← Ch 15  ·  Contents  ·  Ch 17 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

T

tab — ನಾ 1 ಹೆಸರುಪಟ್ಟಿ (ಆ ಕಟ್ಟಿನ ಹೆಸರು ಪಟ್ಟಿಯಲ್ಲಿ ಯಾರ ಹೆಸರಿದೆ?) 2 ತೂಗು ಪಟ್ಟಿ 3 ವೆಚ್ಚ, ಬೆಲೆ
table — ನಾ ಪಟ್ಟಿ, ನಿರುಗೆ (ವೆಚ್ಚದ ಲೆಕ್ಕವನ್ನು ನಿರುಗೆಯಲ್ಲಿ ಕೊಟ್ಟಿದ್ದಾರೆ) of contents ನಾ ಕೋವೆ (ಈ ಕಡತದಲ್ಲಿ ಕೋವೆಯನ್ನು ಕೊನೆಗೆ ಕೊಡ ಲಾಗಿದೆ), ಪರಿವಿಡಿ, ಒಳಪಿಡಿ (ಈ ಕಡತಕ್ಕೆ ಆರು ಪುಟಗಳ ಒಳಪಿಡಿಯಿದೆ)
table-land — ನಾ ತಪ್ಪಲು (ಬೆಟ್ಟದ ತಪ್ಪಲು; ಬೆಟ್ಟದ ತುದಿಯಿಂದ ತಪ್ಪಲಿಗೆ ಉರುಳಿದ ಬಂಡೆ)
tablespoon — ನಾ ದೊಡ್ಡಮಿಳ್ಳಿ
tablet — ನಾ 1 ಕಡುಹು (ಮದ್ದಿನ ಕಡುಹು) 2 ಬರೆಹಲಗೆ
taboo — ನಾ ತಡೆತ, ಹೊರಪಡಿಕೆ, ನೀಗಿಕೆ
tabulate — ಕ್ರಿ ನಿರುಗೆ ಹೂಡು, ನಿರುಗೆಯಲ್ಲಿ ಕೊಡು
tacit — ಗು ಅಡಗಿರುವ, ನೇರವಲ್ಲದ, ಬಾಯಿ ಬಿಟ್ಟು ಹೇಳದ
taciturn — ಗು ಹೆಚ್ಚು ನುಡಿಯದ, ಮಿಣ್ಣಗಿರುವ
tack — ನಾ 1 ತಟ್ಟುಮೊಳೆ 2 ದೂರ ಹೊಲಿಗೆ
tackle — ಕ್ರಿ ನೆಗಳು, ಪೂನು (ಪೂತುನೋಡು - ಮೂರು ಬಾರಿ ಪೂತುನೋಡಿದ)
tact — ನಾ ಮಾಡುವ ಬಗೆ, ಆಡುವ ಬಗೆ
tactics — ನಾ ದಂಡಿ (ಮಾಡುವ ದಂಡಿ), ಬಗೆ, ಸೂಟಿ, ಹಂಚಿಕೆ, ಮಾಟ
tactless — ಗು ಬಗೆ ತಿಳಿಯದ (ಮಾಡುವ ಬಗೆ ತಿಳಿಯದವನು)
tadpole — ನಾ ಗೊದಮೊಟ್ಟೆ
tag — ನಾ 1 ಹೆಸರು ಪಟ್ಟಿ 2 ಕಟ್ಟುನೂಲು
tag — ಕ್ರಿ ತಗುಲಿಸು, ಗಂಟುಹಾಕು
tail — ನಾ ತೋಕೆ (ನವಿಲಿನ ತೋಕೆ), ಹಿಂಗಾರಿ (ಹಕ್ಕಿಯ ಹಿಂಗಾರಿ), ಹೀಲಿ (ನವಿಲು ಹೀಲಿಯ ಕಣ್ಣು)
tail race — ನಾ ಕೆಳನಾಲೆ
tailor — ನಾ ಹೊಲಿಗ
taint — ಕ್ರಿ 1 ಮಡಿಕೆಡಿಸು, ಮಾಸಲು ಗೊಳಿಸು, ಕಲೆಹಿಡಿಸು 2 ಕೆಟ್ಟಹೆಸರು ಬರಿಸು
take — ಕ್ರಿ ಇಸಕೊಳ್ಳು (ಅವನು ಆ ಕೆಲಸಕ್ಕೆ ಎಷ್ಟು ಇಸಕೊಂಡ?), ತೆಗೆದುಕೊಳ್ಳು (ತೆಗೆದುಕೊಂಡು ಹೋಗು) ತೆಗೆ (ತೆಗೆ ದಿರಿಸು)
take a lick — ಕ್ರಿ ನಂಜು (ಉಪ್ಪಿನಕಾಯಿ ನಂಜಿಕೊಂಡು ಊಟಮಾಡುತ್ತಿದ್ದಾಳೆ)
take by force — ಕ್ರಿ ಕಸಿ (ಕಸಿದುಕೊಳ್ಳು; ದರೋಡೆಕೋರರು ಎಲ್ಲವನ್ನೂ ಕಸಿದು ಕೊಂಡರು)
take care — ಕ್ರಿ ಆರಯ್ಯು (ನೀವು ಆತನನ್ನು ಆರಲಿ್ಯುರಿ), ಓವು (ಮಕ್ಕಳನ್ನು ಓವಿ ಕೊಂಡಿರದೆ ಬಿಟ್ಟುಹೋದರೆ ಹೇಗೆ?), ಸಾಕು (ಸಾಕಿದ ಮಗ) down ಕ್ರಿ ಬರೆದುಕೊಳ್ಳು (ನಾನು ಹೇಳುವುದನ್ನು ಬರೆದುಕೊಳ್ಳಿ)
take in — ಕ್ರಿ ಒಳಕೊಳ್ಳು
take place — ಕ್ರಿ ಜರಗು (ನಾಳೆ ಅವಳ ಮದುವೆ ಜರಗಲಿದೆ)
tale — ನಾ 1 ಕತೆ 2 ತೆಗಳಿಕೆ 3 ಸುಳ್ಳು ಮಾತು
talent — ನಾ ಹುಟ್ಟಳವು, ಹುಟ್ಟುಜಾಣ್ಮೆ
talisman — ನಾ ಕಾಪುಂಗುರ, ಕಾಪುಕಟ್ಟು
talk — ಕ್ರಿ ಆಡು (ಮಾತನಾಡು - ಆತ ಮಾತ ನಾಡುವಾಗ ಯಾರೂ ಸೊಲ್ಲೆತ್ತುವುದಿಲ್ಲ)
talk idly — ಕ್ರಿ ಹರಟು (ಏನೇನೋ ಹರಟುತ್ತಾ ಹೊತ್ತು ಕಳೆದರು; ಹರಟೆ - ಹರಟೆ ಹೊಡೆ)
talkative — ನಾ ನುಡಿಗಾರ,ಮಾತಾಳಿ, ಮಾತು ಗಾರ,ಉಲಿಗ (ಅಂತಹ ಉಲಿಗ ಬೇರಿಲ್ಲ)
talkie — ನಾ ನುಡಿತಿಟ್ಟ
tall man — ನಾ ಎಕ್ಕಲ (ಅವನೊಬ್ಬ ಏಳಡಿ ಎತ್ತರದ ಎಕ್ಕಲ), ನಿಡುಕ
tall — ಗು ಎತ್ತರ, ಉದ್ದ
tallow — ನಾ ಕೊಬ್ಬು
tally — ಕ್ರಿ ಸರಿನೋಡು, ಸರಿಹೊಂದಿಸು (ಲೆಕ್ಕ ಸರಿಹೊಂದಿಸಲು ನೀವೇ ಬರಬೇಕು)
tamarind — ಗು ಹುಣಸೆ (ಹುಣಸೆ ಹಣ್ಣು; ಹುಣಸೆಗಿಡ)
tame — ಕ್ರಿ ಪಳಗು (ಪಳಗಿದ ಕುದುರೆ; ಪಳಗಿಸು)
tamper — ಕ್ರಿ ತಿದ್ದು, ಸುಳ್ಳುಮಾಡು
tan — ಕ್ರಿ ಹದಮಾಡು (ಹದಮಾಡಿದ ತೊಗಲು)
tandem — ಗು ಹಿಂದೆಮುಂದೆ, ಸಾಲಿನಲ್ಲಿ
tang — ನಾ ಕಡುಸವಿ, ಕಡುಗಾಟು, ನಾತ
tangent — ಗು ಮುಟ್ಟುವ (ಮುಟ್ಟುವ ಗೆರೆ)
tangible — ಗು ಮುಟ್ಟಬಲ್ಲ, ಗಟ್ಟಿ, ನನಸಾದ
tangle — 1 ಸಿಕ್ಕಾಗು, ಗೋಜಲಾಗು (ಆಕೆಯ ಕೂದಲು ಗೋಜಲಾಗಿದೆ) 2 ಉರುಳಿಗೆ ಸಿಕ್ಕಿಬೀಳು 3 ಜಗಳಾಡು
tangled — ಗು ತೊಡಕು (ತೊಡಕು ಬಲೆ), ಸಿಕ್ಕು (ಸಿಕ್ಕುಗೂದಲು), ಗೋಜಲು
tank — ನಾ ಕೆರೆ (ತಾವರೆ ಕೆರೆ, ಕೆರೆಕಟ್ಟೆ), ಕುಂಟೆ (ಚಿಕ್ಕ ನೀರಿನ ಕುಂಟೆ), ಕೊಳ (ಕೊಳಗಾಹಿ - ಕೊಳದ ಕಾವಲಿಗೊಬ್ಬ ಕೊಳಗಾಹಿ ಇದ್ದ; ಕೊಳಕ್ಕಿಳಿ)
tanker — ನಾ ಎಣ್ಣೆಹಡಗು ನಾ ತೊಗಲುಗಾರ
tantalize — ಕ್ರಿ ಗೋಳುಹುಟ್ಟಿಸು, ತೋರಿಸಿ ಕೊಡದಿರು
tantamount — ಗು ಸಾಟಿಯಾದ, ಸರಿಯಾದ
tantrum — ನಾ ಸಿಡಿಮಿಡಿ, ಸಿಟ್ಟಿನ ತೋರ್ಕೆ
tap — ನಾ ಕೊಳಾಲಿು (ನೀರಿನ ಕೊಳಾಲಿು)
tap — ಕ್ರಿ 1 ತಟ್ಟು (ತೆಂಗಿನಕಾಯಿ ಚನ್ನಾ ಗಿದೆಯೋ ಎಂದು ತಟ್ಟಿನೋಡುತ್ತಿದ್ದ) 2 ತೂತುಕೊರೆ (ಕಟ್ಟದ ಬದಿಯಲ್ಲಿ ತೂತು ಕೊರೆದು ಕೊಳಾಯಿ ಇರಿಸಿದ)
tape — ನಾ ಪಟ್ಟಿ, ಸುರುಳಿ (ನುಡಿಸುರುಳಿ; ಕಾಣ್ಕೆಸುರುಳಿ)
taper — ಕ್ರಿ 1 ಮೆಲ್ಲ ಸಪುರವಾಗು, ಕಿರಿದಾ ಗುತ್ತಾ ಹೋಗು 2 ಮೆಲ್ಲ ಅಳಿವುಗುಂದು
tapioca — ನಾ ಮರಗೆಣಸು
taproot — ನಾ ತಾಯಿಬೇರು (ಈ ಗಿಡದ ತಾಯಿಬೇರು ಆಳಕ್ಕೆ ಇಳಿದಿದೆ)
tardy — ಗು ಮೆಲ್ಲಗಿನ, ತಡವಾದ, ತಗಹಾದ
target — ನಾ ಗುರಿ (ಅವನಿಗೇನಾದರೂ ಬಾಳಿ ನಲ್ಲಿ ಗುರಿ ಇದೆಯೋ?), ಕರು, ಚೂಟಿ, ಈಡು
tariff — ನಾ 1 ಬೆಲೆ ಪಟ್ಟಿ 2 ತೆರಿಗೆ
tarnish — ಕ್ರಿ 1 ಒಪ್ಪಗೆಡಿಸು (ಅವನು ತನ್ನ ಹೆಸರನ್ನು ಒಪ್ಪಗೆಡಿಸಿಕೊಂಡ) 2 ಮಾಸು, ಕಂದು
tarpaulin — ನಾ ನೀರಿಳಿಯದ ಬಟ್ಟೆ
tarry — ಕ್ರಿ ತಡಮಾಡು, ಕಾದಿರು, ತಂಗಿರು (ಆತ ಇನ್ನೂ ಅಲ್ಲೇ ತಂಗಿದ್ದಾನೆ)
tart — ನಾ ಸೂಳೆ, ನಡತೆಗೆಟ್ಟವಳು
tart — ಗು 1 ಹುಳಿ, ಒಗರು 2 ಚುಚ್ಚು (ಚುಚ್ಚುಮಾತು), ಬಿರುಸು
tartar — ನಾ ಕೊಳೆ, ಕಿಟ್ಟ (ಹಲ್ಲಿನ ಕಿಟ್ಟ)
task — ನಾ ಕೆಲಸ (ಆ ಕೆಲಸ ನನ್ನಿಂದಾಗದು), ತೊಡಕಿನ ಕೆಲಸ
tassel — ನಾ ಸೆಂಡು (ಹೂವಿನ ಸೆಂಡು),ಕೊಂಡೆ, ಗೊಂಡೆ
taste — ನಾ ಇಂಪಣ (ಈ ತಿಂಡಿಯ ಇಂಪಣ ಚನ್ನಾಗಿಲ್ಲ)
taste — ಕ್ರಿ ಸವಿ (ಜೇನು ಸವಿದ ಹಾಗೆ; ಯಾರೂ ಸವಿಯದ ತಿಂಡಿ)
tasteless — ಗು ಸಪ್ಪೆ (ಉಪ್ಪುಸಪ್ಪೆ; ಸಪ್ಪೆ ಮೋರೆ)
tattered — ಗು ಹರುಕಲು (ಹರುಕಲು ಬಟ್ಟೆ ತೊಟ್ಟವನು)
tattoo — ನಾ ಹಚ್ಚೆ (ಹಚ್ಚೆಚುಚ್ಚು; ಹಚ್ಚೆ ಬೊಟ್ಟು; ಹಚ್ಚೆಹೊಯ್ಯು)
taunt — ನಾ ಮೂದಲೆ (ಮೂದಲೆ ಮಾತು; ಮೂದಲ್ಮೆ) ಕ್ರಿ ಮೂದಲಿಸು (ಮೂದಲಿಸಿ ಮಾತ ನಾಡು; ಮೂದಲಿಕೆ)
taut — ಗು 1 ಬಿಗಿಯಾಗಿ ಎಳೆದ (ಬಿಗಿಯಾಗಿ ಎಳೆದ ಕಂಬಿ) 2 ಕಳವಳಿಸುವ
tautology — ನಾ ಬೇಡದ ಇನ್ನುಡಿಹ
tavern — ನಾ ಕುಡಿವೆಡೆ, ತಂಗುವೆಡೆ, ತಂಗು ಮನೆ, ನಿಲ್ಮನೆ
tawny — ಗು ನಸುಗೆಂಪು (ನಸುಗೆಂಪು ಹೂ), ಕಂದು-ಮಂಜಳು
tax — ನಾ ತೆರ (ಅವರಲ್ಲಿ ಹೆಂಡತಿಯನ್ನು ಪಡೆಯಲು ತೆರ ಕೊಡಬೇಕು), ತೆರಿಗೆ (ತೆರಿಗೆ ಕೊಡು, ತೆರಿಗೆ ಕಟ್ಟು) ತೆರವು (ತೆರ ವಣ), ಪೊಗದಿ (ಪೊಗದಿ ತೆರು)
taxable — ಗು ತೆರಿಗೆ ತೆರಬೇಕಾದ, ತೆರಿಗೆ ಬೀಳುವ
taxi — ನಾ ಬಾಡಿಗೆಬಂಡಿ
tax-payer — ನಾ ಅಚ್ಚುವಣಿಗ
teach — ಕ್ರಿ ಹೇಳಿಕೊಡು, ಕಲಿಸು
teacher — ನಾ ಕಲ್ಲಯ್ತ (ನಿಮ್ಮ ಕಲ್ಲಯ್ತರು ಇವತ್ತು ಬರುವುದಿಲ್ಲ), ಅಯ್ಗಳು (ನಾನು ಅಯ್ಗಳ ಮನೆಯಲ್ಲಿ ಕಲಿತೆ), ಕಲಿಸುಗ
teaching — ನಾ ಕಲಿಸುಗೆ
teak — ನಾ ಹಾಡಗ,ತೇಗ
team — ನಾ ತಂಡ, ಪಂಗಡ (ನಮ್ಮ ಪಂಗಡ ದಲ್ಲಿ ಹದಿನಯ್ದು ಮಂದಿ ಇದ್ದಾರೆ)
tear — ನಾ ಕಂಬನಿ (ಆಕೆಯ ಕಣ್ಣಿನಲ್ಲಿ ಕಂಬನಿ ತುಂಬಿದೆ), ಕಣ್ಣೀರು (ಕಣ್ಣೀರು ಗಳಗಳನೆ ಸುರಿಲಿುತು; ಕಣ್ಣೀರಿಡು), ಆಲಿನೀರು, ಕಂಕಣ
tear — ಕ್ರಿ ಹರಿ (ಬಟ್ಟೆ ಹರಿದುಹೋಗಿದೆ),ಗೀಳು (ಅವನು ನನ್ನ ಬಟ್ಟೆಯನ್ನು ಗೀಳಿದ), ಸಿಗಿ
tear down — ಕ್ರಿ ಉರುಳಿಸು (ಕಟ್ಟಡವನ್ನು ಉರುಳಿಸಿದರು), ಕೆಡವು
tease — ಕ್ರಿ ತೆವರು, ಕೀಟಲೆ ಕೊಡು
teaspoon — ನಾ ಮಿಳ್ಳಿ (ಇದಕ್ಕೆ ಒಂದು ಮಿಳ್ಳಿ ತುಪ್ಪ ಹಾಕಿ)
teat — ನಾ ಒಂಗು, ಮೊಲೆತೊಟ್ಟು
technical — ಗು ಅರಿಮೆಯ, ಕಯ್ಗಾರಿಕೆಯ
technique — ನಾ 1 ಮಾಡುವ ಬಗೆ 2 ಜಾಣ್ಮೆ
tedious speech — ನಾ ಕಗ್ಗ (ಆತನ ಕಗ್ಗ ವನ್ನೆಲ್ಲ ಕೇಳಿದೆ; ಕಗ್ಗದಾರಿ)
tedious — ಗು ಕಿರಿಕಿರಿಯ, ಬೇಸರಗೊಳಿಸುವ ಕ್ರಿ 1 ತುಂಬಿರು, ತುಂಬಿತುಳುಕು, ಮುಸುರು (ಜೇನುಹುಳಗಳು ಮುಸುರುತ್ತಿವೆ) 2 ತೆರವುಮಾಡು, ಬರಿದುಮಾಡು, ಚೆಲ್ಲು, ಸುರಿ (ಮಳೆಸುರಿ)
teenage — ನಾ ಹದಿಹರೆಯ
teethe — ಕ್ರಿ ಹಲ್ಲುಮೂಡು, ಹಲ್ಲುಬರು
teetotaler — ಗು ಹೆಂಡಕುಡಿಯದವನು
telegram — ನಾ ತಂತಿ
telegraph — ನಾ ತಂತಿಯಂಚೆ
telephone — ನಾ ಗೆಂಟುಮಾತು
teleprinter — ನಾ ಗೆಂಟಚ್ಚು
telescope — ನಾ ಗೆಂಟುತೋರ್ಪುಗ
televise — ಕ್ರಿ ಗೆಂಟುಕಾಣಿಸು
television — ನಾ ಗೆಂಟುಕಾಣ್ಕೆ
tell — ಕ್ರಿ ಹೇಳು (ಹೇಳಿಕಳಿಸು; ಹೇಳಿದ ಕೆಲಸ; ಹೇಳಿದಹಾಗೆ ಮಾಡು)
teller — ನಾ 1 ಕೊಗೆಗ, ಹೇಳುಗ 2 ಎಣಿಸುಗ
telltale — ನಾ 1 ತಿಳಿಹುಗ 2 ಸುಳಿವು (ಹೊರ ಗೆಡಹುವ ಸುಳಿವು)
temerity — ನಾ ಉರವಣಿ, ದುಡುಕುತನ, ಆರ್ಪು, ಅದಟು
temper — ನಾ 1 ಹದ 2 ಒಲವು 3 ಸಿಟ್ಟು, ಸಿಡುಕುತನ
temperament — ನಾ ಒಲವು, ಪಸಿಯಿಸುಗೆ
temperance — ನಾ ಹಾಳಿತ, ಹದವರಿಕೆ, ತನ್ನರಿಕೆ
temperature — ನಾ 1 ಬಿಸುಹು, ಬಿಸುಹಳತೆ 2 ಬಿಸುಪು (ಮಗುವಿಗೆ ತುಸು ಬಿಸುಪಿದೆ)
tempest — ನಾ ಬಿರುಗಾಳಿ ಮಳೆ, ಸುಂಟರಗಾಳಿ ಮಳೆ
temple — ನಾ 1 ಕೋವಿಲು (ಕೋವಿಲಿಗೆ ಹೋಗಲು ಹೊರಟಿದ್ದೇವೆ) 2 ಕೆಪ್ಪೆ (ಕೆಪ್ಪೆಗೆ ಏಟು ಬಿತ್ತು),ಕೆಂದಾರೆ, ಕಣತಲೆ
tempo — ನಾ ಉರುಬು
temporal — ಗು 1 ಹೊತ್ತಿನ 2 ಬಾಳ್ವೆಯ 3 ನೆಲೆನಿಲ್ಲದ, ಮಾರ್ಪಡುವ
temporary — ಗು ತುಸುಹೊತ್ತಿನ, ಬಾಳಿಕೆ ಯಿಲ್ಲದ
tempt — ಕ್ರಿ 1 ಸೆಳೆ, ಮರುಳುಮಾಡು 2 ಕೆಣಕು, ಕೆರಳಿಸು 3 ಒಲವು ತೋರು
temptation — ನಾ ಸೆಳೆತ (ಸೆಳೆತಗಳಿಂದ ದೂರವಿರಲು ಕಲಿಯಬೇಕು) ಗು ಕಾಯಬಲ್ಲ, ಬೆಂಬಲಿಸಬಲ್ಲ, ನಂಬಬಲ್ಲ
tenacious person — ನಾ ಅಂಟುಕ
tenacious — ಗು ಪಟ್ಟುಬಿಡದ; ಜಗ್ಗದ
tenant — ನಾ ಒಕ್ಕಲು (ಒಕ್ಕಲುಮನೆ; ಒಕ್ಕ ಲಾಗು; ಒಕ್ಕಲೆತ್ತು; ಒಕ್ಕಲೆಬ್ಬಿಸು)
tend — ಕ್ರಿ 1 ಆರಯ್ಸು, ಕಾಪಾಡು 2 ಸಾವಗಿಸು 3 ಒಲವುತೋರು
tendency — ನಾ ಒಲವು (ಸಾಲಮಾಡದಿರು ವುದರಲ್ಲೇ ಆತನ ಒಲವು)
tender — ಕ್ರಿ ನೀಡು, ಮುಂದಿಡು
tender — ಗು 1 ನವುರು (ನವುರು ಹುಲ್ಲು), ಎಳ (ಎಳಗರಿಕೆ, ಎಳಮಾವು, ಎಳಬಿಸಿಲು; ಎಳಗೂಸು), ಎಳೆ (ಎಳೆಗೂಸು; ಎಳೆನಗೆ; ಎಳೆನೇಸರು; ಎಳೆತನ), ತಟ್ಟೆ (ತಟ್ಟೆ ಕೋಡು), ಮೊಗರು (ಮೊಗರು ಬದನೆ), ಕುರುಣೆ (ಕುರುಣೆ ಮರಿ), ಹದಿರು (ಹದಿರು ಮಿಡಿ), ಕೊಡ (ಕೊಡಗೂಸು) 2 ಸಣಕಲು 2 ಸುಳುವಾಗಿ ನಾಟುವ
tender coconut — ನಾ ಕುರುಬೆ, ಸೀಯಾಳ,ಎಳನೀರು
tendril — ನಾ ಕುಡಿಬಳ್ಳಿ
tenement — ನಾ ಬಾಡಿಗೆಮನೆ, ಮನೆಕಂತೆ
tenet — ನಾ 1 ಕಡುನಂಬಿಕೆ, ಬಗೆತ 2 ಅಡಿಕಟ್ಟಲೆ
tenor — ನಾ 1 ಒಲವು 2 ಹುರುಳು 3 ಮೇಲುಲಿ
tense — ನಾ ಪೊತ್ತು (ಮುಂಬೊತ್ತು, ಈ ಪೊತ್ತು; ಹಿಂಬೊತ್ತು)
tense — ಗು ಬಿಗಿದ, ಬಿಗಿಯಾಗಿ ಎಳೆದ 2 ಒತ್ತಡದಲ್ಲಿರುವ (ಒತ್ತಡದಲ್ಲಿರುವ ಮಂದಿ ಏನೂ ಮಾಡಬಹುದು)
tension — ನಾ ಬಿಗಿತ, ಒತ್ತಡ (ಕೆಲಸದ ಒತ್ತಡ)
tent — ನಾ ಗುಡಾರ (ಒಂದಿರುಳು ಆತನ ಗುಡಾರದಲ್ಲಿದ್ದೆ)
tentacle — ನಾ ಬಳ್ಳಿಗಾಲು (ಆ ಉಸುರಿಯ ಬಳ್ಳಿಗಾಲು ಇಲ್ಲಿವರೆಗೂ ಬಂದಿದೆ)
tentative — ಗು ತುಸುಹೊತ್ತಿನ, ಒರೆಹಚ್ಚ ಲಿರುವ, ಕಡೆಯದಲ್ಲದ
tenuous — ಗು ತೆಳ್ಳಗಿನ, ನವುರಾದ, ಗಟ್ಟಿ ಯಿಲ್ಲದ, ಹಗುರವಾದ
tenure — ನಾ 1 ಕೆಲಸದ ಗಡುವು (ನನ್ನ ಕೆಲಸದ ಗಡುವು ಇನ್ನೂ ಎರಡು ಸೂಳಿದೆ) 2 ಹಿಡುವಳಿ
tepid — ಗು 1 ತುಸು ಬೆಚ್ಚಗೆ, ಉಗುರು ಬೆಚ್ಚಗೆ 2 ಸಪ್ಪೆ
term — ನಾ 1 ಹೊತ್ತು, ಗಡುವು 2 ಪದ 3 ಬೇಡಿಕೆ (ಒಪ್ಪಂದಕ್ಕೆ ಬೇಡಿಕೆಗಳು ಹಲ ವಿದ್ದುವು)
terminal — ಗು 1 ಹೊತ್ತು ಹೊತ್ತಿಗೆ ನಡೆವ 2 ಕೊನೆಯ ಕ್ರಿ ಕೊನೆಗೊಳಿಸು, ಮುಗಿಸು (ಮುಕ್ತಾಯಗೊಳಿಸು), ಬೀಯಿಸು (ಬೀಯಿ ಸದ ಕೆಲಸ)
terminology — ನಾ ಅರಿಮೆಯ ಪದ (ಸೊಲ್ಲ ರಿಮೆಯ ಪದ)
terminus — ನಾ ಕೊನೆ (ಕೊನೆಯ ನಿಲುಗಡೆ), ಎಲ್ಲ, ತುದಿ
termite — ನಾ ಗೆದ್ದಲು (ಮಾಡಿನ ಗಳೆಗಳೆಲ್ಲ ಗೆದ್ದಲುಹಿಡಿದು ಹೋಗಿದ್ದುವು)
terra — ನಾ ನೆಲ
terra cotta — ನಾ ಬೇಯುಮಣ್ಣು
terrace — ನಾ ಮಚ್ಚು (ಮಾಳಿಗೆಯ ಮಚ್ಚು; ಬಿಸಿಲು ಮಚ್ಚು - ಬಿಸಿಲು ಮಚ್ಚಿನಲ್ಲಿ ಆಕೆ ತರಕಾರಿ ಬೆಳೆಸಿದ್ದಾಳೆ)
terrain — ನಾ ನೆಲಹರಹು
terrestrial — ನಾ ನೆಲದ, ಬಾಳ್ವೆಯ
terrible — ಗು ಬೆದರಿಕೆಯ, ತೀರ ಕೆಟ್ಟದಾದ, ತಡೆಯಲಾಗದ
terrific — ಗು ಬೆದರಿಕೆಯ, ಅಗುರ್ವಿಸುವ
territory — ನಾ 1 ನೆಲಹರಹು 2 ಒಳನಾಡು
terror — ನಾ ಅರುಳು, ಅಗುರ್ವು (ಅಗುರ್ವಿಸು; ಅಗುರ್ವುಪಡೆ), ದಿಗಿಲು
terrorist — ನಾ ಅಗುರ್ವಿಸುಗ, ದಿಗಿಲುಗೊಳಿಸುಗ
terrorize — ಕ್ರಿ ದಿಗಿಲುಗೊಳಿಸು, ಅಗುರ್ವಿಸು
terse — ಗು ಬಿಗಿ (ಬಿಗಿಮಾತು), ಒರಟು (ಒರಟುಮಾತು)
test — ಕ್ರಿ ಒರೆ (ಒರೆಹಚ್ಚು; ಒರೆಕೊಳ್ಳು; ಒರೆ ಕಲ್ಲು)
testament — ನಾ 1 ಒಪ್ಪಂದ, ನಂಬಿಕೆಯ ಒಪ್ಪಿಗೆ 2 ಸತ್ತವನ ಸೆಲವು
testify — ಕ್ರಿ 1 ಎತ್ತಿಹಿಡಿ 2 ಕಂಡುದನ್ನು ತಿಳಿಸು
testimonial — ನಾ ಮೆಚ್ಚುಗೆಯೋಲೆ, ಗುಣ್ಮೆ ಯೋಲೆ
testy — ಗು ತಾಳ್ಮೆಯಿಲ್ಲದ, ಸಿಡುಕುವ
tetanus — ನಾ ಸೆಟೆಬೇನೆ
tether — ನಾ ತಳೆ (ಎಮ್ಮೆಯ ತಳೆ)
text — ನಾ 1 ಬರಹ 2 ಓದು
text-book — ನಾ ಓದುಹೊತ್ತಗೆ, ಓದುಕಡತ, ಕಲಿಕೆಯ ಕಡತ
textile — ನಾ ಬಟ್ಟೆ, ಅರಿವೆ (ಅರಿವೆ ಅಚ್ಚಡ), ಜವಳಿ (ಜವಳಿ ಅಂಗಡಿ) ನಾ ನೆಯ್ಗು (ನೆಯ್ಗೆಕಾರ; ಹೊರಸಿನ ನೆಯ್ಗೆ), ಹೆಣಿಗೆ (ಹೆಣಿಗೆಕೆಲಸ),ಮಯ್ವಳಿಕೆ
thank — ಕ್ರಿ ಮೆಚ್ಚುಗೆ ಹೇಳು, ಒದವಿ ನೆನಪಿಸು
thatch — ನಾ ಮುಳಿಮಾಡು, ಹುಲ್ಲುಮಾಡು
thaw — ಕ್ರಿ 1 ಕರಗು (ಮಂಜುಗಡ್ಡೆ ಕರಗಿತು) 2 ಬೆಚ್ಚಗಾಗು
theft — ನಾ ಕಳವು (ಕಳವು ಮಾಡು; ಕಳವಾಗು; ಕಳವೋಲೆ), ತುಡುಗು (ತುಡುಗು ಮಾಡು; ತುಡಿ - ಅವನು ತಂದಿರಿಸಿದ್ದ ತುಡಿಹಣ)
theism — ನಾ ದೇವರ ನಂಬಿಕೆ
theme — ನಾ 1 ಕಿರುಬರಹ 2 ಹುರುಳು (ಪೆರ್ಮಾತಿನ ಹುರುಳು; ಆಡುಗಬ್ಬದ ಹುರುಳು; ಹುರುಳಿನ ಹಾಡು - ಮೊದಲಿಗೆ ಹುರುಳಿನ ಹಾಡು ಹಾಕುತ್ತಾರೆ)
theology — ನಾ ನಂಬಿಕೆಯರಿಮೆ
theorem — ನಾ ಹೇಳ್ಮೆ (ನನ್ನಿಗೆಯ್ಯ ಬಹುದಾದ ಹೇಳ್ಮೆ)
theoretical — ಗು 1 ಹೇಳ್ಮೆಯ, ಹೇಳ್ಮೆಯೊಳ ಗೊಂಡ, ಹೇಳ್ಮೆಯೊಡ್ಡುವ 2 ಗೆತ್ತ
theorize — ಕ್ರಿ ಹೇಳ್ಮೆಯೊಡ್ಡು
theory — ನಾ 1 ಹಮ್ಮುಗೆ, ಕೇಣ 2 ಅಡಿ ಕಟ್ಟಲೆ 3 ಅನಿಸಿಕೆ, ತೀರ್ಮಾನ
theosophy — ನಾ ದೇವರರಿಮೆ, ದೇವ ರರಿಮೆಯ ಪೂನು
therapeutics — ನಾ ಮಾಂಜುಗೆಯರಿಮೆ
therapy — ನಾ ಮಾಂಜುಗೆ
thermal — ಗು ಕಾವಿನ
thermometer — ನಾ ಬಿಸುಪಳಕ
thermos — ನಾ ಬಿಸಿಯುಳಿಕ (ಬಿಸಿಯುಳಿಕದ ಲ್ಲಿರಿಸಿದ ಕುಡಿಗೆ ತುಂಬಾ ಬಿಸಿಯಾಗಿತ್ತು)
thermostat — ನಾ ಬಿಸಿತೊಡಗುಗ
thesaurus — ನಾ ಪದಸೇರುವೆ, ಪೊರುಳು-ಮರುಪೊರುಳು ಸೇರುವೆ
thick — ಗು ದಪ್ಪ (ದಪ್ಪ ಹಲಿಗೆ, ದಪ್ಪ ಬಟ್ಟೆ; ದಪ್ಪಕ್ಕಿ; ದಪ್ಪಗಟ್ಟು), ದಟ್ಟ (ದಟ್ಟಕೂದಲು; ದಟ್ಟಬಳ್ಳಿ), ಎಟ್ಟೆ (ಎಟ್ಟೆ ಹಾಲು), ತಿಣ್ಣ (ತಿಣ್ಣಕೊಂಬು), ದೊಣ್ಣೆ (ದೊಣ್ಣೆ ಮೂಗು; ದೊಣ್ಣೆಮುಳ್ಳು)
thicken — ಕ್ರಿ ಹೆರು (ಹೆತ್ತುಪ್ಪ; ನೀರು ಹೆತ್ತು ಮಂಜುಗಡ್ಡೆಯಾಗಿದೆ), ತೆಲ್ಲಯಿಸು (ಎಣ್ಣೆ ಚಳಿಗೆ ತೆಲ್ಲಯಿಸಿದೆ) ನಾ ಹೊದರು (ಹಲವು ಬಳ್ಳಿಗಳು ಹಬ್ಬಿರುವ ಹೊದರು), ಮೆಳೆ (ಬೆತ್ತದ ಮೆಳೆಯಲ್ಲಿ ಒಂದು ಹಾವಿದೆ; ಬಿದಿರ ಮೆಳೆ), ಒಬ್ಬೆ (ಒಬ್ಬೆಯಲ್ಲಿ ಅಡಗಿರುವ ನರಿ), ಕುತ್ತುರು (ಕುತ್ತುರೊಳಗೆ ಅಡಗಿ ಕುಳಿತಿರುವ ಹುಲಿ),ತೋಪು (ತೋಪಿನ ಬೇಟೆ)
thickness — ನಾ ದಪ್ಪ, ತಿಣ್ಪು (ತೊಡೆಯ ತಿಣ್ಪು)
thickset — ಗು 1 ದಪ್ಪ, ತೋರ, ಗಿಡ್ಡ 2 ದಟ್ಟವಾದ
thief — ನಾ ಕಳ್ಳ (ಕಳ್ಳ ಇನ್ನೂ ಸೆರೆಸಿಕ್ಕಿಲ್ಲ; ಕಳ್ಳದಾರಿ; ಕಳ್ಳಹಣ), ಉಳಿ (ಚಿನ್ನ ಕದ್ದ ಉಳಿಯನ್ನು ಸೆರೆಹಿಡಿದಿದ್ದಾರೆ), ತುಡುಗ (ತುಡುಗತನ; ತುಡುಗುಣಿ), ತೊಂಡ (ತೊಂಡರನ್ನು ನಂಬಿ ಕೆಟ್ಟುಹೋದ), ಕದಕ (ಕಯ್ಗದಕ; ಕದಕತನ)
thigh — ನಾ ತೊಡೆ
thimble — ನಾ ಬೆರಳಕಾಪು
thin — ಗು ಅಸಿ (ಅಸಿನಡು), ತೆಳು (ತೆಳ್ನಡು, ತೆಳು ಕಾಗದ; ತೆಳುಮಜ್ಜಿಗೆ; ತೆಳ್ಳಗೆ), ಸಿಲುವು (ಸಿಲುವು ಬಟ್ಟೆ), ಜಿಣುಗು(ಜಿಣುಗು ಸೀರೆ ಉಟ್ಟರೆ ಮಯ್ ಕಾಣಿಸು ತ್ತದೆ)
thing — ನಾ ಒಡವೆ (ಬಾಳ್ತೆಯೊಡವೆ), ಬಂಡ
think — ಕ್ರಿ 1 ನೆನೆ (ನಿನ್ನನ್ನೇ ಇರುಳೂ ಹಗಲೂ ನೆನೆಯುತ್ತಿದ್ದ; ನೆನಸು), ಆರಯ್ಯು, ಓರು (ಮಾರ್ನುಡಿಯುವ ಮೊದಲು ತುಂಬಾ ಓರುತ್ತಿದ್ದ), ಒಣರು, ಗಿರು (ಇನಿಯನನ್ನು ಹಗೆಯೆಂದು ಗೆತ್ತವಳು), ಬಗೆ (ತನ್ನಂತೆ ಇತರರನ್ನೂ ಬಗೆ; ಕೇಡು ಬಗೆಯದಿರು), ಉನ್ನು (ನಾನು ಹೇಳುವುದನ್ನು ಉನ್ನದೆ ಕೇಳು; ಉನ್ನಿಸು; ಉಂಕಿಸು), ಎಣಿಸು (ಹಣ ಸಿಗಬಹುದೆಂದು ಎಣಿಸಿದೆ) 2 ನಂಬು
thin — ಗು ತೆಳು (ತೆಳುಬಟ್ಟೆ; ತೆಳ್ನಡು; ತೆಳ್ಗದಪು), ಸೆಳೆ (ಸೆಳೆಗೊಂಬು)
thinly — ಗು ತೆಳ್ಳಗೆ, ತೆಳ್ಳನೆ (ತೆಳ್ಳನೆಯ ಮೋಡ)
thinness — ನಾ ತೆಳುಪು (ಆಕೆಯುಟ್ಟ ಸೀರೆಯ ತೆಳುಪನ್ನು ನೋಡಿ ನಾನು ನಾಚಿದೆ)
thirst — ನಾ ಬಾಯಾರಿಕೆ (ಬಾಯಾರಿಕೆಗೆ ಕುಡಿಯಲು ಏನಾದರೂ ಕೊಡಿ), ನೀರಡಿಕೆ (ನೀರಡಿಕೆಗೆ ನೀರುಮಜ್ಜಿಗೆ ಕೊಟ್ಟರು), ಅರಕೆ (ನೀರರಕೆಲಿುಂದ ಆತನ ಮೋರೆ ಒಣಗಿತ್ತು), ಆಸರು (ಆಸರಿಲ್ಲದ ಊರು; ಆಸರಿಗೆ ಬೆಲ್ಲನೀರು ಕೊಡಿ)
thong — ನಾ 1 ಬಾರು 2 ಚಾಟಿ
thorax — ನಾ ಬಗ್ಗರಿ
thorn — ನಾ ಮುಳ್ಳು (ಆತನ ಕಯ್ಗೊಂದು ಮುಳ್ಳು ಚುಚ್ಚಿತು; ಮುಳ್ಳುಬೇಲಿ, ಮುಳ್ಳು ಗಿಡ, ಮುಳ್ಳುಹಂದಿ; ಮುಳ್ಕತ್ತಿಗೆ - ಮುಳ್ಳು ಕಡಿಯಲು ಮುಳ್ಕತ್ತಿಗೆ ತಂದಿದ್ದಾನೆ), ಸೀಬು (ಬಿದಿರ ಸೀಬು) ಗು 1 ನೆರೆ, ಸಲೆ (ಸಲೆ ಸೋತ ವರು), ತವೆ (ತವೆ ತುಂಬಿದ) 2 ಕಟ್ಟು ನಿಟ್ಟಾದ, ಹಾಳಿತಗೆಡದ
thoroughfare — ನಾ ಹಾದಿ (ಮಂದಿಯ ಹಾದಿ)
thought — ನಾ ನೆನಹು,ಎಣಿಕೆ (ನಿನ್ನ ಎಣಿಕೆ ಎಡೆಗೂಡದಿದ್ದೀತೇ?; ಎಣಿಸಿಕೆ)
thoughtless — ಗು ಓರದ, ಉನ್ನದ, ಎಚ್ಚರಿಕೆ ಯಿಲ್ಲದ
thrall — ನಾ 1 ಅಡಿಮೆ, ತುಳಿಲು 2 ಅಡಿ ಯಾಳು, ತುಳಿಲಾಳು
thrash — ನಾ 1 ಹೊಡೆ, ಚಚ್ಚು, ಸದೆಬಡಿ 2 ಹೊರಳಾಡು 3 ಸಲೆ ಸೋಲಿಸು
thread — ನಾ ನೂಲು (ನೂಲು ಮಾಡಲು ಹತ್ತಿ ತಂದಿದ್ದಾನೆ), ನೂಲೇಣಿ, ನೂಲ ಕಂಡಿಕೆ), ಎಳೆ (ನೂಲ ಎಳೆ; ಕಾಯೆಳೆ)
thread — ಕ್ರಿ ಪೋಣಿಸು (ಹತ್ತಿರಹತ್ತಿರವಾಗಿ ಪೋಣಿಸಿರುವ ಮುತ್ತಿನ ದಂಡೆ), ತೂರಿಸು (ದಬ್ಬಣಕ್ಕೆ ನೂಲು ತೂರಿಸು)
threadbare — ಗು ಚಿಂದಿಯಾದ, ಹಳೆಯ, ಕೊಳಕಾದ
threading — ನಾ ಪವಣಿಗೆ
threat — ನಾ ಹೆದರಿಕೆ, ಬೆದರಿಕೆ (ಬೆದರಿಕೆ ಹಾಕು)
threaten — ಕ್ರಿ ಹೆದರಿಸು, ಕೊಕ್ಕರಿಸು (ಹಾವು ಹೆಡೆಬಿಚ್ಚಿ ಕೊಕ್ಕರಿಸುತ್ತಿದೆ), ಬಗ್ಗಿಸು (ಕಣ್ಣು ಹೊರಳಿಸಿ ನನ್ನನ್ನು ಬಗ್ಗಿಸಿದ), ಅಟ್ಟಾಡು
thresh — ಕ್ರಿ ಒಕ್ಕು (ಇವತ್ತು ಕಣ ಮಾಡಿ ಒಕ್ಕುವ ಕೆಲಸ)
threshing — ನಾ ಒಕ್ಕಣೆ (ಒಕ್ಕಣೆ ಮುಗಿದಿಲ್ಲ; ಒಕ್ಕಣಿಕೆ), ಒಕ್ಕಲು (ಒಕ್ಕಲಿಕ್ಕು)
threshold — ನಾ 1 ಹೊಸಲು (ಹೊಸಲು ದಾಟು), ಹೊಸತಿಲು, ಹೊಸ್ತಿಲು (ಆತ ಹೊಸ್ತಿಲ ಮೇಲೆ ಕುಳಿತ) 2 ತೊಡಗಿಕೆ
thrice — ಗು ಮೂರ್ಮೆ (ಮೂರ್ಮೆ ಬಂದವರು)
thrift — ನಾ ಉಳಿತಾಯ
thrill — ನಾ ಪಸಿಯಿಸುಗೆ
thrive — ಕ್ರಿ ಒದಗು (ಒದಗಿದ ಹೂಗಿಡ), ಹುಲಿಸು (ಹುಲಿಸಿದ ಬೆಳೆ), ತನಿ (ತನಿದ ಕಿಚ್ಚು; ತನಿಕೆಂಡ; ತನಿಕಬ್ಬು), ಕೊನೆ (ಕೊನೆದಾಡು; ಕೊನೆದ ಕೆಲಸ)
thriving — ಗು ಕುದುರಿದ, ಏಳಿಗೆ ಹೊಂದಿದ, ಗೆದ್ದ
throat — ನಾ ಗೊಂಕೆ (ಗೊಂಕೆಯಲ್ಲೇನೋ ಸಿಲುಕಿಕೊಂಡಿದೆ), ದೊಂಡೆ (ದೊಂಡೆ ಕೆರೆ), ಗಂಟಲು (ಗಂಟಲು ಹರಿಯುವಂತೆ ಕಿರುಚು) ಕ್ರಿ ತುಡಿ (ತುಡಿದುಕೊಳ್ಳು; ತುಡಿತ - ಎದೆಯ ತುಡಿತ),ದುಡಿ (ದುಡಿಯುವ ನೋವು; ದುಡಿತ - ಕುರುವಿನ ದುಡಿತ)
throe — ನಾ ಸೇದುನೋವು, ಕಡುನೋವು
throne — ನಾ ಗದ್ದುಗೆ (ಗದ್ದುಗೆಯಲ್ಲಿ ಕುಳಿತ ಅರಸು), ಮುಟ್ಟಡಿ
throng — ಕ್ರಿ ತುಕ್ಕು (ಹೂಗಳಿಗೆ ತುಕ್ಕುವ ಎಳೆದುಂಬಿಗಳು), ಕಿಕ್ಕಿರಿ (ತೇರಿನ ಸುತ್ತ ಕಿಕ್ಕಿರಿದ ಮಂದಿ; ಕಿಕ್ಕಿರಿದಿದ್ದ ಹುಡುಗರು ಯಾರನ್ನೂ ಒಳಗೆ ಬಿಡಲಿಲ್ಲ)
throttle — ಕ್ರಿ 1 ಕುತ್ತಿಗೆ ಹಿಚುಕು 2 ಅಡಗಿಸು, ತೆಗಳು 3 ಹತೋಟಿಯಲ್ಲಿಡು
throw — ಕ್ರಿ ಉಗ್ಗು (ನೀರು ತಂದು ಉಗ್ಗು), ಬಿಸಾಡು (ಬಾಳೆಹಣ್ಣು ತಿಂದು ಸಿಪ್ಪೆಯನ್ನು ಅಲ್ಲೀ ಬಿಸಾಡಿದ), ಎಸೆ (ಮರಕ್ಕೆ ಕಲ್ಲೆಸೆದ ಮಕ್ಕಳು; ಎಸೆತ), ಅಸಿ (ಅಸಿದ ಕಣೆ), ಏಯು (ಕಲ್ಲು ಏಯುತ್ತಿದ್ದ ಹುಡುಗರು), ಒಗೆ (ಹುಡುಗ ಹಾವಿಗೆ ಕಲ್ಲು ಒಗೆದ; ಒಕ್ಕೊಡು), ನೀಂಟು (ಎಲ್ಲವನ್ನೂ ಹೊರಗೆ ನೀಂಟಿದರು), ಈಡಾಡು, ಕಳಲು, ಸಾಕು
thrust — ನಾನೂಕುಬಲ
thrust — ಕ್ರಿ 1 ಇರಿ 2 ದೂಡು, ನೂಕು
thug — ನಾ ಕೊಲೆಗಾರ, ಕೇಡಿ, ಸೆರೆಗ
thumb — ನಾ ಹೆಬ್ಬೆಟ್ಟು (ಹೆಬ್ಬೆಟ್ಟಿನವರು; ಹೆಬ್ಬೆಟ್ಟು ಒತ್ತು), ಹೆಬ್ಬೆರಳು
thumbnail — ಗು ತೀರಾ ಚಿಕ್ಕ, ಅಡಕವಾದ
thump — ನಾ ತೂಕದ ಹೊಡೆತ
thumping — ಗು ತುಂಬಾ ದೊಡ್ಡ
thunder — ಕ್ರಿ ಗುಡುಗು (ಗುಡುಗುತ್ತಿರುವ ಗುಡುಗು; ಗುಡುಗಾಟ; ಗುಡುಗುಡಿಸು), ಮೊಳಗು
thunderbolt — ನಾ ಪಿಡುಗು (ಪಿಡುಗ - ಪಿಡುಗನ ಹಾಗೆ ಎಲ್ಲರನ್ನೂ ಹೆದರಿಸು ತ್ತಾನೆ), ಸಿಡಿಲು (ಮೊಳಗುವ ಸಿಡಿಲಿನ ಅಬ್ಬರ; ಸಿಡಿಲುಮಳೆ),ಮುಗಿಲ್ಗಿಚ್ಚು
thunderstorm — ನಾ ಗುಡುಗುಮಳೆ
thwack — ನಾ ತೂಕದ ಹೊಡೆತ
thwart — ಕ್ರಿ ಅಡ್ಡಬರು, ತಡೆಯೊಡ್ಡು, ಮಾಡ ಗೊಡದಿರು
tick — ನಾ ಉಣ್ಣಿ (ಆಕಳ ಮೇಲಿನ ಉಣ್ಣಿ), ಉಣಿಕ
ticket — ನಾ ಉಂಡಿಗೆ (ಉಂಡಿಗೆಕಾರ)
tickle — ಕ್ರಿ 1 ಕಚಗುಳಿಯಿಡು 2 ಒಲಿಸು, ತಣಿಸು, ಮೆಚ್ಚಿಸು
tickling — ನಾ ಚಕ್ಕಲಗುಳಿ (ಚಕ್ಕಲಗುಳಿ ಯಿಡು), ಕಚಗುಳಿ (ಕಚಗುಳಿ ಮಾಡು), ಜಕ್ಕುಲಿ (ಜಕ್ಕುಲಿಸು) ನಾ 1 ಉಬ್ಬರ-ಇಳಿತ (ಕಡಲಿನ ಉಬ್ಬರ; ಅಲೆಯುಬ್ಬರ) 2 ಸೂಳು, ಅಮಗ
tidiness — ನಾ ಅಚ್ಚುಕಟ್ಟು(ಅವನ ಕೆಲಸ ತುಂಬಾ ಅಚ್ಚುಕಟ್ಟು)
tidings — ನಾ ಸುದ್ದಿ (ಆತನಿಗೆ ಸುದ್ದಿ ಬಂದಿದೆ), ಒಸಗೆ, ತಿಳುವಳಿಕೆ
tie — ನಾ ಗುದಿ (ಕಾಲಿಗೆ ಗುದಿ ಸಿಕ್ಕಿಸಿ ತೆಂಗಿನ ಮರ ಹತ್ತಿದ)
tie — ಕ್ರಿ 1 ಗುದಿ (ಆತನ ಕಾಲುಗಳನ್ನು ಗುದಿ ದರು), ಕಟ್ಟು (ಆಕಳನ್ನು ಕಟ್ಟು; ಕಟ್ಟಿಹಾಕು), ತೆಂಡೆಸುತ್ತು 2 ಎಣೆಗೊಳ್ಳು (ಎಣಿಕೆ ಎಣೆಗೊಂಡಿದೆ)
tier — ನಾ ಅಡ್ಡಸಾಲು, ವರಸೆ
tiff — ನಾ ಕಿರುಜಗಳ, ಕಿರುಸಿಟ್ಟು
tiffin — ನಾ ತಿಂಡಿ (ಅಲೆದಾಟಕ್ಕೆ ಹೋಗುವಾಗ ತಿಂಡಿ ಕಟ್ಟಿಕೊಳ್ಳುತ್ತಾನೆ), ತಿನಿಸು
tiger — ನಾ ಹುಲಿ (ಗೋಡೆಗೆ ಹುಲಿ ತೊಗಲು ಹಾಕಿದ್ದಾರೆ)
tight — ಗು ಬಿರಿ (ಬಿರಿಕಟ್ಟು, ಬಿರಿಹಾಕು; ಬಿರಿ ಬಿಗಿ; ಬಿರಿಹಗ್ಗ), ಗುತ್ತ (ಗುತ್ತ ಬಳೆ; ಗುತ್ತನೆ ಕಟ್ಟು; ಮಯ್ಗೆ ಗುತ್ತವಾದ ಅಂಗಿ), ಗಟ್ಟಿ (ಗಟ್ಟಿಯಾಗಿ ಕಟ್ಟಿದ ಕಟ್ಟಿಗೆ ಹೊರೆ; ಗಟ್ಟಿ ಮುಟ್ಟು; ಗಟ್ಟಿಹಿಡಿ)
tighten — ಕ್ರಿ ಬಿಗಿ (ಬಿಗಿದಪ್ಪು; ಬಿಗಿದುಕೊಳ್ಳು; ಬಿಗಿದುಬರು; ಬಿಗಿಹಿಡಿ; ಬಿಗಿತ)
tightfisted — ಗು ನೆಲಕಲ, ಪಂಜೆ, ಕಾಸು ಬಿಚ್ಚದ
tightness — ನಾ ಬಿಗುಹು
tile — ನಾ ಓಡು (ಓಡಿನ ಮನೆ), ಒಡಿಲು,ಹಂಚು (ಮಾಡಿಗೆ ಹಂಚು ಹಾಸಿದ್ದಾರೆ)
till — ಕ್ರಿ ಉಳು, ಬೇಸಾಯ ಮಾಡು
tillage — ನಾ ಪಣೆ, ಉಳುಮೆ, ಸಾಗುವಳಿ
tilt — ಕ್ರಿ ಓರೆಯಾಗು, ಬಾಗು, ವಾಲು
timber — ನಾ 1 ಮರಮಟ್ಟು 2 ಹೆಟ್ಟಿಗೆ
time — ನಾ 1 ಬಾರಿ (ಮೂರು ಬಾರಿ ಬಂದ; ಬಾರಿಬಾರಿಗೆ), ಸೂಳು (ಹೊರಡುವ ಸೂಳು), ಸಾರಿ (ನಾಲ್ಕು ಸಾರಿ ಹೇಳು, ಮೂರು ಸಾರಿ ಹಾಲು ಕೊಡುವ ದನ), ತಡವೆ (ಮೂರು ದಿನಕ್ಕೆ ಒಂದು ತಡವೆ ಇಲ್ಲಿಗೆ ಬನ್ನಿ) 2 ನಾಳು (ಒಳ್ಳೇ ನಾಳಿನಲ್ಲಿ ಬಂದ), ಏಡು (ಆತನು ಬರುವ ಏಡು), ಏರು, ಪತ್ತು (ಈವತ್ತು, ಒಪ್ಪತ್ತು), ಪೊತ್ತು, ಹೊತ್ತು (ಹೊತ್ತುಕಳೆ, ಹೊತ್ತಿಗೆ ಒದಗು; ಹೊತ್ತಾಗು; ಹೊತ್ತುಹೋಕ)
timely — ಗು ಹೊತ್ತಿಗೆ ಸರಿಯಾದ, ತಕ್ಕ, ಹೊತ್ತಿನ
timepiece — ನಾ ಹೊತ್ತಳಕ
timetable — ನಾ ಹೊತ್ತುಪಟ್ಟಿ ನಾ ಬೇಡ (ಎಲ್ಲರಿಗೂ ಹೆದರುವ ಬೇಡ), ಹೇಡಿ
timid — ಗು ಪುಕ್ಕಲು (ಪುಕ್ಕಲ; ಪುಕ್ಕನಾದವ), ಹೆದರುವ, ಬೇಡ
timorous — ನಾ ಹೆದರಿದ, ಅಂಜಿದ, ಗಾಬರಿ ಯಾದ
tin — ನಾ ತವರ
tinder — ನಾ ಉರಿಕ (ಬೆಂಕಿ ಹೊತ್ತಿಸಲು ಉರಿಕ ಇದ್ದರೆ ಒಳ್ಳೆಯದು)
tinfoil — ನಾ ತವರಹಾಳೆ
tinge — ನಾ ನಸುಬಣ್ಣ, ಬಣ್ಣದ ಕುರುಹು
tingle — ಕ್ರಿ ಜುಮ್ಮೆನ್ನು (ಅದನ್ನು ನೆನೆದಾಗ ಮಯ್ ಜುಮ್ಮೆನ್ನುತ್ತಿದೆ)
tinker — ಕ್ರಿ 1 ಸರಿಪಡಿಸು (ಜಜ್ಜಿ ಹೋದ ತಂಬಿಗೆಯನ್ನು ಸರಿಪಡಿಸುತ್ತಿದ್ದಾನೆ) 2 ಕೆಟ್ಟದಾಗಿ ಸರಿಪಡಿಸು 3 ಹೊತ್ತುಕಳೆ
tinkle — ಕ್ರಿ ಕಿಣಿಕಿಣಿ ಸಪ್ಪಳ ಮಾಡು, ಕಿಣಿ ಕಿಣಿಸು
tinkling — ನಾ ಗಲುಹು (ಆಕೆಯ ಕಾಲಿನ ಹೆಜ್ಜೆಯ ಗಲುಹು ಇಲ್ಲಿಗೂ ಕೇಳಿಸುತ್ತಿದೆ)
tinsel — ನಾ 1 ಬೆಡಗಿನ ತೋರ್ಕೆ 2 ಮಿರುಗುವ ತೆಳುಹಾಳೆ
tint — ನಾ ನಸುಬಣ್ಣ, ಬಣ್ಣದ ಗುರುತು
tiny — ಗು ಚಿಕ್ಕ, ತೀರಸಣ್ಣ, ಪುಟ್ಟ
tip — ನಾ 1 ಕುಡಿ (ಕುಡಿನಾಲಿಗೆ; ಕುಡಿಗೈ; ಕುಡಿಗಣ್ಣು; ಕಣ್ಣಿನ ಕುಡಿ), ಕೊನೆ (ಮರದ ಕೊನೆ; ತುರುಬಿನ ಕೊನೆ), ತುದಿ (ಮರದ ತುದಿ; ತುತ್ತತುದಿ; ತುದಿಗಾಲು; ತುದಿಗಾ ಲಲ್ಲಿ ನಿಲ್ಲು; ತುದಿನಾಲಿಗೆ) 2 ಮೆಚ್ಚುಹಣ 3 ಗುಟ್ಟು, ಎಚ್ಚರಿಕೆ 4 ತಟ್ಟುಗೆ
tip — ಕ್ರಿ 1 ತಟ್ಟು 2 ಬಗ್ಗಿಸು, ಮಗುಚು 3 ಎಚ್ಚರಿಸು, ತಿಳಿಹೇಳು
tip off — ಕ್ರಿ ಸುಳಿವು ಕೊಡು, ಗುಟ್ಟಿನಲ್ಲಿ ತಿಳಿಸು
tipple — ನಾ ಹೆಂಡ
tipsy — ಗು ಕುಡಿದ, ತೂರಾಡುವ
tiptoe — ಕ್ರಿ ತುದಿಗಾಲಲ್ಲಿ ನಡೆ
tirade — ನಾ ತೆಗಳಿಕೆಯ ಪೆರ್ಮಾತು
tire — ಕ್ರಿ ದಣಿ (ದಣಿದ ಎತ್ತು), ಬಳಲು (ನಡೆದು ನಡೆದು ಬಳಲಿದೆ), ಬಚ್ಚು (ಬಚ್ಚಿದ ಕುದುರೆ), ಅಲಸು (ತುಸುವೂ ಅಲಸದೆ ಆತನ ಆರಯ್ಕೆ ಮಾಡಿದಳು), ಚಳಿ (ಚಳಿತು ಬಂದವರು)
tired — ಗು ಕಾಕು (ಬಿಸಿಲಿನಲ್ಲಿ ನಡೆದು ಕಾಕಾ ದವನು), ಕಂಗಾಲು (ತುಂಬ ಕಂಗಾಲಾದ)
tireless — ಗು ದಣಿವಿಲ್ಲದ (ದಣಿವಿಲ್ಲದ ಕೆಲಸ ಗಾರ) ಗು ಬಳಲಿಸುವ, ಚಿಟ್ಟುಹಿಡಿಸುವ
tissue — ನಾ 1 ನವುರು ಬಟ್ಟೆ 2 ಹೀರುಹಾಳೆ 3 ಬಲೆ 4 ಮಯ್
titbit — ನಾ ಚೂರುಪಾರು (ಚೂರುಪಾರು ತಿಂಡಿ; ಚೂರುಪಾರು ಸುದ್ದಿ)
titillate — ಕ್ರಿ ಪಸಿಯಿಸಿ ಒಲಿಸು, ಪಸಿಯಿಸಿ ಇಂಪೆಸೆ, ಕೆರಳಿಸು
title — ನಾ 1 ತಲೆಬರಹ (ನಿಮ್ಮ ಬರಹಕ್ಕೆ ಏನು ತಲೆಬರಹ?) 2 ಬಿರುದು 3 ಹಕ್ಕೋಲೆ
titter — ನಾ ಚಿರಿಚು (ಅವನು ನಗುವನ್ನು ಅದುಮಿ ಚಿರಿಚಿದನು), ಹಲ್ಲುಕಿರಿ
toad — ನಾ ನೆಲಗಪ್ಪೆ, ಕಾಡುಗಪ್ಪೆ
toast — ನಾ ಸುಟ್ಟರೊಟ್ಟಿ, ಕಂದಿಸಿದ ರೊಟ್ಟಿ
toast — ಕ್ರಿ ಕುಡಿನೀಡಿಕೆ
tobacco — ನಾ ಹೊಗೆಸೊಪ್ಪು
toddle — ಕ್ರಿ ತಪ್ಪುಹೆಜ್ಜೆಯಿಟ್ಟು ನಡೆ
toddy — ನಾ ಸಾರಾಯಿ (ಒಂದು ಬಟ್ಟಲು ಸಾರಾಯಿ ಕುಡಿದ), ಈಡಿ (ತಾಳೇ ಮರದ ಈಡಿ), ಹೆಂಡ (ಹೆಂಡದ ಬುರುಡೆ; ಹೆಂಡದ ಗಡಿಗೆ), ಕಳ್ಳು (ಕಳ್ಳು ಕುಡಿದು ತೂರಾಡು ತ್ತಿದ್ದಾನೆ)
toe — ನಾ ಕಾಲಬೆರಳು
toffee — ನಾ ಅಂಟುಸಿಹಿ
together — ಗು ಒಟ್ಟಾರೆ, ಒಟ್ಟಿಗೆ
toil — ನಾ ದುಡಿತ (ದುಡಿತಗಾರ); ದುಡಿಮೆ (ದುಡಿಮೆಯಲ್ಲಿ ಆತ ಮುಂದೆ)
toil — ಕ್ರಿ ದುಡಿ (ಹಗಲೆಲ್ಲ ದುಡಿದು ಬಂದ ವರು), ಹೆಣಗು (ಹೊಟ್ಟೆಬಟ್ಟೆಗಾಗಿ ಹೆಣಗು ತ್ತಿದ್ದಾನೆ; ಹೆಣಗಾಡು; ಹೆಣಗಾಟ)
toilet — ನಾ 1 ಅಂದಗೊಳ್ಳುವೆಡೆ 2 ಉಡುಪು ತೊಡುಪು 3 ತಳ್ಳೆಡೆ
toils — ನಾ ಉರುಳು, ಬಲೆ
token — ನಾ ಕುರುಪು (ಕುರುಪು ಕೊಡು), ಗುರುತು (ಬರುವಾಗ ಗುರುತು ತನ್ನಿ)
tolerable — ಗು ತಾಳಬಲ್ಲ (ತಾಳಬಲ್ಲ ನೋವು), ತಡೆದುಕೊಳ್ಳಬಲ್ಲ
tolerance — ನಾ ತಾಳ್ಮೆ (ಆತನಿಗೆ ತಾಳ್ಮೆ ಕಡಿಮೆ)
tolerate — ಕ್ರಿ 1 ತಾಳು, ತಡೆದುಕೊಳ್ಳು, ತರಹರಿಸು 2 ಒಡಂಬಡು, ಮಾಡಗೊಡು, ನೆಲೆಕೊಡು
toll — ನಾ 1 ದಾಟುಸುಂಕ (ಈ ಕಟ್ಟೆ ದಾಟಲು ದಾಟುಸುಂಕ ತೆರಬೇಕು) 2 ಬೆಲೆ 3 ಸತ್ತವರ ಎಣಿಕೆ ನಾ ಸುಂಕದ ಕಟ್ಟೆ
tomato — ನಾ ತಕ್ಕಾಳಿ (ಹೊಲದಲ್ಲಿ ತಕ್ಕಾಳಿ ಬೆಳೆದು ಮನೆ ಕಟ್ಟಿಸಿದರು)
tomb — ನಾ ಹೂಳುಕಟ್ಟಡ
tomboy — ನಾ ಗಂಡುಬೀರಿ ಹುಡುಗಿ
tomcat — ನಾ ಗಂಡುಬೆಕ್ಕು
tomfoolery — ನಾ ಹೆಡ್ಡುನಡತೆ, ಹುಚ್ಚಾಟಿಕೆ
tomorrow — ಗು ನಾಳೆ (ನಾಳೆ ಬರುವುದು ಇವತ್ತೇ ಬರಲಿ; ನಾಳಿದ್ದು)
tongs — ನಾಕಾರು (ಪಟಕಾರು),ಇಕ್ಕುಳ,ಚಿಮ್ಮಟಿಗೆ
tongue — ನಾ 1 ನಾಲಿಗೆ (ನಾಲಿಗೆ ತಪ್ಪು; ಬೆಂಕಿಯ ನಾಲಿಗೆ) 2 ನುಡಿ (ತಾಯಿನುಡಿ; ಆಡುನುಡಿ; ಒಳನುಡಿ)
tone — ನಾ 1 ಉಲಿಪರಿ 2 ಪರಿಜು
tonic — ನಾ ಅಳವುಕೊಡಿಸುವ, ಬಲಿಯಿಸುವ (ಬಲಿಯಿಸುವ ಮದ್ದು)
tonsure — ಕ್ರಿ ತಲೆಬೋಳಿಸು
tool — ನಾ ಮುಟ್ಟು (ಕೆಲಸದ ಮುಟ್ಟುಗಳು; ಮನೆಮುಟ್ಟು; ಮರಮುಟ್ಟು)
tooth — ನಾ ಹಲ್ಲು (ಹಲ್ಲುಕಡಿ; ಹಲ್ಲುಕಿಸಿ; ಹಲ್ಲುಪುಡಿ)
toothless — ಗು ಬೋಡು (ಬೋಡು ಬಾಯಿ), ಬೊಕ್ಕು (ಬೊಕ್ಕುಬಾಯಿ; ಬೊಕ್ಕ), ಹಲ್ಲಿಲಿ (ಹಲ್ಲಿಲಿ ಬಾಯಿ)
toothsome — ಗು ಸವಿಯಾದ
top — ನಾ ಎಣೆ (ಗುಡ್ಡದ ಎಣೆಯ ಮೇಲೆ ನಿಂತಿದ್ದಾರೆ), ತುದಿ (ಮರದ ತುದಿ; ತುತ್ತ ತುದಿ; ತುಟ್ಟತುದಿ), ಕುಡಿ (ಗೆಲ್ಲಿನ ಕುಡಿ ಯಲ್ಲಿ ಮೊಗ್ಗೆ ಬಿಟ್ಟಿದೆ)
top soil — ನಾ ಮೇಲ್ಮಣ್ಣು (ಮಳೆಗೆ ಗುಡ್ಡದ ಮೇಲ್ಮಣ್ಣೆಲ್ಲ ಕೊಚ್ಚಿಹೋಗಿದೆ)
topic — ನಾ ಹುರುಳು (ಬರಹದ ಹುರುಳು; ಪೆರ್ಮಾತಿನ ಹುರುಳು)
topmost — ಗು ತುತ್ತತುದಿಯ
topple — ಕ್ರಿ ಉರುಳು (ಗೋಡೆಯ ಮೇಲಿರಿ ಸಿದ ಕೊಡ ಕೆಳಗುರುಳಿತು), ಬೀಳು
top-secret — ಗು ತುಂಬಾ ಗುಟ್ಟಿನ
topsy-turvy — ಗು ತಿರುವುಮುರುವಾದ, ತಲೆ ಕೆಳಗಾದ, ಗೊಂದಲದ
torch — ನಾ ಕಯ್ಬೆಳಕು, ದೊಂದಿ (ದೊಂದಿ ಬೆಳಕು), ಸೂಟೆ (ತೆಂಗಿನ ಮಡಲಿನ ಸೂಟೆ), ಪಂಜು (ಪಂಜಿನ ಮೆರವಣಿಗೆ; ಪಂಜುಹಚ್ಚು),ಕೊಳ್ಳಿ (ಉರಿಯುವ ಕೊಳ್ಳಿ; ಕೊಳ್ಳಿಬೀಸು) ಕ್ರಿ ಅಂಡಲೆ (ಹಲವು ರೀತಿಯಲ್ಲಿ ಇವರನ್ನು ಅಂಡಲೆಯಬೇಕು), ಗಲ್ಲಿಸು (ಬೇಸಿಗೆಯ ಬಿಸಿಲು ಎಲ್ಲರನ್ನೂ ಗಲ್ಲಿಸು ತ್ತಿದೆ; ಗಲ್ಲಣೆ)
torn — ಗು ಹರುಕು (ಹರುಕು ಬಟ್ಟೆ, ಹರುಕು ಕಿವಿ)
tornado — ನಾ ಸುಂಟರಗಾಳಿ
torpid — ಗು ಒರಗಿದ, ಚುರುಕಿಲ್ಲದ, ಮದಡು, ಮಂಕು
torrent — ನಾ ಸುರಿಮಳೆ
torrid — ಗು 1 ಉರಿಬಿಸಿಲಿನ, ಕಡು ಬೇಗೆಯ, ಸುಡುವ 2 ಕಾವರದ, ತಾಗುಳದ
torsion — ನಾ ತಿರುಚು, ನುಲಿವು, ಮಲಕು
tortoise — ನಾ ಆಮೆ
tortuous — ಗು 1 ಸುತ್ತುಬಳಸು (ಸುತ್ತುಬಳಸು ದಾರಿ) 2 ಮೋಸದ, ಚದಿಯ
torture — ಕ್ರಿ ನೋವುಣಿಸು (ತಪ್ಪನ್ನು ಒಪ್ಪಿಕೊಳ್ಳುವ ಹಾಗೆ ಆತನಿಗೆ ತುಂಬಾ ನೋವುಣಿಸಿದರು), ನೋಯಿಸು
toss — ಕ್ರಿ 1 ಎಸೆ (ಚೆಂಡೆಸೆ), ಚಿಮ್ಮಿಸು 2 ಹೊರಳಾಡು
tossing — ನಾ ತಿರಿ (ತಿರಿಕಲ್ಲು; ತಿರಿಕಲ್ಲಾಡು), ಎಸೆತ
tot — ನಾ ಚಿಕ್ಕ ಮಗು
total — ನಾ ಮೊತ್ತ (ಮೊತ್ತಗಟ್ಟು)
totem — ನಾ ಬುಡಕಟ್ಟಿನವರ ಗುರುತು
totter — ಕ್ರಿ ತೂರಾಡು (ಚನ್ನಾಗಿ ಕುಡಿದು ತೂರಾಡುತ್ತಾ ಹೋಗುತ್ತಿದ್ದ), ತತ್ತರಿಸು
touch — ನಾ ಸೊಗಡು (ಆಕೆಯ ಸೊಗಡಿನಿಂದ ಅವನೂ ಬೇನೆ ಬಿದ್ದ)
touch — ಕ್ರಿ ಸೋಕು (ತಂಗಾಳಿ ಸೋಕಿದಾಗ ಹಾಯೆನಿಸುತ್ತದೆ), ಮುಟ್ಟು (ಆಡುಮುಟ್ಟದ ಗಿಡ), ಕಿಟ್ಟು (ನನ್ನನ್ನು ಕಿಟ್ಟಬೇಡ), ತಗಲು (ತಗಲುಹಾಕು), ತಾಗು (ಅವನ ಕಯ್ ತಾಗಿ ಕೊಡ ಉರುಳಿತು), ಒರಸು (ಮರದ ಗೆಲ್ಲು ನನ್ನ ಬೆನ್ನಿಗೆ ಒರಸಿತು), ತಟ್ಟು (ಬೆನ್ನುತಟ್ಟು)
touchiness — ನಾ ಸಿಡುಕು, ಕೆರಳಿಕೆ
touchstone — ನಾ ಒರೆಗಲ್ಲು (ಒಡವೆಯನ್ನು ಒರೆಗಲ್ಲಿನ ಮೇಲೆ ತಿಕ್ಕುತ್ತಾ ಇದ್ದಾನೆ)
tough — ಗು ಗಟ್ಟಿ (ಗಟ್ಟಿಹಗ್ಗ), ಒರಟು (ಒರಟು ಬಟ್ಟೆ), ಹಟಮಾರಿ
tour — ನಾ ಸುತ್ತಾಟ (ಎಲ್ಲಿಗೋ ಸುತ್ತಾಟಕ್ಕೆ ಹೊರಟ ಹಾಗಿದೆ), ತಿರುಗಾಟ, ನಡೆ
tournament — ನಾ ಪೋಟಿಹಬ್ಬ, ಹೋಟಿ ಹಬ್ಬ
tourniquet — ನಾ ಸುರಿತತಡೆ, ಸುರಿತಕಟ್ಟು (ನೆತ್ತರು ಸುರಿಯದಂತೆ ಸುರಿತಕಟ್ಟು ಹಾಕಿ ದ್ದಾರೆ) ಕ್ರಿ ಎಳೆ (ಎಳೆದುಕೊಂಡು ಹೋಗು)
towel — ನಾ ಗುಡ್ಡೆ (ಮೋರೆ ಒರೆಸಲು ಒಂದು ಗುಡ್ಡೆ ಕೊಡಿ; ತಲೆಗುಡ್ಡೆ)
tower — ನಾ ಮೇರುವೆ
towering — ಗು ಎತ್ತರದ, ದೊಡ್ಡ
town — ನಾ ಹೊಳಲು (ಕಂಗೊಳಿಸುವ ದೊಡ್ಡ ಹೊಳಲು ಕಾಣಿಸಿತು)
townsfolk — ನಾ ಹೊಳಲಿಗರು
toxin — ನಾ ನಂಜು
toy — ನಾ ಆಟಿಗೆ, ಗಿರಿಕೆ (ಅಳುತ್ತಿರುವ ಮಗು ವಿಗೆ ಒಂದು ಗಿರಿಕೆ ಕೊಟ್ಟಳು)
trace — ನಾ ಜಾಡೆ, ಜಾಡು (ಗಾಲಿಯ ಜಾಡು ಹಿಡಿದು ಹಿಂಬಾಲಿಸಿದರು), ಗುರುತು (ಬೆಳಿಗ್ಗೆ ಮಳೆಬಂದುದರ ಗುರುತೂ ಉಳಿ ದಿಲ್ಲ), ಸುಳಿವು (ಬರುತ್ತೇನೆಂದವನ ಸುಳಿವೇ ಇಲ್ಲ), ಕುರುಹು (ಕೆಲಸದ ಕುರುಹಾದರೂ ಉಳಿದಿದೆಯೋ ನೋಡಿ)
trace — ಕ್ರಿ 1 ಎಲ್ಲೆಗೆರೆಯೆಳೆ 2 ಹಿಂಬಾಲಿಸು (ಸುಳಿವು ಹಿಡಿದು ಹಿಂಬಾಲಿಸುತ್ತಿದ್ದ) 3 ಮಾರ್ಪಾಡು ತಿಳಿ
trachea — ನಾ ಉಸಿರ ಕೊಳವೆ
track — ನಾ 1 ಸರು (ಸರುಹಿಡಿ),ಜಾಡು (ಕಳ್ಳನ ಜಾಡುಹಿಡಿದು ಸಾಗಿದರು) 2 ಹಾದಿ, ದಾರಿ
tract — ನಾ 1 ಹರವು, ಬಯಲು (ಎಲ್ಲರೂ ಬಯಲಲ್ಲಿ ಆಟ ನೋಡಲು ಸೇರಿದ್ದರು) 2 ಕಯ್ಕಡತ
tractable — ಗು ಸಾವಗಿಸಬಲ್ಲ, ತಿದ್ದಬಲ್ಲ, ಮಾರ್ಪಡಿಸಬಲ್ಲ
traction — ನಾ 1 ಎಳೆತ, ಸೆಳೆತ, ಜಗ್ಗಿಕೆ (ಬೆನ್ನುನೋವು ಕಡಿಮೆಯಾಗಲು ಜಗ್ಗಿಕೆಯ ಲ್ಲಿರಬೇಕಾಗಿದೆ) 2 ಹಿಡಿತ
trade — ನಾ ಹರದು (ಹರದುಮಾಡು; ಎಲೆ ಹರದು; ಹರದಿಕೆ), ಕೆಲಸ
trader — ನಾ ಮಾರಾಳಿ, ಹರದ (ಹರದನ ಕುದುರೆ ಸತ್ತುಹೋಗಿದೆ; ಹರದನ ಹಂಗು ನಮಗೆ ಬೇಡ; ಹರದಿಗ), ಕೋಮಟಿ (ಕೋಮಟಿತನ; ಕೋಮಟಿ ಮೋಸ ಹೋದರೆ ಯಾರಿಗೂ ಹೇಳುವುದಿಲ್ಲ)
tradesman — ನಾ ಅಂಗಡಿಗಾರ
tradition — ನಾ ನಡವಳಿ (ನಡವಳಿ ತಪ್ಪು),ಜಾಡು, ನಂಬಿಕೆ
traffic — ನಾ 1 ಸಾಗಣೆ, ಸಾಗಾಣಿಕೆ 2 ಬಂಡಿಗಳ ಓಡಾಟ 3 ಹರದು, ಕೊಡು ಕೊಳ್ಳುವಿಕೆ 4 ಕಟ್ಟಲೆತಪ್ಪಿದ ಸಾಗಣೆ
tragedy — ನಾ ಕೊರಗುವ ಕೊನೆ, ಸೊಮ್ಮು ಕೆಟ್ಟ ಕೊನೆ, ಅಳುಗೊನೆ ನಾ ಸುಳಿವು, ಜಾಡು
trail — ಕ್ರಿ ಹಿಂಬಾಲಿಸು
trailer — ನಾ ಹಿಂಗಾಡಿ
train — ನಾ ಹೊಗೆಬಂಡಿ
train — ಕ್ರಿ ನುರಿ (ನುರಿತ ಕೈ; ನುರಿತ ಕೆಲಸ ಗಾರರು), ಪಳಗು (ಪಳಗಿದ ಎತ್ತು; ಪಳಗಿದ ಕೈ; ಅಡಿಗೆಯಲ್ಲಿ ಪಳಗಿದ ಹುಡುಗ)
training — ನಾ ಪಳಗಿಕೆ
trait — ನಾ ಪರಿಚೆ
traitor — ನಾ ಎರಡುಬಗೆದವನು, ನಾಡಹಗೆ
tram — ನಾ ಹಾದಿಬಂಡಿ, ಕಂಬಿಬಂಡಿ
tramp — ನಾ 1 ಉಂಡಾಡಿ, ಅಲೆಮಾರಿ 2 ಹೆಜ್ಜೆಯ ಸಪ್ಪಳ, ತುಳಿತ
tramp — ಕ್ರಿ 1 ತೂಕವಾಗಿ ನಡೆ 2 ಅಲೆದಾಡು
trample — ಕ್ರಿ ಮೆಟ್ಟು (ಮೆಟ್ಟಿದಲ್ಲದೆ ಹಾವು ಕಡಿಯದು),ತುಳಿ (ತುಳಿದಾಡು; ತುಳಿತ)
trance — ನಾ 1 ಅರಿವಿರುವ ಕಟ್ಟೊರಕು 2 ಬೇಳುವೆ, ತಬ್ಬಿಬ್ಬು 3 ಮಯ್ಮರೆತ
tranquil — ಗು ನೆಮ್ಮದಿಯ, ಗೊಂದಲವಿಲ್ಲದ, ತೊಂದರೆಯಿಲ್ಲದ, ಗದ್ದಲವಿಲ್ಲದ
tranquillity — ನಾ ಹದುಳ (ಹದುಳವಡೆ; ಹದುಳಗೊಳ್ಳು; ಹದುಳವಿರು)
transact — ಕ್ರಿ ನಡೆಸು, ಸಂಬಾಳಿಸು, ಮುಂದು ವರಿಸು, ಮುಗಿಸು
transaction — ನಾ ನಡವಳಿ
transcend — ಕ್ರಿ ಮೀರು (ಮೇರೆಮೀರು; ಎಲ್ಲೆ ಮೀರು), ಮಿಗು, ಮಿಂಚು
transcendental — ಗು ಮೇರೆಮೀರಿದ, ಅರಿವಿಗೆ ಹೊರತಾದ, ಒಳರಿವಿನ
transcribe — ಕ್ರಿ ಬರೆ (ಹೇಳಿದುದನ್ನು ಬರೆ), ಬೆರಳಚ್ಚು ಮಾಡು (ಬಿರುಸು ಬರೆತದಲ್ಲಿ ಬರೆದುದನ್ನು ಬೆರಳಚ್ಚು ಮಾಡು)
transfer — ಕ್ರಿ ಮಾರೆಡೆಗೊಳಿಸು (ಆತನನ್ನು ಮಲೆನಾಡಿಗೆ ಮಾರೆಡೆಗೊಳಿಸಿದ್ದಾರೆ)
transferable — ಗು ಮಾರೆಡೆಯಾಗಬಲ್ಲ
transfigure — ಕ್ರಿ ಮರುಪರಿಜು ಮಾಡು, ಪರಿಜು ಮಾರು
transfix — ಕ್ರಿ 1 ಇರಿ, ಚುಚ್ಚು, ತಿವಿ 2 ಬೆದರಿಸಿ ಹಂದದಂತೆ ಮಾಡು
transform — ಕ್ರಿ ಮಾರ್ಪಡಿಸು (ಹಣ್ಣನ್ನು ಹಕ್ಕಿಯಾಗಿ ಮಾರ್ಪಡಿಸಿದರು; ಮಾರ್ಪಾಟು), ತೋರ್ಪುಮಾರು ನಾ ತೋರ್ಪುಮಾರ್ಪು
transfuse — ಕ್ರಿ ತುಂಬು, ಒಳಮುಟ್ಟು, ಹೀರಿ ಕೊಳ್ಳು, ಒಳಸೇರಿಸು
transgress — ಕ್ರಿ ಮೀರು (ಕಯ್ಮೀರು, ಹದ್ದು ಮೀರು, ಮಿತಿಮೀರು; ಮೀರುಹ; ಮೀರಿತ), ದಾಟು, ಕಡೆ (ಕೊಟ್ಟ ನುಡಿಯನ್ನು ಕಡೆ), ಎಲ್ಲೆಮೀರು, ಕಟ್ಟಲೆಮುರಿ, ಉರುಟು
transient — ನಾ ನಿಲ್ಲದಿಕೆ
transient — ಗು ತುಸುಹೊತ್ತಿನ, ಬಾಳಿಕೆ ಯಿಲ್ಲದ
transit — ನಾ 1 ಸಾಗುವಾಡ, ಸಾಗಣೆ 2 ದಾರಿ, ಎಡೆಮಾರ್ಪು
transitary — ಗು ತಿರುಪು (ತಿರುಪು ಅನಿಸಿಕೆ), ಮಾರ್ಪಡುವ (ಮಾರ್ಪಡುವ ಬಗೆ)
transition — ನಾ 1 ಮಾರ್ಪಡುವ ಹೊತ್ತು 2 ಮಾರ್ಪಾಟು
transitive — ಗು ಇರ್ಪಾಲ್ಗೂಳ್ಳುವ
transitory — ಗು ಕಿರುಹೊತ್ತಿನ
translate — ಕ್ರಿ ನುಡಿಮಾರು (ಈ ಕತೆಯನ್ನು ಇಂಗ್ಲಿಶ್ನಿಂದ ಕನ್ನಡಕ್ಕೆ ನುಡಿಮಾರಿದ್ದೇನೆ)
transliterate — ಕ್ರಿ ಬರಿಗೆಮಾರು
translucent — ಗು ಬೆಳಕುಬಿಡುವ, ಬೆಳಗಿಸುವ
transmigrate — ಕ್ರಿ 1 ನಾಡುಮಾರು 2 ಮಯ್ಮಾರು (ಸತ್ತವರು ಮಯ್ಮಾರಿ ಬೇರೆಡೆ ಹುಟ್ಟುತ್ತಾರೆಂದು ಆತ ಹೇಳುತ್ತಾನೆ)
transmission — ನಾ ಕಳುಹಿಕೆ, ಹರಡಿಕೆ
transmit — ಕ್ರಿ 1 ಮಾರೆಡೆಗೊಳಿಸು 2 ಮರು ಪಡೆಸು 3 ಕಳುಹಿಸು, ಕಳುಹು, ಹರಿಸು (ಮಿಂಚು ಹರಿಸು), ಹರಡು
transmitter — ನಾ ಹರಿಸುಗ, ಕಳಿಸುಗ
transmutation — ನಾ ಮಾರ್ಪಡಿಕೆ
transparent — ಗು ಸಿಲುವು (ಕೊಳದಲ್ಲಿರುವ ಸಿಲುವು ನೀರು), ಆಚೆಕಾಣುವ
transpire — ಕ್ರಿ 1 ಸೂಸು (ಆವಿಸೂಸು), ಹೊರಬಿಡು 2 ಗೊತ್ತಾಗು 3 ಉಂಟಾಗು, ನಡೆ (ಇಲ್ಲಿ ಏನು ನಡೆಯುತ್ತಿದೆ?)
transplantation — ನಾ ನಾಟಿ (ಇನ್ನೂ ನಮ್ಮ ನಾಟಿಯಾಗಿಲ್ಲ)
transport — ನಾ ಸಾರಿಗೆ, ಅಡುಕು
transportation — ನಾ ಸಾಗಣೆ, ಸಾಗವಣೆ, ಸಾಗಾಣಿಕೆ (ಸಾಗಾಣಿಕೆ ನಡೆಸು)
transpose — ಕ್ರಿ 1 ಮಾರು, ಅದಲು ಬದಲು ಮಾಡು 2 ತಿದ್ದಿ ಬರೆ, ಮರುಬರೆ ಗು ಅಡ್ಡ (ಅಡ್ಡಗೋಡೆ; ಅಡ್ಡತೊಲೆ; ಅಡ್ಡಹಾಕು)
trap — ನಾ ಬೋನು (ಬೋನಿಗೆ ಬಿದ್ದ ಇಲಿ), ಸಿಡಿ (ಕಬ್ಬಿಣದ ಸಿಡಿ)
trapdoor — ನಾ ಕಳ್ಳದಾರಿ, ಜಾರುಬಾಗಿಲು
trappings — ನಾ ಅಂದಗೊಳಿಕೆ
trash — ನಾ ಸತ್ತೆ (ಸತ್ತೆ ಹುಲ್ಲು),ಸೆದೆ (ಸೊಪ್ಪು ಸೆದೆ; ಸೆದಗೆ),ಕಸಕಡ್ಡಿ
trauma — ನಾ ಹೊಡೆತ (ಹೊರಮಯ್ ಹೊಡೆತ; ಒಳಹೊಡೆತ)
travail — ನಾ 1 ತೊಡಕಿನ ಕೆಲಸ 2 ಹೆರಿಗೆ ನೋವು 3 ಕಡುಬೇನೆ, ಎದೆಗುದಿ
travel — ನಾ ನಡೆಪಾಡು
traveller — ನಾ ದಾರಿಗ, ಹಾದಿಕಾರ,ದಾರಿ ಕಾರ,
traverse — ಕ್ರಿ ದಾಟು, ಸಾಗು, ಹಾದಿಸವೆಸು
travesty — ನಾ ಅಣಕ (ಅಣಕದಲ್ಲಿ ಹೇಳಿದ ಮಾತು; ಅಣಕಿಸು), ನಗೆಪಾಟಲು ಮಾರ್ಪು
trawl — ನಾ ದೊಡ್ಡ ಬಲೆ
trawler — ನಾ ಮೀನುದೋಣಿ (ಮೀನು ದೋಣಿಗಳು ಬಿರುಗಾಳಿಗೆ ಸಿಲುಕಿವೆ)
tray — ನಾ ತಟ್ಟೆ (ತಟ್ಟೆಯಲ್ಲಿರಿಸಿ ತಂದ ಹಣ್ಣು)
treacherous — ಗು 1 ನಂಬಲಾಗದ 2 ಕುಸಿಯಬಲ್ಲ, ಗಟ್ಟಿಯಿಲ್ಲದ
treachery — ನಾ ಎರಡೆಣಿಕೆ, ಆಳಿ (ಆಳಿ ಗೊಡು), ಹೊಲ್ಲಮೆ
treacle — ನಾ ಜೋನಿಬೆಲ್ಲ, ಕರಗುಬೆಲ್ಲ
tread — ಕ್ರಿ ಒಕ್ಕು (ಒಕ್ಕಲು; ಒಕ್ಕಿದ ಬತ್ತ), ತುಳಿ (ಕಲ್ಲುಮುಳ್ಳುಗಳನ್ನು ತುಳಿದು ಬೇಸತ್ತ; ಎಶ್ಟು ತುಳಿದರೂ ದಾರಿ ಮುಗಿಯುವು ದಿಲ್ಲ), ಮೆಟ್ಟು (ಮೆಟ್ಟುಕತ್ತಿ; ಮೆಟ್ಟುಗಲ್ಲು)
treading — ನಾ ತುಳಿಹ,ತುಳಿತ (ಕಾಲ್ತುಳಿತ)
treadle — ನಾ ಕಾಲುಸನ್ನೆ
treason — ನಾ ಎರಡುಬಗೆತ
treasure — ನಾ ಕಡವರ (ಗೋಡೆ ಒಡೆಯು ತ್ತಿರುವಾಗ ಕಡವರ ಸಿಕ್ಕಿತು)
treasury — ನಾ ಬೊಕ್ಕಸ (ಅರಸನ ಬೊಕ್ಕಸ ಬರಿದಾಯಿತು)
treat — ಕ್ರಿ 1 ನಡೆದುಕೊಳ್ಳು (ದೊಡ್ಡವ ರೊಂದಿಗೆ ನಡೆದುಕೊಳ್ಳುವ ಬಗೆ ಆತನಿಗೆ ತಿಳಿಯದು) 2 ಮದ್ದು ಮಾಡು, ಆರಯ್ಕೆ ನಡೆಸು 3 ತಿಂಡಿ ಕೊಡಿಸು, ಊಟಹಾಕು 4 ಕುರಿತಾಗಿ ಬರೆ
treatise — ನಾ ಪೆರ್ಬರಹ
treatment — ನಾ 1 ನಡೆದುಕೊಳ್ಳುವ ಬಗೆ 2 ಮಾಂಜುಗೆ ನಾ ಒಡಂಬಡಿಕೆ (ಒಡಂಬಡಿಸು; ಒಡಂಬಡು), ಕಂಡಣೆ (ಕಂಡಣೆ ಹಣ), ಒಪ್ಪಂದ (ಮೊದಲು ಒಪ್ಪಂದ ನಡೆಯಲಿ)
treble — ಗು ಮೂರುಪಾಲು, ಮೂರುಪಟ್ಟು
tree — ನಾ ಮರ (ಮರದ ಬುಡ; ಮರಮಟ್ಟು; ಮರಗೆಲಸ)
trek — ನಾ 1 ವಲಸೆ, ಗುಳೆ (ಗುಳೆಹೋಗು) 2 ನಡೆಪಾಡು
trek — ಕ್ರಿ ಮೆಲ್ಲ ಸಾಗು, ತೊಡಕಿನಿಂದ ಸಾಗು
trellis — ನಾ ತಟ್ಟಿ (ಹಂಬು ಹಬ್ಬಿದ ತಟ್ಟಿ)
tremble — ಕ್ರಿ ತರಗುಟ್ಟು (ಚಳಿಗೆ ತರಗಟ್ಟು ತ್ತಿದ್ದ), ನಡುಗು (ಗಡಗಡ ನಡುಗಿದ), ಪೆಳ್ಪಳಿಸು (ಬೆದರಿ ಪೆಳ್ಪಳಿಸಿದ), ಬೆಳ್ಪಳಿಸು, ಪೊಡರು (ಪೊಡರುವ ಕಾಲು; ಪೊಡರ್ಪು), ಅಗಿ (ಹೆದರಿ ಅಗಿಯುತ್ತಿರುವ ಪಡೆ), ಕೆತ್ತು (ಕೆತ್ತುವ ಕೈ), ಅದುರು (ಅವರ ಅಬ್ಬರ ವನ್ನು ನೋಡಿ ನನ್ನ ಎದೆ ಅದುರಿತು), ಬಾರು, ಅಡಲು (ಅಡಲಿಸು - ಗುಂಡಿಗೆ ಯನ್ನು ಅಡಲಿಸುವ ಗುಡುಗು), ಒಣಕು (ಬೆದರಿ ಒಣಕುತ್ತಿದ್ದ ಆಳು), ತಳರು (ತಳರಡಿ; ತಳರ್ನುಡಿ)
trembling — ನಾ ನಡುಕ (ಅದನ್ನು ನೆನೆದರೆ ಈಗಲೂ ನಡುಕ ಬರುತ್ತದೆ)
trembling — ಗು ಅಳ್ಳು (ಅಳ್ಳೆದೆ; ಅಳ್ಳು ಹೊಟ್ಟೆ)
tremendous — ಗು 1 ಬೆದರಿಕೆಯ 3 ತುಂಬಾ ದೊಡ್ಡ
tremor — ನಾ 1 ನಡುಕ, ಅದಿರುವಿಕೆ 2 ನೆಲ ನಡುಕ
tremulous — ಗು 1 ನಡುಗುವ 2 ಬೆದರುವ, ಹೇಡಿ
trench — ನಾ ಕಾಲುವೆ, ಅಗಳು, ಅಗಳ್ತೆ
trenchant — ಗು ಕೊರೆವ, ತೂರುವ, ಒಳ ನುಗ್ಗುವ
trend — ನಾ ಒಲವು (ತಲೆಕೂದಲು ಉದ್ದ ಬಿಡುವ ಒಲವು)
trepidation — ನಾ 1 ನಡುಕ, ಹೆದರಿಕೆ 2 ನಿಕ್ಕುವವಲ್ಲದಿಕೆ
trespass — ಕ್ರಿ ಎಲ್ಲೆಮೀರು, ಕಟ್ಟಲೆಮೀರು
tress — ನಾ ಉದುರಿ (ಆಕೆ ತಲೆಗೆ ಉದುರಿ ಹಾಕಿಕೊಂಡಿದ್ದಾಳೆ)
trestle — ನಾ ಆನಿಕೆ
trial — ನಾ ಒರೆಹಚ್ಚುವಿಕೆ, ಒರೆಹೊತ್ತು
triangle — ನಾ ಮುಮ್ಮೂಲೆ
tribe — ನಾ ಬುಡಕಟ್ಟು
tribulation — ನಾ ತೊಳಲಿಕೆ, ತೊಂದರೆ
tribunal — ನಾ 1 ತೀರ್ಪುಗಾರ 2 ತೀರ್ಪುಜಗಲಿ ನಾ ಕೂಡುಹೊಳೆ
tribute — ನಾ ಪಗದಿ (ಅರಸನಿಗೆ ಪಗದಿ ಕೊಟ್ಟು ಬಂದ), ಒಟ್ಟಜ (ಒಟ್ಟಜ ಕೊಡು), ಕಪ್ಪ (ಕಪ್ಪಕಾಣಿಕೆ),ಕೊಟ್ಟಜ
trick — ನಾ ಸಂಚು (ಸಂಚಿಲ್ಲದ ಮಾತು, ಒಳ ಸಂಚು), ತೋಡು (ತಕ್ಕ ತೋಡುಗಳಿಂದ ತೊಡಕುಗಳನ್ನು ತೊಲಗಿಸಿದ) trickery ; ನಾ ಬೂಟ (ಬೂಟಾಟ ಬೂಟಾ ಟಿಕೆ), ಮಾಟ (ಮಾಟಗಾರ)
trickle — ಕ್ರಿ ಒಸರು (ನೀರು ಒಸರುತ್ತಿದೆ), ಬಸಿ (ಬಸಿವ ನೆತ್ತರು; ಬಸಿದುಬೀಳು), ತೊಟ್ಟಿಕ್ಕು, ಜಿನುಗು
trickster — ನಾ ಮೋಸಗಾರ
tricolour — ನಾ ಮುಬ್ಬಣ್ಣ (ಮುಬ್ಬಣ್ಣದ ಕುಡಿ)
tricycle — ನಾ ಮುಗ್ಗಾಲಿ
trident — ನಾ ಮುಮ್ಮೊನೆ
trifle — ಗು ನಸು (ನಸುಬಾಗು; ನಸುಗೆಂಪು)
trigger — ನಾ ಕುದುರೆ (ಕೋವಿಕುದುರೆ)
trigonometry — ನಾ ಮುಮ್ಮೂಲೆಯರಿಮೆ
trill — ನಾ ಅದಿರುಲಿ
trim — ಕ್ರಿಬಾರು, ಸವರು (ಗೆಲ್ಲುಗಳನ್ನು ಸವರು), ಸರಿಪಡಿಸು, ಅಂದವಿಸು
trim — ಗು ಅಚ್ಚುಕಟ್ಟು, ಚೊಕ್ಕಟ, ಒಪ್ಪ
trinket — ನಾ ಸೂಸಕ
trio — ನಾ ಮುಕ್ಕೂಟ
trip — ನಾ ಹೋಕೆ
trip — ಕ್ರಿ 1 ಎಡವು (ಎಡವಿಬೀಳು); ಎಡ ವರಿಸು, ಮುಗ್ಗರಿಸು 2 ಚಾಗ ನಡೆ 3 ತಪ್ಪು ಮಾಡು
triple — ಗು ಮುಮ್ಮುರಿ,ಮುಮ್ಮಡಿ
tripod — ನಾ ಮುಕ್ಕಾಲಿ
trite — ಗು ಹಳಸಲು, ಸವಕಲು
triumph — ನಾ 1 ಗೆಲವು 2 ಗೆಲವಿನ ನಲಿವು
triumvirate — ನಾ 1 ಮೂವರಾಳ್ವಿಕೆ 2 ಮುಕ್ಕೂಟ ನಾ ಮುಕ್ಕಾಲಿ
trivial — ಗು ಅರಿದಿಲ್ಲದ, ಕುರುಕ
trodden — ಗು ತೊತ್ತಳ (ತೊತ್ತಳ ತುಳಿ)
trolley — ನಾ ಕಯ್ಬಂಡಿ
trombone — ನಾ ಕೊಂಬು (ಮದುವೆಗೆ ಕೊಂಬು ಊದುವವರು ಬಂದಿದ್ದರು)
troop — ನಾ ಬಳಗ (ಆನೆಗಳ ಬಳಗ; ಅಗುಳನ್ನು ಕಂಡು ಕಾಗೆ ಬಳಗವನ್ನು ಕರೆಯುತ್ತದೆ), ತಂಡ (ಎರಡು ತಂಡಗಳೊಳಗೆ ಯಾವುದು ಸೋತಿತು?; ತಂಡಗೊಳ್ಳು), ದಳ (ಕಾಲು ನಡೆಯ ದಳ), ಹಿಂಡು
trophy — ನಾ 1 ಮೆಚ್ಚುಗುರುತು 2 ಗೆಲ್ಲು ನೆನಹು
tropics — ನಾ ಬಿಸಿಬಳಸಿ
trot — ಕ್ರಿ ಕುದುಕು (ಕುದುಕಿ ಓಡುವ ಕುದುರೆ)
trouble — ನಾ ಕಾಟ (ಕಾಟ ಕೊಡು), ಕೋಟಲೆ (ಕೋಟಲೆ ಪಡು; ಕೋಟಲೆಗೊಳ್ಳು; ಕೋಟಲಿಗ), ತೊಂದರೆ (ಅವರು ನಮಗೆ ತೊಂದರೆ ಕೊಟ್ಟಿರಲಿಲ್ಲ), ಚಿಲ್ಲತನ, ಅಲೆ (ಅಲೆಗಾರ),ಆಟಲೆ, ಅಗಚಾಟಲು (ಅಗ ಚಾಟಲಲ್ಲಿ ಸಿಕ್ಕಿಕೊಂಡ),ಕೀಟಲೆ (ಕೀಟಲೆ ಮಾಡಿ ಮಗುವನ್ನು ಅಳಿಸಬೇಡ), ತರಲೆ (ಆತನದು ಮುಗಿಯದ ತರಲೆ), ದಂದುಗ (ದಂದುಗಗೊಳ್ಳು; ನನಗೆ ಆತನ ದಂದುಗ ಬೇಡ), ಪೇಚು (ಪೇಚಾಡು), ಕಿಂಕೊಳೆ (ಕಂಕೊಳೆ ಮಾಡು) ಹಾವಳಿ, (ಹಾವಳಿಯೆಬ್ಬಿಸು), ಎಡವಟ್ಟು
trouble — ಕ್ರಿ ಕಾಡು (ಕಾಡದೆ ಕರೆವ ಆಕಳು), ತಿಣಿಕು (ತಿಣಿಕಾಟ), ಕೆಲ್ಲಯಿಸು, ಮಸಲು (ಮಸಲುವ ಹಗೆ), ಪಗಿಲು
troublesome — ಗು ತೊಂದರೆ ಕೊಡುವ, ಕಾಡುವ, ಕೀಟಲೆ ಮಾಡುವ
trough — ನಾ ತೊಟ್ಟಿ (ಕಲ್ಲುತೊಟ್ಟಿ; ನೀರು ತೊಟ್ಟಿ)
trounce — ಕ್ರಿ 1 ಹೊಡೆ, ಸದೆಬಡಿ 2 ಸಲೆ ಸೋಲಿಸು
troupe — ನಾ ತಂಡ (ಬಯಲಾಟದವರ ತಂಡ)
trousers — ನಾ ಕಾಲಂಗಿ (ಆಕೆಯೀಗ ಕಾಲಂಗಿ ತೊಡಬೇಕೆಂದಿದ್ದಾಳೆ)
trousseau — ನಾ ಮದುಮಗಳ ಉಡುಪು
trout — ನಾ ಸಿಹಿನೀರ ಮೀನು
trowel — ನಾ 1 ಕರಣೆ 2 ಎಬ್ಬಿಗೆ
truant — ನಾ 1 ಓದುಗಳ್ಳ 2 ಕೆಲಸಗಳ್ಳ
truce — ನಾ ಕಾಳಗನಿಲುಮೆ, ಕಾಳಗಸಯ್ಪು ನಾ ಹೊರೆಬಂಡಿ (ಹೊರೆಬಂಡಿಯಲ್ಲಿ ಕಲ್ಲು ತುಂಬುತ್ತಿದ್ದಾರೆ)
truculent — ಗು ಮರುಕವಿಲ್ಲದ, ನೋಯಿ ಸುವ, ಬಿರುಸು, ಹೊಡೆದಾಡುವ
trudge — ನಾ ತೊಡಕಿನ ನಡೆ, ದಣಿವಿನ ನಡೆ
true — ಗು ವಲ (ಅವನು ಬಂದುದು ವಲ), ಸರಿ (ನೀವು ಹೇಳಿದ್ದು ಸರಿ)
truism — ನಾ ತಿಳಿಯಾದ ನನ್ನಿ, ತೆಳುವಾದ ನಿಕ್ಕುವ
truly — ಗು 1 ಸರಿಯಾಗಿ, ತಪ್ಪಿಲ್ಲದೆ 2 ವಲ, ವೆರ
trumpery — ಗು ಬೆಡಗಿನ, ಬರಡಾದ
trumpet — ನಾ ತುತ್ತೂರಿ
truncate — ಕ್ರಿ ಸವರು, ಕಡಿ
truncheon — ನಾ ಗಿಡ್ಡಕೋಲು, ಗುದಿಗೆ
trundle — ಕ್ರಿ ಉರುಳು, ಹೊರಳು
trunk — ನಾ 1 ಕೊರಡು (ಮರದ ಕೊರಡು), ಬೊಡ್ಡೆ 2 ಪೆಟ್ಟಿಗೆ 3 ಸೊಂಡಿಲು (ಆನೆಯ ಸೊಂಡಿಲು)
truss — ಕ್ರಿ 1 ಕಟ್ಟು 2 ಆನು, ತಾಂಗು
trust — ನಾ ಅಳವಿ (ಅಳವಿಕೊಡು),ಅಡರ್ಪು (ನನಗೆ ಆತನಲ್ಲಿ ಅಡರ್ಪಿದೆ), ನೆಮ್ಮುಗೆ, ಅಂಕ
trust — ಕ್ರಿನಂಬು (ಅವನ ಮಾತನ್ನು ನಂಬ ಬೇಡ; ನಂಬುಗೆ; ನಂಬಿಕೆ), ನಚ್ಚು (ನಿಮ್ಮನ್ನು ನಚ್ಚಿ ಬಂದೆವು; ನಚ್ಚುಮೆಚ್ಚು - ನಚ್ಚುಮೆಚ್ಚಿನ ಹುಡುಗ)
trustee — ನಾ ಅಡರ್ಪುಗ
trustworthy — ನಾ ನಂಬಿಗಸ್ತ, ನಂಬಿಕೆಯ, ನಂಬಬಲ್ಲ
truth — ನಾ ನನಸು (ಹಾಗಾಗಿರುವುದು ನನಸು), ನನ್ನಿ (ನನ್ನಿ ಮಾತು; ನನ್ನಿಯನ್ನೇ ನುಡಿಲಿುರಿ; ನನ್ನಿಕಾರ),ನಿಕ್ಕುವ (ನಿಕ್ಕುವವಾಗಿಯೂ ಇವತ್ತಿನ ಕೂಟ ನಡೆಯಲಿದೆ)
try — ಕ್ರಿ 1 ಒರೆ (ಒರೆದು ನೋಡು; ಒರೆಹಚ್ಚು) 2 ತೊಡಕಿಗೆ ಸಿಲುಕು 3 ಪೂನು, ಎತ್ತುಗಡೆ ನಡೆಸು, ಊಕ ನಡೆಸು
trying — ನಾ ತೊಂದರೆಯ, ತೊಡಕಿನ
tryst — ನಾ ಪೂಣ್ದ ಕದೆ (ನಲ್ಲನಲ್ಲೆಯರು ಪೂಣ್ದ ಕದೆ ಇಲ್ಲೇ ಇರಬೇಕು)
tub — ನಾ ತೊಟ್ಟಿ
tube — ನಾ ಕೊಳವಿ (ಕುಂದಣದ ಕೊಳವಿ), ಕೊಳವೆ, ತೂಬು (ಕೆರೆಯ ತೂಬು; ತೂಬಿನ ನೀರು),ತುಂಬು, ನೊಳಲೆ
tuber — ನಾ ಗಡ್ಡೆ ನಾ ಕೊಳವೆಬಾವಿ (ಕೊಳವೆ ಬಾವಿಯ ನೀರು ಬತ್ತಿಹೋಗಿದೆ)
tuck — ಕ್ರಿ 1 ಸಿಕ್ಕಿಸು, ಒಳಹೊಗಿಸು, ತುಂಬಿಸು 2 ನಿರಿ ಹಿಡಿದು ಹೊಲಿ
tuck in — ನಾ ಕುತ್ತು (ಸೀರೆಯ ಸೆರಗನ್ನು ಕುತ್ತಿಕೊಂಡಳು)
tuft — ಕ್ರಿ ಜುಟ್ಟು (ಜುಟ್ಟು ಕಟ್ಟು; ಜುಟ್ಟು ಗಂಟು), ಕೊಪ್ಪು (ಕೂದಲನ್ನು ಕೊಪ್ಪು ಮಾಡಿ ಕಟ್ಟಿಕೊಂಡಿದ್ದಾಳೆ), ಕೊಟ್ಟು
tug — ಕ್ರಿ ಎಳೆ, ಜಗ್ಗು
tugboat — ನಾ ಎಳೆಯೋಡ
tuition — ನಾ ಕಲಿಸುಗೆ, ಮನೆಕಲಿಸುಗೆ
tumble — ಕ್ರಿ ಉರುಳು, ಮುಗ್ಗರಿಸು
tumour — ನಾ ಗಂಟು, ಬಾವು
tumult — ನಾ ಒಟ್ಟಳ (ಅಲ್ಲೇನೋ ಒಟ್ಟಳ ನಡೆಯುತ್ತಿರುವ ಹಾಗಿದೆ), ಅಲ್ಲೋಲ (ಅಲ್ಲೋಲಕಲ್ಲೋಲ), ಗದ್ದಲ, ಬೊಬ್ಬೆ
tune — ನಾ ಮಟ್ಟು
tunnel — ನಾ ಸುರಂಗ (ಉಗಿಬಂಡಿ ಸುರಂಗದ ಮೂಲಕ ಬೆಟ್ಟದ ಆಚೆಗೆ ಹೋಗುತ್ತದೆ)
turbid (be) , — ಕ್ರಿ ಕದಡು (ಕದಡಿದ ನೀರನ್ನು ಕುಡಿಯುವುದು ಹೇಗೆ?) ಕಲಡು (ಕೊಳದ ನೀರೆಲ್ಲ ಕಲಡಿ ಹೋಗಿದೆ),ಕಲಕು (ಕಲಕಿದ ನೀರು)
turbine — ನಾ ನೀರುಗಾಲಿ, ಉಗಿಗಾಲಿ
turbulent — ಗು 1 ಚಡಪಡಿಸುವ, ಗದ್ದಲದ, ಗೊಂದಲದ 2 ಬಿರುಸಾದ, ಒಂದೇ ತರ ವಿಲ್ಲದ
turf — ನಾಹೆಪ್ಪು (ಮನೆಯ ಮುಂದೆ ಹೆಪ್ಪು ಬೆಳೆಸಿದ್ದಾರೆ),ಹಸುರು ಹಾಸು,ಹುಲ್ಲುನೆಲ
turgid — ಗು ಬೀಗಿದ, ಉಬ್ಬಿದ
turmeric — ನಾ ಮಂಜಳು (ಮಂಜಳು ತೇದು ಆಕೆ ಮೋರೆಗೆ ಹಚ್ಚಿಕೊಂಡಳು), ಅರಸಿನ (ಅರಸಿನಕೊಂಬು)
turmoil — ನಾ ಗೊಂದಲ, ತಾರುಮಾರು
turn — ನಾ ತಿರುಗಣೆ (ತಿರುಗಣೆ ಮಡುವು), ಕವ್ವಳೆ (ಕವ್ವಳೆಗೊಳ್ಳು; ಕವ್ವಳೆಬರು), ತಿರುವು (ಹಾದಿಯ ತಿರುವು), ಮುರು (ಮುರುದಲೆ)
turn — ಕ್ರಿ ಹೊರಳು (ನಾಲಿಗೆ ಹೇಗೂ ಹೊರಳು ತ್ತದೆ; ಹೊರಳಿ ನೋಡು), ತಿರುಗು (ತಿರುಗಿ ಬರು; ತಿರುವು - ತಲೆ ತಿರುವಿ ನೋಡಿದ) ಗು ಸಾರಿ (ನಾಲ್ಕನೇ ಸಾರಿ ಹೋದಾಗ ಸಿಕ್ಕಿದ), ಸಲ (ಮೂರು ಸಲ ಹೇಳಿದೆ), ಸರ್ತಿ (ಮೂರು ಸರ್ತಿ ನೀರು ಕುಡಿ), ತಡವೆ (ಇತ್ತಡವೆ ಕೊಟ್ಟೆ), ಸೂಳು (ಮರುಸೂಳು ಹೇಳುವುದು; ನಾಲ್ಕುಸೂಳು ಸುತ್ತು ಬಂದ), ಒಂತು (ಒಂತಿನವ; ನಿಮ್ಮ ಒಂತು ನಾಳೆ), ಪಾಳಿ
turn aside — ಕ್ರಿ ಅಡಮುರಿ, ಓಸರಿಸು (ತೆರೆ ಯನ್ನು ಓಸರಿಸಿ ಹೊರಗೆ ಬಂದ)
turn back — ಕ್ರಿ ಮಗುಳು (ಯಾರೂ ಮಾತ ನಾಡಿಸಲಿಲ್ಲವೆಂದು ಮಗುಳಿದ)
turn round — ಕ್ರಿ ತುಳಿ, ತೊಳಸು (ಸಟ್ಟುಗ ದಿಂದ ತೊಳಸುತ್ತಿದ್ದಾನೆ)
turn upside down — ಕ್ರಿ ಕವುಚು (ಕವುಚಿ ಮಲಗಿ ನೀರಲ್ಲಿ ಈಸುತ್ತಾನೆ) ಮಗುಚು (ಕಯ್ಯನ್ನು ಮಗುಚಿ ಇರಿಸು; ದೋಸೆಯನ್ನು ಮಗುಚಿ ಹಾಕು)
turncoat — ನಾ ಕೂಟಮಾರುಗ, ನಾಡಹಗೆ
turning — ನಾ ತಿರುವು (ಹೆದ್ದಾರಿಯ ತಿರುವಿನಲ್ಲಿ ಗಾಡಿ ಮಗುಚಿತು)
turnover — ನಾ ಹರದುಹಣ
turnpike — ನಾ ದಾಟುಸುಂಕದೆಡೆ
turpitude — ನಾ ಕೇಡಿಗತನ
turquoise — ನಾ ಪಚ್ಚೆಕಲ್ಲು
turret — ನಾ ಕಿರುಗುಮ್ಮಟ
turtle — ನಾ ಆವೆ, ಆಮೆ
tusk — ನಾ ಕೋರೆದಾಡೆ (ಆನೆಯ ಕೋರೆ ದಾಡೆಯಲ್ಲಿ ಕೆತ್ತಿದ ಕೆತ್ತನೆ)
tussle — ಕ್ರಿ ಕಾದಾಡು (ಆತ ಯಾರ ಹತ್ತಿರವೋ ಕಾದಾಡಲು ಹೊರಟಿದ್ದಾನೆ), ಹೋರಾಡು
tutelage — ನಾ 1 ಆರಯ್ಕೆ 2 ಕಲಿಸುಗೆ, ಕಲ್ಪಿಸುಗೆ
tutor — ನಾ 1 ಕಲಿಸುಗ 2 ಮನೆಕಲಿಸುಗ
twaddle — ನಾ ಹೆಡ್ಡುಮಾತು, ಹುರುಳಿಲ್ಲದ ಮಾತು
twang — ನಾ ಮೂಗಿಸಿದ ನುಡಿ
tweak — ಕ್ರಿ ಚಿವುಟು, ಗಿಂಜು, ಕಿವಿಹಿಂಡು
tweezers — ನಾ ಕಿತ್ತಿಕ್ಕುಳ
twice — ಗು ಇತ್ತಡವೆ, ಇಮ್ಮೆ (ಇಮ್ಮೆ ಹೇಳು; ಇಮ್ಮೆ ಕೊಡು)
twig — ನಾ ಸೆಳೆ (ಸೆಳೆಕೊಂಬು; ಸೆಳೆಗೆಲ್ಲು), ಸೆಳ್ಳು (ಕಾಡಿಗೆ ಹೋಗಿ ಒಂತು ಕಟ್ಟ ಸೆಳ್ಳು ತಂದಳು), ಪುಳ್ಳೆ (ಪುಳ್ಳೆಗೆ ಮೊದಲು ಬೆಂಕಿ ಹತ್ತಿ ಕೊಂಡಿತು), ಅಡರು (ನಾಲ್ಕು ಹೊರೆ ಅಡರು ತನ್ನಿ) ನಾ ಮುಂಬೆಳಕು, ಬಯ್ಬೆಳಕು, ನಸು ಬೆಳಕು
twine — ಕ್ರಿ ಹೊಸೆ (ಆತ ಬುಟ್ಟಿಗೆ ಹಗ್ಗ ಹೊಸೆ ಯುತ್ತಿದ್ದಾನೆ)
twinge — ನಾ ಕುತ್ತುನೋವು, ಚುಚ್ಚುನೋವು
twinkle — ಕ್ರಿ ಮಿನುಗು (ಬಾನಿನಲ್ಲಿ ಚುಕ್ಕೆಗಳು ಮಿನುಗುತ್ತಿವೆ), ಮಿರುಗು
twirl — ಕ್ರಿ ಗರಗರ ತಿರುಗು (ತಿರುಚು), ಸುತ್ತು
twist — ನಾ 1 ಹಗ್ಗ 2 ನುಲಿವು (ಮಯ್ಯ ನುಲಿವು), ಮಲಕು (ಮಲಕುಗೊಳ್ಳು) 3 ತಿರುವು
twist — ಕ್ರಿ ನುಲಿ (ಹಗ್ಗನುಲಿ; ನುಲಿಮಂಚ), ಹೊಸೆ (ಹಗ್ಗ ಹೊಸೆಯುವುದು), ತೆತ್ತು (ತೆತ್ತಿದ ಎಳೆಗಳು), ತಿರುಚು (ಸೀರೆಯ ತುದಿಯನ್ನು ತಿರುಚುತ್ತಿದ್ದಳು), ಉಡಿ (ಎರಡು ಮೂರು ಎಳೆಗಳನ್ನು ಉಡಿದು ಹಗ್ಗ ಮಾಡಿದ), ಉರುಗು (ಉರುಗು ಕಾಲು; ಉರುಗು ಬೆರಳು), ಮುರುಟು (ಮುರುಟುಗಿವಿ; ಮುರುಟುಗಯ್)
twisted — ಗು ಹುರಿ (ಹುರಿಹಗ್ಗ, ಹುರಿಮಾಡು)
twit — ಕ್ರಿ ಹೀಗಳೆ, ಮೂದಲೆ
twitch — ಕ್ರಿ ತಟ್ಟನೆ ಎಳೆ, ಜಗ್ಗು, ತುಸು ಹಂದು
twitter — ಕ್ರಿ 1 ಚಿಲಿಪಿಲಿಗುಟ್ಟು (ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ) 2 ಹರಟು, ಕಿಲಕಿಲ ನಗು
tying — ನಾ ಕಟ್ಟುಹ
tylosis — ನಾ ಎವೆಯೂತ
type — ನಾ 1 ಬಗೆ 2 ಎತ್ತುಗೆ 3 ಗುಂಪು 4 ಅಚ್ಚು (ಬರಗೆಯ ಅಚ್ಚು)
typescript — ನಾ ಬೆರಳಚ್ಚಿಸಿದ ಬರಹ
typewriter — ನಾ ಬೆರಳಚ್ಚು (ಬೆರಳಚ್ಚು ಮಾಡಿದ ಬರಹ)
typhoon — ನಾ ಬಿರುಗಾಳಿ ಮಳೆ
typical — ಗು ಎತ್ತುಗೆಯ, ಮಾರ್ಪಾದ
typify — ನಾ ಎತ್ತುಗೆ ಕೊಡು
typist — ನಾ ಬೆರಳಚ್ಚುಗಾರ (ಅವರಲ್ಲಿ ಹತ್ತು ಮಂದಿ ಬೆರಳಚ್ಚುಗಾರರು ಕೆಲಸ ಮಾಡು ತ್ತಿದ್ದಾರೆ)