Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
12. ಮುಕ್ತಾಯ
12.1 ವ್ಯತ್ಯಾಸಗಳ ಮೂಲ
ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳುವುದೇ ಈ ಪುಸ್ತಕದ ಮುಖ್ಯ ಉದ್ದೇಶ.
ಕನ್ನಡದಲ್ಲಿ ಇದುವರೆಗೆ ತಯಾರಾಗಿರುವ ವ್ಯಾಕರಣಗಳಲ್ಲಿ ಹೆಚ್ಚಿನವೂ ಸಂಸ್ಕೃತದ ವ್ಯಾಕರಣ ಪರಂಪರೆಯನ್ನೇ ಅವಲಂಬಿಸಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸುವುದು ಹೇಗೆ ಎಂಬುದನ್ನು ಮಾತ್ರ ಈ ವ್ಯಾಕರಣಗಳು ಪರಿಶೀಲಿಸಿವೆ. ಆದರೆ, ನಿಜಕ್ಕೂ ಕನ್ನಡದ ಪದಗಳ ಮತ್ತು ವಾಕ್ಯಗಳ ಒಳರಚನೆಯಲ್ಲಿ ಬಳಕೆಯಾಗುವ ನಿಯಮಗಳು ಸಂಸ್ಕೃತದಲ್ಲಿ ಬಳಕೆಯಾಗುವ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆ. ಈ ಪದಗಳನ್ನು ಮತ್ತು ವಾಕ್ಯಗಳನ್ನು ಕನ್ನಡದ್ದೇ ಆದ ದೃಷ್ಟಿಕೋನದಿಂದ ಪರಿಶೀಲಿಸಿದಾಗ ಮಾತ್ರ, ಅವುಗಳ ಹಿಂದಿರುವ ವ್ಯಾಕರಣ ನಿಯಮಗಳ ನಿಜವಾದ ಸ್ವರೂಪವೇನು ಎಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತದ ವ್ಯಾಕರಣದ ದೃಷ್ಟಿಕೋನದಿಂದ ಪರಿಶೀಲಿಸಿದಲ್ಲಿ ಅವು ಅಸ್ಪಷ್ಟವಾಗಿ ಮಾತ್ರವೇ ಕಾಣಿಸಬಲ್ಲುವು.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವು ಬಳಸುವ ವ್ಯಾಕರಣ ನಿಯಮಗಳಲ್ಲಿ ಕಾಣಿಸುವ ಇಂತಹ ಹಲವು ರೀತಿಯ ವ್ಯತ್ಯಾಸಗಳನ್ನು ನಾನು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ.
ಆದರೆ, ಈ ಎರಡು ಭಾಷೆಗಳ ನಡುವಿರುವ ವ್ಯತ್ಯಾಸಗಳನ್ನೆಲ್ಲ ಕೂಲಂಕಶ ವಾಗಿ ಪಟ್ಟಿಮಾಡಿ ಹೇಳುವುದು ಈ ಪುಸ್ತಕದ ಉದ್ದೇಶವಲ್ಲ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಹೋದರೆ ಹೇಗೆ ತೊಂದರೆ ಯುಂಟಾಗಬಲ್ಲುದು ಎಂಬುದನ್ನು ಮನಮುಟ್ಟುವಂತೆ ತೋರಿಸಿ ಕೊಡುವುದಷ್ಟೇ ನನ್ನ ಉದ್ದೇಶ. ಹಾಗಾಗಿ ಈ ಉದ್ದೇಶವನ್ನು ಸಾಧಿಸುವುದಕ್ಕೆ ಬೇಕಾಗುವಷ್ಟು ವಿಷಯಗಳನ್ನು ಮಾತ್ರ ನಾನು ಇಲ್ಲಿ ಕೊಟ್ಟಿದ್ದೇನೆ.
ಸಂಸೃತ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿರುವುದೇ ಅವುಗಳ ವ್ಯಾಕರಣ ನಿಯಮಗಳಲ್ಲಿ ಇಷ್ಟೊಂದು ವ್ಯತ್ಯಾಸಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ. ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಮೂಲದಿಂದ ಬೆಳೆದು ಬಂದಿದೆ; ಆದರೆ ಕನ್ನಡ ಭಾಷೆ ಅದಕ್ಕಿಂತ ತೀರ ಭಿನ್ನ ವಾಗಿರುವ ದ್ರಾವಿಡ ಮೂಲದಿಂದ ಬೆಳೆದು ಬಂದಿದೆ (ಭಟ್ 2005ಕ ನೋಡಿ).
ಮನಸ್ಸಿನಲ್ಲಿರುವ ಇಂಗಿತವನ್ನು ಇನ್ನೊಬ್ಬರಿಗೆ ತಿಳಿಸುವುದಕ್ಕಾಗಿ ಮತ್ತು ಪ್ರಶ್ನಿಸುವುದು, ವಿಧಿಸುವುದು, ಸಂಶಯಿಸುವುದು ಮೊದಲಾದ ಹಲವು ರೀತಿಯ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ನಾವು ಭಾಷೆಯನ್ನು ಬಳಸುತ್ತೇವೆ. ಇವನ್ನು ನಡೆಸಲು ಎಲ್ಲಾ ಭಾಷೆಗಳೂ ಒಂದೇ ಬಗೆಯ ವ್ಯಾಕರಣ ವಿಧಾನ ಗಳನ್ನು ಬಳಸುವುದಿಲ್ಲ, ಬೇರೆ ಬೇರೆ ಬಗೆಯ ವ್ಯಾಕರಣ ವಿಧಾನಗಳನ್ನು ಬಳಸು ತ್ತವೆ.
ಇದಕ್ಕಾಗಿ ಇಂಡೋ-ಯುರೋಪಿಯನ್ ಮತ್ತು ದ್ರಾವಿಡ ಭಾಷಾಮೂಲ ಗಳು ಬೇರೆ ಬೇರೆ ವಿಧಾನಗಳನ್ನು ಆರಿಸಿಕೊಂಡಿದ್ದಿರಬೇಕು ಮತ್ತು ಹಾಗಾಗಿ, ಪ್ರಾರಂಭದಲ್ಲೇನೇ ಅವು ಒಂದಕ್ಕಿಂತ ಒಂದು ತೀರಾ ಭಿನ್ನವಾಗಿದ್ದಿರಬೇಕು. ಅನಂತರ ಈ ವಿಧಾನಗಳು ಆ ಎರಡು ಮೂಲಗಳಿಂದ ಬೆಳೆದು ಬಂದಿರುವ ಸಂಸ್ಕೃತ, ಕನ್ನಡ ಮೊದಲಾದ ಭಾಷೆಗಳ ಸಾವಿರಾರು ವಷ್ರಗಳ ಚರಿತ್ರೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಬದಲಾಗುತ್ತಾ ಬಂದಿರಬೇಕು.
ಅನಂತರದ ಕಾಲದಲ್ಲಿ ಕನ್ನಡ ಭಾಷೆ ಸಂಸ್ಕೃತದ ಸಂಪಕ್ರಕ್ಕೆ ಬಂದುದ ರಿಂದಾಗಿ ಕೆಲವು ವಿಷಯಗಳಲ್ಲಿ ಸಂಸ್ಕೃತದೊಂದಿಗೆ ಹೋಲಿಕೆಯನ್ನು ಪಡೆದಿದೆ ಯಾದರೂ ಹೆಚ್ಚಿನ ವಿಷಯಗಳಲ್ಲೂ ಅದು ತನ್ನ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆ.
ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರಿರುವ ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸುವ ಬದಲು ಬೇರೆ ಯಾವುದಾದರೂ ಒಂದು ದ್ರಾವಿಡ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸಿ ಕನ್ನಡದ ವ್ಯಾಕರಣವನ್ನು ರಚಿಸಿದಲ್ಲಿ ಅದು ಕನ್ನಡದ ಪದರಚನೆಯ ಮತ್ತು ವಾಕ್ಯರಚನೆಯ ನಿಯಮಗಳನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸರಿಯಾಗಿ ತಿಳಿಸಬಲ್ಲುದು.
ಆದರೆ ಅಂತಹ ವ್ಯಾಕರಣ ಪರಂಪರೆಯಿನ್ನೂ ಸಿದ್ಧವಾಗಿಲ್ಲ. ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ಭಾಷೆಗಳ ವ್ಯಾಕರಣಗಳೂ ಬಹಳ ಮಟ್ಟಿಗೆ ಸಂಸ್ಕೃತ ಇಲ್ಲವೇ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲೇನೇ ತಯಾ ರಾಗಿದ್ದು ಅವೂ ಕನ್ನಡದ ವ್ಯಾಕರಣಗಳ ಹಾಗೆಯೇ ಅಸಮಪ್ರಕಗಳಾಗಿವೆ. ಹಾಗಾಗಿ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ತಯಾರಿಸಿ ಕೊಳ್ಳುವುದೊಂದೇ ನಮಗೆ ಉಳಿದಿರುವ ದಾರಿ.
12.2 ಹೊಸ ದೃಷ್ಟಿಕೋನ
ಕನ್ನಡ ವ್ಯಾಕರಣದ ಮೇಲೆ ಲೇಖನ ಇಲ್ಲವೇ ಪುಸ್ತಕಗಳನ್ನು ಬರೆಯುವವರು ಈ ಕಾರಣಕ್ಕಾಗಿ ಒಂದು ಹೊಸ ದೃಷ್ಟಿಕೋನವನ್ನು ಬಳಸಿಕೊಳ್ಳುವ ಅವಶ್ಯಕತೆ ಯಿದೆ. ಕನ್ನಡದ ಲೇಖಕರಲ್ಲಿ ಸಾಮಾನ್ಯವಾಗಿ ವ್ಯಾಖ್ಯಾನಕಾರರ ದೃಷ್ಟಿಕೋನವೇ ಕಾಣಿಸುತ್ತಿದೆ. ನಾಗವರ್ಮ, ಕೇಶಿರಾಜ ಮೊದಲಾದ ಕನ್ನಡದ ವೈಯಾಕರಣಿಗಳು
ನಿಜಕ್ಕೂ ಏನು ಹೇಳಿದ್ದರು, ಅವರ ಹೇಳಿಕೆಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಪಟ್ಟಿಮಾಡಿ ವಿವರಿಸುವುದೇ ಇವರು ಇವತ್ತು ಮಾಡುತ್ತಿರುವ ‘ಸಂಶೋಧನೆ’ಗಳು.
ಈ ರೀತಿ ಹಿಂದಿನ ವೈಯಾಕರಣಿಗಳ ಗ್ರಂಥಗಳನ್ನು ವಿಮಶ್ರಿಸುವುದು ಅವಶ್ಯವಾದರೂ ಕನ್ನಡ ವ್ಯಾಕರಣದ ಮಟ್ಟಿಗೆ ಅವು ನಮ್ಮನ್ನು ಹೆಚ್ಚು ಮುಂದಕ್ಕೆ ಕೊಂಡೊಯ್ಯಲಾರವು. ಯಾಕೆಂದರೆ, ಕನ್ನಡದ ಹಳೆಯ ವ್ಯಾಕರಣಗಳೆಲ್ಲ ಸಂಸ್ಕೃತ ವ್ಯಾಕರಣದ ದೃಷ್ಟಿಕೋನವನ್ನಿರಿಸಿಕೊಂಡಿವೆ; ಹಾಗಾಗಿ, ಅವು ಕನ್ನಡ ವ್ಯಾಕರಣದ ನಿಜವಾದ ಸ್ವರೂಪವನ್ನು ವಿವರಿಸಿ ಹೇಳಲಾರವು.
ಉದಾಹರಣೆಗಾಗಿ, ನಮ್ಮ ವೈಯಾಕರಣಿಗಳು ಕನ್ನಡದಲ್ಲಿ ಎಂತಹ ಸಮಾಸ ಗಳೆಲ್ಲ ಇವೆ ಎಂಬುದನ್ನು ವರ್ಣಿಸುವ ಕ್ರಮ ಹೇಗೆ ಎಂಬುದನ್ನು ಗಮನಿಸ ಬಹುದು. ಮೊದಲಿಗೆ ಸಂಸ್ಕೃತದಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ವಿವರಿಸಿ ಅವಕ್ಕೆ ಕನ್ನಡದಿಂದ ಉದಾಹರಣೆಗಳನ್ನು ಕೊಡಲು ಅವರು ಪ್ರಯತ್ನಿಸು ತ್ತಾರೆ. ಅನಂತರ ಈ ಸಮಾಸಗಳಲ್ಲಿ ಒಂದಕ್ಕೂ ಉದಾಹರಣೆಯಾಗಲಾರದ ಜೋಡುಪದಗಳು ಕನ್ನಡದಲ್ಲಿ ಕಾಣಿಸುತ್ತಿವೆಯಾದರೆ ಅವು ಎಂತಹ ಸಮಾಸ ಗಳಿಗೆ ಉದಾಹರಣೆಗಳಾಗಬಲ್ಲುವು ಎಂಬ ಪ್ರಶ್ನೆಗೆ ಇಳಿಯುತ್ತಾರೆ.
ಇದರಿಂದಾಗಿ ಕನ್ನಡ ವ್ಯಾಕರಣ ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ಒಂದು ತೇಪೆಕೆಲಸವಾಗಿದೆ. ಈ ಸಂಸ್ಕೃತ ವ್ಯಾಕರಣದ ದೃಷ್ಟಿಕೋನವನ್ನು ಬಿಟ್ಟು ಕೊಟ್ಟು, ನೇರವಾಗಿ ಕನ್ನಡದ ಜೋಡುಪದಗಳನ್ನು ಒಂದೆಡೆ ಕಲೆಹಾಕಿ ಅವುಗಳಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ಮಾತ್ರವೇ ಪರಿಶೀಲಿಸಿದೆ ವಾದರೆ ನಮಗೆ ಕನ್ನಡದ ನಿಜವಾದ ಸಮಾಸಗಳಾವುವು ಎಂಬ ಪ್ರಶ್ನೆಗೆ ಸರಿ ಯಾದ ಮತ್ತು ಸ್ಪಷ್ಟವಾದ ಉತ್ತರ ದೊರೆತೀತು (ಭಟ್ 2002 ನೋಡಿ). ಇದೇ ರೀತಿಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ಹಲವು ರೀತಿಯ ವಾಕ್ಯ ಗಳನ್ನು ಒಂದೆಡೆ ಸಂಗ್ರಹಿಸಿ, ಅವುಗಳಲ್ಲಿ ಬರುವ ನಾಮಪದಗಳನ್ನು ಕ್ರಿಯಾಪದ ಗಳೊಂದಿಗೆ ಸಂಬಂಧಿಸಲು ಎಂತಹ ಪ್ರತ್ಯಯಗಳೆಲ್ಲ ಬೇಕಾಗುತ್ತವೆ, ಮತ್ತು ಈ ಪ್ರತ್ಯಯಗಳು ಎಂತಹ ಸಂಬಂಧಗಳನ್ನೆಲ್ಲ ಸೂಚಿಸಬಲ್ಲುವು ಎಂಬುದನ್ನು ಪರಿಶೀಲಿಸಿದಲ್ಲಿ ಕನ್ನಡದಲ್ಲಿ ಎಷ್ಟು ವಿಭಕ್ತಿಗಳು ಬಳಕೆಯಲ್ಲಿವೆ ಮತ್ತು ಅವುಗಳ ಕಾರ್ಯವೆಂತಹದು ಎಂಬ ವಿಷಯ ಸ್ಪಷ್ಟವಾದೀತು (ಭಟ್ 1978, 2004 ನೋಡಿ).
ಇದಕ್ಕೆ ಬದಲು ನಮ್ಮ ವೈಯಾಕರಣಿಗಳು ಮಾಡುವ ಹಾಗೆ ಸಂಸ್ಕೃತದ ವಿಭಕ್ತಿಗಳಾವುವು, ಅವುಗಳ ಕಾರ್ಯವೇನು, ಕಾರಕಗಳಿಗೂ ಅವಕ್ಕೂ ನಡುವೆ ಎಂತಹ ಸಂಬಂಧವಿದೆ, ಮೊದಲಾದ ವಿಷಯಗಳನ್ನು ಮೊದಲು ತಿಳಿದುಕೊಂಡು ಅನಂತರ ಕನ್ನಡಕ್ಕೆ ಅವನ್ನು ಹೊಂದಿಸುವ ಬಗೆ ಹೇಗೆ ಎಂಬುದಾಗಿ ಆಲೋಚಿಸಿ ದಲ್ಲಿ ಕನ್ನಡದ ಮಟ್ಟಿಗೆ ಒಂದು ತೀರಾ ವಿಚಿತ್ರವಾದ ವ್ಯಾಕರಣ ಸಿದ್ಧವಾದೀತು (ಮತ್ತು ಸಿದ್ಧವಾಗಿದೆ).
ಒಂದು ಭಾಷೆಯ ವ್ಯಾಕರಣವನ್ನು ಅರ್ಥಮಾಡಿಕೊಳ್ಳುವ ಸಂದಭ್ರದಲ್ಲಿ ಇನ್ನೊಂದು ಭಾಷೆಯ ವ್ಯಾಕರಣ ಹೇಗಿದೆಯೆಂದು ತಿಳಿದುಕೊಳ್ಳುವುದರಿಂದ ಸ್ವಲ್ಪವೂ ಪ್ರಯೋಜನವಿಲ್ಲವೆಂದೇನೂ ನಾನು ಹೇಳುತ್ತಾ ಇಲ್ಲ. ಹೆಚ್ಚು ಹೆಚ್ಚು ಭಾಷೆಗಳ ವ್ಯಾಕರಣಗಳನ್ನು ಅಭ್ಯಾಸ ಮಾಡಿದಷ್ಟೂ ನಮ್ಮ ಭಾಷೆಯ ವ್ಯಾಕರಣ ವನ್ನು ತಿಳಿದುಕೊಳ್ಳುವ ಕೆಲಸ ಹೆಚ್ಚು ಹೆಚ್ಚು ಸುಲಭವಾಗಬಲ್ಲುದು.
ಆದರೆ ಬೇರೆ ಬೇರೆ ಭಾಷೆಗಳ ವ್ಯಾಕರಣಗಳು ಬೇರೆ ಬೇರಾಗಿರಲು ಸಾಧ್ಯ ಎಂಬ ವಿಷಯವನ್ನು ಮರೆಯದಿರುವುದು ಅವಶ್ಯ. ಹಲವು ಭಾಷೆಗಳ ವ್ಯಾಕರಣ ಗಳನ್ನು ಅಭ್ಯಾಸ ಮಾಡಿದಾಗ ವ್ಯಾಕರಣಗಳು ಹೇಗಿರಬಹುದು ಎಂಬ ವಿಷಯ ನಮಗೆ ತಿಳಿಯುತ್ತದೆ. ಈ ತಿಳುವಳಿಕೆಯ ಆಧಾರದ ಮೇಲೆ ನಮ್ಮ ಭಾಷೆಯ ವ್ಯಾಕರಣ ಹೇಗಿದೆ ಎಂಬುದನ್ನು ತಿಳಿಯಲು ನಾವು ಪ್ರಯತ್ನಿಸಬೇಕು.
ಈ ಹೊಸ ದೃಷ್ಟಿಕೋನದ ಅವಶ್ಯಕತೆಯನ್ನು ಮುಖ್ಯವಾಗಿ ಎರಡು ಸಂದಭ್ರಗಳಲ್ಲಿ ಕಾಣಬಹುದು. ಪೌ್ರಢಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಕ್ಕಾಗಿ ವ್ಯಾಕರಣ ಪಠ್ಯಪುಸ್ತಕಗಳನ್ನು ತಯಾ ರಿಸುವುದು ಒಂದು ಸಂದಭ್ರ.
ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಆಳವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯವನ್ನೊದಗಿಸಬೇಕಾಗಿರುವುದು ಮತ್ತು ಕನ್ನಡ ವ್ಯಾಕರಣದ ಮೇಲೆ ಸಂಶೋಧನೆಯನ್ನು ಮಾಡಬೇಕೆಂದಿರುವ ವಿದ್ಯಾರ್ಥಿಗಳಿಗೆ ಮಾಗ್ರ ದಶ್ರನವನ್ನು ಮಾಡಬೇಕಾಗಿರುವುದು ಎರಡನೆಯ ಸಂದಭ್ರ. ಈ ಎರಡು ಸಂದಭ್ರಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳೇಳುವುವಾದ ಕಾರಣ ಅವನ್ನು ಬೇರೆ ಬೇರೆಯಾಗಿ ಪರಿಶೀಲಿಸುವುದು ಅವಶ್ಯ.
12.3 ಶಾಲಾ ವ್ಯಾಕರಣಗಳು
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇವತ್ತು ಶಾಲೆಗಳಲ್ಲಿ ಕಲಿಸುವುದಕ್ಕಾಗಿ ಬಳಕೆಯಲ್ಲಿರುವ ವ್ಯಾಕರಣದ ಪಠ್ಯಪುಸ್ತಕಗಳನ್ನು ಪೂರ್ತಿಯಾಗಿ ಬದಲಾಯಿಸು ವುದು ಅವಶ್ಯ. ಅವುಗಳಲ್ಲಿ ಕಾಣಿಸುವ ಸಂಸ್ಕೃತ ವ್ಯಾಕರಣದ ಅಂಶಗಳೆಲ್ಲ ವನ್ನೂ ಪೂರ್ತಿಯಾಗಿ ತೆಗೆದು ಹಾಕಬೇಕು ಮತ್ತು ಹಳೆಗನ್ನಡದ ಪದರಚನೆ ಮತ್ತು ಪದರೂಪ ರಚನೆಗಳ ಕುರಿತು ಅವುಗಳಲ್ಲಿ ಬರುವ ಎಲ್ಲಾ ಅಂಶಗಳನ್ನೂ ತೆಗೆದು ಹಾಕಬೇಕು.
ಹೊಸಗನ್ನಡದಲ್ಲಿ ಕಾಣಿಸುವ ಪದಗಳ, ಪದರೂಪಗಳ, ಪದಕಂತೆಗಳ ಮತ್ತು ವಾಕ್ಯಗಳ ಒಳರಚನೆಯನ್ನಷ್ಟೇ ಈ ವ್ಯಾಕರಣಗಳಲ್ಲಿ ವಿವರಿಸಿ ಹೇಳಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಲಾರದು. ಇದಲ್ಲದೆ ಇಂತಹ ವ್ಯಾಕರಣಗಳ ಸಹಾಯದಿಂದ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಬಳಸಿಕೊಳ್ಳುವಲ್ಲಿ ಅವರಿಗೆ ಸ್ವಲ್ಪವಾದರೂ ಪ್ರಯೋಜನವಾದೀತು.
ತೀ. ನಂ. ಶ್ರೀಕಂಠಯ್ಯನವರ ಕನ್ನಡ ಮಧ್ಯಮ ವ್ಯಾಕರಣ ಈ ದಿಕ್ಕಿನಲ್ಲಿ ಮಾಡಿದ ಒಂದು ಉತ್ತಮ ಪ್ರಯತ್ನವೆಂದು ಹೇಳಬಹುದು. ಇದರಲ್ಲಿ ಹೊಸ ಗನ್ನಡದ ಪ್ರಯೋಗಗಳನ್ನು ಮಾತ್ರವೇ ವಿವರಿಸುವುದರ ಮೂಲಕ ವ್ಯಾಕರಣದ ನಿಯಮಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗು ವಂತೆ ಮಾಡಲಾಗಿದೆ. ಇದಲ್ಲದೆ ವ್ಯಾಕರಣ ನಿಯಮಗಳನ್ನೂ ಸುಲಭವಾಗಿ ಅರ್ಥವಾಗುವಂತೆ ಇದರಲ್ಲಿ ಬರೆಯಲಾಗಿದೆ.
ಆದರೆ ಕನ್ನಡಕ್ಕೆ ಅವಶ್ಯವಲ್ಲದ ಮತ್ತು ಕನ್ನಡಕ್ಕೆ ಹೊಂದಿಕೆಯಾಗದ ಸಂಸ್ಕೃತ ಪರಂಪರೆಯ ಕೆಲವು ವ್ಯಾಕರಣ ನಿಯಮಗಳು ಇದರಲ್ಲೂ ಹಾಗೆಯೇ ಉಳಿದುಕೊಂಡಿವೆ. ಉದಾಹರಣೆಗಾಗಿ, ಕನ್ನಡದ ಸಮಾಸಗಳನ್ನು ವಿಭಜಿಸುವು ದಕ್ಕಾಗಿ ಸಂಸ್ಕೃತದ ಹಾಗೆ ಜೋಡುಪದದ ಎರಡು ಅಂಗಗಳಲ್ಲಿ ಪ್ರಧಾನ ವಾದುದು ಯಾವುದು ಎಂಬ ಅಂಶವನ್ನೇ ಬಳಸಲಾಗಿದೆ. ಕನ್ನಡದಲ್ಲಿ ಇದಕ್ಕಿಂತಲೂ ಮೊದಲನೆಯ ಅಂಗ ಯಾವ ವಗ್ರಕ್ಕೆ ಸೇರುತ್ತದೆ ಎಂಬ ಅಂಶವೇ ಯೋಗ್ಯ ಎಂಬುದನ್ನು ನಾವು ಮೇಲೆ ಐದನೇ ಅಧ್ಯಾಯದಲ್ಲಿ ನೋಡಿರುವೆವು.
ಗುಣಪದಗಳನ್ನು ನಾಮಪದಗಳ ವಗ್ರದಲ್ಲಿ ಸೇರಿಸಿದುದರಿಂದಾಗಿ ಅವಕ್ಕೆ ವಿಶೇಷಣ ರೂಪ ಮತ್ತು ಕಾರಕ ರೂಪ ಎಂಬುದಾಗಿ ಎರಡು ರೂಪಗಳಿವೆ ಯೆಂದು ಹೇಳಬೇಕಾಗಿದೆ. ಆದರೆ ನಿಜಕ್ಕೂ ದೊಡ್ಡವನು, ಚಿಕ್ಕವಳು, ಹಿರಿಯವರು ಮೊದಲಾದವುಗಳು ಗುಣಪದಗಳಲ್ಲ, ವ್ಯಕ್ತಿವಾಚಕ ಪದಕಂತೆಗಳು. ಅವುಗಳಲ್ಲಿ ದೊಡ್ಡ, ಚಿಕ್ಕ, ಹಿರಿ ಮೊದಲಾದ ಗುಣಪದಗಳು ಅವನು, ಅವಳು, ಅವರು ಮೊದಲಾದ ಸವ್ರನಾಮ (ಸವ್ರಪದ)ಗಳೊಂದಿಗೆ ವಿಶೇಷಣ ಗಳಾಗಿ ಬಳಕೆಯಾಗಿವೆ ಅಷ್ಟೆ.
ಇದೇ ರೀತಿಯಲ್ಲಿ, ಎಣಿಕೆಯ ಪದಗಳಿಗೆ ಮತ್ತು ಕೃದಂತನಾಮಗಳಿಗೆ (ಹೋಗುವವನು, ಬರುವವರು, ಹಾಡಿದವಳು) ವಿಶೇಷಣ ರೂಪ ಮತ್ತು ಕಾರಕ ರೂಪಗಳಿವೆಯೆಂದು ಹೇಳಲಾಗಿದೆ. ಆದರೆ ಇಲ್ಲೂ ಕನ್ನಡದಲ್ಲಿರುವುದು ಪದಕಂತೆಗಳಲ್ಲದೆ ಪದರೂಪಗಳಲ್ಲ. ಇಂತಹ ಬೇರೆಯೂ ಕೆಲವು ಕನ್ನಡಕ್ಕೆ ಹೊಂದಿಕೆಯಾಗದ ವಿಷಯಗಳು ಈ ವ್ಯಾಕರಣದಲ್ಲಿದ್ದು ಇವನ್ನು ತೆಗೆದು ಹಾಕುವ ಇಲ್ಲವೇ ಬದಲಾಯಿಸುವ ಅವಶ್ಯಕತೆಯಿದೆ.
12.4 ಕಾಲೇಜುಗಳಲ್ಲಿ ಬೋಧನೆ ಮತ್ತು ಸಂಶೋಧನೆ
ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಆಳವಾಗಿ ಅಭ್ಯಾಸ ಮಾಡುವ ಮತ್ತು ಕನ್ನಡ ವ್ಯಾಕರಣದ ಮೇಲೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ವಿದ್ಯಾರ್ಥಿ ಗಳಿಗೆ ಮೇಲೆ ವಿವರಿಸಿದ ಹೊಸ ದೃಷ್ಟಿಕೋನವನ್ನು ಒದಗಿಸಿಕೊಡುವುದು ಒಂದು ಅತ್ಯಂತ ಮುಖ್ಯವಾದ ಕೆಲಸವೆಂದು ನನ್ನ ಅಭಿಪ್ರಾಯ. ಕನ್ನಡದ ಪದರಚನೆ ಮತ್ತು ವಾಕ್ಯರಚನೆಗಳನ್ನು ನೇರವಾಗಿ ಪರಿಶೀಲಿಸುವ ಪ್ರವೃತ್ತಿ ಅವರಲ್ಲಿ ಬೆಳೆಯಬೇಕು.
ಇದಲ್ಲದೆ ಕನ್ನಡದ ವ್ಯಾಕರಣ ಪುಸ್ತಕಗಳಲ್ಲಿ ಬರುವ ವ್ಯಾಕರಣ ನಿಯಮ ಗಳನ್ನು ಹಾಗೆಯೇ ಉರುಹೊಡೆಯುವ ಬದಲು ಅವನ್ನು ಸರಿಯಾಗಿ ಅರ್ಥಮಾಡಿ ಕೊಂಡು ನಿಜಕ್ಕೂ ಅವು ಕನ್ನಡದ ಪದರಚನೆಯನ್ನು ಮತ್ತು ವಾಕ್ಯರಚನೆಯನ್ನು ಸರಿಯಾಗಿ ವಿವರಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರವೃತ್ತಿ ಅವರಲ್ಲಿ ಬೆಳೆಯುವಂತೆ ಮಾಡಬೇಕು.
ಇಂತಹ ಪ್ರವೃತ್ತಿ ನಮ್ಮ ಕನ್ನಡ ವಿದ್ಯಾರ್ಥಿ-ಸಂಶೋಧಕರಲ್ಲಿ ಇಲ್ಲವೇ ಇಲ್ಲವೆಂದು ಹೇಳಿದರೂ ತಪ್ಪಾಗಲಾರದು. ಇಲ್ಲವಾದರೆ ನಾನು ಈ ಪುಸ್ತಕದಲ್ಲಿ ವಿವರಿಸಿದಂತಹ ಮತ್ತು ಕಣ್ಣಿಗೆ ಹೊಡೆದು ಕಾಣಿಸುವಂತಹ ಅಸಮಪ್ರಕ ವ್ಯಾಕರಣ ನಿಯಮಗಳು ಕನ್ನಡ ವ್ಯಾಕರಣದಲ್ಲಿ ತುಂಬಿ ತುಳುಕುತ್ತಿರುವುದನ್ನು ಈ ವಿದ್ಯಾರ್ಥಿ-ಸಂಶೋಧಕರಲ್ಲಿ ಒಬ್ಬಿಬ್ಬರಾದರೂ ಗಮನಿಸದಿರಲು ಸಾಧ್ಯವೆ?
ಉದಾಹರಣೆಗಾಗಿ, ಹಳೆಗನ್ನಡದಲ್ಲಿ ದಪ ಪ್ರತ್ಯಯಕ್ಕೆ ವರ್ತಮಾನಾರ್ಥವಿದೆ ಮತ್ತು ವ ಪ್ರತ್ಯಯಕ್ಕೆ ಭವಿಷ್ಯದರ್ಥವಿದೆಯುಂದು ಕನ್ನಡ ವೈಯಾಕರಣಿಗಳು ಕಳೆದ ಸಾವಿರ ವಷ್ರಗಳಿಂದಲೂ ಹೇಳುತ್ತಾ ಬಂದಿದ್ದಾರೆ. ನಿಜಕ್ಕೂ ಇದು ನಿಜವೇ, ಹಳೆಗನ್ನಡ ಕಾವ್ಯಗಳಲ್ಲಿ ಈ ಪ್ರತ್ಯಯಗಳನ್ನೊಳಗೊಂಡಿರುವ ಪದಗಳು ನಿಜಕ್ಕೂ ಈ ಅರ್ಥಭೇದವನ್ನು ಸೂಚಿಸುತ್ತಿವೆಯೇ ಎಂಬುದನ್ನು ಒಬ್ಬನೇ ಒಬ್ಬ ಸಂಶೋಧಕನೂ ಪರಿಶೀಲಿಸಲು ಹೋಗಿಲ್ಲವೆಂದರೆ ಆಶ್ಚರ್ಯವಾಗುವುದಿಲ್ಲವೆ?
ನಾನು ಮೇಲೆಯೇ ಹೇಳಿರುವಂತೆ, ವ್ಯಾಖ್ಯಾನಕಾರನ ಮನೋಭಾವವನ್ನು ಬಿಟ್ಟುಕೊಟ್ಟು ಸಂಶೋಧಕನ ಮನೋಭಾವವನ್ನು ಅಳವಡಿಸಿಕೊಂಡರೇನೇ ನಮ್ಮ ಜ್ಞಾನವನ್ನು ಹೆಚ್ಚಿಸಲು ಸಾಧ್ಯ. ಹಿಂದಿನ ವಿದ್ವಾಂಸರು ಏನು ಹೇಳಿದ್ದರು ಎಂಬುದನ್ನು ವಿವರಿಸುವುದು ಮಾತ್ರವೇ ವ್ಯಾಖ್ಯಾನಕಾರನ ಉದ್ದೇಶ. ಹಿಂದಿನವರ ಹೇಳಿಕೆಯಲ್ಲಿ ತಪ್ಪಿದೆಯೇ? ಇದೆಯಾದರೆ ಅದನ್ನು ಸರಿಪಡಿಸುವುದು ಹೇಗೆ? ಹಿಂದಿನವರು ಹೇಳಿರದಂತಹ ವಿಷಯಗಳೇನಾದರೂ ಇವೆಯೇ? ಎಂಬುದನ್ನು ಕಂಡುಹಿಡಿಯುವುದೇ ಸಂಶೋಧಕನ ಕೆಲಸ.
ಹಿಂದಿನವರು ಹೇಳಿದುದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಮಗೆ ಆ ವಿಷಯದ ಜ್ಞಾನ ಲಭಿಸುತ್ತದೆ. ಆದರೆ ಆ ವಿಷಯದ ಕುರಿತಾಗಿ ನಮ್ಮ ಸಮಾಜದಲ್ಲಿರುವ ಜ್ಞಾನ ಹೆಚ್ಚುವುದಿಲ್ಲ. ಹಿಂದಿನವರು ಹೇಳಿದುದರಲ್ಲಿ ಅಸಾಂಗತ್ಯವೇನಾದರೂ ಇದೆಯಾದರೆ ಅದನ್ನು ಕಂಡುಕೊಳ್ಳುವುದರ ಮೂಲಕ ಮಾತ್ರವೇ ನಮ್ಮ ಸಮಾಜದ ಜ್ಞಾನನಿಧಿ ಹೆಚ್ಚಬಲ್ಲುದು.
ಕನ್ನಡ ವ್ಯಾಕರಣದ ಮೇಲೆ ಸಂಶೋಧನೆಯನ್ನು ನಡೆಸಬೇಕೆಂದಿರುವವರಲ್ಲಿ ಇಂತಹ ಸಂಶೋಧಕ ಪ್ರವೃತ್ತಿ ಬೆಳೆಯುವಂತೆ ಮಾಡುವಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ ವ್ಯಾಕರಣ ಪಠ್ಯಪುಸ್ತಕಗಳನ್ನು ರಚಿಸುವ ವಿದ್ವಾಂಸರಲ್ಲಿ ಒಂದು ಹೊಸ ದೃಷ್ಟಿಕೋನವುಂಟಾಗುವಂತೆ ಮಾಡುವಲ್ಲಿ ಈ ಪುಸ್ತಕ ಸ್ವಲ್ಪ ವಾದರೂ ಸಹಾಯಕವಾಗವಾಗಲಿ ಎಂಬುದೇ ನನ್ನ ಹಾರೈಕೆ.
or South-Indian family of languages. London: Kegan, Paul, Trench, Trubner and Co. Ltd.
ಕೃಷ್ಣ ಭಟ್ಟ, ಸೇಡಿಯಾಪು. 1992. ವಿಚಾರ ಪ್ರಪಂಚ. ಪುತ್ತೂರು: ಕರ್ಣಾಟಕ
ಕೃಷ್ಣಮೂರ್ತಿ, ಭ. 2003. The Dravidian Language. Cambridge:
Cambridge University Press.
ಡಿಕ್ಸನ್, ಆರ್. ಎಮ್. ಡಬ್ಲ್ಯು. 1994. Ergativity. Cambridge:
Cambridge University Press.
ತಾರಾಪೋರ್ವಾಲಾ, ಐ. ಜೆ. ಎಸ್. 1967. Sanskrit syntax. Delhi:
Munshiram Manoharlal.
ತಿರುಮಲೇಶ್, ಕೆ.ವಿ. 1979. (= ಭಟ್, ಕೆ.ವಿ.ಟಿ.) Reordering rules in Kannada and English. Dissertation, Central Institute of English and Foreign Languages, Hyderabad.
ತಿರುಮಲೇಶ್, ಕೆ.ವಿ. 1997. Kannada prefixation. PILC Journal of
Dravidian Studies 7, 201-8.
Faber.
ಬರೋ, ಟಿ. ಮತ್ತು ಎಮೆನೋ, ಎಮ್. ಬಿ. 1961. ಖಿhe ಆಡಿಚಿviಜiಚಿಟಿ
Etymological Dictionary. Oxford: The Clarendon Press.
ಬಿಳಿಗಿರಿ, ಎಚ್. ಎಸ್. 1969. ಆಲೋಕ, ಭಾಗ 1. ಸಾಗರ: ಅಕ್ಷರ
ಪ್ರಕಾಶನ.
ಭಟ್, ಡಿ. ಎನ್. ಶಂಕರ 1978. ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು
ಅರ್ಥವ್ಯವಸ್ಥೆ. ಮೈಸೂರು: ಗೀತಾ ಬುಕ್ ಹೌಸ್.
their necessity and universality. London:
against Routledge.
ಭಟ್, ಡಿ. ಎನ್. ಶಂಕರ 1995. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ. ಹಂಪಿ:
ಕನ್ನಡ ವಿಶ್ವವಿದ್ಯಾಲಯ.
Pune: Center for Advanced Study in Sanskrit, Pune University.
ಭಟ್, ಡಿ. ಎನ್. ಶಂಕರ 2002. ಕನ್ನಡ ಪದಗಳ ಒಳರಚನೆ. ಮೈಸೂರು:
ಭಟ್, ಡಿ. ಎನ್. ಶಂಕರ 2003. ಕನ್ನಡದ ಸವ್ರನಾಮಗಳು. ಮೈಸೂರು:
ಭಟ್, ಡಿ. ಎನ್. ಶಂಕರ 2004. ಕನ್ನಡ ವಾಕ್ಯಗಳ ಒಳರಚನೆ. ಮೈಸೂರು:
ಭಟ್, ಡಿ. ಎನ್. ಶಂಕರ 2005. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?.
ಮೈಸೂರು: ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ 2005ಕ. ಕನ್ನಡ ಬರಹವನ್ನು ಸರಿಪಡಿಸೋಣ.
ಮೈಸೂರು: ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ ಮತ್ತು ನಿಂಗೊಂಬ, ಎಮ್. ಎಸ್. 1997.
Manipuri Grammar. Munich: Lincom Europa.
relational grammar. Studies in Linguistic Sciences 6, 130-
ಶ್ರೀಧರ್, ಎಸ್. ಎನ್. 1995. ಇಂದಿನ ಕನ್ನಡ: ರಚನೆ ಮತ್ತು ಬಳಕೆ. ಹಂಪಿ:
ಕನ್ನಡ ವಿಶ್ವವಿದ್ಯಾಲಯ.
ಶ್ರೀಕಂಠಯ್ಯ, ತೀ. ನಂ. 1952. ಕನ್ನಡ ಮಧ್ಯಮ ವ್ಯಾಕರಣ. ಮೈಸೂರು:
ವಿದ್ಯಾಭ್ಯಾಸದ ಇಲಾಖೆ.
Motilal Banarsidass, Delhi.