← Ch 5  ·  Contents  ·  Ch 7 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

F

fable — ನಾ ಕಟ್ಟುಕತೆ, ಸುಳ್ಳು ನಾ 1 ಬಟ್ಟೆ 2 ಕಟ್ಟಡ
fabricate — ಕ್ರಿ 1 ತಪ್ಪು ತೋರಿಸು 2 ಕಟ್ಟು (ಮನೆ ಕಟ್ಟು)
fabulous — ಗು 1 ಇಲ್ಲದ, ನೆನಸಾದ, ಸುಳ್ಳಾದ 2 ನಂಬಲಾಗದ, ಬೆರಗು ಗೊಳಿಸುವ (ಅವನೊಂದು ಬೆರೆಗುಗೊಳಿ ಸುವ ಮನೆ ಕಟ್ಟಿದ್ದಾನೆ)
facade — ನಾ 1 ಮುಂಬದಿ (ಈ ಮನೆಯ ಮುಂಬದಿ ತುಂಬಾ ಅಂದವಾಗಿದೆ) 2 ತೋರಿಕೆಯ ಹೊರನೋಟ
face — ನಾ ಮೋರೆ (ಮೋರೆ ತಪ್ಪಿಸು; ಮೋರೆ ಮುರಿ)
face (derogatory) — ನಾ ಮೂತಿ (ಮೂತಿ ತಿರುವು; ಮೂತಿ ತಿವಿ),ಸೊಂಡೆ (ಸೊಂಡೆ ಒಣಗಿಸಿಕೊಂಡು ಬಂದ), ಮುಸುಡು
face up (lying) — ಗು ಅಂಗಾತ (ಅಂಗಾತ ಮಲಗು)
facet — ನಾ ಬದಿ (ಎಂಟು ಬದಿಗಳಿರುವ ಮರದ ತುಂಡು)
facile — ಗು ಅಕ್ಕಟೆ, ಸುಳುವಾದ
facilitate — ಕ್ರಿ ಸುಳುವಾಗಿಸು, ಅಕ್ಕಟೆಗೊಳಿಸು
facility — ನಾ 1 ಸುಳುವು, ಚುರುಕುತನ, ಚೆಚ್ಚರಿಕೆ 2 ಒದವಿ, ಒತ್ತಾಸೆ 2 ಕೋಣೆ, ಎಡೆ
facsimile — ನಾ ಮಾರ್ಪು (ಚೊಕ್ಕ ಬೆಳ್ಳಿಯಲ್ಲಿ ಮಾಡಿದ ಆತನ ಮಾರ್ಪನ್ನು ಕೋಣೆಯ ನಡುವೆ ಇರಿಸಿದ್ದರು)
fact — ನಾ ಕೆಲಸ, ನೆನಸು, ನನ್ನಿ
faction — ನಾ ಒಳಗುಂಪು (ಅವರೊಳಗೆ ಒಳಗುಂಪುಗಳು ಹೆಚ್ಚಾಗಿವೆ)
factor — ನಾ 1 ಮಾರಾಳು (ನನ್ನ ಕೆಲಸವನ್ನು ಒಬ್ಬ ಮಾರಾಳಿನ ಕಯ್ಯಲ್ಲಿ ಮಾಡಿಸಿದೆ) 2 ಉಂಟುಮಾಡಬಲ್ಲುದು
factual — ಗು ನನಸಾದ, ನನ್ನಿಯಾದ
faculty — ನಾ 1 ಅಳವು, ಕಸುವು 2 ಕಲಿಸುಗತಂಡ
fade (color) — ಕ್ರಿ ಕಂದು (ಬೇನೆಯಿಂದ ಬಳಲಿ ಕಂದಿದ ಮೋರೆ; ಕಂದಿಕೆ), ಮಸುಳು, ಮಾಸು (ಮಾಸಿದ ಹಳೆಯ ಸೀರೆ), ಅಂಬು (ಅಂಬಿದ ಬಟ್ಟೆ), ಕಳಿ (ಕಳಿದ ಹೂವಿನಲ್ಲಿ ಕಂಪಿಲ್ಲ), ಎಗರು
faded — ಗು ಮಾಸಲು (ಮಾಸಲುಗೊಳಿಸು; ಮಾಸಲಾಗಿ ಉಳಿ; ಮಾಸಲು ಕೆಂಪು), ಮಬ್ಬು (ಕಣ್ಣು ಮಬ್ಬಾಲಿುತು; ಮಬ್ಬು ಗತ್ತಲೆ)
fag — ಕ್ರಿ ಬಳಲು
fagot — ನಾ ಸೆಳ್ಳು, ಪುಳ್ಳೆ, ಅಡರು (ಒಲೆಗೆ ಬೆಂಕಿ ಹತ್ತಿಸಲು ಒಂದಿಶ್ಟು ಅಡರಿದ್ದರೆ ಒಳ್ಳೆಯದು)
fail — ಕ್ರಿ 1 ಸೋಲು (ಸೋತುಹೋಗು), ಕೆಟ್ಟುಹೋಗು 2 ಹೊಳೆ (ಮಾತು ಕೊಟ್ಟು ಹೊಳೆದವನು), ತೇರಯಿಸು
failure — ನಾ ಸೋಲು, ಕುಂದು, ಕೊರತೆ, ಉರುಕು (ಉರುಕುಗೊಳ್ಳು), ತೇರಮೆ
faint — ಕ್ರಿ ನೆರಳು, ಮಳ್ಗು (ಬಿಸಿಲ ಬೇಗೆಗೆ ಕೆಲವರು ಮಳ್ಗಿದರು) ತೇಲು (ಮಾತು ತೇಲು; ಕಣ್ಣು ತೇಲು), ತೆಕ್ಕು (ಗಂಡ ಸತ್ತುದನ್ನು ಕೇಳಿ ಅವಳು ತೆಕ್ಕಿಬಿದ್ದಳು), ಅಳವಳಿ
faint — ಗು ಮಸಕು, ಮಬ್ಬು
fainting — ನಾ ಜೊಂಗುಳಿ (ಜೊಂಗುಳಿಬೀಳು) ಮರವು
fair — ನಾ ಸಂತೆ, ಅಂಗಡಿಸಾಲು
fair — ಗು 1 ಅಂದದ, ಚೆಲುವಿನ, ಕಪ್ಪಲ್ಲದ 2 ಕಟ್ಟಳೆ ತಪ್ಪದ, ನೇರ್ಪಾದ
faith — ನಾ ನಂಬಿಕೆ, ನೆಚ್ಚಿಕೆ, ಅಂಕೆ, ನೆಮ್ಮುಗೆ
faithful — ನಾ ನಂಬಿಗಸ್ತ, ನಂಬಿಗ (ನನಗೆ ನಂಬಿಗನಾಗಿರುವುದು ಆತನೊಬ್ಬನೇ)
faithful — ಗು ನೆಚ್ಚಿನ (ನೆಚ್ಚಿನ ಹೆಂಡತಿ)
fake — ಕ್ರಿ ಮೋಸಮಾಡು, ಸೋಗುಹಾಕು
falcon — ನಾ ಗಿಡುಗ
fall — ನಾ 1 ಬೀಳಿಕೆ, ಪಾಟು (ನೆರೆಯ ಪಾಟು), ಪಡಲು (ಪಡಲ್ಪಡು), ಜೋಗು, ಇಳಿಜಾರು 2 ಚಳಿಗಾಲ
fall — ಕ್ರಿ 1 ಬೀಳು (ಬೀಳಿಕ್ಕು; ಬೀಳುಗುಂಡಿ; ಬೀಳಹೊಡೆ), ಸಾಯು 2 ತಪ್ಪು (ತಪ್ಪು ಮಾಡು) 3 ಉಂಟಾಗು down ಕ್ರಿ ಕಸಿ (ಕಸಿದುಬೀಳು), ಕೂಲು (ಕೂಲಿಹೋಗು), ಕೆಡೆ (ಬಿರುಗಾಳಿಗೆ ಮರಗಳೆಲ್ಲ ಕೆಡೆದಿದ್ದುವು; ಕೆಡೆಕಟ್ಟು; ಕೆಡೆನೂಕು)
fall for — ಕ್ರಿ ಮರುಳಾಗು (ಅವನ ಮಾತಿಗೆ ಮರುಳಾಗದವರು ಯಾರು?)
fall off — ಕ್ರಿ ಉದುರು (ಉದುರಿದ ಹೂವು)
fall short — ಕ್ರಿ ಕಡಿಮೆಬೀಳು
fall upon — ಕ್ರಿ ಎರಗು (ಹದ್ದು ಕೋಳಿ ಮರಿಗಳ ಮೇಲೆ ಎರಗಿತು), ತೊಡಹು
fallacy — ನಾ ತಪ್ಪು ಅನಿಸಿಕೆ, ತಪ್ಪರಿವು
fallible — ಗು ಜಾಣ್ಮೆಯಿಲ್ಲದ, ತಪ್ಪಬಲ್ಲ
fallow — ಗು ಉಳದಿರುವ, ಹಡಿಲುಬಿಟ್ಟ, ಬೀಳುಬಿದ್ದ
false — ಗು ಹುಸಿ (ಹುಸಿನಿದ್ದೆ; ಹುಸಿ ನುಡಿ; ಹುಸಿನಗು), ಕುಂಟು (ಕುಂಟುಸುದ್ದಿ)
falsehood — ನಾಸುಳ್ಳು (ಸುಳ್ಳಾಡು; ಸುಳ್ಳು ಹೇಳು; ಸುಳ್ಳ),ನೂಳು (ಅವನು ಬರೆದು ದೆಲ್ಲ ಬರೇ ನೂಳು),ಕಟ್ಟುಕ,ಕಳು (ಕಳು ಹೇಳು), ಕಳ್ಳ (ಕಳ್ಳಮಾತು; ಕಳ್ಳಹೊನ್ನು), ಕೊದಳು
falsify — ಕ್ರಿ 1 ಸುಳ್ಳಾಡು, ಮೋಸಮಾಡು 2 ಸುಳ್ಳೆಂದು ತೋರಿಸಿಕೊಡು
falter — ಕ್ರಿ ತಡವರಿಸು (ಮಾತನಾಡುವಾಗ ತಡವರಿಸುತ್ತಿದ್ದ), ತೂರಾಡು (ತೂರಾ ಡುತ್ತಾ ಮುಂದೆ ಹೋದ)
fame — ನಾ ಪಡೆವಾತು, ಹೆಸರು (ಹೆಸರಾಗು; ಹೆಸರುಪಡೆ; ಹೆಸರುವಾಸಿ - ಹೆಸರುವಾಸಿ ಯಾಗು; ಹೆಸರಾಂತ), ದೊರೆ (ದೊರೆವೆತ್ತ ಅರಸು)
familiar (be) — ಕ್ರಿ ಪಳಗು (ಕೆಲಸದಲ್ಲಿ ಪಳಗಿದವರಶ್ಟೇ ಬಂದರೆ ಸಾಕು)
familiar — ಗು ಗೊತ್ತಿರುವ, ಸಲಿಗೆಯ, ಹೊಕ್ಕು ಬಳಕೆಯ
familiarity — ನಾ ಸಲಿಗೆ (ಅವಳ ಮಗುವಿಗೆ ನಮ್ಮಲ್ಲಿ ತುಂಬಾ ಸಲಿಗೆ ಇದೆ), ಮಂದಿ ವಾಳ
family — ನಾ ತಳಿ (ಒಳ್ಳೇ ತಳಿಯ ಆಕಳು),ಮನೆತನ (ಅವನ ಮನೆತನ ದೊಡ್ಡದು), ಬಳಿ (ಬಳಿಯರ), ಮೂರಿ
famine — ನಾಅರಬು (ಈ ಸಲದ ಅರಬಿನಲ್ಲಿ ಹಲವು ಮಂದಿ ಸತ್ತರು), ಅರವು,ಪಸವು (ಅನ್ನವಿಲ್ಲದೆ ಗಡ್ಡೆ ಸಪ್ಪು ತಿನ್ನಬೇಕಾ ಗಿದ್ದಂತಹ ಪಸವು), ಬರ (ಬರಗಾಲ; ಬರ ಬಂದು ಊರುಬಿಟ್ಟವರು), ಕಗ್ಗಾರು
famished — ಗು ತುಂಬಾ ಹಸಿದಿರುವ
famous (be) — ಕ್ರಿ ನೆಗಳು (ನೆಗಳಿದ ದೇಗುಲ; ನೆಗಳ್ತೆ - ನೆಗಳ್ತೆ ಪಡೆ;ನೆಗಳಿಕೆ), ಅಮರು, ಗುಡಿಗೊಳ್ಳು, ಪೊದಳು (ಪೊದಳ್ಕೆ)
fan — ನಾ1ಬೀಸಣಿಗೆ (ಆತನಿಗೆ ಗಾಳಿ ಬೀಸಲು ಬೀಸಣಿಗೆ ಕೊಡಿ) 2 ಹಿಂಬಾಲಕ
fan — ಕ್ರಿ ಬೀಸು (ಗಾಳಿಬೀಸು; ಗಾಳಿಹಾಕು)
fanatic — ನಾ ಕುರುಡು ಹಿಂಬಾಲಕ
fancied — ಗು ನೆನಸಿದ
fancy — ನಾ ಒಲವು, ಬಯಕೆ, ನೆನಸಿಕೆ, ಅನಿಸಿಕೆ, ಹುಚ್ಚಾಟಿಕೆ
fang — ನಾ ಕೋರೆ (ಕೋರೆಹಲ್ಲು; ನಂಜಿನ ಹಲ್ಲು)
fantastic — ಗು ನೆನಸಿದ, ನನ್ನಿಯಲ್ಲದ, ಸರಿ ಯಲ್ಲದ, ತಿರುಚಿದ, ನಂಬಲಾಗದ
far — ಗುಕಳಿ (ಕಳಿವರಿ; ಕಳಿಹೋಗು)
farce — ನಾ ನಗೆಯಾಟ, ಸೋಗು
fare — ನಾ ತಿನಿಸು
fare — ಕ್ರಿ 1 ಹೋಗು, ಉಂಟಾಗು 2 ತಿನ್ನು, ಉಣ್ಣು
farewell — ನಾ ಬೀಳ್ಕೊಡುಗೆ (ನಿನ್ನೆ ಅವರ ಬೀಳ್ಕೊಡುಗೆಗೆ ಹಲವರು ಗೆಳೆಯರು ಸೇರಿ ದ್ದರು)
farm — ನಾಪಣ್ಯ,ಪಣ್ಣೆಯ (ಆತನ ಪಣ್ಣೆಯ ದಲ್ಲಿ ಬೆಳೆದ ಮಾವಿನ ಹಣ್ಣು ಸವಿ), ತೋಟ, ಗದ್ದೆ
farmer — ನಾಒಕ್ಕಲಿಗ,ಆರಂಬಗಾರ,ಕಾಣಿ ಯಾಲ
farmhouse — ನಾ ತೋಟದ ಮನೆ ನಾಸೇದ್ಯ, ಆರಂಬ
farsighted — ಗು ಮುಂಗಾಣಬಲ್ಲ, ಗೆಂಟು ನೋಡಬಲ್ಲ
farther — ಗು ಇನ್ನೂ ಮುಂದೆ
fascinate — ಕ್ರಿ ಸೆಳೆ, ಮೋಡಿಹಾಕು, ಮರುಳು ಮಾಡು
fascination — ನಾ ಸೆಳೆತ, ಮೋಡಿ
fashion — ನಾ ಬಗೆ (ಈ ಬಗೆಯ ಸೀರೆಯನ್ನು ಈಗ ಯಾರೂ ಉಡುವುದಿಲ್ಲ), ಮಾಟ, ಕಟ್ಟಳೆ
fast — ಗು 1 ಉರುಬಿನ, ಬಿರುಸಾದ 2 ಮಾಸದ, ಅಳಿಸದ 2 ಬಿಗಿದ
fasten — ಕ್ರಿ ಬಿಗಿ (ಬಿಗಿದು ಕಟ್ಟು), ಅಂಟಿಸು, ಸೇರಿಸು
fastidious — ಗು ಮೆಚ್ಚಿಸಲಾಗದ, ಬೇಸರಿಸುವ
fat — ನಾಬೊಜ್ಜು (ಬೊಜ್ಜು ಬೆಳೆದು ಆತನಿಗೆ ಸರಿಯಾಗಿ ನಡೆಯುವುದಕ್ಕೆ ಆಗುವುದಿಲ್ಲ), ನೆಣ,ಕೊಬ್ಬು (ಕೊಬ್ಬೇರು)
fatal — ಗು ಕೊಲ್ಲಬಲ್ಲ, ತೀರ್ಮಾನಿಸಬಲ್ಲ, ಅಳಿಸಬಲ್ಲ
fatherhood — ನಾ ತಂದೆತನ
fatherly — ಗು ತಂದೆಯಂತಹ, ಮುಚ್ಚಟೆಯ, ಅಕ್ಕರೆಯ
fathom — ನಾಮಾರು (ನೂರು ಮಾರು; ಕಯ್ಮಾರು
fathom — ಕ್ರಿ ಆಳನೋಡು, ಅರಿ
fatigue — ನಾ ಸೇದೆ (ಸೇದೆಗೆಡು; ಸೇದೆನೀರು), ಅಸುರು (ಅಸುರುಸುರು), ಅಲವು, ಅಲಪು, ಗಾಸಿ (ಗಾಸಿಮಾಡು; ಗಾಸಿಯಾಗು; ಗಾಸಿ ಗೊಳಿಸು), ಗೊಲ್ಲಸ, ದಣಿವು (ದಣಿ ವಾರಿಸು; ದಣಿವು ಹತ್ತು), ತಾವಡಿ (ತಾವಡಿಗೊಳ್ಳು), ಬಂಬಳ
fatigue — ಕ್ರಿ ದಣಿ (ಎತ್ತು ದಣಿದಿದೆ, ಗಾಡಿ ನಿಲ್ಲಿಸಿ), ಬಳಲು (ನಡೆದು ನಡೆದು ಬಳಲಿದೆವು; ಬಳಲಿಕೆ), ಅಲಸು (ಅಲಸಿಕೆ)
fatten — ಕ್ರಿ ಕೊಬ್ಬು (ತಿಂದು ತಿಂದು ಕೊಬ್ಬಿ ದ್ದಾನೆ; ಕೊಬ್ಬಿದ ಹಂದಿ), ಕಂಡವಿಡು
fatuous — ಗು ಪೆದ್ದ, ಹೆಡ್ಡ
fault — ನಾ ತಪ್ಪು (ಆತ ಎಲ್ಲದರಲ್ಲೂ ತಪ್ಪು ಹುಡುಕುತ್ತಾನೆ), ಪೊಚ್ಚ (ಪೊಚ್ಚವಾಗು; ಪೊಚ್ಚವಲ್ಲ), ಹೊರೆ (ಹೊರೆಹುಟ್ಟು), ಕುಂದು (ನನಗೆ ಎಲ್ಲಿಯೂ ಕುಂದು ಕಾಣಿಸ ಲಿಲ್ಲ; ಕುಂದುಕೊರತೆ), ಕುತ್ತ
favour , — ನಾಒಲವು (ಮೇಲಿನವರ ಒಲ ವಿಲ್ಲದೆ ಯಾವ ಕೆಲಸವೂ ಸಾಗದು) ಒಲುಮೆ, ಬೆಂಬಲ (ಬೆಂಬಲ ಪಡೆ)
favourable — ಗು ಒಪ್ಪುವ, ಮೆಚ್ಚುವ, ಒದಗುವ (ಅವರೊಂದು ಮೆಚ್ಚುವ ಹೇಳಿಕೆ ಕೊಟ್ಟಿದ್ದಾರೆ)
favourite — ಗು ಅಚ್ಚುಮೆಚ್ಚಿನ (ಅಚ್ಚು ಮೆಚ್ಚಿನ ತಿಂಡಿ), ಒಲವಿನ
favouritism — ನಾ ಬದಿಯೊಲವು
fawn — ನಾ 1 ಜಿಂಕೆಮರಿ 2 ನಸು ಹಳದಿ-ಕಂದು
fawn — ಕ್ರಿ 1 ಕಾಲುನೆಕ್ಕು 2 ಬಗ್ಗಿತಗ್ಗಿರು, ಹೊಗಳು
fealty — ನಾ ನಂಬಿಕೆ, ಮುದಿಪು
fear — ನಾಅಂಜಿಕೆ, ಹೆದರಿಕೆ (ಅವನಿಗೆ ಯಾರ ಹೆದರಿಕೆಯೂ ಇಲ್ಲ), ಉರುಕು (ಉರುಕು ಗೊಳಿಸು; ಉರುಕುಗೊಳ್ಳು), ಗಿಲಿ (ಅವನಿಗೆ ಗಿಲಿ ಹಿಡಿಲಿುತು), ಪುಕ್ಕು, ಅಳುಕು, ಪೆಳಗು
fear — ಕ್ರಿ ಬೆಚ್ಚು (ಬೆಚ್ಚಿದವರು; ಬೆಚ್ಚಿಬೀಳು), ಬೆದರು (ದನಕ್ಕೆ ಬೆದರಿ ಹುಲಿಯ ಬಾಯಿಗೆ ಬಿದ್ದ), ಬಿಗುರು (ಬಿಗುರಿಸು; ಬಿಗುರೇಳು), ಸುಗಿ (ಸುಗಿದು ಓಡು; ಸುಗಿಗೊಳ್ಳು), ಪೆಳರು (ಪೆಳರುಗೊಳ್ಳು; ಪೆಳರಿಸು), ಹೆದರು, ಪೆಳಗು (ಹುಲಿ ಬಂತೆಂದು ಪೆಳಗಿ ಓಡಿದ), ಒಣರು, ಅಳುಕು (ಅಳುಕದೆ ಕುಳಿತಿದ್ದ), ಅಂಜು (ಯಾರಿಗೂ ಅಂಜದೆ ಇರು), ಕೋಡು, ಅಳರು (ಆತ ತುಂಬಾ ಅಳರಿದ್ದಾನೆ), ಅಗಿ (ಎಲ್ಲರೂ ಅವನಿಗೆ ಅಗಿಯುತ್ತಿದ್ದರು)
fearing — ಗು ಪುಕ್ಕಲು (ಪುಕ್ಕಲು ಹುಡುಗ; ಪುಕ್ಕಲತನ), ಪುಕ್ಕು
fearlessness — ನಾ ಅಂಜಮೆ (ಎಲ್ಲರಿಗೂ ಅಂಜಮೆಯಿಂದಿರಲು ಹೇಳಿದ; ಅಂಜಮೆ ಕೊಡು)
feasible (be) — ಕ್ರಿ ತೀರು (ಮಾಡಲು ತೀರುವುದಾದರೆ ಮಾಡಿ; ತೀರದ ಕೆಲಸ)
feast — ನಾ ಸುಗ್ಗಿ, ಒಸಗೆ, ಹಬ್ಬದೂಟ ನಾ ತೊಡಕಿನ ಕೆಲಸ, ಕಟ್ಟೆಸಕ, ಚೆಚ್ಚರಿಕೆಯ ಕೆಲಸ
feather — ನಾಗರಿ (ಗರಿಗೆದರು, ಗರಿ ಮೂಡು),ತುಪ್ಪುಳ (ಗಿಳಿಯ ತುಪ್ಪುಳ),ತಿಪ್ಪುಳು
feature — ನಾ 1 ಮೋರೆತೋರ್ಕೆ, ಮೋರೆ ಕಟ್ಟು, ಗೆಂಟುಪರಿಚೆ 2 ಕಿರುಬರಹ
fecund — ಗು ಆರುವ, ತೀವುವ
federation — ನಾ ಒಕ್ಕೂಟ
fee — ನಾ ಕೂಲಿ (ಕೂಲಿಕೆಲಸ), ಕಟ್ಟುಗೆ
feeble — ಗು ಬಲ್ಮೆಗುಂದಿದ, ಅಳವುಗುಂದಿದ
feed — ನಾ ಮೇವು (ಆಡಿಗೆ ಹಾಕಿದ ಮೇವು), ತಿನಿಸು, ತಿಂಡಿ
feed — ಕ್ರಿ ಊಡು (ಮೊಲೆಯೂಡು), ಮೇವು ಹಾಕು
feedback — ನಾಹಿನ್ನುಣಿಕೆ
feel — ಕ್ರಿ 1 ಎನಿಸು (ನನಗೆ ಮದುವೆಗೆ ಹೋಗ ಬೇಕೆಂದು ಎನಿಸುತ್ತಿದೆ) 2 ಮುಟ್ಟಿನೋಡು
feeler — ನಾ ಸುಳಿವು (ಸುಳಿವು ಕೊಡು)
feeling — ನಾ ಮೂಡಿಕೆ,ಎನಿಸಿಕೆ, ತೋಚಿಕೆ
feign — ಕ್ರಿ ಸೋಗುಹಾಕು, ಕತೆಕಟ್ಟು
feint — ನಾ ಸೋಗು, ಮೋಸ
felicitate — ಕ್ರಿ ನಲ್ಮೆಹೇಳು
felicitous — ಗು ತಕ್ಕ, ಮೆಚ್ಚುಗೆಯ
feline — ಗು ಬೆಕ್ಕಿನಂತಹ, ಸದ್ದಿಲ್ಲದೆ ಬರುವ
fell — ನಾ ತೊಗಲು, ಚಕ್ಕಳ
fell — ಕ್ರಿ ಕೆಡವು (ತಡೆಗೆಡವು; ತೂತುಗೆಡವು; ಬೀಳುಗೆಡವು; ಕೆಡವಗೊಡು), ಕೆಡಹು (ಮರ ಕೆಡಹು), ಕಡಿದುಹಾಕು
fell — ಗು ಕೆರಳಿದ, ಹೆದರಿಕೆ ಹುಟ್ಟಿಸುವ, ಮರುಕ ವಿಲ್ಲದ, ಕೆಟ್ಟ
fellow — ನಾ ಕೂಡಾಡಿ, ಒಡನಾಡಿ
felon — ನಾ ಕೊಲೆಗಾರ, ಕೇಡಿಗ, ಸೆರಗ
felt — ನಾ ಉಣ್ಣೆಬಟ್ಟೆ
female — ನಾಹೆಣ್ಣು (ಹೆಣ್ಣಾನೆ, ಹೆಣ್ಣು ಕೊಟ್ಟ ಅತ್ತೆ; ಹೆಣ್ತನ), ಹೆಂಗಸು,ಹೆಟ್ಟುಗೆ (ಹೆಟ್ಟುಗೆಯರೆಲ್ಲ ಅಲ್ಲಿ ಸೇರಿದ್ದರು), ಪೆಂಟೆ (ಕಡವದ ಪೆಂಟೆ), ಹೆಂಟೆ (ಹೆಂಟೆಹುಳ)
feminine — ಗು ಹೆಂಗಸಿನ, ಹೆಣ್ಣಿನ, ಹೆಂ- (ಹೆಂಗೂಸು, ಹೆಂಗೊಲೆ)
feminine (gender) — ನಾ ಹೆಣ್ಣುಗುರ್ತ
fen — ನಾ ಜವುಗು ನೆಲ
fence — ನಾ ನೆರಕೆ (ಬಿದಿರಿನ ನೆರಕೆ ಕಟ್ಟು; ನೆರಕೆಮನೆ), ಬೇಲಿ (ಮನೆ ಸುತ್ತ ಬೇಲಿ ಇದೆ), ತೋಹು
fence — ಕ್ರಿ 1 ಬೇಲಿಹಾಕು 2 ಕಳವು ಕೊಳ್ಳು, ಕಳವು ಮಾರು (ಆತ ಕಳವು ಮಾರಲು ಹೋಗಿ ಸಿಕ್ಕಿಬಿದ್ದ)
fencing school — ನಾಗರಡಿ (ಒಂದೇ ಗರಡಿಯಲ್ಲಿ ಕಲಿತವರು)
fend — ಕ್ರಿ ಹಿಮ್ಮೆಟ್ಟಿಸು, ತಡೆಹಿಡಿ
fender — ನಾ ತಡೆ, ಕಾಪು
fenugreek — ನಾಮೆಂತೆ (ಮೆಂತೆ ದೋಸೆ)
feral — ಗು ಪಳಗದ, ಕಾಡು (ಕಾಡುಬೆಕ್ಕು, ಕಾಡುಕೋಳಿ)
ferment — ಕ್ರಿ 1 ಹುದುಗೆಬ್ಬಿಸು, ಹುಳಿಬರು 2 ಕೆರಳಿಸು
ferocious — ಗು ಹೆದರಿಕೆ ಹುಟ್ಟಿಸುವ, ಬೆಚ್ಚಿಸುವ ಕ್ರಿ ಹುಡುಕಾಡು
ferrous — ಗು ಕಬ್ಬಿಣದ, ಕಬ್ಬಿಣವಿರುವ
ferry — ನಾ1 ಕಡ(ಕಡವು - ಹೊಳೆ ದಾಟುವ ಕಡವು ಇಲ್ಲಿಂದ ತುಸು ಮುಂದೆ ಇದೆ), ಹಾಯ್ಕಡ 2 ಓಡ, ಅಂಬಿ
fertile — ಗು ಎರುಬುಳ್ಳ, ಈಟುಳ್ಳ (ತುಂಬಾ ಈಟುಳ್ಳ ಗದ್ದೆ), ಮೊಗೆ (ಮೊಗೆ ಹೊಲ)
fertilize — ಕ್ರಿ 1 ಗೊಬ್ಬರ ಹಾಕು 2 ಬಸಿರಾಗು
fertilizer — ನಾ ಗೊಬ್ಬರ, ಈಟು
fervent — ಗು 1 ಬಿಸಿ, ಸುಡುವ 2 ಚುರುಕಾದ, ಕಡಗುವ, ನೇರ್ಪಿನ
fervour — ನಾ 1 ಬೇಗೆ, ಬಿಸಿ 2 ಉಕ್ಕುವ ಹುರುಪು
fester — ಕ್ರಿ 1 ಹುಣ್ಣಾಗು 2 ಕೊರಗು
festival — ನಾಒಸಗೆ (ಒಸಗೆ ಬೀರು; ಒಸಗೆ ಪರೆ), ಹಬ್ಬ
festoon — ನಾ ಇಂಡೆ (ಹೂವಿನ ಇಂಡೆ)
fetch — ಕ್ರಿ 1 ಕರೆತರು (ಕರೆತರಲು ಹೋಗು), ಬರಮಾಡು 2 ಬೆಲೆ ಸಿಗು (ನಿಮ್ಮ ನೀರುಳ್ಳಿಗೆ ಎಷ್ಟು ಬೆಲೆ ಸಿಕ್ಕಿದೆ?)
fete — ನಾ ಹಬ್ಬ, ಸಂತೆ, ಬಯಲಾಟ, ಕೂಟ
fetid smell — ನಾಸಿಂಡು (ಹುಲಿಗಳ ಸಿಂಡು), ಗವುಳು,ಗವಲು (ಎಣ್ಣೆಯ ಗವಲು; ಬೆವರಿನ ಗವಲು)
fetter — ನಾಕುದೆ (ಆತನ ಕಾಲುಗಳಿಗೆ ಕುದೆ ಹಾಕಿದ್ದಾರೆ),ತಳೆ (ತಳೆಯಿಕ್ಕು)
feud — ನಾ ಹಳೇ ಹಗೆತನ
fever — ನಾ ಬಿಸುಪು (ಮಗು ಬಿಸುಪಿನಿಂದ ಮಲಗಿದೆ; ಬಿಸುಪೇರು)
few — ಗು ಕೊಂಚ (ಕೊಂಚ ಮಂದಿ ಬಂದಿ ದ್ದರು; ಕೊಂಚ ನಮಗೂ ಕೊಡಿ), ಕೆಲ (ಕೆಲ ಮಂದಿ)
fiance — ನಾ ಮದುವೆಯಾಗಲಿರುವವನು, ಮದುಮಗ
fiasco — ನಾ ನಗೆಪಾಟಲು (ನಗೆಪಾಟಲಾದ ಸೋಲು), ದೊಡ್ಡ ಸೋಲು
fiat — ನಾ ಸೆಲವು, ಬೆಸ, ಒಪ್ಪಿಗೆ
fib — ನಾ ಸುಳ್ಳು (ತೊಂದರೆ ಕೊಡದ ಸುಳ್ಳು)
fiber board — ನಾ ನಾರುಹಲಿಗೆ
fibre — ನಾ 1 ಕತ್ತ (ತೆಂಗಿನ ಕತ್ತದಿಂದ ತಿಕ್ಕು),ನಾರು (ನಾರುಮಡಿ, ನಾರುಸೀರೆ),ಕೆಲ್ಲ (ಕೆಲ್ಲದ ತುಂಡು) 2 ಹೆಣಿಗೆ, ಮಯ್ವಳಿಕೆ
fibril — ನಾ ನಾರೆಳೆ
fibrous — ಗು ನಾರಿನ, ನಾರು ತುಂಬಿದ, ನಾರುನಾರಾದ
fickle — ಗು ಮಾರ್ಪಡುವ, ನೆಲೆನಿಲ್ಲದ
fiction — ನಾ ಕಟ್ಟುಕತೆ (ಆತ ಹೇಳಿದ್ದೆಲ್ಲ ಬರೀ ಕಟ್ಟುಕತೆ), ಸುಳ್ಳು ಹೇಳಿಕೆ
fictitious — ಗು ಕಟ್ಟು, ನೆನಸು, ಸುಳ್ಳು
fiddle-stick — ನಾ ಕುಡುಪು
fidelity — ನಾ 1 ಪಡಿಯಚ್ಚು, ನನ್ನಿ 2 ಕೆಲಸದ ಒಲವು
fidget — ಕ್ರಿ ಚಡಪಡಿಸು, ಪರದಾಡು, ತಳ ಮಳಿಸು
field — ನಾ1 ಬಯಲು 2 ಕೆೈ (ಎರಡು ಬಾರಿ ಉತ್ತ ಕೆೈ; ಎಳ್ಳು ಬೆಳೆವ ಕೆೈ),ಹೊಲ (ಹೊಲಮನೆ),ಗದ್ದೆ (ಗದ್ದೆಗೆ ನೀರು ಬಿಟ್ಟು ಬಂದಿದ್ದೇನೆ) 3 ಹರಹು (ಕಲಿಕೆಯ ಹರಹು)
fieldwork — ನಾ ನೆರಪುಗೆ
fiend — ನಾ ಕೇಡಿಗ
fierce — ಗು ಕೆರಳಿದ, ಬೆಚ್ಚಿಸುವ, ಹೆದರಿಕೆ ಹುಟ್ಟಿಸುವ
fiercely — ಗು ಬೆಟ್ಟನೆ (ಬೆಟ್ಟನೆ ನುಡಿ; ಬೆಟ್ಟನೆ ಹೋಗು) ಗು 1 ಉರಿಯುವ, ತುಂಬಾ ಬಿಸಿಯಾದ 2 ಕೆರಳುವ, ಸಿಟ್ಟಾಗುವ
fig — ನಾಗೋಳಿ (ಗೋಳಿಮರ)
fight — ನಾ ಅಡರಾಟ,ಕಾಳಗ (ಕಾಳಗ ಕೊಡು), ತೋಟಿ (ತೋಟಿ ತಪ್ಪಿ ಮುಂದೆ ನುಗ್ಗಿದ), ಹೊಡೆದಾಟ, ಮೊನೆ (ಮೊನೆಗೊಡು)
fight — ಕ್ರಿ ಮಲೆ (ಮಲೆಯಲು ಬಂದವರನ್ನು ಹೊಡೆದು ಓಡಿಸಬೇಕಾಗಿದೆ), ಕಾದು (ಕಾದಾಡು; ಕಾದಾಟ; ಕಾದುಹ), ಹೋರು (ಅವನಿಗೆ ಒಳ್ಳೆ ಹೋರುವ ಹೆಂಡತಿ ಸಿಕ್ಕಿ ದ್ದಾಳೆ; ಹೋರಾಟ)
fighter — ನಾ ಕಾದಾಳಿ
figment — ನಾ ಕಟ್ಟುಕತೆ, ನೆನಸು
figurative — ಗು ಮರೆಹುರುಳಿನ (ಮರೆ ಹುರುಳಿನ ಮಾತು)
figure — ನಾ 1 ಎಣಿಕೆ 2 ಪರಿಚು 3 ತಿಟ್ಟ
filament — ನಾ ಕುಸುರು (ಹೂಗಳ ಕುಸುರು), ಎಳೆ (ನೂಲಿನ ಎಳೆ, ಕಂಬಿಯ ಎಳೆ)
filch — ಕ್ರಿ ಕದಿ, ಎಗರಿಸು (ಯಾರೋ ಒಂದು ಸವ್ತೆಕಾಯಿ ಎಗರಿಸಿದ್ದಾರೆ)
file — ನಾ1 ಅರ (ಅರದಲ್ಲಿ ಉಜ್ಜುವುದು) 2 ಮಡತೆ (ಓಲೆಗಳನ್ನೆಲ್ಲ ಮಡತೆಯಲ್ಲಿರಿಸಿ ದ್ದಾಳೆ) 3 ಸಾಲು
file — ಕ್ರಿ 1 ಓರಣಗೊಳಿಸು, ಸಾಲಾಗಿ ನಡೆ 2 ಉಜ್ಜು (ಅರದಲ್ಲಿ ಉಜ್ಜಿ ನುಣುಪುಮಾಡು)
fill — ಕ್ರಿ (ಆ) ನೆರೆ (ನೆರೆದಿರುವ ಕೊಳ; ನೆರ ವಣಿಗೆ; ನೆರತೆ; ನೆರೆದ ಕೂಸು; ನೆರೆದಿಂಗಳು; ನೆರವೇರಿಕೆ; ನೆರೆಯಲರಿಯದ ಹೂ), ಎರೆ, ತುಂಬು (ತುಂಬಿದ ಕೊಡ; ತುಂಬಿ ತುಳುಕು (ಮಾ) ತೀವು (ನೀರನ್ನು ತೀವಿಕೊಂಡು ಬಂದಳು), ತುಂಬು (ತುಂಬಿಕೊಡು; ತುಂಬಿಡು), ಅಡೆ (ತಂಬಿಗೆಯಲ್ಲಿ ಹಾಲನ್ನು ಅಡೆದು ತಂದಿದ್ದಾನೆ)
filling — ನಾ ತುಂಬಿಗೆ (ಅವನ ಹಲ್ಲಿಗೆ ಚಿನ್ನದ ತುಂಬಿಗೆ ಹಾಕಿಸಿದ್ದಾನೆ), ಹೂರಣ (ಅಲ್ಲಿನ ಹೋಳಿಗೆಗೆ ಕಡಲೆಯ ಹೂರಣ), ಎರ್ತ
fillip — ಕ್ರಿ ಮಿಡಿ (ಬೆರಳನ್ನು ಮಿಡಿ; ಕಂಬಿಯನ್ನು ಮಿಡಿ), ಮೀಟು
film — ನಾ ಪರೆ (ಕಣ್ಣಿನ ಮೇಲಿನ ಪರೆ; ಪರೆಕಟ್ಟು), ಹರೆ, ತೋಲೆ
filter — ನಾ ಸೋಸುತಟ್ಟೆ
filter — ಕ್ರಿ ಬಸಿ, ಸೋಸು, ಒಡಿ (ಬಟ್ಟೆಯಲ್ಲಿ ಒಡಿ)
filth — ನಾ ಪಿಸುರು (ಮಯ್ಯ ಪಿಸುರು), ಹೊಲಸು (ಹೊಲಸಾಗು; ಹೊಲಸು ಮಾಡು)
fin — ನಾಈಜುರೆಕ್ಕೆ
final — ಗು ಕೊನೆಯ, ಕಡೆಯ (ಕಡೆಯ ಊಟ), ಮುಗಿಸುವ
finalize — ಕ್ರಿ ಕೊನೆಗೊಳಿಸು
finance — ನಾ ಹಣಕಾಸು
find — ಕ್ರಿ ಸಿಕ್ಕು (ದಾರಿಯಲ್ಲಿ ಸಿಕ್ಕಿದ ಹಣ), ದೊರೆ, ಪಡೆ
find out — ಕ್ರಿ ಗೊತ್ತುಹಚ್ಚು, ಕಂಡುಹಿಡಿ
fine — ನಾ ತಪ್ಪು (ತಪ್ಪುಕೊಡು; ತಪ್ಪು ಕಾಣಿಕೆ)
fine — ಗು ಸಿಡಿ (ಸಿಡಿಸೋನೆ), ಜಿನುಗು (ಅವರು ಜಿನುಗಾದ ನೂಲಿನ ಬಟ್ಟೆಗಳನ್ನು ಉಡು ತ್ತಾರೆ; ಜಿನುಗು ದಾರ), ತೆಳು (ತೆಳುಗನ್ನಡ; ತೆಳುಬಟ್ಟೆ), ನೆರಿ, ನಯ, ನವುರು
finery — ನಾ ಒಳ್ಳೆ ಉಡುಗೆತೊಡುಗೆ
finger — ನಾ ಬೆರಳು (ಬೆರಳು ತೋರಿಸು), ಬೊಟ್ಟು (ಬೊಟ್ಟುಕಚ್ಚು; ಬೊಟ್ಟೆತ್ತು),ಕುಣಿಕೆ (ಕಿರುಕುಣಿಕೆ)
fingerprint — ನಾ ಬೆರಳಚ್ಚು,ಬೆರಳೊತ್ತು (ಕೊಲೆಗಡುಕನ ಬೆರಳಚ್ಚು ಎಲ್ಲೂ ಸಿಗ ಲಿಲ್ಲ)
finger-tip — ನಾ ಕುಡಿಬೆರಳು; ತುದಿಬೆರಳು
finicky — ಗು ಅಚ್ಚುಕಟ್ಟಿನ, ಚಡಪಡಿಸುವ
finish — ಕ್ರಿ (ಆ) ಮುಗಿ (ಊಟ ಮುಗಿದ ಬಳಿಕ), ಮುಡಿ, ಉಡುಗು (ಮದವುಡುಗಿದ ಆನೆ), ತೀರು (ಹಣವೆಲ್ಲ ತೀರಿದ ಬಳಿಕ ಮನೆಗೆ ಬಂದ) (ಮಾ) ಕಂಡಿಸು, ತವಿಸು, ನೆರಪು (ನೆರೆಯಿಸು; ನೆರವೇರಿಸು), ಬೀಟು
finite — ಗು ಹದ್ದುಳ್ಳ, ಎಲ್ಲೆಯುಳ್ಳ, ಮೇರೆ ಯುಳ್ಳ, ನಾ ಕಡಲತೋಳು, ಕಡಲಚಾಚು
fire — ನಾ ಬೆಂಕಿ (ಬೆಂಕಿಯ ಉರಿ; ಬೆಂಕಿಹಚ್ಚು; ಬೆಂಕಿಹಾಕು),ಕಿಚ್ಚು (ಕಿಚ್ಚಿಡು; ಕಿಚ್ಚಿಕ್ಕು)
fire pan — ನಾ ಬೆಸಳಿಗೆ
firepit — ನಾಕುಲುಮೆ (ಕುಲುಮೆಯಲ್ಲಿ ಕೆಂಪಾದ ಕಬ್ಬಿಣ), ಉರಿಗೊಂಡ
fire-brand — ನಾ ಕೊಳ್ಳಿ (ಉರಿಯುವ ಕೊಳ್ಳಿ; ಕೊಳ್ಳಿಕಾಳಗ)
fireplace — ನಾಒಲೆ (ಒಲೆಯ ಮೇಲೆ ನೀರು ಕಾಲಿುಸುತ್ತಿದ್ದಾನೆ; ಒಲೆಕಟ್ಟೆ; ಕೋಡೊಲೆ; ಒಲೆಹೂಡು)
fireproof — ಗು ಕಿಚ್ಚುಹತ್ತದ, ಬಿಸಿತಡೆವ
firewood — ನಾ ಅಡುಗಬ್ಬು,ಅಡಿಗಟ್ಟೆ, ಉರುವಲು (ಉರುವಲು ಹಾಕದಿದ್ದರೆ ಬೆಂಕಿ ಆರಿಹೋಗುತ್ತದೆ)
firework — ನಾ ಸುಡುಮದ್ದು
fire-worm — ನಾ ಮಿಂಚುಹುಳ
firm — ಕ್ರಿ ಬಲಿ (ಬಲಿತ ಕಾಯಿ), ಗಟ್ಟಿಯಾಗು
firm — ಗು ಬೆಟ್ಟು (ಬೆಟ್ಟುಗೂಟ), ಗಟ್ಟಿ (ಗಟ್ಟಿ ಮುಟ್ಟು; ಗಟ್ಟಿಯಾಗಿ ಕಟ್ಟಿದ ಕಟ್ಟಿಗೆ ಹೊರೆ), ಕಡಲು (ಕಡಲು ಬಂಡೆ), ಕದಲದ, ಅಲುಗದ, ಹಿಂದೆಗೆಯದ, ಬದಲಾಗದ
firmly — ಗು ನಡೆ (ನಡೆ ನೋಡಿ ಕಲಿತವರು),ಬಿಮ್ಮಗೆ (ಬಿಮ್ಮಗೆ ಬಿಗಿಯಬೇಡ)
firmness — ನಾಊತ (ಊತದಿಂದ ಮಾತ ನಾಡಿಸಿ ಆತನನ್ನು ಒಪ್ಪಿಸಿದರು),ಒರ್ಪು (ನೆಯ್ಗುಯ ಒರ್ಪು)
first aid — ನಾ ಮೊದಲೊದವಿ
first birth — ಗು ಚೊಚ್ಚಲು (ಚೊಚ್ಚಲ ಮಗು, ಚೊಚ್ಚಲ ಬಸುರು)
first — ಗು ಮೊದಲು (ಮೊತ್ತಮೊದಲು; ಮೊಮ್ಮೊದಲು)
firsthand — ಗು ನೇರ (ನೇರಸುದ್ದಿ)
firth — ನಾ ಕಡಲತೋಳು
fiscal — ಗು ಹಣಕಾಸಿನ (ಆತ ಹಣಕಾಸಿನ ತೊಂದರೆಯಲ್ಲಿದ್ದಾನೆ)
fish — ನಾ ಮೀನು (ಮೀನಿನ ಬುಟ್ಟಿ, ಮೀನಿನ ಬಲೆ; ಮೀನೆಣ್ಣೆ)
fisherman — ನಾ ಬೆಸದ (ಬೆಸದರ ನೆರವಿ), ಬೆಸ್ತ,ಮೀನುಗಾರ, ತೊರೆಯ
fish-hook — ನಾಗಾಳ (ಗಾಳದಲ್ಲಿ ಸಿಕ್ಕಿಬಿದ್ದ ಮೀನು; ಗಾಳ ಹಾಕು),ಕೊಂಕಿ
fishing rod — ನಾ ಗಾಳಗಟ್ಟಿಗೆ
fishmonger — ನಾ ಮೀನುಹರದ, ಮೀನು ಮಾರಾಳಿ
fishy — ಗು 1 ನಚ್ಚಿನ 2 ಮೀನು ನಾತದ
fissiparous — ಗು ಸಿಡಿದು ಹರಡುವ
fissure — ನಾ ಬಿರುಕು (ಬಿರುಕು ಬಿಡು- ಗೋಡೆ ಬಿರುಕುಬಿಟ್ಟಿದೆ)
fist — ನಾ ಹಿಡಿ (ಒಂದು ಹಿಡಿ ಮಣ್ಣು)
fit — ನಾ 1 ಅಡಹು (ನನಗೆ ನೀನು ಅಡಹಲ್ಲ) 2 ಕವಳಿ, ಕವತೆ
fit — ಕ್ರಿ ಒಪ್ಪು (ಅವನಿಗೆ ಒಪ್ಪುವ ಹೆಂಡತಿ), ತಗು (ಹೇಳತಕ್ಕ ಮಾತು; ತಕ್ಕ ಹೊತ್ತು; ತಕ್ಕ ಹೋರಿ; ತಕ್ಕ ನಡತೆ), ಸರಿಹೊಂದು, ನೇರ್ಪಡು
fit closely — ಕ್ರಿ ಅಮರು (ಅವೆರಡೂ ಸರಿಯಾಗಿ ಅಮರಿಕೊಂಡಿವೆ)
fitness — ನಾ ಪಾಟು (ಏರ್ಪಾಟು; ತಿದ್ದುಪಾಟು), ಪಾಟಿ (ಪಾಟಿಯಿಲ್ಲದವರು), ಅನುವು, ಅಣಿ (ಅರಸು ಕಾಳಗಕ್ಕೆ ಅಣಿಯಾಗುತ್ತಿದ್ದ), ಆಯತ,ಹೊಂದಿಕೆ (ಹೊಂದಿಕೆಯಾಗು),ತಕ್ಕಮೆ, ಅಮರಿಕೆ (ಉಂಗುರದ ಅಮರಿಕೆ),ಅಳವಿ, ಸರಿಸ
fitting — ಗು ಅಡಕ (ಕಯ್ಗು ಅಡಕವಾಗಿರುವ ಬಳಪ), ಅಟ್ಟು,ಗಡೆ
five — ನಾ ಅಯ್ದು, ಅೈ- (ಅಯ್ಮೊಗ, ಅಯ್ಗುೀಣು, ಅಯ್ವರು)
fix — ಕ್ರಿ ಅಂಟಿಸು, ಹೊಂದಿಸು, ನಾಟು, ಸಿಕ್ಕಿಸು (on ground) ಕ್ರಿ ಊರು (ಕಯ್ಯೂರಿ ಮೆಲ್ಲನೆ ಎದ್ದ; ಗಿಡದ ಮೊಳಕೆಯನ್ನು ಅಗೆದು ಬೇರೊಂದು ಕಡೆ ಊರುತ್ತಾರೆ), ಪೂಣು
fixed — ಗು ಗಿರಕು (ಬಾಗಿಲು ಗಿರಕಾಗಿದೆ; ಗಿರಕು ದಟ್ಟಣಿ)
fixture — ನಾ ಕೂಡಿಕೆ
fizz — ಕ್ರಿ ನೊರೆಯೇಳು (ಇದನ್ನು ನೀರಿಗೆ ಹಾಕಿದೊಡನೆ ನೊರೆಯೇಳುತ್ತದೆ)
flabby — ಗು ಜೋಲುಬಿದ್ದ, ಅಳ್ಳಕವಾದ, ಸುಕ್ಕುಗಟ್ಟಿದ
flaccid — ಗು ಮೆತ್ತಗಿನ, ಬಾಗಿದ, ಅಳವಿಲ್ಲದ
flag — ನಾ 1 ಕುಡಿ, ಕೊಡಿ (ಕೊಡಿಮರ; ಕೊಡಿಯೇರಿಸು), ಗುಡಿ (ಬೀದಿಯುದ್ದಕ್ಕೂ ಗುಡಿಗಳನ್ನು ಕಟ್ಟಿದ್ದಾರೆ; ಮೇಲ್ಗುಡಿ) 2 ಹಾಸುಗಲ್ಲು, ಕಲ್ಲು ಚಪ್ಪಡಿ
flag — ಕ್ರಿ ಅಳವುಗುಂದು, ಬಳಲು
flagellate — ಕ್ರಿ ಬಾರಿಸು, ಚಾಟಿಯೇಟು ಕೊಡು
flagitous — ಗು ಕೆಟ್ಟ, ಕೂಳ
flagrant — ಗು ಕಣ್ಣುಕುಕ್ಕುವ, ಎದ್ದು ಕಾಣುವ, ಕೆಟ್ಟತನದ
flagstone — ನಾ ಹಾಸುಗಲ್ಲು
flail — ಕ್ರಿ ಹೊಡೆ
flair — ನಾ ಒಲವು (ಹುಡುಗನಿಗೆ ಒಲವು ಯಾವುದರಲ್ಲಿದೆ?)
flake — ನಾ ಹಲ್ಲೆ, ಅವಲು (ಅವಲಕ್ಕಿ)
flamboyant — ಗು ಎದ್ದುಕಾಣುವ, ಬಣ್ಣ ಬಣ್ಣದ, ಬೆಡಗಿನ
flame — ನಾ1 ಉರಿ (ಉರಿಹತ್ತು - ಕೊಟ್ಟಿಗೆಗೆ ಉರಿಹತ್ತಿತು),ಹೊತ್ತಿಗೆ 2 ಕಟ್ಟೆಣ್ಣಿಕೆ
flammable — ಗು ಚೆಚ್ಚರ ಉರಿಯಬಲ್ಲ
flank — ನಾ 1 ಅಳ್ಳೆ (ಹೊಟ್ಟೆಯ ಬಲದ ಅಳ್ಳೆ ನೋಯುತ್ತಿತ್ತು) 2 ಮಗ್ಗುಲು (ಮಗ್ಗುಲಲ್ಲಿ ಅವನ ಹೆಂಡತಿ ಕುಳಿತಿದ್ದಳು)
flannel — ನಾ ನವುರು ಬಟ್ಟೆ, ಮೆತ್ತನೆ ಬಟ್ಟೆ
flap — ನಾ 1 ಮುಚ್ಚಳ, ಕದ 2 ಬಡಿತ (ರೆಕ್ಕೆಗಳ ಬಡಿತ)
flap — ಕ್ರಿ ಅಪ್ಪಳಿಸು, ಬಡಿ (ರೆಕ್ಕೆ ಬಡಿ)
flare — ಕ್ರಿ ಬಗ್ಗನೆ ಉರಿ ಏಳು
flare up — ಕ್ರಿ ಪಕ್ಕನೆ ಕೆರಳು
flash — ನಾಹೊಳಪು (ಹೊಳಪಿಸು), ಹೊಳಹು
flash — ಕ್ರಿ ಹೊಳೆ, ಮಿಂಚು (ಮಿಂಚುವ ಕಣ್ಣು ಗಳು)
flashback — ನಾ ಹಿನ್ನೋಟ, ಮರುಕಳಿಕೆ
flashingly — ಗು ಬಗ್ಗನೆ (ಬೆಂಕಿ ಬಗ್ಗನೆ ಹೊತ್ತಿಕೊಂಡಿತು)
flashlight — ನಾ ಮಿಂಚುಬೆಳಕು (ಮನೆಯ ಬೀಗ ತೆಗೆಯಲು ಮಿಂಚುಬೆಳಕು ಕೊಡಿ)
flat — ನಾ ಕೂಡುಮನೆ (ಈ ಕಟ್ಟಡದಲ್ಲಿ ಹನ್ನೆರಡು ಕೂಡುಮನೆಗಳಿವೆ)
flat — ಗು 1 ಅಪ್ಪಟೆ (ಅಪ್ಪಟೆಚಪ್ಪಟೆ), ಚಪ್ಪಟೆ (ಚಪ್ಪಟೆ ಕಲ್ಲು; ಚಪ್ಪಟೆ ಮೂಗು), ಚಟ್ಟೆ, ತಟ್ಟ (ತಟ್ಟತಳ), ತಟ್ಟೆ (ತಟ್ಟೆಕಲ್ಲು), ಮಟ್ಟಸ (ಮಟ್ಟಸ ಮಾಡು) 2 ಚಪ್ಪೆ (ಚಪ್ಪೆ ಸಾರು), ಸಪ್ಪೆ
flat rice — ನಾಅವಲಕ್ಕಿ (ಅವಲಕ್ಕಿ ಕುಟ್ಟು; ಕರಿದ ಅವಲಕ್ಕಿ ಸವಿನೋಡಿ ಹೇಳಿ)
flat stone — ನಾ ಚಪ್ಪಡಿ (ಚಪ್ಪಡಿ ಎಳೆ; ಚಪ್ಪಡಿ ಹಾಸು), ಪಾಸರೆ (ಎಲ್ಲರೂ ಗುಡ್ಡದ ಮೇಲಿರುವ ಪಾಸರೆಯ ಮೇಲೆ ಕುಳಿತು ತಿಂಡಿ ತಿಂದರು)
flat vessel — ನಾಅಗುಳಿ (ಅಗುಳಿಯಲ್ಲಿ ಬೇಯಿಸಿದ ರೊಟ್ಟಿ)
flatten — ಕ್ರಿ ತಟ್ಟು (ತಟ್ಟಿ ಚಪ್ಪಟೆಮಾಡು) ಕ್ರಿ ಹೊಗಳು (ಯಾರನ್ನೂ ಅಶ್ಟೊಂದು ಹೊಗಳಬಾರದು; ಹೊಗಳಿಕೆ)
flatulent — ಗು 1 ಗಾಳಿಹೊಟ್ಟೆಯ, ಹೊಟ್ಟೆ ಯುಬ್ಬರಿಸಿದ 2 ಬೆಡಗಿನ
flaunt — ಕ್ರಿ ಮೆರೆದಾಡು, ಕೊಬ್ಬಿ ಬೀಗು
flavour — ನಾ ಸವಿ (ಸವಿಹ - ಸವಿಹ ತಿನ್ನು ವವನ ನಾಲಿಗೆಯಲ್ಲಿದೆ)
flaw — ನಾಪಿಳವು (ಆ ಬಂಡೆಯಲ್ಲೇನೋ ಪಿಳವಿದೆಯಂತೆ), ಬಿರುಕು (ಬಿರುಕು ಬಿಡು), ಕುಂದು (ಕುಂದು ಕಾಣಿಸು)
flaxen — ಗು ತೆಳು ಹಳದಿ, ತೆಳು ಮಂಜಳು
flay — ಕ್ರಿ 1 ಸಿಪ್ಪೆ ಸುಲಿ, ತೊಗಲು ಸುಲಿ 2 ತೆಗಳು
flea — ನಾ ಚಿಕ್ಕಾಡು (ಚಿಕ್ಕಾಡು ತಗಣೆ)
flea market — ನಾ ಬಯಲು ಮಾರುಕಟ್ಟೆ, ಹಾದಿ ಮಾರುಕಟ್ಟೆ
fleck — ನಾ ಮಚ್ಚೆ, ಕಲೆ (ಕಲೆ ಹತ್ತಿದ ಮೋರೆ), ಚುಕ್ಕೆ
fledge — ಕ್ರಿ ಗರಿಮೂಡು (ಈ ಹಕ್ಕಿಯ ಮರಿಗಿನ್ನೂ ಗರಿಮೂಡಿಲ್ಲ)
flee — ಕ್ರಿ ಕಾಲ್ದಗೆ (ಆತ ಹೆದರಿ ಕಾಳಗದಿಂದ ಕಾಲ್ದಗೆದ), ಓಡಿಹೋಗು, ಕಂಬಿಕೀಳು (ನಿಮ್ಮನ್ನು ಕಂಡೊಡನೆ ಆತ ಕಂಬಿಕಿತ್ತ)
fleece — ನಾ ಉಣ್ಣೆ, ಬಂಡೆ, ತುಪ್ಪಟ
fleece — ಕ್ರಿ 1 ಉಣ್ಣೆ ತೆಗೆ 2 ಸುಲಿ
fleet — ನಾ ಹಡಗುಪಡೆ
fleet — ಗು ಉರುಬಿನ, ಬಿರುಸಾದ
flesh — ನಾ 1 ಪಿರಿ (ಪಿರಿತಿನಿ),ಬಾಡು (ಬಾಡೂಟ; ಬಾಡುಣಿ), ಕಪ್ಪು,ಕಂಡ (ತಾಳಿಸಿದ ಕಂಡ) 2 ತಿರುಳು (ಹಣ್ಣಿನ ತಿರುಳು)
fleshy — ಗು ಕೊಬ್ಬಿದ, ದಪ್ಪ, ಹೆಚ್ಚು ತಿರುಳಿರುವ
flex — ಕ್ರಿ ಬಗ್ಗು, ಬಳುಕು (ಬಳುಕುವ ಕೋಲು), ಕುಗ್ಗು
flexible — ಗು ಬಗ್ಗುವ, ಹೊಂದಿಕೊಳ್ಳುವ
flexible rod — ನಾ ಚಳ್ಳು (ಚಳ್ಳುಗೆಲ್ಲು; ಚಳ್ಳುಗುರು; ಚಳ್ಳಡರು)
flick — ಕ್ರಿ ಒದರು, ಕೊಡವು, ಕೊಡಹು (ಕೈ ಕೊಡಹು), ಮಗುಚು, ಎಗರಿಸು (ಉಗುರಿ ನಿಂದ ಎಗರಿಸು)
flicker — ಕ್ರಿ ಮಿನುಗು, ಅಲುಗು
flight — ನಾ 1 ಹಾರಾಟ, ಓಟ 2 ಮೆಟ್ಟಲು ಸಾಲು
flimsy — ಗು ತೆಳ್ಳಗಿನ, ಸುಳು ಅಳಿವ, ಗಟ್ಟಿ ಯಿಲ್ಲದ
flinch — ಕ್ರಿ ಹಿಂದೆಗೆ, ಹಿಂದೆಸರಿ, ಬೆಚ್ಚಿಬೀಳು (ನೀವು ಕಯ್ಯೆತ್ತಿದ್ದನ್ನು ನೋಡಿ ಆತ ಬೆಚ್ಚಿ ಬಿದ್ದ)
fling — ಕ್ರಿ ಬೀರು (ಬೀರುಗಲ್ಲು; ಕಲ್ಲುಬೀರು), ಚಿಮ್ಮು, ಎಸೆ (ಎಸೆದ ಕಲ್ಲು), ಬೀಸಿ ಹಾಕು
flint — ನಾ ಚಕಮಕಿ ಕಲ್ಲು, ಕಿಡಿಗಲ್ಲು
flinty — ಗು ಗಟ್ಟಿ, ಗಡಸು, ಪೆಡಸು
flip — ಕ್ರಿ ಮಿಡಿ, ಮೀಟು, ಚಿಮ್ಮು, ಮಗುಚು (ಓದದಿದ್ದರೂ ಹಾಳೆ ಮಗುಚುತ್ತಾ ಕುಳಿ ತಿದ್ದ)
flippant — ಗು ಚೆಲ್ಲುಚೆಲ್ಲಾದ, ಬರಬರ ಮಾತಿನ
flipper — ನಾತೊಳೆಗಾಲು
flirt — ನಾ ಸೋಗುಕಾದಲ (ಆತನೊಬ್ಬ ಸೋಗು ಕಾದಲ)
flit — ಕ್ರಿ ಸರಕ್ಕನೆ ಸರಿ
float — ನಾ ತೆಪ್ಪ (ತೆಪೊ್ಪಸಗೆ)
float — ಕ್ರಿ ತೇಲು (ನೀರ ಮೇಲೆ ತೇಲುವ ಹಲಿಗೆ, ತೇಲಿಬಿಡು; ತೇಲಿಹೋಗು - ತಿಳಿಮಣ್ಣು ತೇಲಿಹೋಗಿದೆ; ತೇಲಾಡು; ತೇಲುಗಣ್ಣು; ತೇಲುಮನೆ), ತೇಕು, ತೆಂಕು (ತೆಂಕಾಡು; ತೆಂಕುವ ಹಲಿಗೆ), ಅಲೆದಾಡು
flock — ನಾಮಂದೆ (ಕುರಿಮಂದೆ),ಕದುಪು (ಹುಲ್ಲೆಗಳ ಕದುಪು),ಕೊತ್ತಳಿ (ಕಾಗೆಗಳ ಕೊತ್ತಳಿ) ನಾ ತೇಲುವ ಮಂಜುಗಡ್ಡೆ
flog — ಕ್ರಿ ಸೆಳೆ (ಬೆತ್ತದಲ್ಲಿ ಸೆಳೆದರು), ಬಾರಿಸು (ಚಾಟಿಯಲ್ಲಿ ಬಾರಿಸು)
flood — ನಾ ಬೆಳ್ಳ (ತೋಡಿನಲ್ಲಿ ದೊಡ್ಡ ಬೆಳ್ಳ ಬಂದಿದೆ),ನೆರೆ (ನೆರೆನೀರು ಮನೆಯ ಅಂಗಳದ ವರೆಗೆ ಬಂದಿತ್ತು)
floodgate — ನಾ ನೆರೆತೂಬು
floodlight — ನಾ ತಡಸಲು ದೀಪ, ಹೊನಲು ಬೆಳಕು
flood-tide — ನಾ ಹೆಕ್ಕಳ (ಕಡಲಿನ ಹೆಕ್ಕಳ)
floor — ನಾ1 ನೆಲ (ನೆಲಗಟ್ಟಿಸು; ಆತ ಬರೀ ನೆಲದ ಮೇಲೆ ಮಲಗಿದ), ಅಟ್ಟ 2 ಕೆಳ ಎಲ್ಲೆ
floor — ಕ್ರಿ ನೆಲಕ್ಕುರುಳಿಸು, ಬೀಳಿಸು
flop — ಕ್ರಿ 1 ದೊಪ್ಪನೆ ಎತ್ತಿಹಾಕು, ಪಟಪಟ ಬಡಿ 2 ಸೋತುಹೋಗು
floral — ಗು ಹೂವಿನ, ಹೂವಿನಂತಹ
florid — ಗು 1 ತೋರಿಕೆಯ, ಬೆಡಗಿನ 2 ಕೆಂಪಡರಿದ
florist — ನಾ ಹೂವಾಡಿಗ, ಹೂಗಾರ
floss — ನಾ ನವಿರು ನೂಲು
flotilla — ನಾ ಕಿರು ಹಡಗುಪಡೆ
flounce — ಕ್ರಿ ಸಿಟ್ಟಿನಲ್ಲಿ ಓಡಾಡು
flounder — ಕ್ರಿ ಒದ್ದಾಡು (ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ), ತಬ್ಬಿಬ್ಬಾಗು (ಮಾತಿನಲ್ಲಿ ಆತನಿಗೆ ತಬ್ಬಿಬ್ಬಾಲಿುತು), ತಡಬಡಿಸು
flour — ನಾ ಹಿಟ್ಟು (ಅಕ್ಕಿಹಿಟ್ಟು)
flourish — ಕ್ರಿ 1 ಕುದುರು, ಏಳಿಗೆಹೊಂದು 2 ಕಲಿ್ಬುೀಸು
flout — ಕ್ರಿ ಕಡೆಗಣಿಸು, ಆಳಿಮಾಡು
flow — ನಾ ಹರಹು (ನೀರಿನ ಹರಹು ಬತ್ತಿ ಹೋಗಿದೆ), ಒಳ್ಕು, ಸುರಿತ (ನೆತ್ತರ ಸುರಿತ), ಸುರಿವು
flow — ಕ್ರಿ ಹರಿ (ಹರಿದು ಹೋಗುವ ನೀರು; ಹರಿವ ಹಳ್ಳ), ಸುರಿ (ಕಣ್ಣೀರು ಸುರಿ, ಬೆವರು ಸುರಿ)
flower — ನಾ ಮಲರು, ಹೂವು (ಹೂವು ಕಟ್ಟು; ಹೂವೆತ್ತು), ಹೂ (ಹೂದೋಟ, ಹೂ ಬಿಡು; ಹೂಮುಡಿ; ಹೂಗಿಡ), ಅಲರು (ಅರಳಿದ ತಾವರೆಯ ಅಲರು)
flower — ಕ್ರಿ ಅರಳು (ಅರಳಿದ ಹೂ), ಹೂ ಬಿಡು
flower bud — ನಾ ಅರುಂಬು (ಗಿಡದಲ್ಲಿ ಹಲವು ಅರುಂಬುಗಳು ಬಿಟ್ಟಿವೆ),ಮೊಗ್ಗು (ಹೂವಿನ ಮೊಗ್ಗು)
flowerbed — ನಾಮಡಿ (ಮಡಿಗಳಲ್ಲಿ ಅರಳಿದ ಹೂಗಳು)
flower-bunch — ನಾ ಕುಂಡಿಗೆ (ಬಾಳೆ ಗೊನೆಯ ಕುಂಡಿಗೆ)
fluctuation — ನಾಏರಿಳಿತ, ಏರುಪೇರು, ಹೆಚ್ಚುಕಡಿಮೆ
flue — ನಾ ಹೊಗೆನಳಿಗೆ
fluent — ಗು ಸರಾಗ (ಸರಾಗವಾದ ಮಾತು; ನೀರು ಸರಾಗವಾಗಿ ಹರಿಯುತ್ತಿದೆ)
fluff — ನಾ ನವಿರು ಗರಿ, ಗುಂಜ
fluid — ಗು ಹರಿಯುವ, ನೆಲೆಗೊಳ್ಳದ
flurry — ನಾ 1 ಸಡಗರ (ಸಡಗರಿಸು) 2 ಹೊಡೆತ (ಮಳೆಯ ಹೊಡೆತ)
flush — ಕ್ರಿ 1 ಕೆಂಪೇರು (ನಾಚುಗೆಲಿುಂದ ಆಕೆಯ ಮೋರೆ ಕೆಂಪೇರಿತು) 2 ಒಮ್ಮೆಗೆ ನೀರು ಬಿಡು 3 ಓಡಿಸು (ಅವಿತಿರುವಲ್ಲಿಂದ ಹೊರಗೋಡಿಸು)
flute — ನಾ ಕೊಳಲು (ಕೊಳಲನ್ನು ಊದುತ್ತಾ ಬಂದವನು ಯಾರು?), ಪಿಳ್ಳಂಗೋವಿ
flutter — ಕ್ರಿ ರೆಕ್ಕೆ ಬಡಿ, ಕೊಡವು, ಬೀಸು, ಅದುರು, ಮಿಳ್ಳಿಸು
fluvial — ಗು ಹೊಳೆಯಲ್ಲಿರುವ, ಹೊಳೆಯಿಂ ದಾದ ನಾ ಹರಿವು, ಎಡೆಬಿಡದ ಮಾರ್ಪಾಡು
fly — ನಾಹಾತೆ, ನೊಣ (ಜೇನು ನೊಣ; ಬೆಲ್ಲ ಇದ್ದ ಕಡೆ ನೊಣ; ನೊಳವು)
fly — ಕ್ರಿ ಎಗರು, ಹಾರು, (ಹಾರಿಹೋಗು, ಹಾರಿಸು), ಹಾರಾಡು
fly over — ನಾ ಮೇಲುದಾರಿ
flying saucer — ನಾಹಾರಾಡುವ ತಟ್ಟೆ
flyleaf — ನಾ ಹಾರುಹಾಳೆ
foal — ನಾ ಕುದುರೆಮರಿ, ಕತ್ತೆಮರಿ
foam — ನಾನೊರೆ (ನೊರೆಗಟ್ಟು; ನೊರೆ ಹಾಲು), ಬುರುಗು (ಬುರುಗುಗಟ್ಟು), ಜತ್ತುಳ
focus — ನಾ ಸೇರ್ಮೆ (ಆತ ಎಲ್ಲರ ಗಮನವನ್ನೂ ಸೆಳೆವ ಸೇರ್ಮೆಯಾಗಿದ್ದ)
fodder — ನಾ ಮೇವು (ದನಗಳ ಮೇವು), ಕರಡ (ಎತ್ತುಗಳಿಗೆ ಕರಡ ಹಾಕಬೇಕು)
foe — ನಾ ಹಗೆ (ಹಗೆಗಾರ; ಹಗೆತನ), ಎದು ರಾಳಿ
foetus — ನಾ ಕಂದು (ಆಕಳ ಕಂದು; ಸತ್ತ ಕಂದು ಹಾಕಿದ ಆಕಳು; ಕಂದಿಕ್ಕಿದ ಆಕಳು)
fog — ನಾಮಂಜು (ಮಂಜು ಮುಸುಕಿದೆ; ಮಂಜಿನ ಮಳೆ)
foggy — ಗು 1 ಮಂಜುಕವಿದ 2 ಮಂಕಾದ, ಗೊಂದಲಗೊಂಡ
fogy — ಗು ಹಳೇ ಕಟ್ಟಲೆಯ, ಮಾರ್ಪಾಡಿ ಗೊಪ್ಪದ
foible — ನಾ ಕಿರುಕುಂದು
foil — ನಾ ತೆಳುಹಾಳೆ (ಚಿನ್ನದ ತೆಳುಹಾಳೆ)
foil — ಕ್ರಿ ಕಕ್ಕಾಬಿಕ್ಕಿಯಾಗಿಸು, ತಪ್ಪಿಸು, ಕೆಡಿಸು
foist — ಕ್ರಿ ಒಳಹೊಗಿಸು, ದಾಟಿಸು (ಒಳ್ಳೆ ಹಣ್ಣುಗಳೊಂದಿಗೆ ಎರಡು ಕೊಳೆತ ಹಣ್ಣು ಗಳನ್ನೂ ನನಗೆ ದಾಟಿಸಿದ್ದಾನೆ)
fold — ನಾ ಮಡಿ (ಮಡಿಗಿವಿ; ಮಡಿಚೀಲ; ಮಡಿಪು - ಮಡಿಪುಕತ್ತಿ; ಸೀರೆಯ ಮಡಿಪು; ಮಡಿಲು, ಮಡಿಕೆ - ಇಮ್ಮಡಿಕೆ; ಪೊಡ ವಡಿಕೆ; ಮುಮ್ಮಡಿಕೆ; ಮಡತೆ - ಹೊಟ್ಟೆಯ ಮೇಲೆ ಕಾಣಿಸುವ ಮಡತೆಗಳು), ನೆರಿ (ಸೀರೆಯ ನೆರಿ), ನಿರಿ (ನಿರಿಗಟ್ಟು; ನಿರಿಗೆ - ಸೀರೆಯ ನಿರಿಗೆ)
fold — ಕ್ರಿ ಮಡಿಸು (ಬಟ್ಟೆ ಮಡಿಸು),ಮಡಚು (ಮಡಚಿದ ಕಿವಿ)
folder — ನಾ ಮಡಿತೆ (ನಿಮ್ಮ ಓಲೆಗಳನ್ನೆಲ್ಲ ಮಡಿತೆಯೊಳಗಿರಿಸಿದ್ದೇನೆ)
foliage — ನಾ ಸೊಪ್ಪು (ಸೊಪ್ಪುಸದೆ; ಸೊಪ್ಪು ಕತ್ತಿ), ಸಪ್ಪು, ತೊಪ್ಪಲು (ಆಕಳು ತಿನ್ನುವ ತೊಪ್ಪಲು), ಗುಬರು (ಗಿಡ ಗುಬರಾಗಿದೆ; ಗುಬರುಗಟ್ಟು)
folk — ನಾ ಮಂದಿ, ನಾಡು, ನಾಡಾಡಿ, ನಾಡಾ ಡಿಗ
folkdance — ನಾ ನಾಡಾಡಿ ಕುಣಿತ
folklore — ನಾ ನಾಡಾಡಿ ಹಾಡು, ನಾಡಾಡಿ ಕತೆ
folksong — ನಾ ನಾಡಾಡಿ ಹಾಡು
folktale — ನಾ ನಾಡಾಡಿ ಕತೆ
follow — ಕ್ರಿ ಬೆಂಬತ್ತು (ಆತನನ್ನು ಬಿಡದೆ ಬೆಂಬತ್ತಿದರು), ಬೆಂಬಿಡಿ, ಬಳಿಗೊಳ್ಳು, ಹಿಂಬಾಲಿಸು (ಹಿಂಬಾಲಕ; ಹಿಂಬಾಲತನ), ಒಮ್ಮು (ಎಲ್ಲದರಲ್ಲೂ ಆತ ನನ್ನನ್ನು ಒಮ್ಮುತ್ತಾನೆ), ಬೆನ್ನುಹತ್ತು, ಬೆನ್ನೊಗ್ಗು
follower — ನಾ ಅಟ್ಟಿಗ, ಹಿಂಬಾಲಕ
following — ಗು ಮಾರಣೆ (ಮಾರಣೆ ತೇದಿ)
folly — ನಾ ತಿಳಿಗೇಡಿತನ, ಹೆಡ್ಡತನ, ಹೆಡ್ಡು ಕೆಲಸ
foment — ಕ್ರಿ 1 ಕಾವು ಕೊಡು, ಒತ್ತು 2 ಕೆರಳಿಸು, ಹುರಿದುಂಬಿಸು
fond — ಗು 1 ಮುದ್ದಿನ, ಅಕ್ಕರೆಯ 2 ತುಂಬಾ ಹಚ್ಚಿಕೊಂಡ ನಾ ಮುಂಡು (ಮುಂಡಾಡು), ಮುದ್ದು (ಮುದ್ದಿಸು; ಮುದ್ದಾಡು - ಮನೆಗೆ ಹಿಂದಿರುಗಿದ ಹುಡುಗನನ್ನು ಮುದ್ದಾಡಿದಳು; ಮುದ್ದಿಕ್ಕು)
food — ನಾ ಕೂಳು (ಹಂಗಿನ ಕೂಳು; ಕೂಳು ನೀರು), ತಿಂಡಿ (ತಿಂಡಿಬಾಕ; ತಿಂಡಿತಿನಸು), ತಿನಿಸು, ತೀನಿ (ಮಕ್ಕಳಿಗೆ ತೀನಿ ಕಲಿಸ ಬೇಡಿ), ಬೀಯ (ನೀನಿಕ್ಕಿದ ಬೀಯ)
fool — ನಾ ಪೆಂಗ,ಹೇಗ,ಹೆಡ್ಡ (ಹೆಡ್ಡತನ; ಹೆಡ್ಡತಿ; ಹೆಡ್ಡಿ), ಬೇಳ (ಬೇಳಾಗು; ಬೇಳುವೆ; ಬೇಳುನುಡಿ), ಮೋಟಗಾರ
foot — ನಾ 1 ಕಾಲು (ಕಾಲುಹಿಡಿದು ಬೇಡಿ ಕೊಳ್ಳುತ್ತಿದ್ದಾನೆ; ಕಾಲಿಗೆ ಬೀಳು), ಅಡಿ (ಅಡಿಗಳಿಗೆ ಎರಗು; ಮುನ್ನಡಿ) 2 ಅಡಿ (ಮೂರಡಿ ಬಟ್ಟೆ)
foot (forepart) — ನಾ ಮುನ್ನಡಿ
foot hold — ನಾ 1 ಮೆಟ್ಟಲು, ಅಡಿಯೆಡೆ 2 ಇಕ್ಕೆ
football — ನಾ ಕಾಲ್ಚೆಂಡು
footboard — ನಾ ಕಾಲೂರೆ
footbridge — ನಾ ಕಾಲುಸೇತುವೆ
footfall — ನಾ ಹೆಜ್ಜೆಯುಲಿ
foothill — ನಾ ತಪ್ಪಲಗುಡ್ಡ
footing — ನಾ ಅಡಿಯೆಡೆ
footlight — ನಾ ಅಡಿಬೆಳಕು, ಕೆಳಬೆಳಕು
footloose — ನಾ ಉಂಡಾಡಿ
footnote — ನಾ ಅಡಿಬರಹ (ಆತನ ಕಿರುಬರಹ ದಲ್ಲಿ ಬರಹಕ್ಕಿಂತ ಅಡಿಬರಹವೇ ಹೆಚ್ಚು)
footpath — ನಾ ಕಿರಿದಾರಿ, ನಡೆಹಾದಿ, ಕಾಲು ದಾರಿ (ಕಾಲುದಾರಿಯಲ್ಲಿ ಹೋದರೆ ಹೆಚ್ಚು ದೂರ ಇಲ್ಲ)
footprint — ನಾ ಅಡಿವಜ್ಜೆ, ಅಡಿವಣಿಗೆ
foot-soldier — ನಾಕಾಲಾಳು
footwear — ನಾ ಮೆಟ್ಟು, ಕಾಲ್ಮರೆ, ಕೆರೆ
forage — ನಾ ಮೇವು
forage — ಕ್ರಿ 1 ಹುಡುಕಾಡು (ತಿನ್ನಲು ಏನಾ ದರೂ ಸಿಗುವುದೋ ಎಂದು ಹುಡುಕಾಡು ತ್ತಿದ್ದ), ಕೊಳ್ಳೆಹೊಡೆ
foray — ಕ್ರಿ ಕೊಳ್ಳೆಹೊಡೆ
forbear — ಕ್ರಿ ತಡೆದುಕೊಳ್ಳು (ಎದುರಾಳಿ ಎಷ್ಟು ಹೀಯಾಳಿಸಿದರೂ ಆತ ತಾಳ್ಮೆಲಿುಂದ ತಡೆದುಕೊಂಡು ಕೂತಿದ್ದ)
forbearance — ನಾ ತರಹರ (ತರಹರಿಸು; ತರಹರಿಕೆ), ತಾಳ್ಮೆ
forbid — ಕ್ರಿ ತಡೆ, ಮಾಡಗೊಡದಿರು
force — ನಾ 1 ಸೆಳೆತ (ಮುಂದೆ ಹೋದಂತೆ ನೀರಿನ ಸೆಳೆತ ಹೆಚ್ಚಾಗುತ್ತಿತ್ತು), ಸೆಳವು (ಅವನು ಹೊಳೆಯ ಸೆಳವಿಗೆ ಸಿಕ್ಕಿ ಹರಿದು ಹೋದ), ಬಿಣಿತೆ (ಆತನ ಹೊಡೆತದ ಬಿಣತೆಯನ್ನು ತಡೆಯಲಾಗಲಿಲ್ಲ), ಉರುಬೆ (ಆತನ ಉರುಬೆಗೆ ಎಲ್ಲರೂ ಹೆದರಿದರು), ಒತ್ತರ (ಗಾಳಿ ಒತ್ತರದಿಂದ ಉರಿಯನ್ನು ಹಿಂದಕ್ಕೆ ಸರಿಸಿತು) 2 ಬಲ್ಮ, ಅಳವು 3 ಪಡೆ
force — ಕ್ರಿ ಒತ್ತಾಯಿಸು (ಇವತ್ತೇ ಹೋಗ ಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾನೆ)
force in — ಕ್ರಿ 1 ತೂರು (ಚಾಪೆಯ ಕೆಳಗೆ ತೂರಿದ; ತೂರಿಕೊಳ್ಳು; ತೂರುಗಾಳಿ) 2 ನುಗ್ಗು (ಎಲ್ಲರೂ ಒಳಗೆ ನುಗ್ಗುತ್ತಿದ್ದಾರೆ)
force into — ಕ್ರಿ ಗಿಡಿ (ಮರದ ಸೊಪ್ಪನ್ನು ಪೊಟರೆಯ ಬಾಯಿಗೆ ಗಿಡಿದರು), ಗಿಡಿಗು
force through — ಕ್ರಿ ನೂರು (ಗುಂಪಿನೊಳ ಗಿಂದ ನೂರಿ ಹೊರಗೆ ಬಂದ)
forcibly — ಗು ಕಚಕ್ಕನೆ (ಕಚಕ್ಕನೆ ಮುಳ್ಳು ನೆಟ್ಟಿತು), ಬಲ್ಮೆಯಿಂದ
ford — ನಾ ಕಾಲ್ಗಡ (ಹೊಳೆಯನ್ನು ದಾಟುವ ಕಾಲ್ಗಡ ತುಸು ಮುಂದೆ ಇದೆ)
forearm — ನಾ ಮುಂಗೈ
forebear — ನಾ ಹಿರೀಕ ನಾ ಮುನ್ನರಿವು (ಕೆಟ್ಟದು ನಡೆಯಲಿದೆಯೆಂಬುದರ ಮುನ್ನರಿವು ಆತನಿ ಗುಂಟಾಗಿತ್ತು)
forecast — ಕ್ರಿ ಮುಂದಾಗಿ ಹೇಳು
forefather — ನಾ ಹಿರೀಕ
forefinger — ನಾ ಸುಟ್ಟುಂಬೆ, ಸುಟ್ಟುಬೆರಳು, ಒತ್ತುಬೆರಳು, ತೋರುಬೆರಳು
forefoot — ನಾ ಮುಂಗಾಲು
forefront — ನಾ ಮುಂಚೂಣಿ (ಆತ ಮುಂ ಚೂಣಿಯಲ್ಲಿದ್ದ)
forego — ಕ್ರಿ ಬಿಟ್ಟುಕೊಡು, ತೊರೆ (ಎಲ್ಲವನ್ನೂ ತೊರೆದವನು)
foregone — ಗು 1 ಮುಗಿದ, ಹಿಂದಿನ 2 ತಡೆಯಲಾಗದ, ಆಗಿಯೇ ಹೋಗುವ
forehead — ನಾ ಹಣೆ (ಹಣೆಬೊಟ್ಟು; ಹಣೆಬರಹ; ಎತ್ತಿನ ಹಣೆಹಗ್ಗ), ನೊಸಲು (ನೊಸಲಿನಲ್ಲಿ ಅಲೆವ ಕುರುಳುಗಳು, ನೊಸಲ ಬರಹ, ನೊಸಲ ಚೊಟ್ಟು)
foreign — ಗು ಹೊರನಾಡಿನ, ಹೊರಗಿನ, ಬೇರೂರಿನ
foreigner — ನಾ ಹೊರನಾಡಿಗ
foreleg — ನಾ ಮುಂಗಾಲು
foreman — ನಾ ಮೇಲಾಳು
foremost — ಗು ಮೊಟ್ಟಮೊದಲಿನ
forenoon — ನಾ ಎಡೆಹಗಲು, ಮುನ್ಪಗಲು
forepart — ನಾ ಮೋಕು (ಜರಿದು ಬಿದ್ದ ಮನೆಯ ಮೋಕು; ಗುಡ್ಡದ ಮೋಕಿಗೇರಿ ಕುಳಿತ)
foresee — ಕ್ರಿ ಮುಂಗಾಣು (ಮುಂಗಾಣಬಲ್ಲ ವರು), ಮುಂದರಿ (ಮುಂದರಿಯದೆ ಒಪ್ಪಿ ಕೆಟ್ಟೆ)
foreshadow — ಕ್ರಿ ಮುನ್ನರಿಸು, ಮುಂದೋ ರಿಸು,
foresight — ನಾ ಮುನ್ನೆಣಿಕೆ, ಮುನ್ನರಿವು (ಆತನ ಮುನ್ನರಿವಿನಿಂದಾಗಿ ನಾವು ಸೋಲ ಲಿಲ್ಲ)
forest — ನಾಹಳುವು (ಹಳುವು ಕಿಚ್ಚು),ಮಲೆ (ಮಲೆನಾಡು; ಮಲೆ ಕುಡಿಯ), ಕಾಡು (ಕಾಡೊಳಗೆ ಹೊಕ್ಕವರು; ಕಾಡುತೋಟ)
forest produce — ನಾ ಮರವಳಿ
forestall — ಕ್ರಿ ಮುಂತಡೆಯೊಡ್ಡು, ಮುಂಗೆಯ್ಯು
forestry — ನಾ ಕಾಡರಿಮೆ
foretaste — ನಾ ಮುನ್ಸವಿಹ
foretell — ಕ್ರಿ ನುಡಿಯಾಡು,ಕಣಿಹೇಳು (ಆತ ಕಣಿಹೇಳಿದ್ದು ಒಮ್ಮೆಯೂ ಸರಿಯಾಗಿಲ್ಲ)
forethought — ನಾ ಮುನ್ನೆಚ್ಚರಿಕೆ
forewarn — ಕ್ರಿ ಮುನ್ನೆಚ್ಚರಿಸು, ಮುನ್ನೆಚ್ಚರಿಕೆ ಕೊಡು
foreword — ನಾ ಮುನ್ನುಡಿ, ಮುಮ್ಮಾತು, ಮೊದಲ ಮಾತು
forfeiture — ನಾ ಮುಟ್ಟುಗೋಲು (ಮುಟ್ಟು ಗೋಲಾಗು; ಮುಟ್ಟುಗೋಲು ಹಾಕು)
forgather — ಕ್ರಿ ಒಟ್ಟುಸೇರು
forge — ಕ್ರಿ ಮುನ್ನಡೆ, ಮುನ್ನುಗ್ಗು
forgery — ನಾ ಸುಳ್ಳೊಪ್ಪ (ಸುಳ್ಳೊಪ್ಪ ಹಾಕು), ಕಳ್ಳೊಪ್ಪ
forget — ಕ್ರಿ ಮರೆ (ಮರೆತು ಹೋದುದು; ಮರಗೇಡಿ; ಮರಗುಳಿ)
forgetful — ಗು ಮರುಕುಳಿ, ಮರಗುಳಿ
forgetfulness — ನಾಮರವೆ, ಮರವು (ಆತನ ಮರವಿಗೆ ಮದ್ದಿಲ್ಲ)
forgive — ಕ್ರಿ ತಪ್ಪುಮರೆ
forgo — ಕ್ರಿ ಬಿಟ್ಟುಕೊಡು, ಇಲ್ಲದೆ ಇರು ನಾ ಸಿಳ್ಳೆ (ಮರದ ಸಿಳ್ಳೆ), ಕೊದೆ (ಕೊದೆ ಯಿರುವ ಕಂಬ), ಕವಲು (ಕವಲೊಡೆದ ಕೊಂಬೆ; ಕವಲಾಗು; ಕವಲ್ಗೊಂಬು); ಕಪ್ಪು, ಕವೆ (ಕವೆಕೋಲು; ಕವೆಕಡ್ಡಿ; ಮರದ ಕವೆ ಯಿರುವಲ್ಲಿಗೆ ಹತ್ತಿ ಕುಳಿತ) ಕವತೆ, ಪಂಗ (ಪಂಗನಾಮ)
forlorn — ಗು ತೊರೆದ, ಪಂಜೆ, ಒತ್ತಾಸೆ ಯಿಲ್ಲದ
form — ನಾ 1 ಪರಿಜು (ಎಣ್ಪರಿಜು; ಗಂಡ ವರಿಜು; ಬಿಗುರ್ವರಿಜು; ಪರಿಜು ಮಾಡು), ಅಂದ, ಕಟ್ಟು 2 ತರಗತಿ (ಮೂರನೇ ತರಗತಿಯ ಹುಡುಗ)
formal — ಗು ಕಟ್ಟಳೆಯಂತಿರುವ, ಕಟ್ಟಳೆತಪ್ಪದ
formalize — ಕ್ರಿ ಪರಿಜೆ ಕೊಡು
formative — ಗು ಬೆಳೆಯುವ
formerly — ಗು ಮುಂಚೆ (ಮುಂಚೆ ಬಂದವನು ಮೊದಲು ಹೋಗಲಿ)
formidable — ಗು ಬೆಚ್ಚಿಸುವ, ಎದುರಿಸ ಲಾಗದ
formless — ಗು ಪಾಂಗಿಲ್ಲದ, ಪರಿಜೆಯಿಲ್ಲದ
formula — ನಾ ಅಡಕದ ಬರೆಹ
forsake — ಕ್ರಿ ಬಿಟ್ಟುಬಿಡು, ತೊರೆ
fort — ನಾಹೂಡೆ,ಕೋಟೆ (ಕೋಟೆಕೊತ್ತಲ; ಕೋಟೆಗಾವಲು; ಕೋಟೆಮನೆ),ಕೊಂಚೆ (ಸುತ್ತಲೂ ಕಟ್ಟಿದ ಕೊಂಚೆ)
forthcoming — ಗು ಬರಲಿರುವ, ಮುಂ ಬರುವ, ಬೇಕಾದಾಗ ಸಿಗುವ
forthright — ಗು ನೇರವಾದ, ಬಿಚ್ಚು ಮಾತಿನ, ಮುಚ್ಚುಮರೆಯಿಲ್ಲದ
forthwith — ಗು ಕೂಡಲೇ (ಹೇಳಿದ ಕೂಡಲೇ ಮಾಡಬೇಕು)
fortify — ಕ್ರಿ ಗಟ್ಟಿಮಾಡು, ಅಳವು ಹೆಚ್ಚಿಸು, ಬೆಂಬಲಿಸು
fortitude — ನಾ ತಾಳ್ಮೆ, ಗಟ್ಟಿಗತನ, ಅದಪು
fortnight — ನಾ ಅರೆತಿಂಗಳು
fortress — ನಾ ಕೋಟೆ, ಕೊಂಚೆ
fortuitous — ಗು ಎದುರುನೋಡದ
fortune — ನಾ ಸಯ್ಪು (ಸಯ್ಪುಳ್ಳವನು)
fortune-teller — ನಾ ಕಣಿಗಾರ್ತಿ, ಕಣಿತಿ,ಕೊರವಂಜಿ
forum — ನಾ ಮಾತುಕತೆಯೆಡೆ
forward — ಕ್ರಿ ಮುಂದೆ ಕಳಿಸು
fossil — ನಾ ಪಳೆಯುಳಿಕೆ
foster — ಕ್ರಿ ಸಲಹು (ಮನೆಯಲ್ಲಿ ಸಲಹಿದ ಹಕ್ಕಿ), ಸಾಕು (ಮುದುಕಿ ಸಾಕಿದ ಹುಡುಗ; ಸಾಕುತಾಲಿು), ಹೊರೆ (ಆತ ಹೊರೆಯು ವುದು ತನ್ನ ಒಡಲನ್ನು)
foul — ಗು 1 ಹೊಲಸು 2 ಕಟ್ಟಳೆತಪ್ಪಿದ 3 ಸಯ್ಯದ
found — ಕ್ರಿ 1 ಕಟ್ಟು, ಹುಟ್ಟುಹಾಕು, ತಳಪಾಯ ಹಾಕು 2 ಎರಕ ಎರೆ
foundation — ನಾಅಡಿಗಲ್ಲು,ಅಡಿಗಟ್ಟು,ಆರ್ಮ,ತಳಕಟ್ಟು; ತಳಗಲ್ಲು, ನೆಲೆ (ನೆಲೆ ಗಟ್ಟು), ಹದಿ (ಹದಿಗಟ್ಟು)
founder — ಕ್ರಿ 1 ಎಡವಿಬೀಳು, ಕುಂಟು 2 ಕೆಟ್ಟುಹೋಗು, ನಿಂತುಹೋಗು
foundry — ನಾ ಎರಕದ ಮನೆ
fountain — ನಾ ಊಟೆ, ಚಿಲುಮೆ (ಹೂ ದೋಟದ ನಡುವೆ ಒಂದು ಚಿಲುಮೆಯಿದೆ), ಒಜ್ಜರ, ಒರತೆ (ಒರತೆ ನೀರು), ಬುಗ್ಗೆ (ನೀರಿನ ಬುಗ್ಗೆ)
fourth part — ನಾಗಿದ್ದ (ಇದರಲ್ಲಿ ಅವಳಿಗೂ ಗಿದ್ದ ಪಾಲಿದೆ)
fowl — ನಾ ಕೋಳಿ (ಕೋಳಿಮೊಟ್ಟೆ; ಕೋಳಿ ಅಂಕ; ಕೋಳಿಕಟ್ಟ)
fox — ನಾನರಿ ಕ್ರಿ ಗದ್ದಲ, ಗುದ್ದಾಟ
fraction — ನಾ ಚಿಕ್ಕತುಂಡು, ಕಿರುಹಸುಗೆ
fracture — ನಾಮುರಿತ (ಮೂಳೆ ಮುರಿತ),ಒಟ್ಟೆ (ಒಟ್ಟೆಬೀಳು), ಬಿರಿತ
fragile — ಗು ಸುಳುವಾಗಿ ಒಡೆಯಬಲ್ಲ, ನವುರು
fragment — ನಾನುಚ್ಚು (ಅಕ್ಕಿನುಚ್ಚು; ನುಚ್ಚು ನೂರು), ನೂಗು,ನುಗ್ಗು, ತುಂಡು (ತುಂಡು ಕಿಡಿ; ತುಂಡುತುಂಡಾಗು), ತುಣುಕು (ರೊಟ್ಟಿಯ ತುಣುಕು; ದಾರದ ತುಣುಕು),ಮುರುಕು (ಮುರುಕು ಚೂರು; ಮುರುಕಿಲ್ಲದ ಅಕ್ಕಿ)
fragmentary — ಗು ತುಂಡುತುಂಡು, ಹರುಕು ಮುರುಕು
fragrance — ನಾ ಕಂಪು (ಮಲ್ಲಿಗೆಯ ಕಂಪು; ಕಂಪುಗಾಳಿ; ಕಂಪುನೀರು), ಗಂಪು, ಕಮ್ಮು (ಕಮ್ಮೆಣ್ಣೆ; ಕಮ್ಮಲರು; ಕಮ್ಮಿಸು), ನರು (ನರುದಂಬುಲ; ನರುನೆೈ),ಮಗ (ಮಗ ಮಗಿಸು - ಮಗಮಗಿಸುವ ಹೂವಿನ ದಂಡೆ)
fragrantly — ಗು ಕಮ್ಮಗೆ (ಕಮ್ಮಗೆ ಉಣಿಸು), ಕಮ್ಮನೆ (ಕಮ್ಮನಾದ ತುಪ್ಪ)
frail — ಗು ಜಬ್ಬು, ಅಸಳೆ, ಬಡಕಲು (ಬಡಕಲು ಆಕಳು)
frame — ನಾಕಟ್ಟು (ಕಟ್ಟುಹಾಕು), ಇಟ್ಟಳ
frame — ಕ್ರಿ 1 ಕಟ್ಟು (ಮನೆಕಟ್ಟು, ಕತೆಕಟ್ಟು) 2 ಹೊಂದಿಸು, ಸರಿಪಡಿಸು 3 ಹೊರಿಸು (ತಪ್ಪುಹೊರಿಸು)
franchise — ನಾ ಒಪ್ಪಿತ ಹಕ್ಕು
frank — ಗು ಮರೆಮಾಚದ, ನೇರವಾದ
frantic — ಗು ಕೆರಳಿದ, ತಲ್ಲಣಗೊಂಡ, ಕಳವಳಿ ಸುವ
fraternal — ಗು ಒಡಹುಟ್ಟಿದವರ, ಒಡಹುಟ್ಟಿ ದವರಂತಿರುವವರ
fraternity — ನಾ ಒಡಹುಟ್ಟು ಬಳಗ
fratricide — ನಾ ಒಡಹುಟ್ಟು ಕೊಲೆ
fraud — ನಾಮಾಜು,ಉಕ್ಕಿವ (ಉಕ್ಕಿವದಿಂದ ಗೆದ್ದವನು), ಜತ್ತಕ
fraught — ಗು ತುಂಬಿದ (ಎಡರು ತೊಡರು ಗಳಿಂದ ತುಂಬಿದ ಕೆಲಸ)
fray — ನಾ ಕಾದಾಟ, ಹೋರಾಟ
fray — ಕ್ರಿ ಹರಿದು ಚಿಂದಿಯಾಗು, ಸೊಪ್ಪಾಗು, ಜಬ್ಬಲಾಗು
freak — ಗು ಓಜೆತಪ್ಪಿದ, ಅದುಹಿನ
freckle — ನಾ ಮತ್ತಿ (ಮತ್ತಿನಾಲಿಗೆ)
free — ಕ್ರಿ ಬಿಡು (ಆತನನ್ನು ಸೆರೆಯಿಂದ ಬಿಟ್ಟಿ ದ್ದಾರೆ)
free — ಗು ತೊಡಕಿಲ್ಲದ, ತಡೆಯಿಲ್ಲದ, ಅಂಕೆ ತಪ್ಪಿದ, ಕಟ್ಟೆಳೆಗೊಳಪಡದ, ಬಿಟ್ಟ, ಬೆಲೆಯಿಲ್ಲದ
free person — ನಾ ಬಿಚ್ಚಾಳು
freedom — ನಾ ಬಿಡುಗಡೆ; ಬಿಡುತೆ (ಬಿಡುತೆ ಗೊಳ್ಳು),ಈಳಿಗೆ
freeze — ಕ್ರಿ 1 ಹೆಪ್ಪುಗಟ್ಟು, ತಣ್ಣಗಾಗು 2 ಸೆಡೆ, ಅಲುಗಾಡದಿರು
freight — ನಾಸಾಗಣೆ, ಸಾಗಾಣಿಕೆ
freightage — ನಾ ಸಾಗಣೆವೆಚ್ಚ
frenzy — ನಾತೂಳು (ತೂಳು ಬಂದು ಹೇಳಿದ ಮಾತು), ಹುಚ್ಚು
frequently — ಗು ಅಡಿಗಡಿಗೆ (ಅಡಿಗಡಿಗೆ ಬಂದು ಏನೋ ಹೇಳುತ್ತಿದ್ದಾನೆ), ಬಾರಿ ಬಾರಿಗೆ
fresh — ಗು ಹೊಸ (ಹೊಸಹಿಟ್ಟು; ಹೊಸ ಬೆಲ್ಲ), ಕಂದದ (ಕಂದದ ಹೂ), ಮಾಸದ, ಬಾಡದ
freshen — ಕ್ರಿ ಕಳೆಯೇರಿಸು, ಹೊಸತುಮಾಡು
freshness — ನಾ ಪಸಿಮೆ (ಕಡಲೆಯ ಪಸಿಮೆ)
freshwater — ನಾಸಿಹಿನೀರು (ಈ ಹೊಂಡ ದಲ್ಲಿ ಸಿಹಿನೀರಿದೆ) ಕ್ರಿ 1 ಸವೆದುಹೋಗು, ದೊರಗಾಗು 2 ಸಿಡಿಮಿಡಿಗೊಳ್ಳು
fretful — ಗು ಅಳುಕುಳಿ (ಈ ಮಗು ಬರೀ ಅಳುಕುಳಿ)
fretwork — ನಾ ಕೆತ್ತನೆ ಕೆಲಸ
friable — ಗು ಪುಡಿಪುಡಿಯಾಗುವ, ಒಡೆಯುವ
friction — ನಾ ತಿಕ್ಕಾಟ, ಉಜ್ಜುವಿಕೆ
fridge — ನಾ ಕುಳಿರರೆ
friend — ನಾಗೆಳೆಯ (ಗೆಳತಿ; ಗೆಳೆತನ),ಅಳವಿಗ
friendliness — ನಾ ಅಚ್ಚು (ಅಚ್ಚಿನಿಂದ ಮಾತ ನಾಡಿಸಿದ)
friendship — ನಾ ನಣ್ಪು (ನಣ್ಪಿನ ಹೊರೆ), ಅಣ್ಪು, ಗೆಳೆತನ, ಗೆಣೆ, ಕೆಳೆ (ಕೆಳೆಗೊಳ್ಳು; ಕೆಟ್ಟವರಿಗೆ ಕೆಳೆಯಿಲ್ಲ), ಗೆಡೆ (ಗೆಡೆಗೊಳ್ಳು; ಗೆಡೆಗೂಡು), ಹೊದ್ದಿಕೆ, ಕೂರ್ಮೆ
fright — ನಾಹೆದರಿಕೆ, ಅಂಜಿಕೆ, ದಿಗಿಲು
frighten — ಕ್ರಿ (ಆ) ಬೆಚ್ಚು (ಹಗ್ಗವನ್ನು ಹಾವೆಂದು ತಿಳಿದು ಬೆಚ್ಚಿ ಕೆಳಗೆ ಹಾರಿದ), ಬೆದರು (ಕೊಡೆಹಿಡಿದು ಬಂದರೆ ಎತ್ತು ಬೆದರುತ್ತದೆ; ಬೆದರೆತ್ತು; ಬೆದರಿಕೆ), ಅಂಜು (ಅಂಜಿದವನ ಮೇಲೆ ಕಪ್ಪೆ ಹಾಕಿದ; ಅಂಜಿಕೆ), ಹೆದರು (ಆ ಹುಚ್ಚನನ್ನು ನೋಡಿ ಮಕ್ಕಳೆಲ್ಲ ಹೆದರಿದ್ದಾರೆ; ಹೆದರಿಕೆ)
frightful — ಗು ಬೆದರಿಕೆಯ, ಬೆಚ್ಚಿಸುವ
frigid — ಗು ತಣ್ಣಗಿರುವ, ನಲ್ಮೆತೋರದ
frill — ನಾ ನಿರಿ, ನಿರಿಗೆ (ಸೀರೆಯ ನಿರಿಗೆ)
fringe — ನಾ ಕರೆ, ಅಂಚು
frisk — ಕ್ರಿ ಕುಪ್ಪಳಿಸು, ಜಿಗಿದಾಡು
frisk about — ಕ್ರಿ ಚಂಗು, ಚೆಂಗು (ಚೆಂಗಾಟ), ತುಳ್ಳು (ತುಳ್ಳುವ ಹುಡುಗ; ತುಳ್ಳಾಡಿ ತುಳ್ಳಾಡಿ ಮುಳ್ಳಿನ ಮೇಲೆ ಬಿದ್ದ)
friskily — ಗು ಚಂಗನೆ (ಚಂಗನೆ ಹಾರು)
fritter — ಕ್ರಿ ಚೂರುಚೂರು ಮಾಡು, ಪೋಲು ಮಾಡು
frivolous — ಗು 1 ಹುಡುಗಾಟದ, ಬೆಡಗಿನ 2 ಪೊಟ್ಟು, ಬರಡು
frizzled — ಗು 1 ಸುಕ್ಕು (ಸುಕ್ಕು ಕೂದಲು; ಸುಕ್ಕುಗಟ್ಟು) 2 ಚಿರಿಚಿರಿ (ಅದನ್ನು ಕುದಿವ ಎಣ್ಣೆಯಲ್ಲಿ ಹಾಕಿದಾಗ ಚಿರಿಚಿರೆನ್ನುತ್ತದೆ)
frock — ನಾ ನಿಲುವಂಗಿ
frog — ನಾಕಪ್ಪೆ (ಬಾವಿಯ ಕಪ್ಪೆ; ಕಪ್ಪೆ ನೆಗೆತ)
frolic — ಕ್ರಿಚಲ್ಲಾಡು, ನೆಗೆದಾಡು
frond — ನಾ ಗರಿ (ತೆಂಗಿನ ಗರಿ), ಸೋಗೆ (ಅಡಿಕೆ ಮರದ ಸೋಗೆ)
front — ನಾ ಚೂಣಿ (ಚೂಣಿ ಕಾಳಗ; ಮುಂಚೂಣಿ), ಮುಂಬದಿ, ಮುಂದುಗಡೆ, ಮುಂದೆ (ಮನೆಯ ಮುಂದೆ), ಇದಿರು (ಇದುರು ಬರು; ಇದಿರಾಗು; ಇದಿರಾಡು),ಎದುರು (ಮನೆಯ ಎದುರು ಒಂದು ಮಾವಿನ ಮರ ಇದೆ; ಎದುರು ಹಾಕಿಕೊಳ್ಳು; ಎದುರುಬದುರು), ಮೋಕು
frontage — ನಾ ಮುನ್ನೆಲ, ಮುಂಬದಿಯ ಹರವು
frontier — ನಾ ಗಡಿ (ನಮ್ಮ ಗಡಿವರೆಗೆ ಹೋಗಿ ಬಂದೆ; ಗಡಿಕಲ್ಲು; ಗಡಿಗೆಡು; ಗಡಿನಾಡು), ಎಲ್ಲೆ (ಎಲ್ಲೆಕಟ್ಟು; ಎಲ್ಲೆಕಲ್ಲು)
frost — ನಾ ಮಂಜುಗಡ್ಡೆ, ಇಬ್ಬನಿಗಡ್ಡೆ
frostbite — ನಾ ಚಳಿಹುಣ್ಣು, ಚಳಿಕಡಿತ
froth — ನಾ ನೊರೆ (ನೊರೆಗಟ್ಟು), ಬುರುಗು (ಬುರುಗುಬಿಡು)
frown — ಕ್ರಿ ಹುಬ್ಬುಗಂಟಿಕ್ಕು, ಮೋರೆಮುರಿ, ಮೋರೆ ಸಿಂಡರಿಸು
fructify — ಕ್ರಿ ಕಾಯಿಬಿಡು
frugal — ಗು ಅಗ್ಗದ, ಕಡಿಮೆ ಬೆಲೆಯ, ದುಂದು ಮಾಡದ
fruit (new) — ನಾ ಹೀಚು (ಹೀಚುಗಾಲಿು), ಪಿಂಜು (ripe) ನಾ ಹಣ್ಣು (ಹಣ್ಣು ಹಂಪಲು; ಹಣ್ಣುಗೊಳಿಸು; ಹಣ್ಣುಮಾಡು)
fruit (unripe) — ನಾ ಹದರು (ಮಾವಿನ ಹದರು)
fruit-seller — ನಾ ಪಣ್ಣಿಗ
frustrate — ಕ್ರಿ ಅಡ್ಡಿಪಡಿಸು, ತಡೆಯೊಡ್ಡು, ಮಾಡಗೊಡದಿರು (ಆಕೆ ಯಾವುದನ್ನೂ ಸರಿಯಾಗಿ ಮಾಡಗೊಡುವುದಿಲ್ಲ)
fry — ಕ್ರಿ ಕರಿ (ಕರಿದ ತಿಂಡಿ), ಗಾರಿಸು
frying pan — ನಾಬಾಣಲೆ, ಕಾವಲಿ
fudge — ನಾ ಕಟ್ಟುಕತೆ, ಬುರುಡೆ, ಬೊಗಳೆ
fuel — ನಾಉರುವಲು
fugitive — ನಾ ತಲೆತಪ್ಪಿಸಿಕೊಂಡವನು
fulcrum — ನಾ ಊರಿ, ಆನಿಕೆ (ಸನ್ನೆಕೋಲಿನ ಆನಿಕೆ)
fulfil — ಕ್ರಿ ನೆರವೇರು, ಕೈಗೂಡು, ಈಡೇರು (ಅವನು ಮಾಡಬಯಸಿದ್ದು ಯಾವುದೂ ಈಡೇರಲಿಲ್ಲ), ನಡೆ (ನಡೆಸಿಕೊಡು)
fulfilment — ನಾ ಸಲುವಳಿಕೆ, ನೆರವೇರಿಕೆ
full — ಗು ನೆರೆದ, ತುಂಬಿದ (ತುಂಬಿದ ಕೊಡ ತುಳುಕುವುದಿಲ್ಲ)
full-blown — ಗು 1 ಸಲೆ ಅರಳಿದ 2 ತವೆ ಬೆಳೆದ
full-fledged — ಗು ಚನ್ನಾಗಿ ಪಳಗಿದ, ಬೆಳೆದ, ಮಾಗಿದ
full moon — ನಾ ತುಂಬುವೆರೆ
fullness — ನಾನೆರತೆ, ನೆರವು, ನೆರವಣಿಗೆ
fully — ಗು ಆರ,ತುಂಬ (ಹೊಟ್ಟೆತುಂಬ ಊಟ ಮಾಡಿದ)
fulminate — ಕ್ರಿ 1 ಸಿಡಿ, ಹೊರಚಿಮ್ಮು 2 ಬೊಬ್ಬಿರಿದು ಬಯ್ಯು
fumble — ಕ್ರಿ ತಡವರಿಸು, ತಡಕಾಡು
fume — ನಾ ಹೊಗೆ (ಉಸಿರು ಕಟ್ಟುವ ಹೊಗೆ)
fume — ಕ್ರಿ ಸಿಡಿಗುಟ್ಟು
fumigate — ಕ್ರಿ ಹೊಗೆಹಾಕು (ಹೊಗೆಹಾಕಿ ಸೊಳ್ಳೆಗಳನ್ನು ಓಡಿಸುತ್ತಿದ್ದಾನೆ)
fun — ನಾಚಲ್ಲ (ಚಲ್ಲವಾಡು; ಚಲ್ಲಾಟ; ಚಲ್ಲಾಟವಾಡು), ಅಲ್ಲಣಿ, ಅಲ್ಲಣಿಗೆ
function — ನಾ 1 ಕೆಲಸ (ಗಂಟೆ ತೋರಿಸು ವುದು ಗಡಿಯಾರದ ಕೆಲಸ) 2 ಕೂಟ (ನನಗೆ ಇವತ್ತು ಒಂದು ಕೂಟಕ್ಕೆ ಹೋಗ ಲಿದೆ)
fund — ನಾ ಕೂಡುಹ, ಇಡುಗಂಟು, ಮುಡುಪು
fundamental — ಗು ಅಡಿಯ (ಅಡಿಯ ತೀರ್ಮಾನಗಳು)
funeral — ನಾ ಕೊನೆಯ ಕೆಲಸ
fungus — ನಾ ನಾಯಿಕೊಡೆ, ಅಣಬೆ
funnel — ನಾ 1 ಆಲಿಕೆ (ಎಮ್ಮೆಗೆ ಮದ್ದು ಕುಡಿಸಲು ಆಲಿಕೆ ಬೇಕಾಗಿತ್ತು), ಕೊಳವೆ 2 ಹೊಗೆ ಕೊಳವೆ
fur — ನಾ ತುಪ್ಪುಳ (ಮೊಲದ ತುಪ್ಪುಳ), ನವಿರು
furbish — ಕ್ರಿ ಮೆರೆಗು ಕೊಡು, ಹೊಳಪು ಕೊಡು, ಅಂದಗೊಳಿಸು, ಹೊಸದಾಗಿಸು
furious — ಗು ರೊಚ್ಚಿಗೆದ್ದ, ಬಿರುಸಿನ
furl — ಕ್ರಿ ಮಡಿಸು, ಸುತ್ತಿಡು
furlough — ನಾ ಆಡಿಗೆ, ಉಳಿ, ಬಿಡುವು
furnace — ನಾಕುಲುಮೆ,ಕುಂಪಟೆ, ಒಲೆ
furnish — ಕ್ರಿ ಒದಗಿಸು, ಕೊಡು, ಅಣಿಮಾಡು, ಅಳವಡಿಸು
furniture — ನಾ ತಟ್ಟುಮುಟ್ಟು ನಾ 1 ಗೊಂದಲ, ಹುಲಿುಲು, ಬೊಬ್ಬೆ 2 ಮೆಚ್ಚುಗೆ, ಗೀಳು
furrier — ನಾ ತುಪ್ಪುಳಿಗ, ತುಪ್ಪುಳ ಮಾರಾಳಿ
furrow — ನಾ ಸಾಲು (ನೇಗಿಲ ಸಾಲು), ನುಗ್ಗು (ನುಗ್ಗಾಗು; ನುಗ್ಗೊತ್ತು), ಸುಕ್ಕು (ಸುಕ್ಕು ಗಟ್ಟು)
furtive — ಗು ಮುಚ್ಚುಮರೆಯ, ಗುಟ್ಟಾದ, ಕಳ್ಳತನದ
fury — ನಾ ರೊಚ್ಚು, ಕಡುಕಿನಿಸು, ಉರುಬು (ಬಿರುಗಾಳಿಯ ಉರುಬು)
fuse — ನಾ ಕರಗುಸರಿಗೆ
fuse — ಕ್ರಿ ಕರಗು, ಕರಗಿಬೆಸೆ
fusion — ನಾ ಬೆಸುಗೆ, ಕರಗಿಕೆ
fuss — ನಾ ಗಡಿಬಿಡಿ, ಗಲಿಬಿಲಿ, ಕಳವಳ, ಬೇಡದ ಗೊಂದಲ,
futile — ಗು ಅನುವಿಗಾಗದ, ಗೊಡ್ಡು, ಕೆಲಸಕ್ಕೆ ಬಾರದ
future — ಗು ಮುಂದಿನದು, ಎದುರುನೋಡುವ, ಬರಲಿರುವ
future tense — ನಾ ಮುಂಬೊತ್ತು
fuzz — ನಾ ನವಿರು, ಹುಗುರ ಗರಿ