Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
U
ubiquitous — ಗು ಎಲ್ಲೆಡೆಯಿರುವ
u-boat — ನಾ ಒಳಹಡಗು ನಾ ಕೆಚ್ಚಲು (ಎಮ್ಮೆಯ ಕೆಚ್ಚಲು)
ugly — ಗು 1 ಅಂದವಿಲ್ಲದ 2 ಕೆಟ್ಟ, ಹೇವರಿ ಕೆಯ 2 ಕುತ್ತದ
ulcer — ನಾ ಹುಣ್ಣು (ಮಗುವಿನ ಮಯ್ಯಲ್ಲೆಲ್ಲ ಹುಣ್ಣಾಗಿದೆ), ಕರಮೆ (ಹೊರೆಗಳನ್ನು ಹೊತ್ತು ಬೆನ್ನಲ್ಲಿ ಕರಮೆಯಾಗಿದೆ), ಕುರು (ಆತನ ತೊಡೆಯಲ್ಲೊಂದು ಕುರು ಎದ್ದಿದೆ)
ulcerate — ಕ್ರಿ ಹುಣ್ಣಾಗು, ಕೀವಾಗು
ulterior — ಗು 1 ಆಚೆಯ 2 ಆಮೇಲಿನ 3 ಒಳಗಿನ, ಗುಟ್ಟಾದ
ultimate — ಗು ಕಟ್ಟಕಡೆಯ (ಇದು ನನ್ನ ಕಟ್ಟಕಡೆಯ ಎಚ್ಚರಿಕೆ), ಕೊನೆಯ (ಕೊನೆಯ ಕೋರಿಕೆ)
ultimatum — ನಾ ಕೊನೆಯ ಎಚ್ಚರಿಕೆ, ಕಡೆಯ ಬೇಡಿಕೆ
ultra — ಗು ಎಲ್ಲೆಮೀರಿದ, ಕಟ್ಟು- (ಕಟ್ಟಚ್ಚರಿ)
ultrasonic — ಗು ಕೇಳ್ಮೆಮೀರಿದ
ultraviolet — ಗು ಕಾಣ್ಕೆಮೀರಿದ
umber — ನಾ ಕಂದುಬಣ್ಣ
umbilical cord — ನಾ ಹೊಕ್ಕುಳ ಬಳ್ಳಿ (ಮಗುವಿನ ಹೊಕ್ಕುಳಬಳ್ಳಿಯಿನ್ನೂ ಬಿದ್ದಿಲ್ಲ)
umbrage — ನಾ 1 ಸೆರಗು, ನೋಲಿುಸುವುದು 2 ಪದರು, ಮುನಿಸು
umbrella — ನಾ ಕೊಡೆ (ಬಿಸಿಲಿಗೆ ಹಿಡಿದ ಕೊಡೆ),ತಳೆ (ತಳೆಹಿಡಿ)
umpire — ನಾ ತೀರ್ಪುಗಾರ
unable — ಗು ಆಗದ (ಹೋಗಲಾಗದ, ತಿನ್ನ ಲಾಗದ, ಬರೆಯಲಾಗದ)
unacceptable — ಗು ಒಪ್ಪಲಾಗದ, ಒಡಂ ಬಡಲಾಗದ
unaccountable — ಗು ಹೇಳಲಾಗದ, ತಿಳಿಸ ಲಾಗದ, ಲೆಕ್ಕಕೊಡಲಾಗದ
unaccustomed — ಗು ಗೊತ್ತಿಲ್ಲದ, ಗುರು ತಿಲ್ಲದ, ಬಳಕೆಯಲ್ಲಿಲ್ಲದ
unacquainted — ಗು ಗುರುತಿಲ್ಲದ
unaffected — ಗು ಮಾರ್ಪಡದ, ನಾಟದ, ತಾಗದ
unaided — ಗು ನೆರವು ಪಡೆಯದ, ಒತ್ತಾಸೆ ಯಿಲ್ಲದ, ಬೆಂಬಲವಿಲ್ಲದ
unalterable — ಗು ಮಾರ್ಪಡಿಸಲಾಗದ
unanimous — ಗು ಒಕ್ಕೊರಲಿನ (ಒಕ್ಕೊರಲಿನ ಹೇಳಿಕೆ)
unanswerable — ಗು ಮಾರ್ನುಡಿಯಲಾಗದ
unapproved — ಗು ಒಪ್ಪಿಗೆ ಪಡೆಯದ ಗು ಕಯ್ದಿಲ್ಲದ
unassuming — ಗು ಮಲೆಪಿಲ್ಲದ, ಸಿಗ್ಗು ಮಾಡುವ
unattached — ಗು 1 ತಗಲದ 2 ಮದುವೆ ಯಾಗದ
unattended — ಗು ಗಮನಿಸದ
unavoidable — ಗು ತಪ್ಪಿಸಿಕೊಳ್ಳಲಾಗದ, ಬಿಟ್ಟುಕೊಡಲಾಗದ
unaware — ಗು ತಿಳಿಯದ, ತಿಳಿಯದ ಹಾಗೆ
unawares — ಗು 1 ತಿಳಿಯದ ಹಾಗೆ 2 ಎದುರುನೋಡದ
unbalanced — ಗು ಮೆಚ್ಚಲಾಗದ, ಹುಚ್ಚು (ಹುಚ್ಚುಕೆಲಸ)
unbearable — ಗು ತಾಳಲಾರದ, ತಡೆಯ ಲಾಗದ, ಮುಲುಕುವ
unbecoming — ಗು ತಕ್ಕುದಲ್ಲದ, ತರ ವಲ್ಲದ, ತಪ್ಪು
unbelievable — ಗು ನಂಬಲಾಗದ, ಎಡರಿದ
unbend — ಕ್ರಿ 1 ಬಾವುತೆಗೆ 2 ಸಡಿಲಿಸು, ಪೆಡಸುಕಳೆ, ನಾಂಬು
unbidden — ಗು ಕರೆಯದ, ಬರಹೇಳದ
unblushing — ಗು ನಾಚದ, ನಾಚಿಕೆಲಿುಲ್ಲದ, ನಿಗ್ಗೇಡಿ, ನಾಣಿಲಿ
unborn — ಗು ಹುಟ್ಟದ (ಇನ್ನೂ ಹುಟ್ಟದ ಮಗು)
unbosom — ಕ್ರಿ ಎಗ್ಗಿಲ್ಲದೆ ತಿಳಿಸು (ಆತ ತನ್ನ ಅನಿಸಿಕೆಗಳನ್ನು ಎಗ್ಗಿಲ್ಲದೆ ತಿಳಿಸಬಲ್ಲ)
unbounded — ಗು ಎಲ್ಲೆಯಿಲ್ಲದ, ಕಟ್ಟಿಲ್ಲದ, ಹತೋಟಿಯಿಲ್ಲದ
unbridled — ಗು ಹತೋಟಿಯಲ್ಲಿಲ್ಲದ
unbroken — ಗು 1 ಇಡೀ, ತುಂಡಾಗದ 2 ಪಳಗದ 3 ನಿಲ್ಲದ, ತಡೆಹಾಕದ
uncalled for — ಗು 1 ಬೇಡದ 2 ತಕ್ಕು ದಲ್ಲದ 3 ತಲೆಹರಟೆಯ, ಸೊಕ್ಕಿನ
uncanny — ಗು 1 ಗುಂಬ, ಗುಟ್ಟಾದ 2 ಎದ್ದು ಕಾಣುವ, ಎಂದಿನಂತಿಲ್ಲದ
uncertain — ಗು 1 ಕಂಡಿತ ತಿಳಿದಿರದ 2 ನಂಬಲಾಗದ, ನೆಚ್ಚಲಾಗದ 3 ಮಾರ್ಪಡದ
unchecked — ಗು ಹತೋಟಿಯಲ್ಲಿಲ್ಲದ
uncivilized — ಗು ಕಾಡಾಡಿ, ಬೆಳ್ಳಾಳ, ಎಗ್ಗುಳಿ, ಕೊಬ್ಬಿಲ
unclean — ಗು ಮುಸುರೆ (ಮುಸುರೆ ಗಡಿಗೆ)
uncoil — ಕ್ರಿ ಬಿಡು (ಸುರುಳಿ ಬಿಡು)
uncomely — ಗು ಅಂದವಿಲ್ಲದ, ಹದನಲ್ಲದ, ಸಲುವಳಿ ಮೀರಿದ
uncomfortable — ಗು ಹದುಳವಿಲ್ಲದ, ಇರುಸುಮುರುಸಾಗುವ ಗು ಎಂದಿನಂತಿಲ್ಲದ, ಗಮನ ಸೆಳೆವ, ಬೇರಾದ
uncompromising — ಗು ಬಗ್ಗದ, ಜಗ್ಗದ, ಕಟ್ಟಲೆಬಿಡದ
unconditional — ಗು ಬೇಡಿಕೆಯಿಲ್ಲದ, ಗೊತ್ತುಪಾಡಿಲ್ಲದ
unconnected — ಗು ಬೇರೆಬೇರಾಗಿರುವ, ಕೂಡಿರದ, ಅಂಟಿಕೊಂಡಿಲ್ಲದ
unconscionable — ಗು ನೇರ್ಪಲ್ಲದ, ಸರಿ ಯಲ್ಲದ, ಕಟ್ಟುನಿಟ್ಟಿಲ್ಲದ
unconscious — ಗು ಅರಿವಿಲ್ಲದ, ಎಚ್ಚರ ವಿಲ್ಲದ
uncontrollable — ಗು ಹತೋಟಿಗೆ ಸಿಗದ, ಹಿಡಿತಕ್ಕೆ ಸಿಗದ
uncouth — ಗು 1 ತೊಡಕಿನ, ಅಡ್ಡಾದಿಡ್ಡಿ 2 ಒರಟು, ಒಡ್ಡ
uncover — ಕ್ರಿ ಹದಿ (ಅಗೆದು ಹದಿದಾಗ ಕಾಣಿಸಿದ ಮಡಕೆ), ತೆರೆ (ತೆರೆದ ಕೆಂಡ; ತೆರೆದ ಕಣ್ಣು)
unction — ನಾ 1 ಹಚ್ಚುಮದ್ದು, ಹಚ್ಚುಗೆ 2 ಕಡಗುವ ಮಾತು, ಕಡಗುವ ನಡತೆ
undaunted — ಗು ಹೆದರದ, ಎದೆಗುಂದದ
undecided — ಗು ತೀರ್ಮಾನಿಸದ, ತರಿಸಲ ಗೆಯ್ಯದ
undeniable — ಗು ಅಲ್ಲಗಳೆಯಲಾಗದ, ಚನ್ನಾಗಿರುವ
undercharge — ಕ್ರಿ ಬೆಲೆ ಕಡಿಮೆಹೇಳು
undercoat — ನಾ ಒಳಬಳಿತ (ಈ ಬಣ್ಣ ಹಚ್ಚುವ ಮೊದಲೇ ಒಂದು ಒಳಬಳಿತ ಕೊಟ್ಟಿರಬೇಕು)
undercover — ಗು ಗುಟ್ಟಾಗಿ
undercurrent — ನಾ ಒಳಹರಿವು
underdog — ನಾ ಒಲುಮೆಗಳಿಸದ, ಸೋಲು ತ್ತಿರುವ, ಹಕ್ಕುಪಡೆಯದ
underdone — ಗು ಸರಿಯಾಗಿ ಬೇಯದ, ಅರೆ ಬೆಂದ
underemployed — ಗು ಕೆಳಕೆಲಸದಲ್ಲಿರುವ
underestimate — ಕ್ರಿ ಕಡಿಮೆ ಬೆಲೆಕಟ್ಟು
undergo — ಕ್ರಿ ಈಡಾಗು, ಒಳಗಾಗು, ತಡೆದು ಕೊಳ್ಳು
undergraduate — ನಾ ಪಟ್ಟೆಳಸುಗ
underground — ಗು 1 ನೆಲದಡಿಯ 2 ಗುಟ್ಟಿನ
underhanded — ಗು ಮೋಸದ, ತೋಹಿನ, ಚದಿಯ
underlie — ಕ್ರಿ 1 ಕೆಳಗಿರು 2 ಅಡಿಗಟ್ಟಾಗಿರು, ತಳಕಟ್ಟಾಗಿರು ನಾ ಅಡಿಗೀಟು (ಅಡಿಗೀಟು ಹಾಕಿರುವ ಪದಗಳು), ಅಡಿಗೆರೆ
undermentioned — ಗು ಕೆಳಗೆ ಹೇಳಿದ
undermine — ಕ್ರಿ 1 ತಳಕಟ್ಟು ಕೆಡಿಸು, ಅಡಿತೋಡು 2 ಸೊಪ್ಪು, ಕಸುವುಗುಂದಿಸು
underrate — ಕ್ರಿ ಕಡಿಮೆ ಬೆಲೆಕೊಡು, ಕಡಿಮೆ ಬೆಲೆಯಿಡು
undersell — ಕ್ರಿ ಕಡಿಮೆ ಬೆಲೆಗೆ ಮಾರು
underside — ನಾ ಅಡಿಮೈ (ಹಡಗಿನ ಅಡಿಮೈ) (partial)
understand — ಕ್ರಿ 1 ತಿಳಿ, ಹುರುಳರಿ 2 ಮರುಗು, ಕನಿಕರಿಸು
understanding — ನಾ ತಿಳುವಳಿಕೆ, ಅರಿವು
understudy — ನಾ ಮಾರಾಳು
undertake — ಕ್ರಿ ನೆಗಳು (ಒಂದು ಮದುವೆ ಯನ್ನು ನೆಗಳಬೇಕಾಗಿದೆ), ಒಡರು (ಈ ಜಗಳವನ್ಮು ಒಡರಿದವರು ಯಾರು?),ತೊಡಗು (ಕೆಲಸಕ್ಕೆ ತೊಡಗು), ಎಸಗು (ಆತನೆಸಗಿದ ಎಸಕ), ತಗುಳ್ಚು, ಕಯ್ಗೊಳ್ಳು (ಕಯ್ಗೊಂಡ ಕೆಲಸ)
undertaking — ನಾ 1 ಪೂಣ್ಕೆ, ಹೊಣೆ 2 ಕೆಲಸ, ಎಸಕ, ನೆಗಳಿಕೆ
underwear — ನಾ ಉಳ್ಳುಡೆ (ಆತನ ಉಳ್ಳುಡೆ ಹರಿದುಹೋಗಿದೆ),ಒಳಉಡುಪು
underworld — ನಾ 1 ಕೀಳುನಾಡು 2 ಕೇಡಿಗರ ತಂಡ
undeserved — ಗು ತಗದ, ತಕ್ಕುದಲ್ಲದ
undesirable — ಗು ಒಪ್ಪಲಾಗದ, ಬೇಡದ
undo — ಕ್ರಿ ಬಿಚ್ಚು (ಕಟ್ಟನ್ನು ಬಿಚ್ಚಿ ತೆರೆದು ನೋಡಿ), ಕಳಚು, ಬಿಡಿಸು (ಎಲ್ಲವನ್ನೂ ಇನ್ನೊಮ್ಮೆ ಬಿಡಿಸಿ ಹಾಕಿದ)
undoing — ನಾ 1 ಹಿಮ್ಮರಳಿಕೆ, ನೀಗಾಡಿಕೆ 2 ಅಳಿವು
undoubted — ಗು ಕಂಡಿತ, ನಚ್ಚಿಲ್ಲದ
undue — ಗು 1 ಮಿತಿಮೀರಿದ, ಹೆಚ್ಚಿನ 2 ತಕ್ಕುದಲ್ಲದ
undulate — ಕ್ರಿ ತೊನೆದಾಡು, ಅಲೆಗಳಂತಿರು
unduly — ಗು ಬೇಡದೆ, ಮಿಗಿಲಾಗಿ, ಮಸಕ ವಾಗಿ
unearth — ಕ್ರಿ 1 ಹೊರಹಾಕು, ಬೆಳಕಿಗೆ ತರು 2 ಅಗೆದು ತೆಗೆ
uneasiness — ನಾ ಕಸವಿಸಿ (ಕಸಿವಿಸಿಯಿಂದ ಮಾತನಾಡಿದ)
unemployed — ಗು 1 ಕೆಲಸವಿಲ್ಲದ 2 ಬಳಸದ
unequal — ಗು 1 ದೊರೆಯಲ್ಲದ, ಸಾಟಿ ಯಲ್ಲದ, ತಕ್ಕುದಲ್ಲದ 2 ಸಸಿನವಲ್ಲದ ಗು ತಪ್ಪದ, ನೇರವಾದ
uneven — ಗು ಕೊರಕಲು (ಇಲ್ಲಿ ನೀರು ಹರಿದು ಕೊರಕಲಾಗಿದೆ), ದುಂಟು (ದುಂಟಾಡು; ನೆಲ ಸರಿಯಿಲ್ಲದೆ ಕಾಲ್ಮಣೆ ದುಂಟಾಡು ತ್ತಿದೆ)
unexceptionable — ಗು ತೆಗಳಲಾಗದ, ಹೊರತುಪಡಿಕೆಯಿಲ್ಲದ
unexpected — ಗು ಎದುರುನೋಡದ
unfasten — ಕ್ರಿ ಪಿಳಿಲು (ಪಿಳಿಲಿದ ಕಟ್ಟು), ಬಿಚ್ಚು
unfinished — ಗು ಮುಗಿಸದ (ಮುಗಿಸದ ಕೆಲಸ)
unfit person — ನಾ ಎಡಗ (ಆತ ಬರೀ ಎಡಗ)
unflappable — ಗು ಪಸಿಯಿಸದ, ತಣ್ಣಗಿರುವ
unfold — ಕ್ರಿ ಕೆಳರು (ಕೆಳರಿದ ಕಣ್ಣು; ಕೆಳರಿದ ಹೂ),ತೆರೆ (ತೆರೆದ ಕಡತ)
unforgettable — ಗು ಮರೆಯಲಾಗದ (ಮರೆಯಲಾಗದ ನೋಟ)
unfortunate — ಗು 1 ಸಯ್ಪುಕೆಟ್ಟ 2 ತಕ್ಕು ದಲ್ಲದ
unfriendly — ಗು 1 ನಣ್ಪು ತೋರದ, ಗೆಡೆ ಗೊಳ್ಳದ, ಮರುಕವಿಲ್ಲದ 2 ಒಲವಿಲ್ಲದ
unfurl — ಕ್ರಿ ನಿಮಿರು (ನಿಮಿರಿದ ಹಾವು; ನಿಮಿ ರಿದ ಕಾಳ್ಗಿಚ್ಚು)
ungainly — ಗು ತೊಡಕಿನ, ಅಡ್ಡಾದಿಡ್ಡಿ (ಅಡ್ಡಾದಿಡ್ಡಿ ನಡೆಯುತ್ತಿದ್ದಾನೆ)
unguarded — ಗು 1 ಕಾವಲಿಲ್ಲದ 2 ಎಚ್ಚರಿಕೆಯಿಲ್ಲದ
unguent — ನಾ ತಿಗುರು (ಆತ ಮಯ್ಗೆಲ್ಲ ತಿಗುರು ಹಚ್ಚಿಕೊಂಡಿದ್ದಾನೆ)
unhappy — ಗು ಕಂಗಾರು, ಕುಂದಿದ
unheard — ಗು ಕೇಳಿರದ
unhelpful — ಗು ನೆರವಾಗದ
unhusk — ಕ್ರಿ ತಳಿಸು (ಬತ್ತವನ್ನು ತಳಿಸಿ ಅಕ್ಕಿ ಮಾಡು), ಕುಟ್ಟು (ಕುಟ್ಟಣ)
unidentified — ಗು ಗುರುತಿಸಲಾಗದ
unified — ಗು ಒಂದಾದ, ಒಗ್ಗೂಡಿಸಿದ
uniform — ಗು ಒಂದೇ ತರದ (ಒಂದೇ ತರದ ಉಡುಪು)
unify — ಕ್ರಿ ಒಟ್ಟು ಸೇರಿಸು, ಒಂದಾಗಿಸು
unilateral — ಗು ಒಂದು ಬದಿಯ, ಒರ್ಬದಿಯ (ಒರ್ಬದಿಯ ತೀರ್ಮಾನ)
unimpeachable — ಗು ನಚ್ಚಲಾಗದ, ತೆಗಳ ಲಾಗದ, ಕೇಳ್ವಿಗೊಳಪಡದ ನಾ ಸೇರಿಕೆ (ಆತನ ಸೇರಿಕೆಯಿಂದ ತೊಂದರೆಯಾಗಿಲ್ಲ), ಒಂದುಗೆ, ಹೊದ್ದಿಗೆ (ಹೊದ್ದಿಗೆ ಮಾಡು),ಕೂಟ (ಒಕ್ಕೂಟ)
unique — ಗು ದೊರೆಯಿಲ್ಲದ, ಎಣೆಯಿಲ್ಲದ, ಒಂದೇ ಇರುವ
unison — ನಾ ಹೊಂದಾಣಿಕೆ
unit — ನಾ ಒಂದು, ಬಿಡಿ, ಒತ್ತೆ
unite — ಕ್ರಿ ಆರು, ಒಂದು (ಒಂದಿಕೊಳ್ಳು; ಒಂದಿ ಬರು; ಒಂದುಗೂಡು), ಕಚ್ಚಿರಿ (ಎರಡನ್ನು ಒಟ್ಟಿಗೆ ಕಚ್ಚಿರಿಯಬೇಕು), ಅಡರು (ಗಿಡಗ ಳೆರಡು ಅಡರಿಕೊಂಡಿವೆ), ಒಡಗೊಳ್ಳು, ಒಗ್ಗು (ಕಯ್ಗಳನ್ನು ಒಗ್ಗಿಹಿಡಿದ), ಕೂಡು (ಕೂಡಿಕೊಳ್ಳು), ಸೇರು (ಎರಡು ಕಾಲ್ಮಣೆ ಗಳನ್ನು ಒಟ್ಟು ಸೇರಿಸಿ ಮೇಲೆ ಬಟ್ಟೆ ಹಾಸಿ ದ್ದಾರೆ)
unity — ನಾ ಒಕ್ಕೂಟ (ಕನ್ನಡ ನಾಡಿನ ಒಕ್ಕೂಟ)
universal — ಗು 1 ಎಲ್ಲೆಡೆಯ, ಎಲ್ಲಾ ಹೊತ್ತಿನ, ಎಲ್ಲೆಯಿಲ್ಲದ 2 ಎಲ್ಲದಕ್ಕೂ ಬಳಕೆಯಾಗುವ
universe — ನಾ ಇಡಿಯೆಡೆ
university — ನಾ ಪೇರ್ಕಲಿಮನೆ, ಮೇಲ್ಕಲ್ಪಿ ಮನೆ
unjust — ಗು ಸರಿಯಲ್ಲದ, ಕಟ್ಟಲೆತಪ್ಪಿದ
unkempt — ಗು ತಲೆಬಾಚದ, ಕೆದರಿದ 2 ಚೊಕ್ಕಟವಿಲ್ಲದ
unkind — ಗು ಕನಿಕರವಿಲ್ಲದ, ಮರುಕವಿಲ್ಲದ
unknown — ಗು ಗೊತ್ತಿಲ್ಲದ
unlawful — ಗು ಕಟ್ಟಲೆತಪ್ಪಿದ, ನಡತೆಗೆಟ್ಟ
unlimited — ಗು ಎಲ್ಲೆಯಿಲ್ಲದ, ತಡೆಯಿಲ್ಲದ, ಹರವಿನ
unload — ಕ್ರಿ 1 ಹೊರೆಲಿುಳಿಸು 2 ಅನಿಸಿದ್ದೆಲ್ಲ ಹೇಳು 3 ಗುಂಡು ತೆಗೆ (ಕೋವಿಯಿಂದ ಗುಂಡು ತೆಗೆ)
unlock — ಕ್ರಿ 1 ಬೀಗ ತೆಗೆ 2 ಬಿಟ್ಟುಬಿಡು 3 ಹೊರಗೆಡಹು
unloose — ಕ್ರಿ ಇಡುಕು
unlucky — ಗು ಸಯ್ಪುಗೆಟ್ಟ
unmake — ಕ್ರಿ 1 ಹಿಮ್ಮರಳಿಸು 2 ಅಳಿಸು, ಕೆಡಿಸು 3 ಕೆಳಗಿಳಿಸು
unmask — ಕ್ರಿ 1 ಮುಸುಕು ತೆಗೆ 2 ತನ್ಪರಿಜು ತೋರು
unmatched — ಗು ದೊರೆಯಿಲ್ಲದ, ಎಣೆ ಯಿಲ್ಲದ
unmistakable — ಗು ತಪ್ಪಲಾಗದ, ತೆಳು ವಾದ ಗು 1 ಕಡಿಮೆಯಾಗದ 2 ಗೊತ್ತುಪಾಡಿಲ್ಲದ
unnatural — ಗು ತನ್ಪರಿಜಲ್ಲದ, ಹುಟ್ಟು ಪರಿಜಲ್ಲದ, ಮಾಳ್ಕೆಯಾದ
unnecessary — ಗು ಬೇಡದ, ಬೇಡದಿರುವ, ಬೇಕಾಗಿಲ್ಲದ, ಬಳಸಲಾಗದ
unnerve — ಕ್ರಿ ಕೆಚ್ಚುಗೆಡು, ಎದೆಗೆಡು, ತಳಮಳ ಗೊಳ್ಳು
unobstructed — ಗು ಸರಾಗವಾಗಿ (ಈಗ ನೀರು ಸರಾಗವಾಗಿ ಹರಿಯುತ್ತಿದೆ), ತಡೆ ಲಿುಲ್ಲದೆ
unpack — ಕ್ರಿ ಗಂಟುಬಿಚ್ಚು, ಹೊರತೆಗೆ
unpalatable — ಗು ತಿನ್ನಲಾಗದ, ಸವಿಯಿಲ್ಲದ
unparalleled — ಗು ಸಾಟಿಯಿಲ್ಲದ, ಎಣೆ ಯಿಲ್ಲದ
unpardonable — ಗು ಕಡೆಗಣಿಸಲಾಗದ, ತಪ್ಪುಮರೆಯಲಾಗದ
unpleasant — ಗು ಒಗ್ಗದ, ಪೆಡಸಾದ
unpolished — ಗು ಕರಡು (ಕರಡು ಬರಹ)
unpopular — ಗು ಮಂದಿಮೆಚ್ಚದ
unprecedented — ಗು ಹಿಂದೆ ನಡೆದಿರದ, ಹೊಸ
unprepared — ಗು ಅಣಿಯಾಗದ, ಅನು ಗೊಳಿಸದ
unprincipled — ಗು ಅಡಿಕಟ್ಟಲೆಲಿುಲ್ಲದ, ಅಡಿನನ್ನಿಲಿುಲ್ಲದ, ಕಟ್ಟಲೆತಪ್ಪಿದ
unproductive — ಗು ಹುಟ್ಟುವಳಿಯಿಲ್ಲದ, ಬರಡು
unquestionable — ಗು ನನಸಾದ, ನಚ್ಚು ಮಾಡಲಾಗದ
unravel — ಕ್ರಿ ಬಗೆಹರಿಸು, ಸಿಕ್ಕು ಬಿಡಿಸು
unreal — ಗು ನನಸಲ್ಲದ, ಅನಿಸಿಕೆಯ, ಸುಳ್ಳು
unreasonable — ಗು ಸರಿಯಲ್ಲದ, ತಕ್ಕು ದಲ್ಲದ, ತುಂಬಾ ಬೆಲೆಯ
unremitting — ಗು ನಿಲ್ಲದ, ನಾಂಬದ, ಬಿಗಿತ ಕಳೆಯದ
unreserved — ಗು ಕಾದಿರಿಸದ, ಮೀಸಲಾ ಗಿಡದ
unrest — ನಾ ಗೊಂದಲ, ಚಡಪಡಿಕೆ
unripe — ಗು ಕನರು, ಕಸು (ಕಸುಗಾಯಿ; ಕಸುಕು - ಕಸುಕಾದ ದಾಳಿಂಬ)
unripe fruit — ನಾ ಮಿಡಿ (ಮಾವಿನ ಮಿಡಿ),ಕಾಯಿ, ಹದಿರು (ಮಾವಿನ ಹದಿರು)
unrivalled — ಗು ಎಣೆಯಿಲ್ಲದ, ಹೋಲಿಸ ಲಾಗದ
unruly — ಗು ಹತೋಟಿಗೆ ಬಾರದ, ತಾರು ಮಾರು ಮಾಡುವ
unsatisfactory — ಗು ತಣಿಸದ, ನೆಮ್ಮದಿ ಕೊಡದ ಗು ಸವಿಯಿಲ್ಲದ, ಪೆಡಸಾದ
unscrupulous — ಗು ಕಟ್ಟಲೆತಪ್ಪಿದ, ಕಟ್ಟು ನಿಟ್ಟಿಲ್ಲದ
unseat — ಕ್ರಿ 1 ಕುಳಿತಲ್ಲಿಂದ ಎಬ್ಬಿಸು 2 ಕೆಳಗಿಳಿಸು
unseemly — ಗು ತಕ್ಕುದಲ್ಲದ, ತರವಲ್ಲದ, ತಪ್ಪಾದ
unsettled — ಗು 1 ನೆಲೆಗೊಳ್ಳದ 2 ಮುಗು ವಳಿಯಾಗದ, ಹಣ ಕೊಡದ 3 ನೆಲಸಿಗ ರಿಲ್ಲದ
unsightly — ಗು ನೋಡಲಾಗದ, ಅಂದ ವಿಲ್ಲದ, ಹೇವರಿಕೆಯ
unskilled — ಗು ಪಳಗದ, ನುರಿಯದ
unsociable — ಗು ಸೇರದಿರುವ, ಒಂಟಿ ಯಾಗಿರುವ
unsparing — ಗು 1 ಹೇರಳ ವೆಚ್ಚಮಾಡುವ 2 ಕನಿಕರವಿಲ್ಲದ, ಕಟ್ಟುನಿಟ್ಟಾದ, ಬಿರುಸು
unspeakable — ಗು 1 ಹೇಳಲಾಗದ 2 ಮಾತಿಗೆ ಮೀರಿದ, ಬೆರಗಾಗಿಸುವ 3 ತುಂಬಾ ಕೆಟ್ಟ
unsteady — ಗು ಉಳಲು (ಆ ಉಳಲು ಏಣಿಯ ಮೇಲೆ ಹತ್ತಬೇಡ), ನಿಲ್ಲದ (ನಿಲ್ಲ ದಿಕೆ)
unsubstantial — ಗು ಪೊಳ್ಳು (ಪೊಳ್ಳು ಮಾತು),ಜೊಳ್ಳು, ಜಳ್ಳು (ಜಳ್ಳು ತೆನೆ)
unsuspecting — ಗು ನಚ್ಚೆಣಿಸದ, ನಂಬಿದ
unthinkable — ಗು 1 ನೆನೆಯಲಾಗದ, ಬಗೆಯಲಾಗದ 2 ಅರಿದು
untidy — ಗು ಅಚ್ಚುಕಟ್ಟಿಲ್ಲದ, ಗೊಂದಲದ, ಗಡಿಬಿಡಿಯ
untie — ಕ್ರಿ 1 ಬಿಚ್ಚು (ಬಿಚ್ಚುಜಡೆ; ಬಿಚ್ಚಿ ಹೇಳು), ಬಿದುರು (ಆತನ ಕಯ್ಕಾಲುಗಳನ್ನು ಬಿದುರಿಬಿಡು), ಉಚ್ಚು (ಹೊಲಿದ ದಾರ ಹರಿದು ಓಲೆಗಳು ಉಚ್ಚಿದುವು) 2 ಬಿಡು ಗಡೆ ಹೊಂದು
untimely — ಗು ಹೊತ್ತುತಪ್ಪಿದ
untiring — ಗು ದಣಿವಿಲ್ಲದ
untold — ಗು 1 ಹೇಳದಿರುವ 2 ಎಣಿಕೆ ಮೀರಿದ, ಎಣಿಸಲಾಗದ
untoward — ಗು ಹದುಳವಿಲ್ಲದ, ತಕ್ಕುದಲ್ಲದ, ತೊಂದರೆಯ, ಸಯ್ಪುಗೆಟ್ಟ
untruth — ನಾ ಸುಳ್ಳು, ನನ್ನಿಯಲ್ಲದುದು
unusual — ಗು ಎಂದಿನಂತಿಲ್ಲದ, ಯಾವಾಗಿನ ದಲ್ಲದ, ಹೆಚ್ಚು ಕಾಣಸಿಗದ
unveil — ಕ್ರಿ ಹೊದಿಕೆ ತೆಗೆ, ತೆರೆ (ತೆರೆದು ತೋರಿಸು), ಹೊರಪಡಿಸು
unwanted — ಗು ಬೇಕಿಲ್ಲದ (ಬೇಕಿಲ್ಲದವರು ಹೊರಗೆ ಹೋಗಲಿ), ಬೇಡದ (ಬೇಡದ ಕೆಲಸ)
unwarranted — ಗು ಒಪ್ಪಿಗೆಯಿಲ್ಲದ, ಬೇಕಿ ಲ್ಲದ, ಬೆಂಬಲಿಸಲಾಗದ
unwary — ಗು ಎಚ್ಚರಿಕೆಯಿಲ್ಲದ, ಕಾಪಾಡದ ಗು ಮಯ್ಸರಿಯಿಲ್ಲದ
unwieldy — ಗು ಹಿಡಿತಕ್ಕೆ ಸಿಗದ, ಸಾವಗಿಸ ಲಾಗದ
unwilling — ಗು 1 ಒಪ್ಪದ, ಒಗ್ಗದ 2 ಒಪ್ಪಿಗೆಲಿುಲ್ಲದೆ ಮಾಡಿದ
unwise — ಗು ತಿಳುವಳಿಕೆಯಿಲ್ಲದ, ಹೆಡ್ಡು, ದುಡುಕುವ, ಎಚ್ಚರಿಕೆಯಿಲ್ಲದ
unwitting — ಗು ತಿಳಿಯದ, ಗಮನಿಸದ, ಬೇಕೆಂದೇ ಮಾಡಿರದ
unwonted — ಗು ಬಳಕೆಯಲ್ಲಿಲ್ಲದ
unworthy — ಗು ತಕ್ಕುದಲ್ಲದ, ಜಾಳು, ಬರಡು
upbraid — ಕ್ರಿ ಅದಪು (ಆಕೆ ಹುಡುಗನನ್ನು ಚನ್ನಾಗಿ ಅದಪಿದಳು), ಬಯ್ಯು
upbringing — ನಾ ಆರಯ್ಕೆ, ಸಾಕುವಿಕೆ, ಸಾಕಣೆ
update — ಕ್ರಿ 1 ಇವತ್ತಿನದಾಗಿಸು, ಇಂದಿನ ದಾಗಿಸು 2 ಮೇಲ್ಮಟ್ಟಕ್ಕೇರಿಸು
upheaval — ನಾ 1 ಎತ್ತಿಕೆ 2 ಉರುಬಿನ ಮಾರ್ಪಾಡು, ದೊಡ್ಡ ಮಾರ್ಪಾಡು
uphill — ಗು 1 ಏರಿಕೆಯ, ಕಡಿದಾದ 2 ತೊಡಕಿನ, ದಣಿವಿನ
uphold — ಕ್ರಿ ಬೆಂಬಲಿಸು, ಎತ್ತಿಹಿಡಿ
upholster — ಕ್ರಿ ಒದಗಿಸು, ಅಣಿಮಾಡು, ತಟ್ಟುಮುಟ್ಟು ಒದಗಿಸು
upkeep — ನಾ ಕಾಪಾಡುವಿಕೆ, ಸರಿಪಡಿಸುವಿಕೆ
uplift — ಕ್ರಿ ಮೇಲೆತ್ತು, ಮೇಲ್ಮಟ್ಟಕ್ಕೇರಿಸು, ನೆಗಹು
upper story — ನಾ ನೆಲೆಮಾಡ, ನೆಲೆಯು ಪ್ಪರಿಗೆ,ಮಚ್ಚು
uproar — ನಾ ಗಲಬೆ,ಗುಲ್ಲು (ಅವರಲ್ಲಿ ಇವತ್ತು ಬರೀ ಗುಲ್ಲು)
uproot — ಕ್ರಿ ಕೀಳು (ಕಿತ್ತುಹಾಕು),ಗೂರು (ಆನೆಗಳು ಬಂದು ಮರಗಳನ್ನೆಲ್ಲ ಗೂರಿ ಹಾಕಿವೆ)
upset — ಕ್ರಿ 1 ಮಗುಚು, ಉರುಳು 2 ಸೋಲಿಸು 3 ಗೊಂದಲಗೊಳಿಸು
upshot — ನಾ ಮುಕ್ತಾಯ, ಕೊನೆ, ಆಗುಹ, ದೊರೆತ
upside down , — ಗು 1 ತಲೆಕೆಳಗೆ ತಿರುವು ಮುರುವು, ಬೋರಲು (ಬೋರಲು ಬೀಳು; ಬೋರಲಿಡು; ಬೋರಲುಹಾಕು), 2 ತಾರು ಮಾರು, ಗೊಂದಲ
upstairs — ನಾ ಕರುಮಾಡ,ಮಾಳಿಗೆ, ದಡ್ಡಿ (ಬಲ್ಲಾಳ ದಡ್ಡಿ)
upwind — ನಾ ಮೇಲುಗಾಳಿ
urban — ಗು ಪೊಳಲಿನ
urbane — ಗು ನಯಗೊಂಡ, ಹೊಲಬನರಿತ, ಒಳ್ಳೆ ನಡತೆಯ
urchin — ನಾ ತುಂಟ ಹುಡುಗ ನಾ ಅಸವಸ (ಆತ ತುಂಬಾ ಅಸ ವಸದಲ್ಲಿದ್ದಾನೆ), ಚಚ್ಚರ
urgent — ಗು ಚಚ್ಚರದ, ಅಸವಸದ, ಪಟ್ಟು ಹಿಡಿವ
urging — ನಾ 1 ಒತ್ತಾಯ (ಒತ್ತಾಯ ಮಾಡು; ಒತ್ತಾಯಿಸು) 2 ಕೆಣಕುವಿಕೆ, ಕೆರಳಿಸುವಿಕೆ
urinal — ನಾ ತಳ್ಳೆಡೆ
urinate — ಕ್ರಿ ಕಾಲುಮಡಿ
urine — ನಾ ಮಯ್ನೀರು,ಉಚ್ಚೆ (ಉಚ್ಚೆ ಹೊಯ್ಯು, ಉಚ್ಚೆಕಟ್ಟು)
usage — ನಾ 1 ಬಳಕೆ, ಸಲುವಳಿ, ಹನಸು (ಮಾತಿನ ಹನಸು) 2 ಕಟ್ಟಾಲೆ, ವಾಡಿಕೆ 3 ನಡವಳಿಕೆ
use — ನಾ ಅನು (ತನ್ನ ಅನುವಿಗಾಗಿ ಇನ್ನೊಬ್ಬರ ವಸ್ತುವನ್ನು ತೆಗೆದುಕೊಂಡ), ಆಗುವೆ, ದೊರೆ (ದೊರೆಯಿಲ್ಲದ ಹೊನ್ನು)
use — ಕ್ರಿಬಳಸು (ನೀವು ಬಳಸದೆ ಉಳಿದ ಅಕ್ಕಿಯನ್ನು ಅವರಿಗೆ ಕೊಡಿ); ಬಳಕೆ
useful — ಗು ಬಳಸಬಲ್ಲ, ನೆರವಾಗಬಲ್ಲ
useless — ಗು ಪೊಟ್ಟು (ಪೊಟ್ಟುಕತೆ; ಪೊಟ್ಟು ಬಾವಿ), ಬರಡು (ಬರಡು ಕೆಲಸ; ಬರಡು ಮಾತು), ಜರಡು, ಬಯಲು (ಬಯಲನುಡಿ; ಬಯಲ್ದೊರೆ; ಬಯಲುಗ), ತರಳೆ (ತರಳೆ ಮಾತು),ಜಾಳು (ಜಾಳಾಗು; ಜಾಳು ಗೊಳಿಸು),ಒಣ (ಒಣಹರಟೆ; ಒಣ ಹೆಮ್ಮೆ), ಗೊಡ್ಡು (ಗೊಡ್ಡು ಹರಟೆ; ಗೊಡ್ಡಾಟ; ಗೊಡ್ಡು ಬೆದರಿಕೆ), ಗುಡ್ಡ (ಗುಡ್ಡೆಣಿಕೆ)
usher — ನಾ 1 ಕಂಬಿಗ (ಬಾಗಿಲಲ್ಲಿ ಕಂಬಿಗ ನಿಂತಿದ್ದ) 2 ಬರಮಾಡುಗ
usher — ಕ್ರಿ ಕರೆತರು, ಬರಮಾಡು
usual — ಗು ಯಾವಾಗಿನ, ಬಳಕೆಯ
usurer — ನಾ ಬಡ್ಡಿಹರದ
usurp — ಕ್ರಿ ಕಿತ್ತುಕೊಳ್ಳು, ಹಕ್ಕಿಲ್ಲದೆ ಪಡೆ
utensil — ನಾ ಅಡುಕಲ
utilise — ಕ್ರಿ ಬಳಸು (ಆವೆಮಣ್ಣನ್ನು ಬಳಸಿ ಮಡಿಕೆಮಾಡುತ್ತಾರೆ)
utility — ನಾ ಬಳಕೆ, ಬಳಕೆಗೆ ಬೇಕಾದುದು
utopian — ನಾ 1 ತಕ್ಕ, ಬದ್ದಿನ, ಮೆಚ್ಚಿಕೆಯ 2 ಅನಿಸಿಕೆಯ, ಹುಚ್ಚಾಟದ
utter — ಕ್ರಿ ಒರೆ (ಒರೆವ ಮೆಲ್ನುಡಿ), ಗಳಹು (ಸುಮ್ಮಗೆ ಗಳಹಬೇಡ), ಹೇಳು, ನುಡಿ, ಉಸುರು (ನಾನು ಏನನ್ನೂ ಉಸುರಲಾರೆ)
utter repeatedly — ಕ್ರಿ ಉಗ್ಗಡಿಸು
utterance — ನಾ ನುಡಿಹ, ಹೇಳಿಕೆ ನಾ ಕಿರುನಾಲಿಗೆ