← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

4. ತಡೆಯುಲಿಗಳು

Eke →

4.1 ಮುನ್ನೋಟ

ಕನ್ನಡದ ಚರಿತ್ರೆಯಲ್ಲಿ ಮೂಲದ್ರಾವಿಡ ಸ್ವರಗಳ ಎಣಿಕೆ ಮತ್ತು ಉಚ್ಚಾರಣೆಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ನಡೆದಿಲ್ಲವೆಂಬುದನ್ನು ನಾವು ಹಿಂದಿನ ಅದ್ಯಾಯದಲ್ಲಿ ನೋಡಿರುವೆವು. ಕೆಲವು ವಿಶಿಶ್ಟವಾದ ಮತ್ತು ಜಾಗಗಳಲ್ಲಿ ಸನ್ನಿವೇಶಗಳಲ್ಲಿ ಬದಲಾವಣೆಗಳಾಗಿವೆ, ಅಶ್ಟೆ (ಕನ್ನಡದ ಕೆಲವು ಒಳನುಡಿಗಳು ಇದಕ್ಕೆ ಅಪವಾದಗಳು).

ಸ್ವರಗಳ ಉದ್ದ

ಮಾತ್ರ

ಆದರೆ, ಮೂಲದ್ರಾವಿಡದಲ್ಲಿದ್ದ ವ್ಯಂಜನಗಳ ಎಣಿಕೆ ಮತ್ತು ಕನ್ನಡದ ಬದಲಾವಣೆಗಳಿಂದಾಗಿ, ಕನ್ನಡದಲ್ಲಿ

ಉಚ್ಚಾರಣೆಗಳೆರಡರಲ್ಲೂ ಚರಿತ್ರೆಯಲ್ಲಿ ಮೂಲದ್ರಾವಿಡದಲ್ಲಿದ್ದ ಇಪ್ಪತ್ತೊಂದು ವ್ಯಂಜನಗಳಾಗಿವೆ.

ಹಲವಾರು ಬದಲಾವಣೆಗಳು

ವ್ಯಂಜನಗಳು

ಹದಿನಾರು

ನಡೆದಿವೆ.

ವಿದ್ವಾಂಸರು ಮೂಲದ್ರಾವಿಡಕ್ಕೆ ಕಲ್ಪಿಸಿಕೊಂಡಿರುವ ವ್ಯಂಜನಗಳನ್ನು

ಕೆಳಗೆ ಸೂಚಿಸಿದ ಹಾಗೆ ಪಟ್ಟಿಮಾಡಬಹುದು.

ಮೂಲದ್ರಾವಿಡ ವ್ಯಂಜನಗಳು

ತಡೆಯುಲಿ ಪ ಮೂಗುಲಿ
ಪಕ್ಕದುಲಿ
ಹೊಡೆಯುಲಿ ತಡೆಯಿಲ್ಲದುಲಿ

ಮೂಲದ್ರಾವಿಡದ ಈ ವ್ಯಂಜನಗಳಲ್ಲಿ ಪ, ತ, ಚ, ಕ; ಮ, ನ, ಞ; ವ, ಯ ಎಂಬ ಒಂಬತ್ತು ವ್ಯಂಜನಗಳು ಮಾತ್ರ ಪದಗಳಲ್ಲಿ ಮೊದಲಿಗೆ ಬರಬಲ್ಲುವಾಗಿದ್ದುವು.

ಞಕಾರವನ್ನು ಬಿಟ್ಟು ಇತರ ಎಲ್ಲಾ ವ್ಯಂಜನಗಳೂ ಎರಡು ಸ್ವರಗಳ ನಡುವೆ ಬರಬಲ್ಲುವಾಗಿದ್ದುವು; ಅವುಗಳಲ್ಲಿ ತಡೆಯುಲಿಗಳು ಮತ್ತು ಮೂಗುಲಿಗಳು ಒತ್ತೆ ರೂಪದಲ್ಲಿ ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ (ಎಂದರೆ ಒತ್ತಕ್ಶರದ ರೂಪದಲ್ಲೂ) ಬರಬಲ್ಲುವಾಗಿದ್ದುವು.

ಉಳಿದ ವ್ಯಂಜನಗಳಲ್ಲಿ ರ-ೞಗಳನ್ನು ಬಿಟ್ಟು ಇತರ ವ್ಯಂಜನಗಳು ಒತ್ತೆ ರೂಪದಲ್ಲಿ ಮತ್ತು ಇಮ್ಮಡಿ ರೂಪದಲ್ಲಿ ಬರಬಲ್ಲುವಾಗಿದ್ದುವು; ರ- ೞಗಳು ಮಾತ್ರ ಇಮ್ಮಡಿ ರೂಪದಲ್ಲಿ ಬರುತ್ತಿರಲಿಲ್ಲ.

ತಡೆಯುಲಿಗಳ ಮೊದಲು ಬಂದ ಮೂಗುಲಿಗೆ ಆ ತಡೆಯುಲಿಗಳ ಜಾಗದಲ್ಲೇನೇ ನಡೆಯುವಂತಹ ಉಚ್ಚಾರಣೆಯಿತ್ತು. ಆದರೆ ಈ ಒಂದು ಮೊದಲಿನ) ಜಾಗವನ್ನು ಹೊರತುಪಡಿಸಿ ಇತರ (ತಡೆಯುಲಿಗಳ ಜಾಗಗಳಲ್ಲಿ ಇಲ್ಲವೇ ಇಮ್ಮಡಿ ರೂಪದಲ್ಲಿ ಮ, ನ, ಣ ಮತ್ತು ಞಗಳು ಮಾತ್ರ ಬರಬಲ್ಲುವಾಗಿದ್ದುವು. ಹಾಗಾಗಿ, ಮೂಲದ್ರಾವಿಡಕ್ಕೆ ಮ, ನ, ಣ ಮತ್ತು ಞಗಳೆಂಬ ಈ ನಾಲ್ಕು ಮೂಗುಲಿಗಳನ್ನು ಕಲ್ಪಿಸಿಕೊಂಡರೆ ಸಾಕಾಗುತ್ತದೆ.

ಹಳೆ ತಮಿಳಿನಲ್ಲಿ ಎರಡು ರೀತಿಯ ನಕಾರಗಳು ಬಳಕೆಯಲ್ಲಿದ್ದುವು; ಇವುಗಳಲ್ಲಿ ಒಂದಕ್ಕೆ ತಕಾರದ ಜಾಗದಲ್ಲಿ ಮತ್ತು ಇನ್ನೊಂದಕ್ಕೆ ಱಕಾರದ ಜಾಗದಲ್ಲಿ ಉಚ್ಚಾರಣೆಯಿತ್ತು. ಉದಾಹರಣೆಗಾಗಿ, ವೆರಿನ್ ‘ಬೆನ್ನು’ ಪದದಲ್ಲಿ ತಕಾರದ ಜಾಗದಲ್ಲಿ ಉಚ್ಚಾರವಾಗುವ ನಕಾರವಿದೆ ಮತ್ತು ವರಿನ್ ‘ಬಂದರೆ’ ಪದದಲ್ಲಿ ಱಕಾರದ ಜಾಗದಲ್ಲಿ ಉಚ್ಚಾರವಾಗುವ ನಕಾರವಿದೆ. ಆದರೆ ಈ ವ್ಯತ್ಯಾಸವನ್ನು ಮೂಲದ್ರಾವಿಡಕ್ಕೆ ಕಲ್ಪಿಸಿಕೊಳ್ಳುವ ಅವಶ್ಯಕತೆಯಿಲ್ಲವೆಂದು ತೋರುತ್ತದೆ.

ಮಲಯಾಳದಲ್ಲೂ ಈ ಎರಡು ರೀತಿಯ

ಮೂಗುಲಿಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಎನ್ನಾಲ್ ‘ಆದರೆ’ ಪದದಲ್ಲಿ ಬರುವ

ಇಮ್ಮಡಿ ನಕಾರಕ್ಕೆ ತಕಾರದ ಜಾಗದಲ್ಲಿ ಉಚ್ಚಾರಣೆಯಿದೆ ಮತ್ತು ಎನ್ನಾಲ್ ‘ನನ್ನಿಂದ’ ಪದದಲ್ಲಿ ಬರುವ ಇಮ್ಮಡಿ ನಕಾರಕ್ಕೆ ಱಕಾರದ ಜಾಗದಲ್ಲಿ ಮೊದಲಿನದು ಮೂಲದ್ರಾವಿಡದ *ನ್್ತ ಇಲ್ಲವೇ *ನ್ಱ್ದಿಂದ ಬಂದಿದೆ ಮತ್ತು ಎರಡನೆಯದು *ನ್್ನದಿಂದ ಬಂದಿದೆ (ಸುಬ್ರಹ್ಮಣ್ಯಂ 1983:380 ನೋಡಿ).

ಉಚ್ಚಾರಣೆಯಿದೆ.

ಇವುಗಳಲ್ಲಿ

ಮೂಗುಲಿಗಳ ಅನಂತರ ಬರುವ ತಡೆಯುಲಿಗಳು ಒತ್ತೆ ಇಲ್ಲವೇ

ಇಮ್ಮಡಿ ರೂಪದಲ್ಲಿರಲು ಸಾದ್ಯವಿತ್ತು.

ತಡೆಯುಲಿಗಳನ್ನು ಬಿಟ್ಟು ಉಳಿದ ಎಲ್ಲಾ ವ್ಯಂಜನಗಳೂ ಪದದ ಕೊನೆ

ಯಲ್ಲಿ ಬರಬಲ್ಲುವಾಗಿದ್ದುವು.

ಮೂಲದ್ರಾವಿಡದಲ್ಲಿ ಱಕಾರ ಒಂದು ತಡೆಯುಲಿಯಾಗಿತ್ತು ಎಂದು

ವಾದಿಸುವುದಕ್ಕೆ ಹಲವು ಕಾರಣಗಳಿವೆ:

(1) ಇತರ ತಡೆಯುಲಿಗಳ ಹಾಗೆ ಅದು ಮೂಗುಲಿಗಳ ಅನಂತರ ಒತ್ತೆ ರೂಪದಲ್ಲಿ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುದಾಗಿತ್ತು (*ತೋನ್ಱು ‘ತೋರು’, *ಕನ್‌ಱ್ಱಯ್ ‘ಕಂತೆ’);

(2) ಸ್ವರಗಳ ನಡುವೆಯೂ ಅದು ಒತ್ತೆ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುದಾಗಿತ್ತು (ಆಱು ‘ತಣಿ’, *ಮಾಱ್ಱು ‘ಮಾತು’).
(3) ಇವತ್ತಿನ ದ್ರಾವಿಡ ನುಡಿಗಳಲ್ಲಿ ಈ ಱಕಾರ ಹಲವು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ತಡೆಯುಲಿಯಾಗಿಯೇ ಉದಾಹರಣೆಗಾಗಿ, ಮೂಗುಲಿಗಳ ಮೊದಲು ಬಂದಿದ್ದ ಈ ಱಕಾರ ಗಿಡ್ಡ ಸ್ವರದ ಅನಂತರ ಕನ್ನಡದಲ್ಲಿ ದಕಾರವಾಗಿ ಕಾಣಿಸಿಕೊಳ್ಳುತ್ತದೆ (
ಒನ್ಱು > ಒಂದು); ಸ್ವರಗಳ ನಡುವಿನ ಇಮ್ಮಡಿ ಱಕಾರವೂ ಗಿಡ್ಡಸ್ವರದ ಅನಂತರ ತ್್ತ ಎಂಬುದಾಗಿ ಕಾಣಿಸಿಕೊಳ್ಳುತ್ತದೆ (*ಪುಱ್ಱಮ್ > ಹುತ್ತ).

ಮೂಲದ್ರಾವಿಡದ ಈ ಹದಿನಾರು ವ್ಯಂಜನಗಳು ಕನ್ನಡದಲ್ಲಿ ಇಪ್ಪ ತ್ತೊಂದು ವ್ಯಂಜನಗಳಾಗಿ ಒಡೆದುಕೊಂಡುದು ಹೇಗೆ ಎಂಬುದನ್ನು ಮತ್ತು

ಬೇರೆ ಕೆಲವು ಬದಲಾವಣೆಗಳಿಂದಾಗಿ ಅವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಉಂಟಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ಮತ್ತು ಮುಂದಿನ (ಅಯ್ದನೇ) ಅದ್ಯಾಯದಲ್ಲಿ ವಿವರವಾಗಿ ಪರಿಶೀಲಿಸಲಾಗುವುದು.

Eke →

4.1.1 ತಡೆಯುಲಿಗಳು

ಒಂದು ವ್ಯಂಜನವನ್ನು ಉಚ್ಚರಿಸುವಾಗ ಬಾಯಿಯ ಮೂಲಕ ಹೊರ ಹೋಗುವ ಉಸಿರನ್ನು ಬಾಯಿಯೊಳಗೆ ಎಲ್ಲಾದರೂ ಒಂದು ಕಡೆ ಪೂರ್ತಿ ಮೂಲಕವೇ) ಬಿಡಲಾಗುತ್ತದೆಯಾದರೆ, ಅದನ್ನು ‘ತಡೆಯುಲಿ’ ಎಂದು ಕರೆಯಬಹುದು; ಪ, ತ, ಚ, ಱ, ಟ, ಕ ಎಂಬವು ಮೂಲದ್ರಾವಿಡದಲ್ಲಿ ಬರುತ್ತಿದ್ದ ಇಂತಹ ತಡೆಯುಲಿಗಳು.

(ಬಾಯಿಯ

ಅನಂತರ

ತಡೆದು

ಇವುಗಳ ಉಚ್ಚಾರಣೆ ಮೂಲದ್ರಾವಿಡದಲ್ಲಿ ರೀತಿಯಲ್ಲಿ ನಡೆಯುತ್ತಿದ್ದಿರಬೇಕೆಂದು ಕಲ್ಪಿಸಲಾಗಿದೆ.

ಕೆಳಗೆ ವಿವರಿಸಿದ

(1) ತುಟಿಗಳೆರಡನ್ನು ಒಟ್ಟಿಗೆ ತರುವ ಮೂಲಕ ಉಚ್ಚರಿಸುವ ಪ;
(2) ನಾಲಿಗೆಯ ತುದಿಯನ್ನು ಹಲ್ಲುಗಳ ಹಿಂಬದಿಯಲ್ಲಿ ನಿಲ್ಲಿಸುವ

ಮೂಲಕ ಉಚ್ಚರಿಸುವ ತ;

(3) ನಾಲಿಗೆಯ ತುದಿಯನ್ನು ಅದಕ್ಕಿಂತ ಇನ್ನೂ ಸ್ವಲ್ಪ ಹಿಂಬದಿಯಲ್ಲಿ

ನಿಲ್ಲಿಸುವ ಮೂಲಕ ಉಚ್ಚರಿಸುವ ಱ;

(4) ನಾಲಗೆಯ ಮುಂದಿರುವ (ಎಂದರೆ ಅದರ ತುದಿಯ ಹಿಂದಿರುವ) ಚಪ್ಪಟೆ ಬಾಗವನ್ನು ಅಲ್ಲೇ ಮೇಲ್ಗಡೆಯಿರುವ ಅಂಗುಳಿಗೆ ತಾಗಿಸುವ ಮೂಲಕ ಉಚ್ಚರಿಸುವ ಚ;

(5) ನಾಲಗೆಯ ತುದಿಯನ್ನು ಮಡಚಿ ಅದರ ಅಡಿಬಾಗವನ್ನು ಅಂಗುಳಿಗೆ

ತಾಗಿಸುವ ಮೂಲಕ ಉಚ್ಚರಿಸುವ ಟ; ಮತ್ತು

(6) ನಾಲಿಗೆಯ ಹಿಂಬಾಗವನ್ನು ಅಲ್ಲೇ ಮೇಲ್ಗಡೆಯಿರುವ ಮೆದು

ಅಂಗುಳಿಗೆ ತಾಗಿಸುವ ಮೂಲಕ ಉಚ್ಚರಿಸುವ ಕ.

ಈ ಎಲ್ಲಾ ತಡೆಯುಲಿಗಳಿಗೂ ಕೊರಳಿಸಿದ ಮತ್ತು ಕೊರಳಿಸದ

ಉಚ್ಚಾರಣೆಗಳಿದ್ದುವು (4.1.2 ನೋಡಿ).

ಮೂಲದ್ರಾವಿಡದಲ್ಲಿದ್ದ ಈ ಆರು ತಡೆಯುಲಿಗಳು ಕನ್ನಡದಲ್ಲಿ ಹತ್ತು ತಡೆಯುಲಿಗಳಾಗಿ ಒಡೆದುಕೊಂಡಿವೆ. ಇದಕ್ಕೆ ಕಾರಣವೇನೆಂದರೆ, ಮೂಲ ದ್ರಾವಿಡದಲ್ಲಿ ಅರ್ತಬೇದವನ್ನು ಸೂಚಿಸದಿದ್ದಂತಹ ಕೊರಳಿಸದ (ಪ, ತ, ಚ, ಟ, ಕ) ಮತ್ತು ಕೊರಳಿಸಿದ (ಬ, ದ, ಜ, ಡ, ಗ) ತಡೆಯುಲಿಗಳ ನಡುವಿನ ವ್ಯತ್ಯಾಸ ಕನ್ನಡದಲ್ಲಿ ಅರ್ತಬೇದವನ್ನು ಸೂಚಿಸುವ ಹಾಗಾಗಿದೆ.

ಇದಲ್ಲದೆ, ಮೂಲದ್ರಾವಿಡದ ತಡೆಯುಲಿಗಳು ಕನ್ನಡದಲ್ಲಿ ಬೇರೆಯೂ ಹಲವು ಬದಲಾವಣೆಗೊಳಗಾಗಿವೆ. ಅದರಲ್ಲಿದ್ದ ಱ ಎಂಬ ತಡೆಯುಲಿ ಹಳೆಗನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ರಕಾರದ ಹಾಗಿದ್ದ, ಆದರೆ ಉಚ್ಚಾರಣೆ ಯಲ್ಲಿ ಅದಕ್ಕಿಂತ ಬೇರಾಗಿದ್ದ, ಒಂದು ‘ಹೊಡೆಯುಲಿ’ಯಾಗಿ ಬದಲಾಗಿದೆ; ಅನಂತರ ಹೊಸಗನ್ನಡದಲ್ಲಿ ಅದು ಉಚ್ಚಾರಣೆಯಲ್ಲಿ ರಕಾರವೇ ಆಗಿದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಕೆಲವು ಸನ್ನಿವೇಶಗಳಲ್ಲಿ (ಎರಡು ಸ್ವರಗಳ ನಡುವೆ ಇಮ್ಮಡಿ ರೂಪದಲ್ಲಿ ಬಂದಿದ್ದಾಗ ಇಲ್ಲವೇ ಒಂದು ಮೂಗುಲಿಯ ಮೊದಲು ಬಂದಿದ್ದಾಗ) ಅದು ಹಳೆಗನ್ನಡದಲ್ಲೇನೇ ತಕಾರ ಇಲ್ಲವೇ ದಕಾರವಾಗಿಯೂ ಬದಲಾಗಿದೆ. ಮೂಲದ್ರಾವಿಡದ ಚಕಾರ ಕನ್ನಡದಲ್ಲಿ ಹೆಚ್ಚಿನೆಡೆಗಳಲ್ಲೂ ಸಕಾರವಾಗಿ ಬದಲಾಗಿದೆ; ಆದರೆ ಕೆಲವು ಪದಗಳಲ್ಲಿ ಅದು ಚಕಾರವಾಗಿಯೇ ಉಳಿದಿದೆ ಇಲ್ಲವೇ ಜಕಾರವಾಗಿ ಬದಲಾಗಿದೆ.

ಮೂಲದ್ರಾವಿಡದ ತಡೆಯುಲಿಗಳು ಕನ್ನಡದಲ್ಲಿ ಬೇರೆಯೂ ಹಲವು ಬದಲಾವಣೆಗಳಿಗೊಳಗಾಗಿದ್ದು, ಅದರಿಂದಾಗಿ ಅವು ಯಾವ ಪದಗಳಲ್ಲೆಲ್ಲ ಬರುತ್ತವೆ ಎಂಬ ವಿಶಯದಲ್ಲಿ ಮೂಲದ್ರಾವಿಡ ಮತ್ತು ಕನ್ನಡಗಳ ನಡುವೆ ಹಲವು ವ್ಯತ್ಯಾಸಗಳು ತೋರಿಬರುತ್ತವೆ.

Eke →

4.1.2 ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳು

ಮೂಲದ್ರಾವಿಡದಲ್ಲಿ ತಡೆಯುಲಿಗಳಿಗೆ ‘ಕೊರಳಿಸಿದ’ ಉಚ್ಚಾರಣೆ ಮತ್ತು ‘ಕೊರಳಿಸದ’ ಉಚ್ಚಾರಣೆ ಎಂಬುದಾಗಿ ಎರಡು ರೀತಿಯ ಉಚ್ಚಾರಣೆ ಗಳಿದ್ದುವು; ಕೊರಳಿಸಿದ ಉಚ್ಚಾರಣೆಯಲ್ಲಿ ಅವುಗಳೊಂದಿಗೆ ಗಂಟಲಿನಲ್ಲಿ ನಡೆಯುವ ಅದಿರುವಿಕೆಯೂ ಸೇರಿರುತ್ತದೆ; ಕೊರಳಿಸದ ಉಚ್ಚಾರಣೆಯಲ್ಲಿ ಈ ಅದಿರುವಿಕೆ ಸೇರಿರುವುದಿಲ್ಲ. ಆದರೆ, ಮೂಲದ್ರಾವಿಡ ತಡೆಯುಲಿಗಳ ಉಚ್ಚಾರಣೆಯಲ್ಲಿದ್ದ ಈ ಸೂಚಿಸುವ ವ್ಯತ್ಯಾಸಕ್ಕೆ ಕೆಲಸವಿತ್ತೆಂದು ವಾದಿಸಲು ಯಾವ ಆದಾರವೂ ದೊರಕುವುದಿಲ್ಲ.

ನಡುವಿನ ಅರ್ತವ್ಯತ್ಯಾಸವನ್ನು

ಪದಗಳ

ಹಾಗಾಗಿ, ಎರಡು ಸ್ವರಗಳ ನಡುವೆ ಬಂದಾಗ, ಇಲ್ಲವೇ ಮೂಗುಲಿ ಗಳ (ಮನಣಞಗಳ) ಅನಂತರ ಒತ್ತೆಯಾಗಿ ಬಂದಾಗ ತಡೆಯುಲಿಗಳನ್ನು ಕೊರಳಿಸಿದ ವ್ಯಂಜನಗಳಾಗಿ ಮತ್ತು ಇತರ ಸಂದರ್ಬಗಳಲ್ಲಿ ಕೊರಳಿಸದ ವ್ಯಂಜನಗಳಾಗಿ ಮೂಲದ್ರಾವಿಡದಲ್ಲಿ ಉಚ್ಚರಿಸಲಾಗುತ್ತಿತ್ತು ಎಂಬುದಾಗಿ ಕಲ್ಪಿಸಬೇಕಾಗಿದೆ.
ನಡೆದ ಹಲವಾರು ಬದಲಾವಣೆಗಳ ಕನ್ನಡದ ತಡೆಯುಲಿಗಳ ಪರಿಣಾಮವಾಗಿ, ನಡುವಿದ್ದ ಈ ಉಚ್ಚಾರಣೆಯ ವ್ಯತ್ಯಾಸಕ್ಕೆ ಅರ್ತವ್ಯತ್ಯಾಸವನ್ನು ಸೂಚಿಸುವ ಬೆಲೆ ಬಂದಿದೆ.

ಕೊರಳಿಸಿದ ಮತ್ತು

ಚರಿತ್ರೆಯಲ್ಲಿ

ಕೊರಳಿಸದ

ಉದಾಹರಣೆಗಾಗಿ, ಕತ್ತೆ ಮತ್ತು ಗದ್ದೆ ಎಂಬ ಎರಡು ಪದಗಳ ನಡು ವಿರುವ ಅರ್ತ ವ್ಯತ್ಯಾಸವನ್ನು ಅವುಗಳಲ್ಲಿ ಬರುವ ತಡೆಯುಲಿಗಳು ಕೊರಳಿಸದ ಕ-ತ ರೂಪದಲ್ಲಿವೆಯೇ ಇಲ್ಲವೇ ಕೊರಳಿಸಿದ ಗ-ದ ಕನ್ನಡದಲ್ಲಿ ರೂಪದಲ್ಲಿವೆಯೇ ಎಂಬ ಸೂಚಿಸಲಾಗುತ್ತದೆ. ಆದರೆ ಪದಗಳು *ಕೞುತಯ್ ರೂಪದಲ್ಲಿದ್ದಿರಬೇಕು (ಉಚ್ಚಾರಣೆಯಲ್ಲಿ *ಕೞುದಯ್ ಮತ್ತು *ಕೞದಯ್).

ವ್ಯತ್ಯಾಸದ ಮೂಲದ್ರಾವಿಡದಲ್ಲಿ ಈ

*ಕೞತಯ್ ಎಂಬ

ಮೂಲಕ

ಮತ್ತು

ಇವುಗಳಲ್ಲಿ ಮೊದಲನೆಯ ಪದ ಕನ್ನಡದಲ್ಲಿ ಕತ್ತೆ ಎಂಬುದಾಗಿ ಬದಲಾಗಿದೆ. ಎಂದರೆ, ೞಕಾರದ ಅನಂತರ ಬಂದಿದ್ದ ಉಕಾರ ಬಿದ್ದು

ಹೋಗಿದೆ ಮತ್ತು ಇದರಿಂದ ಉಂಟಾದ ೞ್್ದ ಒತ್ತಕ್ಶರ ಕೊರಳಿಸದ ತ್್ತ ಎಂಬುದಾಗಿ ಬದಲಾಗಿದೆ. ಇದಲ್ಲದೆ, ಪದದ ಕೊನೆಯ *ಅಯ್ ಎಂಬುದು ಎಕಾರವಾಗಿ ಬದಲಾಗಿದೆ.

ಇದಕ್ಕೆ ಬದಲು ಎರಡನೆಯ ಪದ ಗದ್ದೆ ಎಂಬುದಾಗಿ ಬದಲಾಗಿದೆ. ಎಂದರೆ, ೞಕಾರದ ಅನಂತರ ಬಂದಿದ್ದ ಅಕಾರ ಬಿದ್ದುಹೋಗಿದೆ ಮತ್ತು ಇದರಿಂದ ಉಂಟಾದ ೞ್್ದ ಒತ್ತಕ್ಶರ ಕೊರಳಿಸಿದ ದ್್ದ ಎಂಬುದಾಗಿ ಬದಲಾಗಿದೆ. ಇದಲ್ಲದೆ, ಪದದ ಮೊದಲಿನ ಕಕಾರವೂ ಕೊರಳಿಸಿದ ಗಕಾರವಾಗಿ ಬದಲಾಗಿದೆ ಮತ್ತು ಪದದ ಕೊನೆಯ ಅಯ್ ಎಂಬುದು ಎಕಾರವಾಗಿ ಬದಲಾಗಿದೆ.

ತಡೆಯುಲಿಗಳ ಕೊರಳಿಸುವಿಕೆಯ ಮಟ್ಟಿಗೆ ಕನ್ನಡದಲ್ಲಿ ನಡೆದ ಇಂತಹ ಬದಲಾವಣೆಗಳೆಲ್ಲ ಹೆಚ್ಚಿನ ಮಟ್ಟಿಗೆ ಅನಿಯಮಿತವಾದವುಗಳು. ಅವುಗಳ ಸ್ವರೂಪ ಎಂತಹದು ಎಂಬುದನ್ನು ಕೆಳಗಿನ ವಿಬಾಗಗಳಲ್ಲಿ (ಬೇರೆ ಬೇರೆ ಸಂದರ್ಬಗಳಲ್ಲಿ) ವಿವರಿಸಲಾಗಿದೆ.

ಮತ್ತು

ನಾಲ್ಕು

Eke →

4.2 ಪದಗಳ ಮೊದಲಿಗಿದ್ದ ತಡೆಯುಲಿಗಳು

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡ ಪದಗಳಲ್ಲಿ ಮೊದಲಿಗೆ ಕ, ಚ, ಮಾತ್ರ ಬರಬಲ್ಲುವಾಗಿದ್ದುವು; ಱ ಮತ್ತು ಟಗಳು ಆ ಜಾಗದಲ್ಲಿ ಬರುತ್ತಿರಲಿಲ್ಲ.
ಇದಲ್ಲದೆ, ಈ ತಡೆಯುಲಿಗಳು ಪದಗಳ ಮೊದಲಿಗೆ ಕೊರಳಿಸದ ರೂಪದಲ್ಲಿ ಮಾತ್ರ ಬಳಕೆಯಾಗುತ್ತಿದ್ದುವು. ಅದರೆ ಕನ್ನಡ ಪದಗಳಲ್ಲಿ ಮೊದಲಿಗೆ ಅವು ಕೊರಳಿಸದ ರೂಪದಲ್ಲಿ ಮಾತ್ರವಲ್ಲದೆ ಕೊರಳಿಸಿದ ರೂಪದಲ್ಲೂ ಬರಬಲ್ಲುವು.

ತಡೆಯುಲಿಗಳು

ಈ ವಿಶಯದಲ್ಲಿ ಕನ್ನಡದ (ಮತ್ತು ಇತರ ದ್ರಾವಿಡ ನುಡಿಗಳ) ಪದ ಗಳು ಹಲವು ರೀತಿಯ ಅನಿಶ್ಚಿತತೆಗಳಿಗೊಳಗಾಗಿವೆ. ಹಳೆತಮಿಳು ನುಡಿ ಮಾತ್ರ ಇದಕ್ಕೆ ಅಪವಾದವೆಂದು ಹೇಳಬಹುದು. ಉದಾಹರಣೆಗಾಗಿ, ಕನ್ನಡದ ಕೆಲವು ಪದಗಳ ಮೊದಲಿಗೆ ಬರುವ ತಡೆಯುಲಿಗಳು ಅವುಗಳ ಎಲ್ಲಾ ರೂಪಗಳಲ್ಲೂ ಕೊರಳಿಸಿದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ಗಂಡು, ಗಂಡ, ಗಂಡಸು, ಗಂಡಿಕೆ, ಗಂಡಿಗ ಜಾಱು, ಜಾಱಿಕೆ ’ಜಾರುವಿಕೆ’, ಜಾಱ (ಜಾರುಗುಪ್ಪೆ) ದಟ್ಟ ‘ದಪ್ಪ’, ದಡ್ಡ, ದಡಾಲಿ ‘ದಪ್ಪ ಹೆಂಗಸು’, ದಂಡಿ
‘ದೊಡ್ಡದು’

ಇನ್ನು ಕೆಲವು ಪದಗಳು ಅವುಗಳ ಒಂದೆರಡು ರೂಪಗಳಲ್ಲಿ ಮಾತ್ರ ಮೊದಲಿಗಿರುವ ತಡೆಯುಲಿಯನ್ನು ಕೊರಳಿಸಿದ ರೂಪಕ್ಕೆ ಬದಲಾಯಿಸಿವೆ; ಉಳಿದ ರೂಪಗಳಲ್ಲಿ ಅದನ್ನು ಕೊರಳಿಸದ ರೂಪದಲ್ಲೇ ಉಳಿಸಿಕೊಂಡಿವೆ. (ಈ ಸಂದರ್ಬದಲ್ಲಿ ಚಕಾರ ಕನ್ನಡದಲ್ಲಿ ಚಕಾರವಾಗಿ ಉಳಿದಿರಬಹುದು ಇಲ್ಲವೇ ಸಕಾರವಾಗಿ ಬದಲಾಗಿರಬಹುದು).

  ಗೀರು, ಗೀಟು, ಗೀಚು; ಕೀಱು, ಕಿಱುಕು 

ಗುೞಿ; ಕೊೞವೆ, ಕುೞಿ ಜರಿ, ಜರುಗು, ಜಗ್ಗು; ಸರಿ, ಸರಕು ಜಂಬು; ಚಾಚು, ಚಾಪು; ಸಾಗು

ಆದರೆ, ಕನ್ನಡದ ಹೆಚ್ಚಿನ ಪದಗಳಲ್ಲೂ ಅವುಗಳ ಮೊದಲಿಗಿದ್ದ ಕೊರಳಿಸದ

ಪದರೂಪಗಳಲ್ಲೂ

ತಡೆಯುಲಿಗಳು ತಡೆಯುಲಿಗಳಾಗಿಯೇ ಉಳಿದಿವೆ.

ಕೊಳೆ, ಕೊಳಕು, ಕೊಳಚೆ, ಕೊಚ್ಚೆ ತಡೆ, ತಡ, ತಡವು, ತಡೆತ ಪೊಗೞ್, ಪೊಗೞ್ಕ, ಪೊಗೞ್ತ

ಈ ಬದಲಾವಣೆಯ ಅನಿಯಮಿತತೆಯಿಂದಾಗಿ, ಪದಗಳ ಮೊದಲಿಗೆ ಕಾಣಿಸುವ ಕೊರಳಿಸಿದ ಮತ್ತು ಕೊರಳಿಸದ ತಡೆಯುಲಿಗಳ ನಡುವಿನ ವ್ಯತ್ಯಾಸಕ್ಕೆ ಕನ್ನಡದಲ್ಲಿ ಅರ್ತವ್ಯತ್ಯಾಸವನ್ನು ಸೂಚಿಸುವ ಹೊಣೆ ಸಿಕ್ಕಿದೆ. ಪದಜೋಡಿಯಲ್ಲಿ ಇದನ್ನು

ಕತ್ತೆ-ಗದ್ದೆ

ಕೊಟ್ಟಿರುವ

ಮೇಲೆ

ಕುರಿ-ಗುರಿ

ಮೊದಲಾದ

ಮಾತ್ರವಲ್ಲದೆ, ತೊಟ್ಟಿ-ದೊಡ್ಡಿ, ಕುತ್ತು-ಗುದ್ದು, ತಣಿ-ದಣಿ, ಕಂಡ- ಗಂಡ, ಚಪ್ಪರಿಸು-ಜಬ್ಬರಿಸು, ಸರಿ-ಜರಿ, ತಟ್ಟಿ-ದಟ್ಟಿ, ಪಣ-ಬಣವೆ, ಪರ್ದು-ಬರ್ದು, ಪದಜೋಡಿಗಳಲ್ಲೂ ಕಾಣಬಹುದು. ಹಳೆಯ

ದ್ರಾವಿಡ ನುಡಿಗಳಲ್ಲೂ ನಡೆದಿರುವ ಈ ಬದಲಾವಣೆಯ ಹಿಂದೆ ಎಂತಹ ಹಲವು ನಿಯಮವಿದೆ ಎಂಬುದನ್ನು ಪ್ರಯತ್ನಗಳನ್ನು ಮಾಡಿರುವರಾದರೂ ಹೆಚ್ಚಿನ ಪ್ರಯೋಜನವಾಗಿಲ್ಲ.

ತಮಿಳೊಂದನ್ನು ಬಿಟ್ಟು ಉಳಿದ ಎಲ್ಲಾ

ತಿಳಿಯಲು ವಿದ್ವಾಂಸರು

ಕನ್ನಡದ ಮಟ್ಟಿಗೆ ಹೇಳುವುದಾದರೆ, ಈ ಪದಗಳ ಎರಡನೆಯ ಮತ್ತು ಅನಂತರದ ಉಲಿಕಂತೆಗಳಲ್ಲಿ ಬರುವ ಕೊರಳಿಸಿದ ತಡೆಯುಲಿಗಳಿಂದಾಗಿ ಮತ್ತು ಇತರ ಕೊರಳಿಸಿದ ವ್ಯಂಜನಗಳಿಂದಾಗಿ ಅವುಗಳ ಮೊದಲಿಗಿದ್ದ ತಡೆಯುಲಿಗಳಲ್ಲಿ ಈ ಬದಲಾವಣೆ ನಡೆದಿರಲು ಸಾದ್ಯವಿದೆ.

ಇದಲ್ಲದೆ, ದ್ರಾವಿಡ ಕುಟುಂಬಕ್ಕೆ ಸೇರದಿರುವ ಇತರ ನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲಿ ಕೊರಳಿಸದ ಮತ್ತು ಕೊರಳಿಸಿದ ತಡೆಯುಲಿಗಳ ನಡುವಿನ ವ್ಯತ್ಯಾಸಕ್ಕೆ ಅರ್ತವ್ಯತ್ಯಾಸವನ್ನು ಸೂಚಿಸುವ ಪದಗಳಲ್ಲಿ ಈ ಮೂಲದ್ರಾವಿಡದಿಂದ ಬಂದ ಬೆಲೆಯಿರುವುದು ಬದಲಾವಣೆ ನಡೆಯಲು ಇನ್ನೊಂದು ಕಾರಣವಾಗಿರಬಹುದು.

ಈ ಬದಲಾವಣೆಯಿಂದಾಗಿ, ಮೂಲದ್ರಾವಿಡ ಪದಗಳ ಮೊದಲಿಗಿದ್ದ ಕಕಾರವು ಕಕಾರ ಮತ್ತು ಗಕಾರಗಳಾಗಿಯೂ, ಚಕಾರವು ಚಕಾರ (ಇಲ್ಲವೇ ಸಕಾರ) ಮತ್ತು ಜಕಾರಗಳಾಗಿಯೂ, ತಕಾರವು ತಕಾರ ಮತ್ತು ದಕಾರ ಗಳಾಗಿಯೂ, ಪಕಾರವು ಪಕಾರ ಮತ್ತು ಬಕಾರಗಳಾಗಿಯೂ ಕನ್ನಡದಲ್ಲಿ ಒಡೆದುಕೊಂಡಿವೆ.

ಕನ್ನಡ

ಮಲಯಾಳ: ಕುಡುಖ್:

ಚ>ಚ ಚಂದ

ತಮಿಳು:

ಚ>ಜ ಜಾಱು

ತಮಿಳು:

ತ>ತ ತಿದ್ದು
ತ>ದ ದಿಣ್ಣೆ

ಪ>ಪ ಪಚ್ಚೆ
ಪ>ಬ ಬುರುಡೆ

ಮಲಯಾಳ: ತುಳು:

ತಮಿಳು:
ತೆಲುಗು:

ತಿರುತ್ತು

ಪಚ್ಚಯ್ ಪುಱ್ಱೆ

ಆದರೆ, ಕನ್ನಡ ಪದಗಳ ಮೊದಲಿಗಿದ್ದ ಬಕಾರ ಮೇಲೆ ಸೂಚಿಸಿದ ಹಾಗೆ ಮೂಲದ್ರಾವಿಡದ ಪಕಾರದಿಂದ ಬಂದಿರುವುದು ಕೆಲವೇ ಕೆಲವು ಪದಗಳಲ್ಲಿ ಮಾತ್ರ; ಹೆಚ್ಚಿನವುಗಳಲ್ಲೂ ಅದು ಮೂಲದ್ರಾವಿಡದ ವಕಾರದಿಂದ ನೋಡಲಿರುವೆವು.

ಬಂದಿದೆಯುಂಬುದನ್ನು

ಮುಂದೆ

ಪದಗಳ ಮೊದಲಿಗಿದ್ದ ತಡೆಯುಲಿಗಳು ಕನ್ನಡದ ಚರಿತ್ರೆಯಲ್ಲಿ ಬೇರೆಯೂ ಕೆಲವು ಬದಲಾವಣೆಗಳಿಗೊಳಗಾಗಿದ್ದು ಅವನ್ನು ಕೆಳಗಿನ ವಿಬಾಗಗಳಲ್ಲಿ ವಿವರಿಸಲಾಗಿದೆ.

Eke →

4.2.1 ಪಕಾರ ಹಕಾರವಾಗಿರುವುದು ಮತ್ತು ಬಿದ್ದುಹೋಗಿರುವುದು

ಪದಗಳ ಮೊದಲಿಗಿದ್ದ ಪಕಾರ ಹೊಸಗನ್ನಡದಲ್ಲಿ ಹಕಾರವಾಗಿ ಬದಲಾ ಗಿದೆ ಮತ್ತು ಇವತ್ತಿನ ಕೆಲವು ಒಳನುಡಿಗಳಲ್ಲಿ ಬಿದ್ದುಹೋಗಿದೆ. ಪಕಾರ ಹಕಾರವಾಗುವ ಬದಲಾವಣೆ ಸುಮಾರು ಹತ್ತನೇ ಶತಮಾನದಲ್ಲಿ ಸುರುವಾಗಿತ್ತು ಎಂಬುದಾಗಿ ಕನ್ನಡ ಶಾಸನಗಳನ್ನು ಪರಿಶೀಲಿಸಿದಾಗ ತಿಳಿಯುತ್ತದೆ.
ಒಂಬತ್ತನೇ

ಮಾತ್ರವೇ ಕಾಣಿಸುತ್ತದೆ; ಆದರೆ ಹತ್ತನೇ ಶತಮಾನದ ಶಾಸನಗಳಲ್ಲಿ ಪಕಾರದ ಬದಲು ಹಕಾರವನ್ನು ತೋರಿಸುವ ಕೆಲವು ಪದಗಳು ಕಾಣಸಿಗುತ್ತವೆ.

ಶಾಸನಗಳಲ್ಲಿ

ಶತಮಾನದ

ಪಕಾರ

ಅನಂತರದ ಶಾಸನಗಳಲ್ಲಿ ಇಂತಹ ಪದಗಳ ಎಣಿಕೆ ಜಾಸ್ತಿಯಾಗುತ್ತಾ ಹೋಗುತ್ತದೆ ಮತ್ತು ಹದಿನಾಲ್ಕು-ಹದಿನಯ್ದನೇ ಶತಮಾನಕ್ಕಾಗುವಾಗ

ಮೊದಲಿಗೆ ಪಕಾರ ಬಂದಿರುವ ಪದಗಳು ಕಡಿಮೆಯಾಗುತ್ತಾ ಹೋಗಿ ಅನಂತರ ಅವು ಪೂರ್ತಿ ಇಲ್ಲವಾಗಿಬಿಡುತ್ತವೆ (ನರಸಿಂಹಯ್ಯ 1941,

ಈ ಬದಲಾವಣೆ ಸಾಹಿತ್ಯರಚನೆಯಲ್ಲಿ, ಅದರಲ್ಲೂ ಪದ್ಯಗಳ ರಚನೆಯಲ್ಲಿ ಬಳಕೆಯಾಗುವ ಪದಗಳಲ್ಲಿ ಸರಿಯಾಗಿ ಕಂಡುಬರುವುದು ಹದಿಮೂರು-ಹದಿನಾಲ್ಕನೇ ಶತಮಾನದ ಅನಂತರ ಮಾತ್ರ. ಮಾತಿನಲ್ಲಿ ನಡೆದ ಬದಲಾವಣೆಗಳು ಬರಹವನ್ನು ತಲಪಲು ಸ್ವಲ್ಪ ಸಮಯ ಬೇಕಾಗುತ್ತದೆಯುಂಬುದೇ ಇದಕ್ಕೆ ಕಾರಣ. ಶಾಸನಗಳ ಬರಹ ಮಾತಿಗೆ ಹೆಚ್ಚು ಹತ್ತಿರ ಇರುವ ಕಾರಣ, ಅದರಲ್ಲಿ ಬದಲಾವಣೆಗಳು ಮೊದಲು ಕಾಣಿಸಿಕೊಳ್ಳುತ್ತವೆ.

ಹಳೆಗನ್ನಡ ಪದಗಳ ಮೊದಲಿಗಿದ್ದ ಪಕಾರ ಈ ರೀತಿ ಹಕಾರವಾಗಿ ಬದಲಾಗಿರುವುದನ್ನು ಹೊಸಗನ್ನಡದ ನೂರಾರು ಪದಗಳಲ್ಲಿ ಕಾಣಬಹುದು. ಕೆಳಗಿನ ಕೆಲವು ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಹಳೆಗನ್ನಡ ಪಾಲ್ ಪುಲಿ

ಹೊಸಗನ್ನಡ ಹಣ್ಣು ಹಾಲು ಹೀರು ಹುಲಿ

ಹಳೆಗನ್ನಡ ಪೆರ್ಚು ಪೇೞ್

ಪೊಗೞ್ ಪೋ

ಹೊಸಗನ್ನಡ ಹೂವು ಹೆಚ್ಚು ಹೇಳು ಹೊಗಳು ಹೋಗು

ಇದಲ್ಲದೆ, ಪದಗಳ ಮೊದಲಿಗಿದ್ದ ಪಕಾರದ ಬದಲಿಗೆ ಬಂದ ಹಕಾರವು ಹದಿಮೂರನೇ ಶತಮಾನದ ಶಾಸನವೊಂದರಲ್ಲೇನೇ ಕೆಲವು ‘ಹೋದರು’) ಬಿದ್ದು ‘ಹೋಗು’, ಓದರ್ ಪದಗಳಲ್ಲಿ ಹೋಗಿರುವುದು ಕಂಡು ಬರುತ್ತದೆ. ಆದರೆ, ಅನಂತರದ ಶಾಸನಗಳಲ್ಲಿ ಮತ್ತು ಇವತ್ತಿನ ಬರಹದ ಕನ್ನಡದಲ್ಲಿ ಈ ಹಕಾರ ಉಳಿದುಕೊಂಡಿದೆ. ಇವತ್ತಿನ ಕೆಲವು ಒಳನುಡಿಗಳಲ್ಲಿ ಮಾತ್ರ ಇದು ಪೂರ್ತಿ ಬಿದ್ದುಹೋಗಿದೆ.

ಉದಾಹರಣೆಗಾಗಿ, ಬಳ್ಳಾರಿ ಮತ್ತು ನಂಜನಗೂಡಿನ ಒಕ್ಕಲಿಗರ ಮಾತಿ ನಲ್ಲಿ ಇದು ಪೂರ್ತಿ ಬಿದ್ದುಹೋಗಿದೆ. ಗುಲ್ಬರ್ಗದಲ್ಲೂ ಕೆಲವು ಪ್ರದೇಶಗಳಲ್ಲಿ ಬಿದ್ದುಹೋಗಿದೆ. ಕರಾವಳಿಯ ಕನ್ನಡದಲ್ಲಿ ಇದು ಹೆಚ್ಚಿನೆಡೆಗಳಲ್ಲೂ ಉಳಿದಿದೆಯಾದರೂ ಹಾಲಕ್ಕಿ ಕನ್ನಡದಲ್ಲಿ ವಿಕಲ್ಪವಾಗಿ ಬಿದ್ದುಹೋಗಿದೆ. ಈ ಬದಲಾವಣೆಗಳನ್ನು ಕೆಳಗಿನ ಪದಗಳಲ್ಲಿ ಕಾಣಬಹುದು (ಉಪಾದ್ಯಾಯ

ಬರಹ ನಂಜನಗೂಡು ಬಳ್ಳಾರಿ ಹಳ್ಳಿ ಹಾಲು ಹುಲಿ ಹೂವು ಊ ಹೆದರು ಹೊಲ ಹೋಗು

ವಾಗು

ಗುಲ್ಬರ್ಗ ಹಳ್ಳಿ ಹುಲಿ ಹೂವ ಹೆದ್ರು ಹ್ವಲ ಹೋಗು

ಈ ಬದಲಾವಣೆ ಕನ್ನಡದ ಯಾವ ಒಳನುಡಿಗಳಲ್ಲಿ ನಡೆದಿದೆ ಮತ್ತು ಯಾವ ಒಳನುಡಿಗಳಲ್ಲಿ ನಡೆದಿಲ್ಲ ಎಂಬುದಿನ್ನೂ ಸರಿಯಾಗಿ ಗೊತ್ತಾಗಿಲ್ಲ. ಮಯ್ಸೂರು ಜಿಲ್ಲೆಯನ್ನು ಇದು ಎರಡಾಗಿ ಒಡೆಯುತ್ತದೆ. ಉದಾಹರಣೆ ಗಾಗಿ, ಕೆ. ಆರ್. ನಗರ, ಪೆರಿಯಾಪಟ್ಟಣ ಮತ್ತು ಹುಣಸೂರಿನ ಅರೆವಾಶಿ ಜಾಗದಲ್ಲಿ ಈ ಬದಲಾವಣೆ ನಡೆದಿಲ್ಲ; ಆದರೆ ಹುಣಸೂರಿನ ಉಳಿದ ಅರೆ ವಾಶಿ ಜಾಗದಲ್ಲಿ ಮತ್ತು ಮಯ್ಸೂರಿನ ಇತರ ತಾಲೂಕುಗಳಲ್ಲಿ ನಡೆದಿದೆ.

ನಂಜನಗೂಡಿನ ಒಕ್ಕಲಿಗರ ಮಾತಿನಲ್ಲಿ ಹಕಾರ ಬಿದ್ದುಹೋಗಿದೆ; ಆದರೆ, ಬ್ರಾಹ್ಮಣರ ಮಾತಿನಲ್ಲಿ ಬಿದ್ದುಹೋಗಿಲ್ಲ. ಇದರಿಂದ ಈ

ಬದಲಾವಣೆಗೆ ಸಾಮಾಜಿಕ ಮೇರೆಯೂ ಇದೆಯುಂದು ತಿಳಿಯುತ್ತದೆ (ಬಟ್ 1967 ನೋಡಿ).

ಗುಲ್ಬರ್ಗ ಜಿಲ್ಲೆಯನ್ನೂ ಈ ಬದಲಾವಣೆ ಎರಡಾಗಿ ಒಡೆಯುತ್ತದೆ. ಆದರೆ ಯಾವ ರೀತಿಯಲ್ಲಿ ಅದು ಈ ಜಿಲ್ಲೆಯನ್ನು ಒಡೆಯುತ್ತದೆ ಎಂಬುದನ್ನು ತಿಳಿಯಲು ಇನ್ನೂ ಸಂಶೋದನೆಗಳು ನಡೆಯಬೇಕಾಗಿದೆ.

Eke →

4.2.2 ಚಕಾರದ ಬದಲಾವಣೆಗಳು

ಪದಗಳ ಮೊದಲಿಗಿದ್ದ ಚಕಾರವು ಕನ್ನಡದ ಚರಿತ್ರೆಯಲ್ಲಿ ಹಲವು ರೀತಿಯ ಬದಲಾವಣೆಗಳಿಗೊಳಗಾಗಿದೆ. ಇತರ ತಡೆಯುಲಿಗಳ ಹಾಗೆ ಚಕಾರವೂ ಚಕಾರ ಮತ್ತು ಜಕಾರಗಳಾಗಿ ಒಡೆದಿದೆಯುಂಬುದನ್ನು ನಾವು ಮೇಲೆ ನೋಡಿರುವೆವು.

(1) ಆದರೆ ಈ ರೀತಿ ಅದು ಒಡೆದಿರುವುದು ಕೆಲವು ಪದಗಳಲ್ಲಿ

ಮಾತ್ರ; ಹೆಚ್ಚಿನ ಪದಗಳಲ್ಲೂ ಅದು ಸಕಾರವಾಗಿ ಬದಲಾಗಿದೆ.

ಕನ್ನಡ
ಸಟ್ಟುಗ
ಸಪ್ಪೆ ಸಾರು
ಸಿಕ್ಕು
ಸೀನು
ಸುತ್ತು
ಸೇರು
ಸೋರು

ತಮಿಳು ಚಟ್ಟುಕ ಚಪ್ಪಯ್ ಚೀನ್ತು ಚುಱ್ಱು ಚೋರ್

ತಮಿಳಿನಲ್ಲೂ ಪದಗಳ ಮೊದಲಿಗೆ ಬಂದಿರುವ ಚಕಾರ ಇಂದಿನ

ಕೆಲವು ಒಳನುಡಿಗಳಲ್ಲಿ ಶಕಾರ ಇಲ್ಲವೇ ಸಕಾರವಾಗಿ ಬದಲಾಗಿದೆ.

ಕನ್ನಡದಲ್ಲಿ ಕಾಣಿಸುವ ಈ ಚಕಾರದ ಬದಲಾವಣೆಗೂ (ಎಲ್ಲಿ ಅದು ಚಕಾರ ಇಲ್ಲವೇ ಜಕಾರವಾಗಿ ಬದಲಾಗಿದೆ ಮತ್ತು ಎಲ್ಲಿ ಸಕಾರವಾಗಿದೆ ಎಂಬುದಕ್ಕೂ) ಒಂದು ನಿಶ್ಚಿತವಾದ ನಿಯಮವನ್ನು ಕಂಡುಹಿಡಿಯಲು ಇದು ವರೆಗೂ ಸಾದ್ಯವಾಗಿಲ್ಲ.

ಚಕಾರದಿಂದ ಸುರುವಾಗುವ ಎಲ್ಲಾ ಪದಗಳೂ ಮೊದಲಿಗೆ ಸಕಾರ ವಾಗಿ ಬದಲಾಗಿದ್ದು, ಹಾಗೆ ಸಕಾರವಾದ ಅನಂತರ, ಅದಕ್ಕಿಂತ ಹಿಂದಿನ ಒಳನುಡಿಯಿಂದ ಚಕಾರವಿರುವ ಕೆಲವು ಪದಗಳು ಎರವಲಾಗಿ ಬಂದಿರ ಬಹುದು, ಮತ್ತು ಅವುಗಳಲ್ಲಿ ಕೆಲವು ಪದಗಳ ಮೊದಲ ಚಕಾರ ಜಕಾರ ವಾಗಿರಬಹುದು.

ಇನ್ನು ಕೆಲವು ಪದಗಳನ್ನು ಸುರುವಿನಲ್ಲಿ ಚಕಾರವನ್ನು ಹಾಗೆಯೇ ಉಳಿಸಿಕೊಂಡಿರುವ ತೆಲುಗು ಮೊದಲಾದ ನೆರೆಹೊರೆಯ ದ್ರಾವಿಡ ನುಡಿಗಳಿಂದ ಕನ್ನಡ ಎರವಲಾಗಿ ಪಡೆದಿರಬಹುದು.

ತಮಿಳು, ಮಲಯಾಳ,

ಕನ್ನಡ
ಚಿಲ್ಲಱ
ಚೂಪು ‘ನೋಟ’’ ಚೆಲುವು
ಚೊಕ್ಕ ‘ಸೊಗಸು’’ ಜೋಳ

ತೆಲುಗು: ಚಂದಮು ತಮಿಳು: ಚಿಲ್ಲಱಯ್ ತೆಲುಗು: ಚೂಪು ತೆಲುಗು: ಚೆಲುವು ತಮಿಳು: ಚೊಕ್ಕಮ್ ತಮಿಳು: ಚೋಳಮ್

(2) ಕರಾವಳಿಯ ಹಾಲಕ್ಕಿ ಕನ್ನಡದಲ್ಲಿ ಬರಹ ಕನ್ನಡದ ಸಕಾರ

ಚಕಾರವಾಗಿ ಕಾಣಿಸುತ್ತದೆ. ಸೊಲಿಗರ ಕನ್ನಡದಲ್ಲಿಯೂ ಹೀಗೆಯೇ.

ಬರಹ
ಸಾಸಿವೆ

ಹಾಲಕ್ಕಿ
ಚಾಚಮಿ ಚೆಡ್ಳು

ಸೊಲಿಗ ಚಾಚವೆ

ಸಪ್ಪು
ಸಾರು

ಚೊಪ್ಪು

ಚೊಪ್ಪು

(3) ಮೂಲದ್ರಾವಿಡ ಪದಗಳ ಮೊದಲಿಗಿದ್ದ ಚಕಾರ ಕನ್ನಡದಲ್ಲಿ ಇನ್ನೊಂದು ಬದಲಾವಣೆಗೂ ಒಳಗಾಗಿದೆ; ಅದೇನೆಂದರೆ, ಕನ್ನಡದ ಹಲವು ಪದಗಳಲ್ಲಿ ಅದು ಅನಿಯಮಿತವಾಗಿ ಬಿದ್ದುಹೋಗಿದೆ. ಕನ್ನಡದಲ್ಲಿ ಮಾತ್ರ ವಲ್ಲದೆ, ತಮಿಳು, ಮಲಯಾಳ, ತೆಲುಗು ಮೊದಲಾದ ಇತರ ತೆಂಕು ದ್ರಾವಿಡ ನುಡಿಗಳಲ್ಲೂ ಇಂತಹದೇ ಬದಲಾವಣೆ ನಡೆದಿದೆ.

ಕೆಲವು ಪದಗಳ ಮೊದಲಿಗಿದ್ದ ಚಕಾರ ಈ ರೀತಿ ಅವುಗಳ ಎಲ್ಲಾ ರೂಪಗಳಲ್ಲೂ ಬಿದ್ದುಹೋಗಿದೆಯಾದರೆ, ಬೇರೆ ಕೆಲವು ಪದಗಳ ಕೆಲವು ಕೆಳಗೆ ರೂಪಗಳಲ್ಲಿ ಮಾತ್ರ ಬಿದ್ದುಹೋಗಿದೆ. ಉದಾಹರಣೆಗಾಗಿ, ಕೊಟ್ಟಿರುವ ಪದಗಳಿಗೆ ಕನ್ನಡದಲ್ಲಿ ಚಕಾರ ಬಿದ್ದು ಹೋಗಿರುವ ರೂಪಗಳು ಮಾತ್ರವಲ್ಲದೆ ಬಿದ್ದುಹೋಗದಿರುವ ರೂಪಗಳೂ ಇವೆ.

ಚಕಾರ ಬಿದ್ದಿರುವುದು ಅಮರು ‘ಒಟ್ಟು ಸೇರು’’
ಇಗರು ‘ಚಿಗುರು’
ಅನುವು ‘ಸೌಂದರ್ಯ’’
ಈರು ‘ಹೇನಿನ ತತ್ತಿ’’ ಉಗಿ ‘ಹೊರಗೆಳೆ’’ ಉೞಲ್ ‘ಸುತ್ತು’’

ಚಕಾರ ಉಳಿದಿರುವುದು ಸಮನಿಸು ‘ಒದಗು’’ ಚಿಗುರು ಚನ್ನಾಗಿ ಸೀರು ಸುೞಿ

ತೆಂಕುದ್ರಾವಿಡ ನುಡಿಗಳ ಕೆಲವು ಪದಗಳ ಎಲ್ಲಾ ರೂಪಗಳಲ್ಲೂ ಆ ಪದಗಳ ಮೊದಲಿಗಿದ್ದ ಚಕಾರ ಬಿದ್ದುಹೋಗಿದೆ. ಹಾಗಾಗಿ, ಇಂತಹ ಪದಗಳ ಮೊದಲಿಗೆ ಚಕಾರವಿತ್ತೆಂಬುದು ಕನ್ನಡದವೇ ಆದ (ಇಲ್ಲವೇ

ತೆಂಕುದ್ರಾವಿಡದ) ಗೊತ್ತಾಗುವುದಿಲ್ಲ.

ಪದಗಳನ್ನು

ಮಾತ್ರವೇ

ಗಮನಿಸಿದಾಗ

ಆದರೆ, ನಡು ಮತ್ತು ಬಡಗು ದ್ರಾವಿಡ ನುಡಿಗಳಲ್ಲಿ ಈ ರೀತಿ ಪದಗಳ ಮೊದಲಿಗಿದ್ದ ಚಕಾರ ಬಿದ್ದುಹೋಗಿರಲಿಲ್ಲವಾದ ಕಾರಣ, ಮೇಲೆ ಸೂಚಿಸಿದಂತಹ ಕನ್ನಡ ಪದಗಳನ್ನು ನಡು ಮತ್ತು ಬಡಗು ದ್ರಾವಿಡ ನುಡಿಗಳಲ್ಲಿರುವ ಪದಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳ ಮೊದಲಿಗೆ ಮೂಲ ದ್ರಾವಿಡದಲ್ಲಿ ಚಕಾರ ಇತ್ತು ಮತ್ತು ಅದು ಕನ್ನಡದಲ್ಲಿ ಬಿದ್ದುಹೋಗಿದೆ ಎಂಬ ಸಂಗತಿ ಗೊತ್ತಾಗುತ್ತದೆ.

ನಡು ಮತ್ತು ಬಡಗು ದ್ರಾವಿಡ ನುಡಿಗಳು

ಕನ್ನಡ
ಅಯ್ದು
ಇರುಳು
ಈಯು ‘ಕೊಡು’’ ಉಪ್ಪು
ಅವಲಕ್ಕಿ

ಕೋಲಾಮಿ: ಕೋಲಾಮಿ: ಕೋಲಾಮಿ: ನಾಯ್ಕಿ:

ಚೇದು ಸಾರುಂಗ್ ಚಿರುಮ್ ಚುಪ್ ಚವಲಿ ‘ಒರಳು’’ ಸಾನಿಕುಲ್ ಸೇರು ಸೀನ್ತೆಲ್

(4) ಪದಗಳ ಮೊದಲಿಗಿದ್ದ ಚಕಾರ ಕನ್ನಡದ ಕೆಲವು ಪದಗಳಲ್ಲಿ ತಕಾರವಾಗಿ ಬದಲಾಗಿದೆ. ಈ ಬದಲಾವಣೆಯೂ ಕನ್ನಡದ ಚರಿತ್ರೆಯಲ್ಲಿ ಬಹಳ ಅನಿಯಮಿತವಾಗಿ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸು ತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡ ಪದಗಳಿಗೆ ಮೊದಲಿಗೆ ಚಕಾರವಿರುವ ರೂಪಗಳು ಮಾತ್ರವಲ್ಲದೆ ತಕಾರವಿರುವ ರೂಪಗಳೂ ಇವೆ.

ಚಕಾರವಿರುವ ರೂಪಗಳು
ಸದಕು, ಸದೆ ‘ಹೊಡೆ’’
ಸಪ್ಪು, ಸೊಪ್ಪು
ಸುೞಿ, ಸುೞಿವು, ಸುೞುಹು ಚಪ್ಪಳಿಸು, ಚಪ್ಪಾಳೆ

ತಕಾರವಿರುವ ರೂಪಗಳು

ತದಕು, ತದೆ ತೊಪ್ಪಲು ತುೞಿ, ತುೞಿಸು, ತೊೞಸು ತಪ್ಪಳಿಸು

ಅನಂತರ

(5) ದಾರವಾಡ, ಗುಲ್ಬರ್ಗ, ಬಳ್ಳಾರಿ ಮೊದಲಾದ ಕನ್ನಡದ ಬಡಗು ಒಳನುಡಿಗಳಲ್ಲಿ ಪದಗಳ ಮೊದಲಿಗೆ ಬರುವ ಚಕಾರ ಮತ್ತು ಜಕಾರಗಳಿಗೆ ಅವುಗಳ ಉಚ್ಚಾರಣೆಗಳಿವೆ. ಇವುಗಳ ಅನಂತರ ಹಿನ್ಮೇಲಿನ (ಉ, ಊ) ಮತ್ತು ಹಿನ್ನಡುವಿನ ಸ್ವರಗಳು ಬಂದಾಗ, ಇವಕ್ಕೆ ಹಲ್ಲಿನ ಉಚ್ಚಾರಣೆಯಿದೆ ಮತ್ತು ಇತರ ಸ್ವರಗಳು ಬಂದಾಗ, ಅಂಗುಳಿನ ಉಚ್ಚಾರಣೆಯಿದೆ (ಹಿರೇಮಟ 1961).

ಸ್ವರಗಳನ್ನವಲಂಬಿಸಿ

ಬರುವ

(ಕ) ಹಲ್ಲಿನ ಉಚ್ಚಾರಣೆ

ಬರಹ ಕನ್ನಡ ಚುಂಗು
ಚೂರು
ಜೋರು

(ಖ) ಅಂಗುಳಿನ ಉಚ್ಚಾರಣೆ

ಬರಹ ಕನ್ನಡ

ದಾರವಾಡ ಕನ್ನಡ ತ್ಸುಂಗು ತ್ಸೂರು ದ್ಸೂಜು
ದ್ಸೋರು

ದಾರವಾಡ ಕನ್ನಡ

ಚಕಾರ ಮತ್ತು ಜಕಾರಗಳಲ್ಲಿ ಕಾಣಿಸುವ ಈ ಒಡೆತ ಪದಗಳ ಮೊದಲಿಗೆ ಮಾತ್ರವಲ್ಲದೆ, ನಡುವೆಯೂ ನಡೆದಿದೆ. ಇದಲ್ಲದೆ, ಈ ಬದಲಾವಣೆ ಕನ್ನಡದ ಬಡಗು ಒಳನಾಡಿನ ಒಳನುಡಿಗಳಲ್ಲಿ ಮಾತ್ರವಲ್ಲದೆ, ಮರಾಟಿ, ಕೆಲವು ಒಳನುಡಿಗಳಲ್ಲೂ ನಡೆದಿದೆ.

ಮತ್ತು ಒಡಿಯಾದ

ನುಡಿಗಳಲ್ಲಿ

ತೆಲುಗು

(6) ಹೊಳೇನರಸೀಪುರ ತಾಲೂಕಿನಲ್ಲಿರುವ ಕೆಳವರ್ಗದ ಜನರ ಮಾತಿನಲ್ಲಿ ಪದಗಳ ಮೊದಲಿಗೆ ಬಂದಿದ್ದ ಚಕಾರ ಮತ್ತು ಜಕಾರಗಳು ಅವುಗಳ ಅನಂತರ ಮುನ್ಮೇಲಿನ (ಇ, ಈ) ಮತ್ತು ಮುನ್ನಡುವಿನ (ಎ, ಏ) ಸ್ವರಗಳು ಬಂದಾಗ ಕಕಾರ ಮತ್ತು ಗಕಾರಗಳಾಗಿ ಬದಲಾಗಿವೆಯುಂದು ಚಿದಾನಂದ ಮೂರ್ತಿ (1972, 1984) ವರದಿ ಮಾಡಿದ್ದಾರೆ.

ಬರಹದ ಕನ್ನಡ
ಚೆನ್ನಾಗಿ
ಚೇಳು
ಜಿರಿ ‘ಸಾವಿರಕಾಲು’’ ಜೇನು

ಹೊಳೇನರಸೀಪುರ ಕೆನ್ನಾಗಿ ಕೇಳು ಗೇನು

ಈ ಬದಲಾವಣೆ ನಿಯಮಿತವಾದುದಲ್ಲ. ಯಾಕೆಂದರೆ, ಅದಕ್ಕೆ ಚಿನ್ನ, ಚಿಲುಕ, ಜಿಗುಟು, ಚಿಕ್ಕಣ್ಣ ಮೊದಲಾದ ಹಲವು ಅಪವಾದಗಳಿವೆ. ಅರಕಲಗೂಡಿನಲ್ಲೂ ಈ ಬದಲಾವಣೆ ಅಪರೂಪವಾಗಿ ಕೆಲವು ಪದಗಳಲ್ಲಿ (ಚಿಕ್ಕಿ>ಕಿಕ್ಕಿ, ಚಿಲಕ>ಕಿಲಕ) ಕಾಣಿಸುತ್ತದೆ.

Eke →

4.2.3 ಕಕಾರ-ಗಕಾರಗಳು ಚಕಾರ-ಜಕಾರಗಳಾಗಿರುವುದು

ಮಯ್ಸೂರು ಜಿಲ್ಲೆಯ ಕೆ. ಆರ್. ನಗರದ ಉತ್ತರ ಬಾಗದಲ್ಲಿ (ಉದಾ ಹರಣೆಗಾಗಿ, ಹೊಸೂರು ಮತ್ತು ಸಾಲಿಗ್ರಾಮಗಳಲ್ಲಿ) ಮತ್ತು ಅದರ ಪಕ್ಕ ದಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ಹರಿಜನರ ಕನ್ನಡದಲ್ಲಿ ಕಕಾರ ಮತ್ತು ಗಕಾರಗಳು ಅವುಗಳ ಅನಂತರ ಮುಂದಿನ ಸ್ವರಗಳಾದ ಇ, ಈ, ಎ ಮತ್ತು ಏಗಳು ಬಂದಾಗ, ಚಕಾರ ಮತ್ತು ಜಕಾರಗಳಾಗಿ ಬದಲಾಗಿವೆ

(ಕ) ಕಕಾರ ಚಕಾರವಾಗಿರುವುದು

ಬರಹದ ಕನ್ನಡ
ಕೀವು
ಕೆಲಸ
ಕೇಳು

(ಖ) ಗಕಾರ ಜಕಾರವಾಗಿರುವುದು ಬರಹದ ಕನ್ನಡ
ಗೆಲ್ಲು

ಹೊಸೂರು ಚೀವು ಚೆಲಸ ಚೇಳು

ಹೊಸೂರು ಜೆಲ್ಲು

ಈ ಬದಲಾವಣೆ ಮಯ್ಸೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ, ಹಾಸನ ಮತ್ತು ಚಿಕ್ಕಮಗಳೂರುಗಳಲ್ಲೂ ಕಾಣಿಸುತ್ತದೆಯುಂದು ಚಿದಾನಂದ ಮೂರ್ತಿ (1972, 1984) ವರದಿ ಮಾಡಿದ್ದಾರೆ. ಅಕ್ಕಪಕ್ಕದಲ್ಲಿರುವ ಹೊಳೇ ನರಸೀಪುರ, ಚನ್ನರಾಯ ಪಟ್ಟಣ, ಅರಕಲಗೋಡು, ಸಕಲೇಶಪುರ, ಮೂಡಿ ಗೆರೆ ಮತ್ತು ಕ್ರುಶ್ಣರಾಜಪೇಟೆ ತಾಲೂಕುಗಳಲ್ಲೂ ಅವರು ಈ ಬದಲಾವಣೆ ನಡೆದಿರುವುದನ್ನು ಗಮನಿಸಿದ್ದಾರೆ.

ಅವರ ಅಬಿಪ್ರಾಯದಂತೆ ಈ ಬದಲಾವಣೆ ಚನ್ನರಾಯ ಪಟ್ಟಣದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಎಲ್ಲಾ ವಗ್ರಗಳ ಜನರ ಮಾತಿನಲ್ಲೂ ನಡೆದಿದೆ. ಆದರೆ ಉಳಿದ ತಾಲೂಕುಗಳಲ್ಲಿ ಇದು ಕೆಳವಗ್ರದ ಜನರ ಮಾತಿನಲ್ಲಿ ಮಾತ್ರ ಕಾಣಿಸುತ್ತದೆ.

ಸಕಲೇಶಪುರ ಪೇಟೆಯಲ್ಲಿ ಈ ಬದಲಾವಣೆ ಪದಗಳ ನಡುವೆ

ಬಂದಿರುವ ಕಕಾರ ಗಕಾರಗಳಲ್ಲೂ ಕಾಣಿಸುತ್ತದೆ.

ಬರಹದ ಕನ್ನಡ
ಕುಕ್ಕೆ ಹೊಗೆ

ಸಕಲೇಶಪುರ ಕುಚ್ಚೆ ಹೊಜೆ

ಇಂತಹ ಪದಗಳು ಚನ್ನರಾಯಪಟ್ಟಣದಲ್ಲೂ ಕಾಣಿಸುತ್ತವೆ; ಆದರೆ ಅಲ್ಲಿ ಪದಗಳ ಮೊದಲಿಗೆ ಬರುವ ಕಕಾರ-ಗಕಾರಗಳಲ್ಲಿ ಕಾಣಿಸುವಶ್ಟು ನಿಯಮಿತವಾಗಿ ಈ ಬದಲಾವಣೆ ಪದಗಳ ನಡುವೆ ಬರುವ ಕಕಾರ-ಗಕಾರ ಗಳಲ್ಲಿ ಕಾಣಿಸುವುದಿಲ್ಲ.

ತಮಿಳು ಮತ್ತು ಮಲಯಾಳ ನುಡಿಗಳಲ್ಲಿ ಪದಗಳ ಮೊದಲಿಗಿದ್ದ ಕಕಾರ ಚಕಾರವಾಗುವಂತಹ ಇಂತಹದೇ ಒಂದು ಬದಲಾವಣೆ ಬಹಳ ಹಿಂದೆಯೇ ನಡೆದಿತ್ತು. ತಮಿಳಿನ ಅತೀ ಹಿಂದಿನ ಬರಹಗಳಲ್ಲೂ ಈ ಬದಲಾವಣೆ ನಡೆದಿರುವುದು ಕಾಣಿಸುತ್ತದೆ. ಇದು ಮುನ್ಮೇಲಿನ ಮತ್ತು ಮುನ್ನಡುವಿನ ಸ್ವರಗಳು ಅನಂತರ ಬಂದಿದ್ದಾಗ ನಡೆದಿದ್ದುವು, ಆದರೆ ಅವುಗಳ ಅನಂತರ ಮಡಚಿದ ವ್ಯಂಜನಗಳು (ಟ, ಣ, ಳ, ೞ) ಬಂದಿದ್ದಾಗ ನಡೆದಿರಲಿಲ್ಲ.

ಕನ್ನಡದ ತೆಂಕು ಒಳನುಡಿಯಲ್ಲಿ ನಡೆದ ಮೇಲಿನ ಬದಲಾವಣೆ ಅಂತಹದೇ ಇತ್ತೀಚೆಗಿನದಾದರೂ ಬದಲಾವಣೆಯೊಂದನ್ನು ಮಲಯಾಳ ಮೊದಲಿಗೇನೇ ಪಕ್ಕದಲ್ಲಿದ್ದುದು ಕಾರಣವಾಗಿರಲು ಸಾದ್ಯವಿದೆ. ಆದರೆ ಮೇಲೆ ಸೂಚಿಸಿದ ಹಾಗೆ ಕನ್ನಡ ಒಳನುಡಿಯ ಬದಲಾವಣೆ ಮತ್ತು ಮಲಯಾಳದ ಬದಲಾವಣೆಗಳ ನಡುವೆ ವ್ಯತ್ಯಾಸಗಳಿವೆ.

ನಡೆಯಲು

ನಡೆಸಿದ್ದ

ಹೆಚ್ಚಿನ

ಸ್ವರಗಳ

Eke →

4.3 ಸ್ವರಗಳ ನಡುವಿನ ಒತ್ತೆ ತಡೆಯುಲಿಗಳು

ತಡೆಯುಲಿಗಳಿಗೆ ನಡುವೆ ಒತ್ತೆಯಾಗಿ ಬಂದ ಮೂಲದ್ರಾವಿಡದಲ್ಲಿ ಕೊರಳಿಸಿದ ಉಚ್ಚಾರಣೆಯಿದ್ದಿರಬೇಕು. ಕನ್ನಡದಲ್ಲಿ ತಡೆಯುಲಿಗಳಾಗಿಯೇ ಉಳಿದುಕೊಂಡಿವೆ. ಹಗಲು, ಮಗ, ಸೋಗೆ, ಕದಿರು, ಒದೆ, ಉದುರು, ಹೊಡೆ, ಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಆದರೆ ಈ ನಿಯಮಕ್ಕೆ

ಕೆಳಗೆ ವಿವರಿಸಿದ ಹಾಗೆ

ಮೊದಲಾದ

ಕೊರಳಿಸಿದ

ಮಟ್ಟಿಗೆ

ಕೆಲವು

ಅಪವಾದಗಳಿವೆ.

Eke →

4.3.1 ಪಕಾರವು ವಕಾರ ಮತ್ತು ಹಕಾರಗಳಾಗಿರುವುದು

(1) ಮೂಲದ್ರಾವಿಡದ ಬದಲಾವಣೆ: ಎರಡು ಸ್ವರಗಳ ನಡುವೆ ಮೂಲದ್ರಾವಿಡದಲ್ಲೇನೇ ಒತ್ತೆ ಪಕಾರ ಮತ್ತು ಒತ್ತೆ ವಕಾರಗಳ ತೋರುತ್ತದೆ. ಯಾಕೆಂದರೆ, ಕನ್ನಡವೇ ಮೊದಲಾದ ಇವತ್ತಿನ ಹಲವು ದ್ರಾವಿಡ ನುಡಿಗಳಲ್ಲಿ ಇಮ್ಮಡಿ ಪಕಾರ ಒತ್ತೆ ಪಕಾರವಾಗಬೇಕಿದ್ದ ಹಲವು ಸನ್ನಿವೇಶಗಳಲ್ಲಿ ಒತ್ತೆ ಪಕಾರದ ಬದಲು ವಕಾರ ಕಾಣಿಸಿಕೊಳ್ಳುತ್ತದೆ.

ನಡುವೆ ವ್ಯತ್ಯಾಸವಿರಲಿಲ್ಲವೆಂದು

ಕನ್ನಡದಲ್ಲಿ ಈ ರೀತಿ ಎರಡು

ನಡುವೆ ಪಕಾರ ವಕಾರವಾಗಿರುವುದಕ್ಕೆ ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಪದಗಳನ್ನು ಉದಾಹರಣೆಯಾಗಿ ಕೊಡಬಹುದು. ಇವುಗಳಲ್ಲಿ ಪಕಾರ ಇಮ್ಮಡಿ

ಸ್ವರಗಳ

ರೂಪದಲ್ಲಿ ಬಂದಾಗ ಪಕಾರವಾಗಿ ಉಳಿದಿದೆ ಮತ್ತು ಒತ್ತೆ ರೂಪದಲ್ಲಿ ಬಂದಾಗ ಬಕಾರವಾಗದೆ ವಕಾರವಾಗಿದೆ.

ಇಮ್ಮಡಿ ರೂಪದಲ್ಲಿ ಕಪ್ಪು ‘ಮುಚ್ಚು’
ಕೆಪ್ಪು ‘ಕಿವುಡು’’ ಸೊಪ್ಪು, ತೊಪ್ಪಲು

ಒತ್ತೆ ರೂಪದಲ್ಲಿ

ಕವಿ, ಕವುದಿ ಕಿವುಡು ತೊವಲ್ ‘ತೊಪ್ಪಲು’’ ತೆವರು ’‘ಎತ್ತರದ ಉದ್ದ ಕಟ್ಟೆ’

ಬೇರೆ ದ್ರಾವಿಡ ನುಡಿಗಳಲ್ಲಿ ಇಮ್ಮಡಿ ರೂಪದ ಪ್್ಪ ಇದ್ದು, ಕನ್ನಡ ದಲ್ಲಿ ವ್ ಇರುವ, ಮತ್ತು ಕನ್ನಡದಲ್ಲಿ ಪ್್ಪ ಇದ್ದು ಇತರ ನುಡಿಗಳಲ್ಲಿ ವ್ ಇರುವ ಪದಗಳೂ ಈ ಬದಲಾವಣೆಗೆ ಉದಾಹರಣೆಗಳಾಗಬಲ್ಲುವು.

ಕನ್ನಡದಲ್ಲಿ ವ್
ತವು ‘ಕಡಿಮೆಯಾಗು’’ ತಪ್ಪು, ತವು

ತಮಿಳಿನಲ್ಲಿ ಪ್್ಪ

ಕನ್ನಡದಲ್ಲಿ ಪ್್ಪ
ತಪ್ಪು
ಉಪ್ಪು
ಚಪ್ಪರಿಸು ಕುಪ್ಪಳಿಸು

ತಮಿಳಿನಲ್ಲಿ ವ್ ತವರ್ ಉವಱು ಚವಯ್ ‘ಜಗಿ’’ ಕೊವ್್ಕ ‘ನೆಗೆ’’ (ಗೋಂಡಿ)

ಹಳೆತಮಿಳಿನ

ಕೆಲವು

ಕ್ರಿಯಾರೂಪಗಳಲ್ಲಿ ಒತ್ತೆ

ಪಕಾರ

ಉಳಿದುಕೊಂಡಿದೆ; ಆದರೆ, ಕನ್ನಡದಲ್ಲಿ ಇದು ವಕಾರವಾಗಿ ಕಾಣಿಸುತ್ತದೆ.

ಹಳೆತಮಿಳು ವರುಪವನ್ ಪಾಡುಪ

ಕನ್ನಡ ಬರುವವನು ಹಾಡುವರು (ಹಾಡುತ್ತಾರೆ)

ಚರಿತ್ರೆಯಲ್ಲಿಯೂ

(2) ಕನ್ನಡದಲ್ಲಿ ನಡೆದ ಅನಿಯಮಿತವಾದ ಬದಲಾವಣೆ: ಪಕಾರ ಸ್ವರಗಳ ಕನ್ನಡದ ವಕಾರವಾಗುವ ಬದಲಾವಣೆಯೊಂದು ಅನಿಯಮಿತವಾಗಿ ನಡೆದಿದೆ. ಈ ಬದಲಾವಣೆಗೆ ಬೇಕಾಗುವ ಒತ್ತೆ ಪಕಾರ ಕನ್ನಡದಲ್ಲೇ ನಡೆದಂತಹ ಮೂಲದ್ರಾವಿಡದ ಪಕಾರವಾಗುವ ಬದಲಾವಣೆಯಿಂದ ಬಂದಿದೆ.

ನಡುವಿನ ಒತ್ತೆ

ಇಮ್ಮಡಿ

ಪಕಾರ

ಸ್ವರಗಳ ನಡುವೆ ಬರುವ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಉದ್ದ ಸ್ವರದ ಅನಂತರ ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ ಎಂಬುದನ್ನು ಮುಂದೆ (4.4.1)ರಲ್ಲಿ ನೋಡಲಿರುವೆವು. ಈ ಬದಲಾವಣೆಯ ಮೂಲಕ ದೊರೆತ ಒತ್ತೆ ಪಕಾರ ಕನ್ನಡದಲ್ಲಿ ಅನಿಯಮಿತವಾಗಿ ವಕಾರವಾಗಿದೆ.

ನಾವು

ಕೆಳಗೆ ಕೊಟ್ಟಿರುವಂತಹ ಪದಗಳಲ್ಲಿ ಮತ್ತು ಪದರೂಪಗಳಲ್ಲಿ ಈ

ರೀತಿ ಪಕಾರ ವಕಾರವಾಗಿ ಬದಲಾಗಿರುವುದನ್ನು ಕಾಣಬಹುದು.

ತಮಿಳು ಓಪ್ಪು

ಕನ್ನಡ
ಸೋವು ‘ಓಡಿಸು’’ ತೊಡವು ‘ಮೊದಲು’’ ತೊಟುಪ್ಪು ಕಾವ ’‘ಕಾಯುವ’’ ಕುಡಿವ

ಕಾಪ್ಪ ಪಿಟಿಪ್ಪ ಕುಟಿಪ್ಪ

ಆದರೆ, ಕೆಳಗೆ ಕೊಟ್ಟಿರುವಂತಹ ಪದಗಳಲ್ಲಿ ಈ ಪಕಾರ ಬದಲಾಗದೆ ಉಳಿದಿರುವ ಕಾರಣ, ಇದನ್ನೊಂದು ಅನಿಯಮಿತ ಬದಲಾವಣೆಯುಂದು ಪರಿಗಣಿಸಬೇಕಾಗಿದೆ.

ಕನ್ನಡ
ತೋಪು

ತಮಿಳು ಚಾಪ್ಪಯ್ ತೋಪ್ಪು

ತಾಪಾಳ ಬಳಪ
ಬರಪ (ಬರಹ)
ಬಿಳುಪು
ಮುಡಿಪು

ಅಪ್ಪು ತಾೞ್ಪ್ಪಾಳ್ ಪಳಪ್ಪಮ್ ವರಯ್ಪ್ಪು ಅಕಪ್ಪಯ್ ವೆಳುಪ್ಪು ಮುಟಿಪ್ಪು

ಕನ್ನಡದಲ್ಲೇನೇ ಪಕಾರ ಮತ್ತು ವಕಾರಗಳೆರಡನ್ನೂ ತೋರಿಸುವ ಪದ

ಗಳಿರುವುದೂ ಈ ಬದಲಾವಣೆ ಅನಿಯಮಿತವೆಂಬುದನ್ನು ಸೂಚಿಸುತ್ತದೆ.

ಕನ್ನಡ
ಅೞಿಪು, ಅೞಿವು ಎರಪು, ಎರವು
ಕಱುಪು, ಕಱುವು
ಕೆಡಪು, ಕೆಡವು
ನೆನಪು, ನೆನವು

ತಮಿಳು ಅೞಿಪ್ಪು ಇರಪ್ಪು ‘ಬೇಡುವಿಕೆ’’ ಕಱುಪ್ಪು ಕಿಟಪ್ಪು ನಿನಯ್ಪ್ಪು

ಪಂಪಬಾರತದಲ್ಲಿ ಪಕಾರವಿರುವ ಪೊಳೆಪು, ಪಡೆಪು, ಕರುಪು, ಕಾಪು ಮೊದಲಾದ ಪದಗಳನ್ನು ಮತ್ತು ವಕಾರವಿರುವ ಅಱಿವು, ಉೞಿವು, ಅೞವು, ಸಾವು ಮೊದಲಾದ ಪದಗಳನ್ನು ಕಾಣಬಹುದು.

ಈ ರೀತಿ ವಕಾರವಾಗದೆ ಉಳಿದ ಪಕಾರ ಅನಂತರ ಹಕಾರವಾಗಿದೆ (ಕೆಳಗೆ (4) ನೋಡಿ). ಇಂತಹ ಕೆಲವು ಪದಗಳಿಗೆ ಪಕಾರ, ವಕಾರ ಮತ್ತು ಹಕಾರಗಳಿರುವ ಮೂರು ಮೂರು ರೂಪಗಳಿರುವುದನ್ನು ಕಾಣಬಹುದು (ಸಲಪು, ಸಲವು, ಸಲಹು; ತಿರುಪು, ತಿರುವು, ತಿರುಹು; ಕೊಡಪು, ಕೊಡವು, ಕೊಡಹು; ಕೆಡಪು, ಕೆಡವು, ಕೆಡಹು).

(3) ಪಕಾರ ವಕಾರವಾಗುವ ಸೇರಿಕೆಯ ನಿಯಮ:

ಪಕಾರ ವಕಾರವಾಗುವ ಈ ಬದಲಾವಣೆ ಕನ್ನಡದ ಏಳನೇ ಶತಮಾನದ ಶಾಸನಗಳಲ್ಲಿ ಒಂದು ಸೇರಿಕೆಯ ನಿಯಮವಾಗಿ ಕಾಣಿಸಿಕೊಳ್ಳುತ್ತದೆ. ಈ ನಿಯಮದಂತೆ, ಸ್ವರದಲ್ಲಿ ಕೊನೆಗೊಳ್ಳುವ ಪದದ ಅನಂತರ ಪಕಾರದಲ್ಲಿ ಮೊದಲಾಗುವ ಪದ ಬಂದಾಗ, ಎರಡನೆಯ ಪದದ ಮೊದಲ ಪಕಾರ ವಕಾರವಾಗಿ ಬದಲಾಗುತ್ತದೆ (ನರಸಿಂಹಯ್ಯ 1941:3 ನೋಡಿ).

ಎಡೆವಿಡಿಯಲ್

ಎಡೆ + ಪಿಡಿಯಲ್ ಎಡೆ + ಪೊೞಲ್ನಾಡು ಎಡೆವೊೞಲ್ನಾಡು ಪೋಗೆ + ಪೋಗಿ ಮಂಜು + ಪೋಲ್

ಪೋಗೆವೋಗಿ ಮಂಜುವೋಲ್

ಹಳೆಗನ್ನಡದ  ಕಾವ್ಯಗಳಲ್ಲೂ  ಸೇರಿಕೆಯ  ನಿಯಮವಾಗಿ  ಸ್ವರಗಳ  ನಡುವೆ  ಬಂದ  ಪಕಾರ  ವಕಾರವಾಗಿರುವುದನ್ನು  ಕೆಳಗೆ  ಕೊಟ್ಟಿರುವ  ಪಂಪಬಾರತದ  ಉದಾಹರಣೆಗಳಲ್ಲಿ  ಕಾಣಬಹುದು  (ರಾಮಚಂದ್ರ  ರಾವ್ 

ಅಡಿ + ಪಜ್ಜೆಯಂ ಪಗೆ + ಪಾಡಿಯೊಳ್ ಗಿಳಿ + ಪಿಂಡಿನ
ಒಡ + ಪುಟ್ಟಿತು
ಪೊಱ + ಪೊೞಲೊಳ್ ಪೊಱವೊೞಲೊಳ್ ನಚ್ಚು + ಪೋದ

ಅಡಿವಜ್ಜೆಯಂ ಪಗೆವಾಡಿಯೊಳ್ ಗಿಳಿವಿಂಡಿನ ಒಡವುಟ್ಟಿತು

ನಚ್ಚುವೋದ

(4) ಒತ್ತೆ ಪಕಾರ ಹಕಾರವಾದುದು: ಪದಗಳಲ್ಲಿ ಸ್ವರಗಳ ನಡುವೆ ಬಂದಿದ್ದ ಒತ್ತೆ ಪಕಾರ ವಕಾರವಾಗುವ ಮೇಲಿನ ಅನಿಯಮಿತ ಬದಲಾವಣೆ ನಡೆದ ಅನಂತರ ಆ ಬದಲಾವಣೆಗೆ ಒಳಗಾಗದೆ ಉಳಿದಿದ್ದ ಒತ್ತೆ ಪಕಾರಗಳು ನಡುಗನ್ನಡದಲ್ಲಿ ಹಕಾರವಾಗಿ ಬದಲಾಗಿವೆ.

ಹಳೆಗನ್ನಡ ಅಱುಪು
ಅೞಿಪು
ಎಡಪು
ಬರಪ
ಪೋಪ

ನಡುಗನ್ನಡ ಅರುಹು ಅೞಿಹು ಎಡಹು ಬರಹ ಹೋಹ

ಇದಲ್ಲದೆ, ಹಳೆಗನ್ನಡದಲ್ಲಿ ಸ್ವರಗಳ ನಡುವೆ ಬಂದಿದ್ದ ಇಮ್ಮಡಿ ಪಕಾರ ಕೆಲವು ಸನ್ನಿವೇಶಗಳಲ್ಲಿ ಒತ್ತೆ ಪಕಾರವಾಗಿ ಬದಲಾಗಿದ್ದು, ಅಂತಹ ಹಕಾರವಾಗಿ ಬದಲಾಗಿದೆ. ಈ ಪಕಾರವೂ ಶಾಸನಗಳಲ್ಲೇನೇ ಬದಲಾವಣೆಯನ್ನು ಹದಿಮೂರನೇ ಕಾಣಬಹುದು (ನರಸಿಂಹಯ್ಯ 1941).

ನಡುಗನ್ನಡದಲ್ಲಿ

ಶತಮಾನದ

ಇಮ್ಮಡಿ ಪಕಾರ ಒತ್ತೆ ಪಕಾರ
ಬಪ್ಪ ಅಂತಪ್ಪ

ಹಕಾರ

ಇದಕ್ಕೂ ಮೊದಲು, ಎಂದರೆ ಹನ್ನೊಂದನೇ ಶತಮಾನದ ಒಂದು ನಡಹಿದರ್ ಎಂಬ ಶಾಸನದಲ್ಲೇನೇ ರೂಪದಲ್ಲಿದೆ; ಹತ್ತನೇ ಶತಮಾನದ ಒಂದು ಶಾಸನದಲ್ಲಿ ಹೋಹನ್ (< ಪೋಪನ್) ಎಂಬ ಪದರೂಪ ಇದೆ (ನರಸಿಂಹಯ್ಯ 1941).

ನಡಪ್ಪಿದರ್ ಎಂಬುದು

ಕೆಲವು ಪದರೂಪಗಳಲ್ಲಿದ್ದ ಇಂತಹ ಹಕಾರ ಬಿದ್ದುಹೋಗಿ, ಗಿಡ್ಡ ಸ್ವರದ ಬದಲು ಉದ್ದ ಸ್ವರ ಬಂದಿರುವುದನ್ನು ಕನ್ನಡದ ಕೆಲವು (ಬಂದಹನ್ > (ಒಳನಾಡಿನ) ಒಳನುಡಿಗಳಲ್ಲಿ ಬಂದಾನು, ಬಂದಹೆನ್ > ಬಂದೇನು).

ಕಾಣಬಹುದು

ಹೊಸಗನ್ನಡದಲ್ಲಿ ಈ ಸ್ವರಗಳ ನಡುವಿನ ಹಕಾರ ಕೆಲವು ಪದಗಳಲ್ಲಿ ಮಾತ್ರ ಉಳಿದಿದೆ (ಬರಹ, ಕೆಡಹು, ಸಲಹು); ಬೇರೆ ಕೆಲವು ಪದಗಳಲ್ಲಿ ಅದರ ಬದಲು ಪಕಾರವಿರುವ ರೂಪವೇ ಕಾಣಿಸುತ್ತದೆ (ನೆನಪು, ಬಿಳುಪು). ಹೊಸಗನ್ನಡ ಇವನ್ನು ಪಕಾರ ಹಕಾರವಾದ ಅನಂತರ ಹಳೆಗನ್ನಡದಿಂದ ಎರವಲಾಗಿ ಪಡೆದಿರಬೇಕು.

Eke →

4.3.2 ಚಕಾರ ಸಕಾರವಾಗಿರುವುದು

ಮೂಲದ್ರಾವಿಡ ಪದಗಳಲ್ಲಿ ಎರಡು ಸ್ವರಗಳ ನಡುವೆ ಕಾಣಿಸಿಕೊಂಡಿದ್ದ ಚಕಾರ ಕನ್ನಡದಲ್ಲಿ ಜಕಾರವಾಗಿ ಕಾಣಿಸಿಕೊಳ್ಳುವ ಬದಲು ಸಕಾರವಾಗಿ (ಎಂದರೆ ಕೊರಳಿಸದ ಉಜ್ಜುಲಿಯಾಗಿ) ಕಾಣಿಸಿಕೊಳ್ಳುತ್ತದೆ.

ಕನ್ನಡ
ಹಸಿವು
ಮಸಕು
ಮಾಸು
ಬೀಸು
ಮುಸು
ಮೊಸರು

ತಮಿಳು ಮಚಂಕು ಮಾಚು ವೀಚು ಮುಚು ಮುಚರ್

ಸ್ವರಗಳ

ನುಡಿಗಳಲ್ಲಿ ನಡುವಿದ್ದ ಚಕಾರ ಹಲವು ದ್ರಾವಿಡ ಯಕಾರವಾಗಿ ಬದಲಾಗಿದ್ದು, ಮೂಲದ್ರಾವಿಡದಲ್ಲೇನೇ ಇಂತಹದೊಂದು ಬದಲಾವಣೆ ನಡೆದಿರಬೇಕೆಂದು ಊಹಿಸಲಾಗಿದೆ. ಇದಲ್ಲದೆ, ಈ ಯಕಾರ ಅನಂತರ ಬಿದ್ದು ಹೋಗಿರುವುದನ್ನೂ ಕೆಲವು ನುಡಿಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಈ ಬದಲಾವಣೆಯನ್ನು ತೋರಿಸುವ ಕೆಲವು ಪದಗಳಿವೆ (ಪಯಿರ್ (*ಪಚಿರ್), ಪುಯ್ಯಲ್, ಹುಯ್ಯಲ್ (ತಮಿಳು: ಪೂಚಲ್)).
ಆದರೆ, ಹೆಚ್ಚಿನೆಡೆಗಳಲ್ಲೂ ಸ್ವರಗಳ ನಡುವಿನ ಒತ್ತೆ ಚಕಾರವನ್ನು ಕನ್ನಡ ಸಕಾರವಾಗಿಯೇ ಉಳಿಸಿಕೊಂಡಿರುವ ಕಾರಣ, ಅದು ಈ

ವಿಶಯದಲ್ಲಿ ಮೂಲದ್ರಾವಿಡದ ತೋರಿಸುತ್ತದೆಯುಂದು ಹೇಳಬಹುದು.

ಸ್ವರೂಪವನ್ನು ಹೆಚ್ಚು

ಸರಿಯಾಗಿ

ಕನ್ನಡ
ಹೆಸರು
ಪುಸಿ
ಮೊಸರು ಕಿಸುರ್

ತಮಿಳು ಪೆಯರ್ ಉಯಿರು ಪೊಯ್ ಮೋರ್ (<*ಮೊಯರ್) ಚೆಯಿರ್ ‘ಕೋಪಿಸು’’

ಕನ್ನಡದಲ್ಲಿ ಇವತ್ತು ಸ್ವರಗಳ ನಡುವೆ ಕಾಣಿಸುವ ಒತ್ತೆ ಚಕಾರ ಹೆಚ್ಚಿನೆಡೆಗಳಲ್ಲೂ ಮೂಲದ್ರಾವಿಡದ ಇಮ್ಮಡಿ ಚಕಾರದಿಂದ ಬಂದಿದೆ. ಉದ್ದಸ್ವರದ ಅನಂತರ ಬಂದ ಇಮ್ಮಡಿ ಚಕಾರ ಕನ್ನಡದಲ್ಲಿ ಒತ್ತೆ ಚಕಾರವಾಗಿ ಬದಲಾಗಿರುವುದೇ ಇದಕ್ಕೆ ಕಾರಣ (4.4.1 ನೋಡಿ).

ಕನ್ನಡ
ಆಚ ‘ಶಾಲ ಮರ’’ ಕೂಚು ‘ಕಂಬ’’
ಪೀಚು ‘ಚಿಕ್ಕ’’
ಪೀಚು ‘ಚಿಮ್ಮು’
ಪೂಚಿ ‘ಹುಳ’’

ತಮಿಳು ಕೂಚ್ಚಮ್ ಪೀಚ್ಚ (ಮಲಯಾಳ) ಪೀಚ್ಚು ಪೂಚ್ಚಿ

Eke →

4.3.3 ಱಕಾರ ರಕಾರವಾಗಿರುವುದು

ಮೂಲದ್ರಾವಿಡದ ಱಕಾರ ಎರಡು ಸ್ವರಗಳ ನಡುವೆ ಕೊರಳಿಸಿದ ವ್ಯಂಜನವಾಗಿಯೇ ಉಳಿದಿದೆ; ಹಳೆಗನ್ನಡದ ಕಾಲದಲ್ಲಿ ಅದು ರಕಾರಕ್ಕಿಂತ ಬೇರಾಗಿರುವ ಹೊಡೆಯುಲಿಯಾಗಿ ಉಚ್ಚಾರಣೆಯಲ್ಲಿತ್ತೆಂದು ಹೇಳಲು ಅವಕಾಶವಿದೆ.

ಸೊಲಿಗರ ಕನ್ನಡದಲ್ಲಿ ಈ ತಡೆಯುಲಿ ಇವತ್ತಿಗೂ ರಕಾರಕ್ಕಿಂತ ಬೇರಾ ರಕಾರದ ಹೊಡೆಯುಲಿಯಾಗಿ ಉಚ್ಚಾರಣೆಯಲ್ಲಿದೆ. ಗಿರುವ ಉಚ್ಚಾರಣೆಯಲ್ಲಿ ನಾಲಿಗೆ ಹಲ್ಲಿನ ಹಿಂಬದಿಯಲ್ಲಿರುವ ಅಂಗುಳಿಗೆ ಒಂದು ಬಾರಿ ಹೊಡೆಯುವು ದಾದರೆ, ಱಕಾರದ ಉಚ್ಚಾರಣೆಯಲ್ಲಿ ಹಲವು ಬಾರಿ ಹೊಡೆಯುತ್ತದೆ (ಗುರುಬಸವೇ ಗವ್ಡ 1968).

ಸೊಲಿಗರ ಕನ್ನಡ

ರಕಾರವಿರುವ ಪದ ಱಕಾರವಿರುವ ಪದ ಅಱ ‘ಬಂಡೆ’
ಇರು ‘ಇರು’’ ಇಱು ‘ಇರುವೆ’’
ಊಱು ‘ಕಾಲೂರು’’ ಊರು ‘ಹಳ್ಳಿ’’ ಕಱ ‘ಬರಹೇಳು’’ ತೆಱ ‘ಬಾಗಿಲು ತೆರೆ’’ ತೆರೆ ‘ನೀರಿನ ತೆರೆ’

ಕರೆ ‘ಕಲೆ’

ಬಡಗರ ಕನ್ನಡದಲ್ಲೂ ರಕಾರ ಮತ್ತು ಱಕಾರಗಳ ನಡುವಿನ ಈ ರೂಪದಲ್ಲಿ ವ್ಯತ್ಯಾಸ ಉಳಿದುಕೊಂಡಿದೆ. ಇದಕ್ಕೆ ಕೆಳಗಿನ ಕೆಲವು ಪದಗಳನ್ನು ಉದಾಹರಣೆಯಾಗಿ ಕೊಡಬಹುದು (ನಟರಾಜನ್ 1962).

ಹೊಡೆಯುಲಿಗಳ

ಬಡಗರ ಕನ್ನಡ

ಱಕಾರವಿರುವ ಪದ ಮಱಿ ‘ಕರು’’
ಮೂಱು ‘ಮೂರು’’ ಮೊಱ ‘ಕೇರು’’
ಮುಱಿ ‘ಮುರಿ’
ಚೇಱು ‘ಕೆಸರು’

ರಕಾರವಿರುವ ಪದ ನರಿ ‘ನರಿ’’ ಮಾರು ‘ಎದೆ’’ ಒರಲ ‘ಒರಲು’’ ಪುರಿ ‘ಹುರಿಯಕ್ಕಿ’’ ಬೇರು ‘ಬೇರು’’

ಆದರೆ, ಬಾಲಕ್ರುಶ್ಣನ್ ಬರೆದ ಬಡಗ ವ್ಯಾಕರಣದಲ್ಲಿ (ಬಾಲಕ್ರುಶ್ಣನ್ 1999) ರ ಮತ್ತು ಱಗಳ ನಡುವಿನ ಈ ವ್ಯತ್ಯಾಸ ಬಡಗದಲ್ಲಿ ಅಳಿದು ಹೋಗಿದೆಯುಂದು ಕೊಡಲಾಗಿದೆ. ಅವರು ಸಂಶೋದಿಸಿದ ಒಳನುಡಿ ಬೇರೆಯದಿರಬಹುದು ಇಲ್ಲವೇ ಅವರು ಸಂಶೋದಿಸಿದ ಸಮಯಕ್ಕೆ ಈ ವ್ಯತ್ಯಾಸ ಬಡಗ ಕನ್ನಡದಲ್ಲಿ ಇಲ್ಲವಾಗಿರಬಹುದು.

ಇವತ್ತು ಬಳಕೆಯಲ್ಲಿರುವ ಕನ್ನಡದ ಇತರ ಒಳನುಡಿಗಳಲ್ಲೆಲ್ಲ ಹಳೆ ಗನ್ನಡದ ಱಕಾರ ರಕಾರವಾಗಿ ಬದಲಾಗಿದೆ. ಱಕಾರ ಮತ್ತು ರಕಾರಗಳ ನಡುವಿನ ವ್ಯತ್ಯಾಸ ಈ ರೀತಿ ಇಲ್ಲವಾಗಿರುವುದನ್ನು ಕೆಳಗೆ ಕೊಟ್ಟಿರುವ ಹೊಸಗನ್ನಡ ಪದಗಳಲ್ಲಿ ಕಾಣಬಹುದು.

  ಮೂಲದ್ರಾವಿಡದ ರಕಾರ  ಹಳೆಗನ್ನಡ  ಹೊಸಗನ್ನಡ 

ಮೂಲದ್ರಾವಿಡದ ಱಕಾರ ಹಳೆಗನ್ನಡ ಹೊಸಗನ್ನಡ ಕಱ ಕೆಱ ತೆಱ ಸಾಱು

ಕರೆ ‘ಹಾಲು ಕರೆ’     ಕರೆ 
ಊರು ‘ನಿಲ್ಲಿಸು’      ಊರು  ಊರು ‘ಹಳ್ಳಿ’’ 
ಎರೆ ‘ಹುಯ್ಯು’’ 
ಕೆರೆ ‘ನೀರಿನ ಕೆರೆ’’    ಕೆರೆ 
ತೆರೆ ‘ಬಾಗಿಲು ತೆರೆ’’  ತೆರೆ 
ಸಾರು ‘ಕೂಗಿ ಹೇಳು’’ಸಾರು 

ಎರೆ ‘ಎರೆಹುಳ’’ ಕೆರೆ ‘ಪರಚು’’ ತೆರೆ ‘ಕಡಲಿನ ತೆರೆ’’ ಸಾರು ‘ಸಮೀಪಿಸು’’

ಕರೆ ‘ಬರಹೇಳು’’

ಕನ್ನಡದ ಚರಿತ್ರೆಯಲ್ಲಿ ಈ ರೀತಿ ಱಕಾರ ಮತ್ತು ರಕಾರಗಳು ಒಂದಾಗಿ ಶತಮಾನದಲ್ಲಿ ರಕಾರವಾಗತೊಡಗಿದುದು ಹದಿನಾಲ್ಕು-ಹದಿನಯ್ದನೇ ಎಂಬುದನ್ನು ಆಗಿನ ಕಾಲದ ಶಾಸನಗಳ ಆದಾರದ ಮೇಲೆ ಹೇಳಬಹುದು.
ಹದಿಮೂರನೇ ಶತಮಾನದ ಶಾಸನಗಳಲ್ಲೇನೇ ಕೆಲವು ಪದಗಳಲ್ಲಿ ಱಕಾರದ ಬದಲು ರಕಾರ ಕಾಣಿಸತೊಡಗಿದೆ; ಅನಂತರದ ಶಾಸನಗಳಲ್ಲಿ ಇಂತಹ ಪದಗಳ ಎಣಿಕೆ ಹೆಚ್ಚಾಗುತ್ತಾ ಹೋಗಿ, ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಎಲ್ಲಾ ಪದಗಳಲ್ಲೂ ಱಕಾರದ ಬದಲು ರಕಾರವೇ ಕಾಣಿಸುತ್ತದೆ (ನರಸಿಂಹಯ್ಯ 1941, ಗಾಯ್ 1946).

Eke →

4.3.4 ಟಕಾರದ ಬದಲಾವಣೆಗಳು

ಸ್ವರಗಳ ನಡುವಿದ್ದ ಟಕಾರ ಕನ್ನಡದ ಹೆಚ್ಚಿನ ಪದಗಳಲ್ಲೂ ಡಕಾರವಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಾವು ಮೇಲೆ ನೋಡಿರುವೆವು. (1) ಈ ಡಕಾರ ಹಳೆಗನ್ನಡದ ಕೆಲವು ಪದಗಳಲ್ಲಿ ಅನಿಯಮಿತವಾಗಿ ೞಕಾರವಾಗಿದ್ದು, ಹೊಸಗನ್ನಡದಲ್ಲಿ ಳಕಾರವಾಗಿ ಕಾಣಿಸಿಕೊಳ್ಳುತ್ತದೆ. ನಾಡಿದ್ದು-ನಾಳಿದ್ದು, ಅಳವಡಿಕೆ-ನಡವಳಿಕೆ, ಏಡಿಸು-ಏಳಿಸು, ಪೊಡಪು-ಪೊಳಪು (ಹೊಳಪು), ತೋಳ (ತಮಿಳು: ತೋಣ್ಟನ್), ತೊಡಕು-ತುಳುಕು ಪದಜೋಡಿಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು. (2) ಡಕಾರ ೞಕಾರವಾಗುವ ಸೇರಿಕೆಯ ನಿಯಮ:
ಪದಗಳ ಕೊನೆಯ ಉಲಿಕಂತೆಯಲ್ಲಿ ಬರುವ ಡಕಾರ, ಅದರ ಅನಂತರ ಒಂದು ತಡೆಯುಲಿಯಲ್ಲಿ ಇಲ್ಲವೇ ಮೂಗುಲಿಯಲ್ಲಿ ಮೊದಲಾಗುವ ಒಟ್ಟು ಇಲ್ಲವೇ ಪದ ಬಂದಾಗ, ಅದಕ್ಕೂ ಅದರ ಅನಂತರದ ಒಟ್ಟು ಇಲ್ಲವೇ ಪದಕ್ಕೂ ನಡುವಿರುವ ಸ್ವರ ಬಿದ್ದು ಹೋಗಿ, ಡಕಾರ ೞಕಾರವಾಗಿ ಬದಲಾಗುವ ಸೇರಿಕೆಯ ನಿಯಮವೊಂದು ಹಳೆಗನ್ನಡದ ಕಾಲದಲ್ಲಿತ್ತು.

ಮೊದಲಾದ

ಈ ನಿಯಮ ನಡೆಯಬೇಕಿದ್ದಲ್ಲಿ ಡಕಾರವು ಉದ್ದ ಸ್ವರದ ಅನಂತರ

ಬರಬೇಕು ಇಲ್ಲವೇ ಎರಡು ಗಿಡ್ಡ ಸ್ವರಗಳ ಅನಂತರ ಬರಬೇಕು.

ಡಕಾರವಿರುವ ಪದ (ಕ) ಉದ್ದ ಸ್ವರದ ಅನಂತರ ಮಾಡು
ನೋಡು ಮಾಡು
ಬೇಡು

ೞಕಾರವಿರುವ ಪದರೂಪ

ಮಾೞ್ಪನ್ ‘ಮಾಡುತ್ತೇನೆ’’ ನೋೞ್ಪೂಡೆ ‘ನೋಡುವುದಾದರೆ’’ ಮಾೞ್ಗುಂ ‘ಮಾಡಬಹುದು’’ ಕಾೞಿ್ಕಚ್ರು ‘ಕಾಡಿನ ಬೆಂಕಿ’’ ಬೇೞ್ಕುಂ ‘ಬೇಕು’’

(ಚ) ಎರಡು ಗಿಡ್ಡ ಸ್ವರಗಳ ಅನಂತರ

ಬಿಸುಡು

ಬಿಸುೞ್ಪೂಡೆ ‘ಬಿಸಾಡುವುದಾದರೆ’’ ಎರೞ್ಕುದುರೆ

Eke →

4.3.5 ಕಕಾರ ಬಿದ್ದುಹೋಗಿರುವುದು

ಎರಡು ಸ್ವರಗಳ ನಡುವೆ ಬಂದಿದ್ದ ಕಕಾರ (ಗಕಾರ) ಕೆಲವು ಪದಗಳಲ್ಲಿ ಬಿದ್ದುಹೋಗಿ, ಅದರ ಮೊದಲು ಮತ್ತು ಅನಂತರ ಬಂದಿದ್ದ ಸ್ವರಗಳು ಒಂದಾಗಿ ಉದ್ದಸ್ವರ ಕಾಣಿಸುತ್ತದೆ.

ಉದ್ದಸ್ವರ ಗಿಡ್ಡಸ್ವರ
ತೋಲು ತೊಗಲು ತೋಟೆ ತೊಗಟೆ
ಈರು ‘ಒಸಡು’’ ಮೋರೆ ಮೊಗ
ಸಿಗುಳು ‘ಸೀಳು’
ಸೀಳು ತಿಗಡು ‘ತಿಕ್ಕು’’
ನಿಗುಳ್ ’ನೆಟ್ಟಗೆ ನಿಲ್ಲು’’ ನೀಳ್

ಆದರೆ ಉಳಿದೆಡೆಗಳಲ್ಲಿ ಎರಡು ಸ್ವರಗಳ ನಡುವಿನ ಕಕಾರ ಗಕಾರ ವಾಗಿಯೇ ಉಳಿದಿದೆ. ಇದಕ್ಕೆ ಹೊಗೆ, ಉಗುರು, ತೊಗಲು, ಹಗಲು, ಹೊಗಳು, ಮಗು, ಸಿಗು, ಮಿಗು, ಬಗೆ ಮೊದಲಾದ ಪದಗಳನ್ನು ಉದಾ ಹರಣೆಯಾಗಿ ಕೊಡಬಹುದು.

ಕನ್ನಡದ ಹಲವು ಪದಗಳಲ್ಲಿ ಎರಡು ಸ್ವರಗಳ ನಡುವೆ ಒತ್ತೆ ಕಕಾರ ಕಾಣಿಸುತ್ತಿದ್ದು, ಇದು ಮೂಲದ್ರಾವಿಡದ ಇಮ್ಮಡಿ ಕಕಾರದಿಂದ ಬಂದಿದೆ ಯುಂಬುದನ್ನು ಮುಂದೆ (4.4.1ರಲ್ಲಿ) ನೋಡಲಿರುವೆವು.

ಸ್ವರಗಳ

ನಡುವೆ ಬಂದಿದ್ದ ಇಮ್ಮಡಿ

Eke →

4.4 ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು

ತಡೆಯುಲಿಗಳು ಮೂಲದ್ರಾವಿಡದಲ್ಲೇನೇ ಕೆಲವು ಬದಲಾವಣೆಗಳನ್ನು ತೋರಿಸುತ್ತಿದ್ದುವು; ಇವುಗಳಲ್ಲಿ ಕೆಲವನ್ನು ಕನ್ನಡದ ಪದಗಳಿಗಿರುವ ಪದರೂಪಗಳಲ್ಲೂ ಕಾಣಬಹುದು.

ಇದಲ್ಲದೆ, ಕನ್ನಡದ ಚರಿತ್ರೆಯಲ್ಲೂ ಸ್ವರಗಳ ನಡುವಿನ ಇಮ್ಮಡಿ ತಡೆಯುಲಿಗಳು ಹಲವು ರೀತಿಯ ಬದಲಾವಣೆಗಳಿಗೊಳಗಾಗಿವೆ. ಈ ಬದಲಾವಣೆಗಳಲ್ಲಿ ಕೆಲವು ಮೇಲಿನ ಬದಲಾವಣೆಗಳನ್ನು ಹೋಲುತ್ತವೆ. ಆದರೆ ಬೇರೆ ಕೆಲವು ಕನ್ನಡದವೇ ಆದ ಬದಲಾವಣೆಗಳು.

Eke →

4.4.1 ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿರುವುದು

ಮೂಲದ್ರಾವಿಡದಲ್ಲೇನೇ ಇಮ್ಮಡಿ ತಡೆಯುಲಿಗಳು ಕೆಲವು ಸಂದರ್ಬಗಳಲ್ಲಿ ಒತ್ತೆ ತಡೆಯುಲಿಗಳಾಗಿ ಬದಲಾಗಿವೆಯುಂದು ಕಲ್ಪಿಸಲಾಗಿದೆ. ಈ ಬದಲಾ ವಣೆ ಹಿಂದೆ ಎರಡನೇ ಅದ್ಯಾಯದಲ್ಲಿ (2.3.1ರಲ್ಲಿ) ವಿವರಿಸಿದಂತಹ ಉದ್ದಸ್ವರ ಗಿಡ್ಡಸ್ವರವಾಗುವ ಬದಲಾವಣೆಯನ್ನೇ ಹೋಲುತ್ತದೆ.

ಇಮ್ಮಡಿ ತಡೆಯುಲಿಗಳ ಅನಂತರ ಉಚ್ಚಾರಣೆಗಾಗಿ ಸೇರಿಸಿರುವ ಉಕಾರ ಬಂದಿದೆಯಾದರೆ ಆ ತಡೆಯುಲಿಗಳು ಬದಲಾಗದೆ ಉಳಿಯುತ್ತವೆ (ಕುಟ್ಟು, ಮುಚ್ಚು, ಕಪ್ಪು); ಆದರೆ ಇದಕ್ಕೆ ಬದಲು ಅವುಗಳ ಅನಂತರ ಸ್ವರದಲ್ಲಿ ಮೊದಲಾಗುವ ಒಟ್ಟು ಬಂದಿದೆಯಾದರೆ, ಅವು ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ (ಕುಟುಕು, ಮುಚುಕು, ಕವಿ). ಉಚ್ಚಾರಣೆಗಾಗಿ ಬಂದ ಉಕಾರ ಇಂತಹ ಸ್ವರದಲ್ಲಿ ಮೊದಲಾಗುವ ಒಟ್ಟು ಸೇರಿದಾಗ ಬಿದ್ದುಹೋಗುತ್ತದೆ.

ಕನ್ನಡದಲ್ಲಿ ಈ ವ್ಯಂಜನಗಳು ಬೇರೆ ಕೆಲವು ಬದಲಾವಣೆಗಳಿಗೆ (ಒತ್ತೆ ಚಕಾರ ಸಕಾರವಾಗುವುದು, ಒತ್ತೆ ಪಕಾರ ವಕಾರವಾಗುವುದು ಮತ್ತು ಒತ್ತೆ ಱಕಾರ ಅದಿರುಲಿಯಾಗುವುದು) ಒಳಗಾಗಿವೆ.

ಇಮ್ಮಡಿ ತಡೆಯುಲಿಗಳು ಅವುಗಳ ಅನಂತರ ವ್ಯಂಜನದಲ್ಲಿ ಮೊದ ಲಾಗುವ ಒಟ್ಟು ಬಂದಾಗಲೂ ಬದಲಾಗದೆ ಉಳಿಯುತ್ತವೆ; ಆದರೆ ಅಂತಹ ಸಂದರ್ಬಗಳಲ್ಲಿ ಅವುಗಳೊಂದಿಗೆ ಉಚ್ಚಾರಣೆಗಾಗಿ ಬಂದ ಉಕಾರ ಬಿದ್ದು ಹೋಗದೆ ಉಳಿದಿರುತ್ತದೆ, ಇಲ್ಲವೇ ಬೇರೆ ರೀತಿಯಲ್ಲಿ ಬದಲಾಗಿರುತ್ತದೆ (ಮುಚ್ಚುಗೆ, ಕಟ್ಟಡ, ಬಿತ್ತಿಗೆ).

ಮೂಲದ್ರಾವಿಡದಲ್ಲೇನೇ ಕಾಣಿಸಿಕೊಂಡಿದ್ದ ಈ ಬದಲಾವಣೆ ಕ್ರಿಯಾ ಪದಗಳಲ್ಲಿ, ಗುಣಪದಗಳಲ್ಲಿ ಮತ್ತು ಮೂರು ಉಲಿಕಂತೆಗಳಿರುವ ನಡೆದಿದೆ; ಆದರೆ ಎರಡು ನಾಮಪದಗಳಲ್ಲಿ ಉಲಿಕಂತೆಗಳಿರುವ ನಡೆದಿದೆ (ಸುಬ್ರಹ್ಮಣ್ಯಂ 1983).

ನಿಯಮಿತವಾಗಿ ನಾಮಪದಗಳಲ್ಲಿ ಅನಿಯಮಿತವಾಗಿ

ಕ್ರಿಯಾಪದಗಳಲ್ಲಿ ಈ ಬದಲಾವಣೆ ನಿಯಮಿತವಾಗಿ ನಡೆದಿದೆಯುಂಬು ದನ್ನು ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಉದಾಹರಣೆಗಳಿಂದ ಮತ್ತು ತಮಿಳು ಮತ್ತು ಕನ್ನಡ ನುಡಿಗಳಲ್ಲಿ ಬರುವ ಪದಗಳ ನಡುವಿನ ವ್ಯತ್ಯಾಸದಿಂದ ತಿಳಿಯಬಹುದು.

ಇಮ್ಮಡಿ ತಡೆಯುಲಿ ನುಗ್ಗು ‘ಹಿಸುಕು’’ ಕೆತ್ತು
ಕಟ್ಟು ‘ಗಂಟುಕಟ್ಟು’’ ಎಟ್ಟು ‘ಮುಟ್ಟು’’ ಮುಚ್ಚು ’

ಒತ್ತೆ ತಡೆಯುಲಿ ಕೆದಕು ‘ಅಗೆ’’ ಕಡಗು ‘ಗಟ್ಟಿಯಾಗು’’ ಎಟಕು ‘ಕಯ್ಗು ಮುಟ್ಟು’’ ಮುಸುಱ್

ಕನ್ನಡ

ತಮಿಳು
ಅತ್ತು ‘ಜೋಡಿಸು’’ ಅದುಕು ‘ಜೋಡಿಸು’’ ಎಱ್ಱು ‘ಚೆಲ್ಲು’’
ಕೊಟ್ಟು ‘ಕೊಂಡಿ’’

ಕುಟುಕು ‘ಚುಚ್ಚು’’

ಒತ್ತಕ್ಶರವಿರುವ ಕ್ರಿಯಾಪದಗಳು ಉಕಾರದಲ್ಲಿ ಮಾತ್ರ ಕೊನೆಗೊಳ್ಳ ಬಲ್ಲುವು ಮತ್ತು ಅವುಗಳಲ್ಲಿ ಎರಡು ಉಲಿಕಂತೆಗಳು ಮಾತ್ರ ಇರಬಲ್ಲುವು ಎಂಬ ನಿಯಮವೊಂದು ಕನ್ನಡದಲ್ಲಿದೆ (7.9 ನೋಡಿ). ಈ ನಿಯಮಕ್ಕೆ ಮೇಲಿನ ಬದಲಾವಣೆ ಕ್ರಿಯಾಪದಗಳಲ್ಲಿ ಬಹಳ ನಿಯಮಿತವಾಗಿ ನಡೆದಿರು ವುದೇ ಕಾರಣ.

ನಾಮಪದಗಳಲ್ಲೂ ಈ ಬದಲಾವಣೆ ನಡೆದಿದೆ; ಆದರೆ ಮೂರು ಉಲಿ ಕಂತೆಗಳಿರುವ ಪದಗಳಲ್ಲಿ ಕಾಣಿಸುವಶ್ಟು ನಿಯಮಿತವಾಗಿ ಇದು ಎರಡು ಉಲಿಕಂತೆಗಳಿರುವ ಪದಗಳಲ್ಲಿ ಕಾಣಿಸುವುದಿಲ್ಲ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಈ ಬದಲಾವಣೆ ನಡೆದಿರುವುದನ್ನು ಕಾಣಬಹುದು.

(ಕ) ಮೂರು ಉಲಿಕಂತೆಗಳಿರುವ ಪದಗಳಲ್ಲಿ

ಒತ್ತೆ ತಡೆಯುಲಿ ಇಮ್ಮಡಿ ತಡೆಯುಲಿ
ಪಿಸುರು ‘ಪಿಚ್ಚು’’ ಪಿಚ್ಚು ‘ಕಣ್ಣಿನ ಕೊಳೆ’’ ಮುಸುಕು ಮುಚ್ಚು
ತಡಿಕೆ ‘ತಟ್ಟಿ’’ ತಟ್ಟಿ ‘ಬಿದಿರ ಚಾಪೆ’’ ತೊಟ್ಟು ‘ಹನಿ’’ ತಟಕು ‘ಹನಿ’ ಚಟಿಗೆ ‘ಚಿಕ್ಕ ಮಣ್ಣಿನ ಪಾತ್ರೆ’’ ಚಟ್ಟಿ ‘ಮಣ್ಣಿನ ಪಾತ್ರೆ’’ ಗುಡಸು ‘ಉರುಟಾದುದು’’ ಗುಡ್ಡು ‘ಕಣ್ಣುಗುಡ್ಡೆ’’ ಗುದಿಗೆ ‘ದೊಣ್ಣೆ’’ ಗುದ್ದು
ಕುತ್ತ (<*ಕುಱ್ಱ) ‘ಕೊರತೆ’’ ಕೊಱತೆ ‘ಕೊರತೆ’’ ಸತ್ತೆ ‘ಕೊಳೆ’’ ಬೆಚ್ಚಗೆ
ಪಚ್ಚೆ

ಸೆದಗೆ ‘ಕಸಕಡ್ಡಿ, ಕೊಳೆ’’ ಬಿಸಿಲು ಹಸುರು

(ಚ) ಎರಡು ಉಲಿಕಂತೆಗಳಿರುವ ಪದಗಳಲ್ಲಿ

ಇಮ್ಮಡಿ ತಡೆಯುಲಿ
ಬಿತ್ತು ‘ಬೀಜ’’ ಕಿಟ್ಟು ‘ಮುಟ್ಟು’’
ಬತ್ತು (<*ವಱ್ಱು)

ಒತ್ತೆ ತಡೆಯುಲಿ ಬೆದೆ ‘ಬಿತ್ತುವಿಕೆ’’ ಕಿಡು, ಗೆಡೆ ‘ಮುಟ್ಟುವಿಕೆ’’ ಬಱ(ಗಾಲ)

ಸತ್ತೆ ‘ಕೊಳೆ’’ ಮತ್ತು (<*ಮಱ್ಱು)

ಸದೆ ‘ಕಸಕಡ್ಡಿ, ಕೊಳೆ’’ ಮಱು(ಮದುವೆ)

ಮೂಲದ್ರಾವಿಡದಲ್ಲೇನೇ ನಡೆದಿದ್ದ ಈ ಬದಲಾವಣೆ ಇಮ್ಮಡಿ ತಡೆಯುಲಿಗಳನ್ನು ಮಾತ್ರವಲ್ಲದೆ ಇತರ ಇಮ್ಮಡಿ ವ್ಯಂಜನಗಳನ್ನೂ ಒತ್ತೆ ವ್ಯಂಜನಗಳಾಗಿ ಬದಲಾಯಿಸಿದೆ (5.2.3 ನೋಡಿ). ಕೆಳಗೆ ಕೊಟ್ಟಿರುವ ಪದಗಳು ಇದಕ್ಕೆ ಉದಾಹರಣೆಗಳಾಗಬಲ್ಲುವು.

ಒತ್ತೆ ವ್ಯಂಜನ

ಇಮ್ಮಡಿ ವ್ಯಂಜನ
ಚಿಮ್ಮು ‘ಹೊರಚೆಲ್ಲು’’ ಚಿಮುಕು, ಚಿಮುಕಿಸು ಎಣ್ಣು ‘ಎಣಿಸು’’ ಕೊಳ್ಳು ‘ಹಿಡಿ’’

ಕೊಳಿಕೆ

ಮೇಲೆ ಸೂಚಿಸಿದ ಹಾಗೆ, ಮೂಲದ್ರಾವಿಡದ ಈ ಬದಲಾವಣೆ ಹಿಂದೆ ಎರಡನೇ ಅದ್ಯಾಯದಲ್ಲಿ (2.3.1ರಲ್ಲಿ) ವಿವರಿಸಿದ ಉದ್ದಸ್ವರ ಗಿಡ್ಡಸ್ವರ ವಾಗುವ ಬದಲಾವಣೆಯನ್ನು ಹೋಲುತ್ತದೆ. ಈ ಎರಡು ಬದಲಾವಣೆ ತೂಕದ ಗಳಲ್ಲೂ ಉಲಿಕಂತೆಗಳು ಹಗುರದ ಉಲಿಕಂತೆಗಳಾಗಿ ಬದಲಾಗುತ್ತವೆ ಎಂಬುದಾಗಿ ಇವೆರಡು ಬದಲಾವಣೆಗಳನ್ನೂ ಒಟ್ಟಾಗಿ ವಿವರಿಸಲು ಸಾದ್ಯವಿದೆ.

ಸ್ವರದಲ್ಲಿ ಮೊದಲಾಗುವ ಒಟ್ಟು

ಸೇರಿದಾಗ

ಕನ್ನಡದ ಚರಿತ್ರೆಯಲ್ಲಿ ಎರಡು ಸ್ವರಗಳ ನಡುವಿದ್ದ ಇಮ್ಮಡಿ ತಡೆಯುಲಿಗಳು ಬೇರೆಯೂ ಕೆಲವು ಬದಲಾವಣೆಗಳಿಗೊಳಗಾಗಿದ್ದು ಅವನ್ನು ಕೆಳಗೆ ವಿವರಿಸಲಾಗಿದೆ.

Eke →

4.4.2 ಕೊರಳಿಸದ ಮತ್ತು ಕೊರಳಿಸಿದ ಇಮ್ಮಡಿ ತಡೆಯುಲಿಗಳಾಗಿ

ಎರಡು ಸ್ವರಗಳ ನಡುವೆ ಇಮ್ಮಡಿ ರೂಪದಲ್ಲಿ ಬಂದಿದ್ದ ತಡೆಯುಲಿಗಳು ಮೂಲದ್ರಾವಿಡದಲ್ಲಿ ಕೊರಳಿಸದ ರೂಪದಲ್ಲಿದ್ದುವು. ಕನ್ನಡದಲ್ಲಿ ಇವು

ಕೆಲವು ಸಂದರ್ಬಗಳಲ್ಲಿ ಆ ರೂಪದಲ್ಲೇ ಉಳಿದಿವೆ; ಆದರೆ ಬೇರೆ ಕೆಲವು ಸಂದರ್ಬಗಳಲ್ಲಿ ಕೊರಳಿಸಿದ ತಡೆಯುಲಿಗಳಾಗಿ ಬದಲಾಗಿವೆ.

ಈ ಬದಲಾವಣೆ ತಮಿಳಿನಲ್ಲಿ ನಡೆದಿಲ್ಲವಾದ ಕಾರಣ, ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸುವುದರ ಮೂಲಕ ಇದಕ್ಕೆ ಉದಾಹರಣೆಗಳನ್ನು ಕೊಡಬಹುದು.

(ಕ) ಕೊರಳಿಸದ ರೂಪದಲ್ಲಿ ಉಳಿದಿರುವುದು ತಮಿಳು ವಿಕ್ಕು ಮುಚ್ಚು ಕುತ್ತು ಕುಪ್ಪಯ್

ಕನ್ನಡ
ಬಿಕ್ಕು
ಮುಚ್ಚು
ಕುತ್ತು
ಕುಪ್ಪೆ

(ಚ) ಕೊರಳಿಸಿದ ರೂಪಕ್ಕೆ ಬದಲಾಗಿರುವುದು ಕನ್ನಡ
ತಮಿಳು ಉಗ್ಗ ‘ಹಗ್ಗದ ಹಿಡಿ’’ ಉಕ್ಕಂ ಅಚ್ಚನ್ ಪೊಚ್ಚಯ್ ಬೊಜ್ಜು
ಕುತ್ತಲ್ ಗುದ್ದು
ತಿಪ್ಪಯ್ ಕೊಪ್ಪರಿ ಕೊಬ್ಬರಿ

ಕನ್ನಡದಲ್ಲೇನೇ ಕೆಲವು ಪದಗಳಿಗೆ ಕೊರಳಿಸದ ಮತ್ತು ಕೊರಳಿಸಿದ ಇಮ್ಮಡಿ ತಡೆಯುಲಿಗಳಿರುವ ಎರಡೆರಡು ರೂಪಗಳಿರುವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಕೊರಳಿಸದ ರೂಪ

ಕೊರಳಿಸಿದ ರೂಪ

ಚಕ್ಕನೆ
ಗುಚ್ಚು ‘ಕಿರಿದು’
ತೊಟ್ಟಿ ‘ಬಾನಿ’’
ಕುತ್ತು
ಮುತ್ತು
ಹೊಪ್ಪುಳ

ಜಗ್ಗನೆ ಗುಜ್ಜು ಗುದ್ದು ಮುದ್ದು ಬೊಬ್ಬೆ

ಕನ್ನಡದಲ್ಲಿ ಈ ಬದಲಾವಣೆ ನಡೆದಿರುವುದು ಅನಿಯಮಿತವಾಗಿ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಎಲ್ಲಿ ಇಮ್ಮಡಿ ತಡೆಯುಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗಿದೆ ಮತ್ತು ಎಲ್ಲಿ ಬದಲಾಗಿಲ್ಲ ಎಂಬುದಕ್ಕೆ ಒಂದು ನಿಯಮವನ್ನು ರಚಿಸಲು ಇನ್ನೂ ಸಾದ್ಯವಾಗಿಲ್ಲ.

Eke →

4.4.3 ಉದ್ದ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು

ಉದ್ದಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಒತ್ತೆ ತಡೆಯುಲಿಗಳಾಗಿ ಬದಲಾಗಿವೆ ಮತ್ತು ಇಮ್ಮಡಿ ಱಕಾರ ಒತ್ತೆ ತಕಾರವಾಗಿದೆ. ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಶಯ ಸ್ಪಶ್ಟವಾಗುತ್ತದೆ.

(ಕ) ಒತ್ತೆ ತಡೆಯುಲಿಯಾಗಿ ಬದಲಾಗಿರುವುದು

ತಮಿಳು ಕನ್ನಡ
ತೂಕ್ಕಮ್ ಪೋಕ ‘ಅಲೆಯುವಾತ’’ ಪೋಕ್ಕನ್ ಪೂಚಿ ‘ಹುಳ’’
ನೋಟ

ಪೂಚ್ಚಿ ನೋಟ್ಟಮ್

ಪೋಟಿ
ಮೋತೆ
ತೋಪು

ಪೋಟ್ಟಿ ಮೋತ್ತಯ್ ಚಾಪ್ಪಯ್ ತೋಪ್ಪು

(ಚ) ಇಮ್ಮಡಿ ಱಕಾರ ಒತ್ತೆ ತಕಾರವಾಗಿರುವುದು

ಕನ್ನಡ
ಕೀತು ‘ತುಣುಕು’’ ಮಾತು

ತಮಿಳು ಏಱ್ಱಮ್ ಕೀಱ್ಱು ಮಾಱ್ಱು (ಮಲಯಾಳ) ಪಾಱ್ಱ (ಮಲಯಾಳ)

ಈ ತಡೆಯುಲಿಗಳ ಅನಂತರ ಬಂದಿದ್ದ ಸ್ವರ ಉಚ್ಚಾರಣೆಗಾಗಿ ಮಾತ್ರ ಬಂದುದಾಗಿರುವಲ್ಲಿ ಆ ಕೊರಳಿಸಿದವುಗಳಾಗಿಯೂ ತಡೆಯುಲಿಗಳು ಬದಲಾಗಿವೆ. ಆದರೆ, ಇಂತಹ ಸನ್ನಿವೇಶದಲ್ಲಿ ಱ್ಱ ಎಂಬುದು ಒತ್ತೆ ದಕಾರವಾಗುವ ಬದಲು ಒತ್ತೆ ಱಕಾರವಾಗಿಯೇ ಉಳಿದಿದೆ.

(ಕ) ಕೊರಳಿಸಿದ (ಒತ್ತೆ) ತಡೆಯುಲಿಯಾಗಿ ಬದಲಾಗಿರುವುದು

ಕನ್ನಡ
ತೂಗು
ನೀಗು
ಮೂಗು
ಕೂಡು ‘ಒಂದಾಗು’’ ನೀಡು

ತಮಿಳು ತಾಕ್ಕು ತೂಕ್ಕು ನೀಕ್ಕು ಮೂಕ್ಕು ಕೂಟ್ಟು ನೀಟ್ಟು

ಪೂಡು ‘ಜೋಡಿಸು’’ ಪೂಟ್ಟು

(ಚ) ಱ್ಱ ಎಂಬುದು ಒತ್ತೆ ಱಕಾರವಾಗಿರುವುದು

ಕನ್ನಡ
ತೋಱು
ಸಾಱು
ಮಾಱು
ಆಱು ‘ಶಕ್ತಿ’’
ತೂಱು ‘ಸುರಿ’’

ತಮಿಳು ತೋಱ್ಱು ಚಾಱ್ಱು ಮಾಱ್ಱು ಆಱ್ಱು ‘ಶಕ್ತನಾಗು’’ ತೂಱ್ಱಿ ‘ಚದರಿಸು’’ ಕೀಱ್ಱು

ಮೇಲಿನ ನಿಯಮಕ್ಕೆ ಅಪವಾದವಾಗಿ ಕಾಣಿಸುವ ಕೆಲವು ಪದಗಳು ಕನ್ನಡದಲ್ಲಿವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ ಹೋಲಿಸಿ ನೋಡಬಹುದು.

ಕನ್ನಡ
ನಾದಿನಿ

ತಮಿಳು ಕಾಕ್ಕಯ್ ತೇಕ್ಕು ನಾತ್ತನಾರ್

ಮೇಲಿನ ಕನ್ನಡ ಪದಗಳಲ್ಲಿ ಉದ್ದ ಸ್ವರದ ಅನಂತರ ಬಂದ ಇಮ್ಮಡಿ ತಡೆಯುಲಿ ಅದರ ಅನಂತರ ಬಂದ ಸ್ವರ ಒಟ್ಟಿನದಾಗಿದೆಯಾದರೂ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಬದಲಾಗಿದೆ. ಆದರೆ ಕಾಗೆ ಪದ ಕಾಕೆ ರೂಪದಲ್ಲೂ ಇದೆ. ಹವ್ಯಕದಲ್ಲೂ ಅದು ಕಾಕೆ ರೂಪದಲ್ಲಿದೆ.

Eke →

4.4.4 ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು

(1) ಮೊದಲನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಕನ್ನಡದಲ್ಲಿ ಇಮ್ಮಡಿ ರೂಪದಲ್ಲೇ ಉಳಿಯುತ್ತವೆ. ಇಮ್ಮಡಿ ಱಕಾರ ಮಾತ್ರ ಇಮ್ಮಡಿ ತಕಾರವಾಗಿ ಬದಲಾಗುತ್ತದೆ.

(ಕ) ಇಮ್ಮಡಿ ತಡೆಯುಲಿಗಳು ಬದಲಾಗದಿರುವುದು

ಕನ್ನಡ
ಸಿಕ್ಕು
ಕಚ್ಚು
ಕೆತ್ತು
ತಪ್ಪು
ಮಜ್ಜಿಗೆ
ಕೊಟ್ಟಿಗೆ
ಸಟ್ಟುಗ
ಸುತ್ತಿಗೆ
ಚಪ್ಪಟೆ
ಹಪ್ಪಳ

ತಮಿಳು ಕಚ್ಚು ಚೆತ್ತು ತಪ್ಪು ಉಕ್ಕಳಮ್ ಮಚ್ಚಿಕಯ್ ಕೊಟ್ಟಿಕಯ್ ಚಟ್ಟುಕಮ್ ಚುತ್ತಿಕ (ಮಲಯಾಳ) ಚಪ್ಪಟ್ಟಯ್ ಪಪ್ಪಟಮ್, ಅಪ್ಪಳಮ್

(ಚ) ಇಮ್ಮಡಿ ಱಕಾರ ಇಮ್ಮಡಿ ತಕಾರವಾಗಿರುವುದು

ಕನ್ನಡ
ಹುತ್ತ
ಸುತ್ತು
ತುತ್ತು
ಮತ್ತು
ಮುತ್ತಿಗೆ

ತಮಿಳು ಪುಱ್ಱೆ ಚುಱ್ಱು ತುಱ್ಱು ಮಱ್ಱು ಕೊಱ್ಱಿ ಮುಱ್ಱಿಕಯ್

(2) ಆದರೆ, ಎರಡನೆಯ ಗಿಡ್ಡ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿಗಳಾಗಿ ಬದಲಾಗುತ್ತವೆ ಮತ್ತು ಇಮ್ಮಡಿ ಚಕಾರ ಸಕಾರವಾಗುತ್ತದೆ.

(ಕ) ಇಮ್ಮಡಿ ತಡೆಯುಲಿ ಒತ್ತೆ ತಡೆಯುಲಿಯಾಗಿರುವುದು

ಕನ್ನಡ
ನಂಬಿಕೆ
ಕಮ್ಮಟ
ಸುರುಟು ನಡತೆ
ಹೊರತು ಅೞಿಪು ‘ನಾಶ’’ ಎರಪು ‘ಎರವಲು’’ ಸರಪಳಿ

ತಮಿಳು ನಮ್ಪಿಕ್ಕಯ್ ಅಟಿಕ್ಕಾಯ್ ಕಂಪಟ್ಟಮ್ ಚಿರಟ್ಟಯ್ ಚುರುಟ್ಟು ಚಿಱುತ್ತಯ್ ನಟತ್ತಯ್ ಪುಱತ್ತಿ ಅೞಿಪ್ಪು
ಇಱಪ್ಪು ಚರಪ್ಪಳಿ

(ಚ) ಇಮ್ಮಡಿ ಚಕಾರ ಸಕಾರವಾಗಿರುವುದು

ಗೊರಸು ಕಡಸು ‘ಎಳೆಯ ದನ’’ ಕಟಚ್ಚಿ (ಮಲಯಾಳ)

ಕುರಚ್ಚಯ್

ಒತ್ತೆ ಪಕಾರವಾದ ಇಮ್ಮಡಿ ಪಕಾರ ಅನಂತರ ಕನ್ನಡದ ಚರಿತ್ರೆಯಲ್ಲಿ ಅನಿಯಮಿತವಾಗಿ ವಕಾರ ಇಲ್ಲವೇ ಹಕಾರವಾಗಿ ಬದಲಾಗುತ್ತದೆ ಎಂಬು ದನ್ನು ನಾವು ಮೇಲೆ (4.3.1)ರಲ್ಲಿ ನೋಡಿರುವೆವು.

ಈ ಸನ್ನಿವೇಶದಲ್ಲಿ ಇಮ್ಮಡಿ ಱಕಾರ ಒತ್ತೆ ಱಕಾರವಾಗಲು ಸಾದ್ಯವಿದೆ; ಆದರೆ ಇದಕ್ಕೆ ಕನ್ನಡದಲ್ಲಿ ಉದಾಹರಣೆಗಳು ದೊರೆತಿಲ್ಲ. ಪದರೂಪದಲ್ಲಿ ಇಂತಹ ಬದಲಾವಣೆ ನಡೆದಿರುವುದಕ್ಕೆ ಉದಾಹರಣೆಗಳನ್ನು ಕೆಳಗೆ (3)ನೇ ವಿಬಾಗದಲ್ಲಿ ಕೊಡಲಾಗಿದೆ.

ಉದ್ದ ಸ್ವರದ ಅನಂತರ ಇಮ್ಮಡಿ ತಡೆಯುಲಿಗಳು ಒತ್ತೆ ತಡೆಯುಲಿ ಹಳೆಗನ್ನಡದ

ಬದಲಾವಣೆ

ನೋಡಿ)

ಗಳಾಗುವ

ಸಮಯಕ್ಕಿಂತಲೂ ಮೊದಲೇ ನಡೆದಿರಬೇಕು. ಆದರೆ ಎರಡನೆಯ ಗಿಡ್ಡ ತಡೆಯುಲಿಗಳು ಒತ್ತೆ ಸ್ವರದ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿಗಳಾಗುವ ಹಳೆಗನ್ನಡದ ಸಮಯದಲ್ಲೇನೇ ನಡೆದಿರುವ ಹಾಗೆ ಕಾಣಿಸುತ್ತದೆ.

ಬದಲಾವಣೆ

ಮೇಲಿನ

ಯಾಕೆಂದರೆ ಎರಡು ಸ್ವರಗಳ ಅನಂತರ ಇಮ್ಮಡಿ ತಡೆಯುಲಿಯನ್ನು ಉಳಿಸಿಕೊಂಡಿರುವ ನೇರಿತ್ತು, ಬಲ್ಲಿತ್ತು, ಪದಪ್ಪು ‘ಹೆಬ್ಬಯಕೆ’ ಮೊದ ಲಾದ ಪದಗಳು ಹಳೆಗನ್ನಡದಲ್ಲಿವೆ. ಆದರೆ ಈ ಉಳಿಕೆಯ ಹರಹು ಎಂತಹದೆಂಬುದು ಇನ್ನೂ ಸ್ಪಶ್ಟವಾಗಿಲ್ಲ.

ಗುಣಪದಗಳಲ್ಲಿ ಇಂತಹ ತ್ತು ಒಟ್ಟಿರುವ ರೂಪ ಮೊದಲನೆಯ ಉಲಿ ಕಂತೆ ಮುಚ್ಚಿದ ಉಲಿಕಂತೆಯಾಗಿದ್ದಾಗ (ಎಂದರೆ, ವ್ಯಂಜನದಲ್ಲಿ ಕೊನೆ ಗೊಂಡಿದ್ದಾಗ) ಇಲ್ಲವೇ ಅದರಲ್ಲಿ ಉದ್ದ ಸ್ವರ ಬಂದಿದ್ದಾಗ ಮಾತ್ರ ಕಾಣಿಸುತ್ತದೆ (11.6 ನೋಡಿ).

(3) ಎರಡು ಸ್ವರಗಳ ಅನಂತರ ಬಂದ ಇಮ್ಮಡಿ ತಡೆಯುಲಿ ಪದರಚನೆಯ ಒಟ್ಟಾಗಿರದೆ ಪದರೂಪದ ಒಟ್ಟಾಗಿದ್ದಲ್ಲಿ ಅದು ಕನ್ನಡದಲ್ಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗುತ್ತದೆ (ಸುಬ್ರಹ್ಮಣ್ಯಂ 2004).

ಕನ್ನಡ
ಕೊಳದ
ಮರದ
ಹಗೆಗೆ

ತಮಿಳು ಕೊಳತ್ತ ಮರತ್ತ ಎನಕ್ಕು ಪಕಯ್ಕ್ಕು ತನ್ಕಯ್ಕ್ಕು ತೇಯ್ತ್ತ

ಈ ಸನ್ನಿವೇಶದಲ್ಲಿ ಇಮ್ಮಡಿ ಪಕಾರ ಒತ್ತೆ ಬಕಾರವಾಗುವ ಬದಲು ವಕಾರವಾಗಿದೆ ಮತ್ತು ಇಮ್ಮಡಿ ಱಕಾರ ಒತ್ತೆ ದಕಾರವಾಗುವ ಬದಲು ಒತ್ತೆ ಱಕಾರವಾಗಿದೆ.

ಕನ್ನಡ
ಕುಡಿವ

ತಮಿಳು ಕಾಪ್ಪ ಕುಟಿಪ್ಪ ಪಿಟಿಪ್ಪ ಅವಱ್ಱ

ಮೇಲಿನ ನಿಯಮಕ್ಕೆ ಮರಕ್ಕೆ, ಕೊಳಕ್ಕೆ ಮೊದಲಾದ ಅಕಾರದಲ್ಲಿ (ಅನ್ ಎಂಬುದರಲ್ಲಿ) ಕೊನೆಗೊಳ್ಳುವ (ಮತ್ತು ಮನುಶ್ಯೇತರರನ್ನು ಸೂಚಿಸುವ) ಪದಗಳ ವಿಬಕ್ತಿ ರೂಪಗಳು ಅಪವಾದಗಳಾಗಿ ಕಾಣಿಸುತ್ತವೆ (ಸುಬ್ರಹ್ಮಣ್ಯಂ 2004:134). ಯಾಕೆಂದರೆ ಇಲ್ಲಿ ಇಮ್ಮಡಿ ತಡೆಯುಲಿ ಬದಲಾಗದೆ ಉಳಿದಿದೆ.

Eke →

4.4.5 ಹವ್ಯಕದಲ್ಲಿ ಗಿಡ್ಡಸ್ವರಗಳ ಅನಂತರ ಬದಲಾವಣೆಯಿಲ್ಲ

ಎರಡು ಗಿಡ್ಡ ಸ್ವರಗಳ ಅನಂತರ ಬಂದಿದ್ದ ಇಮ್ಮಡಿ ತಡೆಯುಲಿ ಕರಾವಳಿಯ ಹವ್ಯಕ ಕನ್ನಡದಲ್ಲಿ ಬದಲಾಗದೆ ಉಳಿದಿದೆ. ಇಮ್ಮಡಿ ಟಕಾರ ಮಾತ್ರ ಇದಕ್ಕೆ ಅಪವಾದವಾಗಿದ್ದು, ಅದು ಒತ್ತೆ ಟಕಾರವಾಗಿ ಬದಲಾಗಿದೆ.

(ಕ) ಬರಹದ ಕನ್ನಡ ಹವ್ಯಕ ಕನ್ನಡ

ಕಳಚು
ನಡತೆ
ಹುರುಪು

ಕುಡಿಕ್ಕೆ
ಕಳಚ್ಚು
ಅಳತ್ತೆ
ನಡತ್ತೆ
ಹುರುಪ್ಪು

ತಮಿಳು ಕುಟುಕ್ಕಯ್ ಅಟಯ್ಕ್ಕಾಯ್ ಅಳತ್ತಯ್ ನಟತ್ತಯ್

ಹೊಳಪು

ಹೊಳಪ್ಪು

(ಚ) ಇಮ್ಮಡಿ ಟಕಾರ ಒತ್ತೆ ಟಕಾರವಾಗಿರುವುದು ಬರಹದ ಕನ್ನಡ ಹವ್ಯಕ ಕನ್ನಡ ಬೆರಣಿ
ಸುರುಟು

ಸುರುಟು

ತಮಿಳು ಚಿರಟ್ಟಯ್ ವಱಟ್ಟಿ ಚುರುಟ್ಟು

ಉದ್ದಸ್ವರದ ಅನಂತರ ಬಂದ ಇಮ್ಮಡಿ ತಡೆಯುಲಿಗಳು ಹವ್ಯಕದಲ್ಲೂ ಒತ್ತೆ ತಡೆಯುಲಿಗಳಾಗಿ ಬದಲಾಗಿವೆಯುಂಬುದನ್ನು ಹವ್ಯಕ ಕನ್ನಡದ ತೂಕ (ತಮಿಳು: ತೂಕ್ಕಂ) ಆಟ, ಹಾತೆ, ಮೇಪು ಮೊದಲಾದ ಪದಗಳಿಂದ ತಿಳಿಯಬಹುದು.

ಇದಲ್ಲದೆ, ಎರಡು

ಸ್ವರಗಳ ಅನಂತರ ಬಂದ ಇಮ್ಮಡಿ ತಡೆಯುಲಿಗಳು ಪದರಚನೆಯ ಒಟ್ಟಿನಲ್ಲಿ ಬರುವ ಬದಲು ಪದರೂಪದ ಒಟ್ಟಿನಲ್ಲಿ ಬಂದಿವೆಯಾದರೆ, ಅವು ಕನ್ನಡದ ಹಾಗೆ ಹವ್ಯಕದಲ್ಲೂ ಕೊರಳಿಸಿದ ಒತ್ತೆ ತಡೆಯುಲಿಯಾಗಿ ಬದಲಾಗಿವೆ.

ಹವ್ಯಕದ ಮರದ, ಎನಗೆ ‘ನನಗೆ’, ಕಡಿದ, ಹಿಡಿವ ‘ಹಿಡಿಯುವ’ ಇದಕ್ಕೆ ಉದಾಹರಣೆಗಳನ್ನಾಗಿ

ಪದರೂಪಗಳನ್ನು

ಮೊದಲಾದ ಕೊಡಬಹುದು.

Eke →

4.5 ಮೂಗುಲಿಯ ಅನಂತರದ ತಡೆಯುಲಿಗಳು

ಮೂಲದ್ರಾವಿಡದಲ್ಲಿ ಮೂಗುಲಿಗಳ ಅನಂತರ ಅವುಗಳದೇ ಜಾಗದಲ್ಲಿ ಉಚ್ಚಾರಣೆಯಾಗುವ ತಡೆಯುಲಿಗಳು ಒತ್ತೆಯಾಗಿ ಇಲ್ಲವೇ ಇಮ್ಮಡಿ ರೂಪದಲ್ಲಿ ಬರಬಲ್ಲುವಾಗಿದ್ದುವು.

(1) ಇವುಗಳಲ್ಲಿ ಒತ್ತೆಯಾಗಿ ಬಂದ ತಡೆಯುಲಿಗಳು ಕನ್ನಡದಲ್ಲಿ ತಡೆಯುಲಿಗಳಾಗಿ ಕೊರಳಿಸದ

(ಮೂಲದ್ರಾವಿಡದಲ್ಲಿದ್ದ ಕಾಣಿಸುತ್ತವೆ.

ಬರಹದಲ್ಲಿ

ಕೊರಳಿಸಿದ

ತಮಿಳು

ರೂಪದಲ್ಲಿವೆಯಾದರೂ ತಡೆಯುಲಿಗಳಾಗಿವೆ.

ಉಚ್ಚಾರಣೆಯಲ್ಲಿ

ಕೊರಳಿಸಿದ

ಕನ್ನಡ
ಪೊಂಗು
ನಂಬು

ತಮಿಳು ಪೊಂಕು ನಂಪು

ಮೂಲದ್ರಾವಿಡದ ಱಕಾರ ಮೇಲಿನ ಸನ್ನಿವೇಶದಲ್ಲಿ ಱಕಾರವಾಗಿ

ಉಳಿಯದೆ ದಕಾರವಾಗಿ ಬದಲಾಗಿದೆ.

ಕನ್ನಡ
ಕುಂದು

ತಮಿಳು ಒನ್ಱು ಕನ್ಱು ಅನ್ಱು ಪನ್ಱಿ ಕುನ್ಱು ಎನ್ಱು

ಕನ್ನಡದಲ್ಲಿ

ಕೊರಳಿಸದ ಒತ್ತೆ

(2) ಮೂಗುಲಿಗಳ ಅನಂತರ ಇಮ್ಮಡಿ ರೂಪದಲ್ಲಿ ಬಂದಿದ್ದ ತಡೆಯುಲಿಗಳಾಗಿ ತಡೆಯುಲಿಗಳು ಬದಲಾಗಿವೆ; ಱ್ಱ ಎಂಬುದು ಮಾತ್ರ ತ ಎಂಬುದಾಗಿ ಬದಲಾಗಿದೆ. ತಮಿಳಿನಲ್ಲಿ ಇಮ್ಮಡಿ ರೂಪದಲ್ಲಿರುವ ತಡೆಯುಲಿಗಳು ಈ ರೀತಿ ಬದಲಾಗದೆ ಉಳಿದಿವೆಯಾದರೂ ಅವುಗಳ ಮೊದಲು ಬಂದಿದ್ದ ಮೂಗುಲಿ ಬಿದ್ದುಹೋಗಿದೆ.

ಮೂಲದ್ರಾವಿಡ
*ಕಲಂಕ್ಕು *ಮಂಕ್ಕು *ತೋಂಟ್ಟಮ್

ಕನ್ನಡ
ಕಲಂಕು
ಮಂಕು
ನಂಟ(ರು)

ತಮಿಳು ಕಲಕ್ಕು
ಮಕ್ಕು ತೋಟ್ಟಮ್ ನಟ್ಟಾರ್

(ಚ) ಮೂಗುಲಿಯ ಅನಂತರದ ಇಮ್ಮಡಿ ಱಕಾರ ಒತ್ತೆ ತಕಾರವಾಗಿರು ವುದು

ಮೂಲದ್ರಾವಿಡ
*ಕನ್‌ಱ್ಱಯ್

ಕನ್ನಡ

ತಮಿಳು ಕಱ್ಱಯ್

ನಡೆದ

ಕನ್ನಡದ

ಬೇರೊಂದು ಚರಿತ್ರೆಯಲ್ಲಿ ಬದಲಾವಣೆಯಿಂದಾಗಿ, ಈ ಎರಡು ರೀತಿಯ ಪದಗಳಲ್ಲೂ ತಡೆಯುಲಿಯ ಮೊದಲಿದ್ದ ಮೂಗುಲಿ ಕೆಲವು ಸಂದರ್ಬಗಳಲ್ಲಿ (ಮೂಗುಲಿಯ ಮೊದಲು ಉದ್ದಸ್ವರವಿದ್ದಾಗ ಇಲ್ಲವೇ ಎರಡು ಗಿಡ್ಡಸ್ವರಗಳಿದ್ದಾಗ) ಬಿದ್ದುಹೋಗಿದೆ. ಈ ಬದಲಾವಣೆಯ ಕುರಿತು ಹೆಚ್ಚಿನ ವಿವರಗಳಿಗೆ (5.2.4) ನೋಡಿ.

ಈ ರೀತಿ ಮೂಗುಲಿ ಬಿದ್ದು ಹೋಗುವ ಬದಲಾವಣೆ ಕನ್ನಡದಲ್ಲಿ ಮೂಗುಲಿಗಳ ಅನಂತರ ಱಕಾರ ದಕಾರವಾಗುವ ಬದಲಾವಣೆಗಿಂತ ಮೊದಲೇ ಸಂದರ್ಬಗಳಲ್ಲಿ ಮೂಲದ್ರಾವಿಡ ಱಕಾರ ಹಳೆಗನ್ನಡದಲ್ಲಿ ದಕಾರವಾಗಿ ಬದಲಾಗದೆ ಱಕಾರವಾಗಿಯೇ ಉಳಿದಿದೆ.

ನಡೆದಿರಬೇಕು. ಯಾಕೆಂದರೆ, ಅಂತಹ

ತಮಿಳು

ಕನ್ನಡ
ಮೂಱು ‘ಮೂರು’’ ಊಱು ‘ನಿಲ್ಲಿಸು’’ ಊನ್ಱು ‘ಒತ್ತು’’

ಮೂನ್ಱು

ತೋಱು ‘ತೋರು’’

ತೋನ್ಱು

(4) ಉದ್ದ ಸ್ವರದ ಅನಂತರ ಮೂಗುಲಿಯೊಂದಿಗೆ ಪಕಾರ ಬಂದಿರುವಲ್ಲಿ ಮೇಲೆ ಸೂಚಿಸಿದ ಹಾಗೆ ಮೂಗುಲಿ ಬಿದ್ದುಹೋದಾಗ, ಉಳಿದುಕೊಂಡಿದ್ದ ಪಕಾರ ಕನ್ನಡದ ಕೆಲವು ಪದಗಳಲ್ಲಿ ವಕಾರವಾಗಿ ಬದಲಾಗಿದೆ.

ಕನ್ನಡ
ಹಾವು
ಬೇವು
ಓವು ‘ಕಾಯು’’
ಕಾವು ‘ಹಿಡಿ’’

ತಮಿಳು ಪಾಂಪು ವೇಂಪು
ಕಾಂಪು

ಆದರೆ ಬೇರೆ ಕೆಲವು ಪದಗಳಲ್ಲಿ ಅದು ಬಕಾರವಾಗಿಯೂ ಬದಲಾ

ಕನ್ನಡ
ನಾಂಬು ‘ಸಡಿಲಾಗು’’
ತೂಬು (ಹವ್ಯಕ: ತೂಂಬು)

ತಮಿಳು

ನಾಂಪು ತೂಂಪು

(5) ಕನ್ನಡದ ಕೆಲವು ಪದಗಳಿಗೆ (ಕ) ಮೂಗುಲಿ ಮತ್ತು ತಡೆಯುಲಿ ಗಳಿರುವ ರೂಪ ಮತ್ತು (ಚ) ಇಮ್ಮಡಿ ತಡೆಯುಲಿಯಿರುವ ರೂಪ ಕಾಣಿಸುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ್ದೇ ಆದ ಪದಗಳನ್ನು ಗಮನಿಸಬಹುದು.

ರೂಪಗಳಿರುವುದು

ಎರಡೆರಡು

ಮೂಗುಲಿ ಮತ್ತು ತಡೆಯುಲಿ

ಇಮ್ಮಡಿ ತಡೆಯುಲಿ

ಇಂಗು ‘ಬತ್ತು’’

ಗುಂಗುರು ಸುಂದು
ಒಂದು ‘ಸೇರು’’
ಕಂಪು

ದಕ್ಕು ಗುಗ್ಗುರು ಕೆಚ್ಚು
ಅಟ್ಟು ‘ಸೇರು’’ ಪಿತ್ತಿಲ್ ಸುತ್ತು ಗಬ್ಬು

ಮೂಲದ್ರಾವಿಡದಲ್ಲಿ  ಕೆಲವು  ಒಟ್ಟುಗಳು  ಸೇರಿದಾಗ  ಈ  ರೀತಿ  ಮೂಗುಲಿ  ಮತ್ತು  ತಡೆಯುಲಿಗಳ  ಜೋಡಿಯ  ಬದಲು,  ಇಮ್ಮಡಿ  ತಡೆಯುಲಿ ಬರುವಂತಹ ಸೇರಿಕೆಯ ನಿಯಮವೊಂದಿತ್ತೆಂದು ಕಲ್ಪಿಸಲಾಗಿದೆ.  ಕನ್ನಡದ ಮೇಲಿನ ಪದಗಳು ಆ ನಿಯಮದ ಪಳೆಯಳಿಕೆಗಳಿರಬೇಕು. 

Eke →

4.6 ಇತರ ವ್ಯಂಜನಗಳೊಂದಿಗೆ ಬಂದ ತಡೆಯುಲಿಗಳು

ತಡೆಯುಲಿಗಳು ಇತರ ವ್ಯಂಜನಗಳೊಂದಿಗೆ ಬಂದಿರುವಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆದಿದ್ದುವು ಎಂಬ ವಿಶಯದಲ್ಲಿ ಇನ್ನಶ್ಟು ಸಂಶೋದನೆಗಳು ನಡೆಯುವ ಅವಶ್ಯಕತೆಯಿದೆ. ಮೂಲದ್ರಾವಿಡದಲ್ಲೇನೇ ಕೆಲವು ಬದಲಾವಣೆಗಳು ನಡೆದಿದ್ದು ಅವನ್ನು ವಿವರಿಸುವಂತಹ ಕೆಲವು ಸೇರಿಕೆಯ ನಿಯಮಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಇವುಗಳಲ್ಲಿ ಕೆಳಗಿನ ನಿಯಮಗಳಿಗೆ ಕನ್ನಡದಲ್ಲಿ ಉದಾಹರಣೆಗಳನ್ನು ಕೊಡಲು ಸಾದ್ಯವಿದೆ.

(ಕ) ಲಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಱ್ ಮತ್ತು ನ್ಱ್ ಎಂದಾಗುತ್ತವೆ (ಮತ್ತು ಲಕಾರ ಬಿದ್ದು ಹೋಗು

(ಚ) ಳಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಟ್ ಮತ್ತು ಣ್್ಟ ಎಂದಾಗುತ್ತವೆ (ಮತ್ತು ಳಕಾರ ಬಿದ್ದು ಹೋಗುತ್ತದೆ);
(ಟ) ನಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಱ್ ಮತ್ತು ನ್ಱ್ ಎಂದಾಗುತ್ತವೆ (ಮತ್ತು ನ್ಱ್ ಎಂಬುದರ ಮೊದಲಿನ ನಕಾರ ಬಿದ್ದು ಹೋಗುತ್ತದೆ); ಮತ್ತು (ತ) ಣಕಾರದ ಅನಂತರ ಬಂದ ತ್ ಮತ್ತು ನ್್ತ ಎಂಬವುಗಳು ಟ್ ಮತ್ತು ಣ್್ಟ ಎಂದಾಗುತ್ತವೆ (ಮತ್ತು ಣ್್ಟ ಎಂಬುದರ ಮೊದಲಿನ ಣಕಾರ ಬಿದ್ದುಹೋಗುತ್ತದೆ).

ಈ ನಾಲ್ಕು ರೀತಿಯ ಸೇರಿಕೆಯ ನಿಯಮಗಳಿಗೂ ಉದಾಹರಣೆಗಳನ್ನು  ಕನ್ನಡದ ಕ್ರಿಯಾಪದಗಳ ಹಿಂದಿನ ಸಮಯದ ರೂಪಗಳಲ್ಲಿ ಕಾಣಬಹುದು.  

ಕ್ರಿಯಾಪದ ಕೊಲ್

ಹಿಂದಿನ ಸಮಯ
ಕೊಂದು

ಕೊಳ್

ಕೊಂಡು

ತಮಿಳು ಕೊನ್ಱು ನಿನ್ಱು

ಕೊಣ್ಟು

ಎನ್ಱು

Eke →

4.6.1 ಕನ್ನಡದಲ್ಲಿ ನಡೆದ ಬದಲಾವಣೆಗಳು

(1) ಹಳೆಗನ್ನಡದಲ್ಲಿ ಳಕಾರ, ೞಕಾರ ಮತ್ತು ರಕಾರ (ಇಲ್ಲವೇ ಱಕಾರ)ಗಳ ಅನಂತರ ಬರುವ ವ್ಯಂಜನಗಳಿಗೆ ಎರಡು ರೀತಿಯ ಉಚ್ಚಾರಣೆಗಳಿದ್ದುವು. ಹೆಚ್ಚಿನ ಪದಗಳಲ್ಲೂ ಅವು ಸ್ವಲ್ಪ ಮಟ್ಟಿಗೆ ಉದ್ದವಾಗಿ ಉಚ್ಚಾರಣೆಯಾಗುತ್ತಿದ್ದುವು.

ಆದರೆ ಕೆಲವು ವಿಶಿಶ್ಟವಾದ ಜಾಗಗಳಲ್ಲಿ ಮತ್ತು ಪದಗಳಲ್ಲಿ ಅವು ಗಿಡ್ಡರೂಪದಲ್ಲೇ ಉಚ್ಚಾರಣೆಯಾಗುತ್ತಿದ್ದಿರಬೇಕು ಎಂಬುದನ್ನು ಆ ಕಾಲದ ವಯ್ಯಾಕರಣಿಗಳು ಕೊಟ್ಟಿರುವ ಹೇಳಿಕೆಗಳಿಂದ ಊಹಿಸಬಹುದು. ಇಂತಹ ಗಿಡ್ಡ ಉಚ್ಚಾರಣೆಯಿರುವ ವ್ಯಂಜನಗಳಿಗೆ ‘ಶಿತಿಲದ್ವಿತ್ವ’ ಎಂಬ ಹೆಸರು ರೂಡಿಯಲ್ಲಿದೆ.

ಮೂರು

ಇಲ್ಲವೇ

ಸಾಮಾನ್ಯವಾಗಿ

ವ್ಯಂಜನಕಂತೆಗಳನ್ನು

ಹೆಚ್ಚು ಉಲಿಕಂತೆಗಳಿರುವ ಮತ್ತು ಮೊದಲನೆಯ ಎರಡು ಉಲಿಕಂತೆಗಳು ಹಗುರವಾಗಿರುವ ಪದಗಳಲ್ಲಿ ಮಾತ್ರ ಈ ರೀತಿ ಶಿತಿಲದ್ವಿತ್ವವನ್ನು ತೋರಿಸುವ ನಾಮಪದಗಳಿಗೆ ಹಲವಚನದ ಗಳ್ ಒಟ್ಟು ಇಲ್ಲವೇ ವಿಬಕ್ತಿಯ ಗೆ ಒಟ್ಟು ಸೇರಿರುವಲ್ಲಿ (ಎಸೞ್ಗಳ್, ಎಸೞ್ಗ, ಚಿಗುರ್ಗಳ್, ಚಿಗುರ್ಗೆ), ಕ್ರಿಯಾರೂಪಗಳಲ್ಲಿ (ತೆಗೞ್ದಂ, ತೆಗೞ್ವ, ನುಸುಳ್ಗುಂ, ತೊಡರ್ದಂ), ಮತ್ತು ಕೆಲವು ಜೋಡುಪದಗಳಲ್ಲಿ (ಅಲರ್ದೋರಣಂ, ಬೆಮರ್ವನಿ, ಕುಳಿಗ್ರಾಳಿ) ಇಂತಹ ಉಚ್ಚಾರಣೆಯಿತ್ತೆಂದು ತೋರುತ್ತದೆ.

ಕಾಣಬಹುದು.

ಆದರೆ, ಮೇಲಿನ ನಿಯಮಕ್ಕೆ ಅಪವಾದವಾಗಿ, ಎರ್ದೆ, ಬರ್ದಿಲಂ ಎಂಬಂತಹ ಕೆಲವು ಪದಗಳಲ್ಲೂ ಶಿತಿಲದ್ವಿತ್ವವಿತ್ತು. ಹೊಸಗನ್ನಡದಲ್ಲಿ ಎರ್ದೆ ಪದ ಎದ್ದೆ ಎಂದಾಗದೆ (ಕೆಳಗೆ (2)ನೇ ವಿಬಾಗ ನೋಡಿ) ಎದೆ ಎಂದಾಗಿರುವುದು ಇದೇ ಕಾರಣಕ್ಕಿರಬಹುದು (ಆದರೆ, ಕಿಟ್ಟೆಲ್ ಅವರು ಎದ್ದೆ ರೂಪವನ್ನೂ ಕೊಟ್ಟಿದ್ದಾರೆ).

(2) ಕನ್ನಡದ ಚರಿತ್ರೆಯಲ್ಲಿ ಎರಡು ಗಿಡ್ಡ ಸ್ವರಗಳ ಅನಂತರ ತಡೆಯುಲಿ ಬಂದಿರುವ ಪದಗಳಲ್ಲಿ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರವಿದೆಯಾದಲ್ಲಿ, ಅವುಗಳ ಎರಡನೆಯ ಗಿಡ್ಡ ಸ್ವರ ಬಿದ್ದು ಹೋಗುವ ಬದಲಾವಣೆಯೊಂದು ಅನಿಯಮಿತವಾಗಿ ನಡೆದಿತ್ತು.

ಈ ಬದಲಾವಣೆಯಿಂದಾಗಿ ರಕಾರ ಇಲ್ಲವೇ ೞಕಾರದೊಂದಿಗೆ ತಡೆ ಯುಲಿ ಬರಲು ಸಾದ್ಯವಾಗಿದ್ದು (ಪೊರ್ದು ‘ಹೊಂದು’ - ತಮಿಳು: ಪೊರುತು; ಕೞ್ತ ‘ಕತ್ತೆ’ - ತಮಿಳು: ಕೞುತಯ್), ಅವುಗಳಲ್ಲಿ (ಕ)

ೞಕಾರ ರಕಾರವಾಗುವ (ತೞ್ಗು > ತರ್ಗು) ಮತ್ತು (ಚ) ರಕಾರ ತಡೆಯುಲಿಯೊಂದಿಗೆ ಸೇರಿ ಇಮ್ಮಡಿ ತಡೆಯುಲಿಯಾಗುವ (ಪೊರ್ದು > ಪೊದ್ದು) ಬದಲಾವಣೆಗಳು ನಡೆದಿದ್ದುವು. ಈ ಎರಡನೆಯ ಬದಲಾವಣೆಗೆ ೞಕಾರದಿಂದ ಬಂದ ರಕಾರವೂ ಒಳಗಾಗಿತ್ತು (ತರ್ಗು > ತಗ್ಗು).

ಇಂತಹ ಪದಗಳಲ್ಲಿ ಎರಡನೆಯ ಸ್ವರದ ಅನಂತರ ಬಂದಿದ್ದ ಒತ್ತೆ ತಡೆಯುಲಿ ಕನ್ನಡದಲ್ಲಿ ಕೊರಳಿಸಿದ ತಡೆಯುಲಿಯಾಗಿ ಬದಲಾಗುತ್ತದೆ ಮತ್ತು ಇಮ್ಮಡಿ ತಡೆಯುಲಿ ಕೊರಳಿಸದ ಒತ್ತೆ ತಡೆಯುಲಿಯಾಗಿ ಬದಲಾಗುತ್ತದೆ (ಪರ್ತಿ ‘ಹತ್ತಿ’ - ತಮಿಳು: ಪರುತ್ತಿ).

ಆದರೆ, ಇವುಗಳಲ್ಲಿ ಮೊದಲನೆಯ ಬದಲಾವಣೆಗೆ ಪೊೞ್ತು (ತಮಿಳು: ಪೊೞುತು), ಕೞ್ತ (ತಮಿಳು: ಕೞುತಯ್), ಒೞ್ಕು ಮತ್ತು ಬೆರ್ಕು (ತಮಿಳು: ವೆರುಕು) ಪದಗಳಲ್ಲಿ ತಕಾರ ಮತ್ತು ಕಕಾರಗಳು ದಕಾರ ಮತ್ತು ಗಕಾರಗಳಾಗಿಲ್ಲದಿರುವುದು ಅಪವಾದವಾಗಿ ಕಾಣಿಸುತ್ತದೆ.

(3) ಎರಡು ಗಿಡ್ಡ ಸ್ವರಗಳ ಅನಂತರ ಮೂಗುಲಿ ಮತ್ತು ಒತ್ತೆ ಇಲ್ಲವೇ ಇಮ್ಮಡಿ ತಡೆಯುಲಿಗಳು ಬಂದಿರುವಂತಹ ಪದಗಳಲ್ಲೂ ಮೊದಲನೆಯ ಗಿಡ್ಡ ಸ್ವರದ ಅನಂತರ ರಕಾರ ಇಲ್ಲವೇ ೞಕಾರ ಬಂದಿದೆಯಾದರೆ, ಎರಡನೆಯ ಸ್ವರ ಅನಿಯಮಿತವಾಗಿ ಬಿದ್ದುಹೋಗುತ್ತದೆ.

ಇಂತಹ ಪದಗಳಲ್ಲಿ ರಕಾರ ಇಲ್ಲವೇ ೞಕಾರದ ಅನಂತರ ಮೂಗುಲಿ ಮತ್ತು ಒತ್ತೆ ಇಲ್ಲವೇ ಇಮ್ಮಡಿ ತಡೆಯುಲಿಗಳಿದ್ದುವಾದಲ್ಲಿ, ಮೂಗುಲಿ ಬಿದ್ದು ಹೋಗುತ್ತದೆ ಮತ್ತು ಇದರಿಂದಾಗಿ, ರಕಾರ ಇಲ್ಲವೇ ೞಕಾರಗಳ ಅನಂತರ ತಡೆಯುಲಿಗಳು ಬರುವಂತಾಗುತ್ತದೆ.

ಇಂತಹ ಪದಗಳಲ್ಲೂ (ಕ) ೞಕಾರ ರಕಾರವಾಗುತ್ತದೆ (ಉೞ್ದು > ಉರ್ದು) ಮತ್ತು (ಚ) ರಕಾರ (ಮೂಲದ್ರಾವಿಡ ರಕಾರ ಮತ್ತು ೞಕಾರದಿಂದ ಬಂದ ರಕಾರ) ತಡೆಯುಲಿಯೊಂದಿಗೆ ಸೇರಿ ಇಮ್ಮಡಿ ತಡೆಯುಲಿ ಉಳಿಯುವಂತೆ ಮಾಡುತ್ತದೆ (ಪರ್ದು > ಪದ್ದು ‘ಹದ್ದು’ - ತಮಿಳು: ಪರುನ್ತು; ಪರ್ತಿ > ಹತ್ತಿ; ಉರ್ದು > ಉದ್ದು - ತಮಿಳು:

ಉೞುನ್ತು). ಹೆಚ್ಚಿನ ವಿವರಗಳಿಗೆ (5.2.5), (5.3.3) ಮತ್ತು (5.4.3) ನೋಡಿ.

(4) ಹಳೆಗನ್ನಡದ ಕೆಲವು ಪದಗಳಲ್ಲಿ ಡಕಾರದ ಅನಂತರ ಬೇರೆ ತಡೆಯುಲಿಯೊಂದು ಬಂದಿರುವಲ್ಲಿ ಅದು ೞಕಾರವಾಗಿ ಬದಲಾಗಿರುವುದು ಕಂಡುಬರುತ್ತದೆ. ಈ ಬದಲಾವಣೆ ಉದ್ದಸ್ವರದ ಅನಂತರ ಇಲ್ಲವೇ ಎರಡು ಗಿಡ್ಡಸ್ವರಗಳ ಅನಂತರ ಮಾತ್ರವೇ ನಡೆದಿರುವ ಹಾಗೆ ತೋರುತ್ತದೆ (4.3.4 ನೋಡಿ).

ಸ್ವರಗಳ ನಡುವೆ

ನೋಡು ಮಾಡು
ಬಿಸುಡು

ತಡೆಯುಲಿಯ ಮೊದಲು ನೋೞ್ಪೂಡೆ ‘ನೋಡುವುದಿದ್ದರೆ’’ ಮಾೞ್ಗುಂ ‘ಮಾಡಬಹುದು’’ ಕಾೞಿ್ಗಚ್ರು ‘ಕಾಡುಕಿಚ್ಚು’’ ಬಿಸುಳ್ಪೊಡೆ ‘ಬಿಸಾಡುವುದಿದ್ದರೆ’

ಈ ಬದಲಾವಣೆಗೆ ಅವಶ್ಯವಿರುವ ಸನ್ನಿವೇಶ ಉಳಿದಿಲ್ಲವಾದ ಕಾರಣ, ಹೆಚ್ಚಿನ ರೂಪಗಳಲ್ಲೂ ಅದು ಹೊಸಗನ್ನಡದಲ್ಲಿ ಮುಂದುವರಿದಿಲ್ಲ. ಆದರೆ ಕೆಲವು ಳಕಾರವಾಗಿ ಜೋಡುಪದಗಳಲ್ಲಿ ಕಾಣಿಸಿಕೊಳ್ಳುತ್ತದೆ (ಕಾಳ್ಗಿಚ್ಚು).

ಮಾತ್ರ

Eke →

4.7 ತಿರುಳು

ಮೂಲದ್ರಾವಿಡದ ತಡೆಯುಲಿಗಳು (ಕ, ತ, ಱ, ಟ, ಚ, ಪ) ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಬರಿಯ ಉಚ್ಚಾರಣೆಯಲ್ಲಿ ಮಾತ್ರವೇ ಕಾಣಿಸುತ್ತಿದ್ದ (ಎಂದರೆ ಅರ್ತ ಮತ್ತು ಕೆಲಸವಿಲ್ಲದಿದ್ದ) ವ್ಯತ್ಯಾಸವನ್ನು ಕೊರಳಿಸುವ ತಡೆಯುಲಿಗಳ ನಡುವಿನ ವ್ಯತ್ಯಾಸ ಕನ್ನಡದಲ್ಲಿ ಅರ್ತ ನಡೆದ ವ್ಯತ್ಯಾಸವನ್ನು

ಸೂಚಿಸುವಂತಾದುದು ಈ ಉಲಿಗಳಲ್ಲಿ

ಕೊರಳಿಸದ

ಸೂಚಿಸುವ

ಬದಲಾವಣೆಗಳಲ್ಲಿ ಮುಕ್ಯವಾದುದು. ಆದರೆ ಈ ಬದಲಾವಣೆಯ ಸ್ವರೂಪ ಎಂತಹದು ಎಂಬುದನ್ನಿನ್ನೂ ಸ್ಪಶ್ಟವಾಗಿ ವಿವರಿಸಲು ಸಾದ್ಯವಾಗಿಲ್ಲ.

ಮೂಲದ್ರಾವಿಡ ಱಕಾರ ಕನ್ನಡದಲ್ಲಿ ಹಲವು ರೀತಿಯ ಬದಲಾವಣೆಗಳಿ ಗೊಳಗಾಗಿದ್ದು ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿದೆ. ಚಕಾರ ಮತ್ತು ಪಕಾರಗಳೂ ಇಂತಹವೇ ಹಲವು ಬದಲಾವಣೆಗಳಿಗೊಳಗಾಗಿದ್ದರೂ ಎರವಲುಗಳಿಂದಾಗಿ ಅವು ಹೊಸಗನ್ನಡದಲ್ಲಿ ಇವತ್ತಿಗೂ ಪ್ರತ್ಯೇಕ ತಡೆಯುಲಿಗಳಾಗಿ ಉಳಿದುಕೊಂಡಿವೆ.