Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
6. ಪದಗಳ ಒಳರಚನೆ
6.1 ಮುನ್ನೋಟ
ಮೂಲದ್ರಾವಿಡದಲ್ಲಿ ಮುಕ್ಯವಾಗಿ ಕ್ರಿಯಾಪದ, ನಾಮಪದ ಮತ್ತು ಗುಣಪದಗಳೆಂಬ ಮೂರು ರೀತಿಯ ಪದಗಳಿದ್ದಿರಬೇಕು. ಈ ಪದಗಳಿಗೆ ಕೆಲಸಗಳನ್ನು ತಿಳಿಸುವುದು (ಕ್ರಿಯಾಪದ), ಅಂತಹ ಕೆಲಸಗಳಲ್ಲಿ ತೊಡಗಿದ್ದ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದು (ನಾಮಪದ) ಮತ್ತು ಗುಣಗಳನ್ನು ಸೂಚಿಸುವುದು (ಗುಣಪದ) ಎಂಬುದಾಗಿ ಮೂರು ರೀತಿಯ ಕೆಲಸಗಳಿದ್ದುವು ಮತ್ತು ಇದಕ್ಕಾಗಿ ಅವು ಮೂರು ರೀತಿಯ ಅರ್ತಗಳನ್ನು ಮತ್ತು ಮೂರು ರೀತಿಯ ಒಳರಚನೆಗಳನ್ನು ಪಡೆದಿರಬೇಕಾಗಿತ್ತು.
ಇದಲ್ಲದೆ, ಈ ಮೂರು ರೀತಿಯ ಪದಗಳ ಒಳರಚನೆಯಲ್ಲೂ ನಾಮ ಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬ ಮೂರು ಬೇರೆ ಬೇರೆ ರೀತಿಯ ಬೇರುಗಳು ಬಳಕೆಯಾಗುತ್ತಿದ್ದಿರಬೇಕು. ಈ ಬೇರುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಅವನ್ನು ನೇರವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಾಗಿ ವಾಕ್ಯಗಳಲ್ಲಿ ಬಳಸಲು ಸಾದ್ಯವಿತ್ತಾದ ಕಾರಣ, ಅವಕ್ಕೆ ಮೇಲಿನ ಹೆಸರುಗಳನ್ನು ಕೊಡಲಾಗಿದೆ.
ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳಲು ಸಾದ್ಯವಿರುವಂತಹ ಕೆಲವು ಬೇರು
ಗಳನ್ನು ಕೆಳಗೆ ಉದಾಹರಣೆಗಳಾಗಿ ಕೊಡಲಾಗಿದೆ.
ಮೂಲದ್ರಾವಿಡದ ನಾಮಬೇರುಗಳು
*ಆಳ್ ‘ಆಳು’’
*ಕಣ್ ‘ಕಣ್ಣು’’
*ಇಲ್ ‘ಮನೆ’ *ಕುಪ್್ಪ ‘ರಾಶಿ’’
*ಕಾಯ್ ‘ಕಾಯಿ’’
*ಕಲ್ ‘ಕಲ್ಲು’ *ಕಾಲ್ ‘ಕಾಲು’
*ನಾಟ್ ‘ನಾಡು’
*ಪೆಣ್ ‘ಹೆಂಗಸು’’ *ಪುಲ್ ‘ಹುಲ್ಲು’
*ಕಳ್ ‘ಕಳ್ಳು’’ *ಕೂಟ್ ‘ಗೂಡು’’ *ಞಮ್ ‘ನವಿಲು’’ *ತೇರ್ ‘ತೇರು’ *ನೀರ್ ‘ನೀರು’
ಮೂಲದ್ರಾವಿಡದ ಕ್ರಿಯಾಬೇರುಗಳು *ಪಾಟ್ ‘ಹಾಡು’’ *ಪೂ ‘ಅರಳು’ *ಮೇಯ್ ‘ಮೇಯು’’ *ಚೊಲ್ ‘ಮಾತಾಡು’’ *ಕಪ್್ಪ ‘ಮುಚ್ಚು’ *ಆಱ್ ‘ಆರು’ *ನಿಱ್ ‘ತುಂಬು’’ *ಒ ‘ಒಪ್ಪು’
*ನಕ್್ಕ ‘ನಕ್ಕು’’
*ಕೆಯ್ ‘ಮಾಡು’’ *ಪೋ ‘ಹೋಗು’’ *ವಿಲ್ ‘ಮಾರು’
*ಕಾಣ್ ‘ಕಾಣು’’ *ಪಾರ್ ‘ನೋಡು’’ *ಕುೞ್ ‘ಹೊಂಡ’’
ಮೂಲದ್ರಾವಿಡದ ಗುಣಬೇರುಗಳು
*ಎಱ್ ‘ಕೆಂಪು’’ *ಕಿಱ್ ‘ಚಿಕ್ಕ’ *ಮೇ ‘ಮೇಲೆ’’
*ಪಚ್ ‘ಹಸುರು’’ *ಕರ್ ‘ಕಪ್ಪು’ *ಚೊಟ್್ಟ ‘ಕುಂಟು’’ *ನಲ್ ‘ಒಳ್ಳೆ’’
*ಕೀೞ್ ‘ಕೆಳಗೆ’’ *ಮುನ್ ‘ಮುಂದೆ’’ *ತಣ್ ‘ತಣ್ಣಗೆ’ *ತೇ ‘ಸಿಹಿ’ *ಕಯ್ ‘ಕಹಿ’’ *ಪಿನ್ ‘ಹಿಂದೆ’’ *ವೆಳ್ ‘ಬಿಳಿ’
ಈ ಮೂರು ರೀತಿಯ ಬೇರುಗಳು ಮಾತ್ರವಲ್ಲದೆ ಬೇರೆಯೂ ಕೆಲವು ರೀತಿಯ ಬೇರುಗಳು ಮತ್ತು ಪದಗಳು ಮೂಲದ್ರಾವಿಡದಲ್ಲಿದ್ದುವು. ಉದಾಹರಣೆಗಾಗಿ, ಆಡುಗ ಪದಗಳು, ತೋರುಗ ಪದಗಳು ಮತ್ತು ಎಣಿಕೆಯ ಪದಗಳು ಎಂಬಂತಹ ಮೂರು ರೀತಿಯ ಪದಗಳಿದ್ದು ಅವುಗಳಲ್ಲಿ ಮೂರು ರೀತಿಯ ಬೇರುಗಳು ಬಳಕೆಯಾಗುತ್ತಿದ್ದುವು. ಆದರೆ ಇವುಗಳಲ್ಲಿ ಪ್ರತಿಯೊಂದು ರೀತಿಯ ಪದಗಳಲ್ಲೂ ಕೆಲವೇ ಕೆಲವು ಬೇರುಗಳು ಮಾತ್ರ ಬಳಕೆಯಾಗುತ್ತಿದ್ದುವು.
ಉದಾಹರಣೆಗಾಗಿ, *ಆನ್, *ನೀನ್ ಮತ್ತು *ತಾನ್ ಎಂಬ ಮೂರು
ಬೇರುಗಳು ಮಾತ್ರ ಆಡುಗ ಪದಗಳಲ್ಲಿ ಬಳಕೆಯಾಗುತ್ತವೆ.
ಎಣಿಕೆಯ ಪದಗಳಲ್ಲಿ ಇದಕ್ಕಿಂತ ಸ್ವಲ್ಪ ಹೆಚ್ಚು, ಎಂದರೆ ಹನ್ನೊಂದು ಬೇರುಗಳಿವೆ. ವ್ಯಕ್ತಿ ಇಲ್ಲವೇ ವಸ್ತುಗಳ ಪ್ರಮಾಣವನ್ನು ಸೂಚಿಸುವ *ಕಿಲ್-ಅ ‘ಕೆಲವು’, *ಪಲ್-ಅ ‘ಹಲವು’, *ಎಲ್-ಅ ‘ಎಲ್ಲ’ ಮತ್ತು *ಕೊ-ಞ್್ಚ- ಗುಂಪಿನಲ್ಲಿರಿಸಬಹುದಾಗಿದ್ದು, ಇವುಗಳಲ್ಲಿ ಬೇರೆ ಕೆಲವು ಬೇರುಗಳು ಬಳಕೆಯಾಗಿವೆ.
ಪದಗಳನ್ನು
ಇನ್ನೊಂದು
ತೋರುಗ ಪದಗಳಲ್ಲಿಯೂ ಹೆಚ್ಚು ಬೇರುಗಳು ಬಳಕೆಯಾಗುವುದಿಲ್ಲ. ಅವನ್ನೆಲ್ಲ *ಆ, *ಈ, *ಊ ಮತ್ತು *ಯಾ ಎಂಬ ನಾಲ್ಕು ಬೇರುಗಳೊಂದಿಗೆ ಬೇರೆ ಬೇರೆ ಒಟ್ಟುಗಳನ್ನು ಸೇರಿಸಿ ರಚಿಸಲಾಗಿದೆ.
6.2 ಬೇರುಗಳ ಸ್ವರೂಪ
ಮೂಲದ್ರಾವಿಡ ಪದಗಳಲ್ಲಿ ಬರುವ ಬೇರುಗಳ ಕುರಿತು ಕೆಳಗೆ ಕೊಟ್ಟಿರು ವಂತಹ ಕೆಲವು ಸಾಮಾನ್ಯ ಸಂಗತಿಗಳನ್ನು ಕಲ್ಪಿಸಿಕೊಳ್ಳಲಾಗಿದೆ.
(1) ಈ ಬೇರುಗಳಲ್ಲಿ ಒಂದೇ ಒಂದು ಉಲಿಕಂತೆ ಮಾತ್ರ ಇದ್ದಿರಬೇಕು ಮತ್ತು ಆ ಉಲಿಕಂತೆಯಲ್ಲಿ ಒಂದು ಉದ್ದ ಇಲ್ಲವೇ ಗಿಡ್ಡ ಸ್ವರ ಅವಶ್ಯವಾಗಿಯೂ ಬಂದಿರಬೇಕು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಮೂಲದ್ರಾವಿಡ ಬೇರುಗಳನ್ನು ಗಮನಿಸಬಹುದು.
ಉದ್ದಸ್ವರವಿರುವ ಬೇರುಗಳು: *ಆಯ್ ‘ತಾಯಿ’, *ಕಾಲ್ ‘ಕಾಲು’,
*ಪೂ ‘ಹೂವು’.
ಗಿಡ್ಡಸ್ವರವಿರುವ ಬೇರುಗಳು: *ತೆನ್ ‘ತೆಂಕ’, *ಎಣ್ ‘ಎಣಿಸು’,
*ಕೊಲ್ ‘ಕೊಲ್ಲು’.
(2) ಈ ಸ್ವರದ ಮೊದಲು ಮತ್ತು ಅನಂತರ ವ್ಯಂಜನಗಳು ಬರುತ್ತಿರ ಬಹುದು ಇಲ್ಲವೇ ಅದರೊಂದಿಗೆ ಯಾವ ವ್ಯಂಜನವೂ ಬಾರದಿರಬಹುದು. ಬೇರುಗಳನ್ನು ಕೊಟ್ಟಿರುವ ಉದಾಹರಣೆಗಳಾಗಿ ಕೊಡಬಹುದು.
ಮೂಲದ್ರಾವಿಡ
ಕೆಳಗೆ
ಒಂದು ಸ್ವರ ಮಾತ್ರ ಇರುವ ಬೇರುಗಳು: *ಒ ‘ಒಪ್ಪು’, *ಈ
‘ಹಾರು’, *ಆ ‘ದನ’.
ಸ್ವರದ ಮೊದಲು ಒಂದು ವ್ಯಂಜನ ಬಂದಿರುವ ಬೇರುಗಳು: *ಪೊ
‘ತೂತು ಮಾಡು’, *ಕಾ ‘ಕಾಪಾಡು’, *ತೇ ‘ಸಿಹಿ’, *ಪೂ ‘ಹೂವು’.
ಸ್ವರದ ಅನಂತರ ಒಂದು ವ್ಯಂಜನ ಬಂದಿರುವ ಬೇರುಗಳು: *ಇರ್
‘ಇರು’, *ಏೞ್ ‘ತಿರುಗು’ *ಒರ್ ‘ಒಂದು’.
ಸ್ವರದ ಮೊದಲು ಒಂದು ವ್ಯಂಜನ ಮತ್ತು ಸ್ವರದ ಅನಂತರವೂ ಒಂದು ವ್ಯಂಜನ ಬಂದಿರುವ ಬೇರುಗಳು: *ಕಳ್ ‘ಕದಿ’, *ಕಾಣ್ ‘ಕಾಣು’, *ಪಾಱ್ ‘ಹಾರು’, *ತೇರ್ ‘ತೇರು’.
(3) ಮೂಲದ್ರಾವಿಡ ಬೇರುಗಳಲ್ಲಿ ಸ್ವರದ ಮೊದಲು ಒಂದು ವ್ಯಂಜನ ಮಾತ್ರ ಬರಬಲ್ಲುದು. ಇದು ಱ, ಟ, ರ, ಲ, ಳ ಇಲ್ಲವೇ ೞ ವ್ಯಂಜನಗಳನ್ನು ವ್ಯಂಜನವೂ ಆಗಿರಬಲ್ಲುದು: *ಕಣ್ ‘ಕಣ್ಣು’, *ಚೊಲ್ ‘ಮಾತನಾಡು’, *ತೆನ್ ‘ತೆಂಕು’, ಪಲ್ ‘ಹಲ್ಲು’, *ಞಂಟ್ ‘ಏಡಿ’, *ನಕ್್ಕ ‘ನಕ್ಕು’, *ಮೀನ್ ‘ಮೀನು’, *ಯಾನ್-(ಅಯ್) ‘ಆನೆ’, *ವಾಯ್ ‘ಬಾಯಿ’.
ಹೊರತುಪಡಿಸಿ
ಯಾವ
ಬೇರೆ
(4) ಬೇರುಗಳ ಮೊದಲಿಗೆ ವ್, ಯ್ ಇಲ್ಲವೇ ಞ್ ವ್ಯಂಜನ ಬಂದಿದೆಯಾದರೆ, ಅದರ ಅನಂತರ ಉಕಾರ ಮತ್ತು ಒಕಾರಗಳು ಬರಲಾರವು. ಯಕಾರ ಮತ್ತು ಞಕಾರಗಳು ಬಂದಿವೆಯಾದರೆ ಅವುಗಳ ಅನಂತರ ಅಕಾರ ವ್ಯತ್ಯಾಸಕ್ಕೆ ಮತ್ತು ಎಕಾರಗಳ ಅರ್ತವ್ಯತ್ಯಾಸವನ್ನು ಸೂಚಿಸುವ ಶಕ್ತಿಯಿಲ್ಲ.
ನಡುವಿನ
(5) ಬೇರುಗಳ ಕೊನೆಯಲ್ಲಿ ಞ ಮೂಗುಲಿಯೊಂದನ್ನು ಬಿಟ್ಟು ಬೇರೆ ಎಲ್ಲಾ ವ್ಯಂಜನಗಳೂ ಬರಬಲ್ಲುವು: *ಪಕ್-(ಅಲ್) ‘ಹಗಲು’, *ಕೆಚ್- (ಅಱ್) ‘ಕೆಸರು’, *ಒಟ್-(ಅಯ್) ‘ಒಡೆ’, *ಆಱ್ ‘ಆರು’, *ಕುತ್- (ಇ) ‘ನೆಗೆ’, *ಚುಪ್ ‘ಉಪ್ಪು’, *ಪೆಣ್ ‘ಹೆಣ್ಣು’, *ಇನ್ ‘ಸಿಹಿ’, *ಕೆಮ್ ‘ಕೆಂಪು’, *ಕೊಯ್ ‘ಕೊಯ್ಯು’, *ಪವ್-(ಅಳ್) ‘ಹವಳ’, *ಆಳ್ ‘ಆಳು’, *ಕಲ್ ‘ಕಲ್ಲು’, *ಕೀೞ್ ‘ಕೆಳಗೆ’, *ಪಾರ್ ‘ನೋಡು’.
(6) ಬೇರುಗಳ ಕೊನೆಯಲ್ಲಿ ಬರುವ ತಡೆಯುಲಿ ಒತ್ತೆ ರೂಪದಲ್ಲಿ
ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ ಇರಬಲ್ಲುದು.
ಉದಾಹರಣೆಗಾಗಿ, *ಕಟ್್ಟ ‘ಕಟ್ಟು’ ಎಂಬುದರ ಕೊನೆಯ ವ್ಯಂಜನ ಇಮ್ಮಡಿ ರೂಪದಲ್ಲಿದೆ, ಆದರೆ *ಕೆಟ್ ‘ಕೆಡು’ ಎಂಬುದರಲ್ಲಿ ಅದು ಒತ್ತೆ ರೂಪದಲ್ಲಿದೆ.
(7) ಸ್ವರದ ಅನಂತರ ಬೇರುಗಳ ಕೊನೆಯಲ್ಲಿ ಬಂದ ವ್ಯಂಜನ ತಡೆಯುಲಿಯಾಗಿದ್ದಲ್ಲಿ, ಅದರ ಅನಂತರ ಉಚ್ಚಾರಣೆಗಾಗಿ ಒಂದು ಉಕಾರ ಬಂದಿರುತ್ತದೆ.
ಉದಾಹರಣೆಗಾಗಿ, *ಇಟ್-ಉ ‘ಇಡು’, *ಆಟ್-ಉ ‘ಆಡು’, *ನಕ್್ಕ- ಉ ‘ನಕ್ಕು’, *ಅಮ್್ಪ-ಉ ‘ಅಂಬು’, *ವಿತ್್ತ-ಉ ‘ಬೀಜ’ ಮೊದಲಾದ ಬೇರುಗಳ ಕೊನೆಯಲ್ಲಿ ಇಂತಹ ಉಕಾರವಿದೆ. ಮೇಲೆ ಕೊಟ್ಟಿರುವ ಉದಾ ಹರಣೆಗಳಲ್ಲಿ ಉಚ್ಚಾರಣೆಗಾಗಿ ಬರುತ್ತಿದ್ದ ಈ ಉಕಾರವನ್ನು ತೋರಿಸಿಲ್ಲ.
ಮೂಲದ್ರಾವಿಡದ ಈ
ಮುಕ್ಯವಾಗಿ ಕ್ರಿಯಾಬೇರುಗಳ ಮೇಲಿನ ಸಂಶೋದನೆಯ ಮೇಲೆ ಅವಲಂಬಿಸಿದೆ. ನಾಮ
ಬೇರುಗಳ
ಸ್ವರೂಪ
ಮತ್ತು ಗುಣಬೇರುಗಳ ಕುರಿತಾಗಿ ಹೆಚ್ಚಿನ ಸಂಶೋದನೆ ನಡೆದಿಲ್ಲ. ಹಾಗಾಗಿ, ಅವುಗಳ ಸ್ವರೂಪ ಇದಕ್ಕಿಂತ ಬೇರಾಗಿರಲೂ ಸಾದ್ಯವಿದೆ.
ನಾಮಬೇರುಗಳಿಗೂ ಕ್ರಿಯಾಬೇರುಗಳಿಗೂ ನಡುವೆ ಕಾಣಿಸುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಕ್ರಿಯಾಬೇರುಗಳಲ್ಲಿ ಹೆಚ್ಚಿನವೂ ಅವುಗಳ ಬೇರಿನ ರೂಪದಲ್ಲೇ ಒಂದಲ್ಲ ಒಂದು ದ್ರಾವಿಡ ನುಡಿಯಲ್ಲಿ ಬಳಕೆಯಾಗು ತ್ತಿರುತ್ತವೆ. ಇದಲ್ಲದೆ, ಅವುಗಳಿಂದ ಪಡೆಯಲಾಗುವ ನಾಮಪದ ಮತ್ತು ಗುಣಪದಗಳಲ್ಲೂ ಬೇರು ಮತ್ತು ಒಟ್ಟುಗಳ ನಡುವಿನ ವ್ಯತ್ಯಾಸ ಸ್ಪಶ್ಟವಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಅವುಗಳ ಬೇರಿನ ಸ್ವರೂಪವನ್ನು ತಿಳಿಯಲು ಮತ್ತು ಒಟ್ಟುಗಳಿಂದ ಅದನ್ನು ಬೇರ್ಪಡಿಸಲು ಕಶ್ಟವಾಗುವುದಿಲ್ಲ.
ಆದರೆ, ಹೆಚ್ಚಿನ ನಾಮಪದಗಳೂ ಇವತ್ತಿನ ದ್ರಾವಿಡ ನುಡಿಗಳಲ್ಲಿ ಅವುಗಳ ಪೂರ್ಣರೂಪದಲ್ಲಿ, ಎಂದರೆ ಬೇರು ಮತ್ತು ಒಟ್ಟುಗಳು ಸೇರಿ ಬರುತ್ತವೆ. ಬೇರುಗಳನ್ನು ಒಟ್ಟುಗಳಿಂದ ಬೇರ್ಪಡಿಸುವ ಕೆಲಸ ಅಶ್ಟೊಂದು ಸುಲಬವಲ್ಲ.
ಹಾಗಾಗಿ ಅವುಗಳಲ್ಲಿ
ಉದಾಹರಣೆಗಾಗಿ, ಕನ್ನಡದ ಹಂದಿ, ತಮಿಳಿನ ಪನ್ಱಿ, ತುಳುವಿನ ಪಂಜಿ, ಗೋಂಡಿಯ ಪದ್ದಿ, ಪೆಂಗೋವಿನ ಪಂಜಿ, ಕೂಯಿಯ ಪಜಿ ಪದಗಳನ್ನು ಹೋಲಿಸುವ ಮೂಲಕ ಮೂಲದ್ರಾವಿಡದಲ್ಲಿ ಪನ್ಱಿ ನಾಮಪದವಿದ್ದಿರಬೇಕೆಂದು ಕಲ್ಪಿಸಿಕೊಳ್ಳಬಹುದು. ಆದರೆ, ಇದರಲ್ಲಿ ನಾಮಬೇರು ಯಾವ ರೂಪದ್ದು (ಪನ್ ಎಂಬುದೇ ಇಲ್ಲವೇ *ಪನ್ಱ್ ಎಂಬುದೇ) ಎಂಬ ವಿಶಯದಲ್ಲಿ ಒಂದು ನಿರ್ದಾರಕ್ಕೆ ಬರಲು ಇವತ್ತಿನ ದ್ರಾವಿಡ ನುಡಿಗಳಲ್ಲಿ ಯಾವ ಆದಾರವೂ ಸಿಗುವುದಿಲ್ಲ.
ಇದಲ್ಲದೆ, ಕ್ರಿಯಾಬೇರುಗಳಿಂದ ಬೇರೆ ಬೇರೆ ಒಟ್ಟುಗಳನ್ನು ಬಳಸಿ ಹಲವಾರು ನಾಮಪದ ಮತ್ತು ಗುಣಪದಗಳನ್ನು ತಯಾರಿಸಲು ಸಾದ್ಯ, ಆದರೆ ನಾಮಬೇರುಗಳಿಂದ ಒಟ್ಟುಗಳನ್ನು ಬಳಸಿ ಬೇರೆ ನಾಮಪದ, ಗುಣಪದ ಇಲ್ಲವೇ ಕ್ರಿಯಾಪದಗಳನ್ನು ಬಹಳ ಅಪರೂಪವಾಗಿ ಮಾತ್ರವೇ ತಯಾರಿಸಲಾಗುತ್ತದೆ.
ನಾಮಬೇರುಗಳ
ಹೀಗಿದ್ದರೂ, ಕ್ರಿಯಾಬೇರುಗಳ ವಿವರಿಸಿದಂತಹ ಇದ್ದಿರಬಹುದು ಎಂಬುದಾಗಿ ಸದ್ಯಕ್ಕೆ ಕಲ್ಪಿಸಿಕೊಳ್ಳಲಾಗಿದೆ.
ಮೂಲಸ್ವರೂಪದ
ಮೂಲಸ್ವರೂಪ
ಮೇಲೆ ಹಾಗೆಯೇ
ಬೇರುಗಳ
ರೂಪದಲ್ಲೇನೇ
ಗುಣಬೇರುಗಳು
ಕ್ರಿಯಾಬೇರುಗಳ
ಮೂಲದ್ರಾವಿಡದ
ನಾಮಪದಗಳೊಂದಿಗೆ
ಸುಲಬವಾಗಿ ಒಟ್ಟುಗಳಿಂದ ಬೇರ್ಪಡಿಸಲು ಸಾದ್ಯವಾಗುವಂತಹವಾಗಿವೆ. ಜೋಡುಪದಗಳಲ್ಲಿ ಬರುವುವಾದ ಕಾರಣ, ಈ ಕೆಲಸ ಸುಲಬವಾಗುತ್ತದೆ. ಉದಾಹರಣೆಗಾಗಿ, ಪೆರ್ಮರ, ಚೆಂಗೊರಲ್, ಕೇಸಕ್ಕಿ, ಬೆಳ್ಗಡಲ್, ಒಳ್ಗರುಳ್, ನಲ್ಲುಣಿಸು ಕನ್ನಡದ ಜೋಡುಪದಗಳಲ್ಲಿ ಗುಣಬೇರುಗಳನ್ನು ಸುಲಬವಾಗಿ ಬೇರ್ಪಡಿಸಬಹುದು. ಇವುಗಳ ಮೂಲಸ್ವರೂಪ ಮೇಲೆ ವಿವರಿಸಿದಂತಹ ಕ್ರಿಯಾಬೇರುಗಳ ಮೂಲ ಸ್ವರೂಪದ ಹಾಗೆಯೇ ಇದೆಯುಂಬುದನ್ನು ಇಲ್ಲಿ ಗಮನಿಸಬಹುದು.
ಮೊದಲಾದ
ತಣ್ಣೆಲರ್,
6.3 ಉಲಿಕಂತೆಗಳಲ್ಲಿ ಹಗುರ ಮತ್ತು ತೂಕ
ಮೂಲದ್ರಾವಿಡದ ಉಲಿಕಂತೆಗಳನ್ನು ಹಗುರದವು ಮತ್ತು ತೂಕದವು ಎಂಬುದಾಗಿ ಎರಡು ರೀತಿಯವುಗಳೆಂದು ವಿಂಗಡಿಸುವ ಅವಶ್ಯಕತೆಯಿದೆ ಎಂಬುದನ್ನು ನೋಡಿರುವೆವು. ಪದರಚನೆಯಲ್ಲಿ ಕಾಣಿಸುವ ಹಲವು ಸೇರಿಕೆಯ ನಿಯಮಗಳು ಮತ್ತು ಪದಗಳ ಚರಿತ್ರೆಯಲ್ಲಿ ಕಾಣಿಸುವ ಹಲವು ಬದಲಾವಣೆಗಳು ಈ ಹಂಚಿಕೆಯನ್ನವಲಂಬಿಸಿವೆ.
ಮೇಲೆ
ನಾವು
ಉದ್ದಸ್ವರವಿರುವ ಉಲಿಕಂತೆಗಳು ಮತ್ತು ಒಂದು ವ್ಯಂಜನದಲ್ಲಿ ಕೊನೆ ತೂಕದವು; ಉಳಿದ ಉಲಿಕಂತೆಗಳೆಲ್ಲ ಗೊಳ್ಳುವ ಉಲಿಕಂತೆಗಳು ಹಗುರದವು. ಉಲಿಕಂತೆಗಳ ಮೊದಲಿಗೆ ಬರುವ ವ್ಯಂಜನಕ್ಕೆ ಅವುಗಳ ಈ ಹಂಚಿಕೆಯಲ್ಲಿ ಯಾವ ಕೆಲಸವೂ ಇಲ್ಲ.
ಉದಾಹರಣೆಗಾಗಿ,
ಉಲಿಕಂತೆಗಳಿದ್ದು (ಕೆ ಮತ್ತು ಡು) ಅವೆರಡೂ ಹಗುರ ಉಲಿಕಂತೆಗಳು.
ಪದದಲ್ಲಿ
ಇದೇ ರೀತಿಯಲ್ಲಿ *ಇಟು ‘ಇಡು’ ಪದದಲ್ಲೂ ಎರಡು ಉಲಿಕಂತೆಗಳಿದ್ದು (ಇ ಮತ್ತು ಡು) ಅವೆರಡೂ ಹಗುರದವೇ. ಆದರೆ, *ಕಟ್ಟು ಪದದಲ್ಲಿರುವ ಎರಡು (ಕಟ್ ಮತ್ತು ಟು) ಉಲಿಕಂತೆಗಳಲ್ಲಿ ಮೊದಲನೆಯದು ತೂಕದ ಉಲಿಕಂತೆ ಮತ್ತು ಎರಡನೆಯದು ಹಗುರದ ಉಲಿಕಂತೆ. *ಈ ‘ನೊಣ’, *ಅಲ್ ‘ಅಲ್ಲ’, *ಕಲ್ ‘ಕಲ್ಲು’, *ಆಳ್ ‘ಆಳು’, *ಕೇಳ್ ‘ಕೇಳು’ ಮೊದಲಾದ ಪದಗಳಲ್ಲಿ ಒಂದೇ ಉಲಿಕಂತೆಯಿದ್ದು ಅವೆಲ್ಲವುಗಳಲ್ಲೂ ಅದು ತೂಕದ ಉಲಿಕಂತೆಯಾಗಿದೆ.
ಒಂದು ಪದದಲ್ಲಿ ಬರುವ ಬೇರು ಮತ್ತು ಒಟ್ಟುಗಳ ನಡುವಿನ ವಿಂಗಡಣೆಗೂ ಅದರ ಉಲಿಕಂತೆಗಳ ನಡುವಿನ ವಿಂಗಡಣೆಗೂ ನಡುವೆ ಯಾವ ಸಂಬಂದವೂ ಇಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ತೂಕದ ಮತ್ತು ಹಗುರದ ಉಲಿಕಂತೆಗಳು ಪದಗಳ ‘ರಚನೆ’ಯನ್ನು ವಿವರಿಸುವಲ್ಲಿ ಬಳಕೆಯಾಗುತ್ತವೆ ಮತ್ತು ಬೇರು-ಒಟ್ಟುಗಳು ಅವುಗಳ ‘ಒಳರಚನೆ’ಯನ್ನು ವಿವರಿಸುವಲ್ಲಿ ಬಳಕೆಯಾಗುತ್ತವೆ.
ಉದಾಹರಣೆಗಾಗಿ, *ಪಕಲ್ ‘ಹಗಲು’ ಪದದ ರಚನೆಯಲ್ಲಿ ಪ ಮತ್ತು ಕಲ್ ಎಂಬ ಎರಡು ಉಲಿಕಂತೆಗಳನ್ನು ಕಾಣಬಹುದು. ಆದರೆ ಅದೇ ಪದದ ಒಳರಚನೆಯಲ್ಲಿ *ಪಕ್ ಬೇರಿನ ಅನಂತರ *ಅಲ್ ಒಟ್ಟು
6.4 ಪದರಚನೆಯಲ್ಲಿ ಬೇರುಗಳ ಬಳಕೆ
ಮೇಲೆ ಸೂಚಿಸಿದ ಮೂರು ರೀತಿಯ ಬೇರುಗಳು (ನಾಮಬೇರು, ಕ್ರಿಯಾ ಬೇರು ಮತ್ತು ಗುಣಬೇರು) ಮೂಲದ್ರಾವಿಡ ಪದಗಳ ಒಳರಚನೆಯಲ್ಲಿ ಹೇಗೆ ಬಳಕೆಯಾಗುತ್ತಿದ್ದುವು ಎಂಬ ವಿಶಯದಲ್ಲಿ ಇನ್ನೂ ಬಹಳಶ್ಟು ಸಂಶೋದನೆಗಳನ್ನು ನಡೆದ ಸಂಶೋದನೆಗಳಲ್ಲಿ ಹೆಚ್ಚಿನವೂ ಕ್ರಿಯಾಬೇರುಗಳನ್ನು ಬಳಸಿ ಕ್ರಿಯಾಪದ, ನಾಮಪದ ಇಲ್ಲವೇ ಗುಣಪದಗಳನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಮಾತ್ರವೇ ವಿವರಿಸಲು ಪ್ರಯತ್ನಿಸಿವೆ.
ನಡೆಸಬೇಕಾಗಿದೆ.
ಇದುವರೆಗೆ
ಕ್ರಿಯಾಬೇರುಗಳಿಗಿಂತ ಬೇರಾಗಿರುವ ಹಲವಾರು ನಾಮಬೇರುಗಳು ಮತ್ತು ಗುಣಬೇರುಗಳು ಮೂಲದ್ರಾವಿಡದಲ್ಲಿ ಇದ್ದುವಾದ ಕಾರಣ ಮತ್ತು ಅವನ್ನು ಬಳಸಿಯೂ ಕ್ರಿಯಾಪದಗಳನ್ನು (ಇಲ್ಲವೇ ನಾಮಪದಗಳನ್ನು ಮತ್ತು ಪಡೆಯಲು ಮೂಲದ್ರಾವಿಡದಲ್ಲಿ ಆ ರೀತಿಯ ಪದಗಳ ರಚನೆ ಹೇಗಿದ್ದಿರಬಹುದು ಮತ್ತು ಅದು ಹೇಗೆ ಇವತ್ತಿನ ದ್ರಾವಿಡ ನುಡಿಗಳಲ್ಲಿ ಉಳಿದುಕೊಂಡಿದೆ ಎಂಬುದನ್ನೂ ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಗುಣಪದಗಳನ್ನು)
ಸಾದ್ಯವಿತ್ತಾದ
ಮೇಲೆ
ಈ ವಿಶಯದ
ಹೆಚ್ಚಿನ ಒತ್ತು
ಕೊಡುವುದಕ್ಕಾಗಿ ಮೂಲದ್ರಾವಿಡದ ಕ್ರಿಯಾಪದಗಳ, ನಾಮಪದಗಳ ಮತ್ತು ಗುಣಪದಗಳ ರಚನೆಯಲ್ಲಿ ಈ ಮೂರು ಬೇರೆ ಬೇರೆ ರೀತಿಯ ಬೇರುಗಳ ಬಳಕೆ ಹೇಗೆ ನಡೆದಿರಬಹುದು ಮತ್ತು ಕನ್ನಡ ಆ ಬಳಕೆಯನ್ನು ಯಾವ ರೀತಿಯಲ್ಲಿ ಉಳಿಸಿಕೊಂಡಿದೆ ಎಂಬುದನ್ನು ಮೂರು ಬೇರೆ ಬೇರೆ ಅದ್ಯಾಯಗಳಲ್ಲಿ (ಏಳು, ಒಂಬತ್ತು ಮತ್ತು ಹನ್ನೊಂದನೇ ಅದ್ಯಾಯಗಳಲ್ಲಿ) ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
6.5 ತಿರುಳು
ಈ ಅದ್ಯಾಯದಲ್ಲಿ ಮೂಲದ್ರಾವಿಡದಲ್ಲಿ ಬಳಕೆಯಾಗುತ್ತಿದ್ದ ಬೇರುಗಳ ಸ್ವರೂಪವೆಂತಹದು ಎಂಬುದನ್ನು ಮತ್ತು ಪದರಚನೆಯಲ್ಲಿ ಅವುಗಳ ಬಳಕೆ ಹೇಗಿದ್ದಿರಬಹುದು ಎಂಬುದನ್ನು ಬಹಳ ಚುಟುಕಾಗಿ ವಿವರಿಸಲಾಗಿದೆ.
ನಾಮಬೇರು, ಕ್ರಿಯಾಬೇರು ಮತ್ತು ಗುಣಬೇರು ಎಂಬುದಾಗಿ ಮೂರು ಮುಕ್ಯ ಗುಂಪುಗಳಲ್ಲಿ ಹಂಚಿಕೆಯಾಗಬಲ್ಲ ಬೇರುಗಳು ಮೂಲದ್ರಾವಿಡ ದಲ್ಲಿದ್ದಿರಬೇಕು. ಕನ್ನಡದಲ್ಲೂ ಈ ಮೂರು ರೀತಿಯ ಬೇರುಗಳು ಬಳಕೆ ಯಲ್ಲಿವೆ.
ಮೇಲೆ ಸೂಚಿಸಿದ ಹಾಗೆ, ಈ ಮೂರು ರೀತಿಯ ಬೇರುಗಳು ಮತ್ತು ಬೇರೆ ಕೆಲವು ರೀತಿಯ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಬರುವ ಬೇರುಗಳು ಪದರಚನೆಯಲ್ಲಿ ಹೇಗೆ ಬಳಕೆಯಾಗುತ್ತವೆ, ಅವುಗಳ ಬಳಕೆಯಲ್ಲಿ ಕನ್ನಡ
ಎಂತಹ ಬದಲಾವಣೆಗಳನ್ನೆಲ್ಲ ಮಾಡಿಕೊಂಡಿದೆ ಎಂಬುದನ್ನು ಹೆಚ್ಚು ವಿವರವಾಗಿ ಮುಂದಿನ ಅದ್ಯಾಯಗಳಲ್ಲಿ ಸೂಚಿಸಲಾಗುವುದು.