← Ch 4  ·  Contents  ·  Ch 6 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

5. ಇತರ ವ್ಯಂಜನಗಳು

Eke →

5.1 ಮುನ್ನೋಟ

ಹಿಂದಿನ ಅದ್ಯಾಯದಲ್ಲಿ ಕನ್ನಡದಲ್ಲಿ ಎಂಬುದನ್ನು ವಿವರಿಸಲಾಗಿತ್ತು.

ತಡೆಯುಲಿಗಳು ಮೂಲದ್ರಾವಿಡದಲ್ಲಿದ್ದ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ

ಮೂಲದ್ರಾವಿಡದಲ್ಲಿದ್ದ ಇತರ ವ್ಯಂಜನಗಳು, ಎಂದರೆ ನಾಲ್ಕು ಮೂಗುಲಿಗಳು (ಮ, ನ, ಣ, ಞ), ಒಂದು ಹೊಡೆಯುಲಿ (ರ), ಎರಡು ಪಕ್ಕದುಲಿಗಳು (ಲ, ಳ) ಮತ್ತು ಮೂರು ತಡೆಯಿಲ್ಲದುಲಿಗಳು (ಯ, ವ, ೞ) ಕನ್ನಡದಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗುವುದು.

Eke →

5.2 ಮೂಗುಲಿಗಳು

ಮೂಲದ್ರಾವಿಡದಲ್ಲಿ ಮ, ನ, ಣ ಮತ್ತು ಞಗಳೆಂಬ ನಾಲ್ಕು ಮೂಗುಲಿ ಗಳಿದ್ದುವು. ಇವುಗಳಲ್ಲಿ ಣಕಾರವನ್ನು ಬಿಟ್ಟು ಉಳಿದ ಮೂರು ಮೂಗುಲಿಗಳು (ಮ, ನ ಮತ್ತು ಞಗಳು) ಮೂಲದ್ರಾವಿಡ ಪದಗಳ ಮೊದಲನೆಯ ವ್ಯಂಜನವಾಗಿ ಬರಬಲ್ಲುವಾಗಿದ್ದುವು ಮತ್ತು ಞಕಾರವನ್ನು ಬಿಟ್ಟು ಉಳಿದ ಮೂರು ಮೂಗುಲಿಗಳು (ಮ, ನ, ಣಗಳು) ಎರಡನೆಯ ವ್ಯಂಜನವಾಗಿ ಬರಬಲ್ಲುವಾಗಿದ್ದುವು. ಪದಗಳ ಎರಡನೆಯ ವ್ಯಂಜನವಾಗಿ ಬರುವ ಮೂಗುಲಿಗಳು ಒತ್ತೆ ರೂಪದಲ್ಲಿ ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ ಬರಬಲ್ಲುವಾಗಿದ್ದುವು.

ಇದಲ್ಲದೆ, ಈ ನಾಲ್ಕು ಮೂಗುಲಿಗಳೂ ತಡೆಯುಲಿಗಳ ಮೊದಲು ಬರಬಲ್ಲುವಾಗಿದ್ದುವು. ಆದರೆ ಈ ಸನ್ನಿವೇಶದಲ್ಲಿ ಕಕಾರ, ಱಕಾರ ಮತ್ತು

ತಕಾರಗಳ ಎದುರು ನಕಾರ ಮಾತ್ರ ಬರಲು ಸಾದ್ಯವಿದ್ದು, ಅದಕ್ಕೆ ಆ ತಡೆಯುಲಿಗಳದೇ ಆದ ಜಾಗಗಳಲ್ಲಿ ಉಂಟಾಗುವ ಮೂರು ಬೇರೆ ಬೇರೆ ಉಚ್ಚಾರಣೆಗಳಿದ್ದುವು. ಉಳಿದ ಮೂಗುಲಿಗಳಲ್ಲಿ ಮಕಾರ ಪಕಾರದೆದುರು, ಣಕಾರ ಟಕಾರದೆದುರು ಮತ್ತು ಞಕಾರ ಚಕಾರದೆದುರು ಮಾತ್ರ ಬರಬಲ್ಲು ವಾಗಿದ್ದುವು.

Eke →

5.2.1 ಪದಗಳ ಮೊದಲಿನ ಮೂಗುಲಿಗಳು

ಮೂಲದ್ರಾವಿಡದಲ್ಲಿ ಪದಗಳ ಮೊದಲಿಗೆ ಬರಬಲ್ಲ ಮ, ನ ಮತ್ತು ಞಗಳಲ್ಲಿ ಮ ಮತ್ತು ನಗಳು ಕನ್ನಡದಲ್ಲಿ ಹೆಚ್ಚು ಬದಲಾಗದೆ ಹಾಗೆಯೇ ಉಳಿದಿವೆ. ಞಕಾರ ಮಾತ್ರ ನಕಾರವಾಗಿ ಬದಲಾಗಿದೆ.

(1) ಮಕಾರ ಮತ್ತು ನಕಾರಗಳು ಕನ್ನಡದಲ್ಲಿ ಹೆಚ್ಚು ಬದಲಾಗದೆ ಹಾಗೆಯೇ ಉಳಿದಿವೆಯುಂಬುದಕ್ಕೆ ಉದಾಹರಣೆಯಾಗಿ ಮರ, ಮಾತು, ಮೀರು, ಮುಚ್ಚು, ಮೇಲೆ, ಮೇಯು; ನಾನು, ನೀರು, ನುಂಗು, ನೋಡು ಮೊದಲಾದ ಪದಗಳನ್ನು ಕೊಡಬಹುದು.

(2) ಪದಗಳ ಮೊದಲಿಗೆ ಬರುತ್ತಿದ್ದ ಞಕಾರ ಕನ್ನಡದಲ್ಲಿ ನಕಾರವಾಗಿ ಬದಲಾಗಿದೆ ಮಾತ್ರವಲ್ಲ, ಅದರ ಅನಂತರ ಬಂದಿದ್ದ ಆ ಎಂಬ ಸ್ವರವೂ ಕೆಲವು ಪದಗಳಲ್ಲಿ ಏ ಎಂಬ ಸ್ವರವಾಗಿ ಬದಲಾಗಿದೆ. ಉದಾಹರಣೆಗಾಗಿ, ಞಕಾರವನ್ನು ಮತ್ತು ಅದರ ಅನಂತರ ಬಂದಿರುವ ಆ ಎಂಬ ಸ್ವರವನ್ನು ಹೆಚ್ಚಿನೆಡೆಗಳಲ್ಲೂ ಬದಲಾಯಿಸದೆ ಉಳಿಸಿಕೊಂಡಿರುವ ಮಲಯಾಳ ಪದಗಳೊಂದಿಗೆ ಕೆಳಗೆ ಕೊಟ್ಟಿರುವ ಕನ್ನಡದ ಪದಗಳನ್ನು ಹೋಲಿಸಿ ನೋಡ ಬಹುದು.

(ಕ) ಞಕಾರ ನಕಾರವಾಗಿರುವುದು

ಕನ್ನಡ
ನರಳು
ನಾಱು
ನಿಮಿರು, ನಿಗುರು

ಮಲಯಾಳ ಞಾಱು ಞಿಮಿರ್ (ತಮಿಳು)

ನೇಗಿಲು

ಞೆಙ್ಙೋಳ್

(ಚ) ಆ ಸ್ವರ ಏ ಸ್ವರವಾಗಿರುವುದು

ಕನ್ನಡ
ನೇಣು
ನೇಸಱ್ ನೇಲು
ನೇರಳೆ
ನೇಗಿಲು

ಮಲಯಾಳ ಞಾಯಿಱು ಞಾಲು ಞಾಱಲ್ ಞಾಞ್ಚಲ್ (ತಮಿಳು)

(3) ಕರಾವಳಿಯ ಹವ್ಯಕ ಕನ್ನಡದಲ್ಲಿ ಮೂಲದ್ರಾವಿಡ ಞಕಾರ ಕೆಲವು ಪದಗಳಲ್ಲಿ ಉಳಿದುಕೊಂಡಿದೆ. ಈ ಒಳನುಡಿಯ ಞಙ್ಙು ಇಲ್ಲವೇ ಞಳಿ ‘ನಗ್ಗು’, ಞಾಣು ‘ಗರಿಗರಿಯಾಗಿಲ್ಲದಿರು (ಹಪ್ಪಳ)’, ಞೋಣ ‘ಗಂಡು ಎಮ್ಮೆಕರು’, ಞೋಣಿ ‘ಹೆಣ್ಣು ಎಮ್ಮೆಕರು’, ಞೋಳಿ ‘ಲೋಳೆ’ ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಪದಗಳನ್ನು ಅದು

ತುಳುವಿನಿಂದ ಇಲ್ಲವೇ ಮಲಯಾಳದಿಂದ ಎರವಲಾಗಿ ಪಡೆದಿರಲೂ ಸಾದ್ಯವಿದೆ. ಯಾಕೆಂದರೆ, ನರಂಬು ‘ನರ’, ನರಕ್ಕು ‘ನರಳು’, ನಕ್ಕುರುಳು ‘ಎರೆಹುಳ’, ನೇಗಿಲು, ನೇಣು, ನೇಲು ‘ನೇತಾಡು’, ನಾರು, ನೆರಿಗೆ ‘ನಿರಿಗೆ’ ಮೊದಲಾದ ಬೇರೆ ಹಲವು ಹವ್ಯಕ ಕನ್ನಡ ಪದಗಳಲ್ಲಿ ಮೂಲದ್ರಾವಿಡದ ಞಕಾರ ನಕಾರವಾಗಿಯೇ ಕಾಣಿಸಿಕೊಳ್ಳುತ್ತದೆ.

(4) ಪದಗಳ ಮೊದಲಿಗೆ ಬಂದಿದ್ದ ನಕಾರ ಕನ್ನಡದ ಕೆಲವು ಪದಗಳಲ್ಲಿ ಬಿದ್ದುಹೋಗಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು (ಕ) ಬೇರೆ ದ್ರಾವಿಡ ನುಡಿಗಳ ಪದಗಳೊಂದಿಗೆ ಇಲ್ಲವೇ (ಚ) ಕನ್ನಡದವೇ ಆದ ಬೇರೆ ಪದಗಳೊಂದಿಗೆ ಹೋಲಿಸಿ ನೋಡಬಹುದು.

ಇತರ ದ್ರಾವಿಡ ನುಡಿಗಳು

ಕನ್ನಡ
ಅವುಡು ‘ಕೆಳದುಟಿ’’ ತಮಿಳು: ನಮುಟು ಅರಳ್ ‘ಹೆದರಿಕೆ’’

ಪಾಜ್ರಿ: ನರ್ ತಮಿಳು: ನೀಂದು

ಕನ್ನಡ
ಎಗರು ‘ಏರು’’

ಕನ್ನಡ

ನೀರು

ಈ ಬದಲಾವಣೆ ಹೆಚ್ಚಿನ ದ್ರಾವಿಡ ನುಡಿಗಳಲ್ಲೂ ಕಾಣಿಸುತ್ತಿದೆಯಾದ ಕಾರಣ, ಅದು ಮೂಲದ್ರಾವಿಡದಲ್ಲೇನೇ ನಡೆದಿರಬೇಕೆಂದು ಕಲ್ಪಿಸಲಾಗಿದೆ. ಆದರೆ, ಇವತ್ತು ಅದು ಬೇರೆ ಬೇರೆ ದ್ರಾವಿಡ ನುಡಿಗಳ ಬೇರೆ ಬೇರೆ ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪದಗಳಲ್ಲಿ ಮೊದಲಿಗೆ ಬಂದಿದ್ದ ನಕಾರ ಕನ್ನಡದಲ್ಲಿ ಉಳಿದಿದೆ ಆದರೆ ಬೇರೆ ಕೆಲವು ದ್ರಾವಿಡ ನುಡಿಗಳಲ್ಲಿ ಬಿದ್ದುಹೋಗಿದೆ.

ಕನ್ನಡ
ನಿನ್ನೆ ನಿಲ್ಲು
ನೀನು
ನೆತ್ತರು

ಬೇರೆ ದ್ರಾವಿಡ ನುಡಿಗಳು ನಾಯ್ಕಿ: ಅಡ್್ಗ- ಮಲಯಾಳ: ಇನ್ನಲೆ ಕೋಲಾಮಿ: ಇಲ್- ತುಳು: ಈ, ಗದಬ: ಈನ್ ನಾಯ್ಕಿ: ಎತ್ತುರ್

Eke →

5.2.2 ಸ್ವರಗಳ ನಡುವಿನ ಒತ್ತೆ ಮೂಗುಲಿಗಳು

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡ ಬೇರುಗಳ ಎರಡನೆಯ ವ್ಯಂಜನವಾಗಿ ನ, ಮ ಮತ್ತು ಣಗಳು ಮಾತ್ರ ಬರಬಲ್ಲುವಾಗಿದ್ದುವು. ಹಾಗಾಗಿ, ಎರಡು ಸ್ವರಗಳ ನಡುವೆಯೂ ಈ ಮೂರು ಮೂಗುಲಿಗಳು

ಮಾತ್ರ ಒತ್ತೆ ಬರಬಲ್ಲುವಾಗಿದ್ದುವು.

ರೂಪದಲ್ಲಿ ಇಲ್ಲವೇ ಇಮ್ಮಡಿ

ರೂಪದಲ್ಲಿ

ಒತ್ತೆ ರೂಪದಲ್ಲಿ ಬಂದ ಈ ಮೂರು ಮೂಗುಲಿಗಳಲ್ಲಿ ನಕಾರ ಮತ್ತು ಣಕಾರಗಳು ಕನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ಬದಲಾಗದೆ ಉಳಿದಿವೆ. ಬರಹ ಕನ್ನಡದ ಮನೆ, ಕನಸು, ಆನೆ, ಜಿನುಗು; ಹಣಿಗೆ, ಬೆಣೆ, ತಣಿ, ಪದಗಳನ್ನು ಇದಕ್ಕೆ ಉದಾಹರಣೆಗಳಾಗಿ ಕೊಡಬಹುದು.

ಮೊದಲಾದ

(1) ಆದರೆ, ಎರಡು ಸ್ವರಗಳ ನಡುವೆ ಬಂದ ಮಕಾರ ಹೆಚ್ಚಿನ ಪದ ಗಳಲ್ಲೂ ವಕಾರವಾಗಿ ಬದಲಾಗಿದೆ. ಹಳೆಗನ್ನಡದಲ್ಲೇನೇ ಕೆಲವು ಪದಗಳಲ್ಲಿ ಮಕಾರವಿರುವ ಮತ್ತು ಅದರ ಬದಲು ವಕಾರ ಬಂದಿರುವ ಎರಡು ರೀತಿಯ ರೂಪಗಳನ್ನೂ ಕಾಣಬಹುದು.

ಮಕಾರವಿರುವ ರೂಪ ಅಮುಂಕು ತಾಮರೆ
ತೆಮರ್ ‘ಕಟ್ಟೆ, ದಡ’’
ತಿಮಿರ್ ‘ಕಂಪಿನ ದ್ರವ್ಯ’’
ಸಮನಿಸು

ವಕಾರವಿರುವ ರೂಪ ಅವುಂಕು ತಾವರೆ ತೆವರ್ ಸವನಿಸು

ಇದಲ್ಲದೆ,

ಮೊದಲಿಗೆ

ಮಕಾರವಿದ್ದ

ಸ್ವರದಲ್ಲಿ ಕೊನೆಗೊಳ್ಳುವ ಪದದ ಅನಂತರ ಬಂದಾಗ, ಅವುಗಳ ಮಕಾರ ವಕಾರವಾಗುವಂತಹ ಒಂದು ಅನಿಯಮಿತವಾದ ಸೇರಿಕೆಯ ನಿಯಮವೂ ಹಳೆಗನ್ನಡದ ಕಾಲದಲ್ಲಿತ್ತು.

ಪದಗಳು

ಮಱು + ಮಾತು ಇನಿ + ಮಾತು
ಕಡು + ಮಳೆ

ಮಱುವಾತು ಇನಿವಾತು ಕಡುವಳೆ

ನಟ್ಟೆ + ಮನೆ
ಪೞ + ಮಾತು
ಬಿಱು + ಮಳೆ

ನಟ್ಟೆವನೆ ಪೞವಾತು ಬಿಱುವಳೆ

ಹಳೆಗನ್ನಡದ ಪದಗಳಲ್ಲಿ ಬದಲಾಗದೆ ಉಳಿದಿದ್ದ ಮಕಾರಗಳಲ್ಲಿ ಕೆಳಗಿನ

ವಕಾರವಾಗಿವೆ ಎಂಬುದನ್ನು

ಹೊಸಗನ್ನಡದಲ್ಲಿ

ಹಲವು ಉದಾಹರಣೆಗಳಲ್ಲಿ ಕಾಣಬಹುದು.

ಹಳೆಗನ್ನಡದ ಮಕಾರ ಬೆಮರ್
ಕಿಮುೞ್ಚು ಸಮಱು
ತಮರ್
ಚಿಮುಟು ಸಮೆ
ಮಾಮ

ಹೊಸಗನ್ನಡದ ವಕಾರ ಬೆವರು ಕಿವುಚು ಸವರು ತವರು ಚಿವುಟು ಸವೆ ಮಾವ

ಇದಲ್ಲದೆ, ಹಳೆಗನ್ನಡ ಪದಗಳ ಕೊನೆಯಲ್ಲಿ ಬಂದಿದ್ದ ಮಕಾರದ ಅನಂತರ ಹೊಸಗನ್ನಡದಲ್ಲಿ ಒಂದು ಸೇರಿದ್ದು, ಅಂತಹ ಮಕಾರಗಳಲ್ಲಿ ಹಲವು ಹೊಸಗನ್ನಡದಲ್ಲಿ ಸ್ವರಗಳ ನಡುವಿನದಾಗಿವೆ; ಇಂತಹ ಮಕಾರಗಳೂ ಹೊಸಗನ್ನಡದಲ್ಲಿ ವಕಾರವಾಗಿ ಬದಲಾಗಿವೆ.

ಸ್ವರ

ಹಳೆಗನ್ನಡದ ಮಕಾರ ನಾಮ್
ನೀಮ್
ಕೇಳುವೆಮ್ ಮಾಡಿದೆಮ್

ಹೊಸಗನ್ನಡದ ವಕಾರ ನಾವು ನೀವು ಕೇಳುವೆವು ಮಾಡಿದೆವು

ಹೊಸಗನ್ನಡದ ಪದಗಳಲ್ಲಿ ಸ್ವರಗಳ ನಡುವೆ ಮಕಾರ ಕಾಣಿಸುವುದು ಅಪರೂಪ. ಅಮುಕು, ಉಳುಮೆ, ಗಮನ, ಕುಮುಟು, ಕುಲುಮೆ, ಕೋಮಟಿ, ಚಿಮುಕಿಸು, ದುಮುಕು ಮೊದಲಾದ ಕೆಲವು ಪದಗಳನ್ನು ಮಾತ್ರ ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಇವು ಮೇಲಿನ ಬದಲಾವಣೆ ನಡೆದ ಮೇಲೆ ಹಳೆಯ ಒಳನುಡಿಯಿಂದ ಇಲ್ಲವೇ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳಿರಬೇಕು.

(2) ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಎರಡು ಸ್ವರಗಳ ನಡುವೆ

ಬಂದ ಣಕಾರ ನಕಾರವಾಗಿದೆ (ಆಚಾರ್ಯ 1967).

ಬರಹದ ಕನ್ನಡ
ಎಣಿಸು

ಹಾಲಕ್ಕಿ ಕನ್ನಡ ಕಾನು ಹನೆ

ಇಂತಹದೇ

ಬದಲಾವಣೆ

ಚಾಮರಾಜನಗರದ

ಕೆಲವು ಒಳನುಡಿಗಳಲ್ಲೂ ನಡೆದಿದೆ. ಆದರೆ ಇಲ್ಲಿ ಣಕಾರ ನಕಾರವಾಗುವ ಬದಲು, ನಕಾರ ಣಕಾರವಾಗಿದೆ. ಉದಾಹರಣೆಗಾಗಿ, ಚಾಮರಾಜ ನಗರದ ಉಪ್ಪಲಿಗರ ಕನ್ನಡದಲ್ಲಿ ಬರಹ ಕನ್ನಡದ ಆನೆ ಎಂಬುದು ಆಣೆ ಎಂದಾಗಿದೆ (ಬಟ್ 1969 ನೋಡಿ).

Eke →

5.2.3 ಸ್ವರಗಳ ನಡುವಿನ ಇಮ್ಮಡಿ ಮೂಗುಲಿಗಳು

ಸ್ವರಗಳ ನಡುವೆ ಬಂದಿದ್ದ ಮೂಲದ್ರಾವಿಡದ ಇಮ್ಮಡಿ ಮೂಗುಲಿಗಳು (ಮ್್ಮ, ನ್್ನ ಮತ್ತು ಣ್್ಣ) ಕನ್ನಡದ ಹಲವು ಪದಗಳಲ್ಲಿ ಬದಲಾಗದೆ ಉಳಿದಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು.

ಕನ್ನಡ

ತಮಿಳು

ಅಮ್ಮ
ಸುಮ್ಮಗೆ ಕಣ್ಣಿ ‘ಹಗ್ಗ’’

ಅಮ್ಮ ಚುಮ್ಮ ಚಿನ್ನಮ್ ‘ಚಿನ್ನದ ನಾಣ್ಯ’’

(1) ಮೂಲದ್ರಾವಿಡದಲ್ಲೇನೇ ಸ್ವರದಲ್ಲಿ ಮೊದಲಾಗುವ ಒಟ್ಟು ಮೂಗುಲಿಗಳಾಗುವ ಮೂಗುಲಿಗಳು ಒತ್ತೆ ಸೇರಿದಾಗ ಇಮ್ಮಡಿ ಬದಲಾವಣೆಯೊಂದು ನಡೆದಿತ್ತು. ಹಿಂದಿನ ಅದ್ಯಾಯದಲ್ಲಿ (4.4.1ರಲ್ಲಿ) ವಿವರಿಸಿದಂತಹ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗುವ ಬದಲಾವಣೆಯನ್ನು ಇದು ಹೋಲುತ್ತದೆ.

ಒತ್ತೆ ಮೂಗುಲಿ

ಇಮ್ಮಡಿ ಮೂಗುಲಿ ಚಿಮ್ಮು ‘ಹೊರಚೆಲ್ಲು’’ ಚಿಮುಕು, ಚಿಮುಕಿಸು ಅಮ್ಮು ‘ಶಕ್ತನಾಗು’’ ಅಮಗು ‘ತಕ್ಕಾಗು’’ ದಿಮ್ಮಿ ‘ಎತ್ತರಿಸಿದ ನೆಲ’’ ತೆಮರ್ ‘ಕಟ್ಟೆ’ ಎಣ್ಣು ‘ಎಣಿಸು’

ಹವ್ಯಕ: ಉಣುಂಗು ಚಿನಿವಾರ

ಹಳೆಗನ್ನಡ  ಪದಗಳ  ಕೊನೆಯಲ್ಲಿ  ಗಿಡ್ಡ  ಸ್ವರದ  ಅನಂತರ    ಮತ್ತು  ಣ  ಮೂಗುಲಿಗಳು  ಹೊಸಗನ್ನಡದಲ್ಲಿ  ಬಂದಿದ್ದ  ನ  ಉಚ್ಚಾರಣೆಗಾಗಿ  ಉಕಾರ  ಮೂಗುಲಿಗಳಾಗಿ  ಬದಲಾಗಿವೆ  (7.9  ನೋಡಿ).  ಆದರೆ  ಇವೇ  ಮೂಗುಲಿಗಳ  ಅನಂತರ  ಸೇರಿದಾಗ,  ಅವು  ಒತ್ತೆ  ಸ್ವರದಲ್ಲಿ  ಮೂಗುಲಿಗಳಾಗಿಯೇ  ಉಳಿದಿವೆ.  ಈ  ಬದಲಾವಣೆಯೂ  ಮೇಲಿನ  ನಿಯಮವನ್ನೇ ಸೂಚಿಸುತ್ತದೆ. 

ಮೊದಲಾಗುವ ಒಟ್ಟು

ಸೇರಿದಾಗ ಇಮ್ಮಡಿ

ಹಳೆಗನ್ನಡ

ಹೊಸಗನ್ನಡ ಉಣ್ಣು, ಉಣಿ ‘ಉಣ್ಣುವವನು’’ ತಿನ್ನು, ತಿನಿಸು ಎನ್ನು, ಎನಿಸು

(3) ಇಮ್ಮಡಿ ರೂಪದಲ್ಲಿ ಬಂದ ಬರಹ ಕನ್ನಡದ ಣಕಾರ ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ನಕಾರವಾಗಿದೆ ಮತ್ತು ಇದಕ್ಕೆ ವಿರುದ್ದವಾಗಿ, ಇಮ್ಮಡಿ ರೂಪದಲ್ಲಿ ಬಂದ ನಕಾರ ಚಾಮರಾಜನಗರದ ಕೆಲವು ಒಳನುಡಿಗಳಲ್ಲಿ ಣಕಾರವಾಗಿದೆ. ಇವೆರಡರಲ್ಲೂ ನ-ಣಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ ಎಂಬುದನ್ನು ಗಮನಿಸಬಹುದು.

ಬರಹ ಕನ್ನಡ ಬೆಣ್ಣೆ

ಬರಹ ಕನ್ನಡ ನಿನ್ನೆ

ಹಾಲಕ್ಕಿ ಕನ್ನಡ ಬೆನ್ನೆ ಕನ್ನು

ಚಾಮರಾಜನಗರದ ಉಪ್ಪಲಿಗರ ಕನ್ನಡ

Eke →

5.2.4 ತಡೆಯುಲಿಗಳ ಮೊದಲು ಬಂದ ಮೂಗುಲಿಗಳು

ಹೆಚ್ಚಿನೆಡೆಗಳಲ್ಲೂ ತಡೆಯುಲಿಗಳ ಮೊದಲು ಬಂದ ಮೂಗುಲಿಗಳು ಕನ್ನಡದಲ್ಲಿ ಬದಲಾಗದೆ ಉಳಿದಿವೆ. ತೆಂಕ, ತೆಂಗು; ಕಂತೆ, ಅಂದ, ತೊಂದರೆ; ಅಂಚು, ಮಂಜು; ಅಂಟು, ನೆಂಟ, ಹಿಂಡು; ತಂಪು, ತುಂಬು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

ಈ ಪದಗಳಲ್ಲಿ ತಡೆಯುಲಿಗಳ ಮೊದಲು ಕಾಣಿಸುವ ಸೊನ್ನೆಗೆ ಮೂಲ ದ್ರಾವಿಡದಲ್ಲಿದ್ದ ಹಾಗೆ ಆ ತಡೆಯುಲಿಗಳ ಜಾಗದಲ್ಲೇನೇ ಉಂಟಾಗುವ ಮೂಗುಲಿಗಳ ಉಚ್ಚಾರಣೆ ಕನ್ನಡದಲ್ಲೂ ಇದೆ. ಈ ಉಚ್ಚಾರಣೆಯನ್ನು ಸರಿ ಯಾಗಿ ಸೂಚಿಸಬೇಕಿದ್ದಲ್ಲಿ ಅವನ್ನು ತೆಙ್ಕ, ತೆಙ್ಗು; ಕನ್ತೆ, ಅನ್ದ, ತೊನ್ದರೆ; ಅಞ್ಚು, ಮಞ್ಜು; ಅಣ್ಟು, ನೆಣ್ಟ, ಹಿಣ್ಡು; ತಮ್ಪು, ತುಮ್ಬು ಎಂಬುದಾಗಿ ಬರೆಯಬೇಕು.
ಕನ್ನಡ ಬರಹದಲ್ಲಿ

ಮೊದಲು ಬರುವ ಮೂಗುಲಿಗಳನ್ನು ಆ ರೀತಿ ಬರೆಯುವ ಬದಲು, ಸೊನ್ನೆಯ (ಅನುಸ್ವಾರದ) ಮೂಲಕ ಸೂಚಿಸುವ ಕ್ರಮ ಬಳಕೆಯಲ್ಲಿದೆ. ಆದರೆ ಇದು ಕನ್ನಡ ಬರಹದಲ್ಲಿ ಬಳಕೆಯಾಗುವ ಲಿಪಿಯ ಒಂದು ವಿಶೇಶ ಗುಣ ಮಾತ್ರ. ಉಚ್ಚಾರಣೆಯಲ್ಲಿ ಇಂತಹ ಪದಗಳಲ್ಲೆಲ್ಲ ಬೇರೆ ಬೇರೆ ಮೂಗುಲಿಗಳೇ ಕಾಣಿಸುತ್ತವೆ.

ತಡೆಯುಲಿಗಳ

ತಡೆಯುಲಿಗಳ

ಮೊದಲು ಬಂದ

ಚರಿತ್ರೆಯಲ್ಲಿ ಒಳಗಾಗಿವೆ.

ಕೆಳಗೆ ವಿವರಿಸಿದಂತಹ

ಮೂಗುಲಿಗಳು

ಕನ್ನಡದ ಕೆಲವು ಬದಲಾವಣೆಗಳಿಗೂ

(1) ಉದ್ದ ಸ್ವರದ ಅನಂತರ ಬಂದ ಮೂಗುಲಿ ಅದರ ಅನಂತರ ತಡೆಯುಲಿ ಬಂದಿರುವಲ್ಲೆಲ್ಲ ಬಿದ್ದುಹೋಗಿದೆ. ಈ ಬದಲಾವಣೆ ಹಳೆಗನ್ನಡ ಕ್ಕಿಂತಲೂ ಹಿಂದಿನ ಕಾಲದಲ್ಲೇನೇ ಮೊದಲಾಗಿದ್ದಿರಬೇಕು. ಯಾಕೆಂದರೆ, ಇಂತಹ ಹಲವು ಪದಗಳಲ್ಲಿ ತಮಿಳಿನಲ್ಲಿ ಕಾಣಿಸುವ ಮೂಗುಲಿ ಹಳೆಗನ್ನಡ ಪದಗಳಲ್ಲೂ ಕಾಣಿಸುವುದಿಲ್ಲ.

ಹಳೆಗನ್ನಡ ಬಾಗು ಬೀಗು ನೀಗು

ತಮಿಳು ವಾಙ್ಕು ವೀಙ್ಕು ನೀಙ್ಕು

ಹಳೆಗನ್ನಡ ಕೂದಲ್ ಮೂಱು ತೋಱು

ತಮಿಳು ಕೂನ್ತಲ್ ಮೂನ್ಱು ತೋನ್ಱು

ತೋಡು ಬೇಡು

ಪೂಞ್ಚು ತೋಣ್ಟು ವೇಣ್ಟು

ಬೇವು ಹಾವು

ವೇಮ್ಪು ಪಾಮ್ಪು ಓಮ್ಪು

ಈ ರೀತಿ ಮೂಗುಲಿ ಬಿದ್ದು ಹೋದ ಅನಂತರ ಉಳಿದ ತಡೆಯುಲಿಗಳಲ್ಲಿ ಕ, ಚ, ಟ ಮತ್ತು ತಗಳು ಕನ್ನಡದಲ್ಲಿ ಕೊರಳಿಸಿದ ತಡೆಯುಲಿಗಳಾಗಿ (ಗ, ಜ, ಡ ಮತ್ತು ದಗಳಾಗಿ) ಕಾಣಿಸಿಕೊಳ್ಳುತ್ತವೆ; ಆದರೆ ಱಕಾರ ಹೊಡೆಯುಲಿಯಾಗಿ (ಮತ್ತು ಅನಂತರ ರಕಾರವಾಗಿ) ಮತ್ತು ಪಕಾರ ವಕಾರವಾಗಿ ಬದಲಾಗಿವೆ ಎಂಬುದನ್ನು ಮೇಲಿನ ಉದಾಹರಣೆಗಳಿಂದ ತಿಳಿಯಬಹುದು.

ಇಂತಹ ಬೇರೆ ಕೆಲವು ಪದಗಳಲ್ಲಿದ್ದ ಮೂಗುಲಿ ಹೊಸಗನ್ನಡದಲ್ಲಿ ಬಿದ್ದುಹೋಗಿದೆಯಾದರೂ ಹಳೆಗನ್ನಡದಲ್ಲಿ ಉಳಿದುಕೊಂಡಿದೆ. ಈ ಮೂಗುಲಿ ಕರಾವಳಿಯ ಕನ್ನಡದ ಒಳನುಡಿಗಳಲ್ಲಿಯೂ ಉಳಿದುಕೊಂಡಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಹವ್ಯಕ ಪದಗಳಿಂದ ತಿಳಿಯಬಹುದು.

ಹಳೆಗನ್ನಡ ಮಾಂಜು ಸಾಂದು
ಸೇಂದು ‘- ನಾಂದು

ಹವ್ಯಕ ಕನ್ನಡ ಬರಹ ಕನ್ನಡ

ಮಾಜು ಸಾದು ಸೇದು ನಾದು ತೂಬು

ನಾಂದು
ತೂಂಬು

ಇದಲ್ಲದೆ, ಉದ್ದ ಸ್ವರಗಳ ಅನಂತರ ಮೂಗುಲಿ ಮತ್ತು ಇಮ್ಮಡಿ ತಡೆಯುಲಿಗಳು ಬಂದಿರುವಲ್ಲೂ, ಕನ್ನಡದ ಕೆಲವು ಪದಗಳಲ್ಲಿ ಮೂಗುಲಿ ಬಿದ್ದುಹೋಗಿದೆ; ಆದರೆ ಬೇರೆ ಕೆಲವು ಪದಗಳಲ್ಲಿ ಉಳಿದುಕೊಂಡಿದೆ. ಈ ರೀತಿ ಮೂಗುಲಿ ಉಳಿದುಕೊಂಡಿರುವ ಪದಗಳಲ್ಲೂ, ಅದು ಹೊಸಗನ್ನಡ ದಲ್ಲಿ ಬಿದ್ದುಹೋಗಿದೆ ಮತ್ತು ಹವ್ಯಕ ಕನ್ನಡದಲ್ಲಿ ಉಳಿದುಕೊಂಡಿದೆ.

ಇಂತಹ ಪದಗಳಲ್ಲಿ ಬಂದಿರುವ ಇಮ್ಮಡಿ ತಡೆಯುಲಿ ಕನ್ನಡದಲ್ಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕಾಣಿಸಿಕೊಳ್ಳುತ್ತದೆ. ತಮಿಳಿನಲ್ಲಿ (ಮತ್ತು ಮಲಯಾಳದಲ್ಲಿ) ಈ ತಡೆಯುಲಿ ಇಮ್ಮಡಿ ರೂಪದಲ್ಲೇ ಉಳಿದಿದೆಯಾದರೂ, ಅದರ ಮೊದಲಿಗಿದ್ದ ಮೂಗುಲಿ ಬಿದ್ದು ಹೋಗಿದೆ (4.5 ನೋಡಿ).

(ಕ) ಮೂಗುಲಿ ಹಳೆಗನ್ನಡದಲ್ಲೂ ಕಾಣಿಸದಿರುವ ಪದಗಳು

ಕನ್ನಡ
ಆಪು ‘ತಡೆ’’ ತಮಿಳು: ಆಪ್ಪು (<ಆನ್-ಪ್ಪು) ಓಟೆ ಹುಳಿ ಗೋಟು ‘ಒಣ’’ ತುಳು: ಗೋಂಟು (<ಕೋಣ್ಟ್ಟು) ತಮಿಳು: ತೋಟ್ಟಿ, ತುಳು: ದೋಂಟಿ

ತುಳು: ಓಂಟೆ ಪುಳಿ (<ಓಣ್ಟ್ಟಯ್) ತಮಿಳು: ಓತ್ತಿ, ತುಳು: ಓಂತಿ (<ಓನ್ತ್ತಿ)

(ಚ) ಹಳೆಗನ್ನಡದ ಮೂಗುಲಿ ಹೊಸಗನ್ನಡದಲ್ಲಿ ಬಿದ್ದು ಹೋಗಿರುವುದು

ಹಳೆಗನ್ನಡ ನೂಂಕು
ಬೇಂಟೆ
ಹೋಂತ

ಹೊಸಗನ್ನಡ ನೂಕು
ಬೇಟೆ
ಹೋತ

ತಮಿಳು
ನೂಕ್ಕು ವೇಟ್ಟಮ್ ಪೋತ್ತು ‘ಗಂಡು ಮಿಗ’’ ತೋಟ್ಟಮ್ ವೇಟ್ಟಮ್

ಇಂತಹ ಕೆಲವು ಪದಗಳಲ್ಲಿ ಬಂದಿರುವ ಮೂಗುಲಿ ಕರಾವಳಿಯ ಕೆಳಗಿನ

ಒಳನುಡಿಗಳಲ್ಲಿ ಉಳಿದಿದೆಯುಂಬುದನ್ನು ಹವ್ಯಕ ಉದಾಹರಣೆಗಳಲ್ಲಿ ಕಾಣಬಹುದು.

ಕನ್ನಡದ

ಹಳೆಗನ್ನಡ ಸಾಂಕು
ನೂಂಕು

ಹವ್ಯಕ ಕನ್ನಡ ಬರಹ ಕನ್ನಡ ಸಾಂಕು
ನೂಂಕು

ಸಾಕು ನೂಕು

ಪೀಂಕು
ಮೋಂಟು

ಪೀಕು ತಾಟು ‘ತಟ್ಟು’’ ಮೋಟು

ಈ ಎರಡು ರೀತಿಯ ಪದಗಳಲ್ಲೂ ಉದ್ದ ಸ್ವರವನ್ನು ಗಿಡ್ಡ ಸ್ವರವಾಗಿ ಬದಲಾಯಿಸಿ, ಅದರ ಅನಂತರ ಬಂದಿರುವ ಮೂಗುಲಿಯನ್ನು ಉಳಿಸಿ ಕೊಂಡಿರುವ ಕೆಲವು ಪದಗಳೂ ಕನ್ನಡದಲ್ಲಿವೆ.

(ಕ) ಮೂಗುಲಿಯ ಅನಂತರ ಒತ್ತೆ ತಡೆಯುಲಿ ಬಂದಿರುವಲ್ಲಿ

ಉದ್ದಸ್ವರ ತೂಂಬು, ತೂಬು ಗೋಜು ಈಡು ‘ಸೇರಿಕೆ’’

ಗಿಡ್ಡಸ್ವರ ತುಂಬು

(ಚ) ಮೂಗುಲಿಯ ಅನಂತರ ಇಮ್ಮಡಿ ತಡೆಯುಲಿ ಬಂದಿರುವಲ್ಲಿ

ಉದ್ದಸ್ವರ ಸೋಂಕು, ಸೋಕು ತೇಂಕು, ತೇಕು
ಗೂಂಟ, ಗೂಟ
ಬೇಂಟ, ಬೇಟ

ಗಿಡ್ಡಸ್ವರ ಸೊಂಕು ತೆಂಕು ‘ತೇಲು’’

(2) ಎರಡು ಗಿಡ್ಡ ಸ್ವರಗಳ ಅನಂತರ ಮೂಗುಲಿ ಮತ್ತು ಪದಗಳಲ್ಲಿ

ತಡೆಯುಲಿಗಳು ಒಟ್ಟಿಗೆ ಬಂದಿರುವಲ್ಲೂ ಕಾಣಿಸಿದಂತಹದೇ ಬದಲಾವಣೆ ಕನ್ನಡದಲ್ಲಿ ನಡೆದಿದೆ.

ಮೇಲಿನ

ಹಳೆಗನ್ನಡದಲ್ಲೇನೇ ಇಂತಹ ಪದಗಳಲ್ಲಿ ಬರುವ ಮೂಗುಲಿ ಬಿದ್ದು ಕಾಣಬಹುದು. ಕೆಳಗಿನ ಉದಾಹರಣೆಗಳಲ್ಲಿ ಹೋಗಿರುವುದನ್ನು ಮೂಗುಲಿಯ ಅನಂತರದ ಒತ್ತೆ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಮತ್ತು ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕನ್ನಡದಲ್ಲಿ ಬದಲಾಗಿದೆ. ಇದಕ್ಕೆ ಬದಲು, ತಮಿಳಿನಲ್ಲಿ ಒತ್ತೆ ತಡೆಯುಲಿ ಮತ್ತು ಇಮ್ಮಡಿ ತಡೆಯುಲಿಗಳು ಬದಲಾಗದೆ ಉಳಿದಿದ್ದು, ಇಮ್ಮಡಿ ತಡೆಯುಲಿಯ ಮೊದಲು ಬಂದಿದ್ದ ಮೂಗುಲಿ (ಚ) ಬಿದ್ದು ಹೋಗಿದೆ.

ತಡೆಯುಲಿ

(ಕ) ಮೂಗುಲಿ ಮತ್ತು ಒತ್ತೆ ತಡೆಯುಲಿ ಬಂದಿರುವಲ್ಲಿ

ಕನ್ನಡ
ಬೆಳಗು
ಮೊೞಗು ಕವುದಿ
ಕಿಲುಬು
ಅಲುಬು

ತಮಿಳು
ವಿಳಙ್ಕು
ಮುೞಙ್ಕು ಕವನ್ತಿ ಚಿಲುಮ್ಪು ಅಲಮ್ಪು

(ಚ) ಮೂಗುಲಿ ಮತ್ತು ಇಮ್ಮಡಿ ತಡೆಯುಲಿ ಬಂದಿರುವಲ್ಲಿ

ತಮಿಳು

ಕನ್ನಡ
ಅಮುಕು ‘ಒತ್ತು’’ ಅಲಕು ‘ಅಲುಗಿಸು’’ ಅಲಕ್ಕು (<ಅಲನ್ಕ್ಕು) ನುಱುಕು ‘ಜಜ್ಜು’ ನುಱುಕ್ಕು (<ನುಱುನ್ಕ್ಕು)

ಅಮುಕ್ಕು (<*ಅಮುನ್ಕ್ಕು)

ಹಿದುಕು ‘ತಿಕ್ಕು’

ಪಿತುಕ್ಕು (<*ಪಿತುನ್ಕ್ಕು)

ಬೇರೆ ಕೆಲವು ಪದಗಳಲ್ಲಿ ಈ ಮೂಗುಲಿ ಹಳೆಗನ್ನಡದಲ್ಲಿ ಮತ್ತು ಕರಾವಳಿಯ ಒಳನುಡಿಗಳಲ್ಲಿ ಉಳಿದುಕೊಂಡಿದೆಯಾದರೂ ಹೊಸಗನ್ನಡ ದಲ್ಲಿ ಬಿದ್ದುಹೋಗಿದೆ.

ಹಳೆಗನ್ನಡ ಮರಂಗಳ್ ಅಲುಂಬು ಕಿಲುಂಬು

ಕಲಂಕು
ಅವುಂಕು ಮುರುಂಟು ಸುರುಂಟು

ಹವ್ಯಕ ಕನ್ನಡ ಬರಹ ಕನ್ನಡ ಮರಂಗೊ ಅಲುಂಬು ಕಿಲುಂಬು

ಮರಗಳು ಅಲುಬು ಕಿಲುಬು

ಕಲಂಕು
ಅವುಂಕು ಮುರುಂಟು ಸುರುಂಟು

ಕಲಕು ಅವುಕು (ಅಮುಕು) ಮುರುಟು ಸುರುಟು

ಇಂತಹ ಪದಗಳಲ್ಲಿ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರ ಬಂದಿದೆಯಾದರೆ, ಹಳೆಗನ್ನಡದಲ್ಲೇನೇ ಎರಡನೆಯ ಗಿಡ್ಡ ಸ್ವರ ಬಿದ್ದು ಹೋಗಿರುವುದು ಕಾಣಿಸುತ್ತದೆ; ಇವುಗಳಲ್ಲೂ ಎರಡನೆಯ ಸ್ವರದ ಅನಂತರ ಬಂದಿದ್ದ ಮೂಗುಲಿ ಬಿದ್ದು ಹೋಗಿ, ಅದರ ಅನಂತರ ಬಂದಿದ್ದ ತಡೆಯುಲಿ ರಕಾರದೊಂದಿಗೆ (ಇಲ್ಲವೇ ೞಕಾರದೊಂದಿಗೆ) ಸೇರಿ ಇಮ್ಮಡಿ ತಡೆಯುಲಿಯಾಗುತ್ತದೆ (5.2.5 ನೋಡಿ).

ಕನ್ನಡ
ಕವ್ರು, ಕಬ್ರು, ಕಬ್ಬು ಕುಗ್ರು, ಕುಗ್ಗು
ಸುಕ್ರು, ಸುಕ್ಕು
ತಿದ್ರು, ತಿದ್ದು

ತಮಿಳು ಕರುಮ್ಪು ಕುರಙ್ಕು ಚುರುಕ್ಕು (<*ಚುರುನ್ಕ್ಕು) ತಿರುನ್ತು

ಮದ್ರು, ಮದ್ದು
ಕುಗ್ರು, ಕುಗ್ಗು
ಬಿದ್ರು, ಬಿದ್ದು
ಪದ್ರು, ಹದ್ದು

ಮರುನ್ತು ಕುರಙ್ಕು ವಿರುನ್ತು ’‘ಅವುತಣ’’ ಪರುನ್ತು

(ಚ) ಗೞ್ದ, ಗದ್ರೆ, ಗದ್ದೆ ಪುೞಿ್ಗ, ಪುಗ್ಗಿ ಕಿೞ್ಗು, ಕಿಗ್ರು ಉದ್ರು, ಉದ್ದು

ಕೞನಿ (ಕೞನ್ತಯ್) ಪುೞುಙ್ಕು ಕಿೞಕ್ಕು (ಕಿೞನ್ಕು, *ಕಿೞನ್ಕ್ಕು) ಉೞುನ್ತು

ಈ ಬದಲಾವಣೆಗೆ ಒಳಗಾಗದ ಪದಗಳೂ ಹಳೆಗನ್ನಡದಲ್ಲಿವೆ. ಎಂದರೆ, ಇದೊಂದು ಅನಿಯಮಿತ ಬದಲಾವಣೆಯ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ, ಕೆಳಗಿನ ಪದಗಳನ್ನು ಗಮನಿಸಬಹುದು.

ಕನ್ನಡ
ಕುರುಂಬೆ ಸೊರಗು ಮೊೞಗು ಮುೞುಗು

ತಮಿಳು ಕುರುಮ್ಪಯ್ ಚುರುಙ್ಕು ಮುೞಙ್ಕು ಮುೞುಙ್ಕು

(3) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿರುವ ಮೂಗುಲಿ ಮತ್ತು ಕೊರಳಿಸದ ತಡೆಯುಲಿಗಳ ಸೇರಿಕೆ ಬಡಗ ಕನ್ನಡದಲ್ಲಿ ಇಮ್ಮಡಿ ತಡೆಯುಲಿಯಾಗಿ ಹಲವು ಪದಗಳಲ್ಲಿ ಬದಲಾಗಿರುವುದನ್ನು ಕಾಣಬಹುದು.

ಬರಹ ಕನ್ನಡ ಕಂಕುಳು ಹಂಚು
ಮಿಂಚು

ಬಡಗ ಕನ್ನಡ ತೆಕ್ಕು ಕಕ್ಕುವೆ ಹಚ್ಚು ಮಿಚ್ಚು

ನಂಟರು

ನಟ್ಟರು ಸತ್ತೆ

ಪದಗಳಲ್ಲಿ

Eke →

5.2.5 ಇತರ ವ್ಯಂಜನಗಳೊಂದಿಗೆ ಬಂದ ಮೂಗುಲಿಗಳು

ನೇರವಾಗಿ ಮೂಗುಲಿಗಳು ಮೂಲದ್ರಾವಿಡ ತಡೆಯುಲಿಗಳೊಂದಿಗೆ ಮಾತ್ರ ಬರಬಲ್ಲುವಾಗಿದ್ದುವಲ್ಲದೆ ಇತರ ವ್ಯಂಜನಗಳೊಂದಿಗೆ ಬರುತ್ತಿರಲಿಲ್ಲವೆಂದು ಕಲ್ಪಿಸಲಾಗಿದೆ. ಮೂಗುಲಿಗಳಲ್ಲಿ ಕೊನೆಗೊಳ್ಳುವ ಬೇರು ಇಲ್ಲವೇ ಪದಗಳ ಅನಂತರ ಇತರ ವ್ಯಂಜನಗಳಲ್ಲಿ ಮೊದಲಾಗುವ ಒಟ್ಟು ಇಲ್ಲವೇ ಪದ ಬಂದಾಗ ಅವುಗಳ ನಡುವೆ ಒಂದು ಸ್ವರ ಸೇರಿಕೊಳ್ಳುವುದೇ ಇದಕ್ಕೆ ಕಾರಣ.

ಆದರೆ, ಕನ್ನಡದಲ್ಲಿ ಈ ಸ್ವರ ಕೆಲವು ಸನ್ನಿವೇಶಗಳಲ್ಲಿ ಬಿದ್ದು ಹೋಗಿರುವುದನ್ನು ಕಾಣಬಹುದು. ಉದಾಹರಣೆಗಾಗಿ, ಹಳೆಗನ್ನಡದ ಒರ್ಮೆ ‘ಒಮ್ಮೆ’ (ತಮಿಳು: ಒರುಮಯ್) ಪದದಲ್ಲಿ ರಕಾರದ ಅನಂತರ ಬಂದಿದ್ದ ಉಕಾರ ಬಿದ್ದುಹೋಗಿದೆ.

(1) ಇಂತಹ ಹೆಚ್ಚಿನ ಪದಗಳಲ್ಲೂ ಮೂಗುಲಿ ಮತ್ತು ಇತರ ಮೂಗುಲಿಯಾಗಿರುವುದನ್ನು

ವ್ಯಂಜನಗಳು ಒಟ್ಟುಸೇರಿ ಇಮ್ಮಡಿ ಕಾಣಬಹುದು.

(2) ಕನ್ನಡದ ಅಯ್ದು (ತಮಿಳು: ಅಯ್ನ್ತು) ಪದದಲ್ಲಿ ಯಕಾರ

ಮತ್ತು ತಕಾರಗಳ ನಡುವೆ ಬಂದಿದ್ದ ನಕಾರ ಬಿದ್ದುಹೋಗಿದೆ.

(3) ಮಕಾರ ವಕಾರವಾಗುವಂತಹ ಸೇರಿಕೆಯ ಬದಲಾವಣೆ ಹಳೆ ಗನ್ನಡದಲ್ಲಿ ಲಕಾರದ ಅನಂತರವೂ ನಡೆದಿದೆ (ಮೆಲ್ + ಮಾತು > ಮೆಲ್ವಾತು).

Eke →

5.2.6 ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು

ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು ಹಳೆಗನ್ನಡದಲ್ಲಿ ಹಾಗೆಯೇ ಉಳಿದಿದ್ದುವು, ಆದರೆ ಮುಂದೆ ಉಕಾರವೊಂದು ಸೇರಿ ಅವು ಸ್ವರಗಳ ನಡುವಿನ ಮೂಗುಲಿಗಳಾಗಿವೆ.

ಹೊಸಗನ್ನಡದಲ್ಲಿ ಅವುಗಳ

(1) ಉದ್ದ ಸ್ವರದ ಅನಂತರ ಈ ರೀತಿ ಉಕಾರ ಸೇರಿದಾಗ ಣಕಾರ- ನಕಾರಗಳು ಬದಲಾಗದೆ ಉಳಿಯುತ್ತವೆ. ಆದರೆ ಮಕಾರ ವಕಾರವಾಗಿ ಬದ ಲಾಗುತ್ತದೆ.

ಹಳೆಗನ್ನಡ ನೀನ್
ಮೀನ್

ನಾಮ್
ನೀಮ್

ಹೊಸಗನ್ನಡ ನೀನು ಮೀನು

ನಾವು ನೀವು

(2) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಣಕಾರ- ಕೊನೆಯವಾಗಿದ್ದಲ್ಲಿ ಅವುಗಳ ಅನಂತರ

ನಕಾರಗಳು ಉಚ್ಚಾರಣೆಯ ಉಕಾರ ಸೇರಿದಾಗ ಇಮ್ಮಡಿ ರೂಪಕ್ಕೆ ಬದಲಾಗಿವೆ.

ಪದಗಳ

ಹಳೆಗನ್ನಡ

ಹೊಸಗನ್ನಡ ಹಣ್ಣು ಹೆಣ್ಣು

ತಿನ್ನು

ಪೊನ್
ಬೆನ್

ಹೊನ್ನು ಬೆನ್ನು ಎನ್ನು

(3) ಆದರೆ ಇತರ ಗಿಡ್ಡ ಸ್ವರಗಳ ಅನಂತರ ನಕಾರ ಕೆಲವು ಪದಗಳಲ್ಲಿ ಬದಲಾಗದೆ ಉಳಿದಿದೆ ಮತ್ತು ಬೇರೆ ಕೆಲವು ಪದಗಳಲ್ಲಿ (ಪದರೂಪಗಳಲ್ಲಿ) ಬಿದ್ದುಹೋಗಿದೆ (2.4.2 ನೋಡಿ).

ಹಳೆಗನ್ನಡ ಅವನ್
ಬಂದೆನ್

ಹೊಸಗನ್ನಡ ಅವನು

Eke →

5.3 ಹೊಡೆಯುಲಿ ಮತ್ತು ಪಕ್ಕದುಲಿಗಳು

ಮೂಲದ್ರಾವಿಡದಲ್ಲಿ ರಕಾರವೆಂಬ ಒಂದು ಹೊಡೆಯುಲಿಯೂ ಲಕಾರ ಮತ್ತು ಳಕಾರಗಳೆಂಬ ಎರಡು ಪಕ್ಕದುಲಿಗಳೂ (ಉಸಿರನ್ನು ನಾಲಿಗೆಯ ಪಕ್ಕದಲ್ಲಿ ಬಿಡುವುದರ ವ್ಯಂಜನಗಳೂ) ಬಳಕೆಯಲ್ಲಿದ್ದುವು. ಇವು ಮೂರೂ ಪದಗಳ ನಡುವೆ ಮತ್ತು ಕೊನೆಯಲ್ಲಿ ಮಾತ್ರವೇ ಬರಬಲ್ಲುವಾಗಿದ್ದುವು.

ಮೂಲಕ ಸಿದ್ದವಾಗುವ

ಲಕಾರ ಮತ್ತು ಳಕಾರಗಳು ಸ್ವರಗಳ ನಡುವೆ ಒತ್ತೆ ರೂಪದಲ್ಲಿ ಮಾತ್ರ ವಲ್ಲದೆ ಇಮ್ಮಡಿ ರೂಪದಲ್ಲೂ ಬರಬಲ್ಲುವಾಗಿದ್ದುವು (ಇಲಿ, ಹುಲಿ, ಅಲ್್ಲ, ನೆಲ್ಲಿ; ಎಳತು, ಅಳಿಯ, ಪಿಳ್ಳೆ, ಕಳ್ಳ); ಆದರೆ ರಕಾರ ಒತ್ತೆ ರೂಪದಲ್ಲಿ ಮಾತ್ರ ಬರಬಲ್ಲುದಾಗಿತ್ತು (ಮರ, ಕರಿ).

Eke →

5.3.1 ಲಕಾರದ ಬದಲಾವಣೆಗಳು

ಹೆಚ್ಚಿನ ಪದಗಳಲ್ಲೂ ಮೂಲದ್ರಾವಿಡದ ಲಕಾರ ಕನ್ನಡದಲ್ಲಿ ಬದಲಾಗದೆ ಉಳಿದುಕೊಂಡಿದೆ. ಇಲಿ, ತಲೆ, ಕಾಲು, ಕಲ್ ‘ಕಲ್ಲು’, ಪಾಲ್ ‘ಹಾಲು’, ನೆಲ್ಲಿಕಾಯಿ ಮೊದಲಾದ ಉದಾಹರಣೆಗಳನ್ನಾಗಿ ಕೊಡಬಹುದು.

ಪದಗಳನ್ನು

(1) ಲಕಾರದ ಅನಂತರ ನಕಾರ ಮತ್ತು ತಕಾರಗಳು ಬಂದಿರುವಲ್ಲಿ ಲಕಾರ ಬಿದ್ದು ಹೋಗಿ ತಕಾರ ಱಕಾರವಾಗುತ್ತದೆ ಎಂಬ ಸೇರಿಕೆಯ ನಿಯಮ ಮೂಲದ್ರಾವಿಡದಲ್ಲಿತ್ತು. ಈ ಱಕಾರ ಕನ್ನಡದಲ್ಲಿ ದಕಾರವಾಗಿ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗಾಗಿ, ಲಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಹಿಂದಿನ ಸಮಯವನ್ನು ಸೂಚಿಸುವ ನ್್ತ ಒಟ್ಟು ಬಂದಾಗ,
ಲಕಾರ ಬಿದ್ದು ಱಕಾರವಾಗುತ್ತದೆ ಕನ್ನಡದಲ್ಲಿ ಈ ಱಕಾರ ದಕಾರವಾಗಿ ಕಾಣಿಸಿಕೊಳ್ಳುತ್ತದೆ.

ಹೋಗುತ್ತದೆ

ನ್್ತ ಒಟ್ಟಿನ

ನೋಡಿ).

ಮತ್ತು

ಕೊಲ್
ಸಲ್

ನಿಂದು (ತಮಿಳು: ನಿನ್ಱು) ಕೊಂದು (ತಮಿಳು: ಕೊನ್ಱು) ಸಂದು (ತಮಿಳು: ಚೆನ್ಱು)

(2) ರಕಾರ ಇಲ್ಲವೇ ಱಕಾರದ ಅನಂತರ ಬಂದ ಹಳೆಗನ್ನಡದ

ಲಕಾರ ಹೊಸಗನ್ನಡದಲ್ಲಿ ಳಕಾರವಾಗಿ ಬದಲಾಗಿದೆ.

ಹಳೆಗನ್ನಡ ಬೆರಲ್
ಕೊರಲ್
ಪರಲ್

ನೇಱಲ್
ನೆಱಲ್

ಹೊಸಗನ್ನಡ ಬೆರಳು ಕೊರಳು ಒರಳು ಹರಳು

ನೇರಳೆ ನೆರಳು

Eke →

5.3.2 ಳಕಾರದ ಬದಲಾವಣೆಗಳು

ಹೆಚ್ಚಿನ ಪದಗಳಲ್ಲೂ ಮೂಲದ್ರಾವಿಡದ ಳಕಾರ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಅಳವು, ಅಳತೆ, ಎಳತು, ಚಳಿ, ಬೆಳಕು, ಒಳಿತು, ತಾಳು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

(1) ಆದರೆ ಬೇರೆ ಕೆಲವು ಪದಗಳಲ್ಲಿ ಮೂಲದ್ರಾವಿಡ ಳಕಾರ

ಅನಿಯಮಿತವಾಗಿ ಣಕಾರವಾಗಿದೆ.

ತಮಿಳು ಕುಳಮ್ ಕೇಳನ್ ನುಳಮ್ಪು ಪುಳಿ ಕುಳಮ್ಪು ‘ಗೊರಸು’’

ಕನ್ನಡ
ಕೊಳ, ಕೊಣ ಗೆಳೆಯ, ಗೆಣೆಯ ನೊಳ, ನೊಣ
ಹುಳಿ, ಹುಣಿಸೆ
ಕೊಳಗು, ಕೊಣಗು ಮಾಳ್, ಮಾಣ್ ‘ತಡೆ’’ ಮಾಳ್ ಅಳಂಬೆ, ಅಣಬೆ
ಅಳಾಂಪು (ಮಲಯಾಳ) ಗಾಳ, ಗಾಣ ‘ಕೊಕ್ಕೆ’’ ಕಾಳಮ್ (ಮಲಯಾಳ) ನೊಣೆ ‘ನುಂಗು’

ನೊಳ್

(2) ಳಕಾರದ ಅನಂತರ ಟಕಾರ (ಡಕಾರ) ಬಂದಿರುವಲ್ಲಿ ಳಕಾರ

ನಿಯಮಿತವಾಗಿ ಣಕಾರವಾಗಿರುವುದು ಕಂಡುಬರುತ್ತದೆ.

ಕನ್ನಡ
ಗಿಂಡು ‘ಚಿವುಟು’’ ಕುಳಿಕೆ, ಕೊಂಡಿ
ಕೋಳ್, ಕೊಂಡೆ ತೆಂಟು ‘ಗಾಳಿಸು’’

ತಮಿಳು

ಕಿಳ್ಳು ಕೊಳ್ ಕೋಳ್ ‘ಚಾಡಿ ಹೇಳು’’ ತೆಳಿ ‘ಚಿಮುಕಿಸು’’

(3) ಮೂಲದ್ರಾವಿಡದಲ್ಲೇನೇ ಳಕಾರದ ಅನಂತರ ತಕಾರ ಬಂದಾಗ ಳಕಾರ ಣಕಾರವಾಗುವ ಮತ್ತು ತಕಾರ ಟಕಾರವಾಗುವ ಸೇರಿಕೆಯ ನಿಯಮವೊಂದು ಬಳಕೆಯಲ್ಲಿದ್ದಿರಬೇಕು. ಇದಕ್ಕೆ ಉದಾಹರಣೆಯಾಗಿ ಕನ್ನಡದ ಕೊಳ್ ಕ್ರಿಯಾಪದಕ್ಕಿರುವ ಹಿಂದಿನ ಸಮಯದ ಕೊಂಡು ರೂಪವನ್ನು ಗಮನಿಸಬಹುದು.

(4) ಕನ್ನಡದ ಇವತ್ತಿನ ಕೆಲವು ಒಳನುಡಿಗಳಲ್ಲಿ ಲಕಾರ ಮತ್ತು ವ್ಯತ್ಯಾಸ ಇಲ್ಲವಾಗಿದೆ. ಉದಾಹರಣೆಗಾಗಿ, ಳಕಾರಗಳ ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಳಕಾರ ಲಕಾರವಾಗಿದೆ (ಆಚಾರ್ಯ

ನಡುವಿನ

ಬರಹ ಕನ್ನಡ ತೆಳು
ಹಳಬ
ಪೊಳ್ಳು
ಬೆಳ್ಳುಳ್ಳಿ
ಕೊಳಲು

ಹಾಲಕ್ಕಿ ಕನ್ನಡ ಹಲಬ
ಪೊಲ್ಲು ಬೆಲುಲಿ ಕೊಲ್ಲು

(5) ಬಡಗ ಕನ್ನಡದಲ್ಲಿ ಳಕಾರ ಬಿದ್ದುಹೋಗಿದೆ ಮತ್ತು ಅದರ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಟ್ಟುಸೇರಿದುದರಿಂದಾಗಿ
ಗಿಡ್ಡಸ್ವರವಿರುವಲ್ಲೂ ಉದ್ದಸ್ವರ ಕಾಣಿಸುತ್ತದೆ. ಈ ಳಕಾರ ಮೂಲದ್ರಾವಿಡ ೞಕಾರದಿಂದಲೂ ಳಕಾರದಿಂದ ಬಂದಿರಬಹುದು.

ಬಂದಿರಬಹುದು

ಇಲ್ಲವೇ

ಬರಹ ಕನ್ನಡ ಕಳ ‘ಕಣ’ ಕೀಳು
ದೂಳು

ಬಡಗ ಕನ್ನಡ

ಎಳೆ (ನೂಲಿನ)
ಜೋಳ

ಮುಳುಗು ಕೆಳಗೆ
ಎಳೆಕರು

ಮೂಗು ಕೀಯು

ಬೇರೆ ಕೆಲವು ಪದಗಳಲ್ಲಿ ಳಕಾರದ ಬದಲು ಯಕಾರ ಇಲ್ಲವೇ ವಕಾರ

ಬಂದಿರುವುದನ್ನು ಕಾಣಬಹುದು (ಬಾಲಕ್ರುಶ್ಣನ್ 1999).

ಬರಹ ಕನ್ನಡ ಸುಳಿ ’ ಹೊಳೆ ಹುಳಿ ’ ಮೊಳೆ ‘ಮೊಳಕೆ’’ ಬೀಳು
ಸಂಬಳ
ಕಂಕುಳು

ಬಡಗ ಕನ್ನಡ ಗುಯಿ ಸುಯಿ ಹೊಯೆ ಹುಯಿ ಮೊಯೆ ಬುಯ್ ಸಂಬುವ ಕಕ್ಕುವೆ

Eke →

5.3.3 ರಕಾರದ ಬದಲಾವಣೆಗಳು

(1) ಸ್ವರಗಳ ನಡುವಿನ ರಕಾರ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡುವುದರ ಮೂಲಕ ಇದನ್ನು ತಿಳಿಯಬಹುದು.

ಕನ್ನಡ
ಹರಳು
ಬಿರುದು
ಒರಳು

ತಮಿಳು ಪರಲ್ ವಿರುತು ಕಾರಮ್

(2) ಪದಗಳ ಕೊನೆಯಲ್ಲಿದ್ದ ರಕಾರವೂ ಕನ್ನಡದಲ್ಲಿ ಬದಲಾಗದೆ

ಉಳಿದಿದೆ (ಬೆಮರ್, ಉಸಿರ್, ಬರ್, ತರ್).

ಹೊಸಗನ್ನಡದಲ್ಲಿ ಇಂತಹ ಪದಗಳ ಅನಂತರ ಉಕಾರವೊಂದು ಸೇರಿಕೊಂಡಿದ್ದು, ಅದು ಸ್ವರಗಳ ನಡುವಿನ ರಕಾರವೇ ಆಗಿದೆ. ಇರ್-ಇರು, ಬರ್-ಬರು, ತರ್-ತರು, ತೊಡರ್-ತೊಡರು, ಕೊನರ್-ಕೊನರು, ತೀರ್-ತೀರು ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

(3) ಬೇರುಗಳ ಕೊನೆಯಲ್ಲಿದ್ದ ರಕಾರ, ಅದರ ಅನಂತರ ಬಂದಿದ್ದ ಒಟ್ಟಿನ ಸ್ವರ ಬಿದ್ದುಹೋದುದರಿಂದಾಗಿ, ಹಲವು ಪದಗಳಲ್ಲಿ ವ್ಯಂಜನದ ಮೊದಲು ಬರುವಂತಾಗಿದೆ. ಇಂತಹ ಪದಗಳಲ್ಲಿ ಅದು ಕನ್ನಡದಲ್ಲಿ ಎರಡು ರೀತಿಯ ಬದಲಾವಣೆಗಳಿಗೊಳಗಾಗಿದೆ. ಕೆಲವು ಸನ್ನಿವೇಶಗಳಲ್ಲಿ ಅದು ಬಿದ್ದು ಹೋಗಿದೆ ಮತ್ತು ಬೇರೆ ಕೆಲವು ಸನ್ನಿವೇಶಗಳಲ್ಲಿ ಅದು ಅದರ ಅನಂತರ ಬಂದಿದ್ದ ವ್ಯಂಜನದ ರೂಪವನ್ನೇ ಪಡೆದಿದೆ.

(ಕ) ಉದ್ದಸ್ವರದ ಅನಂತರ ಬಂದ ರಕಾರ ಹಳೆಗನ್ನಡದಲ್ಲಿ ಉಳಿದು ಕೊಂಡಿತ್ತು; ಆದರೆ ಹೊಸಗನ್ನಡದ ಕೆಲವು ಪದಗಳಲ್ಲಿ ಬಿದ್ದುಹೋಗಿದೆ. ಉದಾಹರಣೆಗಾಗಿ, ಹಳೆಗನ್ನಡದ ಬಾರ್ಚು ಪದ ಹೊಸಗನ್ನಡದಲ್ಲಿ ಬಾಚು ಎಂದಾಗಿದೆ. ಹೊಸಗನ್ನಡದ ಪಾಪ ಪದದಲ್ಲೂ ರಕಾರ ಬಿದ್ದುಹೋಗಿದೆ (ಪಾರ ‘ಚಿಕ್ಕ ಮಗು’).

ಆದರೆ ತೀರ್ಪು, ತೀರ್ಮಾನ, ಏರ್ಪಾಡು ಮೊದಲಾದ ಬೇರೆ ಕೆಲವು

ಪದಗಳಲ್ಲಿ ರಕಾರ ಹೊಸಗನ್ನಡದಲ್ಲೂ ಬಿದ್ದುಹೋಗದೆ ಉಳಿದಿದೆ.

ವ್ಯಂಜನದೊಡನೆ

(ಚ) ಗಿಡ್ಡಸ್ವರದ ಅನಂತರ ಬಂದ ರಕಾರ ಅದರ ಅನಂತರ ಬಂದಿದ್ದ ವ್ಯಂಜನ ಇಮ್ಮಡಿ ಸೇರಿಹೋಗಿ, ಆ ವ್ಯಂಜನವಾಗುವ ಹಾಗೆ ಮಾಡಿದೆ. ಈ ಬದಲಾವಣೆಯನ್ನು ತೋರಿಸುವ ಕಚ್ಚು ಶಾಸನದಲ್ಲೇನೇ ಕಾಣಸಿಗುತ್ತದೆ.

(<ಕರ್ಚು) ಪದ ಹತ್ತನೇ

ಶತಮಾನದ

ಹೊಸಗನ್ನಡ ಹಳೆಗನ್ನಡ ಬೆಕ್ಕು
ಬೆರ್ಕು
ಪೊದ್ದು
ಪೊರ್ದು
ಪೆರ್ಗಡೆ
ಹೆಗ್ಗಡೆ
ಪೆರ್ಚು, ಪೆಚ್ಚು ಹೆಚ್ಚು
ಬಿಚ್ಚು
ಬಿರ್ಚು
ಬೆಚ್ಚು
ಬೆರ್ಚು
ಹೆಮ್ಮೆ
ಪೆರ್ಮೆ
ಮೊಮ್ಮಗ ಗುಬ್ಬಿ

ತಮಿಳು ವೆರುಕು ಪೊರುತು ಪೆರ್ ‘ದೊಡ್ಡ’’ ಪೆರ್ ‘ದೊಡ್ಡ’ ವೆರು ‘ಹೆದರಿಕೆ’’ ಪೀರುಮಯ್ ಮರುಮಗನ್ ಕುರುವಿ

(ಟ) ಬಿದ್ದುಹೋಗಿರುವ ಸ್ವರದ ಅನಂತರ ಇಮ್ಮಡಿ ತಡೆಯುಲಿಯಿದ್ದ ಪದಗಳಲ್ಲಿ ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಬದ

ಲಾಗುತ್ತದೆ ಮತ್ತು ಅದರೊಂದಿಗೆ ರಕಾರ ಸೇರಿ ಹೊಸಗನ್ನಡದಲ್ಲಿ ಕೊರಳಿಸದ ಇಮ್ಮಡಿ ತಡೆಯುಲಿ ಉಳಿಯುವಂತೆ ಮಾಡುತ್ತದೆ.

ಹಳೆಗನ್ನಡ ಕರ್ಕು
ಸೊರ್ಕು

ಹೊಸಗನ್ನಡ ಕಕ್ಕು
ಸೊಕ್ಕು
ಪಪ್ಪು

ತಮಿಳು ಪರುತ್ತಿ ಕರುಕ್ಕು ಉರುಕ್ಕು ಚೆರುಕ್ಕು ಪರುಪ್ಪು

(ತ) ಬಿದ್ದು ಹೋಗಿರುವ ಸ್ವರದ ಅನಂತರ ಮೂಗುಲಿ ಮತ್ತು ಒತ್ತೆ ತಡೆಯುಲಿಗಳಿದ್ದ ಪದಗಳಲ್ಲಿ ಮೂಗುಲಿ ಬಿದ್ದುಹೋಗಿದೆ ಮತ್ತು ರಕಾರ ಬಾಕಿ ಉಳಿದಿದ್ದ ತಡೆಯುಲಿಯೊಂದಿಗೆ ಸೇರಿ ಆ ತಡೆಯುಲಿ ಇಮ್ಮಡಿ ಯಾಗುವಂತೆ ಮಾಡಿದೆ.

ಹೊಸಗನ್ನಡ

ತಮಿಳು ಹಳೆಗನ್ನಡ ಪರುನ್ತು ಪರ್ದು, ಪದ್ದು ಹದ್ದು
ಮರುನ್ತು ಮದ್ದು
ಮರ್ದು
ಪರಮ್ಪು ಹಬ್ಬು
ಪರ್ವು, ಪರ್ಬು ಕರುಮ್ಪು ಕಬ್ಬು
ಕರ್ವು, ಕರ್ಬು
ಮಗ್ಗುಲು ಮರುಙ್ಕು ಒಗ್ಗು ‘ಬಗ್ಗು’’ ಒರುಙ್ಕು ಕುರಙ್ಕು ಕುಗ್ಗು
ಕುರ್ಗು

ಹಳೆಗನ್ನಡದ ಸುರ್ಕು ‘ನೆರಿಗೆ ಕಟ್ಟು’ ಪದ ಹೊಸಗನ್ನಡದಲ್ಲಿ ಸುಕ್ಕು ಎಂದಾಗಿದೆ. ತಮಿಳಿನಲ್ಲಿ ಚುರುಕ್ಕು ಪದವಿದೆ. ಆದರೆ ಕನ್ನಡದ ಪದ ಮೂಲದ್ರಾವಿಡದ *ಚುರುನ್ಕ್ಕು ಎಂಬುದರಿಂದ ಬಂದಿರಬೇಕು.

ಕನ್ನಡದಲ್ಲಿ ಇದು ಮೊದಲಿಗೆ *ಸುರುಂಕು ಎಂದಾಗಿದ್ದು ಅನಂತರ ಎರಡನೆಯ ಉಕಾರ ಮತ್ತು ಮೂಗುಲಿ ಬಿದ್ದು ಹೋಗಿ ಸುರ್ಕು ಎಂದಾಗಿದೆ; ಅನಂತರ ರಕಾರದೊಂದಿಗೆ ಕಕಾರ ಸೇರಿ ಸುಕ್ಕು ಎಂದಾಗಿದೆ. ಈ ಎರಡು ರೀತಿಯ ಬದಲಾವಣೆಗಳನ್ನೂ ಮೂಲದ್ರಾವಿಡದ ರಕಾರ ಮಾತ್ರವಲ್ಲದೆ ಱಕಾರ ಇಲ್ಲವೇ ೞಕಾರದಿಂದ ಬಂದ ರಕಾರವೂ ತೋರಿಸು ತ್ತದೆ. ಇದಕ್ಕೆ ಕಾರಣವೇನೆಂದರೆ, ಮೇಲಿನ ಎರಡು ಬದಲಾವಣೆಗಳು ಕನ್ನಡದಲ್ಲಿ ಱಕಾರ (4.3.4 ನೋಡಿ) ಮತ್ತು ೞಕಾರಗಳು (5.4.3 ನೋಡಿ) ರಕಾರವಾಗುವ ಬದಲಾವಣೆಯ ಅನಂತರ ನಡೆದಿರಬೇಕು.

(ಕ) ಉದ್ದಸ್ವರದ ಅನಂತರ ಱಕಾರ ಬಿದ್ದುಹೋಗಿರುವುದು

ಕನ್ನಡ
ತೋಱು, ತೋಚು ಗೀಱು, ಗೀಚು

ತಮಿಳು ತೋಱು

(ಚ) ಗಿಡ್ಡ ಸ್ವರದ ಅನಂತರ ಮೊದಲಿಗೆ ಱಕಾರ ರಕಾರವಾಗಿ, ಅನಂತರ ವ್ಯಂಜನದೊಂದಿಗೆ ಸೇರಿರುವುದು

ಕನ್ನಡ
ಗುಱುತು, ಗುರ್ತು, ಗೊತ್ತು ಕೊಱ, ಕೊರ್ಚು, ಕೊಚ್ಚು ಪೆಱ್, ಹೆಪ್ಪು
ತೆಱಪು, ತೆಪ್ಪಗೆ
ಕಿಱಿ, ಕಿರ್ದು, ಕಿತ್ತು ಹೆಕ್ಕು
ಮುಱುಕು, ಮುರ್ಕು, ಮುಕ್ಕು ಗೊಱಟೆ, ಕೊಟ್ಟೆ

ತಮಿಳು ಕುಱಿ ಕುಱಯ್ ಪೆಱುಕು ‘ಮೊಸರು’’ ತೆಱು ‘ತಡಮಾಡು’’ ಪೆಱುಕ್ಕು ಮುಱುಕ್ಕು ‘ಹೆಮ್ಮೆ’’ ಕುಱಟ್ಟ (ಮಲಯಾಳ)

(ತ) ಗಿಡ್ಡ ಸ್ವರದ ಅನಂತರ ೞಕಾರ ಮೊದಲಿಗೆ ರಕಾರವಾಗಿ ಅನಂತರ ವ್ಯಂಜನದೊಂದಿಗೆ ಸೇರಿರುವುದು

ಕನ್ನಡ

ತಮಿಳು ಕೊೞು ‘ದಪ್ಪ’ ತಾೞ್

ಕೊರ್ಬು, ಕೊಬ್ಬು
ಗೞ್ದ, ಗರ್ದೆ, ಗದ್ದೆ
ತೞ್ಗು, ತರ್ಗು, ತಗ್ಗು ತೞ್ಕ, ತರ್ಬು, ತಬ್ಬು ಬೞ್ದುಂಕು, ಬರ್ದುಂಕು, ಬದುಕು ವಾೞ್ ಪಿಳ್ಕೆ, ಹಿಕ್ಕೆ ಒೞ್ಕು, ಉಗ್ಗು ‘ಚೆಲ್ಲು’’
ಕೞ್ತು, ಕತ್ತು ಕೞ್ತ, ಕತ್ತೆ ಉರ್ದು, ಉದ್ದು
ಅಳ್ದು, ಅದ್ದು ಪುೞಿ್ಗ, ಪುಗ್ಗಿ, ಹುಗ್ಗಿ

ಪಿೞುಕ್ಕಯ್ ಒೞುಕು ಕೞುತ್ತು ಕೞುತಯ್ ಉೞುನ್ತು ಅೞುನ್ತು ಪುೞುಙ್ಕು

(4) ಗಿಡ್ಡ ಸ್ವರದ ಅನಂತರ ವ್ಯಂಜನಗಳ ಮೊದಲು ಬರುತ್ತಿದ್ದ ರಕಾರ ಆ ವ್ಯಂಜನಗಳ ರೂಪವನ್ನೇ ಪಡೆಯುತ್ತಿದ್ದ ಸಮಯದಲ್ಲಿ ರಕಾರ+ವ್ಯಂಜನಗಳಿಗೂ ವ್ಯಂಜನ+ವ್ಯಂಜನಗಳಿಗೂ ನಡುವಿದ್ದ ವ್ಯತ್ಯಾಸ ಇಲ್ಲವಾಗಿತ್ತಾದ ಕಾರಣ, ಮೂಲದ್ರಾವಿಡದಲ್ಲಿ ವ್ಯಂಜನ+ವ್ಯಂಜನಗಳಿದ್ದ ಕೆಲವು ಪದಗಳೂ ಕನ್ನಡದಲ್ಲಿ ರಕಾರ+ವ್ಯಂಜನಗಳಿರುವ ಪದಗಳಾಗಿ ಕಾಣಿಸಿಕೊಳ್ಳುತ್ತವೆ.

ಹಳೆಗನ್ನಡ ಪೊರ್ಕುೞ್, ಪೊಕ್ಕುೞ್
ಮರ್ಕಳ್, ಮಕ್ಕಳ್ ‘ಮಕ್ಕಳು’’ ಬರ್ಗು, ಬಗ್ಗು ‘ಕೂಗುವಿಕೆ’’

ತಮಿಳು ಪೊಕ್ಕುಳ್ ಮಕ್ಕಳ್ ವಕುಳಿ

ಪುರ್ಗು, ಪುಗ್ಗು ‘ಜಂಬ’’
ಕರ್ಚು, ಕಚ್ಚು ‘ಕಡಿ’’ ಒರ್ಪು, ಒಪ್ಪು ಕಿರ್ಚು, ಕಿಚ್ಚು

ಪುಕಲ್ವು ಕಚ್ಚು ಒಪ್ಪು

ಮೇಲಿನ ಪದಗಳಲ್ಲಿ ಕಾಣಿಸುವ ರಕಾರ ಮೂಲದ್ರಾವಿಡದ್ದೆಂದು

ಹೇಳಲು ಬೇರೆ ದ್ರಾವಿಡ ನುಡಿಗಳಲ್ಲಿ ಯಾವ ಆದಾರವೂ ಸಿಗುವುದಿಲ್ಲ.

(5) ಮೂರು ಉಲಿಕಂತೆಗಳಿರುವ ಪದಗಳಲ್ಲಿ ಎರಡನೆಯ ಸ್ವರ ಬಿದ್ದು ಹೋದುದರಿಂದಾಗಿ (3.4.1 ನೋಡಿ) ಕನ್ನಡದ ಕೆಲವು ಒಳನುಡಿಗಳಲ್ಲಿ ರಕಾರ+ವ್ಯಂಜನಗಳು ಮೂಡಿಬಂದಿದ್ದು, ಅವು ಬೇರೆ ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಈ ಬದಲಾವಣೆಗಳ ಸ್ವರೂಪವೇನು ಮತ್ತು ಅವು ಎಲ್ಲೆಲ್ಲಿ ಮತ್ತು ಯಾವ ಯಾವ ತಿಳಿಯಲು ಇನ್ನಶ್ಟು ನಡೆದಿವೆ ಎಂಬುದನ್ನು ಒಳನುಡಿಗಳಲ್ಲಿ ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.

ಇಂತಹ ಪದಗಳಲ್ಲಿ ರ್್ಡ ಎಂಬುದು ಬಳ್ಳಾರಿಯಲ್ಲಿ ಳ್್ಡ ಎಂದಾಗಿದೆ, ಗುಲ್ಬರ್ಗದಲ್ಲಿ ಡ್್ಡ ಎಂದಾಗಿದೆ, ಹಾಲಕ್ಕಿ ಕನ್ನಡದಲ್ಲಿ ಯ್ಡ ಎಂದಾಗಿದೆ, ಮತ್ತು ನಂಜನಗೂಡಿನಲ್ಲಿ ಣ್್ಡ ಎಂದಾಗಿದೆ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು (ಉಪಾದ್ಯಾಯ 1976).

ಬಳ್ಳಾರಿ ಗುಲ್ಬರ್ಗ ಹಾಲಕ್ಕಿ ನಂಜನಗೂಡು

ಬರಹ ಕುರುಡ ಕುಳ್ಡ ಕುಡ್ಡ ಕುಯ್ಡ ಕುಣ್ಡ
ಕರಡಿ ಕಳ್ಡಿ ಕಡ್ಡಿ ಕಯ್ಡ –‘ ಬುರುಡೆ ಬುಳ್ಡೆ ಬುಡ್ಡಿ –‘ ಬುಣ್ಡ ಹೊರಡು ವಳ್ಡು –‘ ಹೊಯ್ಡು ವಣ್ಡು

Eke →

5.4 ತಡೆಯಿಲ್ಲದ ವ್ಯಂಜನಗಳು

ಮೂಲದ್ರಾವಿಡದಲ್ಲಿ ಯಕಾರ, ವಕಾರ ಮತ್ತು ೞಕಾರಗಳೆಂಬ ಮೂರು ಮತ್ತು ತಡೆಯಿಲ್ಲದ

ವ್ಯಂಜನಗಳಿದ್ದುವು. ಇವುಗಳಲ್ಲಿ

ಯಕಾರ

ವಕಾರಗಳನ್ನು ‘ಅರೆಸ್ವರ’ಗಳೆಂದು ಪರಿಗಣಿಸಲು ಸಾದ್ಯವಿದೆಯಾದರೂ ಅವುಗಳ ಬಳಕೆ ಇತರ ವ್ಯಂಜನಗಳ ಬಳಕೆಯ ಹಾಗೆಯೇ ಇರುವ ಕಾರಣ ಅವನ್ನು ವ್ಯಂಜನಗಳೆಂದು ಪರಿಗಣಿಸುವುದೇ ಒಳ್ಳೆಯದು.

(1) ದ್ರಾವಿಡ ನುಡಿಗಳು ಬಳಸುವ ಲಿಪಿಗಳಲ್ಲಿ ಐ, ಔಗಳೆಂಬ ಎರಡು ಸ್ವರಗಳನ್ನು ಸೂಚಿಸಬಲ್ಲ ಸ್ವರ ಚಿಹ್ನೆಗಳಿವೆ. ಆದರೆ ಅಂತಹ ಸ್ವರಗಳ ಇರುವಿಕೆಯನ್ನು ಮೂಲದ್ರಾವಿಡದಲ್ಲಿ ಇಲ್ಲವೇ ಇವತ್ತಿನ ದ್ರಾವಿಡ ನುಡಿಗಳಲ್ಲಿ ಕಲ್ಪಿಸಿಕೊಳ್ಳಲು ಯಾವ ಆದಾರವೂ ಇಲ್ಲ (2.1.1 ನೋಡಿ). ನಿಜಕ್ಕೂ ಅವು ಅಕಾರದೊಂದಿಗೆ ಯಕಾರ ಮತ್ತು ವಕಾರಗಳು ಬಂದಿರುವ ಎರಡೆರಡು ಉಲಿಗಳ ಸೇರಿಕೆಗಳು ಮಾತ್ರ.

(2) ಮೂಲದ್ರಾವಿಡದ *ಅತ್, ಆ ‘ಅದು, ಆ’, *ಚತ್, ಚಾ ‘ಸಾಯು’, *ಉಣ್, ಊಣ್ ‘ಉಣ್ಣು’, *ತರ್, ತಾ ‘ಕೊಡು’ ಮೊದಲಾದ ಹತ್ತು-ಹನ್ನೆರಡು ಪದಗಳಲ್ಲಿ ಗಿಡ್ಡ-ಉದ್ದ ಸ್ವರವ್ಯತ್ಯಾಸ ಕಾಣಿಸುತ್ತಿದ್ದು, ಇದರ ಮೂಲವೇನೆಂಬುದನ್ನು ವಿವರಿಸಲು ಸಾದ್ಯವಾಗಿಲ್ಲ.

ಇಂತಹ ಸ್ವರವಿರುವಲ್ಲೆಲ್ಲ ಹಕಾರವೆಂಬ ಇನ್ನೊಂದು ತಡೆಯಿಲ್ಲದುಲಿ ಯೂ ಇದ್ದಿರಬೇಕೆಂದು ಕ್ರುಶ್ಣಮೂರ್ತಿ (1997, 2003) ವಾದಿಸಿದ್ದಾರೆ. ಈ ಹಕಾರವನ್ನು ಅವರು ‘ಲಾರಿಂಜಲ್’ (ಗಂಟಲಿನಲ್ಲಿ ಉಂಟಾಗುವ ವ್ಯಂಜನ) ಎಂಬುದಾಗಿ ಕರೆದಿದ್ದಾರೆ; ಹಳೆತಮಿಳಿನಲ್ಲಿ ಬಳಕೆಯಲ್ಲಿದ್ದ ‘ಆಯ್ದಮ್’ ಎಂಬ ವ್ಯಂಜನ ಇದೇ ಹಕಾರದ ಪಳೆಯಳಿಕೆಯಿರಬೇಕೆಂದೂ ಅವರು ವಾದಿಸಿದ್ದಾರೆ.

ಈ ವ್ಯಂಜನ ಯಕಾರ ಮತ್ತು ವಕಾರಗಳ ಹಾಗೆ ಒಂದು ತಡೆಯಿಲ್ಲದುಲಿಯಾಗಿದ್ದು ಬೇರುಗಳ ಕೊನೆಯ ವ್ಯಂಜನವಾಗಿ ಮಾತ್ರ ಬರುತ್ತಿದ್ದಿರಬೇಕೆಂದು ಅವರು ವಾದಿಸಿದ್ದಾರೆ. ಉದಾಹರಣೆಗಾಗಿ, ಕನ್ನಡದ ಅದು, ಇದು, ಉದು ಪದಗಳು ಮೂಲದ್ರಾವಿಡದಲ್ಲಿ *ಅಹ್-ತು, *ಇಹ್-ತು, *ಉಹ್-ತು ಎಂದಿದ್ದಿರಬೇಕೆಂದು ಅವರು ಸೂಚಿಸಿದ್ದಾರೆ.

ಈ ವ್ಯಂಜನದ ಅನಂತರ (ಕ) ಯಾವ ಒಟ್ಟೂ ಬಾರದಿದ್ದಲ್ಲಿ ಅದು ಅದರ ಮೊದಲು ಬಂದಿದ್ದ ಸ್ವರದೊಂದಿಗೆ ಸೇರಿ ಆ ಸ್ವರ ಉದ್ದವಾಗುವ ಹಾಗೆ ಮಾಡುತ್ತದೆ (ಆ ಮನೆ, ಈ ಮರ); (ಚ) ಕೊರಳಿಸಿದ ವ್ಯಂಜನ ಬಂದಿದೆಯಾದರೆ, ಲಾರಿಂಜಲ್) (ಹಕಾರ ಬಿದ್ದುಹೋಗುತ್ತದೆ (ಅದು, ಇದು, ಅವನು, ಇವನು); ಮತ್ತು (ಟ) ಕೊರಳಿಸದ ವ್ಯಂಜನ (ತಡೆಯುಲಿ) ಬಂದಿದೆಯಾದರೆ ಅದು (ಲಾರಿಂಜಲ್) ಬಿದ್ದುಹೋಗಿ, ತಡೆಯುಲಿ ಇಮ್ಮಡಿಯಾಗುತ್ತದೆ (ಅತ್ತ, ಇತ್ತ) - ಎಂಬುದಾಗಿ ಮೂಲ ದ್ರಾವಿಡಕ್ಕೆ ಕೆಲವು ನಿಯಮಗಳನ್ನೂ ಅವರು ಕಲ್ಪಿಸಿದ್ದಾರೆ.

ಇಲ್ಲವೇ

ಆದರೆ, ನಿಜಕ್ಕೂ ಈ ಕಲ್ಪಿತ ವ್ಯಂಜನದಿಂದ ಮೂಲದ್ರಾವಿಡದ ಕೆಲವೇ ಕೆಲವು ಪದಗಳಲ್ಲಿದ್ದ ಮೇಲಿನ ಉದ್ದ-ಗಿಡ್ಡ ಸ್ವರವ್ಯತ್ಯಾಸವನ್ನು ವಿವರಿಸು ವುದರಲ್ಲಿ ಸಹಾಯವೇನೂ ಸಿಗುವ ಹಾಗೆ ಕಾಣಿಸುವುದಿಲ್ಲವೆಂಬುದಾಗಿ ಸುಬ್ರಹ್ಮಣ್ಯಂ (ಬರಲಿದೆ) ವಾದಿಸಿದ್ದಾರೆ.

Eke →

5.4.1 ಪದಗಳ ಮೊದಲಿಗೆ ಬಂದ ತಡೆಯಿಲ್ಲದುಲಿಗಳು

ಯಕಾರ ಮತ್ತು ವಕಾರಗಳೆಂಬ ಎರಡು ತಡೆಯಿಲ್ಲದುಲಿಗಳು ಮಾತ್ರ ಮೂಲದ್ರಾವಿಡದಲ್ಲಿ ಪದಗಳ ಮೊದಲಿಗೆ ಬರಬಲ್ಲುವಾಗಿದ್ದುವು. ೞಕಾರ ವೆಂಬ ಮೂರನೆಯ ತಡೆಯಿಲ್ಲದುಲಿ ಪದಗಳ ನಡುವೆ ಮತ್ತು ಕೊನೆಯಲ್ಲಿ ಮಾತ್ರ ಬರಬಲ್ಲುದಾಗಿತ್ತು.

(1) ಯಕಾರ: ಪದಗಳ ಮೊದಲಿನ ಯಕಾರ ಮೂಲದ್ರಾವಿಡದಲ್ಲಿ ಆ ಎಂಬ ಸ್ವರದ ಮೊದಲು ಮಾತ್ರ ಬರುತ್ತಿದ್ದಿರಬೇಕೆಂಬುದು ಸದ್ಯದ ಕಲ್ಪನೆ ಯಾಗಿದೆ. ಕನ್ನಡದಲ್ಲಿ ಇದು ಬಿದ್ದುಹೋಗಿದೆಯುಂಬುದಕ್ಕೆ ಕೆಳಗಿನ ಪದಗಳನ್ನು ಉದಾಹರಣೆಯಾಗಿ ಕೊಡಬಹುದು. ಹಳೆಯ ತಮಿಳಿನಲ್ಲಿ ಮಾತ್ರ ಇದು ಬಿದ್ದು ಹೋಗದೆ ಉಳಿದಿದೆ.

ಕನ್ನಡ

ಹಳೆಯ ತಮಿಳು ಯಾನಯ್

ಆವನ್ ‘ಯಾರು’

ಯಾಳ್ ಯಾನ್ ಯಾಮಯ್ ಯಾವನ್

ಆದರೆ ಕನ್ನಡದ ಯಾರು, ಯಾಕೆ, ಯಾವ ಮೊದಲಾದ ಬೇರೆ ಕೆಲವು ಪದಗಳಲ್ಲಿ ಈ ಯಕಾರ ಬಿದ್ದುಹೋಗದೆ ಉಳಿದಿದೆ. ಇದಲ್ಲದೆ ಏನು, ಏಕೆ, ಏಡು ‘ವರ್ಶ’ ಮೊದಲಾದ ಬೇರೆ ಕೆಲವು ಪದಗಳಲ್ಲಿ ಯಕಾರ ಬಿದ್ದು ಹೋಗುವುದರೊಂದಿಗೆ ಅದರ ಅನಂತರ ಬಂದಿದ್ದ ಉದ್ದ ಆ ಸ್ವರ ಉದ್ದ ಏ ಸ್ವರವಾಗಿ ಬದಲಾಗಿದೆ ಮತ್ತು ಈ ಉದ್ದ ಏ ಸ್ವರ ಬೇರೆ ಕೆಲವು ಸನ್ನಿವೇಶಗಳಲ್ಲಿ (ಎಲ್ಲಿ, ಎಂದು, ಎತ್ತ, ಎಮಗೆ, ಎನ್ನ) ತನ್ನ ಉದ್ದವನ್ನು ಕಳೆದುಕೊಂಡು ಗಿಡ್ಡ ಎ ಸ್ವರವಾಗಿದೆ.

ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ಪದಗಳ ಮೊದಲಿಗೆ ಬಂದ ಎಕಾರ ಯ ಎಂಬುದಾಗಿ ಬದಲಾಗಿರುವುದರಿಂದ ಅವುಗಳಲ್ಲಿ ಪದಗಳ ಮೊದಲಿಗೆ ಯಕಾರ ಹೊಸದಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಾವು ಎರಡನೇ ಅದ್ಯಾಯದಲ್ಲಿ (2.2.3ರಲ್ಲಿ) ನೋಡಿರುವೆವು (ಎಡ > ಯಡ, ಎಲ್ಲ > ಯಲ್ಲ).

(2) ವಕಾರ: ಮೂಲದ್ರಾವಿಡದಲ್ಲಿ ಪದಗಳ ಮೊದಲಿಗಿದ್ದ ವಕಾರ ತುಟಿ ದುಂಡಗಿಲ್ಲದ ಸ್ವರಗಳ (ಇ, ಈ, ಎ, ಏ ಮತ್ತು ಅ, ಆ ಎಂಬವುಗಳ) ಮೊದಲಿಗೆ ಮಾತ್ರ ಬರಬಲ್ಲುದಾಗಿತ್ತು. ಇದು ಕನ್ನಡದಲ್ಲಿ ಬಕಾರವಾಗಿ ಬದಲಾಗಿದೆ.

ಶತಮಾನದಲ್ಲಿ

ಕನ್ನಡದ ಚರಿತ್ರೆಯಲ್ಲಿ ಈ ರೀತಿ ವಕಾರ ಬಕಾರವಾಗುವ ಬದಲಾವಣೆ ವಾದಿಸಲು ಆರು-ಏಳನೇ ಶಾಸನಗಳ ಅದಾರವಿದೆ. ಎಂಟರಿಂದ ಹತ್ತನೇ ಶತಮಾನದ ವರೆಗಿನ ಶಾಸನಗಳಲ್ಲಿ ಇಂತಹ ಹಲವು ಪದಗಳಿಗೆ ಬಕಾರವಿರುವ ರೂಪ ಮಾತ್ರವಲ್ಲದೆ ವಕಾರವಿರುವ ರೂಪವೂ ಕಾಣಿಸುತ್ತದೆ.

ಮೊದಲಾಗಿರಬೇಕೆಂದು

ಆದರೆ ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ನುಡಿಗಳಲ್ಲಿ ವಕಾರವಿರುವ ರೂಪಗಳು ಮಾತ್ರ ಇವೆ (ನರಸಿಂಹಯ್ಯ 1941, ಗಾಯ್

ಎಂಟು-ಹತ್ತನೇ ಶತಮಾನದ ಕನ್ನಡ ವಂದು, ಬಂದು
ವರೆ, ಬರೆ ವಿಟ್ಟ, ಬಿಟ್ಟ ವಿೞ್ದ, ಬಿೞ್ದ

ತಮಿಳು ವಂತು ವರಯ್

ವಕಾರದ ಬದಲು ಬಕಾರದ ಬಳಕೆ ಅನಂತರದ ಶತಮಾನಗಳಲ್ಲಿ ಹೆಚ್ಚಾಗುತ್ತಾ ಹೋಗಿ, ಪದಗಳ ಮೊದಲಿಗೆ ವಕಾರ ಇಲ್ಲವೇ ಇಲ್ಲವೆಂದು ಆಗುವುದನ್ನು ಕನ್ನಡದ ಶಾಸನಗಳಲ್ಲಿ ಕಾಣಬಹುದು.

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಪದಗಳ ಮೊದಲಿಗೆ ಕಾಣಿಸುವ ಬಕಾರಗಳಲ್ಲಿ ಹೆಚ್ಚಿನವೂ ಈ ರೀತಿ ಮೂಲದ್ರಾವಿಡ ವಕಾರದಿಂದಲೇ ಬಂದಿವೆಯುಂದು ಹೇಳಬಹುದು.

ಬರಹ ಕನ್ನಡ ಬಡಗು
ಬಾಗು
ಬೀಸು
ಬೆಳಕು
ಬೇಡು

ತಮಿಳು ವಟಕು ವರಯ್ ವಾಂಕು ವೀಚು ವಿಳಕ್ಕು ವೇಂಟು

ಆದರೆ, ಕೆಲವು ಪದಗಳಲ್ಲಿ ಅವು ಮೂಲದ್ರಾವಿಡದ ಪಕಾರದಿಂದಲೂ ಬಂದಿರಲು ಸಾದ್ಯ ಎಂಬುದಕ್ಕೆ ಕನ್ನಡದ ಕೆಳಗಿನ ಪದಗಳನ್ನು ಉದಾಹರಣೆ ಯಾಗಿ ಕೊಡಬಹುದು.

ಕನ್ನಡ
ಬಸಳೆ
ಬೀಡು
ಬೂಟಾಟಿಕೆ ಬೊಂಬೆ
ಬೊಕ್ಕೆ

ತಮಿಳು ಪಚಳಯ್ ಪಾನಯ್ ಪುಟ್ಟಿಲ್ ಪೂಟ್ಟಕಮ್ ಪೊಮ್ಮಯ್ ಪೊಕ್ಕಯ್

Eke →

5.4.2 ಪದಗಳ ನಡುವಿನ ಯಕಾರ ಮತ್ತು ವಕಾರಗಳು

(1) ಯಕಾರ: ಪದಗಳ ನಡುವಿನ ಯಕಾರ ಮೂಲದ್ರಾವಿಡದಲ್ಲೇನೇ ಹಲವು ಪದಗಳಲ್ಲಿ ಚಕಾರದೊಂದಿಗೆ ಸಂಬಂದವನ್ನು ತೋರಿಸುತ್ತಿದ್ದಿರ ಬೇಕೆಂದು ಕಲ್ಪಿಸಲಾಗಿದೆ. ಕನ್ನಡದಲ್ಲೂ ಕೆಲವು ಪದಗಳಿಗೆ ಯಕಾರವನ್ನು ತೋರಿಸುವ ರೂಪದೊಂದಿಗೆ ಸಕಾರವನ್ನು ತೋರಿಸುವ ರೂಪವೂ ಕಾಣಿಸುತ್ತಿದ್ದು, ಇದು ಮೂಲದ್ರಾವಿಡದಲ್ಲಿದ್ದ ಯ-ಚ ಸಂಬಂದದ ಪಳೆಯಳಿಕೆಯಿರಬೇಕು.

ಯಕಾರವಿರುವ ರೂಪ ಏಯ್ ‘ಹೊಡೆ’
ಒಯ್ ‘ಕೊಂಡುಹೋಗು’
ಕಯ್ ‘ಕಹಿ’ ಸಯ್ ‘ನಿಲ್ಲು’
ನಯ ‘ನುಣುಪು, ಮಿದು’
ಬಾಯು ‘ಬಾತುಕೊಳ್ಳು’

ಸಕಾರವಿರುವ ರೂಪ ಎಸೆ ‘ಹೊಡೆ’’ ಒಸಗೆ ‘ಸುದ್ದಿ ತಿಳಿಸುವಿಕೆ’’ ಕಸುರು ‘ಕಟುವಾದ’’ ಸಸನೆ ‘ಅಲುಗಾಡದೆ’’ ನಸೆ ‘ಮೆತ್ತಗೆ’’ ಬಾಸುೞಿ ‘ಬಾಸುಂಡೆ’’

ಬೇರೆಯೂ ಹಲವು ಪದಗಳಲ್ಲಿ ಕನ್ನಡದ ಸಕಾರ ತಮಿಳಿನ ಯಕಾರವಾಗಿ ಕಾಣಿಸುತ್ತದೆ. ಆದರೆ ಇಲ್ಲಿ ಕನ್ನಡ ಮೂಲದ್ರಾವಿಡದ

ಚಕಾರವನ್ನು (ಸಕಾರ ವಾಗಿ) ಉಳಿಸಿಕೊಂಡಿದ್ದು (4.3.2 ನೋಡಿ) ತಮಿಳು ಅದನ್ನು ಯಕಾರವಾಗಿ ಬದಲಾಯಿಸಿದೆ.

ಕನ್ನಡ
ಹೆಸರು
ಬಸಿಱು
ಬೆಸ ‘ಮಾಡುವಿಕೆ’’ ಹಾಸು

ತಮಿಳು ಪೆಯರ್ ವಯಿಱು ವಿಯಮ್ ‘ಅಪ್ಪಣೆ’’ ಪಾಯ್

(2) ವಕಾರ: ಪದಗಳ ನಡುವೆ ಕಾಣಿಸುವ ವಕಾರ ಹೆಚ್ಚಿನೆಡೆಗಳಲ್ಲೂ ಮೂಲದ್ರಾವಿಡದ ಪಕಾರ, ಮಕಾರ ಇಲ್ಲವೇ ಕಕಾರದಿಂದ ಬಂದಿರುವ ಹಾಗೆ ಕಾಣಿಸುತ್ತದೆ (4.3.1). ಇವುಗಳಲ್ಲಿ ಪಕಾರ ಮತ್ತು ವಕಾರಗಳ ನಡುವಿನ ಸಂಬಂದ ಮೂಲದ್ರಾವಿಡದಲ್ಲೇನೇ ಇದ್ದಿರಬೇಕು.

ಹಳೆಗನ್ನಡದ ಕಾಲದಲ್ಲಿ ಪಕಾರ, ಬಕಾರ ಮತ್ತು ಮಕಾರಗಳಲ್ಲಿ ಮೊದಲಾಗುವ ಪದಗಳು ಸ್ವರದಲ್ಲಿ ಮೊದಲಾಗುವ ಪದಗಳ ಅನಂತರ ಬಂದಾಗ, ಅವುಗಳ ಮೊದಲನೆಯ ವ್ಯಂಜನ ವಕಾರವಾಗುತ್ತದೆಯುಂಬ ಸೇರಿಕೆಯ ಕೆಲವು ಜೋಡುಪದಗಳಲ್ಲಿ ಈ ನಿಯಮದ ಪಳೆಯಳಿಕೆಯನ್ನು ಕಾಣಬಹುದು (4.3.1 ನೋಡಿ).

ನಿಯಮವೊಂದಿತ್ತು.

ಹೊಸಗನ್ನಡದಲ್ಲೂ

Eke →

5.4.3 ೞಕಾರದ ಬದಲಾವಣೆಗಳು

ಮೂಲದ್ರಾವಿಡದ ೞಕಾರ ಪದಗಳ ನಡುವೆ ಇಲ್ಲವೇ ಕೊನೆಯಲ್ಲಿ ಬರಬಲ್ಲುದಾಗಿತ್ತು. ಹಳೆಗನ್ನಡದ ಹೆಚ್ಚಿನ ಪದಗಳಲ್ಲೂ ಇದು ಬದಲಾಗದೆ ಉಳಿದಿದೆ. ಆದರೆ ಇವತ್ತಿನ ಬರಹ ಕನ್ನಡದಲ್ಲಿ ಎಲ್ಲೂ ಕಾಣಿಸುವುದಿಲ್ಲ.
ೞಕಾರ ಮತ್ತು ಳಕಾರಗಳ ನಡುವಿನ ವ್ಯತ್ಯಾಸದ ಮೂಲಕ ಅರ್ತ ವ್ಯತ್ಯಾಸವನ್ನು ಸೂಚಿಸುವ ಪದಜೋಡಿಗಳು ಹಳೆಗನ್ನಡದಲ್ಲಿ ಹಲವಿದ್ದು,

ಆ ಜೋಡಿಗಳೆಲ್ಲ ಇವತ್ತಿನ ಬರಹ ಕನ್ನಡದಲ್ಲಿ ಎರಡು ಅರ್ತ ಕೊಡುವ ಪದಗಳಾಗಿವೆ.

ಮೂಲದ್ರಾವಿಡದ ೞಕಾರ ಹಳೆಗನ್ನಡ ಹೊಸಗನ್ನಡ ಬೞಸು

ಉಳಿ ‘ಉಳಿಯು’’ ಉಳಿ ಎಳೆ ’‘ಎಳೆದಾಡು’’ ಎಳೆ ಬಳಸು ’’

ಮೂಲದ್ರಾವಿಡದ ಳಕಾರ ಹೊಸಗನ್ನಡ ಹಳೆಗನ್ನಡ ಉಳಿ ’‘ಕೆತ್ತುವ ಉಳಿ’ ಎಳೆ ‘ಎಳತು’’ ಬಳಸು ‘ನೇರವಲ್ಲದ’

ಬಳಸು

ಹೊಸಗನ್ನಡದಲ್ಲಿ ಮೇಲೆ ಕೊಟ್ಟಿರುವ ಉಳಿ, ಎಳೆ ಮತ್ತು ಬಳಸು ಪದಗಳಿಗೆ ಎರಡೆರಡು ಅರ್ತಗಳಿವೆ; ಆದರೆ ಹಳೆಗನ್ನಡದಲ್ಲಿ ಈ ಅರ್ತಗಳನ್ನು ಸೂಚಿಸಲು ಉೞಿ-ಉಳಿ, ಎೞ-ಎಳೆ ಮತ್ತು ಬೞಸು- ಬಳಸು ಎಂಬುದಾಗಿ ಎರಡೆರಡು ಪದಗಳಿದ್ದುವು ಎಂಬುದನ್ನು ಗಮನಿಸಬಹುದು.

ಹಳೆಗನ್ನಡದಲ್ಲಿದ್ದ ೞಕಾರ ಕನ್ನಡದಲ್ಲಿ ಕಾಣೆಯಾಗಲು ಅದರ ಚರಿತ್ರೆ ಯಲ್ಲಿ ನಡೆದ ಕೆಳಗೆ ಕೊಟ್ಟಿರುವ ಮೂರು ರೀತಿಯ ಬದಲಾವಣೆಗಳು

(1) ೞಕಾರದ ಅನಂತರ ಯಾವುದಾದರೊಂದು ವ್ಯಂಜನ ಬಂದಿರುವಲ್ಲಿ ಆ ೞಕಾರ ರಕಾರವಾಗಿ ಬದಲಾಗಿದೆ ಮತ್ತು
(2) ಇತರ ಕಡೆಗಳಲ್ಲಿ ಅದು ಳಕಾರವಾಗಿ ಬದಲಾಗಿದೆ;

ಇದಲ್ಲದೆ,
ಕೆಲವು

ಪದಗಳಲ್ಲಿ

ಅನಿಯಮಿತವಾಗಿ

ಣಕಾರವಾಗಿಯೂ ಬದಲಾಗಿದೆ.

(1) ಈ ಮೂರು ಬದಲಾವಣೆಗಳಲ್ಲಿ, ೞಕಾರ ರಕಾರವಾಗುವಂತಹ ಮೊದಲನೆಯ ಬದಲಾವಣೆಯನ್ನು ಹಳೆಗನ್ನಡದ ಕಾವ್ಯಗಳಲ್ಲೇನೇ ಕಾಣ ಬಹುದು.

ವ್ಯಂಜನದ ಮೊದಲು ೞಕಾರ ರಕಾರವಾಗಿರುವುದು

ಹಳೆಗನ್ನಡ ತೞ್ಗು, ತರ್ಗು ಕಿೞ್ಗು, ಕಿರ್ಗು ಪೊೞ್ತು, ಪೊರ್ತು ಬೞ್ದುಂಕು, ಬರ್ದುಂಕು ಗೞ್ದ, ಗರ್ದೆ ಕಳ್ಚು, ಕರ್ಚು ‘ತೊಳೆ’’ ಕೞುವು

ತಮಿಳು ತಾೞ್ ಕೀೞ್ ಪೊೞುತು ವಾೞ್

ಮೂಲದ್ರಾವಿಡದ

ೞಕಾರದಿಂದ ಬಂದಿದ್ದ ಈ

ಮೂಲದ್ರಾವಿಡದ ರಕಾರದ ಹಾಗೆ ಹೊಸಗನ್ನಡದಲ್ಲಿ ಅದರ ಅನಂತರದ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗುತ್ತದೆ ಎಂಬುದನ್ನು ಮೇಲೆ (5.3.3)ರಲ್ಲಿ ನೋಡಿರುವೆವು.

(2) ಇತರೆಡೆಗಳಲ್ಲಿ ೞಕಾರ ಳಕಾರವಾಗಿದೆಯುಂಬುದನ್ನು ತೋರಿಸಿ ಕೊಡಲು ಹಳೆಗನ್ನಡ ಪದಗಳನ್ನು ಹೊಸಗನ್ನಡ ಪದಗಳೊಂದಿಗೆ ಹೋಲಿಸ ಬೇಕಾಗುತ್ತದೆ. ಯಾಕೆಂದರೆ, ಹಳೆಗನ್ನಡ ಬರಹಗಳಲ್ಲಿ ಈ ಬದಲಾವಣೆ ನಡೆದ ಮೇಲೂ ೞಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು.
ಉದಾಹರಣೆಗಾಗಿ, ಕೇಶಿರಾಜನು ತನ್ನ ವ್ಯಾಕರಣದಲ್ಲಿ ೞಕಾರವನ್ನು ಯಾವ ಪದಗಳಲ್ಲಿ ಬಳಸಬೇಕು ಎಂಬುದಕ್ಕೆ ಒಂದು ಪಟ್ಟಿಯನ್ನೇ ಮಾಡಿದ್ದನು ಮತ್ತು ಆ ಪದಗಳಲ್ಲಿ ಅವುಗಳ ಬದಲು ಳಕಾರವನ್ನು ಬಳಸುವುದು ತಪ್ಪು ಎಂಬುದಾಗಿ ಸಾರಿದ್ದನು. ಆದರೆ, ಹೊಸಗನ್ನಡದಲ್ಲಿ ಇದು ಬರವಣಿಗೆಯಲ್ಲೂ ಳಕಾರದೊಂದಿಗೆ ಸೇರಿಹೋಗಿದೆ.

(ಕ) ಎರಡು ಸ್ವರಗಳ ನಡುವೆ ೞಕಾರ ಳಕಾರವಾಗಿರುವುದು

ಹಳೆಗನ್ನಡ

ಹೊಸಗನ್ನಡ

ಕೊೞವೆ
ಕೋೞಿ
ಮೞ

ಕೊಳವೆ ಕೋಳಿ ಮಳೆ

(ಚ) ಪದಗಳ ಕೊನೆಯ ೞಕಾರ ಳಕಾರವಾಗಿರುವುದು

ಹಳೆಗನ್ನಡ ಬಾೞ್
ಬೀೞ್
ಕೀೞ್
ಪಾೞ್
ಉಗುೞ್ ಪೊಗೞ್

ಹೊಸಗನ್ನಡ ಬಾಳು ಬೀಳು ಕೀಳು ಹಾಳು ಉಗುಳು ಹೊಗಳು

ಳಕಾರವಾಗಿರುವುದು

ಹಳೆಗನ್ನಡದಲ್ಲಿ ಪದಗಳ ಕೊನೆಯಲ್ಲಿ ಬಂದಿದ್ದ ೞಕಾರ ಹೊಸಗನ್ನಡ ಮಾತ್ರವಲ್ಲದೆ, ಅದರ ಅನಂತರ ಉಕಾರವೊಂದು ಸೇರುವುದರಿಂದಾಗಿ ಅದು ಸ್ವರಗಳ ನಡುವಿನ ಳಕಾರವೇ ಆಗಿದೆ ಎಂಬುದನ್ನು ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು.

ೞಕಾರವು (ಕ) ರಕಾರವಾಗುವ ಮತ್ತು (ಚ) ಳಕಾರವಾಗುವ ಈ ಎರಡು ರೀತಿಯ ಬದಲಾವಣೆಗಳೂ ಹಳೆಗನ್ನಡದಲ್ಲೇನೇ ಹತ್ತು- ಶಾಸನಗಳ ಹನ್ನೊಂದನೇ ಆದಾರದ ಮೇಲೆ ಹೇಳಲು ಸಾದ್ಯವಾಗುತ್ತದೆ (ನರಸಿಂಹಯ್ಯ 1941 ನೋಡಿ).

ನಡೆದಿರಬೇಕೆಂಬುದಾಗಿ

ಶತಮಾನದಲ್ಲಿ

ಅದಕ್ಕಿಂತಲೂ ಮೊದಲು, ಎಂಟು-ಒಂಬತ್ತನೇ ಶತಮಾನದ ಶಾಸನ ಗಳಲ್ಲೂ ೞಕಾರದ ಬದಲು ಳಕಾರವನ್ನು ತೋರಿಸುವ ಬೀಳದು, ಕೇಳ್ದು, ಏಳ್, ಬೀಳಿಸಿ, ಪುಳು ಎಂಬಂತಹ ಪದಗಳ ಬಳಕೆಯಾಗಿದೆ.

ಹತ್ತನೇ ಶತಮಾನದ ಶಾಸನಗಳಲ್ಲಿ ೞಕಾರ ಳಕಾರವಾಗಿರುವ ಪೊಗಳಲ್, ಅಳಿವಿಂಗೆ, ಬಳಿಕ್ಕೆ ಎಂಬಂತಹ ಪದರೂಪಗಳು ಮಾತ್ರವಲ್ಲದೆ ೞಕಾರ ರಕಾರವಾಗಿರುವ ಅಕ್ರರಿಂದಮ್, ನೋಪ್ರ್ಪರ, ಪೊಗತ್ರ್ತೆಗೆ, ನೆಗಪ್ರ್ಪಿನ್ ಎಂಬಂತಹ ಪದರೂಪಗಳೂ ಕಾಣಿಸುತ್ತವೆ

ಶತಮಾನದ

ಹದಿನಾಲ್ಕು-ಹದಿನಯ್ದನೇ

ಶಾಸನಗಳ ಸಮಯಕ್ಕಾಗುವಾಗ ಈ ಬದಲಾವಣೆ ಕೊನೆಗೊಂಡಿತ್ತೆಂದು ಹೇಳಬಹುದು. ಯಾಕೆಂದರೆ, ಆ ಕಾಲದ ಶಾಸನಗಳಲ್ಲಿ ಹಿಂದೆ ೞಕಾರವಿದ್ದ ಎಲ್ಲಾ ಪದಗಳಲ್ಲೂ (ಕ) ಸ್ವರಗಳ ನಡುವೆ ಳಕಾರ ಕಾಣಿಸುತ್ತದೆ ಮತ್ತು (ಚ) ವ್ಯಂಜನದ ಮೊದಲು ರಕಾರ ಕಾಣಿಸುತ್ತದೆ (ನರಸಿಂಹಯ್ಯ 1941 ನೋಡಿ). ಇದಕ್ಕೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಎಂಟು-ಒಂಬತ್ತನೇ ಶತಮಾನ ಅನಂತರದ ಶತಮಾನಗಳು

ಅೞಿದ ‘ನಾಶವಾದ’’ ಪುೞು ‘ಹುಳ’’
ಪೊಗೞ್ ‘ಹೊಗಳು’’
ಎೞ್ಪತ್ತು ‘ಎಪ್ಪತ್ತು’’ ಗೞ್ದ ‘ಗದ್ದೆ’’
ನೆಗೞ್ದ ‘ಹೆಸರಾಂತ’’

ಪುಳು ಪೊಗಳ್

ಎರ್ಪತ್ತು ನೆಗರ್ದ

ಇವುಗಳಲ್ಲಿ ವ್ಯಂಜನಗಳ ಮೊದಲು ರಕಾರವಾಗಿರುವ ೞಕಾರ ಅನಂತರ ಆ ವ್ಯಂಜನದೊಂದಿಗೆ ಸೇರಿ ಇಮ್ಮಡಿ ವ್ಯಂಜನವಾಗಿದೆ (ಎಪ್ಪತ್ತು, ಗದ್ದೆ) (5.3.3 ನೋಡಿ).

(3) ಎರಡು ಸ್ವರಗಳ ನಡುವೆ (ಇಲ್ಲವೇ ಪದದ ಕೊನೆಯಲ್ಲಿ) ಪದಗಳಲ್ಲಿ ಣಕಾರವಾಗಿ ಕೆಲವು

ಬಂದಿದ್ದ ೞಕಾರ

ಕನ್ನಡದ

ಬದಲಾಗಿರುವುದನ್ನು ಕಾಣಬಹುದು. ಇದು ಕನ್ನಡದಲ್ಲಿ ಅನಿಯಮಿತವಾಗಿ ನಡೆದ ಒಂದು ಬದಲಾವಣೆ.

ಈ ರೀತಿ ಬದಲಾಗಿರುವ ಪದಗಳಲ್ಲಿ (ಕ) ಕೆಲವಕ್ಕೆ ೞಕಾರವನ್ನು ತೋರಿಸುವ ರೂಪ ಮತ್ತು ಣಕಾರವನ್ನು ತೋರಿಸುವ ರೂಪ ಎಂಬುದಾಗಿ ಎರಡೆರಡು ರೂಪಗಳಿವೆ; ಆದರೆ (ಚ) ಬೇರೆ ಕೆಲವಕ್ಕೆ ಣಕಾರವನ್ನು ತೋರಿಸುವ ರೂಪ ಮಾತ್ರ ಇದೆ. (ಇಲ್ಲಿ ಕಂಸದೊಳಗೆ ಕೊಟ್ಟಿರುವ ಳಕಾರವಿರುವ ರೂಪಗಳು ಹೊಸಗನ್ನಡದವು.)

(ಕ) ಎರಡು ರೂಪಗಳಿರುವ ಪದಗಳು

ಹೂಣು

ಗೞ (ಗಳೆ) ಪೂೞು (ಹೂಳು) ಮುೞುಗು (ಮುಳುಗು) ಮುಣುಗು ತುೞಿ (ತುಳಿ) ನೊೞವು (ನೊಳ) ಮೊೞ (ಮೊಳ)
ಮೊೞಕಯ್ ಗೆೞಸು
ಕುೞಿ (ಗುಳಿ) ನೊೞ
ಪುೞ, ಪುೞು

ಮೊಣಕಯ್ ಗೆಣಸು ಕುಣಿ, ಗುಣಿ ನುಣುಚು ಪುಣುಗು, ಪುನುಗು

(ಚ) ಣಕಾರ ಮಾತ್ರ ಇರುವ ಪದಗಳು

ಕನ್ನಡ
ಕೊಣಸು ‘ಎಳತು’’ ತಣಲು ‘ಕೆಂಡ’’
ಪಣ್, ಹಣ್ಣು’
ಕಣಂಜು ‘ಒಂದು ತೂಕ’

ತಮಿಳು ಕುೞ ‘ಮೆತ್ತಗೆ’’ ತೞಲ್ ‘ಸುಡು’’ ಪೞಮ್ ಕೞಞ್ಚು

ಗಣ್ಣ ‘ಗದ್ದೆಯ ತುಂಡು’
ಗುಣ್ಪು ‘ನೆರವಿ’
ಕುಣಿಕೆ ‘ಕೊಂಡಿ’
ತಣಲ್ ‘ಕೆಂಡ’
ಮಣಕ ‘ಕರು’’
ಮೇಣಿ ‘ನೇಗಿಲ ತುದಿ, ಮೇಟಿ’’ ಮೇೞಿ

ಕೞನಿ ‘ಗದ್ದೆ’ ಕುೞು
ಕುೞಯ್ಚ್ಚು ತೞಯ್ ‘ಬಹಳ ಬಿಸಿ’’ ಮೞ ‘ಎಳೆಯ’

ಬಳ್ಳಾರಿ, ಹಡಗಲಿ ಮತ್ತು ಹೊಸ್ಪೇಟೆಗಳಲ್ಲಿ ದೊರೆತ ಹನ್ನೊಂದನೇ ಶತಮಾನದ ಶಾಸನಗಳಲ್ಲಿ ಇತರ ಕಡೆಗಳಲ್ಲಿ ದೊರೆತ ಶಾಸನಗಳ ೞಕಾರಕ್ಕೆ ಬದಲಾಗಿ ಈ ರೀತಿ ಣಕಾರ ಕಾಣಿಸುವುದಾದ ಕಾರಣ, ಕನ್ನಡದ ಬಡಗು ಇಲ್ಲವೇ ಮೂಡು-ಬಡಗು ಒಳನುಡಿಯಲ್ಲಿ ಈ ೞ>ಣ ಬದಲಾವಣೆ ನಡೆದಿರಬಹುದೆಂದು ಊಹಿಸಬಹುದು.

(4) ಕನ್ನಡದ ಬೇರೆ ಕೆಲವು ಪದಗಳಲ್ಲಿ ಮೂಲದ್ರಾವಿಡ ೞಕಾರ ಡಕಾರವಾಗಿ ಕಾಣಿಸುತ್ತದೆ; ಆದರೆ ಈ ಪದಗಳು ಕನ್ನಡಕ್ಕೆ ತೆಲುಗಿನಿಂದ ಎರವಲಾಗಿ ಬಂದವುಗಳಿರಬಹುದು; ಯಾಕೆಂದರೆ, ತೆಲುಗಿನಲ್ಲಿ ಸ್ವರಗಳ ನಡುವಿನ ೞಕಾರ ನಿಯಮಿತವಾಗಿ ಡಕಾರವಾಗಿದೆ.

ತಮಿಳು

ಕನ್ನಡ ಈಳಮ್ ಕೞಯ್ ಗಡೆ, ಗೞ ಗಾಟು ‘ಕಾರ’’ ಕಾೞ್ ಕೊಡ ‘ಎಳವೆ’’ ಕೊೞುನ್ತು ಕೋಡು ‘ಅಳುಕು’’ ಕೋೞಯ್ ಬೋಡಿ ‘ಬೋಳು’’ ಪೋೞು

ತೆಲುಗು ಕೊಡುಕು ‘ಮಗ’’ ಕೋಡಾಡು ಬೋಡಿ

ಹಳೆಗನ್ನಡದ ೞಕಾರ ಡಕಾರದಿಂದಲೂ ಬಂದಿದೆಯುಂಬುದನ್ನು ಮೇಲೆ

(4.3.4)ರಲ್ಲಿ ನೋಡಿರುವೆವು. (ಮತ್ತು

ಕನ್ನಡದಲ್ಲಿ ಬಿದ್ದುಹೋಗಿವೆಯುಂಬುದನ್ನು ಮತ್ತು ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ
ಲಕಾರವಾಗಿವೆಯೆಂಬುದನ್ನು ಮೇಲೆ (5.3.2)ರಲ್ಲಿ ನೋಡಿರುವೆವು.

ಳಕಾರಗಳು) ಬಡಗ

Eke →

5.4.4 ಪದಗಳ ಕೊನೆಯ ತಡೆಯಿಲ್ಲದುಲಿಗಳು

ಮೂಲದ್ರಾವಿಡ ಬೇರುಗಳ ಇಲ್ಲವೇ ಪದಗಳ ಕೊನೆಯಲ್ಲಿ ವಕಾರ ಕಾಣಿಸಿ ಕೊಳ್ಳುವುದು ಬಹಳ ಅಪರೂಪ. ಆದರೆ ಯಕಾರ ಮತ್ತು ೞಕಾರಗಳು ಸಾಕಶ್ಟು ಬೇರುಗಳಲ್ಲಿ ಮತ್ತು ಪದಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಬೇರುಗಳ ಕೊನೆಯಲ್ಲಿದ್ದ ಯಕಾರ ಹಳೆಗನ್ನಡದಲ್ಲಿ ಬದಲಾಗದೆ ಉಳಿದಿದೆ. ಆದರೆ ಹೊಸಗನ್ನಡದಲ್ಲಿ ಇದು ಕೆಲವು ಸನ್ನಿವೇಶಗಳಲ್ಲಿ ಬದಲಾಗಿದೆ ಮತ್ತು ಬೇರೆ ಕೆಲವು ಸನ್ನಿವೇಶಗಳಲ್ಲಿ ಬದಲಾಗದೆ ಉಳಿದಿದೆ. ಉದಾಹರಣೆಗಾಗಿ ಕಯ್, ಕೆಯ್, ಮೆಯ್ ಮೊದಲಾದ ಗಿಡ್ಡ ಸ್ವರವಿರುವ ನಾಮಪದಗಳ ಕೊನೆಯಲ್ಲಿ ಅದು ಬದಲಾಗದೆ ಉಳಿದಿದೆ.

ಇದೇ ರೀತಿಯಲ್ಲಿ ಕೇಳುಗನಿಂದ ಕೆಲಸವೊಂದನ್ನು ಮಾಡಿಸುವುದಕ್ಕಾಗಿ ಬಳಸುವ ಕೊಯ್, ಬಯ್, ಹುಯ್ ಮೊದಲಾದ ಗಿಡ್ಡಸ್ವರವಿರುವ ಕ್ರಿಯಾರೂಪಗಳಲ್ಲೂ ಅದು ಬದಲಾಗದೆ ಉಳಿದಿದೆ.

ಉದ್ದಸ್ವರವಿರುವ ನಾಯಿ, ಬಾಯಿ, ಕಾಯಿ ಮೊದಲಾದ ಕೆಲವು ನಾಮಪದಗಳಲ್ಲಿ ಮತ್ತು ಕೆಲಸ ಮಾಡಿಸಲು ಬಳಸುವ ಆಯಿ, ಸಾಯಿ, ಕಾಯಿ ಮೊದಲಾದ ಕೆಲವು ಕ್ರಿಯಾರೂಪಗಳಲ್ಲಿ ಯಕಾರ ಬದಲಾಗದೆ ಉಳಿದಿದೆಯಾದರೂ ಅದರ ಅನಂತರ ಇಕಾರವೊಂದು ಕಾಣಿಸಿಕೊಳ್ಳುತ್ತದೆ. ಆದರೆ, ಉದ್ದ ಈ ಸ್ವರವಿರುವ ಮೀ, ಈ ಪದಗಳಲ್ಲಿ ಯಕಾರ ಬಿದ್ದು ಹೋಗಿದೆ.

ಒಟ್ಟುಗಳ ಕೊನೆಯಲ್ಲಿ ಬರುವ ಯಕಾರ ಕನ್ನಡದಲ್ಲಿ ಬಿದ್ದು ಹೋಗಿದೆ ಮತ್ತು ಅದರ ಹಿಂದಿರುವ ಅಕಾರ ಎಕಾರವಾಗಿ ಬದಲಾಗಿದೆ (3.6.1 ನೋಡಿ).

ಕನ್ನಡ
ಗೞಲೆ
ಕೊಟ್ಟಿಗೆ
ದೋಸೆ

ತಮಿಳು ಕೞಲಯ್ ಕೞುತಯ್ ಪಾರಯ್ ಕುಟುಕ್ಕಯ್ ಕೊಟ್ಟಿಕಯ್ ತೋಚಯ್

ಪದಗಳ ಕೊನೆಯಲ್ಲಿ ಬಂದ ೞಕಾರ ಹೊಸಗನ್ನಡದಲ್ಲಿ ಳಕಾರವಾಗಿ

ಬದಲಾಗಿರುವುದನ್ನು ಮೇಲೆ 5.4.3ರಲ್ಲಿ ವಿವರಿಸಲಾಗಿದೆ.

Eke →

5.5 ತಿರುಳು

ಮೂಲದ್ರಾವಿಡದ ನಾಲ್ಕು ಮೂಗುಲಿಗಳು (ಮ, ನ, ಣ, ಞ), ಒಂದು ಹೊಡೆಯುಲಿ (ರ), ಎರಡು ಪಕ್ಕದುಲಿಗಳು (ಲ, ಳ), ಮತ್ತು ಮೂರು ತಡೆಯಿಲ್ಲದುಲಿಗಳು (ೞ, ಯ, ವ) ಕನ್ನಡದಲ್ಲಿ ಎಂತಹ ಬದಲಾವಣೆ ಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಮೂಗುಲಿಗಳಲ್ಲಿ ಞಕಾರ ಕನ್ನಡದಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ತನ್ನ ಶಕ್ತಿಯನ್ನು ಕಳೆದುಕೊಂಡಿದೆ; ಕರಾವಳಿಯ ಕೆಲವು ಒಳನುಡಿಗಳು ಮೂಗುಲಿಗಳೂ ಮಾತ್ರ ಇದಕ್ಕೆ ಅಪವಾದಗಳಾಗಿವೆ. ಉಳಿದ ಹೊಸಗನ್ನಡದಲ್ಲಿ ಮತ್ತು ಇವತ್ತಿನ ಇತರ ಒಳನುಡಿಗಳಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿವೆ.

ಲಕಾರ-ಳಕಾರಗಳ ನಡುವಿನ ವ್ಯತ್ಯಾಸ ಕೆಲವು ಒಳನುಡಿಗಳಲ್ಲಿ ಇಲ್ಲ ವಾಗಿದೆ ಮತ್ತು ೞಕಾರವೂ ಬೇರೆ ಬೇರೆ ಕಾರಣಗಳಿಗಾಗಿ ಹೊಸಗನ್ನಡದಲ್ಲಿ

ಇಲ್ಲವಾಗಿದೆ. ವಕಾರ ಬಕಾರವಾಗಿರುವುದು ಕನ್ನಡದಲ್ಲಿ ನಡೆದ ಇನ್ನೊಂದು ಬದಲಾವಣೆ.

ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಈ ವ್ಯಂಜನಗಳು ಬೇರೆಯೂ ಹಲವು ಬದಲಾವಣೆಗಳಿಗೊಳಗಾಗಿದ್ದು, ಅವುಗಳ ಸ್ವರೂಪ ಎಂತಹದು ಎಂಬುದನ್ನು ತಿಳಿಯಲು ಇನ್ನಶ್ಟು ನಡೆಸುವ ಅವಶ್ಯಕತೆಯಿದೆ.

ಸಂಶೋದನೆಗಳನ್ನು