← Ch 6  ·  Contents  ·  Ch 8 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

7. ವಿಭಕ್ತಿಗಳು ಮತ್ತು ಕಾರಕಗಳು

Eke →

7.1 ಮುನ್ನೋಟ

ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬುದಾಗಿ ಎರಡು ವ್ಯಾಕರಣ ತತ್ವಗಳು ಬಳಕೆಯಾಗುತ್ತವೆ. ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ ಮತ್ತು ಸಪ್ತಮೀ ಎಂಬುದಾಗಿ ಏಳು ವಿಭಕ್ತಿ ಗಳನ್ನು ಮತ್ತು ಇದಕ್ಕಿಂತ ಭಿನ್ನವಾದ ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣ ಎಂಬುದಾಗಿ ಆರು ಕಾರಕಗಳನ್ನು ಈ ವ್ಯಾಕರಣ ಗಳಲ್ಲಿ ಬಳಸಲಾಗುತ್ತದೆ.
ಕನ್ನಡದ ವೈಯಾಕರಣಿಗಳು ಇವೆಲ್ಲವನ್ನೂ ಹಾಗೆಯೇ ಎತ್ತಿಕೊಂಡು ಕನ್ನಡ ವ್ಯಾಕರಣಕ್ಕೆ ಹೊಂದಿಸಿಕೊಂಡಿದ್ದಾರೆ. ಹಾಗೆ ಹೊಂದಿಸಿಕೊಳ್ಳಲು ಸಾಧ್ಯವಾಗದ ಕೆಲವು ಕಡೆಗಳಲ್ಲಿ ಕನ್ನಡದಲ್ಲಿಲ್ಲದಂತಹ ವಿಭಕ್ತಿರೂಪಗಳನ್ನು (ಮರದತ್ತಣಿಂ, ರಾಮನ ದೆಸೆಯಿಂದ) ಮತ್ತು ವಿಭಕ್ತಿ ಪ್ರಯೋಗಗಳನ್ನು (ಕರ್ಮಣಿ ಪ್ರಯೋಗ) ಕನ್ನಡದ ಮೇಲೆ ಹೊರಿಸಿದ್ದಾರೆ. ಇಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಅವಶ್ಯಕತೆಯಿದೆ. ಕನ್ನಡ ವ್ಯಾಕರಣಕ್ಕೆ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ವ್ಯಾಕರಣ ತತ್ವಗಳ ಅವಶ್ಯಕತೆಯಿದೆಯೇ ಎಂಬುದು ಇವುಗಳಲ್ಲಿ ಮೊದಲನೆಯ ಪ್ರಶ್ನೆ. ಸಂಸ್ಕೃತ ವ್ಯಾಕರಣವನ್ನು ಬರೆಯುವಲ್ಲಿ ಈ ಎರಡು ತತ್ವಗಳ ಅವಶ್ಯಕತೆ ಯಿದೆಯೆಂಬುದನ್ನು ಅದರ ವೈಯಾಕರಣಿಗಳು ಸ್ಪಷ್ಟವಾಗಿಯೇ ತೋರಿಸಿಕೊಟ್ಟಿ ಆದರೆ ಕನ್ನಡ ವ್ಯಾಕರಣಕ್ಕೂ ಅವುಗಳ ಅವಶ್ಯಕತೆಯಿದೆಯೇ ಎಂಬುದನ್ನು ಕನ್ನಡ ವೈಯಾಕರಣಿಗಳು ಪರಿಶೀಲಿಸಿದ ಹಾಗಿಲ್ಲ. ಸಂಸ್ಕೃತ ವ್ಯಾಕರಣದಲ್ಲಿ ಈ ಎರಡು ವ್ಯಾಕರಣತತ್ವಗಳನ್ನು ಬಳಸಿದ್ದಾರೆ, ಹಾಗಾಗಿ ಕನ್ನಡ ವ್ಯಾಕರಣದಲ್ಲೂ ಅವನ್ನು ಬಳಸಬೇಕಾಗುತ್ತದೆ ಎಂಬುದಾಗಿ ಅವರು ನಿರ್ಧರಿಸಿದ ಹಾಗಿದೆ. ಎಲ್ಲಾ ಭಾಷೆಗಳ ವ್ಯಾಕರಣದಲ್ಲೂ ಈ ಎರಡು ವ್ಯಾಕರಣತತ್ವಗಳು ಇರಲೇಬೇಕೆಂದಿಲ್ಲ ಎಂಬುದನ್ನು ಅವರು ಗಮನಿಸಿದ ಹಾಗಿಲ್ಲ.
ಹಾಗಾಗಿ, ನಾವು ಮೊದಲಿಗೆ ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುತ್ತಿರುವ ಕಾರಕ ಮತ್ತು ವಿಭಕ್ತಿಗಳೆಂಬ ಈ ಎರಡು ತತ್ವಗಳ ನಡುವೆ ಎಂತಹ ವ್ಯತ್ಯಾಸ

ಗಳಿವೆ ಮತ್ತು ಆ ವ್ಯಾಕರಣದಲ್ಲಿ ಅವು ಎಂತಹ ಕಾರ್ಯಗಳನ್ನು ಸಾಧಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.
ಅನಂತರ, ಕನ್ನಡ ವ್ಯಾಕರಣದಲ್ಲಿ ಅಂತಹ ಕಾರ್ಯಗಳನ್ನು ಸಾಧಿಸಬೇಕಾದ ಸಂದಭ್ರಗಳಿವೆಯೇ? ಇವೆಯಾದರೆ ಆ ಸಂದಭ್ರಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ತತ್ವಗಳನ್ನು ಬಳಸಲೇ ಬೇಕಾಗುತ್ತದೆಯೇ? ಎಂಬುದನ್ನು, ಎಂದರೆ ನಿಜಕ್ಕೂ ಈ ಎರಡು ತತ್ವಗಳ ಅವಶ್ಯಕತೆ ಕನ್ನಡ ವ್ಯಾಕರಣಕ್ಕಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಕನ್ನಡದ ವೈಯಾಕರಣಿಗಳು ಮಾತ್ರವಲ್ಲದೆ ಭಾರತದ ಇತರ ಭಾಷೆಗಳ ವೈಯಾಕರಣಿಗಳೂ ಇದೇ ರೀತಿಯಲ್ಲಿ ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಅನುಸರಿಸುತ್ತ ವಿಭಕ್ತಿ ಮತ್ತು ಕಾರಕಗಳೆಂಬ ಈ ಎರಡು ವ್ಯಾಕರಣತತ್ವಗಳನ್ನು ಅವು ಅವಶ್ಯವೇ ಅಥವಾ ಅನವಶ್ಯವೇ ಎಂಬುದನ್ನು ಪರಿಶೀಲಿಸದೆ ಹಾಗೆಯೇ ತಮ್ಮ ಭಾಷೆಯ ವ್ಯಾಕರಣಗಳಿಗೆ ಅಳವಡಿಸಿಕೊಂಡಿದ್ದಾರೆ. ಮತ್ತು ಹಾಗೆ ಮಾಡುವುದರ ಮೂಲಕ ಹಲವೆಡೆಗಳಲ್ಲಿ ಆ ವ್ಯಾಕರಣಗಳು ಬಹಳ ಕ್ಲಿಷ್ಟವಾಗು ವಂತೆಯೂ ಮಾಡಿದ್ದಾರೆ.
ಈ ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀಲಿಸಿದಲ್ಲಿ, ಕನ್ನಡ ವ್ಯಾಕರಣಕ್ಕೆ ವಿಭಕ್ತಿಯೆಂಬ ಒಂದು ವ್ಯಾಕರಣತತ್ವ ಮಾತ್ರ ಇದ್ದರೆ ಸಾಕು, ಅದಕ್ಕಿಂತ ಭಿನ್ನವಾ ಗಿರುವ ಕಾರಕವೆಂಬ ವ್ಯಾಕರಣತತ್ವ ಅವಶ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ. ಇದನ್ನು ನಾನು ಬೇರೊಂದು ಪುಸ್ತಕದಲ್ಲಿ (ಭಟ್ 1991) ಕೂಲಂಕಶವಾಗಿ ಚಚ್ರಿಸಿದ್ದೇನೆ.
ಸಂಸ್ಕೃತದಲ್ಲಿ ವಿಭಕ್ತಿಗಳನ್ನು ನೇರವಾಗಿ ಅವುಗಳ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಾಗದೆ ಇರುವ ಕಾರಣ, ಅದರ ವೈಯಾಕರಣಿಗಳು ಕಾರಕ ವೆಂಬ ತತ್ವವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯುಂಟಾಗಿತ್ತು. ಆದರೆ ಕನ್ನಡದಲ್ಲಿ ವಿಭಕ್ತಿಗಳನ್ನು ನೇರವಾಗಿ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯ ವಿದೆ. ಹಾಗಾಗಿ ಅದಕ್ಕೆ ಕಾರಕಗಳೆಂಬ ಕಲ್ಪಿತ ತತ್ವಗಳ ಅವಶ್ಯಕತೆ ಇಲ್ಲ.
ಇದಲ್ಲದೆ, ಇಂತಹ ಅವಶ್ಯವಿಲ್ಲದ ವ್ಯಾಕರಣ ತತ್ವಗಳನ್ನು ಕಲ್ಪಿಸಿಕೊಳ್ಳುವು ದರಿಂದಾಗಿ ಕನ್ನಡ ವ್ಯಾಕರಣ ಅನವಶ್ಯಕವಾಗಿ ಜಾಸ್ತಿ ಕ್ಲಿಷ್ಟವಾಗುತ್ತದೆ. ನಾವಿಲ್ಲಿ ಪರಿಶೀಲಿಸಬೇಕಾಗಿರುವ ಎರಡನೆಯ ಪ್ರಶ್ನೆಯೇನೆಂದರೆ, ಸಂಸ್ಕೃತ ದಲ್ಲಿ ಬರುವ ಏಳು ವಿಭಕ್ತಿಗಳು ಕನ್ನಡದಲ್ಲೂ ಬರುವ ಅವಶ್ಯಕತೆಯಿದೆಯೇ, ಮತ್ತು ಅವು ನಿಜಕ್ಕೂ ಕನ್ನಡದಲ್ಲಿ ಬರುತ್ತಿವೆಯೇ ಎಂಬುದು. ಈ ವಿಷಯದ ಮಟ್ಟಿಗೆ ಕನ್ನಡದ ವೈಯಾಕರಣಿಗಳಲ್ಲಿ ಅಭಿಪ್ರಾಯಭೇದವಿದ್ದು ಸ್ವಲ್ಪ ಮಟ್ಟಿಗೆ ಸಂಶೋಧನೆಯೂ ನಡೆದಿದೆಯೆಂದು ಹೇಳಬಹುದು. ಆದರೂ ಸಂಸ್ಕೃತ ವ್ಯಾಕರಣದ ಪ್ರಭಾವದಿಂದ ಪೂರ್ತಿಯಾಗಿ ಹೊರಬಂದು ಕನ್ನಡ ವಿಭಕ್ತಿಗಳನ್ನು ಕನ್ನಡದ್ದೇ ಆದ ಸ್ವಭಾವವನ್ನನುಸರಿಸಿ ವಿವರಿಸುವ ಕೆಲಸ ಇನ್ನೂ ನಡೆದಿಲ್ಲ.

ಈ  ವಿಷಯವನ್ನು  ನಾನು  ಮುಂದಿನ  ಅಧ್ಯಾಯದಲ್ಲಿ  ಪರಿಶೀಲಿಸಲಿದ್ದು,  ಈ  ಅಧ್ಯಾಯದಲ್ಲಿ  ಕನ್ನಡಕ್ಕೆ  ಕಾರಕ  ಇಲ್ಲವೇ  ಅಂತಹದೇ  ಆದ  ಬೇರೆ  ಕಲ್ಪಿತವಾದ  ವ್ಯಾಕರಣತತ್ವ ಯಾಕೆ ಅವಶ್ಯವಿಲ್ಲ ಎಂಬುದನ್ನು ಸ್ವಲ್ಪ ವಿಸ್ತಾರವಾಗಿ ವಿವರಿಸಲು  ಯತ್ನಿಸುತ್ತೇನೆ.   

Eke →

7.2 ವಿಭಕ್ತಿಗಳ ಕೆಲಸ

ವಾಕ್ಯವೊಂದರಲ್ಲಿ ಸಾಮಾನ್ಯವಾಗಿ ಒಂದು ಕ್ರಿಯಾಪದ ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚು ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬಳಕೆಯಾಗು ತ್ತವೆ. ಕ್ರಿಯಾಪದಗಳು ಯಾವುದಾದರೂ ಒಂದು ಘಟನೆಯನ್ನು ತಿಳಿಸುತ್ತವೆ ಮತ್ತು ನಾಮಪದಗಳು ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.

(1)

ರಾಜು ಹರಿಯನ್ನು ಒಂದು ಮರಕ್ಕೆ ಕಟ್ಟಿದ

(1)ನೇ  ವಾಕ್ಯದಲ್ಲಿ  ಬಂದಿರುವ  ಕಟ್ಟು  ಕ್ರಿಯಾಪದ  ಒಂದು  ಘಟನೆಯನ್ನು  ತಿಳಿಸುತ್ತದೆ.  ಅದೇ  ವಾಕ್ಯದಲ್ಲಿ  ಬಂದಿರುವ  ರಾಜು,  ಹರಿ  ಮತ್ತು  ಮರ  ನಾಮ  ಪದಗಳು ಆ ಘಟನೆಯಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತಿಸು  ತ್ತವೆ.  
ವಾಕ್ಯವೊಂದರಲ್ಲಿ  ಈ  ರೀತಿ  ಕ್ರಿಯಾಪದದೊಂದಿಗೆ  ಒಂದಕ್ಕಿಂತ  ಜಾಸ್ತಿ  ನಾಮಪದಗಳು ಬಂದಾಗ, ಅವುಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು  ಗುರುತಿಸಬೇಕಾಗುತ್ತದೆ  ಮಾತ್ರವಲ್ಲ,  ಆ  ಕ್ರಿಯಾಪದವು  ತಿಳಿಸುವ  ಘಟನೆಯಲ್ಲಿ  ಅವು  ಯಾವ  ಯಾವ  ಕೆಲಸಗಳಲ್ಲಿ  ತೊಡಗಿವೆ  ಎಂಬುದನ್ನೂ  ತಿಳಿಸಬೇಕಾಗು 
ಉದಾಹರಣೆಗಾಗಿ,  *ರಾಜು  ಹರಿ  ಮರ  ಕಟ್ಟಿದ  ಎಂದಿಷ್ಟೇ  ಹೇಳಿದರೆ,  ‘ಯಾರು  ಯಾರನ್ನು  ಯಾವುದಕ್ಕೆ  ಕಟ್ಟಿದ್ದು’  ಎಂಬ  ವಿಷಯ  ಸ್ಪಷ್ಟವಾಗಲಾರದು.  ಇದನ್ನು  ಸ್ಪಷ್ಟಪಡಿಸುವುದಕ್ಕಾಗಿ  ವಾಕ್ಯದಲ್ಲಿ  ಬರುವ  ಈ  ನಾಮಪದಗಳೊಂದಿಗೆ  ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಅವಶ್ಯಕತೆಯಿದೆ.  
ಮೇಲೆ ಕೊಟ್ಟಿರುವ (1)ನೇ ವಾಕ್ಯದಲ್ಲಿ ಮರ ಪದದ ಅನಂತರ ಕ್ಕೆ ವಿಭಕ್ತಿ  ಪ್ರತ್ಯಯ  ಬಂದಿದ್ದು,  ‘ಕಟ್ಟಿ  ಹಾಕಿದ್ದು  ಯಾವುದಕ್ಕೆ’  ಎಂಬುದನ್ನು  ಅದು  ತಿಳಿಸುತ್ತದೆ;  ಹರಿ  ನಾಮಪದದ  ಅನಂತರ  ಅನ್ನು  ವಿಭಕ್ತಿ  ಪ್ರತ್ಯಯ  ಬಂದಿದ್ದು  ‘ಮರಕ್ಕೆ ಯಾರನ್ನು ಕಟ್ಟಿ ಹಾಕಿದ್ದು’ ಎಂಬುದನ್ನು ಅದು ತಿಳಿಸುತ್ತದೆ. 

ಈ ರೀತಿ ನಾಮಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗೂ ಕ್ರಿಯಾ  ಪದವು  ತಿಳಿಸುವ  ಘಟನೆಗೂ  ನಡುವಿರುವ  ಸಂಬಂಧವೇನೆಂಬುದನ್ನು  ತಿಳಿಸಲು  ವಿಭಕ್ತಿ ಪ್ರತ್ಯಯಗಳ (ಅಥವಾ ಬೇರಾವುದಾದರೂ ಸಾಧನಗಳ) ಅವಶ್ಯಕತೆಯಿದೆ.  ಕನ್ನಡದಂತಹ ಕೆಲವು ಭಾಷೆಗಳಲ್ಲಿ ಈ ಕೆಲಸಕ್ಕಾಗಿ ವಿಭಕ್ತಿ ಪ್ರತ್ಯಯಗಳ ಬಳಕೆ  ಯಾಗುತ್ತದೆ. ಆದರೆ ಬೇರೆ ಭಾಷೆಗಳಲ್ಲಿ ಬೇರೆ ಸಾಧನಗಳ ಬಳಕೆಯಾಗುವುದೂ  ಇದೆ.  ಉದಾಹರಣೆಗಾಗಿ  ಇಂಗ್ಲಿಷ್  ಭಾಷೆಯ  ವಾಕ್ಯಗಳಲ್ಲಿ  ಪದಗಳ  ಜಾಗವೂ  ಈ ಕೆಲಸವನ್ನು ನಡೆಸಬಲ್ಲುದು.  

‘ರಾಜು ಹರಿಯನ್ನು ಮರಕ್ಕೆ ಕಟ್ಟಿದ’

(2R) Hari tied Raju to the tree

‘ಹರಿ ರಾಜುವನ್ನು ಮರಕ್ಕೆ ಕಟ್ಟಿದ’

(2ಕ) ಮತ್ತು (2ಖ) ವಾಕ್ಯಗಳ ನಡುವೆ ಕಾಣಿಸುವ ಅರ್ಥ ವ್ಯತ್ಯಾಸ ಖಚಿರಿu  ಮತ್ತು  ಊಚಿಡಿi  ಎಂಬ  ಈ  ಎರಡು  ಪದಗಳು  ವಾಕ್ಯದಲ್ಲಿ  ಎಲ್ಲಿ  ಬಂದಿವೆ  ಎಂಬುದರ ಮೇಲೆ, ಎಂದರೆ ವಾಕ್ಯದಲ್ಲಿ ಅವುಗಳ ಜಾಗ ಯಾವುದು ಎಂಬುದರ  ಮೇಲೆ ಅವಲಂಬಿಸಿದೆ. ಈ ವಾಕ್ಯಗಳಲ್ಲಿ ಕ್ರಿಯಾಪದಕ್ಕಿಂತ ಮೊದಲು ಬಂದಿರುವ  ನಾಮಪದ  ‘ಕಟ್ಟಿದವರು  ಯಾರು’  ಎಂಬುದನ್ನು  ತಿಳಿಸುತ್ತದೆ  ಮತ್ತು  ಕ್ರಿಯಾ  ಪದದ  ಅನಂತರ  ಬಂದಿರುವ  ನಾಮಪದ  ‘ಯಾರನ್ನು  ಕಟ್ಟಿದ್ದು’  ಎಂಬುದನ್ನು  ತಿಳಿಸುತ್ತದೆ.  
ಇದಲ್ಲದೆ, ಈ ಎರಡು ವಾಕ್ಯಗಳಲ್ಲೂ ‘ಯಾವುದಕ್ಕೆ ಕಟ್ಟಿದ್ದು’ ಎಂಬುದನ್ನು  ತಿಳಿಸಲು ಣo ಎಂಬ ಉಪಸಗ್ರದ ಬಳಕೆಯಾಗಿದೆ.   
ಕನ್ನಡದಲ್ಲಿ  ಇಂತಹ  ಕೆಲಸಗಳನ್ನೆಲ್ಲ  ಮುಖ್ಯವಾಗಿ  ವಿಭಕ್ತಿ  ಪ್ರತ್ಯಯಗಳೇ  ನಡೆಸುವುವಾದ ಕಾರಣ, ಅವು ಯಾವುವೆಲ್ಲ ಇವೆ ಮತ್ತು ವಾಕ್ಯಗಳಲ್ಲಿ ಅವುಗಳ  ಬಳಕೆಯೆಂತಹದು ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ವಿಸ್ತಾರವಾಗಿ ವಿವರಿಸುವ  ಅವಶ್ಯಕತೆಯಿದೆ.  

Eke →

7.3 ಕಾರಕಗಳ ಕೆಲಸ

ಮೇಲೆಯೇ ಸೂಚಿಸಿರುವ ಹಾಗೆ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಎಂಬ ವ್ಯಾಕರಣ ತತ್ವ ಮಾತ್ರವಲ್ಲದೆ ‘ಕಾರಕ’ ಎಂಬ ಇನ್ನೊಂದು ವ್ಯಾಕರಣ ತತ್ವವೂ ಬಳಕೆಯಾಗುತ್ತದೆ. ಕಾರಕಗಳೆಂಬ ಈ ವ್ಯಾಕರಣ ತತ್ವವು ನಡೆಸುವ ಕೆಲಸ ವಿಭಕ್ತಿಗಳು ನಡೆಸುವ ಕೆಲಸಕ್ಕಿಂತ ತೀರ ಭಿನ್ನವಾದುದು.

ಅವು  ವಿಭಕ್ತಿಗಳ  ಹಾಗೆ  ನಿಜಕ್ಕೂ  ವಾಕ್ಯಗಳಲ್ಲಿ  ಕಾಣಿಸುವ  ಅಂಗಗಳಲ್ಲ;  ಸಂಸ್ಕೃತ  ವೈಯಾಕರಣಿಗಳು  ತಮ್ಮ  ಅನುಕೂಲಕ್ಕಾಗಿ  ಸೃಷ್ಟಿಸಿಕೊಂಡಿರುವ  ವೈಯಾಕರಣಿಕ ಪರಿಕಲ್ಪನೆಗಳು ಮಾತ್ರ.  
ಅವರು  ಈ  ಪರಿಕಲ್ಪನೆಗಳನ್ನು  ಸೃಷ್ಟಿಸಿಕೊಳ್ಳಲು  ಕಾರಣವೇನೆಂದರೆ,  ಸಂಸ್ಕೃತದಲ್ಲಿ  ವಿಭಕ್ತಿ  ಪ್ರತ್ಯಯಗಳನ್ನು  ಅವು  ಸೂಚಿಸಬೇಕಾಗಿರುವ  ಅರ್ಥ  ದೊಂದಿಗೆ  ನೇರವಾಗಿ  ಸಂಬಂಧಿಸುವುದು  ಬಹಳ  ಕಷ್ಟ.  ಈ  ಕಾರಣಕ್ಕಾಗಿ,  ವಿಭಕ್ತಿಗಳನ್ನು  ಕಾರಕಗಳೊಂದಿಗೆ  ಸಂಬಂಧಿಸಿ,  ಅನಂತರ  ಅಂತಹ  ಕಾರಕಗಳ  ಮೂಲಕ  ವಾಕ್ಯದ  ಅರ್ಥ  ವೇನೆಂಬುದನ್ನು  ವಿವರಿಸಿ  ಹೇಳಲು  ಸಂಸ್ಕೃತದ  ವೈಯಾಕರಣಿಗಳು  ಪ್ರಯತ್ನಿಸ  ಬೇಕಾಗಿದೆ. 
ಸಂಸ್ಕೃತದಲ್ಲಿ  ಈ  ರೀತಿ  ವಿಭಕ್ತಿಗಳಿಗೂ  ಅವುಗಳ  ಅರ್ಥಕ್ಕೂ  ನೇರವಾದ  ಸಂಬಂಧವಿಲ್ಲದಿರಲು  ಹಲವು  ಕಾರಣಗಳಿವೆ.  ಅವುಗಳಲ್ಲಿ  ಕೆಲವನ್ನು  ಕೆಳಗೆ  ವಿವರಿಸಲಾಗಿದೆ. ಕಲ್ಪಿಸಿಕೊಂಡಿರುವ ಮೊದಲು ತಾವು

Eke →

7.3.1 ಒಂದು ವಿಭಕ್ತಿಗೆ ಹಲವು ಅರ್ಥಗಳು

ಸಂಸ್ಕೃತದಲ್ಲಿ ಪ್ರಥಮಾ ವಿಭಕ್ತಿಗೆ ಒಂದು ನಿಶ್ಚಿತವಾದ ಅರ್ಥವನ್ನು ಕೊಡಲು ಸಾಧ್ಯವಾಗದು. ಯಾಕೆಂದರೆ, ಒಂದು ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ ಆ ಘಟನೆಯಲ್ಲಿ ತೊಡಗಿರುವ ಇತರ ವ್ಯಕ್ತಿ, ವಸ್ತು ಮೊದಲಾ ದವುಗಳನ್ನೂ ಪ್ರಥಮಾ ವಿಭಕ್ತಿಯ ಮೂಲಕ ಸಂಸ್ಕೃತದಲ್ಲಿ ಸೂಚಿಸಲು ಸಾಧ್ಯ

ರಾಮಃ ಸ್ಥಾಲ್ಯಾಂ ಓದನಂ ಕಾಷ್ಠೈಃ ಪಚತಿ ‘ರಾಮನು ಮಡಕೆಯಲ್ಲಿ ಅನ್ನವನ್ನು ಕಟ್ಟಿಗೆಯನ್ನು ಬಳಸಿ ಬೇಯಿಸು ತ್ತಾನೆ’ (3ಖ) ಸ್ಥಾಲೀ ಪಚತಿ

‘ಮಡಕೆಯಲ್ಲಿ (ಅನ್ನವನ್ನು) ಬೇಯಿಸುತ್ತಾನೆ’ ಕಾಷ್ಠಂ ಪಚತಿ ‘ಕಟ್ಟಿಗೆಯನ್ನು ಬಳಸಿ (ಅನ್ನವನ್ನು) ಬೇಯಿಸುತ್ತಾನೆ’

(3ಕ-ಗ)ದಲ್ಲಿ ಕೊಟ್ಟಿರುವ ಮೂರು ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಗೆ ಮೂರು ಬೇರೆ ಬೇರೆ ಅರ್ಥಗಳಿವೆಯುಂಬುದನ್ನು ಗಮನಿಸಬಹುದು. (3ಕ) ವಾಕ್ಯದಲ್ಲಿ ಅದು ಬೇಯಿಸುವ ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಸೂಚಿಸುತ್ತದೆ; ಆದರೆ, (3ಖ) ವಾಕ್ಯದಲ್ಲಿ ಅದು ಆ ಘಟನೆಯನ್ನು ನಡೆಸಲು

ಬಳಸಿದ ಪಾತ್ರೆಯನ್ನು ಸೂಚಿಸುತ್ತದೆ ಮತ್ತು (3ಗ) ವಾಕ್ಯದಲ್ಲಿ ಅದಕ್ಕಾಗಿ ಬಳಸ ಲಾಗಿರುವ ಕಟ್ಟಿಗೆಯನ್ನು ಸೂಚಿಸುತ್ತದೆ.
(3ಖ) ಮತ್ತು (3ಗ) ವಾಕ್ಯಗಳಲ್ಲಿ ಬೇಯುವ ಪದಾರ್ಥ ಮತ್ತು ಬೇಯಿಸುವ ವ್ಯಕ್ತಿ ಇವೆರಡನ್ನು ಹೆಸರಿಸಿಲ್ಲವಾದ ಕಾರಣ, ಸ್ಥಾಲೀ ‘ಮಡಿಕೆ’ ಎಂಬುದನ್ನು (3ಖ) ವಾಕ್ಯದಲ್ಲಿಯೂ ಕಾಷ್ಠಂ ‘ಕಟ್ಟಿಗೆ’ ಎಂಬುದನ್ನು (3ಗ) ವಾಕ್ಯದಲ್ಲಿಯೂ ಪ್ರಥಮಾ ವಿಭಕ್ತಿಯಲ್ಲಿ ಬಳಸಲು ಸಾಧ್ಯವಾಗಿದೆ. ಇದು ಸಂಸ್ಕೃತದ ವೈಶಿಷ್ಟ್ಯ.
ಹೀಗೆ ಪ್ರಥಮಾ ವಿಭಕ್ತಿಗೆ ಈ ಮೂರು (3ಕ-ಗ) ವಾಕ್ಯಗಳಲ್ಲಿ ಮೂರು ಬೇರೆ ಬೇರೆ ಅರ್ಥಗಳಿವೆ.

Eke →

7.3.2 ಒಂದೇ ಅರ್ಥಕ್ಕೆ ಹಲವು ವಿಭಕ್ತಿಗಳು

ಸಂಸ್ಕೃತದಲ್ಲಿ ಈ ರೀತಿ ಒಂದೇ ವಿಭಕ್ತಿ ಪ್ರತ್ಯಯವನ್ನು ಹಲವು ಅರ್ಥಗಳಲ್ಲಿ ಬಳಸಲು ಸಾಧ್ಯವಿದೆ ಮಾತ್ರವಲ್ಲ, ಒಂದೇ ಅರ್ಥವನ್ನೂ ಹಲವು ವಿಭಕ್ತಿಗಳ ಮೂಲಕ ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಮೇಲೆ ಸೂಚಿಸಿರುವ ಅರ್ಥಗಳಲ್ಲಿ ಮೊದಲನೆಯದನ್ನು, ಎಂದರೆ ಘಟನೆಯನ್ನು ನಡೆಸುವುದು ಯಾರು ಎಂಬುದನ್ನು, ಸಂಸ್ಕೃತದಲ್ಲಿ ಪ್ರಥಮಾ ವಿಭಕ್ತಿಯ ಮೂಲಕವೂ ಸೂಚಿಸಬಹುದು, ತೃತೀಯಾ ವಿಭಕ್ತಿಯ ಮೂಲಕವೂ ಸೂಚಿಸಬಹುದು (4ಕ-ಖ ನೋಡಿ).
ಸಂಸ್ಕೃತದಲ್ಲಿ ‘ಕರ್ತರಿ’ ಮತ್ತು ‘ಕರ್ಮಣಿ’ ಎಂಬುದಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಘಟನೆಯೊಂದನ್ನು ನಡೆಸುವ ವ್ಯಕ್ತಿಯನ್ನು ಕರ್ತರಿ ವಾಕ್ಯದಲ್ಲಿ ಪ್ರಥಮಾ ವಿಭಕ್ತಿಯ ಮೂಲಕ ಮತ್ತು ಕರ್ಮಣಿ ವಾಕ್ಯದಲ್ಲಿ ತೃತೀಯಾ ವಿಭಕ್ತಿಯ ಮೂಲಕ ಸೂಚಿಸಲಾಗುತ್ತದೆ.

(4ಕ) ದೇವದತ್ತಃ ಗ್ರಂಥಂ ಪಠತಿ

‘ದೇವದತ್ತನು ಪುಸ್ತಕವನ್ನು ಓದುತ್ತಾನೆ’

(4ಖ) ದೇವದತ್ತೇನ ಗ್ರಂಥಃ ಪಠ್ಯತೇ

‘ದೇವದತ್ತನು ಪುಸ್ತಕವನ್ನು ಓದುತ್ತಾನೆ’

(4ಕ)  ಮತ್ತು  (4ಖ)  ವಾಕ್ಯಗಳೆರಡಕ್ಕೂ  ಸಂಸ್ಕೃತದಲ್ಲಿ  ಅರ್ಥ  ಒಂದೇ;  ಹೀಗಿದ್ದರೂ  ಘಟನೆಯನ್ನು  ನಡೆಸುವ  (ಓದುವ)  ವ್ಯಕ್ತಿಯನ್ನು  (4ಕ)ದಲ್ಲಿ  ಪ್ರಥಮಾ ವಿಭಕ್ತಿಯ ಮೂಲಕ ಸೂಚಿಸಲಾಗಿದೆ ಮತ್ತು (4ಖ)ದಲ್ಲಿ ತೃತೀಯಾ  ವಿಭಕ್ತಿಯ  ಮೂಲಕ  ಸೂಚಿಸಲಾಗಿದೆ.  ಎಂದರೆ,  ಈ  ಎರಡು  ವಾಕ್ಯಗಳಲ್ಲಿ 

ಒಂದೇ ಅರ್ಥವನ್ನು ಎರಡು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳ ಮೂಲಕ ಸೂಚಿಸಲಾಗಿದೆ. ಕನ್ನಡ ವ್ಯಾಕರಣಗಳಲ್ಲಿ (4ಖ) ವಾಕ್ಯವನ್ನು ‘ದೇವದತ್ತನಿಂದ ಪುಸ್ತಕ ಓದಲ್ಪಡುತ್ತದೆ’ ಎಂಬುದಾಗಿ ಅನುವಾದಿಸುವುದು ರೂಢಿ. ಆದರೆ ಇಂತಹ ವಾಕ್ಯ ಕನ್ನಡದಲ್ಲಿ ಸಂಸ್ಕೃತದ ಪ್ರಭಾವದಿಂದ ಬಂದಿದ್ದು, ಹೊಸಗನ್ನಡದಲ್ಲಿ ಇಲ್ಲವೇ ಮಾತಿನಲ್ಲಿ ಇದು ಇಲ್ಲವೆಂದೇ ಹೇಳಬಹುದು. ಇದೇ ರೀತಿಯಾಗಿ ದ್ವಿತೀಯಾ ಮತ್ತು ಸಪ್ತಮೀ ವಿಭಕ್ತಿಗಳನ್ನು ಒಂದೇ ಅರ್ಥದಲ್ಲೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ‘ಕುಳಿತಿದ್ದಾನೆ’ ಎಂಬ ಅರ್ಥ ಕೊಡುವ ಆಸ್ತೇ ಮತ್ತು ಅಧ್ಯಾಸ್ತೇ ಎಂಬ ಎರಡು ಕ್ರಿಯಾಪದಗಳ ಬಳಕೆಯನ್ನು ಗಮನಿಸಬಹುದು.

(5ಕ) ಪವ್ರತೇ ಆಸ್ತೇ

‘ಗುಡ್ಡದಲ್ಲಿ ಕುಳಿತಿದ್ದಾನೆ’ (5ಖ) ಪವ್ರತಂ ಅಧ್ಯಾಸ್ತೇ ‘ಗುಡ್ಡದಲ್ಲಿ ಕುಳಿತಿದ್ದಾನೆ’

(5ಕಖ)  ವಾಕ್ಯಗಳೆರಡರಲ್ಲೂ  ಗುಡ್ಡವು  ಕುಳಿತುಕೊಳ್ಳುವ  ಜಾಗವಾಗಿದೆ.  ಹೀಗಿದ್ದರೂ, (5ಕ) ವಾಕ್ಯದಲ್ಲಿ ಅದು ಸಪ್ತಮಿಯಲ್ಲಿ ಬಂದಿದೆ, ಮತ್ತು (5ಖ)  ದಲ್ಲಿ ದ್ವಿತೀಯುಯಲ್ಲಿ ಬಂದಿದೆ.  

Eke →

7.3.3 ಬೇರೆ ಕಾರಣಗಳು

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅರ್ಥಕ್ಕೂ ನಡುವೆ ನೇರವಾದ ಸಂಬಂಧವಿಲ್ಲದಿರಲು ಬೇರೆಯೂ ಕೆಲವು ಕಾರಣಗಳಿವೆ. ಉದಾಹರಣೆಗಾಗಿ, ಕೆಲವು ಸಂದಭ್ರಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯ ಗಳಿಗೆ ಸಂಸ್ಕೃತದಲ್ಲಿ ವಿಶಿಷ್ಟವಾದ ಅರ್ಥವೇ ಇರುವುದಿಲ್ಲ.
ಇದಲ್ಲದೆ, ಈ ವಿಭಕ್ತಿ ಪ್ರತ್ಯಯಗಳು ವಿಭಕ್ತ್ಯರ್ಥವನ್ನು ಮಾತ್ರವಲ್ಲದೆ, ನಾಮಪದದ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ನಾಮಪದಗಳ ಕೊನೆಯ ಅಕ್ಷರಗಳನ್ನನುಸರಿಸಿಯೂ ಸಂಸ್ಕೃತದ ವಿಭಕ್ತಿ ಪ್ರತ್ಯಯಗಳಲ್ಲಿ ಕೆಲವು ವ್ಯತ್ಯಾಸ ಗಳು ಕಾಣಿಸಿಕೊಳ್ಳುತ್ತವೆ. (ವಿವರಗಳಿಗೆ 8.3 ನೋಡಿ). ಇಂತಹ ವ್ಯತ್ಯಾಸಗಳೂ ಸಂಸ್ಕೃತದ ವಿಭಕ್ತಿ ಪ್ರತ್ಯಯಗಳನ್ನು ಅವುಗಳ ಅರ್ಥದೊಂದಿಗೆ ಸಂಬಂಧಿಸುವ ಕೆಲಸ ಹೆಚ್ಚು ಕ್ಲಿಷ್ಟವಾಗುವಂತೆ ಮಾಡಿವೆ.

Eke →

7.3.4 ಕಾರಕಗಳ ಮೂಲಕ ಸಂಬಂಧಿಸುವುದು

ಮೇಲೆ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸ ಬೇಕಾಗಿರುವ ಅರ್ಥಗಳಿಗೂ ನಡುವೆ ನೇರವಾದ ಸಂಬಂಧವಿಲ್ಲವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ವಾಕ್ಯದ ರಚನೆಯನ್ನು ಮತ್ತು ಅದರಲ್ಲಿ ಬಳಕೆ ಯಾಗುವ ವಿಭಕ್ತಿಗಳ ಸ್ವರೂಪವನ್ನು ಮೊದಲಿಗೆ ಕಾರಕಗಳ ಮೂಲಕ ವಿವರಿಸಿ, ಅನಂತರ ಆ ರಚನೆಯನ್ನು ಅದರ ಅರ್ಥದೊಂದಿಗೆ ಸಂಬಂಧಿಸಬೇಕಾಗಿದೆ. ನಿಜಕ್ಕೂ ಭಾಷೆಯಲ್ಲಿರುವುದು ವಿಭಕ್ತಿ ಪ್ರತ್ಯಯಗಳು ಮತ್ತು ಅವು ಸೂಚಿಸ ಬೇಕಾಗಿರುವ ಅರ್ಥ (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧ) ಇವೆರಡು ಮಾತ್ರ. ಮೇಲೆ ಸೂಚಿಸಿದ ಹಾಗೆ, ಕಾರಕಗಳೆಂಬುವು ಸಂಸ್ಕೃತದ ವೈಯಾಕರಣಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡಿರುವ ಕಾಲ್ಪನಿಕ ತತ್ವಗಳು ಮಾತ್ರ. ಅವು ಆ ಭಾಷೆಯಲ್ಲಿ ವಿಭಕ್ತಿಗಳ ಬಳಕೆ ಒಂದು ವಿಶಿಷ್ಟವಾದ ರೀತಿಯಲ್ಲಿದೆಯಾದ ಕಾರಣ ಮಾತ್ರ ಬೇಕಾಗಿವೆ.
ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (3ಕ-ಗ) ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಯಲ್ಲಿ ಬಂದಿರುವ ಪದಗಳನ್ನು ಮತ್ತು (4ಖ) ವಾಕ್ಯದಲ್ಲಿ ತೃತೀಯಾ ವಿಭಕ್ತಿಯಲ್ಲಿ ಬಂದಿರುವ ಪದವನ್ನು ಸಂಸ್ಕೃತದ ವೈಯಾಕರಣಿಗಳು ಕರ್ತೃ ಕಾರಕವೆಂದು ಪರಿಗಣಿಸುತ್ತಾರೆ. ಇದಕ್ಕೆ ಬದಲು, (4ಖ) ವಾಕ್ಯದಲ್ಲಿ ಪ್ರಥಮೆ ಯಲ್ಲಿ ಬಂದಿರುವ ಪದವನ್ನು ಕರ್ಮಕಾರಕವೆಂದು ಪರಿಗಣಿಸುತ್ತಾರೆ.
ವಿಭಕ್ತಿ ಮತ್ತು ಅವುಗಳ ಅರ್ಥಗಳ ನಡುವೆ ಮಾತ್ರವಲ್ಲ, ವಿಭಕ್ತಿ ಮತ್ತು ಕಾರಕಗಳ ನಡುವೆಯೂ ಸಂಸ್ಕೃತದಲ್ಲಿ ನೇರವಾದ ಸಂಬಂಧವಿಲ್ಲ. ಇದಕ್ಕೆ ಕಾರಣವೇನೆಂದರೆ, ವಿಭಕ್ತಿಗಳು ಸೂಚಿಸಬೇಕಾಗಿರುವ ಅರ್ಥವನ್ನು ವಿವರಿಸು ವುದಕ್ಕಾಗಿ ಮಾತ್ರವಲ್ಲದೆ, ವ್ಯಾಕರಣದ ಬೇರೆ ಕೆಲವು ನಿಯಮಗಳನ್ನು ಸಂಕ್ಷಿಪ್ತ ವಾಗಿ ವರ್ಣಿಸುವುದಕ್ಕಾಗಿಯೂ ಸಂಸ್ಕೃತದ ವೈಯಾಕರಣಿಗಳು ಈ ಕಾರಕ ಗಳನ್ನು ಬಳಸುತ್ತಾರೆ.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (6-7) ವಾಕ್ಯಗಳನ್ನು ಪರಿಶೀಲಿಸ ಬಹುದು.

(6ಕ) ಅಕ್ಷಾಂ ದೀವ್ಯತಿ

‘ಪಗಡೆಗಳಲ್ಲಿ ಜೂಜಾಡುತ್ತಾನೆ’

(6ಖ) ಅಕ್ಷೈಃ ದೀವ್ಯತಿ

(7ಕ) ಆಜ್ಯಂ ಜುಹೋತಿ

‘ತುಪ್ಪದಲ್ಲಿ ಹೋಮ ಮಾಡುತ್ತಾನೆ’

(7ಖ) ಆಜ್ಯೇನ ಜುಹೋತಿ

ಪರಿಗಣಿಸದಿರಲು

(6)  ಮತ್ತು  (7)ನೇ  ವಾಕ್ಯಗಳೆರಡರಲ್ಲೂ  ನಾಮಪದವನ್ನು  ದ್ವಿತೀಯಾ  ವಿಭಕ್ತಿಯಲ್ಲಾಗಲಿ  ಇಲ್ಲವೇ  ತೃತೀಯಾ  ವಿಭಕ್ತಿಯಲ್ಲಾಗಲಿ  ಬಳಸಲು  ಸಾಧ್ಯ  ವಿದೆ.  ಅಕ್ಷ  ‘ಪಗಡೆ’  ಎಂಬುದು  (6ಕ)ದಲ್ಲಿ  ದ್ವಿತೀಯುಯಲ್ಲಿ  ಬಂದಿದೆ  ಮತ್ತು  (6ಖ)ದಲ್ಲಿ  ತೃತೀಯುಯಲ್ಲಿ  ಬಂದಿದೆ;  ಆಜ್ಯ  ‘ತುಪ್ಪ’  ಎಂಬುದು  (7ಕ)ದಲ್ಲಿ  ದ್ವಿತೀಯುಯಲ್ಲಿ ಬಂದಿದೆ ಮತ್ತು (7ಖ)ದಲ್ಲಿ ತೃತೀಯುಯಲ್ಲಿ ಬಂದಿದೆ. 
ಆದರೆ  ಸಂಸ್ಕೃತದ  ವೈಯಾಕರಣಿಗಳು  (6)ರ  ವಾಕ್ಯಗಳಲ್ಲಿ  ಅಕ್ಷ  ನಾಮ  ಪದ  ದ್ವಿತೀಯೆಯಲ್ಲಿ  ಬಂದರೆ  ಕರ್ಮವನ್ನು  ಸೂಚಿಸುತ್ತದೆ  ಮತ್ತು  ತೃತೀಯೆ  ಯಲ್ಲಿ  ಬಂದರೆ  ಕರಣವನ್ನು  ಸೂಚಿಸುತ್ತದೆ  ಎಂಬುದಾಗಿ  ಹೇಳುತ್ತಾರೆ  ಮತ್ತು  ಅಂತಹದೇ  (7)ರ  ವಾಕ್ಯಗಳಲ್ಲಿ  ಆಜ್ಯ  ‘ತುಪ್ಪ’  ನಾಮಪದ  ದ್ವಿತೀಯೆಯಲ್ಲಿ  ಬಂದರೂ  ಕರ್ಮವೇ,  ತೃತೀಯೆಯಲ್ಲಿ  ಬಂದರೂ  ಕರ್ಮವೇ  ಎಂಬುದಾಗಿ  ಹೇಳುತ್ತಾರೆ.  
ಅವರು  ಈ  ರೀತಿ  (7ಖ)  ವಾಕ್ಯದಲ್ಲಿ  ಆಜ್ಯ  ನಾಮಪದ  ತೃತೀಯೆಯಲ್ಲಿ  ಮೇಲೆ  ಕರಣವೆಂದು  ಬಂದಿದೆಯಾದರೂ  ಅದನ್ನು  ಹೇಳಿದಂತಹ ಎರಡನೆಯ ಅವಶ್ಯಕತೆಯೇ (ವ್ಯಾಕರಣ ನಿಯಮಗಳನ್ನು ಸಂಕ್ಷಿಪ್ತ  ವಾಗಿ ಬರೆಯಬೇಕೆಂಬುದೇ) ಮುಖ್ಯ ಕಾರಣ.  
ಸಂಸ್ಕೃತದಲ್ಲಿ  ಕ್ರಿಯಾಪದಕ್ಕೆ  ಅನ  ಪ್ರತ್ಯಯವನ್ನು  ಸೇರಿಸಿ  ತಯಾರಿಸಿದ  ಪದದ  ಮೂಲಕ  ಅದರ  ಕರಣವನ್ನು  ಸೂಚಿಸಲು  ಸಾಧ್ಯ  ಎಂಬ  ವ್ಯಾಕರಣ  ನಿಯಮವೊಂದಿದೆ.  ಈ  ನಿಯಮದ  ಪ್ರಕಾರ,  ಶಾತ್  ‘ತುಂಡು  ಮಾಡು’  ಕ್ರಿಯಾ  ಪದದಿಂದ  ಸಿದ್ಧವಾಗುವ  ಶಾತನ  ಪದದ  ಮೂಲಕ  ಅದರ  ಕರಣವಾಗಿರುವ  ‘ಚೂರಿ’ಯನ್ನು ಸೂಚಿಸಲು ಸಾಧ್ಯವಿದೆ.  
ಹು  ‘ಹೋಮ  ಮಾಡು’  ಕ್ರಿಯಾಪದದೊಂದಿಗೆ  (6ನೇ  ವಾಕ್ಯದಲ್ಲಿ  ಬಂದಿರುವ  ಜುಹೋತಿ  ‘ಹೋಮ  ಮಾಡುತ್ತಾನೆ’  ಎಂಬುದು  ಆ  ಕ್ರಿಯಾಪದದ  ಒಂದು  ರೂಪ)  ತೃತೀಯಾ  ವಿಭಕ್ತಿಯಲ್ಲಿ  ಬರುವ  ಆಜ್ಯ  ‘ತುಪ್ಪ’  ನಾಮಪದ  ವನ್ನು  ಕರಣ  ಎಂಬುದಾಗಿ  ಪರಿಗಣಿಸಿದಲ್ಲಿ,  ಆ  ಕ್ರಿಯಾಪದದಿಂದ  ಸಿದ್ಧವಾಗುವ  ಹವನ  ಪದಕ್ಕೂ  ಅದು  ಸೂಚಿಸುವ  ಕ್ರಿಯೆಯ  ಕರಣವಾದ  ‘ತುಪ್ಪ’  ಎಂಬ  ಅರ್ಥವನ್ನು ಕೊಡಬೇಕಾದೀತು.  
ಆದರೆ ನಿಜಕ್ಕೂ ಸಂಸ್ಕೃತದಲ್ಲಿ ಹವನ ಎಂಬುದರ ಅರ್ಥ ‘ಆಹುತಿಯಾಗಿ  ತುಪ್ಪವನ್ನು  ಹೋಮದಲ್ಲಿ  ಹಾಕಲು  ಬಳಸುವ  ಸಾಧನ’  ಎಂಬುದು.  ‘ಹೋಮ  ಮಾಡುವುದು’  ಎಂಬ  ಅರ್ಥವೂ  ಅದಕ್ಕಿದೆ.  ಆಹುತಿಯಾಗಿ  ಬಳಸುವ  ತುಪ್ಪ  ಎಂಬ ಅರ್ಥ ಅದಕ್ಕಿಲ್ಲ. ಹಾಗಾಗಿ, ಸಂಸ್ಕೃತ ವೈಯಾಕರಣಿಗಳು ಆಜ್ಯ ‘ತುಪ್ಪ’  ಎಂಬುದನ್ನು ಹು ಕ್ರಿಯಾಪದದ ಕರಣವೆಂದು ಪರಿಗಣಿಸುವುದಿಲ್ಲ.  

ಸಂಸ್ಕೃತ  ವ್ಯಾಕರಣದಲ್ಲಿ  ಕಾಣಿಸುವ  ಇಂತಹ  ಹಲವು  ಸಮಸ್ಯೆಗಳಿಂದಾಗಿ  ಅದರ  ವೈಯಾಕರಣಿಗಳಿಗೆ  ವಿಭಕ್ತಿಗಳನ್ನು  ಅರ್ಥದೊಂದಿಗೆ  ಮಾತ್ರವಲ್ಲದೆ  ಕಾರಕಗಳೊಂದಿಗೂ ನೇರವಾಗಿ ಸಂಬಂಧಿಸಲು ಸಾಧ್ಯವಾಗುವುದಿಲ್ಲ. 

Eke →

7.4 ಪಾಶ್ಚಾತ್ಯ ವ್ಯಾಕರಣಗಳಲ್ಲಿ ಕಲ್ಪಿತ ತತ್ವ

ಕೆಲವು ಪಾಶ್ಚಾತ್ಯ ಭಾಷೆಗಳ ವ್ಯಾಕರಣಗಳಲ್ಲಿಯೂ ಇಂತಹದೇ ವ್ಯಾಕರಣ ತತ್ವ ವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕಂಡುಬಂದಿದೆ. ಇದನ್ನು ವ್ಯಾಕರಣ ಸಂಬಂಧ (gಡಿಚಿmmಚಿಣiಛಿಚಿಟ ಡಿeಟಚಿಣioಟಿ) ಎಂಬುದಾಗಿ ಕರೆಯುವುದು ರೂಢಿ.
ಸಬ್ಜೆಕ್್ಟ (subರಿeಛಿಣ), ಡೈರೆಕ್್ಟ ಆಬ್ಜೆಕ್್ಟ (ಜiಡಿeಛಿಣ obರಿeಛಿಣ), ಮತ್ತು ಇಂಡೈರೆಕ್್ಟ ಆಬ್ಜೆಕ್್ಟ (iಟಿಜiಡಿeಛಿಣ obರಿeಛಿಣ) ಎಂಬವುಗಳು ಇಂತಹ ವ್ಯಾಕರಣ ಸಂಬಂಧಗಳು.
ಸಂಸ್ಕೃತ ವ್ಯಾಕರಣದ ಕರ್ತೃ, ಕರ್ಮ ಮೊದಲಾದ ಕಾರಕಗಳ ಹಾಗೆಯೇ ಪಾಶ್ಚಾತ್ಯ ವ್ಯಾಕರಣಗಳ ಸಬ್ಜೆಕ್್ಟ, ಆಬ್ಜೆಕ್್ಟ ಮೊದಲಾದ ವ್ಯಾಕರಣ ಸಂಬಂಧ ಗಳೂ ಕಲ್ಪಿತ ತತ್ವಗಳಾಗಿವೆ. ಇದಲ್ಲದೆ, ಅವನ್ನು ಕಲ್ಪಿಸಿಕೊಂಡಿರುವುದಕ್ಕೆ ಕಾರಣವೂ ಸಂಸ್ಕೃತ ವ್ಯಾಕರಣದಲ್ಲಿರುವಂತಹದೇ.
ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅರ್ಥಕ್ಕೂ ನಡುವೆ ಈ ಭಾಷೆಗಳಲ್ಲಿ ನೇರವಾದ ಹೊಂದಾಣಿಕೆಯಿಲ್ಲವಾದ ಕಾರಣ, ಅವುಗಳ ವ್ಯಾಕರಣ ಗಳಲ್ಲಿ ಸಬ್ಚೆಕ್್ಟ, ಆಬ್ಜೆಕ್್ಟ ಮೊದಲಾದ ಈ ವ್ಯಾಕರಣ ಸಂಬಂಧಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಒಂದು ಘಟನೆಯನ್ನು ನಡೆಸಿ ಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ, ಆ ಘಟನೆಯ ಕರಣ, ಕಾರಣ ಮತ್ತು ಜಾಗ (ಅಧಿಕರಣ) ಈ ಮೂರನ್ನೂ ಕ್ರಿಯಾಪದದ ಮುಂದಿರುವ ಜಾಗದಲ್ಲಿ (ಎಂದರೆ ಪ್ರಥಮಾ ವಿಭಕ್ತಿಯಲ್ಲಿ ಬರುವ ನಾಮಪದದ ಜಾಗದಲ್ಲಿ) ಇರಿಸಲು ಸಾಧ್ಯವಿದೆ.

John opened the door with a key ‘ಜೋನ್ ಬಾಗಿಲನ್ನು ಒಂದು ಕೀಲಿಯಿಂದ ತೆರೆದ’

(8R) The key opened the door

‘ಒಂದು ಕೀಲಿಯಿಂದ ಬಾಗಿಲನ್ನು ತೆರೆಯಲಾಯಿತು’

‘ಗಾಳಿಗೆ ಬಾಗಿಲು ತೆರೆಯಿತು’ The garden is swarming with bees

(9)

‘ತೋಟದಲ್ಲಿ ಜೇನುಹುಳಗಳು ಗುಂಪಾಗಿ ಹಾರುತ್ತಿವೆ’

(8ಕ-ಗ)  ಮತ್ತು  (9)ನೇ  ಇಂಗ್ಲಿಷ್  ವಾಕ್ಯಗಳಲ್ಲಿ  ಜೋನ್  ಎಂಬುದು  (8ಕ)ದಲ್ಲಿ, ಕೀ ಎಂಬುದು (8ಖ)ದಲ್ಲಿ, ವಿಂಡ್ ‘ಗಾಳಿ’ ಎಂಬುದು (8ಗ)ದಲ್ಲಿ  ಮತ್ತು  ಗಾಡ್ರನ್  ಎಂಬುದು (9)ರಲ್ಲಿ ಕ್ರಿಯಾಪದದ  ಮುಂದಿರುವ  ಜಾಗದಲ್ಲಿ  (ಎಂದರೆ ‘ಪ್ರಥಮೆ’ಯಲ್ಲಿ) ಬಂದಿರುವುದನ್ನು ಗಮನಿಸಬಹುದು.  
ಈ ಕಾರಣಕ್ಕಾಗಿ, ಇಂಗ್ಲಿಷ್ ವಾಕ್ಯಗಳಲ್ಲಿ ಕ್ರಿಯಾಪದದ ಮುಂದಿರುವ ನಾಮ  ಪದವನ್ನು ನೇರವಾಗಿ ಕ್ರಿಯೆಯನ್ನು ನಡೆಸಿಕೊಡುವವನು ಎಂಬ ಅರ್ಥದೊಂದಿಗೆ,  ಇಲ್ಲವೇ  ಬೇರೆ  ಯಾವುದಾದರೂ  ಒಂದು  ನಿಶ್ಚಿತವಾದ  ಅರ್ಥದೊಂದಿಗೆ  ಸಂಬಂಧಿಸಲು  ಸಾಧ್ಯವಾಗುವುದಿಲ್ಲ.  ಹಾಗಾಗಿ,  ಈ  ಜಾಗವನ್ನು  ಸಬ್ಜೆಕ್್ಟ  ಜಾಗ  ಎಂಬುದಾಗಿ  ಕರೆದು  ಅನಂತರ  ಬೇರೆ  ನಿಯಮಗಳ  ಮೂಲಕ  ಅದನ್ನು  ಅರ್ಥ  ದೊಂದಿಗೆ ಸಂಬಂಧಿಸಬೇಕಾಗಿದೆ. 

Eke →

7.5 ಕನ್ನಡಕ್ಕೆ ಕಾರಕಗಳು ಬೇಕಾಗಿಲ್ಲದಿರುವುದು

ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವುಗಳು ಸೂಚಿಸಬೇಕಾಗಿರುವ ಅರ್ಥ ದೊಂದಿಗೆ ನೇರವಾಗಿ ಸಂಬಂಧಿಸಲು ಸಾಧ್ಯವಿದೆ. ಈ ವಿಷಯದಲ್ಲಿ ಕನ್ನಡ ಭಾಷೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗಿಂತ ತೀರ ಭಿನ್ನವಾದುದು.
ಉದಾಹರಣೆಗಾಗಿ, ಕನ್ನಡದಲ್ಲಿ ಒಂದು ನಾಮಪದವನ್ನು ದ್ವಿತೀಯಾ ವಿಭಕ್ತಿಯಲ್ಲಿ ಬಳಸಬೇಕೆಂದಿದ್ದಲ್ಲಿ ಅದು ಕ್ರಿಯಾಪದವು ತಿಳಿಸುವ ಘಟನೆಯ ಪರಿಣಾಮವನ್ನು ಒಂದಲ್ಲ ಒಂದು ರೀತಿಯಲ್ಲಿ ತೋರಿಸಲೇಬೇಕೆಂಬ ನಿಯಮ ವಿದೆ. ಇದಲ್ಲದೆ, ಅದು ಗುರುತಿಸುವ ವ್ಯಕ್ತಿ ಸ್ವೇಚ್ಛೆಯಿಂದ ಆ ಘಟನೆಯಲ್ಲಿ ತೊಡಗಿರಬಾರದೆಂಬ ನಿಯಮವೂ ಇದೆ.
ಇದೇ ರೀತಿಯಲ್ಲಿ ಒಂದು ನಾಮಪದವನ್ನು ಸಪ್ತಮೀ ವಿಭಕ್ತಿಯಲ್ಲಿ ಬಳಸ ಬೇಕೆಂದಿದ್ದಲ್ಲಿ ಅದು ಒಂದಲ್ಲ ಒಂದು ರೀತಿಯಲ್ಲಿ ಘಟನೆ ನಡೆಯುವ ಜಾಗವನ್ನು ಸೂಚಿಸುತ್ತಿರಬೇಕೆಂಬ ನಿಯಮವಿದೆ.

Eke →

7.5.1 ಎರಡು ರೀತಿಯ ಸಂಬಂಧಗಳು

ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವುಗಳ ಅರ್ಥಕ್ಕೂ ನಡುವೆ ನೇರವಾದ ಸಂಬಂಧವಿದ್ದು ಇಂಗ್ಲಿಷ್ನಲ್ಲಿ ಅಂತಹ ಸಂಬಂಧವಿಲ್ಲದಿರಲು ಬೇರೆಯೂ ಒಂದು ಮುಖ್ಯವಾದ ಕಾರಣವಿದೆ.
ವಾಕ್ಯವೊಂದರಲ್ಲಿ ಬರುವ ನಾಮಪದಗಳಿಗೂ ಕ್ರಿಯಾಪದಕ್ಕೂ ನಡುವೆ ಎರಡು ರೀತಿಯ ಸಂಬಂಧಗಳಿರಲು ಸಾಧ್ಯವಿದೆ. ಮೇಲೆ ವಿವರಿಸಿದಂತಹ ಅರ್ಥ ಸಂಬಂಧವೊಂದು; ಮತ್ತು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು

ಮೊದಲಾದವುಗಳಲ್ಲಿ ಮಾತನಾಡುತ್ತಿದ್ದೇವೆ, ಯಾವುದರ ವಿಷಯವಾಗಿ ಯಾವುದನ್ನು ಹೊಸತಾಗಿ ಗುರುತಿಸುತ್ತಿದ್ದೇವೆ ಎಂಬಂತಹ ‘ಭಾಷಾವ್ಯವಹಾರ’ಕ್ಕೆ ಸಂಬಂಧಿಸಿದಂತಹ ವಿಷಯಗಳನ್ನು ಸೂಚಿಸುವ ಸಂಬಂಧ ಇನ್ನೊಂದು.
ಕನ್ನಡದಲ್ಲಿ ಈ ಎರಡು ರೀತಿಯ ಸಂಬಂಧಗಳನ್ನು ಸೂಚಿಸಲು ಬೇರೆ ಬೇರೆ ಸಾಧನಗಳಿವೆ. ಆದರೆ ಇಂಗ್ಲಿಷ್ನಲ್ಲಿ ಇವೆರಡನ್ನೂ ಒಂದೇ ಸಾಧನದ ಮೂಲಕ ಸೂಚಿಸಬೇಕಾಗಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (10ಕ-ಖ) ಇಂಗ್ಲಿಷ್ ವಾಕ್ಯಗಳನ್ನು ಅವುಗಳ ಭಾಷಾಂತರಗಳಾಗಿ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.

‘ಹುಡುಗ ಮುದುಕನನ್ನು ದೂಡಿದ’ (10R) The old man was pushed by the boy ‘ಮುದುಕನನ್ನು ಹುಡುಗ ದೂಡಿದ’

(10ಕ)  ಮತ್ತು  (10ಖ)  ವಾಕ್ಯಗಳ  ನಡುವಿರುವ  ವ್ಯತ್ಯಾಸವೇನೆಂದರೆ,  (10ಕ)ದಲ್ಲಿ  ಆಡುಗನು  ಒಬ್ಬ  ಹುಡುಗನ  ವಿಷಯವಾಗಿ  ಮಾತನಾಡುತ್ತಿದ್ದಾನೆ,  ಆದರೆ  (10ಖ)ದಲ್ಲಿ  ಆತ  ಒಬ್ಬ  ಮುದುಕನ  ವಿಷಯವಾಗಿ  ಮಾತನಾಡು  ತ್ತಿದ್ದಾನೆ.  
ಇಂಗ್ಲಿಷ್ನಲ್ಲಿ  ಒಬ್ಬ  ವ್ಯಕ್ತಿ  ಇಲ್ಲವೇ  ವಸ್ತುವಿನ  ಬದಲು  ಇನ್ನೊಬ್ಬ  ವ್ಯಕ್ತಿ  ಇಲ್ಲವೇ  ವಸ್ತುವನ್ನು  ‘ಮಾತನಾಡುವ  ವಿಷಯ’ವನ್ನಾಗಿ  ಮಾಡಿ  ವಾಕ್ಯವನ್ನು  ರಚಿಸಬೇಕಿದ್ದಲ್ಲಿ  ಅವುಗಳ  ಜಾಗವನ್ನು  ಅದಲು  ಬದಲು  ಮಾಡುವುದರೊಂದಿಗೆ  ಕ್ರಿಯಾರೂಪವನ್ನೂ  ಬದಲಿಸಬೇಕಾಗುತ್ತದೆ.  ಕನ್ನಡದಲ್ಲಿ  ಇದು  ಅವಶ್ಯವಲ್ಲ.  (10ಖ)ದಲ್ಲಿ  ಕಾಣಿಸಿದ  ಹಾಗೆ  ನಾಮಪದಗಳ  ಜಾಗವನ್ನು  ಅದಲು  ಬದಲು  ಮಾಡಿದರೆ ಸಾಕು.  
ಇಂಗ್ಲಿಷ್ನಲ್ಲಿ  ಈ  ಕಾರಣಕ್ಕಾಗಿ  ಕರ್ತರಿ  ಮತ್ತು  ಕರ್ಮಣಿ  ಎಂಬುದಾಗಿ  ಎರಡು  ಬಗೆಯ  ವಾಕ್ಯಗಳ  ಅವಶ್ಯಕತೆಯಿದೆ.  ಆದರೆ  ಕನ್ನಡದಲ್ಲಿ  ಇದು  ಅವಶ್ಯ  ವಿಲ್ಲ.  ಮೇಲೆ  (7.3.2)ರಲ್ಲಿ  ಸೂಚಿಸಿದ  ಹಾಗೆ,  ಕನ್ನಡ  ವ್ಯಾಕರಣಗಳಲ್ಲಿ  *ಮುದುಕನು  ಹುಡುಗನಿಂದ  ದೂಡಲ್ಪಡುತ್ತಾನೆ  ಎಂಬಂತಹ  ವಾಕ್ಯಗಳನ್ನು  ಕರ್ಮಣಿ  ಪ್ರಯೋಗಕ್ಕೆ  ಉದಾಹರಣೆಗಳನ್ನಾಗಿ  ಕೊಡುವುದು  ನಿಜವಾದರೂ  ಅಂತಹ ವಾಕ್ಯಗಳು ಇಂಗ್ಲಿಷ್ (ಇಲ್ಲವೇ ಸಂಸ್ಕೃತ) ವಾಕ್ಯಗಳ ಭಾಷಾಂತರಗಳು  ಮಾತ್ರ.  ಬರಹದಲ್ಲಿ  ಅವುಗಳ  ಬಳಕೆ  ಬಹಳ  ಅಪರೂಪ;  ಮಾತಿನಲ್ಲಂತೂ  ಇಲ್ಲವೇ  ಇಲ್ಲವೆಂದು  ಹೇಳಬಹುದು.  ನಿಜಕ್ಕೂ  ಕನ್ನಡಕ್ಕೆ  ಅಂತಹ  ವಾಕ್ಯಗಳ  ಅವಶ್ಯಕತೆಯೂ ಇಲ್ಲ. 

ಇಂಗ್ಲಿಷ್  ಭಾಷೆಯಲ್ಲಿ ಬಳಕೆಯಾಗುವ ಈ ಎರಡು ರೀತಿಯ ವಾಕ್ಯಗಳಲ್ಲಿ  ಪದಗಳ ಜಾಗವನ್ನು ಅದಲು ಬದಲು ಮಾಡುವುದರೊಂದಿಗೆ ಬೇರೆ ಬದಲಾವಣೆ  ಗಳನ್ನೂ  ಮಾಡಬೇಕಾಗುತ್ತದೆ  ಎಂಬುದು  ಅವುಗಳಲ್ಲಿ  ಸವ್ರನಾಮಗಳನ್ನು  ಬಳಸಿದಾಗ ಸ್ಪಷ್ಟವಾಗುತ್ತದೆ.  

‘ಅವನು ಅವಳನ್ನು ದೂಡಿದ’ (11R) She was pushed by him ‘ಅವಳನ್ನು ಅವನು ದೂಡಿದ’

(11ಕ) ವಾಕ್ಯದಲ್ಲಿ he ‘ಅವನು’ ಮತ್ತು heಡಿ ‘ಅವಳನ್ನು’ ಎಂಬ ಎರಡು  ಸವ್ರನಾಮಗಳನ್ನು ಬಳಸಲಾಗಿದೆ; ಆ ವಾಕ್ಯದ ಕರ್ಮಣಿ ರೂಪವಾದ (11ಖ)  ವಾಕ್ಯದಲ್ಲಿ  ಈ  ಎರಡು  ಸವ್ರನಾಮಗಳ  ಜಾಗವನ್ನು  ಬದಲಾಯಿಸಲಾಗಿದೆ  ಮಾತ್ರವಲ್ಲ, ಅವುಗಳ ವಿಭಕ್ತಿರೂಪಗಳನ್ನೂ ಬದಲಾಯಿಸಲಾಗಿದೆ.  
(11ಖ) ವಾಕ್ಯದಲ್ಲಿ ಇಂಗ್ಲಿಷ್ನ he ಎಂಬುದು him ಎಂದಾಗಿದೆ ಮತ್ತು  heಡಿ ಎಂಬುದು she ಎಂದಾಗಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿ ರೂಪಗಳ  ಬದಲಾವಣೆ  ಅವಶ್ಯವಿಲ್ಲ.  ಮೇಲೆ  (11ಖ)  ವಾಕ್ಯದ  ಕನ್ನಡ  ರೂಪದಲ್ಲಿ  ಅವನು  ಮತ್ತು  ಅವಳನ್ನು  ಎಂಬ  ಎರಡು  ಸವ್ರನಾಮಗಳು  ಸ್ವಲ್ಪವೂ  ಬದಲಾಗದೆ  (11ಕ)  ವಾಕ್ಯದಲ್ಲಿರುವಂತೆಯೇ  ಉಳಿದುಕೊಂಡಿವೆ.  ಅವುಗಳ  ಜಾಗ ಮಾತ್ರ ಬದಲಾಗಿದೆ. 
ಕನ್ನಡದಲ್ಲಿ ಈ ರೀತಿ ಅರ್ಥ ಸಂಬಂಧ ಮತ್ತು ಭಾಷಾವ್ಯವಹಾರ ಸಂಬಂಧ  ಗಳನ್ನು  ಬೇರೆ  ಬೇರೆಯಾಗಿ  ಮತ್ತು  ಸ್ವತಂತ್ರವಾಗಿ  ಸೂಚಿಸುವ  ವಿಧಾನ  ಬಳಕೆಯಲ್ಲಿದೆ.  ಪದಗಳ  ಜಾಗದ  ಮೂಲಕ  ಭಾಷಾವ್ಯವಹಾರಕ್ಕೆ  ಸಂಬಂಧಿಸಿದ  ವಿಷಯಗಳನ್ನು  ಸೂಚಿಸಲಾಗುತ್ತದೆ  ಮತ್ತು  ವಿಭಕ್ತಿ  ಪ್ರತ್ಯಯಗಳ  ಮೂಲಕ  ಅರ್ಥಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸಲಾಗುತ್ತದೆ.  
ಹಾಗಾಗಿ,  ಕನ್ನಡದ  ವಾಕ್ಯಗಳಲ್ಲಿ  ಭಾಷಾವ್ಯವಹಾರಕ್ಕೆ  ಸಂಬಂಧಿಸಿದಂತಹ  ಬದಲಾವಣೆಗಳನ್ನು ಮಾಡಲು ಅವುಗಳಲ್ಲಿ ಬರುವ ಪದಗಳ ಜಾಗವನ್ನು ಮಾತ್ರ  ಬದಲಾಯಿಸಿದರೆ  ಸಾಕು,  ಇಂಗ್ಲಿಷ್ನಲ್ಲಿ  ಕಾಣಿಸುವ  ಹಾಗೆ,  ವಿಭಕ್ತಿರೂಪಗಳನ್ನು  ಮತ್ತು ಕ್ರಿಯಾರೂಪಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. 
ಅರ್ಥಸಂಬಂಧಗಳನ್ನು  ಮತ್ತು  ಭಾಷಾವ್ಯವಹಾರ  ಸಂಬಂಧಗಳನ್ನು  ಈ  ರೀತಿ ಒಟ್ಟಿಗೆ ಸೇರಿಸದೆ ಬೇರೆ ಬೇರಾಗಿ ಇರಿಸಿರುವ ಕಾರಣ ಕನ್ನಡದಲ್ಲಿ ವಿಭಕ್ತಿ  ಪ್ರತ್ಯಯಗಳಿಗೂ  ಅವು  ಸೂಚಿಸಬೇಕಾಗಿರುವ  ಅರ್ಥಕ್ಕೂ  ನಡುವೆ  ನೇರವಾದ  ಹೊಂದಾಣಿಕೆಯಿದೆ.  

ಈ  ಕಾರಣಕ್ಕಾಗಿ,  ಕನ್ನಡದ  ವಾಕ್ಯರಚನೆಯನ್ನು  ಮತ್ತು  ಅದರಲ್ಲಿ  ಬಳಕೆ  ಯಾಗುವ  ವಿಭಕ್ತಿ  ಪ್ರತ್ಯಯಗಳನ್ನು  ವರ್ಣಿಸುವಾಗ  ಕರ್ತೃ,  ಕರ್ಮ,  ಕರಣ  ಮೊದಲಾದ  ಕಾರಕಗಳನ್ನಾಗಲಿ  ಇಲ್ಲವೇ  ಸಬ್ಜೆಕ್್ಟ,  ಡೈರೆಕ್್ಟ  ಆಬ್ಜೆಕ್್ಟ,  ಇಂಡೈರೆಕ್್ಟ  ಆಬ್ಜೆಕ್್ಟ  ಮೊದಲಾದ  ಬೇರೆ  ರೀತಿಯ  ವ್ಯಾಕರಣ  ಸಂಬಂಧ  ಗಳನ್ನಾಗಲಿ  ಬಳಸಿಕೊಳ್ಳುವ  ಅವಶ್ಯಕತೆಯಿಲ್ಲ  (‘ಭಾಷಾವ್ಯವಹಾರ’ದ  ಕುರಿತು  ಹೆಚ್ಚಿನ ವಿವರಗಳಿಗೆ ತಿರುಮಲೇಶ್ 1979 ನೋಡಿ).  

Eke →

7.5.2 ಕನ್ನಡ ವಾಕ್ಯಗಳಲ್ಲಿ ಸಬ್ಜೆಕ್್ಟ ಎಂಬ ತತ್ವ

ಅವಶ್ಯವಿಲ್ಲದ ಕಲ್ಪಿತ ವ್ಯಾಕರಣ ತತ್ವಗಳನ್ನು ಬಳಸುವುದರಿಂದ ಕನ್ನಡ ವ್ಯಾಕರಣ ಹೇಗೆ ಅನವಶ್ಯಕವಾಗಿ ಕ್ಲಿಷ್ಟವಾಗುತ್ತದೆ ಎಂಬುದನ್ನು ಇತ್ತೀಚೆಗೆ ಪಾಶ್ಚಾತ್ಯ ವ್ಯಾಕರಣ ಪರಂಪರೆಯಲ್ಲಿ ಬರೆದ ಕನ್ನಡ ವ್ಯಾಕರಣಗಳು ಬಹಳ ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.
ಈ ಕನ್ನಡ ವ್ಯಾಕರಣಗಳಲ್ಲಿ ಪಾಶ್ಚಾತ್ಯ ವ್ಯಾಕರಣಗಳಲ್ಲಿ ಬರುವ ಸಬ್ಜೆಕ್್ಟ, ಡೈರೆಕ್್ಟ ಆಬ್ಜೆಕ್್ಟ ಮತ್ತು ಇಂಡೈರೆಕ್್ಟ ಆಬ್ಜೆಕ್್ಟ ಎಂಬ ವ್ಯಾಕರಣ ಸಂಬಂಧ ಗಳನ್ನು ಬಳಸಬೇಕಾಗುತ್ತದೆ. ಆದರೆ, ಕನ್ನಡದ ಮಟ್ಟಿಗೆ ಇದು ಕೆಲವು ಪರಿಹರಿಸ ಲಾಗದ ಸಮಸ್ಯೆಗಳನ್ನೂ ತಂದುಹಾಕಿದೆ.
ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಯಾವ ನಾಮಪದವನ್ನು ಸಬ್ಜೆಕ್್ಟ ಎಂಬುದಾಗಿ ಹೆಸರಿಸಬೇಕು ಎಂಬುದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ಬಹಳ ಚಚ್ರೆ ನಡೆದಿದೆ. ಮೊದಲನೆಯ ನಾಮಪದ ಪ್ರಥಮಾ ವಿಭಕ್ತಿಯಲ್ಲಿ ಬರುವ ಬದಲು ಚತುರ್ಥೀ ವಿಭಕ್ತಿಯಲ್ಲಿ ಬರುವಂತಹ ಕೆಲವು ಕನ್ನಡ ವಾಕ್ಯಗಳು ಈ ಸಂದಭ್ರದಲ್ಲಿ ವೈಯಾಕರಣಿಗಳಿಗೆ ತೊಂದರೆಯನ್ನು ಕೊಡುತ್ತವೆ.
ಸಾಮಾನ್ಯವಾಗಿ, ಕೆಲವು ಮಾನಸಿಕ ಇಲ್ಲವೇ ದೈಹಿಕ ಅವಸ್ಥೆಗಳನ್ನು ಅನುಭವಿಸುವ (ಇಲ್ಲವೇ ಅನುಭವಿಸಿದ) ವ್ಯಕ್ತಿಯನ್ನು ಈ ರೀತಿ ಚತುರ್ಥೀ ವಿಭಕ್ತಿಯ ಮೂಲಕ ಸೂಚಿಸುವುದು ಕನ್ನಡದ ವ್ಯಾಕರಣ ನಿಯಮ.

(12) ರಾಜುವಿಗೆ ಹಾವನ್ನು ಕಂಡು ಹೆದರಿಕೆಯಾಯಿತು (13) ರಾಜುವಿಗೆ ಹೆಂಡತಿಯ ನೆನಪಾಯಿತು (14) ರಾಜುವಿಗೆ ಒಂದು ಹಾಡು ಕೇಳಿಸಿತು

(12-14)ರಂತಹ ವಾಕ್ಯಗಳಲ್ಲಿ ಚತುರ್ಥೀ ವಿಭಕ್ತಿಯಲ್ಲಿ ಬಂದಿರುವ ಪದ  (ರಾಜುವಿಗೆ ಎಂಬುದು) ಸಬ್ಜೆಕ್್ಟ ಎಂದು ಕೆಲವರು ಹೇಳುತ್ತಾರೆ ಮತ್ತು ವಿಭಕ್ತಿ  ಪ್ರತ್ಯಯವಿಲ್ಲದಿರುವ  ಪದ  (ಹೆದರಿಕೆ,  ನೆನಪು  ಇಲ್ಲವೇ  ಹಾಡು  ಎಂಬುದು)  ಸಬ್ಜೆಕ್್ಟ ಎಂದು ಬೇರೆ ಕೆಲವರು ವಾದಿಸುತ್ತಾರೆ (ಶ್ರೀಧರ್ 1976 ನೋಡಿ).  

ಈ ಎರಡು ಅಭಿಪ್ರಾಯಗಳಲ್ಲಿ ಯಾವುದು ಸರಿ  ಮತ್ತು ಯಾವುದು ತಪ್ಪು  ಎಂದು ಹೇಳುವುದು ಕಷ್ಟ. ಯಾಕೆಂದರೆ, (12-14) ವಾಕ್ಯಗಳಲ್ಲಿ ಯಾವುದನ್ನು  ಸಬ್ಜೆಕ್್ಟ  ಎಂಬುದಾಗಿ  ಆರಿಸಿಕೊಂಡರೂ  ಒಂದಲ್ಲ  ಒಂದು  ಸಮಸ್ಯೆಯನ್ನು  ಎದುರಿಸಬೇಕಾಗುತ್ತದೆ.  
ಇಂತಹ  ವಾಕ್ಯಗಳಲ್ಲಿ  ಸಾಮಾನ್ಯವಾಗಿ  ವಿಭಕ್ತಿ  ಪ್ರತ್ಯಯದೊಂದಿಗೆ  ಬಾರ  ದಿರುವ  ಪದ  ಕ್ರಿಯಾಪದದೊಂದಿಗೆ  ಸೇರಿ  ವಾಕ್ಯವು  ತಿಳಿಸುವ  ಘಟನೆಯನ್ನು  ಸೂಚಿಸುವುದಾದ  ಕಾರಣ,  ಅದನ್ನು  ಸಬ್ಜೆಕ್್ಟ  ಎಂದು  ಹೇಳುವುದು  ಅಷ್ಟೊಂದು  ಉಚಿತವೆಂದು ತೋರುವುದಿಲ್ಲ.  
ಉದಾಹರಣೆಗಾಗಿ,  (12)ನೇ  ವಾಕ್ಯದಲ್ಲಿ  ನಿಜಕ್ಕೂ  ಹೆದರಿಕೆ  ಎಂಬುದು  ಕ್ರಿಯಾಪದದ  ಭಾಗ  ಮಾತ್ರ.  ಹೆದರಿಕೆಯಾಗುವುದು  ಎಂಬುದೇ  ಇಲ್ಲಿ  ನಡೆ  ದಿರುವ ಘಟನೆ. ಹಾಗಾಗಿ ಹೆದರಿಕೆ ಎಂಬುದನ್ನು ವಾಕ್ಯದ ಸಬ್ಜೆಕ್್ಟ ಎಂಬುದಾಗಿ  ಹೆಸರಿಸುವುದು ಸ್ವಲ್ಪ ವಿಚಿತ್ರವಾಗಿ ತೋರುತ್ತದೆ. 
ಇದಕ್ಕೆ ಬದಲು, ಈ (12)ನೇ ವಾಕ್ಯ ರಾಜುವಿಗೆ ಏನಾಯಿತು ಎಂಬುದನ್ನು  ತಿಳಿಸುತ್ತಿದೆಯಾದ  ಕಾರಣ,  ಅದರಲ್ಲಿ  ರಾಜು  ಪದವೇ  ಸಬ್ಜೆಕ್್ಟ  ಎಂದು  ಹೇಳಿದಲ್ಲಿ ಬೇರೆಯೇ ತೊಂದರೆ ಕಾಣಿಸಿಕೊಳ್ಳುತ್ತದೆ.  
ಇಂತಹ  ವಾಕ್ಯಗಳಲ್ಲಿ  ಕ್ರಿಯಾಪದದ  ಕೊನೆಯಲ್ಲಿ  ಬರುವ  ‘ಆಖ್ಯಾತ’  ಪ್ರತ್ಯಯಗಳು  ಚತುರ್ಥೀ  ವಿಭಕ್ತಿಯಲ್ಲಿರುವ  ಪದದ  ಪುರುಷ-ಲಿಂಗ-ವಚನ  ಗಳನ್ನು    ಸೂಚಿಸುವ  ಬದಲು,  ವಿಭಕ್ತಿ  ಪ್ರತ್ಯಯವಿಲ್ಲದಿರುವ  ಪದದ  ಪುರುಷ- ಲಿಂಗ-ವಚನಗಳನ್ನು ಸೂಚಿಸುತ್ತವೆ.  
ಉದಾಹರಣೆಗಾಗಿ, (12)ನೇ ವಾಕ್ಯದಲ್ಲಿ ಬಂದಿರುವ ಆಗು ಕ್ರಿಯಾರೂಪದ  ಪುರುಷ-ಲಿಂಗ-ವಚನಗಳನ್ನು  ಸೂಚಿಸುತ್ತದೆ  ಯಲ್ಲದೆ  ಪುರುಷ-ಲಿಂಗ-ವಚನಗಳನ್ನು  ಸೂಚಿಸುವುದಿಲ್ಲ.  ಇದೇ  ರೀತಿಯಲ್ಲಿ  (14)ನೇ  ವಾಕ್ಯದಲ್ಲಿ  ಕೇಳಿಸಿತು  ಕ್ರಿಯಾರೂಪದ  ಆಖ್ಯಾತ  ಪ್ರತ್ಯಯ  ಹಾಡು  ಪದದ  ಪುರುಷ-ಲಿಂಗ- ವಚನಗಳನ್ನು ಸೂಚಿಸುತ್ತದೆ. 
ಹಾಗಾಗಿ,  (12)ನೇ  ವಾಕ್ಯದಲ್ಲಿ  ರಾಜು  ಪದ  ಸಬ್ಜೆಕ್್ಟ  ಎಂದು  ಹೇಳಿದಲ್ಲಿ  ಅಂತಹ  ವಾಕ್ಯಗಳಲ್ಲಿ  ಬರುವ  ಕ್ರಿಯಾಪದದ  ಆಖ್ಯಾತ  ಪ್ರತ್ಯಯ  ವಾಕ್ಯದ  ಸಬ್ಜೆಕ್ಟನ್ನು  ಅವಲಂಬಿಸಿಲ್ಲ  ಎಂದು  ಹೇಳಬೇಕಾಗುತ್ತದೆ.  ಇದೂ  ಒಂದು  ಸಮಸ್ಯೆಯೇ.  
ಕನ್ನಡ  ವಾಕ್ಯಗಳಲ್ಲಿ  ಸಬ್ಜೆಕ್್ಟ  ಯಾವುದು  ಎಂಬುದನ್ನು  ನಿರ್ಧರಿಸುವಲ್ಲಿ  ಬೇರೆಯೂ  ಕೆಲವು  ತೊಂದರೆಗಳನ್ನು  ವೈಯಾಕರಣಿಗಳು  ಎದುರಿಸಬೇಕಾಗಿದೆ.  ಉದಾಹರಣೆಗಾಗಿ,  ಇಂಗ್ಲಿಷ್  ಮೊದಲಾದ ಪಾಶ್ಚಾತ್ಯ ಭಾಷೆಗಳ  ವ್ಯಾಕರಣದಲ್ಲಿ 

ಹೆದರಿಕೆ

ಪದದ ಪದದ

ಪ್ರತ್ಯಯ

ಸಕರ್ಮಕ ಮತ್ತು ಅಕರ್ಮಕ ಎಂಬ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಬಹಳ ಮಹತ್ವವಿದೆ. ಇದಕ್ಕೆ ವಿರುದ್ಧವಾಗಿ ಕನ್ನಡ ವ್ಯಾಕರಣದಲ್ಲಿ ಐಚ್ಛಿಕ ಮತ್ತು ಅನೈಚ್ಛಿಕ ಘಟನೆಗಳನ್ನು ಸೂಚಿಸುವ ಬೇರೆಯೇ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಹೆಚ್ಚಿನ ಮಹತ್ವವಿದೆ.
ಸಬ್ಜೆಕ್್ಟ ಎಂಬ ವ್ಯಾಕರಣ ತತ್ವವನ್ನು ಮುಖ್ಯವಾಗಿ ಸಕರ್ಮಕ-ಅಕರ್ಮಕ ವಾಕ್ಯಭೇದದ ಆಧಾರದ ಮೇಲೆ ಸಾಧಿಸಲಾಗಿದೆಯಾದ ಕಾರಣ, ಮತ್ತು ಈ ವಾಕ್ಯಭೇದ ಕನ್ನಡದಲ್ಲಿ ಅಷ್ಟೊಂದು ಮಹತ್ವವಾದುದಲ್ಲವಾದ ಕಾರಣ, ಸಬ್ಜೆಕ್್ಟ ತತ್ವವನ್ನು ಕನ್ನಡಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಕೆಳಗಿನ (7.5.3)ನೇ ವಿಭಾಗದಲ್ಲಿ ವಿವರಿಸಲಾಗಿದೆ.

Eke →

7.5.3 ಎರಡು ವ್ಯವಸ್ಥೆಗಳು

ಸಕರ್ಮಕ-ಅಕರ್ಮಕ ವ್ಯತ್ಯಾಸಕ್ಕೆ ಮಹತ್ವವನ್ನು ಕೊಡುವ ಭಾಷೆಗಳಲ್ಲೂ ಒಂದು ಮುಖ್ಯ ವ್ಯತ್ಯಾಸವಿದೆ. ಈ ವ್ಯತ್ಯಾಸ ಅಕರ್ಮಕ ವಾಕ್ಯಗಳಲ್ಲಿ ಬರುವ ನಾಮಪದವು ಸಕರ್ಮಕ ವಾಕ್ಯಗಳಲ್ಲಿ ಬರುವ ಎರಡು ನಾಮಪದಗಳಲ್ಲಿ ಯಾವುದಕ್ಕೆ ಸಮಾನವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಈ ವ್ಯತ್ಯಾಸದ ಸ್ವರೂಪವೇನೆಂಬುದನ್ನು ತಿಳಿಯಲು ಮೊದಲಿಗೆ ಸಕರ್ಮಕ ಮತ್ತು ಅಕರ್ಮಕ ವಾಕ್ಯಗಳಲ್ಲಿ ಬರುವ ನಾಮಪದಗಳನ್ನು ಬೇರೆ ಬೇರಾಗಿ ಗುರುತಿಸಿಕೊಳ್ಳುವುದು ಅವಶ್ಯ.
ಅಕರ್ಮಕ ವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಸಾಮಾನ್ಯವಾಗಿ ಒಂದೇ ಒಂದು ಮುಖ್ಯವಾದ ನಾಮಪದ ಬರುತ್ತಿದ್ದು ಅದನ್ನು ‘ಸ’ ಎಂಬುದಾಗಿ ಗುರುತಿಸಬಹುದು. ಇದಕ್ಕೆ ಬದಲು ಸಕರ್ಮಕ ವಾಕ್ಯಗಳಲ್ಲಿ ಎರಡು ಮುಖ್ಯ ನಾಮಪದಗಳು ಬರುತ್ತಿದ್ದು ಅವನ್ನು ‘ನಿ’ ಮತ್ತು ‘ಕ’ ಎಂಬುದಾಗಿ ಗುರುತಿಸ ಬಹುದು. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಅಕರ್ಮಕ ಮತ್ತು ಸಕರ್ಮಕ ವಾಕ್ಯಗಳನ್ನು ಪರಿಶೀಲಿಸಬಹುದು:

(15) ರಾಜು ಅತ್ತ (16) ರಾಜು ಹರಿಯನ್ನು ದೂಡಿದ

(15)ನೇ  ವಾಕ್ಯ  ಅಕರ್ಮಕವಾಗಿದ್ದು  ಅದರಲ್ಲಿ  ಕ್ರಿಯಾಪದದೊಂದಿಗೆ  ರಾಜು ಎಂಬ ಒಂದೇ ಒಂದು ಮುಖ್ಯ ನಾಮಪದ (‘ಸ’ ಎಂಬುದು) ಬಂದಿದೆ.  
(16)ನೇ  ವಾಕ್ಯ  ಸಕರ್ಮಕವಾಗಿದ್ದು  ಅದರಲ್ಲಿ  ಕ್ರಿಯಾಪದದೊಂದಿಗೆ  ಎರಡು  ಮುಖ್ಯ  ನಾಮಪದಗಳು  ಬಂದಿವೆ.  ಇವುಗಳಲ್ಲಿ  ಮೊದಲನೆಯದನ್ನು  (ರಾಜು ಎಂಬುದನ್ನು) ‘ನಿ’ ಎಂಬುದಾಗಿ ಮತ್ತು ಎರಡನೆಯದನ್ನು (ಹರಿ ಎಂಬು 

ದನ್ನು) ‘ಕ’ ಎಂಬುದಾಗಿ ಪರಿಗಣಿಸಬಹುದು. ಇವುಗಳಲ್ಲಿ ‘ನಿ’ ಎಂಬುದು ಸಾಮಾನ್ಯವಾಗಿ ಒಂದು ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುತ್ತದೆ ಮತ್ತು ‘ಕ’ ಎಂಬುದು ಅಂತಹ ಘಟನೆಯಿಂದ ಯಾವುದಾದರೊಂದು ರೀತಿಯಲ್ಲಿ ಪ್ರಭಾವಿತನಾಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ.
ಕೆಲವು ಭಾಷೆಗಳಲ್ಲಿ ಅಕರ್ಮಕ ವಾಕ್ಯದ ‘ಸ’ ನಾಮಪದಕ್ಕೆ ಸಕರ್ಮಕ ವಾಕ್ಯದ ‘ನಿ’ ನಾಮಪದ ಸಮಾನವಾಗಿರುವುದಾದರೆ, ಬೇರೆ ಕೆಲವು ಭಾಷೆಗಳಲ್ಲಿ ‘ಕ’ ನಾಮಪದ ಸಮಾನವಾಗಿರುತ್ತದೆ. ಈ ಸಮಾನತೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯ, ಅವಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧ, ಮೊದಲಾದವುಗಳನ್ನು ಅವಲಂಬಿಸಿದೆ.
ಕೆಲವು ಭಾಷೆಗಳಲ್ಲಿ ಈ ಎರಡು ರೀತಿಯ ವ್ಯವಸ್ಥೆಗಳೂ ಒಟ್ಟಾಗಿ ಕಾಣಿಸಿ ಕೊಳ್ಳುತ್ತವೆ. ಉದಾಹರಣೆಗಾಗಿ, ಹಿಂದೀ ಭಾಷೆಯಲ್ಲಿ ಅಪೂರ್ಣ ಸಮಯದ ವಾಕ್ಯಗಳಲ್ಲಿ ಮೊದಲನೆಯ ವ್ಯವಸ್ಥೆ ಕಾಣಿಸುತ್ತದೆ ಮತ್ತು ಪೂರ್ಣ ಸಮಯದ ವಾಕ್ಯಗಳಲ್ಲಿ ಎರಡನೆಯ ವ್ಯವಸ್ಥೆ ಕಾಣಿಸುತ್ತದೆ.

(ಅ) ಮೊದಲನೆಯ ವ್ಯವಸ್ಥೆಗೆ ಉದಾಹರಣೆ:

(17ಕ) ರಾಮ್ ಸೋತಾ ಹೈ ‘ರಾಮ ನಿದ್ರಿಸುತ್ತಿದ್ದಾನೆ’ (18ಕ) ರಾಮ್ ಕಿತಾಬ್ ಪಢ್ತಾ ಹೈ ‘ರಾಮ ಪುಸ್ತಕ ಓದುತ್ತಿದ್ದಾನೆ’

(18ಕ)  ಸಕರ್ಮಕ  ವಾಕ್ಯದಲ್ಲಿ  ‘ನಿ’  ನಾಮಪದವಾಗಿ  ಬಂದಿರುವ  ರಾಮ್  ಎಂಬುದು  (17ಕ)  ಅಕರ್ಮಕ  ವಾಕ್ಯದಲ್ಲಿ  ‘ಸ’  ನಾಮಪದವಾಗಿ  ಬಂದಿರುವ  ರಾಮ್  ಪದಕ್ಕೆ  ಸಮನಾಗಿದೆಯೆಂದು  ಹೇಳಬಹುದು.  ಯಾಕೆಂದರೆ,  (17ಕ)  ವಾಕ್ಯದ  ಕ್ರಿಯಾಪದವು  ‘ಸ’  ನಾಮಪದದ  ಪುರುಷ-ಲಿಂಗ-ವಚನಗಳನ್ನು   ತೋರಿಸುತ್ತದೆ  ಮತ್ತು  (18ಕ)  ವಾಕ್ಯದ  ಕ್ರಿಯಾಪದವು  ‘ನಿ’  ನಾಮಪದದ  (ರಾಮ್ ಎಂಬುದರ) ಪುರುಷ-ಲಿಂಗ-ವಚನಗಳನ್ನು ತೋರಿಸುತ್ತದೆ.  

(ಆ) ಎರಡನೆಯ ವ್ಯವಸ್ಥೆಗೆ ಉದಾಹರಣೆ:

(17ಖ) ರಾಮ್ ಸೋಯಾ

‘ರಾಮ ನಿದ್ದೆಮಾಡಿದ’ (18ಖ) ರಾಮ್ ನೇ ಕಿತಾಬ್ ಪಢೀ

‘ರಾಮ ಪುಸ್ತಕ ಓದಿದ’

(18ಖ)  ಸಕರ್ಮಕ  ವಾಕ್ಯದಲ್ಲಿ  ‘ನಿ’  ನಾಮಪದವಾಗಿ  ಬಂದಿರುವ  ರಾಮ್  ಎಂಬುದು  (17ಖ)  ಅಕರ್ಮಕ  ವಾಕ್ಯದ  ‘ಸ’  ನಾಮಪದಕ್ಕೆ  (ರಾಮ್  ಎಂಬು  ದಕ್ಕೆ)  ಸಮನಾಗಿಲ್ಲ  ಎಂಬುದನ್ನು  ಗಮನಿಸಬಹುದು.  ಅದು  ನೇ  ಎಂಬ  ವಿಶಿಷ್ಟವಾದ  ವಿಭಕ್ತಿ  ಪ್ರತ್ಯಯ(ಉಪಸಗ್ರ)ದೊಂದಿಗೆ  ಬಂದಿದೆ,  ಮತ್ತು  ಆ  ವಾಕ್ಯದ ಕ್ರಿಯಾಪದ ಅದರ ಲಿಂಗ-ವಚನಗಳನ್ನು ತೋರಿಸುತ್ತಿಲ್ಲ.  
ಇದಕ್ಕೆ  ಬದಲು,  (18ಖ)  ವಾಕ್ಯದ  ಕ್ರಿಯಾಪದ  ಆ  ವಾಕ್ಯದ  ‘ಕ’  ನಾಮ  ಪದವಾಗಿ ಬಂದಿರುವ ಕಿತಾಬ್ ಎಂಬುದರ ಲಿಂಗ-ವಚನಗಳನ್ನು ಸೂಚಿಸುತ್ತದೆ.  ಎಂದರೆ,  ಈ  (17ಖ-18ಖ)  ವಾಕ್ಯಗಳಲ್ಲಿ  ಅಕರ್ಮಕ  ವಾಕ್ಯದ  ‘ಸ’  ನಾಮ  ಪದಕ್ಕೆ  (ಕಿತಾಬ್  ಎಂಬುದಕ್ಕೆ)  ಸಕರ್ಮಕ  ವಾಕ್ಯದ  ‘ಕ’  ನಾಮಪದ  (ರಾಮ್  ಎಂಬುದು) ಸಮನಾಗಿದೆ. 
ಮೊದಲನೆಯ ವ್ಯವಸ್ಥೆಯನ್ನು ಬಳಸುವ ಸಕರ್ಮಕ ವಾಕ್ಯಗಳಲ್ಲಿ ‘ನಿ’ ನಾಮ  ಪದವನ್ನು  ಸಬ್ಜೆಕ್್ಟ  ಎಂದೂ  ಎರಡನೆಯ  ವ್ಯವಸ್ಥೆಯನ್ನು  ಬಳಸುವ  ಸಕರ್ಮಕ  ವಾಕ್ಯಗಳಲ್ಲಿ  ‘ಕ’  ನಾಮಪದವನ್ನು  ಸಬ್ಜೆಕ್್ಟ  ಎಂದೂ  ಪರಿಗಣಿಸಬೇಕೆಂಬುದು  ಕೆಲವರ  ಅಭಿಪ್ರಾಯ.  ಆದರೆ,  ಬೇರೆ  ಕೆಲವರ  ಅಭಿಪ್ರಾಯದಂತೆ  ಈ  ಎರಡು  ರೀತಿಯ  ವ್ಯವಸ್ಥೆಗಳಲ್ಲೂ  ಸಕರ್ಮಕ  ವಾಕ್ಯದ  ‘ನಿ’  ನಾಮಪದವನ್ನೇ  ಸಬ್ಜೆಕ್್ಟ  ಎಂಬುದಾಗಿ ಪರಿಗಣಿಸಬೇಕು (ಜಾಸ್ತಿ ವಿವರಗಳಿಗೆ ಡಿಕ್ಸನ್ 1994 ನೋಡಿ).   

Eke →

7.5.4 ಕನ್ನಡದ ವೈಶಿಷ್ಟ್ಯ

ಕನ್ನಡದ ಮಟ್ಟಿಗೆ ಹೇಳುವುದಾದರೆ, ಅದರ ವಾಕ್ಯಗಳು ಈ ಎರಡು ವ್ಯವಸ್ಥೆ ಗಳಿಗೂ ಸೇರದೆ ಅವುಗಳಿಂದ ಹೊರಗೆ ನಿಲ್ಲುತ್ತವೆ. ಹಾಗಾಗಿ ಅವುಗಳಲ್ಲಿ ಯಾವ ನಾಮಪದವನ್ನು ಸಬ್ಜೆಕ್್ಟ ಎಂಬುದಾಗಿ ಪರಿಗಣಿಸಬೇಕು ಎಂಬ ವಿಷಯ ದಲ್ಲಿ ನಿರ್ಧಾರಕ್ಕೆ ಬರಲು ತೊಂದರೆಯಾಗಿದೆ.
ಉದಾಹರಣೆಗಾಗಿ, ಕನ್ನಡದಲ್ಲಿ ಅನೈಚ್ಛಿಕ ಘಟನೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಆ ಘಟನೆಯ ಮೂಲಕ ಒಂದು ಅನುಭವವನ್ನು ಪಡೆಯುವಂತಿದ್ದರೆ ಅವನ್ನು ಚತುರ್ಥೀ ವಿಭಕ್ತಿಯ ಮೂಲಕ ಸೂಚಿಸುವ ಕ್ರಮವಿದೆ. ಹಾಗಾಗಿ ಅದರ ಅಕರ್ಮಕ ಮತ್ತು ಸಕರ್ಮಕ ವಾಕ್ಯಗಳೆರಡೂ ಎರಡು ಬೇರೆ ಬೇರೆ ರೀತಿ ಯವುಗಳಾಗಿ ಕಾಣಿಸಿಕೊಳ್ಳುತ್ತವೆ.

(19ಕ) ಅವನು ಹೆದರಿದ (19ಖ) ಅವನಿಗೆ ಹೆದರಿತು (20ಕ) ಅವನು ಕತೆ ಮರೆತ (20ಖ) ಅವನಿಗೆ ಕತೆ ಮರೆತಿತು

ಮೇಲೆ  (19ಕ)  ಮತ್ತು  (20ಕ)  ವಾಕ್ಯಗಳಲ್ಲಿ  ‘ಪ್ರಥಮಾ’  ವಿಭಕ್ತಿಯಲ್ಲಿ  ಬಂದಿರುವ  ಅವನು  ಪದವನ್ನು  ಸಬ್ಜೆಕ್್ಟ  ಎಂದು  ಕರೆಯಬಹುದು,  ಆದರೆ  (19ಖ)  ಮತ್ತು  (20ಖ)  ವಾಕ್ಯಗಳಲ್ಲಿ  ಚತುರ್ಥೀ  ವಿಭಕ್ತಿಯಲ್ಲಿ  ಬಂದಿರುವ  ಅವನಿಗೆ ಪದವನ್ನೂ ಹಾಗೆ ಕರೆಯಲು ಸಾಧ್ಯವೇ?  
ಈ  ಪ್ರಶ್ನೆಗೆ  ಉತ್ತರ  ಕೊಡುವುದು  ಯಾಕೆ  ಕಷ್ಟ  ಎಂಬುದನ್ನು  ಮೇಲೆಯೇ  ನೋಡಿರುವೆವು.  (20ಖ)  ವಾಕ್ಯದಲ್ಲಿ  ಕತೆ  ಎಂಬುದನ್ನು  ಸಬ್ಜೆಕ್್ಟ  ಎಂದು  ಪರಿಗಣಿಸಲು  ಸಾಧ್ಯ,  ಆದರೆ  (19ಖ)  ವಾಕ್ಯದಲ್ಲಿ  ಯಾವುದು  ಸಬ್ಜೆಕ್್ಟ?  ಅದರಲ್ಲಿ ಸಬ್ಜೆಕ್್ಟ ಎಂಬುದೇ ಇಲ್ಲ ಎಂದು ಹೇಳಿದೆವಾದರೆ, ಮೇಲೆ ವಿವರಿಸಿದ  ಅಕರ್ಮಕ-ಸಕರ್ಮಕ ವಾಕ್ಯ ವಿಭಜನೆಗೆ ಅದು ಅಪವಾದವಾಗಿ ನಿಲ್ಲುತ್ತದೆ. 
ನಿಜಕ್ಕೂ ಇಲ್ಲಿ ಗಮನಿಸಬೇಕಾಗಿರುವ ಸಂಗತಿಯೇನೆಂದರೆ, ಕನ್ನಡ ವಾಕ್ಯಗಳ  ಒಳರಚನೆಯನ್ನು  ವಿವರಿಸುವಲ್ಲಿ  ಸಕರ್ಮಕ  ಮತ್ತು  ಅಕರ್ಮಕ  ಎಂಬ  ವಿಭಜನೆ  ಗಿಂತಲೂ  ಐಚ್ಛಿಕ  ಮತ್ತು  ಅನೈಚ್ಛಿಕ  ಎಂಬ  ವಿಭಜನೆಯೇ  ಹೆಚ್ಚು  ಸಹಾಯಕ  ವಾಗುತ್ತದೆ.  ಇವುಗಳಲ್ಲಿ  ಎರಡನೆಯ  ವಿಭಜನೆ  ಮೊದಲನೆಯದನ್ನು  ಅಡ್ಡಕ್ಕೆ  ಕತ್ತರಿಸುವ ಕಾರಣ, ಅವುಗಳಲ್ಲಿ ಯಾವುದಾದರೂ ಒಂದನ್ನು ಮುಖ್ಯ ವಿಭಜನೆ  ಯಾಗಿ ಆರಿಸಿಕೊಳ್ಳುವ ಅವಶ್ಯಕತೆಯಿದೆ.  
ಕನ್ನಡದ ಮಟ್ಟಿಗೆ ಐಚ್ಛಿಕ-ಅನೈಚ್ಛಿಕ ವಿಭಜನೆಯೇ ಮುಖ್ಯವಾದ ವಿಭಜನೆ  (ಇದನ್ನು ಬೆಂಬಲಿಸುವ ಬೇರೊಂದು ವಿಷಯಕ್ಕೆ (7.5.5) ನೋಡಿ). ಹಾಗಾಗಿ,  ಸಕರ್ಮಕ-ಅಕರ್ಮಕ  ವಿಭಜನೆಯ  ಆಧಾರದ  ಮೇಲೆ  ನಿಂತಿರುವ  ಸಬ್ಜೆಕ್್ಟ  ಎಂಬ  ವ್ಯಾಕರಣತತ್ವವನ್ನು  ಕನ್ನಡಕ್ಕೆ  ಅನ್ವಯಿಸಲು  ಸಾಧ್ಯವಿಲ್ಲವೆಂದೇ  ಹೇಳ  ಬೇಕಾಗುತ್ತದೆ. ನಿಜಕ್ಕೂ ಅದು ಕನ್ನಡಕ್ಕೆ ಅವಶ್ಯವೂ ಇಲ್ಲ. 

Eke →

7.5.5 ಎರಡು ರೀತಿಯ ವ್ಯಾಕರಣ ಕಾರ್ಯಗಳು

ಕನ್ನಡ ವಾಕ್ಯಗಳಲ್ಲಿ ಕಾಣಿಸುವ ವ್ಯಾಕರಣ ಕಾರ್ಯಗಳನ್ನು ಎರಡು ವಗ್ರಗಳಾಗಿ ವಿಂಗಡಿಸಲು ಸಾಧ್ಯವಿದೆ. ಅವುಗಳಲ್ಲಿ ಮೊದಲನೆಯ ವಗ್ರಕ್ಕೆ ಸೇರಿದ ವ್ಯಾಕರಣ ಕಾರ್ಯಗಳನ್ನು ವಿವರಿಸಲು ನಾಮಪದಗಳ ವಿಭಕ್ತಿರೂಪಗಳನ್ನು (ಎಂದರೆ ವಿಭಕ್ತಿರೂಪಗಳು ಸೂಚಿಸುವಂತಹ ನಾಮಪದಗಳಿಗೂ ಕ್ರಿಯಾಪದಕ್ಕೂ ನಡು ವಿರುವ ಸಂಬಂಧವನ್ನು) ಬಳಸಿಕೊಳ್ಳುವ ಅವಶ್ಯಕತೆಯಿದೆ.
ಎರಡನೆಯ ವಗ್ರಕ್ಕೆ ಸೇರಿದ ವ್ಯಾಕರಣ ಕಾರ್ಯಗಳು ಇವುಗಳಿಗಿಂತ ತೀರ ಭಿನ್ನವಾಗಿದ್ದು, ಅವನ್ನು ವಿವರಿಸಲು ಭಾಷಾವ್ಯವಹಾರದಲ್ಲಿ ನಾಮಪದಗಳ ಸ್ಥಾನ ವೇನು ಎಂಬ ವಿಷಯವನ್ನು ಬಳಸಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಕ್ರಿಯಾಪದಗಳ ‘ಜೋಡಿಸುವ’ ರೂಪದ ಸಹಾಯದಿಂದ ಕನ್ನಡದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲು ಸಾಧ್ಯವಿದೆ. ಇದು ಮೊದಲನೆಯ ವಗ್ರಕ್ಕೆ ಸೇರುವ ವ್ಯಾಕರಣ ಕಾರ್ಯ.

(21ಕ) ಅವನು ಕಾಡಿಗೆ ಹೋದ (21ಖ) ಅವನು ಕಟ್ಟಿಗೆ ತಂದ (22) ಅವನು ಕಾಡಿಗೆ ಹೋಗಿ ಕಟ್ಟಿಗೆ ತಂದ

(21ಕ)  ಮತ್ತು  (21ಖ)  ವಾಕ್ಯಗಳನ್ನು  ಜೋಡಿಸುವುದರ  ಮೂಲಕ  (22)ನೇ ವಾಕ್ಯವನ್ನು ತಯಾರಿಸಲಾಗಿದೆ ಮತ್ತು ಇದಕ್ಕಾಗಿ (21ಕ) ವಾಕ್ಯದಲ್ಲಿ  ಬಂದಿರುವ  ಹೋದ  ಕ್ರಿಯಾಪದವನ್ನು  ಹೋಗಿ  ಎಂಬುದಾಗಿ  ಅದರ  ಜೋಡಿ  ಸುವ  ರೂಪಕ್ಕೆ    ಬದಲಾಯಿಸಲಾಗಿದೆ.  ಎಂತಹ  ವಾಕ್ಯಗಳನ್ನು  ಈ  ರೀತಿ  ಜೋಡಿಸಲು  ಸಾಧ್ಯ  ಎಂಬುದು  ಅವುಗಳಲ್ಲಿ  ಬರುವ  ನಾಮಪದ  ಮತ್ತು  ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಅವಲಂಬಿಸಿದೆ.  
ಜೋಡಿಕೊಳ್ಳುವ ವಾಕ್ಯಗಳೆರಡರಲ್ಲೂ ಒಂದು ಘಟನೆಯಲ್ಲಿ ಸ್ವೇಚ್ಛೆಯಿಂದ  ತೊಡಗಿರುವಂತಹ  ವ್ಯಕ್ತಿಯನ್ನು  ಗುರುತಿಸಲಾಗಿದೆಯಾದರೆ,  ಅವೆರಡೂ  ಒಬ್ಬನೇ  ವ್ಯಕ್ತಿಯನ್ನು  ಗುರುತಿಸುತ್ತಿರಬೇಕು  ಎಂಬ  ನಿಯಮ  ಕನ್ನಡದಲ್ಲಿದೆ.  ಕೆಳಗೆ  ಕೊಟ್ಟಿರುವ (23-26) ವಾಕ್ಯಗಳು ಈ ವಿಷಯವನ್ನು ಸ್ಪಷ್ಟಪಡಿಸುತ್ತವೆ. 

(23ಕ) ರಾಜು ಅಕ್ಕಿ ತಂದು ಬೇಯಿಸಿದ (23ಖ) *ರಾಜು ಅಕ್ಕಿ ತಂದು ಹರಿ ಬೇಯಿಸಿದ (24ಕ) ರಾಜು ಆ ನಾಯಿಯನ್ನು ಹಿಡಿಸಿ ಕೊಲ್ಲಿಸಿದ (24ಖ) *ರಾಜು ಆ ನಾಯಿಯನ್ನು ಹಿಡಿಸಿ ಹರಿ ಕೊಲ್ಲಿಸಿದ (25) ಮರ ಬಿದ್ದು ಮಾಡು ಮುರಿಯಿತು (26)

ರಾಜು ಬೊಬ್ಬೆ ಹಾಕಿ ಮಗುವಿಗೆ ಎಚ್ಚರವಾಯಿತು

(23ಕ-ಖ)  ಮತ್ತು  (24ಕ-ಖ)  ವಾಕ್ಯಗಳಲ್ಲಿ  ಒಟ್ಟು  ಸೇರಿರುವ  ಎರಡು  ಉಪವಾಕ್ಯಗಳಲ್ಲೂ  ಸ್ವೇಚ್ಛೆಯಿಂದ  ಘಟನೆಯಲ್ಲಿ  ತೊಡಗುವ  ವ್ಯಕ್ತಿಗಳನ್ನು  ಗುರುತಿಸಲಾಗಿದೆ.  (23ಕ)  ಮತ್ತು  (24ಕ)  ವಾಕ್ಯಗಳಲ್ಲಿ  ಇವು  ಒಬ್ಬನೇ  ವ್ಯಕ್ತಿ  ಯನ್ನು  (ರಾಜುವನ್ನು)  ಸೂಚಿಸುವುವಾದ  ಕಾರಣ  ಆ  ವಾಕ್ಯಗಳು  ವ್ಯಾಕರಣ  ಸಮ್ಮತವಾಗಿವೆ.  
ಆದರೆ  (23ಖ)  ಮತ್ತು(24ಖ)  ವಾಕ್ಯಗಳಲ್ಲಿ  ಅವು  ಬೇರೆ  ಬೇರೆ  ವ್ಯಕ್ತಿ  ಗಳನ್ನು  (ರಾಜು  ಮತ್ತು  ಹರಿ  ಎಂಬವರನ್ನು)  ಸೂಚಿಸುತ್ತವೆ.  ಹಾಗಾಗಿ,  ಆ  ವಾಕ್ಯಗಳು ವ್ಯಾಕರಣಸಮ್ಮತವಾಗಿಲ್ಲ.  
(25)ನೇ  ವಾಕ್ಯದಲ್ಲಿ  ಸ್ವೇಚ್ಛೆಯಿಂದ  ಘಟನೆಯಲ್ಲಿ  ತೊಡಗುವಂತಹ  ಯಾವ  ವ್ಯಕ್ತಿಯನ್ನೂ  ಗುರುತಿಸಿಲ್ಲವಾದ  ಕಾರಣ  ಆ  ವಾಕ್ಯ  ವ್ಯಾಕರಣ  ಸಮ್ಮತ 

ವಾಗಿದೆ; ಮರ ಮತ್ತು ಮಾಡು ಇವೆರಡೂ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವವುಗಳಲ್ಲ.
(26)ನೇ ವಾಕ್ಯದ ಮೊದಲನೆಯ ಉಪವಾಕ್ಯದಲ್ಲಿ ಮಾತ್ರ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವ ವ್ಯಕ್ತಿಯನ್ನು (ರಾಜುವನ್ನು) ಗುರುತಿಸಲಾಗಿದೆ; ಎರಡನೆಯ ವಾಕ್ಯದಲ್ಲಿ ಬಂದಿರುವ ಮಗು ಎಂಬುದು ಎಚ್ಚರವಾಗುವ ಘಟನೆ ಯಲ್ಲಿ ತೊಡಗಿದ್ದು, ಅದು ಸ್ವೇಚ್ಛೆಯಿಂದ ತೊಡಗುವ ಘಟನೆಯಲ್ಲ. ಹಾಗಾಗಿ, ಆ ವಾಕ್ಯ ವ್ಯಾಕರಣಸಮ್ಮತವಾಗಿದೆ. ಕನ್ನಡದಲ್ಲಿ ಈ ರೀತಿ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಅರ್ಥಸಂಬಂಧವನ್ನು ಬಳಸಿಕೊಳ್ಳುವ ವ್ಯಾಕರಣ ಕಾರ್ಯಗಳು ಇನ್ನೂ ಹಲವಿವೆ. ಇದಕ್ಕೆ ಬದಲು, ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯವನ್ನು ಬಳಸುವ ಎರಡನೇ ರೀತಿಯ ವ್ಯಾಕರಣ ಕಾರ್ಯಗಳೂ ಕನ್ನಡದಲ್ಲಿ ಹಲವಿವೆ.
ಉದಾಹರಣೆಗಾಗಿ, ಒಂದು ವಾಕ್ಯದಲ್ಲಿ ಬಂದಿರುವ ಅವನು, ಇವನು ಮೊದಲಾದ ಸವ್ರನಾಮ(ಪದ)ಗಳು ಯಾವ ನಾಮಪದದೊಂದಿಗೆ ಸಂಬಂಧಿಸಿವೆ ಎಂಬುದು ಆ ವಾಕ್ಯದಲ್ಲಿ ಅವು ಎಲ್ಲಿ ಬರುತ್ತವೆ ಎಂಬುದರ ಮೇಲೆ, ಎಂದರೆ ಯಾರ ವಿಷಯವಾಗಿ ಆ ವಾಕ್ಯವನ್ನು ಹೇಳಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅವಲಂಬಿಸಿದೆ.

(27ಕ) ರಾಜು ಹರಿಯನ್ನು ಕರೆಯಲಿಲ್ಲ, ಯಾಕೆಂದರೆ ಅವನು ಬರುವಾಗ

ಬಹಳ ತಡವಾಗಿತ್ತು.

(27ಖ) ಹರಿಯನ್ನು ರಾಜು ಕರೆಯಲಿಲ್ಲ, ಯಾಕೆಂದರೆ ಅವನು ಬರುವಾಗ

ಬಹಳ ತಡವಾಗಿತ್ತು.

ಅವನು ಸವ್ರನಾಮವು (27ಕ)ದಲ್ಲಿ ರಾಜುವನ್ನು ಗುರುತಿಸುತ್ತದೆ, ಆದರೆ  (27ಖ)ದಲ್ಲಿ  ಅದು  ಹರಿಯನ್ನು  ಗುರುತಿಸುತ್ತದೆ.  ಈ  ವ್ಯತ್ಯಾಸಕ್ಕೆ  ಕಾರಣ  ವೇನೆಂದರೆ, (27ಕ)ದ ಮೊದಲನೆಯ ಉಪವಾಕ್ಯ ರಾಜುವಿನ ಕುರಿತಾಗಿ ಒಂದು  ಸಂಗತಿಯನ್ನು  ತಿಳಿಸುತ್ತದೆ,  ಆದರೆ  (27ಖ)ದ  ಮೊದಲನೆಯ  ಉಪವಾಕ್ಯ  ಇದನ್ನು ಹರಿಯ ಕುರಿತಾಗಿ ತಿಳಿಸುತ್ತದೆ. 
ಈ ರೀತಿ ಜೋಡಿಸಿರುವ ಎರಡು ವಾಕ್ಯಗಳಲ್ಲಿ ಮೊದಲನೆಯದನ್ನು ಯಾರ  ವಿಷಯವಾಗಿ  ಹೇಳಲಾಗಿದೆ  ಎಂಬ  ‘ಭಾಷಾವ್ಯವಹಾರ’ಕ್ಕೆ  ಸಂಬಂಧಿಸಿದಂತಹ  ವಿಷಯವೇ  ಅದರಲ್ಲಿ  ಬರುವ  ಎರಡು  ನಾಮಪದಗಳಲ್ಲಿ  ಯಾವುದರೊಂದಿಗೆ  ಎರಡನೆಯ  ವಾಕ್ಯದಲ್ಲಿ  ಬರುವ  ಸವ್ರನಾಮವನ್ನು  ಸಂಬಂಧಿಸಬೇಕು  ಎಂಬು  ದನ್ನು ನಿರ್ಧರಿಸುವಲ್ಲಿ ಆಧಾರವಾಗುತ್ತದೆ. 

ಈ  ಎರಡು  (27ಕ-ಖ)  ವಾಕ್ಯಗಳ  ನಡುವೆ  ವಿಭಕ್ತಿ  ಪ್ರತ್ಯಯಗಳ  ಬಳಕೆ  ಯಲ್ಲಿ  ಯಾವ  ವ್ಯತ್ಯಾಸವೂ  ಕಾಣಿಸುವುದಿಲ್ಲವಾದುದರಿಂದ,  ಅವುಗಳ  ನಡುವಿನ  ವ್ಯತ್ಯಾಸಕ್ಕೆ  ‘ಅರ್ಥ  ಸಂಬಂಧ’ದಲ್ಲಿರುವ  ವ್ಯತ್ಯಾಸ  ಕಾರಣವಾಗಲು  ಸಾಧ್ಯವಿಲ್ಲ  ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. 
ಇಂಗ್ಲಿಷ್  ಮತ್ತು  ಸಂಸ್ಕೃತ  ಭಾಷೆಗಳು  ಈ  ವಿಷಯದಲ್ಲಿ  ಕನ್ನಡಕ್ಕಿಂತ  ಭಿನ್ನವಾಗಿವೆ. ಯಾಕೆಂದರೆ, ಈ ಎರಡು ಭಾಷೆಗಳಲ್ಲೂ ಮೇಲೆ ವಿವರಿಸಿದಂತಹ  ಎರಡು  ರೀತಿಯ  ವ್ಯಾಕರಣ  ಕಾರ್ಯಗಳನ್ನು  ಕನ್ನಡದ  ಹಾಗೆ  ಬೇಪ್ರಡಿಸಲು  ಸಾಧ್ಯವಾಗದು.  ಹಾಗಾಗಿ,  ಅವುಗಳಲ್ಲಿ  ಬಳಕೆಯಾಗುವ  ಎಲ್ಲಾ  ರೀತಿಯ  ವ್ಯಾಕರಣ  ಕಾರ್ಯಗಳನ್ನೂ  ಕಲ್ಪಿತವಾದ  ವ್ಯಾಕರಣ  ಸಂಬಂಧಗಳ  ಮೂಲಕವೇ  ವಿವರಿಸಬೇಕಾಗುತ್ತದೆ. 
ಇಂಗ್ಲಿಷ್  ವ್ಯಾಕರಣಗಳಲ್ಲಿ  ‘ಸಬ್ಜೆಕ್್ಟ’  ಎಂಬ  ಕಲ್ಪಿತವಾದ  ವ್ಯಾಕರಣ  ಸಂಬಂಧವನ್ನು ಆ ಭಾಷೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾರ್ಯಗಳ  ಠಿivoಣ  ಎಂದರೆ  ‘ನಿಯಂತ್ರಕ’  ಎಂಬುದಾಗಿ  ಪರಿಗಣಿಸುವ  ಅವಶ್ಯಕತೆ  ಕಂಡುಬಂದಿದೆ.  ಸಂಸ್ಕೃತದಲ್ಲಿಯೂ  ‘ಕರ್ತೃಕಾರಕ’  ಎಂಬ  ಕಲ್ಪಿತವಾದ  ವ್ಯಾಕರಣ  ಸಂಬಂಧ  ವನ್ನು  ಆ  ಭಾಷೆಯಲ್ಲಿ  ಬಳಕೆಯಾಗುವ  ಹೆಚ್ಚಿನ  ವ್ಯಾಕರಣ  ಕಾರ್ಯಗಳಿಗೂ  ನಿಯಂತ್ರಕವಾಗಿ ಬಳಸಬೇಕಾಗಿದೆ.  
ಆದರೆ  ಕನ್ನಡದಲ್ಲಿ  ಬಳಕೆಯಾಗುವ  ವ್ಯಾಕರಣ  ಕಾರ್ಯಗಳನ್ನು  ಮೇಲೆ  ವಿವರಿಸಿದ  ಹಾಗೆ  ನೇರವಾಗಿ  (1)  ನಾಮಪದಕ್ಕೂ  ಕ್ರಿಯಾಪದಕ್ಕೂ  ನಡುವಿರುವ  ಸಂಬಂಧಗಳ  ಮೂಲಕ  ಇಲ್ಲವೇ  (2)  ಭಾಷಾವ್ಯವಹಾರಕ್ಕೆ  ಸಂಬಂಧಿಸಿದ  ವಿಷಯದ  ಆಧಾರದ  ಮೇಲೆ  ವರ್ಣಿಸಲು  ಸಾಧ್ಯವಿದೆಯಾದ  ಕಾರಣ  ಅದಕ್ಕೆ  ವ್ಯಾಕರಣ  ಸಂಬಂಧಗಳ  (ಸಬ್ಜೆಕ್್ಟ,  ಆಬ್ಜೆಕ್್ಟ  ಮೊದಲಾದವುಗಳ  ಇಲ್ಲವೇ  ಕರ್ತೃ, ಕರ್ಮ ಮೊದಲಾದ ಕಾರಕಗಳ) ಅವಶ್ಯಕತೆಯಿಲ್ಲ (ಜಾಸ್ತಿ ವಿವರಗಳಿಗೆ  ಭಟ್ 1991 ನೋಡಿ).  

Eke →

7.6 ತಿರುಳು

ಕನ್ನಡದ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಎರಡು ವ್ಯಾಕರಣ ತತ್ವಗಳನ್ನು ಬಳಸುವುದು ರೂಡಿ. ಸ್ವಲ್ಪ ಆಳವಾಗಿ ವಿಚಾರಿಸಿದಾಗ, ಈ ಎರಡು ವ್ಯಾಕರಣ ತತ್ವಗಳು ಸಂಸ್ಕೃತಕ್ಕೆ ಅವಶ್ಯವೆಂಬುದು ನಿಜವಾದರೂ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ, ಎಂದರೆ ವಿಭಕ್ತಿ ಮಾತ್ರ ಅವಶ್ಯ, ಕಾರಕ ಎಂಬುದರ ಅವಶ್ಯಕತೆಯಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಕನ್ನಡದಲ್ಲಿ ವಿಭಕ್ತಿಗಳನ್ನು ಅವು ಸೂಚಿಸಬೇಕಾಗಿರುವ ಅರ್ಥದೊಂದಿಗೆ (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬ

ವಿಷಯದೊಂದಿಗೆ) ನೇರವಾಗಿ ಸಂಬಂಧಿಸಲು ಸಾಧ್ಯ ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ ಎಂಬುದೇ ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ.
ವಾಕ್ಯರಚನೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾರ್ಯಗಳನ್ನು ವರ್ಣಿಸು ವಲ್ಲೂ ಸಂಸ್ಕೃತಕ್ಕೆ ಕಾರಕಗಳ ಅವಶ್ಯಕತೆಯಿದೆ ಆದರೆ ಕನ್ನಡಕ್ಕೆ ಇದರ ಅವಶ್ಯಕತೆಯಿಲ್ಲ. ಇಂಗ್ಲಿಷ್ ಮೊದಲಾದ ಕೆಲವು ಪಾಶ್ಚಾತ್ಯ ಭಾಷೆಗಳಿಗೂ ಸಂಸ್ಕೃತದ ಹಾಗೆ ಎರಡು ವಿಧವಾದ ವ್ಯಾಕರಣ ತತ್ವಗಳು (ವಿಭಕ್ತಿಗಳು ಮತ್ತು ಸಬ್ಜೆಕ್್ಟ, ಆಬ್ಜೆಕ್್ಟ ಮೊದಲಾದ ವ್ಯಾಕರಣ ಸಂಬಂಧಗಳು) ಮೇಲೆ ವಿವರಿಸಿದ ಕಾರಣಕ್ಕಾಗಿಯೇ ಅವಶ್ಯವೆಂದು ಕಂಡುಬಂದಿದೆ. ಆದರೆ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ ಎಂದರೆ ವಿಭಕ್ತಿಗಳು ಮಾತ್ರ ಇದ್ದರೆ ಸಾಕು. ಸಬ್ಜೆಕ್್ಟ, ಆಬ್ಜೆಕ್್ಟ, ಮೊದಲಾದ ವ್ಯಾಕರಣ ಸಂಬಂಧಗಳ ಅವಶ್ಯಕತೆ ಕನ್ನಡಕ್ಕಿಲ್ಲ.
ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಅಂತಹ ವ್ಯಾಕರಣ ತತ್ವಗಳನ್ನು ಕಲ್ಪಿಸಿ ಕೊಳ್ಳಲು ಪ್ರಯತ್ನಿಸಿದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.