Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
9. ನಾಮಪದಗಳು
9.1 ಮುನ್ನೋಟ
ಮೂಲದ್ರಾವಿಡದಲ್ಲಿ ನಾಮಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬುದಾಗಿ ಮೂರು ರೀತಿಯ ಬೇರುಗಳಿದ್ದುವು. ಈ ಮೂರು ರೀತಿಯ ಬೇರುಗಳಿಂದಲೂ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಅವುಗಳಲ್ಲಿ ನಾಮಬೇರುಗಳನ್ನು ಹಾಗೆಯೇ ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ನಾಮಪದವಾಗಿ ಬಳಸಲು ಸಾದ್ಯವಿತ್ತು. ಉದಾಹರಣೆಗಾಗಿ, *ಕಯ್, *ಆಳ್, *ಊರ್, *ಕಣ್, *ಕಾಲ್, *ಪಲ್ ‘ಹಲ್ಲು’, *ಪೆಣ್ ‘ಹೆಂಗಸು’, ಮೂಲದ್ರಾವಿಡದ ಮೊದಲಾದವು ಈ ರೀತಿ ಬಳಕೆಯಾಗಬಲ್ಲ ನಾಮಬೇರುಗಳು.
ಕನ್ನಡದಲ್ಲೂ ಇಂತಹ ಹಲವು ನಾಮಬೇರುಗಳಿದ್ದು, ಅವನ್ನು ಯಾವ ಒಟ್ಟಿನ ಸಹಾಯವೂ ಇಲ್ಲದೆ ಹಾಗೆಯೇ ನಾಮಪದವಾಗಿ ಬಳಸಲು ಸಾದ್ಯವಿದೆ. ಉದಾಹರಣೆಗಾಗಿ, ಬೇರಿಗೆ ಹಲವಚನವನ್ನು ಸೂಚಿಸುವ ಗಳ್ ಒಟ್ಟು (ಕಣ್ಗಳ್), ಕೊನೆಯನ್ನು ಸೂಚಿಸುವ ವಿಬಕ್ತಿ ಒಟ್ಟು (ಕಣ್ಗೆ), ಮೊದಲಾದುವನ್ನು ನೇರವಾಗಿ ಸೇರಿಸಲು ಸಾದ್ಯವಿದೆ.
ಹಳೆಗನ್ನಡದಲ್ಲಿ
ಕ್ರಿಯಾಬೇರುಗಳಲ್ಲಿಯೂ ಹಲವನ್ನು ಹಾಗೆಯೇ (ಎಂದರೆ ಅವಕ್ಕೆ ‘ಸೊನ್ನೆ’ ಒಟ್ಟನ್ನು ಸೇರಿಸಿ) ನಾಮಪದವಾಗಿ ಬಳಸಲು ಸಾದ್ಯವಿತ್ತು; ಕನ್ನಡದಲ್ಲಿಯೂ ಇದು ಸಾದ್ಯವಿದೆ. ಉದಾಹರಣೆಗಾಗಿ, ಹಾಡು, ಉರಿ, ಬೆಳೆ, ಉಗುಳು, ಕೆಮ್ಮು, ಗುಡುಗು, ತಪ್ಪು ಮೊದಲಾದುವನ್ನು ಕ್ರಿಯಾಪದಗಳಾಗಿ ನಾಮಪದಗಳಾಗಿಯೂ ಬಳಸಲು ಸಾದ್ಯವಿದೆ. (ಹಾಡು ಪದ ಅವನು ಒಂದು ಹಾಡನ್ನು ಹಾಡಿದ
ಮಾತ್ರವಲ್ಲದೆ
ವಾಕ್ಯದಲ್ಲಿ ಮೊದಲಿಗೆ ನಾಮಪದವಾಗಿ ಬಳಕೆಯಾಗಿದೆ ಮತ್ತು ಅದರ ಅನಂತರ ಕ್ರಿಯಾಪದವಾಗಿಯೂ ಬಳಕೆಯಾಗಿದೆ). ಇಂತಹ ಹಲವಾರು ಬೇರುಗಳು ಕನ್ನಡದಲ್ಲಿವೆ.
ಈ ಮೂರು ರೀತಿಯ (ನಾಮ, ಕ್ರಿಯಾ ಮತ್ತು ಗುಣ) ಬೇರುಗಳಿಗೂ ಕೆಲವು ಪದರಚನೆಯ ಒಟ್ಟುಗಳನ್ನು ಸೇರಿಸಿ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಉದಾಹರಣೆಗಾಗಿ, ಮೂಲದ್ರಾವಿಡದ ಕಾ ‘ಕಾಡು’ ನಾಮ ಬೇರಿಗೆ *ಟು ಒಟ್ಟನ್ನು ಸೇರಿಸುವುದರ ಮೂಲಕ ಕನ್ನಡದ ಕಾಡು ನಾಮಪದವನ್ನು, ಮೂಲದ್ರಾವಿಡದ *ವಿಲ್ ‘ಮಾರು’ ಕ್ರಿಯಾಬೇರಿಗೆ *ಅಯ್ ಒಟ್ಟನ್ನು ಸೇರಿಸುವುದರ ಮೂಲಕ ಕನ್ನಡದ ಬೆಲೆ (<ವಿಲಯ್) ನಾಮಪದವನ್ನು ಮತ್ತು ಮೂಲದ್ರಾವಿಡದ ಪೆರ್ ‘ದೊಡ್ಡ’ ಗುಣಬೇರಿಗೆ *ಮಯ್ ಒಟ್ಟನ್ನು ಕನ್ನಡದ ಹೆಮ್ಮೆ ಸೇರಿಸುವುದರ ಮೂಲಕ (<ಪೆರುಮಯ್) ಪಡೆಯಲಾಗಿದೆಯೆಂಬುದನ್ನು ನಾಮಪದವನ್ನು ಗಮನಿಸಬಹುದು.
ಮೂರು
ಇದಲ್ಲದೆ, ಈ
ಬೇರು(ಪದ)ಗಳಿಗೂ ನಾಮಪದಗಳನ್ನು ಸೇರಿಸಿ ಜೋಡುಪದಗಳನ್ನು ತಯಾರಿಸುವ ವಿದಾನವೂ ಮೂಲದ್ರಾವಿಡದಲ್ಲಿ ಬಳಕೆಯಲ್ಲಿದ್ದಿರಬೇಕು. ಉದಾಹರಣೆಗಾಗಿ, *ಎಳ್ ‘ಎಳ್ಳು’ ಮತ್ತು *ನೆಯ್ ‘ಎಣ್ಣೆ, ತುಪ್ಪ’ ಎಂಬ ಎರಡು ಮೂಲದ್ರಾವಿಡ ನಾಮಪದಗಳ ಸೇರಿಕೆಯಿಂದ ಕನ್ನಡದ ಎಣ್ಣೆ ನಾಮಪದವನ್ನು, *ವಾವ್ ‘ಕಿತ್ತುಕೊಳ್ಳು’ (ಕ್ರಿಯಾಪದ) ಮತ್ತು *ಯಾಲ್ ‘ಪ್ರಾಣಿ’ (ನಾಮಪದ)ಗಳ ಸೇರಿಕೆಯಿಂದ ಕನ್ನಡದ ಬಾವಲಿ ನಾಮಪದವನ್ನು ಮತ್ತು *ವೆಳ್ ‘ಬಿಳಿ’ (ಗುಣಪದ) ಮತ್ತು *ನೆಯ್ ‘ತುಪ್ಪ’ (ನಾಮಪದ)ಗಳ ಸೇರಿಕೆಯಿಂದ ಕನ್ನಡದ ಬೆಣ್ಣೆ ನಾಮಪದವನ್ನು ತಯಾರಿಸಿರುವಲ್ಲಿ ಈ ವಿದಾನದ ಬಳಕೆಯಾಗಿದೆ.
ಮತ್ತು
ಕ್ರಿಯಾಬೇರು
ನಾಮಬೇರು,
9.2 ನಾಮಪದಗಳ ಒಳರಚನೆ
ಮೂಲದ್ರಾವಿಡದ ನಾಮಪದಗಳ ಒಳರಚನೆಯಲ್ಲಿ ಮೇಲೆ ಸೂಚಿಸಿದ ಗುಣಬೇರುಗಳು ಬಳಕೆಯಾಗುತ್ತಿದ್ದಿರಬೇಕು ಎಂಬುದಾಗಿ ಕಲ್ಪಿಸಿಕೊಳ್ಳಲಾಗಿದೆಯಾದರೂ, ಇವುಗಳಲ್ಲಿ ಕ್ರಿಯಾಬೇರುಗಳ ಬಳಕೆಯ ವಿಶಯದಲ್ಲಿ ಮಾತ್ರವೇ ಇದುವರೆಗೆ ಹೆಚ್ಚಿನ ಸಂಶೋದನೆಗಳು ನಡೆದಿವೆ.
ಉಳಿದ ಬೇರುಗಳ, ಅದರಲ್ಲೂ ಸಂಶೋದನೆ
ನಾಮಬೇರುಗಳ ಬಳಕೆಯ ವಿಶಯದಲ್ಲಿ ಹೆಚ್ಚಿನ ನಡೆಯದಿರುವುದಕ್ಕೆ ಅಂತಹ ಸಂಶೋದನೆಗೆ ಇವತ್ತಿನ ದ್ರಾವಿಡ ನುಡಿಗಳ ಸಹಾಯ ಸಿಗದಿರುವುದೇ ಕಾರಣವಿರಬೇಕು (9.2.1 ನೋಡಿ). ಈ ಮೂರು ರೀತಿಯ ಬೇರುಗಳ ಮೂಲಕ ನಾಮಪದಗಳನ್ನು ರಚಿಸುವ ವಿದಾನವೆಂತಹದು ಎಂಬುದನ್ನು ಕೆಳಗೆ ವಿವರಿಸಲಾಗಿದೆ.
ಕ್ರಿಯಾಬೇರು
ನಾಮಬೇರುಗಳೆಲ್ಲ,
9.2.1 ನಾಮಬೇರುಗಳಿಂದ ನಾಮಪದಗಳು
ಮೂಲದ್ರಾವಿಡದ ಮತ್ತು ಗುಣಬೇರುಗಳ ಹಾಗೆ, ಒಂದು ಉಲಿಕಂತೆಯವುಗಳಾಗಿದ್ದಿರಬೇಕೆಂಬುದು ಇವತ್ತಿನ ಕಲ್ಪನೆಯಾಗಿದೆ. ಆದರೆ, ಸದ್ಯಕ್ಕೆ ಇದು ಬರಿಯ ಕಲ್ಪನೆ ಮಾತ್ರ. ಯಾಕೆಂದರೆ, ಒಂದಕ್ಕಿಂತ ಜಾಸ್ತಿ ಉಲಿಕಂತೆಯಿರುವ ಹಂದಿ, ಉಗುರು, ಹೊಗೆ, ನೂರಾರು ನಾಮಪದಗಳಲ್ಲಿ ಬೇರನ್ನು ಒಟ್ಟಿನಿಂದ ಪ್ರತ್ಯೇಕಿಸಲು ಇವತ್ತಿನ ದ್ರಾವಿಡ ನುಡಿಗಳು ಸಹಾಯಕವಾಗುವುದಿಲ್ಲ.
ಕಣಜ, ಗಿಡುಗ
ಮೊದಲಾದ
ಕಾಳಗ,
ಉದಾಹರಣೆಗಾಗಿ, ಕನ್ನಡದ ಹಂದಿ ಪದಕ್ಕೆ ಮೂಲದ್ರಾವಿಡದಲ್ಲಿ ಎಂತಹ ಬೇರು ಮತ್ತು ಒಟ್ಟುಗಳ ಸೇರಿಕೆ ಕಾರಣವಾಗಿರಬಹುದೆಂಬುದನ್ನು ಕಲ್ಪಿಸಿಕೊಳ್ಳುವುದು ಸುಲಬವಲ್ಲ. ಈ ಪದ ಮೂಲದ್ರಾವಿಡದಲ್ಲಿ *ಪನ್ಱಿ ಎಂಬ ರೂಪದಲ್ಲಿದ್ದಿರಬಹುದೆಂದು ಹೇಳಬಹುದೇನೋ ನಿಜ; ಆದರೆ ಅದರಲ್ಲಿ ಬಂದಿರುವ ಒಟ್ಟು ಇ ಎಂಬುದೇ ಇಲ್ಲವೇ ಱಿ ಎಂಬುದೇ
ಎಂಬುದನ್ನು ತಿಳಿಯಲು ಇವತ್ತಿನ ದ್ರಾವಿಡ ನುಡಿಗಳಲ್ಲಿ ಆದಾರ ಸಿಗುವುದಿಲ್ಲ.
ಹಾಗಾಗಿ, ಈ ವಿಶಯದಲ್ಲಿ ಹೆಚ್ಚಿನ ಸಂಶೋದನೆ ನಡೆದು, ಮೂಲ ದ್ರಾವಿಡದ ನಾಮಪದಗಳಲ್ಲಿ ಬರಬಲ್ಲ ನಾಮಬೇರುಗಳ ಮತ್ತು ಅವುಗ ಳೊಂದಿಗೆ ಬರಬಲ್ಲ ಒಟ್ಟುಗಳ ಸ್ವಶ್ಟವಾದ ಚಿತ್ರಣ ಸಿಗುವವರೆಗೂ ಮೂಲ ದ್ರಾವಿಡದ ನಾಮಬೇರುಗಳೆಲ್ಲ ನಮ್ಮ ಆಶಯವಶ್ಟೇ ಅಲ್ಲದೆ ಉಲಿಕಂತೆಯವಾಗಿದ್ದಿರಬೇಕೆಂಬುದು ತಿಳುವಳಿಕೆಯಾಗಲಾರದು.
ಇದೇ ಕಾರಣಕ್ಕಾಗಿ, ಕ್ರಿಯಾಬೇರು ಇಲ್ಲವೇ ಗುಣಬೇರುಗಳಿಂದ ಪಡೆ ಯಲು ಸಾದ್ಯವಿಲ್ಲದಂತಹ ಉಗುರು, ಹೊಗೆ, ಕಾಳಗ, ಕಣಜ ಮೊದಲಾದ ನೂರಾರು ನಾಮಪದಗಳ ಒಳರಚನೆಯಲ್ಲಿ ಎಂತಹ ನಾಮಬೇರು ಮತ್ತು ಒಟ್ಟುಗಳ ಬಳಕೆಯಾಗಿದೆ ಮತ್ತು ಅವು ಕನ್ನಡದ ಚರಿತ್ರೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ವಿವರಿಸಲು ಸದ್ಯಕ್ಕಂತೂ ನಮಗೆ ಸಾದ್ಯವಾಗದು.
ಕನ್ನಡದಲ್ಲೇನೇ ಬಳಕೆಯಾಗುವ ನಾಮಪದಗಳನ್ನು ಹೋಲಿಸಿ ನೋಡಿ ದಾಗ ಇಲ್ಲವೇ ಅವನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳ ಒಳರಚನೆಯಲ್ಲಿ ಕೆಳಗೆ ಸೂಚಿಸಿದಂತಹ ಕೆಲವು ಒಟ್ಟುಗಳು ಬಳಕೆಯಾಗಿರುವುದನ್ನು ಊಹಿಸಿಕೊಳ್ಳಲು ಸಾದ್ಯವಿದೆ. ಆದರೆ, ಇವುಗಳಲ್ಲಿ ಯಾವ ಒಟ್ಟುಗಳನ್ನು ಮೂಲದ್ರಾವಿಡಕ್ಕೂ ಸಾದ್ಯ ಎಂಬುದನ್ನು ತಿಳಿಯಲು ಹೆಚ್ಚಿನ ಸಂಶೋದನೆ ನಡೆಸುವ ಅವಶ್ಯಕತೆಯಿದೆ.
ಕಲ್ಪಿಸಿಕೊಳ್ಳಲು
(1) ಅ ಒಟ್ಟು: ಕೆಳಗಿನ ಪದಗಳಲ್ಲಿ ಈ ಒಟ್ಟಿಗೆ ‘ಸಂಬಂದಿಸಿರುವ
ವ್ಯಕ್ತಿ’ ಎಂಬ ಅರ್ತವಿದೆ.
ಎಗ್ಗು ‘ನಾಚುಗೆ’
ಕಾದಲ್
ಎಗ್ಗ ‘ಹೆಡ್ಡ’ ಕಾಟ ‘ಕಾಡಿನವನು’
ಕೆಪ್ಪು ‘ಕಿವುಡು’
ತುಡುಗು ‘ಕಳ್ಳತನ’ ಬಿರುದು
ಅಡಿ ‘ಕಾಲಿನ ಅಡಿ’
ಕೆಪ್ಪ ‘ಕಿವುಡ’ ತುಡುಗ ‘ಕಳ್ಳ’ ಬಿರುದ ‘ಬಿರುದುಳ್ಳವ’ ಅಡಿಯ ‘ಸೇವಕ’
ಆದರೆ ಕೊಂಡೆ : ಕೊಂಡೆಯ ‘ಚಾಡಿ’, ಇಂಬು ‘ಉಳಿಯುವ ಜಾಗ’: ಇಂಬ ‘ಅಗಲ’, ನೀರ್ ‘ನೀರ’ : ಈರ ‘ತೇವ’ ಮೊದಲಾದ ಬೇರೆ ಕೆಲವು ಪದಗಳಲ್ಲಿ ಈ ಒಟ್ಟಿಗೆ ಮೇಲಿನ ಅರ್ತವಿಲ್ಲ.
(2) ಇ ಒಟ್ಟು: ಕೆಲವು ಪದಗಳಲ್ಲಿ ಇದು ಅ ಒಟ್ಟಿಗೆ ಬದಲಾಗಿ ಬರುತ್ತಿದ್ದು, ಸೂಚಿಸಬಲ್ಲುದು. ಇವುಗಳಲ್ಲಿ ಕೆಲವಕ್ಕೆ ಉ ಒಟ್ಟಿನಲ್ಲಿ ಕೊನೆಗೊಳ್ಳುವ ಗುಣಪದವನ್ನೂ ಕೊಡಲು ಸಾದ್ಯವಿದೆ.
ಗಂಡು-ಹೆಣ್ಣು ಅರ್ತಬೇದವನ್ನು
ನಾಮಪದ
ಗುಣಪದ
ಕುರುಡ
ಕುಳ್ಳ ಕಿವುಡ
ಮರುಳ
ಹುಚ್ಚ
ಹೆಡ್ಡ
ಹೆಣ್ಣು
ಕುರುಡಿ
ಕುಳ್ಳಿ ಮರುಳಿ
ಹುಚ್ಚಿ
ಕುರುಡು ಕುಳ್ಳು ಕಿವುಡು ಅರಸು(ತನ) ಮರುಳು ಹುಚ್ಚು ಹೆಡ್ಡು
ಆದರೆ, ಮುದುಕ-ಮುದುಕಿ, ಅಜ್ಜ-ಅಜ್ಜಿ ಮೊದಲಾದ ಬೇರೆ ಕೊನೆಗೊಳ್ಳುವ
ಪದಗಳಿಗೆ ಇಂತಹ ಉ ಒಟ್ಟಿನಲ್ಲಿ
ಕೆಲವು
ಬೆಡಗು-ಬೆಡಗಿ, ಬಸಿಱು-ಬಸಿಱಿ ಗುಣಪದಗಳಿಲ್ಲ. ಇದಲ್ಲದೆ ಮೊದಲಾದ ಬೇರೆ ಕೆಲವು ಪದಗಳಿಗೆ ಅ ಒಟ್ಟಿನಲ್ಲಿ ಕೊನೆಗೊಳ್ಳುವ ಗಂಡುಸನ್ನು ಸೂಚಿಸುವ ಪದವೂ ಇಲ್ಲ.
ಕೆಳಗೆ ಕೊಟ್ಟಿರುವ ಬೇರೆ ಕೆಲವು ಪದಗಳಲ್ಲಿ ಇ ಒಟ್ಟಿಗೆ ಬೇರೆಯೇ
ಅರ್ತಗಳಿವೆ.
ಸೂಡು ‘ಹುಲ್ಲಿನ ಕಟ್ಟು’ ಸೂಡಿ ‘ಹುಲ್ಲಿನ ಚಿಕ್ಕ ಕಟ್ಟು’’ ನಾರ್ ‘ನಾರು’’
ಪುರುಳ್ ‘ಯೋಗ್ಯತೆ’’ ಪುರುಳಿ ‘ಯೋಗ್ಯ ವ್ಯಕ್ತಿ’’
ನಾರಿ ‘ಬಿಲ್ಲಿನ ಹಗ್ಗ’’
ತಮಿಳು
ಕೂನ್ ‘‘ಕಡಾಯಿ’
ಕನ್ನಡ ಕೂನಿ ‘ಮಣ್ಣಿನ ಪಾತ್ರೆ’
(3) ಎ ಒಟ್ಟು: ಕಾದಲ-ಕಾದಲೆ ಪದಗಳಲ್ಲಿ ಇದಕ್ಕೆ ‘ಹೆಂಗಸು’’ ಎಂಬ ಅರ್ತವಿದೆಯಾದರೂ, ಕೆಳಗೆ ಕೊಟ್ಟಿರುವ ಬೇರೆ ಹಲವು ಪದಗಳಲ್ಲಿ ಬೇರೆಯೇ ಅರ್ತವಿದೆ.
ನಾಳ್ ‘ದಿನ’’
ಗುಡ್ಡ
ಕೊಂಬು (ದನದ್ದು)
ಪುಲ್ ‘ಹುಲ್ಲು’’
ಕುಂಡ ‘ಗುಂಡಿ’
ಕೊಪ್ಪ ‘ಚಿಕ್ಕ ಹಳ್ಳಿ’
ನಾಳೆ ‘ಮರುದಿನ’ ಗುಡ್ಡೆ ‘ರಾಶಿ’ ಕೊಂಬೆ (ಮರದ್ದು) ಪುಲ್ಲೆ ‘ಜಿಂಕೆ’’ ಕುಂಟೆ ‘ಗುಂಡಿ’’ ಕೊಂಪೆ ‘ಚಿಕ್ಕ ಹಳ್ಳಿ’’
ನಾಮಪದಗಳನ್ನು ತಯಾರಿಸುವುದಕ್ಕಾಗಿ ಈ ಒಟ್ಟು ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿದೆ (9.3 ನೋಡಿ). ಆದರೆ, ನಾಮಬೇರು ಇಲ್ಲವೇ ನಾಮಪದಗಳಿಂದಲೂ ಬೇರೆ
ಕ್ರಿಯಾಬೇರುಗಳಿಂದ
ನಾಮಪದಗಳನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.
ರಚಿಸಲು ಅದರ ಬಳಕೆಯಾಗುತ್ತದೆಯುಂಬುದನ್ನು
ಪುಡಿಕೆ ‘ಬುಟ್ಟಿ’ ಗಣಿಕೆ ‘ಗಂಟು’
ಪುಟ್ಟಿ ‘ಬುಟ್ಟಿ’
ಕಣ್ ‘ಕಬ್ಬಿನ ಗಂಟು’ ಕಂಡು ‘ನೂಲಿನ ಉಂಡೆ’ ಕಂಡಿಕೆ ‘ನೂಲಿನ ಉಂಡೆ’’ ಕುಡಿಕೆ ‘ಮೊಸರ ಕುಡಿಕೆ’’ ಕೊಡ ‘ನೀರಿನ ಕೊಡ’ ತಡಿಕೆ ‘ತಟ್ಟಿ’’ ತಟ್ಟಿ ‘ಬಿದಿರ ಚಾಪೆ’’ ಹೊರಿಕೆ ‘ನೀರುಳ್ಳಿಯ ಸಿಪ್ಪೆ’’ ಪೊರೆ ‘ಪೊದರು’
ಹಲಿಕೆ ‘ಹಲ್ಲಿರುವ ಸಾದನ’’ ಪಲ್ ‘ಹಲ್ಲು’’
(5) ಗ ಒಟ್ಟು: ಕನ್ನಡದಲ್ಲಿ ಇದಕ್ಕೆ ಒಂದು ವಸ್ತು ಇಲ್ಲವೇ ವಿಶಯಕ್ಕೆ ಸಂಬಂದಿಸಿದವನು ಇಲ್ಲವೇ ಒಂದು ವಸ್ತುವನ್ನು ಬಳಸುವವನು ಎಂಬ ಅರ್ತವಿದೆ.
ಅಂಬಿ ‘ದೋಣಿ’’ ಪೇ ‘ಹುಚ್ಚು’’
ಬೇರು ‘ಮರದ ಬೇರು’’ ಬೇರುಗ ‘ಬೇರು ಮಾರುವವನು’
ಅಂಬಿಗ ‘ದೋಣಿ ನಡೆಸುವವನು’ ಈಡಿಗ ‘ಹೆಂಡ ಮಾಡುವವನು’’ ಹೇಗ ‘ಹುಚ್ಚ’
ಕೆಳಗಿನ ಉದಾಹರಣೆಗಳಲ್ಲಿ ಈ ಒಟ್ಟಿನೊಂದಿಗೆ ಇ ಒಟ್ಟೂ ಸೇರಿರುವ
ಇಗ ಎಂಬುದು ಬಂದಿದೆ.
ಗಾಣ ‘ಎಣ್ಣೆಯ ಗಾಣ’’ ಗಾಣಿಗ ‘ಗಾಣದವನು’’ ಹೆಣ್ಣು ‘ಹೆಂಗಸು’’ ಬೇಂಟೆ ‘ಬೇಟೆ’
ಸಾಲ ‘ಕಡ’’
ಹೆಣ್ಣಿಗ ‘ಪುಕ್ಕ’ ಬೇಂಟಿಗ ‘ಬೇಟೆಗಾರ’ ಸಾಲಿಗ ‘ಸಾಲ ಕೊಟ್ಟವನು’
ದಾರಿ ‘ಮಾರ್ಗ’’
ದಾರಿಗ ‘ಪ್ರಯಾಣಿಕ’
ಆದರೆ, ಕನ್ನಡದ ಗಿಡುಗ ‘ಹದ್ದು’ (ತುಳು: ಗಿಡಿ) ಕೊಳಗ ‘ಗೊರಸು’ (ತಮಿಳು: ಕುಳಂಪು) ಮತ್ತು ಕೊಂಡೆ, ಕೊಂಡೆಗ ‘ಚಾಡಿ’ ಪದಗಳಲ್ಲಿ ಈ ಒಟ್ಟಿಗೆ ಮೇಲಿನ ಅರ್ತವಿಲ್ಲ.
(5) ಗೆ ಒಟ್ಟು: ಇದು ಮೂಲದ್ರಾವಿಡದ *ಕಯ್ ಒಟ್ಟಿನಿಂದ ಬಂದಿರ ಬೇಕು. ಕೆಲವು ಪದಗಳಲ್ಲಿ ಇದು ಇ ಒಟ್ಟಿನೊಂದಿಗೆ ಬರುತ್ತದೆ. ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವಲ್ಲೂ ಈ ಒಟ್ಟಿನ ಬಳಕೆಯಾಗುತ್ತದೆ (9.3 ನೋಡಿ).
ಚಟ್ಟಿ ‘ಮಣ್ಣಿನ ಪಾತ್ರೆ’’ ಚಟ್ಟಿಗೆ ‘ಚಿಕ್ಕ ಚಟ್ಟಿ’ ಸದೆ ‘ಕಸ’ ನಿಱಿ ‘ನೆರಿಗೆ’
ಸೆದಗೆ ‘ಕಸ’ ನಿಱಿಗೆ ‘ನೆರಿಗೆ’
ಕುಂಡ ‘ತಗ್ಗು’’
ಚೆಂಬು ‘ತಾರ್ಮ’
ಮಾಳ ‘ಮೇಲ್ಮನೆ’’
ಗುಂಡಿಗೆ ‘ಎದೆಯ ತಗ್ಗು’ ತಂಬಿಗೆ ‘ತಾರ್ಮದ ಪಾತ್ರೆ’’ ಮಾಳಿಗೆ ‘ಮಾಳ’
ಕನ್ನಡದ ಕೆಳಗಿನ ಪದಗಳಲ್ಲೂ ಈ ಒಟ್ಟು ಬಂದಿದೆಯುಂಬುದನ್ನು
ತಮಿಳಿನ ಪದಗಳು ಸೂಚಿಸುತ್ತವೆ.
ಕೂನ್
ತಮಿಳು
ಕನ್ನಡ
ಗೂಗೆ ‘ಗೂಗೆ ಹಕ್ಕಿ’’ ಕೇದಿಗೆ ‘ಕೇದಿಗೆ ಹೂ’’ ಕಯ್ತಯ್ ಕೊಟ್ಟಿಗೆ ‘ಹಟ್ಟಿ’
ಕೊಟ್ಟಮ್ ಸುತ್ತಿಗೆ ‘ಕೊಡತಿ’ ಸುತ್ತಿ
ನಾಲಿಗೆ
ನಾ, ನಾಕ್ಕು
(6) ಪು ಒಟ್ಟು: ಕ್ರಿಯಾಬೇರು ಮತ್ತು ಗುಣಬೇರುಗಳಿಂದ ನಾಮಪದ
ಗಳನ್ನು ಪಡೆಯುವಲ್ಲೂ ಈ ಒಟ್ಟಿನ ಬಳಕೆಯಾಗುತ್ತದೆ.
ಕೆರ ‘ಎಕ್ಕಡ’’
ಗುಂಡಿ ‘ತಗ್ಗು’’
ನಂಟು ‘ಸಂಬಂದ’’
ಕೆರ್ಪು ‘ಎಕ್ಕಡ’ ಕೆಪ್ಪು ‘ಕಿವುಡು’ ಗುಣ್ಪು ‘ಆಳ’ ನಣ್ಪು ‘ಗೆಳೆತನ’
ಕೆರವು ‘ಎಕ್ಕಡ’, ಕೆಸು, ಕೆಸವು ‘ಕೆಸುವಿನ ಸೊಪ್ಪು’, ತಿರು, ತಿರುವು ‘ಬಿಲ್ಲಿನ ಹೆದೆ’, ಎಲು, ಎಲುವು ‘ಎಲುಬು’, ಮಡು, ಮಡುವು ‘ಕೊಳ’ ಪದಗಳಲ್ಲಿ ಈ ಒಟ್ಟು ವು ರೂಪದಲ್ಲಿದೆ.
(7) ಮೆ ಒಟ್ಟು: ಕೆಲವು ಪದಗಳಲ್ಲಿ ಇದಕ್ಕೆ ವೆ ರೂಪ ಬಂದಿದೆ.
(ಕ) ಅಡಿ ‘ಕಾಲಿನ ಅಡಿ’’ ಅಡಿಮೆ ‘ಕೀಳ್ಮೆ’’ ಕಾದಲ್ಮೆ ‘ನಲ್ಮೆ’’
ಕಾದಲ್ ‘ನಲ್ಮೆ’
ಕಾಲು ‘ಕಾಲುವೆ’’ ಪಲ್ ‘ಹಲ್ಲು’
ಮದ ‘ಮದುವೆ’
ಕಾಲುವೆ ಹಲಿವೆ ಮದುವೆ
ಕನ್ನಡ ನುಡಿಯ ಕುಲುಮೆ (ತಮಿಳು: ಕೊಲ್ ‘ಕಮ್ಮಾರ’), ಒಡವೆ (ತಮಿಳು: ಉಟಯ್ ‘ಸಂಪತ್ತು’) ಮತ್ತು ಇರುವೆ (ಹವ್ಯಕ: ಎರುಗು) ಪದಗಳಲ್ಲೂ ಮೆ ಇಲ್ಲವೇ ವೆ ಒಟ್ಟಿನ ಬಳಕೆಯನ್ನು ಕಾಣಬಹುದು.
(8) ಲ್ ಒಟ್ಟು: ಇದು
ನಾಮಪದದೊಂದಿಗೆ ಬಂದಿರಬಹುದು ಇಲ್ಲವೇ ಅ ಒಟ್ಟಿನೊಂದಿಗೆ ಸೇರಿ ಬಂದಿರಬಹುದು. ಕೆಳಗಿನ ಪದಗಳಲ್ಲಿ ಇದರೊಂದಿಗೆ ಉಚ್ಚಾರಣೆಯ ಉಕಾರ ಸೇರಿದೆ.
ನೇರವಾಗಿ
ಕುಡಿ ‘ತುದಿ’’
ಮಟ್ಟಿ ‘ತೆಂಗಿನ ಗರಿ’’ ಮಣ್ಣು
ಮದ ‘ಮದುವೆ’
ವಂಡು ‘ಕೆಸರು’
ಕಣ್ ‘ಬಿದಿರಿನ ಗಂಟು’ ಕುಂಚ ‘ಕುಚ್ಚು’
ಪುಕ್ಕು ‘ಅಳುಕು’
ಸೊಪ್ಪು ‘ಸಪ್ಪು’’ ದೊದ್ದೆ ‘ಉಗ್ಗು’
ಕುಡಿಲು ‘ಮೊಳಕೆ’ ಮಡಲು ಮಣಲು ‘ಮರಳು’ ಮದಲ್ ‘ಮದುವೆ’’ ಬಂಡಲು ‘ಕೆಸರು’ ಕಣಲು ‘ಗಂಟು’ ಗೊಂಚಲು ಪುಕ್ಕಲು ‘ಅಳುಕು’’ ತೊಪ್ಪಲು ‘ಸಪ್ಪು’ ತೊದಲು
ಕೆಳಗೆ ಕೊಟ್ಟಿರುವ ಪದಗಳಲ್ಲೂ ಈ ಒಟ್ಟು ಬಂದಿದೆಯುಂಬುದನ್ನು
ತಮಿಳು (ಮತ್ತು ತೆಲುಗು) ಪದಗಳು ಸೂಚಿಸುತ್ತವೆ.
ತಮಿಳು
ಕನ್ನಡ
ಒಡಲು ‘ಮೆಯ್’’ ಉಟಮ್ಪು ಎಚ್ಚಮ್ ಇದ್ದಲು
ತುಣ್ಡಮ್ ಸೊಂಡಿಲು ತದಲು ‘ಮುಳ್ಳುಪಡಿ’ ತೆಱ್ಱು ಮೀಸಲು ‘ತೆಗೆದಿರಿಸಿದ್ದು’ ಮಿಚಯ್ ಮೂಡಲ್ ‘ಬೆರಣಿ’ ಮುಟ್ಟಯ್ ವೀೞ್ ಬೀಳಲು ತೆಲುಗು: ಚೆದ ಇದ್ದಲು
(9) ಸು ಒಟ್ಟು: ಕೆಳಗಿನ ಕನ್ನಡ ಪದಗಳಲ್ಲಿ ಈ ಒಟ್ಟು ಬಂದಿದೆ ಎಂಬುದನ್ನು ಅವುಗಳ ಎದುರು ಕೊಟ್ಟಿರುವ ತಮಿಳು ಪದಗಳಿಂದ ತಿಳಿಯ ಬಹುದು.
ತಮಿಳು ಕನಾ, ಕನಾವು
ಕನ್ನಡ
ಕನಸು
ಕಡಸು ‘ಎಳೆಯ ದನ’’ ಕಟವು ಪೊಱಸು ‘ಪಾರಿವಾಳ’’ ಪುಱ ಮಾಸು ‘ಗರ್ಬಾಶಯ’’ ಮಾ ಗೆಣಸು
9.2.2 ಕ್ರಿಯಾಬೇರುಗಳಿಂದ ನಾಮಪದಗಳು
ಮೂಲದ್ರಾವಿಡ ಕ್ರಿಯಾಬೇರುಗಳಿಂದ ನಾಮಪದಗಳನ್ನು ಪಡೆಯುವುದಕ್ಕಾಗಿ ಹಲವು ಒಟ್ಟುಗಳು ಬಳಕೆಯಲ್ಲಿದ್ದಿರಬೇಕು. ಅವುಗಳಲ್ಲಿ ಕೆಲವನ್ನು ಕನ್ನಡ ದಲ್ಲೂ ಕಾಣಬಹುದು.
ಮೂಲದ್ರಾವಿಡದ ಈ ಒಟ್ಟುಗಳಲ್ಲಿ ಕನ್ನಡ ಹಲವಾರು ಬದಲಾವಣೆ ಗಳನ್ನು ಮಾಡಿಕೊಂಡಿದೆ ಮಾತ್ರವಲ್ಲ, ಅವುಗಳಲ್ಲಿ ಕೆಲವು ಒಟ್ಟುಗಳ ಬಳಕೆಯನ್ನು ಬಹಳಶ್ಟು ಹೆಚ್ಚಿಸಿಕೊಂಡಿದೆ.
ಮತ್ತು ಉ
ಕ್ರಿಯಾಬೇರುಗಳು ವ್ಯಂಜನದಲ್ಲಿ ಕೊನೆಗೊಳ್ಳುವುವಾಗಿದ್ದರೆ, ಅವುಗಳ ಅನಂತರ ಅ, ಇ ಸ್ವರದೊಟ್ಟುಗಳನ್ನು ಬಳಸಿ ನಾಮಪದಗಳನ್ನು ಪಡೆಯಲು ಸಾದ್ಯವಿತ್ತು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳಲ್ಲಿ ಈ ಮೂರು ಸ್ವರಗಳು ಒಟ್ಟುಗಳಾಗಿ ಬಂದಿರುವುದನ್ನು ಕಾಣಬಹುದು.
ಕ್ರಿಯಾಬೇರು ಕಲ್ ‘ಕಲಿ’’
ನಾಮಪದ ಕಲಿ ‘ಕಲಿತವನು’
ಕಣಿ ‘ನೋಟ’ ಕುಲಿ ‘ಕೊಲೆಗಾರ’
ಆಡು ‘ಆಟವಾಡು’ ಕಾಣ್ ‘ಕಾಣು’
ಕೊಲ್ ‘ಕೊಲ್ಲು’
ಕಾಯ್ ‘ಕಾಯಿ ಬಿಡು’ ಕಾಯಿ ‘ಕಾಯಿ’ ಕೊಱ್ ‘ತುಂಡುಮಾಡು’’ಕೊಱಿ ‘ತುಂಡು ಗೆಲ್ಲು’
ನಾಮಪದ
ಕ್ರಿಯಾಬೇರು ನೂಲ್ ‘ನೂಲು ಮಾಡು’ ನೂಲು ‘ನೂಲು’ ಅಱು ‘ಒಣಗುವಿಕೆ’ ಆಱ್ ‘ಒಣಗು’
ಒರೆ ‘ಸದ್ದು ಮಾಡು’ ಉರು ‘ಸದ್ದು’ ಕಿಟ್ಟು ‘ಮುಟ್ಟು’
ಇೞಿ ‘ಇಳಿಯು’
ಕಿಡು ‘ಮುಟ್ಟುವಿಕೆ’ ಇೞು ‘ಇಳಿಯುವಿಕೆ’
ಕ್ರಿಯಾಬೇರು ಗೆಲ್ ‘ಗೆಲ್ಲು’’
ಇೞ್ ‘ಎಳೆ’ ಒಡ್ಡು ‘ರಾಶಿಹಾಕು’ ಎತ್ತು ‘ಮೇಲೆತ್ತು’
ನಾಮಪದ ಗೆಲ ‘ಗೆಲುವು’’ ಇೞ ‘ಎಳೆಯುವಿಕೆ’ ಒಡ್ಡ ‘ರಾಶಿ’ ಎತ್ತ ‘ಎತ್ತುವಿಕೆ’
ಉರುಳಿ ‘ಉರುಟಾದ ಪಾತ್ರೆ’, ಎಚ್ಚಱ ‘ಎಚ್ಚರ’ ಮೊದಲಾದ ನಾಮ ಪದಗಳಲ್ಲಿ ಈ ಒಟ್ಟುಗಳನ್ನು ನೇರವಾಗಿ ಕ್ರಿಯಾಬೇರುಗಳಿಗೆ ಸೇರಿಸುವ ಬದಲು, ಅಂತಹ ಕ್ರಿಯಾಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ರಚಿಸಿರುವ ಉರುಳು ‘ಉರುಳು’, ಎಚ್ಚಱ್ ‘ನಿದ್ದೆತಿಳಿ’’ಎಂಬಂತಹ ಕ್ರಿಯಾಪದಗಳಿಗೆ ಸೇರಿಸಿ ನಾಮಪದಗಳನ್ನು ತಯಾರಿಸಲಾಗಿದೆ.
(4) *ಅಯ್ ಒಟ್ಟು: ಕನ್ನಡ ಪದಗಳಲ್ಲಿ ಎಕಾರವೂ ಒಟ್ಟಿನ ಜಾಗದಲ್ಲಿ ಬರಬಲ್ಲುದು; ಆದರೆ, ಇದು ಮೂಲದ್ರಾವಿಡದ *ಅಯ್ ಒಟ್ಟಿನಿಂದ ಬಂದಿದೆ.
ಕ್ರಿಯಾಬೇರು
ನಗು ಕೊಲ್ ‘ಕೊಲ್ಲು’’ ಕಟ್ಟು ‘ಗಟ್ಟಿಯಾಗು’ ಕಿಱ್ ‘ಮುಚ್ಚು’ ಕಿಟ್ಟು ‘ಮುಟ್ಟು’ ಕೆತ್ತು
ನಾಮಪದ ಕಟ್ಟೆ ‘ಕಟ್ಟಿದ ಕಟ್ಟೆ’ ಕೊಲೆ ‘ಕೊಲ್ಲುವಿಕೆ’ ಕೆಱ ‘ನೀರಿನ ಕೆರೆ’ ಗೆಡೆ ‘ಮುಟ್ಟುವಿಕೆ’ ಕೆತ್ತೆ ‘ಚಕ್ಕೆ’’
ತಮಿಳು
ಕಟ್ಟಯ್ ನಕಯ್ ಕೊಲಯ್ — — —
ಮೂಲದ್ರಾವಿಡದಲ್ಲಿ ಇದ್ದಿರಬಹುದಾದ ಬೇರೆ ಕೆಲವು ಒಟ್ಟುಗಳನ್ನು ಕೆಳಗೆ ಕೊಟ್ಟಿರುವ ಕನ್ನಡದ ನಾಮಪದಗಳಲ್ಲಿ ಕಾಣಬಹುದು.
ರಕಾರದ ಅನಂತರ
(5) *ಕಯ್ ಒಟ್ಟು: ಕನ್ನಡದಲ್ಲಿ ಇದಕ್ಕೆ ಗೆ ಎಂಬ ರೂಪವಿದೆ; ರೂಪವಿದೆ. ಬೇರುಗಳೊಂದಿಗೆ ಉದ್ದವಾಗಿರುವ ಪಡೆದು ಮಾತ್ರವಲ್ಲದೆ ಕ್ರಿಯಾಪದಗಳೊಂದಿಗೂ ಈ ಒಟ್ಟು ಬರಬಲ್ಲುದು.
ಒಟ್ಟುಗಳನ್ನು
ಕ್ರಿಯಾಪದ ಅಪ್ಪು
ಕೊಡು
ನಾಮಪದ ಅಪ್ಪುಗೆ ಅದ್ದುಗೆ ‘ಮುಳುಗುವಿಕೆ’’ ಇಡುಗೆ ‘ಇಡುವಿಕೆ’’ ಕೊಡುಗೆ
ಗೆಲುಗೆ
ಸಾರ್ಕೆ ‘ಸಮೀಪಿಸುವಿಕೆ’’ ಸಾರ್ ‘ಬಳಿಗೆ ಬರು’ ಅಳುರ್ ‘ಮುಚ್ಚು’ ಅಳುರ್ಕೆ ‘ಮುಚ್ಚುವಿಕೆ’ ಅಮರ್ ‘ಒತ್ತಾಗಿ ಸೇರು’ ಅಮರ್ಕೆ ‘ಅಮರುವಿಕೆ’
ಇರ್ಕೆ, ಇಕ್ಕೆ ‘ನೆಲೆ’
ಕನ್ನಡದ ಅಱಿಕೆ ‘ತಿಳಿವು’ (ಅಱಿ ‘ತಿಳಿ’), ಉೞಿಕೆ ‘ಉಳಿದುದು’ (ಉೞಿ ‘ಉಳಿ’) ಮೊದಲಾದ ಬೇರೆ ಕೆಲವು ನಾಮಪದಗಳಲ್ಲಿ ಮೂಲ ದ್ರಾವಿಡದ *(ಇ)ಕ್ಕಯ್ ಒಟ್ಟು ಬಂದಿರುವ ಹಾಗೆ ಕಾಣಿಸುತ್ತದೆ.
ಕನ್ನಡದ ಚರಿತ್ರೆಯಲ್ಲಿ ಈ ಒಟ್ಟಿನ ಬಳಕೆ ಬಹಳಶ್ಟು ಹೆಚ್ಚಿದೆ. ಇದಲ್ಲದೆ, ಹೊಸಗನ್ನಡದಲ್ಲಿ ಇಕೆ ಎಂಬ ರೂಪದಲ್ಲಿರುವ ಪದರೂಪ ಯಾವ ಒಟ್ಟೊಂದು ಬಳಕೆಗೆ ಬಂದಿದ್ದು, ಅದರ ಕ್ರಿಯಾಪದದಿಂದ ಬೇಕಿದ್ದರೂ ನಾಮರೂಪಗಳನ್ನು ಪಡೆಯಲು ಸಾದ್ಯವಿದೆ (ಬಟ್ 2002:96 ನೋಡಿ).
ಮೂಲಕ
ಕ್ರಿಯಾಪದ ಕೊಡು
ತಿನ್ನು
ಹೊರಡು
ನಾಮರೂಪ ಇರುವಿಕೆ ಇಳಿಯುವಿಕೆ ಬರೆಯುವಿಕೆ ಕೊಡುವಿಕೆ ತಿನ್ನುವಿಕೆ ಆಡುವಿಕೆ ಹೊರಡುವಿಕೆ
(6) *ಅಮ್ ಒಟ್ಟು: ಕನ್ನಡದಲ್ಲಿ ಇದು ಅ ಎಂಬ ರೂಪದಲ್ಲಿದೆ; ಇದರ ಕೊನೆಯಲ್ಲಿ ಒಂದು ಮಕಾರ ಇದ್ದಿರಬೇಕೆಂಬುದನ್ನು ಕೆಳಗೆ ಕೊಟ್ಟಿರುವ ತಮಿಳು ಪದಗಳು ಸೂಚಿಸುತ್ತವೆ. ಈ ಒಟ್ಟು ಸೇರಿದಾಗ,
ಬೇರುಗಳ ಕೊನೆಯ ಒತ್ತೆ ತಡೆಯುಲಿ ಇಮ್ಮಡಿ ತಡೆಯುಲಿಯಾಗುತ್ತದೆ ಮತ್ತು ಕನ್ನಡದಲ್ಲಿ ಈ ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಕಾಣಿಸಿಕೊಳ್ಳುತ್ತದೆ.
ನಾಮಪದ
ಕ್ರಿಯಾಪದ ಆೞ್ ‘ಮುಳುಗು’ ಆೞ ‘ಕೆರೆಯ ಆಳ’
ನಿಲ್ ‘ನಿಲ್ಲು’ ಅಡಕು ಒತ್ತಿಹಿಡಿ’ ಅಡಕ ‘ಒತ್ತುವಿಕೆ’ ನಡುಗು
ಓತ ’ಓದುವಿಕೆ’ ನಡುಕ
ತಮಿಳು
ಆೞಮ್ ನಿಲಮ್ ಅಟಕ್ಕಮ್ ಆಟ್ಟಮ್ ಓಟ್ಟಮ್ ನಟುಕ್ಕಮ್
(7) *ಅಲ್ ಒಟ್ಟು: ಹೊಸಗನ್ನಡದಲ್ಲಿ ಇದು ಉಚ್ಚಾರಣೆಗಾಗಿ ಬಂದ
ಉಕಾರ ಸೇರಿದುದರಿಂದಾಗಿ ಅಲು ಎಂಬ ರೂಪದಲ್ಲಿದೆ.
ಕ್ರಿಯಾಪದ ಊದು ‘ಉಬ್ಬು’
ಒಕ್ಕು ‘ಕಾಳನ್ನು ಬೇಪ್ರಡಿಸು’ ಒಟ್ಟು ‘ರಾಶಿಮಾಡು’ ಕಾಯ್ ‘ಕಾಯು’
ಕೂಡು ‘ಸೇರು’
ತಪ್ಪು
ತೂಱು ‘ಹನಿಯಾಗಿ ಬೀಳು’ ತೊಂಗು ‘ನೇತಾಡು’ ಪಡು ‘ಮಲಗು’
ನಾಮಪದ ಊದಲು ‘ಉಬ್ಬುವಿಕೆ’’ ಒಕ್ಕಲು ‘ಬೇಪ್ರಡಿಸುವಿಕೆ’ ಒಟ್ಟಲು ‘ರಾಶಿ’ ಕಾವಲು ಕೂಡಲು ‘ಸೇರುವ ಜಾಗ’ ತಪ್ಪಲ್ ‘ತಪ್ಪು ಹೆಜ್ಜೆ’ ತೂರಲು ‘ಹನಿ ಮಳೆ’ ತೊಂಗಲ್ ‘ಗೊಂಚಲು’ ಪಡಲ್ ‘ಮಲಗುವಿಕೆ’’
ಪೊಯ್ ‘ಹೊಡೆ’ ಬೀಳು
ಮೆಟ್ಟು
ಪುಯಲ್ ‘ಹೊಡೆತ’’ ಬೀಳಲು ಮೆಟ್ಟಲು
(8) ಬೇರಿನ ಗಿಡ್ಡ ಸ್ವರವನ್ನು ಉದ್ದಸ್ವರವಾಗಿ ಬದಲಾಯಿಸುವುದು: ಮೂಲದ್ರಾವಿಡದ ಕೆಲವು ಕ್ರಿಯಾಬೇರುಗಳ ಗಿಡ್ಡಸ್ವರವನ್ನು ಉದ್ದಸ್ವರವಾಗಿ ಬದಲಾಯಿಸುವುದರ ಮೂಲಕವೂ ಅವನ್ನು ನಾಮಪದಗಳನ್ನಾಗಿ ಬದಲಾ ಯಿಸಲು ಸಾದ್ಯವಿದ್ದಿರಬೇಕು. ಕನ್ನಡದಲ್ಲಿ ಈ ಬದಲಾವಣೆಯನ್ನು ಕೆಳಗಿನ ಪದಗಳಲ್ಲಿ ಕಾಣಬಹುದು.
ಕ್ರಿಯಾಪದ
ಕೊಡು
ಇಡು ‘ಇರಿಸು’’
ಕೆಡು ‘ಹಾಳಾಗು’’ ಇಱಿ ‘ಚುಚ್ಚು’
ನಾಮಪದ ಕೋಡು ‘ಕೊಡುವಿಕೆ’’ ಈಡು ‘ಗುರಿಗೆ ಇಟ್ಟುದು’’ ಕೇಡು ‘ಪೀಡೆ’ ಏಱು ‘ಗಾಯ’
(9) ತ ಒಟ್ಟು: ಇದು ಕನ್ನಡದಲ್ಲಿ ಇಕಾರ ಮತ್ತು ಎಕಾರ (ಮೂಲ ದ್ರಾವಿಡದ ಅಯ್)ಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಬಳಕೆಯಾಗುವುದೇ ಜಾಸ್ತಿ. ಇದರ ಅನಂತರ ಎ (ಅಯ್) ಒಟ್ಟೂ ಬರಬಲ್ಲುದು.
(ಕ) ತ ಒಟ್ಟಿನ ಬಳಕೆ:
ಕ್ರಿಯಾಪದ
ನಾಮಪದ
(ಚ) ತ ಒಟ್ಟಿನೊಂದಿಗೆ ಎ (*ಅಯ್) ಒಟ್ಟಿನ ಬಳಕೆ:
ನಡತೆ
ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳದಿರುವ ಕ್ರಿಯಾಪದಗಳ ಕೆಳಗಿನ
ಬರಬಲ್ಲುದೆಂಬುದಕ್ಕೆ
ಅನಂತರವೂ ಈ ಉದಾಹರಣೆಗಳನ್ನು ಕೊಡಬಹುದು.
ಕ್ರಿಯಾಪದ ತಪ್ಪು
ಮೇಯು ಕೊಯ್ಯು
ನೆಗಳ್
ಪೊಗಳ್
ಬಾಳ್
ನಾಮಪದ ತಪ್ಪಿತ ಮೇತ ಕೊಯ್ತ
ನೆಗಳ್ತೆ ಪೊಗಳ್ತೆ ಬಾಳ್ತೆ
(10) ಪು ಒಟ್ಟು:
ಕ್ರಿಯಾಪದ ನೆನೆ
ನಾಮಪದ ನೆನಪು
ಮಡಿಪು
ತೀರ್ಪು
ಬಲ್ಪು
ಕೆಲವು ಪದಗಳಲ್ಲಿ ಇದು (ಕ) ಹು ರೂಪಕ್ಕೆ ಮತ್ತು ಇನ್ನು ಕೆಲವು
ಪದಗಳಲ್ಲಿ (ಚ) ವು ರೂಪಕ್ಕೆ ಬದಲಾಗಿದೆ.
ಕ್ರಿಯಾಪದ ನೆನೆ
ನಾಮಪದ ನೆನಹು
ಮುರಿ
ಮುರುಹು ಬಿಗುಹು
ಸಾಯ್
ಮರೆ
ತಿಳಿವು ಸಾವು ಗೆಲುವು ಮರೆವು
(11 ಮೆ (<*ಮಯ್) ಒಟ್ಟು: ನಾಮಪದ ಬಲುಮೆ ತಾಳ್ಮೆ ಸೋಲ್ಮೆ ಕೂರ್ಮೆ ಗೆಯ್ಮೆ
ಕ್ರಿಯಾಪದ ಸೋಲು
9.2.3 ಗುಣಬೇರುಗಳಿಂದ ನಾಮಪದಗಳು
ಗುಣಬೇರುಗಳಿಂದ ನಾಮಪದಗಳನ್ನು ಪಡೆಯುವುದಕ್ಕಾಗಿ ಅವಕ್ಕೆ (ಕ) *ಪ್ಪು (>ಪು, ಬು, ಹು) ಇಲ್ಲವೇ (ಚ) *ಮಯ್ (>ಮೆ) ಒಟ್ಟುಗಳನ್ನು ಸೇರಿಸಿರುವುದಕ್ಕೆ ಕನ್ನಡದಲ್ಲಿ ಕೆಲವು ಉದಾಹರಣೆಗಳಿವೆ.
ಗುಣಬೇರು
ಕಮ್ ಕೆಮ್
ನಾಮಪದ ಕರ್ಪು, ಕಪ್ಪು ಕಂಪು ಕೆಂಪು ತಂಪು
ಗುಣಬೇರು ಮುದು ನುಣ್ ನೀಳ ನೇರ್
ನಾಮಪದ ಕಡುಪು ಮುಪ್ಪು ಬಿಳುಪು ನುಣುಪು ನೀಳ್ಪು ನೇರ್ಪು
ಮುನ್
(ಚ) ಕೀಳ್
ತೆಳ್ಪು ಒಳ್ಪು ಬಲ್ಪು
ಮುಂಬು ಬಿಱುಬು
ಕೀಳ್ಮೆ ಪೆರ್ಮೆ ಎಳವೆ
ಮೆಲ್ ಸಯ್
ನಲ್
ಕೂರ್ಪು ಮೆಲ್ಪು ಸಯ್ಪು
ಒಳುಹು
ನಲ್ಮೆ ಬಲ್ಮೆ
ಕಯ್-ಕಯ್ಪ್ಪುಎಂಬುದರಲ್ಲಿ ಪೆ (<*ಪ್ಪಯ್) ಒಟ್ಟು ಮತ್ತು ಬಿಣ್-
ಬಿಮ್ಮು ಎಂಬುದರಲ್ಲಿ ಮು ಒಟ್ಟು ಕಾಣಿಸುತ್ತದೆ.
ಉಕಾರದಲ್ಲಿ ಕೊನೆಗೊಳ್ಳುವ ಕೆಲವು ಗುಣಪದಗಳಿಗೆ ಅ (<ಅನ್) ಒಟ್ಟನ್ನು ಸೇರಿಸುವ ಮೂಲಕ ಗಂಡಸರನ್ನು ಸೂಚಿಸುವ ನಾಮಪದಗಳನ್ನು ಮತ್ತು ಇ ಒಟ್ಟನ್ನು ಸೇರಿಸುವ ಮೂಲಕ ಹೆಂಗಸರನ್ನು ಸೂಚಿಸುವ ನಾಮ ಪದಗಗಳನ್ನು ಕನ್ನಡದಲ್ಲಿ ಪಡೆಯಲು ಸಾದ್ಯವಿದೆ.
ಗುಣಪದಗಳು ಕುರುಡು
ಕಿವುಡು
ಕುಳ್ಳು
ಮರುಳು ಹುಚ್ಚು
ಚೆಲುವು ಹೆಡ್ಡು
ನಾಮಪದಗಳು ಕುಂಟ, ಕುಂಟಿ ಕುರುಡ, ಕುರುಡಿ ಕಿವುಡ, ಕಿವುಡಿ ಕುಳ್ಳ, ಕುಳ್ಳಿ ಮರುಳ, ಮರುಳಿ ಹುಚ್ಚ, ಹುಚ್ಚಿ ಚೆಲುವ, ಚೆಲುವಿ ಹೆಡ್ಡ, ಹೆಡ್ಡಿ
ಆದರೆ ಇವೆರಡೂ ಇಂಡೋ-ಆರ್ಯನ್ ನುಡಿಗಳಿಂದ ಇತ್ತೀಚೆಗೆ ಎರವ
ಲಾಗಿ ಪಡೆದ ಒಟ್ಟುಗಳಿರಬೇಕು.
9.2.4 ಜೋಡುಪದಗಳ ಒಳರಚನೆ
ಸೇರಿಸಿ ಹೊಸದೊಂದು ಪದವನ್ನು ಎರಡು ಪದಗಳನ್ನು ಒಟ್ಟು ತಯಾರಿಸಿದಲ್ಲಿ ಅದನ್ನು ಜೋಡುಪದವೆಂದು ಕರೆಯಲಾಗುತ್ತದೆ. ಇದು ನಾಮಪದಗಳಿಗೆ ಮಾತ್ರವೇ ಸೀಮಿತವಾಗಿರುವ ಪದರಚನೆಯ ಕ್ರಮವಾಗಿದೆ (ಬಟ್ 2002 ನೋಡಿ).
ಈ ರೀತಿ ಜೋಡಿಸಿರುವ ಎರಡು ಪದಗಳಲ್ಲಿ ಎರಡನೆಯದು ಯಾವಾ ಗಲೂ ಮೂಲದ್ರಾವಿಡದಲ್ಲಿ ಒಂದು ನಾಮಪದವಾಗಿರುತ್ತಿತ್ತು. ಆದರೆ ಮೊದಲನೆಯದು ನಾಮಪದವಾಗಿರಬಹುದು, ಕ್ರಿಯಾಪದವಾಗಿರಬಹುದು ಇಲ್ಲವೇ ಗುಣಪದವಾಗಿರಬಹುದು.
ಈ ವಿಶಯವನ್ನವಲಂಬಿಸಿ, ಮೂಲದ್ರಾವಿಡದ ಜೋಡುಪದಗಳನ್ನು ಮೂರು ಗುಂಪುಗಳಲ್ಲಿ ಹಂಚಲು ಸಾದ್ಯವಿದೆ (ಕ್ರುಶ್ಣಮೂರ್ತಿ 2003:200 ನೋಡಿ). ಬಳಕೆಯಲ್ಲಿದೆ (ಬಟ್ 2002). (1) ನಾಮಪದ + ನಾಮಪದ
ಕನ್ನಡದಲ್ಲೂ ಇಂತಹದೇ
ಜೋಡುಪದಗಳ
ಕಣ್ಣೀರು ಕಣ್ + ನೀರು
ಕಾಲಾಳು ಕಾಲು + ಆಳು
ಎಳ್ + ನೆಯ್
ಕನ್ನಡಿ ತೆನ್ ‘ತೆಂಕ’ + ಕಾಯ್ ತೆಂಗು
(2) ಕ್ರಿಯಾಪದ + ನಾಮಪದ ಕನ್ನಡದ ಬಾವಲಿ ನಾಮಪದವನ್ನು ಮೂಲದ್ರಾವಿಡದಲ್ಲಿ *ವಾವ್ ‘ಕಿತ್ತುಕೊಳ್ಳು’ ಕ್ರಿಯಾಪದಕ್ಕೆ *ಯಾಲ್ ‘ಪ್ರಾಣಿ’ ನಾಮಪದವನ್ನು ಸೇರಿಸಿ ತಯಾರಿಸಿರಬೇಕು (ಕ್ರುಶ್ಣಮೂರ್ತಿ 2003:204). ಕನ್ನಡದಲ್ಲಿ ಸುಳಿಗಾಳಿ, ಸುರಿಮಳೆ, ಸಿಡಿಮದ್ದು, ಬೀಸುಗಲ್ಲು, ನಿಲುಗಡೆ, ಜಾರುಬಂಡಿ,
ಊರುಗೋಲು ಮೊದಲಾದ ಬೇರೆಯೂ ಹಲವು ಜೋಡುಪದಗಳನ್ನು ಕ್ರಿಯಾಪದಗಳಿಗೆ ನಾಮಪದಗಳನ್ನು ಸೇರಿಸಿ ರಚಿಸಲಾಗಿದೆ.
(3) ಗುಣಪದ + ನಾಮಪದ
ಮುನ್ + ನಾಳ್ ‘ದಿನ’
ಪೆರ್ + ಪುಲಿ ಮುತ್ ‘ಮುದಿ’ + ಅಜ್ಜಿ
ಕೆಮ್ + ತಾಳಿ
ಮುನ್ + ಕಡ
ಮೊನ್ನೆ ಹೆಬ್ಬುಲಿ ಮುತ್ತಜ್ಜಿ ಮುಂಗಡ
ಕನ್ನಡದ ಮತ್ತು ಬೇರೆ ಹಲವು ದ್ರಾವಿಡ ನುಡಿಗಳ ವ್ಯಾಕರಣಗಳಲ್ಲಿ ಜೋಡುಪದಗಳ ಒಳರಚನೆಯನ್ನು ವಿವರಿಸುವುದಕ್ಕಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ತತ್ಪುರುಶ, ಕರ್ಮದಾರಯ, ಬಹುವ್ರೀಹಿ ಮೊದಲಾದ ಹೆಸರುಗಳನ್ನು ಬಳಸಲಾಗುತ್ತದೆ. ಆದರೆ, ನಿಜಕ್ಕೂ ಈ ಹೆಸರುಗಳು ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಜೋಡುಪದಗಳ ಒಳರಚನೆಯನ್ನು ಸರಿಯಾಗಿ ವಿವರಿಸಲಾರವು.
ಪದಗಳಲ್ಲಿ
ಇದಕ್ಕೆ ಕಾರಣವೇನೆಂದರೆ, ಮೇಲಿನ ಹೆಸರುಗಳು ಜೋಡುಪದಗಳ ಅಂಗಗಳಾಗಿ ಬಂದಿರುವ ಎರಡು ಯಾವುದು ಆ ಜೋಡುಪದದ ಕೇಂದ್ರಬಿಂದುವಾಗಿರುತ್ತದೆ ಎಂಬ ವಿಶಯದ ಮೇಲೆ ಅವಲಂಬಿಸಿವೆ. ಆದರೆ, ಮೇಲೆ ಸೂಚಿಸಿದ ಹಾಗೆ, ದ್ರಾವಿಡ ನುಡಿಗಳಲ್ಲಿ ಈ ವಿಶಯಕ್ಕಿಂತಲೂ ಜೋಡುಪದಗಳಲ್ಲಿ ಎರಡನೆಯ ಪದವಾಗಿ ಎಂತಹ ಪದ (ನಾಮಪದವೇ, ಕ್ರಿಯಾಪದವೇ, ಗುಣಪದವೇ) ಬಂದಿದೆ ಎಂಬ ವಿಶಯವೇ ಮುಕ್ಯವಾದುದರಿಂದ, ಅದನ್ನವಲಂಬಿಸಿರುವ ಹೆಸರುಗಳನ್ನು ಬಳಸುವುದೇ ಒಳ್ಳೆಯದು (ಬಟ್ 2002 ನೋಡಿ).
9.3 ಲಿಂಗ ಮತ್ತು ವಚನ
ನಾಮಪದಗಳ ಹಂಚಿಕೆಗೆ ಬಳಕೆಯಾಗುವ ತತ್ವವನ್ನು ಲಿಂಗವೆಂದು ಕರೆಯ ಲಾಗುತ್ತದೆ. ಮೂಲದ್ರಾವಿಡದಲ್ಲಿ ಮತ್ತು ಇವತ್ತಿನ ದ್ರಾವಿಡ ನುಡಿಗಳಲ್ಲಿ ಇದು ನಾಮಪದಗಳ ಅರ್ತವನ್ನವಲಂಬಿಸಿದೆ.
ಲಿಂಗಬೇದ
ಮೂಲದ್ರಾವಿಡದ ಈ
ವಚನಬೇದದೊಂದಿಗೆ ಸೇರಿಕೊಂಡಿದೆಯುಂದು ಹೇಳಬಹುದು. ಯಾಕೆಂದರೆ, ಅವೆರಡನ್ನೂ ಮೂಲದ್ರಾವಿಡದಲ್ಲಿ ಸೂಚಿಸಲಾಗುತ್ತಿತ್ತು. ಇದಲ್ಲದೆ, ಇವತ್ತಿನ ಕೆಲವು ದ್ರಾವಿಡ ನುಡಿಗಳಲ್ಲಿ
ಬೇರೆ ಬೇರೆ ವಚನಗಳಲ್ಲಿ ಬೇರೆ ಬೇರೆ ರೀತಿಯ ಲಿಂಗಬೇದವಿದೆ.
ಮೂಲಕ
9.3.1 ಎರಡು ಲಿಂಗಗಳು
ಮೂಲದ್ರಾವಿಡದ ನಾಮಪದಗಳನ್ನು ಅವುಗಳ ಅರ್ತವನ್ನವಲಂಬಿಸಿ (1) ಗಂಡಸರು ಮತ್ತು (2) ಇತರರು (ಹೆಂಗಸರು ಮತ್ತು ಮನುಶ್ಯರಲ್ಲದ ಇತರರು) ಎಂಬುದಾಗಿ ಹಂಚುವ ಕ್ರಮ ಬಳಕೆಯಲ್ಲಿದ್ದಿರಬೇಕು (ಕ್ರುಶ್ಣಮೂರ್ತಿ 2003); ತೆಂಕುದ್ರಾವಿಡ ನುಡಿಗಳಲ್ಲಿ ಕಾಣಿಸುವ ಹಂಚಿಕೆ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿದುದರಿಂದ ಉಂಟಾಗಿರಬೇಕು.
ಒರ್ವಚನದಲ್ಲಿ ಅಳ್ ಒಟ್ಟನ್ನು ಬಳಸುವುದರ ಮೂಲಕ ಈ ನುಡಿಗಳಲ್ಲಿ ಹೆಂಗಸರನ್ನು ಸೂಚಿಸುವುದಕ್ಕಾಗಿ ಒಂದು ಹೊಸ ಲಿಂಗವನ್ನು ಬಳಕೆಗೆ ತರಲಾಯಿತು ಮತ್ತು ಹಲವಚನದಲ್ಲಿ ಗಂಡುಸರು ಮಾತ್ರವೇ ಇರುವ ಗುಂಪನ್ನು ಸೂಚಿಸುತ್ತಿದ್ದ ಅರ್ ಒಟ್ಟಿಗೆ ಗಂಡುಸರು ಮತ್ತು ಹೆಂಗುಸರು ಒಟ್ಟಿಗಿರುವ ಸೂಚಿಸುವ ಅರ್ತವನ್ನೂ ಗುಂಪನ್ನು ಕೊಡಲಾಯಿತು; ಅನಂತರ, ಹೆಂಗಸರು ಮಾತ್ರ ಇರುವ ಗುಂಪನ್ನು ಸೂಚಿಸುವ ಅರ್ತವನ್ನೂ ಅದಕ್ಕೆ ಕೊಡಲಾಯಿತು. ಈ ಬದಲಾಯಿಸಿದ ಹಂಚಿಕೆಯೇ ಇವತ್ತು ಕನ್ನಡದಲ್ಲಿ ಬಳಕೆಯಲ್ಲಿದೆ.
ಕನ್ನಡದ ಒಳನುಡಿಗಳಲ್ಲಿ ಮಾತ್ರ, ತೆಂಕುದ್ರಾವಿಡದ ಈ ಲಿಂಗ- ವಚನದ ಸ್ವರೂಪದಲ್ಲಿ ಕೆಲವು ಬದಲಾವಣೆಗಳಾಗಿವೆ (9.3.3 ನೋಡಿ).
ನಾಮಪದಗಳ ಈ ಹಂಚಿಕೆ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳಲ್ಲಿ, ಗುಣಪದಗಳಲ್ಲಿ, ತೋರುಗ ಪದಗಳಲ್ಲಿ ಮತ್ತು ಎಣಿಕೆಯ ಪದಗಳಲ್ಲಿ ಸೂಚಿತವಾಗುತ್ತದೆ.
ಮತ್ತು
ವಚನಗಳಿಗನುಸಾರವಾಗಿ ಒರ್ವಚನದಲ್ಲಿ
ಉದಾಹರಣೆಗಾಗಿ, ಹಳೆಗನ್ನಡದ ಕ್ರಿಯಾಪದಗಳಿಗೆ ನಾಮಪದಗಳ ಮೂರು ರೂಪಗಳಿವೆ ಮತ್ತು ಹಲವಚನದಲ್ಲಿ ಎರಡು ರೂಪಗಳಿವೆ. ಆದರೆ, ಈ ಕೇಳುಗರನ್ನು ಬಿಟ್ಟು ಇತರರನ್ನು ಲಿಂಗಬೇದ ಆಡುಗ ಸೂಚಿಸಬೇಕಾದಾಗ ಮಾತ್ರ ಕ್ರಿಯಾರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಮತ್ತು
ಗಂಡಸು
ಹೆಂಗಸು
ಒರ್ವಚನ
ಬಂದನ್
ಬಂದಳ್
ಬಂದುದು
ಹಲವಚನ ಬಂದುವು
ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರನ್ನು ಸೂಚಿಸುವಲ್ಲಿ ಕಾಣಿಸುವ ಮೇಲಿನ ಲಿಂಗಬೇದ ಆಡುಗ ಮತ್ತು ಕೇಳುಗರನ್ನು ಸೂಚಿಸುವಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ನಾನ್ ಬಂದೆನ್ ಮತ್ತು ನೀನ್ ಬಂದಯ್ ಎಂಬೆರಡು ವಾಕ್ಯಗಳ ಮೂಲಕ ಆಡುಗ ಮತ್ತು ಕೇಳುಗರ ಬರವನ್ನು ಸೂಚಿಸಲಾಗುತ್ತದೆ; ಆದರೆ, ಹೀಗೆ ಸೂಚಿಸಿರುವ ಇಲ್ಲವೇ ಹೆಂಗಸಾಗಿರಬಹುದು.
ಗಂಡಸಾಗಿರಬಹುದು
ಕೇಳುಗರು
ಮತ್ತು
9.3.2 ಎರಡು ವಚನಗಳು
ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡದಲ್ಲಿ ಒರ್ವಚನ ಮತ್ತು ಹಲವಚನ ಎಂಬುದಾಗಿ ಎರಡು ವಚನಗಳು ಬಳಕೆಯಲ್ಲಿದ್ದುವು. ಹಲವಚನವನ್ನು ಸೂಚಿಸುವುದಕ್ಕಾಗಿ, ಗಂಡಸರನ್ನು ಸೂಚಿಸುವ ಪದಗಳ ಅನಂತರ *ಅರ್ ಒಟ್ಟನ್ನು ಸೇರಿಸಲಾಗುತ್ತಿತ್ತು ಮತ್ತು ಇತರರನ್ನು ಸೂಚಿಸುವ ಪದಗಳ ಅನಂತರ *ಕಳ್ ಒಟ್ಟನ್ನು ಸೇರಿಸಲಾಗುತ್ತಿತ್ತು.
ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿರುವ (*ಆರ್ ಎಂಬುದರಲ್ಲಿ ಗಂಡಸರೊಂದಿಗೆ ಹೆಂಗಸರನ್ನೂ ಸೇರಿಸಿರುವ) ಬಳಕೆ ಕನ್ನಡದಲ್ಲೂ ಇದೆ (ಅರಸರ್, ಹುಡುಗರು, ಹುಡುಗಿಯರು; ಮರಂಗಳ್, ಎಲೆಗಳು).
ತೆಂಕುದ್ರಾವಿಡದಲ್ಲಿ ಒರ್ವಚನ ಮತ್ತು ಗಂಡಸು-ಹೆಂಗಸು ಲಿಂಗಬೇದ ಇವೆರಡನ್ನು ಒಟ್ಟಿಗೆ ಸೂಚಿಸುವುದಕ್ಕಾಗಿ, ಮನುಶ್ಯರನ್ನು ಸೂಚಿಸುವ ಕೆಲವು ಪದಗಳ ಅನಂತರ *ಅನ್ ಮತ್ತು *ಅಳ್ ಒಟ್ಟುಗಳನ್ನು ಸೇರಿಸುವ ಬಳಕೆ ಯಿತ್ತು. ಕನ್ನಡದಲ್ಲೂ ಈ ಒಟ್ಟುಗಳಿವೆ (ಮಗನ್, ಮಗಳ್).
ಕನ್ನಡದ ಗಳ್ ಒಟ್ಟು ಕರಾವಳಿಯ ಕೆಲವು ಒಳನುಡಿಗಳಲ್ಲಿ ತನ್ನ
ಳಕಾರವನ್ನು ಕಳೆದುಕೊಂಡಿದೆ.
ಕರಾವಳಿಯ ಒಳನುಡಿಗಳು
ಹವ್ಯಕ
ಆನೆಗೊ ಎತ್ತುಗೊ ಮರಂಗೊ
ಮರಂಗ
ಬರಹ ಆನೆಗಳು ಎತ್ತುಗಳು ಮರಗಳು
ಆದರೆ, ಈ ಹಲವಚನ ಒಟ್ಟಿನ ಅನಂತರ ಒತ್ತಿ ಹೇಳುವ ಉದೆ ಒಟ್ಟು ಬಂದಾಗ, ಈ ರೀತಿ ಬಿದ್ದುಹೋಗಿರುವ ಳಕಾರ ತಿರುಗಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ವಾಕ್ಯಗಳನ್ನು ಗಮನಿಸಬಹುದು.
(1ಕ) ಸರ್ಕಸ್ಸಿಲಿ ಮೂರು ಆನೆಗೊ ಇತ್ತಿದ್ದವು ‘ಸರ್ಕಸ್ಸಿನಲ್ಲಿ ಮೂರು ಆನೆಗಳು ಇದ್ದುವು’
(1ಚ) ಸರ್ಕಸ್ಸಿಲಿ ಮೂರು ಆನೆಗಳುದೆ ಇತ್ತಿದ್ದವು ‘ಸರ್ಕಸ್ಸಿನಲ್ಲಿ ಮೂರು ಆನೆಗಳೂ ಇದ್ದುವು’
(1ಕ)ದಲ್ಲಿ ಬಂದಿರುವ ಆನೆಗೊ ಪದ (1ಚ)ದಲ್ಲಿ ಆನೆಗಳ್ ಎಂಬ ರೂಪದಲ್ಲೇ ಇದೆ; ಅದರ ಅನಂತರ ಉದೆ ಒಟ್ಟು ಬಂದಿರುವುದೇ ಇದಕ್ಕೆ
ಸುಳ್ಯದ ಗವ್ಡ ಕನ್ನಡದಲ್ಲೂ ಗಳ್ ಒಟ್ಟು ಳಕಾರವನ್ನು ಕಳೆದುಕೊಂಡು ಗ ರೂಪದಲ್ಲಿ ಬಳಕೆಯಾಗುತ್ತದೆ; ಆದರೆ ಈ ರೀತಿ ಬಿದ್ದು ಹೋಗಿರುವ ಳಕಾರ ವಿಬಕ್ತಿ ಒಟ್ಟುಗಳನ್ನು ಸೇರಿಸಿದಾಗಲೂ ಕಾಣಿಸಿಕೊಳ್ಳುತ್ತದೆ. ಮರಂಗ ‘ಮರಗಳು’ : ಮರಂಗಳ್ನ್ದ ‘ಮರಗಳಿಂದ’. ’ ಬಡಗ ಒಳನುಡಿಯಲ್ಲೂ ಹಲವಚನವನ್ನು
- ಎಂಬುದು ಗೊ ಎಂಬುದಾಗಿ ಬದಲಾಗಿದೆ (ಮೊರ ‘ಮರ’ : ಮೊರಗೊ
- ‘ಮರಗಳು’, ಎತ್ತು ‘ಎತ್ತು’ : ಎತ್ತುಗೊ ‘ಎತ್ತುಗಳು’, ನಂಡು ‘ಏಡಿ’
- ನಂಡುಗೊ ‘ಏಡಿಗಳು’).
ಸೂಚಿಸುವ
9.3.3 ಲಿಂಗಬೇದದಲ್ಲಿ ಬದಲಾವಣೆ
ಕರಾವಳಿಯ ಒಳನುಡಿಗಳಲ್ಲಿ ಮತ್ತು ಬಡಗ ಕನ್ನಡದಲ್ಲಿ ಮೇಲೆ ವಿವರಿಸಿ ದಂತಹ ಕನ್ನಡದ ಲಿಂಗಬೇದ ಸ್ವಲ್ಪ ಮಟ್ಟಿಗೆ ಬದಲಾಗಿದೆ.
(1) ಬಡಗ ಕನ್ನಡದಲ್ಲಿ ಹೆಂಗಸರು ಮತ್ತು ಗಂಡಸರ ನಡುವಿನ ವ್ಯತ್ಯಾಸವನ್ನು ತೋರಿಸದಿರುವ ಹಲವಚನದ ಅರ್ ಒಟ್ಟಿಗೆ ಅಂತಹ ವ್ಯತ್ಯಾಸವನ್ನು ತೋರಿಸದಿರುವ ಬಳಕೆ ಮಾತ್ರ ಇದೆ. ಹೆಂಗಸು-ಗಂಡಸು ವ್ಯತ್ಯಾಸವನ್ನು ತೋರಿಸುವಂತಹ ನಾಮಪದಗಳೊಂದಿಗೆ ಅದರ ಬದಲು ಗೊ ಒಟ್ಟನ್ನೇ ಹಲವಚನದ ಒಟ್ಟಾಗಿ ಬಳಸಲಾಗುತ್ತದೆ.
ಕಳ್ಳ ’‘ಕಳ್ಳ’ ಕರ್ಪ ‘ಕರಿಯ’ ssಸೆಟ್ಟಿ ‘ಸೆಟ್ಟಿ’
ಗಂಡುಸರು ಕಳ್ಳಗೊ
ಕರ್ಪಗೊ
ಸೆಟ್ಟಿಗೊ
ಹೆಂಗುಸರು ಕಳ್ಳಿಗೊ
ಕರ್ಪಿಗೊ
ಸೆಟ್ಟಿಚಿಗೊ
ವ್ಯತ್ಯಾಸವಿಲ್ಲ ಕಳ್ಳರು ಕರ್ಪರು ಸೆಟ್ಟಿಯರು
ಈ ಕಾರಣಕ್ಕಾಗಿ, ನಂಟಸ್ತಿಕೆಯನ್ನು ಸೂಚಿಸುವ ಹೆತ್ತ ‘ಅಜ್ಜ’, ಹೆತ್ತೆ ‘ಅಜ್ಜಿ’, ಅಣ್ಣ ‘ಅಣ್ಣ’, ಅಮ್ಮ ‘ತಾಯಿ’ ಮೊದಲಾದ ಪದಗಳೂ (ಗಂಡುಸು-ಹೆಂಗುಸು ಲಿಂಗಬೇದವನ್ನು (ಹೆತ್ತಗೊ ಹಲವಚನದಲ್ಲಿ ‘ಅಜ್ಜಂದಿರು’, ಹೆತ್ತೆಗೊ ‘ಅಜ್ಜಿಯರು’, ಅಣ್ಣಗೊ ‘ಅಣ್ಣಂದಿರು’, ಅಮ್ಮಗೊ ‘ತಾಯಿಯರು’).
ಗೊ ಒಟ್ಟಿನೊಂದಿಗೆ ಬರುತ್ತವೆ
ಸೂಚಿಸುವ
(2) ಹವ್ಯಕ ಕನ್ನಡದಲ್ಲಿ ಗೊ(ಕೊ) (<ಗಳ್) ಮತ್ತು ಅರ್ ಒಟ್ಟುಗಳ ಬಳಕೆ ಬೇರೊಂದು ರೀತಿಯ ಬದಲಾವಣೆಗೊಳಗಾಗಿದೆ. ಅದರಲ್ಲಿ ನಂಟಸ್ತಿಕೆಯನ್ನು ಮೂಗಿಸಿದ ಅಕಾರದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಮಾತ್ರ ಅರ್ ಒಟ್ಟು ಬಳಕೆಯಾಗುತ್ತದೆ (ಇದಕ್ಕೆ ಮೊದಲು ನಂಟಸ್ತಿಕೆಯನ್ನು ಸೂಚಿಸುವ (9.4 ನೋಡಿ) ನ್್ದ ಒಟ್ಟು ಬರುತ್ತದೆ).
ಸೂಚಿಸುವ
ಮತ್ತು
ಇತರ ನಂಟಸ್ತಿಕೆಯನ್ನು ಸೂಚಿಸುವ ಪದಗಳೊಂದಿಗೆ ಗಳ್ ಒಟ್ಟು (ಅ)ಕ್ಕೊ ರೂಪದಲ್ಲಿ ಬರುತ್ತದೆ; ಮತ್ತು ಇತರ ಎಲ್ಲಾ ಪದಗಳೊಂದಿಗೂ ಅದು ಗೊ ರೂಪದಲ್ಲಿ ಬರುತ್ತದೆ.
(ಕ) ಮೂಗಿಸಿದ ಅಕಾರದಲ್ಲಿ ಕೊನೆಗೊಳ್ಳುವ ನಂಟಸ್ತಿಕೆಯ ಪದಗಳು:
ಒವ್ರಚನ ಅಪ್ಪ ᵒ
ತಮ್ಮᵒ
ಅಳಿಯ ᵒ
ಹಲವಚನ ಅಪ್ಪಂದ್ರು ಅಕ್ಕಂದ್ರು ತಮ್ಮಂದ್ರು ಅಳಿಯಂದ್ರು
(ಚ) ಇತರ ನಂಟಸ್ತಿಕೆಯ ಪದಗಳು: ಅಬ್ಬೆ ‘ತಾಯಿ’
ಅಬ್ಬೆಕ್ಕೊ ಅಜ್ಯಕ್ಕೊ ತಂಗೆಕ್ಕೊ
ಅಪ್ಪಚ್ಚಿ ‘ಚಿಕ್ಕಪ್ಪ’‘
ಅಪ್ಪಚ್ಯಕ್ಕೊ
(ಟ) ಇತರ ನಾಮಪದಗಳು: ಕಳ್ಳ ᵒ
ಮರ ಕೂಸು ‘ಹುಡುಗಿ’ ಮನೆ
ಕಳ್ಳಂಗೊ ಮರಂಗೊ ಕೂಸುಗೊ ಮನೆಗೊ
ಇದಲ್ಲದೆ, ಗವ್ರವವನ್ನು ಸೂಚಿಸಬೇಕಾದಲ್ಲೂ ಕ್ಕೊ ಒಟ್ಟನ್ನು ಬಳಸಲಾಗುತ್ತದೆ. ಈ ಬಳಕೆಯನ್ನು ಮಾಶ್ಟ್ರಕ್ಕೊ, ಬಟ್ಟಕ್ಕೊ ಮೊದಲಾದ ಉದಾಹರಣೆಗಳಲ್ಲಿ ಕಾಣಬಹುದು.
ಸುಳ್ಯದ ಗವ್ಡ ಕನ್ನಡದಲ್ಲೂ ಇಂತಹದೇ ಬಳಕೆ ಕಾಣಿಸುತ್ತದೆ. ಅಕಾರದಲ್ಲಿ ಕೊನೆಗೊಳ್ಳುವ ನಂಟಸ್ತಿಕೆಯ ಪದಗಳೊಂದಿಗೆ ನ್ದರ್ ಒಟ್ಟು (ಅಪ್ಪಂದರ್), ಇತರ ನಂಟಸ್ತಿಕೆಯ ಪದಗಳೊಂದಿಗೆ ಕ ಒಟ್ಟು (ಅತ್ತೆಕ ‘ಅತ್ತೆಯರು’), ಮತ್ತು ಇತರ ಪದಗಳೊಂದಿಗೆ ಗ ಒಟ್ಟು (ಅರ್ಸುಗ ‘ಅರಸರು’, ಕೊತ್ತಿಗ ‘ಬೆಕ್ಕುಗಳು’, ಮರಂಗ ‘ಮರಗಳು’) ಅದರಲ್ಲಿ ಬಳಕೆಯಾಗುತ್ತವೆ.
9.4 ನಂಟಸ್ತಿಕೆಯ ಪದಗಳು
ಮೂಲದ್ರಾವಿಡದಲ್ಲಿ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಮೊದಲಾದ ನಂಟಸ್ತಿಕೆಯನ್ನು ಸೂಚಿಸುವ ನಾಮಪದಗಳಿಗೆ ಒಂದು ವಿಶಿಶ್ಟವಾದ ಜಾಗವನ್ನು ಕಲ್ಪಿಸಬೇಕಾಗುತ್ತದೆ. ಇವು ಕನ್ನಡದಲ್ಲಿ ಇರುವ ಹಾಗೆ, ಬರಿಯ ನಂಟಸ್ತಿಕೆಯನ್ನು ಮಾತ್ರವೇ ತಿಳಿಸದೆ, ಆ ನಂಟಸ್ತಿಕೆ ಯಾರೊಡನಿದೆ ಎಂಬುದನ್ನೂ ತಿಳಿಸುತ್ತಿದ್ದಿರಬೇಕು. ಇದಕ್ಕಾಗಿ, ಮೂಲದ್ರಾವಿಡದಲ್ಲಿ ಈ ಪದಗಳನ್ನು ಎನ್, ನಿನ್ ಮತ್ತು ತನ್ ಎಂಬ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವ ಮೂರು ಆಡುಗ ಪದಗಳೊಂದಿಗೆ ಸೇರಿಸಿಯೇ ಬಳಸುತ್ತಿದ್ದಿರಬೇಕು. ಇವತ್ತು ಈ
ವಿದಾನವನ್ನು ಕೋಲಾಮಿ, ಕುಡುಕ್ ಮೊದಲಾದ ಕೆಲವೇ ಕೆಲವು ದ್ರಾವಿಡ ನುಡಿಗಳು ಮಾತ್ರ ಉಳಿಸಿಕೊಂಡಿವೆ. ಹಳೆಯ ತಮಿಳಿನಲ್ಲೂ ಇಂತಹ ಆಡುಗ ಪದಗಳ ಬಳಕೆಯಿತ್ತು.
ಹಳೆಯ ತಮಿಳು ನುಂತಯ್ ತಂತಯ್
ನುಂಕಯ್ ತಂಕಯ್
ಕುಡುಕ್ ನಿಂಬಸ್ ತಂಬಸ್
ಕನ್ನಡ ನನ್ನ ತಂದೆ ನಿನ್ನ ತಂದೆ ಅವನ ತಂದೆ
ನನ್ನ ತಂಗಿ ನಿನ್ನ ತಂಗಿ ಅವನ ತಂಗಿ
ಕನ್ನಡದ ತಮ್ಮ, ತಂಗಿ, ತಂದೆ ಮತ್ತು ತಾಯಿ ಪದಗಳ ಸುರುವಿಗೆ ಬರುವ ತಕಾರ ಮೂಲದ್ರಾವಿಡದಲ್ಲಿ ‘ಅವನ’ ಎಂಬ ಅರ್ತವನ್ನು ಕೊಡಬಲ್ಲ ಮೂಲದ್ರಾವಿಡದಲ್ಲಿ ಅದಕ್ಕಿದ್ದ ಈ ಅರ್ತ ಕನ್ನಡದಲ್ಲಿ ಅಳಿದುಹೋಗಿದೆ.
ಪಳೆಯಳಿಕೆಯಾಗಿದೆ.
ಪದದ
ಹಾಗಾಗಿ, ಈ ಪದಗಳನ್ನು ಕನ್ನಡದಲ್ಲಿ ನನ್ನ, ನಿನ್ನ ಮೊದಲಾದ ಆಡುಗ ಪದಗಳೊಂದಿಗೆ ಸೇರಿಸಿಯೂ (ನನ್ನ ತಮ್ಮ, ನಿನ್ನ ತಮ್ಮ ಮೊದಲಾದವುಗಳಲ್ಲಿ ಕಾಣಿಸುವ ಹಾಗೆ) ಬಳಸಲು ಸಾದ್ಯವಾಗುತ್ತಿದೆ.
ಕನ್ನಡದ ನಂಟಸ್ತಿಕೆಯ ಪದಗಳು ಇನ್ನೊಂದು ವಿಶಯದಲ್ಲೂ ಇತರ ಪದಗಳಿಗಿಂತ ಬೇರಾಗಿವೆ. ಏಕವಚನದಲ್ಲಿ ಗಂಡಸನ್ನು ಸೂಚಿಸುವ ಒಟ್ಟು ರೂಪದಲ್ಲಿದ್ದಿರಬೇಕೆಂದು ಮೂಲದ್ರಾವಿಡದಲ್ಲಿ ಕಲ್ಪಿಸಲಾಗಿದೆ. ಕನ್ನಡದಲ್ಲಿ ಮತ್ತು ತೆಂಕುದ್ರಾವಿಡದ ಇತರ ನುಡಿಗಳಲ್ಲಿ ಇದು ಅನ್ ಎಂಬ ರೂಪಕ್ಕೆ ಬದಲಾಗಿದೆ.
*ಅನ್ಱ್ ಎಂಬ
ಆದರೆ ನಂಟಸ್ತಿಕೆಯನ್ನು ಸೂಚಿಸುವ ಪದಗಳ ಹಲವಚನ ರೂಪದಲ್ಲಿ ಇವತ್ತಿಗೂ ಈ ಒಟ್ಟು ಅನ್ಱ್ ಎಂಬ ರೂಪದಲ್ಲೇನೇ (ಎಂದರೆ ಅನ್ಱ್ ಎಂಬುದು ಅನ್್ದ ಎಂಬ ಮೂಲಕ)
ರೂಪಕ್ಕೆ ಬದಲಾಗುವ
ಪಳೆಯಳಿಕೆಯಾಗಿ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ. ತಾಯಂದಿರು ಎಂಬಲ್ಲಿ ಇದು ಅಕಾರದಲ್ಲಿ ಕೊನೆಗೊಳ್ಳದಿರುವ ಪದಗಳಿಗೂ ಹರಡಿರುವ ಹಾಗೆ ಕಾಣಿಸುತ್ತದೆ.
ಮಾವ
ಅಣ್ಣಂದಿರು ಅಕ್ಕಂದಿರು ಮಾವಂದಿರು
9.5 ಸಂಬಂದದ ಒಟ್ಟು
ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟೆಂಬುದು ಒಂದು ವಿಬಕ್ತಿಯ ಒಟ್ಟಾಗಿರಲಿಲ್ಲ. ಯಾಕೆಂದರೆ, ನಾಮಪದಗಳನ್ನು ಕ್ರಿಯಾಪದದೊಂದಿಗೆ ಸಂಬಂದಿಸುವುದಕ್ಕಾಗಿ ಅದನ್ನು ಬಳಸುತ್ತಿರಲಿಲ್ಲ.
ಸಂಬಂದಿಸಬೇಕಾದಾಗ
ಇದಕ್ಕೆ ಬದಲು, ಒಂದು ನಾಮಪದವನ್ನು ಇನ್ನೊಂದು ನಾಮಪದ (ಎಂದರೆ ಅದನ್ನು ಎರಡನೇ ದೊಂದಿಗೆ ನಾಮಪದದ ವಿಶೇಶಣವಾಗಿ ಗುಣಪದದ ಜಾಗದಲ್ಲಿ ಬಳಸಬೇಕಾದಾಗ), ಅದಕ್ಕೆ ಈ ಸಂಬಂದದ ಒಟ್ಟನ್ನು ಸೇರಿಸಲಾಗುತ್ತಿತ್ತು. ಕನ್ನಡದಲ್ಲೂ ಇದೇ ಕೆಲಸಕ್ಕಾಗಿ ಸಂಬಂದದ ಒಟ್ಟನ್ನು ಬಳಸಲಾಗುತ್ತದೆ (ಬೆಕ್ಕಿನ ಕಣ್ಣು, ಹುಲಿಯ ಹಲ್ಲು, ಹುಡುಗನ ಕಾಲು). ನಾಮಪದಗಳಿಗೆ
ಒಟ್ಟುಗಳನ್ನು ಸೇರಿಸಬೇಕಾದಾಗಲೂ ಮೊದಲಿಗೆ ಅವಕ್ಕೆ ಸಂಬಂದದ ಒಟ್ಟನ್ನು ಸೇರಿಸುವ ಅವಶ್ಯಕತೆಯಿತ್ತು. ಮೂಲದ್ರಾವಿಡದ ವಿಬಕ್ತಿ ಒಟ್ಟುಗಳೆಲ್ಲ ಮೊದಲಿಗೆ ನಾಮಪದಗಳಾಗಿದ್ದುದೇ ಇದಕ್ಕೆ ಕಾರಣವಿರಬೇಕು.
ಇದಲ್ಲದೆ,
9.5.1 ಮೂಲದ್ರಾವಿಡದಲ್ಲಿ ಸಂಬಂದದ ಒಟ್ಟು
ಎರಡು ನಾಮಪದಗಳ ನಡುವಿನ ಸಂಬಂದವನ್ನು ಸೂಚಿಸುವ ಈ ಒಟ್ಟಿಗೆ ಮೂಲದ್ರಾವಿಡದಲ್ಲಿ ಅಕಾರ ಇಲ್ಲವೇ ಇಕಾರದೊಂದಿಗೆ ತ್ತ ಇಲ್ಲವೇ ನ ಎಂಬುದನ್ನು (ಇಲ್ಲವೇ ಅವೆರಡನ್ನೂ) ಸೇರಿಸಿರುವ *ಅತ್ತ, *ಇತ್ತ, *ಅನ, *ಇನ, *ಅತ್ತಿನ, *ಇತ್ತಿನ, *ಅನ್ತ ಮೊದಲಾದ ಹಲವು
ರೂಪಗಳಿದ್ದಿರಬೇಕು. ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ಸ್ಪಶ್ಟವಾಗಿ ನಿರ್ದರಿಸಲು ಇನ್ನೂ ಸಾದ್ಯವಾಗಿಲ್ಲ.
ಕನ್ನಡದಲ್ಲಿ ಈ ಸೇರಿಕೆಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು
ಕೆಳಗೆ ವಿವರಿಸಲಾಗಿದೆ.
(1) ಅತ್ತ/ಇತ್ತ ಎಂಬುದು ದ ರೂಪದಲ್ಲಿ ಅನ್ (ಇಲ್ಲವೇ ಅಮ್) ಎಂಬುದರಲ್ಲಿ ಮನುಶ್ಯರನ್ನು ಕೊನೆಗೊಳ್ಳುವ ಹೊರತುಪಡಿಸಿ ಇತರರನ್ನು ಸೂಚಿಸುವ ಪದಗಳ ಸಂಬಂದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ (ಮರನ್ - ಮರದ, ಪೊಲನ್ - ಪೊಲದ, ನೆಲನ್
- ನೆಲದ).
ಮತ್ತು
(2) *ಇನ ಎಂಬುದು ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಅನಂತರ ಕಾಣಿಸಿಕೊಳ್ಳುತ್ತದೆ (ಅಂದು- ಅಂದಿನ, ಇಂದು - ಇಂದಿನ, ಮಡು - ಮಡುವಿನ).
(3) *ಅನ ಎಂಬುದು *ಅಣ ರೂಪದಲ್ಲಿ ಅತ್ತಣ, ಇತ್ತಣ, ತೆಂಕಣ, ಪಡುವಣ, ಬಡಗಣ, ಮೂಡಣ ಎಂಬ ಈ ಎಂಟು ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ದಿಕ್ಕನ್ನು ಸೂಚಿಸುವ ಮೇಗಣ, ಕೆಳಗಣ, ಪೊಱಗಣ, ಅತ್ತಣ, ಇತ್ತಣ ಪದಗಳಲ್ಲೂ ಇದೇ ಅಣ ಒಟ್ಟು ಬಂದಿದೆ. ಇಲ್ಲಿ ನಕಾರ ಣಕಾರ ಹೇಗಾಯಿತೆಂಬುದು ಸ್ಪಶ್ಟವಾಗಿಲ್ಲ.
(4) *ಅನ್ತ ಎಂಬುದು ತೆಂಕುದ್ರಾವಿಡದಲ್ಲಿ ಅನ್ಱ ಎಂಬುದಾಗಿ ಬದಲಾಗಿದ್ದು, ಕನ್ನಡದಲ್ಲಿ ಅದರ ಮೂಗುಲಿ ಬಿದ್ದುಹೋಗಿ ಅರ (<ಅಱ) ಎಂದಾಗಿದೆ. ಇದು ಕೆಳಗಿನ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. (ಕ) ಎಣಿಕೆಯ ಪದಗಳು (ಒಂದರ, ಎರಡರ, ಮೂರರ),
(ಚ) ಮನುಶ್ಯರನ್ನು ಬಿಟ್ಟು ಇತರರನ್ನು ಸೂಚಿಸುವ ತೋರುಗ
ಪದಗಳು (ಅದರ, ಇದರ, ಯಾವುದರ),
(ಟ) ತು, ತ್ತು, ಸು, ಟುಗಳಲ್ಲಿ ಕೊನೆಗೊಳ್ಳುವ ಮತ್ತು
ಪ್ರಮಾಣವನ್ನು ಸೂಚಿಸುವ ಪದಗಳು (ಅನಿತರ, ಅಶ್ಟರ),
(ತ) ತು, ತ್ತು, ದುಗಳಲ್ಲಿ ಕೊನೆಗೊಳ್ಳುವ ಗುಣಪದಗಳು (ಕಿರಿದರ,
ದೊಡ್ಡದರ),
(ಪ) ಉದು ಮತ್ತು ಅದುಗಳಲ್ಲಿ ಕೊನೆಗೊಳ್ಳುವ ಕ್ರಿಯಾರೂಪಗಳು
(ಮಾಡಿದುದರ, ಮಾಡುವದರ),
(ಗ) ಎಲ್ಲ ಎಂಬುದು (ಎಲ್ಲರ), ಮತ್ತು
(ಜ) ಏನ್ ಎಂಬುದು (ಏತಱ).
9.5.2 ವಿಬಕ್ತಿ ಒಟ್ಟುಗಳೊಂದಿಗಿನ ಬಳಕೆ
ಮೂಲದ್ರಾವಿಡದಲ್ಲಿ ವಿಬಕ್ತಿಯ ಒಟ್ಟುಗಳನ್ನು ನೇರವಾಗಿ ನಾಮಪದಗಳಿಗೆ ಸೇರಿಸುವ ಬದಲು ಅವುಗಳ ಸಂಬಂದ ರೂಪಕ್ಕೆ ಸೇರಿಸಲಾಗುತ್ತಿತ್ತೆಂದು ಮೇಲೆ ಸೂಚಿಸಲಾಗಿತ್ತು. ಮೂಲದ್ರಾವಿಡದ ವಿಬಕ್ತಿ ಒಟ್ಟುಗಳೆಲ್ಲ ನಾಮ ಪದಗಳ ಪಳೆಯಳಿಕೆಗಳಾಗಿದ್ದುದೇ ಇದಕ್ಕೆ ಕಾರಣವಿರಬೇಕು. ಈ ಕಾರಣ ಕ್ಕಾಗಿ, ಅವನ್ನು ನಾಮಪದಗಳ ಅನಂತರ ಬಳಸಬೇಕಾದಾಗಲೆಲ್ಲ ಆ ನಾಮ ಪದಗಳಿಗೆ ಸಂಬಂದದ ಒಟ್ಟನ್ನು ಸೇರಿಸಿ ಅವನ್ನು ವಿಶೇಶಣ ರೂಪಕ್ಕೆ ಬದಲಾಯಿಸಬೇಕಾಗಿತ್ತು.
ಮತ್ತು
ಜಾಗಗಳೆಂಬ ಉಳಿದ
ಹಳೆಗನ್ನಡದ ನಾಲ್ಕು ವಿಬಕ್ತಿಗಳಲ್ಲಿ ಆಗುಗವೊಂದನ್ನು ಬಿಟ್ಟು ಸುರು, ಕೊನೆ ಮೂರು ವಿಬಕ್ತಿಗಳು ಮೂಲದ್ರಾವಿಡದ ಈ ಬಳಕೆಯನ್ನು ಉಳಿಸಿಕೊಂಡಿವೆ. ಅವನ್ನು ಸೂಚಿಸುವ ಒಟ್ಟುಗಳನ್ನು ನಾಮಪದಗಳಿಗೆ ನೇರವಾಗಿ ಸೇರಿಸುವ ಬದಲು, ಅವುಗಳ ಸಂಬಂದರೂಪದೊಂದಿಗೆ ಸೇರಿಸಲಾಗುತ್ತದೆ. ಆದರೆ, ಆಗುಗ ಒಟ್ಟು ಮಾತ್ರ ನಾಮಪದಕ್ಕೆ ನೇರವಾಗಿ ಸೇರಿಕೊಳ್ಳುತ್ತದೆ.
ಸಂಬಂದ ಮಗನ
ಮಗನೊಳ್
ಕಿಚ್ಚಿನೊಳ್
ಆಟದೊಳ್
ಸುರು ಮಗನಿನ್
ಕಿಚ್ಚಿನಿನ್
ಕೊನೆ ಮಗಂಗೆ
ಮಗನನ್
ಕಿಚ್ಚನ್
ಆಟಮನ್
ಅದಱೂಳ್
ಅದಱಿನ್
ಎತ್ತಣಿನ್
ಮೇಲಿನ ಉದಾಹರಣೆಗಳಲ್ಲಿ ಕಾಣಿಸಿದ ಹಾಗೆ, ಜಾಗ, ಸುರು ಮತ್ತು ಕೊನೆಗಳನ್ನು ಸೂಚಿಸುವ ಒಳ್, ಇನ್ ಮತ್ತು ಗೆ ಒಟ್ಟುಗಳು ಸೇರಿದಾಗ, ನಾಮಪದಗಳ ಮುಂದೆ ಇನ್, ದ್, ಅಱ್ ಮತ್ತು ಅಣ್ ಎಂಬವುಗಳು ಬರುತ್ತವೆ.
ಸಂಬಂದಿಸುವ ಅ ಒಟ್ಟಿಗೂ ಈ ನಾಮಪದಗಳ ಅನಂತರ ಇನ್, ದ್, ಅಱ್ ಮತ್ತು ಅಣ್ ಸೇರಿರುವ ರೂಪಗಳಿರುವುದನ್ನು ಮೊದಲನೆಯ ಕಾಲಂನಲ್ಲಿ ಕಾಣಬಹುದು. ಹಾಗಾಗಿ, ಇಲ್ಲಿ ಜಾಗ, ಸುರು ಮತ್ತು ಕೊನೆ ಒಟ್ಟುಗಳು ನಾಮಪದಗಳಿಗೆ ನೇರವಾಗಿ ಸೇರುವ ಬದಲು ಸಂಬಂದಿಸುವ ಒಟ್ಟಿನ ಅನಂತರ ಸೇರುತ್ತವೆಯುಂದು ಹೇಳಲು ಸಾದ್ಯವಿದೆ.
ಆದರೆ, ಈ ನಾಮಪದಗಳಿಗೆ ಆಗುಗವನ್ನು ಸೂಚಿಸುವ ಅನ್ ಒಟ್ಟನ್ನು ಸೇರಿಸಿದಾಗ, ಇನ್, ದ್, ಅಱ್ ಮತ್ತು ಅಣ್ ಎಂಬವುಗಳು ಬರುವುದಿಲ್ಲ. ಆ ಒಟ್ಟನ್ನು ನಾಮಪದಗಳಿಗೆ ನೇರವಾಗಿ ಸೇರಿಸಲಾಗಿದೆ.
9.5.3 ಕನ್ನಡದ ಬದಲಾವಣೆಗಳು
ಸಂಬಂದಿಸುವ ಒಟ್ಟಿನ ರೂಪದಲ್ಲಿ ಮತ್ತು ಬಳಕೆಯಲ್ಲಿ ಕನ್ನಡದ ಒಳನುಡಿ ಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ಸೂಚಿಸಲಾಗಿದೆ.
(1) ಒಂಬತ್ತನೇ ಶತಮಾನಕ್ಕಿಂತಲೂ ಹಿಂದಿನ ಕನ್ನಡ ಬರಹಗಳಲ್ಲಿ ಸಂಬಂದದ ಒಟ್ಟಿಗೆ ಆ ಎಂಬ ಉದ್ದಸ್ವರವಿರುವ ರೂಪವಿತ್ತು. ಉದಾಹರಣೆಗಾಗಿ, ಆರನೆಯ ಶತಮಾನದ ಶಾಸನವೊಂದರಲ್ಲಿ ಬಂದಿರುವ ಏೞನೆಯಾ ನರಕದಾ ಪುೞು ಅಕ್ಕುಂ ವಾಕ್ಯವನ್ನು ಗಮನಿಸಬಹುದು.
(2) ಕರಾವಳಿಯ ಒಳನುಡಿಗಳಲ್ಲಿ ಸುರು ಮತ್ತು ಜಾಗಗಳನ್ನು ಸೂಚಿಸುವ ಒಟ್ಟುಗಳನ್ನು ನಾಮಪದಗಳಿಗೆ ನೇರವಾಗಿ ಸೇರಿಸಲಾಗುತ್ತದೆ. ಅವಕ್ಕೂ ನಾಮಪದಗಳಿಗೂ ನಡುವೆ ಸಂಬಂದಿಸುವ ಒಟ್ಟು ಬರುವುದಿಲ್ಲ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಪದರೂಪಗಳನ್ನು ಗಮನಿಸಬಹುದು.
(ಕ) ಸುರು ಒಟ್ಟು:
ಹವ್ಯಕ ಕನ್ನಡ ಮರಂದ
ಕಲ್ಲಿಂದ
ಮೆಡಿಂದ ಮನೆಂದ
(ಚ) ಜಾಗ ಒಟ್ಟು:
ಹವ್ಯಕ ಕನ್ನಡ ಮರಲ್ಲಿ
ಕಲ್ಲಿಲಿ
ಮೆಡಿಲಿ
ಮನೆಲಿ
ಬರಹ ಕನ್ನಡ ಮರದಿಂದ ಕಲ್ಲಿನಿಂದ ಮಿಡಿಯಿಂದ ಮನೆಯಿಂದ
ಬರಹ ಕನ್ನಡ ಮರದಲ್ಲಿ ಕಾಡಿನಲ್ಲಿ ಕಲ್ಲಿನಲ್ಲಿ ಮಿಡಿಯಲ್ಲಿ ಮನೆಯಲ್ಲಿ
ಬರಹ
ಕನ್ನಡದಲ್ಲಿ
ನಾಮಪದಗಳಿಗೆ ಇಂದ ಮತ್ತು ಅಲ್ಲಿ ಒಟ್ಟುಗಳನ್ನು ಸೇರಿಸುವ ಮೊದಲು ಅವಕ್ಕೆ ದ್, ಇನ್ ಮೊದಲಾದುವನ್ನು ಸೇರಿಸಬೇಕಾಗುತ್ತದೆ, ಹವ್ಯಕ ಕನ್ನಡದಲ್ಲಿ ಇದು ಅವಶ್ಯವಿಲ್ಲ ಎಂಬುದನ್ನು ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು.
ಆದರೆ, ಸಂಬಂದಿಸುವ ರೂಪದಲ್ಲಿ ಅ ಎಂಬುದರೊಂದಿಗೆ ಅರ್ ಎಂಬುದನ್ನು ಪಡೆಯುವ ನಾಮಪದಗಳಿಗೆ ಮಾತ್ರ ಹವ್ಯಕ ಕನ್ನಡದಲ್ಲೂ ಸುರು ಮತ್ತು ಜಾಗ ಒಟ್ಟುಗಳು ನೇರವಾಗಿ ಸೇರದೆ ಅರ್ ಎಂಬುದರ ಅನಂತರ (ಎಂದರೆ ನಾಮಪದಗಳ ಸಂಬಂದಿಸುವ ರೂಪದೊಂದಿಗೆ) ಸೇರುತ್ತವೆ. ಹವ್ಯಕ ಕನ್ನಡದ ಅದರಂದ, ಅದರಲ್ಲಿ, ಮೂರರಂದ,
ಮೂರರಲ್ಲಿ ಮೊದಲಾದ ರೂಪಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಸುಳ್ಯದ
ಪದರೂಪಗಳು ಬಳಕೆಯಲ್ಲಿವೆ (ಮರಂದ, ಏಣಿಂದ, ಅದರಂದ; ಮರಲಿ, ಏಣಿಲಿ,
ಕನ್ನಡದಲ್ಲೂ ಇಂತಹವೇ
ಗವ್ಡ
(3) ಬಡಗ ಕನ್ನಡದಲ್ಲಿಯೂ ಎಂದ (<ಇಂದ) ಒಟ್ಟನ್ನು ನಾಮಪದ ಗಳಿಗೆ ನೇರವಾಗಿ ಸೇರಿಸಲು ಸಾದ್ಯವಿದೆ. ಆದರೆ, ಆ ರೀತಿ ಪಡೆದ ಪದರೂಪಗಳನ್ನು ಅದರಲ್ಲಿ ಒಂದು ಕೆಲಸದ ‘ಕರಣ’ (2ಕ) ಇಲ್ಲವೇ ‘ಕಾರಣ’ವನ್ನು (2ಚ) ಸೂಚಿಸುವುದಕ್ಕಾಗಿ ಬಳಸಲಾಗುತ್ತದೆ. ‘ಚಲನೆಯ ಸುರು’ ಎಂಬ ಅರ್ತವನ್ನು ಕೊಡಬೇಕಾದಲ್ಲಿ ಮಾತ್ರ (2ತ) ಬರಹ ಕನ್ನಡದ ಹಾಗೆ ಇಂದ ಒಟ್ಟನ್ನು ಸಂಬಂದ ಒಟ್ಟಿನ ಅನಂತರ ಬಳಸಲಾಗುತ್ತದೆ.
(2ಕ) ಮೊರಾಂದ ಮನೆ ಕೆಟ್ಟು ‘ಮರದಿಂದ ಮನೆ ಕಟ್ಟು’ (2ಚ) ಅಮಗ ದನಾಂದ ಹಣ ಕಿಟ್ಟಿರ ‘ನಮಗೆ ದನದಿಂದ ಹಣ ಸಿಕ್ಕಿದೆ’
(2ತ) ಮೊರನಿಂದ ಹಣ್ಣು ಬುದ್ದ ‘ಮರದಿಂದ ಹಣ್ಣು ಬಿತ್ತು’
(4) ಕರಾವಳಿಯ ಒಳನುಡಿಗಳಲ್ಲಿ ನಾಮಪದಗಳಿಗೆ ಆಗುಗ ಒಟ್ಟನ್ನು ಸೇರಿಸುವ ಮೊದಲು ಇನ್ ಮತ್ತು ಅರ್ ಎಂಬವುಗಳನ್ನು (ಸಂಬಂದಿಸುವ ಒಟ್ಟನ್ನು) ಸೇರಿಸುವ ಅವಶ್ಯಕತೆಯಿದೆ. ಆದರೆ ಕನ್ನಡದ ಇತರ ಒಳನುಡಿ ಗಳಲ್ಲಿ ಇದು ಅವಶ್ಯವಿಲ್ಲ.
ಹವ್ಯಕ ಕನ್ನಡ
ಬರಹ ಕನ್ನಡ ಕಾಡನ್ನು
ಕಲ್ಲಿನ
ಹತ್ತರ
ಕಲ್ಲನ್ನು ಹತ್ತನ್ನು ಅದನ್ನು
ಇಂತಹ ಸಂದಭ್ರಗಳಲ್ಲಿ ಕರಾವಳಿಯ ಒಳನುಡಿಗಳು ಆಗುಗ ಒಟ್ಟನ್ನೂ ನೇರವಾಗಿ ನಾಮಪದಕ್ಕೆ ಸೇರಿಸದೆ ಅವುಗಳ ಸಂಬಂದ ರೂಪಕ್ಕೆ ಸೇರಿಸುತ್ತವೆಯುಂದು ಮತ್ತು ಈ ವಿಶಯದಲ್ಲಿ ಅವು ಮೂಲದ್ರಾವಿಡದ ಬಳಕೆಯನ್ನು ಉಳಿಸಿಕೊಂಡಿವೆಯುಂದು ಹೇಳಲು ಸಾದ್ಯವಿದೆ.
ಆದರೆ, ಅಕಾರದಲ್ಲಿ ಕೊನೆಗೊಳ್ಳುವ ಮರ, ಆಟ ಮೊದಲಾದ ಪದಗಳಿಗೆ ನೇರವಾಗಿಯೇ ಸೇರಿಸಲಾಗುತ್ತದೆ. ಇವುಗಳ ಆಗುಗರೂಪ ಮತ್ತು ಸಂಬಂದಿಸುವ ರೂಪಗಳ ನಡುವೆ ವ್ಯತ್ಯಾಸವಿದೆ.
ಆಗುಗ ಒಟ್ಟನ್ನು
ಹವ್ಯಕದಲ್ಲೂ
ಆಗುಗ ರೂಪ ಮರವ
ಬೀಜವ
ಸಂಬಂದಿಸುವ ರೂಪ ಮರದ
ಸುಳ್ಯದ ಗವ್ಡ ಕನ್ನಡದಲ್ಲೂ ಮರ ಪದದ ಆಗುಗ ರೂಪ ಮರನ
ಎಂದಿದೆ ಮತ್ತು ಸಂಬಂದಿಸುವ ರೂಪ ಮರದ ಎಂದಿದೆ.
(4) ಬಡಗ ಕನ್ನಡದಲ್ಲಿ ಸಂಬಂದಿಸುವ ಒಟ್ಟು ಬೇರೆ ಕೆಲವು ಬದಲಾ ವಣೆಗಳಿಗೊಳಗಾಗಿದೆ. ಅದರ ದ ರೂಪ ಆ ಒಟ್ಟಿನ ಅನಂತರ ಜಾಗವನ್ನು ಸೂಚಿಸುವ ವಿಬಕ್ತಿ ಒಟ್ಟು (ಒ (<ಒಳ್) ಎಂಬುದು ಬಂದಿರುವಲ್ಲಿ ಮಾತ್ರ) ಉಳಿದಿದೆ (ಕೂಟದೊ ‘ಕೂಟದಲ್ಲಿ’, ಮೊರದೊ ‘ಮರದಲ್ಲಿ’). ಉಳಿದೆಡೆಗಳಲ್ಲಿ ಅದಕ್ಕೆ ನ ರೂಪವಿದೆ (ಮೊರನ ‘ಮರದ’, ದನನಿಂದ ‘ದನದಿಂದ’).
ಇದಲ್ಲದೆ, ಉಕಾರದಲ್ಲಿ ಕೊನೆಗೊಳ್ಳುವ ನಾಮಪದಗಳ ಅನಂತರವೂ ಜಾಗ ಒಟ್ಟಿನೊಂದಿಗೆ ಬರುವ ಸಂಬಂದಿಸುವ ಒಟ್ಟಿಗೆ ಬಡಗ ಕನ್ನಡದಲ್ಲಿ ದ ರೂಪವಿದೆ (ಕಾಡುದೊ ‘ಕಾಡಿನಲ್ಲಿ’, ಕಣ್ಣುದೊ ‘ಕಣ್ಣಿನಲ್ಲಿ’).
9.6 ವಿಬಕ್ತಿ ಒಟ್ಟುಗಳು
ನಾಮಪದ ಮತ್ತು ಕ್ರಿಯಾಪದಗಳ ಸಂಬಂದಗಳನ್ನು ಸೂಚಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅಯ್ದು ವಿಬಕ್ತಿಗಳ ಬಳಕೆಯಾಗು ತ್ತಿದ್ದಿರಬೇಕೆಂದು ಕಲ್ಪಿಸಲಾಗಿದೆ. ಆಗುಗ, ಸುರು, ಕೊನೆ, ಜಾಗ ಮತ್ತು ಒಡನೆ ಎಂಬುದಾಗಿ ಈ ವಿಬಕ್ತಿಗಳನ್ನು ಹೆಸರಿಸಬಹುದು. ಇವುಗಳಲ್ಲಿ ಮೊದಲನೆಯ ನಾಲ್ಕು ವಿಬಕ್ತಿಗಳು ಮಾತ್ರ ಕನ್ನಡದಲ್ಲಿ ಉಳಿದಿವೆ.
ನಡುವಿರುವ
ನಾಮಪದಕ್ಕೆ ಎರಡು
ಈ ವಿಬಕ್ತಿಗಳನ್ನು ಸೂಚಿಸುವ ಒಟ್ಟುಗಳನ್ನು ನಾಮಪದಕ್ಕೆ ಸೇರಿಸುವ ಮೊದಲು, ಆ ನಡುವಿನ ಸಂಬಂದವನ್ನು ಸೂಚಿಸುವಂತಹ ಒಟ್ಟೊಂದನ್ನು ಸೇರಿಸುವ ಅವಶ್ಯಕತೆ ಮೂಲದ್ರಾವಿಡದಲ್ಲಿತ್ತು ಎಂಬುದನ್ನು ವಿವರಿಸಲಾಗಿದೆ.
ನಾಮಪದಗಳ
ಮೇಲೆ
9.6.2 ಒಟ್ಟುಗಳ ರೂಪದಲ್ಲಿ ಬದಲಾವಣೆಗಳು
ಮೂಲದ್ರಾವಿಡದಲ್ಲಿ ಆಗುಗ ಒಟ್ಟಿಗೆ ಅನ್ ಮತ್ತು ಅಯ್ ಎಂಬುದಾಗಿ ಎರಡು ರೂಪಗಳಿದ್ದುವೆಂದು ಕಲ್ಪಿಸಲಾಗಿದೆ. ಇವುಗಳಲ್ಲಿ ಮೊದಲನೆಯದು ಕನ್ನಡದಲ್ಲಿ ಉಳಿದುಕೊಂಡಿದೆ ಮತ್ತು ಎರಡನೆಯದು ತಮಿಳಿನಲ್ಲಿ ಉಳಿದು ಕೊಂಡಿದೆ (ಕನ್ನಡ: ಮಗನನ್; ತಮಿಳು: ಮಕನಯ್).
ಮನುಶ್ಯರನ್ನು ಹೊರತುಪಡಿಸಿ ಇತರರನ್ನು ಸೂಚಿಸುವ ನಾಮಪದಗಳ ಅನಂತರ ಈ ಒಟ್ಟನ್ನು ಬಳಸದಿದ್ದರೂ ಆಗಬಹುದು ಎಂಬುದು ಮೂಲದ್ರಾವಿಡದಲ್ಲೇನೇ ಇದ್ದಿರಬೇಕು. ಈ ವ್ಯವಸ್ತೆ ಕನ್ನಡದಲ್ಲೂ ಉಳಿದುಕೊಂಡಿದೆ.
(3ಕ) ಅವನೊಂದು ಕಾಗದ ಬರೆಯುತ್ತಿದ್ದಾನೆ
(3ಚ) ಅವನೊಬ್ಬ ಹುಡುಗನನ್ನು ಓಡಿಸುತ್ತಿದ್ದಾನೆ
(3ಕ)ದಲ್ಲಿ ಕಾಗದ ಎಂಬುದು ವಸ್ತುವನ್ನು ಸೂಚಿಸುವ ಕಾರಣ, ಅದರ ಅನಂತರ ಅನ್ನು ಒಟ್ಟು ಬಂದಿಲ್ಲ; ಆದರೆ (3ಚ)ದಲ್ಲಿ ಹುಡುಗ ಎಂಬುದು ಮನುಶ್ಯನನ್ನು ಸೂಚಿಸುವ ಕಾರಣ, ಅದರ ಅನಂತರ ಅನ್ನು ಬಂದಿದೆ (ಬಟ್ 2006:55 ನೋಡಿ).
ಕೊನೆ ಒಟ್ಟಿಗೆ ಮೂಲದ್ರಾವಿಡದಲ್ಲಿ *ನ್ಕ್್ಕ ಎಂಬ ರೂಪವಿದ್ದಿರ ಬೇಕೆಂದು ಕಲ್ಪಿಸಲಾಗಿದೆ. ಕನ್ನಡದಲ್ಲಿ ಇದಕ್ಕೆ ಕ್ಕೆ ಮತ್ತು ಗೆ ಎಂಬ ಎರಡು ರೂಪಗಳಿವೆ (ಮರಕ್ಕೆ, ಮನೆಗೆ).
ಇತರ ವಿಬಕ್ತಿ ಒಟ್ಟುಗಳಿಗೆ ಮೂಲದ್ರಾವಿಡದಲ್ಲಿ ಎಂತಹ ರೂಪವಿದ್ದಿರ
ಬಹುದು ಎಂಬುದಿನ್ನೂ ಸ್ಪಶ್ಟವಾಗಿಲ್ಲ.
9.6.2 ಕನ್ನಡದ ಬದಲಾವಣೆಗಳು
ಸೂಚಿಸುವ ಅನ್ ಒಟ್ಟಿಗೆ ಒಂಬತ್ತನೇ (1) ಆಗುಗವನ್ನು ಶತಮಾನಕ್ಕಿಂತಲೂ ಹಿಂದಿನ ಬರಹಗಳಲ್ಲಿ ಆನ್ ಎಂಬ ಉದ್ದ ಸ್ವರವಿರುವ ರೂಪವಿತ್ತು (ಇದಾನ್ ಅೞಿವೋನ್).
ಈ ಒಟ್ಟಿನ ಕೊನೆಯಲ್ಲಿ ಬರುವ ನಕಾರ ಹಳೆಗನ್ನಡದ ಕೆಲವು ಬಳಕೆಗಳಲ್ಲಿ ಬಿದ್ದುಹೋಗಿರುವುದನ್ನು ಕಾಣಬಹುದು (ತೆಂಕನಾಡಂ ಮರೆಯಲ್ಕೆ, ತೆಂಕನಾಡ ಮರೆಯಲ್ಕೆ).
ಕರಾವಳಿಯ ಕನ್ನಡ ಒಳನುಡಿಗಳಲ್ಲಿ ಆಗುಗ ಒಟ್ಟಿಗೆ ಇಂತಹ ನಕಾರ ಬಿದ್ದುಹೋಗಿರುವ ಅ ಎಂಬ ರೂಪವೇ ಇದೆ. ಆದರೆ ಇದರ ಅನಂತರ ಬೇರೆ ಒಟ್ಟು ಬಂದಾಗ, ಮೊದಲಿಗಿದ್ದ ಅನ್ ರೂಪ ಕಾಣಿಸಿಕೊಳ್ಳುತ್ತದೆ.
ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಆನೆಯ ನೋಡಿದೆ ‘ಆನೆ ಯನ್ನು ನೋಡಿದೆ’ ಎಂಬುದರಲ್ಲಿ ಆಗುಗವನ್ನು ಸೂಚಿಸಲು ಅ ಒಟ್ಟು ಬಂದಿದೆ, ಆದರೆ ಆನೆಯನ್ನುದೆ ನೋಡಿದೆ ‘ಆನೆಯನ್ನೂ ನೋಡಿದೆ’
ಎಂಬುದರಲ್ಲಿ ಅನ್ನು ಒಟ್ಟು ಬಂದಿದೆ. ಆಗುಗ ಒಟ್ಟಿನ ಅನಂತರ ಒತ್ತಿ ಹೇಳುವ ಉದೆ ಒಟ್ಟು ಬಂದಿರುವುದೇ ಇದಕ್ಕೆ ಕಾರಣ.
ಬಡಗ ಕನ್ನಡದಲ್ಲೂ ಆಗುಗ ಒಟ್ಟಿಗೆ ಅ ರೂಪವಿದೆ (ಅಮನ ‘ಅವ
ನನ್ನು’, ಕೂಸುನ ‘ಮಗುವನ್ನು’).
(2) ಸುರುವನ್ನು ಸೂಚಿಸುವ ಒಟ್ಟಿಗೆ ಹಳೆಗನ್ನಡದಲ್ಲಿ ಇನ್ ಮತ್ತು ಇಂದಂ (ಇಂದೆ) ಎಂಬ ರೂಪಗಳಿದ್ದುವು; ಇವುಗಳಲ್ಲಿ ಎರಡನೆಯದು ಹೊಸಗನ್ನಡದಲ್ಲಿ ಮಾತ್ರ ಉಳಿದುಕೊಂಡಿದೆ.
ರೂಪದಲ್ಲಿ)
ಇವತ್ತು
ಬಡಗ ಕನ್ನಡದಲ್ಲಿ ಇದು ಕರಣ ಇಲ್ಲವೇ ಕಾರಣವನ್ನು ಸೂಚಿಸುವ ಎಂದ ಮತ್ತು ಸುರುವನ್ನು ಸೂಚಿಸುವ ಇನ್ದ ಎಂಬ ಎರಡು ಒಟ್ಟುಗಳಾಗಿ ಒಡೆದಿದೆಯುಂಬುದನ್ನು ನೋಡಿರುವೆವು (ಮೊರಾಂದ : ಮೊರನಿಂದ; ಅವಾಂದ : ಅವ್ವಿಂದ; ನಿನ್ನೆಂದ : ನಿನ್ನಿಂದ).
ಮೇಲೆ
(3) ಜಾಗವನ್ನು ಸೂಚಿಸುವ ಒಟ್ಟಿಗೆ ಹಳೆಗನ್ನಡದಲ್ಲಿ ಒಳ(ಗೆ) ಮತ್ತು ಹಲವು
ಪದಗಳಿಂದ ಸಿದ್ದವಾದಂತಹ
ಅಲ್ಲಿ ಎಂಬ ಎರಡು ರೂಪಗಳಿದ್ದುವು (ಅಕ್ಕನೊಳ್, ನೀರಲ್ಲಿ).
ಇವುಗಳಲ್ಲಿ ಅಲ್ಲಿ ಎಂಬುದೇ ಇವತ್ತು ಹೊಸಗನ್ನಡದಲ್ಲಿ ಜಾಗವನ್ನು ಸೂಚಿಸುವ ಒಟ್ಟಾಗಿ ಬಳಕೆಯಲ್ಲಿದೆ (ಮನೆಯಲ್ಲಿ, ಕಾಡಿನಲ್ಲಿ). ಆದರೆ, ಬಡಗ ಒಳನುಡಿಯಲ್ಲಿ ಒಳ್ ರೂಪ ಒ ರೂಪಕ್ಕೆ ಬದಲಾಗಿ ಉಳಿದಿದೆ ‘ಕಿವಿಯಲ್ಲಿ’, (ಕಿವಿಯೂ ಮೊರದೊ ಕಾಡುದೊ ‘ಮರದಲ್ಲಿ’, ಮನೆಯೊ ‘ಮನೆಯಲ್ಲಿ’).
‘ಕಾಡಿನಲ್ಲಿ’,
9.7 ತಿರುಳು
ಮೂಲದ್ರಾವಿಡದಲ್ಲಿದ್ದ ನಾಮಪದಗಳ ಒಳರಚನೆ ಕನ್ನಡದಲ್ಲಿ ಹೇಗೆ ಉಳಿದುಕೊಂಡಿದೆ ಎಂಬುದನ್ನು ಮತ್ತು ಮೂಲದ್ರಾವಿಡ ನಾಮಪದಗಳ
ಪದರೂಪಗಳು ಕನ್ನಡದಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.
ಒಟ್ಟುಗಳನ್ನು ಇಲ್ಲವೇ
ನಾಮಪದಗಳನ್ನು ನಾಮಬೇರುಗಳಿಗೆ, ಕ್ರಿಯಾಬೇರುಗಳಿಗೆ ಇಲ್ಲವೇ ಮೂಲಕ ಗುಣಬೇರುಗಳಿಗೆ ಪಡೆಯಲಾಗುತ್ತಿತ್ತು ಹಾಗೆಯೇ ನಾಮಪದಗಳಾಗಿ ಬಳಸಲೂ ಸಾದ್ಯವಿತ್ತು. ಇದಲ್ಲದೆ, ನಾಮಪದ, ಕ್ರಿಯಾಪದ ಇಲ್ಲವೇ ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ರಚಿಸಿದ ಜೋಡುಪದಗಳನ್ನೂ ನಾಮಪದಗಳಾಗಿ ಬಳಸಲು ಸಾದ್ಯವಿತ್ತು. ಇವೆಲ್ಲಾ ವಿದಾನಗಳೂ ಕನ್ನಡದಲ್ಲಿ ಉಳಿದುಕೊಂಡಿವೆ.
ಸೇರಿಸುವುದರ ನಾಮಬೇರುಗಳನ್ನು
ಮಾಡಿಕೊಂಡಿದೆ. ಲಿಂಗಬೇದವನ್ನು
ನಾಮಪದಗಳಿಂದ ನಾಮರೂಪಗಳನ್ನು ಪಡೆಯುವಲ್ಲಿ ಕನ್ನಡ ಹಲವು ಮತ್ತು ಬದಲಾವಣೆಗಳನ್ನು ಅದರೊಂದಿಗೆ ಮತ್ತು ವಿಬಕ್ತಿ ಒಟ್ಟುಗಳನ್ನು ಬಳಸುವಲ್ಲಿ ಇಂತಹ ಬದಲಾವಣೆಗಳು ನಡೆದಿರುವುದನ್ನು ಕಾಣಬಹುದು.
ವಚನಬೇದವನ್ನು
ತೋರಿಸುವಲ್ಲಿ