← Ch 7  ·  Contents  ·  Ch 9 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

8. ಕ್ರಿಯಾರೂಪಗಳು

Eke →

8.1 ಮುನ್ನೋಟ

ವಾಕ್ಯಗಳಲ್ಲಿ ಬಳಕೆಯಾಗುವ ಕ್ರಿಯಾರೂಪಗಳನ್ನು ವಾಕ್ಯದ ಕೊನೆಯಲ್ಲಿ ಬರುವವು ಮತ್ತು ನಡುವೆ ಬರುವವು ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು. ಮಾಡುತ್ತಾನೆ, ಮಾಡಿದ, ಹೋಗು, ಬರಲಿ ಮೊದಲಾ ದವು ವಾಕ್ಯದ ಕೊನೆಯಲ್ಲಿ ಬರಬಲ್ಲ ಕ್ರಿಯಾರೂಪಗಳು; ಮಾಡಿ, ಮಾಡಲು, ಮಾಡುವ, ಮಾಡಿದರೆ ಮೊದಲಾದವು ವಾಕ್ಯದ ನಡುವೆ ಬರಬಲ್ಲ ಕ್ರಿಯಾರೂಪಗಳು.

Eke →

8.1.1 ವಾಕ್ಯದ ಕೊನೆಯ ಕ್ರಿಯಾರೂಪಗಳು

ಮೂಲದ್ರಾವಿಡದಲ್ಲಿ ಮುಕ್ಯವಾಗಿ ತಿಳಿಸುವ ವಾಕ್ಯಗಳು ಮತ್ತು ಕೆಲಸವನ್ನು ಮಾಡಿಸಿಕೊಳ್ಳುವ ವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳಿದ್ದಿರ ಬೇಕು. ಕನ್ನಡದಲ್ಲೂ ಇಂತಹವೇ ಎರಡು ರೀತಿಯ ವಾಕ್ಯಗಳಿವೆ.

ಉದಾಹರಣೆಗಾಗಿ, ಅವನು ಮನೆಗೆ ಹೋಗುತ್ತಾನೆ ಎಂಬುದು ಒಂದು ತಿಳಿಸುವ ವಾಕ್ಯ ಮತ್ತು ಅವನು ಮನೆಗೆ ಹೋಗಲಿ ಎಂಬುದು ಒಂದು ಕೆಲಸವನ್ನು ಮಾಡಿಸಿಕೊಳ್ಳುವ ವಾಕ್ಯ. ಈ ಎರಡು ರೀತಿಯ ವಾಕ್ಯಗಳ ಕೊನೆಯಲ್ಲೂ ಕ್ರಿಯಾರೂಪಗಳು ಬರುತ್ತಿದ್ದು ಅವುಗಳ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳನ್ನು ಕಲ್ಪಿಸಲಾಗಿದೆ.

(1) ತಿಳಿಸುವ ವಾಕ್ಯಗಳ ಕೊನೆಯಲ್ಲಿ ಸಾಮಾನ್ಯವಾಗಿ ಎರಡು ಒಟ್ಟು ಗಳಿರುವ ಕ್ರಿಯಾರೂಪಗಳು ಬರುತ್ತವೆ. ಈ ಎರಡು ಒಟ್ಟುಗಳಲ್ಲಿ ನಡೆಯಲಿರುವ) ನಡೆದಿರುವ ಮೊದಲನೆಯದು ಸಮಯವನ್ನು ಸೂಚಿಸುತ್ತದೆ ಮತ್ತು ಎರಡನೆಯದು ಕೆಲಸದ ಆಗುಗ ಇಲ್ಲವೇ ಮಾಡುಗನು ಮಾತಿನ ಆಡುಗನೇ, ಕೇಳುಗನೇ ಇಲ್ಲವೇ ಇತರರೇ

(ಇಲ್ಲವೇ

ಕೆಲಸ

ಎಂಬುದನ್ನು ಸೂಚಿಸುತ್ತದೆ. ಕನ್ನಡದ ತಿಳಿಸುವ ವಾಕ್ಯಗಳ ಕೊನೆಯಲ್ಲೂ ಇಂತಹ ಎರಡು ಒಟ್ಟುಗಳಿರುವ ಕ್ರಿಯಾರೂಪಗಳು ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಕನ್ನಡದ ತಳ್ಳಿದೆ ಕ್ರಿಯಾರೂಪದಲ್ಲಿ ತಳ್ಳು ಕ್ರಿಯಾ ಪದದ ಅನಂತರ ಹಿಂದಿನ ಸಮಯವನ್ನು ಸೂಚಿಸುವ ದ್ ‘ಸಮಯ’ ಒಟ್ಟು ಬಂದಿದೆ ಮತ್ತು ಅದರ ಅನಂತರ ತಳ್ಳುವ ಕೆಲಸವನ್ನು ಮಾಡಿದವನು ವಾಕ್ಯದ ಆಡುಗ ಎಂಬುದನ್ನು ಸೂಚಿಸುವ ಎ ‘ಆಡುಗ’ ಒಟ್ಟು ಬಂದಿದೆ.

ಒಂದು ಕೆಲಸ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸುವ ಬದಲು, ಒಂದು ಕೆಲಸ ನಡೆದಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನು ತಿಳಿಸಬೇಕಿದ್ದಲ್ಲಿ ಸಮಯದ ಒಟ್ಟಿನ ಜಾಗದಲ್ಲಿ ಅಲ್ಲಗಳೆಯುವ *ಆ ಒಟ್ಟನ್ನು ಬಳಸಲಾಗುತ್ತಿತ್ತು.

ಇಂತಹ ಅಲ್ಲಗಳೆಯುವ ಕ್ರಿಯಾರೂಪ ಹಳೆಗನ್ನಡದಲ್ಲಿ ಉಳಿದಿದೆ (ಪಿಡಿಯಂ ‘(ಅವನು) ಹಿಡಿಯುವುದಿಲ್ಲ’), ಆದರೆ ಹೊಸಗನ್ನಡದ ಹಲವು ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಉಳಿದಿಲ್ಲ.

(2) ಕೆಲಸವನ್ನು ಮಾಡಿಸುವ ವಾಕ್ಯಗಳ ಕೊನೆಯಲ್ಲಿ ಕ್ರಿಯಾಪದವು ಒರ್ವಚನದಲ್ಲಿ ಯಾವ ಒಟ್ಟನ್ನೂ ಸೇರಿಸಿಕೊಳ್ಳದೆ ಹಾಗೆಯೇ ಬರುತ್ತದೆ. ಉದಾಹರಣೆಗಾಗಿ, ಕನ್ನಡದ ಅವನಿಗೊಂದು ಪುಸ್ತಕ ಕೊಡು ವಾಕ್ಯ ಮಾಡಿಸಿಕೊಳ್ಳುವುದಕ್ಕಾಗಿ ಬಳಕೆಯಾಗುತ್ತಿದ್ದು, ಅದರ ಕೆಲಸವನ್ನು ಕೊನೆಯಲ್ಲಿ ಕೊಡು ಕ್ರಿಯಾಪದ ಯಾವ ಒಟ್ಟನ್ನೂ ಸೇರಿಸಿಕೊಳ್ಳದೆ ಹಾಗೆಯೇ ಬಂದಿದೆ.

ಹಲವಚನದಲ್ಲಿ ಮಾತ್ರ ಕ್ರಿಯಾಪದದೊಂದಿಗೆ ವಚನವನ್ನು ಸೂಚಿಸು ವುದಕ್ಕಾಗಿ ಕೇಳುಗನನ್ನು ಸೂಚಿಸುವ ಹಲವಚನದ ಆಡುಗ ಒಟ್ಟು ಬರುತ್ತದೆ. ಉದಾಹರಣೆಗಾಗಿ, ಕನ್ನಡದ ನೀವು ಮನೆಗೆ ಹೋಗಿ ವಾಕ್ಯದ ಕೊನೆಯಲ್ಲಿ ಹೋಗು ಕ್ರಿಯಾಪದದೊಂದಿಗೆ ಹಲವಚನವನ್ನು ಸೂಚಿಸುವ ಇ ಒಟ್ಟು ಬಂದಿದೆ.

Eke →

8.1.2 ವಾಕ್ಯದ ನಡುವಿನ ಕ್ರಿಯಾರೂಪಗಳು

ವಾಕ್ಯಗಳ ನಡುವೆ ಬರುವ ಕ್ರಿಯಾರೂಪಗಳಲ್ಲಿ ಕ್ರಿಯಾ-ಗುಣಪದಗಳ ಜಾಗದಲ್ಲಿ ಬರಬಲ್ಲ ‘ಜೋಡಿಸುವ’ ರೂಪಗಳು ಮತ್ತು ನಾಮ-ಗುಣ ಪದಗಳ ಜಾಗದಲ್ಲಿ ಬರಬಲ್ಲ ‘ಸಂಬಂದಿಸುವ’ ರೂಪಗಳು ಎಂಬುದಾಗಿ ಎರಡು ರೀತಿಯವುಗಳನ್ನು ಕಾಣಬಹುದು. ಜೋಡಿಸುವ ರೂಪಗಳಲ್ಲಿ ಸಮಯವನ್ನು ಸೂಚಿಸುವ ಒಟ್ಟು ಮಾತ್ರ ಬಂದಿರುತ್ತದೆ; ಆದರೆ ಸಂಬಂದಿಸುವ ರೂಪಗಳಲ್ಲಿ ಸಂಬಂದವನ್ನು ಸೂಚಿಸುವ ಅ ಒಟ್ಟೂ ಬಂದಿರುತ್ತದೆ (12.2-3 ನೋಡಿ).

ಈ ಎರಡು ರೀತಿಯ ಕ್ರಿಯಾರೂಪಗಳು ಮಾತ್ರವಲ್ಲದೆ, ಶರತ್ತನ್ನು ಸೂಚಿಸುವ ಕ್ರಿಯಾರೂಪಗಳು ಮತ್ತು ನಾಮಪದಗಳ ಜಾಗದಲ್ಲಿ ಬರಬಲ್ಲ ಕ್ರಿಯಾಪದಗಳ ನಾಮರೂಪಗಳು ಎಂಬುದಾಗಿ ಬೇರೆ ಎರಡು ರೀತಿಯ ಕ್ರಿಯಾರೂಪಗಳೂ ವಾಕ್ಯದ ನಡುವೆ ಬಳಕೆಯಾಗಬಲ್ಲುವಾಗಿದ್ದುವು.

ಮೂಲದ್ರಾವಿಡದಲ್ಲಿ ಈ ಬೇರೆ ಬೇರೆ ರೀತಿಯ ಕ್ರಿಯಾರೂಪಗಳ ಒಳ ರಚನೆ ಹೇಗಿದ್ದಿರಬಹುದು ಮತ್ತು ಅವು ಕನ್ನಡದ ಚರಿತ್ರೆಯಲ್ಲಿ ಹೇಗೆ ಬದಲಾಗಿರಬಹುದು ಎಂಬುದನ್ನು ಈ ಅದ್ಯಾಯದಲ್ಲಿ (ಮತ್ತು ಮುಂದೆ ಒಂಬತ್ತು ಮತ್ತು ಹನ್ನೆರಡನೇ ಅದ್ಯಾಯಗಳಲ್ಲಿ) ವಿವರಿಸಲಾಗುವುದು.

Eke →

8.2 ಸಮಯದ ಒಟ್ಟುಗಳು

ಮೂಲದ್ರಾವಿಡಕ್ಕೆ ಮುಂದಿನ ಸಮಯ ಮತ್ತು ಹಿಂದಿನ ಸಮಯ ಸೂಚಿಸುವಂತಹ ಎಂಬುದಾಗಿ ಎರಡು ರೀತಿಯ ಕ್ರಿಯಾರೂಪಗಳಲ್ಲೂ ಒಟ್ಟುಗಳನ್ನು ಇಂತಹವೇ ಎರಡು ರೀತಿಯ ಸಮಯದ ಒಟ್ಟುಗಳು ಬಳಕೆಯಾಗುತ್ತವೆ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಎರಡು ವಾಕ್ಯಗಳನ್ನು

ಸಮಯಗಳನ್ನು ಕನ್ನಡದ

ಕಲ್ಪಿಸಿಕೊಳ್ಳಲಾಗಿದೆ.

ಪರಿಶೀಲಿಸಬಹುದು.

(1ಕ) ನಾನು ಮುಂಬಯಿಗೆ ಹೋಗುತ್ತೇನೆ. (1ಚ) ನಾನು ಮುಂಬಯಿಗೆ ಹೋದೆ.

(1ಕ) ವಾಕ್ಯದಲ್ಲಿ ಹೋಗುತ್ತೇನೆ ಕ್ರಿಯಾರೂಪ ಬಂದಿದ್ದು, ಅದು ಆ ವಾಕ್ಯವನ್ನಾಡಿದ ಸಮಯದ ಅನಂತರ ನಡೆಯಲಿರುವ (ಎಂದರೆ ‘ಮುಂದಿನ’ ಸಮಯದ) ಕೆಲಸವನ್ನು ಸೂಚಿಸುತ್ತದೆ; ಇದಕ್ಕೆ ಬದಲು (1ಚ) ವಾಕ್ಯದಲ್ಲಿ ಹೋದೆ ಕ್ರಿಯಾರೂಪ ಬಂದಿದ್ದು, ಅದು ಆ ವಾಕ್ಯವನ್ನಾಡಿದ ಸಮಯಕ್ಕಿಂತ ಮೊದಲೇ ನಡೆದ (ಎಂದರೆ ‘ಹಿಂದಿನ’ ಸಮಯದ) ಕೆಲಸವನ್ನು ಸೂಚಿಸುತ್ತದೆ.

ಮುಂದಿನ ಸಮಯದ ಕ್ರಿಯಾರೂಪಕ್ಕೆ ಒಂದು ವಾಕ್ಯವನ್ನಾಡಿರುವ ಸಮಯದ ಅನಂತರ ಜರಗುವ ಕೆಲಸವನ್ನು ಮಾತ್ರವಲ್ಲದೆ, ರೂಡಿಯಲ್ಲಿ ಜರುಗುವ ಕೆಲಸವನ್ನು ಸೂಚಿಸುವ ಅರ್ತವೂ ಇದೆ. ಇದನ್ನು ಕೆಳಗೆ ಕೊಟ್ಟಿರುವ (1ಟ) ವಾಕ್ಯದಲ್ಲಿ ಕಾಣಬಹುದು.

(1ಟ) ನಾನು ಅಂಗಡಿಗೆ ದಿನಾಲೂ ಎಂಟು

ಹೋಗುತ್ತೇನೆ.

(1ಟ) ವಾಕ್ಯವು ರಾಜು ಅಂಗಡಿಗೆ ಹೋಗುವ ಕೆಲಸ ಆ ವಾಕ್ಯವ ನ್ನಾಡಿದ ಸಮಯದ ಅನಂತರ ನಡೆಯುತ್ತದೆಯುಂದೇನೂ ಸೂಚಿಸುತ್ತಿಲ್ಲ; ಇದಕ್ಕೆ ಬದಲು ವಾಕ್ಯದ ಆಡುಗನು (ನಾನು) (ರೂಡಿಯಲ್ಲಿ) ಅಂಗಡಿಗೆ ಹೋಗುವ ಸಮಯ ಯಾವುದು ಎಂಬುದನ್ನು ಮಾತ್ರವೇ ಸೂಚಿಸುತ್ತದೆ. (ಆ ವಾಕ್ಯವನ್ನಾಡಿರುವ ದಿವಸ ಆತ ಅಂಗಡಿಗೆ ಹೋಗದಿರಲೂ ಸಾದ್ಯವಿದೆ).

Eke →

8.2.1 ಹಿಂದಿನ ಸಮಯದ ಒಟ್ಟು

ಮೂಲದ್ರಾವಿಡದಲ್ಲಿ ಹಿಂದಿನ ಸಮಯವನ್ನು ಸೂಚಿಸುವುದಕ್ಕಾಗಿ *ನ್್ತ ಒಟ್ಟಿನ ಬಳಕೆಯಾಗುತ್ತಿದ್ದಿರಬೇಕು. ಇದಕ್ಕೆ ಮೂಲದ್ರಾವಿಡದಲ್ಲೇನೇ ಬೇರೆ ಬೇರೆ ಸನ್ನಿವೇಶಗಳಲ್ಲಿ *ನ್್ತ, *ತ್, *ಚ್ ಮತ್ತು *ಕ್ ಎಂಬ ರೂಪಗಳಿದ್ದುವೆಂದು ಕಲ್ಪಿಸಬೇಕಾಗುತ್ತದೆ. ಆದರೆ ಈ ರೂಪಗಳು ಬರುವ ಸನ್ನಿವೇಶಗಳು ಎಂತಹವು ಎಂಬುದನ್ನು ನಿಶ್ಚಿತವಾಗಿ ಹೇಳಲು ಇನ್ನೂ ಸಾದ್ಯವಾಗಿಲ್ಲ.

ಮೂಲದ್ರಾವಿಡದ ಒಂದು ಕವಲಾದ ತೆಂಕುದ್ರಾವಿಡದಲ್ಲಿ ಈ ಒಟ್ಟಿನ ಸ್ವರೂಪ ಹೇಗಿದ್ದಿರಬಹುದೆಂಬ ವಿಶಯ ಹೆಚ್ಚು ಸ್ಪಶ್ಟವಾಗಿದೆ. ಅದರಲ್ಲಿ ಈ ಒಟ್ಟಿಗೆ ಕೆಲವು ಕ್ರಿಯಾಪದಗಳ ಅನಂತರ *ನ್್ತ ಎಂಬ ರೂಪ ಮತ್ತು ಬೇರೆ ಕೆಲವು ಕ್ರಿಯಾಪದಗಳ ಅನಂತರ *ತ್ ಎಂಬ ರೂಪ ಎಂಬುದಾಗಿ ಎರಡು ಮುಕ್ಯ ರೂಪಗಳಿದ್ದುವೆಂದು ಹೇಳಬಹುದು. ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕ ಬೇರೆಯೂ ಕೆಲವು ಬದಲಾವಣೆಗಳು ಅದರಲ್ಲಿ ನಡೆದಿರುವುದನ್ನು ಕಲ್ಪಿಸಿಕೊಳ್ಳಬಹುದು.

(1) ತಡೆಯುಲಿಯಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಈ ಒಟ್ಟು *ನ್್ತ ಎಂಬ ರೂಪದಲ್ಲೇ ಬರುತ್ತಿದ್ದಿರಬೇಕು ಮತ್ತು ಅದು ಸೇರಿದಾಗ, ಈ ಕ್ರಿಯಾಪದಗಳ ಕೊನೆಯಲ್ಲಿ ಉಚ್ಚಾರಣೆಗಾಗಿ ಬರುತ್ತಿದ್ದ ಉಕಾರ ಇಕಾರವಾಗಿ ಬದಲಾಗುತ್ತಿದ್ದಿರಬೇಕು.

ಕನ್ನಡದಲ್ಲಿ ಮೇಲಿನ ಕ್ರಿಯಾಪದಗಳೊಂದಿಗೆ ಬರುವ ಈ ಒಟ್ಟಿನ ನಕಾರ ಬಿದ್ದುಹೋಗಿ, ಅದರ ಅನಂತರದ ತ್ ವ್ಯಂಜನ ದ್ ಎಂಬ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬದಲು, ತಮಿಳು, ಮಲಯಾಳ, ಕೊಡಗು, ತೊದ ಮೊದಲಾದ ಇತರ ತೆಂಕುದ್ರಾವಿಡ ನುಡಿಗಳಲ್ಲಿ ಅದರ ತಕಾರ ಬಿದ್ದುಹೋಗಿ, ನ್ ಮಾತ್ರ ಉಳಿದಿದ್ದು, ಈ ಒಟ್ಟು ನ್ ಎಂಬ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಎರಡು ರೀತಿಯ ನುಡಿಗಳಲ್ಲೂ ಕ್ರಿಯಾಪದದ ಕೊನೆಯಲ್ಲಿ ಉಚ್ಚಾರಣೆಗಾಗಿ ಬಂದಿದ್ದ ಉಕಾರ ಇಕಾರವಾಗಿ ಬದಲಾಗಿದೆ.

ಕ್ರಿಯಾಪದ ತೂಗು (<ತೂಂಙ್ಕು) ನಂಬು
ಅಡಗು (<
ಅಡಙ್ಕು) ಅಡಗಿದೆ(ನ್) ಅಟಙ್ಕನೇನ್ ಅಮುಕು (<*ಅಮುಕ್ಕು) ಅಮುಕಿದೆ(ನ್) ಅಮುಕ್ಕಿನೇನ್

ಕನ್ನಡ
ತೂಗಿದೆ(ನ್) ನಂಬಿದೆ (ನ್) ಕಟ್ಟಿದೆ(ನ್)

ತಮಿಳು ಆಟಿನೇನ್ ತೂಙ್ಕನೇನ್ ನಮ್ಪಿನೇನ್ ಕಟ್ಟಿನೇನ್

ಈ ಇಕಾರವೂ ಮೂಲದ್ರಾವಿಡದಲ್ಲಿ ಹಿಂದಿನ ಸಮಯದ ಒಟ್ಟಿನ ಅಂಶವಾಗಿರಬೇಕೆಂದು ಹೆಚ್ಚಿನ ವಿದ್ವಾಂಸರೂ ವಾದಿಸುತ್ತಾರೆ. ಆದರೆ ಇದು ಸರಿಯೆಂದು ನನಗೆ ತೋರುವುದಿಲ್ಲ.

ಇಲ್ಲಿ ನಾವು ಮುಕ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ, ಈ ರೀತಿ ಇಕಾರ ಕಾಣಿಸುವುದು ತಡೆಯುಲಿಯಲ್ಲಿ ಕೊನೆಗೊಳ್ಳುವ ಮತ್ತು ಉಚ್ಚಾರಣೆಗಾಗಿ ಕೊನೆಯಲ್ಲಿ ಉಕಾರವನ್ನು ಪಡೆದಿರುವ ಕ್ರಿಯಾಪದಗಳ ಹಿಂದಿನ ಸಮಯದ ಕ್ರಿಯಾರೂಪಗಳಲ್ಲಿ ಮಾತ್ರ. ಈ ಇಕಾರದ ಅನಂತರವೂ *ನ್್ತ ಒಟ್ಟಿನ ಅಂಶಗಳು ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸುವುವಾದ ಕಾರಣ, ಅವನ್ನು ಮಾತ್ರವೇ ಹಿಂದಿನ ಸಮಯದ ಒಟ್ಟಿನ ರೂಪಗಳೆಂದು ಪರಿಗಣಿಸಿದರೆ ಸಾಕು.

ಈ ಸಮಯದ ಒಟ್ಟಿನ ಅನಂತರ ಒರ್ವಚನದಲ್ಲಿ ಮನುಶ್ಯೇತರರನ್ನು ಸೂಚಿಸುವ ತು ಒಟ್ಟು ಬಂದಾಗ ಅದಕ್ಕೆ (ಸಮಯದ ಒಟ್ಟಿಗೆ) ಕನ್ನಡದಲ್ಲಿ ಸೊನ್ನೆ ರೂಪವಿದೆ (ಆಡಿತು, ತೂಗಿತು, ನಂಬಿತು).

ಇದಲ್ಲದೆ, ಈ ಕ್ರಿಯಾಪದಗಳ ಜೋಡಿಸುವ ರೂಪಗಳಲ್ಲಿ ತಮಿಳು ಮತ್ತು ಕನ್ನಡ ನುಡಿಗಳೆರಡರಲ್ಲೂ ಹಿಂದಿನ ಸಮಯದ ಒಟ್ಟಿಗೆ ಸೊನ್ನೆ ರೂಪವಿದೆ (ಎಂದರೆ ಅದರ ನಕಾರ ಮತ್ತು ತಕಾರಗಳೆರಡೂ ಬಿದ್ದು ಹೋಗಿವೆ); ಆದರೆ ಕ್ರಿಯಾಪದದ ಕೊನೆಯಲ್ಲಿ ಉಚ್ಚಾರಣೆಗಾಗಿ ಬಂದ ಉಕಾರ ಇಕಾರವಾಗಿ ಬದಲಾಗಿದ್ದು, ಆ ರೂಪದಲ್ಲೇ ಉಳಿದಿದೆ.

ಕನ್ನಡ
ಅಮುಕಿ

ತಮಿಳು ತೂಙ್ಕ ನಮ್ಪಿ ಅಮುಕ್ಕಿ

ತಡೆಯುಲಿಯಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಗಿಡ್ಡ ಸ್ವರವಿರುವ ಮತ್ತು ಗಿಡ್ಡ ಸ್ವರದ ಅನಂತರ ಒತ್ತೆ ತಡೆಯುಲಿಯಿರುವ ಕೊಡು, ಬಿಡು, ನಗು, ಸಿಗು, ಪೆಱ್(ಉ) ಮೊದಲಾದವುಗಳು ಮೇಲಿನ ನಿಯಮಕ್ಕೆ ಅಪವಾದಗಳು. ಇವುಗಳ ಅನಂತರ ಬಂದ ಹಿಂದಿನ ಸಮಯದ *ನ್್ತ ಒಟ್ಟು ಕನ್ನಡದಲ್ಲಿ ಟ್, ಕ್ ಮತ್ತು ತ್ ಎಂಬ ರೂಪಗಳಲ್ಲಿದೆ.

ಇದಲ್ಲದೆ, ಈ ಕ್ರಿಯಾಪದಗಳ ಕೊನೆಯುಲ್ಲಿ ಉಚ್ಚಾರಣೆಗಾಗಿ ಬಂದಿದ್ದ ಉಕಾರ ಬಿದ್ದುಹೋಗಿ, ಅದರ ಹಿಂದಿರುವ ತಡೆಯುಲಿ ಕೊರಳಿಸದ ಟ್, ಕ್ ಮತ್ತು ತ್ ರೂಪಗಳಲ್ಲಿ ಉಳಿದಿದೆ.

ತಮಿಳಿನಲ್ಲಿಯೂ ಇಂತಹದೇ ಬದಲಾವಣೆ ನಡೆದಿದೆ. ಆದರೆ, ಱಕಾರದ ಅನಂತರ ಈ ಒಟ್ಟಿನ ತಕಾರ ಱಕಾರವಾಗಿದೆ. (ಕನ್ನಡದಲ್ಲೂ ಮೊದಲಿಗೆ ಇಂತಹದೇ ಬದಲಾವಣೆ ನಡೆದಿರಬಹುದು; ಆದರೆ ಱ್ಱ್ ತ್್ತ ಎಂಬುದಾಗಿ ಎಂಬುದು ಅನಂತರ ಕನ್ನಡದ ಚರಿತ್ರೆಯಲ್ಲಿ ಬದಲಾಗಿರುವ ಕಾರಣ (4.4.4 ನೋಡಿ), ಮೇಲೆ ವಿವರಿಸಿದಂತಹ ನಿಯಮ ಕನ್ನಡದಲ್ಲಿದೆ.

ಕ್ರಿಯಾಪದ ನಗು ಕೊಡು
ಹೆರು (<ಪೆಱು)
ತೆರು (<ತೆಱು)

ಕನ್ನಡ
ನಕ್ಕೆ ಕೊಟ್ಟೆ
ಹೆತ್ತೆ

ತಮಿಳು ನಕ್ಕೇನ್ ಇಟ್ಟೇನ್ ಕೊಟ್ಟೇನ್ ಪೆಱ್ಱೀನ್ ತೆಱ್ಱೀನ್

ಈ ಕ್ರಿಯಾಪದಗಳ ಜೋಡಿಸುವ ರೂಪದಲ್ಲಿ ಹಿಂದಿನ ಸಮಯದ ಒಟ್ಟು ಬಿದ್ದುಹೋಗಿಲ್ಲ (ಎಂದರೆ, ಅದಕ್ಕೆ ಸೊನ್ನೆ ರೂಪವಿಲ್ಲ). ಇದಕ್ಕೆ ಬದಲು, ಆ ಒಟ್ಟಿನ ಅನಂತರ ಉಚ್ಚಾರಣೆಗಾಗಿ ಉಕಾರವೊಂದು ಸೇರಿಕೊಂಡಿದೆ.

ಕನ್ನಡ
ನಕ್ಕು
ಕೊಟ್ಟು
ಹೆತ್ತು

ತಮಿಳು ನಕ್ಕು ಕೊಟ್ಟು ಪೆಱ್ಱು

(2) ಕ್ರಿಯಾಪದಗಳ ಕೊನೆಯ ಅಕಾರ ಕನ್ನಡದಲ್ಲಿ ಎಕಾರವಾಗಿದೆ. ಇಂತಹ ಎರಡು ಉಲಿಕಂತೆಗಳಿರುವ ಕ್ರಿಯಾಪದಗಳ ಅನಂತರ ಬಂದಿದ್ದ ಹಿಂದಿನ ಸಮಯದ *ನ್್ತ ಒಟ್ಟು ತಮಿಳಿನಲ್ಲಿ ಬದಲಾಗದೆ ಉಳಿದಿದೆ; ಆದರೆ ಕನ್ನಡದಲ್ಲಿ ನಕಾರವನ್ನು ಕಳೆದುಕೊಂಡು ದ್ ರೂಪಕ್ಕೆ ಬದಲಾಗಿದೆ.

ಕ್ರಿಯಾಪದ ನಡೆ (<ನಟ)
ತೊಱ (<
ತೊಱ) ತೆಱ (<ತೆಱ)
ಕಱ (<
ಕಱ)

ಕನ್ನಡ
ನಡೆದೆ
ತೊಱದೆ ತೆಱದೆ
ಕಱದೆ

ತಮಿಳು ನಟನ್ತೇನ್
ತುಱನ್ತೇನ್ ತಿಱನ್ತೇನ್ ಕಿಟನ್ತೇನ್ ಕಱನ್ತೇನ್

ತಮಿಳಿನಲ್ಲಿ ಎಕಾರ-ಒಕಾರಗಳು, ಅವುಗಳ ಅನಂತರ ಒಟ್ಟಿನ ಅಕಾರ ಬಂದಿರುವಲ್ಲಿ, ಇಕಾರ-ಉಕಾರಗಳಾಗಿ ಬದಲಾಗಿರುವ ಕಾರಣ (2.2.1 ನೋಡಿ), *ತೊಱ, *ತೆಱ ಮತ್ತು *ಕೆಟ ಕ್ರಿಯಾಪದಗಳು ತುಱ, ತಿಱ ಮತ್ತು ಕಿಟ ರೂಪದಲ್ಲಿ ಕಾಣಿಸುತ್ತವೆ. ಕೆಳಗೆ (3)ನೇ ವಿಬಾಗದಲ್ಲಿ ಕೊಟ್ಟಿರುವ ಕ್ರಿಯಾಪದಗಳಲ್ಲೂ ಇಂತಹದೇ ಬದಲಾವಣೆ ತಮಿಳಿನಲ್ಲಿ ನಡೆದಿದೆ.

(3) *ಅಯ್ ಎಂಬುದರಲ್ಲಿ ಕೊನೆಗೊಳ್ಳುತ್ತಿದ್ದ ಎರಡು ಉಲಿಕಂತೆ ಗಳಿರುವ ಕ್ರಿಯಾಪದಗಳೂ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುತ್ತವೆ (ತಮಿಳು: ಉಟಯ್ ಕನ್ನಡ: ಒಡೆ, ತಮಿಳು: ಕುೞಯ್ ಕನ್ನಡ: ಕೊಳೆ).

ಇವುಗಳ ಅನಂತರ ಬರುವ ಹಿಂದಿನ ಸಮಯದ *ನ್್ತ ಒಟ್ಟಿಗೆ ತಮಿಳಿ ನಲ್ಲಿ ಎರಡು ರೂಪಗಳಿವೆ: ಅವುಗಳ ಅನಂತರ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಬಂದಿರುವಲ್ಲಿ (7.5.2 ನೋಡಿ) ಅದು ನಕಾರವನ್ನು ಕಳೆದುಕೊಂಡು ತ್ ರೂಪದಲ್ಲಿ ಉಳಿದಿದೆ; ಮಾಡುವಿಕೆಯ ತ್ ಒಟ್ಟು ಬರದಿರುವಲ್ಲಿ ಅದು ನ್್ತ ರೂಪದಲ್ಲೇ ಉಳಿದಿದೆ.

ಆಗುವಿಕೆ ಮತ್ತು ಮಾಡುವಿಕೆಗಳ ನಡುವಿನ ಈ ವ್ಯತ್ಯಾಸ ಕನ್ನಡದಲ್ಲಿ ಉಳಿದಿಲ್ಲ (ಹವ್ಯಕ ಮತ್ತು ಬಡಗ ಒಳನುಡಿಗಳು ಇದಕ್ಕೆ ಅಪವಾದಗಳು 7.5.3-4 ನೋಡಿ). ಹಾಗಾಗಿ, ಇಂತಹ ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ನ್್ತ ಒಟ್ಟಿಗೆ ಕನ್ನಡದಲ್ಲಿ ದ್ ಎಂಬ ರೂಪವೇ ಇದೆ (ಅದರ ಅನಂತರ ತು ಆಡುಗ ಒಟ್ಟು ಬಂದಿರುವಲ್ಲಿ ಮಾತ್ರ ಅದಕ್ಕೆ ಸೊನ್ನೆ ರೂಪವಿದೆ ಮತ್ತು ಕ್ರಿಯಾಪದದ ಕೊನೆಯಲ್ಲೊಂದು ಇಕಾರ ಕಾಣಿಸಿಕೊಳ್ಳುತ್ತದೆ (ನೆನೆಯಿತು). ಇದು ಕನ್ನಡದಲ್ಲಿ ಮಾತ್ರ ನಡೆದ ಬದಲಾವಣೆ).

ಕನ್ನಡ

ತಮಿಳು

ಆಗುವಿಕೆ/ಮಾಡುವಿಕೆ

ಆಗುವಿಕೆ

ಮಾಡುವಿಕೆ

ನೆನೆದೆ ನನೆಯಿತು

ಉಟಯ್ನ್ತತು ಇಱಯ್ನ್ತತು ನಿನಯ್ನ್ತತು ತಟಯ್ನ್ತತು ನನಯ್ನ್ತತು

ಉಟಯ್ತ್ತೇನ್ ಇಱಯ್ತ್ತೇನ್ ನಿನಯ್ತ್ತೇನ್ ತಟಯ್ತ್ತೇನ್ ನನಯ್ತ್ತೇನ್

(4) ಇಕಾರ ಮತ್ತು ಉಕಾರಗಳಲ್ಲಿ ಕೊನೆಗೊಳ್ಳುವ ಮತ್ತು ಎರಡು ಉಲಿಕಂತೆಗಳಿರುವ ಹಲವು ಕ್ರಿಯಾಪದಗಳ ಅನಂತರ, ಹಾಗೂ ಯಕಾರ, ರಕಾರ ಇಲ್ಲವೇ ೞಕಾರಗಳಲ್ಲಿ ಕೊನೆಗೊಳ್ಳುವ ಮತ್ತು ಒಂದು ಇಲ್ಲವೇ ಎರಡು ಉಲಿಕಂತೆಗಳಿರುವ ಹಲವು ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ನ್್ತ ಒಟ್ಟಿಗೆ ತಮಿಳಿನಲ್ಲಿ ಎರಡೆರಡು ರೂಪಗಳಿವೆ. ಅವುಗಳ ಅನಂತರ ಮಾಡುವಿಕೆಯನ್ನು ಸೂಚಿಸುವ ತ್ ಒಟ್ಟು ಬಂದಿದೆಯಾದರೆ

ಅದಕ್ಕೆ ತ್ ರೂಪವಿದೆ ಮತ್ತು ಮಾಡುವಿಕೆಯ ತ್ ಒಟ್ಟು ಬಾರದಿರುವಲ್ಲಿ ನ್್ತ ರೂಪವಿದೆ.

ಮೇಲೆ ಸೂಚಿಸಿದ ಹಾಗೆ, ಕನ್ನಡದಲ್ಲಿ ಈ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಉಳಿದಿಲ್ಲ (ಹವ್ಯಕ ಮತ್ತು ಬಡಗ ಒಳನುಡಿಗಳು ಇದಕ್ಕೆ ಅಪವಾದಗಳು). ಹಾಗಾಗಿ, ಇಂತಹ ಕ್ರಿಯಾಪದಗಳ ಅನಂತರವೂ ಹಿಂದಿನ ಸಮಯದ ಒಟ್ಟಿಗೆ ಕನ್ನಡದಲ್ಲಿ ದ್ ರೂಪವೇ ಇದೆ (ಇಲ್ಲೂ ಆ ಒಟ್ಟಿನ ಅನಂತರ ತು ಆಡುಗ ಒಟ್ಟು ಬಂದಿರುವಲ್ಲಿ ಅದಕ್ಕೆ ಸೊನ್ನೆ ರೂಪವಿದೆ ಮತ್ತು ಕ್ರಿಯಾಪದಗಳ ಅನಂತರ ಇಕಾರವೊಂದು ಬಂದಿದೆ (ಬಿರಿಯಿತು)).

ಕನ್ನಡ

ತಮಿಳು

ಆಗುವಿಕೆ/ಮಾಡುವಿಕೆ

ಆಗುವಿಕೆ

ಮಾಡುವಿಕೆ

ಬಿರಿಯಿತು
ಮುರಿಯಿತು, ಮುರಿದೆ

ವಿರಿನ್ತತು
ಮುಱಿನ್ತತು ಇರುನ್ತೇನ್

ವಿರಿತ್ತೇನ್ ಮುರಿತ್ತೇನ್ ಇರುತ್ತೇನ್

ನೋಯು, ಮೀಯು, ಬೇಯು, ತರು ಮತ್ತು ಬರು ಎಂಬ ಐದು ಕ್ರಿಯಾಪದಗಳ ಅನಂತರ ಮಾತ್ರ ಹಿಂದಿನ ಸಮಯದ ಒಟ್ಟು ಕನ್ನಡದಲ್ಲಿ ನ್್ದ(<*ನ್್ತ) ರೂಪದಲ್ಲೇ ಉಳಿದಿದೆ. ಆದರೆ ಈ ಒಟ್ಟು ಸೇರಿರುವಲ್ಲಿ ಕ್ರಿಯಾಪದಗಳ ಎರಡನೆಯ ಉಲಿಕಂತೆ ಬಿದ್ದುಹೋಗಿದೆ.

ಕ್ರಿಯಾಪದ ನೋಯು

ಕನ್ನಡ
ನೊಂದೆ

ತಮಿಳು ನೊನ್ತೇನ್ ವನ್ತೇನ್ ತನ್ತೇನ್

(5) ನಕಾರ ಇಲ್ಲವೇ ಣಕಾರಗಳಲ್ಲಿ ಕೊನೆಗೊಳ್ಳುವ ಒಂದು ಉಲಿ ಕಂತೆಯ ಕ್ರಿಯಾಪದಗಳ ಅನಂತರ ಹಿಂದಿನ ಸಮಯದ ಒಟ್ಟಿಗೆ ತೆಂಕು ದ್ರಾವಿಡದಲ್ಲಿ *ತ್ ಎಂಬ ರೂಪವಿದ್ದಿರಬೇಕು. ಕನ್ನಡದಲ್ಲಿ ಇದು ನಕಾರದ

ಅನಂತರ ದ್ ಎಂಬುದಾಗಿ ಮತ್ತು ಣಕಾರದ ಅನಂತರ ಡ್ ಎಂಬುದಾಗಿ ಕಾಣಿಸಿಕೊಳ್ಳುತ್ತದೆ.

ಕ್ರಿಯಾಪದಗಳು

ಹಿಂದಿನ ಸಮಯದ ರೂಪ

(6) ಲಕಾರ ಇಲ್ಲವೇ ಳಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಹಿಂದಿನ ಸಮಯದ ಒಟ್ಟು ತೆಂಕುದ್ರಾವಿಡದಲ್ಲಿ ಯಾವ ರೂಪ ದಲ್ಲಿದ್ದಿರಬಹುದೆಂಬುದು ಇನ್ನೂ ಸ್ಪಶ್ಟವಾಗಿಲ್ಲ. ಲಕಾರ ಮತ್ತು ಳಕಾರಗಳು ಕೆಲವು ಸೇರಿಕೆಯ ಬದಲಾವಣೆಗಳಿಗೆ ಒಳಗಾಗಿರುವುದು ಈ ಅಸ್ಪಶ್ಟತೆಗೆ ಒಂದು ಕಾರಣ. ಈ ಬದಲಾವಣೆಗಳು ಅನಿಯಮಿತವಾಗಿ ಕಾಣಿಸುವುದು ಇನ್ನೊಂದು ಕಾರಣ.

ಉದಾಹರಣೆಗಾಗಿ, ಲ್+ನ್್ತ ಎಂಬುದು ನ್ಱ್ ಎಂದಾಗುವುದು ಮತ್ತು ಳ್+ನ್್ತ ಎಂಬುದು ಣ್್ಟ ಎಂದಾಗುವುದು ಇಂತಹ ಒಂದು ಬದಲಾವಣೆ. ಕನ್ನಡದ ನಿಂದು (ನಿಲ್) ಮತ್ತು ಕೊಂಡು (ಕೊಳ್) ಕ್ರಿಯಾರೂಪಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು (ಕನ್ನಡದ ನಿಂದು ಎಂಬುದು ತೆಂಕುದ್ರಾವಿಡದ *ನಿನ್ಱು ಎಂಬುದರಿಂದ ಬಂದಿದೆ (4.5(1) ನೋಡಿ); ತಮಿಳಿನಲ್ಲಿ ಇದು ನಿನ್ಱು ರೂಪದಲ್ಲೇ ಇದೆ).

ಆದರೆ, ಈ ನಿಯಮಕ್ಕೆ ಕನ್ನಡದಲ್ಲಿ ಹಲವು ಅಪವಾದಗಳೂ ಇವೆ. ಉದಾಹರಣೆಗಾಗಿ, ನಿಲ್ತು (ನಿತ್ತು), ಕಲ್ತು, ಗೆಲ್ದು (ಗೆದ್ದು), ಕಳ್ದು (ಕದ್ದು), ಕೇಳ್ದು ಕ್ರಿಯಾರೂಪಗಳನ್ನು ಗಮನಿಸಬಹುದು.

Eke →

8.2.2 ಮುಂದಿನ ಸಮಯದ ಒಟ್ಟು

ಮುಂದಿನ ಸಮಯದ ಒಟ್ಟಿಗೆ ಮೂಲದ್ರಾವಿಡದಲ್ಲಿ ಪ್್ಪ, ಕ್್ಕ, ತ್್ತ, ಉಮ್ ಮತ್ತು ನ್ ಎಂಬ ರೂಪಗಳಿದ್ದಿರಬೇಕೆಂದು ಕಲ್ಪಿಸಲಾಗಿದೆ (ಸುಬ್ರಹ್ಮಣ್ಯಂ 1971 ನೋಡಿ).

(1) ಇವುಗಳಲ್ಲಿ ಮುಕ್ಯವಾಗಿ ಮೊದಲನೆಯ ಪ್್ಪ ರೂಪವೇ ಹಳೆಗನ್ನಡದಲ್ಲಿ ಉಳಿದಿದ್ದು, ಹೆಚ್ಚಿನ ಕ್ರಿಯಾರೂಪಗಳಲ್ಲೂ ಇದು ವ್ ಎಂಬುದಾಗಿ ಕಾಣಿಸುತ್ತದೆ.

ಕ್ರಿಯಾಪದ

ಪೇೞ್
ನಡುಗು

ಮುಂದಿನ ಸಮಯದ ರೂಪ ಪೇಳ್ವನ್ ‘ಹೇಳುತ್ತಾನೆ’’
ಗೆಲ್ವ ‘ಗೆಲ್ಲುವ’’ ಅಂಜುವಿರ್ ‘ಹೆದರುತ್ತೀರಿ’’ ಬಿಡುವುವು ‘ಬಿಡುತ್ತವೆ’ ನಡುಗುವ

ಆದರೆ, ಕೆಲವು ಕ್ರಿಯಾಪದಗಳ ಅನಂತರ ಮೇಲಿನ ಒಟ್ಟಿಗೆ ಹಳೆಗನ್ನಡದಲ್ಲಿ ಪ್, ಪ್್ಪ ಇಲ್ಲವೇ ಬ್ ಎಂಬ ರೂಪಗಳಿರುವುದನ್ನು ಕಾಣಬಹುದು (ವಿವರಗಳಿಗೆ 8.3 ನೋಡಿ).

ಕ್ರಿಯಾಪದ

ನೋಡು ಎಸಗು

ತೊಳಗು

ಮುಂದಿನ ಸಮಯದ ರೂಪ ಇರ್ಪನ್ ‘ಇರುತ್ತಾನೆ’’ ನೋೞ್ಪನ್ ‘ನೋಡುತ್ತೇನೆ’’ ಎಸಪನ್ ‘ಓಡಿಸುತ್ತಾನೆ’ ಅಪ್ಪರ್ ‘ಆಗುತ್ತಾರೆ’ ತೊಳಪ್ಪ ‘ಹೊಳೆಯುವ’’ ತಿಂಬೆನ್ ‘ತಿನ್ನುತ್ತೇನೆ’

ಕೊಳ್

ಉಣ್ಬೆನ್ ‘ಉಣ್ಣುತ್ತೇನೆ’’ ಕೊಂಬೆನ್ ‘ತೆಗೆದುಕೊಳ್ಳುತ್ತೇನೆ’’

(2) ಮೂಲದ್ರಾವಿಡದ ಕ್್ಕ ಒಟ್ಟಿನ ಬಳಕೆ ಹಳೆಗನ್ನಡದ ಕೇಳ್ಗುಂ, ಪುಟ್ಟುಗುಂ, ಇರ್ಕುಂ, ಮಾಳ್ಕುಂ ಮೊದಲಾದ ಪದರೂಪಗಳಲ್ಲಿ ಕಾಣಿಸು ತ್ತದೆ. ಇವತ್ತಿನ ಬರಹದ ಕನ್ನಡದಲ್ಲಿ ಇದು ಬೇಕು ಮತ್ತು ಸಾಕು ಎಂಬ ಎರಡು ರೂಪಗಳಲ್ಲಿ ಮಾತ್ರ ಉಳಿದಿದೆ.

ಮೂಲದ್ರಾವಿಡದಲ್ಲಿ ಮುಂದಿನ ಸಮಯದ ಈ ಎರಡು (ಪ್್ಪ, ಕ್್ಕ) ಒಟ್ಟುಗಳ ನಡುವೆ ಎಂತಹ ಸಂಬಂದವಿತ್ತು ಎಂಬುದಿನ್ನೂ ಸ್ಪಶ್ಟವಾಗಿಲ್ಲ. ಹಳೆಗನ್ನಡದಲ್ಲಿ ಕುಂ (ಗುಂ) ಒಟ್ಟಿನ ಬಳಕೆ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರು ನಡೆಸುವ ಕೆಲಸಗಳನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಮಾತ್ರ ಕಾಣಿಸುತ್ತದೆ.

ಈ ಒಟ್ಟಿರುವ ಕ್ರಿಯಾರೂಪಗಳನ್ನು ಹಳೆಗನ್ನಡದಲ್ಲಿ ಮೂರು ಕಾಲ ಗಳಲ್ಲೂ ಬಳಸಲಾಗುತ್ತಿತ್ತೆಂದು ಹೆಚ್ಚಿನ ವಿದ್ವಾಂಸರೂ ಹೇಳುತ್ತಾರೆ. ಆದರೆ ಕಾವ್ಯಗಳಲ್ಲಿ ಅವುಗಳ ಬಳಕೆಯನ್ನು ಪರಿಶೀಲಿಸಿದಾಗ ಮುಂದಿನ ಸಮಯದ ಕೆಲಸವನ್ನು ತಿಳಿಸುವಲ್ಲಿ ಆ ಕೆಲಸ ನಡೆಯುವ ಬಗೆಗೆ ಊಹೆಯನ್ನು ಸೂಚಿಸಬೇಕಾಗಿರುವ ಸಂದರ್ಬಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತವೆಯೆಂದು ತೋರುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ಬಳಕೆಯನ್ನು

ಗಮನಿಸಬಹುದು.

ಬೇಡಿದೊಡೆ ಬಲದ ಬರಿಯುಮನ್ ಈಡಾಡುಗುಂ (1.100) ‘ಯಾಚಿಸಿದರೆ (ಕರ್ಣನು) ಬಲಪಕ್ಕೆಯನ್ನು ಕತ್ತರಿಸಿ ಎಸೆದಾನು’

(2)ನೇ ವಾಕ್ಯದಲ್ಲಿ ಈಡಾಡುಗುಂ ಕ್ರಿಯಾರೂಪ ಮುಂದಿನ ಸಮಯದಲ್ಲಿ ನಡೆಯಲಿರುವ ಕೆಲಸದ ಕುರಿತು ಆಡುಗನ ಊಹೆಯನ್ನು

ಸೂಚಿಸುತ್ತದಲ್ಲದೆ ನಿಶ್ಚಿತವಾಗಿಯೂ ಮುಂದೆ ನಡೆಯಲಿರುವ ಕೆಲಸವನ್ನು ಸೂಚಿಸುವುದಿಲ್ಲ.

ಇದಲ್ಲದೆ, ಹಿಂದಿನ ಸಮಯದ ಕೆಲಸಗಳನ್ನು ತಿಳಿಸುವುದಕ್ಕಾಗಿ ಬಳಕೆ ಯಾದಾಗಲೆಲ್ಲ, ಅವು ರೂಡಿಯಲ್ಲಿದ್ದ ಕೆಲಸಗಳನ್ನು ಮಾತ್ರವೇ ಸೂಚಿಸುವ ಹಾಗೆ ಕಾಣಿಸುತ್ತದೆ (ಬಟ್ 2005:210-13 ನೋಡಿ).

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ಕಂದಪದ್ಯದಲ್ಲಿ ಕುಂ (ಗುಂ) ಒಟ್ಟಿರುವ ಮೂರು ಕ್ರಿಯಾರೂಪಗಳು ಹಿಂದಿನ ಸಮಯವನ್ನು ಸೂಚಿಸುವಲ್ಲಿ ಬಳಕೆಯಾಗಿವೆ. ಆದರೆ ಇವೆಲ್ಲವೂ ಸುಬದ್ರೆ ವಿರಹ ‘ರೂಡಿಯ’ ತಾಪದಿಂದ ಸೂಚಿಸುವ ಕೆಲಸಗಳನ್ನು ಅರ್ತದಲ್ಲೇ ಬಳಕೆಯಾಗಿವೆ ಎಂಬುದನ್ನು ಗಮನಿಸಬಹುದು.

ಮಾಡುತ್ತಿದ್ದ

ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ ಮಾತು ತಪೊ್ಪಡಂ ಮತ್ತಮದಂ ನುಡಿಯಿಸುಗುಂ ಮೊದಲಿಂದಾ ನುಡಿ ಪಱಿಪಡೆ ಮುಳಿದು ನೋಡುಗುಂ ಕೆಳದಿಯರಂ (4.56)

ಈ ಕುಂ (ಗುಂ) ಒಟ್ಟಿನಲ್ಲಿರುವ ಕಕಾರ ಮಾತ್ರವೇ ಮೂಲದ್ರಾವಿಡದ ಮುಂದಿನ ಸಮಯದ ಕ್್ಕ ಒಟ್ಟಿನ ಮುಂದುವರಿಕೆಯೆಂದು ಹೇಳಲು ಸಾದ್ಯವಿದೆ. ಹಾಗಿದ್ದಲ್ಲಿ, ಅದರ ಅನಂತರ ಬರುವ ಉಮ್ ಎಂಬುದು ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ‘ಆಡುಗ’ ಒಟ್ಟೆಂದು ವಾದಿಸಬಹುದು.

Eke →

8.3 ಹಳೆಗನ್ನಡದಲ್ಲಿ ಸಮಯದ ಒಟ್ಟುಗಳು

ಕನ್ನಡದ ಹೆಚ್ಚಿನ ವಿದ್ವಾಂಸರೂ ಹಳೆಗನ್ನಡದ ಕ್ರಿಯಾರೂಪಗಳಲ್ಲಿ ದ, ದಪ ಮತ್ತು ವ ಎಂಬುದಾಗಿ ಮೂರು ಸಮಯದ ಒಟ್ಟುಗಳು ಬಳಕೆಯಾಗುತ್ತಿದ್ದುವು ಮತ್ತು ಇವಕ್ಕೆ ಅನುಕ್ರಮವಾಗಿ ಹಿಂದಿನ (ಬೂತ), ಈಗಿನ (ವರ್ತಮಾನ) ಮತ್ತು ಮುಂದಿನ (ಬವಿಶ್ಯತ್) ಕಾಲಗಳನ್ನು ಸೂಚಿಸುವ ಅರ್ತವಿತ್ತು ಎಂಬುದಾಗಿ ಹೇಳುತ್ತಾರೆ. ಆದರೆ ಇದು ಸರಿಯಲ್ಲ.

ಯಾಕೆಂದರೆ, ನಿಜಕ್ಕೂ ದ ಮತ್ತು ವ ಎಂಬ ಎರಡು ಸಮಯದ ಒಟ್ಟುಗಳಿಗಿಂತ ಬೇರೆಯಾಗಿರುವ ದಪ ಎಂಬ ಒಟ್ಟೇ ಹಳೆಗನ್ನಡದಲ್ಲಿ ಇರಲಿಲ್ಲ. ಕನ್ನಡ ವಯ್ಯಾಕರಣಿಗಳು ಅಂತಹ ದಪ ಒಟ್ಟು ಬಳಕೆಯಾಗಿದೆ ಪೇಳ್ದಪಂ ಎಂಬಂತಹ ಯುಂದು ಕ್ರಿಯಾರೂಪಗಳು ಎರಡೆರಡು ಕ್ರಿಯಾರೂಪಗಳಲ್ಲಿ ಬಳಕೆಯಾಗಿವೆಯಲ್ಲದೆ ದಪ ಎಂಬ ಒಟ್ಟು ಬಳಕೆಯಾಗಿಲ್ಲ.

ಬಂದಪಂ,

ಹೇಳುವ

ಉದಾಹರಣೆಗಾಗಿ, ಬಂದಪಂ ಎಂಬುದರಲ್ಲಿ ಬರು ಕ್ರಿಯಾಪದದ ಹಿಂದಿನ ಸಮಯದ ಬಂದ ರೂಪ ಮತ್ತು ಆಗು ಕ್ರಿಯಾಪದದ ಮುಂದಿನ ಸಮಯದ ಅಪಂ (<ಅಪ್ಪಂ) ರೂಪ ಎಂಬುದಾಗಿ ಎರಡು ಕ್ರಿಯಾರೂಪ ಗಳು ಸೇರಿಕೊಂಡಿವೆ. ಈ ವಿಶಯ ಪರೆದಪ್ಪರ್ ‘ಚದರಿಹೋಗುತ್ತಾರೆ’ ಎಂಬುದರಲ್ಲಿ ಇನ್ನಶ್ಟು ಸ್ಪಶ್ಟವಾಗಿ ಕಾಣಿಸುತ್ತದೆ. ಇದರಲ್ಲಿ ಆಗು ಕ್ರಿಯಾ ಪದದ ಮುಂದಿನ ಸಮಯದ ರೂಪ ಅಪ್ಪರ್ ಎಂಬುದಾಗಿಯೇ ಇದೆ.

ಇಂತಹ ಬಳಕೆಗಳಲ್ಲಿ

ಮೊದಲನೆಯ

ರೂಪದಲ್ಲಿ

(‘ಬೂತಕ್ರುದಂತ’

ಕಿಟ್ಟೆಲ್ ಅವರು

ನೋಡಿ). ಆದರೆ ಇದೂ

ಕ್ರಿಯಾಪದ ಅದರ ರೂಪದಲ್ಲಿ) (ಕಿಟ್ಟೆಲ್ ಸರಿಯುಂದು

ಹೇಳುತ್ತಾರೆ

ಸಂಬಂದಿಸುವ ಬಳಕೆಯಾಗಿದೆಯುಂದು ತೋರುವುದಿಲ್ಲ.

ಯಾಕೆಂದರೆ, ಕನ್ನಡದಲ್ಲಿ ಕ್ರಿಯಾಪದಗಳ ಸಂಬಂದಿಸುವ (ಕ್ರುದಂತ) ರೂಪಗಳನ್ನು ಆ ರೀತಿ ಇನ್ನೊಂದು ಕ್ರಿಯಾಪದದೊಂದಿಗೆ ಸೇರಿಸಿ ಹೇಳುವ ಕ್ರಮ ಬಳಕೆಯಲ್ಲಿಲ್ಲ. ನಾಮಪದಗಳ ವಿಶೇಶಣಗಳಾಗಿ ಮಾತ್ರ ಅವು ಕ್ರಿಯಾಪದಗಳ ಬಳಕೆಯಾಗಬಲ್ಲುವಲ್ಲದೆ, (ಕ್ರುದಂತಗಳು) ವಿಶೇಶಣಗಳಾಗಿ (ಇಲ್ಲವೇ ಬೇರೆ ರೀತಿಯಲ್ಲಿ ಕ್ರಿಯಾಪದಗಳೊಂದಿಗೆ ನೇರವಾಗಿ ಸಂಬಂದಿಸಿ) ಬಳಕೆಯಾಗಲಾರವು.

ಹಾಗಾಗಿ, ಮೇಲಿನ ರಚನೆಗಳನ್ನು ಬಂದನ್ ಅಪ್ಪನ್, ಪರೆದರ್ ಕ್ರಿಯಾಪದಗಳ

ಅಪ್ಪರ್ ಎಂಬಂತಹ

ರಚನೆಗಳಿಂದ

ಹೇಳಿಕೆಯೂ

ಕಂಡುಬರುವ

ಸರಿಯಲ್ಲವೆಂದು

ಪಂಪಬಾರತದಲ್ಲಿ

ನಾಮರೂಪದೊಂದಿಗೆ ಆಗು ಕ್ರಿಯಾಪದದ ಮುಂದಿನ ಸಮಯದ ರೂಪವನ್ನು ಸೇರಿಸಿ ತಯಾರಿಸಿರುವ ರಚನೆಗಳಿಂದ) ಪಡೆಯಬೇಕಾಗುತ್ತದೆ. ಬಂದಪಂ, ಪರೆದಪ್ಪರ್ ಎಂಬಂತಹ ಈ ರಚನೆಗಳಿಗೆ ಹಳೆಗನ್ನಡದಲ್ಲಿ ಈಗಿನ (ವರ್ತಮಾನ) ಸಮಯವನ್ನು ಸೂಚಿಸುವ ಅರ್ತವಿತ್ತೆಂಬ ಕನ್ನಡ ತೋರುತ್ತದೆ. ವಯ್ಯಾಕರಣಿಗಳ ಉದಾಹರಣೆಗಾಗಿ, ಕ್ರಿಯಾರೂಪಗಳ ಬಳಕೆಯನ್ನು ಪರಿಶೀಲಿಸಿದಾಗ, ಅವಕ್ಕೂ ವ (ಪ) ಒಟ್ಟಿರುವ ಬರ್ಪಂ, ನಿಲ್ವಂ ಎಂಬಂತಹ ಕ್ರಿಯಾರೂಪಗಳಿಗೂ ನಡುವೆ ಸಮಯದ ಸೂಚನೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲದಿರುವುದು ಸ್ಪಶ್ಟವಾಗುತ್ತದೆ (ವಿವರಗಳಿಗೆ ಬಟ್ 2005:202 ನೋಡಿ). ಬರುತ್ತಾನೆ ಹೊಸಗನ್ನಡದಲ್ಲಿ

ಮತ್ತು ಬಂದವನಾಗುತ್ತಾನೆ ಎಂಬ ಎರಡು ರೂಪಗಳ ನಡುವೆ ಎಂತಹ ವ್ಯತ್ಯಾಸವಿದೆಯೋ ಅಂತಹದೇ ವ್ಯತ್ಯಾಸ ಹಳೆಗನ್ನಡದಲ್ಲಿ ಬರ್ಪಂ ಮತ್ತು ಬಂದಪಂ ನಾವು ರೂಪಗಳ ಕಲ್ಪಿಸಿಕೊಳ್ಳಬೇಕಾಗುತ್ತದೆ.

ನಡುವೆಯೂ ಇದ್ದಿರಬೇಕೆಂದು

ಇವತ್ತು ಕರಾವಳಿಯ ಗವ್ಡ ಕನ್ನಡದಲ್ಲಿ ಮತ್ತು ನೀಲಗಿರಿಯ ಬಡಗ ಕನ್ನಡದಲ್ಲಿ ಹಳೆಗನ್ನಡದ ಈ ‘ದಪ’ ರೂಪದಿಂದ ಬಂದಿರಬಹುದಾದ ಕೆಲಸವನ್ನು ಕ್ರಿಯಾರೂಪವೊಂದು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದೆ (8.3.3-4) ನೋಡಿ.

ಸಮಯದ

ಮುಂದಿನ

ಮಾತ್ರವೇ

ಇದಲ್ಲದೆ, ಒಳನಾಡಿನ ಒಳನುಡಿಗಳಲ್ಲೂ ಅದು ಬಳಕೆಯಲ್ಲಿದ್ದು, ಮುಂದಿನ ಸಮಯದಲ್ಲಿ ಕೆಲಸವೊಂದು ನಡೆಯಬಹುದು ಎಂಬ ಊಹೆಯ ಅರ್ತವನ್ನು ಬಳಕೆಯಾಗುತ್ತದೆ. ನಿಶ್ಚಿತವಾಗಿಯೂ ಮುಂದಿನ ಸಮಯದಲ್ಲಿ ನಡೆಯಲಿರುವ ಕೆಲಸವನ್ನು ಸೂಚಿಸುವುದಕ್ಕಾಗಿ ಒಳನಾಡಿನ ಒಳನುಡಿಗಳಲ್ಲಿ ಉತ್ತ ಒಟ್ಟಿರುವ ರೂಪವನ್ನು ಬಳಸಿರುವುದೇ ಇದಕ್ಕೆ ಕಾರಣವಿರಬಹುದು (ಬರುತ್ತಾನೆ, ತಿನ್ನುತ್ತಾನೆ).

ಕೊಡುವುದಕ್ಕಾಗಿ

ದಪ ಕ್ರಿಯಾರೂಪಗಳು ಒಳನಾಡಿನ ಒಳನುಡಿಗಳಲ್ಲಿ ಬೇರೆಯೂ ಕೆಲವು ಬದಲಾವಣೆಗಳಿಗೆ ಒಳಗಾಗಿವೆ. ಅವುಗಳ ಎರಡನೆಯ ಅಂಗವಾಗಿದ್ದ ಅಪ್ಪನ್ ಎಂಬುದು ನಡುಗನ್ನಡದಲ್ಲಿ ಅಹನ್ ಎಂದು ಬದಲಾಗಿದೆ ಮತ್ತು ಅನಂತರ ಅದರ ಹಕಾರ ಬಿದ್ದುಹೋದುದರಿಂದಾಗಿ ಆನು ಎಂಬ ರೂಪವನ್ನು ಪಡೆದಿದೆ (ಬಂದಪನ್ > ಬಂದಹನ್ > ಬಂದಾನು).

ಬಂದೇನು, ಬಂದಾರು, ಬಂದಾಳು

ಮೊದಲಾದ ಇತರ ರೂಪಗಳಲ್ಲೂ ಇದೇ ರೀತಿಯಲ್ಲಿ ಪಕಾರ ಹಕಾರವಾಗಿದೆ ಮತ್ತು ಅನಂತರ ಬಿದ್ದುಹೋಗಿದೆ. ಈ ಪಕಾರದ ಪಳೆಯಳಿಕೆಯಾಗಿ ಅದರ ಅನಂತರ ಬಂದಿದ್ದ ಸ್ವರ ಇವತ್ತು ಉದ್ದಸ್ವರವಾಗಿ ಉಳಿದುಕೊಂಡಿದೆ.

ನಡುಗನ್ನಡ ಹಳೆಗನ್ನಡ ಬಂದಹೆಂ ಬಂದಪೆಂ ಬಂದಪಯ್ ಬಂದಹೆ
ಬಂದಹಂ ಬಂದಪಂ ಬಂದಹಳ್ ಬಂದಪಳ್

ದಾರವಾಡ ಬಂದೇನು ಬಂದಾನು ಬಂದಾಳು

ಸಮಯಗಳನ್ನು

ಈ ನಿಯಮಕ್ಕೆ ಬರಹ ಕನ್ನಡದಲ್ಲಿ ಬಳಕೆಯಲ್ಲಿರುವ ಇರು ಕ್ರಿಯಾಪದದ ರೂಪಗಳು ಅಪವಾದಗಳಾಗಿರುವ ಹಾಗೆ ಕಾಣಿಸುತ್ತವೆ. ನಿಜಕ್ಕೂ ಈ ಕ್ರಿಯಾಪದಕ್ಕೆ ಬರಹ ಕನ್ನಡದಲ್ಲಿ ಮುಂದಿನ, ಈಗಿನ ಮತ್ತು ಹಿಂದಿನ ರೂಪಗಳಿವೆ ಸೂಚಿಸಬಲ್ಲ (ಇರುತ್ತಾನೆ, ಇದ್ದಾನೆ, ಇದ್ದ). ಇವುಗಳಲ್ಲಿ ಮೊದಲನೆಯ ಇರುತ್ತಾನೆ ರೂಪ ಮತ್ತು ಮೂರನೆಯ ಇದ್ದ ರೂಪಗಳು ಇತರ ಕ್ರಿಯಾಪದಗಳ ಮುಂದಿನ ಮತ್ತು ಹಿಂದಿನ ಸಮಯದ ರೂಪಗಳ ಹಾಗೆ ಉತ್್ತ ಮತ್ತು ದ್ ಒಟ್ಟುಗಳ ಸೇರಿಕೆಯಿಂದ ರಚಿತವಾಗಿವೆ.

ಮೂರು

ಆದರೆ ಈಗಿನ ಸಮಯವನ್ನು ಸೂಚಿಸುವ ಇದ್ದಾನೆ ರೂಪ ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ ಇರ್ದಪನ್ ರೂಪದಿಂದ ಬಂದಿರುವ ಹಾಗೆ

ಕಾಣಿಸುತ್ತದೆ (ಇರ್ದಪನ್ > ಇರ್ದಹನ್ > ಇದ್ದಾನೆ). ಆದರೆ, ಈ ಕ್ರಿಯಾರೂಪ ಮೇಲೆ ವಿವರಿಸಿದಂತಹ ಊಹೆಯನ್ನು ಸೂಚಿಸುವ ಇದ್ದಾನು ರೂಪದಿಂದ ಬೇರಾಗಿದೆಯೆಂಬುದನ್ನು ಗಮನಿಸಬಹುದು. ಈ ರೂಪದ ಕೊನೆಯಲ್ಲಿ ಎಕಾರವಿದೆಯಾದರೆ, ಊಹೆಯನ್ನು ಸೂಚಿಸುವ ರೂಪದ ಕೊನೆಯಲ್ಲಿ ಉಕಾರವಿದೆ. ಈ ಉಕಾರದ ಮೂಲವೇನು ಎಂಬುದು ಸ್ಪಶ್ಟವಾಗಿಲ್ಲ.

ಕನ್ನಡದ ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಹಳೆಗನ್ನಡದ ವ (ಪ) ಒಟ್ಟಿರುವ ಕ್ರಿಯಾರೂಪಗಳು ಉಳಿದುಕೊಂಡಿವೆ ಆದರೆ ಒಳನಾಡಿನ ಒಳನುಡಿಗಳಲ್ಲಿ ಅವು ಉಳಿದಿಲ್ಲ.

ಕೆಲಸವೊಂದು ನಿಶ್ಚಿತವಾಗಿಯೂ

ಆದರೆ, ಈ ಎರಡು ಒಳನುಡಿಗಳಲ್ಲೂ ಅದಕ್ಕೆ ಕೆಲಸವೊಂದು ಮುಂದೆ ನಡೆಯಬಹುದು ಎಂಬ ಊಹೆಯ ಅರ್ತ ಮಾತ್ರವೇ ಇದೆ. ಮುಂದಿನ ಕಾಲ ನಡೆಯಬಹುದೆಂಬುದನ್ನು ಸೂಚಿಸುವುದಕ್ಕಾಗಿ ಬಡಗ ಕನ್ನಡದಲ್ಲಿ ಮತ್ತು ಕರಾವಳಿಯ ಗವ್ಡ ಕನ್ನಡದಲ್ಲಿ ಹಳೆಗನ್ನಡದ ‘ದಪ’ ರೂಪವನ್ನು ಬಳಸಿರುವುದು ಮತ್ತು ಕರಾವಳಿಯ ಇತರ ಒಳನುಡಿಗಳಲ್ಲಿ ಉತ್ತ ಒಟ್ಟಿರುವ ರೂಪವನ್ನು ಬಳಸಿರುವುದು ಇದಕ್ಕೆ ಕಾರಣವಿರಬಹುದು.

Eke →

8.3.1 ಹಿಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು

ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ ಹಿಂದಿನ ಸಮಯದ ಒಟ್ಟು ಕನ್ನಡದ ಅನಂತರದ ಚರಿತ್ರೆಯಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿದೆ. ಈ ಬದಲಾವಣೆಗಳಲ್ಲಿ ಹಲವಕ್ಕೆ ಕ್ರಿಯಾಪದಗಳ ರೂಪದಲ್ಲಿ ನಡೆದ ಬದಲಾವಣೆಗಳೇ (7.9 ನೋಡಿ) ಕಾರಣವೆಂದು ಹೇಳಲು ಸಾದ್ಯವಿದೆ.

(1) ಹಳೆಗನ್ನಡದಲ್ಲಿ ರ್, ಱ್, ಲ್, ಳ್ ಮತ್ತು ೞ್ ವ್ಯಂಜನಗಳಲ್ಲಿ ಕೊನೆಗೊಳ್ಳುತ್ತಿದ್ದ ಕ್ರಿಯಾಪದಗಳು ಹೊಸಗನ್ನಡದಲ್ಲಿ ಉಕಾರದಲ್ಲಿ ಕೊನೆ ಗೊಳ್ಳುವಂತಾಗಿದೆ. ಈ ಕಾರಣಕ್ಕಾಗಿ ಇವುಗಳಲ್ಲಿ ಹಲವು ಕ್ರಿಯಾಪದಗಳ

ಹಿಂದಿನ ಸಮಯದ ರೂಪದಲ್ಲಿ ಬದಲಾವಣೆಗಳಾಗಿರುವುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

ಕ್ರಿಯಾಪದ ಬೆದಱ್
ಕನಲ್
ಕೇಳ್
ಬಾೞ್

ಹಳೆಗನ್ನಡ ಪೀರ್ದನ್
ಬೆದರ್ದನ್ ಕನಲ್ದನ್ ಕೇಳ್ದನ್
ಬಾೞ್ದನ್

ಹೊಸಗನ್ನಡ ಹೀರಿದ(ನು) ಬೆದರಿದ ಕನಲಿದ ಕೇಳಿದ ಬಾಳಿದ

ಆದರೆ, ಈ ನಿಯಮಕ್ಕೆ ಅಪವಾದವಾಗಿ ಹಲವು ಕ್ರಿಯಾಪದಗಳ ಹಿಂದಿನ ರೂಪಗಳ ರೂಪಗಳು ಮುಂದುವರಿಕೆಗಳಾಗಿಯೂ ಉಳಿದುಕೊಂಡಿವೆ. ಇವುಗಳಲ್ಲಿ ಹಲವು ಹಳೆಗನ್ನಡದಲ್ಲೇನೇ ಮೇಲಿನ ನಿಯಮಕ್ಕೆ ಅಪವಾದಗಳಾಗಿದ್ದುವು.

ಸಮಯದ

ಹಳೆಗನ್ನಡ

ಕ್ರಿಯಾಪದ ಕುಳಿರ್
ಕೊಲ್
ಸಲ್ ಕೊಳ್

ಹಳೆಗನ್ನಡ ಕುಳಿತನ್ ಬಂದನ್
ತಂದನ್
ಗೆದ್ದನ್
ಕೊಂದನ್ ನಿಂದನ್
ಸಂದನ್
ಕೊಂಡನ್

ಹೊಸಗನ್ನಡ ಕುಳಿತ

ಇನ್ನು ಕೆಲವು ಕ್ರಿಯಾರೂಪಗಳು ಬೇರೆ ಕೆಲವು ಬದಲಾವಣೆಗಳಿಗೆ ಒಳಗಾಗಿರುವುದೇ ಮೇಲಿನ ನಿಯಮಕ್ಕೆ ಅಪವಾದಗಳಾಗಿ ಉಳಿಯಲು ಕಾರಣವಿರಬೇಕು. ಉದಾಹರಣೆಗಾಗಿ, ಹಳೆಗನ್ನಡದ ಲ್್ತ ಎಂಬುದು ಉದ್ದ

ಸ್ವರದ ಅನಂತರ ತ್ ಎಂಬುದಾಗಿ ಬದಲಾಗಿರುವ ಕಾರಣ, ಕೆಳಗಿನ ಕ್ರಿಯಾರೂಪಗಳು ಮೇಲಿನ ನಿಯಮಕ್ಕೆ ಅಪವಾದಗಳಾಗಿವೆ.

ಕ್ರಿಯಾಪದ ನೇಲ್
ಸೋಲ್
ನೂಲ್

ಹಳೆಗನ್ನಡ ನೇಲ್ತನ್ ಸೋಲ್ತನ್ ನೂಲ್ತನ್

ಹೊಸಗನ್ನಡ ನೇತ ಸೋತ ನೂತ

ಇದೇ ರೀತಿಯಲ್ಲಿ, (ಕ) ಗಿಡ್ಡ ಸ್ವರದ ಅನಂತರ ಬಂದ ೞ್್ತ ಎಂಬುದು ತ್್ತ ಎಂದಾದುದು ಮತ್ತು (ಚ) ರ್್ದ, ೞ್್ದ ಮತ್ತು ಳ್್ದ ಎಂಬವುಗಳು ದ್್ದ ಎಂದಾದುದು ಕೆಳಗೆ ಕೊಟ್ಟಿರುವ ಕ್ರಿಯಾರೂಪಗಳು ಮೇಲಿನ ನಿಯಮಕ್ಕೆ ಅಪವಾದಗಳಾಗಿ ಉಳಿಯಲು ಕಾರಣವಿರಬೇಕು.

ಕ್ರಿಯಾಪದ (ಕ) ಅೞ್

ಬೀೞ್

ಹಳೆಗನ್ನಡ ಅೞ್ತನ್
ಉೞ್ತನ್
ಕಿೞ್ತನ್

ಇರ್ದನ್
ಎೞ್ದನ್
ಬಿೞ್ದನ್
ಕಳ್ದನ್

ಹೊಸಗನ್ನಡ

(2) ನಕಾರ ಮತ್ತು ಣಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು ಹೊಸಗನ್ನಡದಲ್ಲಿ ಎರಡು ರೀತಿಯ ಬದಲಾವಣೆಗಳಿಗೊಳಗಾಗಿವೆ. ಇವು ಗಳಲ್ಲಿ ಸ್ವರ ಬಂದಿದೆಯಾದರೆ, ಉಕಾರ ಮಾತ್ರ ಸೇರಿಕೊಳ್ಳುತ್ತದೆ (ಸೀನು, ಆನು, ಕಾಣು); (ಚ) ಗಿಡ್ಡ ಸ್ವರ ಬಂದಿದೆಯಾದರೆ, ಅವುಗಳ ಕೊನೆಯಲ್ಲಿದ್ದ ನಕಾರ ಇಲ್ಲವೇ ಣಕಾರ ಇಮ್ಮಡಿ ರೂಪವನ್ನೂ ಪಡೆಯುತ್ತದೆ (ತಿನ್ನು, ಎನ್ನು, ಉಣ್ಣು).

ಆದರೆ, ಈ ಎರಡು ಬದಲಾವಣೆಗಳೂ ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳ ಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ. ಅವು ಹಳೆಗನ್ನಡದಲ್ಲಿದ್ದ ರೂಪದಲ್ಲೇ ಉಳಿದಿವೆ. ಉದ್ದ ಸ್ವರದ ಅನಂತರ ಮೂಗುಲಿ ಬಿದ್ದು ಹೋಗುವ ಒಂದು ಬದಲಾವಣೆ ಮಾತ್ರ ಇಲ್ಲಿ ನಡೆದಿದೆ.

ಕ್ರಿಯಾಪದ

ಹಳೆಗನ್ನಡ

ಹೊಸಗನ್ನಡ

ಆತು(ಕೊಂಡ)

Eke →

8.3.2 ಮುಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು

ಹಳೆಗನ್ನಡದಲ್ಲಿ ಮುಂದಿನ ಸಮಯದ ಒಟ್ಟಿಗೆ ವ್, ಬ್ ಮತ್ತು ಪ್ ಎಂಬ ಮೂರು ರೂಪಗಳಿದ್ದುವೆಂಬುದನ್ನು ನಾವು ಮೇಲೆ ನೋಡಿರುವೆವು. (1) ಣಕಾರ ಮತ್ತು ನಕಾರಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರ ಇದಕ್ಕೆ ಬ್ ರೂಪವಿತ್ತು, ಮತ್ತು (2) ರಕಾರ, ಱಕಾರ, ೞಕಾರ ಮತ್ತು ನಕಾರಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರ ಪ್ ರೂಪವಿತ್ತು. ಇದಲ್ಲದೆ, ಇಸು ಒಟ್ಟಿನಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಮತ್ತು ಗು ಇಲ್ಲವೇ ಡು ಉಲಿಕಂತೆಗಳಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳ ಅನಂತರವೂ ಇದಕ್ಕೆ ಪ್ ರೂಪವಿತ್ತು.

ಈ ರೀತಿ, ಪ್ ರೂಪ ಇರುವಲ್ಲಿ ಕ್ರಿಯಾಪದಗಳ ಕೊನೆಯ ಇಸು ಮತ್ತು ಗು ಉಲಿಕಂತೆಗಳು ಬಿದ್ದು ಹೋಗುತ್ತವೆ ಮತ್ತು ಡು ಎಂಬುದು ೞ್ ಎಂದಾಗುತ್ತದೆ (ಉದಾಹರಣೆಗಳನ್ನು ಕೆಳಗೆ (3)ನೇ ಪಾರಾದ ಅನಂತರ ಕೊಡಲಾಗಿದೆ).

(3) ಉಳಿದ ಕ್ರಿಯಾಪದಗಳ ಅನಂತರ ಅದಕ್ಕೆ ವ್ ರೂಪವಿತ್ತು. ಆದರೆ, ಎಲ್ಲಿ ಪ್ ಇಲ್ಲವೇ ಬ್ ರೂಪವಿತ್ತು ಮತ್ತು ಎಲ್ಲಿ ವ್ ರೂಪವಿತ್ತು ಎಂಬುದನ್ನು ತಿಳಿಸುವ ನಿಶ್ಚಿತವಾದ ನಿಯಮಗಳಿಲ್ಲ.

ಕ್ರಿಯಾಪದಗಳ ಪಟ್ಟಿಯ ಮೂಲಕವೇ ಇದನ್ನು ವಿವರಿಸಬೇಕು. ಈ ಎಲ್ಲಾ ಬದಲಾವಣೆಗಳಿಗೂ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಪ್(ಬ್) ರೂಪ 

ತೋಱ್ ಕೀೞ್ ನೋನ್ ನೋಡು

ತೋರ್ಪ ನೋನ್ಪ ನೋೞ್ಪ

ವ್ ರೂಪ

ಕುಡು

ಪೇೞ್ ಬೇಡು

ಬೀಸು

ಕುಡುವ

ಪೀರ್ವ ಪೇೞ್ವ ಅಱಿವ ಬೇಡುವ

ಅಳೆವ ಬೀಸುವ

ಈ ಒಟ್ಟಿನ ರೂಪಗಳು ನಡುಗನ್ನಡದಲ್ಲಿ ಹೆಚ್ಚುಕಡಿಮೆ ಬದಲಾಗದೆ ಉಳಿದಿವೆ. ಪಕಾರ ಹಕಾರವಾಗುವ ಒಂದು ಬದಲಾವಣೆ ಮಾತ್ರ ಇವುಗಳಲ್ಲಿ ಕೆಲವು ರೂಪಗಳನ್ನು ಮಾರ್ಪಡಿಸಿವೆ. ಮೊದಲಿಗೆ ಈ ಬದಲಾವಣೆ ಇಮ್ಮಡಿ ಪಕಾರವಿರುವ ಇಪ್ಪ>ಇಹ, ಬಪ್ಪ>ಬಹ, ತಪ್ಪ>ತಹ ರೂಪಗಳಲ್ಲಿ ಕಾಣಿಸಿಕೊಂಡಿದ್ದು ಅನಂತರ ಬೇಳ್ಪ>ಬೇಹ, ಪೋಪ> ಹೋಹ ರೂಪಗಳಲ್ಲೂ ಕಾಣಿಸಿಕೊಂಡಿದೆ.

ಇವತ್ತಿನ ಬರಹ ಕನ್ನಡದಲ್ಲಿ ಮುಂದಿನ ಸಮಯದ ಈ ವ್ (ಪ್) ಒಟ್ಟು ಕ್ರಿಯಾಪದಗಳ ಸಂಬಂದಿಸುವ ರೂಪದಲ್ಲಿ (ಆಳುವ, ಬೀಳುವ, ಸೀಳುವ) ಮಾತ್ರ ಉಳಿದಿದೆ. ಕೆಲವು ವಿಶಿಶ್ಟವಾದ ಬರಹಗಳಲ್ಲಿ ಮಾತ್ರ, ಅದು ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲೂ (ಮಾಡುವೆನು, ಮಾಡು ವರು) ಕಾಣಿಸಿಕೊಳ್ಳುತ್ತದೆ.

ವಾಕ್ಯಗಳ

ಕೊನೆಯಲ್ಲಿ ಬಳಸುವುದಕ್ಕಾಗಿ ಈ ಒಟ್ಟಿರುವ ಕ್ರಿಯಾರೂಪಕ್ಕೆ ಬದಲಾಗಿ ಬರಹ ಕನ್ನಡದಲ್ಲಿ ಉತ್್ತ ಎಂಬ ಬೇರೆಯೇ

ಒಂದು ಒಟ್ಟಿರುವ ಕ್ರಿಯಾರೂಪ ಬಳಕೆಯಾಗುತ್ತದೆ (ಮಾಡುತ್ತಾನೆ, ಬರುತ್ತೇನೆ, ಹೋಗು ತ್ತಾಳೆ). ಇದು ಎರಡು ಕ್ರಿಯಾರೂಪಗಳ ಜೋಡಣೆಯಿಂದ ಸಿದ್ದವಾಗಿರುವ ಹಾಗೆ ಕಾಣಿಸುತ್ತದೆ.

ಜೋಡಿಸುವುದಕ್ಕಾಗಿ ಬಳಕೆಯಾಗಿರುವ ಕ್ರಿಯಾರೂಪಗಳು ಯಾವುವು ಎಂದು ಹೇಳುವುದು ಮಾತ್ರ ಸ್ವಲ್ಪ ಕಶ್ಟ. ಕಿಟ್ಟೆಲ್ ಅವರ ಮತದಂತೆ, ಆಗು ಕ್ರಿಯಾಪದದ ಮುಂದಿನ ಸಮಯದ ಕ್ರಿಯಾರೂಪಗಳನ್ನು ಉತ್ತ ಒಟ್ಟಿನಲ್ಲಿ ಕೊನೆಗೊಳ್ಳುವ ಮಾಡುತ್ತ, ಬರುತ್ತ, ಹೋಗುತ್ತ ಮೊದಲಾದ ಜೋಡಿಸುವ ಕ್ರಿಯಾರೂಪಗಳೊಂದಿಗೆ ರೂಪಗಳನ್ನು ನೋಡಿ) ತಯಾರಿಸಲಾಗಿದೆ.

ಮೂಲಕ ಈ

ಸೇರಿಸುವ

ಮುಂದಿನ

ಕ್ರಿಯಾಪದದ

ಇವುಗಳಲ್ಲಿ ಆಗು

ಸಮಯದ (ಅಪ್ಪೆನ್, ಅಪ್ಪೆಮ್, ಅಪ್ಪನ್, ಅಪ್ಪಳ್ ಕ್ರಿಯಾರೂಪಗಳು ಮೊದಲಾದುವು) ಏನೆ, ಏವೆ, ಆನೆ, ಆಳೆ ಮೊದಲಾದ ಕುಗ್ಗಿಸಿದ ರೂಪಗಳಲ್ಲಿ ಬಂದಿವೆಯೆಂಬುದಾಗಿ ಅವರು ಸೂಚಿಸುತ್ತಾರೆ (ಕಿಟ್ಟೆಲ್ 1903: 133 ನೋಡಿ).

ಆದರೆ ಇಲ್ಲಿ ಸಮಸ್ಯೆಯೇನೆಂದರೆ, ಮಾಡುತ್ತುಂ ಅಪ್ಪೆನ್ ‘ಮಾಡುತ್ತಾ ಆಗುವೆನು’ ಎಂಬಂತಹ ರಚನೆ ಕನ್ನಡದ ಮಟ್ಟಿಗೆ ಅಶ್ಟೊಂದು ಸರಿಯಾದುದೆಂದು ತೋರುವುದಿಲ್ಲ

ಬರಹ ಕನ್ನಡದ ಸಂಬಂದಿಸುವ ರೂಪಗಳಲ್ಲಿ ವ್(ಪ್) ಒಟ್ಟು ಎಲ್ಲಾ ರೀತಿಯ ಕ್ರಿಯಾಪದಗಳ ಅನಂತರವೂ ವ್ ಎಂಬ ಒಂದೇ ರೂಪದಲ್ಲಿ ಬಳಕೆಯಾಗುತ್ತದೆ (ಎಂಬ ಸಂಬಂದಿಸುವ ಕ್ರಿಯಾರೂಪ ಮಾತ್ರ ಇದಕ್ಕೆ ಅಪವಾದ; ಅದರಲ್ಲಿ ಬ್ ರೂಪ ಉಳಿದಿದೆ). ಕ್ರಿಯಾಪದಗಳ ರೂಪದಲ್ಲಿ ನಡೆದ ಹಲವಾರು ರೀತಿಯ ಬದಲಾವಣೆಗಳೇ (7.9 ನೋಡಿ) ಈ ರೀತಿ ಇವತ್ತಿನ ಬರಹ ಕನ್ನಡದಲ್ಲಿ ಹಳೆಗನ್ನಡದ ಮೂರು (ವ್, ಪ್, ಬ್) ರೂಪಗಳ ಬದಲು ವ್ ಎಂಬ ಒಂದೇ ರೂಪ ಉಳಿದಿರಲು ಕಾರಣವಿರಬೇಕು. ಕೆಳಗಿನ ಉದಾಹರಣೆಗಳು ಇದನ್ನು ಸ್ಪಶ್ಟಪಡಿಸುತ್ತವೆ.

ಹಳೆಗನ್ನಡ ಕ್ರಿಯಾಪದ ಕ್ರಿಯಾರೂಪ
ಪೋ

ಬೇವ
ಕೀಳ್ಪ
ಪೋಪ

ಹೊಸಗನ್ನಡ

ಕ್ರಿಯಾಪದ ಬೇಯು
ತಿನ್ನು
ಕೀಳು
ಹೋಗು

ಕ್ರಿಯಾರೂಪ ಆಳುವ ಬೇಯುವ ತಿನ್ನುವ ಇರುವ ಕೀಳುವ ಹೋಗುವ

Eke →

8.3.3 ಕರಾವಳಿಯ ಒಳನುಡಿಗಳಲ್ಲಿ ಮುಂದಿನ ಸಮಯದ ಒಟ್ಟು

ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದ ಮುಂದಿನ ಸಮಯದ ಒಟ್ಟು ಕರಾ ವಳಿಯ ಒಳನುಡಿಗಳಲ್ಲಿ ಸಂಬಂದಿಸುವ ರೂಪಗಳಲ್ಲಿ ಮಾತ್ರವಲ್ಲದೆ ಇದಲ್ಲದೆ, ಈ ಕ್ರಿಯಾರೂಪಗಳಲ್ಲಿ ಹಲವು ರೂಪಬೇದಗಳೂ ಉಳಿದುಕೊಂಡಿವೆ.

ರೂಪಗಳಲ್ಲೂ ಉಳಿದುಕೊಂಡಿದೆ. ಮುಂದಿನ

ಸಮಯದ ಒಟ್ಟಿನ

(1) ಉದಾಹರಣೆಗಾಗಿ, ಹವ್ಯಕ

ಕನ್ನಡದಲ್ಲಿ ಈ ಒಟ್ಟಿಗೆ ಹಳೆಗನ್ನಡದಲ್ಲಿ ಕಾಣಿಸುವ ಪ್, ಬ್ ಮತ್ತು ವ್ ಎಂಬ ಮೂರು ರೂಪಗಳೂ ಇವೆ.

ಹಳೆಗನ್ನಡ ಪೋಪೆನ್ ಬರ್ಪೆನ್
ಉಣ್ಬೆನ್
ಕಾಣ್ಬೆನ್

ಹವ್ಯಕ ಕನ್ನಡ ಹೋಪೆ ಬಪ್ಪೆ

ಗೆಲ್ವೆನ್
ಪಾಡುವೆನ್ ನಡೆವೆನ್

ಗೆಲ್ಲುವೆ ಹಾಡುವೆ ನಡೆವೆ

ಆದರೆ, ಈ ರೂಪಗಳ ಬಳಕೆಯಲ್ಲಿ ಕೆಲವು ಬದಲಾವಣೆಗಳೂ ನಡೆದಿವೆ. ಕನ್ನಡದ ಇತರ ಒಳನುಡಿಗಳಲ್ಲಿ (ಕ್ರಿಯಾಪದಗಳ ರೂಪದಲ್ಲಿ) ನಡೆದಂತಹ ಹಲವು ಬದಲಾವಣೆಗಳು (7.9 ನೋಡಿ) ಹವ್ಯಕದಲ್ಲೂ ನಡೆದಿರುವುದೇ ಇದಕ್ಕೆ ಕಾರಣವಿರಬಹುದು.

ಹಳೆಗನ್ನಡದಲ್ಲಿ ಹಲವು ಕ್ರಿಯಾಪದಗಳ ಅನಂತರ ಬರುತ್ತಿದ್ದ ಪ್ ರೂಪದ ಬದಲು, ಹವ್ಯಕದಲ್ಲಿ ವ್ ರೂಪ ಕಾಣಿಸುವುದು ಇಂತಹ ಬದಲಾವಣೆಗಳಲ್ಲಿ ಮುಕ್ಯವಾದುದು.

ಹಳೆಗನ್ನಡ ಕೀಳ್ - ಕೀಳ್ಪೆನ್ ಮಾಡು - ಮಾೞ್ಪನ್ ನೋಡು - ನೋೞ್ಪನ್ ತರಿಸು - ತರಿಪೆನ್ ಮಾಡಿಸು - ಮಾಡಿಪ್ಪೆನ್ ಮಾಡುಸು - ಮಾಡುಸುವೆ ತೂಗು - ತೂಪೆನ್

ಹವ್ಯಕ ಕನ್ನಡ ಕೀಳು - ಕೀಳುವೆ ಮಾಡು - ಮಾಡುವೆ ನೋಡು - ನೋಡುವೆ ತರುಸು - ತರುಸುವೆ

ತೂಗು - ತೂಗುವೆ

ಹವ್ಯಕ ಕನ್ನಡದಲ್ಲಿ ಈ ಕ್ರಿಯಾರೂಪಗಳ ಅರ್ತದಲ್ಲೂ ಬದಲಾವಣೆ ಯಾಗಿದೆ. ಮೇಲೆ ಸೂಚಿಸಿದ ಹಾಗೆ, ಅವು ಮುಂದಿನ ಸಮಯದ ಸಂಗತಿ ಯೊಂದನ್ನು ತಿಳಿಸುವ ಬದಲು, ಅದರ ಕುರಿತಾಗಿ ಆಡುಗನ ಊಹೆಯನ್ನು ಸೂಚಿಸುತ್ತವೆ. ನಿಶ್ಚಿತವಾಗಿಯೂ ಒಂದು ಸಂಗತಿ ಮುಂದಿನ ಸಮಯದಲ್ಲಿ ಜರಗಲಿದೆ ಎಂಬುದನ್ನು ತಿಳಿಸಲು, ಇವಕ್ಕೆ ಬದಲು ಉತ್್ತ ಒಟ್ಟಿರುವ ಮಾಡುತ್ತೆ ‘ಮಾಡುತ್ತೇನೆ’, ತರುಸುತ್ತೆ ‘ತರಿಸುತ್ತೇನೆ’ ಮೊದಲಾದ ಕ್ರಿಯಾರೂಪಗಳನ್ನೇ ಹವ್ಯಕ ಕನ್ನಡವೂ ಬಳಸುತ್ತದೆ.

ಇದಲ್ಲದೆ, ಹವ್ಯಕ ಕನ್ನಡದಲ್ಲಿ ಊಹೆಯನ್ನು ಸೂಚಿಸುವ ಮೇಲಿನ ಕ್ರಿಯಾರೂಪಗಳನ್ನು ಆಡುಗ ಮತ್ತು ಕೇಳುಗರು ನಡೆಸಲಿರುವ ಕೆಲಸಗಳನ್ನು ಸೂಚಿಸುವುದಕ್ಕಾಗಿ ಮಾತ್ರವೇ ಬಳಸಲಾಗುತ್ತದೆ. ಇತರರು ನಡೆಸಲಿರುವ

ಕೆಲಸಗಳನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪಗಳನ್ನು ಬಳಸಲಾಗುತ್ತದೆ.

ಒಟ್ಟಿರುವ

ಹಳೆಗನ್ನಡ ಆನ್ ಬರ್ಪೆನ್ ಆಮ್ ಬರ್ಪೆಮ್
ನೀಂ ಬಪ್ರಿರ್
ಅವನ್ ಬಪ್ರನ್
ಅವರ್ ಬಪ್ರರ್

ಹವ್ಯಕ ಕನ್ನಡ ಆನು ಬಪ್ಪೆ ಎಂಗೊ ಬಪ್ಪೆಯೊᵒ ನಿಂಗೊ ಬಪ್ಪಿ ಅವೆ ಬಕ್ಕು ಅವು ಬಕ್ಕು

ಮೇಲೆ (8.2.2)ರಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡದಲ್ಲೂ ಕುಂ (ಗುಂ) ಒಟ್ಟಿರುವ ಕ್ರಿಯಾರೂಪಗಳ ಬಳಕೆಯಲ್ಲಿ ಈ ಎರಡು ನಿರ್ಬಂದಗಳಿದ್ದುವು; (ಕ) ಅವು ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರು ನಡೆಸುವ ಕೆಲಸಗಳನ್ನು ಮಾತ್ರವೇ ಸೂಚಿಸುತ್ತಿದ್ದುವು ಮತ್ತು (ಚ) ಮುಂದಿನ ಸಮಯದ ಕೆಲಸಗಳ ಕುರಿತಾಗಿ ಊಹೆಯನ್ನು ಮಾತ್ರವೇ ಸೂಚಿಸುತ್ತಿದ್ದುವು.

ಹಾಗಾಗಿ, ಈ ಒಟ್ಟಿನ ಮಟ್ಟಿಗೆ ಹವ್ಯಕ ಕನ್ನಡ ಹಳೆಗನ್ನಡದ ಕಾಲದಲ್ಲಿದ್ದ ಬಳಕೆಯನ್ನೇ ಮುಂದುವರಿಸಿದೆ. ಆಗುಗ ಮತ್ತು ಕೇಳುಗರು ನಡೆಸುವ ಕೆಲಸಗಳನ್ನು ಸೂಚಿಸುವಲ್ಲಿ ಮಾತ್ರ ಅದು ಬದಲಾವಣೆಯನ್ನು ಮಾಡಿಕೊಂಡಿದೆ; ಮುಂದಿನ ಸಮಯದ ಕೆಲಸಗಳನ್ನು ಸೂಚಿಸುವ ವ್ (ಪ್) ಒಟ್ಟಿರುವ ಕ್ರಿಯಾರೂಪಗಳನ್ನು ಅಂತಹ ಕೆಲಸಗಳ ಕುರಿತಾಗಿ ಊಹೆಯನ್ನು ಸೂಚಿಸಬೇಕಾಗಿರುವಲ್ಲಿ ಮಾತ್ರ ಬಳಸುವಂತೆ ಅದು ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡಿಕೊಂಡಿದೆ.

ಇದಲ್ಲದೆ, ಹಳೆಗನ್ನಡದ ಹಾಗೆ ಹವ್ಯಕ ಕನ್ನಡದಲ್ಲೂ ಕುಂ (ಗುಂ) ಒಟ್ಟಿರುವ ಕ್ರಿಯಾರೂಪಗಳು ರೂಪದಲ್ಲಿ) ಹಿಂದಿನ ಸಮಯದಲ್ಲಿ ರೂಡಿಯಲ್ಲಿದ್ದ ಕೆಲಸಗಳನ್ನು ಸೂಚಿಸುವುದಕ್ಕಾಗಿಯೂ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯವನ್ನು ಗಮನಿಸ ಬಹುದು.

(4) ಅವು ಪುಣೆಲಿಪ್ಪಗ ಉಂಬಲೆ ಹೋಟೆಲಿಂಗೆ ಹೋಕು

‘ಅವರು ಪುಣೆಯಲ್ಲಿದ್ದಾಗ ಊಟಕ್ಕೆ ಹೋಟೆಲಿಗೆ ಹೋಗುತ್ತಿದ್ದರು’

ಮೇಲಿನ ವಾಕ್ಯದಲ್ಲಿ ಹೋಕು ಕ್ರಿಯಾರೂಪ ಹಿಂದಿನ ಸಮಯದಲ್ಲಿ ರೂಡಿಯಲ್ಲಿ ನಡೆಯುತ್ತಿದ್ದ ಕೆಲಸವೊಂದನ್ನು ಸೂಚಿಸುತ್ತದೆ. ಆದರೆ, ವ್ (ಪ್) ಒಟ್ಟಿರುವ ಹೋಪೆ ‘ಹೋದೇನು’, ಹೋಪಿ ‘ಹೋದೀರಿ’ ಕ್ರಿಯಾ ರೂಪಗಳಿಗೆ ಈ ರೀತಿ ಹಿಂದಿನ ಸಮಯದ (ರೂಡಿಯ) ಕೆಲಸಗಳನ್ನು ಸೂಚಿಸುವ ಬಳಕೆಯಿಲ್ಲ.

ಈ ಕಾರಣಕ್ಕಾಗಿ, ಆಡುಗ ಇಲ್ಲವೇ ಕೇಳುಗ ನಡೆಸುತ್ತಿದ್ದ ಕೆಲಸಗಳನ್ನು (ಅವರೊಂದಿಗೆ ಇತರರನ್ನೂ ಸೇರಿಸಿ ಹೇಳಿರುವ ಸಂದರ್ಬಗಳಲ್ಲಿ) ಕು (ಗು) ಒಟ್ಟಿರುವ ರೂಪಗಳ ಮೂಲಕವೇನೇ ಹಿಂದಿನ ಸಮಯದ ರೂಡಿಯ ಕೆಲಸಗಳನ್ನು ಸೂಚಿಸಲಾಗುತ್ತದೆ.

(5) ನಾವು ಪುಣೆಲಿಪ್ಪಗ ಉಂಬಲೆ ಹೋಟೆಲಿಂಗೆ ಹೋಕು

ಪುಣೆಯಲ್ಲಿದ್ದಾಗ ಊಟಕ್ಕೆ

‘ನಾವು ಹೋಗುತ್ತಿದ್ದೆವು’

ಹೋಟೆಲಿಗೆ

ಈ ವಿಶಯದಲ್ಲಿ ಹವ್ಯಕ ಕನ್ನಡ ಹಳೆಗನ್ನಡಕ್ಕಿಂತ ಬೇರಾಗಿರುವ ಹಾಗೆ

ಕಾಣಿಸುತ್ತದೆ.

ಮುಂದಿನ ಸಮಯದ ಕೆಲಸದ ಕುರಿತಾಗಿ ಊಹೆಯನ್ನು ಸೂಚಿಸುವ ಈ ಅರ್ತದಲ್ಲಿ ವ್ (ಪ್) ಒಟ್ಟಿರುವ ಕ್ರಿಯಾರೂಪಗಳ ಬಳಕೆ ಕರಾವಳಿಯ ಬೇರೆ ಒಳನುಡಿಗಳಲ್ಲೂ ಕಾಣಿಸುತ್ತದೆ. ಆದರೆ, ಈ ಒಳನುಡಿಗಳಲ್ಲಿ ಆಡುಗ ಮತ್ತು ಕೇಳುಗರು ನಡೆಸಲಿರುವ ಕೆಲಸಗಳನ್ನು ಮಾತ್ರವಲ್ಲದೆ ಇತರರು ನಡೆಸಲಿರುವ ಕೆಲಸಗಳನ್ನೂ ಈ ಕ್ರಿಯಾರೂಪಗಳ ಮೂಲಕವೇ ಸೂಚಿಸಲಾಗುತ್ತದೆ.

ಉದಾಹರಣೆಗಾಗಿ, ಹಾಲಕ್ಕಿ ಕನ್ನಡದಲ್ಲಿ (ಆಚಾರ್ಯ 1967) ಕುಡೀವೆ ‘ಕುಡಿದೇನು’, ಎಂಬಂತಹ ರೂಪಗಳು ಮಾತ್ರವಲ್ಲದೆ, ಕುಡೀವ ‘ಅವನು

ಕುಡಿದಾನು’, ಬರುವ ‘ಅವನು ಬಂದಾನು’ ಎಂಬಂತಹ ರೂಪಗಳೂ

(2) ಸುಳ್ಯದ ಗವ್ಡ ಕನ್ನಡವೂ ಹಳೆಗನ್ನಡದ ವ್(ಪ್) ಒಟ್ಟನ್ನು ಉಳಿಸಿ ಕೊಂಡಿದೆ ಮತ್ತು ಅದನ್ನು ಅನಿಶ್ಚಿತವಾಗಿರುವ ಮುಂದಿನ ಸಮಯವನ್ನು ಸೂಚಿಸುವ ಅರ್ತದಲ್ಲಿ ಬಳಸುತ್ತದೆ (ಕುಶಾಲಪ್ಪ ಗವ್ಡ 1970).

ತಿನ್ - ತಿಮ್ಬೊ
ಕಾಣ್ - ಕಾಂಬ
ಅಳಿ - ಅಳಿವೆ

ಕೊಡು - ಕೊಡುವೆ

‘(ಅವನು) ತಿಂದಾನು’ ‘(ನೀನು) ನೋಡಬಹುದು’ ‘(ನಾನು) ಅಳೆದೇನು’ ‘(ನಾನು) ಕೊಟ್ಟೇನು’

ನಿಶ್ಚಿತವಾದ ಮುಂದಿನ ಸಮಯವನ್ನು ಇಲ್ಲವೇ ಈಗಿನ ಸಮಯವನ್ನು ಸೂಚಿಸುವುದಕ್ಕಾಗಿ, ಬರಹ ಕನ್ನಡ ಇಲ್ಲವೇ ಕರಾವಳಿಯ ಹವ್ಯಕ ಕನ್ನಡದ ಹಾಗೆ, ಉತ್್ತ ಒಟ್ಟನ್ನು ಬಳಸುವ ಬದಲು ಗವ್ಡ ಕನ್ನಡ ಹಿಂದಿನ ಸಮಯದ ಒಟ್ಟಿನೊಂದಿಗೆ ಬೇರೊಂದು ಒಟ್ಟನ್ನು ಬಳಸುತ್ತಿರುವ ಹಾಗೆ ಕಾಣಿಸುತ್ತದೆ. ಇದು ಹಳೆಗನ್ನಡದ ‘ದಪ’ ಕ್ರಿಯಾರೂಪದ ಇಲ್ಲವೇ ಅಂತಹ ಬೇರೊಂದು ರೂಪದ ಮುಂದುವರಿಕೆಯಾಗಿರಬೇಕು.

ಕೊಡು
ಹೋಗು
ಹಾರು
ಕೊಡು

ಕೊಟ್ಟನೆ ‘ಕೊಡುತ್ತೇನೆ’ ತಂದನೆ, ತನ್ನೆ ‘ತರುತ್ತೇನೆ’ ಹೋದನೆ, ಹೋನೆ ‘ಹೋಗುತ್ತೇನೆ’ ಹಾರಿಯ ‘ಹಾರುತ್ತೀ’ ಅಳ್ದಿಯ ‘ಅಳೆಯುತ್ತೀ’ ಅತ್ತವೆ ‘ಅಳುತ್ತಾರೆ’ ಕೊಟ್ಟದೆ ‘ಕೊಡುತ್ತದೆ’

ಕೆಳಗೆ 8.3.4ರಲ್ಲಿ ಕೊಟ್ಟಿರುವ ಬಡಗ ಕನ್ನಡದ ಮುಂದಿನ ಸಮಯದ ಕ್ರಿಯಾರೂಪಗಳಿಗೂ ಈ ಕರಾವಳಿಯ ಗವ್ಡ ಕನ್ನಡದ ಕ್ರಿಯಾರೂಪಗಳಿಗೂ ನಡುವಿರುವ ಹೋಲಿಕೆಯನ್ನು ಗಮನಿಸುವುದು ಅವಶ್ಯ.

Eke →

8.3.4 ಬಡಗ ಕನ್ನಡದಲ್ಲಿ ಸಮಯದ ಒಟ್ಟುಗಳು

ನೀಲಗಿರಿಯ ಬಡಗರ ಕನ್ನಡ ಒಳನುಡಿಯಲ್ಲಿ ಹಿಂದಿನ ಸಮಯದ ಕ್ರಿಯಾ ರೂಪಗಳು ಹೆಚ್ಚುಕಡಿಮೆ ಕನ್ನಡದ ಇತರ ಒಳನುಡಿಗಳಲ್ಲಿರುವ ಹಾಗೆಯೇ ಕೆಳಗೆ ಉಳಿದುಕೊಂಡಿವೆ. ಇದಕ್ಕೆ ಕೊಡಲಾಗಿದೆ.

ಕೆಲವು ಉದಾಹರಣೆಗಳನ್ನು

ಮಾಡಿದೆ
ಹೋದ

‘ನೀನು ಮಾಡಿದೆ’’ ‘ಅವನು ಹೋದ’’ ‘ಅವನು ಎದ್ದ’ ‘ಅವನು ಬಂದ’

ಆದರೆ, ಮುಂದಿನ

ಸೂಚಿಸುವುದಕ್ಕಾಗಿ ಬಡಗ ಸಮಯವನ್ನು ಕನ್ನಡದಲ್ಲಿ ಹಳೆಗನ್ನಡದ ದಪ ಒಟ್ಟು ಮುಂದುವರಿದಿರುವ ಹಾಗೆ ಕಾಣಿಸುತ್ತದೆ. ಎಂದರೆ, ಅದರಲ್ಲಿ ಹಿಂದಿನ ಸಮಯದ ಕ್ರಿಯಾರೂಪಕ್ಕೆ ಆಗು ಕ್ರಿಯಾಪದದ ಮುಂದಿನ ಸಮಯದ ಕ್ರಿಯಾರೂಪವನ್ನು ಸೇರಿಸಿ ರಚಿಸಿದಂತಹ ಹಳೆಗನ್ನಡದ ಕ್ರಿಯಾರೂಪವೇ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿರುವ ಹಾಗೆ ಕಾಣಿಸುತ್ತದೆ.

ಉದಾಹರಣೆಗಾಗಿ, ಬಡಗ ಕನ್ನಡದಲ್ಲಿ ಬಳಕೆಯಾಗುವ ಕೆಲವು ಮುಂದಿನ ಸಮಯದ ಕ್ರಿಯಾರೂಪಗಳನ್ನು ಪರಿಶೀಲಿಸಬಹುದು. ಇವು ಮೇಲೆ 6.3.3ರಲ್ಲಿ ರೂಪಗಳನ್ನು ಹೋಲುತ್ತವೆ.

ಕೊಟ್ಟಿರುವ

ಕನ್ನಡದ

ಗವ್ಡ

ನಡದಾರ
ಮಾಡಿನ

‘ಅವರು ನಡೆಯುತ್ತಾರೆ’ ‘ಅವನು ಮಾಡುತ್ತಾನೆ’

ಬಂದನೊ

‘ನೀವು ಉಜ್ಜುತ್ತೀರಿ’ ‘ನಾನು ಉಳುತ್ತೇನೆ’ ‘ನಾವು ಬರುತ್ತೇವೆ’ ‘ನಾನು ಓಡುತ್ತೇನೆ’

ಇದಲ್ಲದೆ, ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದ್ದ ವ್ (ಪ್) ಒಟ್ಟಿರುವ ಕ್ರಿಯಾರೂಪವೂ ಬಡಗ ಕನ್ನಡದಲ್ಲಿ ಉಳಿದುಕೊಂಡಿದೆ. ಆದರೆ, ಕರಾವಳಿಯ ಹವ್ಯಕ ಕನ್ನಡದ ಹಾಗೆ, ಅದನ್ನು ಬಡಗ ಕನ್ನಡ ಆಡುಗ ಮತ್ತು ಕೇಳುಗರು ನಡೆಸುವ ಕೆಲಸಗಳನ್ನು ಸೂಚಿಸುವುದಕ್ಕಾಗಿ ಮಾತ್ರ ಬಳಸುತ್ತದೆ. ಇದಲ್ಲದೆ, ಒರ್ವಚನದಲ್ಲೂ ಅದರ ಬಳಕೆಯಿಲ್ಲ.

ಹೋಪೋ

ಅಳಿಬೋ

‘ನೀವು ಬರುವಿರಿ’ ‘ನಾವು (ಮತ್ತು ನೀವು) ಹೋಗುವೆವು’ ‘ನೀವು ಅಡಿಗೆ ಮಾಡುವಿರಿ’ ‘ನಾವು (ಮತ್ತು ನೀವು) ನಾಶವಾಗುವೆವು’

Eke →

8.3.5 ಸಂಗತಿಯನ್ನು ತಿಳಿಸುವ ಕ್ರಿಯಾಪದಗಳು

ಹಳೆಗನ್ನಡದ ಹೆಚ್ಚಿನ ಕ್ರಿಯಾಪದಗಳೂ ಒಂದು ಕೆಲಸವನ್ನು (ಆಗುವಿಕೆ ಇಲ್ಲವೇ ಮಾಡುವಿಕೆಯನ್ನು) ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಕಾರಣಕ್ಕಾಗಿ ಅವು ಹಿಂದಿನ ಇಲ್ಲವೇ ಮುಂದಿನ ಸಮಯದ ಒಟ್ಟಿನೊಂದಿಗೆ (ಇಲ್ಲವೇ ಅಲ್ಲಗಳೆಯುವ ಒಟ್ಟಿನೊಂದಿಗೆ - 8.4 ನೋಡಿ) ಬರಬಲ್ಲುವು. ಈ ನಿಯಮಕ್ಕೆ ಅಪವಾದವಾಗಿ ಹಳೆಗನ್ನಡದಲ್ಲಿ ಒಳ್ ‘ಇರು’, ಬಲ್ ‘ತಿಳಿದಿರು’, ಅಲ್ ‘ಅಲ್ಲ’ ಎಂಬಂತಹ ಸಂಗತಿಗಳನ್ನು ತಿಳಿಸುವ ಕೆಲವು ಕ್ರಿಯಾಪದಗಳಿವೆ. ಇವು ಕೆಲಸಗಳನ್ನು ತಿಳಿಸುವುದಿಲ್ಲವಾದ ಕಾರಣ, ಅವುಗ ಳೊಂದಿಗೆ ಸಮಯದ ಒಟ್ಟುಗಳು ಬರಲಾರವು. ಹಾಗಾಗಿ, ವಾಕ್ಯಗಳ ಕೊನೆ

ಯಲ್ಲಿ ಬಳಕೆಯಾಗಬಲ್ಲ ಕ್ರಿಯಾರೂಪಗಳಲ್ಲಿ ಅವಕ್ಕೆ ಆಡುಗ ಒಟ್ಟುಗಳನ್ನು ನೇರವಾಗಿ ಸೇರಿಸಲಾಗುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಒಳ್ ಕ್ರಿಯಾಪದದ ಹಳೆಗನ್ನಡ

ಕ್ರಿಯಾರೂಪಗಳನ್ನು ಗಮನಿಸಬಹುದು.

ಕೇಳುಗ:
ಗಂಡಸು:
ಹೆಂಗಸು:

ಒರ್ವಚನ
ಒಳಯ್
ಒಳಳ್

ಹಲವಚನ ಒಳೆವು ಒಳವು

ಈ ಕ್ರಿಯಾಪದಗಳ ಸಂಬಂದಿಸುವ ರೂಪದಲ್ಲೂ ಸಮಯದ ಒಟ್ಟು ಕಾಣಿಸುವುದಿಲ್ಲ (ಉಳ್ಳ ‘ಇರುವ’, ಬಲ್ಲ ‘ತಿಳಿದ’). ಈ ರೂಪಗಳಲ್ಲೂ ಸಂಬಂದಿಸುವ ಅ ಒಟ್ಟನ್ನು ಅವಕ್ಕೆ ನೇರವಾಗಿ ಸೇರಿಸಲಾಗಿದೆ. ಅಲ್ಲ ಕ್ರಿಯಾಪದದ ಸಂಬಂದಿಸುವ ಅಲ್ಲದ ರೂಪದಲ್ಲಿ ದ್ ಒಟ್ಟು ಕಾಣಿಸುವು ದಾದರೂ ಅದಕ್ಕೆ ಸಮಯವನ್ನು ಸೂಚಿಸುವ ಅರ್ತವಿಲ್ಲ.

ಹೊಸಗನ್ನಡದಲ್ಲಿ ಈ ಕ್ರಿಯಾರೂಪಗಳ ಕೆಲವು ಪಳೆಯಳಿಕೆಗಳು ಮಾತ್ರ ಉಳಿದಿವೆ (ಉಳ್ಳವರು, ಉಂಟು, (ಮಾಡ)ಬಲ್ಲೆ). ಕೂಡುಪದದ ಅಂಗವಾಗಿ ಬರುವ ಬಲ್ ಎಂಬುದು ಮಾತ್ರ ಎಲ್ಲಾ ಆಡುಗ ಒಟ್ಟುಗಳೊಂದಿಗೂ ಬಳಕೆಯಾಗುತ್ತದೆ (ಮಾಡಬಲ್ಲ, ಹೋಗಬಲ್ಲರು, ತಿನ್ನಬಲ್ಲೆವು, ಕೇಳಬಲ್ಲಿರಿ, ಕೊಡಬಲ್ಲಳು).

ಈ ರೀತಿ, ಸಮಯದ ಒಟ್ಟನ್ನು ಪಡೆಯದಿರುವ ಕ್ರಿಯಾಪದಗಳನ್ನು ಮೂಲದ್ರಾವಿಡಕ್ಕೂ ಕಲ್ಪಿಸಬೇಕಾಗುತ್ತದೆಯೇ ಎಂಬ ವಿಶಯವನ್ನು ಇನ್ನೂ ಪರಿಶೀಲಿಸಬೇಕಾಗಿದೆ.

Eke →

8.4 ಅಲ್ಲಗಳೆಯುವ ಒಟ್ಟು

ಮೂಲದ್ರಾವಿಡದಲ್ಲೇನೇ ಸಮಯದ ಒಟ್ಟಿಗೆ ಬದಲಾಗಿ ಆ ಜಾಗದಲ್ಲಿ ಅಲ್ಲಗಳೆಯುವ ಒಟ್ಟನ್ನು ಇರಿಸುವ ಮೂಲಕ ಕೆಲಸ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ಅಲ್ಲಗಳೆಯಲು ಸಾದ್ಯವಿತ್ತು. ಹೆಚ್ಚಿನ ದ್ರಾವಿಡ ನುಡಿಗಳೂ ಈ ಮೂಲದ್ರಾವಿಡ ರಚನೆಯನ್ನು ಉಳಿಸಿಕೊಂಡಿವೆ.

ತೆಂಕುದ್ರಾವಿಡ ನುಡಿಗಳಲ್ಲಿ ಈ ಅಲ್ಲಗಳೆಯುವ ಒಟ್ಟಿಗೆ ಎರಡು ರೂಪಗಳಿವೆ. (ಕ) ಆಡುಗ ಇಲ್ಲವೇ ಕೇಳುಗ ಒಟ್ಟುಗಳ ಮೊದಲು ಮತ್ತು (ಚ) ಇತರರಲ್ಲಿ ಮನುಶ್ಯರನ್ನು ಸೂಚಿಸುವ ಒಟ್ಟುಗಳ ಮೊದಲು ಅದು ಸೊನ್ನೆ ರೂಪದಲ್ಲಿದೆ ಮತ್ತು ಮನುಶ್ಯರಲ್ಲದ ಇತರರನ್ನು ಸೂಚಿಸುವ ಒಟ್ಟುಗಳ ಮೊದಲು ಅದು ಆ ರೂಪದಲ್ಲಿದೆ (ತುಳು ನುಡಿ ಇದಕ್ಕೆ ಅಪವಾದ).

ಹಳೆಗನ್ನಡದಲ್ಲಿಯೂ ಅದಕ್ಕೆ ಇಂತಹವೇ ಎರಡು ರೂಪಗಳಿವೆ. ಆದರೆ, ಅಲ್ಲಗಳೆಯುವ ಆ ಒಟ್ಟು ಮಾತ್ರ ಅ ಎಂಬುದಾಗಿ (ಗಿಡ್ಡಸ್ವರವಾಗಿ) ಬದಲಾಗಿದೆ. ನೋಡೆಂ ನೋಡಯ್ ನೋಡಂ ನೋಡಳ್ ನೋಡದು

ನೋಡೆವು ನೋಡಿರ್ ನೋಡರ್ ನೋಡವು

ನೋಡದು ಮತ್ತು ನೋಡವು ಕ್ರಿಯಾರೂಪಗಳಲ್ಲಿ ಅಲ್ಲಗಳೆಯುವ ಒಟ್ಟು ಅ ರೂಪದಲ್ಲಿದೆ (ಅ+ಉದು, ಅ+ಉವು) ಮತ್ತು ಇತರ ಕ್ರಿಯಾರೂಪಗಳಲ್ಲಿ ಸೊನ್ನೆ ರೂಪದಲ್ಲಿದೆ ಎಂದು ಹೇಳಬಹುದು.

ಹಳೆಗನ್ನಡದ ಈ ಅಲ್ಲಗಳೆಯುವ ಕ್ರಿಯಾರೂಪಗಳಿಗೆ ಮೂರು ಕಾಲದ ಕೆಲಸಗಳನ್ನೂ ಅಲ್ಲಗಳೆಯುವ ಬಳಕೆಯಿತ್ತೆಂದು ವಿದ್ವಾಂಸರು ಹೇಳುತ್ತಾರೆ. ಆದರೆ, ಈ ಕ್ರಿಯಾರೂಪಗಳ ಹೆಚ್ಚಿನ ಬಳಕೆಗಳಲ್ಲೂ ಅವಕ್ಕೆ ಮುಂದಿನ ಕೆಲಸಗಳನ್ನು ಅಲ್ಲಗಳೆಯುವ ಅರ್ತವೇ ಕಾಣಿಸುತ್ತದೆ.

ಹಿಂದಿನ

ಇದಲ್ಲದೆ,

ಕೆಲಸಗಳನ್ನು ಸೂಚಿಸುವ ಅಲ್ಲಗಳೆಯಬೇಕಾದಲ್ಲೆಲ್ಲ ಕ್ರಿಯಾರೂಪದದೊಂದಿಗೆ ಇಲ್ಲ ಪದದ ಬಳಕೆಯೇ ಕಾಣಿಸುತ್ತದೆ. ಇದನ್ನು ಕೆಳಗಿನ ಹಳೆಗನ್ನಡ ವಾಕ್ಯದಲ್ಲಿ ನೋಡಬಹುದು.

ಕೆಲಸಗಳನ್ನು

ಸಮಯದ

(6) ಈ ಕನ್ನೆಯನ್ ಪದ್ಮಜನ್ ಪಡೆದನ್ ಇಲ್ಲ ‘ಈ ಕನ್ಯೆಯನ್ನು ಪದ್ಮಜನು ಪಡೆದಿಲ್ಲ’

ಮೂಲದ್ರಾವಿಡದಲ್ಲಿ ಈ ಅಲ್ಲಗಳೆಯುವ ಒಟ್ಟಿಗೆ ಯಾವ ರೂಪ ಇದ್ದಿರಬಹುದು ಎಂಬ ವಿಶಯದಲ್ಲಿ ಒಮ್ಮತವಿಲ್ಲ. ಅದರ ಬಳಕೆಯಲ್ಲಿ ಕಾಣಿಸುವ ಕೆಲವು ಬದಲಾವಣೆಗಳನ್ನು ವಿವರಿಸುವುದಕ್ಕಾಗಿ ಅದಕ್ಕೆ ಅ ಸ್ವರದೊಂದಿಗೆ ‘ಲಾರಿಂಜಲ್’ ವ್ಯಂಜನ (5.4 ನೋಡಿ) ಸೇರಿರುವ *ಅಹ್ ರೂಪವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆಯುಂದು ಕ್ರುಶ್ಣಮೂರ್ತಿ (2003: 348) ವಾದಿಸಿದ್ದಾರೆ.

ಈ ಒಟ್ಟನ್ನು ಪಡೆದಿರುವ ಮತ್ತು ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾರೂಪಗಳು ಇವತ್ತಿನ ಬರಹ ಕನ್ನಡದಲ್ಲಿ ಮತ್ತು ಒಳನಾಡಿನ ಒಳ ನುಡಿಗಳಲ್ಲಿ ಉಳಿದಿಲ್ಲ. ಆದರೆ, ಕರಾವಳಿಯ ಒಳನುಡಿಗಳಲ್ಲಿ ಅವು ಉಳಿದಿದ್ದು, ಮುಂದಿನ ಸಮಯದ ಕೆಲಸಗಳನ್ನು ಅಲ್ಲಗಳೆಯುವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯವನ್ನು ಪರಿಶೀಲಿಸಬಹುದು.

(7ಕ) ಆನು ಅವನ ಮನೆಗೆ ಹೋಗೆ

‘ನಾನು ಅವನ ಮನೆಗೆ ಹೋಗಲಿಕ್ಕಿಲ್ಲ’’

ಹಿಂದಿನ ಸಮಯದ ಕೆಲಸವನ್ನು ಅಲ್ಲಗಳೆಯುವುದಕ್ಕಾಗಿ ಹವ್ಯಕ ಸಮಯದ ಕ್ರಿಯಾರೂಪದೊಂದಿಗೆ ಇಲ್ಲೆ

ಕನ್ನಡದಲ್ಲೂ ಹಿಂದಿನ ಪದವನ್ನೇ ಬಳಸಲಾಗುತ್ತದೆ.

(7ಚ) ಆನು ಅವನ ಮನೆಗೆ ಹೋಯಿದಿಲ್ಲೆ ‘ನಾನು ಅವನ ಮನೆಗೆ ಹೋಗಲಿಲ್ಲ’’

ಹೋಯಿದಿಲ್ಲೆ ಎಂಬುದರಲ್ಲಿ ಹೋಯಿದೆ ‘ಹೋಗಿದ್ದೇನೆ’ ಕ್ರಿಯಾ ರೂಪದೊಂದಿಗೆ ಇಲ್ಲೆ ‘ಇಲ್ಲ’ ಪದವನ್ನು ಬಳಸಲಾಗಿದೆ. ಇದಲ್ಲದೆ, ಹವ್ಯಕ ಕನ್ನಡದಲ್ಲಿ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳ ಅನಂತರವೂ ಇಲ್ಲೆ ಪದವನ್ನು ಬಳಸಲು ಸಾದ್ಯವಿದ್ದು (ಬತ್ತಿಲ್ಲೆ ‘ನಾನು ಬರುವುದಿಲ್ಲ’, ಬತ್ತವಿಲ್ಲೆ ‘ಅವರು ಬರುವುದಿಲ್ಲ’), ಅದು ಅಲ್ಲಗಳೆಯುವ ಒಟ್ಟಿರುವ ಮೇಲಿನ ಕ್ರಿಯಾರೂಪದಿಂದ ಅರ್ತದಲ್ಲಿ ಬೇರಾಗಿದೆ ಎಂಬುದನ್ನು ಗಮನಿಸಬಹುದು (ಹೋಗೆ ‘ಹೋಗಲಿಕ್ಕಿಲ್ಲ’, ಹೋವುತ್ತಿಲ್ಲೆ ‘ಹೋಗುವುದಿಲ್ಲ’).

ಬಡಗ ಕನ್ನಡವೂ ಹಳೆಗನ್ನಡದ ಈ ಅಲ್ಲಗಳೆಯುವ ರೂಪವನ್ನು ಉಳಿಸಿಕೊಂಡಿದೆ (ಬರ ‘ಅವನು ಬರಲಿಕ್ಕಿಲ್ಲ’, ತಿನ ‘ತಿನ್ನಲಿಕ್ಕಿಲ್ಲ’, ಓಡ ‘ಓಡಲಿಕ್ಕಿಲ್ಲ’). ಇದಲ್ಲದೆ, ಕ್ರಿಯಾಪದಗಳೊಂದಿಗೆ ಆರ್ ಎಂಬುದನ್ನು ಸೇರಿಸಿಯೂ ಅದು ಅಲ್ಲಗಳೆಯುವ ರೂಪವನ್ನು ಪಡೆಯಬಲ್ಲುದು (ಬರಾರ ‘ಅವನು ಬರಲಿಕ್ಕಿಲ್ಲ’).

ಇದಲ್ಲದೆ, ಇಲ್ಲೆ (ಇಲೆ) ‘ಇಲ್ಲ’ ಪದವನ್ನು ಬಳಸಿಯೂ ಬಡಗ ಕನ್ನಡದಲ್ಲಿ ಅಲ್ಲಗಳೆಯುವ ಕೂಡುಪದಗಳನ್ನು ತಯಾರಿಸಲು ಸಾದ್ಯವಿದೆ ‘ಬಂದಿರಲಿಲ್ಲ’, (ಬಪ್ಪಿಲೆ ಬಪ್ಪದಿಲ್ಲೆ ‘ಬಂದಿರಲಿಕ್ಕಿಲ್ಲ’).

‘(ಅವನು) ಬರಲಿಕ್ಕಿಲ್ಲ’, ಬಂದದಿಲ್ಲೆ

Eke →

8.5 ಆಡುಗ ಒಟ್ಟುಗಳು

ಮೂಲದ್ರಾವಿಡ ಕ್ರಿಯಾರೂಪಗಳಲ್ಲಿ ಸಮಯದ ಒಟ್ಟಿನ ಅನಂತರ ಆಡುಗ ಒಟ್ಟುಗಳು (ಕೆಲಸದ ಆಗುಗ ಇಲ್ಲವೇ ಮಾಡುಗನು ಆಡುಗನೇ, ಕೇಳುಗನೇ ಅತವಾ ಇತರರೇ ಎಂಬುದನ್ನು ಸೂಚಿಸುವ ಒಟ್ಟುಗಳು)

ಬರಬಲ್ಲುವಾಗಿದ್ದುವು. ಈ ‘ಆಡುಗ’ ಒಟ್ಟುಗಳ ಸ್ವರೂಪವೇನೆಂಬುದನ್ನು ಕೆಳಗೆ ವಿವರಿಸಲಾಗಿದೆ.

Eke →

8.5.1 ಆಡುಗ ಮತ್ತು ಕೇಳುಗರನ್ನು ಸೂಚಿಸುವ ಒಟ್ಟುಗಳು

(1) ಆಡುಗನನ್ನು ಸೂಚಿಸುವ ಒಟ್ಟು ಮೂಲದ್ರಾವಿಡದಲ್ಲಿ *ಏನ್ ಎಂಬ ರೂಪದಲ್ಲಿದ್ದಿರಬಹುದೆಂದು ಕಲ್ಪಿಸಲಾಗಿದೆ. ಹಳೆಗನ್ನಡದಲ್ಲಿ ಇದರ ಉದ್ದ ಸ್ವರ ಗಿಡ್ಡವಾಗಿದೆ (ಮಾೞ್ಪನ್, ಮಾಡಿದೆನ್) ಮತ್ತು ವಿಕಲ್ಪವಾಗಿ ಅದರ ಕೊನೆಯ ನಕಾರ ಬಿದ್ದುಹೋಗಿದೆ (ಮಾೞ್ಪ, ಮಾಡಿದೆ).

ಮೂಲದ್ರಾವಿಡದಲ್ಲೇನೇ ಇದಕ್ಕೆ (ಮತ್ತು ಕೇಳುಗನನ್ನು, ಹಾಗೂ ಅವರಿಬ್ಬರ ಬೇರೆ ಬೇರೆ ಕೂಡಿಕೆಗಳನ್ನು ಸೂಚಿಸುವ ಒಟ್ಟುಗಳಿಗೆ) ಉದ್ದ ಮತ್ತು ಗಿಡ್ಡ ಸ್ವರಗಳಿರುವ ಎರಡೆರಡು ರೂಪಗಳು (*ಏನ್ ಮತ್ತು *ಎನ್) ಇದ್ದಿರಬಹುದೆಂದು ಕೆಲವರ ಅಬಿಪ್ರಾಯ.

(2) ಕೇಳುಗನನ್ನು ಸೂಚಿಸುವ ಒಟ್ಟು ಮೂಲದ್ರಾವಿಡದಲ್ಲಿ *ಆಯ್ ಮತ್ತು *ಈ ಎಂಬ ಎರಡು ರೂಪಗಳಲ್ಲಿದ್ದಿರಬಹುದೆಂದು ಕಲ್ಪಿಸಲಾಗಿದೆ. ಹಳೆಗನ್ನಡದಲ್ಲಿ ಇದು ಅಯ್ ರೂಪದಲ್ಲಿ (ಉದ್ದಸ್ವರ ಗಿಡ್ಡವಾಗಿ) ಬಳಕೆ ಯಾಗುತ್ತದೆ (ಮಾೞ್ಪಯ್, ಮಾಡಿದಯ್).

(3) ಹಲವಚನದಲ್ಲಿ ಇವೆರಡಕ್ಕೆ ಮೂರು ಕೂಡಿಕೆಯ ರೂಪಗಳಿದ್ದಿರ ಬೇಕು (10.2 ನೋಡಿ). ಇದಕ್ಕಾಗಿ ಮೂಲದ್ರಾವಿಡಕ್ಕೆ (ಕ) ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಎಮ್ ಒಟ್ಟು, (ಚ) ಕೇಳುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಇರ್ ಒಟ್ಟು (ಮೊದಲಿಗೆ ಇದು *ಇಮ್ ಎಂದೇ ಇದ್ದಿರಬಹುದು) ಮತ್ತು (ಟ) ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಅಮ್ ಒಟ್ಟು ಎಂಬುದಾಗಿ ಮೂರು ಒಟ್ಟುಗಳನ್ನು ಕಲ್ಪಿಸಿಕೊಳ್ಳಲಾಗಿದೆ.

(4) ಇವುಗಳಲ್ಲಿ ಮೊದಲ ಎರಡು ಒಟ್ಟುಗಳು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿವೆ (ಮಾೞ್ಪಮ್, ಮಾಡಿದೆಮ್; ಮಾೞಿ್ಪರ್, ಮಾಡಿದಿರ್). ಆದರೆ ಮೂರನೆಯ ಒಟ್ಟು ಕೆಲವು ಕ್ರಿಯಾರೂಪಗಳಲ್ಲಿ

ಉಳಿದುಕೊಂಡಿದೆ (ಮಾಡುವಂ ‘ಮಾಡೋಣ’) ಮತ್ತು ಬೇರೆ ಕ್ರಿಯಾ ಕೂಡಿಕೆಯನ್ನು ರೂಪಗಳಲ್ಲಿ ಅದಕ್ಕೂ ಆಡುಗನೊಂದಿಗೆ ಇತರರ ಸೂಚಿಸುವ ಎಮ್ ಒಟ್ಟಿಗೂ ನಡುವಿರುವ ವ್ಯತ್ಯಾಸ ಅಳಿದುಹೋಗಿ, ಎಲ್ಲಾ ಸಂದರ್ಬಗಳಲ್ಲೂ ಎಮ್ ಎಂಬುದೇ ಬಳಕೆಗೆ ಬಂದಿದೆ.

ಉದಾಹರಣೆಗಾಗಿ, ಪಂಪಬಾರತದ ಕೆಳಗಿನ ಬಳಕೆಯನ್ನು ಗಮನಿಸ

ಬಹುದು.

ನಾಮೆಲ್ಲಂ ಒಂದೆ ಗರುಡಿಯೊಳ್ ಓದಿದ ಮಾನಸರೆವು ‘ನಾವೆಲ್ಲರೂ ಒಂದೇ ಗರಡಿಯಲ್ಲಿ ಕಲಿತ ಮನುಶ್ಯರಾಗಿದ್ದೇವೆ’’

(8)ನೇ ವಾಕ್ಯದಲ್ಲಿ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ನಾಮ್ ಆಡುಗ ಪದ ಬಂದಿದೆಯಾದರೂ ಕ್ರಿಯಾಪದದ ಜಾಗದಲ್ಲಿ ಬಂದಿರುವ ನಾಮಪದದೊಂದಿಗೆ ಅಮ್ ಒಟ್ಟು ಬಂದಿಲ್ಲ; ಅದಕ್ಕೆ ಬದಲು ಎಮ್ (<ಎವು) ಒಟ್ಟೇ ಬಂದಿದೆ.

ಮತ್ತು

ಕೇಳುಗರನ್ನು

Eke →

8.5.2 ಇತರರನ್ನು ಸೂಚಿಸುವ ಒಟ್ಟುಗಳು

ಇತರರನ್ನು ಸೂಚಿಸಬೇಕಾದಾಗ ಮೂಲದ್ರಾವಿಡದಲ್ಲಿ ಯಾವ ರೀತಿಯ ಒಟ್ಟುಗಳು ಬಳಕೆಯಲ್ಲಿದ್ದಿರಬಹುದು ಎಂಬ ವಿಶಯದಲ್ಲಿ ವಿದ್ವಾಂಸರೊಳಗೆ ಒಮ್ಮತವಿಲ್ಲ. ಈ ಒಟ್ಟುಗಳಲ್ಲಿ ಬೇರೆ ಬೇರೆ ದ್ರಾವಿಡ ನುಡಿಗಳು ಬೇರೆ ಬೇರೆ ರೀತಿಯ ಲಿಂಗಬೇದವನ್ನು ತೋರಿಸುತ್ತಿರುವುದೇ ಇದಕ್ಕೆ ಕಾರಣ.

ಹೊರತುಪಡಿಸಿ

ತೆಂಕುದ್ರಾವಿಡ ನುಡಿಗಳಲ್ಲಿ ಮನುಶ್ಯ ಮತ್ತು ಇತರ ಎಂಬ ಲಿಂಗಬೇದ ವಿದೆ. ಒರ್ವಚನದಲ್ಲಿ ಮಾತ್ರ ಮನುಶ್ಯರೊಳಗೆ ಗಂಡಸು ಮತ್ತು ಹೆಂಗಸು ಎಂಬ ಹೆಚ್ಚಿನ ಲಿಂಗಬೇದವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಕ್ರಿಯಾರೂಪಗಳನ್ನು ಗಮನಿಸಬಹುದು.

ಒರ್ವಚನ

ಹಲವಚನ

ಮನುಶ್ಯ, ಗಂಡುಸು ಹೆಂಗುಸು

ಹೇಳುತ್ತಾನೆ ಹೇಳುತ್ತಾಳೆ ಹೇಳುತ್ತದೆ

ಹೇಳುತ್ತಾರೆ ಹೇಳುತ್ತವೆ

ಇದಕ್ಕೆ ಬದಲು, ನಡುದ್ರಾವಿಡ ನುಡಿಗಳಲ್ಲಿ ಗಂಡುಸು (ಮನುಶ್ಯ) ಮತ್ತು ಇತರ ಎಂಬ ಲಿಂಗಬೇದವಿದೆ (ತೆಲುಗು ಇದಕ್ಕೆ ಅಪವಾದ) ಮತ್ತು ಬಡಗು ದ್ರಾವಿಡ ನುಡಿಗಳಾದ ಕುಡುಕ್, ಮಾಲ್ತೋಗಳಲ್ಲಿ ಮತ್ತು ತೆಲುಗು ನುಡಿಯಲ್ಲಿ ಒರ್ವಚನದಲ್ಲಿ ಮಾತ್ರ ಗಂಡುಸು ಮತ್ತು ಇತರ ಎಂಬ ಬೇದವಿದ್ದು, ಹಲವಚನದಲ್ಲಿ ಮತ್ತು ಇತರ ಎಂಬ ಲಿಂಗಬೇದವಿದೆ.

ಮನುಶ್ಯ

ಈ ಮೂರು ರೀತಿಯ ಲಿಂಗಬೇದಗಳು ಇವತ್ತಿನ ದ್ರಾವಿಡ ನುಡಿಗಳಲ್ಲಿ ಕಾಣಿಸಿಕೊಳ್ಳಲು ಮೂಲದ್ರಾವಿಡದ ಎಂತಹ ಪರಿಸ್ತಿತಿ ಕಾರಣವಿರಬಹುದು ಸೂಚಿಸಿದ ಹಾಗೆ, ಈ ಎಂಬುದನ್ನು ತಿಳಿಯಬೇಕಾಗಿದೆ. ಮೇಲೆ ವಿಶಯದಲ್ಲಿ ವಿದ್ವಾಂಸರೊಳಗೆ ಒಮ್ಮತವಿಲ್ಲ. ಒರ್ವಚನದಲ್ಲಿ (1) ಗಂಡುಸು *ಅನ್ ಮತ್ತು (2) ಇತರ *ಅತ್ ಎಂಬ ಬೇದವಿದ್ದು, ಹಲವಚನದಲ್ಲಿ (1) ಗಂಡುಸು ಇಲ್ಲವೇ ಮನುಶ್ಯ *ಅರ್ ಮತ್ತು (2) ಇತರ *ಅವ್ ಎಂಬ ಬೇದವಿದ್ದಿರಬಹುದೆಂದು ಕೆಲವರ ಮತ.

ತೆಂಕುದ್ರಾವಿಡದಲ್ಲಿ ಹೆಂಗಸನ್ನು ಸೂಚಿಸುವುದಕ್ಕಾಗಿ ಒರ್ವಚನದಲ್ಲಿ *ಅಳ್ ಎಂಬ ಬೇರೆಯೇ ಒಂದು ಒಟ್ಟು ಅನಂತರದ ಕಾಲದಲ್ಲಿ ಬಳಕೆಗೆ ಬಂದಿರಬೇಕು.

ಹಳೆಗನ್ನಡದಲ್ಲಿ ಮೂಲದ್ರಾವಿಡದ ಈ ಆಡುಗ ಒಟ್ಟುಗಳು ಹೆಚ್ಚು ಬದಲಾಗದೆ ಉಳಿದಿವೆ. ಮನುಶ್ಯರನ್ನು ಬಿಟ್ಟು ಇತರರನ್ನು ಸೂಚಿಸುವ *ಅತ್ ಮತ್ತು *ಅವ್ ಒಟ್ಟುಗಳು ಮಾತ್ರ ಉದು, ತು, ಉವು ಎಂಬುದಾಗಿ ಬದಲಾಗಿವೆ.

Eke →

8.5.3 ಕನ್ನಡದ ಒಳನುಡಿಗಳಲ್ಲಿ ಆಡುಗ ಒಟ್ಟುಗಳು

ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಲ್ಲಿ (1) ಆಡುಗ ಮತ್ತು ಕೇಳುಗರ ಕೂಡಿಕೆ ಹಾಗೂ (2) ಆಡುಗ ಮತ್ತು ಇತರರ ಕೂಡಿಕೆಗಳ ನಡುವೆ ಮೂಲದ್ರಾವಿಡದಲ್ಲಿದ್ದ ಹಳೆಗನ್ನಡದಲ್ಲಿ ಉಳಿದಿಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು. ಒಳನಾಡಿನ ಒಳನುಡಿಗಳಲ್ಲೂ ಈ ವ್ಯತ್ಯಾಸ ಉಳಿದಿಲ್ಲ.

ವ್ಯತ್ಯಾಸ

ಮತ್ತು

(1) ಆದರೆ, ಬಡಗ ಕನ್ನಡದಲ್ಲಿ ಇದು ಉಳಿದುಕೊಂಡಿದೆ. ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪಗಳ ಕೊನೆಯಲ್ಲಿ ಅದು ಓ ಒಟ್ಟನ್ನು ಬಳಸುತ್ತದೆ ಮತ್ತು ಕೇಳುಗನನ್ನು ಹೊರತುಪಡಿಸಿ ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಇಯೊ ಒಟ್ಟನ್ನು ಬಳಸುತ್ತದೆ (ಬಾಲಕ್ರುಶ್ಣನ್ 1999).

(9ಕ) ನಂಗ ಬಂದೋ

‘ನಾವು (ನಾನು ಮತ್ತು ನೀನು) ಬಂದೆವು’’

(9ಚ) ಎಂಗ ಬಂದೆಯೊ

‘ನಾವು (ನಾನು ಮತ್ತು ಅವನು) ಬಂದೆವು’’

ಹವ್ಯಕ

ಕರಾವಳಿಯ

ವ್ಯತ್ಯಾಸ ಉಳಿದುಕೊಂಡಿದೆ; ಆದರೆ ಅದನ್ನು ಸೂಚಿಸುವುದಕ್ಕಾಗಿ ಮೇಲಿನ ಎರಡು ಒಟ್ಟುಗಳನ್ನು ಬಳಸುವ ಬದಲು, ಅದರಲ್ಲಿ ಬೇರೆಯೇ ಒಂದು ಕ್ರಮ ಬಳಕೆಗೆ ಬಂದಿದೆ.

ಕನ್ನಡದಲ್ಲೂ ಈ

ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಎಮ್ ಒಟ್ಟು ಎಯೊᵒ ರೂಪದಲ್ಲಿ ಬಳಕೆಯಾಗುತ್ತದೆ ಮತ್ತು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸಲು ಬಳಸುವ ತು (ದು) ಒಟ್ಟನ್ನೇ ಬಳಸಲಾಗುತ್ತದೆ. ಹೀಗೆ ಮಾಡುವುದರ ಮೂಲಕ, ಅದರಲ್ಲಿ ಮೇಲಿನ ಮೂರು ಕೂಡಿಕೆಗಳ ಸೂಚಿಸಲು ನಡುವಿರುವ

ಕ್ರಿಯಾರೂಪದಲ್ಲೂ

ವ್ಯತ್ಯಾಸವನ್ನು

ಸಾದ್ಯವಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಹವ್ಯಕ ವಾಕ್ಯಗಳಿಂದ ತಿಳಿಯಬಹುದು.

(10ಕ) ಎಂಗೊ ಹೋವುತ್ತೆಯೊᵒ

‘ನಾವು (ನಾನು ಮತ್ತು ಅವನು) ಹೋಗುತ್ತೇವೆ’’

(10ಚ) ನಿಂಗೊ ಹೋವುತ್ತಿ

‘ನೀವು (ನೀನು ಮತ್ತು ಅವನು) ಹೋಗುತ್ತೀರಿ’’

(10ಟ) ನಾವು ಹೋವುತ್ತು

‘ನಾವು (ನಾನು ಮತ್ತು ನೀವು) ಹೋಗುತ್ತೇವೆ’’

(3) ಹಳೆಗನ್ನಡದಲ್ಲಿದ್ದ ಇತರ ಆಡುಗ ಒಟ್ಟುಗಳ ರೂಪದಲ್ಲೂ ಕೆಲವು ಬದಲಾವಣೆಗಳು ಇವತ್ತಿನ ಕನ್ನಡದ ಒಳನುಡಿಗಳಲ್ಲಿ ನಡೆದಿವೆ. ಎನ್ ಮತ್ತು ಅನ್ ಒಟ್ಟುಗಳ ಕೊನೆಯ ನಕಾರ ಅವುಗಳ ಮುಂದೆ ಬೇರೆ ಒಟ್ಟು ಬಾರದಿರುವಲ್ಲಿ ಬಿದ್ದು ಹೋಗಿರುವುದು ಇಂತಹ ಒಂದು ಬದಲಾವಣೆ (ಬಂದೆನ್ >ಬಂದೆ, ಬಂದನ್>ಬಂದ). ಕೇಳುಗನನ್ನು ಸೂಚಿಸುವ ಅಯ್ ಒಟ್ಟಿನ ಬದಲು ಇ ಒಟ್ಟು ಬಳಕೆಗೆ ಬಂದಿರುವುದು ಮಾಡಿದಿ, ಇನ್ನೊಂದು ಪೇಳಿದಯ್>ಹೇಳಿದಿ).

(ಮಾಡಿದಯ್>

ಬದಲಾವಣೆ

ಇದಲ್ಲದೆ, ಇರ್ ಎಂಬುದು ಇರಿ ರೂಪಕ್ಕೆ ಮತ್ತು ಅರ್ ಎಂಬುದು

ಅರು ರೂಪಕ್ಕೆ ಬದಲಾಗಿವೆ (ಬಂದಿರ್>ಬಂದಿರಿ, ಬಂದರ್>ಬಂದರು).

ಒರ್ವಚನದಲ್ಲಿ ಇತರರನ್ನು ಸೂಚಿಸುವ *ಅತ್ ಒಟ್ಟಿಗೆ ಹಳೆಗನ್ನಡ ದಲ್ಲೇನೇ ಹಲವು ರೂಪಗಳಿದ್ದುವು. ಹೆಚ್ಚಿನೆಡೆಗಳಲ್ಲೂ ಇದಕ್ಕೆ ಉದು ರೂಪ ವಿತ್ತು (ಇರ್ದುದು, ಬರ್ಪುದು, ಕೊಟ್ಟುದು). ಆದರೆ ಹಿಂದಿನ ಸಮಯದ ಒಟ್ಟು ತ್ ಇಲ್ಲವೇ ಸೊನ್ನೆ ರೂಪದಲ್ಲಿರುವಲ್ಲಿ ಅದಕ್ಕೆ ತು ರೂಪವಿತ್ತು (ಮಾಡಿತ್ತು, ಅಡಂಗಿತ್ತು, ಪೋಯ್ತು, ಬಿೞ್ದತ್ತು).

ಅಲ್ ‘ಅಲ್ಲ’ ಕ್ರಿಯಾಪದದ ಅನಂತರವೂ ತು ರೂಪವಿತ್ತು (ಅಲ್ತು) ಮತ್ತು ಉಳ್ ‘ಇರು’ ಕ್ರಿಯಾಪದದ ಅನಂತರ ಟು ರೂಪವಿತ್ತು

ಹೊಸಗನ್ನಡದಲ್ಲಿ ಇದು ಹಿಂದಿನ ಸಮಯವನ್ನು ಸೂಚಿಸುವ ಒಟ್ಟಿನ ಅನಂತರ ಎಲ್ಲಾ ಕ್ರಿಯಾರೂಪಗಳಲ್ಲೂ ತು ರೂಪದಲ್ಲಿ ಕಾಣಿಸುತ್ತದೆ (ಬಿಟ್ಟಿತು, ತಿಂದಿತು, ಬರೆಯಿತು, ತಿಳಿಯಿತು, ನುಂಗಿತು).

(4) ಇತರರನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಮನುಶ್ಯರು ಮತ್ತು ಇತರರು ಎಂಬ ವ್ಯತ್ಯಾಸ ತೆಂಕುದ್ರಾವಿಡದಲ್ಲಿತ್ತು ಮತ್ತು ಒರ್ವಚನದಲ್ಲಿ ಮಾತ್ರ ಮನುಶ್ಯರೊಳಗೆ ಗಂಡುಸು ಮತ್ತು ಹೆಂಗುಸು ಎಂಬ ವ್ಯತ್ಯಾಸವಿತ್ತು ಎಂಬುದನ್ನು ನಾವು ಮೇಲೆ (8.5.2)ರಲ್ಲಿ ನೋಡಿರುವೆವು. ಈ ವ್ಯತ್ಯಾಸ ಹಳೆಗನ್ನಡದಲ್ಲಿ ಮತ್ತು ಒಳನಾಡಿನ ಕನ್ನಡ ನುಡಿಗಳಲ್ಲಿ ಉಳಿದುಕೊಂಡಿದೆ; ಆದರೆ, ಕರಾವಳಿಯ ಒಳನುಡಿಗಳಲ್ಲಿ ಬೇರೆಯೇ ವ್ಯತ್ಯಾಸ ಬಳಕೆಗೆ

(ಕ) ಹಾಲಕ್ಕಿ ಕನ್ನಡದಲ್ಲಿ ಗಂಡಸರು ಮತ್ತು ಇತರರು ಎಂಬ ವ್ಯತ್ಯಾಸ

ಬಳಕೆಗೆ ಬಂದಿದೆ (ಆಚಾರ್ಯ 1967).

ಮಾಡಿದ ‘ಅವನು ಮಾಡಿದ’’ ಮಾಡುತು ‘ಅವಳು ಮಾಡಿದಳು, ಅದು ಮಾಡಿತು’’

(ಚ) ಹವ್ಯಕ ಕನ್ನಡದಲ್ಲಿ ಬೇರೊಂದು ರೀತಿಯ ಬದಲಾವಣೆ ನಡೆದಿದೆ. ಒರ್ವಚನದಲ್ಲಿ ಮೂರು ಲಿಂಗರೂಪಗಳು ಉಳಿದಿವೆಯಾದರೂ ಮಾತ್ರ ಮೊದಲ ಎರಡು ಕಾಣಿಸಿಕೊಳ್ಳುತ್ತದೆ. ಇತರ ಸಂದರ್ಬಗಳಲ್ಲೆಲ್ಲ ಮೂರನೆಯ ರೂಪವೇ ಬಳಕೆಯಾಗುತ್ತದೆ.

ರೂಪಗಳ ಬಳಕೆ

ಗವ್ರವಾರ್ತದಲ್ಲಿ

(11ಕ) ಅವ ᵒ ಬಂದ ᵒ

‘ಅವನು ಬಂದ’ (ಗವ್ರವಾರ್ತದಲ್ಲಿ)

(11ಚ) ಅವ ಬಂದ

‘ಅವಳು ಬಂದಳು’ (ಗವ್ರವಾರ್ತದಲ್ಲಿ)

(11ಟ) ಅದು ಬಂತು

‘ಅವನು ಬಂದ, ಅವಳು ಬಂದಳು, ಅದು ಬಂತು’’

(11ಕ)ದಲ್ಲಿ ಹಳೆಗನ್ನಡದಲ್ಲಿದ್ದ ಅವನ್ ಮತ್ತು ಬಂದನ್ ರೂಪಗಳ ಕೊನೆಯ ನಕಾರ ಬಿದ್ದು ಹೋಗಿ ಅದರ ಹಿಂದಿನ ಸ್ವರ ಮೂಗಿಸಿದ ಸ್ವರ ವಾಗಿದೆ; ಇದಕ್ಕೆ ಬದಲು (11ಚ)ದಲ್ಲಿ ಅವಳ್ ಮತ್ತು ಬಂದಳ್ ಎಂಬವುಗಳಲ್ಲಿದ್ದ ಳಕಾರ ಬಿದ್ದುಹೋಗಿ ಅದರ ಹಿಂದಿನ ಸ್ವರ ಬದಲಾಗದೆ ಉಳಿದಿದೆ. ಇದರಿಂದಾಗಿ, ಈ ಎರಡು ರೂಪಗಳ ನಡುವಿನ ವ್ಯತ್ಯಾಸ ಉಳಿದುಕೊಂಡಿದೆ.

ಹಲವಚನದಲ್ಲಿ ಎಲ್ಲಾ

ಸಂದರ್ಬಗಳಲ್ಲೂ ಒಂದೇ

ರೂಪ ಬಳಕೆಯಾಗುತ್ತದೆ ಮತ್ತು ಇತರ ಕನ್ನಡ ಒಳನುಡಿಗಳಲ್ಲಿ ಕಾಣಿಸುವ ಮನುಶ್ಯ-ಇತರ ಲಿಂಗಬೇದ ಹವ್ಯಕದಲ್ಲಿ ಇಲ್ಲವಾಗಿದೆ. ಇದನ್ನು ಕೆಳಗೆ ಕೊಟ್ಟಿರುವ (11ತ) ವಾಕ್ಯದಲ್ಲಿ ಕಾಣಬಹುದು.

(11ತ) ಅವು ಬಂದವು

‘ಅವರು ಬಂದರು, ಅವು ಬಂದುವು’

ಗವ್ರವಾರ್ತವನ್ನು ಸೂಚಿಸಬೇಕಾದಲ್ಲೂ ಮೇಲಿನ (ಅವು ‘ಅವರು’)

ರೂಪವೇ ಹವ್ಯಕದಲ್ಲಿ ಬಳಕೆಯಾಗುತ್ತದೆ.

(ಟ) ಬಡಗ ಕನ್ನಡ ಈ ವಿಶಯದಲ್ಲಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ. ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಅದು ಒರ್ವಚನದಲ್ಲಿ ಗಂಡಸು (ಅನ), ಹೆಂಗಸು (ಇಯ) ಮತ್ತು ಇತರ (ಅರ) ಎಂಬ ಮೂರು ಒಟ್ಟುಗಳನ್ನು ಬಳಸುತ್ತದೆ. ಆದರೆ ಹಲವಚನದಲ್ಲಿ ಮನುಶ್ಯರನ್ನು ಸೂಚಿಸುವ ಆರ ಎಂಬ ಒಂದು ಒಟ್ಟನ್ನು ಮಾತ್ರ ಬಳಸುತ್ತದೆ.

ಹಿಂದಿನ

ಬದಲು,

ಸಮಯವನ್ನು

ಸೂಚಿಸುವ ಕ್ರಿಯಾರೂಪಗಳಲ್ಲಿ ಅದು ಒರ್ವಚನದಲ್ಲೂ ಮನುಶ್ಯರನ್ನು ಸೂಚಿಸುವ (ಅ) ಮತ್ತು ಇತರರನ್ನು ಸೂಚಿಸುವ (ಅ/ಇತು) ಎಂಬ ಎರಡು ಒಟ್ಟುಗಳನ್ನು ಮಾತ್ರ ಬಳಸುತ್ತದೆ. ಇದಲ್ಲದೆ, ಹವ್ಯಕದ ಹಾಗೆ, ಇತು ಒಟ್ಟನ್ನು ಅದು ಮನುಶ್ಯರನ್ನು (ಹೆಂಗಸರನ್ನು ಮತ್ತು ಗಂಡಸರನ್ನು) ಸೂಚಿಸಬೇಕಾಗಿರುವಲ್ಲೂ ಬಳಸಬಲ್ಲುದು.

Eke →

8.5.4 ಆಡುಗ ಇಲ್ಲವೇ ಕೇಳುಗನನ್ನು ಸೂಚಿಸುವ ಇನ್ನೊಂದು ಒಟ್ಟು

ಮೂಲದ್ರಾವಿಡದಲ್ಲಿ ವಾಕ್ಯದ ಆಡುಗ ಇಲ್ಲವೇ ಕೇಳುಗನು

(1) ಕೆಲಸದ ಆಗುಗ ಇಲ್ಲವೇ ಕೊನೆಯಾಗಿದ್ದಲ್ಲಿ ಇಲ್ಲವೇ
(2) ಕೆಲಸವನ್ನು ವಾಕ್ಯದ ಆಡುಗನಿಗಾಗಿ ಇಲ್ಲವೇ ಕೇಳುಗನಿಗಾಗಿ

ನಡೆಸುತ್ತಿದ್ದಲ್ಲಿ

ಅಂತಹ ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಿಗೂ ಇತರ ಕ್ರಿಯಾರೂಪ ಗಳಿಗೂ ನಡುವೆ ವ್ಯತ್ಯಾಸವಿತ್ತೆಂದು ಕೆಲವರು ವಿದ್ವಾಂಸರು ವಾದಿಸಿದ್ದಾರೆ (ಎಮೆನೋ 1945 ನೋಡಿ). ನಡುದ್ರಾವಿಡ ವಿಬಾಗಕ್ಕೆ ಸೇರುವ ಕೂಯಿ ನುಡಿಯಲ್ಲಿ ಇಂತಹ ವ್ಯತ್ಯಾಸ ಕಾಣಿಸುವುದೇ ಇದಕ್ಕೆ ಆದಾರ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕೂಯಿ ನುಡಿಯ ಕ್ರಿಯಾರೂಪ

ಗಳನ್ನು ಪರಿಶೀಲಿಸಬಹುದು.

ಇತರರನ್ನು ಸೂಚಿಸುವವು

ಆಡುಗ-ಕೇಳುಗರನ್ನು ಸೂಚಿಸುವವು

ಸೀಇ ’ಅವರಿಗೆ ಕೊಡುತ್ತೇನೆ’ ಸೀನೆ ’ಅವನಿಗೆ ಕೊಡುತ್ತಾಳೆ’ ’ಅವನನ್ನು ಎಳೆಯುತ್ತೇನೆ’ ಪೆಹಿಇ ‘ಅವನನ್ನು ಓಡಿಸುತ್ತೇನೆ’ ವೇಇ ‘ಅವನಿಗೆ ಹೊಡೆಯುತ್ತೇನೆ’

ಸೀಅಇ ’ನಿಮಗೆ ಕೊಡುತ್ತೇನೆ’ ಸೀಅನೆ ‘ನನಗೆ ಕೊಡುತ್ತಾಳೆ’ ಜೆಜಇ ’ನಿನ್ನನ್ನು ಎಳೆಯುತ್ತೇನೆ’ ಪೆಹಇ ’ನಿನ್ನನ್ನು ಓಡಿಸುತ್ತೇನೆ’ ವೇತಇ ’ನಿನಗೆ ಹೊಡೆಯುತ್ತೇನೆ’ ತುಗ್ದಇ ’ನಿನಗಾಗಿ ಕಟ್ಟುತ್ತೇನೆ’

’ಅವನಿಗಾಗಿ ಕಟ್ಟುತ್ತೇನೆ’ ’ಅವನೆಡೆಗೆ ಕೈ ಹಿಡಿಯುತ್ತೇನೆ’ ಎಂಡಇ ’ನಿನ್ನ ಕಡೆಗೆ ಕೈಹಿಡಿಯುತ್ತೇನೆ’ ’ಅವನು ಹೇಳಿದ್ದು ಕೇಳಿಸುತ್ತದೆ

ವೆಂಜಇ ‘ನೀನು ಹೇಳಿದ್ದು ಕೇಳಿಸುತ್ತದೆ

ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಒಂದು ಹೆಚ್ಚಿನ ಅಕಾರ ಬಂದಿರುವುದನ್ನು ಕಾಣಬಹುದು. (ಇದರೊಂದಿಗೆ ಜೆಜಇ, ಪೆಹಇ, ವೇತಇ ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಿಸುವ ಹಾಗೆ ಜ್, ಇ, ತ್, ದ್, ಡ್ ಮೊದಲಾದವು ಬಂದಿರುವುದಕ್ಕೆ ಕೂಯಿ ನುಡಿಯ ಸೇರಿಕೆಯ ನಿಯಮಗಳು ಕಾರಣ.)

ಕನ್ನಡದಲ್ಲಿ ಮತ್ತು ಇತರ ದ್ರಾವಿಡ ನುಡಿಗಳಲ್ಲಿ ಈ ಒಟ್ಟು ಹೆಚ್ಚಿನ ಮಟ್ಟಿಗೂ ಇಲ್ಲವಾಗಿದೆ. ಬಾ ಮತ್ತು ತಾ ಕ್ರಿಯಾಪದಗಳಿಗಿರುವ ಬಾರದೆ, ತಾರದೆ ರೂಪಗಳಲ್ಲಿ ಕಾಣಿಸುವ ಆರ್ ಎಂಬುದು ಈ ಒಟ್ಟಿನ ಪಳೆಯಳಿಕೆ ಯಾಗಿರಬಹುದು. ಆದರೆ, ಈ ಕ್ರಿಯಾಪದಗಳ ಬರುತ್ತಾ, ಬರಲು ಮೊದಲಾದ ರೂಪಗಳಿಗೆ ಅಲ್ಲಗಳೆಯುವ ಅರ್ತವಿಲ್ಲವಾದರೂ ಅವುಗಳಲ್ಲಿ ಅರ್ ಅಂಶ ಉಳಿದಿರುವುದು ಈ ವಿಶಯದಲ್ಲಿ ಸಂಶಯಕ್ಕೆಡೆಮಾಡಿದೆ.

Eke →

8.6 ಕೆಲಸವನ್ನು ಮಾಡಿಸುವ ಕ್ರಿಯಾರೂಪಗಳು

(1) ಕೇಳುಗನ ಮೂಲಕ ಕೆಲಸವನ್ನು ಮಾಡಿಸುವುದಕ್ಕಾಗಿ ಕ್ರಿಯಾಪದವನ್ನು ಹಾಗೆಯೇ ಯಾವ ಒಟ್ಟನ್ನೂ ಸೇರಿಸದೆ ಬಳಸುವ ಕ್ರಮ ಮೂಲದ್ರಾವಿಡ ದಲ್ಲೇನೇ ಬಳಕೆಯಲ್ಲಿದ್ದಿರಬೇಕು ಮತ್ತು ಇದೇ ಕ್ರಮ ಕನ್ನಡದಲ್ಲೂ ಉಳಿದುಕೊಂಡಿದೆ.

ಹಲವರು ಕೇಳುಗರಿಂದ ಇಲ್ಲವೇ ಕೇಳುಗ ಮತ್ತು ಇತರರಿಂದ ಕೆಲಸವನ್ನು ಮಾಡಿಸಬೇಕಾದಲ್ಲಿ ಕ್ರಿಯಾಪದಕ್ಕೆ ನೇರವಾಗಿ ಹಲವಚನದ ಒಟ್ಟನ್ನು ಸೇರಿಸಿ ಬಳಸಲಾಗುತ್ತಿತ್ತು. ಹಳೆಗನ್ನಡದಲ್ಲಿ ಇದು ಇಮ್ ರೂಪದಲ್ಲಿತ್ತು (ಪೇಳಿಂ ‘ಹೇಳಿ(ರಿ)’, ಮಾಡಿಂ ‘ಮಾಡಿ(ರಿ)’). ಇವತ್ತಿನ ಬರಹ ಕನ್ನಡದಲ್ಲಿ ಅದು ಇರಿ ಇಲ್ಲವೇ ಇ ರೂಪದಲ್ಲಿದೆ.

ಮೂಲದ್ರಾವಿಡಕ್ಕೆ ಹಲವಚನದ *ಇಮ್ (ಉಮ್) ಒಟ್ಟನ್ನು ಕಲ್ಪಿಸಿ ಕೊಳ್ಳಲಾಗಿದೆ. ಬರಹ ಕನ್ನಡದ ಇರಿ ರೂಪ ಮೇಲೆ (8.5.1)ರಲ್ಲಿ ವಿವರಿಸಿದ ಕೇಳುಗ+ಇತರರನ್ನು ಸೂಚಿಸುವ ಇರಿ (ಈರಿ) ಒಟ್ಟಿನ (ಹೇಳಿದಿರಿ, ಹೇಳುತ್ತೀರಿ) ವಿಸ್ತರಣೆಯಾಗಿರಬಹುದು.

ಕೆಲಸವನ್ನು

ಮಾಡದಂತೆ

(ಪೋಗಲ್

ತಡೆಯುವುದಕ್ಕಾಗಿ ಕ್ರಿಯಾಪದದೊಂದಿಗೆ ಅಲ್ ಒಟ್ಟನ್ನು ಬಳಸುವ ಕ್ರಮ ಹಳೆಗನ್ನಡದಲ್ಲಿ ನೋಡಲ್ ಬಳಕೆಯಲ್ಲಿತ್ತು ‘ನೋಡಬೇಡ’). ಇದಕ್ಕೆ ಇಮ್ ಒಟ್ಟನ್ನು ಸೇರಿಸಿ ಹಲವಚನದ ರೂಪವನ್ನು ಪಡೆಯಬಹುದು (ಪೋಗಲಿಂ ‘ಹೋಗ ಬೇಡಿ’). ಈ ಅಲ್ ಕ್ರಿಯಾಪದದಿಂದ ಬಂದಿರಬೇಕೆಂದು ಊಹಿಸಲಾಗಿದೆ.

‘ಹೋಗಬೇಡ’,

ಮೂಲದ್ರಾವಿಡದ

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಈ ಒಟ್ಟು ಉಳಿದಿರುವ ಹಾಗೆ ಕಾಣಿಸುವುದಿಲ್ಲ. ಅದರ ಬದಲು ಬೇಡ (ಬೇಡಿ(ರಿ)) ರೂಪವೇ ಬಳಕೆಗೆ ಬಂದಿದೆ. ಹವ್ಯಕ ಕನ್ನಡದಲ್ಲಿ ಇದು ಡ ಒಟ್ಟಾಗಿ ಬದಲಾಗಿದೆ (ಹೋಗಡ ‘ಹೋಗಬೇಡ’, ಬರಡಿ ‘ಬರಬೇಡಿ’).

ಹಳೆಗನ್ನಡದಲ್ಲಿ

ಸೂಚಿಸುವುದಕ್ಕಾಗಿ

(3) ಆಡುಗನು ಒಂದು ಕೆಲಸವನ್ನು ಕೇಳುಗನೊಂದಿಗೆ ನಡೆಸುವ ಬಯಕೆಯನ್ನು ಕ್ರಿಯಾಪದಕ್ಕೆ ಮುಂದಿನ ಸಮಯದ ಪ್ (ವ್) ಒಟ್ಟನ್ನು ಮತ್ತು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ಅಮ್ ಒಟ್ಟನ್ನು ಬಳಸಿರುವ ಮಾಡುವಂ ‘ಮಾಡೋಣ’, ಪೋಪಂ ‘ಹೋಗೋಣ’, ತೋಱುವಂ ‘ತೋರಿಸೋಣ’) ರೂಪಗಳನ್ನು ಬಳಸಲಾಗುತ್ತಿತ್ತು.

ಹಳೆಗನ್ನಡದ ಈ ಕ್ರಿಯಾರೂಪ ಮೂಲದ್ರಾವಿಡದಲ್ಲಿ ಆಡುಗ ಮತ್ತು ಕೇಳುಗರು ಒಟ್ಟಾಗಿ ಮುಂದಿನ ಸಮಯದಲ್ಲಿ ನಡೆಸುವ ಕೆಲಸವನ್ನು ತಿಳಿಸು ವಂತಹ ಕ್ರಿಯಾರೂಪವಾಗಿದ್ದಿರಬೇಕು. ಮುಂದಿನ ಸಮಯದ ಪ್ (ವ್) ಒಟ್ಟಿನೊಂದಿಗೆ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ *ಅಮ್ ಒಟ್ಟು ಬಂದಿರುವ ಈ ಕ್ರಿಯಾರೂಪಕ್ಕೆ ಹಳೆಗನ್ನಡದಲ್ಲಿ ಮೇಲೆ ಸೂಚಿಸಿದಂತಹ ಬೇರೆಯೇ ಅರ್ತ ಬಳಕೆಗೆ ಬಂದಿದೆ.

ಕರಾವಳಿಯ ಹವ್ಯಕ ಕನ್ನಡದಲ್ಲಿ ಹಳೆಗನ್ನಡದ ಈ ಕ್ರಿಯಾರೂಪ ಹಳೆಗನ್ನಡದ ಅರ್ತದಲ್ಲೇನೇ ಉಳಿದುಕೊಂಡಿದೆ. ಅದರ ಅಮ್ ಒಟ್ಟು

ಮಾತ್ರ ಒᵒ ಎಂಬುದಾಗಿ (ಎಂದರೆ ಮೂಗಿಸಿದ ಒಕಾರವಾಗಿ) ಬದಲಾಗಿದೆ (ಮಾಡುವೊᵒ ‘ಮಾಡೋಣ’, ಹೋಪೊᵒ ‘ಹೋಗೋಣ’ ಉಂಬೊᵒ ‘ಊಟ ಮಾಡೋಣ’).

ಕನ್ನಡದ ಇತರ ಒಳನುಡಿಗಳಲ್ಲಿ ಈ ಕ್ರಿಯಾರೂಪ ಉಳಿದಿಲ್ಲ. ಅದಕ್ಕೆ ಬದಲು, ಕ್ರಿಯಾಪದಕ್ಕೆ ನೇರವಾಗಿ ಓಣ ಒಟ್ಟನ್ನು ಸೇರಿಸಿ ರಚಿಸಿರುವ ಕ್ರಿಯಾರೂಪಗಳು ಬಳಕೆಗೆ ಬಂದಿವೆ (ಮಾಡೋಣ, ಹೋಗೋಣ).

ಬಳಕೆಯಲ್ಲಿತ್ತು.

(4) ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರರಿಂದ ಒಂದು ಕೆಲಸವನ್ನು ಮಾಡಿಸಿಕೊಳ್ಳುವುದಕ್ಕಾಗಿ ಹಳೆಗನ್ನಡದಲ್ಲಿ ಕೆ (ಗೆ) ಕ್ರಿಯಾಪದಕ್ಕೆ ಇದನ್ನು ಸೇರಿಸಲಾಗುತ್ತಿತ್ತು (ಬರ್ಕೆ ‘ಬರಲಿ’, ಈಗೆ ‘ಕೊಡಲಿ’, ತಿನ್ಗೆ ‘ತಿನ್ನಲಿ’).
ಹಳೆತಮಿಳಿನಲ್ಲಿಯೂ ಇಂತಹದೇ ಒಟ್ಟು ಕ (ಕ್ಕ) ರೂಪದಲ್ಲಿ ಬಳಕೆ ಯಲ್ಲಿತ್ತು (ಕಾಣ್ಕ ‘ಕಾಣಲಿ’, ಒೞಿಕ್ಕ ‘ನಾಶಮಾಡಲಿ’). ತೆಂಕುದ್ರಾವಿಡಕ್ಕೆ ಇಂತಹದೊಂದು ಒಟ್ಟನ್ನು ಕಲ್ಪಿಸಿಕೊಳ್ಳಲು ಸಾದ್ಯವಿದೆಯಾದರೂ ಮೂಲ ದ್ರಾವಿಡದಲ್ಲಿ ಇದರ ಜಾಗವೇನು ಎಂಬುದು ಸ್ಪಶ್ಟವಾಗಿಲ್ಲ.

ನೇರವಾಗಿ

ಇವತ್ತಿನ ಕನ್ನಡ ಒಳನುಡಿಗಳಲ್ಲಿ ಈ ಒಟ್ಟು ಉಳಿದಿರುವ ಹಾಗೆ ಕಾಣಿಸುವುದಿಲ್ಲ. ಇದಕ್ಕೆ ಬದಲು ಅಲಿ ಒಟ್ಟನ್ನು ಸೇರಿಸಿರುವ ಬರಲಿ, ಹೋಗಲಿ ಮೊದಲಾದ ರೂಪಗಳು ಬಳಕೆಗೆ ಬಂದಿವೆ. ಇವು ಅನಂತರದ ಕೆಲಸವನ್ನು ಸೂಚಿಸುವ ಜೋಡಿಸುವ ಕ್ರಿಯಾರೂಪಗಳಿಂದ (12.3 ನೋಡಿ) ಬಂದಿವೆ.

Eke →

8.7 ವಾಕ್ಯದ ನಡುವೆ ಬರುವ ಕ್ರಿಯಾರೂಪಗಳು

ಮೇಲೆ ಸೂಚಿಸಿದ ಹಾಗೆ, ವಾಕ್ಯಗಳ ನಡುವೆ ಹಲವು ರೀತಿಯ ಕ್ರಿಯಾ ರೂಪಗಳು ಕನ್ನಡದಲ್ಲಿ ಬಳಕೆಯಾಗುತ್ತವೆ. ಜೋಡಿಸುವ ಕ್ರಿಯಾರೂಪಗಳು (ಮಾಡಿ, ಮಾಡಲು, ಮಾಡುತ್ತಾ, ಮಾಡದೆ), ಸಂಬಂದಿಸುವ ಕ್ರಿಯಾರೂಪಗಳು ಶರತ್ತಿನ ಕ್ರಿಯಾರೂಪಗಳು (ಮಾಡಿದರೆ) ಮತ್ತು ಕ್ರಿಯಾಪದಗಳ ನಾಮರೂಪಗಳು

(ಮಾಡುವ, ಮಾಡಿದ, ಮಾಡದ),

(ಮಾಡುವುದು, ಮುಕ್ಯವಾದವುಗಳು.

ಮಾಡಿದುದು,

ಮಾಡದುದು)

ಇವುಗಳಲ್ಲಿ

ಬೇರೆ

ಅವನ್ನು

ಈ ಕ್ರಿಯಾರೂಪಗಳು ಮೂಲದ್ರಾವಿಡದಿಂದಲೇನೇ ಬಂದಿರಬಹುದೇ ನುಡಿಗಳು ಬೇರೆ ಇಲ್ಲವೇ ಕಲ್ಪಿಸಿಕೊಂಡಿರಬಹುದೇ ಎಂಬುದಿನ್ನೂ ಮೂಲದ್ರಾವಿಡದಿಂದಲೇ ಬಂದಿವೆಯಾದರೆ ಅವಕ್ಕೆ ಅಲ್ಲಿ ಯಾವ ಸ್ವರೂಪ ಅವುಗಳ ಇದ್ದಿರಬಹುದು ಬದಲಾವಣೆಗಳೆಲ್ಲ ಕನ್ನಡದ ಚರಿತ್ರೆಯಲ್ಲಿ ನಡೆದಿರಬಹುದು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ದ್ರಾವಿಡ ಸ್ಪಶ್ಟವಾಗಿಲ್ಲ.

ಸ್ವರೂಪದಲ್ಲಿ

ಮತ್ತು

ಇವುಗಳಲ್ಲಿ ಜೋಡಿಸುವ, ಸಂಬಂದಿಸುವ ಮತ್ತು ಶರತ್ತನ್ನು ತಿಳಿಸುವ ಕ್ರಿಯಾರೂಪಗಳ ಚರಿತ್ರೆಯನ್ನು ಮುಂದೆ ವಾಕ್ಯಗಳ ಒಳರಚನೆಯನ್ನು ವಿವರಿಸುವ ಪರಿಶೀಲಿಸಲಾಗುವುದು. ಕ್ರಿಯಾಪದಗಳಿಂದ ತಯಾರಾದ ನಾಮರೂಪಗಳ ಚರಿತ್ರೆಯೆಂತಹದು ಎಂಬುದನ್ನು ನಾಮಪದಗಳ ಮತ್ತು ನಾಮರೂಪಗಳ ಒಳರಚನೆಯನ್ನು ವಿವರಿಸುವ ಮುಂದಿನ (9ನೇ) ಅದ್ಯಾಯದಲ್ಲಿ ಪರಿಶೀಲಿಸಲಾಗುವುದು.

ಹನ್ನೆರಡನೇ ಅದ್ಯಾಯದಲ್ಲಿ

Eke →

8.8 ತಿರುಳು

ಕ್ರಿಯಾರೂಪಗಳ ಒಳರಚನೆ ಮೂಲದ್ರಾವಿಡದಲ್ಲಿ ಹೇಗಿದ್ದಿರಬಹುದು ಮತ್ತು ಅದು ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. ಈ ವಿಶಯದಲ್ಲಿ ಕನ್ನಡದ ಒಳನುಡಿಗಳು, ಅದರಲ್ಲೂ ಕರಾವಳಿ ಮತ್ತು ಒಳನಾಡಿನ ಒಳನುಡಿಗಳು, ಹಲವು ರೀತಿಯಲ್ಲಿ ಬೇರಾಗಿದ್ದು, ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗಿರುವುದನ್ನು ಕಾಣಬಹುದು.

ಹಿಂದಿನ ಸಮಯದ ನ್್ತ ಒಟ್ಟಿನಲ್ಲಿದ್ದ ನಕಾರ ಹೆಚ್ಚಿನೆಡೆಗಳಲ್ಲೂ ಬಿದ್ದು ಹೋಗಿದೆ; ಮುಂದಿನ ಸಮಯವನ್ನು ಸೂಚಿಸುವ ವ್(ಪ್) ಒಟ್ಟು ಹಳೆಗನ್ನಡದಲ್ಲಿ ಉಳಿದಿದೆಯಾದರೂ ಹೊಸಗನ್ನಡದಲ್ಲಿ ಅದರ ಬದಲು ಉತ್ತ ಒಟ್ಟು ಬಳಕೆಗೆ ಬಂದಿದೆ. ಆದರೆ, ಬಡಗ ಕನ್ನಡದಲ್ಲಿ ಮತ್ತು

ಕರಾವಳಿಯ ಗವ್ಡ ಕನ್ನಡದಲ್ಲಿ ಉತ್ತ ಒಟ್ಟಿನ ಬದಲು ಹಳೆಗನ್ನಡದ ‘ದಪ’ ರೂಪ ಉಳಿದಿರುವ ಹಾಗೆ ಕಾಣಿಸುತ್ತದೆ.

ಕರಾವಳಿಯ ಒಳನುಡಿಗಳಲ್ಲಿ ಹಳೆಗನ್ನಡದ ವ್(ಪ್) ಒಟ್ಟಿಗೆ ಮುಂದಿನ ಸಮಯದಲ್ಲಿ ನಡೆಯುವ ಕೆಲಸದ ಕುರಿತಾಗಿ ಆಡುಗನ ಊಹೆಯನ್ನು ಸೂಚಿಸುವ ಅರ್ತ ಬಂದಿದೆ. ಬಡಗ ಕನ್ನಡದಲ್ಲೂ ಈ ಒಟ್ಟು

ಊಹೆಯನ್ನು ಸೂಚಿಸುವ ಕು ಒಟ್ಟು ಮತ್ತು ಅಲ್ಲಗಳೆಯುವ ಆ ಒಟ್ಟು ಹಳೆಗನ್ನಡದಲ್ಲಿ, ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಉಳಿದಿವೆ, ಆದರೆ ಒಳನಾಡಿನ ಒಳನುಡಿಗಳಲ್ಲಿ ಮತ್ತು ಬರಹ ಕನ್ನಡದಲ್ಲಿ ಉಳಿದಿಲ್ಲ.

ಕನ್ನಡದ ಒಳನುಡಿಗಳಲ್ಲಿ

ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಆಡುಗ ಒಟ್ಟುಗಳಲ್ಲೂ ಹಲವು ರೀತಿಯ ಬದಲಾವಣೆಗಳು ನಡೆದಿವೆ. ಉದಾಹರಣೆಗಾಗಿ, ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವ ಒಟ್ಟು ಬಡಗ ಕನ್ನಡದಲ್ಲಿ ಮಾತ್ರ ಉಳಿದಿದೆ; ಹವ್ಯಕದಲ್ಲಿ ಈ ಒಟ್ಟು ಹಲವಚನದಲ್ಲಿದ್ದ ಅಳಿದಿದೆಯಾದರೂ ಅರ್ತವ್ಯತ್ಯಾಸ ಉಳಿದಿದೆ; ಮನುಶ್ಯ-ಇತರ ಲಿಂಗಬೇದ ಕನ್ನಡದಲ್ಲಿ ಅಳಿದಿದೆ; ಒರ್ವಚನದಲ್ಲೂ ಗವ್ರವಾರ್ತ ಇಲ್ಲದಲ್ಲಿ ಲಿಂಗ ಬೇದ ಹವ್ಯಕ ಮತ್ತು ಬಡಗ ಒಳನುಡಿಗಳಲ್ಲಿ ಅಳಿದಿದೆ.

ಹವ್ಯಕ

ಕ್ರಿಯಾರೂಪಗಳ ಚರಿತ್ರೆಯ ಕುರಿತಾಗಿ ನಾವು ತಿಳಿಯಬೇಕಾಗಿರುವ ಅಂಶ ಇನ್ನೂ ಬಹಳಶ್ಟು ಇದೆ ಎಂಬುದನ್ನು ಇಲ್ಲಿ ನೆನಪಿಸುವುದು ಅವಶ್ಯ.