← Ch 18  ·  Contents  ·  ↑ Contents

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

W

wad — ನಾ ಮೆತ್ತೆ (ಕಟ್ಟುಗಳಲ್ಲಿ ಬಳಸುವ ಮೆತ್ತೆ), ಮುದ್ದೆ
waddle — ಕ್ರಿ ಒಲೆದಾಡುತ್ತ ನಡೆ
wade — ಕ್ರಿ 1 ದಾಟು (ಕೆಸರು ದಾಟು) 2 ಚೆಲ್ಲಡು (ನೀರಲ್ಲಿ ಚೆಲ್ಲಡು)
waft — ಕ್ರಿ ತೇಲಾಡು
wag — ಕ್ರಿ ಅಲ್ಲಾಡಿಸು (ನಾಯಿ ಬಾಲ ಅಲ್ಲಾ ಡಿಸುತ್ತಿದೆ)
wage — ಕ್ರಿ ನಡೆಸು (ಹೋರಾಟ ನಡೆಸು), ಹೂಡು (ಕಾಳಗ ಹೂಡು)
wager — ನಾ ಒಡ್ಡ (ಒಡ್ಡ ಒಡ್ಡು)
wages — ನಾ ಸಂಬಳ (ಕೆಲಸಕ್ಕೆ ಸಂಬಳ; ಸಂಬಳಗಾರ), ಕಂಬಳ (ಕಂಬಳಗಾರ), ಕೂಲಿ (ಕೂಲಿಮಾಡು; ಕೂಲಿಕಂಬಳ; ಕೂಲಿ ಕೆಲಸ)
waggle — ಕ್ರಿ ಅಲ್ಲಾಡಿಸು (ಬಾಲ ಅಲ್ಲಾಡಿಸು)
waggon — ನಾ ಬಂಡಿ
waif — ನಾ 1 ತಬ್ಬಲಿ 2 ತಿರುಕ
wailing — ನಾ ಗೋಳು (ಗೋಳಾಡು; ಗೋಳಾಟ; ಗೋಳಿಡು)
waist — ನಾ ಸೊಂಟ (ಸೊಂಟಕಟ್ಟು; ಸೊಂಟ ಪಟ್ಟಿ; ಸೊಂಟಮುರಿ),ನಡು (ನಡುಕಟ್ಟು),ಉಡಿ (ಉಡಿಲು; ಉಡಿನೂಲು; ಉಡಿ ಗೂಸು), ಒಡಿ (ಒಡ್ಯಾಣ), ಒಂಡೆ (ಈ ಮರದ ಬೇರನ್ನು ಒಂಡೆಯಲ್ಲಿ ಕಟ್ಟಿಕೊಳ್ಳಿ)
waist-band — ನಾ ದಟ್ಟಿ (ದಟ್ಟಿ ಉಡು; ದಟ್ಟಿ ಬಿಗಿದುಕೊಂಡು ಹೋರಾಟಕ್ಕೆ ಬಂದಿದ್ದಾನೆ)
wait — ಕ್ರಿ ಕಾಯು (ತುಂಬಾ ಹೊತ್ತಿನಿಂದ ಕಾಯು; ಕಾದಿರು), ತಡಸು (ತುಸು ತಡಸಿ, ಈಗ ಬಂದುಬಿಡುತ್ತೇನೆ), ತಾಳು (ಆತನ ಹತ್ತಿರ ತುಸು ಹೊತ್ತು ತಾಳಲು ಹೇಳಿದೆ) ಕ್ರಿ 1 ಹಕ್ಕು ಬಿಟ್ಟುಕೊಡು 2 ಮುಂದೆ ಹಾಕು
wake — ನಾ ಜಾಡು (ಹಡಗಿನ ಜಾಡು)
wake — ಕ್ರಿ ಎಚ್ಚರು (ಎಚ್ಚತ್ತ ಹುಲಿ; ಎಚ್ಚತ್ತು ಗೊಳ್ಳು), ಎಚ್ಚರವಾಗಿರು, ತೆಪ್ಪರು (ತೆಪ್ಪತ್ತು ಕೊಳ್ಳು; ತೆಪ್ಪರಿಸು)
wakefulness — ನಾ ಎಚ್ಚರ (ಎಚ್ಚರಿಕೆ; ಎಚ್ಚರಗೇಡಿ; ಎಚ್ಚರ ತಪ್ಪು)
wale — ನಾ ಬಾಸುಂಡೆ, ಬಾಸುಳಿ (ಆತ ಕೊಟ್ಟ ಪೆಟ್ಟಿಗೆ ಬೆನ್ನಿನ ಮೇಲೆ ಬಾಸುಳಿಯುದ್ದಿದೆ)
walk — ಕ್ರಿ ನಡೆ (ನಡೆದಾಡು; ನಡೆದುಬರು)
walking — ನಾ ನಡಪು (ನಡಪಾಡು - ನಡ ಪಾಡುವ ನವಿಲು), ನಡಹು, ನಡೆಹ, ನಡೆ (ಆನೆಯ ನಡೆ)ನಡಿಗೆ (ಒಂಟೆಯ ನಡಿಗೆ)
walking stick — ನಾ ಕಯ್ಗೋಲು, ಊರು ಗೋಲು (ಆತ ಊರುಗೋಲಿಲ್ಲದೆ ನಡೆಯ ಲಾರ)
wall — ನಾ ಕುದುರು (ಕುದುರು ತೊಳೆದು ಸುಣ್ಣ ಬಳಿಯಬೇಕು), ಮದಿಲು (ಮನೆಯ ಸುತ್ತೂ ಮದಿಲು ಕಟ್ಟಿದ್ದಾರೆ), ಕೇರು (ಕೇರು ಕಟ್ಟು), ಗೋಡೆ (ಗೋಡೆಯುೀರಿಸು; ಗೋಡೆಗನ್ನ), ಸುತ್ತಾಲೆ (ಕೋವಿಲಿನ ಸುತ್ತ ಸುತ್ತಾಲೆ ಯಿದೆ), ನೆರಕೆ (ಬಿದಿರ ತಟ್ಟಿಯ ನೆರಕೆ)
wallet — ನಾ ಕಯ್ಚೀಲ (ಕಯ್ಚೀಲದೊಂದಿಗೆ ಹಣವೂ ಕಳವಾಗಿದೆ), ಕಿಸೆಹೊತ್ತಗೆ
wallow — ಕ್ರಿ ತೊಳಲು (ತೊಳಲಾಡು; ತೊಳ ಲಾಟ; ತೊಳಲಿಕೆ), ಹೊರಳು (ಹೊರ ಳಾಡು - ನೆಲದ ಮೇಲೆ ಹೊರಳಾಡು)
wall-shelf — ನಾ ಪತ್ತಿಗೆ (ಮೇಲುವತ್ತಿಗೆ)
wan — ಗು ಬೆಳರಿದ, ಬಿಳಿಚಿದ, ಅಳವುಗುಂದಿದ
wand — ನಾ ಮಾಟಗಾರನ ಕೋಲು
wander — ಕ್ರಿ ಅಲೆ (ಆತ ಊರಿನಿಂದ ಊರಿಗೆ ಅಲೆಯುತ್ತಿದ್ದಾನೆ; ಅಲೆತ, ಅಲೆದಾಟ), ಅಡ್ಡಾಡು (ಎಲ್ಲಿಗೋ ಅಡ್ಡಾಡಲು ಹೋಗಿ ದ್ದಾನೆ), ತಿರುಗು (ತಿರುಗಾಟ), ತಿರಿ (ತಿರಿ ದಾಡು; ತಿರಿದುಣ್ಣು; ತಿರುಕೂಳು), ಸುತ್ತು (ಊರೆಲ್ಲ ಸುತ್ತಿ ಸಾಕಾಯಿತು; ಸುತ್ತಾಡು; ಹೂದೋಟದಲ್ಲಿ ಸುತ್ತಾಡಿದೆ; ಸುತ್ತಾಟ), ಸುಳಿ (ಸುಳಿದಾಡು)
wandering — ನಾ ಕಾಲಾಟ, ಮಲ್ಲಳಿ (ಆತ ಮಲ್ಲಳಿಗೆ ಹೋಗಿದ್ದಾನೆ), ತಿರಿಕೆ
wane — ಕ್ರಿ ನುರುಕು (ಹುಡುಗ ನುರುಕುತ್ತಿ ದ್ದಾನೆ), ಕುಂದು (ಕಳೆಗುಂದು; ಕುಂದಿದ ತಿಂಗಳು), ಕೊರಗು (ಕುತ್ತದಿಂದ ಕೊರಗು)
want — ನಾ ಇಲ್ಲಮೆ, ಗೊಟ್ಟು (ಇಲ್ಲಿ ನೀರಿನ ಗೊಟ್ಟಿದೆ)
want — ಕ್ರಿ 1 ಬಯಸು (ಬಯಕೆ), ಕೋರು (ನೀವು ಕೋರಿದ್ದು ಸಿಗಲಿ; ಕೋರಿಕೆ) 2 ಇಲ್ಲದಿರು, ಸಾಲದಾಗು ಗು 1 ಚಲ್ಲಾಟದ, ಹಣ ಚೆಲ್ಲುವ 2 ನೋಯಿಸುವ, ಕೇಡು ಮಾಡುವ 3 ಕಟ್ಟಲೆ ತಪ್ಪಿದ
war — ನಾ ಕಾಳಗ, ಮೊನೆ (ಮೊನೆಯಾಳು)
warble — ಕ್ರಿ 1 ಹಕ್ಕಿಯಂತೆ ಹಾಡು 2 ಅದಿರುಲಿ
ward — ನಾ 1 ಎಚ್ಚರಿಕೆಯಲ್ಲಿರುವಿಕೆ 2 ಕಾಪಿನ ಲ್ಲಿರುವವನು 3 ಪಾಲು, ಬಗೆ
warden — ನಾ 1 ಕಾಪುಗ, ಹೊಣೆಗಾರ 2 ಮೇಲಾಳು
warder — ನಾ ಕಾವಲುಗಾರ
wardrobe — ನಾ ಉಡುಪುಗಳ ಅರೆವರಸೆ
ware — ನಾ ಮಾರಾಟದ ಒಡಮೆ
warehouse — ನಾ ಉಗ್ರಾಣ (ಉಗ್ರಾಣದ ಲ್ಲಿದ್ದ ಚೀಲ ಕಾಣೆಯಾಗಿದೆ)
warehouse — ನಾ ಒಡಮೆಮನೆ
warfare — ನಾ ಕಾಳಗ, ಹೋರಾಟ, ಮೊನೆ
warhead — ನಾ ಸಿಡಿತಲೆ
warily — ಗು ಎಚ್ಚರಿಕೆಯಿಂದ (ಆತ ತುಂಬಾ ಎಚ್ಚರಿಕೆಯಿಂದ ಕಯ್ತೊಳೆದ)
warm — ಗು ಬೆಚ್ಚಗೆ (ಬೆಚ್ಚಗೆ ಮಾಡು, ಬೆಚ್ಚಗೆ ಕಾಯಿಸು)
warm-blooded — ಗು 1 ಬಿಸಿನೆತ್ತರಿನ 2 ಪದಪಿನ
warmth — ನಾ 1 ಬಿಸಿ, ಬೆಚ್ಚಗಿರುವಿಕೆ 2 ಪದಪು, ಹುರುಪು 3 ಎದೆ ತುಂಬಿದ ಅನಿಸಿಕೆ 4 ನಸುಸಿಟ್ಟು
warn — ಕ್ರಿ ಎಚ್ಚರಿಸು (ನಾನು ಮೊದಲೇ ಆತನನ್ನು ಎಚ್ಚರಿಸಿದ್ದೆ)
warp — ನಾ 1 ಮುಡುಕು, ಉರುಗಿಕೆ 2 ಬದಿಹಿಡಿತ 3 ದಪ್ಪಹಗ್ಗ 5 ಹಾಸು (ಮಗ್ಗದಲ್ಲಿ ಉದ್ದಕ್ಕೆ ಹಾಕಿದ ಹಾಸುನೂಲು; ಹಾಸುನರಿ; ಹಾಸುಹೊಕ್ಕು), ಊಕೆ (ಹೊರಸಿನ ನೆಯ್ಗೆಯ ಊಕೆ)
warp — ಕ್ರಿ 1 ಬಾಗು (ಬಾಗಿದ ಕಂಬಿ), ಉರುಗು (ಉರುಗಿದ ಹಲಿಗೆ) 2 ಹಡಗನ್ನು ಎಳೆ
warrant — ನಾ 1 ಒಪ್ಪಿಗೆಯೋಲೆ (ಆತನನ್ನು ಹಿಡಿಯಲು ಕಾಪುಗರು ಒಪ್ಪಿಗೆಯೋಲೆ ಪಡೆದಿದ್ದಾರೆ) 2 ಎಸಕದ ಹೊಣೆ
warren — ನಾ 1 ಮೊಲಗಳ ಕಾಪು 2 ಕಿಕ್ಕಿರಿದ ಕಟ್ಟಡ
warrior — ನಾ ಮೊನೆಯಾಳು, ಪಡೆಯಿಲ, ಕಯ್ದುಕಾರ
wart — ನಾ ನರೂಲಿ,ಕೇಮ (ಮೂಗಿನಲ್ಲೊಂದು ಕೇಮ ಇದೆ)
wary — ಗು ಎಚ್ಚರಿಕೆಯ ಕ್ರಿ ಕುಸುಬು (ಸೀರೆಯನ್ನು ಕುಸುಬಿ ಒಗೆಯುತ್ತಿದ್ದಾಳೆ), ಕುಸುಕು, ಒಗೆ (ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದಾರೆ), ಅಲೆ (ತನ್ನ ಕಲೆಗಳನ್ನು ಅಲೆಯಲು ತಿಂಗಳು ನೀರಿನಲ್ಲಿ ಮುಳುಗಿದ), ಕಚ್ಚು (ಕಚ್ಚಿ ತೊಳೆ; ಕಲಗಚ್ಚು), ತೊಳೆ (ಕಾಲು ತೊಳೆದು ಒಳಗೆ ಬನ್ನಿ)
washerman — ನಾ ಮಡಿವಾಳ,ಅಗಸ (ನಮ್ಮ ಅಗಸ ಬಟ್ಟೆ ಕೊಳ್ಳುವುದಿಲ್ಲ),ಅಲ್ಲಿಗಾರಿಗ
washing — ನಾ ಒಗತ
wasp — ನಾ ಕಡಂದುರು, (ಕಣಜದ ಹುಳ), ಕಡಜ
wastage — ನಾ ತರಗು (ತರಗಡೆ - ತರಗಡೆ ಬರು),ತೇಮಾನ
waste — ಗು ನಾ 1 ತರಸು (ತರಸುಗದ್ದೆ; ತರಸು ನೆಲ), ಬೀಳು (ಬೀಳುನೆಲ), ಬೀಡು (ಬೀಡು ಬೀಳು, ಬೀಡಾಗು), ಹಾಳು (ಹಾಳುಮಾಡು, ಹಾಳುಬಾವಿ), ದುಂದು (ದುಂದುಗಾರ, ದುಂದುಮಾಡು) 2 ಅಳವುಗುಂದು 3 ಸವೆದುಹೋಗು
watch — ನಾ 1 ಕಾವಲು, ಎಚ್ಚರ 2 ಕಿರು ಹೊತ್ತಳಕ
watch — ಕ್ರಿ 1 ಕಾಯು 2 ಗಮನಿಸು
watchdog — ನಾ ಕಾವಲು ನಾಯಿ
watchman — ನಾ ತಳಾರ, ಕಾಪಿಗ, ಕಾಪಿನಾಳು
water — ನಾ ನೀರು (ನೀರಹಾದಿ; ನೀರಾಗು; ನೀರಂಚು; ನೀರಡಿಸು; ನೀರೂರು)
water hole — ನಾ ಕುಳುಂಪೆ (ದಟ್ಟ ಕಾಡಿನ ನಡುವೆ ಒಂದು ಕುಳುಂಪೆಯಿದೆ), ಗುಮ್ಮಿ (ಗುಮ್ಮಿಯ ನೀರು)
water lily — ನಾ ನೆಯ್ದಿಲೆ,ಕೋಮಳೆ,ಕಲವೆ
water melon — ನಾ ಕಲ್ಲಂಗಡಿ (ಕಲ್ಲಂಗಡಿ ಹಣ್ಣು)
watercourse — ನಾ 1 ಹಳ್ಳ, ತೊರೆ 2 ಕಾಲುವೆ
waterfall — ನಾ ಅಬ್ಬಿ,ಜೋಗು
water-logged — ಗು ನೀರು ತುಂಬಿದ, ಒದ್ದೆ ಯಾದ, ಮುಳುಗಿದ
waterproof — ಗು ನೀರುತಡೆವ
watertight — ಗು 1 ನೀರುತಡೆವ 2 ಚನ್ನಾಗಿ ಹಮ್ಮಿಕೊಂಡ, ತಪ್ಪಿಲ್ಲದ
waterway — ನಾ 1 ಕಾಲುವೆ 2 ಹಡಗಿನ ಹಾದಿ
waterworks — ನಾ ನೀರೊದಗಿಕೆ
watery — ಗು ನೀರಾದ, ತೆಳ್ಳಗೆ ಮಾಡಿದ, ನೀರಿನ
wattle — ನಾ ತಟ್ಟಿ, ತಡಿಕೆ
wave — ನಾ ಅಲೆ (ನೀರಿನ ಅಲೆ; ಅಲೆ ಗೂದಲು),ಒಲೆ (ಒಲೆತ),ತೆರೆ ಕ್ರಿ ತೂರಾಡು
wax — ನಾ ಮೇಣ (ಜೇನುಮೇಣ; ಮೇಣ ಬೆಳಕು)
wax — ಕ್ರಿ 1 ಮೇಣಹಚ್ಚು, ಮೆರುಗು ಕೊಡು 2 ತುಂಬು, ಹೆಚ್ಚು
way — ನಾ 1 ಬಳಿ (ಬಳಿ ತಪ್ಪು; ಬಳಿ ಹಿಡಿ), ದಾರಿ (ಇಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಲಿುಲ್ಲವೇ?), ಹೊಲಬು (ಹೊಲಬಿಗ; ಹೊಲಬು ತಿಳಿದವನು; ಹೊಲಬು ತಪ್ಪು), ಹೋಕು 2 ಪರಿ (ಈ ಪರಿಯ ಸೊಬಗು ಬೇರೆ ಯಾರಲ್ಲಿದೆ?)
wayfarer — ನಾ ಹಾದಿಹೋಕ, ದಾರಿಗ, ದಾರಿ ಹೋಕ
waylay — ಕ್ರಿ ಹಾದಿಕಟ್ಟು (ಹಾದಿಕಟ್ಟಿ ಹಣ ದೋಚಿದರು), ತಾಗುಡಿಯಿಡು
wayward — ಗು 1 ಹೇಳಿದ್ದು ಕೇಳದ, ತಲೆ ಹೋಕ, ಮೊಂಡ 2 ಮುನ್ನುಡಿಯಲಾಗದ
weak — ಗು ಅಸಳೆ (ಅಸಳೆ ಗೆಲ್ಲು), ಜಬ್ಬು (ಜಬ್ಬು ಮುದುಕಿ; ಜಬ್ಬಲು), ಬಡ (ಬಡ ಕುದುರೆ, ಬಡ ಎತ್ತು; ಬಡಕಲು)
weaken — ಕ್ರಿ ಸೊಪ್ಪು (ಸೊಪ್ಪಿದ ಹುಡುಗ; ಸೊಪ್ಪಾಗು), ಕಳಲು
weakness — ನಾ 1 ನಲುವು (ನಲುವಿನಿಂದಾಗಿ ಆಕೆ ಯಾವ ಕೆಲಸವನ್ನೂ ಮಾಡುವುದಿಲ್ಲ), ಅಳವುಗುಂದಿಕೆ 2 ಗೀಳು, ಕೆಟ್ಟ ಚಟ 3 ಕುಂದು
weal — ನಾ 1 ಬರೆ (ಬೆನ್ನಿನ ಮೇಲೆ ಬರೆ ಬಿದ್ದಿದೆ), ಬಾಸುಂಡೆ (ಪೆಟ್ಟಿನಿಂದ ಬಾಸುಂಡೆ ಎದ್ದಿದೆ) 2 ನೆಮ್ಮದಿ
wealth — ನಾ ಸೊಮ್ಮು (ಸೊಮ್ಮುಗಾರ),ಪೊರುಳು, ಮುಟ್ಟ, ಬಾಳ್ತೆ
wean — ಕ್ರಿ ಬಿಡಿಸು (ಮೊಲೆ ಬಿಡಿಸು; ಚಟ ಬಿಡಿಸು)
weapon — ನಾ ಕಯ್ದು (ಕಯ್ದುಕಾರ; ಕಯ್ದು ಗೆಯ್ಯು)
wear — ಕ್ರಿ 1 ನಸಿ (ನಸಿದ ಹಣ್ಣು; ನಸಿಕು), ನವೆ (ನವೆದವನು ನೋಯುತ್ತಿದ್ದಾನೆ), ಎಗರು (ಎಗರಿದ ಹೊಳಪು), ಸವೆ (ಸವೆದ ಕತ್ತಿ; ಸವಕಲು) ತೇಯು (ಕೆಲಸ ಮಾಡಿ ಆಕೆಯ ಉಗುರುಗಳು ತೇದುಹೋಗಿವೆ), 2 ಉಡು (ಉಟ್ಟ ಬಟ್ಟೆ), ತಳೆ, ತೊಡು (ತೊಟ್ಟ ಉಡುಪು), ಸೂಡು (ಹೂ ಸೂಡು), ಮುಡಿ (ಮುಡಿದ ಹೂ)
weariness — ನಾ ಬೇಜಾರು, ಬೇಸರ (ಎಶ್ಟು ತೊಂದರೆ ಬಂದರೂ ಬೇಸರಪಡಬಾರದು; ಬೇಸರಿಸು; ಬೇಸರಿಕೆ)
wearisome — ನಾ ದಣಿಸುವ, ಬಳಲಿಸುವ
weary — ಕ್ರಿ ಬಳಲು (ನಡೆದು ಬಳಲಿದವನು; ಬಳಲುನುಡಿ; ಬಳಲಿಕೆ), ಆಸರು (ಬಾಳು ವೆಗೆ ಆಸತ್ತೆ), ಅಲಸು (ಅಲಸದೆ ಮಾಡು)
weather — ನಾ ಸುತ್ತಾವಿಪಾಡು
weather — ಕ್ರಿ 1 ಸಂಬಾಳಿಸು 2 ಕಂದು (ಬಿಸಿಲಿಗೆ ಕಂದು) ನಾ ಗಾಳಿಕೋಳಿ
weave — ಕ್ರಿ ನೇಯು (ಅವನು ನೆಯ್ದ ಬಟ್ಟೆ), ಹೆಣೆ (ಬುಟ್ಟಿ ಹೆಣೆ)
weaver — ನಾ ಸಾಲಿಗ,ನೇಕಾರ,ಜಾಡ, ಜೇಡ
weaving — ನಾ ನೇಗೆ, ನೆಯ್ಗು (ನೆಯ್ಗು ಕೆಲಸ; ನೆಯ್ಗುಯವನು; ನೆಯ್ಗು ಹುಳ) ನೇಯ, ಜಾಡಿಕೆ
web — ನಾ ಪರಿ (ಜೇಡನ ಪರಿಯಲ್ಲಿ ಬಿದ್ದ ನೊಣ), ಬಲೆ (ಸಾಲಿಗನ ಬಲೆ)
wed — ಕ್ರಿ 1 ಮದುವೆಯಾಗು 2 ಸೇರಿಸು
wedding — ನಾ ಮದುವೆ (ಮಗಳ ಮದುವೆ; ಮದುವೆ ಚಪ್ಪರ)
wedge — ನಾ ಬೆಣೆ
wedge — ಕ್ರಿ 1 ಬೇರ್ಪಡಿಸು, ಬೆಣೆಹೊಡೆ 2 ಕಿಕ್ಕಿರಿ, ತಳ್ಳು
wedlock — ನಾ ಮದುವೆಯಾಗಿರುವಿಕೆ
wee — ಗು 1 ತುಂಬಾ ಚಿಕ್ಕ 2 ಮುಂಚೆ
weed — ನಾ ಕಳೆ (ಕಳೆಕೀಳು; ಕಳೆತೆಗೆ)
week — ನಾ ಎಳ್ನಾಳು, ವಾರ
weekly — ನಾ ಎಳ್ನಾಳಿಗೆ
weep — ಕ್ರಿ ಅಳು (ಬಿಕ್ಕಿಬಿಕ್ಕಿ ಅಳು; ಅಳು ಬುರುಕ; ಗೋಳೋ ಎಂದು ಅಳು)
weeping — ನಾ ಅಕ್ಕೆ (ಮಗುವಿನ ಅಕ್ಕೆ)
weft — ನಾ 1 ಹೊಕ್ಕು (ಹಾಸುಹೊಕ್ಕು) 2 ನೆಯ್ಗೆ, ಬಟ್ಟೆ
weigh — ಕ್ರಿ ತೂಗು (ತೂಗಿನೋಡು; ಬಾಳೆ ಕೊನೆ ತೂಗುತ್ತಿದ್ದಾರೆ)
weighing — ನಾ ತೂಗಿಕೆ
weight — ನಾ ಬಳುವು (ಈ ಗೊನೆಯ ಬಳುವೆಷ್ಟು?), ಬಿಣ್ಪು (ಬಿಣ್ಪೇರು), ತೂಕ (ತೂಕಮಾಡು; ತೂಕದ ಗುಂಡು), ತಿಣ್ಣ (ತಿಣ್ಣವಾಗು)
weighty — ಗು 1 ತುಂಬಾ ತೂಕದ 2 ಹೊರೆಯಾದ 3 ಹೆಚ್ಚುಗಾರಿಕೆಯ
weir — ನಾ 1 ಒಡ್ಡು, ಕಟ್ಟು (ಹೊಳೆಯ ನೀರನ್ನು ತಡೆಯಲು ಕಟ್ಟು ಕಟ್ಟಿದ್ದಾರೆ) 2 ಮೀನುಬೇಲಿ (ಮೀನು ಹಿಡಿಯಲು ಹಳ್ಳಕ್ಕೆ ಮೀನುಬೇಲಿ ಹಾಕಿದ್ದಾರೆ)
weird — ಗು ಗುಂಬವಾದ, ತಬ್ಬಿಬ್ಬಾಗಿಸುವ, ಗಾಳಿಗನ
welcome — ನಾ ನಲ್ಬರವು (ಆತ ನಲ್ಬರವು ಕೋರಲು ಬಾಗಿಲಿಗೆ ಬಂದ)
welcome — ಕ್ರಿ ಎದುರುಗೊಳ್ಳು (ನಮ್ಮನ್ನು ಎದುರುಗೊಳ್ಳಲು ಹೊರಗೆ ಬಂದಿದ್ದಾರೆ), ಈಸಿಕೊಳ್ಳು (ಆತ ಇದಿರೆದ್ದು ಈಸಿಕೊಂಡ) ಕ್ರಿ ಬೆಸೆ (ಬೆಸೆದು ಕೂಡಿಸು; ಬೆಸೆತ; ಬೆಸೆದ ಒರೆ; ಬೆಸುಗೆ - ಬೆಸುಗೆಹಾಕು)
welfare — ನಾ 1 ಹದುಳ, ನೆಮ್ಮದಿ 2 ಆಳ್ವಿಕೆಯ ಕೊಡುಗೆ (ಕೆಲಸವಿಲ್ಲದವರಿಗೆ ಆಳ್ವಿಕೆಯ ಕೊಡುಗೆಯಿದೆ)
well — ನಾ ಗುಂಡಿ (ನೀರಗುಂಡಿ), ಹೊಂಡ, ಚಿಲುಮೆ (ನೀರ ಚಿಲುಮೆ)
well-being — ನಾ ಪದುಳಿಕೆ,ಹದುಳ (ಹದುಳವಿದ್ದೀರೋ?; ಹದುಳಿಗ), ನೆಮ್ಮದಿ
well-known — ಗು ಮಂದಿ ತಿಳಿದ, ಹೆಸರಾದ (ಇವರು ತುಂಬಾ ಹೆಸರಾದ ಅರಿವಿಗರು)
well-off — ಗು ಕುದುರಿದ (ಕುದುರಿದ ಬಾಳ್ವೆ), ಏಳಿಗೆ ಹೊಂದಿದ
well-wisher — ನಾ ನಲ್ಬಯಕೆಯವನು
welt — ನಾ ಬಾವು (ಬಾವು ಏಳು), ಊತ, ಬಾಸುಂಡೆ
welter — ನಾ ಗೊಂದಲ, ತಬ್ಬಿಬ್ಬು
wend — ಕ್ರಿ ಮುಂದೆ ಸಾಗು
west — ನಾ ಪಡು (ಪಡುಗಲು; ಪಡುಬೆಟ್ಟ; ಪಡುನೇಸರು; ಪಡುವ; ಪಡುವಲ), ಕೊಡಗ (ಕೊಡಗಲು)
west wind — ನಾ ಕೋಡೆ (ಕೋಡೆಯ ಚಳಿ; ಕೋಡೆಗದ್ದೆ)
western — ಗು ಪಡುವಣ (ಪಡುವಣ ಮನೆ)
wet — ಕ್ರಿ ನಾನು,ತೊಯ್ಯು (ಮಳೆಯಲ್ಲಿ ತೊಯ್ದ ಹುಡುಗ), ತೋಯು
wet — ಗು ಒದ್ದೆ (ಮಳೆಯಿಂದ ಬಟ್ಟೆ ಒದ್ದೆ ಯಾಯಿತು; ಒದ್ದೆಬಟ್ಟೆ), ತಡಿ (ತಡಿಪುಡಿ), ತಂಗಲು (ತಂಗಲು ನೆಲ)
wetness — ನಾ ನನೆಹ,ಇರಹ
wet-nurse — ನಾ ಮೊಲೆಯೂಡುವ ತೊತ್ತು
whack — ಕ್ರಿ ಪಳಾರನೆ ಹೊಡೆ
wharf — ನಾ ಹಡಗುಕಟ್ಟೆ, ಗೋದಿ
wheedle — ಕ್ರಿ ಹೊಗಳಿ ಒಲಿಸು
wheel — ನಾ ಗಾಲಿ, ಬಂಡಿ,ಉರುಳು,ತಿಗುರಿ (ಕೋವನ ತಿಗುರಿ), ಪಾರುಂಬಳೆ
wheelbarrow — ನಾ ಕಯ್ಗಾಡಿ
wheelwright — ನಾ ಗಾಲಿಕಾರ
wheeze — ಕ್ರಿ ಏದುಸಿರು ಬಿಡು, ಮೇಲುಸಿರು ಬಿಡು
whelp — ನಾ ಮರಿ (ನಾಯಿಮರಿ; ಹುಲಿಮರಿ) ಕ್ರಿ ಮಸೆ (ಕತ್ತಿ ಮಸೆ; ಮಸಗು), ತೀಡು
whetstone — ನಾ ಮಸೆಕಲ್ಲು
whey — ನಾ ತಿಳಿಮಜ್ಜಿಗೆ
whiff — ನಾ ಬೀಸು (ಹೊಗೆಯ ಬೀಸು ಇಲ್ಲಿ ವರೆಗೆ ಬಂದಿದೆ)
while — ನಾ ಮೋಸಗಾರಿಕೆ
whim — ನಾ ಹುಚ್ಚಾಟಿಕೆ, ಹುಚ್ಚು ಅನಿಸಿಕೆ
whimper — ಕ್ರಿ ಬಿಕ್ಕು (ಅಷ್ಟು ಹೊತ್ತಾದರೂ ಅವಳು ಬಿಕ್ಕುವುದು ನಿಂತಿರಲಿಲ್ಲ)
whine — ಕ್ರಿ ದೂರಿಡು, ಊಳಿಡು, ಕಿರುಚು
whinny — ಕ್ರಿ ಕೆನೆ (ಮೆತ್ತಗೆ ಕೆನೆ), ಕಿಳಿರು
whip — ನಾ ಕೊರಡ (ಕೊರಡದಲ್ಲಿ ಹೊಡೆ),ಚಾವಟಿ,ಚಾಟಿ (ಚಾಟಿಯ ಏಟು)
whip — ಕ್ರಿ 1 ಬಾರಿಸು (ಆ ಹುಡುಗನಿಗೆ ನಾಲ್ಕು ಬಾರಿಸಬೇಕಿತ್ತು) 2 ಕಲಕು, ಕಡೆ (ಮೊಸರು ಕಡೆ) 3 ಸೆಳೆ (ಕತ್ತಿ ಸೆಳೆ) 4 ಸುಂದು (ನೂಲು ಸುಂದು), ಸುತ್ತು 5 ಸಳ್ಳಕ ಹೊಲಿ 6 ಸೋಲಿಸು
whirl — ಕ್ರಿ ದೊಮ್ಮಳಿಸು, ಕೊರೆ (ಕುಳಿತಲ್ಲೇ ಕೊರೆದು ನೋಡಿದ), ತಿರುಗು (ತಲೆ ತಿರುಗಿತು)
whirling — ನಾ ಗಿರಕಿ (ಗಿರಕಿ ಹೊಡೆ),ಗಿರಿಕೆ
whirlingly — ಗು ಗರಗರನೆ (ಗರಗರನೆ ತಿರುಗು), ಗಿರಿಗಿರಿ (ಗಿರಿಗಿರಿ ಸುತ್ತು)
whirlpool — ನಾ ಸುಳಿ (ನೀರಿನ ಸುಳಿ),ಪೊರ್ಕುಳಿ (ಪೊರ್ಕುಳಿಯಲ್ಲಿ ಸುತ್ತಿ ತಿರುಗುವ ನೀರು)
whirlwind — ನಾ ಸುಳಿಗಾಳಿ,ಸುಂಟರ ಗಾಳಿ
whisker — ನಾ 1 ಗಡ್ಡ 2 ಕೆನ್ನೆಗೂದಲು
whisk — ಕ್ರಿ 1 ಕೊಡವು, ಸರಕ್ಕನೆ ಅಲ್ಲಾಡಿಸು 2 ಸರಕ್ಕನೆ ಎತ್ತಿಕೊಂಡು ಹೋಗು
whisper — ನಾ ಪಿಸುಮಾತು, ಪಿಸುನುಡಿ, ಕಿವಿಮಾತು, ಗುಜುಗುಜು (ಗುಜುಗುಜಿಸು; ಗುಜುಗುಟ್ಟು)
whisper — ಕ್ರಿ ಪಿಸುಗುಟ್ಟು (ಕಿವಿಯಲ್ಲಿ ಅದೇನೋ ಪಿಸುಗುಟ್ಟುತ್ತಿದ್ದ), ಪಚ್ಚು (ನೀನು ನಿನ್ನೆ ಪಚ್ಚುತ್ತಿದ್ದುದೇನನ್ನು? ಪಚ್ಚು ನುಡಿ)
whistle — ನಾ ಸಿಳ್ಳು (ಸಿಳ್ಳುಹೊಡೆ; ಸಿಳ್ಳುಹಾಕು; ಸಿಳ್ಳುಲಿ), ಪೀಪಿ (ಎಲೆ ಪೀಪಿ)
whit — ನಾ ಚಿಕ್ಕ ಚೂರು
white — ಗು ಬೆಳ್ಳಗೆ (ಬೆಳ್ಳಗೆ ತಿಕ್ಕಿತೊಳೆ), ಬೆಳತಿಗೆ (ಬೆಳತಿಗೆ ಅಕ್ಕಿ), ಬೆಳ್- (ಬೆಳ್ದಿಂಗಳು, ಬೆಳ್ಮುಗಿಲು),ಬಿಳಿ (ಬಿಳಿಗಡ್ಡ)
white ant — ನಾ ಗೆದ್ದಲು (ಗೆದ್ದಲು ಹುತ್ತ), ಒರಳೆ (ಒರಳೆ ಹಿಡಿದ ಹಲಿಗೆ) ant (winged) ನಾ ಈಚಲು (ಈಚಲು ಹುಳ)
white heat — ನಾ ಬಿಳಿಗಾವು
white patch — ನಾ ಸಿಬ್ಬ (ಅವನ ಮಯ್ಮುೀ ಲೆಲ್ಲ ಸಿಬ್ಬ ಬಿದ್ದಿದೆ)
white stone — ನಾ ಬೆಣಚು (ಬೆಣಚು ಕಲ್ಲು)
whiten — ಕ್ರಿ ಬೆಳರು(ಬೆಳರಿದ ಮೋರೆ)
whiteness — ನಾ ಬಿಳುಪು (ಮುಪ್ಪಿನಿಂದ ಬಿಳುಪಾದ ಕೂದಲು)
whittle — ಕ್ರಿ ಹೆರೆ (ಕತ್ತಿಯಿಂದ ಹೆರೆದು ತೆಳ್ಳಗೆ ಮಾಡು), ಕೆತ್ತು
whole — ಗು ಇಡಿ (ಇಡೀ ಊರೇ ಅಲ್ಲಿ ನೆರೆ ದಿದೆ; ಇಡೀ ಹಣ್ಣು; ಇಡಿಗಾಯಿ)
wholesale — ನಾ ಮೊತ್ತದ ಮಾರಾಟ, ಇಡೀ ಮಾರಾಟ, ಒಟ್ಟುಗಟ್ಟಲೆ
wholesome — ಗು ಮಯ್ಯೊಳಿತಿನ (ಮಯ್ಯೊಳಿ ತಿನ ತಿನಿಸು), ಒಂಟು (ಒಂಟುಣಿಸು)
whooping cough — ನಾ ನಾಯಿಕೆಮ್ಮು
whore — ನಾ ಸೂಳೆ, ಬೆಲೆವೆಣ್ಣು, ಹಾದರಗಿತ್ತಿ
wick — ನಾ ನೆಣೆ (ಹತ್ತಿಯ ನೆಣೆ)
wicked — ನಾ ಕೇಡಿ (ಕೇಡಾಳಿ; ಕೇಡಿಗ; ಅಂದಗೇಡಿ; ತಿಳಿಗೇಡಿ),ತುಂಟ (ತುಂಟ ಕುದುರೆ)
wicked — ಗು ಹೊಲ್ಲ (ಹೊಲ್ಲಮಾತು; ಹೊಲ್ಲಮೆ)
wicker — ನಾ 1 ತೆಳುಸೆಳ್ಳು 2 ಸೆಳ್ಳು ಹೆಣಿಗೆ
wicket — ನಾ 1 ಕಿರುಬಾಗಿಲು 2 ಕಿಂಡಿ
wide — ಗು ಅಗಲ (ಅಗಲ ಹಣೆ; ಅಗಲ ಎದೆ; ಅಗಲು (ಅಗಲಿದ ಕಣ್ಣುಗಳು)
wide-awake — ಗು ತವೆ ಎಚ್ಚತ್ತ
widen — ಕ್ರಿ ಅಗಲಿಸು, ಹಿಗ್ಗಲಿಸು (ಕಣ್ಣು ಹಿಗ್ಗಲಿಸು)
widow — ಕ್ರಿ ಮೋಚು (ಮೋಚಿದ ಹೆಣ್ಣು; ಮಂಡೆಮೋಚು)
width — ಗು ಅಡ್ಡಗಲ (ಬಟ್ಟೆಯ ಅಡ್ಡಗಲ ಸಾಕಶ್ಟಿದೆ), ಅಗಲ (ಈ ಹಲಿಗೆಯ ಅಗಲ ಎಶ್ಟಿದೆ?), ಇಂಬ
wield — ಕ್ರಿ 1 ಅಳವುಬಳಸು 2 ಚೆಚ್ಚರಿಕೆ ಯಿಂದ ಬಳಸು
wieldy — ಗು ಸಾವಗಿಸಬಲ್ಲ, ಅಸಕೊಳ್ಳಬಲ್ಲ
wife — ನಾ ಮಡದಿ (ಮಡದಿಮಕ್ಕಳು),ಹೆಂಡತಿ (ಹೋರುವ ಹೆಂಡತಿ)
wig — ನಾ ಮಾರ್ಕೂದಲು
wiggle — ಕ್ರಿ ಅಲುಗಾಡಿಸು ಗು ಕಾಡು (ಕಾಡುಕುರಿ, ಕಾಡುಕೋಳಿ; ಕಾಡುನುಡಿ), ಗಾರು (ಗಾರುಗೆಲಸ; ಗಾರು ನುಡಿ, ಕಾಳು (ಕಾಳುಮಾತು)
wilderness — ನಾ ಮರಳುಗಾಡು, ನೆಲಸುಗ ರಿಲ್ಲದೆಡೆ
wilfully — ಗು ಒಯ್ಯನೆ, ಬೇಕೆಂದೇ (ಅವಳು ಬೇಕೆಂದೇ ಅವಳು ನನ್ನನ್ನು ದೂಡಿದಳು)
will — ನಾ 1 ಸೆಲವು (ಸತ್ತವನ ಸೆಲವು) 2 ಬಯಕೆ, ಆಯ್ಕೆ 3 ನಿಲುವು 4 ಆಯ್ಕೆಯ ಅಳವು
willing — ಗು 1 ಒಡನೆಯೇ ಮಾಡುವ 2 ಒಪ್ಪುವ
wilt — ಕ್ರಿ ಬಾಡು (ಬಿಸಿಲಿಗೆ ಬಾಡಿದ ಹೂ), ಸೊರಗು (ನೀರಿಲ್ಲದೆ ಸೊರಗಿದ ಗಿಡಗಳು)
wily — ಗು ಅಜ್ಜ (ಅಜ್ಜಗಳ್ಳ), ಆಳಿಯ
wimple — ಕ್ರಿ ತೆರೆಯೇಳು
win — ಕ್ರಿ ಗೆಲ್ಲು (ಗೆದ್ದ ಎತ್ತಿನ ಮೆರವಣಿಗೆ; ಗೆಲ್ನೋಟ; ಗೆಲ್ಲಗುಳಿ; ಗೆಲ್ಲಾಳು)
wince — ಕ್ರಿ ಹಿಂದೆಸರಿ (ನೋವಿನಿಂದ ಹಿಂದೆ ಸರಿ), ಮೋರೆ ಕಿವುಚು
winch — ನಾ ಎತ್ತುಗ
wind — ನಾ ಎಲರು (ಎಲರಿನ ನಿಲ್ಲದಲೆತ; ಎಲರುಣಿ), ಗಾಳಿ (ಗಾಳಿತುಂಬಿಸು; ಗಾಳಿ ಹಾಕು), ಗರುವಲಿ
wind — ಕ್ರಿ ಸುತ್ತು (ಸುತ್ತಿಡು; ಸುತ್ತುಕಟ್ಟು; ಸುತ್ತುಡಿಗೆ)
wind up — ಕ್ರಿ 1 ಮುಗಿಸು, ಕೊನೆಗೊಳಿಸು 2 ಕೆರಳಿಸು
windfall — ನಾ ಎದುರುನೋಡದ ಪಡೆತ
winding — ನಾ ಮುರಿವು
winding — ಗು ತಿರುಗುವ, ಸುತ್ತುವ (ಸುತ್ತುವ ಹಾದಿ)
wind-mill — ನಾ ಗಾಳಿಗಿರಣಿ
window — ನಾ ಕಿಂಡಿ (ಬೆಳಕಿಂಡಿ)
windpipe — ನಾ ಉಸಿರಕೊಳವೆ
windshield — ನಾ ಗಾಳಿತಡೆ
windy — ಗು 1 ಗಾಳಿಬೀಸುವ 2 ಹುರುಳಿಲ್ಲದ 3 ಹೊಗಳಿಕೊಳ್ಳುವ
wing — ನಾ ರೆಕ್ಕೆ (ರೆಕ್ಕೆಹುಳ; ರೆಕ್ಕೆ ಇರುವೆ),ಗರಿ,ಎರಕೆ
wink — ಕ್ರಿ ಚಿಮುಟು (ಕಣ್ಣು ಚಿಮುಟು), ಕುಕ್ಕು (ಕಣ್ಣುಕುಕ್ಕು), ಮಿಟುಕಿಸು (ಕಣ್ಣು ಮಿಟು ಕಿಸು)
winning — ನಾ 1 ಗೆಲುಗೆ (ಆತನ ಗೆಲುಗೆ ಯಲ್ಲಿ ನನ್ನದೂ ಪಾಲಿದೆ) 2 ಕಂಗೊಳಿ ಸುವ, ಸೆಳೆವ ಕ್ರಿ ಕೇರು (ಕೇರುವ ಮೊರ), ಗೇರು (ಅಕ್ಕಿ ಗೇರುವ ಹೆಂಗಸು; ಗೆರಸೆ), ತೂರು (ಬತ್ತ ತೂರಿಸಬೇಕು),ತೆಂಟು, ಒನೆ (ಅಕ್ಕಿ ಒನೆಯುವುದು), ಕೊಚ್ಚು (ಕೊಚ್ಚಕ್ಕಿ)
winnowing basket — ನಾ ಮೊರ (ಮೊರ ದಲ್ಲಿ ಹಾಕಿರುವ ಜೋಳ; ಮೊರಗಿವಿ), ಗೆರಸೆ (ಒಂದು ಗೆರಸೆ ತುಂಬ ಅಕ್ಕಿ ಕೊಟ್ಟ)
winter — ನಾ ಚಳಿಗಾಲ
wintry — ಗು ಚಳಿ, ಮಬ್ಬಾದ, ಹೊಂಪಳಿದ
wipe — ಕ್ರಿ ನೀವು (ಬೆವರ ಹನಿಗಳನ್ನು ನೀವುತ್ತಾ ಹೇಳಿದ), ಒರಸು (ಒದ್ದೆ ಕಾಲನ್ನು ಒರಸಿ ಒಳಗೆ ಬನ್ನಿ), ಬಳಿ (ಎಣ್ಣೆ ಬಳಿ), ಸೀಟು (ಸೀಟಿ ತೆಗೆ), ತೊಡೆ (ಕಾಲನ್ನು ತೊಳೆದು ಬಟ್ಟೆಯಲ್ಲಿ ತೊಡೆದ)
wire — ನಾ ಸರಿಗೆ (ಚಿನ್ನದ ಸರಿಗೆ), ಕಂಬಿ (ಅಕ್ಕಸಾಲೆ ಚಿನ್ನದ ಕಂಬಿ ಎಳೆಯುತ್ತಿದ್ದಾನೆ; ಪೊಂಗಂಬಿ; ಕಂಬಿಚ್ಚು)
wiry — ಗು ಸಣಕಲು, ಗಟ್ಟಿಮುಟ್ಟು, ಕಂಬಿ ಯಂತಿರುವ
wisdom — ನಾ ತಿಳುವಳಿಕೆ, ಜಾಣ್ಮೆ
wise — ಗು ತೀರ್ಪುಕೊಡಬಲ್ಲ, ತಿಳುವಳಿಕೆ ಯುಳ್ಳ, ಜಾಣ್ಮೆಯ
wisecrack — ನಾ ಜಾಣ್ಣುಡಿ
wish — ನಾ ಹಂಬಲ (ತವರಿನ ಹಂಬಲ; ಹಂಬ ಲಿಸು), ಮುಗುಸು (ಆತನ ಮುಗುಸೇನು?), ಕದ್ದಿ (ಕದ್ದಿಕಾರ)
wish — ಕ್ರಿ ಕೋರು (ಕೋರಿಕೆ; ಅವನು ಏನು ಕೋರಿದ?), ಬಯಸು (ನೀವು ಬಯಸಿದ್ದ ನ್ನೆಲ್ಲ ಕೊಡಬಲ್ಲೆ; ಬಯಕೆ)
wisp — ನಾ 1 ಹುಲ್ಲಕಂತೆ 2 ನವುರು 3 ತೆಳು ಪರೆ (ಹೊಗೆಯ ತೆಳು ಪರೆ)
wistful — ಗು ಹಾತೊರೆಯುವ, ಬಯಸುವ
wit — ನಾ 1 ಓರುವಳವು 2 ಜಾಣ್ಣುಡಿ ನುಡಿ ವಳವು
witchcraft — ನಾ ಮಾಟ (ಮಾಟಮಾಡು; ಮಾಟಗಾರ)
withdraw — ಕ್ರಿ ಹಿಮ್ಮೆಟ್ಟು (ಆತ ಕಣದಿಂದ ಹೆಮ್ಮೆಟ್ಟಿದ), ಹಿಂದೆ ಸರಿ, ಹಿಂದೆಗೆ (ಕಾಳಗ ದಿಂದ ಹಿಂದೆಗೆ)
wither — ಕ್ರಿ ಬಾಡು (ಬಾಡಿದ ಹೂವು), ಸೊರಗು (ಕುಂಬಳ ಬಳ್ಳಿ ನೀರಿಲ್ಲದೆ ಸೊರಗಿದೆ), ಮಗ್ಗು (ಮಗ್ಗಿದ ಗಿಡಗಳು), ತಾರು (ತಾರಿದ ಆಕಳು; ತಾರಿದ ಮುದುಕ; ತಾರಹೊಯ್ಯು; ತಾರೆಲೆ)
withered — ನಾ ಈಚು (ಈಚುಹೋದ ಕಾವು)
withhold — ಕ್ರಿ ತಡೆಹಿಡಿ (ಆತನನ್ನು ತುಸು ಹೊತ್ತಾದರೂ ತಡೆಹಿಡಿಲಿುರಿ), ನಿಲ್ಲಿಸು ಕ್ರಿ ತಾಳು (ಬಂದ ತೊಂದರೆ ಗಳನ್ನೆಲ್ಲ ತಾಳಬಲ್ಲವನು), ಎದುರಿಸು
witness — ನಾ ನೋಟಕ
witticism — ನಾ ಜಾಣ್ಣುಡಿ, ಚಲ್ಲನುಡಿ
witty — ಗು ಕಯ್ಮೆಯ (ಕಯ್ಮೆಯ ಮಾತು), ತಕ್ಕಿನ, ಜಕ್ಕುಳಿಸುವ
wizard — ನಾ ಮಾಟಗಾರ
wizened — ಗು ಒಣಗಿದ, ಬಾಡಿದ, ಸುಕ್ಕು ಗಟ್ಟಿದ
wobble — ಕ್ರಿ ಓಲಾಡು (ಓಲಾಟ), ತೂರಾಡು (ನಡುದಾರಿಯಲ್ಲಿ ಓಲಾಡುತ್ತಾ ಹೋಗು ತ್ತಿದ್ದ)
woe — ನಾ ಕಟ್ಟಳಲು, ತೊಂದರೆ (ಆತ ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದಾನೆ)
woebegone — ಗು ಮಂಕು ಕವಿದ, ತರುವಲಿ ಯಾದ
wolf — ನಾ ತೋಳ
woman — ನಾ ಪಡತಿ,ಹೆಂಗಸು, ಹೆಣ್ಣು, ಪೆಂಡ
womb — ನಾ ಕುಳುಮೆ, ಬಸುರು (ಬಸುರು ನಿಲ್ಲು, ಬಸುರು ತುಂಬು), ಪೊಡೆ (ಪೊಡೆ ಗೊಳ್ಳು; ಪೊಡೆದುಂಬು)
wonder — ನಾ ಎಕ್ಕಟೆ (ಎಕ್ಕಟೆಯಿಂದ ನನ್ನನ್ನೇ ನೋಡುತ್ತಿದ್ದ), ಬೆರಗು, ಒಗಸುಗ
wonder — ಕ್ರಿ 1 ಬೆರಗಾಗು 2 ಅರೆಮರಿಕೆ ಯಿರು, ತಿಳಿಯಬೇಕೆಂದಿರು
wonderful — ಗು 1 ಬೆರಗುಗೊಳಿಸುವ 2 ತುಂಬಾ ಚನ್ನಾಗಿರುವ
woo — ಕ್ರಿ ಓಲಯ್ಸು, ಒಲಿಸಪೂನು
wood — ನಾ 1 ಮರ (ಮರದ ಮಂಚ), ಮೋಪು (ಮೋಪುಗಾರಿಕೆ; ಮನೆ ಕಟ್ಟಲು ಬೇಕಾದ ಮೋಪುಗಳು)2 ತೋಪು (ಅರಸು ಬೇಟೆಯಾಡಲು ತೋಪಿಗೆ ಹೋದ)
woodpecker — ನಾ ಮರಕುಟಿಗ
woodwork — ನಾ ಮರಗೆಲಸ
wood-worm — ನಾ ಕುಟ್ಟೆ (ಮೇಜಿನ ಹಲಿಗೆಗೆ ಕುಟ್ಟೆ ಹಿಡಿದಿದೆ; ಕುಟ್ಟೆಹುಳ)
woof — ನಾಹೊಕ್ಕು (ಮಗ್ಗದ ಹೊಕ್ಕು), ಅಡ್ಡಣಿ
wool — ನಾ ಬಂಡೆ (ಕುರಿಬಂಡೆ), ಉಣ್ಣೆ,ತುಪ್ಪಟ, ತುಪ್ಪುಳು (ಮೊಲದ ತುಪ್ಪುಳು)
woollen — ಗು ಉಣ್ಣೆಯ (ಉಣ್ಣೆಯ ಬಟ್ಟೆ)
word — ನಾ ಸೊಲ್ಲು (ಸೊಲ್ಲುವೆಣ್ಣು) ಮಾತು (ಮಾತಾಳಿ; ಮಾತಿಗ; ಮಾತಿಲಿ), ಇಂಬು (ಇಂಬುಕೆಯ್; ಅವನಾಡಿದ ಇಂಬು) ನಾ ಒಕ್ಕಣೆ (ಒಕ್ಕಣಿಸು), ಪದ ಬಳಕೆ, ಮಾತುಗಾರಿಕೆ
work — ನಾ ಬೆಸ (ಬೆಸಮಾಡು; ಬೆಸಹೇಳು; ಬೆಸಸು), ಮಾಟ (ಮಾಟಗೂಲಿ), ಕೆಲಸ (ಕೆಲಸಕ್ಕೆ ಬರು; ಕೆಲಸ ಮಾಡು; ಕೆಲಸ ಕೊಡು), ಗೆಯ್ಮು (ಗೆಯ್ಮೆಯಿಲ್ಲದ ಹೊತ್ತು), ಗೇಮೆ, ತುಳಿಲು (ತುಳಿಲ್ಸಲ್ಲು; ತೊಳ್ತು), ಹೋರೆ (ಹೋರೆಯಿಲ್ಲದೆ ಮನೆಯಲ್ಲೇ ಕುಳಿತಿದ್ದ), ಜಂಬರ (ಅವನಿಗೇನೂ ಜಂಬರ ಇಲ್ಲ), ಜೋಲಿ (ಈ ಜೋಲಿ ನಮಗೇಕೆ?), ಊಳಿಗ, ಹೊರಿಗೆ (ಹೊರಿಗೆವಾಳ), ಕೆಯ್ತ (ಕೋಡಗನ ಕೆಯ್ತ), ಚಟುವಟಿಕೆ (ಆತನ ಚಟುವಟಿಕೆಗಳ ಮೇಲೆ ಕಣ್ಣಿರಿಸಿದ್ದೇವೆ)
work — ಕ್ರಿಗೆಯ್ಯು (ಕೆಲಸ ಗೆಯ್ಯು; ಎಂದೂ ಗೆಯ್ಯದ ನೆಲ; ಗೆಯ್ವೊಕ್ಕಲಿಗ), ದುಡಿ
workable — ಗು ಮಾಡಬಲ್ಲ, ತೀರುವ (ತೀರುವ ಕೆಲಸ)
workaholic — ಗು ದುಡಿಮೆಯ ಗೀಳು ಹಿಡಿದ
workbook — ನಾ ಚಟುವಟಿಕೆ ಹೊತ್ತಗೆ
worker — ನಾ ಕೂಲಿಗಾರ,ಕೆಲಸಗಾರ, (ಕೆಲಸ ಗಿತ್ತಿ), ಕೆಲಸಿಗ,ಗೆಯ್ಯಾಳು, ಬದಗ
workmanship — ನಾ ಕೆಲಸದ ಜಾಣ್ಮೆ
workshop — ನಾ ಕಮ್ಮಟ
world — ನಾ 1 ನೆಲ, ನೆಲತೆರಳೆ 2 ಮಂದಿ
worm — ನಾ ಎರೆ (ಎರೆಮಡ್ಡಿ; ಎರೆಹುಳ),ಹುಳ (ಹುಳಹಿಡಿ; ಹುಳಹತ್ತು)
worm-eaten — ಗು ಹುಳುಕು (ಹುಳುಕು ಹಲ್ಲು; ಹುಳುಕಲು)
worn out — ಗು ಸವಕಳಿ (ಸವಕಳಿ ಗುದ್ದಲಿ), ಸವಕಲು (ಸವಕಲು ಕತ್ತಿ), ಕೋರಿ
worry — ನಾ ತೊಂದರೆ (ತೊಂದರೆ ಕೊಡು), ತಳಮಳ, ತಲ್ಲಣ, ಬೇವಸ
worship — ಕ್ರಿ ಕೊಂಡಾಡು
worsted — ನಾ ಗಟ್ಟಿ ಉಣ್ಣೆ, ನುಣುಪು ಉಣ್ಣೆ
worth — ನಾ ಬೆಲೆ, ಹೆಚ್ಚುಗಾರಿಕೆ, ಸೊಮ್ಮು
worthless — ಗು ಬರಡು (ಬದುಕು ಬರಡಾ ಯಿತು),ಜಳ್ಳು (ಜಳ್ಳು ಮಾತು),ಜಾಳು
worthy — ಗು ಬೆಲೆಯುಳ್ಳ, ತಕ್ಕ
wound — ನಾ ಏರು (ಇರಿತದ ಏರು; ಕತ್ತಿಯ ಏರು),ಗಾಸಿ (ಗಾಸಿಗೊಳ್ಳು; ಗಾಸಿಯಾಗು)
wound — ಕ್ರಿ ಏರ್ಪೆರು (ಏರ್ಪೆತ್ತವರನ್ನು ಎತ್ತಿನ ಬಂಡಿಯಲ್ಲಿ ಸಾಗಿಸಬೇಕು), ಏರ್ವಡೆ (ಹೋರಾಟದಲ್ಲಿ ಹಲವಾರು ಮಂದಿ ಏರ್ವಡೆದಿದ್ದರು), ಗಾಸಿಯಾಗು
wrangle — ಕ್ರಿ 1 ಕಚ್ಚಾಡು, ಬೊಬ್ಬಿಡು, ಬಕ್ಕುಡಿಗೆಯ್ಯು 2 ಎಬ್ಬು, ಎಬ್ಬಟ್ಟು (ಆಕಳು ಗಳನ್ನು ಎಬ್ಬಟ್ಟಿಕೊಂಡು ಹೋದ) ಕ್ರಿ ಹೊದೆ (ಕಂಬಳಿ ಹೊದೆ), ಮುಚ್ಚು, ಸುತ್ತು, ಸುಂದು (ಬಟ್ಟೆ ಸುಂದು), ಮುರಿ (ಮುರಿಗೆ - ಹೆಡಮುರಿಗೆ - ಅವನ ಕಯ್ಗ ಳನ್ನು ಹೆಡಮುರಿಗೆ ಕಟ್ಟಿದರು)
wrapper — ನಾ ಹೊದಿಕೆ,ಗವಸಣಿಗೆ
wrap-up — ನಾ ಮುಕ್ತಾಯ, ಕೊನೆಮಾತು
wrath — ನಾ ಸಿಡುಕು (ಸಿಡುಕು ಮೋರೆ)
wreak — ಕ್ರಿ ಹಾವಳಿ ಮಾಡು, ಸಿಟ್ಟಿನಲ್ಲಿ ಕೆಡವು
wreath — ನಾ ತಿರುಚುಬಳಸಿ
wreck — ಕ್ರಿ 1 ಹಾಳುಮಾಡು, ಒಡೆದು ಹಾಕು 2 ಮಯ್ಕೆಡಿಸಿಕೊಳ್ಳು
wreckage — ನಾ ಒಡೆದುಳಿಕೆ
wrench — ನಾ ತಿರಿಚುಳಿ
wrench — ಕ್ರಿ 1 ಬಲ್ಮೆಯಿಂದ ಎಳೆ, ತಿರುಚು 2 ಉಳುಕು 3 ಉರುಗಿಸು (ಹುರುಳನ್ನು ಉರುಗಿಸು)
wrest — ಕ್ರಿ 1 ಎಳೆ, ದೂಡು 2 ಬಲ್ಮೆಯಿಂದ ತೆಗೆದುಕೊಳ್ಳು, ಕಿತ್ತುಕೊಳ್ಳು.
wrestle — ಕ್ರಿ ಹೋರು (ಹೋರಾಡು)
wrestler — ನಾ ಮಲ್ಲ,ಜಟ್ಟಿ (ಜಟ್ಟಿ ಕಾಳಗ; ಜಟ್ಟಿಗ; ಜಟ್ಟಿಹಿಡಿತ),ಹೋರುಕುಳಿ
wrestling school — ನಾ ಗರಡಿ (ಗರಡಿ ಯಲ್ಲಿ ಕಲಿತವರು)
wretched — ಗು ತರುವಲಿ (ಆ ತರುವಲಿ ಮುದುಕಿ ಇನ್ನೊಮ್ಮೆ ಹಣ ಕೇಳಲು ಬಂದಿ ದ್ದಾಳೆ)
wriggle — ಕ್ರಿ ಜಾರಿಕೊಳ್ಳು, ನುಣುಚಿಕೊಳ್ಳು, ತಿರುಚಿಮುರುಚು
wring — ಕ್ರಿ ತಿರುಚು (ನನ್ನ ಕಯ್ಯನ್ನು ತಿರುಚು ತ್ತಿದ್ದಾನೆ), ಹಿಂಡು (ನೀರು ಹಿಂಡು)
wringer — ನಾ ನೀರುಹಿಂಡುಗ
wrinkle — ನಾ ಸುಕ್ಕು (ಸುಕ್ಕುಗಟ್ಟು; ಸುಕ್ಕುಬೀಳು), ತೆರೆ (ಗಲ್ಲದ ತೆರೆ; ತೆರೆ ದೊಗಲು)
wrist — ನಾ ಪಗರು (ಪಗರಿಗೆ ಕಟ್ಟಿದ ನೂಲು), ಮಣಿಕಟ್ಟು (ಆತನಿಗೆ ಮಣಿಕಟ್ಟು ನೋಯು ತ್ತಿದೆ),ಹದಡು (ಹದಡು ಬಾತಿದೆ)
write — ಕ್ರಿ ಬರೆ (ಬರೆದ ಬರಹ; ಬರೆದಿಡು)
writer — ನಾ ಬರಹಗಾರ
writhe — ಕ್ರಿ ಹೊರಳಾಡು (ನೋವಿನಿಂದ ಹೊರಳಾಡು), ಒದ್ದಾಡು, ನರಳು
writing — ನಾ ಬರಹ (ಬರಹಗಾರ, ಬರಹಗಾರ್ತಿ) ಬರವಣಿಗೆ (ಬರವಣಿಗ)
wrong — ಗು ತಪ್ಪು (ತಪ್ಪುಕೆಲಸ; ತಪ್ಪುಹೆಜ್ಜೆ) ಗು ಪರಿಜುಕೊಟ್ಟ, ಮಾಡಿದ
wry — ಗು ಸೊಟ್ಟ (ಸೊಟ್ಟಮೋರೆ) “
XYZ(garbled)
xanthic — ಗು ಮಂಜಳು ಬಣ್ಣದ
xenophobia — ನಾ ಹೊಸಬರ ಹಗೆತನ, ಹೊರನಾಡಿಗರ ಹೆದರಿಕೆ
xerox — ನಾ ನೆರಳಚ್ಚು (ನೆರಳಚ್ಚು ತೆಗೆ)
x-ray — ನಾ ತೋರ್ಕದಿರು (ತೋರ್ಕದಿರ ತಿಟ್ಟ ದಲ್ಲಿ ಎಲುಬು ಕಾಣಿಸುತ್ತದೆ)
yacht — ನಾ ಓಡುದೋಣಿ, ಹಾಯಿದೋಣಿ
yam — ನಾ ಕೆಸವು
yard — ನಾ 1 ಮೂರಡಿ 2 ಕಯ್ತೋಟ
yarn — ನಾ ನೂಲು (ನೂಲುಂಡೆ; ನೂಲುಬಟ್ಟೆ)
yawl — ನಾ ಹಾಯಿ ಓಡ 2 ಹಡಗಿನ ಓಡ
yawn — ಕ್ರಿ ಆಕಳಿಸು (ಆಕಳಿಕೆ)
yean — ಕ್ರಿ ಈನು (ಈ ಎಮ್ಮೆ ಎರಡೇ ದಿನದಲ್ಲಿ ಈನುತ್ತದೆ), ಈಯು (ಈದ ಆಕಳು)
year — ನಾ ಏಡು (ಆತ ಬಂದು ಏಡು ಹತ್ತಾಯಿತು), ಸೂಳು, ಸಾಲು
yearn — ಕ್ರಿ 1 ಹಾತೊರೆ, ಹಂಬಲಿಸು (ಹಂಬಲ)
yeast — ನಾ ಹುದುಗೆಬ್ಬಿಸುವ ಅಣಬೆ
yell — ಕ್ರಿ ಬೊಬ್ಬಿರಿ, ಮೊರೆ (ಹುಲಿಯ ಬಾಯಿಗೆ ಸಿಕ್ಕಿದ ಹುಲ್ಲೆ ಮೊರೆಯುತ್ತಿತ್ತು), ಕೂಗು
yellow — ನಾ 1 ಮಂಜಳು 2 ಹೇಡಿ, ಅಂಜು ಕುಳಿ 3 ಜನೆ
yelp — ನಾ ನಾಯಿಯ ಕೂಗು
yeoman — ನಾ 1 ಗೇಣಿದಾರ 2 ಬಂಟ
yield — ನಾ ಬೆಳೆ, ಹುಟ್ಟುವಳಿ, ಪಡಪು
yield — ಕ್ರಿ 1 ಇಳಿಸು (ಕೊನೆ ಇಳಿಸಿದ ಬಾಳೆ), ಹಾಕು (ಗೊನೆ ಹಾಕು), ಈಯು 2 ಬಿಟ್ಟುಕೊಡು, ಮಣಿ, ಸೋಲೊಪ್ಪು 3 ಒಪ್ಪಿಕೊಳ್ಳು
yoke — ನಾ 1 ನೊಗ (ನೊಗ ಹೂಡು) 2 ಅಡಿಮೆ, ತುಳಿಲು ಕ್ರಿ ಹೂಡು (ನೇಗಿಲಿಗೆ ಹೂಡು)
yoking — ನಾ ಹೂಟ (ಹೂಟದ ಎತ್ತು)
yolk — ನಾ ಜನೆ (ಮೊಟ್ಟೆಯ ಜನೆ ಮಂಜಳು ಬಣ್ಣದಲ್ಲಿರುತ್ತದೆ)
young — ನಾ ಕುನ್ನಿ (ನಾಲಿುಕುನ್ನಿ), ಎಳಕು (ಆನೆ ಎಳಕಿರುವಾಗ ಕೋರೆಗಳು ಕಾಣುವುದಿಲ್ಲ), ಎಳಮೆ, ಮಣಕ (ಮಣಕೆಮ್ಮೆ), ಪಿಳ್ಳೆ (ಗುಬ್ಬಚ್ಚಿಯ ಪಿಳ್ಳೆ), ಮರಿ (ಮರಿಯಾನೆ, ಕುರಿಮರಿ; ಮರಿಹಾಕು),ಕಂದ,ಕೊಣಸು (ಜಿಂಕೆಯ ಕೊಣಸು),ಕಿರಿಯ
youth — ನಾ ಕೊಡ (ಕೊಡಗೂಸು)
zeal — ನಾ ಹುರುಪು, ಸಡಗರ
zealous — ಗು ಹುರುಪುಳ್ಳ, ಕಡಗುವ, ಕೊಸ ರುವ
zenith — ನಾ 1 ತುತ್ತತುದಿ 2 ಮೇಲ್ಬಾನು
zephyr — ನಾ 1 ಪಡುಗಾಳಿ 2 ಮೆಲ್ಲನೆ ಬೀಸುವ ಗಾಳಿ 3 ಮೆತ್ತಗಿನ ಬಟ್ಟೆ
zero — ನಾ ಮುಚ್ಚರು
zest — ನಾ ಪಸಿಲಿುಸುಗೆ, ಹಿಗ್ಗುಗೆ
zigzag — ಗು ಅಂಕುಡೊಂಕು (ಅಂಕುಡೊಂಕು ಹಾದಿ), ಅಡ್ಡಾದಿಡ್ಡಿ
zipper — ನಾ ಪತ್ತಿಗೆ (ಅವಳ ಸೀರೆ ಚೀಲದ ಪತ್ತಿಗೆಯಲ್ಲಿ ಸಿಲುಕಿಕೊಂಡಿದೆ)
zone — ನಾ 1 ಬಳಸುಪಟ್ಟಿ 2 ಪಸುಗೆ
zoo — ನಾ ಉಸುರಿಮನೆ, ಉಸುರಿಲು
zoology — ನಾ ಉಸಿರಿಯರಿಮೆ
zoom — ಕ್ರಿ ಮೇಲೆೀರು (ಗಾಳಿತೇರು ಮೇಲೆ ಮೇಲೆ ಏರುತ್ತಾ ಇದೆ), ಹಿಗ್ಗು