Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
E
each — ಗು ಒಂದೊಂದು (ಒಂದೊಂದೇ ಹಣ್ಣನ್ನು ಮೂಸಿ ನೋಡಿ ಇರಿಸುತ್ತಿದ್ದಾನೆ), ಒಬ್ಬೊಬ್ಬ (ಒಬ್ಬೊಬ್ಬ ಹುಡುಗನನ್ನೂ ಕರೆದು ಮಾತನಾಡಿಸಿದೆ; ಒಬ್ಬೊಬ್ಬರಿಗೂ ಎರಡೆರಡು ಹಣ್ಣುಗಳು ಸಿಗುತ್ತವೆ)
eager (be) — ಕ್ರಿ ಕೊಸರು, ಕಡಗು (ಮನೆಗೆ ಹೋಗಲು ಕಡಗುತ್ತಿರುವ ಹುಡುಗ) ನಾ ಪಸ (ಪಸವಡು, ಪಸತರು; ಪಸವು),ಪದೆಪು, ಕೊಸರಿಕೆ, ಕಟ್ಟುರ
eagle — ನಾ ಹದ್ದು
eaglet — ನಾ ಹದ್ದಿನ ಮರಿ
ear — ನಾ ಕಿವಿ (ಕಿವಿಹಿಂಡು; ಕಿವಿಗೆಹಾಕು; ಕಿವಿಗೆ ಬೀಳು; ಕಿವಿಸೋಲು; ಕಿವಿಗೊಡು - ಕಿವಿ ಗೊಟ್ಟು ಕೇಳು; ಕಿವಿಯಾರೆ ಕೇಳು), ಕೊಡಕೆ
ear (of corn) — ನಾ ಕದಿರು (ಕದಿರಿನಲ್ಲಿ ಇನ್ನೂ ಹಾಲು ತುಂಬಿಲ್ಲ), ಹೊಡೆ, ಪೊಡೆ (ಕಿಳ್ಪೊಡೆ; ಪೆರ್ಬೊಡೆ)
eardrum — ನಾ ಕಿವಿತಮ್ಮಟೆ (ಈ ಹುಡುಗರ ಬೊಬ್ಬೆಗೆ ನನ್ನ ಕಿವಿತಮ್ಮಟೆಯೇ ಹರಿದು ಹೋಲಿುತು)
earlier — ಗು ಮುಂಚೆ (ಕೆಲವು ತಿಂಗಳುಗಳಿಗೆ ಮುಂಚೆ, ಅವನು ಬರುವುದಕ್ಕೆ ಮುಂಚೆ)
ear-lobe — ನಾತಮ್ಮೆ (ತಮ್ಮೆ ಹಿಡಿದು ತಿರು ಗಿಸಿದರು)
earmark — ಕ್ರಿ ಮೀಸಲಿಡು, ತೆಗೆದಿಡು
earn — ಕ್ರಿ ಗಿಟ್ಟಿಸು (ಆತ ಮಕ್ಕಳಿಗೆ ಕಲಿಸಿ ಹಣ ಗಿಟ್ಟಿಸಿಕೊಳ್ಳುತ್ತಿದ್ದ), ಪಡೆ (ಹಗಲಿರುಳು ಕೆಲಸ ಮಾಡಿ ಪಡೆದ ಹಣ), ಗಳಿಸು
earnest — ನಾ ಮುಂಗಡ
earnest — ಗು ಕಡಗುವ, ನೇರ್ಪಿನ
earning — ನಾಗಳಿಕೆ,ಅಡಹಿಕೆ (ಅಡಹಿಕೆಯಲ್ಲಿ ಎಲ್ಲರಿಗೂ ಪಾಲು ಕೊಡಬೇಕು)
earring — ನಾ ಓಲೆ (ಕಿವಿಗೆ ಇಟ್ಟುಕೊಳ್ಳುವ ಓಲೆ; ಓಲೆತಿರುಪು)
earshot — ನಾ ಕೇಳ್ತೆರಪು
earth — ನಾ 1 ನೆಲ 2 ಮಣ್ಣು (ಮಣ್ಣಿನ ಗಡಿಗೆ)
earthen — ಗು ಮಣ್ಣಿನ
earthen pot (large) — ನಾ ಬಾನಿ (ನಿಮ್ಮ ಕಾಳು ತುಂಬುವ ಮಣ್ಣಿನ ಬಾನಿ ತುಂಬಾ ದೊಡ್ಡದು)
earthquake — ಕ್ರಿ ನೆಲನಡುಗು (ನೆಲ ನಡುಗಿ ನಿಂದ ಹಲವು ಮಂದಿ ಸತ್ತರು), ನೆಲನಡುಕ
earthworm — ನಾ ಎರೆಹುಳ (ಎರೆಹುಳ ಗೊಬ್ಬರ), ನಕ್ಕುಳ (ನಕ್ಕುಳದ ಹಿಕ್ಕೆ), ಮಳೆಹುಳು (ಮಳೆಗಾಲದಲ್ಲಿ ಮಳೆಹುಳು ಮಣ್ಣಿನ ಮೇಲೆ ಬರುತ್ತದೆ), ಮಣ್ಣುಹುಳ (ಮಣ್ಣುಹುಳದ ಗೊಬ್ಬರ)
earwax — ನಾಕುರುಗಣಿ,ಕೂಕಣಿ,ಕೊಂಗೆ (ಕಿವಿಗಳ ಕೊಂಗೆ ತೆಗೆ),ಕೊಗ್ಗು (ಕಿವಿಯ ಕೊಗ್ಗು), ಗುಗ್ಗೆ (ಕಿವಿಯಲ್ಲಿ ಗುಗ್ಗೆ ತುಂಬಿದೆ)
ease — ನಾ ನೆಮ್ಮದಿ, ಸುಳು
ease — ಕ್ರಿ ಸುಳುವಾಗಿಸು, ಸುಳುವಾಗು
easel — ನಾ ಆನಿಕೆ (ಕರಿಹಲಿಗೆಯ ಆನಿಕೆ ಮುರಿದುಹೋಗಿದೆ)
easily — ಗು ಅಕ್ಕಟೆ (ಅಕ್ಕಟೆ ಬಂದ ದುಡ್ಡು)
east — ನಾಮೂಡಲು (ನಮ್ಮ ಮನೆಯ ಮೂಡ ಲಲ್ಲಿ ದೊಡ್ಡ ಗುಡ್ಡ ಇದೆ)
easy — ಗು ಸುಳು (ಸುಳುವು - ಎಶ್ಟು ಸುಳುವಾಗಿ ಅವನದನ್ನು ಹೊರುತ್ತಿದ್ದಾನೆ!), ಹಾಯಾಗಿ (ಹಾಯಾಗಿ ಮಲಗಿಕೊಂಡಿದ್ದ), ಹಗುರ
eat — ಕ್ರಿ ತಿನ್ನು (ತಿನ್ನುಬಾಕ; ತಿನ್ನಾಳಿ), ಆರೋ ಗಿಸು (ಆರೋಗಣೆ), ಮೆಲ್ಲು, ಊಡು (ತಾಲಿು ಮಗುವಿಗೆ ಮೊಲೆಯೂಡು ತ್ತಿದ್ದಾಳೆ)
eat (meal) — ಕ್ರಿ ಉಣ್ಣು (ಉಣ್ಣದೆ ಹೋಗ ಬೇಡಿ)
eat greedily — ಕ್ರಿ ಮುಕ್ಕು (ಬಡಿಸಿದ್ದನ್ನೆಲ್ಲ ಒಡನೆಯೇ ಮುಕ್ಕಿ ಮುಗಿಸಿದ)
eatable — ಗು ತಿನ್ನತಕ್ಕ, ತಿನ್ನುವ (ತಿನ್ನುವ ಅಣಬೆ)
eating — ನಾತಿನಿ, ತಿನ್ನಿ (ಆತನ ತಿನ್ನಿಲಿುನ್ನೂ ಮುಗಿದಿಲ್ಲ)
eaves — ನಾಸೂರು (ಮನೆಯ ಸೂರಿನ ಕೆಳಗೆ ನಿಂತಿದ್ದ; ಸೂರಿನ ಹಲಿಗೆ; ಮುಂಜೂರು)
eavesdrop — ಕ್ರಿ ಅಡಗಿ ಕೇಳು
ebb (of tide) — ನಾ ಪಾಟು (ಕಡಲ ಪಾಟು), ಇಳಿತ
ebony — ನಾ ಬೀಟೆ (ಬೀಟೆಮರ)
ebullient — ಗು 1 ಕುದಿಯುವ 2 ಸಡಗರದ, ಹುರುಪಿನ ಗು 1 ನಡು ಬೇರಾದ 2 ಎಲ್ಲರಂತಿಲ್ಲದ
echelon — ನಾ ಅಳವಿಗ ಮಟ್ಟ
echo — ನಾ ಸೆಲೆ (ಸೊಲ್ಲಿನ ಸೆಲೆ; ಸೆಲೆ ಕೊಡು),ಮಾರುಲಿ, ಹೊಳಲು
eclat — ನಾ 1 ಹೊಗಳಿಕೆ, ಮೆಚ್ಚುಗೆ 2 ದೊಡ್ಡ ಗೆಲವು
eclectic — ಗು ಆಯ್ದ, ಆರಿಸಿದ
eclipse — ನಾ ಬೆಳಕುತಡೆ
ecology — ನಾ ಹೊಂದಿಕೆಯರಿಮೆ
economical — ಗು ದುಂದುಮಾಡದ, ಹಾಳು ಮಾಡದ
economics — ನಾ ಸೊಮ್ಮರಿಮೆ
economist — ನಾ ಸೊಮ್ಮರಿಗ
economize — ಕ್ರಿ ಮುಟ್ಟುವಳಿ ತಗ್ಗಿಸು, ವೆಚ್ಚ ತಗ್ಗಿಸು
economy — ನಾ 1 ಹಾಳಿತ ಬಳಕೆ 2 ಸೊಮ್ಮು ಸಂಬಾಳಿಕೆ
ecstasy — ನಾ ಪೆರ್ನಲಿವು, ದೊಡ್ಡ ಹಿಗ್ಗು
eddy — ನಾ ಸುಳಿಗಾಳಿ, ನೀರಿನ ಸುಳಿ
edentate — ಗು ಹಲ್ಲಿಲ್ಲದ, ಹಲ್ಲಿಲಿ
edge — ನಾ 1 ಅಂಚು (ಸೀರೆಯ ಅಂಚು; ದೊಡ್ಡಂಚಿನ ಸೀರೆ), ಅರುಗು (ಗದ್ದೆಯ ಮೂಡಲ ಅರುಗಿನಲ್ಲಿ ಒಂದು ಹುಣಿಸೆ ಮರವಿದೆ), ಏಣು, ಕರೆ (ಕರೆಗಲ್ಲು), ದಾರೆ (ದಾರೆಹುಳಿ ಬೇಕಾದಶ್ಟಿದೆ) 2 ಅಲಗು (ಕತ್ತಿಯ ಅಲಗು ಬಡ್ಡಾಗಿದೆ), ಬಾಯಿ (ಕತ್ತಿಯ ಬಾಯಿ)
edgy — ಗು 1 ಹರಿತ, ಮೊನಚು 2 ಸಿಡುಕುವ, ರೇಗುವ
edible — ಗು ತಿನ್ನುವ (ತಿನ್ನುವ ಅಣಬೆ)
edict — ನಾಕಟ್ಟಳೆ (ಇಶ್ಟು ದಿವಸವೂ ಕಟ್ಟಳೆಗೆ ಹೊಂದಿಕೊಂಡು ಬಾಳಿದ್ದಾನೆ), ಬೆಸ, ಸೆಲವು
edifice — ನಾ ದೊಡ್ಡ ಕಟ್ಟಡ
edify — ಕ್ರಿ ತಿಳಿಹೇಳು, ದಾರಿತೋರಿಸು
edit — ಕ್ರಿ ಅಚ್ಚಿಗೆ ಅಳವಡಿಸು, ತಿದ್ದು
edition — ನಾ ಅಚ್ಚು (ಎರಡನೇ ಅಚ್ಚಿನಲ್ಲಿ ಮೂರು ಸಾವಿರ ಹಾಕಿದ್ದೇವೆ)
editor — ನಾ ಅಳವಡಿಗ
editorial — ಗು ಅಳವಡಿಸುವ, ಅಳವಡಿಕೆಯ
educate — ಕ್ರಿ ಕಲಿಸು (ಕಲಿಸಲು ಮಕ್ಕಳನ್ನು ದೂರದ ಊರಿಗೆ ಕಳಿಸಿದರು), ಪಳಗಿಸು
education — ನಾ ಕಲಿಕೆ (ಆತನ ಕಲಿಕೆಯಿನ್ನೂ ಮುಗಿದಿಲ್ಲ), ಪಳಗಿಕೆ
educe — ಕ್ರಿ ಹೊರತರು, ಹೊರಸೆಳೆ, ತೀರ್ಮಾನಕ್ಕೆ ಬರು, ತೀರ್ಮಾನಿಸು
eel — ನಾಹಾವುಮೀನು
eerie — ಗು ಗುಂಬದ, ಹೆದರಿಕೆಯ
effable — ಗು ನುಡಿಯಬಲ್ಲ, ಮಾತಿಗೆ ಬರುವ
efface — ಕ್ರಿ ಅಳಿಸು (ಗೋಡೆಯ ಮೇಲೆ ಬರೆದುದನ್ನೆಲ್ಲ ಅಳಿಸಿಬಿಡು), ತೊಡೆದು ಹಾಕು, ಒರೆಸು (ಬರೆದುದನ್ನು ಒದ್ದೆಬಟ್ಟೆ ಯಿಂದ ಒರೆಸು), ಕಾಣದಂತಿರು
effect — ನಾ ಆಗುಹ
effect — ಕ್ರಿ ಆಗಿಸು, ಆಗುಮಾಡು, ಉಂಟು ಮಾಡು
effective (be) — ಕ್ರಿ ನಾಟು (ಅವರ ಮದ್ದು ನಾಟಲಿಲ್ಲ; ನೀವು ಹೇಳಿದ್ದು ನಾಟಿದೆ)
effectuate — ಕ್ರಿ ಆಗುಮಾಡು, ಈಡೇರಿಸು, ನೆರವೇರಿಸು ನಾ ಹೆಣ್ಣಿಗತನ, ನವುರುತನ
effervescent — ಗು 1 ನೊರೆಯೇಳುವ, ಗುಳ್ಳೆಯೇಳುವ 2 ಮಿಡುಕಿನ, ಚುರುಕಿನ, ನಗುನಗುತ್ತಿರುವ
effete — ಗು ಬರಡು, ಗೊಡ್ಡು, ನವೆದ, ಸೊಮ್ಮಳಿದ
efficacious — ಗು ನಾಟುವ (ಇದು ಒಳ್ಳೇ ನಾಟುವ ಮದ್ದು)
efficient — ಗು ಅಳವುಳ್ಳ
effigy — ನಾ ಅಡರ್ಪು (ಆತನ ಅಡರ್ಪನ್ನು ಊರ ನಡುವೆ ಸುಡಲಿದ್ದಾರೆ), ಮಾರೊಡಲು
effort — ನಾ ಊಕ, ಎತ್ತುಗಡೆ (ಮನೆಯನ್ನು ಕೆಡವಬೇಕೆಂಬ ಎತ್ತುಗಡೆ ನಡೆಸಿದ್ದಾರೆ)
effrontery — ನಾ ಆರ್ಪು, ಕಡುಪು, ಸೊಕ್ಕು, ನಾಣಿಲಿತನ
effulgence — ನಾ ದೊಡ್ಡಬೆಳಕು, ಹೊನಲು ಬೆಳಕು
effuse — ಕ್ರಿ ಹೊರಚೆಲ್ಲು, ಹರಡು
effusive — ಗು ಹೊರಹೊಮ್ಮುವ, ಚಿಮ್ಮುವ, ತುಂಬಿತುಳುಕುವ
egg — ನಾಮೊಟ್ಟೆ (ಮೊಟ್ಟೆ ಒಡೆದು ಮರಿ ಹೊರಬಂತು), ತತ್ತಿ, ಗುಡ್ಡು
egg — ಕ್ರಿ ಹುರಿದುಂಬಿಸು (ಕೆಟ್ಟ ಕೆಲಸ ಮಾಡಲು ಆತನನ್ನು ಹುರಿದುಂಬಿಸದಿರಿ), ಒತ್ತಾಯ ಮಾಡು
eggplant — ನಾ ಬದನೆ (ಬದನೆಕಾಯಿ)
ego — ನಾ ತನ್ನತನ
egoism — ನಾ ತನ್ನತಿಗೆ
egotism — ನಾ ಹಮ್ಮು, ಹೆಕ್ಕಳ
egregious — ಗು ಕಡುಕೆಟ್ಟ, ದೋವಿಲ
egress — ನಾ ಹೊರದಾರಿ, ತೆರಳ್ಕೆ
ejaculate — ಕ್ರಿ 1 ಚಿಮ್ಮು (ಹೊರಚಿಮ್ಮು) 2 ಬೊಬ್ಬಿರಿ (ಬೆಚ್ಚಿಬಿದ್ದು ಬೊಬ್ಬಿರಿದ)
eject — ಕ್ರಿ (ಆ) ಚಿಮ್ಮು (ಮೇಲಕ್ಕೆ ಚಿಮ್ಮಿದ ಕೆಂಪು ನೀರು), ಹೊರಸೂಸು (ಮಾ) ಹೊರದೂಡು, ತಳ್ಳು
eke — ಕ್ರಿ ಕೊರತೆ ತುಂಬಿಸು
ekeout — ಕ್ರಿ ಹೊಟ್ಟೆಹೊರೆ, ಬಾಳ್ವೆ ನಡೆಸು
ekistics — ನಾ ಹೊಳಲರಿಮೆ
elaborate — ಕ್ರಿ ಬಿಡಿಸಿ ಹೇಳು
elapse — ಕ್ರಿ ಜರುಗು, ದಾಟು (ತಿಂಗಳು ದಾಟು), ಕಳೆದುಹೋಗು, ಮುಗಿ (ಮುಗಿದ ಗಡುವು)
elastic (be) — ಕ್ರಿ ತೂಳು
elastic — ಗು ಹಿಗ್ಗುವ, ಬಾಗುವ, ತೂಳುವ
elate — ಕ್ರಿ ಹಿಗ್ಗು, ಉಕ್ಕು, ಉಬ್ಬರಿಸು
elation — ನಾ ಹಿಕ್ಕಳ,ಹಿಗ್ಗು,ಹೆಚ್ಚಳ
elbow — ನಾ ಮೊಣಕೈ, ತೋಳು
elder — ಗು ಹಿರಿ (ಹಿರಿಮಗ, ಹಿರಿಯಕ್ಕ; ಹಿರಿಯ) ದೊಡ್ಡ (ದೊಡ್ಡಣ್ಣ; ದೊಡ್ಡಪ್ಪ; ದೊಡ್ಡವನು)
elderly woman — ನಾ ಅಜ್ಜಗಿತ್ತಿ
elect — ಕ್ರಿ ಆರಿಸು, ಆಯ್ಕುಮಾಡು
election — ನಾ ಆಯ್ಕು (ನೀವು ಯಾರನ್ನು ಆಯ್ಕೆ ಮಾಡುತ್ತೀರಿ?), ಆಯ್ಕಳಿ (ಆಯ್ಕಳಿ ಗೊಳ್ಳು)
electricity — ನಾ ಮಿಂಚು (ಮಿಂಚು ದೀವಿಗೆ; ಮಿಂಚುರಿ; ಮಿಂಚಂಚೆ)
electrify — ಕ್ರಿ ಮಿಂಚಿಸು
electrocute — ಕ್ರಿ ಮಿಂಚಿಕ್ಕು (ಕೊಲೆಗಾರನಿಗೆ ಇವತ್ತು ಬೆಳಿಗ್ಗೆ ಮಿಂಚಿಕ್ಕಲಾಲಿುತು) ನಾ ನಿರತೆ, ಚೊಕ್ಕಳಿಕೆ (ಚೊಕ್ಕಳಿಕೆ ಯಿಂದ ಅಚ್ಚಗನ್ನಡದಲ್ಲೇ ಬರೆಯಿರಿ), ಮಾಟ, ಒಪ್ಪು (ಒಪ್ಪೆಸೆ; ಒಪ್ಪುಗೊಳಿಸು), ಒಪ್ಪ (ಒಪ್ಪಗೆಯ್ಯು; ಒಪ್ಪವಿಕ್ಕು), ಕೆನೆ
elegant — ಗು ಚನ್ನು (ಚನ್ನಿಗ; ಚನ್ನಮಾತು; ಚನ್ನಮಾಡು)
elementary — ಗು ಮೊದಲನೆಯ, ತೊಡ ಗುವ
elephant — ನಾಆನೆ (ಮದದಾನೆ; ಆನೆಮರಿ),ಪಲ್ಲ
elephant driver — ನಾ ಹಂಚಿಗ
elephantiasis — ನಾ ಆನೆಕಾಲು (ಆನೆಕಾಲು ಬಂದು ಆತನ ಕಾಲು ತುಂಬಾ ದಪ್ಪ ವಾಗಿದೆ), ಒರಲೆಗಾಲು
elevate — ಕ್ರಿ ಮೇಲೆತ್ತು, ಮೇಲೇರಿಸು
elevation — ನಾ ಏಳಿಗೆ, ಮೇಲ್ಮೆ
elevator — ನಾಎತ್ತುಗ, ಏರಿಳಿ
elicit — ಕ್ರಿ ಹೊರದೆಗೆ, ಹೊರತರು, ಹೊರಸೆಳೆ
eligible — ಗು ತಕ್ಕ, ಒಪ್ಪುವ, ಹೊಂದುವ, ಬಯಸುವ
eliminate — ಕ್ರಿ ತೆಗೆದುಹಾಕು (ನಿನ್ನ ಹೆಸರನ್ನು ತೆಗೆದುಹಾಕಿದ್ದಾರೆ)
elision — ನಾ ಕಳೆತ, ತೆಗೆತ
elite — ನಾ ಅದಟುಳ್ಳವರು, ಅಣ್ಣೆಮಂದಿ
elk — ನಾ ಕಡವೆ
elliptical — ಗು ಉದ್ದ-ಉರುಟು
elocution — ನಾ ಮಾತುಗಾರಿಕೆ (ಮಾತು ಗಾರಿಕೆಯಲ್ಲಿ ಆತ ಯಾವಾಗಲೂ ಮುಂದೆ)
elongate — ಕ್ರಿ ಉದ್ದಮಾಡು
elope — ಕ್ರಿ (ಮದುವೆಯಾಗಲು) ಓಡಿಹೋಗು
eloquence — ನಾ ಮಾತುಗಾರಿಕೆ (ಮಾತು ಗಾರಿಕೆಯಲ್ಲಿ ನೀನೇ ಮುಂದೆ)
eloquent — ನಾ ಮಾತುಗ, ಮಾತುಗಾರ
elsewhere — ಗು ಬೇರೆಡೆ, ಬೇರೆ ಕಡೆ (ಅವ ನೊಬ್ಬ ಬೇರೆ ಕಡೆ ಹೋಗಿದ್ದಾನೆ)
elucidate — ಕ್ರಿ ಮನದಟ್ಟುಮಾಡು (ಎಲ್ಲ ವನ್ನೂ ಅವರಿಗೆ ಮನದಟ್ಟು ಮಾಡಿದ್ದೇನೆ), ಬೆಳಗು
elude — ಕ್ರಿ 1 ನುಣುಚಿಕೊಳ್ಳು (ಯಾರ ಕಯ್ಗೂ ಸಿಕ್ಕದೆ ನುಣುಚಿಕೊಂಡ), ತಪ್ಪಿಸಿಕೊಳ್ಳು 2 ತಿಳಿಯದಿರು
elution — ನಾ ಪಾರು (ಪಾರಾಗು), ಸಿಕ್ಕ ದಿರುವಿಕೆ
emaciate — ಕ್ರಿ ಕಳಲು, ಸೊರಗು (ಆಕಳು ತಿನ್ನಲು ಕೊಡದೆ ಸೊರಗಿದೆ)
e-mail — ನಾ ಮಿಂಚಂಚೆ (ನಿಮಗೊಂದು ಮಿಂಚಂಚೆ ಬಂದಿದೆಯಂತೆ), ಮಿನ್ನಂಚೆ, ಮಿಂಚೆ
emanate — ಕ್ರಿ ಹೊರಹೊಮ್ಮು, ತೊಡಗು
emancipate — ಕ್ರಿ ಬಿಟ್ಟುಬಿಡು (ತೊತ್ತು ಗಳನ್ನೆಲ್ಲ ಬಿಟ್ಟುಬಿಟ್ಟಿದ್ದಾರೆ), ಬಿಡುಗಡೆ ಮಾಡು
embalm — ಕ್ರಿ ಕಾಪಾಡು (ಹೆಣವನ್ನು ಹಚ್ಚಿಕೆ ಗಳನ್ನು ಹಚ್ಚಿ ಕಾಪಾಡಿದ್ದಾರೆ; ಆತನನ್ನು ನೆನಪಿನಲ್ಲಿ ಕಾಪಾಡಬೇಕು)
embankment — ನಾಒಡ್ಡು,ಕಟ್ಟೆ, ಏರಿ
embargo — ನಾ ತಡೆ, ತಡೆಹಿಡಿತ (ಆ ನಾಡಿ ನೊಡನೆ ಹರದಿಕೆಯನ್ನು ತಡೆಹಿಡಿಯ ಲಾಗಿದೆ)
embark — ಕ್ರಿ ತೊಡಗು (ಕೆಲಸಕ್ಕೆ ತೊಡಗು)
embarkation — ನಾ ಎಗು (ಎಗ್ಗುಡಿ), ಏರಿಕೆ
embarrass — ಕ್ರಿ ಮುದಿಪು ಕೆಡಿಸು, ಗಲಿಬಿಲಿ ಗೊಳಿಸು
embellish — ಕ್ರಿ ಅಂದಗೆಯ್ಯು, ಒಪ್ಪವಿಡು; ಒಪ್ಪಗೊಳಿಸು
ember — ನಾ ಕೆಂಡ, ಕೊಳ್ಳಿ ಕ್ರಿ ಕದ್ದುಕೊಳ್ಳು, ಹಣ ತಿಂದು ಹಾಕು
embitter — ಕ್ರಿ ರೇಗಿಸು, ಕಹಿತುಂಬು
emblem — ನಾ ಗುರುತು
embody — ಕ್ರಿ ಒಳಗೊಳ್ಳು, ಸೇರಿಕೊಳ್ಳು, ಮಯ್ದಾಳು, ಹೊಂದಿರು
embolden — ಕ್ರಿ ಹುರಿದುಂಬಿಸು
emboss — ಕ್ರಿ ಉಬ್ಬಿಸು, ಉಬ್ಬಿರುವಂತೆ ಮಾಡು
embossed work — ನಾ ಕರು (ಕರುವಿಡು), ಉಬ್ಬಚ್ಚು
embrace — ನಾ ಅಪ್ಪುಗೆ, ತಕ್ಕೆ (ತಕ್ಕೆಬೀಳು; ತಕ್ಕೆಗಟ್ಟು; ತಕ್ಕಯಿಸು; ತಕ್ಕೆಗೊಳ್ಳು), ತೆಕ್ಕೆ (ತೆಕ್ಕೆಬೀಳು - ಹೆಂಡತಿ ಅವನ ಕೊರಳಿಗೆ ತೆಕ್ಕೆ ಬಿದ್ದಳು),ಅಳ್ಕೆ
embrace — ಕ್ರಿ ಅಪ್ಪು (ಅಪ್ಪಿಕೊಳ್ಳು), ಅವಚು (ತಾಯಿ ಮಗುವನ್ನು ಎದೆಗೆ ಅವಚಿ ಕೊಂಡಳು), ಅಕ್ಕು, ಕಟ್ಟಯ್ಸು, ತಬ್ಬು (ಕರುವನ್ನು ತಬ್ಬಿ ಹಿಡಿದಿದ್ದಾನೆ; ತಬ್ಬಿ ಕೊಳ್ಳು), ಗುಂಡಿಗೆಗೊಳ್ಳು, ಅಣೆ, ಕೊಸೆ (ಕೊಸ್ತಾಟ), ಪೆಣಸು
embroider — ಕ್ರಿ ಕಸೂತಿಹಾಕು, ಕಸೂತಿ ಮಾಡು
embroil — ಕ್ರಿ ಗೊಂದಲಪಡಿಸು, ತೊಂದರೆ ಯಲ್ಲಿ ಬೀಳಿಸು
embryo — ನಾಬಸಿರು (ಬಸಿರಿ - ಅವನ ಹೆಂಡತಿ ಬಸಿರಿ),ತನೆ (ತನೆಯ ಆಕಳು; ತನೆಯಾಗು)
emendation — ನಾ ತಿದ್ದುಪಡಿ, ತಿದ್ದುಪಾಟು
emerald — ನಾ ಪಚ್ಚೆಹರಳು, ಹೊಳೆವ ಪಚ್ಚೆ ಬಣ್ಣ
emerge — ಕ್ರಿ ಹೊರಬರು, ಬೆಳಕಿಗೆ ಬರು, ಬಯಲಾಗು
emergency — ನಾ ಮುಂಗಾಣದ ಆಗುಹ
emetic — ಗು ಓಕರಿಕೆ ಬರಿಸುವ, ಕಾರಿಸುವ (ಕಾರಿಸುವ ಮದ್ದು)
emigrate — ಕ್ರಿ ವಲಸೆ ಹೋಗು, ಗುಳೆಹೋಗು (ಅವರು ದೂರದ ಊರಿಗೆ ಗುಳೆಹೋಗಿ ದ್ದಾರೆ)
emigre — ನಾ ವಲಸೆಗಾರ
eminence — ನಾ ಪೆಂಪು (ಆತನ ಪೆಂಪನ್ನು ಏನೆಂದು ಹೇಳಲಿ!), ಎಕ್ಕೆ (ತನ್ನ ಎಕ್ಕೆಲಿುಂದ ಎಲ್ಲರ ನಡುವೆ ಮಿಂಚುತ್ತಿದ್ದಾನೆ), ಹಿರಿಮೆ, ಮೇಲ್ಮೆ, ಹೆಗ್ಗಳಿಕೆ, ಹೆಚ್ಚುಗಾರಿಕೆ (ತನ್ನ ಹೆಚ್ಚುಗಾರಿಕೆಯ ಮಾತನ್ನು ತಾನೇ ಹೇಳಿ ಕೊಳ್ಳುತ್ತಿದ್ದಾನೆ),ದಂಡಿ
eminent — ಗು ದೊಡ್ಡ (ದೊಡ್ಡತನ; ದೊಡ್ಡ ವರು; ದೊಡ್ಡಸ್ತಿಕೆ), ಹಿರಿಯ
emissary — ನಾ 1 ಮಾರಾಳು 2 ಮರೆಯಾಳು
emission — ನಾ ಸೂಸಿಕೆ
emit — ಕ್ರಿ ಸೂಸು (ಕಿಡಿಗಳನ್ನು ಸೂಸುತ್ತಿರುವ ಕಣ್ಣು; ಸೂಸುಗಿಡಿ; ಸೂಸುನೀರು; ಸೂಸಾಟ; ಸೂಸುವೆಳಗು), ಇರಿ (ಎಂತಹದೋ ಕೂಗನ್ನು ಇರಿಯುತ್ತಿರುವ ಹುಳ), ಹೊರ ಬಿಡು, ಕರೆ (ಬೋರ್ಗರೆವ ಅಬ್ಬಿ), ಚೆಲ್ಲು
emollient — ಗು ಮೆತ್ತಗೆ ಮಾಡುವ, ತಣಿಸುವ
emolument — ನಾ ಪಡಪು, ಸಂಬಳ
emotion — ನಾ ತಲ್ಲಣ, ಅನಿಸಿಕೆ, ಕೂರನಿಸಿಕೆ, ಬೇಗುದಿ
empathy — ನಾ ಹೊಂದಾಣಿಕೆ
emperor — ನಾ ಪೇರರಸು, ದೊಡ್ಡರಸು
emphasis — ನಾ ಒತ್ತು (ಆ ಮಾತಿನ ಮೇಲೆ ಅವನು ಒತ್ತು ಕೊಟ್ಟಿದ್ದ)
emphasize — ಕ್ರಿ ಒತ್ತಿಹೇಳು (ನೀವು ಬರಲೆೀ ಬೇಕೆಂದು ಒತ್ತಿಹೇಳಿದ್ದಾನೆ), ಒತ್ತುಕೊಡು, ಒತ್ತುಹಾಕು
empire — ನಾ ಪೆರ್ನಾಡು
employ — ಕ್ರಿ ಬಳಸು (ಈ ಮನೆಯನ್ನು ನೀವು ಯಾವ ಕೆಲಸಕ್ಕೂ ಬಳಸಬಹುದು), ಕೆಲಸ ಕೊಡು
employee — ನಾ ಕೆಲಸಗಾರ
employer — ನಾ ಒಡೆಯ, ಕೆಲಸ ಕೊಟ್ಟವ ನಾ ಸಂತೆ, ದೊಡ್ಡಂಗಡಿ
empower — ಕ್ರಿ ಅಳವೀಯು, ಕಸುವು ಕೊಡು
empty — ಕ್ರಿ ತೆರವುಮಾಡು (ಇವತ್ತೇ ಮನೆ ಯನ್ನು ತೆರವುಮಾಡಿ ಕೊಡಬೇಕಾಗಿದೆ), ಬರಿದುಮಾಡು
empty — ಗು ಬರಿ (ಬರಿಗಂಟು; ಬರಿಗಾಲು; ಬರಿಗಿವಿ; ಬರಿಕೈ; ಬರಿ ಮಾತು; ಬರಿದು), ಬಣ (ನೆಂಟರೆಲ್ಲಾ ಹೋದಮೇಲೆ ಮನೆ ಬಣಬಣ ಎನಿಸುತ್ತದೆ), ಪೊಳ್ಳು (ಪೊಳ್ಳುಮಾತು), ಜಳ್ಳು (ಜಳ್ಳುಕಾಳು; ಜಳ್ಳುಮಾತು), ಜೊಳ್ಳು, ಟೊಳ್ಳು (ಆತನ ದೆಲ್ಲ ಬರೇ ಟೊಳ್ಳು ಮಾತು)
emulate — ಕ್ರಿ 1 ಒಮ್ಮು, ಬೆಂಬತ್ತು 2 ಪೋಟಿ ನಡೆಸು, ಮೀರು
emulsion — ನಾ ಕದಡುಗೆ (ಹಾಲಿನ ಹಾಗೆ ನೀರಲ್ಲಿ ಎಣ್ಣೆ ಕದಡಿರುವ ಕದಡುಗೆ)
en route — ಗು ದಾರಿಯಲ್ಲಿ, ಹಾದಿಯಲ್ಲಿ
enable — ಕ್ರಿ ಅಳವೀಯು
enact — ಕ್ರಿ ನೆಗಳು, ಪೊದಳ್ಚು, ಎಸಗು, ಕಟ್ಟಳೆ ಮಾಡು
enamel — ನಾ ಗಾಜಿನ ಹೊರಿಕೆ, ನುಣುಪಿನ ಹೊರಿಕೆ
enamour — ಕ್ರಿ ಒಸೆ, ಹಂಬಲಿಸು, ಅಳುರು
encamp — ಕ್ರಿ ಬೀಡುಬಿಡು
encapsulate — ಕ್ರಿ ಕುಗ್ಗಿಸು, ಅಡಕಮಾಡು
encase — ಕ್ರಿ ಮುಚ್ಚು, ಒಳಗೊಳ್ಳು
encash — ಕ್ರಿ ಕಾಸಾಗಿಸು, ಹಣವಾಗಿಸು
enchain — ಕ್ರಿ ಸರಪಳಿ ಬಿಗಿ, ಸೆರೆಹಿಡಿ
enchant — ಕ್ರಿ ಮೋಡಿಮಾಡು, ಮಾಟಮಾಡು, ಗೋರಿಗೊಳಿಸು
encircle — ಕ್ರಿ ಬಳಸು (ಪಡೆ ಕೋಟೆಯನ್ನು ಬಳಸಿ ನಿಂತಿದೆ), ಸುತ್ತುವರಿ, ತೊಂತು (ತೊಂತಿಕೊಳ್ಳು; ಕಾಲು ತೊಂತಿದ ಹಾವು ಕಚ್ಚದೆ ಬಿಡದು)
enclave — ನಾ ಸುತ್ತುವರಿದ ಊರು (ಹೊರ ನಾಡಿನ ಊರುಗಳಿಂದ ಸುತ್ತುವರಿದಿರುವ ಊರು ನಮ್ಮದು)
enclose — ಕ್ರಿ ಅಳುರು (ಅಳುರಿದ ಬಿಸಿಲು),ಅಡೆ,ಕೆತ್ತು (ಹರಳು ಕೆತ್ತಿದ ಉಂಗುರ), ಒಳಗೊಳ್ಳು
enclosure — ನಾ ಅಡಕ,ಕೊಂಚೆ (ಮನೆಯ ಸುತ್ತ ಒಂದು ಕೊಂಚೆಯನ್ನು ಕಟ್ಟಿಸಿದ್ದಾರೆ)
encode — ಕ್ರಿ ಗುಟ್ಟುಬರೆ
encomium — ನಾ ದೊಡ್ಡ ಹೊಗಳಿಕೆ
encompass — ಕ್ರಿ ಸುತ್ತು (ಸುತ್ತುತ್ತಿರುವ ಕತ್ತಲೆ; ಬಸಿರೊಳಗೆ ಸುತ್ತಿಕೊಂಡಿರುವ ಮಾಸು; ಸುತ್ತುವರಿ), ಒಳಗೊಳ್ಳು
encounter — ಕ್ರಿ ಎದುರಿಸು, ಎದುರಾಗು (ದಾರಿಯಲ್ಲಿ ಅವರಿಬ್ಬರೂ ನಮಗೆ ಎದು ರಾದರು)
encouragement — ನಾ ಕಡಗು, ಹುರಿ (ಹುರಿದುಂಬು, ಹುರಿಗೂಡಿಸು, ಹುರಿ ಮಾಡು)
encroachment — ನಾ ಒತ್ತುವರಿ
encrust — ಕ್ರಿ ಹಕ್ಕಳೆ ಕಟ್ಟು
encumbrance — ನಾ ತಡೆ, ಹೊರೆ (ಸಾಲದ ಹೊರೆ)
encyclopedia — ನಾ ಅರಿವುಕಲೆತ
end — ನಾಕುಡಿ (ಕುಡಿಯುಲೆ), ಕಡೆ (ಕಡೆಗಣ್ಣು, ಕಡೆನೋಟ), ಸೆರಗು (ಸೀರೆಯ ಸೆರಗು, ಸೆರಗೊಡ್ಡಿ ಬೇಡು), ಚುಂಗು (ಸೀರೆಯ ಚುಂಗು), ಕೊನೆ (ಕೊನೆಗಾಣು; ಕೊಟ್ಟ ಕೊನೆ; ಕೊನೆಗಣ್ಣು; ಕೊನೆಮುಟ್ಟು; ಕೊನೆ ಗೊಳ್ಳು), ತುದಿ (ಕೆಲಸದ ತುದಿ; ತುದಿ ಗಾಣಿಸು; ತುದಿಮುಟ್ಟಿಸು; ತುತ್ತತುದಿ), ತೀರ್ಕಣೆ (ಕೆಲಸದ ತೀರ್ಕಣೆ), ನಿಲುಗಡೆ (ಮಳೆಯ ನಿಲುಗಡೆ), ಬೀಕಲು (ಏಳನೆಯ ದಿನ ಬೀಕಲಾಗುವ ಮೊದಲೆೀ ಬರಬೇಕು), ಕಳಿವು, ತವುಗೆ (ಹಬ್ಬದ ತವುಗೆ)
end — ಕ್ರಿ ಬೀಯು (ಮಳೆಗಾಲ ಬೀತಿತು), ಮುಡಿ (ಮುಡಿದ ಕಾಳಗ; ಮುಡಿಗೊಳ್ಳು),ಮುಗಿ (ಕೆಲಸ ಮುಗಿಯಿತು),ತೀರು (ತೀರಿದ ಬಯಕೆ; ತೀರಿದ ಜಗಳ; ತೀರುಗಡೆ), ತವು (ತವದ ಮೆಚ್ಚುಗೆ), ಅರು (ಅರಲ್ವೋಗು) ಕ್ರಿ ಕುತ್ತಕ್ಕೆ ಸಿಕ್ಕಿಸು
endeavour — ನಾ ಊಕ, ಎತ್ತುಗಡೆ
endodermis — ನಾಒಳತೊಗಟೆ
endorse — ಕ್ರಿ ಹಿಂಬರೆ
endorsement — ನಾಹಿಂಬರಹ, ಒಪ್ಪಿಗೆ, ಬೆಂಬಲ
endow — ಕ್ರಿ ಹಣ ಕೊಡು (ಈ ಶಾಲೆ ನಡೆಸಲು ಅವರು ಹಣ ಕೊಟ್ಟಿದ್ದಾರೆ)
endue — ಕ್ರಿ ಒದಗಿಸು (ಜಾಣ್ಮೆಯೊದಗಿಸು)
endurance — ನಾತಾಳಿಕೆ, ತಾಳ್ಮೆ
endure — ಕ್ರಿ ಆನು,ಉರಿಸು,ತಾಳು (ತಾಳಿ ಕೊಳ್ಳು)
enema — ನಾ ಗೊಳ್ಳೆತುಂಬಿಕೆ
enemy — ನಾಹಗೆ(ಹಗೆಗಾರ; ಹಗೆಯ), ಎದುರಿ
energy — ನಾಹುರುಪು (ತುಂಬಾ ಹುರುಪಿರುವ ಹುಡುಗ)
enervate — ಕ್ರಿ ಸೊಪ್ಪು, ಅಳವು ಕುಂದಿಸು
enfeeble — ಕ್ರಿ ಬಲ್ಮೆಗುಂದಿಸು
enfold — ಕ್ರಿ ಮಡಿಸು, ಮುಚ್ಚು
enforce — ಕ್ರಿ ಒತ್ತಾಯಿಸು, ಕಡ್ಡಾಯ ಮಾಡು
enfranchise — ಕ್ರಿ ಬಿಡುಗಡೆ ಮಾಡು, ಹಕ್ಕು ಕೊಡು
engage — ಕ್ರಿ (ಆ) ತೊಡಗು (ಬಂದೊಡನೆಯೇ ಕೆಲಸದಲ್ಲಿ ತೊಡಗಿದ), ಮಾತುಕೊಡು (ಮದುವೆಗೆ ಮಾತುಕೊಡು) (ಮಾ) ಗೊತ್ತು ಮಾಡು (ಕೆಲಸಕ್ಕೆ ಒಬ್ಬ ಆಳನ್ನು ಗೊತ್ತು ಮಾಡಿದ್ದೇನೆ)
engagement — ನಾ ಮಾತುಕೊಡುಗೆ, ಒಡಂ ಬಡಿಕೆ, ಒಪ್ಪಂದ, ಒಪ್ಪುಮಾತು
engender — ಕ್ರಿ 1 ಉಂಟುಮಾಡು, ಆಗಿಸು 2 ಹುಟ್ಟಿಸು
engine — ನಾ ಬಿಣಿಗೆ
engineer — ನಾ ಬಿಣಿಗೆಯರಿಗ
engorge — ಕ್ರಿ ಮುಕ್ಕು
engrave — ಕ್ರಿ ಕಂಡರಿಸು, ಕೆತ್ತು (ಬಡಗಿ ನೇಗಿಲು ಕೆತ್ತುತ್ತಿದ್ದಾನೆ), ಕೊರೆ
engraver — ನಾ ಕೆತ್ತುಗ
engross — ಕ್ರಿ ಮುಳುಗಿರು (ಆತ ಬೆಳಗ್ಗಿ ನಿಂದಲೂ ಓದಿನಲ್ಲಿ ಮುಳುಗಿದ್ದಾನೆ)
engulf — ಕ್ರಿ ನುಂಗಿಬಿಡು, ಸುತ್ತುವರಿ
enhance — ಕ್ರಿ ಹೆಚ್ಚಿಸು (ಆಳುಗಳು ಸಂಬಳ ಹೆಚ್ಚಿಸಬೇಕೆನ್ನುತ್ತಿದ್ದಾರೆ), ಬೆಳೆಸು
enigma — ನಾ ಒಗಟು, ಮುಂಡಿಗೆ (ಆತನಿಕ್ಕಿದ ಮುಂಡಿಗೆ ಬಿಡಿಸಲು ಯಾರಿಗೂ ಬಾರದು)
enjoin — ಕ್ರಿ ಹೊರಿಸು, ಹೇರು, ಕಟ್ಟಲೆಯಿಡು, ತಡೆ
enjoy — ಕ್ರಿ ನಲಿ, ಒಲೆದಾಡು, ಹಿಗ್ಗು
enlarge — ಕ್ರಿ ಹೆಚ್ಚಿಸು, ದೊಡ್ಡದು ಮಾಡು, ಹಿಗ್ಗಿಸು
enlighten — ಕ್ರಿ ತಿಳಿಸು, ಬೆಳಕು ಚೆಲ್ಲು, ಮುನ್ನೊಲವು ಕಳೆ
enlist — ಕ್ರಿ ಸೇರಿಸು, ಬೆಂಬಲ ಪಡೆ
enliven — ಕ್ರಿ ತುಮುಳು (ಊಟ ನೀಡಿದಾಗ ಆತನ ಕಣ್ಣು ತುಮುಳುತ್ತದೆ), ಎಲರಿಸು, ಕಳೆದುಂಬು
enmasse — ಗು ಒಟ್ಟುಗೂಡಿ (ಒಟ್ಟುಗೂಡಿ ವಲಸೆಹೋಗು)
enmesh — ಕ್ರಿ ಬಲೆಯೊಡ್ಡು, ಬಲೆಗೆ ಸಿಕ್ಕಿಬೀಳು ನಾಹಗೆ (ಹಗೆ ಮಾಡು; ಹಗೆ ತೀರಿಸು; ಹಗೆಸಾರು; ಹಗೆತನ),ಆರಡಿ (ಆರಡಿಗೊಳ್ಳು),ಕಡ್ಡ (ಅವರಿಬ್ಬರೊಳಗೆ ಕಡ್ಡ ಇದೆ)
ennoble — ಕ್ರಿ ಮೇಲೆತ್ತು, ಹಿರಿಮೆಗೊಳಿಸು
ennui — ನಾ ಬೇಸರ, ಬಳಲಿಕೆ
enormous — ಗು ತುಂಬಾ ದೊಡ್ಡ, ಎಣಿಸ ಲಾಗದ
enough — ಕ್ರಿ ಸಾಕು (ಸಾಕಾಗು, ಸಾಕು ಮಾಡು)
enquire — ಕ್ರಿ ಕೇಳು (ಅವರು ಎಲ್ಲಿಗೆ ಹೋಗಿ ದ್ದರೆಂದು ಕೇಳಿ), ತಿಳಿ, ಆರಯ್ಯು
enrage — ಕ್ರಿ ಕೆರಳಿಸು, ರೇಗಿಸು
enrapture — ಕ್ರಿ ತುಂಬಾ ಒಲಿಸು, ಮೆಚ್ಚಿಸು, ಮಯ್ಮರೆಸು
enrich — ಕ್ರಿ ಹಣವಂತನಾಗಿಸು, ಬೆಲೆ ಹೆಚ್ಚಿಸು
enrol — ಕ್ರಿ ಸೇರು (ನಿಮ್ಮ ಗುಂಪಿಗೆ ನಾನು ಸೇರುವುದಿಲ್ಲ)
ensconce — ಕ್ರಿ ನೆಲಸು, ಅಡಗಿರು
ensemble — ನಾ ಮೇಳ
ensign — ನಾ ನಾಡಗುಡಿ, ಕುಡಿ
enslave — ಕ್ರಿ ಅಡಿಯಾಳಾಗಿಸು, ತೊತ್ತು ಮಾಡು, ಉಡುಗಿಸು
ensnare — ಕ್ರಿ ಸಿಲುಕಿಸು (ಬೇಡ ಉರುಳಿಟ್ಟು ಜಿಂಕೆಯನ್ನು ಸಿಲುಕಿಸಿದ)
ensue — ಕ್ರಿ ಮುಂಬರು (ಮುಂಬರುವ ಕೂಟ), ಉಂಟಾಗು
ensure — ಕ್ರಿ ಕಂಡಿತಪಡಿಸು
entail — ಕ್ರಿ ಉಂಟಾಗು, ಒಳಗೊಳ್ಳು, ಒಳ ಪಡಿಸು,
entangle — ಕ್ರಿ ಸಿಕ್ಕು (ಬಲೆಗೆ ಸಿಕ್ಕಿದ ಹಕ್ಕಿ), ಸಿಲುಕು (ಗೂಡಿನಲ್ಲಿ ಸಿಲುಕಿದ ಹುಲಿ), ಗುಂಜು (ಗುಂಜಿಕೊಂಡಿರುವ ಕೂದಲು), ತೊಡರು (ತೊಡರುಗಾಲು), ತೊಡಕು (ಹುಲ್ಲೆಯ ಕೊಂಬು ಮರದ ಗೆಲ್ಲಿಗೆ ತೊಡಕಿಕೊಂಡಿದೆ)
entangled — ಗು ಗೋಜು (ನೂಲು ಗೋಜು ಗೋಜಾಗಿದೆ; ಗೋಜಲು)
enter — ಕ್ರಿ ತೂರು (ಇಲಿ ತೂತಿನೊಳಗೆ ತೂರಿಕೊಂಡಿದೆ), ಹೂಣು (ಹೂಣಿಹೋಗು - ಕಳ್ಳ ಗುಂಪಿನೊಳಗೆ ಹೂಣಿಹೋದ), ಹುದಿ (ತೂತಿನೊಳಗೆ ಹುದಿದ ಹಾವು), ಹುಗು, ಹೊಗು (ಹೊಕ್ಕು ತುಂಬುವ ಬಾವಿ; ಬೇಲಿಯನ್ನು ಹೊಕ್ಕ ಹಂದಿ), ಒಳಸೇರು (ಆತ ಮೆಲ್ಲಗೆ ಒಳಸೇರಿದ್ದಾನೆ)
enteric — ಗು ಕರುಳಿನ
enterprise — ನಾ ಎಸಕ, ನೆಗಳಿಕೆ, ಕೆಚ್ಚು, ಎದೆಗಾರಿಕೆ
entertain — ಕ್ರಿ 1 ಸೊಮ್ಮುಗೊಳಿಸು, ನಗಾ ಡಿಸು 2 ಎಡೆಗೊಡು, ಬಗೆ, ಓರು
enthrall — ಕ್ರಿ ಸೆಳೆಹಿಡಿ, ಸೂರೆಗೊಳ್ಳು
enthrone — ಕ್ರಿ ಗದ್ದುಗೆಗೇರಿಸು
enthusiasm — ನಾಹುರುಪು, ಸಡಗರ (ಸಡ ಗರಿಸು)
enthusiast — ನಾ ಹಿಂಬಾಲಕ, ಹುರುಪುಗ
entice — ಕ್ರಿ ಮರುಳುಮಾಡು, ಸೆಳೆ
entire — ಗು ಎಲ್ಲ, ಇಡೀ (ಇಡೀ ಮನೆಯನ್ನು ಗುಡಿಸಿ, ಉದ್ದಿ ಮಾಡುತ್ತಿದ್ದಾಳೆ)
entitle — ಕ್ರಿ ಹೆಸರಿಸು, ಹಕ್ಕು ಕೊಡು
entity — ನಾ ಇರವು, ಇರುಗ
entomb — ಕ್ರಿ ಹುಗಿ, ಹೂಳು
entomology — ನಾ ಪೂಚಿಯರಿಮೆ
entourage — ನಾ ಸುತ್ತುಮುತ್ತ ಇರುವವರು, ಹಿಂಬಾಲಕರು, ನೋಡಿಕೊಳ್ಳುವವರು ನಾಕರುಳು
entrain — ಕ್ರಿ ಬಂಡಿಯೇರು
entrance — ನಾ 1 ಬಾಗಿಲು 2 ಬರುವಿಕೆ, ಬರವು
entrance-door — ನಾ ತಲೆಬಾಗಿಲು
entrant — ನಾ ಬಂದವ, ಬರುಗ
entrap — ಕ್ರಿ ಸಿಲುಕಿಸು, ಮೋಸಮಾಡು
entreat — ಕ್ರಿ ಅಂಗಲು (ಅಂಗಲಾಚು), ಬೇಡು, ಮೊರೆಯಿಡು
entreaty — ನಾ ಎರಕೆ, ಇಮ್ಮೊರೆ
entrench — ಕ್ರಿ 1 ಕಂದಕ ತೋಡು 2 ನೆಲೆಸು
entrust — ಕ್ರಿ ಒಪ್ಪಿಸು (ಮನೆಯ ಪಾರುಪತ್ಯ ವನ್ನೆಲ್ಲ ಮಗನಿಗೆ ಒಪ್ಪಿಸಿ ಕಾµಗೆ ಹೋಗಿ ದ್ದಾನೆ), ನಂಬಿ ಕೊಡು
entry — ನಾ ಪುಗಿಲು (ಇಲ್ಲಿ ಯಾರಿಗೂ ಪುಗಿಲಿಲ್ಲ),ಹೊಗುತೆ (ಆತನ ಹೊಗುತೆ ಯನ್ನು ಯಾರೂ ಗಮನಿಸಲಿಲ್ಲ), ಸಲಂಡು, ಸಲವು
entwine — ಕ್ರಿ ಹೆಣೆದುಕೊಳ್ಳು, ಸುತ್ತಿಕೊಳ್ಳು
enumerate — ಕ್ರಿ ಎಣಿಸು (ಎಶ್ಟಿದೆಯೆಂದು ಎಣಿಸಿ ಹೇಳು)
enumeration — ನಾಎಣಿಕೆ (ಮರಗಳ ಎಣಿಕೆ ಮುಗಿದಿಲ್ಲ)
enumerator — ನಾಎಣಿಕೆಗಾರ
enunciate — ಕ್ರಿ ಸಾರಿಹೇಳು, ಬಿಡಿಸಿಹೇಳು, ಮನದಟ್ಟುಮಾಡು
envelop — ಕ್ರಿ ಮುಚ್ಚು, ಹೊದಿಸು, ಸುತ್ತು
envelope — ನಾಹೊದಿಕೆ (ಈ ಎಲ್ಲ ಸುತ್ತೋಲೆಗಳನ್ನು ಹೊದಿಕೆಯೊಳಗಿರಿಸಿ ಇವತ್ತೇ ಅಂಚೆಮನೆಗೆ ಕಳುಹಿಸಬೇಕು)
envenom — ಕ್ರಿ ನಂಜಿಡು, ನಂಜುಹಾಕು
enviable — ಗು ಕರುಬಿಸಬಲ್ಲ, ಬಯಸುವ
envious man — ನಾಕರುಬ,ಕುದಿಕ (ಕುದಿಕ ತನ)
envious — ಗು ಕರುಬಿನ, ಹುರುಡಿನ (ಹುರು ಡಿನ ಮಾತು)
environment — ನಾ ಸುತ್ತುಮುತ್ತು, ನೆರೆಕರೆ
envisage — ಕ್ರಿ ಒಳಗಣ್ಣಿನಿಂದ ಕಾಣು, ಎದುರುನೋಡು
envoy — ನಾ ಮಾರಾಳು, ಓಲೆಕಾರ
envy — ನಾ ಅಕ್ಕಜ (ಅಕ್ಕಜದ ಮಾತು), ಕೇಣ (ಕೇಣಗೊಳ್ಳು; ಕೇಣಕಾರ), ಹೊಟ್ಟೆಕಿಚ್ಚು (ಹೊಟ್ಟೆಕಿಚ್ಚು ಮಾಡು), ಹೊಟ್ಟೆಉರಿ, ಹೂಜೆ (ಹೂಜೆ ಹೆಂಗಸು; ಹೂಜೆಗ),ಪುರುಡು (ಪುರುಡು ತೋರು; ಪುರುಡು ಮಾತು; ಪುರುಡಿಸು; ಪುರುಡು ಬೆರೆಸಿದ ಕೊಂಕು), ಕುದಿಕತನ
envy — ಕ್ರಿ ಸೆಣಸು (ಅಶ್ಟು ಒಳ್ಳೆಯವನನ್ನೂ ಸೆಣಸುವವರಿದ್ದಾರೆ), ಕರುಬು (ಕರುಬಿ ತೆಗಳುವವರು; ಕರುಬುತನ; ಕರುಬ - ಅವನಂತಹ ಕರುಬನನ್ನು ನಾನು ಇದುವರೆಗೆ ಕಂಡಿಲ್ಲ)
ephemeral — ಗು ಹೆಚ್ಚುಕಾಲ ಬಾಳದ, ನೆಲೆಗೊಳ್ಳದ
epic — ನಾ ಪೆರ್ಬರಹ
epicure — ನಾ ತೀನಿಯರಿಗ
epidemic — ನಾ ಸೋಂಕುಬೇನೆ (ಸೋಂಕು ಬೇನೆಯಿಂದ ಹಲವು ಮಂದಿ ಸತ್ತರು), ಅಂಟುಬೇನೆ
epidermis — ನಾ ಮೇಲ್ತೊಗಲು
epiglottis — ನಾಕಿರುನಾಲಿಗೆ
epigram — ನಾ ನಾಟುನುಡಿ
epilepsy — ನಾ ಬೆರಗು
epilogue — ನಾ ಕಡೆನುಡಿ, ಹಿನ್ನುಡಿ ನಾಅಡ್ಡಕತೆ
epistle — ನಾ ಓಲೆ
epitaph — ನಾ ಗೋರಿಬರಹ
epithet — ನಾ ಅಡ್ಡಹೆಸರು
epitome — ನಾ ತಿರುಳು, ಅಡಕ
epoch — ನಾ ಮೇಲ್ಕಾಲ
equal — ನಾ ಸಾಟಿ (ಸಾಟಿಮಾಡು; ಅವನಿಗೆ ಸಾಟಿ ಯಾರೂ ಇಲ್ಲ), ಈಡು (ಅವನಿಗೆ ನೀನು ಈಡಲ್ಲ; ಈಡು ಮಾಡು), ಎಣೆ (ಅವನಿಗೆ ಎಣೆ ಯಾರು?), ತೋಡು (ಹಕ್ಕಿ ಗಳೆರಡು ಕೂಡಿ ತೋಡಾದುವು), ದೊರೆ (ದೊರೆಗೆಡಿಸು; ದೊರೆಗೆ ಬರು), ಸರಿ (ಈ ಬಿಸಿಲು ಆ ಉರಿಗೆ ಸರಿ; ಸರಿಗ), ತೊಣೆ (ಅವನ ತೊಣೆಗೆ ಯಾರೂ ಇಲ್ಲ), ಒರೆ (ಈತನ ಒರೆಗೆ ಬರುವವರು ಯಾರಿ ದ್ದಾರೆ?), ಒಗರೆ
equal — ಕ್ರಿ ಎಣೆಗೊಳ್ಳು (ಬಿಸಿಲನ್ನು ಎಣೆ ಗೊಂಡ ಬೆಳಕು), ಒರೆಗಟ್ಟು
equal share — ನಾಪಂಪ
equality — ನಾ ಓರೆ (ಓರಗೆ; ಓರಗೆಯವರು), ದೀಟು,ಗಡೆ, ದೊರತೆ (ದೊರತೆ ಮಾಡು), ಸರಿಕತನ
equalize — ಕ್ರಿ ಸರಿಮಾಡು
equanimity — ನಾ ನೆಮ್ಮದಿ, ಹದುಳ
equator — ನಾ ನೆಲನಡುವಿನ ಗೆರೆ
equerry — ನಾ ಮಯ್ಗಾವಲು
equestrian — ಗು ಕುದುರೆಯರಿವಿನ
equidistant — ಗು ಸರಿದೂರದ
equilateral — ನಾ ಸರಿಬದಿಯುಳ್ಳ
equilibrium — ನಾ ಸರಿನೆಲೆ
equine — ಗು ಕುದುರೆಯ, ಕುದುರೆಯಂತಹ
equip — ಕ್ರಿ ಅಣಿಮಾಡು, ಒದಗಿಸು (ಅವನಿಗೆ ಬೇಕಾದುದನ್ನೆಲ್ಲ ಒದಗಿಸಲಾಗಿದೆ)
equipment — ನಾ ಒದಗಿಕೆ, ಒದಗುಗೆ
equitable — ಗು ನೇರ್ಮೆಯ, ನಡುನೆಲೆಯ
equity — ನಾ ನೇರ್ಮೆ
equivalent — ಗು ಸಾಟಿಯಾದ, ಸರಿಯಾದ
equivocal — ಗು ಹದಿರು (ಹದಿರು ಮಾತು)
eradicate — ಕ್ರಿ ತೊಡೆದುಹಾಕು
erase — ಕ್ರಿ ಅಳಿಸು (ಬರೆದುದನ್ನು ಅಳಿಸಿ ತಿರುಗ ಬರೆ; ಅಳಿಸಿಹಾಕು; ಅಳಿಕಿಸು), ಉಜ್ಜು (ಹಣೆಯಲ್ಲಿ ಬರೆದುದನ್ನು ಉಜ್ಜಲಾರೆವು), ಕಿರುಕು (ಗೋಡೆಯ ಮೇಲೆ ಬರೆದುದನ್ನು ಕಿರುಕಿ ತೆಗೆ), ತೊಡೆ, ತೆವರು
erect — ಕ್ರಿ ನೆಟ್ಟಗೆ ನಿಲ್ಲಿಸು, ನಿಗುರಿಸು
erect — ಗು ನೆಟ್ಟಗಿನ (ನೆಟ್ಟಗಿನ ಕೋಲು), ನೇರ (ನೇರನಿಲ್ಲು; ನೇರಕುಂದ)
erode — ಕ್ರಿ ಸವೆ (ಸವೆದ ಕತ್ತಿ), ತಳೆ
erosion — ನಾಸವೆತ (ಹೊಳೆಯ ದಂಡೆಯ ಸವೆತ)
err — ಕ್ರಿ ತಪ್ಪು (ಗುರಿತಪ್ಪು; ಎಚ್ಚರತಪ್ಪು), ದಾರಿತಪ್ಪು
errand — ನಾ ಅಟ್ಟಾಟಿಕೆ (ಅವನನ್ನೊಂದು ಅಟ್ಟಾಟಿಕೆಯ ಮೇಲೆ ದೂರ ಕಳಿಸಿದ್ದೇವೆ), ಒಸಗೆ
erratum — ನಾತಪೊ್ಪೀಲೆ (ಕೊನೆಯಲ್ಲೊಂದು ತಪೊ್ಪೀಲೆಯಿದೆ)
erroneous — ಗು ತಪ್ಪಾದ, ತಪ್ಪಿದ ನಾ ತಪ್ಪು (ತಪ್ಪು ಹೆಜ್ಜೆ, ತಪ್ಪು ಕೆಲಸ; ತಪ್ಪಿತ, ತಪ್ಪುಮಾಡು)
erstwhile — ಗು ಮೊದಲಿನ, ಹಿಂದಿನ
eruct — ಕ್ರಿ ತೇಗು
erudition — ನಾಕಲಿತ, ಕಲ್ಪಿ (ಕಲಿಯ ದಿದ್ದರೂ ಆತನಲ್ಲಿ ಕಲ್ಪಿಯಿದೆ),ಬಲ್ಲತನ
erupt — ಕ್ರಿ ಹೊರಚಿಮ್ಮು
escalator — ನಾ ಏರಿಳಿ (ಏರಿಳಿ ಮೆಟ್ಟಲುಗಳು)
escape — ನಾ ಪಾರು (ಪಾರಾಗು; ಪಾರು ಮಾಡು; ಪಾರುಗಾಣು), ತಪ್ಪಿಸಿಕೊಳ್ಳು, ಸಳ್ಳು (ಸಳ್ಳುವರಿ)
escarpment — ನಾ ಬೆಟ್ಟದ ಇಳಿಜಾರು
eschew — ಕ್ರಿ ತೊರೆ, ದೂರ ಇರು
escort — ನಾಬೆಂಗಾವಲು, ಮಯ್ಗಾವಲು (ಮಯ್ಗಾವಲಿಗೆ ನೂರು ಮಂದಿ ಬಿಲ್ಲಾಳುಗ ಳಿದ್ದರು),
esoteric — ಗು ಗುಟ್ಟಾದ, ಗುಟ್ಟಿನ
espionage — ನಾ ಬೇಹುಗಾರಿಕೆ, ಬೇಗುಗಾರಿಕೆ
esplanade — ನಾ ಬಯಲು, ಅಗಲ ಹಾದಿ
espouse — ಕ್ರಿ 1 ಬೆಂಬಲಿಸು 2 ಮದುವೆ ಯಾಗು
espy — ಕ್ರಿ ಕಾಣು, ಬೇಹುಮಾಡು
essay — ನಾ 1 ಪೂನು 2 ಕಿರುಬರಹ
essence — ನಾ ಸೊಗಡು (ಆಡುನುಡಿಯ ಸೊಗಡು), ಉಳುಪು, ಚೇಗು (ಗಿಡದಲ್ಲಿರುವ ಚೇಗು), ಹೊಲಬು (ಅವನ ಮಾತಿನ ಹೊಲಬು ತಿಳಿಯುವುದಿಲ್ಲ),ಕೆಚ್ಚು (ಮರದ ಕೆಚ್ಚು; ಕೆಚ್ಚುಗಟ್ಟು),ತಿರುಳು (ತಿರುಳ್ನುಡಿ), ಕಟ್ಟಾಯ (ಕಟ್ಟಾಯದ ನುಡಿ)
essential — ಗು ಬೇಕಾಗಿರುವ, ಅರಿದು (ಅರಿ ದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿದ)
establish — ಕ್ರಿ ನೆಲೆಗೊಳ್ಳು (ನಾವಿನ್ನೂ ಇಲ್ಲಿ ನೆಲೆಗೊಂಡಿಲ್ಲ), ನೆಲೆಯಾಗು, ಬೇರೂರು, ನೆಲಸು (ಬೇರೆ ಊರಿನಿಂದ ಇಲ್ಲಿ ಬಂದು ನೆಲಸಿದವರೆಲ್ಲ ತುಂಬಾ ಹಣವಂತರಾಗಿ ದ್ದಾರೆ), ಇಕ್ಕೆಗೊಳ್ಳು
establishment — ನಾ ನೆಲಸಿಕೆ, ನೆಲೆ, ನೆಲೆ ಗಟ್ಟು
estate — ನಾ ನೆಲಸೊಮ್ಮು
esteem — ನಾ ಮದಿಪು, ಅಡ್ಡಿ
estimate — ಕ್ರಿ 1 ಬೆಲೆಕಟ್ಟು, ಎಣಿಸು 2 ತೀರ್ಮಾನಿಸು (ಅವನ ಅರಿವು ಎಂತಹ ದೆಂಬುದನ್ನು ನಾನು ತೀರ್ಮಾನಿಸಿದ್ದೇನೆ)
estrange — ಕ್ರಿ ಅಗಲಿಸು, ದೂರಮಾಡು, ಕೆಳೆಗೆಡು
estuary — ನಾ ಅಳಿವೆ
etch — ಕ್ರಿ 1 ಕೆತ್ತು, ಕೊರೆ 2 ಅಚ್ಚೊತ್ತು
eternal — ಗು ಮುಗಿಯದ, ಮಾರ್ಪಡದ, ನೆಲೆ ನಿಂತ
ether — ನಾ 1 ಮೇಲ್ಬನು 2 ಎಚ್ಚರಳಿಕೆ
ethical — ಗು ಒಳ್ತನದ
ethics — ನಾ ಒಳ್ತನದರಿಮೆ
ethnology — ನಾ ನಾಡರಿಮೆ
etiquette — ನಾ ಒಳ್ಳೆ ನಡತೆ, ಕಟ್ಟುಪಾಡು
etymology — ನಾ ಪದದ ಹಿನ್ನೆಲೆ
eulogize — ಕ್ರಿ ತುಂಬಾ ಹೊಗಳು
eunuch — ನಾ ಆಣ (ಆಣನಿಗೆ ಮದುವೆ ಯಾಕೆ?), ಹೆಣ್ಣಿಗ (ಹೆಣ್ಣಿಗತನ)
euphemism — ನಾ ಸಿಹಿನುಡಿ (ಕೆಟ್ಟದ್ದನ್ನು ಹೇಳುವುದಿದ್ದರೂ ಸಿಹಿನುಡಿಯಲ್ಲೀ ಹೇಳಿ), ಬಳಸುನುಡಿ ನಾ ಹೊಂದಿಕೆಯ ಸೊಲ್ಲು, ಪೊರ್ದುನುಡಿ
euphoria — ನಾ ಪದಪು ಹೆಚ್ಚುಗೆ
euthanasia — ನಾ ಕೋರೆಕೆಯ ಸಾವು, ಕೋರೊಗೆತ
evacuate — ಕ್ರಿ ಬರಿದು ಮಾಡು, ಹೊರಹಾಕು, ಹೊರ ಒಯ್ಯು
evade — ಕ್ರಿ ತಪ್ಪಿಸಿಕೊಳ್ಳು, ಪಾರಾಗು
evaluate — ಕ್ರಿ ಬೆಲೆಕಟ್ಟು
evanescent — ಗು ಮಾಸುವ, ಬಾಳಿಕೆ ಬಾರದ, ಮರೆಯಾಗುವ
evaporate — ಕ್ರಿ ಸುಂಡು (ಸುಂಡಿಹೋಗು), ಇಮರು (ಉಪ್ಪುನೀರು ಕುದಿಕುದಿದು ನೀರು ಇಮರಿ ಉಪ್ಪು ಉಳಿದಿದೆ), ಇಗರು (ಇಗರಿದ ಹೊಳೆ), ಇಂಗು (ಮಳೆಯ ನೀರೆಲ್ಲ ಒಡನೆಯೇ ಇಂಗಿಹೋಲಿುತು), ಅಂಟರಿಸು, ಅಟ್ಟು (ಬಿಸಿಲಿಗೆ ಬಾವಿಯ ನೀರು ಅಟ್ಟಿಹೋಗಿದೆ)
evasive word — ನಾ ಎಡೆಮಾತು
even — ಗು 1 ಸಸಿನ (ಸಸಿನವಾಗು),ಮಟ್ಟಣೆ (ಮಟ್ಟಣೆ ಮಾಡು, ಮಟ್ಟಣೆ ಹಾಕು) 2 ಸರಿ (ಸರಿ ಎಣಿಕೆ; ಸರಿ-ಮುಗುಳಿ)
evening — ಗು ಬೈ- (ಬಯ್ತನಕ; ಬಯ್ಗು - ಹೊತ್ತು ಬಯ್ಗಾಗುವಾಗ ಹೊರಟ; ಬಯ್ಗು; ಬಯ್ಸಾರೆ - ಬಯ್ಸಾರೆ ಬರುವವರು ಈಗಲೇ ಬಂದಿದ್ದಾರೆ),ಇಳಿಹೊತ್ತು,ಕಡೆಹಗಲು
event — ನಾ ಆಗುಹ (ಅಲ್ಲಿ ನಡೆದ ಆಗುಹದ ಕುರಿತು ಅವರೇನು ಹೇಳುತ್ತಾರೆ?), ನೆಗಳ್ತೆ
eventual — ಗು ಕೊನೆಯಲ್ಲಿ ಆಗುವ, ಕಟ್ಟ ಕಡೆಯ
everlasting — ಗು ಮುಗಿಯದ, ಕೊನೆ ಯಿಲ್ಲದ
evict — ಕ್ರಿ ಹೊರಹಾಕು (ತೊಂದರೆ ಕೊಟ್ಟರೆ ಹೊರಹಾಕುತ್ತಾರೆ), ಹೊರದಬ್ಬು, ಒಕ್ಕ ಲೆಬ್ಬಿಸು
evidence — ನಾ 1 ಗುರುತು 2 ಕಂಡವರು (ಅವನ ಕೊಲೆಗೆ ಕಂಡವರು ಯಾರೂ ಇರಲಿಲ್ಲ), ನಿಂದರಿಕೆ
evident — ಗು ಸುಳುವಾಗಿ ತಿಳಿಯುವ, ತೆಳು ವಾದ
evil — ನಾ ಕೇಡು(ಯಾರಿಗೂ ಕೇಡು ಬಗೆಯ ದವನು; ಕೆಡುಕು)
evince — ಕ್ರಿ ತೋರಿಸು, ನನ್ನಿಗೆಯ್ಯು
evoke — ಕ್ರಿ ಕರೆ, ಎಬ್ಬಿಸು, ಪಸಿಲಿುಸು
evolution — ನಾ ಬಿಚ್ಚಿಕೊಳ್ಳುವುದು, ಬೆಳ ವಣಿಗೆ
evolve — ಕ್ರಿ ಹಂತ ಹಂತವಾಗಿ ಬೆಳೆ, ಬಿಚ್ಚಿ ಕೊಳ್ಳು
ewe — ನಾ ಹೆಣ್ಣುಕುರಿ
exacerbate — ಕ್ರಿ ಕೆರಳಿಸು, ಹೆಚ್ಚಿಸು (ನಿಮ್ಮ ಮದ್ದಿನಿಂದ ಆತನ ನೋವು ಹೆಚ್ಚಿದೆ)
exact — ಗು ಸರಿಯಾದ, ಹಾಳಿತಗೆಡದ, ಕಟ್ಟು ನಿಟ್ಟಾದ
exactly — ಗು ಒಯ್ಕನೆ, ಸಸಿನೆ (ಸಸಿನೆ ಮಾಡಿದ ಕೆಲಸ)
exaggerate — ಕ್ರಿ ತುಂಬ ದೊಡ್ಡದು ಮಾಡು
exalt — ಕ್ರಿ ಹೊಗಳು (ಹೊಗಳಿ ಅಟ್ಟಕ್ಕೇರಿಸು), ಮೇಲೇರಿಸು
exaltation — ನಾ ಪೆಂಪು, ಹೆಚ್ಚಳ
examination — ನಾ ಒರೆತ
examine — ಕ್ರಿ ಕಣ್ಣರಸು, ಸರಿನೋಡು, ಒರೆ (ಒರೆದು ನೋಡು), ಕಾಲ್ಗುತ್ತು (ಕಾಲ್ಗುತ್ತಿ ನೋಡು), ಚೂಚಿಸು, ಹುಡುಕು
examiner — ನಾ ಒರೆಗ (ಒರೆಗರು ಹೆಚ್ಚು ಹಣ ಕೇಳುತ್ತಿದ್ದಾರೆ)
example — ನಾ ಎತ್ತುಗೆ (ಆತನ ಕೆಲಸ ಏನೂ ಚನ್ನಾಗಿಲ್ಲ ಎಂಬುದಕ್ಕೆ ಎತ್ತುಗೆ ಇಲ್ಲಿದೆ)
exasperate — ಕ್ರಿ ಕೆರಳಿಸು, ಕೆಣಕು, ರೇಗಿಸು
excavate — ಕ್ರಿ ಅಗೆದು ತೆಗೆ, ತೋಡು
exceed — ಕ್ರಿ ಮಿಗು (ಉಂಡು ಮಿಕ್ಕುದು), ಎಲ್ಲೆದಾಟು, ಅಳವಿದಪ್ಪು, ಕಯ್ಮೀರು (ಎಲ್ಲ ಕಯ್ಮೀರಿ ಹೋಯಿತು), ಮಿಂಚು (ಕಯ್ಮಿಂಚು) ನಾ ಕಳಿಹ
exceedingly — ಗು ತವೆ, ಮಿಗೆ (ಮಿಗೆ ನುಡಿಯಬಲ್ಲವನು)
excel — ಕ್ರಿ ಮಿಂಚು, ಮಿಗು, ಮೀರು (ಆತ ಎಲ್ಲರನ್ನೂ ಮೀರಿ ನಿಂತಿದ್ದಾನೆ)
excellence — ನಾಮಿಗಿಲು (ನೂರ್ಮಡಿ ಮಿಗಿ ಲಾಯಿತು), ಮೇಟಿ, ಮೇಲ್ಮೆ
excellent — ಗು ಅಣ್ಣೆ (ಅಣ್ಣೆ ಹಾಲು), ಉರುವ, ಆಣಿ (ಆಣಿಮುತ್ತು), ಮೇಲ್ಮೆಯ
except — ಕ್ರಿ ಹೊರತುಪಡಿಸು, ಹೊರಗಿಡು, ಬಿಡು (ಒಬ್ಬರನ್ನು ಬಿಟ್ಟು ಬೇರೆಲ್ಲರೂ ನಮ್ಮೊಂದಿಗೆ ಬಂದಿದ್ದರು)
except — ಗು ಹೊರತು (ಈ ಮಾತು ಹೊರತು ಬೇರೇನಾದರೂ ಹೇಳಿ), ಬಿಟ್ಟು (ಅದನ್ನು ಬಿಟ್ಟುಬೇರೆ ಏನನ್ನು ಬೇಕಿದ್ದರೂ ಕೇಳಿ, ಕೊಡುತ್ತೇನೆ)
exception — ನಾ 1 ಹೊರತುಪಡಿಕೆ, ಹೊರ ತಾದುದು 2 ಅಡ್ಡಿ
excerpt — ನಾ ಆಯ್ದ ತುಣುಕು, ಆಯ್ದ ತುಂಡು
excess — ನಾ ಮಿಗಿಲು (ಮಿಗಿಲಾಗು), ಉರುಬೆ, ಆಸುರ (ಆಸುರದ ಕಬ್ಬೊಗೆ), ದುಂದು (ದುಂದುಗಾರ), ಮಿಕ್ಕಡ, ಮಸಕ (ಮಸಕ ಗೊಳ್ಳು; ಮಸಗು)
excessive — ಗು ಕಳಿಹ,ಕೆನ್ನ
excessively — ಗು ನಾಡೆ (ನಾಡೆ ಕೆಡಿಸಿದ ನಾಡು), ತೆಕ್ಕನೆ (ತೆಕ್ಕ ತೆಕ್ಕನೆ; ತೆಕ್ಕನೆ ಕುದಿ), ಮಮ್ಮಲ (ಮಮ್ಮಲ ಮರುಗು)
exchange — ನಾತಿರು,ಮಾರ್ಪು, ಕೊಡುಕೊಳೆ, ಅದಲುಬದಲು
exchequer — ನಾ ಬೊಕ್ಕಸ
excise — ನಾ ತೆರಿಗೆ
excite — ಕ್ರಿ ಪಸಿಯಿಸು (ಆತ ಚೆಚ್ಚರವಾಗಿ ಪಸಿಯಿಸುತ್ತಾನೆ)
excitedly — ಗು ಅರವುರನೆ (ಆತನನ್ನು ಅರವುರನೆ ಎಬ್ಬಿಸಿದರು)
exclaim — ಕ್ರಿ ಬೆರಗಾಗಿ ಕೂಗು, ಬೊಬ್ಬಿರಿ
exclude — ಕ್ರಿ ಹೊರಗಿಡು, ಬಿಡು (ನಿಮ್ಮನ್ನು ಬಿಟ್ಟು ಉಳಿದವರನ್ನು ಕಳಿಸುತ್ತೇನೆ), ಹೊರತುಪಡಿಸು (ಅವನನ್ನು ಹೊರತುಪಡಿಸಿ ಬೇರೆಲ್ಲರನ್ನೂ ಕರೆದಿದ್ದರು)
exclusive — ಗು ಮೀಸಲಾದ
excommunicate — ಕ್ರಿ ಹೊರಹಾಕು
excoriate — ಕ್ರಿ ಬಿಚ್ಚನೆ ಹಳಿ
excrete — ಕ್ರಿ ಹೊರತಳ್ಳು (ಮಯ್ಯಿಂದ ಹೊರ ತಳ್ಳು)
excruciating — ಗು ತುಂಬಾ ನೋಯುವ, ತಳಮಳಗೊಳಿಸುವ
exculpate — ಕ್ರಿ ತಪ್ಪಿಲ್ಲವೆನ್ನು
excursion — ನಾ ನಡೆಪಾಡು (ನಾವೆಲ್ಲ ಪಡು ಬೆಟ್ಟಕ್ಕೆ ನಡೆಪಾಡು ಹೋಗಿದ್ದೆವು)
excuse — ನಾ ನೆವ, ಸಾಕು (ಅಲ್ಲಿಗೆ ಹೋಗಲು ಅವನಿಗೊಂದು ಸಾಕು ಬೇಕಾಗಿತ್ತು), ಹೆಳೆ
excuse — ಕ್ರಿ 1 ತಾಳು, ತಾಳ್ಮೆ ತೋರು 2 ತಪೊ್ಪಪ್ಪಿಕೊಳ್ಳು
execrate — ಕ್ರಿ ಹೀಗಳೆ, ಹೇಸು
execute — ಕ್ರಿ 1 ಎಸಗು, ಪೊದಳ್ಚು 2 ಗಲ್ಲಿಗೇರಿಸು
executive — ನಾ ನೆಗಳ್ಚುಗ, ಎಸಗುಗ
exemplary — ಗು 1 ಹಿಂಬಾಲಿಸತಕ್ಕ 2 ಎಚ್ಚರಿಸುವ
exemplify — ಕ್ರಿ ಎತ್ತುಗೆ ಕೊಡು
exemption — ನಾ ಬಿಡುತೆ (ಬಿಡುತೆ ಕೊಡು; ಹಣ ಕೊಡುವ ಮಟ್ಟಿಗೆ ಆತನಿಗೆ ಬಿಡುತೆ ಸಿಕ್ಕಿದೆ)
exercise — ಕ್ರಿ 1 ಮಯ್ಪಳಗಿಸು 2 ಬಳಸು 3 ಕಯ್ಗಯ್ಯು ಕ್ರಿ ಹೂಣಿಸು (ಆತ ಮೇಲೇಳಲು ಹೂಣಿಸುತ್ತಿದ್ದಾನೆ)
exertion — ನಾ ಹೂಣಿಕೆ (ಹೂಣಿಕೆಯಿಂದ ಓದುತ್ತಿದ್ದಾನೆ)
exhale — ಕ್ರಿ ಉಸಿರು ಬಿಡು
exhaust — ಕ್ರಿ 1 ಬಳಲು (ಬಾವಿಲಿುಂದ ನೀರೆಳೆದು ಬಳಲಿದ), ದಣಿ 2 ಮುಗಿಸು, ಬರಿದು ಮಾಡು
exhibit — ಕ್ರಿ ಮಸಗು (ತರತರದ ಉಡುಗೆ ತೊಡುಗೆಗಳನ್ನು ಅಲ್ಲಿ ಮಸಗಿದ್ದರು), ಹರಡು
exhibition — ನಾ ಕಾಣ್ಪು (ಉಡುಪುಗಳ ಕಾಣ್ಪು), ಸೂಸಿಕೆ
exhilarate — ಕ್ರಿ ಗೆಲುವಾಗಿಸು, ಹದುಳಿಸು
exhort — ಕ್ರಿ ಒತ್ತಾಯಿಸು, ಹುರಿದುಂಬಿಸು, ಅಂಗಲಾಚು, ಮೊರೆಯಿಡು
exhume — ಕ್ರಿ ಹೊರತೆಗೆ (ಹೂತ ಹೆಣವನ್ನು ಹೊರತೆಗೆಯಬೇಕಾಯಿತು)
exigency — ನಾ ಕದುಬು, ಒತ್ತಂಬರ
exiguous — ಗು ತುಂಬಾ ಚಿಕ್ಕ, ಕಿರು
exile — ಕ್ರಿ ಗಡಿಪಾರು ಮಾಡು, ಹೊರಹಾಕು, ಹೊರದೂಡು
exist — ಕ್ರಿ ಇರು (ಕಡವನೆಂಬವನು ಇದ್ದಾ ನೆಂಬುದನ್ನು ಅವನು ನಂಬುವುದಿಲ್ಲ), ಬದುಕಿರು (ಅವನು ಅಲ್ಲಲ್ಲೂೀ ದೂರದ ಊರಿನಲ್ಲಿ ಬದುಕಿದ್ದಾನೆ), ಉಳಿ
existence — ನಾಇರುಹ, ಇರವು,ಉಣ್ಮೆ, ನಿಲವು
exit — ನಾ ಹೋಬಳು, ಹೋಕೆ
exodus — ನಾ ಗುಳೆ (ಎಲ್ಲರೂ ಒಟ್ಟಾಗಿ ಗುಳೆ ಹೋದರು)
exonerate — ಕ್ರಿ ಬಿಡುಗಡೆ ಮಾಡು, ತಪ್ಪಿಲ್ಲ ವೆಂದು ಸಾರು
exorbitant — ಗು ತುಂಬಾ, ಮಟ್ಟು ಮೀರಿದ
exorcise — ಕ್ರಿ ಗಾಳಿಗ ಬಿಡಿಸು
exotic — ಗು ಮರುಳು ಮಾಡುವ, ಹೊರ ನಾಡಿನ
expand — ಕ್ರಿ ನಿಗುಳು,ಮಸಗು,ಕಿಸಿ (ಬಾಲಿು ಕಿಸಿದ), ಹಿಗ್ಗಿಸು
expanse — ನಾ ಹರವು, ತೆರಪು
expansion — ನಾ ಇಂಬ, ಹಬ್ಬುಗೆ
expatiate — ಕ್ರಿ ಕೊಗೆದು ಹೇಳು, ಕೊಗೆದು ಬರೆ
expatriate — ಕ್ರಿ ಗಡಿಪಾರು ಮಾಡು, ಹೊರ ಹಾಕು, ಗುಳೆಹೋಗು
expect — ಕ್ರಿ ಎದುರುನೋಡು, ಕಾದಿರು, ಹಾರಯ್ಸು, ನಿಲುಕು (ನಿಲುಕಿ ನಿಲುಕಿ ದಾರಿ ಕಾಣದಾದನು), ಹಾರು
expectant — ಗು 1 ಕಾದಿರುವ, 2 ಹೆರಿಗೆ ಯಾಗಲಿರುವ
expectorate — ಕ್ರಿ ಕೆಮ್ಮಿ ತುಪ್ಪು, ಉಗಿ
expedient — ಗು ಒತ್ತಾಸೆಯಾಗುವ, ಕೆಲಸಕ್ಕೆ ಬರುವ
expedite — ಕ್ರಿ ಉರುಬು ಹೆಚ್ಚಿಸು
expedition — ನಾ ನಡೆಪಾಡು, ಪಡೆನಡೆ
expeditiously — ಗು ಒಡನೆಯೇ, ತಕ್ಕ ಹೊತ್ತಿನಲ್ಲಿ
expel — ಕ್ರಿ ಎಸು (ತರಗತಿಯಿಂದ ಎಚ್ಚ ಹುಡು ಗರು), ಹೊರಹಾಕು, ಹೊರದೂಡು
expend — ಕ್ರಿ ಬಳಸಿ ಮುಗಿಸು, ವೆಚ್ಚಮಾಡು
expenditure — ನಾ ಬಳಸಿದ ಹಣ, ಬಳಸಿದ ಹೊತ್ತು
expense — ನಾ ಮುಟ್ಟುವಳಿ (ಈ ತಿಂಗಳ ಮುಟ್ಟುವಳಿ ಎಶಾ್ಟಗಿದೆ?), ವೆಚ್ಚ, ತೀರುಕಣೆ
expensive — ಗು ಬೆಲೆಬಾಳುವ, ಹೆಚ್ಚಿನ ಬೆಲೆಯ ನಾ ಪಾಡು, ಪಾಟು, ತಾಳುಗೆ 2 ತಿಳುವಳಿಕೆ
experience — ಕ್ರಿ ಪಡು (ನಾನು ಪಟ್ಟ ಪಾಡು; ತಿನ್ನಲ್ಪಡು; ಒಡೆಯಲ್ಪಡು), ಪಡಲು, ಪಡೆ, ತಾಳು, ಒಂದು (ಬೆಡಗೊಂದು; ಒಲ ವೊಂದು)
experiment — ನಾ ಆರಯ್ಕೆ
expert — ನಾ ಅರಿವಿಗ
expiate — ಕ್ರಿ ತಪ್ಪುಕಟ್ಟು, ತಪ್ಪುತೆರು, ತಪ್ಪುಕಳೆ
expire — ಕ್ರಿ 1 ಮಿಂಚು (ಈ ಮದ್ದಿನ ಸಮಯ ಮಿಂಚಿಹೋಗಿದೆ) 2 ಸಾಯು, ತೀರಿ ಹೋಗು
explain — ಕ್ರಿ ತಿಳಿಸು, ಮನದಟ್ಟು ಮಾಡು, ಯಾಕೆಂದು ತಿಳಿಸು
expletive — ನಾ ಕೆಟ್ಟನುಡಿ, ಬಯ್ಗಳು
explicable — ಗು ತಿಳಿಸಬಲ್ಲ, ಮನದಟ್ಟು ಮಾಡಬಲ್ಲ
explicit — ಗು ಸರಿಯಾಗಿ ತಿಳಿಸಿದ, ಮುಚ್ಚು ಮರೆಯಿಲ್ಲದ
explode — ಕ್ರಿ 1 ಸಿಡಿ (ಡಬ್ಬೆಂದು ಸಿಡಿ) 2 ತಪ್ಪು ತೋರಿಸು
exploit — ಕ್ರಿ 1 ಬಳಸು 2 ಮೋಸದಿಂದ ಬಳಸಿಕೊಳ್ಳು
explore — ಕ್ರಿ ಆರಯ್ಯು (ಇದರ ಬುಡವನ್ನು ಆರಯ್ಯಬೇಕಾಗಿದೆ), ಕಂಡುಹಿಡಿ, ಹುಡುಕು
explosion — ನಾ 1 ಸಿಡಿತ 2 ಒಮ್ಮೆಗಿನ ಹೆಚ್ಚಳ
explosive — ನಾ ಸಿಡಿಮದ್ದು
exponent — ನಾ 1 ತಿಳಿಸುಗ 2 ಎತ್ತುಗೆ
export — ನಾ ಎತ್ತುಮತಿ (ಬೆಳೆದ ಅಕ್ಕಿಯನ್ನೆಲ್ಲ ಎತ್ತುಮತಿ ಮಾಡಿದರೆ ನಾವು ತಿನ್ನುವು ದೇನನ್ನು?)
expose — ಕ್ರಿ ಎಡೆಯಾಗು (ನಗೆಗೆ ಎಡೆ ಯಾಗು), ಬಯಲಾಗು (ಆತನ ಗುಟ್ಟೆಲ್ಲ ಬಯಲಾಗಿದೆ)
expound — ಕ್ರಿ 1 ತಿಳಿಸು, ಮನದಟ್ಟು ಮಾಡು 2 ಹಿಂಡು
express — ಕ್ರಿ ನುಡಿಗೊಡು,ತೋಡಿಕೊಳ್ಳು (ತನ್ನ ಅಳಲನ್ನು ತೋಡಿಕೊಂಡ), ತಿಳಿಸು
express — ಗು ಉರುಬಿನ (ಉರುಬಿನ ಉಗಿ ಬಂಡಿ)
expression — ನಾ ನುಡಿತ (ಆತನ ನುಡಿತ ಚನ್ನಾಗಿಲ್ಲ)
expropriate — ಕ್ರಿ ಕಿತ್ತುಕೊಳ್ಳು
expulsion — ನಾ ನೀಗಿಕೆ, ಹೊರಪಡಿಕೆ
expunge — ಕ್ರಿ ತೊಡೆ, ಅಳಿಸು, ತೆಗೆದುಹಾಕು, ನೀಗು, ಒರೆಸು
expurgate — ಕ್ರಿ ಪೆಡಸುಕಳೆ
exquisite — ಗು ಅಂದವಾದ, ಚುರುಕಾದ, ಕೂರರಿವು ಕೊಡುವ
extant — ಗು ಬಳಕೆಯಲ್ಲಿರುವ
extempore — ಗು ಒಡನೆಯೇ, ಮುನ್ನೆಣಿಕೆ ಯಿಲ್ಲದೆ, ಮುನ್ನೇರ್ಪಡದ
extend — ಕ್ರಿ ಸಾಗು (ಸಾಗಬಡಿ - ಕಬ್ಬಿಣದ ಸರಳನ್ನು ಕಾಲಿುಸಿ ಸಾಗಬಡಿಯುತ್ತಾರೆ), ನಿಗುರು (ನಿಗುರಿದ ತೋಳು), ನೀಡು (ಕಾಲು ನೀಡು),ಹಬ್ಬು (ಮರಕ್ಕೆ ಹಬ್ಬಿದ ಬಳ್ಳಿ),ಕಪ್ಪು (ಎಲ್ಲಾ ಕಡೆಗೂ ಕಪ್ಪಿದ ಹೊಗೆ),ಕೆಳರು
extended — ಗು ಹರಹು (ಹರಹು ಬಲೆ), ನೀಳ (ನೀಳನಾಲಿಗೆ), ನಿಡು (ನಿಡುಗಿಚ್ಚು; ನಿಡುಬೊಬ್ಬೆ; ನಿಡುಗಣ್ಣು; ನಿಡುದೋಳು; ನಿಡಿದು), ಚಾಪು (ಚಾಪುಗಾಲು; ಚಾಪು ಗಲ್ಲು)
extension — ನಾಪೊಡೆ,ಹಬ್ಬುಗೆ,ಹೊಡೆ (ಹೊಡೆಗೆಡಹು), ತೆರಪು
extent — ನಾ 1 ಮಟ್ಟ (ನಡುಮಟ್ಟ ನೀರಿದೆ), ಮೇರೆ 2 ಹರವು
extenuate — ಕ್ರಿ ಹಗುರಮಾಡು, ತಗ್ಗಿಸು, ಕುಂದಿಸು
exterior — ನಾ ಹೊರಮೈ (ಇದರ ಹೊರ ಮಯ್ ನುಣುಪಾಗಿದೆ) ಕ್ರಿ ಹುಟ್ಟಡಗಿಸು (ಇಲ್ಲಿನ ಇಲಿಗಳ ಹುಟ್ಟಡಗಿಸಬೇಕು)
external — ಗು ಹೊರಗಿನ, ಹೊರಮಯ್ಯ
extinct — ಗು ಸತ್ತುಹೋದ, ಚುರುಕು ಕಳೆದ, ಇರವಳಿದ
extinguish — ಕ್ರಿ (ಆ) ಅವಿ, ಅಣೆ, ನಂದು (ನಂದಿದ ಹಣತೆ), ಸಿಂದು (ಸಿಂದಿದ ಬರಹ), ಆರು (ಆರಿಹೋಗು; ಹಣತೆ ಆರಿಹೋಗಿದೆ; ಆರಿದಬೆಂಕಿ) (ಮಾ) ಕಂತಿಸು, ತೆಗೆ (ಹಣತೆ ತೆಗೆ)
extirpate — ಕ್ರಿ ಅಳಿಸು, ಚಟ್ಟುಮಾಡು, ಪುಚ್ಚಳಿಸು
extol — ಕ್ರಿ ಕೊಂಡಾಡು (ಆಕೆಯ ಕುಣಿತವನ್ನು ಕೊಂಡಾಡಿದರು)
extort — ಕ್ರಿ ಹೆದರಿಸಿ ಸುಲಿ, ಕಸಿದುಕೊಳ್ಳು
extra — ಗು ಹಸುಬೆ, ಆಟು (ಆಟಾಳು)
extra (in a bargain) — ನಾಕೊಸರು
extract — ಕ್ರಿ 1 ಹಿಂಡಿ ತೆಗೆ 2 ಎಳೆದು ತೆಗೆ (ಹುಡುಗನ ಆಡುವ ಹಲ್ಲನ್ನು ತಾಯಿ ಎಳೆದು ತೆಗೆದಳು)
extracurricular — ಗು ಕಲಿಕೆಗೆ ಹೊರತಾದ
extraneous — ಗು ಪತ್ತುಗೆಯಿಲ್ಲದ, ಬೇಡದ, ಹೊರಗಿನ
extraordinary — ಗು ಎಂದಿನಂತಿಲ್ಲದ, ಯಾವಾಗಿನದಲ್ಲದ, ಬೇರಾದ
extravagant — ಗು ದುಂದು (ದುಂದು ವೆಚ್ಚ, ದುಂದುಗಾರಿಕೆ) ಮಟ್ಟು ಮೀರಿದ
extreme — ಗು ಕಟ್ಟು (ಕಟ್ಟಚ್ಚರಿ, ಕಟ್ಟಡವಿ, ಕಟ್ಟೆಚ್ಚರ), ಕಡು (ಕಡುಬಣ್ಣ), ಕೊಟ್ಟ (ಕೊಟ್ಟ ಕೊನೆ)
extremity — ನಾಕೊನೆ,ತುದಿ (ತುತ್ತ ತುದಿ)
extricate — ಕ್ರಿ ಬಿಡುಗಡೆ ಮಾಡು, ಪಾರು ಮಾಡು
extrinsic — ಗು ಹೊರಗಿನ, ಬೇಕಿಲ್ಲದ, ತತ್ತಿಲ್ಲದ
extrovert — ಗು ಬೆರೆಯುವ (ಅವನು ಎಲ್ಲ ರೊಂದಿಗೂ ಬೆರೆಯುವ ಹುಡುಗ), ಮಾತಿ ನಲ್ಲಿ ತೊಡಗುವ
exuberant — ಗು 1 ಹುಲುಸಾದ (ಈ ಬಾರಿ ಹುಲುಸಾದ ಬೆಳೆ ಬಂದಿದೆ) 2 ಹದುಳಿರುವ (ಹದುಳಿರುವ ಹುಡುಗ)
exude — ಕ್ರಿ 1 ಜಿನುಗು, ಒಸರು 2 ಹರಡು
exult — ಕ್ರಿ ಹೊಂಗು, ಹಿಗ್ಗು, ಉಬ್ಬು
exulted position — ನಾ ಹಿರಿತನ
eye — ನಾ ಕಣ್ಣು (ಕಣ್ಣಿಗೆ ಬೀಳು; ಕಣ್ಣುತಪ್ಪಿಸು; ಕಣ್ಣುತಾಗು; ಕಣ್ಣುಮುಚ್ಚು)
eyeball — ನಾಗುಡ್ಡೆ (ಕಣ್ಣುಗುಡ್ಡೆ)
eyebrow — ನಾ ಬಿಲ್ಲಿ, ಹುಬ್ಬು (ಆತನ ಹುಬ್ಬೆಲ್ಲ ಉದುರಿಹೋಗಿದೆ)
eye-cap — ನಾ ಒಪ್ಪರ (ಕಣ್ಣಿನ ಒಪ್ಪರ)
eye-hole — ನಾ ನೋಡುಗಂಡಿ (ಬಾಗಿಲ ಲ್ಲೊಂದು ನೋಡುಗಂಡಿಯಿದೆ)
eyelash — ನಾ ಎಮೆ, ಎವೆ (ಮುಗುಳೆವೆ; ಕಣ್ಣೆವೆ)
eyelid — ನಾರೆಪ್ಪೆ,ಪರೆ,ಎವೆ (ಎವೆಮುಚ್ಚು; ಎವೆಯಿಕ್ಕು - ಮಗು ನಿನ್ನನ್ನೇ ಎವೆಲಿುಕ್ಕದೆ ನೋಡುತ್ತಿದೆ)
eyesight — ನಾ ನೋಟ, ಕಾಣಿಕೆ
eyesore — ನಾ ಕಣ್ಗಿಸುರು (ಈ ಕಟ್ಟಡ ಒಂದು ಕಣ್ಗಿಸುರಾಗಿದೆ)