Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
M
macabre — ಗು ಹೆದರಿಸುವ, ಬೆಚ್ಚಿಸುವ, ದಿಗಿಲುಗೊಳಿಸುವ, ಹೇವರಿಸುವ
macadam — ನಾ ಜಲ್ಲಿಕಲ್ಲು (ಜಲ್ಲಿಕಲ್ಲಿನ ಹಾದಿ)
macaroni — ನಾ ಕೊಳವಿಸೇವಿಗೆ
macerate — ಕ್ರಿ 1 ನೆನೆಸು (ನೆನೆಸಿ ಮೆತ್ತಗೆ ಮಾಡು, ನೆನೆಸಿ ಬಿಡಿಸು) 2 ತೆಳ್ಳಗಾಗು, ಸಣಕಲಾಗು
machete — ನಾ ಮಚ್ಚುಕತ್ತಿ
machine — ನಾ ಪೆರ್ಚೂಟಿ
mackintosh — ನಾ ಮಳೆಯಂಗಿ, ನೀರಿಳಿಯದ ನಿಲುವಂಗಿ
macro — ಗು ದೊಡ್ಡ, ಉದ್ದ, ನೀಳ
mad — ನಾಮರುಳ, ಹೇಗ (ಹೇಗತನ),ಹುಚ್ಚ
mad — ಗು ಮರುಳು (ಮರುಳಾಗು, ಮರಳು ನಾಲಿು), ಪೇ (ಪೇಬಡು; ಪೇಪಂದಿ)
madden — ಕ್ರಿ ಹುಚ್ಚುಹಿಡಿಸು, ಕೆರಳಿಸು
madness — ನಾ ಹುಚ್ಚು (ಹುಚ್ಚು ಹೋಗದೆ ಮದುವೆಯಾಗದು), ಹೇಕುಳಿ (ಹೇಕುಳಿ ಗೊಳ್ಳು), ಹೇಗತನ, ಬೇಳುವೆ, ಬೇಳ್ತನ
maelstrom — ನಾ 1 ಗಡಿಬಿಡಿ, ಗೊಂದಲ 2 ದೊಡ್ಡ ನೀರಸುಳಿ
maestro — ನಾ ಕಲೆಯೆರೆಯ, ಕಲೆಯಾಣ್ಮ
mafia — ನಾ ಕೇಡಿತಂಡ
magazine — ನಾ ಗಡುಕಡತ
magenta — ಗು ಕಡುಗೆಂಪು; ಕೆನ್ನೇರಿಳೆ
maggot — ನಾ ಮರಿಹುಳು
magic — ನಾ ಕಣ್ಕಟ್ಟು, ಕಯ್ಚಳಕ, ಮಾಟ, ಮೋಡಿ ನಾ 1 ಮಾಟಗಾರ, ಕಣ್ಕಟ್ಟುಗಾರ 2 ಮೋಡಿಗಾರ
magistrate — ನಾ ತೀರ್ಪುಗಾರ
magnanimous — ಗು ಕೊಡುಗಯ್ಯ, ಕಳ ಕಳಿಯ
magnate — ನಾ ದೊಡ್ಡ ಕಯ್ವಾಡಿಗ
magnet — ನಾ ಸೆಳೆಗಲ್ಲು
magnetism — ನಾ 1 ಸೆಳೆತನ, ಸೆಳೆತ 2 ಸೆಳೆಯರಿಮೆ
magnificent — ಗು ತುಂಬಾ ಒಳ್ಳೆಯ, ತುಂಬಾ ದೊಡ್ಡ, ಚನ್ನಾಗಿರುವ
magnify — ಕ್ರಿ ಹೆಚ್ಚಿಸು (ಇದನ್ನು ನೂರು ಪಾಲು ಹೆಚ್ಚಿಸಿ ನೋಡೋಣ)
magnitude — ನಾ ಅಳವು, ಹರವು, ಪೆರ್ಮೆ
magnum opus — ನಾ ಪೆರ್ಬರಹ
mahout — ನಾ ಮಾವಟಿಗ
maid — ನಾ 1 ಹುಡುಗಿ, ಕೊಡಗೂಸು 2 ಹೆಣ್ಣಾಳು
maiden — ನಾಕೂಸು (ಕೊಡಗೂಸು; ನೆರೆದ ಕೂಸು),ಕೊಡವಿ, ಹುಡುಗಿ
maiden — ಗು ಮೊದಲನೆಯ, ಮದುವೆ ಯಾಗದ (ಹುಡುಗಿ)
mail — ನಾ ಅಂಚೆ (ಅಂಚೆಮನೆ; ಅಂಚೆಯಾಳು)
maimed — ಗು ಪೋಟು (ಪೋಟುಬೀಳು; ಪೋಟ), ಮೂಳ (ಮೂಳನಾಲಿು; ಮೂಳಗಿವಿ), ಮೋಟು (ಮೋಟುಬಾಲ, ಮೋಟುಕಿವಿ), ಕುಂಟು (ಕುಂಟುಕಾಲು)
main — ಗು ಮೊದಲನೆಯ, ಅರಿದು
mainstay — ನಾ ಅರಿದುನೆಲೆ
mainstream — ನಾ ಈಗಿನ ಒಲವು
maintain — ಕ್ರಿ 1 ಮುಂದುವರಿಸು, ಉಳಿಸು 2 ಕಾಪಾಡು, ಎತ್ತಿಹಿಡಿ, ಬೆಂಬಲಿಸು, ಒತ್ತಾಸೆ ಕೊಡು
maize — ನಾ ಮೆಕ್ಕೆಜೋಳ
majestic — ಗು ತುಂಬಾ ದೊಡ್ಡ, ಅಗ್ಗಳಿಕೆಯ, ಮೇಲ್ಮಟ್ಟದ
major — ನಾ ದೊಡ್ಡ, ಹಿರಿಯ
majority — ನಾ ಹೆಚ್ಚೆಣಿಕೆ (ನಮ್ಮವರಿಗೆ ಹೆಚ್ಚೆಣಿಕೆ ಬಂದಿದೆ)
make — ಕ್ರಿ ಮಾಡು (ಹುಡುಗ ಮಣಿನಲ್ಲಿ ಏನು ಮಾಡುತ್ತಿದ್ದಾನೆ? ಕೆಲಸಮಾಡು; ಅಡಿಗೆ ಮಾಡು; ಹಣಮಾಡು - ಆತನಿಗೆ ಹಣ ಮಾಡುವುದೊಂದೇ ತಲೆಯಲ್ಲಿ) off ಕ್ರಿ ಓಡಿಹೋಗು
make pots — ಕ್ರಿ ಬಾನು (ಕುಂಬಾರ ಆವೆಮಣ್ಣಿ ನಿಂದ ಒಂದು ಕೊಡವನ್ನು ಬಾನುತ್ತಿದ್ದಾನೆ)
make ready — ಕ್ರಿ ಅಳವಡಿಸು (ಊಟಕ್ಕೆ ಬಟ್ಟಲುಗಳನ್ನು ಅಳವಡಿಸುತ್ತಿದ್ದಾಳೆ)
make way — ಕ್ರಿ ದಾರಿಬಿಡು
make-believe — ನಾ ಮೋಸ, ತೋರ್ಕೆ, ಸೋಗು
maker — ನಾ 1 ಮಾಡುಗ 2 ಕಡವರು
makeshift — ಗು ಒಮ್ಮೆಗಿನ
make-up — ನಾ 1 ಕಟ್ಟುಗೆ 2 ಒಲವು 3 ಅಂದಗೆಯ್ಯುಗೆ
mala fide — ಗು ಕೆಟ್ಟ ಬಯಕೆಯ, ಕೆಟ್ಟೆಣಿಕೆಯ
maladjusted — ಗು ತಪ್ಪು ಹೊಂದಾಣಿಕೆಯ, ಹೊಂದಾಣಿಕೆಲಿುಲ್ಲದ
maladministration — ನಾ ಕೆಟ್ಟಾಳ್ವಿಕೆ
maladroit — ಗು ಒಡ್ಡೊಡ್ಡಾದ, ತಪ್ಪುತಪ್ಪಾದ
malady — ನಾ ಕುತ್ತ, ಬೇನೆ (ಬೇನೆಬೀಳು)
malaise — ನಾ ಒಳಗುದಿ, ಒಳಬೇನೆ, ಇರುಸು ಮುರುಸು
malaria — ನಾ ಚಳಿಬಿಸುಪು
malcontent — ಗು ತಣಿಯದ, ಒಪ್ಪದ, ಎದುರುಬೀಳುವ
male — ನಾಆಳು, ಗಂಡಸು
male — ಗು ಗಂಡು (ಗಂಡುಕೂಸು; ಗಂಡುಮಗು; ಗಂಡುಹೂವು), ಹೋರಿ (ಹೋರಿಕರು)
malediction — ನಾ ಬಯ್ಗಳು, ಉಸುರಿಡುಗೆ
malevolent — ನಾ ಕೇಡಿಗ
malevolent — ಗು ಕೇಡೆಣಿಸುವ, ಕೇಡು ಮಾಡುವ
malformation — ನಾ ತಪ್ಪುಮಾಳ್ಕೆ, ತಪ್ಪು ಪರಿಜು
malfunction — ಕ್ರಿ ಕೆಟ್ಟುಹೋಗು, ಸರಿಯಾಗಿ ನಡೆಯದಿರು
malice — ನಾ ಕೆಟ್ಟೆಣಿಕೆ, ಹಗೆತನ
malign — ಕ್ರಿ ಹೆಸರುಕೆಡಿಸು, ತಪ್ಪುಹೊರಿಸು
malignant — ಗು 1 ಕೊಲ್ಲಬಲ್ಲ, ಕಡು ಸೋಂಕಿನ 2 ಕೆಡಿಸಬಲ್ಲ
malignity — ನಾ ಕಡುಹಗೆತನ, ಕಡು ಕೆಟ್ಟೆಣಿಕೆ
malinger — ಕ್ರಿ ಕುತ್ತದ ಸೋಗುಹಾಕು ನಾ ಅಂಗಡಿಸಾಲು
malleable — ಗು 1 ಪಳಗಬಲ್ಲ 2 ಪಾಂಗು ಕೊಡಬಲ್ಲ
mallet — ನಾ ಮರದ ಸುತ್ತಿಗೆ
malnourished — ಗು ಆರಯ್ಕೆ ಸಿಗದ
malpractice — ನಾ ಕೆಟ್ಟಕೆಲಸ, ತಪ್ಪುಕೆಲಸ (ಈ ಬೇನೆ ಮಾಂಜುಗ ತಪ್ಪುಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ)
malt — ನಾ ಮೊಳೆತ ಕಾಳು, ನೆನೆಸಿದ ಕಾಳು
maltreat — ಕ್ರಿ ಕಾಡು, ತೊಂದರೆ ಕೊಡು
mammal — ನಾ ಹಾಲೂಡಿ, ಮೊಲೆಯೂಡಿ
mammary — ಗು ಮೊಲೆಯ (ಮೊಲೆಯ ಸುರಿಗೆ)
mammoth — ಗು ಬಾರೀ ದೊಡ್ಡ
man — ನಾ ಆಳು
manacles — ನಾ 1 ಕೋಳ (ಕಯ್ಕೋಳ) 2 ಅಡ್ಡಿ, ತಡೆತ, ಅಂಕೆ
manage — ಕ್ರಿ ಸಂಬಾಳಿಸು (ಅವನು ಎಲ್ಲ ವನ್ನೂ ಸಂಬಾಳಿಸುತ್ತಾನೆ), ಏಗು (ಇಂತಹ ಗಂಡನನ್ನು ಕಟ್ಟಿಕೊಂಡು ನಾನು ಏಗಬೇಕು),ತೂಗಿಸು (ತೂಗಿಸಿಕೊಂಡು ಹೋಗು)
manageable (be) — ಕ್ರಿ ಅಸಕೊಳ್ಳು (ನನ ಗೊಬ್ಬನಿಗೆ ಈ ಕುದುರೆ ಅಸಕೊಳ್ಳಲಿಕ್ಕಿಲ್ಲ)
management — ನಾ ಪಾರುಪತ್ಯ (ಮನೆಯ ಲ್ಲಲ್ಲ ಆತನದೇ ಪಾರುಪತ್ಯ)
manager — ನಾಮಣಿಯ, ಮೇಲಾಳು
mandate — ನಾ ಸೆಲವು, ಬೆಸ, ಒಪ್ಪಿಗೆ
mandatory — ಗು ಕಡ್ಡಾಯ
mandible — ನಾ ಕೆಳದವಡೆ
mane — ನಾ ನೀಳಕೂದಲು
maneuver — ಕ್ರಿ ಸೂಟಿ, ಅನು, ಹಂಚಿಕೆ (ಅವನ ಹಂಚಿಕೆಯೇನೆಂದು ತಿಳಿಯುವು ದಿಲ್ಲ), ಹೂಟ (ಪಡೆಗಳನ್ನು ಮುಂದೂ ಡುವ ಹೂಟ)
manful — ಗು ಕೆಚ್ಚಿನ (ಕೆಚ್ಚಿನ ಕೆಲಸ), ಎದೆ ಗಾರಿಕೆಯ
manger — ನಾ ಮೇವಿನ ತೊಟ್ಟಿ
mangle — ಕ್ರಿ 1 ಕೊಚ್ಚಿಹಾಕು, ಕಚ್ಚಿಹಾಕು, ಕೆಡಿಸು 2 ಚಪ್ಪಟೆಮಾಡು
mango — ನಾಮಾವು (ಮಾವಿನ ಹಣ್ಣು) ಕ್ರಿ ಕಯ್ಮಾಡು, ಒರಟಾಗಿ ಹಿಡಿದೆಳೆ
manhole — ನಾಆಳುಗುಂಡಿ
mania — ನಾ 1 ಕಡುಹುಚ್ಚು 2 ಕಡುಗೀಳು
maniac — ನಾ ಕಡುಹುಚ್ಚ
manicure — ಕ್ರಿ ಉಗುರಂದಗೊಳಿಸು
manifest — ಕ್ರಿ ಪೊಚ್ಚರಿಸು (ಪೊಚ್ಚರಿಸಿದ ನೀರಿನ ಒರತೆ), ಎಸೆ, ಹೊಳಕು (ಇದ್ದ ಕ್ಕಿದ್ದಂತೆ ಹೊಳಕಿದ ಒಂದು ಪೇತು), ಹೊದಳು
manifest — ಗು ತಿಳಿವಾದ, ಕಾಣುವ, ನಚ್ಚಿಲ್ಲದ
manifold — ನಾತಲೆನಳಿಕೆ, ಕವಲುನಳಿಕೆ
manifold — ಗು ಬಗೆಬಗೆಯ, ತುಂಬಾ, ಹಲವು
manikin — ನಾ ಕುಳ್ಳ
manipulate — ಕ್ರಿ 1 ಚೆಚ್ಚರಿಕೆಲಿುಂದ ಮಾಡು 2 ಕಯ್ಚಳಕ ತೋರು, ಕಯ್ವಾಡ ನಡೆಸು
manliness — ನಾಆಣ್ಮೆ, ಗಂಡಸುತನ, ಗಂಡುಬೀರಿತನ
man-load — ನಾ ಆಳ್ಮೊಟ್ಟೆ
manner — ನಾ ಪಾಂಗು (ಪಾಂಗರಿ; ಪಾಂಗು ತಿಳಿ), ಪರಿಜು, ಮಾಳ್ಕೆ, ಪಾಯ (ಇದು ಮಂದಿಯ ಪಾಯ), ಮೋಡಿ (ನಡೆಯುವ ಮೋಡಿ), ಅಚ್ಚಿಗ (ಮಾಡುವ ಅಚ್ಚಿಗ), ಅಂದ (ಎಲ್ಲ ಅಂದದಲ್ಲೂ ಹೋಲಿಸಿ ನೋಡಿ ಹೇಳಿದರು), ಹದಿರು, ಹೊಲಬು (ಹೊಲಬು ತಪ್ಪು, ಹೊಲಬನರಿಯದ ಮಾತು), ತರ, ತೆರ (ಯಾವ ತೆರದಲ್ಲಿ ಹೋಗಲಿ?; ತೆರತೆರದ ಹಾಡುಗಳು; ತೆರವು), ನಡತೆ, ನಡವಳಿಕೆ (ಅವನ ನಡವಳಿಕೆ ಸರಿಲಿುಲ್ಲ)
mannerism — ನಾ ಹೆಚ್ಚುಬಳಕೆಯ ಮೋಡಿ
manpower — ನಾ ಆಳಳವು
mansion — ನಾ ಹೆಮ್ಮನೆ,ತೊಂಬಾರ, ಮಾಡ
mantle — ನಾ ಮೇಲುಡುಪು, ಹೊದಿಕೆ
manual — ನಾ ಕಲಿ್ಪುಡಿ
manual — ಗು ಮಯ್ಯ, ಕಯ್ (ಕಯ್ಗಾರಿಕೆ, ಕಯ್ಕೊಡಲಿ, ಕಯ್ಬೆಳಕು)
manufacture — ಕ್ರಿ ಮಾಡು (ಉಂಟು ಮಾಡು), ಕಟ್ಟು
manure — ನಾ ಸೆಟ್ಟೆ (ಸೆಟ್ಟೆಗಳನ್ನು ಹೊತ್ತು ತಂದು ಗದ್ದೆಗಳಿಗೆ ಹಾಕಿದರು), ಅಡೆ (ಅಡೆಕುಣಿ - ಅಡೆಕುಣಿಯಲ್ಲಿ ಅಡೆ ತುಂಬಿದೆ), ಈಟು, ಎರುಬು (ಎರುಬು ಹುಳು), ಕುಪ್ಪಲು (ಗದ್ದೆಗೆ ಕುಪ್ಪಲು ಮಣ್ಣು ಸುರಿದಿದ್ದಾರೆ) ನಾ ಕಯ್ಬರಹದ ಕಡತ, ಬೆರಳಚ್ಚು ಕಡತ, ಅಚ್ಚಿಗನುವಾದ ಬರಹ
many — ಗು ಹಲ (ಹಲವು - ಹಲವು ಮಕ್ಕಳ ತಂದೆ; ಹಲವರು ಬಂದಿದ್ದರು), ಆರು (ನೂರಾರು, ಹಲವಾರು)
map — ನಾ ನಾಡತಿಟ್ಟ (ಈ ನಾಡತಿಟ್ಟದಲ್ಲಿ ನಿಮ್ಮೂರು ಎಲ್ಲಿದೆಯೆಂದು ಗುರುತಿಸಿ)
mar — ಕ್ರಿ ಕೆಡಿಸು, ಹಾಳುಮಾಡು
marathon — ನಾ ಗೆಂಟೋಟ, ದೊಡ್ಡೋಟ
maraud — ಕ್ರಿ ಕೊಳ್ಳೆಹೊಡೆ, ಸುಲಿಗೆಮಾಡು
marble — ನಾ ಹಾಲುಗಲ್ಲು, ತಣ್ಗಲ್ಲು
march — ನಾ 1 ಪಡೆನಡೆ, ಮುನ್ನಡೆ, ಮೆರ ವಣಿಗೆ 2 ಎಲ್ಲ, ಗಡಿ
march against — ಕ್ರಿ ಮಾರ್ನಡೆ, ಉರುಬು (ಹಗೆಗಳ ಪಡೆಯನ್ನು ಉರುಬಲು ಯಾರು ಬರುತ್ತಾರೆ?)
mare — ನಾ ಹೆಣ್ಣುಕುದುರೆ, ಹೆಣ್ಣುಕತ್ತೆ
margarine — ನಾ ಎಣ್ಣೆಬೆಣ್ಣೆ
margin — ನಾ ಓರ (ಓರದಲ್ಲಿ ಬರೆಯಬೇಡಿ), ಕರೆ (ಕರೆಗಲ್ಲು), ಬದಿ (ಬದಿಯಲ್ಲಿ ನಿಂತು ನೋಡುತ್ತಿದ್ದಾರೆ)
margosa — ನಾ ಬೇವು
marine — ಗು ಕಡಲಿನ (ಕಡಲಿನ ಬಾಳು)
marionette — ನಾ ಕೀಲುಗೊಂಬೆ, ನೂಲು ಗೊಂಬೆ
marital — ಗು ಮದುವೆಯ (ಮದುವೆಯ ತೊಂದರೆ)
maritime — ಗು ಹಡಗಿನ, ಕಡಲಿನ
mark — ನಾ ಸೋವು, ಸೋಹೆ (ಬಲತೊಡೆ ಯಲ್ಲಿರುವ ಅವನ ಸೋಹೆ), ಕುರುಹು (ಆತನ ಕುರುಹೂ ಉಳಿದಿಲ್ಲ), ಅಡಯಾಳ, ಕೂನು (ಈ ಎತ್ತಿನ ಮೇಲೆ ಯಾವ ಕೂನೂ ಇಲ್ಲ), ಗುರುತು (ಗುರುತು ಹಿಡಿ; ಗುರುತು ಹತ್ತು)
mark (to aim at) — ನಾ ಈಡು (ಈಡು ಮಾಡು; ಈಡಾಗು), ಗುರಿ (ಗುರಿಲಿುಡು; ಗುರಿಯಾಗು; ಗುರಿಮುಟ್ಟು; ಗುರಿಹಿಡಿ)
mark (track) — ನಾಜಾಡು (ಎತ್ತಿನ ಗಾಡಿಯ ಜಾಡು)
mark out — ಕ್ರಿ ಕುರಿ (ಕುರಿತುಕೊಳ್ಳು; ಅದನ್ನು ಕುರಿತು ಓದಿದ್ದೇನೆ)
market — ನಾಮಾರುಕಟ್ಟೆ,ತರಗಿನಂಗಡಿ
marksman — ನಾ ಗುರಿಕಾರ ಕ್ರಿ ಬೆಲೆ ಏರಿಸು
maroon — ನಾ ಕಂದು-ಕೆಂಪು ಬಣ್ಣ
marriage — ನಾ ಮದುವೆ (ಮದುವೆಯಾಗು, ಮದುವೆ ಚಪ್ಪರ)
marriage party — ನಾ ದಿಬ್ಬಣ (ದಿಬ್ಬಣಿಗ)
marrow — ನಾ ನೆಣ
marsh — ನಾ ಜವುಗು (ಜವುಗು ನೆಲ; ಜವುಗೇಳು; ಬೆಟ್ಟಜವುಗು), ಜವುಳು
marshal — ಕ್ರಿ ಅಣಿಗೊಳಿಸು, ಒಟ್ಟು ಸೇರಿಸು
mart — ನಾ ಮಾರುಕಟ್ಟೆ
martial — ನಾ ಕಾಳಗದ
marvel — ಕ್ರಿ ಬೆರಗಾಗು
marvelous — ಗು ಬೆರಗಾಗಿಸುವ, ನಂಬ ಲಾಗದ
mascara — ನಾ ಕಾಡಿಗೆ (ಕಣ್ಣಿಗೆ ಹಚ್ಚಿದ ಕಾಡಿಗೆ)
mascot — ನಾ ಸಯ್ಪುಗೆ
masculine — ನಾ ಗಂಡುಗುರ್ತ
mash — ಕ್ರಿ ಜಜ್ಜು, ರುಬ್ಬು
mask — ನಾ ಮುಸುಕು (ಮುಸುಕುಹಾಕು; ಮುಸುಕಿಡು)
mason — ನಾಕಲ್ಲುಕುಟಿಗ,ಮುಚ್ಚಿಗ (ಕಲ್ಲು ಕಟ್ಟಲು ಮುಚ್ಚಿಗನನ್ನು ಕರೆಸಿದ್ದಾರೆ) mason’s square ನಾ ಮೂಲೆಮಟ್ಟ
masonry — ನಾ ಕಲ್ಲುಕೆಲಸ
masquerade — ಕ್ರಿ ಸೋಗುಹಾಕು
mass (round) — ನಾಮುದ್ದೆ (ರಾಗಿ ಮುದ್ದೆ), ಉರಳಿ (ಹಿಟ್ಟಿನ ಉರಳಿ)
mass — ನಾ 1 ಗಡ್ಡೆ (ಮರದ ಗಡ್ಡೆ; ಗಡ್ಡೆಕಟ್ಟು; ಹೊಟ್ಟೆಯಲ್ಲಿ ಗಡ್ಡೆ ಬೆಳೆ), ಗಂಟೆ (ಹುಲ್ಲಿನ ಗಂಟೆಯನ್ನು ಅಗೆದು ತೆಗೆದ) 2 ಒಟ್ಟಲು (ಅಕ್ಕಿಯ ಒಟ್ಟಲು), ತಿಟ್ಟ, ತೆರ (ಹಣ್ಣುಗಳ ತೆರ), ತೊಂಬಾರ (ರಾಗಿಯ ತೊಂಬಾರ), ಮೊತ್ತ (ಮೊತ್ತವೆರು) 3 ಜಂಗುಳಿ (ಎತ್ತುಗಳ ಜಂಗುಳಿ),ಇಟ್ಟಣ (ಇಟ್ಟಣಿಸು; ಹೆಂಗಸರ ಇಟ್ಟಣ),ಕದಲೆ, ಕದಳಿ (ಕೂಲಿ ಗಾರರ ಕದಳಿ), ಗಡಣ (ಗಡಣಿಸು), ತೇಂಕಿ (ಎದುರಿಗೆ ನೆರೆದಿರುವ ತೇಂಕಿ), ಹರಿ
mass — ಕ್ರಿ ಒಟ್ಟಾಗು, ಒಂದಾಗು
mass media — ನಾ ಒಟ್ಟಲೊಯ್ಯುಗೆ ನಾ ಕಗ್ಗೊಲೆ (ಮನೆಯಲ್ಲಿದ್ದವ ರೆಲ್ಲರ ಕಗ್ಗೊಲೆ ನಡೆದಿತ್ತು)
massage — ಕ್ರಿ ನೀವು (ಕಾಲು ನೀವು), ತಿಕ್ಕು (ಬೆನ್ನು ತಿಕ್ಕು), ತೀಡು
massive — ಗು ಬಾರೀ ದೊಡ್ಡ, ತೂಕದ
mast — ನಾ ಕೂವೆಮರ
master — ನಾಎರೆ (ಎರೆತನ), ಎರೆಯ,ಆಳ್ಮ,ಒಡೆಯ
master — ಕ್ರಿ ಗೆಲ್ಲು, ಹತೋಟಿಪಡೆ, ಆಳು
masterly — ಗು ಪಳಗಿದ, ಅರಿತ, ಚೆಚ್ಚರಿಕೆಯ
masterpiece — ನಾ ಅಣ್ಣೆಕೆಲಸ, ಅಣ್ಣೆ ಬರಹ
mastery — ನಾ ಹತೋಟಿ, ಒಡೆತನ, ಗೆಲುವು, ಅರಿವು
masticate — ಕ್ರಿ ನಮಲು, ಅಗಿ, ಜಗಿ (ಜಗಿದು ತಿನ್ನು)
mat — ನಾ ಚಾಪೆ (ಬಿದಿರಿನ ಚಾಪೆ; ಹುಲ್ಲಿನ ಚಾಪೆ; ಚಾಪೆಹಿಡಿ), ಮಂದಲಿಗೆ (ಹುಲ್ಲಿನ ಮಂದಲಿಗೆ)
match — ಕ್ರಿ ಮದುವೆಯಾಗು, ಎಣೆಯೊಡ್ಡು, ಎದುರಿಸು
match — ಗು 1 ಎಣೆ (ಎಣೆಗಾಣು; ಎಣೆಬರು; ಎಣೆಯೊಡ್ಡು), ಓರಗೆ (ಓರಗೆಗೊಳ್ಳು), ಗೆಡೆ (ಗೆಡೆವಕ್ಕಿ) 2 ಆಟ (ಮೇಲಾಟ), ಪುರುಡು
match stick — ನಾ ಬೆಂಕಿಕಡ್ಡಿ
mate — ನಾ ಕೆಳ (ಕೆಳೆಯ, ಕೆಳದಿ), ಗಂಡ, ಹೆಂಡತಿ
material — ಗು 1 ಮಯ್ಯ 2 ಬೇಕಾಗಿರುವ
material — ನಾ 1 ಅಡಕ 2 ಬಟ್ಟೆ
materialise — ಕ್ರಿ ಕಾಣಿಸಿಕೊಳ್ಳು, ಉಂಟಾಗು
maternal — ಗು ತಾಲಿುಯ
maternity — ನಾತಾಯ್ತನ
mathematician — ನಾ ಎಣಿಕೆಯರಿಗ
mathematics — ನಾ ಎಣಿಕೆಯರಿಮೆ
matinee — ನಾ ಹಗಲಕಾಣ್ಕೆ, ಹಗಲ ಆಟ
matriarchy — ನಾ ತಾಲಿುಯಾಳಿಕೆ
matricide — ನಾ ತಾಯ್ಕೊಲೆ
matriculate — ಕ್ರಿ ಪುಗಿಲು ಪಡೆ ಗು ಮದುವೆಯ
matrimony — ನಾ ಮದುವೆ
matrix — ನಾ ಬಸಿರು, ಅಚ್ಚು (ಎರಕದ ಅಚ್ಚು)
matted — ಗು ಮಣುಕು (ಮಣುಕು ಕೂದಲು), ಸಿಕ್ಕುಗಟ್ಟಿದ
matter — ಕ್ರಿ ಅರಿದಾಗಿರು
matting — ನಾ ತಟ್ಟಿ (ಬಿದಿರಿನ ತಟ್ಟಿ; ತಟ್ಟಿ ಗೋಡೆ), ಚಾಪೆ
mattock — ನಾ ಗುದ್ದಲಿ
mattress — ನಾಮೆತ್ತೆ, ಹಾಸಿಗೆ
mature — ಕ್ರಿ ನೆರೆ (ನೆರೆದಿಂಗಳು; ನೆರೆದವನು; ಮಯ್ನೆರೆ)
mature — ಗು 1 ಗೋಟು (ಗೋಟಡಿಕೆ; ಗೋಟುಹೋಗು), ನೆರ (ನೆರವಣಿಗೆ), ತನಿ (ತನಿಕಬ್ಬು), ದೋರೆ (ದೋರೆಗಾಲಿು, ದೋರೆಹಣ್ಣು) 2 ಪಡ್ಡೆ (ಪಡ್ಡೆಯೆಮ್ಮೆ; ಪಡ್ಡೆಹುಡುಗ),ಓಗರ (ಓಗರಹೂವು; ಓಗರಗಂಪು)
maturity — ನಾ 1 ಬೆಳವಣಿಗೆ 2 ತೀರುವಳಿ (ನಾಳೆಗೆ ನಿಮ್ಮ ಸಾಲದ ತೀರುವಳಿಯಾಗು ತ್ತದೆ)
maudlin — ಗು ಕುಡಿದು ಅಳುವ
maul — ಕ್ರಿ 1 ಚಿಂದಿಮಾಡು (ಹುಲಿ ಆತನನ್ನು ಕಚ್ಚಿ ಚಿಂದಿಮಾಡಿತ್ತು) 2 ಒರಟಾಗಿ ಬಳಸು
mausoleum — ನಾ ಹೂಳಿದೆಡೆ
mauve — ಗು ಕೆನ್ನೀಲಿ, ನೇರಳೆ (ನೇರಳೆ ಸೀರೆ)
maverick — ನಾ ಇಡುಕುಗ
maxim — ನಾ ಅರಿವೊರೆ, ಅರಿವೆನ್ನಿಕೆ
maximum — ಗು ಉರೆಹೆಚ್ಚು, ತುಂಬಾ ಹೆಚ್ಚು
maze — ನಾ ಸಿಕ್ಕುದಾರಿ (ಹೂದೋಟದ ನಡುವೆ ಒಂದು ಸಿಕ್ಕುದಾರಿ ಬೆಳೆಸಿದ್ದರು), ಒಗಟು
mead — ನಾ ಹುಲ್ಲುಗಾವಲು
meadow — ನಾಹುಲ್ಲುಗಾವಲು, ಬಾಣಿ (ಬಾಣಿಯಲ್ಲಿ ಮೇಯುವ ಆಕಳು), ನುಣ್ಬಸಲೆ
meagre — ಗು ತೀರಾ ಕಡಿಮೆ, ತೀರಾ ಸಪುರ, ತೀರಾ ತೆಳ್ಳಗೆ, ಸಣಕಲು
meal — ನಾ ಉಣಿಸು (ನನಗೆ ಉಣಿಸು ಬೇಕಾ ಗಿಲ್ಲ; ಒಳ್ಳುಣಿಸು; ಇನ್ನುಣಿಸು), ಉಣ್ಣಿ, ಊಟ (ಹಬ್ಬದ ಊಟ; ಊಟವಿಡು) ಗು ಹೊಲ್ಲ (ಹೊಲ್ಲಮಂದಿ; ಹೊಲ್ಲ ದಾರಿ; ಅರಿವಿಲ್ಲದಿದ್ದರೆ ಹೊಲ್ಲ; ಹೊಲ್ಲ ಮಾತು; ಹೊಲ್ಲಮೋರೆ; ಹೊಲ್ಲತನ), ಕೀಳು (ಕೀಳುಮಾಡು; ಕೀಳುಮಾತು), ಕೂಳ (ಕೂಳತನ; ಕಿರುಕುಳ)
mean — ನಾ ಸರಾಸರಿ, ನಡುನೆಲೆ
meaning — ನಾ 1 ತಿಳಿವು, ಗೊತ್ತು (ನಾನು ಹೇಳಿದುದು ಗೊತ್ತಾಲಿುತೋ?), 2 ಹುರುಳು (ಹಲವು ಹುರುಳುಗಳುಳ್ಳ ಮಾತು)
meaningless word — ನಾ ಪಸೆ (ಪಸೆ ಕೊಚ್ಚು; ಆತ ಹೇಳುವುದೆಲ್ಲ ಬರೀ ಪಸೆ)
means — ನಾ 1 ಬಗೆ (ಅದನ್ನು ಮಾಡುವ ಬಗೆ ಯಾವುದು?) 2 ಗಳಿಕೆ
measles — ನಾ ತಟ್ಟು, ಗೊಬ್ಬರ
measure — ನಾ ಅಳವು (ಅಳವುಗೋಲು), ಅಳವಿ (ಹತ್ತು ಕಿಲೊೀಮೀಟರ್ ಅಳವಿಯ ದಾರಿ), ಅಳತೆ (ಅಳತೆಗೆಡು; ಅಳತೆಗೋಲು; ಅಳತೆಗೆ ಸಿಕ್ಕು), ಆಯ (ಗದ್ದೆಯ ಆಯ ಎµ್ಟದೆ?)
measure — ಕ್ರಿ ಅಳೆ (ಅಕ್ಕಿಯನ್ನು ಅಳೆದು ಗೋಣಿಯಲ್ಲಿ ತುಂಬಿಸಿದ)
measurement — ನಾ ಅಳವು, ಅಳತೆ, ಹರವು, ಉದ್ದಗಲ
meat — ನಾ ಅಡಗು (ಸುಟ್ಟಡಗು; ತಾಳಿಸಿದ ಅಡಗು; ಅಡಗುದರಿ, ಅಡಗುಣಿಸು, ಅಡಗೂಟ), ಕಂಡ (ಮೀನಕಂಡ), ಬಾಡು (ಬಾಡೂಟ), ಬಿರ್ಕು, ಮುರುಹ
meddle — ಕ್ರಿ ತಲೆಹಾಕು (ಅವರ ಹೋರಾಟ ದಲ್ಲಿ ನೀನು ತಲೆಹಾಕುವುದು ಬೇಡ)
medial — ಗು ನಡುವಿನ 2 ಸರಾಸರಿ
mediate — ಕ್ರಿ ಹೊಂದಾಣಿಕೆ ಮಾಡಿಸು, ಹೊಂದಿಸು
mediator — ನಾ ಹೊಂದಿಸುಗ
medical — ಗು ಮಾಂಜುವ
medicinal — ಗು ಮದ್ದಿನ
medicine — ನಾ 1 ಮದ್ದು (ಮದ್ದರೆ, ಮದ್ದು ಮಾಡು; ಮದ್ದುಗಾತಿ) 2 ಮಾಂಜರಿಮೆ
medieval — ಗು ನಡುಗಾಲದ
mediocre — ಗು ಎಡತರ
meditate — ಕ್ರಿ 1 ಊಂಕು 2 ಬಗೆ (ಬಗೆಕಾರ; ಬಗೆಲಿುಸು), ಎಣಿಸು
meditation — ನಾ ಊಕ (ಆತನ ಊಕವಿನ್ನೂ ಮುಗಿದಿಲ್ಲ)
medium — ನಾ ಕಲಿಕೆಯ ನುಡಿ, ಒಯ್ಯುಗೆ
medley — ಗು ಕಲಬೆರಕೆ
meek — ಗು 1 ತಾಳ್ಮೆಯ, ತಾಳುವ 2 ತಲೆ ಬಾಗುವ, ತಗ್ಗುವ ಕ್ರಿ ಕದೆ (ಆತನನ್ನು ಕದೆದು ಕರೆದು ಕೊಂಡು ಬರುವವರು ಯಾರು?), ಎದುರು ಗೊಳ್ಳು
meeting — ನಾ ಸೇರಿಕೆ, ನೆರವಿ (ಬೆಸದರ ನೆರವಿ; ಕಾಗೆಯ ನೆರವಿ), ಕೂಡುಹ, ಕೂಟ (ಕಳ್ಳರ ಕೂಟ)
megalith — ನಾ ದೊಡ್ಡಕಲ್ಲು
megaphone — ನಾ ಉಲಿಪೆಚ್ಚುಕ
melancholy — ನಾ ಮಂಕುತನ, ಕೊರಗು, ತಲ್ಲಣ
melee — ನಾ ಹೋರಾಟ, ಗಲಿಬಿಲಿ, ದೊಂಬಿ
mellow — ಗು 1 ಮಾಗಿದ, ಕಳಿತ (ಕಳಿತ ಹಣ್ಣು) 2 ಹದ (ಹದಮಾಡು; ಹದವಾಗಿ ಕುದಿಸು)
melodious — ಗು ಕಿವಿಗಿಂಪಾದ
melodrama — ಗು ಉರೆತಲ್ಲಣಿಸುವ ಆಡು ಗಬ್ಬ
melody — ನಾ ಇಂಪು (ಇಂಪುಗು; ಇಂಪೆಸೆ)
melon — ನಾ ಕಲ್ಲಂಗಡಿ (ಕಲ್ಲಂಗಡಿ ಹಣ್ಣು), ಕೆಕ್ಕರಿಕೆ, ಬಚ್ಚಂಗಾಲಿು
melt — ಕ್ರಿ ಜಿನುಗು (ಬಿಸಿಲಿಗೆ ಬೆಲ್ಲವೆಲ್ಲ ಜಿನುಗಿ ಹೋಲಿುತು), ನಾಂದು (ಉಪ್ಪು ನೀರಿನಲ್ಲಿ ನಾಂದಿದೆ), ಉರಗು, ಕರಗು (ಬಿಸಿಗೆ ಕರಗಿದ ಬೆಣ್ಣೆ)
member — ನಾ 1 ಕಯ್ಕಾಲು 2 ಉರಳಿಗ, ತೆತ್ತಿಗ
membrane — ನಾ ಪೊರೆ, ತೆಳುತೊಗಲು
memento — ನಾ ನೆನಪಿನ ಕಾಣಿಕೆ, ನೆನಸುಗೆ
memoir — ನಾ 1 ತನ್ಕತೆ 2 ತಿಳಿವಿಗರ ಹೇಳಿವೆ
memorable — ಗು ನೆಗಳಿದ, ಮರೆಯಲಾಗದ
memorandum — ನಾ ಹೇಳಿವೆ, ಗುರುತಿಸಿ ಕೊಂಡುದು
memorial — ನಾ ನೆನಸಿಕೆ
memorize — ಕ್ರಿ ಉರುಹಾಕು, ಉರುಹಚ್ಚು, ಗಟ್ಟಿಮಾಡು, ನೆನಪಿಡು
memory — ನಾನೆನಪು (ನೆನಪಿಡು; ನೆನಪಿಸು; ನೆನಪಿನಲ್ಲಿ ಉಳಿದ ಮಾತು)
menace — ನಾಹೆದರಿಕೆ (ಹೆದರಿಸು), ಪೀಡೆ
mend — ಕ್ರಿ ತಿದ್ದು (ಆತನನ್ನು ತಿದ್ದಲು ಅವನ ಅಪ್ಪನೇ ಬಂದಿದ್ದಾನೆ), ಸರಿಪಡಿಸು, ನೇರ್ಪಡಿಸು
mendacious — ಗು ಸುಳ್ಳಾದ
mendicant — ನಾ ಗೊರವ (ಗೊರವತಿ; ಗೊರವಿ), ಕಿತ್ತಡಿ
menial — ಗು 1 ಕೀಳುಕೆಲಸದ 2 ಮನೆ ಕೆಲಸದ ನಾ ಮಿದುಳಿನ ಕುತ್ತ
menopause — ನಾ ಮುಟ್ಟುತೀರಿಕೆ
menses — ನಾ ಮುಟ್ಟು, ಮುಟ್ಟಲೆ
menstruation — ನಾ ಮುಟ್ಟು (ಮುಟ್ಟಿನ ಮನೆ; ಮುಟ್ಟಾದವಳು; ಮುಟ್ಟಲು; ಮುಟ್ಟಲೆ; ಮುಟ್ಟಾಗು; ಮುಟ್ಟಲೆಗೊಳ್ಳು)
mensuration — ನಾ ಅಳೆತದರಿಮೆ
mental — ಗು ಒಳ (ಒಳಗಣ್ಣು, ಒಳಗುಟ್ಟು, ಒಳಳುಕು, ಒಳಗು)
mention — ನಾ ಕಿರುಹೇಳಿಕೆ
mention — ಕ್ರಿ ಹೆಸರಿಸು, ಮಾತೆತ್ತು
mention before — ಕ್ರಿ ಮುಂಬೇಳು, ಮುನ್ನುಡಿ
mentor — ನಾ ಅರಿಗ, ಅರಿವೀಯುಗ
menu — ನಾ ತಿನಸುಪಟ್ಟಿ (ತಿನಸುಪಟ್ಟಿ ಕೊಟ್ಟರೆ ಅದನ್ನು ಓದಲು ಬರಬೇಕಲ್ಲ?)
mercantile — ಗು ಹರದರ, ಹರದಿನ
mercenary — ನಾ ಕೂಲಿಪಡೆಯಾಳು, ಕೂಲಿ ಕೆಲಸಗಾರ
merchandise — ನಾ ಮಾರಾಟಕ್ಕಿಟ್ಟವು
merchant — ನಾಕೋಮಟಿ,ಹರದ,ತಕ್ಕಡಿಗ, ಮಾರಾಳಿ
merciless — ಗು ಕನಿಕರವಿಲ್ಲದ
mercy — ನಾ ಕನಿಕರ (ಅವನಿಗೆ ನಮ್ಮ ಮೇಲೆ ಕನಿಕರವಿಲ್ಲ; ಕನಿಕರಿಸು)
merely — ಗು ಕೆಮ್ಮಗೆ (ಅವನಿಗೆ ಕೆಮ್ಮಗೆ ತೊಂದರೆ ಕೊಟ್ಟೆ), ಸುಮ್ಮನೆ, ನಿರ್ನೆರ (ನಿರ್ನೆರ ಬಂದುಹೋದ)
merge — ಕ್ರಿ ಒಂದಾಗು; ಒಂದುಗೂಡು
merger — ನಾ ಒಕ್ಕೂಟ
meridian — ನಾ 1 ನಡುಹಗಲ ಗೆರೆ
merit — ನಾ ಬೆಲೆ, ಹೊಗಳಿಕೆ, ಹಿರಿಮೆ, ಸಯ್ಪು (ಸಯ್ಪುಪಡೆ), ಮದಿಪು
meritorious — ಗು ಮದಿಪುಳ್ಳ, ಮೆಚ್ಚುಗೆ ಪಡೆದ, ಒಳ್ಳೆಯ
mermaid — ನಾ ಮೀನುಹೆಣ್ಣು
merry — ಗು ಗೆಲುವಿನ, ಸಡಗರದ
merry-make — ನಾ ಸಡಗರ (ಸಡಗರ ಗೊಳ್ಳು; ಸಡಗರಿಸು) ನಾ ಬಲೆ, ಬಲೆತೂತು
mesh — ಕ್ರಿ 1 ಬಲೆಹಿಡಿ, ಬಲೆಗೆ ಬೀಳು 2 ಒಂದಕ್ಕೊಂದು ಸೇರಿಕೊಳ್ಳು
mess — ನಾ 1 ಗಡಿಬಿಡಿ, ಗೊಂದಲ 2 ಒಟ್ಟಿಗೆ ಉಣ್ಣುವೆಡೆ 3 ಮೆತ್ತಗಿನ ತಿನಿಸು
message — ನಾ ಅಟ್ಟೋಲೆ, ಒಸಗೆ (ಒಸಗೆ ಕಳುಹಿಸು; ಒಸಗೆ ಹೇಳು)
messenger — ನಾ ಅಟ್ಟಟ್ಟಿ (ಎಲ್ಲರಿಗೂ ಅಟ್ಟಟ್ಟಿಗಳನ್ನು ಕಳಿಸಿದ್ದಾರೆ), ಓಲೆಕಾರ
messy — ಗು ಕೊಳಕು, ಗೊಂದಲದ
metal infusion — ನಾ ಎರಕ (ಎರಕ ಹೊಯ್ಯು)
metamorphosis — ನಾ ಪಾಂಗುಮಾರ್ಪು, ಮಾರ್ಪಾಡು
metaphor — ನಾ ಮಾರ್ಪುರುಳು
mete — ಕ್ರಿ ಹಂಚು, ಪಾಲುಮಾಡು, ಅಳೆ
meteor — ನಾ ಬೀಳ್ಚುಕ್ಕಿ
meteorology — ನಾ ಗಾಳಿಯರಿಮೆ
meter — ನಾ ಅಳತೆಗೂಡು
method — ನಾ ದಾಟಿ (ಹಳೆಯ ದಾಟಿಯಲ್ಲಿ ಓದು),ಹಾಳಿ (ಹಾಳಿಗೆಡು), ಪಡಿ (ಅಚ್ಚು ವಡಿ), ದಂಡಿ (ನಾವು ಮಾಡುವ ದಂಡಿ ಬೇರೆ), ಬಳಿ, ಹೊಲಬು (ಹೊಲಬು ತಪ್ಪು, ಹೊಲಬುಗೆಡು), ಹಾಡು
methodical — ಗು ಅಚ್ಚುಕಟ್ಟಿನ, ಓರಣ ಗೊಂಡ, ಕಟ್ಟಲೆತಪ್ಪದ
meter — ನಾ ಹಾಡಿನಳತೆ
meticulous — ಗು ತುಂಬ ಎಚ್ಚರಿಕೆಯ, ಎಲ್ಲಕ್ಕೂ ಗಮನಕೊಡುವ
metropolis — ನಾ ಪೇರ್ಪೊಳಲು, ಮಲ್ಲ ಪೊಳಲು
mettle — ನಾ ಹುರುಪು, ಕೆಚ್ಚು, ಅಳವು
mezzanine — ನಾ ಮುಂದೊಟ್ಟಿ
mica — ನಾ ಕಾಗೆಚಿನ್ನ
micro- — ಗು ಸೀರು
microbe — ನಾ ಸೀರುಸಿರುಗ, ಸೀರುಸಿರಿ
microbiology — ನಾ ಸೀರುಸಿರುಗರಿಮೆ
microchip — ನಾಸೀರುಸಿಗುರು, ಸೀರುಚೆಕ್ಕೆ
microphone — ನಾ ಉಲಿಹೆಚ್ಚುಕ ನಾ ಸೀರುತೋರ್ಪುಕ
microwave — ನಾ ಸೀರಲೆ (ಸೀರಲೆಯ ಒಲೆ)
midday — ಗು ಸರಿಹಗಲು (ಆತ ಸರಿಹಗಲಿನ ಬಿಸಿಲಿಗೇನೇ ಮನೆಲಿುಂದ ಹೊರಟಿದ್ದ), ನಡುವಗಲು, ನಟ್ಟೆವಗಲು
middle — ಗು ನಡು (ನಡುಗಡ್ಡೆ, ನಡುಗಂಬ, ನಡುಬೀದಿ; ನಡುಬೆರಳು; ನಡುಕಿವಿ), ನಡುವೆ (ಎರಡು ಮನೆಗಳ ನಡುವೆ ಒಂದು ಅರಳಿ ಮರ ಇದೆ), ಉತ್ತಣ (ಉತ್ತಣ ಮನೆ ನಮ್ಮದು), ನಟ್ಟೆ (ನಟ್ಟೆವನೆ; ನಟ್ಟೆ ಗೊಂಬು)
middle born — ಗು ಎಡಚಿಲು (ಎಡಚಿಲು ಹುಡುಗಿ)
middle man — ನಾ ಎಡೆಯಣ (ನಮಗೆ ಎಡೆಯಣ ಬೇಕಾಗಿಲ್ಲ)
middle path — ನಾ ಎಡೆವಟ್ಟೆ (ಅವನು ಎಡೆವಟ್ಟೆಯಲ್ಲಿ ಹೋದ)
middle-aged — ನಾ ಎಡತಿ (ಆಕೆಯ ಮಗಳು ಎಡತಿ)
midget — ನಾ ಕುಳ್ಳ
midnight — ನಾ ನಟ್ಟಿರುಳು (ನಟ್ಟಿರುಳು ಮನೆ ಹೊಕ್ಕ ಕಳ್ಳರು ಸಿಕ್ಕಿ ಬಿದ್ದಿದ್ದಾರೆ)
midway — ಗು ನಡುದಾರಿಯಲ್ಲಿ
midwife — ನಾ ಸೂಲಗಿತ್ತಿ, ಸೂಲಗಾತಿ
mien — ನಾ ತೋರ್ಪು, ನಡತೆ
might — ನಾ ಆರ್ಪು (ಆರ್ಪರಿ; ಆರ್ಪುಗುಂದು), ಬಲ್ಮ
mighty — ಗು ಬಲ್ಮಯ, ತುಂಬಾ ಅಳವಿನ
migraine — ನಾ ಅರೆತಲೆನೋವು
migration — ನಾ ವಲಸೆ (ವಲಸೆಬರು; ವಲಸೆಹೋಗು), ಗುಳೆ (ಗುಳೆಹೋಗು; ಗುಳೆಯುೀಳು; ಗುಳೆಕಟ್ಟು)
mike — ನಾ ಉಲಿಹೆಚ್ಚುಕ
milch — ಗು ಹಾಲುಕರೆಯುವ, ಕರೆಯುವ
mild — ಗು ನಯ (ನಯನುಡಿ), ಬಿರುಸಲ್ಲದ, ಮೆತ್ತನೆ
mildew — ನಾ ಮಸಗೆ, ಅಣಬೆ, ಬೂಜು (ಬೂಜುಹಿಡಿ; ಬೂಜುಗಟ್ಟು)
militant — ನಾ 1 ಜಗಳಗಂಟ 2 ಮೇಲೆ ಬೀಳುವ, ಹೊಡೆದಾಡುವ
military — ಗು ಪಡೆಯ
militate — ಕ್ರಿ ಮಲೆ, ಎದುರಿಸು, ಒಪ್ಪದಿರು ನಾ ಮಂದಿಪಡೆ
milk — ನಾ ಹಾಲು (ಹಾಲು ಕುಡಿಯುವ ಮಗು; ಹಾಲುಹಸುಳೆ)
milk — ಕ್ರಿ 1 ಕರೆ (ಹಾಲು ಕರೆದು ಬಂದ) 2 ಹಿಂಡಿ ತೆಗೆ
milk (of plants) — ನಾ ಸೊನೆ (ಸೊನೆಗಳೆ; ಮಾವಿನ ಸೊನೆ; ಸೊನೆಹುಣ್ಣು)
milk-hedge — ನಾ ಕಳ್ಳಿ
milking — ನಾ ಕರಾವು (ಕರಾವು ನಿಂತ ಆಕಳು)
milk-tooth — ನಾ ಹಾಲುಹಲ್ಲು (ಹುಡುಗನ ಹಾಲುಹಲ್ಲು ಅಲ್ಲಡುತ್ತಿದೆ)
mill — ನಾ ಗಿರಣಿ (ಹಿಟ್ಟಿನ ಗಿರಣಿ)
mill — ಕ್ರಿ 1 ಬೀಸು, ಹಿಟ್ಟುಮಾಡು 2 ಗೊಂದಲಿಸು, ತತ್ತರದಿಂದ ಓಡಾಡು
millennium — ನಾ ಸಾವಿರಸೂಳು
millet — ನಾ ನವಣೆ, ಜೋಳ
millionaire — ನಾ ದೊಡ್ಡ ಹಣವಂತ
millstone — ನಾ ಬೀಸುಕಲ್ಲು (ಬೀಸು ಕಲ್ಲಿನಲ್ಲಿ ಅಕ್ಕಿ ಬೀಸುತ್ತಿದ್ದಾರೆ)
mime — ನಾ ಅಣಕು ಆಡುಗಬ್ಬ
mimic — ಕ್ರಿ ಅಣಕಿಸು, ಕೊರಚು
mimicry — ನಾ ಅಣಕ, ಕೊರಚಾಟ
minar — ನಾ ಬೆಳಕುಮನೆ, ಕಡಲಬೆಳಕು
minaret — ನಾ ಕರೆಕುಂದ
mince — ಕ್ರಿ ಕೊತ್ತು (ಕೊಬ್ಬರಿಯನ್ನು ಕೊತ್ತಿ ಎಣ್ಣೆಯಲ್ಲಿ ಕರಿಯಬೇಕು), ಕೊಚ್ಚು (ಕೊಚ್ಚಿರಿಸಿದ ಅಡಿಕೆ), ಹಚ್ಚು (ಮಾವಿನ ಕಾಲಿು ಹಚ್ಚು)
mind — ನಾ ಬಗೆ (ಬಗೆಗೆಡು; ಬಗೆಯಳಲು; ಬಗೆಬಿಚ್ಚು; ಬಗೆಯರಿ; ಬಗೆಮುಟ್ಟು; ಬಗೆಗುಡು; ಬಗೆಗೆಲ್ಲು),ಎದೆ (ಎದೆಗೆಡು; ಎದೆಕರಗು)
mind — ಕ್ರಿ 1 ಕೂರು (ಕೂರ್ತು ಕೊಟ್ಟ ಒಸಗೆ; ಕೂರದೆ ಬರೆದ ಬರಹ), ಗಮನಿಸು (ನಾನು ಹೇಳುವುದನ್ನು ಗಮನಿಸಿ ಕೇಳಬೇಕು) 2 ನೋಡಿಕೊಳ್ಳು (ಮಗುವನ್ನು ನೋಡಿಕೊಳ್ಳಿ), ಎಚ್ಚರದಿಂದಿರು
mindful — ಗು ಎಚ್ಚರಿಕೆಯ
mine — ನಾ 1 ಸಿಡಿಮದ್ದು 2 ಅಗೆತ (ಕಲ್ಲಿದ್ದಲ ಅಗೆತ, ಚಿನ್ನದ ಅಗೆತ)
mingle — ಕ್ರಿ ಬೆರೆ (ಅವನು ಯಾರೊಡನೆಯೂ ಬೆರೆಯುವುದಿಲ್ಲ), ಒಂದಾಗು (ಇದೊಂದು ಕೆಲಸಕ್ಕೆ ಅವರಿಬ್ಬರೂ ಒಂದಾಗಿದ್ದಾರೆ) ನಾ ಕಿರುತಿಟ್ಟ, ಚಿಕಣಿತಿಟ್ಟ, ಕುಗ್ಗಿಕೆ
minimize — ಕ್ರಿ ಕುಗ್ಗಿಸು, ಕಡಿಮೆಮಾಡು
minimum — ನಾ ಮೊಕ್ಕಳ ಕಡಿಮೆ
mining — ನಾ ಅಗೆತದ ಕೆಲಸ
mink — ನಾ ಉಣ್ಣೆದೊಗಲು
minor — ಗು ಚಿಕ್ಕ, ಕಿರಿಯ, ಕೆಳಗಿನ (ಕೆಳಗಿನ ಮಟ್ಟದ), ಏನಿಕೆ (ಏನಿಕೆ ಕೆಲಸಗಳು)
minority — ನಾ 1 ಕೊರೆಯೆಣಿಕೆ 2 ಕೊರೆ ಹರೆಯ
minstrel — ನಾ ಅಲೆಮಾರಿ ಹುಡುಗ
mint — ನಾ ಕಮ್ಮಟ
minuscule — ನಾ ತುಂಬಾ ಚಿಕ್ಕ
minute — ಗು ನಸು (ನಸುಗೆಂಪು; ನಸುನಗೆ), ತುಂಬಾ ಚಿಕ್ಕ
minx — ನಾ 1 ಎಗ್ಗಿಲ್ಲದ ಹುಡುಗಿ 2 ದುಡುಕುವ ಹುಡುಗಿ
miraculous — ಗು ನಂಬಲಾಗದ, ಎದುರು ನೋಡದ
mirage — ನಾ ಕುಂಬಿ,ಬಿಸಿಲುಕುದುರೆ, ಬಯ ಲ್ದೂರೆ
mire — ನಾ ಕೊಚ್ಚೆ,ರೊಚ್ಚು (ರೊಚ್ಚುಗುಂಡಿ)
mirror — ನಾ ಕನ್ನಡಿ (ಕನ್ನಡಿಯಲ್ಲಿ ಕಂಡ ಮೋರೆ),ಚಲ್ಲಿ
mirror — ಕ್ರಿ ಹಿಂಪುಟಿಸು, ಮಾರ್ಪೊಳೆ
mirth — ನಾ ಅಲ್ಲಣಿ, ಅಲ್ಲಣಿಗೆ, ನಲಿವು, ನಗು
misadventure — ನಾ ಕೇಡು (ಕೇಡಾಗುಹ), ಕೆಟ್ಟಸಯ್ಪು
misanthrope — ನಾ ಆಳಹಗೆ, ಮಂದಿಹಗೆ, ನಂಬದವನು, ಒಂಟೆ
misapprehend — ಕ್ರಿ ತಪ್ಪುತಿಳಿ, ತಪ್ಪೆಣಿಸು
misappropriate — ಕ್ರಿ ತಪ್ಪುಬಳಸು
misbehave — ಕ್ರಿ ತಪ್ಪುನಡೆದುಕೊಳ್ಳು
misbehaviour — ನಾ ತಪ್ಪುನಡತೆ, ಕೆಟ್ಟ ನಡತೆ
miscalculate — ಕ್ರಿ ತಪ್ಪೆಣಿಕೆ ಹಾಕು
miscarriage — ನಾ 1 ಮಲಿ್ಯುಳಿತ, ಹೊಟ್ಟೆ ಲಿುಳಿತ 2 ತಪ್ಪುತೀರ್ಪು 3 ಸೋಲು
miscellaneous — ಗು ಬೆರೆಕೆಯ, ತರತರದ, ಹಲಬಗೆಯ
mischance — ನಾ ಕೆಟ್ಟಸಯ್ಪು ನಾ ಕೀಟಲೆ,ತುಂಡು (ತುಂಡು ತನ), ತುಂಟು
mischievous — ಗು ತುಂಟ (ಆ ಹುಡುಗ ದೊಡ್ಡ ತುಂಟ; ತುಂಟಾಟ; ತುಂಟನಗೆ; ತುಂಟನೋಟ)
misconceive — ಕ್ರಿ ತಪ್ಪುತಿಳಿ (ಆತನೇನೋ ತಪ್ಪು ತಿಳಿದುಕೊಂಡಿದ್ದಾನೆ)
misconceived — ನಾ ತಪ್ಪಾಗಿ ತಿಳಿದ, ಕೆಟ್ಟ ದಾಗಿ ಹಮ್ಮಿಕೊಂಡ
misconduct — ನಾ ಕೆಟ್ಟನಡತೆ, ತಪ್ಪುನಡತೆ
misconstrue — ಕ್ರಿ ತಪ್ಪುತಿಳಿ, ತಪ್ಪಾಗಿ ಹುರುಳಿಸು
miscount — ಕ್ರಿ ತಪ್ಪೆಣಿಕೆ ಮಾಡು
miscreant — ನಾ ಕೇಡಿ, ಕಿಡಿಗೇಡಿ (ಇದನ್ನು ಯಾರೋ ಕಿಡಿಗೇಡಿಗಳು ಹಾಳುಗೆಡವಿ ದ್ದಾರೆ)
misdeal — ಕ್ರಿ ತಪ್ಪಾಗಿ ಹಂಚು
misdeed — ನಾ ತಪ್ಪುಕೆಲಸ, ಕೆಟ್ಟಕೆಲಸ, ತಪ್ಪಿತ
misdemeanour — ನಾ ಕೆಟ್ಟನಡತೆ
misdirect — ಕ್ರಿ ತಪ್ಪುಹಾದಿ ತೋರಿಸು, ಹಾದಿ ತಪ್ಪಿಸು
miser — ನಾ ನೆಲಕಲ (ಆತ ದೊಡ್ಡ ನೆಲಕಲ, ಕಾಸು ಬಿಚ್ಚುವುದಿಲ್ಲ), ಪಂಜೆ
misery — ನಾ ಬಡತನ, ಬೇಗುದಿ, ತೊಳಲಿಕೆ
misfire — ಕ್ರಿ ಆಗದಿರು, ಗುರಿತಪ್ಪು, ಸಿಡಿಯ ದಿರು
misfit — ಗು ಹೊಂದಿಕೆಯಾಗದ, ಅಡಕವಲ್ಲದ
misfortune — ನಾ ಅಳಿಪಾಲು,ತತ್ತು (ಆತನ ತತ್ತಿನ್ನೂ ಮುಗಿದಿಲ್ಲ)
misgiving — ನಾ ಅಪನಂಬಿಕೆ, ಅಳುಕು
misguided — ಗು ಹಾದಿತಪ್ಪಿದ, ಅಡ್ಡಹಾದಿ ಹಿಡಿದ
mishandle — ಕ್ರಿ ಕೆಟ್ಟುದಾಗಿ ನಡೆಸು, ಕೆಡಿಸು
misinform — ಕ್ರಿ ತಪ್ಪುಸುದ್ದಿ ಕೊಡು, ತಪ್ಪು ತಿಳುವಳಿಕೆ ನೀಡು
misinterpret — ಕ್ರಿ ತಪ್ಪಾಗಿ ಹುರುಳಿಸು
misjudge — ಕ್ರಿ ತಪ್ಪಾಗಿ ತೀರ್ಮಾನಿಸು
mislay — ಕ್ರಿ ಕಯ್ಮರೆತಿಡು, ಕಳೆದುಕೊಳ್ಳು
mislead — ಕ್ರಿ ಹಾದಿತಪ್ಪಿಸು, ಅಡ್ಡಹಾದಿ ಹಿಡಿಸು
misnomer — ಕ್ರಿ ಹೆಸರುತಪ್ಪು, ತಪ್ಪು ಹೆಸರು ಕೊಡು
misplace — ಕ್ರಿ 1 ತಪ್ಪದೆ ಇಡು 2 ಕೆಟ್ಟವ ರನ್ನು ನಂಬು ನಾ ತಪ್ಪಚ್ಚು
misquotation — ನಾ ತಪ್ಪೆತ್ತುಗೆ
misrepresentation — ನಾ ತಪ್ಪಡರ್ಪು
miss — ಕ್ರಿ ತಪ್ಪು (ಗುರಿತಪ್ಪು)
missile — ನಾ ಬಿಟ್ಟೇರು
missing — ಗು 1 ಕಳೆದುಹೋದ, ಕಾಣೆಯಾದ 2 ತಪ್ಪುವ, ದಟ್ಟು (ದಟ್ಟಡಿ - ಮಗು ದಟ್ಟಡಿಲಿುಡುತ್ತಿದೆ)
mission — ನಾ 1 ಬಾಳಿನ ಗುರಿ 2 ಕಳಿಪುಗೆ
missionary — ನಾ ತಿಳಿಪುಗ (ತಿಳಿಪುಗರು ಈ ಊರಲ್ಲಿ ತುಂಬಾ ಕೆಲಸ ಮಾಡಿದ್ದಾರೆ)
missive — ನಾ ಸುದ್ದಿ, ಓಲೆ
misspell — ಕ್ರಿ ತಪ್ಪುಬರೆ
mist — ನಾ ಇಬ್ಬನಿ (ಇಬ್ಬನಿ ಬಿದ್ದು ಬಟ್ಟೆ ಒದ್ದೆ ಯಾಗಿದೆ), ಮಂಜು (ಮಂಜು ಮುಸುಕು)
mistake — ನಾ ಹೊರೆ (ಹೊರೆಯೇರು - ಊಟಮಾಡುವಾಗ ಹೊರೆಯೇರಿ ಆತ ಸತ್ತುಹೋದ), ಪೊರೆ (ಪೊರಕೆ), ಕಿತ (ಕಿತನಾಸಿ), ತಪ್ಪು (ತಪ್ಪುಕೆಲಸ; ತಪ್ಪು ಮಾಡು; ತಪ್ಪುಕಾಣಿಕೆ)
mistress — ನಾ ಆಳ್ದಿತಿ,ಎರತಿ, ಒಡತಿ
mistrust — ಕ್ರಿ ನಂಬದಿರು
misunderstand — ಕ್ರಿ ತಪ್ಪುತಿಳಿ
misuse — ನಾ ಸೋರಿಕೆ (ಹಣದ ಸೋರಿಕೆ), ತಪ್ಪುಬಳಕೆ
mite — ನಾ ತೊಣಚಿ, ತೀರ ಚಿಕ್ಕದು
mitigate — ಕ್ರಿ ತಣಿಸು, ತಗ್ಗಿಸು, ಇಳಿಸು
mitten — ನಾ ಕಯ್ಮುಚ್ಚು
mix — ಕ್ರಿ ತಿಣಿ (ಚನ್ನಾಗಿ ತಿಣಿದ ಹಿಟ್ಟು), ಬೆರೆ (ಬೆರೆಯದ ಅಚ್ಚಕನ್ನಡ), ಕಲಡು (ಕಲಡಿದ ನೀರು), ಕಲೆ (ಇದರಲ್ಲಿ ಎಲ್ಲವೂ ಕಲೆತಿದೆ)
mixed — ಗು ಕಲ (ಕಲಬೆರಕೆ; ಕಲಗಚ್ಚು)
mixer — ನಾ ಕಲಸುಗ (ಕಲಸುಗದಲ್ಲಿ ಕಾಲಿು ತಿರುವುತ್ತಿದ್ದಾಳೆ)
mixture — ನಾ ಬೆರಕೆ,ಕಲಪು, ಕಲಕ
mnemonic — ಗು ನೆನಪಿಸುವ ಕ್ರಿ ನರಳು (ಇರುಳಿಡೀ ನರಳುತ್ತಿದ್ದ ಮುದುಕಿ; ನರಳಾಟ), ತೆಣರು
moat — ನಾ ಅಗಳು (ಕೋಟೆಯ ಸುತ್ತಲೂ ಅಗಳು ತೋಡಿದ್ದರು)
mob — ನಾ ದೊಂಬಿ (ದೊಂಬಿಯ ಕಯ್ಗೆ ಸಿಕ್ಕಿ ಆತ ಸತ್ತುಹೋದ)
mobile — ಗು ಮಿಳಿರಬಲ್ಲ (ಮಿಳಿರುಗೆ), ಕದಲ ಬಲ್ಲ (ಕದಲುಗೆ)
mobilize — ಕ್ರಿ ಒಟ್ಟುಗೂಡಿಸು, ಪಡೆ ಸೇರಿಸು
moccasin — ನಾ 1 ಜಿಂಕೆದೊಗಲು 2 ಮೆಟ್ಟು, ಕೆರ
mock at — ಕ್ರಿ ಎಕ್ಕರಿಸು (ಆ ಹುಡುಗ ನನ್ನನ್ನು ಕಂಡಾಗಲೆಲ್ಲ ಎಕ್ಕರಿಸುತ್ತಾನೆ), ಅಣಕಿಸು, ಎಡ್ಡಿಸು (ಎಡ್ಡಿಸಿ ಕಾಡಿದರು), ಏಡಿಸು (ನೀನು ಏಡಿಸಲು ಯಾವಾಗ ಕಲಿತೆ?), ಜಕ್ಕುಳಿಸು, ಮೂದಲಿಸು, ಸೇರು
mockery — ನಾ ಅಣಕ (ಅವನು ಅಣಕದಲ್ಲಿ ಹಾಗೆಂದ; ಅಣಕವಾಡಿದ), ಆಗಡ (ಆಗಡ ಮಾಡು)
mode — ನಾ ಬಗೆ (ನುಡಿವ ಬಗೆ; ನಡೆದು ಕೊಳ್ಳುವ ಬಗೆ)
model — ನಾ ಮರುಪರಿಜು, ಎತ್ತುಗೆ, ಹಿಂಬಾ ಲಿಸತಕ್ಕವನು
moderate — ಗು ನಡುತರದ, ಹದವರಿತ, ಹಾಳಿತವಾದ
modern — ಗು ಈಗಿನ, ಇಂದಿನ (ಇಂದಿನ ಉಡುಪು)
modesty — ನಾ ಸಿಗ್ಗು (ಸಿಗ್ಗಾಗು; ಸಿಗ್ಗು ಮಾಡು),ತಣಿ (ಆಕೆ ತಣಿಲಿುಂದ ಹೊರಗೆ ಬರಲಿಲ್ಲ)
modify — ಕ್ರಿ ಮಾರ್ಪಡಿಸು (ನಿಮ್ಮ ಬರಹವನ್ನು ತುಸು ಮಾರ್ಪಡಿಸಿದ್ದೇನೆ)
modish — ಗು ಬೆಡಗಿನ (ಬೆಡಗಿನ ಹುಡುಗಿ), ವಯ್ಯಾರದ (ಆಕೆ ವಯ್ಯಾರದ ಹೆಂಗಸು), ಸೊಗಸುಗಾರಿಕೆಯ
modulate — ಕ್ರಿ ಹತೋಟಿಯಲ್ಲಿಡು, ಸರಿ ಹೊಂದಿಸು
moisten — ಕ್ರಿ ನಾನು, ನಾದು (ಅದನ್ನು ಮುಟ್ಟುವ ಮೊದಲೆೀ ಕಯ್ಯನ್ನು ನೀರಿನಲ್ಲಿ ನಾದಿಕೊಳ್ಳಬೇಕು), ನಾರು (ಬಟ್ಟೆಯನ್ನು ನಾರಿ ಕನ್ನಡಿಯನ್ನು ಒರೆಸಬೇಕು)
moisture — ನಾ ಈರ (ಈರುಳ್ಳಿ), ಪಸೆ (ನೀರಿನ ಪಸೆ)
molar — ನಾ ಕಡೆಹಲ್ಲು,ದವಡೆ ಹಲ್ಲು
molasses — ನಾ ನೀರುಬೆಲ್ಲ
mole — ನಾ 1 ಮಚ್ಚೆ (ಆತನ ಕುತ್ತಿಗೆಯಲ್ಲಿ ಒಂದು ಮಚ್ಚೆಲಿುದೆ) 2 ತಡೆಗೋಡೆ
molest — ಕ್ರಿ ತೊಂದರೆ ಕೊಡು, ಕಾಡು
molodorous — ಗು ಕೆಟ್ಟ ನಾತದ
molten — ಗು ಕರಗಿದ (ಕರಗಿದ ಕಬ್ಬಿಣ) ಗು ಪೆರ್ಮೆಯ, ಹೆಚ್ಚುಗಾರಿಕೆಯ
monarch — ನಾ ಪೇರರಸು
monastery — ನಾ ಬಿಡುಗರ ಬಿಡದಿ
money — ನಾ ಕಾಸು, ದುಡ್ಡು, ಹಣ
money (small) — ನಾ ಚಿಲ್ಲರೆ (ಚಿಲ್ಲರೆ ಹಣ)
money-lender — ನಾ ಎರವಣಿಗ
monger — ನಾ ಹರದ, ಮಾರಾಳಿ, ಮಾರಾಟ ಗಾರ
mongoose — ನಾ ಮುಂಗುಸಿ, ಕೀರ
monition — ನಾ ಎಚ್ಚರಿಕೆ
monitor — ನಾ 1 ಮುನ್ನೆಚ್ಚರಿಕೆಗಾರ 2 ಮೇಲ್ಕಲಿಗ
monk — ನಾ ಬಿಡುಗ (ಬಿಡುಗನಿಗೆ ಇರುಳೂಟ ವಿಲ್ಲ)
monkey — ನಾ ಮಂಗ (ಮಂಗಾಟ; ಮಂಗಾ ಟಿಕೆ), ಕೋಡಗ (ಕೋಡಗದ ಹಾಗೆ ಹಲ್ಲು ಕಿರಿಯ ಬೇಡ), ಕೊಂಗ (ಕೊಂಗಾಟ), ಕೋತಿ
monocle — ನಾ ಒಕ್ಕನ್ನಡಕ
monocrome — ಗು ಒರ್ಬಣ್ಣದ (ಒರ್ಬಣ್ಣದ ತಿಟ್ಟ)
monogram — ನಾ ಕೂಡುಬರಿಗೆ
monolith — ನಾ ಒರ್ಕಲ್ಲು
monologue — ನಾ ಒರ್ಸೂಳು
monopolize — ಕ್ರಿ ಓರಂಕೆಪಡೆ
monopoly — ನಾ ಓರಂಕೆ
monotonous — ಗು ಚಿಟ್ಟುಹಿಡಿಸುವ, ಒಂದೇ ಮಟ್ಟದ ಉಲಿಯ, ಬದಲಾಗದ, ಏರಿಳಿತ ವಿಲ್ಲದ
monsoon — ನಾ ಮಳೆಗಾಲ, ಕಾರ್ಗಾಲ
monstrous — ಗು ಅಂಜಿಸುವ, ತುಂಬಾ ದೊಡ್ಡ, ದಿಗಿಲುಗೊಳಿಸುವ
month — ನಾ ತಿಂಗಳು (ತಿಂಗಳು ತುಂಬು; ತಿಂಗಳುಗಟ್ಟಲೆ)
monument — ನಾ ನೆನಪುಗೆ
monumental — ಗು ನೆನಪಿನಲ್ಲುಳಿಸುವ, ತುಂಬಾ ದೊಡ್ಡ, ಮರೆಯಲಾಗದ
mood — ನಾ ಅನಿಸಿಕೆ ನಾ ತಿಂಗಳು (ತಿಂಗಳ ಬೆಳಕು),ಹೆರೆ (ಹೆರೆಗಾಣು; ಹೆರೆನೊಸಲು), ಇಂಗದಿರ
moonlight — ನಾ ಬೆಳದಿಂಗಳು
moor — ನಾ ಪಾಳುನೆಲ
moor — ಕ್ರಿ ಕಟ್ಟಿಹಾಕು, ಗಟ್ಟಿನಿಲ್ಲಿಸು
moot — ಗು ತೀರ್ಮಾನಕ್ಕೆ ಬಾರದ, ಆರಯ್ಯ ಬೇಕಿರುವ
mop — ನಾ 1 ಪೊದೆತಲೆ 2 ದುಂಬುತೊಡಪ, ಒರಸುಗೆ
mop up — ಕ್ರಿ ಒರಸು (ಚೆಲ್ಲಿದ ಹಾಲನ್ನು ಬಟ್ಟೆಲಿುಂದ ಒರಸಿ ತೆಗೆ)
mope — ಕ್ರಿ ಮಂಕಾಗಿರು (ಹುಡುಗ ಇವತ್ತು ಮಂಕಾಗಿದ್ದಾನೆ), ಹುರುಪಿಲ್ಲದಿರು
moral — ಗು ಒಳ್ಳೆ ನಡತೆಯ, ಸರಿ-ತಪ್ಪು ತಿಳಿಸುವ
morale — ನಾ ಅದಟು, ಕದುಪು, ಎದೆ
morality — ನಾ ಸರಿತಪ್ಪರಿಮೆ
morass — ನಾ ಜವುಗು ನೆಲ, ಕೆಸರು ನೆಲ
moratorium — ನಾ ತಡೆಹಿಡಿತ, ತಡೆ
morbid — ಗು 1 ಕುತ್ತಹಿಡಿದ, ಮಯ್ಸರಿ ಲಿುಲ್ಲದ 2 ದಿಗಿಲುಗೊಳಿಸುವ, ನೋಡ ಲಾಗದ
mordant — ಗು ಚುಚ್ಚುವ (ಚುಚ್ಚುವ ಮಾತು)
more — ಗು ಹೆಚ್ಚಿಗೆ (ಅವನು ಹೆಚ್ಚಿಗೆ ಕೇಳಲಿಲ್ಲ)
morgue — ನಾ ಹೆಣದರೆ (ಅವರು ಹೆಣದರೆಗೆ ಹೋಗಿದ್ದಾರೆ)
moribund — ಗು ಸಾಯುತ್ತಿರುವ
morning — ಗು ಮುಂಜಾವು, ಮುಂಜಾನೆ,ಮುಂಬಗಲು
morose — ಗು ಮಂಕಾದ, ಸೇರದಿರುವ, ಸಿಡುಕಿನ
morsel — ನಾ ತುತ್ತು (ತುತ್ತುಗೂಳು)
mortal — ಗು ಸಾವಿರುವ, ಸಾವಿನ, ಕೊಲ್ಲಬಲ್ಲ
mortality — ನಾ 1 ಸಾವಿರುವಿಕೆ 2 ಹಲವರ ಸಾವು, ಸಾವಿನ ಎಣಿಕೆ
mortar — ನಾ ಒರಳು (ಒರಳು ಕಲ್ಲು),ತಿರುವು ಕಲ್ಲು, ಕುಟ್ಟಣಿ
mortgage — ನಾ ಈಡು, ಅಡವು (ಅಡವಿಡು), ಒತ್ತೆ (ಒತ್ತೆಲಿುಡು; ಒತ್ತೆಬಿಡಿಸು)
mortify — ಕ್ರಿ ಮದಿಪು ಕೆಡಿಸು, ತಕ್ಕಮೆ ಕಳೆ
mortuary — ನಾ ಹೆಣದರೆ
mosquito — ನಾ ಸೊಳ್ಳೆ (ಸೊಳ್ಳೆಗಳ ಕಾಟ), ಗುಂಗಾಡಿ, ನುಸಿ (ನುಸಿಬಲೆ), ಕುಣುಬು ನಾ ಪಾಚಿ (ಪಾಚಿಕಟ್ಟು - ಪಾಚಿಕಟ್ಟಿದ ಮೆಟ್ಟಲುಗಳು), ಹಾವಸೆ (ಆ ಕಲ್ಲಿನ ಮೇಲೆ ಹಾವಸೆ ಬೆಳೆದಿದೆ)
mote — ನಾ ದುಂಬಿನ ತುಣುಕು
moth — ನಾ ಹಾತೆ (ಸೊಡರಿನ ಸುತ್ತೂ ಹಾತೆಗಳು ಬಂದು ಬಿದ್ದಿವೆ)
mother — ನಾ ಅಬ್ಬೆ, ಅವ್ವ, ಅಮ್ಮ, ತಾಲಿು (ತಾಲಿುಮನೆ; ತಾಲಿು ಮಾತು; ತಾಲಿು ನಾಡು; ತಾಲಿುನುಡಿ; ತಾಲಿುವಾವಿ), ತಾಯ್ (ತಾಯ್ನುಡಿ)
mother tongue — ನಾ ತಾಯ್ನುಡಿ
motherhood — ನಾ ತಾಯ್ತನ
motherland — ನಾ ತಾಯ್ನಾಡು
mother-of-pearl — ನಾ ಮುತ್ತುಚಿಪ್ಪು
motif — ನಾ ಹುರುಳು (ಹುರುಳಿನ ಹಾಡು)
motion — ನಾ 1 ಆಡಿಕೆ (ಅಲ್ಲಡಿಕೆ), ಕದಲಿಕೆ, ಪೊಡಪು (ಮಿಂಚಿನ ಪೊಡಪು), ತೆರಳಿಕೆ (ಕಣ್ಣುಗಳ ತೆರಳಿಕೆ) 2 ಗೊತ್ತುವಳಿ 3 ತಳ್ಳುಗೆ (ಅವನಿಗೆ ಇವತ್ತು ಸರಿಯಾಗಿ ತಳ್ಳುಗೆಯಾಗಲಿಲ್ಲ)
motionless — ಗು ಸಸಿನೆ (ಸಸಿನೆ ಇರಲಾರ ದವನು)
motive — ನಾ ಉರವಣೆ, ಒಳ ಒತ್ತಡ, ಹೆಳೆ
motley — ಗು ಬಣ್ಣಬಣ್ಣದ
motor — ನಾ ಓಡುಗೆ
mottled — ಗು ಬಣ್ಣಚುಕ್ಕೆಯ
motto — ನಾ ಒಳ್ನುಡಿ
mould — ನಾ 1 ಬೂಸು, ಬೂಷ್ಟ, ಬೂಜು (ಬೂಜುಗಟ್ಟು), ಬೂಸರು (ಬೂಸರು ಬಂದ ರೊಟ್ಟಿಯ ಚೂರು), ಮಗ್ಗು (ಮಗ್ಗುಹಿಡಿ, ಮಗ್ಗುನಾತ) 2ಅಚ್ಚು (ಬೆಲ್ಲದ ಅಚ್ಚು; ಎರಕದ ಅಚ್ಚು)
moult — ಕ್ರಿ ಕಳೆ (ಕೂದಲು ಕಳೆ), ಬಿಡು (ಹೆರೆಬಿಡು), ಉದುರು (ಕೂದಲು ಉದುರು)
mound — ನಾ ದಿಬ್ಬ, ದಿನ್ನೆ (ದಿನ್ನೆ ಮೇಲೆ ಹೊಯ್ದ ಮಳೆ ಹಳ್ಳಕ್ಕೆ ಬರುತ್ತದೆ), ದಿಣ್ಣೆ
mount — ಕ್ರಿ ಹತ್ತು, ಏರು (ಕುದುರೆ ಏರು)
mountain — ನಾ ಕೊಂಡ, ಬೆಟ್ಟ (ಬೆಟ್ಟದಿಂದ ಉರುಳಿದ ಕಲ್ಲು, ಬೆಟ್ಟದ ತಪ್ಪಲು), ಹೆಬ್ಬೆಟ್ಟ, ಮಲೆ (ಮಲೆಕೋಡು; ಮಲೆಗ; ಮಲೆಜೇನು; ಮಲೆನಾಡು)
mountain pass — ನಾ ಕಣಿವೆ ನಾ 1 ಮಲೆಯೇರುಗ 2 ಮಲೆಬಾಳುಗ
mountainous — ಗು ಗುಡ್ಡಬೆಟ್ಟಗಳಿರುವ
mourn — ಕ್ರಿ ಮರುಗು (ಆತನ ಸಾವಿಗೆ ಮರುಗ ದವರು ಯಾರೂ ಇರಲಿಲ್ಲ)
mourning — ನಾ ಮರುಕ, ಮರುಕತೋರ್ಪು
mouse — ನಾ ಇಲಿ
moustache — ನಾ ಮೀಸೆ (ಮೀಸೆತಿಕ್ಕು; ಮೀಸೆಮಣ್ಣಾಗು)
mouth — ನಾ ಬಾಲಿು (ಬಾಲಿುಬಡಿ; ಬಾಲಿು ಬಿಡು; ಬಾಲಿುಬಡುಕ; ಬಾಲಿುಹಾಕು; ಬಾಯಾರೆ - ಬಾಯಾರೆ ನುಡಿ)
mouth (of river) — ನಾ ಅಳುವೆ (ಹೊಳೆಯ ಅಳುವೆಯಲ್ಲಿ ನೀರು ಉಪ್ಪಾಗಿದೆ)
mouthful — ಗು ಮುಕ್ಕುಳಿ (ಒಂದು ಮುಕ್ಕುಳಿ ನೀರು), ಗುಟುಕು (ಗುಟುಕು ನೀರು), ತುತ್ತು (ತುತ್ತಿಕ್ಕು; ತುತ್ತಿಡು)
movable — ಗು ಸರಿಸಬಲ್ಲ, ಹೋಗಬಲ್ಲ
move — ಕ್ರಿ ಸರಿ (ಹಿಂದಕ್ಕೆ ಸರಿ; ಪಕ್ಕಕ್ಕೆ ಸರಿ; ಸರಿಲಿುಸು), ತಳರು, ಮಿಡುಕು (ಮಿಡುಕುವ ಬಾಲಿು; ಮಿಡುಕದೆ ನೋಡು), ಮಲುಕು (ಯಾರು ನೂಕಿದರೂ ಮಲುಕದ ತೇರು), ಮಿಸುಕು (ಮಿಸುಕಾಡು; ಅವನು ಮಿಸು ಕಾಡದೆ ಮಲಗಿದ್ದ), ಮೆದಲು (ಮೆದಲದೆ ಬಂಡೆಯ ಮೇಲೆ ಮಲಗಿದ್ದ), ಅಲ್ಲಡು, ಅಲಗು (ಅಲಗಿಸು), ಆಡು (ಈ ಹಲ್ಲು ಆಡುತ್ತಿದೆ), ಉಲುಕು (ಉಲುಕಾಡದೆ ಬಿದ್ದುಕೊಂಡಿದ್ದ), ಹಂದು (ಹಂದಾಡು; ಹಂದದೆ ನಿಂತುಕೋ), ಕದಲು (ಕದಲಾಡು; ಆತ ಕುಳಿತ ಜಾಗವನ್ನು ಬಿಟ್ಟು ಕದಲಲಿಲ್ಲ)
move about — ಕ್ರಿ ಮಿಳಿರು (ಮಿಳಿರುವ ತುಂಬಿಗಳು; ತಳಿರು ತೋರಣಗಳು ಮಿಳಿರು ತ್ತಿದ್ದುವು; ಮಿಳ್ಳಿಸು), ಹರಿದಾಡು, ಮುಲು ಗುಟ್ಟು (ಆಕೆಯ ತಲೆಯಲ್ಲಿ ಹೇನುಗಳು ಮುಲುಗುಟ್ಟುತ್ತಿವೆ)
move aside — ಕ್ರಿ ಜರುಗು (ತುಸು ಜರುಗಿ ಕುಳಿತುಕೊಳ್ಳಿ), ಒತ್ತು (ಬದಿಗೆ ಒತ್ತು)
move suddenly — ಕ್ರಿ ಅಡಬಡಿಸು
movement — ನಾ 1 ಆಡಿಕೆ, ಕದಲಿಕೆ 2 ನುಗ್ಗಿಕೆ (ತೆರಿಗೆ ಕಡಿಮೆಮಾಡಬೇಕೆಂಬ ಒಂದು ನುಗ್ಗಿಕೆ ಮೊದಲಾಗಿದೆ)
movie — ನಾ ಓಡುತಿಟ್ಟ
mow — ಕ್ರಿ ಕೊಯ್ಯು (ಹುಲ್ಲುಕೊಯ್ಯು)
much — ಗು ನೊಳದು, ಮೊಕ್ಕಳ (ಅವನಿಗೆ ಮೊಕ್ಕಳ ತಿಳಿದಿದೆ), ಅಕ್ಕುಮಿಕ್ಕು (ಅವನ ಅಕ್ಕರೆ ಅಕ್ಕುಮಿಕ್ಕಾಲಿುತು), ಅಣ್ಣನೆ (ಅಣ್ಣನೆ ದಣಿದು ಬಂದರು), ಎಯ್ದು (ಆತನನ್ನು ಎಯ್ದು ಹೊಗಳಿದರು), ಅಳುಂಬ (ಅಳೆದು ನೋಡಿದಾಗ ಅಳುಂಬವೆಂದು ಕಂಡುಬಂತು; ಆತ ಅಳುಂಬವಾಗಿತ್ತು), ಉರೆ (ಉರೆ ಉಂಡು ಬಂದೆ; ಉರೆ ಕಾಯುವ ಬಿಸಿಲು), ಹಲವು (ಅಲ್ಲಿ ಹಲವು ಮಕ್ಕ ಳಿದ್ದರು; ಹಲವಿರುಳು), ಹೇರಳ (ಹೇರಳ ಹಣ ದೊರೆತಿದೆ), ಹೆಚ್ಚು (ಹೆಚ್ಚಿಸು; ಹೆಚ್ಚುಕಡಿಮೆ; ಹೆಚ್ಚುಗೆ), ತುಂಬ (ತುಂಬ ಹೊತ್ತು ಕಾಲಿುಸಿದ; ತುಂಬಾ ಮಂದಿ ಸೇರಿದ್ದಾರೆ), ಕೆನ್ನ
muck — ನಾ ಕೊಳೆ, ಕೊಚ್ಚೆ, ಅಡಲು, ಹಸಿ ಗೊಬ್ಬರ (ಕೊಟ್ಟಿಗೆ ಗೊಬ್ಬರ), ಸೆಗಣಿ
mucus — ನಾ ಸಿಂಬಳ (ಮಕ್ಕಳ ಸಿಂಬಳ ಒರೆಸು), ಲೊೀಳಿ (ಮೂಗಿನಿಂದ ಹರಿವ ಲೊೀಳಿ; ಲೊೀಳಿಸರ),ಉಮ್ಮಲು
mud — ನಾ ಮಣ್ಣು, ಬುರುದೆ (ಕೆರೆಯಲ್ಲಿ ಬುರುದೆ ತುಂಬಿದೆ), ಮಲಪು, ರೊಚ್ಚು, ಕೊಚ್ಚೆ (ಕೊಚ್ಚೆಯಲ್ಲಿ ಬಿದ್ದ ಹಣ್ಣು), ಅಡಲು,ಕೆಸರು (ಕೆಸರಿನಲ್ಲಿ ಕಂಡ ಹೆಜ್ಜೆ ಗುರುತು; ಕೆಸರಿನಲ್ಲಿ ಮುಳ್ಳು ತುಳಿದರು)
muddle — ನಾ ತಬ್ಬಿಬ್ಬು, ಗೊಂದಲ
muddy — ಕ್ರಿ 1 ಕದಡು (ಕದಡಿದ ನೀರು) 2 ತಬ್ಬಿಬ್ಬಾಗು
muddy — ಗು ಒಂಡು (ಕೆಸರು ಕದಡಿ ನೀರು ಒಂಡಾಗಿದೆ), ಅರುಲು (ಅರುಲುಗದ್ದೆ)
mudguard — ನಾ ಕೆಸರುತಡೆ (ಬಂಡಿಯ ಕೆಸರುತಡೆ)
mud-heap — ನಾ ಮಿಟ್ಟಿ (ಕಲ್ಲು ತಾಗಿದ ಮಿಟ್ಟಿಯ ಹಾಗೆ), ಮಿಟ್ಟೆ (ಮಿಟ್ಟೆ ನೆಲ)
muffle — ಕ್ರಿ 1 ಸುಂದು, ಮುಚ್ಚು (ಚಳಿ ತಡೆಯಲು ಕುತ್ತಿಗೆ ಮುಚ್ಚು) 2 ಬಾಲಿು ಮುಚ್ಚಿಸು, ಉಲಿಗುಂದಿಸು
muffler — ನಾ ಕುತ್ತಿಗೆಬಟ್ಟೆ, ಕುತ್ತಿಗೆಪಟ್ಟಿ
mug — ನಾ ಕಯ್ಬಟ್ಟಲು
mug — ಕ್ರಿ ದಾಳಿಲಿುಡು, (ಹಿಂದಿನಿಂದ) ದಾಳಿ ಮಾಡು
muggy — ಗು ಮಂಜುಮುಸುಕಿದ, ಮಂಜು ಕವಿದ
mulberry — ನಾ ಉಪ್ಪುನೇರಿಳೆ, ಹಿಪ್ಪನೇರಿಳೆ
mulch — ನಾ ಹಸಿಗೊಬ್ಬರ
mule — ನಾ 1 ಹೇಸರಗತ್ತೆ 2 ದಡ್ಡ, ಹಟ ಮಾರಿ
multicoloured — ಗು ಬಣ್ಣಬಣ್ಣದ, ಹಲ ಹೊಗರಿನ
multifarious — ಗು ಬಗೆಬಗೆಯ (ಬಗೆ ಬಗೆಯ ಹಣ್ಣುಗಳು)
multilingual — ಗು ಹಲನುಡಿಯ (ಹಲ ನುಡಿಯ ನಾಡು)
multinational — ಗು ಹಲನಾಡ (ಹಲನಾಡ ತೊಂದರೆಗಳು)
multiple — ಗು ಹಲಕೂರುಗಳುಳ್ಳ, ಬಗೆ ಬಗೆಯ ನಾ ಹೆಚ್ಚುಗೆ
multiply — ಕ್ರಿ ಹೆಚ್ಚು (ಹೆಚ್ಚಾಗು)
multipurpose — ಗು ಹಲ ಈಡುಗಳುಳ್ಳ
multitude — ನಾ ಉರಳಿ, ಉಂದಲು (ಉಂದ ಲಲ್ಲಿ ಮಗು ತಪ್ಪಿಹೋಲಿುತು), ಉರುಬೆ (ತಲೆಯ ಮೇಲೆ ಬೀಳುತ್ತಿರುವ ಕಲ್ಲುಗಳ ಉರುಬೆ), ಒಬ್ಬುಳಿ (ಎಲ್ಲರೂ ಒಟ್ಟು ಸೇರಿ ಒಬ್ಬುಳಿಯಾಗಿ ಕೆಲಸ ಮಾಡಿ), ಕದಲೆ, ತೆರಳ್ಕೆ (ಇರುವೆಗಳ ತೆರಳ್ಕೆಯಲ್ಲಿ ಹಾತೆ ಮುಚ್ಚಿ ಹೋಲಿುತು),ತೆಮ್ಮಲು, ತಿಂತಿಣಿ (ತಿಂತಿಣಿಸು)
mum — ಗು ಮಾತಾಡದಿರುವ
mumble — ಕ್ರಿ ಗೊಣಗುಟ್ಟು (ಮುದುಕಿ ಗೊಣ ಗುಟ್ಟುತ್ತಿದ್ದಳು), ವಟಗುಟ್ಟು
mummy — ನಾ ಉಳಿಹೆಣ
mumps — ನಾ ಗದ್ದಬಾವು
munch — ಕ್ರಿ ಕುರುಕು (ಅವನಿಗೆ ಏನಾದರೂ ಕುರುಕುತ್ತಾ ಇರಬೇಕು)
mundane — ಗು ಎಂದಿನ (ಎಂದಿನ ಕೆಲಸ), ಯಾವಾಗಿನ
municipality — ನಾ ಪೊಳಲು, ಪೊಳಲಾಳ್ವಿಕೆ
munificent — ಗು ಕೊಡುಗಯ್ (ಆತ ಕೊಡುಗಯ್ ದೊರೆ)
munitions — ನಾ ಪಡೆಯೊಡವೆ
munute — ನಾ ಕರಡುಬರಹ
mural — ಗು ಗೋಡೆಯ (ಗೋಡೆಯ ಮೇಲೆ ಬಿಡಿಸಿದ ತಿಟ್ಟ)
murder — ನಾ ಕೊಲೆ (ಕೊಲೆಯಾಗಿ ಮೂರು ತಿಂಗಳು ಕಳೆದರೂ ಕೊಲೆಗಾರ ಸಿಕ್ಕಿಲ್ಲ; ಕೊಲೆಗಡುಕ; ಕೊಲೆಗೊಳ್ಳು; ಕೊಲೆಗೆಯ್ಯು), ಇಕ್ಕ (ಅರಸನ ಇಕ್ಕ)
murky — ಗು ಮಬ್ಬು (ಮಬ್ಬುಗತ್ತಲೆ), ಮಂಕು (ಮಂಕು ಕವಿದಿದೆ)
murmur — ಕ್ರಿ ಗೊಣಗು (ಗೊಣಗಾಡು), ಗುಣುಗುಟ್ಟು, ಜಿನುಗು (ಆತ ಕಿವಿಯ ಲ್ಲೀನೋ ಜಿನುಗುತ್ತಿದ್ದ; ಜಿನುಗುಮಾತು), ಗುಣುಗುಣಿಸು
muscle — ನಾ 1 ನರಕಟ್ಟು 2 ದಿಂಡು, ಬಲ್ಮ, ಅಳವು
muse — ಕ್ರಿ ಓರು, ಉನ್ನು, ನೆನೆ
museum — ನಾ ಒಡವೆನೆರಪೆಡೆ, ಒಡವೆಮನೆ
mushroom — ನಾ ಅಣಬೆ (ತಿನ್ನುವ ಅಣಬೆ), ನಾಲಿುಕೊಡೆ, ಕೊಡೆಹುಲ್ಲು
music — ನಾ ಹಾಡಿಕೆ, ಎಸೆಗೆ
musician — ನಾ ಹಾಡುಗಾರ, ಹಾಡುಗಾರ್ತಿ ನಾ ಹಾಡಿಕೆಯರಿಗ
musicology — ನಾ ಹಾಡಿಕೆಯರಿಮೆ
musket — ನಾ ಕಯ್ಕೋವಿ
muslin — ನಾ ತೆಳು ಹತ್ತಿಬಟ್ಟೆ
mustard — ನಾ 1 ಸಾಸಿವೆ 2 ಕಂದು ಮಂಜಳ ಹೊಗರು
muster — ಕ್ರಿ ಹುರಿದುಂಬಿಸು, ಒಟ್ಟುಸೇರಿಸು
musty (be) — ಕ್ರಿ ಮುಗ್ಗು (ಮುಗ್ಗಿದ ಅಕ್ಕಿ)
musty — ಗು ಕುಮುಟು (ಕುಮುಟು ಅಕ್ಕಿ), ಹಳಸಲು
mutation — ನಾ ಹುಟ್ಟು ಪರಿಜೆಯ ಮಾರ್ಪು, ಮಾರ್ಪಾಡು
mute — ಗು ಮಾತುಬಾರದ, ಮಾತಿಲ್ಲದ, ಊಮೆ
mutilate — ಕ್ರಿ ಕಡಿ, ತುಂಡಿಸು, ಹೆಳವನಾಗಿಸು
mutiny — ಕ್ರಿ ಎದುರುಬೀಳು, ಎದುರು ನಿಲ್ಲು, ತಿರುಗಿಬೀಳು
mutter — ಕ್ರಿ ಜಿನುಗು (ಜಿನುಗುವ ಮುದುಕಿ), ಗುಣುಗು, ಗುಣುಗುಟ್ಟು
mutton — ನಾ ಕುರಿಬಾಡು
mutual — ಗು ಒಬ್ಬನಿಗೊಬ್ಬ, ಒಂದಕ್ಕೊಂದು
muzzle — ನಾ 1 ಮುಸುಡು (ಕುದುರೆಯ ಮುಸುಡು), ಮೂತಿ 2 ಬಾಲಿುಕುಕ್ಕೆ (ಕೆಯ್ ತಿನ್ನದ ಹಾಗೆ ಎತ್ತಿನ ಮುಸುಡಿಗೆ ಬಾಲಿು ಕುಕ್ಕೆ ಕಟ್ಟಿದ್ದಾರೆ)
myopia — ನಾ ಹತ್ತಿರಕಾಣ್ಕೆ
myriad — ಗು ಗೊತ್ತಿಲ್ಲದಷ್ಟು, ಲೆಕ್ಕವಿಲ್ಲದಷ್ಟು (partial)
mysterious — ಗು ಗುಂಬ (ಗುಂಬ ಮಾತು)
mystery — ನಾ 1 ಗುಟ್ಟು 2 ತಿಳಿಯಲಾಗದ್ದು
mystify — ಕ್ರಿ ಕಣ್ಣಿಗೆ ಮಣ್ಣೆರಚು, ಗುಟ್ಟು ಮಾಡು, ತಬ್ಬಿಬ್ಬಾಗಿಸು
myth — ನಾ ಕಟ್ಟುಕತೆ (ಆತ ಎಲ್ಲ ಬಗೆಯ ಕಟ್ಟುಕತೆಗಳನ್ನೂ ನಂಬುತ್ತಾನೆ), ಹಳೇಕತೆ, ನಂಬಿಬಂದ ಕತೆ
mythology — ನಾ ನಂಬಿದ ಕತೆಯರಿಮೆ