← Ch 6  ·  Contents  ·  Ch 8 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

G

gab — ಕ್ರಿ ಹರಟು (ಹರಟೆ; ಹರಟೆಕೊಚ್ಚು), ಸೊರಗು (ನೀನು ಸೊರಗಿದ್ದು ಸಾಕು, ಸುಮ್ಮ ನಿರು)
gabble — ಕ್ರಿ ಬಡಬಡಿಸು, ಉರುಬು ಮಾತಾಡು
gad — ಕ್ರಿ ತಿರುಗಾಡು, ಅಲೆದಾಡು
gadfly — ನಾ ತೊಣಚಿ (ಆಕಳಿಗೆ ತೊಣಚಿ ಕಡಿದಿದೆ)
gadget — ನಾ ಕಿರುಸೂಟಿ
gaffe — ನಾ ಹೆಡ್ಡುತಪ್ಪು, ಹೆಡ್ಡುಕೆಲಸ
gag — ನಾ ಬಾಯಿಗಿಡಿ, ಬಾಯಡಪು
gage — ನಾ ಪೋಟಿಕರೆ (ಆತ ತನ್ನ ಪೋಟಿಕರೆ ನೀಡಿದ್ದಾನೆ)
gaggle — ನಾ ಬಾತುಕೊತ್ತಳಿ, ಕೊತ್ತಳಿ, ಗುಂಪು
gaiety — ನಾ ಗೆಲುವು, ನಲಿವು, ಬೆಡಗು
gaily — ಗು ಸಡಗರದಿಂದ, ಗೆಲುವಿನಲ್ಲಿ
gain — ನಾ 1 ದುಡಿತ,ದುಡಿಮೆ (ತನ್ನ ದುಡಿಮೆ ಯಲ್ಲಿ ಒಂದು ಪಾಲನ್ನು ತಂಗಿಗೆ ಕೊಡು ತ್ತಾನೆ) 2 ಪಡೆತ
gain — ಕ್ರಿ 1 ಹೆಚ್ಚು (ಪಡಪು ಹೆಚ್ಚು) 2 ಗಳಿಸು 3 ಗೆಲ್ಲು
gainsay — ಕ್ರಿ ಅಲ್ಲಗಳೆ, ಎದುರಾಡು, ಎದು ರಿಸು
gait — ನಾ ನಡಿಕೆ (ಕುಣಿನಡಿಕೆ; ಜಾರುನಡಿಕೆ; ನಿಡುನಡಿಕೆ)
gala — ನಾ ಹಬ್ಬ
galaxy — ನಾ ಅರಿಲ್ವಳಿ
gale — ನಾ ಬಿರುಗಾಳಿ (ಬಿರುಗಾಳಿಗೆ ಮಾಡಿನ ಹಂಚೆಲ್ಲ ಹಾರಿ ಹೋಗಿದೆ)
gall — ನಾ 1 ಹಗೆತನ, ಕಿಸುರು 2 ಉಚ್ಚು ಗಾಯ, ಕಿರುಕುಳ
gallant — ಗು ಕೆಚ್ಚೆದೆಯ, ಸೊಗಸುವ, ಚೆಲು ವಿನ
gallery — ನಾ 1 ಓಣಿ 2 ಮೆಟ್ಟಲು ಮಣೆ
gallop — ಕ್ರಿ ನೆಗೆದೋಡು ನಾ ನೇಣು (ನೇಣುಹಾಕು), ನೇಣು ಗಂಬ
galore — ಗು ಹೇರಳ
galosh — ನಾ ಮೇಲ್ಕೆರ, ಮೇಲ್ಕೆರ್ಪು (ಆತ ತನ್ನ ಕೆರದ ಮೇಲೆ ಮೇಲ್ಕೆರ್ಪನ್ನೂ ಹಾಕಿಕೊಂಡಿ ದ್ದಾನೆ)
galvanize — ಕ್ರಿ 1 ಮಿಂಚುಹರಿಸು 2 ಬೆಚ್ಚಿಸು 3 ಒಪ್ಪಯಿಸು
gamble — ಕ್ರಿ ಜೂಜಾಡು
gambler — ನಾ ಆಟಿ
game — ನಾ 1 ಆಟ 2 ಬೇಟೆ 3 ಒಳಸಂಚು, ಹಂಚಿಕೆ, ಹೂಟ
gamin — ನಾ ಅಲೆಮಾರಿ ಹುಡುಗ
gamine — ನಾ ತುಂಟ ಹುಡುಗಿ
gamut — ನಾ ಇಡೀ ಹರಹು
gander — ನಾ ಗಂಡು ಬಾತುಕೋಳಿ
gang — ನಾ ಕೂಟ (ಕಳ್ಳರ ಕೂಟ), ತಂಡ (ಕೆಲಸಗಾರರ ತಂಡ)
gangling — ಗು ಸಣಕಲು, ಬಡಕಲು, ಎತ್ತರ
gangrene — ನಾ ಕೊಳೆತ (ಅವನ ಕಾಲ ಬೆರಳಿಗೆ ಕೊಳೆತ ಹತ್ತಿದೆ)
gangster — ನಾ ಸುಲಿಗೆಕೂಟದವನು
gangway — ನಾ ನಡುದಾರಿ, ನಡುಕಟ್ಟೆ
gaol — ನಾ ಸೆರೆಮನೆ, ಸೆರೆ
gap — ನಾ ಬಿಡುವು, ಬಿಡುಕು, ಕಂಡಿ (ಎರಡು ಕಲ್ಲುಗಳ ನಡುವೆ ಚಿಕ್ಕ ಕಂಡಿಯಿತ್ತು)
gape — ಕ್ರಿ 1 ಎವೆಯಿಕ್ಕದೆ ನೋಡು 2 ಬಿರಿ, ತೆರೆದುಕೊಳ್ಳು, ಬಾಯಿಬಿಡು
garage — ನಾ ಗಾಡಿಕೊಟ್ಟಿಗೆ
garb — ನಾ ಉಡುಪು, ಹೊರನೋಟ
garbage — ನಾ ಕಸ (ಕಸಕುಪ್ಪೆ; ಕಸಗೊಟ್ಟಿ)
garble — ಕ್ರಿ ತಿರುಚು, ಗೊಂದಲಗೊಳಿಸು, ಗೋಜುಗೊಳಿಸು
garden — ನಾತೋಟ (ತೋಟಗಾರಿಕೆ; ಹೂ ವಿನ ತೋಟ)
garden bed — ನಾಪಾತಿ (ಪಾತಿಯಲ್ಲಿ ಬಿತ್ತಿದ ಹರಿವೆಸೊಪ್ಪು)
gardener — ನಾತೋಟಿಗ (ಆತ ನಮ್ಮಲ್ಲಿ ತೋಟಿಗನ ಕೆಲಸ ಮಾಡುತ್ತಾನೆ), ತೋಟ ಗಾರ
gargle — ಕ್ರಿ ಗಂಟಲು ಗಲಬರಿಸು
garish — ಗು ಕಣ್ಣುಕುಕ್ಕುವ, ತುಂಬ ಬೆಡಗಿನ
garland — ನಾಇಂಡೆ (ಈ ಹೂವಿನ ಇಂಡೆ ಯಾರಿಗಾಗಿ?), ಹೂವೀಡು
garlic — ನಾಬೆಳ್ಳುಳ್ಳಿ
garment — ನಾಉಡುಪು, ಉಡುಗೆ, ಬಟ್ಟೆಬರೆ, ತೊಡುಪು
garner — ನಾ ಕಣಜ, ಹಗೇವು
garner — ಕ್ರಿ ಕೂಡಿಹಾಕು, ತುಂಬಿರಿಸು
garnish — ಕ್ರಿ ಪರಿವಡಿಸು, ಅಂದವಿಸು (ಆಕೆ ತಾನು ಮಾಡಿದ ತಿಂಡಿಯನ್ನು ತುಂಬಾ ಚೆನ್ನಾಗಿ ಅಂದವಿಸಿದ್ದಾಳೆ)
garret — ನಾ ಅಟ್ಟ
garrison — ನಾ ಕಾವಲುಪಡೆ (ಕೋಟೆಯನ್ನು ಕಾಯಲು ದೊಡ್ಡ ಕಾವಲು ಪಡೆಯಿದೆ)
garrulous — ಗು ಹರಟುವ (ಬೇಡದ್ದನ್ನೆಲ್ಲ ಹರಟುವ ಮುದುಕಿ)
gas — ನಾ ಆವಿ (ನೀರಿನ ಆವಿ, ನಂಜಾವಿ) ಕ್ರಿ ಸೀಳು, ಸೀಳುಗಾಯಮಾಡು
gasify — ಕ್ರಿ ಆವಿಯಾಗು
gasp — ಕ್ರಿ ಉಗರಿಸು (ಉಬ್ಬಸದಿಂದ ಉಗರಿಸು ತ್ತಿದ್ದಾಳೆ), ಉಬ್ಬಸಗೊಳ್ಳು, ಏದು (ಓಡಿ ಓಡಿ ಏದುತ್ತಿದ್ದಾನೆ)
gastric — ಗು ಹೊಟ್ಟೆಯ
gastrology — ನಾ ಅಡುಗೆಯರಿಮೆ
gastronomy — ನಾ ಊಟದರಿಮೆ
gate — ನಾ ತದ್ದಲು (ಅವರ ತೋಟದ ಬೇಲಿಗೆ ಮುಳ್ಳಿನಿಂದ ಮಾಡಿದ ಒಂದು ತದ್ದಲಿದೆ), ಅಗಸೆ (ಅಗಸೆಬಾಗಿಲು), ಹೊರಬಾಗಿಲು, ಹೆಬ್ಬಾಗಿಲು (ಹೆಬ್ಬಾಗಿಲಿನಲ್ಲಿ ಇಬ್ಬರು ಕಾವಲುಗಾರರು)
gatekeeper — ನಾ ಬಾಗಿಲಾಳು
gateway — ನಾ ಬಾಗಿಲು, ಹೊಗುಗೆ
gather — ಕ್ರಿ (ಆ) ನೆರೆ (ಅಲ್ಲಿ ತುಂಬಾ ಮಂದಿ ನೆರೆದಿದ್ದರು), ಸೇರು (ಒಟ್ಟುಸೇರು), ಒಂದುಗೂಡು (ಮಾ) ಬಳಿ (ಚೆಲ್ಲಿದ ಎಣ್ಣೆಯನ್ನು ಬಳಿದು ತೆಗೆ; ಕಸವನ್ನೆಲ್ಲ ಬಳಿದು ಹೊರಹಾಕಿದ), ಆರಿಸು (ಬಿದ್ದ ಹೂಗಳನ್ನು ಆರಿಸು), ಆಯು (ಆಯ್ಕಳಿ), ಕೂಡಿಹಾಕು, ಗೋರು (ಗೋರಿಡು; ಗೋರು ಕೋಲು; ಗೋರುಮಣೆ), ಬಾಚು (ಚೆಲ್ಲಿದ ಅಕ್ಕಿಯನ್ನು ಕಯ್ಯಲ್ಲಿ ಬಾಚಿ ತೆಗೆ), ಒಟ್ಟ ಲಿುಸು, ನಿಗುಂಬು
gathering — ನಾನೆರವಿ (ಕಾಗೆಗಳ ನೆರವಿ),ಮೊಗ್ಗರ (ಮೊಗ್ಗರಿಸು), ಕೂಟ (ಮಕ್ಕಳ ಕೂಟ), ಗೊಂದಣಿ (ಹಬ್ಬದ ಗೊಂದಣಿ)
gathering place — ನಾನೆಪ್ಪು (ನಾವು ಯಾವಾಗಲೂ ಒಟ್ಟು ಸೇರುವ ನೆಪ್ಪಿನಲ್ಲಿ ಇವತ್ತು ಬೇರೆ ಯಾರೋ ಬಂದು ಕುಳಿತಿ ದ್ದಾರೆ)
gauche — ಗು ಒಡ್ಡು, ಒರಟು
gaudy — ಗು ಹೊಳೆಯುವ, ಅಗ್ಗದ, ಬೆಡಗಿನ
gauge — ನಾ ಅಳತೆ
gauge — ಕ್ರಿ ಅಳೆ, ತೀರ್ಮಾನಿಸು
gaunt — ಗು 1 ಬಡಕಲು, ಸಣಕಲು 2 ಬೆಚ್ಚಿಬೀಳಿಸುವ
gauze — ನಾ ನವಿರುಬಟ್ಟೆ, ಬಲೆ
gawk — ಕ್ರಿ ಪೆದ್ದುಪೆದ್ದಾಗಿ ನಿಟ್ಟಿಸು
gay — ಗು ಗೆಲುವಿನ, ಬೆಡಗಿನ, ಹಿಗ್ಗುವ
gaze — ಕ್ರಿ ಎವೆಯಿಕ್ಕದೆ ನೋಡು, ಅಡಸಿ ನೋಡು
gear — ನಾ 1 ಗಾಲಿಹೊಂದಿಕೆ 2 ಒದಗಿಕೆ (ಬೆಟ್ಟ ಏರಲು ಬೇಕಾಗುವ ಒದಗಿಕೆಗಳೆಲ್ಲ ಇಲ್ಲೇ ಸಿಗುತ್ತವೆ)
gearwheel — ನಾ ಹಲ್ಲುಗಾಲಿ
gecko — ನಾ ಹಲ್ಲಿ
gem — ನಾ ಹರಳು
gender — ನಾ ಗುರ್ತ (ಗಂಡುಗುರ್ತ, ಹೆಣ್ಣುಗುರ್ತ, ಉಳಿಕೆಗುರ್ತ)
genealogy — ನಾ ತಲೆಮಾರು ಕತೆ, ಪೀಳಿಗೆ ಕತೆ
general — ನಾ ಪಡೆವಳ,ದಳವಾಯಿ
general — ಗು 1 ಎಲ್ಲರ (ಸಂಬಳ ಹೆಚ್ಚಾಗ ಬೇಕೆಂಬುದೇ ಎಲ್ಲರ ಒಲವು) 2 ಹರಡಿದ (ಹರಡಿದ ಗೊಂದಲ) 3 ಕಟ್ಟುನಿಟ್ಟಿಲ್ಲದ
generation — ನಾ 1 ಪೀಳಿಗೆ (ಪೀಳಿಗೆಯಿಂದ ಪೀಳಿಗೆಗೆ; ಮುಂದಿನ ಪೀಳಿಗೆ), ತಲೆಮಾರು (ಈ ತಲೆಮಾರಿನಲ್ಲಿ ಆತನನ್ನು ಮೀರಿಸು ವವರಿಲ್ಲ) 2 ಉಂಟುಮಾಡುವಿಕೆ
generator — ನಾ ಉಂಟುಮಾಡುಗೆ
generosity — ನಾ ದೊಡ್ಡತನ, ಕೊಡು ಗಯ್ತನ, ತನ್ಮೆಯಿಲ್ಲದಿಕೆ
genesis — ನಾ ಹುಟ್ಟು, ತೊಡಗಿಕೆ, ತೊಡವು
genetic character — ನಾಹುಟ್ಟಾಣಿಕೆ (ಮಾತು ಕಲಿಯುವುದೂ ಒಂದು ಹುಟ್ಟಾ ಣಿಕೆಯಾಗಿದೆ)
genetic — ಗು ಹುಟ್ಟು (ಹುಟ್ಟುಪೊಚ್ಚ; ಹುಟ್ಟು ತೊಂದರೆ) ನಾ ತಳಿಯರಿಮೆ
genial — ಗು ನಲ್ಮಯ, ಕನಿಕರವುಳ್ಳ, ಗೆಲುವಾ ಗಿರುವ
genius — ನಾ ಪೇರರಿಗ
genocide — ನಾ ಮಂದಿಯಳಿಪು
gentle — ಗು 1 ನಯ (ನಯನುಡಿ; ನಯ ಮಾತು) 2 ನೆಮ್ಮದಿಯ, ತಾಳ್ಮೆಯ 3 ಕೊಡುಗಯ್ಯ 4 ಪಳಗಿದ 5 ಮೇಲ್ತಳಿಯ 6 ತಕ್ಕಮೆಯ
gentleman — ನಾ ಮುದಿಪುಗ
gently — ಗು ಮೆಲ್ಲನೆ (ಮೆಲ್ಲನೆ ಬಂದ ಮಗು)
genuflect — ಕ್ರಿ ಮಂಡಿಯೂರು (ಆತ ತುಂಬಾ ಹೊತ್ತು ಮಂಡಿಯೂರಿ ಕುಳಿತಿದ್ದ)
genuine — ಗು ಒಳ್ಳೆಯ, ನಂಬತಕ್ಕ, ಮೋಸ ವಲ್ಲದ
genus — ನಾ ಬಗೆ, ಪಂಗಡ, ತಳಿ
geography — ನಾ ನೆಲದರಿಮೆ
geology — ನಾ ಮಣ್ಣರಿಮೆ
geometry — ನಾ ಗೆರೆಯರಿಮೆ
geriatrics — ನಾ ಮುಪ್ಪರಿಮೆ
germ — ನಾ 1 ಮೊಳಕೆ (ಅವರೆಯ ಮೊಳಕೆ) 2 ಕಿತ್ತುಸಿರಿಗ 3 ತೊಡಗಿಕೆ, ಹುಟ್ಟು
germane — ಗು ತಕ್ಕ, ಹೊಂದುಗೆಯ
germinate — ಕ್ರಿ ಮೊಳೆ (ಮೊಳೆಗರಿಕೆ; ಮೊಳೆ ದೋರು; ಮೊಳೆತಿರುವ ಹೆಸರಿನ ಕಾಳು ಗಳು; ಮೊಳಕೆ), ಕುಡಿಯೊಡೆ (ಹರಿವೆ ಬಿತ್ತು ಕುಡಿಯೊಡಿದಿದೆ)
gestation — ನಾ ಬಸುರಿತನ
gesticulate — ಕ್ರಿ ಸನ್ನೆಮಾಡು
gesture — ನಾ ಸನ್ನೆ (ಕಯ್ಸನ್ನೆ; ಸನ್ನೆನುಡಿ; ಸನ್ನೆಮಾತು; ಸನ್ನೆವೇಟೆ)
get — ಕ್ರಿ ಪಡೆ (ಅವನು ಪಡೆದ ಹಣ), ಹೊಂದು (ಹೊಂದತಕ್ಕುದನ್ನು ಹೊಂದಿಸಿಕೊಡುವ ಆರ್ಪು ಆತನಲ್ಲಿದೆ; ಹೊಂದಪಟ್ಟ; ಹೊಂದ ದಿರುವ)
get around — ಕ್ರಿ ಸುತ್ತಾಡು
get away — ಕ್ರಿ ದೂರಹೋಗು, ತಪ್ಪಿಸಿಕೊಳ್ಳು
get back — ಕ್ರಿ ಹಿಂದಿರುಗು, ಹಿಂದೆಪಡೆ
get down — ಕ್ರಿ ತೊಡಗು
get in — ಕ್ರಿ ಹುಗು, ಒಳಹೊಗು
get off — ಕ್ರಿ ಹೊರಬರು, ತಪ್ಪಿಸಿಕೊಳ್ಳು, ಬಿಡುವುಪಡೆ
get over — ಕ್ರಿ 1 ತೆಪ್ಪರು, ಕುದುರು 2 ಮರೆತುಬಿಡು
get ready — ಕ್ರಿ ಸಮನಿಸು (ಊಟಕ್ಕೆ ಎಲ್ಲ ವನ್ನೂ ಸಮನಿಸಿ ಕಾದುಕುಳಿತಿದ್ದರು)
get rid of — ಕ್ರಿ ನೀಗು (ಚಳಿಯನ್ನು ನೀಗಲು ದೊಡ್ಡ ಬೆಂಕಿಯನ್ನು ಹಾಕಿದ್ದರು)
get up — ಕ್ರಿ 1 ಏಳು 2 ಅನುಗೊಳಿಸು
geyser — ನಾ ಬಿಸಿನೀರೂಟೆ
ghastly — ಗು ಬೆಚ್ಚಿಸುವ
ghee — ನಾತುಪ್ಪ (ತುಪ್ಪದ ದೋಸೆ; ತುಪ್ಪದ ಕೊಡ),ನೆೈ (ನೆಯ್ಗೂಳು)
ghetto — ನಾ ಕೊಳೆಗೇರಿ
ghost — ನಾ ಹೇದೆ ನಾ ಪಿರಿತಿನಿ, ಹೆಣದಿನಿ (ಸುಡಿಗಾಡಿ ನಲ್ಲಿ ಹೆಣದಿನಿಯನ್ನು ಕಂಡು ಹೆದರಿದ)
giant — ನಾ ಪೇರಾಳು, ಪೆರ್ಮಯ್ಯಾಳು
gibberish — ನಾ ಹುರುಳಿಲ್ಲದ ಮಾತು
gibbet — ನಾ ನೇಣುಗಂಬ, ಗಲ್ಲುಮರ
gibe — ಕ್ರಿ ಅಣಕಿಸು, ಮೂದಲಿಸು
giddiness — ನಾ ತಲೆಸುತ್ತು, ದಿಮ್ಮು (ದಿಮ್ಮು ಹಿಡಿ; ದಿಮ್ಮೆನ್ನು; ದಿಮ್ಮೇರು)
gift — ನಾಒಸಗೆ ಆತನ ಮನೆಗೆ ಹೋಗುವಾಗ ಏನಾದರೂ ಒಸಗೆಯನ್ನು ಕೊಂಡೊಯ್ಯು ತ್ತಿದ್ದೆ),ಕೋಡು (ಇದು ಆತನಿಗೆ ಕೊಟ್ಟ ಕೋಡು; ಕೊಡವಳಿಗೆ; ಕೊಡುಗೆ),ಬಳಿ (ಬಳುವಳಿ; ಬಳಿಗೆ), ಕಾಣಿಕೆ (ಕಾಣಿಕೆಲಿುಕ್ಕು; ಕಾಣಿಕೆ ಹಿಡಿ)
gifted — ಗು ಜಾಣ್ಮೆಯ, ಪೇರರಿಮೆಯ
gigantic — ಗು ಬಾರೀ ದೊಡ್ಡ
giggle — ಕ್ರಿ ಕಿಲಕಿಲ ನಗು
gild — ಕ್ರಿ ಹೊಂಬಣ್ಣ ಹಚ್ಚು
gin — ನಾ 1 ಬೋನು, ಬೆಳ್ಳಾರ 2 ಹತ್ತಿ ಹಿಂಜುಗೆ
ginger — ನಾ ಅಲ್ಲ (ಅಲ್ಲದ ಕೊಂಬು; ಹಲಸಿನ ಹಣ್ಣು ತಿಂದ ಮೇಲೆ ಅಲ್ಲಕ್ಕೆ ಉಪ್ಪು ಸೇರಿಸಿ ತಿನ್ನಿ)
gingerly — ಗು ಎಚ್ಚರಿಕೆಯಿಂದ (ಇದನ್ನು ತುಂಬಾ ಎಚ್ಚರಿಕೆಯಿಂದ ಸಾಗಿಸಬೇಕು)
gingley seed — ನಾ ಎಳ್ಳು (ಎಳ್ಳೆಣ್ಣೆ; ಎಳ್ಳು ನೀರು ಬಿಡು)
gird — ಕ್ರಿ ಕಟ್ಟು, ಸುತ್ತು
girder — ನಾ ತೊಲೆ (ಮರದ ತೊಲೆ; ಕಬ್ಬಿಣದ ತೊಲೆ)
girdle — ನಾನೇವಳ (ಮಗುವಿಗೆ ಚಿನ್ನದ ನೇವಳ ಹಾಕಿದ್ದಾರೆ), ನಡುಕಟ್ಟು, ಉಡಿ ದಾರ
girth — ನಾ ಸುತ್ತಳತೆ
gist — ನಾ ತಿರುಳು
give — ಕ್ರಿ ಇಕ್ಕು (ಸೂಳೆಗೆ ಇಕ್ಕಿದ ಹಣ), ಇಂಗು, ಈಯು (ಅನ್ನ ಈಯುವವರು),ಕೊಡು (ಕೊಡುಗಯ್; ಕೊಡಮಾಡು)
give and take — ನಾ ಕೊಳುವಡೆ (ನಮ್ಮ ನಡುವೆ ಕೊಳುವಡೆಯಿಲ್ಲ)
give back — ಕ್ರಿ ಹಿಂದಿರುಗಿಸು
give birth — ಕ್ರಿ ಹಡೆ (ಮೂವರು ಮಕ್ಕಳನ್ನು ಹಡೆದಳು), ಹೆರು (ಹೆತ್ತ ತಾಯಿ; ಹೆತ್ತ ಮನೆ)
give forth — ಕ್ರಿ ಹೊರಸೂಸು
give in — ಕ್ರಿ ಬಿಟ್ಟುಕೊಡು, ಸೋಲೊಪ್ಪು
give out — ಕ್ರಿ ಹೊರಸೂಸು, ಹಂಚು, ಹೊರ ಹಾಕು
give up — ಕ್ರಿ ಕಲಿ್ಬುಡು (ಅವನನ್ನು ಕಲಿ್ಬುಡ ಬೇಡ), ತೊರೆ (ಮನೆಯನ್ನು ತೊರೆದು ಬಂದವನು), ತೂರು (ಅವನು ಎಲ್ಲವನ್ನೂ ತೂರಿಬಿಟ್ಟ), ನಿಲ್ಲಿಸು (ಆತ ಹೊಗೆಸೇದುವು ದನ್ನು ನಿಲ್ಲಿಸಿದ್ದಾನೆ)
give way — ಕ್ರಿ ಒತ್ತು (ಎಲ್ಲರೂ ಒತ್ತಿನಿಲ್ಲಿ), ಕುಸಿ (ಕುಸಿದುಬೀಳು)
giving — ನಾಕೊಡುಹ (ಬಡ್ಡಿಯ ಕೊಡುಹ), ಸಲಿಕೆ, ಸಲ್ಲಿಕೆ
giving up — ನಾ ತೊರೆಹ
glace — ಗು ನುಣುಪಾದ, ಹೊಳಪಿನ
glacier — ನಾ ನೀರ್ಗಲ್ಲ ಹೊಳೆ, ಮಂಜುಗಡ್ಡೆ ಹೊಳೆ
glad — ಗು ಸೊಮ್ಮುಗೊಂಡ, ಹದುಳಿರುವ, ಗೆಲುವಿನ
gladden — ಕ್ರಿ ಅಗಿ (ಅಗಿವ ಮಕ್ಕಳು)
glade — ನಾ 1 ಬಯಲು (ಕಾಡಿನ ನಡುವೆ ಒಂದು ಬಯಲಿತ್ತು) 2 ಜವುಗು ನೆಲ ನಾ ಸೊಂಪು (ಸೊಂಪುಗರೆ), ಒನಪು (ಒನಪುಗಾರ್ತಿ)
glance — ನಾ ಚೂಪು, ಕುಡಿನೋಟ, ಓರೆ ನೋಟ
gland — ನಾ ಸುರಿಗೆ
glare — ಕ್ರಿ (ಆ) ಕಣ್ಣುಕುಕ್ಕು (ಅವಳದು ಕಣ್ಣುಕುಕ್ಕುವ ಉಡುಪು) (ಮಾ) ದುರು ಗುಟ್ಟು (ದುರುಗುಟ್ಟಿ ನೋಡು)
glass — ನಾ 1 ಗಾಜು (ಕಿಟಿಕಿಯ ಗಾಜು ಒಡೆದಿದೆ) 2 ಕನ್ನಡಿ 3 ಕನ್ನಡಕ
glaze — ಕ್ರಿ ಹೊಳಪುಕೊಡು, ಮೆರುಗು ಕೊಡು, ನುಣುಪಾಗಿಸು
gleam — ನಾ 1 ಕದಿರು (ಬೆಳಕಿನ ಕದಿರು) 2 ಮಬ್ಬು ಬೆಳಕು, ಮಬ್ಬು ನಂಬಿಕೆ
glean — ಕ್ರಿ ಹೆಕ್ಕು, ನೆರಪು, ಒಟ್ಟಿಸು, ಒಟ್ಟುಮಾಡು
gleanings — ನಾಹೆಕ್ಕಲು,ಹಕ್ಕಲು (ಹಕ್ಕಲ ನಾಯ್ದ ಬತ್ತ)
glee — ನಾ ನಲಿವು, ಹಿಗ್ಗು
glen — ನಾ ಇರುಂಬು, ಕಣಿವೆ
glib — ಗು ನುಣ್ಣಗಿನ (ನುಣ್ಣಗಿನ ಮಾತು), ನಯವಾದ
glide — ಕ್ರಿ ಜಾರು (ಜಾರಿಹೋಗು)
glimmer — ನಾ ಮಬ್ಬು ಬೆಳಕು, ಮಬ್ಬು ನಂಬಿಕೆ, ಮಸಕು ಕಾಣ್ಕೆ
glimpse — ನಾ ಸುಳಿವು (ಇನ್ನೂ ಅವನ ಸುಳಿವೇ ಇಲ್ಲ)
glint — ನಾ ಹೊಳಪು, ಮಿಂಚು
glisten — ಕ್ರಿ ಮಳಮಳಿಸು (ಮಳೆಬಂದು ಗಿಡಗಳೆಲ್ಲ ಮಳಮಳಿಸುತ್ತಿವೆ), ಮಿನುಗು
glitter — ಕ್ರಿ ಮಿಸುಗು (ಮಿಸುಗುವ ಹೊಸ ತಳಿರು), ಮಿಂಚು (ಮಿಂಚುವ ಚಿನ್ನದ ಉಡುಪು), ಮಿನುಗು (ಮಿನುಗುವ ಮಿರುಗು ಹುಳ), ಮಿರುಗು (ಆಕೆಗೆ ಮಿರುಗುವ ಕಣ್ಣುಗಳಿವೆ; ಮಿರುಗು ಕೊಡು), ಮಿಣುಕು (ಆಕೆಯ ಸೀರೆ ಮಿಣುಕುತ್ತಿದೆ; ಮಿಣುಕು ಹುಳ), ತಳತಳಿಸು, ತಳಕು (ತಳಕುವ ಚಿನ್ನದುಡಿಗೆ; ತಳಕುಪಳಕು), ಗಜಗಜಲಿಸು, ಪೊಚ್ಚರಿಸು
gloaming — ನಾ ಎರೆಗತ್ತಲೆ, ಕಡೆಹಗಲು
gloat — ಕ್ರಿ ಕರುಬಿ ಹಿಗ್ಗು
glob — ನಾ ಮುದ್ದೆ (ದುಂಡು ಮುದ್ದೆ)
globe — ನಾ 1 ಉಂಡೆ, ತೆರಳೆ 2 ನೆಲ, ಉಂಡೆನೆಲ, ನೆಲತೆರಳೆ (ಈ ನೆಲತೆರಳೆ ಯಲ್ಲಿ ನಮ್ಮೂರು ಕಾಣಿಸುವುದೇ?)
globular — ಗು ಗುಂಡಗೆ (ಗುಂಡಗಿನ ಕಣ್ಣು), ಉರುಟು, ಬಟ್ಟ, ದುಂಡು
globule — ನಾ ಹನಿ, ತೊಟ್ಟು, ಚಿಕ್ಕ ತೆರಳೆ
gloom — ನಾ1 ಮಬ್ಬು (ಮಬ್ಬು ಕವಿದಿದೆ) 2 ಮಂಕು (ಮಂಕುಕವಿ), ಕೊರಗು
glorify — ಕ್ರಿ ಹೊಗಳು, ಮದಿಪು ಕೊಡು, ದೊಡ್ಡದಾಗಿಸು, ಮೇಲೇರಿಸು
glorious — ಗು ಹೆಸರಾಂತ (ಅವರದು ಹೆಸರಾಂತ ಮನೆತನ), ನೆಗಳಿದ, ನೆಗಳ್ತೆ ಪಡೆದ, ನುಡಿಗೊಂಡ, ಚಂದದ
glory — ನಾಎಸಕ (ಆತನ ಎಸಕದಲ್ಲಿ ನಮ್ಮದೂ ಪಾಲಿದೆ)
gloss — ನಾ 1 ಹೊಳಪು, ಹುಸಿತೋರ್ಕೆ 2 ಅಡಿಬರಹ, ತಿಳುವಳಿಕೆ, ಹುರುಳು (ಈ ಹೊತ್ತಗೆಯ ಕೊನೆಯಲ್ಲಿ ಕೆಲವು ಪದಗಳ ಹುರುಳು ಕೊಟ್ಟಿದ್ದಾರೆ)
glossary — ನಾ ಕಯ್ಪಿಡಿ (ಕಡತದ ಕೊನೆ ಯಲ್ಲೊಂದು ಕಯ್ಪಿಡಿ ಯಿದ್ದರೆ ಒಳ್ಳೆಯದು)
glove — ನಾ ಕಯ್ಗವಸು
glow — ನಾ ಕಾವು (ಬೆಂಕಿಯ ಕಾವು ದೂರದ ವರೆಗೂ ಕಾಣಿಸುತ್ತಿತ್ತು), ಹೊಳಪು
glow — ಗು ನಿಗಿ (ಬೆಂಕಿ ನಿಗಿನಿಗಿ ಉರಿಯು ತ್ತಿತ್ತು)
glow worm — ನಾ ಮಿಂಚುಹುಳ, ಮಿಣುಕು ಹುಳ
glower — ಕ್ರಿ ಕೆರಳಿ ನಿಟ್ಟಿಸು ಕ್ರಿ ತಿಳಿಸಿಹೇಳು
glue — ನಾಸರಿ (ಜೇಡನ ಬಲೆಯ ಕೆಲವು ನೂಲುಗಳಲ್ಲಿ ಸರಿಯಿದೆ), ಅಂಟು (ಇದಕ್ಕೆ ಅಂಟುಹಚ್ಚಿ ಅಂಟಿಸಬೇಕು)
glum — ಗು ಮಂಕಾದ, ಒಳಮುನಿಸಿನ
glut — ಕ್ರಿ ಹೊಟ್ಟೆಬಿರಿಯುವಂತೆ ತಿನ್ನು, ಮುಕ್ಕು, ಗಿಡಿ, ತುರುಕು, ತುಂಬು
glutinous — ಗು ಅಂಟುವ, ಜಿಗುಟು
glutton — ನಾ ಹೊಟ್ಟೆಬಾಕ,ಕುದುಗುಳಿ (ಆತ ನೊಬ್ಬ ಕುದಗುಳಿ, ತಿನ್ನಲು ಎಶ್ಟು ಕೊಟ್ಟರೂ ಸಾಲದು),ತಿನಾಳಿ
gnarled — ಗು ಗಂಟುಗಂಟಾದ (ಮುದಿಮರ ಗಂಟುಗಂಟಾಗಿದೆ; ಮುದುಕನ ಕಯ್ ಗಂಟು ಗಂಟಾಗಿದೆ)
gnash — ಕ್ರಿ ಹಲ್ಲುಕಡಿ, ಹಲ್ಲುಮಸೆ
gnat — ನಾ ನುಸಿ (ಬಟ್ಟೆಗೆ ನುಸಿಹತ್ತಿದೆ), ನೊರಜು (ನೊರಜು ಕಣ್ಣಿನೊಳಗೆ ಸೇರಿ ಕೊಂಡಿದೆ), ಗುಂಗುರು (ಆಕೆಯನ್ನು ಗುಂಗುರು ಕಾಡುತ್ತಿದೆ),ದೋಮೆ
gnaw — ಕ್ರಿ ಕಡಿ (ಇಲಿ ಬಾಗಿಲನ್ನು ಕಡಿದು ತೂತುಮಾಡಿದೆ), ಕುರುಕು, ಕೊರೆ
gnome — ನಾ ಕುಳ್ಳ
go — ಕ್ರಿ ಹೋಗು (ಹೋಗಬಿಡು; ಹೋಗ ಲಾಡಿಸು; ಕಳೆದುಹೋಗು; ಹೋಗಾಡು)
go about — ಕ್ರಿ ತೊಡಗಿರು
go ahead — ಕ್ರಿ ಮುಂದುವರಿಸು (ನೀವು ನಿಮ್ಮ ಊಟವನ್ನು ಮುಂದುವರಿಸಿ)
go away — ಕ್ರಿ ಅಗಲು (ಹಿಂಡನಗಲಿದ ಹುಲ್ಲ; ಅಗಲದೆ ನಿಲ್ಲು), ತೊಲಗು (ನೀವು ಇಲ್ಲಿ ನಿಲ್ಲದೆ ಈಗಲೆೀ ಇಲ್ಲಿಂದ ತೊಲಗಿದರೆ ಒಳ್ಳೆಯದು)
go back — ಕ್ರಿ ಹಿಂಗು (ಹಿಮ್ಮೆಟ್ಟಿ ಹಿಂಗಿ ದವರು), ಹಿಂದಿರುಗು, ಬೀಗು
go beyond — ಕ್ರಿ ಎಡೆಗಲಿಸು, ಕಯ್ಮೀರು (ಆತನ ಕುತ್ತ ಕಯ್ಮೀರಿದೆ)
go down — ಕ್ರಿ ಇಳಿ, ಕೆಳಗಿಳಿ
go far — ಕ್ರಿ ಕಳಿ (ಕಳಿದವರು)
go in a line — ಕ್ರಿ ಅಣಿವರಿ (ಹುಡುಗರೆಲ್ಲಾ ಅಣಿವರಿಯುತ್ತಿದ್ದಾರೆ)
go off — ಕ್ರಿ ತೂಳು (ಅವನಲ್ಲಿಂದ ಬೇರೆ ಎಲ್ಲಿಗೋ ತೂಳಿದ)
go out — ಕ್ರಿ ಆರಿಹೋಗು, ನಂದು (ಹಣತೆ ನಂದಿಹೋಗಿದೆ)
go round — ಕ್ರಿ ಸುಳಿ (ಸುಳಿದಾಡು; ಸುಳಿದಾಟ; ಸುಳಿಸುತ್ತು), ಸುತ್ತು (ನಿಮ್ಮ ನಂಟರು ಊರೆಲ್ಲ ಸುತ್ತಿ ಬಸವಳಿದರು), ಬಳಸು (ಈ ತೋಟವನ್ನು ಬಳಸಿ ಹೋಗಬೇಕಾಗು ತ್ತದೆ; ಬಳಸುದಾರಿ)
goad — ಕ್ರಿ 1 ದೂಡು 2 ಹುರಿದುಂಬಿಸು
goal — ನಾ ಗೊತ್ತು (ಗೊತ್ತುಮುಟ್ಟು; ಆತನದು ಗೊತ್ತುಗುರಿಲಿುಲ್ಲದ ಕೆಲಸ), ಗುರಿ (ಗುರಿ ಹಿಡಿದು ಮುಂದುವರಿ; ಗುರಿಮುಟ್ಟು)
goat — ನಾಆಡು,ಮೇಕೆ
goat (male) — ನಾಹೋತ
gobble — ಕ್ರಿ ಮುಕ್ಕು (ತವುಡು ಮುಕ್ಕು; ತಿಂದುಮುಕ್ಕು),ಗದಗು
goblet — ನಾ ಗಿಂಡಿ (ಒಂದು ಗಿಂಡಿ ತುಂಬ ತುಪ್ಪ ಕೊಟ್ಟರು; ಗಿಂಡಿಯೂಳಿಗ)
goblin — ನಾ ನೆಲಮುಕ್ಕು
god — ನಾ ಪೆರುಮಾಳು, ಕಡವರು (ಕಡವರನ್ನು ನಂಬಿದವರಿಗೆ ತೊಂದರೆಲಿುಲ್ಲ), ದಾಟುಗ, ನಿಳಿಂಬ
goddess of speech — ನಾ ನುಡಿವೆಣ್ಣು
goggle — ಕ್ರಿ ಕಣ್ಣು ಹೊರಳಿಸು, ಕಣ್ಣುಬ್ಬಿಸು
going — ನಾ ಹೋಕು, ಹೋಗುಹ, ತೆರಳಿಕೆ
going beyond — ನಾ ದಾಂಗುಡಿ (ದಾಂಗುಡಿ ಬಿಡು) ನಾ ಮಿಸುನಿ (ಮಿಸುನಿಸು; ಮಿಸುನಿಯ ಕೆಲಸ; ಮಿಸುನಿ ಬರಹ), ಚಿನ್ನ (ಚಿನ್ನದೆಳೆ; ಚಿನ್ನದ ಹಬ್ಬ), ಹೊನ್ನು, ಹೊನ್- (ಹೊಂ ಗದಿರು; ಹೊಂಗನ್ನಡಿ; ಹೊಂಗಿಂಡಿ; ಹೊಂ ಬಣ್ಣ; ಹೊಂಬಟ್ಟಲು),ಕಸವರ,ಕಡವರ (ಆತ ಮಣ್ಣೊಳಗೆ ಹುಗಿದಿಟ್ಟ ಕಡವರ ಯಾರಿಗೂ ಸಿಗಲಿಲ್ಲ)
gold (fine) — ನಾ ಕುಂದಣ (ಕುಂದಣಗಾರ; ಕುಂದಣ ಕಟ್ಟು; ಕುಂದಣವಿಡು)
goldfish — ನಾಹೊಮ್ಮೀನು
goldsmith — ನಾ ಚಿನಿವಾರ,ಅಕ್ಕಸಾಲೆ,ಏರಣಿಗ
good — ಗು ನಲ್- (ನಲ್ಕುದುರೆ, ನಲ್ನುಡಿ), ನಲ್ಲ (ನಲ್ಲತನ; ನಲ್ಲರಿವು; ನಲ್ಲತ್ತು; ನಲ್ಲುಣಿಸು; ನಲ್ಮಿಸುನಿ; ನಲ್ಗತೆ), ಒಳ್- (ಒಳ್ನುಡಿ, ಒಳ್ದೊಡುಗೆ, ಒಳ್ನಾಡು; ಒಳ್ಳೆ;ಒಳಿತು); ಬಕ್ಕೆ (ಬಕ್ಕೆ ಹಲಸು), ತನಿ (ತನಿಗಂಪು; ತನಿಬೆಲ್ಲ)
good will — ನಾಎರಕ (ಅವರಿಗೆ ನಿಮ್ಮಲ್ಲಿ ಎರಕವಿದೆ)
goodness — ನಾನಲ್ಮೆ,ಒಳುಹು,ನಾಣ್ಯ (ನಾಣ್ಯನುಡಿ)
goods — ನಾ ಸರಕು (ಬಂಡಿಗಳ ಮೇಲೆ ಸರಕು ತುಂಬಿಸಿದರು)
goof — ನಾ 1 ದಡ್ಡ 2 ಎಡವಟ್ಟು, ಪೆದ್ದುಕೆಲಸ
goon — ನಾ ಒರಟ, ಕೇಡಿ, ಪೆದ್ದ, ಹೆಡ್ಡ
goose — ನಾ ಬಾತುಕೋಳಿ
gore — ನಾ ಹೆಪ್ಪುಗಟ್ಟಿದ ನೆತ್ತರು
gore — ಕ್ರಿ ಕೋಡಿಡು (ಕೋಡಿಡುವ ಆನೆ), ಹಾಯು (ಹಾಯುವ ಎತ್ತು; ಎತ್ತುಗಳ ಹಾದಾಟ), ತಿವಿ (ಹತ್ತಿರ ಹೋದರೆ ಆ ಎತ್ತು ತಿವಿಯುತ್ತದೆ), ಈಡಿರಿ
gorge — ನಾ ಕಣಿವೆ, ಕಮರಿ, ಸರಿ (ಗುಡ್ಡದ ಸರಿ)
gorge — ಕ್ರಿ ಗಬಗಬನೆ ತಿನ್ನು, ಮುಕ್ಕು
gorgeous — ಗು ಬೆರಗುಗೊಳಿಸುವ, ಕಣ್ಸೆಳೆವ, ಬಣ್ಣಬಣ್ಣದ
gormandize — ಕ್ರಿ ಹೊಟ್ಟೆಬಾಕನಂತೆ ತಿನ್ನು, ಮುಕ್ಕು
gossamer — ಗು ನವಿರು, ತೆಳ್ಳಗೆ, ಹಗುರ
gossip — ನಾ ಹರಟೆ (ಹರಟೆಕೊಚ್ಚು; ಹರಟೆ ಹೊಡೆ)
gouge — ಕ್ರಿ ತೋಡು, ತೂತುಮಾಡು
gourd (bitter) — ನಾಹಾಗಲ (ಹಾಗಲಕಾಲಿು ಕಹಿ)
gourd (sponge) — ನಾಹೀರೆ (ಹೀರೆ ಕಾಲಿುಯ ತಾಳು ಮಾಡಿದ್ದರು)
gourd-bottle — ನಾಬುರುಡೆ (ಬಿತ್ತುಗಳನ್ನು ಒಂದು ಬುರುಡೆಯಲ್ಲಿ ತುಂಬಿಸಿಟ್ಟಿದ್ದಳು)
gourmet — ನಾ ತಿನ್ನಾಳಿ, ತಿನ್ನುಗ, ತಿನ್ನರಿಗ
gout — ನಾ ಕೀಲೂರ
govern — ಕ್ರಿ ಆಳು, ಆಡಳಿತ ನಡೆಸು
government — ನಾಆಡಳಿತ (ಆತನ ಆಡಳಿತ ಚನ್ನಾಗಿರಲಿಲ್ಲ), ಆಳ್ವಿಕೆ
governor — ನಾ 1 ನಾಡಾಳ್ವ 2 ಕಟ್ಟುಕ
gown — ನಾ ನಿಲುವಂಗಿ, ಮೇಲುಡುಪು
grab — ಕ್ರಿ ಕಸಿ, ಸೆಳೆ, ಕಿತ್ತುಕೊಳ್ಳು
grace — ನಾ 1 ಬೆಡಗು (ಬೆಡಗ, ಬೆಡಗಿ), ಒಲವು, ಗಾಡಿ (ಗಾಡಿಗಾರ್ತಿ; ಗಾಡಿವೆತ್ತು ಬರು; ಗಾಡಿಗತನ) 2 ಹೆಚ್ಚಿದ ಗಡುವು
gracious — ಗು ಗಾಡಿವೆತ್ತ, ಒಲವಿನ, ಕನಿಕರ ತೋರುವ
grade — ನಾ ಹಂತ, ಮಟ್ಟ
gradient — ನಾ ಇಳಿಜಾರು, ಇಳುಕಲು
gradual — ಗು ಹಂತಹಂತವಾದ ನಾ ಪಟ್ಟವಡೆಗ
graffiti — ನಾ ಗೀಚು (ಗೋಡೆಯ ಮೇಲೆಲ್ಲ ಯಾರೋ ಗೀಚು ಹಾಕಿದ್ದಾರೆ)
graft — ನಾ ಬಿಂಕುಗಳಿಕೆ (ಬಿಂಕುಗಳಿಕೆಯಿಂದ ಕಟ್ಟಿದ ಮನೆ), ಮೋಸದ ಗಳಿಕೆ
graft — ಕ್ರಿ ಕೂಡಿಸು, ಒಳಸೇರಿಸು, ಬೆಸೆ (ಈ ಗಿಡದಲ್ಲಿ ಮೂರು ಗಿಡಗಳನ್ನು ಬೆಸೆದಿದ್ದೇವೆ; ಬೆಸೆದ ಗಿಡ)
grain — ನಾಅಗುಳು (ಅನ್ನದ ಅಗುಳು; ಅಗು ಳೂಟ),ಅವುಡು,ಕಾಳು (ಕಾಳುತುಂಬು; ಕಾಳುಗಟ್ಟು), ಕುಡುಕು
grain-dealer — ನಾ ಕಾಳುಗ
gram (green) — ನಾ ಹೆಸರು
gram (horse) — ನಾ ಹುರುಳಿ
grammar — ನಾ ಸೊಲ್ಲರಿಮೆ
grammarian — ನಾ ಸೊಲ್ಲರಿಗ
granary — ನಾಕುದಿರು (ಬತ್ತದ ಕುದಿರು), ಪತ್ತಾಯ (ಪತ್ತಾಯದಲ್ಲಿ ತುಂಬಿದ ಬತ್ತ)
granary (underground) — ನಾ ಹಗ (ಹಗೇವು - ಹಗೇವಿನಲ್ಲಿ ತುಂಬಿದ ಕಾಳಿಗೆ ಗೆದ್ದಲು ಹಿಡಿದಿದೆ), ನೆಲಮಾಳಿಗೆ
grand — ಗು ದೊಡ್ಡಸ್ತಿಕೆಯ, ಮೇಲ್ಮಟ್ಟದ, ಚಂದದ
grandchild — ನಾ ಮೊಮ್ಮಗು
grandeur — ನಾಉರ್ಮೆ, ಪೆಂಪು (ಪೆಂಪುಗಾರ; ಪೆಂಪುಗೆಡು; ಪೆಂಪೇರು), ಹೆಂಪು
grange — ನಾ ತೋಟ, ಪಣ್ಯ
granite — ನಾ ಪೆಡಸುಕಲ್ಲು
grant — ನಾಕೊಡುಗೆ
granular — ಗು ಕಾಳುಕಾಳಾಗಿರುವ
granule — ನಾ ಕಿರುಕಾಳು
graph — ನಾ ಮಾರ್ಪಾಡು ತಿಟ್ಟ
graphic — ಗು ಕಣ್ಣಿಗೆಕಟ್ಟುವ (ಕಣ್ಣಿಗೆ ಕಟ್ಟುವ ಕೊಗೆತ)
grapple — ಕ್ರಿ ಪಟ್ಟುಹಾಕು, ಗಟ್ಟಿಹಿಡಿ, ಹೊಡೆ ದಾಡು
grasp — ನಾ ಹಿಡಿಹು (ಹಿಡಿಹು ಕೊಡು)
grasp — ಕ್ರಿ ತುಡುಕು (ಹಾವನ್ನು ತುಡುಕಿ ಕಚ್ಚಿಸಿಕೊಂಡ), ಹಿಡಿ (ಹಿಡಿದಿಡು; ಕೊಂಬೆ ಹಿಡಿದು ನೇತಾಡುತ್ತಿದ್ದಾನೆ), ಹಿಡಿಯಾಳು; ಹಿಡಿವಿಡಿ)
grass — ನಾ ಹುಲ್ಲು (ಹುಲ್ಲುಕಡ್ಡಿ, ಹುಲ್ಲು ಗಾವಲು)
grass (dry) — ನಾ ಮುಳಿ (ಮುಳಿಹುಲ್ಲು; ಮಾಡಿಗೆ ಮುಳಿ ಹೊದೆಸು)
grasshopper — ನಾ ಮಿಡಿತೆ (ಮಿಡಿತೆ ಹುಳು)
grate — ನಾ ಒಲೆ
grate — ಕ್ರಿ 1 ತುರಿ (ತುರಿಮಣೆ); ತುರುವು (ತೆಂಗಿನಕಾಯಿಯನ್ನು ತುರುವಿ ಆಗಿದೆ; ತುರುವು ಮಣೆ) 2 ಕಿರಿಕಿರಿಮಾಡು
grateful — ಗು ಮೆಚ್ಚುಗೆಯ
gratify — ಕ್ರಿ ತಣಿಸು, ಮೆಚ್ಚಿಸು
gratis — ಗು ಬೆಲೆಹಾಕದ, ಬೆಲೆಕೇಳದ
gratuitous — ಗು ಬೆಲೆಕೇಳದ, ಕೇಳದೆ ಕೊಟ್ಟ
gratuity — ನಾ ಒಸಗೆ (ಕೆಲಸದಿಂದ ಬಿಡುವು ಪಡೆದವರಿಗೆ ಒಸಗೆ ಹಣ ಬರುತ್ತದೆ)
grave — ನಾ 1 ಹೂತೆಡೆ (ಅವನ ಹೂತೆಡೆಯ ಮೇಲೆ ಒಂದು ಚಂದದ ಗಿಡ ಬೆಳೆಯುತ್ತಿದೆ) 2 ಸಾವು
grave — ಗು 1 ಅರಿದು (ಅರಿದು ಕೆಲಸ) 2 ಕಳವಳಪಡಿಸುವ, ಮಂಕಾದ, ಸಪ್ಪೆ ನಾ ನೊರಜು, ನರುಜು (ನರುಜು ಕಲ್ಲು; ನರುಜುನೆಲ), ಗರಸು (ಗರಸು ಹಾಕಿ ಸಾರಣೆ ಮಾಡಿದ ನೆಲ ಜಾರದ ಹಾಗೆ ದೊರಗಾಗಿತ್ತು)
graveyard — ನಾ ಸುಡುಗಾಡು, ಹೂಳೆಡೆ
gravity — ನಾ ಬಿಣ್ಪು, ತೂಕ
graze — ಕ್ರಿ 1 ಮೇಯು (ಹುಲ್ಲು ಮೇಯು) 2 ಒರಸು (ಗೋಡೆ ನನ್ನ ಬೆನ್ನಿಗೆ ಒರಸಿತು), ಸೋಕು
grazing — ನಾ ಮೇತ (ಮೇತಕ್ಕೆ ಬಿಟ್ಟ ಆಕಳು ಗಳು ಇನ್ನೂ ಹಿಂದಿರುಗಿಲ್ಲ), ಮೇಪು (ಮೇಪುಗಾಡು - ತೋಟದ ಬದಿಯಲ್ಲಿ ಮೇಪುಗಾಡು ಹೆಚ್ಚಿರಲಿಲ್ಲ)
grease — ನಾ ಜಿಡ್ಡು (ಜಿಡ್ಡುಹಿಡಿ; ಜಿಡ್ಡುಗಟ್ಟು; ಜಿಡ್ಡುಗಂಬ; ಜಿಡ್ಡೆಣ್ಣೆ),ಹೆರೆ (ಹೆರೆಯನ್ನು ತುಂಬಿಸಿ ಇಟ್ಟಿರುವ ಹೆರೆಕೊಂಬು)
great — ಗು ಕಂಡೆಯ (ಕಂಡೆಯ ಸಿರಿ), ಕರ (ಕರ ಲೇಸು), ಮಲ್ಯ, ಮಲ್ಲ (ಮಲ್ಲಂತಿಗೆ; ಅವನಿಗೊಂದು ಮಲ್ಲ ಕೆಲಸ ದೊರೆತಿದೆ) ತನಿ (ತನಿ ಸೊಬಗು; ತನಿಗಂಪು; ತನಿ ಯೊಸರು; ತನಿಸೊಕ್ಕು), ದೊಡ್ಡ (ದೊಡ್ಡ ತನ, ದೊಡ್ಡಸ್ತಿಕೆ)
greatly — ಗು ಬಿಡೆ (ಬಿಡೆ ಬಗ್ಗಿಸಿದಾಗ ಮುರಿ ಯಿತು), ಬಂಬಳ (ಬಂಬಳ ಬಾಡು), ಕಡು (ಕಡುಬಳಲು; ಕಡುಬೆಳೆ; ಕಡುಮಿಂಚು), ತವೆ, ಕುಕ್ಕುಳ (ಕುಕ್ಕುಳ ಕುದಿ), ಕರಮೆ
greatness — ನಾ ಬದ್ದು (ಬದ್ದಿನಲ್ಲಿ ಆತನಿಗೆ ಹೋಲಿಕೆಲಿುಲ್ಲ), ಮೀಟು (ಮೀಟಾದ ಹೆಂಗಸು), ಎಕ್ಕಟೆ (ಎಕ್ಕಟಿಗ), ಕಂಡೆಯ (ಕಂಡೆಯ ಸೊಮ್ಮು), ಕರ, ದಂಡಿ, ಅಗ್ಗಳಿಕೆ (ತನ್ನ ಅಗ್ಗಳಿಕೆಯನ್ನು ತಾನೇ ಕೊಚ್ಚಿಕೊಳ್ಳು ತ್ತಿದ್ದಾನೆ), ಹೆಂಪು (ಹೆಂಪೇರು), ತಕ್ಕು (ತಕ್ಕು ಗೆಡು), ಬಳ್ಪಳಿಕೆ
greed — ನಾ ಪೆರ್ಬಯಕೆ, ಪೇರೆಳಸು, ಕೆಟ್ಟೆಳಸು
green gram — ನಾ ಹೆಸರು (ಹೆಸರು ಕಾಳು, ಹೆಸರುಬೇಳೆ)
green — ಗು 1 ಪಚ್ಚೆ (ಪಚ್ಚೆ ತೋರಣ; ಪಚ್ಚೆತೆನೆ), ಹಸುರು (ಹಸುರು ಹಾವು, ಹಸುರು ಬಣ್ಣ) 2 ಹಣ್ಣಾಗದ, ಎಳಸು 3 ಪಳಗದ
greenbelt — ನಾ ಹಸಿರುಪಟ್ಟಿ
greenhorn — ನಾ ಹೊಸಬ, ಪಳಗದವ
greenhouse — ನಾ ಹಸಿರುಮನೆ
greenly — ಗು ಹಚ್ಚಗೆ (ಗಿಳಿಗಳು ಹಚ್ಚಗೆ ಇರುತ್ತವೆ; ಹಚ್ಚಗೆ ಹೊಳೆಯುವ ಗುಡ್ಡ)
greens — ನಾ ಸೊಪ್ಪು,ಕೀರೆ (ಕೀರೆ ಸೊಪ್ಪು)
greet — ಕ್ರಿ ಎದುರುಗೊಳ್ಳು (ಅವರನ್ನು ಎದುರು ಗೊಳ್ಳಲು ನೀವೇ ಹೋಗಬೇಕು)
greeting — ನಾ ಹದುಳೊರೆ
gregarious — ಗು ಒಟ್ಟಿಗಿರುವ, ಹೊಂದಿ ಬಾಳುವ
grey — ಕ್ರಿ ನೆರೆ (ಆತನ ಕೂದಲು ನೆರೆತಿದೆ; ನೆರೆಗಡ್ಡ; ನೆರೆತನ; ನೆರೆದೋರು)
grey — ಗು ನರುಗು (ನರುಗು ಕಂಬಳಿ), ಮಬ್ಬು, ಮಸಕು, ಮಂಕು
grief — ನಾ ಮಿಡಿ (ಸಿಡಿಮಿಡಿ; ಮಿಡುಕು - ಮಿಟ್ಟನೆ ಮಿಡುಕು; ಏನು ಮಾಡುವುದೆಂದು ಮಿಡುಕುತ್ತಿದ್ದ), ಅಳಲು (ಅಳಲಿಕೆ, ಅಳ ಲಿಗ; ಅಳವಳಲು; ಆತನದು ಅಳಲಿಲ್ಲದ ಹುಯ್ಯಲು)
grievance — ನಾ ಬೇಗುದಿ, ದೂರು
grieve — ಕ್ರಿ ಮರುಗು (ಅಷ್ಟಕ್ಕೆಲ್ಲ ಮರುಗಲು ಅವಳಿಗೇನಾಗಿದೆ?), ಕುದಿ (ಮಗನ ಸಾವಿ ನಿಂದ ಕುದಿಯುತ್ತಿರುವ ತಾಲಿು; ಬೇಗುದಿ - ಬೇಗುದಿಸು; ಬೇಗುದಿಗೊಳ್ಳು; ಎದೆಗುದಿ; ಕುದಿಪ),
grievous — ಗು ಬೇಗುದಿಯ, ಮರುಕದ, ಕೆಡುಕು ಮಾಡುವ
grill — ಕ್ರಿ 1 ಸುಡು 2 ಎಡೆಬಿಡದೆ ಕೇಳು
grim — ಗು ಬೆಚ್ಚಿಸುವ, ಅಂಜಿಸುವ, ಕೆಡುಕಿನ
grimace — ನಾ ಸೊಟ್ಟಮೋರೆ, ಕಿವುಚು ಮೋರೆ
grime — ನಾ ಕೊಳೆ, ಇಲ್ಲಣ (ಹುಡುಗ ಮಯ್ಯ ಲ್ಲೆಲ್ಲ ಇಲ್ಲಣ ಮೆತ್ತಿಕೊಂಡಿದ್ದಾನೆ)
grin — ನಾ ಕೀನಿಕೆ ಕ್ರಿ ಕಿಸಿ (ನಾಲಿು ಹಲ್ಲು ಕಿಸಿದು ಸತ್ತಿತು; ಕಿಸಿಬಾಲಿು), ಕಿರಿ (ಕಂಡಕಂಡವರಿಗೆಲ್ಲ ಹಲ್ಲು ಕಿರಿಯುವುದು ಯಾಕೆ?)
grind — ಕ್ರಿ ಬೀಸು (ಬೀಸುವ ಕಲ್ಲು), ಮಸೆ (ಕತ್ತಿ ಮಸೆಯುತ್ತಿದ್ದಾನೆ), ಅರೆ (ಮದ್ದು ಅರೆ), ರುಬ್ಬು (ತೆಂಗಿನಕಾಲಿು ರುಬ್ಬಲು ಯಾರು ಬರುತ್ತಾರೆ?; ರುಬ್ಬುಕಲ್ಲು; ರುಬ್ಬು ಗುಂಡು), ತೇಯು (ತೇದ ಬೇರು),ತೆಗೆ (ಇದನ್ನು ಕಲ್ಲಿನ ಮೇಲೆ ತೆಗೆದರೆ ಕಂಪು ಹೊರಬರುತ್ತದೆ), ತಿರುವು (ಇದನ್ನು ಕಲ್ಲಿನಲ್ಲಿ ಹಾಕಿ ಚನ್ನಾಗಿ ತಿರುವಬೇಕು)
grinder — ನಾ 1 ಕಡೆಹಲ್ಲು 2 ರುಬ್ಬುಗೆ
grinding — ನಾಅರತ (ಮದ್ದರತ ಇನ್ನೂ ಮುಗಿದಿಲ್ಲ), ಅಮ್ಮಿ (ಅಮ್ಮಿಕಲ್ಲು)
grinding stone — ನಾ ಸಣ್ಣಿಗೆ (ಸಣ್ಣಿಗೆ ಯೊರಲು),ಗುಂಡುಕಲ್ಲು, ಬೀಸುಗಲ್ಲು, ಆಂದುಗಲ್ಲು
grip — ಕ್ರಿ ಪಟ್ಟುಹಿಡಿ, ಬಿಗಿಹಿಡಿ, ಸೆರೆಹಿಡಿ (ನಿಮ್ಮ ಗಮನವನ್ನು ಸೆರೆಹಿಡಿಯಬಲ್ಲ ಕತೆ)
gripe — ಕ್ರಿ 1 ನುಲಿ (ಆತನಿಗೆ ಹೊಟ್ಟೆ ನುಲಿಯು ತ್ತಿದೆ) 2 ದೂರು, ಗೊಣಗು
grisly — ಗು ಬೆದರಿಸುವ, ಬೆಚ್ಚಿಸುವ
grit — ನಾ 1 ಚೂರು (ಕಲ್ಲಿನ ಚೂರು; ಮಳಲ ಚೂರು) 2 ಎದೆಗಾರಿಕೆ, ಕೆಚ್ಚು
grits — ನಾ ತರಿ (ಅಕ್ಕಿ ತರಿ; ರೊಟ್ಟಿಗೆ ಅಕ್ಕಿಯನ್ನು ತರಿತರಿಯಾಗಿ ರುಬ್ಬಬೇಕು),ನುಚ್ಚು (ಗೋದಿ ನುಚ್ಚು, ಅಕ್ಕಿ ನುಚ್ಚು; ನುಚ್ಚುನುರಿ)
gritty — ಗು 1 ತರಕಲು (ಈ ಹಣ್ಣು ತರಕಲಾಗಿದೆಯಲ್ಲವೇ?) 2 ಕೆಚ್ಚೆದೆಯ
grizzled — ಗು ಬೂದುಬಣ್ಣದ
groan — ಕ್ರಿ ನರಕು (ಆಕೆ ನಂಟರು ಬಂದಾಗ ಹೆಚ್ಚು ನರಕುತ್ತಾಳೆ), ನರಳು (ನರಳಾಟ, ನರಳಿಕೆ), ಮುಲುಕು (ಹೆರಿಗೆ ಬೇನೆಯಿಂದ ಮುಲುಕುತ್ತಿದ್ದಾಳೆ)
grocer — ನಾ ಕಾಳುಗ
groggy — ಗು ಸೊಕ್ಕೇರಿದ (ಕುಡಿದು ಹಾದಿ ಯಲ್ಲೇ ಬಿದ್ದಿರುವ ಸೊಕ್ಕೇರಿದ ಮುದುಕ)
groin — ನಾತೊಡೆಸಂದು
groom — ನಾ ಮದುಮಗ
groom — ಕ್ರಿ 1 ಪಳಗಿಸು 2 ಅಂದಗೊಳಿಸು
groove — ನಾ ಕೊರಕಲು, ಹಳ್ಳ, ಉದ್ದ ಚಡಿ
grope — ಕ್ರಿ ಸಿದುಗು (ಕತ್ತಲೆಯಲ್ಲಿ ಕೆಳಗೆ ಬಿದ್ದ ಹಣವನ್ನು ಸಿದುಗಿದ), ಪರಡು, ತಡವರಿಸು, ತಡಕಾಡು (ನೀರಲ್ಲಿ ಮುಳುಗಿ ತಂಬಿಗೆ ಸಿಗು ತ್ತದೋ ಎಂದು ತಡಕಾಡುತ್ತಿದ್ದಾನೆ)
gross — ಗು 1 ತುಂಬಾ ದಪ್ಪದ, ಒರಟು, ಎದ್ದುಕಾಣುವ 2 ಒಟ್ಟಾರೆ (ನಿಮಗೆ ಒಟ್ಟಾರೆ ಸಂಬಳ ಎಷ್ಟು ಬರುತ್ತದೆ?)
grotesque — ಗು ತಿರುಚಿದ, ನಗು ಬರಿಸುವ
grotto — ನಾ ಅಂದವಾದ ಗವಿ
grouch — ಕ್ರಿ ದೂರಿಡು, ಗೊಣಗು, ಗೊಣ ಗಾಡು (ಗೊಣಗಾಡುವ ಮುದುಕಿ)
ground — ನಾ ನೆಲ (ನೆಲದ ಪಡೆ; ನೆಲ ದೊಡೆಯ; ನೆಲಕಂಪು)
groundnut — ನಾ ನೆಲಗಡಲೆ, ಕಡಲೆಕಾಯಿ
groundwater — ನಾ ಅಡಿನೀರು, ನೆಲ ನೀರು
group — ನಾತಂಡ (ತಂಡತಂಡವಾಗಿ ಬರು),ಒಗ್ಗಡ (ಒಗ್ಗಡಿಸು), ಉರಳಿ, ಕೂಟ, ಮೊತ್ತ (ಆನೆಗಳ ಮೊತ್ತ), ಗುಂಪು, ತೆಮ್ಮಲು
group (of four) — ನಾ ಉಡಿ (ಇವತ್ತು ನಾನು ಆರು ಉಡಿ ಗೇರುಬೀಜ ಗೆದ್ದೆ)
grouse — ಕ್ರಿ ಗೊಣಗು, ದೂರು
grove — ನಾಹಾಡಿ,ತೋಪು (ಮಾವಿನ ತೋಪು)
grovel — ಕ್ರಿ ಅಡ್ಡಬೀಳು, ಅಂಗಲಾಚು, ತಗ್ಗಿ ಬಗ್ಗಿ ನಡೆ
grow — ಕ್ರಿ ಬೆಳೆ (ಬೆಳೆದ ತೆನೆ), ಬಲಿ (ಬಲಿತ ಕಾಯಿ, ಬಲಿತು ಹಣ್ಣಾದ ಬಾಳೆಕೊನೆ), ಪಾರು (ಹಣ್ಣುಬಾರು - ಮೊನ್ನೆ ಕಡಿದ ಹಲಸಿನ ಕಾಯಿ ಹಣ್ಣುಬಾರಾಗಿದೆ), ತಲೆ ಯೆತ್ತು, ದೊಡ್ಡದಾಗು
grow dim — ಕ್ರಿ ಮಸುಳು (ಬಾನು ಮಸುಳಿತು) hot ಕ್ರಿ ಕಾಯು (ಕಾದ ಕಾವಲಿಗೆ)
grow up — ಕ್ರಿ ಬಳೆ (ಹುಡುಗರಿಬ್ಬರೂ ಬಳೆಯುತ್ತಿದ್ದರು), ಮಡಲು
growl — ಕ್ರಿ ಗುರುಗುಟ್ಟು (ಬೆಕ್ಕು ಬರುತ್ತಿರುವು ದನ್ನು ಕಂಡು ನಾಯಿ ಗುರುಗುಟ್ಟುತ್ತಾ ಇದೆ)
grownup — ನಾ ದೊಡ್ಡವನು
growth — ನಾ 1 ಬೆಳವಣಿಗೆ, ಬಳವಿ (ತಿಂಗಳ ಬಳವಿ), ಬಳೆವಿಗೆ, ಏಳಿಗೆ (ಏಳಿಗೆಕುಂದು) 2 ಗಡ್ಡೆ (ಆತನ ಹೊಟ್ಟೆಯೊಳಗೆ ಗಡ್ಡೆ ಬೆಳೆದಿದೆ)
grub — ನಾ ದುಂಬಿಮರಿ
grub — ಕ್ರಿ 1 ಅಗೆದು ತೆಗೆ 2 ಹುಡುಕು 3 ಮಯ್ಮುರಿದು ದುಡಿ
grubby — ಗು ಕೊಳಕು, ಮಾಸಲು
grudge — ನಾ ಕೇಣ (ಕೇಣಗೊಳ್ಳು; ಕೇಣವನ್ನು ಬಿಟ್ಟು ಆತನ ಮಾತನ್ನು ಕೇಳಿ)
gruel — ನಾ ಅಂಬಲಿ (ಅಂಬಲಿ ಕುಡಿಯುವುದು)
gruelling — ಗು ದಣಿಸುವ, ತುಂಬಾ ಬಳ ಲಿಸುವ
gruesome — ಗು ಬೆಚ್ಚಿಸುವ, ದಿಗಿಲುಗೊಳಿ ಸುವ
gruff — ಗು 1 ಒರಟು (ಒರಟು ಮಾತು), ಗದರಿಸುವ, ಸಿಡುಕುವ (ಎಲ್ಲರ ಮೇಲೂ ಸಿಡುಕುವ ಮುದುಕ), 2 ಹೆಚ್ಚು ಮಾತಿಲ್ಲದ 3 ದರಕು ಉಲಿಯ
grumble — ಕ್ರಿ ಗೊಣಗು (ಗೊಣಗಾಡು; ಗೊಣಗುಟ್ಟು)
grumbling — ಗು ನರಟು (ನರಟುಗಾರ - ನರಟುಗಾರ ಒರಟಾಡುತ್ತಿದ್ದಾನೆ)
grumpy — ಗು ಗೊಣಗಾಡುವ, ದೂರಿಡುವ, ಸಿಡುಕಿನ
grunt — ಕ್ರಿ ಗುರ್ರೆನ್ನು (ಹತ್ತಿರ ಹೋದಾಗ ನಾಯಿ ಗುರ್ರೆನ್ನುತ್ತಿತ್ತು)
guaranty — ನಾ ಹೊಣೆ (ಅವನು ಸಾಲಕ್ಕೆ ನನ್ನನ್ನು ಹೊಣೆ ಮಾಡಿದ; ಹೊಣೆಯಾಗು; ಹೊಣೆಗಾರಿಕೆ; ಹೊಣೆಗಾರ)
guard — ನಾ ಕಾಪು (ಕಾಪುಮಾಡು; ಕಾಪು ಕಾಡು),ಕಾವಲು (ಕಾವಲುಗಾರ; ಕಾವಲು ಮನೆ)
guard — ಕ್ರಿ ಕಾಯು (ಕಾಯ್ದಿಡು; ಕಾದಿಡು; ಕಾದುಕೊಂಡಿರು;ಕಾಯಿಕೆ)
guard house — ನಾಉಕ್ಕಡ (ಉಕ್ಕಡದ ಬಾಗಿಲು; ಉಕ್ಕಡಮನೆ), ಕಟ್ಟೆ (ಸುಂಕದ ಕಟ್ಟೆ)
guardian — ನಾ ಸಾಕುಗ, ನೋಡಿಕೊಳ್ಳು ವವನು
guerilla — ನಾ ಮರೆಪಡೆ
guess — ಕ್ರಿ ತೀರ್ಮಾನಕ್ಕೆ ಬರು (ಸರಿಯಾಗಿ ತಿಳಿಯದಿದ್ದರೂ ಆತ ಒಂದು ತೀರ್ಮಾನಕ್ಕೆ ಬಂದಿದ್ದ)
guest — ನಾ ಬಿದ್ದಿನ (ಮನೆಗೆ ಬಿದ್ದಿನ ಬಂದಿ ದ್ದಾನೆ)
guffaw — ನಾ ಬಿರುನಗು, ಗಹಗಹಿಸುವ ನಗು
guidance — ನಾ ಮುಂದಾಳ್ತನ, ದಾರಿತೋರು ವಿಕೆ, ಅರಿವು ಕೊಡುಗೆ
guide — ಕ್ರಿ ಅರಿವು ಕೊಡು, ದಾರಿ ತೋರು, ಹತೋಟಿಯಲ್ಲಿಡು, ತೆರಹುದೋರು
guideline — ನಾ ಕೆಲಸದ ಕಟ್ಟುಪಾಡು, ತಿಟ್ಟ, ಗೊತ್ತುವಳಿ
guidepost — ನಾ ಕಯ್ಕಂಬ
guild — ನಾ ಕೂಟ, ಸೇರುಗೆ
guile — ನಾ ಸಂಚು, ಮೋಸ, ಮುಚ್ಚುಮರೆ
guilt — ನಾ ತಪ್ಪು, ತಪ್ಪನಿಸಿಕೆ, ಕುತ್ತ
guilty — ನಾ ತಪ್ಪುಗಾರ
guise — ನಾ ಹೊರತೋರಿಕೆ, ಉಡುಪು, ತೋರ್ಕೆ
gulch — ನಾ ಆಳಕಣಿವೆ, ಕಮ್ಮರಿ ನಾಕೊಲ್ಲಿ (ಕೊಲ್ಲಿಗೆ ಹೋದವರ ಮನೆ)
gullet — ನಾ ಗಂಟಲು, ಉಣ್ಕೊಳವೆ
gullible — ಗು ಅಕ್ಕಟೆ ಮೋಸಹೋಗಬಲ್ಲ
gully — ನಾ ಕಮರಿ, ಕಿರುಕಣಿವೆ
gulp — ನಾಗುಟುಕು (ಗುಟುಕರಿಸು; ಗುಟುಕಿಡು; ಗುಟುಕು ನೀರು), ನುಂಗು
gum — ನಾ 1 ಬಂಕೆ (ಬಂಕೆಯಂಟು; ಬಂಕೆ ಬೆವರು), ಅಂಟು (ಅಂಟಿನ ಮರ), ಸರಿ (ಹುಣಿಸೆ ಬೀಜದ ಸರಿ), ಹಗಿನು (ಎಲ ವಲದ ಹಗಿನು), ಜಿಗಿ (ಜಿಗಟು) 2 ಒಸಡು (ಒಸಡೊಡೆದು ನೆತ್ತರು ಹರಿಲಿುತು), ಈರು, ಇಗರು
gumption — ನಾ ಎದೆಗಾರಿಕೆ, ಕೆಚ್ಚು
gun — ನಾ ಬೆಡಿ (ಆತನ ಹಿಂದೆ ಯಾವಾಗಲೂ ಬೆಡಿ ಹಿಡಿದವನೊಬ್ಬ ಇರಬೇಕು),ಕೋವಿ (ಕೋವಿಕಾರ; ಕೋವಿಮದ್ದು)
gun cotton — ನಾಸಿಡಿಹತ್ತಿ
gurgle — ಕ್ರಿ 1 ಜುಳುಜುಳು ಹರಿ 2 ಗಂಟಲು ಮುಕ್ಕುಳಿಸು
gush out — ಕ್ರಿ ಚಿಮ್ಮು (ಮೇಲಕ್ಕೆ ಚಿಮ್ಮುವ ನೀರು; ಚಿಮ್ಮುಗೆ; ಮಾತು ಚಿಮ್ಮು)
gust — ನಾ ಹೊಯ್ಗಾಳಿ (ಹೊಯ್ಗಾಳಿಗೆ ನೀರೆಲ್ಲ ಮನೆಯೊಳಗೆ ಬಂತು), ಹೊಯ್ಮಳೆ
gut — ನಾ 1 ಕರುಳು 2 ಕೆಚ್ಚು
gutter — ನಾ ಬಚ್ಚಲು (ಬಚ್ಚಲು ನೀರು ದಾರಿ ಗಡ್ಡ ಹರಿಯುತ್ತಿತ್ತು)
guttural — ಗು ಗಂಟಲಿನ
guy — ನಾ ಆಳು
guzzle — ಕ್ರಿ ಗಟಗಟನೆ ಕುಡಿ
gymnasium — ನಾ ಗರಡಿಮನೆ
gynecology — ನಾ ಹೆಣ್ಣೊಡಲರಿಮೆ
gyrate — ಕ್ರಿ ಸುತ್ತು, ತಿರುಗು (ಆತ ನಿಂತಲ್ಲೀ ಗರಗರನೆ ತಿರುಗುತ್ತಿದ್ದ) habiliment — ನಾಉಡುಗೆ ತೊಡುಗೆ
habit — ನಾ ಚಟ (ಕೆಟ್ಟ ಚಟ; ಚಟಮಾರಿ), ಬಳಕೆ (ಅವನಿಗೆ ದಿನಾಲೂ ತಿರುಗಾಟಕ್ಕೆ ಹೋಗುವುದು ಬಳಕೆಯಾಗಿದೆ), ತೆವಲು (ತೆವಲುಗಾರ)
habitable — ಗು ತಂಗಬಲ್ಲ, ಇರಬಲ್ಲ (ಇರಬಲ್ಲ ಮನೆ)
habitant — ನಾ ನೆಲಸುಗ, ಇರುಗ (ಈ ಊರಿನ ಇರುಗರೆಲ್ಲರೂ ಕರಾವಳಿಲಿುಂದ ಬಂದವರು)
habitat — ನಾ ಇಕ್ಕೆ, ನೆಲೆ, ಬೀಡು
habitation — ನಾ ಮನೆ, ಬೀಡು
habitual — ನಾ ಬಳಕೆಯ, ಚಟಕ್ಕೆ ಸಿಕ್ಕಿದ (ಅವನು ಹೊಗೆ ಸೇದುವ ಚಟಕ್ಕೆ ಸಿಕ್ಕಿ ಬಿದ್ದಿದ್ದಾನೆ)
hack — ನಾ 1 ಕಡಿತ 2 ಒಣಕೆಮ್ಮು 3 ಕಳಪೆ ಬರಹಗಾರ 4 ಕುದುರೆಗಾಡಿ
hack — ಕ್ರಿ 1 ಕೊಚ್ಚು, ಕಡಿ 2 ಕೆಮ್ಮು
hackneyed — ಗು ಹಳಸಲು (ಹಳಸಲು ಪದ ಕಂತೆ), ಸವಕಲು
hacksaw — ನಾ ಗರಗಸ
haemorrhage — ನಾ ನೆತ್ತರ ಸುರಿತ
hag — ನಾ ಮುದಿಗೂಬೆ
haggard — ಗು ಬಡಕಲು, ಸಣಕಲು
haggle — ಕ್ರಿ ಕೊಸರಾಡು
hail — ಕ್ರಿ 1 ಹದುಳೊರೆ 2 ಕರೆ, ಬರಹೇಳು 3 ಆಲಿಕಲ್ಲು ಸುರಿ
hailstone — ನಾಆಲಿ (ಆಲಿಕಲ್ಲು; ಆಲಿ ಮಳೆ, ಆಲಿನೀರು), ಮುಗಿಲಕಲ್ಲು
hair ( — ನಾನವಿರು (ತಲೆಯ ನವಿರು, ಮಯ್ಯ ನವಿರು),ಕೂದಲು ತಲೆಗೂದಲು)
hair (artificial) — ನಾ ಉದುರಿ (ಆಕೆಗೆ ಕೂದಲು ಉದುರಿದುದರಿಂದ ಉದುರಿ ಹಾಕಬೇಕಾಗಿದೆ)
hair (fine) — ನಾಬೊಚ್ಚು
hair (knot) — ನಾ ಮುಡಿ (ಅಡ್ಡಮುಡಿ; ಪೆರ್ಮುಡಿ), ತುರುಬು (ತುರುಬು ಕಟ್ಟು; ತುರುಬಿನಲ್ಲಿ ಹೂ ಮುಡಿ)
hairdo — ನಾ ಕೂದಲಣಿಗೆ ನಾ ಕೂದಲಣಿಗ
hale — ಕ್ರಿ ಹೋಗಪಡಿಸು, ಹೋಗುವಂತೆ ಮಾಡು
hale — ಗು ಗಟ್ಟಿಮುಟ್ಟಾದ
half — ಗು ಅರೆ (ಅರೆಚಣ್ಣ, ಅರೆತಲೆ ನೋವು, ಅರೆಮನಸ್ಸು, ಅರೆವಾಸಿ, ಅರೆ ಆಳಿನ ಕೂಲಿ)
half-hearted — ಗು ಹುರುಪಿಲ್ಲದ, ಅರೆ ಮನದ
half-pant — ನಾ ಚಡ್ಡಿ
half-ripe — ನಾ ಉಳ್ಳಗಾಲಿು (ಆಕೆಗೆ ಉಳ್ಳ ಗಾಲಿು ತಿಂದು ಹೊಟ್ಟೆನೋವು ಬಂದಿದೆ), ದೋರೆಗಾಲಿು
hall — ನಾ ಅಂಬಲ (ಮನೆಯ ಅಂಬಲ; ಅಂಬಲಗೊಟ್ಟಿಗೆ), ತೊಟ್ಟಿ
hallucination — ನಾ ಹುಸಿಗಾಣ್ಕೆ, ಹುಸಿ ದೋರ್ಕೆ
halo — ನಾ ಬೆಳಕಿನ ಬಳಸಿ (ನೇಸರ ಸುತ್ತ ಬೆಳಕಿನ ಬಳಸಿ ಕಾಣಿಸುತ್ತದೆ), ಗುಡಿ
halt — ನಾನಿಲುಗಡೆ (ಅರಳಿ ಮರದ ಹತ್ತಿರ ನಿಲುಗಡೆಲಿುದೆ),ನಿಲ್ಲಡೆ, ಬೀಡು (ಬೀಡು ಬಿಡು), ತಂಗುಮನೆ, ತಂಗುದಾಣ, ಇಡುರಿ
halt — ಕ್ರಿ 1 ತಡೆಹಿಡಿ, ನಿಲ್ಲಿಸು 2 ತಂಗು (ಊರುಬಿಟ್ಟು ಹೊಲಗೇರಿಯಲ್ಲಿ ತಂಗಿ ದರು)
halter — ನಾ ಕುಣಿಕೆ, ನೇಣು
halve — ಕ್ರಿ ಎರಡಾಗಿಸು, ಅರೆಗೆಡೆ
hamlet — ನಾಪಟ್ಟಿ (ತುರುಕಾರರ ಪಟ್ಟಿ),ಪಾಡಿ (ಕನ್ನಂಬಾಡಿ, ಹಾಗಲವಾಡಿ), ಹಾಡಿ,ಹುಂಡಿ, ಕೊಪ್ಪ (ಕೊರಗರ ಕೊಪ್ಪ),ಕೊಂಪೆ,ಮಂದು (ತೊದವರ ಮಂದು)
hammer — ಕ್ರಿ ಹೆಟ್ಟು (ಗೂಟವನ್ನು ನೆಲದ ಮೇಲಿರಿಸಿ ಹೆಟ್ಟಿದ)
hammer — ನಾ ಸುತ್ತಿಗೆ (ಹುಡುಗನ ಬೆರಳ ಮೇಲೆ ಸುತ್ತಿಗೆ ಬಿತ್ತು)
hammer (sledge) — ನಾಚಮ್ಮಟಿಗೆ (ಕಮ್ಮಾರನ ಚಮ್ಮಟಿಗೆ)
hammer (wooden) — ನಾ ಕೊಡತಿ (ಹೆಂಟೆ ಗೊಡತಿ - ಮಣ್ಣ ಹೆಂಟೆಗಳನ್ನು ಒಡೆಯಲು ಹೆಂಟೆಗೊಡತಿ ಬೇಕು)
hammock — ನಾ ಜೋಲುಮಂಚ, ಜೋಲಿ
hamper — ನಾ 1 ಬುಟ್ಟಿ, ಕುಕ್ಕೆ, ಹೆಡಿಗೆ 2 ತಡೆ (ತಡೆಯೊಡ್ಡು), ಅಡ್ಡಿ (ಅಡ್ಡಿಮಾಡು)
hand — ನಾ ಕೈ (ಕಲಿ್ನುೀಡು; ಕಲಿ್ಮುೀರು; ಕಯ್ಮಾಡು; ಕಯ್ಯಾರೆ; ಕಯ್ತುಂಬಿ)
handbag — ನಾ ಕಲಿ್ಚುೀಲ
handbill — ನಾ ಕಿರುತಿಳುಪು, ಕಲಿ್ತುಳುಪು, ಕಯ್ಯರಿಕೆ ನಾ ಕಿರುಹೊತ್ತಿಗೆ, ಕಿರುಕಡತ
hand-brake — ನಾ ಕಲಿ್ಬುರಿ
handcart — ನಾ ಕಯ್ಗಾಡಿ
handcuff — ನಾಕಯ್ಕೋಳ (ಕಯ್ಕೋಳ ತೊಡಿಸಿ ಆತನನ್ನು ನಡುವೆ ನಿಲ್ಲಿಸಿದ್ದರು)
handful — ನಾ ಬೊಗಸೆ (ಬೊಗಸೆ ನೀರು), ಸೆರೆ (ಒಂದು ಸೆರೆ ಅಕ್ಕಿ), ಸೇರೆ (ಕಯ್ಗಳ ಸೇರೆ), ಹಿಡಿ (ಹಿಡಿತುಂಬು; ಹಿಡಿಹುಲ್ಲು)
handgun — ನಾ ಕಯ್ಕೋವಿ
handicap — ನಾ ಅಡ್ಡಿ (ಅಡ್ಡಿಪಡಿಸು), ತೊಂದರೆ (ತೊಂದರೆ ಕೊಡು)
handicapped — ಗು ಬಳವಿಗುಂದಿದ, ಹೆಳವ
handicraft — ನಾ ಕಯ್ಕಲೆ, ಕಯ್ಕೆಲಸ
handiwork — ನಾ ಕಯ್ಕೆಲಸ
handkerchief — ನಾ ಕಯ್ಬಟ್ಟೆ
handle — ನಾ ಹಿಡಿ (ಕತ್ತಿಯ ಹಿಡಿ; ಹಿಡಿಕೆ), ಕಾವು (ಕೊಡೆಯ ಕಾವು; ಕತ್ತಿಯ ಕಾವು), ಕಯ್, ಉಗ್ಗ (ಹುರಿಹಗ್ಗದ ಉಗ್ಗ), ಗುಣಿ (ಚಾಟಿಯ ಗುಣಿ)
handle — ಕ್ರಿ 1 ಮುಟ್ಟು, ಎತ್ತು 2 ಹಿಡಿತ ದಲ್ಲಿಡು
handloom — ನಾಕಯ್ಮಗ್ಗ
handout — ನಾ 1 ಕಿತ್ತರಿಕೆ (ತಮ್ಮ ಕಿತ್ತರಿಕೆ ಯನ್ನು ಅವರು ಎಲ್ಲರಿಗೂ ಹಂಚುತ್ತಿದ್ದಾರೆ) 2 ತಿರುಪೆ
handrail — ನಾ ಕಟಕಟೆ, ಕಯ್ತಾಂಗು
handshake — ನಾ ಕಯ್ಕುಲುಕು
handsome — ಗು 1 ದೊಡ್ಡ (ದೊಡ್ಡ ಕೊಡುಗೆ), ಕೊಡುಗಯ್ಯ 2 ಸಾಕಷ್ಟು, 2 ಸೊಗಸಾದ, ಅಂದವಾದ, ಚೆಲುವಿನ (ಚಲುವಿನ ಮೋರೆ), ಚನ್ನಾದ
handwriting — ನಾ ಕಯ್ಬರಹ, ಬರವಣಿಗೆ
handy — ಗು 1 ಕಯ್ಗೆ ಸಿಗುವ 2 ಕಯ್ಚಳಕದ 3 ತಕ್ಕ, ಹೊಂದುವ
hang — ಕ್ರಿ (ಆ) ನೇಲು (ನೇತಾಡು), ಏಲು (ಏಲಾಡು), ಎಳಲು, ತೂಗು (ತೂಗು ಹಾಕು) (ಮಾ) ಇಳಿಬಿಡು (ಹೆಗಲಿಗೆ ಇಳಿಬಿಟ್ಟ ಚೀಲ), ಎಳಲೆವಿಡು
hang around — ಕ್ರಿ ಅಲ್ಲೀ ಸುತ್ತುತ್ತಿರು, ಅಲೆದಾಡುತ್ತಿರು
hang back — ಕ್ರಿ ಹಿಂದೆಗೆ, ಹಿಮ್ಮೆಟ್ಟು down ಕ್ರಿ (ಆ) ಜೋಲು (ಜೋತು ಬೀಳು; ಜೋತುಹಾಕು), ತೊಂಗು (ತೊಂಗುತ್ತಿರುವ ನೆಲ್ಲುಗಳು) (ಮಾ) ಎಳಲೆವಿಡು, ಎಳಲಿಕ್ಕು
hang on — ಕ್ರಿ ನಚ್ಚಿಕೊಂಡಿರು, ನಂಬಿರು, ಬಿಡದಿರು
hanger-on — ನಾ ಹಿಂಬಾಲಕ, ಹೊರಕುಳಿ
hanker — ಕ್ರಿ ಹಂಬಲಿಸು (ಬಿಸಿಲಲ್ಲಿ ನಡೆದು ನೆರಳಿಗೆ ಹಂಬಲಿಸುತ್ತಿದ್ದ)
haphazard — ಗು ಗೊತ್ತುಗುರಿಲಿುಲ್ಲದ, ಅಡ್ಡಾದಿಡ್ಡಿ
hapless — ಗು ನಂಬಿಕೆಯಳಿದ, ಸೊಮ್ಮಳಿದ
happen — ಕ್ರಿ ಆಗು (ಉಂಟಾಗು), ಒದಗು, ಒಡಗೂಡು; ಈಡೇರು
happening — ನಾ ಆಗುಹ
happiness — ನಾ ಸೊಮ್ಮು (ಸೊಮ್ಮು ಕೆಡಿಸು; ಸೊಮ್ಮುಗೊಳ್ಳು), ಅದುಕುಳಿ, ಹೊಂಪುಳಿ (ಹೊಂಪುಳಿಪಡೆ), ಹದುಳ (ಹದುಳಿರು; ಇತ್ತೀಚೆಗೆ ಆತ ತುಂಬಾ ಹದುಳಿರುವ ಹಾಗೆ ಕಾಣಿಸುತ್ತದೆ), ದೊಂದುಳಿ, ಅರ್ತಿ, ಒಲವರ (ಒಲವರಗೊಳ್ಳು), ಒಲವು (ಒಲವಾಗು; ಒಲವೆತ್ತು ಬರು), ಒಲುಮೆ
harass — ಕ್ರಿ ಸೆರೆ (ಅತನನ್ನು ಸೆರೆದು ಓಡಿಸಿ ದರು), ಅಂಡಲೆಸು (ಅವನನ್ನು ಅಂಡಲೆಸಿ ದಣಿಸುತ್ತಿದ್ದಾನೆ)
harassment — ನಾ ಹಾವಳಿ (ಈ ಊರಲ್ಲಿ ತುಂಬಾ ಗಂಟುಗಳ್ಳರ ಹಾವಳಿಲಿುದೆ)
harbinger — ನಾ 1 ಮುನ್ನರಿವು 2 ಸುದ್ದಿಗ, ಓಲೆಕಾರ
harbour — ನಾ ಬಂದರು (ಹಡಗು ಬಂದರಿಗೆ ಬಂದು ನಿಂತಿದೆ)
harbour — ಕ್ರಿ ಎಡೆಕೊಡು, ನೆಲೆನೀಡು
hard — ಗು ಗಟ್ಟಿ (ಗಟ್ಟಿಕಾಳು), ಗಡಸು (ಗಡಸು ನೀರು), ಬೆಟ್ಟ (ಬೆಟ್ಟಬೇಸಗೆ; ಬೆಟ್ಟವೆಸಗೆ; ಬೆಟ್ಟನೆ), ಬೆಟ್ಟೆ (ಬೆಟ್ಟೆಚಿನ್ನ, ಬೆಟ್ಟೆಬೆಳ್ಳಿ; ಬೆಟ್ಟೆಮಾತು), ಬಿರು (ಬಿರುಬಿಸಿಲು, ಬಿರುನೋಟ; ಬಿರುಗತ್ತಲೆ; ಬಿರುಗಾಳಿ; ಬಿರುನುಡಿ), ಬಿರುಸು (ಬಿರುಸು ಕೂದಲು; ಬಿರುಸುಗಟ್ಟು; ಬಿರುಸುನುಡಿ), ಪೆಡಸು, ಕಡದು (ಕಡದುಳ್ಳವ, ಕಡದಾಳ)
harden — ಕ್ರಿ ಕಡುಗು (ಕಡುಗಿದ ಮಣ್ಣು), ಗಟ್ಟಿಯಾಗು (ನೆಲ ಒಣಗಿ ಗಟ್ಟಿಯಾಗಿದೆ), ಕಾಯ್ಗಟ್ಟು
hard-hearted — ಗು ಕಲ್ಲದೆಯ, ಮರುಕ ವಿಲ್ಲದ, ಕಾಳಿಮೆ (ಕಾಳಿಮೆಯರಸು)
hardship — ನಾ ಒದ್ದಾಟ, ತೊಂದರೆ
hardy — ಗು ದಿಂಡು, ಗಟ್ಟಿಮನದ
hare — ನಾ ಮೊಲ ಗು ದುಡುಕುವ, ಮುನ್ನುಗ್ಗುವ
harelip — ನಾಸೀಳ್ದುಟಿ
harem — ನಾ ಹೆಂಗಳರೆ
hark — ಕ್ರಿ ಕೇಳು, ಕಿವಿಗೊಡು
harm — ನಾ ಕೆಡುಕು, ತೊಂದರೆ, ಕೇಡು
harmless — ಗು ತೊಂದರೆಲಿುಲ್ಲದ, ಕೆಡು ಕಿಲ್ಲದ
harmonious — ಗು ಹೊಂದಿಕೆಯಾಗುವ, ಹೊಂದಿಕೊಳ್ಳುವ
harmony , — ನಾ ಹೊಂದಿಕೆ (ಅವರೊಳಗೆ ಹೊಂದಿಕೆಲಿುಲ್ಲ), ಪೊರ್ದುಗೆ ಒಕ್ಕಟ್ಟು (ಒಕ್ಕಟ್ಟಿಲ್ಲದ ಮನೆ),ಒಚ್ಚತ, ಒಗತನ (ಒಗತನದಿಂದ ಬಾಳು)
harp — ಕ್ರಿ ಹೇಳಿದ್ದೇ ಹೇಳು
harpoon — ನಾಈಟಿಗಾಳ
harpy — ಗು ಪೆರ್ಬಯಕೆಯ, ಕಟ್ಟೆಳಸಿನ
harrow — ನಾಹಲುಬೆ, ಹಲಿವೆ
harrowing — ಗು ಕಡುನೋವಿನ
harry — ಕ್ರಿ ಕೊಳ್ಳೆಹೊಡೆ, ಅಂಡಲೆಸು
harsh — ಗು ಪರಟೆ (ಪರಟೆತಲೆ), ಬಿಟ್ಟೆ, ಬೆಟ್ಟ (ಬೆಟ್ಟಬೇಸಿಗೆ), ಬಿರು (ಬಿರುನುಡಿ; ಬಿರು ಬಿಸಿಲು), ಬಿರುಸು (ಬಿರುಸುನುಡಿ), ಮೊನೆ (ಮೊನೆಮಾತು)
harsh sound — ನಾ ಗವುರು
harshly — ಗು ಬೆಟ್ಟನೆ, ಬಿಚ್ಚನೆ
harshness — ನಾಪರಿಗೆ, ಪಪ್ಪರಿಕೆ, ಇರುಂಬು
harvest — ನಾ ಕೊಯ್ಲು (ಇನ್ನೂ ನಮ್ಮ ಗದ್ದೆಯ ಕೊಯ್ಲಾಗಿಲ್ಲ)
hash — ನಾ 1 ಬೆರಕೆ 2 ಗೊಂದಲ, ಗಲಿಬಿಲಿ
hash — ಕ್ರಿ 1 ಕೊಚ್ಚು, ಚೂರುಮಾಡು 2 ಕೆಡಿಸು (ಕೆಲಸವನ್ನು ಆತ ಕೆಡಿಸಿಬಿಟ್ಟ), ಹಾಳು ಮಾಡು
hasp — ನಾಚಿಲುಕ (ಬಾಗಿಲ ಚಿಲುಕ)
hassle — ನಾ ತೊಂದರೆ, ಹೋರಾಟ, ಜಗಳ
haste — ನಾ ಉರವಣಿ (ಉರವಣಿಸು), ಅಸವಸ (ಅಸವಸದಿಂದ ಮಾಡು), ಒತ್ತಂಬರ, ಗಡಿ ಬಿಡಿ (ಅವನಿಗೆ ಯಾವಾಗಲೂ ಗಡಿಬಿಡಿ), ಚಚ್ಚರ (ಚಚ್ಚರದಿಂದ ಆತನನ್ನೆಬ್ಬಿಸಿದ), ಬೆರಗು, ದುಡುಕು ಕ್ರಿ ಪದರು (ಪದರಾಡು), ಗಡಿಬಿಡಿ ಮಾಡು (ನೀವು ಅಷ್ಟೂಂದು ಗಡಿಬಿಡಿ ಮಾಡುವುದು ಯಾಕೆ?)
hastily — ಗು ಸರಸರನೆ (ಸರಸರಿಸು), ಅಬಕ್ಕನೆ (ಅಬಕ್ಕನೆ ನುಂಗು)
hatch — ನಾ ಬಾಗಿಲು, ಕದ
hatch — ಕ್ರಿ ಕಾವುಕೊಡು, ಮರಿಮಾಡು
hatch (a plot) — ಕ್ರಿ ಸಂಚುಮಾಡು
hatchet — ನಾ ಮಚ್ಚು (ಮರ ಕಡಿಯಲು ಮಚ್ಚು ಹಿಡಿದುಕೊಂಡು ಬಂದ; ಮಚ್ಚು ಕತ್ತಿ), ಕಯ್ಗೊಡಲಿ
hate — ಕ್ರಿ ಹಗೆಮಾಡು, ಒಲ್ಲದಿರು
hatred — ನಾಹಗೆ, ಹಗೆತನ,ಕಿಸುರು
haughtiness — ನಾ ಸೆಡಕು (ಸೆಡಕಾಗಿ ಹೇಳು; ಸೆಡಕುಗಾತಿ),ಪನ್ನ
haughty (be) — ಕ್ರಿ ಮಲೆ (ಮಲೆತು ನಿಂತ ವರು; ಮಲೆಗೆಯ್ಯು)
haul — ಕ್ರಿ ಎಳೆ, ಎಳೆದು ಸಾಗಿಸು
haunt — ಕ್ರಿ ಸುಳಿದಾಡು, ಕಾಡು
haunted — ಗು ಗಾಳಿಗ ಕಾಡುವ
haunting — ಗು ನೆನಪಿನಲ್ಲುಳಿಯುವ, ನೆನಪಿ ನಲ್ಲಿ ಕಾಡುವ (ನೆನಪಿನಲ್ಲಿ ಕಾಡುವ ಹಾಡು)
have — ಕ್ರಿ ಹೊಂದಿರು, ಪಡೆದಿರು, ಇರು
haven — ನಾ 1 ನೆಮ್ಮದಿಯೆಡೆ, ಮರೆ, ಉಳವೆ 2 ಬಂದರ
havoc — ನಾ ಅಳಿವು, ಚಟ್ಟು, ಹಾವಳಿ
hawk — ನಾಹದ್ದು (ಹದ್ದುಕಣ್ಣು), ಗಿಡುಗ
hawk — ಕ್ರಿ 1 ಕೇಕರಿಸು (ಕೇಕರಿಸಿ ಉಗುಳು) 2 ಕೂಗಿ ಮಾರು
hay — ನಾ ಒಣಹುಲ್ಲು
haystack — ನಾ ಕುತ್ತರಿ
haywire — ಗು ಕಗ್ಗಂಟಾದ, ಸಿಕ್ಕುಸಿಕ್ಕಾದ
hazardous — ಗು ತೊಂದರೆಯ, ಕುತ್ತ ತರ ಬಲ್ಲ
haze — ನಾ ಮಬ್ಬು, ಮಸುಕು
hazel — ಗು ನಸು ಕಂದು
hazy — ಗು ಮಂಜು ಕವಿದ, ಹೊಗೆ ಕವಿದ ನಾ 1 ತಲೆ (ತಲೆಬಾಗು; ತಲೆಗಿಂಬು; ತಲೆಗೆ ಹತ್ತು), ಮಂಡೆ (ಮಂಡೆ ಬಿಸಿ ಯಾಗು; ಮಂಡೆ ತೂಗು) 3 ಮುಂದಾಳು, ಮೇಲಾಳು
head — ಕ್ರಿ 1 ಮುಂದಿರು, ಮೇಲಾಳಾಗಿರು 2 ಗುರಿಹಿಡಿ (ಗುರಿ ಹಿಡಿದು ಸಾಗು)
head (back) — ನಾಹೆಡತಲೆ
headache — ನಾ ತಲೆನೋವು
headdress — ನಾ ತಲೆಯುಡಿಗೆ
heading — ನಾ ತಲೆಬರಹ, ಒಕ್ಕಣೆ
headland — ನಾ ನೆಲಚಾಚು
headless (trunk) — ನಾ ಅಟ್ಟೆ (ಅಟ್ಟೆ ಲಿುಂದಗಲಿದ ಕುದುರೆಯ ತಲೆ), ಕಡುಕು
headlong — ಗು ದುಡುಕಿನ
headman — ನಾಗೊತ್ತುಗಾರ,ಹೆಗ್ಗಡೆ,ಗುರಿ ಕಾರ
headmaster — ನಾ ಮೇಲ್ಕಲಿಸುಗ
head-on — ಗು ಇದುರುಬದಿರಾಗಿ
headquarters — ನಾ ತಲೆಮಣಿಹ
headstrong — ಗು ತಲೆಹೋಕ, ಮೊಂಡು
headway — ನಾ ಮುನ್ನಡೆ
heady — ಗು 1 ದುಡುಕಿನ 2 ಸೊಕ್ಕು ಬರಿಸುವ, ಸೊಕ್ಕೇರಿಸುವ
heal — ಕ್ರಿ ಆರು (ಗಾಯ ಆರುತ್ತಾ ಇದೆ), ಮಾಯು (ಗಾಸಿ ಮಾದು ಹೋಗಿದೆ), ಮಾಜು, ಮಾಣು (ಮಾಣಿಸು)
health — ನಾ ಮಯ್ಯೊಳಿತು, ಒಡಲೊಳಿತು
healthy — ಗು ಮಯ್ಯೊಳಿತುಳ್ಳ
heap — ನಾ ಇಕ್ಕಲು (ಜೋಳವನ್ನು ಕಿತ್ತು ಇಕ್ಕಲು ಹಾಕಿದ್ದರು), ಇಂಡು, ಇಡುವು (ಹಣ್ಣುಗಳ ಇಡುವು), ಇಟ್ಟಳ (ಇಟ್ಟಳಿಸು), ಒಗ್ಗರ, ಒಗ್ಗು (ಒಗ್ಗುಗೆಡು), ಒಟ್ಟಜೆ, ಒಟ್ಟಿಲು (ನೆರೆಲಿುಂದ ಮಳಲ ಒಟ್ಟಿಲು ಕಟ್ಟಿದೆ), ಒಡ್ಡ (ಒಡ್ಡಣೆ), ಕುಪ್ಪೆ (ಕಲ್ಲು ಕುಪ್ಪೆ; ಕಸಕುಪ್ಪೆ; ಕುಪ್ಪೆಹಾಕು), ಗುಪ್ಪೆ, ಕುತ್ತರಿ, ಕೊಪ್ಪಲು, ಗಡಣ (ಗಡಣಿಸು), ಗುಡ್ಡೆ (ಮಳಲ ಗುಡ್ಡೆ; ರಾಗಿಗುಡ್ಡೆ), ಗುಮಿ, ಗುಂಪು, ತಿಪ್ಪೆ (ಕಸದ ತಿಪ್ಪೆ), ತೊಂಬಾರ, ಬಳಬೆ (ಹುಲ್ಲಿನ ಬಳಬೆ), ಬಣವೆ, ಬೀಡು, ಮೊತ್ತ (ಮುತ್ತಿನ ಮೊತ್ತ), ಮೆದೆ (ಹಣ್ಣಿನ ಮೆದೆ), ಹೊರಳಿ (ಹೊರಳಿಗಟ್ಟು) ಕ್ರಿ ಒಟ್ಟು (ಎಲ್ಲವನ್ನೂ ಒಂದೇ ಕಡೆ ಒಟ್ಟಿದ್ದಾರೆ; ಒಟ್ಟಿದ ಕಟ್ಟಿಗೆ), ಒಡ್ಡು, ಕುಪ್ಪು, ಕೂಡು (ಕೂಡಿಕ್ಕು; ಕೂಡಿಡು), ನಿಗುಂಬು
heap of four — ನಾಒಡ್ಡಿ
hear — ಕ್ರಿ ಕಿವಿ (ಯಾವುದನ್ನೂ ಕಿವಿಯದೆ ನೇರ ಹೋಗು), ಆಲಿಸು (ಕಿವಿಗೊಟ್ಟು ಆಲಿಸ ಬೇಕು), ಕೇಳು (ಕೇಳಿಕೊಳ್ಳು; ಕೇಳಿಬರು)
hearer — ನಾ ಕೇಳುಗ
hearing — ನಾಕೇಳುಹ
hearken — ಕ್ರಿ ಆಲಿಸಿ ಕೇಳು, ಗಮನಿಸಿ ಕೇಳು
hearsay — ನಾ ಕೇಳಿಕೆ (ಕೇಳಿಕೆಯ ಮಾತು), ಗಾಳಿಸುದ್ದಿ (ಗಾಳಿಸುದ್ದಿಗಳಿಗೆ ನೀವು ಗಮನ ಕೊಡಬೇಡಿ)
hearse — ನಾ ಹೆಣಗಾಡಿ, ಹೆಣಬಂಡಿ
heart — ನಾ ಒಳಗು (ಒಳಗಾರು), ಬಿಕ್ಕು, ಎದೆ (ಎದೆಬಿರಿ; ಎದೆನೋವು; ಎದೆಗುಂಡಿ - ಎದೆಗುಂಡಿಯ ಬಡಿತ; ಎದೆಗುಂಡಿಗೆ)
heart attack — ನಾ ಎದೆಕಟ್ಟು, ಗುಂಡಿಗೆ ಕಟ್ಟು
heart failure — ನಾ ಎದೆಸೋಲು
heart transplant — ನಾಗುಂಡಿಗೆ ನಾಟಿ
heartache — ನಾ ಎದೆಕಿಚ್ಚು, ಮರುಕ, ಅಳಲು
heartbeat — ನಾಗುಂಡಿಗೆ ಮಿಡಿತ,ಎದೆ ಬಡಿತ
heartbreak — ನಾ ಕಡುಮರುಕ, ಅಳಲು, ಕಳಲಿಕೆ
heartburn — ನಾಗುಂಡಿಗೆ ಉರಿ,ಎದೆಯುರಿ
heartfelt — ಗು ಮನಸಾರೆ (ಮನಸಾರೆ ಮಾಡಿದ ಕೆಲಸ), ಮನತುಂಬಿ (ಮನತುಂಬಿ ಕೊಟ್ಟ ಕೊಡುಗೆ)
hearth — ನಾ 1 ಒಲೆಬದಿ 2 ಮನೆ
heartless — ಗು ಮರುಕವಿಲ್ಲದ, ನೋಲಿುಸುವ
hearty — ಗು 1 ಮನಸಾರೆ, ಮನತುಂಬಿ 2 ಮಯ್ಯೊಳಿತುಳ್ಳ, ದಿಂಡು
heat — ನಾ 1 ಒಡಿ, ಬೆಂಗೆ, ಬೇಗೆ (ಒಡಲ ಬೇಗೆ; ಬೇಗೆಗಿಚ್ಚು), ಬಿಸುಪು, ಕಾವು (ಬಿಸಿಲಿನ ಕಾವು), ಕಾಕು (ಕಾಕಿರಿ), ಕಾಂಕೆ (ಕಾಳ್ಗಿಚ್ಚಿನ ಕಾಂಕೆ), ಕಾಹು, ಉಬ್ಬೆ 2 ಬೆದೆ (ಬೆದೆಗೊಳ್ಳು; ಬೆದೆಯಾದ ಆಕಳು), ಪಡ್ಡೆ (ಪಡ್ಡೆಯೆಮ್ಮೆ; ಪಡ್ಡೆಯಾಕಳು; ಪಡ್ಡೆಹುಲಿ) ಕ್ರಿ (ಆ) ಕಾಯು (ಕಾದ ಎಣ್ಣೆ), ಮರುಗು (ಮರುಗುವ ಹಾಲು) (ಮಾ) ಕಾಸು (ತುಪ್ಪ ಕಾಸು)
heated — ಗು 1 ಕಾದ, ಬೆಚ್ಚಗಿನ 2 ಮುನಿದ, ಕನಲಿದ
heater — ನಾ ಒಲೆ, ಕುಲುಮೆ, ಕಾಯ್ಗೆ
heath — ನಾ ಬರಡು ಬಯಲು, ಬರಡು ನೆಲ
heave — ಕ್ರಿ 1 ಮೇಲೆತ್ತು, ಎತ್ತಿ ಬಿಸಾಡು 2 ಏರಿಳಿ 3 ವಾಕರಿಸು, ಕಕ್ಕು, ಕಾರು
heave — ಗು ಅಳ್ಳ (ಅಳ್ಳನೆಲ; ಅಳ್ಳಹೊಟ್ಟೆ; ಅಳ್ದಳಿರು)
heaven — ನಾ 1 ಬರ್ದಿಲನಾಡು 3 ಹುದುಳಿರು ವೆಡೆ
heavy — ಗು 1 ತೂಕದ (ತೂಕದ ಹಲಿಗೆ) 2 ಅಡ್ಡ (ಅಡ್ಡಮಳೆ)
heavy-handed — ಗು ಒಡ್ಡೊಡ್ಡಾದ, ಒರಟು
hectic — ಗು ಬಿಡುವಿಲ್ಲದ (ಬಿಡುವಿಲ್ಲದ ಕೆಲಸ), ಗೊಂದಲದ
hector — ಕ್ರಿ ಬೆದರಿಸು, ತೊಂದರೆ ಕೊಡು
hedge — ನಾ ಬೇಲಿ (ಬೇಲಿಸವ್ತೆ)
hedge — ಕ್ರಿ ಅಡ್ಡಿಪಡಿಸು, ಕಟ್ಟುಬೀಳದಿರು
hedgehog — ನಾ ಮುಳ್ಳುಹಂದಿ
heed — ಕ್ರಿಗಮನಿಸು (ಅವನು ಬಂದುದನ್ನು ಯಾರೂ ಗಮನಿಸಲಿಲ್ಲ), ಗಮನಕೊಡು
heel — ನಾ ಹಿಂಬುಡ, ಮಡಹು, ಮಡ (ಮಡ ಕಾಲು), ಮಡಿ (ಆತನ ಮಡಿಗೆ ಪೆಟ್ಟಾಗಿದೆ; ಹಿಮ್ಮಡಿ)
heel — ಕ್ರಿ 1 ಹಿಂಬಾಲಿಸು, ಹಿಂದೆಯೇ ಹೋಗು 2 ಮಾಲು (ಹಡಗು ಒಂದು ಬದಿಗೆ ಮಾಲಿದೆ)
hefty — ಗು ಗಟ್ಟಿಮುಟ್ಟಾದ, ತೂಕದ, ದೊಡ್ಡ ಮಯ್ಕಟ್ಟಿನ
he-goat — ನಾಹೋತ
height — ನಾನಿಲುವು, ಎತ್ತರ (ಈ ಕಟ್ಟಡದ ಎತ್ತರ ಎಷ್ಟು?)
heighten — ಕ್ರಿ ಎತ್ತರಿಸು, ಏರಿಸು, ದೊಡ್ಡದು ಮಾಡು, ಹೆಚ್ಚಿಸು
heinous — ಗು ತೀರಾ ಕೆಟ್ಟುಹೋದ, ತಡೆಯ ಲಾಗದ
heir — ನಾ ಮರುಪಡೆಗ
heiress — ನಾ ಮರುಪಡೆಗಿತ್ತಿ
heist — ಕ್ರಿ ದೋಚು, ಕೊಳ್ಳೆಹೊಡೆ ನಾ ಕೀಳುನಾಡು; ಕೆಟ್ಟೂರು
helm — ನಾ ಅಂಕೆ, ಹಿಡಿತ, ಮುಂದಾಳ್ತನ
helmet — ನಾ ತಲೆಕಾಪು
helot — ನಾ ಅಡಿಯ, ತೊತ್ತು
help — ನಾ ಒತ್ತಾಸೆ (ಒತ್ತಾಸೆಗಾರ), ಒದವಿ (ನನಗೆ ನಿಮ್ಮ ಒದವಿ ಬೇಕಾಗಿದೆ), ಕೆಲಚು, ನೆರವು (ನೆರವಾಗು)
help — ಕ್ರಿಒದಗು (ನನ್ನ ಕೆಲಸಕ್ಕೆ ಒದಗುವವನು ಅವನೊಬ್ಬನೇ)
helper — ನಾ ಒತ್ತಾಸೆಗಾರ,ಒತ್ತಾಳು, ನೆರವಿಗ
helping — ನಾ ಒಬ್ಬೆ
helpless — ನಾ ಪಂಜೆ (ಪಂಜೆತನ)
helve — ನಾ ಹಿಡಿ (ಕತ್ತಿಯ ಹಿಡಿ), ಕಾವು (ಕೊಡಲಿಯ ಕಾವು)
hem — ನಾ ಅಂಚು (ಸೀರೆಯ ಅಂಚು), ಕರೆ
hematology — ನಾ ನೆತ್ತರರಿಮೆ
hemisphere — ನಾ ಅರೆಗೋಳ
hen — ನಾಹೇಟೆ
henchman — ನಾ ಹಿಂಬಾಲಕ, ನೆಚ್ಚಿನ ನೆರವಿಗ
henpeck — ಕ್ರಿ ಕಯ್ಗೊಂಬೆಯಾಗಿಸು, (ಗಂಡ ನನ್ನು) ಹಿಡಿತದಲ್ಲಿರಿಸು, ಕಾಡು
heptagon — ಗು ಏಳುಬದಿಯ
herald — ನಾ ಸುದ್ದಿಗ, ಓಲೆಕಾರ
herald — ಕ್ರಿ ಮುನ್ನರಿವು ಕೊಡು
herb — ನಾನಾರುಬೇರು (ನಾರುಬೇರಿನ ಮದ್ದು), ಮದ್ದಿನ ಗಿಡ
herbicide — ನಾ ಕಳೆಕುಲಿ, ಕೆಳೆಯಳಿಪ
herd — ನಾ ಕೆರೆ (ದನಗಳ ಕೆರೆ), ಮಂದೆ, (ತುರುವಿನ ಮಂದೆ), ಹೊದರು (ಹೊದ ರಿಕ್ಕು), ಕದುಪು (ಕಾಡಾನೆಯ ಕದುಪು)
herd — ಕ್ರಿ 1 ಎಬ್ಬು (ಕುರಿಮಂದೆಯನ್ನು ಎಬ್ಬು), ಸಾಕು 2 ಒಟ್ಟುಗೂಡು, ಮಂದೆಗಟ್ಟಿ ಹೋಗು
heredity — ನಾ ಹುಟ್ಟುಪರಿಚೆ
heresy — ನಾ ಒಡ್ಡುನಂಬಿಕೆ, ಮರುಬಗೆತ
heretic — ನಾ ಒಡ್ಡುನಂಬುಗ ನಾ 1 ಹುಟ್ಟುಪರಿಚೆ 2 ತಲೆ ತಲಾಂತರದ ಪರಿಚೆ
hermit — ನಾ ತನ್ನಷ್ಟಕ್ಕಿರುವವನು, ಒಬ್ಬಂಟಿಗ
hermitic — ಗು ಗಾಳಿ ತಡೆವ, ಗಾಳಿ ಹೋಗದ (ಗಾಳಿಹೋಗದ ಮುಚ್ಚಳ)
hernia — ನಾ ಬಿರಿತ, ಕರಳು ಮುಂಚಾಚಿಕೆ
hero — ನಾಗಂಡಾಡಿ, ಕೆಚ್ಚುಗ, ತುಳಿಲಾಳು
heroism — ನಾ ಅದಟು, ಕಲಿತನ, ತುಳಿಲು (ತುಳಿಲಾಳು; ತುಳಿಲಾಳ್ತನ), ಆಕ (ಆಕ ವಾಳ್ತನ), ಪನ್ನತಿಕೆ
hesitate — ಕ್ರಿ ಹಿಂಜರಿ, ಹಿಮ್ಮೆಟ್ಟು, ಹಿಂದೆ ಮುಂದೆ ನೋಡು, ಕಂಡಳಿಸು
hesitation — ನಾಅರೆಮರೆ, ಹಿಂಜರಿಕೆ
heterodox — ಗು ನಂಬಿಕೆಯಳಿದ
heterogeneous — ಗು ಹೋಲದ, ದೊರೆ ಲಿುಲ್ಲದ, ಕಲಬೆರಕೆಯ
heterosexuality — ನಾ ಮರುಗುರ್ತದ ಒಲುಮೆ
heuristic — ಗು ಕಲಿಕೆಗೆ ಅನುವಾಗುವ
hew — ಕ್ರಿ 1 ಕಡಿ, ಕೆತ್ತು 2 ಒಮ್ಮು, ಬಳಿಗೊಳ್ಳು, ತಪ್ಪದಿರು
hexagon — ನಾ ಆರುಬದಿ
heyday — ನಾ ಏಳಿಗೆಯ ಹೊತ್ತು, ಗೆಲುವಿನ ಹೊತ್ತು
hiatus — ನಾ ಬಿರುಕು, ಕಂಡಿ, ತೆರಪು, ಎಡೆ
hibernation — ನಾ ಚಳಿಗಾಲದ ಒರಕು
hiccup — ನಾ ಬಿಕ್ಕಳಿಕೆ (ಬಿಕ್ಕಳಿಕೆಗೆ ಒಂದು ಗುಟುಕು ನೀರು ಮದ್ದು), ಎಕ್ಕುಡು (ಆತುರ ವಾಗಿ ಕಡುಬು ತಿಂದು ಆತನಿಗೆ ಎಕ್ಕುಡು ಬಂತು)
hide — ನಾ ತೊಗಲು (ಹುಲಿಯ ತೊಗಲು), ಕಡವಸ, ಚಕ್ಕಳ
hide — ಕ್ರಿ (ಆ) ಕರೆ (ತಲೆಗರೆ, ಮಯ್ಗರೆ), ಹುದುಗು (ಅಲ್ಲಲ್ಲೂೀ ಹುದುಗಿಕೊಂಡಿ ದ್ದಾನೆ), ಮಸುಳು, ಅವಿ (ಅವಿತುಕೊಳ್ಳು; ಅವಿತಿಡು), ಅಡಗು (ನೀನು ಈ ಪೊದೆಯ ಹಿಂದೆ ಅಡಗಿಕೋ), ಉಳಿ, ತಲೆತಪ್ಪಿಸು, ತಲೆಮರೆಸು, ಮಯ್ದೆಗೆ (ಮಾ) ಮರಪು (ಅವರು ಅದನ್ನು ಎಲ್ಲಿ ಮರಪಿದ್ದಾರೆ?), ಬಚ್ಚು (ಅವನಿಗೆ ತಿಳಿಯದ ಹಾಗೆ ಇದನ್ನು ಎಲ್ಲಿಯಾದರೂ ಬಚ್ಚಬೇಕು; ಬಚ್ಚಿಡು - ಬಚ್ಚಿಟ್ಟುಕೊಂಡ ಸುಳ್ಳು), ಬೈ- (ಒಂದು ಹಣ್ಣನ್ನು ನಿನಗೆಂದು ಬಲಿ್ತುದ್ದೇವೆ; ಬಲಿ್ತುಡು), ಮಾಜು (ಅದನ್ನು ಮಾಜ ಲಾರೆವು; ಮರೆಮಾಚು - ಏನಾಲಿುತೆಂಬು ದನ್ನು ಮರೆಮಾಚಿದ್ದಾನೆ), ಇಂಬಿಡು
hideous — ಗು ಹೆದರಿಸುವ, ಹೇವರಿಸುವ ನಾ ಅಡಗುವೆಡೆ (ಕೊಳ್ಳೆ ಹೊಡೆ ದವರ ಅಡಗುವೆಡೆ ಇಲ್ಲೀ ಎಲ್ಲೂೀ ಇದೆ), ಉಳಿ (ಕಳ್ಳನ ಉಳಿ; ಬೇಟೆಯ ಉಳಿ)
hiding — ನಾಉಳಿತ,ಅವುತೆ, ಮರೆ (ಮರೆ ಯಾಗು, ಮರೆಗೆ ನಿಲ್ಲು; ಮುಚ್ಚುಮರೆ)
hie — ಕ್ರಿ ಚುರುಕಾಗಿ ಹೋಗು, ಪದರು
hierarchy — ನಾ ಮಟ್ಟ (ಆತನದು ನಮ್ಮಿಂದ ಮೇಲಿನ ಮಟ್ಟದ ಕೆಲಸ)
hieroglyph — ನಾ ತಿಟ್ಟ ಬರಹ
high — ಗು ಕರು (ಕರುಮನೆ; ಕರುಮಾಡು), ಮೇಲು (ಮೇಲಾಗು; ಮೇಲು-ಕೀಳು; ಮೇಲೆ ಮೇಲೆ ಹೋಗು)
high position — ನಾಪುರುಳಿ
high school — ನಾ ಮೇಲುಸಾಲೆ, ಮೇಗು ಸಾಲೆ
high tide — ನಾ ಉಬ್ಬರ (ಕಡಲಿನ ಉಬ್ಬರ)
high-grade — ಗು ಮೇಲ್ಮಟ್ಟದ
highhanded — ಗು ಸೊಕ್ಕಿನ, ದಬ್ಬಾಳಿಕೆಯ
highland — ನಾ ಮಲೆನಾಡು
highlight — ಕ್ರಿ ಎತ್ತಿತೋರಿಸು, ಬೆಳಗಿಸು
high-minded — ಗು ಹೆಮ್ಮೆಯ, ದೊಡ್ಡ ಮನದ
high-rise — ನಾ ಕರುಕಟ್ಟಡ
high-spirited — ಗು ಕೆಚ್ಚಿನ, ಎದೆಗಾರಿಕೆಯ
highway — ನಾ ಹೆಬ್ಬಟ್ಟೆ, ಹೆದ್ದಾರಿ (ಹೆದ್ದಾರಿ ಬಿಟ್ಟು ಹೋಗಬೇಡಿ), ಬಳಿಸಳ್ತು
highwayman — ನಾ ಹೆದ್ದಾರಿ ಕೊಳ್ಳೆಗಾರ
hike — ನಾ 1 ಕಾಲ್ನಡಿಗೆ, ನಿಡುನಡಿಗೆ, ತಿರು ಗಾಟ
hike — ಕ್ರಿ ಬೆಲೆ ಏರಿಸು
hilarious — ಗು ನಗಿಸುವ, ಬೊಬ್ಬಿರಿವ, ನಕ್ಕು ನಲಿವ
hill — ನಾ ಗುಡ್ಡ (ಗುಡ್ಡಕಾಡು), ಮೊರಡಿ (ಮೊರಡಿಯ ಮೇಲಕ್ಕೆ ಹತ್ತಿದ ಕುರಿಮರಿ), ಮಡ್ಡಿ, ಕುಂದ (ಕುಂದ ಹತ್ತಿ ಸಾಕಾಲಿುತು), ಕುರುವ, ಕೊಂಡ (ಕುರಚಿ ಕೊಂಡ; ಕೊಂಡ ಮುಸು), ಬೆಟ್ಟ (ಬೆಟ್ಟದ ತಪ್ಪಲು; ಬೆಟ್ಟ ಏರಿದರೆ ದೂರದ ವರೆಗೆ ಕಾಣಿಸುತ್ತದೆ)
hill pass — ನಾ ಕಣಿವೆ (ಕೆಮ್ಮಣ್ಣು ಗುಂಡಿಯ ಕಣಿವೆ) ನಾ ಬೋರೆ, ಮಂಟಿ (ಮಂಟಿಲಿುಂದ ಉರುಳಿದ ಬಂಡೆ), ಮೇಡು (ಮೇಡುಗದ್ದೆ), ದಿಬ್ಬ (ದಿಬ್ಬದ ಮೇಲೆ ಬಗೆಬಗೆಯ ಮರಗಳು ಬೆಳೆದಿವೆ), ತಿಟ್ಟೆ, ದಿಮ್ಮಿ, ತೆವರು (ಗದ್ದೆಯ ತೆವರು), ಮೊರಡಿ (ಬೆಟ್ಟದ ಹತ್ತಿರ ಕೆಲವು ಮೊರಡಿಗಳಿವೆ)
hilly — ಗು ಮಲ- (ಮಲನಾಡು)
hilt — ನಾ ಹಿಡಿ (ಕತ್ತಿಯ ಹಿಡಿ), ಹಿಡಿಕೆ
hind — ಗುಪೆರ (ಪೆರಕಾಲು; ಪೆರಹೋಗು; ಪೆರಗು), ಹೆರೆ (ಹೆರೆ ತೊಲಗು; ಹೆರೆದೆಗೆ)
hind leg — ನಾ ಹಿಂಗಾಲು
hinder — ಕ್ರಿ ಅಡ್ಡಬರು (ಹೊರಡುವ ಹೊತ್ತಿ ನಲ್ಲಿ ಆಕೆ ಅಡ್ಡ ಬಂದಳು), ಅಡ್ಡಿಮಾಡು, ತಡೆಯೊಡ್ಡು
hindrance — ನಾ ಎಡರು (ಬಂದ ಎಡರು ಗಳನ್ನೆಲ್ಲ ತೊಡೆದುಹಾಕು), ಕೊಳೆ (ಕೊಳೆ ಹಾಕು - ನನ್ನನ್ನು ಕೊಳೆಹಾಕಬೇಡ), ಕೊಳಂಬ, ತಡಪು, ಮಸಲು, ತೊಡಕು (ಕಾಲ್ತೂಡಕು; ತೊಡಕಾಗು; ತೊಡಕು ಬೀಳು)
hinge — ನಾ ತಿರುಗಣೆ, ಕೀಲು, ಕೀಲಚ್ಚು
hint — ನಾ ಸುಳಿವು (ಸುಳಿವು ಕೊಡು), ಗುರುತು
hinterland — ನಾಹಿನ್ನಾಡು, ಒಳನಾಡು
hip — ನಾ ಸೊಂಟ (ಆತನ ಸೊಂಟ ಮುರಿದು ಹೋಗಿದೆ), ಉಡಿ (ಉಡಿದಾರ; ಉಡಿ ಗಂಟೆ), ಟೊಂಕ (ಟೊಂಕದ ಪಟ್ಟಿ)
hip bone — ನಾ ಚಪ್ಪೆ
hippopotamus — ನಾನೀರುಕುದುರೆ
hire purchase — ನಾ ಕಂತು ಮಾರಾಟ
hired — ಗು ಅಡದಿ (ಅಡದಿ ಬಟ್ಟೆ), ಬಾಡಿಗೆ (ಬಾಡಿಗೆ ಮನೆ, ಬಾಡಿಗೆ ಕೊಡು)
hireling — ನಾ ಕೂಲಿಯಾಳು, ಕೂಲಿ ಪಡೆ ಲಿುಲ
hirsute — ಗು ನವಿರು ತುಂಬಿದ, ನವಿರಡಸಿದ
hiss — ಕ್ರಿ ಸೀವರಿಸು, ಬುಸುಗುಟ್ಟು
historian — ನಾ ಹಿನ್ನಡವಳಿಯರಿಗ
history — ನಾ ಹಿನ್ನಡವಳಿ
histrionics — ನಾ ಬೂಟಾಟಿಕೆ, ತೋಹು, ಪಿತ್ತಲಾಟ
hit — ನಾ ಏಟು, ಹೊಡೆತ, ಗುರಿಯೇಟು ಕ್ರಿ (ಆ) ತಗಲು (ಬೆನ್ನಿಗೆ ತಗಲಿದ ಕಲ್ಲು) ತಾಗು (ಆತನ ತಲೆಗೆ ತಾಗಿದೆ), ತಾಟು (ತಾಟಾಡು) (ಮಾ) ಇಡು (ಹುಡುಗ ನಾಲಿುಗೆ ಕಲ್ಲಿನಿಂದ ಇಟ್ಟ), ತಟ್ಟು (ಬೆನ್ನು ತಟ್ಟು), ಹೊಡೆ (ಮಕ್ಕಳಿಗೆ ಹೊಡೆಯ ಬಾರದು), ಬಡಿ, ಮೋದು (ಆಕಳನ್ನು ಮೋದು)
hit back — ಕ್ರಿ ಮುಲಿ್ಯುತೀರಿಸು
hitch — ನಾ 1 ಜಗ್ಗಾಟ 2 ತೊಡಕು, ತಡೆ
hitch — ಕ್ರಿ ಸಿಲುಕು, ನಿಂತುನಿಂತು ಸರಿ
hive — ನಾ 1 ಜೇನುಗೂಡು, ಹುಟ್ಟು, ಹುಟ್ಟಿ 2 ನೆರವಿ (ಮಂದಿನೆರವಿ)
hoard — ನಾ ಬಯಕೆ (ಹೊನ್ನ ಬಯಕೆ),ಕಡವರ, ಗಂಟು, ಒಯ್ಕೆ
hoarse — ಗು ದರಕು (ದರಕು ಉಲಿ)
hoary — ಗು ಬಿಳಿ, ಬೂದು 2 ಮುಪ್ಪಿನ, ತಲೆನೆರೆತ 3 ತುಂಬಾ ಹಳೆಯ
hoax — ನಾ ಮಂಕು, ಕಯ್ತ
hobble — ಕ್ರಿ 1 ಕುಂಟು 2 ಕಾಲುಕಟ್ಟು, ಅಡ್ಡಿ ಮಾಡು
hobby — ನಾ ಅಡ್ಡಕೆಲಸ
hobnail — ನಾ ದಪ್ಪತಲೆಯಾಣಿ (ಕೆರ್ಪು ಸವೆಯ ದಂತೆ ಅದಕ್ಕೆ ದಪ್ಪತಲೆಯಾಣಿ ಹೊಡೆದಿ ದ್ದಾರೆ)
hobnob — ಕ್ರಿ ಸಲಿಗೆಲಿುಂದಿರು
hock — ಕ್ರಿ ಅಡವಿಡು, ಒತ್ತೆಲಿುಡು
hoe — ನಾಹಾರೆ,ಗುದ್ದಲಿ (ಕಳೆ ಗುದ್ದಲಿ)
hog — ನಾ 1 ಹಂದಿ 2 ಕೊಳಕ, ಒರಟ
hoist — ಕ್ರಿ ಏರಿಸು, ಮೇಲೆತ್ತು
hold — ನಾಹಿಡಿತ,ಪಟ್ಟು (ಪಟ್ಟಾಡು, ಪಟ್ಟು ಕಟ್ಟು; ಪಟ್ಟುಹಿಡಿ)
hold — ಕ್ರಿ 1 ತಾಳು (ತಾಳಲಾರದ ನೋವು), ತಳೆ 2 ಹಿಡಿ (ಹಿಡಿದಿಡು; ಸೆರೆಹಿಡಿ), ಹಿಡಿಸು (ಇದರಲ್ಲಿ ತುಂಬಾ ಹಿಡಿಸುತ್ತದೆ) 3 ನಡೆಸು, ಏರ್ಪಡಿಸು
hold out — ಕ್ರಿ ಒಡ್ಡು (ಕಯ್ಯೊಡ್ಡು)
holdall — ನಾ ಅಡಕುಚೀಲ (ಅಡಕುಚೀಲದಲ್ಲಿ ಏನೇನೋ ತುಂಬಿಸಿಕೊಂಡಿದ್ದಾನೆ)
holding — ನಾ ಹಿಡುವಳಿ
holdup — ನಾ 1 ತಡ (ಗಾಡಿ ಹೊರಡಲು ತಡ ಇದೆ) 2 ತಡೆ ಮತ್ತು ಸುಲಿಗೆ
hole — ನಾ 1 ತೂತು (ತೂತಾಗು, ತೂತು ಕೊರೆ, ತೂತು ಮಾಡು; ತೂತು ಕೆಡಹು), ತೊಳೆ (ತೊಳೆಹಾಕು), ತೊರಳೆ, ತೂಬು, ಕೋವೆ (ಹುತ್ತದ ಕೋವೆ), ಇಡುಪು 2 ತೊರಲು ತೊರಲು), ಹೋರು (ಕಲ್ಲಿನ ಹೋರು; ಹೆಗ್ಗಣದ ಹೋರು),ಬೊಕ್ಕೆ (ಹೆಗ್ಗಣಗಳು ಇಲ್ಲಿ ಬೊಕ್ಕೆಗಳನ್ನು ತೋಡಿವೆ), ಗುದ್ದು (ಇಲಿಯ ಗುದ್ದು), ಪೋಟೆ, ಪೊಟರೆ (ಮರದ ಪೊಟರೆಯಲ್ಲಿ ಹಕ್ಕಿ ಗೂಡು ಕಟ್ಟಿದೆ) 3 ಒಟ್ಟೆ (ಒಟ್ಟೆ ಬೀಳು), ಜಿಲ್ಲಿ (ತಂಬಿಗೆಯಲ್ಲಿ ಜಿಲ್ಲಿ ಬಿದ್ದಿದೆ) 4 ಕನ್ನ (ಕಳ್ಳ ಕೊರೆದ ಕನ್ನ), ಕಂಡಿ (ಬೆಳಕಿನ ಕಂಡಿ), ಕಿಂಡಿ 5 ಗುಂಡಿ (ಗುಂಡಿತೆಗೆ), ಗುಳಿ (ಗುಳಿತೋಡು), ಗೊಡಗು (ಬಾವಿಯ ಗೊಡಗು)
holiday — ನಾ ಆಡಿಗೆ,ಉಳಿ (ಇವತ್ತು ಸಾಲೆಗೆ ಉಳಿ), ಬಿಡುವು
hollow — ನಾ 1 ಪೊಟರೆ (ಕಲ್ಲುಗಳ ಪೊಟರೆ), ಪೋಟೆ (ಪೋಟೆಕೊಂಬು; ಪೋಟೆಬೀಳು), ಪೊಟ್ಟೆ (ಮರದ ಪೊಟ್ಟೆ), ಹೊದರು (ಆ ಮರದ ಹೊದರಿನಲ್ಲಿ ಒಂದು ಹಾವಿದೆ), ಪೋಳಲು, ಗೋಳೆ, ಟೊಳ್ಳು, ಹೊಳ್ಳು (ಮರದ ಹೊಳ್ಳು, ಹೊಳ್ಳಾಗು, ಹೊಳ್ಳು ಕಟ್ಟು), ಕುಣಿಕೆ, ಕೋರಡಿ 2 ಜಳ್ಳು (ಜಳ್ಳಾಗು; ಜಳ್ಳುಕಾಳು; ಜಳ್ಳುತೆನೆ)
hollow — ಗು 1 ಪೊಳ್ಳು (ಪೊಳ್ಳುಮರ; ಆತನದೆಲ್ಲ ಬರೇ ಪೊಳ್ಳುಮಾತು) 2 ಕುಳಿಬಿದ್ದ (ಕುಳಿಬಿದ್ದ ಕೆನ್ನೆ)
hollow — ಕ್ರಿ ತುರಿ (ತೆಂಗಿನಕಾಲಿು ತುರಿದು ರುಬ್ಬಲು ಹಾಕಿದ್ದಳು), ಕೊಡೆ (ತಿರುಳನ್ನು ಕೊಡೆದು ತೆಗೆದ)
holograph — ನಾ ತನ್ಕಯ್ಬರಹ
holster — ನಾ ಒರೆ (ಆತ ಕಯ್ಗೋವಿಯನ್ನು ಒರೆಲಿುಂದೆಳೆದು ತೆಗೆದ)
homage (to pay) — ಕ್ರಿ ಆಲಯ್ಸು, ಓಲಯ್ಸು (ಆತನನ್ನು ಯಾವಾಗಲೂ ಓಲಯ್ಸುವವರು ಸುತ್ತುವರಿದಿರುತ್ತಿದ್ದರು)
home — ನಾ ಮನೆ, ಬೀಡು, ನೆಲೆ
home rule — ನಾ ತಮ್ಮಾಳ್ವಿಕೆ
homeland — ನಾ ತಾಲಿುನಾಡು
homely — ಗು 1 ಮನೆಯಂತಹ, ಮನೆ ಯಂತಿರುವ 2 ಒರಟು, ಚಂದವಿಲ್ಲದ
homesickness — ನಾ ಮನೆಗೀಳು
homey — ಗು ಹದುಳದ, ಸಸಿನ, ನೆಮ್ಮದಿಯ (ನೆಮ್ಮದಿಯ ಬಾಳ್ವೆ)
homicide — ನಾ 1 ಕೊಲೆ 2 ಕೊಲೆಗಾರ
homogeneous — ಗು ಹೊಂದಿಕೊಳ್ಳುವ, ಒರ್ಬಗೆಯ
homogenize — ಕ್ರಿ ಹೊಂದಿಸು, ಒರ್ಬಗೆ ಯಾಗಿಸು homograph ನಾ ಒರ್ಪರಿಜು (ಎಳೆ ಎಳೆ ದಾಡು ’ ಮತ್ತು ಎಳೆ ಎಳತು ’ ಒರ್ಪರಿಜು ಪದಗಳು)
homologous — ಗು ಹೋಲುವ, ಹೊರೆ ವಡೆದ ನಾ ತನ್ಗುರ್ತದೊಲುಮೆ
hone — ನಾ ಮಸೆಕಲ್ಲು
hone — ಕ್ರಿ ತೀಡು, ಮಸೆ (ಕತ್ತಿಯನ್ನು ಮಸೆದು ಹರಿತ ಮಾಡಿದ)
honest (be) — ಕ್ರಿ 1 ಸಯ್ (ಸಯ್ದ - ಹೊರಗಿನಿಂದ ಸಯ್ದನೆನಿಸಿಕೊಂಡು ಒಳಗಿ ನಿಂದ ಮೋಸಮಾಡುತ್ತಿದ್ದ; ಸಯ್ಯದವರು)
honesty — ನಾ ನಾಣ್ಯ (ನಾಣ್ಯಗಾರ), ನೇರಿದು
honey — ನಾ 1 ಜೇನು (ಜೇನುತುಪ್ಪ, ಜೇನು ಗೂಡು; ಜೇನದಸಿ; ಜೇನಹಳಿ; ಜೇನು ಹಲ್ಲ), ತೇನು,ಬಂಡು (ಹೂವಿನ ಬಂಡು),ಕೊಡ 2 ಇಂಪು
honeybee — ನಾ ಜೇನುಹುಳ
honeycomb — ನಾ ಹುಟ್ಟಿ (ಹುಟ್ಟಿಯಲ್ಲಿ ಜೇನಿರಲಿಲ್ಲ)
honeymoon — ನಾ ಇನಿತಿಂಗಳು (ಇನಿತಿಂಗಳಿಗೆ ಅವರನ್ನು ಊಟಿಗೆ ಕಳಿಸಿ ದ್ದಾರೆ)
honorarium — ನಾ ತಕ್ಕಮೆ ಹಣ
honorary — ನಾ ತಕ್ಕಮೆಯ (ತಕ್ಕಮೆಯ ಕೆಲಸ)
honour — ನಾ ಮದಿಪು,ಅಡ್ಡಿ (ಆತನ ಅಡ್ಡಿ ಕೆಟ್ಟುಹೋಗಿದೆ), ತಕ್ಕಮೆ (ತಕ್ಕಮೆ ಕೊಡು)
hood — ನಾ 1 ಹೆಡೆ (ಹೆಡೆ ಬಿಚ್ಚಿದ ಹಾವು; ಹೆಡೆಯಾಡಿಸು) 2 ಗೊಪ್ಪೆ (ತಲೆಯ ಮೇಲೊಂದು ಗೊಪ್ಪೆ ಹಾಕಿದ್ದ)
hoodwink — ಕ್ರಿ ಮೋಸಮಾಡು, ಮಂಕು ಗೊಳಿಸು, ಕಣ್ಣಿಗೆ ಮಣ್ಣೆರಚು
hoof — ನಾಕೊಳಗ (ಕುದುರೆಯ ಕೊಳಗಗಳ ಸಪ್ಪಳ ಕೇಳಿಸಿತು),ಗೊರಸು (ಎತ್ತಿನ ಗೊರಸು)
hook — ನಾ ಸಿಡಿ (ಸಿಡಿಮರ, ಸಿಡಿಯಾಟ), ದೋಟಿ (ಆ ಮರದ ಹಣ್ಣು ಕೊಯ್ಯಲು ದೋಟಿ ಬೇಕು), ಕೊಳಿಕೆ (ಕೂದಲು ಕೊಳಿಕೆಗೆ ಸಿಕ್ಕಿಕೊಂಡಿದೆ), ಕೊಂಡಿ (ಹತ್ತು ಕೊಂಡಿಗಳ ಸರಪಣಿ; ಕೊಂಡಿಲು), ಕೊಕ್ಕೆ (ಕೊಕ್ಕೆಕೋಲು; ಕೊಕ್ಕೆಮೂಗು), ಕೊಂಕಿ (ಮೀನು ಹಿಡಿಯಲು ಕೊಂಕಿ; ಕೊಂಕಿಗ), ತೊರಡು (ಆ ಮರದಿಂದ ಹಣ್ಣು ಕೀಳಲು ಉದ್ದವಾದ ತೊರಡು ಬೇಕು), ಗಾಳ (ಗಾಳ ಹಾಕಿ ಮೀನು ಹಿಡಿಯುತ್ತಿದ್ದಾನೆ),ಒಂಕಿ
hookup — ಕ್ರಿ ಸೇರಿಸು, ಜೋಡಿಸು
hookworm — ನಾಕೊಕ್ಕೆಹುಳು
hooligan — ನಾ ಪೋಕು, ಪೋಕರಿ
hoop — ನಾ ಬಳೆ
hoot — ನಾ ಗೂಬೆಯ ಕೂಗು, ಜರೆವ ಕೂಗು, ಹುಲಿುಲು, ಸಿಳ್ಳು
hop — ಕ್ರಿ ಕುಪ್ಪಳಿಸು, ದೂಟು (ದೂಟಾಡಿಸು), ಕುಂಟು ನಾ ನಂಬಿಕೆ, ಹಾರಯ್ಕು
hope — ಕ್ರಿ ಬಯಸು, ಹಾರಯ್ಸು, ಎದುರು ನೋಡು
hopeful — ಗು ನಂಬುವ, ನಂಬಿಕೆಯಳಿಯದ (ನಂಬಿಕೆಯಳಿಯದವರು ನಾವಿಬ್ಬರೇ)
hopeless — ಗು ನಂಬಿಕೆಯಳಿದ, ಮಾಡಲಾಗದ
horde — ನಾ ತಂಡ (ತಂಡಕಟ್ಟು), ಗುಂಪು (ಗುಂಪುಕೂಡು)
horizon — ನಾ ಕಡೆಮುಗಿಲು, ಬಾನಂಚು (ಬಾನಂಚಿನಲ್ಲಿ ಕಪ್ಪು ಮೋಡ ಕಾಣಿಸು ತ್ತಿದೆ)
horizontal — ಗು 1 ಅಡ್ಡಡ್ಡವಾದ 2 ಚಪ್ಪಟೆ, ಮಟ್ಟಸ
hormone — ನಾ ಒಳಹರಿಗೆ
horn — ನಾ ಕೊಂಬು (ಕೊಂಬುಗಳಿಂದ ತಿವಿದ ಎತ್ತು),ಕೋಡು (ಎಮ್ಮೆಯ ಕೋಡು)
hornet — ನಾ ಕಣಜ (ಕಣಜಹುಳ; ಕಣಜದ ಗೂಡು)
horrendous — ಗು ಬೆಚ್ಚಿಸುವ, ಬಿಗುರಿಸುವ
horrible — ಗು ಬೆಚ್ಚಿಸುವ, ಬೆದರಿಸುವ, ಸೊಮ್ಮುಗೆಡಿಸುವ
horrid — ಗು ಬೆಚ್ಚಿಸುವ, ಹೇವರಿಸುವ
horripilate — ಕ್ರಿ ಜುಮ್ಮೆನ್ನು (ಆವತ್ತು ನಡೆದು ದನ್ನು ನೆನೆಸಿದರೆ ಈಗಲೂ ಜುಮ್ಮೆನ್ನುತ್ತದೆ)
horripilation — ನಾ ಕದ್ದವಣಿ, ಕೆಚ್ಚು, ಗುಗ್ಗುರಿ (ಗುಗ್ಗುರಿಗೊಳ್ಳು)
horror — ನಾ ಹೆದರಿಕೆ, ಹೇಸಿಕೆ, ಅಸುರು
horse — ನಾ ಕುದುರೆ (ಕುದುರೆಗಾಡಿ)
horsefly — ನಾತೊಣಚೆ (ತೊಣಚೆಗೆ ಮದ್ದೇ ನಾದರೂ ಗೊತ್ತೇ?)
horse-gram — ನಾ ಹುರುಳಿ (ಹುರುಳಿ ಕಟ್ಟು)
horseplay — ನಾ ಹುಚ್ಚಾಟ, ಗದ್ದಲದ ಆಟ
hortatory — ಗು ಒತ್ತಾಲಿುಸುವ, ಅರಿವು ಹೇಳುವ, ತಿಳುವಳಿಕೆ ಕೊಡುವ
horticulture — ನಾತೋಟಗಾರಿಕೆ
hose — ನಾ 1 ಕೊಳವೆ (ಕೊಳವೆಯಲ್ಲಿ ಹೂಗಿಡಗಳಿಗೆ ನೀರು ಬಿಡುತ್ತಿದ್ದಾಳೆ) 2 ಕಾಲ್ಚೀಲ
hosiery — ನಾ ಹೆಣೆದ ಉಡುಪು
hospice — ನಾ ಬಿಡದಿ (ದಾರಿಹೋಕರಿಗೆ ತಂಗಲು ಇಲ್ಲೂಂದು ಬಿಡದಿಲಿುದೆ)
hospital — ನಾ ಮದ್ದುಮನೆ, ಮಾಂಜುಮನೆ
hospitality — ನಾ ಸೆರಪು (ಬಿರ್ದಿಗನಿಗೆ ಸೆರಪು ಮಾಡಿದರು), ಬಿರ್ದು
host — ನಾ ಸೆರಪುಗ ನಾ ಒತ್ತೆಯಾಳು, ಓಲು (ಓಲಾಗು; ಓಲುಕೊಡು),
hostel — ನಾ ತಂಗುಮನೆ, ಕಲಿಗಮನೆ
hostess — ನಾ ಸೆರಪುಗಿತ್ತಿ
hostile — ಗು ಹಗೆತನದ, ಹಗೆಯಾದ, ಅಚ್ಚಿ ಲ್ಲದ, ಎದುರಿಸುವ, ಸೆರಪಿಲ್ಲದ
hostility — ನಾ ಹಗೆತನ, ಎದುರುನೆಲೆ
hot — ಗು 1 ಪುಡುಕು (ಪುಡುಕು ನೀರು), ಸುಡು (ಸುಡುನೀರು; ಸುಡುನುಡಿ; ಸುಡುಬಿಸಿಲು), ಬಿಸಿ (ಬಿಸಿಹಾಲು, ಬಿಸಿನೆತ್ತರು; ಬಿಸಿನಗೆ), ಬಿಸು (ಬಿಸುಕಂಬನಿ; ಬಿಸುಗಾಳಿ; ಬಿಸು ಸುಯ್ಯು) 2 ಉರಿಸುವ (ಬಾಲಿು ಉರಿಸುವ ತಿಂಡಿ)
hot house — ನಾಉಬ್ಬೆಮನೆ,ಕಾವುಮನೆ
hot season — ನಾಬೇಸಿಗೆ
hot wind — ನಾ ಉರಿಗಾಳಿ
hot-blooded — ಗು ಕೆರಳುವ, ಹುಚ್ಚು ಕಡುಪಿನ
hotel — ನಾ 1 ಬಿಡದಿ 2 ತಿಂಡಿಮನೆ, ಊಟ ಮನೆ
hotheaded — ಗು ಕೆರಳುವ, ದುಡುಕುವ, ಮುನ್ನುಗ್ಗುವ
hound — ನಾ ಬೇಟೆನಾಲಿು
hour — ನಾ 1 ತಾಸು 2 ಹೊತ್ತು
house — ನಾ ಮನೆ (ಮನೆಮಾಡು; ಮನೆ ಮಂದಿ; ಮನೆಯಾಕೆ; ಮನೆಹಿಡಿ; ಮನೆ ಮಾತು), ಬೀಡು (ತಾಲಿ್ಬುೀಡು), -ಇಲು (ಹಿತ್ತಿಲು), ಗುಡಿ (ಗುಡಿ ಕಯ್ಗಾರಿಕೆ)
house lizard — ನಾಹಲ್ಲಿ
house — ಕ್ರಿ ತುಂಬಿಸು, ಚಾಟಾಗು
houseboat — ನಾ ಓಡಮನೆ
housebreak — ಕ್ರಿ ಪಳಗಿಸು (ಚೆನ್ನಾಗಿ ಪಳಗಿಸಿದ ನಾಲಿು)
housefly — ನಾನೊಣ (ಬೆಲ್ಲಕ್ಕೆ ನೊಣಗಳು ಮುಕರಿವೆ), ನೊಳ
household — ನಾಮನೆತನ (ಮನೆತನಸ್ತ)
housewarming — ನಾ ಮನೆಯೊಕ್ಕಲು
house-work — ನಾ ಮನೆಗೆಲಸ
hovel — ನಾ ಕಿರುಮನೆ, ಗುಡಿಸಲು
hover — ಕ್ರಿ 1 ಸುತ್ತುತ್ತಿರು, ಗಾಳಿಯಲ್ಲಿ ತೇಲು 2 ಸುಳಿದಾಡು, ಅಡ್ಡಾಡು ಕ್ರಿ ಊಳು (ಹೋಗಬೇಡಿ ಎಂದು ಊಳುತ್ತಿದ್ದ;ಊಳಿಡು - ಬಸದಿಗಳಲ್ಲಿ ಊಳಿಡುವ ನರಿಗಳು), ಹುಯ್ಯಲಿಡು, ಬೊಬ್ಬಿಡು, ಚೀರು
hub — ನಾ 1 ಗಾಲಿಯ ನಡು 2 ನಡುವಿನೆಡೆ
hubbub — ನಾ ಗುಲ್ಲು (ಆ ಗುಲ್ಲು ಕೇಳಿ ಎಲ್ಲರೂ ಹೊರ ಬಂದರು; ಗುಲ್ಲುಮಾಡು; ಗುಲ್ಲಬ್ಬಿಸು),ಗವುಜಿ
hubris — ನಾ ಸೊಕ್ಕು, ಕೊಬ್ಬು, ಮಲೆಪು
huddle — ಕ್ರಿ 1 ಗುಂಪುಸೇರು, ಕಿಕ್ಕಿರಿ 2 ಮಯ್ಮುದುಡಿಸು
hue — ನಾ 1 ಬಣ್ಣ, ಹೊಗರು 2 ಬೊಬ್ಬೆ
huff — ಕ್ರಿ ರೇಗಿಸು, ಕೆರಳಿಸು 2 ಊದು
hug — ಕ್ರಿ ತಬ್ಬು, ಅಪ್ಪು (ಅಪ್ಪುಗೆ)
huge — ಗು ಬಿಟ್ಟಳ (ಬಿಟ್ಟಳವಾಗು), ಎಕ್ಕಲ (ಎಕ್ಕಲ ಕಟ್ಟಡ)
hulk — ನಾ ಬಿಚ್ಚಿಟ್ಟ ಹಡಗು, ಒಡೆದ ಹಡಗು
hulky — ಗು ದಪ್ಪವಾದ
hull — ನಾ ಹಡಗಿನ ಒಡಲು, ಸಿಪ್ಪೆ, ಹೊಟ್ಟು, ಗೆರಟೆ
hullabaloo — ನಾ ಬೊಬ್ಬೆ, ಗುಲ್ಲು
hum — ಕ್ರಿ ಮೊರೆ (ಮೊರೆಯುತ್ತಿರುವ ತುಂಬಿಗಳ ಹಿಂಡು)
human — ಗು ಮಂದಿಯ, ಮಂದಿಗನ
humane — ಗು ಮರುಕವಿರುವ, ಒತ್ತಾಸೆ ಯಾಗುವ
humble — ಕ್ರಿ ಅಡಗು, ತಗ್ಗು (ಅವನೊಂದಿಗೆ ಅಷ್ಟೂಂದು ತಗ್ಗಿಬಗ್ಗಿ ನಡೆಯಬೇಕೇ?), ಕಿಳ್ಪಡಿಸು, ಕಿಳ್ಮಾಡು (ನಿಮ್ಮೆದುರು ತನ್ನನ್ನೇ ಕಿಳ್ಮಾಡಿಕೊಳ್ಳುತ್ತಿದ್ದಾನೆ)
humbug — ನಾ ಮೋಸ, ಉಕ್ಕಿವ, ಮೋಸಗಾರ
humdrum — ಗು ಒಂದೇ ಬಗೆಯ, ಚಿಟ್ಟು ಹಿಡಿಸುವ, ಸಪ್ಪೆ
humid — ಗು ಒದ್ದೆ, ಈರವುಳ್ಳ
humidity — ನಾ ಗಾಳಿಲಿುೀರ
humiliate — ಕ್ರಿ ಮದಿಪುಕಳೆ, ತಕ್ಕಮೆ ಕೆಡಿಸು
humility — ನಾ ತಗ್ಗಿಕೆ, ಅಡಗಿಕೆ
hummock — ನಾ ಗುಡ್ಡ, ದಿಬ್ಬ
humor — ನಾ 1 ನಗೆವಡಿ, ನಗೆವಳಿ 2 ತಣಿಸು (ಆತನ ತೆವಲನ್ನು ನಾನು ತಣಿಸಲಾರೆ) ನಾ ನಗೆವಡಿಗಾರ
humorous — ಗು ನಗಿಸುವ
hump — ನಾ ಹಿಳಲು (ಗೂಳಿಯ ಹಿಳಲು), ಹೊರಡು (ಬೆನ್ನ ಹೊರಡು), ಕೂನು, ಗೂನು (ಗೂನುಬೆನ್ನು)
humpback — ನಾ ಗೂನುಬೆನ್ನು
humus — ನಾ ಹೊಳೆಮಣ್ಣು (ಹೊಳೆಮಣ್ಣಿನಲ್ಲಿ ಬದನೆ ಗಿಡ ಚನ್ನಾಗಿ ಬೆಳೆದಿದೆ), ಮಣ್ಣು ಗೊಬ್ಬರ
hunch — ನಾ ಮುನ್ನೆಣಿಕೆ (ಏನೋ ಕೆಟ್ಟದ್ದು ನಡೆಯಲಿದೆಯೆಂಬ ಮುನ್ನೆಣಿಕೆ ಅವನಿ ಗಿತ್ತು)
hunch — ಕ್ರಿ 1 ಗೂನುಬೀಳು (ಗೂನುಬಿದ್ದ ಬೆನ್ನು) 2 ಬೆನ್ನು ಬಾಗಿಸು (ಮುದುಕಿ ಬೆನ್ನು ಬಾಗಿಸಿ ನಡೆಯುತ್ತಿದ್ದಾಳೆ)
hundred — ನಾ ನೂರು (ನೂರ್ವರು, ನೂರು ಮಂದಿ, ನೂರಾರು)
hunger — ನಾ ಹಸಿವು (ಹಸಿವಾದಾಗ ಆತ ಏನಾದರೂ ಬೇಲಿುಸಿ ತಿನ್ನುತ್ತಾನೆ), ಹಸಿವೆ (ತಡೆಯಲಾರದ ಹಸಿವೆ)
hunger — ಕ್ರಿ ಹಸಿ (ಹಸಿದವನು; ಹಸಿದ ಹುಲಿ)
hungry — ಗು ಹಾತೊರೆವ, ಹಂಬಲಿಸುವ, ಹಸಿದ
hunt — ಕ್ರಿ 1 ಬೇಟೆಯಾಡು, ಹಿಂಬಾಲಿಸು 2 ಹುಡುಕು
hunter — ನಾ ಬೇಟೆಗಾರ, ಬೇಡ, ಬೇಡಿತಿ, ಕಾಟಕ (ಕಾಡುಕೋಳಿಗಳನ್ನು ಬೇಟೆಯಾಡು ತ್ತಿರುವ ಕಾಟಕನವನು), ಕಬ್ಬಿಲ (ಕಬ್ಬಿಲ ಪಡೆ)
hunting — ನಾ ಬೇಟೆ (ಬೇಟೆನಾಲಿು; ಬೇಟೆ ಯಾಡು),ಸರವಿ, ಸರಡು (ಜಿಂಕೆಗಳ ಸರಡು)
hunting animal — ನಾ ಅಟ್ಟುಳಿ
hurdle — ನಾ ತಡೆ (ತಡೆಯೋಟದಲ್ಲಿ ಅವನು ಮೊದಲಿಗನಾಗಿದ್ದಾನೆ), ಅಡ್ಡಿ, ಅಡಚಣೆ
hurl — ಕ್ರಿ 1 ಎಸೆ (ಊಟದ ತಟ್ಟೆಯನ್ನು ಕೆರಳಿ ಹೊರಗೆಸೆದ), ಒಗೆ, ಬಿಸಾಡು 2 ಓಡು
hurricane — ನಾ ಸುಂಟರಗಾಳಿ, ಸುಟ್ಟುರೆ
hurry — ನಾ ಪದರು, ಗಡಿಬಿಡಿ (ಅವಳು ತವರಿಗೆ ಹೊರಡುವ ಗಡಿಬಿಡಿಯಲ್ಲಿದ್ದಳು), ಕದುಬು (ಕದುಬುಗೊಳ್ಳು), ಉರವಣಿ (ಹೋಗುವ ಉರವಣಿಯಲ್ಲಿ ಆತನಿಗೆ ಯಾರೂ ಕಾಣಿಸು ವುದಿಲ್ಲ)
hurt — ಕ್ರಿ 1 ನೋಲಿುಸು, ಗಾಸಿಗೊಳಿಸು 2 ತೊಂದರೆ ಕೊಡು, ಅಳಿಸು, ಕೆಡಿಸು
hurtle — ಕ್ರಿ ಬಿರುಸಾಗಿ ಎಸೆ, ದಡದಡನೆ ಬೀಳು
husband — ನಾಗಂಡ,ಇನಿಯ ನಾ ಒಕ್ಕಲಿಗ, ಆರಂಬಗಾರ
husbandry — ನಾ ಆರಂಬ, ಸೇದ್ಯ
hush — ಕ್ರಿ ಕುಂಗಿರು, ಸುಮ್ಮಗಿರು, ಗಪ್ಪನಿರು
husk — ನಾ ಗುಂಗು (ಬತ್ತದ ಗುಂಗು), ಉಬ್ಬಲು (ಬತ್ತದ ಉಬ್ಬಲನ್ನು ತಲೆದಿಂಬಿಗೆ ಬಳಸು ತ್ತಾರೆ), ಉಮಿ (ಉಮಿಕರಿ), ಹೊಟ್ಟು, ಸಿಪ್ಪೆ (ಸಿಪ್ಪೆಕಳೆ), ಕೊಬ್ಬಟ್ಟು
husky — ಗು ದರಕು, ಒರಟು, ಗೊಗ್ಗರು
hustle — ನಾ ನೂಕುನುಗ್ಗಲು
hustle — ಕ್ರಿ 1 ದೂಡು, ದಬ್ಬು, ಸೆಣಸು 2 ದಡಬಡನೆ ಮಾಡು (ಕೆಲಸಗಳನ್ನೆಲ್ಲ ದಡಬಡನೆ ಮಾಡಿ ಮುಗಿಸಿದ)
hut — ನಾ1 ಗುಡಿಸಲು 2ಕೊಗಳು, ಕೊಬಳು (ಕೊಬಳಿಗೆ ಮುಳಿ ಹೊದಿಸುತ್ತಿದ್ದಾರೆ)
hutch — ನಾ ತೊಟ್ಟಿ, ಗೂಡು
hybrid — ನಾ ಬೆರಕೆತಳಿ, ಅಡ್ಡತಳಿ
hydrant — ನಾ ಬೀದಿಕೊಳಾಲಿು, ಹೆಕ್ಕೊಳಾಲಿು
hydrophobia — ನಾ 1 ನೀರಂಜಿಕೆ 2 ನಾಲಿು ಹುಚ್ಚು
hyena — ನಾಕಿರುಬ
hygiene — ನಾ ಒಡಲೊಳಿತರಿಮೆ
hymn — ನಾ ಹೊಗಳುಹಾಡು, ಹೊಗಳ್ತೆ
hyperbole — ನಾ ಮಿಗಿಲೊರೆ, ಮಿಗಿಲೊರೆತ
hypertension — ನಾಏರೊತ್ತಡ
hyphen — ನಾ ಅಡ್ಡಗೆರೆ, ಕೂಡುಗೆರೆ
hypnosis — ನಾ ಮಯ್ಮರೆತ
hypnotic — ಗು ಒರಗಿಸುವ, ಒರಕು ಬರಿಸುವ
hypnotize — ಕ್ರಿ ಮಯ್ಮರೆಸಿ ಈಲುಪಡೆ
hypocrisy — ನಾ ಹೊರತೋರಿಕೆ, ಚದುಪು
hypocrite — ನಾ ತೋರ್ಕೆಗ
hypodermic — ನಾ 1 ಚುಚ್ಚುಮದ್ದು 2 ತೊಗಲಿನೊಳಗು
hypothesis — ನಾ ಗೆತ್ತುದು, ಗಿರುಗೆ
hypothetical — ಗು ಗಿರುಗೆಯ, ಗೆತ್ತ ನಾ ನರಮರುಳು (ನರಮರುಳು ಗೊಂಡ ಹುಡುಗಿ)