Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12


ಕನ್ನಡ ನುಡಿ ನಡೆದು ಬಂದ ದಾರಿ

ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ

← ಸೂಚಿ ಇಂಗ್ಲಿಶ್ ವಿಶ್ಲೇಷಣೆ: en Eke: eke

ಪರಿವಿಡಿ


ಕನ್ನಡ ನುಡಿ ನಡೆದು ಬಂದ ದಾರಿ

(ಈ ಪುಸ್ತಕ‘‘ಹೊಸ ಬರಹ’ದಲ್ಲಿದೆ)

ಡಿ. ಎನ್. ಶಂಕರ ಬಟ್

ಬಾಶಾ ಪ್ರಕಾಶನ, ಹೆಗ್ಗೋಡು

KANNADA NUDI NADEDU BANDA DARI (The path that Kannada language has covered - A history of Kannada language) by D.N.Shankara Bhat, Ninasam, Heggodu, Sagara 577417. Phone: 9900829345.

ಮೊದಲನೆಯ ಮುದ್ರಣ : 2007

ಬಿ ಬರಹಗಾರ

ಪ್ರಕಟಣೆ ಬಾಶಾ ಪ್ರಕಾಶನ, ಹೆಗ್ಗೋಡು,
ಸಾಗರ 577 417

ವಿತರಣೆ ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001.

ಮುದ್ರಣ ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮಯ್ಸೂರು 570 014.

ಮುನ್ನುಡಿ

‘ಹೊಸ ಬರಹ’ ಈ ಪುಸ್ತಕದಲ್ಲಿ ನಾನು ಕನ್ನಡದ ‘ಹೊಸ ಬರಹ’ವನ್ನು ಬಳಸಿದ್ದೇನೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಹಾಗೆಯೇ ಬರೆಯುವ ಹೇಗಿವೆಯೋ ಅವು ಅವಶ್ಯಕತೆಯಿಲ್ಲ; ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆ ಬರೆದರೆ ಸಾಕು ಎಂಬ ನಿರ್ಣಯದ ಮೇಲೆ ಈ ‘ಹೊಸ ಬರಹ’ವನ್ನು ಯೋಜಿಸಲಾಗಿದೆ.

ಸಂಸ್ಕ್ರುತದಲ್ಲಿ

ಬೇರೆ ಬಾಶೆಗಳಿಂದ ಎರವಲಾಗಿ ಬಂದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ ಬಾಶೆಗಳಲ್ಲಿರುವ ಹಾಗೆ ವಕಾರಗಳಿವೆ, ಎರಡು ಬರೆಯುವುದಿಲ್ಲ. ಇಂಗಿಶ್ನಲ್ಲಿ ಎರಡು ಶಕಾರಗಳಿವೆ, ಎರಡು ಸಕಾರಗಳಿವೆ. ಆದರೆ ಇವನ್ನೆಲ್ಲ ನಾವು ಒಂದೇ ರೀತಿ ಬರೆಯುತ್ತೇವೆ.

ನಾವು ಅದನ್ನೂ

ಹಳೆಗನ್ನಡದಲ್ಲೇನೇ ಳ-ೞ ಮತ್ತು ರ-ಱಗಳ ನಡುವೆ ವ್ಯತ್ಯಾಸವಿತ್ತು; ಆದರೆ ಹೊಸಗನ್ನಡದಲ್ಲಿ ಬಿಟ್ಟುಕೊಟ್ಟಿದ್ದೇವೆ. ಹೀಗಿರುವಾಗ, ಹಳೆಗನ್ನಡದ ಸಮಯಕ್ಕಿಂತಲೂ ಹಿಂದೆ ಸಂಸ್ಕ್ರುತದಲ್ಲಿ ಇದ್ದಿರಬಹುದಾದ ವ್ಯತ್ಯಾಸಗಳನ್ನು ಸಂಸ್ಕ್ರುತಕ್ಕಿಂತ ತೀರ ಬೇರಾಗಿರುವ

ಕನ್ನಡ ಬಾಶೆಯ ಬರಹಗಳಲ್ಲಿ ಇವತ್ತಿಗೂ ಉಳಿಸಿಕೊಳ್ಳಬೇಕೆಂದು ಹೇಳುವುದು ಯಾವ ರೀತಿಯಲ್ಲೂ ಸಮತ್ರನೀಯವಲ್ಲ.

ಸಂಸ್ಕ್ರುತ

ಕನ್ನಡಿಗರ

ಪದಗಳಲ್ಲಿ

ಮಾತಿನಲ್ಲಿ

ಬರುವ ಮಹಾಪ್ರಾಣಾಕ್ಶರಗಳು ಅಲ್ಪಪ್ರಾಣಾಕ್ಶರಗಳಾಗಿ ಉಚ್ಚಾರವಾಗುತ್ತವೆ; ಷಕಾರ ಶಕಾರವಾಗಿ, ಋಕಾರ ರು ಎಂಬುದಾಗಿ, ವಿಸರ್ಗ ಸ್ವರದ ಮೊದಲು ಹಕಾರವಾಗಿ ಮತ್ತು ವ್ಯಂಜನದ ಮೊದಲು ಆ ವ್ಯಂಜನದ ಒತ್ತಕ್ಶರವಾಗಿ, ಐ ಮತ್ತು ಔಗಳು ಅಯ್ ಮತ್ತು ಅವ್ಗಳಾಗಿ ಉಚ್ಚಾರವಾಗುತ್ತವೆ. (ಎಂದರೆ, ಆ ರೀತಿ ನಾವು ಓದುತ್ತೇವೆ). ಹಾಗಾಗಿ, ಸಂಸ್ಕ್ರುತ ಪದಗಳಲ್ಲಿ ಮಾತ್ರವೇ ಬರುವ ಈ ಎಲ್ಲಾ ಅಕ್ಶರಗಳನ್ನು (ಮತ್ತು ಕನ್ನಡ ಪದಗಳಲ್ಲೂ ‘ಹೊಸ ಬರಹ’ದಲ್ಲಿ ಅವುಗಳ ಬರುವ ಐ, ಔಗಳನ್ನು) ಉಚ್ಚಾರಣೆಗನುಸಾರವಾಗಿ ಬರೆಯಲಾಗುತ್ತದೆ.

ಇದಲ್ಲದೆ, ರಕಾರಕ್ಕೆ ಕನ್ನಡದ ಲಿಪಿಯಲ್ಲಿ ಮೂರು ರೂಪಗಳಿವೆ (ರ, ್ರ ಮತ್ತು ್ರ). ಇವುಗಳಲ್ಲಿ ಎರಡನೆಯದು ನಿಜಕ್ಕೂ ಅವಶ್ಯವಿಲ್ಲವಾದ ಕಾರಣ ಅದನ್ನೂ ಬಿಟ್ಟುಕೊಡಲಾಗಿದೆ. ಇದೇ ರೀತಿಯಲ್ಲಿ ಕನ್ನಡ ಲಿಪಿಯಲ್ಲಿ ವಿಶಿಶ್ಟವಾದ ಸಂದಬ್ರಗಳಲ್ಲಿ ಮೂಗುಲಿ(ಅನುನಾಸಿಕ)ಗಳ ಬದಲು ಬಳಸುವ ಕಾರಣ, ಞ್ ಮತ್ತು ಙ್ಗಳ ಅವಶ್ಯಕತೆಯಿಲ್ಲ. ಹಾಗಾಗಿ, ಅವನ್ನೂ ಬಿಟ್ಟುಕೊಡಲಾಗಿದೆ.

ಸೊನ್ನೆ(ಂ)(ಅನುಸ್ವಾರ)ವನ್ನು

ಕೆಲವು

ಈ ‘ಹೊಸ ಬರಹ’ದ ಕುರಿತು ಹೆಚ್ಚಿನ ವಿವರಗಳನ್ನು ನಾನು 2005ರಲ್ಲಿ ಬರೆದು ಪ್ರಕಟಿಸಿರುವ ಕನ್ನಡ ಬರಹವನ್ನು ಸರಿಪಡಿಸೋಣ! ಪುಸ್ತಕದಲ್ಲಿ ನೋಡಬಹುದು.

ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳನ್ನು ಈ ರೀತಿ ಬರೆಯುವು ದರಿಂದ ಅವು ಬಂದಿರುವ ವಾಕ್ಯಗಳನ್ನು ಓದಿ ಅರ್ತ ಮಾಡಿಕೊಳ್ಳುವಲ್ಲಿ ತೊಂದರೆಯೂ ಆಗುವುದಿಲ್ಲವೆಂಬುದು ಈ ಪುಸ್ತಕವನ್ನು ಯಾವ ಓದಿದವರಿಗೆ ಸ್ಪಶ್ಟವಾಗದಿರದು.

ಈ ಬರಹವನ್ನು ಬಳಸುವುದರಿಂದ ಕನ್ನಡವನ್ನು ಕಲಿಯುವ ಮಕ್ಕಳಿಗೆ (ಅದರಲ್ಲೂ ಕೆಳವರ್ಗದ ಮಕ್ಕಳಿಗೆ) ಮತ್ತು ಅದನ್ನು ಆಮೇಲೆ ಬಳಸುವ ಜನರಿಗೆ ಬಹಳಶ್ಟು ಉಪಕಾರವಾಗಬಲ್ಲುದೆಂಬುದೇ ಅದನ್ನು ಬಳಕೆಗೆ ತರ ಬೇಕೆಂಬ ಈ ಪ್ರಯತ್ನಕ್ಕೆ ಮುಕ್ಯ ಕಾರಣ.

ಮೀಸಲಾತಿಯಿಂದಾಗಿ ಹೇಗೆ ಹೆಚ್ಚು ಹೆಚ್ಚು ಮಂದಿ ಕೆಳವರ್ಗದ ಜನರು ಸಮಾಜದಲ್ಲಿ ಮೇಲೆ ಬರುತ್ತಿದ್ದಾರೋ ಹಾಗೆಯೇ ಈ ಹೊಸ ಬರಹದ ಬಳಕೆಯಿಂದಾಗಿ ಹೆಚ್ಚು ಹೆಚ್ಚು ಮಂದಿ ಕೆಳವರ್ಗದ ಜನರು ಕನ್ನಡ ಬರಹವನ್ನು ಬಳಸುವಂತಾಗಬಲ್ಲರೆಂಬುದರಲ್ಲಿ ಸಂಶಯವಿಲ್ಲ.

ಕೀಳರಿಮೆಯಿಲ್ಲದೆ

ಮೇಲೆ ಸೂಚಿಸಿದ ನನ್ನ ಕನ್ನಡ ಬರಹವನ್ನು ಸರಿಪಡಿಸೋಣ! ಪುಸ್ತಕವನ್ನು ಓದಿದವರಲ್ಲಿ ಹಲವರು ‘ಹಾಗೆ ಮಾಡಿದರೆ ಬಹಳ ಒಳ್ಳೆಯದಿತ್ತು, ಆದರೆ ಮಾಡುವುದು ಯಾರು?’ ಎಂದು ಕೇಳಿದ್ದಾರೆ. ಅದರ ವಿಮರ್ಶಕರೊಬ್ಬರು ‘ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

ಕನ್ನಡದ ಬರಹಗಾರರು ಈ ‘ಹೊಸ ಬರಹ’ವನ್ನು ಬಳಸಿದರೆ ಒಳ್ಳೆಯ ದೆಂದು ಅನಿಸಿದರೂ ಬಳಸುವ ಎದೆಗಾರಿಕೆಯನ್ನು ತೋರಿಸದಿರುವುದಕ್ಕೆ ಹಾಗೆ ಮಾಡಿದಲ್ಲಿ ಅವರ ಬರಹಕ್ಕೆ ಕನ್ನಡದ ಇವತ್ತಿನ ಹಲವು ವಿದ್ವಾಂಸರ ಮನ್ನಣೆ ದೊರೆಯದಿರಬಹುದು ಮತ್ತು ಅದಕ್ಕೆ ಸಿಗಬಹುದಾದ ಪ್ರಶಸ್ತಿಗಳು ಮುಕ್ಯ ಕಾರಣವಿರಬೇಕು.

ತಪ್ಪಿಹೋಗಬಹುದು ಎಂಬ

ಹೆದರಿಕೆಯೇ

ನನಗೆ ವಿದ್ವಾಂಸರ ಮನ್ನಣೆ ದೊರೆಯದಿರಬಹುದೆಂಬ ಹೆದರಿಕೆಯಿಲ್ಲ; ಯಾಕೆಂದರೆ, ಅದನ್ನು ಪುಸ್ತಕದ ಯೋಗ್ಯತೆ ನಿರ್ದರಿಸಬೇಕಲ್ಲದೆ ಅದಕ್ಕಾಗಿ ಬಳಸಿದ ಬರಹದ ಸ್ವರೂಪವಲ್ಲ. ಇನ್ನು ಪ್ರಶಸ್ತಿಗಳ ಮೇಲೆ ನನಗೆ ಸ್ವಲ್ಪವೂ ಆಸೆಯಿಲ್ಲ.

ಹಾಗಾಗಿ, ‘ಹೊಸ ಬರಹ’ವನ್ನು ಬಳಸಲು ಸುರುಮಾಡುವುದಕ್ಕೆ ನಾನೇ ತಕ್ಕ ವ್ಯಕ್ತಿ ಎಂದು ನಿರ್ದರಿಸಿ ಈ ಪುಸ್ತಕದಲ್ಲಿ ಅದನ್ನು ಬಳಸಲು ಮೊದಲು ಮಾಡಿದ್ದೇನೆ. ನನ್ನ ಮುಂದಿನ ಪುಸ್ತಕಗಳಲ್ಲೂ ಅದನ್ನೇ ಬಳಸುವ ನಿರ್ದಾರ ವನ್ನೂ ಮಾಡಿದ್ದೇನೆ.

ಈ ‘ಹೊಸ ಬರಹ’ವನ್ನು ಬಳಸಿದುದರಿಂದ ಕೆಲವು ಮಂದಿ ಓದುಗರಿಗೆ ಸ್ವಲ್ಪ ಹಿಂಸೆಯಾಗಬಹುದು. ಅದರಲ್ಲೂ ಬೇರೆ ಬರಹಗಾರರ ಹೆಸರುಗಳು (ಬಾಲಕ್ರುಶ್ಣನ್, ಕ್ರುಶ್ಣಮೂರ್ತಿ, ಗವ್ಡ, ಮೊದಲಾದುವು) ಇಂತಹ ಅನಿಸಿಕೆಗೆ ಕಾರಣವಾಗಬಲ್ಲುವು. ಆದರೆ ಇದು ಬರಹದ ಮಾದ್ಯಮ ಬೇರಾದುದರ ಪರಿಣಾಮವಲ್ಲದೆ ಬೇರೇನಲ್ಲ.

ಬಣ್ಣದ ಚಿತ್ರದಲ್ಲಿ ಕೆಂಪಾಗಿ ಕಾಣಿಸುವ ತುಟಿ ಕಪ್ಪು-ಬಿಳುಪು ಚಿತ್ರದಲ್ಲಿ ಕಪ್ಪಾಗಿ ಕಾಣಿಸುತ್ತದೆ. ಆದರೆ, ಇದರಿಂದ ಯಾರಿಗೂ ಹಿಂಸೆಯಾಗುವುದಿಲ್ಲ. ಅದನ್ನು ನೋಡಿ ಬಳಕೆಯಾಗಿರುವುದೇ ಇದಕ್ಕೆ ಕಾರಣ. ಹೊಸ ಬರಹವೂ ಹಾಗೆಯೇ. ಬಳಕೆಯಾದಾಗ ಅದರಿಂದ ಯಾರಿಗೂ ಹಿಂಸೆಯಾಗದು.

ಕನ್ನಡದ್ದೇ ಪದಗಳು ಈ ಪುಸ್ತಕದಲ್ಲಿ ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಲು ಪ್ರಯತ್ನಿಸಿದ್ದೇನೆ. ಇದು ಕನ್ನಡದ ವಿದ್ವಾಂಸರು ಸಾಮಾನ್ಯವಾಗಿ ಬಳಸುವ ವಿದಾನಕ್ಕಿಂತ ತೀರ ಬೇರಾಗಿದೆ.

ಉದಾಹರಣೆಗಾಗಿ, ಕನ್ನಡ ಪದಗಳಲ್ಲಿ ಕಾಣಿಸಿಕೊಳ್ಳುವ ಉಲಿಗಳನ್ನು ವಾಕ್ಯಗಳ ಒಳರಚನೆಯಲ್ಲಿ

ಪದಗಳ

ಮತ್ತು

ಕನ್ನಡ

ಮತ್ತು

ಬಳಕೆಯಾಗುವ ನಿಯಮಗಳನ್ನು ವಿವರಿಸಬೇಕಾದಾಗ ಹಲವಾರು ಹೊಸ ಇಂತಹ ಪದಗಳನ್ನು ಉಂಟುಮಾಡಬೇಕಾಗುತ್ತದೆ. ವಿಶಯಗಳನ್ನು ತಿಳಿಸಲು ಯೋಗ್ಯವಾದ ಪದಗಳಿಲ್ಲದಿರುವುದೇ ಇದಕ್ಕೆ ಕಾರಣ.

ಕನ್ನಡದಲ್ಲಿ

ಇಂತಹ

ಸಂದರ್ಬಗಳಲ್ಲಿ

ಕನ್ನಡದ ವಿದ್ವಾಂಸರು

ಸಂಸ್ಕ್ರುತದ ಮೊರೆಹೊಗುತ್ತಾರೆ. ಆ ನುಡಿಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ಅವರು ಎರವಲಾಗಿ ಪಡೆಯುತ್ತಾರೆ ಮಾತ್ರವಲ್ಲ, ಹೊಸ ಪದಗಳನ್ನು ಉಂಟುಮಾಡಬೇಕಾಗಿರುವಲ್ಲೂ ಕನ್ನಡ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸುತ್ತಾರೆ (ಕೆಂಪೇಗವ್ಡ 1976 ನೋಡಿ). ಆದರೆ ಅಂತಹ ಪದಗಳನ್ನು ಬಳಸಿದ ಕನ್ನಡ ಬರಹ ಕಗ್ಗಂಟಾಗುತ್ತದೆ.

ಹಾಗೆ ಮಾಡುವ ಬದಲು ನಾನು ಈ ಪುಸ್ತಕದಲ್ಲಿ ಹೆಚ್ಚು ಹೆಚ್ಚು
ಕನ್ನಡದ್ದೇ ಆದ ಪದಗಳನ್ನು ಉಂಟುಮಾಡಿ ಬಳಸಿದ್ದೇನೆ. ತಡೆಯುಲಿ, ಮಡಚಿದ ತಡೆಯುಲಿ, ಉಜ್ಜುಲಿ, ಮುಂದಿನ ಸ್ವರ, ಮೇಲಿನ ಸ್ವರ, ಉದ್ದ ಸ್ವರ ಮೊದಲಾದ ಈ ಪದಗಳನ್ನು ಕಲಿಯುವುದು ಮತ್ತು ನೆನಪಿನಲ್ಲಿಟ್ಟು ಕೊಳ್ಳುವುದು ಕನ್ನಡಿಗರಿಗೆ ಹೆಚ್ಚು ಸುಲಬವೆಂದು ನನಗೆ ತೋರುತ್ತದೆ. ಇವುಗಳ ಅರ್ತವನ್ನು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.

ಈ ಪುಸ್ತಕದ ಕುರಿತು ಕನ್ನಡ ನುಡಿ ಮೂಲದ್ರಾವಿಡದಿಂದ ಬದಲಾಗುತ್ತಾ ಬಂದ ಬಗೆ ಹೇಗೆ ಎಂಬುದನ್ನು ವಿವರಿಸುವಲ್ಲಿ ಇದು ನನ್ನ ಮೂರನೆಯ ಪ್ರಯತ್ನವಾಗಿದೆ. ಇದಕ್ಕೆ ಮೊದಲು 1979ರಲ್ಲಿ ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ ಎಂಬ ಪುಸ್ತಕವನ್ನು ಮತ್ತು 1995ರಲ್ಲಿ ಅದನ್ನೇ ತಿದ್ದಿ ದೊಡ್ಡದು

ಮಾಡಿರುವ ಕನ್ನಡ ಬಾಶೆಯ ಕಲ್ಪಿತ ಚರಿತ್ರೆ ಎಂಬ ಪುಸ್ತಕವನ್ನು ಬರೆದಿದ್ದೆ.

ಈ ಪುಸ್ತಕ ಅವೆರಡಕ್ಕಿಂತಲೂ ಬೇರಾಗಿದ್ದು, ಕನ್ನಡ ನುಡಿಯಲ್ಲಿ ನಡೆದ ಬದಲಾವಣೆಗಳನ್ನು ವಿವರಿಸುವ ಒಂದು ಹೊಸ ಪ್ರಯತ್ನವಾಗಿದೆ. ಮೂಲದ್ರಾವಿಡದ ಸ್ವರ ಮತ್ತು ವ್ಯಂಜನಗಳು ಕನ್ನಡದ ಚರಿತ್ರೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಆ ವಿಶಯದಲ್ಲಿ ಇತ್ತೀಚೆಗಿನ ವರೆಗೂ ನಡೆದಿರುವ ಸಂಶೋದನೆಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಹೆಚ್ಚು ವಿವರವಾಗಿ ಕೊಡಲಾಗಿದೆ.

ನಡೆದ ಬದಲಾವಣೆಗಳು

ಕನ್ನಡದ ಒಳನುಡಿಗಳಲ್ಲಿ, ಅದರಲ್ಲೂ ಕರಾವಳಿ ಮತ್ತು ಬಡಗ ಕನ್ನಡದ ಚರಿತ್ರೆಯನ್ನು ಒಳನುಡಿಗಳಲ್ಲಿ ತಿಳಿಯಬೇಕೆಂದಿರುವವರಿಗೆ ಬಹಳ ಪ್ರಾಮುಕ್ಯವಾದವುಗಳು. ಯಾಕೆಂದರೆ, ಕನ್ನಡದ ಬರಹ ಒಳನಾಡಿನ ಒಳನುಡಿಯೊಂದರಿಂದ ಬೆಳೆದು ಬಂದಿದೆಯಾದ ಕಾರಣ, ಅದು ಕನ್ನಡ ನುಡಿಯ ಚರಿತ್ರೆಯ ಒಂದು ಅಂಶವನ್ನು ತಿಳಿಯುವಲ್ಲಿ ಮಾತ್ರ ಸಹಾಯಕವಾಗಬಲ್ಲುದು. ಅದಕ್ಕೂ ಹಳೆಗನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅರ್ತಮಾಡಿಕೊಳ್ಳಬೇಕಿದ್ದರೂ ಕರಾವಳಿಯ ಒಳನುಡಿಗಳ ತಿಳಿವು ಅವಶ್ಯ.

ಈ ಕಾರಣಕ್ಕಾಗಿ, ಕರಾವಳಿ ಮತ್ತು ಬಡಗ ಒಳನುಡಿಗಳಿಗೆ ಈ ಪುಸ್ತಕದಲ್ಲಿ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಡಲಾಗಿದೆ. ಇದಲ್ಲದೆ ಇವತ್ತಿನ ದ್ರಾವಿಡ ನುಡಿಗಳಲ್ಲಿ ಕನ್ನಡಕ್ಕೆ ಅತಿ ಸಮೀಪದಲ್ಲಿರುವ ತಮಿಳು ನುಡಿಯ ಪದ ಮತ್ತು ಪದರೂಪಗಳನ್ನು ಅಲ್ಲಲ್ಲಿ ಕೊಡುವ ಮೂಲಕ, ಕನ್ನಡ ನುಡಿ ನಡೆದು ಬಂದ ದಾರಿಯನ್ನು ಹೆಚ್ಚು ಸ್ಪಶ್ಟವಾಗಿ ತೋರಿಸಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಈ ಪುಸ್ತಕದಲ್ಲಿ ವ್ಯಂಜನಗಳನ್ನು ಸೂಚಿಸಬೇಕಾದಾಗ ಅವನ್ನು ಅಕಾರ ದೊಂದಿಗೆ ಕೊಡಲಾಗಿದೆ. ಆದರೆ ಈ ಅಕಾರಕ್ಕೆ ಬೆಲೆಯಿಲ್ಲ ಎಂಬುದನ್ನು ಗಮನಿಸಬೇಕು. ‘ಕ, ಚ, ತಗಳು’ ಎಂದರೆ ‘ಕ್, ಚ್, ತ್ಗಳು’ ಎಂದೇ

ಅರ್ತ. ಕಕಾರ ಎಂಬುದಕ್ಕೂ ಕ್ ಎಂಬ ವ್ಯಂಜನ ಎಂಬ ಅರ್ತವಿದೆ. ಅಲ್ಲೂ ಅಕಾರಕ್ಕೆ ಬೆಲೆಯಿಲ್ಲ.

ಕನ್ನಡದ ಚರಿತ್ರೆಯನ್ನು ವರ್ಣಿಸುವಲ್ಲಿ ಸ್ವರ ಮತ್ತು ವ್ಯಂಜನಗಳ ಕುರಿತು ಹೆಚ್ಚು ಹೇಳಲು ಸಾದ್ಯವಾಗಿದೆ, ಆದರೆ ಪದ ಮತ್ತು ಪದರೂಪಗಳ ಕುರಿತು ಇದಕ್ಕಿಂತ ಸ್ವಲ್ಪ ಕಡಿಮೆ ಮತ್ತು ವಾಕ್ಯಗಳ ಕುರಿತು ಬಹಳ ಸ್ವಲ್ಪ ಮಾತ್ರ ತಿಳಿಸಲು ಸಾದ್ಯವಾಗಿದೆ. ಮೂಲದ್ರಾವಿಡದ ಕುರಿತಾಗಿ ಇದುವರೆಗೆ ನಡೆದಿರುವ ಸಂಶೋದನೆಗಳಲ್ಲಿರುವ ಕೊರತೆಯನ್ನು ಇದು ಸೂಚಿಸುತ್ತದೆ. ಈ ವಿಶಯದಲ್ಲಿ ನಡೆಸಬೇಕೆಂದಿರುವವರು ಇದನ್ನು ಗಮನಿಸಬೇಕು.

ಸಂಶೋದನೆ

ಈ ಪುಸ್ತಕದ ಮುದ್ರಣದಲ್ಲಿ ‘ಬರಹ’ ತಂತ್ರಾಂಶವನ್ನು ಉಚಿತವಾಗಿ ಬಳಸಿಕೊಳ್ಳಲು ಒಪ್ಪಿಗೆ ಕೊಟ್ಟಿರುವ ಶ್ರೀ ಶೇಶಾದ್ರಿವಾಸು ಚಂದ್ರಶೇಕರನ್ ಅವರನ್ನು, ಇದನ್ನು ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀ ರಾ. ಶ್ರೀ. ಮೋಹನ ಮೂರ್ತಿ ಅವರನ್ನು, ಇದರ ಮಾರಾಟದ ಹೊರೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ. ಜಿ. ಎನ್. ಅಶೋಕವರ್ದನ ಅವರನ್ನು, ಹಾಗೂ ಇದರ ಕಯ್ಬರಹವನ್ನು ಓದಿ ಹಲವು ಸಲಹೆಗಳನ್ನು ಕೊಟ್ಟ ಮತ್ತು ಬೇರೆಲ್ಲಾ ರೀತಿ ಯಲ್ಲೂ ನನ್ನ ಬೆನ್ನೆಲುಬಾಗಿ ನಿಂತ ನನ್ನ ಮಡದಿ ಶ್ರೀಮತಿ ಬಾರತಿ ಬಟ್ ಅವರನ್ನು ಇಲ್ಲಿ ನೆನಪಿಸಬಯಸುತ್ತೇನೆ.

ಹೆಗ್ಗೋಡು ಅಗೋಸ್ಟು 1, 2007

ಡಿ. ಎನ್. ಶಂಕರ ಬಟ್

ಒಳಪಿಡಿ

1 ಮುನ್ನೋಟ 1.1 ನಡೆದು ಬಂದ ದಾರಿ 1.1.1 ನುಡಿಗಳ ನಡುವಿನ ನಂಟಸ್ತಿಕೆ 1.1.2 ಒಡೆದುಕೊಳ್ಳುವ ವಿದಾನಗಳು 1.1.3 ಮೂಲನುಡಿಯ ಕಲ್ಪನೆ
1.1.4 ವ್ಯತ್ಯಾಸ ಮತ್ತು ಸಾಮ್ಯ 1.2 ದ್ರಾವಿಡ ನುಡಿಗಳು 1.2.1 ಇವತ್ತಿನ ದ್ರಾವಿಡ ನುಡಿಗಳು 1.2.2 ದ್ರಾವಿಡರ ಮೂಲ ನೆಲೆ 1.2.3 ತೆಂಕುದ್ರಾವಿಡದಲ್ಲಿ ಕನ್ನಡದ ಜಾಗ 1.3 ಕನ್ನಡ ನುಡಿ ಒಳನುಡಿಗಳಾಗಿ ಒಡೆದುಕೊಂಡ ಬಗೆ 1.3.1 ಕರಾವಳಿ ಮತ್ತು ಒಳನಾಡಿನ ಒಳನುಡಿಗಳು
1.3.2 ಬಡಗ ಒಳನುಡಿ 1.3.3 ಇತರ ಒಡೆತಗಳು 1.4 ಪುಸ್ತಕದ ಸ್ವರೂಪ

2 ಬೇರಿನ ಸ್ವರಗಳು 2.1 ಸ್ವರಗಳ ಎಣಿಕೆ ಮತ್ತು ಉಚ್ಚಾರಣೆ
2.1.1 ಐ ಮತ್ತು ಔ ಸ್ವರಗಳು 2.1.2 ಉಲಿಗಳು ಮತ್ತು ಉಲಿಕಂತೆಗಳು
2.1.3 ಬೇರುಗಳು ಮತ್ತು ಒಟ್ಟುಗಳು 2.2 ಬೇರಿನ ಸ್ವರಗಳು 2.2.1 ಮೇಲಿನ ಗಿಡ್ಡ ಸ್ವರಗಳು ನಡುವಿನ ಸ್ವರಗಳಾದುದು 2.2.2 ನಡುವಿನ ಗಿಡ್ಡ ಸ್ವರಗಳು ಮೇಲಿನ ಸ್ವರಗಳಾದುದು 2.2.3 ಎಕಾರ, ಒಕಾರಗಳು ಯ ಮತ್ತು ವಗಳಾದುದು

15 15 16 16 19 20 21 22 24 25 27 28 31 33 34

35 
35 
37 
39 
40 
42 
42 
47 
53 

2.2.4 ನಡುವಿನ ಸ್ವರಗಳು ಕೆಳಗಿನ ಸ್ವರಗಳಾದುದು
2.2.5 ಅಕಾರ ಎಕಾರವಾದುದು 2.3 ಸ್ವರದ ಉದ್ದದಲ್ಲಿ ಬದಲಾವಣೆಗಳು
2.3.1 ಮೂಲದ್ರಾವಿಡದಲ್ಲಿದ್ದ ವ್ಯತ್ಯಾಸ
2.3.2 ಕನ್ನಡದಲ್ಲಿ ನಡೆದ ಬದಲಾವಣೆಗಳು 2.4 ಸ್ವರಗಳ ಎಣಿಕೆಯಲ್ಲಿ ಹೆಚ್ಚಳ 2.4.1 ಅಕಾರದ ಒಡೆತ 2.4.2 ದುಂಡಗಿಲ್ಲದ ಉ 2.4.3 ಮೂಗಿಸಿದ ಸ್ವರಗಳು
2.4.4 ಮಡಚಿದ ಸ್ವರಗಳು 2.5 ತಿರುಳು

3 ಒಟ್ಟಿನ ಸ್ವರಗಳು
3.1 ಮುನ್ನೋಟ
3.2 ಮೂಲದ್ರಾವಿಡದ ಒಟ್ಟುಗಳು 3.3 ಉದ್ದ ಸ್ವರ ಗಿಡ್ಡವಾಗುವುದು 3.4 ಎರಡು ಗಿಡ್ಡ ಸ್ವರಗಳು ಸೇರಿ ಉದ್ದ ಸ್ವರವಾಗುವುದು 3.5 ಎರಡನೆಯಸ್ವರದಲ್ಲಿ ಬದಲಾವಣೆ
3.5.1 ಎರಡನೇ ಸ್ವರ ಬಿದ್ದುಹೋಗುವುದು 3.5.2 ಮೂಗಿಸಿದ ಸ್ವರಗಳು
3.6 ಪದಗಳ ಕೊನೆಯ ಸ್ವರಗಳು 3.6.1 ಅಯ್ ಎಂಬುದು ಎಕಾರವಾಗುವುದು 3.6.2 ಅಕಾರ ಎಕಾರವಾಗುವುದು 3.6.3 ಎಕಾರ ಇಕಾರವಾಗುವುದು 3.6.4 ಉಕಾರದ ಸೇರಿಕೆ 3.6.5 ಉಕಾರ ಅಕಾರವಾಗುವುದು 3.6.6 ಉಕಾರದ ಒಡೆತ 3.7 ತಿರುಳು

4 ತಡೆಯುಲಿಗಳು
4.1 ಮುನ್ನೋಟ

55 
56 
58 
58 
66 
68 
69 
70 
71 
72 
73 

75 
75 
76 
78 
79 
79 
81 
83 
84 
84 
86 
86 
87 
87 
89 
89 

91 
91 

4.1.1 ತಡೆಯುಲಿಗಳು 4.1.2 ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳು 4.2 ಪದಗಳ ಮೊದಲಿಗಿದ್ದ ತಡೆಯುಲಿಗಳು 4.2.1 ಪಕಾರ ಹಕಾರವಾಗಿರುವುದು ಮತ್ತು ಬಿದ್ದು ಹೋಗಿರುವುದು 4.2.2 ಚಕಾರದ ಬದಲಾವಣೆಗಳು 4.2.3 ಕಕಾರ-ಗಕಾರಗಳು ಚಕಾರ-ಜಕಾರಗಳಾಗಿರುವುದು 4.3 ಸ್ವರಗಳ ನಡುವಿನ ಒತ್ತೆ ತಡೆಯುಲಿಗಳು 4.3.1 ಪಕಾರವು ವಕಾರ ಮತ್ತು ಬಕಾರಗಳಾಗಿರುವುದು 4.3.2 ಚಕಾರವು ಸಕಾರವಾಗಿರುವುದು
4.3.3 ಱಕಾರವು ರಕಾರವಾಗಿರುವುದು
4.3.4 ಟಕಾರದ ಬದಲಾವಣೆಗಳು 4.3.5 ಕಕಾರ ಬಿದ್ದುಹೋಗಿರುವುದು 4.4 ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು
4.4.1 ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿರುವುದು 4.4.2 ಕೊರಳಿಸುವ ಮತ್ತು ಕೊರಳಿಸದ ಇಮ್ಮಡಿ ತಡೆಯುಲಿಗಳಾಗಿ

ಒಡೆತ

4.4.3 ಉದ್ದ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು 4.4.4 ಗಿಡ್ದ ಸ್ವರದ ಅನಂತರದ ಬಂದಿದ್ದ ಇಮ್ಮಡಿ ತಡೆಯುಲಿಗಳು 4.4.5 ಹವ್ಯಕದಲ್ಲಿ ಗಿಡ್ಡ ಸ್ವರಗಳ ಅನಂತರ ಬದಲಾವಣೆಯಿಲ್ಲ
4.5 ಮೂಗುಲಿಯ ಅನಂತರದ ತಡೆಯುಲಿಗಳು 4.6 ಇತರ ವ್ಯಂಜನಗಳೊಂದಿಗೆ ಬಂದ ತಡೆಯುಲಿಗಳು 4.6.1 ಕನ್ನಡದಲ್ಲಿ ನಡೆದ ಬದಲಾವಣೆಗಳು 4.7 ತಿರುಳು

5 ಇತರ ವ್ಯಂಜನಗಳು 5.1 ಮುನ್ನೋಟ
5.2 ಮೂಗುಲಿಗಳು
5.2.1 ಪದಗಳ ಮೊದಲಿನ ಮೂಗುಲಿಗಳು 5.2.2 ಸ್ವರಗಳ ನಡುವಿನ ಒತ್ತೆ ಮೂಗುಲಿಗಳು 5.2.3 ಸ್ವರಗಳ ನಡುವಿನ ಇಮ್ಮಡಿ ಮೂಗುಲಿಗಳು
5.2.4 ತಡೆಯುಲಿಗಳ ಮೊದಲು ಬಂದ ಮೂಗುಲಿಗಳು

93 
95 
96 
99     101     106     108     108     113     114     116     117     118     118 

121 123 125 128 129 132 133 136

137 137 137 138 140 142 144

5.2.5 ಇತರ ವ್ಯಂಜನಗಳೊಂದಿಗೆ ಬಂದ ಮೂಗುಲಿಗಳು 5.2.6 ಪದಗಳ ಕೊನೆಯಲ್ಲಿ ಬಂದ ಮೂಗುಲಿಗಳು
5.3 ಹೊಡೆಯುಲಿ ಮತ್ತು ಪಕ್ಕದುಲಿಗಳು
5.3.1 ಲಕಾರದ ಬದಲಾವಣೆಗಳು 5.3.2 ಳಕಾರದ ಬದಲಾವಣೆಗಳು 5.3.3 ರಕಾರದ ಬದಲಾವಣೆಗಳು 5.4 ತಡೆಯಿಲ್ಲದ ವ್ಯಂಜನಗಳು 5.4.1 ಪದಗಳ ಮೊದಲಿಗೆ ಬಂದ ತಡೆಯಿಲ್ಲದುಲಿಗಳು 5.4.2 ಪದಗಳ ನಡುವಿನ ಯುಕಾರ ಮತ್ತು ವಕಾರಗಳು 5.4.3 ೞಕಾರದ ಬದಲಾವಣೆಗಳು 5.4.4 ಪದಗಳ ಕೊನೆಯ ತಡೆಯಿಲ್ಲದುಲಿಗಳು 5.5 ತಿರುಳು

6 ಪದಗಳ ಒಳರಚನೆ 6.1 ಮುನ್ನೋಟ
6.2 ಬೇರುಗಳ ಸ್ವರೂಪ 6.3 ಉಲಿಕಂತೆಗಳಲ್ಲಿ ಹಗುರ ಮತ್ತು ತೂಕ 6.4 ಪದರಚನೆಯಲ್ಲಿ ಬೇರುಗಳ ಬಳಕೆ
6.5 ತಿರುಳು

7 ಕ್ರಿಯಾಪದಗಳ ಒಳರಚನೆ
7.1 ಮುನ್ನೋಟ
7.2 ಆಗುವಿಕೆ ಮತ್ತು ಮಾಡುವಿಕೆ 7.2.1 ತಮಿಳಿನಲ್ಲಿ ಕೆಲಸದ ಪರಿಣಾಮ
7.2.2 ಕನ್ನಡದಲ್ಲಿ ಆಗುವಿಕೆ ಮತ್ತು ಮಾಡುವಿಕೆ
7.2.3 ಮೂಲದ್ರಾವಿಡದ ವ್ಯತ್ಯಾಸ 7.3 ಕ್ರಿಯಾಬೇರುಗಳಿಂದ ಕ್ರಿಯಾಪದಗಳು
7.3.1 ಅ, ಇ, ಉ ಒಟ್ಟುಗಳು
7.3.2 ತಡೆಯುಲಿಯಲ್ಲಿ ಕೊನೆಗೊಳ್ಳುವ ಒಟ್ಟುಗಳು
7.3.3 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು 7.4 ಆಗುವಿಕೆಯ ಒಟ್ಟುಗಳು

150 151 152 153 154 156 161 162 165 166 172 173

174 174 176 179 180 181

182 182 182 183 186 189 190 190 191 193 193

7.5 ಮಾಡುವಿಕೆಯನ್ನು ಸೂಚಿಸುವ ಒಟ್ಟು 7.5.1 ಕನ್ನಡದಲ್ಲಿ *ತ್ ಒಟ್ಟಿನ ಪಳೆಯಳಿಕೆಗಳು
7.5.2 ಸಮಯದ ಒಟ್ಟಿನ ಅನಂತರ *ತ್ ಒಟ್ಟಿನ ಬಳಕೆ 7.5.3 ಬಡಗ ಕನ್ನಡದಲ್ಲಿ *ತ್ ಒಟ್ಟು
7.5.4 ಹವ್ಯಕದಲ್ಲಿ *ತ್ ಒಟ್ಟು 7.6 ಮಾಡುವಿಕೆಯನ್ನು ಸೂಚಿಸುವ ಬೇರೆ ಒಟ್ಟುಗಳು 7.7 ನಾಮಬೇರುಗಳಿಂದ ಕ್ರಿಯಾಪದಗಳು
7.8 ಗುಣಬೇರುಗಳಿಂದ ಕ್ರಿಯಾಪದಗಳು
7.9 ಕ್ರಿಯಾಪದಗಳ ರೂಪದಲ್ಲಿ ಬದಲಾವಣೆಗಳು
7.10 ತಿರುಳು

8 ಕ್ರಿಯಾರೂಪಗಳು 8.1 ಮುನ್ನೋಟ
8.1.1 ವಾಕ್ಯದ ಕೊನೆಯ ಕ್ರಿಯಾರೂಪಗಳು 8.1.2 ವಾಕ್ಯದ ನಡುವಿನ ಕ್ರಿಯಾರೂಪಗಳು 8.2 ಸಮಯದ ಒಟ್ಟುಗಳು 8.2.1 ಹಿಂದಿನ ಸಮಯದ ಒಟ್ಟು 8.2.2 ಮುಂದಿನ ಸಮಯದ ಒಟ್ಟು 8.3 ಹಳೆಗನ್ನಡದಲ್ಲಿ ಸಮಯದ ಒಟ್ಟುಗಳು 8.3.1 ಹಿಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು 8.3.2 ಮುಂದಿನ ಸಮಯದ ಒಟ್ಟಿನಲ್ಲಿ ಬದಲಾವಣೆಗಳು 8.3.3 ಕರಾವಳಿಯಲ್ಲಿ ಮುಂದಿನ ಸಮಯದ ಒಟ್ಟು
8.3.4 ಬಡಗ ಕನ್ನಡದಲ್ಲಿ ಸಮಯದ ಒಟ್ಟುಗಳು
8.3.5 ಸಂಗತಿಯನ್ನು ತಿಳಿಸುವ ಕ್ರಿಯಾಪದಗಳು 8.4 ಅಲ್ಲಗಳೆಯುವ ಒಟ್ಟು 8.5 ಆಡುಗ ಒಟ್ಟುಗಳು 8.5.1 ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಒಟ್ಟುಗಳು
8.5.2 ಇತರರನ್ನು ಸೂಚಿಸುವ ಒಟ್ಟುಗಳು 8.5.3 ಕನ್ನಡದ ಒಳನುಡಿಗಳಲ್ಲಿ ಆಡುಗ ಒಟ್ಟುಗಳು 8.5.4 ಆಡುಗ ಇಲ್ಲವೇ ಕೇಳುಗರನ್ನು ಸೂಚಿಸುವ ಇನ್ನೊಂದು ಒಟ್ಟು 8.6 ಕೆಲಸವನ್ನು ಮಾಡಿಸುವ ಕ್ರಿಯಾರೂಪಗಳು

195 196 197 199 201 204 205 207 208 213

215 215 215 216 217 218 224 226 229 232 234 239 240 241 243 243 245 246 249 250

8.7 ವಾಕ್ಯದ ನಡುವೆ ಬರುವ ಕ್ರಿಯಾರೂಪಗಳು 8.8 ತಿರುಳು

9 ನಾಮಪದಗಳು
9.1 ಮುನ್ನೋಟ
9.2 ನಾಮಪದಗಳ ಒಳರಚನೆ
9.2.1 ನಾಮಬೇರುಗಳಿಂದ ನಾಮಪದಗಳು 9.2.2 ಕ್ರಿಯಾಬೇರುಗಳಿಂದ ನಾಮಪದಗಳು 9.2.3 ಗುಣಬೇರುಗಳಿಂದ ನಾಮಪದಗಳು 9.2.4 ಜೋಡುಪದಗಳ ಒಳರಚನೆ 9.3 ಲಿಂಗ ಮತ್ತು ವಚನ 9.3.1 ಎರಡು ಲಿಂಗಗಳು 9.3.2 ಎರಡು ವಚನಗಳು 9.3.3 ಲಿಂಗಬೇದದಲ್ಲಿ ಬದಲಾವಣೆ 9.4 ನಂಟಸ್ತಿಕೆಯ ಪದಗಳು
9.5 ಸಂಬಂದ ಒಟ್ಟು 9.5.1 ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟು 9.5.2 ವಿಬಕ್ತಿ ಒಟ್ಟುಗಳೊಂದಿಗೆ ಬಳಕೆ
9.6.3 ಕನ್ನಡದ ಬದಲಾವಣೆಗಳು 9.6 ವಿಬಕ್ತಿ ಒಟ್ಟುಗಳು 9.6.1 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು 9.6.2 ಕನ್ನಡದ ಬದಲಾವಣೆಗಳು 9.7 ತಿರುಳು

10 ಆಡುಗ ಮತ್ತು ತೋರುಗ ಪದಗಳು 10.1 ಮುನ್ನೋಟ
10.2 ಆಡುಗ ಪದಗಳು 10.2.1 ವ್ಯವಸ್ತೆಯಲ್ಲಿ ಬದಲಾವಣೆ 10.2.2 ಮೂರನೆಯ ವ್ಯಕ್ತಿ
10.2.3 ಆಡುಗ ಪದಗಳು ಮತ್ತು ನಾಮಪದಗಳು
10.3 ತೋರುಗ ಪದಗಳು

252 253

255 255 256
256 263 269 270 272 272 273 275 276 278 278 280 281 284 284 285 286

287 287 287 288 291 293 294

10.3.1 ಮೊದಲನೆಯ ಅಂಗದಲ್ಲಿ ನಡೆದ ಬದಲಾವಣೆಗಳು
10.3.2 ಎರಡನೆಯ ಅಂಗದಲ್ಲಿ ನಡೆದ ಬದಲಾವಣೆಗಳು 10.4 ತಿರುಳು

11 ಗುಣಪದಗಳು
11.1 ಮುನ್ನೋಟ
11.1.1 ನಾಮ-ಗುಣಪದಗಳ ಕೆಲಸ 11.1.2 ಕ್ರಿಯಾ-ಗುಣಪದಗಳ ಕೆಲಸ
11.2 ನಾಮ-ಗುಣಪದಗಳ ಒಳರಚನೆ
11.2.1 ಗುಣಬೇರುಗಳಿಂದ ನಾಮ-ಗುಣಪದಗಳು
11.2.2 ನಾಮಬೇರುಗಳಿಂದ ನಾಮ-ಗುಣಪದಗಳು 11.2.3 ಕ್ರಿಯಾಬೇರುಗಳಿಂದ ನಾಮ-ಗುಣಪದಗಳು 11.3 ನಾಮ-ಗುಣಪದಗಳ ಬಳಕೆ 11.3.1 ಮೂಲದ್ರಾವಿಡದ ಸೇರಿಕೆಯ ಬದಲಾವಣೆಗಳು 11.3.2 ಕನ್ನಡದವೇ ಆದ ಸೇರಿಕೆಯ ಬದಲಾವಣೆಗಳು 11.4 ಕ್ರಿಯಾ-ಗುಣಪದಗಳು
11.5 ಅಣಕಿಸುವ ಪದಗಳು
11.6 ಗುಣಪದಗಳ ನಾಮರೂಪಗಳು
11.7 ತಿರುಳು

12 ವಾಕ್ಯಗಳ ಒಳರಚನೆ 12.1 ಮುನ್ನೋಟ
12.2 ಜೋಡಿಸುವ ಕ್ರಿಯಾರೂಪಗಳು
12.3 ಸಂಬಂದಿಸುವ ಕ್ರಿಯಾರೂಪಗಳು
12.4 ಶರತ್ತಿನ ಕ್ರಿಯಾರೂಪಗಳು 12.4.1 ಹಳೆಗನ್ನಡದ ರೂಪಗಳು 12.4.2 ಕನ್ನಡದಲ್ಲಿ ನಡೆದ ಬದಲಾವಣೆಗಳು 12.5 ತಿರುಳು

ಕೆಲವು ಪಾರಿಬಾಶಿಕ ಪದಗಳು
ಆಕರಸೂಚಿ

297 298 299

301 301 301 304 305 305 306 307 308 309 311 313 314 316 318

319 319 321 324 325 326 326 328

329 339

ವಿಶಯಸೂಚಿ

343


Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12