← Ch 1  ·  Contents  ·  Ch 3 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19

B

babble — ಕ್ರಿ ಉಲಿ ಹೊರಡಿಸು
babool tree — ನಾ ಜಾಲಿ (ಜಾಲಿಯ ಮರ)
baby (new born) — ನಾ ಹಿಳ್ಳೆ
baby — ನಾ ಹಸುಳೆ, ಕೂಸು (ಹೆಣ್ಣುಕೂಸು, ಗಂಡುಕೂಸು), ಪಿಳ್ಳೆ
back — ನಾ ಬೆನ್ನು (ಬೆನ್ನು ಹತ್ತು, ಬೆನ್ನು ಬೀಳು; ಬೆಂಬತ್ತು; ಬೆಂಬಲ) ಗು ಹಿಂದೆ, ಹಿಂದಕ್ಕೆ, ಹೆಡ (ಹೆಡತಲೆ; ಹೆಡಕಯ್; ಹೆಡಕಾಲು; ಹೆಡಮುರಿಗೆ ಕಟ್ಟು; ಹೆಡಗುಡಿ)
back of neck — ನಾ ಹೆಡಕು, ಹೆಗ್ಗತ್ತು (ಆತನಿಗೆ ಹೆಗ್ಗತ್ತಿನಲ್ಲಿ ನೋವು)
back up — ಕ್ರಿ ಬೆಂಬಲಿಸು
backbiting — ನಾ ಕೊಂಡೆ (ಕೊಂಡೆಗ; ಕೊಂಡೆಗಿತ್ತಿ; ಕೊಂಡೆನಾಲಿಗೆ)
backbone — ನಾ ಬೆನ್ನೆಲುಬು, ಬೆನ್ನುಹುರಿ, ಬೆನ್ನುಮೂಳೆ
backdoor — ನಾ ದಿಡ್ಡಿ (ದಿಡ್ಡಿಬಾಗಿಲು)
backer — ನಾ ಬೆಂಬಲಿಗ
background — ನಾ ಹಿನ್ನೆಲೆ (ಅವರ ಜಗಳದ ಹಿನ್ನೆಲೆ ಮಾತ್ರ ಯಾರಿಗೂ ತಿಳಿದಿಲ್ಲ)
background music — ನಾ ಹಿಮ್ಮೇಳ (ಕೆಲವು ಹಾಡುಗಳನ್ನು ಹಿಮ್ಮೇಳದಲ್ಲಿ ಹೇಳಲಾಗುತ್ತದೆ)
backing — ನಾ ಬೆಂಬಲ (ನಿಮಗೆ ನಮ್ಮ ಬೆಂಬಲವಿದೆ)
backlash — ನಾ ಹಿನ್ಸರಿತ,ಹಿಂದೇಟು
backlog — ನಾಹಿಂದುಳಿಕೆ
backside — ನಾ ಪೆರಗು, ಹಿಂಗಟ್ಟು, ಹಿಂಗಡೆ
backtrack — ನಾ ಹಿನ್ನಡೆ
backward — ಗು ಹಿಂದುಳಿದ
backwards — ಗು ಹೆರೆ (ಹೆರೆದೆಗೆ, ಹೆರೆ ಹಿಂಗು)
backwash — ನಾ ಹಿಂದೆರೆ
backwater — ನಾ ಹಿನ್ನೀರು,ಕಾರಿ
backyard — ನಾ ಬೆಂಬಿತ್ತಿಲು (ಬೆಂಬಿತ್ತಿಲ ತೋಟ), ಹಿತ್ತಿಲು (ಮನೆಯ ಹಿಂದೆ ಚಿಕ್ಕ ಹಿತ್ತಿಲಿದೆ)
bad debt — ನಾ ಕರಡು ಸಾಲ
bad smell — ನಾ ಗಬ್ಬು
bad — ಗು ಕೆಟ್ಟ (ಕೆಟ್ಟ ಹೆಸರು; ಕೆಟ್ಟ ಮಾತು), ಬಚ್ಚ (ಬಚ್ಚ ನಾಲಿಗೆ), ಹೊಲ್ಲು (ಹೊಲ್ಲು ನುಡಿವವನು; ಹೊಲ್ಲುಬಟ್ಟೆ)
badge — ನಾ ಗುರುತು
baffle — ಕ್ರಿ ಕಕ್ಕಾಬಿಕ್ಕಿಯಾಗು
bag — ನಾ ಕಲ್ಲಿ (ಕಲ್ಲಿಯಲ್ಲಿಟ್ಟ ತಿಂಡಿ),ಚೀಲ (ಗೋಣಿ ಚೀಲ),ಚೊಕ್ಕಣ (ಅಡಿಕೆ ಮತ್ತು ಎಲೆ ಅವನ ಚೊಕ್ಕಣದಲ್ಲಿದೆ)
bag (long) — ನಾ ಹಸುಬೆ (ಹೆಗಲ ಮೇಲೆ ಹಾಕಿಕೊಂಡ ಹಸುಬೆ)
bag (small) — ನಾ ಹಡಪ (ಹಡಪದಲ್ಲಿ ಹಾಕಿರಿಸಿದ ಎಲೆ, ಅಡಿಕೆ)
bagasse — ನಾ ಕಬ್ಬಿನ ಸಿಪ್ಪೆ
baggage — ನಾ ಗಂಟುಮೂಟೆ (ಗಂಟುಮೂಟೆ ಕಟ್ಟಿ ಎಲ್ಲಿಗೋ ಹೊರಟಿದ್ದಾನೆ)
bail — ನಾ ಹೊಣೆ (ನನಗವನು ಹೊಣೆಯಾಗಿ ನಿಂತಿದ್ದ)
bail out (water) — ಕ್ರಿ ತೋಡು, ಮೊಗೆ (ನೀರನ್ನು ಮೊಗೆದು ಹೊರ ಹಾಕಿದ)
bake — ಕ್ರಿ ಸುಡು (ಒಲೆಯಲ್ಲಿ ಸುಡು; ರೊಟ್ಟಿ ಸುಡು), ಬೇಯಿಸು
baking powder — ನಾ ಒದಗುಪುಡಿ, ಉಬ್ಬುಪುಡಿ
balance — ನಾ 1 ತಕ್ಕಡಿ (ತಕ್ಕಡಿಯಲ್ಲಿ ತೂಗು) 2 ಸರಿತೂಕ
balance — ಕ್ರಿ ಸರಿಮಾಡು (ಎರಡನ್ನೂ ಸರಿಮಾಡಿ ಕೊಡಿ)
balance amount — ನಾ ತಡಿಗೆ ಹಣ
balcony — ನಾ 1 ಮೇಲ್ಕಟ್ಟು (ಮೇಲ್ಕಟ್ಟಿನಲ್ಲಿ ಕುಳಿತರೆ ಕುಣಿತ ಚನ್ನಾಗಿ ಕಾಣಿಸುತ್ತದೆ) 2 ಮುಂದೊಟ್ಟಿ ಗು ಬೋಳು (ಬೋಳಾಗು; ಬೋಳು ತಲೆ),ಬಕ್ಕ (ಬಕ್ಕತಲೆ; ಬಕ್ಕ ಬಯಲು), ಬಟ್ಟ (ಬಟ್ಟತಲೆ, ಬಟ್ಟ ಬಯಲು), ತರಟು (ತರಟು ಮಂಡೆ; ತಲೆ ತರಟಾಗು)
baldness — ನಾ ತೆಗಳಿ, ತೆಗಳಿಗೆ
bale — ನಾ ಮೂಟೆ
bale out — ಕ್ರಿ ಮೊಗೆ (ನೀರನ್ನು ಮೊಗೆದು ಗದ್ದೆಗೆ ಬಿಡು)
baleful — ಗು ಕೆಟ್ಟ
ball — ನಾ ಚೆಂಡು (ಚೆಂಡಾಟ)
ball bearing — ನಾ ಹೊರಳುಗುಂಡು
balloon — ನಾ ಗಾಳಿಚೆಂಡು
ballot — ನಾ ಒಪ್ಪಿತ
bamboo — ನಾ ಬಿದಿರು (ಬಿದಿರಕ್ಕಿ; ಬಿದಿ ರುಪ್ಪು; ಬಿದಿರು ಮೆಳೆ; ಬಿದಿರ ಕಳಿಲೆ)
bamboo mat — ನಾ ತಟ್ಟಿ
bamboo pole — ನಾ ಬೊಂಬು (ಬೊಂಬು ಗಳಿಂದ ಕಟ್ಟಿದ ಅಟ್ಟ), ಬಂಬು, ಜಲ್ಲೆ,ಗಳು, ಗಳೆ (ಗಳೆಕಾರ; ದೋಣಿ ನಡೆಸುವ ಗಳೆ)
bamboo shoot — ನಾ ಕಳಿಲೆ, ಕಣಿಲೆ (ಕಣಿಲೆ ಊರುಗಾಲಿು; ತಾಳಿಸಿದ ಕಣಿಲೆ)
bamboo tube — ನಾ ಕೊಟ್ಟ (ಅಂಬಲಿಯನ್ನು ಕೊಟ್ಟದಲ್ಲಿ ತುಂಬಿಸಿದ), ಗೊಟ್ಟ
bamboo vessel — ನಾ ಅಂಡೆ (ಬಿದಿರಿನ ಅಂಡೆಯಲ್ಲಿ ಮಜ್ಜಿಗೆ ಕುಡಿಯುತ್ತಾರೆ)
bamboo-slit — ನಾ ಸೀಬು (ಬಿದಿರ ಸೀಬಿನ ತೊಟ್ಟಿಲು)
ban — ನಾ ತಡಹು
banana — ನಾ ಬಾಳೆ (ಬಾಳೆಗಿಡ, ಬಾಳೆ ಹಣ್ಣು)
band — ನಾ 1 ಪಟ್ಟಿ 2 ಹಾಡುತಂಡ
bandage — ನಾ ಕಟ್ಟುಪಟ್ಟಿ
bandicoot — ನಾ ಹೆಗ್ಗಣ
bandit — ನಾ ಕೊಳ್ಳೆಗಾರ, ದೋಚುಗ
bandy — ಕ್ರಿ ಕೊಡುಕೊಳ್ಳು
bane — ನಾ ಅಳಿವು
bangle — ನಾ ಬಳೆ (ಬಳೆಗಾರ; ಬಳೆಗಾರ್ತಿ; ಬಳೆತೊಡಿಸು)
bangle-seller — ನಾ ಬಳೆಗಾರ
banish — ಕ್ರಿ ಹೊರಗಟ್ಟು (ಆತನನ್ನು ನಾಡಿ ನಿಂದ ಹೊರಗಟ್ಟಿದರು)
banister — ನಾ ಕಟಕಟೆ (ಮೆಟ್ಟಲುಗಳ ಎರಡೂ ಬದಿಗಳಲ್ಲಿ ಕಟಕಟೆಯಿತ್ತು)
bank (mud) — ನಾ ಒಡ್ಡು (ಕಡಲ ದಂಡೆಗೆ ಒಡ್ಡುಗಳನ್ನು ಹಾಕಿದ್ದಾರೆ), ದಿಣ್ಣೆ (ಮಳಲ ದಿಣ್ಣೆ), ಏರಿ (ಕೆರೆಯ ಏರಿಯ ಮೇಲೆ ನಡೆದುಕೊಂಡು ಬಂದೆ), ಬದುವು (ಹೊಲ ಗದ್ದೆಗಳ ಬದುವುಗಳಲ್ಲಿ ಸೊಂಪಾಗಿ ಬೆಳೆದ ಹುಲ್ಲು), ಬದು (ಗದ್ದೆಯ ಬದು), ಕರೆ (ಹೊಳೆಯ ಕರೆ)
bankrupt — ನಾ ಸಾಲಗೇಡಿ
banner — ನಾ ಕಪ್ಪು
banquet — ನಾ ಬಿದ್ದು (ಮದುವೆಯ ಬಿದ್ದು; ಬಿದ್ದಣ; ಬಿದ್ದೂಟ)
banter — ನಾ ಗೇಲಿಮಾತು
bar — ನಾ ಕಂಬಿ (ಅಡ್ಡಕಂಬಿ)
bar — ಕ್ರಿ ಅಡ್ಡಿಮಾಡು, ತಡೆಹಿಡಿ wire ನಾ ಮುಳ್ಳುತಂತಿ
barber — ನಾ ಕೆಲಸಿ,ಕೆಲಸಿಗ, ಹಡಪವಳ, ಹಡಪಿಗ,ಕಿಲಿಗ barber’s knife ನಾ ಕೂಪಿ
bard — ನಾ ಹಾಡುಗ
bare — ಕ್ರಿ ತೋರಿಸು, ಬಿಚ್ಚು, ತೆರೆ
bare — ಗು ಬರಡು, ಬಟ್ಟ (ಬಟ್ಟ ತಲೆ, ಬಟ್ಟ ಬಯಲು), ಬಕ್ಕ (ಬಕ್ಕಟ - ಬಕ್ಕಟ ಬಯಲು)
barefoot — ನಾ ಬರಿಗಾಲು (ಬರಿಗಾಲಲ್ಲಿ ಅಂಗಳಕ್ಕಿಳಿಯಬೇಡ)
bargain — ನಾ ಒಪ್ಪಂದ
bargain — ಕ್ರಿ ಕೊಸರಾಡು (ಆತ ಕೊಸರಾಡದೆ ಯಾವುದನ್ನೂ ಕೊಂಡುಕೊಳ್ಳುವುದಿಲ್ಲ)
barge — ನಾ ಹಲಗೆ ಓಡ
bark — ನಾ ಬೊಬ್ಬಡೆ,ಪಟ್ಟೆ,ತೊಗಟೆ (ಮರದ ತೊಗಟೆ)
bark — ಕ್ರಿ ಬೊಗಳು (ಬೊಗಳುವ ನಾಯಿ)
barn — ನಾ ಕೊಟ್ಟಿಗೆ
barracks — ನಾ ಪಡೆಮನೆ
barrage — ನಾ ಕಟ್ಟೆ (ಹೊಳೆಗೆ ಕಟ್ಟೆಕಟ್ಟಿ ನೀರು ನಿಲ್ಲಿಸಿದ್ದಾರೆ)
barrel — ನಾ ನಳಿಕೆ (ಕೋವಿಯ ನಳಿಕೆ)
barren — ಗು ಬರಡು (ಬರಡಾಕಳು, ಬರಡು ಮಾತು), ಬರಲು (ಬರಲು ಮಾಡು), ಬಡ್ಡು (ಬಡ್ಡು ಕುದುರೆ, ಬಡ್ಡು ಹಸು), ಗೊಡ್ಡು (ಗೊಡ್ಡಿ; ಗೊಡ್ಡಿಡು; ಗೊಡ್ಡಾಕಳು)
barricade — ನಾ ತಡಪು
barrier — ನಾಅಡ್ಡಗೋಡೆ, ಬೇಲಿ
barrister — ನಾ ಕಟ್ಟಳೆಯರಿಗ
barrow — ನಾ ಕಯ್ಬಂಡಿ
barter — ನಾ ಉರುನಾರು
barter — ಕ್ರಿತೆರು (ಈ ಆಡಿಗೆ ಅವನು ಆರು ಕೋಳಿಗಳನ್ನು ತೆತ್ತ)
base — ನಾ 1 ಅಡಿ (ಅಡಿಗಲ್ಲು), ಅಡೆ (ಅಡೆಯ ಮರದ ಮೇಲಿಟ್ಟು ಕೊರಡನ್ನು ಕೆತ್ತಿದ), ಬುಡ (ಬುಡಗಟ್ಟು) 2 ಹುಳುಕು (ಹಣವಿದ್ದರೆ ಹುಳುಕು ಮುಚ್ಚುತ್ತದೆ; ಹುಳುಕು ನೆಲ)
base — ಕ್ರಿ ನಿಲ್ಲಿಸು, ನೆಲೆಗೊಳಿಸು
basement — ನಾ ನೆಲಮಾಳಿಗೆ, ನೆಲಮನೆ
bashful (be) — ಕ್ರಿ ನಾಚು (ನಾಚುವಾತ; ಏನು ಮಾಡಲೂ ನಾಚದವನು)
bashfulness — ನಾ ನಾಚಿಕೆ (ನಾಚಿಕೆಗೆಲಸ; ನಾಚಿಕೆಗೇಡು; ನಾಚಿಕೆಪಡು), ಸಿಗ್ಗು (ಸಿಗ್ಗಾಗು; ಸಿಗ್ಗುಮಾಡು; ಸಿಗ್ಗಾಳಿ), ಎಗ್ಗು (ಎಗ್ಗುಳಿ; ಎಗ್ಗುತನ)
basic — ಗು ಅಡಿ (ಅಡಿಕಲಿಕೆ; ಅಡಿಗಲ್ಲು)
basin — ನಾ1 ಮರಿಗೆ (ಉಪ್ಪಿನಕಾಯಿ ಮರದ ಮರಿಗೆಯಲ್ಲಿದೆ) 2 ಹೊಳೆಕುದುರು
basis — ನಾ ನೆಲೆ (ಮಾತಿನ ನೆಲೆ)
bask — ಕ್ರಿ ಕಾಯಿಸು (ಬಿಸಿಲು ಕಾಯಿಸು; ಒಲೆಯೆದುರು ಚಳಿ ಕಾಯಿಸು)
basket — ನಾಬುಟ್ಟಿ (ಬಿದಿರಿನ ಬುಟ್ಟಿ; ಮೀನಿನ ಬುಟ್ಟಿ), ಪುಡಿಕೆ (ಪುಡಿಕೆಯೊಳಗೊಂದು ಚಿಕ್ಕ ಕುಡಿಕೆಯಿದೆ),ಕುಕ್ಕೆ (ಮೀನಿನ ಕುಕ್ಕೆ), ಗೂಡೆ (ಆ ಗೂಡೆಯೊಳಗೆ ಏನಿದೆ?), ತೊಟ್ಟೆ (ತೆಂಗಿನ ಗರಿಯ ತೊಟ್ಟೆ),ಮಕ್ಕರಿ (ಬಿದಿರಿನ ಮಕ್ಕರಿ), ಮಂಕರಿ (ಕಸದ ಮಂಕರಿ)
bastion — ನಾಕೊತ್ತಳ (ಕೋಟೆ ಕೊತ್ತಳ)
bat — ನಾ ಬಾವಲಿ (ಬಾವಲಿ ತಲೆಕೆಳಗಾಗಿ ನೇತಾಡುತ್ತದೆ) ನಾ ತಂಡ, ಒಗ್ಗಡ
bate — ಕ್ರಿ ಬಿಡು, ಕುಗ್ಗಿಸು
bath — ನಾ ಮೀಹ (ಮೀಹದ ಮನೆ), ಮೀಣ,ಜಳಕ (ಜಳಕಕ್ಕೆ ಬಚ್ಚಲ ಮನೆಗೆ ಹೋಗಿ; ಜಳಕ ಮಾಡು)
bathe — ಕ್ರಿ ಮೀಯು (ನದಿಯ ನೀರಲ್ಲಿ ಮಿಂದು ಬಂದರು)
bathroom — ನಾ ಬಚ್ಚಲು (ಬಚ್ಚಲು ಮನೆ; ಅವರು ಮೀಯಲು ಬಚ್ಚಲಿಗಿಳಿದಿದ್ದಾರೆ)
baton — ನಾ ಕಿರುಕೋಲು, ಕಿರುಗುದಿಗೆ
batter — ನಾ ಕಲಸಿದ ಹಿಟ್ಟು, ಕಣಕ
batter — ಕ್ರಿ ಚಚ್ಚು
battle — ನಾ ಮೊನೆ (ಮೊನೆಗೊಡು, ಮೊನೆ ಯಾಳು),ಕಾಳಗ (ಕಾಳಗ ಕೊಡು), ಪೋರ್ಕೆ
bawl — ನಾ ಬೊಬ್ಬೆ (ಬೊಬ್ಬಿರಿ; ಬೊಬ್ಬೆ ಮಾಡು; ಬೊಬ್ಬೆ ಹಾಕು - ಬೊಬ್ಬೆ ಹಾಕಿದರೆ ಹೆಬ್ಬುಲಿ ಓಡುವುದೇ?; ಬೊಬ್ಬಿಡು)
bawl — ಕ್ರಿ ಆರು (ಗುಡುಗುಡೆಂದು ಆರುವ ಗುಡುಗು; ಆರವಾರ)
bawling — ನಾಅಬ್ಬರ (ಬೊಬ್ಬೆಯ ಅಬ್ಬರ; ಅಬ್ಬರಿಸು; ಮೊಳಗುವ ಸಿಡಿಲಿನ ಅಬ್ಬರ)
bay — ನಾ ಕೊಲ್ಲಿ
bayonet — ನಾ ಕೋವಿ ಈಟಿ
bazar — ನಾ ಸಂತೆ (ಸಂತೆಗೆ ಮಾವಿನ ಹಣ್ಣು ಈಗಲೇ ಬಂದಿದೆ)
be — ಕ್ರಿ ಉಳ್ (ಉಂಟು), ಇರು
beach — ನಾ ಕಡಲ್ಕರೆ; ಕಡಲ್ತಡಿ
bead — ನಾ ಮಣಿ
beak — ನಾ ಕೊಕ್ಕು (ಸವೆದ ಕೊಕ್ಕಿನ ಕಾಗೆ), ಚುಂಡು, ಚುಂಚ
beam — ನಾ ಹೆಟ್ಟಿಗೆ (ಬಟ್ಟತಲೆಯವನು ಹೆಟ್ಟಿಗೆ ಹೊರಲಾರ), ಬೆಲಗು
bear — ನಾಕರಡಿ
bear — ಕ್ರಿ 1 ಹೆರು (ಹೆತ್ತಮನೆ, ಹೆತ್ತ ತಾಯಿ; ಹನ್ನೆರಡು ಮಕ್ಕಳನ್ನು ಹೆತ್ತವಳು) 2 ತಳೆ (ಮುಳಿಸನ್ನು ತಳೆದ ಮೋರೆ), ತಳುವು ಹೊರು (ಒಂದು ಹೊರೆ ಕಟ್ಟಿಗೆಯನ್ನು ಹೊತ್ತುಕೊಂಡು ಬಂದ)
beard — ನಾಗಡ್ಡ (ಗಡ್ಡಮೀಸೆ)
beat — ಕ್ರಿ ಬಡಿ (ಬಡಿದಾಡು; ಬಡಿದಾಟ; ಬಡಿಮಣೆ - ಬಡಿಮಣೆಲಿುಂದ ಬಡಿದು ನೆಲವನ್ನು ಸಮಮಾಡಬೇಕು), ಮಡಗು (ಅವನಿಗೆರಡು ಮಡಗಬೇಕಾಗಿತ್ತು), ಅರೆ (ಅರೆಗೊಲೆ; ಅರೆಯಟ್ಟು), ಹೊಯ್ಯು (ತಾಳಹೊಯ್ಯು; ಕಲ್ಲು ಹೊಯ್ಯು; ಕತ್ತಿಯ ನ್ನೆತ್ತಿ ಹೊಯ್ಯು), ಹೊಡೆ (ಹೊಡೆದಾಡು, ಹೊಡೆದಾಟ), ಜಡಿ (ತೂತಿನೊಳಗೆ ಮಣ್ಣನ್ನು ಜಡಿದು ತುಂಬಿಸಿದ),ತದಕು, ತೋಕು, ಸದಕು, ಸೂಳಯಿಸು
beating — ನಾಹೊಡೆತ (ಸಾಕಶ್ಟು ಹೊಡೆತ ಗಳೂ ಬಿದ್ದುವು),ಕುಟ್ಟುಹ,ಕೊಟ್ಟುಹ,ಬಡಿತ (ಬಡಿತವನ್ನು ತಪ್ಪಿಸಲು ಪುದೆ ಯೊಳಗೆ ಅಡಗಿ ಕುಳಿತ),ಹೊಯಿತ
beautiful — ಗು ಎಡ್ಡ (ಎಡ್ಡಕೂದಲು; ಕಣ್ಣಿಗೆ ಎಡ್ಡವಾಗು), ಚಂದ (ಚಂದಗೆಡು; ಚಂದ ಗೇಡಿ; ಚಂದಗಾರ), ಚೆನ್ನ (ಚೆನ್ನ ಹೂವು; ಚೆನ್ನಾಕಳು; ಚಿನ್ನುಡಿ; ಚಿನ್ನಿಗ), ಅಂದ (ಅಂದಗೆಯ್ಯು, ಅಂದಗೊಳಿಸು - ಮನೆಯ ನ್ನೆಲ್ಲ ಅಂದಗೊಳಿಸಿದ್ದಾಳೆ), ನಿರಿ (ನಿರಿ ದಳಿರು; ನಿರಿಗುರುಳು)
beautify — ಕ್ರಿ ಸೊಮ್ಮುಗೊಳಿಸು, ಹೊಂಪು ಗೊಳಿಸು, ಅಂದಗೊಳಿಸು, ಹಸನುಮಾಡು
beauty — ನಾ ಕೋಲ (ಕೋಲ ಮಾಡು), ಅಣ, ಅಲಂಪು, ಇಳಿಲು, ನಿರತೆ, ಸಮಂತು (ಸಮಂತಾಗಿಸು), ಮೀಟು (ಮೀಟುವಡೆ; ಮೀಟು ಹೆಣ್ಣು), ಮಾಸರ (ಮಾಸರಿಕೆ), ಹೊಂಪು (ಹೊಂಪೆಸೆವ ಕೇದಗೆಯ ಹೂ), ಗಾಡಿ, ಚೆಲುವು (ಚೆಲುವಿಕೆ), ಎಸಕ, ನೆಟ್ಟಿ, ಹಸನು (ತೊಳೆದು ಹಸನು ಮಾಡಿದ ಬಟ್ಟೆ), ಅಲ್ಲಣಿ, ಅಲ್ಲಣಿಗೆ
beckon — ಕ್ರಿ ಕರೆ (ಯಾರೋ ನಿನ್ನನ್ನು ಕರೆಯುತ್ತಿದ್ದಾರೆ)
become — ಕ್ರಿ ಆಗು, ಉಂಟಾಗು
becoming — ಗು ತಕ್ಕ ನಾ 1 ಮಡಿ (ಹೂವಿನ ಮಡಿ), ಕುದುರು (ಹೊಳೆಯ ಕುದುರು) 2 ಹಾಸುಗೆ, ಹಾಸಿಗೆ (ಹಾಸಿಗೆ ಹಿಡಿ; ಮಲಗಲು ಹಾಸಿಗೆ; ಹಾಸಿಗೆ ಹುಣ್ಣು), ಮೆತ್ತೆ
bed bug — ನಾತಗಣೆ (ತಗಣೆ ಕಾಟ), ತಿಗಣೆ
bedroom — ನಾ ಮಲಗುವ ಕೋಣೆ, ಪಕ್ಕೆ, ಪಡುವನೆ
bedsheet — ನಾ ಹಚ್ಚಡ (ಹಚ್ಚಡದರಿವೆ; ಹಚ್ಚಡಿಸು)
bee — ನಾ ಜೇನುನೊಣ, ಗುಂಗಿ
beehive — ನಾತೊಟ್ಟೆ (ಜೇನುತೊಟ್ಟೆ; ತೊಟ್ಟೆ ಕಟ್ಟು)
beetle (black) — ನಾದುಂಬಿ, ತುಂಬಿ (ಹೂಗಳಿಗೆ ತುಂಬಿಗಳು ಮುತ್ತಿಕೊಂಡಿವೆ)
befall — ಕ್ರಿ ಆಗು
befit — ಕ್ರಿ ಒಪ್ಪು, ತಗು, ಹೊಂದು
befogged — ಗು ಮಂಜುಮುಸುಕಿದ, ಮಂಜು ಕವಿದ
before — ಗು ಮುನ್ನ (ಮದುವೆಯಾಗುವ ಮುನ್ನ; ಮುನ್ನ ಮಾಡಿದ ಕೆಲಸ), ಮುಂಚೆ (ಅದನ್ನು ಮುಂಚೆ ಇದ್ದ ಹಾಗೆಯೇ ಇರಿಸ ಬೇಕು), ಮುಂದು (ಮುಂದುಗಡೆ)
beforehand — ಗು ಮುಂಚಿತವಾಗಿ
befriend — ಕ್ರಿ ಕೆಳೆಗೊಳ್ಳು, ಗೆಡೆಗೂಡು, ಒದಗು
beg — ಕ್ರಿ ಗೋಗರೆ (ಆತ ತನ್ನನ್ನು ಕೀಳುಮಾಡಿ ಗೋಗರೆಯುತ್ತಿದ್ದಾನೆ), ಬೇಡು (ಬೇಡಿ ಕೊಳ್ಳು), ಬೇಯು (ಕೀಳುದನಿಯಲ್ಲಿ ಬೇತು ಕೊಳ್ಳು), ತಿರಿ (ತಿರಿದುಣ್ಣು; ತಿರಿದಾಡು), ಹಾರು (ಹಾರಿ ಬೇಡು)
beget — ಕ್ರಿ 1 ಹೆರು (ಹೆತ್ತ ತಾಯಿ) 2 ಉಂಟುಮಾಡು
beggar — ನಾ ಬೇಕರೆ, ತಿರುಕ (ತಿರುಕನ ಕನಸು),ಆಯ್ಕಳಿ,ಆದುಣಿಗ, ಎರವ
begging — ನಾತಿರುಪೆ (ತಿರುಪೆ ಎತ್ತು; ತಿರುಪೆ ತಿಂದು ಬದುಕು),ತಿರಿಕೆ (ತಿರಿಕೆ ಯಿಂದ ಹೊಟ್ಟೆಹೊರೆ)
begin — ಕ್ರಿ ತೊಡಗು (ಓದಲು ತೊಡಗಿದರು), ತೊಡು (ಮೊಣಕಾಲಿನಿಂದ ತೊಟ್ಟು ನಡು ವರೆಗೂ ಎಣ್ಣೆ ಹಚ್ಚಿದ), ಕಾಲುಮಾಡು (ಕೆಲಸಕ್ಕೆ ಕಾಲು ಮಾಡಿದ), ಮೊದಲು ಮಾಡು, ಒಡರ್ಚು
beginner — ನಾ ತೊಡಗುಗ
beginning — ನಾಚೊಚ್- (ಚೊಚ್ಚಲ ಬಸುರು),ತೊಡವು (ತೊಡವು ಮಾಡು)
begird — ಕ್ರಿ ಸುತ್ತುವರಿ
begrudge — ಕ್ರಿ ಕಂಗಾಗು, ಕಂಗು ಮಾಡು
beguile — ಕ್ರಿ 1 ಎಡ್ಡಗೊಳಿಸು 2 ಸೊಂಪು ಗೊಳಿಸು
behalf — ನಾ ಸಲುವಾಗಿ (ಆತನ ಸಲುವಾಗಿ ಬಂದೆ)
behave — ಕ್ರಿ ನಡೆದುಕೊಳ್ಳು (ಅವರಲ್ಲಿಗೆ ಹೋದರೆ ಹೀಗೆಲ್ಲ ಮಾಡಬಾರದು, ಸರಿ ಯಾಗಿ ನಡೆದುಕೊಳ್ಳಬೇಕು)
behaviour — ನಾನಡತೆ (ಆತನ ನಡತೆ ಚನ್ನಾಗಿಲ್ಲ), ನಡವಳಿಕೆ
behead — ಕ್ರಿ ತಲೆಕಡಿ, ತಲೆತೆಗೆ
behest — ನಾ ಸೆಲವು, ಕೋರಿಕೆ
behind — ಗು ಹಿನ್ (ಹಿಂದಿರುಗು; ಹಿಂದೆಗೆ; ಹಿನ್ನೆಲೆ; ಹಿಂದಲೆ), ಹಿಂಚು (ಊಟಕ್ಕೆ ಮುಂಚು, ಕೆಲಸಕ್ಕೆ ಹಿಂಚು), ಹಿಂದೆ (ನಿನ್ನ ಹಿಂದೆ ಬರುತ್ತೇನೆ),ಹೆರಗೆ (ಹೆರಗೆ ಹಳಿವವರು), ಹಿಗ್ಗ (ಹಿಗ್ಗಾಮುಗ್ಗಾ)
behold — ಕ್ರಿ (ಆ) ಕಾಣು (ಮಾ) ನೋಡು
being — ನಾ 1 ಇರುವಿಕೆ, ಇರವು 2 ಉಸಿರುಗ
belated — ಗು ತಡವಾದ
belay — ಕ್ರಿ ಸುತ್ತು (ಹಗ್ಗ ಜಾರದ ಹಾಗೆ ಕುಂದಕ್ಕೆ ಸುತ್ತಿದ)
belch — ಕ್ರಿ ಒಕ್ಕುಳಿಸು, ತೇಗು (ಊಟ ಮಾಡಿ ಗರ್ರೆಂದು ತೇಗಿದ) ಕ್ರಿ ಮುತ್ತು, ಮುತ್ತಿಗೆ ಹಾಕು
belie — ಕ್ರಿ ಸುಳ್ಳಾಡು
belief — ನಾನಂಬುಗೆ, ನಂಬಿಕೆ (ಅವನಿಗೆ ನಿಮ್ಮ ಮೇಲೆ ನಂಬಿಕೆಲಿುಲ್ಲ), ಅಳವಿ (ಅಳವಿಗಳೆ)
believe — ಕ್ರಿ ನಂಬು (ಎಲ್ಲರೂ ಆತನನ್ನು ನಂಬಿದರು)
belittle — ಕ್ರಿ ಕಿರಿದುಮಾಡು
bell — ನಾ ಮಣಿ
belle — ನಾ ಚೆಲುವೆ
belligerent — ನಾಜಗಳಗಂಟ
bellow — ಕ್ರಿ ಬೊಬ್ಬಿರಿ, ಮೊರೆ, ಅಬ್ಬರಿಸು
belly — ನಾ ಬಸಿರು (ಬಸಿರೊಡೆ; ಬಸಿರುರಿ; ಬಸಿರು ಬೇನೆ), ಬಟ್ಟಿ, ಹೊಟ್ಟೆ (ಹೊಟ್ಟೆ ಹೊರೆ; ಹೊಟ್ಟೆಗೆ ಹಾಕು; ಹೊಟ್ಟೆ ತುಂಬಿಸು; ಹೊಟ್ಟೆಕಟ್ಟು; ಹೊಟ್ಟೆನೋವು)
belong — ಕ್ರಿ ಸೇರಿರು, ದಕ್ಕಾಗಿರು
belongings — ನಾ ಒಡಮೆ, ಹುರುಳು
beloved — ಗು ಅಣುಗು (ಅಣುಗ; ಅಣುಗಿ; ಅಣುಗಿನಲ್ಲಿಟ್ಟ ಹೆಸರು), ಅಚ್ಚುಮೆಚ್ಚಿನ
below — ಗು ಕೆಳ (ಕೆಳಗೆ; ಕೆಳಗಡೆ, ಕೆಳತನಕ, ಕೆಳತುಟಿ),ಕೀಳ್ (ಕೀಳ್ದುಟಿ; ಕೀಳ್ನೋಟ; ಕೀಳುಮಾತು; ಕಿಗ್ಗಡೆ)
belt — ನಾ ಪಟ್ಟಿ (ಸೊಂಟಕ್ಕೆ ಪಟ್ಟಿ ಬಿಗಿದಿದ್ದಾನೆ)
bemoan — ಕ್ರಿ ಅಳು, ಹಲುಬು
bench — ನಾ ನಿಡುಮಣೆ, ನಿಡುಕುಳಿಹ
bend — ನಾತಿರುವು (ತಿರುವಿನಲ್ಲಿ ಗಾಡಿ ಮಗುಚಿತು),ಮಡುಕು,ಮಣಿಗೆ
bend down — ಕ್ರಿ ಜಗ್ಗು (ಹಣ್ಣುಗಳಿಂದ ಕೆಳಗೆ ಜಗ್ಗಿದ ಕೊಂಬೆ),ಕುಗ್ಗು (ಕುಗ್ಗಿದ ಮಾಡು), ಕುಂಗು,ತಗ್ಗು (ತಗ್ಗಿಬಗ್ಗಿ ನಡೆ), ಕುರಿ (ಕುರಿದ ಬೆನ್ನು), ಬಾಗು (ತಲೆವಾಗು), ಬಗ್ಗು (ಬಗ್ಗಿದ ಮರ; ಬಗ್ಗುಬಡಿ), ಮುರಿ (ಮುರಿದ ಹಾವಿನ ಹೆಡೆ), ಮಣಿ (ಮಣಿಗೆ; ಮಣಿತ; ಮಣಿಹ; ಮಣಿಸು; ಮಣಿಕಟ್ಟು, ಮಣಿಕಾಲು), ಮಣಗು (ಯಾರಿಗೂ ಮಣಗ ದವನು), ಸೆಟೆ (ಹಿಂದಕ್ಕೆ ಸೆಟೆದುಕೊಳ್ಳು), ಮಾಲು (ಮಾಲಿದ ಕಂಬ), ಬಳುಕು (ಉದ್ದ ವಾಗಿ ಬಳುಕುವ ಕೋಲು), ಕುಸಿ (ಕುಸಿ ಗೊರಲು), ತಾಳು, ಮಡಿ (ಮಡಿದ ಬೆರಳು; ಮಡಿಕೆ), ಕುನಿ (ಕುನಿದ ಬೆನ್ನು), ಕುನುಗು,ಕುಂಬು (ಕುಂಬಿಡು),ತಾಗು (ತಾಗುಬಾಗು), ಕುಡಿಸು, ಪುದುಗು, ಹುದುಗು, ಜಕ್ಕಿಸು (ಜಕ್ಕಿಸಿ ನಡೆ)
bending — ನಾ ಬಾಗುಹ,ಮುರಿಕೆ, ಮುರಿವು
beneath — ಗು ಕೆಳಗಡೆ
benedection — ನಾ ಹರಕೆ (ಹರಸು), ನಲ್ವರಕೆ
benefaction — ನಾ ಒಳ್ಳೆಕೆಲಸ
benefactor — ನಾ ಕೊಡುಗ
beneficial — ಗು ಬಳಕೆಗಾಗುವ, ಬಳಕೆಗೆ ಬರುವ
benefit — ನಾ ಸಲೆ, ಸಲುಗೆ
benevolent — ಗು ಒಳ್ಳೆದು ಮಾಡುವ
benign — ಗು ನಯ (ನಯಮಾತು), ತೊಂದರೆ ಕೊಡದ
bent — ಗು ಕೊಂಗು (ಕೊಂಗಾಟ), ಕೊಂಕು (ಕೊಂಕಿದ ನುಡಿ),ಡೊಂಕು (ಡೊಂಕು ಬಾಲ), ಕುಡು (ಕುಡುಗೋಲು; ಕುಡುವೆರೆ), ಕೊಲ್ಲೆ
benumb — ಕ್ರಿ ಜೋಮು ಹಿಡಿ, ಮರವಡು (ಮರವಟ್ಟು ಹೋಗು) ಮರಕಟ್ಟು
berate — ಕ್ರಿ ಗಜರು, ಜಂಕಿಸು
bereaved — ಗು ತಬ್ಬಲಿ (ತಬ್ಬಲಿ ಕೂಸು)
beseech — ಕ್ರಿ ಮೊರೆಯಿಡು, ಬೇಡಿಕೊಳ್ಳು
beseem — ಕ್ರಿ ಒಪ್ಪು, ತಗು (ಈ ಕೆಲಸಕ್ಕೆ ತಕ್ಕ ಜನ ಸಿಕ್ಕಿಲ್ಲ) ಕ್ರಿ ಮುತ್ತು (ಎಲ್ಲರೂ ಅವನ ಸುತ್ತ ಮುತ್ತಿದರು); ಮುತ್ತಿಗೆ ಹಾಕು
besmirch — ಕ್ರಿ ಕಲೆಹಿಡಿ, ಕೊಳೆಯಾಗು
besotted — ಗು ಮುಚ್ಚುತ್ತ (ಕುಡಿದು ಕುಡಿದು ಮುಚ್ಚುತ್ತ ಮುದುಕ)
best — ಗು ಅಣ್ಣೆ (ಅಣ್ಣೆ ಹಾಲು, ಅಣ್ಣೆ ನೂಲು), ಉರುವ
bestow — ಕ್ರಿ ಬೀರು, ಕೊಡು
bet — ನಾ ಒಡ್ಡ (ಕುದುರೆಗೆ ನೂರು ರುಪಾಯಿ ಒಡ್ಡ ಒಡ್ಡಿದ)
bet — ಕ್ರಿಒಡ್ಡು (ಹಣ ಒಡ್ಡು)
betoken — ಕ್ರಿ ಮುಂದೋರು
betray — ಕ್ರಿ ಎರಡು ಬಗೆ
betrothal — ನಾ ಮದುವೆ ತೀರ್ಮಾನ
beverage — ನಾ ಕುಡಿಹ
bewail — ಕ್ರಿ ಗೋಳಿಡು, ಗೋಳಾಡು
beware — ಕ್ರಿ ಎಚ್ಚರಿಕೆಯಿಂದಿರು
bewilder — ಕ್ರಿ ತಬ್ಬರಿಸು, ಮೆಳ್ಪಡು, ಬಗೆಗೆಡು
bewilderment — ನಾ ಬೇಳುವೆ (ಬೇಳುವೆ ಬೂದಿ), ಮರವೆ (ಮರವೆಗೊಳಿಸು), ಅರುಳು, ಅಲಿುಲು, ತಬ್ಬಿಬ್ಬು (ತಬ್ಬಿಬ್ಬು ಗೊಳ್ಳು; ತಬ್ಬಿಬ್ಬಾಗು)
bewitch — ಕ್ರಿ ಮರುಳುಮಾಡು, ಮೋಡಿ ಹಾಕು
bibulous — ಗು ಕುಡುಕ
bicycle — ನಾಕಾಲಬಂಡಿ, ಇಗ್ಗಾಲಿ
bid — ಕ್ರಿ ಬೆಸಸು, ಹೇಳು
bide — ಕ್ರಿ ಉಳಿ, ತಾಳು
bier — ನಾ ಚಟ್ಟ (ಚಟ್ಟಕಟ್ಟು), ಮಾಡ
bifurcate — ಕ್ರಿಕವಲೊಡೆ (ಕವಲೊಡೆದು ಹಲವು ಕೊಂಬೆಗಳಾಗಿ ಬೆಳೆವ ಮರ)
big — ಗು ದೊಡ್ಡ (ದೊಡ್ಡ ಮನೆ; ದೊಡ್ಡ ಕೆಲಸ), ಹಿರಿ (ಹಿರಿ ಬೆಲೆಯ ಸೀರೆ; ಹಿರಿಯ ಮರ), ಆನೆ (ಆನೆಸೊಳ್ಳೆ, ಆನೆಗಲ್ಲು, ಆನೆಗೊಲೆ), ಉರುವ (ಉರುವ ಕತೆ), ತನಿ (ತನಿತುಂಡು; ತನಿಗಬ್ಬು; ತನಿಸೂರೆ), ಬಿಣ್ (ಬಿಣ್ಗೆಚ್ಚಲು, ಬಿಣ್ಗೊನೆ, ಬಿಣ್ಮೊಲೆ), ಹೆಗ್ (ಹೆಗ್ಗಟ್ಟು; ಹೆಗ್ಗಡಜ; ಹೆಗ್ಗತ್ತಲೆ; ಹೆಗ್ಗಳ್ಳ; ಹೆಗ್ಗೆಚ್ಚಲು; ಹೆಜ್ಜೇನು)
big man — ನಾತೋರಿದ
bigot — ನಾ ಕುರುಡು ನಂಬಿಕೆಯವನು
bikini — ನಾ ಈಜುಡುಪು
bilingual — ನಾ ಇನ್ನುಡಿಗ
bilk — ಕ್ರಿ ಎಡ್ಡುಗೊಳಿಸು, ತಪ್ಪಿಸಿಕೊಳ್ಳು
bill — ನಾ 1 ಕೊಕ್ಕು 2 ಬೆಲೆಪಟ್ಟಿ
billet — ನಾ ಕಿತ್ತೋಲೆ
billhook — ನಾಮಚ್ಚು,ಕುಡುಗೋಲು,ಕೊಯಿತ
billow — ನಾ ಪೆರ್ದೆರೆ, ದೊಡ್ಡ ಅಲೆ
billow — ಕ್ರಿ ಗಾಳಿತುಂಬು, ಉಬ್ಬು
bin — ನಾ ತೊಟ್ಟಿ (ಕಸವನ್ನು ತೊಟ್ಟಿಯಲ್ಲೇ ಹಾಕಿ)
binary — ಗು ಇಬ್ಬಗೆಯ ಕ್ರಿ ಕಟ್ಟು (ಕಟ್ಟಿಡು; ಕಟ್ಟುಬೀಳು)
biodegradable — ಗು ಕೊಳೆಯಬಲ್ಲ
biology — ನಾ ಉಸಿರರಿಮೆ
biped — ನಾ ಇಕ್ಕಾಲುಗ
birth — ನಾ ಬೆಸಲೆ (ಬೆಸಲಾಗು; ಬೆಸಲ ತಿಂಗಳು),ಹುಟ್ಟು (ಹುಟ್ಟುಕಿವುಡ, ಹುಟ್ಟು ಚಾಳಿ, ಹುಟ್ಟೂರು; ಹುಟ್ಟುಹಬ್ಬ), ಹುಟ್ಟುಹ
birth control — ನಾ ಹುಟ್ಟುತಡೆ
birthday — ನಾ ಹುಟ್ಟುಹಬ್ಬ
birthmark — ನಾಹುಟ್ಟುಮಚ್ಚೆ
birthplace — ನಾ ತವರು (ತವರೂರು; ತವರು ಮನೆ), ಹುಟ್ಟೂರು
bisect — ಕ್ರಿ ಎರಡಾಗಿಸು
bit — ನಾತುಂಡು (ತುಂಡಿಸು; ತುಂಡುಕಿಡಿ), ತುಣುಕು
bitch — ನಾ ಬೊಗ್ಗಿ, ಹೆಣ್ಣುನಾಯಿ
bite — ನಾ ಕಾಟು (ನಾಯಿಯ ಕಾಟು),ಕಡಿತ (ಚೇಳಿನ ಕಡಿತ)
bite — ಕ್ರಿ ಕಡಿ (ಕಡಿವ ಕಟ್ಟಿರುವೆಗಳು), ಕಚ್ಚು (ಹಾವು ಕಚ್ಚಿತು; ಕಚ್ಚುವ ನಾಯಿ; ಕಚ್ಚಾಡು)
biting — ನಾಕಚ್ಚಿಕೆ, ಕಟಕಿ (ಕಟಕಿ ಮಾತು; ಕಟಕಿಯಾಡು), ಕಡಿತ
bitransitive — ಗು ಮೂರ್ಪಾಲ್ಗೊಳ್ಳುವ (ಮೂರ್ಪಾಲ್ಗೊಳ್ಳುವ ಎಸಕಪದ)
bitter — ಗು ಕಹಿ (ಕಹಿಯಾಗು; ಕಹಿನನ್ನಿ; ಕಹಿನಾಲಿಗೆ), ಚೇದು, ಕಯ್ (ಕಯ್ಸೋರೆ; ಕಲಿ್ಹುೀರೆ), ಕಯ್ಪು (ಕಯ್ಪೆ ಸೊರೆ)
bitter gourd — ನಾಹಾಗಲ (ಹಾಗಲಕಾಯಿ ಕಹಿ)
blabber — ಕ್ರಿ ಕೊಂಚು (ಕೊಂಚುವ ಹಕ್ಕಿ; ಕೊಂಚಾಡು; ಕೊಂಚಾಟ)
black — ಗು ಕನ್ (ಕನ್ನೆಯ್ದಿಲೆ; ಕನ್ನಡ), ಕಪ್ಪು, ಕರಿ (ಕರಿಮರ; ಕರಿತಿಂಗಳು; ಕರ್ರಗೆ), ಕಾರು (ಕಾರಡವಿ; ಕಾರೆಳ್ಳು; ಕಾರಿರುಳು)
black bee — ನಾ ಗುಂಗಿ
black market — ನಾಕಾಳಸಂತೆ
black money — ನಾಕಪ್ಪುಹಣ (ಈ ಮನೆ ಕಟ್ಟಿದ್ದು ಕಪ್ಪುಹಣದಲ್ಲಿ)
black pepper — ನಾ ಮೆಣಸು (ಮೆಣಸಿನ ಬಳ್ಳಿ, ಮೆಣಸಿನ ಕಾಳು)
black pepper (green) — ನಾ ಕರೆ
black soil — ನಾಎರೆ (ಎರೆಮಣ್ಣು)
blackboard — ನಾ ಕರಿಹಲಿಗೆ
blacken — ಕ್ರಿ ಕರಗು, ಕರಿಕು
blackgram — ನಾ ಉದ್ದು (ದೋಸೆಗೆ ಉದ್ದು ನೆನೆಹಾಕಿದ್ದಾಳೆ)
blackguard — ನಾಪೋಲಿ
blackout — ನಾ 1 ಹಮ್ಮಯಿಕೆ 2 ಕತ್ತಲಿಕೆ,ಕಣ್ಗತ್ತಲೆ
blacksmith — ನಾಕೊಲ್ಲ
blackwood — ನಾನೂಕೆ
bladder — ನಾ ತೆಳುಚೀಲ
blade — ನಾ ಅಲಗು (ಕತ್ತಿಯ ಅಲಗು, ಅಲಗು ಹುಲ್ಲು)
blame — ನಾಪಳಿವು,ಏಳಿದ (ಏಳಿದವನ್ನು ಬಗೆಯದಿರಿ), ಆರಡಿ
blame — ಕ್ರಿ ಹೀಯು (ಹೀಯಾಳಿಸು; ಹೀಗಳೆ - ಹೀಗಳೆದು ಗೇಲಿಗೊಳಿಸು), ಕುಚ್ಚಣಿಸು, ಹಳಿ (ಹಳಿವ ನುಡಿ), ತೆಗಳು (ತೆಗಳಿಕೆ; ಯಾರನ್ನೂ ತೆಗಳದಿರು),ದೂರು (ಆಕೆ ಯನ್ನು ಎಲ್ಲರೂ ದೂರುತ್ತಿದ್ದಾರೆ), ತಿಟ್ಟು, ಕೊರಚಾಡು, ಕೋಡಿಗಳೆ ಗು ನಯ (ನಯಮಾತು)
blank — ಗು ಮುಚ್ಚರ, ಬರಿದು (ಬರಿದು ಬಿಡು)
blanket — ನಾಹೊದಿಕೆ (ಮಗುವಿಗೊಂದು ಹೊದಿಕೆ ಹೊದಿಸಿದಳು)
blare — ಕ್ರಿ ಆರು, ಒರಲು
blarney — ನಾ ಹೊಗಳಿಕೆ
blaspheme — ನಾ ಕೊಂಡೆ, ತಿಟ್ಟು
blast — ನಾ1 ಬಿರುಸುಗಾಳಿ 2 ಸಿಡಿತ
blatant — ಗು ನಾಚಿಕೆಯಿಲ್ಲದ (ನಾಚಿಕೆ ಯಿಲ್ಲದ ಕೆಲಸ)
blaze — ನಾ ದೊಡ್ಡ ಉರಿ (ಗುಡ್ಡದ ಮೇಲಿನ ದೊಡ್ಡ ಉರಿ)
bleach — ಕ್ರಿ ಬಿಳಿಚಿಸು (ನಿಮ್ಮ ಬಟ್ಟೆಯನ್ನು ಬಿಳಿಚಿಸಲು ಅಗಸನಿಗೆ ಕೊಟ್ಟಿದ್ದೇನೆ), ಬಿಳಿ ಮಾಡು
bleak — ಗು ಮಬ್ಬಾದ, ಹೊಂಪಳಿದ
blear — ಗು ಮಸಕಾದ, ಮಬ್ಬಾದ (ಕಣ್ಣಿನಲ್ಲಿ ನೀರು ಬಂದು ಕಣ್ಣು ಮಬ್ಬಾಲಿುತು)
bleat — ಕ್ರಿ ಚಕ್ಕರಿಸು (ಕುರಿಮರಿ ಚಕ್ಕರಿಸುತ್ತಿದೆ), ಅರಚು
bleed — ಕ್ರಿ ಸೋರು (ನೆತ್ತರು ಸೋರುತ್ತಿದೆ)
blemish — ನಾ ಕುಂದು (ಕುಂದು ತರು; ಕುಂದು ಹೆಚ್ಚು), ಕೊರತೆ (ಕೊರತೆ ಬೀಳು; ಕೊರತೆ ಯಿಲ್ಲದ ಕೆಲಸ)
blend — ಕ್ರಿ ಕಲೆಸು, ಒಂದಾಗಿಸು
blending — ನಾಒಂದಿಕೆ
bless — ಕ್ರಿ ಹರಸು (ಆತನಿಗೆ ಒಳ್ಳೆಯದಾಗ ಲೆಂದು ಹರಸಿದೆವು), ಹಾರಯ್ಸು
blessing — ನಾ ಹರಕೆ, ಹಾರಯ್ಕೆ, ನಲ್ವರಕೆ
blighted — ಗು ಪೊಟ್ಟು (ಪೊಟ್ಟುಕಾಯಿ; ಪೊಟ್ಟುಕೆಲಸ),ಚೋಕು (ಚೋಕು ಕೊನೆ; ಚೋಕುಮರ)
blind — ನಾ ಕಂಗಳ (ಕಣ್ಣು ಕಾಣದ ಕಂಗಳ),ಕಣ್ಣಿಲಿ, ಕುರುಡ, ಕುಚ್ಚ
blind — ಗು ಕುರುಡು (ಕುರುಡಾಗು; ಕುರುಡ, ಕುರುಡಿ; ಕುರುಡು ಕಣ್ಣು; ಕುರುಡು ನಂಬಿಕೆ)
blindfold — ಕ್ರಿ ಕಣ್ಣುಕಟ್ಟು
blink — ಕ್ರಿ ಮಿಟಕಿಸು (ಕಣ್ಣು ಮಿಟಕಿಸು), ಎವೆಯಿಕ್ಕು
blinking — ನಾ ಮಿಟಿ (ಮಿಟಿ ಮಿಟಿ ನೋಡು)
bliss — ನಾ ದೊಡ್ಡ ಹೊಂಪುಳಿ
blister — ನಾ ಬೊಕ್ಕೆ (ಹಣೆಯ ಮೇಲೆ ಬೊಕ್ಕೆ ಎದ್ದಿದೆ), ಬೊಬ್ಬೆ (ಬೆಂಕಿಗೆ ಬಿದ್ದು ಮಯ್ಮೇಲೆ ಬೊಬ್ಬೆ ಎದ್ದಿದೆ), ಹೊಪ್ಪಳ, ಕುಪ್ಪಳ (ಕುಪ್ಪಳ ಏಳು)
blister — ಕ್ರಿಹೊಪ್ಪಳಿಸು, ಕುಪ್ಪಳಿಸು
blizzard — ನಾ ಬಿರುಗಾಳಿ ಮಳೆ
bloated — ಗು ಉಬ್ಬಿದ (ನೀರಿಗೆ ಬಿದ್ದು ಉಬ್ಬಿದ ಹೆಣ)
blob — ನಾ ತೊಟ್ಟು (ತೊಟ್ಟಿಕ್ಕು), ಹನಿ
block — ನಾ 1 ತುಂಡು 2 ಕಟ್ಟಡಕಂತೆ
block — ಕ್ರಿ ತಡೆ, ನಿಲ್ಲಿಸು
blockade — ನಾ ಮುತ್ತಿಗೆ (ಮುತ್ತಿಗೆ ಹಾಕು)
blood — ನಾನೆತ್ತರು (ನೆತ್ತರು ಕುರು; ಕತ್ತಿ ತಾಗಿ ನೆತ್ತರು ಸೋರುತ್ತಿತ್ತು),ಕೆನ್ನೀರು
bloom — ನಾ ಹೂವು, ಹೂ (ಹೂಬಿಡು) ಕ್ರಿ ಬಿರಿ (ಬಿರಿದ ಹೂ; ಬಿರಿಯುವ ಮೊಗ್ಗು; ಬಿರಿಮೊಗ್ಗೆ), ಮಲರು (ಮಲರಿದ ಹೂಗಳಿಂದ ತುಂಬಿದ ಗೆಲ್ಲು), ಅರಳು (ಅರಳಿದ ಹೂ), ಅಲರು, ತಳಿರು (ತಳಿತ ತಾವರೆ ಹೂ), ಇಗಲು
blot — ನಾ ಕಲೆ (ಬೀಜದ ಹಣ್ಣಿನ ಕಲೆ)
blot — ಕ್ರಿ ಹೀರು, ತೆಗೆ
blotch — ನಾ ಬಣ್ಣದ ಕಲೆ
blotting paper — ನಾಒತ್ತುಕಾಗದ, ಹೀರುಕಾಗದ, ಹೀರುಕ
blow — ನಾ1 ತೀಟ (ಗಾಳಿಯ ತೀಟ) 2 ಪೆಟ್ಟು (ಪೆಟ್ಟುಕೊಡು; ಪೆಟ್ಟು ಹಾಕು; ಪೆಟ್ಟುಬೀಳು), ಏಟು (ಏಟು ತಿನ್ನು), ಹೊಡೆತ (ತಂದೆಯ ಹೊಡೆತಕ್ಕೆ ಹೆದರಿ ಹುಡುಗ ಮನೆಗೆ ಹಿಂದಿರುಗಲಿಲ್ಲ), ಬೆಸೆ
blow — ಕ್ರಿ 1 ತೀಡು (ತೀಡುವ ತಂಬೆಲರು), ಬೀಸು (ಗಾಳಿ ಬೀಸುತ್ತಿದೆ), ಉರುಬು (ಮೆಲ್ಲ ಉರುಬಿದರೂ ಬಿದ್ದೀತು), ಊದು (ಊದುಕೊಳವೆ) 2 ಗುದ್ದು (ನನ್ನ ಬೆನ್ನಿಗೆ ಗುದ್ದಿದವರು ಯಾರು?)
bludgeon — ನಾ ಬಡಿಗೆ, ತಡಿ
blue — ಗು ನೀಲಿ (ನೀಲಿ ಸೀರೆ)
bluff — ಕ್ರಿ ಸುಳ್ಳಾಡು
bluff — ಗು 1 ಕಡಿದು (ಕಡಿದಾದ ಬೆಟ್ಟ) 2 ನೇರವಾದ (ನೇರವಾದ ಮಾತು)
blunt — ಗು ಮೊಂಡು (ಮೊಂಡು ಕೊಡಲಿ), ಬಡ್ಡು (ಕತ್ತಿ ಬಡ್ಡಾಗಿ ಮರ ಕಡಿಯಲು ತೊಂದರೆಯಾಗಿದೆ; ಬಡ್ಡುಗಟ್ಟು; ಬಡ್ಡು ಹಿಡಿ), ಕೂರಿಲಿ (ಕೂರಿಲಿ ಕುಡುಗೋಲು)
blur — ಕ್ರಿ ಮಸಕಾಗು
blurt — ಕ್ರಿ ಒದರಿಬಿಡು (ಅಜ್ಜನಿಗೆ ಹೆದರಿ ಹುಡುಗ ಎಲ್ಲವನ್ನೂ ಒದರಿಬಿಟ್ಟ)
blush — ಕ್ರಿ ಕೆಂಪಾಗು (ನಾಚಿಕೆಯಿಂದ ಆಕೆಯ ಮೋರೆ ಕೆಂಪಾಯಿತು), ನಾಚು
boa — ನಾ ಹೆಬ್ಬಾವು
boar — ನಾ ಗಂಡು ಹಂದಿ
board — ನಾ 1 ಹಲಿಗೆ 2 ಊಟ
boarding house — ನಾ ಊಟದ ಮನೆ
boast — ಕ್ರಿ ಹೊಗಳಿಕೊಳ್ಳು (ಆತ ಎಲ್ಲರ ಹತ್ತಿರವೂ ತನ್ನನ್ನು ಹೊಗಳಿಕೊಳ್ಳು ತ್ತಿದ್ದಾನೆ)
boat — ನಾಅಂಬಿ, ಓಡ (ಹೊಳೆ ದಾಟಲು ಓಡ ಇದೆ)
boat (large) — ನಾಮಂಜಿ
boatman — ನಾ ಅಂಬಿಗ (ಹೊಳೆ ದಾಟಿದ ಮೇಲೆ ಅಂಬಿಗನ ನೆನಪಾಗಲಿಲ್ಲ), ಕಬ್ಬ ಲಿಗ, ಕಬ್ಬಿಯ
bobbin — ನಾ ಉರುಳೆ (ನೂಲುರುಳೆ, ಕಂಬಿ ಯುರುಳೆ)
bode — ಕ್ರಿ ಮುನ್ಸೊಲ್ಲು, ಕಣಿಹೇಳು
bodice — ನಾ ಬಾಚಿ, ಕುಪ್ಪಸ
body — ನಾ 1 ಮೈ (ಮಯ್ಬಗ್ಗಿಸು; ಮಯ್ಬರು; ಮಯ್ದಡವು; ಮಯ್ಮೇಲೆ ಬೀಳು), ಬೊಂದಿ, ಒಡಲು (ಒಡಲುರಿ; ಒಡಲಿನ ಎಲುಬು; ಹಾವಿನ ಒಡಲು) 2 ಹೆಣ
bodyguard — ನಾ ಮಯ್ಗಾವಲು, ಬೆಂ ಗಾವಲು
bog — ನಾ ಕೆಸರು, ಜವುಗು
boggle — ಕ್ರಿ ಕದ್ದಯ್ಸು, ಉರು
bogus — ಗು ಹುಸಿ (ಹುಸಿ ಸೆಲವು)
boil — ನಾ ಹುಗುಳು (ಹುಗುಳೇಳು; ಕಾಲ ಹುಗುಳು), ಹುಣ್ಣು (ಈ ಮರದ ಸೊನೆ ತಗಲಿದರೆ ಹುಣ್ಣಾಗುತ್ತದೆ), ಕುರು (ಕುರು ಏಳು), ಪೊರೆ (ಪೊರೆ ಏಳು), ಬೊಕ್ಕೆ (ಬೊಕ್ಕೆ ಮೂಡು), ಗಾರು (ಗಾರು ಬೊಕ್ಕೆ) ಕ್ರಿ ಮರಳು (ನೀರು ಮರಳುತ್ತಿದೆ), ಮರುಗು (ಮರುಗುವ ಹಾಲು), ಎಸರು (ನೀರು ಎಸರುತ್ತಿದೆ), ಕುದಿ (ಕುದಿದು ಉಕ್ಕಿದ ಹಾಲು; ಕುದಿನೀರು)
boil over — ಕ್ರಿ ಉಗು (ಉಕ್ಕಿ ಬರುವ ಹಾಲು), ಹೊಂಗು (ಕುದಿದು ಹೊಂಗುವ ತುಪ್ಪ)
boiled — ಗು ಕುದುಕಲು (ಕುದುಕಲಕ್ಕಿ), ಕುದುಪಲು, ಕುಚ್ಚಲು (ಕುಚ್ಚಲಕ್ಕಿ)
boiler — ನಾಕೊಪ್ಪರಿಗೆ,ಕುದಿಗೆ
boiling — ನಾಕುದಿಹ
bold person — ನಾಎದೆಗಾರ,ಮೊನೆಗಾರ
bold — ಗು ಕೆಚ್ಚಿನ, ಪನ್ನತಿಕೆಯ, ಆರ್ಪಿನ
boldness — ನಾ ಅದಟು (ಅದಟಿನಿಂದ ಆತನಿಗೆ ಹೊಡೆಯಲು ಹೋದ), ಕಡೆತ, ಕಡುಪು (ಆತನ ಕಡುಪನ್ನು ಹೊಗಳದವ ರಿಲ್ಲ), ಕಡ್ಡ, ಸಿರಿಸ,ಎದೆ (ಎದೆಗಾರ; ಎದೆ ಗುಂದು; ಎದೆಕೊಡು), ಹುರಿ (ಹುರಿ ದುಂಬಿಸು; ಹುರಿಗೂಡಿಸು; ಹುರಿಯೇರು)
bole — ನಾ ಮರದ ಬುಡ
bolster — ಕ್ರಿ ಬೆಂಬಲಿಸು, ತಾಂಗು
bolt — ನಾ 1 ತಾಳು (ಕಯ್ತಾಳು; ಬಾಗಿಲಿಗೆ ತಾಳು ಹಾಕಿದೆ), ತಾಪಾಳು (ಬಾಗಿಲಿನ ತಾಪಾಳು ಮರ), ಚಿಲುಕ (ಬಾಗಿಲಿನ ಚಿಲುಕ) 2 ಮೊಳೆ (ಗೋಡೆಗೆ ಮೊಳೆ ಹೊಡೆದು ಚೀಲವನ್ನು ನೇತುಹಾಕಿದ)
bomb — ನಾ ಸಿಡಿಗುಂಡು
bona fide — ಗು ನಂಬಿಕೆಯ
bond — ನಾಮುಚ್ಚಳಿಕೆ,ಹೊಣೆ
bondage — ನಾ ಅಡಿಮೆ, ತುಳಿಲು
bone — ನಾಮೂಳೆ (ಆತನ ಅಪ್ಪುಗೆಗೆ ಮೂಳೆ ಪುಡಿಯಾಯಿತು), ಎಮಿಕೆ,ಎಲುಬು, ಎಲುವು (ಎಲುವು ಗಂಟಲಲ್ಲಿ ಸಿಕ್ಕಿ ಕೊಂಡಿತು)
bonfire — ನಾ ಬಯಲುರಿ
book — ನಾಕಡತ, (ಹಳೇ ಕಡತ), ಹೊತ್ತಗೆ
book — ಕ್ರಿ ಕಾಯ್ದಿರಿಸು
booking — ನಾ ಮುನ್ನೇರ್ಪಾಡು
booklet — ನಾ ಕಿರುಕಡತ
book-mark — ನಾಓದುಗುರುತು
book-post — ನಾತೆರೆದ ಅಂಚೆ
boon — ನಾ ಒಸಗೆ, ಕೊಡುಗೆ, ಹಾರಯ್ಕೆ
boor — ನಾ ನರಡ (ಅವನೊಬ್ಬ ನರಡ)
boost — ಕ್ರಿ ಹೆಚ್ಚಿಸು, ಏರಿಸು (ಬೆಲೆಯೇರಿಸು), ಮೇಲೆತ್ತು
booth — ನಾ 1 ಗೂಡು 2 ಗೂಡಂಗಡಿ
booty — ನಾ ಕೊಳ್ಳೆ, ದೋಚುಗೆ
boquet — ನಾ ಹೂಗೊಂಚಲು
border — ನಾ1 ಗೋಟು (ಬಟ್ಟೆಯ ಗೋಟು),ಕರೆ (ಕರೆಕಟ್ಟು), ಕಂಬಿ (ಸೀರೆಯ ಕಂಬಿ ಕೊಳಕಾಗಿದೆ), ಅಡೆ (ಅಡೆ ಕಟ್ಟು; ಅಡೆಪಟ್ಟಿ) 2 ಎಲ್ಲೆ (ಎಲ್ಲೆಕಲ್ಲು; ಎಲ್ಲೆ ಮೀರಿ ಹರಿವ ಹೊಳೆ), ಗಡಿ (ನಾಡಿನ ಗಡಿ), ಬದುವು (ಹೊಲಗದ್ದೆಗಳ ಬದುವು), ಮೇರೆ (ಮೇರೆಗಲ್ಲು; ಮೇರೆದಪ್ಪು; ಮೇರೆ ಮೀರು),ಅರಗು (ನಮ್ಮ ನಾಡಿನ ಪಡು ಅರಗಿನಲ್ಲಿ ಕಡಲಿದೆ),ತಲಹು (ಗದ್ದೆಯ ತಲಹಿನಲ್ಲಿ ನೆಟ್ಟ ಕಲ್ಲು)
bore — ಕ್ರಿ 1 ಕೊರೆ (ತೂತು ಕೊರೆ) 2 ಬಿಪ್ಪಂಡಿಸು, ಬೇಸರಿಸು
borer — ನಾಕೊರಕ
borewell — ನಾಕೊಳವೆಬಾವಿ, ಕೊರೆ ಬಾವಿ
boring — ಗು ತಲೆ ಚಿಟ್ಟುಹಿಡಿಸುವ (be) ಕ್ರಿ ಹುಟ್ಟು (ಹುಟ್ಟು ಕುರುಡ; ಹುಟ್ಟುಕೂದಲು; ಹುಟ್ಟುತನ; ಹುಟ್ಟು ಮನೆ), ಒಗೆ (ಒಗೆದುಕೊಂಡು ಬರು), ಪೊದರು
borrow — ಕ್ರಿ ಎರೆ (ನೆರೆಮನೆಯಿಂದ ಹಾಲು ಎರೆದುಕೊಂಡು ಬಂದಳು)
borrower — ನಾ ಎರವಣಿಗ
borrowing — ನಾಎರವು (ಎರವಿನ ಚಿನ್ನದಲ್ಲಿ ಮೆರೆವ ಹೆಂಗಸು; ಎರವಲು; ಎರವಣಿಗ), ಕಡ (ಕಡ ಬಡ್ಡಿ; ಕಡಕೊಟ್ಟವರು)
bosom — ನಾ ಎದೆ, ತೆಗೆಲೆ
boss — ನಾ ಒಡೆಯ
botany — ನಾ ಗಿಡದರಿಮೆ
bother — ನಾ ಕಾಟ, ತೊಂದರೆ (ತೊಂದರೆ ಕೊಡು)
bottle — ನಾಬುರುಡೆ (ಮಸಿಬುರುಡೆ; ತಲೆ ಬುರುಡೆ),ಬುಡ್ಡಿ
bottle-bird — ನಾ ಗೀಜಗ (ಗೀಜಗದ ಹಕ್ಕಿ)
bottlegourd — ನಾ ಸೊರೆ (ಸೊರೆಕಾಯಿ), ಸೋರೆ (ಸೋರೆಬುರುಡೆ)
bottleneck — ನಾಇಕ್ಕಟ್ಟು, ಅಡಚಣೆ
bottom — ನಾತಾಳು (ಮರದ ಮೇಲೆ ನಿಂತು ತಾಳು ಕಡಿಯುತ್ತಿದ್ದಾನೆ),ಅಡಿ (ಅಡಿ ಒಡೆದ ಕೊಡ)
bough — ನಾ ಮಟ್ಟೆ (ತೆಂಗಿನ ಮರದ ಮಟ್ಟೆ), ಮಡಲು
boulder — ನಾಕಲ್ಲುಗುಂಡು, ಕಲ್ಲುಬಂಡೆ
bounce — ಕ್ರಿ ಚಿಮ್ಮು, ಹಾರು (ಮೇಲಕ್ಕೆ ಹಾರು)
boundary ( — ನಾಎಲ್ಲೆ ಎಲ್ಲೆಕಲ್ಲು; ಎಲ್ಲೆ ಮೀರು; ಎಲ್ಲೆಕಟ್ಟು)
bounteous — ಗು 1 ಹೇರಳ 2 ಕೊಡುಗಯ್
bountiful — ಗು ಕೊಡುಗಯ್ಯ (ಕೊಡುಗಯ್ಯ ಅರಸು)
bouquet — ನಾ ಹೂಗೊಂಚಲು
bow — ನಾ ಬಿಲ್ಲು (ಬಿಲ್ಲುಗಾರ; ಬಿಲ್ಲಾಳು),ಸಿಂಗಾಡಿ (ಸಿಂಗಾಡಿ ಕತ್ತಿ; ಸಿಂಗಾಡಿಬಿಲ್ಲು)
bow down — ಕ್ರಿ ಮಣಿ (ಆತ ಯಾರಿಗೂ ಮಣಿಯುವುದಿಲ್ಲ; ಕೀಳ್ಮಣಿ),ಪದುಗು, ಎರಗು (ಕಾಲಿಗೆರಗು), ಕುಂಬು (ಕುಂಬಿಕ್ಕು; ಕುಂಬಿಡು), ಮೊಳ್ಗು
bowels — ನಾ ಕರುಳು (ಆತನ ಕರುಳಿನಲ್ಲಿ ಹುಣ್ಣಾಗಿದೆ)
bow-string — ನಾತಿರು,ಹೆದೆ (ಬಿಲ್ಲ ಹೆದೆ)
box — ನಾ ಪೆಟ್ಟಿಗೆ (ಪೆಟ್ಟಿಗೆಯಲ್ಲಿ ಹಣ ಇರಲಿಲ್ಲ), ಪುಡುಕೆ
box — ಕ್ರಿ ಗುದ್ದು (ಬೆನ್ನಿಗೆ ಗುದ್ದು; ಗುದ್ದಾಡು; ಗುದ್ದಾಟ)
boy — ನಾ ಪೋರ (ಈ ಪೋರನ ಹಣೆಯಲ್ಲಿ ಏನು ಬರೆದಿದೆಯೋ; ಪೋರಿ), ಚಿಣ್ಣ (ಚಿಣ್ಣರ ಕಾಟ), ಹುಡುಗ (ಹುಡುಗತನ; ಹುಡುಗಾಟ; ಹುಡುಗಾಟಿಕೆ), ತರುವಲಿ (ತರುವಲಿತನ; ಈ ತರುವಲಿಗಳನ್ನು ಯಾಕೆ ನಡೆಸುತ್ತಿದ್ದೀರಿ?)
boycott — ಕ್ರಿ ಹೊರಗಿಡು, ಹೊರಮಾಡು
boyish — ಗು ಹುಡುಗು (ಹುಡುಗು ಕೆಲಸ)
brace — ನಾ ಎಡ, ಎಣೆ, ಜೋಡಿ
brace — ಕ್ರಿ 1 ಅಣಿಯಾಗು 2 ಗಟ್ಟಿಮಾಡು, ಬಿಗಿ
bracelet — ನಾ ಸೂಡಗ (ಹೊನ್ನ ಸೂಡಗ; ಪೊರಿಜೂಡಗ)
bracket — ನಾ ತಾಂಗುಗೆ
brackish — ಗು ಸವುಳು (ಸವುಳು ನೀರು, ಸವುಳು ಮಣ್ಣು), ಚವುಳು (ಚವುಳು ಮಣ್ಣು), ಕರಲು (ಕರಲು ಮಣ್ಣು)
brag — ಕ್ರಿ ಕೊಚ್ಚು (ಹೆಮ್ಮೆ ಕೊಚ್ಚು; ಹರಟೆ ಕೊಚ್ಚು)
bragging — ನಾ ಪನ್ನಿ (ಆತನ ಪನ್ನಿ ಕೇಳಿ ತಲೆನೋಯುತ್ತಿದೆ) (of hair) ನಾಹೆಣಿಲು (ಹೆಣಿಲು ಹೆಣೆ), ಹೆರಳು (ಹೆರಳು ಹಾಕು),ಹೆಳಲು (ಹೆಳಲು ಬಂಗಾರ)
braid — ಕ್ರಿ ಹೆಣೆ (ಕೂದಲು ಹೆಣೆ)
Braille — ನಾ ಕುರುಡರ ಬರಹ
brain — ನಾಮಿದುಳು (ನಿನ್ನ ತಲೆಯೊಳಗೆ ಮಿದುಳಿದೆಯೋ?)
brake — ನಾ ಬಿರಿ (ಗಾಡಿಯ ಬಿರಿ), ಕಾಲ್ಬಿರಿ
brake — ಕ್ರಿ ತಡೆಹಾಕು, ತಡೆಯೊಡ್ಡು
bramble — ನಾ ಮುಳ್ಳುಗಿಡ (ಅವರ ಮನೆ ಸುತ್ತ ಮುಳ್ಳುಗಿಡ ಬೆಳೆದಿದೆ)
bran — ನಾತವುಡು (ಅಕ್ಕಿ ತವುಡು; ಆಕಳಿಗೆ ತವುಡು ಕೊಡು), ಹೊಟ್ಟು, ಉಮಿ
branch — ನಾ ರೆಂಬೆ (ಆತ ರೆಂಬೆಯ ಮೇಲೆ ಕುಳಿತಿದ್ದ), ಕೊಂಬೆ (ಮರದ ಕೊಂಬೆ; ಹಸಿ ಕೊಂಬೆ), ಗೆಲ್ಲು (ಮರದ ಗೆಲ್ಲುಗಳನ್ನು ಸವರಲಿ), ಕವಲು (ಗಿಡ ಕವಲು ಬಿಟ್ಟಿದೆ), ಟೊಂಗೆ (ಎರಡು ಟೊಂಗೆಗಳನ್ನು ಕಡಿದು ತಂದ), ಹರೆ (ಮರದ ಹರೆ; ಸಂಪಿಗೆಯ ಹರೆ ಗಟ್ಟಿಯಿಲ್ಲ), ಕೋಡು (ಕೋಡು ಗೈ; ತುದಿಗೋಡು; ನಿಡುಗೋಡು), ಕೊಂಗೆ (ಮರದ ಕೊಂಗೆ)
branch (slender) — ನಾ ಸಬ್ಬೆ (ಸಬ್ಬಿಗೆ; ಗೇರುಮರದ ಸಬ್ಬೆ)
branched out — ಗು ಸೀಳು (ಸೀಳು ದಾರಿ; ಸೀಳೆಲುಬು)
branching — ನಾಕವತೆ (ನೆಲದಿಂದ ಹನ್ನೆರ ಡಡಿ ಎತ್ತರದಲ್ಲಿ ಮರಕ್ಕೆ ಕವತೆಯಿದೆ)
brand — ನಾಗುರುತು
brandish — ಕ್ರಿ ಆಡಿಸು
brash — ಗು ದುಡುಕಿನ (ದುಡುಕಿನ ಹುಡುಗ)
brass — ನಾ ಹಿತ್ತಾಳಿ (ಹಿತ್ತಾಳಿ ತಂಬಿಗೆಯಲ್ಲಿ ಮಜ್ಜಿಗೆ ಹಾಕಬೇಡ)
brassiere — ನಾ ಮೊಲೆಗಟ್ಟು
bravado — ನಾ ಪುಸಿಕೆಚ್ಚು, ಪುಸಿಬೆದರಿಕೆ
brave — ಗು ಕೂರು (ಕೂರಾಳು), ಕೆಚ್ಚೆದೆಯ
bravery — ನಾ ಕೆಚ್ಚು, ಕಡ್ಡ, ಪನ್ನತಿಕೆ
brawl — ಕ್ರಿ ಕಿತ್ತಾಡು (ಕಿತ್ತಾಟ)
brawny — ಗು ಗಟ್ಟಿ, ಕೊಡಿ
bray — ಕ್ರಿ ಅರಚು, ಕಿರಿಚು (ಕತ್ತೆ ಕಿರಿಚುತ್ತಿದೆ)
brazen — ಗು ನಾಚಿಕೆಗೆಟ್ಟ
brazier — ನಾ ಹಿತ್ತಾಳಿಗ
breach — ನಾಬಿರುಕು (ಬಿರುಕು ಬಿಡು), ಒಡಕು (ಒಡಕು ದೋಣಿ; ಮಕ್ಕಳೊಳಗೆ ಹುಟ್ಟಿದ ಒಡಕು),ಇಡುಪು
bread — ನಾ ರೊಟ್ಟಿ
breadth — ಗು ಅಗಲ (ಮೂರಡಿ ಅಗಲ),ಹರ (ಹರವಾದ ಹಲಿಗೆ)
break — ನಾ ಕಡಕು (ಕಡಕಿಲ್ಲದೆ ಕತೆ ಹೇಳು)
break — ಕ್ರಿ ಒಡೆ (ಒಡೆದ ಮಡಿಕೆ), ದೋರೆ ಹೋಗು, ಸದೆ (ಸದೆಬಡಿ)
break down — ಕ್ರಿ ಮುರಿಬೀಳು
break in — ಕ್ರಿ ಒಳನುಗ್ಗು (ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ)
break off — ಕ್ರಿ ಮುರಿ (ಮುರುಗಡೆ; ಮುರಿ ಕೊಂಬು; ಮುರಿದ ಗೆಲ್ಲು)
break up — ಕ್ರಿ ಹಿರಿ (ಹಲಸಿನ ಹಣ್ಣು ಕೆಳಗೆ ಬಿದ್ದು ಹಿರಿದುಹೋಗಿದೆ)
breakage — ನಾಒಡೆತ
breaker — ನಾ ಮುರಿ ಅಲೆ ನಾ ಬೆಳಗ್ಗಿನ ತಿಂಡಿ, ತಿಂಡಿ (ತಿಂಡಿಗೆ ಏನು ಮಾಡಿದ್ದಾರೆ?)
breast — ನಾ1 ಮೊಲೆ (ಮೊಲೆಯೂಡು, ಮೊಲೆಗೂಸು) 2 ಎದೆ (ಎದೆಹಾಲು; ಎದೆ ಬಿಚ್ಚಿ ಹೇಳು)
breast milk — ನಾ ಎದೆಹಾಲು
breast-plate — ನಾ ಎದೆಮುಚ್ಚು
breath — ನಾ ಸುಯಿ (ಸುಯ್ಗರೆ; ಸುಯ್ಯು; ಸುಯಿಲು - ಸುಯಿಲಿಡು),ಉಸಿರು (ಉಸಿ ರಿಕ್ಕು, ಉಸಿರಿಡು; ಉಸಿರಾಡು; ಉಸಿರೆಳೆ - ಅವಳು ಹಾಯಾಗಿ ಉಸಿರೆಳೆಯು ತ್ತಿದ್ದಳು)
breathe — ಕ್ರಿ ಸುಯ್ಯು (ಬೆಚ್ಚಗಿನ ಉಸಿರು ಸುಯ್ಯುತ್ತಲಿದ್ದ; ಬಿಸುಸುಯ್ಯು; ಸುಯ್ಯೆಲರು
breathe hard — ಕ್ರಿ ಉಗರಿಸು
breathing difficulty — ನಾ ಉಬ್ಬಸ (ಅವನಿಗೆ ಉಬ್ಬಸ ಇದೆ; ಉಬ್ಬಸಪಡು; ಉಬ್ಬಸಗೊಳ್ಳು)
breeches — ನಾಚಣ್ಣ, ಚಲ್ಲಣ (ಬಣ್ಣಬಣ್ಣದ ಚಲ್ಲಣವನ್ನುಟ್ಟು ಬಂದ), ಚಡ್ಡಿ
breed — ನಾ ತಳಿ (ತಳಿಕುದುರೆ)
breed — ಕ್ರಿ 1 ಸಾಕು (ಸಾಕಣೆ - ಕೋಳಿ ಸಾಕಣೆ) 2 ಈಯು, ಮರಿ ಇಡು
breeze — ನಾನಸುಗಾಳಿ
brevity — ನಾ ಅಡಕ (ಅಡಕ ಮಾಡು, ಅಡಕ ಗೊಳ್ಳು)
bribe — ಕ್ರಿ ಅಡ್ಡಿಕ್ಕು (ಅವನಿಗೆ ಅಡ್ಡಿಕ್ಕಿ ಕೆಲಸ ಮಾಡಿಸಿಕೊಂಡೆ)
bribery — ನಾ ಗಿಂಬಳ (ಸಂಬಳ-ಗಿಂಬಳ), ಅಡ್ಡದುಡ್ಡು, ಪತ್ತುವಳಿ, ಕಯ್ಕೂಲಿ
brick — ನಾ ಇಟ್ಟಿಗೆ (ಮನೆಯೆದುರು ಒಂದು ಗಾಡಿ ಇಟ್ಟಿಗೆ ಬಂದು ಬಿದ್ದಿದೆ)
brick (unbaked) — ನಾ ಹೆಂಟೆ
brick layer — ನಾ ಉಪ್ಪಾರ
bride — ನಾ ಮದುಮಗಳು
bridegroom — ನಾಮದುವಣಿಗ, ಮದು ಮಗ
bride-money — ನಾ ತೆರ, ತೆರವು (ತೆರವಿನ ಹಣ)
bridge — ನಾ ಸಾರ (ಹಳ್ಳಕ್ಕೆ ಹಾಕಿದ ಸಾರ), ಕಟ್ಟೆ (ನೀರ ನಡುವಿನ ಕಟ್ಟೆ), ದಾಂಟುಮರ
bridle — ನಾಕಡಿವಾಣ (ಕುದುರೆಯ ಬಾಯಿಗೆ ಕಡಿವಾಣ)
brief — ಗು ಅಡಕ (ಅಡಕ ಹೇಳಿಕೆ; ಅಡಕ ಬರಹ)
brigand — ನಾ ಸುಲಿಗೆಗಾರ, ಕೊಳ್ಳೆಗಾರ
brighten — ಕ್ರಿ ತಿಳಿ, ಹೊಳೆ
brightness — ನಾ ಎದ್ದು (ಎದ್ದಾಗಿ ತೋರುವ ಕೆಂಪು ಹೊಗರು), ಬೆಳ್ಪಳಿ (ಬೆಳ್ಪಳಿಸು), ಪೊಗರು (ಪೊಗರೇರು; ಪೊಗರ್ವಟ್ಟೆ), ಹೊಳಪು (ಹೊಳಪಿಸು)
brilliant — ಗು ಕೂರರಿವಿನ
brim — ನಾ ಏಣು (ಕೊಡದ ಏಣಿನ ವರೆಗೆ ತುಂಬಿದ ಜೇನುತುಪ್ಪ)
brine — ನಾ ಉಪ್ಪುನೀರು
bring — ಕ್ರಿ ತರು (ತಂದುಹಾಕು; ತರ ಹೇಳು; ತರಹೋಗು)
bring forth — ಕ್ರಿ ಬೆಸಲಾಗು (ಬೆಸಲಾದ ಎಮ್ಮೆ), ಈಯು (ಈಯುವ ಮುಂಚೆ ಬಾಳೆಯ ಸುತ್ತುಮುತ್ತು ಮರಿಗಳು ಹುಟ್ಟು ತ್ತವೆ; ಆಕಳು ಗಬ್ಬವಾಗಿ ಒಂಬತ್ತು ತಿಂಗಳಿಗೆ ಈಯುತ್ತದೆ)
bring out — ಕ್ರಿ ಹೊರಗೆಡಹು
bringing — ನಾತರುಹ
brinjal — ನಾಬದನೆ (ಬದನೆಗಿಡ; ಬದನೆ ಕಾಯಿ), ಗುಳ್ಳ ನಾ ಕರೆ, ಬದಿ
brisk — ಗು ಬಿರು (ಬಿರುನಡೆ; ಬಿರುಗಾಳಿ; ಬಿರುಹೊಯಿಲು), ಚುರುಕು (ಚುರುಕುತನ; ಚುರುಕು ನಡೆ)
bristle — ನಾಬಿರುಗೂದಲು
brittle — ಗು ಗರಗು (ಮಳೆಲಿುಲ್ಲದೆ ಗರಗಾದ ನೆಲ), ಗಡಸು (ಗಡಸು ಕಬ್ಬಿಣ)
broach — ಕ್ರಿ ಮಾತು ತೊಡಗು, ತಿಳಿಹೇಳು
broad — ಗು ಅಗಲ (ಅಗಲ ಎದೆ; ಅಗಲ ದಾರಿ)
broadcast — ಕ್ರಿ 1 ಕಳುಹಿಸು, ಹರಡು 2 ಚೆಲ್ಲು
broaden — ಕ್ರಿ ಅಗಲಿಸು
brochure — ನಾ ಕಿರುಕಡತ
brogue — ನಾ ಆಡುನುಡಿ
broil — ಕ್ರಿ ಸುಡು (ಸುಟ್ಟು ಬೇಯಿಸು)
broken — ಗು ಒಡಕಲು (ಒಡಕಲು ಅಕ್ಕಿ), ಮುರುಕು (ಮುರುಕು ಬಾಗಿಲು), ಮುಕ್ಕು (ಮುಕ್ಕಾಗು; ಮುಕ್ಕು ಮಡಿಕೆ), ಮೊಟಕು (ಮೊಟಕು ಕತ್ತಿ, ಮೊಟಕು ಬೆರಳು)
broken stone — ನಾಜಲ್ಲಿ (ನಿಮ್ಮ ಮನೆಯ ಮುಂದೆ ಜಲ್ಲಿಯ ಕುಪ್ಪೆ ಇತ್ತು)
broken voice — ನಾ ಗೊಗ್ಗರ (ಗೊಗ್ಗರ ಮಾತು; ಗೊಗ್ಗರವಾಗಿ ಒದರು)
broker — ನಾ ತರಗ
brokerage — ನಾತರಗು (ತರಗಿನ ಅಂಗಡಿ)
brood — ಕ್ರಿ 1 ಕಾವುಕೊಡು 2 ಕೊರಗು (ಏನನ್ನೋ ನೆನೆದು ಕೊರಗುತ್ತಿದ್ದಾನೆ)
brood chamber — ನಾಕಾವುಗೂಡು
brook — ನಾ ಕಿರುತೊರೆ, ಹಳ್ಳ (ಬೆಟ್ಟದ ತುದಿಯಿಂದ ಒಸರಿ ಹರಿಯುವ ಹಳ್ಳ)
brook — ಕ್ರಿ ತಾಳು (ತಾಳಿಕೊಳ್ಳು)
broom — ನಾ ಹಿಡಿ (ಹಿಡಿಸೂಡಿ; ಹಿಡಿಗಲು), ಪೊರಕೆ, ಬರಲು (ಗಂಡನ ಕಯ್ಗೆ ಬರಲು ಕೊಟ್ಟಳು), ಕಸಬರಿಕೆ, ಕಸಕಳಿ (ಕಸಕಳಿಯ ಹಾಗೆ ಹೊರಳುವ ನಾಲಿಗೆ), ಕಟ್ಟೆ (ಕಸ ಗುಡಿಸಲು ಕಟ್ಟೆ ಎಲ್ಲೂ ಕಾಣಿಸುವುದಿಲ್ಲ), ಉಡುಗೋಲು (ಅಲ್ಲೆಲ್ಲಾದರೂ ಉಡು ಗೋಲು ಬಿದ್ದಿರಬಹುದು, ಹುಡುಕಿಕೊಂಡು ಬಾ), ಚೀಪರಿಕಟ್ಟೆ
broth (seasoned) — ನಾ ಸಾರು (ತೊಗರಿ ಬೇಳೆಯ ಸಾರು; ಹುರುಳಿ ಸಾರು)
brother — ನಾ ಒಡಹುಟ್ಟಿದವನು; ಒಡ ಹುಟ್ಟುಗ
brow — ನಾ ಹುಬ್ಬು (ಆತನ ಹುಬ್ಬು ಬಹಳ ದಪ್ಪವಾಗಿದೆ)
brown — ಗು ಕಂದು (ಕಂದು ಬಣ್ಣದ ಸೀರೆ)
browse — ಕ್ರಿ ಕಣ್ಣಾಡಿಸು (ನನ್ನ ಬರಹದ ಮೇಲೆ ಒಮ್ಮೆ ಕಣ್ಣಾಡಿಸಿಬಿಡಿ)
bruise — ಕ್ರಿ ನಗ್ಗು (ತಂಬಿಗೆ ಕಯ್ಯಿಂದ ಬಿದ್ದು ನಗ್ಗಿ ಹೋಗಿದೆ; ನಗ್ಗುಬೀಳು; ನಗ್ಗೆತ್ತಿಸು), ನಜುಗು (ಮೆಣಸನ್ನು ನಜುಗುತ್ತಿದ್ದಾಳೆ), ತರಚು (ಮುಳ್ಳಿನ ಹೊದರಿನ ಮೇಲೆ ಬಿದ್ದು ಮಯ್ಯೆಲ್ಲ ತರಚಿಹೋಗಿದೆ)
brush — ಕ್ರಿ ಒರಸು (ಕೋತಿ ಬೆಣ್ಣೆ ತಿಂದು ಆಡಿನ ಬಾಯಿಗೆ ಒರಸಿತು)
brush aside — ಕ್ರಿ ಕಡೆಗಣಿಸು, ತಳ್ಳಿಹಾಕು (ನನ್ನ ಕೇಳಿಕೆಯನ್ನು ತಳ್ಳಿಹಾಕಿದ್ದಾರೆ)
brusque — ಗು ಒರಟು, ಬಿಗುಮಾನದ
brutal — ಗು ಗಾರು, ಮರುಕವಿಲ್ಲದ, ಕಾಳು (ಕಾಳರಸು)
bubble — ನಾಬೊಬ್ಬುಳಿ (ನೀರ ಬೊಬ್ಬುಳಿ),ಗೊಬ್ಬೆ,ಗುಳ್ಳೆ (ನೀರ ಮೇಲಿನ ಗುಳ್ಳೆ), ಗುರುಳೆ
buck — ನಾ ಗಂಡು ಹುಲ್ಲೆ
buckle — ನಾ ಕೊಂಡಿ, ಕೊಳಿಕೆ
bud — ನಾಮೊಗ್ಗೆ (ಮೊಗ್ಗೆ ಅರಳಿ ಹೂವಾಗಿದೆ), ಚಿಗುರು ಕ್ರಿ ಮುಗುಳು (ಹೂವಿನ ಗಿಡ ಮುಗು ಳಿದೆ), ತಳಲು (ತಳಲಿದ ಗಿಡಮರಗಳು), ನನೆ (ಹಾಗಲಬಳ್ಳಿ ನನೆತಿದೆ; ನನೆಗಣ್ಣು; ನನೆಗಣೆ), ಚಿಗುರು
budge — ಕ್ರಿ ಕದಲು (ಆತ ನಿಂತಲ್ಲಿಂದ ಕದಲ ಲಿಲ್ಲ), ಅಲುಗು (ಅಲುಗಾಡು - ಅಲ್ಲೇ ಅಲುಗಾಡದೆ ಕುಳಿತಿದ್ದ)
buff — ಗು ನಸುಮಂಜಳು
buffalo — ನಾಎಮ್ಮೆ (ಎಮ್ಮೆ ಹಾಲು ದನದ ಹಾಲಿಗಿಂತ ದಪ್ಪ), ಕೋಣ
buffalo race — ನಾ ಕಂಬಳ (ಕಂಬಳದ ಕೋಣ)
buffet — ಕ್ರಿ 1 ಗುದ್ದು, ಅಪ್ಪಳಿಸು 2 ಒದ್ದಾಡು, ಹೆಣಗಾಡು
buffet dinner — ನಾಸುತ್ತೂಟ (ಮದುವೆಗೆ ಸುತ್ತೂಟದ ಏರ್ಪಾಡಾಗಿತ್ತು)
buffoon — ನಾ ಕೋಡಂಗಿ (ಕೋಡಂಗಿ ಯಾಟ)
bug — ನಾ ತಿಗಣೆ (ತಿಗಣೆ ಕಾಟ)
bugbear — ನಾಗುಮ್ಮ (ಗುಮ್ಮ ಬರುತ್ತದೆಂದು ಮಕ್ಕಳನ್ನು ಹೆದರಿಸಬಾರದು)
bugle — ನಾ ಕೊಂಬು (ಮದುವೆಗೆ ಕೊಂಬು ಊದುವವನೂ ಬಂದಿದ್ದ)
build — ಕ್ರಿ ಕಟ್ಟು (ನಾವು ಕಟ್ಟಿದ ಮನೆ)
builder — ನಾ ಕಟ್ಟುಗ
building — ನಾಕಟ್ಟಡ
bulb — ನಾ1 ಉಳ್ಳಿ (ನೀರುಳ್ಳಿ, ಬೆಳ್ಳುಳ್ಳಿ) 2 ಮಿಂಚುಸೊಡರು
bulbous root — ನಾಗಡ್ಡೆ (ಗೆಣಸಿನ ಗಡ್ಡೆ)
bulge — ಕ್ರಿ ಬೀಗು, ಉಬ್ಬು, ಊದು
bulky — ಗು ದಪ್ಪ (ದಪ್ಪ ಗಂಟುಮೂಟೆ ಹೊತ್ತಿರುವ ಮುದುಕ)
bull — ನಾಹೋರಿ (ಮೂಗುನೇಣಿಕ್ಕಿದ ಹೋರಿ),ಗೋಂದೆ (ಹೂಡುವ ಗೋಂದೆ),ಗೂಳಿ (ಗೂಳಿಬಿಡು; ಗೂಳಿಹೋರಿ), ಮುರಿ
bulldoze — ಕ್ರಿ ಮಟ್ಟಗೊಳಿಸು (ಇಡೀ ಗುಡ್ಡ ವನ್ನೇ ಮಟ್ಟಗೊಳಿಸಿದ್ದಾರೆ)
bullet — ನಾ ಗುಂಡು (ಸಿಡಿಗುಂಡು; ಗುಂಡು ಹಾರಿಸು)
bulletin — ನಾ ಕಿರಿಯರಿಕೆ, ಅರುಹಿಕೆ
bullfight — ನಾ ಗೂಳಿಕಾಳಗ
bullion — ನಾ ಚಿನ್ನದ ಗಟ್ಟಿ, ಬೆಳ್ಳಿಗಟ್ಟಿ
bullock — ನಾ ಎತ್ತು (ಎತ್ತಿನ ಗಾಣ; ಗಾಡಿ ಎತ್ತು)
bully — ನಾ ಜಗಳಗಂಟ
bulwark — ನಾ ಕೋಟೆಕೊತ್ತಳ
bump — ನಾ ಬಾವು, ಬಾಸುಂಡೆ (ಹಣೆಯಲ್ಲಿ ಬಾಸುಂಡೆ ಎದ್ದಿದೆ)
bump — ಕ್ರಿ ಗುದ್ದು (ಗಾಡಿ ಮರಕ್ಕೆ ಗುದ್ದಿ ಮಗುಚಿಬಿತ್ತು)
bumper crop — ನಾಹುಲುಸು ಬೆಳೆ
bun — ನಾ 1 ಸಿಹಿರೊಟ್ಟಿ 2 ಮುಡಿ, ತುರುಬು
bunch — ನಾ ಚಿಪ್ಪು (ಹತ್ತು ಬಾಳೆಹಣ್ಣು ಗಳಿರುವ ಚಿಪ್ಪು), ಗೊನೆ (ಈ ಗೊನೆಯಲ್ಲಿ ಆರು ಚಿಪ್ಪುಗಳಿವೆ; ಗೊನೆ ಹಾಕು; ಗೊನೆ ಗೊಳ್ಳು; ಗೊನೆ ನೂಕು; ಅಡಿಕೆ ಗೊನೆ), ತಾರು (ಅಡಿಕೆಯ ತಾರು), ಗೊಂಚಲು (ಹೂಗಳ ಗೊಂಚಲು; ಗೊಂಚಲ್ಮಿಂಚು), ಕೊತ್ತು (ಹಣ್ಣಿನ ಕೊತ್ತು), ಗುತ್ತಿ (ಹೂವಿನ ಗುತ್ತಿ), ಗುದಿ (ಹೂಗುದಿ; ಗುದಿಗೆಯ್ಯು, ತೊಂಗಲು (ನೂಲ ತೊಂಗಲು; ತೊಂಗ ಲ್ಗುರುಳು), ತೊಂಗೆ, ತೊಡಂಬೆ (ಹೂವಿನ ತೊಡಂಬೆ), ಪೊತ್ತೆ (ಮರದಲ್ಲಿ ಪೊತ್ತೆ ಪೊತ್ತೆಯಾಗಿ ಹಿಡಿದ ಕಾಲಿುಗಳು),ಜೊಂಪೆ, ಗುಡಿ (ಹೂಗುಡಿ)
bund — ನಾ ಅಣೆಕಟ್ಟು, ತೆಮರು ನಾ ಸೂಡಿ (ಹುಲ್ಲನ್ನು ಸೂಡಿಕಟ್ಟಿ ಇರಿಸಿದ್ದಾರೆ), ಕಂತೆ (ಹುಲ್ಲಿನ ಕಂತೆ; ಕಂತೆಕಟ್ಟು), ಗಟ್ಟೆ, ಮೂಟೆ (ಬಟ್ಟೆಯ ಮೂಟೆ), ಮೂಡೆ (ಮೂಡೆ ಕಟ್ಟು), ಮುಡಿಪು (ಹಣದ ಮುಡಿಪು), ಮುಡಿ (ಬಯ್ಹುಲ್ಲಿನಲ್ಲಿ ಕಟ್ಟಿರಿಸಿದ ಅಕ್ಕಿ ಮುಡಿ), ಸಿವಡಿ (ಹುಲ್ಲಿನ ಸಿವಡಿ; ಸಿವಡಿ ಕಟ್ಟು),ಕಣಿ (ಅವಳು ಕಟ್ಟಿಕೊಂಡ ಕಣಿ)
bung — ನಾ ದೊಡ್ಡ ಬೆಣೆ, ಬಿರಡೆ
bungle — ಕ್ರಿ ತಪ್ಪುಮಾಡು, ಅಡ್ಡಾದಿಡ್ಡಿ ಕೆಲಸ ಮಾಡು
bunk — ನಾ ಒರಗುಹಲಿಗೆ
buoy — ನಾತೇಲುಬುರುಡೆ (ಏಳೆಂಟು ತೇಲು ಬುರುಡೆಗಳು ಕಾಣಿಸುತ್ತಿವೆ)
buoyant — ಗು ಹದುಳಿರುವ
burden — ನಾಹೊರೆ (ತಲೆಹೊರೆ; ಬಂಡಿಯ ಹೊರೆ; ಹೊರಿಗೆ)
burglar — ನಾ ಕಳ್ಳ, ತುಡುಗ burglar’s hole ನಾ ಕನ್ನ (ಕನ್ನ ಕೊರೆದು ಕಳ್ಳ ಮನೆಯೊಳಗೆ ಬಂದ; ಕನ್ನಕತ್ತಿ; ಕನ್ನಹಾಕು)
burgle — ಕ್ರಿ ತುಡುಗು
burial — ನಾ ಹೂಳಿಕೆ
burly — ಗು ಗಟ್ಟಿಮುಟ್ಟು
burn — ನಾ ಸುಡುಗಾಯ
burn — ಕ್ರಿ ಸುಡು (ಸುಟ್ಟುಹಾಕು; ಸುಡಲೆಂದು ಒಟ್ಟಿದ ಕಟ್ಟಿಗೆ), ಸೀಯು (ಅನ್ನ ಸೀದು ಹೋಗಿದೆ), ಉರಿ (ಉರಿಯುವ ಬೆಂಕಿ; ಉರಿಯುವ ಕೊಳ್ಳಿ), ಹೊತ್ತು (ಹೊತ್ತಿದ ರೊಟ್ಟಿ, ಹೊತ್ತಿದ ಅನ್ನ), ಕತ್ತು (ಒಲೆ ಕತ್ತು; ಬೆಂಕಿ ಕತ್ತಿಕೊಂಡಿದೆ),ಕಮರು (ಬಿಸಿಲಿಗೆ ಕಮರಿದ ಬೆನ್ನು), ಕರಟು (ಬೇಳೆ ಕರಟಿಹೋಗಿದೆ)
burn (begin to) — ಕ್ರಿ ಕೊಮೆ (ಒಲೆಗೆ ಹಾಕಿದ ಅಡಿಕೆಸಿಪ್ಪೆ ಕೊಮೆಯಲು ತೊಡ ಗಿದೆ)
burn inside — ಕ್ರಿ ಕುಮುಲು (ಕುಮುಲು ತ್ತಿರುವ ಉಮಿಯ ಕುಪ್ಪೆ)
burning — ನಾ ಸೂಡು (ಸೂಡಿಡು; ಸೂಡಿನ ಕಾಳಗ), ಸುಡುಗ, ಸುಂಟಗೆ (ಸುಂಟಗೆ ಯಡಗು; ಸುಂಟಗೆ ಬಾಡು), ಸುಡುಹ, ಸೊಡ (ಸೊಡಬಲಿ),ಉರುಪು (ಕಣ್ಣು ರುಪು; ಉರುಪುನುಡಿ)
burnish — ಕ್ರಿ ಹೊಳಪು ಕೊಡು
burnt — ಗು ಕರಕು (ಕರಕನ್ನ)
burrow — ಕ್ರಿ ತೂತುಮಾಡು (ತೋಟದಲ್ಲಿ ಹೆಗ್ಗಣ ತೂತುಮಾಡಿದೆ)
burst — ಕ್ರಿ ಚಿಟ್ಳಿಸು (ಬಿಸಿಲಿಗೆ ಆ ಮರದ ಕೋಡುಗಳು ಚಿಟ್ಳಿಸುತ್ತಿವೆ)
burst forth — ಕ್ರಿ ಸಿಡಿ (ಚಿಪೊ್ಪಡೆದು ಸಿಡಿದ ಮುತ್ತು), ಉಗು, ಒಗು (ಬಿದಿರಿನಿಂದ ಒಕ್ಕುವ ಮುತ್ತುಗಳು)
burst open — ಕ್ರಿ ಬಿರಿ (ಅವನ ಅಬ್ಬರಕ್ಕೆ ನೆಲವೇ ಬಿರಿಲಿುತು; ಬಿಬ್ಬಿರಿ)
bury — ಕ್ರಿ ಮಣ್ಣು ಕೊಡು, ಹೂಳು (ಹೂಳಿಡು; ಹೂತಿಡು), ಹುಗಿ (ಹುಗಿದಿಟ್ಟ ಹಣ ಅವರಿಗೂ ಸಿಗಲಿಲ್ಲ ನಮಗೂ ಸಿಗಲಿಲ್ಲ)
bush — ನಾ ಹೊದರು (ಬಿದಿರಿನ ಹೊದರು; ಹೊದರು ತಲೆ), ಮೆಳೆ (ಮೆಳೆಗುತ್ತಿ; ಸೀಗೆಯ ಮೆಳೆ), ಗಂಜಣಿ (ಮುಳ್ಳಿನ ಗಂಜಣಿ), ಗುತ್ತಿ (ಸೀಗೆಯ ಗುತ್ತಿ),ಪರಟೆ (ಪರಟೆ ಕೂದಲು)
busily — ಗು ಚುರುಕಾಗಿ (ಹುಡುಗ ಚುರುಕಾಗಿ ಓದುತ್ತಿದ್ದಾನೆ)
business — ನಾ ಕೆಲಸ (ಅವನಿಗೆ ಇಲ್ಲಿ ಏನು ಕೆಲಸ?), ಬದುಕು (ಬದುಕು ಮಾಡು), ಮಾಳ್ಕೆ, ಹೋರೇವು (ಹೋರೇವು ಇಲ್ಲದೆ ಬಂದವರು)
bustle — ನಾ ಗಡಿಬಿಡಿ, ಕದುಬು
butcher — ನಾ ಕಟುಕ
butchery — ನಾಕಗ್ಗೊಲೆ
butler — ನಾ ಮೇಲಾಳು, ಮೇಲ್ತೊತ್ತಿಗ
butt — ನಾ 1 ದಪ್ಪತುದಿ 2 ಗುರಿ ನಾ ಬೆಣ್ಣೆ (ಬೆಣ್ಣೆ ಕಾಸು; ಬೆಣ್ಣೆಹಚ್ಚು; ಬಿಸಿಲಿಗೆ ಕರಗಿದ ಬೆಣ್ಣೆ; ಬೆಣ್ಣೆಮಾತು), ನೆಯಿ (ನೆಯಿ ಹತ್ತದ ನಾಲಿಗೆ)
butterfly — ನಾ ಚಿಟ್ಟೆ (ಬಣ್ಣ ಬಣ್ಣದ ಚಿಟ್ಟೆ), ಹಾತೆ
buttermilk — ನಾ ಮಜ್ಜಿಗೆ (ಮಜ್ಜಿಗೆಯೊಳ ಗಿನ ಬೆಣ್ಣೆ), ಅಳೆ (ಈಚಲ ಮರದ ಕೆಳಗೆ ಕುಳಿತು ಅಳೆ ಕುಡಿದ ಹಾಗೆ), ಕಳಲು (ಕೆನೆಯ ತೆಗೆಯದೆ ಕಡೆದ ಕಳಲು)
buttock — ನಾ ಅಂಡು (ಅಂಡುಗಚ್ಚೆ ಹಾಕಿ ಮುಂಡಾಸು ಕಟ್ಟಿ ಹೊರಟರು),ಕುಂಡೆ (ಕುಂಡೆಯ ಕುರು)
button — ನಾಗುಬ್ಬಿ,ಗುಂಡಿ (ಅಂಗಿಯ ಗುಂಡಿ ಬಿದ್ದುಹೋಗಿದೆ)
buttress — ನಾ ತಾಂಗು (ಗೋಡೆಗೆ ತಾಂಗು ಕೊಟ್ಟಿದ್ದಾರೆ)
buxom — ಗು ದುಂಡಗೆ, ತೋರ, ಚಂದ
buy — ಕ್ರಿ ಬಿಲಿ (ನಿನ್ನೆ ನಾವು ಬಿಲಿತ ಮಾವಿನ ಹಣ್ಣು ಕೊಳೆತುಹೋಗಿದೆ), ಕೊಳ್ಳು (ಕೊಂಡುಕೊಳ್ಳು - ಆತ ಒಂದು ಮನೆ ಯನ್ನು ಕೊಂಡುಕೊಂಡ)
buyer — ನಾ ಬಿಲ್ಲ (ನಿಮ್ಮ ಮನೆಗಿನ್ನೂ ಬಿಲ್ಲರು ಸಿಗಲಿಲ್ಲವೇ?), ಕೊಳ್ಳುಗ (ಕೊಳ್ಳುಗರೆಲ್ಲ ಒಟ್ಟುಸೇರಿದ್ದಾರೆ)
buzz — ಕ್ರಿ ಮೊರೆ (ಹೂದೋಟದಲ್ಲಿ ಬೆಳಿಗ್ಗೆ ದುಂಬಿಗಳು ಮೊರೆಯುತ್ತಿದ್ದುವು)
bye-road — ನಾ ಒಳಹಾದಿ (ಒಳಹಾದಿಯಲ್ಲಿ ಹೋದರೆ ಅವರ ಮನೆ ತುಂಬಾ ಹತ್ತಿರ ಇದೆ)
bygone — ಗು ನಡೆದ, ಕಳೆದುಹೋದ
by-heart — ನಾ ಉರು (ಉರುಹೊಡೆ; ಉರು ಹಾಕು)
bylane — ನಾ ಅಡ್ಡ ಓಣಿ (ಅವರ ಮನೆ ಅಡ್ಡ ಓಣಿಯಲ್ಲಿದೆ)
by-path — ನಾ ಅಡ್ಡದಾರಿ (ಯಾವುದೋ ಅಡ್ಡದಾರಿಗೆ ನುಗ್ಗಿ ಕಳ್ಳ ತಪ್ಪಿಸಿಕೊಂಡ)
by-stander — ನಾ ನೋಟಕ, ಬದಿಯಲ್ಲಿದ್ದ ವನು
byword — ನಾ ನಾಣ್ಣುಡಿ