← Ch 10  ·  Contents  ·  Ch 12 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

11. ಗುಣಪದಗಳು

Eke →

11.1 ಮುನ್ನೋಟ

ಮೂಲದ್ರಾವಿಡ ವಾಕ್ಯಗಳಲ್ಲಿ ಬಳಕೆಯಾಗುತ್ತಿದ್ದ ಕ್ರಿಯಾಪದ ಮತ್ತು ನಾಮಪದಗಳ ಮತ್ತು ಅವುಗಳ ಪದರೂಪಗಳ ಸ್ವರೂಪ ಎಂತಹದು ಎಂಬುದನ್ನು ನಾವು ಹಿಂದಿನ ನಾಲ್ಕು ಅದ್ಯಾಯಗಳಲ್ಲಿ ನೋಡಿದ್ದೇವೆ. ಇವುಗಳಲ್ಲಿ ಕ್ರಿಯಾಪದಗಳಿಗೆ ಮಾಡುವಿಕೆಯನ್ನು ಇಲ್ಲವೇ ಆಗುವಿಕೆಯನ್ನು ಸೂಚಿಸುವ ನಾಮಪದಗಳಿಗೆ ಅಂತಹ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವ ಕೆಲಸವಿದ್ದಿರಬೇಕು.

ಕೆಲಸವಿದ್ದಿರಬೇಕು ಮತ್ತು

ಮೂಲದ್ರಾವಿಡದಲ್ಲಿ ಈ ಎರಡು ರೀತಿಯ ಪದಗಳು ಮಾತ್ರವಲ್ಲದೆ ಗುಣಪದಗಳೆಂಬ ಇನ್ನೊಂದು ರೀತಿಯ ಪದಗಳೂ ಸಾಕಶ್ಟು ಎಣಿಕೆಯಲ್ಲಿ ಬಳಕೆಯಾಗುತ್ತಿದ್ದಿರಬೇಕು. ಇವಕ್ಕೆ ನಾಮಪದ ಮತ್ತು ಕ್ರಿಯಾಪದಗಳ ಕೆಲಸದಲ್ಲಿ ಸಹಾಯ ಮಾಡುವಂತಹ ಕೆಳಗಿನ ಸ್ತರದ ಕೆಲಸವಿತ್ತು. ಈ ಕಾರಣಕ್ಕಾಗಿ, ಅವನ್ನು ‘ನಾಮ-ಗುಣಪದ’ ಮತ್ತು ‘ಕ್ರಿಯಾ-ಗುಣಪದ’ ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು.

Eke →

11.1.1 ನಾಮ-ಗುಣಪದಗಳ ಕೆಲಸ

ಮೂಲಕ, ನಾಮಪದಗಳೊಂದಿಗೆ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುವುದೇ ನಾಮ-ಗುಣಪದಗಳ ಅತಿ ಮುಕ್ಯವಾದ ಕೆಲಸ.

ಪದಕಂತೆಗಳಲ್ಲಿ ಬಳಕೆಯಾಗುವ

ಹೂವು

ಉದಾಹರಣೆಗಾಗಿ,

ನಾಮಪದದೊಂದಿಗೆ

ಕೆಂಪು ಗುಣಪದವನ್ನು ಬಳಸಿದಾಗ, ಹೂವು ಪದದ ವ್ಯಾಪ್ತಿ ಕಡಿಮೆಯಾಗುತ್ತದೆ. ಯಾಕೆಂದರೆ, ಹೂವು ಪದವು ಸೂಚಿಸುವ ವಸ್ತುಗಳಲ್ಲಿ ಕೆಲವನ್ನು ಮಾತ್ರ (‘ಕೆಂಪು ಬಣ್ಣ’ ಇರುವವುಗಳನ್ನು ಮಾತ್ರ) ಅದರೊಂದಿಗೆ ಕೆಂಪು ಗುಣಪದವನ್ನು ಬಳಸಿ ತಯಾರಿಸಿರುವ ಕೆಂಪು ಹೂವು ಪದಕಂತೆ ಸೂಚಿಸಬಲ್ಲುದು.

ನಾಮ-ಗುಣಪದಗಳಿಗಿರುವ ಈ ಕೆಲಸಕ್ಕಾಗಿ ಅವು ಒಂದು ನಿಶ್ಚಿತವಾದ ಗುಣವನ್ನು ಸ್ವಲ್ಪವೂ ಸಂಶಯ ಬಾರದಂತೆ ಸೂಚಿಸುವ ಅವಶ್ಯಕತೆಯಿದೆ. ಗುಣಪದಗಳ ಬಳಕೆಯಲ್ಲಿ ಕಾಣಿಸುವ ಹಲವು ನಿರ್ಬಂದಗಳು ಈ ಅವಶ್ಯಕತೆಯನ್ನು ಬೆಳೆದು ಬಂದಿವೆ. ಪೂರಯ್ಸುವುದಕ್ಕಾಗಿ ಉದಾಹರಣೆಗಾಗಿ, ಕನ್ನಡ ಗುಣಪದಗಳ ಬಳಕೆಯಲ್ಲಿ ಕಾಣಿಸುವ ಕೆಳಗಿನ ಒಂದು ನಿರ್ಬಂದವನ್ನು ಇಲ್ಲಿ ಪರಿಶೀಲಿಸಬಹುದು.

ಕನ್ನಡದಲ್ಲಿ ‘ಮೊದಲಾದ’ ಎಂಬ ಅರ್ತವನ್ನು ಕೊಡುವುದಕ್ಕಾಗಿ ನಾಮ ಪದಗಳೊಂದಿಗೆ ಇಲ್ಲವೇ ಕ್ರಿಯಾಪದಗಳೊಂದಿಗೆ ಅವುಗಳ ಮೊದಲನೆಯ ಅಕ್ಶರದ ಬದಲು ಗಿ ಇಲ್ಲವೇ ಗೀ ಎಂಬುದನ್ನು ಬಳಸಿ ರಚಿಸಿದ ಪದವನ್ನು ಸೇರಿಸಿ ಹೇಳಲಾಗುತ್ತದೆ. (ಆ ಪದದ ಮೊದಲನೆಯ ಸ್ವರ ಗಿಡ್ಡ ಇದ್ದರೆ ಗಿ ಎಂಬುದನ್ನು ಬಳಸಬೇಕು ಮತ್ತು ಉದ್ದ ಇದ್ದರೆ ಗೀ ಎಂಬುದನ್ನು ಬಳಸ ಬೇಕು). ಇಂತಹ ಪದಗಳ ಬಳಕೆ ಮೂಲದ್ರಾವಿಡದಲ್ಲೂ ಇದ್ದಿರಬೇಕು.

(1ಕ) ಇದರಲ್ಲಿ ಏನಾದರೂ ಕಲ್ಲುಗಿಲ್ಲು ಇದೆಯೋ ನೋಡಿ. (1ಚ) ಅವಳಿಗೆ ಹಾವುಗೀವು ಬಂದೀತೆಂದು ಹೆದರಿಕೆ. (1ಟ) ಆ ಹುಡುಗ ಎಲ್ಲಿಯಾದರೂ ಬಿದ್ದುಗಿದ್ದಾನು.

(1ಕ)ದಲ್ಲಿ ಕಲ್ಲುಗಿಲ್ಲು ಎಂಬುದಕ್ಕೆ ‘ಕಲ್ಲು ಮೊದಲಾದವು’ ಎಂಬ ಅರ್ತ ಇದೆ ಮತ್ತು (1ಟ)ದಲ್ಲಿ ಬಂದಿರುವ ಬಿದ್ದುಗಿದ್ದಾನು ಎಂಬುದಕ್ಕೆ ‘ಬಿದ್ದಾನು ಇಲ್ಲವೇ ಬೇರೆ ಯಾವುದಾದರೂ ಅಪಾಯಕರ ಕೆಲಸವನ್ನು ಮಾಡಿಯಾನು’ ಎಂಬ ಅರ್ತವಿದೆ.

ನಾಮ-ಗುಣಪದಗಳೊಂದಿಗೆ ಈ ರೀತಿ ಗಿ ಇಲ್ಲವೇ ಗೀ ಎಂಬವುಗಳಿಂದ ಮೊದಲಾಗುವ ಪದಗಳನ್ನು ನೇರವಾಗಿ ಸೇರಿಸಿ ಹೇಳಲು ಸಾದ್ಯವಾಗದು. ಉದಾಹರಣೆಗಾಗಿ, ಕೆಂಪು ಗುಣಪದದೊಂದಿಗೆ ಗಿಂಪು ಎಂಬುದನ್ನು ಸೇರಿಸಿ ಕೆಂಪುಗಿಂಪು ಹೂವು ಎನ್ನಲು ಬರುವುದಿಲ್ಲ. ಗಿಂಪುಹೂವು ಅಂತಹದನ್ನು ಎಂಬುದಾಗಿ ಇಡೀ ಪದಕಂತೆಗೇನೇ ಸೇರಿಸಬೇಕು.

ಸೇರಿಸುವುದಿದ್ದರೆ,

ಕೆಂಪುಹೂವು

ಈ ನಿರ್ಬಂದಕ್ಕೆ ಕಾರಣವೇನೆಂದರೆ, ‘ಮೊದಲಾದ’ ಎಂಬ ಅರ್ತವನ್ನು ಕೊಡುವ ಗಿಂಪು ಪದ ಸೇರಿದಾಗ ಕೆಂಪು ಗುಣಪದದ ಅರ್ತ ಅಸ್ಪಶ್ಟವಾಗುತ್ತದೆ; ಆದರೆ ಮೇಲೆ ಸೂಚಿಸಿದ ಹಾಗೆ, ನಾಮಪದದ ಒಂದು ನಿಶ್ಚಿತವಾದ ಗುಣವನ್ನು ಗುಣಪದ ಸೂಚಿಸಬೇಕಾಗಿದೆಯಾದ ಕಾರಣ, ಅದರ ಈ ಮುಕ್ಯ ಕೆಲಸಕ್ಕೆ ಗಿಂಪು ಎಂಬುದರ ಸೇರಿಕೆ ಅಡ್ಡಿಯಾಗುತ್ತದೆ.

ಮೂಲದ್ರಾವಿಡದ ನಾಮ-ಗುಣಪದಗಳನ್ನು ಕೆಳಗೆ ಸೂಚಿಸಿದ ಹಾಗೆ ಏಳು ಗುಂಪುಗಳಲ್ಲಿ ಹಂಚಲು ಸಾದ್ಯವಿದೆ. ಇವಕ್ಕೆ ಉದಾಹರಣೆಗಳನ್ನು ಕೆಳಗೆ ಕನ್ನಡದಿಂದ ಕೊಡಲಾಗಿದೆ.

ಗುಂಪುಗಳು

  1. ಬೆಲೆ
  2. ಮನುಶ್ಯರ ಗುಣಗಳು
  3. ವಸ್ತುಗಳ ಗುಣಗಳು

ಕನ್ನಡದ ಉದಾಹರಣೆಗಳು ಉದ್ದ-ಗಿಡ್ಡ, ದಪ್ಪ-ತೆಳು
ಕರ್, ಕೆಮ್, ಬೆಳ್ ಪೊಸ-ಪೞ, ಎಳ್-ಮುದಿ ಪೊಲ್, ಚನ್
ಕುರುಡು, ಕಿವುಡು, ಪೋಲಿ, ಗಟ್ಟಿ ಇನ್, ಎಳ್, ಕಯ್, ಕೂರ್, ತಣ್

  1. ದಿಕ್ಕು

ಮೂಡು, ತೆನ್, ಪಡು, ಬಡ

ನಾಮಪದ ಕಂತೆಗಳಲ್ಲಿ ಈ ಗುಣಪದಗಳ ಬಳಕೆಯುಂತಹದು ಎಂಬುದನ್ನು ಕೆಳಗೆ ಕೊಟ್ಟಿರುವ ಹಳೆಗನ್ನಡ ಮತ್ತು ಹೊಸಗನ್ನಡ ಉದಾಹರಣೆಗಳು ತೋರಿಸಿಕೊಡುತ್ತವೆ.

ಹಳೆಗನ್ನಡ ಪೆರ್ಮರಂ ಒಳ್ಗನ್ನಡಂ ಪೇರಡವಿ ನಿಡುದೋಳ್ ಪೞವಾವಿ ಕೀೞ್ಗಡೆ
ಕಿಱಿಗೂಸು ಚೆಂದಾವರೆ

ಹೊಸಗನ್ನಡ ದೊಡ್ಡ ಮರ ಒಳ್ಳೆ ಕನ್ನಡ ದೊಡ್ಡ ಕಾಡು ಉದ್ದ ತೋಳು ಹಳೆಬಾವಿ ಕೆಳಗಡೆ ಚಿಕ್ಕ ಮಗು ಕೆಂಪು ತಾವರೆ

ಇಂತಹ ಗುಣಪದಗಳು ಮಾತ್ರವಲ್ಲದೆ, ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಯನ್ನು ಸೂಚಿಸುವ ಒನ್/ಓರ್/ ಒಕ್, ಈರ್, ಮೂ, ನಾಲ್, ಚಯ್, *ಚಾಱ್, ಏೞ್, ಎಣ್, *ತೊಳ್/ತೊಣ್, ಪತ್, ನೂಱ್ ಮತ್ತು ಅರ್, ಕೆಲ್ (<*ಕಿಲ್), ಪಲ್ ಎಂಬ ಎಣಿಕೆಯ ಬೇರುಗಳು ಹಾಗೂ ಆ, ಈ, ಊ ಮತ್ತು ಯಾ ನಾಮ- ಗುಣಪದಗಳಾಗಿ ಬಳಕೆಯಲ್ಲಿದ್ದಿರಬೇಕು.

ಮೂಲದ್ರಾವಿಡದಲ್ಲಿ

ಬೇರುಗಳು

ತೋರುಗ

Eke →

11.1.2 ಕ್ರಿಯಾ-ಗುಣಪದಗಳ ಕೆಲಸ

ನಾಮಪದಗಳ ಗುಣಗಳನ್ನು ಸೂಚಿಸುವುದಕ್ಕಾಗಿ ನಾಮ-ಗುಣಪದಗಳ ಬಳಕೆಯಾಗುವ ಗುಣಗಳನ್ನು ಬಳಕೆಯಾಗುತ್ತದೆ. ಸೂಚಿಸುವುದಕ್ಕಾಗಿ

ಕ್ರಿಯಾ-ಗುಣಪದಗಳ

ಕ್ರಿಯಾಪದಗಳ

ಹಾಗೆಯೇ,

ಉದಾಹರಣೆಗಾಗಿ, ನಾಡಂ ನಾಡೆ ಕೆಡಿಸಿದನ್ ಎಂಬ ಹಳೆಗನ್ನಡ ವಾಕ್ಯದಲ್ಲಿ ಬಂದಿರುವ ನಾಡೆ ಗುಣಪದವು ಕೆಡಿಸು ಕ್ರಿಯಾಪದದ ಒಂದು ಗುಣವನ್ನು ಸೂಚಿಸುತ್ತದೆ.

ಆದರೆ, ಕ್ರಿಯಾಪದಗಳ ಗುಣಗಳನ್ನು ಸೂಚಿಸುವಂತಹ ಕ್ರಿಯಾ-ಗುಣ ಪದಗಳಲ್ಲಿ ಹೆಚ್ಚಿನವನ್ನೂ ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸುವುದರ ಮೂಲಕ ರಚಿಸಲಾಗುತ್ತದೆ. ದೊಪ್ಪನೆ, ತಟ್ಟನೆ, ಸರಸರನೆ ಮೊದಲಾದ ಅಣಕಿಸುವ ಗುಣಪದಗಳು ಮಾತ್ರ ಇದಕ್ಕೆ ಅಪವಾದಗಳಾಗಿದ್ದು, ಅವನ್ನು ಆ ರೀತಿ ನಾಮಬೇರುಗಳಿಂದ ಪಡೆಯಲು ಸಾದ್ಯವಾಗುವುದಿಲ್ಲ. ಆದರೆ, ಇಂತಹ ಪದಗಳು ಬೇರೆ ಹಲವು ವಿಶಯಗಳಲ್ಲಿ ಇತರ ಗುಣಪದಗಳಿಂದ ಬೇರಾಗಿದ್ದು ಪದಕೋಶದ ಹೊರಗೆ ನಿಲ್ಲುತ್ತವೆ (11.5 ನೋಡಿ).

ಈ ಕಾರಣಕ್ಕಾಗಿ, ಕ್ರಿಯಾ-ಗುಣಪದವೆಂಬ ಬೇರೆಯೇ ಒಂದು ಗುಂಪಿ ನಲ್ಲಿ ಬರುವ ಗುಣಬೇರುಗಳು ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದುವೇ ಎಂಬ ವಿಶಯದ ಕುರಿತು ಸಂಶಯವೆದ್ದಿದೆ ಮತ್ತು ಈ ವಿಶಯದಲ್ಲಿ ಇನ್ನಶ್ಟು ಸಂಶೋದನೆ ನಡೆಸುವ ಅವಶ್ಯಕತೆಯಿದೆ.

ಮಾತ್ರವಲ್ಲದೆ,

ಇಂತಹ ಕ್ರಿಯಾ-ಗುಣಪದಗಳು

ಗುಣಪದಗಳ ಗುಣಗಳನ್ನು ಸೂಚಿಸುವಂತಹ ಗುಣ-ಗುಣಪದಗಳೂ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕು. ಉದಾಹರಣೆಗಾಗಿ, ಕನ್ನಡದ ಹೆಚ್ಚು ದೊಡ್ಡ ಮನೆ ಪದಕಂತೆಯಲ್ಲಿ ಬಂದಿರುವ ಹೆಚ್ಚು ಗುಣಪದ ದೊಡ್ಡ ಗುಣಪದದ ಒಂದು ಗುಣವನ್ನು ಸೂಚಿಸುತ್ತದೆ. ಆದರೆ ನಾಮ-ಗುಣಪದ ಮತ್ತು ಕ್ರಿಯಾ-ಗುಣಪದಗಳ ಹಾಗೆ ಈ ಗುಣ-ಗುಣಪದಗಳ ಎಣಿಕೆ ಹೆಚ್ಚಿಲ್ಲ.

Eke →

10.2 ನಾಮ-ಗುಣಪದಗಳ ಒಳರಚನೆ

ಮೂಲದ್ರಾವಿಡದ ನಾಮ-ಗುಣಪದಗಳು ಬರಿಯ ಗುಣಬೇರುಗಳಾಗಿರ ಬಹುದು ಇಲ್ಲವೇ ಅಂತಹ ಗುಣಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದ ಪದಗಳಾಗಿರಬಹುದು. ಇದಲ್ಲದೆ, ಕ್ರಿಯಾಬೇರುಗಳಿಗೆ ಇಲ್ಲವೇ

ನಾಮಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದ ಪದಗಳೂ ನಾಮ- ಗುಣಪದಗಳಾಗಿ ಬಳಕೆಯಾಗಬಲ್ಲುವು.

ಉದಾಹರಣೆಗಾಗಿ, ಹಳೆಗನ್ನಡದ ಬೆಳ್ಗುದುರೆ ಪದಕಂತೆಯಲ್ಲಿ ಬೆಳ್ ಗುಣಬೇರು ನೇರವಾಗಿ ನಾಮಪದದೊಂದಿಗೆ ಬಳಕೆಯಾಗಿದೆ. ಆದರೆ ಬಿಳಿ ಗಱಿಕೆ ಪದದಲ್ಲಿ ಇದೇ ಗುಣಬೇರು ಇ ಒಟ್ಟಿನೊಂದಿಗೆ ಬಂದಿದೆ

ಎಗ್ಗ ‘ನಾಚುವ’ ಗುಣಪದವನ್ನು ಎಗ್ಗು ‘ನಾಚಿಕೆ’ ನಾಮಬೇರಿಗೆ ಅ ಒಟ್ಟನ್ನು ಸೇರಿಸಿ ರಚಿಸಲಾಗಿದೆ ಮತ್ತು ಸೊಡ ‘ಉರಿಯುವ’ ಗುಣಪದ ವನ್ನು ಸುಡು ಕ್ರಿಯಾಬೇರಿಗೆ ಅ ಒಟ್ಟನ್ನು ಸೇರಿಸಿ ರಚಿಸಲಾಗಿದೆ. (ಈ ಅಕಾರ ಸೇರಿದುದರಿಂದಾಗಿ ಸುಡು ಪದದ ಮೊದಲಿನ ಉಕಾರ ಸೊಡ ಎಂಬುದರಲ್ಲಿ ಒಕಾರವಾಗಿದೆ (2.2.1 ನೋಡಿ)).

Eke →

11.2.1 ಗುಣಬೇರುಗಳಿಂದ ನಾಮ-ಗುಣಪದಗಳು

ಮೂಲದ್ರಾವಿಡದ ಗುಣಬೇರುಗಳಿಗೆ ಕೆಲವು ಒಟ್ಟುಗಳನ್ನು ಸೇರಿಸುವುದರ ಮೂಲಕ ಹಲವು ಹೆಚ್ಚಿನ ಗುಣಪದಗಳನ್ನು ತಯಾರಿಸಲು ಸಾದ್ಯವಿತ್ತು. ಉ, ಇ ಮತ್ತು ಅ ಎಂಬ ಮೂರು ಒಟ್ಟುಗಳು ಮೂಲದ್ರಾವಿಡದಲ್ಲೇನೇ ಸೇರಿಸಿದಾಗ ಇದಕ್ಕಾಗಿ ಬಳಕೆಯಾಗುತ್ತಿದ್ದುವೆಂಬುದಕ್ಕೆ ಮೂಲದ್ರಾವಿಡಕ್ಕೇನೇ ಸೇರಿಕೆಯ ಕಲ್ಪಿಸಿಕೊಳ್ಳಬಲ್ಲ ಬದಲಾವಣೆಗಳು ನಡೆಯುತ್ತವೆ ಎಂಬುದನ್ನು ಆದಾರವಾಗಿ ಕೊಡಬಹುದು. ಕನ್ನಡದ ಗುಣಪದಗಳಲ್ಲಿ ಈ ಮೂರು ಒಟ್ಟುಗಳ ಬಳಕೆಯನ್ನು ಕೆಳಗೆ

ಅವನ್ನು ಕೆಲವು

ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

(1) ಉ ಒಟ್ಟಿನ ಬಳಕೆ ಆಱ್ ‘ಆರು’ ಕೇಸ್ (ಕೇಸಕ್ಕಿ)
ಪೇರ್ (ಪೇರಡವಿ) ಕಟ್ (ಕಟ್ಟಡವಿ)

ಅಱು (ಅರುತಿಂಗಳು) ಕಿಸು (ಕಿಸುಗಣ್) ಪೆರು (ಪೆರುಕಿಚ್ಚು) ಕಡು (ಕಡುಗಾಳಿ)

(2) ಇ ಒಟ್ಟಿನ ಬಳಕೆ

ಕಾರ್ (ಕಾರಿರುಳು) ಇನ್ (ಇನ್ನುಣಿಸು) ಪೇರ್ (ಪೇರಡವಿ) ಬೆಳ್ (ಬೆಳ್ಗಡಲ್)

ಕರಿ (ಕರಿಜೀರಿಗೆ) ಇನಿ (ಇನಿವಾತು) ಪಿರಿ (ಪಿರಿಯಣ್ಣ) ಬಿಳಿ (ಬಿಳಿಗೂದಲು)

(3) ಅ ಒಟ್ಟಿನ ಬಳಕೆ

ಉಳ್ (ಉಳ್ಗರುಳ್) ಬೆಳ್ (ಬೆಳ್ಗೊಡೆ)

ಒಳ (ಒಳಮಾತು) ಬೆಳ (ಬೆಳದಿಂಗಳು)

ನಾಮ-ಗುಣಪದಗಳನ್ನು

Eke →

11.2.2 ನಾಮಬೇರುಗಳಿಂದ ನಾಮ-ಗುಣಪದಗಳು

ನಾಮಬೇರುಗಳಿಂದ ತಯಾರಿಸಿ ಬಳಸುವು ದಕ್ಕಿಂತಲೂ ಅವನ್ನು ಇಲ್ಲವೇ ಅವನ್ನು ಬಳಸಿ ರಚಿಸಿದ ನಾಮಪದಗಳನ್ನು ನೇರವಾಗಿ ನಾಮ-ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳ ವ್ಯಾಪ್ತಿಯನ್ನು ಅವುಗಳೊಂದಿಗೆ ಪದಕಂತೆಗಳಲ್ಲಿ) ಬಳಸುವ ವಿದಾನವೇ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದಕ್ಕಾಗಿ ನಾಮಬೇರುಗಳಿಗೆ ಇಲ್ಲವೇ ನಾಮಪದಗಳಿಗೆ ಒಟ್ಟನ್ನು ನಾಮಪದಗಳನ್ನು ಸೇರಿಸಬೇಕಾಗುತ್ತದೆ (9.5.1 ನೋಡಿ).

ಸಂಬಂದಿಸಬಲ್ಲ ಅ

ಮಾಡುವುದಕ್ಕಾಗಿ

ಕಡಿಮೆ

ಈ ರೀತಿ ಅ ಒಟ್ಟನ್ನು ಸೇರಿಸಿರುವ ನಾಮಪದಗಳನ್ನು ಅವುಗಳ ಗುಣ ರೂಪಗಳೆಂದು (ಇಲ್ಲವೇ ಸಂಬಂದಿಸುವ ರೂಪಗಳೆಂದು) ಕರೆಯಬಹುದು.

ಮರದ ಗೆಲ್ಲು
ಮೊಸರಿನ ಮಡಿಕೆ ಹೂವಿನ ಎಸಳು
ಕಲ್ಲಿನ ಗೋಡೆ
ಹಾವಿನ ಹುತ್ತ

ಮನೆಯ ಮಾಡು ಚಿನ್ನದ ಹೂ ಮಗಳ ಮದುವೆ ಹಲ್ಲಿನ ಹೊಳಪು ಬಣ್ಣದ ಗೊಂಬೆ

ಇದಲ್ಲದೆ, ನಾಮಪದಗಳನ್ನು ನೇರವಾಗಿ ಯಾವ ಒಟ್ಟನ್ನೂ ಸೇರಿಸದೆ ಬೇರೆ ನಾಮಪದಗಳೊಂದಿಗೆ ಬಳಸಿ ಹಲವು ರೀತಿಯ ಜೋಡುಪದಗಳನ್ನು ರಚಿಸಲು ಕನ್ನಡದಲ್ಲಿ ಸಾದ್ಯವಿದ್ದು, ಇಂತಹ ರಚನೆಗಳಲ್ಲಿ ನಾಮಪದಗಳು ನೇರವಾಗಿ ಗುಣಪದಗಳ ಕೆಲಸವನ್ನು ನಡೆಸುತ್ತವೆ.

ಅ ಒಟ್ಟಿನೊಂದಿಗೆ
ಬೆಂಕಿಯ ಪೆಟ್ಟಿಗೆ ನೂಲಿನ ಏಣಿ ತಲೆಯ ಕೂದಲು ಕಣ್ಣಿನ ನೀರು ಹೂವಿನ ಗಿಡ ಕಾಡಿನ ಕಿಚ್ಚು

ನೇರವಾಗಿ ಬೆಂಕಿಪೆಟ್ಟಿಗೆ ನೂಲೇಣಿ ತಲೆಗೂದಲು ಕಣ್ಣೀರು ಹೂಗಿಡ ಕಾಳ್ಗಿಚ್ಚು

Eke →

11.2.3 ಕ್ರಿಯಾಬೇರುಗಳಿಂದ ನಾಮಗುಣಪದಗಳು

ಕ್ರಿಯಾಬೇರುಗಳಿಗೆ ಅ ಒಟ್ಟನ್ನು ಸೇರಿಸಿ ಗುಣಪದಗಳನ್ನು ತಯಾರಿಸಲು ಸಾದ್ಯ ಎಂಬುದನ್ನು ಕನ್ನಡದ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಗುಣಪದ

ಕ್ರಿಯಾಪದ ಬಱ್ ‘ಒಣಗು’
ನೀಳ್ ‘ಉದ್ದವಾಗು’’ ನೀಳ ‘ಉದ್ದ’ ಕೂಡು ‘ಸೇರು’’

ಕೂಡ ‘ಒಟ್ಟಿಗೆ’’

ಆದರೆ, ಕ್ರಿಯಾಬೇರುಗಳಿಗೆ ಈ ರೀತಿ ನೇರವಾಗಿ ಅ ಒಟ್ಟನ್ನು ಸೇರಿಸಿ ಗುಣಪದಗಳನ್ನು ತಯಾರಿಸಿಕೊಳ್ಳುವ ವಿದಾನ ದ್ರಾವಿಡ ನುಡಿಗಳಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಅದಕ್ಕೆ ಬದಲು ಕ್ರಿಯಾಪದಗಳಿಗೆ ಮುಂದಿನ (ಕೊಡುವ, ತಿನ್ನುವ), ಹಿಂದಿನ (ಕೊಟ್ಟ, ತಿಂದ) ಇಲ್ಲವೇ ಅಲ್ಲಗಳೆಯುವ (ಕೊಡದ, ತಿನ್ನದ) ಒಟ್ಟುಗಳನ್ನು ಸೇರಿಸಿ, ಅವುಗಳ ಅನಂತರ ಅ

ಒಟ್ಟನ್ನು ಬಳಸಿ ರಚಿಸಿಕೊಳ್ಳುವುದೇ ಜಾಸ್ತಿ.

ಕ್ರಿಯಾಪದಗಳ ’ಗುಣರೂಪಗಳನ್ನು

ಮುಂದಿನ ರೂಪ ಮಾಡುವ ಕೆಲಸ ತಿನ್ನುವ ಹಣ್ಣು ಹೋಗುವ ದಾರಿ ಕೇಳುವ ಹಾಡು ಕಟ್ಟುವ ಮನೆ

ಅಲ್ಲಗಳೆಯುವ ರೂಪ

ಹಿಂದಿನ ರೂಪ ಮಾಡಿದ ಕೆಲಸ ಮಾಡದ ಕೆಲಸ ತಿಂದ ಹಣ್ಣು ಹೋದ ದಾರಿ ಕೇಳಿದ ಹಾಡು ಕಟ್ಟಿದ ಮನೆ

ತಿನ್ನದ ಹಣ್ಣು ಹೋಗದ ದಾರಿ ಕೇಳದ ಹಾಡು ಕಟ್ಟದ ಮನೆ

Eke →

11.3 ನಾಮ-ಗುಣಪದಗಳ ಬಳಕೆ

ಮೂಲದ್ರಾವಿಡದಲ್ಲಿ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಬೇರುಗಳ ರೂಪದಲ್ಲೇನೇ ಬಳಕೆಯಾಗುತ್ತಿದ್ದಿರಬಹುದು, ಇಲ್ಲವೇ ಕೆಲವು ಒಟ್ಟುಗಳೊಂದಿಗೆ ಸೇರಿಯೂ ಬಳಕೆಯಾಗುತ್ತಿದ್ದಿರಬಹುದು ಎಂಬುದನ್ನು ನಾವು ಮೇಲೆ ನೋಡಿರುವೆವು. ಕನ್ನಡದಲ್ಲಿ ಈ ಎರಡು ರೀತಿಯ ನಾಮ- ಗುಣಪದಗಳ ಬಳಕೆಯನ್ನೂ ಕಾಣಬಹುದು.

(ಕ) ಬೇರುಗಳ ರೂಪದಲ್ಲಿ ಬಳಕೆ

ಮುಂ
ನಲ್ ಬೆಳ್

ಕೆಂಬಣ್ಣ, ಕೆಂಬರಲ್, ಕೆಂಬಿಸಿಲ್, ಕೆಮ್ಮಣ್ಣು ಮುಂಗಣ್ಣು, ಮುಂಗಾಲು, ಮುಂಗೊರಲ್
ತಣ್ಗದಿರ್, ತಣ್ಣೆಲರ್, ತಣ್ಬನಿ, ತಣ್ಗೊಳ ನಲ್ಗುದುರೆ, ನಲ್ಗಾದೆ, ನಲ್ಲುಣಿಸು ಬೆಳ್ಗಡಲ್, ಬೆಳ್ಗೊಡೆ, ಬೆಳ್ನೊರೆ, ಬೆಳ್ಳಾನೆ

(ಚ) ಒಟ್ಟುಗಳೊಂದಿಗೆ ಬಳಕೆ ಪೊಸ್-ಅ ಪೞ್-ಅ

ಪೊಸ ಕಂಪು, ಪೊಸ ಪೂ, ಪೊಸದಳಿರ್ ಕಿಸುಗಣ್, ಕಿಸುವಣ್ಣ, ಕಿಸುಗಲ್, ಕಿಸುಗಾಡು ಬಿಳಿಗಱಿಕೆ, ಬಿಳಿಗಡ್ಡ, ಬಿಳಿಗೂದಲು ಪೞಗನ್ನಡ, ಪೞನೆಲ್, ಪೞನವಿರ್

ನಿಡುದೋಳ್, ನಿಡುಗರುಳ್, ನಿಡುಗಿಚ್ಚು

ಮೇಲೆ ಸೂಚಿಸಿದ ಹಾಗೆ, ಎಣಿಕೆಯ ಪದಗಳ ಮತ್ತು ತೋರುಗ ಪದಗಳ ಮೊದಲನೆಯ ಅಂಶಗಳೂ (ಒರ್, ಇರ್, ಮೂ; ಆ, ಈ, ಊ, ಯಾವ) ಗುಣಪದಗಳಾಗಿ ಬಳಕೆಯಾಗಬಲ್ಲುವಾಗಿದ್ದು, ಮೂಲದ್ರಾವಿಡದ ಈ ಬಳಕೆ ಹಳೆಗನ್ನಡದಲ್ಲೂ ಉಳಿದುಕೊಂಡಿದೆ.

ಎಣಿಕೆಯ ಪದ
ಇರ್ಕಾಲು
ಮೂಗೊಳ ನಾಲ್ದಿಂಗಳ್ ಒರ್ಪೆಸರ್

ತೋರುಗ ಪದ ಆ ಮನೆ ಈ ಬಂದರ್ (ಬಂದವರು)

ಊ ಬನಮ್

ಆವ ಆನೆಗಳ್

ಆದರೆ, ಹೊಸಗನ್ನಡದಲ್ಲಿ ತೋರುಗ ಪದಗಳ ಮೊದಲನೆಯ ಅಂಶ ಮಾತ್ರ ಈ ರೀತಿ ನಾಮ-ಗುಣಪದವಾಗಿ ಬಳಕೆಯಾಗಬಲ್ಲುದಲ್ಲದೆ ಎಣಿಕೆಯ ಪದಗಳ ಮೊದಲನೆಯ ಅಂಶಕ್ಕೆ ಅಂತಹ ಬಳಕೆಯಿಲ್ಲ. ಕೆಲವು ಜೋಡುಪದಗಳಲ್ಲಿ ಮಾತ್ರ ಅದು ನಾಮಪದಗಳೊಂದಿಗೆ ಆ ರೀತಿ ಬಂದಿರುವುದನ್ನು ಕಾಣಬಹುದು (ಇಬ್ಬರು, ಮೂವರು, ಒಗ್ಗಟ್ಟು).

Eke →

11.3.1 ಮೂಲದ್ರಾವಿಡದ ಸೇರಿಕೆಯ ಬದಲಾವಣೆಗಳು

ನಾಮ-ಗುಣಪದಗಳನ್ನು ಬೇರುಗಳ ರೂಪದಲ್ಲಿ ಬಳಸಿದಾಗ, ಅವು ಕೆಲವು ಸೇರಿಕೆಯ ನಿಯಮಗಳಿಗೊಳಗಾಗುವುದನ್ನು ಕಾಣಬಹುದು. ಈ ನಿಯಮ ಗಳಲ್ಲಿ ಕೆಲವು ಮೂಲದ್ರಾವಿಡದಲ್ಲೇನೇ ಬಳಕೆಯಲ್ಲಿದ್ದಿರಬೇಕು.

(1) ಉದ್ದ ಸ್ವರವಿರುವ ಕೀೞ್ ‘ಕೆಳ’, ಪೇರ್ ‘ದೊಡ್ಡ’, ಕಾರ್ ‘ಕಪ್ಪು’ ಮತ್ತು ಮಾಱ್ ‘ಮತ್ತಿನ’ ಗುಣಪದಗಳ ಅನಂತರ ಮತ್ತು ಓರ್ ‘ಒಂದು’, ಈರ್ ‘ಎರಡು’, ಮೂಱ್ ‘ಮೂರು’ ಮತ್ತು ಆಱ್ ‘ಆರು’ ಎಣಿಕೆಯ ಪದಗಳ ಅನಂತರ (<*ಚಾಱ್) ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಉದ್ದಸ್ವರ ಬದಲಾಗದೆ

ಉಳಿಯುತ್ತದೆ; ಆದರೆ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅದು ಗಿಡ್ಡ ಸ್ವರವಾಗಿ ಬದಲಾಗುತ್ತದೆ (ಎಂದರೆ, ಈ ಬೇರುಗಳಿಗೆ ಎರಡೆರಡು ರೂಪಗಳಿವೆ).

ಉದ್ದಸ್ವರದ ರೂಪ ಕೀೞಲೆ, ಕೀೞಸಳ್ ಪೇರಡವಿ, ಪೇರರ್ಬಿ ಕಾರೆಳ್ಳು, ಕಾರಡವಿ ಮಾಱಡಿ, ಮಾಱೂಡ್ಡು ಓರಡಿ, ಓರೊರ್ಮೆ ಈರಡಿ, ಈರಯ್ದು ಮೂಱು, ಮೂಱಡಿ ಆಱಡಿ, ಆಱಾಟ

ಗಿಡ್ಡಸ್ವರದ ರೂಪ ಕಿೞ್ಗವಲ್, ಕಿೞ್ಗಣ್ಣು ಪೆರ್ಗಡಲ್, ಪೆರ್ಗಿಚ್ಚು ಕರ್ಪೊಗೆ, ಕರ್ವಿಸಿಲ್ ಮಱುಮಾತು, ಮಱುವಾಳ್ ಒರ್ನುಡಿ, ಒರ್ಪೆಸರ್ ಇರ್ತಲೆ, ಇರ್ಕಿವಿ ಮುಕ್ಕಣ್, ಮುನ್ನೂರು ಅಱುನೂಱು, ಅಱುವತ್ತು

(2) ಮೇಲಿನ ನಿಯಮವನ್ನು ಹೋಲುವ ಇನ್ನೊಂದು ನಿಯಮ ಕಟ್್ಟ ‘ಹೆಚ್ಚಿನ’, ಕುಱ್ಱ್ ‘ಚಿಕ್ಕ’, ನಟ್್ಟ ‘ನಡುವಿನ’, ನಿಟ್್ಟ ‘ಉದ್ದ’ ಮತ್ತು ಮುತ್್ತ ‘ಮುದಿ’ ಗುಣಬೇರುಗಳ ಬಳಕೆಯಲ್ಲಿ ಕಾಣಿಸುತ್ತದೆ.

ಈ ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಕೊನೆಯ ಇಮ್ಮಡಿ ವ್ಯಂಜನ ಬದಲಾಗದಿರುತ್ತದೆ ಮತ್ತು ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಆ ಇಮ್ಮಡಿ ವ್ಯಂಜನ ಒತ್ತೆ ರೂಪಕ್ಕೆ ಬದಲಾಗುತ್ತದೆ.

ಇಮ್ಮಡಿ ವ್ಯಂಜನ ಕಟ್ಟಿರುವೆ, ಕಟ್ಟುಬ್ಬಸ ಕುತ್ತೆಸಳ್, ಕುತ್ತಳೆ ನಟ್ಟಡವಿ, ನಟ್ಟಿರುಳ್ ನಿಟ್ಟುಸಿರ್, ನಿಟ್ಟೆಲುವು ಮುತ್ತಜ್ಜ, ಮುತ್ತಪ್ಪ

ಒತ್ತೆ ವ್ಯಂಜನ ಕಡುಗೆಂಪು, ಕಡುಬಡವ ಕುಱುಗಡ್ಡ, ಕುಱುವಜ್ಜೆ ನಡುಗಡಲ್, ನಡುಗಂಬ ನಿಡುದೋಳ್, ನಿಡುಗೊಂಬು ಮುದುಗಾಗೆ, ಮುದುವರ್ದು

ಕಾಣಿಸಲು

(3) ಮೇಲೆ ವಿವರಿಸಿದ ಸೇರಿಕೆಯ ನಿಯಮಗಳು ಈ ಬೇರುಗಳ ಕಾರಣವೇನೆಂದರೆ, ಅವುಗಳ ಅನಂತರ ಬಳಕೆಯಲ್ಲಿ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಕೊನೆಯಲ್ಲಿ ಉ ಎಂಬ ಒಂದು ಸ್ವರ ಒಟ್ಟು ಸೇರಿಕೊಳ್ಳುತ್ತದೆ; ಈ ರೀತಿ ಬೇರುಗಳ ಅನಂತರ ಒಂದು ಸ್ವರ ಒಟ್ಟು (ಇಲ್ಲವೇ ಸ್ವರದಲ್ಲಿ ಮೊದಲಾಗುವ ಒಟ್ಟು) ಸೇರಿದಾಗ, ಅವುಗಳ ಉದ್ದ ಸ್ವರ ಗಿಡ್ಡವಾಗುತ್ತದೆ ಮತ್ತು ಕೊನೆಯ ಇಮ್ಮಡಿ ವ್ಯಂಜನ ಒತ್ತೆ ವ್ಯಂಜನವಾಗುತ್ತದೆ ಎಂಬುದನ್ನು ನಾವು (2.3.1) ಮತ್ತು (4.4.1)ರಲ್ಲಿ ನೋಡಿದ್ದೇವೆ.

(ಕ) ಉದ್ದ ಸ್ವರವಿರುವ ಕೀೞ್, ಪೇರ್, ಕಾರ್, ಮಾಱ್, ಓರ್, ಈರ್, ಮೂಱ್, ಆಱ್ ಬೇರುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗಲೆಲ್ಲ ಅವುಗಳೊಂದಿಗೆ ಉ ಒಟ್ಟು ಸೇರಿಕೊಳ್ಳುತ್ತದೆ; ಮತ್ತು ಇದರಿಂದಾಗಿ ಅವುಗಳ ಉದ್ದಸ್ವರ ಗಿಡ್ಡವಾಗುತ್ತದೆ.

ಆದರೆ, ಮೇಲಿನ ಕನ್ನಡ ಪದಗಳಲ್ಲಿ ಈ ಒಟ್ಟು ಹೆಚ್ಚಿನೆಡೆಗಳಲ್ಲೂ ಬಿದ್ದುಹೋಗಿದೆ ಎಂಬುದನ್ನು ಕಿೞ್ಗವಲ್ (<ಕಿೞುಗವಲ್), ಪೆರ್ಗಡಲ್ (<ಪೆರುಗಡಲ್, ಒರ್ನುಡಿ (<ಒರುನುಡಿ), ಇರ್ತಲೆ (<ಇರುತಲೆ) ಮೊದಲಾದ ಬಳಕೆಗಳಲ್ಲಿ ಕಾಣಬಹುದು.

ಆದರೆ, ಮಱುಮಾತು, ಮಱುವಾಳ್, ಅಱುನೂಱು, ಅಱುವತ್ತು ಎಂಬವುಗಳಲ್ಲಿ ಈ ಉ ಒಟ್ಟು ಬಿದ್ದುಹೋಗದೆ ಉಳಿದಿದೆ. ಮುಕ್ಕಣ್, ಮುನ್ನೂರು ಎಂಬವುಗಳಲ್ಲಿ ಕನ್ನಡದವೇ ಆದ ಬೇರೆ ಕೆಲವು ವ್ಯಂಜನಗಳ ಬದಲಾವಣೆಗಳೂ ನಡೆದಿವೆ (11.3.2 ನೋಡಿ).

ಮೂರು ಉಲಿಕಂತೆಗಳಿರುವ ಪದಗಳಲ್ಲಿ ಗಿಡ್ಡ ಸ್ವರಗಳು ಮಾತ್ರ ಬಂದಿದ್ದು, ಆ ಪದಗಳ ಎರಡನೆಯ ಉಲಿಕಂತೆಯಲ್ಲಿ ರಕಾರ ಇಲ್ಲವೇ ೞಕಾರವಿದ್ದಾಗ, ಎರಡನೆಯ ಗಿಡ್ಡ ಸ್ವರ ಬಿದ್ದುಹೋಗುತ್ತದೆ ಎಂಬ ಕನ್ನಡದ ನಿಯಮವೇ (3.5.1 ನೋಡಿ) ಈ ರೀತಿ ಮೇಲೆ ಕೊಟ್ಟಿರುವ

ಪದಗಳಲ್ಲಿ ಬೇರುಗಳ ಅನಂತರ ಬಂದಿದ್ದ ಉ ಒಟ್ಟು ಬಿದ್ದುಹೋಗಲು

(ಚ) ಇಮ್ಮಡಿ ವ್ಯಂಜನವಿರುವ ಕಟ್್ಟ, ಕುಱ್ಱ್, ನಟ್್ಟ, ನಿಟ್್ಟ, ಮುತ್್ತ (<*ಮುಱ್ಱ್) ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳ ಇಮ್ಮಡಿ ವ್ಯಂಜನ ಬದಲಾಗದೆ ಉಳಿದಿದೆಯುಂಬುದನ್ನು ಕಟ್ಟಿರುವೆ, ಕುತ್ತೆಸಳ್, ಕಟ್ಟಡವಿ ಮೊದಲಾದ ಪದಗಳಲ್ಲಿ ಕಾಣಬಹುದು.

ಇದಕ್ಕೆ ಬದಲು, ಅವುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಅವುಗಳೊಂದಿಗೆ ಉ ಒಟ್ಟು ಸೇರಿಕೊಳ್ಳುತ್ತದೆ ಎಂಬುದನ್ನು ಮತ್ತು ಇದರಿಂದಾಗಿ ಅವುಗಳ ಇಮ್ಮಡಿ ವ್ಯಂಜನ ಒತ್ತೆ ವ್ಯಂಜನವಾಗಿ (ಕಡು, ಕುಱು, ನಡು, ನಿಡು ಮತ್ತು ಮುದು ಎಂಬುದಾಗಿ) ಬದಲಾಗುತ್ತದೆ ಎಂಬುದನ್ನು ಕಡುಗೆಂಪು, ಕುಱುಗಡ್ಡೆ, ನಡುಗಡಲ್ ಮೊದಲಾದ ಪದಗಳಲ್ಲಿ ಕಾಣಬಹುದು.

ಉದ್ದಸ್ವರ ಗಿಡ್ಡವಾಗುವ ಮೇಲಿನ (ಕ) ನಿಯಮಕ್ಕೆ ಕನ್ನಡದಲ್ಲಿ ಕೆಲವು ಅಪವಾದಗಳೂ ಇವೆ. ಮೂಲದ್ರಾವಿಡದ ಬದಲಾವಣೆ ನಡೆದ ಅನಂತರ ಕನ್ನಡದಲ್ಲೇನೇ ತಯಾರಾಗಿರಬಹುದಾದ ಜೋಡುಪದಗಳಲ್ಲಿ ಇಂತಹ ಅಪವಾದಗಳನ್ನು ಕಾಣಬಹುದು.

ಉದಾಹರಣೆಗಾಗಿ, ಮೂಗಾವುದ, ಮೂಗಂದಾಯ, ಮೂಗೊಳ, ಮೂವತ್ತು (<ಮೂಱ್ ಪತ್ತು) ಜೋಡುಪದಗಳಲ್ಲಿ ಮೂ(ಱ್) ಪದದ ಅನಂತರ ಪದಗಳು ಬಂದಿವೆಯಾದರೂ ಅದರ ಉದ್ದಸ್ವರ ಗಿಡ್ಡಸ್ವರವಾಗದೆ ಉಳಿದಿದೆ.

ವ್ಯಂಜನಗಳಲ್ಲಿ

ಮೊದಲಾಗುವ

Eke →

11.3.2 ಕನ್ನಡದವೇ ಆದ ಸೇರಿಕೆಯ ಬದಲಾವಣೆಗಳು

ಕನ್ನಡದವೇ ಆದ ಕೆಲವು ಸೇರಿಕೆಯ ಬದಲಾವಣೆಗಳನ್ನೂ ಗುಣಪದಗಳ ವ್ಯಂಜನಗಳಲ್ಲಿ ಕಾಣಬಹುದು. ಇವು ಬಳಕೆಯಲ್ಲಿ ಕೊನೆಗೊಳ್ಳುವ ಮೊದಲಾಗುವ ಗುಣಪದಗಳು ನಾಮಪದಗಳೊಂದಿಗೆ ಬಂದಾಗ ಕಾಣಿಸಿಕೊಳ್ಳುತ್ತವೆ.

ಮುಕ್ಯವಾಗಿ ವ್ಯಂಜನಗಳಲ್ಲಿ

(1) ರಕಾರದಲ್ಲಿ ಕೊನೆಗೊಳ್ಳುವ ಕಾರ್ ‘ಕಪ್ಪು’, ಪೇರ್ ‘ದೊಡ್ಡ’, ಓರ್’‘ಒಂದು’, ಈರ್ ‘ಎರಡು’ ಮತ್ತು ಮೂಱ್ ‘ಮೂರು’ ಪದಗಳಿಗೆ ವ್ಯಂಜನದಲ್ಲಿ ಮೊದಲಾಗುವ ಪದಗಳು ಸೇರಿದಾಗ ಉ ಒಟ್ಟಿನಲ್ಲಿ ಕೊನೆಗೊಳ್ಳುವ ಮತ್ತು ಬೇರಿನ ಉದ್ದಸ್ವರ ಗಿಡ್ಡವಾಗಿರುವ ಕರು, ಪೆರು, ಒರು, ಇರು ಮತ್ತು ಮುರು ರೂಪಗಳಲ್ಲಿ ಬರುತ್ತವೆ ಎಂಬುದನ್ನು ಮೇಲೆ 11.3.1ರಲ್ಲಿ ನೋಡಿರುವೆವು.

ಹೆಚ್ಚಿನೆಡೆಗಳಲ್ಲೂ ಇವುಗಳ ಕೊನೆಯ ಉ ಒಟ್ಟು ಕನ್ನಡದಲ್ಲಿ ಬಿದ್ದು ಹೋಗಿದೆ. ಇದಲ್ಲದೆ, ಈ ಬೇರುಗಳ ಕೊನೆಯಲ್ಲಿರುವ ರಕಾರ ಮತ್ತು ಱಕಾರಗಳು ಅವುಗಳ ಅನಂತರ ಬಂದ ವ್ಯಂಜನಗಳೊಂದಿಗೆ ಸೇರಿಹೋಗಿ ಅವೆರಡೂ ಹಲವು ರೀತಿಯ ಬದಲಾವಣೆಗಳನ್ನು ತೋರಿಸುತ್ತವೆ.

ಉದಾಹರಣೆಗಾಗಿ, ಒರ್ ‘ಒಂದು’ ಬೇರಿನ ಕೊನೆಯ ರಕಾರ, ಅದರ ಅನಂತರ ಕ, ಚ (ಸ), ತ ಮತ್ತು ಪ ವ್ಯಂಜನಗಳು ಬಂದಾಗ, ಅವುಗಳದೇ ರೂಪವನ್ನು ಪಡೆಯುತ್ತದೆ (ಒಕ್ಕಟ್ಟು, ಒಚ್ಚೆರಗು, ಒತ್ತಟ್ಟು, ಒಪೊ್ಪತ್ತು); ಈ ವ್ಯಂಜನಗಳು ಕೊರಳಿಸಿದ ರೂಪವನ್ನು ಪಡೆದಿರುವಲ್ಲಿ ಮತ್ತು ವಕಾರ ಬಕಾರವಾಗಿರುವಲ್ಲಿ ರಕಾರವೂ ಅಂತಹದೇ ರೂಪವನ್ನು (ಒಗ್ಗಟ್ಟು, ಒಬ್ಬ). ಅದರ ಅನಂತರ ಮೂಗುಲಿ ಪಡೆಯುತ್ತದೆ ಬಂದಿರುವಲ್ಲೂ ಅಂತಹದೇ ರೂಪವನ್ನು ಪಡೆಯುತ್ತದೆ (ಒಮ್ಮೆ).

(2) ಮೂಗುಲಿಯಲ್ಲಿ ಕೊನೆಗೊಳ್ಳುವ ಇನ್ ‘ಸಿಹಿ’, ಕೆಮ್/ಚೆಮ್ ‘ಕೆಂಪು’, ತಣ್ ‘ತಂಪು’, ಪಿನ್ ‘ಹಿಂದೆ’, ಮುನ್ ‘ಮುಂದೆ’ ಗುಣಪದಗಳ ಕೊನೆಯ ವ್ಯಂಜನವೂ ಅವುಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ಪದಗಳು ಬಂದಾಗ ಹಲವು ರೀತಿಯ ಬದಲಾವಣೆಗಳನ್ನು ತೋರಿಸುತ್ತವೆ.

ಉದಾಹರಣೆಗಾಗಿ, ಕೆಂ ‘ಕೆಂಪು’ ಪದಕ್ಕೆ ಕೆಣ್, ಕೆನ್ ಮತ್ತು ಕೆಮ್ ಎಂಬ ರೂಪಗಳಿರುವುದನ್ನು ಕೆಂಗಣ್, ಕೆಂಜಡೆ, ಕೆಣ್ಡ, ಕೆನ್ದಳಿರ್, ಕೆನ್ನೀರ್, ಕೆಮ್ಬಿಸಿಲ್, ಕೆಮ್ಮಣ್ ಮೊದಲಾದ ಪದಗಳಲ್ಲಿ ಕಾಣಬಹುದು.

ಕನ್ನಡದ

ಕಗ್ಗಂಟು,

ಕಗ್ಗಾಯಿ,

ಕಗ್ಗತ್ತಲೆ,

ಕಗ್ಗೊಲೆ ಮೊದಲಾದ ಕೆಲವು ಜೋಡುಪದಗಳಲ್ಲಿ ಕಟ್್ಟ ಗುಣಪದ ಕಡು ರೂಪಕ್ಕೆ ಕೊನೆಯ ಉ ಒಟ್ಟು ಬದಲಾಗಿದೆಯಾದರೂ ಅನಂತರ ಅದರ ಬಿದ್ದುಹೋಗಿದೆ ಕಕಾರ(ಇಲ್ಲವೇ ಮತ್ತು ಗಕಾರ)ದೊಂದಿಗೆ ಸೇರಿ ಅವೆರಡೂ ಗಕಾರಗಳಾಗಿವೆ (ಕಡು+ಗಂಟು > ಕಗ್ಗಂಟು, ಕಡು+ ಕತ್ತಲೆ > ಕಗ್ಗತ್ತಲೆ).

ಮುಂದಿನ

ಪದಗಳಲ್ಲಿ

ಮೊದಲಾದ

(4) ಪೆರ್-ಪಿರಿ, ಹಿರಿ; ಬೆಳ್-ಬಿಳಿ, ಬಿಳಿಮೋಡ, ಬಿಳ್ಪು; ಬೆಚ್- ಬಿಸಿ, ಬಿಸಿಲು, ಬಿಸಿನೀರ್; ಎದುರ್-ಇದಿರ್; ಕೆಚ್-ಕಿಸು, ಕಿಸ್ಗಾರ, ಕಿಸುವೊನ್ ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ನಡೆದ ಎಕಾರ ಇಕಾರವಾಗುವ ಬದಲಾವಣೆಯನ್ನು ಕಾಣಬಹುದು (2.2.2 ನೋಡಿ). ಜೋಡುಪದಗಳಲ್ಲಿ

ಬದಲಾವಣೆಗಳೆಲ್ಲ ಸಾಮಾನ್ಯವಾಗಿ ಅನಿಯಮಿತವಾಗಿರುತ್ತವೆ (ಬಟ್ 2002:148 ನೋಡಿ). ಈ ಕಾರಣಕ್ಕಾಗಿ ಮೇಲಿನ ಬದಲಾವಣೆಗಳಿಗೂ ಕನ್ನಡದಲ್ಲೇನೇ ಹಲವು ಅಪವಾದಗಳನ್ನು ಕಾಣಬಹುದು.

ನಡೆಯುವ

ಉದಾಹರಣೆಗಾಗಿ, ನೇರ್ ‘ನೇರ’ ಪದದ ಉದ್ದಸ್ವರ ನೇರ್ಗೋಲ್, ನೇರ್ಪು ಪದಗಳಲ್ಲಿ ಗಿಡ್ಡಸ್ವರವಾಗಿಲ್ಲ; ನುಣ್ ‘ನುಣ್ಣಗೆ’ ಪದದ ಣಕಾರ ನುಣ್ಗದಪು, ನುಣ್ದೊಡೆ, ನುಣ್ಬನಿ, ನುಣ್ಮಾತು ಪದಗಳಲ್ಲಿ ಅದರ ಅನಂತರ ಬಂದ ವ್ಯಂಜನಕ್ಕನುಗುಣವಾಗಿ ಬದಲಾಗಿಲ್ಲ. ಇಂತಹ ಬದಲಾವಣೆಗಳೆಲ್ಲ ನಿಜಕ್ಕೂ ಒಂದು ನುಡಿಯ ಇಲ್ಲವೇ ಒಳ ನುಡಿಯ ‘ಒಲವು’ಗಳಲ್ಲದೆ ‘ನಿಯಮ’ಗಳಲ್ಲ.

Eke →

11.4 ಕ್ರಿಯಾ-ಗುಣಪದಗಳು

ಕ್ರಿಯಾ-ಗುಣಪದಗಳು ಕ್ರಿಯಾಪದಗಳ ಮುಕ್ಯವಾಗಿ ಕ್ರಿಯಾಪದಗಳು ಸೂಚಿಸುವ ಕೆಲಸದ ಜಾಗ (ಮೇಲೆ, ಕೆಳಗೆ, ಒಳಗೆ, ಅಲ್ಲಿ, ಇಲ್ಲಿ,

ಸೂಚಿಸಬಲ್ಲ ರೀತಿಯವುಗಳಾಗಿರುತ್ತವೆ.

ಗುಣವನ್ನು

ಮೂರು

ಹತ್ತಿರ), ಸಮಯ (ನಾಳೆ, ಅಂದು, ಇಂದು, ಆಗ, ಬಳಿಕ, ಒಡನೆ, ಕೂಡಲೆ, ಬೆಳಿಗ್ಗೆ) ಮತ್ತು ಪ್ರಕಾರ (ಇಂತು, ಹಾಗೆ, ಬಱಿದೆ, ಮತ್ತೆ, ಗಡಗಡನೆ, ಬಗ್ಗನೆ, ಕತಕತನೆ, ದಿಡೀ ರನೆ) ಎಂಬುದಾಗಿ ಮೂರು ರೀತಿಯ ಗುಣಗಳನ್ನು ಇವು ಸೂಚಿಸುತ್ತವೆ.

ಈ ಮೂರು ರೀತಿಯ ಗುಣಪದಗಳಾಗಿಯೂ ತೋರುಗ ಪದಗಳ ಬಳಕೆಯಾಗುತ್ತದೆಯೆಂಬುದನ್ನು ಗಮನಿಸಬಹುದು (ಅಲ್ಲಿ, ಅಂದು, ಹಾಗೆ). ಉಳಿದವುಗಳಲ್ಲಿ ಸಮಯಗಳನ್ನು ಸೂಚಿಸುವವುಗಳು ಮುಕ್ಯವಾಗಿ ನಾಮಪದಗಳಿಗೆ ಇಲ್ಲವೇ ನಾಮ- ಗುಣಪದಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿದವುಗಳು ಮತ್ತು ಪ್ರಕಾರವನ್ನು ಸೂಚಿಸುವವುಗಳು ಮುಕ್ಯವಾಗಿ ಅಣಕಿಸುವ ಪದಗಳು.

ಮತ್ತು

ನಾಮ-ಗುಣಪದಗಳಿಗೆ ಅಗೆ ಇಲ್ಲವೇ ಅನೆ ಒಟ್ಟನ್ನು ಸೇರಿಸಿ ಕನ್ನಡದಲ್ಲಿ ಕ್ರಿಯಾ-ಗುಣಪದಗಳನ್ನು ತಯಾರಿಸಲಾಗುತ್ತದೆ. ಇವು ಅನ್ ‘ಹೇಳು’ ಮತ್ತು ಆಗು ಕ್ರಿಯಾಪದಗಳಿಂದ ತಯಾರಾದ ಒಟ್ಟುಗಳಿರಬೇಕು.

ಗುಣಪದ ಮೆಲ್
ದುಂಡು

ತೆಳ್ಳಗೆ
ಮೆಲ್ಲಗೆ
ನೆಟ್ಟಗೆ
ಕರ್ರಗೆ
ದುಂಡಗೆ

ಅನೆ ಒಟ್ಟು ತೆಳ್ಳನೆ
ಮೆಲ್ಲನೆ ನೆಟ್ಟನೆ ಕರ್ರನೆ ದುಂಡನೆ

ಜಾಗವನ್ನು ಸೂಚಿಸುವ ಗುಣಪದಗಳೊಂದಿಗೆ ಬರುವ (ಕೆಳಗೆ, ಒಳಗೆ, ಹೊರಗೆ) ಒಟ್ಟು ಇದಕ್ಕಿಂತ ಬೇರಾಗಿರುವ ಕೊನೆ ಒಟ್ಟು (9.6 ನೋಡಿ).

Eke →

11.5 ಅಣಕಿಸುವ ಪದಗಳು

ಅರಿವು, ತೋರಿಕೆ, ಉಲಿ ಮೊದಲಾದುವನ್ನು ಅಣಕಿಸುವಂತಹ ಸರ್ರನೆ, ದೊಪ್ಪನೆ, ತಟಕ್ಕನೆ, ಕಿಲಕಿಲನೆ, ಬಡಬಡನೆ ಮೊದಲಾದ ಹಲವು

ಪದಗಳು ಕ್ರಿಯಾಪದಗಳ ಗುಣಗಳನ್ನು ಸೂಚಿಸುವುದಕ್ಕಾಗಿ ಹೆಚ್ಚಿನ ದ್ರಾವಿಡ ನುಡಿಗಳಲ್ಲೂ ಬಳಕೆಯಾಗುತ್ತಿದ್ದು, ಅವನ್ನು ಮೂಲದ್ರಾವಿಡ ಪದಗಳೆಂದು ತಿಳಿಯಲು ಸಾದ್ಯವಿದೆ.

ಆದರೆ ಇಂತಹ ಅಣಕಿಸುವ ಪದಗಳು ಮೇಲೆ ಸೂಚಿಸಿದ ಹಾಗೆ ಹಲವು ವಿಶಯಗಳಲ್ಲಿ ಇತರ ಪದಗಳಿಂದ ಬೇರಾಗಿರುವ ಕಾರಣ, ಅವು ಒಂದು ರೀತಿಯಲ್ಲಿ ವ್ಯಾಕರಣ ಮತ್ತು ಪದಕೋಶಗಳ ಹೊರಗೆ ನಿಲ್ಲುತ್ತವೆ. ನುಡಿಗಳಲ್ಲಿ ನಡೆಯುವ ಹಲವು ರೀತಿಯ ಬದಲಾವಣೆಗಳು ಅವನ್ನು ಮುಟ್ಟುವುದಿಲ್ಲ. ಉದಾಹರಣೆಗಾಗಿ,

ಪಕಾರ ಹಕಾರವಾಗುವ ಬದಲಾವಣೆ ಪಕ್ಕನೆ, ಪಟಪಟನೆ, ಪಚಕ್ಕನೆ, ಪರ್ರನೆ, ಪಳಪಳನೆ ಮೊದಲಾದ ಅಣಕಿಸುವ ಪದಗಳನ್ನು ತಟ್ಟಿಲ್ಲ ಮತ್ತು (2) ಕಿಲಕಿಲನೆ ಇಕಾರ ಎಕಾರವಾಗುವ ಬದಲಾವಣೆ ಮೊದಲಾದುವನ್ನು ತಟ್ಟಿಲ್ಲ.

ನಡೆದಿರುವ

ಕನ್ನಡದಲ್ಲಿ

ಗಿರಗಿರನೆ,

(3) ಮೂಲದ್ರಾವಿಡ ಪದಗಳಲ್ಲಿದ್ದ ಇಮ್ಮಡಿ ಱಕಾರ ಕನ್ನಡದಲ್ಲಿ ತಕಾರವಾಗಿ ಬದಲಾಗಿದೆ (4.4 ನೋಡಿ). ಆದರೆ ಅಣಕಿಸುವ ಪದಗಳಲ್ಲಿ ಅದು ಬದಲಾಗದೆ ಉಳಿದಿದೆ (ಗಿಱ್ಱನೆ, ಬಱ್ಱನೆ, ತಿಱ್ಱನೆ, ಡಱ್ಱನೆ, ಸುಱ್ಱನೆ).

ದ್ರಾವಿಡ

ಪದಗಳಿಗಿಂತ

ನುಡಿಗಳ ಇತರ

ಬೇರೆ ಹಲವು ವಿಶಯಗಳಲ್ಲೂ ಈ ಪದಗಳು ಮೂಲದ್ರಾವಿಡದ ಇಲ್ಲವೇ ಬೇರಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, (4) ಇವು ಇತರ ಪದಗಳ ಹಾಗೆ ಸ್ವರದಲ್ಲಿ ಮೊದಲಾಗುವುದಿಲ್ಲ. ಅವುಗಳ ಮೊದಲಿಗೆ ಯಾವಾಗಲೂ ಒಂದು ವ್ಯಂಜನ ಬಂದಿರುತ್ತದೆ (ಅಯ್ಕನೆ ಮತ್ತು ಒಯ್ಕನೆ ಎಂಬ ಎರಡು ಸ್ವರದಲ್ಲಿ ಮೊದಲಾಗುವ ಅಣಕಿಸುವ ಪದಗಳು ಇದಕ್ಕೆ ಅಪವಾದಗಳಾಗಿ ಕಾಣಿಸುತ್ತವೆ).

(5) ಇಂತಹ ಗುಣಪದಗಳು ಜೋಡಿಯಾಗಿ ಬರುವುದಿದ್ದರೆ (ಗಡ ಗಡ, ಗಮಗಮ, ಗುಸುಗುಸು) ಅವುಗಳಲ್ಲಿ ಒತ್ತಕ್ಶರಗಳು ಇಲ್ಲವೇ

ಉದ್ದ ಸ್ವರ ಇರುವುದಿಲ್ಲ ಮತ್ತು ಒತ್ತೆಯಾಗಿ ಬರುವುದಿದ್ದರೆ ಒತ್ತಕ್ಶರ, ಉದ್ದಸ್ವರ (ಇಲ್ಲವೇ ಮಹಾಪ್ರಾಣಕ್ಶರ) ಇಲ್ಲದಿರುವುದಿಲ್ಲ (ಬರ್ರನೆ, ಬಗ್ಗನೆ, ದೊಪ್ಪನೆ, ಸರಕ್ಕನೆ, ಪಟಾರನೆ, ಧಿಗಿಲನೆ, ಘೞಿಲನೆ) ಎಂಬಂತಹ ನಿಯಮವನ್ನೂ ಕನ್ನಡದ ಮಟ್ಟಿಗೆ ಮಾಡಲು ಸಾದ್ಯವಿದೆ.

(6) ಇತರ ಪದಗಳಲ್ಲಿಲ್ಲದಿರುವ ಮಹಾಪ್ರಾಣಾಕ್ಶರಗಳು ಇಂತಹ ಪದಗಳಲ್ಲಿ ಕಾಣಿಸಿಕೊಳ್ಳುತ್ತವೆ (ಖಳಿಲನೆ, ಭುಗಿಲ್ಲನೆ, ದುಢುಮ್ಮನೆ, ಭೋಂಕನೆ, ಛಟಛಟ).

(7) ಇಂತಹ ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಕೊರಳಿಸಿದ ದಡಬಡ) ತಡೆಯುಲಿಗಳೂ ಬರಬಲ್ಲುವಾಗಿದ್ದುವು ಎಂಬುದಾಗಿ ಎಮೆನೋ ಮತ್ತು ಹಾರ್್ಟ (1993) ವಾದಿಸಿದ್ದಾರೆ. ಇತರ ಪದಗಳಲ್ಲಿ ಈ ರೀತಿ ಪದಗಳ ಮೊದಲಿಗೆ ಕೊರಳಿಸಿದ ತಡೆಯುಲಿಗಳು ಮೂಲದ್ರಾವಿಡದಲ್ಲಿ ಬರುತ್ತಿರಲಿಲ್ಲ ಎಂಬುದನ್ನು ನಾವು ಮೇಲೆ ನಾಲ್ಕನೇ ಅದ್ಯಾಯದಲ್ಲಿ (4.1.2) ನೋಡಿರುವೆವು.

(ದಬಕ್ಕನೆ,

ಇಂತಹ ಬೇರೆ ಬೇರೆ ಕಾರಣಗಳಿಗಾಗಿ, ಇವು ಮೂಲದ್ರಾವಿಡದಲ್ಲಿ (ಮತ್ತು ಇವತ್ತಿನ ದ್ರಾವಿಡ ನುಡಿಗಳಲ್ಲಿ) ಇತರ ಪದಗಳಿಂದ ಬೇರಾಗಿ ನಿಲ್ಲುವ ಮತ್ತು ನುಡಿಯ ವ್ಯವಸ್ತೆಯಿಂದ ಹೊರಗಿರುವ ಪದಗಳೆಂದು ಪರಿಗಣಿಸಬೇಕಾಗುತ್ತದೆ.

ಪದಗಳನ್ನು ಕನ್ನಡದ

ಅಣಕಿಸುವ ಮತ್ತು

ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳಬಹುದು ಎಂತಹದಾದರೂ ಬದಲಾವಣೆಗಳಿಗೆ ಒಳಗಾಗಿವೆಯೇ ಎಂಬುದನ್ನು ತಿಳಿಯಲು ಈ ಪದಗಳ ಕುರಿತಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ಚರಿತ್ರೆಯಲ್ಲಿ

Eke →

11.6 ಗುಣಪದಗಳ ನಾಮರೂಪಗಳು

ಗುಣಪದಗಳನ್ನು ನಾಮಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವನ್ನು ನಾಮರೂಪಕ್ಕೆ ಬದಲಾಯಿಸಬೇಕಾಗುತ್ತದೆ. ಹಳೆಗನ್ನಡದಲ್ಲಿ ಇದಕ್ಕಾಗಿ

ಅವುಗಳೊಂದಿಗೆ ಲಿಂಗ-ವಚನಗಳನ್ನು ಸೂಚಿಸುವ ಒಟ್ಟುಗಳನ್ನು (ಅಮ್, ಅಳ್, ಅರ್, ತು, ಉವು ಎಂಬವುಗಳನ್ನು) ಸೇರಿಸಬೇಕಾಗುತ್ತದೆ.

ಗುಣಪದಗಳಿಗಿರುವ ಇಂತಹ ನಾಮರೂಪಗಳ ಸ್ವರೂಪವನ್ನವಲಂಬಿಸಿ

ಹಳೆಗನ್ನಡದ ಗುಣಪದಗಳನ್ನು ಎರಡು ಗುಂಪುಗಳಲ್ಲಿ ಹಂಚಬಹುದು.

(ಕ) ಮೊದಲನೆಯ ಉಲಿಕಂತೆ ಮುಚ್ಚಿರುವ (ವ್ಯಂಜನದಲ್ಲಿ ಕೊನೆ ಗೊಳ್ಳುವ - ಒಳ್ಳಿತು, ಒಳ್ಳಿತ್ತು; ತೆಳ್ಳಿತು, ತೆಳ್ಳಿತ್ತು) ಮತ್ತು ಮೊದಲನೆಯ ಉಲಿಕಂತೆ ತೆರೆದಿದ್ದು (ಸ್ವರದಲ್ಲಿ ಕೊನೆಗೊಳ್ಳುತ್ತಿದ್ದು), ಉದ್ದ ಸ್ವರವಿರುವ ಪದಗಳದು (ನೇರಿತು, ನೇರಿತ್ತು; ಕೂರಿತು, ಕೂರಿತ್ತು) ಒಂದು ಗುಂಪು.

(ಚ) ಮೊದಲನೆಯ ಉಲಿಕಂತೆ ತೆರೆದಿದ್ದು, ಗಿಡ್ಡ ಸ್ವರವಿರುವ

ಪದಗಳದು (ಅಸಿದು, ಇನಿದು) ಇನ್ನೊಂದು ಗುಂಪು.

ಮೂರು ಉಲಿಕಂತೆಗಳಿರುವ ಅಗಲ ಗುಣಪದ ಮೊದಲನೆಯ (ಕ)

ಗುಂಪಿನಲ್ಲೇ ಬರುತ್ತದೆ (ಅಗಲಿತು, ಅಗಲಿತ್ತು).

ಈ ಎರಡು ಗುಂಪುಗಳಲ್ಲಿ ಬರುವ ಗುಣಪದಗಳ ನಾಮರೂಪಗಳು ಬೇರೆ ಬೇರೆ ರೀತಿಯವಾಗಿರುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ರೂಪಾವಳಿಗಳನ್ನು ಗಮನಿಸಬಹುದು.

ಗಂಡಸು
ಹೆಂಗಸು

ಒರ್ವಚನ
ಒಳ್ಳಿದಳ್ ಒಳ್ಳಿತ್ತು, ಒಳ್ಳಿತು

ಗಂಡಸು
ಹೆಂಗಸು

ಪಿರಿಯಳ್

ಹಲವಚನ ಒಳ್ಳಿದರ್ ಒಳ್ಳಿದುವು

ಪಿರಿಯರ್ ಪಿರಿದುವು

ಲಿಂಗ-ವಚನದ ಒಟ್ಟನ್ನು ಸೇರಿಸುವ ಮೊದಲು (ಕ) ಗುಂಪಿನಲ್ಲಿ ಬಂದಿರುವ ಗುಣಪದಗಳಿಗೆ ದ್ ಎಂಬುದನ್ನು ಸೇರಿಸಬೇಕಾಗುತ್ತದೆ; ಮತ್ತು (ಚ) ಗುಂಪಿನಲ್ಲಿ ಬಂದಿರುವ ಗುಣಪದಗಳಿಗೆ ಯ್ ಎಂಬುದನ್ನು ಸೇರಿಸ ಬೇಕಾಗುತ್ತದೆ; ಗಂಡಸು ಮತ್ತು ಹೆಂಗಸರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ‘ಇತರ’ ರೂಪಗಳಲ್ಲಿ ಮಾತ್ರ ಇದು ಅವಶ್ಯವಿಲ್ಲ.

ಆದರೆ, ಈ ‘ಇತರ’ ರೂಪಗಳಲ್ಲಿ ಬರುವ ಒರ್ವಚನದ ಒಟ್ಟಿಗೆ (ಕ) ಗುಂಪಿನ ಗುಣಪದಗಳ ಅನಂತರ ತು ಇಲ್ಲವೇ ತ್ತು ಎಂಬ ರೂಪವಿದೆ ಮತ್ತು (ಚ) ಗುಂಪಿನ ಗುಣಪದಗಳ ಅನಂತರ ದು ಎಂಬ ರೂಪವಿದೆ. ಇದಲ್ಲದೆ, ಈ ಎರಡು ಗುಂಪುಗಳಲ್ಲೂ ಹಲವಚನದ ವು ಒಟ್ಟು ಒರ್ವಚನದ ದು ಒಟ್ಟಿನ ಅನಂತರ ಬರುತ್ತದೆ.

ಮೊದಲಿಗೆ ತೂಕದ ಉಲಿಕಂತೆಯಿರುವ ಗುಣಪದಗಳು (ಕ) ಗುಂಪಿ ನಲ್ಲಿ ಬರುತ್ತವೆ ಮತ್ತು ಹಗುರದ ಉಲಿಕಂತೆಯಿರುವ ಗುಣಪದಗಳು (ಚ) ಗುಂಪಿನಲ್ಲಿ ಬರುತ್ತವೆ ಎಂಬುದಾಗಿಯೂ ಇಲ್ಲಿ ನಿಯಮವನ್ನು ರಚಿಸಬಹುದು.

ಹೊಸಗನ್ನಡದಲ್ಲಿ ಗುಣಪದಗಳ ನಾಮರೂಪಗಳನ್ನು ರಚಿಸುವುದಕ್ಕಾಗಿ ಅವನು, ಅವಳು, ಅವರು, ಅದು, ಅವು ಎಂಬ ತೋರುಗ ಪದಗಳನ್ನು ಸೇರಿಸಲಾಗುತ್ತದೆ.

ಗಂಡಸು
ಹೆಂಗಸು

ಒರ್ವಚನ
ದೊಡ್ಡವನು ದೊಡ್ಡವಳು ದೊಡ್ಡದು

ಹಲವಚನ ದೊಡ್ಡವರು ದೊಡ್ಡವು

ಇದು ಎಲ್ಲಾ ಗುಣಪದಗಳಿಗೂ ಸಮಾನವಾಗಿದ್ದು ಹಳೆಗನ್ನಡದಲ್ಲಿ

ಕಾಣಿಸುವ ಮೇಲಿನ ವ್ಯತ್ಯಾಸ ಹೊಸಗನ್ನಡದಲ್ಲಿ ಉಳಿದಿಲ್ಲ. ದೊಡ್ಡದು-ಉದ್ದದ್ದು;

ಹಳೆದು- ತೋರದ್ದು; ಬಿಳಿದು, ಕರಿದು; ಅಗಲದ್ದು; ಹೊಸತು, ಹಳತು, ಎಳತು

ಹೊಸಗನ್ನಡದ

ಗುಣಪದಗಳಲ್ಲಿ ಈ

ಮೊದಲಾದ ಕೆಲವು ಒಟ್ಟುಗಳು ತೋರಿಸುತ್ತವೆ. ಈ ರೂಪವ್ಯತ್ಯಾಸಗಳನ್ನು ಹಳೆಗನ್ನಡದಲ್ಲಿದ್ದಂತಹ ವ್ಯತ್ಯಾಸಗಳು ಮೇಲೆ ವಿವರಿಸಿದ ನಿಯಮದ ಪಳೆಯಳಿಕೆಯಿರಬಹುದೆಂದು ತೋರುತ್ತದೆ.

Eke →

11.7 ತಿರುಳು

ಮೂಲದ್ರಾವಿಡದಲ್ಲಿ ನಾಮಪದಗಳ ಗುಣಗಳನ್ನು ಸೂಚಿಸುವವು ಮತ್ತು ಕ್ರಿಯಾಪದಗಳ ಗುಣಗಳನ್ನು ಸೂಚಿಸುವವು ಎಂಬುದಾಗಿ ಎರಡು ರೀತಿಯ ಗುಣಪದಗಳಿದ್ದಿರಬೇಕು. ಕನ್ನಡದಲ್ಲೂ ಇಂತಹ ಎರಡು ರೀತಿಯ ಗುಣಪದಗಳು ಬಳಕೆಯಲ್ಲಿವೆ.

ಬೇರಿನ

ನಾಮ-ಗುಣಪದಗಳು

ರೂಪದಲ್ಲೂ ಇವುಗಳಲ್ಲಿ ಬಳಕೆಯಾಗಬಲ್ಲುವು. ನಾಮ- ಗುಣಪದಗಳಿಂದ ಇಲ್ಲವೇ ನಾಮಪದಗಳಿಂದ (ಮತ್ತು ಕ್ರಿಯಾಪದಗಳಿಂದ) ತಯಾರಾಗುತ್ತವೆ; ಅವು ಬೇರಿನ ರೂಪದಲ್ಲಿ ಬರುವುದಿಲ್ಲ. ಕೆಲವು ತೋರುಗ ಪದಗಳೂ ಕ್ರಿಯಾ-ಗುಣಪದಗಳಾಗಿ ಬರಬಲ್ಲುವು.

ಕ್ರಿಯಾ-ಗುಣಪದಗಳು

ಇದಲ್ಲದೆ, ಪದಕೋಶದ ಹೊರಗೆ ನಿಲ್ಲುವ ಹಲವು ರೀತಿಯ ಅಣಕಿಸುವ ಪದಗಳೂ ನಾಮ- ಇಲ್ಲವೇ ಕ್ರಿಯಾ-ಗುಣಪದಗಳಾಗಿ ಬಳಕೆಯಾಗಬಲ್ಲುವು. ಪದಗಳ

ಕುರಿತಾಗಿ ಇನ್ನಶ್ಟು

ಸಂಶೋದನೆ

ನಡೆಸುವ

ಅವಶ್ಯಕತೆಯಿದೆ.