← Ch 12  ·  Contents  ·  Ch 14 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

O

oaf — ನಾ ಹೆಡ್ಡ, ದಡ್ಡ (ಅವನೊಬ್ಬ ಹೇಳಿದ್ದನ್ನು ಮಾಡಲಾಗದ ದಡ್ಡ)
oar — ನಾ ತುಟುಬು, ಹುಟ್ಟು (ಹುಟ್ಟುಹಾಕು)
oarsman — ನಾ ಗಣೆಕಾರ, ಅಂಬಿಗ (ಹೊಳೆ ದಾಟಿದ ಮೇಲೆ ಅಂಬಿಗನ ನೆನಪಿಲ್ಲ)
oasis — ನಾ ನೀರೊಸರು, ಮರಳುಗಾಡಿನ ತೋಟ
oath — ನಾ ಸೂರುಳು (ಸೂರುಳಿಡು, ಸೂರುಳು ಮಾಡು),ಒಟ್ಟು (ಒಟ್ಟಿಟ್ಟುಕೊಳ್ಳು)
obduracy — ನಾ ಮೊಂಡುತನ (ಹುಡುಗ ಮೊಂಡುತನ ಮಾಡಿದ)
obedient — ಗು ಹೇಳಿದಂತೆ ಕೇಳುವ, ಹೇಳಿದ್ದು ಮಾಡುವ, ಹೊಂದಿರುವ
obeisance — ನಾ ತಲೆಬಾಗುವಿಕೆ, ತಲೆ ಬಾಗುಹ
obese — ಗು ಬೊಜ್ಜು (ಬೊಜ್ಜುಹೊಟ್ಟೆ; ಬೊಜ್ಜುಮಯ್), ದಪ್ಪ (ದಪ್ಪಹೊಟ್ಟೆ)
obey — ಕ್ರಿ ಹೇಳಿದ್ದು ಕೇಳು, ಹೇಳಿದಂತೆ ಮಾಡು
obituary — ನಾ ಸಾವರಿಪು, ತೀರಿಕೆಯರಿಪು
object — ನಾ ಹುರುಳು; ಪುರುಳು (ಬೇಡಿ ದೊಂದು ಪುರುಳು), ಈಡು, ಬಗೆ, ಬಂಡ
object — ಕ್ರಿ ಅಸಿಮಿಸಿ ಅನ್ನು, ಅಡ್ಡಿ ಹೇಳು
objection — ನಾ ಎದುರಿಕೆ, ಅಡ್ಡಿ, ಮಾರ್ನುಡಿ
objective — ನಾ ಈಡು (ಅವರ ಬರವಿನ ಈಡೇನು?)
objective — ಗು 1 ನನಸಾದ, ಇರುವ 2 ಬದಿಹಿಡಿಯದ
objector — ನಾ ಮಾರ್ನುಡಿಗ, ಮರುನುಡಿಗ
oblation — ನಾ ಬೇಳುವೆ (ತುಪ್ಪದ ಬೇಳುವೆ; ಬೇಳು; ಬೇಳುವ ತುತ್ತು), ಕಾಣಿಕೆ, ಬಾರೆ
obligation — ನಾ ಹಂಗು (ಅವನ ಹಂಗಿನಲ್ಲಿ ಎಷ್ಟು ದಿನ ಇರಬೇಕು? ಹಂಗಾಳು), ಹರಿ (ನನಗೆ ಅವನ ಹರಿಲಿುಲ್ಲ)
obligatory — ಗು ಮಾಡಲೆೀಬೇಕಾದ, ಕಟ್ಟು ಬಿದ್ದ ಕ್ರಿ ಕಟ್ಟುಬೀಳು (ಕೊಟ್ಟ ಮಾತಿಗೆ ಕಟ್ಟುಬಿದ್ದು ಬರಬೇಕಾಲಿುತು), ಒತ್ತಾಸೆ ಪಡೆ
oblique — ಗು ಕೋಸು (ಕೋಸುಕಣ್ಣು), ಓರೆ (ಓರೆಕೋರೆ), ಬೂತು (ಬೂತಾಟ), ಸುತ್ತು ಬಳಸಿದ
obliterate — ಕ್ರಿ ಅಳಿಸು (ಬರೆದುದನ್ನು ಅಳಿಸಿಬಂದೆ), ತೊಡೆ (ಕತ್ತಲೆಯನ್ನು ತೊಡೆವ ಸೊಡರು)
oblivion — ನಾ ಮರೆವು, ಪಳಿವು, ಕೀಟು
oblivious — ಗು ಮರೆಯುವ, ಗಮನಿಸದ
oblong — ಗು ನಿಡುನಾಲ್ಮೂಲೆ
obloquy — ನಾ ತೆಗಳಿಕೆ, ಹೆಸರಕೆಡುಗೆ
obnoxious — ಗು ಹೇಸಿಕೆಯ, ಪೆಡಸು
obscene — ಗು ಹೊಲಸು, ಪೆಡಸು (ಪೆಡಸು ಮಾತು), ರೋಸಿಹೋಗುವ, ಸಲುವಳಿ ಲಿುಲ್ಲದ), ಊರುಗ ನುಡಿ
obscure — ಗು ಮಬ್ಬಾದ (ಮಬ್ಬಾದ ಕಾಣ್ಕೆ), ಮಂಕಾದ, ನೇರವಲ್ಲದ (ನೇರವಲ್ಲದ ಹೇಳಿಕೆ), ಮಸಕಾದ, ತಿಳಿಯಲ್ಲದ, ಅಡ ಗಿರುವ
obsequies — ನಾ ಕೊನೆಯ ಕೆಲಸ, ಸಾವಿನ ಕೆಲಸ
obsequious — ಗು ತಲೆಬಾಗುವ, ಕೀಳ್ಮಾಡಿ ಕೊಳ್ಳುವ, ಹಲ್ಲುಗಿಂಜುವ
observance — ನಾ ಒಮ್ಮುಗೆ (ಕಟ್ಟಲೆಗಳ ಒಮ್ಮುಗೆ)
observatory — ನಾ ಬಾನುಂಕುಗೆ (ಅವರು ಬಾನುಂಕುಗೆಯಲ್ಲಿ ಚುಕ್ಕೆಗಳನ್ನು ಉಂಕಿಸಿ ನೋಡುತ್ತಿದ್ದಾರೆ)
observe — ಕ್ರಿ ಉಂಕಿಸು (ಸರಿಯಾಗಿ ಉಂಕಿಸಿ ನೋಡಿಕೊಳ್ಳಿ), ಆರಯ್ಯು (ನುಡಿದುದನ್ನು ಆರಯ್ದು ತಿಳಿದುಕೊಳ್ಳಬೇಕು; ಆರಯ್ಕೆ), ಗಮನಿಸು (ಆತ ಎಲ್ಲವನ್ನೂ ಗಮನಿಸು ತ್ತಿದ್ದ; ಗಮನ - ನಿನ್ನ ಗಮನ ಎಲ್ಲಿತ್ತು?), ಗವಿಸು, ಬಗೆಗೊಳ್ಳು
obsession — ನಾ ಗೀಳು (ಮುದುಕಿಗೆ ಕಾµಗೆ ಹೋಗಬೇಕೆಂಬ ಗೀಳು)
obsolete — ಗು ಬಳಕೆ ತಪ್ಪಿದ, ಹಳತಾದ (ಹಳತಾದ ಉಡುಪುಗಳು)
obstacle — ನಾ ಅಡೆತಡೆ,ಅಡ್ಡಿ (ನನ್ನದೇನೂ ಅಡ್ಡಿಲಿುಲ್ಲ; ನಾನೇನೂ ಅಡ್ಡಿ ಮಾಡುವು ದಿಲ್ಲ), ತಡ (ತಡಗಲ್ಲು; ತಡಗುಂಡಿ), ತಡೆ (ತಡೆಯೊಟ್ಟು; ತಡೆಹಾಕು), ತೊಡರು (ತೊಡರುಗಳನ್ನೆಲ್ಲ ಹೋಗಲಾಡಿಸಬೇಕು),ತಗಹು
obstetrician — ನಾ ಹೆರಿಗೆಯರಿಗ
obstetrics — ನಾ ಹೆರಿಗೆಯರಿಮೆ ನಾ ಆರು (ಆರುಮಾಡು), ಕಾಳಿಮೆ (ಆತನಿಗೆ ಹಿಡಿದ ಕೆಲಸವನ್ನು ಮುಗಿಸುವ ಕಾಳಿಮೆಲಿುದೆ), ಮೊಂಡು (ಮೊಂಡುಬೀಳು; ಮೊಂಡುಹಿಡಿ; ಮೊಂಡು ತನ), ಗೊಟ್ಟು (ಗೊಟ್ಟಾಟ), ಎಟ್ಟಿ (ಅವನು ಯಾರ ಮಾತೂ ಕೇಳದ ಎಟ್ಟಿ), ಒಟ್ಟಿ (ಅವ ನೊಬ್ಬ ಒಟ್ಟಿ), ಒರಟು (ಒರಟ), ಪಟ್ಟು (ಪಟ್ಟುಹಿಡಿ), ಚೊಂಗು, ಮುರುಹು
obstreperous — ಗು ಗದ್ದಲದ, ಹತೋಟಿಗೆ ಸಿಗದ
obstruct — ಕ್ರಿ ತಳ್ಪೊಯ್ಯು,ತಡೆ (ಅವನನ್ನು ಯಾರೂ ತಡೆಯಬೇಡಿ)
obstruction — ನಾ ಮುಕ್ಕುಡಿ (ಎಲ್ಲದಕ್ಕೂ ಆತನ ಮುಕ್ಕುಡಿಲಿುದೆ), ಅಡ್ಡಿ (ಅಡ್ಡಿ ಮಾಡು; ಅಡ್ಡಲಿುಸು), ತಗಹು
obtain — ಕ್ರಿ ಪಡೆ (ನಾಲ್ಕು ಮಂದಿ ಹುಡುಗರನ್ನು ಪಡೆದರೂ ಆಕೆಗೆ ಬಡತನ ತಪ್ಪಲಿಲ್ಲ), ಅಂದು (ಅವನು ನನ್ನ ಕಯ್ಗೆ ಅಂದುವು ದಿಲ್ಲ), ಅಡೆ (ಬೇಕಾದುದನ್ನು ಬೇಡದೆ ಅಡೆದಿದ್ದಾನೆ), ಒದಗು (ಕೆಲಸಕ್ಕೆ ಒದಗದ ವಸ್ತು), ಕಿಟ್ಟು (ಕಿಟ್ಟಿದ ಹಣ), ಗಿಟ್ಟು (ಅವನಿಗೇನು ಗಿಟ್ಟಿತು?), ಗೀಟು, ತಳೆ (ಅವಳು ತಳೆದ ಚಿನ್ನದ ಗಟ್ಟಿ), ದೊರಕು (ಅವನಿಗೆ ದೊರಕಿದ ಬಟ್ಟೆ ಚನ್ನಾಗಿಲ್ಲ), ದೊರೆ (ನಾಲ್ಕು ಆಣೆಗೆ ಒಂದು ತೊಲ ಲವಂಗ ದೊರೆಯುತ್ತಿತ್ತು; ದೊರೆಕೊಳ್ಳು), ಸಿಕ್ಕು (ಹಾದಿಯಲ್ಲಿ ಬಿದ್ದು ಸಿಕ್ಕಿದ ಹಣ), ಹೊಂದು (ಒಪ್ಪಿಗೆ ಹೊಂದು), ಈಸಿಕೊಳ್ಳು
obtaining — ನಾ ಪಾಡು (ಏರ್ಪಾಡು, ತಿದ್ದುಪಾಡು)
obtrude — ಕ್ರಿ 1 ಹೊರದೂಡು 2 ನಡುವೆ ಬರು, ಮೂಗು ತೂರಿಸು
obtuse — ಗು ಬಡ್ಡು, ಹರಿತವಿಲ್ಲದ, ಮೊಂಡು
obverse — ನಾ ಮಾರು (ಮಾರುಲಿ, ಮಾರ್ನುಡಿ, ಮಾರೊಡ್ಡು), ಮರು (ಮರುಮಾತು)
obviate — ಕ್ರಿ ತಡೆ, ತೊಡೆದುಹಾಕು, ಬೇಡಿಕೆ ಕಳೆ
obvious — ಗು ಸುಳುವಾಗಿ ತಿಳಿಯುವ, ತೆಳು ವಾದ, ಅಲ್ಲಗಳೆಯಲಾಗದ
occasion — ನಾ 1 ಆಗುಹ, ಮಾಳ್ಕೆ, ನೆಗಳ್ತೆ 2 ಅಮಗ, ತೆರಹು
occasionally — ಗು ಒಮ್ಮೊಮ್ಮೆ (ಆತ ನಮಗೆ ಒಮ್ಮೊಮ್ಮೆ ಕಾಣಲು ಸಿಗುತ್ತಾನೆ)
occident — ಗು ಪಡುವಣ (ಪಡುವಣ ನಾಡು)
occiput — ನಾ ಹೆಡತಲೆ
occlude — ಕ್ರಿ ತಡೆ, ಮುಚ್ಚು (ಈ ಬಾಗಿಲನ್ನು ಮುಚ್ಚಿದ್ದಾರೆ; ಮುಚ್ಚಿಹೋಗು)
occult — ಗು 1 ಗುಟ್ಟಾದ, ಅಡಗಿಸಿಟ್ಟ 2 ತಿಳಿಯಲಾಗದ, ತಿಳಿವಿಗೆ ಮೀರಿದ
occupant — ನಾ ನೆಲಸಿಗ, ಒಕ್ಕಲು (ಆ ಮನೆಗೆ ಇನ್ನೂ ಒಕ್ಕಲು ಬಂದಿಲ್ಲ)
occupation — ನಾ 1 ಕೆಲಸ 2 ನೆಲಸುಗೆ, ಹಿಡುವಳಿ
occupy — ಕ್ರಿ 1 ನೆಲಸು, ಒಕ್ಕಲಿರು 2 ಹಿಡು ವಳಿ ಪಡೆ, ಒಡೆತನ ಪಡೆ 3 ನುಗ್ಗಿ ನೆಲಸು ಕ್ರಿ ಸಮನಿಸು (ಹಣವಿದ್ದರೆ ಬೇಕಾದು ದೆಲ್ಲ ಸಮನಿಸುತ್ತದೆ), ಎಡೆಗೊಳ್ಳು, ನಡೆ (ಮದುವೆ ನಡೆಲಿುತು), ಉಂಟಾಗು
occurrence — ನಾ ಆಗುಹ, ನೆಗಳ್ತೆ
ocean — ನಾ ಕಡಲು (ಪಾಲ್ಗಡಲು; ಕಡಲುರಿ), ಮುನ್ನೀರು (ಮುನ್ನೀರ್ಗಟ್ಟೆ; ಮುನ್ನೀರ್ಗಿಚ್ಚು)
ochre — ಗು ಕಾವಿ (ಕಾವಿಬಟ್ಟೆ)
octagon — ನಾ ಎಣ್ಮೂಲೆ
octav — ನಾ ಎಂಟುಲಿಕಂತೆ
octroi — ನಾ ಉಕ್ಕಡ
ocular — ಗು ಕಣ್ಣಿನ
oculist — ನಾ ಕಣ್ಣುಮಾಂಜುಗ
odd — ಗು 1 ಬಿಡಿ (ಬಿಡಿ ಹೂ) 2 ಮುಗುಳಿ (ಮುಗುಳಿ ಎಣಿಕೆ) 3 ಒಮ್ಮೊಮ್ಮೆಯ (ಒಮ್ಮೊಮ್ಮೆಯ ಕೆಲಸ) 4 ಎಲ್ಲರಂತಿಲ್ಲದ, ಬೇರಾಗಿರುವ
odds — ನಾ ಸಲೆ, ಅಕ್ಕು
odious — ಗು ಕಿಸುರೆಬ್ಬಿಸುವ, ಹೇಸಿಕೆಯ
odium — ನಾ ಹಗೆತನ, ಕಿಸುರು, ಹೇಸಿಕೆ
odour — ನಾ ಗಮನ (ಹೂವಿನ ಗಮನ); ಕಂಪು (ತುಪ್ಪದ ಕಂಪು ಮನೆಯಲ್ಲಲ್ಲ ಹರಡಿತು)
offence — ನಾ 1 ಕೆಟ್ಟಕೆಲಸ, ಸೆರಗು 2 ನೋಲಿುಸುವುದು, ಕೆರಳಿಸುವುದು
offend — ಕ್ರಿ ಸಿಟ್ಟುಬರಿಸು, ಕೇಡುಮಾಡು
offensive — ಗು ಪೆಡಸು (ಪೆಡಸು ಮಾತು)
offer — ಕ್ರಿ ನೀಡು (ನೀಡದವನಲ್ಲಿಗೆ ಹೋಗಿ ಬೇಡಬಾರದು; ನೀಡಿಕೆ), ಕೊಡು (ಮನೆ ಯನ್ನೇ ಕೊಡುತ್ತಾನಂತೆ; ಕೊಡುಗೆ)
offering — ನಾ ಕಾಣಿಕೆ (ಕಾಣಿಕೆ ಕೊಡು; ಕಯ್ಗಾಣಿಕೆ), ವಂತಿಗೆ, ಎಡೆ (ಎಡೆ ಇಕ್ಕು)
offhand — ಗು ಆರಯ್ಯದೆ, ಒಡನೆಯೇ
office — ನಾ ಮಣಿಹ (ಮಣಿಹಗಾರ), ಅಳವೆಡೆ
officer — ನಾ 2 ಅಳವಿಗ 2 ಕಾಪುಗ
officiate — ಕ್ರಿ ಅಳವು ನಡೆಸು
offprint — ನಾ ಮೇಲಚ್ಚು (ಬರಹದ ಇಪ್ಪತ್ತು ಮೇಲಚ್ಚುಗಳನ್ನು ಕಳಿಸುತ್ತೇವೆ)
offset — ಕ್ರಿ ಸರಿದೂಗಿಸು, ಕಳೆತುಂಬು ನಾ 1 ಕವಲು, ಕೊಂಬೆ (ಅಡ್ಡ ಕೊಂಬೆ) 1 ಪಡೆಪು, ಪಡೆತ, ಹುಟ್ಟಿಗೆ
offshore — ನಾ ಕರೆಲಿುಂದ ದೂರ, ಕಡಲಲ್ಲಿ, ಕರೆಬಿಟ್ಟು
offspring — ನಾ ಪೀಳಿಗೆ, ಮಕ್ಕಳು
off-white — ಗು ಮಾಸಲು ಬಿಳುಪು, ಬೂದು ಬಿಳಿ
ogle — ಕ್ರಿ ತೆವಲಿನಿಂದ ನೋಡು
oil — ನಾ ಎಣ್ಣೆ (ಎಣ್ಣೆತೆಗೆ; ದೀಪಕ್ಕೆ ಎಣ್ಣೆ ಹಾಕು), ಜಿಡ್ಡು (ಜಿಡ್ಡುಬಟ್ಟೆ; ಜಿಡ್ಡು ತೆಗೆಯಲು ಸೀಗೆಪುಡಿ ಒಳ್ಳೆಯದು)
oil cake — ನಾ ಹಿಂಡಿ (ಆಕಳಿಗೆ ತೆಂಗಿನ ಹಿಂಡಿ ಕೊಡು; ಬೇವಿನ ಹಿಂಡಿ)
oil monger — ನಾ ಎಣ್ಣೆಹರದ
oil-mill — ನಾ ಗಾಣ (ಗಾಣದ ಎತ್ತು; ಗಾಣ ವಾಡು)
oil-miller — ನಾ ಗಾಣಿಗ, ಗಾಣಿಗಿತ್ತಿ
oilskin — ನಾ ಎಣ್ಣೆಬಟ್ಟೆ (ಎಣ್ಣೆಬಟ್ಟೆಯ ಚೀಲ), ನೀರಿಳಿಯದ ಬಟ್ಟೆ
ointment — ನಾ ಹಚ್ಚುಮದ್ದು
okra — ನಾ ಬೆಂಡೆ (ಬೆಂಡೆಕಾಲಿು)
old (be) — ಕ್ರಿ ಹಳಸು (ಹಿಟ್ಟು ಹಳಸಿದೆ; ಹಳಸಲು)
old — ಗು ಮುತ್ತು (ಮುತ್ತವ್ವ; ಮುತ್ತಪ್ಪ; ಮುತ್ತಯ್ದು), ಮುದಿ (ಮುದಿಯುತ್ತು, ಮುದಿ ಗೂಬೆ; ಮುತ್ತಮುದಿ), ಮುಪ್ಪು (ಮುಪ್ಪಿ ನಲ್ಲಿ ಅವನೊಂದಿಗೆ ಈಗ ಯಾರೂ ಇಲ್ಲ; ಮುಪ್ಪುಚಿಪ್ಪು), ಹಳೆ (ಹಳೆಗನ್ನಡ; ಹಳೆ ಸೀರೆ; ಹಳೆಯೆತ್ತು), ಹಳತು
old man — ನಾ ಮುದುಕ (ಮುದುಕಿ; ಮುದುಕ ತನ), ಹಳಬ, ಕೆಳವ (ಕೋಲೂರಿ ಹೊರಟ ಕೆಳವ; ಕೆಳವಿ), ಹಿರಿಯ
omelet — ನಾ ಮೊಟ್ಟೆದೋಸೆ, ತತ್ತಿದೋಸೆ
omen — ನಾ ಒಕ್ಕು, ತಾರು (ಒಳ್ಳೆ ತಾರು; ಕೆಟ್ಟ ತಾರು)
ominous — ಗು ತೋರಿಸುವ, ಮುಂಗಾ ಣಿಸುವ, ಕೆಟ್ಟತಾರಿನ
omission — ನಾ ಬಿಡುಹ, ಕಡೆಗಣಿಕೆ
omit — ಕ್ರಿ ಬಿಡು (ಬಿಟ್ಟುಹೋಗು - ಅವನಿಗೆ ಮದುವೆಯ ಹೇಳಿಕೆ ಕೊಡಲು ಬಿಟ್ಟು ಹೋಗಿದೆ), ಮಾಡದಿರು, ಕಡೆಗಣಿಸು
omnifarious — ಗು ಎಲ್ಲ ಬಗೆಯ, ಎಲ್ಲ ತರದ
omnipotent — ಗು ಎಲ್ಲ ಮಾಡಬಲ್ಲ
omnipresent — ಗು ಎಲ್ಲಲ್ಲೂ ಇರುವ ಗು ಎಲ್ಲ ತಿಳಿದ
omnivorous — ಗು ಎಲ್ಲ ತಿನ್ನುವ
once — ಗು ಒಪ್ಪಟ್ಟು, ಒಮ್ಮೆ (ತಿಂಗಳಿಗೊಮ್ಮೆ; ಒಮ್ಮಿಂದೊಮ್ಮೆ),ಒಚ್ಚೊತ್ತು, ತಡವೆ
oncoming — ಗು ಮುಂಬರುವ, ಬರಲಿರುವ
one-eighth — ಗು ಅರೆಕಾಲು
one-fourth — ಗು ಒಕ್ಕಾಲು, ಹಾಗ
onerous — ಗು ದಬ್ಬಾಳಿಕೆಯ, ತೊಂದರೆಯ, ತೊಡಕಿನ
one-sided — ಗು ಬದಿಹಿಡಿದ, ಎಣೆತಪ್ಪಿದ, ದೊರೆಗೆಟ್ಟ
ongoing — ಗು ನಡೆಯುತ್ತಿರುವ, ಜರಗು ತ್ತಿರುವ
onion — ನಾ ನೀರುಳ್ಳಿ (ನೀರುಳ್ಳಿ ಗಡ್ಡೆ),ಈರುಳ್ಳಿ,ಉಳ್ಳಿ (ಉಳ್ಳಿಗಡ್ಡೆ)
online — ಗು ನೇರ
onlooker — ನಾ ನೋಟಕ, ನೋಡುಗ
only — ಗು ಬರಿ (ಬರಿ ಎಂಟು ಹಣ್ಣು ಸಿಕ್ಕಿದೆ), ಬರಿದೆ (ಬರಿದೆ ತಿನ್ನುತ್ತಿದ್ದ)
onomatopoeia — ನಾ ಅಣಕುಪದ
onrush — ನಾ ಮುನ್ನುಗ್ಗುವಿಕೆ, ನುಗ್ಗಿಬರುವಿಕೆ
onshore — ಗು ಕಡಲಕರೆಯ
onslaught — ನಾ ಬಿರುಸಿನ ದಾಳಿ
onus — ನಾ ಹೊಣೆ (ಹೊಣೆಗಾರಿಕೆ), ಹೊರಿಗೆ
ooze — ಕ್ರಿ ಊರು (ಊರುತ್ತಿರುವ ನೀರು; ಊಟೆ), ಊಜು (ನೆತ್ತರು ಈಗಲೂ ಊಜುತ್ತಿದೆ), ಕಸಿ (ಕಸಿ ನೀರು), ಜಿನುಗು (ಜಿನುಗುನೀರು), ಒಸರು (ಕಂಬನಿ ಒಸರು ತ್ತಿದೆ), ಒರೆ (ಒರತು ಹರಿವ ಹಳ್ಳ), ಒಡಿ, ತೊಟ್ಟಿಕ್ಕು, ಸೋರು
opaque — ಗು 1 ಬೆಳಕು ತಡೆಯುವ, ಆಚೆ ಕಾಣಿಸದ 2 ತಿಳಿಯಲಾಗದ, ಮಬ್ಬಾದ
open — ಕ್ರಿ ಕಿಸಿ (ಬಾಲಿು ಕಿಸಿದು ನೋಡುತ್ತಿದ್ದ; ಕಣ್ಣುಕಿಸಿ; ಹಲ್ಲುಕಿಸಿ), ತೆರೆ (ತೆರೆದ ಕಿಟಿಕಿಲಿುಂದ ಬೆಕ್ಕು ಒಳಗೆ ಬಂತು; ತೆರೆ ಗಣ್ಣು), ಬಿಚ್ಚು (ಬಿಚ್ಚಿದ ಕಡತ; (ಬಿಚ್ಚು ಗಣ್ಣು; ಬಿಚ್ಚುಗತ್ತಿ; ಬಿಚ್ಚುಗನ್ನಡ; ಬಿಚ್ಚು ನುಡಿ)
open — ಗು ಕಿಸ (ಕಿಸಬಾಲಿು, ಕಿಸಗಾಲು), ಬಯಲು (ಬಯಲಾಗು), ಕೀನಿ (ಕೀನಿ ಹಲ್ಲು)
open neck — ನಾ ತೆರೆಗೊರಳು (ತೆರೆಗೊರಳಿನ ಉಡುಪು)
open space — ನಾ ಬಯಲು (ಬಟ್ಟಬಯಲು; ಬಯಲಾಟ; ಬಯಲುಬಂಡಿ; ಬಯಲು ನಾಡು) wide ಕ್ರಿ ಹಿಗ್ಗಲಿಸು (ಕಣ್ಣನ್ನು ಬೆರಳಿ ನಿಂದ ಹಿಗ್ಗಲಿಸಿದ)
open-hearted — ಗು 1 ಬಿಚ್ಚುಮನಸ್ಸಿನ, ಬಿಡುಗಯ್ಯ, ಕಳಕಳಿಲಿುರುವ 2 ಬಿಚ್ಚೆದೆಯ
opening — ನಾ ತೆರವು (ಎಲ್ಲೂ ತೆರವು ಕಾಣಿಸಲಿಲ್ಲ; ತೆರಹು), ತೂತು, ಕೀನಿಕೆ (ಹಲ್ಲಕೀನಿಕೆ)
openly — ಗು ಮುಚ್ಚುಮರೆಲಿುಲ್ಲದೆ
open-minded — ಗು ತೆರೆದ ಮನಸ್ಸಿನ, ಬದಿ ಹಿಡಿಯದ, ತಿಳಿಸಬಲ್ಲ
operate — ಕ್ರಿ 1 ಗೆಯ್ಯು (ಕೆಲಸಗೆಯ್ಯು), ನಡೆಸು 2 ಕೊಯ್ಮದ್ದು ಮಾಡು
operation — ನಾ 1 ಕೊಯ್ಮದ್ದು ಕೆಲಸ 2 ಕೆಲಸದ ಮೆಟ್ಟಲು
ophthalmia — ನಾ ಕಣ್ಣುಬೇನೆ, ಕಣ್ಣುಕುತ್ತ
ophthalmologist — ನಾ ಕಣ್ಣರಿಗ, ಕಣ್ಣು ಮಾಂಜುಗ
ophthalmology — ನಾ ಕಣ್ಣರಿಮೆ
opinion — ನಾ 1 ಬಗೆ (ಅವನ ಬಗೆಯುೀನು?; ಬಗೆತ - ನಿಮ್ಮ ಬಗೆತವನ್ನು ತಿಳಿಸಿರಿ), ನಂಬಿಕೆ, ತೋಚಿಕೆ, ಅನಿಸಿಕೆ 2 ತೀರ್ಮಾನ
opponent — ನಾ ಮಾರಡಿ, ಮರ್ಮ (ಅವನಿಗೆ ಮರ್ಮರು ಯಾರೂ ಇಲ್ಲ), ಎದುರಾಳಿ, ಎದುರಿ, ಉದ್ದಿ (ನಿನ್ನ ಉದ್ದಿಯನ್ನು ನೀನೇ ಆರಿಸಿಕೋ),ತತ್ತಾಳು
opportune — ಗು ತಕ್ಕ, ಸರಿಯಾದ, ಹೊತ್ತಿನ
opportunity — ನಾ ಅಮಗ (ನಿಮಗಿದು ಒಳ್ಳೇ ಅಮಗ), ತೆರಹು (ತೆರಹು ತೋರಿಸು; ಸಿಕ್ಕಿದ ತೆರಹನ್ನು ಬಿಟ್ಟುಕೊಡಬೇಡ)
oppose — ಕ್ರಿ ಮಲೆ (ಮಲೆತವರನ್ನು ತೊಲಗಿಸಿ ದರು), ಎದುರಿಸು (ಎದುರಾಲಿುಸು), ಇದಿರಿಸು (ನಮ್ಮನ್ನು ಇದಿರಿಸುವವರು ಯಾರೂ ಇಲ್ಲ), ಒಡ್ಡು (ನಾವೀಗ ಆತ ನನ್ನು ಒಡ್ಡಿ ನಿಲ್ಲಬೇಕಾಗಿದೆ; ಒಡ್ಡುಗಲ್ಲು; ಎಣೆಯೊಡ್ಡು, ಮಾರು (ಅವರನ್ನು ಮಾರುವವರು ಯಾರು?; ಮಾರೊಡ್ಡು), ಒಡ್ಡಲಿುಸು
opposite party — ನಾ ಮರುವಕ್ಕ (ಮರುವಕ್ಕ ದವರು ಏನು ಹೇಳುತ್ತಾರೆ?), ಆಂಕೆ (ಆಂಕೆಯಾಳು)
opposite — ಗು ಮರು (ಮರುಮಾತು, ಮರು ವಕ್ಕ) ಎದುರಿನ, ಮಾರ್- (ಮಾರ್ನುಡಿ)
oppress — ಕ್ರಿ ಅದುಮು (ಎದುರಾಳಿಗಳನ್ನೆಲ್ಲ ಅದುಮಿ ಆಳುತ್ತಿದ್ದಾನೆ), ತುಳಿ
oppression — ನಾ ದಬ್ಬಾಳಿಕೆ
oppressive — ಗು ದಬ್ಬಾಳಿಕೆಯ, ಹೊರೆ ಯಾದ, ತಡೆಯಲಾಗದ
oppressor — ನಾ ಗೋರೆ (ಎಲ್ಲರಿಗೂ ಆತ ನೊಬ್ಬ ಗೋರೆಯಾಗಿದ್ದಾನೆ), ಕೇಡಾಳಿ, ಅಡನಾಡಿ
opprobrium — ನಾ ಒಚ್ಚಿ, ಒಚ್ಚಯ, ಕೆಟ್ಟ ಹೆಸರು ಕ್ರಿ ಆರಿಸು (ನೀವು ಯಾವುದನ್ನು ಆರಿಸು ತ್ತೀರಿ?), ಆಯು (ಯಾವುದಾದರೂ ಒಂದನ್ನು ಆದುಕೊಳ್ಳಿ), ಆಯ್ಕೆಮಾಡು
optic — ಗು ನೋಟದ
optician — ನಾ ಕನ್ನಡಕ ಮಾರಾಳಿ
optics — ನಾ ನೋಟದರಿಮೆ, ಬೆಳಕಿನರಿಮೆ
optimistic — ಗು ಬಯಕೆಯಳಿಯದ, ನಂಬಿಕೆ ಲಿುರುವ
option — ನಾ ಆಯ್ಕೆ (ಇವುಗಳಲ್ಲಿ ನಿಮಗೆ ಆಯ್ಕೆಲಿುದೆ; ಆಯ್ಕೆಯ, ಆಯ್ಕೆಗೆ ಬಿಟ್ಟ)
optional — ಗು ಆಯ್ಕೆಲಿುರುವ, ಕಡ್ಡಾಯ ವಲ್ಲದ
opulence — ನಾ ಸೊಮ್ಮು (ಸೊಮ್ಮಿನಲ್ಲಿ ಆತನನ್ನು ಮೀರಿಸುವವರಿಲ್ಲ), ಪೊರುಳು, ಹೆಚ್ಚುಗೆ
oracle — ನಾ 1 ಅರಿವಿಗ 2 ಅರಿವಿಗನ ನುಡಿ
oral — ಗು 1 ಬಾಲಿುಮಾತಿನ, ಮಾತಿನ 2 ಬಾಲಿುಯ (ಬಾಲಿುಯ ಉಲಿಗಳು ಮತ್ತು ಮೂಗಿನ ಉಲಿಗಳು)
orange — ನಾ ಈಳೆ (ಈಳೆಯ ಹಿತ್ತಲು),ಕಿತ್ತಳೆ (ಕಿತ್ತಳೆ ಹಣ್ಣು)
oration — ನಾ 1 ಮಾತಿನ ಮೊರೆ 2 ಪೆರ್ಮಾತು
orator — ನಾ ಮಾತುಗಾರ (ಆತನೊಬ್ಬ ದೊಡ್ಡ ಮಾತುಗಾರ)
orb — ನಾ 1 ತೆರಳೆ, ಉಂಡೆ 2 ಬಾನುಂಡೆ, ಬಾನ್ತೆರಳೆ
orbit — ನಾ 1 ಕಣ್ಣುಗುಳಿ, ಕಣ್ಣುಗೂಡು 2 ಬಾನ್ತೆರಳೆಯ ಹಾದಿ 3 ಎಸಕದ ಹರವು
orchard — ನಾ ಹಣ್ಣುತೋಟ
orchestra — ನಾ ಹಾಡುಗತಂಡ (ಹಾಡುಗ ತಂಡವಿಲ್ಲದೆ ಅವನಿಗೆ ಹಾಡಲು ಬರುವು ದಿಲ್ಲ)
ordain — ಕ್ರಿ ನೆಗಳು, ಪೊದಳ್ಚು, ಕೆಲಸ ಕೊಡು
ordeal — ನಾ ಕಿಚ್ಚೊರೆತ, ತೊಡಕಿನ ಒರೆತ, ಕಟ್ಟೊರೆತ
order — ನಾ 1 ಸೆಲವು (ಸೆಲವುಗೊಳ್ಳು), ಹೇಳಿಕೆ, ಬೆಸ (ಬೆಸಕೇಳು; ಬೆಸಹೇಳು), ಅಂಕೆ 2 ಒಪ್ಪ (ಒಪ್ಪಗೆಡು), ಅಚ್ಚುಕಟ್ಟು, ಓರಣ (ಓರಣಗೊಳ್ಳು)
order — ಕ್ರಿ 1 ಕಟ್ಟುಮಾಡು, ಬೆಸಸು, ಸೆಲವಿಕ್ಕು 2 ಎಳವು (ಎಲ್ಲವನ್ನೂ ಸರಿಯಾಗಿ ಎಳವ ಬೇಕು), ಓರಣಿಸು
orderly — ನಾ ಅಚ್ಚುಳಾಯ್ತ
orderly — ಗು ಅಣಿಗೊಳಿಸಿದ, ಅಳವಡಿಸಿದ, ಓರಣಗೊಳಿಸಿದ
ordinal — ನಾ ಓರಣದಂಕೆ ನಾ ಕಟ್ಟಲೆ
ordinary — ಗು ಬಳಕೆಯ, ಎಂದಿನ, ಯಾವಾ ಗಿನ
ordnance — ನಾ ಕಯ್ದು (ಕಾಳಗದ ಕಯ್ದು)
ore — ನಾ ಅದುರು (ಚಿನ್ನದ ಅದುರು; ಕಬ್ಬಿಣದ ಅದುರು)
organism — ನಾ ಉಸಿರುಗ, ಉಸಿರಿ
organization — ನಾ 1 ಕೂಟ, ಕೂಟಗೆ (ನಮ್ಮ ಕೂಟಗೆಗಿನ್ನೂ ಹೆಸರು ಕೊಟ್ಟಿಲ್ಲ) 2 ಕೊಡುವ ಬಗೆ
organize — ಕ್ರಿ ಅಣಿಗೊಳಿಸು (ಇವತ್ತು ಒಂದು ಕೂಟವನ್ನು ಅಣಿಗೊಳಿಸಬೇಕಾಗಿದೆ), ಸಾವಗಿಸು, ಏರ್ಪಡಿಸು, ನೆಲೆಗೊಳಿಸು
orient — ನಾ ಮೂಡಣ ನಾಡುಗಳು
oriental — ಗು ಮೂಡಣ
orientate — ಕ್ರಿ 1 ಹೊಂದಿಕೊಳ್ಳು 2 ಮೂಡ ಮೋರೆ ಮಾಡು, ಮೂಡಕ್ಕೆ ತಿರುಗು
orientation — ನಾ ಗುರಿ, ನಿಲುವು
orifice — ನಾ ಕಂಡಿ (ಬಂದವರು ಯಾರೆಂದು ಬಾಗಿಲಿನ ಕಂಡಿಯಲ್ಲಿ ನೋಡಿದೆ), ತೂತು (ತೂತು ಕೊರೆ)
origin — ನಾ ತೊಡಗಿಕೆ, ಹುಟ್ಟು (ಹೊಳೆಯ ಹುಟ್ಟು - ಈ ಹೊಳೆಯ ಹುಟ್ಟೆಲ್ಲಿ ಎಂಬುದನ್ನು ಕಂಡುಹಿಡಿಯಬೇಕಾಗಿದೆ)
original — ಗು 1 ಮೊದಲಿನ, ಮೊತ್ತ ಮೊದಲಿನ 2 ಹೊಸ, ತನ್ನತನವಿರುವ, ಹುಟ್ಟಿಸಬಲ್ಲ, ಕಂಡುಹಿಡಿಯಬಲ್ಲ
originality — ನಾ ಹೊಸತನ, ತನ್ನತನ
originate — ಕ್ರಿ ಮೂಡು (ಹೊಸತಾಗಿ ಮೂಡಿದ ಮೊಳಕೆ), ಒಗೆ (ಎದೆಯಲ್ಲಿ ಒಗೆದ ಒಲವು; ಒಗೆತರು)
ornament — ನಾ ಪರಿಕೆ (ತೊಡವರಿಕೆ), ಒಡವೆ (ನಿಮ್ಮಲ್ಲಿರುವುದೆಲ್ಲ ಕಳವಿನ ಒಡವೆಗಳು), ತೊಡುಗೆ (ಉಡುಗೆತೊಡುಗೆ)
ornate — ನಾ ಅಂದವಿಸಿದ (ಅಂದವಿಸಿದ ಹೆಂಗಳೆಯರು), ತುಂಬಾ ಒಡವೆ ತೊಟ್ಟ
ornithologist — ನಾ ಹಕ್ಕಿಯರಿಗ
ornithology — ನಾ ಹಕ್ಕಿಯರಿಮೆ
orphan — ನಾ ತಬ್ಬಲಿ (ತಾಲಿುತಂದೆಲಿುಲ್ಲದ ತಬ್ಬಲಿ)
orphanage — ನಾ ತಬ್ಬಲಿಮನೆ ನಾ ಹಲ್ಲುಕಟ್ಟುಗ, ಹಲ್ಲು ನೇರ್ಪುಗ
orthodox — ಗು ನೆಲೆಗೊಂಡ ನಂಬಿಕೆಯ, ನೆಲೆ ನಂಬಿಕೆಯ
orthography — ನಾ ಬರಿಗೆಯರಿಮೆ
oscillate — ಕ್ರಿ ತೊನೆ (ತೊನೆಯುವ ಅಡಿಕೆ ಮರಗಳು), ಜೋತಾಡು, ತೂಗಾಡು, ಓಲಾಡು
ossify — ಕ್ರಿ 1 ಗಟ್ಟಿಯಾಗು, ಎಲುಬಾಗು 2 ಜಡ್ಡುಗಟ್ಟು, ಮರಗಟ್ಟು
ostensible — ಗು ಮೇಲ್ನೂೀಟದ, ತೋರಿಕೆಯ
ostentation — ನಾ ತೋರಿಕೆಯ ಮೆರೆತ, ಸೊಮ್ಮಿನ ಮೆರೆತ
ostracize — ಕ್ರಿ ಹೊರಹಾಕು (ನಾಲ್ಕು ಮಂದಿ ಯನ್ನು ಹೊರಹಾಕಲಾಗಿದೆ), ಗಡಿಪಾರು ಮಾಡು
other — ಗು ಮರು (ಮರುಮಾತು; ಮರು ನಾಳು), ಮಾರು (ಮಾರೊಡವೆ), ಹೆರ (ಹೆರವರು; ಹೆರನಾಡು), ಹೆರತು (ಹೆರ ತೊಂದು - ಹೆರತೊಂದು ಊರು), ಬೇರೆ (ಬೇರೊಬ್ಬ; ಬೇರೊಂದು)
otiose — ಗು ಸೋಂಬ, ಮಯ್ಗಳ್ಳ
otter — ನಾ ನೀರುನಾಲಿು
oust — ಕ್ರಿ ಹೊರಗಟ್ಟು, ತೊಲಗಿಸು
outbit — ಕ್ರಿ ಹೆಚ್ಚು ನೀಡು
outburst — ಕ್ರಿ ಒಮ್ಮೆಲೆೀ ಉಂಟಾಗು, ಸಿಡಿ, ತಲೆದೋರು
outcast — ಗು ಹೊರಹಾಕಿದ, ಹೊರಗೆಸೆದ
outclass — ಕ್ರಿ ಮೀರಿಸು (ನಿಮ್ಮನ್ನು ಮೀರಿಸ ಬಲ್ಲವರು ಈ ಊರಲ್ಲಿ ಯಾರೂ ಇಲ್ಲ)
outcome — ನಾ ದೊರೆತ, ಆಗುಹ (ನಮ್ಮ ಊಕದ ಆಗುಹವೇನೆಂಬುದನ್ನು ಕಾದು ನೋಡೋಣ)
outcry — ನಾ ಬೊಬ್ಬೆ (ಬೊಬ್ಬಿಡು, ಬೊಬ್ಬೆ ಹಾಕು; ಬೊಬ್ಬಾಟ), ಕೂಗಾಟ (ಈ ಮಂದಿಯ ಕೂಗಾಟದಲ್ಲಿ ಯಾವುದೂ ಕೇಳಿಸುವುದಿಲ್ಲ), ಹುಲಿುಲು (ಹುಲಿು ಲೆಬ್ಬಿಸು; ಹುಲಿುಲಿಡು)
outdated — ಗು ಹಳತಾದ (ಹಳತಾದ ಮದ್ದು)
outdistance — ಕ್ರಿ ಮುಂದೆಹೋಗು, ಹಿಂದೆ ಹಾಕು
outdo — ಕ್ರಿ ಮೀರಿಸು
outdoor — ಗು ಮನೆಹೊರಗಿನ
outfit — ನಾ ಬಟ್ಟೆಬರೆ, ಉಡುಗೆ ತೊಡುಗೆ
outflow — ನಾ ಹೊರಹರಿವು (ಒಳಹರಿವಿ ಗಿಂತ ಹೊರಹರಿವೇ ಹೆಚ್ಚಾಗಿದೆ) ಗು 1 ಹೊರಹೋಗುವ 2 ನಣ್ಪಿನ, ಹೊಂದಿಕೊಳ್ಳುವ
outgrow — ಕ್ರಿ ಮೀರಿ ಬೆಳೆ, ಬೆಳೆದುಕಳೆ
outhouse — ನಾ ಹೊರಮನೆ (ಆತನಿಗೆ ಇರಲು ಹೊರಮನೆಯಲ್ಲಿ ಎಡೆಮಾಡಿದ್ದರು)
outlandish — ಗು ತುಂಬಾ ಹಳೆಯ, ಬೇರಾ ಗಿರುವ, ಒಂಟಿ
outlast — ಕ್ರಿ ಬಾಳಿಕೆ ಬರು (ಬಾಳಿಕೆ ಬರುವ ಉಡುಪು), ಹೆಚ್ಚು ಕಾಲ ಉಳಿ
outlaw — ನಾ ಹೊರಬಿದ್ದವನು, ಕಟ್ಟಲೆ ತಪ್ಪಿದವನು, ಕೇಡಿಗ
outlet — ನಾ 1 ಕೋಡಿ (ಕೆರೆಯ ಕೋಡಿಲಿುಂದ ನೀರು ಹರಿಯುತ್ತಿದೆ), ತೂತು (ತೂತು ಮುಚ್ಚಿಹೋಗಿದೆ), ಹೊರದಾರಿ, ಹಾದಿ 2 ಮಾರುಕಟ್ಟೆ
outline — ನಾ 1 ಎಲ್ಲಗೆರೆ, ಹೊರಗೆರೆ 2 ಹಮ್ಮುಗೆ, ಅಡಕಬರಹ
outlive — ಕ್ರಿ ಹೊತ್ತುಮೀರಿ ಬದುಕು, ಪಾರಾಗು
outlook — ನಾ 1 ಕಾಣುವ ಬಗೆ 2 ಎಡೆಕಾಣ್ಕೆ
outlying — ಗು ಸರಹದ್ದಿನ, ಹೊರಗಿನ
outmoded — ಗು ಬಳಕೆತಪ್ಪಿದ, ಹಳತಾದ
outnumber — ಕ್ರಿ ಎಣಿಕೆಮೀರು
outpatient — ನಾ ಹೊರಕುತ್ತಿಗ (ಇದು ಹೊರಕುತ್ತಿಗರ ಕೋಣೆ)
outpost — ನಾ 1 ಹೊರಪಾಳೆಯ 2 ಗಡಿಹಳ್ಳಿ, ಹಡಿಹಾಡಿ
outpour — ಕ್ರಿ ಹೊರಹೊಮ್ಮು
output — ನಾ ಪಳಿ (ಆಗುವಳಿ; ಹುಟ್ಟುವಳಿ), ಇಳುವರಿ
outrage — ನಾ ಕಡುಕೆಕ್ಕಸ, ಕಡುಮುಳಿಸು, ಕೆಡುಕಿನ ಕೆಲಸ, ಬೆಚ್ಚಿಸುವ ಕೆಲಸ
outright — ಗು 1 ನೇರವಾದ, ಒಟ್ಟಾರೆ 2 ಒಡನೆ, ಒಮ್ಮೆಗೆ
outrun — ಕ್ರಿ ಹಿಂದೆಹಾಕು, ಮುಂದೆ ಓಡು, ಮೀರು
outset — ನಾ ಮೊದಲು, ತೊಡಗಿಕೆ, ತೊಡ ಗುಹ
outshine — ಕ್ರಿ ಬೆಳಗು, ಮೀರು, ಗೆಲ್ಲು
outside — ಗು ಹೊರ (ಹೊರಚೆಲ್ಲು; ಹೊರ ಹೋಗು; ಹೊರಹೊಮ್ಮು; ಹೊರಮೆ; ಹೊರಗೆ - ಹೊರಗಿಡು;ಹೊರಗಡೆ)
outsider — ನಾ ಹೊರಬಿಗ (ನಮ್ಮ ಕೂಟದಲ್ಲಿ ಹೊರಬಿಗರಿಗೆ ಎಡೆಲಿುಲ್ಲ)
outsize — ಗು ಅಳತೆಮೀರಿದ, ತುಂಬಾ ದೊಡ್ಡ ನಾ ಗಡಿನಾಡು (ಗಡಿನಾಡಿನ ಬರಹಗಾರರನ್ನೂ ಬರಹೇಳಿದ್ದಾರೆ), ಎಲ್ಲ, ಹೊರಬಳಸಿ
outspoken — ಗು ಬಿಚ್ಚುಮಾತಿನ (ಅವರು ಬಿಚ್ಚುಮಾತಿನ ಕಲಿಸುಗರೆಂದು ಹೆಸರಾಗಿ ದ್ದಾರೆ), ನೇರಮಾತಿನ
outstanding — ಗು 1 ಒಳ್ಳೆಯ 2 ತೀರುವೆ ಯಾಗದ(ತೀರುವೆಯಾಗದ ಸಾಲಗಳು)
outward — ಗು ಹೊರಗಿನ, ತೋರಿಕೆಯ (ತೋರಿಕೆಯ ಕನಿಕರ)
outweigh — ಕ್ರಿ ಹೆಚ್ಚು ತೂಗು, ಹೆಚ್ಚುಗಾರಿಕೆ ತೋರು
outwit — ಕ್ರಿ ಸೋಲಿಸು, ಕಯ್ಮೆಮೀರು (ಆತನ ಕಯ್ಮೆಮೀರಲು ನಿಮಗೆ ಆದೀತೇ?)
oval — ಗು ತತ್ತಿಪಾಂಗಿನ (ತತ್ತಿಪಾಂಗಿನ ಗುಂಡು)
ovary — ನಾ ತತ್ತಿಚೀಲ (ತತ್ತಿಚೀಲದಿಂದ ಒಂದೊಂದಾಗಿ ತತ್ತಿಗಳು ಹೊರಬರುತ್ತಿ ದ್ದುವು)
ovation — ನಾ ಚಪ್ಪಾಳೆಮೆಚ್ಚುಗೆ, ದೊಡ್ಡ ನಲ್ಬರವು
oven — ನಾ ಗೂಡೊಲೆ (ಗೂಡೊಲೆಯೊಳಗೆ ರೊಟ್ಟಿ ಬೇಯುತ್ತಿದೆ)
overaction — ನಾ ಮೀರಿದ ನಡತೆ
overall — ನಾ ಮೇಲುಡುಪು (ಅಡಿಗೆ ಮಾಡಲು ಆತ ಮೇಲುಡುಪು ತೊಟ್ಟುಕೊಂಡಿದ್ದಾನೆ)
overall — ಗು ಒಟ್ಟಾರೆ, ಒಟ್ಟಿನಲ್ಲಿ
overawe — ಕ್ರಿ ಬೆಚ್ಚಿಸು, ಬೆಚ್ಚಿಸಿ ಉಡುಗಿಸು
overbearing — ನಾ ಉರುಟು (ಉರುಟು ಮಾತು, ಉರುಟುತನ), ತೊಂಡು (ತೊಂಡಿ ನಲ್ಲಿ ಉಕ್ಕಿ ಕೆಟ್ಟು ಹೋಗಿದ್ದಾನೆ; ತೊಂಡು ತನ)
overbid — ಕ್ರಿ ಹೆಚ್ಚು ನೀಡು
over-boiled — ಗು ಅಡಸಲ (ಅನ್ನ ಅಡಸಲ ವಾಗಿ ಹೋಗಿದೆ)
overcast — ಗು ಮೋಡಮುಸುಕಿದ
overcharge — ಕ್ರಿ 1 ಹೆಚ್ಚು ಬೆಲೆ ಹೇಳು 2 ಹೆಚ್ಚು ತುಂಬಿಸು
overcome — ಕ್ರಿ ಗೆಲ್ಲು, ಸೋಲಿಸು
overcrowded — ಗು ಕಿಕ್ಕಿರಿದ, ತುಂಬಿ ತುಳುಕುವ
overdraft — ನಾ ಮೀರಿಕೆ (ಹಣ ತೆಗೆತದ ಮೀರಿಕೆ)
overdue — ಗು ತಡವಾದ, ಗಡುವು ಮೀರಿದ
overflow — ಕ್ರಿ ಉಕ್ಕು (ಉಕ್ಕಿ ಹರಿಯುವ ಹೊಳೆ), ಉಬ್ಬರಿ (ಉಬ್ಬರಿಯುವ ಕಡಲು) ನಾ ಉಕ್ಕಂದ (ಹೊಳೆಯ ನೀರಿನ ಉಕ್ಕಂದ ಗದ್ದೆಯ ಈಟನ್ನೆಲ್ಲ ತೊಳೆದುಹಾಕಿತು)
overgrow — ಕ್ರಿ ಮೇಲೆಹಬ್ಬು, ಮುಚ್ಚು, ಕಾಡುಬೆಳೆ
overhang — ಕ್ರಿ 1 ಮುಂದೆ ಚಾಚು 2 ಕವಿದಿರು, ಈಗ ಬರುವಂತಿರು
overhaul — ಕ್ರಿ 1 ಸರಿಗಟ್ಟು 2 ಸರಿಪಡಿಸು (ಆತ ಬಂಡಿಯನ್ನು ಸರಿಪಡಿಸಲು ಕೊಟ್ಟಿ ದ್ದಾನೆ)
overhead — ನಾ ಮೇಲುವೆಚ್ಚ (ಆತನ ಮೇಲು ವೆಚ್ಚಗಳು ತುಂಬಾ ಹೆಚ್ಚಾಗುತ್ತಿವೆ)
overhead — ಗು ತಲೆಮೇಲೆ, ಬಾನಿನಲ್ಲಿ
overland — ಗು ನೆಲಹಾದಿಯಾಗಿ, ನೆಲದ ಮೇಲೆ
overlap — ಕ್ರಿ ಒಂದರ ಮೇಲೊಂದಾಗು
overlook — ಕ್ರಿ 1 ತಲೆಬೀಸು (ಆತ ಎಲ್ಲ ದಕ್ಕೂ ತಲೆಬೀಸಿದ), ಕಡೆಗಣಿಸು 2 ಮೇಲಿನಿಂದ ಗಮನಿಸು
overnight — ಗು 1 ಇರುಳು ನಡೆಸಿದ 2 ಒಂದಿರುಳಿನ 3 ಇದ್ದಕ್ಕಿದ್ದಂತೆ
overpower — ಕ್ರಿ ಒಟ್ಟಲಿುಸು (ಎತ್ತನ್ನು ಒಟ್ಟ ಲಿುಸಿ ಕಟ್ಟಿಹಾಕಿದೆ), ಚಪ್ಪರಿಸು (ಆತನನ್ನು ಮುಪ್ಪು ಚಪ್ಪರಿಸಿತು)
overrate — ಕ್ರಿ ಹೆಚ್ಚು ಬೆಲೆಕಟ್ಟು, ಹೆಚ್ಚು ಮದಿಪುಕೊಡು
override — ಕ್ರಿ ಕಡೆಗಣಿಸು (ಎಲ್ಲರನ್ನೂ ಕಡೆಗಣಿಸಿ ಆತ ಮುಂದೆ ಬಂದಿದ್ದಾನೆ), ತುಳಿ, ಅಡಗಿಸು, ತಳ್ಳಿಹಾಕು
overrule — ಕ್ರಿ ತಳ್ಳಿಹಾಕು (ನನ್ನ ಹೇಳಿಕೆಯನ್ನು ಅವರು ತಳ್ಳಿಹಾಕಿದ್ದಾರೆ)
overrun — ಕ್ರಿ ಉಕ್ಕಿಹರಿ (ಉಕ್ಕಿಹರಿಯುವ ಹೊಳೆ), ಮೇಲೆಹಬ್ಬು, ಮುಚ್ಚು, ಮುಸುರು (ಮುಸುರಿದ ನೊಣಗಳು), ಎಲ್ಲಮೀರು (ಎಲ್ಲಮೀರಿದ ಮಾತು)
overseas — ಗು ಕಡಲಿನಾಚೆಯ, ಹೊರನಾಡಿನ (ಆತನಿಗೊಂದು ಹೊರನಾಡಿನ ಕೆಲಸ ದೊರೆತಿದೆ)
oversee — ಕ್ರಿ 1 ಕಾಣಿಸು 2 ಗಮನಿಸು, ಪಾರು ಪತ್ಯ ನಡೆಸು (ನಿಮ್ಮ ಕೆಲಸದ ಪಾರುಪತ್ಯ ನಡೆಸಲು ಈತ ಸರಿಯಾದ ಆಳು)
overshadow — ಕ್ರಿ 1 ಕತ್ತಲಿಸು, ನೆಳಲು ಬೀಳಿಸು 2 ಮರೆಮಾಡು, ಮರೆಸು (ಆ ದೊಡ್ಡ ಕಟ್ಟಡ ನಿಮ್ಮ ಅಂದದ ಮನೆಯನ್ನು ಮರೆಸಿಬಿಟ್ಟಿದೆ)
overshoot — ಕ್ರಿ ಮುಂದೆ ಚಾಚು, ಮೇಲೆ ಚಾಚು
oversight — ನಾ ತಪ್ಪು, ಕಣ್ತಪ್ಪು (ನನ್ನ ಬರಹದಲ್ಲಿ ಕಣ್ತಪ್ಪುಗಳೇನಾದರೂ ಇದ್ದರೆ ತಿದ್ದಿಕೊಳ್ಳಿ) ಕ್ರಿ ಹೊತ್ತಿಗೆ ಏಳದಿರು, ಹೊತ್ತು ಮೀರಿ ಒರಗು
overspread — ಕ್ರಿ ಅಳುರು (ಮನೆಯಲ್ಲಲ್ಲ ಅಳುರಿರುವ ಹೊಗೆ),ಕವಿ (ಕವಿದ ಕತ್ತಲೆ), ಕಪ್ಪು (ಮೋಡ ಕಪ್ಪಿದ ಬಾನು)
overstay — ಕ್ರಿ ಮೀರಿತಂಗು (ನೀವಿಲ್ಲಿ ಮೂರು ದಿವಸ ಮೀರಿತಂಗಿದ್ದೀರಿ)
overstep — ಕ್ರಿ ಹದ್ದುಮೀರು (ಆ ರೀತಿ ಮಾತನಾಡುವಲ್ಲಿ ಆತ ಹದ್ದುಮೀರಿದ್ದಾನೆ), ಎಲ್ಲಮೀರು
overt — ಗು ಗುಟ್ಟಲ್ಲದ, ತೆರೆದ, ಅಡಗಿಸದ, ಮುಚ್ಚುಮರೆಲಿುಲ್ಲದ (ಅವರ ಹೇಳಿಕೆಯಲ್ಲಿ ಮುಚ್ಚುಮರೆಲಿುಲ್ಲ)
overtake — ಕ್ರಿ ಬೆನ್ನಿಕ್ಕು (ಓಡಿಹೋಗು ತ್ತಿರುವವನನ್ನು ಬೆನ್ನಿಕ್ಕಿದರು)
overthrow — ಕ್ರಿ ಸೋಲಿಸು, ಉರುಳಿಸು, ಕೊನೆಗಾಣಿಸು, ಕೆಡವು (ಆತನನ್ನು ಕೆಡವಲು ನಾವೇ ಬರುತ್ತಿದ್ದೇವೆ)
overtime — ನಾ ಪಾಳಿಮೀರಿಕೆ, ಹೊತ್ತು ಮೀರಿಕೆ
overture — ನಾ 1 ತೊಡಗಿಕೆಯ ಹಾಡು (ನಿಮ್ಮ ಆಡುಗಬ್ಬದ ತೊಡಗಿಕೆಯ ಹಾಡು ಚನ್ನಾಗಿದೆ) 2 ಮೊದಲನೀಡಿಕೆ
overturn — ಕ್ರಿ ಉರುಳು (ಉರುಳಿಕ್ಕು; ಉರು ಳಿಸು), ಕೂಲು (ಕಟ್ಟೆಯ ಮೇಲಿರಿಸಿದ ನೀರಿನ ಕೊಡ ಕೂಲಿಹೋಲಿುತು), ಮಗುಚು (ಬಿರುಗಾಳಿಗೆ ಮನೆಯೆದುರಿದ್ದ ದೊಡ್ಡ ಮರ ಮಗುಚಿ ಬಿತ್ತು)
overwhelm — ಕ್ರಿ 1 ಅಡಗಿಸು, ಒಟ್ಟಲಿುಸು 2 ಮುಳುಗಿಸು
oviparous — ಗು ಮೊಟ್ಟೆಲಿುಡುವ
ovum — ನಾ ಮೊಟ್ಟೆ, ತತ್ತಿ
owe — ಕ್ರಿ ಹಂಗಿನಲ್ಲಿರು (ಹಂಗಿಗ), ಸಾಲ ದಲ್ಲಿರು, ಸಾಲಬೀಳು
owl — ನಾ ಗುಮ್ಮ, ಗೂಗೆ, ಗೂಬೆ (ಗೂಬೆ ಗೂಗೂ ಎನ್ನುತ್ತಿದೆ)
own — ಕ್ರಿ 1 ಒಪ್ಪು, ತಪೊ್ಪಪ್ಪು 2 ಪಡೆ, ಹೊಂದು, ಒಡೆಯನಾಗಿರು
owner — ನಾ ಒಡೆಯ (ಈ ಮನೆಯ ಒಡೆಯ ಎಲ್ಲಿದ್ದಾನೆ?; ಒಡೆತನ), ಎರೆಯ (ನೆಲ ದೆರೆಯ; ನಾಡೆರೆಯ)
ox — ನಾ ಮುರಿ, ಎತ್ತು (ಗಾಣದ ಎತ್ತು; ಬಾಲ ಮೋಟಾದ ಎತ್ತು; ಎತ್ತುಗಳಿಗೆ ಹುಲ್ಲು ಹಾಕಿ ಬಂದೆ), ಹೋರಿ
oxygen — ನಾ ಉಸಿರುಗಾಳಿ
oyster shell — ನಾ ಚಿಪ್ಪು (ಮುತ್ತಿನ ಚಿಪ್ಪು), ಸಿಂಪು (ಕಡಲ ದಡದಲ್ಲಿ ಸಿಕ್ಕಿದ ಸಿಂಪಿನ ಚೂರನ್ನು ಯಾರಿಗೂ ಕೊಡದೆ ಇರಿಸಿ ಕೊಂಡಿದ್ದಾನೆ) pace — ನಾ 1 ಹೆಜ್ಜೆ (ಹೆಜ್ಜೆಲಿುಡು; ಹೆಜ್ಜೆದಾಪು) 2 ಬೆಳವಣಿಗೆ 3 ಉರುಬು
pacific — ಗು ನೆಮ್ಮದಿಗೊಳಿಸುವ, ನೆಮ್ಮದಿಯ, ಸದ್ದಡಗಿದ
pacify — ಕ್ರಿ ನೆಮ್ಮದಿಗೊಳಿಸು, ತಣಿಸು
pack — ನಾ 1 ಮೂಟೆ (ಮೂಟೆಕಟ್ಟು) 2 ಗುಂಪು, ತಂಡ (ತೋಳಗಳ ತಂಡ)
pack — ಕ್ರಿ (ಆ) ತಿಣಿ (ಎಲ್ಲವೂ ಅದರೊಳಗೆ ತಿಣಿದಿವೆ) (ಮಾ) ತುರುಕು (ಬಟ್ಟೆಗಳನ್ನೆಲ್ಲ ಒಂದು ಚೀಲದಲ್ಲಿ ತುರುಕಿ ತುಂಬಿಸಿದ), ಅಡಕು, ಅಡಚು (ತಲೆದಿಂಬಿನೊಳಗೆ ಹತ್ತಿಯನ್ನು ಅಡಚಿ ತುಂಬಿಸುತ್ತಿದ್ದಾರೆ)
package — ನಾ ಕಟ್ಟು (ನಿಮಗೊಂದು ಕಟ್ಟು ಬಂದಿದೆ)
packer — ನಾ ಕಟ್ಟುಗ
packet — ನಾ ಕಿರುಕಟ್ಟು
pact — ನಾ ಒಪ್ಪಂದ, ಒಡಂಬಡಿಕೆ
pad — ನಾ 1 ಸಿವುಡಿ (ಕೊಡದ ಕೆಳಗಿರಿಸಲು ಸಿವುಡಿ), ಒತ್ತಿಗೆ (ಒತ್ತಿಗೆಲಿುಟ್ಟು ಬರೆ) 2 ಪಂಜ (ಹುಲಿಯ ಪಂಜ)
pad — ಕ್ರಿ ಮೆತ್ತೆತುಂಬು
paddle — ನಾ ಹುಟ್ಟು (ನಮ್ಮ ದೋಣಿಯಲ್ಲಿ ಹುಟ್ಟುಹಾಕುವವರು ಇಬ್ಬರಿದ್ದರು; ಹುಟ್ಟು ಗಾಲಿ)
paddy — ನಾ ನೆಲ್ಲು (ನೆಲ್ಲು ಬೆಳೆವ ಗದ್ದೆ; ನೆಲ್ಲ ಹೆಡಿಗೆ; ನೆಲ್ಲುಗದ್ದೆ; ಕರಿನೆಲ್ಲು)
paddy crop — ನಾ ಕೆಯ್ (ಬೇಲಿಯೇ ಕೆಯ್ ಮೆಯ್ದರೆ ಏನು ಮಾಡಲಿ?; ಕೆಯ್ಗಂಪು)
paddy field — ನಾ ಗದ್ದೆ (ನೆಲ್ಲಗದ್ದೆ; ಗದ್ದೆಗೆ ಬಿಟ್ಟ ನೀರು; ಗದ್ದೆತೆವರು)
padlock — ನಾ ಬೀಗ (ಬಾಗಿಲಿಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದಾರೆ), ಬಿಯ್ಯಗ
paean — ನಾ ಗೆಲುವಿನ ಹಾಡು
pagan — ನಾ 1 ನಂಬದವನು 2 ಪೊಳಲಿಗ ನಲ್ಲದವನು
page — ನಾ 1 ಹಾಳೆಬದಿ 2 ಕಿರು ತೊತ್ತಿಗ, ಅಚ್ಚುಳಾಯ್ತ
pageant — ನಾ ಬೆಡಗಿನ ಮೆರವಣಿಗೆ
pail — ನಾ ಕೊಳಗ (ನೀರಿನ ಕೊಳಗ) ನಾ ಕೊಡೆತ (ಸಂದುಗಳ ಕೊಡೆತ; ಎಲುವುಗಳ ಕೊಡೆತ), ಬೇನೆ (ಹೊಟ್ಟೆ ಬೇನೆ, ಬೇನೆ ಬರು, ಬೇನೆಬೀಳು; ಬೇನೆ ಗುದಿ), ನೋವು (ನೋವುಕೊಡು; ನೋವು ಗಂಟು; ನೋವುಣ್ಣು), ನೋತ (ನೋತ ವುಳ್ಳವನು)
pain — ಕ್ರಿ ನೋಯು (ನೊಂದು ನುಡಿ; ನೋಲಿುಸು - ನೀನು ಅವನನ್ನು ನೋಲಿು ಸಿದೆ), ಕೆರು (ಕೆರುತ್ತಿರುವವನು)
painkiller — ನಾ ನೋವಳಿಕ
painstaking — ಗು ಎಚ್ಚರಿಕೆಯ, ತುಂಬಾ ತೊಂದರೆಯ, ತೊಡಕಿನ
paint — ನಾ ಬರ್ಚಣೆ
paint — ಕ್ರಿ ಬರ್ಚಿಸು (ತುಂಬಿಯ ಮೇಲೆ ಮಿಸು ಗುವ ಕಪ್ಪು ಬರ್ಚಿಸಿದ ಹಾಗೆ ಕಾಣಿಸುತ್ತದೆ)
painter — ನಾ ಓರೆಗಾರ
painting — ನಾ ಓರೆ (ಗೋಡೆಯ ಮೇಲೆ ಓರೆ ಬಿಡಿಸಿದ್ದಾರೆ), ಬರ್ಚಣೆ (ಬರೆದು ಬರ್ಚಿಸಿದ ಬರ್ಚಣೆ)
pair — ನಾ ಆರು (ಆರುಕಟ್ಟು; ನೇಗಿಲು ಹೂಡಿ ಆರುಕಟ್ಟಿ ನಿಂತರು; ಆರುಗೆಲಸ), ಎಣೆ (ಎಣೆಯಾಗು), ಏರು, ಜೋಡು (ಜೋಡು ಕಟ್ಟು; ಜೋಡೆತ್ತು), ಜೋಡಿ (ದನದ ಜೋಡಿ), ಹೊಣಕೆ (ಹೊಣಕೆ ಮಾಡು), ತೋಡು (ನೀರ್ವಕ್ಕಿಗಳ ತೋಡು), ಸವಡಿ (ಸವಡಿ ನುಡಿ; ಸವಡಿವೆರಳು)
pair — ಕ್ರಿ (ಆ) ಹೊಣರು (ಹೊಣರಿಕೊಂ ಡಿರುವ ಎರಡು ಗಿಳಿಗಳು) (ಮಾ) ತೆಕ್ಕೆ ಹಾಕು (ಎತ್ತುಗಳಿಗೆ ತೆಕ್ಕೆಹಾಕಿದ್ದಾರೆ)
palace — ನಾ ಅರಮನೆ
palatable — ಗು ನಾಲಿಗೆ ತಣಿಸುವ, ಸವಿ ಯಾದ
palate — ನಾ ಅಂಗುಳ (ಬಾಲಿುಯ ಅಂಗುಳ ದಲ್ಲಿ ಹುಣ್ಣಾಗಿದೆ)
palatial — ಗು ಅರಮನೆಯಂತಹ, ತುಂಬಾ ದೊಡ್ಡ
pale — ನಾ 1 ಬೇಲಿ, ಎಲ್ಲ 2 ಚೂಪುಗೂಟ, ದಸಿ (ದಸಿಗಳ ಬೇಲಿ)
pale — ಕ್ರಿ ಬೆಳರು (ಬೆಳರು ತುಟಿ),ಮಗ್ಗು (ಮಗ್ಗಿದ ಚಿನ್ನ), ಬಿಳಿಚು (ಬಿಳಿಚಿದ ಮೋರೆ)
paleography — ನಾ ಬರಿಗೆಯರಿಮೆ
palette — ನಾ ಬಣ್ಣತಟ್ಟೆ
palisade — ನಾ ದಸಿಬೇಲಿ
pall — ನಾ ಮುಸುಕು, ಹೊದಿಕೆ
pall — ಕ್ರಿ 1 ಸಪ್ಪೆಯಾಗು 2 ಚಿಟ್ಟುಹಿಡಿ, ಬೇಸರಿಸು ನಾ ಹೆಣಹೊರುಗ
pallet — ನಾ 1 ಹುಲ್ಲಿನ ಹಾಸುಗೆ 2 ಹಲಿಗೆ, ಮಣೆ
palliate — ಕ್ರಿ ಕಡಿಮೆಮಾಡು, ತಣಿಸು
pallor — ಗು ಬಿಳಿಚಿದ, ಬೆಳರಿದ
palm — ನಾ 1 ಕುಡುತೆ (ಒಕ್ಕುಡುತೆ), ಅಂಗೈ (ಅಂಗಯ್ಯಲ್ಲಿರುವ ಗೆರೆ; ಅಂಗೈ ಬುತ್ತಿ), ಒಳಕೈ,ಒಚ್ಚಾರೆ 2 ತಾಳೆ (ತಾಳೆಮರ)
palm leaf — ನಾ ಸೋಗೆ,ಒಲಿ (ತೆಂಗಿನ ಮಡಲಿನ ಒಲಿ),ಓಲೆ
palmist — ನಾ ಕಯ್ನೋಡುಗ
palms (joined) — ನಾ ಬೊಗಸೆ (ಬೊಗಸೆ ತುಂಬ ಅಕ್ಕಿ)
palpable — ಗು ಮುಟ್ಟಬಲ್ಲ, ಒಣರಬಲ್ಲ, ಸುಳುವಾಗಿ ತಿಳಿಯಬಲ್ಲ
palpitation — ನಾ ಬಿರುಸಿನ ಮಿಡಿತ, ಅದುರು ವಿಕೆ, ಗುಕ್ಕು (ಎದೆಗೂಡಿನ ಗುಕ್ಕು)
paltry — ಗು ಚಿಲ್ಲರೆ, ಚುಂಗಡಿ
pamper — ಕ್ರಿ ಚನ್ನಾಗಿ ತಿನ್ನಿಸು, ಮುದ್ದುಮಾಡು
pamphlet — ನಾ ಕಿರುಹೊತ್ತಿಗೆ, ಕಯ್ಕಡತ
pan — ನಾ ಬಾಣಲೆ, ಚಟ್ಟಿ
pan — ಕ್ರಿ ತೆಗಳು, ತಪ್ಪೆತ್ತಿ ತೋರಿಸು
panacea — ನಾ ಎಲ್ಲಮಾಂಜುಗ
pancake — ನಾ ದೋಸೆ
pandemonium — ನಾ ಗೊಂದಲ, ಗಲಿಬಿಲಿ
pander — ನಾ ಹೆಣ್ಣುಗ
pane — ನಾ ಗಾಜಿನ ಹಾಳೆ, ಕನ್ನಡಿ ಹಾಳೆ
panegyric — ನಾ ಬಾರೀ ಹೊಗಳಿಕೆ
panel — ನಾ 1 ಪಡಿ (ಬಾಗಿಲಿನ ಪಡಿ; ಮುಚ್ಚಿದ ಪಡಿಗಳು) 2 ತಂಡ
pang — ನಾ ಚುಚ್ಚುನೋವು, ಚಳಕು
panic — ನಾ ದಿಗಿಲು (ದಿಗಿಲುಗೊಳಿಸು)
pannier — ನಾ ಹೆಗಲಬುಟ್ಟಿ
panoply — ನಾ ಬೆಡಗಿನ ಉಡುಗೆತೊಡುಗೆ
panorama — ನಾ ಹರವು ನೋಟ ಕ್ರಿ 1 ಬಿಕ್ಕು (ಬಿಕ್ಕಿಬಿಕ್ಕಿ ಅಳು) 2 ಏದು (ಓಡಿ ಓಡಿ ಏದುತ್ತಿದ್ದಾನೆ; ಏದುಸಿರುಬಿಡು)
pantomime — ನಾ ಊಮೆಕೂತು, ಊಮೆ ನುಡಿತ, ಸನ್ನೆನುಡಿ
pantry — ನಾ ಅಡುಕಲ ಕೋಣೆ
paper — ನಾ 1 ಹಾಳೆ 2 ನೀಳ್ಬರಹ 3 ಸುದ್ದಿ ಹಾಳೆ
paper-back — ನಾ ತೆಳುಹೊದಿಕೆಯ ಹೊತ್ತಗೆ
paperweight — ನಾ ಹಾಳೆತೂಕ
par — ನಾ 1 ದೊರೆ, ಎಣೆ 2 ಸರಾಸರಿ
parable — ನಾ ಒಳ್ಳೆ ನಡತೆಯ ಕತೆ, ಎತ್ತುಗೆ ಕತೆ
parachute — ನಾ ಇಳಿಕೊಡೆ, ಗಾಳಿಕೊಡೆ
parade — ನಾ ಮೆರವಣಿಗೆ (ಮದುವೆಯ ಮೆರ ವಣಿಗೆ)
paradigm — ನಾ 1 ಮಾರ್ಪರಿಜು, ಎತ್ತುಗೆ 2 ಪಾಂಗುಪಟ್ಟಿ
paradise — ನಾ ಹೊನ್ನೂರು, ಹೊನ್ನಾಡು
paradox — ನಾ ತಪ್ಪೆನಿಸುವ ಸೊಲ್ಲು, ತಪ್ಪು ಸೊಲ್ಲು
paraffin — ನ ಮೇಣ (ಮೇಣಬೆಳಕು)
paragon — ನಾ ತುಂಬಾ ಒಳ್ಳೆಯ ಮಾರ್ಪರಿಜು
paragraph — ನಾ ಕುರಳು (ನಾಲ್ಕನೇ ಕುರಳಿ ನಲ್ಲಿ ಎರಡು ತಪ್ಪುಗಳಿವೆ)
parallel — ಗು ಹೋಲುವ 2 ಸರಿತೆರಪಿನ, ಒಂದೇ ತೆರಪಿನ
parallelism — ನಾ 1 ಸರಿತೆರಪು 2 ದೊರೆ, ಹೋಲಿಕೆ
paralysis — ನಾ ಮರವೆ (ಮರವೆಗೊಳ್ಳು; ಆತನ ಬಲದ ಕಯ್ಕಾಲುಗಳು ಮರವೆ ಗೊಂಡಿವೆ), ಅರನಾರಿ
parameter — ನಾ ಹರವು (ಆಯ್ಕೆಯ ಹರವು, ಮಾತುಕತೆಯ ಹರವು), ಹರಹು
paramilitary — ನಾ ಅರೆಪಡೆಯ
paramour — ನಾ ಮಿಂಡ, ನಲ್ಮಗಾರ
parapet — ನಾ ಕುಂಬೆ (ಕುಂಬೆಯ ಮೇಲೆ ಹತ್ತಿ ಕುಳಿತ ಹುಡುಗ ಕೆಳಗೆ ಬಿದ್ದ)
paraphrase — ಕ್ರಿ ಬಿಡಿಸಿ ಹೇಳು, ಮರು ಸೊಲ್ಲು (ಮರುಸೊಲ್ಲುಗೆ)
parasite — ನಾ ಹೊರಕುಳಿ
parasol — ನಾ ಕಯ್ಕೊಡೆ, ಬಿಸಿಲುಕೊಡೆ
parboiled — ಗು ತುಸು ಬೇಲಿುಸಿದ, ಕುಸು ಬಲು (ಕುಸುಬಲಕ್ಕಿ) ನಾ ಕಟ್ಟು (ನಾಲ್ಕು ಕಟ್ಟುಗಳನ್ನು ಮಯ್ಸೂರಿಗೆ ಕಳಿಸಿದೆ)
parch — ಕ್ರಿ 1 ಹುರಿ (ಹುರಿಗಾಳು; ಹುರಿಗಡಲೆ; ಹುರಿಗಾವಲಿ), ಒಣಗಿಸು 2 ಬಾಯಾರು, ನೀರಡಿಸು
parched corn — ನಾ ಹುರಕಲು (ಎಲ್ಲರೂ ಹುರಕಲು ಕುರುಕುತ್ತ ಕುಳಿತಿದ್ದರು)
parched rice — ನಾ ಬುರುಗಲು (ಹುರಿದ ಬುರುಗಲು)
parchment — ನಾ ತೊಗಲುಹಾಳೆ (ಯಾವಾ ಗಲೊೀ ಹಿಂದಿನ ಕಾಲದಲ್ಲಿ ತೊಗಲು ಹಾಳೆಯ ಮೇಲೆ ಬರೆದ ಬರಹ)
pardon — ಕ್ರಿ ತಾಳು, ತಪ್ಪುಮರೆ, ಕಡೆಗಣಿಸು
pare — ಕ್ರಿ ಹೊಳಚು (ಆತನ ಕಿವಿಯನ್ನು ಹೊಳಚಿದರು), ಹೆರೆ, ಸುಲಿ (ಹಣ್ಣಿನ ಸಿಪ್ಪೆ ಸುಲಿ), ಕೆತ್ತು (ಈ ಮರದ ಸಿಪ್ಪೆಯನ್ನು ಕೆತ್ತಿದವರು ಯಾರು?)
parent — ನಾ ತಂದೆ, ತಾಲಿು, ಹೆತ್ತವರು (ನಾಳೆ ಇಲ್ಲಿ ಹೆತ್ತವರ ಕೂಟ ಇದೆ)
parenthesis — ನಾ ತೂರಿಕೆ (ತೂರಿಕೆಯ ತಾಂಗುಗೆ)
parings — ನಾ ಸಿಗುರು (ಸಿಗುರು ಕಳೆದ ಕಬ್ಬು)
parity — ನಾ ಹೋಲಿಕೆ, ಎಣೆ (ಎಣೆಲಿುಲ್ಲದ ಆಳ್ತನ)
park — ನಾ 1 ಹೂದೋಟ 2 ಗಾಡಿನೆಲೆ
park — ಕ್ರಿ ಇರಿಸು, ನಿಲ್ಲಿಸು
parlance — ನಾ ಒರೆಬಗೆ (ಮಾತಿನ ಒರೆಬಗೆ, ಬರಹದ ಒರೆಬಗೆ)
parlay — ನಾ ಮಾತುಕತೆ, ಆರಯ್ಕೆ (ಆರಯ್ಕೆ ನಡೆಸು)
parlour — ನಾ ನಡುಮನೆ
parochial — ಗು ಹಳ್ಳಿಯ, ಎಗ್ಗತನದ
parody — ನಾ ಅಣಕ (ಅಣಕವಾಡು; ಅಣಕ ಬರಹ)
parole — ನಾ ನಂಬಿಕೆಯ ಮಾತು
paroxysm — ನಾ ದಿಡೀರ್ ನೋವು, ಕೆರಳಿಕೆ
parricide — ನಾ ತಂದೆಕೊಲೆ, ತಂದೆಕೊಲೆಗ (ತಂದೆಕೊಲೆಗನನ್ನು ಸೆರೆಹಿಡಿದಿದ್ದಾರೆ)
parrot — ನಾ ಗಿಳಿ (ಗಿಳಿಯ ಹಿಂಡು; ಗಿಳಿನುಡಿ; ಗಿಳಿಮೂಗು)
parry — ಕ್ರಿ ತಪ್ಪಿಸಿಕೊಳ್ಳು (ಪೆಟ್ಟುಬೀಳದ ಹಾಗೆ ತಪ್ಪಿಸಿಕೊಂಡ), ನುಣುಚಿಕೊಳ್ಳು
parsimonious — ಗು ಪಂಜೆಯಾದ, ನೆಲಕಲ ನಾದ, ಹೆಚ್ಚು ವೆಚ್ಚಮಾಡದ
part — ನಾ ತುಂಡು (ತುಂಡಾಗು, ತುಂಡು ಮಾಡು), ತುಣುಕು (ರೊಟ್ಟಿಯ ತುಣುಕು) ಕ್ರಿ ಕೂರು (ಕೂರುಗೊಳ್ಳು), ಅಗಲು (ಅಗಲಿಕೆ; ಅಗಲದೆ ಇರು), ಬೇರ್ಪಡು, ಬೀಳ್ಕೊಡು (ಆತನನ್ನು ಬೀಳ್ಕೊಡಲು ಹಲವು ಮಂದಿ ಸೇರಿದ್ದರು)
part aside — ಕ್ರಿ ಬೈ- (ಬಲಿ್ತುಡು, ಬಯ್ತಲೆ)
partake — ಕ್ರಿ ಪಾಲುಪಡೆ
partial — ಗು 1 ಮುಗಿಯದ 2 ಬದಿ ಹಿಡಿದ
participate — ಕ್ರಿ ಪಾಲ್ಗೂಳ್ಳು (ಇವತ್ತಿನ ನಮ್ಮ ಕೂಟದಲ್ಲಿ ನೀವೂ ಪಾಲ್ಗೂಳ್ಳ ಬೇಕು), ಸೇರಿಕೊಳ್ಳು
particle — ನಾ ಕಿರುತುಣುಕು
particular — ಗು 1 ಗುರುತಿಸತಕ್ಕ, ಗಮನಿಸ ತಕ್ಕ 2 ತಣಿಸಲಾಗದ 3 ಒಬ್ಬಾತನ
particularize — ಕ್ರಿ ಆಯ ತಿಳಿಸು
parting — ನಾ ಬೇಟ (ನಲ್ಲನಲ್ಲಯರ ಬೇಟ), ಅಗಲಿಕೆ (ಹೆಂಡತಿಯ ಅಗಲಿಕೆಲಿುಂದ ಆತ ಬಡವಾಗಿದ್ದಾನೆ), ಬೀಳ್ಕೊಡುಗೆ
partisan — ನಾ ತಂಡದವನು, ಉರಳಿಗ
partition — ನಾ ಅಡ್ಡಗೋಡೆ (ಮನೆಯ ನಡುವೆ ಅಡ್ಡಗೋಡೆ ಕಟ್ಟಿ ಎರಡು ಮನೆ ಮಾಡಿದ್ದಾರೆ), ತಟ್ಟಿ, ತಡಿಕೆ
partly — ಗು ಅರೆಕುರಿಯಾಗಿ
partner — ನಾ ಪಾಲುಗಾರ (ಆತನಿಗೆ ತನ್ನ ಪಾಲುಗಾರನೊಂದಿಗೆ ಜಗಳ)
partnership — ನಾ ಪಾಲುವಂತಿಗೆ,ಪುದು (ಪುದುಗೊಳ್ಳು; ಪುದುವು), ಕೂಡು ಒಡೆತನ
part-time — ನಾ ಒಪೊ್ಪತ್ತು (ಒಪೊ್ಪತ್ತಿನ ಕೆಲಸ)
party — ನಾ ಪಂಗಡ, ಕೂಟಗೆ (ಕೂಟಗೆಯ ಊಟಕ್ಕೆ ಬಂದವರು), ತಂಡ (ಇಲ್ಲಿ ನಾಲ್ಕು ತಂಡಗಳು ಒಟ್ಟಿಗೆ ಸೇರಿವೆ)
pass (exam) — ಕ್ರಿ ತೇರು (ತೇರಿದವರಿಗೆ ಕೂಟ ಇದೆ; ತೇರ್ಗಡೆ - ತೇರ್ಗಡೆಯಾದರೂ ಕೆಲಸ ಸಿಕ್ಕಿಲ್ಲ)
pass away — ಕ್ರಿ ಕಳಿ (ಕಳಿಯದೆ ಉಳಿಯು ವವರು ಯಾರು?), ಕೊರೆ (ಕೊರೆದು ಹೋದವರು), ತೀರಿಹೋಗು, ಸಾಯು (ಸತ್ತವರಿಗೆ ಯಾವುದೂ ಬೇಡ)
pass over — ಕ್ರಿ ಎಡಗಲಿಸು (ಎಲ್ಲ ತೊಡರು ಗಳನ್ನೂ ಎಡಗಲಿಸಿ ಬಂದವರು), ಕಡೆ (ಕಟ್ಟುಕಡೆ; ಕೊಟ್ಟ ನುಡಿಯನ್ನು ಕಡೆದವನು)
passage — ನಾ ದಾರಿ (ದಾರಿಕೊಡು; ದಾರಿ ಬಿಡು), ಓಣಿ (ಮನೆಗಳ ನಡುವಿನ ಓಣಿ), ಹಾದಿ
passenger — ನಾ ದಾರಿಕಾರ, ದಾರಿಗ, ಹಾದಿ ಕಾರ ನಾ ದಾರಿಹೋಕ, ಹಾದಿಹೋಕ (ಆತನಿಗೆ ಹಾದಿಹೋಕರನ್ನೆಲ್ಲ ಮನೆಗೆ ಕರೆದು ಮಾತನಾಡಿಸಬೇಕು)
passing — ಗು 1 ಹೋಗುತ್ತಿರುವ 2 ತುಸು ಹೊತ್ತಿನ, ನೆಲೆನಿಲ್ಲದ
passion — ನಾ ಮಿಂಡು (ಆತನಿಗೆ ತನ್ನ ಮಿಂಡನ್ನು ತಡೆದುಕೊಳ್ಳಲು ಆಗುವುದಿಲ್ಲ), ಮಸಕ (ಮಸಕಗುಂದು), ಉರುಗು, ಕಾವರ, ತಾಗುಳ (ತಾಗುಳದಲ್ಲಿ ಆತ ಏನೇನೋ ಮಾಡಿದ), ತೂಣ, ತೂಳು (ತೂಳು ಬಂದು ಹೇಳಿದ ಮಾತು)
passionate person — ನಾ ಉರಿಕ
passive — ಗು ಚುರುಕಲ್ಲದ, ಬಗ್ಗುವ, ಮಣಗುವ
passport — ನಾ ಪಾರೋಲೆ (ಹೊರನಾಡಿಗೆ ಹೋಗಲು ಪಾರೋಲೆ ಬೇಕು), ಗುರು ತೋಲೆ
password — ನಾ ಗುರುತುನುಡಿ (ಬಾಗಿಲಿನ ಒಳಗೆ ಹೋಗಬೇಕಿದ್ದರೆ ಗುರುತುನುಡಿ ಹೇಳಬೇಕು)
past — ಗು ಕಳೆದ, ಹಿಂದಿನ (ಹಿಂದಿನ ಕೆಲಸ)
past tense — ನಾ ಹಿಂಬೊತ್ತು
paste — ನಾ ಅಂಟು (ಈ ಅಂಟು ಚನ್ನಾಗಿಲ್ಲ; ಅಂಟುಹಚ್ಚು; ಅಂಟಿಸು)
pastel — ನಾ ಬಣ್ಣದ ಕಡ್ಡಿ, ಬಣ್ಣದ ಬಳಪ
pastime — ನಾ ಹೊತ್ತುಹೋಕೆ, ಹೊತ್ತುಕಳೆತ
pastoral — ಗು 1 ಕುರಿಮಂದೆಯ 2 ಹಳ್ಳಿಯ, ಹಳ್ಳಿಬಾಳ್ವೆಯ
pastry — ನಾ ಪಂಜಾರ (ಮಕ್ಕಳಿಗೆಲ್ಲ ಪಂಜಾರ ಹಂಚಿದರು)
pasture — ನಾ 1 ಪಸಲೆ (ಪಸಲೆಯಲ್ಲಿ ಆಕಳುಗಳು ಮೇಯುತ್ತಿವೆ), ಹುಲ್ಲುಗಾವಲು 2 ಮೇವು, ಹುಲ್ಲು
pat — ಕ್ರಿ ತಟ್ಟು (ಬೆನ್ನುತಟ್ಟು; ಮಗುವನ್ನು ತಟ್ಟಿ ಮಲಗಿಸು; ರೊಟ್ಟಿ ತಟ್ಟು)
patch — ನಾ ತೇಪೆ (ಹರಿದ ಬಟ್ಟೆಗೆ ತೇಪೆ ಹಾಕು; ತೇಪೆಹಚ್ಚು; ತೇಪೆ ಕೆಲಸ)
patent — ಗು 1 ತಿಳಿಯುವ, ಕಾಣಿಸುವ 2 ಹಕ್ಕುಕಾಪಿರುವ
paternal — ಗು ತಂದೆಯ
path — ನಾ ಹೊಳೆ (ಅವರ ಮನೆಗೆ ಹೋಗುವ ಹೊಳೆ ಯಾವುದು?; ಹೊಳೆತಪ್ಪು), ದಾರಿ (ಹೊರಗೆ ಹೋಗುವ ದಾರಿ), ಬಟ್ಟೆ (ಬಟ್ಟೆ ಗೆಡು; ಬಟ್ಟೆತಪ್ಪು), ಜಾಡು (ಜಾಡು ಹಿಡಿ), ತೋಲು, ಬಳಿ, ಹೊಲಬು (ಹೊಲಬು ತಪ್ಪು), ಹೋಕೆ
pathetic — ಗು ಕನಿಕರ ಹುಟ್ಟಿಸುವ, ಎದೆಕರಗಿ ಸುವ, ಸೋತುಹೋದ
pathologist — ನಾ ಕುತ್ತದರಿಗ ನಾ ಕುತ್ತದರಿಮೆ
pathos — ನಾ ಮರುಕಬರಹ
pathway — ನಾ ಕಾಲುಹಾದಿ
patience — ನಾ ತಾಳ್ಮೆ (ತಾಳ್ಮೆಲಿುಲ್ಲದವರು), ತಾಳಿಕೆ (ತಾಳಿಕೆ ಬೇಕು), ತರಹರ (ತರ ಹರಿಸು)
patient — ನಾ ಕುತ್ತಿಗ, ಬೇನೆಬಿದ್ದವನು
patio — ನಾ ತೆರೆದ ಒಳಾಂಗಣ
patios — ನಾ ಆಡುನುಡಿ
patriarch — ನಾ ಮನೆಯೊಡೆಯ, ಮನೆತನದ ಹಿರಿಯ
patriarchy — ನಾ ತಂದೆಯಾಳಿಕೆ
patricide — ನಾ ತಂದೆಕೊಲೆ, ತಂದೆಕೊಲೆಗ
patrimony — ನಾ 1 ತಂದೆಯ ಕೊಡುಗೆ 2 ಪುದುವಟ್ಟು
patriot — ನಾ ನಾಡರ್ತಿಗ, ನಾಡೊಲುಮೆಗ
patriotism — ನಾ ನಾಡರ್ತಿ, ನಾಡೊಲುಮೆ
patrol — ಕ್ರಿ ಕಾವಲು ಕಾಯು, ಕಾವಲು ತಿರುಗು
patron — ನಾ ಕಾಪುಗ, ಬೆಂಬಲಿಗ, ಹೊಣೆಗಾರ
patter — ಕ್ರಿ ಬಡಬಡಿಸು, ಪಟಪಟ ತಟ್ಟು
pattern — ನಾ ಹಮ್ಮುಗೆ, ಹಂಚಿಕೆ, ಮರು ಪರಿಜು
paucity — ನಾ ಕೊರತೆ (ಕೊಂಚ ಹಣದ ಕೊರತೆಲಿುದೆ)
paunch — ನಾ ಬೊಜ್ಜು (ಬೊಜ್ಜು ಹೊಟ್ಟೆ; ಬೊಜ್ಜು ಬೆಳೆದಿದೆ)
pauper — ನಾ ತಿರುಕ, ಎರವ, ತೀರಾ ಬಡವ
pause — ನಾ ಉಸುರ್ದಾಣ, ತಡೆ, ಬಿಡುವು (ಆಕೆಗೆ ಬಿಡುವಿಲ್ಲದ ಕೆಲಸ)
pave — ಕ್ರಿ ಹದಿ (ನೆಲಕ್ಕೆ ಕಲ್ಲು ಹದಿಯು ತ್ತಿದ್ದಾರೆ), ಹಾಸು (ಕಲ್ಲು ಹಾಸಿದ ಕಾಲುಹಾದಿ), ಹೊದೆಸು (ಕಲ್ಲು ಹೊದೆಸು)
pavement — ನಾ ನೆಲಗಟ್ಟು, ಕಲ್ಲುಹಾಸು
pavilion — ನಾ ಆಟದ ಕಟ್ಟಡ, ದೊಡ್ಡ ಗುಡಾರ
paw — ನಾ ಪಂಜ (ಬೆಕ್ಕಿನ ಪಂಜ) ನಾ ಅಡವು (ಅಡವಿಡು), ಈಡು (ಈಡಿನ ಹಣ), ಒತ್ತೆ (ಒತ್ತೆ ಇಡು; ಒತ್ತೆಗೆ ಬೀಳು; ಒತ್ತೆಯಾಳು)
pay — ನಾ ಸಂಬಳ (ನಿಮಗೆ ಸಂಬಳ ಎಷ್ಟು ಕೊಡುತ್ತಾರೆ?), ಕೂಲಿ (ಅವರಿಗಿನ್ನೂ ಈ ವಾರದ ಕೂಲಿ ಸಿಕ್ಕಿಲ್ಲ)
pay — ಕ್ರಿ ಕಟ್ಟು (ಹಣಕಟ್ಟು), ತೆರು (ಸುಂಕ ತೆತ್ತಲ್ಲದೆ ಹೋಗಕೂಡದು; ಎಲ್ಲವನ್ನೂ ಇವತ್ತೇ ತೆರಬೇಕು)
pay attention — ಕ್ರಿ ಕಿವಿಗೊಡು (ನನ್ನ ಮಾತಿಗೆ ಕಿವಿಗೊಡದೆ ಹೊರಟುಹೋದ)
pay back — ಕ್ರಿ ತೀರಿಸು (ಸಾಲ ತೀರಿಸು), ಬೀಟು (ಸಾಲ ಬೀಟು)
pay for — ಕ್ರಿ ಬೆಲೆಕೊಡು; ಬೆಲೆತೆರು
payee — ನಾ ಹಣಪಡೆದವನು
payment — ನಾ ಸಲಿಕೆ, ಸಂದಾಯ (ಇವತ್ತೇ ಅವರಿಗೆ ಹಣವನ್ನು ಸಂದಾಯ ಮಾಡ ಬೇಕು)
peace — ನಾ ನೆಮ್ಮದಿ (ನೆಮ್ಮದಿಲಿುಂದಿರು; ನೆಮ್ಮದಿಯಾಗಿರು), ನೆಮ್ಮುಗೆ (ಆತನಿಗೆ ಬಾಳುವೆಯಲ್ಲಿ ನೆಮ್ಮುಗೆಲಿುಲ್ಲ)
peaceful — ಗು ನೆಮ್ಮದಿಯ
peacock — ನಾ ಸೋಗೆ,ನವಿಲು (ನವಿಲ ಕೊಟ್ಟು, ನವಿಲುಗರಿ),ಮಲಿುಲು, ನೆಮಲಿ
peak — ನಾ ಕೋಡು (ಬೆಟ್ಟದ ಕೋಡು; ಕೋಡುಗಲ್ಲು)
peal — ಕ್ರಿ ಮೊಳಗು, ಬಾರಿಸು
pearl-oyster — ನಾ ಸಿಂಪು (ಮುತ್ತಿನ ಸಿಂಪು), ಚಿಪ್ಪು
peasant — ನಾ 1 ಒಕ್ಕಲಿಗ, ಆರಂಬಗಾರ 2 ಹಳ್ಳಿಗ, ಒಡ್ಡ
peat — ನಾ ಕೊಳೆಸೊಪ್ಪು
pebble — ನಾ ಹರಳು, ಉರುಟುಕಲ್ಲು
peck — ಕ್ರಿ ಕುಕ್ಕು (ಕೊಕ್ಕಿನಿಂದ ಕುಕ್ಕು; ಕಣ್ಣು ಕುಕ್ಕುವ ಬೆಳಕು), ಕುಟುಕು
peculiar — ಗು ಬೇರಾದ, ತನ್ನದೇ ಆದ
pecuniary — ನಾ ಹಣದ, ಹಣಕಾಸಿನ
pedagogue — ನಾ ಕಲ್ಲಯ್ತ, ಕಲಿಸುಗ
pedagogy — ನಾ ಕಲಿಕೆಯರಿಮೆ
pedal — ನಾ ಮೆಟ್ಟುಸನ್ನೆ
pedant — ನಾ ಒಣತಿಳಿವಿಗ (ತನಗೆ ಎಲ್ಲವೂ ಗೊತ್ತೆಂದು ಕೊಚ್ಚಿಕೊಳ್ಳುವ ಒಣತಿಳಿವಿಗ) ಕ್ರಿ ಕೂಗಿಮಾರು
peddler — ನಾ ಹಾದಿಹರದ, ತಿರುಗುಹರದ, ಕೂಗಿಮಾರುಗ
pedestal — ನಾ ಅಡಿಗಲ್ಲು (ಕುಂದದ ಅಡಿ ಗಲ್ಲು; ಅಡರ್ಪಿನ ಅಡಿಗಲ್ಲು)
pedestrian — ನಾ ಕಾಲ್ನಡೆಗ, ನಡೆಗ
pediatrician — ನಾ ಮಕ್ಕಳ ಮಾಂಜುಗ
pediatrics — ನಾ ಮಕ್ಕಳ ಮಾಂಜುಗೆ, ಮಕ್ಕ ಳರಿಮೆ
pedigree — ನಾ ತಳಿ, ಮನೆತನ
pedometer — ನಾ ಹೆಜ್ಜೆಯಳೆಕ
peel — ನಾ ತೊಗಟೆ (ಮಾವಿನ ಹಣ್ಣಿನ ತೊಗಟೆ), ತೋಟೆ, ಸಿಪ್ಪೆ (ಸಿಪ್ಪೆ ಸುಲಿದ ಹಣ್ಣು)
peel — ಕ್ರಿ ಸುಲಿ (ಬಾಳೆ ಹಣ್ಣನ್ನು ಸುಲಿ; ಸುಲಿ ಗಬ್ಬು), ಎಡೆ (ಕಿತ್ತಳೆ ಹಣ್ಣು ಎಡೆಯ ಬೇಕು), ಹಿದುಕು (ಕಾಲಿನಿಂದ ಹಿದುಕು; ಹಿದುಕವರೆ)
peeler — ನಾ ಸುಲಿಕ (ಸುಲಿಕದಿಂದ ಹಣ್ಣಿನ ಸಿಪ್ಪೆ ತೆಗೆಯುತ್ತಿದ್ದಾನೆ)
peep — ಕ್ರಿ ಇಣಿಕು (ಆತನು ಮೆಲ್ಲಗೆ ಇಣಿಕಿ ನೋಡಿದ), ಹಣಿಕು, ಎಟಕಿ ನೋಡು
peer — ನಾ ಒಂದೇ ಮಟ್ಟದವರು
peer — ಕ್ರಿ ಇಣಿಕಿ ನೋಡು, ನಿಟ್ಟಿಸಿ ನೋಡು
peevish — ಗು ಕೆಟ್ಟನಡತೆಯ, ಸಿಡುಕಿನ, ರೇಗಾಡುವ
peg — ನಾ ಬೆಣೆ, ಕಳಿ (ಬಾಗಿಲಿನ ಕಳಿ), ಕುಟ್ಟಿ (ಕುಟ್ಟಿದೊಣ್ಣೆ), ಗುಂಟ, ಗೂಟ (ಜೋಳಿಗೆ ಯನ್ನು ಗೂಟಕ್ಕೆ ಸಿಗಹಾಕಿದ), ದಸಿ
pejorative — ಗು ಕೆಟ್ಟ ಹುರುಳಿನ
pelagic — ನಾ ಕಡಲಿನ
pelf — ನಾ ಇಳಿಕೆಯ ಸೊಮ್ಮು, ಅಳಿಸೊಮ್ಮು
pellet — ನಾ ಕಿರುಗುಂಡು, ಕಡುಹು
pell-mell — ಗು ಅಡ್ಡಾದಿಡ್ಡಿ, ಗೊಂದಲದ, ತಾರಾಮಾರು
pellucid — ಗು ತಿಳಿಯಾದ, ಆಚೆ ಕಾಣುವ
pelt — ನಾ ಹಸಿತೊಗಲು
pelt — ಕ್ರಿ ತೂರು (ಕಲ್ಲು ತೂರು), ಬೀರು, ಹೊಡೆ, ಜಡಿ (ಮಳೆ ಜಡಿಯುತ್ತಿದೆ, ಜಡಿ ಮಳೆ)
pelvis — ನಾ ಕಿಳ್ಗುಳಿ ನಾ 1 ಬಳಪ (ಬರಹಗಾರನ ಬಳಪ ಕಳೆದುಹೋಗಿದೆ) 2 ದೊಡ್ಡಿ (ಆಕಳ ದೊಡ್ಡಿ), ಕೊಟ್ಟಿಗೆ
pen — ಕ್ರಿ 1 ಬರೆ 2 ಕಟ್ಟು (ಆಕಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ)
pen name — ನಾ ಬರೆಹೆಸರು
penalize — ಕ್ರಿ ಮುಯ್ವು ಕೊಡು
penance — ನಾ ತಪ್ಪುಕಳೆತ
penchant — ನಾ ಒಲವು, ಮೆಚ್ಚುಗೆ
pencil — ನಾ ಬರೆಕೋಲು (ಹುಡುಗ ತನ್ನ ಬರೆಕೋಲನ್ನೆಲ್ಲೂೀ ಬಿಟ್ಟು ಬಂದಿದ್ದಾನೆ)
pendent — ನಾ ತೂಗಿಕೆ
pending — ಗು ತೀರ್ಮಾನವಾಗದ, ಉಳಿದಿರುವ, ಮುಗಿಸದ
pendulum — ನಾ ತೂಗುಗುಂಡು
penetrate — ಕ್ರಿ ತೂರು (ಮರದೊಳಗೆ ತೂರಿದ ಸರಳು),ಒಳನುಗ್ಗು
penetration — ನಾ ತೂರಿಕೆ, ನುಗ್ಗಿಕೆ
peninsula — ನಾ ಅರೆತೆವರು
penmanship — ನಾ ಬರಹಗಾರಿಕೆ
pension — ನಾ ಬಿಡುವುಸಂಬಳ (ಅವನಿಗೆ ಸಿಗುವ ಬಿಡುವುಸಂಬಳದಲ್ಲಿ ಹೆಚ್ಚುಪಾಲು ಮನೆಬಾಡಿಗೆಗೇ ಹೋಗುತ್ತದೆ)
pensive — ಗು ನೆನಹಿನಲ್ಲಿರುವ
pentagon — ನಾ ಅಯ್ಬದಿ
pent-up — ಗು ತಡೆದಿರಿಸಿದ, ಅದುಮಿಟ್ಟ
penury — ನಾ ಕಡು ಬಡತನ
peon — ನಾ ಕೋಲುಗಾರ (ನಿಮ್ಮ ಕೋಲುಗಾರ ಬಾಗಿಲ ಬಳಿ ಕುಳಿತಿದ್ದಾನೆ)
people — ನಾ ಮಂದಿ (ಮಂದಿವಾಳ; ನೂರು ಮಂದಿ ಬಂದಿದ್ದರು)
pepper — ನಾ ಮಿರಿ,ಮೆಣಸು (ಮೆಣಸಿನ ಉರಿ)
pepper (long) — ನಾ ತಿಪ್ಪಲಿ
peppermint — ನಾ ಪುದಿನ
peptic — ಗು ಕರಗುವಿಕೆಯ (ಕರಗುವಿಕೆಯ ಹುಣ್ಣು) ನಾ ತಳ್ಳುಬಂಡಿ (ಮಗು ವನ್ನು ತಳ್ಳುಬಂಡಿಯಲ್ಲಿರಿಸಿ ನೂಕಿಕೊಂಡು ಹೋಗುತ್ತಿದ್ದಳು)
perceive — ಕ್ರಿ ಒಣರು (ಏನಾಲಿುತು ಎಂಬು ದನ್ನು ಆತ ಒಣರಬಲ್ಲವನಾಗಿದ್ದ), ಅರಿ (ಅರಿದು ಬರೆ), ತಿಳಿ
percentage — ನಾ ನೂರಕ್ಕೆ ಬೆಲೆ, ನೂರಕ್ಕೆ ಲೆಕ್ಕ
perception — ನಾ ಅರಿತ
perch — ಕ್ರಿ ತೆಂಗು (ತೆಂಗುಹ; ಮರದ ಮೇಲೆ ತೆಂಗಿದ ಹಕ್ಕಿ)
perchance — ಗು ಒಂದು ವೇಳೆ (ಒಂದು ವೇಳೆ ಆತ ಬಂದರೆ ನನ್ನನ್ನು ಕರೆಲಿುರಿ)
percolate — ಕ್ರಿ ಒಡಿಗಟ್ಟು
percussion — ನಾ ಬಡಿತ
perdition — ನಾ ಅಳಿವು
peregrinate — ಕ್ರಿ ಅಲೆದಾಡು, ಸುತ್ತಾಡು
peremptory — ಗು ಕೊನೆಯ, ತಡೆಯ ಲಾಗದ, ತಡಮಾಡಲಾಗದ, ತೀರ್ಮಾನಿಸಿದ
perennial — ಗು ನಿಲ್ಲದ (ನಿಲ್ಲದ ಸಿಹಿನೀರಿನ ಹರಿವು), ಬಾಳುವ, ಸೂಳಿಡೀ ಉಳಿಯುವ
perfect — ಗು 1 ಕುಂದಿಲ್ಲದ, ಮುಡಿಗೊಂಡ, ಮುಗಿದ 2 ತುಂಬಾ ಚನ್ನಾಗಿರುವ
perfection — ನಾ 1 ಬದ್ದು (ಎಲ್ಲವನ್ನೂ ಬದ್ದಿನಿಂದ ನಡೆಸಿಕೊಟ್ಟ) 2 ಮುಗಿತಾಯ
perfidy — ನಾ ಎರಡುಬಗೆತ, ಎರಡೆಣಿಕೆ
perforate — ಕ್ರಿ ತೂತುಕೊರೆ, ತೂತುಮಾಡು
perforce — ಗು ಕಡ್ಡಾಯವಾಗಿ
perform — ಕ್ರಿ ನೆಗಳು (ಮುಂದೆ ನೆಗಳುವ ಕಾಣ್ಕೆಯನ್ನು ನೋಡಬೇಡಿ; ನೆಗಳ್ಚು) ಪೊದಳ್ಚು (ಪೊದಳ್ಚುವ ಕೆಲಸ), ಗೆಯ್ಯು (ಆರಂಬ ಗೆಯ್ಯು; ತುಳಿಲ್ಗಯ್ಯು), ಎಸಗು (ಆತನು ಎಸಗಿದ ಎಸಕ)
performance — ನಾ ಕೊಲ್ಲಣಿಗೆ (ಅವರ ಇವತ್ತಿನ ಕೊಲ್ಲಣಿಗೆ ಚನ್ನಾಗಿತ್ತು), ಗೆಯ್ತ, ಗೆಯ್ಮು, ಎಸಕ
performer — ನಾ ಆಯ್ತ (ಅಚ್ಚುಳಾಯ್ತ, ಸೂಳಾಯ್ತ)
perfume — ನಾ ಸಾದು (ಸಾದುಬೊಟ್ಟು), ಕಂಪು (ಹೂವಿನ ಕಂಪು; ಕಡುಗಂಪು; ಹೊಸ ಕಂಪು)
perfunctory — ಗು ತೋರಿಕೆಯ, ಎಚ್ಚರಿಕೆ ಲಿುಲ್ಲದ, ಗೊಡವೆಲಿುಲ್ಲದ
perfusion — ನಾ ಒಳಹರಿಕೆ
pergola — ನಾ ಬಳ್ಳಿಮನೆ (ಇಬ್ಬರೂ ಬಳ್ಳಿಮನೆ ಯೊಳಗಿದ್ದರು) ನಾ ಗೊಡ್ಡ,ತತ್ತು, ಕೇಡು, ತೊಂದರೆ
perimeter — ನಾ ಸುತ್ತಳತೆ (ಮನೆಯ ಸುತ್ತಳತೆ), ಹೊರ ಎಲ್ಲ
period — ನಾ 1 ಗಡಿ, ಗಡುವು (ಸಾಲ ತೀರಿಸಲು ಮೂರು ತಿಂಗಳ ಗಡುವು ಕೊಟ್ಟಿದ್ದಾರೆ), ಹೊತ್ತು 2 ಮುಟ್ಟು (ಆಕೆಗೆ ಮುಟ್ಟು ನಿಂತಿದೆ) 3 ಕೊನೆ, ಮುಗಿತಾಯ
periodical — ಗು ಗಡುವಿನ (ಗಡುವಿನ ಒರೆತ)
periodical — ನಾ ಗಡುಕಡತ (ನಾವು ಮೂರು ಗಡುಕಡತಗಳನ್ನು ತರಿಸುತ್ತಿದ್ದೇವೆ)
peripatetic — ಗು ತಿರುಗಾಟದ, ಅಲೆದಾಟದ (ಅಲೆದಾಟದ ಕೆಲಸ)
periphery — ನಾ ಹದ್ದು, ಎಲ್ಲ, ಗಡಿ
periphrasis — ನಾ ಬಳಸುಹೇಳಿಕೆ
periscope — ನಾ ಮೇಲೆತೋರ್ಪುಗೆ
perish — ಕ್ರಿ ಅವಿ (ಅವಿದ ಹಣ್ಣು), ಕಿಡು, ಕೆಡು (ಹಾವಸೆ ಕೆಟ್ಟಾಗ ನೀರು ತಿಳಿಯಾಗುತ್ತದೆ), ನಂದು (ನಂದಿಹೋಗು), ಅಳಿ (ಅಳಿ ವೊಡಲು; ಅಳಿಗಣ್ಣು; ಅಳಿಗಾಲ), ಕೊಳೆ (ಹಣ್ಣು ಕೊಳೆತುಹೋಗಿದೆ)
perjure — ಕ್ರಿ ಆಣೆತಪ್ಪು, ಆಣೆಮುರಿ, ಸುಳ್ಳುಕಾಣ್ಕೆ ಕೊಡು
perjury — ನಾ ಸುಳ್ಳುಕಾಣ್ಕೆ, ಆಣೆಮುರಿತ
perky — ಗು ತೊಂದರೆಯ, ಕಾಡುವ
permanent — ಗು ಬಾಳಿಕೆಯ, ನೆಲೆನಿಂತ, ಮಾರದ (ಮಾರ್ಪಡದ)
permeate — ಕ್ರಿ ಒಳಮುಟ್ಟು, ಹೀರಿಕೊಳ್ಳು, ಹರಡು
permissible — ಗು ಒಪ್ಪಬಲ್ಲ, ಸೆಲವುಕೊಡ ತಕ್ಕ
permission — ನಾ ಸೆಲವು (ಸೆಲವುಗೊಳ್ಳು, ಸೆಲವುಪಡೆ), ಒಪ್ಪಿಗೆ (ಆತನಿಗೆ ಮನೆಗೆ ಹೋಗಲು ಒಪ್ಪಿಗೆ ಸಿಗಲಿಲ್ಲ)
permit — ನಾ ಒಪ್ಪಿಗೆ, ಸೆಲವು, ಉಂಡಿಗೆ
permit — ಕ್ರಿ ಬಿಡು (ಅವರು ನನ್ನನ್ನು ಹೋಗಲು ಬಿಡುವುದಿಲ್ಲ)
permutation — ನಾ ಮಾರ್ಪಾಡು
pernicious — ಗು ಅಳಿಸಬಲ್ಲ, ಕೇಡು ನಡೆಸ ಬಲ್ಲ, ಕೊಲ್ಲಬಲ್ಲ
peroration — ನಾ ಮುಕ್ತಾಯ (ತಾಸು ಎರಡಾದರೂ ಆತನ ಪೇರೊರೆ ಮುಕ್ತಾ ಯಕ್ಕೆ ಬಂದಿಲ್ಲ)
perpendicular — ಗು ನೆಟ್ಟಗೆ (ನೆಟ್ಟಗೆ ನಿಲ್ಲಿ ಸಿರುವ ಗೂಟ )
perpetrate — ಕ್ರಿ ತಪ್ಪುಮಾಡು, ಕೇಡು ನಡೆಸು ಗು ಎಡೆಬಿಡದೆ ನಡೆವ, ನಿಲ್ಲದ, ನೆಲೆನಿಂತ, ಮುಗಿಯದ
perplex — ಕ್ರಿ ತಡಬಡಿಸು (ಆತನನ್ನು ಆ ಊರಲ್ಲಿ ನೋಡಿ ನಾನು ತಡಬಡಿಸಿದೆ), ಕಂಗೆಡು, ಕಯ್ಮರೆ (ಕಯ್ಮರೆತ ಹುಡುಗ)
perplexity — ನಾ ಮಯಮು, ಮಯ್ಮು, ತತ್ತರ (ತತ್ತರಗೊಳ್ಳು; ತತ್ತರಬಿತ್ತರ), ಕುಳ
perquisite — ನಾ ಹೆಚ್ಚಿನ ಹುಟ್ಟುವಳಿ, ಮೇಲ್ಗಳಿಕೆ
persecute — ಕ್ರಿ ಕಾಡು, ಕಿರುಕುಳ ಕೊಡು, ಗೋಳಾಡಿಸು
persecution — ನಾ ಕಾಟ (ಸಾಲಿಗನ ಕಾಟ), ಕಿರುಕುಳ (ಆತನ ಕಿರುಕುಳದಿಂದ ತಪ್ಪಿಸಿ ಕೊಳ್ಳುವುದು ಹೇಗೆ?)
perseverance — ನಾ ಅದಟು, ಪಟ್ಟು, ಮೊಂಡುತನ
persevere — ಕ್ರಿ ಬಿಟ್ಟುಕೊಡದಿರು
persist — ಕ್ರಿ 1 ಪಟ್ಟುಹಿಡಿ (ತೊಂದರೆ ಯಾದರೂ ಬಿಡದೆ ಪಟ್ಟುಹಿಡಿದು ಕೆಲಸ ಮುಗಿಸಿದ) 2 ತಾಳು, ಉರಿಸು 3 ಉಳಿ
persistence — ನಾ ಪಟ್ಟು, ಕೆಚ್ಚು, ಕಡುಪು
persistent — ಗು 1 ಮೊಂಡು, ಪಟ್ಟುಬಿಡದ, ತಾಳ್ಮೆಯ 2 ನಿಲ್ಲದಿರುವ, ಮುನ್ನಡೆಯುವ
person — ನಾ 1 ಆಳು (ಕಾಲಾಳು; ತುಳಿ ಲಾಳು; ಆಳುದ್ದ; ಆಳುಮಟ್ಟ) 2 ಮಯ್ 3 ಮಾತಾಳು (ಆಡುಗ, ಕೇಳುಗ, ಇತರ)
personable — ಗು ಚೆಲುವಾದ, ಅಂದವಾದ
personage — ನಾ ಮೇಲಾಳು, ಅರಿದಾಳು
personal — ಗು ಆಳಿನ 2 ಮಯ್ಯ (ಮಯ್ಯ ಪರಿಜು) 3 ತನ್ನ, ತನ್ನೊಬ್ಬನ
personality — ನಾ 1 ಆಳ್ಮೆ, ಆಳ್ತನ 2 ಮೇಲಾಳು, ಅರಿದಾಳು
personally — ಗು ಕಯ್ಯಾರೆ (ಕಯ್ಯಾರೆ ಕೊಟ್ಟು ಬಂದಿದ್ದೇನೆ)
personified — ಗು ಮಯ್ವೆತ್ತ
personnel — ನಾ ಕೆಲಸಗಾರರು
perspective — ನಾ ಕಾಣ್ಬಟ್ಟೆ
perspicacious — ಗು ಬೇರ್ಪಡಿಸಬಲ್ಲ, ಗುರುತಿಸಬಲ್ಲ, ಚುರುಕು ತಿಬ್ಬಳಿಯ
perspiration — ನಾ ಬೆವರು (ಬೆವರು ಸುರಿಯುತ್ತಿದೆ; ಬೆವರಿಳಿ; ಬೆವರುಹರಿ; ಬೆವರಿಕೆ)
perspire — ಕ್ರಿ ಬೆವರು (ಆತ ಬಿಸಿಲಲ್ಲಿ ನಡೆದು ಬೆವತು ಒದ್ದೆಯಾಗಿದ್ದಾನೆ)
persuade — ಕ್ರಿ ಒಡಂಬಡಿಸು (ಆತನನ್ನು ಹೇಗೋ ಒಡಂಬಡಿಸಿದೆ) ಒಪ್ಪಿಸು, ಒಲಿಸು (ಆತನನ್ನು ಒಲಿಸದೆ ಯಾವ ಕೆಲಸವೂ ಸಾಗದು), ಕಳರು ನಾ ಒತ್ತಾಯ (ಒತ್ತಾಯ ಮಾಡಿ ಕಳಿಸಿದೆ)
persuasive — ಗು ಒಲಿಸಬಲ್ಲ, ಒಪ್ಪಿಸಬಲ್ಲ
pert — ಗು ಕೆಚ್ಚಿನ, ಸೊಕ್ಕಿನ (ಸೊಕ್ಕಿನ ಮರು ನುಡಿ), ಸಿಗ್ಗಿಲ್ಲದ, ಎಗ್ಗಿಲ್ಲದ
pertain — ಕ್ರಿ ಸೇರು (ಸೇರಿರು), ಅಡಸು
pertinacious — ಗು ಪಟ್ಟುಬಿಡದ, ಮೊಂಡು, ಹಿಡಿತಬಿಡದ
pertinent — ಗು ತಕ್ಕ, ಬೇಕಾದ, ಸೇರಿದ
perturb — ಕ್ರಿ ಮನಕಲಕಿಸು, ಬೆದರಿಸು, ತಲ್ಲ ಣಿಸು
perturbation — ನಾ ಗಲಿಬಿಲಿ (ನಿಮ್ಮನ್ನು ಕಂಡಾಗ ಆತ ಗಲಿಬಿಲಿಗೊಂಡಿದ್ದ)
perusal — ನಾ ಓತ, ಓದಿಕೆ, ಕಲಿಕೆ
peruse — ಕ್ರಿ ಓದು (ಎಚ್ಚರಿಕೆಲಿುಂದ ಓದು), ಕಲಿ
pervade — ಕ್ರಿ ಹರಡು (ಹೂವಿನ ಕಂಪು ಎಲ್ಲ ಕಡೆಗೂ ಹರಡಿದೆ), ಹಬ್ಬು (ಕುಂಬಳ ಬಳ್ಳಿ ಮಾಡಿನ ಮೇಲೆಲ್ಲ ಹಬ್ಬಿದೆ)
perverse — ಗು ಮುಸುಂಡಿ (ಮುಸುಂಡಿತನ), ಎಕ್ಕಸಕ್ಕ (ಎಕ್ಕಸಕ್ಕ ಮಾಡು), ಕೊಕ್ಕಿ (ಕೊಕ್ಕಿ ಹುಡುಗ), ಅಡ್ಡದಾರಿ ಹಿಡಿದ, ಓಜೆ ತಪ್ಪಿದ
pervert — ಕ್ರಿ 1 ತಪ್ಪುದಾರಿ ಹಿಡಿಸು, ಅಡ್ಡ ದಾರಿ ಹಿಡಿಸು 2 ತಪ್ಪಾಗಿ ಬಳಸು 3 ಮುಡುಕು, ಕೀಳುಗಳೆ
pervious — ಗು ಅಡ್ಡಹಾಯಬಲ್ಲ, ಕಡೆಯ ಬಲ್ಲ, ದಾಟಬಲ್ಲ, ಒಳಹರಡಬಲ್ಲ
pessimism — ನಾ ನಂಬಿಕೆಯಳಿತ
pest — ನಾ ಕೇಡಿ, ಕೇಡುಗ
pester — ಕ್ರಿ ಕಾಡು (ಹುಡುಗ ತಾಲಿುಯನ್ನು ತುಂಬಾ ಕಾಡುತ್ತಿದ್ದಾನೆ), ಕಿರಿಕಿರಿ ಮಾಡು
pesticide — ನಾ ಕೇಡಳಿಕ
pestilence — ನಾ ಅಂಟುಬೇನೆ, ಸೋಂಕು ಬೇನೆ
pestle — ನಾ ಒನಕೆ (ಆಕೆ ಕಯ್ಯಲ್ಲಿ ಒನಕೆ ಹಿಡಿದಿದ್ದಳು)
pet — ನಾ ಮುದ್ದಿಗ, ಮೆಚ್ಚುಗ
pet — ಕ್ರಿ ಮಯ್ದಡವು (ಹುಡುಗನ ಮಯ್ದಡವಿ ಕಳುಹಿಸಿಕೊಟ್ಟಳು), ಮುದ್ದುಮಾಡು
petal — ನಾ ಎಸಳು (ಹೂವಿನ ಎಸಳು; ಎಸಳು ಕಣ್ಣು; ಆ ಹೂವಿಗೆ ಮೂರು ಎಸಳುಗಳಿವೆ)
peter — ಕ್ರಿ ಸಣ್ಣದಾಗು, ಚಿಕ್ಕದಾಗು, ಕುಂದು
petite — ಗು ಪುಟ್ಟ, ಚೆಲುವೆಯಾದ ನಾ ಮನವಿ (ಮನವಿ ಕೊಡು), ಅರಿಕೆ (ಅರಿಕೆ ಮಾಡು), ಬೇಡಿಕೆ (ಅವರು ಹಲವಾರು ಬೇಡಿಕೆಗಳನ್ನು ನಮ್ಮ ಮುಂದಿಟ್ಟಿ ದ್ದರು)
petitioner — ನಾ ಅರಿಕೆಗಾರ, ಮನವಿಗಾರ
petrify — ಕ್ರಿ ಕಲ್ಲಗು, ಗಟ್ಟಿಯಾಗು, ಮರ ಗಟ್ಟು, ಮರವೆಗೊಳ್ಳು
petroleum — ನಾ ಕಲ್ಲಣ್ಣೆ
petticoat — ನಾ ಒಳಪಾವಡೆ
petty — ಗು ಚುಂಗಡಿ (ಚುಂಗಡಿ ಹಣ; ಅಂಗಡಿ ಯಲ್ಲಿ ಚುಂಗಡಿ ಸಿಗುವುದಿಲ್ಲ), ಚಿಲ್ಲರೆ (ಚಿಲ್ಲರೆ ಮಾತು, ಚಿಲ್ಲರೆ ಕೆಲಸ)
petulant — ಗು ತಾಳ್ಮೆಲಿುಲ್ಲದ, ಸಿಡಿಮಿಡಿ ಗೊಳ್ಳುವ
pew — ನಾ ಒರಗು ನಿಡುಮಣೆ
phalanx — ನಾ ಈಡುತಂಡ
phantasm — ನಾ ತೋರ್ಕೆ, ಹೇದೆ
phantom — ನಾ 1 ಗಾಳಿಗ, ಮರಳು 2 ಮಟ್ಟ, ಮಚ್ಚು, ಕನ್ನಡ
pharmacy — ನಾ ಮದ್ದಿನಂಗಡಿ
pharynx — ನಾ ಮುಂದೊಂಡೆ, ಮುನ್ಗಂಟಲು
phase — ನಾ ಹಂತ (ಎರಡನೆಯ ಹಂತ), ಮೆಟ್ಟಲು
phenomenon — ನಾ 1 ನೆಗಳ್ತೆ, ಆಗುಹ 2 ಮರುಬಳಕೆಯ ಆಗುಹ
phial — ನಾ ಮದ್ದಿನ ಬುಡ್ಡಿ
philander — ಕ್ರಿ ಸೋಗಳುಗು
philanthropy — ನಾ ಮಂದಿಯರ್ತಿ, ಮಂದಿ ಮರುಕ
philatelist — ನಾ ಬೆಟ್ಟು ನೆರಪುಗ (ಅಂಚೆ ಬೆಟ್ಟು ನೆರಪುಗ)
philately — ನಾ ನಾ ಬೆಟ್ಟರಿಮೆ, ಬೆಟ್ಟುಕಲೆತ
philology — ನಾ ಬರಹದರಿಮೆ
philosopher — ನಾ ಅರಿವಿನರಿಗ
philosophy — ನಾ ಅರಿವಿನರಿಮೆ
phlegm — ನಾ ಲೊೀಳೆ (ಗಂಟಲಲ್ಲಿ ಲೊೀಳೆ ತುಂಬಿದೆ), ಕೋಳೆ (ಕೆಮ್ಮಿ ಕೆಮ್ಮಿ ಕೋಳೆ ಹೊರಹಾಕುತ್ತಿದ್ದಾನೆ)
phobia — ನಾ ಕಡುಹೆದರಿಕೆ, ಕಡುದಿಗಿಲು ನಾ 1 ಉಲಿ 2 ಗೆಂಟುಮಾತು
phonetics — ನಾ ಉಲಿಯರಿಮೆ
phonics — ನಾ ಉಲಿಯೋದು
phonograph — ನಾ ಉಲಿಯಚ್ಚುಕ
phonologist — ನಾ ಉಲಿಯರಿಗ
photocopy — ನಾ ನೆರಳಚ್ಚು
photoelectric — ಗು ಬೆಳಕುಮಿಂಚಿನ
photograph — ನಾ ನೆರಳುತಿಟ್ಟ (ನಿಮ್ಮ ದೊಂದು ನೆರಳುತಿಟ್ಟವಿದ್ದರೆ ಕೊಡಿ)
photographer — ನಾ ನೆರಳುತಿಟ್ಟಗ
phrase — ನಾ 1 ನುಡಿಗಟ್ಟು 2 ಪದಕಂತೆ
phraseology — ನಾ ಪದಬಳಕೆ
physic — ನಾ ಮದ್ದು, ಅರಗುಮದ್ದು
physical — ನಾ 1 ಮಯ್ಯ, ಒಡಲಿನ (ಒಡಲಿನ ಒರೆತ) 2 ಅರಿಯಬಲ್ಲ
physician — ನಾ ಮಾಂಜುಗ
physics — ನಾ ಪುರುಳರಿಮೆ
physiognomy — ನಾ ಮೋರೆನುಡಿತ
physiography — ನಾ ನೆಲದರಿಮೆ
physiology — ನಾ ಉಸಿರಿಯರಿಮೆ
physique — ನಾ ಮಯ್ಕಟ್ಟು (ಮಯ್ಕಟ್ಟು ಚನ್ನಾಗಿದ್ದರೆ ಸಾಲದು), ಒಡಲಿನಿಟ್ಟಳ, ಒಡಲಿನ ತೋರ್ಕೆ, ಒಡಲಿನಳವು
pick out — ಕ್ರಿ ಆರಿಸು, ಆಯು (ಇವರಲ್ಲಿ ನಾಲ್ಕು ಮಂದಿಯನ್ನು ಆಯುವ ಕೆಲಸ ನಿಮ್ಮದು; ಆಯ್ಕೆ)
pick — ಕ್ರಿ 1 ಕುತ್ತು, ಚುಚ್ಚು 2 ಮೀಟು
pick up — ಕ್ರಿ 1 ಹೆಕ್ಕು (ಹೂಗಳನ್ನೆಲ್ಲ ಹೆಕ್ಕಿ ಬುಟ್ಟಿಯಲ್ಲಿ ತುಂಬಿಸಿದಳು), ತೆಬ್ಬರಿಸು 2 ತಿಳಿದುಬರು 3 ಸೆರೆಹಿಡಿ
pickaxe — ನಾ ಗುದ್ದಲಿ (ಗುದ್ದಲಿಯನ್ನೆತ್ತಿ ಅಗೆಯತೊಡಗಿದ)
picket — ನಾ 1 ಹೊಂಚುಪಡೆ, ಕಾವಲು ಪಡೆ 2 ಗೂಟ, ದಸಿ
picket — ಕ್ರಿ ಅಡ್ಡಿಪಡಿಸು, ತಡೆಹಾಕು, ದಾರಿ ಗಟ್ಟು ನಾ ಊರುಗಾಲಿು, ಉಪ್ಪಿನಕಾಲಿು (ಮಾವಿನ ಮಿಡಿಯ ಉಪ್ಪಿನಕಾಲಿು)
pickpocket — ನಾ ಕಿಸೆಗಳ್ಳ
picnic — ನಾ ಹೊರ ಊಟ, ತೋಟದೂಟ
picture — ನಾ ತಿಟ್ಟ (ತಿಟ್ಟವಿಕ್ಕು; ತಿಟ್ಟವಿಡು - ತಿಟ್ಟವಿಟ್ಟು ಬರೆ)
picturesque — ಗು ತಿಟ್ಟದಂತಿರುವ, ಚಂದ ನೋಟದ, ಎದ್ದುಕಾಣುವ
pidgin — ನಾ ಬೆರಕೆನುಡಿ (ಅವರು ಮಾತನಾಡು ತ್ತಿರುವುದು ಬೆರಕೆನುಡಿ)
pie — ನಾ ತುಂಬುಕಡುಬು
piebald — ಗು ಕಪ್ಪು-ಬಿಳುಪು ಬಣ್ಣದ (ಕಪ್ಪು-ಬಿಳುಪು ಬಣ್ಣದ ಕುದುರೆ)
piece — ನಾ ಅರಕೆ (ಮಡಿಕೆಯ ಅರಕೆ), ಒಡಪು, ನುಚ್ಚು (ನುಚ್ಚುನೂರು ಮಾಡು; ನುಚ್ಚುಬಡಿ; ನುಚ್ಚುಗುಟ್ಟು; ನುಚ್ಚುನುರಿ), ಪಚ್ಚಡಿ (ಪಚ್ಚಡಿಮಾಡು), ಸಿಂಗೆ, ಹೋಳು (ಅಡಿಕೆ ಹೋಳು; ಹೋಳಾಗು), ಹೊಪ್ಪೆ, ಕಡುಕು (ಮರದ ಕಡುಕು),ಕಂಡಿಕೆ, ತುಣುಕು (ತಿಂಡಿಯ ತುಣುಕು), ತುಂಡು (ತುಂಡಾಗು; ತುಂಡುಮಾಡು; ತುಂಡುಕೂದಲು), ಮೂರಿ, ತುಮುರು (ತುಮುರು ತುಮುರಾಗಿ ಒಡೆದು ಹೋಗು; ತುತ್ತುಮುರಾಗು), ಕುಣಿ (ಕಿರು ಗುಣಿ), ಚಲ್ಲಿ (ಮೆಣಸಿನ ಚಲ್ಲಿ),ಚೂರು (ಚೂರುಚೂರು ಮಾಡು; ಕನ್ನಡಿ ಚೂರು)
piece together — ಕ್ರಿ ಅಂಟಿಸು (ಈ ಎರಡು ಹಾಳೆಗಳನ್ನು ಒಟ್ಟಿಗೆ ಅಂಟಿಸಬೇಕು)
piecemeal — ಗು ಚೂರುಚೂರಾಗಿ, ಕೊಂಚ ಕೊಂಚ
piecework — ನಾ ತುಂಡುಕೆಲಸ, ಚಿಲ್ಲರೆ ಕೆಲಸ
pied — ಗು ಬಣ್ಣಬಣ್ಣದ
pier — ನಾ ಹಡಗುಕಟ್ಟೆ, ಇಳಿವೆಡೆ
pierce — ಕ್ರಿ ಇರಿ (ಇರಿದಾಡು), ನಾಟು (ಅವನ ಕಾಲಿಗೊಂದು ಮುಳ್ಳು ನಾಟಿದೆ; ನಾಟು ನುಡಿ), ತಿವಿ (ತಿವಿನುಡಿ), ಚುಚ್ಚು (ಚುಚ್ಚು ನುಡಿ; ಚುಚ್ಚುನೋಟ; ಚುಚ್ಚುಮಾತು), ಕೊರೆ (ಕಬ್ಬಿನ ಕೊರೆ)
piercing — ನಾ ಇರಿತ (ಕತ್ತಿಯ ಇರಿತ), ಇರಿಕೆ
piety — ನಾ ಕಡವರ ಮುಡಿಪು
pig — ನಾ ಹಂದಿ (ಹಂದಿಬಲೆ; ಹಂದಿಬೇಟೆ; ಹಂದಿಗ)
piggish — ಗು ತಿನಾಳಿ, ಹೊಲಸು
pigheaded — ಗು ಮೊಂಡು, ಹಟಮಾರಿ
pig-iron — ನಾ ಬೀಡು ಕಬ್ಬಿಣ, ಪೆಡಸು ಕಬ್ಬಿಣ
pigment — ನಾ ಪೊಗರು, ಹೊಗರು ನಾ ಕುಳ್ಳ
pile — ನಾ ಒಟ್ಟಿಲು (ಮಳಲ ಒಟ್ಟಿಲು), ಗುಪ್ಪೆ (ಕಸದಗುಪ್ಪೆ), ಗುಡ್ಡೆ (ರಾಗಿಗುಡ್ಡೆ), ನಿಟ್ಟು (ನಿಟ್ಟುಹಾಕು - ಮಾಳಿಗೆಯಲ್ಲಿ ಚೀಲ ಗಳನ್ನು ನಿಟ್ಟುಹಾಕಿದ್ದರು; ನಿಟ್ಟೇರಿಸು - ನಿಟ್ಟೇರಿಸಿದ ಚೀಲಗಳು), ಅಡಕಲು (ಜನರು ಕಿಕ್ಕಿರಿದು ಅಡಕಲಾಗಿ ತುಂಬಿದ್ದಾರೆ; ಅಡಕ ಲಿಡು)
pile up — ಕ್ರಿ ಅಡಕು (ಮಡಕೆಗಳನ್ನೆಲ್ಲ ಒಂದು ಕೋಣೆಯಲ್ಲಿ ಅಡಕಿದ್ದರು), ಒಟ್ಟು (ಕಟ್ಟಿಗೆಯನ್ನು ಒಟ್ಟು; ಒಟ್ಟವಿಸು)
piles — ನಾ ಮೊಳೆ
pilfer — ಕ್ರಿ ಕಿರುಕಳವು ಮಾಡು
pilferage — ನಾ ಕಿರುಕಳ್ಳತನ, ಕಿರುಕಳವು
pilferer — ನಾ ಕಿರುಕಳ್ಳ (ಇಲ್ಲಿ ಕಿರುಕಳ್ಳರ ತೊಂದರೆ ಹೆಚ್ಚಾಗಿದೆ)
pilgrim — ನಾ 1 ಅಲೆಮಾರಿ 2 ಹಾದಿಗ, ನಡೆಪಾಡುಗ
pill — ನಾ ಕಡುಹು (ಕಡುಹು ನುಂಗು; ಮದ್ದಿನ ಕಡುಹು)
pillage — ನಾ ಸೂರೆ (ಸೂರೆಹೋಗು; ಸೂರೆ ಮಾಡು; ಸೂರೆಗಾರ; ಸೂರೆಗ), ಕೊಳ್ಳೆ (ಕೊಳ್ಳೆಹೊಡೆ)
pillar — ನಾ ಅರಳೆ (ಅರಳೆಯ ಸುತ್ತು ತಿರುಗುವ ಗಾಣದೆತ್ತು), ಕುಂದ (ಕಲ್ಲಿನ ಕುಂದ), ಬೋದಿಗೆ (ಕಗ್ಗಲ್ಲಿನ ಬೋದಿಗೆ)
pillion — ನಾ ಹಿನ್ಕುಳ್ಳಿಗ, ಹಿನ್ಮಣೆ
pillow — ನಾ ದಿಂಬು (ತಲೆದಿಂಬು; ತಲೆ ಗಿಂಬು),ಮಲಗುಮೂಡೆ, ಕವುಳುಡೆ, ಮೂಡಾವೆ
pilot — ಕ್ರಿ ಓಡಿಸು (ಹಡಗು ಓಡಿಸು)
pimp — ನಾ ಹೆಣ್ಣುಗ
pimple — ನಾ ಮೊಡವೆ (ಅವಳ ಮೋರೆತುಂಬ ಮೊಡವೆಗಳೆದ್ದಿವೆ)
pin — ನಾ ಕಡಾಣಿ, ಆಣಿ (ಗೋಡೆಗೆ ಒಂದು ಆಣಿಹೊಡೆದು ಅದಕ್ಕೆ ಚೀಲವನ್ನು ನೇತು ಹಾಕಿದ), ಗುಂಡಾಣಿ
pincers — ನಾ ಕಾರು (ನೀರುಕಾರು; ಮೊನೆ ಕಾರು), ಇಕ್ಕುಳ
pinch — ನಾ ಚಿಟಿಕೆ (ಒಂದು ಚಿಟಿಕೆ ಉಪ್ಪು)
pinch — ಕ್ರಿ ಇಡಕು, ಗಿಂಡು (ಅವನು ಗಿಂಡಿದಲ್ಲಿ ನೆತ್ತರು ಕಪ್ಪಾಗಿದೆ), ಚಿವುಟು (ಅವನ ತೋಳನ್ನು ಚಿವುಟಿದಳು), ಜಿಗುಟು, ಗಿಲ್ಲು (ಮಗುವಿನ ಕೆನ್ನೆಯನ್ನು ಯಾರೋ ಗಿಲ್ಲಿ ದ್ದಾರೆ)
pincushion — ನಾ ಆಣಿಮೂಡಾವೆ
pine away — ಕ್ರಿ ಬಾಡು ಕ್ರಿ ಹೆಡಕಟ್ಟು, ಹೆಡಗುಡಿ ಕಟ್ಟು, ಹೆಡಗೈ ಕಟ್ಟು, ಹೆಡಮುರಿಗೆ ಕಟ್ಟು
pink — ಗು ನಸುಗೆಂಪು
pinky — ನಾ ಕಿರುಬೆರಳು
pinnacle — ನಾ ಕೋಡು (ಬೆಟ್ಟದ ಕೋಡು), ತುತ್ತತುದಿ (ಬೆಟ್ಟದ ತುತ್ತತುದಿಗೆ ಹತ್ತಿ ದ್ದಾನೆ)
pioneer — ನಾ ಮೊದಲಿಗ (ಈ ಬೆಟ್ಟದಲ್ಲಿ ತೋಟ ಮಾಡಿದವರಲ್ಲಿ ಅವರು ಮೊದಲಿ ಗರು)
pious — ಗು ಮುದಿಪುಳ್ಳ
pip — ನಾ 1 ಕಿರುಬಿತ್ತು 2 ಚುಕ್ಕೆ
pipe — ನಾ ಕೊಳವೆ
piquant — ಗು ಉರಿಸುವ (ಬಾಲಿು ಉರಿಸುವ ಸವಿಯಾದ ತಿಂಡಿ), ಕೆರಳಿಸುವ, ಗಮನ ಸೆಳೆವ
pique — ನಾ ಸಿಟ್ಟು, ಬಿಂಕಕೆಡುಗೆ
piracy — ನಾ 1 ಕಡಲುಗಳ್ಳತನ 2 ಬರಹ ಗಳ್ಳತನ
pirate — ನಾ ಕಡಲುಗಳ್ಳ
pirouette — ನಾ ಗಿರಕಿ, ಗಿರಗಟೆ (ಗಿರಗಟೆಯ ಕುಣಿತ)
pistol — ನಾ ಕಿರುಕಯ್ಕೋವಿ
piston — ನಾ ಆಡುಬೆಣೆ
pit — ನಾ ಬೊಂದೆ (ಸತ್ತ ಮಗುವನ್ನು ಬೊಂದೆ ಯೊಳಗೆ ಇರಿಸಿ ಮಣ್ಣುಮುಚ್ಚಿದರು), ಹಳ್ಳ (ಹಳ್ಳ ತೋಡು), ಕಪ್ಪು (ಆನೆಯನ್ನು ಹಿಡಿಯಲು ತೋಡಿದ ಕಪ್ಪು; ಕಪ್ಪಲು), ಕುಳಿ, ಗುಳಿ (ನೆಲದಲ್ಲಲ್ಲ ಗುಳಿಬಿದ್ದಿದೆ), ಗುಣಿ (ಗುಣಿಗಣ್ಣು; ಗುಣಿಗಲ್ಲ), ಗುಂಡಿ (ಗುಂಡಿಗೆ ಬೀಳು, ನೀರಗುಂಡಿ), ಚಲಿಮೆ (ನೀರಿಲ್ಲದಾಗ ಹೊಳೆಯಲ್ಲಿ ತೋಡಿದ ಚಲಿಮೆ), ಹೊಂಡ (ನೀರಿನ ಹೊಂಡ)
pitch — ನಾ ಕಪ್ಪುರಾಳ
pitch — ಕ್ರಿ ಎಸೆ, ಒಗೆ (ಹುಡುಗ ಹಾವಿನ ಮೇಲೆ ಕಲ್ಲು ಒಗೆದ), ಬೀರು
pitch-black — ಗು ಕಗ್ಗಪ್ಪು (ಕಗ್ಗಪ್ಪು ಕಲ್ಲು), ಕಡುಕಪ್ಪು
pitcher — ನಾ ಕೊಡ (ನೀರಿನ ಕೊಡ)
piteous — ಗು ಮರುಕ ಹುಟ್ಟಿಸುವ
pitfall — ನಾ ಮುಗ್ಗು (ತಗ್ಗುಮುಗ್ಗು), ಗುಂಡಿ
pith — ನಾ ಬೆಂಡು (ಬೆಂಡು ಹಿಡಿದು ನೀರಿಗೆ ಹಾರಿದರು),ತಿರುಳು (ತಿರುಳಿನ ಹುಳ)
pithy — ಗು ತುಂಬಾ ತಿರುಳುಳ್ಳ, ತುಂಬಾ ಹುರುಳುಳ್ಳ ಗು ಕನಿಕರಿಸತಕ್ಕ
pitiless — ಗು ಕನಿಕರವಿಲ್ಲದ, ಮರುಗದ
pittance — ನಾ ಕಿರುಪಾಲು, ಕಿರುಮೊತ್ತ
pity — ನಾ ಕನಿ (ಕನಿಕರ - ಆಕೆಗೆ ನಿಮ್ಮ ಮೇಲೆ ಕನಿಕರವಿದೆ; ಕನಿಕರಿಸು), ಮರುಕ
pivot — ನಾ ತಿರುಗುಗೂಟ, ತಿರುಗಾಣಿ
placard — ನಾ 1 ಸೂಳ್ಗರೆತ 2 ಗೋಡೆತಿಟ್ಟ
placate — ಕ್ರಿ ತಣಿಸು, ನೆಮ್ಮದಿಗೊಳಿಸು
place — ನಾ ಇಂಬು (ಇಂಬಾಗು), ಇಕ್ಕೆ (ಆತನ ಇಕ್ಕೆ ಕಾಡಿನಲ್ಲಿ), ಇಡೆ, ಎಡೆ (ಅವನಿದ್ದ ಎಡೆಲಿುಂದ ತೊಲಗುವುದೊಳ್ಳೆಯದು), ಕಣಿ (ಮುಂಕಣಿ), ಕಡೆ (ಎಲ್ಲ ಕಡೆ ಲಿುಂದಲೂ ಬಂದರು), ಹಕ್ಕೆ (ಆಕಳ ಹಕ್ಕೆ ಲಿುಂದ ಸೆಗಣಿ ತೆಗೆಯಬೇಕು)
place — ಕ್ರಿ ಇಡು (ನೀನು ತಂದುದನ್ನು ಒಳಗೆ ಇಡು), ಮಡಗು (ಹಣವನ್ನೆಲ್ಲ ನೆಲದೊಳಗೆ ಮಡಗಿದ), ನಿರಿಸು (ಹಣೆಯಲ್ಲಿ ನಿರಿಸಿದ ಬೊಟ್ಟು), ಇಕ್ಕು (ತಂದಿಕ್ಕು)
placenta — ನಾ ಮಾಸು (ಮಾಸುಚೀಲ), ಕಸ
placid — ಗು ಅಲ್ಲಡದ, ನೆಮ್ಮದಿಯ
plain — ನಾ ಬಯಲು (ಎಲ್ಲರೂ ಬಯಲಲ್ಲಿ ಬಂದು ಕುಳಿತರು)
plain — ಗು 1 ತೆರೆದ 2 ತೆಳುವಾದ 3 ನೇರ (ನೇರಮಾತು) 4 ಅಂದವಿಲ್ಲದ, ಯಾವಾ ಗಿನ
plaint — ನಾ ಗೋಳು, ಗೋಳಾಟ, ದೂರು
plaintiff — ನಾ ದೂರುಗಾರ (ದೂರುಗಾರನನ್ನು ಒಳಗೆ ಕರೆದರು)
plaintive — ಗು ಅಳಲಿನ (ಅಳಲಿನ ಕೂಗು), ಗೋಳಾಡುವ, ಮರುಕದ
plait — ಕ್ರಿ ಮೆಡರು (ತಟ್ಟಿ ಮೆಡರು), ಹೆಣೆ (ಬುಟ್ಟಿ ಹೆಣೆ), ಹೊಸೆ (ಹಗ್ಗ ಹೊಸೆ), ಅಲ್ಲು (ಕೂದಲು ಅಲ್ಲು)
plaiting — ನಾ ಹೆಣಿಗೆ (ಆಕೆ ಹೆಣಿಗೆ ಕಲಿಯು ತ್ತಿದ್ದಾಳೆ)
plan — ನಾ ಬಳಕೆ, ಹೊಳಹು (ಹೊಳಹು ಹಾಕು), ಏರ್ಪಾಡು, ಹಂಚಿಕೆ (ಹಂಚಿಕೆ ಮಾಡು), ಹೂಟ (ಹೂಟಗಾರ)
plan — ಕ್ರಿ ಹಮ್ಮಿಕೊಳ್ಳು (ಹಮ್ಮುಗೆ)
plane — ನಾ 1 ನಡೆಮಾಡ, ಗಾಳಿತೇರು, ಬಾನೋಡ 2 ಕೀಸುಳಿ, ಹತ್ತರಿ, ಉಜ್ಜು ಕೊರಡು, ತೋಪಡೆ 2 ಮಟ್ಟ
plane — ಕ್ರಿ ಹತ್ತರಿ ಹಿಡಿ (ಹತ್ತರಿ ಹಿಡಿದು ಈ ಹಲಿಗೆಯನ್ನು ಮಟ್ಟಸ ಮಾಡಬೇಕು)
plane — ಗು ಮಟ್ಟಸ (ಮಟ್ಟಸ ನೆಲ) ನಾ ಅರಿಲ್ಸುತ್ತುಗ
planetarium — ನಾ ಅರಿಲುಂಕುಗೆ
plank — ನಾ ಹಲಿಗೆ (ಮರದ ಹಲಿಗೆ)
plant — ನಾ 1 ಗಿಡ (ಗಿಡಗಂಟೆ; ಗಿಡುಗಾಡು),ಅಗೇವು (ಮೆಣಸಿನ ಅಗೇವು, ಬದನೆ ಅಗೇವು), ನಾಟಿ (ನಾಟಿನಡು, ನಾಟಿಹಾಕು) 2 ಪೆರ್ಚೂಟಿ
plant — ಕ್ರಿನಡು (ಹೂಗಿಡ ನಡು; ಕಳದಲ್ಲಿ ನಟ್ಟ ಗುಂಟ), ಊರು, ನಾಟು (ನಾಟು ಕೋಲು)
plantain — ನಾ ಬಾಳೆ (ಬಾಳೆಗೊನೆ; ಬಾಳೆ ಗಿಡ)
plantation — ನಾ ನೆಡುತೋಪು (ನೆಡು ತೋಪಿನಲ್ಲಿದ್ದ ಮರಗಳೆಲ್ಲ ಬಿರುಗಾಳಿಗೆ ಮುರಿದುಬಿದ್ದಿವೆ), ತೋಟ (ತೆಂಗಿನ ತೋಟ; ಅಡಿಕೆ ತೋಟ)
plaque — ನಾ 1 ಚಂದತಗಡು 2 ಪಿಟ್ಟು (ಹಲ್ಲಿನ ಪಿಟ್ಟು)
plaster — ಕ್ರಿ ಮೆತ್ತು (ಮಣ್ಣು ಮೆತ್ತು, ಕಯ್ಗು ಮೆತ್ತಿದ ಜೇನು), ಅಂಟಿಸು
plastering — ನಾ ಉಪ್ಪಾರ (ಉಪ್ಪಾರಕಾರ)
plastic — ಗು ಅಚ್ಚೊತ್ತಬಲ್ಲ
plate — ನಾ 1 ಅಗಲು (ಅಗಲಲ್ಲಿ ಇಕ್ಕಿದ ಉಣಿಸು), ಹರಿಯಣ, ಹರಿವಾಣ, ತಟ್ಟೆ 2 ತಗಡು (ಬೆಳ್ಳಿಯ ತಗಡು), ಹಾಳೆ (ಉಕ್ಕಿನ ಹಾಳೆ)
plate (very thin) — ನಾ ರೇಕು (ಹಬ್ಬದ ತಿಂಡಿಗೆ ಬೆಳ್ಳಿಯ ರೇಕು ಹಚ್ಚಿದ್ದಾರೆ; ಚಿನ್ನದ ರೇಕು)
plateau — ನಾ ಕುರುಂಬು (ಕುರುಂಬಿನ ಮೇಲೆ ಕಟ್ಟಿದ ಮನೆಗಳು)
platform — ನಾ ತವಂಗ, ತವಗ, ಜಗಲಿ (ಜಗಲಿಯಲ್ಲಿ ಕುಳಿತು ಮಾತನಾಡಲು ತೊಡಗಿದರು), ತೆವರು
platitude — ನಾ ಹಳಸಲು ಮಾತು
platonic — ಗು ತೊಂದರೆಲಿುಲ್ಲದ (ತೊಂದರೆ ಲಿುಲ್ಲದ ಗೆಳೆತನ)
platoon — ನಾ ಕಿರು ಕಾಲುಪಡೆ
platter — ನಾ ಊಟದ ತಟ್ಟೆ
plaudit — ನಾ ಹೊಗಳಿಕೆ, ಮೆಚ್ಚುಗೆ, ಚಪ್ಪಾಳೆ, ಕಯ್ತಟ್ಟುವಿಕೆ, ಚಪ್ಪಳಿ (ಚಪ್ಪಳಿಕ್ಕು; ಚಪ್ಪಳಿ ಗುಟ್ಟು),
plausible — ಗು ನಡೆಯಬಲ್ಲ, ಸರಿತೋರುವ
play — ನಾ 1 ಕೊಲ್ಲಣಿಗೆ 2 ಆಟ ಕ್ರಿ 1 ನುಡಿಸು (ವೀಣೆಯನ್ನು ನುಡಿಸು; ವೀಣೆಯಲ್ಲಿ ಹಾಡನ್ನು ನುಡಿಸು), ಬಾರಿಸು (ಕೊಳಲು ಬಾರಿಸು), ಊದು (ಕೊಳ ಲೂದು) 2 ಆಡು (ಆಟ ಆಡು) 3 ಕೆಲಸ ನಡೆಸು
player — ನಾ 1 ಆಟಗಾರ 2 ಬಾರಿಸುಗ
playground — ನಾ ಆಟದ ಬಯಲು
playmate — ನಾ ಒಡನಾಡಿ (ಈತನಿಗೆ ಯಾವಾಗಲೂ ಒಡನಾಡಿಯೊಂದಿಗೆ ಜಗಳ)
plea — ನಾ ಕೋರಿಕೆ, ಅರಿಕೆ
plead — ಕ್ರಿ 1 ಬೇಡು, ಮೊರೆಲಿುಡು, ಕೋರಿಕೆ ಸಲ್ಲಿಸು 2 ಮಾರ್ನುಡಿಯೊಡ್ಡು
pleader — ನಾ ಕಟ್ಟಲೆಯರಿಗ
pleasant — ಗು ಇಂಪೆಸೆವ, ಒಗ್ಗುವ, ನಗಿಸುವ, ಸವಿಯಾದ, ಹಾಲಿು (ಹಾಲಿುದೋರುವ ಹಾಡು; ಹಾಲಿುನುಡಿ)
pleasantly — ಗು ನೊಚ್ಚಗೆ (ನೊಚ್ಚಗೆ ಮಾತ ನಾಡಿಸು)
pleasantry — ನಾ ಇಂಪು (ಇಂಪುಗು; ಇಂಪು ವಡೆ; ಇಂಪೆಸೆ)
please — ಕ್ರಿ ಒಲಿ (ಅವಳು ನಿನಗೆ ಒಲಿದಿ ದ್ದಾಳೆ), ಮೆಚ್ಚು, ತಣಿ
pleasure — ನಾ ನಲಿವು (ನೋವು-ನಲಿವು),ಪದಪು (ಮನಕ್ಕೆ ಪದಪನ್ನು ಕೊಡುವ ಹೂಗಳು), ಒಲವು (ಒಲವಲರು; ಒಲ ವೆತ್ತು; ಒಲವೊಂದು), ಒಲುಮೆ, ಬೇಟ (ತನಿವೇಟ; ಪೊಸವೇಟ; ಬೇಟಕಾರ್ತಿ), ಹಿಗ್ಗಣೆ
pleat — ನಾ ನಿರಿಗೆ, ಮಡಿಕೆ (ಸೀರೆಯ ಮಡಿಕೆ)
plebiscite — ನಾ ಮಂದಿಯೊಪ್ಪಿತ
pledge — ನಾ ಅಡವು (ಅಡವಿಡು - ತಾಳಿ ಯನ್ನೂ ಅಡವಿಡಬೇಕಾಲಿುತು), ಈಡು, ಕುದುವು, ಒತ್ತೆ (ಒತ್ತೆಲಿುಡು)
pledge — ಕ್ರಿ ಮಾತುಕೊಡು, ಒತ್ತೆಲಿುಡು
plenary — ಗು ನೆರೆದ, ತುಂಬಿದ, ಎಲ್ಲ ಸೇರಿದ
plenty — ಗು ಹೇರಳ (ಅವನ ಹತ್ತಿರ ಹೇರಳ ಹಣವಿದೆ), ತುಂಬಾ, ಬೇಕಾದಷ್ಟು
plethora — ನಾ ಹೆಗ್ಗಳವಾದುದು, ಉರೆ ಹೆಚ್ಚುಗೆಯಾದುದು
pliable — ಗು ಬಾಗುವ, ಮಣಿಯುವ, ಹೊಂದಿ ಕೊಳ್ಳುವ, ತಿದ್ದಬಲ್ಲ
pliers — ನಾ ಚಿಮುಟ, ಚಿಮಟಿ, ಇಕ್ಕುಳ (ಇಕ್ಕುಳದಲ್ಲಿ ಆಣಿಯನ್ನು ಎಳೆದು ತೆಗೆದ)
plight — ನಾ ಪಾಡು (ಆತನ ಪಾಡು ನಾಲಿು ಪಾಡು)
plight — ಕ್ರಿ ಮಾತುಕೊಡು (ಮದುವೆಯಾಗು ತ್ತೇನೆಂದು ಮಾತುಕೊಟ್ಟ), ಆಣೆಲಿುಡು
plinth — ನಾ ಅಡಿಗಲ್ಲು (ಕುಂದದ ಅಡಿಗಲ್ಲು) ಕ್ರಿ ಮೆಲ್ಲ ನಡೆ, ಮೆಲ್ಲ ಮಾಡು
plot — ನಾ 1 ನೆಲೆ (ಮನೆಕಟ್ಟಲು ನೆಲೆ), ಅಡಿ (ಮನೆಯ ಅಡಿ) 2 ಕೆಟ್ಟ ಹಮ್ಮುಗೆ 3 ಕತೆಯ ನೆಗಳ್ತೆ
plough — ನಾ ನೇಗಿಲು (ನೇಗಿಲಿನಿಂದ ಉಳು, ಹೊಲವನ್ನು ನೇಗಿಲು ಹೊಡೆದು ಹಸನು ಮಾಡಿದ)
plough — ಕ್ರಿಹೂಡು (ಗದ್ದೆ ಹೂಡು, ಹೂಡುವ ಎತ್ತು), ಉಳು (ಉತ್ತ ಹೊಲ; ಉಳುಮೆ)
ploughshare — ನಾ ಕುಳು,ಕಾರು
plough-tail — ನಾ ಮೇಟಿ
ploy — ನಾ ಹಂಚಿಕೆ, ಹೂಟ
pluck — ನಾ ಕೆಚ್ಚು, ಎದೆಗಾರಿಕೆ
pluck — ಕ್ರಿ 1 ಕೀಳು (ಕಿತ್ತ ಗಿಡ; ಕಿತ್ತುಹಾಕು), ತಿರಿ (ಹೂಗಳನ್ನು ತಿರಿದು ತಂದಿದ್ದಾರೆ), ಪೀತು, ಸಸಿ (ಸಸಿದ ಗಿಡ), ಕೊಯ್ಯು (ಗಿಡದಿಂದ ಹೂ ಕೊಯ್ಯುತ್ತಿದ್ದಾಳೆ) 2 ಮಿಡಿ (ಕಂಬಿ ಮಿಡಿ)
plucky — ಗು ಕೆಚ್ಚೆದೆಯ
plug — ನಾ ಬೆಣೆ (ಬೆಣೆಕೀಲು; ಬೆಣೆಗಳಿಂದ ಬಿಗಿಯುವುದು), ಗೂಟ (ಗೋಡೆಯಲ್ಲಿ ನೇತುಹಾಕಲು ನಾಲ್ಕು ಗೂಟಗಳಿವೆ)
plumage — ನಾ ತುಪ್ಪುಳ (ಹಕ್ಕಿಯ ತುಪ್ಪುಳ)
plumb — ನಾ ತೂಗುಗುಂಡು
plumber — ನಾ ಕೊಳಾಲಿುಗಾರ
plumbing — ನಾ ನೀರುನೀಡಿಕೆ, ನೀರೊದಗಿಕೆ, ಕೊಳಾಲಿು ಕೆಲಸ
plumb-line — ನಾ ನೂಲುಗುಂಡು
plume — ನಾ ಗರಿ (ನವಿಲ ಗರಿ; ಗರಿಗಟ್ಟು)
plump — ಗು ದುಂಡಗೆ (ಹುಡುಗಿ ದುಂಡ ಗಿದ್ದಾಳೆ), ತೋರ (ತೋರದೊಡೆ)
plumule — ನಾ ಎಳೆಗರಿ
plunder — ನಾ ಆರಡಿ (ಆರಡಿಗ), ಕೊಳ್ಳೆ (ಕೊಳ್ಳೆಹೊಡೆ; ಕೊಳ್ಳೆಗ; ಕೊಳ್ಳೆಗಾರ), ಕೋಳು (ಕೋಳುಗೊಳ್ಳು; ಕೋಳು ಹೋಗು; ಕೋಳಾಟ; ಕೋಳ್ಗೊಲೆ), ಸುಲಿಗೆ (ಕೊಲೆಸುಲಿಗೆಗಳಿಲ್ಲದ ಊರು), ಸುಲಿಹ, ಸೂರೆ (ಸೂರೆಮಾಡು, ಸೂರೆಯಾಗು), ಕವತೆ, ಕಾಟಕತನ ಕ್ರಿ ಕವರು (ಎಲ್ಲವನ್ನೂ ಕವರಿ ಹೋಗಿದ್ದಾರೆ), ದೋಚು (ಆತ ಸಾಕಷ್ಟು ಹಣ ದೋಚಿದ್ದಾನೆ), ಸುಲಿ (ಹಣ ಸುಲಿ; ಇದ್ದುದನ್ನೆಲ್ಲ ಕಳ್ಳರು ಸುಲಿದರು), ಸುಗಿ (ಸುಗಿವಡೆ; ಸುಗಿಯಾಗು)
plunge — ಕ್ರಿ ನೂಕು, ತಳ್ಳು (ಚುಚ್ಚು ಕೊಳವೆ ಯನ್ನು ಒಳಕ್ಕೆ ತಳ್ಳಿದ), ಮುಳುಗು (ಇಡೀ ಕೋಣೆ ಕತ್ತಲೆಯಲ್ಲಿ ಮುಳುಗಿತು)
plural — ನಾ ಹಲವೆಣಿಕೆ
plurality — ನಾ ಹಲತನ, ಒಂದಲ್ಲದಿಕೆ
plus — ಗು ಹೆಚ್ಚಿನ, ಕೂಡಿಕೆಯ
plutocrat — ನಾ ಹಣವಂತ, ಹಣದ ಕಯ್ವಾಡ ವಿರುವವನು
pluvial — ಗು ಮಳೆಯ, ಹೆಚ್ಚು ಮಳೆಯ
ply — ನಾ ಮಡಿಕೆ (ಮಡಿಕೆಹಲಿಗೆ)
ply — ಕ್ರಿ 1 ಬಗ್ಗಿಸು, ತಿರುಚು 2 ಕೆಲಸ ನಡೆಸು, ಸಾರಿಗೆ ನಡೆಸು, ಎಡೆ ಬಿಡದೆ ಒದಗಿಸು
plywood — ನಾ ಅಂಟುಹಲಿಗೆ
pneumatic — ಗು ಗಾಳಿಯ, ಗಾಳಿ ನಡೆಸುವ
pneumonia — ನಾ ಉಸಿರುಕದ ಉರಿಯೂತ
poach — ಕ್ರಿ 1 ಬೇಲಿುಸು 2 ಒಳಹೊಗು, ಕದ್ದುಕೊಳ್ಳು
poaching — ನಾ ಕಳ್ಳಬೇಟೆ
pocket — ನಾ 1 ಕಿರುಚೀಲ, ಕಿಸೆ 2 ಕಿತ್ತೆಡೆ
pocket-money — ನಾ ಕಯ್ಹಣ, ಕಿಸೆಹಣ
pockmark — ನಾ ಕಲೆ (ಆತನ ಮೋರೆ ತುಂಬ ಕಲೆಲಿುದೆ)
pod — ನಾ ಕೋಡು (ಅವರೆ ಕೋಡು)
podium — ನಾ ಜಗಲಿ, ತವಗ (ಜಗಳಾಡು ತ್ತಿರುವವರಿಬ್ಬರೂ ತವಗದಲ್ಲಿ ಒಟ್ಟಿಗೆ ಕುಳಿತಿದ್ದಾರೆ)
poem — ನಾ ಕಟ್ಟೊರೆ
poet — ನಾ ಹಾಡುಗ, ಹಾಡುಕಟ್ಟುಗ
poetics — ನಾ ಕಟ್ಟೊರೆಯರಿಮೆ
poetry — ನಾ 1 ಹಾಡು, ಕಟ್ಟೊರೆ 2 ಕಟ್ಟೊರೆಯರಿಮೆ
poignant — ಗು ನೋಲಿುಸುವ, ಕನಗುವ, ಗಾಟು ನಾ 1 ಮೊನೆ (ಮೊನೆ ಮಾಡು; ಮೊನೆ ನೋಟ; ಮೊನೆಹಾರೆ), ಕುಡಿ (ಬಿದಿರ ಕುಡಿ; ಕುಡಿದಾಡೆ; ಕುಡಿವೆಳಗು), ಕೊನೆ (ಕೊನೆ ನಾಲಿಗೆ; ಮೊಲೆಯ ಕೊನೆ; ಕೊನೆಮುಳ್ಳು) 2 ಚುಕ್ಕೆ 3 ಗುರಿ, ಸೂಟಿ
point out — ಕ್ರಿ 1 ತೋರಿಸು, ಸುಟ್ಟು (ಸುಟ್ಟಿ ತೋರಿಸು; ಸುಟ್ಟಿಸು) 2 ಗುರಿಲಿುಡು
point-blank — ಗು ನೇರವಾಗಿ (ಏನಾದರೂ ಹೇಳುವುದಿದ್ದರೆ ಆತ ನೇರವಾಗಿ ಹೇಳಿಬಿಡು ತ್ತಾನೆ), ನೆಟ್ಟಗೆ, ಎದುರೆದುರಿನ
pointed — ಗು ಚೀಪು (ಚೀಪುಗಲ್ಲು), ಕೋರೆ (ಕೋರೆದಾಡೆ), ಚೂಪು (ಬೆಕ್ಕಿಗೆ ಚೂಪಾದ ಉಗುರುಗಳಿವೆ), ಮೊನಚು (ಮೊನಚಾದ ಮೂಗು), ಕೂರು (ಕೂರುಗಲ್ಲು)
pointless — ಗು ತಿರುಳಿಲ್ಲದ (ತಿರುಳಿಲ್ಲದ ಹೇಳಿಕೆ ನೀಡುತ್ತಾ ನಮ್ಮ ಹೊತ್ತು ಕಳೆಯ ಬೇಡಿ)
poise — ನಾ ನಿಲುವು (ಸರಿತೂಕದ ನಿಲುವು; ಅಲುಗದ ನಿಲುವು), ಸರಿತೂಕ, ಅಗ್ಗಳೆ
poison — ನಾ ನಂಜು (ನಂಜಾಗು; ನಂಜು ಮುಳ್ಳು; ಆಕೆಯ ಮಾತುಗಳು ನಂಜುಕಾರು ತ್ತಿದ್ದುವು)
poison — ಕ್ರಿ ನಂಜಿಕ್ಕು
poke — ಕ್ರಿ ತಿವಿ, ಚುಚ್ಚು (ಹಣ್ಣನ್ನು ಕೋಲಿನಿಂದ ಚುಚ್ಚಿ ನೋಡಿದ), ತೂರು (ಕೋಲು ತೂರು; ಮೂಗು ತೂರಿಸು), ಚಾಚು
poker — ನಾ ಕೆದಕುಕಂಬಿ
poky — ಗು 1 ಇಕ್ಕಟ್ಟಾದ, ಚಿಕ್ಕ 2 ಕೊಳಕು
polar — ಗು ಕೊನೆಯ (ತೆಂಕಕೊನೆಯ, ಬಡಗು ಕೊನೆಯ)
pole — ನಾ 1 ಜಲ್ಲ (ಜಲ್ಲಯನ್ನು ಹಿಡಿದು ದೋಣಿ ಓಡಿಸುತ್ತಿದ್ದಾರೆ; ಕಬ್ಬಿನ ಜಲ್ಲ), ಗಳೆ (ಗಳೆಯ ಸುತ್ತ ಹಾವು ಸುತ್ತಿ ಕೊಂಡಿದೆ), ಗಡೆ (ಗಡೆಕೋಲು) 2 ತುದಿ, ಕೊನೆ (ನೆಲತೆರಳೆಯ ಕೊನೆ; ತೆಂಕುಕೊನೆ, ಬಡಗುಕೊನೆ - ಬಡಗುಕೊನೆಯ ಕರಡಿ ಚಳಿಗಾಲವಿಡೀ ಒರಗುತ್ತದೆ)
pole (hooked) — ನಾ ದೋಟಿ (ದೋಟಿ ಹಾಕಿ ಗೆಲ್ಲನ್ನು ಸೆಳೆದ); ದೋಟಿಕೋಲು
pole-dancer — ನಾ ಕೊಲ್ಲಟಿಗ (ಕೊಲ್ಲಟಿ ಗಿತ್ತಿ)
police — ನಾ ಕಾಪುಗ
policy — ನಾ 1 ಹಮ್ಮುಗೆ, ನೆಗಳ್ತೆ 2 ಮುನ್ಗಾಪು ಒಪ್ಪಂದ
polish — ನಾ ಮೆರುಗು (ಮೆರುಗು ಕೊಡು), ಹೊಳಪು (ಹೊಳಪು ಕುಂದು)
polite — ಗು ನಯಗೊಂಡ, ಹೊಲಬನರಿತ, ಒದಗುವ, ಒಳ್ಳೆನಡತೆಯ
politeness — ನಾ ಎರಕ, ನಯ ಗು ಆಳ್ವಿಕೆಯ
politician — ನಾ 1 ಆಳ್ದ 2 ಹೂಟಗಾರ
politics — ನಾ ಆಳ್ವಿಕೆಯರಿಮೆ (ಆತ ಆಳ್ವಿಕೆ ಯರಿಮೆ ಕಲಿಯುತ್ತಿದ್ದಾನೆ)
poll — ನಾ 1 ತಲೆ 2 ತಲೆಯೆಣಿಕೆ, ಒಪ್ಪಿತ ದೆಣಿಕೆ
poll — ಕ್ರಿ 1 ಕಡಿ, ತುಂಡುಮಾಡು, ಸವರು 2 ಒಪ್ಪಿತ ತಿಳಿಸು, ಒಪ್ಪಿತ ಪಡೆ
pollen — ನಾ ಬಂಡು (ಹೂವಿನ ಬಂಡು),ದೂಳು,ಹೂಪುಡಿ
pollinate — ಕ್ರಿ ಬಂಡುಮುಟ್ಟಿಸು
pollute — ಕ್ರಿ ಮಾಸಲುಗೊಳಿಸು, ಮಡಿಕೆಡಿಸು
pollution — ನಾ ಪುರುಡು (ಪುರುಡಿನ ಮನೆ), ಕೊಳಕು, ಹೊಲಸು
poltroon — ನಾ ಹೇಡಿ, ಅಂಜುಕುಳಿ
polyandry — ನಾ ಹಲಗಂಡರಿರುವಿಕೆ
polygamy — ನಾ ಹಲಹೆಂಡಿರಿರುವಿಕೆ
polyglot — ನಾ ಹಲನುಡಿಗ (ಹತ್ತು ನುಡಿ ಗಳನ್ನು ಬಲ್ಲ ಹಲನುಡಿಗ)
polygon — ನಾ ಹಲಮೂಲೆ
polytechnic — ನಾ ಹಲವರಿಮೆಯ ಕಲಿಮನೆ
pommel — ನಾ ಹಿಡಿಗುಂಡು, ಹಿಡಿಗುಬ್ಬಿ
pomp — ನಾ ದೊಡ್ಡಮೆರೆತ, ತೋರಿಕೆಯ ಮೆರೆತ
pond — ನಾ ಕುಳುಂಪೆ (ಆನೆ ಮೆಟ್ಟಿದ ಕುಳುಂಪೆ ಯಲ್ಲಿ ನೀರು ನಿಂತಿದೆ), ಕೊಳ (ಕೊಳದಲ್ಲಿ ಅರಳಿದ ತಾವರೆ; ತಿಳಿಗೊಳ; ಪೂಗೊಳ; ತಣ್ಗೊಳ), ಗುಯ್ಯಲು, ಮಡು (ಮಡುವಿ ನಲ್ಲಿ ಈಜಾಡು; ಮಡುಗಟ್ಟು), ಕಟ್ಟೆ
ponder — ಕ್ರಿ ಆಳವಾಗಿ ಓರು, ಕೇಣ ನಡೆಸು
ponderous — ಗು ತೂಕದ, ಹೆಣಗಾಡುವ, ತಿಣುಕುವ
poniard — ನಾ ಕುತ್ತುಬಾಳು (ಆತನನ್ನು ಕುತ್ತು ಬಾಳಿನಲ್ಲಿ ಇರಿದು ಕೊಂದರು)
pontoon — ನಾ ಚಟ್ಟೆ ಓಡ, ಚಪ್ಪಟೆ ಓಡ
pony — ನಾ ಕಿರುಕುದುರೆ
poodle — ನಾ ಕೂದಲುನಾಲಿು
pool — ನಾ ಕುಂಟೆ (ಕುಂಟೆಯ ನೀರು ಬತ್ತಿ ಹೋಗಿದೆ), ಹೊಂಡ, ಕೊಳ (ಈಜುಕೊಳ)
pool — ಕ್ರಿ ಒಟ್ಟುಸೇರಿಸು, ಒಟ್ಟು, ಒಟ್ಟು ಗೂಡಿಸು, ಸೇರಿಸು ಗು ಬಡ (ಬಡನಂಟ; ಬಡಬಗ್ಗರು; ಬಡವಾಗು), ಮೊಲ್ಲಗ
poor person — ನಾ ಬಡವ (ಬಡತನ; ಬಡವಿ; ಬಡವೆ), ಪಂಜೆ (ಆತನನ್ನು ಪಂಜೆಯೆಂದು ಯಾರು ಹೇಳಿದರು?), ಇಳಿಯ, ಕಂಗಾಲ
pop — ಕ್ರಿ ಸಿಡಿ, ಅರಳು ಮಾಡು, ಅರಳು ಹುರಿ
popgun — ನಾ ಪೆಟ್ಟಲು (ಮಕ್ಕಳು ಪೆಟ್ಟಲು ಹಿಡಿದು ಆಡುತ್ತಿದ್ದಾರೆ)
popped corn — ನಾ ಅರಳು (ಮರಳಲ್ಲಿ ಹುರಿದ ಅರಳು)
populace — ನಾ ಮಂದಿ
popular — ಗು 1 ಮಂದಿ ಮೆಚ್ಚುವ, ಮಂದಿ ಮೆಚ್ಚಿಸುವ, ಕಡಿಮೆ ಬೆಲೆಯ
popularity — ನಾ ಮಂದಿಮೆಚ್ಚಿಕೆ
popularize — ಕ್ರಿ ಮಂದಿಮೆಚ್ಚಿಸು, ತಿಳಿಯ ಪಡಿಸು
populate — ಕ್ರಿ ನೆಲೆಸು, ನೆಲೆಸಿಸು
population — ನಾ 1 ಮಂದಿಯೆಣಿಕೆ 2 ನಾಡಿಗರು
populous — ಗು ಹಲಮಂದಿಯುಳ್ಳ
porch — ನಾ ಕಯ್ಸಾಲೆ
porcupine — ನಾ ಮುಳ್ಳುಹಂದಿ,ಎಲಿ್ಯು (ಎಯ್ಯಮುಳ್ಳು), ಏದು (ಏದುಮುಳ್ಳು)
pore — ನಾ ಕಿರುತೂತು (ಕಿರುತೂತುಗಳಿಂದ ನೀರು ಜಿನುಗುತ್ತಿದೆ)
pore — ಕ್ರಿ ಆಳವಾಗಿ ಓರು, ಕೇಣ ನಡೆಸು
pork — ನಾ ಹಂದಿಬಾಡು
porous — ಗು ಕಿರುತೂತಿನ, ಕಿರುತೂತಿರುವ
porridge — ನಾ ಗಂಜಿ
porringer — ನಾ ಗಂಜಿತಟ್ಟೆ (ಗಂಜಿತಟ್ಟೆಯಲ್ಲಿ ಬಿಸಿ ಬಿಸಿ ಗಂಜಿ ಹಾಕಿ ಕೊಟ್ಟಳು)
port — ನಾ ರೇವು (ಹಡಗು ರೇವಿಗೆ ಬಂದು ನಿಂತಿದೆ)
portable — ಗು ಒಯ್ಯಬಲ್ಲ, ಒಯ್ಯುವ, ಎತ್ತಿಕೊಳ್ಳಬಲ್ಲ
portal — ನಾ ಹೆಬ್ಬಾಗಿಲು, ಕದ
portend — ಕ್ರಿ ಮುನ್ನೆಚ್ಚರಿಕೆ ಕೊಡು, ಕಣಿ ಹೇಳು, ನುಡಿಯಾಡು
porter — ನಾ ಹೊರೆಕಾರ (ನಿಲುಗಡೆಯಲ್ಲಿ ಒಬ್ಬ ಹೊರೆಕಾರನೂ ಇರಲಿಲ್ಲ)
portfolio — ನಾ ಓಲೆಯೊರೆ ನಾ ಪಾಲು (ನನ್ನ ಪಾಲು ನನಗೆ ಕೊಟ್ಟುಬಿಡಿ),ಕೋರು (ಮೂರು ಕೋರು; ಕೋರು ಮಾಡು), ಹಸುಗೆ
portly — ಗು ಕೊಬ್ಬಿದ, ತೂಕದ, ದಿಂಡು
portmanteau — ನಾ ತೊಗಲ ಪೆಟ್ಟಿಗೆ
portrait — ನಾ 1 ಮೋರೆತಿಟ್ಟ 2 ಕೊಗೆತ
pose — ನಾ ನಿಲುವು
pose — ಕ್ರಿ 1 ನಿಲುವು ಹಿಡಿ 2 ಎತ್ತು (ಕೇಳ್ವಿ ಯೆತ್ತು), ಮುಂದಿರಿಸು 3 ಸೋಗುಹಾಕು
poser — ನಾ 1 ಸೋಗುಗಾರ 2 ಬಿಕ್ಕಟ್ಟು, ಒಗಟು
posh — ನಾ ಸೊಗಸಾದ, ಸೊಮ್ಮಿನ (ಹಾದಿಯ ಇಬ್ಬದಿಗಳಲ್ಲೂ ಸೊಮ್ಮಿನ ಮನೆಗಳಿದ್ದುವು)
position — ನಾ ಎಡೆ, ನಿಲುವು, ಮಟ್ಟ, ಇರುಹ
positive — ಗು 1 ಕಂಡಿತ (ಕಂಡಿತ ಹೇಳಿಕೆ) 2 ನಂಬಿಕೆಯ, ಒಪ್ಪುವ, ಬೆಂಬಲಿಸುವ 3 ನನಸಾದ
posse — ನಾ ಕಾಪುಗರ ತಂಡ (ಕಳ್ಳರನ್ನು ಹಿಡಿ ಯಲು ಕಾಪುಗರ ತಂಡ ಹೊರಟಿದೆ)
possess — ಕ್ರಿ 1 ಉಳ್- (ಉಂಟು; ಹೊನ್ನುಳ್ಳವರು), ಪಡೆ, ಹೊಂದು 2 ಗೀಳುಹಿಡಿ, ಮಯ್ಮೇಲೆ ಬರು
possession — ನಾ ಹಿಡುವಳಿ (ಆ ಮನೆಯ ಹಿಡುವಳಿಲಿುನ್ನೂ ಆತನಿಗೆ ದೊರೆತಿಲ್ಲ), ಒಳವು (ಆ ಮನೆಲಿುನ್ನೂ ಅವನ ಒಳವಿಗೆ ಬಂದಿಲ್ಲ), ಒಡೆ (ಒಡೆತನ; ಒಡೆಯ - ಊರೊಡೆಯ; ಕೊಡೆಯೊಡೆಯ; ಒಡತಿ), ಒಡವೆ (ಕಳವಿನ ಒಡವೆ)
possessive — ಗು 1 ಪಡೆಯ ಬಯಸುವ, ಹೊಂದಬಯಸುವ 2 ಬಿಟ್ಟುಕೊಡದ
possessor — ನಾ ಒಂದಿಗ (ಮಕ್ಕಳೊಂದಿಗ)
possibility — ನಾ ಅಳವಿ
possible — ಕ್ರಿ ಕೂಡು (ಕೂಡುವ ಕೆಲಸ ಮಾಡಲಿ; ತಿಳಿಸಕೂಡದ ನಾಚಿಕೆ), ಆರ್- (ಬರಲಾರ; ಕೊಡಲಾರ), ಆಸು (ಅವನನ್ನು ತಿದ್ದಲಾಸಲ್ಲ), ಎಡೆ (ಮಾಡಲೆಡೆಯ), ಬಲ್ಲ- (ಮಾಡಬಲ್ಲ; ಹೇಳಬಲ್ಲ), -ಬಹುದು (ಹೋಗಬಹುದು; ಬರಬಹುದು), ತೀರು (ತೀರದ ಕೆಲಸ; ನಿಮಗೆ ತೀರುವಷ್ಟು ಮಾಡಿ)
possible — ಗು ಬಲ್ಲ (ಹೇಳಬಲ್ಲ; ಕೊಡ ಬಲ್ಲ), ಆರ್ಪ (ಆರ್ಪವನು)
post — ನಾ 1 ನೆಡಿಗೆ (ಕರುವನ್ನು ಆ ನೆಡಿಗೆಗೆ ಕಟ್ಟಿಹಾಕಿ), ಅರಳೆ (ಅರಳೆಯ ಸುತ್ತ ತಿರುಗುವ ಗಾಣದೆತ್ತು), ಕೂಚು (ಮಾರಿಗೆ ಒಂದು ಕೂಚು), ಮೇಟಿ 2 ಅಂಚೆ (ಅಂಚೆ ಕಟ್ಟೆ, ಅಂಚೆಮನೆ), 3 ಕೆಲಸ (ಇನ್ನೂ ಕೆಲಸ ಸಿಗಲಿಲ್ಲ)
post — ಕ್ರಿ 1 ಅಂಚೆಗೆ ಹಾಕು 2 ಕೆಲಸಕ್ಕೆ ಕಳಿಸು 3 ಸುದ್ದಿತಿಳಿಸು ನಾ ಅಂಚೆವೆಚ್ಚ
postdate — ಕ್ರಿ ಮುನ್ತೇದಿ ಹಾಕು
poster — ನಾ ಗೋಡೆತಿಟ್ಟ, ಗೋಡೆಯೋಲೆ
posterior — ಗು 1 ಹಿಂದಿನ (ಹಿಂದಿನ ಬಂಡಿ), ಹಿಂದುಗಡೆಯ 2 ಆಮೇಲಿನ, ಮುಂದಿನ (ಮುಂದಿನ ಕೆಲಸ)
posterity — ನಾ ಮುಂದಿನ ತಲೆಮಾರು, ಮಕ್ಕಳು-ಮರಿ ಮಕ್ಕಳು
posthaste — ಗು ಕಟ್ಟುರವಣಿಲಿುಂದ, ಕಡು ಚಚ್ಚರದಿಂದ
posthumous — ಗು ಬರ್ದುಗೆಯ ಮೇಲಿನ (ಬರ್ದುಗೆಯ ಮೇಲಿನ ಅಚ್ಚು)
postman — ನಾ ಅಂಚೆಯಾಳು,ಓಲೆಕಾರ
post-meridian — ನಾ ಪಿನ್ಪಗಲು
post-mortem — ನಾ ಹೆಣದೊರೆ
postpone — ಕ್ರಿ ಮುಂದೆಹಾಕು, ಮುಂದೂಡು
postscript — ನಾ ಮೇಲುಬರಹ (ಆತನ ಬರಹದ ಕೊನೆಯಲ್ಲಿರುವ ಮೇಲುಬರಹ ವನ್ನು ನಾನೇ ಬರೆದು ಕೊಟ್ಟೆ), ಕೊನೆ ಬರಹ, ಹಿನ್ನುಡಿ
postulation — ನಾ ತೆಗಹು
postulation — ಕ್ರಿ ತೆಗಹಿಕ್ಕು, ಸರಿಯೆಂದು ತಿಳಿ
posture — ನಾ 1 ನಿಲುವು (ನಿಮ್ಮ ನಿಲುವು ಸರಿಲಿುಲ್ಲದ ಕಾರಣ ನಿಮಗೆ ಬೆನ್ನುನೋವು ಬಂದಿದೆ) 2 ತೋರ್ಕೆ
pot — ನಾ ಚಟ್ಟಿ (ಹೂವಿನ ಚಟ್ಟಿ), ಮಡಿಕೆ (ಮಣ್ಣಿನ ಮಡಿಕೆ), ಕುಡಿಕೆ (ಚಿಕ್ಕ ಕುಡಿಕೆ; ಕುಡಿಕೆಯಲ್ಲಿ ಮಜ್ಜಿಗೆ ಇದೆ)
potable — ಗು ಕುಡಿಯುವ (ಕುಡಿಯುವ ನೀರು)
potation — ನಾ 1 ಕುಡಿತ, ಕುಡಿಯುವಿಕೆ 2 ಕುಡಿಗೆ (ಬಂದವರಿಗೆ ಕುಡಿಗೆ ಕೊಡಿ)
potato — ನಾ ಉರುಳೆಗಡ್ಡೆ (ಉರುಳೆಗಡ್ಡೆಯ ಬೆಲೆ ಮತ್ತಷ್ಟು ಕೆಳಗೆ ಬಂದಿದೆ)
potbelly — ಗು ಬೊಜ್ಜು (ಬೊಜ್ಜುಗ; ಬೊಜ್ಜು ಮಯ್)
potency — ನಾ ಅಳವು, ಕಸುವು
potential — ನಾ ಒಳಕಸುವು, ನೆಗಳ್ಪು
potential — ಗು ಮಾಡಬಲ್ಲ, ಹುದುಗಿದ ಕಸುವುಳ್ಳ, ಒಳಕಸುವಿನ
pother — ನಾ ಹುಲಿುಲು, ಗೊಂದಲ ನಾ ಕುಳಿ, ಗುಂಡಿ (ಹೆದ್ದಾರಿಯ ಗುಂಡಿಗಳಿಗೆಲ್ಲ ಮಣ್ಣು ತುಂಬಿಸುತ್ತಿದ್ದಾರೆ), ಹಳ್ಳ (ಹಳ್ಳ ಮುಚ್ಚಲು ಹಣವಿಲ್ಲವಂತೆ)
potion — ನಾ ಗುಟುಕು, ಕುಡಿಗೆ
potsherd — ನಾ ಬಕರೆ (ಬಕರೆಯಲ್ಲಿ ಕೆಂಡ ಹಾಕಿ ತಂದಳು), ಪರಟೆ (ಪರಟೆಹಿಡಿ; ಪರಟೆ ಕೊಡು), ಓಡು (ಓಡಿನ ಮೇಲೆ ಬೇಲಿುಸಿದ ರೊಟ್ಟಿ), ಬೋಕಿ (ಬೋಕಿ ಯೂಟ), ಹಂಚು (ಹುರಿಯುವ ಹಂಚು), ಹಲಪಿ
potstone — ನಾ ಬಳಪ (ಬಳಪ ಹಿಡಿಯಲು ಬಾರದವರು ನಾಡನ್ನು ಆಳುತ್ತಿದ್ದಾರೆ)
potter — ನಾ ಬಾಂಬ, ಬಾನಿಗ,ಕುವರ, ಕೋವ (ನಮ್ಮೂರ ಕೋವ ಮಾಡಿದ ಚಟ್ಟಿ) potter’s wheel ನಾ ತಿರುಣಿ (ಆತ ತಿರುಣಿ ತಿರುಗಿಸಿ ಬಾಳುವೆ ಮಾಡುತ್ತಿದ್ದಾನೆ)
pottery — ನಾ 1 ಬಾನು 2 ಬಾನಂಗಡಿ
pouch — ನಾ ಬೊಕ್ಕಣ (ಬೊಕ್ಕಣದಲ್ಲಿದ್ದ ಹಣ ಕಾಣೆಯಾಗಿದೆ),ಮಡಿಲು(ಮಡಿಲು ತುಂಬು)
poultice — ನಾ ಬಿಸಿಪಟ್ಟಿ
poultry — ನಾ ಬೆಳೆಹಕ್ಕಿ
pounce — ಕ್ರಿ ಎರಗು, ಮೇಲೆಬೀಳು
pound — ನಾ ದೊಡ್ಡಿ (ಕುದುರೆ ದೊಡ್ಡಿ)
pound — ಕ್ರಿ ಸದೆ (ಸದೆಬಡಿ), ಚಚ್ಚು (ದಡಿ ಲಿುಂದ ಚಚ್ಚು),ತಳಿಸು (ಅಕ್ಕಿ ತಳಿಸಿ ಬಿಳಿಮಾಡು; ತಳಿಸಿದ ಅಕ್ಕಿ), ತೊಳಸು, ಮಿದಿ (ಬತ್ತವನ್ನು ಮಿದಿ; ಮಿದಿಕೂಲಿ), ಅವಲು (ಅವಲಕ್ಕಿ; ಅವಲರಗು; ಅವಲಕ್ಕಿ ಯನ್ನು ಅವಲುತ್ತಿದ್ದಾನೆ), ಇಡಿ (ಒನಕೆ ಹಿಡಿದು ಇಡಿಯುತ್ತಿದ್ದಾರೆ), ಕುಮ್ಮು (ಒನಕೆ ಲಿುಂದ ಕುಮ್ಮು), ಕುಟ್ಟು (ಕುಟ್ಟಿ ಪುಡಿ ಮಾಡು; ಕುಟ್ಟೊರಳು), ಕುಣುಕು (ಕೆಲಸ ದವಳು ಬತ್ತ ಕುಣುಕುತ್ತಿದ್ದಾಳೆ)
pound — ಗು ತೊಳಸಲು (ತೊಳಸಲಕ್ಕಿ)
pour — ಕ್ರಿ ಸುರಿ (ಮಳೆ ಸುರಿಯುತ್ತಿದೆ; ಸುರಿ ಮಳೆ; ಸುರುವು - ತಲೆಯ ಮೇಲೆ ತಣ್ಣೀರು ಸುರುವಿಕೊಂಡ), ಅಟ್ಟು, ಎರೆ (ಗಿಡಕ್ಕೆ ನೀರೆರೆಯುವುದು), ಹೊಯ್ಯು (ಮಳೆ ಹೊಯ್ಯು, ದೋಸೆ ಹೊಯ್ಯು)
pour off — ಕ್ರಿ ಬಸಿ (ಬಸಿದ ಅನ್ನ), ಬಾರು
pour out — ಕ್ರಿ ಚಲ್ಲು (ನೀರು ಚಲ್ಲು), ಚಲುಕು (ಇಲ್ಲಲ್ಲ ನೀರು ಚಲುಕಿದ್ದು ಯಾರು?)
pouring — ನಾ ಸುರಿವು, ಪೋಚಲು (ನೀರಿನ ಪೋಚಲು)
pout — ಕ್ರಿ ತುಟಿ ಚಾಚು (ತುಟಿ ಚಾಚಿ ಅಣಕಿಸು)
poverty — ನಾ ಪಂಜೆತನ, ಬಡತನ,ಎಡರು (ಎಡರಡಸಿದ ಮುದುಕರು ಎಲ್ಲಿದ್ದಾರೆ?), ತವಿರು (ತವಿರಿನಿಂದ ಆತ ಕಂಗೆಟ್ಟಿದ್ದಾನೆ), ಇಲ್ಲದತನ, ಕಂಗಾಲು ನಾ ನೀರು (ಕಲ್ಲನ್ನು ಕುಟ್ಟಿ ನೀರು ಮಾಡಿದ), ಪುಡಿ (ಪುಡಿಪುಡಿಯಾಗು), ಹುಡಿ (ಹುಡಿಯಾಗು, ಹುಡಿಮಾಡು), ಕೊಚ್ಚು (ಗಾಡಿಯ ಹಿಂದುಗಡೆ ಕುಳಿತವನ ಮೇಲೆ ಕೊಚ್ಚು ತುಂಬಿಕೊಂಡಿದೆ)
powder — ಕ್ರಿ ನುಗಿ, ನುಗ್ಗು (ನುಗ್ಗುನುರಿ; ನುಗ್ಗೊತ್ತು), ಇಡಿ
powdery — ನಾ ಉದುರು (ಉದುರು ಕುಟ್ಟು)
power — ನಾ 1 ಅಳವು (ಆತನ ಅಳವಿಗೆ ಬಂದವರು), ಆಕೆ, ಕಸುವು (ಕಸುವುಳ್ಳವನು), ಅದಟು, ಹತೋಟಿ (ಅವನಿಗೆ ಕೆಲಸಗಾರರ ಮೇಲೆ ಹತೋಟಿಲಿುಲ್ಲ), ಕೊಡಿ 2 ಮಿಂಚು (ಮಿಂಚುಳಿತಾಯ; ಮಿಂಚುಬೆಳಕು)
powerful — ಗು ಕಸುವುಳ್ಳ, ಅದಟುಳ್ಳ
powerless — ಗು ಕಸುವಿಲ್ಲದ, ಮಾಡಲಾಗದ
practical — ಗು 1 ಮಾಡಿ ತೋರಿಸಬಲ್ಲ, ಮಾಡಬಲ್ಲ, 2 ಬಳಕೆಯ, ಬಳಕೆಗೆ ಬರುವ, ಬಳಕೆಗಾಗುವ
practice — ನಾ ಬಳಕೆ (ಬಳಕೆಗೆ ತರು)
practise — ಕ್ರಿ 1 ಪಳಕಿಸು (ಕಲಿಯಬೇಕು ಎಂದಿದ್ದರೆ ಬೆಳಿಗ್ಗೆ ಎದ್ದು ಪಳಕಿಸಬೇಕು) 2 ಕೆಲಸ ನಡೆಸು
pragmatic — ಗು ಬಳಸಿ ನೋಡಿದ, ಬಳಕೆಗೆ ಬರುವ
prairie — ನಾ ಹರಹಿನ ಹುಲ್ಲುಗಾವಲು
praise — ನಾ ಹೊಗಳಿಕೆ, ಕಯ್ವಾರ (ಆತನ ಕಯ್ವಾರ ಮುಗಿಯುವುದೇ ಇಲ್ಲ), ಪೊಗಳ್ತೆ, ಆಣತಿ, ಜಾಗುರೆ, ಸುಂಪುರೆ
praise — ಕ್ರಿ ಹೊಗಳು (ನಮ್ಮನ್ನು ಸುಮ್ಮನೆ ಹೊಗಳಬೇಡಿ; ಹೊಗಳಿಕೆ), ಕೊಂಡಾಡು (ನಿನ್ನನ್ನು ಎಲ್ಲರೂ ಕೊಂಡಾಡುತ್ತಾರೆ), ಜೀಂಕರಿಸು (ನೀವು ಆತನನ್ನು ಜೀಂಕರಿಸು ವುದು ಹೆಚ್ಚಾಲಿುತು), ಕೊಂಡುಕೊನೆ
praiseworthy — ಗು ಹೊಗಳತಕ್ಕ, ಮೆಚ್ಚತಕ್ಕ
prance — ಕ್ರಿ ನೆಗೆದು ನಡೆ, ಬೀಗಿ ನಡೆ
prank — ನಾ ತುಂಟಾಟ, ಹುಚ್ಚಾಟ
prank — ಕ್ರಿ ಅಂದಗೊಳಿಸು
prate — ಕ್ರಿ ಸೊರಗು (ಇವತ್ತಿಗೆ ನೀವು ಸೊರ ಗಿದ್ದು ಸಾಕು; ಸೊರಗುಗಾರ), ಹರಟು (ಗಂಡನೊಡನೆ ಹರಟುವುದರಲ್ಲಿ ಆಕೆ ಬೇರೆಲ್ಲವನ್ನೂ ಮರೆತಿದ್ದಳು), ಕೊಚ್ಚು (ಆತ ಯಾವಾಗಿನಿಂದ ಕೊಚ್ಚುತ್ತಿದ್ದಾನೆ)
prattle — ಕ್ರಿ ಹರಟು, ಉಲಿಹೊರಡಿಸು, ಸೊರಹು, ಪದರಾಡು ಕ್ರಿ ಬೇಡಿಕೊಳ್ಳು, ಮೊರೆಲಿುಡು, ಕೋರಿ ಕೊಳ್ಳು
prayer — ನಾ ಮೊರೆ, ಬೇಡಿಕೆ, ಮೊರೆಹಾಡು
preach — ಕ್ರಿ ಸರಿ-ತಪ್ಪು ತಿಳಿಸು, ಪೆರ್ಮಾತು ಹೇಳು
preacher — ನಾ ತಿಳಿಪುಗ (ಈ ತಿಳಿಪುಗನ ಪೇರೊರೆ ಮುಗಿಯುವುದೇ ಇಲ್ಲ)
preamble — ನಾ ಮುನ್ಮಾತು, ಮುನ್ನೋಟ
prearrange — ಕ್ರಿ ಮುನ್ನೇರ್ಪಡಿಸು
precarious — ಗು ಕಂಡಿತವಲ್ಲದ, ಕುತ್ತದ
precaution — ನಾ ಮುನ್ನೆಚ್ಚರಿಕೆ (ಮುನ್ನೆಚ್ಚರಿಕೆ ಯಾಗಿ ಎಲ್ಲರಿಗೂ ಚುಚ್ಚುಮದ್ದು ಕೊಡಿಸ ಲಾಲಿುತು)
precede — ಕ್ರಿ ನೋಳು (ಅವನು ಎಲ್ಲದರಲ್ಲೂ ನೋಳುವಂತಹ ಹುಡುಗ), ಮುಂಚು (ಅವನು ಊಟಕ್ಕೆ ನನ್ನಿಂದ ಮುಂಚಿದನು)
precedent — ನಾ ಹಿಂದಿನ ತೀರ್ಮಾನ, ಹಿನ್ನೆತ್ತುಗೆ
preceding — ಗು ಮುಂಚಿನ (ಮುಂಚಿನ ಹೇಳಿಕೆ)
precept — ನಾ ಕಟ್ಟಲೆ, ಅರಿವೊರೆ, ಅರಿವೆನ್ನಿಕೆ, ತಿಳಿಹೇಳುವಿಕೆ
preceptor — ನಾ ತಿಳಿವಿಗ, ಕಲಿಸುಗ
precinct — ನಾ 1 ಎಲ್ಲ 2 ಕಾಪುಕಂಪಣ 3 ಕೊಂಚೆ, ಅಡಕ
precious — ಗು 1 ಬೆಲೆಬಾಳುವ (ಬೆಲೆ ಬಾಳುವ ಉಡುಗೆತೊಡುಗೆಗಳು) 2 ನಲ್ಮಯ, ಅಕ್ಕರೆಯ (ಅವನ ಅಕ್ಕರೆಯ ಮಗಳು)
precipice — ನಾ ಕಮ್ಮರಿ (ಕಮ್ಮರಿಯನ್ನು ಏರಿ ಕೆಳಗೆ ನೋಡಿದ), ಇಳುಕಲು (ಬೆಟ್ಟದ ಇಳುಕಲು)
precipitate — ಕ್ರಿ 1 ತಳ್ಳಿಬಿಡು, ನೂಕಿಬಿಡು, ಒಗೆದುಬಿಡು 2 ಕೆಳಸೇರು 3 ಗಡಿಬಿಡಿ ಮಾಡು
precis — ನಾ ತಿರುಳು, ಅಡಕಪರಿಜು
precise — ಗು ಸರಿಯಾದ, ತಪ್ಪಿಲ್ಲದ, ಕಟ್ಟು ನಿಟ್ಟಾದ
precision — ನಾ ಕಟ್ಟುನಿಟ್ಟು
preclude — ಕ್ರಿ ತಡೆಹಾಕು, ನಡೆಯದಂತೆ ಮಾಡು
precognition — ನಾ ಮುನ್ನರಿವು
preconsceive — ಕ್ರಿ ಮುನ್ನೆನೆಸು
precursor — ನಾ 1 ಮುನ್ನೋಡುಗ, ಅಟ್ಟಟ್ಟಿ 2 ಹಿಂದಿದ್ದವನು ನಾ 1 ಉಸಿರಿಯೆರೆಗ 2 ಕೊಳ್ಳೆ ಗಾರ, ಆರಡಿಗ
predecessor — ನಾ ಹಿಂದಿದ್ದವನು, ಹಿರೀಕ
predestination — ನಾ ಹಣೆಬರಹ
predetermine — ಕ್ರಿ ಮೊದಲೆೀ ತೀರ್ಮಾನಿಸಿರು (ಮುಂದಾಳು ಯಾರೆಂಬುದನ್ನು ಮೊದಲೆೀ ತೀರ್ಮಾನಿಸಲಾಗಿತ್ತು)
predicament — ನಾ ಬಿಕ್ಕಟ್ಟು (ಈ ಬಿಕ್ಕಟ್ಟಿ ನಿಂದ ತಪ್ಪಿಸಿಕೊಳ್ಳಲು ಏನಾದರೂ ಮಾಡ ಬೇಕಾಗಿದೆ), ಇಕ್ಕಟ್ಟು (ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿದ್ದಾನೆ)
predicate — ಕ್ರಿ ಸಾರಿಹೇಳು (ಹಲವು ಬಾರಿ ಸಾರಿಹೇಳಿದರೂ ಕೇಳಲಿಲ್ಲ)
predict — ಕ್ರಿ ಮುನ್ನುಡಿ, ಮುಂದಾಗಿ ಹೇಳು, ನುಡಿಯಾಡು
prediction — ನಾ ಬರುವುದರುಲಿಪು, ಆಗು ವುದರುಲಿಪು
predilection — ನಾ ಒಲವು, ಬದಿಹಿಡಿತ
predispose — ಕ್ರಿ ಒಳಪಡುವಂತೆ ಮಾಡು, ಈಡಾಗುವಂತೆ ಮಾಡು
predominance — ನಾ ಮೇಲುಗಯ್ (ಎಲ್ಲ ಕಡೆಯೂ ಅವನದೇ ಮೇಲುಗಯ್ಯಾಗಿದೆ)
predominant — ಗು 1 ಮೇಲುಗಯ್ಯ, ಹತೋಟಿಲಿುರುವ 2 ಬಳಕೆಯಲ್ಲಿರುವ, ಹೆಚ್ಚುಬಾರಿಯ
pre-eminent — ಗು ಎಲ್ಲಕ್ಕಿಂತ ಮೇಲಿನ, ಎಲ್ಲ ಮೀರಿಸಿದ
pre-empt — ಕ್ರಿ ಮೊದಲೆೀ ಪಡೆ, ಮೊದಲೆೀ ಹಿಡಿ
preemptive — ಗು ಮುನ್ನೆಚ್ಚರಿಕೆಯ
preen — ಕ್ರಿ ಅಂದಗೊಳಿಸು
pre-exist — ಕ್ರಿ ಮೊದಲೆೀ ಇರು
prefabricated — ಗು ಮೊದಲೆೀ ಮಾಡಿರಿಸಿದ (ಮೊದಲೆೀ ಮಾಡಿರಿಸಿದ ಮನೆಗಳು)
preface — ನಾ ಮುನ್ನುಡಿ (ಮುನ್ನುಡಿ ಬರೆಸು), ಮೊದಲ ಮಾತು
prefer — ಕ್ರಿ ಆರಿಸು, ಆಯು, ಒಲವು ತೋರು, ಬೆಂಬಲಿಸು
preferable — ಗು ಬಯಸತಕ್ಕ, ಹೆಚ್ಚು ಒಲವಿನ
preference — ನಾ ಒಲವು
prefix — ನಾ ಮುನ್ನೊಟ್ಟು
pregnancy — ನಾ ಬಸಿರು (ಬಸಿರ ಹೆಂಡತಿ; ಬಸಿರಿನ ಬಯಕೆ; ಬಸಿರು ನಿಲ್ಲು), ಚೂಲು, ಕುಳುಮೆ (ಕುಳುಮೆಕಾರ್ತಿ) (first) ನಾ ಚೊಚ್ಚಲು (ಚೊಚ್ಚಲು ಹೆರಿಗೆಗೆ ಆಕೆ ತವರು ಮನೆಗೆ ಬಂದಿದ್ದಾಳೆ)
pregnancy (of animals) — ನಾ ಸೂಲು (ಸೂಲಾಕಳು), ತನೆ (ತನೆಯಾಗು; ತನೆ ತುಂಬು; ತನೆಯಾಕಳು)
pregnant — ನಾ ಬಸುರಿ, ಬಿಮ್ಮನಿಸಿ
prehensile — ಗು ಹಿಡಿಯಬಲ್ಲ, ಹಿಡಿಯತಕ್ಕ
prehistoric — ಗು ಹಿನ್ನಡವಳಿಗೆ ಹಿಂದಿನ
prejudge — ಕ್ರಿ ಮುಂತೀರ್ಪು ಮಾಡು, ಮುಂ ತೀರ್ಪಿಗೆ ಬರು
prejudice — ನಾ 1 ತಪ್ಪೆಣಿಕೆ, ಮುನ್ನೊಲವು 2 ಕೇಡು
preliminary — ಗು ಮೊದಲನೆಯ, ತೊಡಗಿ ಕೆಯ
prelude — ನಾ ನಾ ಮುನ್ನುಡಿ, ತೊಡಗಿಕೆ
premarital — ಗು ಮದುವೆಗೆ ಮುಂಚಿನ
premature — ಗು ಮೊದಲೆೀ ಹುಟ್ಟಿದ, ಬೆಳ ವಣಿಗೆಯಾಗದ (ಬೆಳವಣಿಗೆಯಾಗದ ಮಗುವನ್ನು ಎಚ್ಚರಿಕೆಲಿುಂದ ಗಮನಿಸಿ)
premeditate — ಕ್ರಿ ಮುನ್ನೆಣಿಸು, ಮುನ್ನೋರು
premier — ನಾ ಮೊದಲಿಗ, ಮುಂಚ
premiere — ನಾ ಮೊದಲ ನೋಟ, ಮೊದಲ ಕಾಣ್ಕೆ
premise — ನಾ 1 ಅಡಿಹೇಳಿಕೆ, ಮುನ್ನಾಡಿಕೆ 2 ಮನೆನೆಲೆ, ಅಡಿ
premium — ನಾ 1 ಹೆಚ್ಚಿನ ಬೆಲೆ, ಹೆಚ್ಚಿನ ಕೊಡುಗೆ 2 ಮುನ್ಗಾಪಿನ ಕಂತು
premonition — ನಾ ಮುನ್ನಳುಕು (ಅವನಿಗೆ ಏನೋ ಕೆಟ್ಟದು ನಡೆಯಲಿದೆಯೆಂಬ ಮುನ್ನಳುಕು ಉಂಟಾಗಿತ್ತು), ಮುನ್ನೆಚ್ಚರಿಕೆ
prenatal — ಗು ಹೆರಿಗೆಯ ಮೊದಲಿನ
preoccupy — ಕ್ರಿ 1 ಹಿಡಿದಿಡು, ಮುನ್ಪಡೆ 2 ಮುಳುಗಿರು (ಆತ ಬೇರಾವುದರಲ್ಲೂೀ ಮುಳುಗಿದ್ದಾನೆ)
preparation — ನಾ ಅನು (ಅನುವು - ಹೊರಹೊರಡಲು ಅನುವು ನಡೆಸುತ್ತಿದ್ದಾನೆ; ಅನುಗೊಳಿಸು, ಅನುಮಾಡು),ಒಡ್ಡವಣೆ, ಸವರಣೆ
prepare — ಕ್ರಿ ಪಣ್ಣು (ಪಣ್ಣಿಡು), ಹೂಡು (ಒಲೆ ಹೂಡು), ಸಮೆ (ಹೂಮಾಲೆ ಸಮೆಯುತ್ತಿದ್ದಾಳೆ), ಅಣಿಮಾಡು (ಅವ ನನ್ನು ಹೋರಾಟಕ್ಕೆ ಅಣಿಮಾಡಿದರು)
prepay — ಕ್ರಿ ಮುನ್ತೆರು ಕ್ರಿ ಮುನ್ನೋರು, ಮೊದಲೆೀ ಹಮ್ಮಿ ಕೊಳ್ಳು
preponderant — ಗು ಹತೋಟಿಲಿುರುವ, ಮೇಲುಗಯ್ಯ, ಹೆಚ್ಚು ಅಳವಿನ
preposition — ನಾ ಮುನ್ಪದ
prepossessing — ಗು ಮೆಚ್ಚಿಸುವ, ಮನ ಮುಟ್ಟುವ
preposterous — ಗು ನಗೆಗೀಡಾದ, ಪರಿಜು ಕೆಟ್ಟ
prerequisite — ನಾ ಮುನ್ಬೇಡಿಕೆ (ಮುನ್ಬೇಡಿಕೆ ಯೇನಾದರೂ ಇದೆಯೇ?), ಮುನ್ಕೋರಿಕೆ
prerogative — ನಾ ಹಕ್ಕು (ಅವನಿಗೆ ಬೇಕಾ ದಾಗ ಈ ಕೋಣೆಯಲ್ಲಿ ಉಳಕೊಳ್ಳುವ ಹಕ್ಕಿದೆ)
presage — ಕ್ರಿ ಮುನ್ನೊರೆ, ಮುನ್ನುಡಿ, ಎಚ್ಚ ರಿಸು, ಮುನ್ನಳುಕಿರು
prescience — ನಾ ಮುನ್ನರಿವು (ಅವರು ಇವತ್ತೇ ಬರುತ್ತಾರೆಂಬುದರ ಮುನ್ನರಿವು ನಮಗಿತ್ತು)
prescribe — ಕ್ರಿ 1 ಮದ್ದುಹೇಳು, ಮದ್ದುಬರೆ 2 ಸೆಲವಿಕ್ಕು, ಬೆಸಸು
prescription — ನಾ 1 ಸೆಲವು 2 ಬರೆದ ಮದ್ದು
presence — ನಾ ಇರವು (ಈ ಕೆಲಸ ಅವನ ಇರವಿನಲ್ಲೀ ನಡೆಯಬೇಕು), ತೋರ್ಕೆ, ಕಾಣ್ಕೆ
present — ನಾ 1 ಮುಲಿ್ಯು (ಮುಲಿ್ಯು ಕೊಡು; ಮುಲಿ್ಯುಹಾಕು), ಉಡುಗೊರೆ (ಮದುವೆಯ ಉಡುಗೊರೆ); ಉಡುವಲಿ, ಕೆರೆ (ಉಡು ಗೆರೆ), ಬಳುವಳಿ, ಕಾಣಿಕೆ, ಮೆಚ್ಚವಣಿಗೆ, ತೆಲ್ಲಟಿ 2 ಈಪೊತ್ತು
present — ಕ್ರಿ 1 ಒಡ್ಡು (ಕೆಲಸಕ್ಕೆ ಮಯ್ಯೊಡ್ಡು), ಕೊಡು 2 ಗುರುತು ಹೇಳು
presentable — ಗು ತೋರಿಸತಕ್ಕ, ನೋಡತಕ್ಕ
presentation — ನಾ ಒಪ್ಪಿಸುಗೆ, ಕಾಣ್ಕೆ, ಉಡುಗೊರೆ, ಮಂಡನೆ
presentiment — ನಾ ಮುನ್ನರಿವು, ಮುನ್ನ ಳುಕು
preservation — ನಾ ಕಾಪಾಡಿಕೆ, ಕೆಡದಂತೆ ಇರಿಸುವಿಕೆ
preservative — ನಾ ಕಾಪುಗೆ (ಮಾವಿನ ಮಿಡಿಗೆ ಕಾಪುಗೆಯಾಗಿ ಉಪ್ಪುನೀರನ್ನು ಬಳಸುತ್ತೇವೆ)
preserve — ಕ್ರಿ ಕಾಪಾಡು, ಕೆಡದಂತೆ ಇರಿಸು
preside — ಕ್ರಿ ತಲೆಯಾಳಾಗು
president — ನಾ ತಲೆಯಾಳು, ಮೇಲಾಳು, ಹತೋಟಿಗ
press — ನಾ 1 ಒತ್ತುಗ (ಕಬ್ಬನ್ನು ಒತ್ತುಗಕ್ಕೆ ಕೊಟ್ಟು ಹಿಂಡುತ್ತಿದ್ದಾರೆ) 2 ಗುಂಪು 3 ಅಚ್ಚುಕೂಟ
press — ಕ್ರಿ 1 ಅದುಮು (ಅದುಮಿ ಹಿಡಿ), ಅಮುಕು, ಅದಕು, ಕದುಬು (ಕದುಬಿ ಹಿಡಿ ದರೂ ಅದು ತಪ್ಪಿಸಿಕೊಂಡಿತು), ಕದುಕು, ಇರುಕಿಸು (ಇಕ್ಕುಳದಲ್ಲಿ ಇರುಕಿಸಿದ ಹಾಗೆ), ಒತ್ತು ಕಟ್ಟು; ಒತ್ತಿಹಿಡಿ; ಒತ್ತಿ ಚಪ್ಪಟೆ ಮಾಡು), ಹಿಂಡು 2 ಒತ್ತಾಲಿುಸು, ಒತ್ತಾಯಪಡಿಸು
pressure — ನಾ 1 ಒತ್ತಡ (ಗಾಳಿಯ ಒತ್ತಡ), ಅವುಕಾಟ, ಒತ್ತಿಕೆ, 2 ಒತ್ತಾಯ (ಅವನ ಒತ್ತಾಯಕ್ಕೆ ಹೋದೆ; ಒತ್ತಾಯ ತರು (ನಮ್ಮ ಮೇಲೆ ತುಂಬಾ ಒತ್ತಾಯ ತರುತ್ತಿದ್ದಾರೆ)
prestige — ನಾ ಹೆಸರು, ಮದಿಪು, ತಕ್ಕಮೆ
presume — ಕ್ರಿ 1 ಆರು, ಹೊರೆಯೇರು 2 ಎಣಿಸು (ಆಕೆ ಬರಬಹುದೆಂದು ಎಣಿಸಿದ್ದೆ)
presumption — ನಾ 1 ಆರ್ಪು, ಸೊಕ್ಕು, ಮಲೆಪು 2 ಎಣಿಕೆ
presuppose — ಕ್ರಿ 1 ಮುನ್ನೆಣಿಸು 2 ಅಡಿ ಹೇಳಿಕೆಲಿುಕ್ಕು
pretence — ನಾ ಸೋಗು, ತೋರ್ಕೆ
pretend — ಕ್ರಿ ಸೋಗುಹಾಕು, ತೋರ್ಪಡಿಸಿ ಕೊಳ್ಳು
pretender — ನಾ ಸೋಗಾಳಿ, ಸುಳ್ಳು ಹಕ್ಕು ದಾರ
pretext — ನಾ ಸಾಕು (ಅಲ್ಲಿಗೆ ಹೋಗಲು ಅವನಿಗೊಂದು ಸಾಕು ಸಿಕ್ಕಿದಹಾಗಾಲಿುತು), ತೋರ್ಕೆ (ತಲೆನೋವೆಂಬುದು ಒಂದು ತೋರ್ಕೆ ಅಷ್ಟ), ಹೆಳೆ (ಅಲ್ಲಿಗೆ ಹೋಗ ದಿರಲು ಅವನಿಗೆ ಒಂದು ಹೆಳೆ ಬೇಕಾಗಿತ್ತು)
pretty — ಗು 1 ಚೆಲುವಾದ, ಅಂದವಾದ, ಮುದ್ದಾದ 2 ತಕ್ಕಮಟ್ಟಿಗಿನ, ತುಸು ಅಂದದ
prevail — ಕ್ರಿ 1 ಬಳಕೆಯಲ್ಲಿರು 2 ಗೆಲ್ಲು, ತೇರು (ತೇರ್ಗಡೆಹೊಂದು) 3 ಕಸುವು ಹೆಚ್ಚು, ಹರವು ಹೆಚ್ಚು
prevail upon — ಕ್ರಿ ಒತ್ತಾಲಿುಸು, ಒಪ್ಪಿಸು
prevalent — ಗು ಯಾವಾಗಿನ, ಎಂದಿನ, ನಡವಳಿಕೆಯ, ಎಲ್ಲಡೆಯ
prevaricate — ಕ್ರಿ ಸುಳ್ಳುಹೇಳು, ನನ್ನಿ ನುಡಿ ಯಲು ಹಿಂದೆಗೆ
prevent — ಕ್ರಿ ತಡೆ (ಹೋಗದಂತೆ ತಡೆ), ತಪ್ಪಿಸು
preventive — ಗು ತಡೆಗಟ್ಟುವ (ತಡೆಗಟ್ಟುವ ಮದ್ದು), ಮುನ್ನೆಚ್ಚರಿಕೆಯ
preview — ನಾ ಮುನ್ನೋಟ, ಮುನ್ಕಾಣ್ಕೆ
previous — ಗು ಹಿಂದಿನ (ಹಿಂದಿನ ತಿಂಗಳು), ಮುಂಚಿನ
prey — ನಾ ಎರೆ (ಹುಲಿಗೆ ಎರೆಯಾದ ಆಡು), ಬೇಟೆ
prey — ಕ್ರಿ ಬೇಟೆಯಾಡು, ಮೋಸಮಾಡು, ದೋಚು
price — ನಾ ಬೆಲೆ (ಬೆಲೆಬಾಳು; ಬೆಲೆಬೀಳು; ಬೆಲೆಮಾಡು; ಬೆಲೆಕೊಡು; ಬೆಲೆಕಟ್ಟು), ಅಗ್ಗ (ಅಗ್ಗ ಹೇಳು),ತೆರ (ತೆರ ಕೊಡು)
priceless — ಗು ಬೆಲೆಕಟ್ಟಲಾಗದ ನಾ 1 ಮುಳ್ಳು 2 ತೂತು
prick — ಕ್ರಿ ಅಳುಕು (ಬೆರಳಿಗೆ ಮುಳ್ಳು ಅಳುಕಿತು), ಕುತ್ತು (ಕಾಲಿಗೆ ಮುಳ್ಳು ಕುತ್ತಿ ಕುಂಟುತ್ತಿದ್ದಾನೆ; ಕುತ್ತಿ ಇರಿ), ಬೆಟ್ಟು (ಮುಳ್ವೆಟ್ಟು), ಇರಿ (ಮುಳ್ಳಿರಿ), ತಗಲು, ಕುಕ್ಕು (ಹಣ್ಣನ್ನು ಕಾಗೆ ಕುಕ್ಕಿ ತಿನ್ನುತ್ತಿದೆ)
prickle — ಕ್ರಿ ಮಯ್ಮುಳ್ಳಾಗು
pride — ನಾ ಉಬ್ಬು, ಸಟ, ಸೆಡವು (ಆಕೆಗೆ ಸೆಡವು ಹೆಚ್ಚು), ಪುಗ್ಗು (ಪುಗ್ಗಾಲಿುಲ), ಪೊಂಗು (ಪೊಂಗು ಬಿಡು; ಪೊಂಗುಳಿ), ಪೆಟ್ಟು (ಪೆಟ್ಟು ಹೆಚ್ಚು), ಬಿಂಕ (ಬಿಂಕದ ನುಡಿ; ಬಿಂಕಗೆಡಿಸು; ಬಿಂಕಗಾರ್ತಿ; ಬಿಂಕ ಗಾರ; ಬಿಂಗಾರಿ), ಮುರುಕು, ಹೆಮ್ಮೆ (ಹೆಮ್ಮೆ ಪಡು), ಕೆಚ್ಚು (ಕೆಚ್ಚೆದೆ), ಹಮ್ಮು, ಕುಬ್ಬು, ಕೊಬ್ಬು (ಕೊಬ್ಬಾಟ)
priest — ನಾ ತಮ್ಮಡಿ
primary — ಗು ಮೊದಲಿನ (ಮೊತ್ತಮೊದ ಲಿನ)
prime — ಕ್ರಿ ಸಾವಗಿಸು, ನೇರ್ಪುಗೊಳಿಸು
prime — ಗು ಮೊದಲಿನ, ಮೇಲಿನ, ತುಂಬಾ ಒಳ್ಳೆಯ
primer — ನಾ ಮೊದಲ ಓದು
primeval — ಗು ತುಂಬಾ ಹಳೆಯ, ಮೊತ್ತ ಮೊದಲಿನ
primitive — ಗು ಮೊತ್ತ ಮೊದಲಿನ, ಒರಟು, ಪೊಳಲಿಗನಲ್ಲದ
prince — ನಾ ಅರಸುಮಗ
princely — ಗು ಅರಸನಿಗೆ ತಕ್ಕ, ಅರಸನ (ಅರಸನ ಉಡುಪು)
princess — ನಾ ಅರಸುಮಗಳು
principal — ನಾ 1 ಮೇಲಾಳು 2 ಆಳಳವಿಗ
principal — ಗು ಅರಿದಾದ, ಮೊದಲನೆಯ
principle — ನಾ ಅಡಿನನ್ನಿ, ಅಡಿಕಟ್ಟಲೆ, ನಡತೆಯ ಗೊತ್ತು
print — ಕ್ರಿ ಅಚ್ಚುಹಾಕು; ಅಚ್ಚುಮಾಡು
printer — ನಾ ಅಚ್ಚುಗಾರ
printing press — ನಾ ಅಚ್ಚುಕೂಟ, ಅಚ್ಚು ಮನೆ
prior — ಗು 1 ಮುಂಚಿನ, ಹಿಂದಿನ 2 ಹೆಚ್ಚು ಅರಿದಾದ
priority — ನಾ ಮೊದಲತನ, ಮೊದಲೆಡೆ, ಮೊದಲ ಹಕ್ಕು
prison — ನಾ ಸೆರೆ (ಸೆರೆಮನೆ)
prisoner — ನಾ ಸೆರೆಯಾಳು ಗು 1 ಮೊದಲಿನ, ಹಿಂದಿನ 2 ಕೆಡದಿರುವ
privacy — ನಾ ಪಚ್ಚುಗೆ (ಆತನಿಗೆ ನನ್ನೊಡನೆ ಪಚ್ಚುಗೆಯಲ್ಲಿ ಮಾತನಾಡಬೇಕಿತ್ತು), ಹಚ್ಚು (ಹಚ್ಚಿನಲ್ಲಿ ಕುಳಿತು ಊಟಮಾಡುತ್ತಿ ದ್ದಾನೆ), ಆಯ
private — ಗು 1 ಒಬ್ಬನ, ಒಂದು ಗುಂಪಿನ 2 ಗುಟ್ಟಿನ
privately — ಗು ಗುಟ್ಟಾಗಿ (ಅವನನ್ನು ಗುಟ್ಟಾಗಿ ಕಂಡುಬಂದರು)
privation — ನಾ ಬಡತನ, ಇಲ್ಲದಿಕೆ
privatise — ಕ್ರಿ ಒಬ್ಬನದಾಗಿಸು, ಗುಂಪಿನ ದಾಗಿಸು
privilege — ನಾ ಹಕ್ಕು, (ಅವರು ತಮ್ಮ ಹಕ್ಕಿಗಾಗಿ ಹೋರಾಡುವವರು) ಒಲವು
privy — ನಾ ತಳ್ಳುವೆಡೆ, ಕಳೆವೆಡೆ
privy — ಗು ಗುಟ್ಟಿನ, ಒಬ್ಬನ
prize — ನಾ ಮೆಚ್ಚು (ನಿಮ್ಮ ಹುಡುಗನಿಗೆ ಮೆಚ್ಚು ಬಂದಿದೆ)
prize — ಕ್ರಿ ಬೆಲೆಕೊಡು
probability — ನಾ ಅಮಗ, ತೆರಹು
probable — ಗು -ಬಹುದಾದ (ಆಗಬಹು ದಾದ; ಬರಬಹುದಾದ)
probation — ನಾ ಒರೆಹೊತ್ತು (ಒರೆಹಚ್ಚುವ ಹೊತ್ತು)
probe — ನಾ ಆರಯ್ಕೆ
probe — ಕ್ರಿ ಹುಡುಕು, ಆರಯ್ಯು
probity — ನಾ ನಾಣ್ಯ, ನೆರತೆ
problem — ನಾ ತೊಡಕು (ಅವನನ್ನು ಬರಿಸುವು ದಕ್ಕೆ ಒಂದು ತೊಡಕಿದೆ), ಸಿಕ್ಕಲು
procedure — ನಾ ಬಗೆ (ಮಾಡುವ ಬಗೆ, ತಿನ್ನುವ ಬಗೆ), ಮೊರೆ (ಮಾಡುವ ಮೊರೆ)
proceed — ಕ್ರಿ ಮುಂದುವರಿ, ಸಾಗು (ದೋಣಿ ಸಾಗಲಿ; ಸಾಗಹಾಕು; ಸಾಗಕಳುಹಿಸು), ಮುಂದಳೆ, ಮುನ್ನುಗ್ಗು, ಮುಮ್ಮೆಟ್ಟು
proceeding — ನಾ ನಡವಳಿಕೆ (ಕೂಟದ ನಡವಳಿಕೆಯನ್ನು ಸರಿಯಾಗಿ ಬರೆದಿಟ್ಟಿ ದ್ದೇವೆ), ಮಾಡುವ ಬಗೆ
proceeds — ನಾ ಹುಟ್ಟುವಳಿ (ತೋಟದ ಹುಟ್ಟುವಳಿ)
process — ನಾ ಹಮ್ಮುಗೆ, ಬಗೆ (ಮಾಡುವ ಬಗೆ)
process — ಕ್ರಿ ಎಸಗು, ಪೊದಳ್ಚು ನಾ ದಿಬ್ಬಣ (ಮದುವೆಯ ದಿಬ್ಬಣ ಇನ್ನೂ ಇಲ್ಲಿಗೆ ತಲಪಿಲ್ಲ), ಮೆರ ವಣಿಗೆ (ಆಟದಲ್ಲಿ ಗೆದ್ದವರ ಮೆರವಣಿಗೆ)
proclaim — ಕ್ರಿ ಸಾರು (ಡಂಗುರ ಸಾರು; ಸಾರಿ ಹೇಳು; ಸಾರುಹ), ಉಗ್ಗಡಿಸು, ಕೀರು (ಕೀರಿಕೊಳ್ಳು)
proclivity — ನಾ ಒಲವು (ಹುಟ್ಟಿನ ಒಲವು, ತನ್ಪರಿಜೆಯ ಒಲವು)
procrastinate — ಕ್ರಿ ಮುಂದೂಡು, ಹೊತ್ತು ಕಳೆ, ತಡಮಾಡು
procure — ಕ್ರಿ 1 ಒದಗಿಸು, ಗಳಿಸು 2 ತಲೆ ಹಿಡುಕನಾಗು
prod — ಕ್ರಿ ಚುಚ್ಚು, ಮುಂದೂಡು, ಹುರಿ ದುಂಬಿಸು (ಇಂತಹ ಕೆಲಸ ಮಾಡಲು ಆತ ನನ್ನು ಹುರಿದುಂಬಿಸಿದ್ದು ಯಾರು?)
prodigal — ಗು 1 ಹಣ ಪೋಲುಮಾಡುವವ, ಹಾಳು ಮಾಡುವವ 2 ಕೊಡುಗಯ್ಯ
prodigy — ನಾ ಹುಟ್ಟಳವುಗ
produce — ನಾ ಹುಟ್ಟುವಳಿ, ಬೆಳೆ
produce — ಕ್ರಿ 1 ಕಾಯು (ಕಾಯ್ತ ಹಲಸು), ಬೆಳೆಕೊಡು, ಈಯು, ಹುಟ್ಟಿಸು 2 ಉಂಟು ಮಾಡು 3 ತೋರಿಸು, ಕಾಣಿಸು (ಬರಿ ಚೀಲದಲ್ಲಿ ಒಂದು ಮೊಲವನ್ನು ಕಾಣಿಸಿದ), ಮುಂದಿಡು
producer — ನಾ ಮಾಡುಗ, ಉಂಟುಮಾಡುಗ
product — ನಾ ಬೆಳೆ, ಹುಟ್ಟುವಳಿ, ಮಾಡುಗೆ
product (of multiplication) — ನಾ ಸಲೆ (ಸಲೆ ಮಾಡು)
production — ನಾ ಮಾಡುವಿಕೆ, ಮಾಳ್ಕೆ, ನೆಗಳ್ತೆ, ಪಣ್ಣುಗೆ
profane — ಕ್ರಿ ಕೀಳುಗಳೆ, ಎಂಜಲಿಸು, ಹೊಲೆ ಗೆಡಿಸು
profess — ಕ್ರಿ 1 ತಿಳಿಸಿಹೇಳು, ಒಪ್ಪು, ನಂಬಿಕೆ ತಿಳಿಸು 2 ಸೋಗುಹಾಕು, ತೋರ್ಪಡಿಸು
profession — ನಾ ಕೆಲಸ, ಪಳಗಿಕೆ, ಬಾಳಿಕೆ
professor — ನಾ ಪೆರ್ಕಲಿಸುಗ, ಮೇಲ್ಕಲಿಸುಗ
proffer — ಕ್ರಿ ನೀಡು (ಹಣ ನೀಡು)
proficiency — ನಾ ನುರಿತ (ನುರಿತವಿಲ್ಲದ ಕೆಲಸಗಾರ), ಪಳಗಿಕೆ, ತೇರ್ಗಡೆ
proficient — ಗು ನುರಿತ (ನುರಿತ ಆಟ ಗಾರರು), ಪಳಗಿದ
profile — ನಾ 1 ಬದಿನೋಟ 2 ಎಲ್ಲಗೆರೆ, ಹೊರಗೆರೆ (ಆತ ಗುಡ್ಡದ ಹೊರೆಗೆರೆಯನ್ನು ಚೆನ್ನಾಗಿ ಬಿಡಿಸಿದ್ದಾನೆ)
profit — ನಾ ಪಡಪು (ಪಡಪಾಗು),ಬಾಳ್ತೆ, ಅಕ್ಕು ಗು ಪಡಪುಳ್ಳ, ಸಲೆಲಿುೀವ
profligacy — ನಾ ಬಂಡತನ
profondity — ನಾ ಗುಣ್ಪು (ಕಡಲ ಗುಣ್ಪು; ತಿಳಿವಿನ ಗುಣ್ಪು; ಕೆಲಸದ ಗುಣ್ಪು), ಗುಂಬು
profound — ಗು ಆಳವಾದ (ಆಳವಾದ ತಿಬ್ಬಳಿ; ಆಳವಾದ ಅರಿವು), ನೆರೆ ನೆರಪಿದ
profuse — ಗು ಹೇರಳ (ಅವನ ಹತ್ತಿರ ಹೇರಳ ಕೇಳಬಹುದು), ತುಂಬಾ
progeny — ನಾ ಕರುಳು (ಕರುಳ ಕುಡಿ; ಕುರುಳಿ ನವರು)
prognosis — ನಾ ಮುನ್ನರಿವು, ಮುನ್ನೋಟ
prognosticate — ಕ್ರಿ ಮುನ್ನರಿವು ಕೊಡು, ನುಡಿಯಾಡು
program — ನಾ ಹಮ್ಮುಗೆ, ನೆಗಳ್ತೆಯರಿಕೆ, ನೆಗಳ್ತೆಪಟ್ಟಿ
progress — ನಾ ಮುನ್ನಡೆ (ನಿಮ್ಮ ಕೆಲಸದ ಮುನ್ನಡೆ ಹೇಗಿದೆ?), ಮುಂದುವರಿಕೆ
progressive — ಗು 1 ಮುಂದರಿವ, ಹೆಚ್ಚು ತ್ತಿರುವ, ಮುನ್ನಡೆವ 2 ಮುಂದರಿಯ ಲೊಪ್ಪುವ
prohibit — ಕ್ರಿ ತಡೆ (ಅಲ್ಲಿಗೆ ಹೋಗಬಾರ ದೆಂದು ತಡೆದರು; ತಡೆಗಟ್ಟು), ಬಿಡದಿರು (ಇಲ್ಲಿ ಹೊಗೆಬತ್ತಿ ಸೇದಲು ಬಿಡುವುದಿಲ್ಲ), ಮಾಡಗೊಡದಿರು
prohibition — ನಾ ಬಿಡದಿರುವಿಕೆ, ತಡೆ ಗಟ್ಟುಗೆ, ಅಲ್ಲಮೆ
project — ನಾ ಹಮ್ಮುಗೆ, ಹಂಚಿಕೆ (ಹಂಚಿಕೆ ಮಾಡು), ಎಣಿಕೆ, ಸೂಟಿ
project — ಕ್ರಿ 1 ಚಾಚು (ಮುಂದಕ್ಕೆ ಚಾಚಿದ ಗೆಲ್ಲು), ಚಿಮ್ಮು 2 ಹಮ್ಮಿಕೊಳ್ಳು (ದೊಡ್ಡ ಕೆಲಸವೊಂದನ್ನು ಹಮ್ಮಿಕೊಂಡಿದ್ದೇವೆ)
projector — ನಾ ತೋರ್ಪುಗೆ (ಓಡುತಿಟ್ಟ ತೋರ್ಪುಗೆ)
prolapse — ಕ್ರಿ ಜಾರು, ಸರಿ
proletariat — ನಾ ಕೆಲಸಗಾರರು, ಕೂಲಿ ಗಾರರು
proliferate — ಕ್ರಿ ಚಾಗಚಾಗ ಹುಟ್ಟಿಸು, ಚೆಚ್ಚರ ಹೆಚ್ಚಿಸು
prolific — ಗು ಆರುವ, ತೀವುವ
prolix — ಗು ಬೇಸರಿಸುವಷ್ಟು ಉದ್ದದ
prologue — ನಾ ತೊಡಗಿಕೆ, ಮುನ್ಮಾತು
prolong — ಕ್ರಿ ಉದ್ದ ಬೆಳೆ (ಆತನ ಹೇಳಿಕೆ ಉದ್ದ ಬೆಳೆಯುತ್ತಾಇದೆ), ಬೆಳಸು
promenade — ನಾ 1 ಕಾಲುಹಾದಿ 2 ತಿರುಗಾಟ
prominence — ನಾ 1 ಹೆಸರು (ಹೆಸರು ಮಾಡು), ಪಡೆವಾತು 2 ಚಾಚಿಕೆ (ಮುಂ ಚಾಚಿಕೆ) ಗು 1 ಎದ್ದುಕಾಣುವ (ಎದ್ದು ಕಾಣುವ ಮೂಗು) 2 ಹೆಸರಾಂತ, ಹೆಸರು ಹೊಂದಿದ
promiscuous — ಗು 1 ಬೆರಕೆಯ 2 ಕಟ್ಟಲೆ ತಪ್ಪಿದ
promise — ನಾ ಪೂಣ್ಕೆ (ಪೂಣ್ಕೆತಪ್ಪು; ಪೂಣು; ಪೂಣಿಕೆ), ಮಾತು (ಮಾತು ಕೊಡು, ಮಾತು ತಪ್ಪು), ನನ್ನಿ (ನನ್ನಿಕೊಡು)
promontory — ಗು ನೆಲಚಾಚು
promote — ಕ್ರಿ ಮೇಲೆೀರಿಸು, ಮೇಲಿನ ಕೆಲಸ ಕೊಡು, ಬೆಂಬಲಿಸು, ಒತ್ತಾಸೆ ನೀಡು (ಅವರು ನಮಗೆ ಒತ್ತಾಸೆ ನೀಡಿದ್ದಾರೆ)
promotion — ನಾ 1 ಬೆಂಬಲ, ಒತ್ತಾಸೆ, ಕಡಗು 2 ಮೇಲೆೀರಿಕೆ
prompt — ಕ್ರಿ ನೆನಪಿಸು, ಎತ್ತಿಕೊಡು
prompt — ಗು ಕೂಡಲೆೀ ಮಾಡಿದ, ತಡ ವಿಲ್ಲದ, ಸರಿಹೊತ್ತಿನ
promulgate — ಕ್ರಿ 1 ತಿಳಿಸು, ಸಾರು, ಹರಡು 2 ನೆರವೇರಿಸು
prone — ಗು 1 ಬೋರಲು (ಬೋರಲು ಬೀಳು; ಬೋರಲು ಮಲಗು) 2 ಬಲ್ಲ (ತಪ್ಪು ಮಾಡಬಲ್ಲ)
prong — ನಾ ಕವಲಿನ ಮೊನೆ
pronoun — ನಾ ಆಡುಗಪದ
pronounce — ಕ್ರಿ 1 ತೊಳಲು, ಹೇಳಿಕೆ ಕೊಡು 2 ನುಡಿ, ಉಂಟುಮಾಡು (ಉಲಿ ಯನ್ನುಂಟುಮಾಡು)
pronounced — ಗು ಎದ್ದುಕಾಣುವ
pronunciation — ನಾ ಉಲಿಪು
proof — ನಾ 1 ಕರಡಚ್ಚು (ಇನ್ನೂ ಕರಡಚ್ಚು ತಿದ್ದಿ ಆಗಿಲ್ಲ) 2 ನನ್ನಿಗೆಯ್ತ, ನಿಂದರಿಕೆ 3 ತಿಳಿಹು
prop — ನಾ ಆನಿಕೆ, ಈಡು (ಗೋಡೆ ಬೀಳದ ಹಾಗೆ ಈಡು ಕೊಟ್ಟಿದ್ದಾರೆ), ಒತ್ತುಗಂಬ, ಒತ್ತುಗೋಡೆ, ಊರೆ (ಬಾಳೆಗೊನೆಗೆ ಕೊಟ್ಟ ಊರೆಯೇ ಮುರಿದುಹೋಗಿದೆ)
propaganda — ನಾ ಹರಡಿಕೆ (ಸುದ್ದಿ ಹರಡಿಕೆ; ನಂಬಿಕೆಯ ಹರಡಿಕೆ)
propagate — ಕ್ರಿ 1 ಹರಡು, ಒಯ್ಯು 2 ಮರುಹುಟ್ಟಿಸು
propel — ಕ್ರಿ ಮುಂದೂಡು, ತಳ್ಳು
propeller — ನಾ ತಳ್ಳುಕ, ಮುಂದೂಡುಕ
propensity — ನಾ ಹುಟ್ಟೊಲವು ಗು ಸಲುವಳಿ (ಸಲುವಳಿ ಮಾತು; ಸಲುವಳಿಯಾಗಿರು), ಹದ (ಕುಡಿಗೆಗೆ ಸಕ್ಕರೆ ಹಾಕಿದ್ದು ಹದವಾಗಿದೆ; ಹದವಾಗಿ ಕುದಿಸ ಬೇಕು; ಹದಗೆಡು, ಹದಮಾಡು), ನೇರಿತು (ನೇರಿತು ಹೇಳಿಕೆ), ತರ (ತರವಲ್ಲದ ಕೆಲಸ; ತರಗೊಳಿಸು), ಅಂಗ (ಹಾಗೆ ಹೇಳುವುದು ನಿನಗೆ ಅಂಗವಲ್ಲ), ದೊಡ್ಡ (ದೊಡ್ಡ ಮಾತು), ಚೆನ್- (ಚೆನ್ನೆನಪು - ಇವತ್ತಿನ ಚೆನ್ನೆನಪು ಯಾವಾಗಲೂ ನನ್ನಲ್ಲಿರುತ್ತದೆ)
proper (be) — ಕ್ರಿ ಸಲ್ಲು (ಸಲ್ಲದ ಕೆಲಸ; ಸಲ್ಲುವ ಮಾತು; ಸಲ್ಲಗಳೆ), ತಗು ( ತಕ್ಕ - ಅವನು ಈ ಕೆಲಸಕ್ಕೆ ತಕ್ಕ ಆಳು; ಇಲ್ಲಿಗಿದು ತಕ್ಕುದು; ಅವನಿಗೆ ಆಕೆ ತಕ್ಕ ಹೆಂಡತಿ; ತಗುವ - ಆತನಿಗೆ ತಗುವ ಕೆಲಸ; ತಗದ ಹೇಳಿಕೆ)
proper time — ನಾ ತರುಣ (ತರುಣದಲ್ಲಿ ಬಂದು ಮುಟ್ಟಿದ್ದಾನೆ)
properness — ನಾ ನಿರತೆ,ಹದನು (ಹದನಾಗಿ ಕೆಲಸ ಮಾಡಿದ್ದಾನೆ), ಅಡಗು
property — ನಾ ಹುರುಳು,ದಕ್ಕು (ದಕ್ಕು ಕೊಡು; ದಕ್ಕು ಹಾಕಿಕೊಳ್ಳು), ಒಡಮೆ
prophesy — ನಾ ಕಣಿ, ಬರುವುದರುಲಿಪು
prophet — ನಾ ಕಣಿಹೇಳುಗ
prophylactic — ಗು ತಡೆಯಬಲ್ಲ (ಕುತ್ತ ಬರದಂತೆ ತಡೆಯಬಲ್ಲ ಮದ್ದು)
propinquity — ನಾ ಹೋಲಿಕೆ, ಸಾರ್ಕೆ
propitiate — ಕ್ರಿ ಮೆಚ್ಚಿಸು, ತಣಿಸು, ಒಲಿಸು
propitious — ಕ್ರಿ ಒಲಿದ, ಹೊಂದಿಕೆಯಾಗುವ, ಸರಿಯಾದ
proportion — ನಾ ಹಾಳಿತ, ಹೊಂದಿಕೊಳ್ಳುವ ಪಾಲುಗಳು, ಹೊಂದಿಕೆ, ಹೊಂದುವ ಅಳತೆ
proposal — ನಾ ನೀಡಿಕೆ (ಮದುವೆಯ ನೀಡಿಕೆ)
propose — ಕ್ರಿ ನೀಡು, ಹೆಸರುಹಚ್ಚು
proposition — ನಾ ಹೇಳಿಕೆ (ನಮ್ಮದೊಂದು ಹೇಳಿಕೆಲಿುದೆ)
propound — ಕ್ರಿ ಮುಂದಿಡು
proprietor — ನಾ ಒಡೆಯ
propriety — ನಾ ಅಸ (ಅಸಕೊಳ್ಳು; ಅಸಕಳಿ), ಸಯ್ಪು, ಸಸಿನ (ಸಸಿನವಾಗು), ನೇರಿದು, ಪುರುಳು, ನೇರ್ಪು (ನೇರ್ಪುಗೆಡಿಸು; ನೇರ್ಪು ಗೊಳ್ಳು), ಪಾಳಿ (ಪಾಳಿಗೆಡು; ಪಾಳಿಕಾರ; ಪಾಳಿಹೇಳು), ಹಾಳಿತ, ಅನು (ಅನುವಿನಲ್ಲಿ ಕುಳಿತಿದ್ದ), ಆಯ (ಆಯಕಟ್ಟು), ಆಯತ (ಅಟ್ಟಡಿಗೆ ಆಯತವಾಗಿದೆ), ಒಪ್ಪ (ಒಪ್ಪ ಗೆಡು, ಒಪ್ಪಗುಂದು), ತಕ್ಕುಮೆ, ತೋದು (ತೋದುಗಾರ)
prop-root — ನಾ ಊದುಬೇರು
propulsion — ನಾ ತಳ್ಳುಗೆ ಕ್ರಿ ಮುಂದೂಡು, ನಿಲ್ಲು, ಮುಗಿ
prosaic — ಗು ಬೇಸರ ಹಿಡಿಸುವ, ಸಪ್ಪೆ
proscribe — ಕ್ರಿ ಹೊರಹಾಕು, ಹೊರಗಟ್ಟು, ತಡೆಹಾಕು
prose — ನಾ ಒರೆ
prosecute — ಕ್ರಿ 1 ಕಟ್ಟಲೆ ನಡೆಸು 2 ಮುಂದುವರಿಸು, ತೊಡಗು
prosecutor — ನಾ ಕಟ್ಟಲೆ ನಡೆಸುಗ
prosody — ನಾ ಹಾಡರಿಮೆ
prospect — ನಾ 1 ಹರವು ಕಾಣ್ಕೆ, ಹರವು ನೋಟ, ಹೊರನೋಟ 2 ಎದುರು ನೋಡುವಿಕೆ, ಕಾದಿರುವಿಕೆ
prospective — ಗು ಬರಲಿರುವ, ಆಗಲಿರುವ, ಎದುರುನೋಡಿದ
prospectus — ನಾ ಕೊಗೆತ
prosper — ಕ್ರಿ ಮಿಳಿರು, ಒದಗು, ಕುದುರು (ಆತನ ಬದುಕು ಈಗತಾನೇ ತುಸು ಕುದುರಲು ತೊಡಗಿದೆ), ತಲೆಯುತ್ತು (ತಲೆಯುತ್ತಿ ನಡೆ), ಇಂಬುವಡೆ
prosperity — ನಾ ಪದುಳ,ಏಳಿಗೆ (ಏಳಿಗೆ ಹೊಂದು)
prostitute — ನಾ ಬೆಲೆವೆಣ್ಣು,ಸೂಳೆ, ಪೊಡ್ಡಿ, ಬೊಡ್ಡಿ
prostitution — ನಾ ಸೂಳೆಗಾರಿಕೆ, ಪಾರು (ಮುದಿಪಾರು; ಪಾರುಗೆಯ್ತ)
prostrate — ಕ್ರಿ ಸಯ್ಗೆಡೆ (ಅವನಡಿಗೆ ಸಯ್ಗೆಡೆ ದನು), ಅಡ್ಡಬೀಳು (ಕಯ್ಗಾಣಿಕೆಲಿುತ್ತು ಅಡ್ಡಬಿದ್ದರು), ಸಾಗರಬೀಳು, ಮಲಿ್ಯುಕ್ಕು
protect — ಕ್ರಿ ಸಲಹು (ಮನೆಯಲ್ಲಿ ಸಲಹಿದ ಬೆಕ್ಕು), ಓವು, ಕಾಪಾಡು, ಕಾಯು (ಬಾಗಿಲು ಕಾಯು; ಕಾವಲು), ಹೊರೆ (ಒಡಲ ಹೊರೆವಾತ; ಹೊಟ್ಟೆಹೊರೆ)
protected forest — ನಾ ಕಾಪುಕಾಡು
protection — ನಾ ಕಾಹು (ಮಯ್ಗಾಹು), ಕಾವಣ, ಕಾವಲು, ಆರೆ (ಆರೆಕಾರ)
protege — ನಾ ಸಲಹು, ಸಲಹಿದಾತ
protest — ಕ್ರಿ ಎದುರಿಸು, ಮಾರ್ನುಡಿ, ಒಪ್ಪದಿರು
prototype — ನಾ ಮೊದಲ ಮಾರ್ಪರಿಜು, ಎತ್ತುಗೆ, ಪರಿಜು
protract — ಕ್ರಿ ಎಳೆ, ಹೆಚ್ಚಿಸು, ಉದ್ದಮಾಡು, ತಡಮಾಡು
protrude — ಕ್ರಿ ಮುಂಚಾಚು
protuberance — ನಾ ಬುಗುಡು (ಹಣೆಯ ಮೇಲೆ ಬುಗುಡು ಎದ್ದಿದೆ; ಹೊಕ್ಕುಳದ ಬುಗುಡು) (be) ಕ್ರಿ ಬೀಗು (ತಲೆ ಬಾಗಿದರೂ ಬೀಗುತ್ತಿದ್ದಾನೆ),ಕೊಬ್ಬು, ಸೆಡೆ (ಸೆಡೆದು ನಿಲ್ಲು)
proud — ನಾ ಕೊಬ್ಬಿಗ
prove — ಕ್ರಿ ನನ್ನಿಗೆಯ್ಯು; ನನ್ನಿಮಾಡು
provender — ನಾ ಮೇವು, ಕರಡ
proverb — ನಾ ನಾಣ್ಣುಡಿ, ನಾಣ್ಮಾತು
proverbial — ಗು 1 ಹೆಸರಾಂತ 2 ಕೆಟ್ಟ ಹೆಸರಿನ, ದೋವಿಲಿನ
provide — ಕ್ರಿ 1 ಒದಗಿಸು 2 ಬೇಡಿಕೆಲಿುಡು
provident — ಗು ಒದಗಿಸಲಿರುವ, ಕಡಿಮೆ ವೆಚ್ಚದ
province — ನಾ ಕಂಪಣ
provision — ನಾ 1 ಒದಗಣೆ 2 ಬೇಕಾದ್ದು, ಬೇಡಿಕೆ
provocation — ನಾ ಕೆರಳಿಸುವಿಕೆ, ಕೆಣಕುವಿಕೆ
provoke — ಕ್ರಿ ಕೆಣಕು (ಅವನನ್ನು ಯಾರೂ ಕೆಣಕಬೇಡಿ; ಕೆಣಕುನಗೆ), ಕೆರಳಿಸು, ಎಕ್ಕ ರಿಸು
prow — ನಾ ಹಡಗಿನ ಮುಂಬದಿ
prowess — ನಾ ಗಂಡಿಕೆ, ಕಸುವು, ಪನ್ನತಿಕೆ
prowl — ಕ್ರಿ ಸುಳಿದಾಡು (ಏನೋ ಕೆಟ್ಟಕೆಲಸ ನಡೆಸಲು ಸುಳಿದಾಡುತ್ತಿದ್ದಾನೆ)
proximity — ನಾ ಸಾರೆ (ಸಾರೆಯಾಗು, ಸಾರೆ ಬರು), ಸಾರ್ಕೆ, ಬದಿ (ಮನೆಯ ಬದಿಯಲ್ಲಿ), ಅಳವು (ಅಳವಿಗ)
proxy — ನಾ ಬದಲಾಳು, ಬದಲೊಪ್ಪಿತ
prudent — ಗು ಎಚ್ಚರಿಕೆಯ, ಅರಿವುಳ್ಳ, ದುಡು ಕದ
prune — ಕ್ರಿ ಸವರು (ಮರದ ಗೆಲ್ಲುಗಳನ್ನು ಸವರಿ ಹಾಕಿದ್ದಾರೆ)
pry — ಕ್ರಿ ಹೊಂಚಿನೋಡು, ಇಣಿಕಿ ನೋಡು, ಬೆದಕು
psalm — ನಾ ಹೊಗಳಿಕೆಯ ಹಾಡು
pseudonym — ನಾ ಗುಟ್ಟುಹೆಸರು, ಬರೆ ಹೆಸರು
psyche — ನಾ ಒಳಗು
psychic — ಗು ಒಳಗಿನ
psychology — ನಾ ಒಳಗಿನರಿಮೆ
puberty — ನಾ ಹರಯ, ಮಯ್ನೆರೆತ
publicity — ನಾ ಆರಡಿ,ದೋವಿಲು ಕ್ರಿ 1 ಸಾರು (ತಮ್ಮಟೆ ಹೊಡೆದು ಸಾರುತ್ತಿದ್ದ), ಹುಲುಬು 2 ಬಯಲು ಮಾಡು, ಹೊರಪಡಿಸು (ನಿಮ್ಮ ಗುಟ್ಟು ಗಳನ್ನೆಲ್ಲ ಹೊರಪಡಿಸಿದ್ದಾರೆ), ತೆರೆ
publisher — ನಾ ಹೊರಪಡಿಸುಗ, ಹುಲುಬುಗ
pucker — ಕ್ರಿ ಗಂಟಿಕ್ಕು (ಹುಬ್ಬುಗಂಟಿಕ್ಕು), ಗಂಟುಹಾಕು, ಸುಕ್ಕುಗಟ್ಟು, ಸುಕ್ಕಾಗು, ನಿರಿಗಟ್ಟು
pudding — ನಾ ಸಿಹಿತಿಂಡಿ
puddle — ನಾ ಕೆಸರುಗುಂಡಿ, ಹಳ್ಳ
pudgy — ಗು ಗಿಡ್ಡ ಮತ್ತು ದಪ್ಪ
puff — ಕ್ರಿ 1 ಏದು (ಮೇಲಕ್ಕೆ ಹತ್ತಿ ಬಂದು ಏದುತ್ತಿದ್ದಾನೆ; ಏದುಸಿರುಬಿಡು) 2 ತುಂಬಾ ಹೊಗಳು 3 ಹೊಗೆಬಿಡು (ಹೊಗೆಬಿಡು ವವರನ್ನು ಹೊರಗೆ ಕಳಿಸಿ)
puff up — ಕ್ರಿ ಪೊಟ್ಟಳಿಸು, ಉಬ್ಬು
pug nose — ನಾ ಗಿಡ್ಡಮೂಗು
pugnacious — ಗು ಜಗಳಗಂಟ, ಜಗಳಕ್ಕೆ ಬರುವ
pull — ಕ್ರಿ ಜಗ್ಗು (ಜಗ್ಗಾಡು, ಜಗ್ಗಾಟ), ಈರು, ಎಳೆ (ಎಳೆದಾಡು), ತುಲಿು (ತುಲಿುತ; ತುಲಿುದುಬಿಡು; ತುಯ್ಯು - ತುಯ್ದಾಡು, ತುಯ್ದುಬಿಡು), ಸೆಳೆ (ಸೆಳೆದುಕೊಳ್ಳು; ಸೆಳೆಮಂಚ; ಸೆಳೆಸೂರೆ; ಸೆಳೆಕೊಕ್ಕೆ), ಕಳೆ
pull down — ಕ್ರಿ ಕೆಡವು
pull out — ಕ್ರಿ ಪೀಕು (ಕೂದಲು ಪೀಕು), ಮೀಟು, ಹಿರಿ (ಕತ್ತಿ ಹಿರಿ), ಉಗಿ (ಬಳ್ಳಿ ಯನ್ನು ಉಗಿದು ತಂದ), ಕೀಳು (ಗಿಡವನ್ನು ಕಿತ್ತು ಹಾಕಿದ), ಸುಗಿ, ಊಚು (ಕೂದಲನ್ನು ಊಚು), ಕೀಸು (ಎರಡು ಕಯ್ಗಳನ್ನೂ ಕೀಸಿ ಮುರಿದುಹಾಕಿದ)
pulley — ನಾ ಕಪ್ಪಿ, ಗಡಗಡೆ
pulling — ನಾ ಎಳೆತ, ತುಯ್ತ, ತುಯ್ಯಾಟ (ಅವರಿಬ್ಬರ ತುಯ್ಯಾಟವನ್ನು ನೋಡುತ್ತಾ ನಿಂತಿದ್ದ)
pulp — ನಾ ದುದ್ದು (ಕುಂಬಳಕಾಲಿು ದುದ್ದು),ಕುಸುರು,ತಿರುಳು (ಹಣ್ಣಿನ ತಿರುಳು)
pulpit — ನಾ ಜಗಲಿ, ಕಟ್ಟೆ
pulsate — ಕ್ರಿ ಎದೆಹಾರು, ಎದೆಬಡಿ, ಗುಕ್ಕೆನ್ನು
pulse — ನಾ 1 ಬೇಳೆ (ಬೇಳೆ ಕಾಳು, ತೊಗರಿ ಬೇಳೆ),ಪಪ್ಪು,ಅಡಗಾಳು 2 ಮಿಡಿತ, ಹೊಡೆತ (ಎದೆಗೂಡಿನ ಹೊಡೆತ ನಿಂತು ಹೋಗಿದೆ), ಗುಕ್ಕು, ಎದೆಬಡಿತ
pulverize — ಕ್ರಿ ಹುಡಿಮಾಡು
pulverized (by worms) — ಗು ಕುಟ್ಟೆ (ಕುಟ್ಟೆಹುಳ; ಕುಟ್ಟೆಹುಡಿ - ಹಲಿಗೆಲಿುಂದ ಕುಟ್ಟೆಹುಡಿ ಬೀಳುತ್ತಿದೆ) ಕ್ರಿ ಗುದ್ದು, ಬಡಿ
pump — ಕ್ರಿ ಎಳೆದು ತೆಗೆ, ಎತ್ತು, ಒತ್ತಿ ನೂಕು
pun — ನಾ ಪದಿರು, ಹದಿರು (ಹದಿರು ನುಡಿ), ಇರ್ಪೊರುಳ ಮಾತು
punch — ಕ್ರಿ 1 ಗುದ್ದು (ಹಿಂದಿನಿಂದ ಬಂದು ಬೆನ್ನಿಗೆ ಗುದ್ದಿದ), ಚುಚ್ಚು, ಮುಂದೂಡು 2 ತೂತುಕೊರೆ, ತೂತಿಡು
punctilious — ಗು ಅಚ್ಚುಕಟ್ಟು, ಕಟ್ಟುನಿಟ್ಟು
punctual — ಗು ತಡಮಾಡದ, ಸರಿಹೊತ್ತಿನ
punctuality — ನಾ ಗಡುತಪ್ಪದಿರುವಿಕೆ, ಹೊತ್ತರಿವು
punctuation — ನಾ ತಡೆಗುರುತು (ಬರಹದ ತಡೆಗುರುತು)
puncture — ನಾ ತೂತು (ತೂತಾಗು; ತೂತು ಮಾಡು; ಕೊಡದಲ್ಲಿ ತೂತಾಗಿ ನೀರೆಲ್ಲ ಸೋರಿಹೋಗಿದೆ)
pungency — ನಾ ಕಗ್ಗು (ಉರಿವ ಎಣ್ಣೆಯ ಕಗ್ಗು), ಕಂಗು, ಕನಗು (ಕನಗಿನ ಹುಲ್ಲು), ನಿಡಿ (ಹೊಗೆಸೊಪ್ಪಿನ ನಿಡಿ),ಗಾಟು (ಮೆಣಸಿನ ಗಾಟು)
punishment — ನಾ ಮುಯ್ಪು (ಮುಯ್ಪು ಕೊಡು)
punitive — ಗು ಮುಲಿ್ಪುನ
puny — ಗು ಗಿಡ್ಡ, ಕಸುವಿಲ್ಲದ
pup — ನಾ ನಾಲಿುಮರಿ, ಕುನ್ನಿ
pupa — ನಾ ಗೂಡುಹುಳು
pupil — ನಾ 1 ಅಲಿ (ಕಣ್ಣಾಲಿ), ಗೊಂಬೆ (ಕಣ್ಣ ಗೊಂಬೆ), ಪಾಪೆ 2 ಕಲಿಗ (ಅವನ ತರಗತಿ ಯಲ್ಲಿ ಮೂವತ್ತು ಮಂದಿ ಕಲಿಗರಿದ್ದರು)
puppet — ನಾ ಬೊಂಬೆ (ಕೀಲಬೊಂಬೆ; ಬೊಂಬೆಯಾಟ),ಹೂಹೆ,ಕರು (ಕರು ವಿಡು),ಗೊಂಬೆ (ಮಾತನಾಡುವ ಗೊಂಬೆ)
puppy — ನಾ ನಾಲಿುಮರಿ, ಕುನ್ನಿ (ನಾಲಿುಕುನ್ನಿ)
purchase — ಕ್ರಿ ಬಿಲಿತರು (ನೀನು ಬಿಲಿತಂದ ಕುರಿ ಸತ್ತುಹೋಗಿದೆ), ಕೊಳ್ಳು (ಕೊಂಡು ಕೊಳ್ಳು)
purchaser — ನಾ ಕೊಳ್ಳುಗ
pure — ಗು ಚೊಕ್ಕ (ಚೊಕ್ಕ ಚಿನ್ನ; ಚೊಕ್ಕ ನೀರು),ಮಡಿ (ಮಡಿಬಟ್ಟೆ; ಮಡಿಹಿಡಿ; ಮಡಿ ಅಡಿಗೆ; ಮಡಿವಂತಿಕೆ), ಅಣ್ಣೆ (ಅಣ್ಣೆ ಹಾಲು), ತೇಟೆ (ತೇಟೆನೀರು)
purgative — ನಾ ಎಕ್ಕುಗೆ ಕ್ರಿ 1 ಎಕ್ಕು (ಮಗು ಎಕ್ಕಿಎಕ್ಕಿ ಸೋತು ಹೋಗಿದೆ) 2 ಮಡಿಮಾಡು, ಚೊಕ್ಕಟ ಗೊಳಿಸು 3 ಹೊರಹಾಕು (ತಂಡದಿಂದ ನಂಬದವರನ್ನೆಲ್ಲ ಹೊರಹಾಕುತ್ತಿದ್ದಾರೆ)
purify — ಕ್ರಿ 1 ಮಡಿಮಾಡು, ಚೊಕ್ಕಮಾಡು 2 ತಪ್ಪುಕಳೆ
purile — ಗು ಹುಡುಗಾಟಿಕೆಯ, ಪೆದ್ದು
purist — ನಾ ಮಡಿವಂತ
purity — ನಾ ಮಚ್ಚು (ಚಿನ್ನದ ಮಚ್ಚನ್ನು ಕಂಡು ಹಿಡಿ; ಮಚ್ಚುಗಾರ), ತೆಳುಪು (ತೆಳುಪುಕೆಡು)
purlieu — ನಾ ಎಲ್ಲ, ಗಡಿ, ಹೊರಸುತ್ತು
purloin — ಕ್ರಿ ಕದಿ, ಎಗರಿಸು
purple — ಗು ನೇರಳೆ, ತೊಗರು (ತೊಗರು ಕಂಬಿಲಿುರುವ ಸೀರೆ)
purport — ನಾ 1 ಹುರುಳು 2 ಈಡು, ಎಣಿಕೆ, ಅಳಬು
purpose — ನಾ ಈಡು (ಅವನು ಹಾಗೆ ಹೇಳಿ ದುದರ ಈಡೇನು?), ಅಳಬು
purposely — ಗು ಬೇಕೆಂದೇ
purr — ಕ್ರಿ ಗುರುಗುಟ್ಟು
purse — ನಾ 1 ಕಲಿ್ಚುೀಲ, ಹಣದ ಚೀಲ 2 ಹಣ, ಕೊಡುಗೆ
pursue — ಕ್ರಿ ಅಟ್ಟು (ಅಟ್ಟಿಕೊಂಡು ಹೋಗು; ಬೆನ್ನಟ್ಟು) ಎಬ್ಬು (ಎತ್ತುಗಳನ್ನು ಹೊಳೆಯ ಕಡೆಗೆ ಎಬ್ಬು; ಎಬ್ಬಟ್ಟು - ಎಬ್ಬಟ್ಟಿನಿಲ್ಲಿಸು), ಹಿಂಬಾಲಿಸು, ತಗುಳು (ಬೆನ್ದಗುಳು)
pursuit — ನಾ ಅಟ್ಟುಗೆ
purvey — ಕ್ರಿ ಒದಗಿಸು (ಅಡುಗೆಗೆ ಬೇಕಾದು ದನ್ನೆಲ್ಲ ಅವನೇ ಒದಗಿಸುತ್ತಿದ್ದ)
purview — ನಾ ಹರಹು (ಕಟ್ಟಲೆಯ ಹರಹು), ಹರವು (ಈ ನೆಗಳ್ತೆಗಳ ಹರವು ದೊಡ್ಡದು)
pus — ನಾ ಕೀವು (ಕೀವುಗಟ್ಟು)
pus (to form) — ಕ್ರಿ ಕೀ (ಕೀತಿರುವ ಹುಣ್ಣು)
push — ಕ್ರಿ ನೂಕು (ನೂಕಿಹಾಕು; ನೂಕಾಡು; ನೂಕುತೆರೆ; ನೂಕುಬಂಡಿ),ತಳ್ಳು (ಬಾಗಿಲು ತಳ್ಳು; ತಳ್ಳಿಹಾಕು; ತಳ್ಳುಗಾಡಿ), ದೂಕು, ದೂಡು (ಬಾವಿಗೆ ದೂಡು), ದಬ್ಬು (ಹೊರಗೆ ದಬ್ಬು; ದಬ್ಬಾಳಿಕೆ)
push aside — ಕ್ರಿ ಒತ್ತರಿಸು (ಮುಂದಿದ್ದವರ ನ್ನೆಲ್ಲ ಒತ್ತರಿಸಿ ಒಳಗೆ ಬಂದ), ಎಡಗಲಿಸು
push away — ಕ್ರಿ ಗದಮು (ಆತನನ್ನು ಗದಮಿ ಹೊರಗೆ ಹಾಕಿದರು)
push button — ನಾ ತಳ್ಳುಗುಂಡಿ, ತಳ್ಳುಗುಬ್ಬಿ
pushforward — ಕ್ರಿ ಗುಮ್ಮು (ಗುಮ್ಮುಹಾಕು - ಗುಮ್ಮುಹಾಕಿ ಈಜು), ತೂಳು in ಕ್ರಿ ಹೆಟ್ಟು (ಮೊಳೆ ಹೆಟ್ಟು)
pushcart — ನಾ ತಳ್ಳುಗಾಡಿ
pusillanimous — ಗು ಹೇಡಿ, ಪುಕ್ಕಲು
pustule — ನಾ ಬೊಕ್ಕೆ (ನಾಲಿಗೆಯ ಮೇಲೆ ಬೊಕ್ಕೆಗಳೆದ್ದಿವೆ), ಗುಳ್ಳೆ (ನೀರುಗುಳ್ಳೆ; ಸುಟ್ಟಗುಳ್ಳೆ), ಮೊಡವೆ (ಮೋರೆಯ ತುಂಬ ಮೊಡವೆಗಳೆದ್ದಿವೆ)
put — ಕ್ರಿ ಇಕ್ಕು (ಇಕ್ಕಿದ ಕೂಳು; ಕೊರಳಿಗೆ ಇಕ್ಕಿದ ಇಂಡೆ), ಇಡು (ಆಡಿಲಿುಡು, ಎತ್ತಿಡು, ಗೋಳಿಡು, ನೆನಪಿಡು, ಹೆಸರಿಡು; ಇಟ್ಟು ಕೊಳ್ಳು),ಒಡ್ಡು (ತಂಗಾಳಿಗೆ ಮಯ್ಯೊಡ್ಡು), ಹಾಕು (ಬಾಲಿುಗೆ ಹಾಕು; ಆಕಳಿಗೆ ಮೇವು ಹಾಕು), ಕುಕ್ಕು (ಕುಕ್ಕರಿಸು)
put (on the head) — ಕ್ರಿ ಸೂಡು (ಮದುವೆಗೆ ಹೋಗಲು ದೊಡ್ಡ ಮಲ್ಲಿಗೆಯ ಇಂಡೆ ಯನ್ನೇ ಸೂಡಿದ್ದಾಳೆ)
put aside — ಕ್ರಿ ಓಸರಿಸು (ಹೊತ್ತಗೆಗಳನ್ನೆಲ್ಲ ಓಸರಿಸಿ ಎಡೆಮಾಡಿಕೊಟ್ಟ)
put down — ಕ್ರಿ ಅದುಮು, ಅಂಕೆಯಲ್ಲಿಡು, ಅಡಗಿಸು
put forward — ಕ್ರಿ ಮುಂದಿಡು, ಮುಂದಿರಿಸು
put in a row — ಕ್ರಿ ಓರಣಿಸು (ಹಣ್ಣು ಗಳನ್ನೆಲ್ಲ ಒಂದು ಸಾಲಿನಲ್ಲಿ ಓರಣಿಸಿ ಇರಿಸಿದ್ದಾನೆ)
put off — ಕ್ರಿ ಮುಂದೆ ಹಾಕು
put on — ಕ್ರಿ ತಳೆ (ತಳೆದ ಬಟ್ಟೆ), ಉಡು (ಸೀರೆ ಉಡು), ತೊಡು (ಅವಳು ತೊಟ್ಟ ಬಳೆ ಚನ್ನಾಗಿದೆ)
put together — ಕ್ರಿ ಹೂಡು (ಒಲೆ ಹೂಡು; ಚಪ್ಪರ ಹೂಡು), ಕುಪ್ಪು, ಒತ್ತರಿಸು
put up — ಕ್ರಿ ನೀಡು, ನೆಲೆಕೊಡು, ಬೆಂಬಲಿಸು
put upon — ಕ್ರಿ ಕವುಚು (ಬುಟ್ಟಿಯನ್ನು ಕೋಳಿ ಮರಿಗಳ ಮೇಲೆ ಕವುಚಿ ಹಾಕಿದಳು)
putative — ಗು ನಂಬಿದ, ಎಣಿಸಿದ
putrefy — ಕ್ರಿ ಕೊಳೆ (ಕೊಳೆತು ನಾರು), ಕೆಡು (ತರಗೆಲೆ ಬಿದ್ದು ಕೊಳದ ನೀರು ಕೆಟ್ಟು ಹೋಗಿದೆ)
putrid — ಗು ಚಳಿಯ (ಚಳಿಯ ಕೊಳ), ಕೊಳಕು (ಕೊಳಕುತನ, ಕೊಳಕು ನುಡಿ); ಕೊಳಚೆ (ಕೊಳಚೆ ದಾರಿ, ಕೊಳಚೆ ನೀರು)
puzzle — ನಾ ಒಗಟು (ಒಗಟು ಹಾಕು; ಒಗಟು ಬಿಡಿಸು; ಅವಳು ಹಾಕಿದ ಒಗಟನ್ನು ಬಿಡಿಸಲು ಯಾರೂ ಮುಂದೆಬರಲಿಲ್ಲ)
pygmy — ನಾ ಕುಳ್ಳ (ಕುಳ್ಳನನ್ನು ಮಕ್ಕಳು ಸುತ್ತುವರಿದಿದ್ದಾರೆ)
pyorrhea — ನಾ ಒಸಡುಸೋಕು ನಾ ಸಿಡಿಮದ್ದು
python — ನಾ ಹೆಬ್ಬಾವು (ಹೆಬ್ಬಾವು ಮರದ ಕೊಂಬೆಗೆ ಸುತ್ತಿಕೊಂಡಿದೆ)