← Ch 14  ·  Contents  ·  Ch 16 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

R

rabble — ನಾ ದೊಂಬಿ
rabid — ಗು 1 ಕೆರಳಿದ, ಕನಲಿದ 2 ನಾಲಿು ಹುಚ್ಚಿನ
rabies — ನಾ ನಾಲಿುಹುಚ್ಚು
racant — ಕ್ರಿ ನಂಬಿಕೆ ಕಳೆ
race — ನಾ 1 ಓಟ (ಓಟದ ಪೋಟಿ) 2ತಳಿ, ಬುಡಕಟ್ಟು
rack — ನಾ ಪತ್ತಿಗೆ (ಗೋಡೆಯ ಉದ್ದಕ್ಕೂ ಪತ್ತಿಗೆಲಿುದೆ)
racketeer — ನಾ ಮೋಸಗಾರ, ಮಾಜುಗ, ಕೆಯ್ತಗಾರ
raconteur — ನಾ ಕತೆಹೇಳುಗ, ಕತೆಕೊರೆಗ
radiate — ಕ್ರಿ ಹರಡು, ಹೊರಸೂಸು, ಬೀರು (ಸುತ್ತ ಬೀರುವ ಕಂಪು)
radiation — ನಾ ಸೂಸಿಕೆ, ಬೀರಿಕೆ
radical — ಗು ಅಡಿಪಾಯದ (ಅಡಿಪಾಯದ ತಿದ್ದಿಕೆ; ಅಡಿಪಾಯದ ಮಾರ್ಪಾಡು)
radio — ನಾ ಬಾನುಲಿ, ಬಾನ್ನುಡಿ
radius — ನಾ 1 ಅರೆ (ಗಾಲಿಯ ಅರೆ) 2 ಕದಿರು 3 ಮುಂಗಯ್ಮೊಳೆ
raffish — ಗು ಒಚ್ಚಿಯ, ಕೆಟ್ಟಹೆಸರಿನ
raffle — ನಾ ಸಲಿ್ಪುನ ಆಯ್ಕೆ
raft — ನಾ ಕೋಲು (ಹರಿಗೋಲು),ತೆಪ್ಪ (ತೆಪ್ಪತೇರು)
rafter — ನಾ ಪಟ್ಟೆ, ಎಳೆ (ಮಾಡಿನ ಎಳೆಗಳೆಲ್ಲ ಕುಂಬಾಗಿವೆ)
rag — ಗು ಹರುಕು (ಹರುಕು ಬಟ್ಟೆ), ಕೋರಿ (ಆತನ ಹೆಗಲ ಮೇಲೆ ಒಂದು ಕೋರಿ ಕಂಬಳಿಲಿುತ್ತು)
rage — ಕ್ರಿಕೀರು,ಕೆರಳು (ಮಾತನಾಡಿದರೆ ಕೆರಳುತ್ತಾನೆ), ಕನಲು
ragged — ಗು 1 ಹರಿದು ಚಿಂದಿಯಾದ 2 ಕೊರಕಲು (ಕೊರಕಲು ಹಾದಿ), ತರಕಲು
raid — ಕ್ರಿ ಮೇಲೆ ಬೀಳು, ಎರಗು
rail — ನಾ ಕಂಬಿ (ಕಂಬಿ ಹಿಡಿದು ನಡೆಯುತ್ತಿದ್ದ)
railing — ನಾ 1 ಕಟಕಟೆ (ಕಟಕಟೆಯೊಳಗೆ ನಿಂತಿರುವ ಕಳ್ಳ) 2 ಬಯ್ಗಳು, ಜಂಕೆ
raillery — ನಾ ಗೇಲಿಮಾತು, ಗೇಲಿನುಡಿ ನಾ ಉಡುಗೆ, ಉಡುಪು (ಗಂಡಸಿನ ಉಡುಪು; ಉಡುಪುತೊಡುಪು), ಕೊರೆ (ಉಡುಗೊರೆ)
rain — ನಾ ಮಳೆ (ಮಳೆನೀರು, ಮಳೆಗಾಲ; ಅರೆಮಳೆ; ಹೂಮಳೆ), ಕಾರು (ಕಗ್ಗಾರು; ಮುಂಗಾರು - ಮುಂಗಾರು ಮಳೆ; ಕಾರು ಬೆಳೆ; ಕಾರಗಪ್ಪೆ, ಕಾರಿರುಳು; ಕಾರ್ಗಾಲ; ಕಾರ್ಮುಗಿಲು), ಉಬ್ಬೆ (ಉಬ್ಬೆಗೆ ಸಿಕ್ಕಿ ಒದ್ದೆ ಯಾದ), ಸರಿ (ಮಂಜಿನ ಸರಿ; ಬೆಳ್ಸರಿ; ಸರಿಮಳೆ)
rain — ಕ್ರಿಕರೆ (ಕರೆವ ಮುಗಿಲು), ಮಳೆಸುರಿ (ನಿನ್ನೆಲಿುಂದಲೂ ಮಳೆಸುರಿಯಯ್ತ್ತಿದೆ)
rainbow — ನಾ ಮಳೆಬಿಲ್ಲು (ಮಳೆಬಿಲ್ಲಿನ ಉಯ್ಯಾಲೆ)
raincoat — ನಾ ಮಳೆಯಂಗಿ
rainfall — ನಾ 1 ಮಳೆಸುರಿತ 2 ಮಳೆಯಳತೆ
rain-forest — ನಾ ಮಳೆಕಾಡು
rain-gauge — ನಾ ಮಳೆಯಳಕ
raise — ಕ್ರಿ 1 ಎತ್ತು (ಮೇಲಕ್ಕೆ ಎತ್ತು), ಎತ್ತ ರಿಸು, ನಿಗುರು (ಕುದುರೆಯ ಕಿವಿ ನಿಗುರಿದೆ) 2 ಬೆಳೆಸು
raised ground — ನಾ ಏರಿ, ದಿಣ್ಣೆ (ಆಕೆ ಮನೆಯ ಮುಂದಿನ ದಿಣ್ಣೆಯ ಮೇಲೆ ಕುಳಿತಿದ್ದಳು), ಮಿಟ್ಟೆ (ಮಿಟ್ಟೆನೆಲ)
rake — ನಾ ಮಡಿಕೆ,ಗೋರಿ, ಕುಂಟೆ (ಕುಂಟೆ ಹೊಡೆ)
rally — ನಾ 1 ಕೂಟ, ಮೇಳ 2 ಕುದುರಿಕೆ 3 ಬಂಡಿಯೋಟ
rally — ಕ್ರಿ 1 ಒಟ್ಟುಸೇರು 2 ಕುದುರು (ಕುತ್ತ ದಿಂದ ತುಸು ಕುದುರಿಕೊಂಡಿದ್ದಾನೆ)
ram — ನಾ ಟಗರು, ತಗರು (ತಗರಿನ ಬಲಿತ ಕೊಂಬು; ತಗರ ಕಾಳಗ)
ram — ಕ್ರಿ ಜಡಿ (ಜಡಿದು ತುಂಬಿಸು; ಜಡಿಮಳೆ; ಜಡಿತ), ಡಿಕ್ಕಿಹೊಡೆ
ramble — ಕ್ರಿ 1 ಸುತ್ತಿಬಳಸಿ ನುಡಿ 2 ಅಲೆ ದಾಡು, ಸುತ್ತಾಡು, 3 ಹಬ್ಬು (ಎಲ್ಲಡೆ ಹಬ್ಬು)
ramify — ಕ್ರಿ ಕವಲೊಡೆ (ಮರ ಕವಲೊಡೆದು ಹಬ್ಬಿದೆ)
rampage — ಕ್ರಿ ಎಗರಾಡು, ನುಗ್ಗು, ಕೆರಳಿ ಓಡಾಡು
rampart — ನಾ ಕೊಂಚೆ (ಕೊಂಚೆಯ ಮೇಲೆ ಹತ್ತಿ ನೋಡಿದ)
ramshakle — ಗು ಕುಸಿಯುತ್ತಿರುವ
ranch — ನಾ ಹುಲ್ಲುಗಾವಲು, ದೊಡ್ಡ ಪಣ್ಣೆಯ
rancid — ಗು ಕಮಟು (ಕಮಟು ಎಣ್ಣೆ)
rancour — ನಾ ಕಡುಹಗೆ ಗು ಗೊತ್ತುಗುರಿಲಿುಲ್ಲದ (ಗೊತ್ತು ಗುರಿಲಿುಲ್ಲದ ಅಲೆದಾಟ, ಕಟ್ಟಲೆಲಿುಲ್ಲದ (ಕಟ್ಟಲೆಲಿುಲ್ಲದ ಆಯ್ಕೆ)
range — ನಾ 1 ಸಾಲು (ಬೆಟ್ಟಗಳ ಸಾಲು), ವರಸೆ 2 ಗುಂಡು ಹೊಡೆಯುವೆಡೆ 3 ಹುಲ್ಲುಗಾವಲು 4 ಹರಹು
range — ಕ್ರಿ 1 ಓರಣಗೊಳಿಸು, ಸಾಲಾಗಿರಿಸು 2 ಅಲೆದಾಡು
rank — ನಾ 1 ಸಾಲು 2 ಮಟ್ಟ (ಬಾಳ್ವೆಯ ಮಟ್ಟ; ಪಡೆಯ ಮಟ್ಟ)
rankle — ಕ್ರಿ 1 ನೋಯು (ಕೀವು ತುಂಬಿ ನೋಯು) 2 ಕೆರಳಿಸು, ರೇಗಿಸು
ransack — ಕ್ರಿ ಕೊಳ್ಳೆಹೊಡೆ, ಸೂರೆಮಾಡು (ಯಾರೂ ಇಲ್ಲದಾಗ ಬಂದು ಮನೆಯನ್ನೆಲ್ಲ ಸೂರೆಮಾಡಿದರು)
ransom — ನಾ ಬಿಡುಗಡೆಯ ಬೆಲೆ
rant — ಕ್ರಿ ಅಬ್ಬರಿಸು (ಅಬ್ಬರಿಸಿ ಮಾತನಾಡು), ಕೂಗಾಡು
rap — ಕ್ರಿ ಮೊಟ್ಟು (ತಲೆಯ ಮೇಲೆ ಮೊಟ್ಟು), ತಟ್ಟು (ಬಾಗಿಲು ತಟ್ಟು), ಗುದ್ದು
rapacious — ಗು ಪೇರೆಳಸಿನ, ಕೆಟ್ಟೆಳಸಿನ, ದೋಚಿಕೊಳ್ಳುವ, ಸುಲಿಗೆ ನಡೆಸುವ
rape — ಕ್ರಿ ತುಯ್ಯು, ಕೆಡಿಸು
rapid — ಗು ಬಿರುಸಿನ, ಉರುಬಿನ
rapier — ನಾ ಕಿರುಕತ್ತಿ, ಇರಿಗತ್ತಿ
rapport — ನಾ ಹೊಂದಾಣಿಕೆ (ಅವರೊಳಗೆ ಹೊಂದಾಣಿಕೆಲಿುಲ್ಲ)
rapt — ಗು ಮಯ್ಮರೆತ
rapture — ನಾ ಕಡುಸೊಗಸು, ಒಚ್ಚತ, ನಲಿವು
rare — ಗು 1 ಎಲ್ಲಡೆಲಿುಲ್ಲದ, ಹೆಚ್ಚು ಕಾಣ ಸಿಗದ 2 ಮಿಗಿಲಾದ 3 ತೆಳುವಾದ, ದಟ್ಟವಲ್ಲದ 4 ಅರೆಬೆಂದ
rash (be) — ಕ್ರಿ ದುಡುಕು (ನೀನು ದುಡುಕಿದೆ; ದುಡುಕು ಕೆಲಸ)
rashly — ಗು ಅಡಬಡ (ಅಡಬಡ ತಿನ್ನು)
rashness — ನಾ ಉರ (ಉರವಣಿ)
rasp — ನಾ ಒರಟು ಅರ
rat — ನಾ ಇಲಿ (ಮೂಗಿಲಿ; ಸುಂಡಿಲಿ)
rat snake — ನಾ ಕೇರೆ (ಕೇರೆಹಾವು)
rate — ನಾ 1 ಬೆಲೆ (ಬೆಲೆಯೇರು) 2 ಮಟ್ಟ, ಬಗೆ ಕ್ರಿ 1 ಬೆಲೆಕಟ್ಟು 2 ಬಯ್ಯು, ಹಳಿ
ratify — ಕ್ರಿ ಒಪ್ಪು, ಒಪ್ಪಿಗೆ ಕೊಡು
ratio — ನಾ 1 ಹೊಂದಿಕೆ 2 ಹಸುಗೆ, ತುಂಡು
ration — ನಾ ಪಡಿತರ, ಪಾಲು
rational — ಗು ತೀರ್ಮಾನಿಸಬಲ್ಲ, ಓರಬಲ್ಲ
rattle box — ನಾ ಗಿಲಿಕೆ (ಮಗುವಿಗೊಂದು ಗಿಲಿಕೆ ತಂದಿದ್ದಾರೆ)
rattle-drum — ನಾ ಬುಡುಬುಡಿಕೆ
raucous — ಗು ಒರಟು (ಒರಟು ಮಾತು), ಗಡುಸು
ravage — ಕ್ರಿ ಹಾಳುಗೆಡವು
rave — ಕ್ರಿ ಹುಚ್ಚಾಡು, ಕೂಗಾಡು (ಬೆಳಿಗ್ಗಿ ನಿಂದಲೂ ಕೂಗಾಡುತ್ತಿದ್ದಾನೆ)
ravel — ಕ್ರಿ ಬಿಡಿಸು (ಗಂಟುಬಿಡಿಸು, ಸಿಕ್ಕು ಬಿಡಿಸು)
ravenous — ಗು ತುಂಬಾ ಹಸಿದ
ravine — ನಾ ಕಮ್ಮರಿ,ಕಣಿವೆ
ravish — ಕ್ರಿ 1 ಎಳೆದುಕೊಂಡು ಹೋಗು 2 ಹಿಗ್ಗಿಸು, ಸೊಗಸುಪಡಿಸು
raw — ಗು 1 ಹಸಿ (ಹಸಿಕಟ್ಟಿಗೆ; ಹಸಿಗೋಡೆ; ಹಸಿಬಿಸಿ) 2 ಪಳಗದ, ಹದಗೊಳಿಸದ, ಮಾಯದ (ಮಾಯದ ಹುಣ್ಣು)
ray (of light) — ನಾ ಕದಿರು (ಚೆಂಗದಿರು; ತಣ್ಗದಿರು), ತೊಳಪು
raze — ಕ್ರಿ ಮಟ್ಟಹಾಕು, ನೆಲಸಮ ಮಾಡು, ಹಾಳುಗೆಡವು
razor — ನಾ ಕತ್ತಿ (ಹರಿತ ಅಲಗಿನ ಕತ್ತಿ), ಬಾಳು (ಕೂರ್ವಾಳು; ಬಾಳ್ಮೊನೆ)
reach — ಕ್ರಿ ಸೇರು (ದಡ ಸೇರು), ಎಟಕು (ಕಯ್ಗು ಎಟಕುವ ಹಣ್ಣು; ತಿಳುವಳಿಕೆಗೆ ಎಟಕದ ಮಾತು), ಹೊಂದು, ತಲಪು (ಮನೆಗೆ ತಲಪಿದ ಹುಡುಗ), ತೇರು (ತೇರದವನು; ತೇರ್ಗಡೆಯಾಗು), ಕಿಟ್ಟು (ಅವನಿಗೆ ಕಿಟ್ಟಿದ ಕೆಲಸ), ಅಂದು (ಅದು ನನ್ನ ಕಯ್ಗು ಅಂದು ವುದಿಲ್ಲ; ಅಂದಿಕೋ; ಅಂದಿಕೊಡು), ಮುಟ್ಟು (ಹಳ್ಳಿಗೆ ಹೋಗಿ ಮುಟ್ಟಿದರು; ಮುಟ್ಟಲಿುಸು), ಎಟ್ಟು (ಕಣ್ಣೆಟ್ಟುವಷ್ಟು ದೂರ; ಎಟ್ಟಿಬರು), ನಿಲುಕು (ನಿಲುಕಿಸು; ಕಯ್ಗೆ ನಿಲುಕದ ಹಣ್ಣು; ನಾಲಿಗೆಗೆ ನಿಲುಕದ ಮಾತು)
reach up — ಕ್ರಿ ಎಕ್ಕು (ಎಕ್ಕಳಿಸು), ಎಟ್ಟು (ಎಟಕಿಸು; ಎಟ್ಟಿಕೆ)
react — ಕ್ರಿ ಮಾರೆಸಗು
reaction — ನಾ ಮಾರೆಸಕ, ಇದಿರೆಸಕ ಗು ಮಾರೆಸಗುವ, ಎದುರಿ ಸುವ (ಮಾರ್ಪಾಡುಗಳನ್ನೆಲ್ಲ ಎದುರಿಸುವ ಹುಚ್ಚು ಆತನಲ್ಲಿತ್ತು)
read — ಕ್ರಿ ಓದು (ಓದುಬರಹ)
readable — ಗು ಓದಿಸಿಕೊಳ್ಳುವ, ಓದಬಲ್ಲ, ಗಮನಸೆಳೆವ
reader — ನಾ 1 ಓದಾಳಿ, ಓದುಗಾರ, ಓದುಗ 2 ಕಲಿಕೆಯ ಹೊತ್ತಗೆ, ಕಲಿಕಡತ
readily — ಗು ಕೂಡಲೆೀ (ಹೇಳಿದ ಕೂಡಲೆೀ ಬಂದ), ತಡಮಾಡದೆ, ಒಡನೆಯೇ
readiness — ನಾ ಒಪ್ಪಿಗೆ, ಅಣಿ
reading — ನಾ ಓದಿಕೆ
ready — ಕ್ರಿ ನಿರಿ, ಅಣಿಯಾಗು (ಎಲ್ಲವೂ ಅಣಿಯಾಗಿದೆ; ನಾವು ಹೋಗುವ ಮೊದಲೆೀ ಆತ ಅಣಿಯಾಗಿದ್ದ), ಸಮೆ (ಸಮೆದ ಏರ್ಪಾಡು), ಸಮನಿಸು (ಹೊನ್ನಿದ್ದರೆ ಯಾವುದೂ ಸಮನಿಸೀತು)
ready — ಗು ಸಮ (ಸಮಕಟ್ಟು; ಸಮತಿಳಿಸು)
real — ಗು ನನ್ನಿಯಾದ, ನನಸಾದ, ಅನಿಸಿಕೆ ಯಲ್ಲದ
realise — ಕ್ರಿ 1 ಎದೆಗಾಣು (ನಾನಿಲ್ಲ, ತಾನುಂಟು ಎಂಬುದನ್ನು ಎದೆಗಂಡವರು), ತಿಳಿದುಕೊಳ್ಳು, ಮನಗಾಣು 2 ಹಣಪಡೆ, ಗಳಿಸು, ಹಣವಾಗಿಸು
reality — ನಾ ನನಸು (ಕನಸು ನನಸಾಲಿುತು)
reallot — ಕ್ರಿ ಮರುಹಂಚು (ಒಮ್ಮೆ ಹಂಚಿದ ಮನೆಗಳನ್ನು ಈಗ ಮರುಹಂಚುತ್ತಿದ್ದಾರೆ)
realm — ನಾ 1 ನಾಡು 2 ಹರವು (ನೆನಸಿಕೆಯ ಹರವು)
reap — ಕ್ರಿ 1 ಕೊಯ್ಯು (ಕೆಯ್ಕೊಯ್ಯು; ಹುಲ್ಲು ಕೊಯ್ಯು) 2 ಪಡೆ
reaping — ನಾ ಅರಿಹ,ಕೊಲಿುಲು (ಇನ್ನೂ ಕೊಲಿುಲು ಮುಗಿದಿಲ್ಲ)
rear — ಕ್ರಿ 1 ನೇರ ನಿಲ್ಲು, ನೇರ ಮೇಲೆೀರು (ಬೆಟ್ಟ ಇಲ್ಲಿಂದ ನೇರ ಮೇಲೆೀರುತ್ತದೆ) 2 ಸಾಕು (ನಾಲಿುಮರಿ ಸಾಕು), ಬೆಳೆಸು (ಮಕ್ಕಳನ್ನು ಬೆಳೆಸಿ ದೊಡ್ಡದು ಮಾಡು)
rear — ಗು ಹಿಂ (ಹಿಂಬದಿ, ಹಿಂದುಗಡೆ)
rear-guard — ನಾ ಬೆಂಗಾವಲು
rearing — ಗು ಹಾತೊರೆಯುವ (ಅಜ್ಜಿಮನೆಗೆ ಹೋಗಲು ಹಾತೊರೆಯುವ ಹುಡುಗ)
reason — ನಾ ಸಲುವು, ದೂಸರು (ನಿಮ್ಮೊಡನೆ ಹೋದ ದೂಸರಿಂದ ನನಗಿಷ್ಟು ತೊಂದರೆ ಯಾಲಿುತು), ಮುಳಿ (ಅವರಲ್ಲಿಗೆ ಹೋಗಲು ನನಗೆ ಮುಳಿಯೇನೂ ಇಲ್ಲ)
reasonable — ಗು 1 ನೇರ್ಪಾದ, ಸರಿಯಾದ, ಕಟ್ಟಲೆತಪ್ಪದ 2 ಹೆಚ್ಚಲ್ಲದ, ಹೆಚ್ಚು ಬೆಲೆ ಲಿುಲ್ಲದ ಕ್ರಿ ಮರುಮಾತುಕೊಡು, ನಂಬಿಕೆ ಯುಳಿಸು
rebate — ನಾ ಕಳೆತ (ಕಳೆತ ಎಷ್ಟು ಕೊಟ್ಟಿ ದ್ದಾರೆ?), ತಳ್ಳುಪಡಿ, ತರಗು
rebel — ಕ್ರಿ ತಿರುಗಿ ಬೀಳು, ಎದುರು ನಿಲ್ಲು (ಆತ ಎದುರು ನಿಂತವರನ್ನೆಲ್ಲ ಸೆರೆಮನೆಗೆ ತಳ್ಳಿದ್ದಾನೆ)
rebirth — ನಾ 1 ಮರುಹುಟ್ಟು 2 ಹೊಸಬಾಳು
rebound — ನಾ ಹಿನ್ನೆಗೆತ (ಕೋವಿಯ ಹಿನ್ನೆಗೆತ ದಿಂದ ಆತ ಕೆಳಗೆ ಬಿದ್ದ)
rebound — ಕ್ರಿ ಹಿನ್ನೆಗೆ, ಪುಟಿದೇಳು
rebuff — ಕ್ರಿ 1 ಹಿಮ್ಮೆಟ್ಟಿಸು 2 ತಳ್ಳಿಹಾಕು (ನನ್ನ ಒದವಿಯನ್ನು ಆತ ತಳ್ಳಿಹಾಕಿದ)
rebuke — ಕ್ರಿ ಜರೆ (ಆತ ಯಾರನ್ನು ಜರೆಯು ತ್ತಿದ್ದಾನೆ?), ತೆಗಳು (ತೆಗಳಿಕೆ), ಹಳಿ (ಹಳಿವ ನುಡಿ), ಗದರಿಸು (ನಿಮ್ಮನ್ನು ಆತ ಗದಿರಿಸು ತ್ತಿದುದು ಯಾಕೆ?)
rebut — ಕ್ರಿ ಅಲ್ಲಗಳೆ, ತಪ್ಪೆಂದು ತೋರಿಸು
recalcitrant — ಗು ಹೇಳಿದ್ದು ಕೇಳದ, ಒಪ್ಪದ, ಹಟಮಾರಿ, ಮೊಂಡು
recall — ಕ್ರಿ 1 ಹಿಂದೆಗೆ, ಹಿಂಗರೆ (ಹಿಂಗರೆತ) 2 ನೆನೆ, ನೆನಪಿಸು
recapitulate — ಕ್ರಿ ಇನ್ನೊಮ್ಮೆ ಹೇಳು, ಚುಟು ಕಾಗಿ ಹೇಳು
recapture — ಕ್ರಿ ಮತ್ತೆ ಸೆರೆಹಿಡಿ
recast — ಕ್ರಿ 1 ಮಾರೆರಕ ಹೊಯ್ಯು 2 ತಿದ್ದು, ಹೊಸದಾಗಿಸು
recede — ಕ್ರಿ ಹಿಮ್ಮೆಟ್ಟು, ಹಿಂದೆಸರಿ, ಹಿಂದುಳಿ
receipe — ನಾ ಮಾಡುವ ಬಗೆ
receipt — ನಾ ಸಲ್ಲಿಕೆ (ಹಣ ಕೊಟ್ಟುದಕ್ಕೆ ಸಲ್ಲಿಕೆ ಪಡೆಯದಿರಬೇಡಿ)
receive — ಕ್ರಿ 1 ಪಡೆ (ಹಣಪಡೆ) 2 ಎದುರುಗೊಳ್ಳು (ಬಂದವರನ್ನು ಎದುರು ಗೊಳ್ಳಲು ಯಾರು ಹೋಗಿದ್ದಾರೆ?)
receiver — ನಾ ಪಡೆಗ (ಹಣಪಡೆಗ)
recent — ಗು ಇತ್ತೀಚಿನ (ಅವನ ಇತ್ತೀಚಿನ ಬರಹ), ಈಚಿನ
receptacle — ನಾ ಹಿಡಿಗೆ, ಹಿಡಿಕಲ
reception — ನಾ ಬರಮಾಡುಗೆ (ಅರಸನ ಬರಮಾಡುಗೆಗೆ ನೂರಾರು ಮಂದಿ ಸೇರಿ ದ್ದರು), ಎದುರುಗೊಳಿಕೆ
recess — ನಾ 1 ಬಿಡುವು 2 ತೂತು, ಕಂಡಿ (ಗೋಡೆಯ ಕಂಡಿಯಲ್ಲಿರಿಸಿದ ಹಣ ಕಳೆದು ಹೋಗಿದೆ)
recession — ನಾ ಹಿಂಜರಿತ, ಹಿನ್ನಡೆ, ಇಳಿಕೆ ನಾ ಪಡೆಪುಗಾರ (ಪಡೆಪು ಗಾರರನ್ನೆಲ್ಲ ಬರಮಾಡಿದ್ದಾರೆ), ಪಡೆಗ (ಪಡೆಗರೆಲ್ಲ ಇಲ್ಲಿ ಕುಳಿತುಕೊಳ್ಳಿ)
reciprocal — ಗು ಒಬ್ಬನಿಗೊಬ್ಬ, ಒಂದ ಕ್ಕೊಂದು
reciprocate — ಕ್ರಿ 1 ಹಿಂದಿರುಗಿಸು 2 ಕೊಡುಕೊಳ್ಳು 3 ಮುಂದೂ ಹಿಂದೂ ಓಡು
reckless — ಗು ಎಚ್ಚರಿಕೆಲಿುಲ್ಲದ, ದುಡುಕುವ
reckon — ಕ್ರಿ 1 ಎಣಿಸು, ಲೆಕ್ಕ ಹಾಕು 2 ಗುರುತಿಸು 3 ಬೆಲೆಕಟ್ಟು, ತೀರ್ಮಾನಿಸು
reclaim — ಕ್ರಿ 1 ಹಿಂದಕ್ಕೆ ಪಡೆ, ಹಿಂದೆಕೇಳು 2 ತಿದ್ದು, ಸರಿಪಡಿಸು
reclamation — ನಾ ಹಿಂಪಡೆತ (ಕಡಲಿನಿಂದ ನೆಲದ ಹಿಂಪಡೆತ ನಡೆಸುತ್ತಿದ್ದಾರೆ)
recline — ಕ್ರಿ ಒರಗು (ಗೋಡೆಗೆ ಒರಗಿ ಕುಳಿತಿ ದ್ದಾನೆ)
recluse — ನಾ ತೊರೆಗ, ಒಂಟಿ
recognise — ಕ್ರಿ ಗುರುತಿಸು, ಗುರುತು ಹಿಡಿ (ನನಗೆ ನಿಮ್ಮ ಗುರುತು ಹಿಡಿಯಲು ಕೂಡಲಿಲ್ಲ)
recognition — ನಾ ಗುರುತು, ಗುರುತು ಹಿಡಿಯುವಿಕೆ
recoil — ಕ್ರಿ 1 ತೂಳು (ಹೊಡೆದಾಗ ಹಿಂದಕ್ಕೆ ತೂಳಿದ ಕೋವಿ ಆತನ ಎದೆಗೆ ಬಡಿಲಿುತು) 2 ಕಂಟಳಿಸು, ಹೇವರಿಸು (ಅದನ್ನು ನೋಡಿ ಆತ ಹೇವರಿಸಿದ), ಹೇಸು (ಹೇಸು ಮಾತು; ಆತ ಯಾವುದಕ್ಕೂ ಹೇಸುವುದಿಲ್ಲ), ಗುಂಪಿಸು, ಗುಮ್ಮು (ಗುಮ್ಮಿಕ್ಕು; ಗುಮ್ಮಿಡು)
recollection — ನಾ ನೆನವು, ನೆನವರಿಕೆ (ಎಲ್ಲಿ ನೋಡಿದ್ದೆನೋ ನೆನವರಿಕೆಲಿುಲ್ಲ; ನೆನ ವರಿಸು)
recommend — ಕ್ರಿ ಒಲವುತೋರು, ಮೆಚ್ಚುಗೆ ತಿಳಿಸು, ತಿಳುವಳಿಕೆ ನೀಡು
recommendation — ನಾ ಮೆಚ್ಚುಗೆಯ ಮಾತು, ಮೆಚ್ಚುಗೆಯ ಹೇಳಿಕೆ
recompense — ಕ್ರಿ ಕಳೆತ ತುಂಬು, ಮೆಚ್ಚುಗೆ ಕೊಡು
reconcilation — ನಾ ಹೊಂದಾಣಿಕೆ (ಅವರ ನಡುವೆ ಹೊಂದಾಣಿಕೆಯಾಗುವುದು ಹೇಗೆ?)
reconcile — ಕ್ರಿ ಬಗೆಹರಿಸು, ಹೊಂದಾಣಿಕೆ ನಡೆಸು
recondite — ಗು ತಿಳಿಯದ, ತಿಳಿವಿಗೆ ನಿಲುಕದ, ಮುಚ್ಚುಮರೆಯ, ಹುದುಗಿದ
recondition — ಕ್ರಿ ಸರಿಪಡಿಸು, ಹೊಸದಾಗಿ ಮಾಡು
reconnaissance — ನಾ ಬೇಹುಗಾರಿಕೆ (ಬೇಹುಗಾರಿಕೆ ಮಾಡು)
reconsider — ಕ್ರಿ ಮಾರೋರು, ಮತ್ತೆ ಉನ್ನಿಸು
reconstruct — ಕ್ರಿ ಮತ್ತೆಕಟ್ಟು, ಮತ್ತೆ ಸೇರಿಸು
record — ಕ್ರಿ 1 ಬರೆದಿಡು 2 ಅಚ್ಚೊತ್ತು
recorder — ನಾ ಅಚ್ಚೊತ್ತುಗ ನಾ ಮರುಎಣಿಕೆ (ಮರುಎಣಿಕೆ ಯಲ್ಲಿ ಆತನಿಗೆ ಗೆಲವಾಲಿುತು), ಮಾರೆಣಿಕೆ
recount — ಕ್ರಿ 1 ಮಾರೆಣಿಸು 2 ಕೊಗೆ, ತಿಳಿಹೇಳು
recoup — ಕ್ರಿ ಕಳೆತ ಗಳಿಸು
recourse — ನಾ ಒದಗಿಕೆ, ನೆರವು
recover — ಕ್ರಿ 1 ಕುದುರು (ಮಯ್ಗುದುರು), ತೆಪ್ಪರು (ತೆಪ್ಪತ್ತು ಎದ್ದು ಕುಳಿತ; ತೆಪ್ಪರಿಸು), 2 ಮರಳಿಪಡೆ (ಕದ್ದುಹೋದ ಒಡವೆ ಗಳನ್ನು ಮರಳಿಪಡೆದೆವು)
recovery — ನಾ ಹದುಳ (ಹದುಳಿರು - ಆತನೀಗ ಹದುಳಿದ್ದಾನೆ; ಹದುಳಿಗ; ಹದುಳಿಸು)
recreate — ಕ್ರಿ ಮತ್ತೆಮಾಡು, ಮತ್ತೆ ಉಂಟು ಮಾಡು, ಮಾರೆಸಗು
recreation — ನಾ ಚಲ್ಲ (ಚಲ್ಲವಾಡು), ದಣಿವುಕಳೆತ
recrimination — ನಾ ಮರುತೆಗಳಿಕೆ
recrudescence — ನಾ ಮರುಕಳಿಕೆ, ಮತ್ತೆ ತಲೆದೋರುವಿಕೆ
recruit — ನಾ ಹೊಸಪಡೆಲಿುಲ, ಹೊಸ ಆಯ್ಕೆ ಯಾಳು
rectangular — ಗು ನೇರಮೂಲೆಯ
rectify — ಕ್ರಿ ಸಾವಗಿಸು (ಸೀರೆಯನ್ನು ಸಾವಗಿಸಿ ಕೊಂಡಳು), ತಿದ್ದು, ಸರಿಪಡಿಸು, ನೇರ್ಪಡಿಸು (ನೇರ್ಪಡಿಕೆ)
rectitude — ನಾ ನಾಣ್ಯ, ನೇರ್ಪು
recumbent — ಗು ಮಲಗಿದ, ಮಯ್ಚಾಚಿದ, ಒರಗಿಕುಳಿತ
recuperate — ಕ್ರಿ ತೆಪ್ಪರು, ಕುದುರು, ಕಳೆತ ಗಳಿಸು
recur — ಕ್ರಿ ಮರುಕಳಿಸು (ತೊಂದರೆ ಮರು ಕಳಿಸಿದೆ; ಮರುಕಳಿಕೆ)
recusant — ಗು ಕಟ್ಟಲೆಗೊಪ್ಪದ, ತಿರುಗಿ ಬೀಳುವ
recycle — ನಾ ಮರುಬಳಕೆ
red — ಗು ಕೆನ್ (ಕೆನ್ನಕ್ಕಿ, ಕೆನ್ನೀರು, ಕೆನ್ನಾಲಿು), ಕೆಂಪು (ಕೆಂಪು ಕಲ್ಲು; ಕೆಂಪ, ಕೆಂಪಿ), ಕೆಂ (ಕೆಂಬಟ್ಟೆ; ಕೆಂಬತ್ತಿ; ಕೆಂಬೊನಲು), ಚೆಂ- (ಚೆಂಗೂದಲು; ಚೆಂದುಟಿ; ಚೆಂಗುಡಿ), ಕೇಸು (ಕೇಸುಗುರು; ಕೇಸುಳ್ಳಿ), ಕಿಸು (ಕಿಸುಗಣ್ಣು; ಕಿಸುವೊನ್ನು, ಕಿಸುವೊನಲು)
red eye — ನಾ ಕೆಂಗಣ್ಣು (ಕೆಂಗಣ್ಣಿನ ಹೆಬ್ಬುಲಿ)
red hot — ಗು ಕೆಂಪಾಗಿ ಕಾದ
red light — ನಾ ಕೆಂಜೊಡರು
red ochre — ನಾ ಜಾಜು,ಕಾವಿ (ಕಾವಿ ಸೀರೆ ಯನ್ನುಟ್ಟ ಮುದುಕಿಯನ್ನು ಇಲ್ಲಿಗೆ ಕರೆಸಿ) rice ನಾ ಕೆಂಗಳವೆ, ಕೆಚ್ಚಕ್ಕಿ
red soil — ನಾ ಕೆನ್ನೆಲ
redden — ಕ್ರಿ ಕೆಕ್ಕರಿಸು (ಆತನ ಕಣ್ಣು ಕೆಕ್ಕರಿಸಿದೆ), ಕಿಸುಗುಟ್ಟು, ಕೆಂಪುಗಟ್ಟು
reddish — ಗು ಅರೆಕೆಂಪು, ಕೆಂಚು (ಕೆಂಚು ಕೂದಲು), ಕೆಂದು (ಕೆಂದೆತ್ತು), ಕೆಚ್ಚನೆ (ಕೆಚ್ಚನೆ ಮೀನು; ಕೆಚ್ಚನೆ ಮಾಡಿದ ಮುಸುಡು)
reddish-brown — ಗು ಕೆಂಗಲು
redeem — ಕ್ರಿ ಒತ್ತೆಬಿಡಿಸು, ಮಾತು ಉಳಿಸು, ಕಳೆತತುಂಬು
redemption — ನಾ ಬಿಡುಗಡೆ (ಕೊನೆಗೂ ಅಡವಿನಿಂದ ಬಿಡುಗಡೆಯಾಲಿುತು)
redhead — ನಾ ಕೆಂದಲೆ
redolent — ಗು 1 ಗಮಗಮಿಸುವ 2 ನೆನ ಪಿಸುವ
redoubt — ನಾ ಕೋಟೆಕೊತ್ತಳ, ಕೊಂಚೆ
redound — ಕ್ರಿ 1 ಸೇರಿಸು 2 ಮಾರೆಸಗು, ಹಿಂದೆಬರು
redress — ಕ್ರಿ ಸರಿಪಡಿಸು, ಕಳೆತತುಂಬು, ತವಳಿಸು
reduce — ಕ್ರಿ ಹಿಂಗು (ಹಿಂಗದ ಬೆಳ್ದಿಂಗಳು), ಆರು (ಆರಿದ ಬೆಂಕಿ), ಉಡುಗು (ಉಡುಗಿದ ಕಾವು), ಕುಗ್ಗು (ಕುಗ್ಗಿದ ಹದುಳ)
reduced — ಗು ಕೊರೆ (ಕೊರೆಸಂಬಳ; ಕೊರೆಯುಸಿರು; ಕೊರೆಯಕ್ಕಿ)
reduction — ನಾ ಕಡಿತ (ಸಂಬಳದಲ್ಲಿ ಕಡಿತ ಮಾಡಿದ್ದಾರೆ), ಇಳುವರಿ, ಇಳುಗಡೆ
redundant — ಗು ಹೆಚ್ಚಿನ, ಬೇಕಾಗದ, ಬೇಡದ
reed — ನಾ 1 ಓಟೆ (ಓಟೆಕೊಳಲು), ಜೊಂಡು (ಆನೆಗೆ ಜೊಂಡು ತಿನ್ನಿಸುತ್ತಿದ್ದಾರೆ) 2 ಕೊಳಲು, ಪೀಪಿ, ಊದುಕೊಳವಿ
reek — ನಾ ನಾತ (ಕೆಟ್ಟನಾತ; ಗಬ್ಬುನಾತ)
reel — ನಾ ಉರುಳೆ (ನೂಲಿನ ಉರುಳೆ)
reel — ಕ್ರಿ 1 ಸುತ್ತು (ನೂಲುಸುತ್ತು), ಸುಂದು (ಹಗ್ಗಸುಂದು) 2 ತಲೆತಿರುಗು
re-entry — ನಾ ಮರುಪುಗಿಲು, ಮರುಹೊಗುತೆ
refectory — ನಾ ಊಟದ ಮನೆ
refer — ಕ್ರಿ ಬಳಿಗೆ ಕಳಿಸು, ಒಪ್ಪಿಗೆ ಕೇಳು, ಅರಿವು ಕೇಳು
referee — ನಾ ತೀರ್ಪುಗಾರ (ತೀರ್ಪುಗಾರರು ಹಲವು ತಪ್ಪುಗಳನ್ನು ಮಾಡಿದ್ದಾರೆ) ನಾ 1 ಎತ್ತುಗೆ (ಅವನ ಬರಹದಲ್ಲಿ ನನ್ನ ಕಡತದ ಎತ್ತುಗೆಲಿುದೆ) 2 ಪತ್ತುಗೆ, ತತ್ತು 3 ಪಳಗಿಕೆಯ ಹೇಳಿಕೆ
referendum — ನಾ ಒಪ್ಪಿತಕ್ಕಿಡುವುದು, ಒಪ್ಪಿತದ ಬೇಡಿಕೆ
refine — ಕ್ರಿ ನಯಗೊಳಿಸು (ನಯಗೊಳಿಸಿದ ಎಣ್ಣೆ)
refinery — ನಾ ನಯಗೊಳಿಸುವೆಡೆ
refit — ಕ್ರಿ ಸರಿಪಡಿಸು, ಮತ್ತೆಸೇರಿಸು, ನೇರ್ಪಡಿಸು
reflect — ಕ್ರಿ ಹಿಂಪುಟಿಸು (ಕನ್ನಡಿಯಲ್ಲಿ ಹಿಂಪುಟಿಸಿದ ಮೋರೆ), ಮರುಹೊಳೆ (ಮರುಹೊಳೆದ ಬೆಳಕು), ಮರುತಳೆ
reflection — ನಾ ನೆರಳು,ಮರುಹೊಳಪು
reflector — ನಾ ಕನ್ನಡಿ (ಮಿಂಚುಸೊಡರಿನ ಹಿಂದೆ ಕನ್ನಡಿಲಿುದ್ದರೆ ಬೆಳಕು ಹೆಚ್ಚು)
reflex — ಗು ಅಂಕೆಯಲ್ಲಿಲ್ಲದ (ಅಂಕೆಯ ಲ್ಲಿಲ್ಲದ ಮಾರೆಸಕ), ಹತೋಟಿಯಲ್ಲಿಲ್ಲದ
reform — ಕ್ರಿ ತಿದ್ದು, ಸರಿಪಡಿಸು
reformation — ನಾ ತಿದ್ದುಪಾಟು
reformer — ನಾ ಸರಿಪಡಿಸುಗ
refractory — ಗು 2 ಮೊಂಡು, ಸಂಬಾಳಿಸ ಲಾಗದ 2 ಮಾಂಜಲಾಗದ (ಮಾಂಜ ಲಾಗದ ಕುತ್ತ)
refrain — ಕ್ರಿ ಹಿಂದೆಗೆ, ಹಿಮ್ಮೆಟ್ಟು (ಅವರು ಹೋರಾಟದಿಂದ ಹಿಮ್ಮೆಟ್ಟಿದ್ದಾರೆ)
refresh — ಕ್ರಿ ದಣಿವಾರಿಸು
refreshment — ನಾ ತಿಂಡಿ, ಕುಡಿಗೆ
refrigerate — ಕ್ರಿ ತಂಪಾಗಿಸು, ತಣ್ಣಗೆ ಮಾಡು
refrigerator — ನಾ ಕುಳಿರರೆ, ಕುಳಿರ್ಕೋಣೆ
refuge — ನಾ ಪಡೆ (ಕಲ್ಲುಗಳ ನಡುವಿದ್ದ ಪಡೆ), ಆಪು, ಉಳವೆ (ಉಳವೆಯ ಮನೆ), ಮರೆ (ಮರೆಹೊಗು, ಮರೆಹೋಗು), ಊರೆ, ಚಾಟು, ಮೊಗ್ಗು (ಮೊಗ್ಗಲ್ಲು), ಸೆರಗು (ಒಳಸೆರಗು)
refugee — ನಾ ನೆಲೆಲಿುಲ್ಲದವನು, ಮರೆ ಹೊಕ್ಕವನು, ಮರೆಹೊಗುಗ
refund — ಕ್ರಿ ಹಣಹಿಂದಿರುಗಿಸು, ಮರುತೆರು
refuse — ನಾ ಮಡಗೂಳು (ಅವರು ಮಡ ಗೂಳು ತಿನ್ನುವುದನ್ನು ಬಿಡಬೇಕು)
refuse — ಕ್ರಿ ಒಪ್ಪದಿರು, ತೆಗೆದುಕೊಳ್ಳದಿರು
refute — ಕ್ರಿ ಅಲ್ಲಗಳೆ (ನಾನು ಹೇಳಿದ್ದನ್ನೆಲ್ಲ ಆತ ಅಲ್ಲಗಳೆದಿದ್ದ) ಕ್ರಿ ಮತ್ತೆಪಡೆ (ಆತ ಮನೆಯನ್ನು ಮತ್ತೆಪಡೆದಿದ್ದಾನೆ), ಮರುಪಡೆ
regal — ಗು ಅರಸನ, ಅರಸನಿಗೆ ಒಪ್ಪುವ
regale — ಕ್ರಿ 1 ನಗಿಸು, ಸೊಮ್ಮುಗೊಳಿಸು 2 ಹಬ್ಬದೂಟ ಕೊಡಿಸು
regard — ಕ್ರಿ 1 ಗಮನಿಸು 2 ಎಣಿಸು (ಆತ ನೊಬ್ಬ ಸಯ್ದನೆಂದೆಣಿಸಿದ್ದೆ) 3 ತಕ್ಕಮೆ ಲಿುಡು, ಅಕ್ಕರೆ ತೋರು
regatta — ನಾ ಓಡಪೋಟಿ
regenerate — ಕ್ರಿ ಮರುಹುಟ್ಟು ಪಡೆ, ಹೊಸದಾಗಿ ನೆಲೆಗೊಳಿಸು
regent — ನಾ ಮಾರಾಳ್ಮ
regime — ನಾ ಆಡಳಿತ, ಆಳ್ವಿಕೆ (ಆತನ ಆಳ್ವಿಕೆ ಯಲ್ಲಿ ಯಾರಿಗೂ ಒಳ್ಳೆಯದಾಗಲಿಲ್ಲ)
region — ನಾ ಕಂಬಲ (ಹಗೆಯ ಕಂಬಲವನ್ನು ಹೊಕ್ಕವನು ಹಿಂದಿರುಗಲಿಲ್ಲ)
register — ಕ್ರಿ 1 ಸೇರಿಸು, ಹೆಸರುಕೊಡು 2 ಬರೆದಿಡು
regress — ಕ್ರಿ ಹಿಂದೆಸರಿ, ಹಿಂಜರಿ, ಹಿಂದೆ ಹೋಗು
regression — ನಾ ಹಿಂಜರಿಕೆ, ಹಿಂಜರಿತ
regret — ಕ್ರಿ ಬೇಸರಿಸು, ಮರುಗು
regrettable — ಗು ಬೇಸರಿಕೆಯ (ಬೇಸರಿಕೆಯ ಎಸಕ)
regroup — ಕ್ರಿ ಮತ್ತೆ ಸೇರು, ಮತ್ತೆ ಅಣಿ ಗೊಳಿಸು
regular — ಗು 1 ಓಜೆಯ (ಓಜೆಯ ಕೆಲಸ; ಓಜೆಗೊಂಡ; ಓಜೆವಿಡಿದ), ಬಳಕೆಯಾದ, ಕಟ್ಟಲೆಯ 2 ಪಳಗಿದ (ಪಳಗಿದ ಪಡೆ), ನೆಲೆನಿಂತ
regularity — ನಾ ಓಜೆ (ಓಜೆಗೆಡು; ಓಜೆದಪ್ಪು)
regulate — ಕ್ರಿ ಹತೋಟಿಯಲ್ಲಿಡು, ನಡೆಸು, ಸರಿದೂಗಿಸು, ಹೊಂದಿಸು
regulation — ನಾ ಕಟ್ಟು (ಕಟ್ಟುಮಾಡು; ಕಟ್ಟುಬೀಳು; ಕಟ್ಟೊಡೆ; ಕಟ್ಟುವಳಿ; ಕಟ್ಟಳೆ, ಕಟ್ಟುಪಾಡು - ಕಟ್ಟುಪಾಡಿಲ್ಲದ ನಡತೆ), ಗೊತ್ತು (ಗೊತ್ತುವಳಿ)
regurgitate — ಕ್ರಿ ಕಾರು, ವಾಕರಿಸು, ಕಕ್ಕು
rehabilitate — ಕ್ರಿ ಮತ್ತೆನೆಲೆಕೊಡು, ಮೊದಲಿ ನಂತೆ ಮಾಡು
rehearsal — ನಾ ಒತ್ತರ
rehearse — ಕ್ರಿ ಬಳಕೆಗೆ ತರು, ಒತ್ತರಿಸು
reign — ನಾ ಆಳ್ವಿಕೆ, ಆಡಳಿತ
reimburse — ಕ್ರಿ ತುಂಬಿಕೊಡು (ನಾನು ಬಳಸಿದ ಹಣವನ್ನು ಒಡನೆಯೇ ತುಂಬಿ ಕೊಟ್ಟರು) ನಾ 1 ಹತೋಟಿ (ಹುಡುಗನನ್ನು ಹತೋಟಿಯಲ್ಲಿರಿಸಿಕೊಳ್ಳಿ) 2 ಕಡಿವಾಣ (ಕುದುರೆಯನ್ನು ಕಡಿವಾಣ ಹಿಡಿದು ಎಳೆದು ನಿಲ್ಲಿಸಿದ)
rein — ಕ್ರಿ ಅಂಕೆಯಲ್ಲಿಡು, ಮೆಲ್ಲಗಾಗಿಸು, ನಿಲ್ಲಿಸು
reincarnation — ನಾ ಮರುಹುಟ್ಟು
reinforce — ಕ್ರಿ ಬಲ್ಮ ಹೆಚ್ಚಿಸು, ಊರೆಕೊಡು
reinstate — ಕ್ರಿ ಮೊದಲಿನಂತೆ ಮಾಡು
reiterate — ಕ್ರಿ ಮತ್ತೆ ಹೇಳು, ಒತ್ತಿಹೇಳು, ತಿರುತಿರುಗಿ ಹೇಳು
reject — ಕ್ರಿ ಅಲ್ಲಗಣಿಸು, ಅಲ್ಲಗಳೆ, ತಳ್ಳು (ನಾನು ಆಯ್ಕೆ ಮಾಡಿದ್ದನ್ನೆಲ್ಲ ಆತ ತಳ್ಳಿ ಹಾಕಿದ್ದಾನೆ), ಬಿಸಾಡು
rejoice — ಕ್ರಿ ನಲಿ (ನಲಿದಾಡು; ನಲಿವು), ಹಿಗ್ಗು (ಹಿಗ್ಗಣ್ಣು)
rejoin — ಕ್ರಿ 1 ಮತ್ತೆ ಸೇರು 2 ಮಾರ್ನುಡಿ
rejoinder — ನಾ ಮಾರ್ನುಡಿ, ಮರುಮಾರ್ನುಡಿ
rejuvenate — ಕ್ರಿ 1 ಎಳೆತನ ಕೊಡಿಸು, ಎಳವೆ ಬರಿಸು (ಎಳವೆಬರಿಸುವ ಮದ್ದು) 2 ಹೊಸದಾಗಿಸು, ಕಳೆಯೇರಿಸು
relapse — ಕ್ರಿ ಮರುಕಳಿಸು (ಮರುಕಳಿಸಿದ ಬೇನೆ)
relate — ಕ್ರಿ 1 ಸೇರಿಸು, ಸಿಕ್ಕಿಸು 2 ಕತೆಹೇಳು
relation — ನಾ ಪತ್ತುಗೆ (ಪತ್ತುಗೆಗೆಡು), ವರಸೆ (ವರಸೆಯಲ್ಲಿ ಅವಳು ನನಗೆ ಅಕ್ಕನಾಗ ಬೇಕು), ನಂಟು (ನಂಟಸ್ತಿಕೆ; ನಂಟತನ; ನಂಟುವಳಿ), ಅಣ್ಪು (ಅಣ್ಪಿತ), ಮೊರೆ (ಯಾವ ಮೊರೆಯಲ್ಲಿ ಅವಳು ನಿನಗೆ ಅಕ್ಕನಾಗಬೇಕು?), ಅಟ್ಟು (ಅಟ್ಟುಂಬಳಿ - ಮದುವೆಯಲ್ಲಿ ನಂಟರಿಂದ ಏನೆಲ್ಲ ಅಟ್ಟುಂ ಬಳಿ ಬಂದಿದೆ?), ತತ್ತು (ತತ್ತುಗೊಳ್ಳು; ತತ್ತುಹಾಕು; ತತ್ತುಗಾರಿಕೆ), ಒಪ್ಪಾರಿ
relative — ನಾ ನಂಟ (ನಂಟರಿಗೆ ಸಾಲ ಕೊಡ ಬಾರದು; ನಂಟತನ), ಉರವ, ತೆತ್ತಿಗ (ತೆತ್ತಿಗರನ್ನು ಬೀಳ್ಕೊಂಡು ಬಂದೆವು)
relative (by marriage) — ನಾ ಬಿಯ್ಯಗ, ಬೀಗ (ಬೀಗರು ಕನಲಿದ್ದಾರೆ)
relax — ಕ್ರಿ ಸಡಿಲಿಸು, ಪೆಡಸು ಕಳೆ, ಬಿಗಿತ ಕಳೆ, ನಾಂಬು
relay — ನಾ ಮಾರೊದಗಿಕೆ (ಮಾರೊದಗಿಕೆಯ ಓಟ), ಮರುಪಡೆಪು
release — ನಾ ಬಿಡುಗಡೆ (ಸೆರೆಮುನೆಲಿುಂದ ಬಿಡುಗಡೆಯಾಗಿ ಹೊರಗೆ ಬಂದ)
release — ಕ್ರಿ 1 ಬಿಡು, ಪಾರುಮಾಡು, ಬಿಡುಗಡೆಗೊಳಿಸು 2 ಸೊರೆಬಿಡು (ಕರು ವನ್ನು ನೋಡದೆ ದನ ಹಾಲು ಸೊರೆಬಿಡುವು ದಿಲ್ಲ) ಕ್ರಿ 1 ಹೊರತಳ್ಳು, ಹೊರಹಾಕು, ಕೆಳತಳ್ಳು 2 ತೀರ್ಮಾನಕ್ಕೆ ಕಳಿಸು
relent — ಕ್ರಿ 1 ಪಟ್ಟುಸಡಿಲಿಸು, ಬಿಗಿತಕಳೆ 2 ಮರುಕ ತೋರಿಸು
relevant — ನಾ ಪತ್ತುಗೆಯ, ಸೇರಿದ, ಬೇಕಾದ
reliable — ಗು ನಂಬತಕ್ಕ (ಇಲ್ಲಿ ನಂಬತಕ್ಕ ಮಂದಿ ಯಾರಿದ್ದಾರೆ?)
reliance — ನಾ ನಂಬಿಕೆ (ಅವನ ಮೇಲೆ ನಂಬಿಕೆಲಿುರಿಸಬೇಡಿ), ನೆಚ್ಚಿಕೆ
relic — ನಾ ಉಳಿಕೆ, ಕುರುಹು, ಪಳೆಯುಳಿಕೆ
relief — ನಾ 1 ಒದವಿ (ನೆರೆಯಲ್ಲಿ ನೊಂದವ ರಿಗೆ ಒದವಿ ದೊರೆಯಲಿಲ್ಲ) 2 ಕುಗ್ಗಿಕೆ (ಬೇನೆಯ ಕುಗ್ಗಿಕೆ), ಇಳಿತ 3 ಉಬ್ಬುತಿಟ್ಟ, ಉಬ್ಬುಕೆತ್ತನೆ
relieve — ಕ್ರಿ 1 ಕಡಿಮೆಮಾಡು, ತಗ್ಗಿಸು 2 ಸರದಿಹಿಡಿ
religion — ನಾ ನಂಬಿಕೆಯ ಕಟ್ಟುಪಾಡು, ನೆಮ್ಮು
religiousact — ನಾ ನೋಂಪಿ (ಅವರು ನೋಂಪಿಯನ್ನು ನೋಂತವರು)
religious vow (to perform) — ಕ್ರಿ ನೋನು (ಅವರು ನೋನುತ್ತಿದ್ದಾರೆ)
relinquish — ಕ್ರಿ ಬಿಟ್ಟುಕೊಡು (ಬಂದವರಿಗೆ ತನ್ನ ಮನೆಯನ್ನೇ ಬಿಟ್ಟುಕೊಟ್ಟ)
relish — ಕ್ರಿ ಸವಿ (ಜೇನು ಸವಿದವರು)
reluctant — ಗು ಒಪ್ಪಿಗೆಲಿುಲ್ಲದ, ಒಗ್ಗದ
rely — ಕ್ರಿ ನಂಬಿಕೆಲಿುಡು, ನೆಚ್ಚು
remain — ಕ್ರಿ 1 ದಕ್ಕು (ಅವರಲ್ಲೂಬ್ಬನಿಗೂ ತಿಂದ ಊಟ ದಕ್ಕಲಿಲ್ಲ) 2 ಉಳಿ (ಅವ ನೊಬ್ಬ ಎಲ್ಲಿಗೂ ಹೋಗದೆ ಇಲ್ಲೀ ಉಳಿದಿ ದ್ದಾನೆ; ಹೋಗದೆ ಉಳಿದ ಮೂವರು; ಉಳಕೊಳ್ಳು)
remainder — ನಾ ಮಿಗಿಲು, ಉಳ (ಉಳಗಡೆ; ಉಳಪಡಿ; ಉಳಕಿ - ಉಳಕಿ ಒಡವೆ; ಉಳಕಿ ಹಣ; ಉಳಿತ; ಉಳಿಕೆ),ಒಕ್ಕುದು (ನಿಮ್ಮ ಒಕ್ಕುದನ್ನು ನನಗೆ ಕೊಡಿ)
remains — ನಾ 1 ಉಳಿಕೆ 2 ಹೆಣ
remand — ಕ್ರಿ ಮತ್ತೆ ಸೆರೆಯಲ್ಲಿಡು
remark — ಕ್ರಿ 1 ಹೇಳಿಕೆಕೊಡು (ಅವರೊಂದು ಹೇಳಿಕೆ ಕೊಡಲಿದ್ದಾರೆ) 2 ಗಮನಿಸು
remarkable — ಗು ಗಮನ ಸೆಳೆವ, ಎದ್ದು ಕಾಣುವ, ಗಮನಿಸತಕ್ಕ
remediable — ಗು ಮಾಂಜಬಲ್ಲ, ತಿದ್ದಬಲ್ಲ (ತಿದ್ದಬಲ್ಲ ಕೊರತೆ)
remedial — ಗು 1 ಮಾಂಜುವ 2 ಸರಿ ಪಡಿಸುವ
remedy — ನಾ ಮಾಂಜುಗೆ, ಮದ್ದು (ಈ ಬೇನೆಗೆ ಮದ್ದು ಸಿಕ್ಕಿಲ್ಲ)
remember — ಕ್ರಿ ನೆನೆ (ನಿಮ್ಮನ್ನು ಯಾವಾ ಗಲೂ ನೆನೆಯುತ್ತಿರುತ್ತೇನೆ) ನಾ 1 ನೆನಪು (ನೆನಪಿಡು - ನೆನಪಿಡತಕ್ಕ ಮಾತುಗಳು), ನೆನಹು (ನೆನಹುಡುಗು) 2 ನೆನಪಿನ ಕಾಣಿಕೆ
remind — ಕ್ರಿ ನೆನಪಿಸು, ನೆನಪುಮಾಡು
reminder — ನಾ ನೆನಪೋಲೆ
reminiscence — ನಾ ನೆನಪು, ನೆನವರಿಕೆ
remiss — ಗು ಎಚ್ಚರಿಕೆಲಿುಲ್ಲದ, ಎಚ್ಚರಗೇಡಿ ಯಾದ
remission — ನಾ ಕಡಿತ (ಬೆಲೆಕಡಿತ), ತಪ್ಪು ಮರವೆ
remit — ಕ್ರಿ 1 ಕಟ್ಟು (ಹಣಕಟ್ಟು) 2 ತಪ್ಪು ಮರೆ, ಬಿಟ್ಟುಬಿಡು 3 ಕಡಿಮೆಮಾಡು, ಸಡಿಲಿಸು
remnant — ನಾ ಮಿಗತೆ (ಮಿಗತೆಯಾಗಿ ನೂರು ರುಪಾಲಿು ಕೊಟ್ಟರು), ಉಳಿಕೆ, ತುಂಡು, ಚೂರು
remonstrate — ಕ್ರಿ ಒಪ್ಪದಿರು, ಮಾರ್ನುಡಿ, ಎದುರುಹೇಳು
remorse — ನಾ ತಪ್ಪನಿಸಿಕೆ (ತಪ್ಪನಿಸಿಕೆಯ ಬೇಗುದಿ)
remote — ಗು ಗೆಂಟು (ಆತ ಈಗ ನನಗೆ ಗೆಂಟಾಗಿದ್ದಾನೆ), ಹತ್ತಿರವಿಲ್ಲದ
removal — ನಾ ಕಳಿವು, ಕಳೆವು
remove — ಕ್ರಿ (ಆ) ಕಳಚು (ಗುದ್ದಲಿಯ ಹಿಡಿ ಕಳಚಿಹೋಗಿದೆ), ಕಳೆ (ಕಳಕೊಳ್ಳು; ಕಳೆದು ಹೋಗು) (ಮಾ) ಹೋಗಲಾಡಿಸು, ಕೊಚ್ಚು (ನೆರೆ ಎಲ್ಲ ಕೊಚ್ಚಿಕೊಂಡು ಹೋಗಿದೆ), ತೆಗೆ (ನಿಮ್ಮ ಹೆಸರನ್ನು ತೆಗೆದುಹಾಕಿದ್ದಾರೆ), ಕಳುಪು, ಹಿಂಗಿಸು
remuneration — ನಾ ಮರುಸಲಿಕೆ (ನಿಮ್ಮ ಬರಹಕ್ಕೆ ಮರುಸಲಿಕೆಲಿುದೆ)
renaissance — ನಾ ಮಾರೇಳಿಗೆ, ಹೊಸ ಹುಟ್ಟು
rend — ಕ್ರಿ ಉಗಿ (ಉಗುರುಗಳಿಂದ ಉಗಿ), ಹೀಜು (ಬಟ್ಟೆಯನ್ನು ಹೀಜಿ ಹಾಕಿದ), ಹರಿ (ಹರಿದು ಹಾಕು), ಸಿಗಿ (ಈ ಹಾಳೆಗಳನ್ನೆಲ್ಲ ಸಿಗಿದು ಎಮ್ಮೆಗೆ ಹಾಕಬೇಕು)
render — ಕ್ರಿ 1 ಕೊಡು (ಒದವಿಕೊಡು), ಸಲ್ಲಿಸು 2 ನುಡಿಮಾರು (ನಿಮ್ಮ ಬರಹವನ್ನು ಕನ್ನಡಕ್ಕೆ ನುಡಿಮಾರುತ್ತಿದ್ದೇವೆ) 3 ಕರಗಿಸು 4 ಆಡಿತೋರಿಸು
rendezvous — ನಾ ಕೂಡೆಡೆ (ಆತ ಹೇಳಿದ ಕೂಡೆಡೆ ಎಲ್ಲಿದೆ?)
renew — ಕ್ರಿ 1 ಮತ್ತೆ ತೊಡಗು, ಮರು ತೊಡಗು 2 ಹೊಸದಾಗಿಸು, ಮುಂದು ವರಿಸು 3 ಮತ್ತೆ ಮಾಡು
renewal — ನಾ ಮುಂದುವರಿಕೆ, ಹೊಸದಾಗಿಕೆ
renounce — ಕ್ರಿ ತೊರೆ (ಎಲ್ಲವನ್ನೂ ತೊರೆದು ಹೋದವರು) , ಬಿಟ್ಟುಕೊಡು, ಹಕ್ಕು ಬಿಡು, ಒಡೆತನ ಬಿಡು ಕ್ರಿ ಹೊಸದಾಗಿಸು (ಕಟ್ಟಡವನ್ನು ಹೊಸದಾಗಿಸಬೇಕು)
renown — ನಾ ಹೊಗಳಿಕೆ, ಹೆಸರು, ಪಡೆ ವಾತು, ದೊರೆ
renowned — ಗು ಹೆಸರಾಂತ, ಹೆಸರುವಾಸಿ ಯಾದ, ದೊರೆವಡೆದ
rent — ನಾ 1 ಗೇಣಿ (ಗದ್ದೆಯ ಗೇಣಿಲಿುನ್ನೂ ಬಂದಿಲ್ಲ) 2 ಹರಿದುದು, ತೂತು (ಬಟ್ಟೆ ಹರಿದು ತೂತಾಗಿದೆ)
rent-free plot — ನಾ ಉಂಬಳಿ (ಉಂಬಳಿ ಬಿಡು; ಉಂಬಳಿಗಾರ)
renunciate — ಕ್ರಿ ತೊರೆ (ಎಲ್ಲ ತೊರೆದು ಕಾಡಿಗೆ ಹೋದ; ತೊರೆಹ; ತೊರೆತ)
reorganize — ಕ್ರಿ ಮತ್ತೆ ಅಣಿಗೊಳಿಸು, ಹೊಸ ದಾಗಿ ಅಣಿಗೊಳಿಸು, ಮಾರಣಿಗೊಳಿಸು
repair — ಕ್ರಿ 1 ಸರಿಪಡಿಸು (ಮನೆಯ ಮಾಡನ್ನು ಸರಿಪಡಿಸಬೇಕು) 2 ಕಡಿತತುಂಬು
reparation — ನಾ 1 ತಿದ್ದುಪಡಿ 2 ಕಳೆತ ತುಂಬಿಕೆ
repartee — ನಾ ಚಲ್ಲ ಮಾರ್ನುಡಿ, ತಕ್ಕು ಮಾರ್ನುಡಿ, ಕಯ್ಮೆ ಮಾರ್ನುಡಿ
repast — ನಾ ಊಟ, ತಿಂಡಿ
repatriate — ಕ್ರಿ ತಾಯ್ನಾಡಿಗೆ ಕಳಿಸು, ತಾಯ್ನಾಡಿಗೆ ಮರಳು
repay — ಕ್ರಿ 1 ಹಿಂದಿರುಗಿಸು (ಸಾಲವನ್ನೆಲ್ಲ ಹಿಂದಿರುಗಿಸಿದೆ), ಹಿಂದಕ್ಕೆ ಕೊಡು 2 ಮರು ಕೊಡು (ಅಷ್ಟಲ್ಲ ನೆರವು ನೀಡಿದವರಿಗೆ ನಾವೇನಾದರೂ ಮರುಕೊಡಬೇಕು)
repeal — ಕ್ರಿ ಹಿಂತೆಗೆ (ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ), ನೀಗು
repeat — ಕ್ರಿ ಮತ್ತೆ ಹೇಳು, ಇರ್ನುಡಿ, ಮತ್ತೆ ಮಾಡು, ಮಾರೆಸಗು
repel — ಕ್ರಿ 1 ಹಿಂದಟ್ಟು, ಹಿಮ್ಮೆಟ್ಟಿಸು 2 ಹೇಸು, ರೋಸು
repent — ಕ್ರಿ ಬೇಸರಿಸು, ತಪ್ಪೆನಿಸಿಕೆ ಬರು
repentance — ನಾ ತಪ್ಪೆನಿಸಿಕೆ
repercussion — ನಾ ಮಾರುಲಿ, ಹೊಳಲು, ಮಾರೆಸಕ
repetition — ನಾ ಇರ್ನುಡಿಹ
replace — ಕ್ರಿ 1 ಹಿಂದಿಡು, ಅಲ್ಲೀ ಇಡು 2 ಮಾರ್ಪಾಗಿ ಬರು
replacement — ನಾ ಮಾರ್ಪು, ಮಾರಾಳು
replantation — ನಾ ಮರುನೆಡು
replay — ಕ್ರಿ ತಿರುಗಿ ಆಡು
replenish — ಕ್ರಿ ಮತ್ತೆ ತುಂಬು
replete — ಗು ತುಂಬಿದ (ತುಂಬಿದ ಹೊಟ್ಟೆ; ತುಂಬಿಕೆ) ನಾ ಮಾರಚ್ಚು (ಇದು ಆ ತಿಟ್ಟದ ಮಾರಚ್ಚು), ಮಾರಡರ್ಪು
reply — ನಾ ಮರುಮಾತು, ಮಾರ್ನುಡಿ (ನನಗೆ ನಾಚದೆ ಮಾರ್ನುಡಿ ಕೊಡು), ಮಾರೋಲೆ (ಮಾರೋಲೆ ಬರೆಲಿುರಿ)
report — ನಾ ಆರಡಿ, ಒಸಗೆ (ಒಸಗೆಯೋಲೆ ಗಳನ್ನು ದೆಸೆದೆಸೆಗೆ ಕಳಿಸಿದರು; ಒಸಗೆನುಡಿ), ಹೇಳಿವೆ
reporter — ನಾ ಸುದ್ದಿಗಾರ, ಆರಡಿಗ
repose — ಕ್ರಿ 1 ಮಲಗು, ಬಿಡುವುಪಡೆ 2 ಸತ್ತುಮಲಗು 3 ನಂಬಿಕೆಲಿುಡು, ಇರಿಸು, ಕೊಡು (ಹತೋಟಿ ಕೊಡು)
repository — ನಾ ಉಗ್ರಾಣ
reprehend — ಕ್ರಿ ತೆಗಳು, ಹೀಗಳೆ, ಹಳಿ
reprehensible — ಗು ತೆಗಳತಕ್ಕ, ಹೀಗಳೆಯ ತಕ್ಕ
represent — ಕ್ರಿ 1 ಎತ್ತುಗೆಯಾಗಿರು 2 ಕೊಗೆ 3 ಗುರುತಾಗಿರು 4 ದೊರೆಯಾಗಿರು, ಸಾಟಿ ಯಾಗಿರು 5 ಮಾರ್ಪಾಗಿ ನಿಲ್ಲು
representation — ನಾ 1 ಅಡರ್ಪು (ಆತನ ಅಡರ್ಪಾಗಿ ಈತ ಬಂದಿದ್ದಾನೆ) 2 ಸಾಟಿ, ಮಾರ್ಪು 3 ಹೇಳಿಕೆ (ಬೇಡಿಕೆಗಳ ಹೇಳಿಕೆ)
representative — ನಾ 1 ಎತ್ತುಗೆ 2 ಮಾರಾಳು
repress — ಕ್ರಿ 1 ಅದುಮಿಡು, ಅಂಕೆಯಲ್ಲಿಡು 2 ಅಡಗಿಸು, ತುಳಿದುಹಾಕು
repression — ನಾ ದಬ್ಬಾಳಿಕೆ
reprieve — ಕ್ರಿ ಮುಂದೂಡು (ಕೊಲೆಗಾರನ ಗಲ್ಲಿನೇರಿಕೆಯನ್ನು ಮುಂದೂಡಲಾಗಿದೆ)
reprimand — ನಾ ತೆಗಳಿಕೆ, ಜರೆತ
reprint — ನಾ ಮಾರಚ್ಚು (ಮಾರಚ್ಚು ಹಾಕಿಸು)
reprisal — ನಾ ಮುಯ್ಯೆಸಕ
reproach — ಕ್ರಿ ಬಯ್ಯು, ತೆಗಳು
reprobate — ಕ್ರಿ ಒಪ್ಪದಿರು, ಹೀಗಳೆ, ತೆಗಳು
reproduce — ಕ್ರಿ 1 ಮತ್ತೆ ಮಾಡು 2 ಮಾರ್ಪು ಮಾಡು 3 ಮರಿಹಾಕು, ಮರಿಹುಟ್ಟಿಸು, ಹೆರು
reproof — ನಾ ಬಯ್ಗಳು, ತೆಗಳಿಕೆ
reprove — ಕ್ರಿ ಏಳಿಸು (ಒಂಟಿಯೆಂದು ನನ್ನನ್ನು ಏಳಿಸಬೇಡ), ಅದಪು (ಅದಪುವ ಹಾಗೆ ಆತನೇನೂ ಮಾಡಿಲ್ಲ), ಬಯ್ಯು, ತೆಗಳು
republic — ನಾ ಮಂದಿಯಾಳ್ವಿಕೆ, ಮಂದಿ ಯಾಳ್ವಿಕೆಯ ನಾಡು ಕ್ರಿ ಒಪ್ಪದಿರು, ಪತ್ತುಗೆ ಕಳೆ, ಬೆಂಬಲಿಸದಿರು, ತೆರಲು ಒಪ್ಪದಿರು
repugnant — ಗು 1 ಅಲ್ಲಗಳೆವ, ಎದುರಿಸುವ 2 ಹೇವರಿಕೆಯ
repulse — ಕ್ರಿ ಹಿಮ್ಮೆಟ್ಟಿಸು, ತಳ್ಳು, ಅಲ್ಲಗಳೆ
repulsive — ಗು ಹೇವರಿಕೆಯ, ಹಿಮ್ಮೆಟ್ಟಿಸುವ, ಹೇಸಿಕೆಯ
reputable — ಗು ತಕ್ಕಮೆಯ, ಹೆಸರಾಂತ
reputation — ನಾ ಒಳ್ಳೆಹೆಸರು (ಈ ಊರಲ್ಲಿ ಆತನಿಗೆ ಒಳ್ಳೆಹೆಸರಿದೆ)
repute — ಕ್ರಿ ನೆಲಸು (ನೆಲಸಿದ ಬರಹ)
request — ನಾ ಅರಿಕೆ (ಕೊನೆಯ ಅರಿಕೆ; ಅರಿಕೆ ಮಾಡು), ಬೇಡಿಕೆ, ಕೇಳ್ವಿ, ಕೋರಿಕೆ (ನಿಮ್ಮ ಕೋರಿಕೆಯೇನು?)
request — ಕ್ರಿ ಬೇಡು (ಬೇಡುಗ; ಬೇಡಿಕೆ; ಬೇಡುಗಣ್ಣು), ಕೇಳು (ಹಣ ಕೇಳು; ಸಾಲ ಕೇಳು; ಕೇಳಿಕೊಳ್ಳು), ಕೋರು (ಕೋರಿಕೆ)
requiem — ನಾ ಸತ್ತವರ ಹಾಡು, ಕೊನೆಯ ಹಾಡು
require — ಕ್ರಿ 1 ಬೇಕಾಗು 2 ಸೆಲವಿಕ್ಕು
required — ಗು ಬೇಕಾದ, ಬೇಹ (ಬೇಹನುಡಿ)
requirement — ನಾ ಬೇಕಾದುದು 2 ಸೆಲವು
requisition — ನಾ ಬೇಡಿಕೆ (ಒತ್ತಾಯದ ಬೇಡಿಕೆ), ಕೋರಿಕೆ
requital — ನಾ ಮುಲಿ್ಯು (ಮುಲಿ್ಯುಗೆ ಮುಲಿ್ಯು)
resale — ನಾ ಮರುಮಾರಾಟ
rescind — ಕ್ರಿ ತಳ್ಳಿಹಾಕು, ತೆಗೆದುಹಾಕು, ನೀಗು
rescue — ಕ್ರಿ ಪಾರುಮಾಡು, ಕಾಪಾಡು
research — ಕ್ರಿ ಅರಸು (ಅರಕೆ; ಅರಕೆಕಾರ)
resemblance — ನಾ ಹೋಲಿಕೆ (ಅವರೊಳಗೆ ಹೋಲಿಕೆಲಿುಲ್ಲ; ಹೋಲುವೆ), ದೊರೆ (ಬಂಗಾರಕ್ಕೆ ದೊರೆ ಯಾವುದಿದೆ?; ದೊರೆ ವಡೆ), ತೇಂಗು (ಆತನಿಗೆ ತೇಂಗಾಗಿರುವ ಮಗನಿದ್ದಾನೆ), ಪಾಂಗು
resemble — ಕ್ರಿ ಹೋಲು (ಅವನನ್ನು ಹೋಲು ವವರು ಯಾರೂ ಇಲ್ಲ; ಸರಿಹೋಲು)
resent — ಕ್ರಿ ಸಿಟ್ಟಾಗು, ಪದರಾಡು
resentment — ನಾ ಪದರು, ಕೆಕ್ಕಸ, ಮುನಿಸು
reservation — ನಾ ಮೀಸಲಾತಿ ಕ್ರಿ ಕಾದಿಡು, ಕಾದಿರಿಸು, ಮೀಸಲಾ ಗಿಡು
reserve — ಗು ಕಯ್ಗಾವಲು (ಕಯ್ಗಾವಲು ಹಣ; ಕಯ್ಗಾವಲು ಆಟಗಾರ), ಮೀಸಲು (ಮೀಸ ಲಾಗು; ಮೀಸಲು ಪಡೆ; ಮೀಸಲಾಗಿಡು)
reservoir — ನಾ ಕೆರೆ, ಕೊಳ, ಕಟ್ಟ
reside — ಕ್ರಿ ಊರು (ಆ ಊರಿನಲ್ಲಿ ಊರಿ ದವರು ಅವರಲ್ಲಿ ಮೂವರು), ನೆಲಸು (ಅವರು ಇಲ್ಲೀ ನೆಲಸಲಿದ್ದಾರೆ)
residence — ನಾ ಇಕ್ಕೆ (ಇಕ್ಕೆ ಮಾಡು; ಮೊಸಳೆಯ ಇಕ್ಕೆ ನೀರಿನಲ್ಲಿ), ಒಕ್ಕಲು (ಒಕ್ಕಲು ತೆಗೆ; ಒಕ್ಕಲೆತ್ತು; ಒಕ್ಕಲಾಗು; ಒಕ್ಕಲಿರು), ಮನೆ (ಮನೆಮಾಡು)
resident — ನಾ ಒಕ್ಕಲಿಗ, ನೆಲಸುಗ
residential — ಗು ಮನೆಗಳಿರುವ, ಒಕ್ಕಲಾಗ ಬಲ್ಲ
residue — ನಾ 1 ಹಿಪ್ಪೆ (ಹಣ್ಣಿನ ಹಿಪ್ಪೆ) 2 ಆಕಳಿ (ಆರಿಸಿ ಉಳಿದಿರುವ ಆಕಳಿ ಹಣ್ಣು), ಆಯ್ಕಳಿ (ಆಯುವವರು ಉಳಿಸಿರುವ ಆಯ್ಕಳಿ) 3 ಉಳಿಕೆ
resign — ಕ್ರಿ 1 ಕೆಲಸಬಿಡು 2 ತಾಳಿಕೊಳ್ಳು
resignation — ನಾ 1 ಬಿಡುವೋಲೆ (ಕೆಲಸ ಬಿಡುವೋಲೆ) 2 ತಾಳ್ಮೆಯ ತಲೆಬಾಗುವಿಕೆ
resilient — ಗು ಪುಟಿದೇಳಬಲ್ಲ, ಒಡನೆಯೇ ಮೊದಲಿನಂತಾಗಬಲ್ಲ
resin — ನಾ ಪಗಿನು (ಗೇರುಮರದ ಪಗಿನು), ಅಂಟು
resist — ಕ್ರಿ ಒಡ್ಡು (ನೀರಿನ ಹರಿವಿಗೆ ಒಡ್ಡಿದ ಕಟ್ಟೆ), ಎದುರಿಸು, ತಡೆಗಟ್ಟು, ಹಳಚು
resistance — ನಾ ಎದುರಿಸುವಿಕೆ, ತಡೆ
resolute — ಗು ಈಡುಳ್ಳ, ಗಟ್ಟಿನಿಲ್ಲಬಲ್ಲ
resolution — ನಾ ಗೊತ್ತುವಳಿ, ತೀರ್ಮಾನ, ತರಿಸಲು
resolve — ಕ್ರಿ (ಆ) ಬಗೆಹರಿ (ತೊಂದರೆಗಳೆಲ್ಲ ಬಗೆಹರಿದುವು; ಬಗೆಹರಿಸು) (ಮಾ) ಬಿಡಿಸು (ಒಡಂಬಡಿಕೆಗಿದ್ದ ತೊಡಕಗಳನ್ನೆಲ್ಲ ಒಂದೊಂದಾಗಿ ಬಿಡಿಸಿದರು)
resonant — ಗು ಮಾರುಲಿವ, ಹೊಳಲಿಡುವ
resorption — ನಾ ಮರುಹೀರಿಕೆ
resort — ನಾ ಇಕ್ಕೆ (ಕಾಡಿನ ಇಕ್ಕೆ), ಉಳಿತ
resound — ಕ್ರಿ ದೊಡ್ಡದಾಗಿ ಮಾರುಲಿ, ಹೊಳ ಲಿಡು
resource — ನಾ 1 ಸೊಮ್ಮು, ಒಡಮೆ 2 ಬಳಕೆಗೆ ಬೇಕಾದುದು 3 ಜಾಣ್ಮೆ
resourceful — ಗು ಜಾಣ್ಮೆಯ, ಬೇಕಾದು ದನ್ನು ಪಡೆಯಬಲ್ಲ
respect — ನಾ ತಕ್ಕಮೆ (ಅಲ್ಲಿ ಅವನಿಗೆ ತಕ್ಕಮೆ ಸಿಗಲಿಲ್ಲ), ಮದಿಪು ಗು 1 ತಕ್ಕಮೆ ಕೊಡತಕ್ಕ 2 ತಕ್ಕಮಟ್ಟಿಗಿನ, ತೊಡಬಹುದಾದ (ತೊಡ ಬಹುದಾದ ಉಡುಪು)
respective — ಗು ಅವರವರ, ನಿಮ್ಮನಿಮ್ಮ, ಅದರದರ, ನಮ್ಮನಮ್ಮ
respiration — ನಾ ಉಸಿರಾಟ (ಆತನಿಗೆ ಉಸಿರಾಟದ ತೊಂದರೆಲಿುದೆ)
respite — ನಾ ಬಿಡುವು (ಒಮ್ಮೆಗೆ ಎಲ್ಲ ತೊಂದರೆಗಳಿಂದಲೂ ಅವನಿಗೆ ಬಿಡುವು ದೊರೆತಿತು), ತಡ, ಮುಂದುವರಿಕೆ
resplendent — ಗು ಹೊಳೆಯುವ, ಕಣ್ಣು ಕೋರಯ್ಸುವ
respond — ಕ್ರಿ ಓಗೊಡು (ಕರೆಗೆ ಓಗೊಟ್ಟು ಬಂದ); ಓಕೊಳ್ಳು (ಕೂಗಿಗೆ ಓಕೊಳ್ಳು ವವರು ಯಾರೂ ಇರಲಿಲ್ಲ), ಮಾರ್ನುಡಿ
respondent — ನಾ 1 ಓಗೊಡುವವರು 2 ಇದಿರಾಡುಗ
response — ನಾ ಮರುನುಡಿ, ಮರುಮಾತು
responsibility — ನಾ ಹೊರಿಗೆ, ಹೊಣೆ (ಈ ಕೆಲಸದ ಹೊಣೆಹೊತ್ತವರು ಯಾರು? ಹೊಣೆಗಾರಿಕೆ)
responsible — ಗು 1 ನಂಬಬಲ್ಲ 2 ಹೊಣೆ ಯಾದ
responsive — ಗು ಮಾರ್ನುಡಿವ, ಓಕೊಳ್ಳುವ, ಕೂಡಲೆೀ ಮಾರೆಸಗುವ
rest — ನಾ 1 ಒರಕು, ಬಿಡುವು, ಇರುಗಡೆ 2 ಸಾವು 3 ಹಂದದಿರುವಿಕೆ 4 ಆನಿಕೆ, ಊರೆ, ಬೆಂಬಲ 5 ಉಳಿಕೆ, ಉಳಿದವರು
rest — ಕ್ರಿ 1 ದಣಿವಾರಿಸು, ಆಸರ್ಗಳೆ 2 ಹಂದ ದಿರು, ಅಲುಗಾಡದಿರು 3 ಸತ್ತುಹೋಗು 4 ಮಾರ್ಪಡದಿರು 5 ಹೊರಕುಳಿಯಾಗಿರು
restaurant — ನಾ ಕಿತ್ತೂಟದಮನೆ
resting place — ನಾ ಇಂಬು (ಕಾಡಿನ ನಡುವೆ ಒಂದು ಇಂಬನ್ನು ಕಟ್ಟಿಸಿದ್ದಾರೆ), ಹಕ್ಕೆ
restive — ಗು ಚಡಪಡಿಸುವ, ಸಿಡುಕಿನ, ತಾಳ್ಮೆಲಿುಲ್ಲದ, ಮೊಂಡು, ಹತೋಟಿಗೆ ಸಿಗದ
restless — ಗು ಚಡಪಡಿಸುವ, ಬಿಗಿತ ಕಳೆಯ ಲಾಗದ, ಗೊಂದಲಿಸಿದ, ಸುಮ್ಮಗಿರದ
restore — ಕ್ರಿ ಹಿಂದಿರುಗಿಸು, ಮತ್ತೆ ಮೊದಲು ಮಾಡು, ಹಿಂದಿದ್ದಂತೆ ಮಾಡು, ಮಯ್ಯೊಳಿ ತಾಗಿಸು
restrain — ಕ್ರಿ (ಆ) ಉಡುಗು (ಸಿಡಿಯುಡುಗಿದ ಆನೆ) (ಮಾ) ಉಯ್ಯು (ಓಡುವ ಕರುವನ್ನು ಉಯ್ದು ಕಟ್ಟಿಹಾಕಿದ), ತಡೆ (ತಡೆಗಟ್ಟು; ತಡೆಹಿಡಿ; ತಡೆಹಾಕು; ತಡಕೊಳ್ಳು;ತಡಗು)
restraint — ನಾ ತಡೆತ, ಆಪು (ಆಪುಹಾಕು), ಅಡ್ಡಿ (ಅಡ್ಡಿಮಾಡು), ಹತೋಟಿ (ಹತೋಟಿ ತಪ್ಪು), ಅಂಕೆ (ಆನೆಯನ್ನೇ ತನ್ನ ಅಂಕೆ ಯೊಳಗೆ ಇಟ್ಟುಕೊಂಡವನು) ಕ್ರಿ ಕಟ್ಟುಪಾಡಿಗೊಳಪಡಿಸು, ಇರುಕು
restriction — ನಾ ಎಲ್ಲಕಟ್ಟು, ತನ್ನಡರ್ಪು
result — ನಾ 1 ಆಗುಹ, ದೊರೆತ 2 ಕೊನೆ, ಮುಗಿತಾಯ
result — ಕ್ರಿ 1 ಉಂಟಾಗು (ನೀವು ಆತನನ್ನು ಕರೆದುದರಿಂದ ಇಷ್ಟಲ್ಲ ತೊಂದರೆಗಳು ಉಂಟಾದುವು) 2 ಮುಗಿಯು
resume — ಕ್ರಿ ಮುಂದುವರಿಸು, ಮತ್ತೆ ತೊಡಗು
resurgent — ಗು ಮತ್ತೆ ತಲೆಯೆತ್ತಿದ, ಮಾರೆದ್ದ
resurrection — ನಾ ಮರುಹುಟ್ಟು
resuscitate — ಕ್ರಿ 1 ಮತ್ತೆ ಬದುಕಿಸು 2 ಮತ್ತೆ ಬೆಳಕಿಗೆ ತರು
retail — ನಾ ಚಿಲ್ಲರೆ ಹರದಿಕೆ, ಬಿಡಿ ಹರದಿಕೆ
retain — ಕ್ರಿ 1 ಉಳಿಸಿಕೊಳ್ಳು (ಮನೆಯನ್ನು ತಮ್ಮ ಕಯ್ಯಲ್ಲೀ ಉಳಿಸಿಕೊಂಡಿದ್ದಾರೆ), ತಡೆಹಿಡಿ 2 ನೆನಪಿಡು 3 ಕೆಲಸಕೊಡು (ಕಟ್ಟಲೆಯರಿಗರಿಗೆ ಈ ಊರಲ್ಲೀ ಕೆಲಸ ಕೊಡಬೇಕೆಂದಿದ್ದಾರೆ)
retainer — ನಾ ಮುಂಗೊತ್ತಿನ ತೆರ
retaliation — ನಾ ಮುಲಿ್ಯು (ಮುಲಿ್ಯುಗೆ ಮುಲಿ್ಯು; ಮುಲಿ್ಯು ತೀರಿಸು), ಸೇಡು (ಸೇಡು ತೀರಿಸು - ಸೇಡುತೀರಿಸಲು ಹೋಗಿ ಆತ ತನ್ನಲ್ಲಿರುವುದೆಲ್ಲವನ್ನೂ ಕಳಕೊಂಡ)
retard — ಕ್ರಿ ತಡಮಾಡು, ಹಿಂದೆಬೀಳು, ಮೆಲ್ಲಗಾಗಿಸು
retch — ಕ್ರಿ ಓಕರಿಸು (ಮಗು ಹಾಲನ್ನು ಓಕರಿಸು ತ್ತಿದೆ), ಕಕ್ಕು, ಕಾರು
reticence — ನಾ ಬಿಗಿಹು (ಬಿಗುಮಾನ -ನೀವು ಹೇಳಿದುದನ್ನು ಒಪ್ಪಿಕೊಳ್ಳಲು ಬಿಗುಮಾನ)
reticular — ನಾ ಬಲೆಯಂತಹ
retina — ನಾ ಕಣ್ಣಪೊರೆ
retinue — ನಾ ಮಯ್ಗಾವಲು, ಬೆಂಗಾವಲು, ತೊತ್ತಿಗಪಡೆ (ಆತನೊಂದಿಗೆ ಯಾವಾಗಲೂ ತೊತ್ತಿಗ ಪಡೆಯೊಂದು ಇದ್ದೇ ಇರುತ್ತದೆ)
retire — ಕ್ರಿ 1 ಬಿಡುವುಪಡೆ (ಆತ ಕೆಲಸದಿಂದ ಬಿಡುವುಪಡೆದಿದ್ದಾನೆ) 2 ಮಲಗಲು ಹೋಗು 3 ಹಿಂದೆಸರಿ
retired — ಗು 1 ಬಿಡುವುಪಡೆದ 2 ಬೇರೆ ಯಾದ
retort — ನಾ ಮಾರ್ನುಡಿ (ನಾನು ಹೇಳಿದ್ದಕ್ಕೆಲ್ಲ ಆತನ ಮಾರ್ನುಡಿಲಿುದ್ದೇ ಇದೆ)
retrace — ಕ್ರಿ 1 ಹಿಂದೆಹೋಗು, ಬಂದದಾರಿ ಯಲ್ಲಿ ಹಿಂದಿರುಗು 2 ನೆನಪಿಸು ಕ್ರಿ ಹಿಮ್ಮೆಟ್ಟು (ಸೋತು ಹಿಮ್ಮೆಟ್ಟು), ಹಿಂದೆಗೆ (ಹೋರಾಟದಿಂದ ಹಿಂದೆಗೆದರು), ತೆರಲಿುಸು
retreat — ಕ್ರಿ ಬೆಂಗೊಡು, ಹಿಮ್ಮೆಟ್ಟು, ನುಸುಳು, ಮಸುಳು (ಮಸುಳುತ್ತಿರುವ ಪಡೆ), ಹೆರ ಮೆಟ್ಟು, ಹೆರಹಿಂಗು, ಕಾಲ್ದಗೆ, ಪೆಡಸಾರು
retrench — ಕ್ರಿ ಕಡಿಮೆಮಾಡು, ತಗ್ಗಿಸು (ಮುಟ್ಟುವಳಿ ತಗ್ಗಿಸು)
retribution — ನಾ ಮರುಮುಲಿ್ಯು
retrieve — ಕ್ರಿ 1 ಪತ್ತೆಹಚ್ಚು, ಹುಡುಕಿ ತರು, ಸರಿಪಡಿಸು 2 ನೆನಪಿಗೆ ತರು
retrograde — ಗು ಹಿಮ್ಮೆಟ್ಟುವ, ಹಿಂದೆ ಹೋಗುವ, ಹದಗೆಡುವ
retrospect — ನಾ ಹಿನ್ನೋಟ
return — ಕ್ರಿ ಹಿಂದಿರುಗು (ಹಿಂದಿರುಗಿಸು), ಮರಳು (ಮನೆಗೆ ಮರಳಿದ ಹುಡುಗ), ಮಗುಳು (ಮನೆಗೆ ಮಗುಳಿದ ಮಡದಿ), ಹೆರಹೋಗು; ಹೆರಸಾರು
reuse — ನಾ ಮರುಬಳಕೆ (ಕಸದ ಮರುಬಳಕೆ)
reveal — ಕ್ರಿ ಹೊರಗೆಡಹು (ಆತನ ಗುಟ್ಟನ್ನು ಹೊರಗೆಡಹಿದವರು ಯಾರು?), ತೋರಿಸು
revel — ಕ್ರಿ ಗದ್ದಲದ ಕೂಟ ನಡೆಸು, ನಲಿದಾಡು
revelry — ನಾ ಗದ್ದಲದ ಕೂಟ
revenge — ನಾ ಸೇಡು (ಸೇಡು ತೀರಿಸು), ಮುಲಿ್ಯು (ಮುಲಿ್ಯುಮಾಡು)
revenge — ಕ್ರಿ ಮರಳಿಸು (ಮರಳಿಸದೆ ಇರಲು ಅವನು ಒಪ್ಪುವುದಿಲ್ಲ)
revenue — ನಾ ಹುಟ್ಟುವಳಿ
revere — ಕ್ರಿ ಕೊಂಡಾಡು
reverence — ನಾ 1 ತಕ್ಕಮೆ, ಓಲಯ್ಕೆ 2 ಎರಗಿಕೆ, ಕುಂಬಿಡುಗೆ
reverie — ನಾ ಹಗಲುಗನಸು
reverse — ಕ್ರಿ ಹಿನ್ನಡೆಸು (ಗಾಡಿಯನ್ನು ಹಿನ್ನಡೆಸ ಬೇಕು), ತಲೆಕೆಳಗಾಗಿಸು, ತಿರುಗುಮುರುಗು ಮಾಡು, ಹಿಂದುಮುಂದಾಗು
reversion — ನಾ ಹಿಮ್ಮರಳಿಕೆ
revert — ಕ್ರಿ ಹಿಂದಿರುಗು, ಮರಳು, ಹಿಂದಿದ್ದಂತೆ ಮಾಡು
review — ನಾ 1 ಮರುನೋಟ, ಹಿನ್ನೋಟ 2 ಮಾರೊರೆತ 3 ಹೊತ್ತಿಗೆಯ ಆರಡಿ
review — ಕ್ರಿ ಮತ್ತೆ ಕಣ್ಣರಸು, ಮತ್ತೆ ಒರೆದು ನೋಡು
revile — ಕ್ರಿ ಬಯ್ಯು, ಹಳಿ, ಹೆಸರು ಕೆಡಿಸು ನಾ ಕೊರಸಾಟ
revise — ಕ್ರಿ ತಿದ್ದು, ಮಾರ್ಪಡಿಸು
revive — ಕ್ರಿ 1 ಮಿಡುಕಿಸು, ತೆಪ್ಪತ್ತುಕೊಳ್ಳು ವಂತೆ ಮಾಡು 2 ಬಳಕೆಗೆ ತರು
revoke — ಕ್ರಿ ಹಿಂತೆಗೆದುಕೊಳ್ಳು, ತಳ್ಳಿಹಾಕು, ಅಳಿಸು
revolt — ಕ್ರಿ ಎದುರುಬೀಳು
revolution — ನಾ 1 ಸುತ್ತುವಿಕೆ 2 ಬಳಸಿ, ಆಳಿ 3 ದೊಡ್ಡ ಮಾರ್ಪಾಡು 4 ಆಳ್ವಿಕೆಯ ಕೊನೆ
revolve — ಕ್ರಿ ಸುಳಿ (ಸುಳಿದು ಬೀಸುವ ಗಾಳಿ), ಉರುಳು (ಉರುಳುತ್ತಿರುವ ಗಾಲಿಗಳು), ತೊಳಲು (ತೊಳಲುವ ಕಣ್ಣುಗಳು)
revolver — ನಾ ಉರುಳು ಕಯ್ಕೋವಿ
revulsion — ನಾ ಹೇಸಿಕೆ, ಹೇವ (ಹೇವರ; ಹೇವರಿಸು)
reward — ನಾ ಮೆಚ್ಚು, ದೊರೆತ
rewind — ಕ್ರಿ ಹಿಂದಕ್ಕೆ ಸುತ್ತು, ಮರುಸುತ್ತು
rewrite — ಕ್ರಿ ತಿದ್ದಿಬರೆ, ಮರುಬರೆ
rhetoric — ನಾ ಮಾತುಗಾರಿಕೆ, ಮಾತಿನ ಜಾಣ್ಮೆ
rheum — ನಾ ಸಿಳ್ಳು (ಸಿಳ್ಳುಗಣ್ಣು; ಸಿಳ್ಳು ಮುಸುಡು), ಪಿಚ್ಚು (ಕಣ್ಣಿನ ಪಿಚ್ಚು; ಪಿಚ್ಚು ಗಣ್ಣು), ಪಿಸುರು,ಕಿಸುರು (ಕಿಸುರುಗಣ್ಣು), ಹಕ್ಕು (ಹಕ್ಕುಗಟ್ಟು)
rheumatic pain — ನಾ ಚಳುಕು (ಆತ ಚಳುಕಿನಿಂದಾಗಿ ನಡೆಯಲಾರ)
rheumatism — ನಾ ಗಂಟೂತ, ಗಂಟೂದಿಕೆ, ಗಂಟಿನ ಉರಿಯೂತ
rhyme — ನಾ ಕೊನೆಯುಲಿ ಸಾಟಿ
rhythm — ನಾ ಮರುಕಳಿಕೆ
rib — ನಾ ಪಕ್ಕೆ (ಪಕ್ಕೆಲುಬು)
ribald — ಗು ಹೊಲಸುಮಾತಿನ (ಹೊಲಸು ಮಾತಿನ ಕತೆ)
ribbon — ನಾ ಪಟ್ಟಿ
rice — ನಾ ಅಕ್ಕಿ (ಅಕ್ಕಿಕಾಳು; ಅಕ್ಕಿಗಚ್ಚು; ಅಕ್ಕಿಗಂಜಿ)
rice (boiled) — ನಾ ಕೂಳು (ಎಂಜಲು ಕೂಳು; ಕುದಿಕೂಳು; ಕೂಳ್ಬಡಿಕ), ಬೋನ (ಬೋನಗಿತ್ತಿ)
rice (cold) — ನಾ ತಂಗಳು (ತಂಗಳುಂಡು ಗದ್ದೆಯ ಕಡೆಗೆ ಹೋದ)
rice bin — ನಾ ಗುಡಾಣ (ಗುಡಾಣದಲ್ಲಿ ಅಕ್ಕಿ ತುಂಬಿದ್ದಾರೆ) ನಾ ಗಂಜಿ (ಗಂಜಿ ಕುಡಿ)
rich — ಗು 1 ಹುಲುಸು (ಹುಲುಸಾಗಿ ಬೆಳೆ ದಿರುವ ಬತ್ತದ ತೆನೆ) 2 ಹಣವಂತನಾದ, ಉಳ್ಳವನಾದ
riches — ನಾ ಸೊಮ್ಮು, ಒಡಮೆ, ಕೂಡುದಲೆ
rick — ನಾ ಬಣವೆ, ಮೆದೆ, ಒಟ್ಟಿಲು
rickets — ನಾ ಎಲುಮುರುಟು
rickety — ಗು ಅಲುಗಾಡುವ, ಅಳವುಗುಂದಿದ, ಅಸಳೆ
ricochet — ಕ್ರಿ ಚಿಮ್ಮು, ಪುಟಿದೇಳು, ಕುಪ್ಪಳಿಸು
rid — ಕ್ರಿ ತೊಲಗಿಸು (ಅವನನ್ನೊಮ್ಮೆ ಇಲ್ಲಿಂದ ತೊಲಗಿಸಿಬಿಡಿ)
riddle — ನಾ ಮುಂಡಿಗೆ (ಮುಂಡಿಗೆಲಿುಕ್ಕು; ಮುಂಡಿಗೆ ಹಾಕು), ಒಡಗತೆ, ಒಗಟು (ಒಗಟು ಹಾಕು; ಒಗಟಾಗು)
ride — ಕ್ರಿ ಏರಿಹೋಗು (ಕುದುರೆಯೇರಿ ಹೋಗು)
ridge — ನಾ ಏಣು, ಬದು (ಗದ್ದೆಯ ಬದುವಿ ನಲ್ಲಿ ಬೆಳೆದ ಹುಲ್ಲು), ಮೊಗಡು (ಮಾಡಿನ ಮೊಗಡು)
ridicule — ನಾ ಅಣಕ (ಅಣಕಿಸು), ಗೇಲಿ (ಗೇಲಿಮಾಡು; ಗೇಲಿಗೊಳಿಸು), ಎಗತಾಳಿ (ಆತ ಎಲ್ಲರನ್ನೂ ಎಗತಾಳಿ ಮಾಡುತ್ತಿ ದ್ದಾನೆ)
ridiculous — ಗು ನಗೆಪಾಟಲಿನ, ಪೆದ್ದು, ತಿಳಿ ವಿಲ್ಲದ
rife — ಗು 1 ತೀವಿದ, ತುಂಬಿತುಳುಕುವ 2 ಆಗಾಗ ಉಂಟಾಗುವ, ಹರವಿನ
riff-raff — ನಾ ಕೀಳುಮಂದಿ, ಕೆಲಸಕ್ಕೆ ಬಾರ ದವನು
rifle — ನಾ ಕೋವಿ
rifle — ಕ್ರಿ ದೋಚು, ಕೊಳ್ಳೆಹೊಡೆ, ಸೂರೆ ಮಾಡು
rift — ನಾ ಬಿರುಕು, ಒಡಕು, ಸೀಳು
rig — ಕ್ರಿ ಅಣಿಮಾಡು, ಒದಗಿಸು (ಹಡಗಿಗೆ ಬೇಕಾದ ಹಾಲಿುಗಳನ್ನು ಒದಗಿಸು; ತಿರು ಗಾಟಕ್ಕೆ ಬೇಕಾದುದನ್ನು ಒದಗಿಸು)
right — ನಾ 1 ಹಕ್ಕು (ನಮಗೆ ಇಲ್ಲಿಗೆ ಬರುವ ಹಕ್ಕಿದೆ) 2 ಬಲಬದಿ
right — ಗು 1 ಬಲ (ಬಲಗಾಲು, ಬಲಬದಿ; ಬಲಗಡೆ) 2 ಸರಿ (ಸರಿದಾರಿ; ಸರಿಮಾಡು; ಸರಿಬೀಳು; ಸರಿಯಾಗು; ಸರಿಯಲ್ಲ), ತಕ್ಕ (ಮನೆಗೆ ತಕ್ಕ ಬಾಗಿಲು)
righteous — ಗು ಕಟ್ಟಲೆ ಮೀರದ, ಸರಿಯಾದ, ಒಳ್ಳೇ ನಡತೆಯ
rigid — ಗು 1 ಬಗ್ಗದ, ಪೆಡಸು, ಅಲುಗಾಡದ 2 ಕಟ್ಟುನಿಟ್ಟಿನ ನಾ 1 ಪೆಡಸು, ಗಡುಸು, ಬಿರುಸು 2 ಕಟ್ಟುನಿಟ್ಟು (ಆತ ಮಕ್ಕಳನ್ನು ಕಟ್ಟುನಿಟ್ಟಿ ನಿಂದ ಬೆಳೆಸಿದ್ದಾನೆ)
rigmarole — ನಾ ಹುರುಳಿಲ್ಲದ ಮಾತು
rigor — ನಾ ಸೆಡೆತ (ಸೆಡೆತದಿಂದ ಆಕೆಯ ಬೆನ್ನು ಬಾಗಿದೆ), ಬಿಗಿತ
rigorous — ಗು ಕಟ್ಟುನಿಟ್ಟಿನ (ಕಟ್ಟುನಿಟ್ಟಿನ ಕಟ್ಟಲೆಗಳು), ಬಿಗಿಯಾದ, ಕನಿಕರವಿಲ್ಲದ, ತುಂಬಾ ತೊಡಕಿನ
rigour — ನಾ ಬಿರುಸುತನ, ಪೆಡಸುತನ
rile — ಕ್ರಿ ಕೆರಳಿಸು (ಎಲ್ಲರೂ ಸೇರಿ ಆತನನ್ನು ಕೆರಳಿಸುತ್ತಿದ್ದಾರೆ)
rill — ನಾ ಚಿಕ್ಕ ಹಳ್ಳ, ತೋಡು
rim — ನಾ ಬದಿ, ಅಂಚು, ಹೊರಸುತ್ತು, ಅರಗು (ತಂಬಿಗೆಯ ಅರಗು ಕಿತ್ತುಹೋಗಿದೆ)
rind — ನಾ ಸಿಪ್ಪೆ (ಬಾಳೆ ಹಣ್ಣಿನ ಸಿಪ್ಪೆ; ಸಿಪ್ಪೆ ಗಟ್ಟು; ಸಿಪ್ಪೆಸುಲಿ), ಸಿಗುರು (ಸಿಗುರು ತೆಗೆದ ಕಬ್ಬು),ಕೆಬ್ಬೆ (ಹಣ್ಣಿನ ಕೆಬ್ಬೆ)
ring — ನಾ 1 ಮಿಂಚು (ಬೆಳ್ಳಿಯ ಮಿಂಚು), ಉಂಗುರ (ಉಂಗುರಕ್ಕೆ ಚಿನ್ನ ಕೊಡಿ), ಮುರಿ (ಬೆಳ್ಳಿಯ ಮುರಿ), ಸಿಂಬಿ (ಸಿಂಬಿಯ ಮೇಲೆ ಇರಿಸಿದ ಮಡಿಕೆ) 2 ಮಣಿಯುಲಿ (ಮಣಿ ಯುಲಿ ಕೇಳಿಸುತ್ತಿದೆ)
ring leader — ನಾ ಕೇಡಿಗಳ ಮುಂಚ
ringworm — ನಾ ತಾಮರೆ
rink — ನಾ ನೀರ್ಗಲ್ಲ ಹರವು
rinse — ಕ್ರಿ ಮುಕ್ಕುಳಿಸು (ಬಾಲಿು ಮುಕ್ಕುಳಿಸು), ಅಲುಬು (ಬಟ್ಟೆ ಅಲುಬು), ಗಲಬರಿಸು (ಕೊಡವನ್ನು ಗಲಬರಿಸದೆ ನೀರು ತುಂಬ ಬೇಡ)
riot — ನಾ 1 ದೊಂಬಿ (ದೊಂಬಿ ಎಬ್ಬಿಸು; ದೊಂಬಿಮಾಡು; ದೊಂಬಿಗಾರ; ದೊಂಬಿಗ) 2 ಗೊಂದಲ
riotous — ಗು ತಾರುಮಾರಾದ, ಗೊಂದಲದ, ದೊಂಬಿಯ
rip — ಕ್ರಿ ಸಿಗಿ (ಸಿಗಿದುಹಾಕು), ಕಿತ್ತುಹಾಕು
riparian — ಗು ಹೊಳೆಬದಿಯ (ಹೊಳೆಬದಿಯ ಹೊಲ)
ripe — ಗು ಹಣ್ಣು (ಹಣ್ಣು ಮುದುಕಿ, ಹಣ್ಣೆಲೆ), ತೊರೆ (ತೊರೆಹಣ್ಣು)
ripen — ಕ್ರಿ ಮಾಗು (ಗಿಡದಲ್ಲೀ ಮಾಗಿದ ಹಣ್ಣು), ಬಲಿ (ಬಲಿತ ಕಾಲಿು), ಕಳಿ (ಕಳಿತ ಹಣ್ಣು; ಕಳಿಯಲರು)
rip-off — ನಾ ಸುಲಿಗೆ, ಮೋಸ, ಕಳ್ಳತನ ನಾ ಕಿರುದೆರೆ
rise — ಕ್ರಿ ಮೂಡು (ನೇಸರು ಮೂಡಿತು), ಹೊಮ್ಮು, ಎಗರು (ಮೇಲಕ್ಕೆ ಎಗರು), ಏರು (ಬಿಸಿಲೆೀರು; ಏರುಹೊತ್ತು; ಏರುತ; ಏರು ತಗ್ಗು; ಏರಿಳಿತ; ಅಮಲೆೀರು), ನೆಗೆ (ನೆಗೆ ಯುವ ಕೆಂದೂಳಿ)
rising — ನಾ 1 ನೆಗೆಹ,ಏರಿಕೆ 2 ಎಗು (ಎಗುವಿನ ಮೇಲೆ ಹತ್ತಿ ಕುಳಿತ)
risk — ಕ್ರಿ ತೊಂದರೆಗೊಡ್ಡು, ಕುತ್ತಕ್ಕೆ ಎಡೆಗೊಡು
risky — ಗು ತೊಂದರೆ ಕೊಡಬಲ್ಲ, ಕುತ್ತ ತರಬಲ್ಲ
rite — ನಾ ಬೇಳುವೆ, ನೋಂಪಿ (ಇವತ್ತು ಅವನು ಯಾವುದೋ ನೋಂಪಿ ನಡೆಸುತ್ತಿದ್ದಾನೆ)
ritual — ನಾ ಕೊಂಡಾಡುವ ಬಗೆ
rival — ನಾ ಎದುರಾಳಿ (ಎದುರಾಳಿ ಯಾರು?)
rivalry — ನಾ ಪುರುಡು (ಪುರುಡಿಸು; ಪುರುಡು ಮಾತು), ಹುರುಡು (ಹುರುಡು ಹಿಡಿ ದವನು), ಮೇಕು, (ಮೇಕು ತೋರಿಸು) ಮೇಲಾಟ
rive — ಕ್ರಿ ಸೀಳು, ಸಿಗಿ, ಹರಿ
river — ನಾ ಹೊಳೆ (ಹೊಳೆಯ ನೀರು; ಬತ್ತಿದ ಹೊಳೆ)
river-mouth — ನಾ ಅಳವೆ (ಹೊಳೆಯ ಅಳವೆ)
rivet — ನಾ ಕಟಿಮೊಳೆ
rivulet — ನಾ ಕಿರುಹೊಳೆ, ತೊರೆ, ತೋಡು, ಹಳ್ಳ
road — ನಾ ಬಳಿ (ಬಳಿತಪ್ಪು; ಬಳಿವಿಡು; ಬಳಿಹೋಕ), ಹಾದಿ (ಹಾದಿನಡೆ, ಹಾದಿ ನೋಡು, ಹಾದಿಹೋಕ),ದಾರಿ (ಆ ದಾರಿ ಯಲ್ಲಿ ಹೋಗಬೇಡಿ; ದಾರಿತಪ್ಪು; ದಾರಿ ಬಿಡು)
roadblock — ನಾ ದಾರಿತಡೆ
roadway — ನಾ ಹೆದ್ದಾರಿ
roam — ಕ್ರಿ ಮೆರೆ (ಆತ ಬೆಳಗ್ಗಿನಿಂದಲೂ ಮೆರೆಯುತ್ತಿದ್ದಾನೆ), ಎಡೆಯಾಡು (ಎಡೆ ಯಾಟ), ತಿರಿ (ತಿರುಕುಳಿ; ತಿರಿದು ತಿನ್ನು), ತೊಳಲು (ತೊಳಲಿ ಬಳಲು), ತಿರುಗು (ತಿರುಗಾಟ; ತಿರುಗಾಡು), ಅಲೆ (ಅಲೆ ದಾಡು), ಸುತ್ತಾಡು
roan — ನಾ ಬೆರಕೆ ಬಣ್ಣದ ಕುದುರೆ
roar — ಕ್ರಿ ಮೊರೆ (ಮೊರೆವ ಹುಲಿ), ಅಬ್ಬರಿಸು (ಗುಡುಗು ಅಬ್ಬರಿಸುತ್ತಿದೆ), ಮೊಳಗು, ಗದರಿಸು, ಕೂಕಿರಿ
roaring — ನಾ ಮೊರೆತ, ಗದರಿಕೆ, ಗೀಳು (ಗೀಳಿಡು) ಕ್ರಿ ಹುರಿ (ಹುರಿಯುವ ಹಂಚು, ಹುರಿ ಗಾಳು, ಹುರಿಗಡಲೆ, ಹುರಿಹಿಟ್ಟು), ಕರಿ (ಎಣ್ಣೆಯಲ್ಲಿ ಕರಿ), ಸುಡು (ರೊಟ್ಟಿಯನ್ನು ಸುಡು)
roasting — ನಾ ಸುಂಟಗೆ
rob — ಕ್ರಿ ಬಾಚು, ಗೋಚು (ಎಲ್ಲವನ್ನೂ ಗೋಚಿ ಕೊಂಡು ಹೋದರು), ತೆವರು (ಮನೆಗೆ ಕನ್ನಹಾಕಿ ಒಡವೆಗಳನ್ನು ತೆವರಿಕೊಂಡ),ದೋಚು
robbery — ನಾ ಸುಲಿಗೆ (ಸುಲಿಗೆ ಮಾಡು), ಕೊಳ್ಳೆ (ಕೊಳ್ಳೆಹೊಡೆ; ಕೊಳ್ಳೆಗಾರ)
robe — ನಾ ನಿಲುವಂಗಿ, ನೀಳುಡುಪು
robot — ನಾ ಪೆರ್ಚೂಟಿಯಾಳು
robust — ಗು ಮಯ್ಯೊಳಿತುಳ್ಳ, ಗಟ್ಟಿಮುಟ್ಟು (ಒಳ್ಳೆ ಗಟ್ಟಿಮುಟ್ಟಾದ ಮನೆ)
rock — ನಾ ಪಾರೆ (ಪಾರೆಯ ಮೇಲೆ ಹತ್ತಿ ನಿಂತಿದ್ದಾನೆ),ಬಂಡೆ (ಬಂಡೆಯ ಮೇಲೆ ಕುಳಿತವನು; ಬಂಡೆಗಲ್ಲು), ಅರೆ (ನೀನು ಒಡೆದ ಅರೆಯ ತುಂಡು ಚೂಪಾಗಿದೆ;ಕಲ್ಲರೆ), ಕಡಲು
rock — ಕ್ರಿ ತೂಗು (ತೂಗಹಾಕು; ತೊಟ್ಟಿಲು ತೂಗು), ಓಲಾಡು, ತೊನೆ (ತೊನೆದಾಡುವ ಗೆಲ್ಲುಗಳು)
rock salt — ನಾ ಕಲ್ಲುಪ್ಪು
rocket — ನಾ ಏರುಗಣೆ
rod — ನಾ ಸರಳು (ಕಬ್ಬಿಣದ ಸರಳು), ಸೆಳೆ (ಸೆಳೆಮಿಂಚು, ಸೆಳೆಕೋಲು), ಬಡಿಗೆ
rodent — ನಾ ಕಡಿಗ (ಇಲಿ ಒಂದು ಕಡಿಗ)
roe — ನಾ 1 ಮೀನಿನ ಮೊಟ್ಟೆ 2 ಜಿಂಕೆ
rogue — ನಾ ಪೋಕ (ಪೋಕರಿ)
role — ನಾ 1 ಕೆಲಸ 2 ಪಾಂಗು (ಇವತ್ತಿನ ಬಯಲಾಟದಲ್ಲಿ ನಿನಗೆ ಯಾವ ಪಾಂಗು ಕೊಟ್ಟಿದ್ದಾರೆ?)
roll — ನಾ ಸುರುಳಿ (ಕಾಗದದ ಸುರುಳಿ), ಕಂಡಿಕೆ (ನೂಲಿನ ಕಂಡಿಕೆ)
roll — ಕ್ರಿ ಉರುಳು (ಬೆಟ್ಟದ ಕಲ್ಲು ಕೆಳಗುರು ಳಿತು; ಉರುಳಾಡು; ದಿಂಡುರುಳು), ಹೊಳೆ (ಹಕ್ಕಿಯ ಗರಿ ಹೊಳೆ ಹೊಳೆದು ಕೆಳಗೆ ಬಂತು), ಹೊರಳು (ಹೊರಳಾಡು), ಮೆಳ್ಳಿಸು (ಕಣ್ಣುಗುಡ್ಡೆಗಳನ್ನು ಮೆಳ್ಳಿಸುತ್ತಿ ದ್ದಾನೆ), ತುಳ್ಳು (ಮಗು ತುಳ್ಳಾಡುತ್ತಿದೆ)
roll call — ನಾ ಇರವಿನ ಕರೆ (ತರಗತಿಯಲ್ಲಿ ಮೊದಲು ಇರವಿನ ಕರೆ ಕರೆಯುತ್ತಾರೆ)
roll up — ಕ್ರಿ ತೆರಟು (ಆಕೆ ಹೊಳೆ ದಾಟುವಾಗ ಸೀರೆಯನ್ನು ಮೆಲಕ್ಕೆ ತೆರಟಿಕೊಂಡಳು)
roller — ನಾ ಕಣಿ (ದಪ್ಪದ ಕಣಿ)
rollick — ನಾ ಗದ್ದಲದ ಕೂಟ ಗು ಮೆಳ್ಳೆ (ಮೆಳ್ಳೆಗಣ್ಣು)
romance — ನಾ ನನಸಲ್ಲದ ಕತೆ, ಗೆತ್ತ ಕತೆ, ನೆನಸಿದ ಕತೆ
romantic — ಗು 1 ನೆನಸಿನ, ಅನಿಸಿಕೆಗಳ 2 ಬಳಕೆಗೆ ತರಲಾಗದ
romp — ನಾ ಚಲ್ಲಟದ ಹುಡುಗಿ
romp — ಕ್ರಿ 1 ಕುಣಿದಾಡು, ಚಲ್ಲಡು 2 ಸುಳುವಾಗಿ ಗೆಲ್ಲು (ಓಟದಲ್ಲಿ ನಾವು ಸುಳು ವಾಗಿ ಗೆದ್ದೆವು)
roof — ನಾ ಎರಕೆ (ಮುಳಿಯ ಎರಕೆಲಿುರುವ ಮನೆ; ಎರಕಿಲು), ಮಾಡು (ಮನೆಯ ಮಾಡು ಕುಸಿದಿದೆ), ಸೂರು (ತಲೆಯ ಮೇಲೊಂದು ಸೂರು ಬೇಕು), ಪುರೆ (ಮಳೆ ಲಿುಂದ ಒದ್ದೆಯಾಗದ ಹಾಗೆ ಪುರೆ ಕಟ್ಟಿ ದರು),ಹೊದಿಕೆ (ಹುಲ್ಲಿನ ಹೊದಿಕೆ; ಮನೆಯ ಹೊದಿಕೆ)
roof-garden — ನಾ ಅಟ್ಟಳಿಗೆ ತೋಟ, ಮೆತ್ತೆ ತೋಟ
rook — ನಾ ಮೋಸಗಾರ
room — ನಾ ಇಂಬು (ಇಂಬುಕೊಡು), ಕೋಣೆ (ಮನೆಯ ಕೋಣೆ; ಕೋಣೆವುಗಿಸು), ಅರೆ
roost — ನಾ 1 ಮಲಗುವೆಡೆ, ಒರಗು ವೆಡೆ (ಹಕ್ಕಿ ಕುಳಿತು ಒರಗುವೆಡೆ)
root — ನಾ ಗಡ್ಡೆ (ತಾವರೆಗಡ್ಡೆ; ಗೆಣಸಿನ ಗಡ್ಡೆ), ಬೇರು (ಬೇರುಮುಟ್ಟ ಕೀಳು),ದುಂಪ
root — ಕ್ರಿ ಬೇರೂರು, ಬೇರುಬಿಡು, ಬೇರೊಡೆ, ನೆಲೆಗೊಳ್ಳು
root out — ಕ್ರಿ ಅಗೆಯುತ್ತು
root-seller — ನಾ ಬೇರುಗ, ಬೇರುಗಿತಿ
rope — ನಾ ಕಣ್ಣಿ (ಕಾಲುಗಣ್ಣಿ; ಕೊರಳು ಗಣ್ಣಿಯ ಕುಣಿಕೆ), ನಾರಿ (ಬಿಲ್ಲಿನ ನಾರಿ), ನೇಣು (ಎತ್ತುಗಳ ನೇಣು; ನೇಣಿಕ್ಕು), ಹಮ್ಮುಗೆ, ಮಿಣಿ (ಮಿಣಿಯಾಟ; ಮಿಣಿಬಲೆ; ಹೆಮ್ಮಿಣಿ), ಹೊರಜೆ
rope — ಕ್ರಿ ಹಮ್ಮು (ಆತ ಹೊರಜೆ ಹಮ್ಮು ತ್ತಿದ್ದಾನೆ)
rope handle — ನಾ ಉಗ್ಗ (ತಂಬಿಗೆಯನ್ನು ಹಿಡಿಯಲು ಉಗ್ಗವಿದ್ದರೆ ಒಳ್ಳೆಯದು; ಉಗ್ಗಹಾಕು)
rope ladder — ನಾ ನೂಲೆೀಣಿ (ನೂಲೆೀಣಿ ಲಿುಂದ ಮಾಳಿಗೆಗೆ ಹತ್ತಿದ)
rope-dancer — ನಾ ಕೊಲ್ಲಟಿಗ, ಕೊಲ್ಲಟಿ ಗಿತ್ತಿ
rosary — ನಾ ಮಣಿಲಿುಂಡೆ (ಮೊರೆ ಹಾಡಿನ ಮಣಿಲಿುಂಡೆ)
rose water — ನಾ ಪನ್ನೀರು
roster — ನಾ ಸರದಿಪಟ್ಟಿ, ಪಾಳಿಪಟ್ಟಿ
rostrum — ನಾ ತವಗ, ಜಗಲಿ ಗು 1 ನಸುಗೆಂಪು 2 ನಾಚಿ ಕೆಂಪಾದ
rot — ಕ್ರಿ ಅಳುಗು (ಅಳುಗಿದ ಹಣ್ಣು), ಕೊಳೆ (ಕೊಳೆಹಾಕು; ಕೊಳೆತ ಕುಂಬಳಕಾಲಿು)
rotary — ಗು ತಿರುಗುವ, ಉರುಳುವ
rotate — ಕ್ರಿ ಸುತ್ತಿಸು, ತಿರುಗಿಸು, ಉರುಳಿಸು
rotation — ನಾ 1 ಸರದಿ (ಸರದಿಯ ಮೇಲೆ ಹಾಡು; ಇವತ್ತು ನಿನ್ನ ಸರದಿ), ಪಾಳಿ 2 ಸುತ್ತುವಿಕೆ
rote — ನಾ 1 ಉರು (ಉರುಹಚ್ಚುವುದು, ಉರುಹೊಡೆಯುವುದು) 2 ಹುರುಳರಿಯದ ಉಲಿ
rotor — ನಾ ತಿರುಗೋಲು
rotten — ಗು ಪುಳಿಂಚಿಲು, ಕೊಳಕು (ಕೊಳಕಿನ ಕೊಂಪೆ)
rotund — ಗು ದುಂಡಗಿನ, ತೋರ
rouge — ನಾ ಕೆನ್ನೆಬಣ್ಣ
rough — ಗು ನರಡು (ಆತ ತುಂಬಾ ನರಡು), ಕರಡು (ಕರಡು ಕಾಗದ, ಕರಡು ಮಾತು; ಕರಡಕ್ಕಿ),ತರಕು (ತರಕು ಬಂಡೆ; ತರಕಲು - ತರಕಲು ಬಟ್ಟೆ),ದೊರಗು (ದೊರಗು ನೆಲ), ಮುರುಡು (ಮುರುಡು ಕಲ್ಲು), ಬಿರು (ಬಿರುಗಾಳಿ, ಬಿರುದನಿ), ಹುರುಕು (ಹುರುಕು ಹಿಮ್ಮಡಿ), ಉರುಟು (ಉರುಟು ನೂಲು)
roughly — ಗು 1 ಒರಟಾಗಿ 2 ಸರಿಸುಮಾರು
roughness — ನಾ ಪಪ್ಪರಿಕೆ,ಪರಿಗೆ
round — ನಾ ತೆರಳೆ (ಮಣ್ಣಿನ ತೆರಳೆ), ಉಂಡೆ (ನೂಲುಂಡೆ; ಉಂಡೆಕಟ್ಟು), ಗುಡುಸು, ಗುಂಡು (ಗುಂಡುಕಲ್ಲು; ಗುಂಡೋಲೆ; ಕಲ್ಲುಗುಂಡು; ಸಿಡಿಗುಂಡು)
round about — ಗು ಸುತ್ತುಬಳಸಿದ, ನೇರ ವಲ್ಲದ
round — ಗು ಬಳೆ (ಬಳೆಗಣ್ಣು),ಬಟ್ಟ (ಬಟ್ಟ ಕಲ್ಲು; ಬಟ್ಟಮೊಲೆ),ಆಳಿ (ಅಳಿ ನೇಗಿಲು), ಆಣಿ (ಆಣಿ ಮೆಟ್ಟಿನ ಉಂಗುರ), ದುಂಡು (ದುಂಡುಮಲ್ಲಿಗೆ, ದುಂಡು ಕಡಗ), ದಿಂಡೆ (ದಿಂಡೆಕಲ್ಲು), ಉರುಟು (ಉರುಟು ಕಲ್ಲು), ದುಂಡಗೆ (ಸುತ್ತಿಗೆಲಿುಂದ ಹೊಡೆದು ದುಂಡಗೆ ಮಾಡು), ಗುಂಡಗೆ
round up — ಕ್ರಿ ಒಟ್ಟು ಸೇರಿಸು, ಒಟ್ಟು ಗೂಡಿಸು
rouse — ಕ್ರಿ ಎಬ್ಬು (ಎಬ್ಬಟ್ಟು - ಎಬ್ಬಟ್ಟಿ ನಿಲ್ಲಿಸು; ಎಬ್ಬಿಸು - ಬೆಳಿಗ್ಗೆ ಎಲ್ಲರನ್ನೂ ಎಬ್ಬಿಸಬೇಕು), ಎಚ್ಚರಿಸು
rousing — ಗು ಹುರಿದುಂಬಿಸುವ
rout — ಕ್ರಿ 1 ಸಲೆಸೋಲಿಸು 2 ಓಡಿಸು 3 ತೋಡು ನಾ ದಾರಿ, ಹಾದಿ (ಈ ಹಾದಿಯನ್ನು ಹಿಡಿದು ಹೋಗಿ)
routine — ನಾ ಯಾವಾಗಿನ ಕೆಲಸ, ಯಾವಾಗಿನ ಹಾದಿ
rove — ಕ್ರಿ ಅಲೆದಾಡು, ಸುತ್ತಾಡು
row — ನಾ 1 ಸಾಲು (ಮರಗಳ ಸಾಲು, ಸಾಲುಗಟ್ಟು, ಅಡ್ಡಸಾಲು), ಪಾಳಿ (ಪಾಳಿ ನಿಲ್ಲು), ಓರಣ (ಓರಣಗೊಳ್ಳು; ಓರಣ ಹಿಡಿ), ಜಾಡು, ಓಜೆ (ಓಜೆಹಿಡಿ, ಓಜೆ ಗೊಳ್ಳು), ಓಣಿ (ಮರಳನ್ನು ಹರಡಿ ಓಣಿ ಓಣಿಯಾಗಿ ಮಾಡಿ ಇರಿಸಿದ್ದಾರೆ), ಹಂತಿ (ಹಂತಿತಪ್ಪು; ಹಂತಿಗೊಳ್ಳು; ಹಂತಿ ಹೊಡೆ), ನಿಟ್ಟಣಿ, ಚಾರ, ಮೋಳಿ 2 ಗದ್ದಲ, ಹುಲಿುಲು
row — ಕ್ರಿ ಹುಟ್ಟುಹಾಕು
rowdy — ನಾ ಪುಂಡ, ಪೋಲಿ
rower — ನಾ ಅಂಬಿಗ
royal — ನಾ ಅರಸನ, ಅರಸನಿಗೆ ತಕ್ಕುದಾದ
royalty — ನಾ 1 ಅರಸುತನ 2 ಮದಿಪುಹಣ, ತಕ್ಕಮೆಹಣ
rub — ಕ್ರಿ ನೇವರಿಸು (ಬೆನ್ನನ್ನು ನೇವರಿಸು), ತೇಯು (ಬೇರನ್ನು ತೇದು ಹಚ್ಚು), ನೀವು, ಉಜ್ಜು (ಉಜ್ಜುಗಲ್ಲು, ಉಜ್ಜುಗಾಯ), ಉದ್ದು (ಎರಡು ಕಯ್ಗಳನ್ನು ಉದ್ದಿಕೊಂಡು ಬಂದ), ತೀಡು (ಆನೆ ದಾಡೆಯನ್ನು ಮರಕ್ಕೆ ತೀಡುತ್ತಿದೆ), ತಿಕ್ಕು (ಬೆನ್ನು ತಿಕ್ಕಿ ತೊಳೆ), ತಿಗುರು (ಮಯ್ಗೆ ಎಣ್ಣೆ ತಿಗುರು), ಎಳವು (ಎಳವಿಕೊಳ್ಳು), ಒರೆ (ಒರೆಗಲ್ಲು, ಒರೆ ಹಚ್ಚು), ಹೊಸೆ (ಕಿಚ್ಚು ಹೊಸೆವ ಕೋಲು), ಮಸೆ (ಕತ್ತಿ ಮಸೆ), ಸವರು (ಎಣ್ಣೆ ಸವರು), ತೆಗೆ (ಬೇರು ತೆಗೆ)
rub off — ಕ್ರಿ ಒರಸು (ಒದ್ದೆಯಾದ ನೆಲವನ್ನು ಒರಸು), ಕೀರು, ತೊಡೆ (ಬರಹವನ್ನು ತೊಡೆದುಹಾಕು), ಸಿಂದು (ಬರೆದುದನ್ನೆಲ್ಲ ನೀವೇ ಸಿಂದಬೇಕು), ತಿಮಿರು (ಕಾಲನ್ನು ತಿಮಿರಿ ತೊಳೆ), ತೆಮರು (ತೆಮರಿದ ಬರಹ), ಎಳವು
rubber — ನಾ 1 ಹಿಗ್ಗುಕ 2 ಉಜ್ಜುಕ
rubbing — ನಾ ಮಸೆಪು (ಕತ್ತಿಯ ಮಸೆಪು), ಒರೆತ
rubbish — ನಾ ಸತ್ತೆ (ಸತ್ತೆಹುಲ್ಲು),ಸದೆ, ಕಸ (ಕಸಗುಡಿಸು; ಕಸಕಡ್ಡಿ; ಕಸಬರಿಕೆ),ಪಳಿ (ಎಲ್ಲ ಕಡೆಯಲ್ಲೂ ಪಳಿ ತುಂಬಿದೆ), ಚೀಪರಿ
rubble — ನಾ ಕಲ್ಲುಮಣ್ಣು (ಒಡೆದ ಕಟ್ಟಡದ ಕಲ್ಲುಮಣ್ಣುಗಳನ್ನು ಅಲ್ಲೀ ಎದುರುಕಡೆ ಹಾಕಿದ್ದಾರೆ)
ruby — ನಾ ಕಿಸುಗಲ್ಲು
rucksack — ನಾ ಬೆನ್ನುಚೀಲ (ಬೆಟ್ಟ ಹತ್ತು ವವರ ಬಳಿ ಬೆನ್ನುಚೀಲ ಇರುತ್ತದೆ)
ruddy — ಗು 1 ಮಯ್ಯೊಳಿತುಳ್ಳ 2 ಕೆಂಪು ಬಣ್ಣದ
rude — ಗು ಬಿರುಸು (ಬಿರುಸಿನವನು), ಒರಟು (ಒರಟ; ಒರಟುಮಾತು) ನಾ ಮೊದಲ ಹಂತ (ಕಲಿಕೆಯ ಮೊದಲ ಹಂತ), ಮೊದಲ ತೋರ್ಕೆ
rue — ಕ್ರಿ ಕೊರಗು, ಮರುಗು
ruffian — ನಾ ಕೇಡಿ, ಕೊಲೆಗಾರ
ruffle — ಕ್ರಿ 1 ನಲುಗು (ನಲುಗಿದ ಕೂದಲು; ನಲುಗಿದ ಉಡುಪು) 2 ತಲ್ಲಣಗೊಳಿಸು, ಕಾಡು
rug — ನಾ ನೆಲಹಾಸು
rugged — ಗು 1 ಒರಟು, ಕೊರಕಲು 2 ಗಟ್ಟಿಮುಟ್ಟಾದ
rugged — ಗು ಮೊರಡು
ruin — ನಾ ಪಾಟಿ, ಕೆಟ್ಟೆ (ಕೆಟ್ಟೆಣಿಸು), ಕೆಡುಹ, ಕೆಡುಕು (ಒಳಿತು-ಕೆಡುಕು), ಅಳಿವು, ಕೇಡು (ಕೇಡಿ, ಕೇಡಿಗ; ಕೇಡುಗಾಲ)
ruin — ಕ್ರಿ ಅಳಿ (ಅವನಲ್ಲಿ ಇದ್ದುದೆಲ್ಲ ಅಳಿದು ಹೋಲಿುತು), ಕೆಡು (ಕೆಟ್ಟುಹೋಗು; ಕೆಡುಗ; ನೆಲೆಗೆಡು), ಮಣ್ಣಾಗು
ruined — ಗು ಪಾಳು (ಪಾಳ್ಮನೆ; ಪಾಳ್ವೊಲ), ಹಾಳು (ಹಾಳಾಗು, ಮನೆಹಾಳ), ಪುರ್ಚು (ಪುರ್ಚುಗೊಳ್ಳು)
ruinous — ಗು 1 ಅಳಿದುಹೋದ, ಮುರಿದು ಬಿದ್ದ 2 ಅಳಿಸಬಲ್ಲ, ಕೇಡುಂಟುಮಾಡಬಲ್ಲ
rule — ನಾ ಕೋಹು (ಈ ಕೋಹಿಗೆ ತಪ್ಪ ಕೂಡದು), ಗೊತ್ತು (ಗೊತ್ತುವಳಿ), ತಿಟ್ಟ (ಅವನು ಹಾಕಿದ ತಿಟ್ಟವನ್ನು ಮೀರುವವರು ಯಾರು?), ಹಾಳಿ
rule — ಕ್ರಿ ಆಳು (ಆಳ್ವಿಕೆ, ಆಡಳಿತ)
ruler — ನಾ ಆಳ್ವ
ruling — ನಾ ತೀರ್ಪು, ತೀರ್ಮಾನ
rumble — ನಾ ಗುಡುಗು, ಆಳದ ಸದ್ದು
ruminant — ನಾ ನಮುಲುಗ
rumination — ನಾ 1 ನಮಲು (ನಮಲು ಹಾಕು), ಮೆಲುಕು (ಮೆಲುಕಾಡಿಸು, ಮೆಲುಕು ಹಾಕು) 2 ಊಂಕುವಿಕೆ
rumour — ನಾ ಹೇಳಿವು,ಗಾಳಿಮಾತು, ಗಾಳಿಸುದ್ದಿ,ಗುಮಿತ (ಗುಮಿತ ನುಡಿದವರು)
rumple — ಕ್ರಿ ನಲುಗು (ಬಟ್ಟೆಯ ಮಡಿ ನಲುಗದಂತೆ ತರಬೇಕು), ಸುಕ್ಕು (ಸುಕ್ಕಿದ ಬಟ್ಟೆ; ಸುಕ್ಕುಗಟ್ಟು), ಮುದುರು, ಕೆದರು (ಕೆದರಿದ ಕೂದಲು)
run — ನಾ ಓಟ (ಓಟಕೀಳು; ಓಟಗಾರ)
run — ಕ್ರಿ ಓಡು (ಓಡಾಟ; ತಪ್ಪಿಸಿ ಕೊಂಡು ಓಡಿಹೋಗು)
run away — ಕ್ರಿ ಕಂಬಿ ಕೀಳು ಗು 1 ಹತೋಟಿ ಮೀರಿದ, ಅಂಕೆತಪ್ಪಿದ 2 ಓಡಿಹೋದ, ತಪ್ಪಿಸಿಕೊಂಡ
rung — ನಾ ಮೆಟ್ಟಲು (ಏಣಿಯ ಮೆಟ್ಟಲು)
runner — ನಾ ಓಟಗಾರ, ಓಡುಕುಳಿ
running — ನಾ ಹರಿಕೆ
runway — ನಾ ಓಡುದಾರಿ
rupture — ನಾ ಬಟ್ಟಿ (ಬಟ್ಟಿಬೀಳು), ಒಡಕು, ಬಿರುಕು (ಬಿರುಕುಬಿಡು)
rural — ಗು ಹಳ್ಳಿಯ
ruse — ನಾ ಸಂಚು, ತೋಡು
rush — ಕ್ರಿ ಮುನ್ನುಗ್ಗು, ನುಗ್ಗಾಟ (ಮೆರವಣಿಗೆಯ ನುಗ್ಗಾಟದಲ್ಲಿ ಮೆಟ್ಟು ಕಳೆದುಕೊಂಡೆ)
rusk — ನಾ ಒಣರೊಟ್ಟಿ
russet — ಗು ಕೆಂಪು-ಕಂದು, ಮಂಜಳು-ಕಂದು
rust (iron) — ನಾ ತುಕ್ಕು (ತುಕ್ಕುಹಿಡಿ),ಕಿಟ್ಟು (ಕಿಟ್ಟು ಹಿಡಿದ ಮೊಳೆ)
rustic — ನಾ ನಾಡಾಡಿ, ಗಾಂಪ, ಎಗ್ಗ (ಎಗ್ಗತನ - ಎಗ್ಗತನದ ಮಾತು; ಎಗ್ಗುಳಿ), ಕೊಬ್ಬಿಲ (ಆತನನ್ನು ಎಲ್ಲರೂ ಕೊಬ್ಬಿಲನೆಂದು ತಿಳಿದಿ ದ್ದಾರೆ), ಒರಟ
rut — ನಾ ಗಾಲಿಯ ಹಳ್ಳ, ತುಳಿದ ದಾರಿ, ಹಳೆಯ ಬಗೆ
rut — ಕ್ರಿ ಸೊಕ್ಕು (ಸೊಕ್ಕಿದ ಆನೆ ಒಬ್ಬ ಹುಡುಗ ನನ್ನು ಕೊಂದುಹಾಕಿತು)
ruthless — ಗು ಕನಿಕರವಿಲ್ಲದ
rutting — ನಾ ಬೆದೆ (ಬೆದೆಯಾಗು; ಬೆದೆಗೊಳ್ಳು; ಬೆದೆಗಾರ; ಬೆದೆಯಾಕಳು)
ryot — ನಾ ಒಕ್ಕಲಿಗ, ಆರಂಬಗಾರ saber — ನಾ ಅಗಲ ಅಲಗಿನ ಕತ್ತಿ
sabot — ನಾ ಮರದ ಮೆಟ್ಟು, ಮರದ ಕೆರ
sabotage — ಕ್ರಿ ಬೇಕೆಂದೇ ಕೆಡಿಸು, ಹಾಳು ಮಾಡು
sac — ನಾ ಕಿರುಚೀಲ
sachet — ನಾ ಕಂಪುಚೀಲ
sack — ನಾ ಹಸುಬೆ (ಆತನ ಹಸುಬೆಯಲ್ಲಿ ಎಶ್ಟೂ ಹಿಡಿದೀತು), ಕುನಿ ಕಿಲು, ಗವಸಣಿಗೆ (ಗವಸಣಿಗೆಯಲ್ಲಿ ಹತ್ತಿ ತುಂಬಿಸಿದ), ಗೋಣಿ (ಗೋಣಿ ಚೀಲ; ಒಂದು ಗೋಣಿ ಅಕ್ಕಿ ಕೊಡಿ)
sack — ಕ್ರಿ ಕೊಳ್ಳೆಹೊಡೆ
sacred — ಗು ಮುದಿಪಿನ
sacrifice — ನಾ ಕೋರಲು (ಕೋರಲು ಕೊಡು)
sad — ಗು ಕೊರಗುವ, ಸೊಮ್ಮುಕೆಟ್ಟ
sadden — ಕ್ರಿ ಕೊರಗು, ಬಗೆಗೆಡು
safe — ಗು 1 ತೊಂದರೆಗೊಳಗಾಗದ, ಗಾಸಿ ಗೊಳ್ಳದ 2 ನಂಬಿಕೆಯ
safeguard — ಕ್ರಿ ಕಾಪಾಡು (ಇದನ್ನು ಎಚ್ಚರಿಕೆ ಯಿಂದ ಕಾಪಾಡಬೇಕು), ಕಾಯು
safety — ಗು ಕಾಪಾಡುವ
sag — ಕ್ರಿ ಇಳಿಬೀಳು, ಜೋಲು (ಜೋಲು ಮೋರೆ; ಜೋತುಬೀಳು), ಕುಸಿ (ಅವನು ಕೂತಾಗ ಗೆಲ್ಲು ಕೆಳಕ್ಕೆ ಕುಸಿಯಿತು)
saga — ನಾ ತುಳಿಲ ನೀಳ್ಗತೆ
sagacious — ಗು ಮುಂಗಾಣಬಲ್ಲ, ಚುರುಕು ತಿಬ್ಬಳಿಯ,
sage — ನಾ ತಿಳಿವಿಗ, ಅರಿವಿಗ, ಕಿತ್ತಡಿ (ಗುಡಿಯ ಎದುರಿಗೆ ಒಬ್ಬಕಿತ್ತಡಿ ಬಂದು ಕುಳಿತಿದ್ದಾನೆ)
sail — ನಾ ಹಾಯಿ (ಹಾಯಿದೋಣಿ)
sail — ಕ್ರಿ ಹಾಯಿದೋಣಿ ನಡೆಸು, ಹಡಗು ನಡೆಸು
sailor — ನಾ ಹಡಗಾಳು
saint — ನಾ ಕಿತ್ತಡಿ ಗು ಹೊಲಸು, ಹಾದರದ, ರೋಸಿ ಹೋಗುವ
salad — ನಾ ಹಸಿಪಲ್ಲೆ, ಬೆರಕೆಪಲ್ಲೆ, ಬೆರಕೆಹಣ್ಣು
salary — ನಾ ಸಂಬಳ (ಸಂಬಳಗಾರ; ನಿಮಗೆ ಸಂಬಳ ಎಷ್ಟು ಬೇಕು?)
sale — ನಾ ಮಾರಾಟ (ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಕಳಿಸಿದರು)
saleable — ಗು ಮಾರಬಲ್ಲ (ಮಾರಬಲ್ಲ ಹಣ್ಣು ಗಳನ್ನು ಬೇರೆ ಇರಿಸಿ)
salesman — ನಾ ಮಾರಾಟಗಾರ (ಮಾರಾಟ ಗಾರ್ತಿ)
salient — ಗು 1 ಎದ್ದುಕಾಣುವ 2 ಹೊರ ಚಾಚಿದ
saliva — ನಾ ಜೊಲ್ಲು (ಜೊಲ್ಲು ಸುರಿಸು; ಜೊಲ್ಲುಬಾಯಿ),ಉಗುಳು,ಎಂಜಲು
sallow — ಗು ನಸುಮಂಜಳು ಬಣ್ಣದ, ಕುತ್ತ ಹಿಡಿದ
sally — ಕ್ರಿ 1 ದಾಳಿಮಾಡು 2 ತಟ್ಟನೆ ತೊಡಗು 3 ಮಾತಿನದಾಳಿ ನಡೆಸು
saloon — ನಾ ಅಂಬಲ, ತೊಟ್ಟಿ
salt — ನಾ ಉಪ್ಪು (ಉಪ್ಪಿನಕಾಯಿ; ಉಪ್ಪಿನ ಮಾಳ; ಉಪ್ಪುನೆಲ; ಉಪ್ಪಲ - ಈ ತಿಂಡಿ ಉಪ್ಪಲವಾಗಿದೆ)
saltish — ಗು ಒವಳು (ಒವಳು ನೆಲ), ಕರಲು (ಕರಲು ನೆಲದಲ್ಲಿ ಬೆಳೆ ಬೆಳೆಯುವುದಿಲ್ಲ)
salt-maker — ನಾ ಉಪ್ಪಲಿಗ, ತೊರೆಯ, ಉಪ್ಪಾರ
salubrious — ಗು ಮಯ್ಯೊಳಿತುಳ್ಳ
salutary — ಗು ಒಳಿತು ಮಾಡುವ, ಬಳಕೆ ಗಾಗುವ
salutation — ನಾ ಕಯ್ಮುಗಿತ, ತುಳಿಲು (ತುಳಿಲು ಮಾಡು - ಆತ ಬಂದವರಿಗೆಲ್ಲ ತುಳಿಲು ಮಾಡುತ್ತ ನಿಂತಿದ್ದ)
salute — ಕ್ರಿ ನಳಿ (ಆತನಿಗೆ ನಳಿದು ಅರಿಕೆ ಮಾಡಿ ಕೊಂಡೆ), ಕಯ್ಮುಗಿ, ಮಣಿ (ಯಾರಿಗೂ ಮಣಿಯದ ಕೆಚ್ಚೆದೆ), ಕಯ್ಜೋಡಿಸು, ತಲೆಬಾಗು, ಸಯ್ಗೆಡೆ (ಆತನ ಕಾಲಿಗೆ ಸಯ್ಗೆಡೆದ), ಪೊಡಮಡು, ಹೊಡವಡು, ತಲೆಮಡು, ಕಾಲ್ವಿಡಿ, ಕುಂಬು (ಕುಂಬಿಡು), ಮುಳ್ಗು, ಎರಗು (ಕಾಲಿಗೆರಗು)
salvage — ಕ್ರಿ ಪಾರುಮಾಡು (ಒಡೆದ ಹಡಗಿ ನಲ್ಲಿದ್ದವರನ್ನು ಪಾರುಮಾಡಿದರು), ಉಳಿಸು (ಮೂವರನ್ನು ಉಳಿಸಲಾಗಲಿಲ್ಲ)
salvation — ನಾ ಬಿಡುಗಡೆ (ಆತ ಬಾಳ್ವೆಯ ತೊಡಕುಗಳಿಂದ ಬಿಡುಗಡೆ ಪಡೆದ)
salve — ನಾ ಹಚ್ಚುಮದ್ದು
salve — ಕ್ರಿ ಮಾಂಜು, ನೋವುತಗ್ಗಿಸು
salver — ನಾ ಕಯ್ತಟ್ಟೆ ನಾ 1 ಗುಂಡು ಸುರಿಮಳೆ 2 ಚಪ್ಪಾಳೆ
same — ಗು ಅದೇ, ಒಂದೇ ಬಗೆಯ
sample — ನಾ ಎತ್ತುಗೆ
sanatorium — ನಾ ಮಾಂಜುಮನೆ
sanctify — ಕ್ರಿ ಮದಿಪುಕೊಡು
sanction — ನಾ ಒಪ್ಪಿಗೆ (ಕೆಲಸಕ್ಕೆ ಆತನ ಒಪ್ಪಿಗೆ ಸಿಗಲಿಲ್ಲ)
sanctuary — ನಾ ಕಾಹುವೆಡೆ, ಸಲಹುವೆಡೆ, ನೆಲೆ
sand — ನಾ ಮಳಲು (ಮಳಲ ದಿಣ್ಣೆ), ಮರಳು (ಮರಳುಗಾಡು, ಮರಳು ದಿನ್ನೆ), ಮಣಲು, ಉಸುಕು (ಉಸುಕಿನಲ್ಲಿ ನಡೆಯುವಾಗ ಕಾಲು ಹುಗಿಯುತ್ತಿತ್ತು; ಉಸುಕಿನ ಒಡ್ಡುಗಳ ಮೇಲೆ ಹುಲ್ಲು ಬೆಳೆಸಿದ್ದಾರೆ), ಉಸುಬು,ಹೊಯಿಗೆ
sandal — ನಾ ಕೆರ (ಕೆರಗಾರ; ಕೆರಹು), ಮೆಟ್ಟು (ಆತನ ಮೆಟ್ಟು ಎಲ್ಲೋ ಕಳೆದುಹೋಗಿದೆ)
sandbank — ನಾ ಪುಳಿಲು, ಒಟ್ಟಿಲು (ಮಳ ಲೊಟ್ಟಿಲು)
sandpaper — ನಾ ಮರಳುಹಾಳೆ
sandstone — ನಾ ಮರಳುಗಲ್ಲು
sandwich — ಕ್ರಿ ನಡುವೆ ಸೇರಿಸು
sane — ಗು ಓರಬಲ್ಲ, ಅರಿವುಳ್ಳ
sanguine — ಗು 1 ಕೆಂಪು 2 ಗೆಲವಾಗಿರುವ, ನಂಬಿಕೆಯ
sanitary — ಗು ಚೊಕ್ಕಟವಾದ, ಮಯ್ಗೆ ಕೆಡುಕು ತಾರದ
sanity — ನಾ ತಿಳಿವು, ತಿಳಿಒಳಗು
sap — ನಾ 1 ಮರದೆಸರು, ಗಿಡದೆಸರು 2 ಹುರುಪು, ಅಳವು 3 ಕಾಲುವೆ, ಅಗಳು
sapless — ಗು ಗೋಡು, ಕಟ್ಟೆ (ಕಟ್ಟೆ ಬಿದಿರು; ಕಟ್ಟೆ ಹಾಯು - ಬಿದಿರಿಗೆ ಕಟ್ಟೆ ಹಾಯಿತು)
sapling — ನಾ ಗಿಡ (ಎಳೆಯ ಗಿಡ), ಪಿಳ್ಳೆ (ಬಾಳೆಪಿಳ್ಳೆ)
sarcasm — ನಾ ಕೆಣಕು ಮಾತು, ಚುಚ್ಚು ಮಾತು, ಕಟಕಿ ಮಾತು
sarcastic — ಗು ಅಣಕದ, ಕಟಕಿ
sarcophagus — ನಾ ಕಲ್ಲಿನ ಹೆಣದರೆ
sardonic — ಗು ಕಟಕಿಯ, ನೋವು ತುಂಬಿದ, ಕೆಣಕುವ
sash — ನಾ ಹೆಗಲಪಟ್ಟಿ
satchel — ನಾ ಕಯ್ಚೀಲ, ಹೆಗಲ ಚೀಲ ನಾ ಅಟ್ಟಿಗ, ಹಿಂಬಾಲಕ
satiate — ಕ್ರಿ ತಣಿ (ತಣಿಯೂಡು; ತಣಿ ಯುಣ್ಣು), ಕಟ್ಟರೆಯಾಗು
satiety — ನಾ ಸಿಡಿ (ಸಿಡಿಯಾಗುವ ವರೆಗೆ ತಿಂದು ಕುಡಿದು ಮಾಡಿದ)
satire — ನಾ ಅಣಕ (ಅಣಕ ಬರಹ)
satisfaction — ನಾ ತಣಿವು, ತಣ್ಪು, ಮೆಚ್ಚುಗೆ
satisfy — ಕ್ರಿ ಆರು (ಕಣ್ಣಾರೆ ನೋಡು),ತಣಿ (ನೋಡಿ ನೋಡಿ ತಣಿದರು)
saturate — ಕ್ರಿ ಊರಿಸು (ನೀರಲ್ಲಿ ಉಪ್ಪು ಊರಿಸಿದೆ), ತೋಯಿಸು, ನೆನಸು
saturnine — ಗು ಮಂಕಾದ, ಚುರುಕಿಲ್ಲದ, ಜೋಲುಮೋರೆಯ
sauce — ನಾ 1 ಸಾರು, ಗೊಜ್ಜು 2 ತಲೆಹರಟೆ, ಸೊಕ್ಕು, ಮಲೆತ
saucer — ನಾ ಬಟ್ಟಲತಟ್ಟೆ (ಹಾರಾಡುವ ಬಟ್ಟಲತಟ್ಟೆಗಳು), ಕಿರುತಟ್ಟೆ
saucy — ಗು 1 ಎಗ್ಗಿಲ್ಲದ, ಮಲೆವ 2 ಚುರುಕಿನ
saunter — ಕ್ರಿ ಅಡ್ಡಾಡು (ಅವರು ಬರುವ ವರೆಗೆ ತೋಟದಲ್ಲಿ ಅಡ್ಡಾಡುತ್ತಿದ್ದ)
savage — ಗು ಪೊಳಲಿಗನಲ್ಲದ, ಕಾಡು, ಗಾರು, ಮರುಕವಿಲ್ಲದ, ಕಾಳು (ಕಾಳುಗೆಲಸ; ಕಾಳು ಮಾತು)
savanna — ನಾ ಹುಲ್ಲುಗಾವಲು, ಹುಲ್ಲುಗಾಡು
savant — ನಾ ಅರಿವಿಗ, ತಿಳಿವಿಗ
save — ಕ್ರಿ ಕಾಪಾಡು, ಉಳಿಸು (ಮರಗಳನ್ನು ಉಳಿಸಿರಿ; ಹಣ ಉಳಿಸು)
saving — ನಾ ಉಳಿತಾಯ (ಉಳಿತಾಯ ಮಾಡು)
saviour — ನಾ ಉಳಿಸುಗ, ಕಾಪುಗ
savour — ಕ್ರಿ ಸವಿ (ಜೇನು ಸವಿಯುತ್ತಿದ್ದಾನೆ; ಸವಿಹಣ್ಣು; ಸವಿತುತ್ತು; ಸವಿಗಾರ)
saw — ನಾ 1 ಗರಗಸ 2 ನಾಣ್ನುಡಿ
saw — ಕ್ರಿ ಕುಯ್ಯು, ಕೊಯ್ಯು (ಮರ ಕೊಯ್ಯು ವವರು ಬಂದಿದ್ದಾರೆ)
say — ಕ್ರಿ ಸೊಲ್ಲು (ಅವನು ಏನು ಸೊಲ್ಲು ತ್ತಿದ್ದಾನೆ? ಸೊಲ್ಲುವೆಣ್ಣು), ಎನ್ನು (ಎಂದು ಕೊಳ್ಳು; ಎಂದುದು), ಒರೆ (ಆತನೊರೆವ ಮೆಲ್ನುಡಿ), ಹೇಳು (ಹೇಳಿಕೊಳ್ಳು; ಹೇಳಿ ಮಾಡಿಸು), ಅನ್ನು (ಏನಾದರೂ ಅನ್ನು; ಅನ್ನಬಾರದ ಮಾತು)
saying — ನಾ 1 ಮಾತು (ಮಾತುಕೊಡು; ಮಾತು ಬಲ್ಲವನು; ಮಾತಿಗೆ ತಪ್ಪು), ಅಂಬೋಣ (ನನ್ನ ಅಂಬೋಣ ಮೊದಲು ಕೇಳಿಕೊಳ್ಳಿ),ಎನ್ನುಹ, ಎನ್ನಿಕೆ,ಹೇಳಿಕೆ (ಆತ ಕೊಟ್ಟ ಹೇಳಿಕೆ), ಇಂಬು (ಇಂಬು ಮಾಡು; ಆತನ ಇಂಬನ್ನು ಯಾರೂ ನಂಬಬೇಡಿರಿ) 2 ನಾಣ್ನುಡಿ, ಜಾಣ್ನುಡಿ ನಾ ಪರೆ (ಹುಣ್ಣಿನ ಪರೆ; ಪರೆಯೇಳು),ಹಕ್ಕು (ಕಣ್ಣಹಕ್ಕು; ಹಕ್ಕುಗಟ್ಟು; ಹಕ್ಕಳೆ),ಕೆರಕು (ಆತನ ಬಟ್ಟೆಯ ಮೇಲೆಲ್ಲ ಕೆರಕು ಬಿದ್ದಿದೆ)
scab — ನಾ ತುರಿಕಜ್ಜಿ
scabbard — ನಾ ಕತ್ತಿಯ ಒರೆ
scaffolding — ನಾ ಸಾರ (ಸಾರವೆ; ಸಾರ ಕಟ್ಟು)
scald — ಕ್ರಿ 1 ಕುದಿನೀರೆರೆ 2 ಸುಟ್ಟುಹೋಗು (ಕಾಲಿನ ಮೇಲೆ ಕುದಿನೀರು ಬಿದ್ದು ಕಾಲು ಸುಟ್ಟುಹೋಯಿತು)
scale — ನಾ 1 ಪೊರೆ (ಪೊರೆ ಕಳಚಿದ ಹಾವು), ಹೊರಿಗೆ, ಹೊರಿಕೆ (ನೀರುಳ್ಳಿಯ ಹೊರಿಕೆ) 2 ಅಳತೆ ಕೋಲು, ತಕ್ಕಡಿ
scale — ಕ್ರಿ 1 ಹತ್ತು (ಬೆಟ್ಟ ಹತ್ತು), ಏರು 2 ಅಳತೆಗೆ ಸರಿಪಡಿಸು
scallop — ನಾ 1 ಇಚ್ಚಿಪ್ಪು ಮೀನು 2 ಕಸೂತಿಯ ಅಂಚು
scalp — ನಾ ತಲೆತೊಗಲು
scalpel — ನಾ ಕೊಯ್ಕತ್ತಿ, ಕೊಯ್ಮಾಂಜು ಕತ್ತಿ
scamp — ನಾ ಪುಂಡ
scamper — ಕ್ರಿ ಓಡಿಹೋಗು, ಸಿಕ್ಕಾಪಟ್ಟೆ ಓಡು
scan — ಕ್ರಿ 1 ಕಣ್ಣುಹಾಲಿುಸು, ಕಣ್ಣೋಡಿಸು 2 ಎಚ್ಚರದಿಂದ ನೋಡು, ಗಮನಿಸು (ಎಲ್ಲವನ್ನೂ ಗಮನಿಸುತ್ತಿರಬೇಕು)
scandal — ನಾ ಆರಡಿ (ಆತ ಆರಡಿಯಾಗಬಹು ದೆಂದು ಬೆದರಿದ)
scandalize — ಕ್ರಿ ಹೆಸರು ಕೆಡಿಸು
scandalous — ಗು ಒಚ್ಚಿಯ, ಎಗ್ಗಿನ (ಎಗ್ಗಿನ ಕೆಲಸ)
scanty — ಗು ಸಾಕಾಗದ, ಕಡಿಮೆ
scapegoat — ನಾ ಹಳಿಹೊರುಗ, ತಪ್ಪು ಹೊರುಗ
scapula — ನಾ ತೋಳುಹಾಳೆ
scar — ನಾ ಜಡ್ಡು (ಹುಣ್ಣಿನ ಜಡ್ಡು), ಕಲೆ (ಸುಟ್ಟ ಕಲೆ ಯಾವತ್ತೂ ಹಾಗೆಯೇ ಉಳಿ ದಿರುತ್ತದೆ)
scarcity — ನಾ ಅರಕೆ, ಕೊರತೆ, ಕೊರೆ, ಗೊಟ್ಟು (ಗೊಟ್ಟುವಳ್ಳ; ಮನೆಯಲ್ಲಿ ಮಜ್ಜಿಗೆ ನೀರಿಗೆ ಗೊಟ್ಟಾಗಿದೆ), ತವಿಲು
scare — ಕ್ರಿ ಬೆಚ್ಚು (ಬೆಚ್ಚದೆ ನಡೆ), ಬೆದರು (ಬೆದರಿಸು; ಬೆದರಿಕೆ), ಹೆದರು, ದಿಗಿಲು ಗೊಳ್ಳು
scare-crow — ನಾ ಬೆಚ್ಚಪ್ಪ, ಬೆಚ್ಚಿಗ, ಬೆಚ್ಚು ಗೊಂಬೆ ನಾ ಕೊರಳ ಬಟ್ಟೆ
scarify — ಕ್ರಿ 1 ಚುಚ್ಚು, ಗೀರು 2 ಚುಚ್ಚಿನುಡಿ, ತೆಗಳು
scarlet — ಗು ತೊಗರು, ಕಡುಕೆಂಪು
scarp — ನಾ ಕಡಿದಾದ ಇಳಿಜಾರು, ಕಂತ
scathe — ಕ್ರಿ ಮೇಲ್ಮಯ್ ಸುಡು, ಗಾಯ ಗೊಳಿಸು
scatter — ಕ್ರಿ ಬೀರು (ಮೋಡಗಳು ಎಲ್ಲಡೆಗೂ ನೀರು ಬೀರಿದುವು; ಬೀರಿಗ), ಚದರು (ಚದರಿ ಹೋಗು), ಸೀರು (ಸೀರುವ ಹನಿ ಗಳು), ಕೆದರು (ಕೆದರಿದ ಕೂದಲು), ಚಲ್ಲು (ಚಲ್ಲಾಡು; ಚಲ್ಲಾಪಿಲ್ಲಿ), ತಳಿ (ನೀರು ತಳಿ), ಬಿದಿರು (ಬಿದಿರಿಸು), ಎರಚು (ಎರ ಚಾಡು), ಕೊಡಹು (ಕಯ್ಯ ಲ್ಲಿದ್ದ ನೀರನ್ನೆಲ್ಲ ನನ್ನ ಮೇಲೆ ಕೊಡಹಿದ)
scavenger — ನಾ ತೋಟಿ
scene — ನಾ ನೋಟ (ಆ ನೋಟವನ್ನು ನೋಡಿ ಆತ ಹೆದರಿದ), ಆಗುಹ
scenery — ನಾ ನೆಲಗಾಣ್ಕೆ (ನೆಲಗಾಣ್ಕೆಯ ತಿಟ್ಟ)
scent — ನಾ ಕಂಪು (ಹೂವಿನ ಕಂಪು; ಕಂಪು ಗಾತಿ)
scent — ಕ್ರಿ ಮೂಸಿ ತಿಳಿ, ಸುಳಿವು ತಿಳಿ
sceptic — ಗು ನಂಬದ, ನಂಬಿಕೆಯಿಲ್ಲದ
schedule — ನಾ ಆಗುಹ ಪಟ್ಟಿ, ನೆಗಳ್ತೆ ಪಟ್ಟಿ, ಹಮ್ಮುಗೆಯರಿಕೆ
scheme — ನಾ ಸೂಟಿ, ಅನು (ನಾನು ಒಂದು ಅನುವನ್ನು ಹೇಳುತ್ತೇನೆ), ಹಂಚಿಕೆ (ಹಂಚಿಕೆ ಮಾಡು; ಹಂಚಿಕೆಗಾರ),ಹೂಟ (ಅವನು ಇನ್ನೊಂದು ಹೂಟ ಹೂಡಿದ; ಹೂಟಗಾರ)
schism — ನಾ ಒಡಕು (ಅವರ ಕೂಟದಲ್ಲಿ ಒಡಕುಂಟಾಗಿದೆ), ಬಿರುಕು
scholar — ನಾ ಅರುಹಿಗ, ತಿಳಿವಿಗ (ಆತ ತಾನೊಬ್ಬ ದೊಡ್ಡ ತಿಳಿವಿಗನೆಂದುಕೊಂಡಿ ದ್ದಾನೆ), ಕಲಿಗ
scholarship — ನಾ 1 ತಿಳಿವು, ಅರಿವು, ಪೇರರಿಕೆ 2 ಕಲಿಕೊಡುಗೆ (ಆತನಿಗೆ ತಿಂಗಳು ತಿಂಗಳು ಕಲಿಕೊಡುಗೆ ಬರುತ್ತದೆ)
school — ನಾ 1 ಕಲಿಮನೆ, ಕಲಿಕೆಯ ಮನೆ 2 ಕಲಿಕೆ 3 ಅರಿವುತಂಡ
sciatica — ನಾ ಸೊಂಟಬೇನೆ
science — ನಾ ಅರಿಮೆ (ನುಡಿಯರಿಮೆ; ಉಲಿ ಯರಿಮೆ; ಮಣ್ಣರಿಮೆ; ಗೆರೆಯರಿಮೆ)
scientist — ನಾ ಅರಿಗ
scimitar — ನಾ ಕಿರುಬಾಗು ಕತ್ತಿ
scion — ನಾ 1 ಚಿಗುರು, ಕುಡಿ, ಬೆಸೆವ ಕೊಂಬೆ 2 ತಳಿಗ ನಾ ಇರ್ಕತ್ತಿ, ಈರಲಗು ಕತ್ತಿ
scoff — ಕ್ರಿ ಹೀಗಳೆ (ಜರಿದು ಹೀಗಳೆಯದೆ ತಿದ್ದಬೇಕು), ಹೀಯಾಳಿಸು, ಸೇರು
scold — ಕ್ರಿ ಬಯ್ಯು (ಬಯ್ಗಳು; ಬಾಲಿುಗೆ ಬಂದ ಹಾಗೆ ಬಯ್ಯು), ಜಬ್ಬರಿಸು, ಜಂಕಿಸು (ಜಂಕಣೆ), ಹಳಿ (ಇನ್ನೊಬ್ಬರಿಂದ ಹಳಿಸಿ ಕೊಳ್ಳುವ ಹಾಗೆ ಮಾತನಾಡಬೇಡ), ಅದಟು (ನೀನು ಅವನನ್ನು ಅದಟಬೇಡ), ಗಜರು (ನನ್ನನ್ನು ಆ ರೀತಿ ಗಜರಬೇಡ), ತಿಟ್ಟು (ತಿಟ್ಟುಬಾಯಿ), ಸಿಡುಕು
scolding — ನಾ ಜಂಕೆ (ಜಂಕಣೆ), ಬಯ್ಗಳು (ಆಕೆಯ ಬಯ್ಗಳನ್ನು ತಡೆದುಕೊಳ್ಳಲಾರೆ), ಉಟ್ಟಿ
sconce — ನಾ 1 ತಾಂಗುಗೆ (ಗೋಡೆಯಲ್ಲಿದ್ದ ತಾಂಗುಗೆಯಲ್ಲಿ ಸೊಡರನ್ನಿರಿಸಿದ್ದಳು) 2 ಕಿರುಕೊಂಚೆ, ಕಿರುಕೋಟೆ
scone — ನಾ ಅಪ್ಪ (ತೂತಪ್ಪ, ಎರಿಯಪ್ಪ, ಅಪ್ಪಚ್ಚಿ)
scoop — ನಾ1ತೋಡುಗಯ್ 2 ಪಸಿಯಿಸುವ ಸುದ್ದಿ
scoop — ಕ್ರಿ ಕೊಡೆ (ತೆಂಗಿನ ತಿರುಳನ್ನು ಕೊಡೆದು ತೆಗೆ), ತೋಡು (ಬಾವಿ ತೋಡು; ಗುಂಡಿ ತೋಡು), ಗೋರು (ಗೋರಿ ತೆಗೆ; ಗೋರುಮಣೆ), ಮೊಗೆ (ನೀರು ಮೊಗೆ)
scoot — ಕ್ರಿ ತಟ್ಟನೆ ಹೋಗು, ಓಡು
scope — ನಾ ಇಂಬು (ಕೆಲಸ ಮಾಡಲು ಇಲ್ಲಿ ಸಾಕಶ್ಟು ಇಂಬಿದೆ)
scorch — ಕ್ರಿ ಸೀಯು (ಸೀದು ಹೋದ ಅನ್ನ), ಕಮರು (ಕಮರಿದ ತುಪ್ಪ; ಸುಟ್ಟು ಕಮರಿದ ಕೂದಲು), ಒಣಗು
scorched — ಗು ಸೀಕರಿ (ಸುಟ್ಟು ಸೀಕರಿ ಯಾಗು), ಸೀಕು (ಸೀಕನ್ನ), ಕರಕು (ಸುಟ್ಟು ಕರಕಾದ
wAr)(garbled)
score — ಕ್ರಿ 1 ಗೆರೆಯೆಳೆ 2 ಎಣಿಕೆ ಪಡೆ (ಕಲಿಕೆಯ ಎಣಿಕೆ ಪಡೆ)
scorn — ನಾ ಕೀಟು
scorn — ಕ್ರಿ ಜರೆ (ಆತನ ಬರಹವನ್ನು ಅವರು ಹಾಗೆ ಜರೆಯಬಾರದಿತ್ತು)
scorpion — ನಾ ತೇಳು,ಚೇಳು (ಚೇಳು ಕಡಿದು ಆತನ ಕಾಲು ಬಾತಿದೆ)
scotch — ಕ್ರಿ 1 ಪೋತುಬೀಳಿಸು 2 ಕೊನೆ ಗೊಳಿಸು, ಮುಗಿಸು, ಹತ್ತಿಕ್ಕು
scot-free — ಗು ಪೆಟ್ಟುತಿನ್ನದೆ
scoundrel — ನಾ ಕೇಡಿ, ಕಡುಕೆಟ್ಟವನು
scour — ಕ್ರಿ 1 ತಿಕ್ಕು (ತಿಕ್ಕಿತೀಡು; ತಿಕ್ಕಿ ತಿಕ್ಕಿ ತೊಳೆ), ಉಜ್ಜು (ನೆಲವನ್ನು ಉಜ್ಜಿ ತೊಳೆ) 2 ಹುಡುಕಾಡು
scourge — ನಾ 1 ಕೊರಡು, ಚಾಟಿ 2 ತೊಂದರೆ ನಾ 1 ಬೇಹುಗಾರ, ಹುಡುಕುಳಿ
scout — ಕ್ರಿ 1 ಹುಡುಕು, ಬೇಹುಗಾರಿಕೆ ನಡೆಸು 2 ಹೀಗಳೆ (ಹೀಗಳೆದು ತಳ್ಳಿಹಾಕು)
scowl — ಕ್ರಿ ಹುಬ್ಬುಗಂಟಿಕ್ಕು, ಸಿಂಡರಿಸು
scraggy — ಗು ಬಡಕಲು (ಬಡಕಲು ನಾಲಿು ಕುನ್ನಿ)
scram — ಕ್ರಿ ಗಡಿಬಿಡಿಯಲ್ಲಿ ಓಡು
scramble — ಕ್ರಿ 1 ಗಲಿಬಿಲಿಗೊಳ್ಳು (ಗಲಿಬಿಲಿ ಗೊಂಡು ಹತ್ತು, ಗಲಿಬಿಲಿಗೊಂಡು ತೆವಳು) 2 ಕಚ್ಚಾಡು (ಯಾವುದನ್ನಾದರೂ ಪಡೆ ಯಲು ಕಚ್ಚಾಡು) 3 ಬೆರಸಿ ಹಾಕು, ತಿಳಿಯ ದಂತೆ ಮಾಡು
scrap — ನಾ 1 ತುಣುಕು, ಚೂರು, ಉಳಿಕೆ, ತಿಂಡಿಚೂರು 2 ಕಾದಾಟ
scrape — ಕ್ರಿ ಬೆರಟು (ಉಗುರಿನಿಂದ ಬೆರಟು), ಚಿವ್ವು, ಚೀವು (ತೆಳ್ಳಗೆ ಚೀವು), ಹೆರೆ (ನೆಲವನ್ನು ಹೆರೆದು ತಿಕ್ಕಿ ತೊಳೆ), ಕೆರೆ (ಉಜ್ಜಿ ಕೆರೆಯುವ ಅರ), ಕೀಸು (ಕೋಲನ್ನು ಕೀಸುವುದು; ಕೀಸಿಹೋಗು; ಕೀಸುಳಿ),ಕೆತ್ತು (ಕೋಲಿನ ತುದಿಯನ್ನು ಕೆತ್ತಿ ಚೂಪು ಮಾಡು), ತುರುವು (ತೆಂಗಿನ ಕಾಲಿು ತುರುವು), ಗೀಕು (ಬರೆದುದನ್ನು ಗೀಕಿ ತೆಗೆ; (ಉಗುರಿನಿಂದ ಗೀಕು)
scrape together — ಕ್ರಿ ಬಾಚು (ಕಸವನ್ನು ಬಾಚಿ ಹೊರಗೆ ಹಾಕಿದ)
scraped — ಗು ಕೆರಕಲು (ಅವಳಿಗೆ ಕೆರಕಲನ್ನ ಬಿಟ್ಟರೆ ಬೇರೇನಿಲ್ಲ)
scraper — ನಾ ಹೆರ್ಮಣೆ (ತೆಂಗಿನ ಕಾಯಿ ಹೆರೆಯುವ ಹೆರ್ಮಣೆ), ಕೆರಮಣೆ
scratch — ಕ್ರಿ ಪರಚು (ಮಗುವನ್ನು ಬೆಕ್ಕು ಪರಚಿದೆ), ಬಗರು (ಉಗುರಿನಿಂದ ಬಗರು), ಉಗುರಿಸು, ಚಿವರು (ಬೆಕ್ಕು ಚಿವರಿದೆಡೆ ಯಲ್ಲಿ ಹುಣ್ಣಾಗಿದೆ), ಗೆಬ್ಬು (ಉಗುರಿನಿಂದ ಗೆಬ್ಬಿ ಕಲ್ಲನ್ನು ಸಡಿಲಿಸಿದ), ಕೆರಟು, ಗಿಬರು (ಗಿಬರಾಡು), ಗೆಬರು (ನೆಲವನ್ನು ಗೆಬರು), ಗೀರು (ಗೀರುಬಳೆ; ಕಟ್ಟಿಯ ಗೀರು), ಕೀರು, ಸಿವುರು, ತುರಿಸು (ತಲೆ ತುರಿಸು), ಕಿರುಕು (ಬರೆದುದನ್ನು ಕಿರುಕಿ ಅಳಿಸು), ಕೆರೆ (ಉಜ್ಜಿ ಕೆರೆಯುವ ಅರ)
scrawl — ಕ್ರಿ ಗೀಚು (ಗೋಡೆಯಲ್ಲೆಲ್ಲ ಮಕ್ಕಳು ಗೀಚಿದ್ದಾರೆ)
scrawny — ಗು ಸಣಕಲು, ಬಡಕಲು
scream — ನಾ ಸೀಳು (ಸೀಳಿಡು)
scream — ಕ್ರಿ ಅರಚು (ಬೇನೆಯಿಂದ ಅರಚು ತ್ತಿದ್ದಾಳೆ), ಒರಲು (ಅಯ್ಯಾ ಎಂದು ಒರಲು ತ್ತಿದ್ದಾನೆ), ಕಿರುಚು (ಇಲ್ಲಿ ಕಿರುಚಿದರೆ ಕೇಳುವವರಿಲ್ಲ; ಕಿರುಚಾಟ), ಚೀರು (ಯಾವಾಗಲೂ ಚೀರುತ್ತಿರುವ ಮಕ್ಕಳು), ಕೀರು (ಕೀರುವ ಮರಿ), ಗೀಳು (ಗೀಳಿಡು; ಕುದುರೆಗಳು ಗೀಳಿಡುತ್ತಿದ್ದುವು)
scree — ನಾ ಕಿಗ್ಗಲ್ಲು (ಬೆಟ್ಟದ ಬುಡದಲ್ಲಿ ಕಿಗ್ಗಲ್ಲುಗಳು ಬಿದ್ದಿದ್ದುವು) ಕ್ರಿ ಕಿರುಚು, ಕೀರಿಕುತ್ತು
screen — ನಾ 1 ತಟ್ಟಿ (ಜಗಲಿಗೆ ಬಿದಿರಿನ ತಟ್ಟಿಯಿದೆ), ದಡ್ಡಿ (ದಡ್ಡಿಯ ಮರೆಗೆ ನಿಂತು ಮಾತನಾಡಿದಳು), ಮರೆ (ತೆಂಗಿನ ಗರಿಯ ಮರೆ; ಮರೆಕಟ್ಟು), ತಡಿಕೆ (ಬಿದಿರಿನ ತಡಿಕೆ; ತಡಿಕೆಗೋಡೆ; ತಡಿಕೆಪಡಿ), ಕುಂಬೆ (ತೆಂಗಿನ ಗರಿಯ ಕುಂಬೆ) 2 ತೆರೆ (ತೆರೆಯ ಮೇಲೆ ಕಾಣಿಸುವ ತಿಟ್ಟ)
screen — ಕ್ರಿ 1 ಮುಚ್ಚು, ಮರೆಮಾಚು, ಅಡಗಿಸು 2 ಬಸಿ, ಸೋಸು 3 ತೆರೆಯ ಮೇಲೆ ತೋರಿಸು
screw — ನಾ ಮರಸುತ್ತು, ತಿರುಪು (ತಿರುಪಿನ ಚೆಂಬು), ತಿರುಪು ಮೊಳೆ, ತಿರುಗಣೆ (ತಿರುಗಣೆ ತಂಬಿಗೆ)
screw — ಕ್ರಿ 1 ತಿರುಚು, ತಿರುಗಿಸು 2 ಸೇರಿಸು (ತಿರುಪು ಮೊಳೆಯಿಂದ ಒಟ್ಟು ಸೇರಿಸು)
screwdriver — ನಾ ತಿರುಗುಳಿ, ತಿರುಪುಳಿ (ತಿರುಪುಳಿಯಿಂದ ತಿರುಪುಮೊಳೆಯನ್ನು ಸಡಿಲಿಸಿದ)
scribal error — ನಾ ಕಯ್ತಪ್ಪು
scribble — ಕ್ರಿ ಗೀಚು (ಏನನ್ನೋ ಗೀಚು ತ್ತಿದ್ದಾನೆ; ಗೀಚುಗೆರೆ; ಗೀಚುಹಾಕು)
scribe — ನಾ 1 ಬರೆಗ (ಅವನು ಹೇಳಿದ್ದನ್ನು ಬರೆದುಕೊಡಲು ಮೂವರು ಬರೆಗರಿದ್ದರು)
scrimmage — ನಾ ಗಲಿಬಿಲಿ, ಗೊಂದಲ
scrimp — ಕ್ರಿ 1 ಚಿಕ್ಕದಾಗಿಸು 2 ಪಂಜೆ ಯಾಗಿರು, ಬಿಗಿಹಿಡಿ
scrip — ನಾ ಹಕ್ಕಿನೋಲೆ
script — ನಾ 1 ಕಯ್ಬರಹ 2 ಆಡುಗಬ್ಬದ ಮಾತು
scripture — ನಾ ಮೇಲ್ಬರಹ
scroll — ನಾ ಓಲೆಸುರುಳಿ
scrooge — ನಾ ಪಂಜೆ, ನೆಲಕಲ
scrub — ಕ್ರಿ ತಿಕ್ಕು, ಉಜ್ಜು (ಉಜ್ಜಿ ತೊಳೆ)
scruff — ನಾ ಹಿಂಗತ್ತು (ಹಿಂಗತ್ತು ಹಿಡಿದು ಹೊರದೂಡಿದ)
scrumptious — ಗು ಸವಿಯಾದ, ಮೆಚ್ಚುಗೆಯ
scruple — ನಾ 1 ಚೂರು 2 ಸರಿ-ತಪ್ಪಿನ ನಚ್ಚು, ಅರೆಮರಿಕೆ
scrupulous — ಗು ತಪ್ಪೆಸಗದ, ಕಟ್ಟುನಿಟ್ಟಾದ, ಎಚ್ಚರಿಕೆಯ
scrutinise — ಕ್ರಿ ನಿಟ್ಟಿಸು (ಎಲ್ಲವನ್ನೂ ನಿಟ್ಟಿಸಿ ನೋಡುತ್ತಿದ್ದಾರೆ)
scrutiny — ನಾ ಎಚ್ಚರಿಕೆಯ ಗಮನ, ಎಚ್ಚರಿ ಕೆಯ ಕಣ್ಣೊರೆ
scud — ಕ್ರಿ ಚೆಚ್ಚರ ಓಡು, ಹಾರಿಹೋಗು ನಾ ಹೊಡೆದಾಟ, ಬಡಿದಾಟ
scull — ಕ್ರಿ ಹುಟ್ಟುಹಾಕು
scullion — ನಾ ಅಟ್ಟುಳಿಗಡಿಯ
sculptor — ನಾ ಕೆತ್ತನೆಗ, ಕೆತ್ತುಗ
sculpture — ನಾ ಕೆತ್ತನೆಕೆಲಸ
scum — ನಾ 1 ತೇಲುಕೊಳೆ, ಮಡ್ಡು, ಮಡ್ಡು ಕಳವೆ 2 ಕೀಳುಮಂದೆ
scurf — ನಾ ತಲೆಹೊಟ್ಟು, ಹೆಡಸು
scurrilous — ಗು ಬಯ್ಯುವ, ಕೀಳು ಮಾತಿನ, ಕೆಣಕುವ
scurry — ಕ್ರಿ ಚೆಚ್ಚರ ಓಡು, ಸರಸರನೆ ಓಡು
scuttle — ಕ್ರಿ ತಪ್ಪಿಸಿ ಓಡು
scythe — ನಾ ಕುಡುಗೋಲು, ಕೊಯ್ಲು ಕತ್ತಿ
sea — ನಾ ಕಡಲು (ಈ ಊರಿನ ಕಡಲನ್ನು ನೋಡಲು ಹೋಗೋಣ; ಕಡಲ ತೆರೆ; ಕಡಲ್ಗಳಿ)
seacoast — ನಾ ಕರಾವಳಿ
seal — ನಾ 1 ಮುಚ್ಚಿಗೆ 2 ಗುತ್ತು (ಗುತ್ತಿ ನುಂಗುರ), ಉಂಡಿಕೆ, ನೆರೆವೆಟ್ಟು (ಅರಸನ ಓಲೆಯಾದರೂ ನೆರೆವೆಟ್ಟು ಒತ್ತದಿದ್ದರೆ ಬೆಲೆಯಿಲ್ಲ)
seal — ಕ್ರಿ 1 ಅಚ್ಚೊತ್ತು (ಓಲೆಗಳ ಮೇಲೆಲ್ಲ ಅಚ್ಚೊತ್ತುತ್ತಿದ್ದಾರೆ), ಬೆಟ್ಟು (ಬೆಟ್ಟಿದ ಬೆಳ್ಳಿ) 2 ಕೊನೆಗೊಳಿಸು 3 ಅಂಟಿಸು
sealing stick — ನಾ ಅಚ್ಚುಗೋಲು
sealing wax — ನಾ ಅರಗು (ಅರಗು ಕರಗಿಸಿ ಅದರ ಮೇಲೆ ಅಚ್ಚೊತ್ತಿದರು)
seam — ಕ್ರಿ ದಳೆ (ದಳೆದ ಬಟ್ಟೆ; ದಳಿಗೆ)
sear — ಕ್ರಿ 1 ಬಾಡು, ಕರಟು 2 ಕಳಕಳಿ ಯಿಲ್ಲದಿರು
search — ಕ್ರಿ ಅರಸು (ಹೆಂಡತಿಯನ್ನು ಅರಸಿ ಕೊಂಡು ಊರೂರು ಸುತ್ತಿದ), ಹುಡುಕು (ಹುಡುಕುನೋಟ), ಆರಯ್ಯು (ಕಳ್ಳನನ್ನು ಆರಯ್ದು ಒಡವೆಯನ್ನು ಹಿಂದೆ ತರಬೇಕು)
search for — ಕ್ರಿ ಬೆದಕು (ಬೆದಕಾಟ; ಬೆದಕಿ ನೋಡು)
searching — ನಾ ಅರಕೆ (ಆತನ ಅರಕೆಯಿನ್ನೂ ಮುಗಿದಿಲ್ಲ)
searing — ಗು ಉರಿಯುವ, ಕಡುನೋವಿನ
season — ನಾ ಸೂಳು,ಅಮಗ (ನಮ್ಮಲ್ಲಿ ಮಾವಿನ ಅಮಗ ಇನ್ನೂ ಮುಗಿದಿಲ್ಲ)
season — ಕ್ರಿ ತಾಳಿಸು (ಬೆಂಡೆಕಾಯಿಯನ್ನು ಎಣ್ಣೆ ಹಾಕಿ ತಾಳಿಸಬೇಕು), ಕರಿ ನಾ ಒಗ್ಗರಣೆ (ತಾಳಿಗೆ ಒಗ್ಗರಣೆ ಹಾಕಿಲ್ಲ; ಒಗ್ಗರಿಸು), ನರೆ (ನರೆಕೊಡು, ನರೆಯಿಕ್ಕು)
seat — ನಾ ಮಣೆ (ಮರದ ಮಣೆ; ಮಣೆಯ ಮೇಲೆ ಕುಳಿತುಕೊಳ್ಳಿ; ಮಣೆಹಾಕು; ಈಡು ಮಣೆ), ಜಗಲಿ (ಮಣ್ಣಿನ ಜಗಲಿ), ಮುಟ್ಟಡಿ
seat — ಕ್ರಿ ಕುಳ್ಳಿರಿಸು, ಇರಿಸು
seaworthy — ಗು ಕಡಲಿಗೆ ಇಳಿಯಬಲ್ಲ, ಕಡಲಲ್ಲಿ ಹೋಗಬಲ್ಲ
secede — ಕ್ರಿ ಹಿಂದೆಗೆ, ಬೇರಾಗು, ಬಿಟ್ಟು ಹೋಗು
secession — ಗು ಬೇರ್- (ಬೇರ್ಪಡು; ಬೇರ್ಪಡೆ; ಬೇರ್ಕೆಯ್ಯು), ಬೇರೆ
seclude — ಕ್ರಿ ಬೇರಾಗು, ಒಂಟಿಯಾಗಿರು
secluded — ಗು ಬೇರೆಯಾದ
second — ಕ್ರಿ ಬೆಂಬಲಿಸು (ಅವರನ್ನು ಬೆಂಬಲಿ ಸಲು ಯಾರೂ ಸಿಗಲಿಲ್ಲ)
second — ಗು 1 ಎರಡನೆಯ, ಮತ್ತಿನ, ಮರು (ಮರುಮಾತು; ಮರುಸಲು; ಮರುಮಯ್) 2 ಕೆಳತರಗತಿಯ
secondary — ಗು 1 ಅಕ್ಕಡಿ (ಅಕ್ಕಡಿ ಸಾಲು) 2 ಪಡೆದ, ತೆಗೆದ
second-hand — ಗು ಬಳಸಿದ (ಬಳಸಿದ ಬಟ್ಟೆ)
secracy — ನಾ ನೆಲೆ,ಮುಚ್ಚುಮರೆ (ಮುಚ್ಚು ಮರೆಯಿಲ್ಲದೆ ಮಾತನಾಡು),ಮರೆನುಡಿ,ಒಳವು, ಒಳಗು, ಕಿವಿಮಾತು,ಗುಟ್ಟು (ಗುಟ್ಟು ಬಯಲಾಗು), ಮರಹು
secret part — ನಾ ನಾಣೆಡೆ
secret — ಗು ಒಳ (ಒಳಮಾತು), ಕಳ್ಳ (ಕಳ್ಳ ಹಾದಿ) ಗುಟ್ಟು (ಗುಟ್ಟುಮಾಡು, ಗುಟ್ಟು ಮಾತು)
secretary — ನಾ ಒತ್ತಾಳು, ನೆರವಿಗ
secrete — ಕ್ರಿ 1 ಬಚ್ಚಿಡು (ಹಣವನ್ನು ಎಲ್ಲಿ ಬಚ್ಚಿಟ್ಟಿದ್ದಾನೆಂದು ತಿಳಿಯುವುದಿಲ್ಲ), ಮರೆ ಸಿಡು, ಮುಚ್ಚಿಡು 2 ಒಸರು (ಮಾವಿನ ಕಾಯಿಯಿಂದ ಸೊನೆ ಒಸರುತ್ತಿದೆ), ಊರು
secretive — ಗು ಮುಚ್ಚುಮರೆಯ, ಗುಟ್ಟು ಮಾಡುವ
sect — ನಾ ಗುಂಪು, ಪಂಗಡ (ಅವರು ತಮ್ಮದೇ ಒಂದು ಪಂಗಡ ಕಟ್ಟಿಕೊಂಡಿದ್ದಾರೆ)
sectarian — ಗು 1 ಕೂಟದ 2 ಕುರುಡು ನಂಬಿಕೆಯ
section — ನಾ 1 ಕೊಯ್ತ 2 ತುಂಡು ಸೀಳಿಕೆ 3 ಪಸುಗೆ
sector — ನಾ ಬಳಸಿತುಂಡು
secular — ಗು ನೆಮ್ಮಲ್ಲದ ಕ್ರಿ 1 ಪಡೆ, ಗಳಿಸು, ದೊರಕಿಸು (ಅವನು ತನಗೂ ಒಂದು ಕೆಲಸವನ್ನು ದೊರಕಿಸಿಕೊಂಡಿದ್ದಾನೆ) 2 ಕಾಪಾಡು 3 ಗಟ್ಟಿಮಾಡು
secure — ಗು 1 ನೆಮ್ಮದಿಯ (ನೆಮ್ಮದಿಯ ಊರು), ಬೆದರಿಕೆಯಿಲ್ಲದ 2 ದಾಳಿಗೊಳ ಗಾಗದ 3 ನಂಬಿಕೆಯ
security — ನಾ 1 ನೆಮ್ಮದಿ 2 ಕಾವಲು 3 ಒತ್ತೆ, ಈಡು 4 ಹಕ್ಕಿನೋಲೆ
sedate — ಗು ನೆಮ್ಮದಿಯ, ಗೊಂದಲವಿಲ್ಲದ
sedative — ಗು ನೆಮ್ಮದಿಗೊಳಿಸುವ, ಅರವುರ ಕಡಿಮೆಗೊಳಿಸುವ
sedentary — ಗು ಕುಳಿತಿರುವ (ಯಾವಾಗಲೂ ಕುಳಿತಿರುವ ಕೆಲಸ)
sediment — ನಾ ಗೋಡು (ಗೋಡುಗೊಬ್ಬರ; ಗೋಡುಮಣ್ಣು), ಕದಲು (ನೀರಿನ ಅಡಿಯ ಲ್ಲಿರುವ ಕದಲು), ಮಡ್ಡಿ (ತುಪ್ಪದ ಮಡ್ಡಿ; ಮಡ್ಡಿ ಅನ್ನ), ಗಸಿ (ಎಣ್ಣೆಯ ಗಸಿ), ಚರಟ (ತುಪ್ಪದ ಚರಟ)
sedition — ನಾ ಆಳ್ವಿಕೆಯ ತೂಳು, ಆಳ್ವಿಕೆಯ ಎದುರಿಕೆ, ದಂಗೆ
seduce — ಕ್ರಿ ಕೆಡಿಸು, ತಪ್ಪುದಾರಿಗೆಳೆ, ಸೆಳೆ
sedulous — ಗು ದುಡಿಯುವ, ಕೆಲಸದಲ್ಲಿ ಗಮನವಿರುವ
see — ಕ್ರಿ (ಆ) ಕಾಣು (ಕಂಡುದನ್ನು ಕಂಡ ಹಾಗೆ ಹೇಳುತ್ತಿದ್ದೇನೆ; ಕಾಣಬರು; ಕಾಣಗೊಡು; ಕಾಣಿಸು - ನನಗೆ ಏನೂ ಕಾಣಿಸುವುದಿಲ್ಲ) (ಮಾ) ನೋಡು (ನಮ್ಮನ್ನು ನೋಡದೆ ಹೋಗಬೇಡ; ಯಾರನ್ನು ನೋಡಿದ್ದು? )
seed — ನಾ ಬಿತ್ತು (ನುಗ್ಗೆಯ ಬಿತ್ತು; ಹಾಗಲ ಬಿತ್ತು)
seed drill — ನಾ ಕೂರಿಗೆ
seedling — ನಾ ಅಗೆ (ಅಗೆ ಕಟ್ಟು; ಅಗೆಬಿಡು)
seedy — ಗು 1 ಗಿಂಜು (ಗಿಂಜು ಬದನೆ; ಗಿಂಜು ಕಾಯಿ) 2 ಕೊಳಕು, ಮಯ್ಸರಿಯಿಲ್ಲದ
seek — ಕ್ರಿ ತಡಕು (ತಡಕಾಡು - ಕತ್ತಲಲ್ಲಿ ತಡಕಾಡುತ್ತಿದ್ದ), ಹುಡುಕು (ಹುಡುಕಿ ತೆಗೆ), ಅರಸು (ನಾನು ಅರಸುತ್ತಿದ್ದ ಬಳ್ಳಿ ನನ್ನ ಕಾಲಿಗೆ ಸಿಕ್ಕಿಹಾಕಿಕೊಂಡಿದೆ)
seem — ಕ್ರಿ ತೋಚು (ನನಗೆ ಹೀಗೆ ತೋಚು ತ್ತದೆ), ತೋರು (ತೋರಬರು; ತೋರ ಗೊಡು; ಒಳಗುದೋರು; ತೋರಿದ ಹಾಗೆ ಮಾಡು)
seemly — ಗು ಕಂಗೊಳಿಸುವ, ಹೊಂದಿಕೆಯ, ತಕ್ಕ
seep — ಕ್ರಿ ಜಿನುಗು (ಕಟ್ಟದಿಂದ ನೀರು ಜಿನುಗು ತ್ತಿದೆ), ಒಸರು, ತೊಟ್ಟಿಕ್ಕು, ಸೋರು
seer — ನಾ 1 ನೋಡುಗ 2 ನುಡಿಯಾಡುಗ, ಕಣಿಹೇಳುಗ
seesaw — ನಾ ಆಡುಮಣೆ (ಆಡುಮಣೆಯ ಮೇಲೆ ಕುಳಿತು ತೂಗಾಡುತ್ತಿದ್ದ) ಕ್ರಿ ತಳಮಳಿಸು (ಆತ ಸಿಟ್ಟಿನಿಂದ ತಳಮಳಿಸುತ್ತಿದ್ದ), ತಹತಹಿಸು
segment — ನಾ ತುಂಡು (ತುಂಡು ಮಾಡು; ತುಂಡಿಸು; ಮರದ ತುಂಡು), ಹೋಳು (ಹೋಳು ಮಾಡು; ಅಡಿಕೆಹೋಳು)
segregate — ಕ್ರಿ ಬೇರ್ಪಡಿಸು, ಬೇರೆಮಾಡು
segregation — ನಾ ಬೇರ್ಪಡುಗೆ
seine — ನಾ ಮೀನುಬಲೆ
seismograph — ನಾ ನೆಲನಡುಕ ತೋರುಗ
seize — ಕ್ರಿ ಪಟ್ಟು (ಪಟ್ಟಾಡು),ಕವರು (ಎಲ್ಲ ವನ್ನೂ ಕವರಿಹೋದರು),ಕದುಬು (ಗಟ್ಟಿ ಯಾಗಿ ಕದುಬು), ಹಿಡಿ (ಹಿಡಿದುಹಾಕು; ಚಳಿಹಿಡಿ)
seizing — ನಾ ಪಿಡಿಹ, ಹಿಡಿತ (ಅವನ ಹಿಡಿತ ದಿಂದ ತಪ್ಪಿಸಿಕೊಳ್ಳಲಾಗಲಿಲ್ಲ), ಕವತೆ, ಕೋಳು (ಕೋಳ್ಗೊಳ್ಳು; ಕೋಳೊಡವೆ; ಕೋಳಾಟ)
seizure — ನಾ ಹಿಡಿತ, ಪಟ್ಟು
seldom — ಗು ಒಮ್ಮೊಮ್ಮೆ (ಒಮ್ಮೊಮ್ಮೆ ಆತ ನಮ್ಮಲ್ಲಿಗೂ ಬರುವುದಿತ್ತು)
select — ಕ್ರಿ ಆಯು (ಆಯ್ದು ಒಟ್ಟಿದ ಹಣ್ಣು ಗಳು), ಆರಿಸು (ಕೇರಿಯಲ್ಲಿ ಬಿದ್ದಿರುವ ಕಾಳುಗಳನ್ನು ಆರಿಸಿಕೊಂಡ),ಕದರು (ಕದರಡಿಕೆ)
selection — ನಾ ಆಯ್ಕು (ಈ ಬಾರಿಯ ಆಯ್ಕೆ ಚನ್ನಾಗಿಲ್ಲ)
selector — ನಾ ಆಯ್ಕುಗಾರ
self-acquired — ಗು ತಾನಾಗಿ ಪಡೆದ, ತಾನೇ ಪಡೆದ
self-addressed — ಗು ತನ್ನೊಕ್ಕಣಿಕೆಯ (ಓಲೆಯೊಂದಿಗೆ ತನ್ನೊಕ್ಕಣಿಕೆಯ ಹೊದಿಕೆ ಯನ್ನೂ ಇರಿಸಿದ್ದೇನೆ)
self-admiration — ನಾ ತನ್ಮೆಚ್ಚುಗೆ
self-conceit — ನಾ ತನ್ಪೆರ್ಮೆ, ತನ್ಹೆಕ್ಕಳ
self-confidence — ನಾ ತನ್ನಂಬುಗೆ (ಆತ ನಿಗೆ ತನ್ನಂಬುಗೆಯಿದೆ), ತನ್ನಂಕೆ
self-conscious — ಗು ತನ್ಬಗೆಗೊಂಡಿರುವ (ತನ್ಬಗೆಗೊಂಡಿರುವ ಹುಡುಗ)
self-contained — ಗು ಅಡಕವಾದ, ಒಳ ಗೊಂಡಿರುವ
self-contradictory — ಗು ತನ್ನೆದುರಿಕೆಯ (ತನ್ನೆದುರಿಕೆಯ ನುಡಿ)
self-control — ನಾ ತನ್ನಂಕೆ, ತನ್ನೀಲು
self-deception — ನಾ ತನ್ನುಕ್ಕಿವ, ತನ್ತೋಹು
self-defense — ನಾ ತನ್ಕಾವಲು, ತನ್ಕಾಹು ನಾ ತನ್ಮುಳುವು (ಆತ ತನ್ಮುಳುವನ್ನೇ ಬಯಸುವಂತಿದೆ), ತನ್ಕೆಡುಹ
self-determination — ನಾ ತನ್ತರಿಸಲಿಕೆ
self-evident — ಗು ತಿಳಿಯಾದ, ತಾನೇ ತಿಳಿಸುವ
self-glorification — ನಾ ತನ್ಪೊಗಳಿಕೆ
self-government — ನಾ ತಮ್ಮಾಳ್ವಿಕೆ
self-help — ನಾ ತನ್ನೊದವಿ, ತನ್ನೊತ್ತಾಸೆ
self-imposed — ಗು ತನ್ಪೇರ್ಕೆಯ
self-interest — ನಾ ತನ್ಪಡಪು
selfish — ನಾ ತನ್ನಲ್ಮೆಯ, ತನ್ಪಡಪಿನ, ತನ್ಮೆಯ
selfishness — ನಾ ತನ್ಮೆ
self-knowledge — ನಾ ತನ್ನರಿವು
selfless — ಗು ತನ್ನಲ್ಮೆಯಿಲ್ಲದ, ತನ್ಮೆಯಿಲ್ಲದ
self-love — ನಾ ತನ್ನೊಲುಮೆ, ತನ್ನರುಮೆ
self-luminous — ಗು ತನ್ಬೆಳಕುಳ್ಳ
self-made — ಗು ತನ್ನೆಸಕದ
self-pity — ನಾ ತನ್ಕನಿಕರ
self-praise — ನಾ ತನ್ಪೊಗಳಿಕೆ
self-reliance — ನಾ ತನ್ನಂಬಿಕೆ, ತನ್ನೆಚ್ಚುಗೆ
self-respect — ನಾ ತನ್ಮದಿಪು, ತನ್ತಕ್ಕಮೆ
self-restraint — ನಾ ತನ್ತಡೆತ
self-sacrifice — ನಾ ತನ್ಮದಿಪುಕಳಿತ
self-seeker — ನಾ ತನ್ಮದಿಪುಗ
self-sufficient — ಗು ತನ್ನೆಚ್ಚುಗೆಯ, ಒದವಿ ಕೇಳದ
self-trust — ನಾ ತನ್ನಂಬಿಕೆ
self-will — ನಾ ಅದಟು (ಆತ ಅದಟಿನಿಂದ ಹೆದರಿಕೆಯನ್ನು ಹೊರಗೆ ತೋರಿಸದೆ ಅಲ್ಲೀ ನಿಂತಿದ್ದ),ಆರು
self-willed — ಗು ಒಟ್ಟಿ (ಒಟ್ಟಿ ಹುಡುಗ) ಕ್ರಿ ಬಿಲಿ (ಮೊಲವನ್ನು ಹತ್ತು ರುಪಾಯಿಗೆ ಬಿಲಿದ), ಮಾರು (ಮಾರುಕಟ್ಟೆ; ಮಾರಾಡು; ಎತ್ತು ಮಾರಿ ಕುದುರೆ ಕೊಂಡುಕೊಂಡ), ಬೆಲೆಗಾಣಿಸು, ಸೀಯು (ಸೀದುಬಿಡು; ತಂದ ಮಾಲನ್ನೆಲ್ಲ ಸಿಕ್ಕಾಬಟ್ಟೆ ಸೀದುಬಿಟ್ಟ)
seller — ನಾ ಮಾರಾಳಿ, ಮಾರುವವನು
semantics — ನಾ ಹುರುಳರಿಮೆ
semaphore — ನಾ ಕಯ್ಮರ, ತೋರ್ಗಂಬ
semblance — ನಾ ಹೋಲಿಕೆ, ತೋರಿಕೆ
semester — ನಾ ಅರೆಸೂಳಿಗೆ
semi — ಗು ಅರೆ (ಅರೆಗೆಲಸ; ಅರೆದಿಂಗಳು; ಅರೆದೆರೆದ ಕಣ್ಣುಗಳು; ಅರೆಬಿರಿದ ಹೂ; ಅರೆಹಣ್ಣು)
semicircle — ನಾ ಅರೆಬಳಸಿ, ಅರೆಯಾಳಿ
semicolon — ನಾ ಅರೆಕೊನೆಗುರುತು
seminary — ನಾ ಕಲಿವೆಡೆ, ಪಳಗುವೆಡೆ
senate — ನಾ ಮೇಲ್ಮನೆ
send — ಕ್ರಿ ಅಟ್ಟು (ಆತನು ಅಟ್ಟಿದ ಓಲೆ), ಅನುಪು (ಆತನನ್ನು ಮನೆಗೆ ಅನುಪಿದರು), ಕಳುಹಿಸು, ಕಳುಹು
send off — ನಾ ಬಿಡುಗೆ (ಬಿಡುಗೆ ಕೊಡು), ಅಂಪಕ (ಆತನನ್ನು ಕಳುಹಿಸಿಕೊಡಲು ಒಂದು ಅಂಪಕವನ್ನು ಏರ್ಪಡಿಸಿದ್ದರು), ಬೀಳ್ಕೊಡುಗೆ
send off — ಕ್ರಿ ಬೀಳ್ಕೊಡು, ಬೀಳ್ಕೊಳ್ಳು, ಕಳಿಸು
senile — ಗು ಮುದಿ
senility — ನಾ ಅರುಳುಮರುಳು, ಮುಪ್ಪು (ಮುಪ್ಪಡರಿ ನಡೆಯಲಾಗುವುದಿಲ್ಲ)
seniority — ನಾ ಹಿರಿತನ
sensation — ನಾ 1 ಅನಿಸಿಕೆ 2 ಅರೆವುರ, ಪಸಿಲಿುಕೆ
sense — ನಾ 1 ಅರಿವು (ಕಾಲುಗಳಲ್ಲಿ ಅರಿವು ಉಳಿದಿಲ್ಲ) 2 ಹುರುಳು (ಈ ಮಾತಿನ ಹುರುಳು ಏನೆಂದು ತಿಳಿಯುವುದಿಲ್ಲ)
senseless — ಗು ಅರಿವಿಲ್ಲದ, ಅರಿವುತಪ್ಪಿದ
sensible — ಗು 1 ಅರಿಯಬಲ್ಲ, ಅರಿವುಳ್ಳ 2 ಮೆಚ್ಚತಕ್ಕ
sensitive — ಗು ಸುಳುವಾಗಿ ನಾಟುವ, ತಾಗುವ
sensuality — ನಾ ಸವಿಹ ನಾ 1 ತೀರ್ಪು (ಇವತ್ತು ತೀರ್ಪನ್ನು ಓದಿ ಹೇಳುತ್ತಾರೆ) 2 ಸೊಲ್ಲು
sentiment — ನಾ ಅನಿಸಿಕೆ, ಎಣಿಕೆ
sentinel — ನಾ ಪಡೆಯ ಕಾವಲು
sentry — ನಾ ಕಾವಲುಗಾರ (ಕಾವಲುಗಾರ ಒರಗಿದ್ದಾನೆ)
separable — ಗು ಬೇರ್ಪಡಿಸಬಲ್ಲ, ಅಗಲಿಸ ಬಲ್ಲ
separate — ಕ್ರಿ ಅಗಲು (ಮನೆಯಿಂದ ಅಗಲದೆ ಇರು), ಎಕ್ಕು (ಹತ್ತಿ ಎಕ್ಕು; ಎಕ್ಕಾಡು), ಹಿಕ್ಕು (ಕೂದಲುಗಳನ್ನು ಹಿಕ್ಕುವ ಹಣಿಗೆ), ಹಿಗ್ಗು (ಹಿಗ್ಗಿಸು - ಉಳಿಯಿಂದ ಹಲಗೆಗಳನ್ನು ಹಿಗ್ಗಿಸಿದ), ಬೇರ್ಪಡು, ಹಿಂಜು (ಹತ್ತಿ ಹಿಂಜು)
separate — ಗು ಬೇರೆ (ಬೇರೆ ಕಡೆ; ಬೇರಾಗು, ಬೇರೊಂದು, ಬೇರೊಬ್ಬ)
separation — ನಾ ಅಗಲಿಕೆ (ನಲ್ಲೆಯ ಅಗಲಿ ಕೆಯನ್ನು ತಾಳಲಾರದ ನಲ್ಲ), ಅಲ್ಲರ, ಬೇಟ, ಹಿಕ್ಕಲು
sepia — ಗು ಕೆಂಪುಕಂದು (ಈ ಕೆಂಪುಕಂದು ಬಣ್ಣದ ಸೀರೆ ಚನ್ನಾಗಿದೆ)
sepsis — ನಾ ಗಾಯಕೊಳೆತ
septic — ಗು ಕೊಳೆಸುವ (ಗಾಯ ಕೊಳೆಸುವ), ಕೆಡಿಸುವ
sepulcher — ನಾ ಹೂಳುಮನೆ
sequel — ನಾ 1 ಮುಂದುವರಿಕೆ 2 ದೊರೆತ
sequence — ನಾ ವರಸೆ (ಈ ಕೆಲಸಗಳನ್ನು ಯಾವ ವರಸೆಯಲ್ಲಿ ನಡೆಸಬೇಕು?)
sequester — ಕ್ರಿ ಬೇರ್ಪಡಿಸು, ಒಂಟಿಯಾಗಿಸು 2 ಒಡೆತನ ಪಡೆ
serenade — ನಾ ಕಾದಲರ ಹಾಡು
serf — ನಾ ಅಡಿಯ, ತೊತ್ತು
sergeant — ನಾ ಪಡೆಮುಂಚ
serial — ಗು ವರಸೆಯ (ವರಸೆಯ ಕರೆ; ವರಸೆ ಯಲ್ಲಿ ಹೇಳುವ ಕತೆ)
sericulture — ನಾ ತೆರಳೆ ಸಾಕಣೆ
series — ನಾ ಕೇಳಿ, ಸಾಲು (ಮರಗಳ ಸಾಲು), ವರಸೆ (ಇವೆಲ್ಲವೂ ಒಂದೇ ವರಸೆಗೆ ಸೇರಿವೆ)
serious — ಗು 1 ಅರಿದು 2 ಕುತ್ತದ 3 ನಗಿಸದ
serpent — ನಾ ಹಾವು
serpentine — ಗು 1 ಸುತ್ತುಸುತ್ತಿನ (ಸುತ್ತು ಸುತ್ತಿನ ದಾರಿ) 2 ಸಂಚಿನ, ಗುಟ್ಟಿನ ನಾ ಆಳು (ದುಡಿಯುವ ಆಳು), ಗುಂಡ (ಆತ ತನ್ನ ಗುಂಡನನ್ನೂ ಕರೆದು ಕೊಂಡು ಬಂದಿದ್ದ), ತೊತ್ತು (ತೊತ್ತು ಕೆಲಸ; ತೊತ್ತಿಗ; ತೊತ್ತಿ), ತೆತ್ತಿಗ, ಬೆಸಕ (ಬೆಸವೆಣ್ಣು), ಅಡಿಯ (ಅಡಿಯಾಳು),ಅಚ್ಚುಳಾಯ್ತ
serve — ಕ್ರಿ 1 ಬಡಿಸು (ಉಣಬಡಿಸು), ಇಕ್ಕು (ಕೂಳಿಕ್ಕು) 2 ಓಲಯ್ಸು, ಓಲಗಿಸು, ಕೆಲಸ ಮಾಡು, ದುಡಿ (ದುಡಿಯುವ ಆಳುಗಳು)
service — ನಾ ಬದಗು (ಬದಗು ಮಾಡು), ಆಳ್ತನ, ಊಳಿಗ (ಊಳಿಗದವನು; ಊಳಿಗ ಗಿತ್ತಿ; ಊಳಿಗಹಿಡಿ), ತುಳಿಲು
serviceable — ಗು 1 ಬಳಸಬಲ್ಲ 2 ಬಾಳಿಕೆಯ
servile — ಗು ತೊತ್ತಿಗತನದ, ಕೀಳ್ಪಡಿಸಿ ಕೊಳ್ಳುವ, ತಗ್ಗುವ
servitude — ನಾ ಅಡಿಮೆ (ಒಬ್ಬನ ಅಡಿಮೆ ಯಲ್ಲಿರಲು ಆತ ಒಪ್ಪುವುದಿಲ್ಲ), ತುಳಿಲು (ತುಳಿಲು ಸಲ್ಲಿಸು)
sesam — ನಾ ಎಳ್ಳು (ಎಳ್ಳೆಣ್ಣೆ; ಎಳ್ಳು ನೀರು ಬಿಡು)
session — ನಾ ಕೂಟ, ಹೊತ್ತು (ಇಂದು ಒಂದು ಹೊತ್ತಿನ ಕೆಲಸ ಮುಗಿಯಿತು)
set — ನಾ ಕಂತೆ, ಗುಂಪು, ವರಸೆ, ಸಾಲು
set apart — ಗು ಮೀಸಲು (ಮೀಸಲು ನೀರು, ಮೀಸಲೆಲೆ; ಮೀಸಲಿಡು)
set aside — ಕ್ರಿ ಎತ್ತಿಡು, ಬದಿಗಿಡು
set down — ಕ್ರಿ ಬರೆದಿಡು (ನಡೆದದ್ದೆಲ್ಲವನ್ನೂ ಆತ ಬರೆದಿಟ್ಟಿದ್ದ)
set out — ಕ್ರಿ ತೆರಳು (ಮನೆಗೆ ತೆರಳು)
set — ಕ್ರಿ 1 ಕೆತ್ತು (ಕೆತ್ತನೆ ಕೆಲಸ) 2 ಪಡು (ಪಡುವ ಹೊತ್ತು; ಪಡುಗಡಲು; ಪಡುಗಡೆ; ಪಡುನೇಸರು; ಪಡುಬೆಟ್ಟ), ಕಂತು (ಆತ ಮನೆಗೆ ಬರುವಾಗ ಹೊತ್ತು ಕಂತುತ್ತಿತ್ತು), ಮುಳುಗು (ಹೊತ್ತು ಮುಳುಗಿ ಕತ್ತ ಲಾಗುತ್ತಿತ್ತು) 3 ಕುಳ್ಳಿರಿಸು, ಗಟ್ಟಿಮಾಡು 4 ಓರಣಗೊಳಿಸು
setback — ನಾ ಹಿಂಜರಿತ, ಹಿನ್ನಡೆ (ಅವರ ಕೆಲಸಕ್ಕೆ ತುಸು ಹಿನ್ನಡೆ ಉಂಟಾಗಿದೆ)
settee — ನಾ ಹೊರಸು
settle ( — ಕ್ರಿ ನೆಲಸು ನೆಲಸಿ ನಿಲ್ಲು; ನೆಲೆಗೊಳ್ಳು; ನೆಲೆನಿಲ್ಲು), ತಳಸೇರು, ಕಂಡಿಸು (ಮನೆಯ ಬೆಲೆಯನ್ನು ಇವತ್ತೇ ಕಂಡಿಸಬೇಕು), ಇಂಬಿಸು (ಆತ ಈ ಊರಲ್ಲಿ ಇಂಬಿಸಿ ದ್ದಾನೆ; ಇಂಬುಗೊಳ್ಳು), ಊರು (ಕಾಲೂರು - ಅಲ್ಲಿಗೆ ಹೋಗಿ ಕಾಲೂರಿ ನಿಂತರು; ತಳವೂರು; ನೆಲೆಯೂರು), ಕುದುರು (ಆತನ ಕೆಲಸ ಕುದುರಿದೆ), ಪೂಡು ನಾ 1 ಪಾಳೆಯ (ಪಾಳೆಯ ಮಾಡು; ಪಾಳೆಯಗಾರ), ಹಾಡಿ (ಹಾಡಿಗ), ಪಳ್ಳಿ (ಬೇಡರ ಪಳ್ಳಿ; ಪಳ್ಳಿಹೋಗು), ಪೂಡೂರು 2 ಮುಗುವಳಿ, ತೀರ್ಪು, ತೀರು ವಳಿ 3 ಒಡ್ಡವ (ಪದದೊಡ್ಡವ)
settler — ನಾ ಹಾಡಿಗ (ಹಾಡಿಗರಿಂದಾಗಿ ಈ ಊರು ತುಂಬಾ ಮುಂದಕ್ಕೆ ಬಂದಿದೆ)
sever — ಕ್ರಿ ಕಡಿ, ತುಂಡಿಸು, ಬೇರ್ಪಡಿಸು
several — ಗು 1 ಕೆಲವು 2 ಬೇರೆ
severe — ಗು 1 ಕರಕಟ (ಕರಕಟ ಕಾಡು) 2 ಕಟ್ಟುಪಾಡಿನ, ಬಿರುಸಾದ
severity — ನಾ ಬಿರುಸು, ಕಡುಹು, ಕಡುಪು (ಬೇನೆಯ ಕಡುಪು)
sew — ಕ್ರಿ ಹೊಲಿ (ಆಕೆ ಹರಿದ ಬಟ್ಟೆಯನ್ನು ಹೊಲಿದು ಸರಿಪಡಿಸಿದಳು), ಸೆಡೆ (ಗೋಣಿ ಯನ್ನು ಸೆಡೆಯುತ್ತಿದ್ದ), ದಳೆ (ದಳೆಕಟ್ಟು; ದಳೆಹಾಕು; ಎರಡು ತುಂಡುಗಳನ್ನು ದಳೆದು ಒಟ್ಟುಸೇರಿಸು)
sewage — ನಾ ಕೊಚ್ಚೆನೀರು, ಹೊಲಸುನೀರು
sewer — ನಾ ಒಳಕಾಲುವೆ, ಕೊಚ್ಚೆ ಕಾಲುವೆ
sewing — ನಾ ಹೊಲಿಗೆ (ಹೊಲಿಗೆ ಹಾಕು)
sewing machine — ನಾ ಕುಡುಮೊಳೆ
sex — ನಾ ಮರೆವಾಳ್ವೆ
sextant — ನಾ ಕೋನಳೆಕ
shabby — ಗು ಹರುಕಲಾದ, ಕೊಳೆಯಾದ, ಹಾಳುಬಿದ್ದ, ನಾಚುಗೆಯ
shack — ನಾ ಗುಡಿಸಲು
shackles — ನಾ ಕೋಳ (ಕೋಳಕ್ಕೆ ಹಾಕು; ಕೋಳ ತೊಡಿಸು; ಕಯ್ಕೋಳ), ಕುದೆ
shade — ನಾ 1 ನೆಳಲು (ಮರದ ನೆಳಲು), ಕಾವಣ, ನೆರಳು 2 ಬಣ್ಣದ ಮಟ್ಟ 3 ನಸುಗೆಂಟು, ಬೇರ್ಪಡುಗೆ 4 ತೆರೆ (ತೆರೆಬಟ್ಟೆ; ತೆರೆಹಾಕು; ಸೊಡರಿನ ತೆರೆ)
shade — ಕ್ರಿ 1 ಅಡಗಿಸು, ಮಸುಳಿಸು, ಮಬ್ಬಾ ಗಿಸು 2 ತುಸು ಮಾರ್ಪಡಿಸು
shadow — ನಾ 1 ನೆರಳು (ನೆರಳು ಉದ್ದವಾಗು ತ್ತಿರುವ ಹೊತ್ತು) 2 ಸುಳಿವು, ಉಳಿಕೆ
shadow — ಕ್ರಿ 1 ನೆರಳಿಕ್ಕು, ಕತ್ತಲಿಸು 2 ಗುಟ್ಟಾಗಿ ಹಿಂಬಾಲಿಸು
shady — ಗು 1 ನೆರಳಿರುವ (ನೆರಳಿರುವೆಡೆ) 2 ಮೋಸಮಾಡುವ, ಬಿಂಕಿನ
shaft — ನಾ 1 ಮೂಕಿ (ಗಾಡಿಯ ಮೂಕಿ ತುಂಡಾಗಿದೆ; ಮೂಕಿಮರ), ನಡುಕಡ್ಡಿ 2 ತೋಡುದಾರಿ (ಗುಡ್ಡದ ಆಚೆಗೆ ತೋಡು ದಾರಿಯಿಂದ ಹೋಗಬಹುದು)
shaggy — ಗು ಒರಟು ಕೂದಲಿನ, ಪೊದೆ ನವಿರಿನ off ಕ್ರಿ ಒದರು (ಬಟ್ಟೆಯನ್ನೊಮ್ಮೆ ಒದರಿ ಉಟ್ಟ),ಕೊಡಹು (ಕಯ್ಕೊಡಹು)
shake — ಕ್ರಿ (ಆ) ನಲುಗು, ಅಲೆ (ಮುಂದಲೆ ಯಲ್ಲಿ ಅಲೆವ ಕುರುಳುಗಳು), ಅದಿರು (ಕಣ್ಣಿನ ರೆಪ್ಪೆ ಅದಿರುತ್ತಿದೆ), ಅಲುಗು (ಅಲುಗಾಡು - ಒಂದು ಹಲ್ಲು ಅಲುಗಾಡು ತ್ತಿದೆ), ಆಡು (ಆಡುವ ತಲೆ; ತೂಗಾಡು), ಹಂದು (ರೆಪ್ಪೆ ಹಂದು; ಹಂದಾಡು), ಅಸುಬು (ಅಸುಬುವ ಗೆಲ್ಲು), ಒದರು (ಒದರುವ ತಲೆ) (ಮಾ) ತಳರು, ಕುಲುಕು (ಇದನ್ನೊಮ್ಮೆ ಕುಲುಕಿ ಕುಡಿಯಿರಿ), ಕದಡು (ಹುಡಿಯನ್ನು ನೀರಿನಲ್ಲಿ ಹಾಕಿ ಕದಡ ಬೇಕು), ಕುದುಕು, ಉಲುಬು (ಬಟ್ಟೆಯನ್ನು ಉಲುಬಿ ತೊಳೆದ), ಬಾರಿಸು, ಮೆರೆ (ಮೆರೆ ಕೋಲು)
shaking — ನಾ ಪೊಳಪು (ತಲೆಯ ಪೊಳಪು),ಅಲ್ಲಾಟ, ನಡುಕ (ಚಳಿಯ ನಡುಕ)
shaky — ಗು 1 ಅಲ್ಲಾಡುವ, ಗಟ್ಟಿಯಿಲ್ಲದ, ನಡುಗುವ 2 ನಂಬಲಾಗದ
shale — ನಾ ಹಾಳೆಕಲ್ಲು
shallow — ಗು 1 ಆಳವಿಲ್ಲದ, ತೆಟ್ಟೆ 2 ಆಳವಾದ ಅರಿವಿಲ್ಲದ, ಪೊಳ್ಳು
sham — ನಾ ಸೋಗು, ಮಾಜು, ಉಕ್ಕಿವ
shamble — ಕ್ರಿ ಕುಂಟುಗಾಲಿಕ್ಕು, ಸೆಳೆಗಾಲಿಕ್ಕು
shambles — ನಾ 1 ಕಡಿವೆಡೆ, ಕಟುಕನಂಗಡಿ 2 ಗೊಂದಲದೆಡೆ, ಕಗ್ಗೊಲೆಯೆಡೆ
shame — ನಾ ನಾಚಿಕೆ (ನಾಚಿಕೆಗೇಡಿ; ನಾಚಿಕೆ ಪಡು), ನಾಣು (ನಾಣುಗೆಡು), ಸಿಗ್ಗು (ಸಿಗ್ಗು ಗೆಡಿಸು)ಎಗ್ಗು (ಎಗ್ಗಾಗು; ಎಗ್ಗಿಲ್ಲದೆ)
shameless — ಗು ನಿಗ್ಗೆಡಿ (ಅವನೊಬ್ಬ ನಿಗ್ಗೆಡಿ), ಬೂತು (ಬೂತಾಟ; ಬೂತು ಗೊಳ್ಳು; ಬೂತುಗೆಡಹು),ಕೊಟ್ಟು, ನಾಣಿಲಿ (ನಾಣಿಲಿ ಹೆಣ್ಣು; ನಾಣಿಲಿಗ; ನಾಣಿಲಿತನ)
shanty — ನಾ ಗುಡಿಸಲು
shampoo — ಕ್ರಿ ತೊಳೆ (ಕೂದಲು ತೊಳೆ)
shape — ನಾ ಪಾಂಗು (ಪಾಂಗುಗೆಡು; ಪಾಂಗು ವಡೆ),ಪರಿಜು (ಎಣ್ಪರಿಜು)
shapeless — ಗು ಪಾಂಗಿಲ್ಲದ, ಪಾಂಗುಗೆಟ್ಟ
shapely — ಗು ಅಂದ ಮಯ್ಕಟ್ಟಿನ
share — ನಾ ಪಾಲು (ಪಾಲಿಗೆ ಬಂದ ಹಣ), ಕೋರು (ನನ್ನ ಕೋರು ನನಗೆ ಕೊಡಿ; ಅರಗೋರು; ಮೂಗೋರು), ಹಸುಗೆ (ಅವನ ಹಸುಗೆಯನ್ನು ಬೇರಾರಿಗೋ ಕೊಟ್ಟಿ ದ್ದಾರೆ)
share — ಕ್ರಿ ಹಂಚು (ಮೂರು ಪಾಲು ಮಾಡಿ ಹಂಚಿಕೊಳ್ಳಿ)
sharing — ನಾ ಹಂಚಿಕೆ (ಹಣದ ಹಂಚಿಕೆ)
sharp — ಗು ಮೊನಚು (ಮೊನಚು ಕತ್ತಿ),ಹರಿತ,ಕೋರೆ (ಕೋರೆದಾಡೆ; ಕೋರೆಹಲ್ಲು),ಕೂರು (ಕೂರ್ಗತ್ತಿ, ಕೂರಲಗು; ಕೂರುಗುರು) ಕ್ರಿ ಬಸಿ (ಬಸಿದ ಕೋಡು), ತೀಡು (ತೀಡಿದ ಕತ್ತಿ), ಮಸೆ (ಬಾಳು ಮಸೆ)
sharper — ನಾ ಮೋಸಗಾರ
sharpness — ನಾ ಪದ (ಪದಗೊಳ್ಳು; ಪದ ಗುಡು), ಮಸೆತ (ನಾಲಿಗೆಯ ಮಸೆತ), ಹರಿತ (ಹರಿತವಾದ ಚೂರಿ), ಕೂರ್ಪು (ಕತ್ತಿಯ ತುದಿಯ ಕೂರ್ಪು; ಕೂರಿಕೆ), ಹದನು (ಹದನು ಮಾಡಿದ ಹೆರಮಣೆ)
shatter — ಕ್ರಿ 1 ದೋರುಹೋಗು (ಕನ್ನಡಿ ದೋರುಹೋಗಿದೆ), ಒಡೆ (ಒಡೆದು ಚೂರು ಚೂರಾಯಿತು) 2 ನೆಮ್ಮದಿ ಕಳೆ
shave — ಕ್ರಿ ಬೋಳಿಸು (ತಲೆ ಬೋಳಿಸು),ಚೀವು, ಚಿವ್ವು, ಕೆರೆ (ಗಡ್ಡ ಕೆರೆ), ಕಿರಿ (ತಲೆ ಕಿರಿ)
sheaf — ನಾ ಕಂತೆ (ನಾಲ್ಕು ಕಂತೆ ಹುಲ್ಲು), ಕಟ್ಟು
shear — ಕ್ರಿ 1 ಉಣ್ಣೆ ಸವರು 2 ಹಕ್ಕುಕಳೆ
shears — ನಾ ಹೆಗ್ಗತ್ತರಿ
sheath — ನಾ ಒರೆ (ಒರೆಯಿಂದ ಕತ್ತಿಯನ್ನು ಎಳೆದು ತೆಗೆ)
shed — ನಾ ಕಾವಣ (ಕಾವಣ ಕಟ್ಟು),ಕೊಟ್ಟಿಗೆ (ಆಕಳ ಕೊಟ್ಟಿಗೆ),ಕೀಳು (ಕೀಳಿಲ್ಲು)
shed — ಕ್ರಿ ಬೀಳಿಸು, ಎಸೆ, ಉದುರಿಸು, ಸುರಿಸು (ನೆತ್ತರು ಸುರಿಸು; ಕಣ್ಣೀರು ಸುರಿಸು), ಬಸಿ, ತೊರೆ, ಮಿಡಿ (ಕಣ್ಣೀರು ಮಿಡಿ)
sheen — ನಾ ಹೊಳಪು, ಪೊಗರು
sheep — ನಾ ಕುರಿ (ಕುರಿಮಂದೆ; ಕುರಿಮರಿ)
sheepfold — ನಾ ಕುರಿದೊಡ್ಡಿ
sheepish — ಗು ಹೇಡಿ, ಅಂಜುಬುರುಕ
sheer — ಗು 1 ಬರಿಯ 2 ಕಡಿದಾದ 3 ತೆಳು ವಾದ
sheet — ನಾ 1 ಹಾಳೆ (ಒಂದು ಹಾಳೆ ಹರಿದು ಹೋಗಿದೆ) 2 ಹಚ್ಚಡ
shelf — ನಾ ಅಂಕಣ,ಅರೆ (ಗೋಡೆಯಲ್ಲಿ ಕೊರೆದ ಅರೆ), ಓಡೆ (ಓಡೆಯಲ್ಲಿರಿಸಿದ ಬೊಂಬೆ)
shell — ನಾ ಗೆರಟೆ (ತೆಂಗಿನ ಕಾಯಿಯ ಗೆರಟೆ), ನೊಳಲೆ (ಕಡಲ ಕರೆಯಲ್ಲಿ ತುಂಬಾ ನೊಳಲೆಗಳಿವೆ), ಮೊಳಲೆ (ಒಡೆದ ಮೊಳಲೆ), ಓಡು (ಆಮೆಯ ಓಡು), ಚಿಪ್ಪು (ಮುತ್ತಿನ ಚಿಪ್ಪು; ತಲೆಯ ಚಿಪ್ಪು; ಚಿಪ್ಪುಗಟ್ಟು)
shell — ಕ್ರಿ ಸುಲಿ (ಸಿಪ್ಪೆ ಸುಲಿ), ಬಿಡಿಸು
shelter , — ನಾ ಬದ್ದೆ (ಅವನಿಗೆ ಬದ್ದೆಲಿುಲ್ಲ) ಮರೆ (ಮರೆಹೊಗು; ಮರೆಕಟ್ಟು; ಮರೆಗೆ ನಿಲ್ಲು), ಚಾಟು (ಚಾಟಾಗು; ಗಾಳಿಮಳೆ ತಡೆಯುವ ಚಾಟು),ಮೊರೆ (ಮೊರೆ ಹೊಗು)
shelve — ಕ್ರಿ 1 ಅರೆಯಲ್ಲಿರಿಸು, ಬದಿಗಿರಿಸು, ತೊರೆ 2 ತುಸು ಓರೆಯಾಗಿರು, ಇಳಿಜಾ ರಾಗಿರು ನಾ ಕುರುಬ
shield — ನಾ 1 ಕಾಪು, ಹರಿಗೆ, ಅಡ್ಡಣ 2 ಮೆಚ್ಚು
shield — ಕ್ರಿ ಕಾಯು
shift — ನಾ 1 ಮಾರ್ಪು, ಕದಲಿಕೆ 2 ಪಾಳಿ, ಸರದಿ
shift — ಕ್ರಿ ಕದಲು (ಕದಲಿಸು), ಮಾರು
shifty — ಗು ಮೋಸದ, ನುಣುಚಿಕೊಳ್ಳುವ
shimmer — ಕ್ರಿ ಮಿನುಗು, ಹೊಳೆ
shin — ನಾ ಮೊಣಕಾಲು
shine — ನಾ ಮೆರುಗು, ಹೊಳಪು, ಹೊಗರು (ಹೊಗರಲಗು; ಹೊಗರಳಿ; ಹೊಗರು ಗಣ್ಣು), ಹಳಚಿಕೆ, ಎಸಕ
shine — ಕ್ರಿ ಬೆಳಗು (ಮನೆ ಬೆಳಗಿತು), ಮಿನುಗು (ಕತ್ತಲೆಯಲ್ಲಿ ಮಿನುಗುವ ಮಿಂಚುಹುಳ), ಮಿಂಚು (ಮಿಂಚುಗುರು; ಮಿಂಚುತಲೆ), ಎಸೆ (ಕಣ್ಣಿಗೆ ಎಸೆಯುತ್ತಿದ್ದರು), ಹೊಳೆ (ಹೊಳೆವ ಕೆಂಡ), ತೊಳಗು (ತೊಳ ತೊಳಗು; ತೊಳಗಿಬೆಳಗು; ತೊಳಗುವ ಕಾಲುಗುರು), ಚಕಚಕಿಸು (ತಾರೆಗಳು ಚಕಚಕಿಸಿದುವು), ಜಗಗಗಿಸು, ತಳತಳಿಸು, ತಳಗುಟ್ಟು, ಮಿಸುಗು, ಮೆರೆ (ಮಿರಮಿರನೆ ಮೆರೆವ ಉಡುಪು), ಜಗಿ (ಅವನ ಮಯ್ಕಟ್ಟು ತುಂಬಿ ಜಗಿಯ ತೊಡಗಿತು), ಕನಿ (ಕಳ್ಗನೆ ಕನಿವ ಮಿಂಚು), ಕಳಕಳಿಸು, ಉಳ್ಕು, ಮಿಣ ಗುಟ್ಟು
shingle — ನಾ 1 ನೊರಜುಕಲ್ಲು, ಹರಳುಕಲ್ಲು 2 ಮರಹಂಚು
shiny — ಗು ಹೊಳೆಯುವ, ಬೆಳಗುವ, ನುಣ್ಣಗಿನ
ship — ನಾ ಹಡಗು (ಹಡಗುಕಟ್ಟೆ)
shipshape — ಗು ಅಚ್ಚುಕಟ್ಟಾದ, ಓರಣ ಗೊಳಿಸಿದ
shire — ನಾ ಕಂಪಣ
shirk — ಕ್ರಿ ತಪ್ಪಿಸಿಕೊಳ್ಳು, ಜಾರಿಕೊಳ್ಳು, ಹೊಣೆತಪ್ಪಿಸು
shirt — ನಾ ಮೇಲುಡುಪು
shiver — ಕ್ರಿ ಅಸಿ (ಚಳಿಗೆ ಅಸಿಯುವ ಕಾಲು ಗಳು), ಕೆತ್ತು (ನನ್ನ ಕಣ್ಣುಗಳು ಕೆತ್ತಿದುವು), ನಡುಗು (ಚಳಿಗೆ ನಡುಗು)
shoal — ನಾ 1 ಆಳವಿಲ್ಲದೆಡೆ 2 ಗುಂಪು, ಸಂದಣಿ (ಮೀನುಗಳ ಸಂದಣಿ)
shock — ನಾ 1 ಹೊಡೆತ (ಮಿಂಚು ಹೊಡೆತ; ಕೆಟ್ಟ ಆಗುಹಗಳ ಹೊಡೆತ) 2 ಸೂಡಿ, ಕಂತೆ (ಕದಿರ ಕಂತೆ)
shoddy — ಗು ಕಳಪೆ (ಕಳಪೆ ಬಟ್ಟೆ; ಕಳಪೆ ಕೆಲಸ) ನಾ ಕೆರ (ಕೆರಕ್ಕೆ ಅಳತೆ ತೆಗೆ; ಕೆರ್ಪು)
shoot — ನಾ ಹಿಳ್ಳಿ (ಹಿಳ್ಳಿಯೊಡೆದ ಕಾಳು), ಕುಡಿ
shoot — ಕ್ರಿ ಎಸೆ, ಇಸು (ಎಚ್ಚ ಬಾಣ), ಚಿಮ್ಮು (ಚಿಮ್ಮಿಸು), ಗುಂಡಿಕ್ಕು, ಗುಂಡುಹಾರಿಸು, ಗುಂಡುಹೊಡೆ
shooting — ನಾ ಎಸುಗೆ (ಬಿಲ್ಲೆಸುಗೆ; ಎಸೆತ)
shop — ನಾ ಮಳಿಗೆ,ಅಂಗಡಿ (ಅಕ್ಕಿ ಅಂಗಡಿ; ಅಂಗಡಿಯಿಡು)
shore — ನಾ ಒಂಡಿ, ಕರೆ (ಕಡಲಿನ ಕರೆ; ಹೊಳೆಯ ಕರೆ; ಕರೆನಾಡು), ಕರಾವಳಿ - ಕಡಲ ಕರಾವಳಿ)
short cut — ನಾ ಅಡ್ಡಹಾದಿ, ನೇರಹಾದಿ
short — ಗು ಪೀಚು (ಪೀಚು ಗಡ್ಡ), ಮೊಟಕು (ಮೊಟಕು ಕತ್ತಿ), ಮಟ್ಟು (ಮಟ್ಟಾಗು; ಮಟ್ಟುಮೂಗು), ಮೊಟ್ಟ (ಮೊಟ್ಟಕಿರುಬ), ಚಿಟ್ಟು (ಚಿಟ್ಟಿಲಿ; ಚಿಟ್ಟುದ್ದು), ಕುಳ್ಳು (ಕುಳ್ಳ, ಕುಳ್ಳಿ), ಕಿತ್ತು (ಕಿತ್ತೆಸಳು; ಕಿತ್ತಂಬು; ಕಿತ್ತಿಳೆ), ಗಿಡ್ಡ (ಗಿಡ್ಡಕೊಂಬು; ಗಿಡ್ಡಮೂತಿ), ಕುಂಟು, ಕುರು (ಕುರುಗಡ್ಡ, ಕುರುವಡೆ; ಕುರುಗಂಟು), ಗುಜುರು (ಗುಜುರುಕೊಂಬು), ಗುಜ್ಜು (ಗುಜ್ಜುಮಾವು; ಗುಜ್ಜುಗೊರಲು; ಗುಜ್ಜು ಕಾಲು; ಗುಜ್ಜುಕತ್ತಿ; ಗುಜ್ಜುಗೆಜ್ಜೆ), ಗುಡ್ಡ (ಗುಡ್ಡಕೊಂಬು; ಗುಡ್ಡಿ)
shortage — ನಾ ಕೊರತೆ (ಕೊರತೆ ಬಂದರೆ ನಾನು ಕೊಡುತ್ತೇನೆಂದಿದ್ದ), ಮುಗ್ಗಟ್ಟು (ಹಣದ ಮುಗ್ಗಟ್ಟು),
shortcoming — ನಾ ಕುಂದು, ಕೊರತೆ
shorthand — ನಾ ಬಿರುಸು ಬರೆತ
shortsighted — ಗು 1 ಸಾರೆನೋಟದ 2 ಮುನ್ನರಿವಿಲ್ಲದ, ಮುನ್ನೆಣಿಸದ
short-term — ಗು ಕಿರುಹೊತ್ತಿನ, ಕಿರು ಗಡುವಿನ
shortwave — ನಾ ಕಿತ್ತಲೆ
shoulder — ನಾ ಮುೈ- (ಮುಯ್ಯಾನು; ಮುಯ್ವೊನೆ), ಮುಯಿಬು, ಮುಯ್ಪು (ಮುಯ್ಪಾಗು), ಮುಡುಹು (ಮುಡುಹು ಕೊಡು), ಹೆಗಲು (ಹೆಗಲಿಗೇರಿಸು; ಹೆಗಲ ಕೆಲಸ; ಹೆಗಲು ಕೊಡು),ತೆಗಲು,ತೋಳ್ದಲೆ
shout — ನಾ ಬೊಬ್ಬೆ (ಬೊಬ್ಬಿಡು; ಬೊಬ್ಬಿರಿ; ಬೊಬ್ಬೆಹಾಕು), ಕೇಕೆ (ಕೇಕೆಹಾಕು), ಅಬ್ಬರ (ಅವನ ಅಬ್ಬರ ಹೇಳತೀರದು),ಕೂಕಲು (ಕೂಕಲು ಹಾಕು), ಆರುಗ (ಬಾಯಾರುಗ)
shout — ಕ್ರಿ ಕೆಲೆ (ಕೆಲೆದಾಡು), ಗದರು (ನೀನು ಗದರುವುದು ಯಾಕೆ?), ಅದ್ದರಿಸು (ಎತ್ತು ಗಳನ್ನು ಅದ್ದರಿಸಿ ಬಂಡಿಯನ್ನೋಡಿಸಿದ), ಆಲು (ಆಲಿಡು; ಆಲಾಟ), ಆರು (ಆತನು ಆರಿ ಬೊಬ್ಬಿರಿದನು), ಒದರು (ಒದರಾಡು), ಒರಲು (ಬೇಡಬೇಡೆಂದು ಒರಲಿದರು) ಕ್ರಿ ಸೆಕ್ಕು (ಎಲ್ಲರನ್ನೂ ಒಳಕ್ಕೆ ಸೆಕ್ಕು ತ್ತಿದ್ದ; ಸೆಕ್ಕೆ), ದಿಮ್ಮು(ಮಂದಿ ಎಲ್ಲಾ ಕಡೆ ಗಳಿಂದಲೂ ಆತನನ್ನು ದಿಮ್ಮುತ್ತಿದ್ದರು), ನೂಕು (ನಿನ್ನನ್ನು ನಾನು ನೂಕಲಿಲ್ಲ), ತಳ್ಳು (ಆಕಳನ್ನು ನೀವು ಒಳಕ್ಕೆ ತಳ್ಳಿ, ನಾನು ಎಳೆಯುತ್ತೇನೆ), ದಬ್ಬು (ಯಾರೋ ಹಿಂದಿ ನಿಂದ ದಬ್ಬುತ್ತಿದ್ದಾರೆ)
shovel — ನಾ ಗೋರೆ (ಒಳಗಿನ ಹೊಲಸು ತೆಗೆಯುವುದಕ್ಕೆ ಒಂದು ಗೋರೆಯನ್ನೇ ಬಳಸಬೇಕಾಯಿತು)
show — ನಾ ಕಾಣ್ಕೆ, ತೆರವೆ, ನಿರಿಗೆ, ಸೂಸಿಕೆ
show — ಕ್ರಿ ತೋರಿಸು (ನಿಮ್ಮ ಕಯ್ಯನ್ನು ತೋರಿಸಿ), ಸೂಸು (ನಗುಸೂಸು)
shower — ನಾ ಮಳೆ (ಮಳೆಯ ಸುರಿತ)
showiness — ನಾ ಬೆಡಗು (ಬೆಡಗಿನಲ್ಲಿ ಆಕೆಯನ್ನು ಹಿಂದಿಕ್ಕುವವರಿಲ್ಲ)
shrapnel — ನಾ ಚದರುಗುಂಡು
shred — ಕ್ರಿ ಹರಿ (ಹರಿದು ಹಾಕು), ಚೂರು ಮಾಡು
shrew — ನಾ 1 ಮೂಗಿಲಿ 2 ಕಾಡುವ ಹೆಂಗಸು
shrewd — ಗು ಚುರುಕಾದ, ಸುಟಿ, ಕಯ್ಮೆಯ, ಆಯವರಿತ
shriek — ಕ್ರಿ ಕಿರುಚು, ಅರಚು (ಹುಡುಗ ಯಾಕೆ ಹೀಗೆ ಅರಚುತ್ತಿದ್ದಾನೆ?)
shrift — ನಾ ತಪೊ್ಪಪ್ಪಿಕೆ
shrill — ಗು ಕೀರಲು, ಕೀಚು (ಕೀಚುಲಿ)
shrine — ನಾ ಗುಡಿ (ದಾಟುಗನ ಗುಡಿ)
shrink — ಕ್ರಿ ಸುಕ್ಕು (ಸುಕ್ಕುಗಟ್ಟು; ಸುಕ್ಕಾಗು; ಸುಕ್ಕುಗುರುಳು), ಜುಣುಗು, ಕೋಡು (ಕೋಡಿ ಮರಕಟ್ಟಿದ ಕಯ್ಗಳು), ಮುಡುಕು (ಮುಡುಕಿದ ಬೆನ್ನು), ಮುರುಟು (ಮುರುಟಿ ಹೋಗು; ಮಲಗಿದಲ್ಲೇ ಮುರುಟಿಕೊಳ್ಳು), ಉಡುಗು (ಚಳಿಗೆ ಉಡುಗಿದ ಮಯ್), ಕುಕ್ಕುರಿಸು, ಕುನುಗು, ಮುದುಡು
shrinkage — ನಾ 1 ಮುರುಟುಹ 2 ಸವಕಳಿ, ಇಳಿತಾಯ
shrive — ಕ್ರಿ ತಪೊ್ಪಪ್ಪಿಕೆ ಪಡೆ
shrivel — ಕ್ರಿ ಸುಕ್ಕು (ಸುಕ್ಕಿದ ತೊಗಲು), ಸುರುಟು (ಸುರುಟಿದ ಎಲೆ), ಕೊರಗು (ಗಿಡಗಳೆಲ್ಲ ನೀರಿಲ್ಲದೆ ಒಣಗಿ ಕೊರಗಿವೆ), ಕೊರಟು (ಕೊರಟು ಬೀಳು)
shrivelled — ಗು ಸೊರಟು (ಸೊರಟು ಎಲೆ)
shroud — ನಾ ಹೆಣಹೊದಿಕೆ, ಹೊದಿಕೆ, ತೆರೆ
shroud — ಕ್ರಿ ಮುಚ್ಚು (ಬಟ್ಟೆ ಮುಚ್ಚು), ಹೊದಿಸು (ಹೊದಿಕೆ ಹೊದಿಸು) ನಾ ಮಿಡಿ (ಮಿಡಿಯಲ್ಲೊಂದು ಹಕ್ಕಿ ಗೂಡುಕಟ್ಟಿದೆ), ಮೆಳೆ (ಬಿದಿರ ಮೆಳೆ), ಹೊದರು (ಹಲವು ಬಳ್ಳಿಗಳು ಹಬ್ಬಿದ ಹೊದರು), ಪೊದೆ, ಕುತ್ತರು
shrug — ಕ್ರಿ ಹೆಗಲುಹಾರಿಸು
shudder — ಕ್ರಿ ನಡುಗು (ಹೆದರಿ ನಡುಗು; ಹೇಸಿ ನಡುಗು)
shuffle — ಕ್ರಿ 1 ಬೆರಸು, ಕಲಸು 2 ಕಾಲೆಳೆ (ಕಾಲೆಳೆದುಕೊಂಡು ನಡೆ)
shun — ಕ್ರಿ ದೂರವಿಡು, ಸೇರದಿರು, ತಪ್ಪಿಸು
shunt — ಕ್ರಿ ಬದಿಗೆ ಸರಿಸು
shut — ಕ್ರಿ ಮುಚ್ಚು (ಕಣ್ಣುಮುಚ್ಚು; ನಾನು ಹೋಗುವ ಮೊದಲೇ ಬಾಗಿಲು ಮುಚ್ಚಿ ದ್ದರು), ಕಿರು (ಕಣ್ಣೆವೆಗಳು ಕೆತ್ತವು), ಮುಗಿ (ಮುಗಿದ ಹೂವಿನ ದಳಗಳು; ನಸು ಮುಗಿದ ರೆಪ್ಪೆಗಳು; ಕಯ್ಮುಗಿ)
shutter — ನಾ ಕದ
shutting — ನಾ ಮುಚ್ಚಿಕೆ, ಮುಚ್ಚಳಿಕೆ
shuttle — ನಾ ಅಟ್ಟೆ
shy — ಗು ನಾಣಿಸಿದ, ಸಿಗ್ಗಾದ
shyness — ನಾ ನಾಣು (ನಾಣಿಲಿ; ನಾಣುಗೆಡು; ನಾಣನುಡಿ; ನಾಣಿಸು), ಸಿಬ್ಬದಿ (ಸಿಬ್ಬದಿ ಗೊಳ್ಳು),ಸಿಗ್ಗು (ಸಿಗ್ಗಾಗು; ಸಿಗ್ಗುಮಾಡು; ಸಿಗ್ಗಾಳಿ)
sibling — ನಾ ಒಡಹುಟ್ಟಿದವನು
sick — ಗು ಕುತ್ತಹಿಡಿದ, ಬೇನೆಬಿದ್ದ, ಮಯ್ಸರಿ ಯಿಲ್ಲದ
sicken — ಕ್ರಿ 1 ಬೇನೆಬೀಳು 2 ಹೇಸು, ರೋಸು, ಹೇವರಿಸು
sickle — ನಾ ಕುಡುಗೋಲು (ಹುಲ್ಲು ಮಾಡಲು ಕುಡುಗೋಲು ತೆಗೆದುಕೊಂಡು ಹೋದ)
sickness — ನಾ ಕುತ್ತ (ಕುತ್ತಂಗುಳಿ; ಕುತ್ತಾಳ; ಕುತ್ತವಿಲ್ಲದವನು; ಕುತ್ತದಿಂದ ಕೂಂತು ಗೊಂಡವನು; ತಲೆಕುತ್ತ; ಬಸಿರ್ಕುತ್ತ), ಬೇನೆ (ಬೇನೆಬೀಳು)
side — ನಾ ಅಳ್ಳೆ (ಹೊಟ್ಟೆಯ ಬಲದ ಅಳ್ಳೆ ನೋಯುತ್ತಿದೆ), ಪರ (ನನ್ನ ಪರವಾಗಿ ಎರಡು ಮಾತು ಹೇಳಿ), ಅಂಡೆ (ಮನೆಯ ಎಡ ಅಂಡೆಯಲ್ಲಿ ಮಾವಿನ ಮರವಿದೆ), ತಟ್ಟು (ಈ ತಟ್ಟಿನಲ್ಲಿ ಯಾರೂ ಇಲ್ಲ; ತಟ್ಟಾಗು; ತಟ್ಟುವರಿ), ಕೆಲ (ಇಕ್ಕೆಲ, ಕೆಲ ಸಾರು),ಬದಿ (ಬದಿಗೆ ಮಾಡು; ಬದಿಗಿಡು; ಬದಿಗೊತ್ತು), ಮಗ್ಗುಲು (ಮಗ್ಗುಲಲ್ಲಿ ಮಲಗಿದ ಕೂಸು), ಹೊಡೆ (ಎಡದ ಹೊಡೆ ಚನ್ನಾಗಿಲ್ಲ), ಪುದಿ (ಬಾಗಿಲಿನ ಪುದಿ)
side dish — ನಾ ಕೆಲವಟ್ಟಲು
side glance — ನಾ ಕುಡಿನೋಟ ನಾ ಅಡ್ಡನಗೆ
sidereal — ನಾ ಅರಿಲಿನ, ಚುಕ್ಕೆಯ
sidestep — ಕ್ರಿ ಬದಿಗೆ ಸರಿ (ಬದಿಗೆ ಸರಿದು ಏಟು ತಪ್ಪಿಸಿಕೊಂಡ)
siege — ನಾ ಮುತ್ತಿಗೆ (ಮುತ್ತಿಗೆ ಹಾಕು)
sierra — ನಾ ಬೆಟ್ಟದ ಸಾಲು
siesta — ನಾ ಕಿತ್ತೊರಕು (ನಡುಹಗಲ ಕಿತ್ತೊ ರಕು)
sieve — ನಾ ಜರಡೆ (ಜರಡೆಹಿಡಿ; ಜರಡೆ ಯಾಡು), ಜಲ್ಲಡೆ, ಒನಲಿ (ಅವನ ಕಯ್ಯ ಲ್ಲೆಲ್ಲ ಒನಲಿಯ ಹಾಗೆ ತೂತಾಗಿದೆ)
sift — ಕ್ರಿ 1 ಜಲ್ಲಿಸು (ಅಕ್ಕಿ ಹಿಟ್ಟನ್ನೊಮ್ಮೆ ಜಲ್ಲಿಸಬೇಕು), ತೆಂಡಿಸು 2 ಆಯ್ಕೆಮಾಡು, ಒರೆದುನೋಡು
sigh — ನಾಸುಯಿಲು,ನಿಟ್ಟುಸಿರು (ನಿಟ್ಟುಸಿರು ಬಿಡು)
sigh — ಕ್ರಿ ಸುಯ್ಯು (ಸುಯ್ಯುತ್ತಾ ಹಲವು ದಿನಗಳನ್ನು ಕಳೆದನು; ಬಿಸುಸುಯ್ಯು)
sight — ನಾ ನೋಟ (ಕಡೆಗಣ್ಣ ನೋಟ, ಸಿಟ್ಟಿನ ನೋಟ), ಕಣಿ (ಕಣಿ ಹೇಳು), ಕಾಣಿಕೆ, ಕಾಣ್ಕೆ (ಕಾಣ್ಕೆ ಮಾಡಿಸು), ಕಾಣುಹ, ಕಾಣ್ಮೆ (ನಾ ಕಂಡ ಕಾಣ್ಮೆ), ಚೂಪು (ಆತನ ಚೂಪು ಕುಂದಿದೆ)
sightly — ಗು ನೋಡತಕ್ಕ, ನೋಡಲೊಗ್ಗುವ
sightseeing — ನಾ ನೋಟಕಾಣುಹ (ಅವ ರೆಲ್ಲ ನೋಟಕಾಣುಹಕ್ಕೆ ಹೊರಟಿದ್ದಾರೆ)
sign — ನಾ ಸುಳಿವು (ಸುಳಿವು ಹತ್ತು; ಸುಳಿವು ಹಿಡಿ), ಸೋಹೆ, ಸೋವು (ಸೋವು ಸಿಕ್ಕು), ಕುರುಹು (ಕುರುಹು ಹಿಡಿ), ಗುರುತು (ಆತ ಬಂದುದರ ಗುರುತು ಯಾವುದೂ ಇಲ್ಲ), ಕೂನು, ಗೊಂತು, ಜಾಡು (ಕಣ್ಜಾಡು)
sign language — ನಾ ಸನ್ನೆನುಡಿ
sign — ಕ್ರಿ ಒಪ್ಪಹಾಕು (ಅವರು ತೋರಿಸಿದಲ್ಲೆಲ್ಲ ಒಪ್ಪಹಾಕಿದ)
signal — ನಾ ಗುರುತು, ಸುಳಿವು, ತೋರಿಕೆ
signature — ನಾ ಕಯ್ಗುರುತು, ಒಪ್ಪಿತ (ಒಪ್ಪಿತ ಹಾಕು)
sign-board — ನಾ ತೂಗುಹಲಗೆ (ಅಂಗಡಿ ಯೆದುರು ದೊಡ್ಡ ತೂಗುಹಲಗೆಯಿದೆ)
signet — ನಾ ಗುತ್ತು (ಗುತ್ತಿನುಂಗುರ)
significance — ನಾ ಹುರುಳು, ಹೆಚ್ಚುಗಾರಿಕೆ
signify — ಕ್ರಿ ತಿಳಿಸು, ತೋರಿಸು, ಹುರುಳಿಸು, ಹುರುಳುಕೊಡು
signpost — ನಾ ಕಯ್ಮರ (ಕಯ್ಮರ ನೋಡಿ ಬಲಕ್ಕೆ ತಿರುಗಿದರು), ತೋರ್ಗಂಬ ನಾ ಸೊಲ್ಲಮೆ, ಜಾಗು (ಜಾಗು ಮಾಡು), ಕುಂಗು (ಇದು ಕುಂಗಿರಬೇಕಾದ ಎಡೆ), ಸಯ್ಪು
silently — ಗು ಸುಮ್ಮಗೆ (ಸುಮ್ಮಗೆ ಕುಳಿತಿದ್ದ), ಉಸಿಕನೆ (ಉಸಿಕನೆ ಕುಳಿತಿದ್ದ),ಗಪ್ಪನೆ (ಗಪ್ಪನೆ ಬಂದು ಹೋದ), ಮಿಣ್ಣಗೆ (ಮಿಣ್ಣಗೆ ಬಂದು ನಿಂತಿದ್ದಾನೆ), ಬಿನ್ನಗೆ (ಮದುವೆ ಬಿನ್ನಗಾಯಿತು; ಬಿನ್ನಗಿರು)
silhouette — ನಾ ನೆರಳುತಿಟ್ಟ
silk cloth — ನಾ ಸಣ್ಣಿ (ಮಡಿಗಾಗಿ ಸಣ್ಣಿ ಉಟ್ಟಿದ್ದಾನೆ)
silk worm — ನಾ ತೆರಳೆಯ ಹುಳ
silk-cotton — ನಾ ಬೂರುಗ (ಬೂರುಗದ ಮರ)
sill — ನಾ ಅಡಿಗಟ್ಟು (ಬಾಗಿಲಿನ ಅಡಿಗಟ್ಟು)
silly — ಗು ತಿಳಿವಿಲ್ಲದ, ಹೆಡ್ಡು, ಪೆದ್ದು
silt — ನಾ ಕೆಸರು (ಕೆಸರಲ್ಲಿ ಕಾಲು ಹೂತು ಹೋಗುತ್ತಿದೆ), ಹೂಳು (ಕೆರೆಯಲ್ಲಿ ಹೂಳು ತುಂಬಿದೆ), ಬುರುದೆ (ಬುರುದೆಯಲ್ಲಿ ಅರಳಿದ ಹೂಗಳು), ವಂಡು
silver — ನಾ ಬೆಳ್ಳಿ (ಬೆಳ್ಳಿ ಬಟ್ಟಲು; ಬೆಳ್ಳಿ ಕೊಡೆ, ಬೆಳ್ಳಿಬೆಟ್ಟ)
silver jubilee — ನಾ ಬೆಳ್ಳಿಹಬ್ಬ
similar — ಗು ಪುದು (ಪುದುವೆನಿಸು; ಪುದು ಮಾಡು),ಹೋಲುವ
similarity — ನಾ ಸಾಟಿ (ಅವನಿಗೆ ಸಾಟಿ ಯಾರು?), ಹೋಲಿಕೆ (ಹೋಲಿಕೆಗೆ ಒಂದು ಹಣ್ಣನ್ನು ತೋರಿಸಿದ; ಹೋಲುವೆ), ಒರೆ (ಈತನ ಒರೆಗೆ ಯಾರು ಬಂದಾರು?), ಪಾಸಟಿ, ಗೆತ್ತು, ದೊರೆ (ತಾರೆಗಳೆµ್ಟದ್ದರೂ ತಿಂಗಳಿಗೆ ದೊರೆಯೇ?), ಓಪಾದಿ (ತಾಲಿು ಯೋಪಾದಿಯಲ್ಲಿ)
simile — ನಾ ಹೋಲಿಕೆ
simmer — ಕ್ರಿ 1 ಕುದಿ (ಉರಿ ಕಡಿಮೆ ಮಾಡಿ ಕುದಿಯಲು ಬಿಡಬೇಕು), ಮರಳು 2 ತಳ ಮಳಿಸು, ಸಿಟ್ಟಿನಿಂದ ಕುದಿ
simper — ಕ್ರಿ ಹುಸಿನಗೆ ನಗು, ಪೆದ್ದುನಗೆ ನಗು
simple — ಗು 1 ಸುಳುವಾದ, ತೊಡಕಿಲ್ಲದ 2 ಪದಪಿಲ್ಲದ, ಯಾವಾಗಿನ 3 ಮೋಸ ವಿಲ್ಲದ, ಮರೆಮಾಚದ 4 ಹೆಡ್ಡು, ಪೆದ್ದು
simpleton — ನಾ ಪೆಂಗ
simplicity — ನಾ ನೇರ್ಪು, ಸರಿಸ
simplify — ಕ್ರಿ ಸುಳುವಾಗಿಸು, ತೊಡಕು ಕಳೆ
simulate — ಕ್ರಿ ಸೋಗುಹಾಕು, ತೋರ್ಪಡಿಸು, ಅಣಕಮಾಡು ಗು ಒಡನೆಯ, ಒಂದೇ ಹೊತ್ತಿನ
sin — ನಾ ತಪ್ಪು, ಕೇಡು, ಸೆರಗು, ನಡತೆ ಕೆಡುಗೆ
sincere — ಗು ನೇರ್ಪಿನ, ಸಯ್ದ, ಸಯ್ಪಿನ
sinew — ನಾ 1 ನರಕಟ್ಟು 2 ಕಸುವು
sinewy — ನಾ ಕಸುವುಳ್ಳ, ಗಟ್ಟಿಮುಟ್ಟಾದ
sing — ಕ್ರಿ ಹಾಡು (ಈಗ ಹಾಡುತ್ತಿರುವವರು ಯಾರು? ಹಾಡುಗಾರ; ಹಾಡುಗಾರಿಕೆ)
singe — ಕ್ರಿ ಸೀಯು (ಅನ್ನ ಸೀದುಹೋಗಿದೆ), ಕಮರು (ಬೆಂಕಿಯ ಹತ್ತಿರ ಬಗ್ಗಿದಾಗ ಆತನ ಕೂದಲು ಕಮರಿತು)
singer — ನಾ ಹಾಡುಗಾರ, ಪಾಣ
singing — ನಾ ಪಾಟ (ಆಟಪಾಟಕೂಟಗಳು)
single — ನಾ ಉಂಡಿಗ (ಆತ ನಂಟರು ಯಾರೂ ಇಲ್ಲದ ಉಂಡಿಗನಾಗಿದ್ದಾನೆ), ಒಬ್ಬಂಟಿಗ (ಆತ ಮದುವೆಯಾಗದ ಒಬ್ಬಂಟಿಗ)
single — ಕ್ರಿ ಆಯು, ಆಯ್ಕೆ ಮಾಡು
single — ಗು ಒಂಟಿ (ಒಂಟಿಯಾಗು; ಒಂಟಿ ಗಾಲು; ಒಂಟಿಬಾಳು - ಆತ ಒಂಟಿಬಾಳು ಬಾಳುತ್ತಿದ್ದಾನೆ), ಒತ್ತೆ (ಒತ್ತೆಕೊಂಬು; ಒತ್ತೆಆಕಳು)
single-handed — ಗು 1 ಒಂದೇ ಕಯ್ಯಲ್ಲಿ 2 ಒಬ್ಬನೇ
single-minded — ಗು 1 ಸಯ್ಪಿನ, ನೇರ್ಪಿನ 2 ಒರ್ಸೂಟಿಯ, ಒರ್ಗುರಿಯ
singular — ನಾ 1 ಓರೆಣಿಕೆಯ 2 ಬೇರಿಲ್ಲದ, ದೊರೆಯಿಲ್ಲದ, ಎಲ್ಲರಂತಿಲ್ಲದ
sinister — ಗು 1 ಕೇಡಿನ, ಬೆದರಿಸುವ, ಕುತ್ತದ 2 ಮೋಸದ, ಬಿಂಕಿನ
sink — ನಾ 1 ತೊಳೆಮರಿಗೆ, ತೊಟ್ಟಿ 2 ಕೊಚ್ಚೆಕಾಲುವೆ, ಕೊಚ್ಚೆಕೊಳವೆ
sink — ಕ್ರಿ 1 ಕುಸಿ (ಕುಸಿದುಬೀಳು; ಮನೆ ಕುಸಿಲಿುತು), ತಗ್ಗು (ತಗ್ಗಿದ ನೆಲ), ಕುಗ್ಗು (ಕುಗ್ಗಿದ ಅದಟು), ಕುಂಗು, ನೆಗ್ಗು (ತಂಬಿಗೆ ನೆಗ್ಗಿಹೋಗಿದೆ), ತಾಳು (ಕೊಳದಲ್ಲಿ ನೀರು ಕೆಳಗೆ ತಾಳಿದೆ) 2 ಮುಳುಗು (ನೀರಿನಲ್ಲಿ ಮುಳುಗಿತು; ಮುಳುಗಡೆ), ಆಳು (ಕೊಳ ದಲ್ಲಿ ಆಳಿ ತಂಬಿಗೆಯನ್ನು ಹೊರತಂದ), ಕಂತು (ನೀರಿನಲ್ಲಿ ಮಂಡಿ ಕಂತುವ ತನಕ ಹೋಗು), ಅಗುಳು (ಕೊಳದಲ್ಲಿ ಅಗುಳಿ ಸತ್ತು ಹೋದ),ಹೂಳು (ಕಾಲು ಹೂತು ಹೋಗಿದೆ)
sinking — ನಾ ಅದ್ದಿಕೆ, ಅದ್ದುಗೆ,ಆಳ್ತೆ
sinner — ನಾ ತಪ್ಪುಕ
sinuous — ಗು ಡೊಂಕು, ತಿರುವುಮುರುವು
sip — ಕ್ರಿ ಈಂಟು (ಮಗು ಮೊಲೆಹಾಲನ್ನು ಈಂಟುತ್ತಿದೆ), ಹೀರು (ಹೀರಿ ಕುಡಿ) ನಾ ಎಳೆಕೊಳವಿ (ಎಳೆಕೊಳವಿ ಯಿಂದ ಎಣ್ಣೆ ತೆಗೆಯುತ್ತಿದ್ದಾನೆ), ಇಳಿ ಗೊಳವೆ
sire — ನಾ 1 ಹುಟ್ಟಿಸುಗ (ಕುದುರೆಯ ಹುಟ್ಟಿ ಸುಗ) 2 ತಂದೆ, ಅಜ್ಜ
siren — ನಾ 1 ಎಚ್ಚರಿಕೆಯ ಉಲಿವು 2 ಸೆಳೆಹೆಣ್ಣು
sister — ನಾ ಒಡವುಟ್ಟಿ
sit back — ಕ್ರಿ ನಾಂಬು
sit out — ಕ್ರಿ 1 ಕೊನೆವರೆಗಿರು 2 ಸೇರದಿರು
sit — ಕ್ರಿ ಮಂಡಿಸು (ಉಯ್ಯಾಲೆಯ ಮೇಲೆ ಮಂಡಿಸಿದ್ದಾರೆ),ಕುಳ್ಳಿರು,ಕೂರು (ಕೂತು ಕೊಳ್ಳು)
site — ನಾ ನೆಲೆ (ಮನೆ ಕಟ್ಟಲು ನೆಲೆ ಕೊಂಡು ಕೊಂಡಾಯಿತು), ಅಡಿ (ಮನೆಯ ಅಡಿ)
sitting — ನಾ ಕೂಟ, ಹೊತ್ತು (ಒಂದು ಹೊತ್ತಿನ ಮಾತುಕತೆ)
situation — ನಾ 1 ಪಾಡ (ಕಯ್ವಾಡ), ನೆಲೆ (ನೆಲೆಗೆಡಿಸು) 2 ಕೆಲಸ
sizable — ಗು ದೊಡ್ಡ ಅಳತೆಯ
size — ನಾ ಉದ್ದಗಲ, ಅಳತೆ
size — ಕ್ರಿ 1 ಅಳತೆಯಂತೆ ಓರಣಿಸು 2 ಪೆಡಸಾ ಗಿರು
sizzle — ಕ್ರಿ 1 ಚರಚರನೆ ಬಿಸಿಯಾಗು 2 ತುಂಬಾ ಬಿಸಿಯಾಗಿರು
skate — ನಾ ಜಾರುಮೆಟ್ಟು, ಗಾಲಿಮೆಟ್ಟು
skein — ನಾ ನೂಲಕಂಡಿಕೆ
skeleton — ನಾ ಅಟ್ಟೆ, ಎಲುಬಿನ ಗೂಡು
sketch — ನಾ 1 ಎಲ್ಲೆಗೆರೆ 2 ಅಡಕಬರಹ 3 ಕಿರುಕತೆ
skew — ಗು ತಿರುಚಿದ (ನಾನು ಹೇಳಿದ್ದಕ್ಕೆಲ್ಲ ತಿರುಚಿದ ಮಾರ್ನುಡಿ ಕೊಟ್ಟ)
skewer — ನಾ ಬಾಡುಕೋಲು, ಬಾಡುಕಂಬಿ
ski — ನಾ ಜಾರುಪಟ್ಟಿ
skid — ನಾ ಜಾರುಹಲಗೆ (ತೂಕದ ಪೆಟ್ಟಿಗೆಯನ್ನು ಜಾರುಹಲಗೆಯ ಮೇಲೆ ಎಳೆದು ತಂದರು)
skid — ಕ್ರಿ ಜಾರು (ಹಿಮದ ಮೇಲೆ ಓಡುವ ಬಂಡಿ ಪಕ್ಕಕ್ಕೆ ಜಾರಿತು), ಸರಿ
skiff — ನಾ ಕಿರುಹಡಗು
skill — ನಾ ಕಲಿಕೆ,ಚೆಚ್ಚರಿಕೆ (ಚೆಚ್ಚರಿಕೆಯ ಕಯ್), ಚಳಕ (ಕಯ್ಚಳಕ), ಚೊಕ್ಕೆಯತನ, ಬದ್ದು
skillet — ನಾ ಕಾವಲಿಗೆ
skim — ಕ್ರಿ ಕೆನೆತೆಗೆ ನಾ ಸೋಲೆ (ಹಲಸಿನ ಹಣ್ಣಿನ ಬೇಳೆಯ ಮೇಲಿರುವ ಸೋಲೆ), ಸಿಪ್ಪೆ (ಹಣ್ಣಿನ ಸಿಪ್ಪೆ), ಕಡವಸ (ಅತನನ್ನು ಕಡವಸದ ಮೇಲೆ ಕುಳ್ಳಿರಿಸಿದರು), ತೊಗಲು (ತೊಗಲ ಬಾವಲಿ; ಸಡಿಲಿಸಿದ ತೊಗಲು), ತೋಲು, ಚಕ್ಕಳ (ಚಕ್ಕಳದ ಮೆಟ್ಟು)
skip — ಕ್ರಿ ದಾಟು (ಅಗಳು ಹಾರಿ ದಾಟು), ಚಂಗು (ಚಂಗುಚಂಗನೆ ಹಾರು), ನೆಗೆ, ಜಿಗಿ (ಜಿಗಿಯುತ್ತಾ ಓಡಿದಳು)
skipper — ನಾ ಮೇಲಾಳು, ಮೇಲಾಟಗಾರ
skirmish — ನಾ 1 ಕಿರುಹೋರಾಟ 2 ಕಿರು ತಿಕ್ಕಾಟ
skirt — ನಾ ಕೆಳ ಉಡುಪು, ಒಳ ಉಡುಪು
skirt — ಕ್ರಿ ಗಡಿಯಲ್ಲಿರು, ಗಡಿಯಲ್ಲಿ ಸುತ್ತಾಡು
skittish — ಗು 1 ಚುರುಕಾದ, ಆಟವಾಡುವ 2 ದಿಗಿಲುಬೀಳುವ
skulk — ಕ್ರಿ ತಲೆಮರೆಸಿಕೊಳ್ಳು, ಅಡಗು, ತಲೆಮರೆಸಿ ಅಡ್ಡಾಡು
skull — ನಾ ಬುರುಡೆ (ತಲೆಬುರುಡೆ),ಎಲು ದಲೆ, ಓಡು (ತಲೆಯ ಓಡು)
sky — ನಾ ಬಾನು (ಬಾನಗಣ್ಣು; ಬಾನಂಚು; ಬಾನುಲಿ),ಎಲರ್ವಟ್ಟೆ
slab — ನಾ ಅರೆ (ಆನೆ ಅರೆಯನ್ನು ಮೆಟ್ಟಿ ಒಡೆದುಹಾಕಿತು), ಹಾಸುಗಲ್ಲು, ಹಲಗೆ, ಚಪ್ಪಡಿ (ಕಾಲ್ದಾರಿಗೆ ಚಪ್ಪಡಿ ಹಾಸಿದ್ದಾರೆ)
slack — ಗು ಜಬ್ಬು (ಜಬ್ಬಲು - ಜಬ್ಬಲು ಬೀಳು) ಸಡಿಲು (ಸಡಿಲಿಸು, ಹಗ್ಗವನ್ನು ತುಸು ಸಡಿಲು ಬಿಡಿ), ಅಳಿಲು (ಅಳಿಲಾದ ಮುಡಿ), ಜಂಗಳ (ಕಟ್ಟುಗಳೆಲ್ಲ ಜಂಗಳ ವಾಗಿವೆ), ಜೋಲು (ಜೋಲುತುಟಿ, ಜೋಲುತುರುಬು, ಜೋಲಾಡು; ಜೋಲು ಕಿವಿ), ಸೋರು (ಸೋರ್ಗುರುಳು; ಸೋರು ಮುಡಿ)
slack water — ನಾ ಇಳಿನೀರು
slacken — ಕ್ರಿ 1 ನಾಂಬು (ನಾಂಬಿದ ತುರುಬು) 2 ಚುರುಕು ಕಳೆ
slake — ಕ್ರಿ 1 ಹಿಂಗಿಸು (ಬಾಯಾರಿಕೆ ಹಿಂಗಿಸು; ಹಸಿವು ಹಿಂಗಿಸು) 2 ನೀರೆರೆ (ಸುಣ್ಣದ ಕಲ್ಲಿಗೆ ನೀರೆರೆ)
slam — ಕ್ರಿ ಬಲ್ಮೆಯಿಂದ ಮುಚ್ಚು, ಡಬ್ಬನೆ ಮುಚ್ಚು
slander — ನಾ ಕೊಂಡೆ,ತಳ್ಳಿ (ತಳ್ಳಿಕಾರ; ತಳ್ಳಿಮಾತು)
slanderer — ನಾ ಕುರುಕುಳಿ, ತಳ್ಳಿಕಾರ
slang — ನಾ ಆಡುನುಡಿ
slant — ಗು ಮಾಲ (ಮಾಲಗಣ್ಣು; ಮಾಲ ಗಂಬ),ಓರೆ (ಓರೆನುಡಿ, ಓರೆನೋಟ)
slap — ಕ್ರಿ ಅಪ್ಪಳಿಸು (ತೊಡೆಯನ್ನು ಅಪ್ಪಳಿಸು), ಹೊಡೆ (ಕೆನ್ನೆಗೆ ಹೊಡೆ) ಕ್ರಿ ಸಿಗಿ, ಸೀಳು, ತುಂಡರಿಸು
slat — ನಾ ದಬ್ಬೆ, ಪಟ್ಟಿ
slate — ನಾ ಕರಿಹಲಗೆ, ಕಲ್ಲಹಲಗೆ (ಹುಡುಗನಿ ಗೊಂದು ಕಲ್ಲಹಲಗೆ ತಂದುಕೊಡಬೇಕು)
slate pencil — ನಾ ಬಳಪ (ಬಳಪದ ಕಲ್ಲು)
slaughter — ನಾ 1 ಕಗ್ಗೊಲೆ 2 ಕೊಲ್ಲುವಿಕೆ
slave — ನಾ ಅಡಿಯ,ತೊತ್ತು (ತೊತ್ತುಮಾಡು; ತೊತ್ತುಕೆಲಸ)
slavery — ನಾ ಅಡಿಮೆ,ತುಳಿಲು (ತುಳಿಲಾಳು)
slavish — ನಾ 1 ಅಡಿಮೆಯ 2 ಅಡಿಯಾಳಾ ಗಿರುವ, ಕಣ್ಣುಮುಚ್ಚಿ ಹಿಂಬಾಲಿಸುವ
slay — ಕ್ರಿ ಕೊಲ್ಲು
sledge — ನಾ ಜಾರುಬಂಡಿ (ಜಾರುಬಂಡಿ ಯನ್ನು ನಾಯಿಗಳು ಮಂಜಿನ ಮೇಲೆ ಎಳೆಯುತ್ತಿವೆ)
sledge hammer — ನಾ ಚಮ್ಮಟಿಗೆ
sleek — ಗು 1 ನುಣ್ಣಗೆ ಹೊಳೆಯುವ 2 ಅಂದಗೊಳಿಸಿಕೊಂಡ
sleep — ನಾ ಕುಗುರು (ಕುಗುರುಹತ್ತು), ಒರಕು (ಆತನಿಗೆ ಒರಕು ಬಂದಿದೆ)
sleep — ಕ್ರಿ ಒರಗು (ಊಟ ಮಾಡಿ ಮಲಗಿ ಒರಗಿದ), ಕೆಂದು
sleepwalk — ನಾ ಒರಕು ನಡೆತ
sleepy — ಗು ಒರಕು ತೂಗುವ
sleet — ನಾ ಮಂಜುಮಳೆ, ನೀರುಮಂಜು
sleeve — ನಾ ಉಡುಪಿನ ಕಯ್
sleigh — ನಾ ಜಾರುಬಂಡಿ
slender — ಗು ಅಸಿ (ಅಸಿಹೂ; ಅಸಿಬೆರಳು; ಅಸಿನೂಲು), ತೆಳು (ತೆಳ್ನಡು; ತೆಳ್ವಸಿರು; ತೆಳ್ಳಗೆ)
sleuth — ನಾ 1 ತುಬ್ಬುಗಾರ 2 ಬೇಟೆನಾಯಿ
slice — ನಾ ಹೋಳು (ಅಡಿಕೆಯ ಹೋಳು),ಕೀತು (ಒಂದು ಚಿಕ್ಕ ಬಾಳೆಯ ಕೀತು)
slick — ಗು 1 ಚುರುಕಾದ, ಪಳಗಿದ, ಜಾಣ್ಮೆಯ 2 ಸರಿಯಲ್ಲದ, ಮೋಸದ
slide — ನಾ ಇಳಿಜಾರು, ಜಾರಿಕೆ (ಜಾರಿಕೆಯಲ್ಲಿ ಮೆಲ್ಲಗೆ ಹೋಗಿ)
slide — ಕ್ರಿ ಜರಿ (ಗೋಡೆ ಜರಿದಿದೆ; ಜರುಗು), ನೊಣಚು (ಕೆಸರಿನಲ್ಲಿ ಕಾಲು ನೊಣಚಿತು), ಜಾರು (ಜಾರಿಕೊಳ್ಳು; ಜಾರಿಬೀಳು), ಪಯ್ಸರಿಸು, ಸರಿ (ಮಾಡಿನ ಹಂಚು ಕೆಳಗೆ ಸರಿದಿದೆ),
slight — ಗು 1 ಚಿಕ್ಕ, ತೆಳ್ಳಗಿನ, ಸಣಕಲು 2 ನವುರು (ನವುರು ನಗು) 3 ಕಡೆಗಣಿಸಬಲ್ಲ
slim — ಗು 1 ತೆಳ್ಳಗಿನ, ತೆಳು ಮಯ್ಕಟ್ಟಿನ 2 ಕಡಿಮೆ ನಾ ಕೆಸರು, ಅಂಟು, ಲೋಳೆ
sling — ನಾ ಕವಣೆ (ಕವಣೆಯ ಕಲ್ಲು)
slink — ಕ್ರಿ ತಲೆಮರೆಸಿ ಓಡು
slip — ಕ್ರಿ ಸರಿ (ಕತ್ತಿಹಿಡಿ ಸರಿದಿದೆ), ನುಣುಚು (ಕಳ್ಳ ನಮ್ಮ ಕಯ್ಯಿಂದ ನುಣುಚಿಕೊಂಡ), ಜಗುಳು (ಅವಳ ಕಯ್ಯಿಂದ ಗಿಂಡಿ ಜಗುಳಿ ಬಿತ್ತು), ಜಾರು (ಜಾರುದಾರಿ), ತಬ್ಬರಿಸು (ಗಡಿಬಿಡಿ ಮಾಡಹೋಗಿ ತಬ್ಬರಿಸಿದ), ಜರಗು (ಜರಗಿಸು; ಹಲಿಗೆ ಕಯ್ಯಿಂದ ಜರಗಿ ಕಾಲಿಗೆ ಬಿತ್ತು), ಕಸಿ (ಕಸಿದು ಬೀಳು)
slip off — ಕ್ರಿ ಕಳಚು (ಹಿಡಿಯನ್ನು ಕಳಚುವುದು ಹೇಗೆ?),ಕಳಲು (ಗಾಳಿ ಬೀಸಿದಾಗ ಎಲೆ ಗಳು ಕಳಲಿದುವು), ಕೊಸರು (ಆಕೆ ಅವನ ಕಯ್ಯಿಂದ ಕೊಸರಿಕೊಂಡು ದೂರ ಸರಿದಳು; ಕೊಸರಾಡು)
slipper — ನಾ ಕಾಲುಮೆಟ್ಟು; ಕಾಲ್ಮರೆ (ಕಾಲ್ಮರೆ ಯಿಲ್ಲದೆ ನಡೆಯಬೇಡಿ)
slipping — ನಾ ಜಾರಿಕೆ
slip-shod — ಗು ಎಚ್ಚರಗೇಡಿಯಾದ, ಅಚ್ಚು ಕಟ್ಟಿಲ್ಲದ, ಬೇಕಾಬಿಟ್ಟಿಯ
slit — ನಾ ಸೀಳುಕಂಡಿ
slit — ಕ್ರಿ ಸಿಗಿ (ಕಟ್ಟಿಗೆ ಸಿಗಿ), ಸೀಳು (ಸೀಳಾಗು, ಸೀಳಿಹೋಗು - ಮೊಳೆ ಹೊಡೆಯುವಾಗ ಹಲಿಗೆ ಸೀಳಿಹೋಯಿತು)
slither — ಕ್ರಿ 1 ಹರಿದಾಡು (ಹಾವು ಹರಿ ದಾಡುತ್ತ ಬರುತ್ತಿದೆ), ಸರಿದಾಡು 2 ಜಾರು (ಚರಳು ಕಲ್ಲಿನ ಮೇಲೆ ಜಾರುತ್ತ ಓಡಿದ)
sliver — ನಾ ದಬ್ಬೆ, ಚಕ್ಕೆ, ಸಿದರು, ಸಿಬರು, ಸಿಬ್ಬೆ (ಬಿದಿರಿನ ಸಿಬ್ಬೆ)
slobber — ಕ್ರಿ ಜೊಲ್ಲು ಸುರಿಸು
slog — ಕ್ರಿ ಪಟ್ಟುಹಿಡಿದು ಮಾಡು, ದುಡಿ
slogan — ನಾ ಗುರಿನುಡಿ (ಮೆರವಣಿಗೆಯಲ್ಲಿ ಗುರಿನುಡಿ ಕೂಗುವವರು ಮುಂದಿದ್ದಾರೆ)
sloop — ನಾ ಒಕ್ಕೂವೆಯ ಹಡಗು
slop — ನಾ 1 ಕೆಸರು, ಮಂಜುನೀರು, ತೊಳೆ ನೀರು 2 ನೀರುಣಿಸು
slop — ಕ್ರಿ ತುಳುಕು (ನೀರು ತುಂಬಿ ತುಳುಕು ತ್ತಿದೆ), ಚೆಲ್ಲು
slope — ನಾ ಇಳಿಜಾರು, ವಾಟ (ವಾಟ ತುಸು ಹೆಚ್ಚಾಯಿತು)
sloping — ಗು ಓರೆ (ಓರೆಕೋರೆ; ಓರೆಮಾಡು; ತಲೆಯನ್ನು ಓರೆಮಾಡಿ ನೋಡು), ಇಳು ಕಲು (ಇಳುಕಲು ನೆಲ),ಕಂತ (ಆ ದಾರಿ ಬಹಳ ಕಂತ ಇದೆ) ಕ್ರಿ 1 ಅಲುಗಾಡಿಸು, ಕಲಕು, ಚೆಲ್ಲು, ತೋಯು 2 ಕೆಸರಲ್ಲಿ ನಡೆ (ಅವರು ಕೆಸರಲ್ಲಿ ನಡೆಯುವ ಸಪ್ಪಳ ಕೇಳಿಸುತ್ತಿದೆ)
slot — ನಾ ಕಂಡಿ (ಸೀಳುಕಂಡಿ), ಉದ್ದ ಚಡಿ
sloth — ನಾ ಸೋಂಬತನ, ಮಯ್ಗಳ್ಳತನ
slouch — ಕ್ರಿ ಜೋತುಬಿದ್ದು ನಡೆ
slough — ನಾ 1 ಸೋಲೆ (ಹಾವಿನ ಸೋಲೆ), ಪರೆ (ಪರೆ ಬಿಡು), ಹರೆ, ಹೆರೆ (ಹಾವಿನ ಹೆರೆ; ಹೆರೆಬಿಡು; ಹೆರೆಸುಲಿ; ಹೆರೆಸುಲಿದ ಹಾವು), ಹೊರೆ (ಹಾವಿನ ಹೊರೆ; ಹೊರೆ ಕಳಚು) 2 ಕೆಸರುಗುಂಡಿ
slovenly — ಗು ಅಚ್ಚುಕಟ್ಟಿಲ್ಲದ, ಎಚ್ಚರ ಗೇಡಿಯಾದ
slowly — ಗು ಮೆಲ್ಲನೆ (ಮೆಲ್ಲನೆ ಬೀಸುವ ಗಾಳಿ; ಮೆಲ್ಲಮೆಲ್ಲನೆ ಬರು), ಒಯ್ಯನೆ (ಒಯ್ಯನೊಯ್ಯನೆ), ಆತು (ಆತು ಉರಿ; ಆತು ಉಣ್ಣು; ಆತು ಹೋಗು)
sludge — ನಾ ಕೆಸರು, ರೊಚ್ಚು, ಗೋಡು ಮಣ್ಣು, ಬದಿ
slug — ನಾ 1 ಗುಂಡು 2 ಗೋಡೆಹುಳು
slug — ಕ್ರಿ ಹೊಡೆ, ಗುದ್ದು, ಅಪ್ಪಳಿಸು
sluggard — ನಾ ಸೋಂಬ, ಸೋಮಾರಿ
sluggish — ಗು 1 ಹಂದಾಡದ, ಕೊಳೆ ತುಂಬಿದ 2 ಚುರುಕಿಲ್ಲದ
sluice — ನಾ ತೂಬು (ಕೆರೆಕಟ್ಟೆಯ ತೂಬು), ಮದಗ (ಕಟ್ಟದ ಮದಗ), ಕೋಡಿ (ಕೆರೆಯ ಕೋಡಿ)
slum — ನಾ ಕೊಳೆಗೇರಿ
slumber — ಕ್ರಿ ಒರಗು, ಸುಮ್ಮಗಿರು
slump — ಕ್ರಿ ಕುಸಿ (ಕುಸಿದುಬೀಳು; ಬೆಲೆ ಕುಸಿ), ತಗ್ಗು
slur — ನಾ ಹಳಿವು, ತೆಗಳಿಕೆ
slur — ಕ್ರಿ 1 ತೊದಲು (ಚನ್ನಾಗಿ ಕುಡಿದು ತೊದಲುತ್ತಿದ್ದಾನೆ) 2 ಹೀಗಳೆ
slush — ನಾ ಬದಿ (ಬದಿಯಲ್ಲಿ ಬಿದ್ದು ಹೊರಳಿ ದರು), ಕೆಸರು
sly — ಗು ಮುಚ್ಚುಮರೆಯ, ಗುಟ್ಟಿನ
smack — ಕ್ರಿ ತಪ್ಪಳಿಸು (ಸಿಹಿ ತಿಂದು ತುಟಿ ತಪ್ಪಳಿಸಿದರು), ಚಪ್ಪಳಿಸು, ಚಪ್ಪರಿಸು (ಬಾಯಿ ಚಪ್ಪರಿಸು; ತುಟಿ ಚಪ್ಪರಿಸು)
small money — ನಾ ಚುಂಗಡಿ, ಚಿಲ್ಲರೆ ಗು ಚೀಕು (ಚೀಕುಕಾಳು), ಪುಟ್ಟ (ಪುಟ್ಟ ಹುಡುಗ, ಪುಟ್ಟಪುಟ್ಟ ಕೊಂಬೆಗಳು; ಪುಟ್ಟಬಾಳೆ), ಚಿಕ್ಕ (ಚಿಕ್ಕ ಹುಡುಗಿ; ಚಿಕ್ಕಪ್ಪ), ಚಿಗ, ಚಿಣ್ಣ, ಚಿಣಿ, ಕುರು (ಕುರುಗಡ್ಡ; ಕುರು ಗಂಟು), ಕುರುಚು (ಕುರುಚಲು - ಕುರು ಚಲು ಕಾಡು), ಕುತ್ತು (ಕುತ್ತೆಸಳು; ಕುತ್ತುಸಿರು), ಕಿರು (ಕಿರುಗಾಣಿಕೆ; ಕಿರುಗತ್ತಿ; ಕಿರುಗುಡ್ಡ; ಕಿರುನಾಲಿಗೆ), ಕಿತ್ತು (ಕಿತ್ತಿಲಿ; ಕಿತ್ತುಸಿರು), ಕಿಗ್ (ಕಿಗ್ಗಣ್ಣು; ಕಿಗ್ಗಟ್ಟು), ಕಿರಿ (ಕಿರಿಗಣ್ಣು; ಕಿರಿಗೆಜ್ಜೆ; ಕಿರಿದು), ಗುನ್ನ (ಗುನ್ನಾನೆ), ಕೀಟು (ಕೀಟುಕೆಲಸ), ಬಡ (ಬಡಕಣ್ಣು; ಬಡಕೆಲಸ), ಸೀರು (ಸೀರ್ಮಿಡಿ; ಸೀರ್ಮೀನು; ಸೀರ್ಪನಿ), ಚಿನ್ನ (ಚಿನ್ನಾಟ, ಚಿನ್ನಾಟಿಕೆ), ಮರಿ (ಮರಿಮುಗಿಲು; ಮರಿ ದಿಂಗಳು), ಅಸಿ (ಅಸಿಮೊಗ, ಅಸಿಯವಳು, ಅಸಿಯಾಗು), ಪಿಳ್ಳ, ಪೀಚು (ಪೀಚುಗಡ್ಡ; ಪೀಚಕತ್ತಿ; ಪೀಚಾಳು), ಚಿಟ್ಟು (ಚಿಟ್ಟಿಲಿ, ಚಿಟ್ಟುಹರಳು; ಚಿಟ್ಟಗುಬ್ಬಿ; ಚಿಟ್ಟ ಜೇನು), ಕೂಚು (ಕೂಚುಗಡ್ಡ, ಕೂಚು ಗಿಡ), ಗುಚ್ಚು
small-pox — ನಾ ಸಿಡುಬು (ಸಿಡುಬು ತಗಲು; ಸಿಡುಬು ಹಾಕಿಸಿಕೊಂಡವರಿಗೆ ಸಿಡುಬು ತಗಲಲಿಲ್ಲ)
smart — ಕ್ರಿ ಉರಿ (ಮೆಣಸಿನ ಕಾಯಿ ಮುಟ್ಟಿ ಕಯ್ ಉರಿಯುತ್ತಿದೆ) ಹೊಗೆ (ಮೆಣಸು ಜಗಿದು ಬಾಯಿ ಹೊಗೆಯುತ್ತಿದೆ)
smart — ಗು ಸೂಟಿ (ಹುಡುಗ ಸೂಟಿಯಾಗಿ ದ್ದಾನೆ),ಚುರುಕು (ಚುರುಕಾಗಿ ನಡೆಯಿರಿ)
smartly — ಗು ಕಚ್ಚನೆ (ಕಾಲಿಗೆ ಕಚ್ಚನೆ ಮುಳ್ಳು ನಟ್ಟಿತು)
smash — ನಾ 1 ದೊಡ್ಡ ಏಟು 2 ಡಿಕ್ಕಿ 3 ಬಾರೀ ಮೆಚ್ಚುಗೆ
smash — ಕ್ರಿ ಒಡೆದುಹಾಕು, ಪುಡಿಮಾಡು, ಜಜ್ಜು, ಡಿಕ್ಕಿಹೊಡೆ
smattering — ನಾ ಮೇಲ್ಮೇಲಿನ ಅರಿವು, ಆಳ ವಲ್ಲದ ತಿಳಿವು
smear (cowdung) — ಕ್ರಿ ಸಾರಿಸು (ನೆಲ ವನ್ನು ಗುಡಿಸಿ ಸಾರಿಸಬೇಕು)
smear — ಕ್ರಿ ಸವರು (ಎಣ್ಣೆ ಸವರು),ಪೂಸು (ಪೂಸಿಕೊಳ್ಳು), ತೀಡು, ತೊಡೆ (ಬೇರನ್ನು ತಳೆದು ಮಯ್ಗೆಲ್ಲ ತೊಡೆದುಕೊಂಡ), ಊಡು (ಇದನ್ನು ಬಾಣದ ತುದಿಗೆ ಊಡು ತ್ತಿದ್ದರು), ಬಳಿ (ಎಣ್ಣೆ ಬಳಿದುಕೊಳ್ಳು), ದೋಳಿಸು, ಒರಸು (ಕೋತಿ ಬೆಣ್ಣೆ ತಿಂದು ಆಡಿನ ಬಾಯಿಗೆ ಒರಸಿತು)
smearing — ನಾ ಅಣ್ಕೆ, ಅಣ್ಪು,ತೊಡಕ
smell — ನಾ ನಾತ (ನಾತಹಿಡಿ; ನಾತ ಹೂ), ಗಬ್ಬು (ಗಬ್ಬುನಾತ) ಗಾಟು (ಮೆಣಸಿನ ಕಾಯಿಯ ಗಾಟು), ಹಸುಕು (ಹಸುಕು ನಾರುವ ನೆತ್ತರು), ಸೊಗಡು (ಮಣ್ಣಿನ ಸೊಗಡು), ಗಮನ (ಹೂವಿನ ಗಮನ),ಕಂಪು (ಕೆಟ್ಟ ಕಂಪು; ಹೂವಿನ ಕಂಪು), ನಿಡಿ (ಹೊಗೆಸೊಪ್ಪಿನ ನಿಡಿ)
smell — ಕ್ರಿ (ಆ) ನಾರು (ನಾರುವ ಬಟ್ಟೆ; ನಾರುವ ಹೊಸ ತುಪ್ಪ), ಗಮಗಮಿಸು (ಮಾ) ಮೂಸು (ಮೂಸಿ ನೋಡು; ಮೂಸು ಕೊಳವೆ)
smile — ನಾ ನಗು (ಕುಡಿನಗು; ಹುಸಿನಗು; ನಸುನಗು) ಕ್ರಿ ನಗು (ನಗಾಡು, ನಗುಮೋರೆ; ನಕ್ಕು ಮಾತನಾಡಿಸು)
smirch — ಕ್ರಿ 1 ಕೊಳೆಹಚ್ಚು, ಕೊಳೆಮಾಡು 2 ಹೆಸರು ಕೆಡಿಸು
smirk — ನಾ ಹುಸಿನಗು
smite — ಕ್ರಿ ಮೋದು (ಆತನನ್ನು ಮೋದಿ ಬೀಳಿಸಿದೆ)
smith — ನಾ ಕಮ್ಮಾರ (ಕಮ್ಮಾರನ ಹತ್ತಿರ ಎರಡು ಕತ್ತಿಗಳನ್ನು ಸರಿಮಾಡಿಕೊಡಲು ಹೇಳಿದ್ದೇನೆ)
smock — ನಾ ಹೊರ ಅಂಗಿ (ಉಡುಪು ಕೊಳೆ ಯಾಗದಂತೆ ಹೊರ ಅಂಗಿ ತೊಟ್ಟಿದ್ದ)
smoke — ಕ್ರಿ (ಆ) ಹೊಗೆ (ಒಲೆ ಹೊಗೆದು ಹೊತ್ತಿತು; ಹೊಗೆಕೊಡು, ಹೊಗೆಹಾಕು; ಹೊಗೆಸೊಪ್ಪು; ಹೊಗೆಬಂಡಿ) (ಮಾ) ಸೇದು (ಹೊಗೆಸೊಪ್ಪು ಸೇದು)
smooth — ಗು ನಯ (ನಯಬಟ್ಟೆ, ನಯ ಮಾತು, ನಯಗಂಬಳಿ), ನಳಿ (ನಳಿತೋಳು, ನಳಿಮೊಗ), ನುಣ್- (ನುಣ್ಗದಪು, ನುಣ್ದನಿ, ನುಣ್ಮಳಲು), ನುಣುಪು (ನುಣುಪು ಮಯ್; ನುಣುಪು ಮಾಡು), ಮಟ್ಟಣೆ (ಮಟ್ಟಣೆ ಗೊಳಿಸು)
smoothen — ಕ್ರಿ ನುಣ್ಣಿಸು, ನೇವರಿಸು (ತಲೆ ಗೂದಲನ್ನು ನೇವರಿಸಿದ)
smoothly — ಗು ನುಣ್ಣಗೆ (ನುಣ್ಣಗೆ ಬೀಸಿದ ರಾಗಿಹಿಟ್ಟು)
smother — ಕ್ರಿ ಉಸಿರಡಗಿಸು (ಉಸಿರಡಗಿಸಿ ಕೊಲ್ಲು), ಮುಚ್ಚಿ ನಂದಿಸು (ಬೆಂಕಿಯನ್ನು ಮುಚ್ಚಿ ನಂದಿಸಿದ), ತಡೆಹಿಡಿ (ಆಕಳಿಕೆ ಯನ್ನು ತಡೆಹಿಡಿ), ಹತ್ತಿಕ್ಕು
smoulder — ಕ್ರಿ ಕುಮುಲು (ಒಲೆಗೆ ಹಾಕಿದ ಕಾಯಿಸಿಪ್ಪೆ ಕುಮುಲಿ ಉರಿಯಿತು), ಹೊಗೆ ಯಾಡು
smudge — ನಾ ಕಲೆ
smug — ಗು ತನ್ಪೆರ್ಮೆಯುಳ್ಳ, ತನ್ತಣಿವಿನಲ್ಲಿರುವ, ನೆಮ್ಮದಿಯ
smuggling — ನಾ ಕಳ್ಳಸಾಗಾಣಿಕೆ
smut — ನಾ ಇಲ್ಲಣ, ಮಸಿ
snack — ನಾ ಕಿತ್ತುಣಿಸು, ತಿಂಡಿ
snag — ನಾ 1 ಅಡ್ಡಿ (ಕೆಲಸಕ್ಕೆ ಅಡ್ಡಿಯಾಗಿದೆ) 2 ಚೂಪು, ಚಾಚುಗೆ
snake — ನಾ ಹಾವು (ಹಲ್ಲುಕಳೆದ ಹಾವು; ಹೆರೆಕಳಚಿದ ಹಾವು)
snake-charmer — ನಾ ಹಾವಾಡಿಗ
snake-gourd — ನಾ ಪಡುವಳ
snap — ನಾ ಚಿಟಿಕೆ (ಚಿಟಿಕೆ ಹೊಡೆ)
snap — ಕ್ರಿ ಬಾಯಿಹಾಕು, ಕಚ್ಚು 2 ಚುಚ್ಚು ನುಡಿಯಾಡು 3 ಚಿಟಿಕೆಹಾಕು 4 ತುಂಡಾಗು ಗು ಸಿಡುಕು (ಸಿಡುಕುತನ; ಸಿಡುಕ; ಸಿಡುಕುಮೋರೆ)
snare — ನಾ ಬೆಳ್ಳಾರ (ಬೆಳ್ಳಾರ ಬಲೆ; ಬೆಳ್ಳಾರ ಸುತ್ತು),ಉರುಳು (ಬೇಡರು ಇರಿಸಿದ ಉರುಳಿಗೆ ಒಂದು ಜಿಂಕೆ ಸಿಕ್ಕಿಬಿದ್ದಿದೆ)
snarl — ಕ್ರಿ 1 ಗುರುಗುಟ್ಟು, ಗುರ್ರೆನ್ನು (ನಾಯಿ ಗುರ್ರೆನ್ನುತ್ತಿದೆ) 2 ಕೂಗಿ ಹೇಳು, ಎಚ್ಚರಿಸು
snatch — ಕ್ರಿ ಈಳು (ಈಳ್ದುಕೊಳ್ಳು, ಈಳ್ದು ಉರುಳಿಸು), ತುಡುಕು (ಕಯ್ತುಡುಕು; ತುಡುಕುಬೆಳಕು), ಕಸಿ (ಕಾಗೆ ಮಗುವಿನ ಕಯ್ಯಿಂದ ತಿಂಡಿಯನ್ನು ಕಸಿದುಕೊಂಡಿತು), ಕಿತ್ತುಕೊಳ್ಳು, ಕಸುಗೊಳ್ಳು, ಕಸುಕು, ಕವರು
snatchingly — ಗು ಕಬಕ್ಕನೆ,ಗಬಕ್ಕನೆ (ಗಬ ಕ್ಕನೆ ಹಿಡಿ)
sneak — ಕ್ರಿ ಸದ್ದಿಲ್ಲದೆ ಹೋಗು, ಕಳ್ಳನಂತೆ ಹೋಗು
sneer — ನಾ ಅಣಕದ ನಗು, ಹೀಗಳೆವ ನಗು, ಹೀಗಳೆವ ಮಾತು, ಗೇಲಿ (ಗೇಲಿಮಾತು)
sneeze — ಕ್ರಿ ಸೀನು (ಮೆಣಸಿನ ಕಾಯಿ ಒಲೆಗೆ ಬಿದ್ದು ಎಲ್ಲರೂ ಸೀನಲು ತೊಡಗಿದರು)
snick — ಕ್ರಿ ಚೂರು ಕೆತ್ತು, ಚೂರು ತುಂಡಿಸು
snicker — ಅಣಕದ ನಗು, ಗೇಲಿನಗು
sniff — ಕ್ರಿ 1 ಮೂಸು (ನಾಯಿ ಎಲ್ಲವನ್ನೂ ಮೂಸಿ ನೋಡುತ್ತಿತ್ತು) 2 ಸೊರಗುಟ್ಟು (ಅವನು ಸೊರಗುಟ್ಟುವುದು ಯಾಕೆ?)
sniffle — ಕ್ರಿ ಸೊರಗುಟ್ಟು
snigger — ನಾ ಅಣಕದ ನಗು, ಗೇಲಿನಗು (ನನಗೆ ಅವನ ಗೇಲಿನಗುವನ್ನು ಕಂಡರೆ ಆಗುವುದಿಲ್ಲ)
snip — ನಾ 1 ಕಿರುಕಡಿತ 2 ಕಡಿತದ ಸಪ್ಪಳ 2 ಕಡಿದ ತುಂಡು 4 ಹೆಗ್ಗತ್ತರಿ
snip — ಕ್ರಿ ಚಕಚಕನೆ ತುಂಡಿಸು
snipe — ಕ್ರಿ ಮರೆಯಿಂದ ಗುಂಡು ಹೊಡೆ, ಅಡಗಿ ದಾಳಿಮಾಡು
snivel — ಕ್ರಿ ತೋರಿಕೆಗೆ ಗೋಳಿಡು, ತೋರಿಕೆಗೆ ಸೊರಗುಟ್ಟು
snob — ನಾ ಬೆಡಗುಗಾರ, ಹಣವಂತರ ಬೆನ್ನಾಳು
snoop — ಕ್ರಿ ಮೂಗುತೂರಿಸು, ಬೇಹುಗಾರಿಕೆ ನಡೆಸು
snooze — ನಾ ಕಿತ್ತೊರಕು
snore — ಕ್ರಿ ಕೊರೆ (ಆತ ಕೊರೆದಾಗ ಬೆಟ್ಟವೇ ಬಿರಿಯಿತು)
snoring — ನಾ ಗೊರಕೆ (ಗೊರಕೆ ಹೊಡೆ; ಅವನ ಗೊರಕೆಲಿುಂದ ನನಗೆ ನಿದ್ದೆಯೇ ಬರಲಿಲ್ಲ)
snorkel — ನಾ ಉಸಿರುಕೊಳವೆ, ಗಾಳಿಕೊಳವೆ
snort — ಕ್ರಿ ಬುಸುಗುಟ್ಟು, ಗುಟುರುಹಾಕು, ಸಿಟ್ಟು ತೋರಿಸು ನಾ ಚುಂಚು (ಚುಂಚಿಲಿ), ಮುಸುಡು (ಕುದುರೆಯ ಮುಸುಡು)
snow — ನಾ ಮಂಜು, ಹಳುಕುಮಂಜು, ಹಲ್ಲ ಹನಿ, ಅಲಿ್ಕುಲು (ಅಲಿ್ಕುಲ್ವಟ್ಟ)
snow — ಕ್ರಿ ಮಂಜುಬೀಳು, ಹಲ್ಲಹನಿ ಬೀಳು
snowfall — ನಾ ಮಂಜುಸುರಿತ
snowline — ನಾ ಮಂಜುಮಟ್ಟ
snowstorm — ನಾ ಮಂಜಿನ ಬಿರುಗಾಳಿ
snub — ಕ್ರಿ 1 ಜರೆ 2 ಮಾತು ತಿರುಗಿಸು 3 ನಂದಿಸು (ಸೊಡರು ನಂದಿಸು)
snuff — ನಾ 1 ಮೂಗುಪುಡಿ (ಹೊಗೆಸೊಪ್ಪಿನ ಮೂಗುಪುಡಿ) 2 ಕರಟಿದ ನೆಣೆ
snuff — ಕ್ರಿ 1 ನೆಣೆ ತುಂಡಿಸು 2 ನಂದಿಸು 3 ಹಾಳುಗೆಡವು 4 ಮೂಸು
snug — ಗು 1 ಬೆಚ್ಚಗೆ (ಬೆಚ್ಚಗೆ ಮಲಗು) 2 ಅಡಕ (ಅಡಕ ಉಡುಪು)
snuggle — ಕ್ರಿ ಅವಚಿಕೊಳ್ಳು, ಅಪ್ಪಿಕೊಳ್ಳು
soak — ಕ್ರಿ ನಾನು (ನಾತುಹೋಗು), ನಾಂದು (ಮಳೆಗೆ ತಲೆ ನಾಂದಿ ಹೋಗಿದೆ; ಕಯ್ ನಾಂದು), ನನೆ (ನನೆದಕ್ಕಿ; ನನೆಹಾಕು; ನನೆಲಿುಸು), ಇಂಗು (ಮಳೆನೀರು ಇಂಗಿದ ನೆಲ; ಇಂಕೆ), ಉನಿ (ಚೆನ್ನಾಗಿ ಉನಿದ ಬಟ್ಟೆ ಯನ್ನು ಒಗೆದರೆ ಕೊಳೆ ಬೇಗ ಹೋಗು ತ್ತದೆ), ತೋಯು (ತೊಯ್ದ ಉಡುಪು)
soap — ನಾ ನೊರೆಹ, ನೊರತೆ
soap-nut — ನಾ ಕುಗ್ಗಟೆ, ನೊರೆಕಾಲಿು
soar — ಕ್ರಿ ಏರು (ಮೇಲೆ ಮೇಲೆ ಏರು)
sob — ಕ್ರಿಬಿಕ್ಕು (ಅವನು ಬಿಕ್ಕುತ್ತಿದ್ದ; ಬಿಕ್ಕಿಬಿಕ್ಕಿ ಅಳು)
sober — ಗು ಸೊಕ್ಕಿಲ್ಲದ, ಪಸಿಯಿಸದ, ತಾಳ್ಮೆಯ
sociable — ಗು ಅಚ್ಚಿನ, ಹೊಂದಿಕೊಳ್ಳುವ, ಕೂಡಿ ಇರಬಲ್ಲ
social — ಗು 1 ಕೂಟದ, ಕೂಟಗೆಯ 2 ಗುಂಪಿನಲ್ಲಿರುವ
society — ನಾ 1 ಕೂಟ, ಸೇರುವೆ 2 ಕೂಟಗೆ 3 ಗೆಣೆ (ಗೆಣೆತನ)
sock — ನಾ ಕಾಲುಚೀಲ, ಕಾಲ್ಮುಚ್ಚು
socket — ನಾ ಲೊಲಿ, ತೊಲಿ (ತೊಲಿಯಿಡು), ಕುಳಿ (ಕಣ್ಣಿನ ಕುಳಿ), ಗೂಡು
socket pipe — ನಾ ಗೂಡುಗೊಳವೆ
sod — ನಾ ಹುಲ್ಲುನೆಲ
sodden — ಗು ತೊಯ್ದ (ಮಳೆಗೆ ತೊಯ್ದ ಬಟ್ಟೆ), ನೆನೆದ (ನೆನೆದ ಹಪ್ಪಳ) ನಾ ಎರಗುಹೊರಸು
soft palate — ನಾ ಕಿಳ್ದಾಳಿಗೆ
soft — ಗು ನಯ (ನಯನುಡಿ), ನವುರು (ನವುರು ಮಾಡು; ನವುರಾದ ಬಟ್ಟೆ), ಮೆಲು (ಮೆಲ್ಲುಲಿ; ಮೆಲ್ಲೆಲರು; ಮೆಲ್ವಾಸು; ಮೆಲ್ನುಡಿ; ಮೆಲ್ನೋಟ; ಮೆಲ್ಪು), ಮೆತ್ತನೆ, ಮೆತ್ತಗೆ (ಚನ್ನಾಗಿ ಬೇಯಿಸಿ ಮೆತ್ತಗೆ ಮಾಡಿದಳು), ನಳಿ (ನಳಿದೋಳು)
soften — ಕ್ರಿ ಮೆತ್ತಗಾಗು, ನವುರಾಗು
softhearted — ಗು ಕನಿಕರವುಳ್ಳ
soggy — ಗು ತುಂಬ ನೆನೆದ, ತೊಯ್ದ
soil — ನಾ 1 ಮಣ್ಣು (ಮಣ್ಣುಮುಕ್ಕು; ಮಣ್ಣು ಬೀಳು; ಮಣ್ಣುಹೊರು; ಮಣ್ಣುಮಾಡು) 2 ನಾಡು, ನೆಲ
soil — ಕ್ರಿ 1 ಕೊಳೆ ಮಾಡು 2 ಹೆಸರು ಕೆಡಿಸು
sojourn — ನಾ ಬಿಡಾರ, ನಿಲ್ಮನೆ
solace — ನಾ ನೆಮ್ಮದಿ, ಹದುಳ, ತಣಿವು
solar — ಗು ನೇಸರಿನ (ನೇಸರಿನ ಮಿಂಚು; ನೇಸರಿನ ಅಡುಕಲ; ನೇಸರಿನ ಸೊಡರು)
solder — ಕ್ರಿ ಬೆಸೆ (ಬೆಳ್ಳಿ ಬೆಸೆ; ಬೆಸಿಗೆ - ಬೆಸಿಗೆ ಹಾಕು)
soldier — ನಾ ಪಡೆಯಿಲ,ಕಯ್ದುಕಾರ, ಮೊನೆ ಯಾಳು
sole — ನಾ 1 ಅಂಗಾಲು (ಆತ ಕಾಲು ತೊಳೆದರೂ ಅಂಗಾಲು ಒದ್ದೆಯಾಗಿಲ್ಲ), ಕಾಲ್ಮಡಿ 2 ಅಟ್ಟೆ (ಕೆರ್ಪಿನ ಅಟ್ಟೆ)
sole — ಗು ಒಬ್ಬನೇ, ಒಂದೇ
solecism — ನಾ ತಪ್ಪುಬರಹ
solemn — ಗು ನಗಿಸದ, ಕಡಗುವ, ನೇರ್ಪಿನ, ಕಟ್ಟಲೆತಪ್ಪದ
solemnize — ಕ್ರಿ ಕಟ್ಟಲೆಯಂತೆ ನಡೆಸು
solicit — ಕ್ರಿ 1 ಎರೆ (ಎರೆದವರಿಗೆ ನೀಡ ದವನು), ಕೋರು (ಕೋರಿಕೆ) 2 ಸೆಳೆ (ಆಕೆಯ ಕಣ್ಣುಗಳು ಯಾರನ್ನೂ ತನ್ನೆಡೆಗೆ ಸೆಳೆದುಕೊಳ್ಳಬಲ್ಲುದು)
solicitor — ನಾ 1 ಕೋರುಗ 2 ಕಟ್ಟಲೆಯರಿಗ
solicitous — ಗು 1 ಕಳಕಳಿಯ 2 ಹಂಬಲಿ ಸುವ, ಕಡಗುವ 3 ತಲ್ಲಣಿಸುವ, ಬೇವಸ ಗೊಂಡ
solicitude — ನಾ ಬೇವಸ, ತಲ್ಲಣ, ಕಳಕಳಿ
solid — ಗು 1 ಗಟ್ಟಿ, ಪೊಳ್ಳಲ್ಲದ, ದಟ್ಟವಾದ 2 ನಂಬಿಕೆಯ, ನಂಬಬಲ್ಲ ನಾ ಒಗ್ಗಟ್ಟು (ಅವರೊಳಗೆ ಒಗ್ಗಟ್ಟಿದೆ)
solidify — ಕ್ರಿ ಕಡುಗು (ಕಡುಗಿದ ನೀರು), ಗಟ್ಟಿಯಾಗು
soliloquy — ನಾ ತನ್ನೊಂದಿಗೆ ಆಡು, ಒಂಟಿ ಮಾತು
solitary — ಗು 1 ಒಂಟಿ (ಒಂಟಿ ತೋಳ; ಒಂಟಿ ಎತ್ತು), ಒಬ್ಬಂಟಿ 2 ಗೆಂಟು
solitude — ನಾ ಬಿಡಿತನ, ಒಂಟಿತನ, ಒಂಟಿ ಬಾಳ್ವೆ, ಪಚ್ಚುಗೆ, ಹಚ್ಚು
solo — ಗು ಒಬ್ಬನ (ಒಬ್ಬನ ಕುಣಿತ, ಒಬ್ಬನ ಆಟ, ಒಬ್ಬನ ಹಾಡುಗಾರಿಕೆ)
solstice — ನಾ ನೇಸರ ತಿರುವು, ತಿರುವು
soluble — ಗು 1 ಕರಗಬಲ್ಲ 2 ಬಿಡಿಸಬಲ್ಲ 3 ಬಗೆಹರಿಸಬಲ್ಲ
solve — ಕ್ರಿ ಬಗೆಹರಿಸು, ಬಿಡಿಸು (ನಿಮ್ಮ ತೊಡಕುಗಳನ್ನೆಲ್ಲ ಬಿಡಿಸಿದ್ದೇವೆ)
solvent — ನಾ 1 ಕರಗಿಸಬಲ್ಲ 2 ಕಡತೀರಿಸ ಬಲ್ಲ
somber — ಗು 1 ಮುದುಡು, ಮಂಕು, ಮಬ್ಬು 2 ತಲ್ಲಣಗೊಂಡ, ಕೊರಗುವ 3 ಕಡಗುವ, ಕಟ್ಟಲೆತಪ್ಪದ
some — ಗು ಏನಿಕೆ (ಏನಿಕೆ ಕೆಲಸಗಳು ಇನ್ನೂ ಉಳಿದಿವೆ), ಕೆಲ (ಕೆಲ ಹೊತ್ತು; ಕೆಲವರು; ಕೆಲವು)
somnambulism — ನಾ ಒರಕುನಡಿಗೆ
somnolent — ಗು ಒರಕುತೂಗುವ, ತೂಕಡಿ ಸುವ
son — ನಾ ಮಗ,ಅಣುಗ
song — ನಾ ಹಾಡು (ಒಂದು ಹಾಡು ಹಾಡಿ), ಪಾಟ (ಆಟ-ಪಾಟ-ಕೂಟ; ಪಾಟ ಕಲಿ)
songster — ನಾ ಹಾಡುಗಾರ
songstress — ನಾ ಹಾಡುಗಾರ್ತಿ
sonic — ಗು ಉಲಿವಿನ, ಸಪ್ಪಳದ
sonorous — ಗು ಮಾರುಲಿವ, ಹೊಳಲಿಡುವ
soon — ಗು ಕೂಡಲೇ, ಒಡನೆಯೇ
soot — ನಾ ಮಸಿ (ಮಸಿಹಿಡಿದ ಕುಡಿಕೆ), ಮಕ್ಕು (ಹಣತೆಯ ಮಕ್ಕು; ಮಕ್ಕುಹಿಡಿ), ಇಲ್ಲಣ (ಹಂಚುಗಳಿಗೆ ತುಂಬಾ ಇಲ್ಲಣ ಹಿಡಿದಿದೆ), ಇಲ್ಲಾರ
sooth — ನಾ ನನ್ನಿ
soothe — ಕ್ರಿ ನೆಮ್ಮದಿಗೊಳಿಸು, ಬೇನೆ ತಗ್ಗಿಸು
soothsayer — ನಾ ಕಣಿಹೇಳುವವನು ಗು ನಡತೆಯರಿತ, ನುರಿತ, ನಯನುಡಿಯರಿತ, ಬದುಕಬಲ್ಲ
soporific — ಗು ಒರಕು ಬರಿಸುವ (ಒರಕು ಬರಿಸುವ ಮದ್ದು), ಒರಗಿಸುವ
soppy — ಗು ತೀರಾ ಒದ್ದೆ
soprano — ನಾ ಕೀರಲು ಹಾಡು
sorcerer — ನಾ ಮಾಟಗಾರ (ಮಾಟಗಾರಿಕೆ), ಮಾಟಕ
sorcery — ನಾ ಬೇಳುವೆ,ಮಾಟ (ಮಾಟ ಮಾಡು)
sordid — ಗು 1 ಹೊಲಸು, ಕೊಳಕು 2 ಕೆಟ್ಟೆಳಸಿನ, ತನ್ಮೆಯ
sore — ನಾ ಹುಣ್ಣು, ಕುರು (ಬೆನ್ನಿನಲ್ಲಿ ಕುರು ಎದ್ದಿದೆ)
sorority — ನಾ ಹೆಂಗಸರ ಕೂಟ, ಹುಡುಗಿಯರ ಕೂಟ
sorrow — ನಾ ಮರುಕ (ಮರುಕ ತುಂಬಿದ ಮಾತು), ಅಳಲು (ಅಳಲುರಿ; ಕಟ್ಟಳಲು; ಅಳಲುಬಳಲು), ಅಚ್ಚುಗ (ಅಚ್ಚುಗದ ಮಾತು; ಅಚ್ಚುಗಪಡು), ಹೊದಕುಳಿ (ಹೊದಕುಳಿಗೊಳ್ಳು), ಕೊರಗಣೆ (ಆಕೆಯ ಕೊರಗಣೆಯನ್ನು ನೋಡಲಾಗುವುದಿಲ್ಲ), ಕೊರೆ, ಮಿಡುಕು
sorrow — ಕ್ರಿ ಕೊರಗು (ಕುತ್ತದಿಂದ ಕೊರಗು)
sorry — ಗು 1 ಮರುಕದ, ಅಳಲಿನ, ಬೇಸರದ 2 ಕೀಳ್ಮಟ್ಟದ, ಬಡ, ತರುವಲಿ
sort — ನಾ ಬಗೆ (ಬಗೆಬಗೆಯಾದ ತಿಂಡಿಗಳು), ತೆರ (ಈ ತೆರನಾದ ಬಾಳು ಯಾರಿಗೆ ಬೇಕು?)
sort — ಕ್ರಿ ಬೇರೆ ಮಾಡು, ಬೇರ್ಪಡಿಸು (ಅಂಚೆ ಯಾಳು ಓಲೆಗಳನ್ನೆಲ್ಲ ಬೇರ್ಪಡಿಸಿ ಇಟ್ಟು ಕೊಂಡಿದ್ದ)
sortie — ನಾ ಹೊರದಾಳಿ
sot — ನಾ ಕುಡುಕ
sotto voce — ಗು ಮೆತ್ತಗೆ (ಮೆತ್ತಗೆ ಹೇಳು)
souffle — ನಾ ಪೊಂಗಪ್ಪ
soul — ನಾ ಉಸಿರು
sound — ನಾ ಸಪ್ಪಳ (ಏನೋ ಸಪ್ಪಳ ಕೇಳಿಸುತ್ತಿದೆ), ಉಲಿವು (ಹಕ್ಕಿಗಳ ಉಲಿವು), ಉಲುಹು (ಅವನು ಉಲಿದ ಉಲುಹು; ಕಟ್ಟುಲುಹು), ಒಲೆ (ಒಲೆಗೆಡು), ಕಲೆ, ಸೆಲೆ
sound — ಕ್ರಿ ಮೊಳಗು, ಎಸೆ (ಎಸೆತ), ಉಲಿ (ಕೋಗಿಲೆ ಉಲಿದುದು; ನಾಲಿಗೆ ಉಲಿ ಯಿತು), ಕರೆ (ಉಸುರ್ಗರೆ; ಬೋರ್ಗರೆ - ಬೋರ್ಗರೆವ ಕಡಲು), ಕಿಳಿರು (ಕಿಳಿರುವ ಕುದುರೆಗಳು), ಇಕ್ಕರಿಸು
sound — ಗು 1 ಮಯ್ಯೊಳಿತುಳ್ಳ 2 ಕೆಡದ 3 ಮೆಚ್ಚತಕ್ಕ, ಸರಿಯಾದ ನಾ ಸಾರು,ಎಸರು
sour — ಕ್ರಿ ಹುಳಿ (ಹುಳಿತ ಹಣ್ಣು; ಹುಳಿ ತೇಗು; ಹುಳಿಮೊಸರು)
sour gruel — ನಾ ಕಳಿ
source — ನಾ ಹುಟ್ಟು, ತೊಡಗಿಕೆ, ಬುಡ, ನೆಲೆ
south — ಗು ತೆಂ- (ತೆಂಗಾಳಿ; ತೆಂಪಡುವಲು; ತೆಂಬಡಗಲು; ತೆಮ್ಮೂಡಲು), ತೆಂಕ (ತೆಂಕ ಕಡೆ; ತೆಂಕನಾಡು); ತೆಂಕು, ತೆಂಬು (ತೆಂ ಬೆಲರು), ತೆಂಕಲು (ತೆಂಗಿನ ಮರಗಳು ತೆಂಕ ಲಾಗಿ ಹೆಚ್ಚಿವೆ), ತೆಂಕಣ (ತೆಂಕಣ ಕಡಲು)
south-east — ನಾ ತೆಂಕು-ಮೂಡು, ತೆಮ್ಮೂ ಡಲು
souvenir — ನಾ ನೆನೆಹ (ಆತನ ಬೀಳ್ಕೊಡುಗೆಗೆ ನೆನೆಹವೊಂದನ್ನು ಹೊರತಂದಿದ್ದಾರೆ)
sovereign — ನಾ ಆಣ್ಮ, ಆಳ್ದ
sow — ನಾ ಹೆಣ್ಣು ಹಂದಿ
sow — ಕ್ರಿ ಬಿತ್ತು (ಬಿತ್ತಿದ ಬೀಜ), ಹರಗು (ಇವತ್ತು ಗದ್ದೆ ಹರಗಬೇಕು)
sowing — ನಾ ಬೆದೆ (ಬೆದೆಗಾಲ; ಬೆದೆಗದ್ದೆ; ಬೆದೆಯಾವು), ಬಿತ್ತನೆ (ಬಿತ್ತನೆಯ ಕೆಲಸ ಇನ್ನೂ ಮುಗಿದಿಲ್ಲ), ಬಿತ್ತೋಣ
space — ನಾ ಇಂಬು (ಇಂಬಾಗು; ಇಂಬು ಕೊಡು), ತೆರವು (ಉರುವಲು ತುಂಬಲು ಇಲ್ಲಿ ತೆರವು ಇದೆ), ಹರಹು (ಹರಹುಳ್ಳ ಕೋಣೆ)
spade — ನಾ ಗುದ್ದಲಿ
span (thumb to forefinger) — ನಾ ಚೋಟು (ಚೋಟೆತ್ತರ; ಚೋಟಗಲ, ಚೋಟುದ್ದ ಹುಡುಗ)
span (thumb to little finger) — ನಾಗೇಣು (ಗೇಣಗಲ)
spanner — ನಾ ಮೊಳೆತಿರುಪು (ಏಳರ ಮೊಳೆತಿರುಪು ಬೇಕಾಗಿತ್ತು)
spar — ನಾ ತೊಲೆ
spar — ಕ್ರಿ 1 ಎಚ್ಚರಿಕೆಯಿಂದ ಗುದ್ದಾಡು 2 ಬಕ್ಕುಡಿಗೆಯ್ಯು, ಜಗಳಾಡು
spare — ಕ್ರಿ 1 ಬಳಸದಿರು, ಕಡಿಮೆ ಬಳಸು 2 ಬಿಟ್ಟುಬಿಡು
spare — ಗು 1 ಬಳಕೆಯಲ್ಲಿಲ್ಲದ, ಹೆಚ್ಚಿನ 2 ಬಿಡುವು (ಬಿಡುವಿದ್ದರೆ ನಮ್ಮೊಂದಿಗೆ ಬನ್ನಿ) 3 ಕಡಿಮೆ (ವೆಚ್ಚ ಕಡಿಮೆ ಮಾಡಬೇಕಾ ಗಿಲ್ಲ) 4 ತೆಳು, ಬಡಕಲು, ಸಪುರ
spark — ನಾ ಕಿಡಿ (ಕಿಡಿ ಚಿಕ್ಕದಾದರೂ ಕಾಡನ್ನೇ ಸುಟ್ಟೀತು; ಕಿಡಿಗೆದರು; ಕಿಡಿನುಡಿ)
spark plug — ನಾ ಕಿಡಿಬೆಣೆ, ಕಿಡಿತಿರುಪು
sparkle — ಕ್ರಿ 1 ಮಿನುಗು (ಮಿನುಗುವ ಬಟ್ಟಲುಗಳು) 2 ಕಿಡಿಹಾರಿಸು 3 ನೊರೆ ಯೆಬ್ಬಿಸು ನಾ ಗುಬ್ಬಿ (ಮನೆಯೊಳಗೆ ಗುಬ್ಬಿ ಗೂಡುಕಟ್ಟಿದೆ; ಗುಬ್ಬಚ್ಚಿ, ಗುಬ್ಬಿಹಕ್ಕಿ)
sparse — ಗು ಒತ್ತಾಗಿಲ್ಲದ, ಚದರಿದ
spasm (to suffer) — ಕ್ರಿ ಸೇದು (ನಾಲಿಗೆ ಸೇದುಹೋಗು), ಸೆಳೆ (ಸೆಳೆತ; ಸೆಳವು), ಚಳುಕು ಬರು
spasmodic — ಗು 1 ಸೇದುವ, ಸೆಳೆಯುವ 2 ಸೆಳೆತದಂತಹ, ಒಮ್ಮೆಗೇ ಬರುವ
spate — ನಾ 1 ದೊಡ್ಡಮಳೆ 2 ಹೊರ ಹೊಮ್ಮಿಕೆ (ಮಾತಿನ ಹೊರಹೊಮ್ಮಿಕೆ)
spathe — ನಾ ಹಾಳೆ (ಅಡಿಕೆಹಾಳೆ, ಹೊಂಬಾಳೆ - ಹಾಳೆಯ ಕೆಳಗೆ ಹೊಂಬಾಳೆಯಿದೆ)
spatter — ಕ್ರಿ ಸಿಡಿ (ಬಾಯೊಳಗಿಂದ ಸಿಡಿದ ಹನಿ; ಮೆಟ್ಟಿನಿಂದ ಸಿಡಿದ ಕೆಸರು), ಹಾರು (ಕಿಡಿ ಹಾರು)
spawn — ನಾ ಗೊಂಚಲುಮೊಟ್ಟೆ (ಕಪ್ಪೆಗಳ ಗೊಂಚಲುಮೊಟ್ಟೆ)
speak — ಕ್ರಿ ನುಡಿ (ಕೊಟ್ಟೆನೆಂದು ನುಡಿದವನು; ನುಡಿದಂತೆ ನಡೆ), ಆಡು (ಮಾತನಾಡು), ಉಲಿ (ನೀನು ನನ್ನ ಹತ್ತಿರ ಉಲಿಯಬೇಡ), ಉಸಿರು (ಅರಿದು ಉಸಿರಬೇಕು), ಉಸಿರೆತ್ತು (ಅವನು ಉಸಿರೆತ್ತಲಿಲ್ಲ), ಪಲುಕು (ಒಳ್ಳೇ ಕೆಲಸಕ್ಕೆ ಹೊರಟಿರುವಾಗ ಏನಾದರೂ ಪಲುಕಬೇಡ), ಸೊಲ್ಲು (ಆತನು ಸೊಲ್ಲಿದ ಸೊಲ್ಲು), ಒರೆ (ಆಕೆ ಒರೆದ ಮೆಲ್ನುಡಿ), ಹೇಳು (ಏನೋ ಹೇಳಿದ)
speaker — ನಾ ಮಾತುಗಾರ, ನುಡಿಗಾರ (ನುಡಿ ಗಾರಿಕೆ), ಆಡುಗ
speaking (way of) — ನಾ ನುಡಿವಳಿ (ನುಡಿ ವಳಿಕೆ)
spear — ನಾ ಈಟಿ, ಬಿಟ್ಟೇರು
special — ಗು ಹೆಚ್ಚಿನ, ಬೇರಾದ, ಹೊರತಾದ
specialize — ಕ್ರಿ ಉರೆಯರಿವು ಪಡೆ, ಒಂದನ್ನೇ ಕಲಿ
specially — ಗು ನಾಡೆ (ನಾಡೆ ಮೆಚ್ಚು)
specie — ನಾ ಕಾಸು (ಬೆಟ್ಟಿದ ಕಾಸು)
species — ನಾ ಬಗೆ, ಪಂಗಡ
specific — ಗು 1 ತಕ್ಕ, ಸರಿಯಾದ 2 ಒಂದು ಬಗೆಯ
specify — ಕ್ರಿ ಆರಿಸು, ಹೆಸರಿಸು, ಗೊತ್ತು ಮಾಡು, ಸರಿಯಾಗಿ ತಿಳಿಸು
specimen — ನಾ ಎತ್ತುಗೆ
specious — ಗು ತೋರಿಕೆಯ, ಹೊರ ಅಂದದ
speck — ನಾ ಕಲೆ, ಚುಕ್ಕೆ, ಚೂರು
spectacle — ನಾ 1 ನೋಡತಕ್ಕುದು 2 ಪೆರ್ಕಾಣ್ಕೆ ನಾ ಕನ್ನಡಕ (ಅವನ ಕನ್ನಡಕ ಒಡೆದುಹೋಗಿದೆ)
spectator — ನಾ ನೋಟಕ (ನೋಟಕರನ್ನು ಮೆಚ್ಚಿಸಲು ಏನು ಮಾಡಲಿ?), ನೋಟ ಗಾರ; ನೋಡುಗ
specter — ನಾ ಗಾಳಿಗ, ಹೇದೆ (ಅವನಿಗೆ ಎಲ್ಲ ಕಡೆಯೂ ಹೇದೆಗಳು ಕಾಣಿಸುತ್ತಿವೆ)
spectrum — ನಾ ಹೊಗರಿಂಡೆ, ಹೊಗರಸಾಲು
speculate — ಕ್ರಿ 1 ಕೇಣ ನಡೆಸು, ಓರು 2 ತೊಂದರೆಗೆ ಕಯ್ಹಾಕು, ಕುತ್ತಕ್ಕೆಡೆಕೊಡು
speculation — ನಾ ಹೂಡಿಕೆ, ತೊಡಗಿಕೆ
speech — ನಾ ಸೊಲ್ಲು (ಹುಸಿಯಾದ ಸೊಲ್ಲು; ಸೊಲ್ಲಡಗು; ಸೊಲ್ಲಣಿಗೆ; ಸೊಲ್ಲಿಡು), ನುಡಿ (ನುಡಿಗಟ್ಟು; ನುಡಿತ; ನುಡಿಗುಂದು; ನುಡಿಗೆಡು), ಮಾತು (ಮಾತುಬಲ್ಲವರಿಗೆ ಸೋಲಿಲ್ಲ)
speed — ನಾ ಉರುಬು (ಗಾಳಿಯ ಉರುಬು), ಒತ್ತರ (ಒತ್ತರದಿಂದ ಬೀಸುವ ಗಾಳಿ; ಪಡೆಯ ಒತ್ತರ)
spell — ಕ್ರಿ ಪದಬರಿಗೆ ಹೇಳು
spellbound — ಗು ಮಯ್ಮರೆತ (ಮಯ್ಮರೆತ ಹುಡುಗ)
spelling — ಪದಬರಿಗೆ
spend — ಕ್ರಿ ಬಳಸು (ಕೊಟ್ಟ ಹಣವನ್ನೆಲ್ಲ ಬಳಸಿ ಮುಗಿಸಿದ್ದಾನೆ), ಕಳೆ (ಹೊತ್ತುಕಳೆ; ಕಳೆದು ಕೊಳ್ಳು), ಸವೆ (ಹೊತ್ತು ಸವೆ), ಎಗರು (ಹಣವೆಲ್ಲ ಎಗರಿಹೋಯಿತು)
spendthrift — ಗು ದುಂದು (ದುಂದುಗಾರ; ದುಂದುಗಾರಿಕೆ; ದುಂದು ಅವುತಣ), ಸೂರೆ ಕಾರ
sphere — ನಾ 1 ತೆರಳೆ, ಉಂಡೆ, ಚೆಂಡು 2 ಸೇರುವೆಯೆಡೆ (ಆತನ ಸೇರುವೆಯೆಡೆ ದೊಡ್ಡದು)
spider — ನಾ ಸಾಲಿಗ (ಮಾಡಿನಿಂದ ಸಾಲಿಗನ ಬಲೆ ನೇತಾಡುತ್ತಿದೆ), ಜೇಡ (ಜೇಡರ ಹುಳ), ಸೆಲದಿ (ಸೆಲದಿನೂಲು; ಸೆಲದಿ ಹುಳು)
spike — ನಾ ಕದಿರು (ಬತ್ತದ ಕದಿರು),ತೆನೆ (ತೆನೆಕಟ್ಟು; ತೆನೆಬಿಡು; ತೆನೆತುಂಬು; ತೆನೆಹಾಲು)
spill — ಕ್ರಿ ಉಗು (ಉಗುವ ನೆತ್ತರು), ಒಗು (ಹಾಲು ಒಗುತ್ತಿದೆ; ಒಲೆಗೆ ಒಕ್ಕ ಹಾಲು ಸುಟ್ಟು ಹೋಯಿತು), ತುಳುಕು (ತುಳುಕುವ ಕೊಡ; ನೀರು ತುಂಬಿ ತುಳುಕಿತು), ಚೆಲ್ಲು (ಚೆಲ್ಲಿದ ಹಾಲು)
spin — ಕ್ರಿ ನೂಲು (ನೂತ ನೂಲಿನ ಎಳೆ, ನೂಲುವ ಹುಡುಗಿ; ನೂಲಿಗೆ - ಆಕೆಯ ನೂಲಿಗೆಯಿನ್ನೂ ಮುಗಿದಿಲ್ಲ), ತಿರುಗು (ಗಿರ್ರನೆ ತಿರುಗು)
spinach — ನಾ ಬಸಳೆ,ಬಚ್ಚಲೆ
spinal — ನಾ ಬೆನ್ನುಮೂಳೆಯ
spindle — ನಾ ಕದಿರು (ಕದಿರಿನಿಂದ ನೂತ ನೂಲು) ನಾ ಹುರಿ (ಬೆನ್ನಹುರಿ), ಬೆನ್ನೆಲುಬು, ಬೆನ್ನುಮೂಳೆ
spinster — ನಾ ಮದುವೆಯಾಗದ ಹೆಂಗಸು
spiral — ಗು ಸುರುಳಿ (ಸುರುಳಿಸುತ್ತು)
spirit — ನಾ 1 ಹುರುಳು (ಹುರುಳುಗುಂದು; ಹುರುಳುಗೆಡು) 2 ಗಾಳಿ (ಗಾಳಿಬಡಿ; ಗಾಳಿ ಸೋಕು; ಆಕೆಗೆ ಗಾಳಿಬಿಡಿಸಲು ಮಾಟಗಾರ ನನ್ನು ಕರೆಸಿದ್ದಾರೆ; ಗಾಳಿಗ), ನೆಲ ಮುಕ್ಕು 3 ಉಸಿರು 4 ಹೆಂಡ
spirited — ಗು ಚುರುಕಾದ, ಹುರುಪಿನ
spiritual — ನಾ ಉಸಿರಿನ
spirituous — ಗು ಹೆಂಡವಿರುವ, ಹೆಂಡ ಸೇರಿಸಿದ
spit — ಕ್ರಿ ಉಗಿ (ಆಗಾಗ ಹಾಗೆ ಉಗಿಯುತ್ತಿರ ಬಾರದು), ಉಗುಳು (ನೀರನ್ನು ಮುಕ್ಕುಳಿಸಿ ಉಗುಳುವುದು), ಉಮುಳು (ಬಾಯಿಗೆ ಕಸ ಬಂತೆಂದು ಉಮುಳಿದ), ದೂಕರಿಸು, ತೂಪು (ತೂಪಿರಿ), ತುಪ್ಪು (ಮಗು ತಿನ್ನಿಸಿದ್ದನ್ನೆಲ್ಲ ಒಡನೆಯೇ ತುಪ್ಪುತ್ತಿದೆ)
spite — ನಾ ಹಗೆತನ; ಹೊಟ್ಟೆಕಿಚ್ಚು (ಇಶ್ಟೆಲ್ಲ ವನ್ನೂ ಹೊಟ್ಟೆಕಿಚ್ಚಿನಲ್ಲಿ ಮಾಡಿರಬೇಕು)
spite — ಕ್ರಿ ಕುತ್ತು (ಈಟಿಯಲ್ಲಿ ಕುತ್ತು)
spitoon — ನಾ ಕಾಳಂಚಿ (ತುಪ್ಪಲು ಕಾಳಂಚಿ ಯಿದೆ)
spittle — ನಾ ಉಗುಳು, ಎಂಜಲು
splash — ಕ್ರಿ ಸಿಡಿಸು (ನೀರು ಸಿಡಿಸು), ಕೆದರು (ಆನೆಯ ಸೊಂಡಿಲಿನಿಂದ ಕೆದರುವ ಹನಿ)
spleen — ನಾ ತೊರಳೆ
splendid — ಗು ಸೊಗಸಾದ, ಎಸಕದ
splendour — ನಾ ಎಸಕ (ಮೆರವಣಿಗೆಯ ಎಸಕವನ್ನು ನೋಡುತ್ತಿದ್ದೆ; ಎಸಕಾಗು)
splice — ಕ್ರಿ ಒಟ್ಟುಗೂಡಿಸು, ಗಂಟುಹಾಕು
splint — ನಾ ದಬ್ಬೆ, ಪಟ್ಟಿ
splinter — ನಾ ಸಿವರು (ಸಿವರೇಳು), ಸಿಗುರು (ಸಿಗುರು ಉಗುರಿನ ಎಡೆಗೆ ಹೊಕ್ಕಿದೆ), ಕೆಲ್ಲೆ (ಕೆಲ್ಲೆಯೇಳು),ಕಕ್ಕು (ಅಡಿಕೆ ಮರದ ದಬ್ಬೆಯ ಕಕ್ಕು)
split — ನಾ ದಬ್ಬೆ (ಅಡಿಕೆ ಮರದ ದಬ್ಬೆ), ಬಾಳು (ಬಾಳುಕ - ಬಾಳೆಕಾಯಿಯ ಬಾಳುಕ), ಸಿಗುಳು (ಬಾಳೆ ಎಲೆಯ ಸಿಗುಳು), ಹೋಳು (ಅಡಿಕೆಯ ಹೋಳು), ಹಗುರು (ಬಿದಿರಿನ ಹಗುರು), ಹಂಜರ (ಬಿದಿರಿನ ಹಂಜರ; ಹಂಜರದಿಂದ ಮಾಡಿದ ಬುಟ್ಟಿ) ಕ್ರಿ ಸೀಳು (ಎರಡಾಗಿ ಸೀಳಿದ ಕೋಲು; ಸೀಳುಗಾಯ), ಸಿಗಿ (ಬಿದುರು ಸಿಗಿದು ದಬ್ಬೆ ಮಾಡುತ್ತಿದ್ದ), ಸಿಗುಳು (ಆಳು ಕಟ್ಟಿಗೆ ಸಿಗುಳುತ್ತಿದ್ದಾನೆ), ಕೆಲ್ಲಯಿಸು (ಸುತ್ತಿಗೆಯ ಹೊಡೆತಕ್ಕೆ ಕೊರಡು ಕೆಲ್ಲಯಿಸಿತು)
split pulse — ನಾ ಬೇಳೆ (ಹಸರಿನ ಬೇಳೆ), ಪರುಪು, ಪಪ್ಪು (ಕಡಲೆಯ ಪಪ್ಪು)
spoil — ಕ್ರಿ ಕೆಡು (ಕೆಟ್ಟುಹೋದ ಕೆಲಸ; ಕೆಟ್ಟ ಅಡಿಗೆ), ಹಳಸು (ಹಳಸಿದ ಹಿಟ್ಟನ್ನು ಎಸೆದುಬಿಡಿ)
spoke — ನಾ ಅರೆ (ಗಾಲಿಯ ಅರೆ), ಮೆಟ್ಟಲು (ಏಣಿಯ ಮೆಟ್ಟಲು)
spokesman — ನಾ ಮಾತುಗ
spoliation — ನಾ ಕಳ್ಳತನ, ಕೊಳ್ಳೆ, ಸುಲಿಗೆ
sponge — ನಾ 1 ಹೀರುಗ 2 ಹೊರಕುಳಿ
sponsor — ಕ್ರಿ ಹೊಣೆಗಾರ, ನಡೆಸುಗ, ಬೆಂಬ ಲಿಗ, ವೆಚ್ಚತೆರುಗ
spontaneous — ಗು ತಾನಾಗಿಯೇ ನಡೆ ಯುವ, ಉರವಣೆಯ, ಎತ್ತುಗಡೆಯಿಲ್ಲದ, ಒಳಒತ್ತರದಿಂದ ನಡೆವ
spook — ನಾ ಗಾಳಿಗ, ಹೇದೆ
spool — ನಾ ಕಂಡಿಕೆ (ನೂಲಕಂಡಿಕೆ)
spoon — ನಾ ಮಿಳ್ಳಿ (ಎರಡು ಮಿಳ್ಳಿ ತುಪ್ಪ ಬಡಿಸಿದಳು),ಮಿಣ್ಣಿ
spoor — ನಾ ಹೆಜ್ಜೆಗುರುತು
sporadic — ಗು ಚದರಿದ, ಒಮ್ಮೊಮ್ಮೆ ನಡೆವ
spore — ನಾ ಬಿತ್ತು
sport — ನಾ 1 ಆಟವಾಡು, ಪೋಟಿ ನಡೆಸು 2 ಚಲ್ಲಾಟವಾಡು 3 ಉಡು, ತೊಡು, ಮೆರೆಸು, ತೋರಿಸು
sport ( — ನಾ ಆಟ ಚಲ್ಲಾಟ; ಆಟಗಾರ)
sporting — ಗು ಚಕ್ಕಂದ (ಚಕ್ಕಂದದವನು; ಚಕ್ಕಂದವಾಡು; ಚಕ್ಕಂದ ಹೊಡೆ)
sportive — ಗು ಚಲ್ಲಾಟದ (ಆತನದು ಚಲ್ಲಾಟದ ಪರಿಜೆ), ನಗಿಸುವ
sportsman — ನಾ 1 ಆಟಗಾರ 2 ಮೋಸ ಮಾಡದವನು
spot — ನಾ 1 ಕಲೆ, ಗುರುತು 2 ಎಡೆ
spotless — ಗು ಕಲೆಯಿಲ್ಲದ, ಮಡಿಯಾದ
spotlight — ನಾ ನೆಲಬೆಳಕು, ಎಡೆಬೆಳಕು
spotted — ಗು 1 ಚುಕ್ಕೆಗಳಿರುವ 2 ಕಲೆಗ ಳಿರುವ, ಕೊಳಕಾದ ನಾ ಗಂಡ, ಹೆಂಡತಿ
spout — ನಾ 1 ಮೂಳಿ (ಮೂಳಿ ಮುರಿದ ಗಿಂಡಿ) 2 ಚಿಮ್ಮುಗೆ
spout — ಕ್ರಿ 1 ಚಿಮ್ಮು, ಹೊರಹರಿ 2 ಬರಬರ ಮಾತನಾಡು
sprain — ನಾ ಇಲುಕು (ಕಾಲಿನ ಇಲುಕು)
sprain — ಕ್ರಿ ಉಳುಕು (ಹೆಗ್ಗಡೆಯ ಎಡಗಾಲು ಉಳುಕಿಹೋಗಿತ್ತು), ಕುಸುಕು
sprawl — ಕ್ರಿ 1 ಕಯ್ಕಾಲು ಚಾಚು (ಕಯ್ಕಾಲು ಚಾಚಿ ಮಲಗು) 2 ಓರೆಕೋರೆಯಾಗಿ ಬರೆ
spray — ನಾ ತುಂತುರು (ತುಂತುರು ಹನಿ), ಸೀರ್ಪನಿ (ಮಳೆ ಬರುವಾಗ ಬಾಗಿಲು ತೆರೆ ದರೆ ಸೀರ್ಪನಿ ಒಳಗೆ ಬರುತ್ತದೆ),ಜೂಪರು (ಜೂಪರು ಮಳೆ)
spray — ಕ್ರಿ ಚಿಮ್ಮಿಸು, ಪೀಚು
spray — ಗು ಚುರುಕಾದ, ಗೆಲುವಿನ
sprayer — ನಾ ಚಿಮ್ಮಲು (ಗಿಡಕ್ಕೆ ಚಿಮ್ಮಲಿನಲ್ಲಿ ಮದ್ದು ಚಿಮುಕಿಸುತ್ತಿದ್ದಾನೆ), ಚಿಮ್ಮು ಗೋವಿ, ಪೀಚುಕೊಳವಿ
spread — ಕ್ರಿ (ಆ) ಪರೆ (ಪರೆಯುತ್ತಿರುವ ತಂಪುಗಾಳಿ), ಹಬ್ಬು (ಮರಕ್ಕೆ ಹಬ್ಬಿದ ಬಳ್ಳಿ), ಹರಡು (ಸುತ್ತಲೂ ಹರಡಿದ ಎಣ್ಣೆ; ಹರಡಿಕೆ), ಕೆರಳು (ಹುಣ್ಣು ಕೆರಳಿದೆ), ಪೀರು (ಎಲ್ಲಾ ಕಡೆಗೂ ಪೀರಿದ ಬಿತ್ತು ಗಳು), ಮಡಲು (ಮಡಲಿದ ಬಳ್ಳಿಗಳು; ಮಡಲಿಡು), ಅವ್ವಳಿಸು, ದಳ್ಳಿಸು (ದಳ್ಳಿಸಿದ ದಳ್ಳುರಿ), ತೀವು, ನಿಮಿರು (ನಿಮಿರಿದ ಕಾಡಿನ ಕಿಚ್ಚು) (ಮಾ) ಹರವು (ಎಲ್ಲಾ ಕಡೆಯಲ್ಲೂ ಹರವಿ ಕುಳಿತಿದ್ದಾನೆ), ಹಾಸು (ಹಾಸಿಗೆ ಹಾಸು, ಚಾಪೆ ಹಾಸು), ಬಗಟು (ಕಾಲುಗಳನ್ನು ಬಗಟು)
spreading — ನಾ ಬಾಳುವೆ (ಬಾಳುವೆಯಾಗು - ಕಿಚ್ಚು ಕಾನನದಲ್ಲಿ ಬಾಳುವೆಯಾಗು ತ್ತಿದೆ), ಅಳುರ್ಕೆ, ನಿಮಿರ್ಕೆ
spreading — ಗು ದಳ್ (ದಳ್ಳುರಿ; ದಳ್ಗದಿರು)
spree — ನಾ 1 ಚಲ್ಲಾಟದ ಕೂಟ 2 ಹತೋಟಿ ಯಿಲ್ಲದ ಕೆಲಸ
sprig — ನಾ ಕಿರುಕೊಂಬೆ, ಕಿರುಗೆಲ್ಲು
sprightly — ಗು ಚುರುಕಾದ, ನಗುನಗುವ
spring — ನಾ 1 ಊಟೆ (ತುಂಬಾ ಆಳಕ್ಕೆ ಕೊರೆ ದರೂ ಬಾವಿಯಲ್ಲಿ ಊಟೆ ಸಿಗಲಿಲ್ಲ), ಸೆಲೆ (ಸೆಲೆಯೊಡೆ; ಈ ಬಾವಿಗೆ ಹೊಳೆಯ ಸೆಲೆಯಿದೆ), ಬುಗ್ಗೆ (ನೀರ ಬುಗ್ಗೆ), ಒರತೆ (ನೀರಿನ ಒರತೆ ನಿಂತುಹೋಗಿದೆ), ಜಲುಗು (ಗುಡ್ಡದ ಕೆಳಗೆ ನೀರಿನ ಜಲುಗಿದೆ), ಚಿಲುಮೆ (ನೀರಿನ ಚಿಲುಮೆ) 2 ಸುಗ್ಗಿ (ಸುಗ್ಗಿಯ ಗದ್ದೆ; ಸುಗ್ಗಿಯ ಕುಣಿತ)
spring up — ಕ್ರಿ ಚಿಮ್ಮು (ಹೊರಕ್ಕೆ ಚಿಮ್ಮಿದ ಗುಂಡು), ಪೊದಳು (ಪೊದಳ್ಕೆ), ಹೊಮ್ಮು (ಹೊರಹೊಮ್ಮು), ನೆಗೆ (ಮೇಲಕ್ಕೆ ನೆಗೆದ ನೀರು) ಕ್ರಿ ಚಿಮುಕು (ಚಿಮುಕಿಸು - ನೀರು ಚಿಮುಕಿಸಿ ಬಾಳೆ ಎಲೆ ತೊಳೆದರು), ತಳಿ (ಮೇಲಕ್ಕೆಲ್ಲ ನೀರು ತಳಿಯಬೇಡ), ತಕ್ಕಳಿಸು (ಬೀಗರ ಮೇಲೆ ಪನ್ನೀರು ತಕ್ಕಳಿಸಿದರು), ಅಕ್ಕಳಿಸು
sprint — ಕ್ರಿ ಕಿತ್ತೋಟ ಓಡು
sprout — ನಾ ಸುಳಿ (ಸುಳಿಬಾಳೆ; ಸುಳಿಯೆಲೆ), ಕುಡಿಲು (ಚಿಗುರೆಲೆಗಳಿಂದ ಕೂಡಿರುವ ಕುಡಿಲು), ಮೊಳಕೆ (ಮೊಳಕೆ ಕಟ್ಟಿದ ಕಾಳು), ಅಗೆ (ಅಗೆಬಿಡು, ಅಗೆಯುೀಳು, ಅಗೆಯೊಡೆ, ಅಗೆದೋರು),ತೊವಲು (ತೊವಲಿಕ್ಕು), ಕುಡಿ (ಕುಡಿಯೊಡೆ)
sprout — ಕ್ರಿ ಮೊಳೆ (ಮೊಳೆತ ಕಾಳುಗಳು), ಚಿಗುರು (ಚಿಗುರಿದ ಗೆಲ್ಲು), ಚಿಗಿ (ಚಿಗಿತ ಮರ), ಇಗರು (ನೀರೆರೆದರೂ ನೀವು ನೆಟ್ಟ ಗೆಲ್ಲು ಇಗರಲಿಲ್ಲ), ಕೊನರು (ಕೊನರಿದ ಗಿಡ), ತಳಿರು, ತಳಿ (ತಳಿತ ಮಾವಿನ ಗಿಡ; ತತ್ತಳಿರು - ತತ್ತಳಿತು ಹೂವುಬಿಟ್ಟ ಮರ), ತಳಲು (ಮರ ತಳಲಿದೆ)
spruce — ಗು ಅಂದ, ಚೊಕ್ಕಟ, ಸೂಟಿ
spume — ನಾ ನೊರೆ, ತೇಲುಕೊಳೆ
spur — ನಾ 1 ಮುಳ್ಳುಹಿಮ್ಮಡಿ 2 ಉರವಣಿ, ಒತ್ತಾಯ, ಹುರಿದುಂಬಿಕೆ
spur — ಕ್ರಿ ಹುರಿದುಂಬಿಸು, ಮುಂದೂಡು, ಒತ್ತಾಯಿಸು
spurious — ಗು ಮೋಸದ, ನಂಬಲಾಗದ, ಸುಳ್ಳಿನ
spurn — ಕ್ರಿ ದೂಡು (ಕಾಲಿನಿಂದ ದೂಡು), ತಳ್ಳು (ಜರೆದು ತಳ್ಳು)
spurt — ನಾ ಚೇಪು (ಚೇಪಿದ ಹಾಲು), ಚಿಮ್ಮು (ನೀರು ಚಿಮ್ಮಿತು)
sputter — ಕ್ರಿ 1 ಒದರಾಡು 2 ಸಿಡಿಸು 3 ಚರಚರನೆ ಬಿಸಿಯಾಗು
sputum — ನಾ ಉಗುಳು
spy — ಕ್ರಿ ತುಬ್ಬು (ತುಬ್ಬಿನವರು, ತುಬ್ಬುಗಾರ), ಹೊಂಚು (ನಾಲ್ಕು ಮಂದಿ ಹೊಂಚಿ ಕುಳಿತಿ ದ್ದರು)
spying — ನಾ ಬೇಹು (ಬೇಹಿನವರು; ಬೇಹು ಗಾರಿಕೆ),ಸಂಚು (ಸಂಚುಗಾರ; ಸಂಚು ಗಾರಿಕೆ)
squabble — ಕ್ರಿ ಕಚ್ಚಾಡು (ಅಣ್ಣ ತಮ್ಮಂದಿರು ಕಚ್ಚಾಡುತ್ತಿದ್ದಾರೆ), ಕಾದಾಡು (ಕಾದಾಡಲು ಹೋಗಿ ಕಾಲು ಮುರಿದುಕೊಂಡರು)
squad — ನಾ ಕಿರುತಂಡ, ಕಿರುಕೂಟ
squadron — ನಾ ಕಾಳಗತಂಡ, ಕಾಳಗಪಡೆ
squalid — ಗು ಹೊಲಸು (ಹೊಲಸು ಗುಡಿ ಸಲು), ಕೊಳಕು (ಕೊಳಕು ಹುಡುಗ)
squall — ನಾ 1 ಕೂಗಾಟ, ಚೀರಾಟ 2 ಬಿರು ಗಾಳಿ ಮಳೆ (ಒಮ್ಮೆಗೇ ಬೀಸಿದ ಬಿರುಗಾಳಿ ಮಳೆ) ನಾ ಹೊಲಸುತನ, ಕೊಳಕುತನ
squandering — ನಾ ದುಂದು (ದುಂದುಗಾರ), ಪೋಲು (ಪೋಲುಮಾಡು)
square — ಕ್ರಿ 1 ಸಾಲತೀರಿಸು, ಕಂಡಿಸು, ಕುದು ರಿಸು 2 ದೊರೆಗೊಳಿಸು, ಸರಿಮಾಡು 3 ಅಶ್ಟರಿಂದಲೇ ಹೆಚ್ಚಿಸು
square — ಗು 1 ಸಲೆ (ಸಲೆಯಡಿ; ಸಲೆಮಾಡು) 2 ನೇರ, ಸರಿಮಟ್ಟದ 3 ಉಳಿಕೆಯಿಲ್ಲದ 4 ಕಟ್ಟಲೆತಪ್ಪದ, ಬದಿಹಿಡಿಯದ 5 ಗಟ್ಟಿಮುಟ್ಟಾದ
squash — ಕ್ರಿ ಜಜ್ಜು (ಅಡಿಕೆ ಹೋಳನ್ನು ಜಜ್ಜಿ ಪುಡಿಮಾಡಿದ), ನೆಗ್ಗು (ಕಲ್ಲಿನಡಿಗೆ ಸಿಕ್ಕಿ ಆತನ ಕಾಲು ನೆಗ್ಗಿಹೋಗಿದೆ)
squashed — ಗು ನಜ್ಜು (ನಜ್ಜುಗುಜ್ಜು)
squat — ಕ್ರಿ ಕುಕ್ಕರಿಸು (ಈ ಹುಡುಗಿ ಎಲ್ಲೆಂದ ರಲ್ಲಿ ಕುಕ್ಕರಿಸುತ್ತಾಳೆ), ಕುಳ್ಳಿರು (ನೀನು ಇಲ್ಲಿ ಕುಳ್ಳಿರಬೇಡ; ಕುಳಿತುಕೊಳ್ಳು), ಕೂಡು (ನೆಲದ ಮೇಲೆ ಕೂಡಬೇಡ)
squawk — ಕ್ರಿ ಅರಚು
squeak — ಕ್ರಿ ಚೀರು, ಕಿರಿಚು
squeamish — ಗು 1 ಮೆಚ್ಚಿಸಲಾಗದ, ಸುಳು ವಾಗಿ ಕೆರಳುವ 2 ಸುಳುವಾಗಿ ಓಕರಿಸುವ
squeeze — ಕ್ರಿ ಹಿಸುಕು (ಹಣ್ಣನ್ನು ಹಿಸುಕಿದಳು; ಕತ್ತುಹಿಸುಕು), ಹಿಚುಕು (ಕುತ್ತಿಗೆ ಹಿಚುಕಲು ಕಯ್ಚಾಚಿದ; ಹಿಚುಕಾಟ), ಹಿಸಿ (ಹತ್ತಿ ಹಿಸಿದು ಬಿತ್ತು ತೆಗೆದ), ಹಿದುಕು (ಅವರೆ ಯನ್ನು ಹಿದುಕಿ ಸಿಪ್ಪೆ ತೆಗೆದ), ಕದುಕು (ನಿಂಬೆಹಣ್ಣನ್ನು ಕದುಕಿ ಎಸರು ತೆಗೆದ), ಕಿವುಚು (ಹುಣಿಸೆ ಕಿವುಚು), ಹಿಳಿ (ಗಾಣ ದಲ್ಲಿ ಹಿಳಿದು ಎಣ್ಣೆ ತೆಗೆದ), ಹಿಂಡು (ತೆಂಗಿನಕಾಯಿ ಹಿಂಡಿ ಹಾಲು ತೆಗೆದಳು), ಚಿದುಕು (ನೆನೆಸಿದ ಅವರೆಕಾಳನ್ನು ಚಿದುಕಿ ಸಿಪ್ಪೆ ತೆಗೆದಳು), ಅಮುಕು (ಕಯ್ಗಳನ್ನು ಹಿಡಿದು ಅಮುಕಿದ), ಅವುಕು, ಜಿಗಟು (ಆತ ಜಿಗಟಿದಲ್ಲಿ ನೆತ್ತರು ಬಂತು), ಇರಕಿಸು
squeeze through — ಕ್ರಿ ನುಗುಳು, ನುಗ್ಗು (ನುಗ್ಗಿ ಮುಂದೆಹೊಗು)
squib — ನಾ ಕೆಣಕುಮಾತು
squint ( — ಗು ಮೆಳ್ಳೆ (ಮೆಳ್ಳೆಕಣ್ಣು),ಕೋಸು (ಕೋಸುಕಣ್ಣು), ಓರೆ ಓರೆಗಣ್ಣು)
squirm — ಕ್ರಿ ಮಲಿ್ತುರುಚು (ಆತ ನೋವಿನಿಂದ ಮಲಿ್ತುರುಚುತ್ತಿದ್ದಾನೆ)
squirrel — ನಾ ಅಳಿಲು,ಇಣಚಿ,ಉಡುತೆ,ಚಣಿಲು
squirt — ಕ್ರಿ ಪೀಚು (ಪೀಚುಕೊಳವಿಯಲ್ಲಿ ಪನ್ನೀರು ಪೀಚುತ್ತಿದ್ದಾರೆ), ಚಿಮ್ಮು (ಮಕ್ಕಳು ನೀರು ಚಿಮ್ಮುತ್ತಿದ್ದಾರೆ)
stab — ಕ್ರಿ ಇರಿ (ಕತ್ತಿಯಲ್ಲಿ ಎದೆಗೆ ಇರಿದ; ಇರಿಗತ್ತಿ; ಇರಿನುಡಿ; ಇರಿತ - ಕತ್ತಿಯ ಇರಿತ), ತಿವಿ (ಕೋಲಿನಿಂದ ತಿವಿದು ಕೆಳಗೆ ಬೀಳಿಸಿದ; ತಿವಿದಾಡು; ತಿವಿಗತ್ತಿ; ತಿವಿ ಗೋಲು) ಕ್ರಿ 1 ನೆಲೆಗೊಳಿಸು, ಗಟ್ಟಿಮಾಡು 2 ಮಾರ್ಪಡದಿರು
stable — ಗು 1 ನೆಲೆಗೊಂಡ, ಮಾರ್ಪಡದ, ಮುರಿದುಬೀಳದ 2 ತಾಳ್ಮೆಯ, ಗಟ್ಟಿ ತೀರ್ಮಾನದ
stack — ನಾ 1 ಬಣವೆ (ಹುಲ್ಲಿನ ಬಣವೆ), ಮೆದೆ (ಹುಲ್ಲು ಮೆದೆ, ಮೆದೆಯೊಟ್ಟು; ಮೆದೆ ಹಾಕು) 2 ಕಡತದ ಕೋಣೆ 3 ಹೊಗೆ ನಳಿಗೆ
stadium — ನಾ ಆಟದ ಕಣ
staff — ನಾ 1 ದಡಿ (ದಡಿಗೋಲು; ದಡಿಗ) 2 ಬೆಂಬಲಿಗರ ತಂಡ, ನೆರವುತಂಡ
stag — ನಾ ಗಂಡು ಜಿಂಕೆ, ಕಡವೆ
stage — ನಾ 1 ನಿಲ್ಲಡೆ (ನಾಲ್ಕನೇ ನಿಲ್ಲಡೆಯಲ್ಲಿ ಊಟಮಾಡಿದರು) 2ಮಟ್ಟ (ನೀರು ಒಂದು ಮಟ್ಟದ ವರೆಗೆ ಹೋಗಿ ನಿಲ್ಲುತ್ತದೆ) 3 ಅಟ್ಟಲು (ಬಯಲಾಟದ ಅಟ್ಟಲು), ಜಗಲಿ, ಕಟ್ಟೆ, ಮಂಚಿಗೆ
stagger — ಕ್ರಿ 1 ತೂರಾಡು, ತತ್ತರಿಸು 2 ಗುಂಪುತಪ್ಪು, ಸಂದಣಿತಪ್ಪು
stagnate — ಕ್ರಿ 1 ನಿಂತಲ್ಲಿರು, ಹರಿಯದಿರು, ಕೊಳೆಯತೊಡಗು 2 ಚುರುಕುಕಳೆ, ಚುರು ಕಿಲ್ಲದಾಗು
staid — ಗು ನೆಮ್ಮದಿಯ, ಗೊಂದಲವಿಲ್ಲದ, ತಾಳ್ಮೆಯ, ಪಸಿಯಿಸದ
stain — ನಾ ಕಲೆ (ಎಣ್ಣೆಯ ಕಲೆ),ಕಾರೆ (ಬಟ್ಟೆಗೆ ಕಾರೆ ಹಿಡಿದಿದೆ; ಕೆಂಗಾರೆ)
stair — ನಾ ಮೆಟ್ಟಲು
staircase — ನಾ ನಿಚ್ಚಣಿಕೆ, ಪಾವಟಿಗೆ
stake — ನಾ 1 ತರಿ, ದಸಿ (ಕೂರದಸಿ; ಅಂಗಳದ ಸುತ್ತ ದಸಿಗಳ ಬೇಲಿಯಿತ್ತು; ದಸಿಗೋಲು), ಸುಡುಗಂಬ 2 ಒಡ್ಡ (ಪೋಟಿಯಲ್ಲಿ ನೂರು ರುಪಾಯಿ ಒಡ್ಡ ಒಡ್ಡಿದ್ದ)
stalactite — ನಾ ತೂಗುತೊಂಗಲು
stalagmite — ನಾ ನೆಲತೊಂಗಲು, ನೀರು ಗೋಲು
stale (be) — ಕ್ರಿ ಹಳಸು (ಹಳಸಿದ ಹಿಟ್ಟು)
stale — ಗು 1 ತಂಗಳು (ತಂಗಳನ್ನ; ತಂಗಳು ಹಿಟ್ಟು), ಹಳಸಲು 2 ಸಪ್ಪೆ, ಬೇಸರದ
stalemate — ನಾ ಬಿಕ್ಕಟ್ಟು
stalk — ನಾ ದಿಂಡು (ಮರದ ದಿಂಡು; ಬಾಳೆಯ ದಿಂಡು), ಕಣಿಕೆ (ಜೋಳದ ಕಣಿಕೆ), ಹಂಬೆ (ಬಾಳೆಹಂಬೆ), ಕಾಮು (ಸೊಪ್ಪಿನ ಕಾಮು), ತೊಡಂಬೆ (ಹೂವಿನ ತೊಡಂಬೆ), ದಂಟು (ಜೋಳದ ದಂಟು, ತಾವರೆಯ ದಂಟು), ತೊಟ್ಟು (ತೊಟ್ಟಿನಿಂದ ಕಳಚಿ ಬಿದ್ದ ಹಣ್ಣು)
stall — ನಾ ಕೊಟ್ಟಿಗೆ, ಅಂಗಡಿ
stall — ಕ್ರಿ 1 ನಿಂತುಹೋಗು 2 ಬೇಕೆಂದೇ ತಡಮಾಡು, ಅಡ್ಡಿಹೇಳು ನಾ ಕಟ್ಟಾಳು, ಕೂರಾಳು
stamina — ನಾ ತಾಳಿಕೆ, ಆನಿಕೆ, ಉರಿಕೆ
stammer — ನಾ ಬಿಕ್ಕಲು (ಬಿಕ್ಕಲು ಮಾತು), ತೊದಲು (ತೊದಲು ನುಡಿ; ತೊದಲಿಸು), ದೊದ್ದೆ (ದೊದ್ದೆ ಮಾತು)
stammer — ಕ್ರಿ ನತ್ತು (ನತ್ತಿ ಮಾತನಾಡು), ಕೊದಲು (ಕೊದಲುವ ಹುಡುಗ), ಉಗ್ಗು (ಉಗ್ಗದೆ ಮಾತನಾಡಲು ಕಲಿಯಬೇಕು)
stamp — ನಾ ಬೆಟ್ಟುಗೆ
stamp — ಕ್ರಿ ಬೆಟ್ಟು (ಬೆಟ್ಟಿದ ಓಲೆ)
stampede — ನಾ ನುಗ್ಗಾಟ, ನೂಕುನುಗ್ಗಲು (ನೂಕುನುಗ್ಗಲಲ್ಲಿ ಚೀಲ ಕಾಣೆಯಾಲಿುತು)
stance — ನಾ ನಿಲುವು (ಇದರಲ್ಲಿ ನಿಮ್ಮ ನಿಲುವೇನು?)
stand — ಕ್ರಿ ನಿಲ್ಲು (ಎದ್ದುನಿಲ್ಲು; ಅಷ್ಟು ಹೊತ್ತೂ ನಿಂತಿದ್ದ)
stand erect — ಕ್ರಿ ನಿಗುಳು
stand on tiptoe — ಕ್ರಿ ಎಕ್ಕು (ಎಕ್ಕಿ ನೋಡು ತ್ತಿದ್ದಾನೆ)
stand up — ಕ್ರಿ ಏಳು (ಕೂತಲ್ಲಿಂದ ಏಳು)
standard — ನಾ 1 ಆಯ (ಆಯಕಟ್ಟು; ಆಯ ವರಿತು ನಿಲ್ಲು), ಮಟ್ಟ, ಎತ್ತುಗೆ 2 ತರಗತಿ 3 ಗುಡಿ (ಗುಡಿ ಹಾರಿಸು)
standby — ನಾ ಮಾರಾಳು
standing — ಗು 1 ನಿಂತಿರುವ, ಬಳಕೆಯ ಲ್ಲಿರುವ 2 ಹರಿಯದ, ಕೊಳೆತ 3 ಬಾಳಿಕೆಯ, ಮಾರ್ಪಡದ
standpoint — ನಾ ನಿಲುವು
standstill — ನಾ ನಿಲುಗಡೆ, ಅಲ್ಲಡದಿರುವಿಕೆ
stanza — ನಾ ಹಾಡು
staple — ನಾ ಬಾಗುಸರಿಗೆ (ಓಲೆಗಳನ್ನೆಲ್ಲ ಒಟ್ಟುಗೂಡಿಸಿ ಬಾಗುಸರಿಗೆ ಹಾಕಿದ), ಬಾಗುಕಂಬಿ
star — ನಾ ಮೀನು (ಮೀಂಬಟ್ಟೆ; ಬಾನ್ಮೀನು), ಅರಿಲು (ಅರಿಲ್ವಟ್ಟೆ), ಚುಕ್ಕೆ (ಮುಗಿಲ ಚುಕ್ಕೆ; ಬಾನಿನಲ್ಲಿ ಒಂದು ಚುಕ್ಕೆಯೂ ಕಾಣಿಸು ವುದಿಲ್ಲ)
starboard — ನಾ ಹಡಗಿನ ಬಲಗಡೆ
starch — ನಾ ಗಂಜಿ (ಗಂಜಿ ಹಾಕಿದ ಬಟ್ಟೆ)
stare — ಕ್ರಿ ನಿಟ್ಟಿಸು (ನಿಟ್ಟಿಸಿ ನೋಡು), ದುರು ಗುಟ್ಟಿ ನೋಡು
staring — ನಾ ಮಿಟಿ (ಮಿಟಿಮಿಟಿ ನೋಡು) ಗು 1 ಬಾಗದ, ಪೆಡಸಾದ (ಪೆಡಸಾದ ಹೆಣ) 2 ಹಾಳುಬಿದ್ದ, ಯಾರೂ ಇಲ್ಲದ 2 ಬರೀ (ಬರೀ ಬತ್ತಲೆ)
start — ಕ್ರಿ 1 ಹೊರಡು (ಮನೆಯಿಂದ ಹೊರಟಿ ದ್ದಾನೆ), ತೊಡಗು (ಕೆಲಸದಲ್ಲಿ ತೊಡಗಿದ), ತೊಡು (ಮನೆಯಿಂದ ತೊಟ್ಟು ಇಲ್ಲಿವರೆಗೆ ನಡೆದೆ), ಉಲುಕು (ನನ್ನ ಒದವಿಯಿಲ್ಲದೆ ಈ ಹಡಗು ಉಲುಕಲಾರದು), ನೆಗಳ್ಚು, ಪೂಡು, ನಿಲುಕು (ಕೆಲಸಕ್ಕೆ ನಿಲುಕು) 2 ಬೆಚ್ಚು (ಬೆಚ್ಚಿಬೀಳು)
startle — ಕ್ರಿ ಬೆರಗುಪಡಿಸು, ಬೆದರಿಸು
starve — ಕ್ರಿ ಹಸಿ, ಹಸಿದು ಸಾಯು
state — ನಾ 1 ಉಪ್ಪು, ಇರವು (ಅವನು ಎಂತಹ ಇರವಿನಲ್ಲಿದ್ದಾನೆ?) 2 ಆಡಳಿತ
state — ಕ್ರಿ ಹೇಳು, ತಿಳಿಸು (ನಿಮ್ಮ ಅನಿಸಿಕೆಯನ್ನು ಎಗ್ಗಿಲ್ಲದೆ ನಮಗೆ ತಿಳಿಸಿ)
stately — ಗು ಮಲೆಪಿನ, ದೊಡ್ಡಸ್ತಿಕೆಯ, ಅಗ್ಗಳಿಕೆಯ
statement — ನಾ ಆಡಿಕೆ,ಹೇಳಿಕೆ (ಅವರು ಕೊಟ್ಟ ಹೇಳಿಕೆ ಸರಿಯಿಲ್ಲ)
statesman — ನಾ ಆಳ್ವಿಕೆಯ ಮುಂದಾಳು, ಆಳ್ವಿಕೆಯರಿಗ
static — ಗು ಹಂದದಿರುವ
station — ನಾ ನಿಲ್ಮನೆ (ಗಾಡಿ ನಿಲ್ಮನೆ ಬಿಟ್ಟಿದೆ), ನಿಲ್ದಣ (ನಿಲ್ದಾಣದಲ್ಲಿ ನೂರಾರು ಮಂದಿ ನೆರೆದಿದ್ದರು)
stationary — ಗು ನಿಂತಿರುವ, ಮಾರ್ಪಡದ, ಹಂದಾಡದ, ಹೋಗದ
stationery — ನಾ ಬರಹಕ್ಕೆ ಬೇಕಾದವು
statue — ನಾ ಅಡರ್ಪು (ಕಡವನ ಅಡರ್ಪು)
stature — ನಾ ಪೊಡೆ (ಆತನದು ನೆಟ್ಟಗಿನ ಪೊಡೆ; ಪೊಡೆಗೆಡೆ), ನಿಲುವು (ಎದ್ದು ಕಾಣುವ ನಿಲುವು)
statute — ನಾ ಕಟ್ಟಳೆ
staunch — ಗು ಗಟ್ಟಿಯಾದ, ಮಾರ್ಪಡದ, ನಂಬಿಕೆಯ
stave in — ಕ್ರಿ ಒಳಜಜ್ಜು, ನಗ್ಗಿಸು
stave off — ಕ್ರಿ ತಪ್ಪಿಸು, ತಡೆ
stave — ಕ್ರಿ ತೂತುಮಾಡು
stay — ನಾ ತಂಗಣೆ (ಅವನ ತಂಗಣೆಗೆ ಆ ದಿನ ಕೊನೆಯ ಗಡುವಾಗಿತ್ತು),ಇರವು ಕ್ರಿ 1 ನೆಲಸು (ಇಲ್ಲಿ ನೆಲಸಿದವರೆಲ್ಲ ಮುಂದೆ ಬಂದಿದ್ದಾರೆ), ತಂಗು (ದಾರಿಹೋಕ ರಿಗೆ ತಂಗಲು ಒಂದು ಕೋಣೆ ಇದೆ), ಇರು (ಇವತ್ತು ನೀನು ಇರುವುದೆಲ್ಲಿ?), ಇಳ ಕೊಳ್ಳು, ಉಳಕೊಳ್ಳು 2 ಆನಿಕೆಕೊಡು, ಈಡುಕೊಡು 3 ಮುಂದೂಡು
steadfast — ಗು ಅಲ್ಲಾಡದ, ಮಾರ್ಪಡದ
steady — ಗು 1 ಅಲ್ಲಾಡದ (ಅಲ್ಲಾಡದ ಹಿಡಿತ), ಗಟ್ಟಿಯಾದ, ಒಂದೇ ತರದ 2 ನಂಬಬಲ್ಲ
steak — ನಾ ಹಸಿಬಾಡು
steal — ಕ್ರಿ ಎಗರಿಸು (ಅಂಗಡಿಯಿಂದ ಬಾಳೆ ಹಣ್ಣು ಎಗರಿಸಿದ), ಕದಿ (ಕದ್ದು ತಿನ್ನು; ಕದ್ದು ಕೊಳ್ಳು),ಎತ್ತಿಹಾಕು, ತೆವರು (ಆಕೆಯ ಒಡವೆಗಳನ್ನೆಲ್ಲ ತೆವರಿದ್ದಾರೆ)
stealing — ನಾ ಕಳ್ಳತನ, ಕಳವು
stealthy — ಗು ಗುಟ್ಟಿನ, ಮುಚ್ಚುಮರೆಯ, ಕಳ್ಳ ತನದ
steam — ನಾ ಆವಿ (ಆವಿಯಾದ ನೀರು), ಉಬ್ಬೆ (ಉಬ್ಬೆಹಾಕು; ಉಬ್ಬೆಮನೆ), ಉಗಿ (ನೀರು ಕಾದು ಉಗಿಯಾಗುತ್ತಿದೆ; ಉಗಿಬಂಡಿ)
steamer — ನಾ ಉಗಿಹಡಗು
steel — ನಾ ಉಕ್ಕು (ಉಕ್ಕಿನ ಕೊಡಲಿ)
steep — ಕ್ರಿ ಊರು (ಉಪ್ಪುನೀರಿನಲ್ಲಿ ಊರಲು ಹಾಕು)
steep — ಗು ಸರಿ (ಸರಿಗಲ್ಲು),ಕಡಿದು (ಕಡಿದಾದ ಬೆಟ್ಟ)
steer — ನಾ ಎತ್ತು
steer — ಕ್ರಿ ನಡೆಸು (ಹಡಗು ನಡೆಸು)
stellar — ಗು ಚುಕ್ಕೆಯ, ಅರಿಲಿನ
stem — ನಾ ಕಾವು (ತಾವರೆಯ ಕಾವು), ಕಣಿಕೆ (ಜೋಳದ ಕಣಿಕೆ), ಕಂಡಿಕೆ, ತುಂಬು (ಎಲೆಯ ತುಂಬು; ಹೂವಿನ ತುಂಬು), ತಾಳು (ಹೂವಿನ ತಾಳು)
stench — ನಾ ಹಡಿಕೆ (ಹಡಿಕೆ ನಾರು), ಗಬ್ಬು (ಕುರಿಮಂದೆಯ ಗಬ್ಬು), ಕೊಚ್ಚು (ಉಚ್ಚೆಯ ಕೊಚ್ಚು)
stencil — ನಾ ಕೆತ್ತುತಗಡು, ಕೊರೆಯಚ್ಚು
stenographer — ನಾ ಬಿರುಸುಬರೆಗ, ಅಡಕ ಬರೆಗ (ಆಕೆ ತನ್ನ ಅಡಕಬರೆಗನನ್ನು ಮದುವೆ ಯಾಗಿದ್ದಾಳೆ)
stenography — ನಾ ಬಿರುಸುಬರೆಹ, ಅಡಕ ಬರೆಹ
stentorian — ಗು ತುಂಬಾ ದೊಡ್ಡ, ತುಂಬಾ ಗಟ್ಟಿ (ತುಂಬಾ ಗಟ್ಟಿ ಕೂಗು) ನಾ 1 ಮೆಟ್ಟಲು (ಮನೆಯ ಮುಂದಿನ ಮೆಟ್ಟಲು), ಮೆಟ್ಟಿಗೆ, ಅಂಕರಿಕೆ (ಬಾವಿಯ ಅಂಕರಿಕೆ), ಕೂಲು (ಕೂಲುಬಾವಿ; ಕೂಲು ಕಂಬ), ಹಂತ (ಗುಡ್ಡದ ಮೇಲೆ ಹತ್ತಿ ಹೋಗುವ ಹಂತಗಳು; ನಿಮ್ಮ ಕೆಲಸ ಈಗ ಯಾವ ಹಂತದಲ್ಲಿದೆ?), 2 ಹೆಜ್ಜೆ (ಹೆಜ್ಜೆ ಹಾಕು; ಹೆಜ್ಜೆಯಿಡು), ಅಡಿ (ಅಡಿಯಿಡು)
step — ಕ್ರಿ ಮೆಟ್ಟು (ಹುಡುಗ ಕೆಂಡವನ್ನು ಮೆಟ್ಟಿ ಬೊಬ್ಬಿರಿದ)
step — ಗು ಮಲ- (ಮಲತಾಯಿ; ಮಲಮಗ; ಮಲಮಗಳು; ಮಲತಂದೆ)
step aside — ಕ್ರಿ ಒತ್ತು (ಬದಿಗೆ ಒತ್ತಿ ನಿಲ್ಲಿ)
step over — ಕ್ರಿ ಉರುಟು (ಉರುಟಿ ಮುಂದೆ ಹೋಗು)
steppe — ನಾ ಬಯಲು, ಬೆಂಕಾಡು
stereo- — ಗು ಒಂದಾಗಿಸುವ, ಒಂದಿಕೆಯ
stereotype — ನಾ ಪಡಿಯಚ್ಚು
sterile — ಗು ಬರಡು (ಬರಡೆಮ್ಮೆ - ಆತ ಗೊಬ್ಬರಕ್ಕಾಗಿ ನಾಲ್ಕು ಬರಡೆಮ್ಮೆಗಳನ್ನು ಸಾಕುತ್ತಿದ್ದಾನೆ), ಗೊಡ್ಡು (ಗೊಡ್ಡಾಕಳು; ಗೊಡ್ಡುಕೆಲಸ)
sterilize — ಕ್ರಿ 1 ಬರಡಾಗಿಸು 2 ಸೋಂಕುಕಳೆ, ಕೊಳೆತೆಗೆ
sterling — ಗು ಒಳ್ಳೆಯ, ನಂಬತಕ್ಕ, ಬೆಲೆ ಬಾಳುವ
stern — ಗು ಗಡುಸು (ಗಡುಸು ನಿಲುವು), ಕಟ್ಟುನಿಟ್ಟಿನ
sternum — ನಾ ಎದೆಯೆಲುಬು
stevedore — ನಾ ಹಡಗುಕೂಲಿ
stew — ಕ್ರಿ ಬೇಯಿಸು 2 ತಳಮಳಿಸು, ತಲ್ಲಣಿಸು
stick — ನಾ ಬಡಿಗೆ (ಬಡಿಗೆಕೋಲು), ಕಣೆ (ಉದ್ದ ಕಣೆಯ ಹಾಗಿರುವ ಹುಡುಗಿ), ಕುಣಿಲು (ಕುಣಿಲು ಹಿಡಿದುಕೊಂಡು ಬಂದು ಮಕ್ಕಳನ್ನು ಹೆದರಿಸಿದ), ಕೋಲು (ಕೋಲು ಜೇನು; ಕೋಲಾಟ; ಕೋಲೂರು; ಕೋಲು ಮಿಂಚು), ತಡಿ (ತಡಿಕೋಲು), ದಡಿ (ನುಗ್ಗೆ ದಡಿ; ದಡಿಯಲ್ಲಿ ಹೊಡೆ), ದಂಡಿ,ಚುಳಿಕೆ (ಚುಳಿಕೆಯಲ್ಲಿ ಹತ್ತಿಯನ್ನು ಹೊಡೆದು ಸರಿ ಪಡಿಸಿದ)
stick — ಕ್ರಿ (ಆ) ಹತ್ತು (ಕಯ್ಗೆ ಹತ್ತಿದ ಹಿಟ್ಟು), ನಾಟು (ಕಾಲಿಗೆ ನಾಟಿದ ಮುಳ್ಳು), ಅಂಟು (ಬಂಡೆಗೆ ಅಂಟಿಕೊಂಡ ಪಾಚಿ), ಪಗಿಲು (ಕಾಲಿಗೆ ಪಗಿಲಿದ ಮಣ್ಣು), ಚಿಗಿಲು (ಚಿಗಿ ಲುವ ಅನ್ನ), ಜಿಗಿಲು (ಗಾಲಿಗಳು ಜಿಗಿಲಿ ನಿಂತಿವೆ), ಸರಿಗೊಳ್ಳು (ಮಾ) ಅಟ್ಟು, ಹಚ್ಚು (ಓಲೆಯನ್ನು ಗೋಡೆಗೆ ಹಚ್ಚಿದ)
sticky — ಗು ಗಿಜಟಿ (ಗಿಜಟಿ ಹಣ್ಣು), ಜಿಗುಟು (ಜಿಗುಟು ಮಣ್ಣು), ಜಿಬಟು, ಜಿಬ್ಬು (ಜಿಬ್ಬಡಿಕೆ)
stiff — ಗು ಗರಿಮುರಿ (ಗರಿಮುರಿ ಉಡುಪು),ಪೆಡಸು (ಪೆಡಸು ನಾಲಿಗೆ) ಕ್ರಿ ಬೆರೆ (ಹೆಣದ ಕಯ್ಕಾಲುಗಳು ಆಗಲೇ ಬೆರೆತುಕೊಳ್ಳತೊಡಗಿದ್ದುವು), ಸೆಟೆ (ಸೆಟೆದ ಬೆನ್ನು; ಸೆಟೆಬೇನೆ; ಸೆಟೆಮಾತು)
stiff-necked — ಗು ಬಿಟ್ಟುಕೊಡದ, ಹಟ ಮಾರಿ
stiffness — ನಾ ಒಟ್ಟಿ (ಕಾಲಿಗೆ ಒಟ್ಟಿ ಹಿಡಿ ಯಿತು), ಜುಮ್ಮು (ಜುಮ್ಮು ಹಿಡಿ; ಕಾಲು ಗಳಿಗೆ ಜುಮ್ಮು ಹಿಡಿದಿದೆ)
stifle — ಕ್ರಿ ಉಸಿರಡಗಿಸು, ಹತ್ತಿಕ್ಕು
stigma — ನಾ 1 ಒಚ್ಚಿ, ಕೆಟ್ಟಹೆಸರು 2 ಕಲೆ
stile — ನಾ ದಾಟುಮೆಟ್ಟು (ಬೇಲಿ ದಾಟಲು ಎರಡು ಕಡೆಯೂ ದಾಟುಮೆಟ್ಟುಗಳಿವೆ)
stiletto — ನಾ ಇರಿಕತ್ತಿ
still — ಗು ಸಸನೆ (ಆತ ಸಸನೆ ಇರಲಾರ),ಸಯ್ಪು (ಎಲ್ಲಾ ಕಡೆಯೂ ಸಯ್ಪಾಗಿದೆ; ಸಯ್ಪಿಡು)
still-born — ಗು ಸತ್ತುಹುಟ್ಟಿದ, ಹುಟ್ಟು ವಾಗಲೇ ಸತ್ತ
stilt — ನಾ ಮರಗಾಲು, ಮೆಟ್ಟುಗೋಲು
stilted — ಗು ಮೆರೆತದ, ತೋರಿಕೆಯ, ಅಗ್ಗಳಿಕೆ ತೋರುವ
stimulant — ಗು ಚುರುಕುಗೊಳಿಸುವ, ಹುರಿ ದುಂಬಿಸುವ
stimulate — ಕ್ರಿ ಹುರಿದುಂಬಿಸು (ಆತನನ್ನು ಹೋರಾಡುವ ಹಾಗೆ ಹುರಿದುಂಬಿಸಿದರು)
sting — ನಾ ಕೊಂಡಿ (ಚೇಳಿನ ಕೊಂಡಿ)
sting — ಕ್ರಿ ಕಚ್ಚು (ಆತ ಹಾವು ಕಚ್ಚಿ ಸತ್ತ), ಊರು (ಜೇನು ನೊಣ ಊರಿತು), ಕಡಿ (ಕಡಿವ ಕಟ್ಟಿರುವೆಗಳು), ಕುಟುಕು (ಚೇಳು ಕುಟುಕಿತು; ಕುಟುಕಿದ ಮುಳ್ಳು)
stingy — ಗು ನೆಲಕಲ, ಪಂಜೆ, ಕಾಸು ಬಿಚ್ಚದ
stink — ಕ್ರಿ ನಾರು (ಕೊಳೆತು ನಾರುವ ನೀರು)
stint — ನಾ 1 ಎಲ್ಲೆಕಟ್ಟು, ತಡೆತ 2 ಹಂಚಿದ ಕೆಲಸ, ಕಿರುಕೆಲಸ
stipend — ನಾ ಸಂಬಳ, ಪಡಿ, ಹಡದೆ
stipulate — ಕ್ರಿ 1 ಮೊದಲೆೀ ತೀರ್ಮಾನಿಸು 2 ಬೇಡಿಕೆಲಿುಡು (ಒಪ್ಪಂದಕ್ಕೆ ಅವನೊಂದು ಬೇಡಿಕೆಯಿಟ್ಟಿದ್ದಾನೆ)
stipule — ನಾ ಎಲೆಕಿವಿ, ಕಾವಿನೆಲೆ
stir — ನಾ 1 ಕದರು, ಗದ್ದಲ 2 ಸೆರೆಮನೆ
stir — ಕ್ರಿ 1 ಮಿಸುಕು (ಚೂರೂ ಮಿಸುಕಾಡದಿರ ಬೇಕೆಂದು ಹೇಳಿದ್ದರು), ಕದಲು (ಆತ ಕುಳಿತಲ್ಲಿಂದ ಕದಲಲಿಲ್ಲ), ಕದಡು (ನೀರು ಕದಡಿದೆ) ಕಲಕು (ಆನೆಗಳು ನೀರನ್ನು ಕಲಕಿ ಕೆದಕು (ಕೋಳಿ ಮಣ್ಣನ್ನು ಕೆದಕು ತ್ತಿದೆ), ತೊಳಸು (ಆಕೆಗೆ ಹೊಟ್ಟೆ ತೊಳಸು ತ್ತಿದೆ) 2 ಮಗುಚು, ಬೆರಸು
stir up — ಕ್ರಿ ಎತ್ತಿಕಟ್ಟು, ಕೆರಳಿಸು
stirrup — ನಾ ಕಾಲೂರೆ
stitch — ಕ್ರಿ ಹೊಲಿ (ಬಟ್ಟೆ ಹೊಲಿ; ಹೊಲಿಗೆ), ಸೆಡು (ಸೆಟ್ಟೆಲೆ - ಅವನಿಗೆ ಸೆಟ್ಟೆಲೆಯಲ್ಲಿ ಊಟ ಮಾಡಲು ತಿಳಿಯದು)
stitch together — ಕ್ರಿ ದಳೆ
stock — ನಾ 1 ಮರದ ಬುಡ 2 ತಳಿ (ತಳಿ ಆಕಳು), ಬುಡಕಟ್ಟು 3 ಹಿಡಿ (ಕೋವಿಯ ಹಿಡಿ) 4 ಸೇರುವೆ, ಕಲೆತ 5 ಹಕ್ಕೋಲೆ 6 ಕೋಳ (ಕೋಳ ತೊಡಿಸು, ಕೋಳಾಗು)
stockade — ನಾ ದಸಿಗೋಡೆ, ದಸಿಬೇಲಿ
stocking — ನಾ ಕಾಲುಚೀಲ
stodgy — ಗು ಗಟ್ಟಿಮುಟ್ಟಾದ, ದಪ್ಪಗೆ ಮತ್ತು ಕುಳ್ಳು 2 ಮದಡು, ಸಪ್ಪೆ, ಗಮನ ಸೆಳೆಯದ 3 ಹಳೇ ಬಗೆಯ
stoical — ಗು ನೋವರಿಯದ, ತಣ್ಣಗಿರುವ
stoke — ಕ್ರಿ ಉರುವಲು ಹಾಕು, ಉರಿಹೆಚ್ಚಿಸು
stolid — ಗು ಪಸಿಯಿಸಲಾಗದ, ತಲ್ಲಣಗೊಳ್ಳದ
stomach — ನಾ ಹೊಟ್ಟೆ (ಹೊಟ್ಟೆಕಟ್ಟು; ಹೊಟ್ಟೆಹೊರೆ; ಹೊಟ್ಟೆನೋವು)
stomach — ಕ್ರಿ 1 ಎದುರಿಸದೆ ಒಪ್ಪು, ತಾಳು 2 ಕರಗಿಸು
stone — ನಾ 1 ಅರೆ (ಆನೆ ತನ್ನ ದಾಡೆಯನ್ನು ಅರೆಯ ಮೇಲಿಟ್ಟು ತೀಡುತ್ತಿದೆ; ಪಾಸರೆ), ಕಣಿ (ಬಳಪದ ಕಣಿ), ಕಲ್ಲು (ಕಲ್ಲುಕುಟಿಗ; ಕಲ್ಲುಗುಂಡು; ಕಲ್ಲೊರಳು) 2 ಜಲ್ಲಿ (ಜಲ್ಲಿ ಹಾಕಿದ ಹೆದ್ದಾರಿ), ಹರಳು (ಹರಳುಂಗುರ), 3 ಗೊರಟೆ (ಮಾವಿನ ಗೊರಟೆ ಮೊಳೆ ತಿದೆ), ಕೊಟ್ಟೆ (ಹಣ್ಣಿನ ಕೊಟ್ಟೆ)
stone-blind — ಗು ಕಡುಗುರುಡು
stone-deaf — ಗು ಕಡುಗಿವುಡು
stooge — ನಾ ನಗೆಗಾರನ ತೊತ್ತು
stool — ನಾ ಮಣೆ (ಮಣೆಯ ಮೇಲೆ ಕುಳ್ಳಿರಿಸಿ ದರು), ಹಂಗುಳಿ (ಹಂಗುಳಿಗೆ),ಕಾಲ್ಮಣೆ
stoop — ಕ್ರಿ ಕೂನು (ಕೂಂತುಕೊಳ್ಳು; ಕೂನಿದ ಬೆನ್ನು),ಕುನಿ (ಕುನಿದ ಗೆಲ್ಲು), ತೊಂಗು (ತೊಂಗಿ ನೋಡು), ಕುಸಿ (ಕುಸಿದು ನಡೆ)
stop — ನಾ ನಿಲುಗಡೆ (ಈಗ ಇಲ್ಲಿ ನಿಲುಗಡೆ ಲಿುಲ್ಲ) ಕ್ರಿ ಮಾಂದು (ಮಾಂದಿದ ಕೆಲಸ), ಮಾಣು (ಮಾಣದೆ ಹಣ್ಣು ಕೊಡುವ ಮರ; ಮಾಣ್ಕೆ), ಕಟ್ಟು (ನೀರು ಕಟ್ಟು; ಅಡ್ಡಕಟ್ಟು), ತಳುಗು (ತಳುಗಿದ ನಡೆ), ತರುಬು (ಕುರಿ ಹಿಂಡನ್ನು ಅಲ್ಲೀ ತರುಬಿ ಎಣಿಕೆ ಮಾಡಲು ತೊಡಗಿದ), ತಡೆ (ತಡೆಹಾಕು; ತಡೆಗಟ್ಟು, ನಿಮ್ಮನ್ನು ತಡೆದವರು ಯಾರು?), ತಡಸು, ತಗೆ (ಓಡುತ್ತಿರುವವನನ್ನು ತಗೆದು ನಿಲ್ಲಿಸಿ ದರು), ನಿಲ್ಲು (ಮಳೆ ನಿಂತಿದೆ)
stopcock — ನಾ ನಿಲುಬಿರಡೆ, ತಡೆಬಿರಡೆ
stopgap — ನಾ ಮಾರೇರ್ಪಾಡು (ಇವತ್ತಿಗೆ ಮಾರೇರ್ಪಾಡು ಮಾಡಿಕೊಳ್ಳಿ), ನಡುವಿನ ಏರ್ಪಾಡು
stoppage — ನಾ ಉರುಕು (ಉರುಕುಗೊಳ್ಳು - ನಿಮ್ಮ ಕಲಸುಗ ಹಲವು ಬಾರಿ ಉರುಕು ಗೊಂಡಿತು), ನಿಲುಗಡೆ, ನಿಲುಮೆ
storage — ನಾ 1 ಸೇರುವೆ 2 ಉಗ್ರಾಣ
store — ನಾ 1 ಸೇರುವೆ 2 ಅಂಗಡಿ
store house — ನಾ ತುಡಿಕೆ (ಹಣ್ಣಿನ ತುಡಿಕೆ), ಉಗ್ರಾಣ
store — ಕ್ರಿ ಕೂಡಿಡು, ಸೇರಿಸು, ತುಂಬಿಡು
storey — ನಾ ಕರುಮಾಡ, ನೆಲಮಾಡ
stork — ನಾ ಕೊಕ್ಕರೆ, ಬೆಳ್ಳಕ್ಕಿ
storm — ನಾ 1 ಬಿರುಗಾಳಿ ಮಳೆ 2 ಪೆರ್ದಾಳಿ
story — ನಾ 1 ಕತೆ 2 ಕಟ್ಟುಕತೆ, ಸುಳ್ಳು
stout — ಗು ದಿಂಡು (ದಿಂಡಾಳು; ದಿಂಡು ಮಯ್), ತೋರ (ತೋರಗೊಂಬು; ತೋರದೊಡೆ), ದಪ್ಪ (ದಪ್ಪಹಲಿಗೆ; ದಪ್ಪ ಮರ), ಬಿಣ್- (ಬಿಣ್ಗೆಚ್ಚಲು, ಬಿಣ್ಗೊನೆ), ದಟ್ಟ (ದಟ್ಟ ಬಳ್ಳಿ), ತಿಣ್ಣ, (ತಿಣ್ಣ ಕೊಂಬು)
stoutness — ನಾ ಬಿಣ್ಪು (ತೊಡೆಯ ಬಿಣ್ಪು), ತಿಣ್ಪು
stove — ನಾ ಒಲೆ (ಮುಚ್ಚೊಲೆ; ಗೂಡೊಲೆ; ಒಲೆಹೂಡು; ಒಲೆ ಹತ್ತಿಸು), ಕುಮ್ಮಟ
stow — ಕ್ರಿ 1 ಮೂಟೆಕಟ್ಟು, ತುಂಬಿಡು 2 ನಿಲ್ಲಿಸು
straddle — ಕ್ರಿ ಬಗಟು (ಕುದುರೆಯ ಮೇಲೆ ಬಗಟಿ ಕುಳಿತ), ಕಿಸಿಗಾಲು ಹಾಕು
straggle — ಕ್ರಿ 1 ದಾರಿತಪ್ಪು, ಗುಂಪು ಬಿಟ್ಟು ಹೋಗು 2 ಚದರು 3 ಹಾರಾಡು (ಆಕೆಯ ಕೂದಲು ಹಾರಾಡುತ್ತಿದೆ)
straight away — ಗು ಕೂಡಲೇ, ಒಡನೆಯೇ
straight — ಗು ಸೈ (ಸಯ್ಕನೆ ಬರು; ಸಯ್ವಳಿ; ಸಯ್ಗೋಡು), ಸಯ್ತು (ಸಯ್ತುಗೆರೆ; ಸಯ್ತು ಮಾಡು), ಸರಿಸ (ಸರಿಸಗೊಳ್ಳು), ನೇರ (ನೇರ ದಾರಿ; ನೇರಮಾಡು; ನೇರಗೊಳಿಸು), ನೀಟ ನೀಟಮೂಗು),ನೀಟು (ನೀಟುದಿಮ್ಮಿ; ನೀಟುದಾರಿ), ನೆಟ್ಟಗೆ (ನೆಟ್ಟಗೆ ಹೋಗಿ ಬರಬೇಕು; ನೋಟ ನೆಟ್ಟಗಿರಬೇಕು)
straighten — ಕ್ರಿ ನಿಮಿರು (ನಿಮಿರಿದ ಹಾವು), ಉಡುಕಿಸು
straight-forward — ಗು ಸಯ್ದ, ಬದಿಹಿಡಿ ಯದ, ನೇರನುಡಿಯ, ಮರೆಮಾಚದ (ಮರೆ ಮಾಚದ ಮಾತು)
strain — ನಾ 1 ತಳಿ (ಒಳ್ಳೆ ತಳಿಯ ಆಕಳು) 2 ಒತ್ತಡ (ಆತ ಒತ್ತಡದಲ್ಲಿದ್ದಾನೆ), ಬಿಗಿತ (ತುಸು ಬಿಗಿತ ಕಡಿಮೆಯಾಗಲಿ)
strain — ಕ್ರಿ 1 ಬಸಿ (ಬಸಿದ ತಿಳಿನೀರು; ಬಸಿದ ಅನ್ನ), ತೆಂಡಿಸು 2 ತಿಣುಕು (ಕಲ್ಲನ್ನೆತ್ತಲು ಆತ ತಿಣುಕಿದ),ಮುಕ್ಕರೆ (ಮುಕ್ಕರೆಯುತ್ತ ಎಳೆದರು), ಮುಲುಕು (ಆರು ಹೆತ್ತವಳಿಗೆ ಮುಲುಕಲು ಕಲಿಸಬೇಕೇ?)
strainer — ನಾ ಜರಡಿ (ಅಕ್ಕಿಹಿಟ್ಟನ್ನು ಜರಡಿಗೆ ಹಾಕಿ ಅಲ್ಲಾಡಿಸಿದಾಗ ಹುಳಗಳು ಮೇಲುಳಿ ದುವು), ಬಸಿಗೆ
strait — ನಾ 1 ಇಕ್ಕಟ್ಟು (ಆತ ಇಕ್ಕಟ್ಟಿನಲ್ಲಿ ಸಿಲುಕಿದ್ದಾನೆ), ಬಿಕ್ಕಟ್ಟು (ಈ ಬಿಕ್ಕಟ್ಟಿನಿಂದ ಆತ ಹೇಗೆ ಹೊರಬಂದಾನು?) 2 ಬಾಗದ, ಕಟ್ಟುನಿಟ್ಟಿನ
straiten — ಕ್ರಿ ಇಕ್ಕಟ್ಟಾಗಿಸು, ಸಪುರಮಾಡು 2 ತೊಂದರೆಗೊಳಪಡು
strand — ನಾ 1 ಎಳೆ (ನೂಲಿನ ಎಳೆ) 2 ಕರೆ (ಕಡಲ ಕರೆ)
strand — ಕ್ರಿ 1 ಉಳಿದುಹೋಗು (ಮರಳು ಗಾಡಿನಲ್ಲಿ ಉಳಿದುಹೋದರು) 2 ಸಿಕ್ಕಿ ಬೀಳು (ಹಡಗು ಮರಳುದಂಡೆಯಲ್ಲಿ ಸಿಕ್ಕಿ ಬಿದ್ದಿದೆ)
strange — ಗು 1 ತಿಳಿಯದ, ನೋಡಿರದ, ಗುರುತಿಲ್ಲದ 2 ಎಂದಿನಂತಿಲ್ಲದ, ಬೇರಾದ 3 ಬಳಕೆಗೆ ಬಾರದ, ಬಳಕೆಯಲ್ಲಿಲ್ಲದ
stranger — ನಾ ಹೊರಬಿಗ, ಹೊಸಬ (ಅವನು ಊರಿಗೆ ಹೊಸಬ; ಹೊಸಬಿಗ), ಪೆಡೆಯ (ಅವನನ್ನು ನೋಡಿದರೆ ಪೆಡೆಯನೆಂದು ತಿಳಿಯುತ್ತದೆ)
strangle — ಕ್ರಿ ಕತ್ತು ಹಿಸುಕು
strap — ನಾ ಬಾರು (ಬಾರುಕೋಲು),ಮಿಳಿ (ಅನೆಯ ನಡುವಿಗೆ ಬಿಗಿವ ಮಿಳಿ), ಮಿಣ್ಣಿ
stratagem — ನಾ ಒಳಸಂಚು, ತೋಡು
strategy — ನಾ ಹಮ್ಮುಗೆಯ ಚೆಚ್ಚರಿಕೆ
stratocracy — ನಾ ಪಡೆಯಾಳ್ವಿಕೆ, ಪಡೆಯ ಮೇಲುಗಯ್
stratum — ನಾ ಪೊರೆ (ಮುಗಿಲ ಪೊರೆಯಲ್ಲಿ ಅಡಗಿದ ತಿಂಗಳು; ಪೊರೆಗೊಳ್ಳು), ಮಟ್ಟ
stratus — ನಾ ಕವಿದ ಮುಗಿಲು ನಾ 1 ಒಣಹುಲ್ಲು (ಒಣಹುಲ್ಲಿಗೆ ಬೆಂಕಿ ಹಿಡಿಯಿತು), ಬಯ್ಹುಲ್ಲು 2 ಹೀರು ಕಡ್ಡಿ 3 ಬೇಡದ ಕಸ
stray — ಕ್ರಿ 1 ದಾರಿತಪ್ಪು, ತಿರುಗಾಡು 2 ತಪ್ಪುಮಾಡು
stray — ಗು ಅಡಬೆ (ಅಡಬೆ ಎತ್ತು)
streak — ನಾ 1 ಉದ್ದಗೆರೆ, ಪಟ್ಟಿ 2 ತೆಳುಪರೆ 3 ಒಲವು
stream — ನಾ ಹೊನಲು (ಮನೆಯ ಹತ್ತಿರ ಒಂದು ಹೊನಲು ಹರಿಯುತ್ತದೆ), ತೋಡು (ನಮ್ಮ ತೋಡಿಗೆ ಹಾಕಿದ ಕಟ್ಟ ಒಡೆದು ಹೋಗಿದೆ), ತೊರೆ (ತೊರೆಯ ಬದಿಯಲ್ಲಿ ಬಿದಿರ ಮೆಳೆಯಿದೆ; ತೊರೆನಾಯಿ; ತೊರೆ ಮಾವು), ಹಳ್ಳ (ಹನಿಹನಿ ಕೂಡಿ ಹಳ್ಳವಾ ಲಿುತು), ಪೊಚ್ಚ (ಮುಂಗಾರಿನ ಮಳೆಗೆ ಪೊಚ್ಚದಲ್ಲಿ ನೆರೆ ಬಂದಿದೆ), ಕಾಲುಹೊಳೆ, ಕೊಂಚರು (ಕಣಿವೆಯೊಳಗೆ ಒಂದು ಸಣ್ಣ ಕೊಂಚರು ಹರಿಯುತ್ತಿತ್ತು)
street — ನಾ ಕೇರಿ (ಮೀನು ಮಾರುವ ಕೇರಿ; ಅಂಗಡಿಕೇರಿ; ಸೂಳೆಗೇರಿ)
strength — ನಾ ದಿಂಡು (ದಿಂಡಾಳು; ದಿಂಡು ಗೆಡು), ಬಲು (ಬಲುಬಲೆ; ಬಲುಹೋರಿ; ಬಲುಮೆ; ಬಲ್ಮೆ), ಈಡು (ಈಡಿಲ್ಲದ ಹುಡುಗ), ಅಳವು (ಅಳವುಗುಂದು; ಆತನಿಗೆ ಅಳವು ಎಶ್ಟಿದೆಯೆಂದು ತಿಳಿಯದು), ಕೊಡಿ, ಅಚ್ಚು, ಅಚ್ಚಾಳಿಕೆ, ಬಿಣತೆ
strengthen — ಕ್ರಿ ಗಟ್ಟಿಮಾಡು, ಅಳವು ಗೊಳಿಸು, ಬಲಿಯಿಸು, ತೆಲ್ಲಯಿಸು (ತೆಲ್ಲ ಯಿಸಿದ ಕೋಟೆ)
strenuous — ಗು 1 ಚುರುಕಿನ 2 ಊಕದ
stress — ನಾ 1 ಒತ್ತಡ, ಬಿಗಿತ 2 ಒತ್ತು (ಒತ್ತು ಕೊಡು), ಹೆಚ್ಚುಗಾರಿಕೆ
stretch — ನಾದಾಪು (ದಾಪುಹಾಕು, ದಾಪು ಕಾಲು; ದಾಪಿಡು), ಹರವು
stretch — ಕ್ರಿನಿಮಿರು (ಮರದ ಬೇರುಗಳು ಕೆಳಗಿಳಿದು ನಿಮಿರಿದ್ದುವು),ನಿಗುರು (ನಿಗುರು ಬಾಲ; ಕಯ್ಕಾಲನ್ನು ನಿಗುರು), ಒಡ್ಡು (ಕಯ್ಯೊಡ್ಡು), ಆನು (ಆನುವ ಕೈ)
stretch oneself — ಕ್ರಿ ನಿಲುಕು (ನಿಲುಕು ಗಾಲು; ನಿಲುಕಿನೋಡು; ನಿಲುಕಿದರೆ ಸಿಕ್ಕದ್ದು ಕುಳಿತರೆ ಸಿಗುವುದೇ?), ಜಾಗಿಸು (ಆತ ಒಡಲನ್ನು ಜಾಗಿಸಿ ಕಯ್ಯೆತ್ತಿ ಹಣ್ಣು ಕಿತ್ತ)
stretch out — ಕ್ರಿ ಚಾಚು (ಕಾಲು ಚಾಚಿ ಕುಳಿತುಕೊಂಡಳು), ನೀಡು (ಕಾಲು ನೀಡು; ನೀಡಿಕೊಳ್ಳು)
stretched — ಗು ನಿಡು (ನಿಡುಗೊಂಬು; ನಿಡು ಗೊರಲು; ನಿಡುಬೊಬ್ಬೆ; ನಿಡುಮೂಗು), ನಿಟ್ಟು (ನಿಟ್ಟಾಲಿ; ನಿಟ್ಟುಸಿರು; ನಿಟ್ಟೆಲುವು), ನಿಡಿದು (ಆನೆ ಹನ್ನೆರಡಡಿ ನಿಡಿದಿದೆ), ಚಾಪು (ಚಾಪುಕಲ್ಲು; ಚಾಪುಕಾಲು), ತೂರಲು (ತೂರಲು ಗೆಲ್ಲು)
stretcher — ನಾ ಕಯ್ಮಂಚ
strew — ಕ್ರಿ (ಆ) ಚದರು, ಹರಡು (ಮಾ) ಬೀರು, ಚೆಲ್ಲು, ಎರಚು ನಾ ಕಟ್ಟುನಿಟ್ಟು (ಅವರು ಮಕ್ಕಳನ್ನು ಬಹಳ ಕಟ್ಟುನಿಟ್ಟಿನಲ್ಲಿ ಬೆಳೆಸಿದ್ದಾರೆ), ಬಿರುಸು
stricture — ನಾ 1 ತೆಗಳಿಕೆ 2 ಕೊಳವೆ ಮುಡುಕು
stride — ನಾ ಬೀಸುಗಾಲು, ದಾಪು (ದಾಪು ಗಾಲು; ದಾಪುಹಾಕು), ಜಾಪು, ಜಂಗೆ (ಉದ್ದ ಜಂಗೆಯನ್ನಿಟ್ಟು ನಡೆ)
strident — ಗು ಬಿರುಸು (ಬಿರುಸುಲಿ), ಪರಟೆ, ಕೀರಲು
strife — ನಾ ಕಿಸುರು (ಕಿಸುರಳಿ; ಕಣ್ಗಿಸುರು), ತಿಕ್ಕಾಟ, ಜಗಳ
strike — ನಾ 1 ಹೊಡೆತ 2 ಸಂಪು
strike — ಕ್ರಿ 1 ಇರಿ (ಕತ್ತಿಯಿಂದ ಇರಿ), ತಿವಿ (ಚೂರಿಯಿಂದ ತಿವಿ), ಬೆಸೆ (ಚಾಟಿಯಿಂದ ಬೆಸೆ; ಬೆಸೆಕೋಲು), ಬೆದಕು (ಉಗುರಿನಿಂದ ಬೆದಕು), ಕುತ್ತು (ಕೋಲಿನಿಂದ ಕುತ್ತು), ಸದೆ (ಸದೆಬಡಿ; ಸದೆಗುಟ್ಟು), ಅಪ್ಪಳಿಸು (ಹಡಗು ಬಂಡೆಕಲ್ಲಿಗೆ ಅಪ್ಪಳಿಸಿತು), ಅಣೆ (ಅಣೆದಾಡು; ಅಣೆದು ನೂಕು), ತದೆ (ತದಕು - ಮಕ್ಕಳನ್ನು ತದಕಬಾರದು), ತೋಕು (ಬೊಗಳುವ ನಾಯಿಗೆ ತೋಕಿದ), ತಾಟು (ತಾಟಾಡು; ಗೆಲ್ಲು ತಲೆಗೆ ತಾಟಿತು), ಅರೆ (ಬೆಂಕಿಕಡ್ಡಿ ಅರೆದು ಒಲೆ ಹೊತ್ತಿಸಿದ), ಗೀರು (ಬೆಂಕಿಕಡ್ಡಿ ಗೀರು) 2 ಬೆಟ್ಟು (ಬೆಟ್ಟಿದ ಕಾಸು) 3 ಕಂಡುಹಿಡಿ, ಕಾಣಿಸು 4 ಅಳಿಸು, ತೆಗೆದುಹಾಕು
striking — ಗು ನಾಟುವ, ಸೆರೆಹಿಡಿವ, ಎದ್ದು ಕಾಣುವ (ಆಕೆ ಇವತ್ತು ಎದ್ದುಕಾಣುವ ಉಡುಪು ತೊಟ್ಟು ಬಂದಿದ್ದಾಳೆ)
string — ನಾ 1 ನೂಲು, ಎಳೆ, ನಾರು, ಹೆದೆ 2 ಸರಿಗೆ, ಕಂಬಿ 3 ಸಾಲು, ವರಸೆ
string — ಕ್ರಿ ಕೋಯು (ಕೆಂದಾವರೆಯ ಎಸಳು ಗಳನ್ನು ಕೋದು ತಂದಳು), ಸುರಿ (ಮೀನು ಗಳನ್ನು ಕಡ್ಡಿಯಲ್ಲಿ ಸುರಿದಿದ್ದಾಳೆ), ಪೋಣಿಸು (ಪೋಣಿಸಿದ ಮುತ್ತಿನ ದಂಡೆ)
stringent — ಗು ಕಟ್ಟುನಿಟ್ಟಿನ, ಬಿರುಸು
stringy — ಗು ನಾರುನಾರಾದ
strip — ಕ್ರಿ ಸುಗಿ (ಸುಗಿದ ಸಿಪ್ಪೆ), ಉಗಿ (ಮುಡಿ ಹಿಡಿದು ಸೀರೆಯನ್ನು ಉಗಿದ), ಸುಲಿ (ಉಟ್ಟ ಸೀರೆಯನ್ನು ಸುಲಿದ), ತರಿ (ಹುಡುಗರು ಹೂವನ್ನೆಲ್ಲ ತರಿದು ತಂದಿದ್ದಾರೆ), ಕಳಚು (ಬಟ್ಟೆ ಕಳಚು), ಬಿಚ್ಚು
stripe — ನಾ ಬರೆ (ಬರೆಹಾಕು; ಬರೆ ಎಳೆ; ಬರೆಕೊಡು; ಬರೆಕೋಲು),ಸೀರು (ಸೀರೆಳೆ)
strive — ಕ್ರಿ ಹೆಣಗು (ಹೆಣಗಾಡು; ಹೆಣಗಾಟ), ಮಲೆದಾಡು, ಕೊಸರು (ಕುದುರೆ ಕೊಸರಿ ಕೊಂಡು ಓಡಿಹೋಯಿತು
stroke — ನಾ 1 ಹೊಡೆತ 2 ದಾಳಿ 3 ಗುರುತು (ಹಾಳೆಯ ಮೇಲಿನ ಗುರುತು) 4 ನೇವರಿಕೆ
stroke — ಕ್ರಿ ನೀವು (ಬೆನ್ನನ್ನು ನೀವುತ್ತಿದ್ದ), ತಡವು (ಮಯ್ದಡವು), ತಳುಕು, ನಿವರು (ನೇವರಿಸು), ಸವರು (ಬೆನ್ನನ್ನು ಸವರು), ಕಯ್ಯಾಡಿಸು ಕ್ರಿ ಅಡ್ಡಾಡು, ತಿರುಗಾಡು
stroller — ನಾ ದಾರಿಹೋಕ
strong — ಗು ಕೊಡಿ (ಕೊಡಿಬಟ್ಟೆ, ಕೊಡಿಕಲ್ಲು, ಕೊಡಿಯ), ಗಟ್ಟಿ (ಗಟ್ಟಿಮುಟ್ಟು), ಕಡು (ಕಡುಕೆಂಪು), ಬಿರುಸು, ಹುರಿ (ಹುರಿಗಲ್ಲು)
strong (grow) — ಕ್ರಿ ಬಲಿ (ಬಲಿತ ಗಿಡ; ಬಲಿತವನು)
strong man — ನಾ ದಿಂಡಾಳು, ಅಚ್ಚಾಳು
stronghold — ನಾ ಕೋಟೆ
strongly — ಗು ದಿಮ್ಮನೆ (ದಿಮ್ಮನೆ ಹಿಡಿ)
strop — ನಾ ಬಾರು (ಬಾಳು ಮಸೆಯುವ ಬಾರು)
structure — ನಾ 1 ಇಟ್ಟಳ (ಅದರ ಇಟ್ಟಳ ಹೇಗಿದೆಯುಂದು ಬಿಡಿಸಿ ನೋಡಬೇಕು), ಕಟ್ಟು 2 ಕಟ್ಟಡ
struggle — ಕ್ರಿ ಒದ್ದಾಡು (ಕೆಲಸವನ್ನು ಇವತ್ತೇ ಮುಗಿಸಬೇಕೆಂದು ಒದ್ದಾಡುತ್ತಿದ್ದಾನೆ), ಹೆಣ ಗಾಡು, ಹೊಯ್ದಾಡು (ಒಂದು ಕತೆಯ ನ್ನಾದರೂ ಬರೆದು ಮುಗಿಸಬೇಕೆಂದು ಹೊಯ್ದಾಡುತ್ತಿದ್ದಾನೆ), ನವೆ (ನವೆನವೆದು)
strut — ನಾ 1 ಗುಜ್ಜು 2 ಆನಿಕೆ
stub — ನಾ ತುಂಡು, ಮೋಟು
stubble — ನಾ ಕೋಲಿ (ಜೋಳದ ಕೋಲಿ), ಬಸೆ (ತೊಗರಿಯ ಬಸೆ), ಕೂಳೆ (ಕೂಳೆಗಿಡ; ಕೂಳೆಕಾಯಿ; ಕೂಳೆಬೆಳೆ)
stubborn — ಗು ಮೊಂಡು (ಈ ಹುಡುಗ ಬರೀ ಮೊಂಡು), ಹಟಮಾರಿ, ಪಟ್ಟುಬಿಡದೆ (ಆತ ಪಟ್ಟುಬಿಡದೆ ಯಾವ ಕೆಲಸ ಕೊಟ್ಟರೂ ಮುಗಿಸಿಬಿಡುತ್ತಾನೆ)
stud — ನಾ 1 ತಳಿಕುದುರೆ, ತಳಿಹೋರಿ 2 ಮೊಳೆ, ಗುಬುಟು
student — ನಾ ಕಲಿಗ
studious — ಗು ಓದಕ್ಕರೆಯ, ಗಮನವಿರುವ
study — ನಾ ಓದು (ನಿಮ್ಮ ಓದು ಯಾವಾಗ ಮುಗಿಯುತ್ತದೆ?), ಕಲಿಕೆ (ಅವನ ತಲೆ ಕಲಿಕೆಗಿಂತಲೂ ಆಟಕ್ಕೇ ಹೋಗುತ್ತದೆ)
study — ಕ್ರಿ ಕಲಿ (ಅವಳು ಹಲವು ಹಾಡುಗಳನ್ನು ಕಲಿತಿದ್ದಾಳೆ)
stuff in — ಕ್ರಿ ಅಡಪು, ಗಿಡಿ (ತೂತಿನೊಳಗೆ ಹುಲ್ಲು ಗಿಡಿದ), ತುರುಕು (ಬಂದ ಓಲೆಗಳ ನ್ನೆಲ್ಲ ಬಾಗಿಲ ಸಂದಿನಲ್ಲಿ ತುರುಕಿದ್ದಾನೆ)
stuffy — ಗು 1 ಗಾಳಿಯಾಡದ, ಉಸಿರುಗಟ್ಟಿ ಸುವ 2 ಮೆರೆತದ ಕ್ರಿ ಹೆಡ್ಡುಮಾಡು
stumble — ಕ್ರಿ ಎಡವು (ಕಲ್ಲಿಗೆ ಎಡವಿ ಬಿದ್ದ), ಎಡರು (ಹೊಸ್ತಿಲಿಗೆ ಎಡರಿ ಕಾಲುಬೆರಳಿನ ತೊಗಲು ಎದ್ದಿದೆ), ಮುಗ್ಗರಿಸು (ಮೊದಲ ಹೆಜ್ಜೆಯಲ್ಲೀ ಮುಗ್ಗರಿಸಿದ), ಮುಗ್ಗಿರಿ, ತಬ್ಬರಿಸು (ತವಕ ಪಟ್ಟವ ತಬ್ಬರಿಸಿ ಬಿದ್ದ), ಅಡಿಗೆಡು
stumbling — ಗು ತಪ್ಪಲು (ತಪ್ಪಲಡಿ),ತತ್ತು (ತತ್ತುನಡೆ)
stumbling-block — ನಾ ಅಡ್ದಿ (ನಿಮ್ಮ ಕೆಲಸಕ್ಕೆ ಅಡ್ಡಿ ಎಲ್ಲಿದೆ?), ತೊಂದರೆ
stump — ನಾ 1 ಕೂಳೆ (ಜೋಳದ ಕೂಳೆ), ಕುತ್ತಿ (ಮರದ ಕುತ್ತಿ), ಗುತ್ತಿ (ಕಾಸರಕದ ಗುತ್ತಿ), ಕೊರಡು (ಮರದ ಕೊರಡು) 2 ಗುರಿಕೋಲು
stun — ಕ್ರಿ 1 ಮಯ್ಮರೆಸು 2 ಬೆರಗುಗೊಳಿಸು, ಬೇಳುವೆಗೊಳಿಸು
stunning — ಗು ಸೊಗಸಾದ, ಬೆರಗುಗೊಳಿ ಸುವ
stunt — ನಾ ಗಮನಸೆಳೆವ ಕೆಲಸ
stunt — ಕ್ರಿ ನರಟು (ನರಟಿದ ಗಿಡ), ಬೆಳೆ ತಡೆ, ಕುಗ್ಗಿಸು, ಕುರುಟು ಬೀಳಿಸು
stunted — ಗು ಕೊರಟು (ಕೊರಟು ಬೀಳು; ಕೊರಟು ಬೆರಳು)
stupefy — ಕ್ರಿ ಮುಚ್ಚುರು (ತಲೆಗೆ ಪೆಟ್ಟು ಬಿದ್ದು ಆತ ಮುಚ್ಚುತ್ತುಹೋದ)
stupendous — ಗು ಬೆರಗಾಗಿಸುವ, ದಂಗಾ ಗಿಸುವ
stupid — ನಾ ಮುಟ್ಟಾಳ, ಮಡ್ಡ (ಮಡ್ಡತನ), ದಡ್ಡ (ಆತ ದಡ್ಡರನ್ನೆಲ್ಲ ತನ್ನೊಂದಿಗೆ ಸೇರಿಸಿಕೊಂಡಿದ್ದಾನೆ; ದಡ್ಡಿ), ಹೆಡ್ಡ (ಹೆಡ್ಡು; ಹೆಡ್ಡತಿ), ಎಡವಟ್ಟ, ಗಾಂಪ (ಗಾಂಪು; ಗಾಂಪತನ), ಎಗ್ಗ (ಆತನೊಬ್ಬ ದೊಡ್ಡ ಎಗ್ಗ; ಎಗ್ಗತನ)
stupid — ಗು ಬೆಳ್- (ಬೆಳ್ಳಾಗು; ಬೆಳ್ಗಳು - ಬೆಳ್ಗಳ ಬರಹಗಳು; ಬೆಳ್ಳೆತ್ತು; ಬೆಳ್ಳಾಳು), ಪೆದ್ದು (ಪೆದ್ದುತನ), ಮಂಕು (ಮಂಕಾಗು, ಮಂಕುಹಿಡಿ; ಮಂಕುತನ), ಮೊದ್ದು (ಮೊದ್ದು ಗಳಹು), ಅಸಡು (ಅಸಡು ಕುದುರೆ)
stupor — ನಾ ಜೊಂಪು (ಕಣ್ಣಿಗೆ ನಿದ್ದೆಯ ಜೊಂಪು ಹತ್ತಿದೆ), ಜೋಮು, ತೊವಲು (ತೊವಲುಗೊಳ್ಳು - ಹೆದರಿಕೆಯಿಂದ ತೊವಲುಗೊಂಡ ಹೆಂಗಸರು)
sturdy — ಗು ಗಟ್ಟಿಮುಟ್ಟಾದ, ದಪ್ಪದ
stutter — ಕ್ರಿ ನತ್ತು (ಕೀಳರಿಮೆಯೆಂದಾಗಿ ಆತ ಮಾತಿನಲ್ಲಿ ನತ್ತುತ್ತಿರುತ್ತಾನೆ), ತಟ್ಟಿಸು (ತಟ್ಟಿಸಿ ಮಾತನಾಡು), ಉಗ್ಗು (ಆತನಿಗೆ ಗಡಿಬಿಡಿಯಲ್ಲಿ ಮಾತನಾಡ ಹೊರಟಾಗ ಉಗ್ಗುತ್ತದೆ)
stuttering — ನಾ ತಿಕ್ಕಲು (ತಿಕ್ಕಲು ತಿಕ್ಕಲಾಗಿ ಮಾತನಾಡು)
sty — ನಾ 1 ಕಣ್ಣುಕುಟಿಕೆ, ರೆಪ್ಪೆಕುರು 2 ಕೊಳಕೆಡೆ, ಹಂದಿದೊಡ್ಡಿ
style — ನಾ 1 ಒಡ್ಡವ (ಈ ಬರಹದ ಒಡ್ಡವ ಚನ್ನಾಗಿದೆ; ನುಡಿಯೊಡ್ಡವ) 2 ಬಳಪ 3 ಬಗೆ (ಆತ ನಡೆಯುವ ಬಗೆ ನೋಡಲು ಅಷ್ಟೂಂದು ಚನ್ನಾಗಿಲ್ಲ), ಮಾಟ, ನಿರತೆ, ಚೊಕ್ಕಳಿಕೆ ಗು ಗಾಡಿವೆತ್ತ (ಗಾಡಿವೆತ್ತ ಹುಡುಗಿ), ಹೊಲಬರಿತ, ನಯಗೊಂಡ (ನಯಗೊಂಡ ಅರಿವಿಗ), ಒಲವಿನ
subaltern — ನಾ ಅಚ್ಚುಳಾಯ್ತ (ನಿಮ್ಮಲ್ಲಿಗೆ ನನ್ನ ಅಚ್ಚುಳಾಯ್ತನನ್ನು ಕಳಿಸುತ್ತೇನೆ)
subconscious — ಗು ಅರಿವಿಗೆ ಎಟಕದ (ಅರಿವಿಗೆ ಎಟಕದ ಒಳಅರಿವು)
subcontinent — ನಾ ಅರೆಪೆರ್ನೆಲ
subdivide — ಕ್ರಿ ಮತ್ತೆ ತುಂಡಿಸು, ಮಾರುಗಿ
subdue — ಕ್ರಿ ಅಡಕು (ಈ ಹೋರಿಯನ್ನು ಅಡಕಲು ಅವನೇ ಬರಬೇಕು), ಉಡುಗು (ಆತನ ಅದಟೆಲ್ಲ ಉಡುಗಿಹೋಗಿದೆ),ಒತ್ತರಿಸು
subject — ನಾ 1 ನಾಡಿಗ 2 ಹುರುಳು (ಯಾವ ಹುರುಳಿನ ಕುರಿತಾಗಿ ಅವರು ಮಾತನಾಡು ತ್ತಿದ್ದಾರೆ?)
subject — ಕ್ರಿ 1 ಒಳಪಡು, ಗುರಿಯಾಗು, ಈಡಾಗು 2 ಒಲವಿರು 3 ಮೇಲೆ ನಿಂತಿರು
subjective — ಗು ಅನಿಸಿಕೆಯ, ನನಸಲ್ಲದ
sublet — ಕ್ರಿ ಮರುಗೇಣಿಗೆ ಕೊಡು, ಒಳ ಗುತ್ತಿಗೆಗೆ ಕೊಡು
sublime — ಗು ಅಗ್ಗಳಿಕೆಯ, ಮೇಲ್ಮಟ್ಟದ, ಬೆರಗುಗೊಳಿಸುವ, ಮೆಚ್ಚತಕ್ಕ
submarine — ನಾ ಒಳಹಡಗು (ನೀರೊಳಗೆ ಓಡುವ ಒಳಹಡಗು)
submerge — ಕ್ರಿ ಮುಳುಗು (ಕಡಲಿನಲ್ಲಿ ಮುಳುಗಿದ ಹಡಗು)
submersion — ನಾ ಮುಳುಗಡೆ (ಈ ಹಳ್ಳಿಗ ಳೆಲ್ಲ ಮುಳುಗಡೆಯಾಗಲಿವೆ)
submission — ನಾ 1 ಅರಿಕೆ, ಸಲ್ಲಿಕೆ 2 ಸೋಲೊಪ್ಪಿಗೆ, ತಲೆಬಾಗುವಿಕೆ
submit — ಕ್ರಿ 1 ಬಗ್ಗು (ಯಾರಿಗೂ ಬಗ್ಗ ದವನು), ಎಡೆಗೊಡು, ಮಣಗು (ಮಣಗಿ ದವನು), ತಲೆಬಾಗು (ನಿಮ್ಮ ಮಾತಿಗೆ ಆತ ತಲಬಾಗದಿರಲಿಕ್ಕಿಲ್ಲ) 2 ಅರಿಕೆಮಾಡು, ಕೋರಿಕೆ ಸಲ್ಲಿಸು
subordination — ನಾ ಅಚ್ಚುಳ (ಅಚ್ಚು ಳಾಯ್ತ - ಆತನಿಗೆ ಹಲವರು ಅಚ್ಚುಳಾಯ್ತ ರಿದ್ದಾರೆ)
suborn — ಕ್ರಿ ಆಣೆಮುರಿಸು, ಮಾತು ತಪ್ಪು ವಂತೆ ಮಾಡು
subscribe — ಕ್ರಿ 1 ಒಪ್ಪಿಗೆ ಕೊಡು 2 ಹಣಕೊಡುಗೆ ನೀಡು, ಹಣನೀಡು
subscript — ನಾ ಕೆಳಬರಹ, ಅಡಿಬರಹ
subsequent — ಗು ಆಮೇಲಿನ, ಮುಂದಿನ
subservient — ಗು 1 ಕಯ್ಕೆಳಗಿನ 2 ತಲೆ ಬಾಗುವ, ಕೀಳ್ಪಡಿಸಿಕೊಳ್ಳುವ
subside — ಕ್ರಿ ಅಡಗು (ನಿಮ್ಮ ಮಾತು ಕೇಳಿ ಆತನ ಸಿಟ್ಟು ಅಡಗಿತು), ತಗ್ಗು (ಬೆಂಕಿಯ ಕಾವು ತಗ್ಗಿದೆ), ಕುಸಿ, ತಳಸೇರು
subsidiary — ಗು 1 ಒತ್ತಾಸೆಯ, ನೆರವು ನೀಡುವ 2 ಕಯ್ಕೆಳಗಿನ, ಕೊಡುಗೆ ಪಡೆವ ನಾ ಕೊಡುಗೆ (ಆಳ್ವಿಕೆಯ ಕೊಡುಗೆ)
subsist — ಕ್ರಿ ಬಾಳು (ಉತ್ತು ಬಾಳುವ ಒಕ್ಕಲುಮಗ), ಬದುಕು, ಉಳಿ
subsistence — ನಾ 1 ಬಾಳ್ವಿಕೆ 2 ಹೊಟ್ಟೆ ಪಾಡು, ಬಾಳುಹಣ
subsoil — ನಾ ಒಳಮಣ್ಣು, ಕೆಳಮಣ್ಣು
substance — ನಾ 1 ಸೊಗಡು, ಹೊಲಬು, ತಿರುಳು 2 ಮಯ್ 3 ಹುರುಳು 4 ಸೊಮ್ಮು
substantial — ಗು 1 ಗಟ್ಟಿಯಾದ, ಪೊಳ್ಳಲ್ಲದ 2 ನನ್ನಿಯ, ನನಸಾದ 3 ಸಾಕಷ್ಟು
substantiate — ಕ್ರಿ 1 ಮಯ್ಕೊಡು 2 ಸರಿ ಯೆಂದು ತೋರಿಸಿಕೊಡು
substitute — ಕ್ರಿ ಮಾರು, ಮಾರ್ಪುಕೊಡು
substratum — ನಾ ಕೆಳಮಡಿಕೆ
subterfuge — ನಾ ಸುಳ್ಳು ಹೆಳೆ, ತಪ್ಪಿಸುವ ಹಂಚಿಕೆ
subterranean — ಗು ನೆಲದಡಿಯ, ನೆಲ ದೊಳಗಿನ
subtle — ಗು ಚೆಚ್ಚರಿಕೆಯ, ಚುರುಕಾದ, ಸುಳುವಾಗಿ ತಿಳಿಯದ
subtract — ಕ್ರಿ ಕಳೆ (ಹತ್ತರಿಂದ ಎಂಟನ್ನು ಕಳೆ)
suburb — ನಾ ಪೊಳಲಿನ ಹೊರ
subvention — ನಾ ಕೊಡುಗೆ ಹಣ, ಒದವಿ ಹಣ
subversive — ಗು ಹಾಳುಗೆಡವುವ, ಮುಳು ವಾಗುವ
subvert — ಕ್ರಿ 1 ಪುಚ್ಚಳಿ, ಅಲೆಮಾಡು 2 ಉರುಳಿಸು, ಕೊನೆಗಾಣಿಸು 3 ಕೆಡಿಸು
succeed — ನಾ 1 ತೇರು (ತೇರ್ಗಡೆ - ತೇರ್ಗಡೆ ಯಾದ ಹುಡುಗ; ಕಡ ತೇರು), ಒಡಗೂಡು, ನೆರವೇರು (ಅವನ ಕೆಲಸಗಳೆಲ್ಲ ನೆರವೇರಿ ದುವು), ಕಯ್ಗೂಡು, ಗೆಲ್ಲು (ಹೋರಾಟ ದಲ್ಲಿ ಗೆದ್ದು ಬಂದಿದ್ದಾನೆ) 2 ಹಿಂಬಾಲಿಸು
success — ನಾ ಅನು (ನಮ್ಮ ಕೆಲಸದ ಅನುವಿ ನಿಂದ ಪಡೆದ ಹಣ), ಕೂಡುದಲೆ, ಏಳಿಗೆ, ಗೆಲುವು (ಗೆಲುವಿನಿಂದ ಆತ ಹಿಗ್ಗಿದ್ದಾನೆ)
succession — ನಾ 1 ಸಾಲು, ವರಸೆ 2 ಹಕ್ಕುದಾರಿಕೆ
successive — ಗು ಹಿಂಬರುವ, ಹಿಂದೆ ಹಿಂದೆ ಬರುವ
successor — ನಾ ಮರುಪಡೆಗ
succinct — ಗು ಅಡಕವಾದ, ಗಿಡ್ಡ
succour — ನಾ 1 ಒದವಿ, ನೆರವು, ಒತ್ತಾಸೆ (ತೊಂದರೆಯಿದ್ದಾಗ ದೊರೆತ ಒತ್ತಾಸೆ) 2 ಒದವಿಗ, ಒತ್ತಾಳು ಗು 1 ಎಸರು ತುಂಬಿದ 2 ಗಮನ ಸೆಳೆವ
succumb — ಕ್ರಿ ತುತ್ತಾಗು, ಬಲಿಬೀಳು, ಸೋಲು, ಬಿಟ್ಟುಕೊಡು
suck — ಕ್ರಿ ಹೀರು (ನೆತ್ತರನ್ನು ಹೀರುವ ಜಿಗಣೆ), ಸೀಪು (ಬೊಟ್ಟುಸೀಪು; ಮೊಲೆಸೀಪು), ಚೀಪು (ಬೆರಳು ಚೀಪು),ಜಬ್ಬು (ಮಾವಿನ ಹಣ್ಣು ಜಬ್ಬು; ಜಬ್ಬರಿಸು), ಸೇದು (ಹೊಗೆ ಸೇದು)
sucker — ನಾ 1 ಹೀರುತಟ್ಟೆ 2 ಬೇರು ಮೊಳಕೆ
suckle — ಕ್ರಿ 1 ಮೊಲೆಕೊಡು, ಮೊಲೆ ಯೂಡಿಸು, ಮೊಲೆಯುಣಿಸು 2 ಹೊರೆ, ಆರಯ್ಕೆ ಮಾಡು
suction — ನಾ ಹೀರಿಕೆ
sudden — ಗು ಎದುರುನೋಡದ, ಚೆಚ್ಚರ (ಚೆಚ್ಚರ ದಾಳಿ), ಚಾಗ (ಚಾಗನುಡಿ)
suddenly — ಗು ಕೂಡಲೆೀ, ದಿಗ್ಗನೆ (ಅವರನ್ನು ಕಂಡು ಆತ ದಿಗ್ಗನೆ ಎದ್ದುನಿಂತ), ಪಕ್ಕನೆ (ಅವಳು ನಮ್ಮ ಗುಟ್ಟನ್ನು ಪಕ್ಕನೆ ಒಡೆ ದಳು), ಚಟ್ಟನೆ, ಚಕ್ಕನೆ (ಚಕ್ಕನೆ ಕಿತ್ತು ಹಾಕಿದ), ಒಮ್ಮಿಂದೊಮ್ಮೆ, ಒಮ್ಮೆಲೆ (ಒಡ್ಡು ಒಮ್ಮೆಲೆ ಒಡೆದುಬಿಟ್ಟಿತು), ಕಳ್ಕನೆ (ಕಳ್ಕನೆ ಕಚ್ಚಿತು), ಕಿಸಕ್ಕನೆ (ಕಿಸಕ್ಕನೆ ಓಡಿಹೋದ), ಪುಸಕ್ಕನೆ (ಪುಸಕ್ಕನೆ ಹಾರಿಹೋಯಿತು), ಅಳ್ಕನೆ, ಗಪ್ಪನೆ (ಗಪ್ಪನೆ ಹಿಡಿದ), ಗಕ್ಕನೆ (ಗಕ್ಕನೆ ಎದ್ದುನಿಂತ), ತಟಕ್ಕನೆ (ಅವಳಿಗೆ ತಟಕ್ಕನೆ ಕೋಪ ಬಂತು), ದಬ್ಬನೆ, ದಬಕ್ಕನೆ (ದಬಕ್ಕನೆ ಕೆಳಗೆ ಹಾರಿದ), ತೊಟ್ಟನೆ, ಜರ್ರನೆ (ನಿಮ್ಮನ್ನು ಕಂಡೊದನೆ ಆತನ ಸಿಟ್ಟು ಜರ್ರನೆ ಇಳಿ ಯಿತು)
suds — ನಾ ನೊರೆ, ನೊರೆನೀರು
sue — ಕ್ರಿ 1 ಮೊರೆಯಿಡು, ಮೇಲ್ಮನವಿ ಸಲ್ಲಿಸು 2 ಕಟ್ಟಲೆ ನಡೆಸು
suffer — ಕ್ರಿ ಪಡು (ಅವನು ಪಟ್ಟ ಪಾಡು ಎಂತಹದೆಂದು ಯಾರಿಗೂ ತಿಳಿಯದು), ತೊಳಲು (ಬಡತನದಿಂದ ತೊಳಲುವ ಮಂದಿ)
sufferance — ನಾ 1 ತಾಳಿಕೆ, ತಾಳ್ಮೆ 2 ಒಪ್ಪಿಗೆ, ಮೂಗೊಪ್ಪಿಗೆ
suffering — ನಾ ಪಡಲು (ಪಡಲುಹಿಡಿ), ಪಾಡು (ಪಾಡುಪಡು; ಪಾಡುಬೀಳು), ಹಾಡು, ಪಾಟು
suffice — ಕ್ರಿ ಸಾಕಾಗು (ಇದು ಇಲ್ಲಿರುವವರಿ ಗೆಲ್ಲ ಸಾಕಾಗುತ್ತದೆ), ಸಾಲು (ಸಾಲದೆ ಬಂದರೆ ಕೊಡುತ್ತೇನೆ), ತಣಿಸು
sufficient — ಗು ಸಾಕಶ್ಟು, ಬೇಕಾದಶ್ಟು, ಸಾಲುವಶ್ಟು (ಅವನ ಹತ್ತಿರ ಮೂರು ತಲೆಮಾರಿಗೆ ಸಾಲುವಶ್ಟು ಹಣ ಇದೆ)
suffix — ಹಿನ್ನೊಟ್ಟು
suffocate — ಕ್ರಿ ಉಸಿರುಕಟ್ಟು (ಉಸಿರು ಕಟ್ಟಿ ಸಾಯು), ಉಸಿರಡಗಿಸು
suffrage — ನಾ ಒಪ್ಪಿತದ ಹಕ್ಕು, ಒಪ್ಪಿತ ಕ್ರಿ ಅಳುರು, ಕವಿ (ಕತ್ತಲೆ ಕವಿದಿದೆ), ಕಪ್ಪು
sugar — ನಾ ಸಕ್ಕರೆ
sugarcane — ನಾ ಕಬ್ಬು (ಈ ಬಾರಿ ಆತ ಕಬ್ಬು ಬೆಳೆಯುತ್ತಾನಂತೆ), ಇಂಗೋಲು
sugarcane press — ನಾ ಆಲೆ (ಕಬ್ಬಿನಾಲೆ; ಆಲೆಯ ಮನೆ; ಆಲೆಯಾಡು)
suggest — ಕ್ರಿ ತೋಚು (ನನಗೆ ಏನೂ ತೋಚು ವುದಿಲ್ಲ), ಹೊಳೆ (ಸರಿಯೋ ತಪೊ್ಪೀ ನನಗೆ ಹೊಳೆದುದನ್ನು ತಿಳಿಸಿದೆ), ಸುಳಿವು ಕೊಡು
suggestion — ನಾ ತಿಳುಹಿಕೆ, ಸುಳಿವು
suicide — ನಾ 1 ತನ್ಕೊಲೆ 2 ತನ್ಕೊಲೆಗ 3 ತನ್ಪಡಪು ಕಳೆತ
suit — ನಾ 1 ಉಡುಪುಕಂತೆ, ಉಡುಪು ಜೋಡಿ 2 ಅರಿಕೆ, ಬೇಡಿಕೆ
suit — ಕ್ರಿ ಒಪ್ಪು (ಈ ಉಡುಪು ನಿನಗೆ ಒಪ್ಪು ತ್ತದೆ), ತಗು (ಅವನಿಗೆ ತಕ್ಕ ಹೆಂಡತಿ),ಹೊಂದು (ಈ ಮಾತು ಅಲ್ಲಿಗೆ ಹೊಂದುವು ದಿಲ್ಲ), ಏರು (ಅವನಿಗೆ ಏರದ ಕೆಲಸ), ಒಸೆ, ತಡೆ (ಆತನಿಗೆ ಇರುಳಿನ ಊಟ ತಡೆಯುವುದಿಲ್ಲ), ಒಗ್ಗು (ಒಗ್ಗದ ಊರು)
suitable — ಗು ತಕ್ಕ, ಒಪ್ಪುವ, ಒಂಟು (ಒಂಟು ಕೆಲಸ)
suite — ನಾ 1 ಕೋಣೆಕಂತೆ 2 ತೊತ್ತಿಗ ಪಡೆ 3 ತಟ್ಟುಮುಟ್ಟು
suitor — ನಾ 1 ಓಲಯ್ಸುಗ (ಆಕೆಯ ಓಲ ಯ್ಸುಗ ಇವತ್ತು ಬರಲಿಲ್ಲ) 2 ಅಂಕೆಗಾರ, ಮನವಿಗಾರ
sulk — ಕ್ರಿ ಮುಳಿದು ಮಾತಾಡದಿರು
sullen — ಗು ಒಳಮುನಿಸಿನ, ಕೊರಗುವ, ನೊಂದ, ಮಂಕಾದ
sully — ಕ್ರಿ ಕೊಳಕುಮಾಡು, ಕೆಡಿಸು
sultriness — ನಾ ಉಮರು (ಮಳೆ ಬರುವ ಹಾಗಿದ್ದು ಬಿಸಿಲಿನ ಉಮರು ಹೆಚ್ಚಾಗಿದೆ)
sum — ನಾ ಮೊತ್ತ (ನೀವು ಬಳಸಿದ ಹಣದ ಮೊತ್ತ ಎಷ್ಟು?)
sum up — ಕ್ರಿ ಒಟ್ಟುಮಾಡು (ವೆಚ್ಚ ಎಶ್ಟಾಯಿ ತೆಂದು ಒಟ್ಟುಮಾಡಿ ಹೇಳಿ)
summarise — ಕ್ರಿ ಅಡಕಮಾಡು (ನೀವು ಬರೆದುದನ್ನು ಅಡಕಮಾಡಿ ಹೇಳಿ)
summary — ನಾ ತಿರುಳು (ಇದರ ಮೊದಲಿಗೆ ಬರಹದ ತಿರುಳನ್ನು ಕೊಡಬೇಕು)
summer — ನಾ ಬೇಸಿಗೆ (ಬೇಸಿಗೆಯಲ್ಲಿ ಆಕೆ ಊಟಿಗೆ ಹೋಗುತ್ತಾಳೆ)
summit — ನಾ 1 ತುದಿ (ತುತ್ತತುದಿ) 2 ಮೇಲ್ಮಟ್ಟ (ಮೇಲ್ಮಟ್ಟದವರ ಕೂಟ)
summon — ಕ್ರಿ ಕರೆ (ಆತನನ್ನು ಬೆಂಗಳೂರಿಗೆ ಕರೆದಿದ್ದಾರೆ), ಬರಹೇಳು
summons — ನಾ ಕರೆಸೆಲವು ನಾ ಗುಂಡಿ (ನೀರಗುಂಡಿ), ತೊಟ್ಟಿ (ತೊಟ್ಟಿಯಲ್ಲಿ ಮಳೆನೀರು ತುಂಬಿದೆ)
sumptuous — ಗು ಸೊಗಸಾದ, ಪದಪಿನ, ಹೆಚ್ಚುಬೆಲೆಯ, ಹೇರಳ
sun — ನಾ ನೇಸರು (ನೇಸರು ಮೂಡಿತು; ನೇಸರಿನ ಬಿಸಿಲು),ಹೊತ್ತು (ಹೊತ್ತು ಮುಳುಗಿತು)
sun bath — ನಾ ಬಿಸಿಲಮೀಹ
sun blind — ನಾ ಬಿಸಿಲುಮರೆ
sundry — ಗು ಚಿಕ್ಕಪುಟ್ಟ, ಚಿಲ್ಲರೆ (ಚಿಲ್ಲರೆ ಕೆಲಸ)
sundry — ಗು ತರತರದ, ಬಗೆಬಗೆಯ, ಚಿಕ್ಕ ಪುಟ್ಟ
sunken — 1 ಮುಳುಗಿದ 2 ಗುಳಿಬಿದ್ದ (ಗುಳಿ ಬಿದ್ದ ಕೆನ್ನೆ)
sunlight — ನಾ ಬಿಸಿಲು
sunny — ನಾ 1 ಬಿಸಿಲುಬಿದ್ದ 2 ಹದುಳಿಸಿದ, ಗೆಲುವಾಗಿರುವ
sunrise — ನಾ ಹೊತ್ತುಮೂಡುಗೆ
sunset — ನಾ ಹೊತ್ತುಕಂತುಗೆ
sunshine — ನಾ ಬಿಸಿಲು (ಇವತ್ತು ಬಿಸಿಲು ಜೋರಾಗಿದೆ; ಬಿಸಿಲಡಿಗೆ; ಬಿಸಿಲುಮಳೆ)
sunstroke — ನಾ ಬಿಸಿಲ ಬಿಸುಪು
sup — ಕ್ರಿ ಇರುಳೂಟ ಉಣ್ಣು
superannuated — ಗು 1 ಮುದಿಯಾದ 2 ಮುದಿಬಿಡುವು ಕೊಟ್ಟ 3 ಹಳತಾದ, ಬಳಕೆ ತಪ್ಪಿದ
superb — ಗು ಅಗ್ಗಳಿಕೆಯ, ತುಂಬಾ ದೊಡ್ಡ, ಸೊಮ್ಮಿನ, ಅಣ್ಣೆ, ಮೇಲ್ಮಯ
supercilious — ಗು ಸೆಡಕಿನ, ಮಲೆವ, ಆಲಿಮಾಡುವ, ಏವಯಿಸುವ
superficial — ಗು ತೋರಿಕೆಯ (ಅವನದೆಲ್ಲ ತೋರಿಕೆಯ ಕೆಲಸ), ಹೊರಗಣ
superfluous — ಗು ಬೇಡದ, ಹೆಚ್ಚಿನ
superimpose — ಕ್ರಿ ಮೇಲಿರಿಸು
superintend — ಕ್ರಿ ಸಂಬಾಳಿಸು, ತೂಗಿಸಿ ಕೊಂಡು ಹೋಗು
superintendent — ನಾ ಮೇಲಾಳು (ಆತ ನಿಲ್ಲಿ ಮೇಲಾಳು), ಮಣಿಯ
superior — ನಾ ಎಕ್ಕಟಿಗ
superior — ಗು ಮೇಲು (ಮೇಲಕ್ಕಿ; ಮೇಲು ದೋರು), ಆಣಿ (ಆಣಿಮುತ್ತು, ಆಣಿ ಹೊನ್ನು; ಕಟ್ಟಾಣಿ - ಕಟ್ಟಾಣಿ ಮುತ್ತು; ಕಟ್ಟಾಣಿ ಸರ), ಮೀಟು (ಮೀಟಾದ ಕೆಲಸ)
superiority — ನಾ ಮೇಟಿ, ಪೆರ್ಮೆ, ಮೇಲ್ಮೆ, ಹಿರಿಮೆ complex ನಾ ಮೇಲರಿಮೆ
superlative — ಗು ಎಲ್ಲಕ್ಕಿಂತ ಮೇಲಿನ, ಎಲ್ಲರಿಗಿಂತ ಒಳ್ಳೆಯ
superscript — ನಾ ಮೇಲ್ಬರಹ
supersede — ಕ್ರಿ ಹಿಂದೆಹಾಕು, ಮಾರ್ಪಾಗಿ ಬರು, ಕಡೆಗಣಿಸು
superstition — ನಾ ಗೊಡ್ಡು ನಂಬಿಕೆ
superstructure — ನಾ ಮೇಲ್ಕಟ್ಟಡ
supervise — ಕ್ರಿ ಸಂಬಾಳಿಸು, ಪಾರುಪತ್ಯ ನಡೆಸು
supervisor — ನಾ ಮೇಲಾಳು, ಪಾರುಪತ್ಯ ಗಾರ
supine — ಗು 1 ಅಂಗಾತ (ಅಂಗಾತ ಮಲಗು) 2 ಗೊಡವೆಯಿಲ್ಲದ, ಗೋಜಿಲ್ಲದ
supper — ನಾ ಇರುಳೂಟ
supplant — ಕ್ರಿ ಮಾರ್ಪಾಗು, ಮೋಸದಿಂದ ಮಾರು
supple — ಗು ಬಾಗುವ, ಬಳುಕುವ, ಹೊಂದಿ ಕೊಳ್ಳುವ
supplement — ನಾ ಸೇರಿಕೆ, ಜೋಡಿಕೆ
supplicant — ಕ್ರಿ ತಗ್ಗಿಬಗ್ಗಿ ಬೇಡು, ಕೀಳ್ಪಡಿಸಿ ಕೊಂಡು ಕೇಳು
supply — ನಾನೀಡಿಕೆ
supply — ಕ್ರಿ ಒದಗಿಸು, ಕೊರತೆತುಂಬು
support — ನಾ 1 ಬೆಂಬಲ (ನಮಗೆ ಅವನ ಬೆಂಬಲ ಬೇಕು; ಬೆಂಬಲಿಸು; ಬೆಂಬಲಿಗ), ಅಡರ್ಪು (ನನಗೆ ನೀನೇ ಅಡರ್ಪು), ಒತ್ತಾಸೆ (ಆತನಿಗೆ ದೊಡ್ಡವರ ಒತ್ತಾಸೆಲಿುದೆ) 2 ಆನಿಕೆ (ಈ ಗಿಡ ಆನಿಕೆಲಿುಲ್ಲದೆ ನಿಂತಿದೆ), ಊರೆ (ಊರೆಕೊಡು; ಮೊಣಕಯ್ಯನ್ನು ಗಲ್ಲಕ್ಕೆ ಊರೆ ಕೊಟ್ಟು ಕುಳಿತಿದ್ದ), ಊದು (ಊದುಕೊಡು), ತಳ್ಪು (ಆ ಕೆಸರಿನಲ್ಲಿ ತಳ್ಪಿಲ್ಲದೆ ಹೋಗುವುದು ಹೇಗೆ?)
support — ಕ್ರಿ ಆನು (ಆತನನ್ನು ನಾನು ಆನ ಲಾರೆ), ತಾಂಗು (ಅವನು ಆಕೆಯನ್ನು ತಾಂಗಿ ನಿಂತಿದ್ದ), ತಡೆ (ತಡೆಹಿಡಿ)
supporter — ನಾ 1 ಬೆಂಬಲಿಗ 2 ಆನಿಕೆ, ಕಯ್ತಾಂಗು ( ಅಡಿಕೆ ಮರದ ಸಾರದ ಮೇಲೆ ಹೋಗುವವರಿಗೆ ಹಿಡಿದುಕೊಳ್ಳಲು ಒಂದು ಕಯ್ತಾಂಗಿದೆ)
suppose — ಕ್ರಿ 1 ಎಣಿಸು 2 ನಂಬು 3 ಮುನ್ನೆಣಿಸು 4 ಎದುರುನೋಡು
supposition — ನಾ ಎಣಿಕೆ, ತೆಗಹು, ನಂಬಿಕೆ
suppress — ಕ್ರಿ ನುಂಗು (ನಿಮ್ಮ ಸಿಟ್ಟನ್ನು ನುಂಗಿ ಕೊಳ್ಳಿ), ಮರೆಮಾಚು, ಅಡಗಿಸು (ತನ್ನ ಅನಿಸಿಕೆಗಳನ್ನು ಯಾರಿಗೂ ತಿಳಿಸದೆ ಅಡಗಿ ಸಿಟ್ಟಿದ್ದಾನೆ) ಕ್ರಿ ಕೀಯು (ಕೀತುಕೊಳ್ಳು, ಕೀದ ಹುಣ್ಣು), ಕೀವಾಗು
supremacy — ನಾ ಮೇಲ್ಮೆ
surcharge — ನಾ ಮೇಲ್ತೆರಿಗೆ (ಇಲ್ಲಿ ತೆರಿಗೆ ಯೊಂದಿಗೆ ಮೇಲ್ತೆರಿಗೆಯೂ ಇದೆ)
sure — ಗು ನನ್ನಿ, ದಿಟ, ನಿಕ್ಕುವ, ಕಂಡಿತ
surety — ನಾ 1 ಹೊಣೆ (ಹೊಣೆಯಾಗು, ಹೊಣೆಗಾರ; ಹೊಣೆನಿಲ್ಲು - ಆತನ ಸಾಲಕ್ಕೆ ಹೊಣೆನಿಲ್ಲಹೋಗಿ ಎಲ್ಲವನ್ನೂ ಕಳಕೊಂಡ) 2 ನಿಕ್ಕುವತನ
surf — ನಾ ತೆರೆನೊರೆ (ಕಡಲಿನ ತೆರೆನೊರೆಯಲ್ಲಿ ಮಕ್ಕಳು ಆಡುತ್ತಿದ್ದಾರೆ)
surface — ನಾ ಮೇಲ್ಮೈ (ಕೊಳದ ಮೇಲ್ಮ ಯ್ಯಲ್ಲಿ ಜೊಂಡು ತುಂಬಿದೆ), ಹೊರಮಯ್ (ಹೊರಮಯ್ಯ ನೋಟ ಚನ್ನಾಗಿದೆ)
surfeit — ಗು ಹೇರಳ (ಹೇರಳ ಮೊತ್ತ; ಹೇರಳ ವೆಚ್ಚ; ಹೇರಳ ತಿನಿಸು)
surge — ಕ್ರಿ ಉಕ್ಕೇರು (ಉಕ್ಕೇರಿದ ನೆರೆನೀರು)
surgeon — ನಾ ಕೊಯ್ಮಾಂಜುಗ
surgery — ನಾ ಕೊಯ್ಯಾರಯ್ಕೆ, ಕೊಯ್ಮದ್ದು
surly — ಗು ಸಿಡುಕಿನ, ಬಿರುಸು, ಒರಟು, ಕೆಟ್ಟ ನಡತೆಯ
surmise — ನಾ ತೋರಿಕೆ, ಅನಿಸಿಕೆ, ತೀರ್ಮಾನ
surmount — ಕ್ರಿ ಗೆಲ್ಲು, ದಾಟು, ಮೇಲೇರು
surname — ನಾ ಅಡ್ಡಹೆಸರು, ಮನೆಹೆಸರು
surpass — ಕ್ರಿ ಮೀರು (ಕಯ್ಮೀರು, ಮೇರೆ ಮೀರು), ಅಸಕಳಿ (ಅಸಕಳಿದ ಅಳಲು)
surplus — ನಾ ಮಿಗಿತ (ಏನಾದರೂ ಮಿಗಿತ ಇದ್ದರೆ ನಮಗೆ ಕೊಡಿ), ಉಳಿಕೆ (ಉಳಿಕೆ ಹಣದಲ್ಲಿ ಒಂದು ಸೀರೆ ಕೊಂಡುಕೊಂಡ)
surprise — ನಾ ಬೆರಗು (ಬೆರಗಾಗು; ಬೆರಗಾ ದವನು; ನಿಡುಬೆರಗು; ನಿಬ್ಬೆರಗು), ಅರುದು (ನಿಮ್ಮ ಮಾತು ಕೇಳಿ ನನಗೆ ಅರುದಾಗು ತ್ತದೆ), ಅಕ್ಕಜ (ಅಕ್ಕಜಗೊಳ್ಳು; ಅಕ್ಕಜ ಪಡು), ಎತ್ತರ (ಎತ್ತರತತ್ತರ) ಕಂಗು (ಕಂಗಾಗು) ಕೋಡು, ನದುಳು
surrender — ಕ್ರಿ ಬಿಟ್ಟುಕೊಡು (ಆತನಿನ್ನೂ ಬಿಟ್ಟುಕೊಟ್ಟಿಲ್ಲ), ಸೋಲೊಪ್ಪು (ಒಬ್ಬ ನಾದರೂ ಸೋಲೊಪ್ಪದೆ ಪೋಟಿ ನಿಲ್ಲದು)
surreptitiously — ಗು ಗುಟ್ಟಾಗಿ (ಅವನು ಗುಟ್ಟಾಗಿ ಇಲ್ಲಿಗೆ ಬಂದುಹೋಗಿದ್ದ)
surround — ಕ್ರಿ ಸುತ್ತು (ಸುತ್ತುಗೋಡೆ; ಸುತ್ತು ಬೇಲಿ; ಸುತ್ತುಗಟ್ಟು), ಮುತ್ತು (ಮುತ್ತಿ ಕೊಳ್ಳು), ಬಳಸು (ಕೋಟೆಯನ್ನು ಬಳಸಿ ನಿಂತ ಪಡೆ),ಕವಿ (ಕವಿದ ಕಾಲಾಳುಗಳು)
surrounding — ನಾ 1 ಸುತ್ತುಮುತ್ತು 2 ಗೊತ್ತುಪಾಡು ನಾ ಮೇಲ್ತೆರಿಗೆ
surveillance — ನಾ ಕಣ್ಗಾವಲು (ಕಣ್ಗಾವಲಿಗೆ ಮೂವರಿದ್ದಾರೆ)
survey — ಕ್ರಿ 1 ಕಣ್ಣರಸು, ಗಮನಿಸಿ ನೋಡು 2 ಬೆಲೆಹಾಕು
survive — ಕ್ರಿ ಬದುಕಿರು (ಪಾರಾಗಿ ಬದುಕಿರು), ಉಳಿ
susceptible — ಗು ಸುಳುವಾಗಿ ನಾಟುವ, ತಾಗುವ
suspect — ಕ್ರಿ ಅದುಹು, ಅರೆಮರಿಕೆಯಿರು, ನಚ್ಚೆಣಿಸು
suspend — ಕ್ರಿ ನೇಲು (ನೇತಾಡು; ನೇತು ಹಾಕು),ಎಳಲು (ಹಿಂಗಾಲಿನಿಂದ ಎಳಲುವ ಸಂಕಲೆ)
suspender — ನಾ ತೂಗುಪಟ್ಟಿ, ಎತ್ತುಪಟ್ಟಿ
suspense — ನಾ ಕಂಡಿತವಲ್ಲದಿಕೆ, ಅರಿವಿಲ್ಲ ದಿಕೆ, ಕೊನೆಯ ಪಸಿಯಿಸುಗೆ
suspension — ನಾ ತಡೆ, ನಿಲುಗಡೆ, ಕೊನೆಯ ದಲ್ಲದ ಕಳೆವು
suspect — ಕ್ರಿ ಉರು (ಉರ್ತವನು; ಉರಿಮೆ)
suspicious — ಗು ಅದುಹಿನ, ಅರೆಮರಿಕೆಯ, ನಚ್ಚೆಣಿಸುವ
sustain — ಕ್ರಿ 1 ತಾಳು (ತೊಂದರೆಗಳನ್ನೆಲ್ಲ ತಾಳಿ ಬಾಳಿದವನು) 2 ಎತ್ತಿಹಿಡಿ, ಬಿಡದೆ ನಡೆಸು, ಬೆಂಬಲಿಸು 3 ಉಳಿಸು, ಮುಂದು ವರಿಸು
suture — ಕ್ರಿ ಹೊಲಿ (ಗಾಯದ ಬದಿಗಳನ್ನು ಒಟ್ಟು ಸೇರಿಸಿ ಹೊಲಿದಿದ್ದಾರೆ)
svelte — ಗು ತೆಳ್ಳಗಿನ, ಬೆಡಗಿನ
swab — ನಾ 1 ಹೀರೊತ್ತು, ಹತ್ತಿತುಂಡು 2 ಒರಸುಗೆ
swaddle — ಕ್ರಿ ಗಟ್ಟಿಯಾಗಿ ಹೊದೆಸು
swagger — ಕ್ರಿ ಎದೆಯುಬ್ಬಿಸಿ ನಡೆ, ಹೊಗಳಿ ಕೊಳ್ಳು, ಹೆಮ್ಮೆಕೊಚ್ಚು
swallow — ನಾ ಗುಟುಕು (ಒಂದು ಗುಟುಕು ನೀರು ಕುಡಿದ)
swallow — ಕ್ರಿ ಮಿಂಗು (ಆತ ಇಡೀ ಹಣ್ಣನ್ನು ಮಿಂಗಿದ), ನುಂಗು (ಮೀನನ್ನು ನುಂಗುವ ಮೀನು; ನುಂಗುಹ), ನೊಣೆ (ತತ್ತಿಯನ್ನು ನೊಣೆದ ನರಿ; ನೊಣೆನಕ್ಕು), ತೀರು, ತುತ್ತು ಗೊಳ್ಳು
swamp — ನಾ ಜವುಳು (ನೀರಿನ ಜವುಳು), ಜವುಗು (ಜವುಗೇಳು; ಬೆಟ್ಟಜವುಗು)
swanky — ಗು ಮೆರೆಯುವ, ಬೆಲೆಬಾಳುವ ಉಡುಪಿನ
swap — ಕ್ರಿ ಮಾರು, ಮಾರ್ಪುಮಾಡು, ಅದಲು ಬದಲು ಮಾಡು
swarm — ನಾ ಬಿಡಯ (ಜೇನುಹುಳುಗಳ ಬಿಡಯ), ಬಂಬಲು (ದೊಡ್ಡ ದೊಡ್ಡ ತುಂಬಿಗಳ ಬಂಬಲು) ಕ್ರಿ ಮುಸುಕು (ಬಾನನ್ನು ಮುಸುಕಿದ ಹೊಗೆ), ಮುಸುರು (ಮುಸುರುತ್ತ ಬಂದ ದುಂಬಿಗಳು), ಮುಕರು (ಮುಕರಿದ ಜೇನು ನೊಣಗಳು)
swarthy — ಗು ಕಪ್ಪು ಬಣ್ಣದ
swash — ಕ್ರಿ 1 ಸಿಡಿಸು (ನೀರು ಸಿಡಿಸು), ಹೊಡೆ (ನೀರಿಗೆ ಹೊಡೆ) 2 ಎದೆಯುಬ್ಬಿಸಿ ನಡೆ
swatch — ನಾ ಬಟ್ಟೆಯ ಎತ್ತುಗೆ
swathe — ಕ್ರಿ ಕಟ್ಟುಪಟ್ಟಿ ಕಟ್ಟು, ಬಟ್ಟೆಕಟ್ಟು
sway — ಕ್ರಿ 1 ತೂಗು (ತೂಗಾಡು), ಬದಿಗೆ ಬಾಗು, ಒನಸು, ತಳರು 2 ಹತೋಟಿಯ ಲ್ಲಿಡು
swear — ನಾ ಸೂರುಳು (ಸೂರುಳಿಸು)
sweat — ಕ್ರಿ ಬೆವಿ (ಬೆವರು; ಬೆವತು ಒದ್ದೆ ಯಾಗು)
sweep — ಕ್ರಿ ಉಡುಗು (ಕಸವನ್ನು ಉಡುಗಿ ಮೂಲೆಯಲ್ಲಿ ಒಟ್ಟಿದಳು), ಗುಡಿಸು (ಮನೆಯನ್ನು ಚನ್ನಾಗಿ ಗುಡಿಸಿ ಚೊಕ್ಕಟ ಮಾಡಿದ್ದರು)
sweep together — ಕ್ರಿ ಬಳಿ (ಕೆಸರನ್ನೆಲ್ಲ ಬಳಿದು ದೂರ ಎಸೆದಳು), ಗೋಚು (ಕೆಸರನ್ನು ಬಟ್ಟಲಲ್ಲಿ ಗೋಚಿಕೊಂಡು ಬಂದ),ಗೋರು (ಗೋರಿ ತೆಗೆದು ಹೊರ ಹಾಕಿದ)
sweeping — ಗು ದೊಡ್ಡ ಹರಹಿನ (ದೊಡ್ಡ ಹರಹಿನ ಮಾರ್ಪಾಟುಗಳು), ಹಬ್ಬುಗೆಯ, ಚಾಪು
sweet — ಗು ಸಿಹಿ (ಸಿಹಿಗೆಣಸು; ಸಿಹಿ ನೀರು; ಸಿಹಿಮಾತು), ಸೀ (ಬೇವು ಸೀಯಾಗದು; ಸೀಕುಂಬಳ; ಸೀ ಮೊಸರು), ಇನಿ (ಇನಿ ಗಂಪು, ಇನಿನುಡಿ, ಇನಿದುಟಿ) ಇನ್- (ಇನ್ನೀರು, ಇನ್ನುಡಿ), ಈನ್- (ಈನ್ದುಟಿ; ಈಂಬುಳಿ), ಸವಿ (ಸವಿಮಾವು)
sweetly — ಗು ಸಿಯ್ಯನೆ (ಸಿಯ್ಯನೆ ನಗು),ಇಮ್ಮನೆ (ಆಕೆ ನಿಮ್ಮನ್ನು ಇಮ್ಮನೆ ನೋಡು ತ್ತಿದ್ದಳು)
sweetmeat — ನಾ ಸಿಹಿತಿಂಡಿ
sweetness — ನಾ ಇಂಪು (ಕುಡಿನೀರಿನ ಇಂಪು; ಇಂಪಾಗಿ ಹಾಡು; ಇಂಪುಗೊಳ್ಳು)
swell — ಕ್ರಿ 1 ಬಾಯು (ಆತನ ಕೈ ಬಾತಿದೆ; ಬಾತುಕೊಳ್ಳು), ಬೀಗು (ಬೀಗಿದ ಕಾಲು ಗಳು), ಉಬ್ಬು (ಉಬ್ಬಿದ ಕೆನ್ನೆ; ಉಬ್ಬರಿಸು - ಹೊಟ್ಟೆ ಉಬ್ಬರಿಸಿದೆ), ಊದು (ಅವನ ಕಾಲು ಊದಿಕೊಂಡಿದೆ; ಊದುಹೊಟ್ಟೆ), ಗದ್ದರಿಸು (ಆಕೆಯ ಮೋರೆ ಗದ್ದರಿಸಿದೆ) 2 ಹೊಂಗು (ಕುದಿದು ಹೊಂಗಿದ ಹಾಲು), ಉಕ್ಕು (ಉಕ್ಕಿದ ಕಡಲು; ಉಕ್ಕೇರು)
swelling — ನಾ ಬಾವು (ಹೊಟ್ಟೆಯ ಬಾವು), ಬಾಹು, ಬಾಸುಂಡೆ (ಬಾಸುಂಡೆಗಟ್ಟು; ಹಣೆ ಯಲ್ಲಿ ಬಾಸುಂಡೆ ಎದ್ದಿದೆ), ಬುಡ್ಡೆ (ಬುಡ್ಡೆ ಇಳಿಯಿತು), ಉಬ್ಬರ (ಹೊಟ್ಟೆಯ ಉಬ್ಬರ; ಉಬ್ಬರದ ತೊರೆ), ಊದಲು (ಊದಲು ಮೋರೆ); ಊತ (ಏಟು ಬಿದ್ದ ಜಾಗದಲ್ಲಿ ಊತ ಬಂದಿದೆ), ಗದುವು (ಪೆಟ್ಟು ಬಿದ್ದ ಜಾಗದಲ್ಲಿ ಗದುವಾಗಿದೆ), ಹೊಂಪು (ಕಡಲಿನ ಹೊಂಪು ಮತ್ತು ತಿರುಪು)
swelter — ಕ್ರಿ ಬೆವರು, ಬೇಗೆಯಿಂದ ಬಳಲು ಕ್ರಿ 1 ಬದಿಗೆ ಹೋಗು, ಹಾದಿತಪ್ಪು 2 ತಟ್ಟನೆ ಬದಿಗೆ ಸರಿ
swift — ಗು ಚಾಗ, ಚೆಚ್ಚರ, ಬಿರುಸಿನ
swiftly — ಗು ಕಡು (ಕಡುಕಂಗೆಡು; ಕಡು ಗೆಯ್ಯು), ಸರಕ್ಕನೆ (ಸರಕ್ಕನೆ ಸರಿ)
swig — ನಾ ಮುಕ್ಕುಳಿ, ಗುಟುಕು
swill — ಕ್ರಿ 1 ಗಲಬರಿಸು 2 ಗಟಗಟನೆ ಕುಡಿ
swim — ಕ್ರಿ ಈಜು (ಕೊಳದಲ್ಲಿ ಮೀನುಗಳ ಹಾಗೆ ಈಜಬಲ್ಲವನು; ಈಜಾಡು), ಈಸು (ಈಸುವುದರಲ್ಲಿ ಆತನನ್ನು ಮೀರಿಸುವವ ರಿಲ್ಲ; ಈಸುಗಲಿ; ಈಸಾಡು)
swimmer — ನಾ ಈಜುಗಾರ
swindle — ಕ್ರಿ ಮೋಸಮಾಡು, ತಿಂದುಹಾಕು (ಆತ ಎಲ್ಲರ ಹಣವನ್ನೂ ತಿಂದುಹಾಕಿದ)
swine — ನಾ 1 ಹಂದಿ 2 ಕೊಳಕ
swing — ನಾ ಉಯ್ಯಲು (ಉಯ್ಯಲಾಟ, ಉಯ್ಯಲಾಡು; ಉಯ್ಯಾಲೆ), ತೂಗುಮಂಚ; ತೂಗುಕುದುರೆ; ತೂಗುಯ್ಯಾಲೆ, ಹೊಳಹು
swing — ಕ್ರಿ ತೊನೆ (ಗಾಳಿಗೆ ತೊನೆಯುವ ಅಡಿಕೆ ಮರಗಳು), ಜೋಲು (ಜೋಲಾಡು), ತೊಂಗು (ತೊಂಗುತ್ತಿರುವ ತಲೆ), ಒನೆ (ಒನೆದಾಡುವ ಗೆಲ್ಲು), ಒಲೆ (ಒಲೆದಾಡು), ಓಲಾಡು, ಬೀಸು (ಗಾಳಿ ಬೀಸು; ಬಲೆ ಬೀಸು; ಬೀಸಿ ಬಿಸುಡು; ಬೀಸುವ ದೊಣ್ಣೆ), ಜೀಕು (ಜೋಕಾಲೆ ಜೀಕುತ್ತಿದ್ದಾನೆ), ತೂಗು (ತೊಟ್ಟಿಲು ತೂಗು; ತೂಗಿಬಿಡು; ತೂಗಾಟ)
swinging — ನಾ ಒಲೆತ (ಉಯ್ಯಾಲಿನ ಒಲೆ ತಕ್ಕೆ ಕಣ್ಣುಮುಚ್ಚಿ ಕುಳಿತ; ಒಲಹು)
swipe — ಕ್ರಿ ಬೀಸಿ ಹೊಡೆ
swirl — ಕ್ರಿ ಸುತ್ತುಹಾಕು, ಸುತ್ತುಸುತ್ತು, ತಿರುಗು
swish — ಕ್ರಿ 1 ಬೀಸು, ಬೀಸಿಹೊಡೆ 2 ಮರ್ಮರ ಗುಟ್ಟು (ಆಕೆ ನಡೆಯುವಾಗ ಸೀರೆ ಮರ್ಮರ ಗುಟ್ಟುತ್ತದೆ)
switch — ನಾ 1 ಸೆಳೆಗೋಲು (ಹೊಡೆಯಲು ಸೆಳೆಗೋಲು ತಂದಿದ್ದಾರೆ), ಚಾಟಿ 2 ಬಾಲದ ತುದಿ 3 ಒತ್ತುಗುಂಡಿ, ಕೀಲುಗುಂಡಿ 4 ಮಾರ್ಪಾಟು
swivel — ನಾ ತಿರುಪುಕೊಂಡಿ (ತಿರುಪು ಕೊಂಡಿಯ ನಾಲ್ಕಾಲಿ)
swollen — ಗು ಬೋದ (ಬೋದ ಬೋಟೆ ಯಾಗು), ಊದಲು (ಊದಲು ಮೋರೆ), ಗೇಬೆ (ಗೇಬೆಮೋರೆ; ಗೇಬೆಹೊಟ್ಟೆ)
swoon — ನಾ ಕವಳಿ (ಕವಳಿಹತ್ತು), ನೀಡರು (ನೀಡರಿಂದ ಎಚ್ಚತ್ತ), ಎಳತಟ, ಬವಳಿ
swoon — ಕ್ರಿ ಮಯ್ಮರೆ (ಅವನಿನ್ನೂ ಮಯ್ಮರೆ ದಿದ್ದಾನೆ), ಅರಿವುದಪ್ಪು, ಎಚ್ಚರತಪ್ಪು (ದೊಪ್ಪನೆ ಎಚ್ಚರತಪ್ಪಿ ಬಿದ್ದ), ಹಮ್ಮಯಿಸು (ಗಂಡ ಸತ್ತುದನ್ನು ಕೇಳಿ ಹಮ್ಮಯಿಸಿದಳು), ಎಳತಟಕ್ಕೆ ಬೀಳು, ಮೊಬ್ಬಿರಿ, ಜೊಂಪಿಸು, ಜೋಗರಿಸು, ತೆಕ್ಕು ಕ್ರಿ ಹಾರಿಬರು, ಮೇಲೆರಗು, ತಟ್ಟನೆ ದೋಚು, ದಾಳಿಯಿಡು
sword — ನಾ ಬಾಳು,ಕೂರಹು
syllable — ನಾ ಉಲಿಕಂತೆ
syllabus — ನಾ ಓದಿಕೆ ತಿರುಳು, ಓದುಗಳ ಹಮ್ಮುಗೆ
sylvan — ಗು ಮರದ
symbol — ನಾ ಗುರುತು
symmetry — ನಾ ಸರಿಬದಿ, ಹೊಂದಿಕೆ (ಬದಿ ಹೊಂದಿಕೆ)
sympathy — ನಾ ಮರುಕ (ನಿಮ್ಮ ಮರುಕ ನನಗೆ ಬೇಕಾಗಿಲ್ಲ), ಕನಿಕರ
symposium — ನಾ ಮಾತುಕತೆ, ಆರಯ್ವ ಕೂಟ
symptom — ನಾ ಕುರುಹು (ಈ ಬೀಗು ಯಾವ ಬೇನೆಯ ಕುರುಹು?)
synchronise — ಕ್ರಿ ಮೇಳಯ್ಸು
syncope — ನಾ ಉಲಿಕಳೆತ
syndicate — ನಾ ಸೇರ್ಮೆ (ನಾಲ್ಕು ಪಂಗಡಗಳ ಸೇರ್ಮೆ)
syndrome — ನಾ ಕುರುಹುಕಂತೆ
synonym — ನಾ ಹುರುಳು, ಎಣೆನುಡಿ, ಸರಿ ನುಡಿ
synopsis — ನಾ ತಿರುಳು, ಅಡಕಬರಹ
syntax — ನಾ ಸೊಲ್ಲರಿಮೆ
synthesis — ನಾ ಒಂದುಗೆ, ಕೂಡುಗೆ
syringe — ನಾ ಚುಚ್ಚುಕೊಳವೆ, ತಿರಿಜೆ
syrup — ನಾ ಹಣ್ಣುತುಪ್ಪ
system — ನಾ ಕಟ್ಟಳೆ (ನಮ್ಮ ಕಾಲದ ಕಟ್ಟಳೆ ಹಾಗಿತ್ತು), ಏರ್ಪಾಡು, ಕಟ್ಟುಪಾಡು