Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
12. ವಾಕ್ಯಗಳ ಒಳರಚನೆ
12.1 ಮುನ್ನೋಟ
ಮೂಲದ್ರಾವಿಡದ ವಾಕ್ಯರಚನೆಯ ವಿಶಯವಾಗಿ ಹೆಚ್ಚಿನ ಸಂಶೋದನೆಗ ಳಿನ್ನೂ ನಡೆಯಬೇಕಾಗಿದೆ. ಅದಕ್ಕೆ ಮೊದಲು, ಇವತ್ತಿನ ದ್ರಾವಿಡ ನುಡಿಗಳಲ್ಲಿ ಮತ್ತು ಒಳನುಡಿಗಳಲ್ಲಿ ಎಂತಹ ವಾಕ್ಯರಚನೆಯಿದೆ ಮತ್ತು ಈ ವಿಶಯದಲ್ಲಿ ಅವುಗಳ ನಡುವೆ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಅದರಲ್ಲಿ ಕೆಲಸಗಳನ್ನು ತಿಳಿಸುವ ವಾಕ್ಯಗಳು ಮತ್ತು ಸಂಗತಿಗಳನ್ನು ತಿಳಿಸುವ ವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ (1ಕ) ವಾಕ್ಯ ಒಂದು ಕೆಲಸ (ಮರಕ್ಕೆ ಹತ್ತುವುದು) ನಡೆದಿರುವುದನ್ನು ತಿಳಿಸುತ್ತದೆ ಮತ್ತು (1ಚ) ವಾಕ್ಯ ಒಂದು ಸಂಗತಿಯ ಇರುವಿಕೆಯನ್ನು (ಶಾಲೆಗೆ ರಜೆ ಇರುವುದನ್ನು) ತಿಳಿಸುತ್ತದೆ.
(1ಕ) ಹುಡುಗ ಮರಕ್ಕೆ ಹತ್ತಿದ. (1ಚ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇದೆ.
ಕೆಲಸಗಳನ್ನು ಇಲ್ಲವೇ ಸಂಗತಿಗಳನ್ನು ತಿಳಿಸುವುದಕ್ಕಾಗಿ ಮಾತ್ರವಲ್ಲದೆ, ಅವನ್ನು ಅಲ್ಲಗಳೆಯುವುದು, ಅವುಗಳ ಕುರಿತಾಗಿ ಆಶ್ಚರ್ಯ ಸೂಚಿಸುವುದು, ಸಂಶಯ ಸೂಚಿಸುವುದು, ಪ್ರಶ್ನಿಸುವುದು, ಇನ್ನೊಬ್ಬರಿಂದ ಅವನ್ನು ಮಾಡಿ
ಸುವುದು, ಮೊದಲಾದ ಬೇರೆ ಹಲವಾರು ರೀತಿಯ ಮಾತಿನ ಕೆಲಸಗಳಲ್ಲೂ ಇಂತಹ ವಾಕ್ಯಗಳನ್ನು ಬಳಸಲು ಸಾದ್ಯವಿದ್ದು, ಅದಕ್ಕಾಗಿ ಈ ವಾಕ್ಯಗಳ ಕೊನೆಯಲ್ಲಿ ಬೇರೆ ಬೇರೆ ರೀತಿಯ ಕ್ರಿಯಾರೂಪಗಳನ್ನು ಬಳಸಬೇಕಾಗು ತ್ತದೆ (ಹೆಚ್ಚಿನ ವಿವರಗಳಿಗೆ ಬಟ್ 2006 ನೋಡಿ).
(2ಕ) ಹುಡುಗ ಮರಕ್ಕೆ ಹತ್ತಲಿಲ್ಲ. (2ಚ) ಹುಡುಗ ಮರಕ್ಕೆ ಹತ್ತಿದನೋ? (2ಟ) ಹುಡುಗ ಮರಕ್ಕೆ ಹತ್ತಲಿ. (2ತ) ಹುಡುಗ ಮರಕ್ಕೆ ಹತ್ತಬಾರದು. (2ಪ) ಹುಡುಗ ಮರಕ್ಕೆ ಹತ್ತಬಹುದು.
(3ಕ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇಲ್ಲ. (3ಚ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ ಇದೆಯೋ? (3ಟ) ಮಕ್ಕಳಿಗೆ ಇವತ್ತು ಶಾಲೆಗೆ ರಜೆಯಿರಬಹುದು. (3ತ) ಮಕ್ಕಳಿಗೆ ಇವತ್ತು ಶಾಲೆಗೆ ರಜೆಯಿರಲಾರದು.
ಕೆಲಸಗಳನ್ನು
ಸೂಚಿಸುವುದಕ್ಕಾಗಿ
ಕನ್ನಡದಲ್ಲಿ ಕ್ರಿಯಾರೂಪಗಳ ಬಳಕೆಯಾಗುತ್ತದೆ ಮತ್ತು ಕೆಲಸಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಇಲ್ಲವೇ ನಾಮರೂಪಗಳ ಬಳಕೆಯಾಗುತ್ತದೆ.
ಗುರುತಿಸುವುದಕ್ಕಾಗಿ
ವಿಶಯಗಳನ್ನು
ಉದಾಹರಣೆಗಾಗಿ, ಮೇಲೆ (2ಕ) ವಾಕ್ಯದಲ್ಲಿ ಕೆಲಸವನ್ನು ಹತ್ತು ಕ್ರಿಯಾಪದದ ಹತ್ತಲಿಲ್ಲ ಕ್ರಿಯಾರೂಪ ತಿಳಿಸುತ್ತದೆ, ಮತ್ತು ಆ ಕೆಲಸದಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಹುಡುಗ ಮತ್ತು ಮರ ಎಂಬ ನಾಮಪದಗಳ ನಾಮರೂಪಗಳು ತಿಳಿಸುತ್ತವೆ.
ಕೆಲಸಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿದಾನಗಳ ಮೂಲಕ ಗುರುತಿಸಲು ಕೆಲಸವನ್ನು ನಾಮಪದಗಳ ಮೂಲಕ ನಡೆಸಲಾಗುತ್ತದೆ ಮತ್ತು ವರ್ಣಿಸುವ ಕೆಲಸವನ್ನು
ಸಾದ್ಯವಿದೆ. ಇವುಗಳಲ್ಲಿ
ಹೆಸರಿಸುವ
ನಾಮಪದಗಳೊಂದಿಗೆ ಗುಣಪದಗಳನ್ನು ಸೇರಿಸಿ ರಚಿಸಿದ ಪದಕಂತೆಗಳ ಮೂಲಕ ಮಾಡಲಾಗುತ್ತದೆ.
(4) ಚಿಕ್ಕ ಹುಡುಗ ದೊಡ್ಡ ಮರಕ್ಕೆ ಹತ್ತಿದ.
(4)ನೇ ವಾಕ್ಯದಲ್ಲಿ ಚಿಕ್ಕ ಹುಡುಗ ಮತ್ತು ದೊಡ್ಡ ಮರ ಎಂಬ ಎರಡು ಪದಕಂತೆಗಳ ಮೂಲಕ ಹತ್ತುವ ಕೆಲಸದಲ್ಲಿ ತೊಡಗಿದ ವ್ಯಕ್ತಿ ಪದಕಂತೆಗಳನ್ನು ಮತ್ತು ರಚಿಸುವುದಕ್ಕಾಗಿ ಹುಡುಗ ಮತ್ತು ಮರ ಪದಗಳೊಂದಿಗೆ ಚಿಕ್ಕ ಮತ್ತು ದೊಡ್ಡ ಗುಣಪದಗಳನ್ನು ಸೇರಿಸಲಾಗಿದೆ.
ಗುರುತಿಸಲಾಗಿದೆ. ಈ
ವಸ್ತುಗಳನ್ನು
ಕನ್ನಡದ ಈ ವಾಕ್ಯರಚನೆಯ ವಿದಾನವೇ ಮೂಲದ್ರಾವಿಡದಲ್ಲೂ
ಇದ್ದಿರಬೇಕೆಂಬುದಾಗಿ ಸದ್ಯಕ್ಕೆ ಕಲ್ಪಿಸಿಕೊಳ್ಳಬಹುದು.
12.2 ಜೋಡಿಸುವ ಕ್ರಿಯಾರೂಪಗಳು
ಎರಡು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೂಲದ್ರಾವಿಡದಲ್ಲೇನೇ ಕೆಲವು ಜೋಡಿಸುವ ಕ್ರಿಯಾರೂಪಗಳು ಬಳಕೆಯಲ್ಲಿದ್ದಿರಬೇಕು. ಈ ಕ್ರಿಯಾರೂಪಗಳಲ್ಲಿ ಕ್ರಿಯಾಪದದೊಂದಿಗೆ ಸಮಯದ ಒಟ್ಟು ಇಲ್ಲವೇ ಅಲ್ಲಗಳೆಯುವ ಒಟ್ಟು ಮಾತ್ರವೇ ಬರುತ್ತಿದ್ದಿರಬೇಕು.
ಬೇರೆ
ಬೇರೆ ತಿಳಿಸುವ
ಜೋಡಿಸಿ ಹೇಳುವುದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಈ ರೀತಿ ಜೋಡಿಸುವ ರೂಪಕ್ಕೆ ಬದಲಾಯಿಸಲಾಗುತ್ತದೆ.
ವಾಕ್ಯಗಳನ್ನು
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸ
ಬಹುದು.
(5ಕ) ರಾಜು ಮನೆಗೆ ಹೋದ. (5ಚ) ರಾಜು ಊಟ ಮಾಡಿದ. (5ಟ) ರಾಜು ಮನೆಗೆ ಹೋಗಿ ಊಟ ಮಾಡಿದ.
ನಡುವೆ
ಕೆಲಸಗಳ
(5ಕ) ಮತ್ತು (5ಚ) ವಾಕ್ಯಗಳನ್ನು ಜೋಡಿಸುವ ಮೂಲಕ (5ಟ) ವಾಕ್ಯವನ್ನು ರಚಿಸಲಾಗಿದೆ ಮತ್ತು ಇದಕ್ಕಾಗಿ (5ಕ) ವಾಕ್ಯದ ಕ್ರಿಯಾಪದ ವನ್ನು ಅದರ ಹೋಗಿ ಎಂಬ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಸಮಯ ಸಂಬಂದಗಳಿರಲು ಸಾದ್ಯವಿದೆ: (1) ಮೊದಲನೆಯದು ಎರಡನೆಯದರ ಮೊದಲು ನಡೆದಿರಬಹುದು, (2) ಅನಂತರ ನಡೆದಿರಬಹುದು, ಇಲ್ಲವೇ (3) ಅವೆರಡೂ ಒಂದೇ ಸಮಯದಲ್ಲಿ ನಡೆದಿರಬಹುದು. ಇದಲ್ಲದೆ, ಅವುಗಳ ನಡುವೆ ಅಲ್ಲಗಳೆಯುವ (ಎಂದರೆ ಮೊದಲನೆಯದು ನಡೆಯದೆ ಎರಡನೆಯದು ನಡೆಯುವಂತಹ) ನಾಲ್ಕನೆಯ ಸಂಬಂದವನ್ನೂ ಕಾಣಲು ಸಾದ್ಯವಿದೆ.
ಮೂರು ರೀತಿಯ
ಹಾಗಾಗಿ, ವಾಕ್ಯಗಳನ್ನು ಜೋಡಿಸಿ ಹೇಳುವುದಕ್ಕಾಗಿ ನಾಲ್ಕು ರೀತಿಯ ಜೋಡಿಸುವ ಕನ್ನಡದಲ್ಲಿ ಬಳಕೆಯಲ್ಲಿರುವ ಇಂತಹ ನಾಲ್ಕು ಜೋಡಿಸುವ ಕ್ರಿಯಾರೂಪಗಳನ್ನು ಕೆಳಗಿನ ಜೋಡಿಸಿದ ವಾಕ್ಯಗಳಲ್ಲಿ ಕಾಣಬಹುದು.
ಅವಶ್ಯಕತೆಯಿದೆ.
ಕ್ರಿಯಾರೂಪಗಳ
(6ಕ) ಓದಿ ಹೋದ.
(6ಚ) ಓದಲು ಹೋದ. (6ಟ) ಓದುತ್ತಾ ಹೋದ. (6ತ) ಓದದೆ ಹೋದ.
ಈ ಕ್ರಿಯಾರೂಪಗಳಲ್ಲಿ ಮೊದಲಿನ ಕೆಲಸವನ್ನು ಸೂಚಿಸುವ ಸೊನ್ನೆ ರೂಪದಲ್ಲಿರುವ ಒಟ್ಟು (6ಕ)ದಲ್ಲಿಯೂ, ಅನಂತರದ ಕೆಲಸವನ್ನು ಸೂಚಿಸುವ ಅಲು ಒಟ್ಟು (6ಚ)ದಲ್ಲಿಯೂ, ಒಂದೇ ಸಮಯದ ಕೆಲಸಗಳನ್ನು ಸೂಚಿಸುವ ಉತ್ತಾ ಒಟ್ಟು (6ಟ)ದಲ್ಲಿಯೂ, ಅಲ್ಲಗಳೆದ ಕೆಲಸವನ್ನು ಸೂಚಿಸುವ (ಅ)ದೆ ಒಟ್ಟು(6ತ)ದಲ್ಲಿಯೂ ಬಂದಿರುವುದನ್ನು ಕಾಣಬಹುದು. ಹಳೆಗನ್ನಡದಲ್ಲಿ ಇವು ಸೊನ್ನೆ, ಅಲ್, ಉತ್ತೆ (ಉತ್ತುಂ) ಮತ್ತು (ಅ)ದೆ ರೂಪದಲ್ಲಿದ್ದುವು.
ಇವುಗಳಲ್ಲಿ ಅಲ್ಲಗಳೆದ ಕೆಲಸವನ್ನು ಸೂಚಿಸುವ ಜೋಡಿಸುವ ರೂಪ ದಲ್ಲಿ ಅಲ್ಲಗಳೆಯುವ ಆ ಒಟ್ಟಿನೊಂದಿಗೆ ಜೋಡಿಸುವ ದೆ ಒಟ್ಟು ಬಂದಿದೆ ಯೆಂದು ಹೇಳಬಹುದು. ಹಳೆಯ ಶಾಸನಗಳಲ್ಲಿ ಬರುವ ತಪ್ಪಾದೆ, ವೆಳೆ ಯಾದೆ ಪದಗಳಲ್ಲಿ ಈ ಅಲ್ಲಗಳೆಯುವ ಒಟ್ಟು ಆ ರೂಪದಲ್ಲೇ ಇದೆ (ನರಸಿಂಹಯ್ಯ 1941: 208).
ಕೆಲಸವನ್ನು ಕನ್ನಡದಲ್ಲಿ ಇವತ್ತಿಗೂ ಅಲ್ಲಗಳೆದ ಸೂಚಿಸುವುದಕ್ಕಾಗಿ ಆದೆ ಒಟ್ಟನ್ನೇ ಬಳಸಲಾಗುತ್ತದೆ (ಗೋರಾದೆ ‘ಬಾಚದೆ’, ಬೂವಾದೆ ‘ಬೀಳದೆ’, ಸಾವಾದೆ ‘ಸಾಯದೆ’).
ಮೊದಲಿನ
ಕೆಲಸವನ್ನು
ಸೊನ್ನೆ ಒಟ್ಟಿನೊಂದಿಗೂ ಸೂಚಿಸುವ ಜೋಡಿಸುವ ಇ ಒಟ್ಟು ಬಂದಿದೆಯುಂದು ಹೇಳಬಹುದು. ಇಂತಹ ಕೆಲವು ಜೋಡಿಸುವ ರೂಪಗಳಲ್ಲಿ ಕ್ರಿಯಾಪದೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ದ್ ಒಟ್ಟು ಬಂದಿದ್ದು (ಕರೆದು, ತಿಂದು, ಉಂಡು), ಅದರ ಅನಂತರ ಜೋಡಿಸುವ ಒಟ್ಟು ಉ ರೂಪದಲ್ಲಿ ಬರುತ್ತದೆ.
ಆದರೆ, ಹಳೆಗನ್ನಡದಲ್ಲೇನೇ ಇಂತಹ ಜೋಡಿಸುವ ರೂಪಗಳಲ್ಲೂ ಜೋಡಿಸುವ ಒಟ್ಟು ಇ ರೂಪದಲ್ಲಿ ಬಂದಿರುವುದನ್ನು ತೆರಳ್ದಿ ‘ತೆರಳಿ’, ನಾನ್ದಿ ಕಾಣಬಹುದು. ಮೊದಲಾದ ಒಳನಾಡಿನ ಕೆಲವು ಒಳನುಡಿಗಳಲ್ಲೂ ಇದು ಇ ರೂಪದಲ್ಲಿದೆ.
‘ಒದ್ದೆಮಾಡಿ’
ರೂಪಗಳಲ್ಲಿ
ಅಲ್ಲಗಳೆಯುವ ಆ ಒಟ್ಟಿನ ಅನಂತರ ಬರುವ ತ್ (ದ್) ವ್ಯಂಜನ ಮೂಲದ್ರಾವಿಡದ ಹಿಂದಿನ ಸಮಯದ ಒಟ್ಟಿನ ಪಳೆಯಳಿಕೆಯಿರಬೇಕೆಂದು ಸುಬ್ರಹ್ಮಣ್ಯಂ (1971:390) ವಾದಿಸಿದ್ದಾರೆ.
ಹವ್ಯಕ ಕನ್ನಡದಲ್ಲಿ ಈ ವ್ಯಂಜನ ಇಮ್ಮಡಿ ರೂಪದಲ್ಲಿದೆ (ಹೋಗದ್ದೆ
‘ಹೋಗದೆ’, ತಿನ್ನದ್ದೆ ‘ತಿನ್ನದೆ’, ಹೋಗದ್ದ ‘ಹೋಗದ’).
ಹಳೆಗನ್ನಡದ ಜೋಡಿಸುವ ಕ್ರಿಯಾರೂಪಗಳಲ್ಲಿ ಅಲ್ ಎಂಬ ಒಂದೇ ರೂಪದಲ್ಲಿರುವ ಎರಡು ಬೇರೆ ಬೇರೆ ಒಟ್ಟುಗಳ ಬಳಕೆಯಾಗುತ್ತಿತ್ತು. ಅವುಗಳಲ್ಲಿ ಒಂದು ಅನಂತರದ ಕೆಲಸವನ್ನು ಸೂಚಿಸುತ್ತಿತ್ತು ಮತ್ತು
ಮೊದಲಿನ
ಇನ್ನೊಂದು ಬಳಕೆಯಲ್ಲಿ ಎರಡು ಕಾಣಿಸಿಕೊಳ್ಳುತ್ತವೆ.
ಕೆಲಸವನ್ನು
ಸೂಚಿಸುತ್ತಿತ್ತು. ಇವೆರಡರ ಬೇರೆ ರೀತಿಯ ನಿಬ್ರಂದಗಳು
ಬೇರೆ
ಕೆಲಸವನ್ನು
(1) ಅನಂತರದ
ಸೂಚಿಸುವ ಅಲ್ ಒಟ್ಟನ್ನು ಬಳಸಿದೆಯಾದಲ್ಲಿ, ಅಂತಹ ವಾಕ್ಯಗಳು ಬೇರೆ ಬೇರೆ ವ್ಯಕ್ತಿಗಳು ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಜೋಡಿಸಲಾರವು. ಮೊದಲಿನ ಕೆಲಸವನ್ನು ಸೂಚಿಸುವ ಸೊನ್ನೆ ಒಟ್ಟಿನ ಬಳಕೆಯಲ್ಲೂ ಇಂತಹದೇ ನಿಬ್ರಂದವಿದೆ.
(7ಕ) ಕೀಚಕಂ ತಮ್ಮಕ್ಕನಂ ಕಾಣಲ್ ಪೋದಂ
‘ಕೀಚಕನು ತನ್ನ ಅಕ್ಕನನ್ನು ಕಾಣಲು ಹೋದನು’
(7ಚ) ನೀ ಎನ್ನ ಕಾಳೆಗಮಂ ಪೆಱಗಿರ್ದು ನೋಡಿಂ
‘ನೀವು ನನ್ನ ಕಾಳಗವನ್ನು ಹೊರಗೆ ಇದ್ದು ನೋಡಿ’
ಮೇಲಿನ ಎರಡು ವಾಕ್ಯಗಳಲ್ಲೂ ಒಬ್ಬನೇ ವ್ಯಕ್ತಿ ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಜೋಡಿಸಲಾಗಿದೆ. ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಸ್ವೇಚ್ಚೆಯಿಂದ ನಡೆಸುವ ಎರಡು ಕೆಲಸಗಳನ್ನು ಇವುಗಳ ಮೂಲಕ ಜೋಡಿಸಲು ಸಾದ್ಯವಾಗದು.
ಆದರೆ, ಮೊದಲಿನ ಕೆಲಸವನ್ನು ಸೂಚಿಸುವ ಅಲ್ ಒಟ್ಟನ್ನು ಬಳಸುವು
ದಿದ್ದಲ್ಲಿ ಈ ನಿರ್ಬಂದವಿಲ್ಲ.
(7ಟ) ಎಂದು ನುಡಿದು ಕೞಿಪಲ್ ಆ ದ್ರವ್ಪದಿ ಅಂತೆ ಗೆಯ್ವುನೆಂದು
ಪೋಗಿ…. ‘(ಕೀಚಕನು) ಹಾಗೆ ಹೇಳಿ ಕಳಿಸಿದಾಗ ದ್ರವ್ಪದಿ ಹಾಗೆಯೇ
ಮಾಡುತ್ತೇನೆಂದು (ಹೇಳಿ ಹೋದಳು); ಹೋಗಿ….’
ಮೇಲಿನ (7ಟ) ವಾಕ್ಯದಲ್ಲಿ ಬಂದಿರುವ ಅಲ್ ಒಟ್ಟು ಮೊದಲಿನ ಕೆಲಸವನ್ನು ಸೂಚಿಸುತ್ತದೆ. ಹಾಗಾಗಿ, ಕಳಿಸು ಮತ್ತು ಹೋಗು ಎಂಬ
ಎರಡು ಬೇರೆ ಬೇರೆ ವ್ಯಕ್ತಿಗಳು (ಕೀಚಕ ಮತ್ತು ದ್ರವ್ಪದಿ) ಸ್ವೇಚ್ಚೆಯಿಂದ ನಡೆಸುವ ಕೆಲಸಗಳನ್ನು ಸೂಚಿಸುವ ಎರಡು ವಾಕ್ಯಗಳನ್ನು ಅದರ ಮೂಲಕ ಜೋಡಿಸಲು ಸಾದ್ಯವಾಗಿದೆ.
ಇದಲ್ಲದೆ, ಮೊದಲಿನ ಕೆಲಸವನ್ನು ಸೂಚಿಸುವುದಕ್ಕಾಗಿ ಎ ಎಂಬ ಇನ್ನೊಂದು ಒಟ್ಟೂ ಹಳೆಗನ್ನಡದಲ್ಲಿ ಬಳಕೆಯಲ್ಲಿತ್ತು. ಇದರ ಬಳಕೆಯಲ್ಲೂ ಮೇಲಿನ ನಿರ್ಬಂದವಿಲ್ಲ (7ತ ನೋಡಿ). ಈ ಎರಡು ಒಟ್ಟುಗಳೂ ಇವತ್ತಿನ ಬರಹ ಕನ್ನಡದಲ್ಲಿ ಉಳಿದಿಲ್ಲ.
(7ತ) ಪಾಂಡ್ಯನ್
ತೋಮರದಿಂದ ಇಡೆ
ಗುರುತನೂಜಂ
ಎಡೆಯೊಳ್ ಕಡಿದಂ ‘ಪಾಂಡ್ಯನು ತೋಮರದಿಂದ ಹೊಡೆದಾಗ ಗುರುತನೂಜನು
(ಅದನ್ನು) ನಡುದಾರಿಯಲ್ಲೇ ಕಡಿದನು’
ನಡೆಯುವ
ಸಮಯದಲ್ಲಿ
ಕೆಲಸಗಳನ್ನು ಜೋಡಿಸುವುದಕ್ಕಾಗಿ ಹವ್ಯಕ ಕನ್ನಡದಲ್ಲಿ ಉತ್ತ ಒಟ್ಟಿನ ಬದಲು ಕೊಳ್ ಗೊಂಡು ಕ್ರಿಯಾಪದದ ಜೋಡಿಸುವ (<ಕೊಂಡು) ಕ್ರಿಯಾರೂಪವನ್ನು ಬಳಸಲಾಗುತ್ತದೆ.
ಎಂಬುದನ್ನು
ರೂಪವಾದ
ಸೇರಿಸಿರುವ
ಮೊದಲಿನ
(8) ಆನು ಸಂಗೀತ ಕೇಳಿಗೊಂಡು ಉಣ್ಣುತ್ತೆ
‘ನಾನು ಸಂಗೀತವನ್ನು ಕೇಳುತ್ತಾ ಊಟಮಾಡುತ್ತೇನೆ’
ಉತ್ತ ಒಟ್ಟನ್ನು ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬದಲಾವಣೆಯನ್ನು ಹವ್ಯಕ ಈ
ಬಳಸಿರುವ ಮಾಡಿಕೊಂಡಿರಬಹುದು.
12.3 ಸಂಬಂದಿಸುವ ಕ್ರಿಯಾರೂಪಗಳು
ಕೆಲಸವನ್ನು ನಾಮಪದದೊಂದಿಗೆ ಸಂಬಂದಿಸಿ ಪದಕಂತೆಯನ್ನು ರಚಿಸಲು ಸಾದ್ಯವಿದೆ. ಇದಕ್ಕಾಗಿ ಆ ವಾಕ್ಯದ
ಸೂಚಿಸುವ ಒಂದು ವಾಕ್ಯವನ್ನು
ಕೊನೆಯಲ್ಲಿ ಆಡುಗ ಒಟ್ಟಿನ ಬದಲು ಸಂಬಂದಿಸುವ ಅ ಒಟ್ಟನ್ನು ಸೇರಿಸಲಾಗುತ್ತದೆ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸ
ಬಹುದು. (9ಕ) ಹುಡುಗಿ ಮನೆಗೆ ಬಂದಳು (9ಚ) ಹುಡುಗಿ ಊಟ ಮಾಡಿದಳು (9ಟ) ಮನೆಗೆ ಬಂದ ಹುಡುಗಿ ಊಟ ಮಾಡಿದಳು
ವಾಕ್ಯವನ್ನು
ವಾಕ್ಯದಲ್ಲಿರುವ
ಹುಡುಗಿ ನಾಮಪದದೊಂದಿಗೆ ಸಂಬಂದಿಸುವ ಮೂಲಕ, (9ಟ) ವಾಕ್ಯವನ್ನು ರಚಿಸಲಾಗಿದೆ. ಇದಕ್ಕಾಗಿ (9ಕ) ವಾಕ್ಯದ ಕೊನೆಯಲ್ಲಿರುವ ಬಂದಳು ಕ್ರಿಯಾಪದದ ಕೊನೆಯ ಅಳು ಒಟ್ಟನ್ನು ತೆಗೆದು ಹಾಕಿ, ಅದರ ಬದಲು ಸಂಬಂದಿಸುವ ಅ ಒಟ್ಟನ್ನು ಸೇರಿಸಲಾಗಿದೆ. ಇದಲ್ಲದೆ, ಈ ಎರಡು ವಾಕ್ಯಗಳಿಗೂ ಸಮಾನವಾಗಿರುವ ಹುಡುಗಿ ಪದವನ್ನು (9ಕ) ವಾಕ್ಯದಿಂದ ತೆಗೆದುಹಾಕಲಾಗಿದೆ.
ಕ್ರಿಯಾಪದಗಳ ಹಿಂದಿನ, ಮುಂದಿನ ಮತ್ತು ಅಲ್ಲಗಳೆಯುವ ರೂಪಗಳಿಂದ ಮೂರು ರೀತಿಯ ಸಂಬಂದಿಸುವ ಕ್ರಿಯಾರೂಪಗಳನ್ನು ಪಡೆಯಲು ಸಾದ್ಯವಿದೆ (ಮನೆಗೆ ಬಂದ ಹುಡುಗಿ, ಮನೆಗೆ ಬರುವ ಹುಡುಗಿ, ಮನೆಗೆ ಬಾರದ ಹುಡುಗಿ). ಇವುಗಳಲ್ಲಿ ಕಾಣಿಸುವ ಸಂಬಂದಿಸುವ ಅ ಒಟ್ಟನ್ನು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ.
ಕೆಲಸಕ್ಕೆ ಇನ್ನೊಂದು
12.4 ಶರತ್ತಿನ ಕ್ರಿಯಾರೂಪಗಳು
ಶರತ್ತು ಎಂಬುದನ್ನು ಸೂಚಿಸುವುದಕ್ಕಾಗಿ, ಎರಡನೆಯ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಶರತ್ತಿನ (ಜೋಡಿಸುವ) ರೂಪಕ್ಕೆ ಬದಲಿಸಲಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯವನ್ನು ಪರಿಶೀಲಿಸಬಹುದು.
ಕೆಲಸ
(10) ರಾಜು ಬಂದರೆ ಹರಿ ಮನೆಗೆ ಹೋಗುತ್ತಾನೆ.
(10)ನೇ ವಾಕ್ಯದಲ್ಲಿ ‘ರಾಜು ಬರುವ’ ಕೆಲಸ ‘ಹರಿ ಮನೆಗೆ ಹೋಗುವ’ ಕೆಲಸಕ್ಕೆ ಶರತ್ತಾಗಿದೆ. ಇದನ್ನು ಸೂಚಿಸುವುದಕ್ಕಾಗಿ ‘ಬರುವ’ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಬಂದರೆ ಎಂಬ ಶರತ್ತಿನ ಜೋಡಿಸುವ ರೂಪಕ್ಕೆ ಬದಲಿಸಲಾಗಿದೆ.
ಸೂಚಿಸುವ
ಜೋಡಿಸುವ
ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಬೇರೆ ಬೇರೆ ಒಟ್ಟುಗಳು ಇಂತಹ ಕ್ರಿಯಾರೂಪಗಳನ್ನು ಶರತ್ತನ್ನು ತಯಾರಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅದು ಯಾವ ರೂಪದಲ್ಲಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾದ್ಯವಾಗಿಲ್ಲ. ಉದಾಹರಣೆಗಾಗಿ, ತಮಿಳಿನಲ್ಲಿ ಇದಕ್ಕಾಗಿ ಆಲ್ ಒಟ್ಟನ್ನು ಬಳಸಲಾಗುತ್ತದೆ (ಕಂಟಾಲ್ ‘ಕಂಡರೆ’).
ಬಳಕೆಯಾಗುತ್ತಿವೆಯಾದ
12.4.1 ಹಳೆಗನ್ನಡದ ರೂಪಗಳು
ಹಳೆಗನ್ನಡದಲ್ಲಿ ಇಂತಹ ಶರತ್ತಿನ ಜೋಡಿಸುವ ರೂಪಗಳನ್ನು ತಯಾರಿಸು ವುದಕ್ಕಾಗಿ ಸಂಬಂದಿಸುವ ಕ್ರಿಯಾರೂಪಗಳಿಗೆ ಒಡೆ ಒಟ್ಟನ್ನು ಸೇರಿಸಲಾಗು ತ್ತಿತ್ತು.
ಮೇಲೆ (12.3)ರಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಮುಂದಿನ, ಹಿಂದಿನ ಮತ್ತು ಅಲ್ಲಗಳೆಯುವ ಎಂಬುದಾಗಿ ಮೂರು ಸಂಬಂದಿಸುವ ಕ್ರಿಯಾರೂಪಗಳಿದ್ದು, ಈ ಮೂರರೊಂದಿಗೂ ಒಡೆ ಒಟ್ಟನ್ನು ಬಳಸಲು ಸಾದ್ಯವಿತ್ತು.
(11ಕ) ಪೋಪೊಡೆ ಬರ್ಪೆಂ ‘ಹೋಗುವುದಿದ್ದರೆ ಬರುತ್ತೇನೆ’’ (11ಚ) ಪೋದೊಡೆ ಬರ್ಪೆಂ ‘ಹೋದರೆ ಬರುತ್ತೇನೆ’ (11ಟ) ಪೋಗದೊಡೆ ಬರ್ಪೆಂ ‘ಹೋಗದಿದ್ದರೆ ಬರುತ್ತೇನೆ’
ಆದರೆ ಈ ಶರತ್ತಿನ ಜೋಡಿಸುವ ರೂಪಗಳಲ್ಲಿ ವ್ (ಪ್) ಮತ್ತು ದ್ ಒಟ್ಟುಗಳಿಗೆ ಮುಂದಿನ ಮತ್ತು ಹಿಂದಿನ ಸಮಯಗಳನ್ನು ಸೂಚಿಸುವ ಅರ್ತವಿಲ್ಲ. ಇದಕ್ಕೆ ಬದಲು, ಅವು ಮಾಡಲಿರುವ ಕೆಲಸಕ್ಕೆ ಮೊದಲು
ಇಲ್ಲವೇ ಅನಂತರ ನಡೆಯಬೇಕಾದ ಕೆಲಸವನ್ನು ಶರತ್ತಾಗಿ ಸೂಚಿಸಲು ಬಳಕೆಯಾಗುತ್ತವೆ.
ಉದಾಹರಣೆಗಾಗಿ, ಆಡುಗನು ಬರುವ ಕೆಲಸಕ್ಕೆ (11ಕ) ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಅನಂತರ (ಎಂದರೆ ಕೆಲಸ ಮುಗಿದ ಮೇಲೆ) ಹೋಗುವುದು ಶರತ್ತು, ಮತ್ತು (11ಚ) ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಕೆಲಸ ಶರತ್ತು (ವಿವರಗಳಿಗೆ ಬಟ್ 2005:227 ನೋಡಿ).
ಮೊದಲೇ ಹೋಗುವುದು
ಸುರುವಾಗುವುದಕ್ಕಿಂತ
12.4.2 ಕನ್ನಡದಲ್ಲಿ ನಡೆದ ಬದಲಾವಣೆಗಳು
ಹಳೆಗನ್ನಡದಲ್ಲಿದ್ದ ಅಡೆ ಒಟ್ಟು ಹೊಸಗನ್ನಡದಲ್ಲಿ ಅರೆ ರೂಪವನ್ನು ಪಡೆದಿದೆ. ಆದರೆ, ಇವತ್ತಿನ ಬರಹ ಕನ್ನಡದಲ್ಲಿ ಈ ಒಟ್ಟನ್ನು ನೇರವಾಗಿ ಹಿಂದಿನ ಸಮಯದ ಸಂಬಂದಿಸುವ ಕ್ರಿಯಾರೂಪಕ್ಕೆ ಮಾತ್ರವೇ ಸೇರಿಸಲು ಸಾದ್ಯವಲ್ಲದೆ (ಬಂದರೆ, ಹೋದರೆ) ಮುಂದಿನ ಸಮಯದ (ಬರುವ, (ಬಾರದ, ಹೋಗದ) ಹೋಗುವ) ಇಲ್ಲವೇ ಅಲ್ಲಗಳೆಯುವ ಸಂಬಂದಿಸುವ ಸೇರಿಸಲು ಸಾದ್ಯವಾಗದು.
ರೂಪಗಳೊಂದಿಗೆ ಅದನ್ನು
ನೇರವಾಗಿ
ಕರಾವಳಿಯ ಹವ್ಯಕ ಕನ್ನಡ ಈ ವಿಶಯದಲ್ಲಿ ಹಳೆಗನ್ನಡದ ವಿದಾನ ವನ್ನು ಉಳಿಸಿಕೊಂಡಿದೆ. ಅದರಲ್ಲಿ ಶರತ್ತನ್ನು ಸೂಚಿಸುವ ಅರೆ ಒಟ್ಟನ್ನು ಹಿಂದಿನ ಸಮಯದ ಸಂಬಂದಿಸುವ ಕ್ರಿಯಾರೂಪಗಳೊಂದಿಗೆ ಮಾತ್ರವಲ್ಲದೆ ಮುಂದಿನ ಮತ್ತು ಅಲ್ಲಗಳೆಯುವ ಕ್ರಿಯಾರೂಪಗಳೊಂದಿಗೂ ಸೇರಿಸಿ ಹೇಳಲು ಸಾದ್ಯವಿದೆ. ಇದಲ್ಲದೆ, ಹಳೆಗನ್ನಡದಲ್ಲಿದ್ದ ಅರ್ತವ್ಯತ್ಯಾಸವನ್ನೂ ಮೂಲಕ ಹವ್ಯಕದಲ್ಲಿ ಈ ಸೂಚಿಸಲಾಗುತ್ತದೆ.
ಜೋಡಿಸುವ
ರೂಪಗಳ
ಶರತ್ತಿನ
(12ಕ) ನೀನು ಕೊಡುತ್ತರೆ ಬತ್ತೆ
‘ನೀನು (ಅನಂತರ) ಕೊಡುವುದಿದ್ದರೆ (ಈಗ) ಬರುತ್ತೇನೆ’’
(12ಚ) ನೀನು ಕೊಟ್ಟರೆ ಬತ್ತೆ
‘ನೀನು (ಈಗ) ಕೊಟ್ಟರೆ (ಅನಂತರ) ಬರುತ್ತೇನೆ’’
(12ಟ) ನೀನು ಕೊಡದ್ದರೆ ಬತ್ತೆ
‘ನೀನು ಕೊಡದಿದ್ದರೆ ಬರುತ್ತೇನೆ’’
ಬರಹ ಕನ್ನಡದಲ್ಲಿ ಅಲ್ಲಗಳೆಯುವ ಕ್ರಿಯಾರೂಪದೊಂದಿಗೆ ಅರೆ ಒಟ್ಟನ್ನು ಬಳಸಬೇಕಿದ್ದಲ್ಲಿ ಅದರೊಂದಿಗೆ ಇರು ಕ್ರಿಯಾಪದದ ಹಿಂದಿನ ಸಮಯದ ರೂಪವನ್ನು ಬಳಸಬೇಕಾಗುತ್ತದೆ (ಕೊಡದೆ ಇದ್ದರೆ) ಮತ್ತು ಮುಂದಿನ ಕ್ರಿಯಾರೂಪದೊಂದಿಗೆ ಬಳಸಬೇಕಿದ್ದಲ್ಲಿ ಕ್ರಿಯಾಪದದ ನಾಮರೂಪವನ್ನು ಬಳಸಬೇಕಾಗುತ್ತದೆ (ಕೊಡುವುದು ಇದ್ದರೆ) ಎಂಬುದನ್ನು ಕೊಟ್ಟಿರುವ ಉದಾಹರಣೆಗಳಿಂದ ತಿಳಿಯಬಹುದು.
ಸಮಯದ
ಮೇಲೆ
ಬಡಗ ಕನ್ನಡದಲ್ಲಿ ಶರತ್ತನ್ನು ಸೂಚಿಸುವ ಒಟ್ಟು ಅಲೆ ರೂಪದಲ್ಲಿದೆ. ಉದಾಹರಣೆಗಾಗಿ, ಕೆಳಗಿನ ಬಡಗ ವಾಕ್ಯಗಳನ್ನು ಗಮನಿಸಬಹುದು (ಬಾಲ ಕ್ರುಶ್ಣನ್ 1999:181, 220).
ಮೇ ಹೂದಲೆ ಕೊರವು ಅಪ್ಪರ ಇರಾ ‘ಮಳೆ ಸುರಿದರೆ ಚಳಿ ಹೆಚ್ಚು ಇರಲಿಕ್ಕಿಲ್ಲ’
ಮೇ ಇಲ್ಲಾದೋಲೆ ಹೊಲ ಎಲ್ಲ ಹಾಳಾಗಿಬುಟ್ಟರ ‘ಮಳೆ ಇಲ್ಲದಿದ್ದರೆ ಹೊಲ ಎಲ್ಲ ಹಾಳಾಗಿಬಿಟ್ಟೀತು’
ಈ ಅಲೆ ಒಟ್ಟನ್ನು ಬಡಗ ಕನ್ನಡವು ತಮಿಳಿನಿಂದ ಎರವಲಾಗಿ
ಪಡೆದಿರಲು ಸಾದ್ಯವಿದೆ. ತಮಿಳಿನಲ್ಲಿ ಆಲ್ ಒಟ್ಟು ಬಳಕೆಯಲ್ಲಿದೆ.
12.5 ತಿರುಳು
ವಾಕ್ಯರಚನೆಯಲ್ಲಿ ಕನ್ನಡ ನುಡಿ ನಡೆದು ಬಂದ ದಾರಿ ಎಂತಹದು ನಡೆಸುವ ಎಂಬುದನ್ನು ತಿಳಿಯಲು ಇನ್ನಶ್ಟು
ಸಂಶೋದನೆಗಳನ್ನು
ಅವಶ್ಯಕತೆಯಿದೆ. ಇದಕ್ಕೆ ಕಾರಣವೇನೆಂದರೆ, ಮೂಲದ್ರಾವಿಡ ವಾಕ್ಯದ ಸ್ವರೂಪ ಹೇಗಿತ್ತು ಎಂಬುದಿನ್ನೂ ಸ್ಪಶ್ಟವಾಗಿಲ್ಲ.
ಹಾಗಾಗಿ, ಕನ್ನಡ ವಾಕ್ಯಗಳ ಸ್ವರೂಪ ಮತ್ತು ಅವುಗಳಲ್ಲಿ ಕನ್ನಡದ ಒಳನುಡಿಗಳು ತೋರಿಸುವ ಕೆಲವು ವ್ಯತ್ಯಾಸಗಳನ್ನಶ್ಟೇ ಇಲ್ಲಿ ವಿವರಿಸಲು ಸಾದ್ಯವಾಗಿದೆ.
ಆಕರಸೂಚಿ
ಉಪಾದ್ಯಾಯ, ಯು. ಪಿ. 1976. ಂ ಛಿomಠಿಚಿಡಿಚಿಣive sಣuಜಥಿ oಜಿ ಏಚಿಟಿಟಿಚಿಜಚಿ
ಎಮೆನೋ, ಎಮ್. ಬಿ. 1940. ‘ಖಿhe voತಿeಟs oಜಿ ಃಚಿಜಚಿgಚಿ ಟಚಿಟಿguಚಿge’.
ಎಮೆನೋ ಮತ್ತು ಹಾರ್್ಟ, ಕೆ. 1993. ಖಿಚಿmiಟ exಠಿಡಿessives ತಿiಣh iಟಿiಣiಚಿಟ
ಕಾಲ್್ಡವೆಲ್, ಆರ್. 1913. ಂ ಅomಠಿಚಿಡಿಚಿಣive gಡಿಚಿmmಚಿಡಿ oಜಿ ಣhe
ಕುಮಾರಸ್ವಾಮಿ ರಾಜ, ಎನ್. 1969. Posಣ-ಟಿಚಿsಚಿಟ voiಛಿeಟess ಠಿಟosives
ಕೆಂಪೇಗವ್ಡ, ಕೆ. 1976. ಬಾಶಾವಿಜ್ನಾನ ಕೋಶ. ಮಯ್ಸೂರು:
ಮಯ್ಸೂರು ವಿಶ್ವವಿದ್ಯಾನಿಲಯ.
ಕ್ರುಶ್ಣಮೂರ್ತಿ, ಬ. 1997. ಖಿhe oಡಿigiಟಿ ಚಿಟಿಜ evoಟuಣioಟಿ oಜಿ ಠಿಡಿimಚಿಡಿಥಿ
ಕ್ರುಶ್ಣಮೂರ್ತಿ 2001ರಲ್ಲಿ ಇನ್ನೊಮ್ಮೆ ಮುದ್ರಿತವಾಗಿದೆ).
ಗವ್ಡ, ಕೆ. ಕುಶಾಲಪ್ಪ 1970. ಉoತಿಜಚಿ ಏಚಿಟಿಟಿಚಿಜಚಿ. ಂಟಿಟಿಚಿmಚಿಟಚಿiಟಿಚಿgಚಿಡಿ:
ಗವ್ಡ, ಕೆ. ಎಸ್. ಗುರುಬಸವೇ 1968. ಆesಛಿಡಿiಠಿಣive ಚಿಟಿಚಿಟಥಿsis oಜಿ Soಟigಚಿ.
ಚಿದಾನಂದ ಮೂರ್ತಿ, ಎಮ್. 1972. ‘ಂ ಠಿಚಿಟಚಿಣಚಿಟiziಟಿg ಚಿಟಿಜ veಟಚಿಡಿiziಟಿg
ದ್ಸ್ವೆಲೆಬಿಲ್, ಕಮಿಲ್ 1970. ಅomಠಿಚಿಡಿಚಿಣive ಆಡಿಚಿviಜiಚಿಟಿ ಠಿhoಟಿoಟogಥಿ.
ನರಸಿಂಹಯ್ಯ, ಎ. ಎನ್. 1941. ಂ gಡಿಚಿmmಚಿಡಿ oಜಿ ಣhe oಟಜesಣ ಏಚಿಟಿಚಿಡಿese
ನರಸಿಂಹಾಚಾರ್, ಆರ್. 1969. ಊisಣoಡಿಥಿ oಜಿ ಏಚಿಟಿಟಿಚಿಜಚಿ ಟಚಿಟಿguಚಿge.
(ಎರಡನೇ ಆವ್ರುತ್ತಿ). ಒಥಿsoಡಿe: ಒಥಿsoಡಿe Uಟಿiveಡಿsiಣಥಿ.
ಪರಮಶಿವಂ, ಕೆ. 1980. ಇಜಿಜಿeಛಿಣiviಣಥಿ ಚಿಟಿಜ ಛಿಚಿusಚಿಣiviಣಥಿ iಟಿ ಖಿಚಿmiಟ.
ಬರೋ, ಟಿ. ಮತ್ತು ಎಮೆನೋ, ಎಮ್. ಬಿ. 1961. ಖಿhe ಆಡಿಚಿviಜiಚಿಟಿ
—-1995. ಕನ್ನಡ ಬಾಶೆಯ ಕಲ್ಪಿತ ಚರಿತ್ರೆ. ಹಂಪಿ: ಕನ್ನಡ
ವಿಶ್ವವಿದ್ಯಾಲಯ.
—-2002. ಕನ್ನಡ ಪದಗಳ ಒಳರಚನೆ. (ಎರಡನೇ ಆವ್ರುತ್ತಿ).
ಮಯ್ಸೂರು: ಬಾಶಾಪ್ರಕಾಶನ.
—-2003. ಕನ್ನಡದ ಸರ್ವನಾಮಗಳು. ಮಯ್ಸೂರು: ಬಾಶಾಪ್ರಕಾಶನ.
—-2005. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಮಯ್ಸೂರು:
ಬಾಶಾಪ್ರಕಾಶನ.
—-2005. ಕನ್ನಡ ಬರಹವನ್ನು ಸರಿಪಡಿಸೋಣ. ಮಯ್ಸೂರು:
ಬಾಶಾಪ್ರಕಾಶನ.
—-2006 ಕನ್ನಡ ವಾಕ್ಯಗಳ ಒಳರಚನೆ (ಎರಡನೇ ಮುದ್ರಣ).
ಮಯ್ಸೂರು: ಬಾಶಾಪ್ರಕಾಶನ.
ಬಾಲಕ್ರುಶ್ಣನ್, ಆರ್. 1999. ಃಚಿಜಚಿgಚಿ – ಂ ಆಡಿಚಿviಜiಚಿಟಿ ಟಚಿಟಿguಚಿge.
ರಾಮಚಂದ್ರರಾವ್, ಬಿ. 1972. ಂ ಜesಛಿಡಿiಠಿಣive gಡಿಚಿmmಚಿಡಿ oಜಿ Pಚಿmಠಿಚಿ
ರಾಮಚಂದ್ರರಾವ್, ಬಿ. 1998. ಕನ್ನಡ ಬಾಶೆಯ ಇತಿಹಾಸ.
ಮಯ್ಸೂರು: ಡಿ.ವಿ.ಕೆ.ಮೂರ್ತಿ.
ವೆಂಕಟಾಚಲ ಶಾಸ್ತ್ರೀ, ಟಿ. ವಿ. 1994. ’ಉಪೋದ್ಗಾತ’. ವೆಂಕಟಾಚಲ ಶಾಸ್ತ್ರೀ (ಸಂ.) ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣಂ, ಪುಟ 1-
- ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರುತಿ ನಿರ್ದೇಶನಾಲಯ.
ಸೀತಾರಾಮಯ್ಯ, ವಿ. 1979. ಪ್ರಾಚೀನ ಕನ್ನಡ ವ್ಯಾಕರಣಗಳು.
ಮಯ್ಸೂರು: ಮಯ್ಸೂರು ವಿಶ್ವವಿದ್ಯಾನಿಲಯ.
ಸುಬ್ರಹ್ಮಣ್ಯಂ, ಪಿ. ಎಸ್. (ಬರಲಿದೆ) ಆಡಿಚಿviಜiಚಿಟಿ ಛಿomಠಿಚಿಡಿಚಿಣive
ಹೋಕಿಂಗ್್ಸ, ಪಿ. ಮತ್ತು ಪಯ್ಲಟ್-ರಯ್ಚೂರ್, ಸಿ. 1992. ಂ
ವಿಶಯಸೂಚಿ
ಅಣಕಿಸುವ ಪದ 304, 313-15 ಅನುಸ್ವಾರ 144 ಅರ್ತವ್ಯತ್ಯಾಸ 97 ಅರಕಲಗೂಡು 106 ಅರೆಸ್ವರ 161 ಅಲ್ಲಗಳೆ 216, 241, 321 ಆಗುವಿಕೆ 193-5
ಆಗುವಿಕೆ-ಮಾಡುವಿಕೆ 182-93, 195-206, 221-3 ಆತ್ಮಾರ್ತ 291-2 ಆಯ್ದಮ್ 162 ಆರ್ಯರು 24 ಇಂಡೋ-ಆರ್ಯನ್ 270 ಇಂಡೋ-ಯುರೋಪಿಯನ್ 16, 183 ಇಮ್ಮಡಿ ಱಕಾರ 314
ಇರು ಕ್ರಿಯಾಪದ 229 ಇರುಳ 22 ಇಲಾಮಯ್ಟ 24 ಈಗಿನ ಸಮಯ 226-7
ಉದ್ದಸ್ವರ 267 ಉಪಾದ್ಯಾಯ 55-6, 70, 100 ಉರಾಲ್-ಆಲ್ಟೇಯಿಕ್ 24 179, 209, 213, 221-3, 315-16; ಹಗುರ-ತೂಕ 39-40, ಎಮೆನೋ 72-3, 249 ಐ-ಔಗಳು 38-9 ಒಲವು 313 ಒಳನಾಡು 18, 21-31, 47, 163, 291, 312 ಕನ್ನಡ-ತೆಲುಗು ಲಿಪಿ 39
ಕಾಲ್್ಡವೆಲ್ 21
ಕುಡುಕ್ 23, 45, 195, 245, 277 ಕುಱುಂಬ 22 ಕೂಡುಪದ 240 ಕೂಯಿ 23, 75, 249-50 ಕೆಆರ್ನಗರ 106 ಕೆಲಸ 319-20 ಕೇಶಿರಾಜ 168 ಕೇಳುಗ 273, 276, 287-8 ಕೊಡಗು 22, 75 ಕೊನೆ 280, 285, 293, 313 ಕೊರಗ 22, 25, 195 ಕೊರಳಿಸಿದ ಉಚ್ಚಾರಣೆ 94, 95- ಕೋತ 22 ಕೋಲಾಮಿ 23, 60, 64, 140, 277 ಕ್ರುದಂತ 227 ಕ್ರುಶ್ಣಮೂರ್ತಿ 24, 162, 242, 270-2, 191-2, 193-4, 297 ಗವ್ಡ ಕನ್ನಡ 52, 69-70, 89, 132, 2378, 274, 276, 282-3,
ಗವ್ಡ, ಕುಶಾಲಪ್ಪ 52
ಗವ್ಡ, ಗುರುಬಸವೇ 72, 115 ಗವ್ರವಾರ್ತ 201, 203-4, 248, 276 ಗುಲ್ಬರ್ಗ 54-5, 69-70, 82, 86-7, 100-1 ಚಾಮರಾಜನಗರ 85, 141, 144 ಚಿದಾನಂದ ಮೂರ್ತಿ 105-6 ಜಪಾನೀಸ್ 24 ಜೇನುಕುರುಬ 55-6, 83 ಜೋಡಿಸುವ ರೂಪ 216, 321-4 ಜೋಡುಪದ 41, 134, 136, 179, 256, 270-2, 306, 309,
ತಡೆಯಿಲ್ಲದುಲಿ 137, 161-73 ತಿಳಿಯದ ಪದ 295-7 ತೆಂಕು ಒಳನುಡಿ 54, 82, 85-6, 108
ದಪ ಒಟ್ಟು 226 ದಾರವಾಡ 105, 228 ದಿಕ್ಕು 279
ದುಂಡಗಿಲ್ಲದ ಸ್ವರ 163 ದ್ಸ್ವೆಲೆಬಿಲ್ 38 ನಂಜನಗೂಡು 100-1 ನಂಟಸ್ತಿಕೆ 15-6, 20, 24, 275-8 ನಕಾರ, ಎರಡು ರೀತಿ 92 ನಟರಾಜನ್ 115 ನಡುಗನ್ನಡ 112, 229 ನಡುದ್ರಾವಿಡ 22-3, 103, 245, 249 ನರಸಿಂಹಯ್ಯ 99, 111-12, 116, 164, 169, 322 ನಾಯ್ಕಿಡಿ 23 ನಿಯಮ-ಒಲವು 81 ನುಡಿಕುಟುಂಬ 21 ಪಂಪಬಾರತ 38, 111, 226-7, 244, 289 ಪದಕೋಶ 304, 314 ಪಯ್ಲಟ್-ರಯ್ಚೂರ್ 17 ಪರಮಶಿವಂ 183 ಪಶ್ಚಿಮಗಟ್ಟ 18 ಪಳೆಯಳಿಕೆ 196, 203, 205, 240, 277-8, 280, 317, 122 ಪಾಶ್ಚಾತ್ಯ ವ್ಯಾಕರಣ 291 ಪೆಂಗೊ 23 ಪ್ರಮಾಣ 279 ಪ್ರಶ್ನಾರ್ತಕ ಪದ 297 ಪ್ರಾಸ 38-9
ಬಡಗು ಒಳನುಡಿ 54, 82, 86, 110-4, 171 ಬಡಗುದ್ರಾವಿಡ 22-3, 103, 195, 245 ಬರಹ 144 ಬಲೂಚಿಸ್ತಾನ 19 ಬಳ್ಳಾರಿ 56, 100, 171 ಬಾಲಕ್ರುಶ್ಣನ್ 73, 115, 200, 246, 298, 327 ಬೇರು 40, 42, 75-6 ಬ್ರಾಹುಯೀ 19, 23-4 ಬ್ರಾಹ್ಮೀ ಲಿಪಿ 25, 39 ಮಂಡ 23 ಮಡಚಿದ ವ್ಯಂಜನ 107 ಮನುಶ್ಯ 128, 219, 284-5, 298-9 ಮಯ್ಸೂರು 54-5, 82-3, 86-7, 101 ಮರಾಟಿ 105
ಮಹಾಪ್ರಾಣಾಕ್ಶರ 315 ಮಾಡುವಿಕೆ 194, 195 ಮಾತಿನ ಕೆಲಸ 319 ಮಾಲ್ತೋ 23, 195, 245 ಮುಂಗೆಳಗಿನ ಸ್ವರ 85
ಮುಂದಿನ ಸಮಯ 26, 191-2, 217, 224-29, 232 ಮುಂದಿನ ಸ್ವರ - ಹಿಂದಿನ ಸ್ವರ 41 ಮೂಗುಲಿ 137, 152 ಮೂಡು-ಬಡಗು ಒಳನುಡಿ 171 ಮೂಲನುಡಿ 19-29 ರಚನೆ-ಒಳರಚನೆ 180 ರಾಮಚಂದ್ರ ರಾವ್ 111 ರೂಡಿಯ ಕೆಲಸ 217-8, 237 ಲಾರಿಂಜಲ್ 162, 242, 297 ಲಿಂಗಬೇದ 201, 245, 249, 272 ವಚನ 272, 316 ವಡ್ಡಾರಾದನೆ 289 ವಯ್ಯಾಕರಣಿ 133, 226-7, 291 ವರ್ಣಿಸು 320 ವಿಶೇಶಣ 278, 280 ಶರತ್ತು 325
ಶಿತಿಲದ್ವಿತ್ವ 134 ಸಂಬಂದದ ಒಟ್ಟು 278-9, 306 ಸಂಬಂದಿಸುವ ರೂಪ 216, 324-5 ಸಂಸ್ಕ್ರುತ 16, 20, 21, 127
ಸಕರ್ಮಕ-ಅಕರ್ಮಕ 182-6, 189, 191, 193-4, 202 ಸಕಲೇಶಪುರ 107 ಸಮಯದ ಒಟ್ಟು 216, 240-1, 321 ಸರ್ವನಾಮ 287 ಸುಬ್ರಹ್ಮಣ್ಯಂ 62, 92, 119, 127-8, 162, 198, 202-3, 224,
ಸುರು 280, 285, 293 ಸೇರಿಕೆಯ ಬದಲಾವಣೆ 309-11 ಸೊನ್ನೆ 144, 322 ಸೊನ್ನೆ ಒಟ್ಟು 207, 255 ಸೊಲಿಗ 69, 72, 102, 114-5 ಸ್ವರ, ಗಿಡ್ಡ-ಉದ್ದ 35-6, 41, 58, 61, 83; ಮೂಗಿಸಿದ 71, 83-4; ಮಡಚಿದ 72; ಬಿದ್ದುಹೋಗು 81-3; ದುಂಡಗಿಲ್ಲದ 70-1, 89; ಹೆಸರು 35; ಎಣಿಕೆ 35, 68
ಸ್ವೇಚ್ಚೆ 323 ಹಲವಚನ 26, 134, 183, 216, 245, 251, 272-3, 288-9,
ಹಳೆತಮಿಳು 92, 96, 98, 109, 163, 208, 252, 277 ಹಿಂದಿನ ಸಮಯ 191, 198, 217-24, 227, 229-31 ಹಿರೇಮಟ 104 ಹೆಂಗಸು 269, 270, 272, 298, 316
ಹೆಸರಿಸು 320 ಹೊಡೆಯುಲಿ 114, 119, 137, 145, 152, 156-61 ಹೊಸೂರು 106 ಹೊಳೇನರಸೀಪುರ 105 ಹೋಕಿಂಗ್್ಸ 17 (ಪುಸ್ತಕದ ಹೆಚ್ಚಿನ ಪುಟಗಳಲ್ಲಿಯೂ ಕಾಣಿಸುವ ಕನ್ನಡ, ಹಳೆಗನ್ನಡ,
ಮತ್ತು ತಮಿಳು ಪದಗಳನ್ನು ಈ ಸೂಚಿಯಲ್ಲಿ ಸೇರಿಸಲಿಲ್ಲ)
ಬಾಶಾಪ್ರಕಾಶನದ ಇತರ ಪುಸ್ತಕಗಳು
ಡಿ. ಎನ್. ಶಂಕರ ಬಟ್ ಬರೆದ ಇತರ ಪುಸ್ತಕಗಳು:
- ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, 2000, 2001; ದೊಡ್ಡ ಮಾಡಿರುವ 3ನೇ ಮುದ್ರಣ 2006; ಪುಟ 248, ರೂ 140.
-
ಕನ್ನಡ ಬರಹವನ್ನು ಸರಿಪಡಿಸೋಣ! 2005, ಪುಟ 247, ರೂ.
-
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? 2005, ಪುಟ 265,
- ಕನ್ನಡ ಪದಗಳ ಒಳರಚನೆ, 1999; ದೊಡ್ಡ ಮಾಡಿರುವ ಎರಡನೇ
ಮುದ್ರಣ 2002, ಪುಟ 239, ರೂ. 120.
- ಕನ್ನಡದ ಸರ್ವನಾಮಗಳು, 2003, ಪುಟ 192, ರೂ. 46.
- ಬಾಶೆಯ ಬಗೆಗೆ ನೀವೇನು ಬಲ್ಲಿರಿ?, 1970, 1998, ದೊಡ್ಡ
ಮಾಡಿರುವ ಮೂರನೇ ಮುದ್ರಣ 2002, ಪುಟ 191, ರೂ. 100.
- ಕನ್ನಡ ವಾಕ್ಯಗಳ ಒಳರಚನೆ, 2004, ಎರಡನೇ ಮುದ್ರಣ 2006,
ಪುಟ 280, ರೂ. 120.
ಬಾರತಿ ಬಟ್ ಬರೆದ ಪುಸ್ತಕಗಳು:
- ನನ್ನ ಬೆಲ್ಜಿಯಂ ಪ್ರವಾಸ, 2000, ಪುಟ 160, ರೂ. 50.
- ತಾಯಂದಿರಿಗೆ ಕಿವಿಮಾತು, 2007, ಪುಟ 224, ರೂ. 120.
ದಬ್ರೆ ನಾರಾಯಣ ಶಾಸ್ತ್ರಿಗಳು ಬರೆದ ಪುಸ್ತಕ: ಸನಾತನತ್ವದ ಇಣುಕುನೋಟಗಳು, 2007, ಪುಟ 264, ರೂ. 140
ಪ್ರತಿಗಳಿಗೆ ಬರೆಯಿರಿ:
ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001
ದೂರವಾಣಿ: 0824-2425161, -249397