← Ch 17  ·  Contents  ·  Ch 19 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

V

vacancy — ನಾ ತೆರವು, ತೆರಹು (ಅಲ್ಲಿ ತೆರಹಿಲ್ಲ),ಬಿಡುವು
vacant — ಗು 1 ಬರಿದು (ಬರಿದುಮಾಡು), ಬಕ್ಕಟ (ಬಕ್ಕಟ ಬಯಲು) 2 ಕೆಲಸವಿಲ್ಲದ 3 ಅನಿಸಿಕೆಲಿುಲ್ಲದ
vacate — ಕ್ರಿ 1 ಬಿಟ್ಟುಕೊಡು, ತೆರಪುಮಾಡು, ಬರಿದುಮಾಡು 2 ಅಳಿಸು, ನೀಗಾಡು
vacation — ನಾ ಪೆರ್ಬಿಡುವು (ಈ ಸಲದ ಪೆರ್ಬಿಡುವಿನಲ್ಲಿ ನಾವು ನಿಮ್ಮೂರಿಗೆ ಬರು ತ್ತೇವೆ)
vaccination — ನಾ ತಡೆಚುಚ್ಚು (ಸಿಡುಬಿಗೆ ತಡೆಚುಚ್ಚು ಕೊಡಿಸಿದ್ದಾರೆ)
vacillate — ಕ್ರಿ ತುಯ್ದಾಡು (ಗಾಳಿಗೆ ಮರ ತುಯ್ದಾಡುತ್ತಿದೆ), ಓಲಾಡು (ಓಲಾಟ)
vacuum — ನಾ ಮುಚ್ಚರ (ಮುಚ್ಚರದಲ್ಲಿರಿಸಿದ ತಿಂಡಿ ಕೆಟ್ಟುಹೋಗುವುದಿಲ್ಲ)
vagabond — ನಾ ಅಲೆಮಾರಿ, ಉಂಡಾಡಿ (ಯಾವ ಕೆಲಸವನ್ನೂ ಮಾಡದೆ ಉಂಡಾಡಿ ಯಾಗಿದ್ದಾನೆ)
vagary — ನಾ 1 ಹುಚ್ಚಾಟ 2 ಎಲ್ಲರಂತಿಲ್ಲದ ನಡತೆ
vagrant — ನಾ ಅಲೆಮಾರಿ, ಉಂಡಾಡಿ
vague — ಗು ಕಂಡಿತವಲ್ಲದ, ತೆಳುವಲ್ಲದ
vain — ಗು ಹೊಳ್ಳು (ಹೊಳ್ಳು ಮಾತು; ಹೊಳ್ಳು ಬೆದರಿಕೆ), ಒಣ (ಒಣಹೆಮ್ಮೆ), ಬರಿ (ಬರಿ ನುಡಿ; ಬರಿಬಾಯಿ)
vainglory — ನಾ ಹೊಗಳಿಕೊಳ್ಳುವಿಕೆ, ಒಣ ಹೆಮ್ಮೆ, ಹೊಳ್ಳುಕಾಣ್ಕೆ
vainly — ಗು 1 ಬರಿದೆ (ಬರಿದೆ ಹೊತ್ತು ಕಳೆಯಬೇಡ; ಆತ ಬರಿದೆ ತಿನ್ನುತ್ತಿದ್ದ) 2 ಕೊಬ್ಬಿ, ಬೀಗಿ
vale — ನಾ ಕಣಿವೆ
valedictory — ಗು ಬೀಳ್ಕೊಡುಗೆಯ (ಇದು ಬೀಳ್ಕೊಡುಗೆಯ ಕೂಟ)
valet — ನಾ ಕಯ್ಯಾಳು (ಆತನಿಗೊಬ್ಬ ಕಯ್ಯಾಳು ಬೇಕಾಗಿದೆ)
valiant man — ನಾ ಕಟ್ಟಾಳು, ಆಕೆವಾಳ
valid (be) — ಕ್ರಿ ಸಲ್ಲು (ಒಂಟಿಯಾಗಿ ಹೋಗ ಸಲ್ಲ; ಜೇನುತುಪ್ಪಕ್ಕೆ ಸಕ್ಕರೆ ಸಲ್ಲುತ್ತದೆ)
valid — ಗು ಸರಿಯಾದ, ಕಟ್ಟಲೆಗೆ ಒಪ್ಪುವ
validity — ನಾ ಸಲವು (ಈ ಮದ್ದಿನ ಸಲವು ಇನ್ನೂ ಒಂದು ತಿಂಗಳಿದೆ) ನಾ ತಿರುಗಾಟದ ಚೀಲ
valley — ನಾ ಕಣಿವೆ
valorous man — ನಾ ಹೂಣಿಗ (ಹೂಣಿಕೆ; ಹೂಣಿಗತನ)
valour — ನಾ ಆಕೆ (ಆಕೆವಾಳ; ಆಕೆವಾಳತನ), ತಕ್ಕು (ಗೆಲ್ಲುವ ತಕ್ಕು ನಮ್ಮಲ್ಲಿದೆ), ಕಾಣ್ಮೆ, ಒಟ್ಟಜೆ, ಪನ್ನತಿಕೆ
value — ನಾ ಆರ್ಪು (ಆರ್ಪುಗುಂದು), ಬೆಲೆ
value — ಕ್ರಿ ಕಂಡಿಸು (ಅವರು ನಮ್ಮ ಮನೆ ಯನ್ನು ಕಂಡಿಸಲು ಬಂದಿದ್ದಾರೆ), ಬೆಲೆಕಟ್ಟು
valve — ನಾ ತೆರ್ಪು (ಈ ಹಿಡಿಕೆಯನ್ನು ಬಲಕ್ಕೆ ತಿರುಗಿಸಿದರೆ ತೆರ್ಪು ಮುಚ್ಚುತ್ತದೆ)
vandalize — ಕ್ರಿ ಒಡಮೆಯಳಿಸು, ಒಡಮೆ ಕೆಡಿಸು
vane — ನಾ ಗಾಳಿಕೋಳಿ
vanguard — ನಾ 1 ಮುಂಪಡೆ 2 ಮುಂದಾಳು 3 ಮುಂಗಡೆ
vanish — ಕ್ರಿ 1 ಕಣ್ಮರೆಯಾಗು, ಕಾಣದಾಗು 2 ಇಲ್ಲದಾಗು
vanity — ನಾ 1 ಹೊಳ್ಳು, ಕೆಲಸಕ್ಕೆ ಬಾರದ 2 ಒಣಹೆಮ್ಮೆ
vanquish — ಕ್ರಿ 1 ಸೋಲಿಸು, ಗೆಲ್ಲು 2 ಒಟ್ಟಯಿಸು, ನುಂಗಿಕೊಳ್ಳು (ಸಿಟ್ಟನ್ನು ನುಂಗಿ ಕೊಳ್ಳು), ಅಡಗಿಸು (ಗೀಳನ್ನು ಅಡಗಿಸಿ ಕೊಂಡ)
vantage — ನಾ 1 ಆಯಕಟ್ಟಿನೆಡೆ 2 ಅಕ್ಕು
vapid — ಗು 1 ಸಪ್ಪೆ, ಕಂಪಿಲ್ಲದ 2 ಮದಡು, ಮಂಕು
vapour — ನಾ ಆವಿ (ಕುದಿವ ನೀರಿನಿಂದ ಮೇಲೆ ಏಳುವ ಆವಿ)
variable — ಗು ಮಾರ್ಪಡಬಲ್ಲ
variance — ನಾ 1 ಮಾರ್ಪು, ಮಾರ್ಪಾಡು 2 ಗೆಂಟು 3 ತೋಟಿ
varied — ಗು 1 ಬಗೆಬಗೆಯ 2 ಮಾರ್ಪಟ್ಟ
variegated — ಗು ಬಣ್ಣಬಣ್ಣದ
variety — ನಾ ಬಗೆ (ಹಬ್ಬಕ್ಕೆಂದು ಹಲವು ಬಗೆಯ ತಿಂಡಿಗಳನ್ನು ಮಾಡಿದ್ದರು)
various — ಗು ಹಲವು, ಬಗೆಬಗೆಯ, ಬೇರೆ ಬೇರೆ
varnish — ನಾ ಮೆರುಗೆಣ್ಣೆ
vary — ಕ್ರಿ ಮಾರ್ಪಡು, ಬೇರಾಗು
vast — ಗು ತುಂಬಾ ಹರವಿನ, ಹಲವಾರು, ತುಂಬಾ ದೊಡ್ಡ
vat — ನಾ ದೊಡ್ಡ ತೊಟ್ಟಿ, ಬಾನಿ ನಾ 1 ಬಾಗುಮಾಡು, ಬಾಗುಮೆತ್ತೆ 2 ನೆಲಮನೆ 3 ಕಾಪುಕೋಣೆ
vault — ಕ್ರಿ ನೆಗೆ, ಜಿಗಿ
veer — ಕ್ರಿ ಬದಿಗೆ ಸರಿ, ತಿರುಗು
vegetable — ನಾ ಕರಿ, ಪಲ್ಲೆ (ಪಲ್ಲೆಸಪ್ಪು; ಪಲ್ಲೆಯ)
vegetarian — ನಾ ಬಾಡುಣ್ಣದವನು
vegetate — ಕ್ರಿ 1 ಗಿಡದಂತೆ ಬೆಳೆ 2 ಮಂಕಾ ಗಿರು, ಸಪ್ಪೆಯಾಗಿರು
vehemence — ನಾ 1 ಕಡುಪು 2 ಕಡು ಮೂಡಿಕೆ, ಕಡು ಅನಿಸಿಕೆ
vehemently — ಗು ತತ್ತಳ (ತತ್ತಳ ಕುದಿ)
vehicle — ನಾ 1 ಬಂಡಿ 2 ಒಯ್ಯುಗೆ (ಅನಿಸಿಕೆ ಗಳ ಒಯ್ಯುಗೆ)
veil — ನಾ ಮುಸುಕು (ಮುಸುಕು ಹಾಕು; ಮುಸುಕಿಡು), ಕವ್ವರ, ಕೊವ್ವರಿ, ಗುಬರು (ಗುಬರುಗಟ್ಟು)
vein — ನಾ 1 ನರವು (ನೆತ್ತರಿನ ನರವು ಎದ್ದು ಕಾಣಿಸುತ್ತಿದೆ) 2 ಎಳೆ (ಎಲೆಗಳ ಮೇಲೆ ಕಾಣಿಸುವ ಎಳೆ)
velocity — ನಾ ಒತ್ತರ, ಉರುಬು (ಗಾಳಿಯ ಉರುಬು)
venal — ಗು ಅಡ್ಡಿಕ್ಕಬಲ್ಲ, ಲಂಚ ಕೊಡಬಲ್ಲ
vend — ಕ್ರಿ ಮಾರು (ಮಾರಾಟ; ಮಾರಾಟಗಾರ)
vendetta — ನಾ ಕಡುಹಗೆತನ, ಮನೆತನದ ಹಗೆತನ
vendor — ನಾ ಮಾರಾಳಿ, ಹಾದಿಹರದ, ತಿರುಗು ಹರದ
veneer — ನಾ 1 ತೆಳುಹೊದಿಕೆ, ಮೆರುಗು 2 ಹೊರನಯ, ತೋರ್ಕೆ
venerable — ಗು ತಕ್ಕಮೆಯ
veneration — ನಾ ತಕ್ಕಮೆ, ಮದಿಪು
vengeance — ನಾ ಸೇಡು, ಮುಯ್ಯಿ (ಮುಯ್ಯಿ ತೀರಿಸು)
venial — ಗು ತಪ್ಪು ಮರೆಯಬಲ್ಲ, ತಪ್ಪು ಕಡೆಗಣಿಸಬಲ್ಲ
venison — ನಾ ಜಿಂಕೆಯ ಬಾಡು
venom — ನಾ ನಂಜು (ಹಾವಿನ ನಂಜು)
vent — ನಾ 1 ಕಂಡಿ, ಕೋಡಿ, ತೂತು 2 ಸೀಳು
vent — ಕ್ರಿ ಹೊರಹಾಕು, ಹೊರಗೆಡಹು
ventilate — ಕ್ರಿ 1 ಗಾಳಿಬೀಸಲು ಬಿಡು 2 ತೂತು ಕೊರೆ 3 ಅನಿಸಿಕೆ ತಿಳಿಸು ನಾ ಗಾಳಿಯಾಟ (ಕೋಣೆಯ ಗಾಳಿಯಾಟ ಚನ್ನಾಗಿಲ್ಲ), ಗಾಳಿ ಹರಿದಾಟ
ventilator — ನಾ ಕಿಂಡಿ
ventriloquist — ನಾ ಉಲಿಮಾಟಗಾರ
venture — ನಾ ಕುತ್ತದ ಕೆಲಸ, ತೊಂದರೆ ಕೆಲಸ
venture — ಕ್ರಿ 1 ಕೆಚ್ಚೆದೆಲಿುಂದ ಮುನ್ನುಗ್ಗು 2 ಕುತ್ತದ ಕೆಲಸಕ್ಕೆ ಹೊರಡು 3 ಅನಿಸಿಕೆ ತಿಳಿಸು
venue — ನಾ ಕೂಟದೆಡೆ, ಎಸಕದೆಡೆ
veracity — ನಾ 1 ನಾಣ್ಯ 2 ಸರಿಮೆ 3 ನನ್ನಿ, ನಿಕ್ಕುವ
veranda — ನಾ ದಿಣ್ಣೆ, ಕೀಳು (ಮನೆಯೆದುರಿನ ಕೀಳಿನಲ್ಲಿ ಕುಳಿತಿದ್ದ; ಕೀಳಿಲು), ಜಗಲಿ (ಮನೆಯ ಮುಂದಿನ ಜಗಲಿ),ಕಯ್ಸಾಲೆ
verb — ನಾ ಎಸಕ (ಎಸಕಪದ)
verbal — ಗು ಮಾತಿನ (ಮಾತಿನ ಒಪ್ಪಿಗೆ) 2 ಎಸಕದ (ಎಸಕದ ಹೆಸರು; ಎಸಕದಿಂದ ಪಡೆದ ಹೆಸರು)
verbatim — ಗು ಪದಕ್ಕೆ ಪದ ಕೊಟ್ಟು
verbose — ಗು ಹೆಚ್ಚು ಮಾತಿನ, ಬೇಡದಶ್ಟು ನುಡಿವ
verdant — ಗು ಹಚ್ಚ ಹಸಿರು
verdict — ನಾ ತೀರ್ಪು, ತೀರ್ಮಾನ
verdigris — ನಾ ಕಿಲುಬು (ಕಿಲುಬುಗಟ್ಟು; ಕಿಲುಬು ಹಿಡಿ)
verdure — ನಾ 1 ಪಚ್ಚೆ ಪಯಿರು 2 ಪಚ್ಚೆ ಬಣ್ಣ
verge — ನಾ ಬದಿ, ದಂಡೆ
verge — ಕ್ರಿ 1 ಮಾಲು, ಬದಿಗೆ ಸರಿ 2 ಒಂದುಗೂಡು
verify — ಕ್ರಿ ನನ್ನಿಮಾಡು
veritable — ಗು ನನ್ನಿ, ನನಸಾದ
vermicelli — ನಾ ಸೇವಿಗೆ (ತೆಳು ಸೇವಿಗೆ)
vermilion — ಗು ಕಡುಕೆಂಪು
vermin — ನಾ ಕೇಡಿ, ಕೇಡಿಗ
vernacular — ನಾ ಆಡುನುಡಿ
versatile — ಗು ಹಲನುರಿಗ, ಹಲನುರಿತವನು
verse — ನಾ ಹಾಡು ಗು ನುರಿತ (ಮನೆಕೆಲಸದಲ್ಲಿ ನುರಿತ ಹುಡುಗಿ), ಪಳಗಿದ (ಕೆಲಸದಲ್ಲಿ ಪಳಗು), ಕಲಿತ, ತಿಳಿದ
version — ನಾ 1 ನುಡಿಮಾರ್ಪು 2 ಒಂದು ಅನಿಸಿಕೆ
vertebra — ನಾ ಬೆನ್ನೆಲುಬು ತುಂಡು
vertex — ನಾ ತುದಿ (ತುತ್ತತುದಿ; ಕೋನದ ತುದಿ)
vertical — ನಾ ನೆಟ್ಟಗೆ (ನೆಟ್ಟಗೆ ಎಳೆದ ಗೆರೆ)
vertigo — ನಾ ತಲೆಸುತ್ತು (ತಲೆಸುತ್ತು ಬಂದು ಬೀಳು)
verve — ನಾ ಹುರುಪು, ಚುರುಕು
very — ಗು 1 ತೀರ (ತೀರ ಚಿಕ್ಕವನು; ತೀರ ಕಡಿಮೆ; ತೀರ ಜಗ್ಗಿದರೆ ಹಗ್ಗ ಹರಿದೀತು), ತುಂಬಾ 2 ಅದೇ 3 ತಕ್ಕ
vesicle — ನಾ ಬೊಬ್ಬೆ, ಹೊಪ್ಪಳ
vessel — ನಾ 1 ಕಲ (ಅಡುಕಲ), ಹರವಿ (ನೀರಿನ ಹರವಿ), ಮಿಳ್ಳಿ (ತುಪ್ಪದ ಮಿಳ್ಳಿ), ಚಂಬು (ಹಾಲಿನ ಚಂಬು), ತಂಬಿಗೆ (ತಂಬಿಗೆಯಲ್ಲಿ ನೀರು ಕೊಟ್ಟಳು), ಕುಡಿಕೆ (ಎಣ್ಣೆಯ ಕುಡಿಕೆ) 2 ಹಡಗು 3 ನರವು
vest — ನಾ ಎದೆಯಂಗಿ
vest — ಕ್ರಿ 1 ಉಡು 2 ಇಡು, ಹೊರಿಸು (ಅಳವು ಹೊರಿಸು)
vestibule — ನಾ ನಡುಮನೆ
vestige — ನಾ ಉಳಿಕೆ (ಉಳಿಕೆಯ ಕುರುಹು)
veteran — ನಾ ನುರಿತವನು, ಹಳೇ ಕೆಲಸಗಾರ
veterinary — ಗು ಗಂಟಿಮಾಂಜುಗೆಯ
veto — ನಾ ತಡೆಹಕ್ಕು
vex — ಕ್ರಿ ಕಾಡು, ಕೆರಳಿಸು, ಕಿರಿಕಿರಿ ಮಾಡು, ಬೇಸರು (ಬಿಡದೆ ಬರುವ ಮಳೆಯಿಂದ ಬೇಸತ್ತು ಹೋದೆವು)
vexation — ನಾ ಬೇಸರ (ಬೇಸರಿಸು; ಬೇಸರ ಗೊಳ್ಳು), ಕಿರಿಕಿರಿ
viaduct — ನಾ ಬಾಗುಸಾರ (ಕಣಿವೆಯನ್ನು ದಾಟಲು ಬಾಗುಸಾರದ ಮೇಲಿನ ಹೆದ್ದಾರಿ ಯಿದೆ)
vial — ನಾ ಕಿರುಬುಡ್ಡಿ
vibrant — ಗು 1 ನಡುಗುವ, ಅದುರುವ 2 ಮಾರುಲಿವ, ಹೊಳಲಿಡುವ 3 ಹುರುಪಿನ, ಮಿಡಿಯುವ, ಹೊಯ್ದಾಡುವ
vibrate — ಕ್ರಿ ನಡುಗು, ಅದುರು ನಾ 1 ಕೆಟ್ಟ ಕೆಲಸ, ಕೆಟ್ಟ ನಡತೆ 2 ಕುಂದು, ತಪ್ಪು 3 ತಿರುಡಿ, ಅಮುಕುಹಿಡಿಕೆ
vice versa — ನಾ ಮಾರ್ಬಗೆ
vice-president — ನಾ ಮರುತಲೆಯಾಳು, ಮರುಮೇಲಾಳು
viceroy — ನಾ ಮಾರರಸು
vicinity — ನಾ ಬದಿ (ಆಲದ ಮರದ ಬದಿಯ ಲ್ಲಿರುವ ಮನೆ; ಬದಿಮಾಡು), ಕೆಲ (ಮನೆಯ ಕೆಲದ ಬಾಗಿಲು; ಕೆಲಸಾರು),ದಂಡೆ,ಅರಗು (ಮನೆಯ ಅರಗಿನಲ್ಲೇ ಹೊಳೆ ಹರಿಯುತ್ತದೆ), ಬಳಿ (ನಿನ್ನ ಬಳಿಗೆ ಕಳುಹಿಸಿದೆವು; ಬಳಿಹಿಡಿ; ಬಳಿಸಾರು)
vicious — ಗು ಸಿಲುಕು (ಸಿಲುಕು ಕುದುರೆ), ಸಿಕ್ಕು, ಅಗಡು (ಅಗಡಾಕಳು)
vicissitudes — ನಾ ಏರಿಳಿತಗಳು, ಎದುರು ನೋಡದ ಮಾರ್ಪಾಡುಗಳು
victim — ನಾ 2 ಕೋರಲಾದವನು 2 ಮೋಸ ಹೋದವನು, ನೊಂದವನು
victor — ನಾ ಗೆಲ್ಲಕಾರ
victory — ನಾ ಗೆಲವು, ಗೆಲ್ಲ (ಗೆಲ್ಲಸೋಲು), ಗೆಲುಹ
victual — ನಾ ತಿನಿಸು
vide — ಕ್ರಿ ನೋಡು, ಅರಿವುಪಡೆ
video — ನಾ ಕಾಣ್ಕೆ (ಕಾಣ್ಕೆಸುರುಳಿ, ಕಾಣ್ಕೆತಟ್ಟೆ)
vie — ಕ್ರಿ ಸೆಣಸು, ಹೊಣರು
view — ನಾ 1 ಕಾಣ್ಕೆ 2 ಅನಿಸಿಕೆ
view — ಕ್ರಿ ನೋಡು (ಅವರ ಕೆಲಸವನ್ನು ನೋಡಲು ಬಂದೆ; ನೋಟ)
viewpoint — ನಾ ನೋಟದ ಕೋನ
vigil — ನಾ ಕಾವಲು (ಇರುಳಿಡೀ ಕಾವಲು ಕುಳಿತಿದ್ದ), ಕಾಪು (ಕಾಲ್ಗಪು), ಕಾಹು
vigilance — ನಾ ಎಚ್ಚರಿಕೆ (ಎಲ್ಲರೂ ಎಚ್ಚರಿಕೆ ಯಿಂದಿರಲು ಹೇಳಿದ್ದಾರೆ)
vigorous — ಗು ಕಸುವುಳ್ಳ, ಹುರುಪಿನ
vigour — ನಾ ಕಸುವು, ಹುರುಪು
vile — ಗು ಕೂಳ (ಕೂಳತನ), ಕೆಟ್ಟ (ಕೆಟ್ಟ ಮಂದಿ)
villa — ನಾ ದೊಡ್ಡ ತೋಟದಮನೆ
village — ನಾ ಕೊಪ್ಪ (ಕೊರಗರ ಕೊಪ್ಪ), ಕೊಪ್ಪಲು (ಕಾಡುಕುರುಬರ ಕೊಪ್ಪಲು), ಊರು (ಊರಿನ ದಾರಿ), ಹಳ್ಳಿ (ಹಳ್ಳಿಗ; ಹಳ್ಳಿಕಾರ; ಹಳ್ಳಿಗಾಡು), ಕುರಿಕೆ (ನಮ್ಮ ಕುರಿಕೆಯಲ್ಲಿ ಅರುವತ್ತು ಮನೆಗಳಿವೆ) ನಾ ಊರವ, ಊರಾಳು
villain — ನಾ ಕೇಡಿ
villainy — ನಾ ಕೇಡಿತನ, ಕೆಟ್ಟತನ
vim — ನಾ ಕಸುವು, ಹುರುಪು
vincible — ಗು ಗೆಲ್ಲಬಲ್ಲ, ಹತೋಟಿಗೆ ತರ ಬಲ್ಲ
vindicate — ಕ್ರಿ ಬೆಂಬಲಿಸು, ಸರಿತೋರಿಸು, ತೆಗಳಿಕೆಯನ್ನು ದೂರಮಾಡು
vindictive — ಗು ಸೇಡಿನ, ಮುಯ್ಯಿ ತೀರಿಸುವ
vine — ನಾ ಬಳ್ಳಿ (ಮೆಣಸಿನ ಬಳ್ಳಿ), ಹಂಬು (ಹಾಗಲ ಹಂಬು)
vinegar — ನಾ ಹುಳಿನೀರು
violate — ಕ್ರಿ ತಪ್ಪು (ಅವನು ಮಾತಿಗೆ ತಪ್ಪಿದರೆ ನಾನೇನು ಮಾಡಲಿ?), ಮುರಿ (ಕಟ್ಟಲೆ ಮುರಿಯಬೇಡ)
violence — ನಾ ಉರುಬು (ಗಾಳಿಯ ಉರು ಬನ್ನು ತಡೆಯುವುದಕ್ಕಾಗುವುದಿಲ್ಲ), ಬಿಣಿತೆ, ಬಲ್ಮೆ, ಒತ್ತರ
violet — ಗು ನೀಲಿ-ನೇರಳೆ
viper — ನಾ ಕಟ್ಟುಹಾವು
virile — ಗು ಗಂಡುಸುತನದ, ಕಸುವುಳ್ಳ
virtue — ನಾ 1 ಸಯ್ಪು (ಸಾಯುವ ಹೊತ್ತಿಗೆ ತುಸುವಾದರೂ ಸಯ್ಪು ಗಳಿಸಬೇಡವೇ?), ಮೊರೆ (ಮೊರೆದಪ್ಪು),ಅರ (ಅರವಟ್ಟಿಗೆ; ಅರಮಗ) 2 ಮೇಲ್ಮೆ, ಮೇಟಿ
virtuosity — ನಾ ಚೆಚ್ಚರಿಕೆ, ಪಳಗಿಕೆ
virtuous — ಗು ಸಯ್ದ, ಸಯ್ಪುಳ್ಳ
virulent — ಗು 1 ನಂಜಿನ, ಕೊಲ್ಲಬಲ್ಲ 2 ಕಡುಹಗೆಯ 3 ಹರಡುವ (ಹರಡುವ ಕುತ್ತ), ಬಿರುಸಿನ
virus — ನಾ ನಂಜುತುಣುಕು
visa — ನಾ ಪುಗಿಲೊಪ್ಪಿಗೆ
visage — ನಾ 1 ಮೊರೆ 2 ತೋರಿಕೆ
vis-a-vis — ಗು ಎದುರೆದುರಿನ
viscera — ನಾ ಮಯ್ಯೊಳಗು, ಕರಳು
viscous — ಗು ದಪ್ಪ, ಎಟ್ಟೆ (ಎಟ್ಟೆ ಹಾಲು) ಗು ಕಾಣುವ (ಕಣ್ಣಿಗೆ ಕಾಣುವ ತಾರೆಗಳು), ನೋಡಬಲ್ಲ
vision — ನಾ ನೋಟ, ಕಾಣ್ಮೆ, ನೆನೆಯಳವು
visionary — ನಾ ಕನಸುಗಾರ, ಕನಸಿಗ
visionary — ಗು ನೆನಹಿನ, ಬಳಕೆಗೆ ಬಾರದ
visit — ನಾ ಕಾಣ್ಕೆ
visit — ಕ್ರಿ 1 ಹೋಗಿ ಕಾಣು 2 ಬಿದ್ದಿನವ ನಾಗಿರು 3 ಒರೆದು ನೋಡು
visitor — ನಾ ಕಾಣಬಂದವನು
visor — ನಾ 1 ಮುಸುಕು 2 ಗಾಳಿತಡೆ, ಬಿಸಿಲು ತಡೆ
vista — ನಾ ಹರಹಿನ ಕಾಣ್ಕೆ
visual — ಗು ಕಣ್ಣಿನ (ಕಣ್ಣಿನ ತಿಟ್ಟ)
visualize — ಕ್ರಿ ನೆನೆ, ಒಳಕಣ್ಣಿನಿಂದ ನೋಡು
vital — ಗು ಅರಿದಾದ, ಬೇಕಾಗಿರುವ
vital organ — ನಾ ನೆರ (ನೆರವನ್ನು ಮುಟ್ಟು)
vital part — ನಾ ಆಯ (ಆಯಕಟ್ಟು)
vitality — ನಾ ಉಸಿರು, ತಾಳಿಕೆ, ಉಳಿವಳವು, ಕಸುವು, ಹುರುಪು
vitamine — ನಾ ಬಾಳುಳುಪು
vitiate — ಕ್ರಿ 1 ಕೆಡಿಸು, ಹಾಳುಮಾಡು 2 ಕುಂದಿಸು, ಸೊಪ್ಪು, ನಾಟದಂತೆ ಮಾಡು
vitreous — ಗು ಕನ್ನಡಿಯಂತಹ, ಗಾಜಿನಂತಹ
vituperate — ಕ್ರಿ ಅದಟು, ಗಜರು, ಜಂಕಿಸು, ಕೆಟ್ಟಮಾತು ಬಳಸು
viva voce — ನಾ ಬಾಯೊರೆ (ಇವತ್ತು ನಾಲ್ಕಕ್ಕೆ ನನಗೊಂದು ಬಾಯೊರೆಯಿದೆ)
vivacious — ಗು ಚುರುಕಾದ, ಗೆಲುವಾದ, ಮಿಡುಕುವ
vivid — ಗು ಎದ್ದುಕಾಣುವ, ಮಿಡುಕುವ, ಹೊಳೆಯುವ
vivify — ಕ್ರಿ ಉಸಿರುತುಂಬು, ತೆಪ್ಪರು, ಎದ್ದು ಕಾಣುವಂತೆ ಮಾಡು
vocabulary — ನಾ ಪದನೆರಕೆ
vocal cord — ನಾ ಉಲಿತುಟಿ
vocal — ಗು 1 ಆಡಿದ, ಹಾಡಿದ (ಹಾಡಿದ ಹಾಡು) 2 ಗಟ್ಟಿಯಾಗಿ ಮಾತನಾಡಬಲ್ಲ
vocalist — ನಾ ಹಾಡುಗಾರ
vocation — ನಾ ಕೆಲಸ, ಪಳಗಿಕೆ ನಾ ರಂಪ (ರಂಪಮಾಡು), ಹುಯ್ಯಲು (ಹುಯ್ಯಲಿಡು),ಹೊಯಿಲು
vogue — ನಾ ಇವತ್ತಿನ ಮಾಟ, ಉಡುಗೆಯ ಮಾಟ, ಮಂದಿ ಮೆಚ್ಚುವ ಮಾಟ
voice — ನಾ ಕೊರಳು (ಇಂಗೊರಳು, ಕೊರಳು ಗುಟ್ಟು), ಗೊರೆ (ಆತನ ಗೊರೆ ಕೇಳಿಸುವು ದಿಲ್ಲ), ಉಲಿವು, ಹುದುಕ (ಕೊರಳ ಹುದುಕ)
void — ಗು ಬರಿದು (ಬರಿದು ಮಾಡು; ಬರಿ ದಾಗು)
volatile — ಗು 1 ಆವಿಯಾಗುವ 2 ತಟ್ಟನೆ ಮಾರ್ಪಡುವ
volcano — ನಾ ಉರಿಬೆಟ್ಟ
volley — ನಾ ಸುರಿಮಳೆ (ಗುಂಡುಗಳ ಸುರಿ ಮಳೆ; ಬಯ್ಗಳ ಸುರಿಮಳೆ)
voluble — ಗು ಹರಟುವ, ತುಂಬಾ ಮಾತ ನಾಡುವ
volume — ನಾ 1 ಕಡತ, ಹೊತ್ತಗೆ 2 ಅಳವಿ (ಕೊಳದಲ್ಲಿರುವ ನೀರಿನ ಅಳವಿ) 3 ಉಲಿ ಯೇರಿಕೆ
voluntary — ಗು ತನ್ನೊಲವಿನಂತೆ, ಬಯಸಿ ದಂತೆ
volunteer — ನಾ ತನ್ನೊಲವಿಗ
vomit — ಕ್ರಿ ವಾಕರಿಸು (ತಿಂದುದನ್ನೆಲ್ಲ ವಾಕರಿ ಸಿದ; ವಾಕರಿಕೆ; ವಾಕರಿಕೆ ಬರು), ಕಕ್ಕು (ಮಗು ತಿಂದದ್ದನ್ನೆಲ್ಲ ಕಕ್ಕಿ ಹಾಕಿದೆ; ಕಕ್ಕಿಸು), ಕಾರು (ಕಾರಿಕೆ; ಕಾರುಹ), ಉಗು (ನೆತ್ತರು ಉಗು), ಒಗಡಿಸು
vomiting — ನಾ ತೋಹಡಿಕೆ, ಉಬ್ಬಳ (ಉಬ್ಬ ಳಿಸು; ಉಬ್ಬಳಿಕೆ), ಓಕರಿ (ಓಕರಿಯಾಗು; ಓಕರಿಬರು; ಓಕರಿಸು; ಓಕರಿಕೆ), ಬಿಕ್ಕುಳಿ (ಬಿಕ್ಕುಳಿಸು; ಮೂಗಿನೊಳಗೆ ಹೋದ ನೆತ್ತರಿನ ಬಿಕ್ಕುಳಿ)
voracious — ಗು 1 ತುಂಬಾ ಹಸಿದ, ಹೊಟ್ಟೆ ಬಾಕನಾದ 2 ತುಂಬಾ ಕಡಗುವ (ತುಂಬಾ ಕಡಗುವ ಓದುಗ)
vortex — ನಾ 1 ನೀರಸುಳಿ, ಸುಳಿಗಾಳಿ 2 ಅಳಿಸಬಲ್ಲ ಅದಟು
votary — ನಾ 1 ಮೊರೆಗ, ಕೊಂಡಾಡುಗ
vote — ನಾ ಒಪ್ಪಿತ (ಒಪ್ಪಿತ ನೀಡು)
voter — ನಾ ಒಪ್ಪಿತ ನೀಡುಗ, ಒಪ್ಪಿತಗಾರ
vouch — ಕ್ರಿ 1 ನನ್ನಿಯೆನ್ನು, ಸರಿಯೆನ್ನು 2 ಹೊಣೆಯಾಗು
voucher — ನಾ ಸಲ್ಲಿಕೆ
vow — ನಾ ಹರಕೆ (ಹರಕೆ ಕಟ್ಟು, ಹರಕೆ ಕೊಡು; ಹರಕೆ ತೀರಿಸು; ಹರಕೆ ಹೊರು), ಒಟ್ಟು (ಒಟ್ಟಿಟ್ಟುಕೊಳ್ಳು), ಓಲು (ಓಲಿಡು; ಓಲು ಕೊಡು; ಓಲುಗಾರ), ನುಡಿವಳಿ ಕ್ರಿ ಪೂಣು (ಪೂಣ್ಕೆ), ಬಾಯ್ಮಾಡು
vowel — ನಾ ತೆರೆಯುಲಿ
vulgar — ನಾ 1 ಒರಟು, ಹದನಲ್ಲದ, ತರ ವಲ್ಲದ, ಹೊಲಸು, ಪೆಡಸು 2 ಹಳ್ಳಿಯ, ಮಂದಿಯ
vulgar man — ನಾ ಊರುಗ,ಕೂಳ
vulnerable — ಗು 1 ಕುತ್ತದ, ಗಾಸಿಗೊಳಿಸ ಬಲ್ಲ 2 ಸುಳುವಾಗಿ ನಾಟುವ