← Ch 11  ·  Contents  ·  Ch 13 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

N

nadir — ಗು ತುಂಬಾ ಕೆಳಗೆ
nag — ನಾ ಮುದಿ ಕುದುರೆ
nag — ಕ್ರಿ ತಪ್ಪುಹಿಡಿದು ಕಾಡು, ಕಿರಿಕಿರಿ ಮಾಡು (ಆತ ತುಂಬಾ ಕಿರಿಕಿರಿ ಮಾಡುತ್ತಿದ್ದಾನೆ)
nail — ನಾ 1 ಮೊಳೆ (ಗೋಡೆಗೆ ಮೊಳೆ ಹೊಡೆಯಬಾರದು), ಆಣಿ (ಬೀಗದ ಗೊಂಚಲನ್ನು ಆಣಿಗೆ ಸಿಕ್ಕಿಸಿದ್ದೇನೆ) 2 ಉಗುರು (ಕಾಲುಗುರು; ಉಗುರುಕಚ್ಚು)
nail — ಕ್ರಿ 1 ಮೊಳೆಹೊಡೆ 2 ಸುಳ್ಳು ಬಯಲು ಮಾಡು
nail-cutter — ನಾ ಕಡಿಚಣ (ಕಡಿಚಣದಿಂದ ಉಗುರು ಕತ್ತರಿಸಿದ)
naive — ಗು ಬೆಪ್ಪ, ಮೋಸ ತಿಳಿಯದ, ಜಾಣ್ಮೆ ಲಿುಲ್ಲದ
naked — ಗು ಬೆತ್ತಲೆ (ಬೆತ್ತಲೆ ಹೆಂಗಸು; ಬೆತ್ತಲೆಯಾಗು; ಬೆತ್ತಲಿಸು; ಬೆತ್ತಲಿಗ)
name — ನಾ ಹೆಸರು (ಹೆಸರಾಗು; ಹೆಸರೆತ್ತು; ಹೆಸರುಮಾಡು; ಹೆಸರಿಡು; ಹೆಸರಿಸು; ಹೆಸರುಹೋಗು)
nameless — ಗು ಹೆಸರಿಲ್ಲದ, ಹೆಸರು ತಿಳಿಸದ, ಹೆಸರುಮಾಡದ
name-sake — ಗು ಒಂದೇ ಹೆಸರಿನ
nap — ನಾ ಕಿತ್ತೊರಕು
nape — ನಾ ಹೆಕ್ಕತ್ತು (ಹೆಕ್ಕತ್ತು ನೋಯುತ್ತಿದೆ), ಹೆಡಕು, ಹಿಂಗತ್ತು, ಕುಂಕೆ, ಚಂಡು (ಚಂಡಾಡು)
napkin — ನಾ ಕಯ್ಬಟ್ಟೆ (ಕಯ್ಯೊರೆಸಲು ಕಯ್ಬಟ್ಟೆಲಿುದೆ)
narcissism — ನಾ ತನ್ಮೆಚ್ಚುಗೆ, ತನ್ಕೂರ್ಮೆ
narcotic — ಗು ಒರಗಿಸುವ (ಒರಗಿಸುವ ಮದ್ದು), ನೋವಳಿಸುವ
narrate — ಕ್ರಿ ಹೇಳು (ಕತೆಹೇಳು), ಕೊಗೆ
narration — ನಾ ಹೇಳುವಿಕೆ
narrative — ನಾ ಕತೆ, ಕೊಗೆತ
narrator — ನಾ ಹೇಳುಗ, ಕೊಗೆಗ
narrow place — ನಾ ಮುಡುಕು, ಮುಡುಕಲು (ಮೂಲೆಮುಡುಕಲಲ್ಲಿ ಹುಡುಕಿದ), ಇಕ್ಕಟ್ಟು (ಆತ ಇಕ್ಕಟ್ಟಿನಲ್ಲಿ ನಿಂತಿದ್ದಾನೆ), ಇರುಕು, ಇಡುಕು (ಮರಬಳ್ಳಿಗಳ ಇಡುಕಿನಿಂದ ಹೊರಬಂದ), ಇರುಂಬು (ಆತ ಎರಡು ಬೆಟ್ಟಗಳ ನಡುವಿನ ಇರುಂಬಿನಲ್ಲಿ ಅಡಗಿದ)
narrow — ಗು ಅಗಲಕಿರಿದಾದ, ಇಕ್ಕಟ್ಟಾದ, ಸಪುರ
nasal — ನಾ ಮೂಗುಲಿ ನಾ ಹೇಸುತನ
nasty — ಗು ಕೊಳಕು, ಹೊಲಸು, ಕುತ್ತ ತರಬಲ್ಲ
natal — ಗು ಹುಟ್ಟಿನ, ಹುಟ್ಟಿನಿಂದ ಬಂದ
nation — ನಾ 1 ನಾಡು 2 ನಾಡಿಗರು
national — ಗು ನಾಡಿನ
nationalism — ನಾ ನಾಡೊಲುಮೆ
nationality — ನಾ ನಾಡಿಗತನ
nationalize — ಕ್ರಿ ನಾಡಿನದಾಗಿ ಮಾಡು, ಹತೋಟಿ ಪಡೆ, ಅಂಕೆಯೊಳಗಿರಿಸು
native — ನಾ ನಾಡವ (ನಾಡವರಿಗೂ ವಲಸೆ ಗಾರರಿಗೂ ನಡುವೆ ಹೋರಾಟ ನಡೆಯು ತ್ತಿದೆ), ನಾಡಿಗ, ನಾಡಿಗಿತ್ತಿ
nativity — ನಾ ಹುಟ್ಟು
natty — ಗು ಅಂದವಾದ, ಒಪ್ಪವಾದ, ಅಚ್ಚು ಕಟ್ಟಾದ
natural — ಗು ಹುಟ್ಟಿನಿಂದ ಬಂದ, ಹುಟ್ಟಿನ, ತನ್ಪರಿಜೆಯ
naturalize — ಕ್ರಿ 1 ನಾಡಿಗನಾಗಿಸು 2 ಎರ ವಲುಪಡೆ 3 ತಮ್ಮದಾಗಿಸು
naturally — ಗು ತೊಂದರೆಪಡದೆ, ಎದುರು ನೋಡಿದ ಹಾಗೆ
nature — ನಾ ಪರಿಚೆ (ಈ ಮದ್ದಿನ ಪರಿಚೆ ಎಂತಹದು?), ತೆರ (ಇದು ಯಾವ ತೆರದ ಹಣ್ಣು?), ಬಗೆ, ಪರಿಜು (ತನ್ಪರಿಜು, ಹುಟ್ಟುಪರಿಜು), ಪಾಟು, ಹದಿರು
naught — ನಾ ಇಲ್ಲದಿಕೆ, ಇಲ್ಲಮೆ, ಇಲ್ಲದತನ
naughty — ಗು ತುಂಟ (ತುಂಟ ಹುಡುಗ), ಒರಟ
nausea — ನಾ ಉಬ್ಬಳ (ಉಬ್ಬಳದಿಂದಾಗಿ ಆತ ಉಂಡದ್ದು ಹೊಟ್ಟೆಯಲ್ಲಿ ಉಳಿಯುವುದಿಲ್ಲ; ಉಬ್ಬಳಿಕೆ; ಉಬ್ಬಳಿಸು), ಓಕರಿಕೆ (ಓಕ ರಿಸು), ಹೇವರಿಕೆ (ಹೇವರಿಸು), ಒಗಡಿಕೆ
nautical — ಗು ಹಡಗಿನ
naval — ಗು ಹಡಗುಪಡೆಯ
navel — ನಾ ಹೊಕ್ಕುಳು (ಮಗುವಿನ ಹೊಕ್ಕುಳು ಊದಿಕೊಂಡಿದೆ; ಹೊಕ್ಕುಳ ಬಳ್ಳಿ; ಹೊಕ್ಕುಳ ಹುರಿ)
navigable — ಗು ಹಡಗು ಹೋಗಬಲ್ಲ
navigate — ಕ್ರಿ ಹಡಗು ನಡೆಸು, ಹಡಗು ಓಡಿಸು
navy — ನಾ ಹಡಗುಪಡೆ ನಾ ಕೀಳುಬ್ಬರ
near — ನಾ ಸಾರೆ (ಯಾವುದು ದೂರ, ಯಾವುದು ಸಾರೆ ಎಂದು ತಿಳಿಯದವನು; ಸಾರೆಗರೆ; ಸಾರೆಬರು), ಅಂಚು (ಅವರ ಮನೆ ನಮ್ಮ ಮನೆಯ ಅಂಚಿನಲ್ಲೀ ಇದೆ), ಹತ್ತಿರ (ಹತ್ತಿರದ ಮನೆ), ಹೊರೆ (ಊರ ಹೊರೆ; ನೆರೆಹೊರೆ; ಹೊರೆಯಲ್ಲಿರು), ಗುಂಟ (ದಾರಿಗುಂಟ; ಮನೆಗುಂಟ ಹೋಗಿ ಬನ್ನಿ), ಅಣುಗು ಅವನ ಅಣುಗಿಗೆ ಹೋಗ ಬೇಡ), ಅಳವಿ (ಆತನ ಅಳವಿಗೆ ಯಾರೂ ಬರಲಿಲ್ಲ), ನೆರೆ (ನೆರೆಕರೆ), ಬಳಿ (ಬಳಿವಿಡಿ; ತಾಲಿುಯ ಬಳಿ ಬಂದ ಮಗು)
near — ಕ್ರಿ ಬಳಿಸಾರು, ಹತ್ತಿರಬರು
nearly — ಗು ಹೆಚ್ಚುಕಡಿಮೆ (ಹೆಚ್ಚುಕಡಿಮೆ ನೂರು ಮಂದಿ ಬಂದಿದ್ದರು)
nearsighted — ಗು ಸಾರೆನೋಟದ
neat — ಗು 1 ಅವುಸು, ಒಪ್ಪ (ಮನೆಯನ್ನು ಒಪ್ಪ ಓರಣವಾಗಿಟ್ಟುಕೊಂಡಿದ್ದಾಳೆ), ಚೊಕ್ಕ (ಚೊಕ್ಕ ಹೆಂಡತಿ; ಚೊಕ್ಕ ಊಟ), ಚೊಕ್ಕಟ (ಕೋಣೆಯನ್ನು ಚೊಕ್ಕಟವಾಗಿಡು) 2 ಬೆರಕೆಲಿುಲ್ಲದ
neatness — ನಾ ಗರಗರಿಕೆ
nebulous — ಗು ಮುಸುಕು, ಮಬ್ಬು, ಕಂಡಿತ ವಲ್ಲದ
necessary — ಗು ಕಡ್ಡಾಯವಾದ (ಕಡ್ಡಾಯ ವಾದ ಕೆಲಸ), ಬೇಕಾಗಿರುವ
necessitate — ಕ್ರಿ ಬೇಕಾಗಿಸು, ಕಡ್ಡಾಯ ಮಾಡು,
necessity — ನಾ ಬೇಡಿಕೆ, ಬೇಹ, ಬೇಕಾದುದು
neck — ನಾ ಕುತ್ತಿಗೆ (ನಂಬಿಸಿ ಕುತ್ತಿಗೆ ಕೊಯ್ದ; ಕುತ್ತಿಗೆ ಹಿಚುಕು), ಕತ್ತು, ಕೊರಳು (ಕೊರಳ ನೂಲು; ಕೊರಳೊಡೆ; ಕೊರಳು ಬಿಚ್ಚು; ಕೊರಳುಲಿ), ಗೊಂಕೆ (ಗೊಂಕೆ ಮುರಿದ ಆಕಳು), ಗೋಣು (ಗೋಣು ಮುರಿ; ಗೋಣು ಬಗ್ಗಿಸು; ಗೋಣುಹಾಕಿ ಒಪ್ಪಿಗೆ ಸೂಚಿಸು; ಗೋಣ್ಮೊಳಗು)
neck bone — ನಾ ಬಳೆ
neck — ಕ್ರಿ ತಬ್ಬಿಕೊಳ್ಳು, ಮುದ್ದಿಸು
necklace — ನಾ ನೇವಳ (ಕೊರಳ ನೇವಳ), ಅಡ್ಡಿಕೆ
necktie — ನಾ ಕೊರಳುಡುಪು
necro- — ಗು ಹೆಣದ, ಸಾವಿನ
necrology — ನಾ ಸತ್ತವರ ಪಟ್ಟಿ
necrophobia — ನಾ ಸಾವಿನ ಹೆದರಿಕೆ
nectar — ನಾ ಬಂಡು, ಜೇನು, ಸವಿಕುಡಿಗೆ (ಈ ಕೊಳದ ನೀರು ಸವಿಕುಡಿಗೆಯ ಹಾಗಿದೆ) ನಾ 1 ಬೇಡಿಕೆ, ಬೇಹ 2 ಬಡತನ
need — ಕ್ರಿ ಬೇಕಾಗಿರು, ಬೇಡು
needle — ನಾ ದಬ್ಬಣ (ಗೋಣಿ ಹೊಲಿಯುವ ದಬ್ಬಣ), ಮುಳ್ಳು
needless — ಗು ಬೇಡದ, ಬೇಕಿಲ್ಲದ
neem — ನಾ ಬೇವು (ಬೇವಿನ ಮರ, ಬೇವಿ ನೆಣ್ಣೆ)
nefarious — ಗು ತುಂಬಾ ಕೆಟ್ಟ, ಕಟ್ಟಲೆ ತಪ್ಪಿದ
negate — ಕ್ರಿ ಅಲ್ಲಗಳೆ (ನೀವು ಹೇಳಿದುದನ್ನು ಯಾರೂ ಅಲ್ಲಗಳೆಯುವುದಿಲ್ಲ)
negation — ನಾ ಇಲ್ಲದಿರುವಿಕೆ, ಅಲ್ಲಗಳೆತ
negative — ನಾ 1 ಎದುರುನುಡಿ, ಮಾರ್ಪು 2 ಕಳೆಯಬೇಕಾದ್ದು
neglect — ಕ್ರಿ 1 ಕಡೆಗಣಿಸು (ಆತನನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ) 2 ಮಾಡ ದಿರು
negligent — ನಾ ಎಚ್ಚರಗೇಡಿ (ಈ ಎಚ್ಚರ ಗೇಡಿಗೆ ಯಾರು ಕೆಲಸ ಕೊಡುತ್ತಾರೆ?)
negligible — ಗು ಕಡೆಗಣಿಸಬಲ್ಲ, ತುಂಬಾ ಕಡಿಮೆ
negotiable — ಗು 1 ದಾಟಬಲ್ಲ, ತೇರಬಲ್ಲ 2 ಮಾರಬಲ್ಲ
negotiate — ಕ್ರಿ 1 ಹಣವಾಗಿ ಮಾರ್ಪಡಿಸು 2 ಒಟ್ಟುಗೂಡಿ ತೀರ್ಮಾನಿಸು 3 ದಾಟಿಹೋಗು
negotiation — ನಾ ಮಾತುಕತೆ (ಅವರೊಳಗೆ ತುಂಬಾ ಹೊತ್ತಿನಿಂದ ಮಾತುಕತೆ ನಡೆದಿದೆ)
neigh — ಕ್ರಿ ಕೆನೆ (ಕುದುರೆ ಕೆನೆಯುತ್ತಿದೆ),ಕಿಳಿರು (ಕಿಳಿರುವ ಕುದುರೆಗಳು)
neighbourhood — ನಾ ನೆರೆ (ನೆರೆಕರೆ, ನೆರೆಮನೆ, ನೆರೆಯೂರು, ನೆರೆಹಳ್ಳಿ, ನೆರೆಹೊರೆಯವರು),ಅಕ್ಕ ಪಕ್ಕ (ಅಕ್ಕಪಕ್ಕದ ಕೋಣೆಗಳು)
neighbourly — ಗು ಅಚ್ಚಿನ, ನಣ್ಪಿನ, ಬೆರೆ ಯುವ
nepotism — ನಾ ನಂಟೊಲವು (ಆತ ಕೆಲಸ ಕೊಡಿಸುವಲ್ಲಿ ನಂಟೊಲವು ತೋರಿಸಿದ)
nerve — ನಾ ನರ, ನರವು
nervous — ಗು 1 ನರದ 2 ತಳಮಳಗೊಳ್ಳುವ, ಸುಳುವಾಗಿ ಬೆದರುವ
nest — ನಾ ಗೂಡು (ಗೂಡಿಕ್ಕು; ಗೂಡುಕಟ್ಟು)
nestle — ಕ್ರಿ ಅಪ್ಪಿಕೊಳ್ಳು, ಹೊಂದಿಮಲಗು, ಹುದುಗು, ಹದುಳದಲ್ಲಿರು
nestling — ನಾ ಚಿಕ್ಕ ಹಕ್ಕಿಮರಿ
net — ನಾ ಬಲೆ (ಬಲೆಬೀಸು, ಬಲೆಗಾರ; ಬಲೆಗೆ ಬೀಳು; ಬಲೆಹಿಡಿ)
nether — ಗು ಕೆಳಗಿನ
network — ನಾ ನೆಲುಹು (ನೆಲುಹಿನಲ್ಲಿರಿಸಿದ ಮೊಸರ ಗಡಿಗೆ), ನೆಲು (ನೆಲುವಿನ ಗಡಿಗೆ),ಕಲ್ಲಿ ನಾ ನರಕುತ್ತ (ಆಕೆ ನರಕುತ್ತದಿಂದ ಬಳಲುತ್ತಿದ್ದಾಳೆ)
neuter — ನಾ ಗಂಡು-ಹೆಣ್ಣಲ್ಲದ
neutral — ಗು ಬದಿಹಿಡಿಯದ, ನಡುನೆಲೆಯ
new — ಗು ಪೊಚ್ಚ (ಪೊಚ್ಚಮುತ್ತು), ಹೊಸ (ಹೊಸತುಪ್ಪ; ಹೊಸಮನೆ - ಇವತ್ತು ಆತನ ಹೊಸಮನೆಯ ಮನೆಯೊಕ್ಕಲು; ಹೊಚ್ಚಹೊಸ; ಹೊಸತು)
news — ನಾ ಒಸಗೆ (ಹುಟ್ಟಿನ ಒಸಗೆ ತಂದ ಹುಡುಗನಿಗೆ ಸಿಹಿತಿಂಡಿ ಕೊಡಿರಿ), ಸುದ್ದಿ, ಗುಮಿತ (ನುಡಿವ ಗುಮಿತ)
newspaper — ನಾ ಸುದ್ದಿಹಾಳೆ
next — ಗು ಮಲ- (ಮಲತಾಲಿು, ಮಲಮಗ), ಬಲ- (ಬಲ ಅಕ್ಕ; ಬಲತಾಲಿು; ಬಲ ಅಣ್ಣ; ಬಲಸೊಸೆ), ಮರು- (ಮರುದಿನ, ಮರುಮಾತು; ಮರುನುಡಿ) ಮಾರ್- (ಮಾರನೇ ದಿನ), ಮಾರಣೆ, ನೆರೆ (ನೆರೆ ಮನೆ; ನೆರೆಯೂರು)
nib — ನಾ 1 ಮೊನೆ (ಬಳಪದ ಮೊನೆ), ಚೂಪು ತುದಿ 2 ಕೊಕ್ಕು (ಹಕ್ಕಿಯ ಕೊಕ್ಕು)
nibble — ಕ್ರಿ ಕುರುಕು (ಜಿರಲೆ ಕುರುಕಿದ ಹಣ್ಣು; ಕುರುಕು ತಿಂಡಿ), ಕೊರಕು (ಮಗು ಏನನ್ನೋ ಕೊರಕುತ್ತಿದೆ)
nice — ಗು ನಿರಿ (ನಿರಿನಿಂಬೆ, ನಿರಿದುಂಬಿ, ನಿರಿ ಯುಡಿಗೆ), ಹಸ (ಹಸಮಾಡು; ಹಸಗೆಡು), ಚನ್ನ (ಚನ್ನ ಮಾತು), ಚನ್ನು, ಚನ್ನಾದ - ಚನ್ನಾದ ನಾಡು), ಚೊಕ್ಕ (ಚೊಕ್ಕ ಮಾತು; ಚೊಕ್ಕಟ), ನಟ್ಟಿ (ಆಕೆ ಇವತ್ತು ನಟ್ಟಿ ಉಡುಗೆ ತೊಟ್ಟಿದ್ದಾಳೆ)
nicely — ಗು ಸಸಿನೆ (ಸಸಿನೆ ತೊಳೆ), ಉರೆ (ಉರೆ ಕುಣಿದವಳು), ಚನ್ನಾಗಿ (ಚನ್ನಾಗಿ ಕಟ್ಟಿದ ಚಪ್ಪರ),ಕೆಂಕನೆ (ಬಂದವರೆದುರು ಇವತ್ತು ಕೆಂಕನೆ ಹಾಡಬೇಕು)
niceness — ನಾ ಹಸನು (ಹಸನಾದ ಹಲ್ಲು; ಮನೆಯನ್ನು ಸಾರಿಸಿ ಹಸನು ಮಾಡಿದಳು), ತೆಳುಲು (ತೆಳುಲು ಕದಪು)
niche — ನಾ ಮಾಡ (ಗೋಡೆಯ ಮಾಡದ ಲ್ಲಿರಿಸಿದ ಹಣ), ಗೂಡು (ಗೂಡಿನಲ್ಲಿ ದೀಪ ಇರಿಸಿದ್ದಾಳೆ)
nick — ನಾ ಕಚ್ಚು (ಗಿಡದಲ್ಲಿ ಚೂರಿಲಿುಂದ ಕಚ್ಚು ಮಾಡಿದ), ಸೀಳಿಕೆ (ಸೀಳಿಕೆಲಿುಂದ ಹಾಲು ಒಸರುತ್ತಿದೆ)
nickname — ನಾ ಅಡ್ಡಹೆಸರು ಆತನಿಗೆ ಎರಡು ಅಡ್ಡಹೆಸರುಗಳಿವೆ)
nifty — ಗು ಅಣಿಯಾದ, ಅಚ್ಚುಕಟ್ಟಾದ, ಸೊಗಸಾದ, ಜಾಣ್ಮೆಯ
niggard — ನಾ ನೆಲಕಲ, ಪಂಜ (ಕಾಸು ಬಿಚ್ಚದ ಪಂಜ), ಹೊಲ್ಲ, ಕೂಳ
niggling — ಗು ಚುಂಗಡಿ, ಚಿಲ್ಲರೆ (ಚಿಲ್ಲರೆ ಮಾತು)
night — ನಾ ಇರುಳು (ಇರುಳು ಕಳೆದ ಮೇಲೆ ಹಗಲು ಬರಲೆೀಬೇಕಲ್ಲವೇ?) ನಾ ಇರುಳು ಕುರುಡು
nightfall — ನಾ ಮುನ್ನಿರುಳು, ಮುಂಗತ್ತಲೆ
nightingale — ನಾ ಹಾಡುಹಕ್ಕಿ
night-watch — ನಾ ಇರುಳ್ಗಾಪು (ಇವತ್ತಿನ ಇರುಳ್ಗಾಪು ನನ್ನದು)
nil — ನಾ ಇಲ್ಲದಿಕೆ
nimble — ಗು ಚುರುಕಿನ, ಬಿರು, ಜಾಣ್ಮೆಯ
nimbus — ನಾ 1 ಮಳೆಮೋಡ 2 ಬೆಳಕಿನ ಬಳಸಿ
nincompoop — ನಾ ಹೆಡ್ಡ, ಬೆಪ್ಪ
nip — ಕ್ರಿ ಚಿವುಟು (ಆ ಗಿಡದ ಚಿಗುರುಗಳನ್ನು ಯಾರೋ ಚಿವುಟಿಹಾಕಿದ್ದಾರೆ), ಕಚ್ಚು, ಚಿರುಟು (ಚಳಿಗೆ ಚಿರುಟು)
nipple — ನಾ ತೊಟ್ಟು (ಮೊಲೆತೊಟ್ಟು)
nit — ನಾ ಈರು, ಸೀರು (ಸೀರಣಿಗೆಲಿುಂದ ಸೀರು ತೆಗೆ), ಈಪಿ
nitwit — ನಾ ಹೆಡ್ಡ, ದಡ್ಡ
noble — ಗು ಮೇಲ್ಮಟ್ಟದ
nocturnal — ಗು ಇರುಳಿನ
nod — ಕ್ರಿ 1 ತಲೆದೂಗು, ತಲೆ ಅಲ್ಲಡಿಸು, ಒಪ್ಪಿಗೆ ತೋರಿಸು, ತೂಕಡಿಸು 2 ಎಚ್ಚರ ತಪ್ಪು, ಜಾರು
node — ನಾ ಗಂಟು, ಗಡ್ಡೆ, ಬಾವು, ಚಿಗು ರೊಡೆವೆಡೆ
nodule — ನಾ ಗಡ್ಡೆ, ಗಂಟು
noise — ನಾ ಸೂಳು (ಸೂಳಲಿುಸು), ಸುಳುವು, ಗುಲ್ಲು (ಈ ಗುಲ್ಲಿನಲ್ಲಿ ಏನೂ ಕೇಳಿಸುವು ದಿಲ್ಲ), ಗದ್ದಲ (ಸಂತೆಯಲ್ಲಿ ಬಹಳ ಗದ್ದಲ ವಿತ್ತು), ಸಪ್ಪಳ (ಕಲ್ಲು ನೆಲಕ್ಕೆ ಅಪ್ಪಳಿಸಿದ ಸಪ್ಪಳ),ಅಬ್ಬರ (ಸಿಡಿಲಿನ ಅಬ್ಬರ)
nomad — ನಾ ಅಲೆಮಾರಿ
nomenclature — ನಾ ಹೆಸರಿಸುವ ಬಗೆ
nominal — ಗು 1 ಬರೀ ಹೆಸರಾಗಿರುವ, ಹೆಸರಿಗಷ್ಟೀ (ಹೆಸರಿಗಷ್ಟೀ ಬೆಲೆ) 2 ತುಂಬಾ ಕಡಿಮೆ
nominate — ಕ್ರಿ ಹೆಸರುಕೊಡು, ಸೇರಿಸು
nominee — ನಾ ಹೆಸರಿಸಿದವನು
nonage — ನಾ ಚಿಕ್ಕವನು, ಕಿರಿಯ ಗು ಬದಿಸೇರದ, ಹೊರ ಉಳಿದ
nonchalant — ಗು ತಾಳ್ಮೆಗೆಡದ, ತಣ್ಣಗಿರುವ, ಕಳಕಳಿಲಿುಲ್ಲದ, ಗೊಡವೆಲಿುಲ್ಲದ
non-combatant — ಗು ಕಾಳಗದಲ್ಲಿಲ್ಲದ
noncommittal — ಗು ಕಟ್ಟುಬೀಳದ (ಕಟ್ಟು ಬೀಳದ ಹೇಳಿಕೆ)
noncooperation — ನಾ ಒಬ್ಬುಳಿಯಳಿಕೆ
nondescript — ಗು ಹಂಚಲಾಗದ, ಸೇರದ
nonentity — ನಾ ಇಲ್ಲದಿರುವುದು, ಹೆಚ್ಚು ಗಾರಿಕೆಲಿುಲ್ಲದುದು
nonessential — ಗು ಬೇಡದಿರುವ, ಅರಿ ದಲ್ಲದ, ಬೇಕಾಗದ
non-existence — ನಾ ಇಲ್ಲಮೆ
non-existent — ಗು ಇಲ್ಲದ
non-plus — ಕ್ರಿ ಬಾಲಿು ಮುಚ್ಚಿಸು, ತಬ್ಬಿಬ್ಬಾ ಗಿಸು
nonproductive — ಗು ಉಂಟುಮಾಡುವ ಲ್ಲಿಲ್ಲದ, ಉಂಟುಮಾಡದ
non-profit — ಗು ಪಡಪುಬೇಡದ (ಪಡಪು ಬೇಡದ ಕೆಲಸ)
non-resident — ನಾ ನೆಲಸದವನು (ತಾವು ಕೆಲಸ ಮಾಡುವಲ್ಲಿ ನೆಲಸದವರು ಹಲವ ರಿದ್ದಾರೆ)
nonsense — ನಾ ಹುಚ್ಚುಮಾತು, ಹುರುಳಿಲ್ಲದ ಮಾತು
nonskid — ಗು ಜಾರದ, ಜಾರಿ ಉರುಳದ (ಜಾರಿ ಉರುಳದ ಗಾಲಿಗಳು)
non-stick — ಗು ಅಂಟದ (ಅಂಟದ ಕಾವಲಿ)
non-stop — ಗು ನಿಲ್ಲದ, ನಿಲ್ಲದೆ ಹೋಗುವ
non-vegetarian — ನಾ ಬಾಡುಣಿ
nook — ನಾ ಮೂಲೆ (ಮೂಲೆಯಲ್ಲಿ ಜೇಡನ ಬಲೆ ತುಂಬಿದೆ)
noon — ನಾ ನಡುಹಗಲು (ನಡುಹಗಲಾದರೂ ಮಂಜು ಕರಗಿಲ್ಲ)
noose — ನಾ ಉರುಲು, ಉರುಳು (ಉರುಳು ಹಾಕು; ಉರುಳಿನ ಹಗ್ಗ), ಕುಣಿಕೆ
normal — ಗು ಎಂದಿನ, ಯಾವಾಗಿನ, ಬಳಕೆಯ
normalize — ಕ್ರಿ ಎಂದಿನಂತಾಗಿಸು
north — ನಾ ಬಡಗ (ಬಡಗನಾಡು; ಬಡಗ ಬಾಗಿಲು; ಬಡಗಲು, ಬಡಗು)
nose — ನಾ ಮೂಗು (ಮೂಗಿನ ಮೇಲೆ ಬೆರಳಿಡು; ಮೂಗುಹಾಕು)
nose — ಕ್ರಿ 1 ಮೂಸು 2 ಬೆದಕು, ಮೂಗು ತೂರಿಸು 3 ಮುಂದೆ ಹೋಗು ornament ನಾ ಮೂಗುತಿ, ಮೂಗು ಬೊಟ್ಟು
nosegay — ನಾ ಕಿರು ಹೂಗೊಂಚಲು
noseless — ನಾ ಮುಕ್ಕಡಿ
nose-rope — ನಾ ಮೂಗುದಾಣ (ಮೂಗು ದಾಣ ಹಾಕಿ ಹಗ್ಗ ಹಚ್ಚಿದ ಎತ್ತು), ಮೂಗುದಾರ
nostalgia — ನಾ ಮನೆಗೀಳು, ಮನೆ ಹಂಬಲ, ಹಳೆಯದರ ಹಂಬಲ
nostril — ನಾ ಸೊಳ್ಳೆ, ಹೊಳ್ಳೆ (ಮೂಗಿನ ಹೊಳ್ಳೆ),ಹೊರಳೆ, ತೊಳ್ಳೆ
nosy — ಗು ಬೆದಕುವ, ಮೂಗುತೂರಿಸುವ
notable — ಗು ಹೆಸರಾಂತ, ಗಮನಿಸತಕ್ಕ
notation — ನಾ ಗುರುತುಬರಹ
notch — ನಾ ಕಕ್ಕು (ಮರಕ್ಕೆ ಹತ್ತಲು ಕಕ್ಕುಗಳನ್ನು ಕೆತ್ತಿದ್ದಾರೆ), ಕಚ್ಚು
note — ನಾ 1 ನೆನಪುಗುರುತು 2 ಕಿರುತಿಳುಪು 3 ಕೂಗು (ಹಕ್ಕಿಯ ಕೂಗು) 4 ಉಲಿಮಟ್ಟ
note book — ನಾ ನೆನಪುಕಡತ
note down — ಕ್ರಿ ಗುರುತುಹಾಕು
noted — ಗು ಹೆಸರಾಂತ, ಹೆಸರುಪಡೆದ, ಹೆಸರು ಹೊಂದಿದ
noteworthy — ಗು ಗುರುತಿಟ್ಟುಕೊಳ್ಳಬೇಕಾದ, ಗಮನಿಸಬೇಕಾದ
notice — ನಾ 1 ಎಚ್ಚರಿಕೆ 2 ಸೂಳ್ಗರೆತ
notice — ಕ್ರಿ 1 ಹೆಸರಿಸು, ಮಾತೆತ್ತು 2 ಗಮನಿಸು, ಬಗೆವರು
notify — ಕ್ರಿ ಸೂಳ್ಗರೆ, ಎಚ್ಚರಿಸು, ತಿಳಿಸು
notion — ನಾ 1 ಎಣಿಕೆ (ಇವರು ಗೆಲ್ಲಬಹು ದೆಂದು ನನ್ನ ಎಣಿಕೆ), ಅನಿಸಿಕೆ 2 ಒಲವು 3 ಬಯಕೆ
notoriety — ನಾ ಕೆಟ್ಟಹೆಸರು, ದೋವಿಲು (ಆತನ ದೋವಿಲು ಎಲ್ಲರಿಗೂ ಗೊತ್ತಿದೆ)
noun — ನಾ ಹೆಸರು (ಇರುವ ಹೆಸರು; ಕೊಟ್ಟ ಹೆಸರು; ಹೆಸರುಪದ)
nourish — ಕ್ರಿ ಹೊರೆ (ಒಡಲ ಹೊರೆವಾತ, ಹೊಟ್ಟೆ ಹೊರಕೊಂಬವನು), ಆರಯ್ಕೆ ಮಾಡು
nourishment — ನಾ 1 ತಿನಿಸು (ಮಗುವಿಗೆ ಸರಿಯಾದ ತಿನಿಸು ಸಿಕ್ಕಿಲ್ಲ) 2 ಆರಯ್ಕೆ
novel — ಗು ಹೊಸ (ಹೊಸತನ; ಹೊಚ್ಚಹೊಸ; ಹೊಸಬಟ್ಟೆ; ಹೊಸಮನೆ), ತಿಳಿದಿರದ
novel — ನಾ ಪೆರ್ಕತೆ
novelist — ನಾ ಪೆರ್ಕತೆಗಾರ
novelty — ನಾ ಹೊಸದು, ಹೊಸತು (ಹೊಸತು ಮಾಡು) ನಾ ಹೊಸಬ, ತೊಡಗುಗ, ಪಳಗ ದವನು
noxious — ಗು ಕೆಟ್ಟ, ತೊಂದರೆ ಕೊಡಬಲ್ಲ, ಗಾಸಿಗೊಳಿಸಬಲ್ಲ
nozzle — ನಾ ಮೂತಿ, ಅಂಜುಳಿ (ತಂಬಿಗೆಯ ಅಂಜುಳಿ)
nuance — ನಾ ಕಿರುಮಾರ್ಪು
nubile — ಗು ಮದುವೆಗೆಬಂದ (ಮದುವೆಗೆ ಬಂದ ಹುಡುಗಿ)
nucleus — ನಾ ನಡು, ತಿರುಳು
nude — ಗು ಬೆತ್ತಲೆ, ಬಟ್ಟೆಕಳೆದ
nudge — ಕ್ರಿ ಮೆಲ್ಲ ದೂಡು
nugget — ನಾ ಚಿನ್ನದ ಗಟ್ಟಿ
nuisance — ನಾ ತೊಂದರೆ, ಕಿರುಕುಳ
nullify — ಕ್ರಿ ಇಲ್ಲದಾಗಿಸು, ತೊಡೆದುಹಾಕು
numb (be) — ಕ್ರಿ ಮರಕಟ್ಟು (ಕುಳಿತು ಕುಳಿತು ಕಾಲು ಮರಕಟ್ಟಿಹೋಗಿದೆ), ಜೋಮು ಹಿಡಿ, ಒಟ್ಟಿಹಿಡಿ
number — ನಾ ಎಣಿಕೆ (ಎಣಿಕೆ ಮಾಡು; ಎಣಿಕೆಗೆ ಬಾರದವನು; ಓರೆಣಿಕೆ; ಹಲ ವೆಣಿಕೆ)
number — ಕ್ರಿ 1 ಎಣಿಸು, ಎಣಿಕೆಕೊಡು 2 ಒಳಗೊಳ್ಳು
numeral — ನಾ ಅಂಕೆ, ಎಣಿಕೆ
numerate — ಕ್ರಿ ಎಣಿಸು, ಲೆಕ್ಕಮಾಡು
numerator — ನಾ ಎಣಿಸುಗ, ಎಣಿಕೆಗಾರ
numerous — ಗು ತುಂಬ (ತುಂಬ ಮಂದಿ), ಹಲವು
numismatics — ನಾ 1 ಬೆಟ್ಟರಿಮೆ 2 ಬೆಟ್ಟುಕಲೆತ
numskull — ನಾ ಹೆಡ್ಡ, ಪೆದ್ದ
nun — ನಾ ಬಿಡುಗಿತ್ತಿ
nuptial — ನಾ ಮದುವೆ (ಆಕೆಯ ಮದುವೆಗೆ ಇನ್ನೂ ಮೂರು ತಿಂಗಳಿದೆ)
nurse — ಕ್ರಿ 1 ಮೊಲೆಯೂಡು 2 ಆರಯ್ಕೆ ಮಾಡು 3 ಮಾಂಜು 4 ಮುದ್ದುಮಾಡು
nurse — ನಾ ಆರಯ್ಗ, ಆರಲಿ್ಗುತ್ತಿ
nursery — ನಾ 1 ಮಕ್ಕಳಕೋಣೆ 2 ಮಕ್ಕಳಮನೆ 3 ಗಿಡಮನೆ (ಹೂಗಳ ಗಿಡ ಮನೆ)
nurture — ಕ್ರಿ ಸಾಕು, ಬೆಳೆಸು, ಆರಯ್ಸು (ಆರಯ್ಕೆ)
nut — ನಾ 1 ಕಾಲಿು (ಕಾಯಾಗು, ಕಾಯ್ಗಟ್ಟು), ಗೊರಟೆ, ಬಿತ್ತು 2 ತಿರುಪುಮೊಳೆ ಗು ಆರಯ್ವ (ಆರಯ್ವ ತಿನಿಸು)
nutrition — ನಾ 1 ಆರಯ್ಕೆ 2 ಆರಯ್ಕೆ ಯರಿಮೆ
nutshell — ನಾ ಗೆರಟೆ