← Ch 9  ·  Contents  ·  Ch 11 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

10. ಆಡುಗ ಮತ್ತು ತೋರುಗ ಪದಗಳು

ಸಂಬಂದಿಸಿರುವ

Eke →

10.1 ಮುನ್ನೋಟ

ಮೂಲದ್ರಾವಿಡದಲ್ಲಿ ಬಳಕೆಯಾಗುವ ಆಡುಗ ಪದಗಳು ಎರಡು ಪದಗುಂಪುಗಳಲ್ಲಿ ಬರುತ್ತವೆ. ವಾಕ್ಯದ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ‘ಆಡುಗ’ ಪದಗಳದು ಒಂದು ಗುಂಪು; ಮತ್ತು ವ್ಯಕ್ತಿ, ವಸ್ತು, ವಿಶಯ, ದಿಕ್ಕು, ಸಮಯ, ಪ್ರಮಾಣ, ವಿದಾನ, ನಮೂನೆ ಮೊದಲಾದವುಗಳ ಜಾಗವನ್ನು ಆಡುಗನ ಸೂಚಿಸುವ ಇಲ್ಲವೇ ಅವು ಜಾಗಕ್ಕೆ ತಿಳಿದಿಲ್ಲವೆಂದು ಸೂಚಿಸುವ ‘ತೋರುಗ’ ಪದಗಳದು ಇನ್ನೊಂದು ಗುಂಪು.
ಈ ಎಲ್ಲಾ ಪದಗಳನ್ನೂ ಒಟ್ಟಾಗಿ ‘ಸರ್ವನಾಮ’ವೆಂಬ ಪದಗುಂಪಿನಲ್ಲಿ ಸೇರಿಸಿ ಹೇಳುವುದು ರೂಡಿ. ಆದರೆ, ಮೂಲದ್ರಾವಿಡದಲ್ಲಿ ಇಲ್ಲವೇ ಕನ್ನಡ ದಲ್ಲಿ ಇವು ಮೇಲೆ ಸೂಚಿಸಿದ ಹಾಗೆ ಎರಡು ಬೇರೆ ಬೇರೆ ಪದಗುಂಪುಗಳಲ್ಲಿ ಬರುತ್ತವೆ. ಆಡುಗನಿಗೆ ಸಂಬಂದಿಸಿವೆ ಎಂಬ ಒಂದು ವಿಶಯವನ್ನು ಬಿಟ್ಟರೆ ಇವನ್ನು ಒಂದೇ ಗುಂಪಿನಲ್ಲಿ ಸೇರಿಸಿ ಹೇಳಲು ಬೇರೆ ಆದಾರಗಳೇನೂ ಇಲ್ಲ (ಹೆಚ್ಚಿನ ವಿವರಗಳಿಗೆ ಬಟ್ 2003:18 ನೋಡಿ). ಇದಲ್ಲದೆ, ಆಡುಗನಿಗೆ ಸಂಬಂದಿಸಿದಂತಹ ಬೇರೆಯೂ ಹಲವು ಪದಗಳು ಬಳಕೆಯಲ್ಲಿದ್ದು (ಮೇಲೆ, ಕೆಳಗೆ, ನಿನ್ನೆ, ನಾಳೆ, ಈಗ) ಇವನ್ನೆಲ್ಲ ಸರ್ವನಾಮಗಳ ಗುಂಪಿನಲ್ಲಿರಿಸುವ ರೂಡಿಯಿಲ್ಲ.

Eke →

10.2 ಆಡುಗ ಪದಗಳು

ಮೂಲದ್ರಾವಿಡದಲ್ಲಿ ವಾಕ್ಯದ ಆಡುಗನನ್ನು ಸೂಚಿಸುವ *ಯಾನ್, ಕೇಳುಗ ನನ್ನು ಸೂಚಿಸುವ *ಞೀನ್ ಮತ್ತು ಅವರಿಬ್ಬರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಲ್ಲೊಬ್ಬನನ್ನು ಸೂಚಿಸುವ *ತಾನ್ ಎಂಬುದಾಗಿ ಮೂರು ಆಡುಗ ಪದಗಳು ಬಳಕೆಯಲ್ಲಿದ್ದಿರಬೇಕು.

ಹಲವಚನದಲ್ಲಿ ಈ ಮೂರು ಪದಗಳಿಗೆ ಮೂರರ ಬದಲು ನಾಲ್ಕು ರೂಪಗಳಿದ್ದುವು. ಇದಕ್ಕೆ ಕಾರಣವೇನೆಂದರೆ, ಈ ಪದಗಳ ಹಲವಚನ ರೂಪಗಳು ನಾಮಪದಗಳ ಹಾಗೆ ಒಬ್ಬನಿಗಿಂತ ಜಾಸ್ತಿ ಆಡುಗ, ಕೇಳುಗ ಮತ್ತು ಇತರರನ್ನು ಸೂಚಿಸುವ ಬದಲು, ಆ ವ್ಯಕ್ತಿಗಳ ಬೇರೆ ಬೇರೆ ‘ಕೂಡಿಕೆ’ಗಳನ್ನು ಸೂಚಿಸಬೇಕಾಗಿದೆ. ಹಾಗಾಗಿ, ನಿಜಕ್ಕೂ ಅವನ್ನು ‘ಹಲವಚನ’ದ ಕೂಡಿಕೆಯ ಕರೆಯುವುದಕ್ಕಿಂತಲೂ ರೂಪಗಳೆಂದು ರೂಪಗಳೆಂದು ಕರೆಯುವುದೇ ಒಳ್ಳೆಯದು.

(1) ಆಡುಗ ಮತ್ತು ಇತರ:
(2) ಆಡುಗ ಮತ್ತು ಕೇಳುಗ: (3) ಕೇಳುಗ ಮತ್ತು ಇತರ: (4) ಇತರ ಮತ್ತು ಇತರ:

*ಯಾಮ್ *ಞಾಮ್ *ಞೀಮ್ *ತಾಮ್

ಮೇಲೆ ಕೊಟ್ಟಿರುವ ಪದಗಳಲ್ಲಿ ಆಡುಗ ಮತ್ತು ಕೇಳುಗರನ್ನು ಒಟ್ಟಾಗಿ ಸೂಚಿಸುವ *ಞಾಮ್ ಎಂಬುದು ಎರಡು ಪದಗಳ ಜೋಡಣೆಯಿಂದ ಸಿದ್ದವಾಗಿದೆಯುಂದು ಕಲ್ಪಿಸಲಾಗಿದೆ. ಆಡುಗನನ್ನು ಮಾತ್ರವೇ ಸೂಚಿಸುವ *ಯಾನ್ ಮತ್ತು ಕೇಳುಗನನ್ನು ಮಾತ್ರವೇ ಸೂಚಿಸುವ *ಞೀನ್ ಎಂಬ ಎರಡು ಪದಗಳು ಅದರಲ್ಲಿ ಒಟ್ಟು ಸೇರಿವೆ.

ಎಂದರೆ, ಆಡುಗನನ್ನು ಸೂಚಿಸುವ *ಯಾನ್ ಪದದ ಮೊದಲನೆಯ ವ್ಯಂಜನಕ್ಕೆ (ಯಕಾರಕ್ಕೆ) ಬದಲಾಗಿ ಕೇಳುಗನನ್ನು ಸೂಚಿಸುವ *ಞೀನ್ ಪದದ ಮೊದಲನೆಯ ವ್ಯಂಜನವನ್ನು (ಞಕಾರವನ್ನು) ಬಳಸಿ ಮತ್ತು

ಕೂಡಿಕೆಯ ಅರ್ತವನ್ನು ಕೊಡುವುದಕ್ಕಾಗಿ ಆ ಪದದ ಕೊನೆಯ ನಕಾರವನ್ನು ಮಕಾರವಾಗಿ ಬದಲಾಯಿಸಿ *ಞಾಮ್ ಎಂಬುದನ್ನು ತಯಾರಿಸಲಾಗಿದೆ.

Eke →

10.2.1 ವ್ಯವಸ್ತೆಯಲ್ಲಿ ಬದಲಾವಣೆ

ಮೂಲದ್ರಾವಿಡದ ಈ ಆಡುಗ ಪದಗಳ ವ್ಯವಸ್ತೆ ಹಳೆಗನ್ನಡದಲ್ಲಿ ಉಳಿದು ಕೊಂಡಿದೆ; ಆದರೆ ಹೊಸಗನ್ನಡದ ಹೆಚ್ಚಿನ ಒಳನುಡಿಗಳಲ್ಲಿ (ಮತ್ತು ಬರಹ ಕನ್ನಡದಲ್ಲಿ) ಬಹಳ ಮಟ್ಟಿಗೆ ಬದಲಾಗಿದೆ.

ಉದಾಹರಣೆಗಾಗಿ, ಪಂಪಬಾರತದಲ್ಲಿ ಆಡುಗ, ಕೇಳುಗ ಮತ್ತು ಇತರ ಎಂಬ ಮೂರು ರೀತಿಯ ವ್ಯಕ್ತಿಗಳನ್ನು ಸೂಚಿಸುವುದಕ್ಕಾಗಿ ಆನ್, ನೀನ್ ಮತ್ತು ತಾನ್ ಎಂಬ ಮೂರು ಪದಗಳು ಬಳಕೆಯಲ್ಲಿವೆ; ಇವುಗಳಲ್ಲಿ ಮೂಲ ದ್ರಾವಿಡ ಪದಗಳ ಸುರುವಿನ ಯಕಾರ ಬಿದ್ದುಹೋದುದರಿಂದಾಗಿ *ಯಾನ್ ಮತ್ತು ಞಕಾರ ನಕಾರವಾದುದರಿಂದಾಗಿ *ಞೀನ್ ಎಂಬುದು ನೀನ್ ಆಗಿದೆ.

ಎಂಬುದು

ಈ ಪದಗಳಿಗೆ ಪಂಪಬಾರತದಲ್ಲಿ ಆಮ್, ನಾಮ್, ನೀಮ್ ಮತ್ತು ತಾಮ್ ಎಂಬ ನಾಲ್ಕು ಕೂಡಿಕೆಯ (ಹಲವಚನದ) ರೂಪಗಳಿವೆ ಮತ್ತು ಇವಕ್ಕೆ ಮೂಲದ್ರಾವಿಡದಲ್ಲಿದ್ದಂತಹದೇ ಅರ್ತವ್ಯತ್ಯಾಸಗಳನ್ನು ಸೂಚಿಸುವ ಬಳಕೆಯೂ ಇದೆ (ಬಟ್ 2005:77-8 ನೋಡಿ).

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಬಾರತದ ವಾಕ್ಯದಲ್ಲಿ ಆಮ್ ಮತ್ತು ನಾಮ್ ಎಂಬ ಎರಡು ಆಡುಗ ಪದಗಳೂ ಬಂದಿದ್ದು, ಮೊದಲನೆಯ ಎಮ್ಮಮ್ ಎಂಬುದು ಅವುಗಳಲ್ಲಿ ಕೇಳುಗನನ್ನು ಹೊರತುಪಡಿಸಿ ಆಡುಗನನ್ನು ಸೂಚಿಸುತ್ತದೆ; ಆದರೆ, ಎರಡನೆಯ ನಾಮ್ ಎಂಬುದು ಆಡುಗನೊಂದಿಗೆ ಕೇಳುಗನನ್ನು (ಮತ್ತು ಇತರರನ್ನೂ) ಸೇರಿಸಿ ಸೂಚಿಸುತ್ತದೆ.

ಮಾತ್ರವೇ

ನಾಮೆಲ್ಲಂ ಒಂದೆ ಗರುಡಿಯೊಳ್ ಓದಿದ ಮಾನಸರೆವು;
ಎಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸವೇಡ (9.48 ವಚನ) ‘ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಶ್ಯರಾಗಿದ್ದೇವೆ; ನೀವು

ನಮ್ಮನ್ನು ಸುಮ್ಮಗೆ ಆಯಾಸಪಡಿಸಬೇಡಿ’’

ವಡ್ಡಾರಾದನೆಯಲ್ಲೂ, ಕೇಳುಗನನ್ನು ಹೊರತುಪಡಿಸಿ ಆಡುಗ ಮತ್ತು ಇತರರನ್ನು ಸೂಚಿಸಲು ಆಮ್, ಎಮ್ಮನ್, ಎಮಗೆ ಮತ್ತು ಎಮ್ಮ ಪದಗಳ ಬಳಕೆಯಾಗುತ್ತದೆ ಮತ್ತು ಆಡುಗನೊಂದಿಗೆ ಕೇಳುಗನನ್ನೂ ಸೇರಿಸಿ ಹೇಳಬೇಕಿದ್ದಲ್ಲಿ ನಾಮ್, ನಮ್ಮನ್, ಮತ್ತು ನಮಗೆ ಪದಗಳ ಬಳಕೆಯಾಗುತ್ತದೆ (ಗಾಯ್ 1955 ನೋಡಿ).

(1) ಹಳೆಗನ್ನಡ ಉಳಿಸಿಕೊಂಡಿದ್ದ ಈ ಮೂಲದ್ರಾವಿಡದ ಅರ್ತ (ಮತ್ತು ಪದರೂಪ) ವ್ಯತ್ಯಾಸ ಕರಾವಳಿಯ ಕನ್ನಡ ಒಳನುಡಿಗಳಲ್ಲಿ ಇವತ್ತಿಗೂ ಉಳಿದುಕೊಂಡಿದೆ. ಉದಾಹರಣೆಗಾಗಿ, ಕರಾವಳಿಯ ಹವ್ಯಕ ಕನ್ನಡದಲ್ಲಿ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ಆನು ಮತ್ತು ನೀನು ಪದಗಳು ಬಳಕೆಯಾಗುತ್ತವೆ.

ಇದಲ್ಲದೆ, ಮೇಲಿನ ಎರಡು ಪದಗಳಿಗೆ ಹವ್ಯಕ ಕನ್ನಡದಲ್ಲಿ ಎಂಗೊ, ನಾವು ಮತ್ತು ನಿಂಗೊ ಎಂಬುದಾಗಿ ಮೂರು ಕೂಡಿಕೆಯ ರೂಪಗಳಿವೆ ಮತ್ತು ಇವು ಹಳೆಗನ್ನಡದ ಆಮ್, ನಾಮ್ ಮತ್ತು ನೀಮ್ ಎಂಬವುಗಳ ಹಾಗೆ, ಮೂರು ರೀತಿಯ ಕೂಡಿಕೆಗಳ ಅರ್ತಗಳಲ್ಲೇ ಬಳಕೆಯಾಗುತ್ತವೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡದ ಎರಡು ವಾಕ್ಯಗಳನ್ನು ಅವುಗಳ ಕೆಳಗೆ ಕೊಟ್ಟಿರುವ ಬರಹ ಕನ್ನಡದ ವಾಕ್ಯಗಳೊಡನೆ ಹೋಲಿಸಿ ನೋಡಬಹುದು.

(2ಕ) ಎಂಗೊ ಪೇಟೆಗೆ ಹೋವುತ್ತೆಯೊ ᵒ ‘ನಾವು ಪೇಟೆಗೆ ಹೋಗುತ್ತೇವೆ’’

(2ಚ) ನಾವು ಪೇಟೆಗೆ ಹೋಪೊ ᵒ ‘ನಾವು ಪೇಟೆಗೆ ಹೋಗೋಣ’

(2ಕ-ಚ) ವಾಕ್ಯಗಳೆರಡರಲ್ಲೂ ಬರಹ ಕನ್ನಡದಲ್ಲಿ ನಾವು ಎಂಬುದೇ ಬಳಕೆಯಾಗಿದೆ; ಆದರೆ ಅದಕ್ಕೆ (2ಕ)ದಲ್ಲಿ ಆಡುಗನೊಂದಿಗೆ ಕೇಳುಗನನ್ನು

ಸೇರಿಸದಿರುವ ಅರ್ತವಿದೆ ಮತ್ತು (2ಚ)ದಲ್ಲಿ ಕೇಳುಗನನ್ನು ಸೇರಿಸಿರುವ ಅರ್ತವಿದೆ ಎಂಬುದು ಈ ವಾಕ್ಯಗಳ ಕೊನೆಯಲ್ಲಿ ಬಂದಿರುವ ಕ್ರಿಯಾರೂಪ ಗಳಿಂದ (ಹೋಗುತ್ತೇವೆ ಮತ್ತು ಹೋಗೋಣ ಎಂಬವುಗಳಿಂದ) ಸ್ಪಶ್ಟ ವಾಗುತ್ತದೆ.

ಹವ್ಯಕ ಕನ್ನಡದಲ್ಲಿ ಈ ವ್ಯತ್ಯಾಸವನ್ನು ಸೂಚಿಸಲು ಎಂಗೊ ಮತ್ತು ನಾವು ಎಂಬ ಎರಡು ಬೇರೆ ಬೇರೆ ಪದಗಳನ್ನು (ಮೇಲೆ (2ಕ) ಮತ್ತು (2ಚ) ವಾಕ್ಯಗಳಲ್ಲಿ) ಬಳಸಲಾಗಿದೆ; ಆದರೆ ಇವತ್ತಿನ ಬರಹ ಕನ್ನಡದಲ್ಲಿ ಇವೆರಡು ಸಂದರ್ಬಗಳಲ್ಲೂ ನಾವು ಎಂಬುದನ್ನೇ ಬಳಸಲಾಗುತ್ತದೆ.

ಹಳೆಗನ್ನಡದ ಆಮ್ ಎಂಬುದು ಹವ್ಯಕ ಕನ್ನಡದಲ್ಲಿ ಎಂಗೊ ಎಂಬ ರೂಪಕ್ಕೆ, ನಾಮ್ ಎಂಬುದು ನಾವು ಎಂಬ ರೂಪಕ್ಕೆ ಮತ್ತು ನೀಮ್ ಎಂಬುದು ನಿಂಗೊ ಎಂಬ ರೂಪಕ್ಕೆ ಬದಲಾಗಿದೆ. ಇಲ್ಲಿ ಆಮ್ ಎಂಬುದರ ಆ (ಉದ್ದ ಸ್ವರ) ಗಿಡ್ಡ ಎಕಾರವಾಗಿದೆ, ನಾಮ್ ಎಂಬುದರ ಮಕಾರ ವಕಾರವಾಗಿ ಅದರ ಮುಂದೆ ಉಕಾರ ಸೇರಿದೆ ಮತ್ತು ಆಮ್ ಮತ್ತು ನೀಮ್ ಎಂಬವುಗಳಿಗೆ ಹಲವಚನದ ಗೊ ಒಟ್ಟು ಹೆಚ್ಚಾಗಿ ಸೇರಿಕೊಂಡಿದೆ.

(2) ಬಡಗ ಕನ್ನಡದಲ್ಲೂ ಆಡುಗ ಪದಗಳಿಗೆ ಮೂರು ಕೂಡಿಕೆಯ ರೂಪಗಳಿದ್ದು ಅದು ಹಳೆಗನ್ನಡದ (ಮತ್ತು ಮೂಲದ್ರಾವಿಡದ) ವ್ಯವಸ್ತೆ ಯನ್ನು ಉಳಿಸಿಕೊಂಡಿದೆ. ಅದರಲ್ಲಿ ಎಂಗ ‘ನಾನು ಮತ್ತು ಅವನು’, ನಂಗ (ಇಲ್ಲವೇ ಅಂಗ) ‘ನಾನು ಮತ್ತು ನೀನು’ ಮತ್ತು ನಿಂಗ ‘ನೀನು ಮತ್ತು ಅವನು’ ಎಂಬ ಮೂರು ಕೂಡಿಕೆಯ ರೂಪಗಳು ಬಳಕೆಯಲ್ಲಿವೆ.

(3) ಹಳೆಗನ್ನಡದಲ್ಲಿದ್ದ ಆಮ್ ಪದದ ಬಳಕೆ ನಡುಗನ್ನಡದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಅದರ ಜಾಗದಲ್ಲಿ ನಾಮ್ ಎಂಬುದರ ಬಳಕೆ ಜಾಸ್ತಿಯಾಗುತ್ತಾ ಹೋಗುತ್ತದೆ. ಇದಕ್ಕೆ ಮೊದಲೇ ಅವುಗಳ ನಡುವಿದ್ದ ಅರ್ತವ್ಯತ್ಯಾಸವೂ ಇಲ್ಲವಾಗಿರಬೇಕು. ಇವತ್ತು ಬರಹ ಕನ್ನಡದಲ್ಲಿ ಮತ್ತು ಒಳನಾಡಿನ ಒಳನುಡಿಗಳಲ್ಲಿ ಇವೆರಡರ ಬದಲು

ನಾಮ್ ಎಂಬ ಉಳಿದುಕೊಂಡಿದೆ.

ಪದ ಮಾತ್ರ

(ನಾವು ಎಂಬ

ರೂಪದಲ್ಲಿ)

ಇದಲ್ಲದೆ, ಆಡುಗನನ್ನು ಸೂಚಿಸುವ ಆನ್ ಎಂಬುದರ ಮೊದಲಿಗೆ ನಕಾರ ಸೇರಿಕೊಂಡುದರಿಂದಾಗಿ ನಾನು ಎಂಬ ಹೊಸ ರೂಪವೊಂದು ಬಳಕೆಗೆ ಬಂದಿದೆ.

ಕೇಳುಗರನ್ನು

Eke →

10.2.2 ಮೂರನೆಯ ವ್ಯಕ್ತಿ

ಮೂರನೆಯ ಮತ್ತು ವ್ಯಕ್ತಿಯೊಬ್ಬನನ್ನು ಮೂಲದ್ರಾವಿಡದಲ್ಲಿ ಸೂಚಿಸುವುದಕ್ಕಾಗಿ ಬಳಕೆಯಾಗುತ್ತಿದ್ದ *ತಾನ್ ಮತ್ತು *ತಾಮ್ ಪದಗಳು ಹಳೆಗನ್ನಡದಲ್ಲಿ ಬದಲಾಗದೆ ಉಳಿದಿವೆ.

ಹೊರತುಪಡಿಸಿ

ಇದಲ್ಲದೆ, ಮೂಲದ್ರಾವಿಡದಲ್ಲಿದ್ದ ಹಾಗೆಯೇ ತಾನ್ ಎಂಬುದಕ್ಕೆ ಆಡುಗ ಮತ್ತು ಕೇಳುಗರಿಂದ ಬೇರೆಯಾಗಿರುವ ಮೂರನೆಯ (ಇತರ) ವ್ಯಕ್ತಿಯನ್ನು ಸೂಚಿಸುವ ಮತ್ತು ತಾಮ್ ಎಂಬುದಕ್ಕೆ ಅಂತಹ ವ್ಯಕ್ತಿಗಳ ಕೂಡಿಕೆಯನ್ನು ಸೂಚಿಸುವ ಅರ್ತವೂ ಹಳೆಗನ್ನಡದಲ್ಲಿತ್ತು.

(1) ಇವತ್ತಿನ ಬರಹ ಕನ್ನಡದಲ್ಲಿ ಈ ಪದಗಳು ತಾನು ಮತ್ತು ತಾವು ಎಂಬ ಪದಗಳಿಗೆ ರೂಪದಲ್ಲಿ ಬಳಕೆಯಾಗುತ್ತವೆ. ಈ ‘ಆತ್ಮಾರ್ತ’ವಿದೆಯುಂಬ ಕನ್ನಡ ವಯ್ಯಾಕರಣಿಗಳ ಹೇಳಿಕೆಗೆ ಪಾಶ್ಚಾತ್ಯ ವ್ಯಾಕರಣಗಳ ಪ್ರಬಾವವೇ ಕಾರಣವಿರಬೇಕು. ಯಾಕೆಂದರೆ, ನಿಜಕ್ಕೂ ‘ಆತ್ಮಾರ್ತ’ದಲ್ಲಿ ಇವತ್ತಿನ ಬರಹ ಬಳಕೆಯಾಗುವುದಿಲ್ಲ.

ಕನ್ನಡದಲ್ಲಿ ಈ

ಪದಗಳು

ಬರಹ ಕನ್ನಡದಲ್ಲಿ ‘ಆತ್ಮಾರ್ತ’ವನ್ನು ಎಂದರೆ ‘ಒಂದು ಕೆಲಸವನ್ನು ಆಗುಗ ಇಲ್ಲವೇ ಮಾಡುಗನು ತನ್ನ ಹಿತಕ್ಕಾಗಿ (ಇಲ್ಲವೇ ಬೇರೆಯವರ ಸಹಾಯವಿಲ್ಲದೆ) ನಡೆಸಿದ್ದಾನೆ’ ಎಂಬ ಅರ್ತವನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಕೊಳ್ಳು ಎಂಬುದನ್ನು ಬಳಸಲಾಗುತ್ತದೆ.

(3ಕ) ರಾಜು ಮೂರು ಪುಟ ಬರೆದ (3ಚ) ರಾಜು ಮೂರು ಪುಟ ಬರೆದುಕೊಂಡ

(3ಕ) ವಾಕ್ಯದ ಪ್ರಕಾರ, ಮೂರು ಪುಟ ಬರೆಯುವ ಕೆಲಸವನ್ನು ರಾಜು ತನ್ನ ಹಿತಕ್ಕಾಗಿ ಮಾಡಿರಬಹುದು, ಇಲ್ಲವೇ ಬೇರೊಬ್ಬರಿಗೆ ಬೇಕಾಗಿಯೂ ಮಾಡಿರಬಹುದು; ಆದರೆ, (3ಚ) ವಾಕ್ಯದ ಪ್ರಕಾರ ಆ ಕೆಲಸವನ್ನು ಆತ ತನ್ನ ಹಿತಕ್ಕಾಗಿ ವಾಕ್ಯದಲ್ಲಿ ಮಾತ್ರವೇ ‘ಆತ್ಮಾರ್ತ’ವಿದೆ; ಆದರೆ ತಾನು ಪದ ಬಳಕೆಯಾಗಿಲ್ಲ.

ಮಾಡಿದ್ದಾನೆ.

(2) ತಾನು ಮತ್ತು ತಾವು ಪದಗಳನ್ನು ಅವನು, ಅವಳು ಮೊದಲಾದ ತೋರುಗಪದಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಹೊಸಗನ್ನಡ ವಾಕ್ಯಗಳಲ್ಲಿ ಅವುಗಳಿಗಿರುವ ಕೆಲಸವೇನು ಎಂಬ ವಿಶಯ ಸ್ಪಶ್ಟವಾಗುತ್ತದೆ.

ತಾನು ಎಂಬುದು ಒಂದು ವಾಕ್ಯದಲ್ಲಿ ಹೆಸರಿಸಿರುವ ವ್ಯಕ್ತಿಯನ್ನು ಮಾತ್ರವೇ ಸೂಚಿಸಬಲ್ಲುದು; ಆದರೆ ಅವನು ಎಂಬುದು ಯಾವ ವ್ಯಕ್ತಿಯನ್ನೂ ಸೂಚಿಸಬಲ್ಲುದು.

(4ಕ) ರಾಜು ಸೀತೆಯ ಹತ್ತಿರ ಅವನ ಅಣ್ಣನನ್ನು ದೂರುತ್ತಿದ್ದಾನೆ (4ಚ) ರಾಜು ಸೀತೆಯ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದಾನೆ

(4ಕ) ವಾಕ್ಯದಲ್ಲಿ ಬಂದಿರುವ ಅವನ ಪದ ರಾಜುವನ್ನಾಗಲಿ ಇಲ್ಲವೇ ಬೇರೆ ಯಾರೋ ಒಬ್ಬ (ವಾಕ್ಯದಲ್ಲಿ ಹೆಸರಿಸದಿರುವ) ವ್ಯಕ್ತಿಯನ್ನಾಗಲಿ ಸೂಚಿಸಬಲ್ಲುದು; ಆದರೆ (6ಚ) ವಾಕ್ಯದಲ್ಲಿ ಬಂದಿರುವ ತನ್ನ ಪದ ರಾಜುವನ್ನು ಮಾತ್ರ ಸೂಚಿಸಬಲ್ಲುದು.

ಇದಲ್ಲದೆ, ತಾನು ಪದ ವಾಕ್ಯದ ಆಡುಗ ಇಲ್ಲವೇ ಕೇಳುಗರನ್ನು

ಸೂಚಿಸಲಾರದು. (4ಟ) ರಾಜು ನನ್ನ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದಾನೆ

(4ಟ) ವಾಕ್ಯದಲ್ಲಿ ಬಂದಿರುವ ತನ್ನ ಪದ ರಾಜುವನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ, ಆ ವಾಕ್ಯದ ಆಡುಗನನ್ನು ಸೂಚಿಸಲಾರದು. ತಾನು ಎಂಬುದಕ್ಕೆ ವಾಕ್ಯದ ಆಡುಗ ಮತ್ತು ಕೇಳುಗರೊಂದಿಗೆ ಸಂಬಂದವಿದೆ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ. (ಜಾಸ್ತಿ ವಿವರಗಳಿಗೆ ಬಟ್ 2003: 60 ನೋಡಿ).

(3) ಕನ್ನಡದ ಹೆಚ್ಚಿನ ಒಳನುಡಿಗಳಲ್ಲೂ ಮೂಲದ್ರಾವಿಡದ ಈ ಎರಡು ಪದರೂಪಗಳು ಉಳಿದುಕೊಂಡಿವೆ. ಅವುಗಳ ಅರ್ತದಲ್ಲಿ ಮಾತ್ರ, ಮೇಲೆ ಸೂಚಿಸಿದ ಹಾಗೆ, ಬದಲಾವಣೆಯಾಗಿದೆ. ಆದರೆ, ಕರಾವಳಿಯ ಕೆಲವು ಒಳನುಡಿಗಳಲ್ಲಿ ಈ ಪದರೂಪಗಳು ಬಳಕೆಯಿಂದ ಬಿದ್ದುಹೋಗಿವೆ. ಉದಾಹರಣೆಗಾಗಿ, ತೆಂಕು ಹವ್ಯಕದಲ್ಲಿ ತಾನು ಮತ್ತು ತಾವು ಪದಗಳು ಬಳಕೆಯಲ್ಲಿಲ್ಲ. ಅವುಗಳ ಬದಲು, ಅವನು, ಅವಳು ಮೊದಲಾದ ತೋರುಗ ಪದಗಳೇ ಬಳಕೆಯಾಗುತ್ತವೆ.

ಬಡಗ ಕನ್ನಡದಲ್ಲಿ ಮಾತ್ರ, ತಾನು ಮತ್ತು ಅದರ ಹಲವಚನದ ರೂಪವಾದ ತಂಗ ಪದಗಳು ‘ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಮೂರನೆಯ ವ್ಯಕ್ತಿ’ ಎಂಬ ಅರ್ತದಲ್ಲೇ ಬಳಕೆಯಾಗುತ್ತಿವೆ. ಆದರೆ, ಇವನ್ನು ಈ ಅರ್ತದಲ್ಲಿ ಈಗ ಮುದುಕರು ಮಾತ್ರ ಬಳಸುತ್ತಿದ್ದಾರೆ; ಚಿಕ್ಕವರ ಮಾತಿನಲ್ಲಿ ಅವು ಬರಹ ಕನ್ನಡದಲ್ಲಾದ ಹಾಗೆ ಬದಲಾಗಿವೆ (ಬಾಲಕ್ರುಶ್ಣನ್ 1999).

Eke →

10.2.3 ಆಡುಗ ಪದಗಳು ಮತ್ತು ನಾಮಪದಗಳು

ನಾಮಪದಗಳ ಹಾಗೆ ಆಡುಗ ಪದಗಳು ವಿಬಕ್ತಿ ಒಟ್ಟುಗಳೊಂದಿಗೆ ಬರಬಲ್ಲುವಾಗಿದ್ದುವು. ಈ ಒಟ್ಟುಗಳು ಸೇರಿದಾಗ ಎಲ್ಲಾ ಆಡುಗ ಪದ ಮತ್ತು ಪದರೂಪಗಳಲ್ಲೂ ಮೊದಲನೆಯ ಸ್ವರ ಉದ್ದ ಇದ್ದುದು ಗಿಡ್ಡ ಸ್ವರವಾಗಿ ಬದಲಾಗುತ್ತದೆಯುಂದು ಮೂಲದ್ರಾವಿಡಕ್ಕೇನೇ ಕಲ್ಪಿಸಲಾಗಿದೆ (ಯಾನ್> *ಯನ್, *ನೀನ್>ನಿಮ್, ತಾನ್>ತಮ್, *ಯಾಮ್>

ಯಮ್, *ಞಾಮ್>ಞಮ್, ನೀಮ್>ನಿಮ್ ಮತ್ತು *ತಾಮ್> ತಮ್).

ಇಂತಹದೇ

ಬದಲಾವಣೆ

ಹಳೆಗನ್ನಡದಲ್ಲಿ

(ಮತ್ತು ಹೊಸಗನ್ನಡದಲ್ಲೂ) ಕಾಣಿಸುತ್ತದೆ (ನೀನ್, ನಿನಗೆ; ನೀಮ್, ನಿಮಗೆ; ತಾನ್, ತನಗೆ; ತಾಮ್, ತಮಗೆ). ಇದಲ್ಲದೆ, ಮೂಲದ್ರಾವಿಡದ *ಯನ್ ಮತ್ತು *ಯಮ್ ಎಂಬವುಗಳು ಹಳೆಗನ್ನಡದಲ್ಲಿ ಎನ್ ಮತ್ತು ಎಮ್ ಎಂಬುದಾಗಿ ಬದಲಾಗಿವೆ (ಆನ್, ಎನಗೆ; ಆಮ್, ಎಮಗೆ).

ಸ್ವರದಿಂದ ಸುರುವಾಗುವ ಆಗುಗ, ಸುರು ಮತ್ತು ಜಾಗ ಒಟ್ಟುಗಳು ಸೇರಿದಾಗ ಮೇಲಿನ ಎಲ್ಲಾ ಪದಗಳ ಎರಡನೆಯ ವ್ಯಂಜನ (ನಕಾರ ಇಲ್ಲವೇ ಮಕಾರ) ಇಮ್ಮಡಿಯಾಗುತ್ತದೆ (ಎನ್ನ, ಎಮ್ಮ, ನಿನ್ನಿಂದ, ನಿಮ್ಮಿಂದ).

ವಿಬಕ್ತಿ ಒಟ್ಟುಗಳೊಂದಿಗೆ ಬಳಕೆಯಾಗುವ ವಿಶಯದಲ್ಲಿ ಆಡುಗ ಪದಗಳು ನಾಮಪದಗಳನ್ನು ಹೋಲುತ್ತಿವೆಯಾದರೂ ಬೇರೆ ಹಲವು ವಿಶಯಗಳಲ್ಲಿ ಅವು ನಾಮಪದಗಳಿಂದ ಬೇರಾಗಿವೆ. ಉದಾಹರಣೆಗಾಗಿ, ಮೇಲೆ ಸೂಚಿಸಿದ ಹಾಗೆ, ಅವಕ್ಕೆ ಹಲವಚನ ರೂಪಗಳಿರುವ ಬದಲು ಕೂಡಿಕೆಯ ರೂಪಗಳಿವೆ, ಮತ್ತು ಈ ಕಾರಣಕ್ಕಾಗಿ ಮೂಲದ್ರಾವಿಡದಲ್ಲಿ ಮತ್ತು ಹಳೆಗನ್ನಡದಲ್ಲಿ ಮೂರು ಆಡುಗ ಪದಗಳಿಗೆ ನಾಲ್ಕು ಕೂಡಿಕೆಯ ರೂಪಗಳಿವೆ (ಆಮ್, ನಾಮ್, ನೀಮ್, ತಾಮ್).

ಗುಣಗಳನ್ನು

ನಾಮಪದಗಳೊಂದಿಗೆ ಅವುಗಳ

ಸೂಚಿಸಬಲ್ಲ ಪದಗಳನ್ನು (ಗುಣಪದಗಳನ್ನು) ಬಳಸಬಲ್ಲೆವು; ಆದರೆ ಆಡುಗ ಪದಗಳೊಂದಿಗೆ ಅಂತಹ ಪದಗಳನ್ನು ಬಳಸಲಾರೆವು. ದೊಡ್ಡ ಪುಸ್ತಕ ಎನ್ನುವ ಹಾಗೆ *ದೊಡ್ಡ ನಾನು ಇಲ್ಲವೇ *ದೊಡ್ಡ ನೀನು ಎಂದು ಹೇಳಲು ಸಾದ್ಯವಾಗದು (ಹೆಚ್ಚಿನ ವಿವರಗಳಿಗೆ ಬಟ್ 2003 ನೋಡಿ).

Eke →

10.3 ತೋರುಗ ಪದಗಳು

ಮೂಲದ್ರಾವಿಡದಲ್ಲಿ ಪದಗಳು ಬಳಕೆಯಲ್ಲಿದ್ದುವು. ಇವುಗಳಲ್ಲಿ ಮೂರು ಆಡುಗನ ಜಾಗಕ್ಕೆ ಸಂಬಂದಿಸಿದ

ತೋರುಗ

ನಾಲ್ಕು

ಹಾಗೆ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸುತ್ತಿದ್ದುವು ಮತ್ತು ನಾಲ್ಕನೆಯದು ಅವು ತಿಳಿದಿಲ್ಲವೆಂಬುದನ್ನು ಸೂಚಿಸುತ್ತಿತ್ತು.

ಈ ಪದಗಳ ಒಳರಚನೆಯಲ್ಲಿ ಎರಡು ಅಂಗಗಳಿರುತ್ತವೆ; ಅವುಗಳಲ್ಲಿ ಮೊದಲನೆಯದು ಪದಗಳ ಕೆಲಸವೇನೆಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವು ಎಂತಹದರ (ವ್ಯಕ್ತಿ, ವಸ್ತು, ಜಾಗ, ಸಮಯ, ಪ್ರಮಾಣ, ನಮೂನೆ ಮೊದಲಾದವುಗಳಲ್ಲಿ ಯಾವುದರ) ಕುರಿತಾಗಿ ಈ ಕೆಲಸವನ್ನು ನಡೆಸುತ್ತವೆ ಎಂಬುದನ್ನು ತಿಳಿಸುತ್ತದೆ.

ಉದಾಹರಣೆಗಾಗಿ, ಕನ್ನಡದ ಅಲ್ಲಿ ಪದದ ಮೊದಲನೆಯ ಅಂಗವಾದ ಅ ಎಂಬುದು ‘ಆ ಪದ ಆಡುಗನಿಗಿಂತ ಸ್ವಲ್ಪ ದೂರದಲ್ಲಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸಲು ಬಳಕೆಯಾಗುತ್ತದೆ’ ಎಂಬುದನ್ನು ತಿಳಿಸುತ್ತದೆ (ಈ ವಿಶಯದಲ್ಲಿ ಅದು ಇಲ್ಲಿ ಮತ್ತು ಎಲ್ಲಿ ಎಂಬವುಗಳಿಂದ ಬೇರಾಗಿದೆ; ಇಲ್ಲಿ ಎಂಬುದು ಆಡುಗನ ಹತ್ತಿರ ಇರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ತೋರಿಸುತ್ತದೆ ಮತ್ತು ಎಲ್ಲಿ ಎಂಬುದು ಆಡುಗನಿಗೆ ತಿಳಿಯದಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಜಾಗವನ್ನು ಸೂಚಿಸುತ್ತದೆ).

ಅಲ್ಲಿ ಪದದ ಎರಡನೆಯ ಅಂಗವಾದ ಲ್ಲಿ ಎಂಬುದು ‘ಆ ಪದ ಒಂದು ಜಾಗದ ಕುರಿತಾಗಿ ಈ ಕೆಲಸವನ್ನು ನಡೆಸುತ್ತದೆ’ ಎಂಬುದನ್ನು ತಿಳಿಸುತ್ತದೆ (ಈ ವಿಶಯದಲ್ಲಿ ಅದು ಅಶ್ಟು, ಅಂದು, ಅತ್ತ, ಆಗ ಮೊದಲಾದವುಗಳಿಂದ ಬೇರಾಗಿದೆ; ಅಶ್ಟು ಎಂಬುದರ ಎರಡನೆಯ ಅಂಗವಾದ ಶ್ಟು ಎಂಬುದು ಪ್ರಮಾಣವನ್ನು ಸೂಚಿಸುತ್ತದೆ; ಅಂದು ಎಂಬುದರ ಎರಡನೆಯ ಅಂಗವಾದ ಂದು ಎಂಬುದು ಸಮಯವನ್ನು ಸೂಚಿಸುತ್ತದೆ; ಅತ್ತ ಎಂಬುದರ ಎರಡನೆಯ ಅಂಗವಾದ ತ್ತ ಎಂಬುದು ದಿಕ್ಕನ್ನು ಸೂಚಿಸುತ್ತದೆ).

ಮೂಲದ್ರಾವಿಡದಲ್ಲಿ ಈ ಪದಗಳ ಮೊದಲನೆಯ ಅಂಗವಾಗಿ *ಆ, ಬೇರುಗಳು

ಮತ್ತು

ನಾಲ್ಕು

ಬರಬಲ್ಲುವಾಗಿದ್ದುವು; ಹಳೆಗನ್ನಡದ ತೋರುಗ ಪದಗಳಲ್ಲಿ ಈ ನಾಲ್ಕು ಬೇರುಗಳೂ ಉಳಿದುಕೊಂಡಿವೆ.

ಆಡುಗನಿಂದ ದೂರ ಆಡುಗನ ಹತ್ತಿರ ಆ ಮತ್ತು ಈಗಳ ನಡುವೆ ತಿಳಿಯದುದು

ತೋರುಗ

ಮೂಲದ್ರಾವಿಡದ

ಪದಗಳಲ್ಲಿ ಈ

ನಾಲ್ಕು ಬೇರುಗಳೊಂದಿಗೆ ಎರಡನೆಯ ಅಂಗವಾಗಿ ಹಲವು ಬೇರುಗಳು ಇಲ್ಲವೇ ಬಳಸಿ ಒಟ್ಟುಗಳು ತಯಾರಿಸಲಾಗಿರುವ ಪದಗಳನ್ನು, ಕೆಳಗೆ ಕೊಟ್ಟಿರುವ ಹಾಗೆ, ಒಂದು ಕೋಶ್ಟಕದಲ್ಲಿ ಪಟ್ಟಿ ಮಾಡಬಹುದು.

ಬರಬಲ್ಲುವಾಗಿದ್ದುವು.

ಅವುಗಳನ್ನು

(1) ನಾಮಪದಗಳು ದೂರದವು ಅವನ್ ಅವಳ್

ನಡುವಿನವು ಉವನ್ ಉವಳ್

ಹತ್ತಿರದವು ಇವನ್ ಇವಳ್ ಈತನ್ ಊತನ್

ತಿಳಿಯದವು ಆವನ್ ಆವಳ್ ಆವುದು ಆವುವು

(2) ನಾಮ-ಗುಣಪದಗಳು

ದೂರದವು

ಹತ್ತಿರದವು

ನಡುವಿನವು

ತಿಳಿಯದವು

(3) ಕ್ರಿಯಾ-ಗುಣಪದಗಳು

ಹತ್ತಿರದವು

ನಡುವಿನವು

ದೂರದವು ಅಂತು(ಟು) ಇಂತು(ಟು) ಉಂತು(ಟು) ಅತ್ತ(ಲ್)

ಇತ್ತ(ಲ್) ಉತ್ತ(ಲ್)

ತಿಳಿಯದವು ಎತ್ತ(ಲ್)

ಇವುಗಳಲ್ಲಿ ಆ, ಈ, ಊ ಮತ್ತು ಆವ (ಏ) ಎಂಬ ಗುಣಪದಗಳಲ್ಲಿ ಮಾತ್ರ ಎರಡು ಅಂಗಗಳಿಲ್ಲ. ನಿಜಕ್ಕೂ ಇವು ನಾಮಪದಕಂತೆಗಳಲ್ಲಿ ಕೆಲಸವನ್ನು ಸೂಚಿಸುವ ಮೊದಲನೆಯ ಅಂಗವಾಗಿ ಬರುತ್ತವೆ ಮತ್ತು ಎಂತಹದರ ಕುರಿತಾಗಿ ಅವು ಈ ಕೆಲಸವನ್ನು ನಡೆಸುತ್ತವೆ ಎಂಬುದನ್ನು ಪದಕಂತೆಗಳಲ್ಲಿ ಅವುಗಳ ಅನಂತರ ಬರುವ ನಾಮಪದಗಳೇ ಸೂಚಿಸುತ್ತವೆ.

ಉದಾಹರಣೆಗಾಗಿ, ಆ ಮನೆ ಪದಕಂತೆಯಲ್ಲಿ ಆ ಎಂಬುದು ಮೊದಲನೆಯ ಅಂಗವಾಗಿ ಬಂದಿದೆ ಮತ್ತು ಮನೆ ನಾಮಪದ ಇಂತಹ ತೋರುಗ ಪದಗಳ ಎರಡನೆಯ ಅಂಗಕ್ಕೆ ಬದಲಾಗಿ ಬಂದಿದೆ.

ಹಳೆಗನ್ನಡದ ಏನ್ ಮತ್ತು ಏಕೆ ಎಂಬ ‘ತಿಳಿಯದ’ ಪದಗಳೂ ಈ ಪಟ್ಟಿಗೆ ಸೇರಬೇಕು; ಆದರೆ, ಅವುಗಳಿಗೆ ಸಮನಾದ ಇತರ (‘ತಿಳಿದ’) ಪದಗಳಿಲ್ಲ.

ಇದೇ ರೀತಿಯಲ್ಲಿ, ಏವನ್, ಏವಳ್, ಏವರ್, ಏವುದು ಮತ್ತು ಏವುವು ಎಂಬ ಕ್ರಿಯಾರೂಪಗಳ ಗುಂಪಿಗೆ ಸೇರಬಲ್ಲ ‘ತಿಳಿಯದ’ ಪದಗಳೂ ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದುವು ಮಾಡುತ್ತಾನೆ?’). ಇವಕ್ಕೂ ಸಮನಾದ ಇತರ (‘ತಿಳಿದ’) ಪದಗಳಿಲ್ಲ.

(ಏವನ್

ಆವನ್, ಆವಳ್, ಆವುದು, ಎಲ್ಲಿ, ಎಂತು ಮೊದಲಾದುವನ್ನು ಸಾಮಾನ್ಯವಾಗಿ ‘ಪ್ರಶ್ನಾರ್ತಕ’ ಪದಗಳೆಂದು ಕರೆಯಲಾಗುತ್ತದೆ. ಆದರೆ ಅವನ್ನಿಲ್ಲಿ ‘ತಿಳಿಯದ’ ಪದಗಳೆಂದು ಕರೆಯಲಾಗಿದೆ.

ಇದಕ್ಕೆ ಕಾರಣವೇನೆಂದರೆ, ಪ್ರಶ್ನೆ (ಕೇಳ್ವಿ)ಯ ಅರ್ತವನ್ನು ಕೊಡುವುದ ಕ್ಕಿಂತಲೂ ಆಡುಗನಿಗೆ ಅವು ತೋರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ವಿಶಯ ತಿಳಿದಿಲ್ಲವೆಂಬುದನ್ನು ಸೂಚಿಸುವುದೇ ಈ ಪದಗಳ ನಿಜವಾದ ಕೆಲಸ. ಇದನ್ನು ನಾನು (ಬಟ್ 2003, 2004)ರಲ್ಲಿ ಸ್ಪಶ್ಟವಾಗಿ ತೋರಿಸಿಕೊಟ್ಟಿದ್ದೇನೆ.

ಮೇಲಿನ ಕೋಶ್ಟಕದಲ್ಲಿ ಕೊಟ್ಟಿರುವ ಪದಗಳಿಗೆ ಬದಲಾಗಿ, ಕನ್ನಡದ ಒಳನುಡಿಗಳಲ್ಲಿ ಹಲವು ಅವುಗಳಿಗಿಂತ ಬೇರಾಗಿರುವ ಪದಗಳು ಬಳಕೆ ಯಾಗುತ್ತವೆ. ಇದಕ್ಕೆ ಈ ಒಳನುಡಿಗಳಲ್ಲಿ ನಡೆದಿರುವ ಬೇರೆ ಬೇರೆ ಬದಲಾವಣೆಗಳು ಕಾರಣ.

Eke →

10.3.1 ಮೊದಲನೆಯ ಅಂಗದಲ್ಲಿ ನಡೆದ ಬದಲಾವಣೆಗಳು

ಹಳೆಗನ್ನಡದಲ್ಲಿ ಆ, ಈ, ಊ ಮತ್ತು ಆವ (ಏ) ಎಂಬ ನಾಲ್ಕು ಬೇರುಗಳು ಬಳಕೆಯಾಗುತ್ತಿದ್ದುವು ಎಂಬುದನ್ನು ನಾವು ಮೇಲೆ ನೋಡಿರುವೆವು. ಮೂಲದ್ರಾವಿಡದಲ್ಲಿಯೂ ಬೇರುಗಳು ಬಳಕೆಯಲ್ಲಿದ್ದಿರಬೇಕೆಂದು ಕಲ್ಪಿಸಲಾಗಿದೆ.

ಮೊದಲನೆಯ

ತೋರುಗ

ಪದಗಳ

ನಾಲ್ಕು

ಮೇಲಿನ ಕೋಶ್ಟಕದಲ್ಲಿ ಕಾಣಿಸಿದ ಹಾಗೆ, ಈ ಬೇರುಗಳಿಗೆ ಉದ್ದ ರೂಪ (ಆತನ್, ಈತನ್, ಊತನ್, ಆವ) ಮತ್ತು ಗಿಡ್ಡ ರೂಪ (ಅಲ್ಲಿ, ಇಲ್ಲಿ, ಉಲ್ಲಿ, ಎಲ್ಲಿ) ಎಂಬುದಾಗಿ ಎರಡೆರಡು ರೂಪಗಳಿದ್ದುವು. ಮೂಲ ದ್ರಾವಿಡದಲ್ಲಿಯೂ ಇಂತಹದೇ ವ್ಯತ್ಯಾಸ ಇದ್ದಿರಬೇಕು.

ಈ ರೂಪವ್ಯತ್ಯಾಸವನ್ನು ವರ್ಣಿಸುವುದಕ್ಕಾಗಿ ಮೂಲದ್ರಾವಿಡದಲ್ಲಿ ಅವುಗಳ ಸ್ವರದ ಅನಂತರ ಒಂದು ‘ಲಾರಿಂಜಲ್’ (ಹಕಾರ - 5.4 ನೋಡಿ) ಬಂದಿತ್ತು ಎಂಬುದಾಗಿ ಕಲ್ಪಿಸುವ ಅವಶ್ಯಕತೆಯಿದೆಯೆಂದು

ಕ್ರುಶ್ಣಮೂರ್ತಿ (2003:253) ವಾದಿಸಿದ್ದಾರೆ. ಆದರೆ, ನಿಜಕ್ಕೂ ಅಂತಹ ಕಲ್ಪನೆಯಿಂದ ಏನು ಪ್ರಯೋಜನ ಎಂಬುದಿನ್ನೂ ಸ್ಪಶ್ಟವಾಗಿಲ್ಲ.

ಕನ್ನಡದ ಒಳನುಡಿಗಳಲ್ಲಿ ಈ ಮೊದಲನೆಯ ಅಂಗದಲ್ಲಿ ನಡೆದ

ಕೆಲವು ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ.

(1) ಹಳೆಗನ್ನಡದ ತೋರುಗ ಬೇರುಗಳಲ್ಲಿದ್ದ ಮೂರನೆಯ ಊ ಬೇರು ಕನ್ನಡದ ಇವತ್ತಿನ ಒಳನುಡಿಗಳಲ್ಲಿ ಉಳಿದಿಲ್ಲ. ಆದರೆ, ಅದರ ಪಳೆಯುಳಿಕೆಯನ್ನು ಕ್ರಿಯಾರೂಪಗಳಲ್ಲಿ ಬರುವ ಉದು ಒಟ್ಟಿನಲ್ಲಿ (ಮಾಡುವುದು, ಹೋಗುವುದು) ಕಾಣಬಹುದು.

(2) ತಿಳಿಯದುದನ್ನು ಸೂಚಿಸುವ ಹಳೆಗನ್ನಡದ ಆವ ಮತ್ತು ಏ ಬೇರುಗಳು ಹೊಸಗನ್ನಡದಲ್ಲಿ ಯಾವ ಮತ್ತು ಯಾ ಎಂಬ ರೂಪದಲ್ಲಿವೆ (ಯಾರು, ಯಾವನು, ಯಾಕೆ); ಈ ಯಕಾರ ದಕಾರವಾಗಿರುವ ದಾರು, ದಾವನು ರೂಪಗಳೂ ಕೆಲವು ಒಳನುಡಿಗಳಲ್ಲಿವೆ (ಕಿಟ್ಟೆಲ್ 1903:

(3) ಹವ್ಯಕ ಕನ್ನಡದಲ್ಲಿ ತಿಳಿಯದುದನ್ನು ಸೂಚಿಸಲು ಏವ ‘ಯಾವ’, ಎಂತಗೆ ‘ಯಾಕೆ’, ಆರು ‘ಯಾರು’, ಏವದು ‘ಯಾವದು’, ಮೊದಲಾದ ಬಂದಿಲ್ಲವೆಂಬುದನ್ನು ರೂಪಗಳಿದ್ದು ‘ಯಾವ’, ಎವಕ ಗಮನಿಸಬಹುದು. ಬಡಗ ‘ಯಾರು’’ಏದು ‘ಯಾವುದು’ ಎಂಬಂತಹ ರೂಪಗಳಿವೆ.

ಯಕಾರ ಕನ್ನಡದಲ್ಲೂ ಏ

ಅವುಗಳಲ್ಲಿ

ಮನುಶ್ಯರ

ಪದಗಳ ಬಳಕೆಯಾಗುತ್ತದೆ;

(4) ಬಡಗ ಕನ್ನಡದಲ್ಲಿ ತಿಳಿಯದುದನ್ನು ಸೂಚಿಸಲು ಮೂರು ತೋರುಗ ಹೇಳುವುದಿದ್ದರೆ ದಾರು ‘ಯಾರು’ ಪದದ ಬಳಕೆಯಾಗುತ್ತದೆ ಮತ್ತು ಇತರರ ಕುರಿತಾಗಿ ಹೇಳುವುದಿದ್ದರೆ ಏದು ‘ಯಾವುದು’ ಪದದ ಬಳಕೆಯಾಗುತ್ತದೆ. ಇದಲ್ಲದೆ ಏನ ಎಂಬ ಮೂರನೆಯ ಪದವೊಂದು ಎಂಬುದು ತಿಳಿಯದಿರುವಲ್ಲಿ ಬಳಕೆಯಾಗುತ್ತದೆ (ಬಾಲಕ್ರುಶ್ಣನ್ 1999).

ನಡೆಯುತ್ತಿತ್ತು’

ನಡೆಯುತ್ತಿದೆ

ಇಲ್ಲವೇ

Eke →

10.3.2 ಎರಡನೆಯ ಅಂಗದಲ್ಲಿ ಬದಲಾವಣೆಗಳು

ತೋರುಗ ಪದಗಳ ಎರಡನೆಯ ಅಂಗವಾಗಿ ವ್ಯಕ್ತಿ, ಜಾಗ, ಸಮಯ, ಪ್ರಮಾಣ ಮೊದಲಾದುವನ್ನು ತಿಳಿಸುವ ಒಟ್ಟುಗಳು ಬಳಕೆಯಾಗುತ್ತವೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಮೂಲದ್ರಾವಿಡದಲ್ಲಿ ಇವು ಯಾವ ರೂಪದಲ್ಲಿದ್ದುವು ಎಂಬ ವಿಶಯದಲ್ಲಿ ಇನ್ನೂ ಸಾಕಶ್ಟು ಸಂಶೋದನೆಗಳು ನಡೆದಿಲ್ಲ.

ವ್ಯಕ್ತಿಗಳನ್ನು ಸೂಚಿಸುವ ಪದಗಳಲ್ಲಿ ಮನುಶ್ಯರು ಮತ್ತು ಇತರರು ಎಂಬ ವ್ಯತ್ಯಾಸ ಮತ್ತು ಮನುಶ್ಯರಲ್ಲೇನೇ ಒರ್ವಚನದಲ್ಲಿ ಗಂಡಸು- ಹೆಂಗಸು ಎಂಬ ಹೆಚ್ಚಿನ ವ್ಯತ್ಯಾಸ ಈ ಎರಡನೆಯ ಅಂಗದಲ್ಲಿ ಕಾಣಿಸುತ್ತದೆ.

ಮನುಶ್ಯರು: ಗಂಡಸು
ಹೆಂಗಸು
ಇತರರು

ಒವ್ರಚನ (ಅ)ವನು (ಅ)ವಳು

ಹಲವಚನ (ಅ)ವರು

ಹಲವಚನದಲ್ಲಿದ್ದ ಮನುಶ್ಯರು-ಇತರರು ವ್ಯತ್ಯಾಸ ಕರಾವಳಿಯ ಒಳನುಡಿಗಳಲ್ಲಿ ಇಲ್ಲವಾಗಿದೆ. ಉದಾಹರಣೆಗಾಗಿ ಹವ್ಯಕ ಕನ್ನಡದಲ್ಲಿ ಅವು ಎಂಬುದನ್ನೇ ‘ಅವರು’ ಮತ್ತು ‘ಅವು’ ಎಂಬ ಎರಡು ಅರ್ತಗಳಲ್ಲೂ ಬಳಸಲಾಗುತ್ತದೆ. ಸುಳ್ಯದ ಗವ್ಡ ಕನ್ನಡದಲ್ಲೂ ಹೀಗೆಯೇ.

ಒರ್ವಚನದಲ್ಲಿಯೂ ಅದು ಎಂಬುದಕ್ಕೆ ಇಂತಹದೇ ಬಳಕೆಯಿದ್ದು, ಗವ್ರವಾರ್ತದಲ್ಲಿ ಮಾತ್ರ ಅವ ᵒ ‘ಅವನು’ ಮತ್ತು ಅವ ‘ಅವಳು’ ಪದಗಳ ಬಳಕೆಯಾಗುತ್ತದೆ.

ಅಹಗೆ, ಇಹಗೆ ಮತ್ತು ಎಹಗೆ ಪದಗಳು ಇವತ್ತಿನ ಬರಹ ಕನ್ನಡದಲ್ಲಿ ಹಾಗೆ, ಹೀಗೆ ಮತ್ತು ಹೇಗೆ ಎಂಬುದಾಗಿ ಬದಲಾಗಿವೆ. ಇಲ್ಲಿ ಎರಡನೆಯ ಅಂಗದಲ್ಲಿದ್ದ ಹಕಾರ ಮೊದಲನೆಯ ಅಂಗದ ಮುಂದೆ ಬಂದು ನಿಂತಿದೆ. ಹವ್ಯಕ ಕನ್ನಡದಲ್ಲಿ ಇವು ಹಾಂಗೆ, ಹೀಂಗೆ ಮತ್ತು ಹೇಂಗೆ

ಎಂಬ ರೂಪದಲ್ಲಿವೆ. ಅಹಗೆ ಮೊದಲಾದವುಗಳ ಹಿಂದಿದ್ದ ರೂಪಗಳಲ್ಲಿ ಒಂದು ಮೂಗುಲಿಯೂ ಬರುತ್ತಿತೆಂಬುದು ಇದರಿಂದ ತಿಳಿಯುತ್ತದೆ.

ಮೇಲೆ

ಸೂಚಿಸಿದ

ಹಾಗೆ, ಎರಡನೇ ಅಂಗದಲ್ಲಿ

ನಡೆದ ಬದಲಾವಣೆಗಳ ಕುರಿತಾಗಿ ಇನ್ನಶ್ಟು ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ. ಇದಕ್ಕಾಗಿ ಕನ್ನಡದ ಬೇರೆ ಬೇರೆ ಒಳನುಡಿಗಳಲ್ಲಿ ಎಂತಹ ತೋರುಗ ಪದಗಳೆಲ್ಲ ಬಳಕೆಯಲ್ಲಿವೆ ಎಂಬುದನ್ನು ಪಟ್ಟಿ ಮಾಡುವ ಅವಶ್ಯಕತೆಯಿದೆ.

Eke →

10.4 ತಿರುಳು

ಮೂಲದ್ರಾವಿಡದ ಆಡುಗ ಪದಗಳು ಮತ್ತು ತೋರುಗ ಪದಗಳು ಕನ್ನಡದಲ್ಲಿ ಎಂತಹ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ.

ಆಡುಗ ಪದಗಳ ಕೂಡಿಕೆಯ ರೂಪಗಳಲ್ಲಿದ್ದ ವ್ಯತ್ಯಾಸವೊಂದು ಸೇರಿಸದೆ ಹಲವು ಒಳನುಡಿಗಳಲ್ಲಿ

(ಆಡುಗನೊಂದಿಗೆ ಸೂಚಿಸುವಂತಹ ವ್ಯತ್ಯಾಸ) ಇಲ್ಲವಾಗಿರುವುದು ಇವುಗಳಲ್ಲಿ ಮುಕ್ಯವಾದುದು.

ಸೇರಿಸಿ ಇಲ್ಲವೇ

ಕೇಳುಗನನ್ನು

ಕನ್ನಡದ

ಇದೇ ರೀತಿಯಲ್ಲಿ, ತೋರುಗ ಪದಗಳ ಮೊದಲನೆಯ ಅಂಗದಲ್ಲಿದ್ದ ಒಂದು ವ್ಯತ್ಯಾಸವೂ ಇವತ್ತಿನ ಕನ್ನಡ ಒಳನುಡಿಗಳಲ್ಲಿ ಇಲ್ಲವಾಗಿದೆ. ಉದಾಹರಣೆಗಾಗಿ, ಅಲ್ಲಿ, ಇಲ್ಲಿ, ಉಲ್ಲಿ ಎಂಬ ಮೂರು ತೋರುಗ ಪದಗಳ ಬದಲು ಇವತ್ತು ಅಲ್ಲಿ ಮತ್ತು ಇಲ್ಲಿ ಎಂಬ ಎರಡು ತೋರುಗ ಪದಗಳು ಮಾತ್ರ ಉಳಿದುಕೊಂಡಿವೆ.