Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
7. ಕ್ರಿಯಾಪದಗಳ ಒಳರಚನೆ
7.1 ಮುನ್ನೋಟ
ಮೂಲದ್ರಾವಿಡದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರ ಬಂದಿರಲು ಸಾದ್ಯವಿತ್ತು ಮತ್ತು ಆ ಬೇರಿನ ಅನಂತರ ಹಲವು ರೀತಿಯ ಒಟ್ಟುಗಳೂ ಬಂದಿರಲು ಸಾದ್ಯವಿತ್ತು.
ಕನ್ನಡದಲ್ಲೂ ಇಂತಹದೇ ಪರಿಸ್ತಿತಿಯನ್ನು ಕಾಣಬಹುದು. ನಿಲ್, ಉಣ್, ಕೆಯ್ ಮೊದಲಾದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರ ಬಳಕೆಯಾಗಿದೆ. ಆದರೆ ಬೆಳೆ, ತಿಳಿ, ತೊಡಗು, ಬೆವರು ಮೊದಲಾದ ಕ್ರಿಯಾಪದಗಳಲ್ಲಿ ಒಂದು ಬೇರು ಮಾತ್ರವಲ್ಲದೆ ಒಂದು ಇಲ್ಲವೇ ಎರಡು ಒಟ್ಟುಗಳೂ ಬಳಕೆಯಾಗಿವೆ.
ಈ ರೀತಿ ಬೇರುಗಳೊಂದಿಗೆ ಒಟ್ಟುಗಳೂ ಬಂದಿರುವ ಕ್ರಿಯಾಪದಗಳ ಅದ್ಯಾಯದಲ್ಲಿ
ಎಂಬುದನ್ನು
ಒಳರಚನೆಯುಂತಹದು ಪರಿಶೀಲಿಸಲಾಗಿದೆ.
ವ್ಯತ್ಯಾಸದ ಆದಾರದ
7.2 ಆಗುವಿಕೆ ಮತ್ತು ಮಾಡುವಿಕೆ
ಮೂಲದ್ರಾವಿಡ ಕ್ರಿಯಾಪದಗಳ ರಚನೆಯನ್ನು ಹೆಚ್ಚಿನ ವಿದ್ವಾಂಸರೂ ಸಕರ್ಮಕ-ಅಕರ್ಮಕ ಮೇಲೆ ವಿವರಿಸಲು ಪ್ರಯತ್ನಿಸಿದ್ದಾರೆ. ಈ ವ್ಯತ್ಯಾಸ ಕ್ರಿಯಾಪದಗಳು ಸೂಚಿಸುವ ಕೆಲಸಗಳಲ್ಲಿ ಎಶ್ಟು ಮಂದಿ ವ್ಯಕ್ತಿ, ವಸ್ತು ಮೊದಲಾದವುಗಳು (ಇಲ್ಲವೇ ಅವುಗಳ ಗುಂಪುಗಳು) ತೊಡಗಿಕೊಂಡಿವೆ (ಒಂದು ಇಲ್ಲವೇ ಜಾಸ್ತಿ) ಎಂಬ ವಿಶಯದ ಮೇಲೆ ಅವಲಂಬಿಸಿದೆ.
ಒಂದು ಕೆಲಸದಲ್ಲಿ ತೊಡಗಿಕೊಂಡಿರುವುದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ಆಗಿದೆಯಾದರೆ, ಆ ಕೆಲಸವನ್ನು ಸೂಚಿಸುವ
ಕ್ರಿಯಾಪದವನ್ನು ‘ಅಕರ್ಮಕ’ವೆಂದು ಕರೆಯಲಾಗುತ್ತದೆ ಮತ್ತು ಅದರಲ್ಲಿ ಒಂದಕ್ಕಿಂತ ಜಾಸ್ತಿ ವ್ಯಕ್ತಿ ಇಲ್ಲವೇ ವಸ್ತುಗಳು ತೊಡಗಿಕೊಂಡಿವೆಯಾದರೆ, ಅಂತಹ ಕ್ರಿಯಾಪದವನ್ನು ‘ಸಕರ್ಮಕ’ವೆಂದು ಕರೆಯಲಾಗುತ್ತದೆ.
ಉದಾಹರಣೆಗಾಗಿ, ಬೀಳು ಕ್ರಿಯಾಪದವು ಸೂಚಿಸುವ ಕೆಲಸದಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ತೊಡಗಿಕೊಂಡಿರಬಲ್ಲುದು; ಹಾಗಾಗಿ, ಬೀಳು ಕ್ರಿಯಾಪದ ಅಕರ್ಮಕ. ಆದರೆ, ಕೊಲ್ಲು ಕ್ರಿಯಾಪದವು ಸೂಚಿಸುವ ಕೆಲಸದಲ್ಲಿ ಕೊಲ್ಲುವ ವ್ಯಕ್ತಿ ಮತ್ತು ಕೊಲೆಯಾಗುವ ವ್ಯಕ್ತಿ (ಇಲ್ಲವೇ ಪ್ರಾಣಿ) ಎಂಬುದಾಗಿ ಕಡಿಮೆಯುಂದರೆ ಎರಡು ವ್ಯಕ್ತಿ ಇಲ್ಲವೇ ಪ್ರಾಣಿಗಳಾದರೂ ತೊಡಗಿಕೊಂಡಿರಬೇಕಾಗುತ್ತದೆ. ಹಾಗಾಗಿ, ಕೊಲ್ಲು ಕ್ರಿಯಾಪದ ಸಕರ್ಮಕ (ಹಲವಚನದಲ್ಲಿ ಬರುವ ಪದ ಹಲವು ವ್ಯಕ್ತಿ ಇಲ್ಲವೇ ವಸ್ತುಗಳನ್ನು ಸೂಚಿಸುವುದಾದರೂ, ಅದು ಅವುಗಳ ಒಂದು ಗುಂಪನ್ನು ಸೂಚಿಸುವ ಕಾರಣ, ಅದನ್ನೂ ಇಲ್ಲಿ ‘ಒಂದು’ ಎಂಬುದಾಗಿ ಪರಿಗಣಿಸಲಾಗುತ್ತದೆ).
ಮೂಲದ್ರಾವಿಡ ವ್ಯಾಕರಣಗಳಲ್ಲಿ ಮಾತ್ರವಲ್ಲದೆ ಹೆಚ್ಚಿನ ದ್ರಾವಿಡ ನುಡಿಗಳ ವ್ಯಾಕರಣಗಳಲ್ಲೂ ಕ್ರಿಯಾಪದಗಳ ರಚನೆಯನ್ನು ಈ ಸಕರ್ಮಕ- ಅಕರ್ಮಕ ವ್ಯತ್ಯಾಸದ ಮೇಲೇನೇ ವಿವರಿಸಲಾಗಿದೆ.
ಆದರೆ, ನಿಜಕ್ಕೂ ಇದು ಸಂಸ್ಕ್ರುತ, ಲ್ಯಾಟಿನ್, ಇಂಗ್ಲಿಶ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳ ಕ್ರಿಯಾಪದಗಳನ್ನು ವಿವರಿಸುವಲ್ಲಿ ಅನುಕೂಲವಾಗಿರುವಂತಹ ವ್ಯತ್ಯಾಸವಾಗಿದೆಯಲ್ಲದೆ, ದ್ರಾವಿಡ ನುಡಿಗಳ ಕ್ರಿಯಾಪದಗಳನ್ನು ವಿವರಿಸುವಲ್ಲಿ ಅನುಕೂಲವಾದಂತಹ ವ್ಯತ್ಯಾಸವಲ್ಲ. ಇದಕ್ಕೆ ಕಾರಣವೇನೆಂದರೆ, ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಗಿಂತಲೂ ಕೆಲಸದ ಸ್ವರೂಪಕ್ಕೇನೇ ದ್ರಾವಿಡ ನುಡಿಗಳಲ್ಲಿ ಹೆಚ್ಚಿನ ಬೆಲೆಯಿದೆ.
ಉದಾಹರಣೆಗಾಗಿ, ತಮಿಳು ಮತ್ತು ಕನ್ನಡ ಕ್ರಿಯಾಪದಗಳ ಕುರಿತು
ನಡೆಸಿದ ಎರಡು ಸಂಶೋದನೆಗಳನ್ನು ಇಲ್ಲಿ ಪರಿಶೀಲಿಸಬಹುದು.
7.2.1 ತಮಿಳಿನಲ್ಲಿ ಕೆಲಸದ ಪರಿಣಾಮ
ತಮಿಳಿನಲ್ಲಿ ಒಂದು ಕೆಲಸದ ಪರಿಣಾಮ ಅದನ್ನು ಮಾಡಿದ ವ್ಯಕ್ತಿಯ ಮೇಲೆ ಆಗಿದೆಯೇ ಇಲ್ಲವೇ ಬೇರೊಬ್ಬ ವ್ಯಕ್ತಿಯ ಮೇಲೆ (ಇಲ್ಲವೇ ಬೇರೆ ಪ್ರಾಣಿ ಇಲ್ಲವೇ ವಸ್ತುವಿನ ಮೇಲೆ) ಆಗಿದೆಯೇ ಎಂಬ ವಿಶಯದ ಮೇಲೆ ಅದರ ಕ್ರಿಯಾಪದಗಳನ್ನು ವಿಂಗಡಿಸುವುದು ಅವಶ್ಯ ಎಂಬುದಾಗಿ ಪರಮಶಿವಂ ಅವರು ತೋರಿಸಿಕೊಟ್ಟಿದ್ದಾರೆ (ಪರಮಶಿವಂ 1979).
ತಮಿಳಿನಲ್ಲಿ ಇದಕ್ಕಾಗಿ ಎರಡು ರೀತಿಯ ಕ್ರಿಯಾಪದಗಳನ್ನು ಇಲ್ಲವೇ ಕ್ರಿಯಾರೂಪಗಳನ್ನು ಬಳಸಲಾಗುತ್ತದೆ. ಉದಾಹರಣೆಗಾಗಿ, ವಳಯ್ ‘ಸುತ್ತುವರಿ’ ಕ್ರಿಯಾಪದಕ್ಕೆ ‘ಸುತ್ತುವರಿದು’ ಎಂಬ ಅರ್ತವನ್ನು ಕೊಡುವ ವಳಯ್ನ್ತು ಮತ್ತು ವಳಯ್ತ್ತು ಎಂಬ ಎರಡು ಕ್ರಿಯಾರೂಪಗಳಿವೆ.
ಅವುಗಳಲ್ಲಿ ಮೊದಲನೆಯದು ಸುತ್ತುವರಿಯುವ ಕೆಲಸದ ಪರಿಣಾಮ ಸುತ್ತುವರಿಯುವ ವ್ಯಕ್ತಿಗಳ (ಗುಂಪಿನ) ಮೇಲೆ ನಡೆಯುತ್ತದೆಯುಂಬುದನ್ನು ವ್ಯಕ್ತಿಗಳು ಸೂಚಿಸುತ್ತದೆ ಸುತ್ತುವರಿದಿರುವಂತಹ ವ್ಯಕ್ತಿಯ ಮೇಲೆ ನಡೆಯುತ್ತದೆಯುಂಬುದನ್ನು ಸೂಚಿಸುತ್ತದೆ.
ಎರಡನೆಯದು
ಮತ್ತು
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಎರಡು ತಮಿಳು ವಾಕ್ಯಗಳ
ನಡುವಿನ ವ್ಯತ್ಯಾಸವನ್ನು ಗಮನಿಸಬಹುದು.
(1ಕ) ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಂಟಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದರು’ (1ಚ) ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಂಟಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದರು’
ಮೇಲಿನ ಎರಡು ವಾಕ್ಯಗಳೂ ‘ಸಕರ್ಮಕ’ ವಾಕ್ಯಗಳೇ. ಯಾಕೆಂದರೆ ಅವೆರಡರಲ್ಲೂ ನಟಿಕಯ್ ಮತ್ತು ರಚಿಕರ್ಕಳ್ ಎಂಬ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪನ್ನು ಸೂಚಿಸುವ ಎರಡು ನಾಮಪದಗಳು ಬಂದಿವೆ. ಆದರೆ
ತಮಿಳಿನಲ್ಲಿ ಈ ಎರಡು ವಾಕ್ಯಗಳ ನಡುವೆ ಅರ್ತದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವಿದೆ. (ಕನ್ನಡದಲ್ಲಿ ಈ ವ್ಯತ್ಯಾಸವನ್ನು ನೇರವಾಗಿ ಸೂಚಿಸಬಲ್ಲ ಕ್ರಿಯಾರೂಪಗಳಿಲ್ಲ).
(1ಕ) ವಾಕ್ಯದಲ್ಲಿ ವಳಯ್ ‘ಸುತ್ತುವರಿ’ ಕ್ರಿಯಾಪದ ವಳಯ್ನ್ತು ಎಂಬ ರೂಪದಲ್ಲಿ ಬಂದಿದ್ದು, ಅದು ನಟಿಯ ಅಬಿಮಾನಿಗಳಿಗೆ ಏನಾಯಿತು ಎಂಬುದನ್ನು ತಿಳಿಸುತ್ತದೆ; ಆದರೆ (1ಚ) ವಾಕ್ಯದಲ್ಲಿ ಅದೇ ಕ್ರಿಯಾಪದ ವಳಯ್ತ್ತು ಎಂಬ ರೂಪದಲ್ಲಿ ಬಂದಿದ್ದು, ಅದು ನಟಿಗೆ ಆಕೆಯ ಅಬಿಮಾನಿಗಳು ಏನು ಮಾಡಿದರು ಎಂಬುದನ್ನು ಸೂಚಿಸುತ್ತದೆ.
ಈ ಕಾರಣಕ್ಕಾಗಿ, ಅಬಿಮಾನಿಗಳಿಗೆ ಬೇರೆ ಏನಾಯಿತು ಎಂಬುದನ್ನು ಸೂಚಿಸುವ ಕ್ರಿಯಾರೂಪವನ್ನು (1ಕ) ವಾಕ್ಯದ ಅನಂತರ ಬಳಸಲು ಸಾದ್ಯವಿದೆಯಲ್ಲದೆ (1ಚ) ವಾಕ್ಯದ ಅನಂತರ ಬಳಸಲು ಸಾದ್ಯವಾಗದು.
(2ಕ) ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಣ್ಟು ಆಟಿನಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದು ಕುಣಿದರು’
(2ಚ) *ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಣ್ಟು ಆಟಿನಾರ್ಕಳ್ ‘ಅಬಿಮಾನಿಗಳು ನಟಿಯನ್ನು ಸುತ್ತುವರಿದು ಕುಣಿದರು’
(2ಚ) ವಾಕ್ಯದಲ್ಲಿ ಅಬಿಮಾನಿಗಳಿಗೆ ಬೇರೆ ಏನಾಯಿತು ಎಂಬುದನ್ನು ಸೂಚಿಸುವ ಆಟಿನಾರ್ಕಳ್ ಕ್ರಿಯಾರೂಪವನ್ನು ಅವರು ನಟಿಗೆ ಏನು ಮಾಡಿದರು ಎಂಬುದನ್ನು ತಿಳಿಸುವ ವಳಯ್ತ್ತುಕೊಣ್ಟು ಕ್ರಿಯಾರೂಪದ ಅನಂತರ ಬಳಸಲಾಗಿದೆಯಾದ ಕಾರಣ, ಆ ವಾಕ್ಯ ವ್ಯಾಕರಣದ ಮಟ್ಟಿಗೆ ಸರಿಯಲ್ಲ. (ಇಲ್ಲಿ ಒಂದು ವಾಕ್ಯ ವ್ಯಾಕರಣದ ಮಟ್ಟಿಗೆ ಸರಿಯಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ನಕ್ಶತ್ರ ಚಿಹ್ನೆ(*)ಯನ್ನು ಬಳಸಲಾಗಿದೆ).
ಇದೇ ರೀತಿಯಲ್ಲಿ ಅಬಿಮಾನಿಗಳು ನಟಿಗೆ ಬೇರೆ ಏನು ಮಾಡಿದರು ಎಂಬುದನ್ನು ಸೂಚಿಸುವ ಕ್ರಿಯಾರೂಪವೊಂದನ್ನು ಅವರು ನಟಿಗೆ ಏನು ಮಾಡಿದರು ಎಂಬುದನ್ನು ತಿಳಿಸುವ (1ಚ) ವಾಕ್ಯದ ಅನಂತರ ಬಳಸಲು
ಸಾದ್ಯವಿದೆಯಲ್ಲದೆ ಅಬಿಮಾನಿಗಳಿಗೆ ಏನಾಯಿತು ಎಂಬುದನ್ನು ತಿಳಿಸುವ (1ಕ) ವಾಕ್ಯದ ಅನಂತರ ಬಳಸಲು ಸಾದ್ಯವಾಗದು.
(3ಕ) *ರಚಿಕರ್ಕಳ್ ನಟಿಕಯಯ್ ವಳಯ್ನ್ತುಕೊಣ್ಟು ಅಟಿತ್ತಾರ್ಕಳ್ ನಟಿಯನ್ನು
ಸುತ್ತುವರಿದು
‘ಅಬಿಮಾನಿಗಳು ಹೊಡೆದರು’’
(3ಚ) ರಚಿಕರ್ಕಳ್ ನಟಿಕಯಯ್ ವಳಯ್ತ್ತುಕೊಣ್ಟು ಅಟಿತ್ತಾರ್ಕಳ್ ನಟಿಯನ್ನು
ಸುತ್ತುವರಿದು
‘ಅಬಿಮಾನಿಗಳು ಹೊಡೆದರು’’
(3ಕ) ವಾಕ್ಯ ವ್ಯಾಕರಣದ ಮಟ್ಟಿಗೆ ತಪ್ಪಾಗಲು ಅದರಲ್ಲಿ ಅಬಿಮಾನಿ ಗಳಿಗೆ ಏನಾಯಿತು ಎಂಬುದನ್ನು ಸೂಚಿಸುವ ವಳಯ್ನ್ತುಕೊಣ್ಟು ಕ್ರಿಯಾ ರೂಪದ ಅನಂತರ ವಾಕ್ಯದ ಕೊನೆಯಲ್ಲಿ ಅವರು ನಟಿಗೆ ಬೇರೆ ಏನು ಮಾಡಿದರು ಎಂಬುದನ್ನು ತಿಳಿಸುವ ಅಟಿತ್ತಾರ್ಕಳ್ ಕ್ರಿಯಾರೂಪವನ್ನು ಬಳಸಿದುದೇ ಕಾರಣ.
ಮೇಲೆ ಸೂಚಿಸಿದ ಹಾಗೆ, ಹೆಚ್ಚಿನ ವಯ್ಯಾಕರಣಿಗಳೂ ತಮಿಳಿನ ಹಲವು ಕ್ರಿಯಾಪದಗಳಲ್ಲಿ ಮತ್ತು ಕೆಲವು ಕ್ರಿಯಾರೂಪಗಳಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಸಕರ್ಮಕ-ಅಕರ್ಮಕ ವ್ಯತ್ಯಾಸವೆಂದು ವರ್ಣಿಸಿದ್ದಾರೆ. ಆದರೆ ಈ ಎರಡು ರೀತಿಯ ವಾಕ್ಯಗಳಲ್ಲೂ ಎರಡೆರಡು ನಾಮಪದಗಳ ಬಳಕೆ ಯಾಗಿದೆಯಾದ ಕಾರಣ ಮತ್ತು ಅವುಗಳ ನಡುವಿನ ವ್ಯತ್ಯಾಸ ವಾಕ್ಯಗಳಲ್ಲಿ ಬರುವ ನಾಮಪದಗಳ ಎಣಿಕೆಯ ಮೇಲೆ ಅವಲಂಬಿಸಿಲ್ಲವಾದ ಕಾರಣ, ಅದನ್ನು ಅಕರ್ಮಕ-ಸಕರ್ಮಕ ವ್ಯತ್ಯಾಸವೆಂದು ಕರೆಯುವುದು ಸರಿಯಲ್ಲ ಎಂಬುದಾಗಿ ಪರಮಶಿವಂ ವಾದಿಸಿದ್ದಾರೆ.
6.2.2 ಕನ್ನಡದಲ್ಲಿ ಆಗುವಿಕೆ-ಮಾಡುವಿಕೆ ವ್ಯತ್ಯಾಸ
ಕನ್ನಡದಲ್ಲಿ ಇಂತಹದೇ ಒಂದು ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಇಸು ಒಟ್ಟನ್ನು ಬಳಸಲಾಗುತ್ತದೆ. ಇದನ್ನೂ ವಯ್ಯಾಕರಣಿಗಳು ಅಕರ್ಮಕ-ಸಕರ್ಮಕ
ವ್ಯತ್ಯಾಸವೆಂದೇ ಕರೆದಿದ್ದಾರೆ. ಆದರೆ ಕನ್ನಡದ ಮಟ್ಟಿಗೂ ಇದು ಸರಿಯಲ್ಲ. ಯಾಕೆಂದರೆ, ಕನ್ನಡದಲ್ಲೂ ವಾಕ್ಯಗಳು ಸೂಚಿಸುವ ಕೆಲಸಗಳಲ್ಲಿ ಎಶ್ಟು ಮಂದಿ ತೊಡಗಿಕೊಂಡಿರುವರೆಂಬ ವಿಶಯಕ್ಕಿಂತಲೂ ಆ ಕೆಲಸಗಳು ಆಗುವಿಕೆಗಳೇ ಇಲ್ಲವೇ ಮಾಡುವಿಕೆಗಳೇ ಎಂಬ ವಿಶಯಕ್ಕೇನೇ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಡುವ ಅವಶ್ಯಕತೆಯಿದೆ.
ಸಕರ್ಮಕ-ಅಕರ್ಮಕ ವ್ಯತ್ಯಾಸವಿರುವ ನುಡಿಗಳಲ್ಲಿ ಅಕರ್ಮಕ ಕ್ರಿಯಾಪದ ಗಳನ್ನು ಸಕರ್ಮಕ ಕ್ರಿಯಾಪದಗಳನ್ನಾಗಿ ಮಾಡುವ ವಿದಾನಕ್ಕಿಂತ ಕನ್ನಡದಲ್ಲಿ ಕ್ರಿಯಾಪದಕ್ಕೆ ಇಸು ಒಟ್ಟನ್ನು ಸೇರಿಸುವ ವಿದಾನ ಹಲವು ವಿಶಯಗಳಲ್ಲಿ ಬೇರಾಗಿದೆ. ಇದನ್ನು ಸೂಚಿಸುವಂತಹ ನಾಲ್ಕು ವಿಶಯಗಳನ್ನು ಕೆಳಗೆ ಕೊಡಲಾಗಿದೆ.
(1) ಇಸು ಒಟ್ಟಿನ ಮೂಲಕ ಕನ್ನಡದಲ್ಲಿ ಒಬ್ಬ ವ್ಯಕ್ತಿ ಮಾತ್ರ ತೊಡಗಿಕೊಂಡಿರುವ ಅಕರ್ಮಕ ಕ್ರಿಯಾಪದಗಳನ್ನು ಮಾತ್ರವಲ್ಲದೆ ಇಬ್ಬರು ವಸ್ತು) ವ್ಯಕ್ತಿಗಳು ವ್ಯಕ್ತಿ ತೊಡಗಿಕೊಂಡಿರುವ ‘ಸಕರ್ಮಕ’ ಕ್ರಿಯಾಪದಗಳನ್ನೂ ಬದಲಾಯಿಸಲು ಸಾದ್ಯವಿದೆ.
(ಇಲ್ಲವೇ ಒಬ್ಬ
ಮತ್ತು ಒಂದು
(4ಕ) ರಾಜು ಓಡಿದ (4ಚ) ಹರಿ ರಾಜುವನ್ನು ಓಡಿಸಿದ
(5ಕ) ರಾಜು ಹಣ್ಣು ತಿಂದ (5ಚ) ಹರಿ ರಾಜುವಿಗೆ ಹಣ್ಣು ತಿನ್ನಿಸಿದ
(5ಕ)ದಲ್ಲಿ ಬಂದಿರುವ ತಿನ್ನು ಕ್ರಿಯಾಪದ ಅಕರ್ಮಕವಲ್ಲ, ಸಕರ್ಮಕ; ಯಾಕೆಂದರೆ, ಅದರೊಂದಿಗೆ ಎರಡು ನಾಮಪದಗಳು (ರಾಜು ಮತ್ತು ಹಣ್ಣು) ಬಳಕೆಯಾಗಿವೆ. ಹೀಗಿದ್ದರೂ, ಅದಕ್ಕೆ ಇಸು ಒಟ್ಟನ್ನು ಸೇರಿಸಲು ಸಾದ್ಯ ಎಂಬುದನ್ನು (5ಚ)ದಲ್ಲಿ ಕಾಣಬಹುದು.
ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಈ ಇಸು ಒಟ್ಟಿನ ಕೆಲಸ ಅಕರ್ಮಕ ಕ್ರಿಯಾಪದವನ್ನು ಸಕರ್ಮಕವಾಗಿ ಮಾಡುವುದಲ್ಲ; ಒಂದು ಕೆಲಸದ
ಮೇಲೆ ಒಬ್ಬ ವ್ಯಕ್ತಿಗಿರುವ ಹಿಡಿತವನ್ನು ತಪ್ಪಿಸಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕೊಡುವುದೇ ಅದರ ಕೆಲಸ. ಮೇಲೆ (ಕ) ವಾಕ್ಯಗಳಲ್ಲಿ ಒಂದು ಕೆಲಸದ ಮೇಲೆ ರಾಜುವಿಗಿದ್ದ ಹಿಡಿತವನ್ನು (ಚ) ವಾಕ್ಯಗಳಲ್ಲಿ ತಪ್ಪಿಸಿ, ಆ ಹಿಡಿತವನ್ನು ಹರಿಗೆ ಕೊಡಲಾಗಿದೆ.
(2) ಕನ್ನಡದಲ್ಲಿ ಕೊಳ್ಳು ಎಂಬುದರ ಬಳಕೆಯೂ ಇದೇ ರೀತಿಯಲ್ಲಿ ಸಕರ್ಮಕ-ಅಕರ್ಮಕ ವ್ಯತ್ಯಾಸಗಳಿರುವ ನುಡಿಗಳಲ್ಲಿರುವ ಹಾಗೆ ಬರಿಯ ಸಕರ್ಮಕ ಕ್ರಿಯಾಪದಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಬ್ಬನೇ ವ್ಯಕ್ತಿ ತೊಡಗಿಕೊಂಡಿರುವ ಕ್ರಿಯಾಪದಗಳೊಂದಿಗೂ ಅದನ್ನು ಬಳಸಲು ಸಾದ್ಯವಿದೆ. ಒಂದು ಕೆಲಸ ಪೂರ್ತಿ ಅದನ್ನು ನಡೆಸುವ ವ್ಯಕ್ತಿಯ ಹಿಡಿತದಲ್ಲಿದೆ ಮತ್ತು ಅದು ಆತನ ಹಿತಕ್ಕಾಗಿಯೇ ನಡೆದಿದೆ ಎಂಬುದನ್ನು ಸೂಚಿಸುವುದೇ ಅದರ ಕೆಲಸ.
(6ಕ) ಮಗು ನಿಂತಿದೆ (6ಚ) ಮಗು ನಿಂತುಕೊಂಡಿದೆ
(7ಕ) ಹರಿ ರಾಜುವನ್ನು ದೂರಿದ (7ಚ) ರಾಜು ತನ್ನನ್ನೇ ದೂರಿಕೊಂಡ
ವಾಕ್ಯ (6)ರಲ್ಲಿ ಬಂದಿರುವ ನಿಲ್ಲು ಕ್ರಿಯಾಪದ ಅಕರ್ಮಕ ಮತ್ತು (7)ನೇ ವಾಕ್ಯದಲ್ಲಿ ಬಂದಿರುವ ದೂರು ಕ್ರಿಯಾಪದ ಸಕರ್ಮಕ. ಆದರೆ ಕನ್ನಡದಲ್ಲಿ ಈ ಎರಡು ರೀತಿಯ ಕ್ರಿಯಾಪದಗಳೊಂದಿಗೂ ಕೊಳ್ಳು ಎಂಬುದನ್ನು ಬಳಸಲು ಸಾದ್ಯವಿದೆ (ನಿಂತುಕೊಂಡಿದೆ, ದೂರಿಕೊಂಡ). ತಕ್ಕುದಾದುದಲ್ಲ ಎಂಬುದು ಕನ್ನಡಕ್ಕೆ ಸಕರ್ಮಕ-ಅಕರ್ಮಕ ವ್ಯತ್ಯಾಸ ಇದರಿಂದಲೂ ಸಿದ್ದವಾಗುತ್ತದೆ.
(3) ಬೇರೆ ನುಡಿಗಳಿಂದ ಎರವಲಾಗಿ ಪಡೆದ ಕ್ರಿಯಾಪದಗಳನ್ನು ಕನ್ನಡದಲ್ಲಿ ಬಳಸುವುದಕ್ಕಾಗಿ ಆಗು ಮತ್ತು ಮಾಡು ಎಂಬ ಎರಡು ಕ್ರಿಯಾಪದಗಳನ್ನು ಅವುಗಳೊಂದಿಗೆ ಸೇರಿಸಿ ಬಳಸಲು ಸಾದ್ಯವಿದೆ. ಉದಾಹರಣೆಗಾಗಿ, ಇಂಗ್ಲಿಶ್ನ ಅವ್ಟಾಗು, ಬವ್ಲಾಗು, ಅವ್ಟುಮಾಡು,
ಬವ್್ಲಮಾಡು ಮೊದಲಾದ ಎರವಲುಗಳನ್ನು ಗಮನಿಸಬಹುದು. ಇಲ್ಲಿ ಅಕರ್ಮಕ-ಸಕರ್ಮಕ ವ್ಯತ್ಯಾಸಕ್ಕಿಂತಲೂ ಆಗುವಿಕೆ-ಮಾಡುವಿಕೆ ವ್ಯತ್ಯಾಸವೇ ಮುಕ್ಯವಾಗಿದೆ.
(4) ಕನ್ನಡದಲ್ಲಿ ಎರಡು ವಾಕ್ಯಗಳನ್ನು ಮಾಡಿ, ಮಾಡುತ್ತಾ, ಮಾಡಲು ಮತ್ತು ಮಾಡದೆ ಎಂಬ ನಾಲ್ಕು ರೀತಿಯ ಜೋಡಿಸುವ ಕ್ರಿಯಾರೂಪಗಳ ಮೂಲಕ ಜೋಡಿಸಿ ಹೇಳಲು ಸಾದ್ಯವಿದೆ.
(8ಕ) ರಾಜು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ. (8ಚ) ರಾಜು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ. (8ಟ) ರಾಜು ಊಟ ಮಾಡಲು ನಮ್ಮಲ್ಲಿಗೆ ಬಂದ. (8ತ) ರಾಜು ಊಟ ಮಾಡದೆ ನಮ್ಮಲ್ಲಿಗೆ ಬಂದ.
ಎರಡು ವಾಕ್ಯಗಳನ್ನು ಈ ರೀತಿ ಜೋಡಿಸಬೇಕಿದ್ದಲ್ಲಿ ಅವು ಮಾಡು ವಿಕೆಗಳೇ ಇಲ್ಲವೇ ಆಗುವಿಕೆಗಳೇ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಯಿದೆ. ಯಾಕೆಂದರೆ, ಮಾಡುವಿಕೆಗಳನ್ನು (ಎಂದರೆ ಒಬ್ಬ ವ್ಯಕ್ತಿಯ ಹಿಡಿತದಲ್ಲಿರುವ ಕೆಲಸಗಳನ್ನು) ಸೂಚಿಸುವ ಎರಡು ವಾಕ್ಯಗಳನ್ನು ಇಂತಹ ಜೋಡಿಸುವ ಕ್ರಿಯಾರೂಪಗಳ ಮೂಲಕ ಜೋಡಿಸಬೇಕಿದ್ದಲ್ಲಿ ಅವೆರಡನ್ನು ಮಾಡುವ ವ್ಯಕ್ತಿ ಒಬ್ಬನೇ ಆಗಿರುವ ಅವಶ್ಯಕತೆಯಿದೆ.
(9ಕ) ರಾಜು ತರಕಾರಿ ತಂದು ಅಡುಗೆ ಮಾಡಿದ. (9ಚ) *ರಾಜು ತರಕಾರಿ ತಂದು ಜಾನಕಿ ಅಡುಗೆ ಮಾಡಿದಳು.
ತರಕಾರಿ ತರುವುದು ಮತ್ತು ಅಡುಗೆ ಮಾಡುವುದು ಎಂಬ ಈ ಎರಡು ಕೆಲಸಗಳೂ ಮಾಡುವಿಕೆಗಳಾದ ಕಾರಣ, ಅವನ್ನು ತಂದು ಕ್ರಿಯಾರೂಪದ ಮೂಲಕ ಜೋಡಿಸಬೇಕಿದ್ದಲ್ಲಿ ಅವೆರಡನ್ನೂ ಒಬ್ಬನೇ ವ್ಯಕ್ತಿ ಮಾಡಿರುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ (9ಚ) ವಾಕ್ಯ ಸರಿಯಾದುದಲ್ಲ.
ಎರಡು ಕೆಲಸಗಳೂ ಆಗುವಿಕೆಗಳಾದಲ್ಲಿ ಇಲ್ಲವೇ ಒಂದು ಮಾಡುವಿಕೆ ಮತ್ತು ಇನ್ನೊಂದು ಆಗುವಿಕೆ ಎಂದಿರುವಲ್ಲಿ ಮಾತ್ರ ಈ ರೀತಿ ಬೇರೆ ಬೇರೆ ವ್ಯಕ್ತಿಗಳು ಕೆಲಸಗಳನ್ನು ಜೋಡಿಸಿ ಹೇಳಲು ಸಾದ್ಯವಿದೆ.
ತೊಡಗಿಕೊಂಡಿರುವ
(10ಕ) ಜೋರಾಗಿ ಗಾಳಿ ಬೀಸಿ ತರಗೆಲೆಗಳೆಲ್ಲ ಒಳಗೆ ಬಂದುವು. (10ಚ) ನಾವು ಇಶ್ಟು ಬೇಗ ಬಂದು ಅವಳಿಗೆ ತೊಂದರೆಯಾಯಿತು.
(10ಕ)ದಲ್ಲಿ ಗಾಳಿ ಬೀಸುವುದು ಮತ್ತು ಒಳಗೆ ಬರುವುದು ಎಂಬವು ಎರಡೂ ಆಗುವಿಕೆಗಳು; ಮತ್ತು (10ಚ)ದಲ್ಲಿ ಬೇಗ ಬರುವುದು ಒಂದು ಮಾಡುವಿಕೆ ಮತ್ತು ತೊಂದರೆಯಾಗುವುದು ಒಂದು ಆಗುವಿಕೆ; ಈ ಕಾರಣಕ್ಕಾಗಿ, ಮೇಲಿನ ಎರಡು ಜೋಡಣೆಗಳೂ ಸರಿಯಾಗಿವೆ (ಬಟ್ 2006 ನೋಡಿ). ಸಕರ್ಮಕ-ಅಕರ್ಮಕ
ಮುಕ್ಯವಾದುದಲ್ಲ ಎಂಬುದನ್ನು ಮತ್ತು ಆಗುವಿಕೆ-ಮಾಡುವಿಕೆ ವ್ಯತ್ಯಾಸ ಮುಕ್ಯ ಎಂಬುದನ್ನು ತೋರಿಸಿಕೊಡಲು ಇಂತಹ ಇನ್ನೂ ಹಲವು ವಿಶಯಗಳನ್ನು ಆದಾರವಾಗಿ ಕೊಡಬಹುದು (ಹೆಚ್ಚಿನ ವಿವರಗಳಿಗೆ ಬಟ್ 1991 ನೋಡಿ).
ಕನ್ನಡದಲ್ಲಿ
ವ್ಯತ್ಯಾಸ
7.2.3 ಮೂಲದ್ರಾವಿಡದ ವ್ಯತ್ಯಾಸ
ಮೇಲೆ ವಿವರಿಸಿದ ಕಾರಣಗಳಿಗಾಗಿ, ಸಕರ್ಮಕ-ಅಕರ್ಮಕ ಅರ್ತವ್ಯತ್ಯಾಸದ ಬದಲು ತಮಿಳು ಮತ್ತು ಕನ್ನಡ ನುಡಿಗಳಲ್ಲಿ ಕಾಣಿಸಿಕೊಳ್ಳುವ ಈ ಎರಡು ರೀತಿಯ ಅರ್ತವ್ಯತ್ಯಾಸಗಳಲ್ಲಿ ಯಾವುದಾದರೂ ಒಂದನ್ನು ಇಲ್ಲವೇ ಬೇರೊಂದು ಅರ್ತವ್ಯತ್ಯಾಸವನ್ನು ಸಮಾನವಾಗಿರುವ ಅವೆರಡಕ್ಕೂ ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ.
ಕೆಲಸದ ಪರಿಣಾಮ ಆಗುಗನ ಇಲ್ಲವೇ ಮಾಡುಗನ ಮೇಲೆಯೇ ನಡೆದಿದೆಯಾದರೆ ಅದನ್ನು ಆಗುವಿಕೆಯುಂದು ಮತ್ತು ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಮೇಲೆ ನಡೆದಿದೆಯಾದರೆ ಅದನ್ನು ಮಾಡುವಿಕೆಯುಂದು ಸಾದ್ಯವಿದೆ. ಹಾಗಾಗಿ, ಮೂಲದ್ರಾವಿಡ ಕ್ರಿಯಾಪದಗಳ ಕರೆಯಲು
ರಚನೆಯನ್ನು ಇಲ್ಲಿ ಸಕರ್ಮಕ-ಅಕರ್ಮಕ ವ್ಯತ್ಯಾಸದ ಮೂಲಕ ವಿವರಿಸುವ ಬದಲು ಆಗುವಿಕೆ-ಮಾಡುವಿಕೆ ವ್ಯತ್ಯಾಸದ ಮೂಲಕ ವಿವರಿಸಲಾಗಿದೆ.
ಮೂಲದ್ರಾವಿಡದಲ್ಲಿ ಕ್ರಿಯಾಬೇರುಗಳೇನೇ ಆಗುವಿಕೆಗಳನ್ನು ಇಲ್ಲವೇ ಮಾಡುವಿಕೆಗಳನ್ನು ಸೂಚಿಸಲು ಸಾದ್ಯವಿದ್ದು, ಈ ವ್ಯತ್ಯಾಸವನ್ನವಲಂಬಿಸಿ ಅವನ್ನು ಕೆಳಗೆ ಸೂಚಿಸಿದ ಹಾಗೆ ಎರಡು ಗುಂಪುಗಳಲ್ಲಿ ಹಂಚಬಹುದು.
ಮಾಡುವಿಕೆಗಳು ಆಗುವಿಕೆಗಳು *ಕೊಟ್್ಟ ‘ಹೊಡೆ’’ *ಪೂ ‘ಅರಳು’’
*ಕಳ್ ‘ಕದಿ’’ *ನಿಱ್ ‘ತುಂಬು’’ *ಕೊಲ್ ‘ಕೊಲ್ಲು’’ *ಮಾಱ್ ‘ಬದಲು’’ *ವೀೞ್ ‘ಬೀಳು’’ *ಯಾಳ್ ‘ಆಳು’’ *ಚೊಟ್ ‘ತೊಟ್ಟಿಕ್ಕು’’ *ವಿಲ್ ‘ಮಾರು’’ *ಕಯ್ ‘ಕಹಿಯಾಗು’’ *ಪೂಣ್ ‘ಉಡು’’ *ನೀ ‘ಉದ್ದವಾಗು’’
*ನಿಲ್ ‘ನಿಲ್ಲು’’ *ಕೊಯ್ ‘ಕೊಯ್ಯು’’
ಈ ಕ್ರಿಯಾಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಬೇರೆ ಕ್ರಿಯಾಪದಗಳನ್ನು ರಚಿಸುವಲ್ಲೂ ಆಡುವಿಕೆ-ಮಾಡುವಿಕೆ ವ್ಯತ್ಯಾಸವೇ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಕೆಳಗಿನ ವಿವರಣೆಯಿಂದ ತಿಳಿಯಬಹುದು.
7.3 ಕ್ರಿಯಾಬೇರುಗಳಿಂದ ಕ್ರಿಯಾಪದಗಳು
ಮೂಲದ್ರಾವಿಡ ಕ್ರಿಯಾಬೇರುಗಳನ್ನು ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಕ್ರಿಯಾಪದಗಳಾಗಿ ಬಳಸಬಹುದಿತ್ತು. ಇದಲ್ಲದೆ ಅವಕ್ಕೆ ಹಲವು ಹೊಸ ಕ್ರಿಯಾಪದಗಳನ್ನು ರಚಿಸಬಹುದಿತ್ತು.
ಪದದೊಟ್ಟುಗಳನ್ನು
ಸೇರಿಸಿಯೂ
ಹೊಸ
7.3.1 ಅ, ಇ, ಉ ಒಟ್ಟುಗಳು
ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳ ಅನಂತರ ಅ, ಇ ಮತ್ತು ಕ್ರಿಯಾಪದಗಳನ್ನು ತಯಾರಿಸಬಹುದಿತ್ತು. ಆದರೆ, ಈ ಒಟ್ಟುಗಳು ಯಾವ ಅರ್ತದಲ್ಲಿ ಬರುತ್ತಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಇನ್ನೂ ಸಾದ್ಯವಾಗಿಲ್ಲ. ಕೆಳಗೆ ಕೊಟ್ಟಿರುವ ಕನ್ನಡ ಕ್ರಿಯಾಪದಗಳಲ್ಲಿ ಈ ಮೂರು ಒಟ್ಟುಗಳ
ಮೂರು ಒಟ್ಟುಗಳನ್ನು
ಸೇರಿಸಿ
ಬಳಕೆಯನ್ನು ಕಾಣಬಹುದು.
(ಕ) ಇ ಒಟ್ಟಿನ ಬಳಕೆ
ನೂಲ್ ‘ನೂಲು ಮಾಡು’
ನೂಱು ‘ಜಜ್ಜು’
ಪಾರ್ ‘ಓಡು’
ಕೂನ್ ‘ಬಾಗು, ಕುಸಿ’
ನುಲಿ ‘ತಿರುಪು’’ ನುಱಿ ‘ಪುಡಿಮಾಡು’’ ಪರಿ ‘ಓಡು’’ ಕುನಿ ‘ಬಾಗು, ಮುದುಡು’’
(ಚ) ಉ ಒಟ್ಟಿನ ಬಳಕೆ
ಬೀಸು ‘ಬಿಸಾಡು’’
ಬಿಸು ‘ಬಿಸಾಡು’’ ಅಗು ‘ಆಗು’’
(ಟ) ಅ(ಯ್) ಒಟ್ಟಿನ ಬಳಕೆ
ನಾನ್ ‘ಒದ್ದೆಮಾಡು’’
ನೇರ್ ‘ಒಪ್ಪು’’
ತಾಳ್ ‘ತಾಳ್ಮೆಯಿಂದಿರು’’
ನನೆ ‘ಒದ್ದೆಯಾಗು’’ ನೆರೆ ‘ಒಟ್ಟು ಸೇರು’ ತಳೆ ‘ತಾಳು’
ಮೇಲೆ (ಟ) ವಿಬಾಗದಲ್ಲಿ ಕೊಟ್ಟಿರುವ ಕನ್ನಡ ಉದಾಹರಣೆಗಳಲ್ಲಿ ಎ ಒಟ್ಟು ಕಾಣಿಸುವುದಾದರೂ ಅದು ಮೂಲ ದ್ರಾವಿಡದಲ್ಲಿ *ಅಯ್ ಎಂಬ ರೂಪದಲ್ಲೇ ಬರುತ್ತಿತ್ತು (ತಮಿಳು: ನನಯ್, ನಿಱಯ್) ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆ.
7.3.2 ತಡೆಯುಲಿಯಲ್ಲಿ ಕೊನೆಗೊಳ್ಳುವ ಒಟ್ಟುಗಳು
(ಕ) ಸ್ವರದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳ ಅನಂತರ ಮತ್ತು (ಚ) ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳಿಗೆ, ಮೇಲೆ ಸೂಚಿಸಿದ ಹಾಗೆ, ಅ, ಇ, ಉ ಒಟ್ಟುಗಳನ್ನು ಸೇರಿಸಿದ ಅನಂತರ, ತಡೆಯುಲಿಯಲ್ಲಿ ಕೊನೆಗೊಳ್ಳುವ ಮೂರು ರೀತಿಯ ಒಟ್ಟುಗಳು ಬರಬಲ್ಲುವೆಂಬುದಾಗಿ ಕಲ್ಪಿಸಲಾಗಿದೆ. ಈ ಒಟ್ಟುಗಳು ಕಕಾರದಲ್ಲಿ, ತಕಾರದಲ್ಲಿ ಇಲ್ಲವೇ ಪಕಾರದಲ್ಲಿ ಕೊನೆಗೊಳ್ಳಬಲ್ಲುವಾಗಿದ್ದುವು.
ಈ ಮೂರು ರೀತಿಯ ಒಟ್ಟುಗಳಲ್ಲೂ ತಡೆಯುಲಿ ಒತ್ತೆ ರೂಪದಲ್ಲಿ (ಕು, ತು, ಪು) ಇಲ್ಲವೇ ಇಮ್ಮಡಿ ರೂಪದಲ್ಲಿ (ಕ್ಕು, ತ್ತು, ಪ್ಪು) ಬರಬಲ್ಲುದಾಗಿತ್ತು ಮತ್ತು ಅದರ ಮೊದಲು ಒಂದು ಮೂಗುಲಿ ಬರಬಲ್ಲು ದಾಗಿತ್ತು (ನ್ಕು, ನ್ಕ್ಕು, ನ್ತು, ನ್ತ್ತು, ಮ್ಪು, ಮ್ಪ್ಪು) ಎಂಬುದಾಗಿ ಕ್ರುಶ್ಣಮೂರ್ತಿ (1997, 2003) ವಾದಿಸಿದ್ದಾರೆ. ಅವರ ಮತದಂತೆ, ಈ ಒಟ್ಟುಗಳು ಮೂಲದ್ರಾವಿಡದಲ್ಲಿ ಅಕರ್ಮಕ-ಸಕರ್ಮಕ ವ್ಯತ್ಯಾಸವನ್ನು ಮತ್ತು ಹಿಂದಿನ ಸಮಯ - ಮುಂದಿನ ಸಮಯ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಹಾಗೆ ಸೂಚಿಸುತ್ತಿದ್ದಿರಬೇಕು.
ಅಕರ್ಮಕ
ಸಕರ್ಮಕ
ಮುಂದಿನ ಸಮಯ *ಮ್್ಪ *ನ್್ಕ
*ಮ್ಪ್್ಪ *ನ್ಕ್್ಕ
ಹಿಂದಿನ ಸಮಯ *ನ್ತ್್ತ
(1) ಆದರೆ, ಕೆಳಗೆ 7.5ರಲ್ಲಿ ಸೂಚಿಸಿದ ಹಾಗೆ, ಆಗುವಿಕೆಯ ಕ್ರಿಯಾಪದಗಳಿಂದ ಮಾಡುವಿಕೆಯ ಕ್ರಿಯಾಪದಗಳನ್ನು ಪಡೆಯುವುದಕ್ಕಾಗಿ ಅವಕ್ಕೆ ಮೂಲದ್ರಾವಿಡದಲ್ಲಿ ತ್ ಒಟ್ಟನ್ನು ಸೇರಿಸಲಾಗುತ್ತಿತ್ತೆಂಬ ಕಲ್ಪನೆ ಸರಿಯಾದಲ್ಲಿ, ಮೇಲೆ ಕೊಟ್ಟಿರುವ ಮಾಡುವಿಕೆಯ ಒಟ್ಟುಗಳೆಲ್ಲ (ಪ್್ಪ, *ಕ್್ಕ, *ತ್್ತ ಮತ್ತು *ಮ್ಪ್್ಪ, *ನ್ಕ್್ಕ ಮತ್ತು *ನ್ತ್್ತ) ಆಗುವಿಕೆಯ
ಒಟ್ಟುಗಳಿಗೆ (ಕ್ರುಶ್ಣಮೂರ್ತಿಯವರ ‘ಅಕರ್ಮಕ’’ಒಟ್ಟುಗಳಿಗೆ) ಅದೇ *ತ್ ಒಟ್ಟನ್ನು ಸೇರಿಸಿ ಪಡೆದ ರೂಪಗಳಲ್ಲದೆ ಸ್ವತಂತ್ರವಾದ ಒಟ್ಟುಗಳಲ್ಲ ಎಂಬುದಾಗಿ ವಾದಿಸಲು ಸಾದ್ಯವಿದೆ. ಈ ಎಲ್ಲಾ ಒಟ್ಟುಗಳಲ್ಲೂ (ಮತ್ತು ಇವುಗಳಲ್ಲಿ ಮಾತ್ರವೇ) ಇಮ್ಮಡಿ ತಡೆಯುಲಿಗಳು ಬಂದಿವೆಯೆಂಬುದನ್ನು ಗಮನಿಸಬಹುದು (ಪ್+ತ್>ಪ್್ಪ, ಮ್್ಪ+ತ್>ಮ್ಪ್್ಪ, ಇತ್ಯಾದಿ).
ಕೊನೆಗೊಳ್ಳುವ
(2) ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಪಕಾರದಲ್ಲಿ ಮತ್ತು ಒಟ್ಟುಗಳು ಕಕಾರದಲ್ಲಿ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕೆಂದು ಮೇಲೆ ಕೊಟ್ಟಿರುವ ಕೋಶ್ಟಕದಲ್ಲಿ ಸೂಚಿಸಲಾಗಿದೆ. ಆದರೆ, ಇವುಗಳ ನಡುವೆ ಅರ್ತದಲ್ಲಿ ಕಲ್ಪಿಸಿಕೊಳ್ಳಲು ಇನ್ನೂ ಸಾದ್ಯವಾಗಿಲ್ಲ.
ವ್ಯತ್ಯಾಸವಿತ್ತು ಎಂಬುದನ್ನು
(3) ಪಕಾರ ಮತ್ತು ಕಕಾರಗಳಲ್ಲಿ ಕೊನೆಗೊಳ್ಳುವ ಒಟ್ಟುಗಳಿಗೆ ಮೂಲ ದ್ರಾವಿಡದಲ್ಲಿ ಮೊದಲಿಗೆ ಮುಂದಿನ ಸಮಯವನ್ನು ಸೂಚಿಸುವ ಅರ್ತವಿದ್ದಿರಬೇಕು ಮತ್ತು ತಕಾರದಲ್ಲಿ ಕೊನೆಗೊಳ್ಳುವ ಒಟ್ಟುಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಅರ್ತವಿದ್ದಿರಬೇಕು ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆ. ಆದರೆ ಈ ಅರ್ತವ್ಯತ್ಯಾಸವೂ ಇವತ್ತಿನ ನುಡಿಗಳಲ್ಲಿ ಉಳಿದುಕೊಂಡಿಲ್ಲ. ಅದರ ಕೆಲವು ಕ್ರಿಯಾಪದಗಳ ಬಳಕೆಯಲ್ಲಿ ಕಾಣಬಹುದು.
ಪಳೆಯಳಿಕೆಗಳನ್ನು
ಮಾತ್ರ
ಮತ್ತು
ಉದಾಹರಣೆಗಾಗಿ,
ಹೋಗು ಕನ್ನಡದ ಆಗು ಕ್ರಿಯಾಪದಗಳಲ್ಲಿ ಕಾಣಿಸುವ ಗಕಾರ ಮೂಲದ್ರಾವಿಡದಲ್ಲಿ ಬರುತ್ತಿದ್ದ ಸಮಯದ ಒಟ್ಟಿನ ಪಳೆಯಳಿಕೆಯುಂಬುದಾಗಿ ಹೇಳಲು ಮುಂದಿನ ಸಾದ್ಯವಿದೆ. ಯಾಕೆಂದರೆ, ಅದು ಮುಂದಿನ ಸಮಯದ ಕ್ರಿಯಾರೂಪಗಳಲ್ಲಿ (ಆಗುತ್ತದೆ, ಆಗಲಿ; ಹೋಗುತ್ತದೆ) ಕಾಣಿಸುತ್ತದಲ್ಲದೆ ಹಿಂದಿನ ಹೋದ, ಸಮಯದ ಹೋಯಿತು) ಸಮಯವನ್ನು ಸೂಚಿಸುವ ಆಗಿ ಮತ್ತು ಹೋಗಿ ರೂಪಗಳು ಇದಕ್ಕೆ ಅಪವಾದಗಳು).
(ಆದ, ಆಯಿತು; (ಆದರೆ ಹಿಂದಿನ
ಕ್ರಿಯಾರೂಪಗಳಲ್ಲಿ ಕಾಣಿಸುವುದಿಲ್ಲ.
ಕನ್ನಡದ ಪಿೞಿ ಕ್ರಿಯಾಪದದ ಅರ್ತದಲ್ಲೇ ಪಿಂಡು, ಹಿಂಡು ರೂಪ ಗಳೂ ಬಳಕೆಯಲ್ಲಿರುವುದು ಮೇಲಿನ ಕಲ್ಪನೆಗೆ ಇನ್ನೊಂದು ಉದಾಹರಣೆ ಯಾಗಬಲ್ಲುದು. ಇವುಗಳಲ್ಲಿ ಕಾಣಿಸುವ ಣ್್ಡ ಒಟ್ಟು ಮೇಲೆ ಕೊಟ್ಟಿರುವ ಹಿಂದಿನ ಸಮಯದ ನ್್ತ ಒಟ್ಟಿನ ಪಳೆಯಳಿಕೆಯಿರಬೇಕು. (ೞಕಾರದ ಅನಂತರ ಬಂದ ನ್್ತ ಎಂಬುದು ಣ್್ಡ ಎಂದಾಗಿದೆ). ಆದರೆ ಈ ರೂಪಗಳು ಕನ್ನಡದಲ್ಲಿ ಹಿಂದಿನ ಸಮಯಕ್ಕೆ ಸೀಮಿತವಾಗಿಲ್ಲ.
ವ್ಯತ್ಯಾಸವನ್ನೂ
(4) ಮೂಲದ್ರಾವಿಡದಲ್ಲಿ ಈ ಒಟ್ಟುಗಳು ಅಕರ್ಮಕ-ಸಕರ್ಮಕ (ಆಗುವಿಕೆ-ಮಾಡುವಿಕೆ) ಕೊಡುತ್ತಿದ್ದಿರಬೇಕೆಂಬುದಾಗಿ ಮೇಲಿನ ಕೋಶ್ಟಕದಲ್ಲಿ ಸೂಚಿಸಲಾಗಿದೆ. ಈ ವ್ಯತ್ಯಾಸ ತಮಿಳು, ಮಲಯಾಳ ಮೊದಲಾದ ಹಲವು ತೆಂಕುದ್ರಾವಿಡ ನುಡಿಗಳಲ್ಲಿ ಇವತ್ತಿಗೂ ಉಳಿದುಕೊಂಡಿದೆ; ಆದರೆ, ಕನ್ನಡದಲ್ಲಿ ಇದು ಬಹಳ ಮಟ್ಟಿಗೆ ಅಳಿದು ಹೋಗಿದೆ (ವಿವರಗಳಿಗೆ 7.5.1 ನೋಡಿ).
7.3.3 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು
ಮೇಲೆ ವಿವರಿಸಿದ ತಡೆಯುಲಿಗಳು ಮಾತ್ರವಲ್ಲದೆ ಚ್, ಱ್ ಮತ್ತು ಟ್ ತಡೆಯುಲಿಗಳೂ ನುಣುಚು, ಎಡಱು, ಬೆದಱು, ಕದಡು, ಹೊರಡು).
ಕಾಣಿಸಿಕೊಳ್ಳುತ್ತವೆ
ಕ್ರಿಯಾಪದಗಳಲ್ಲಿ
ಆದರೆ, ಇವು ಮೂಲದ್ರಾವಿಡ ಬೇರುಗಳಲ್ಲಿ ಇಲ್ಲವೇ ಒಟ್ಟುಗಳಲ್ಲಿ ಬಂದಿರುವ ವ್ಯಂಜನಗಳಲ್ಲಿ ನಡೆದ ಕೆಲವು ಸೇರಿಕೆಯ ಬದಲಾವಣೆಗಳಿಂದ ಮೂಡಿಬಂದಿವೆಯಲ್ಲದೆ, ಮೂಲದ್ರಾವಿಡ ಒಟ್ಟುಗಳಲ್ಲಿದ್ದ ವ್ಯಂಜನಗಳಲ್ಲ ಎಂಬುದಾಗಿ ಕ್ರುಶ್ಣಮೂರ್ತಿ (2003) ವಾದಿಸಿದ್ದಾರೆ.
ಕಾಣಿಸುವ ಕ್ರಿಯಾಪದಗಳಲ್ಲಿ
ಟ್ ಎಂಬುದು ಳಕಾರದೊಂದಿಗೆ ತಕಾರ ಸೇರಿದಾಗ ನಡೆದ ಬದಲಾವಣೆಯ ಪಲ ಎಂಬುದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು.
ಕನ್ನಡದ
ಕನ್ನಡ
ಸುರುಟು (*ಸುರುಳ್-ತು)
ತಮಿಳು ಚುರುಳ್
ತೆರಟು ‘ಉರುಳು’’
ತೆರಳ್
7.4 ಆಗುವಿಕೆಯ ಒಟ್ಟುಗಳು
ಸ್ವರದಲ್ಲಿ ಕೊನೆಗೊಳ್ಳುವ ಬೇರುಗಳ ಅನಂತರ ಮತ್ತು ವ್ಯಂಜನದಲ್ಲಿ ಕೊನೆಗೊಳ್ಳುವ ಕ್ರಿಯಾಬೇರುಗಳಿಗೆ ಅ, ಇ, ಉ ಒಟ್ಟುಗಳನ್ನು ಸೇರಿಸಿದ ಅನಂತರ (7.3.1 ನೋಡಿ), ಅವುಗಳೊಂದಿಗೆ ಲ, ಳ, ರ, ೞ, ವ ಮೊದಲಾಗುವ ಒಟ್ಟುಗಳೂ ಇಲ್ಲವೇ ಬರಬಲ್ಲುವಾಗಿದ್ದುವು.
ವ್ಯಂಜನಗಳಲ್ಲಿ
ಮೂಲದ್ರಾವಿಡದಲ್ಲಿ ಮೇಲಿನ ಒಟ್ಟುಗಳಿಗೆ ಸಕರ್ಮಕ ಕ್ರಿಯಾಪದಗಳನ್ನು ಮಾಡುವಿಕೆಗಳನ್ನು ಅಕರ್ಮಕ ಆಗುವಿಕೆಗಳನ್ನಾಗಿ) ಬದಲಾಯಿಸುವ ಕೆಲಸವಿದ್ದಿರಬೇಕೆಂದು ಕ್ರುಶ್ಣಮೂರ್ತಿ (2003) ವಾದಿಸಿದ್ದಾರೆ.
ಕ್ರಿಯಾಪದಗಳನ್ನಾಗಿ
ದ್ರಾವಿಡ ನುಡಿಗಳಲ್ಲಿ ಇಂತಹ ಒಟ್ಟುಗಳಿರುವ ಕ್ರಿಯಾಪದಗಳಲ್ಲಿ ಹೆಚ್ಚಿ ನವೂ ಆಗುವಿಕೆಗಳಾಗಿವೆಯುಂಬುದು ಈ ಊಹೆಗೆ ಒಂದು ಆದಾರ. ಉದಾ ಹರಣೆಗಾಗಿ, ಕನ್ನಡದ ಕ್ರಿಯಾಪದಗಳಲ್ಲಿ ಲ, ಳ, ೞ ಇಲ್ಲವೇ ರ ಒಟ್ಟಿನ ಸಾಮಾನ್ಯವಾಗಿ ಒಂದು ಜಾಗದಲ್ಲಿ ಬಂದಿದೆಯಾದರೆ, ಅವು ಆಗುವಿಕೆಯನ್ನು ಸೂಚಿಸುತ್ತವೆ.
ಳಕಾರವಿರುವವು ತೆವಳ್ ‘ತೆವಳು’’ ನರಳ್ ‘ನರಳು’’
ಲಕಾರವಿರುವವು
ಸಡಿಲ್ ‘ಸಡಿಲು’’ ಕೞಲ್ ‘ಕಳಚು’
ಕಳಲ್ ‘ಉದುರು’’ ಉರುಳ್ ‘ಉರುಳು’’ ಕವಲ್ ‘ಕವಲೊಡೆ’’ ಕನಲ್ ‘ಸಿಟ್ಟಾಗು’’ ಎೞಲ್ ‘ನೇತಾಡು’’
ತೆಮಳ್ ‘ಜಾರು’’ ಮುಗುಳ್ ‘ಮುಚ್ಚು’’ ಪೊರಳ್ ‘ಹೊರಳು’’
ೞಕಾರವಿರುವವು
ರಕಾರವಿರುವವು
ನೆಗೞ್ ‘ವ್ಯಕ್ತವಾಗು’’ ಬಿದಿರ್ ‘ಚೆಲ್ಲು, ಹರಡು’’ ತುಮುೞ್ ‘ಬೆಳಗು’’ ಅದಿರ್ ‘ನಡುಗು’’ ಜಗುೞ್ ‘ಜಾರು’’ ಅಗುೞ್ ‘ಮುಳುಗು’’ ಚಿಗುರ್ ‘ಚಿಗುರು’’ ಪೊದೞ್ ‘ಕಾಣಿಸು’’ ಮಗುೞ್ ‘ಮಗುಚು’’ ಬೆಮರ್ ‘ಬೆವರು’’
ಪಸುರ್ ‘ಹಸುರಾಗು’’
ಕುಳಿರ್ ‘ಚಳಿಯಾಗು’’
ಮೇಲೆ ಕೊಟ್ಟಿರುವ ಕನ್ನಡ ಕ್ರಿಯಾಪದಗಳ ಕೊನೆಯಲ್ಲಿ ಬರುವ ಒಟ್ಟಿನಲ್ಲಿ ಲ, ಳ, ೞ ಇಲ್ಲವೇ ರ ವ್ಯಂಜನವಿದ್ದು ಅವೆಲ್ಲವೂ ಆಗುವಿಕೆಗಳನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು. ಇಂತಹ ಒಟ್ಟುಗಳನ್ನು ಮಾಡುವಿಕೆಯನ್ನು ಸೂಚಿಸುವಂತಹ ಅವಲ್ ‘ಒನಕೆಯಿಂದ ಕುಟ್ಟು’, ಅಗೞ್ ‘ಅಗೆ’, ಸವರು ‘ಕತ್ತರಿಸು’ ಎಂಬಂತಹ ಕೆಲವೇ ಕೆಲವು ಮಾತ್ರ ಕನ್ನಡದಲ್ಲಿವೆ.
ಕ್ರಿಯಾಪದಗಳಲ್ಲಿ
ಪಡೆದಿರುವ
ಇದಲ್ಲದೆ, ಬಡಗು ದ್ರಾವಿಡ ನುಡಿಗಳಾದ ಕುಡುಕ್ ಮತ್ತು ಮಾಲ್ತೋ ಗಳಲ್ಲಿ ಮಾಡುವಿಕೆಗಳನ್ನು ಆಗುವಿಕೆಗಳನ್ನಾಗಿ ಮಾಡಲು ರಕಾರವಿರುವ ಒಟ್ಟೊಂದು ಬಳಕೆಯಲ್ಲಿದೆಯುಂಬುದು ಮೇಲಿನ ಕಲ್ಪನೆಗೆ ಇನ್ನೊಂದು ಆದಾರ. ಉದಾಹರಣೆಗಾಗಿ, ಮಾಲ್ತೋ ನುಡಿಯಲ್ಲಿ ಇದಕ್ಕಾಗಿ ರ್ ಒಟ್ಟನ್ನು ಬಳಸಲಾಗುತ್ತದೆ.
ಮಾಡುವಿಕೆ ಏಗ್ ‘ಬೀಳಿಸು’’
ಅಸ್್ಗ ‘ಅಂಟಿಸು’
ಎಯ್ ‘ಕಟ್ಟು’
ಬಾಗ್ ‘ಕೆರೆ’
ಆಗುವಿಕೆ ಏಗ್್ರ ‘ಬೀಳು’’ ಅಸ್್ಗ್ರ ‘ಅಂಟು’’ ಎಯ್ರ ‘ಕಟ್ಟಿಕೊಳ್ಳು’’ ಬಾಗ್್ರ ‘ಕೆರೆದುಕೊಳ್ಳು’’
7.5 ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು
ಮೂಲತೆಂಕುದ್ರಾವಿಡದಲ್ಲಿ ಆಗುವಿಕೆಯನ್ನು ಸೂಚಿಸುವ ಕ್ರಿಯಾಬೇರುಗಳಿಗೆ *ತ್ ಒಟ್ಟನ್ನು ಸೇರಿಸಿ ಅವು ಮಾಡುವಿಕೆಯನ್ನು ಸೂಚಿಸುವ ಹಾಗೆ ಮಾಡಲು ಸಾದ್ಯವಿತ್ತು. ಕನ್ನಡ (ಮತ್ತು ತುಳು, ಕೊರಗ) ನುಡಿಗಳನ್ನು ಬಿಟ್ಟು ಇತರ ಎಲ್ಲಾ ತೆಂಕುದ್ರಾವಿಡ ನುಡಿಗಳೂ ಈ ಒಟ್ಟನ್ನು ಬಹಳ ಸ್ಪಶ್ಟವಾಗಿ ಉಳಿಸಿಕೊಂಡಿವೆ.
ಉದಾಹರಣೆಗಾಗಿ, ತಮಿಳಿನ ಹಲವು ಕ್ರಿಯಾಪದಗಳಿಗೆ ಆಗುವಿಕೆ ಮತ್ತು ಮಾಡುವಿಕೆಗಳನ್ನು ರೂಪಗಳಿದ್ದು ಅವುಗಳಲ್ಲಿ ಎರಡನೆಯ (ಮಾಡುವಿಕೆಯನ್ನು ಸೂಚಿಸುವ) ರೂಪವನ್ನು ಮೊದಲನೆಯದಕ್ಕೆ ತ್ ಒಟ್ಟನ್ನು ಸೇರಿಸುವುದರ ಮೂಲಕ ಪಡೆಯಲು ಸಾದ್ಯವಿದೆ.
ಸೂಚಿಸುವ ಎರಡೆರಡು
(ಕ) ಈ ಕ್ರಿಯಾಪದಗಳ ಕೊನೆಯ ವ್ಯಂಜನ ಕ್, ಟ್ ಇಲ್ಲವೇ ಱ್ ಇದ್ದಲ್ಲಿ, ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಅವುಗಳದೇ ರೂಪ ವನ್ನು ಪಡೆಯುತ್ತದೆ; (ಚ) ನ್ ಇಲ್ಲವೇ ಲ್ ಇದ್ದಲ್ಲಿ ಆ ವ್ಯಂಜನ ಮತ್ತು ಒಟ್ಟಿನ ತಕಾರ ಎರಡೂ ಱ್ ರೂಪವನ್ನು ಪಡೆಯುತ್ತವೆ ಮತ್ತು (ಟ) ಣ್ ಇಲ್ಲವೇ ಳ್ ಇದ್ದಲ್ಲಿ ಎರಡೂ ಟ್ ರೂಪವನ್ನು ಪಡೆಯುತ್ತವೆ; (ತ) ಇತರ ಕ್ರಿಯಾಪದಗಳ ಅನಂತರ ಅದು ತ್್ತ ರೂಪದಲ್ಲಿ ಬರುತ್ತದೆ.
ಇದಲ್ಲದೆ, (ಪ) ಕ್ರಿಯಾಪದಗಳ ಕೊನೆಯ ವ್ಯಂಜನ ಒಂದು ತಡೆ ಯುಲಿಯಾಗಿದ್ದು, ಅದಕ್ಕೆ ಮೊದಲು ಮೂಗುಲಿಯೊಂದು ಬಂದಿದ್ದರೆ, ಅಂತಹ ಕ್ರಿಯಾಪದಕ್ಕೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟನ್ನು ಸೇರಿಸಿದಾಗ ತಡೆಯುಲಿಯ ಮೊದಲಿದ್ದ ಮೂಗುಲಿ ಬಿದ್ದುಹೋಗುತ್ತದೆ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ತಮಿಳು ಕ್ರಿಯಾಪದಗಳ
ಆಗುವಿಕೆ ಮತ್ತು ಮಾಡುವಿಕೆಯ ರೂಪಗಳನ್ನು ಪರಿಶೀಲಿಸಬಹುದು.
ಆಗುವಿಕೆ
ಪೋಕು ‘ಹೋಗು’
ಮಾಡುವಿಕೆ ಪೋಕ್ಕು ‘ಹೋಗಿಸು’’
ಏಱು ‘ಏರು’
ಓಟ್ಟು ‘ಓಡಿಸು’’ ಏಱ್ಱು ‘ಏರಿಸು’
(ಚ) ತಿನ್ ‘ತಿನ್ನು’
ಅಕಲ್ ‘ಹರಡು’
ತಿಱ್ಱು ‘ತಿನ್ನಿಸು’ ಅಕಱ್ಱು ‘ಹರಡಿಸು’’
ಮಾಳ್ ‘ಸಾಯು’
ಊಟ್ಟು ‘ಉಣಿಸು’ ಮಾಟ್ಟು ‘ಕೊಲ್ಲು’
(ತ) ಅಲರ್ ‘ಅರಳು’
ಅಲರ್ತ್ತು ‘ಅರಳಿಸು’’
(ಪ) ಇಱಙ್ಕು ‘ಇಳಿ’’
ಇರಕ್ಕು ‘ಇಳಿಸು’
ಈಣ್ಟು ‘ಒಟ್ಟು ಸೇರು’’ ಈಟ್ಟು ‘ಒಟ್ಟು ಸೇರಿಸು’’ ಪೊರುನ್ತು ‘ಒಪ್ಪು’ ತಿರುಮ್ಪು ‘ತಿರುಗು’
ಪೊರುತ್ತು ‘ಒಪ್ಪಿಸು’ ತಿರುಪ್ಪು ‘ತಿರುಗಿಸು’
7.5.1 ಕನ್ನಡದಲ್ಲಿ *ತ್ ಒಟ್ಟಿನ ಪಳೆಯಳಿಕೆಗಳು
ಆಗುವಿಕೆಗಳನ್ನು ಮಾಡುವಿಕೆಗಳಾಗಿ ಬದಲಾಯಿಸುವ ಈ ವಿದಾನ ಕನ್ನಡ ದಲ್ಲಿ ಉಳಿದಿಲ್ಲ. ಅದರ ಪಳೆಯಳಿಕೆಗಳನ್ನು ಮಾತ್ರ ಹಳೆಗನ್ನಡದ ಕೆಲವು ಕ್ರಿಯಾಪದ ಜೋಡಿಗಳಲ್ಲಿ ಕಾಣಬಹುದು.
ಆಗುವಿಕೆ
ಅಡಗು ‘ಮರೆಯಾಗು’’
ಅಮುಗು ‘ಒತ್ತಿಹೋಗು’
ತುಱುಗು ‘ಒತ್ತಿ ತುಂಬಿರು’’ ಅಣುಂಗು ‘ನಾಶವಾಗು’
ಮಾಡುವಿಕೆ ಅಡಕು ‘ಬಚ್ಚಿಟ್ಟುಕೊಳ್ಳು’’ ಅಮುಕು ‘ಒತ್ತು’ ತುಱುಕು ‘ಒತ್ತಿ ತುಂಬಿಸು’ ಅಣುಂಕು ‘ನಾಶಮಾಡು’
ಕನ್ನಡದ
ಇದಲ್ಲದೆ,
ಕ್ರಿಯಾಪದಗಳು
ಗು ಎಂಬುದರಲ್ಲಿ ಕೊನೆಗೊಳ್ಳುವುವಾದರೆ ಅವು ಆಗುವಿಕೆಗಳಾಗಿರುವುದು ಹೆಚ್ಚು ಮತ್ತು ಕು ಎಂಬುದರಲ್ಲಿ ಕೊನೆಗೊಳ್ಳುವುವಾದರೆ ಮಾಡುವಿಕೆಗಳಾಗಿರುವುದು ಹೆಚ್ಚು. ಇವುಗಳಲ್ಲಿ ಬರುವ ಗು ಮತ್ತು ಕು ಎಂಬವುಗಳು ಮೂಲತೆಂಕುದ್ರಾವಿಡದ ಕು ಮತ್ತು *ಕ್ಕು (<ಕ್+*ತ್) ಎಂಬವುಗಳ (ಇಲ್ಲವೇ *ನ್ಕು ಮತ್ತು ನ್ಕ್ಕು ಎಂಬವುಗಳ) ಕನ್ನಡ ರೂಪಗಳಾಗಿವೆ ಎಂಬುದನ್ನು ಇದರಿಂದಲೂ ಊಹಿಸಬಹುದು.
ಆಗುವಿಕೆಗಳು ಮೊೞಗು ಮುೞುಗು ಮಿಱುಗು ಸೊರಗು ನಡುಗು
ಪೞಗು
ಕೊರಗು
ಜಿನುಗು
ಕರಗು
ಮಾಡುವಿಕೆಗಳು ತದಕು ಕುಸುಕು ಪೆಱುಕು (ಹೆಕ್ಕು) ಹುಡುಕು ಹಿಸುಕು ತುಱುಕು ಸಿಡುಕು
ಚಿಮುಕು
ಇದಲ್ಲದೆ, ಕನ್ನಡದ ಹಲವು ನಾಮಪದಗಳಲ್ಲಿ ಮಾಡುವಿಕೆಯನ್ನು
ಸೂಚಿಸುವ ಕ್ರಿಯಾರೂಪ ಉಳಿದುಕೊಂಡಿರುವುದನ್ನು ಕಾಣಬಹುದು.
ಮೊದಲಾದ
ಉದಾಹರಣೆಗಾಗಿ, ಕನ್ನಡದ ತೂಗು-ತೂಕ, ನಾಱು-ನಾತ, ಆಡು- ಜೋಡಿಗಳಲ್ಲಿ ಮೂಲದ್ರಾವಿಡದ ಆಗುವಿಕೆಯ ಮೊದಲನೆಯದು ರೂಪದಿಂದ (*ತೂಂಕು, *ನಾಱು ಮತ್ತು *ಆಟು ಎಂಬುದರಿಂದ) ಬಂದಿರಬೇಕು ಮತ್ತು ಎರಡನೆಯದು (ನಾಮಪದ) ಮಾಡುವಿಕೆಯ
ಕ್ರಿಯಾಪದ-ನಾಮಪದ
(ಕ್ರಿಯಾಪದ)
ರೂಪದಿಂದ (*ತೂಂಕ್ಕು, *ನಾಱ್ಱು ಮತ್ತು *ಆಟ್ಟು ಎಂಬುದರಿಂದ) ಬಂದಿರಬೇಕು.
7.5.2 ಸಮಯದ ಒಟ್ಟಿನ ಅನಂತರ *ತ್ ಒಟ್ಟಿನ ಬಳಕೆ
ಕನ್ನಡ (ಮತ್ತು ತುಳು) ನುಡಿಗಳನ್ನು ಹೊರತುಪಡಿಸಿ ಇತರ ತೆಂಕುದ್ರಾವಿಡ ನುಡಿಗಳಲ್ಲಿ ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು ಕೆಲವು ಕ್ರಿಯಾಪದ ಗಳಿಗೆ ನೇರವಾಗಿ ಸೇರುವ ಬದಲು ಸಮಯದ ಒಟ್ಟಿನ ಅನಂತರ ಬರುತ್ತದೆ ಎಂಬುದಾಗಿ ವಿದ್ವಾಂಸರು ಕಲ್ಪಿಸಿಕೊಂಡಿದ್ದಾರೆ (ಸುಬ್ರಹ್ಮಣ್ಯಂ 1971 ನೋಡಿ).
ಇಕಾರದಲ್ಲಿ ಇಲ್ಲವೇ ಯ್, ರ್ ಅತವಾ ೞ್ ವ್ಯಂಜನದಲ್ಲಿ ಕೊನೆ ಗೊಳ್ಳುವ ಹಲವಾರು ಕ್ರಿಯಾಪದಗಳ ಕ್ರಿಯಾರೂಪಗಳಲ್ಲಿ (ಮತ್ತು ಕೆಟು ‘ಕೆಡು’, ವಿಟು ‘ಬಿಡು’, ವಱು ‘ಹುರಿ’ಯಂತಹ ಕೆಲವು ಉಕಾರದಲ್ಲಿ ಕೊನೆಗೊಳ್ಳುವ ಮತ್ತು ಎರಡು ಹಗುರ ಉಲಿಕಂತೆಗಳಿರುವ ಕ್ರಿಯಾಪದಗಳ ಕ್ರಿಯಾರೂಪಗಳಲ್ಲಿ) ಇಂತಹ ಬಳಕೆಯನ್ನು ಕಾಣಬಹುದು.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಹಿಂದಿನ ಸಮಯದ ತಮಿಳು
ಕ್ರಿಯಾರೂಪಗಳನ್ನು ಪರಿಶೀಲಿಸಬಹುದು.
ಆಗುವಿಕೆ
ಕ್ರಿಯಾಪದ ಕುೞಯ್ ‘ಕೊಳೆ’’ ಕುೞಯ್ನ್ತತು ಚಮಯ್ ‘ಸಮೆ’’ ಚಮಯ್ನ್ತತು ಕುನಿ ‘ಬಾಗು’’ ಕುನಿನ್ತತು ಚರಿ ‘ಜಾರು’’ ಚರಿನ್ತತು
ತಱಿ ‘ತುಂಡಾಗು’ ತಱಿನ್ತತು ಚೇರ್ ‘ಸೇರು’ ಚೇರ್ನ್ತತು ತಾೞ್ ‘ತಗ್ಗು’’ ತಾೞ್ನ್ತತು ತೋಯ್ ‘ನೆನೆ’’ ತೋಯ್ನ್ತತು
ಮಾಡುವಿಕೆ
ಕುೞಯ್ತ್ತೇನ್ ಚಮಯ್ತ್ತೇನ್ ಕುನಿತ್ತೇನ್ ಚರಿತ್ತೇನ್ ತಱಿತ್ತೇನ್ ಚೇರ್ತ್ತೇನ್ ತಾೞ್ತ್ತೇನ್ ತೋಯ್ತ್ತೇನ್
ಕೊಟ್ಟಿರುವ
ಕ್ರಿಯಾಪದಗಳಿಗೆ ಆಗುವಿಕೆ
ಸೂಚಿಸುವ ಎರಡೆರಡು ಹಿಂದಿನ
ಮೇಲೆ ಮತ್ತು ಸಮಯದ ಮಾಡುವಿಕೆಗಳನ್ನು ರೂಪಗಳಿವೆ. ಇವುಗಳಲ್ಲಿ ಆಗುವಿಕೆಯನ್ನು ಸೂಚಿಸುವ ಮೊದಲನೆಯ ಕ್ರಿಯಾರೂಪದಲ್ಲಿ ಮತ್ತು ಮಾಡುವಿಕೆಯನ್ನು ಸೂಚಿಸುವ ಎರಡನೆಯ ಕ್ರಿಯಾರೂಪದಲ್ಲಿ ತ್್ತ ಸಮಯದ ಒಟ್ಟು ಬಂದಿದೆ.
ಸಮಯದ ಒಟ್ಟು ಬಂದಿದೆ
ತಮಿಳು
ರೂಪವಾಗಿದೆ
ಇವುಗಳಲ್ಲಿ ಮೊದಲನೆಯ ಒಟ್ಟು ಮೂಲ ತೆಂಕುದ್ರಾವಿಡದ *ನ್್ತ ತಮಿಳಿನಲ್ಲಿ ಸಮಯದ ಒಟ್ಟಿನ ಬದಲಾಗದೆ ಉಳಿದಿದೆ); ಒಟ್ಟಿನೊಂದಿಗೆ ಮೂಲತೆಂಕುದ್ರಾವಿಡದ ಮಾಡುವಿಕೆಯನ್ನು ಸೂಚಿಸುವ *ತ್ ಒಟ್ಟು ಸೇರಿ ಆಗಿರುವ *ನ್ತ್್ತ ಎಂಬುದರ ತಮಿಳು ರೂಪವಾಗಿದೆ (ಇಲ್ಲಿ ನಕಾರ ಬಿದ್ದು ಹೋಗಿದೆ - 7.5(ಪ) ನೋಡಿ).
ಎರಡನೆಯ
ಸಮಯದ
ಇಂತಹದೇ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಮುಂದಿನ ಸಮಯದ ಕ್ರಿಯಾರೂಪಗಳಲ್ಲೂ ಕಾಣಿಸುತ್ತದೆ. ಉದಾಹರಣೆಗಾಗಿ, ತಮಿಳಿನ ಉತಿರ್ ‘ಉದುರು’ ಕ್ರಿಯಾಪದಕ್ಕೆ ಉತಿರ್ವ ‘ಉದುರುವ’ ಮತ್ತು ಉತಿರ್ಪ್ಪ ‘ಉದುರಿಸುವ’ ಎಂಬ ಎರಡು ಮುಂದಿನ ಸಮಯದ ರೂಪಗಳಿವೆ.
ಇವುಗಳಲ್ಲಿ ಮೊದಲನೆಯದು ಮುಂದಿನ ಸಮಯದ ಪ್ ಒಟ್ಟು ವ್ ಆದುದರಿಂದ ತಯಾರಾಗಿದೆ ಮತ್ತು ಎರಡನೆಯದು ಮುಂದಿನ ಸಮಯದ ಪ್ ಒಟ್ಟಿನೊಂದಿಗೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಸೇರಿ ಪ್್ಪ ಆದುದರಿಂದ ತಯಾರಾಗಿದೆ.
7.5.3 ಬಡಗ ಕನ್ನಡದಲ್ಲಿ *ತ್ ಒಟ್ಟು
ಕ್ರಿಯಾರೂಪಗಳು
ಆಗುವಿಕೆ
ಮತ್ತು
ಮಾಡುವಿಕೆಗಳನ್ನು
ಸೂಚಿಸುವ ಕನ್ನಡದಲ್ಲೂ ಉಳಿದುಕೊಂಡಿವೆ.
ಉದಾಹರಣೆಗಾಗಿ ಪರಿಶೀಲಿಸಬಹುದು (ಎಮೆನೋ 1967).
ಕೆಳಗೆ
ಕೊಟ್ಟಿರುವ
ಕ್ರಿಯಾರೂಪಗಳನ್ನು
ಆಗುವಿಕೆಗಳು ಸಿಗುದುತ್ತು ‘ಹರಿಯಿತು’
ಹೊಗದತ್ತು ‘ಹೊಗೆ ಬಂತು’ ಇಡುದತ್ತು ‘ಒಡೆಯಿತು’
ಅಗಿದುತ್ತು ‘ಬಿಟ್ಟಿತು’ ಸುಲದುತ್ತು ‘ಸುಲಿಯಿತು’ ನನದೆ ‘ಒದ್ದೆಯಾದೆ’ ಸೇದೆ ‘ಸೇರಿದೆ’
ಮಾಡುವಿಕೆಗಳು
ಸಿಗುತ್ತೆ ‘ಹರಿದೆ’ ಹೊಗತ್ತೆ‘ಹೊಗೆ ಬರಿಸಿದೆ’ ಇಡುತ್ತೆ ‘ಒಡೆದೆ’ ಅಗಿತ್ತೆ ‘ಬಿಟ್ಟೆ’ ಸುಲತ್ತೆ ‘ಸುಲಿದೆ’ ನನತ್ತೆ ‘ಒದ್ದೆ ಮಾಡಿದೆ’ ಸೇತ್ತೆ ‘ಸೇರಿಸಿದೆ’
ಮೊದಲನೆಯ
ಆಗುವಿಕೆಯನ್ನು
ಸೂಚಿಸುವಂತಹ
ಕ್ರಿಯಾರೂಪಗಳಲ್ಲಿ *ನ್್ತ ಒಟ್ಟು ದ್
ಕಾಲಂನಲ್ಲಿ ಮೂಲತೆಂಕುದ್ರಾವಿಡದ ಹಿಂದಿನ ಕೊಟ್ಟಿರುವ ಸಮಯದ ಮತ್ತು ರೂಪಕ್ಕೆ ಬದಲಾಗಿದೆ ಮಾಡುವಿಕೆಯನ್ನು ಸೂಚಿಸುವಂತಹ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಕ್ರಿಯಾರೂಪಗಳಲ್ಲಿ ಅದರೊಂದಿಗೆ ಮಾಡುವಿಕೆಯ *ತ್ ಒಟ್ಟು ಬಂದಿದ್ದು ಅವೆರಡೂ ಸೇರಿರುವ *ನ್ತ್್ತ ಎಂಬುದು ತ್್ತ ರೂಪಕ್ಕೆ ಬದಲಾಗಿದೆ.
ಆದರೆ, ಇದು ಬಡಗ ನುಡಿಯಲ್ಲಿ ತೆಂಕುದ್ರಾವಿಡದ ಉಳಿಕೆಯೇ ಇಲ್ಲವೇ ಬೇರೆ ತಮಿಳು, ತೊದ ಮೊದಲಾದ ತೆಂಕುದ್ರಾವಿಡ ನುಡಿಗಳ ಸಂಪರ್ಕದಿಂದ ಬೆಳೆದು (ಇಲ್ಲವೇ ಎರವಲಾಗಿ) ಬಂದುದೇ ಎಂಬ ವಿಶಯದಲ್ಲಿ ಸಂಶಯವಿದೆ. ಯಾಕೆಂದರೆ, ಬಡಗ ಕನ್ನಡದ ಬೇರೆ ಪದಗಳಲ್ಲಿ ತಮಿಳಿನಲ್ಲಿ ನಡೆದ ಈ ಎರಡನೆಯ (*ನ್ತ್್ತ > ತ್್ತ) ಬದಲಾವಣೆ ನಡೆದಿಲ್ಲ.
ಆದರೆ, ಕನ್ನಡದಲ್ಲಿ ಪಳೆಯಳಿಕೆಯಾಗಿ ಮಾತ್ರವೇ ಉಳಿದಿರುವಂತಹ ಆಗುವಿಕೆ ಮತ್ತು ಮಾಡುವಿಕೆಗಳ ನಡುವಿನ ವ್ಯತ್ಯಾಸಕ್ಕೆ (7.5.1 ನೋಡಿ) ಸಮನಾದ ವ್ಯತ್ಯಾಸ ಬಡಗ ಕನ್ನಡದ ಹಲವು ಕ್ರಿಯಾಪದಗಳಲ್ಲಿ
ಕಾಣಿಸುತ್ತದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಎರಡು ರೀತಿಯ ಕ್ರಿಯಾಪದಗಳನ್ನು ಹೋಲಿಸಿ ನೋಡಬಹುದು (ಬಾಲಕ್ರುಶ್ಣನ್ 1999).
ಮಾಡುವಿಕೆ
ಆಗುವಿಕೆ
ಅಲುಗು ‘ಅಲ್ಲಾಡು’’ ಅಲುಕು ‘ಅಲ್ಲಾಡಿಸು’’ ಒಣಗು ‘ಒಣಗು’’ ಕುಲುಗು ‘ಅಲ್ಲಾಡು’’ ಮಂಗು ‘ಮಂಕಾಗು’’ ಮಕ್ಕು ‘ಮಂಕು ಮಾಡು’’ ತಿರುಗು ‘ತಿರುಗು’
ಒಣಕು ‘ಒಣಗಿಸು’ ಕುಲುಕು ‘ಅಲ್ಲಾಡಿಸು’’
ಈಕು ‘ಇಳಿಸು’ ತಿರುಕು ‘ತಿರುಗಿಸು’
ಇದಲ್ಲದೆ, ಬೇರೆ ಕೆಲವು ರೀತಿಯ ವ್ಯತ್ಯಾಸಗಳನ್ನು ತೋರಿಸುವ ಕ್ರಿಯಾಪದಗಳೂ ಬಡಗ ಕನ್ನಡದಲ್ಲಿ ಆಗುವಿಕೆ-ಮಾಡುವಿಕೆ ಅರ್ತವ್ಯತ್ಯಾಸ ವನ್ನು ಸೂಚಿಸಬಲ್ಲುದು.
ಮಾಡುವಿಕೆ ಆಗುವಿಕೆ
ಮಾತು ‘ಬದಲಾಯಿಸು’’ ಮಾರು ‘ಬದಲಾಗು’ ನಾತು ‘ಒದ್ದೆ ಮಾಡು’ ನಾನು ‘ಒದ್ದೆಯಾಗು’ ಆಟು ‘ಅಲ್ಲಾಡಿಸು’ ಆಡು ‘ಅಲ್ಲಾಡು’ ಕೂಟು ‘ಸೇರಿಸು’ ಕೂಡು ‘ಸೇರು’’
ಬೂಕು ‘ಬೀಳಿಸು’’ ಬೂ ‘ಬೀಳು’ ಸುರುಳು ‘ಸುತ್ತಿಕೊಳ್ಳು’ ಸುರುಟು ‘ಸುಂದು’’
ಇವುಗಳಲ್ಲಿ ಕೆಲವು ಕ್ರಿಯಾಪದಗಳು ತಮಿಳಿನಿಂದ ಎರವಲಾಗಿ ಬಂದಿರಲು ಸಾದ್ಯವಿದೆಯಾದರೂ, ಕೆಲವು ಮೂಲದ್ರಾವಿಡದ ವ್ಯತ್ಯಾಸವನ್ನು ಬಡಗ ಕನ್ನಡ ಉಳಿಸಿಕೊಂಡಿದೆಯುಂಬುದಕ್ಕೆ ಆದಾರವಾಗಿರಲು ಸಾದ್ಯವಿದೆ.
7.5.4 ಹವ್ಯಕ ಕನ್ನಡದಲ್ಲಿ *ತ್ ಒಟ್ಟು
ಹವ್ಯಕ ಕನ್ನಡದಲ್ಲೂ ಆಗುವಿಕೆ ಮತ್ತು ಮಾಡುವಿಕೆಗಳನ್ನು ಸೂಚಿಸುವ ಕಾಣಿಸುತ್ತವೆ. ಕೆಲವು ಹಿಂದಿನ ಕನ್ನಡದ ಉದಾಹರಣೆಗಾಗಿ, ಕ್ರಿಯಾರೂಪಗಳನ್ನು ಗಮನಿಸಬಹುದು.
ಸಮಯದ ಕೆಳಗೆ
ಕ್ರಿಯಾರೂಪಗಳು
ಕೊಟ್ಟಿರುವ
ಹವ್ಯಕ
ಆಗುವಿಕೆ
ಮುರುತ್ತು ‘ಮುರಿಯಿತು’’ ಹರುತ್ತು ‘ಹರಿಯಿತು’ ಸಿಗುತ್ತು ‘ಸಿಗಿಯಿತು’ ಕಡುತ್ತು ‘ಕಡಿಯಿತು’ ಇಳುತ್ತು ‘ಇಳಿಯಿತು’ ಹಿಡುತ್ತು ‘ಹಿಡಿಯಿತು’’
ಒಡತ್ತು ‘ಒಡೆಯಿತು’ ತಳತ್ತು ‘ಸವೆಯಿತು’ ಮರತ್ತು ‘ಮರೆತ’
ಮಾಡುವಿಕೆ ಮುರುದತ್ತು ‘ಮುರಿದ’’ ಹರುದತ್ತು ‘ಹರಿದ’ ಸಿಗುದತ್ತು ‘ಸಿಗಿದ’ ಕಡುದತ್ತು ‘ಕಡಿದ’ ಇಳುದತ್ತು ‘ಇಳಿದ’ ಹಿಡುದತ್ತು ‘ಹಿಡಿದ’’ ಒಡದತ್ತು ‘ಒಡೆದ’ ತಳದತ್ತು ‘ಸವೆದ’ ಮರದತ್ತು ‘ಮರೆತ’’
ಹವ್ಯಕ
ಕನ್ನಡದ
ಕ್ರಿಯಾರೂಪಗಳನ್ನು
ಸಂದರ್ಬಗಳಲ್ಲಿ ಅದು
ಗವ್ರವಾರ್ತದಲ್ಲಿ ಬಳಸಬೇಕಾದಾಗ ಮಾತ್ರ ಅವುಗಳಲ್ಲಿ ಲಿಂಗಬೇದ ಸೂಚಿತವಾಗುತ್ತದೆ, ಮೇಲೆ ಸೂಚಿಸುವ ಕೊಟ್ಟಿರುವಂತಹ ಆಗುವಿಕೆ-ಮಾಡುವಿಕೆ ವ್ಯತ್ಯಾಸವನ್ನು ಕ್ರಿಯಾರೂಪಗಳು ಮಾತ್ರ ಗವ್ರವಾರ್ತವನ್ನು ಕಾಣಿಸುವುವಾದ ಕಾರಣ, ಈ ಎರಡು ರೀತಿಯ ಕ್ರಿಯಾರೂಪಗಳ ಕೊನೆಯಲ್ಲೂ ತ್ತು ಆಡುಗ ಒಟ್ಟು ಬಳಕೆಯಾಗಿದೆ.
ಸೂಚಿತವಾಗುವುದಿಲ್ಲ.
ಸೂಚಿಸದಿರುವಲ್ಲಿ
ಇವುಗಳಲ್ಲಿ ಮೊದಲನೆಯ ರೂಪವನ್ನು ಕ್ರಿಯಾಪದಕ್ಕೆ ಹಿಂದಿನ ಸಮಯದ ‘ಸೊನ್ನೆ’ ಒಟ್ಟನ್ನು (ಮತ್ತು ತ್ತು ಆಡುಗ ಒಟ್ಟನ್ನು)
ಸೇರಿಸುವುದರ ಮೂಲಕ ರಚಿಸಲಾಗಿದೆ ಮತ್ತು ಅದು ಒಂದು ವಸ್ತುವಿಗೆ ಏನಾಯಿತೆಂಬುದನ್ನು (ಎಂದರೆ ಆಗುವಿಕೆಯನ್ನು) ತಿಳಿಸುತ್ತದೆ.
ಎರಡನೆಯ ರೂಪವನ್ನು ಕ್ರಿಯಾಪದಕ್ಕೆ ಹಿಂದಿನ ಸಮಯದ ದ್(ಅ) ಒಟ್ಟನ್ನು (ಮತ್ತು ಅದರ ಅನಂತರ ತ್ತು ಒಟ್ಟನ್ನು) ಸೇರಿಸುವುದರ ಮೂಲಕ ರಚಿಸಲಾಗಿದೆ ಮತ್ತು ಅದು ಒಬ್ಬ ವ್ಯಕ್ತಿ ಏನು ಮಾಡಿದ ಎಂಬುದನ್ನು (ಎಂದರೆ ಮಾಡುವಿಕೆಯನ್ನು) ತಿಳಿಸುತ್ತದೆ.
ಈ ಎರಡು ರೀತಿಯ
ವ್ಯತ್ಯಾಸ ಅಕರ್ಮಕ-ಸಕರ್ಮಕಗಳ
ಕ್ರಿಯಾರೂಪಗಳ ಬಳಕೆಯುಂತಹದು ಎಂಬುದನ್ನು ಕೆಳಗಿನ ಹವ್ಯಕ ವಾಕ್ಯಗಳು ಸ್ಪಶ್ಟಪಡಿಸುತ್ತವೆ. ಇಲ್ಲಿ ಕಾಣಿಸುವ ನಡುವಿನದು ಎಂದು ಹೇಳುವುದಕ್ಕಿಂತಲೂ ಆಗುವಿಕೆ-ಮಾಡುವಿಕೆಗಳ ನಡುವಿನದು ಎಂದು ಹೇಳುವುದೇ ಉದಾಹರಣೆಯಿಂದ ನಾಮಪದಗಳ ವಾಕ್ಯಗಳಲ್ಲೂ ಒಂದಕ್ಕಿಂತ ಬಳಕೆಯಾಗಿದೆಯುಂಬುದನ್ನು ಗಮನಿಸಬಹುದು.
ಕೊಟ್ಟಿರುವ ಕೆಳಗೆ ಸ್ಪಶ್ಟವಾಗುತ್ತದೆ. ಈ ಎರಡು
ಸರಿ ಎಂಬುದು
ಹೆಚ್ಚು
(11ಕ) ಅಳಗೆ ಒಡತ್ತು
’‘ಮಡಿಕೆ ಒಡೆಯಿತು’’ (11ಚ) ಕೂಸು ಅಳಗೆಯ ಒಡದತ್ತು
’‘ಹುಡುಗಿ ಮಡಿಕೆಯನ್ನು ಒಡೆದಳು’
(12ಕ) ಕೂಸಿಂಗೆ ಪದ ಮರತ್ತು
‘‘ಹುಡುಗಿಗೆ ಪದ ಮರೆತಿತು’’
(12ಚ) ಕೂಸು ಪದವ ಮರದತ್ತು
’‘ಹುಡುಗಿ ಪದವನ್ನು ಮರೆತಳು’’
ಈ ರೀತಿಯ ರೂಪವ್ಯತ್ಯಾಸ ಹವ್ಯಕ ಕನ್ನಡದಲ್ಲಿ ಎಕಾರಾಂತ ಮತ್ತು ಇಕಾರಾಂತ ಕ್ರಿಯಾಪದಗಳಲ್ಲಿ, ಅದರಲ್ಲೂ ಆಡುಗ-ಕೇಳುಗರನ್ನು ಬಿಟ್ಟು
ಇತರ ವ್ಯಕ್ತಿಗಳ ಕೆಲಸವನ್ನು ಸೂಚಿಸುವ ಮತ್ತು ಗವ್ರವಾರ್ತವಿಲ್ಲದ ಕ್ರಿಯಾ ರೂಪಗಳಲ್ಲಿ ಮಾತ್ರವೇ ಕಾಣಿಸುತ್ತದೆ.
ಸುಬ್ರಹ್ಮಣ್ಯಂ (ಬರಲಿದೆ) ಅವರ ಅಬಿಪ್ರಾಯದಂತೆ, ಹವ್ಯಕದ ಈ ರೂಪವ್ಯತ್ಯಾಸಕ್ಕೂ ತಮಿಳು ಇಲ್ಲವೇ ಬಡಗ ಕನ್ನಡದಲ್ಲಿ ಕಾಣಿಸುವ ರೂಪ ವ್ಯತ್ಯಾಸಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಹವ್ಯಕದಲ್ಲಿ ಕಾಣಿಸುವ ವ್ಯತ್ಯಾಸಕ್ಕೆ ಅವರು ಕೊಟ್ಟಿರುವ ಹಾಗೆ ವಿವರಣೆಯನ್ನು ಒದಗಿಸಿದ್ದಾರೆ.
ಕೆಳಗೆ
ಹವ್ಯಕದ ಹೆಚ್ಚಿನ ಕ್ರಿಯಾರೂಪಗಳಲ್ಲೂ ಹಿಂದಿನ ಸಮಯದ ಒಟ್ಟಿಗೆ ಅದರ ಅನಂತರ ಬರುವ ಆಗುಗ ಒಟ್ಟನ್ನವಲಂಬಿಸಿ ಎರಡೆರಡು ರೂಪಗಳಿವೆ; ಗವ್ರವವನ್ನು ಸೂಚಿಸುವ ಆಗುಗ ಒಟ್ಟು ಬಂದಿದೆಯಾದರೆ ಅದಕ್ಕೆ ದ್ ರೂಪವಿದೆ (ಮಾಡಿದೆ, ಹೇಳಿದೆ, ಬಡುದೆ) ಮತ್ತು ಗವ್ರವವನ್ನು ಸೂಚಿಸದಿರುವ ಆಗುಗ ಒಟ್ಟು ಬಂದಿದೆಯಾದರೆ ಸೊನ್ನೆ ರೂಪವಿದೆ (ಮಾಡಿತ್ತು, ಹೇಳಿತ್ತು, ಬಡುತ್ತು).
ಗವ್ರವವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಬರುವ ದ್ ಒಟ್ಟನ್ನು ಗವ್ರವವನ್ನು ಸೂಚಿಸದಿರುವ ಕ್ರಿಯಾರೂಪಗಳಲ್ಲೂ ಬಳಸುವ ಮೂಲಕ ಹವ್ಯಕ ಕನ್ನಡ ಕೆಲವು ಕ್ರಿಯಾಪದಗಳ ಮಟ್ಟಿಗೆ ಆಗುವಿಕೆ-ಮಾಡುವಿಕೆ ವ್ಯತ್ಯಾಸವನ್ನು ಹೊಸದಾಗಿ ತಯಾರಿಸಿಕೊಂಡಿರಬೇಕು; ಎಂದರೆ, ಹವ್ಯಕ ಕನ್ನಡದ ಈ ವ್ಯತ್ಯಾಸ ಮೂಲ ತೆಂಕುದ್ರಾವಿಡದಲ್ಲಿದ್ದ ಆಗುವಿಕೆ- ಮಾಡುವಿಕೆ ವ್ಯತ್ಯಾಸದ ಪಳೆಯಳಿಕೆಯಲ್ಲ ಎಂಬುದಾಗಿ ಸುಬ್ರಹ್ಮಣ್ಯಂ ವಾದಿಸುತ್ತಾರೆ.
ಆದರೆ ಸುಬ್ರಹ್ಮಣ್ಯಂ ಅವರ ಈ ವಿವರಣೆ ಒಂದು ವಿಶಯದಲ್ಲಿ
ತೊಂದರೆ ಕೊಡುವಂತಹದಾಗಿದೆ.
ಮೇಲೆ (7.5.2ರಲ್ಲಿ) ಸೂಚಿಸಿದ ಹಾಗೆ, ತಮಿಳಿನಲ್ಲಿ ಮಾಡುವಿಕೆ ಯನ್ನು ಸೂಚಿಸುವ ತ್ ಒಟ್ಟು ಸಮಯದ ಒಟ್ಟಿನ ಅನಂತರ ಬರುವುದು ಮುಕ್ಯವಾಗಿ ಇಕಾರದಲ್ಲಿ ಮತ್ತು ಯ, ರ, ೞ ವ್ಯಂಜನಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಮಾತ್ರ.
ಎಕಾರದಲ್ಲಿ
ಹವ್ಯಕ ಕನ್ನಡದಲ್ಲೂ ಮೇಲಿನ ಅರ್ತವ್ಯತ್ಯಾಸವನ್ನು ಕಾಣಿಸುವಲ್ಲಿ ಅಂತಹದೇ ನಿರ್ಬಂದವಿದೆಯುಂದು ಹೇಳಬಹುದು. ಅದು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮಾತ್ರ ಕಾಣಿಸುತ್ತದೆ. ಇವುಗಳಲ್ಲಿ ಕ್ರಿಯಾಪದಗಳು ಮೂಲದ್ರಾವಿಡದಲ್ಲಿ *ಅಯ್ ಎಂಬುದರಲ್ಲಿ ಕೊನೆಗೊಳ್ಳುತ್ತಿದ್ದುವಾದ ಕಾರಣ, ಅವು ತಮಿಳಿನ ಯಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ಸಮನಾಗಿವೆ. (ರಕಾರ ಮತ್ತು ೞಕಾರದಲ್ಲಿ ಕೊನೆಗೊಳ್ಳುವ ಮೂಲದ್ರಾವಿಡ ಕ್ರಿಯಾಪದಗಳು ಹವ್ಯಕದಲ್ಲಿ ಉಕಾರದಲ್ಲಿ ಕೊನೆಗೊಳ್ಳುವ ಕಾರಣ ಅಂತಹ ಕ್ರಿಯಾಪದಗಳಲ್ಲಿ ಈ ವ್ಯತ್ಯಾಸ ಕಾಣಿಸುವುದಿಲ್ಲ).
ಕೊನೆಗೊಳ್ಳುವ
ಮೇಲೆ ಕೊಟ್ಟಿರುವ ಸುಬ್ರಹ್ಮಣ್ಯಂ ಅವರ ವಿವರಣೆಯನ್ನು ಒಪ್ಪಿ ಕೊಂಡಲ್ಲಿ, ತಮಿಳು ಮತ್ತು ಬಡಗ ಕನ್ನಡಗಳಲ್ಲಿ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಸಮಯದ ಒಟ್ಟಿನ ಅನಂತರ ಬರುವುದಕ್ಕಿರುವ ನಿರ್ಬಂದವೇ ಹವ್ಯಕದಲ್ಲಿ ಮೇಲೆ ಸೂಚಿಸಿದ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಕಾಣಿಸಿಕೊಳ್ಳುವುದಕ್ಕೂ ಯಾಕೆ ಇದೆ ಎಂಬುದನ್ನು ವಿವರಿಸಲು ಸಾದ್ಯವಾಗದು.
ಹಾಗಾಗಿ, ಹವ್ಯಕದಲ್ಲೂ ಮೇಲಿನ ವ್ಯತ್ಯಾಸ ಮಾಡುವಿಕೆಯ ಒಟ್ಟು ಸಮಯದ ಒಟ್ಟಿನ ಅನಂತರ ಬಂದುದರಿಂದಾಗಿ ಮೂಡಿಬಂದಿದೆಯುಂದು ವಾದಿಸುವ ಅವಶ್ಯಕತೆಯಿದೆ. ಕೆಳಗೆ ಕಾಣಿಸಿದ ಹಾಗೆ ಆ ರೀತಿ ವಾದಿಸಲು ಒಂದು ದಾರಿಯೂ ಇದೆ.
ಹಿಂದಿನ ಸಮಯದ ನ್್ತ ಒಟ್ಟಿನ ಅನಂತರ ನೇರವಾಗಿ ಗವ್ರವವನ್ನು ಸೂಚಿಸದಿರುವ ತ್ತು ಒಟ್ಟು ಬಂದಾಗ ಅದು ಹವ್ಯಕದಲ್ಲಿ ಸೊನ್ನೆ ರೂಪ ವನ್ನು ಪಡೆದಿದೆ ಮತ್ತು ಅದರೊಂದಿಗೆ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟೂ ಬಂದಾಗ ಅವೆರಡರ ಜೋಡಿ (ನ್ತ್್ತ ಎಂಬುದು) ದ್ ರೂಪ ಹವ್ಯಕದಲ್ಲೂ ಹೇಳುವ ವನ್ನು ತಮಿಳಿನಂತಹದೇ ನಿರ್ಬಂದ ಯಾಕೆ ಇದೆ ಎಂಬುದನ್ನು ವಿವರಿಸಲು ಸಾದ್ಯವಿದೆ.
ಪಡೆದಿದೆ ಎಂದು
ಮೂಲಕ
7.6 ಮಾಡುವಿಕೆಯನ್ನು ಸೂಚಿಸುವ ಬೇರೆ ಒಟ್ಟುಗಳು
*ಇಪು ಮತ್ತು *ಇಚು ಎಂಬ ಬೇರೆ ಎರಡು ಒಟ್ಟುಗಳ ಮೂಲಕವೂ ಮೂಲದ್ರಾವಿಡದಲ್ಲಿ ಆಗುವಿಕೆಗಳನ್ನು ಮಾಡುವಿಕೆಗಳಾಗಿ ಬದಲಾಯಿಸಲು ಸಾದ್ಯವಿದ್ದಿರಬೇಕು. ಇವುಗಳಲ್ಲಿ ಮೊದಲಿನದು ಮುಂದಿನ ಸಮಯದ ಕ್ರಿಯಾಪದಗಳೊಂದಿಗೆ ಬರುತ್ತಿದ್ದಿರಬೇಕು ಮತ್ತು ಎರಡನೆಯದು ಹಿಂದಿನ ಸಮಯದ ಕ್ರಿಯಾಪದಗಳೊಂದಿಗೆ ಬರುತ್ತಿದ್ದಿರಬೇಕು. ಹಳೆಗನ್ನಡದ ಕೆಲವು ಕ್ರಿಯಾಪದಗಳಲ್ಲಿ ಈ ಎರಡು ಒಟ್ಟುಗಳ ಬಳಕೆಯನ್ನೂ ಕಾಣಬಹುದು.
ಆಗುವಿಕೆ
ಕರಗು
ಮಾಡುವಿಕೆ
ಮುಂದಿನ ಸಮಯ ಕರಗಿಪರ್ ಅಳಿಪರ್
ಗೆಲಿಪರ್
ಹಿಂದಿನ ಸಮಯ ಕರಗಿಸಿದರ್ ಅಳಿಸಿದರ್ ಗೆಲಿಸಿದರ್
ಆದರೆ ಹೊಸಗನ್ನಡದಲ್ಲಿ ಇಸು ಒಟ್ಟನ್ನೇ ಎಲ್ಲಾ ಸಂದರ್ಬಗಳಲ್ಲೂ
ಬಳಸಲಾಗುತ್ತದೆ.
ಆಗುವಿಕೆ
ಕರಗಿಸು
ಗೆಲ್ಲು
ಮಾಡುವಿಕೆ
ಮುಂದಿನ ಸಮಯ ಕೆಡಿಸುತ್ತಾರೆ ಕರಗಿಸುತ್ತಾರೆ
ಅಳಿಸುತ್ತಾರೆ ಗೆಲ್ಲಿಸುತ್ತಾರೆ
ಹಿಂದಿನ ಸಮಯ ಕೆಡಿಸಿದರು ಕರಗಿಸಿದರು ಅಳಿಸಿದರು ಗೆಲ್ಲಿಸಿದರು
ಬೇರೆ
ರೂಪಗಳಲ್ಲೂ ಹಳೆಗನ್ನಡದಲ್ಲೇನೇ ಚು ಒಟ್ಟು ಆಗುವಿಕೆಗಳನ್ನು ಮಾಡುವಿಕೆಗಳಾಗಿ
ಕ್ರಿಯಾಪದಗಳ
ಕೆಲವು
ಬದಲಾಯಿಸಲು ಬಳಕೆಯಾಗುತ್ತಿತ್ತು. ಇದೂ ಕೂಡ ಮೂಲದ್ರಾವಿಡದ *ಇಚು ಒಟ್ಟಿನ ಪಳೆಯಳಿಕೆಯಾಗಿರಬೇಕು.
ಆಗುವಿಕೆ
ಉರುಳ್
ತಿರುಗು
ಮಾಡುವಿಕೆ ಅಗಲ್ಚು ತೀರ್ಚು ಉರುಳ್ಚು ತಿರುಚು
7.7 ನಾಮಬೇರುಗಳಿಂದ ಕ್ರಿಯಾಪದಗಳು
ಮೂಲದ್ರಾವಿಡದಲ್ಲಿ ನಾಮಬೇರುಗಳಿಂದ ಇಲ್ಲವೇ ನಾಮಪದಗಳಿಂದ ಕ್ರಿಯಾಪದಗಳನ್ನು ಪಡೆಯಲು ಸಾದ್ಯವಿತ್ತೇ ಎಂಬುದಿನ್ನೂ ಸ್ಪಶ್ಟವಾಗಿಲ್ಲ. ಕನ್ನಡದ ಕ್ರಿಯಾಪದಗಳನ್ನು ಕನ್ನಡದ್ದೇ ಆದ ನಾಮಪದಗಳೊಂದಿಗೆ ಇಲ್ಲವೇ ತಮಿಳು ಮೊದಲಾದ ಇತರ ದ್ರಾವಿಡ ನುಡಿಗಳ ಪದಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳ ಒಳರಚನೆಯಲ್ಲಿ ಕೆಳಗೆ ಸೂಚಿಸಿದ ಕೆಲವು ಒಟ್ಟುಗಳು ಬಳಕೆಯಾಗಿರುವ ಹಾಗೆ ತೋರುತ್ತದೆ.
ನಾಮಪದ ಪುೞು ‘ಹುಳ’’
ನೂಲು
ಕ್ರಿಯಾಪದ ಪುೞಿ ‘ಹುಳ ಹಿಡಿ’’ ನುಲಿ ‘ತಿರುಚು, ನೂಲು ತೆಗೆ’’
(2) ಕು\ಗು ಒಟ್ಟು: ನಾಮಪದ ಮಿಡಿ ‘ದುಗುಡ’
ಕೂ ‘ಕೂಗು’ ಮೞ ‘ಮಸುಕು’
ಕ್ರಿಯಾಪದ ಮಿಡುಕು ‘ಅಳಲು’’ ಕೂಗು ಮೞ್ಗು, ಮಗ್ಗು ‘ಮಸುಕಾಗು’’
(3) ಚು ಒಟ್ಟು:
ನಾಮಪದ ನಾಣ್ ‘ನಾಚುಗೆ’’ ಕೊರಲ್ ‘ಉಲಿ’
ತಮಿಳು: ವೆರು ‘ಹೆದರಿಕೆ’ ಬೆರ್ಚು ‘ಬೆಚ್ಚು’’
ಕ್ರಿಯಾಪದ ನಾಣ್ಚು ‘ನಾಚು’ ಕೊರಲ್ಚು ‘ಉಲಿ ಮಾಡು’
ಮೇಲಿನ ಒಟ್ಟೇ ಸು ರೂಪದಲ್ಲಿ ಇನ್ನೂ ಹಲವು ಪದಗಳಲ್ಲಿ
ಬಳಕೆಯಾಗುತ್ತದೆ.
ನಾಮಪದ ತುಂಡು
ಹೆಸರು
ಕೊಂಡೆ ‘ಚಾಡಿ’
ನೂಲು
ಬೋಳು ಬಯಕೆ
ಬೆಸ ‘ಅಪ್ಪಣೆ’’
ಬೆಪ್ಪಳ ‘ಅಚ್ಚರಿ’
(4) ಮು ಒಟ್ಟು: ನಾಮಪದ ಆಳ್ ‘ಕೆಚ್ಚು’’
(5) ಲ್ ಒಟ್ಟು:
ಕ್ರಿಯಾಪದ ತುಂಡಿಸು ಹೆಸರಿಸು ಕತ್ತರಿಸು ಕೊಂಡಿಸು ‘ಚಾಡಿ ಹೇಳು’’ ನೂಲಿಸು ‘ನೂಲು ಮಾಡು’’ ಬೋಳಿಸು
ಬಯಸು ಬೆಸಸು ‘ಅಪ್ಪಣೆ ಮಾಡು’ ಬೆಪ್ಪಳಿಸು ‘ಅಚ್ಚರಿಪಡು’
ಕ್ರಿಯಾಪದ ಅಣ್ಮು ‘ಕೆಚ್ಚು ತೋರಿಸು’
ನಾಮಪದ ಮೞ ‘ಮಸುಕು’
ಕ್ರಿಯಾಪದ ಮೞಲ್ ‘ಮಸಕಾಗು’’
ಮೂಲದ್ರಾವಿಡದಲ್ಲೇನೇ ಹಲವು ನಾಮಪದಗಳು ಮತ್ತು ಕ್ರಿಯಾಪದ ಗಳು ಒಂದೇ ರೂಪದಲ್ಲಿದ್ದುವೆಂದು ಕಲ್ಪಿಸಲಾಗಿದೆ. ಕನ್ನಡದಲ್ಲೂ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು.
ಕ್ರಿಯಾಬೇರು ಹಿಗ್ಗು
ನಗು ದೂರು
ಹಾಡು
ನಾಮಪದ ಹಿಗ್ಗು
ನಗು ದೂರು ಹಾಡು
ಮೂಲಕ
ಆದರೆ, ಇಂತಹ ಸಂದರ್ಬಗಳಲ್ಲೆಲ್ಲ ಕ್ರಿಯಾಬೇರುಗಳಿಂದ ‘ಸೊನ್ನೆ’ ಪಡೆಯಲಾಗಿದೆಯುಂದೇ ನಾಮಪದಗಳನ್ನು ಕಲ್ಪಿಸಿಕೊಳ್ಳಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ, ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಕ್ರಿಯಾಪದಗಳನ್ನು ಪಡೆಯುವ ವಿದಾನ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿಲ್ಲ; ಆದರೆ, ಕ್ರಿಯಾಬೇರುಗಳಿಗೆ ಹಲವು ರೀತಿಯ ಒಟ್ಟುಗಳನ್ನು ಸೇರಿಸುವುದರ ಮೂಲಕ ನಾಮಪದಗಳನ್ನು ಪಡೆಯಲು ಸಾದ್ಯವಿದೆ (9.3 ನೋಡಿ)
7.8 ಗುಣಬೇರುಗಳಿಂದ ಕ್ರಿಯಾಪದಗಳು
ಗುಣಬೇರುಗಳಿಗೆ ಇ ಒಟ್ಟನ್ನು ಸೇರಿಸಿ ತಯಾರಿಸಿದ ಕ್ರಿಯಾಪದಗಳು
ಕನ್ನಡದಲ್ಲಿ ಕೆಲವಿವೆ. ಬೇರೆ ಕೆಲವು ಕ್ರಿಯಾಪದಗಳಲ್ಲಿ ಇ ಒಟ್ಟಿನ ಅನಂತರ ಮೂಲದ್ರಾವಿಡದ *ತು ಒಟ್ಟು ಬಂದಿದ್ದು ಅದು ಕನ್ನಡದಲ್ಲಿ ಚು ರೂಪಕ್ಕೆ ಬದಲಾಗಿದೆ.
ಗುಣಬೇರು ಕ್ರಿಯಾಪದ ತಣ್ ‘ತಣ್ಣಗೆ, ತಂಪು’’ ತಣಿ ‘ತಣ್ಣಗಾಗು’, ದಣಿ ‘ಬಳಲು’ ನಸು ‘ಚಿಕ್ಕ, ಸ್ವಲ್ಪ’’
ನಸಿ ‘ತಳೆ, ಚಿಕ್ಕದಾಗು’’
ಪಿನ್ ‘ಹಿಂದೆ’’
ಪೆರ್ ‘ದೊಡ್ಡ’’
ಪಿಂಚು ‘ಹಿಂದೆ ಸರಿ’’ ಪೆರ್ಚು, ಪೆಚ್ಚು ‘ಹೆಚ್ಚು’’
ಗುಣಪದಗಳಿಂದ ಇಸು ಒಟ್ಟಿನ ಮೂಲಕ ಕ್ರಿಯಾಪದಗಳನ್ನು
ರಚಿಸುವ ಕನ್ನಡದ ಕ್ರಮ ಇದೇ ಒಟ್ಟಿನ ಮುಂದುವರಿಕೆಯಾಗಿರಬಹುದು.
ಗುಣಪದ ಇದುರು
ಕಂಪು
ಚೊಕ್ಕ
ಕ್ರಿಯಾಪದ ಇದುರಿಸು ಕಂಪಿಸು ‘ಪರಿಮಳಿಸು’’ ಅಡ್ಡವಿಸು ಸೊಗಯಿಸು ದಟ್ಟಣಿಸು ಪೞಸು
ಗುಣಬೇರುಗಳಿಗೆ ಗು ಒಟ್ಟನ್ನು ಸೇರಿಸಿ ರಚಿಸಿರುವ ಕ್ರಿಯಾಪದಗಳೂ
ಕೆಲವಿವೆ.
ಗುಣಬೇರು ಕಿೞ್ ‘ಕೆಳ, ಕೆಳಗೆ’’ ಪಿನ್ ‘ಹಿಂದೆ’ ಪೆರ್ ‘ದೊಡ್ಡ’’
ಒಣ್-ಅ ‘ಒಣಗಿದ’’ ಒಣಗು ‘ನೀರಾರು’
ಕ್ರಿಯಾಪದ ಕಿಳ್ಗು ‘ತಗ್ಗು’’ ಪಿಂಗು ‘ಹಿಂದೆ ಸರಿ’’ ಹಿಗ್ಗು ‘ದೊಡ್ಡದಾಗು, ಉಬ್ಬು’
7.9 ಕ್ರಿಯಾಪದಗಳ ರೂಪದಲ್ಲಿ ಬದಲಾವಣೆಗಳು
ಮೂಲದ್ರಾವಿಡ ಕ್ರಿಯಾಪದಗಳು ಹಳೆಗನ್ನಡದಲ್ಲಿ ಹೆಚ್ಚು ಬದಲಾಗದೆ ಉಳಿದುಕೊಂಡಿವೆ (ಹಳೆತಮಿಳು ಇಲ್ಲವೇ ಹಳೆಗನ್ನಡದಲ್ಲಿ ಕಾಣಿಸುವ ರೂಪವೆಂಬುದಾಗಿ ರೂಪವೇ
ಮೂಲದ್ರಾವಿಡದ
ಹೆಚ್ಚುಕಡಿಮೆ
ಕಲ್ಪಿಸಿಕೊಂಡಿರುವುದೇ ಹೊಸಗನ್ನಡದಲ್ಲಿ ಅವುಗಳ ರೂಪ ಬಹಳ ಮಟ್ಟಿಗೆ ಬದಲಾಗಿದೆ.
ಕಾರಣವಿರಬಹುದು).
ಮೂಲದ್ರಾವಿಡದ ಹಾಗೆ ಹಳೆಗನ್ನಡದಲ್ಲಿ ಹಲವು ಆಕಾರಗಳಲ್ಲಿರುವ ಕ್ರಿಯಾಪದಗಳಿದ್ದುವು; ಆದರೆ ಹೊಸಗನ್ನಡದಲ್ಲಿ ಉಕಾರ, ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಮೂರು ರೀತಿಯ ಕ್ರಿಯಾಪದಗಳು ಮಾತ್ರ ಕಾಣಿಸುತ್ತವೆ. ಅದರಲ್ಲೂ, ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲೆಲ್ಲ ಎರಡು ಹಗುರ ಉಲಿಕಂತೆಗಳು ಮಾತ್ರ ಬರಬಲ್ಲುವು (ನುಡಿ, ಮಡಿ, ಅರಿ, ಹರಿ; ಕರೆ, ತೆರೆ, ಸೆಳೆ, ಹೊಳೆ, ಬರೆ).
ಇತರ ಉಲಿಕಂತೆಗಳು (ಕಟ್ಟು, ಅಂಜು, ತೂಗು) ಮತ್ತು ಎರಡಕ್ಕಿಂತ ಜಾಸ್ತಿ ಉಲಿಕಂತೆಗಳು (ಒಣಗು, ದುಡುಕು, ಅಪ್ಪಳಿಸು, ಮೂದಲಿಸು) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮಾತ್ರ ಬರಬಲ್ಲುವು.
ಕೆಳಗೆ
ಸೂಚಿಸಿದ ಬದಲಾವಣೆಗಳಿಂದಾಗಿ, ಮೂಲದ್ರಾವಿಡದಲ್ಲಿ ಇಲ್ಲವೇ ಹಳೆಗನ್ನಡದಲ್ಲಿದ್ದ ಹಲವಾರು ಬಗೆಯ ಕ್ರಿಯಾಪದಗಳು ಈ ರೀತಿ ಹೊಸಗನ್ನಡದಲ್ಲಿ ಇಲ್ಲವಾಗಿವೆ.
ಇದ್ದುವಾದರೂ
(1) ತಡೆಯುಲಿಗಳಲ್ಲಿ ಕೊನೆಗೊಳ್ಳುವ ಹಲವು ಕ್ರಿಯಾಪದಗಳು ಕೊನೆಯಲ್ಲಿ ಮೂಲದ್ರಾವಿಡದಲ್ಲಿ ಉಚ್ಚಾರಣೆಗಾಗಿ ಉಕಾರವೊಂದು ಬರುತ್ತಿತ್ತೆಂಬುದನ್ನು ನಾವು ಹಿಂದೆ ಆರನೇ ಅದ್ಯಾಯದಲ್ಲಿ ನೋಡಿರುವೆವು. ಈ ಉಕಾರ ಹೊಸಗನ್ನಡಲ್ಲೂ ಉಳಿದುಕೊಂಡಿದೆ (ಇಡು, ಕಟ್ಟು, ಸಿಗು, ಹೆಕ್ಕು, ಹತ್ತು, ಅಪ್ಪು).
ಅವುಗಳ
(2) ಮೂಲದ್ರಾವಿಡದಲ್ಲಿ ತಡೆಯುಲಿಯಾಗಿದ್ದ ಱಕಾರ ಕನ್ನಡದಲ್ಲಿ ಸ್ವರಗಳ ನಡುವೆ ತಡೆಯುಲಿಯಾಗಿ ಉಳಿಯದೆ ಹೊಡೆಯುಲಿ (ಇಲ್ಲವೇ ಅದಿರುಲಿ)ಯಾಗಿ ಬದಲಾಗಿದೆಯಾದ ನೋಡಿ), ಱಕಾರದಲ್ಲಿ ಕ್ರಿಯಾಪದಗಳ ಅನಂತರ ಹಲವು ಹಳೆಗನ್ನಡದಲ್ಲಿ ಉಚ್ಚಾರಣೆಗಾಗಿ ಉಕಾರ ಬರುವ ಅವಶ್ಯಕತೆಯಿರಲಿಲ್ಲ. ಹಾಗಾಗಿ ಅವು ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳಾಗಿದ್ದುವು (ತಾಱ್ ‘ಒಣಗು’, ಆಱ್ ‘ನಂದು’, ಉಱ್ ‘ಇರು’ ಎೞ್ಚಱ್ ‘ನಿದ್ದೆತಿಳಿ’).
ಕೊನೆಗೊಳ್ಳುವ
ಆದರೆ, ಹೊಸಗನ್ನಡದಲ್ಲಿ ಇಂತಹ ಕ್ರಿಯಾಪದಗಳೆಲ್ಲ ಉಕಾರದಲ್ಲಿ
ಕೊನೆಗೊಳ್ಳುವುವಾಗಿವೆ (ನಾಱ್ > ನಾರು, ಪೆಱ್ > ಹೆರು).
(3) ಇದಲ್ಲದೆ, ಮೂಲದ್ರಾವಿಡದಲ್ಲಿ ನ, ಣ, ಯ, ವ, ರ, ಲ, ಳ ಮತ್ತು ೞಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿದ್ದುವು ಮತ್ತು ಇವೆಲ್ಲ ಕೊನೆಗೊಳ್ಳುವ ಹಳೆಗನ್ನಡದಲ್ಲಿ ವ್ಯಂಜನಗಳಲ್ಲಿ ಕ್ರಿಯಾಪದಗಳಾಗಿಯೇ ಉಳಿದಿದ್ದುವು; ಆದರೆ ಹೊಸಗನ್ನಡದಲ್ಲಿ ಇವೆಲ್ಲವೂ ಸ್ವರದಲ್ಲಿ (ಉಕಾರದಲ್ಲಿ) ಕೊನೆಗೊಳ್ಳುವ ಕ್ರಿಯಾಪದಗಳಾಗಿ ಬದಲಾಗಿವೆ.
ಈ ಕ್ರಿಯಾಪದಗಳಲ್ಲಿ ಒಂದೇ ಉಲಿಕಂತೆಯಿದ್ದು, ಅದರಲ್ಲಿ ಗಿಡ್ಡ ಸ್ವರ ಬಂದಿದೆಯಾದರೆ, ಅದರ ಕೊನೆಯ ವ್ಯಂಜನ ಹೊಸಗನ್ನಡದಲ್ಲಿ ಇಮ್ಮಡಿ ರೂಪವನ್ನು ಪಡೆಯುತ್ತದೆ. (ರಕಾರ ಇಲ್ಲವೇ ಱಕಾರದಿಂದ ಬಂದ ರಕಾರ (ಬರ್ > ಬರು, ತೆಱ್ > ತೆರು) ಮತ್ತು ೞಕಾರದಿಂದ ಬಂದ ಳಕಾರ (ಅೞ್ > ಅಳು) ಮಾತ್ರ ಈ ನಿಯಮಕ್ಕೆ ಅಪವಾದಗಳಾಗಿವೆ).
ಗಿಡ್ಡ ಸ್ವರ ಇರುವಲ್ಲಿ ಹಳೆಗನ್ನಡ ಹೊಸಗನ್ನಡ ತಿನ್ನು ಕೊಯ್ ಕೊಯ್ಯು ಗೆಲ್ಲು ಕೊಳ್ಳು ಕೊಳ್ ತೆಱ್ ಅೞ್ ಅೞು
ಉದ್ದ ಸ್ವರ ಇರುವಲ್ಲಿ ಹಳೆಗನ್ನಡ ಹೊಸಗನ್ನಡ ಸೀನ್ ಸೀನು ನೋಯ್ ನೋಯು ಸೋಲ್ ಸೋಲು ಕೇಳು ಕೇಳ್ ಹೀರು ನಾಱ್ ನಾರು ಬಾೞ್ ಬಾಳು
(4) ಆದರೆ, ಎರಡು ಉಲಿಕಂತೆಗಳಿರುವ ಕ್ರಿಯಾಪದಗಳಲ್ಲಿ ಗಿಡ್ಡ ಸ್ವರದ ಅನಂತರವೂ ಲಕಾರ ಮತ್ತು ಳಕಾರಗಳು ಒತ್ತೆ ರೂಪದಲ್ಲೇ ಉಳಿದಿವೆ.
ಹಳೆಗನ್ನಡ ಕನಲ್
ಪೊಗಳ್
ತೆಗೞ್
ಹೊಸಗನ್ನಡ ಕನಲು ಹೊಗಳು ತೆಗಳು
(5) ಇಂತಹ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಉಚ್ಚಾರಣೆಗಾಗಿ ಸೇರಿದ ಉಕಾರ ಅವುಗಳ ಕ್ರಿಯಾರೂಪಗಳಲ್ಲೂ ಉಳಿದುಕೊಂಡಿರುವ ಕಾರಣ, ಅದು ಕ್ರಿಯಾಪದದ ಅಂಶವಾಗಿದೆ. ಉದಾಹರಣೆಗಾಗಿ, ಹಳೆಗನ್ನಡ ಮತ್ತು ಹೊಸಗನ್ನಡಗಳಲ್ಲಿ ಕೆಳಗಿನ ಕ್ರಿಯಾಪದಗಳಿಗಿರುವ ಹಿಂದಿನ ಸಮಯದ ರೂಪಗಳನ್ನು ಹೋಲಿಸಿ ನೋಡಬಹುದು.
ಹಳೆಗನ್ನಡ ಬೆಮರ್ ಕನಲ್ ಬಾೞ್ ಕೇಳ್
ಪೀರ್ದ
ಬೆಮರ್ದ
ಕನಲ್ದ
ಬಾೞ್ದ
ಕೇೞ್ದ
ಹೊಸಗನ್ನಡ ಹೀರು ಬೆವರು ಕನಲು ಬಾಳು ಕೇಳು
ಬೆವರಿದ ಕನಲಿದ ಬಾಳಿದ ಕೇಳಿದ
ಮೇಲೆ ಕೊಟ್ಟಿರುವ ಹೊಸಗನ್ನಡ ಕ್ರಿಯಾಪದಗಳ ಕೊನೆಯಲ್ಲಿ ಬಂದಿರುವ ಉಕಾರ ಬರಿಯ ಉಚ್ಚಾರಣೆಗಾಗಿ ಬಂದುದಲ್ಲ. ಯಾಕೆಂದರೆ, ಅವುಗಳ ಅನಂತರ ಹಿಂದಿನ ಸಮಯದ ದ್ ಒಟ್ಟು ಸೇರಿದಾಗಲೂ ಈ ಉಕಾರ ಇಕಾರವಾಗಿ ಬದಲಾಗುತ್ತದಲ್ಲದೆ ಬಿದ್ದುಹೋಗುವುದಿಲ್ಲ.
(6) ಆದರೆ ಬೇರೆ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಅದು ಬರಿಯ ಉಚ್ಚಾರಣೆಗಾಗಿ ಸಾದ್ಯವಿದೆ. ಮಾತ್ರವೇ ಬಂದುದೆಂದು ಹೇಳಲು ಯಾಕೆಂದರೆ, ಅವುಗಳ ಅನಂತರ ಹಿಂದಿನ ಸಮಯದ ಒಟ್ಟು ಸೇರಿದಾಗ ಈ ಉಕಾರ ಬಿದ್ದುಹೋಗುತ್ತದೆ.
ಹಳೆಗನ್ನಡ
ಹೊಸಗನ್ನಡ
ಸೋಲ್
ಸಾಯ್
ಸೋಲ್ತ ಸತ್ತ
ತಿನ್ನು
ಗೆಲ್ಲು
ಸೋಲು ಸಾಯು
ಸೋತ ಸತ್ತ
ಹಳೆಗನ್ನಡದ ತಿನ್ ಕ್ರಿಯಾಪದದ ಕೊನೆಯಲ್ಲಿ ಉಕಾರ ಸೇರಿ ಅದು ಹೊಸಗನ್ನಡದಲ್ಲಿ ತಿನ್ನು ಎಂದಾಗಿದೆಯಾದರೂ ಹಿಂದಿನ ಸಮಯದ ಕ್ರಿಯಾರೂಪದಲ್ಲಿ ತಿನ್ ಎಂಬ ರೂಪದಲ್ಲೇ ಉಳಿದಿದೆ. ಇತರ ಕ್ರಿಯಾಪದಗಳ ಕೊನೆಯ ಉಕಾರವೂ ಹೊಸಗನ್ನಡದ ಹಿಂದಿನ ಸಮಯದ ರೂಪಗಳಲ್ಲಿ ಉಳಿದಿಲ್ಲವೆಂಬುದನ್ನು ಗಮನಿಸಬಹುದು.
(7) ಒಂದೇ ಉಲಿಕಂತೆಯಿರುವ ಮತ್ತು ಸ್ವರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರವೂ ಹೊಸಗನ್ನಡದಲ್ಲಿ ಇಂತಹ ಉಕಾರ ಸೇರಿ ಅವು ಎರಡು ಉಲಿಕಂತೆಯ ಕ್ರಿಯಾಪದಗಳಾಗಿವೆ. ಇದಲ್ಲದೆ, ಈ ಉಕಾರದ ಮೊದಲು ಯಕಾರವೊಂದು ಸೇರಿರುತ್ತದೆ.
ಆದರೆ, ಈ ಉಕಾರ ಮತ್ತು ಯಕಾರಗಳು ಬರಿಯ ಉಚ್ಚಾರಣೆಗಾಗಿ ಸೇರಿದವುಗಳೆಂದು ಹೇಳಲು ಸಾದ್ಯವಿದೆ. ಯಾಕೆಂದರೆ, ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ಅವೆರಡೂ ಉಳಿಯುವುದಿಲ್ಲ.
ಹಳೆಗನ್ನಡ ಮೇ
ಮೇದ
ಹೊಸಗನ್ನಡ
ಕಾಯು ತೇಯು ಮೇಯು
ಮೇದ
(8) ಮೇಲಿನ ಬದಲಾವಣೆಗಳು ಮಾತ್ರವಲ್ಲದೆ, ಹಳೆಗನ್ನಡದಲ್ಲಿದ್ದ ಹಲವು ರೀತಿಯ ವ್ಯಂಜನಕಂತೆಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ
(ವಿವರಗಳಿಗೆ ಬದಲಾವಣೆಗಳಿಂದಾಗಿಯೂ ಕ್ರಿಯಾಪದಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ.
ಹಳೆಗನ್ನಡದಲ್ಲಿದ್ದ
ನೋಡಿ). ಈ ಹಲವು ರೀತಿಯ
ಉದಾಹರಣೆಗಾಗಿ, ಎರಡು ಉಲಿಕಂತೆಗಳಿರುವ ಕ್ರಿಯಾಪದಗಳ ಮೊದಲನೆಯ ಉಲಿಕಂತೆಯಲ್ಲಿ ಉದ್ದಸ್ವರವಿದೆಯಾದಲ್ಲಿ ಅದರ ಅನಂತರ ಹೊಸಗನ್ನಡದಲ್ಲಿ ಒಂದು ವ್ಯಂಜನ ಮಾತ್ರ ಬರಬಲ್ಲುದು.
ಹಳೆಗನ್ನಡ ಬಾರ್ಚು
ಸೋಂಕು ನೂಂಕು
ಮೀಂಟು
ಹೊಸಗನ್ನಡ ಬಾಚು ಸೋಕು ನೂಕು ಮೀಟು
ಗಿಡ್ಡಸ್ವರ
ಮೊದಲನೆಯ ಉಲಿಕಂತೆಯಲ್ಲಿ
ಇರುವಲ್ಲೂ ಹೊಸಗನ್ನಡದಲ್ಲಿ ಆ ಸ್ವರದ ಅನಂತರ ಇಮ್ಮಡಿ ವ್ಯಂಜನ (ಕಟ್ಟು, ತಿನ್ನು, ಕೊಯ್ಯು) ಇಲ್ಲವೇ ಮೂಗುಲಿಯೊಂದಿಗೆ ಬಂದ ತಡೆಯುಲಿ (ನುಂಗು, ತುಂಬು, ಅಂಟು) ಮಾತ್ರ ಬರಬಲ್ಲುದಲ್ಲದೆ ಇತರ ವ್ಯಂಜನಕಂತೆಗಳು ಬರಲಾರವು.
ಹಳೆಗನ್ನಡ ಕೞ್ಕು
ಕುರ್ಗು
ಪೊಣ್ಮು
ಹೊಸಗನ್ನಡ ಕಕ್ಕು ಕುಗ್ಗು ಹೊಮ್ಮು
ಮೂರು ಉಲಿಕಂತೆಗಳಿರುವ
ಹಳೆಗನ್ನಡದಲ್ಲಿ ವ್ಯಂಜನಕಂತೆಗಳು ಬರಬಲ್ಲುವಾಗಿದ್ದುವು. ಆದರೆ ಹೊಸಗನ್ನಡದಲ್ಲಿ ಇವೆಲ್ಲ ಇಲ್ಲವಾಗಿವೆ.
ಪದಗಳಲ್ಲೂ
ಹಳೆಗನ್ನಡ ಬೞ್ದುಂಕು ಕಲಂಕು
ಮುರುಂಟು ಪಲುಂಬು
ಹೊಸಗನ್ನಡ ಬದುಕು ಕಲಕು ಮುರುಟು ಹಲುಬು
ಮೇಲಿನ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಹೊಸಗನ್ನಡದ ಕ್ರಿಯಾಪದಗಳೆಲ್ಲ ಇಸು ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ (ನಿಟ್ಟಿಸು, ಆಲಿಸು, ಜಂಕಿಸು). ಇದಲ್ಲದೆ, ಜಾಸ್ತಿ ಉಲಿಕಂತೆಗಳಿರುವ ಮೂರಕ್ಕಿಂತ ಹೊಸಗನ್ನಡ ಕ್ರಿಯಾಪದಗಳೆಲ್ಲ ಇಸು ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ (ಅಪ್ಪಳಿಸು, ಕನವರಿಸು, ಬೇಸರಿಸು).
7.10 ತಿರುಳು
ಮೂಲದ್ರಾವಿಡದ ಕ್ರಿಯಾಪದಗಳನ್ನು ಕ್ರಿಯಾಬೇರುಗಳಿಂದ ಇಲ್ಲವೇ ಗುಣ ಬೇರುಗಳಿಂದ ಪಡೆಯಲು ಸಾದ್ಯವಿತ್ತು; ಆದರೆ ನಾಮಬೇರುಗಳಿಂದಲೂ ಅವನ್ನು ಪಡೆಯಲು ಸಾದ್ಯವಿತ್ತೇ ಎಂಬ ವಿಶಯದಲ್ಲಿ ಸಂಶಯವಿದೆ.
ಕ್ರಿಯಾಬೇರುಗಳಿಗೆ ತ್ ಒಟ್ಟನ್ನು ಸೇರಿಸುವ ಮೂಲಕ ಆಗುವಿಕೆಗಳನ್ನು ಮಾಡುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು ಮತ್ತು ಲ, ಳ, ರ, ೞ, ವ ಇಲ್ಲವೇ ಯ ವ್ಯಂಜನಗಳಿಂದ ಮೊದಲಾಗುವ ಒಟ್ಟುಗಳನ್ನು ಸೇರಿಸುವ ಮೂಲಕ ಮಾಡುವಿಕೆಗಳನ್ನು ಆಗುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು. ಕನ್ನಡದಲ್ಲಿ ಈ ಎರಡು ವಿದಾನಗಳೂ ಪಳೆಯಳಿಕೆಗಳಲ್ಲಿ ಮಾತ್ರ ಉಳಿದುಕೊಂಡಿವೆ.
ಆದರೆ, ಈ ಮೂಲದ್ರಾವಿಡ ವಿದಾನಗಳಿಗೆ ಬದಲಾಗಿ ಕ್ರಿಯಾಪದಗಳಿಗೆ ಇಸು ಒಟ್ಟನ್ನು ಸೇರಿಸುವಂತಹ ತನ್ನದೇ ಆದ ವಿದಾನವನ್ನು ಕನ್ನಡ ಕಲ್ಪಿಸಿ
ಕ್ರಿಯಾಪದಗಳು
ಹಳೆಗನ್ನಡದಲ್ಲಿ
ಮೂಲದ್ರಾವಿಡದ
ಹೆಚ್ಚು ಬದಲಾಗಿಲ್ಲ, ಆದರೆ ಹೊಸಗನ್ನಡದಲ್ಲಿ ಅವು ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಇದರಿಂದಾಗಿ ಹೊಸಗನ್ನಡದಲ್ಲಿ ಕೆಲವೇ ಮಾತ್ರ ಕೆಲವು ಬಳಕೆಯಾಗುತ್ತವೆ.
ತೋರಿಸುವ ಕ್ರಿಯಾಪದಗಳು
ರೂಪಬೇದಗಳನ್ನು