↑ Contents · Contents · Ch 2 →
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
A
a little — ಗು ನಸು (ನಸು ಮಾಸಿದ ರೆಕ್ಕೆ, ನಸುಗತ್ತಲೆ, ನಸುನಗೆ), ಇಳಿ (ಇಳಿಯಶ್ಟಾದರೂ ಕೊಡಿ), ಏನಿಕೆ, ಕೊಂಚ (ಕೊಂಚ ಹೊತ್ತಾಯಿತು),ಕೀಟು,ತುಸು (ತುಸು ಹೊತ್ತು; ತುಸುನಗು)
abandon — ಕ್ರಿ ನೀಗು (ನೀಗಾಡು), ಬಿಟ್ಟು ಕೊಡು, ಕಲಿ್ಬುಡು, ಕಳೆ, ತೊರೆ (ಎಲ್ಲವನ್ನೂ ತೊರೆದು ಬಂದವರು)
abandoning — ನಾ ತೊರವಿ
abate — ಕ್ರಿ ಕುಗ್ಗು (ನೆರೆ ಕುಗ್ಗಲು ಸುರುವಾಗಿದೆ), ಕುಂದು, ತಗ್ಗು
abbreviate — ಕ್ರಿ ಕಿರಿದುಮಾಡು, ಅಡಕ ಮಾಡು (ನಿಮ್ಮ ಬರಹವನ್ನು ಅಡಕಮಾಡಿ ಕೊಡಿ)
abdicate — ಕ್ರಿ ತೊರೆ (ಅರಸು ಗದ್ದುಗೆಯನ್ನು ತೊರೆದು ಕಾಡಿಗೆ ನಡೆದ)
abdomen — ನಾ ಹೊಟ್ಟೆ (ಹೊಟ್ಟೆನೋವು; ಹೊಟ್ಟೆಬರು)
abduct — ಕ್ರಿ ಹಾರಿಸು (ಅವರ ಮಕ್ಕಳನ್ನು ಯಾರೋ ಹಾರಿಸಿಕೊಂಡು ಹೋಗಿದ್ದಾರೆ), ಎತ್ತಿ ಹಾಕು, ಎಗರಿಸು
abet — ಕ್ರಿ ಒತ್ತಾಸೆ ಕೊಡು (ಕಳವಿನಲ್ಲಿ ಅವನಿಗೆ ಒತ್ತಾಸೆ ಕೊಟ್ಟವರು ಯಾರು?)
abeyance — ನಾ ತಡೆಹಿಡಿಕೆ, ಹಿಂದಿಡುವಿಕೆ
abhor — ಕ್ರಿ ಹೇಸು (ಆತ ಯಾವುದಕ್ಕೂ ಹೇಸ ದವನು)
abide — ಕ್ರಿ ಒಪ್ಪು (ನೀವೆಂದುದಕ್ಕೆಲ್ಲ ಆತ ಒಪ್ಪಿದ್ದಾನೆ; ಒಪ್ಪಿನಡೆ)
ability — ನಾ 1 ಅಳವು (ಈ ಕೆಲಸವನ್ನು ಮಾಡುವ ಅಳವು ಆತನಲ್ಲಿದೆ) 2 ಜಾಣ್ಮೆ, ಅರಿವು, ಬದ್ದು
able (to do) — ಕ್ರಿ ತೀರು (ಅದು ನಿನ್ನಿಂದ ತೀರದ ಕೆಲಸ), ಬಲ್ಲ- (ಮಾಡಬಲ್ಲೆ), ಆರು (ಕೊಡಲಾರೆ, ಹೋಗಲಾರೆ; ಆರದವನು), ಅರಿ (ಮಾಡಲರಿಯದ ಹುಡುಗ), ಅಮ್ಮು (ಮಾಡಲಮ್ಮೆ)
able person — ನಾ ಗಟ್ಟಿಗ, ಗಟ್ಟಿಗಿತ್ತಿ
abnormal — ಗು ಓಜೆತಪ್ಪಿದ
abode — ನಾ ನಿಲುವು (ಈ ಮಕ್ಕಳ ನಿಲುವೆ ಲ್ಲಿದೆಯೋ ತಿಳಿಯದು), ಮನೆ, ನೆಲೆ (ನೆಲೆಯಿಲ್ಲದವರು), ಬೀಡು (ಬೀಡು ಬಿಡು, ) ನೆಲೆವೀಡು), ಪಟ್ಟಿಗೆ (ಮಸಣ ವಟ್ಟಿಗೆ; ಅರವಟ್ಟಿಗೆ), ಹಟ್ಟಿ (ಹಟ್ಟಿಗೆ , ಇಕ್ಕೆ (ಆತನ ಇಕ್ಕೆ ಕಾಡಿನಲ್ಲಿ), ಗರುಡಿ (ನಾವೆಲ್ಲ ಒಂದೇ ಗರುಡಿಯಲ್ಲಿ ಓದಿ ದವರು),ಗೀಬು
abolish — ಕ್ರಿ ನೀಗು (ನೀಗಾಡು - ಆತನ ಆಳ್ವಿಕೆಯನ್ನು ನೀಗಾಡಬೇಕಿದೆ), ಅಳಿಸು, ಕೊನೆಗಾಣಿಸು
abominable — ಗು ಹೇಸಿಗೆಯ
aboriginal — ಗು ಬುಡಕಟ್ಟಿನ (ಬುಡಕಟ್ಟಿನ ಜನರ ನುಡಿ)
abortion — ನಾ ಮಯ್ಯಿಳಿತ, ಬಸಿರಿಳಿತ
abound — ಕ್ರಿ ಆರು, ತೀವು (ತೀವಿದೊಡ್ಡೋ ಲಗ), ಚಳೆ, ತುಂಬು (ತುಂಬಿರು; ತುಂಬಿ ತುಳುಕು)
above — ಗು ಮೇಗೆ (ಮೇಗುಸಿರು), ಮೇಲು (ಮೇಲುಗಡೆ; ಮೇಲುಕಾಲುವೆ; ಮೇಲು ಗೆಲಸ; ಮೇಲುಹೊದಿಕೆ), ಮೇಲೆ (ಮೇಲೆತ್ತು; ಮೇಲೆಬರು; ಮೇಲೇಳು)
abrade — ಕ್ರಿ ಕೆರೆ (ಕೆರೆತ), ಕಿರುಕು, ಉಜ್ಜು
abrasion — ನಾ ಉಜ್ಜುಗಾಯ
abrasive — ಗು ಒರಟು
abreast — ಗು ಒಟ್ಟೊಟ್ಟಿಗೆ
abridge — ಕ್ರಿ ಅಡಕಮಾಡು, ಅಡಕಗೊಳಿಸು, ಕುಗ್ಗಿಸು, ದಾಟು ಮಾಡು
abroad — ಗು ಹೊರನಾಡಿನಲ್ಲಿ (ಅವರು ಇದು ವರೆಗೆ ಹೊರನಾಡಿನಲ್ಲಿದ್ದರು)
abrogate — ಕ್ರಿ ನೀಗು, ತೆಗೆದುಹಾಕು ಗು ಇದ್ದಕ್ಕಿದ್ದಂತೆ (ಆತ ಇದ್ದ ಕ್ಕಿದ್ದಂತೆ ಹೊರಟುಹೋದ)
abscess — ನಾ ಕುರು (ಅವನ ಬೆನ್ನಲ್ಲೊಂದು ಕುರು ಎದ್ದಿದೆ), ಹುಣ್ಣು
abscond — ಕ್ರಿ ತಲೆಮರೆಸಿಕೊಳ್ಳು, ತಪ್ಪಿಸಿ ಕೊಳ್ಳು
absence — ನಾ ಇಲ್ಲದಿರುವಿಕೆ, ಇಲ್ಲಮೆ (ಅವನ ಇಲ್ಲಮೆಯನ್ನು ಯಾರೂ ಗಮನಿಸ ಲಿಲ್ಲ), ಕೊರತೆ, ಗೊಟ್ಟು (ನೀರಿಗೆ ಗೊಟ್ಟಾ ಲಿುತು), ತಗುಸಿ
absentee — ನಾ ಉಳಿಯಾಳು
absent-minded — ನಾ ಮರೆಗುಳಿ
absolute — ಗು ಗೊತ್ತುಪಾಡಿಲ್ಲದ (ಆತನದು ಗೊತ್ತುಪಾಡಿಲ್ಲದ ಅಳವು)
absolve — ಕ್ರಿ ದೂರು ಹಿಂತೆಗೆ
absorb — ಕ್ರಿ ಹೀರು (ಮಳೆಲಿುಂದ ಸೋರಿದ ನೀರನ್ನೆಲ್ಲ ನೆಲ ಹೀರಿದೆ)
absorbent — ನಾ ಹೀರುಗ
abstain — ಕ್ರಿ ದೂರವಿಡು, ಸೇರದಿರು
abstract — ನಾ ತಿರುಳು (ಬರಹದ ಮೊದಲಿಗೆ ಅದರ ತಿರುಳನ್ನು ಕೊಡಲಾಗಿದೆ)
abstracted — ಗು ಗಮನಿಸದ
abstruse — ಗು ಹುದುಗಿದ, ಮುಚ್ಚುಮರೆಯ
absurd — ಗು ನಗೆಗೀಡಾದ, ನಗೆಪಾಟಲಾದ
abundance — ನಾ ಮಿಗಿತೆ
abundant — ಗು ಉಕ್ಕಂದ (ಕೆರೆಯಲ್ಲಿ ಉಕ್ಕಂದ ನೀರಿದೆ), ಕರ (ಕರ ಚನ್ನಾ ಗಿದೆ), ಬಿಜ್ಜೆ (ಬಿಜ್ಜೆ ಮೇಲೇರು), ಹೇರಳ (ಅವನ ಹತ್ತಿರ ಹೇರಳ ಹಣ ಇದೆ), ಹೆಗ್ಗಳ (ಹೆಗ್ಗಳವಾಗು), ಆರು (ನೂರಾರು ಮಂದಿ)
abuse — ನಾ ಕೊಂಡೆ (ಆತನ ಕೊಂಡೆಯನ್ನು ಕೇಳಲಾಗದು; ಕೊಂಡಿಸು), ತಿಟ್ಟು, ಉಟ್ಟಿ (ಉಟ್ಟಿ ಮಾತು), ಚುನ್ನ (ಚುನ್ನವಾಡು; ಊಳಿಗದವರ ಕೈಯಲ್ಲಿ ನನ್ನನ್ನು ಚುನ್ನ ವಾಡಿಸಿದಳು; ಚುನ್ನ ಮಾಡು), ಪರೆ
abuse — ಕ್ರಿ ಬಯ್ಯು (ಬಯ್ಗಳು - ಕೆಟ್ಟ ಬಯ್ಗಳು; ಬಯ್ದಾಟ), ಜರೆ (ಇತರರನ್ನೆಲ್ಲ ಜರೆದು ತನ್ನನ್ನು ಹೊಗಳಿಕೊಳ್ಳುತ್ತಿದ್ದಾನೆ), ಜಬ್ಬರಿಸು, ತೆಗಳು (ಆತನದು ತೆಗಳುವ ನುಡಿ; ತೆಗಳಿಕೆ)
abyss — ನಾ ಅಡಿಯಿಲ್ಲದ ಗುಂಡಿ
academic — ಗು ಕಲಿಕೆಯ (ನೀವು ನಮ್ಮ ಕಲಿಕೆಯ ಸುದ್ದಿಗೆ ಬರಬೇಡಿ)
academy — ನಾ 1 ಪೆರ್ಕಲಿಮನೆ 2 ಕಲಿಗ ಕೂಟ
accede — ಕ್ರಿ ಒಪ್ಪು (ಆತ ನಿಮ್ಮ ಕಟ್ಟುಪಾಡು ಗಳಿಗೆಲ್ಲ ಒಪ್ಪಿದ್ದಾನೆ)
accelerate — ಕ್ರಿ ಚುರುಕಾಗು (ಆತನ ನಡೆ ಚುರುಕಾಯಿತು)
accelerator — ನಾ ಉರುಬುಹೆಚ್ಚುಕ
accent — ನಾ ಒತ್ತು (ಒತ್ತುಕೊಡು; ಒತ್ತಿ ಹೇಳು - ಕೊನೆಯ ಮಾತನ್ನು ಒತ್ತಿ ಹೇಳಿದ್ದಾನೆ)
accept — ಕ್ರಿ ಒಪ್ಪಿಕೊಳ್ಳು (ಅವರು ನಮ್ಮ ಬೇಡಿಕೆಗಳನ್ನೆಲ್ಲ ಒಪ್ಪಿಕೊಂಡಿದ್ದಾರೆ), ಇಂಬುಗೆಯ್ಯು, ಒಡಂಬಡು, ಕಯ್ಕೊಳು
acceptable — ಗು ಒಪ್ಪಿಗೆಯಾಗುವ (ಎಲ್ಲ ರಿಗೂ ಒಪ್ಪಿಗೆಯಾಗುವ ಹೇಳಿಕೆ)
acceptance — ನಾ ಒಪ್ಪಿಗೆ,ಕೊಳ್ಗೆ
acceptor — ನಾ ಒಪ್ಪಿದವ
access — ನಾ ದಾರಿ, ಬಾಗಿಲು
accessary — ನಾ ಒತ್ತಾಸೆಗಾರ (ಆತನ ಕೆಟ್ಟ ಕೆಲಸಗಳಿಗೆ ಈತ ಒತ್ತಾಸೆಗಾರನಾಗಿದ್ದಾನೆ)
accessible — ಗು ಪಡೆಯಬಲ್ಲ, ಮುಟ್ಟಬಲ್ಲ
accident — ನಾ 1 ಕೆಟ್ಟಾಗುಹ 2 ತೆಗಹು, ಅಮಗ
acclimatize — ಕ್ರಿ ಒಗ್ಗು (ಒಗ್ಗಿಕೊಳ್ಳು; ಒಗ್ಗಿಕೆ - ಅವನಿಗೆ ಆ ಊರು ಒಗ್ಗಿಕೆಯಾಗಲು ಎರಡು ತಿಂಗಳ ಬೇಕಾಲಿುತು), ಹೊಂದಿ ಕೊಳ್ಳು ಕ್ರಿ ತೆರಪುಗೊಡು, ಎಡೆ ಗೊಡು (ನಾನು ಮೂರು ಮಂದಿಗೆ ಎಡೆ ಗೊಡಬಲ್ಲೆ)
accommodation — ನಾ 1 ಹೊಂದಾಣಿಕೆ 2 ತಂಗು (ತಂಗುಮನೆ)
accompany — ಕ್ರಿ ಒಡಹೋಗು
accomplice — ನಾ ಒತ್ತಾಸೆಗಾರ
accomplish — ಕ್ರಿ (ಆ) ಕಯ್ಗೂಡು (ಅವನ ಬಯಕೆ ಕಯ್ಗೂಡಿತು), ಕಡೆಸಲ್ಲು, ನೆರವೇರು (ಮಾ) ಈಡೇರಿಸು (ಆಕೆಯ ಕೊನೆಯ ಬಯಕೆಯನ್ನು ಈಡೇರಿಸಬೇಕು)
accomplishment — ನಾ ನೆರವಣಿಗೆ
accord — ನಾ ಒಪ್ಪಂದ
accost — ಕ್ರಿ ಬಳಿಸಾರು (ನಾನೇ ಆತನ ಬಳಿ ಸಾರಿ ಮಾತನಾಡಿಸಿದೆ)
account — ನಾ 1 ಹೇಳಿಕೆ 2 ಲೆಕ್ಕ
accountable — ನಾ ಹೊಣೆಗಾರ (ಇದಕ್ಕೆ ನಾನು ಹೊಣೆಗಾರನಲ್ಲ; ಹೊಣೆಗಾರಿಕೆ - ಈ ಕಟ್ಟಡದ ಹೊಣೆಗಾರಿಕೆ ಯಾರಲ್ಲಿದೆ?)
accredit — ಕ್ರಿ ನಂಬು (ನಂಬಿಕೆಯಿಡು)
accretion — ನಾ ಬೆಳವಣಿಗೆ
accrue — ಕ್ರಿ ಸಲ್ಲು (ಆತನಿಗೆ ಸಂದ ಹಣ ಎಷ್ಟು?; ಸಂದಾಯವಾಗು),ಕೂಡಿಬರು,ಒದಗು,ದಕ್ಕು (ದಕ್ಕಿ ಹೋಗು; ದಕ್ಕುಹಿಡಿ; ದಕ್ಕಬೇಕಾದ ಹಣ)
accumulate — ಕ್ರಿ ಒಟ್ಟುಗೂಡಿಸು, ಕೂಡಿ ಹಾಕು
accumulator — ನಾ ಮಿಂಚುನೆರಕ
accuracy — ನಾ ಸರಿಮೆ (ಆತನ ಹೇಳಿಕೆಯ ಸರಿಮೆಯ ಕುರಿತು ನನಗೆ ಅಲಿ್ಬುದೆ)
accurate — ಗು ಸರಿಯಾದ (ಸರಿಯಾದ ಹೇಳಿಕೆ), ತಪ್ಪಿಲ್ಲದ
accursed — ಗು ಉಸುರಿಟ್ಟ (ಉಸುರಿಟ್ಟ ಕಟ್ಟಡ)
accuse — ಕ್ರಿ ತಪ್ಪುಹೊರಿಸು, ತೆಗಳು
accustom — ಕ್ರಿ ಬಳಕೆಗೆ ಬರು
acerb — ಗು ಬಿರು (ಬಿರುಬಿಸಿಲು), ಬಿರುಸು (ಬಿರುಸುನುಡಿ)
ache — ನಾ ಕೊಡೆತ (ಸಂದುಗಳ ಕೊಡೆತ), ನೋವು (ತಲೆನೋವು), ಸಿಡಿತ (ತಲೆ ಸಿಡಿತ)
ache — ಕ್ರಿ ನೋಯು, ಕುಟ್ಟು (ಚಿಟಗುಟ್ಟು - ತಲೆ ಚಿಟಗುಟ್ಟುತ್ತಿದೆ),ಕೊಡೆ (ಈ ಕುರು ತುಂಬಾ ಕೊಡೆಯುತ್ತಿದೆ)
achieve — ಕ್ರಿ ಗುರಿಮುಟ್ಟು
achievement — ನಾ ಗೆಲವು (ಗೆಲವು ಪಡೆ), ಪಡೆಪು
acidity — ನಾ ಹುಳಿತ
acknowledge — ಕ್ರಿ 1 ಗುರುತಿಸು 2 ಒಪ್ಪಿಗೆ ತಿಳಿಸು
acknowledgement — ನಾ ತಲುಪರಿತ (ಓಲೆ ಕಳುಹಿಸಿದುದಕ್ಕೆ ತಲುಪರಿತ ಬಂದಿದೆ), ತಲುಪೊಪ್ಪಿಗೆ
aclaim — ಕ್ರಿ ಹೊಗಳು, ಮೆಚ್ಚು
acne — ನಾ ಮೊಡವೆ, ಬೊಕ್ಕೆ
acoustics — ನಾ ಸೂಳರಿಮೆ
acquaint — ಕ್ರಿ ತಿಳಿಸು, ಗುರುತುಮಾಡು
acquaintance — ನಾ ಗುರುತು, (ಗುರುತಿ ನವರು; ನನಗವನ ಗುರುತಿಲ್ಲ)
acquire — ಕ್ರಿ ಪಡೆ (ಪಡಪು), ಗಳಿಸು (ತುಂಬಾ ಹಣ ಗಳಿಸಿದ್ದಾನೆ; ಗಳಿಕೆ), ಹೊಂದು
acquit — ಕ್ರಿ 1 ನಡೆದುಕೊಳ್ಳು (ಕೂಟದಲ್ಲಿ ನೀವು ನಡೆದುಕೊಂಡುದು ಸರಿಯಾಗಿಲ್ಲ) 2 ಬಿಡುಗಡೆಯಾಗು
acquittance — ನಾ ಬಿಡುಗಡೆ (ಅವನ ಬಿಡು ಗಡೆ ಯಾವಾಗ?) ಗು ಕನರು (ಈ ಹಣ್ಣಿಗೆ ಕನರು ಸವಿಯಿದೆ)
acrobat — ನಾ ದೊಂಬ (ಆತನ ದೊಂಬರಾಟ ನೋಡಲು ಹೋಗಿದ್ದೆ)
across — ಗು ಅಡ್ಡ (ಬೆಳಕಿಗೆ ಅಡ್ಡ ನಿಂತಿದ್ದಾನೆ; ಅಡ್ಡಬರು, ಅಡ್ಡ ಬೀಳು)
act — ನಾ 1 ಮಾಡುಗೆ,ಗೆಯ್ತ 2 ಆಟ
act — ಕ್ರಿ 1 ನಟಿಸು 2 ನಡೆದುಕೊಳ್ಳು 3 ಕೆಲಸ ನಡೆಸು
act hastily — ಕ್ರಿ ಉರವಣಿಸು (ಉರವಣಿಸಿ ಮಾತನಾಡು)
act rashly — ಕ್ರಿ ದುಡುಕು (ಅವನದೆಲ್ಲ ದುಡುಕಿ ಮಾಡುವ ಕೆಲಸ; ದುಡುಕುತನ)
action — ನಾ ನೆಗಳ್ತೆ,ಎಸಕ (ಆತನ ಎಸಕ ನಮಗೆ ಒಪ್ಪಿಗೆಯಾಗಿಲ್ಲ)
activate — ಕ್ರಿ ಚುರುಕುಗೊಳಿಸು
actor — ನಾ ನಟ, ನಟಿ
actual — ಗು ನನಸು, ನನ್ನಿ, ಇರುವ (ಇರುವ ಮಂದಿಯನ್ನು ಬರಹೇಳಿ)
acumen — ನಾ ಚುರುಕು ತಿಬ್ಬಳಿ
acute — ನಾ ಮುಳ್ಳು
acute — ಗು ಮೊನಚಾದ,
acuteness — ನಾ ಮೋಪು (ಗಾಯದ ಮೋಪು
ad infinitum — ಗು ಕೊನೆಯಿಲ್ಲದ (ಕೊನೆ ಯಿಲ್ಲದ ಎಣಿಕೆ)
adage — ನಾ ಗಾದೆಮಾತು, ನಾಣ್ಣುಡಿ
adapt — ಕ್ರಿ ಅಳವಡಿಸಿಕೊಳ್ಳು, ಹೊಂದಿಕೊಳ್ಳು (ಅವನು ಎಂತಹ ಊರಿಗೆ ಹೋದರೂ ಹೊಂದಿಕೊಳ್ಳುತ್ತಾನೆ), ಸರಿಹೊಂದು
adaptation — ನಾ ಅಳವಡಿಕೆ, ಹೊಂದಿಕೆ
add — ಕ್ರಿ ಕೂಡಿಸು (ನಾಲ್ಕಕ್ಕೆ ಮೂರನ್ನು ಕೂಡಿಸು), ಸೇರಿಸು
addendum — ನಾ ಜೋಡಿಕೆ, ಸೇರಿಕೆ
addict — ಕ್ರಿ ಅಳುಪು (ಹೊಗೆಸೊಪ್ಪಿಗೆ ಅಳುಪು)
addiction — ನಾ ತೆವಲು (ಹೆಂಡದ ತೆವಲು; ತೆವಲುಗಾರ)
addition — ನಾ ಸೇರ್ಪಡೆ (ಅವರ ಬಳಗಕ್ಕೆ ಇನ್ನೂ ಮೂವರ ಸೇರ್ಪಡೆಯಾಗಿದೆ)
additional — ಗು ಹೆಚ್ಚುವರಿ (ಇವತ್ತು ನಾಲ್ಕು ಹೆಚ್ಚುವರಿ ಕೂಲಿಗಳನ್ನು ಕರೆಸಬೇಕಾಗಿದೆ)
addle — ಕ್ರಿ ಕೊಳೆಯಿಸು, ಕೆಡಿಸು
address — ನಾ ಒಕ್ಕಣೆ (ನೀವು ಒಕ್ಕಣೆ ಬರೆದುದು ಸರಿಯಾಗಿಲ್ಲ)
adduce — ನಾ 1 ಎತ್ತುಗೆ ಕೊಡು 2 ಸಲುವು ಕೊಡು
address — ಕ್ರಿ ಮಾತನಾಡು (ಇವತ್ತಿನ ಕೂಟ ದಲ್ಲಿ ನಾನೂ ಮಾತನಾಡಲಿದ್ದೇನೆ)
adept — ನಾ ಅರಿಗ
adequate — ಗು ಸಾಕಷ್ಟು (ಸಾಕಷ್ಟು ಹಣ ತಂದಿದ್ದೇನೆ), ತಕ್ಕ (ಆಕೆ ಅವನಿಗೆ ತಕ್ಕ ಮಡದಿ)
adhere — ಕ್ರಿ 1 ಹತ್ತು, ಅಂಟು (ಅವನ ಕಾಲಿಗೆ ಒಂದು ಹತ್ತಿಯ ಚೂರು ಅಂಟಿಕೊಂಡಿದೆ), ಒಟ್ಟು 2 ಒಮ್ಮು (ಕಟ್ಟಲೆಗಳಿಗೆ ಒಮ್ಮಿ ನಡೆಯುವವರು)
adhesive — ನಾ ಅಂಟು (ಇದಕ್ಕೆ ಅಂಟು ಹಚ್ಚಿದ್ದು ಸಾಕಾಗಲಿಲ್ಲ)
adieu — ನಾ ಬೀಳ್ಕೊಡುಗೆ (ಆತನ ಬೀಳ್ಕೊಡು ಗೆಗೆ ನಾನೂ ಹೋಗಿದ್ದೆ)
adjacent — ಗು ಮಗ್ಗುಲಿನ (ಮಗ್ಗುಲಿನ ಗುಡಿಸಲು), ಒತ್ತಿನ (ಒತ್ತಿನ ಮನೆಯಲ್ಲಿ ಒಬ್ಬ ಮುದುಕಿ ಮತ್ತು ಅವಳ ಮೊಮ್ಮಗ ಇದ್ದಾರೆ)
adjoining — ಗು ನೆರೆ (ನೆರೆಮನೆ; ನೆರೆ ಯೂರು)
adjourn — ಕ್ರಿ ಮುಂದೂಡು (ಮುಂದೂಡಿಕೆ), ಮುಂದೆ ಹಾಕು ನಾ ನಿಲುವಳಿ (ನಿಲುವಳಿ ಬೇಕೆಂದು ಎಲ್ಲರೂ ಬೊಬ್ಬಿರಿದರು)
adjudge — ಕ್ರಿ ತೀರಿಸು, ಮುಗಿಸು, ತೀರ್ಪು ಕೊಡು
adjudicate — ಕ್ರಿ ತೀರ್ಪುಕೊಡು, ತೀರ್ಮಾನಿಸು
adjunct — ನಾ ಹಿನ್ನೊಟ್ಟು
adjust — ಕ್ರಿ ಸರಿಮಾಡು, ಸರಿದೂಗಿಸು, ಹೊಂದಿಸು (ಹೊಂದಿಕೊಳ್ಳು, (ಹೊಂದಾ ಣಿಕೆ, ಹೊಂದಿಕೆ)
administration — ನಾ ಆಡಳಿತ (ಆಡಳಿತ ಗಾರ)
admirable — ಗು ಮೆಚ್ಚತಕ್ಕ (ಮೆಚ್ಚತಕ್ಕ ಕೆಲಸ)
admire — ಕ್ರಿ ಮೆಚ್ಚು (ಮೆಚ್ಚಿಗೆ)
admission — ನಾ ಪೂಣ್ಕೆ,ಒಪ್ಪಿಗೆ (ನಿಮ್ಮ ಮಾತಿಗೆ ನನ್ನ ಒಪ್ಪಿಗೆಯಿದೆ; ಒಪ್ಪಿತ)
admit — ಕ್ರಿ 1 ಪೂಣು 2 ಒಳಬಿಡು, ಸೇರಿಸು
admittance — ನಾ ಸೇರ್ಪಡೆ
admix — ಕ್ರಿ ಕಲೆಸು
admonish — ಕ್ರಿ ಎಚ್ಚರಿಸು, ನೆನಪಿಸು
adolescence — ನಾ ಹದಿಹರೆಯ
adopted — ನಾ ಕೊಳ್ಮಗ (ಆತ ನನ್ನ ಕೊಳ್ಮಗ; ಕೊಳ್ಮಗಳು)
adoration — ನಾ ಮೆಚ್ಚುಗೆ
adorn — ಕ್ರಿ ಅಂದಗೊಳಿಸು (ಆಕೆ ಬರಲಿ ದ್ದಾಳೆಂದು ತನ್ನ ಕೋಣೆಯನ್ನು ಅಂದ ಗೊಳಿಸುತ್ತಿದ್ದಾನೆ)
adrift — ಗು ನೆಲೆಯಿಲ್ಲದ
adroit — ಗು ಕಯ್ಗಾರ, ಹೊಲಬಿಗ
adulation — ನಾ ಹೊಗಳಿಕೆ (ಆತನ ಹೊಗಳಿಕೆ ಹೆಚ್ಚಾಯಿತು)
adult — ನಾ ದೊಡ್ಡವನು (ದೊಡ್ಡವರೆಲ್ಲ ಈ ಕಡೆ ಬಂದು ನಿಲ್ಲಿ)
adulteration — ನಾ ಕಲಬೆರೆಕೆ
adulteress — ನಾ ಹಡಬೆ (ಹಡಬೆ ಬೀಳು),ದುಂಡೆ
adultery — ನಾ ಹಾದರ,ಪಡಪು
adumbral — ಗು ನೆಳಲು ಕವಿದ, ನೆಳಲಿನ ಲ್ಲಿರುವ
advance — ಕ್ರಿ 1 ಮುಂದುವರಿ 2 ಮುಂಕೊಳ್ಳು, ಮುಂಕಣಿಸು
advance (money) — ನಾ ಮುಂಗಡ (ಮುಂಗಡ ಹಣ)
advancement — ನಾ ಮುಂದುವರಿಕೆ, ಮುನ್ನಡೆ
advantage — ನಾ ಸಲೆ, ಅಕ್ಕು
advent — ನಾ ಬರವು, ಬರುವಿಕೆ
adventitious — ಬಂದು ಸೇರಿದ
adventure — ನಾ ಕುತ್ತದ ಕೆಲಸ, ಕುತ್ತಗೆಯ್ತ
adversary — ನಾ ಎದುರಾಳಿ
adverse — ಗು ಇದಿರಾಗುವ, ಇದಿರಿಸುವ
adversity — ನಾ ತೊಂದರೆ, ತತ್ತು, ಕೇಡು
advertise — ಕ್ರಿ ತಿಳಿಯಪಡಿಸು, ಅರಿಕೆಮಾಡು
advertisement — ನಾ ಬಯಲರಿಕೆ
advise — ಕ್ರಿ ಅರಿವು ಕೊಡು, ಅರಿವು ಹೇಳು ನಾ ಅರಿವಿಗ, ಅರಿವೀಯುಗ
advocate — ನಾ ಕಟ್ಟಲೆಯರಿಗ
aerodrome — ನಾ ಹಾರ್ಕೆಮನೆ
aeroplane — ನಾ ನಡೆಮಾಡ, ಗಾಳಿತೇರು, ಹಾರ್ಕೆ, ಬಾನೋಡ, ಪಾರು
aesthetics — ನಾ ಅಂದದರಿಮೆ
affability — ನಾ ಸದರ (ಸದರ ಕೊಡು; ನಾಯಿಗಳಿಗೆ ಅಶ್ಟೊಂದು ಸದರ ಕೊಡ ಬಾರದು)
affable — ಗು ನೊಚ್ಚಗಿನ (ನೊಚ್ಚಗಿನ ಮಾತು)
affect — ಕ್ರಿ ತಾಗು, ನಾಟು (ನಾನು ಹೇಳಿದ್ದು ಅವನಿಗೆ ಸರಿಯಾಗಿ ನಾಟಿದೆ)
affectation — ನಾ ಸೋಗು (ಅವಳ ಆದರ ವೆಲ್ಲ ಬರೀ ಸೋಗು)
affection — ನಾ ಆರಮೆ (ಆರಮೆ ಮಾಡು; ಆರಮೆ ತೋರಿಸು), ಕಾದಲು (ಕಾದಲ; ಕಾದಲೆ; ಕಾದಲ್ಮೆ), ಉಪ್ಪು (ಉಪ್ಪುಪ್ಪು - ಉಪ್ಪುಪ್ಪು ಮಾಡು),ಓಲಾಟ, ನಲ್ಮ (ನಲ್ಮಗಾರ, ನಲ್ಮಗಾರ್ತಿ), ನನ್ನಿ, ಅಕ್ಕರೆ (ವೆಂಕಜ್ಜಿಗೆ ಮಕ್ಕಳೆಂದರೆ ಬಲು ಅಕ್ಕರೆ),ತಕ್ಕು
affidavit — ನಾ ಒಟ್ಟಿಟ್ಟ ಹೇಳಿಕೆ
affiliate — ಕ್ರಿ ಸೇರು, ಸೇರಿಸು
affinity — ನಾ ಒಲವು, ನಂಟು (ನಮ್ಮೊಳಗೆ ಎಂತಹ ನಂಟೂ ಇಲ್ಲ)
affirm — ಕ್ರಿ ಎತ್ತಿಹಿಡಿ (ನನ್ನ ಹೇಳಿಕೆಯನ್ನು ಅವರು ಎತ್ತಿಹಿಡಿದಿದ್ದಾರೆ)
affix — ಕ್ರಿ ಅಂಟಿಸು, ಹಚ್ಚು, ಒಟ್ಟು
affliction — ನಾ ಹೊದಕುಳಿ (ಹೊದಕುಳಿ ಗೊಳ್ಳು)
affluence — ನಾ ಸೊಮ್ಮು, ಪೊರುಳು, ಹೆಚ್ಚುಗೆ
affluent — ನಾ 1 ಸೊಮ್ಮುಳ್ಳ (ಸೊಮ್ಮುಳ್ಳ ಮಂದಿ) 2 ಕೂಡುಹೊಳೆ
afford — ಕ್ರಿ ಕೊಡು (ಕೊಡಬಲ್ಲ - ಕೊಡ ಬಲ್ಲ ಬೆಲೆ)
afforest — ಕ್ರಿ ಕಾಡು ಬೆಳೆ (ಈ ಗುಡ್ಡದಲ್ಲೆಲ್ಲ ಕಾಡು ಬೆಳೆಯಲಿದ್ದೇವೆ)
affront — ಕ್ರಿ 1 ತಿರುಗಿ ಬೀಳು 2 ಹೀಗಳೆ
afire — ಗು ಉರಿಯುವ (ಉರಿಯುವ ಕಾಡು)
afloat — ಗು ತೇಲುವ
afraid — ಗು ಹೆದರಿದ (ಹೆದರಿದ ಆಕಳು ಬೇಲಿಯನ್ನು ದೂಡಿ ಮುರಿದು ಹಾಕಿತು)
afresh — ಗು ಹೊಸದಾಗಿ (ಆ ಕೆಲಸವನ್ನು ಇನ್ನೊಮ್ಮೆ ಹೊಸದಾಗಿ ಮಾಡಹೊರಟ)
aft — ಗು ಹಿಂದೆ
afterbirth — ನಾ ಮಾಸು,ಕಸ (ಆಕಳು ಇನ್ನೂ ಕಸ ಹಾಕಿಲ್ಲ)
afternoon — ಗು ಇಳಿಹೊತ್ತು
afterthought — ನಾ ಹಿನ್ನೆಣಿಕೆ (ಮದುವೆಗೆ ಹೋಗದಿದ್ದುದು ಸರಿಯಲ್ಲವೆಂಬ ಹಿನ್ನೆಣೆಕೆ ಆತನಿಗುಂಟಾಗಿದೆ)
afterwards — ಗು ಬಳಿಕ,ಮತ್ತೆ,ತರುವಾಯ, ಕೇಸ (ಅಲ್ಲಿಗೆ ಹೋಗಿ ಕೇಸ ಬಂದ)
after-word — ನಾ ಹಿನ್ನುಡಿ
again — ಗು ಮರಳಿ, ತಿರುಗಿ (ತಿರುಗಿ ಅವನನ್ನೇ ಕಾಣಲು ಹೋಗಬೇಡ), ಮಗುಳಿ (ಮಗುಳಿ ಬಂದವರು), ಮತ್ತೆ (ನೀನು ಮತ್ತೆ ಕೆಡ ದಿರು), ಇನ್ನೊಮ್ಮೆ, ತೇನ (ತೇನ ತೇನ ಬರುತ್ತಿದ್ದಾನೆ), ಮಮ್ಮಲ (ಮಮ್ಮಲ ಮರುಗು)
against — ಗು ಎದುರು (ಅವನ ಎದುರು ನಾನು ನಿಲ್ಲುವುದಿಲ್ಲ)
age — ನಾ ಹರೆಯ
agenda — ನಾ ಹಮ್ಮುಗೆ, ನೆಗಳ್ತೆಯರಿಕೆ
agent — ನಾ ಮಾರಾಳು ನಾ ಇಟ್ಟಳ, ಗಡಣ, ಹೊರಳಿ
agglutinate — ಕ್ರಿ ಅಂಟಿಸು
aggravate — ಕ್ರಿ ಕೆರಳು, ಹದಗೆಡು (ಅವನ ಕುತ್ತು ಹದಗೆಟ್ಟಿದೆ)
aggregate — ನಾ ಮೊತ್ತ (ಮೊತ್ತ ಎಶ್ಟೆಂದು ಗೊತ್ತಾಗಿಲ್ಲ)
aggregate — ಗು ಒಟ್ಟಾರೆ (ಒಟ್ಟಾರೆ ನೂರು ಮಂದಿ ಸೇರಿದ್ದರು)
aggrieved — ಗು ನೊಂದ (ನೆರೆಯಿಂದ ನೊಂದ ಮಂದಿಗೆ ಏನಾದರೂ ಕೊಡಿಸಿ)
aghast — ಗು ಹೆದರಿದ
agile — ಗು ಚುರುಕಾದ (ಒಳ್ಳೆ ಚುರುಕಾದ ಹುಡುಗ)
agitate — ಕ್ರಿ ತುಳುಕು (ನೀರು ಅಲ್ಲಡಿ ತುಳುಕುತ್ತದೆ), ಕಲಕು
agitation — ನಾ ತೂಳು (ತೂಳು ಬಂದು ಹೇಳಿದ ಮಾತು), ಕಳವಳ, ತಲ್ಲಣ (ತಲ್ಲಣಿಸು; ತಲ್ಲಣಗೊಳ್ಳು), ತೂಣ, ಬೆಳ್ಪಳ (ಬೆಳ್ಪಳಿಸು - ಬೆಚ್ಚಿ ಬೆಳ್ಪಳಿಸಿ ಬಂದ),ಎದೆಗುದಿ,ಕಾಬಳತೆ, ಕವ್ವರ (ಕವ್ವರಗೊಳ್ಳು), ಕಾಳಿ,ತೂಳಗ (ತೂಳಗ ಬರು; ತೂಳಗವೇಳು), ಕದಲಿಕೆ
aglow — ಗು ಉರಿಯುವ
agnail — ನಾ ಉಗುರುಸುತ್ತು
agony — ನಾ ಕಳವಳ, ಎದೆಗುದಿ, ಬೇಗುದಿ
agree — ಕ್ರಿ (ಆ) ಸೇರು (ಬೆಕ್ಕುಗಳಿಗೆ ಹೊಲಸುತನ ಸೇರುವುದಿಲ್ಲ), ಒಗ್ಗು (ಅದು ಯಾರಿಗೂ ಒಗ್ಗದ ಊರು), ಒಂಟು (ಅವಳ ಅಡುಗೆ ಅವನಿಗೆ ಒಂಟುವುದಿಲ್ಲ), ಊರು (ಆ ಊರಿನ ನೀರು ಅವನಿಗೆ ಊರಿತು), ಹಿಡಿ (ಆ ಊರಿನ ನೀರು ನನಗೆ ಹಿಡಿಯುವುದಿಲ್ಲ), ಹೊಂದು (ಹೊಂದಿ ಕೊಳ್ಳು; ಅವನು ಎಲ್ಲರೊಂದಿಗೆ ಹೊಂದಿ ಕೊಂಡಿದ್ದಾನೆ) (ಮಾ) ನೇರು (ನೀವು ನೇರದಿದ್ದರೆ ನಾನು ಹೊರಡುವುದಿಲ್ಲ), ಒಮ್ಮು, ಒಪ್ಪು (ಒಪ್ಪಿಕೊಳ್ಳು; ತನ್ನ ತಪ್ಪು ಗಳನ್ನೆಲ್ಲ ಒಪ್ಪಿಕೊಂಡಿದ್ದಾನೆ), ಏಗೊಳ್ಳು (ಆತ ಮದುವೆಗೆ ಏಗೊಂಡ), ಒಡಂಬಡು (ನಾವೆಂದುದಕ್ಕೆ ಒಡಂಬಡುವುದಿದ್ದರೆ ಬನ್ನಿ), ತಲೆದೂಗು
agreement — ನಾ ಒಪ್ಪಂದ (ಕೊನೆಗೂ ಅವರೊಂದು ಒಪ್ಪಂದಕ್ಕೆ ಬಂದರು), ಒಡಂಬಡಿಕೆ, ಕಂದಣೆ, ಮುಗುವಳಿ, ಒಪೊ್ಪೀಲೆ, ಗೊತ್ತುವಳಿ
agriculture — ನಾ ಸಾಗುವಳಿ, ಆರಂಬ
aground — ಗು ನೆಲಮುಟ್ಟಿದ
ague — ನಾ ಚಳಿಬಿಸುಪು
ahead — ಗು ಮುಂದೆ, ಮುಂದಾಗಿ
aid — ನಾ ನೆರವು (ನನಗೀಗ ನಿಮ್ಮ ನೆರವು ಬೇಕಾಗಿದೆ), ಬೆಂಬಲ (ಅವರ ಬೆಂಬಲ ವಿದ್ದರೆ ನಾನು ಏನೂ ಮಾಡಿಯೇನು), ಒತ್ತಾಸೆ
ail — ಕ್ರಿ ನರಳು (ಆತ ಆರು ತಿಂಗಳಿನಿಂದ ನರಳುತ್ತಿದ್ದಾನೆ)
ailment — ನಾ ನರಳಾಟ, ತೊಂದರೆ
aim — ನಾ ಗುರಿ (ಯಾವುದು ನಿಮ್ಮ ಗುರಿ?),ಚೂಟಿ, ಸೂಟಿ
aim at — ಕ್ರಿ ಪೂಣಿಸು, ಗುರಿಯಿಡು, ಕರು (ಕರುತ್ತು ಹೊಡೆದ)
air — ನಾ ಎರಲು, ಗಾಳಿ
air gun — ನಾ ಗಾಳಿಕೋವಿ
aircraft — ನಾ ಗಾಳಿತೇರು
air-lock — ನಾ ಗಾಳಿತಡೆ
air-mail — ನಾ ಎರಲಂಚೆ
airtight — ಗು ಗಾಳಿಹೋಗದ, ಗಾಳಿತಡೆವ
ajar — ಗು ನಸುತೆರೆದ (ನಸುತೆರೆದ ಬಾಗಿಲು)
akin — ಗು ನೆತ್ತರನಂಟಿನ
alabaster — ನಾ ಹಾಲುಗಲ್ಲು
alacrity — ನಾ ಚುರುಕುತನ ನಾ ದಿಗಿಲು (ದಿಗಿಲುಗೊಳಿಸು; ದಿಗಿಲು ಗನಸು; ದಿಗಿಲುಬೀಳು; ದಿಗಿಲುಹಾರು),ತಳಮಳ (ತಳಮಳಗೊಳ್ಳು, ತಳಮಳಿಸು)
alarm — ಕ್ರಿ ಬೆದರು (ಬೆದರಿಕೆ -ಬೆದರಿಕೆಯಿಂದ ಎತ್ತು ಕೆಳಗೆ ಹಾರಿತು; ಬೆದರಣೆ - ಬೆದರಣೆ ಸೊಲ್ಲು), ದೊಮ್ಮಳಿಸು (ದೊಮ್ಮಳಿಸುವ ಕರು)
album — ನಾ ತಿಟ್ಟಕಡತ (ಆತನ ತಿಟ್ಟಕಡತ ದಲ್ಲಿ ನಿನ್ನ ತಿಟ್ಟವೂ ಇದೆ)
albumen — ನಾ ತತ್ತಿಬಿಳುಪು (ತತ್ತಿಯ ನ್ನೊಡೆದು ತತ್ತಿಬಿಳುಪನ್ನು ಬೇರ್ಪಡಿಸಿದಳು)
alcohol — ನಾ ಹೆಂಡ (ಬೆಲ್ಲದ ಹೆಂಡ, ಬತ್ತದ ಹೆಂಡ)
alert — ಗು ಚುರುಕಾದ, ಎಚ್ಚರಿಕೆಯಿಂದಿರುವ
alga — ನಾ ಕಡಲುಪಾಚಿ
alien — ನಾ ಹೊರನಾಡಿಗ
alienable — ಗು ಮಾರೆಡೆಗೊಳಿಸಬಲ್ಲ
alight — ಕ್ರಿ ಇಳಿ (ತೇರಿನಿಂದ ಇಳಿದ ಅರಸು)
align — ಕ್ರಿ ಹೊಂದಿಸು, ಸಾಲಾಗಿಡು (ಹಣ್ಣು ಗಳನ್ನು ಸಾಲಾಗಿಟ್ಟಿದ್ದಾರೆ)
alike — ಗು ಹೋಲುವ, ಪುದು (ಪುದುಮಾಡು)
alimony — ನಾ ಬಾಳ್ವೆಪಡಿ
alive — ಗು ಉಸಿರುಳ್ಳ
alkali — ನಾ ಹುಳಿಕಳೆಯ
allay — ಕ್ರಿ ತಣಿಸು, ಕಡಿಮೆಮಾಡು
allegation — ನಾ ತಪ್ಪುಹೊರಿಕೆ
allegiance — ನಾ ಮುಡಿಪು, ನಂಬಿಕೆ
allergy — ನಾ ಒಗ್ಗದಿಕೆ (ಆ ಮಗುವಿಗೆ ಆಕಳ ಹಾಲಿನ ಒಗ್ಗದಿಕೆಯಿದೆ)
alleviate — ಕ್ರಿ ಇಳಿಸು, ಹಿಂಗಿಸು (ನಿನ್ನ ತೊಂದರೆಗಳನ್ನು ತುಸು ಹಿಂಗಿಸಬಲ್ಲ)
alley — ನಾ ಓಣಿ
alliance — ನಾ ಹೊಂದಾಣಿಕೆ (ನೆರೆನಾಡಿ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕಾಗಿದೆ)
alligator — ನಾ ನೆಗಳೆ
allocate — ಕ್ರಿ ಹಂಚು
allotment — ನಾ ಹಂಚಿಕೆ (ಈ ಮನೆಗಳ ಹಂಚಿಕೆಯಿನ್ನೂ ನಡೆದಿಲ್ಲ)
allow — ಕ್ರಿ ಎಡೆಗೊಡು, ಈಸು (ಹಾಲು ಕರೆಯಲು ಈಸುವ ಆಕಳು)
allowance — ನಾ ಪಡಿ (ಪಡಿಗೆ ಬಂದವರು; ಪಡಿಯಕ್ಕಿ; ಪಡಿಬೇಡು; ಪಡಿತರ), ಹಡದೆ (ಹಡಪಿಗನಿಗೆ ಮನೆಯಲ್ಲಿ ಮೂವತ್ತು ರುಪಾಲಿು ಹಡದೆ ಕೊಡುತ್ತಾರೆ)
allude — ಕ್ರಿ ಸುಳಿವು ಕೊಡು
allure — ಕ್ರಿ ಸೆಳೆ, ಕೆಳೆ (ಆತನನ್ನು ತನ್ನೆಡೆಗೆ ಕೆಳೆದುಕೊಂಡಿದ್ದಾಳೆ)
allusion — ನಾ ಸುಳಿವು, ಎತ್ತುಗೆ
ally — ನಾ ಅಳವಿಗ, ಗೆಳೆಯ
ally — ಕ್ರಿ ನಂಟು ಬೆಳೆಸು, ಒಂದಾಗು
alms — ನಾ ತಿರುಪೆ (ತಿರುಪೆ ಎತ್ತು),ಅರ (ಅರವಟ್ಟಿಗೆ)
alone — ಗು ತನಿ (ತನಿಯಾಗಿ ಹಾಡು), ಒಬ್ಬನೇ, ಒಂಟಿಯಾಗಿ (ಒಂಟಿಯಾಗಿ ಬಂದ)
aloof — ಗು ಬೇರಾಗಿ (ಒಬ್ಬನೇ ಬೇರಾಗಿ ಕುಳಿತಿ ದ್ದಾನೆ)
aloud — ಗು ಗಟ್ಟಿಯಾಗಿ (ಇಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಬಾರದು) ಕ್ರಿ ಮಾರು (ಮಾರ್ಪಡು - ಇಲಿ ಹುಲಿ ಯಾಗಿ ಮಾರ್ಪಟ್ಟಿತು)
alteration — ನಾ ಮಾರ್ಪಾಟು (ಈ ಮನೆ ಯಲ್ಲಿ ಏನೆಲ್ಲ ಮಾರ್ಪಾಟು ನಡೆದಿದೆ?)
altercate — ಕ್ರಿ ಜಗಳಾಡು, ಕಿತ್ತಾಡು
alternately — ಗು ಒಂದರಮೇಲೊಂದು, ಒಂದಾದ ಮೇಲೊಂದು
alternative — ಗು ಆಯ್ಕೆಯ (ಅಲ್ಲಿ ಆಯ್ಕೆಯ ಕೆಲಸ ಇರಲಿಲ್ಲ)
altitude — ನಾ ಎತ್ತರ (ಕಡಲಿನ ಮಟ್ಟದಿಂದ ಈ ಬೆಟ್ಟ ಎಷ್ಟು ಎತ್ತರ ಇದೆ?)
amalgamate — ಕ್ರಿ ಸೇರಿಸು, ಕೂಡಿಸು, ಬೆರೆಸು
amass — ಕ್ರಿ ಉಗ್ರಾಣಿಸು, ಕಲೆಹಾಕು, ಒಟ್ಟು ಗೂಡಿಸು
amaze — ಕ್ರಿ ಬೆಗಡು (ಆತನ ಕೆಲಸವನ್ನು ನೋಡಿ ನಾನು ಬೆಗಡಿದೆ)
amazement — ನಾ ಬೆರಗು (ಬೆರಗಾಗು; ನಿಬ್ಬೆರಗು),ಮಲ್ಲಣಿ (ನಿಮ್ಮ ಮಾತನ್ನು ಕೇಳಿ ಆತ ಮಲ್ಲಣಿಗೊಂಡ)
ambassodor — ನಾ ಮಾರಳವಿಗ
amenity — ನಾ 1 ಒಗ್ಗುವಿಕೆ 2 ಹದುಳ
ambiguous — ಗು ಇಬ್ಬಗೆಯ (ಅವನ ಮಾತಿಗೆ ಇಬ್ಬಗೆಯ ಹುರುಳಿದೆ)
ambit — ನಾ ಎಲ್ಲೆ (ನಾಡಿನ ಪಡು ಎಲ್ಲೆಯಲ್ಲಿ ಕಡಲಿದೆ), ಮೇರೆ
ambition — ನಾ ಏರಿಕೆಯ ಹಂಬಲ
amble — ಕ್ರಿ ಮೆಲ್ಲ ನಡೆ
ambush — ನಾ ತಾಗುಡಿ (ಇಲ್ಲಿ ತುಸು ಮುಂದೆ ಅವರ ತಾಗುಡಿಯಿದೆ; ಎಚ್ಚರಿಕೆಯಿಂದ ಮುಂದೆ ಹೋಗಿ)
ameliorate — ಕ್ರಿ ಮೇಲೆತ್ತು, ಒಳ್ಳೆದು ಮಾಡು
amenable — ಗು ಒಗ್ಗುವ, ಒಳಗಾಗುವ
amend — ಕ್ರಿ ತಿದ್ದು
amendment — ನಾ ತಿದ್ದುಪಡಿ (ನಿನ್ನೆಯ ಹೇಳಿಕೆಯಲ್ಲಿ ತುಸು ತಿದ್ದುಪಡಿ ಮಾಡಿ ದ್ದಾರೆ)
amiable — ಗು ಒಳ್ಳೆನಡತೆಯ, ನಣ್ಪಿನ
amicable — ಗು ಹೊಂದಾಣಿಕೆಯ
amiss — ಗು ತಪ್ಪಿದ, ತಪ್ಪಾದ
amity — ನಾ ನಣ್ಪು, ಗೆಳೆತನ
ammunition — ನಾ ಮದ್ದುಗುಂಡು
amorphous — ಗು ಪಾಂಗುಗೆಟ್ಟ, ಪರಿಜಿಲ್ಲದ
amount — ನಾ ಮೊತ್ತ
ample — ಗು ಸಾಕಷ್ಟು, ಹೇರಳ (ಅವನಿಗೆ ಹೇರಳ ಹಣ ಸಿಕ್ಕಿದೆ)
amplify — ಕ್ರಿ ಹೆಚ್ಚಿಸು, ಮೊಕ್ಕಳಿಸು
amputate — ಕ್ರಿ ತುಂಡಿಸು, ಕಡಿದು ತೆಗೆ
amuse — ಕ್ರಿಜಕ್ಕುಳಿಸು, ಚಲ್ಲವಾಡು
amusement — ನಾ ಚಲ್ಲ (ಚಲ್ಲವಾಡು; ಚಲ್ಲಗಾತ್ರಿ; ಚಲ್ಲಗಣ್ಣು), ಚಕ್ಕಂದ, ನೆಬ್ಬುವ
anaemia — ನಾ ನೆತ್ತರಿಳಿತ (ಆಕೆ ನೆತ್ತರಿಳಿತ ದಿಂದ ಬಳಲುತ್ತಿದ್ದಾಳೆ)
anaesthesia — ನಾ ಅರಿವಳಿಕೆ
analgesic — ಗು ನೋವಳಿಕ
analogy — ನಾ ಹೋಲಿಕೆ, ದೊರೆ, ಪಾಂಗು
analyse — ಕ್ರಿ ಬಿಡಿಸಿನೋಡು ನಾ ಕಟ್ಟಲೆಗೆಡುಹ, ಕಟ್ಟಲೆಯಳಿವು
anathema — ನಾ 1 ಉಸುರಿಡುಗೆ 2 ಹೇಸಾಳು, ಹೇಸಿಗೆ
anatomy — ನಾ ಒಡಲರಿಮೆ
ancestor — ನಾ ಹಿರೀಕ (ಇಲ್ಲಲ್ಲ ಕಾಡನ್ನು ಕಡಿದು ತೋಟ ಮಾಡಿದವರು ನಮ್ಮ ಹಿರೀಕರು)
ancestry — ನಾ ಮನೆತನ (ಅವರದು ಹಿರಿಮೆ ಯುಳ್ಳ ಮನೆತನ), ತಳಿಲಿುಳಿಕೆ
anchor — ನಾ ಹಿಡಿಗೂಟ
ancient — ಗು ಕಿಗ್ಗಳ (ಒಂದು ಕಿಗ್ಗಳ ಕತೆ), ಹಳೇಕಾಲದ
ancillary — ಗು ಒತ್ತಾಸೆಯ, ಕೆಳಗಿನ, ಒಳಪಟ್ಟ
anecdote — ನಾ ಕಿರುಕತೆ
anew — ಗು 1 ಹೊಸ 2 ಇನ್ನೊಮ್ಮೆ
anger — ನಾ ಸಿಟ್ಟು (ಸಿಟ್ಟಾಗು, ಸಿಟ್ಟು ಬರು, ಸಿಟ್ಟುಮಾಡು, ಸಿಟ್ಟುಬಿಡು),ಮುನಿಸು (ಮುನಿಸುಮಾಡು; ಮುನಿಸುಗೊಳ್ಳು), ಮುನಿಪು, ಸೀತರು (ಸೀತರುಗೊಳ್ಳು), ಕಾತಿ (ಕಾತಿಯಲ್ಲಿ ಆತ ಏನೇನೋ ಒದರಿದ), ಕಿನಿಸು (ಕಿನಿಸು ಮಾತು; ಕಿನಿಸೇರು), ಕಾವು, ಕಾಯ್ಪು (ಕಡುಗಾಯ್ಪು), ಮೊರಹು, ಕತಿ (ಕತಿಗೊಳ್ಳು), ಮುಳಿಸು, ಕನಲ್ಕೆ
angle — ನಾ ಮೂಲೆ,ಕೋನ,ಗೋಟು
angrily — ಗು ಕವ್ವನೆ
angry (be) — ಕ್ರಿ ಮುನಿ (ಮುನಿದುಕೊಳ್ಳು), ಮುಳಿ (ಮುಳಿಸು; ಮುಳಿಸುಗ), ರೇಗು; ರೊಚ್ಚುಗೊಳ್ಳು, ಕನಲು (ಕನಲ್ಕ), ಕೆರಳು (ಕೆರಳಿ ನುಡಿ), ಕಿನಿ (ಕಿನಿವವನಿಗೆ ಕಿನಿಯ ಬೇಡ), ಸೀರು, ಕಾಯು, ಕಂಗು (ಕಂಗಾಗು)
anguish — ನಾ ಬೇಗುದಿ (ಬೇಗುದಿಗೊಳ್ಳು),ಅಲ್ಲರ (ನಲ್ಲನಿಂದ ಬೇರಾಗಿರಬೇಕಾದ ಅಲ್ಲರ), ಎದೆಗುದಿ
animal — ನಾ ಉಸಿರುಗ, ಉಸುರಿ
animate — ಕ್ರಿ ಉಸಿರುಹಚ್ಚು, ತೆಪ್ಪರು (ತೆಪ್ಪತ್ತುಕೊಳ್ಳು)
animate — ಗು ಉಸಿರುಳ್ಳ
animosity — ನಾ ಹಗೆತನ
ankle — ನಾ ಪರಡು,ಮಂಡ,ಚೀಲ ಮಂಡೆ,ಗಿರಿಗೆ
anklet — ನಾ ಕಳಲು (ಕಳಲುಲಿ)
annex — ಕ್ರಿ ಕೊನೆಗೆ ಸೇರಿಸು
annexture — ನಾ ಜೋಡಣೆ, ಸೇರಿಕೆ
annihilate — ಕ್ರಿ ಹುಟ್ಟಡಗಿಸು, ಅಳಿಸು
anniversary — ನಾ ಸೂಳುಹಬ್ಬ, ಏಡುಹಬ್ಬ
annoint — ಕ್ರಿ ತಳ್ಕು, ಸವರು (ಎಣ್ಣೆ ಸವರು)
annotate — ಕ್ರಿ ತಿಳುಪು ಕೊಡು
announce — ಕ್ರಿ ಸೂಳ್ಗರೆ, ಸಾರು
announcer — ನಾ ಸೂಳಾಯ್ತ, ಸಾರುವವ, ಸಾರುಗ
annoy — ಕ್ರಿ (ಆ) ಮಸಗು (ಮಾ) ಕಾಡು (ಆತ ಬೆಳಿಗ್ಗೆಯೇ ಬಂದು ಕಾಡಲು ತೊಡಗಿದೆ)
annoyance — ನಾ ಕಾಟ (ಈ ಮಕ್ಕಳ ಕಾಟ ವನ್ನು ತಡೆಯುವುದು ಹೇಗೆ?), ಕಿರುಕುಳ (ಕಿರುಕುಳ ಕೊಡು)
annul — ಕ್ರಿ ಅಳಿಸು, ನೀಗಾಡು
annul — ಗು ಸಾಲೆಸಾಲು (ಸಾಲೆಸಾಲು ಕಾಣ್ಕೆ ನಾಳೆ ನಡೆಯಲಿದೆ)
anomalous — ಗು ಒಮ್ಮದ, ಓಜೆಗೆಟ್ಟ
anonym — ನಾ ತೆಗಹಿದ ಹೆಸರು ಗು ಹೆಸರು ತಿಳಿಯದ
answer — ನಾ ಮಾರ್ನುಡಿ (ನನ್ನ ಕೇಳ್ವಿಗೆ ಆತನ ಮಾರ್ನುಡಿಯಿಲ್ಲ),ಮರುಮಾತು, ಮರು ನುಡಿ
ant — ನಾ ಗೊದ್ದ (ಈ ಕಪ್ಪು ಗೊದ್ದ ಕಡಿದರೆ ತುಂಬಾ ನೋಯುತ್ತದೆ), ಇರುವೆ (ಬೆಲ್ಲಕ್ಕೆ ಇರುವೆ ಮುತ್ತಿದೆ)
antagonism — ನಾ ಹಗೆತನ, ಕಡ್ಡತನ
antagonist — ನಾ ಹಗೆ, ಎದುರಾಳಿ, ಉದ್ದಿ
ant-eater — ನಾ ಇರುವೆಬಾಕ
antecedent — ಗು ಹಿಂದಿನ, ಮೊದಲಿನ
antechamber — ನಾ ಒಳಕೋಣೆ
antedate — ಕ್ರಿ ಹಿಂದೂಡು
antelope — ನಾ ಜಿಂಕೆ, ಚಿಗರೆ, ಎರಳೆ (ಎರಳೆ ಗಣ್ಣು),ಹುಲ್ಲೆ
anterior — ಗು 1 ಮುಂದಿನ 2 ಹಿಂದಿನ, ಮುಂಚಿನ
anthem — ನಾ ಹೊಗಳುಹಾಡು
anthill — ನಾ ಹುತ್ತ (ಗೆದ್ದಲಿನ ಹುತ್ತ)
anthology — ನಾ ಆರಿಸಿದ ಬರಹಗಳು
anthropology — ನಾ ಮಂದಿಯರಿಮೆ
anticipate — ಕ್ರಿ ಎದುರುನೋಡು (ನಿಮ್ಮ ಬರವನ್ನು ಎದುರುನೋಡುತ್ತಿದ್ದೇನೆ), ಕಾದಿರು
anticlockwise — ನಾ ಬಲತಿರುವು
antics — ನಾ 1 ಸಂಚು, ಬೂಟಾಟಿಕೆ 2 ಮಂಗಾಟ
antidote — ನಾ ಮರುಮದ್ದು
antipathy — ನಾ ಅಸುರು, ಕಿಸುರು
antiquary — ನಾ ಪಳಮೆನೆರಪು
antiquated — ಗು ಬಳಕೆಯಿಲ್ಲದ
antiquity — ನಾ ಪಳಮೆ
antiseptic — ನಾ ಕೊಳೆಯಳಿಕ
antler — ನಾ ಉದುರುಗೊಂಬು,ಕವಲ್ಗೊಂಬು
antonym — ನಾ ಮರುಪೊರುಳು
anus — ನಾ ಗೊಳ್ಳೆ
anvil — ನಾ ಪಟ್ಟಡಿ (ಪಟ್ಟಡಿಮನೆ; ಆತನ ಪೆಟ್ಟಿಗೆ ಪಟ್ಟಡಿಯೇ ಒಡೆದು ಹೋಯಿತು), ಬಡಿಗಲ್ಲು, ಅದ್ದಗಣಿ (ಅದ್ದಗಣಿಯ ಮೇಲೆ ಸುತ್ತಿಗೆಯ ಹೊಡೆತ ಬಿತ್ತು)
anxiety — ನಾ ಬೇವಸ (ಬೇವಸಗೊಳ್ಳು; ಬೇವಸಪಡು),ಸೆಡೆ (ಸೆಡೆವಡು),ತಲ್ಲಣ (ಆಕೆ ತುಂಬಾ ತಲ್ಲಣಗೊಂಡಿದ್ದಾಳೆ),ತೂಣ, ಅಳರು, ಅತ್ತಳಗ, ಎದೆಗುದಿ (ಎದೆ ಗುದಿಪಡು),ಕಳವಳ (ಒಡಲ ಕಳವಳ; ಕಳವಳಿಸು), ಕದಲಿಕೆ, ತಳ್ಳಂಕ, ಸಿಡಿಮಿಡಿ, ಬೆಗಡು
apart — ಗು ಪಂಗಡ (ಪಂಗಡವಾದವನು), ಹಕ್ಕಲು (ಹಕ್ಕಲು ಮನೆ)
apartment — ನಾ ಕೂಡುಮನೆ
apathy — ನಾ ಗೊಡವೆಯಿಲ್ಲದಿಕೆ
ape — ನಾ ಕೋತಿ
aperture — ನಾ ಕಿಂಡಿ (ಗೋಡೆಯಲ್ಲೊಂದು ಕಿಂಡಿಯಿದೆ), ತೂತು (ಬಾಗಿಲಿನಲ್ಲಿರುವ ತೂತಿನ ಮೂಲಕ ಬಂದವರು ಯಾರೆಂದು ನೋಡಬಹುದು)
apex — ನಾ ಕೋಡು, ತುದಿ ನಾ ನಾಣ್ಣುಡಿ, ಗಾದೆಮಾತು
aplomb — ನಾ ತನ್ನಂಬಿಕೆ
apology — ನಾ ತಪೊ್ಪಪ್ಪಿಗೆ (ತಪೊ್ಪಪ್ಪಿಕೊಳ್ಳು)
apothecary — ನಾ ಮದ್ದಿನಂಗಡಿ
appalling — ಗು ಅಂಜಿಸುವ, ಹೆದರಿಸುವ
apparel — ನಾ ಉಡುಪು, ಬಟ್ಟೆಬರೆ
apparent — ಗು ಕಾಣುವ, ಮೇಲ್ನೋಟದ
apparition — ನಾ ಗಾಳಿಗ, ಮರಳು
appeal — ನಾ ಮೇಲ್ಮನವಿ (ಮೇಲ್ಮನವಿ ಮಾಡುವ ಮೊದಲು ತಪ್ಪು ಕಟ್ಟಬೇಕಾಗು ತ್ತದೆ)
appeal — ಕ್ರಿ ಮೊರೆಯಿಡು
appear — ಕ್ರಿ 1 ಸೂಸು (ಹೊರಸೂಸು), ಪೊಚ್ಚರಿಸು, ಮಯ್ದೋರು, ಮೂಡು (ನೇಸರು ಮೂಡಿದುದು; ಒಡಮೂಡು), ಒಗೆ (ಕಾಡಿನಲ್ಲಿ ಕಿಚ್ಚು ಒಗೆದಿದೆ), ಹೊಳಕು (ಹೊಳಕಿದ ಗುಮ್ಮ), ತೋರು (ಇಲ್ಲಿ ಹುಡುಕಿದರೆ ಅಲ್ಲಿ ತೋರುತ್ತಾನೆ), ತಳಿ 2 ಹೊಡಕರಿಸು, ತಲೆದೋರು, ತೋಚು (ನನಗೆ ಹೀಗೆ ತೋಚುತ್ತದೆ), ಕಾಣು, ತೋರು (ಬಂದಿದ್ದಾನೆಂದು ತೋರುತ್ತದೆ; ತೋರಿಕೆ; ತೋರ್ಪು), ಕಾಣು (ಬಿಸಿಲಿನಿಂದ ಒಳಗೆ ಬಂದರೆ ಏನೂ ಕಾಣುವುದಿಲ್ಲ; ಕಾಣ್ಕೆ), ಪೊದಳು (ಪೊದಳ್ಕೆ)
appearing — ನಾ ಕಳಿಕೆ (ಮರುಕಳಿಕೆ)
appease — ಕ್ರಿ ತಣಿಸು (ಆತನನ್ನು ತಣಿಸುವು ದಕ್ಕಾಗಿ ಏನೇನೋ ಮಾಡುತ್ತಿದ್ದಾರೆ)
appellant — ನಾ ಮೇಲ್ಮನವಿ
append — ಕ್ರಿ ಸೇರಿಸು, ಒಟ್ಟು
appendix — ನಾ 1 ಕರುಳುಬಾಲ (ಕರುಳು ಬಾಲದಲ್ಲಿ ಹುಣ್ಣಾದರೆ ಅದನ್ನು ಕತ್ತರಿಸಿ ತೆಗೆಯುತ್ತಾರೆ) 2 ಸೇರಿಕೆ (ಕಡತದ ಕೊನೆಯಲ್ಲಿ ಮೂರು ಸೇರಿಕೆಗಳಿವೆ)
appetite — ನಾ ಹಸಿವು (ಊಟ ಮಾಡಲು ನನಗೆ ಹಸಿವಿಲ್ಲ)
applaud — ಕ್ರಿ ಕೊಂಡಾಡು, ಮೆಚ್ಚು, ಹೊಗಳು (ಆತನನ್ನು ಎಲ್ಲರೂ ಹೊಗಳಿದರು)
applause — ನಾ ಹೊಗಳಿಕೆ, ಮೆಚ್ಚುಗೆ
appliance — ನಾ ಚೂಟಿ (ಕಾಯಿ ಅರೆಯುವ ಚೂಟಿ)
applicant — ನಾ ಮನವಿಗಾರ
application — ನಾ 1 ಬಳಕೆ 2 ಮನವಿ, ಅರಿಕೆ
apply — ಕ್ರಿ 1 ಹಚ್ಚು (ಮಯ್ಗು ಎಣ್ಣೆ ಹಚ್ಚಿ ಕೊಂಡ) 2 ಮನವಿ ಕೊಡು
appoint — ಕ್ರಿ ಆರಿಸು, ಕೆಲಸ ಕೊಡು
appointed place — ನಾ ಪನವು (ಆತ ತನ್ನನ್ನು ಕಾಣಬೇಕಾದ ಪನವು ಯಾವು ದೆಂದು ತಿಳಿಸಿದ್ದಾನೆ), ಕೊಂಬು (ನಾನು ಮೆಲ್ಲನೆ ಕೊಂಬಿನೆಡೆಗೆ ನಡೆದೆ)
appointment — ನಾ 1 ಕೆಲಸ (ಅವನಿಗೆ ಇನ್ನೂ ಕೆಲಸ ಆಗಿಲ್ಲ) 2 ಪೂಣ್ದ ಕದೆ
apportion — ಕ್ರಿ ಪಾಲುಹಚ್ಚು, ಪಾಲುಮಾಡು (ಕದ್ದುತಂದ ಹಣವನ್ನು ಪಾಲುಮಾಡು ತ್ತಿದ್ದಾರೆ)
appraise — ಕ್ರಿ 1 ತಿಳಿಯಪಡಿಸು (ಆತನಿಗೆ ಎಲ್ಲವನ್ನೂ ತಿಳಿಯಪಡಿಸಿದ್ದೇವೆ) 2 ಬೆಲೆ ಕಟ್ಟು (ನಮ್ಮ ಕಟ್ಟಡಕ್ಕೆ ಬೆಲೆಕಟ್ಟಲು ಬಂದಿದ್ದಾರೆ)
appreciate — ಕ್ರಿ 1 ಬೆಲೆಹೆಚ್ಚು 2 ತಿಳಿದು ಕೊಳ್ಳು (ನೀವು ಪಟ್ಟ ತೊಂದರೆಗಳನ್ನು ಆತ ತಿಳಿದುಕೊಂಡಿದ್ದಾನೆ)
apprehend — ಕ್ರಿ 1 ಸೆರೆಹಿಡಿ 2 ತಿಳಿ (ನಾನು ಹೇಳಿದ್ದು ತಿಳಿಲಿುತೇ?) 3 ಅಂಜು, ಹೆದರು (ಯಾರಿಗೂ ಹೆದರಬೇಡ)
apprentice — ನಾ ಕಲಿಕೆಯವನು (ಅಲ್ಲಿ ಆರು ತಿಂಗಳು ಕಲಿಕೆಯವನಾಗಿರಬೇಕು)
apprise — ಕ್ರಿ ತಿಳಿಸು (ನಡೆದುದನ್ನೆಲ್ಲ ಆತ ಯಾರಿಗೋ ತಿಳಿಸಿದ್ದಾನೆ)
approach — ಕ್ರಿ ಸಾರು (ಬಳಿಸಾರು; ಕೆಲ ಸಾರು), ಅಣೆ, ಅಂಡು, ಎಯ್ತರು, ಎಳ್ತರು, ಹೊಂದು (ಹೊಂದತಕ್ಕುದು), ಮುಟ್ಟ ಯಿಸು, ಎಡೆವೊಗು ನಾ ಮೆಚ್ಚುಗೆ, ಹೊಗಳಿಕೆ
appropriate — ಗು ತಕ್ಕ (ಕೆಲಸಕ್ಕೆ ತಕ್ಕ ಉಡುಪು; ತಕ್ಕುಮೆ), ಸರಿಯಾದ (ಅವರದು ಸರಿಯಾದ ಹೇಳಿಕೆ)
approval — ನಾ ಒಪ್ಪಿಗೆ (ಆ ಕೆಲಸಕ್ಕೆ ನಮ್ಮ ತಂದೆಯವರ ಒಪ್ಪಿಗೆ ಸಿಕ್ಕಿದೆ),ಮೆಚ್ಚುಗೆ (ಅವರು ನಿಮ್ಮನ್ನು ಮೆಚ್ಚುಗೆಲಿುಂದ ಕಾಣುತ್ತಾರೆ)
approve — ಕ್ರಿ ಮೆಚ್ಚು (ಈ ಊರಲ್ಲಿ ನಿನ್ನ ಅಳವನ್ನು ಮೆಚ್ಚದವರಿಲ್ಲ; ಮೆಚ್ಚವಣಿಕೆ; ಮೆಚ್ಚುಗಾಣಿಕೆ; ಮೆಚ್ಚುಗೆ)
approver — ನಾ ಒಪ್ಪಿಕೊಂಡವ, ಒಪ್ಪುಗ (ಸಿಕ್ಕಿಬಿದ್ದ ಕಳ್ಳರಲ್ಲಿ ಒಬ್ಬ ಒಪ್ಪುಗನಾಗಿ ದ್ದಾನೆ)
approximately — ಗು ಹೆಚ್ಚುಕಡಿಮೆ (ಹೆಚ್ಚು ಕಡಿಮೆ ಇನ್ನೂರು ರುಪಾಯಿ ಬೇಕಾದೀತು)
approximation — ನಾ ತೋರೆಣಿಕೆ, ತೋರುಬೆಲೆ
apron — ನಾ ತಡಪು (ತಡಪು ಕಟ್ಟಿಕೊಂಡು ಅಡಿಗೆ ಮಾಡಲು ಹೋದ), ಮೇಲುಡುಪು
apt — ಗು ತಕ್ಕ (ಅವನಿಗೆ ತಕ್ಕ ಆಳು ಸಿಗಲಿಲ್ಲ)
aptitude — ನಾ ಒಲವು (ಅವನ ಒಲವು ಯಾವುದರಲ್ಲಿದೆಯೆಂದು ಮೊದಲು ತಿಳಿ)
aquatic — ಗು ನೀರಿನ
aqueduct — ನಾ ಮೇಲ್ಗಾಲುವೆ, ಕಟ್ಟುಕಾಲುವೆ
arable — ಗು ಉಳತಕ್ಕ (ಉಳತಕ್ಕ ನೆಲ)
arbiter — ನಾ ತೀರ್ಪುಗಾರ
arbitrary — ಗು ಕಟ್ಟಳೆಯಿಲ್ಲದ, ಕಟ್ಟಿಲ್ಲದ
arbitrate — ನಾ ತೀರ್ಮಾನಿಸು
arbitrator — ನಾ ತೀರ್ಪುಗಾರ
arbour — ನಾ ಹಂಬಿನ ಹಂದರ
arch — ಕ್ರಿ ಬಾಗು (ಬಾಗಿದ ಬೆನ್ನು)
archaic — ಗು ಬಳಕೆಯಲ್ಲಿಲ್ಲದ, ತುಂಬಾ ಹಳೆಯ
archeology — ನಾ ಪಳಮೆಯರಿಮೆ
archer — ನಾ ಪೂಣಿಗ, ಬಿಲ್ಲುಗಾರ
architect — ನಾ ಕಟ್ಟಡದರಿಗ
architecture — ನಾ ಕಟ್ಟಡದರಿಮೆ
ardent desire — ನಾ ಹಂಬಲ,ಗೀಳು (ಗೀಳು ಹಿಡಿ; ಹೆಂಡತಿಯ ಮೇಲಿನ ಗೀಳು)
ardour — ನಾ ಪಸ, ಪದೆಪು (ಕೆಲಸಕ್ಕೆ ಸೇರುವ ಪದೆಪು ಆತನಲ್ಲಿಲ್ಲ)
ardous — ಗು ತೊಡಕಿನ (ಅವರಿಗೆ ಸಿಕ್ಕಿರುವುದು ತುಂಬಾ ತೊಡಕಿನ ಕೆಲಸ)
area — ನಾ ಹರವು (ಅಂಗಳದ ಹರವು ತುಸು ಕಡಿಮೆಯಾಯಿತು)
arecanut — ನಾ ಅಡಿಕೆ
arena — ನಾ ಕಣ (ಹೋರಾಟದ ಕಣ)
argument — ನಾ ಬಕ್ಕುಡಿ (ಬಕ್ಕುಡಿಗಟ್ಟು; ಬಕ್ಕುಡಿಗೆಯ್ಯು)
arid — ಗು ಒಣ (ಒಣ ಊರು)
arid zone — ನಾ ಬೆಂಗಾಡು
arise — ಕ್ರಿ ಉಂಟಾಗು,ಹುಟ್ಟು,ಉಣ್ಮು (ಒಲವುಣ್ಮು; ಉಣ್ಮಿದ ಮಿಂಚು; ಉಣ್ಮೆ), ತಲೆದೋರು, ಮೂಡು (ಮೂಡಿ ಬಂದ ನೇಸರು)
arithmatic — ನಾ ಎಣಿಕೆಯರಿಮೆ (ಎಣಿಕೆ ಯರಿಗ)
arm — ನಾ ರಟ್ಟೆ (ಆತನ ರಟ್ಟೆ ಹಿಡಿದು ಎಳೆದು ಕೊಂಡು ಬಂದೆ), ತೋಳು (ತೋಳಾಟ; ತೋಳಿನ ಕೆಲಸ; ತೋಳೇರಿಸು)
armlet — ನಾ ವಂಕಿ
armpit — ನಾ ಕಂಕುಳ (ಕಂಕುಳಲ್ಲಿ ಕೊಡೆ ಇತ್ತು) ನಾ ಪಡೆ, ಪಾಳೆಯ, ಒಡ್ಡಣ (ಇದಿ ರೊಡ್ಡಣ)
aroma — ನಾ ಕಂಪು (ಹೂವಿನ ಕಂಪು)
around — ಗು ಸುತ್ತ (ಮನೆಯ ಸುತ್ತಲಿನ ಗೋಡೆ; ಸುತ್ತಮುತ್ತ)
arouse — ಕ್ರಿ ಎಬ್ಬಿಸು (ಹೊಡೆದೆಬ್ಬಿಸು)
arrange — ಕ್ರಿ (ಆ) ಏರ್ಪಡು (ಅವರಲ್ಲಿ ಒಂದು ಮದುವೆ ಏರ್ಪಟ್ಟಿದೆ) (ಮಾ) ಸಾವಗಿಸು (ಸೀರೆಯ ನೆರಿಗಳನ್ನು ಸಾವಗಿಸಿಕೊಳ್ಳುತ್ತ ಬಂದಳು), ಹೂಡು (ಒಲೆ ಹೂಡು; ಕೋವಿ ಹೋಡು)
arrangement — ನಾ ಏರ್ಪಾಡು, ನಿರುಗೆ (ಸಂತೆಯಲ್ಲಿರಿಸಿದ ಹಣ್ಣುಗಳ ನಿರುಗೆ ನೋಡಲು ಚನ್ನಾಗಿತ್ತು), ಪೊಂಕ (ಪೊಂಕ ಗೆಡು), ಅಟ್ಟಣೆ (ಮದುವೆಯ ಅಟ್ಟಣೆ ಮಾಡಲಿದೆ), ಕಡಕಟ್ಟು,ಗೊತ್ತುಪಾಡು,ಪಣ್ಣುಗೆ, ಪಣ್ಣಿಕೆ, ಒಡ್ಡವ, ಮುರಿ
arrant — ಗು ಕೆಟ್ಟ, ದೋವಿಲಿನ
array — ನಾ ಓರಣ (ಓರಣಿಸು)
arrest — ನಾ ಕಯ್ಸುರೆ (ಕಯ್ಸುರೆಹಿಡಿ)
arrival — ನಾ ಪುಗಿಲು (ಆತನ ಪುಗಿಲನ್ನು ನೋಡಲು ಸಾವಿರ ಮಂದಿ ಸೇರಿದ್ದರು), ಬರುವಿಕೆ, ಎಳ್ತರವು, ಬರವು, ಬರ್ತನ
arrive — ಕ್ರಿ ಎಯ್ತರು; ಎಯ್ದು, ತಲಪು (ತಲಪು ವಿಕೆ)
arrogance — ನಾ ಸೊಕ್ಕು, ಕೊಬ್ಬು, ಪಪ್ಪ (ಆತನ ಪಪ್ಪವನ್ನು ಕಂಡರೆ ನನಗಾಗುವು ದಿಲ್ಲ), ಪುಗ್ಗು (ಪುಗ್ಗಾಯಿಲ; ಪುಗ್ಗಾಯಿಲ ತನ), ಮಲೆಪು (ಮಯ್ಯುಬ್ಬಿಸಿ ಮಲೆಪಿನಿಂದ ನಿಲ್ಲು), ಮುರುಕು (ಮುರಿಕಿನಿಂದ ಎದೆ ಯುಬ್ಬಿಸಿ ನಡೆದ), ಮುಕ್ಕು, ಹಮ್ಮು, ಎಂಟು (ಎಂಟೆದೆ), ತಾಮರ
arrow — ನಾ ಸರಳು, ಕಣೆ, ಅಂಬು (ಅಂಬು ಬಿಡು)
arrowroot — ನಾ ಕೂವೆ (ಕೂವೆ ಹುಡಿಯಿಂದ ಮಾಡಿದ ತಿಂಡಿ ಚನ್ನಾಗಿರುತ್ತದೆ)
arson — ನಾ ಕಿಚ್ಚಿಡುವುದು, ಬೆಂಕಿ ಹಚ್ಚುವುದು
art — ನಾ ಕಲೆ
arthritis — ನಾ ಕೀಲೂತ
article — ನಾ 1 ಹುರುಳು 2 ಬರಹ
articulation — ನಾ ಉಲಿಯಲು (ಅವನಿಗೆ ಮಡಚುಲಿಗಳನ್ನು ಉಲಿಯುವುದು ಹೇಗೆ ಎಂದು ತಿಳಿಯದು)
artificial — ಗು ತನ್ಪರಿಜಲ್ಲದ, ಮಾಳ್ಕೆಯಾದ
artisan — ನಾ ಕೆಲಸಗಾರ
artist — ನಾ ಕಲೆಗಾರ
asbestos — ನಾ ಕಲ್ನಾರು
ascend — ಕ್ರಿ ಅಡರು (ಬಳ್ಳಿ ಮರದ ತುದಿವರೆಗೆ ಅಡರಿದೆ), ಏರು (ನಾಲ್ಕು ಮಂದಿ ಬೆಟ್ಟ ಏರುತ್ತಿದ್ದಾರೆ), ಹತ್ತು
ascent — ನಾ ಏತ
ascertain — ಕ್ರಿ ಕಂಡುಹಿಡಿ
ascetic — ನಾ ಕಿತ್ತಡಿ, ಗೊರವ
ascribe — ಕ್ರಿ ಹೊರಿಸು (ಅವನ ಮೇಲೆ ತಪ್ಪುಹೊರಿಸಿದ್ದು ಹೇಗೆ?)
ash — ನಾ ಬುಗ್ಗಿ, ನೀರು (ಹಣೆಗೆ ನೀರು ಹಚ್ಚಿಕೊಂಡಿದ್ದಾನೆ)
ashamed(be) — ಕ್ರಿ ನಾಚು (ಅಕೆ ಹೊರ ಬರಲು ನಾಚುತ್ತಿದ್ದಾಳೆ)
ask — ಕ್ರಿ ಎರೆ (ಎರೆಯುವವನಿಗೆ ನಾಚಿಕೆಲಿುಲ್ಲ; ಎರವಲು), ಕೇಳು
askew — ಗು ಓರೆ (ಗಿಡ ನಟ್ಟದ್ದು ಓರೆ ಯಾಗಿದೆ)
asking — ನಾ ಬೇಡಿಕೆ, ಕೇಳಿಕೆ
asleep — ಗು ಒರಗಿದ (ಒರಗಿದ ಹುಲಿಯ ಮೇಲೆ ಮಕ್ಕಳು ಕಲ್ಲು ಎಸೆದರು)
aspect — ನಾ ತೋರ್ಕೆ, ನೋಟ ನಾ ಪಪ್ಪರಿಕೆ, ಪರಿಗೆ
aspersion — ನಾ ಕೊಂಡೆಯ, ಹೆಸರು ಕೆಡಿಸು ವುದು
asphalt — ನಾ ಕಲ್ಲರಗು
asphyxia — ನಾ ಉಸಿರು ಕಟ್ಟುವುದು
aspirant — ನಾ ಹಂಬಲಿಗ
aspirated sound — ನಾ ಊದುಲಿ
aspiration — ನಾ 1 ಹಂಬಲ 2 ಊದಿಕೆ
ass — ನಾ ಕತ್ತೆ
assail — ಕ್ರಿ ಕಯ್ಮಾಡು
assassin — ನಾ ಕೊಲೆಗಾರ
assault — ಕ್ರಿ ದಾಳಿಯಿಡು, ದಾಳಿಮಾಡು
assay — ಕ್ರಿ ಒರೆಹಚ್ಚು
assemblage — ನಾ ಸೇರ್ವೆ (ನೂರಾರು ಮಂದಿಯ ಸೇರ್ವೆ; ಸೇರುವೆ), ಗೊಂದಣ (ಹಬ್ಬದ ಗೊಂದಣ), ಕೊತ್ತಣ, ನೆರವಿ (ಕಾಗೆಗಳ ನೆರವಿ), ಜಂಗುಳಿ (ಜನ ಜಂಗುಳಿ),ಹೊರಳಿ (ಹೊರಳಿಗಟ್ಟು), ಕೂಟ, ಒಳ್ಗು, ಒಟ್ಟಿಲು
assemble — ಕ್ರಿ ಸೇರು,ನೆರೆ (ಹಲವರು ನೆರೆದಿದ್ದರು), ಗೊಂದಣಿಸು
assent — ಕ್ರಿ ಒಮ್ಮು, ಒಪ್ಪು (ಒಪ್ಪಿಗೆ)
assert — ಕ್ರಿ ಒತ್ತಿಹೇಳು (ಎಲ್ಲರೂ ಬರ ಬೇಕೆಂದು ಆಕೆ ಒತ್ತಿಹೇಳಿದ್ದಳು)
assess — ಕ್ರಿ ಬೆಲೆಕಟ್ಟು (ನೆರೆಯ ಹಾವಳಿ ಎಶ್ಟೆಂದು ಬೆಲೆಕಟ್ಟಬೇಕಾಗಿದೆ)
assign — ಕ್ರಿ ಕೆಲಸ ಹಂಚು
assimilate — ಕ್ರಿ ಹೀರಿಕೊಳ್ಳು
assistance — ನಾ ನೆರವು (ನೆರವಾಗು; ಆತನ ನೆರವಿಗೆ ಯಾರೂ ಬರಲಿಲ್ಲ; ನೆರವು ತಪ್ಪು; ನೆರವು ನೀಡು), ಒತ್ತಾಸೆ (ಒತ್ತಾಸೆ ನೀಡು), ಕಯ್ನುರವು
associate — ನಾ ಪತ್ತಿಗ (ನನ್ನ ಪತ್ತಿಗನನ್ನು ಕರೆದು ತರುತ್ತೇನೆ)
associate — ಕ್ರಿ ಅಡಸು (ಇನ್ನೊಬ್ಬನ ಹೆಂಡತಿಗೆ ಅಡಸಿದರೆ ತೊಂದರೆ ತಪ್ಪದು), ಒಡನಾಡು, ಒಡಗೂಡು
association — ನಾ 1 ಒಡನಾಟ,ಕೂಡಾಟ,ತಳ್ಳಿ (ಅವನ ತಳ್ಳಿಗೆ ಹೋಗಬೇಡ), ಸೇರಿಕೆ 2 ಉರಳಿ, ಕೂಟ
assort — ಕ್ರಿ ಬೇರ್ಪಡಿಸು, ಹಂಚು
assortment — ನಾ ಹಂಚಿಕೆ
assuage — ಕ್ರಿ ತಣಿಸು
assumption — ನಾ ತೆಗಹು (ನೀವು ಬರುತ್ತೀ ರೆಂಬುದೇ ನನ್ನ ತೆಗಹಾಗಿತ್ತು)
assure — ಕ್ರಿ ಮಾತುಕೊಡು (ನಿಮಗೆ ತೊಂದರೆ ಯಾದರೆ ಹಣ ಹಿಂದಿರುಗಿಸುತ್ತೇನೆಂದು ಆತ ಮಾತುಕೊಟ್ಟಿದ್ದ)
asthma — ನಾ ಉಬ್ಬಸ (ಉಬ್ಬಸದಿಂದ ಆತನಿಗೆ ಮಾತನಾಡಲು ತೊಂದರೆಯಾಗು ತ್ತದೆ),ಗೂರು (ಗೂರಲು; ಗೂರುಬ್ಬಸ)
astonishment — ನಾ ಬೆಕ್ಕಸ (ಬೆಕ್ಕಸಪಡು, ಬೆಕ್ಕಸ ಬೆರಗಾಗು), ಬೆಕ್ಕಟ (ಬೆಕ್ಕಟದಿಂದ ನೋಡು),ಬೆರಗು (ಬೆರಗಿನ ನೋಟ), ತೂಣ
astray — ಗು ದಾರಿತಪ್ಪಿದ
astringent — ಗು ಒಗರು (ಉದುರಿದ ಎಲೆಗಳಿಂದ ಒಗರಾದ ನೀರು),ಕಸರು (ಕಾಯಿಕಸರು; ಕಸರುಗಾಯಿ),ಕನರು, ತೊಗರು, ಚೊಗರು
astrologer — ನಾ ನುಡಿಗ (ಆ ನುಡಿಗನ ಮಾತು ಕೇಳಬೇಡ)
astronomy — ನಾ ಬಾನರಿಮೆ
astute — ಗು ಸುಟಿ, ಕಯ್ಮೆಯ
asunder — ಗು ಬೇರಾಗಿ, ತುಂಡು ತುಂಡಾಗಿ ನಾ ತಳಿ (ತಳಿಯ ಕೂಳು), ಮೊಗ್ಗು
at ease — ಗು ತೆಪ್ಪಗೆ (ತೆಪ್ಪಗೆ ನಿಂತಿದ್ದ; ತೆಪ್ಪಗಾಗು; ತೆಪ್ಪಗಿರು)
atmosphere — ನಾ ಗಾಳಿಹೊದಿಕೆ, ಸುತ್ತಾವಿ
at once — ಗು ನೆಕ್ಕನೆ,ಒಮ್ಮೆಲೆ,ತಪಕ್ಕನೆ
atrophy — ನಾ ಮಯ್ಸವೆತ
attach — ಕ್ರಿ 1 ಹಚ್ಚು, ತಗಲು (ಒಂದು ಹುಲ್ಲುಕಡ್ಡಿ ನನ್ನ ಬಟ್ಟೆಗೆ ತಗಲಿಕೊಂಡಿದೆ) 2 ಉಳುಗು (ಅಜ್ಜಿ ಮೊಮ್ಮಗನನ್ನು ತುಂಬಾ ಉಳುಗುತ್ತಾಳೆ)
attachment — ನಾಈಲು (ನಮ್ಮ ಈಲಾ ಗಿರುವ ಕುರಿಮರಿ), ಉಳ್ಗೆ,ಕೂರ್ಮೆ
attack — ನಾ ದಾಳಿ (ದಾಳಿಯಿಡು; ದಾಳಿ ಮಾಡು; ದಾಳಿಗ; ದಾಳಿಕಾರ)
attack — ಕ್ರಿ (ಆ) ಅಡಸು (ಕಡುಬಡತನ ಅವನನ್ನಡಸಿತು) (ಮಾ) ಮೇಲೆ ಬೀಳು, ಎರಗು (ಎರಗಿಬೀಳು), ಏರು, ಕಯ್ಮಾಡು, ತಾಗು (ತಾಗಲಾಡು; ತಾಗಲಿಕ್ಕು), ಮೇಲ್ವಾಯು, ತೂಳು, ಮುಕ್ಕುರಿಕು
attain — ಕ್ರಿ ಹೊಂದು, ಪಡೆ (ಬಿಡುಗಡೆ ಪಡೆದ ಹುಡುಗ)
attempt — ಕ್ರಿ ಪೂನು (ಇನ್ನೊಂದು ಬಾರಿ ಪೂತುಬಿಡೋಣ), ಒಡರ್ಚು
attend — ಕ್ರಿ 1 ನೋಡಿಕೊಳ್ಳು 2 ಹೋಗಿರು, ಬಂದಿರು
attendance — ನಾ ಇರುವಿಕೆ
attendant — ನಾ ಅಚ್ಚುಳಾಯ್ತ
attention — ನಾ ಗಮನ (ನನ್ನ ಗಮನವೆಲ್ಲ ಬೇರೆಲ್ಲೋ ಇತ್ತು)
attentive (be) — ಕ್ರಿ ಆಲಿಸು (ಆಲಿಸಿ ಕೇಳು), ಗಮನಿಸು (ಚನ್ನಾಗಿ ಗಮನಿಸಿ ಓದು)
attentively — ಗು ಕಿವಿಯಾರೆ (ಕಿವಿಯಾರೆ ಕೇಳು)
attenuate — ಕ್ರಿ ಸೊಪ್ಪು (ಸೊಪ್ಪಿದ ಹುಡುಗ), ತೆಳ್ಳಗಾಗು
attest — ಕ್ರಿ ನನ್ನಿಯೆನ್ನು, ಸರಿಯೆನ್ನು
attic — ನಾ ಅಟ್ಟ (ಅಟ್ಟಕ್ಕೆ ಹತ್ತು), ಕುತ್ತಟ್ಟ
attire — ನಾ ಉಡುಪು (ಉಡುಪು ತೊಡು)
attitude — ನಾ ನಿಲುವು (ಈ ಕೆಲಸದ ಮಟ್ಟಿಗೆ ನಿಮ್ಮ ನಿಲುವೇನು?)
attorney — ನಾ ಕಟ್ಟಲೆಯರಿಗ
attract — ಕ್ರಿ (ಆ) ಕಂಗೊಳು, ಕಂಗೊಳಿಸು (ಮಿಂಚಿನ ಗೊಂಚಲು ಕಂಗೊಳಿಸುತ್ತಿತ್ತು) (ಮಾ) ಸೆಳೆ, ಎಳೆ, ಕೆಳೆ (ಆತ ಯಾರನ್ನೂ ತನ್ನೆಡೆಗೆ ಕೆಳೆಯಬಲ್ಲ)
attraction — ನಾ ಸೆಳವು (ಆಕೆಗೆ ತವರು ಮನೆಯ ಸೆಳವು ಹೆಚ್ಚು), ತುಯಿತ, ಇಳ್ಕುಳಿ
attribute — ಕ್ರಿ ನೆಮ್ಮಿಸು (ಅವರು ನಮ್ಮ ಮೇಲೆ ಇಷ್ಟೂಂದು ತಪ್ಪನ್ನು ನೆಮ್ಮಿಸಿದರೆ ಹೇಗೆ?)
attrition — ನಾ ತೇಮಾನ (ಚಿನ್ನದ ಒಡವೆಗೆ ತೇಮಾನ ತೆಗೆದ), ಸವೆತ
audacious — ಗು ಆರ್ಪಿನ (ಆರ್ಪಿನ ಕೆಲಸ), ಅದಟಿನ, ಕಡುವಿನ
audible — ಗು ಕೇಳುವ (ಕೇಳುವ ಉಲಿ), ಕೇಳಿಸುವ (ಕಿವಿಗೆ ಕೇಳಿಸುವ ಹಾಗೆ ಮಾತ ನಾಡಿ)
audience — ನಾ ಕೇಳುಗರು (ಕೇಳುಗರ ನೆರವಿ)
audition — ನಾ ಕೇಳುಹ
auditorium — ನಾ ಅಂಬಲ
augment — ಕ್ರಿ ಹೆಚ್ಚಿಸು
aurora — ನಾ ಸುಸಿಲು, ಮುಂಬೆಳಗು
auspecious — ಗು ಒಳ್ಳೆಯ, ಗೆಲುವು ತರ ಬಲ್ಲ, ಒಳಿತು, ಸುಬ್ಬಲೆ ನಾ 1 ನೋನು, ನೋಂಪಿ (ಆಕೆ ನೋಂಪಿಯಲ್ಲಿದ್ದಾಳೆ) 2 ಕಟ್ಟುನಿಟ್ಟು
authentic — ಗು ನಂಬಬಲ್ಲ, ನನ್ನಿಯ, ಸಯ್ದ
author — ನಾ ಬರಹಗಾರ
authority — ನಾ ಅಳವಿಗ, ತಿಳಿವಿಗ, ಅರಿಗ
authorize — ಕ್ರಿ ಒಪ್ಪಿಗೆ ಕೊಡು
autograph — ನಾ ಕಯ್ಗುರುತು (ಇದರಲ್ಲಿ ನಿಮ್ಮದೊಂದು ಕಯ್ಗುರುತಿರಲಿ)
autonomy — ನಾ ತಮ್ಮಾಳ್ವಿಕೆ
autopsy — ನಾ ಹೆಣದ ಒರೆ
auxiliary — ಗು ಒತ್ತಾಸೆಯ
avail — ಕ್ರಿ ಬಳಸಿಕೊಳ್ಳು
available — ಗು ದೊರೆಯುವ, ಬಳಸಬಲ್ಲ
avarice — ನಾ ನೆಲಕಲ
avenge — ನಾ ಮುಯ್ಯಿ (ಮುಯ್ಯಿ ತೀರಿಸು)
aver — ಕ್ರಿ ನನ್ನಿಯೆನ್ನು
average — ಗು ಸರಾಸರಿ (ಹೊಳೆಯ ಆಳ ಸರಾಸರಿ ಮೂರು ಅಡಿ)
aversion — ನಾ ಹೇವರಿಕೆ,ಹೇಸಿಗೆ
avert — ಕ್ರಿ ತಪ್ಪಿಸು, ಮಲರು
aviary — ನಾ ಹಕ್ಕಿಕಾಪು
avoid — ಕ್ರಿ ತಪ್ಪಿಸು
avow — ಕ್ರಿ ಒಪ್ಪಿಕೊಳ್ಳು
await — ಕ್ರಿ ಕಾದಿರು, ಎದುರುನೋಡು
awake — ಕ್ರಿ ಎಚ್ಚರಗೊಳ್ಳು (ಈಗ ತಾನೇ ಆತ ನಿದ್ದೆಲಿುಂದ ಎಚ್ಚರಗೊಂಡ ಹಾಗಿದೆ; ಎಚ್ಚರಿಸು)
awaken — ಕ್ರಿ ಎಬ್ಬಿಸು (ಎಂಟು ಗಂಟೆ ಯಾದರೂ ಆತನನ್ನು ಎಬ್ಬಿಸಲು ಒಬ್ಬರೂ ಯಾಕೆ ಹೋಗಲಿಲ್ಲ?)
award — ಕ್ರಿ ಕೊಡು (ಕೊಡುಗೆ), ಮೆಚ್ಚು (ಮೆಚ್ಚುಗೆ)
awareness — ನಾಎಚ್ಚರ
awe — ನಾ ಬೆರಗು (ಅವನು ಎಲ್ಲವನ್ನೂ ಬೆರಗಿ ನಿಂದ ನೋಡುತ್ತಿದ್ದ), ಅಕ್ಕಜ
awkward — ಗು ತೊಡಕಿನ, ಅಡ್ಡಾದಿಡ್ಡಿ (ಆತನ ಕೆಲಸವೆಲ್ಲ ಬರೀ ಅಡ್ಡಾದಿಡ್ಡಿ)
awn — ನಾ ಊಬು (ಬತ್ತದ ಊಬು)
awning — ನಾ ಮೇಲ್ಕಾಪು (ಗಾಳಿಗೆ ಮೇಲ್ಕಾಪು ಹಾರಿಹೋಗಿದೆ), ಮೇಲ್ಕಟ್ಟು
axe — ನಾ ಮಚ್ಚು, ಕೊಡಲಿ (ಕೊಡಲಿಯಲ್ಲಿ ಮರ ಕಡಿದ)
axle — ನಾ ಇರಸು (ಬಂಡಿಯ ಇರಸು ಮುರಿ ದಿದೆ)