Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
3. ಒಟ್ಟಿನ ಸ್ವರಗಳು
3.1 ಮುನ್ನೋಟ
ಮೂಲದ್ರಾವಿಡ ಪದಗಳ ಮೊದಲಿನ ಉಲಿಕಂತೆಯಲ್ಲಿ ಬರುವ ಸ್ವರಗಳು ಬೇರಿನದಾಗಿದ್ದುವು ಮತ್ತು ಅದರ ಅನಂತರ ಎರಡು, ಮೂರು ಇಲ್ಲವೇ ನಾಲ್ಕನೆಯ ಉಲಿಕಂತೆಯಲ್ಲಿ ಬರುವ ಸ್ವರಗಳು ಒಟ್ಟಿನದಾಗಿದ್ದುವು. ಬೇರಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಿಗೂ ಅವುಗಳ ಅನಂತರ ಬಂದಿದ್ದ ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಿಗೂ ನಡುವೆ ಹಲಕೆಲವು ವ್ಯತ್ಯಾಸಗಳಿವೆಯಾದ ಕಾರಣ, ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳನ್ನು ಇಲ್ಲಿ ಈ ಬೇರೆಯೇ ಒಂದು ಅದ್ಯಾಯದಲ್ಲಿ ವಿವರಿಸಲಾಗಿದೆ.
ಒಟ್ಟಿನ ಸ್ವರಗಳಲ್ಲಿ ನಡೆದ ಬದಲಾವಣೆಗಳನ್ನು ಬೇರಿನ ಸ್ವರಗಳಲ್ಲಿ ನಡೆದ ಬದಲಾವಣೆಗಳಶ್ಟು ಸ್ಪಶ್ಟವಾಗಿ ಮತ್ತು ನಿಯಮಿತವಾಗಿ ವಿವರಿಸಲು ಸಾದ್ಯವಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಪದಗಳಲ್ಲಿ ಕಾಣಿಸುವ ಬೇರುಗಳು ಎಲ್ಲಾ ದ್ರಾವಿಡ ನುಡಿಗಳಲ್ಲೂ ಸಮಾನವಾಗಿರುತ್ತವೆ; ಆದರೆ ಅವುಗಳ ಅನಂತರ ಬರುವ ಒಟ್ಟುಗಳು ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಬೇರೆ ಬೇರಾಗಿರುತ್ತವೆ.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಬೇರೆ
ದ್ರಾವಿಡ ನುಡಿಗಳ ಪದಗಳೊಂದಿಗೆ ಹೋಲಿಸಿ ನೋಡಬಹುದು.
ಕನ್ನಡ
ಬೇರೆ ದ್ರಾವಿಡ ನುಡಿಗಳು ತಮಿಳು: ಅಳವಯ್, ತುಳು: ಅಳಕೆ, ತೆಲುಗು: ಅಲವಿ, ಕೂಯಿ: ಡಾಸ
ತೇಪೆ
ತಮಿಳು: ನಾಣ್ಮಯ್, ಕೊಡಗು: ಞಾಣ ತೆಲುಗು: ನಕ್ಕ, ಗೋಂಡಿ: ನರ್ಕಲ್ ತಮಿಳು: ತಯ್ಯಲ್, ಕೂವಿ: ತಚಲಿ
ಈ ಪದಗಳಲ್ಲೆಲ್ಲ ಮೊದಲನೆಯ ಉಲಿಕಂತೆ ಎಂದರೆ ಬೇರು ಸಮಾನ ವಾಗಿರುವುದನ್ನು ಕಾಣಬಹುದು. ಆದರೆ ಅದರ ಅನಂತರ ಬಂದ ಒಟ್ಟಿನ ಉಲಿಕಂತೆಗಳು ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರಾಗಿವೆ.
ಹಾಗಾಗಿ, ಹಲವು ಸಂದರ್ಬಗಳಲ್ಲಿ ಕನ್ನಡ ಪದಗಳಲ್ಲಿ ಕಾಣಿಸಿಕೊಳ್ಳುವ ಒಟ್ಟುಗಳು ಮೂಲದ್ರಾವಿಡದಲ್ಲಿ ಯಾವ ರೂಪದಲ್ಲಿ ಇದ್ದಿರಬಹುದು ಮತ್ತು ಅವುಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ನಮಗೆ ಸಾಕಶ್ಟು ಆದಾರಗಳು ಸಿಗುವುದಿಲ್ಲ.
3.2 ಮೂಲದ್ರಾವಿಡದ ಒಟ್ಟುಗಳು
ಮೂಲದ್ರಾವಿಡ ಪದಗಳಲ್ಲಿ ಬರುತ್ತಿದ್ದ ಒಟ್ಟುಗಳ ಕುರಿತಾಗಿ ಕೆಲವು ನಿಯಮಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಾಗಿದೆ.
(1) ಒಟ್ಟಿನ ಸ್ವರಗಳಾಗಿ ಮೂಲದ್ರಾವಿಡದಲ್ಲಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರ ಬರಬಲ್ಲುವಾಗಿದ್ದುವು. ಉದಾಹರಣೆ ಗಾಗಿ, ಕನ್ನಡದ ಅಱಿ ‘ತಿಳಿ’, ಇೞಿ ‘ಇಳಿ’, ಪಿಡಿ ‘ಹಿಡಿ’ ಪದಗಳಲ್ಲಿ ಮೂಲದ್ರಾವಿಡ ಬೇರಿನ ಅನಂತರ ಇ ಒಟ್ಟು ಬಂದಿದೆ; ಪುೞು ‘ಹುಳ’, ಕಿಱು ‘ಚಿಕ್ಕ’’ ಪದಗಳಲ್ಲಿ ಉ ಒಟ್ಟು ಬಂದಿದೆ ಮತ್ತು ನೀಳ ‘ಉದ್ದ’, ತುಂಬ ‘ಬಹಳ’, ಕೂಡ ‘ಒಟ್ಟಾಗಿ’ ಪದಗಳಲ್ಲಿ ಅ ಒಟ್ಟು ಬಂದಿದೆ.
ಕನ್ನಡ ಪದಗಳಲ್ಲಿ ಎಕಾರವೂ ಒಟ್ಟಿನ ರೂಪದಲ್ಲಿ ಬಂದಿರುವುದನ್ನು ಕಟ್ಟು-ಕಟ್ಟೆ, ಮೊದಲಾದ ಪದಜೋಡಿಗಳಲ್ಲಿ ಕಾಣಬಹುದು. ಆದರೆ, ಇದು ಮೂಲದ್ರಾವಿಡದಲ್ಲಿ *ಅಯ್ ಎಂಬ ರೂಪದಲ್ಲಿದ್ದ ಒಟ್ಟಾಗಿತ್ತು. ಕನ್ನಡದಲ್ಲಿ ಅದು ಎ ಒಟ್ಟಾಗಿ
ಕೊಲ್ಲು-ಕೊಲೆ
ನಗು-ನಗೆ,
ಬದಲಾಗಿದೆ. ತಮಿಳಿನ ಕಟ್ಟಯ್ ‘ಕಟ್ಟೆ’, ನಕಯ್ ‘ನಗೆ’, ಕೊಲಯ್ ‘ಕೊಲೆ’ ಮೊದಲಾದ ಪದಗಳಲ್ಲಿ ಈ ಒಟ್ಟು ಮೂಲದ್ರಾವಿಡದ ರೂಪದಲ್ಲಿ ಉಳಿದುಕೊಂಡಿದೆ.
(2) ತಡೆಯುಲಿಗಳಲ್ಲಿ ಕೊನೆಗೊಳ್ಳುವ ಬೇರುಗಳ ಅನಂತರ ಉಚ್ಚಾ ರಣೆಗಾಗಿ ಉಕಾರವೊಂದನ್ನು ಸೇರಿಸಿಕೊಳ್ಳಲಾಗುತ್ತಿತ್ತು (6.2 ನೋಡಿ). ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ ಈ ಉಕಾರ ಬಿದ್ದುಹೋಗುತ್ತಿತ್ತು. ಈ ಸೇರಿಕೆಯ ನಿಯಮವನ್ನು ಕನ್ನಡದ ಕೂಡು-ಕೂಡ, ತೆಱು-ತೆಱ ಪದಗಳಲ್ಲಿ ಕಾಣಬಹುದು.
ಉದಾಹರಣೆಗಾಗಿ, ಕೂಡು ಪದದ ಕೊನೆಯಲ್ಲಿ ಕಾಣಿಸುವ ಉಕಾರ ಉಚ್ಚಾರಣೆಗಾಗಿ ಬಂದುದು; ಆ ಪದಕ್ಕೆ ಅ ಒಟ್ಟನ್ನು ಸೇರಿಸಿ ಕೂಡ ಪದವನ್ನು ತಯಾರಿಸಬಹುದು. ಆದರೆ ಈ ರೀತಿ ಅ ಒಟ್ಟನ್ನು ಸೇರಿಸುವಾಗ ಕೂಡು ಪದದ ಕೊನೆಯಲ್ಲಿರುವ ಉಕಾರ ಬಿದ್ದುಹೋಗುತ್ತದೆ.
(3) ಬೇರುಗಳ ಅನಂತರ ಬರಬಲ್ಲ ಉ ಒಟ್ಟಿಗಿಂತ ಬೇರಾಗಿರುವ ಇಂತಹ ಉಚ್ಚಾರಣೆಗಾಗಿ ಸೇರುವ ಉಕಾರವೊಂದನ್ನು ಕಲ್ಪಿಸಿಕೊಳ್ಳಲು ಮೂಲದ್ರಾವಿಡದ ಕೆಲವು ಸೇರಿಕೆಯ ನಿಯಮಗಳು ಕಾರಣ.
ಉದಾಹರಣೆಗಾಗಿ, ಮೂಲದ್ರಾವಿಡದ ಬೇರುಗಳಲ್ಲಿ ಬರುವ ಇಮ್ಮಡಿ ತಡೆಯುಲಿಗಳು ಅವುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆಯೆಂಬ ಸೇರಿಕೆಯ ನಿಯಮವೊಂದಿದೆ (4.4.1 ನೋಡಿ).
ಆದರೆ, ಇಂತಹ ಇಮ್ಮಡಿ ತಡೆಯುಲಿಗಳ ಅನಂತರ ಉಚ್ಚಾರಣೆಗಾಗಿ ಉಕಾರ ಬಂದಿದೆಯಾದರೆ, ಅಂತಹ ಪದಗಳಲ್ಲಿ ಈ ರೀತಿ ಇಮ್ಮಡಿ ತಡೆಯುಲಿ ಒತ್ತೆ ತಡೆಯುಲಿಯಾಗುವ ಬದಲಾವಣೆ ನಡೆಯುವುದಿಲ್ಲ.
ಕನ್ನಡದ ನುಗ್ಗು ಮತ್ತು ನುಗಿ ಪದಗಳನ್ನು ಈ ವ್ಯತ್ಯಾಸಕ್ಕೆ ಉದಾ
ಹರಣೆಯಾಗಿ ಕೊಡಬಹುದು:
ನುಗ್ಗು ಪದದಲ್ಲಿ ಬಂದಿರುವ ಉಕಾರ ಉಚ್ಚಾರಣೆಗಾಗಿ ಬಂದುದು;
ಹಾಗಾಗಿ, ಅದರ ಗ್್ಗ ಎಂಬುದು ಒತ್ತೆ ತಡೆಯುಲಿಯಾಗಿ ಬದಲಾಗಿಲ್ಲ.
ಆದರೆ ನುಗಿ ಪದದಲ್ಲಿ ಬಂದಿರುವ ಇ ಎಂಬುದು ಒಂದು ಒಟ್ಟು. ಗ್್ಗ ಎಂಬುದು ಒತ್ತೆ ತಡೆಯುಲಿಯಾಗಿ
ಹಾಗಾಗಿ, ಅದರಲ್ಲಿದ್ದ ಬದಲಾಗಿದೆ.
(4) ಉಚ್ಚಾರಣೆಗಾಗಿ ಬಂದ ಸ್ವರಕ್ಕೂ ಒಟ್ಟಿನ ಸ್ವರಕ್ಕೂ ನಡುವಿರುವ ಈ ವ್ಯತ್ಯಾಸ ಸಮಯ ಕಳೆದಂತೆ ನುಡಿಯೊಂದರಲ್ಲಿ ಇಲ್ಲವಾಗಲು ಸಾದ್ಯವಿದೆ. ಉದಾಹರಣೆಗಾಗಿ, ಕನ್ನಡದ ಕ್ರಿಯಾಪದಗಳಿಗೆ ಉಚ್ಚಾರಣೆಗಾಗಿ ಸೇರಿಸಿರುವ ಉಕಾರದ ಸ್ವರೂಪ ಸಮಯ ಕಳೆದಂತೆ ಬದಲಾಗಿದೆ.
ಹಳೆಗನ್ನಡದಲ್ಲಿ ಮಾಡು, ನೋಡು, ಬೇಡು ಮೊದಲಾದ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಬಂದಿದ್ದ ಉಕಾರ ಅವುಗಳ ಅನಂತರ ಒಟ್ಟುಗಳು ಸೇರಿದಾಗ ಬಿದ್ದುಹೋಗುವಂತಹದಾಗಿತ್ತು (ಮಾೞ್ಪೂಡೆ, ಮಾಳ್ತುದು).
ಆದರೆ, ಅನಂತರದ ಸಮಯದಲ್ಲಿ ಈ ಉಕಾರ ಬಿದ್ದು ಹೋಗದೆ (ಮಾಡುವೊಡೆ,
ಕ್ರಿಯಾಪದದ ಅಂಶವಾಗಿಯೇ ಉಳಿದಿರುವುದನ್ನು ಮಾಡಿದುದು) ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಬಹುದು.
3.3 ಉದ್ದಸ್ವರ ಗಿಡ್ಡವಾಗುವುದು
ತಮಿಳಿನ ಕೆಲವು ಪದಗಳಲ್ಲಿ ಒಟ್ಟಿನ ಜಾಗದಲ್ಲಿ ಕಾಣಿಸುವ ಉದ್ದ ಸ್ವರ ಕನ್ನಡದಲ್ಲಿ ಗಿಡ್ಡ ಸ್ವರವಾಗಿ ಕಾಣಿಸುತ್ತದೆ. ಇಲ್ಲಿ ಮೇಲ್ನೋಟಕ್ಕೆ ಉದ್ದ ಸ್ವರ ಕನ್ನಡದಲ್ಲಿ ಗಿಡ್ಡ ಸ್ವರವಾಗಿದೆಯೆಂದು ತೋರುತ್ತದೆ. ಉದಾಹರಣೆ ಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು. ಕನ್ನಡ
ಕೞಲ್ ‘ಮಜ್ಜಿಗೆ’’ ನೆಂಟರು
ಕಿೞಾನ್ ಕಾಕ್ಕಾಯ್ ನಾಟ್ಟಾರ್
ತಮಿಳು
ಕನ್ನಡಿ
ಆದರೆ, ಎರಡು ಇಲ್ಲವೇ ಮೂರನೇ ಉಲಿಕಂತೆಯಲ್ಲಿ ಉದ್ದಸ್ವರ ಮತ್ತು ಗಿಡ್ಡಸ್ವರಗಳ ನಡುವಿನ ವ್ಯತ್ಯಾಸ ಮೂಲದ್ರಾವಿಡದಲ್ಲಿ ಇತ್ತೆಂದು ವಾದಿಸಲು ಹೆಚ್ಚಿನ ಆದಾರವೇನೂ ಇಲ್ಲ. ಹಾಗಾಗಿ, ಒಟ್ಟಿನ ಜಾಗದಲ್ಲಿ ಬರಬಲ್ಲ ಸ್ವರಗಳೆಲ್ಲ ಮೂಲದ್ರಾವಿಡದಲ್ಲಿ ಗಿಡ್ಡವಾಗಿ ಮಾತ್ರ (ಅದರಲ್ಲೂ ಅ, ಇ, ಉಗಳಾಗಿ ಮಾತ್ರ) ಇದ್ದುವು ಎಂಬುದೇ ಈಗಿನ ಕಲ್ಪನೆಯಾಗಿದೆ.
ಈ ಕಲ್ಪನೆಯಂತೆ ಮೇಲಿನ ಪದಗಳಲ್ಲಿ ಕನ್ನಡ ಮೂಲದ್ರಾವಿಡದ ಒಟ್ಟಿನ ರೂಪಗಳನ್ನು ಉಳಿಸಿಕೊಂಡಿದೆ ಮತ್ತು ತಮಿಳು ಅವನ್ನು ಉದ್ದ ಸ್ವರದವನ್ನಾಗಿ ಬದಲಾಯಿಸಿದೆ.
ಆದರೆ, ಇದಕ್ಕೆ ಅಪವಾದವಾಗಿ ಇಂತಹ ಕೆಲವು ಪದಗಳು ಜೋಡು ಪದಗಳಾಗಿರಲು ಸಾದ್ಯವಿದ್ದು, ಅವುಗಳಲ್ಲಿ ಬರುವ ಉದ್ದಸ್ವರ ಬೇರಿನ ಸ್ವರವಾಗಿರಲು ಸಾದ್ಯವಿದೆ. ಕನ್ನಡ ಆ ಬೇರನ್ನು ಒಟ್ಟಿನ ರೂಪಕ್ಕೆ ಬದಲಾಯಿಸಿ ಅದರ ಉದ್ದಸ್ವರವನ್ನು ಗಿಡ್ಡsಸ್ವರವಾಗಿ ಮಾಡಿಕೊಂಡಿದೆ.
ಕನ್ನಡ
ಕಣವೆ, ಕಣಿವೆ
ತಮಿಳು ಕಣವಾಯ್ ಅಟಿಕ್ಕಾಯ್ ಕುಣ್ಟಿಕ್ಕಾಯ್
ಮೇಲಿನ ಕನ್ನಡ ಪದಗಳಲ್ಲಿ ಕಾಣಿಸುವ ಗಿಡ್ಡ ಎಕಾರ ತಮಿಳಿನಲ್ಲಿ ಆಯ್ ರೂಪದಲ್ಲಿ ಕಾಣಿಸುತ್ತದೆ. ನಿಜಕ್ಕೂ ಇದು ಬೇರಿನ (ವಾಯ್ ‘ಬಾಯಿ’ ಮತ್ತು ಕಾಯ್ ‘ಕಾಯಿ’) ಸ್ವರವಲ್ಲದೆ ಒಟ್ಟಿನ ಸ್ವರವಲ್ಲ. ಕನ್ನಡದ ಪದಗಳಲ್ಲಿ ಮಾತ್ರ ಇದು ಗಿಡ್ಡಸ್ವರವಾಗಿ ಬದಲಾಗಿದ್ದು ಒಟ್ಟಿನ ರೂಪವನ್ನು ಪಡೆದಿದೆ.
3.4 ಎರಡು ಗಿಡ್ಡ ಸ್ವರಗಳು ಸೇರಿ ಉದ್ದ ಸ್ವರವಾಗುವುದು
ಮೂಲದ್ರಾವಿಡದ ಕ್ರಿಯಾಬೇರುಗಳ ಕೊನೆಯಲ್ಲಿದ್ದ ಯಕಾರ ಇಲ್ಲವೇ ಕಕಾರ ಬಿದ್ದುಹೋದಾಗ (4.3.5 ನೋಡಿ) ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ ಮತ್ತು ಅದರ ಮೊದಲು ಬಂದಿದ್ದ ಬೇರಿನ ಸ್ವರ - ಇವೆರಡು ಒಟ್ಟು ಸೇರಿ ಒಂದು ಉದ್ದ ಸ್ವರ ಕಾಣಿಸಿಕೊಳ್ಳುತ್ತದೆ. ಇದು ಮೂಲದ್ರಾವಿಡದಲ್ಲೇನೇ ನಡೆದ ಬದಲಾವಣೆಯಾಗಿರಬಹುದು. ಈ ಬದಲಾವಣೆಯನ್ನು ತೋರಿಸುವ (ಬದಲಾದ) ಮತ್ತು ತೋರಿಸದಿರುವ (ಬದಲಾಗದ) ಎರಡು ರೀತಿಯ ಪದಗಳೂ ಕನ್ನಡದಲ್ಲಿವೆ.
ಬದಲಾಗದ ಪದ
ತೊಗಲು ಮೊಗ
ತಿಗಡು ‘ತಿಕ್ಕು’’
ಬದಲಾದ ಪದ ತೋಲು ಮೋರೆ
ಇದಲ್ಲದೆ, ಬೇರೆ ದ್ರಾವಿಡ ನುಡಿಗಳ ಪದಗಳೂ ಈ ಬದಲಾವಣೆ ನಡೆ ದಿರುವುದನ್ನು ಸೂಚಿಸಬಲ್ಲುವು. ಉದಾಹರಣೆಗಾಗಿ, ಕನ್ನಡದ ಜೇನು ಪದದಲ್ಲಿ ಈ ಬದಲಾವಣೆ ನಡೆದಿದೆಯೆಂಬುದನ್ನು ತುಳುವಿನ ತಿಗ ‘ಜೇನು’ ಪದ ಸೂಚಿಸುತ್ತದೆ; ಕನ್ನಡದ ಕೆಸವು ಪದದಲ್ಲಿ ಈ ಬದಲಾವಣೆ ನಡೆದಿಲ್ಲ, ಆದರೆ, ತಮಿಳಿನ ಚೇಮ್ಪು ‘ಕೆಸವು’ ಪದದಲ್ಲಿ ನಡೆದಿದೆ.
3.5 ಎರಡನೆಯ ಸ್ವರದಲ್ಲಿ ಬದಲಾವಣೆ
ಮೂರು ಉಲಿಕಂತೆಗಳಿರುವ ಹಲವು ಪದಗಳಿಗೆ ಕಿಟ್ಟೆಲ್ ಅವರ ಕನ್ನಡ- ಇಂಗ್ಲಿಶ್ ನಿಗಂಟಿನಲ್ಲಿ ಅವುಗಳ ಎರಡನೆಯ ಸ್ವರವನ್ನವಲಂಬಿಸಿ ಮೂರು ಮೂರು ರೂಪಗಳಿರುವುದನ್ನು ಕಾಣಬಹುದು. ಕನ್ನಡದ ಪದಗಳಲ್ಲಿ ಈ ಎರಡನೆಯ ಸ್ವರ ಅಕಾರ, ಇಕಾರ ಇಲ್ಲವೇ ಉಕಾರವಾಗಿರಲು ಸಾದ್ಯ ಎಂಬುದೇ ಅವುಗಳಿಗೆ ಈ ರೀತಿ ಮೂರು ಮೂರು ರೂಪಗಳು ಕಾಣಿಸಿ
ಕೊಳ್ಳಲು ಕಾರಣ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪದಗಳನ್ನು ಗಮನಿಸಬಹುದು.
ಇಮರು
ಪಾಸಗೆ
ಕುಡಕ
ಹುಡಗಿ
ಇಮಿರು
ಪಾಸಿಕೆ
ಅದುರು ‘ನಡುಗು’’ ಇಮುರು ‘ಒಣಗು’’ ಉಡುಗು ‘ಕುಗ್ಗು’’ ಪಾಸುಗೆ ‘ಹಾಸಿಗೆ’ ಕುಡುಕ ಹುಡುಗಿ
ಇನ್ನು ಕೆಲವು ಪದಗಳಿಗೆ ಎರಡನೆಯ ಸ್ವರವನ್ನವಲಂಬಿಸಿ ಎರಡೆರಡು ರೂಪಗಳು ಕಾಣಿಸುತ್ತವೆ; ಅದು (1) ಅಕಾರ ಇಲ್ಲವೇ ಇಕಾರವಾಗಿರ ಬಹುದು (ಅಱವೆ, ಅಱಿವೆ; ಒಕ್ಕಲ್, ಒಕ್ಕಿಲ್); (2) ಇಕಾರ ಇಲ್ಲವೇ ಉಕಾರವಾಗಿರಬಹುದು (ಅಳಿಪು, ಅಳುಪು; ಒಪ್ಪಿಗೆ, ಒಪ್ಪುಗೆ); (3) ಅಕಾರ ಇಲ್ಲವೇ ಉಕಾರವಾಗಿರಬಹುದು (ಅಲಗು, ಅಲುಗು; ಗಂಡಸು, ಗಂಡುಸು).
ಇದಲ್ಲದೆ, ಎರಡನೆಯ ಸ್ವರವಾಗಿ ಅಕಾರ ಇಲ್ಲವೇ ಎಕಾರವನ್ನು ತೋರಿಸುವ ಪದಗಳು (ಅಳತ, ಅಳೆತ; ಬರಹ, ಬರೆಹ) ಕೆಲವಿವೆ ಮತ್ತು ಅ, ಇ, ಉ, ಎಗಳೆಂಬ ನಾಲ್ಕು ಸ್ವರಗಳನ್ನೂ ತೋರಿಸುವ ಪದಗಳೂ (ಅಳಸು, ಅಳಿಸು, ಅಳುಸು, ಅಳೆಸು) ಕೆಲವಿವೆ.
ಈ ಹೆಚ್ಚಿನ ರೂಪಗಳು ಯಾವ ರೀತಿಯ ಪದಗಳಲ್ಲಿ ಕಾಣಿಸಿಕೊಳ್ಳು ತ್ತವೆ, ಅವುಗಳ ಹಿಂದೆ ನಿಯಮವೇನಾದರೂ ಅಡಗಿದೆಯೇ ಎಂಬುದನ್ನು ಕಂಡುಹಿಡಿಯುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ಎರಡನೇ ಉಲಿಕಂತೆಯಲ್ಲಿರುವ ಸ್ವರ ಮೂಲ ದ್ರಾವಿಡದ *ಅಯ್ (ಇಲ್ಲವೇ *ಅ) ಎಂಬುದರಿಂದ ಬಂದಿದೆಯಾದರೆ,
ಅದು ಇಂತಹ ಪದಗಳಲ್ಲಿ ಅಕಾರವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಒಂದು ನಿಯಮವನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.
ಅಳೆ ಅಳತೆ
ನಡತೆ
ಬರೆ ಬರವಣಿಗೆ ಮೆರೆ ಮೆರವಣಿಗೆ ಬೆಳೆ ಬೆಳವಣಿಗೆ
ಕಳವು
ನೆರವು ತೆರವು ನಡವಳಿಕೆ ನೆನಪು ನೆನೆ ಬರೆ ಬರಹ
ಇದಲ್ಲದೆ, ಈ ಬೇರೆ ಬೇರೆ ರೂಪಗಳು ಕನ್ನಡದ ಬೇರೆ ಬೇರೆ ಒಳನುಡಿಗಳಲ್ಲಿ ಬೆಳೆದುಬಂದು, ಅಲ್ಲಿಂದ ಬರಹ ಕನ್ನಡಕ್ಕೆ ಬಂದಿರಲು ಸಾದ್ಯವಿದೆ.
ಯಾವ
ಪದಗಳಲ್ಲಿ
ಸ್ವರ ಎರಡನೆಯ
ಇದು ನಿಜವೇ ಎಂಬುದನ್ನು ತಿಳಿಯಲು ಇವತ್ತಿನ ಒಳನುಡಿಗಳಲ್ಲಿರುವ ಸ್ವರವಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನೂ ಕಂಡುಹಿಡಿಯುವ ಅವಶ್ಯಕತೆಯಿದೆ. ನಿಯಮಗಳಿಗಿಂತಲೂ ‘ಒಲವು’ಗಳು ಕಾಣಿಸಿಕೊಳ್ಳುವುದೇ ಜಾಸ್ತಿ ಎಂಬುದು ಇಲ್ಲಿ ನಾವು ಎದುರಿಸಬೇಕಾಗಿರುವ ತೊಂದರೆಯಾಗಿದೆ.
ಪದರಚನೆಯಲ್ಲಿ
ಸಾಮಾನ್ಯವಾಗಿ
3.5.1 ಎರಡನೇ ಸ್ವರ ಬಿದ್ದು ಹೋಗುವುದು
ಮೂರು ಉಲಿಕಂತೆಗಳಲ್ಲೂ ಸ್ವರವಿದ್ದು, ಎರಡನೆಯ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರವಿದ್ದ ಪದಗಳ ಎರಡನೆಯ ಗಿಡ್ಡಸ್ವರ ಕನ್ನಡದ ಹಲವು ಪದಗಳಲ್ಲಿ ಬಿದ್ದುಹೋಗಿರುವುದನ್ನು (ಮತ್ತು ಅನಂತರ ರಕಾರ ಇಲ್ಲವೇ ೞಕಾರ ಮುಂದಿನ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗಿರುವುದನ್ನು) ಕಾಣಬಹುದು. ಕೆಳಗೆ ಕೊಟ್ಟಿರುವ ತಮಿಳು ಪದಗಳಲ್ಲಿ ಈ ಸ್ವರ ಬಿದ್ದುಹೋಗಿಲ್ಲ.
ಕನ್ನಡ
ಉರ್ಕು, ಉಕ್ಕು
ಕುರ್ಗು, ಕುಗ್ಗು ಗುರ್ಬಿ, ಗುಬ್ಬಿ ಪರ್ತಿ, ಹತ್ತಿ
ಉರ್ದು, ಉದ್ದು
ಕರ್ಚು, ಕಚ್ಚು ಮೞ್ಗು, ಮಗ್ಗು
ಪಿೞ್ಕ, ಹಿಕ್ಕೆ
ತಮಿಳು ಉರುಕ್ಕು ಕುರಙ್ಕು ಕುರುವಿ ಪರುತ್ತಿ
ಉೞುನ್ತು ಕೞುವು ಮೞುಙ್ಕು ಪಿೞುಕ್ಕಯ್
ಆದರೆ ಈ ಬದಲಾವಣೆ ಕನ್ನಡದಲ್ಲಿ ನಿಯಮಿತವಾಗಿ ನಡೆದಿಲ್ಲ. ಕೆಳಗೆ ಕೊಟ್ಟಿರುವ ಪದಗಳ ಎರಡನೇ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರ ಬಂದಿದೆಯಾದರೂ ಎರಡನೆಯ ಗಿಡ್ಡಸ್ವರ ಬಿದ್ದುಹೋಗಿಲ್ಲ.
ಕನ್ನಡ
ಎರಪು, ಎರವು
ಗೊರಸು ಸರಕು
ಅೞಿವು
ಪೞಗು
ಮೊೞಗು
ತಮಿಳು ಇರಪ್ಪು ಕುರಚ್ಚಯ್ ಚರಕ್ಕು ಅೞಿಪು ಪೞಕು ಮುೞುಙ್ಕು
ಎರಡನೆಯ ಉಲಿಕಂತೆಯಲ್ಲಿ ಬಂದ ಗಿಡ್ಡ ಸ್ವರಗಳು ಕರ್ನಾಟಕದ ಇಂದಿನ ಕೆಲವು ಒಳನುಡಿಗಳಲ್ಲಿ ಬೇರೆ ಹಲವು ಸನ್ನಿವೇಶಗಳಲ್ಲೂ ಬಿದ್ದು ಹೋಗಿವೆ.
ಉದಾಹರಣೆಗಾಗಿ, ಒಳನಾಡಿನ ಬಡಗು ಒಳನುಡಿಗಳಲ್ಲಿ ಇವು ಹೆಚ್ಚಿನ ಪದಗಳಲ್ಲೂ ಬಿದ್ದುಹೋಗಿವೆ; ಆದರೆ, ತೆಂಕು ಒಳನುಡಿಗಳಲ್ಲಿ ಕೆಲವು
ಸನ್ನಿವೇಶಗಳಲ್ಲಿ (ಉದಾ: ಎರಡನೇ ಮತ್ತು ಮೂರನೇ ಉಲಿಕಂತೆಗಳಲ್ಲಿ ತಡೆಯುಲಿ ತಡೆಯುಲಿಯಿದ್ದು, ಒತ್ತಕ್ಶರವಾಗಿರುವಲ್ಲಿ) ಅವು ಹಾಗೆಯೇ ಉಳಿದಿವೆ ಮತ್ತು ಉಳಿದೆಡೆಗಳಲ್ಲಿ ಬಿದ್ದು ಹೋಗಿವೆ (ಉಪಾದ್ಯಾಯ 1976:256).
ಉಲಿಕಂತೆಯ
ಎರಡನೇ
(1) ಒಳನಾಡಿನ ಬಡಗು ಒಳನುಡಿಗಳಲ್ಲಿ ಮಾತ್ರ ಬಿದ್ದುಹೋಗಿರುವುದು:
ಬರಹ
ಮಯ್ಸೂರು
ಗುಲ್ಬರ್ಗ
(2) ಒಳನಾಡಿನ ತೆಂಕು ಮತ್ತು ಬಡಗು ಒಳನುಡಿಗಳೆರಡರಲ್ಲೂ
ಬಿದ್ದುಹೋಗಿರುವುದು:
ಬರಹ
ಕುದುರೆ
ಸಾಸಿವೆ
ಬಾಗಿಲು
ಮಯ್ಸೂರು ಕುದ್ರೆ
ಸಾಸ್ವೆ
ಬಾಗ್ಲು
ಗುಲ್ಬರ್ಗ ಕುದ್ರಿ ಸಾಸ್ವಿ ಬಾಗ್ಲ
ಕರಾವಳಿಯ ತೆಂಕು ಒಳನುಡಿಗಳಲ್ಲಿ ಈ ಸ್ವರ ಬಿದ್ದುಹೋಗದೆ ಉಳಿದಿದೆಯುಂಬುದಕ್ಕೆ ತೆಂಕು ಹವ್ಯಕದ ಕುದುರೆ, ಸಾಸಮೆ, ಬಾಗಿಲು, ಪದಗಳನ್ನು ಉದಾಹರಣೆಯಾಗಿ ಕೊಡಬಹುದು.
ಮೊದಲಾದ
(3) ಮಡಿಕೇರಿಯ ಜೇನುಕುರುಬರ ಕನ್ನಡದಲ್ಲಿ ಬರುವ ಮೂರು ಉಲಿಕಂತೆಯ ಪದಗಳಲ್ಲಿ ಬೇರೆಯೇ ಒಂದು ಬದಲಾವಣೆ ಕಾಣಿಸುತ್ತಿದೆ. ಇಂತಹ ಪದಗಳ ಎರಡನೆಯ ಉಲಿಕಂತೆಯಲ್ಲಿ ಬರುವ ಸ್ವರ ಈ ಒಳನುಡಿಯಲ್ಲಿ ಉದ್ದಸ್ವರವಾಗುತ್ತದೆ (ಉಪಾದ್ಯಾಯ 1976). ಆದರೆ
ಇದು ಅಕಾರವನ್ನು ಮಾತ್ರವಲ್ಲದೆ ಬೇರೆ ಸ್ವರಗಳನ್ನೂ ಬದಲಾಯಿಸಿದೆಯೇ ಎಂಬುದನ್ನು ತಿಳಿಯಲು ಉದಾಹರಣೆಗಳಿಲ್ಲ.
ಬರಹದ ಕನ್ನಡ
ಹಗಲು
ಕನಸು
ಕತ್ತಲೆ
ಕೂದಲು
ಜೇನುಕುರುಬ ಹಗಾಲು ವನಾಕೆ ಕನಾಸು
ಕತ್ತಾಲೆ ಕೂದಾಲು
3.5.2 ಮೂಗಿಸಿದ ಸ್ವರಗಳು
ಎರಡನೇ (ಇಲ್ಲವೇ ಮತ್ತಿನ) ಸ್ವರದ ಅನಂತರ ಬಂದಿದ್ದ ಮೂಗುಲಿ ಬಿದ್ದು ಹೋದಾಗ ಅದರ ಮೊದಲಿನ ಸ್ವರ ಕೆಲವು ಒಳನುಡಿಗಳಲ್ಲಿ ಮೂಗಿಸಿದ ಸ್ವರವಾಗಿ ಬದಲಾಗುತ್ತದೆ (5.2.6 ನೋಡಿ).
ಕರಾವಳಿಯ ಹವ್ಯಕ ಕನ್ನಡದಲ್ಲಿ ಇಂತಹ ಸನ್ನಿವೇಶದಲ್ಲಿ ಬಂದಿದ್ದ ಳಕಾರವೂ ಬಿದ್ದು ಹೋದುದರಿಂದಾಗಿ, ಮೂಗಿಸಿದ ಸ್ವರಕ್ಕೆ ‘ಗಂಡಸು’ ಅರ್ತವನ್ನು ಸೂಚಿಸುವ ಕೆಲಸ ದೊರೆತಿದೆ. ಯಾಕೆಂದರೆ, ಳಕಾರ ಬಿದ್ದುಹೋಗಿರುವಲ್ಲಿ ಅದರ ಮೊದಲು ಬಂದಿದ್ದ ಸ್ವರ ಬದಲಾಗದೆ
ಹಳೆಗನ್ನಡ
ಹವ್ಯಕ ಕನ್ನಡ
ಬಂದನ್
ಬಂದಳ್
ಮಾಡಿದನ್ ಮಾಡಿದಳ್
ಮಾಡಿದ ᵒ ಮಾಡಿದ
ಆದರೆ, ಹಳೆಗನ್ನಡದ ಅಪ್ಪನ್, ಅಜ್ಜನ್ (ಹವ್ಯಕ ಅಪ್ಪ ᵒ, ಅಜ್ಜ ᵒ)
ಮೊದಲಾದ ಗಂಡಸರನ್ನು ಸೂಚಿಸುವ ಪದಗಳಲ್ಲಿ ಮಾತ್ರವಲ್ಲದೆ, ಅಕ್ಕನ್ (ಹವ್ಯಕ ಅಕ್ಕ ᵒ)ದಂತಹ ಬೇರೆ ಕೆಲವು ಪದಗಳಲ್ಲೂ ಈ ಬದಲಾವಣೆ ನಡೆದಿದೆಯಾದ ಕಾರಣ ಇಂತಹ ಪದಗಳಲ್ಲಿ ಮೂಗಿಸಿದ ಸ್ವರಕ್ಕೆ ಮೇಲಿನ ಅರ್ತವಿಲ್ಲ.
3.6 ಪದಗಳ ಕೊನೆಯ ಸ್ವರಗಳು
ಮೂಲದ್ರಾವಿಡ ಪದಗಳ ಕೊನೆಯಲ್ಲಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರವೇ ಬರಬಲ್ಲುವಾಗಿದ್ದುವು. ಆದರೆ ಕನ್ನಡದ ಹಲವು ಕಾಣಬಹುದು. ಪದಗಳ ಮೂಲದ್ರಾವಿಡ ಪದಗಳ ಕೊನೆಯಲ್ಲಿ ಬರುತ್ತಿದ್ದ ಅಯ್ ಎಂಬುದು ಕೆಲವು ಸನ್ನಿವೇಶಗಳಲ್ಲಿ ಎಕಾರವಾಗಿ ಕನ್ನಡದಲ್ಲಿ ಬದಲಾಗಿರುವುದೇ ಇದಕ್ಕೆ ಕಾರಣ. ಇದಲ್ಲದೆ, ಕ್ರಿಯಾಪದಗಳ ಕೊನೆಯಲ್ಲಿದ್ದ ಅಕಾರವೂ ಕನ್ನಡದಲ್ಲಿ ಎಕಾರವಾಗಿದೆ.
ಕೊನೆಯಲ್ಲಿ ಎಕಾರ ಬಂದಿರುವುದನ್ನು
ಪದಗಳ ಕೊನೆಯಲ್ಲಿದ್ದ ಬೇರೆ ಕೆಲವು ಸ್ವರಗಳು ಕನ್ನಡದ ಒಳನುಡಿ ಗಳಲ್ಲಿ ಬದಲಾಗಿವೆ. ಪದಗಳ ಕೊನೆಯ ಎಕಾರ ಇಕಾರವಾಗುವುದು, ಅಕಾರ ಅ಼ಕಾರವಾಗುವುದು ಮತ್ತು ಉಕಾರ ಉ ಮತ್ತು ಉ್ಗಳಾಗಿ ಇದಲ್ಲದೆ, ಒಡೆದುಕೊಳ್ಳುವುದು ಉಕಾರದಲ್ಲಿ ವ್ಯಂಜನಗಳಲ್ಲಿ ಕೊನೆಗೊಳ್ಳುವಂತಾದುದು ಹೊಸಗನ್ನಡದ ಇನ್ನೊಂದು ಬದಲಾವಣೆ.
ಬದಲಾವಣೆಗಳು. ಪದಗಳು
ಕೊನೆಗೊಳ್ಳುವ
3.6.1 ಅಯ್ ಎಂಬುದು ಎಕಾರವಾಗುವುದು
ಮೂಲದ್ರಾವಿಡದಲ್ಲಿದ್ದ ಉಲಿಕಂತೆಗಳಿರುವ ಪದಗಳಲ್ಲಿ ಬಂದಾಗಲೆಲ್ಲ ಕನ್ನಡದಲ್ಲಿ ಎಕಾರವಾಗಿ ಬದಲಾಗಿದೆ. ತಮಿಳಿನಲ್ಲಿ ಇದು ಅಯ್ ಎಂಬುದಾಗಿಯೇ ಕಾಣಿಸುತ್ತದೆ.
ಇಲ್ಲವೇ
ಕನ್ನಡ
ಹೊಗೆ
ಬೆಳೆ
ತಮಿಳು ಕಟ್ಟಯ್ ತಾಳಯ್ ಯಾನಯ್ ಪುಕಯ್ ವಿಳಯ್ ಎಚ್ಚರಿಕ್ಕಯ್
ಕನ್ನಡದಲ್ಲೂ ಕೆಲವು ತೆಂಕು ಒಳನುಡಿಗಳಲ್ಲಿ ಅಯ್ ಎಂಬುದು ಪದಗಳ ಕೊನೆಯಲ್ಲಿ ಬದಲಾಗದೆ ಉಳಿದಿದೆ. ಉದಾಹರಣೆಗಾಗಿ, ಮಯ್ಸೂರು ಜಿಲ್ಲೆಯ ಪಶ್ಚಿಮ ವಿಬಾಗ(ಚಾಮರಾಜನಗರ)ದಲ್ಲಿ ಅದು ಇವತ್ತಿಗೂ ಅಯ್ ಎಂಬ ರೂಪದಲ್ಲೇ ಉಚ್ಚಾರಣೆಯಾಗುತ್ತದೆ.
ಬರಹದ ಕನ್ನಡ ಚಾಮರಾಜ ನಗರ ಮನೆ
ಕಲಯ್
ಮನಯ್ ಬರಯ್
ತಮಿಳು ಮನಯ್ ವರಯ್ (ಅಗೞ್)
ಆದರೆ ಇದೇ ಊರಿನ ಕೆಲವರ ಮಾತಿನಲ್ಲಿ ಅಯ್ ಎಂಬುದು ಅ ಎಂಬುದಾಗಿ (ಇಲ್ಲವೇ ನಾಲಿಗೆಯ ಮುಂಬಾಗವನ್ನು ಬಾಯಿಯ ಕೆಳಬಾಗ ದಲ್ಲಿ ನಿಲ್ಲಿಸಿ ಉಚ್ಚರಿಸಿದ ’ಮುಂಗೆಳಗಿನ’ಸ್ವರವಾಗಿ) ಬದಲಾದುದೂ ಇದೆ. ಮನ (ಇಲ್ಲವೇ ಮನೆ಼) ‘ಮನೆ’, ಗ್ವಾಡ (ಇಲ್ಲವೇ ಗ್ವಾಡೆ಼) ‘ಗೋಡೆ’, ತಲ (ಇಲ್ಲವೇ ತಲೆ಼) ‘ತಲೆ’ ಮೊದಲಾದ ಬಳಕೆಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.
ಒಂದು ಉಲಿಕಂತೆಯಿರುವ ಪದಗಳಲ್ಲಿ ಮಾತ್ರ ಅಯ್ ಎಂಬುದು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿದೆ. ಹೊಸಗನ್ನಡದಲ್ಲೂ ಇದು ನಾಮಪದಗಳಲ್ಲಿ ಮತ್ತು ಕ್ರಿಯಾಪದಗಳ ಕೆಲವು ರೂಪಗಳಲ್ಲಿ ಬದಲಾಗದೆ ಉಳಿದಿದೆ (5.4.4 ನೋಡಿ).
3.6.2 ಅಕಾರ ಎಕಾರವಾಗುವುದು
ಪದಗಳ ಕೊನೆಯಲ್ಲಿ ಬರುವ ಅಕಾರವೂ ಕನ್ನಡದಲ್ಲಿ ಎಕಾರವಾಗಿ ಬದಲಾಗಿರುವುದನ್ನು ಕನ್ನಡದ ಕ್ರಿಯಾಪದಗಳಲ್ಲಿ ಕಾಣಬಹುದು.
ಕನ್ನಡ
ಮರೆ ಮೊಗೆ
ತಮಿಳು
ಮಱ
ಮುಕ
ಪದಗಳ ಕೊನೆಯ ಅಯ್ ಎಂಬುದು (3.6.1 ನೋಡಿ) ಮತ್ತು ಕೊನೆಯ ಅಕಾರ - ಇವೆರಡೂ ಎಕಾರವಾಗಿ ಕ್ರಿಯಾಪದಗಳ ಮತ್ತು ಅಯ್ ಬದಲಾದುದರಿಂದಾಗಿ, ಎಂಬವುಗಳಲ್ಲಿ ಕೊನೆಗೊಳ್ಳುತ್ತಿದ್ದ ಎರಡು ರೀತಿಯ ಕ್ರಿಯಾಪದಗಳೂ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವಂತಾಗಿದೆ.
ಮೂಲದ್ರಾವಿಡದಲ್ಲಿ ಅ
3.6.3 ಎಕಾರ ಇಕಾರವಾಗುವುದು
ಮೇಲೆ ವಿವರಿಸಿದ ಎರಡು ಬದಲಾವಣೆಗಳಿಂದ ಬಂದ ಪದಗಳ ಕೊನೆಯ ಎಕಾರ ಒಳನಾಡಿನ ಬಡಗು ಒಳನುಡಿಗಳಲ್ಲಿ, ಎಂದರೆ ದಾರವಾಡ, ಗುಲ್ಬರ್ಗ, ಬೆಳಗಾವಿ ಮೊದಲಾದ ಪ್ರದೇಶಗಳಲ್ಲಿ ಇಕಾರವಾಗಿ ಬದಲಾಗಿದೆ.
ಬದಲಾವಣೆ ನಡೆದಿದೆಯಾದರೂ, ಅದು ಕ್ರಿಯಾಪದಗಳನ್ನು ಮಾತ್ರ ಬದಲಾಯಿಸಿದೆ; ನಾಮಪದಗಳನ್ನು ಬದಲಾಯಿಸಿಲ್ಲ.
ಒಳನುಡಿಗಳಲ್ಲೂ
ಇಂತಹದೊಂದು
ಕರಾವಳಿಯ ಒಳನುಡಿಗಳಲ್ಲಿ ಈ ಸ್ವರ ಎಕಾರವಾಗಿಯೇ ಇದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಕರಾವಳಿಯ ಹವ್ಯಕ ಕನ್ನಡ, ತೆಂಕು ಒಳ ನಾಡಿನ ಮಯ್ಸೂರು ಕನ್ನಡ ಮತ್ತು ಬಡಗು ಒಳನಾಡಿನ ಗುಲ್ಬರ್ಗ ಕನ್ನಡ ಪದಗಳ ನಡುವೆ ಕಾಣಬಹುದು.
(1) ನಾಮಪದಗಳು:
ಹವ್ಯಕ
ಕುದುರೆ
ಸಾಸವೆ
(2) ಕ್ರಿಯಾಪದಗಳು:
ಹವ್ಯಕ
ಕೊಳೆ
ಮಸೆ
ಮಯ್ಸೂರು ಕುದ್ರೆ
ಯಲೆ
ಸಾಸ್ವೆ
ಮಯ್ಸೂರು ಮಸಿ
ಗುಲ್ಬರ್ಗ ಕುದ್ರಿ ಸಾಸ್ವಿ
ಗುಲ್ಬರ್ಗ ಮಸಿ
ಕೊನೆಯಲ್ಲೂ ಬರಬಲ್ಲುವಾಗಿದ್ದುವು.
3.6.4 ಉಕಾರದ ಸೇರಿಕೆ
ಮೂಲದ್ರಾವಿಡದಲ್ಲಿ ತಡೆಯುಲಿಗಳನ್ನು ಬಿಟ್ಟು ಇತರ ವ್ಯಂಜನಗಳು ಹಳೆಗನ್ನಡ ಈ ಪದಗಳ ಮೂಲದ್ರಾವಿಡದಲ್ಲಿ ಬಳಕೆಯನ್ನು ಉಳಿಸಿಕೊಂಡಿದೆ. ಇದಲ್ಲದೆ, ತಡೆಯುಲಿಯಾಗಿದ್ದ ಅದಿರುಲಿಯಾಗಿ ಬದಲಾಯಿಸಿಕೊಂಡಿದೆಯಾದ ಕಾರಣ, ಅದನ್ನೂ ಅದು ಪದಗಳ ಕೊನೆಯ ವ್ಯಂಜನವಾಗಿ ಬಳಸಬಲ್ಲುದು.
ಱಕಾರವನ್ನು
ಹಳೆಗನ್ನಡ
ಹೊಸಗನ್ನಡ (ಬರಹ ಕನ್ನಡ) ಇಂತಹ ಪದಗಳೆಲ್ಲವನ್ನೂ ಸ್ವರದಲ್ಲಿ ಪದಗಳಾಗಿ ಬದಲಾಯಿಸಿದೆ. ಇದಕ್ಕಾಗಿ ಇಂತಹ ಕೊನೆಗೊಳ್ಳುವ ಹೊಸಗನ್ನಡದಲ್ಲಿ ಉಚ್ಚಾರಣೆಗಾಗಿ ಉಕಾರವನ್ನು ಪದಗಳಿಗೆಲ್ಲ ಸೇರಿಸಲಾಗುತ್ತದೆ. ಈ ರೀತಿ ಉಕಾರವನ್ನು ಸೇರಿಸಿದಾಗ ಪದಗಳ ಕೊನೆಯ ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳೂ ನಡೆದಿವೆ (ಉದಾಹರಣೆಗಳಿಗೆ
7.9 ನೋಡಿ).
3.6.5 ಉಕಾರ ಅ಼ಕಾರವಾಗುವುದು
ನಾಮಪದಗಳ ಕೊನೆಯಲ್ಲಿ ಬರುವ ಉಕಾರ ಕರ್ನಾಟಕದ ಬಡಗು ಒಳನುಡಿಗಳಲ್ಲಿ (ಉದಾಹರಣೆಗಾಗಿ ಗುಲ್ಬರ್ಗ ಕನ್ನಡದಲ್ಲಿ) ಅ಼ಕಾರವಾಗಿ ಬದಲಾಗಿದೆ.
ಪದಗಳಲ್ಲಿ
ಆದರೆ, ಈ ಬದಲಾವಣೆ ಎಲ್ಲಾ ಪದಗಳಲ್ಲೂ ನಡೆದಿಲ್ಲ. ಎರಡು ಉಲಿಕಂತೆಗಳಿರುವ ಸ್ವರ ಉದ್ದವಾಗಿರುವಲ್ಲಿ ಮತ್ತು (2) ಮೊದಲನೆಯ ಸ್ವರದ ಅನಂತರ ಒತ್ತಕ್ಶರವಿರುವಲ್ಲಿ ಮಾತ್ರ ನಡೆದಿದೆ.
(1) ಮೊದಲನೆಯ ಸ್ವರ ಉದ್ದವಾಗಿರುವ ಎರಡು ಉಲಿಕಂತೆಯ ಪದ ಗಳು:
ಮೊದಲನೆಯ
ಬರಹದ ಕನ್ನಡ
ಗುಲ್ಬರ್ಗದ ಕನ್ನಡ
ಹಾಲು
ಹೂವು
ಕೂಸು
ಹೂ಼ವ
ಕೂ಼ಸ
(2) ಮೊದಲನೆಯ ಸ್ವರದ ಅನಂತರ ಒತ್ತಕ್ಶರವಿರುವ ಎರಡು ಉಲಿಕಂತೆಯ ಪದಗಳು:
ಬರಹದ ಕನ್ನಡ
ಗುಲ್ಬರ್ಗದ ಕನ್ನಡ
ಕಲ್ಲು
ಮಂಜು
ನೆಕ್ಕು
ನೆ಼ಕ್ಕ
ಮೂರು ಉಲಿಕಂತೆಗಳಿರುವ
ಸ್ವರ ಬಿದ್ದುಹೋದುದ ರಿಂದಾಗಿ ಎರಡು ಉಲಿಕಂತೆಗಳಿರುವವುಗಳಾಗಿರುವಂತಹ ಪದಗಳಲ್ಲೂ ಈ ಬದಲಾವಣೆ ನಡೆದಿದೆ.
ಪದಗಳ ಎರಡನೆಯ
ಬರಹದ ಕನ್ನಡ
ಬಿಸಿಲು
ನೇಗಿಲು
ಗುಡುಗು ಹೊಕ್ಕುಳು
ಗುಲ್ಬರ್ಗದ ಕನ್ನಡ
ಬಿ಼ಸ್ಲ
ನೇ಼ಗ್ಲ
ಗು಼ಡ್ಗ
ಹೊ಼ಂಕ್ಳ
ಆದರೆ, ಉದ್ದಸ್ವರವಿಲ್ಲದ ಎರಡು ಉಲಿಕಂತೆಗಳಿರುವ ಪದಗಳಲ್ಲಿ ಈ
ಬದಲಾವಣೆ ನಡೆದಿಲ್ಲ.
ಬರಹದ ಕನ್ನಡ
ಇರುವೆ
ಎಲುಬು
ಹಸಿವು
ಗುಲ್ಬರ್ಗದ ಕನ್ನಡ ಯಲು ಹೊಸು
ಈ ಬದಲಾವಣೆ ಎಲ್ಲೆಲ್ಲ ನಡೆದಿದೆ ಎಂಬುದನ್ನು ಸರಿಯಾಗಿ
ತಿಳಿಯಲು ಹೆಚ್ಚಿನ ಸಂಶೋದನೆ ನಡೆಯಬೇಕಾಗಿದೆ.
3.6.6 ಉಕಾರದ ಒಡೆತ
ಕರಾವಳಿಯ ಗವ್ಡ ಕನ್ನಡದ ಒಟ್ಟುಗಳಲ್ಲಿ ಬರುವ (ಎಂದರೆ ಮೊದಲನೆಯ ಉಲಿಕಂತೆಯನ್ನು ಹೊರತುಪಡಿಸಿ ಇತರ ಉಲಿಕಂತೆಗಳಲ್ಲಿ ಬರುವ) ಉಕಾರ ದುಂಡಗಿರುವ ಉಕಾರ ಮತ್ತು ದುಂಡಗಿಲ್ಲದ ಉ್ಕಾರ ಎಂಬ ಎರಡು ಸ್ವರಗಳಾಗಿ ಒಡೆದುಕೊಂಡಿದೆ.
ತುಟಿಯನ್ನು ಬಳಸಿ ಉಚ್ಚರಿಸುವ ವ, ಪ, ಬ ಮತ್ತು ಮ ವ್ಯಂಜನಗಳ ಅನಂತರ ಮತ್ತು ದುಂಡಗಿರುವ (ಉದ್ದ ಇಲ್ಲವೇ ಗಿಡ್ಡ) ಉಕಾರ ಮತ್ತು ಒಕಾರಗಳ ಅನಂತರ ಉಕಾರ ಬದಲಾಗದೆ ಉಳಿದಿದೆ, ಆದರೆ ಇತರ ಸನ್ನಿವೇಶಗಳಲ್ಲಿ ಉ್ಕಾರವಾಗಿ ಬದಲಾಗಿದೆ.
ಕಪ್ಪು
ಉಕಾರವಿರುವ ಪದಗಳು ಉ್ಕಾರವಿರುವ ಪದಗಳು ಕಂತ್ಸ್ ‘ಮುಳುಗಿಸು’’ ಅವುಲು ‘ಅವಲಕ್ಕಿ’ ಕಟ್್ಟ ‘ಕಟ್ಟು’ ತಟ್್ಟ ‘ತಟ್ಟು’’ ಎತ್್ತ ‘ಎತ್ತು’ ಸಿಕ್್ಕ ‘ಸಿಗು’ ಹೇಳ್ ‘ಹೇಳು’
ಹೋಳು ‘ತುಂಡು’
ಕೊಕ್ಕು
ತಬ್ಬು
ಕುತ್ತು
ಆದರೆ, ಈ ನಿಯಮಕ್ಕೆ ಹಲವು ಅಪವಾದಗಳೂ ಇವೆಯಾದ ಕಾರಣ (ದುಡ್್ಕ ‘ದುಡುಕು’, ಮೊಣ್್ಣ ‘ಮಣ್ಣು’, ಮೂಕ್ತಿ ‘ಮೂಗುತಿ’, ಅಂತು ‘ಹಾಗೆ’), ಈ ವ್ಯತ್ಯಾಸಕ್ಕೆ ಗವ್ಡ ಕನ್ನಡದಲ್ಲಿ ಅರ್ತವನ್ನು ಸೂಚಿಸುವ ಹೊಣೆ
ಕೆಲವು
ಜೋಡುಪದಗಳಲ್ಲಿ
3.7 ತಿರುಳು
ಮೂಲದ್ರಾವಿಡದ ಒಟ್ಟುಗಳಲ್ಲಿ ಬರುತ್ತಿದ್ದ ಸ್ವರಗಳು ಕನ್ನಡದಲ್ಲಿ ಯಾವ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬ ವಿಶಯದಲ್ಲಿ ನಮಗಿನ್ನೂ ಹೆಚ್ಚು ತಿಳಿದಿಲ್ಲ. ಕಾಣಿಸುತ್ತಿದ್ದ ಉದ್ದಸ್ವರ ಗಿಡ್ಡವಾಗಿರುವುದು, ಯಕಾರ ಇಲ್ಲವೇ ಕಕಾರ ಬಿದ್ದು ಹೋದುದರಿಂದಾಗಿ ಅವುಗಳ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಟ್ಟು ಸೇರಿ ಉದ್ದಸ್ವರವಾಗಿರುವುದು ಮತ್ತು ಪದಗಳ ಕೊನೆಯ *ಅಯ್ ಮತ್ತು *ಅ ಎಂಬವುಗಳು ಎಕಾರವಾಗಿ ಬದಲಾಗಿರುವುದು ನಮಗೆ ತಿಳಿದಿರುವ ಮುಕ್ಯ ಬದಲಾವಣೆಗಳು.
ಇದಲ್ಲದೆ, ಕನ್ನಡದ ಚರಿತ್ರೆಯಲ್ಲೇನೇ ಅದರ ಒಳನುಡಿಗಳಲ್ಲಿ ಕೆಲವು ಬದಲಾವಣೆಗಳನ್ನೂ ಈ ಅದ್ಯಾಯದಲ್ಲಿ ನಡೆದಿರುವ ವಿವರಿಸಲಾಗಿದೆ. ವ್ಯತ್ಯಾಸ ಅಳಿದುಹೋಗುವುದು ಇಲ್ಲವೇ ಆ ಸ್ವರವೇ ಬಿದ್ದುಹೋಗುವುದು, ಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿ ಮತ್ತು ಉಕಾರ ಅ಼ಕಾರವಾಗಿ
ಪದಗಳ ಎರಡನೆಯ
ಸ್ವರದಲ್ಲಿದ್ದ
ಇಲ್ಲವೇ ಉ್ಕಾರವಾಗಿ ಬದಲಾಗುವುದು ಮತ್ತು ವ್ಯಂಜನಗಳಲ್ಲಿ ಕೊನೆಗೊಳ್ಳುವ ಪದಗಳ ಅನಂತರ ಉಕಾರವೊಂದು ಸೇರಿಕೊಳ್ಳುವುದು ಇವುಗಳಲ್ಲಿ ಮುಕ್ಯವಾದ ಬದಲಾವಣೆಗಳು.