← Ch 1  ·  Contents  ·  Ch 3 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

2. ಬೇರಿನ ಸ್ವರಗಳು

Eke →

2.1 ಸ್ವರಗಳ ಎಣಿಕೆ ಮತ್ತು ಉಚ್ಚಾರಣೆ

ಮೂಲದ್ರಾವಿಡಕ್ಕೆ ಇ, ಎ, ಉ, ಒ ಮತ್ತು ಅ ಎಂಬ ಅಯ್ದು ಗಿಡ್ಡ ಸ್ವರಗಳನ್ನು ಮತ್ತು ಈ, ಏ, ಊ, ಓ ಮತ್ತು ಆ ಎಂಬ ಅಯ್ದು ಉದ್ದ ಸ್ವರಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಕನ್ನಡದಲ್ಲೂ ಇಂತಹವೇ ಅಯ್ದು ಗಿಡ್ಡ ಸ್ವರಗಳ ಎಣಿಕೆ ಮತ್ತು ಮತ್ತು ಉದ್ದ ಉಚ್ಚಾರಣೆಗಳ ಮಟ್ಟಿಗೆ ಮೂಲದ್ರಾವಿಡಕ್ಕೂ ಕನ್ನಡಕ್ಕೂ ನಡುವೆ, ಈಗ ಕಲ್ಪಿಸಿಕೊಂಡಿರುವ ಹಾಗೆ, ಯಾವ ವ್ಯತ್ಯಾಸವೂ ಇಲ್ಲ.

ಸ್ವರಗಳಿವೆ. ಎಂದರೆ,

ಆದರೆ, ಕನ್ನಡದ ಕೆಲವು ಇವತ್ತಿನ ಒಳನುಡಿಗಳಲ್ಲಿ ಸ್ವರಗಳ ಎಣಿಕೆಯ ಮಟ್ಟಿಗೂ ಬದಲಾವಣೆಗಳಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು (2.4 ನೋಡಿ).

ಕನ್ನಡದಲ್ಲಿ ಬಳಕೆಯಾಗುವ ಈ ಸ್ವರಗಳನ್ನು ಹೆಸರಿಸುವುದಕ್ಕಾಗಿ ಎರಡು ಮುಕ್ಯ ವಿಶಯಗಳನ್ನು ಗಮನಿಸಬೇಕಾಗುತ್ತದೆ. ಅದಕ್ಕಾಗಿ (1) ನಾಲಿಗೆಯ ಯಾವ ಬಾಗವನ್ನು ಬಳಸಲಾಗುತ್ತದೆ ಎಂಬುದೊಂದು; ಮತ್ತು (2) ಆ ಬಾಗವನ್ನು ಬಾಯಿಯ ಯಾವ ಜಾಗದಲ್ಲಿ ನಿಲ್ಲಿಸಲಾಗುತ್ತದೆ ಎಂಬುದು ಇನ್ನೊಂದು.

ಕನ್ನಡ ಸ್ವರಗಳ ಉಚ್ಚಾರಣೆಯಲ್ಲಿ ಈ ಎರಡು ಅಂಶಗಳು (ನಾಲಗೆಯ ಬಾಗ ಮತ್ತು ಅದು ನಿಲ್ಲುವ ಬಾಯಿಯ ಜಾಗ) ಯಾವ ರೀತಿಯಲ್ಲಿ ತೊಡಗಿಕೊಳ್ಳುತ್ತವೆ ಎಂಬುದನ್ನು ಕೆಳಗೆ ಸೂಚಿಸಲಾಗಿದೆ.

ಬಾಯಿಯ ಜಾಗ

ಮುಂದಿನ ಬಾಗ

ಹಿಂದಿನ ಬಾಗ

ನಾಲಿಗೆಯ ಬಾಗ

ಮೇಲಿನ ಜಾಗ ನಡುವಿನ ಜಾಗ
ಕೆಳಗಿನ ಜಾಗ

ನಾಲಿಗೆಯ ಮುಂಬಾಗವನ್ನು ಬಾಯಿಯ ಮೇಲ್ಬಾಗದಲ್ಲಿ ನಿಲ್ಲಿಸಿ ಒಂದು ಸ್ವರವನ್ನು ಉಚ್ಚರಿಸಿದಲ್ಲಿ ಅದು ಇ ಇಲ್ಲವೇ ಈ ಎಂಬುದಾಗಿ ಕೇಳಿಸುತ್ತದೆ; ಅದೇ ಮುಂಬಾಗವನ್ನು ಸ್ವಲ್ಪ ಕೆಳಗೆ ಎಂದರೆ ಬಾಯಿಯ ನಡುಬಾಗಕ್ಕೆ ಸರಿಸಿ ಉಚ್ಚರಿಸಿದರೆ ಆ ಸ್ವರ ಎ ಇಲ್ಲವೇ ಏ ಎಂಬುದಾಗಿ ಕೇಳಿಸುತ್ತದೆ.

ನಾಲಿಗೆಯ ಮುಂಬಾಗದ ಬದಲು ಹಿಂಬಾಗವನ್ನು ಬಾಯಿಯ ಮೇಲ್ಬಾಗದಲ್ಲಿರಿಸಿ (ಮತ್ತು ಅದರೊಂದಿಗೆ ತುಟಿಯನ್ನೂ ದುಂಡಗಾಗಿಸಿ) ಒಂದು ಸ್ವರವನ್ನು ಉಚ್ಚರಿಸಿದೆವಾದರೆ, ಅದು ಉ ಇಲ್ಲವೇ ಊ ಎಂಬುದಾಗಿ ಕೇಳಿಸುತ್ತದೆ; ನಡುಬಾಗದಲ್ಲಿರಿಸಿ (ಮತ್ತು ತುಟಿಯನ್ನು ದುಂಡಗಾಗಿಸಿ) ಉಚ್ಚರಿಸಿದೆವಾದರೆ ಒ ಇಲ್ಲವೇ ಓ ಎಂಬುದಾಗಿ ಕೇಳಿಸುತ್ತದೆ; ಮತ್ತು ಕೆಳಬಾಗದಲ್ಲಿರಿಸಿ (ತುಟಿಯನ್ನು ದುಂಡಗಾಗಿಸದೆ) ಉಚ್ಚರಿಸಿದೆವಾದರೆ ಅ ಇಲ್ಲವೇ ಆ ಎಂಬುದಾಗಿ ಕೇಳಿಸುತ್ತದೆ.

ಈ ರೀತಿ ಉಚ್ಚರಿಸುವ ನಾಲಿಗೆಯ ಬಾಗ ಮತ್ತು ಅದು ನಿಲ್ಲುವ ಬಾಯಿಯ ಜಾಗಗಳನ್ನು ಅವಲಂಬಿಸಿ, ಕನ್ನಡದ ಸ್ವರಗಳನ್ನು ಅಯ್ದು ಗುಂಪುಗಳಲ್ಲಿ ಹಂಚಿ ಹೆಸರಿಸಬಹುದು. ಇ ಮತ್ತು ಈ ಎಂಬವುಗಳು ಮುನ್ಮೇಲಿನ’ಸ್ವರಗಳು; ಎ ಮತ್ತು ಏ ಎಂಬವುಗಳು ಮುನ್ನಡುವಿನ ಸ್ವರಗಳು; ಉ ಮತ್ತು ಊ ಎಂಬವುಗಳು ಹಿನ್ಮೇಲಿನ’ಸ್ವರಗಳು; ಒ ಮತ್ತು ಓ ಎಂಬವುಗಳು ಹಿನ್ನಡುವಿನ’ಸ್ವರಗಳು; ಅ ಮತ್ತು ಆ ಎಂಬವುಗಳು ಹಿಂಗೆಳಗಿನ’ಸ್ವರಗಳು.

ಕನ್ನಡ ಸ್ವರಗಳ ಈ ಹೆಸರುಗಳಲ್ಲಿ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ನಾಲಿಗೆಯ ಬಾಗವನ್ನು ಮತ್ತು ಎರಡನೆಯದು ಅದು

ನಿಲ್ಲುವ ಬಾಯಿಯ ಜಾಗವನ್ನು ಸೂಚಿಸುತ್ತದೆಯುಂಬುದನ್ನು ಗಮನಿಸ ಬಹುದು.

ಕನ್ನಡದ ಸ್ವರಗಳನ್ನು ಈ ರೀತಿ ಅವುಗಳ ಉಚ್ಚಾರಣೆಯಲ್ಲಿ ಬಳಕೆಯಾಗುವ ನಾಲಿಗೆಯ ಬಾಗ ಮತ್ತು ಆ ಬಾಗ ನಿಲ್ಲುವ ಬಾಯಿಯ ಜಾಗಗಳನ್ನವಲಂಬಿಸಿ ಮಾತ್ರವಲ್ಲದೆ ಬೇರೆ ವಿಶಯಗಳನ್ನವಲಂಬಿಸಿಯೂ ಹಂಚಲು ಸಾದ್ಯವಿದೆ. ಮೇಲೆ ಸೂಚಿಸಿದ ಹಾಗೆ, ಈ ಸ್ವರಗಳನ್ನು ಎಶ್ಟು ಹೊತ್ತು ಉಚ್ಚರಿಸಲಾಗುತ್ತದೆ ಎಂಬುದನ್ನವಲಂಬಿಸಿ ಗಿಡ್ಡಸ್ವರಗಳು (ಇ, ಎ, ಉ, ಒ ಮತ್ತು ಅ) ಮತ್ತು ಉದ್ದಸ್ವರಗಳು (ಈ, ಏ, ಊ, ಓ ಮತ್ತು ಆ) ಎಂಬುದಾಗಿ ಎರಡು ಗುಂಪುಗಳಲ್ಲಿ ಹಂಚಬಹುದು.

ಇದಲ್ಲದೆ, ಇವುಗಳ ಉಚ್ಚಾರಣೆಯಲ್ಲಿ ತುಟಿ ದುಂಡಗಿರುತ್ತದೆಯೇ ಇಲ್ಲವೇ ದುಂಡಗಿಲ್ಲದಿರುತ್ತದೆಯೇ ಎಂಬುದನ್ನವಲಂಬಿಸಿ, ದುಂಡಗಿನ ಸ್ವರಗಳು (ಉ, ಊ, ಒ ಮತ್ತು ಓ), ಮತ್ತು ದುಂಡಗಿಲ್ಲದ ಸ್ವರಗಳು (ಇ, ಈ, ಎ, ಏ, ಅ ಮತ್ತು ಆ) ಎಂಬುದಾಗಿಯೂ ಹಂಚಬಹುದು.

ಕನ್ನಡದ

ಚರಿತ್ರೆಯಲ್ಲಿ ಈ

ಸ್ವರಗಳು ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ವರ್ಣಿಸುವಲ್ಲಿ ಅವುಗಳ ಉಚ್ಚಾರಣೆಯನ್ನನುಸರಿಸಿ ಮಾಡಿರುವ ಈ ಮೂರು ರೀತಿಯ ಹಂಚಿಕೆಗಳು ಸಹಾಯಕವಾಗುತ್ತವೆ ಎಂಬುದನ್ನು ಮುಂದೆ ನೋಡಲಿರುವೆವು.

ಹತ್ತು

Eke →

2.1.1 ಐ ಮತ್ತು ಔ ಸ್ವರಗಳು

ಕನ್ನಡ ಬರಹದಲ್ಲಿ ಐ ಮತ್ತು ಔ ಎಂಬ ಬೇರೆ ಎರಡು ಸ್ವರಗಳನ್ನು ಪಟ್ಟಿಮಾಡಲಾಗುತ್ತದೆ; ಆದರೆ ನಿಜಕ್ಕೂ ಇವು ಕನ್ನಡದ (ಇಲ್ಲವೇ ಮೂಲದ್ರಾವಿಡದ) ಹೆಚ್ಚಿನ ಸ್ವರಗಳಲ್ಲ. ಅಕಾರದ ಅನಂತರ ಯಕಾರ ಬಂದಿರುವುದನ್ನು ಬರೆಯಲಾಗುತ್ತದೆ ಮತ್ತು ವಕಾರ ಬಂದಿರುವುದನ್ನು (ಅವ್ ಎಂಬುದನ್ನು) ಔ ಎಂಬುದಾಗಿ ಬರೆಯಲಾಗುತ್ತದೆ.

ಎಂಬುದನ್ನು)

ಕನ್ನಡದಲ್ಲಿ (ಮತ್ತು ಮೂಲದ್ರಾವಿಡದಲ್ಲಿ) ಈ ರೀತಿ ಅಕಾರದೊಂದಿಗೆ ಸೇರಿರುವುದನ್ನು ಎರಡು ಹೆಚ್ಚಿನ

ಯಕಾರ ಮತ್ತು ವಕಾರಗಳು

ಸ್ವರಗಳೆಂಬುದಾಗಿ ಪರಿಗಣಿಸಲು ಯಾವ ಆದಾರವೂ ಇಲ್ಲ. ಈ ಸಂದರ್ಬದಲ್ಲಿ ಕೆಳಗಿನ ಕೆಲವು ವಿಶಯಗಳನ್ನು ಗಮನಿಸುವುದು ಅವಶ್ಯ.

(1) ಅಕಾರದ ಅನಂತರ ಮಾತ್ರವಲ್ಲದೆ ಇತರ ಸ್ವರಗಳ ಅನಂತರವೂ ಯಕಾರ ಬರಬಲ್ಲುದು. ಉದಾಹರಣೆಗಾಗಿ, ಮೂಲದ್ರಾವಿಡದ *ಕೆಯ್ ‘ಮಾಡು’ ಮತ್ತು *ಕೊಯ್’‘ಕೊಯ್ಯು’’ಪದಗಳಲ್ಲಿ ಯಕಾರ ಎ ಮತ್ತು ಒ ಸ್ವರಗಳ ಅನಂತರ ಬಂದಿದೆ. ಈ ಬಳಕೆಯ ಯಕಾರಕ್ಕೂ *ಕಯ್ (ಕೈ) ಪದದಲ್ಲಿರುವಂತಹ ಅಕಾರದ ಅನಂತರದ ಬಳಕೆಯಲ್ಲಿರುವ ಯಕಾರಕ್ಕೂ ನಡುವೆ ಯಾವ ವ್ಯತ್ಯಾಸವೂ ಇಲ್ಲ.

(2) ಗಿಡ್ಡ ಸ್ವರಗಳ ಅನಂತರ ಮಾತ್ರವಲ್ಲದೆ ಉದ್ದ ಸ್ವರಗಳ ಅನಂತರವೂ ಯಕಾರ ಬರಬಲ್ಲುದು. *ಕಯ್ (ಕೈ) - *ಕಾಯ್ ‘ಕಾಯು’, *ಬಯ್ ‘ಬಯ್ಯು’’- *ಬಾಯ್’‘ಬಾಯಿ’, *ಪಯ್ ‘ಒಡೆ’

  • *ಪಾಯ್ ‘ಜಿಗಿ’’ಮೊದಲಾದ ಮೂಲದ್ರಾವಿಡ ಬೇರುಗಳಲ್ಲಿ ಈ ಎರಡು ರೀತಿಯ ಬಳಕೆಗಳನ್ನು ಕಾಣಬಹುದು. ಗಿಡ್ಡ ಅಕಾರದ ಅನಂತರ ಬರುವ ಯಕಾರವನ್ನು ಮಾತ್ರವೇ ಒಂದು ಹೆಚ್ಚಿನ ಸ್ವರದ ಅಂಗವೆಂದು ಕರೆಯುವುದಕ್ಕೆ ದ್ರಾವಿಡ ನುಡಿಗಳಲ್ಲಾಗಲಿ, ಮೂಲದ್ರಾವಿಡದಲ್ಲಾಗಲಿ ಯಾವ ಆದಾರವೂ ಇಲ್ಲ.

ವ್ಯಂಜನಗಳೊಂದಿಗೂ

(3) ಸ್ವರಗಳ ಅನಂತರ ಬರುವ ಯಕಾರ ಮತ್ತು ವಕಾರಗಳು ಮೂಲದ್ರಾವಿಡದಲ್ಲಿ ರಕಾರ, ಲಕಾರ, ಳಕಾರ ಮೊದಲಾದವುಗಳ ಹಾಗೆ ಹಲವು ವಿಶಯಗಳಲ್ಲಿ ವ್ಯಂಜನಗಳಂತೆಯೇ ಬಳಕೆಯಾಗುತ್ತವೆ. ಇದಲ್ಲದೆ, ಅವುಗಳಿಗೆ ಸಂಬಂದವಿದೆ. ಉದಾಹರಣೆಗಾಗಿ, *ಪಯ್ - *ಪಚ್ಚೆ’‘ಹಸುರು’, *ಮುಯ್ - *ಮುಚ್ಚು ‘ಹೊದಿಸು’, *ಕಯ್ - *ಕಚ್ ‘ಕಹಿ’, *ಪಿಯರ್ - *ಪಿಚರ್ ‘ಹೆಸರು’ ಮೊದಲಾದ ಪದಗಳಲ್ಲಿ ಯಕಾರ ಮತ್ತು ಚಕಾರಗಳ ನಡುವೆ ಮತ್ತು ಸಂಬಂದವಿರುವುದನ್ನು ಮಕಾರಗಳೊಂದಿಗೆ ಇಂತಹದೇ ಸಂಬಂದವಿದೆ (4.3.1 ಮತ್ತು 5.2.2 ನೋಡಿ).

ಕಾಣಬಹುದು.

ವಕಾರಕ್ಕೆ

ಪಕಾರ

(4) ಮೂಲದ್ರಾವಿಡದ ಹಲವು ಬೇರುಗಳಲ್ಲಿ *ಅಯ್ ಎಂಬುದರ ಬದಲಿಗೆ *ಎಯ್ ಎಂಬುದನ್ನು ಬಳಸಬಹುದಿತ್ತು. ಇವತ್ತಿನ ದ್ರಾವಿಡ ನುಡಿಗಳಲ್ಲಿ ಈ ಪದಗಳು ಅಯ್ ಎಂಬುದನ್ನು ತೋರಿಸಬಹುದು ಇಲ್ಲವೇ ಎಯ್ ಎಂಬುದನ್ನು ತೋರಿಸಬಹುದು.

ಇದಲ್ಲದೆ, ಮೂಲದ್ರಾವಿಡದಲ್ಲಿ ಇದಕ್ಕಿಂತ ಬೇರಾದ *ಎಯ್ ಎಂಬುದೂ ಬಳಕೆಯಲ್ಲಿತ್ತು. ಅದು ಇವತ್ತಿನ ಎಲ್ಲಾ ನುಡಿಗಳಲ್ಲೂ ಎಯ್ ರೂಪದಲ್ಲೇ ಉಳಿದಿದೆ (ದ್ಸ್ವೆಲೆಬಿಲ್ 1970:70 ನೋಡಿ).

ಮೂಲದ್ರಾವಿಡದಲ್ಲಿದ್ದ *ಅಯ್ ಮತ್ತು *ಎಯ್ ಎಂಬವುಗಳ ನಡುವಿನ ಈ ಸಂಬಂದವೂ ಅವುಗಳಲ್ಲಿ ಒಂದು ‘ಐ ಎಂಬ ಸ್ವರ’ ಮತ್ತು ಇನ್ನೊಂದು ‘ಸ್ವರ (ಎ) ಮತ್ತು ವ್ಯಂಜನ(ಯ್)ಗಳ ಸೇರಿಕೆ’ ಎಂಬುದಾಗಿ ಹೇಳುವುದು ಸರಿಯಲ್ಲವೆಂಬುದನ್ನೇ ಸೂಚಿಸುತ್ತದೆ.

ಹಳೆಗನ್ನಡ

ಪದ್ಯರಚನೆಯಲ್ಲಿ

ಪ್ರಾಸವನ್ನು ಸೂಚಿಸಬೇಕಾಗಿರುವಂತಹ ಸಂದರ್ಬಗಳಲ್ಲಿ ಅಯ್ ಎಂಬುದರ ಬದಲಿಗೆ ಒಯ್, ಉಯ್, ಎಯ್ ಎಂಬವುಗಳನ್ನು ಬಳಸಬಹುದಿತ್ತು ಎಂಬುದೂ ಅಯ್ (ಐ) ಎಂಬುದು ಕನ್ನಡದಲ್ಲಿ ಒಯ್, ಉಯ್, ಎಯ್ ಮೊದಲಾದವುಗಳಿಂದ ಬೇರೆ ರೀತಿಯದಲ್ಲ ಎಂಬುದನ್ನೇ ಸೂಚಿಸುತ್ತದೆ. ಉದಾಹರಣೆಗಾಗಿ, ಪಂಪಬಾರತದ ಕೆಳಗಿನ ಪದ್ಯವನ್ನು ಗಮನಿಸಬಹುದು.

ಅಯ್ದೞಿವಾಡದೊಳಯ್ವರುಮಂ ನೀಂ ಕೂರ್ತಿರಿಸೆಂದೊಡಮೆಂತುಮೇ ಗೆಯ್ದುದನೊಲ್ಲದ ಕಾರಣದಿಂದಂ ನೋಡಿನಿತಾದುದು ನಿನ್ನೊಳೇ ಗೆಯ್ದವನಲ್ಲನೆ ಧರ್ಮತನೂಜಂ ಪೇೞ್ದುದನಿನ್ನೆಮಗಿಂಬುಕಯ್ ಸಯ್ದೊರೆಯಾಗುೞಿದಾರೊಳಮೇವಂಗೊಳ್ಳದಿರಿಂ ಫಣಿಕೇತನಾ

ಮೇಲಿನ ಪದ್ಯದ ಮೊದಲನೆಯ ಮತ್ತು ಕೊನೆಯ ಸಾಲಿನ ಮೊದಲಿಗೆ ಬರುವ ಅಯ್ದೞಿವಾಡ ಮತ್ತು ಸಯ್ದೊರೆ ಎಂಬವುಗಳನ್ನು ಐದೞಿವಾಡ ಮತ್ತು ಸೈದೊರೆ ಎಂಬುದಾಗಿ ಬರೆದಲ್ಲಿ ಪ್ರಾಸ ತಪ್ಪಾಗಿದೆಯುಂದು ತೋರ

ದಿರದು. ಯಾಕೆಂದರೆ, ಆಗ ನಡುವಿನ ಎರಡು ಸಾಲುಗಳಲ್ಲಿ ಕಾಣಿಸುವ ಯಕಾರ ಮೊದಲನೆಯ ಮತ್ತು ಕೊನೆಯ ಸಾಲುಗಳಲ್ಲಿ ಕಾಣಿಸದಾಗುತ್ತದೆ. (6) ದ್ರಾವಿಡ ನುಡಿಗಳ ಬರಹಗಳಲ್ಲಿ ಐ ಮತ್ತು ಔಗಳೆಂಬ ಎರಡು ಸ್ವರಾಕ್ಶರಗಳು ಕಾಣಿಸಿಕೊಳ್ಳಲು ಅವುಗಳಲ್ಲಿ ಅಂತಹ ವಿಶಿಶ್ಟವಾದ ಸ್ವರಗ ಳಿದ್ದುವೆಂಬುದು ಕಾರಣವಲ್ಲ; ಇದಕ್ಕೆ ಬದಲು, ಬ್ರಾಹ್ಮೀ ಎಂಬ ಲಿಪಿ ಈ ಬರಹಗಳಿಗೆ ಮೂಲವಾಗಿತ್ತು ಎಂಬುದೇ ಕಾರಣವಾಗಿದೆ.

ಈ ಲಿಪಿ ಮೊದಲಿಗೆ ಪ್ರಾಕ್ರುತ ಮತ್ತು ಸಂಸ್ಕ್ರುತ ನುಡಿಗಳನ್ನು ಬರೆಯುವುದಕ್ಕಾಗಿ ಬಳಕೆಗೆ ಬಂದಿತ್ತು. ಆ ನುಡಿಗಳಲ್ಲಿ ಅಯ್ ಮತ್ತು ಅವ್ ಎಂಬವುಗಳಿಗೆ ಒಂದು ವಿಶಿಶ್ಟವಾದ ಸ್ತಾನವಿತ್ತಾದ ಕಾರಣ ಅವನ್ನು ಸ್ವರಗಳೆಂದು ಪರಿಗಣಿಸಲಾಗಿತ್ತು ಮತ್ತು ಇದಕ್ಕಾಗಿ ಆ ಲಿಪಿಯಲ್ಲಿ ಐ ಮತ್ತು ಔ ಎಂಬ ಎರಡು ಸ್ವರಾಕ್ಶರಗಳನ್ನು ಹುಟ್ಟುಹಾಕಲಾಗಿತ್ತು (ಬಟ್

Eke →

2.1.2 ಉಲಿಗಳು ಮತ್ತು ಉಲಿಕಂತೆಗಳು

ಕನ್ನಡದ ಪದಗಳನ್ನು ಉಲಿಕಂತೆಗಳಾಗಿ ಮತ್ತು ಉಲಿಗಳಾಗಿ ಒಡೆದು ಹೇಳಲು ಸಾದ್ಯವಿದೆ. ಉದಾಹರಣೆಗಾಗಿ, ಆನೆ ಪದದಲ್ಲಿ ಆ ಮತ್ತು ನೆ ಎಂಬ ಎರಡು ಉಲಿಕಂತೆಗಳಿವೆ. ಇವುಗಳಲ್ಲಿ ಮೊದಲನೆಯ ಉಲಿಕಂತೆಯಲ್ಲಿ ಆ ಎಂಬ ಒಂದು ಉಲಿ (ಸ್ವರ) ಮಾತ್ರ ಇದೆ; ಆದರೆ ಎರಡನೆಯದರಲ್ಲಿ ನ್ ವ್ಯಂಜನ ಮತ್ತು ಎ ಸ್ವರ ಎಂಬುದಾಗಿ ಎರಡು ಉಲಿಗಳಿವೆ.

ಉಲಿಕಂತೆಗಳನ್ನು ಹಗುರದವು ಮತ್ತು ತೂಕದವು ಎಂಬುದಾಗಿ ತೂಕದವು; ವಿಂಗಡಿಸಬಹುದು. ಉದ್ದಸ್ವರವಿರುವ ಉಲಿಕಂತೆಗಳೆಲ್ಲ ಉದಾಹರಣೆಗಾಗಿ, ಆನೆ ಪದದ ಮೊದಲನೆಯ ಉಲಿಕಂತೆ ತೂಕದ

ಗಿಡ್ಡಸ್ವರವಿರುವ ಉಲಿಕಂತೆಗಳಲ್ಲಿ ಸ್ವರದ ಅನಂತರ ಒಂದು ವ್ಯಂಜನ ಬಂದಿದೆಯಾದರೆ ಉಲಿಕಂತೆಯಾಗುತ್ತದೆ. ತೂಕದ ಉದಾಹರಣೆಗಾಗಿ, ಹತ್ತು ಪದದಲ್ಲಿ ಹತ್ ಮತ್ತು ತು ಎಂಬ ಎರಡು

ಉಲಿಕಂತೆಗಳಿದ್ದು, ಅವುಗಳಲ್ಲಿ ಮೊದಲನೆಯದು ತೂಕದ ಉಲಿಕಂತೆ (ಯಾಕೆಂದರೆ ಅದರಲ್ಲಿ ಅಕಾರದ ಅನಂತರ ತ್ ವ್ಯಂಜನ ಬಂದಿದೆ) ಮತ್ತು ಎರಡನೆಯದು ಹಗುರದ ಉಲಿಕಂತೆ (ಯಾಕೆಂದರೆ ಅದರಲ್ಲಿ ಉಕಾರದ ಅನಂತರ ಯಾವ ವ್ಯಂಜನವೂ ಬಂದಿಲ್ಲ).

ಉಲಿಕಂತೆಗಳಲ್ಲಿ ಸ್ವರದ ಮೊದಲಿಗೆ ಬಂದಿರುವ ವ್ಯಂಜನಗಳು ಅವುಗಳ ತೂಕದ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಉದಾಹರಣೆಗಾಗಿ, ಅವನು ಪದದ ಮೊದಲ ಉಲಿಕಂತೆಯಾದ ಅ ಎಂಬುದರಲ್ಲಿ ವ್ಯಂಜನವಿಲ್ಲ; ಮನೆ ಪದದ ಮೊದಲ ಉಲಿಕಂತೆಯಾದ ಮ ಎಂಬುದರಲ್ಲಿ ಅ ಎಂಬ ಸ್ವರ ಮಾತ್ರವಲ್ಲದೆ ಅದರ ಮೊದಲು ಮ್ ಎಂಬ ಒಂದು ವ್ಯಂಜನವಿದೆ; ಹೀಗಿದ್ದರೂ ಈ ಎರಡು ಉಲಿಕಂತೆಗಳೂ (ಅ ಮತ್ತು ಮ) ಹಗುರದ ಉಲಿಕಂತೆಗಳು.

ಮೂಲದ್ರಾವಿಡ ಸ್ವರಗಳ (ಮತ್ತು ವ್ಯಂಜನಗಳ) ಚರಿತ್ರೆಯನ್ನು ವಿವರಿಸುವಲ್ಲಿ ಹಗುರದ ಉಲಿಕಂತೆಗಳು ಮತ್ತು ತೂಕದ ಉಲಿಕಂತೆಗಳು ಎಂಬ ಈ ವ್ಯತ್ಯಾಸವನ್ನು ಆಗಾಗ ಬಳಸಬೇಕಾಗುತ್ತದೆ ಎಂಬುದನ್ನು ಮುಂದೆ ನೋಡಲಿರುವೆವು.

Eke →

2.1.3 ಬೇರುಗಳು ಮತ್ತು ಒಟ್ಟುಗಳು

ಮೂಲದ್ರಾವಿಡದ ಮಟ್ಟಿಗೆ ಬೇರುಗಳಲ್ಲಿ ಬರುವ ಸ್ವರಗಳು ಮತ್ತು ಅವುಗಳ ಅನಂತರ ಒಟ್ಟುಗಳಲ್ಲಿ ಬರುವ ಸ್ವರಗಳು ಎಂಬ ಇನ್ನೊಂದು ರೀತಿಯ ವ್ಯತ್ಯಾಸವನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಪದಗಳ ಮೊದಲಿಗೆ ಬೇರುಗಳು ಬರುತ್ತವೆ; ಇವನ್ನು ಇವತ್ತಿನ ಎಲ್ಲಾ ದ್ರಾವಿಡ ನುಡಿಗಳೂ ಉಳಿಸಿಕೊಂಡಿವೆ. ಹಾಗಾಗಿ ಅವುಗಳನ್ನು ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವುದು ಸುಲಬ. ಈ ಬೇರುಗಳ ಅನಂತರ ಒಟ್ಟುಗಳು ಬರುತ್ತಿದ್ದು, ಅವು ನುಡಿಯಿಂದ ನುಡಿಗೆ ಬೇರೆ ಬೇರಾಗಿರುತ್ತವೆ. ಹಾಗಾಗಿ, ಒಂದು ನುಡಿಯ ಪದಗಳಲ್ಲಿ ಕಾಣಿಸುವ ರೂಪದಲ್ಲಿ ಒಟ್ಟುಗಳಲ್ಲಿ

ಯಾವುದು

ಯಾವ

ಮೂಲದ್ರಾವಿಡದಲ್ಲಿದ್ದಿರಬಹುದು ಕಂಡುಹಿಡಿಯಲು ಸಾದ್ಯವಾಗುವುದಿಲ್ಲ.

ಎಂಬುದನ್ನು

ಹೆಚ್ಚಿನೆಡೆಗಳಲ್ಲೂ

ಮೂಲದ್ರಾವಿಡದ ಬೇರುಗಳೆಲ್ಲ ಒಂದೇ ಉಲಿಕಂತೆಯವಾಗಿದ್ದುವೆಂಬ ಕಲ್ಪನೆಯಿದೆಯಾದ ಕಾರಣ, ಬೇರುಗಳಲ್ಲಿ ಬರುವ ಸ್ವರಗಳೆಲ್ಲ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಬರುವ ಸ್ವರಗಳೇ ಎಂದು ಹೇಳಬಲ್ಲೆವು.
ಇದಲ್ಲದೆ, ಒಟ್ಟುಗಳಲ್ಲಿ ಬರುವ ಸ್ವರಗಳೆಲ್ಲ ಎರಡನೆಯ ಇಲ್ಲವೇ ಮೂರನೆಯ ಉಲಿಕಂತೆಯಲ್ಲಿ ಬರುವ ಸ್ವರಗಳಲ್ಲದೆ ಮೊದಲನೆಯ ಉಲಿ ಕಂತೆಯಲ್ಲಿ ಬರುವ ಸ್ವರಗಳಲ್ಲ.

ಹಾಗಾಗಿ, ಮೂಲದ್ರಾವಿಡದ ಮಟ್ಟಿಗೆ ಬೇರುಗಳಲ್ಲಿ ಬರುವ ಸ್ವರಗಳು ಮತ್ತು ಒಟ್ಟುಗಳಲ್ಲಿ ಬರುವ ಸ್ವರಗಳು ಎಂಬ ಮೇಲಿನ ವ್ಯತ್ಯಾಸ ಮೊದಲನೆಯ ಉಲಿಕಂತೆಯ ಸ್ವರಗಳು ಮತ್ತು ಇತರ ಉಲಿಕಂತೆಗಳ ಸ್ವರಗಳು ಎಂಬ ವ್ಯತ್ಯಾಸವೂ ಆಗಿದೆ (ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಪದಗಳು ಸೇರಿರುವ ಜೋಡುಪದಗಳು ಮಾತ್ರ ಇದಕ್ಕೆ ಅಪವಾದಗಳು).
ಮೂಲದ್ರಾವಿಡ ಪದಗಳಲ್ಲಿ ಬರುವ ಸ್ವರಗಳ ಬಳಕೆಯ ಕುರಿತಾಗಿ

ಕೆಳಗೆ ಕೊಟ್ಟಿರುವಂತಹ ಕೆಲವು ನಿಯಮಗಳನ್ನು ಕಲ್ಪಿಸಿಕೊಳ್ಳಲಾಗಿದೆ.

(1) ಮೂಲದ್ರಾವಿಡ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಮೇಲೆ ವಿವರಿಸಿದ ಎಲ್ಲಾ ಸ್ವರಗಳೂ ಬರಬಲ್ಲುವಾಗಿದ್ದುವು; ಆದರೆ, ಅವುಗಳ ಅನಂತರ ಬರುವ ಉಲಿಕಂತೆಗಳಲ್ಲಿ ಇ, ಉ ಮತ್ತು ಅ ಎಂಬ ಮೂರು ಗಿಡ್ಡ ಸ್ವರಗಳು ಮಾತ್ರವೇ ಬರಬಲ್ಲುವಾಗಿದ್ದುವು;

(2) ಪದದ ಮೊದಲಿಗೆ ಯಕಾರ ಇಲ್ಲವೇ ಞಕಾರ ಬಂದಿದೆಯಾದರೆ, ಅದರ ಅನಂತರ ಮೂಲದ್ರಾವಿಡದಲ್ಲಿ ಅ ಮತ್ತು ಆ ಎಂಬ ಎರಡು ಸ್ವರಗಳು ಮಾತ್ರ ಬರಬಲ್ಲುವಾಗಿದ್ದುವು;

(3) ಪದದ ಮೊದಲಿಗೆ ಪಕಾರ ಇಲ್ಲವೇ ಮಕಾರ ಬಂದಿದೆಯಾದರೆ ವ್ಯಂಜನವಾಗಿ ಪ್, ಮ್ ಇಲ್ಲವೇ ವ್ ಮತ್ತು ಎರಡನೆಯ ಬಂದಿದೆಯಾದರೆ, ಅವುಗಳ ನಡುವೆ ಇ, ಈ, ಎ ಮತ್ತು ಏಗಳನ್ನು (ಎಂದರೆ ನಾಲಗೆಯ ಮುಂದಿನ ಬಾಗದ ಮೂಲಕ ಉಚ್ಚರಿಸುವ

‘ಮುಂದಿನ’ ಸ್ವರಗಳನ್ನು) ಬಿಟ್ಟು ಉಳಿದ ಸ್ವರಗಳು (ಎಂದರೆ ಉ, ಊ, ಒ, ಓ, ಅ ಮತ್ತು ಆ ಎಂಬ ‘ಹಿಂದಿನ’ ಸ್ವರಗಳು) ಮಾತ್ರ ಬರಬಲ್ಲುವಾಗಿದ್ದುವು.

ಮೂಲದ್ರಾವಿಡದ ಸ್ವರಗಳ ಬಳಕೆಯ ಕುರಿತಾಗಿ ಕಲ್ಪಿಸಿಕೊಂಡಿರುವ ಈ ನಿಯಮಗಳಲ್ಲಿ ಕೆಲವು ಕನ್ನಡದಲ್ಲಿ ಹಾಗೆಯೇ ಉಳಿದುಕೊಂಡಿವೆ; ಆದರೆ ಬೇರೆ ಕೆಲವು ಬದಲಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು.

ಪದಗಳ ಬೇರುಗಳಲ್ಲಿ

Eke →

2.2 ಬೇರಿನ ಸ್ವರಗಳು

ಮೂಲದ್ರಾವಿಡ ಮೊದಲನೆಯ ಉಲಿಕಂತೆಯಲ್ಲಿ) ಬಂದಿದ್ದ ಸ್ವರಗಳು ಕನ್ನಡದ ಹಲವು ಪದಗಳಲ್ಲಿ ಬದಲಾಗದೆ ಹಾಗೆಯೇ ಉಳಿದಿವೆ. ಈ ರೀತಿ ಅವು ಬದಲಾಗದೆ ಉಳಿದಿರುವುದಕ್ಕೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಮೂಲದ್ರಾವಿಡ *ಪುಲ್

ಕನ್ನಡ ಕಲ್ಲು ನಿಲ್ಲು ನೀರು ಹುಲ್ಲು

ಮೂಲದ್ರಾವಿಡ *ಕೇಳ್ *ಕೊಲ್ *ಕೋಲ್

ಕನ್ನಡ ಹೂ(ವು) ಗೆಯ್ಯು ಕೇಳು ಕೊಲ್ಲು ಕೋಲು

ಆದರೆ, ಕೆಲವು ಸಂದರ್ಬಗಳಲ್ಲಿ ಮೂಲದ್ರಾವಿಡ ಬೇರುಗಳಲ್ಲಿ ಬಂದಿದ್ದ ಈ ಸ್ವರಗಳು ಕನ್ನಡದ ಪದಗಳಲ್ಲಿ ಮತ್ತು ಪದರೂಪಗಳಲ್ಲಿ ಕೆಲವು ಬದಲಾವಣೆಗಳನ್ನು ತೋರಿಸುತ್ತವೆ. ಈ ಬದಲಾವಣೆಗಳ ಸ್ವರೂಪ ಎಂತಹದು ಮತ್ತು ಕನ್ನಡದ ಚರಿತ್ರೆಯಲ್ಲಿ ಅವು ಯಾವಾಗ ನಡೆದಿರಬೇಕು ಎಂಬುದನ್ನು ಈ ಅದ್ಯಾಯದಲ್ಲಿ ವಿವರವಾಗಿ ಪರಿಶೀಲಿಸಲಾಗುವುದು.

Eke →

2.2.1 ಮೇಲಿನ ಗಿಡ್ಡ ಸ್ವರಗಳು ನಡುವಿನ ಸ್ವರಗಳಾದುದು

ಕನ್ನಡ ಪದಗಳ ಬೇರಿನಲ್ಲಿರುವ (ಎಂದರೆ ಮೊದಲನೆಯ ಉಲಿಕಂತೆ ಯಲ್ಲಿರುವ) ನಡುವಿನ ಗಿಡ್ಡ ಸ್ವರಗಳು (ಎ ಮತ್ತು ಒ ಎಂಬವುಗಳು) ಮೂಲದ್ರಾವಿಡ ಬೇರುಗಳ ಎಕಾರ ಮತ್ತು ಒಕಾರಗಳಿಂದ ಬಂದಿರಬಹುದು ಇಲ್ಲವೇ ಇಕಾರ ಮತ್ತು ಉಕಾರಗಳಿಂದ ಬಂದಿರಬಹುದು.

ಅವು ಮೂಲದ್ರಾವಿಡ ಬೇರುಗಳ ಇಕಾರ ಮತ್ತು ಉಕಾರಗಳಿಂದ ಬಂದಿರುವುದಕ್ಕೆ ತೆಂಕುದ್ರಾವಿಡದಲ್ಲಿ ನಡೆದ ಒಂದು ಬದಲಾವಣೆಯೇ ಕಾರಣ. ಈ ಬದಲಾವಣೆಯ ಮೂಲಕ ಕೆಲವು ಸನ್ನಿವೇಶಗಳಲ್ಲಿ ಮೂಲದ್ರಾವಿಡದಲ್ಲಿದ್ದ ಎಕಾರ ಮತ್ತು ಇಕಾರಗಳ ನಡುವಿನ ವ್ಯತ್ಯಾಸ ಹಾಗೂ ಒಕಾರ ಮತ್ತು ಉಕಾರಗಳ ನಡುವಿನ ವ್ಯತ್ಯಾಸ - ಇವೆರಡೂ ಇಲ್ಲವಾಗಿದ್ದುವು.

ಆದರೆ ಈ ಬದಲಾವಣೆ ಯಾವ ಸನ್ನಿವೇಶಗಳಲ್ಲೆಲ್ಲ ನಡೆದಿತ್ತು ಎಂಬುದನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ವಿದ್ವಾಂಸರಿಗಿನ್ನೂ ಸಾದ್ಯವಾಗಿಲ್ಲ.
(1) ಈ ಬದಲಾವಣೆ ಮೂಲದ್ರಾವಿಡದಲ್ಲಿ ಗಿಡ್ಡ ಇ-ಎ, ಉ-ಒ ಸ್ವರಗಳಿದ್ದ ಮತ್ತು ಒಂದು ಒತ್ತೆ ವ್ಯಂಜನದಲ್ಲಿ ಕೊನೆಗೊಳ್ಳುತ್ತಿದ್ದ ಬೇರುಗಳಲ್ಲಿ ಮಾತ್ರ ನಡೆದಿದೆ. ಇಂತಹ ಬೇರುಗಳ ಅನಂತರ ಅಕಾರದಲ್ಲಿ ಮೊದಲಾಗುವ ಒಂದು ತೆಂಕುದ್ರಾವಿಡ ಪದದೊಟ್ಟು ನುಡಿಗಳಲ್ಲಿ (ಮತ್ತು ನಡುದ್ರಾವಿಡದ ತೆಲುಗು, ಕೂವಿಗಳಲ್ಲಿ) ಇ-ಎ ಮತ್ತು ಉ-ಒಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.

ಸೇರಿದಾಗ

ಕನ್ನಡದಲ್ಲಿ ಈ ಬದಲಾವಣೆಯ ಮೂಲಕ ಪದದ ಮೊದಲನೆಯ ಉಲಿ ಕಂತೆಯಲ್ಲಿದ್ದ (ಕ) ಇಕಾರ ಎಕಾರವಾಗಿದೆ ಮತ್ತು (ಚ) ಉಕಾರ ಒಕಾರವಾಗಿದೆ. ತೆಲುಗಿನಲ್ಲೂ ಇದೇ ರೀತಿ ನಡೆದಿದೆ.

ಆದರೆ ಹಳೇ ತಮಿಳಿನಲ್ಲಿ ಇದಕ್ಕೆ ವಿರುದ್ದವಾದ, ಎಂದರೆ (ಕ) ಎಕಾರ ಇಕಾರವಾಗುವ ಮತ್ತು (ಚ) ಒಕಾರ ಉಕಾರವಾಗುವ ಬದಲಾವಣೆ ಮೇಲಿನ ಸನ್ನಿವೇಶಗಳಲ್ಲಿ ನಡೆದಿತ್ತು; ಇವತ್ತಿನ ಬರಹದ ತಮಿಳಿನಲ್ಲೂ ಹೀಗೆಯೇ ಇದೆ. ಆದರೆ ಇವತ್ತಿನ ತಮಿಳು ಒಳನುಡಿಗಳಲ್ಲಿ, ಕನ್ನಡ-

ತೆಲುಗುಗಳ ಹಾಗೆ, ಮೇಲಿನ ಸನ್ನಿವೇಶಗಳಲ್ಲಿ ಎಕಾರ-ಒಕಾರಗಳೇ ಕಾಣಿಸುತ್ತವೆ.

ಕನ್ನಡ
(ಕ) ಎಳತು

ತೆಱ
ಬೆಳಗು

ಹೊಗೆ
ತೊಗಲು ಮೊದಲು ಹೊಗಳು

ತೆಲುಗು
ಚೆಲುಗು ತೆಱಚು
ಪೆನ ವೆಲುಗು

ಪೊಗ
ತೊವಲು ಮೊದಲು ಪೊಗಡು ಗೊಡುಗು

ತಮಿಳು
ವಿಳಂಗು

ಪುಕಯ್ ತುಕಲ್ ಮುತಲ್ ಪುಕೞ್ ಕುಟಯ್

(2) ಈ ರೀತಿ ಇಕಾರ ಮತ್ತು ಉಕಾರಗಳು ಬದಲಾಗಿರುವ ಪದ ಗಳಲ್ಲಿ ಮೂಲದ್ರಾವಿಡ ಸ್ವರ ಯಾವುದಿತ್ತು ಎಂಬುದನ್ನು ಎರಡನೆಯ ಉಲಿಕಂತೆಯಲ್ಲಿ (ಕ) ಅಕಾರದ ಬದಲು ಬೇರೆ ಸ್ವರಗಳಿರುವ ಇಲ್ಲವೇ ನಡುವೆ ಒತ್ತೆ ವ್ಯಂಜನದ ಬದಲು ಇಮ್ಮಡಿ (ಚ) ಅವುಗಳ ವ್ಯಂಜನವಿರುವ ಪದರೂಪಗಳಿಂದ ತಿಳಿಯಲು ಕನ್ನಡದವೇ ಆದ ಸಾದ್ಯವಿದೆ.

ಇಕಾರ ಎಕಾರವಾಗಿರುವುದು ನಿಲ್, ನಿಲ್ಲು ಇರ್ (ಇಬ್ಬರು)
ಬಿತ್ತು

ನೆಲಸು, ನೆಲೆ ಬೆದೆ‘‘ಬಿತ್ತನೆ’’

ತೆವರು’‘ಬೆಟ್ಟ’’ ತಿನ್, ತಿನಿಸು ’ತುರಿಕೆ’ ತೆನಸು’‘ತುರಿಕೆ’’

ಉಕಾರ ಒಕಾರವಾಗಿರುವುದು

ಸುಡು
ಮುಂದೆ
ಮುಳ್ಳು
ಕುಂದು (<ಕುನ್ಱು) ಸುಕ್ರು, ಸುಕ್ಕು

ಸೊಡರು’‘ದೀಪ’’ ಮೊನೆ ಮೊಳೆ ಕೊರತೆ ಸೊರಗು

ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಕನ್ನಡ ಪದಗಳ ಮೊದಲ ಉಲಿಕಂತೆಯಲ್ಲಿ ಇಕಾರ ಮತ್ತು ಉಕಾರಗಳಿವೆ ಮತ್ತು ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಕನ್ನಡದವೇ ಆದ ಪದಗಳ ಮತ್ತು ಒಕಾರಗಳಿವೆ. ಮೊದಲನೆಯ ಉಲಿಕಂತೆಯಲ್ಲಿ ಎಕಾರ ಇವುಗಳಲ್ಲೆಲ್ಲ ಮೂಲದ್ರಾವಿಡದಲ್ಲಿ ಇಕಾರ ಮತ್ತು ಉಕಾರಗಳೇ ಇದ್ದಿರಬೇಕು; ಎರಡನೆಯ ಉಲಿಕಂತೆಯಲ್ಲಿ ಬಂದಿರುವ ಅಕಾರದಿಂದಾಗಿ ಕಾಲಂನಲ್ಲಿರುವ ಪದಗಳಲ್ಲಿ ಎಕಾರ ಮತ್ತು ಇವು ಎರಡನೆಯ ಒಕಾರಗಳಾಗಿ ಬದಲಾಗಿವೆ.

ನೆಲೆ, ಬೆದೆ, ಮೊನೆ ಮತ್ತು ಮೊಳೆ ಪದಗಳ ಎರಡನೆಯ ಸ್ವರವಾಗಿ ಕನ್ನಡದಲ್ಲಿ ಎಕಾರ ಕಾಣಿಸುವುದಾದರೂ ಅದು ಮೂಲದ್ರಾವಿಡದ ಅಕಾರ ದಿಂದ (ಅಯ್ ಎಂಬುದರಿಂದ) ಬಂದಿದೆಯಾದ ಕಾರಣ (2.6.1 ನೋಡಿ), ಆ ಪದಗಳಲ್ಲಿ ಮೇಲಿನ ಬದಲಾವಣೆಯೇ ನಡೆದಿದೆ.

ತಿಪ್ಪೆ ಮತ್ತು ಮುಂದೆ ಪದಗಳಲ್ಲಿ ಇದೇ ಅಯ್ ಎಂಬುದರಿಂದ ಬಂದ ಎಕಾರ ಎರಡನೆಯ ಸ್ವರವಾಗಿ ಬಂದಿದೆಯಾದರೂ ಅದರ ಮೊದಲು ಎರಡು ವ್ಯಂಜನಗಳು ಬಂದಿರುವ ಕಾರಣ, ಆ ಪದಗಳಲ್ಲಿ ಮೇಲಿನ ಬದಲಾವಣೆ ನಡೆದಿಲ್ಲ.

ತಿನಿಸು ಮತ್ತು ಸುಡು ಪದಗಳಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನವಿದೆಯಾದರೂ, ಅವುಗಳ ಎರಡನೆಯ ಸ್ವರ ಅಕಾರ (ಇಲ್ಲವೇ ಎಕಾರ) ವಲ್ಲವಾದ ಕಾರಣ, ಮೇಲಿನ ಬದಲಾವಣೆ ನಡೆದಿಲ್ಲ.

(3) ಈ ಬದಲಾವಣೆಗೆ ಒಳಗಾಗದಿರುವ ಬೇರೆ ನುಡಿಗಳ ಪದ ಗಳಿಂದಲೂ ಮೂಲದ್ರಾವಿಡ ಪದಗಳಲ್ಲಿ ಯಾವ ಸ್ವರ ಇತ್ತು ಎಂಬುದನ್ನು ಊಹಿಸಲು ಸಾದ್ಯವಿದೆ.

(ಕ) ಇಕಾರ ಎಕಾರವಾಗಿರುವುದು

ಕನ್ನಡ
ಎಣೆ ‘ಜೋಡಿ’’

ಬದಲಾವಣೆಗೊಳಗಾಗದ ನುಡಿ ತುಳು: ಇರೆ ತುಳು: ಇಣೆ ಗೋಂಡಿ: ಕಿಲಾನಾ ಕೊಂಡ: ನಿಱಯ್

(ಚ) ಉಕಾರ ಒಕಾರವಾಗಿರುವುದು

ತೊಗಲು ಸೊರಗು ನೊಳೆ

ಕೊಂಡ: ಒಡೊಲ್ ತುಳು: ತುಗಲ್ ಕೊಂಡ: ಸೊಲು ಪಾಜ್ರಿ: ಚುಕ್್ರ- ಕುಡುಕ್: ನುಲ್್ಗನಾ

ಮೇಲೆ ಕೊಟ್ಟಿರುವ ಕನ್ನಡದ (ಕ) ಪದಗಳಲ್ಲಿ ಮೊದಲಿಗೆ ಇಕಾರ
ವಿದ್ದಿರಬೇಕು ಮತ್ತು (ಚ) ಪದಗಳಲ್ಲಿ ಉಕಾರವಿದ್ದಿರಬೇಕು ಎಂಬುದನ್ನು ಅವುಗಳ ಎದುರಿಗೆ ಕೊಟ್ಟಿರುವ (ಬ್ರಾಹ್ಮಣರ) ತುಳು, ಗೋಂಡಿ, ಕೊಂಡ, ಪಾಜ್ರಿ ಮತ್ತು ಕುಡುಕ್ ಪದಗಳಿಂದ ತಿಳಿಯಬಹುದು. ಯಾಕೆಂದರೆ, ಈ ನುಡಿಗಳಲ್ಲಿ ಮೇಲಿನ ಬದಲಾವಣೆ ನಡೆದಿಲ್ಲ. (ತುಳುವಿನ ಬ್ರಾಹ್ಮಣರ ಒಳನುಡಿಯಲ್ಲಿ ಈ ಬದಲಾವಣೆ ನಡೆದಿಲ್ಲ, ಆದರೆ ಅದರ ಇತರ ಒಳನುಡಿಗಳಲ್ಲಿ ನಡುವಿನ ಸ್ವರಗಳು ಮೇಲಿನ ಸ್ವರಗಳಾಗುವ ಇಲ್ಲವೇ

ಮೇಲಿನ ಸ್ವರಗಳು ನಡುವಿನ ಸ್ವರಗಳಾಗುವ ಬೇರೊಂದು ಬದಲಾವಣೆ ಇತ್ತೀಚೆಗೆ ನಡೆದಿದೆ (ಬಟ್ 1966 ನೋಡಿ)).

(4) ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಚಕಾರ ಬಂದಿದ್ದು, ಅದರ ಅನಂತರ ಬಂದಿದ್ದ ಇಕಾರ (ಮತ್ತು ಎಕಾರಗಳು) ಮೇಲಿನ ಬದಲಾವಣೆಗೆ ಒಳಗಾಗಿಲ್ಲವೆಂದು ತೋರುತ್ತದೆ. ಕನ್ನಡದಲ್ಲಿ ಇಕಾರ ಬದಲಾಗಿಲ್ಲದಿರುವುದಕ್ಕೆ ಉದಾಹರಣೆಯಾಗಿ ಪದಗಳನ್ನು ಕೊಡಬಹುದು.

ಕೆಳಗಿನ

ತೆಲುಗು

ಕನ್ನಡ
ಜಿಗಟು, ಚಿಕಣಿ
ಚಿಗರಿ, ಚಿಗರೆ ‘ಹುಲೆ’್ಲ’ ಸಿವಂಗಿ ‘ಕತ್ತೆಕಿರುಬ’’ ಚಿವರ ಚಿವರು ‘ಪರಚು’’

(5) ಮೇಲಿನ ಬದಲಾವಣೆ ನಡೆಯಲು ಎರಡನೆಯ ಉಲಿಕಂತೆಯಲ್ಲಿ ಬರುವ ಅಕಾರವು ಒಂದು ಪದದೊಟ್ಟಿನ ಅಕಾರವಾಗಿರುವ ಅವಶ್ಯಕತೆಯಿದೆ. ಅದು ಒಂದು ‘ಪದರೂಪ’ದೊಟ್ಟಿನ ಅಕಾರವಾಗಿರುವ ಸಂದರ್ಬಗಳಲ್ಲಿ ಈ ಬದಲಾವಣೆ ನಡೆದಿಲ್ಲ.

ಉದಾಹರಣೆಗಾಗಿ ಇರು ಕ್ರಿಯಾಪದದ ಪದರೂಪಗಳಾದ ಇರಲು, ಇರದೆ ಮೊದಲಾದ ರೂಪಗಳಲ್ಲಿ ಬಂದಿರುವ ಅಲು ಮತ್ತು ಅದೆ ಎಂಬವುಗಳು ಪದರೂಪದೊಟ್ಟುಗಳಾದ ಕಾರಣ, ಅವು ಅಕಾರದಲ್ಲಿ ಮೊದಲಾಗುವುವಾದರೂ ಅವುಗಳ ಮೊದಲಿದ್ದ ಇಕಾರ ಬದಲಾಗದೆ ಹಾಗೆಯೇ ಉಳಿದಿದೆ.

(6) ಕನ್ನಡದ ಚರಿತ್ರೆಯಲ್ಲಿ ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರ ಗಳಾಗುವ ಬೇರೊಂದು ಬದಲಾವಣೆಯೂ ನಡೆದಿದ್ದು (2.2.2 ನೋಡಿ),

ಅದನ್ನು ತೋರಿಸುವ ಪದಗಳನ್ನು ಮೇಲಿನ ಬದಲಾವಣೆಯನ್ನು ತೋರಿಸ ದಿರುವ ಪದಗಳಿಂದ ಬೇರೆ ಮಾಡಬೇಕಾಗುತ್ತದೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಉದಾಹರಣೆಗಾಗಿ, ಬಿಳಿ - ಬೆಳಕು, ಉಸಿರು ‘ಹೇಳು’’- ಒಸಗೆ ‘ಹೇಳುವಿಕೆ’ ಮೊದಲಾದ ಪದಜೋಡಿಗಳಲ್ಲಿ ಕಾಣಿಸುವ ವ್ಯತ್ಯಾಸಕ್ಕೆ ಈ ಬದಲಾವಣೆ ಕಾರಣವಲ್ಲ. ಯಾಕೆಂದರೆ ಇವುಗಳಲ್ಲಿ ಮೂಲದ್ರಾವಿಡದ ಎಕಾರ ಮತ್ತು ಒಕಾರಗಳು ಇಕಾರ ಮತ್ತು ಉಕಾರಗಳಾಗಿವೆಯಲ್ಲದೆ ಇಕಾರ ಮತ್ತು ಉಕಾರಗಳು ಎಕಾರ ಮತ್ತು ಒಕಾರಗಳಾಗಿಲ್ಲ.

(7) ಇದಲ್ಲದೆ, ಎರಡನೆಯ ಉಲಿಕಂತೆಯಲ್ಲಿದ್ದ ಸ್ವರಗಳಲ್ಲಿ ಹಲ ವಾರು ರೀತಿಯ ಬದಲಾವಣೆಗಳು ಕನ್ನಡದ ಚರಿತ್ರೆಯಲ್ಲಿ ನಡೆದಿದ್ದು, ಇದರಿಂದಾಗಿಯೂ ಹಲವು ಅಪವಾದಗಳಿವೆಯುಂದು ತೋರಬಹುದು.

ಕನ್ನಡದಲ್ಲಿ

ನಿಯಮಕ್ಕೆ

ಮೇಲಿನ

ಕನ್ನಡ

ರೂಪಗಳೂ

ಉದಾಹರಣೆಗಾಗಿ, ಎರಡನೆಯ ಉಲಿಕಂತೆಯ ಇಕಾರ-ಉಕಾರಗಳು ಅಕಾರವಾಗಿರುವಂತಹ ಪದಕೋಶಗಳಲ್ಲಿ ಕಾಣಿಸುತ್ತವೆ (ದಿಗಿಲು>ದಿಗಲು, ಇೞಿತ>ಇೞತ, ಉಳುಕು>ಉಳಕು, ತಿರುಳು> ತಿರಳು). ಆದರೆ ಈ ಬದಲಾವಣೆ (3.5 ನೋಡಿ) ಕನ್ನಡದ ಕೆಲವು ಒಳನುಡಿಗಳಲ್ಲಿ ಇತ್ತೀಚೆಗೆ ಎಂದರೆ ಮೇಲಿನ ಬದಲಾವಣೆ ನಡೆದ ಅನಂತರ ನಡೆದಿರಬೇಕು. ಹಾಗಾಗಿ, ನಿಜಕ್ಕೂ ಈ ಪದಗಳು ಮೇಲಿನ ಬದಲಾವಣೆಗೆ ಅಪವಾದಗಳಲ್ಲ.

Eke →

2.2.2 ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾದುದು

ನಡುವಿನ ಗಿಡ್ಡ ಸ್ವರಗಳಾದ ಎಕಾರ ಮತ್ತು ಒಕಾರಗಳು ಮೇಲಿನ ಸ್ವರ ಗಳಾಗಿ (ಎಂದರೆ ಅನುಕ್ರಮವಾಗಿ ಇಕಾರ ಮತ್ತು ಒಕಾರಗಳಾಗಿ) ಬದಲಾ ಗಿರುವುದನ್ನು ಒಳನಾಡಿನ ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಕಾಣಬಹುದು. ಕರಾವಳಿಯ ಒಳನುಡಿಗಳಲ್ಲಿ ಈ ಬದಲಾವಣೆ ನಡೆದಿಲ್ಲ.

ಸನ್ನಿವೇಶಗಳಲ್ಲಿ ಮಾತ್ರ

ಮೇಲೆ ವಿವರಿಸಿದ ಬದಲಾವಣೆಯ ಹಾಗೆ, ಈ ಬದಲಾವಣೆಯೂ ನಡೆದಿದೆ. ಅದಕ್ಕೆ ಅವಶ್ಯವಿದ್ದ ಕೆಲವು ಶರತ್ತುಗಳೆಂದರೆ, (ಕ) ಎರಡನೆಯ ಸ್ವರವಾಗಿ ಇಕಾರ ಇಲ್ಲವೇ ಉಕಾರ (ಮೇಲಿನ ಸ್ವರ) ಬಂದಿರಬೇಕು; ಮತ್ತು (ಚ) ಈ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿರಬೇಕು.

ಉದಾಹರಣೆಗಾಗಿ, ಬರಹ ಕನ್ನಡದ ಬಿಳಿ ಪದ ಅದಕ್ಕೆ ಹಿಂದಿನ *ಬೆಳಿ ಪದದಿಂದ ಬಂದಿದೆ. ಇಲ್ಲಿ ಎರಡನೆಯ ಸ್ವರವಾಗಿ ಇಕಾರ ಬಂದಿದೆ ಮತ್ತು ಪದದ ಎರಡು ಸ್ವರಗಳ ನಡುಗೆ ಳ್ ಎಂಬ ಒಂದೇ ವ್ಯಂಜನ ಬಂದಿದೆ.

ಬರಹ ಕನ್ನಡದಲ್ಲೇನೇ ಮೇಲಿನ ಶರತ್ತುಗಳನ್ನು ಪೂರಯ್ಸದಿರುವ ಪದಗಳಲ್ಲಿ ಇಲ್ಲವೇ ಪದರೂಪಗಳಲ್ಲಿ ಈ ಬದಲಾವಣೆ ನಡೆದಿಲ್ಲ. ಹಾಗಾಗಿ, ಕೆಲವು ಸಂದರ್ಬಗಳಲ್ಲಿ ಕನ್ನಡದಲ್ಲೇನೇ ಈ ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಎರಡೆರಡು ಪದ ಇಲ್ಲವೇ ಪದರೂಪಗಳಿರುವುದನ್ನು ಕಾಣಬಹುದು.

(ಕ) ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಪದಗಳು

ಬಿಳಿ, ಬಿಳುಪು
ಕಿವುಡು

ಉಸಿರು ‘ಹೇಳು’’ ತುಳಿಲು
ಕುಲಿ ‘ಕೊಲೆಗಾರ’’

ಬೆಳ್ಳಗೆ, ಬೆಳಕು ಬೆಚ್ಚಗೆ ಕೆಪ್ಪು ನೆಟ್ಟಗೆ

ಒಸಗೆ ‘ಹೇಳುವಿಕೆ’’ ತೊಟ್ಟು ತೊತ್ತು ಕೊಲ್ಲು

ಮೇಲೆ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳಲ್ಲಿ ಎಕಾರ ಇಕಾರವಾಗುವ ಇಲ್ಲವೇ ಒಕಾರ ಉಕಾರವಾಗುವ ಬದಲಾವಣೆ ನಡೆದಿಲ್ಲ. ಇದಕ್ಕೆ ಕಾರಣವೇನೆಂದರೆ (1) ಬೆಳಕು ಮತ್ತು ಒಸಗೆ ಪದಗಳಲ್ಲಿ

ಎರಡನೆಯ ಸ್ವರವಾಗಿ ಮೇಲಿನ ಸ್ವರ (ಇಕಾರ ಇಲ್ಲವೇ ಉಕಾರ) ಬಂದಿಲ್ಲ, ಅಕಾರ ಬಂದಿದೆ; (2) ಕೆಪ್ಪು, ತೊಟ್ಟು, ತೊತ್ತು ಮತ್ತು ಕೊಲ್ಲು ಪದಗಳಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿಲ್ಲ, ಒಂದಕ್ಕಿಂತ ಜಾಸ್ತಿ (ಎರಡು) ವ್ಯಂಜನಗಳು ಬಂದಿವೆ; ಮತ್ತು (3) ಬೆಳ್ಳಗೆ, ಬೆಚ್ಚಗೆ ಮತ್ತು ನೆಟ್ಟಗೆ ಪದಗಳಲ್ಲಿ ಈ ಎರಡು ಶರತ್ತುಗಳೂ ನೆರವೇರಿಲ್ಲ.

(ಚ) ಬದಲಾವಣೆಯನ್ನು ತೋರಿಸುವ ಮತ್ತು ತೋರಿಸದಿರುವ ಪದರೂಪ ಗಳು

ಪುಗು
ಕುಡು

ಪೊಕ್ಕ

ಇಲ್ಲೂ ಕೂಡ, ಮೊದಲನೆಯ ಕಾಲಂನಲ್ಲಿ ಎರಡು ಸ್ವರಗಳ ನಡುವೆ ಒಂದೇ ವ್ಯಂಜನ ಬಂದಿದೆ, ಮತ್ತು ಎರಡನೆಯ ಕಾಲಂನಲ್ಲಿ ಎರಡು ವ್ಯಂಜನಗಳು (ಇಮ್ಮಡಿ ವ್ಯಂಜನ) ಬಂದಿವೆ; ಹಾಗಾಗಿ, ಮೊದಲನೆಯ ಕಾಲಂನಲ್ಲಿರುವ ಪದರೂಪಗಳಲ್ಲಿ ಮೇಲಿನ ಬದಲಾವಣೆ ನಡೆದಿದೆ; ಆದರೆ, ಎರಡನೆಯ ಕಾಲಂನಲ್ಲಿರುವ ಪದರೂಪಗಳಲ್ಲಿ ನಡೆದಿಲ್ಲ.

(1) ಕನ್ನಡದ ಚರಿತ್ರೆಯಲ್ಲಿ ಈ ಬದಲಾವಣೆ ಏಳು-ಎಂಟನೇ ಶತಮಾನದಲ್ಲಿ ನಡೆದಿರಬೇಕೆಂದು ಹೇಳುವುದಕ್ಕೆ ಶಾಸನಗಳ ಆದಾರವಿದೆ. ಆರು-ಏಳನೇ ಶತಮಾನದ ಶಾಸನಗಳಲ್ಲಿ ಕಾಣಿಸುವ ಕೊಡು, ಕೆಡು ಮತ್ತು ಪೆರಿಯ ಪದಗಳು ಅನಂತರದ ಶಾಸನಗಳಲ್ಲಿ ಕುಡು, ಕಿಡು ಮತ್ತು ಪಿರಿಯ ಎಂಬ ರೂಪದಲ್ಲಿವೆ. ಶಾಸನಗಳಲ್ಲಿ ಇದಲ್ಲದೆ, ಎಂಟು-ಒಂಬತ್ತನೆಯ ಇಂತಹ ಪದಗಳಿಗೆ ಈ ಬದಲಾವಣೆಯನ್ನು ತೋರಿಸುವ ರೂಪ ಮತ್ತು

ಶತಮಾನದ

ಅದನ್ನು ತೋರಿಸದಿರುವ ರೂಪ ಎಂಬುದಾಗಿ ಎರಡೆರಡು ರೂಪಗಳು ಕಾಣಿಸುತ್ತವೆ (ಗಾಯ್ 1946). ಎಂಟು-ಒಂಬತ್ತನೇ ಶತಮಾನದ ಶಾಸನಗಳು

ಬದಲಾಗಿರುವ ರೂಪ

ಬದಲಾಗದ ರೂಪ
ಎದಿರ್ ‘ಮುಂದೆ’’ ಎಱಿದು ‘ಚುಚ್ಚಿ’’ ಇಱಿದು ಕೆಡಿಸು ‘ಹಾಳು ಮಾಡು’’ಕಿಡಿಸು ಪೆರಿಯ ‘ದೊಡ್ಡ’’ ತೊಱು ‘ಹಸು’’
ತುಱು ಪೊಗು ‘ಹೊಗು’’ ಪುಗು

ಮೇಲೆ ಕೊಟ್ಟಿರುವ ಎರಡು ರೀತಿಯ (ಬದಲಾಗದ ಮತ್ತು ಬದಲಾ ಗಿರುವ) ರೂಪಗಳೂ ಎಂಟು-ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕಾಣಿಸುತ್ತವೆ.

(2) ಹಳೆಗನ್ನಡದಲ್ಲಿ ಈ ಬದಲಾವಣೆ ಬಹಳ ನಿಯಮಿತವಾಗಿ ನಡೆದಿರಬೇಕು; ಆದರೆ ಈ ನಿಯಮಿತತೆ ಹೊಸಗನ್ನಡದಲ್ಲಿ ಉಳಿದಿಲ್ಲ. ಅದಕ್ಕೆ ಅಪವಾದವಾಗಿ ಕಾಣಿಸುವ ಪದಗಳೂ ಹೊಸಗನ್ನಡದಲ್ಲಿವೆ. ಉದಾಹರಣೆಗಾಗಿ, ಹಳೆಗನ್ನಡದ ಹಲವು ಕ್ರಿಯಾಪದಗಳು ಇಕಾರ ಮತ್ತು ಒಕಾರಗಳನ್ನು ಅನುಸಾರವಾಗಿಯೇ ತೋರಿಸುತ್ತಿವೆಯಾದರೂ, ಹೊಸಗನ್ನಡದಲ್ಲಿ ಅವು ಎಕಾರ ಮತ್ತು ಒಕಾರಗಳನ್ನು ತೋರಿಸುತ್ತಿದ್ದು ಮೇಲಿನ ನಿಯಮಕ್ಕೆ ಅಪವಾದಗಳಾಗಿ ಕಾಣಿಸುತ್ತವೆ.

ನಿಯಮಕ್ಕೆ

ಮೇಲಿನ

ಹಳೆಗನ್ನಡ ಕುಡು
ಪುಗು

ಹೊಸಗನ್ನಡ ಕೊಡು
ಹೊಗು

ತುಡು

ತೊಡು

ಹೊಸಗನ್ನಡದಲ್ಲಿ ಈ ಕ್ರಿಯಾಪದಗಳು ಮೇಲಿನ ನಿಯಮಕ್ಕೆ ಅಪ ವಾದಗಳಾಗಿ ಬದಲಾಗಲು ಕಾರಣವೇನೆಂದರೆ, ಅವುಗಳಿಗಿರುವ ಹಿಂದಿನ ಸಮಯದ ರೂಪದಲ್ಲಿ ಎಕಾರ ಮತ್ತು ಒಕಾರಗಳು ಕಾಣಿಸುತ್ತವಲ್ಲದೆ, ಇಕಾರ ಮತ್ತು ಉಕಾರಗಳು ಕಾಣಿಸುವುದಿಲ್ಲ.

ಕ್ರಿಯಾಪದಗಳು
ಕುಡು
ಪುಗು
ತುಡು

ಹಿಂದಿನ ಸಮಯದ ರೂಪಗಳು ಪೊಕ್ಕ

ಮೇಲೆ ಕೊಟ್ಟಿರುವ ಹಿಂದಿನ ಸಮಯದ ಕ್ರಿಯಾರೂಪಗಳ ಮೊದಲ ನೆಯ ಉಲಿಕಂತೆಯಲ್ಲಿ ಇಕಾರ-ಉಕಾರಗಳು ಬರುವುದಕ್ಕೆ ಬೇಕಾಗುವ ಶರತ್ತುಗಳು (ಒತ್ತೆ ವ್ಯಂಜನ ಮತ್ತು ಅದರ ಅನಂತರ ಮೇಲಿನ ಸ್ವರ) ಇಲ್ಲದಿರುವುದೇ ಈ ರೀತಿ ಅವುಗಳಲ್ಲಿ ಮೇಲಿನ ಬದಲಾವಣೆ ನಡೆಯದಿರಲು ಕಾರಣ ಎಂಬುದನ್ನು ನಾವು ಮೇಲೆ ನೋಡಿರುವೆವು.

ಈ ಹಿಂದಿನ ಸಮಯದ ಕ್ರಿಯಾರೂಪಗಳ ಪ್ರಬಾವದಿಂದಾಗಿ ಕುಡು, ಕಿಡು, ಪುಗು ಮತ್ತು ತುಡು ಕ್ರಿಯಾಪದಗಳು ಹೊಸಗನ್ನಡದಲ್ಲಿ ಕೊಡು, ಕೆಡು, ಹೊಗು (<ಪೊಗು) ಮತ್ತು ತೊಡು ಎಂಬುದಾಗಿ ಬದಲಾಗಿವೆ.

ಹಿಂದಿನ ಸಮಯದ ರೂಪಗಳಲ್ಲಿ ಮೇಲಿನ ನಿಯಮಕ್ಕೆ ಬೇಕಾಗುವ ಶರತ್ತನ್ನು ಕಾಣಿಸುವಂತಹ ಕುಣಿ (ಕುಣಿದ), ತುಳಿ (ತುಳಿದ), ಸುಲಿ (ಸುಲಿದ) ಮೊದಲಾದ ಕ್ರಿಯಾಪದಗಳು ಮೇಲಿನ ಕ್ರಿಯಾಪದಗಳ ಹಾಗೆ ಹೊಸಗನ್ನಡದಲ್ಲಿ ಬದಲಾಗಿಲ್ಲ. ಅವುಗಳಲ್ಲಿದ್ದ ಮೇಲಿನ ಸ್ವರಗಳು (ಇಕಾರ-ಉಕಾರಗಳು) ನಡುವಿನ ಸ್ವರಗಳಾಗಿ ಬದಲಾಗದೆ ಹಾಗೆಯೇ ಉಳಿದುಕೊಂಡಿವೆ. ಈ ಕ್ರಿಯಾಪದಗಳ ಪದರೂಪಗಳಲ್ಲಿ ಹಿಂದಿನ ಮತ್ತು

ಮುಂದಿನ ಸಮಯದ ರೂಪಗಳ ನಡುವೆ ಮೊದಲನೆಯ ಸ್ವರದ ಮಟ್ಟಿಗೆ ಇಲ್ಲದಿರುವುದೇ ವ್ಯತ್ಯಾಸವೂ ಯಾವ ಬದಲಾಗದಿರುವುದಕ್ಕೆ ಕಾರಣವಿರಬೇಕು.

ಯಕಾರದಲ್ಲಿ

ಕೊನೆಗೊಳ್ಳುವ ಒಂದಕ್ಶರದ ಕ್ರಿಯಾಪದಗಳಲ್ಲೂ ನಡುವಿನ ಸ್ವರಗಳು ಮೇಲಿನ ಸ್ವರಗಳಾಗುವ ಮೇಲಿನ ಬದಲಾವಣೆ ಹಳೆಗನ್ನಡದಲ್ಲಿ ನಡೆದಿತ್ತು (ಆದರೆ ಈ ಬದಲಾವಣೆಗೆ ಒಕಾರ ಮಾತ್ರವೇ ಒಳಗಾಗಿರುವ ಹಾಗೆ ಕಾಣಿಸುತ್ತದೆ). ಇಂತಹ ಕ್ರಿಯಾಪದಗಳಲ್ಲೂ ಹೊಸಗನ್ನಡದಲ್ಲಿ ನಡುವಿನ ಸ್ವರಗಳೇ ಕಾಣಿಸುತ್ತವೆ.

ಹಳೆಗನ್ನಡ ಕುಯ್
ತುಯ್
ಪುಯ್

ಹೊಸಗನ್ನಡ ಕೊಯ್ಯು ತೊಯ್ಯು ಒಯ್ಯು
ಹೊಯ್ಯು

ಮೂಲದ್ರಾವಿಡ *ಕೊಯ್ *ತೋಯ್ *ಪೊಯ್

ಈ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ನಡುವಿನ ಸ್ವರಗಳೇ ಕಾಣಿಸುತ್ತವೆಯಾದ ಕಾರಣ (ಎಂದರೆ, ಅಂತಹ ರೂಪಗಳಲ್ಲಿ ಈ ಬದಲಾವಣೆಗೆ ಬೇಕಾಗಿರುವ ಶರತ್ತುಗಳು ಇರಲಿಲ್ಲವಾದ ಕಾರಣ), ಕುಡು, ಕಿಡು, ತುಡು ಮೊದಲಾದ ಕ್ರಿಯಾಪದಗಳ ಹಾಗೆ ಅವುಗಳ ವಿಶಯದಲ್ಲೂ ಎರಡೆರಡು ತಪ್ಪಿಸುವುದಕ್ಕಾಗಿ ಹೊಸಗನ್ನಡದಲ್ಲಿ ಈ ಬದಲಾವಣೆ ಇಲ್ಲವಾಗಿರಬಹುದು.

ರೂಪಗಳಿರುವುದನ್ನು

ಹಳೆಗನ್ನಡ ತುಯ್-ತೊಯ್ದಂ ಕುಯ್-ಕೊಯ್ದಂ ಉಯ್-ಒಯ್ದಂ
ಪುಯ್-ಪೊಯ್ದಂ

ಹೊಸಗನ್ನಡ ತೊಯ್ಯು-ತೊಯ್ದ ಕೊಯ್ಯು-ಕೊಯ್ದ ಒಯ್ಯು-ಒಯ್ದ ಹೊಯ್ಯು-ಹೊಯ್ದ

(3) ಕರಾವಳಿಯ ಒಳನುಡಿಗಳಲ್ಲಿ ಈ ಬದಲಾವಣೆ ನಡೆದಿಲ್ಲವೆಂಬು ದನ್ನು ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ಪದಗಳನ್ನು ಬರಹ ಕನ್ನಡ ಪದ ಗಳೊಂದಿಗೆ ಹೋಲಿಸಿ ನೋಡುವುದರ ಮೂಲಕ ತಿಳಿದುಕೊಳ್ಳಬಹುದು.

 ಎಕಾರ ಇಕಾರವಾದುದು  ಹವ್ಯಕ ಕನ್ನಡ  ಎರುಗು  ಎದುರು  ಬೆಶಿಲು  ಬೆದುರು  ಸೆಡಿಲು 

ಬರಹ ಕನ್ನಡ ಇರುವೆ ಬಿಸಿಲು ಬಿದಿರು

ಒಕಾರ ಉಕಾರವಾದುದು ಹವ್ಯಕ ಕನ್ನಡ ಸೊಲಿ ತೊರಿಕ್ಕೆ

ಬರಹ ಕನ್ನಡ ಹುಡಿ, ಪುಡಿ ಸುಲಿ

ಕರಾವಳಿಯ ಇತರ ಒಳನುಡಿಗಳಲ್ಲೂ ಈ ಬದಲಾವಣೆ ನಡೆದಿಲ್ಲ. ಉದಾಹರಣೆಗಾಗಿ, ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ಎದುರು ‘ಇದಿರು’, ಕೆವಿ ‘ಕಿವಿ’, ಬೆಳಿ ‘ಬಿಳಿ’, ಹೆರಿ ‘ಹಿರಿಯ’, ಹೊರಿ ‘ಹುರಿ’, ಚೆಡ್ಲು ‘ಸಿಡಿಲು’, ತೊರಿ ‘ತುರಿಸು’ ಮೊದಲಾದ ಪದಗಳಿವೆ (ಆಚಾರ್ಯ 1967); ಸುಳ್ಯ-ಪುತ್ತೂರು ಗವ್ಡರ ಕನ್ನಡದಲ್ಲಿ ಎದ್ರ್ ‘ಇದಿರು’, ಕೆಬಿ ‘ಕಿವಿ’, ಹೊರಿ ‘ಹುರಿ’, ಬೆದ್ರ್ ‘ಬಿದಿರು’, ಕೊದಿ ‘ಕುದಿ’, ತೊಳಿ ‘ತುಳಿ’ ಮೊದಲಾದ ಪದಗಳಿವೆ (ಗವ್ಡ 1970).

ಆದರೆ ಬಡಗ

ಕನ್ನಡದಲ್ಲಿ ಈ ಬದಲಾವಣೆ

ನಡೆದಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಬಡಗ ಕನ್ನಡ ಪದಗಳನ್ನು ಗಮನಿಸಬಹುದು.

ಎಕಾರ ಇಕಾರವಾದುದು ಒಕಾರ ಉಕಾರವಾದುದು

ಇರುಪು ‘ಇರುವೆ’’ ಬಿಸಲು ‘ಬಿಸಿಲು’’ ಇದುರು ‘ಇದಿರು’’

ತುಡಿ ‘ತುಟಿ’’ ಹುಡಿ ‘ದೂಳು’’ ತುರಿ ‘ತುರಿಕೆ’’

(4) ಈ ಬದಲಾವಣೆ ನಡೆದ ಅನಂತರ ಕನ್ನಡದ ಕೆಲವು ಒಳನುಡಿ ಗಳಲ್ಲಿ ಬೇರೆ ಕೆಲವು ಬದಲಾವಣೆಗಳು ನಡೆದಿದ್ದು, ಅವುಗಳಿಂದಾಗಿ ಕೆಲವು ಪದಗಳು ಈ ನಿಯಮಕ್ಕೆ ಅಪವಾದಗಳಾಗಿರುವ ಹಾಗೆ ಕಾಣಿಸುತ್ತವೆ.

ಉದಾಹರಣೆಗಾಗಿ, ಮೂರು ಉಲಿಕಂತೆಗಳಿರುವ ಪದಗಳಲ್ಲಿ ಎರಡ ನೆಯ ಉಲಿಕಂತೆಯಲ್ಲಿ ಬರುವ ಮೇಲಿನ ಸ್ವರ ಕೆಲವು ಒಳನುಡಿಗಳಲ್ಲಿ ಕೆಳಗಿನ ಸ್ವರವಾಗಿ ಬದಲಾಗಿದೆ (3.5 ನೋಡಿ). ಆದರೆ, ಈ ಬದಲಾವಣೆ ಮೇಲಿನ ಬದಲಾವಣೆ ನಡೆದು ಹೋದ ಅನಂತರ ನಡೆದಿದೆಯಾದ ಕಾರಣ, ಅದರ ಮೂಲಕ ಬಂದಿರುವ ಕೆಳಗಿನ ಸ್ವರ ಮೇಲಿನ ನಿಯಮಕ್ಕೆ ಅಪವಾದವಾಗಿ ಕಾಣಿಸುತ್ತದೆ.

ಬರಹದ ಕನ್ನಡ

ಹವ್ಯಕ

ಮೇಲಿನ ಸ್ವರ ಬಿದಿರು
ಬಿಸಿಲು
ಇಱುವೆ
ತುಱಿಸು

ಕೆಳಗಿನ ಸ್ವರ ಬಿದರು
ಬಿಸಲು
ತುಱಸು

ಬೆದುರು ಬೆಶಿಲು ಎರುಗು ತೊರುಸು

ಮೇಲೆ ಕೊಟ್ಟಿರುವ ಪದಗಳ ಮೊದಲನೆಯ ಉಲಿಕಂತೆಯಲ್ಲಿ ಎಕಾರ ಇಲ್ಲವೇ ಒಕಾರವಿತ್ತೆಂಬುದನ್ನು ಹವ್ಯಕದ ರೂಪಗಳು ತಿಳಿಸುತ್ತವೆ. ಈ ಸ್ವರದ ಅನಂತರ ಎರಡನೆಯ ಉಲಿಕಂತೆಯಲ್ಲಿ ಇಕಾರ ಇಲ್ಲವೇ ಉಕಾರ

ಇದ್ದುದರಿಂದಾಗಿ ಮೊದಲನೆಯ ಕಾಲಂನ ಪದಗಳು ಸೂಚಿಸುವ ಹಾಗೆ ಮೊದಲನೆಯ ಉಲಿಕಂತೆಯ ಎಕಾರ-ಒಕಾರಗಳು ಬರಹ ಕನ್ನಡದಲ್ಲಿ ಇಕಾರ-ಉಕಾರಗಳಾಗಿವೆ.

ಎರಡನೆಯ ಕಾಲಂನಲ್ಲಿ ಕಾಣಿಸುವ ಎರಡನೇ ಉಲಿಕಂತೆಯ ಅಕಾರ ಮೇಲಿನ ಬದಲಾವಣೆ ನಡೆದ ಮೇಲೆ ಇಕಾರ-ಉಕಾರಗಳು ಅಕಾರವಾದು ದರಿಂದಾಗಿ ಸಿದ್ದವಾಗಿವೆ. ಹಾಗಾಗಿ ಇವು ಮೇಲಿನ ನಿಯಮಕ್ಕೆ ಅಪವಾದ ಗಳಲ್ಲ.

Eke →

2.2.3 ಎಕಾರ, ಒಕಾರಗಳು ಯ ಮತ್ತು ವಗಳಾದುದು

ಪದಗಳ ಮೊದಲಿಗೆ ಬರುವ ಎಕಾರ ಮತ್ತು ಒಕಾರಗಳು ಕನ್ನಡದ ಹಲವಾರು ಇವತ್ತಿನ ಒಳನುಡಿಗಳಲ್ಲಿ ಯ ಮತ್ತು ವಗಳಾಗಿ ಬದಲಾಗಿವೆ. ಆದರೆ, ಕರಾವಳಿಯ ಒಳನುಡಿಗಳಲ್ಲಿ ಮತ್ತು ಬರಹ ಕನ್ನಡದಲ್ಲಿ ಈ ಎರಡು ಬದಲಾವಣೆಗಳು ನಡೆದಿಲ್ಲ.

ಒಳನಾಡಿನ ಬಡಗು ಒಳನುಡಿಗಳಲ್ಲಿ ಈ ಎರಡು ರೀತಿಯ ಬದಲಾ ವಣೆಗಳೂ ನಿಯಮಿತವಾಗಿ ನಡೆದಿವೆ. ಆದರೆ ತೆಂಕು ಒಳನುಡಿಗಳಲ್ಲಿ ಒಕಾರ ವ ಎಂದಾಗುವ ಬದಲಾವಣೆ ನಿಯಮಿತವಾಗಿ ನಡೆದಿದೆಯಾದರೂ, ಎಕಾರ ಯ ಎಂದಾಗುವ ಬದಲಾವಣೆ ಅಶ್ಟೊಂದು ನಿಯಮಿತವಾಗಿ ನಡೆದಿಲ್ಲ. ಅದರಲ್ಲೂ ಎರಡನೆಯ ಉಲಿಕಂತೆಯಲ್ಲಿ ಮೇಲಿನ (ಇ, ಉ) ಸ್ವರವಿರುವಲ್ಲಿ ಈ ಎರಡನೆಯ (ಎ>ಯ) ಬದಲಾವಣೆ ನಡೆದಿರುವುದು ಅಪರೂಪವೆಂದೇ ಹೇಳಬಹುದು.

(ಕ) ಎಕಾರ ಯ ಎಂದಾಗುವುದು (ನಡುಸ್ವರ ಇಲ್ಲವೇ ಕೆಳಸ್ವರ ಅನಂತರ ಬಂದಿರುವಲ್ಲಿ)

ಬರಹ

ಮಯ್ಸೂರು ಯಲೆ
ಯಲ್ಲ

ಗುಲ್ಬಗ್ರ ಯಲ್ಲ

(ಚ) ಎಕಾರ ಯ ಎಂದಾಗುವುದು (ಮೇಲಿನ ಸ್ವರ ಅನಂತರ ಬಂದಿರುವಲ್ಲಿ)

ಬರಹ

ಮಯ್ಸೂರು

ಗುಲ್ಬಗ್ರ ಯತ್ತ

(ಟ) ಒಕಾರ ವ ಎಂದಾಗುವುದು

ಬರಹ
ಒಪ್ಪು

ಮಯ್ಸೂರು ವಳ್ಗೆ ವಪ್ಪು
ವಣ್ಗು

ಗುಲ್ಬಗ್ರ ವಳ್ಗ ವಪ್ಪು ವಣ್ಗು

ಕೆಲವು ಪದಗಳಲ್ಲಿ ಅವುಗಳ ಮೊದಲಿನ ಉದ್ದ ಏ ಮತ್ತು ಓ ವಾ ಎಂದಾಗುವ)

ಮತ್ತು

ಸ್ವರಗಳೂ ಇಂತಹದೇ ಬದಲಾವಣೆಗೊಳಗಾಗಿವೆ.

ಬರಹ

ಮಯ್ಸೂರು ವಾಲೆ
ಯಾಲಕ್ಕಿ

ಗುಲ್ಬರ್ಗ

ಪದಗಳ ಮೊದಲಲ್ಲಿದ್ದ ಹಕಾರ ಬಿದ್ದು ಹೋಗಿರುವ ಕೆಲವು ಪದಗಳಲ್ಲೂ (3.2.2 ನೋಡಿ) ಎಕಾರ ಮತ್ತು ಒಕಾರಗಳು ಇಂತಹದೇ ಬದಲಾವಣೆಗೊಳಗಾಗಿರುವುದನ್ನು ಕೊಟ್ಟಿರುವ ಮಯ್ಸೂರಿನ ಪದಗಳಲ್ಲಿ ಕಾಣಬಹುದು. ಇದಲ್ಲದೆ, ಗುಲ್ಬರ್ಗ ಕನ್ನಡದಲ್ಲಿ ಹಕಾರ ಬದಲಾವಣೆ ಉಳಿದಿದ್ದರೂ ನಡೆದಿದೆಯೆಂಬುದನ್ನೂ ಕೆಳಗಿನ ಉದಾಹರಣೆಗಳಲ್ಲಿ ನೋಡಬಹುದು (ಉಪಾದ್ಯಾಯ 1976).

ಪದಗಳಲ್ಲಿ

ಕೆಲವು

ಕೆಳಗೆ

ಬರಹ
ಹೊಕ್ಕುಳು ಹೊಟ್ಟೆ
ಹೊಲ
ಹೊಸತು ಹೋಗು ಹೋತ

ಮಯ್ಸೂರು ವಕ್ಕ್ಳು
ವಟ್ಟೆ
ವಸ್ತು
ವಾಗು

ಗುಲ್ಬರ್ಗ ಹೊಂಕ್ಳ ಹ್ವಟ್ಟಿ ಹ್ವಲ ಹೊಸ ಹೋಗು ಹೋತ

Eke →

2.2.4 ನಡುವಿನ ಸ್ವರಗಳು ಕೆಳಗಿನ ಸ್ವರಗಳಾದುದು

ಮಡಿಕೇರಿಯ ಜೇನುಕುರುಬ ಒಳನುಡಿಯಲ್ಲಿ ಪದಗಳ ಮೊದಲಿಗೆ ಬರುವ ಮಕಾರದ ಅನಂತರ ಒಕಾರ ಅಕಾರವಾಗಿದೆ ಮತ್ತು ಪದಗಳ ಮೊದಲಿಗೆ ಬರುವ ನಕಾರದ ಅನಂತರ ಎಕಾರ ಅಕಾರವಾಗಿದೆ (ಉಪಾದ್ಯಾಯ

ಬರಹ ಜೇನುಕುರುಬ ಬರಹ ಜೇನುಕುರುಬ ಮೊಲ ಮಲ
ಮೊನ್ನೆ ಮನ್ನೆ
ಮೊಟ್ಟೆ ಮಟ್ಟೆ

ನೆರಳು ನಳ್ಳು ನೆನೆ

ಇದಲ್ಲದೆ, ಜೇನುಕುರುಬ ಒಳನುಡಿಯಲ್ಲಿ ಎ ಮತ್ತು ಏ ಎಂಬ ಈ ಎರಡು ಸ್ವರಗಳ ಅನಂತರ ಮಡಚಿದ ವ್ಯಂಜನವೊಂದು ಬಂದಿರುವಲ್ಲೆಲ್ಲ ಅವು (ಎ ಮತ್ತು ಏ ಸ್ವರಗಳು) ಅ ಮತ್ತು ಆ ಸ್ವರಗಳಾಗಿ ಬದಲಾಗಿವೆ.

ಬರಹ ಜೇನುಕುರುಬ ಬರಹ ಜೇನುಕುರುಬ ಕೆಳಗೆ ಕಳಗೆ
ಎಣ್ಣೆ ಅಣ್ಣೆ

ಬೇಡ ಬಾಡ ಕೇಳು ಕಾಳು

ಬಳ್ಳಾರಿಯ ಕನ್ನಡ ಒಳನುಡಿಯಲ್ಲೂ ಮಕಾರದ ಅನಂತರ ಇಂತಹದೇ ಬದಲಾವಣೆ ನಡೆದಿದೆ. ಆ ಒಳನುಡಿಯಲ್ಲಿ ಮಕಾರದ ಅನಂತರ ಒಕಾರ ಅಕಾರವಾಗಿದೆ ಮಾತ್ರವಲ್ಲ, ಓ ಸ್ವರ ಆ ಸ್ವರವಾಗಿ ಬದಲಾಗಿದೆ (ಉಪಾ ದ್ಯಾಯ 1976).

ಬರಹ ಕನ್ನಡ ಬಳ್ಳಾರಿ ಕನ್ನಡ ಮೊಗ್ಗೆ
ಮೊಳಕೆ
ಮೊಲ
ಮೊಸಳೆ

ಮಗ್ಗೆ ಮಳಿಕೆ ಮಲ ಮಸುಳೆ

ಮೋಡ
ಮೋಸ

ಮಾಡ ಮಾಸ

Eke →

2.2.5 ಅಕಾರ ಎಕಾರವಾದುದು

(1) ಪದಗಳ ಮೊದಲಲ್ಲಿ ಬರುವ ಚಕಾರದ ಅನಂತರ ಗಿಡ್ಡ ಅಕಾರ ಮತ್ತು ಗಿಡ್ಡ ಎಕಾರಗಳ ನಡುವಿನ ವ್ಯತ್ಯಾಸ ಹಲವು ಕನ್ನಡ ಪದಗಳಲ್ಲಿ ಇಲ್ಲವಾಗಿದೆ. ಇದು ಕನ್ನಡದ ಕೆಲವು ಒಳನುಡಿಗಳಲ್ಲಿ ನಿಯಮಿತವಾಗಿ ನಡೆದ ಬದಲಾವಣೆಯಿರಬಹುದು.

ತಮಿಳಿನಲ್ಲಿ ಚಕಾರದ ಅನಂತರದ ಅಕಾರ ಮತ್ತು ಎಕಾರಗಳು ಈ ರೀತಿ ಬದಲಾಗಿಲ್ಲವಾದ ಕಾರಣ, ಕನ್ನಡದ ಪದಗಳನ್ನು ಕೆಳಗೆ ಕೊಟ್ಟಿರುವ ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ ಮೂಲ ಸ್ವರ ಎಂತಹದೆಂಬ ವಿಶಯ ಸ್ಪಶ್ಟವಾಗುತ್ತದೆ.

ಮೂಲದ್ರಾವಿಡ ಅಕಾರ

ತಮಿಳು ಕನ್ನಡ ಚಲ್ಲು, ಚೆಲ್ಲು ಚಲ್ಲು ಚಂದ, ಚೆಂದ ಚಂತಮ್ ಚಟ್ಟಿ, ಚೆಟ್ಟಿ

ಮೂಲದ್ರಾವಿಡ ಎಕಾರ ತಮಿಳು ಚಕ್ಕಯ್ ಚಣ್ಟಯ್

ಕನ್ನಡ ಚಕ್ಕೆ, ಚೆಕ್ಕೆ ಚಂಡೆ, ಚೆಂಡೆ ಚಂಬು, ಚೆಂಬು ಚೆಮ್ಪು

ಕರಾವಳಿಯ ಹವ್ಯಕ ಕನ್ನಡದಲ್ಲಿ ಚಕಾರದ ಅನಂತರ ಮಾತ್ರವಲ್ಲದೆ ಜಕಾರ ಮತ್ತು ಗಕಾರಗಳ ಅನಂತರವೂ ಹಲವು ಪದಗಳಲ್ಲಿ ಅಕಾರ ಎಕಾರ ವಾಗಿದೆ.

ಬರಹ ಕನ್ನಡ

ಹವ್ಯಕ ಕನ್ನಡ

(ಕ) ಜರಿ ‘ಜರಿದು ಬೀಳು’’ ಜೆರಿ

ಜಡಿ (ಮಳೆ)

(2) ಮೂಲದ್ರಾವಿಡದ ಅಕಾರ ನಕಾರದ ಅನಂತರ ಅನಿಯಮಿತವಾಗಿ

ಎಕಾರವಾಗಿರುವುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಕನ್ನಡ
ನಕ್ಕು, ನೆಕ್ಕು ನಚ್ಚು, ನೆಚ್ಚು
ನಡು, ನೆಡು ನಂಟು, ನೆಂಟು
ನಂಬು, ನೆಮ್ಮು
ನನೆ, ನೆನೆ

ತಮಿಳು ನಕ್ಕು ನಚ್ಚು ನಡು ನಣ್ಟು ನಮ್ಪು ನನಯ್

Eke →

2.3 ಸ್ವರದ ಉದ್ದದಲ್ಲಿ ಬದಲಾವಣೆಗಳು

ಕನ್ನಡದ ಕೆಲವು ಪದಗಳಿಗೆ ಮೊದಲನೆಯ ಉಲಿಕಂತೆಯಲ್ಲಿ ಉದ್ದಸ್ವರ ವಿರುವ ರೂಪ ಮತ್ತು ಗಿಡ್ಡಸ್ವರವಿರುವ ರೂಪ ಎಂಬುದಾಗಿ ಎರಡೆರಡು ರೂಪಗಳಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದವೇ ಆದ ಪದಗಳನ್ನು ಗಮನಿಸಬಹುದು.

ಉದ್ದ ಸ್ವರವಿರುವ ರೂಪ ಗಿಡ್ಡಸ್ವರವಿರುವ ರೂಪ

ನೀನು
ನೇಯು
ಕೇಡು
ಬಾಳು
ಹಾಳು
ಕೇರು

ತಿನ್ನು ನಿನ್ನ ನೆಯ್ಗು ಕೆಡುಕು ಬದುಕು ಹಳತು ಗೆರಸೆ

ಕನ್ನಡ ಪದಗಳಲ್ಲಿ ಕಾಣಿಸುವ ಸ್ವರಗಳ ಈ ಉದ್ದ-ಗಿಡ್ಡ ವ್ಯತ್ಯಾಸಕ್ಕೆ ಎರಡು ಕಾರಣಗಳಿವೆ. ಅಂತಹ ವ್ಯತ್ಯಾಸ ಮೂಲದ್ರಾವಿಡ ಪದಗಳಲ್ಲೇ ಇದ್ದುದು ಒಂದು ಕಾರಣ (2.3.1 ನೋಡಿ) ಮತ್ತು ಮೂಲದ್ರಾವಿಡ ಪದ ನಡೆದ ಕನ್ನಡದ ಗಳಲ್ಲಿ ಬದಲಾವಣೆಗಳಿಂದಾಗಿ ಅಂತಹ ಮೂಡಿಬಂದಿರುವುದು ಇನ್ನೊಂದು ಕಾರಣ (2.3.2).

ಇಲ್ಲದಿದ್ದಲ್ಲೂ

ಚರಿತ್ರೆಯಲ್ಲಿ

ವ್ಯತ್ಯಾಸ

Eke →

2.3.1 ಮೂಲದ್ರಾವಿಡದಲ್ಲಿದ್ದ ವ್ಯತ್ಯಾಸ

ಮೂಲದ್ರಾವಿಡದಲ್ಲಿ ಉದ್ದಸ್ವರವಿರುವ ಬೇರು ಮತ್ತು ಗಿಡ್ಡಸ್ವರವಿರುವ ಬೇರು ಎಂಬುದಾಗಿ ಎರಡು ರೀತಿಯ ಬೇರುಗಳಿದ್ದುವು. ಉದಾಹರಣೆಗಾಗಿ, ಮೂಲದ್ರಾವಿಡಕ್ಕೆ ಕಲ್ಪಿಸಲಾಗಿರುವ ಕೆಳಗೆ ಕೊಟ್ಟಿರುವ ಬೇರುಗಳನ್ನು ಗಮನಿಸಬಹುದು.

ಉದ್ದಸ್ವರದ ಬೇರು *ಆರ್ ‘ಅರಚು’’
*ಕಾರ್ ‘ಕಾರವಾಗಿರು’’
*ತಾೞ್ ‘ತಗ್ಗು’’ *ನೂಱ್ ‘ಜಜ್ಜು, ನುರಿ’’
*ಪಾಱ್ ‘ಓಡು, ಹಾರು’’ *ನಾನ್ ‘ಒದ್ದೆಯಾಗು’’

ಗಿಡ್ಡಸ್ವರದ ಬೇರು *ಕಳ್ ‘ಕಳ್ಳು’’ *ತಳ್ ‘ತಡೆ’’ *ನಿಲ್ ‘ನಿಲ್ಲು’’ *ಪರಿ ‘ಹರಿ’’ *ಮಿನ್ ‘ಹೊಳೆ’’

(1) ಇವುಗಳಲ್ಲಿ ಉದ್ದಸ್ವರವಿರುವ ಬೇರುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಾಗ, ಆ ಬೇರುಗಳ ಉದ್ದಸ್ವರ ಗಿಡ್ಡವಾಗುವು ದೆಂಬ ನಿಯಮವೊಂದನ್ನು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ. ಈ ನಿಯಮದ ಪರಿಣಾಮವನ್ನು ಕೆಳಗೆ ಕೊಟ್ಟಿರುವ ಕನ್ನಡ ಪದಗಳಲ್ಲಿ ಕಾಣ ಬಹುದು.

ಗಿಡ್ಡಸ್ವರದ ರೂಪ ನನೆ ‘ಒದ್ದೆಯಾಗು’’ ನೆರೆ ‘ಒಟ್ಟು ಸೇರು’’ ನೆಱ’‘ನೇತುಹಾಕು’’ ತಳೆ ‘ತಾಳು’ ನುಲಿ ‘ತಿರುಪು’’ ನುಱಿ ‘ಪುಡಿಮಾಡು’’

ಉದ್ದಸ್ವರದ ರೂಪ ನಾನ್ ‘ಒದ್ದೆಮಾಡು’’
ನೇರ್ ‘ಒಪ್ಪು’’
ನೇಱು ‘ನೇತಾಡು’’ ತಾಳ್ ‘ತಾಳ್ಮೆಯಿಂದಿರು’’
ನೂಲ್ ‘ನೂಲು ಮಾಡು’’ ನೂಱು ‘ಜಜ್ಜು’’
ಮೀಟು ‘ತಂತಿಯನ್ನು ಮಿಡಿ’’ ಮಿಡಿ ‘ಸಿಡಿಸು’ ಪಾರ್ ‘ಓಡು’’
ಕೂನ್ ‘ಬಾಗು, ಕುಸಿ’’
ಬೀಸು ‘ಎಸೆ’’

ಪರಿ ‘ಓಡು’ ಕುನಿ ‘ಬಾಗು’’ ಬಿಸುಡು ‘ಎಸೆ’’

ಚೀವು ‘ಕೆತ್ತು’’
ಚಿವುಟು
ನೂಱು ‘ಜಜ್ಜು’’
ನುಱುಗು ‘ಜಜ್ಜು’’ ಕೀಱು, ಚೀಱು ‘ಅಂಜಿ ಕೂಗು’’ ಕಿಱುಚು ‘ಕೂಗು’’

ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳು ಮೂಲ ಪದಗಳು; ಅವುಗಳಲ್ಲೆಲ್ಲ ಮೊದಲನೆಯ ಉಲಿಕಂತೆಯಲ್ಲಿ (ಬೇರಿನಲ್ಲಿ) ಉದ್ದ ಸ್ವರವಿದೆ. ಈ ಪದಗಳೆಲ್ಲ ಒಂದು ಉಲಿಕಂತೆಯ ಪದಗಳು ಇಲ್ಲವೇ ಉಚ್ಚಾರಣೆಗಾಗಿ ಸೇರಿಸಿರುವ ಉಕಾರದಲ್ಲಿ ಕೊನೆಗೊಳ್ಳುವ ಪದಗಳು.

ಎರಡನೆಯ ಕಾಲಂನಲ್ಲಿ ಕೊಟ್ಟಿರುವ ಪದಗಳನ್ನು ಎ (<*ಅಯ್), ಇ, ಉಡು, ಉಟು, ಉಗು, ಉಚು ಎಂಬ ಸ್ವರದಲ್ಲಿ ಮೊದಲಾಗುವ ಒಟ್ಟುಗಳನ್ನು ಸೇರಿಸಿ ರಚಿಸಲಾಗಿದ್ದು, ಅವುಗಳ ಮೊದಲನೆಯ ಉಲಿಕಂತೆ ಯಲ್ಲಿದ್ದ ಉದ್ದ ಸ್ವರಗಳು ಗಿಡ್ಡ ಸ್ವರಗಳಾಗಿ ಬದಲಾಗಿವೆ.

ಬೇರಾಗಿರುವ

ನುಡಿಗಳಲ್ಲಿ ಅದಕ್ಕಿಂತ

ಕನ್ನಡ ಕ್ರಿಯಾಪದಗಳಲ್ಲಿ ಗಿಡ್ಡ ಇಲ್ಲವೇ ಉದ್ದ ಸ್ವರವಿದ್ದು ಬೇರೆ ದ್ರಾವಿಡ ಸ್ವರವಿರುವ ಉದಾಹರಣೆಗಳೂ ಹಲವಿವೆ. ಇವುಗಳಲ್ಲಿ ಕಾಣಿಸುವ ವ್ಯತ್ಯಾಸಕ್ಕೂ ಮೇಲಿನ ಬದಲಾವಣೆಯೇ ಕಾರಣ. ಅಂತಹ ಪದಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ.
ಇವುಗಳಲ್ಲಿ (ಕ) ವಿಬಾಗದಲ್ಲಿ ಬಂದವುಗಳು ಕನ್ನಡದಲ್ಲಿ ಬದಲಾಗಿವೆ ಮತ್ತು (ಚ) ವಿಬಾಗದಲ್ಲಿ ಬಂದವುಗಳು ಬೇರೆ ದ್ರಾವಿಡ ನುಡಿಯಲ್ಲಿ (ತಮಿಳಿನಲ್ಲಿ) ಬದಲಾಗಿವೆ ಎಂಬುದನ್ನು ಗಮನಿಸಬಹುದು.

ಬೇರೆ ದ್ರಾವಿಡ ನುಡಿಗಳು ತೆಲುಗು: ಪಾಱು

ಕನ್ನಡ
ಪರಡು, ಹರಡು
ಮುಸುಱು ‘ಮುಚ್ಚು’’ ತಮಿಳು: ಮೂಚು ‘ಸುತ್ತುವರಿ’’ ಸೆಡೆ ‘ಸೆಟೆದುಕೊಳ್ಳು’’ ಕೋಲಾಮಿ: ಸೀಡ್ ’

(ಚ) ಆರ್ ‘ಬೊಬ್ಬಿರಿ’’

ತಮಿಳು: ಅರಱ್ಱು ‘ಹಲುಬು’’

ಪೋರ್ ‘ಹೋರಾಡು’’ ತಮಿಳು: ಪೊರುತು ಪಾಱ್ ‘ಹಾರು’’

ತಮಿಳು: ಪಱ

ಮೇಲೆ

ಕೊಟ್ಟಿರುವ ಉದಾಹರಣೆಗಳಲ್ಲೆಲ್ಲ ಒಂದು ಕ್ರಿಯಾಪದದಿಂದ ಬೇರೊಂದು ಕ್ರಿಯಾಪದವನ್ನು ತಯಾರಿಸಲಾಗಿದೆ. ಇದಲ್ಲದೆ ಎಣಿಕೆಯ ಪದಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ; ‘ನಾಲ್ಕು’, ಆಱ್ ‘ಆರು’’ಮತ್ತು ಏೞ್ ‘ಏಳು’ ಎಂಬ ಎಣಿಕೆಯ ಪದಗಳಲ್ಲಿ ಕಾಣಿಸುವ ಉದ್ದ ಸ್ವರ ಅವುಗಳ ಅನಂತರ ಉ ಒಟ್ಟು ಬಂದಾಗ ಗಿಡ್ಡ ಸ್ವರವಾಗಿ ಬದಲಾಗುತ್ತದೆ.

‘ಎರಡು’, ನಾಲ್

ಸಾಮಾನ್ಯವಾಗಿ, ಈ ಎಣಿಕೆಯ ಪದಗಳು ಒಂದು ವ್ಯಂಜನದಲ್ಲಿ ಮೊದಲಾಗುವ ಪದಗಳ ಮೊದಲು ಇಂತಹ ಉ ಒಟ್ಟು ಸೇರಿರುವ ರೂಪದಲ್ಲಿ ಬರುತ್ತವೆ ಮತ್ತು ಸ್ವರದಲ್ಲಿ ಮೊದಲಾಗುವ ಪದಗಳ ಮೊದಲು ಹಾಗೆಯೇ ಯಾವ ಒಟ್ಟೂ ಸೇರದೆ ಬರುತ್ತವೆ.

ಒಟ್ಟಿಲ್ಲದ ಬಳಕೆ ಒಟ್ಟಿನೊಂದಿಗೆ ಬಳಕೆ ಓರೊರ್ವ ‘ಒಬ್ಬೊಬ್ಬ’’ ಒರ್ನುಡಿ ‘ಒಂದು ಮಾತು’’ ಇರುವಾಯಿ ‘ಎರಡು ಬಾಯಿ’’ ಈರಡಿ ‘ಎರಡು ಅಡಿ’’ ಆಱಾಳು ‘ಆರು ಆಳು’’ ಅಱುದಿಂಗಳ್ ‘ಆರು ತಿಂಗಳು’’ ಏೞಡಿ ‘ಏಳು ಅಡಿ’’

ಎೞ್ಪತ್ತು ‘ಏಳು ಹತ್ತು, ಎಪ್ಪತ್ತು’’

ಮೇಲೆ ಮೊದಲನೆಯ ಕಾಲಂನಲ್ಲಿ ಬಂದಿರುವ ಎಣಿಕೆಯ ಪದಗಳ ಅನಂತರ ಸ್ವರದಲ್ಲಿ ಮೊದಲಾಗುವ ಒರ್ವ, ಅಡಿ ಮತ್ತು ಆಳು ಪದಗಳು ಬಂದಿವೆ ಮತ್ತು ಎರಡನೆಯ ಕಾಲಂನಲ್ಲಿ ಬಂದಿರುವ ಎಣಿಕೆಯ ಪದಗಳ ಅನಂತರ ವ್ಯಂಜನದಲ್ಲಿ ಮೊದಲಾಗುವ ನುಡಿ, ವಾಯಿ ‘ಬಾಯಿ’, ತಿಂಗಳ್ ಮತ್ತು ಪತ್ತು ‘ಹತ್ತು’’ಪದಗಳು ಬಂದಿವೆ.

ನಾಲ್ ಪದದ ಬಳಕೆಯಲ್ಲಿ ಈ ಬದಲಾವಣೆ ನಲುವತ್ತು ಎಂಬು ದರಲ್ಲಿ ಮಾತ್ರ ಕಾಣಿಸುತ್ತದೆ. ಈ ಬದಲಾವಣೆಯನ್ನು ತೋರಿಸದಿರುವ ನಾಲ್ವತ್ತು ಎಂಬ ರೂಪವೂ ಕನ್ನಡದಲ್ಲಿದೆ. ಇದಲ್ಲದೆ, ನಾಲ್ದಿಂಗಳ್, ನಾಲ್ತೋಳ್, ನಾಲ್ವಡಿ (ನಾಲ್ + ಮಡಿ) ಮೊದಲಾದ ಪದಗಳಲ್ಲೂ ವ್ಯಂಜನಗಳಲ್ಲಿ ಮೊದಲಾಗುವ ಪದಗಳೊಂದಿಗೆ ಒಟ್ಟಿಲ್ಲದ ರೂಪ ಬಂದಿದ್ದು, ಉದ್ದ ಆ ಸ್ವರ ಬದಲಾಗದೆ ಉಳಿದಿದೆ.

ಮೂ ‘ಮೂರು’ ಪದದ ಬಳಕೆಯಲ್ಲಿ ಕೆಳಗೆ (2.3.2ರಲ್ಲಿ) ಸೂಚಿಸಿದ ಹಾಗೆ ಕನ್ನಡದ್ದೇ ಆದ ಬದಲಾವಣೆಯ ಮೂಲಕ ಉದ್ದ (ಮೂಗೆರೆ, ಮೂದಲೆ, ಮೂನೂಱ್) ಮತ್ತು ಗಿಡ್ಡ (ಮುಯ್ಯಡಿ, ಮುಯ್ಯೀರ್, ಮುಯ್ಯೇೞ್) ರೂಪಗಳು ಕಾಣಿಸಿಕೊಳ್ಳುತ್ತವೆ. ಮೂಱು ಎಂಬುದರ ಬಳಕೆಯಲ್ಲೂ ಇಂತಹದೇ ಕಾರಣಕ್ಕೆ ಉದ್ದ (ಮೂಸ್ರೂೞ್, ಮೂಗ್ರಳ್) ಮತ್ತು ಗಿಡ್ಡ (ಮುಕ್ಕಣ್, ಮುಚ್ಚಾಲ್, ಮುನ್ನೀರ್, ಮುಪ್ಪುರಿ) ರೂಪಗಳಿವೆ.

(3) ಗುಣಪದಗಳ ಬಳಕೆಯಲ್ಲೂ ಕ್ರಿಯಾಪದ ಮತ್ತು ಎಣಿಕೆಯ ಪದಗಳ ಬಳಕೆಯಲ್ಲಿ ನಡೆದಿರುವಂತಹದೇ ಬದಲಾವಣೆ ನಡೆದಿರುವುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

ಒಟ್ಟಿರುವ ರೂಪ

ಒಟ್ಟಿಲ್ಲದ ರೂಪ
ಕೇಸಕ್ಕಿ ‘ಕೆಂಪು ಅಕ್ಕಿ’’ ಕಿಸುಗಣ್ ‘ಕೆಂಪು ಕಣ್ಣು’’ ಕಾರಡವಿ ‘ಕಪ್ಪು ಅಡವಿ’’ಕರಿತುಳಸಿ ‘ಕಪ್ಪು ತುಳಸಿ’’ ಕೀೞಲೆ ‘ಕೆಳಗಿನ ಎಲೆ’’ ಕೆಳನಾಲಿಗೆ ‘ಕೆಳಗಿನ ನಾಲಿಗೆ’’ ನಾಱುವ ‘ನಾತದ’’ ಮಾಱಣೆ ‘ಮತ್ತಿನ’’

ನಱುನೆಯ್ ‘ಪರಿಮಳದ ತುಪ್ಪ’’ ಮರುದಿವಸ ‘ಮತ್ತಿನ ದಿವಸ’’

ಮೇಲಿನ ಉದಾಹರಣೆಗಳಲ್ಲಿ ಒಟ್ಟಿಲ್ಲದ ಕೇಸ್, ಕಾರ್, ಕೀೞ್, ನಾಱ್, ಮಾಱ್ ರೂಪಗಳು ಸ್ವರದಲ್ಲಿ ಮೊದಲಾಗುವ ಅಕ್ಕಿ, ಅಡವಿ,

ಎಲೆ ಮೊದಲಾದ ಪದಗಳೊಂದಿಗೆ ಬಂದಿವೆ ಮತ್ತು ಒಟ್ಟಿರುವ ಕಿಸು, ಕರಿ, ಕೆಳ, ನಱು, ಮರು ರೂಪಗಳು ವ್ಯಂಜನದಲ್ಲಿ ಮೊದಲಾಗುವ ಕಣ್, ತುಳಸಿ, ಮರ ಮೊದಲಾದ ಪದಗಳೊಂದಿಗೆ ಬಂದಿವೆ. ಕೊನೆಯ ಎರಡು ಪದಗಳಲ್ಲಿ ಮಾತ್ರ ಉದ್ದಸ್ವರದ ರೂಪಗಳು ಸ್ವರದಲ್ಲಿ ಮೊದಲಾಗುವ ಪದರೂಪದ ಒಟ್ಟುಗಳೊಂದಿಗೆ (ಅ ಮತ್ತು ಅಣೆ ಎಂಬವುಗಳೊಂದಿಗೆ) ಬಂದಿವೆ.

(4) ಕ್ರಿಯಾಪದದಿಂದ ನಾಮಪದವನ್ನು ತಯಾರಿಸಿರುವಲ್ಲಿ ಈ ಬದಲಾವಣೆ ಅಶ್ಟೊಂದು ನಿಯಮಿತವಾಗಿ ನಡೆದಿಲ್ಲ. ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ನಾಮಪದಗಳಲ್ಲಿ ಅದು ನಿಯಮಿತವಾಗಿ ನಡೆದಿದೆ ಯಾದರೂ ಎರಡು ಉಲಿಕಂತೆಗಳಿರುವ ನಾಮಪದಗಳಲ್ಲಿ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬುದಾಗಿ ಸುಬ್ರಹ್ಮಣ್ಯಂ (1983) ವಾದಿಸಿ

(ಕ) ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ಪದಗಳು

ಕ್ರಿಯಾಪದ ತಾಱು ‘ಒಣಗು’’ ಪೋೞ್ ‘ಸೀಳು’’ ಸೋಂಕು, ಸೋಕು ಚೀವು ‘ಕೆತ್ತು’’
ನೇರ್ ‘ಒಪ್ಪು’’

ನಾಮಪದ ತಱಗು ‘ತರಗೆಲೆ’’ ಪೊಟರೆ ‘ತೂತು’’ ಒಱತೆ ‘ನೀರಿನ ಚಿಲುಮೆ’’ ಸೊಗಡು ‘ಸೋಂಕುವಿಕೆ’’ ಸಿವಱು ಸಿಪ್ಪೆ’’
ನೆರವಿ ‘ಕೂಟ’ (ನೆರೆ ‘ಒಟ್ಟುಸೇರು’)’

ಬುರುಲಿ ‘ಕಾಡು ಕೋಳಿ’’ತಮಿಳು: ಪೂೞ್ ಮುಸುರೆ ಮುಸುಡು ‘ಮೂತಿ’’

ತಮಿಳು: ಮೂಚು ‘ಕೆಡು’’ ತಮಿಳು: ಮೂಂಚಿ

ಮುಸುಕು ಹಸುಕು ‘ಹಸಿ ವಾಸನೆ’’ ತೆಲುಗು: ಪಾಸು, ಪಾಯು ‘ಕೊಳೆ’

ತಮಿಳು: ಮೂಚು ‘ಸುತ್ತುವರಿ’’

(ಚ) ಎರಡು ಉಲಿಕಂತೆಗಳಿರುವ ಪದಗಳಲ್ಲಿ ಮೇಲಿನ ಬದಲಾವಣೆ ನಡೆದಿರುವುದಕ್ಕೆ ಉದಾಹರಣೆಗಳು

ಕ್ರಿಯಾಪದ ಕಾಣ್ ‘ಕಾಣು’’
ಬೀಸು
ಪಾಸು ‘ಹಾಸು’’

ನಾಮಪದ ಕಣಿ ‘ನೋಟ’’ ಬೆಸೆ ‘ಹೊಡೆತ’’ ಪಸೆ ‘ಹಾಸುಗೆ’’

ಕೆಳೆ ‘ಗೆಳೆತನ’’

ತಮಿಳು: ಕೇಳ್

(ಟ) ಎರಡು ಉಲಿಕಂತೆಗಳಿರುವ ಪದಗಳಲ್ಲಿ ಮೇಲಿನ ಬದಲಾವಣೆ ನಡೆಯದಿರುವುದಕ್ಕೆ ಉದಾಹರಣೆಗಳು

ಕ್ರಿಯಾಪದ ಹಾಯು ‘ದಾಟು, ಹೋಗು’’ ತೀರು ‘ಮುಗಿ’’
ಮಾಯು ‘ಕಾಣದಾಗು’’
ಮೇಯು

ನಾಮಪದ ಹಾದಿ ‘ದಾರಿ’’ ತೀರ ‘ಮುಗಿತಾಯ’’ ಮಾಯ
ಮೇತ ‘ಮೇಯುವಿಕೆ’’

(5) ಮೇಲೆ ವಿವರಿಸಿದಂತಹ ಬದಲಾವಣೆ ಸ್ವರದಲ್ಲಿ ಮೊದಲಾಗುವ ಒಟ್ಟುಗಳನ್ನು ಸೇರಿಸಿ ಒಂದು ಪದದಿಂದ ಇಲ್ಲವೇ ಬೇರಿನಿಂದ ಹೊಸ ಪದ ಗಳನ್ನು ತಯಾರಿಸಿರುವಲ್ಲಿ ಮಾತ್ರ ನಡೆಯುತ್ತದಲ್ಲದೆ, ಪದರೂಪಗಳನ್ನು ತಯಾರಿಸಿರುವಲ್ಲಿ ನಡೆಯುವುದಿಲ್ಲ.

ಉದಾಹರಣೆಗಾಗಿ, ಹಾಡು-ಹಾಡಲು, ಕೇಳು-ಕೇಳದೆ, ಆಗು- ಆಗಿ, ಕಾಡು-ಕಾಡನ್ನು ಮೊದಲಾದ ಪದರೂಪಗಳಲ್ಲಿ ಸ್ವರದಲ್ಲಿ

ಮೊದಲಾಗುವ ಅಲು, ಅದೆ, ಇ, ಅನ್ನು ಎಂಬ ಒಟ್ಟುಗಳು ಬಂದಿವೆಯಾದರೂ ಅವು ಪದರೂಪಗಳನ್ನು ತಯಾರಿಸುವ ಒಟ್ಟುಗಳಾದ ಕಾರಣ, ಅವುಗಳಲ್ಲಿ ಉದ್ದ ಸ್ವರ ಬದಲಾಗದೆ ಉಳಿದಿರುವುದನ್ನು ಕಾಣಬಹುದು.

ಪದರೂಪಗಳಲ್ಲಿ

ಆದರೆ, ನಾನು, ನಾವು, ನೀನು, ತಾನು ಮೊದಲಾದ ಆಡುಗ ಪದಗಳ ಕಾಣಿಸುವ ಉದ್ದಸ್ವರ ಗಿಡ್ಡವಾಗುವ ಬದಲಾವಣೆ ಮೇಲಿನ ನಿಯಮಕ್ಕೊಳಪಟ್ಟಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಇವುಗಳೊಂದಿಗೆ ಪದರೂಪಗಳನ್ನು ತಯಾರಿಸುವ ಒಟ್ಟುಗಳನ್ನು ಬಳಸಿದಾಗಲೂ ಅವುಗಳ ಉದ್ದಸ್ವರ ಗಿಡ್ಡವಾಗುತ್ತದೆ.

ಸ್ವರದಲ್ಲಿ

ಇದಲ್ಲದೆ, ಈ ಒಟ್ಟುಗಳು

ಸುರುವಾಗಬೇಕೆಂಬ ನಿಯಮವಿಲ್ಲ (ನಾನು-ನನಗೆ, ನೀನು, ನಿನಗೆ ಪದಗಳಲ್ಲಿ ವ್ಯಂಜನದಲ್ಲಿ ಮೊದಲಾಗುವ ಗೆ ಒಟ್ಟು ಬಂದಿದೆ) ಮತ್ತು ಸ್ವರದಲ್ಲಿ ಸುರುವಾಗುವ ಒಟ್ಟುಗಳನ್ನು ಬಳಸಿದಾಗ ಇವುಗಳ ಕೊನೆಯ ಮೂಗುಲಿ ಇಮ್ಮಡಿಯಾಗಿ ಬದಲಾಗಿದೆ (ತಾನು-ತನ್ನ, ನೀನು-ನಿನ್ನನ್ನು, ನಿನ್ನಿಂದ).

(6) ಉದ್ದಸ್ವರವಿರುವ ಕ್ರಿಯಾಬೇರಿನ ಅನಂತರ ವ್ಯಂಜನದಲ್ಲಿ ಮೊದಲಾಗುವ ಒಟ್ಟು ಬಂದಿರುವಲ್ಲಿ ಮೇಲಿನ ಉದ್ದಸ್ವರ ಗಿಡ್ಡವಾಗುವ ಬದಲಾವಣೆ ನಡೆದಿರಲಿಲ್ಲ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಹಾಸು
ಸೇರು ‘ಕೂಡು’’ ಮೀರು
ಬಾಳು

ಹಾಸುಗೆ ಸೇರುವೆ ‘ಕೂಟ’’ ಮೀರುಹ ಬಾಳ್ತೆ

(7) ಕನ್ನಡದ ಕೆಲವು ಪದಗಳಲ್ಲಿ ಉದ್ದಸ್ವರವನ್ನು ಗಿಡ್ಡಸ್ವರವಾಗಿ ಬದಲಾಯಿಸಿದ ಒಟ್ಟಿನ ಸ್ವರ ಅನಂತರ ಬಿದ್ದುಹೋಗಿರುವುದೂ ಇದೆ; ಅಂತಹ ಪದಗಳಲ್ಲಿ ಮೇಲಿನ ಬದಲಾವಣೆ ವ್ಯಂಜನದಲ್ಲಿ ಮೊದಲಾಗುವ

ಒಟ್ಟು ಸೇರಿದಾಗಲೂ ನಡೆದಿದೆಯುಂದು ಅನಿಸುವುದಾದರೂ ನಿಜಕ್ಕೂ ಅಂತಹ ಪದಗಳಲ್ಲಿ ಮೊದಲಿಗೆ ಒಂದು ಸ್ವರ ಇದ್ದಿರಬೇಕು.

ಉದ್ದ ಸ್ವರದ ರೂಪ
ಅೞ್ ‘ಮುಳುಗು’’
ಊಱು ‘ಹೆಚ್ಚು’ ಕಾರ್ ‘ಕಪ್ಪು’’ ಸೋರು ‘ಬಳಲು’’
ತಾೞ್ ‘ತಗ್ಗು’’ ನೀಳ್ ‘ಉದ್ದವಾಗು’’

ಗಿಡ್ಡ ಸ್ವರದ ರೂಪ ಅಳ್ದು, ಅದ್ದು (ಅೞುತ್ತು) ‘ಮುಳುಗಿಸು’ ಉರ್ಬು, ಉಬ್ಬು (ಉಱುಪ್ಪು) ಕರ್ಪು, ಕಪ್ಪು (<ಕರುಪ್ಪು) ಸೊರ್ಕು, ಸೊಕ್ಕು (<ಸೊರುಕ್ಕು) ತೞ್ಗು, ತಗ್ಗು (<ತೞುಕ್ಕು) ನಿಳ್ಕು, ನಿಕ್ಕು (ನಿಳುಕ್ಕು) ‘ನಿಲುಕು’’

ಇಮ್ಮಡಿ ವ್ಯಂಜನಗಳ (ಇಲ್ಲವೇ ಬೇರೆ ಒತ್ತಕ್ಶರಗಳ) ಮೊದಲು ಬಂದ ಉದ್ದಸ್ವರ ಕನ್ನಡದಲ್ಲಿ ಗಿಡ್ಡಸ್ವರವಾಗುವುದೆಂಬುದನ್ನು ನಾವು ಕೆಳಗೆ (2.3.2(1-2)ರಲ್ಲಿ) ನೋಡಲಿರುವೆವು. ಕನ್ನಡದಲ್ಲೇನೇ ನಡೆದ ಈ ಬದಲಾವಣೆಯೂ ಮೇಲಿನ ಪದಗಳಲ್ಲಿ ಕಾಣಿಸುವ ಗಿಡ್ಡಸ್ವರಕ್ಕೆ ಕಾರಣ ವಾಗಬಲ್ಲುದು.

(8) ಕೆಳಗೆ ಕೊಟ್ಟಿರುವ ಪದಗಳಲ್ಲಿ ನಾಮಪದಗಳು ಉದ್ದಸ್ವರ ದೊಂದಿಗೂ ಕ್ರಿಯಾಪದಗಳು ಗಿಡ್ಡಸ್ವರದೊಂದಿಗೂ ಬರುವುದನ್ನು ಕಾಣ ಬಹುದು. ಇಲ್ಲಿ ನಾಮಪದಗಳಿಂದ ಕ್ರಿಯಾಪದಗಳನ್ನು ಪಡೆಯಲಾಗಿದ್ದು, ಅದಕ್ಕಾಗಿ ಸ್ವರದಲ್ಲಿ ಮೊದಲಾಗುವ ಅರು, ಇ, ಎ ಒಟ್ಟುಗಳನ್ನು ಬಳಸ

ನಾಮಪದ ಊಳ್ ‘ಕೂಗು’’
ಏಱ್ ‘ಗಾಯ’’
ನೂಳ್ ‘ಸುಳ್ಳು’’

ಕ್ರಿಯಾಪದ ಒಳರು ‘ಕೂಗು’’ ನೊಳೆ ‘ಕದ್ದು ಒಳಹೋಗು’’

(9) ಇನ್ನು ಕೆಲವು ಪದಗಳಲ್ಲಿ ಕಾಣಿಸುವ ಉದ್ದಸ್ವರ ಗಿಡ್ಡಸ್ವರದಿಂದ ಬಂದಿರುವುದು ಕಾಣಿಸುತ್ತದೆ. ಮೂಲದ್ರಾವಿಡದ ಕ್ರಿಯಾಬೇರುಗಳ ಕೊನೆ

ಯಲ್ಲಿದ್ದ ಯಕಾರ ಇಲ್ಲವೇ ಕಕಾರ ಬಿದ್ದುಹೋದಾಗ (4.3.5 ನೋಡಿ) ಬೇರಿನ ಸ್ವರ ಮತ್ತು ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ - ಇವೆರಡರ ಬದಲು ಉದ್ದಸ್ವರವೊಂದು ಬಂದಿರುವುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.

ಗಿಡ್ಡಸ್ವರದ ರೂಪ

ಕುಸಿ (*ಕುಯಿ)
ಕೊಸರು ‘ಹೆಚ್ಚು ಆಸೆಪಡು’’ ನುಸಿ ‘ಒಳಹೊಗು’’

ಉದ್ದಸ್ವರದ ರೂಪ ಕೂಲು ‘ಬೀಳು’’ ಕೋಱು ‘ಬಯಸು’’ ನೂಱು ‘ನುಗ್ಗು’’

(10) ಕೆಳಗೆ ಕೊಟ್ಟಿರುವ ಕನ್ನಡದ ಪದಗಳೂ ಮೇಲಿನ ನಿಯಮಗಳಿಗೆ ಅಪವಾದಗಳಾಗಿ ಕಾಣಿಸುತ್ತವೆ. ಇವುಗಳಲ್ಲಿ ಕ್ರಿಯಾಪದ ಗಿಡ್ಡಸ್ವರವನ್ನು ಮತ್ತು ನಾಮಪದ ಉದ್ದಸ್ವರವನ್ನು ತೋರಿಸುತ್ತಿದ್ದು, ಇಲ್ಲಿ ಎಂತಹ ಬದಲಾವಣೆ ಕಂಡುಹಿಡಿಯಲು ಇನ್ನೂ ಸಾದ್ಯವಾಗಿಲ್ಲ.

ನಡೆದಿದೆ ಎಂಬುದನ್ನು

ನಾಮಪದಗಳು ಈಡು ‘ಇಡುವಿಕೆ, ಇಟ್ಟದ್ದು’’ ಕೇಡು ‘ಅಳಿವು’’ ಕೋಡು ‘ಕೊಡುವಿಕೆ’’ ಕೋಳ್ ‘ಹಿಡಿತ’’

ಕ್ರಿಯಾಪದಗಳು
ಇಡು ‘ಇರಿಸು’’
ಕೆಡು ‘ಅಳಿ’’ ಕೊಡು
ಕೊಳ್ ‘ಹಿಡಿ’’
ಸುಡು ‘ಉರಿ, ಉರಿಸು’’ ಸೂಡು ‘ಸುಡುವಿಕೆ, ಬಿಸಿ’’ ತಿನ್ ‘ತಿನ್ನು’’
ಪಡು ‘ಪಡೆ’’

ತೀನಿ ‘ತಿನಿಸು, ತಿಂಡಿ’’ ಪಾಡು’‘ಪಡೆಯುವಿಕೆ’’ ಬೀಡು ‘ಬಿಡುವಿಕೆ, ಮನೆ’’

Eke →

2.3.2 ಕನ್ನಡದಲ್ಲಿ ನಡೆದ ಬದಲಾವಣೆಗಳು

(1) ಕನ್ನಡದಲ್ಲಿ ಸಾಮಾನ್ಯವಾಗಿ ಉದ್ದಸ್ವರದ ಅನಂತರ ಇಮ್ಮಡಿ ವ್ಯಂಜನ ಬರುವುದಿಲ್ಲ; ಇಮ್ಮಡಿ ವ್ಯಂಜನ ಬಂದಿರುವ ಕನ್ನಡದ ಹಲವು ಪದಗಳಲ್ಲಿ ಗಿಡ್ಡಸ್ವರ ಕಾಣಿಸುತ್ತದೆ ಮತ್ತು ಅವಕ್ಕೆ ಸಮನಾದ ತಮಿಳು ಪದಗಳಲ್ಲಿ ಉದ್ದಸ್ವರ ಕಾಣಿಸುತ್ತದೆ.

ತಮಿಳು: ಕನ್ನಡ
ಸಿಳ್ಳು
ಪಿಲ್ಲಿ ‘ಕಾಲುಂಗುರ’’ ಪೀಲಿ ನೇಟು ನಿಟ್ಟಿಸು
ತೂವಲ್ ತುಪ್ಪುಳ ಪೂಚಲ್ ಹುಯ್ಯಲು ಉಯ್ಯಲು

ಇಂತಹ ಪದಗಳಲ್ಲಿ ಕನ್ನಡ ಇಮ್ಮಡಿ ವ್ಯಂಜನಗಳ ಮೊದಲು

ಬಂದಿರುವ ಉದ್ದಸ್ವರವನ್ನು ಗಿಡ್ಡಸ್ವರವಾಗಿ ಬದಲಾಯಿಸಿಕೊಂಡಿರಬೇಕು.

ಇಮ್ಮಡಿ

ಆದರೆ ಸಾಮಾನ್ಯವಾಗಿ ತೆಂಕುದ್ರಾವಿಡದಲ್ಲಿ ಉದ್ದಸ್ವರದ ಅನಂತರ ವ್ಯಂಜನವಾಗಿ ಹಾಗೆಯೇ ಕಾಣಿಸುವ

ಬಂದಿದ್ದ ಬದಲಾಯಿಸುವುದರ ಉಳಿಸಿಕೊಳ್ಳುವುದೇ ಬದಲಾವಣೆಯಾಗಿದೆ (4.4.3 ನೋಡಿ).

ಸ್ವರವನ್ನು ಪದಗಳಲ್ಲೂ

ವ್ಯಂಜನವನ್ನು ಮೂಲಕ ಉದ್ದ

ಕನ್ನಡದ

ಹೆಚ್ಚಿನ

(2) ಉದ್ದಸ್ವರದ ಅನಂತರ ಒತ್ತಕ್ಶರ ಬಂದಿರುವಲ್ಲೂ ಕನ್ನಡ ಪದಗಳಲ್ಲಿ ಕೆಲವೆಡೆ ಉದ್ದಸ್ವರ ಗಿಡ್ಡಸ್ವರವಾಗಿ ಬದಲಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಈ ಎರಡು ರೀತಿಯ ಪದಗಳೂ ಕಾಣಿಸುತ್ತಿದ್ದು, ಅವುಗಳಲ್ಲಿ ಮೊದಲನೆಯದು ಹಳೆಯದಿರಬೇಕು.

ಉದ್ದಸ್ವರವಿರುವ ರೂಪ
ಮಾರ್ಮ ‘ಎದುರಾಳಿ’’ ಏಳ್ನೂರು ಆಣ್ಮ ‘ಆಳುವವನು’’ ಆಮಂಡ
ನಾಲ್ವತ್ತು

ಗಿಡ್ಡಸ್ವರವಿರುವ ರೂಪ

ಮರ್ಮ ಎಳ್ನೂರು ಅಣ್ಮು ‘ಕೆಚ್ಚು’’
ಅಮಂಡ ನಲ್ವತ್ತು

ಆದರೆ ಮೇಲೆ ಸೂಚಿಸಿದ ಹಾಗೆ ಇಂತಹ ಹೆಚ್ಚಿನ ಕಡೆಗಳಲ್ಲೂ ಉದ್ದ ಸ್ವರವನ್ನು ಹಾಗೆಯೇ ಉಳಿಸಿ, ಒತ್ತಕ್ಶರದಲ್ಲಿ ಬದಲಾವಣೆ ಮಾಡುವುದೇ ಕನ್ನಡದ ಒಲವಾಗಿದೆ.

ಯಕಾರದಲ್ಲಿ

ಕೊನೆಗೊಳ್ಳುವ ಒಂದು ಉಲಿಕಂತೆಯ ಕನ್ನಡದಲ್ಲಿ ಬೇರುಗಳಲ್ಲಿ ಉದ್ದ ಮತ್ತು ಗಿಡ್ಡಸ್ವರಗಳ ವ್ಯತ್ಯಾಸವಿರುವುದು ನಿಜವಾದರೂ (ಬಯ್ಯು ‘ಹಳಿಯು’, ಬಾಯು ‘ಬಾತುಕೊಳ್ಳು’) ಅಂತಹ ಕೆಲವು ಬೇರುಗಳು ಉದ್ದ ಇಲ್ಲವೇ ಗಿಡ್ಡ ಸ್ವರದೊಂದಿಗೆ ಬರುವುದು ಕಾಣಿಸುತ್ತದೆ.

ನಡುವೆ

ಉದ್ದಸ್ವರದ ರೂಪ ತೊಯ್ಯು ‘ಒದ್ದೆಯಾಗು’’ ಬೆಯ್ಯು
ಸಯ್ ‘ಮಾಯವಾಗು’’
ಸುಯ್ ‘ನಿಟ್ಟುಸಿರು ಬಿಡು’

ಗಿಡ್ಡಸ್ವರದ ರೂಪ

ತೋಯು ಬೇಯು ಸಾಯ್ ಸೂಯ್

Eke →

2.4 ಸ್ವರಗಳ ಎಣಿಕೆಯಲ್ಲಿ ಹೆಚ್ಚಳ

ಕನ್ನಡದ ಕೆಲವು ಒಳನುಡಿಗಳಲ್ಲಿ ಮೇಲೆ ವಿವರಿಸಿದ ಹತ್ತು ಸ್ವರಗಳಲ್ಲಿ ಕೆಲವು ಹತ್ತಕ್ಕಿಂತ ಜಾಸ್ತಿಯಾಗಿವೆ.

ಬದಲಾವಣೆಗಳಾಗಿರುವುದರಿಂದಾಗಿ

ಈ ಬದಲಾವಣೆಗಳನ್ನು ವಿವರಿಸುವುದಕ್ಕಾಗಿ ಬರಹ ಕನ್ನಡದಲ್ಲಿರುವ ಸ್ವರಗಳಿಗಿಂತ ಹೆಚ್ಚಿನ ಸ್ವರಗಳನ್ನು ಬಳಸಬೇಕಾಗುತ್ತದೆಯಾದ ಕಾರಣ, ಅದಕ್ಕಾಗಿ ಕೆಳಗೆ ಸೂಚಿಸಿದ ಹಾಗೆ, ನಾಲಿಗೆಯನ್ನು ಮುಂದೆ, ನಡುವೆ ಮತ್ತು ಹಿಂದೆ ಎಂಬುದಾಗಿ ಮೂರು ಬಾಗಗಳಲ್ಲಿ ವಿಂಗಡಿಸಬೇಕಾಗುತ್ತದೆ ಮತ್ತು ಬಾಯಿಯ ಜಾಗವನ್ನು ಮೇಲೆ, ಮೇಲ್ನಡುವೆ, ಕೆಳನಡುವೆ ಮತ್ತು ಕೆಳಗೆ ಎಂಬ ನಾಲ್ಕು ಅಂಶಗಳಾಗಿ ವಿಂಗಡಿಸಬೇಕಾಗುತ್ತದೆ.

ಬಾಯಿಯ ಜಾಗ ಮೇಲೆ ಮೇಲ್ನಡುವೆ

ಮುಂದಿನ ಬಾಗ

ನಾಲಿಗೆಯ ಬಾಗ ನಡುವಿನ ಬಾಗ

ಕೆಳನಡುವೆ ಕೆಳಗೆ

ಹಿಂದಿನ ಬಾಗ

ಈ ರೀತಿ ವಿಂಗಡಿಸಿದಲ್ಲಿ ಒಟ್ಟು 12 ಸ್ವರಗಳು ದೊರೆಯುತ್ತವೆ; ಅವುಗಳಲ್ಲಿ ಎಂಟು ಸ್ವರಗಳು ಮಾತ್ರ ಕನ್ನಡದ ಒಳನುಡಿಗಳನ್ನು ವರ್ಣಿಸಲು ಬೇಕಾಗುತ್ತವೆಯಾದ ಕಾರಣ, ಅವಕ್ಕೆ ಮಾತ್ರ ಮೇಲೆ ವಿಶಿಶ್ಟವಾದ ಲಿಪಿ ಗಳನ್ನು ಒದಗಿಸಲಾಗಿದೆ. ಮುಂಗೆಳನಡುವಿನ ಎ಼, ಹಿಂಗೆಳನಡುವಿನ ಒ಼ ಮತ್ತು ನಡುಕೆಳನಡುವಿನ ಅ಼ ಎಂಬವುಗಳು ಇಲ್ಲಿ ಬೇಕಾಗುವ ಹೆಚ್ಚಿನ ಸ್ವರಗಳು.

ಈ ಹೆಚ್ಚಿನ ಸ್ವರಗಳನ್ನು ಹೆಸರಿಸುವುದಕ್ಕಾಗಿ ಎಕಾರ ಒಕಾರಗಳನ್ನು ನಡುವಿನ ಸ್ವರಗಳೆಂದು ಕರೆಯುವ ಬದಲು ಮೇಲ್ನಡುವಿನ ಸ್ವರಗಳೆಂದು ಕರೆಯಬೇಕಾಗುತ್ತದೆ. ಎಂದರೆ, ‘ನಡು’ ಎಂಬ ಬಾಯಿಯ ಜಾಗವನ್ನು ಮೇಲ್ನಡು ಮತ್ತು ಕೆಳನಡು ಎಂಬುದಾಗಿ ಒಡೆದುಕೊಳ್ಳಬೇಕಾಗುತ್ತದೆ.

ಈ ಎಂಟು ಸ್ವರಗಳನ್ನು ಮಾತ್ರವಲ್ಲದೆ, ಬೇರೆಯೂ ಕೆಲವು ಸ್ವರಗಳನ್ನು ಕನ್ನಡದ ಒಳನುಡಿಗಳನ್ನು ವಿವರಿಸುವಲ್ಲಿ ಬಳಸಬೇಕಾಗುತ್ತದೆ. ಆದರೆ ಇವುಗಳ ಉಚ್ಚಾರಣೆಗೆ ಕೆಲವು ಅಂಶಗಳು ಬಳಕೆಯಾಗುತ್ತವೆ.

ಬೇರೆಯೇ

(1) ಉಕಾರವನ್ನು ಉಚ್ಚರಿಸುವಾಗ ತುಟಿ ದುಂಡಗಿರಬಹುದು (ಉ) ಇಲ್ಲವೇ ದುಂಡಗಿಲ್ಲದಿರಬಹುದು (ಉ್); ಈ ವ್ಯತ್ಯಾಸದ ಮೂಲಕ ಕರಾವಳಿಯ ಗವ್ಡ ಕನ್ನಡದಲ್ಲಿ ಎರಡು ಸ್ವರಗಳನ್ನು ಬೇರ್ಪಡಿಸಲಾಗುತ್ತದೆ.

(2) ಸ್ವರಗಳನ್ನು ಉಚ್ಚರಿಸುವಾಗ ಉಸಿರು ಬಾಯಿಯ ಮೂಲಕ ಮಾತ್ರವೇ ಹೊರ ಹೋಗಬಹುದು ಇಲ್ಲವೇ ಮೂಗಿನ ಮೂಲಕವೂ ಹೊರ ಹೋಗಬಹುದು. ಈ ವ್ಯತ್ಯಾಸದ ಮೂಲಕ ಕರಾವಳಿಯ ಹವ್ಯಕ ಕನ್ನಡ, ಗುಲ್ಬರ್ಗ ಕನ್ನಡ, ಹಾಲಕ್ಕಿ ಕನ್ನಡ ಮೊದಲಾದ ಕೆಲವು ಒಳನುಡಿಗಳಲ್ಲಿ ಸ್ವರಗಳನ್ನು ಬೇರ್ಪಡಿಸಲಾಗುತ್ತದೆ.

(3) ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ತುದಿ ಹಿಂದಕ್ಕೆ ಮಡಚಿರಬಹುದು ಇಲ್ಲವೇ ಮಡಚದಿರಬಹುದು; ಮಡಚಿರುವಲ್ಲೂ ಅದು ಬೇರೆ ಬೇರೆ ಪ್ರಮಾಣಗಳಲ್ಲಿ ಮಡಚಿರಬಹುದು. ಈ ವ್ಯತ್ಯಾಸದ ಮೂಲಕ ಸೊಲಿಗ ಮತ್ತು ಬಡಗ ಕನ್ನಡಗಳಲ್ಲಿ ಸ್ವರಗಳನ್ನು ಬೇರ್ಪಡಿಸಲಾಗುತ್ತದೆ. ಈ ವ್ಯತ್ಯಾಸಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗುವುದು.

Eke →

2.4.1 ಅಕಾರದ ಒಡೆತ

ಕನ್ನಡದ ಕೆಲವು ಇವತ್ತಿನ ಒಳನುಡಿಗಳಲ್ಲಿ ಅಕಾರವು ಹಿಂಗೆಳಗಿನ ಅಕಾರ ಮತ್ತು ನಡುಕೆಳನಡುವಿನ ಅ಼ಕಾರ ಎಂಬ ಎರಡು ಸ್ವರಗಳಾಗಿ ಒಡೆದು ಕೊಂಡಿದೆ. ಅಕಾರದ ಅನಂತರ ಬರುವ ಸ್ವರಗಳಲ್ಲಿ ಕೆಲವು ಬದಲಾವಣೆ ಗಳಾದುದೇ ಇದಕ್ಕೆ ಮುಕ್ಯ ಕಾರಣ.

ಈ ಒಳನುಡಿಗಳಲ್ಲಿ ಅಕಾರಕ್ಕೆ ಎರಡು ಉಚ್ಚಾರಣೆಗಳಿದ್ದುವು. ಅದರ ಅನಂತರ ಮೇಲಿನ ಸ್ವರ ಬಂದಿರುವ ಪದಗಳಲ್ಲಿ ಅದು ನಡುಕೆಳನಡುವಿನ

ಅ಼ಕಾರವಾಗಿ ಬದಲಾಗಿತ್ತು, ಮತ್ತು ಅದರ ಅನಂತರ ಇತರ ಸ್ವರಗಳಿರುವ ಪದಗಳಲ್ಲಿ ಹಿಂಗೆಳಗಿನ ಅಕಾರವಾಗಿಯೇ ಉಳಿದಿತ್ತು.

ಈ ಬದಲಾವಣೆ ನಡೆದ ಮೇಲೆ, ಈ ಒಳನುಡಿಗಳಲ್ಲಿ ಬೇರೆ ಕೆಲವು ಬದಲಾವಣೆಗಳೂ ನಡೆದಿದ್ದುವು. ಉದಾಹರಣೆಗಾಗಿ, ಇಂತಹ ಕೆಲವು ಪದಗಳಲ್ಲಿ ಅಕಾರದ ಅನಂತರ ಬಂದಿದ್ದ ಎಕಾರ ಇಕಾರವಾಗಿತ್ತು ಮತ್ತು ಬೇರೆ ಕೆಲವು ಪದಗಳಲ್ಲಿ ಅಕಾರದ ಅನಂತರ ಬಂದ ಸ್ವರ (ಇದು ಮೇಲಿನದಿರಬಹುದು ಇಲ್ಲವೇ ನಡು ಅತವಾ ಕೆಳಗಿನದಿರಬಹುದು) ಬಿದ್ದು ಹೋಗಿತ್ತು. ಈ ಬದಲಾವಣೆಗಳಿಂದಾಗಿ ಮೇಲಿನ ಎರಡು ಅಕಾರಗಳಿಗೆ ಈ ಒಳನುಡಿಗಳಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆ ಬಂದಿದೆ.

ಕೆಳಗೆ ಕೊಟ್ಟಿರುವ ಗುಲ್ಬರ್ಗ ಕನ್ನಡದ ಪದಗಳಲ್ಲಿ ಈ ಎರಡು ರೀತಿಯ ಅಕಾರಗಳಿಗೆ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿದೆ ಎಂಬುದನ್ನು ಗಮನಿಸಬಹುದು (ಉಪಾದ್ಯಾಯ 1976).

ಇಕಾರವಿದ್ದ ಪದಗಳು ಗುಲ್ಬರ್ಗ

ಬರಹ

ಬ಼ಸ಼್ರ

ಎಕಾರ ಇಕಾರವಾದ ಪದಗಳು ಗುಲ್ಬರ್ಗ ಮರೆ

ಬರಹ ಮರೆ ಕಡಲೆ

ಕತ್ತಿ ಪದದಲ್ಲಿ ಎರಡನೆಯ ಸ್ವರವಾಗಿ ಮೇಲಿನ ಸ್ವರ (ಇಕಾರ) ಬಂದಿದೆಯಾದ ಕಾರಣ, ಮೊದಲಿಗೆ ಅದರ ಅಕಾರ ನಡುಕೆಳಗಿನ ಅ಼ಕಾರವಾಗಿಯೂ ಮತ್ತು ಕತ್ತೆ ಪದದಲ್ಲಿ ಎರಡನೆಯ ಸ್ವರವಾಗಿ ಮೇಲ್ನಡುವಿನ ಸ್ವರ (ಎಕಾರ) ಬಂದಿದೆಯಾದ ಕಾರಣ, ಅದರ ಅಕಾರ ಅಕಾರವಾಗಿಯೂ ಗುಲ್ಬರ್ಗ ಕನ್ನಡದಲ್ಲಿ ಉಚ್ಚಾರವಾಗುತ್ತಿದ್ದಿರಬೇಕು.

ಸೂಚಿಸಲು

ಅನಂತರ  ಕತ್ತೆ  ಪದದ  ಎರಡನೆಯ  ಸ್ವರ  (ಎಕಾರ)  ಮೇಲಿನ  ಸ್ವರವಾಗಿ  (ಇಕಾರವಾಗಿ)  ಬದಲಾದುದರಿಂದ  ಈ  ಎರಡು  ಪದಗಳ  ನಡುವಿನ  ಅರ್ತವ್ಯತ್ಯಾಸವನ್ನು  ಮೊದಲಿನ  ಹಾಗೆ  ಅವುಗಳ  ಎರಡನೆಯ  ಸ್ವರಗಳು  ಸಾದ್ಯವಾಗದ  ಹಾಗಾಯಿತು.  ಯಾಕೆಂದರೆ,  ಎರಡರಲ್ಲೂ ಈಗ ಎರಡನೆಯ ಸ್ವರವಾಗಿ ಇಕಾರವೇ ಬರುತ್ತಿದೆ. ಹಾಗಾಗಿ  ಆ  ಅರ್ತವ್ಯತ್ಯಾಸವನ್ನು  ಅವುಗಳ  ಮೊದಲನೆಯ  ಸ್ವರದಲ್ಲಿದ್ದ  ಅ಼-ಅ  (ನಡುಕೆಳನಡುವಿನ  ಅ಼ಕಾರ  ಮತ್ತು  ಹಿಂಗೆಳಗಿನ  ಅಕಾರ)  ವ್ಯತ್ಯಾಸವೇ  ಸೂಚಿಸುವಂತಾಗಿರಬೇಕು. ಇತರ ಪದಗಳಲ್ಲೂ ಹೀಗೆಯೇ.  

Eke →

2.4.2 ದುಂಡಗಿಲ್ಲದ ಉಕಾರ

ಕರಾವಳಿಯ (ಸುಳ್ಯದ) ಗೌಡ ಕನ್ನಡದಲ್ಲಿ ಉಕಾರ ದುಂಡಗಿನ ಉ ಮತ್ತು ದುಂಡಗಿಲ್ಲದ ಉ್ ಎಂಬ ಎರಡು ಉಗಳಾಗಿ ಒಡೆದುಕೊಂಡಿದೆ. ಉದಾ ಹರಣೆಗಾಗಿ, ಗವ್ಡ ಕನ್ನಡದ ಅದ್ ‘ಅದು’’ಪದದ ಕೊನೆಯಲ್ಲಿ ದುಂಡಗಿಲ್ಲದ ಉಕಾರ ಬಂದಿದೆ. ಕೊಟ್್ಟ ‘ಕೊಟ್ಟು’’ಮತ್ತು ಕೊಟ್ಟು ‘ಹಾರೆ’ ಎಂಬಂತಹ ಪದಜೋಡಿಗಳಲ್ಲಿ ಈ ವ್ಯತ್ಯಾಸಕ್ಕೆ ಅರ್ತವನ್ನು ಸೂಚಿಸುವ ಕೆಲಸ ಬಂದಿದೆ.

ಆದರೆ ಈ ಬದಲಾವಣೆ ಒಟ್ಟಿನ ಸ್ವರಗಳಲ್ಲಿ ಮಾತ್ರ ನಡೆದಿದೆಯಾದ ಕಾರಣ ಅದರ ಸ್ವರೂಪವನ್ನು ಮುಂದಿನ ಅದ್ಯಾಯದಲ್ಲಿ (3.6.6ರಲ್ಲಿ) ವಿವರಿಸಲಾಗುವುದು.

Eke →

2.4.3 ಮೂಗಿಸಿದ ಸ್ವರಗಳು

ಎರಡಕ್ಕಿಂತ ಹೆಚ್ಚು ಉಲಿಕಂತೆಗಳಿರುವ ಪದ ಇಲ್ಲವೇ ಪದರೂಪಗಳ ಕೊನೆಯಲ್ಲಿ ಬಂದಿರುವ ನಕಾರ ಇಲ್ಲವೇ ಮಕಾರ ಬರಹ ಕನ್ನಡದ ಹಲವು ಪದ ಮತ್ತು ಪದರೂಪಗಳಲ್ಲಿ ಬಿದ್ದು ಹೋಗಿದೆ. ಆದರೆ ಕನ್ನಡದ

ಕೆಲವು ಒಳನುಡಿಗಳಲ್ಲಿ ಈ ಬಿದ್ದು ಹೋದ ಮೂಗುಲಿಯ ಅವಶೇಶವಾಗಿ ಅದರ ಮೊದಲಿದ್ದ ಸ್ವರ ‘ಮೂಗಿಸಿದ’ ಸ್ವರವಾಗಿ ಬದಲಾಗಿದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಪದ ಮತ್ತು ಪದರೂಪಗಳನ್ನು ಹಳೆಗನ್ನಡ ಮತ್ತು ಬರಹ ಕನ್ನಡದ ಪದ ಮತ್ತು ಪದ ರೂಪಗಳೊಂದಿಗೆ ಹೋಲಿಸಿ ನೋಡಬಹುದು.

ಹಳೆಗನ್ನಡ ಬಂದನ್
ಪೋದನ್ ಮಗನ್
ಅಕ್ಕನ್

ಬರಹ ಕನ್ನಡ ಹೋದ
ಮಗ

ಹವ್ಯಕ ಕನ್ನಡ ಹೋದ ᵒ ಮಗ ᵒ

ಆದರೆ ಈ ಮೂಗಿಸಿದ ಸ್ವರಗಳು ಹವ್ಯಕ ಕನ್ನಡದಲ್ಲಿ ಪದಗಳ ಬರುವುದಿಲ್ಲ. ಒಟ್ಟುಗಳಲ್ಲಿ ಬೇರುಗಳಲ್ಲಿಯೂ ಇಂತಹ ಮೂಗಿಸಿದ ಸ್ವರ ಬರುವುದನ್ನು ಕನ್ನಡದ ಬೇರೆ ಒಳನುಡಿಗಳಲ್ಲಿ ಕಾಣಬಹುದು.

ಬರುತ್ತವಲ್ಲದೆ

ಬೇರುಗಳಲ್ಲಿ

ಉದಾಹರಣೆಗಾಗಿ,

ಮೂಲದ್ರಾವಿಡದ ಹೊಸಗನ್ನಡದಲ್ಲಿ ಹಾವು ಎಂಬುದಾಗಿ ಬದಲಾಗಿದೆ; ಆದರೆ ಕೆಲವು ಒಳನುಡಿಗಳಲ್ಲಿ ಇದು ಹಾᵒವು ಎಂಬುದಾಗಿ ಉಚ್ಚಾರಣೆಯಲ್ಲಿದ್ದು ಅದರಲ್ಲಿ ಬಿದ್ದು ಹೋಗಿರುವ ಮಕಾರ ಮೂಗಿಸಿದ ಆ ᵒ ಸ್ವರದಲ್ಲಿ ಉಳಿದುಕೊಂಡಿದೆ.

ಪಾಂಬು

Eke →

2.4.4 ಮಡಚಿದ ಸ್ವರಗಳು

ಕನ್ನಡದ ಬಡಗ ಮತ್ತು ಸೊಲಿಗ ಒಳನುಡಿಗಳಲ್ಲಿ ಸ್ವರಗಳು ಮಡಚಿದ ಮತ್ತು ಮಡಚದ ಸ್ವರಗಳಾಗಿ ಒಡೆದುಕೊಂಡಿವೆ. ಇವುಗಳಲ್ಲಿ ಮಡಚಿದ ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ತುದಿ, ಟ, ಡ, ಣ, ಳಗಳ ಸೊಲಿಗರ ಉಚ್ಚಾರಣೆಯಲ್ಲಿರುವ ಹಾಗೆ, ಒಳಕ್ಕೆ ಮಡಚಿರುತ್ತದೆ.

ಒಳನುಡಿಯಲ್ಲಿ ಇದೊಂದು ಉಚ್ಚಾರಣೆಯ ಸಂಗತಿ ಮಾತ್ರ. ಆದರೆ ಬಡಗರ ಒಳನುಡಿಯಲ್ಲಿ ಇದು ಅರ್ತಬೇದವನ್ನೂ ಸೂಚಿಸುತ್ತದೆ.

ಸೊಲಿಗರ ಕನ್ನಡದಲ್ಲಿ ಇಂತಹ ಮಡಚಿದ ಸ್ವರಗಳು ಅವುಗಳ ಅನಂತರ ಮಡಚಿದ ವ್ಯಂಜನವೊಂದು (ಟ್, ಡ್, ಣ್ ಇಲ್ಲವೇ ಳ್) ಬಂದಿರುವಲ್ಲಿ ಮಾತ್ರ ಕಾಣಿಸುತ್ತದೆ. ಇದಲ್ಲದೆ, ಇಂತಹ ಮಡಚಿದ ಸ್ವರ ಕಾಣಿಸಬೇಕಿದ್ದಲ್ಲಿ ಅವುಗಳ ಮೊದಲು ಕಕಾರ ಇಲ್ಲವೇ ಗಕಾರ ಇರಬೇಕು ಇಲ್ಲವೇ ಅವುಗಳ ಅನಂತರ ಬಂದಿರುವ ಮಡಚಿದ ವ್ಯಂಜನದ ಅನಂತರ ಮೇಲಿನ ಸ್ವರವೊಂದು ಬಂದಿರಬೇಕು (ಗುರುಬಸವೇ ಗವ್ಡ 1968). ಹಾಗಾಗಿ, ಈ ವ್ಯತ್ಯಾಸಕ್ಕೆ ಸೊಲಿಗ ಒಳನುಡಿಯಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿಲ್ಲ.

ಆದರೆ, ಬಡಗ ಒಳನುಡಿಯಲ್ಲಿ ಈ ಬದಲಾವಣೆ ಎರಡು ಹೆಜ್ಜೆ ಮುಂದೆ ಹೋಗಿದೆ. ಅದರಲ್ಲಿ ಪೂರ್ತಿ ಮಡಚಿದ, ಅರೆ ಮಡಚಿದ ಮತ್ತು ಸ್ವರಗಳು ಮಡಚದ ಉಚ್ಚಾರಣೆಯಲ್ಲಿವೆ ಮತ್ತು ಅವೆಲ್ಲಕ್ಕೂ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆಯಿದೆ.

ಸ್ವರಗಳೆಂಬುದಾಗಿ

ಮೂರು

ಳಕಾರ ಮತ್ತು ೞಕಾರಗಳು ಹತ್ತಿರವಿರುವಲ್ಲೆಲ್ಲ ಸ್ವರಗಳು ಈ ರೀತಿ ಮಡಚಿದ ಸ್ವರಗಳಾಗಿ ಬದಲಾಗಿದ್ದು, ಅನಂತರ ಆ ವ್ಯಂಜನಗಳು (ಳಕಾರ ಮತ್ತು ೞಕಾರಗಳು) ಬಿದ್ದುಹೋದುದರಿಂದಾಗಿ ಅವಕ್ಕೆ ಅರ್ತವ್ಯತ್ಯಾಸವನ್ನು ಹೊರುವ ಹೊಣೆ ದೊರೆತಿದೆಯುಂದು ಈ ಬದಲಾವಣೆಯನ್ನು ಸ್ತೂಲವಾಗಿ ವಿವರಿಸಬಹುದು.
ಬಡಗ ಒಳನುಡಿಯಲ್ಲಿ ಕಾಣಿಸುವ ಈ ಸ್ವರಗಳಿಗೆ ಕೆಳಗಿನ ಪದಗಳನ್ನು ಉದಾಹರಣೆಗಳನ್ನಾಗಿ ಕೊಡಬಹುದು (ಎಮೆನೋ 1940):

ಬಡಗರ ಕನ್ನಡ

ಅರೆಮಡಚಿದ ಸ್ವರ ಪೂರ್ತಿ ಮಡಚಿದ ಸ್ವರ ಮಡಚದ ಸ್ವರ ಕತ್ತೆ ‘ಕಲಿತೆ’ ಕತ್ತೆ ‘ಹಿಡಿ ಎಲೆ’’ ಕತ್ತೆ ‘ಕತ್ತೆ’’ ಬೇ ’‘ಬಾಯಿ’ ಬೇ ’‘ಬಳೆ’’ ಬೇ ’‘ಬೆಳೆ’’

ಗೀ ’‘ಗೇಯು’’ ಕೀ ’‘ಕೀಳು’ ಕಯ್ ‘ಕಯ್’’ ಕಯ್ ‘ಕಳೆ’

ಕೀಎ ‘ಕೆಳಗೆ’ ಕಯ್ ‘ಕೊಳೆತ ಹಣ್ಣು’

ಮೇಲೆ ಮೊದಲನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಮೊದಲ ನೆಯ ಸ್ವರ ಮಡಚದ ಸ್ವರವಾಗಿದೆ; ಆದರೆ ಎರಡನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಮೊದಲನೆಯ ಸ್ವರ ಅರೆಮಡಚಿದ ಸ್ವರವಾಗಿದೆ ಮತ್ತು ಮೂರನೆಯ ಕಾಲಂನಲ್ಲಿ ಬಂದಿರುವ ಪದಗಳಲ್ಲಿ ಅದು ಪೂರ್ತಿ ಮಡಚಿದ ಸ್ವರವಾಗಿದೆ (ಇದನ್ನಿಲ್ಲಿ ಚಿಹ್ನೆಗಳ ಮೂಲಕ ಸೂಚಿಸಲು ಪ್ರಯತ್ನಿಸಿಲ್ಲ).

ಎಮೆನೋ ಅವರು 1940ರಲ್ಲಿ ವರ್ಣಿಸಿದ ಈ ವ್ಯತ್ಯಾಸದ ಕುರಿತು ಬಾಲಕ್ರುಶ್ಣನ್ ಅವರು 1999ರಲ್ಲಿ ಬರೆದಿರುವ ಬಡಗ ವ್ಯಾಕರಣದಲ್ಲಿ (ಬಾಲಕ್ರುಶ್ಣನ್ 1999) ಏನೂ ಹೇಳಿಲ್ಲ. ಅವರ ಸಮಯಕ್ಕಾಗುವಾಗ ಆ ವ್ಯತ್ಯಾಸ ಇಲ್ಲವಾಗಿತ್ತೋ ಅತವಾ ಅದನ್ನು ಉಳಿಸಿಕೊಂಡಿರುವ ಬಡಗ ಕನ್ನಡಿಗರು ಅವರ ಗಮನಕ್ಕೆ ಬರಲಿಲ್ಲವೋ ತಿಳಿಯದು. ಇದಲ್ಲದೆ, ಎಮೆನೋ ಅವರ 1940ರ ಬರಹವನ್ನು ಬಾಲಕ್ರುಶ್ಣನ್ ಗಮನಿಸಿದ ಹಾಗೂ ಕಾಣಿಸುವುದಿಲ್ಲ.

ಎಮೆನೋ ಅವರ ಬರಹದಲ್ಲಿದ್ದ ಮೇಲಿನ ಪದಗಳು ಬಾಲಕ್ರುಶ್ಣನ್ ಕೊಟ್ಟಿರುವ ಪದಕೋಶದಲ್ಲಿ ಒಂದೇ ರೂಪದವಾಗಿ ಬರುತ್ತವೆ. ಉದಾ ಹರಣೆಗಾಗಿ ‘ಬಾಯಿ’, ‘ಬಳೆ’ ಮತ್ತು ‘ಬೆಳೆ’ ಎಂಬ ಮೂರು ಅರ್ತದಲ್ಲೂ ಬೇ ಎಂಬ ಒಂದೇ ಪದ ಬರುತ್ತದೆ.

Eke →

2.5 ತಿರುಳು

ಮೂಲದ್ರಾವಿಡದ ಬೇರುಗಳಲ್ಲಿ ಸ್ವರಗಳ ಬಳಕೆ ಹೇಗಿತ್ತು ಮತ್ತು ಅದು ಕನ್ನಡದಲ್ಲಿ ಯಾವ ರೀತಿಯಲ್ಲೆಲ್ಲ ಬದಲಾಗಿದೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. ಬೇರುಗಳ ಸ್ವರಗಳಲ್ಲಿದ್ದ ’ಮೇಲೆ-ನಡುವೆ’ ವ್ಯತ್ಯಾಸ ಮೂಲತೆಂಕು ದ್ರಾವಿಡದ ಕಾಲದಲ್ಲೇನೇ ಅವುಗಳ ಅನಂತರ ಒಟ್ಟಿನ ಜಾಗದಲ್ಲಿ ಅಕಾರ

ಬಂದಿರುವಲ್ಲಿ ಅಳಿದು ಹೋಗಿತ್ತು. ಈ ಬದಲಾವಣೆಯ ಪರಿಣಾಮವನ್ನು ತುಳು ಮತ್ತು ಕೊರಗ ನುಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತೆಂಕು ದ್ರಾವಿಡ ನುಡಿಗಳಲ್ಲೂ ಕಾಣಬಹುದು. ಇದಲ್ಲದೆ, ನೆರೆಯ ನುಡಿಯಾದ ತೆಲುಗಿನಲ್ಲಿ ಮತ್ತು ಬೇರೆ ಕೆಲವು ನಡುದ್ರಾವಿಡ ನುಡಿಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ.

ಈ ಬದಲಾವಣೆಯಲ್ಲದೆ, ಕನ್ನಡದಲ್ಲಿ ನಡೆದ ಬೇರೆಯೂ ಕೆಲವು ಬದಲಾವಣೆಗಳು ಮೂಲದ್ರಾವಿಡದ ಬೇರುಗಳಲ್ಲಿ ಬರುತ್ತಿದ್ದ ಸ್ವರಗಳ ಸ್ವರೂಪವನ್ನು ಬದಲಾಯಿಸಿವೆ.

ಬೇರುಗಳ

ಸ್ವರಗಳಲ್ಲಿದ್ದ

ವ್ಯತ್ಯಾಸ ಮೂಲದ್ರಾವಿಡದಲ್ಲೇನೇ ಸೇರಿಕೆಯ ನಿಯಮವೊಂದಕ್ಕೆ ಒಳಗಾಗಿತ್ತು. ಅನಂತರ ಕನ್ನಡದ ಚರಿತ್ರೆಯಲ್ಲೂ ಇದು ಕೆಲವು ಬದಲಾವಣೆಗಳನ್ನು ಕಂಡಿದೆ. ಇವನ್ನೆಲ್ಲ ಮೇಲೆ ವಿವರವಾಗಿ ಪರಿಶೀಲಿಸಲಾಗಿದೆ.

ಉದ್ದ-ಗಿಡ್ಡ

ಈ ಸ್ವರಗಳ ಅನಂತರ ಬಂದಿದ್ದ ಒಟ್ಟುಗಳಲ್ಲಿ ಎಂತಹ ಸ್ವರಗಳು ಬರಬಲ್ಲುವಾಗಿದ್ದುವು ಮತ್ತು ಇವು ಕನ್ನಡದಲ್ಲಿ ಹೇಗೆ ಬದಲಾಗಿವೆ ಎಂಬುದನ್ನು ಮುಂದಿನ ಅದ್ಯಾಯದಲ್ಲಿ ವಿವರಿಸಲಾಗುವುದು.