↑ Contents · Contents · Ch 2 →
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
1. ಮುನ್ನೋಟ
1.1 ನಡೆದು ಬಂದ ದಾರಿ
ಇವತ್ತು ನಾವು ಮಾತನಾಡಲು ಮತ್ತು ಬರೆಯಲು ಬಳಸುವ ಕನ್ನಡ ನುಡಿ ಯಾವ ದಾರಿಯಾಗಿ ನಡೆದು ಬಂದಿದೆ, ಎಂದರೆ ಮೂಲದ್ರಾವಿಡ ನುಡಿಯ ಒಂದು ಕವಲಿನಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯುವುದರ ಮೂಲಕ ಅದು ‘ಹೊಸಗನ್ನಡ’ ಎಂಬ ಇವತ್ತಿನ ರೂಪವನ್ನು ಪಡೆದಿದೆ ಎಂಬುದನ್ನು ತಿಳಿಯುವ ಒಂದು ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
ಇದಕ್ಕಾಗಿ ಕನ್ನಡವನ್ನು ಅದರೊಂದಿಗೆ ‘ನಂಟಸ್ತನ’ವನ್ನು ತೋರಿಸುವ ತಮಿಳು, ಮಲಯಾಳ, ತೆಲುಗು, ತುಳು, ಗೋಂಡಿ, ಕೂಯಿ, ಕುಡುಕ್ ಮೊದಲಾದ ಬೇರೆ ಇಪ್ಪತ್ತು-ಇಪ್ಪತ್ತಯ್ದು ದ್ರಾವಿಡ ನುಡಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಈ ಎಲ್ಲಾ ನುಡಿಗಳೂ ‘ಮೂಲದ್ರಾವಿಡ’ ಎಂಬ ಒಂದು ಮೂಲ ನುಡಿಯಿಂದ ಬೆಳೆದು ಬಂದಿರಬೇಕೆಂಬ ಕಲ್ಪನೆಯೇ ಈ ಪ್ರಯತ್ನಕ್ಕೆ ಅಡಿಗಲ್ಲಾಗಿದೆ.
ಬರಹ ಕನ್ನಡವನ್ನು ಈ ರೀತಿ ಅದರೊಂದಿಗೆ ನಂಟಸ್ತನವಿರುವ ಬೇರೆ ಹಲವು ನುಡಿಗಳೊಂದಿಗೆ ಹೋಲಿಸುವುದು ಮಾತ್ರವಲ್ಲದೆ ಕನ್ನಡದ್ದೇ ಆದ ಹಲವು ಒಳನುಡಿಗಳೊಂದಿಗೂ ಹೋಲಿಸುವ ಮೂಲಕ, ಕನ್ನಡ ನುಡಿ ತನ್ನ ತನವನ್ನು ಪಡೆದ ಮೇಲೆ ಅದರಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿವೆ ಎಂಬುದನ್ನೂ ಇಲ್ಲಿ ತಿಳಿಯಲು ಪ್ರಯತ್ನಿಸಲಾಗಿದೆ.
ಇದಕ್ಕಾಗಿ, ಹಿಂದಿನ ಕಾಲದಿಂದ ಉಳಿದು ಬಂದಿರುವ ಶಾಸನಗಳಲ್ಲಿ ಮತ್ತು ಇತರ ಬರಹಗಳಲ್ಲಿ ಕಾಣಿಸುವ ಕನ್ನಡದ ರೂಪಗಳನ್ನು ಮತ್ತು
ಇವತ್ತು ಕನ್ನಡ ನಾಡಿನ ಬೇರೆ ಬೇರೆ ಊರುಗಳಲ್ಲಿ (ಅದರಲ್ಲೂ ಕಾಣಿಸುವ ಮುಕ್ಯವಾಗಿ ಒಳನುಡಿಗಳಲ್ಲಿ) ಬಳಕೆಯಲ್ಲಿರುವ ಕನ್ನಡದ ರೂಪಗಳನ್ನು (ಎಂದರೆ ಕನ್ನಡದ ‘ಒಳನುಡಿ’ಗಳನ್ನು) ಬಳಸಿಕೊಳ್ಳಲಾಗಿದೆ.
ಮತ್ತು ಒಳನಾಡುಗಳಲ್ಲಿ
ಕರಾವಳಿ
ಈ ವ್ಯತ್ಯಾಸ ಯಾವ ರೀತಿ ಇರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಿದ್ದಲ್ಲಿ ಮೊದಲಿಗೆ ಒಂದು ನುಡಿ ಎರಡು (ಇಲ್ಲವೇ ಇಲ್ಲವೇ ಒಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದು ಅವಶ್ಯ.
ನುಡಿಗಳಾಗಿ ಬದಲಾಗುವುದು
ಹೆಚ್ಚು)
(1) ಒಂದು ಊರಿನಲ್ಲಿರುವ ಜನರಲ್ಲಿ ಕೆಲವರು ದೂರದಲ್ಲಿರುವ ಬೇರೊಂದು ಊರಿಗೆ ಹೋಗಿ ನೆಲೆಸಿದರಾದರೆ, ಅವರಿಗೂ ಹಿಂದೆ ಉಳಿದ ವರಿಗೂ ನಡುವಿದ್ದ ಸಂಪರ್ಕ ಪೂರ್ತಿ ಕಡಿದು ಹೋಗುತ್ತದೆ ಮತ್ತು ಇದರಿಂದಾಗಿ ಅವರು ಬಳಸುವ ನುಡಿಯಲ್ಲಿ ಹಿಂದೆ ಉಳಿದವರ ನುಡಿಯಲ್ಲಿ ನಡೆಯುವ ಬದಲಾವಣೆಗಳಿಗಿಂತ ತೀರ ಬೇರಾಗಿರುವ ಬದಲಾವಣೆಗಳು ನಡೆಯತೊಡಗುತ್ತವೆ.
ಇದರಿಂದಾಗಿ, ಆ ಎರಡು ಊರುಗಳಲ್ಲಿ ನೆಲೆಸಿರುವ ಜನರ ನುಡಿ ಮೊದಲಿಗೆ ಒಂದು ಇದ್ದುದು ಕಳೆದಂತೆ ಎರಡಾಗಿ ಒಡೆದುಕೊಳ್ಳುತ್ತದೆ ಮತ್ತು ಅನಂತರ ಈ ಎರಡು ಒಳನುಡಿಗಳು ಎರಡು ಸ್ವತಂತ್ರವಾದ ನುಡಿಗಳೆನಿಸುತ್ತವೆ.
ಸಮಯ
ಉದಾಹರಣೆಗಾಗಿ, ಕನ್ನಡ ನುಡಿಯನ್ನಾಡುತ್ತಿದ್ದ ಕೆಲವು ಜನರು ಸುಮಾರು ನಾನೂರು ವರ್ಶಗಳಶ್ಟು ಹಿಂದೆ ಮಯ್ಸೂರನ್ನು ಬಿಟ್ಟು ನೀಲಗಿರಿಯಲ್ಲಿ ಹೋಗಿ ನೆಲೆಸಿರಬೇಕು ಮತ್ತು ಅನಂತರ ಅವರಿಗೂ ಮಯ್ಸೂರಿನ ಹೋಗಿರಬೇಕು.
ಕನ್ನಡಿಗರಿಗೂ
ನಡುವಿದ್ದ
ಸಂಪರ್ಕ
ಪೂರ್ತಿ
ಈ ರೀತಿ ಸಂಪರ್ಕ ತಪ್ಪಿಹೋದುದರಿಂದಾಗಿ ಮಯ್ಸೂರಿನಲ್ಲೇ ಉಳಿದಿದ್ದ ಕನ್ನಡಿಗರ ನುಡಿಯಲ್ಲಿ ನಡೆದ ಬದಲಾವಣೆಗಳಿಗಿಂತ ತೀರ ಬೇರಾಗಿರುವ ಹಲವು ಬದಲಾವಣೆಗಳು ನೀಲಗಿರಿಯಲ್ಲಿ ನೆಲಸಿದವರ
ನುಡಿಯಲ್ಲಿ ನಡೆದಿರಬೇಕು ಮತ್ತು ಇದರಿಂದಾಗಿ ನೀಲಗಿರಿಯಲ್ಲಿ ನೆಲಿಸಿದವರ ಕನ್ನಡ ಮಾತು ‘ಬಡಗ’ ಎಂಬ ಹೆಸರಿನ ಬೇರೆಯೇ ಒಂದು ಒಳನುಡಿಯಾಗಿ ಬದಲಾಗಿರಬೇಕು.
ಕೆಲವರ ಅಬಿಪ್ರಾಯದಂತೆ ಬಡಗ ಎಂಬುದು ಇವತ್ತು ಕನ್ನಡಕ್ಕಿಂತ ಬೇರಾಗಿರುವ ಒಂದು ಸ್ವತಂತ್ರವಾದ ನುಡಿಯಾಗಿದೆ (ಹೋಕಿಂಗ್್ಸ ಮತ್ತು ಪಯ್ಲಟ್-ರಯ್ಚೂರ್ 1992 ನೋಡಿ).
(2) ಒಂದು ನುಡಿಯನ್ನಾಡುವ ಜನರು ವಿಸ್ತಾರವಾದ ಒಂದು ಪ್ರದೇಶ ದಲ್ಲಿ ನೆಲೆಸಿರುವರಾದರೆ, ಅದರ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆಯಬಲ್ಲುವು. ಆ ಜಾಗಗಳಲ್ಲಿ ನೆಲೆಸಿದ ಜನರ ನಡುವೆ ಎಂತಹ ಸಂಪರ್ಕವಿತ್ತು ಎಂಬುದರ ಮೇಲೆ ಇದು ಅವ ಲಂಬಿಸಿದೆ.
ಉದಾಹರಣೆಗಾಗಿ, ಕನ್ನಡವನ್ನಾಡುವ ಪ್ರದೇಶವನ್ನು ‘ಕರಾವಳಿ’ ಮತ್ತು ‘ಒಳನಾಡು’ ಎಂಬುದಾಗಿ ಮತ್ತು ಒಳನಾಡನ್ನು ‘ಬಡಗು ಒಳನಾಡು’ ಮತ್ತು ‘ತೆಂಕು ಒಳನಾಡು’ ಎಂಬುದಾಗಿ ವಿಂಗಡಿಸಬಲ್ಲೆವು. ಇವುಗಳಲ್ಲಿ ಕರಾವಳಿ ಮತ್ತು ಒಳನಾಡುಗಳ ನಡುವೆ ದುರ್ಗಮವಾದ ಪಶ್ಚಿಮಗಟ್ಟಗಳು ತಡೆಯಾಗಿ ನಿಂತಿವೆ ಮತ್ತು ಈ ತಡೆಯಿಂದಾಗಿ ಆ ಎರಡು ಜಾಗಗಳಲ್ಲಿ ನೆಲೆಸಿದ್ದ ಜನರ ನಡುವೆ ಹಿಂದಿನ ಕಾಲದಲ್ಲಿ ಬಹಳ ಕಡಿಮೆ ಸಂಪರ್ಕವಿದ್ದಿರಬೇಕು.
ಬಡಗು ಮತ್ತು ತೆಂಕು ಒಳನಾಡುಗಳ ನಡುವೆ ಇಂತಹ ದುರ್ಗಮವಾದ ನಡುವಿರುವ
ತಡೆಯಿಲ್ಲವಾದರೂ, ಅವುಗಳ ಎರಡು ಅಂತರದಿಂದಾಗಿ ಸಂಪರ್ಕಕ್ಕೆ ಸ್ವಲ್ಪ ಮಟ್ಟಿಗಿನ ತಡೆ ಬಂದಿರಬೇಕು.
ತುದಿಗಳ
ನಡುವೆ
ಕರಾವಳಿ
ಮತ್ತು ಒಳನಾಡುಗಳ
ಸಂಪರ್ಕ ಬಹಳ ಕಡಿಮೆಯಿದ್ದುದರಿಂದಾಗಿ, ಕರಾವಳಿಯ ಕನ್ನಡಿಗರ ನುಡಿಯಲ್ಲಿ ನಡೆದ ಹಲವು ಬದಲಾವಣೆಗಳು ಒಳನಾಡಿನ ಕನ್ನಡಿಗರ ನುಡಿಯಲ್ಲಿ ನಡೆಯಲಿಲ್ಲ ಮತ್ತು ಒಳನಾಡಿನಲ್ಲಿ ನಡೆದ ಹಲವು ಬದಲಾವಣೆಗಳು ಕರಾವಳಿಯಲ್ಲಿ ನಡೆಯಲಿಲ್ಲ (1.3.1 ನೋಡಿ).
ಇದರಿಂದಾಗಿ, ಇವತ್ತು ಕರಾವಳಿಯ ಕನ್ನಡ ಮತ್ತು ಒಳನಾಡಿನ ಕನ್ನಡಗಳ ನಡುವೆ ಒಂದು ನಿಶ್ಚಿತವಾದ ಗಡಿಯಿರುವುದನ್ನು ಕಾಣಬಹುದು. ಕರಾವಳಿಯಿಂದ ಒಳನಾಡಿನ ಬಡಗು ಇಲ್ಲವೇ ತೆಂಕು ಕರ್ನಾಟಕದ ಕಡೆಗಾಗಿ ಸಂಚರಿಸಿದಾಗ, ದಾಟುತ್ತಿದ್ದಂತೆ ಒಮ್ಮೆಗೇನೇ ಕರಾವಳಿಯ ಒಳನುಡಿ ಮುಗಿದು ಒಳನಾಡಿನ ಒಳನುಡಿ ಸುರುವಾಗುವುದು ಕಾಣಿಸುತ್ತದೆ.
ಪಶ್ಚಿಮಗಟ್ಟಗಳನ್ನು
ಇದಕ್ಕೆ ಬದಲು, ಒಳನಾಡಿನ ಬಡಗು ಮತ್ತು ತೆಂಕು ಒಳನುಡಿಗಳ ನಡುವೆ ಇಂತಹ ಒಂದು ನಿಶ್ಚಿತವಾದ ಗಡಿಯನ್ನು ಕಾಣಲು ಸಾದ್ಯವಾಗುವು ದಿಲ್ಲ. ಅವು ಬಡಗಿನಿಂದ ತೆಂಕಕ್ಕೆ ಹಂತ ಹಂತವಾಗಿ ಬೇರಾಗುತ್ತಾ ಹೋಗುತ್ತವೆ. ಅವುಗಳ ನಡುವಿನ ಯಾವುದೇ ಒಂದು ಊರಲ್ಲೂ ಬಡಗು ಕನ್ನಡದ ಒಳನುಡಿ ಕನ್ನಡದ ಒಳನುಡಿ ಸುರುವಾಗುತ್ತಿದೆಯುಂದು ನಿಶ್ಚಿತವಾಗಿ ಹೇಳಲು ಸಾದ್ಯವಾಗುವುದಿಲ್ಲ.
ಮುಗಿದು
ಮೇಲೆ ಸೂಚಿಸಿದ ಹಾಗೆ, ಒಳನಾಡಿನಲ್ಲಿ ಬಡಗು ಮತ್ತು ತೆಂಕು ಕರ್ನಾಟಕಗಳ ನಡುವೆ ದುರ್ಗಮವಾದ ತಡೆ ಯಾವುದೂ ಇಲ್ಲದಿರುವುದೇ ಈ ರೀತಿ ಆ ಎರಡು ಒಳನುಡಿಗಳ ನಡುವೆ ನಿಶ್ಚಿತವಾದ ಗಡಿಯಿಲ್ಲದಿರಲು ಕಾರಣ. ಬರಿಯ ಅಂತರ ಮಾತ್ರವೇ ಅವನ್ನು ಬೇರ್ಪಡಿಸಬಲ್ಲುದು. ಹಾಗಾಗಿ, ಒಳನಾಡಿನ ಜನರ ನುಡಿಯಲ್ಲಿ ನಡೆದ ಬದಲಾವಣೆಗಳ ಹರಹು ಬೇರೆಯೇ ಒಂದು ರೂಪದಲ್ಲಿದೆ.
ಅವುಗಳಲ್ಲಿ ನಡೆದ ಕೆಲವು ಬದಲಾವಣೆಗಳು ಇಡೀ ಒಳನಾಡನ್ನೇ ವ್ಯಾಪಿಸಿವೆಯಾದರೆ, ಬೇರೆ ಕೆಲವು ಬದಲಾವಣೆಗಳು ಬಡಗು ಪ್ರದೇಶದಲ್ಲಿ ಮಾತ್ರ ನಡೆದಿವೆ ಇಲ್ಲವೇ ತೆಂಕು ಪ್ರದೇಶದಲ್ಲಿ ಮಾತ್ರ ನಡೆದಿವೆ. ಇನ್ನು ಕೆಲವು ಬದಲಾವಣೆಗಳು ಇವೆರಡರ ನಡುವಿನ ಪ್ರದೇಶದಲ್ಲಿ ಮಾತ್ರ ನಡೆದಿವೆ. ಇದರಿಂದಾಗಿ, ಇವತ್ತು ಕನ್ನಡದ ಒಳನಾಡಿನ ಒಳನುಡಿಗಳು ಊರಿಂದೂರಿಗೆ ಹಂತ ಹಂತವಾಗಿ ಬೇರಾಗುತ್ತಿರುವುದನ್ನು ಕಾಣಬಹುದು.
ಮೂಲದ್ರಾವಿಡವೆಂಬ ಒಂದು ನುಡಿ ಕನ್ನಡ ಮತ್ತು ಅದರೊಂದಿಗೆ ನಂಟಸ್ತಿಕೆಯನ್ನು ತೋರಿಸುವ ತಮಿಳು, ಮಲಯಾಳ, ತೆಲುಗು, ತುಳು,
ಕೊಡಗು, ಗೋಂಡಿ, ಕುಡುಕ್ ಮೊದಲಾದ ಸುಮಾರು ಇಪ್ಪತ್ತಾರು ದ್ರಾವಿಡ ನುಡಿಗಳಾಗಿ ಒಡೆದುಕೊಳ್ಳಲು ಮೇಲೆ ವಿವರಿಸಿದ ಎರಡು ರೀತಿಯ ವಿದಾನಗಳಲ್ಲಿ ಯಾವುದು ಕಾರಣವಿರಬಹುದು ಎಂಬುದನ್ನು ಈಗ ಹೇಳುವುದು ಕಶ್ಟ. ಈ ಎರಡು ರೀತಿಯ ವಿದಾನಗಳೂ ಒಟ್ಟಾಗಿ ಇದಕ್ಕೆ ಕಾರಣವಾಗಿರಬಹುದು.
ಉದಾಹರಣೆಗಾಗಿ, ಇವತ್ತು ಬಲೂಚಿಸ್ತಾನ(ಪಾಕಿಸ್ತಾನ)ದಲ್ಲಿ ನೆಲೆ ಸಿರುವ ಬ್ರಾಹುಯೀ ಜನಾಂಗದ ನುಡಿ ಒಂದು ಸ್ವತಂತ್ರ ನುಡಿಯಾಗಿ ಬದಲಾಗಲು ಅದನ್ನಾಡುವ ಜನರು ಬಾರತದಿಂದ ಬಲೂಚಿಸ್ತಾನಕ್ಕೆ ವಲಸೆ ಹೋದುದೇ ಕಾರಣವಾಗಿರಬಹುದು. ಆದರೆ, ತಮಿಳು ಮತ್ತು ಮಲಯಾಳ ನುಡಿಗಳು ಎರಡು ಸ್ವತಂತ್ರ ನುಡಿಗಳಾಗಿ ಬದಲಾಗಲು ಅಂತಹ ವಲಸೆಗಿಂತಲೂ ಅವನ್ನಾಡುವ ಜನರು ವಾಸಿಸುವ ಜಾಗಗಳ ನಡುವಿರುವ ಅಂತರವೇ ಕಾರಣವಿರಬೇಕು.
1.1.3 ಮೂಲನುಡಿಯ ಕಲ್ಪನೆ
ಎರಡು ನುಡಿಗಳು ಒಂದೇ ಮೂಲನುಡಿಯಿಂದ ಬೆಳೆದು ಬಂದಿವೆಯುಂದು ವಾದಿಸಬೇಕಿದ್ದಲ್ಲಿ ಅವುಗಳ ನಡುವೆ ಎಂತಹ ವ್ಯತ್ಯಾಸಗಳಿರಬೇಕು ಎಂಬುದು ಮೇಲಿನ ವಿವರಣೆಯಿಂದ ಸ್ಪಶ್ಟವಾಗುತ್ತದೆ. ಆ ವ್ಯತ್ಯಾಸಗಳೆಲ್ಲ ಮೂಲನುಡಿಯನ್ನಾಡುತ್ತಿದ್ದ ಎರಡು ಗುಂಪುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಿದ್ದಲ್ಲಿ ಮಾತ್ರ ಆ ಎರಡು ನುಡಿಗಳು ಒಂದೇ ವಾದಿಸಲು ಮೂಲನುಡಿಯಿಂದ ಸಾದ್ಯವಾಗುತ್ತದೆ.
ಬೆಳೆದು ಬಂದಿವೆಯುಂಬುದಾಗಿ
ನಡೆದುದರಿಂದಾಗಿ
ಉದಾಹರಣೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳು ತೆಂಕುದ್ರಾವಿಡ ವೆಂಬ ಮೂಲನುಡಿಯಿಂದ ಬೆಳೆದು ಬಂದಿವೆಯುಂಬುದಾಗಿ ವಾದಿಸಲು ನಮಗೆ ಸಾದ್ಯವಾಗಿದೆ. ಎಂದರೆ, ಈ ಎರಡು ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಕಲ್ಪಿತವಾಗಿರುವ ತೆಂಕುದ್ರಾವಿಡವೆಂಬ ಮೂಲನುಡಿಯ
ಎರಡು ಕವಲುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದುದ ರಿಂದಾಗಿ ಮೂಡಿಬಂದಿವೆಯುಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ.
ಈ ಮೂಲನುಡಿಯನ್ನಾಡುತ್ತಿದ್ದ ಜನರ ಒಂದು ಗುಂಪಿನಲ್ಲಿ ಒಂದು ರೀತಿಯ ಬದಲಾವಣೆಗಳಾದುದರಿಂದಾಗಿ ಕನ್ನಡ ನುಡಿ ಸಿದ್ದವಾಗಿದೆ ಮತ್ತು ಇನ್ನೊಂದು ಬದಲಾವಣೆಗಳಾದುದರಿಂದಾಗಿ ತಮಿಳು ನುಡಿ ಸಿದ್ದವಾಗಿದೆ ಎಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಿದೆ.
ಗುಂಪಿನಲ್ಲಿ
ಬೇರೆಯೇ
ಇದೇ ರೀತಿಯಲ್ಲಿ ತೆಲುಗು, ಕೊಡಗು, ತುಳು ಮೊದಲಾದ ಇತರ ದ್ರಾವಿಡ ನುಡಿಗಳೂ ಮೂಲದ್ರಾವಿಡ ನುಡಿಯನ್ನಾಡುತ್ತಿದ್ದ ಜನರ ಬೇರೆ ಬೇರೆ ಗುಂಪುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದುದ ರಿಂದಾಗಿ ಮೂಡಿಬಂದಿವೆಯುಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ.
1.1.4 ವ್ಯತ್ಯಾಸ ಮತ್ತು ಸಾಮ್ಯ
ನುಡಿಗಳ ನಡುವಿನ ನಂಟಸ್ತನ ಈ ರೀತಿ ಅವುಗಳ ನಡುವಿರುವ ವ್ಯತ್ಯಾಸಗಳು ಎಂತಹವು ಎಂಬುದನ್ನು ಅವಲಂಬಿಸಿದೆಯಲ್ಲದೆ ಅವುಗಳ ನಡುವೆ ಎಂತಹ ಸಾಮ್ಯವಿದೆ ಇಲ್ಲವೇ ಎಶ್ಟು ಸಾಮ್ಯವಿದೆ ಎಂಬುದನ್ನು ಅವಲಂಬಿಸಿಲ್ಲ. ನುಡಿಗಳ ನಡುವಿರುವ ನಂಟಸ್ತಿಕೆ ಎಶ್ಟು ಹತ್ತಿರದ್ದು ಇಲ್ಲವೇ ಎಶ್ಟು ದೂರದ್ದು ಎಂಬ ವಿಶಯದಲ್ಲಿ ಇದೊಂದು ಅತ್ಯಂತ ಪ್ರಾಮುಕ್ಯವಾದ ಸಂಗತಿ. ಆದರೆ ಹೆಚ್ಚಿನವರೂ ಇದನ್ನು ಸರಿಯಾಗಿ ಅರ್ತಮಾಡಿಕೊಂಡಿರುವುದಿಲ್ಲ.
ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಹಲವು ರೀತಿಯ ಸಾಮ್ಯಗಳನ್ನು ಕಾಣಬಲ್ಲೆವು. ಕರ್ಣ-ಕಿವಿ, ಮುಖ-ಮೋರೆ, ಮೊದಲಾದ ಹಲವು ಸಾಮ್ಯವಿದೆಯುಂದು ಪದಗಳ ತೋರಬಹುದು; ವ್ಯಾಕರಣದಲ್ಲೂ ಇಂತಹ ಕೆಲವು ಸಾಮ್ಯಗಳನ್ನು ಈ ಎರಡು ನುಡಿಗಳ ನಡುವೆ ಕಾಣಲು ಕಶ್ಟವಾಗದು.
ಸಂಸ್ಕ್ರುತ-ಕನ್ನಡ
ನಡುವೆ
ಆದರೆ ಈ ಸಾಮ್ಯಗಳನ್ನವಲಂಬಿಸಿ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ನಂಟಸ್ತಿಕೆಯಿದೆಯುಂದಾಗಲಿ ಇಲ್ಲವೇ ಕನ್ನಡ ಸಂಸ್ಕ್ರುತದಿಂದ
(‘ವಿಕ್ರುತ’ಗೊಂಡು)
ಬೆಳೆದು ಸಾದ್ಯವಾಗದು.
ಬಂದಿದೆಯುಂದಾಗಲಿ
ವಾದಿಸಲು
ಇದಕ್ಕೆ ಕಾರಣವೇನೆಂದರೆ, ಎರಡು ನುಡಿಗಳ ನಡುವಿನ ಸಾಮ್ಯಕ್ಕೆ ಹಲವು ಕಾರಣಗಳಿರಬಹುದು. ಅವುಗಳೊಳಗೆ ಹಲವು ಶತಮಾನಗಳ ಸಂಪರ್ಕವಿದೆಯಾದಲ್ಲಿ ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಇಲ್ಲವೇ ವ್ಯಾಕರಣಾಂಶಗಳನ್ನು ಎರವಲಾಗಿ ಪಡೆದಿರಲು ಸಾದ್ಯವಿದ್ದು, ಅದರಿಂದಾಗಿ ಅವುಗಳ ನಡುವೆ ಸಾಮ್ಯ ಕಾಣಿಸಬಲ್ಲುದು.
ಇದಲ್ಲದೆ, ನುಡಿಗಳ ನಡುವಿನ ಸಾಮ್ಯ ಆಕಸ್ಮಿಕವಾದುದಾಗಿರಲೂ ಸಾದ್ಯವಿದೆ. ಎಲ್ಲಾ ನುಡಿಗಳೂ ಮಾನವನ ವಿಕಾಸದ ಒಂದು ಅಂಗವಾಗಿ ಮೂಡಿ ಬಂದಿವೆಯಾದ ಕಾರಣ, ಅವುಗಳ ನಡುವೆ ಅಂತಹ ಸಾಮ್ಯ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ.
ನುಡಿಗಳಾಗಿ
ಆದರೆ ನುಡಿಗಳ ನಡುವಿನ ನಂಟಸ್ತಿಕೆಯುಂಬುದು ಒಂದು ಮೂಲನುಡಿ ಯಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ಅದು ಹೇಗೆ ಹಲವು ಒಡೆದುಕೊಂಡಿದೆಯುಂಬುದನ್ನು ತಿಳಿಸಬೇಕಾಗಿದೆಯಾದ ಕಾರಣ, ಅದಕ್ಕೆ ನುಡಿಗಳ ನಡುವಿನ ಸಾಮ್ಯವನ್ನು ಆದಾರವಾಗಿ ಕೊಡಲು ಸಾದ್ಯವಾಗುವುದಿಲ್ಲ. ಆ ನುಡಿಗಳ ನಡುವಿನ ವ್ಯತ್ಯಾಸಗಳನ್ನೆಲ್ಲ ಒಂದೇ ಮೂಲ ನುಡಿಯ ಎರಡು ಬೇರೆ ಬೇರೆ ಬದಲಾವಣೆಗಳ ಕವಲುಗಳಲ್ಲಿ ತೋರಿಸಿಕೊಡಲು ಸಾದ್ಯವಾಗುವುದೊಂದೇ ಅದಕ್ಕೆ ಆದಾರವಾಗಬಲ್ಲುದು.
ನಡೆದ
1.2 ದ್ರಾವಿಡ ನುಡಿಗಳು
ಒಂದರೊಡನೊಂದು ನಂಟಸ್ತನವನ್ನು ತೋರಿಸುವ (ಎಂದರೆ ಒಂದೇ ಮೂಲ ನುಡಿಯಿಂದ ಬದಲಾಗಿ ಬಂದಿರುವ) ನುಡಿಗಳನ್ನೆಲ್ಲ ಒಟ್ಟಿಗೆ ಒಂದು ‘ನುಡಿ ಕುಟುಂಬ’ವೆಂಬುದಾಗಿ ಪರಿಗಣಿಸಲಾಗುತ್ತದೆ.
ಕನ್ನಡ, ತಮಿಳು, ತೆಲುಗು, ಮಲಯಾಳ ಮೊದಲಾದ ನುಡಿಗಳು ‘ದ್ರಾವಿಡ’ ಎಂಬ ಒಂದು ನುಡಿಕುಟುಂಬಕ್ಕೆ ಸೇರಿದವುಗಳೆಂಬುದನ್ನು
ಮೊದಲಿಗೆ ತೋರಿಸಿ ಕೊಟ್ಟವರು ರೋಬರ್್ಟ ಕಾಲ್್ಡವೆಲ್ (ಕಾಲ್್ಡವೆಲ್ 1913). ಅವರ ಅನಂತರ ಈ ನುಡಿಕುಟುಂಬದ ಮೇಲೆ ಮತ್ತು ಅದಕ್ಕೆ ಸೇರಿದ ನುಡಿಗಳ ಮೇಲೆ ಹಲವು ಮಂದಿ ವಿದ್ವಾಂಸರು ಸಂಶೋದನೆಗಳನ್ನು ನಡೆಸಿದ್ದಾರೆ ಮತ್ತು ಈ ಸಂಶೋದನೆಗಳ ಮೂಲಕ ಈ ವಿಶಯ ಇನ್ನಶ್ಟು ಸ್ಪಶ್ಟ ಮತ್ತು ಕಚಿತವಾಗುವ ಹಾಗೆ ಮಾಡಿದ್ದಾರೆ.
ಒಟ್ಟು ಇಪ್ಪತ್ತಾರಕ್ಕಿಂತಲೂ ಹೆಚ್ಚು ನುಡಿಗಳು ಈ ನುಡಿಕುಟುಂಬಕ್ಕೆ ಸೇರುತ್ತವೆ. ಮೇಲೆ ಸೂಚಿಸಿದ ಹಾಗೆ, ಮೊದಲಿಗೆ ಈ ದ್ರಾವಿಡ ಜನರಲ್ಲಿ ಒಂದೇ ಒಂದು ಮೂಲನುಡಿ ಬಳಕೆಯಲ್ಲಿದ್ದಿರಬೇಕು; ಅನಂತರ ಅದನ್ನಾಡುವ ಈ ಜನರು ಬೇರೆ ಬೇರೆ ಊರುಗಳಿಗೆ ಹೋಗಿ (ಇಲ್ಲವೇ ಒಂದು ವಿಶಾಲವಾದ ಜಾಗದಲ್ಲಿ ನೆಲೆಸಿದುದರಿಂದಾಗಿ ನೆಲೆಸಿದುದರಿಂದಾಗಿ), ಅವರ ಮಾತಿನಲ್ಲಿ ಸಮಯದಿಂದ ಸಮಯಕ್ಕೆ ನಡೆದ ಬದಲಾವಣೆಗಳು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ದಿಕ್ಕುಗಳನ್ನು ಹಿಡಿದಿರಬೇಕು; ಮತ್ತು ಇದರಿಂದಾಗಿ, ಆ ಮೂಲ ನುಡಿ ಹಲವು ನುಡಿಗಳಾಗಿ ಒಡೆದಿರಬೇಕು ಎಂಬುದು ವಿದ್ವಾಂಸರ ಕಲ್ಪನೆ
ಮೊದಲಿಗೆ
ಕರೆಯಲಾಗಿದೆ. ಅದು
ಇದ್ದಿರಬಹುದಾದ ಈ
ಮೂಲನುಡಿಯನ್ನು ‘ಮೂಲದ್ರಾವಿಡ’ ಎಂದು ತೆಂಕುದ್ರಾವಿಡ, ನಡುದ್ರಾವಿಡ ಮತ್ತು ಬಡಗು ದ್ರಾವಿಡ ಎಂಬ ಮೂರು ಕವಲುಗಳಾಗಿ ಒಡೆದಿದ್ದು, ಅವುಗಳಲ್ಲಿ ತೆಂಕುದ್ರಾವಿಡವೆಂಬ ಕವಲಿನಿಂದ ಕನ್ನಡ ನುಡಿ ಬೆಳೆದು ಬಂದಿರಬೇಕು ಎಂಬುದು ಇವತ್ತಿನ ಹಲವು ವಿದ್ವಾಂಸರ ಕಲ್ಪನೆಯಾಗಿದೆ.
1.2.1 ಇವತ್ತಿನ ದ್ರಾವಿಡ ನುಡಿಗಳು
ತೆಂಕುದ್ರಾವಿಡ ಕವಲಿನಿಂದ ಕನ್ನಡ ನುಡಿ (ಜನಸಂಕ್ಯೆ: ಮೂರು ಕೋಟಿ) ಮಾತ್ರವಲ್ಲದೆ, ತಮಿಳು (ಅಯ್ದು ಕೋಟಿ) ಮಲಯಾಳ (ಮೂರು ಕೋಟಿ), ಕೊಡಗು (93 ಸಾವಿರ), ತೊದ (1,600), ಕೋತ (1,400), ಇರುಳ (5,200) ಮತ್ತು ಕುಱುಂಬ (5000) ಎಂಬ ಬೇರೆ ಏಳು
ನುಡಿಗಳೂ ಬೆಳೆದು ಬಂದಿವೆ. ಇವುಗಳಲ್ಲಿ ಕೊನೆಯ ನಾಲ್ಕು ನುಡಿಗಳು (ತೊದ, ಕೋತ, ಇರುಳ ಮತ್ತು ಕುಱುಂಬ) ನೀಲಗಿರಿಯ ಗುಡ್ಡ ಕಾಡುಗಳಲ್ಲಿ ಬಳಕೆಯಲ್ಲಿವೆ.
ಇದಲ್ಲದೆ, ಕರ್ನಾಟಕದ ಕರಾವಳಿಯಲ್ಲಿ ಬಳಕೆಯಲ್ಲಿರುವ ತುಳು (ಹದಿನಾರು ಲಕ್ಶ) ಮತ್ತು ಕೊರಗ (ನಾಲ್ಕು ಸಾವಿರ) ನುಡಿಗಳೂ ಈ ಕವಲಿಗೆ ಸೇರುತ್ತವೆಯುಂದು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಆದರೆ ಈ ವಿಶಯದಲ್ಲಿ ಕೆಲವು ಸಂದೇಹಗಳು ಇನ್ನೂ ಉಳಿದಿವೆ. ಇವುಗಳಲ್ಲಿ ತುಳು ನುಡಿ ತೆಂಕು ದ್ರಾವಿಡ ನುಡಿಗಳಿಂದ ಹಲವು ವಿಶಯಗಳಲ್ಲಿ ಬೇರಾಗಿದ್ದು, ನಡುದ್ರಾವಿಡದ ನುಡಿಗಳೊಂದಿಗೆ ಹತ್ತಿರದ ನಂಟಸ್ತನವನ್ನು ತೋರಿಸುವ ಹಾಗೆ ಕಾಣಿಸುತ್ತದೆ. ಕೊರಗ ನುಡಿಯೂ ಕೆಲವು ವಿಶಯಗಳಲ್ಲಿ ಬಡಗು ದ್ರಾವಿಡ ನುಡಿಗಳಿಗೆ ಸಮೀಪವಿರುವ ಹಾಗೆ ಕಾಣಿಸುತ್ತದೆ. ಹಾಗಾಗಿ, ಈ ಎರಡು ನುಡಿಗಳ ವಿಶಯವಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.
ನೀಲಗಿರಿಯಲ್ಲಿ ಬಳಕೆಯಲ್ಲಿರುವ ‘ಬಡಗ’ ಎಂಬುದು (ಜನಸಂಕ್ಯೆ: ಒಂದೂಕಾಲು ಲಕ್ಶ) ಕನ್ನಡಕ್ಕಿಂತ ಬೇರಾಗಿರುವ ಒಂದು ಸ್ವತಂತ್ರ ನುಡಿಯುಂಬುದಾಗಿ ಕೆಲವರು ವಾದಿಸಿದ್ದಾರೆ; ಆದರೆ ಇಲ್ಲಿ ಅದನ್ನು ಕನ್ನಡದ ಒಳನುಡಿಯುಂದೇ ಪರಿಗಣಿಸಲಾಗಿದೆ. ಇದಕ್ಕೆ ಕೆಳಗೆ (1.3.2)ರಲ್ಲಿ ವಿವರಿಸಲಾಗಿದೆ.
ಕಾರಣವನ್ನು
ನಡುದ್ರಾವಿಡ ಕವಲಿನಲ್ಲಿ ತೆಲುಗು, ಗೋಂಡಿ, ಕೊಂಡ, ಕೂಯಿ, ಕೂವಿ, ಪೆಂಗೊ, ಮಂಡ, ಕೋಲಾಮಿ, ನಾಯ್ಕಿ, ನಾಯ್ಕಿಡಿ, ಪಾರ್ಜಿ, ಒಲ್ಲಾರಿ ಮತ್ತು ಗದಬ ಎಂಬ ಹದಿಮೂರು ನುಡಿಗಳು ಸೇರುತ್ತವೆ. ತೆಲುಗು ನುಡಿಯನ್ನಾಡುವವರ ಜನಸಂಕ್ಯೆ ಸುಮಾರು ಆರೂವರೆ ಕೋಟಿ.
ಉಳಿದವುಗಳಲ್ಲಿ ಗೋಂಡಿ ನುಡಿ ಸುಮಾರು ಇಪ್ಪತ್ತನಾಲ್ಕು ಲಕ್ಶ ಜನರ ಮಾತಾಗಿದ್ದು, ಮದ್ಯಪ್ರದೇಶ, ಮಹಾರಾಶ್ಟ್ರ, ಒರಿಸ್ಸ ಮತ್ತು ಆಂದ್ರ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿ ಒರಿಸ್ಸಾದಲ್ಲಿ ಬಳಕೆಯಲ್ಲಿದೆ.
ಕೂವಿ ನುಡಿ ಸುಮಾರು ಎರಡೂವರೆ ಲಕ್ಶ ಜನರ ಮಾತಾಗಿದ್ದು, ಒರಿಸ್ಸಾ ಮತ್ತು ಆಂದ್ರಪ್ರದೇಶ (ವಿಶಾಕಪಟ್ಟಣ)ಗಳಲ್ಲಿ ಬಳಕೆಯಲ್ಲಿದೆ. ಕೊಂಡ ನುಡಿ ಸುಮಾರು ಹದಿನೆಂಟು ಸಾವಿರ ಜನರ ಮಾತಾಗಿದ್ದು, ಆಂದ್ರಪ್ರದೇಶದಲ್ಲಿ ಬಳಕೆಯಲ್ಲಿದೆ. ಸುಮಾರು ಒಂದೂವರೆ ಸಾವಿರ ಜನರ ಮಾತಾಗಿದ್ದು, ಒರಿಸ್ಸಾದ ನವರಂಗಪುರ ಜಿಲ್ಲೆಯಲ್ಲಿ ಬಳಕೆಯಲ್ಲಿದೆ. ಅದೇ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಮಂಡ ನುಡಿ ಎಶ್ಟು ಜನರ ಮಾತಾಗಿದೆಯುಂಬುದಿನ್ನೂ ನಿಶ್ಚಿತವಾಗಿ ತಿಳಿದಿಲ್ಲ.
ಪೆಂಗೋ
ಬಡಗುದ್ರಾವಿಡ ಕವಲಿನಲ್ಲಿ ಕುಡುಕ್, ಮಾಲ್ತೋ ಮತ್ತು ಬ್ರಾಹುಯಿ ಎಂಬ ಮೂರು ನುಡಿಗಳು ಸೇರುತ್ತವೆ. ಇವುಗಳಲ್ಲಿ ಕುಡುಕ್ ನುಡಿ ಸುಮಾರು ಹದಿನಾಲ್ಕು ಲಕ್ಶ ಜನರ ಮಾತಾಗಿದ್ದು, ಬಿಹಾರ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಬಳಕೆಯಲ್ಲಿದೆ. ನೇಪಾಳದಲ್ಲೂ ಈ ನುಡಿಯನ್ನಾಡುವ ಸುಮಾರು ಹತ್ತು ಸಾವಿರ ಜನರಿದ್ದಾರೆ.
ಸುಮಾರು ಒಂದು ಲಕ್ಶ ಜನರ ಮಾತಾಗಿರುವ ಮಾಲ್ತೋ ನುಡಿ ಬಿಹಾರದ ರಾಜಮಹಾಲ್ ಗುಡ್ಡಗಳಲ್ಲಿ ಬಳಕೆಯಲ್ಲಿದೆ ಮತ್ತು ಸುಮಾರು ಹದಿನೇಳು ಲಕ್ಶ ಜನರ ಮಾತಾಗಿರುವ ಬ್ರಾಹುಯೀ ನುಡಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಳಕೆಯಲ್ಲಿದೆ.
ಈ ಹಂಚಿಕೆಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಹಂಚಿಕೆಯೊಂದನ್ನು ಕ್ರುಶ್ಣಮೂರ್ತಿ (2003) ಸೂಚಿಸಿದ್ದಾರೆ. ಮೇಲೆ ಕೊಟ್ಟಿರುವ ತೆಂಕುದ್ರಾವಿಡ ನುಡಿಗಳನ್ನು ಮೇಲೆ ನಡುದ್ರಾವಿಡದಲ್ಲಿ ಸೇರಿಸಿದ ತೆಲುಗು, ಗೋಂಡಿ, ಕೊಂಡ, ಕೂಯಿ, ಕೂವಿ, ಪೆಂಗೊ ಮತ್ತು ಮಂಡ ನುಡಿಗಳನ್ನು ‘ತೆಂಕುದ್ರಾವಿಡ-2’ ಎಂಬುದಾಗಿ ಪರಿಗಣಿಸಬೇಕೆಂದು ಅವರು ವಾದಿಸಿದ್ದಾರೆ.
‘ತೆಂಕುದ್ರಾವಿಡ-1’ ಎಂಬುದಾಗಿ
ಮತ್ತು
ಇವನ್ನು ಬಿಟ್ಟು ಉಳಿದ ಕೋಲಾಮಿ, ನಾಯ್ಕಿ, ಪಾರ್ಜಿ, ಒಲ್ಲಾರಿ ಮತ್ತು ಗದಬ ನುಡಿಗಳನ್ನು ಮಾತ್ರ ‘ನಡುದ್ರಾವಿಡ’ ಕವಲಿನಲ್ಲಿ ಇರಿಸಬೇಕೆಂಬುದು ಅವರ ಅಬಿಪ್ರಾಯ. ತಮಿಳು, ಕನ್ನಡ ಮೊದಲಾದ ನುಡಿಗಳಲ್ಲಿ ನಡೆದ
ಕೆಲವು ಬದಲಾವಣೆಗಳು ತೆಲುಗು, ಗೋಂಡಿ, ಕೂಯಿ ಮೊದಲಾದ ನುಡಿ ಗಳಲ್ಲೂ ಕಾಣಿಸುತ್ತಿರುವುದೇ ಅವರ ಈ ಅಬಿಪ್ರಾಯಕ್ಕೆ ಆದಾರ.
ಗಡಿಪ್ರದೇಶದ
1.2.2 ದ್ರಾವಿಡರ ಮೂಲ ನೆಲೆ
ದ್ರಾವಿಡ ನುಡಿಗಳನ್ನಾಡುವ ಜನರು ತೆಂಕು ಏಶ್ಯಾ ಇಲ್ಲವೇ ಯುರೋಪ್ ನಿಂದ ಈಶಾನ್ಯ ವಲಸೆ ಬಂದಿರಬೇಕೆಂದು ಹೆಚ್ಚಿನ ವಿದ್ವಾಂಸರೂ ಅಬಿಪ್ರಾಯಪಡುತ್ತಾರೆ. ಇದು ಬಾರತಕ್ಕೆ ಆರ್ಯರು ವಲಸೆ ಬಂದುದಕ್ಕಿಂತ ಸುಮಾರು ಎರಡು ಸಾವಿರ ವರ್ಶಗಳಶ್ಟು ಹಿಂದೆ ನಡೆದಿರಬೇಕೆಂದೂ ಕೂಡ ಇವರು ವಾದಿಸುತ್ತಾರೆ. ಬಾರತಕ್ಕೆ ಆರ್ಯರು ವಲಸೆ ಬಂದುದು ಸುಮಾರು ಮೂರೂವರೆ ಸಾವಿರ ವರ್ಶಗಳಶ್ಟು ಹಿಂದೆ.
ಬಾರತಕ್ಕೆ
ಮೂಲಕ
ಆದರೆ, ಈ ಅಬಿಪ್ರಾಯಗಳಿಗೆ ಸಮಾದಾನಕರವಾದ ಆದಾರವೇನೂ ಇರುವ ಹಾಗೆ ಕಾಣಿಸುವುದಿಲ್ಲ. ದ್ರಾವಿಡ ನುಡಿಗಳಿಗೆ ಉರಾಲ್- ಆಲ್ಟೇಯಿಕ್ ಕುಟುಂಬಕ್ಕೆ ಸೇರಿದ ಹಂಗೇರಿಯನ್, ಫಿನ್ನಿಶ್ ಮೊದಲಾದ ಹಲವರು ವಿದ್ವಾಂಸರು ನುಡಿಗಳೊಂದಿಗೆ ಮತ್ತು ಜಪಾನೀಸ್ ವಾದಿಸಿದ್ದಾರೆ. ಇದಲ್ಲದೆ, ಇಲಾಮಯ್ಟ ನುಡಿಗಳೊಂದಿಗೂ ದ್ರಾವಿಡ ನುಡಿಗಳಿಗೆ ನಂಟಸ್ತನವಿದೆಯುಂದು ಸಾದಿಸಲು ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಇವುಗಳಲ್ಲಿ ಯಾವುದೂ ಇದುವರೆಗೆ ಎಲ್ಲರೂ ಒಪ್ಪುವಂತಹ ಸ್ತಿತಿಗೆ ತಲಪಿಲ್ಲ.
ನಂಟಸ್ತನವಿದೆಯುಂದು
ತಮಿಳು,
ಇದಲ್ಲದೆ, ನಮಗೆ ತಿಳಿದಿರುವ ಹಾಗೆ, ಇವತ್ತು ಮೂಲದ್ರಾವಿಡದ ಪದ ಮತ್ತು ವ್ಯಾಕರಣ ಸ್ವರೂಪಗಳನ್ನು ಹೆಚ್ಚು ಬದಲಾಯಿಸದೆ ಕೊಡಗು, ಮಲಯಾಳ ಉಳಿಸಿಕೊಂಡಿರುವುದು ಮೊದಲಾದ ದ್ರಾವಿಡ ನುಡಿಗಳನ್ನಾಡುವ ಜನರ ವಲಸೆ ಬಾರತದಲ್ಲಿ ತೆಂಕು ದಿಕ್ಕಿನಿಂದ ಬಡಗು ದಿಕ್ಕಿಗೆ ಸಾಗಿರಬೇಕಲ್ಲದೆ ಬಡಗು ದಿಕ್ಕಿನಿಂದ ತೆಂಕು ದಿಕ್ಕಿಗಲ್ಲ (ಕ್ರುಶ್ಣಮೂರ್ತಿ
ಕನ್ನಡ, ನುಡಿಗಳೇ.
ತೆಂಕುದ್ರಾವಿಡ
1.2.3 ತೆಂಕುದ್ರಾವಿಡದಲ್ಲಿ ಕನ್ನಡದ ಜಾಗ
ತೆಂಕುದ್ರಾವಿಡ ನುಡಿಗಳಲ್ಲಿ ತುಳು ಮತ್ತು ಕೊರಗ ನುಡಿಗಳು ಮೊತ್ತ ಮೊದಲಿಗೆ ಬೇರಾಗಿರಬೇಕು. ಅವು ಹಲವು ವಿಶಯಗಳಲ್ಲಿ ಇತರ ತೆಂಕು ದ್ರಾವಿಡ ನುಡಿಗಳಿಂದ ಬೇರಾಗಿರುವುದೇ ಈ ನಿರ್ದಾರಕ್ಕೆ ಬರಲು ಕಾರಣ. ಮೇಲೆ ಸೂಚಿಸಿದ ಹಾಗೆ, ಹಲವು ವಿಶಯಗಳಲ್ಲಿ ತುಳು ನುಡಿ ನಡು ದ್ರಾವಿಡ ತೋರುವುದು ಇದೇ ಹತ್ತಿರವಿದೆಯುಂದು ಕಾರಣಕ್ಕಾಗಿಯೂ ಇರಬಹುದು.
ನುಡಿಗಳಿಗೆ
ಮೇಲಿನ ಎರಡು ನುಡಿಗಳ ಅನಂತರ, ತೆಂಕುದ್ರಾವಿಡದಿಂದ ಕನ್ನಡ ನುಡಿ ಬೇರಾಗಿರಬೇಕು ಮತ್ತು ಅದರ ಅನಂತರ ಕೋತ ಹಾಗೂ ತೊದ ನುಡಿಗಳು ಮತ್ತು ಆಮೇಲೆ ಕೊಡಗು ಮತ್ತು ಕುಱುಂಬ ನುಡಿಗಳು ಬೇರಾಗಿರಬೇಕೆಂದು ವಿದ್ವಾಂಸರು ಕಲ್ಪಿಸಿಕೊಂಡಿದ್ದಾರೆ. ಬಾಕಿ ಉಳಿದಿರುವ ನುಡಿಗೆ ‘ತಮಿಳು’ ಎಂಬ ಹೆಸರು ಬಂದಿದ್ದು, ಅದರಿಂದ ಇತ್ತೀಚೆಗೆ ಅಂದರೆ ಸುಮಾರು ಒಂದೂವರೆ ಸಾವಿರ ವರ್ಶಗಳಶ್ಟು ಹಿಂದೆ ಇರುಳ ಮತ್ತು ಮಲಯಾಳ ನುಡಿಗಳು ಬೇರಾಗಿರಬೇಕು.
ನುಡಿಗಳ ಈ ಚರಿತ್ರೆಗಿಂತ ಅವು ಬಳಸುವ ಲಿಪಿಗಳ ಚರಿತ್ರೆ ತೀರ ಬೇರಾದುದೆಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ (ಎಂದರೆ ಅಶೋಕನ ಕಾಲದಲ್ಲಿ) ಪ್ರಾಕ್ರುತ ಶಾಸನಗಳನ್ನು ಬರೆಯಲು ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯೇ ಬಾರತದ ಹೆಚ್ಚಿನ ಲಿಪಿಗಳಿಗೂ ಮೂಲ. ದ್ರಾವಿಡ ನುಡಿಗಳು ಬಳಸುವ ಲಿಪಿಗಳೂ ಇದರಿಂದಲೇ ಬೆಳೆದು ಬಂದಿವೆಯೆಂದು ವಿದ್ವಾಂಸರು ನಿರ್ಣಯಕ್ಕೆ ಬಂದಿದ್ದಾರೆ.
ಕನ್ನಡ ಮತ್ತು ತೆಲುಗು ನುಡಿಗಳು ಬಳಸುತ್ತಿದ್ದ ಲಿಪಿ ಹದಿನಯ್ದನೇ ಶತಮಾನದ ವರೆಗೂ ಹೆಚ್ಚು ಕಡಿಮೆ ಒಂದೇ ಲಿಪಿಯಾಗಿ ಉಳಿದಿತ್ತು. ಅನಂತರ ಅದು ಎರಡು ಬೇರೆ ಬೇರೆ ಲಿಪಿಗಳಾಗಿ ಒಡೆದುಕೊಂಡಿತು. ಈ ಲಿಪಿಗಳನ್ನು ಮುದ್ರಣಕ್ಕೆ ಅಳವಡಿಸಿಕೊಳ್ಳುವ ಸಮಯದಲ್ಲಿ ಅವುಗಳ ನಡುವೆ ಬೆಳೆದು ಬಂದಿದ್ದ ವ್ಯತ್ಯಾಸಗಳು ಇನ್ನಶ್ಟು ಸ್ಪಶ್ಟವಾದುವು.
ಕನ್ನಡ ಮತ್ತು ತೆಲುಗು ಲಿಪಿಗಳ ನಡುವಿರುವ ಈ ಸಾಮ್ಯದಿಂದಾಗಿ, ಆ ಎರಡು ನುಡಿಗಳ ನಡುವೆಯೂ ಹತ್ತಿರದ ನಂಟಸ್ತನವಿರಬೇಕೆಂದು ಹಲವು ಮಂದಿ ಬಾವಿಸುತ್ತಾರೆ. ಆದರೆ ಇದು ತಪ್ಪು. ಹಳೆಗನ್ನಡವನ್ನು ಹಳೆತಮಿಳು ಮತ್ತು ಹಳೆತೆಲುಗುಗಳೊಂದಿಗೆ ಹೋಲಿಸಿ ನೋಡಿದಾಗ, ಹಲವು ವಿಶಯ ಗಳಲ್ಲಿ ಕನ್ನಡ ನುಡಿ ತೆಲುಗಿಗಿಂತಲೂ ತಮಿಳಿಗೆ ಹೆಚ್ಚು ಹತ್ತಿರವಿರುವುದು ಕಂಡುಬರುತ್ತದೆ.
ತೆಲುಗು ನುಡಿಯನ್ನು ಕನ್ನಡ, ತಮಿಳು ಮೊದಲಾದ ತೆಂಕುದ್ರಾವಿಡ ನುಡಿಗಳಿಂದ ದೂರ ಮಾಡುವ ಸಂಗತಿಗಳಲ್ಲಿ ಕೆಲವನ್ನು ಇಲ್ಲಿ ಗಮನಿಸ ಬಹುದು.
ವಸ್ತು,
ವಿಶಯ
ಮೊದಲಾದುವನ್ನು
(1) ತೆಂಕುದ್ರಾವಿಡ ನುಡಿಗಳಲ್ಲಿ ಮನುಶ್ಯರನ್ನು ಹೊರತುಪಡಿಸಿ ಇತರ ಪ್ರಾಣಿ, ಸೂಚಿಸುವ ನಾಮಪದಗಳೊಂದಿಗೆ ಹಲವಚನವನ್ನು ಸೂಚಿಸುವ ಗಳ್ ಒಟ್ಟನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅವಶ್ಯವಿದ್ದಲ್ಲಿ ಮಾತ್ರ ಅದನ್ನು ಬಳಸಿದರೆ ಸಾಕು. ಆದರೆ ತೆಲುಗು ಮತ್ತು ಇತರ ನಡುದ್ರಾವಿಡ ನುಡಿಗಳಲ್ಲಿ ಹಲವಚನದ ಅರ್ತವಿರುವಲ್ಲೆಲ್ಲ ಈ ಒಟ್ಟನ್ನೂ ಬಳಸಲೇಬೇಕೆಂಬ ನಿಯಮವಿದೆ.
(2) ತೆಂಕುದ್ರಾವಿಡ ನುಡಿಗಳಲ್ಲಿ ಕಾಣಿಸುವ ಅವನ್ ‘ಅವನು’ ಎಂಬುದು ತೆಲುಗು ಮತ್ತು ಇತರ ನಡುದ್ರಾವಿಡ ನುಡಿಗಳಲ್ಲಿ *ಅವನ್ಱ್ ಎಂಬ ರೂಪದಲ್ಲಿದೆ. ತೆಲುಗಿನಲ್ಲಿ ಇದು ವಾಡು ಎಂದಾಗಿದೆ.
(3) ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ತೆಂಕುದ್ರಾವಿಡ ನುಡಿಗಳಲ್ಲಿ ಮೂಲದ್ರಾವಿಡದ ಪ್್ಪ ಒಟ್ಟು ಬಳಕೆಯಾಗುವುದಾದರೆ (ಹಳೆಗನ್ನಡದ ಪೋಪೆಂ, ಬರ್ಪೆಂ), ತೆಲುಗು ಮತ್ತು ಇತರ ದ್ರಾವಿಡ (ಚೇಸ್ತಾನು ನುಡಿಗಳಲ್ಲಿ ‘ಮಾಡುತ್ತೇನೆ’). ಹಳೆಗನ್ನಡದಲ್ಲಿ ಈ ತ್್ತ ಒಟ್ಟು ಅಟ್ಟುತ್ತುಂ, ಒಡೆಯುತ್ತುಂ ಎಂಬಂತಹ ಜೋಡಿಸುವ ರೂಪಗಳಲ್ಲಿ ಮಾತ್ರ ಉಳಿದಿದೆ. ಹೊಸಗನ್ನಡದಲ್ಲಿ ಈ ತ್್ತ ಒಟ್ಟು ಮುಂದಿನ ಸಮಯವನ್ನು
ಬಳಕೆಯಾಗುತ್ತದೆ
ಸೂಚಿಸುವುದಕ್ಕಾಗಿಯೂ (ಮಾಡುತ್ತೇನೆ), ಆದರೆ ಇದಕ್ಕೆ ಕನ್ನಡದಲ್ಲಿ ಇತ್ತೀಚೆಗೆ ನಡೆದ ಬದಲಾವಣೆ ಕಾರಣ (8.3.2 ನೋಡಿ).
ಬಳಕೆಯಾಗುತ್ತದೆಯೇನೋ
(4) ನಡುದ್ರಾವಿಡದ ತೆಲುಗು, ಗೋಂಡಿ, ಕೊಂಡ, ಕೂವಿ, ಕೂಯಿ, ಪೆಂಗೊ ಮತ್ತು ಮಂಡ ನುಡಿಗಳಲ್ಲಿ ಎರಡು ಗಿಡ್ಡಸ್ವರಗಳಿರುವ ಪದಗಳಲ್ಲಿ ಮೊದಲನೆಯ ಸ್ವರದ ಅನಂತರ ಟ್, ಱ್, ಲ್, ಳ್, ರ್ ಇಲ್ಲವೇ ೞ್ ಬಂದಿದೆಯಾದರೆ, ಮೊದಲ ಸ್ವರ ಎರಡನೆಯ ಸ್ವರವಿದ್ದಲ್ಲಿಗೆ ಹೋಗಿ ಅದರೊಂದಿಗೆ ಸೇರಿ ಉದ್ದ ಸ್ವರವಾಗುತ್ತದೆ. ಇಕಾರ ಮತ್ತು ಎಕಾರಗಳು ಈ ರೀತಿ ಒಟ್ಟು ಸೇರಿದಾಗ ಏಕಾರವೂ, ಉಕಾರ ಮತ್ತು ಒಕಾರಗಳು ಒಟ್ಟು ಸೇರಿದಾಗ ಓಕಾರವೂ ದೊರೆಯುತ್ತವೆ. ಈ ಬದಲಾವಣೆ ತೆಂಕುದ್ರಾವಿಡ ನುಡಿಗಳಲ್ಲಿ ನಡೆದಿಲ್ಲ.
ಕನ್ನಡ
ಮರ(ನ್) ಒರಳು
ಬರೆ(ಯು) ಕಿಳ್ (ಕೆಳಗೆ) ಕುರುಡ
ಕೊೞವೆ
ತೆಲುಗು ರ್ಮಾನು ರೋಲು ವ್ರಾಯು, ರಾಯು ಲೋನು ಗ್ರುಡ್ಡಿ ಕ್ರೋವಿ
1.3 ಕನ್ನಡ ನುಡಿ ಒಳನುಡಿಗಳಾಗಿ ಒಡೆದುಕೊಂಡ ಬಗೆ
ಮೂಲ ತೆಂಕುದ್ರಾವಿಡದಿಂದ ಕನ್ನಡ ಒಂದು ಸ್ವತಂತ್ರ ನುಡಿಯಾಗಿ ಒಡೆದು ಕೊಂಡ ಮೇಲೆ, ಅದು ಹಲವು ಒಳನುಡಿಗಳಾಗಿ ಒಡೆದುಕೊಂಡಿದೆ. ಇದು ಯಾವ ರೀತಿಯಲ್ಲಿ ನಡೆದಿರಬೇಕು ಎಂಬುದನ್ನು ಅದರ ಇವತ್ತಿನ
ಒಳನುಡಿಗಳ ಪರಿಶೀಲನೆಯ ಮೂಲಕ ತಿಳಿದುಕೊಳ್ಳಬಹುದು.
ಕಾಣಿಸುವ
ನಡುವೆ
ಸಾಮ್ಯ ಮತ್ತು ವ್ಯತ್ಯಾಸಗಳ
ಮೇಲೆ (1.1.2)ರಲ್ಲಿ ಸೂಚಿಸಿದ ಹಾಗೆ, ಕನ್ನಡ ನುಡಿಯನ್ನಾಡುವ ಜನರಲ್ಲಿ ಕೆಲವರು ಕರಾವಳಿಯಲ್ಲೂ, ಇನ್ನು ಕೆಲವರು ಒಳನಾಡಿನಲ್ಲೂ ನೆಲೆಸಿರಬೇಕು ಮತ್ತು ಹೀಗೆ ನೆಲೆಸಿದ ಮೇಲೆ, ಈ ಎರಡು ಗುಂಪುಗಳ ನಡುವಿನ ಸಂಪರ್ಕ ಪೂರ್ತಿ ತಪ್ಪಿ ಹೋಗಿರಬೇಕು. ಇದರಿಂದಾಗಿ, ಅನಂತರ ಕನ್ನಡ ನುಡಿಯಲ್ಲಿ ನಡೆದ ಬದಲಾವಣೆಗಳಲ್ಲಿ ಹೆಚ್ಚಿನವೂ ಈ ಎರಡು ಪ್ರದೇಶಗಳಲ್ಲಿ ತೀರ ಬೇರಾಗಿರುವ ದಿಕ್ಕುಗಳಲ್ಲಿ ನಡೆದಿರಬೇಕು.
ಕರಾವಳಿ ಮತ್ತು ಒಳನಾಡುಗಳ ಒಳನುಡಿಗಳಾಗಿ ಈ ರೀತಿ ಒಡೆದು ಕೊಂಡಿರುವುದೇ ಕನ್ನಡದ ಅತ್ಯಂತ ಹಳೆಯ ಕವಲೊಡೆತವಾಗಿದೆ. ಈ ಕವಲೊಡೆತವನ್ನು ಬೆಂಬಲಿಸುವಂತಹ ಬದಲಾವಣೆಗಳಲ್ಲಿ ಕೆಲವನ್ನು ಕೆಳಗೆ 1.3.1ರಲ್ಲಿ ಸೂಚಿಸಲಾಗಿದೆ. ಅವುಗಳ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ಅದ್ಯಾಯಗಳಲ್ಲಿ ಕೊಡಲಾಗುವುದು.
ಈ ಒಳನುಡಿಗಳೊಂದಿಗೆ ಬಡಗ ಒಳನುಡಿಯನ್ನು ಹೋಲಿಸಿದಾಗ, ಕೆಲವು ವಿಶಯಗಳಲ್ಲಿ ಅದು ಕರಾವಳಿಯ ಒಳನುಡಿಗಳ ಹಾಗೆ ಮತ್ತು ಕೆಲವು ವಿಶಯಗಳಲ್ಲಿ ಒಳನಾಡಿನ ಒಳನುಡಿಗಳ ಹಾಗೆ ಬೇರೆ ಕಾಣಿಸುತ್ತದೆ. ಇದಕ್ಕೆ ಕಾರಣವೇನಿರಬಹುದೆಂಬುದನ್ನು 1.3.2ರಲ್ಲಿ ಸೂಚಿಸಲಾಗಿದೆ.
1.3.1 ಕರಾವಳಿ ಮತ್ತು ಒಳನಾಡಿನ ಒಳನುಡಿಗಳು
ಕರಾವಳಿಯ ಒಳನುಡಿಗಳಿಗೂ ಒಳನಾಡಿನ ಒಳನುಡಿಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಕೆಲವು ಅವುಗಳ ನಡುವಿನ ಒಡೆತವನ್ನು ಅತ್ಯಂತ ಪ್ರಾಚೀನವಾದ ಕನ್ನಡ ಬರಹಗಳಿಂದಲೂ ಹಿಂದಕ್ಕೆ ಕೊಂಡುಹೋಗುತ್ತವೆ.
ತೆಂಕುದ್ರಾವಿಡದಲ್ಲಿ
ಸೂಚಿಸುವ ಕ್ರಿಯಾಪದಗಳಿಗೆ ತ್ ಒಟ್ಟನ್ನು ಸೇರಿಸಿ ಅವನ್ನು ಮಾಡುವಿಕೆಗಳನ್ನಾಗಿ ಬದಲಾಯಿಸಲು ಸಾದ್ಯವಿತ್ತು. ಒಳನಾಡಿನ ಒಳನುಡಿಗಳಲ್ಲಿ ಇದು ಪೂರ್ತಿ
ಆಗುವಿಕೆಯನ್ನು
ಇಲ್ಲವಾಗಿದೆ; ಆದರೆ ಕರಾವಳಿಯ ಹವ್ಯಕ ಒಳನುಡಿಯಲ್ಲಿ ಇದರ ಅವಶೇಶಗಳನ್ನು ಹಲವು ಕ್ರಿಯಾಪದಗಳಲ್ಲಿ ಕಾಣಬಹುದು (7.5.4 ನೋಡಿ).
(2) ನಡುವಿನ ಗಿಡ್ಡ ಸ್ವರಗಳು (ಎಕಾರ, ಒಕಾರಗಳು) ಅವುಗಳ ಅನಂತರ ಮೇಲಿನ ಸ್ವರಗಳು (ಇ ಇಲ್ಲವೇ ಉ) ಬಂದಾಗ ಮೇಲಿನ ಗಿಡ್ಡ ಸ್ವರಗಳಾಗುವಂತಹ ಬದಲಾವಣೆಯೊಂದು ಕನ್ನಡದಲ್ಲಿ ಎಂಟು- ಒಂಬತ್ತನೇ ಶತಮಾನದಲ್ಲಿ ನಡೆದಿರಬೇಕೆಂದು ಶಾಸನಗಳ ಆದಾರದ ಮೇಲೆ ಹೇಳಲಾಗುತ್ತದೆ. ಈ ಬದಲಾವಣೆ ಕನ್ನಡದ ಒಳನಾಡಿನ ಒಳನುಡಿಗಳಲ್ಲಿ ನಡೆದಿದೆ, ಆದರೆ ಕರಾವಳಿಯ ಒಳನುಡಿಗಳಲ್ಲಿ ನಡೆದಿಲ್ಲ (2.2.2 ನೋಡಿ).
(3) ತಡೆಯುಲಿಯ ಮೊದಲು ಬಂದಿದ್ದ ಮೂಗುಲಿ ಉದ್ದ ಸ್ವರದ ಅನಂತರ ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಬಿದ್ದು ಹೋಗುವ ಬದಲಾವಣೆ ಹಳೆಗನ್ನಡದ ಸಮಯದಲ್ಲಿ ನಡೆದಿತ್ತು. ಒಳನಾಡಿನ ಒಳನುಡಿ ಗಳಲ್ಲಿ ಈ ಮೂಗುಲಿ ಉಳಿದಿಲ್ಲ, ಆದರೆ ಕರಾವಳಿಯ ಒಳನುಡಿಗಳ ಹಲವು ಪದಗಳಲ್ಲಿ ಅದು ಉಳಿದಿದೆ (5.2.4 ನೋಡಿ).
(4) ಎರಡು ಗಿಡ್ಡ ಸ್ವರಗಳ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿ ಹಳೆಗನ್ನಡಕ್ಕಿಂತಲೂ ಹಿಂದಿನ ಸಮಯದಲ್ಲೇನೇ ಬಿದ್ದು ಹೋಗಲು ತೊಡಗಿರಬೇಕು. ಹಳೆಗನ್ನಡದಲ್ಲಿ ಇಂತಹ ಕೆಲವು ಪದಗಳು ಮಾತ್ರ ಉಳಿದುಕೊಂಡಿವೆ. ಒಳನಾಡಿನ ಒಳನುಡಿಗಳಲ್ಲೂ ಈ ಬದಲಾವಣೆ ನಡೆದಿದೆ, ಆದರೆ ಕರಾವಳಿಯ ಹವ್ಯಕ ಕನ್ನಡದಲ್ಲಿ ಟಕಾರವನ್ನು ಹೊರತುಪಡಿಸಿ ಇತರ ತಡೆಯುಲಿಗಳಲ್ಲಿ ಅದು ನಡೆದಿಲ್ಲ (4.4.5 ನೋಡಿ).
(5) ಮೂಲದ್ರಾವಿಡದಲ್ಲಿ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಯಾಮ್ ಪದವನ್ನು ಬಳಸಲಾಗುತ್ತಿತ್ತು ಮತ್ತು ಆಡುಗ ಮತ್ತು ಇತರರ ಕೂಡಿಕೆಯನ್ನು ಸೂಚಿಸುವುದಕ್ಕಾಗಿ *ಞಾಮ್ ಹಳೆಗನ್ನಡ ಪದವನ್ನು ಬಳಸಲಾಗುತ್ತಿತ್ತು. ಈ
ವ್ಯತ್ಯಾಸವನ್ನು
ಉಳಿಸಿಕೊಂಡಿದೆ (ಆಮ್ ಮತ್ತು ನಾಮ್ ಪದಗಳ ಮೂಲಕ) ಮತ್ತು ಕರಾವಳಿಯ ಒಳನುಡಿಗಳೂ ಉಳಿಸಿಕೊಂಡಿವೆ (ಹವ್ಯಕದಲ್ಲಿ ಎಂಗೊ ಮತ್ತು ನಾವು ಪದಗಳು ಇದಕ್ಕಾಗಿ ಬಳಕೆಯಾಗುತ್ತವೆ). ಆದರೆ, ಒಳನಾಡಿನ ಒಳನುಡಿಗಳು ಇದನ್ನು ಉಳಿಸಿಕೊಂಡಿಲ್ಲ (10.2 ನೋಡಿ).
(6) ಮೂಲದ್ರಾವಿಡದ ಕ್ರಿಯಾರೂಪಗಳಲ್ಲೂ ಮೇಲಿನ ವ್ಯತ್ಯಾಸ ಕಾಣಿಸುತ್ತಿದ್ದಿರಬೇಕು. ಅವುಗಳ ಕೊನೆಯಲ್ಲಿ ಬರುವ *ಅಮ್ ಒಟ್ಟು ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಸೂಚಿಸುವುದಾದರೆ *ಎಮ್ ಒಟ್ಟು ಆಡುಗ ಮತ್ತು (ಕೇಳುಗನನ್ನು ಹೊರತುಪಡಿಸಿ) ಇತರರ ಕೂಡಿಕೆಯನ್ನು ಸೂಚಿಸುತ್ತದೆ.
ಈ ವ್ಯತ್ಯಾಸವನ್ನು ಹಳೆಗನ್ನಡ ಉಳಿಸಿಲ್ಲ ಮತ್ತು ಒಳನಾಡಿನ ಒಳನುಡಿ ಗಳೂ ಉಳಿಸಿಲ್ಲ. ಆದರೆ ಕರಾವಳಿಯ ಹವ್ಯಕ ಕನ್ನಡ ಬೇರೆ ವಿದಾನದ ಮೂಲಕ (ಅಮ್ ಒಟ್ಟಿನ ಬದಲು ತು ಒಟ್ಟನ್ನು ಬಳಸುವ ಮೂಲಕ) ಉಳಿಸಿಕೊಂಡಿದೆ (8.5.3 ನೋಡಿ).
(7) ಹಳೆಗನ್ನಡದ ವ (ಪ) ಒಟ್ಟನ್ನು ಒಳನಾಡಿನ ಒಳನುಡಿಗಳು ಕ್ರಿಯಾಪದಗಳ ಸಂಬಂದಿಸುವ ರೂಪಗಳಲ್ಲಿ (ಮಾಡುವ, ಕೊಡುವ) ಮಾತ್ರ ಉಳಿಸಿಕೊಂಡಿವೆ, ಆದರೆ ಕರಾವಳಿಯ ಒಳನುಡಿಗಳು ಅದನ್ನು ಕೆಲಸವನ್ನು ತಿಳಿಸುವ ಕ್ರಿಯಾರೂಪಗಳಲ್ಲೂ ಉಳಿಸಿಕೊಂಡಿವೆ.
ಈ ರೂಪಕ್ಕೆ ಮುಂದಿನ ಕೆಲಸದ ಕುರಿತಾಗಿ ಆಡುಗನ ಊಹೆಯನ್ನು ತಿಳಿಸುವ ಅರ್ತ ಬಂದಿದೆಯೆಂಬುದು ಮಾತ್ರ ಕರಾವಳಿಯಲ್ಲಿ ನಡೆದ ಕೊಡುವೆ ಹೋಪೆ ಬದಲಾವಣೆ ‘ಕೊಟ್ಟೇನು’) (8.3.3 ನೋಡಿ).
‘ಹೋದೇನು’,
(ಹವ್ಯಕದ
(8) ಹಳೆಗನ್ನಡದ ಬಂದಪೆಂ
‘ಬರುತ್ತೇನೆ’, ಮುರಿದಪೆಂ ‘ಮುರಿಯುತ್ತೇನೆ’ ಎಂಬಂತಹ ಕರಾವಳಿಯ ಒಳನುಡಿಗಳಲ್ಲಿ ಉಳಿದಿಲ್ಲ, ಒಳನಾಡಿನ ಒಳನುಡಿಗಳಲ್ಲಿ ಬಂದೇನು, ಮುರಿದೇನು ಎಂಬಂತಹ ರೂಪಗಳಲ್ಲಿ ಉಳಿದುಕೊಂಡಿವೆ. ಇವುಗಳ ಅರ್ತ ಮಾತ್ರ ಈ ಒಳನುಡಿಗಳಲ್ಲಿ ಬದಲಾಗಿದೆ; ಅವು ಮುಂದಿನ ಕೆಲಸವನ್ನು
ಕ್ರಿಯಾರೂಪಗಳು
ತಿಳಿಸುವ ಬದಲು ಆ ಕೆಲಸಗಳ ಕುರಿತಾಗಿ ಆಡುಗನ ಊಹೆಯನ್ನು ತಿಳಿಸುತ್ತವೆ (8.3 ನೋಡಿ).
(9) ಹಳೆಗನ್ನಡದಲ್ಲಿ ಮುಂದಿನ ಸಮಯದ ಕೆಲಸದ ಕುರಿತು ಆಡುಗನ ಊಹೆಯನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಕುಂ (ಗುಂ) ಒಟ್ಟನ್ನು ಬಳಸಲಾಗುತ್ತಿತ್ತು. ಒಳನಾಡಿನ ಒಳನುಡಿಗಳಲ್ಲಿ ಈ ಒಟ್ಟು ಉಳಿದಿಲ್ಲ. ಆದರೆ ಕರಾವಳಿಯ ಹವ್ಯಕ ಕನ್ನಡದಲ್ಲಿ ಇದು ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ, ಇತರರ ಕೆಲಸದ ಕುರಿತು ಆಡುಗನ ಊಹೆಯನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತದೆ (8.3.3 ನೋಡಿ).
ಇದಲ್ಲದೆ, ಹಿಂದಿನ ಸಮಯದಲ್ಲಿ ರೂಡಿಯಲ್ಲಿದ್ದ ಕೆಲಸವೊಂದನ್ನು ಸೂಚಿಸುವುದಕ್ಕಾಗಿಯೂ ಈ ಒಟ್ಟನ್ನು ಹಳೆಗನ್ನಡದಲ್ಲಿ ಬಳಸಲಾಗುತ್ತಿತ್ತು; ಇಂತಹದೇ ಬಳಕೆ ಹವ್ಯಕದಲ್ಲಿಯೂ ಇದೆ.
(10) ಮುಂದಿನ ಸಮಯದ ಕೆಲಸಗಳನ್ನು ಸೂಚಿಸುವುದಕ್ಕಾಗಿ ಕನ್ನಡದ ಎಲ್ಲಾ ಒಳನುಡಿಗಳೂ ಕ್ರಿಯಾಪದಕ್ಕೆ ಉತ್ತ ಒಟ್ಟನ್ನು ಸೇರಿಸಿರುವ ರೂಪಗಳನ್ನು ಬಳಸುತ್ತವೆ (ಬಡಗ ಕನ್ನಡ ಇದಕ್ಕೆ ಅಪವಾದ - 1.3.2 ನೋಡಿ). ಆದರೆ ಈ ಒಟ್ಟಿನ ಅನಂತರ ಬರುವ ಆಡುಗ ಒಟ್ಟಿನ ಸ್ವರೂಪದಲ್ಲಿ ಕರಾವಳಿಯ ಒಳನುಡಿಗಳು ಒಳನಾಡಿನ ಒಳನುಡಿಗಳಿಂದ ಬೇರಾಗಿವೆ.
ಒಳನಾಡಿನ ಒಳನುಡಿಗಳು ಆಗು ಕ್ರಿಯಾಪದದ ಮುಂದಿನ ಸಮಯದ ರೂಪಗಳಿಂದ ಸಿದ್ದವಾದ ಏನೆ, ಏವೆ, ಈರಿ ಮೊದಲಾದ ಒಟ್ಟುಗಳನ್ನು ಬಳಸುತ್ತವೆ (ಮಾಡುತ್ತೇನೆ, ಕೊಡುತ್ತೇನೆ) ಆದರೆ ಕರಾವಳಿಯ ಒಳನುಡಿಗಳು ಹಿಂದಿನ ಸಮಯದ ಒಟ್ಟಿನೊಂದಿಗೆ ಬರುವ ಆಡುಗ ಒಟ್ಟುಗಳನ್ನೇ ಇಲ್ಲಿಯೂ ಬಳಸುತ್ತವೆ (ಮಾಡುತ್ತೆ, ಕೊಡುತ್ತೆ).
(11) ಮೂಲದ್ರಾವಿಡದ ಅಲ್ಲಗಳೆಯುವ ಕ್ರಿಯಾರೂಪ ಹಳೆಗನ್ನಡ ದಲ್ಲಿ ಉಳಿದಿದೆ (ನೋಡೆಂ ‘ನಾನು ನೋಡುವುದಿಲ್ಲ’, ನೋಡರ್ ‘ಅವರು ನೋಡುವುದಿಲ್ಲ’) ಮತ್ತು ಕರಾವಳಿಯ ಒಳನುಡಿಗಳಲ್ಲಿಯೂ ಉಳಿದಿದೆ; (ಇದರ ಅರ್ತದಲ್ಲಿ ಮಾತ್ರ ಸ್ವಲ್ಪ ಬದಲಾವಣೆಯಾಗಿದೆ:
ಹವ್ಯಕದ ಮಾಡೆ ‘ನಾನು ಮಾಡಲಿಕ್ಕಿಲ್ಲ’, ನೋಡವು ‘ಅವರು ನೋಡಲಿಕ್ಕಿಲ್ಲ’). ಬಡಗ ಒಳನುಡಿಯಲ್ಲೂ ಉಳಿದಿದೆ (ಬರೋ ‘ನಾವು ಬರಲಿಕ್ಕಿಲ್ಲ’). ಆದರೆ ಒಳನಾಡಿನ ಒಳನುಡಿಗಳಲ್ಲಿ ಇದು ಉಳಿದಿಲ್ಲ (8.4 ನೋಡಿ).
(12) ಹಳೆಗನ್ನಡದಲ್ಲಿ ಶರತ್ತನ್ನು ಸೂಚಿಸುವ ಒಡೆ ಒಟ್ಟನ್ನು ನೇರವಾಗಿ ಹಿಂದಿನ ಇಲ್ಲವೇ ಮುಂದಿನ ಸಮಯದ ಒಟ್ಟುಗಳ ಅನಂತರ ಮತ್ತು ಅಲ್ಲಗಳೆಯುವ ಒಟ್ಟಿನ ಅನಂತರ ಬಳಸಲು ಸಾದ್ಯವಿತ್ತು (ಬಂದೊಡೆ ‘ಬಂದರೆ’, ಬಪೊ್ಪಡೆ ‘ಬರುವುದಿದ್ದರೆ’, ಬಾರದೊಡೆ ‘ಬಾರದಿದ್ದರೆ’).
ಕರಾವಳಿಯ ಹವ್ಯಕ ಕನ್ನಡದಲ್ಲೂ ಇದೇ ರೀತಿಯಲ್ಲಿ ಶರತ್ತನ್ನು ಸೂಚಿಸುವ ಅರೆ ಒಟ್ಟನ್ನು ಹಿಂದಿನ ಮತ್ತು ಮುಂದಿನ ಸಮಯದ ಒಟ್ಟುಗಳ ಅನಂತರ ಇಲ್ಲವೇ ಅಲ್ಲಗಳೆಯುವ ಒಟ್ಟಿನ ಅನಂತರ ಬಳಸಲು ಸಾದ್ಯವಿದೆ (ಬಂದರೆ ‘ಬಂದರೆ’, ಬತ್ತರೆ ‘ಬರುವುದಿದ್ದರೆ’ ಬಾರದ್ದರೆ ‘ಬಾರದಿದ್ದರೆ’).
ಆದರೆ ಒಳನಾಡಿನ ಒಳನುಡಿಗಳಲ್ಲಿ ಶರತ್ತನ್ನು ಸೂಚಿಸುವ ಅರೆ
ಒಟ್ಟನ್ನು ಮುಂದಿನ ಸಮಯದ ಒಟ್ಟಿನ ಅನಂತರ ಇಲ್ಲವೇ ಅಲ್ಲಗಳೆಯುವ ಒಟ್ಟಿನ ಅನಂತರ ನೇರವಾಗಿ ಬಳಸಲು ಸಾದ್ಯವಾಗದು (12.4. ನೋಡಿ). ಕರಾವಳಿ ಮತ್ತು ಒಳನಾಡಿನ ಕನ್ನಡ ಒಳನುಡಿಗಳಲ್ಲಿ ಇಂತಹ ಹಲವು ಬದಲಾವಣೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿದ್ದು, ಅವು ಈ ಎರಡು ಒಳನುಡಿಗಳ ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಕಾರಣಗಳಾಗಿವೆ. ಕನ್ನಡದ ಒಳನುಡಿಗಳ ಒಡೆತದಲ್ಲಿ ಕರಾವಳಿ ಮತ್ತು ಒಳನಾಡುಗಳ ನಡುವಿನ ಒಡೆತವೇ ಅತ್ಯಂತ ಹಳೆಯದೆಂಬುದು ಈ ವ್ಯತ್ಯಾಸಗಳಿಂದ ಸ್ಪಶ್ಟವಾಗುತ್ತದೆ.
1.3.2 ಬಡಗ ಒಳನುಡಿ
ಬಡಗ ಕನ್ನಡ ಕೆಲವು ವಿಶಯಗಳಲ್ಲಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ ಮತ್ತು ಬೇರೆ ಕೆಲವು ವಿಶಯಗಳಲ್ಲಿ ಒಳನಾಡಿನ ಒಳನುಡಿಗಳನ್ನು ಹೋಲುತ್ತದೆ. ಇದಲ್ಲದೆ, ಇನ್ನು ಕೆಲವು ವಿಶಯಗಳಲ್ಲಿ ಅದು ತನ್ನವೇ ಆದ ಬದಲಾವಣೆಗಳನ್ನೂ ಮಾಡಿಕೊಂಡಿದೆ.
ಈ ಎಲ್ಲಾ ವಿಶಯಗಳನ್ನೂ ವಿವರಿಸುವುದಕ್ಕಾಗಿ, ಅದನ್ನಾಡುವ ಜನ ಮೊದಲಿಗೆ ಕರಾವಳಿಯಲ್ಲಿದ್ದಿರಬೇಕೆಂದು ಮತ್ತು ಆಮೇಲೆ ಅಲ್ಲಿಂದ ಒಳ ನಾಡಿಗೆ (ಮಯ್ಸೂರಿಗೆ) ವಲಸೆ ಹೋಗಿರಬೇಕೆಂದು ಕಲ್ಪಿಸಿಕೊಳ್ಳಬಹುದು. ಇದರ ಅನಂತರ ಅವರು ನೀಲಗಿರಿಗೆ ವಲಸೆ ಹೋದುದರಿಂದಾಗಿ, ಅವರ ನುಡಿಯಲ್ಲಿ ಅದರದೇ ಆದ ಕೆಲವು ಬದಲಾವಣೆಗಳು ನಡೆದಿರಬೇಕು.
(1) ಕ್ರಿಯಾಪದಗಳಲ್ಲಿ ಕಾಣಿಸುವ ಆಗುವಿಕೆ-ಮಾಡುವಿಕೆ ವ್ಯತ್ಯಾಸ ಕರಾವಳಿಯ ಹವ್ಯಕದಲ್ಲಿದೆ ಮತ್ತು ಬಡಗದಲ್ಲೂ ಇದೆ; ಆದರೆ, ಒಳನಾಡಿನ ಒಳನುಡಿಗಳಲ್ಲಿರುವ ಹಾಗೆ ಕಾಣಿಸುವುದಿಲ್ಲ (7.5.3-4 ನೋಡಿ).
(2) ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಮುಂದಿನ ಸಮಯದ ವ್ (ಪ್) ಒಟ್ಟನ್ನು ಉಳಿಸಿಕೊಂಡಿದೆ ಮತ್ತು ಸುಳ್ಯದ ಗವ್ಡ ಕನ್ನಡದ ಹಾಗೆ ಹಳೆಗನ್ನಡದ ‘ದಪ’ ಕ್ರಿಯಾರೂಪದ ಬದಲು ಉತ್ತ ರೂಪವನ್ನು ಬಳಸದೆ ಅದನ್ನೇ ಉಳಿಸಿಕೊಂಡಿದೆ (8.3.3-4 ನೋಡಿ).
(3) ಅಲ್ಲಗಳೆಯುವ ಕ್ರಿಯಾರೂಪವನ್ನು ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಉಳಿಸಿಕೊಂಡಿದೆ. ಇದಲ್ಲದೆ, ಇಲ್ಲ ಪದವನ್ನು (ಬಡಗದಲ್ಲಿ ಇಲೆ ಎಂಬುದನ್ನು) ಹಿಂದಿನ, ಮುಂದಿನ ಮತ್ತು ಅಲ್ಲಗಳೆಯುವ ಕ್ರಿಯಾರೂಪಗಳೊಂದಿಗೆ ಬಳಸುವ ಕರಾವಳಿಯ ವಿದಾನ ಬಡಗದಲ್ಲೂ ಉಳಿದಿದೆ (8.4 ನೋಡಿ).
(4) ಆಡುಗ ಪದಗಳಲ್ಲಿ ಮತ್ತು ಕ್ರಿಯಾರೂಪಗಳಲ್ಲಿ ಆಡುಗನೊಂದಿಗೆ ಕೇಳುಗನನ್ನು ಸೇರಿಸಿ ಮತ್ತು ಸೇರಿಸದೆ ಹೇಳುವಂತಹ ಎರಡು ರೀತಿಯ
ಕೂಡಿಕೆಯ ರೂಪಗಳನ್ನು ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಉಳಿಸಿಕೊಂಡಿದೆ (10.2.1 ಮತ್ತು 8.5.3 ನೋಡಿ).
(5) ಆಡುಗ ಮತ್ತು ಕೇಳುಗರನ್ನು ಸೂಚಿಸುವ ಪದಗಳ ಹಲವಚನದ ರೂಪಗಳಲ್ಲಿ ಕರಾವಳಿಯ ಒಳನುಡಿಗಳ ಹಾಗೆ ಬಡಗವೂ ಗ (<ಗಳ್) ಒಟ್ಟನ್ನು ಬಳಸುತ್ತದೆ (10.2.1 ನೋಡಿ).
(6) ಹಲವಚನವನ್ನು ಸೂಚಿಸುವ ಗಳ್ ಒಟ್ಟು ಗೊ ಎಂದಾಗಿರುವಲ್ಲಿ ಬಡಗ ನುಡಿ ಕರಾವಳಿಯ ಒಳನುಡಿಗಳನ್ನು ಹೋಲುತ್ತದೆ (9.3.2 ನೋಡಿ).
(7) ಕ್ರಿಯಾರೂಪಗಳಲ್ಲಿ ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ಇತು ಒಟ್ಟನ್ನು ಮನುಶ್ಯರನ್ನು ಸೂಚಿಸುವುದಕ್ಕಾಗಿಯೂ ಬಳಸುವ ವಿದಾನ ಬಡಗದಲ್ಲಿಯೂ ಇದೆ (8.5.2 ನೋಡಿ).
ಕರಾವಳಿಯ ಒಳನುಡಿಗಳಲ್ಲಿರುವ
(8) ಏಳು-ಎಂಟನೇ ಶತಮಾನದಲ್ಲಿ ನಡೆದ ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾಗುವ ಬದಲಾವಣೆ ಬಡಗ ಕನ್ನಡದಲ್ಲೂ ನಡೆದಿದೆ. ಇದು ಈ ಒಳನುಡಿಯನ್ನಾಡುವವರು ಮಯ್ಸೂರಿಗೆ ವಲಸೆ ಹೋದ ಅನಂತರ ನಡೆದಿರಬೇಕು. ಯಾಕೆಂದರೆ, ಕರಾವಳಿಯಲ್ಲಿ ಈ ಬದಲಾವಣೆ ನಡೆದಿಲ್ಲ (2.2.2 ನೋಡಿ).
ಮೂಗುಲಿ
ಮೊದಲು ಬಂದಿದ್ದ
(9) ಉದ್ದಸ್ವರದ ಅನಂತರ ಮತ್ತು ಎರಡು ಗಿಡ್ಡಸ್ವರಗಳ ಅನಂತರ ತಡೆಯುಲಿಯ ಕರಾವಳಿಯ ಒಳನುಡಿಗಳಲ್ಲಿ ಉಳಿದುಕೊಂಡಿದೆ (5.2.4). ಇದು ಬಡಗ ಕನ್ನಡದ ಕೆಲವು ಪದಗಳಲ್ಲಿ ಉಳಿದಿದೆಯಾದರೂ (ಏಂಗು ‘ಹಂಬಲಿಸು’, ನೀಂದು ‘ಈಜು’, ತಾಂಡು ‘ಹಾರಿ ದಾಟು’, ತಾಂಗು ‘ತಾಳ್ಮೆ’), ಬೇರೆ ಕೆಲವು ಪದಗಳಲ್ಲಿ ಉಳಿದಿಲ್ಲ (ನೂಕು (ಹವ್ಯಕ ನೂಂಕು), ಸಾಕು (ಹವ್ಯಕ ಸಾಂಕು), ತಾಟು (ಹವ್ಯಕ ತಾಂಟು), ಮರಗೊ (ಹವ್ಯಕ ಮರಂಗೊ).
(10) ನೀಲಗಿರಿಗೆ ವಲಸೆ ಹೋದ ಮೇಲೆ ಅದರಲ್ಲಿ ನಡೆದಿರುವ ಬದಲಾವಣೆಗಳಲ್ಲಿ (ಕ) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ
ಮೂಗುಲಿ ಮತ್ತು ಕೊರಳಿಸದ ತಡೆಯುಲಿಗಳ ಸೇರಿಕೆ ಇಮ್ಮಡಿ ತಡೆಯುಲಿ ಯಾಗಿ ಬದಲಾಗಿರುವುದು (5.2.4 ನೋಡಿ) ಮತ್ತು (ಚ) ಳಕಾರ ಮತ್ತು ೞಕಾರಗಳು ಬಿದ್ದು ಹೋಗಿ ಅವುಗಳ ಹತ್ತಿರ ಇದ್ದ ಸ್ವರಗಳು ಮಡಚಿದ ಸ್ವರಗಳಾಗಿ ಬದಲಾಗಿರುವುದು ಮುಕ್ಯವಾದವುಗಳು (2.4.4 ನೋಡಿ).
1.3.3 ಇತರ ಒಡೆತಗಳು
ಕನ್ನಡದಲ್ಲಿ ಮೇಲಿನ ಒಳನುಡಿಗಳ ಒಡೆತ ಮಾತ್ರವಲ್ಲದೆ ಬೇರೆಯೂ ಹಲವು ಒಡೆತಗಳು ನಡೆದಿರುವುದನ್ನು ಕಾಣಬಹುದು. ಇವುಗಳ ಸ್ವರೂಪ ಎಂತಹದೆಂಬುದಿನ್ನೂ ಸ್ಪಶ್ಟವಾಗಿಲ್ಲ. ಕನ್ನಡಿಗರು ಕರ್ನಾಟಕದ ಬೇರೆ ಬೇರೆ ಜಾಗಗಳಲ್ಲಿ ನೆಲೆಸಿದ್ದು, ಈ ಜಾಗಗಳ ನಡುವಿನ ಅಂತರದಿಂದಾಗಿ ಅವರು ಬಳಸುವ ನುಡಿಯಲ್ಲಿ ವ್ಯತ್ಯಾಸಗಳೇರ್ಪಟ್ಟಿವೆ. ಒಳನಾಡಿನಲ್ಲೇನೇ ಕಾಣಿಸುವ ಬಡಗು (ದಾರವಾಡ) ಮತ್ತು ತೆಂಕು (ಮಯ್ಸೂರು) ಎಂಬ ವ್ಯತ್ಯಾಸ ಇಂತಹದು.
ಕರಾವಳಿಯ ಹವ್ಯಕದಲ್ಲೂ ತೆಂಕು ಹವ್ಯಕ, ಬಡಗು ಹವ್ಯಕ ಮತ್ತು ಗಟ್ಟದ ಮೇಲಿನ ಹವ್ಯಕ ಎಂದೆಲ್ಲ ವ್ಯತ್ಯಾಸಗಳಿವೆ. ಆದರೆ ಈ ಯಾವ ಒಡೆತಗಳೂ ಮೇಲೆ ಸೂಚಿಸಿದ ಕರಾವಳಿ-ಒಳನಾಡು ಒಡೆತದಶ್ಟು ಮುಕ್ಯ ವಾದುವಲ್ಲ.
ಇಂತಹ ನುಡಿಯನ್ನಾಡುವವರ ಜಾಗವನ್ನವಲಂಬಿಸಿದ ಒಡೆತಗಳು ಮಾತ್ರವಲ್ಲದೆ ಒಂದೇ ಜಾಗದಲ್ಲೂ ಬೇರೆ ಬೇರೆ ಜಾತಿಗಳಲ್ಲಿ ಬಳಕೆಯಾಗುವ ಕನ್ನಡವೂ ಬೇರೆ ಬೇರಾಗಿದೆ. ಈ ಜಾತಿ ಇಲ್ಲವೇ ಸಮಾಜಕ್ಕೆ ಸಂಬಂದಿಸಿದ ಒಳನುಡಿಗಳ ನಡುವಿನ ವ್ಯತ್ಯಾಸ ಯಾವ ರೀತಿಯದು ಎಂಬುದರ ಕುರಿತಾಗಿಯೂ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ.
ಈ ಎಲ್ಲ ವ್ಯತ್ಯಾಸಗಳೂ ಕನ್ನಡ ನುಡಿಯನ್ನು ಬಳಸುವ ಈ ಬೇರೆ ಬೇರೆ ರೀತಿಯ ಪಂಗಡಗಳ ನಡುವೆ ಕಳೆದ ನೂರಾರು ವರ್ಶಗಳಲ್ಲಿ ಎಂತಹ ಸಂಪರ್ಕವಿತ್ತು ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ಇಲ್ಲಿ ಮರೆಯಬಾರದು.
1.4 ಪುಸ್ತಕದ ಸ್ವರೂಪ
ಮೂಲದ್ರಾವಿಡದಿಂದ ಕನ್ನಡದ ವರೆಗೆ ಮತ್ತು ಅಲ್ಲಿಂದ ಇವತ್ತಿನ ಕನ್ನಡದ ಒಳನುಡಿಗಳ ವರೆಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ಎಂತಹ ಬದಲಾವಣೆ ಗಳೆಲ್ಲ ನಡೆದಿವೆ ಎಂಬುದನ್ನು ವಿವರಿಸುವುದೇ ಈ ಪುಸ್ತಕದ ಗುರಿಯಾಗಿದೆ. ಮೂಲದ್ರಾವಿಡ ಸ್ವರಗಳು ಬೇರಿನಲ್ಲಿ ಮತ್ತು ಒಟ್ಟಿನಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಿಗೊಳಗಾಗಿವೆಯಾದ ಕಾರಣ ಅವನ್ನು ಬೇರೆ ಬೇರಾಗಿ ಎರಡು ಮತ್ತು ಮೂರನೇ ಅದ್ಯಾಯಗಳಲ್ಲಿ ವಿವರಿಸಲಾಗಿದೆ.
ಇದಕ್ಕೆ ಬದಲು, ವ್ಯಂಜನಗಳಲ್ಲಿ
ನಡೆದ ಬದಲಾವಣೆಗಳನ್ನು ತಡೆಯುಲಿಗಳಲ್ಲಿ ನಡೆದವು ಮತ್ತು ಇತರ ವ್ಯಂಜನಗಳಲ್ಲಿ ನಡೆದವು ಎಂಬುದಾಗಿ ವಿಂಗಡಿಸಿ, ನಾಲ್ಕು ಮತ್ತು ಅಯ್ದನೆಯ ಅದ್ಯಾಯಗಳಲ್ಲಿ ವಿವರಿಸಲಾಗಿದೆ.
ಮೂಲದ್ರಾವಿಡದ ಪದರಚನೆ ಹೇಗಿದ್ದಿರಬೇಕು ಮತ್ತು ಅದರಲ್ಲಿ ಎಂತಹ ಬದಲಾವಣೆಗಳಾದುದರಿಂದಾಗಿ ಕನ್ನಡದ ಪದಗಳು ಸಿದ್ದವಾಗಿವೆ ಎಂಬುದನ್ನು ಆರನೆಯ ಅದ್ಯಾಯದಲ್ಲಿ ವಿವರಿಸಲಾಗಿದೆ.
ಕ್ರಿಯಾಪದಗಳ ಒಳರಚನೆಯ ಕುರಿತು ಹಲವಾರು ಸಂಗತಿಗಳನ್ನು ಈಗಾಗಲೇ ಕಂಡುಹಿಡಿಯಲಾಗಿದೆಯಾದ ಕಾರಣ, ಅದನ್ನು ಬೇರೆಯೇ ಒಂದು (ಏಳನೇ) ಅದ್ಯಾಯದಲ್ಲಿ ವಿವರಿಸಲಾಗಿದೆ. ಈ ಪದಗಳಿಂದ ರಚಿಸಬಹುದಾದ ಕ್ರಿಯಾರೂಪಗಳ ಒಳರಚನೆಯನ್ನು ಮತ್ತು ಅದರಲ್ಲಿ ನಡೆದ ಅದ್ಯಾಯದಲ್ಲಿ ಕಯ್ಗೆತ್ತಿಕೊಳ್ಳಲಾಗಿದೆ.
ಬದಲಾವಣೆಗಳನ್ನು
ನಾಮಪದಗಳ ಮತ್ತು ನಾಮರೂಪಗಳ ಒಳರಚನೆಯಲ್ಲಿ ನಡೆದ ಬದಲಾವಣೆಗಳನ್ನು ಒಂಬತ್ತನೇ ಅದ್ಯಾಯದಲ್ಲೂ, ಆಡುಗ ಮತ್ತು ತೋರುಗ ಹತ್ತನೇ ನಡೆದವುಗಳನ್ನು ಅದ್ಯಾಯದಲ್ಲೂ, ಹನ್ನೊಂದನೇ ಅದ್ಯಾಯದಲ್ಲೂ ವಿವರಿಸಲಾಗಿದೆ.
ಗುಣಪದಗಳ ಒಳರಚನೆಯಲ್ಲಿ
ಪದಗಳ ಒಳರಚನೆಯಲ್ಲಿ
ನಡೆದವುಗಳನ್ನು
ಮೂಲದ್ರಾವಿಡದಲ್ಲಿ ವಾಕ್ಯರಚನೆ ಹೇಗಿದ್ದಿರಬೇಕು ಮತ್ತು ಈ ರಚನೆ ಯಲ್ಲಿ ಎಂತಹ ಬದಲಾವಣೆಗಳನ್ನು ಕನ್ನಡ ಮಾಡಿಕೊಂಡಿದೆ ಎಂಬುದನ್ನು ಹನ್ನೆರಡನೇ ಅದ್ಯಾಯದಲ್ಲಿ ಪರಿಶೀಲಿಸಲಾಗಿದೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಪಾರಿಬಾಶಿಕ ಪದಗಳನ್ನು ಕೊನೆಯಲ್ಲಿ ವಿವರಿಸಲಾಗಿದೆ.