು, ಮುನಿಸು, ಕಿರಿಕಿರಿ
due — ಗು ತಕ್ಕ (ಸಲ್ಲತಕ್ಕ; ತಕ್ಕನೆ ಮಾಡು; ಅವನಿಗೆ ತಕ್ಕ ಹೆಂಡತಿ; ತಕ್ಕ ಹೊತ್ತು; ತಕ್ಕಶ್ಟು)
duel — ನಾ ಜೋಡಿಹೋರಾಟ (ಅವರಿಬ್ಬ ರೊಳಗೆ ಜೋಡಿಹೋರಾಟ ನಡೆದಿದೆ)
dues — ನಾ ತೀರ್ವೆ (ಆತ ತೀರ್ವೆ ಕಟ್ಟಲು ಹೋಗಿದ್ದಾನೆ)
duet — ನಾ ಜೋಡಿಹಾಡು
duffel — ನಾ ಉರುಳೆಚೀಲ
dug — ನಾ ಕೆಚ್ಚಲು
dugout — ನಾ ತೋಡುದೋಣಿ
dulcet — ಗು ಸಿಹಿಯಾದ, ಇಂಪಾದ
dull — ಗು ಸಪ್ಪೆ (ಅವನ ಕೆಲಸ ಸಪ್ಪೆಯಾಲಿತು), ಮದಡು (ಕಣ್ಣು ಮದಡಾಗಿದೆ; ಮದಡ), ಮಂಕು (ಮಂಕು ಹಿಡಿದವನ ಹಾಗೆ ಕುಳಿತಿ ದ್ದಾನೆ)
dullard — ನಾ ಹೆಡ್ಡ, ಮದಡ
duly — ಗು ಸರಿಯಾಗಿ, ತಕ್ಕ ಹೊತ್ತಿನಲ್ಲಿ
dumb — ಗು ಊಮೆ (ಊಮೆ ಹುಡುಗ)
dumbfound — ಕ್ರಿ ಬಾಯಿಕಟ್ಟು, ಬೆರಗಾಗು, ಸೊಲ್ಲಡಗು
dummy — ನಾ ಗೊಂಬೆ (ಅಂಗಡಿಯಲ್ಲಿ ಹೊಸ ಉಡುಪುಗಳನ್ನು ಗೊಂಬೆಗಳಿಗೆ ತೊಡಿಸು ತ್ತಿದ್ದಾರೆ)
dump — ನಾ ತಿಪ್ಪೆಗುಂಡಿ, ಕಸದ ಗುಡ್ಡೆ ಕ್ರಿ ಬಿಸಾಡು, ಸುರಿ (ಎಲ್ಲವನ್ನೂ ಕಸದ ಗುಪ್ಪೆಗೆ ಸುರಿದಿದ್ದಾನೆ), ಕೆಡವು
dumpy — ಗು ಗುಂಡಗೆ, ಕುಳ್ಳಗೆ ಮತ್ತು ದಪ್ಪಗೆ
dun — ಕ್ರಿ ತಿರುತಿರುಗಿ ಕೇಳು
dun — ಗು ಕಂದು, ಬೂದು
dunce — ನಾ ದಡ್ಡ, ಮಂಕ
dune — ನಾ ಮರಳುದಿನ್ನೆ, ಗುಡ್ಡ
dung — ನಾ ಎರಣ (ಕರುವಿನ ಎರಣ), ಹಿಕ್ಕೆ (ಆಡಿನ ಹಿಕ್ಕೆ; ಕುರಿಯ ಹಿಕ್ಕೆ), ಎರುಬು (ಎರುಬು ಹುಳು), ತೊಪ್ಪೆ (ಆಕಳು ಆಗ ತಾನೇ ಹಾಕಿದ ತೊಪ್ಪೆ)
dungeon — ನಾ ನೆಲಮಾಳಿಗೆ (ಆತನನ್ನು ಸೆರೆಹಿಡಿದು ನೆಲಮಾಳಿಗೆಯಲ್ಲಿ ಇಟ್ಟಿದ್ದಾರೆ)
dunghill — ನಾ ತಿಪ್ಪೆ (ತಿಪ್ಪೆಕೆದರು; ತಿಪ್ಪೆ ಗುಂಡಿ; ತಿಪ್ಪೆಸಾರಿಸು)
dunk — ಕ್ರಿ ಅದ್ದು (ರೊಟ್ಟಿಯನ್ನು ಹಾಲಿನಲ್ಲಿ ಅದ್ದಿ ತಿಂದ)
duo — ನಾ ಎಣೆ, ಜೋಡಿ
dupe — ಕ್ರಿ ಉಕ್ಕೆವಿಸು, ಅಟವಟಿಸು, ಆಳಿ ಗೊಳಿಸು
duplex house — ನಾ ಅಂಟುಮನೆ
duplicate — ನಾ ಪಡಿಯಚ್ಚು (ನಿಮ್ಮ ಹತ್ತಿರ ಇರುವುದು ಅದರ ಪಡಿಯಚ್ಚು)
duplicity — ನಾ ಇಬ್ಬಗೆತನ, ಆಳಿ
durability — ನಾಬಾಳಿಕೆ (ಇದು ಒಳ್ಳೆ ಬಾಳಿಕೆ ಬರುವ ಕದ)
durable — ಗು ಬಾಳಿಕೆಯ, ಬಾಳಿಕೆ ಬರುವ
duration — ನಾ ಗಡುವು (ಮೂರು ತಿಂಗಳ ಗಡುವು), ಗಡಿ, ಹದ್ದು (ಹದ್ದುಮೀರು)
duress — ನಾ ಸೆರೆ, ತಡೆಹಿಡಿತ, ಒತ್ತಾಯ
dusk — ನಾ ಮುಂಗತ್ತಲು (ಆತ ಮಂಗತ್ತಲಲ್ಲಿ ಮನೆಗೆ ಹಿಂದಿರುಗಿದ)
dusky — ಗು ಮಾಸರ (ಮಾಸರ ಕುದುರೆ),ಎರೆ (ಎರೆನೆಲ; ಎರೆಮಣ್ಣು; ಎರೆಗತ್ತಲೆ), ಮಬ್ಬು
dust — ನಾನುಸಿ (ನುಚ್ಚುನುಸಿ),ದುಂಬು (ಮನೆ ಯಲ್ಲೆಲ್ಲಾ ದುಂಬು ತುಂಬಿದೆ),ಹುಡಿ (ಹುಡಿಮಣ್ಣು)
duty — ನಾ 1 ಕೆಲಸ 2 ತೆರಿಗೆ
dwarf — ನಾಕುಳ್ಳ,ಗುಚ್ಚ,ಗುಜ್ಜಾರಿ
dwarf — ಗು ಮಿಣ್ಣು (ಮಿಣ್ಣಾಗಿರುವವನು; ಮಿಣ್ಣಾಳು)
dwell — ಕ್ರಿ ಇರು, ನೆಲಸು (ಈಗ ನಾವು ಈ ಊರಲ್ಲೀ ನೆಲೆಸಿದ್ದೇವೆ)
dwindle — ಕ್ರಿ ಕುಗ್ಗು, ಕಿರಿದಾಗು, ಕಡಿಮೆ ಯಾಗು
dye — ನಾ ಪೊಗರು, ಬಣ್ಣ
dyke — ನಾಏರಿ (ಏರಿಯ ಮೇಲೆ ನಡೆದು ಕೊಂಡು ಹೋಗು), ಒಡ್ಡು (ಮಳಲೊಡ್ಡು; ಒಡ್ಡುಹಲಗೆ), ಅಡ್ಡಗೋಡೆ
dynamic — ಗು ಚುರುಕು (ಈ ಹುಡುಗ ತುಂಬಾ ಚುರುಕು
dynamite — ನಾ ಸಿಡಿಮದ್ದು (ಬಂಡೆ ಒಡೆ ಯಲು ಸಿಡಿಮದ್ದು ತಂದಿದ್ದಾನೆ)
dyspepsia — ನಾ ಕೋವೆ