Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
2. ಸೇರಿಕೆಯ ನಿಯಮಗಳು
2.1 ಮುನ್ನೋಟ
ಒಂದು ಪದದೊಂದಿಗೆ ಇನ್ನೊಂದು ಪದವನ್ನು ಇಲ್ಲವೇ ಪ್ರತ್ಯಯವನ್ನು ಸೇರಿಸಿ ದಾಗ ಆ ಪದದಲ್ಲಿ ಇಲ್ಲವೇ ಪ್ರತ್ಯಯದಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ವೈಯಾಕರಣಿಗಳು ‘ಸಂಧಿಕಾರ್ಯಗಳು’ ಎಂಬುದಾಗಿ ಕರೆಯುತ್ತಾರೆ. ಇವನ್ನೇ ಇಲ್ಲಿ ‘ಸೇರಿಕೆಯ ನಿಯಮಗಳೆ’ಂದು ಕರೆಯಲಾಗಿದೆ.
ಉದಾಹರಣೆಗಾಗಿ, ನೆಲ ನಾಮಪದಕ್ಕೆ ಕಡಲೆ ನಾಮಪದವನ್ನು ಸೇರಿಸಿ ನೆಲಗಡಲೆ ಎಂಬ ಜೋಡುಪದವನ್ನು ತಯಾರಿಸಿದಾಗ, ಎರಡನೆಯ ಪದದ (ನೆಲ+ಕಡಲೆ> ಸುರುವಿನಲ್ಲಿರುವ ನೆಲಗಡಲೆ). ಹಂಬಲ ನಾಮಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿ ಹಂಬಲಿಸು ಕ್ರಿಯಾಪದ ವನ್ನು ತಯಾರಿಸಿದಾಗ ಮೊದಲನೆಯ ಪದದ ಕೊನೆಯಲ್ಲಿರುವ ಅಕಾರ ಬಿದ್ದು ಹೋಗುತ್ತದೆ (ಹಂಬಲ+ಇಸು>ಹಂಬಲಿಸು).
ಇಂತಹ ಸೇರಿಕೆಯ ನಿಯಮಗಳು ಎಲ್ಲಾ ಭಾಷೆಗಳಲ್ಲೂ ಒಂದೇ ತೆರನಾಗಿ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗಾಗಿ, ಅಕಾರದಲ್ಲಿ ಕೊನೆಗೊಳ್ಳುವ ಒಂದು ಪದದೊಂದಿಗೆ ಅಕಾರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಸೇರಿಸಿದಾಗ, ಕನ್ನಡದಲ್ಲಿ ಮೊದಲನೆಯ ಅಕಾರ ಬಿದ್ದುಹೋಗಿ ಎರಡನೆಯದು ಉಳಿದುಕೊಳ್ಳು ತ್ತದೆ (ನನ್ನ+ಅಣ್ಣ>ನನ್ನಣ್ಣ, ಬಂದ+ಅಲ್ಲಿ>ಬಂದಲ್ಲಿ).
ಆದರೆ ಸಂಸ್ಕೃತದಲ್ಲಿ ಈ ರೀತಿ ಎರಡು ಅಕಾರಗಳು ಸೇರಿದಾಗ ಅವು ಗಳಲ್ಲಿ ಒಂದು ಬಿದ್ದುಹೋಗುವ ಬದಲು ಅವೆರಡೂ ಒಟ್ಟು ಸೇರಿ ಆಕಾರ ಕಾಣಿಸಿಕೊಳ್ಳುತ್ತದೆ (ಪದ+ಅರ್ಥ>ಪದಾರ್ಥ, ಮುಖ್ಯ+ಅಧಿಕಾರಿ> ಮುಖ್ಯಾ ಉಕಾರದ ಮುಂದೆ ಅಕಾರ ಬಂದಾಗ ಕನ್ನಡದಲ್ಲಿ ಉಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಬೆನ್ನು+ಅಟ್ಟು>ಬೆನ್ನಟ್ಟು, ಕಪ್ಪು+ಅಲ್ಲ>ಕಪ್ಪಲ್ಲ) ಆದರೆ ಸಂಸ್ಕೃತದಲ್ಲಿ ಉಕಾರದ ಬದಲು ವಕಾರ ಬರುತ್ತದೆ, ಮತ್ತು ಅದರ ಅನಂತರದ ಅಕಾರ ಉಳಿದಿರುತ್ತದೆ (ಮನು+ಅಂತರ>ಮನ್ವಂತರ, ಗುರು+ ಅಕ್ಷರ>ಗುವ್ರಕ್ಷರ).
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಸೇರಿಕೆಯ ನಿಯಮಗಳ ಮಟ್ಟಿಗೆ ಇಂತಹ ಹಲವಾರು ಮುಖ್ಯವಾದ ವ್ಯತ್ಯಾಸಗಳಿವೆ. ಪದರಚನೆ ಇಲ್ಲವೇ
ವಾಕ್ಯರಚನೆಯಲ್ಲಿ ಕಾಣಿಸುವ ವ್ಯತ್ಯಾಸಗಳಿಗಿಂತಲೂ ಸೇರಿಕೆಯ ನಿಯಮಗಳಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಬಹಳ ಸುಲಭವಾಗಿ ಕಣ್ಣಿಗೆ ಗೋಚರಿಸುತ್ತವೆ. ಈ ಕಾರಣಕ್ಕಾಗಿಯೋ ಏನೋ, ಕನ್ನಡದ ವೈಯಾಕರಣಿಗಳು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಹಾಗೆಯೇ ಕನ್ನಡದ ಮೇಲೆ ಹೇರಲು ಪ್ರಯತ್ನಿಸಿಲ್ಲ. ಅವರು ಬರೆದ ವ್ಯಾಕರಣಗಳಲ್ಲಿ ‘ಕನ್ನಡಸಂಧಿ’ ಮತ್ತು ‘ಸಂಸ್ಕೃತಸಂಧಿ’ ಎಂಬುದಾಗಿ ಎರಡು ವಿಭಾಗಗಳಿರುವುದನ್ನು ಗಮನಿಸಬಹುದು.
2.1.1 ಪಠ್ಯಪುಸ್ತಕಗಳಲ್ಲಿ ಸೇರಿಕೆಯ ನಿಯಮಗಳು
ಹೀಗಿದ್ದರೂ ಪೌ್ರಢಶಾಲೆಯ ವಿದ್ಯಾರ್ಥಿಗಳಿಗಾಗಿ ಬರೆಯಲಾಗಿರುವ ಕನ್ನಡ ವ್ಯಾಕರಣಗಳಲ್ಲಿ (ಪಠ್ಯಪುಸ್ತಕಗಳಲ್ಲಿ) ಕನ್ನಡಸಂಧಿ ಮತ್ತು ಸಂಸ್ಕೃತ ಸಂಧಿ ಎಂಬ ಈ ಎರಡು ರೀತಿಯ ಸೇರಿಕೆಯ ನಿಯಮಗಳನ್ನು ಕಲಿಸಿಕೊಡಲು ಬಳಸಿರುವ ಕ್ರಮ ಮಾತ್ರ ಅಷ್ಟೊಂದು ಸರಿಯಾದುದೆಂದು ನನಗೆ ತೋರುವು ದಿಲ್ಲ. ಇದಕ್ಕೆ ಕಾರಣಗಳು ಹಲವಿವೆ. ಮೊದಲನೆಯದಾಗಿ, ಕನ್ನಡದ ಈ ವ್ಯಾಕರಣ ಪಠ್ಯಪುಸ್ತಕಗಳಲ್ಲಿ ಕನ್ನಡ ಸಂಧಿಗಳು ಯಾವುವು ಮತ್ತು ಸಂಸ್ಕೃತ ಸಂಧಿಗಳು ಯಾವುವು ಎಂಬುದನ್ನು ಬೇರೆ ಬೇರೆಯಾಗಿ ಹೇಳಲಾಗಿದೆ. ಯಾವ ರೀತಿಯಲ್ಲಿ ಅವು ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂಬುದನ್ನು ವಿವರಿಸಲು ಯತ್ನಿಸಿಲ್ಲ.
ಎರಡನೆಯದಾಗಿ, ಕನ್ನಡಸಂಧಿಗಳು ಯಾವುವೆಂಬುದನ್ನು ವಿವರಿಸುವಾಗ ಹೊಸಗನ್ನಡ ಮತ್ತು ಹಳೆಗನ್ನಡಗಳ ನಡುವಿರುವ ವ್ಯತ್ಯಾಸವನ್ನು ಗಮನಿಸಿಲ್ಲ. ಮೊದಲಿಗೆ ಹೊಸಗನ್ನಡದ ಸೇರಿಕೆಯ (ಸಂಧಿ)ನಿಯಮಗಳು ಯಾವುವೆಂಬುದನ್ನು ಹೊಸಗನ್ನಡದವೇ ಆದ ಉದಾಹರಣೆಗಳ ಮೂಲಕ ವಿವರಿಸಿ ಹೇಳಿ, ಅನಂತರ ಬೇಕಿದ್ದರೆ ಅವಕ್ಕಿಂತ ಭಿನ್ನವಾಗಿರುವ ಸೇರಿಕೆಯ ನಿಯಮಗಳು ಹಳೆಗನ್ನಡದಲ್ಲಿ ಕಾಣಿಸಿಕೊಳ್ಳುತ್ತವೆಯೇ, ಕಾಣಿಸಿಕೊಳ್ಳುವುದಿದ್ದಲ್ಲಿ ಅವು ಎಂತಹವು ಎಂಬುದನ್ನು ವಿವರಿಸಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸುಲಭ ವಾಗಬಲ್ಲುದು. ಮೂರನೆಯದಾಗಿ, ನಿಜಕ್ಕೂ ಸಂಸ್ಕೃತದಲ್ಲಿ ಎಂತಹ ಸೇರಿಕೆಯ ನಿಯಮ ಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ನೇರವಾಗಿ ವಿವರಿಸುವ ಅವಶ್ಯಕತೆ ಇಲ್ಲ. ಕನ್ನಡಕ್ಕಿಂತ ಭಿನ್ನವಾದ ಸೇರಿಕೆಯ ನಿಯಮಗಳು ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಕಾಣಿಸುತ್ತಿದ್ದು, ಅವನ್ನೆಲ್ಲ ಹೇಗೆ ಕನ್ನಡ ವ್ಯಾಕರಣದಲ್ಲಿ ವಿವರಿಸುವ ಅವಶ್ಯಕತೆಯಿಲ್ಲವೋ ಹಾಗೆಯೇ ಸಂಸ್ಕೃತದ ಸೇರಿಕೆಯ ನಿಯಮಗಳನ್ನೂ ಕನ್ನಡದ ವ್ಯಾಕರಣದಲ್ಲಿ ವಿವರವಾಗಿ ತಿಳಿಸಿ ಹೇಳುವ ಅವಶ್ಯಕತೆಯಿಲ್ಲ.
ಹೀಗಿದ್ದರೂ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವಾರು ಪದ ಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಕಾರಣ ಅವುಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳೆಂತಹವು ಎಂಬುದನ್ನು ವಿವರಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಲ್ಲುದು. ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದಲೂ ಕನ್ನಡಕ್ಕೆ ಹಲವು ಪದಗಳು ಎರವಲಾಗಿ ಬಂದಿವೆಯೇನೋ ನಿಜ; ಆದರೆ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೆ ಕನ್ನಡದಲ್ಲಿ ಇರುವಂತಹ ವಿಶಿಷ್ಟವಾದ ಸ್ಥಾನ ಆ ಪದಗಳಿಗಿಲ್ಲ.
ಉದಾಹರಣೆಗಾಗಿ, ಕನ್ನಡದಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಸೃಷ್ಟಿಸಬೇಕಿದ್ದಲ್ಲಿ ಸಾಮಾನ್ಯವಾಗಿ ನಾವು ಸಂಸ್ಕೃತದ ಮರೆಹೊಗುತ್ತೇವೆ. ಈ ಕಾರಣಕ್ಕಾಗಿಯೂ ಕನ್ನಡ ವ್ಯಾಕರಣದಲ್ಲಿ ಇತರ ಭಾಷೆಗಳ ಸೇರಿಕೆಯ ನಿಯಮ ಗಳಿಗಿಂತ ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಔಚಿತ್ಯವಿದೆ.
ಆದರೆ ಸಂಸ್ಕೃತದ ಸೇರಿಕೆಯ ನಿಯಮಗಳ ವರ್ಣನೆಯನ್ನು ನೇರವಾಗಿ ಅದರ ವ್ಯಾಕರಣದಿಂದ ಎತ್ತಿ ಕನ್ನಡ ವ್ಯಾಕರಣದಲ್ಲಿ ಇರಿಸುವ ಬದಲು, ಕನ್ನಡ ವ್ಯಾಕರಣವನ್ನು ಕಲಿಯುವವರಿಗೆ ಅನುಕೂಲವಾಗುವ ಹಾಗೆ ಅದನ್ನು ಅಳವಡಿಸಿ ಕೊಂಡಲ್ಲಿ ಅದು ಹೆಚ್ಚು ಉಪಯುಕ್ತವಾಗಬಲ್ಲುದು.
2.1.2 ಸಂಸ್ಕೃತದ ನಿಯಮಗಳನ್ನು ತಿಳಿಸುವ ಕ್ರಮ
ಸಂಸ್ಕೃತದಲ್ಲಿ ಬಳಕೆಯಾಗುವ ಸೇರಿಕೆಯ ನಿಯಮಗಳನ್ನು ಕನ್ನಡ ಕಲಿಯುವ ಮಕ್ಕಳಿಗೆ ಅರ್ಥವಾಗುವ ಹಾಗೆ ಮತ್ತು ಸಹಾಯಕವಾಗುವ ಹಾಗೆ ತಿಳಿಸಿ ಹೇಳಬೇಕಿದ್ದಲ್ಲಿ ಮೊದಲಿಗೆ ಸಂಸ್ಕೃತದಿಂದ ಹೊಸಗನ್ನಡಕ್ಕೆ ಎಂತಹ ಪದಗಳೆಲ್ಲ ಎರವಲಾಗಿ ಬಂದಿವೆ ಎಂಬುದನ್ನು ಪರಿಶೀಲಿಸಬೇಕು ಮತ್ತು ಆ ಪದಗಳಲ್ಲಿ ಕನ್ನಡದ ಸೇರಿಕೆಯ ನಿಮಮಗಳಿಗಿಂತ ಭಿನ್ನವಾಗಿರುವ ನಿಯಮಗಳು ಎಂತಹ ವೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕಂಡುಹಿಡಿಯಬೇಕು.
ಈ ಭಿನ್ನವಾಗಿರುವ ಸೇರಿಕೆಯ ನಿಯಮಗಳನ್ನು ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕೃತ ಪದಗಳನ್ನು ಮಾತ್ರವೇ ಉದಾಹರಣೆಗಳನ್ನಾಗಿ ಕೊಟ್ಟು ವಿವರಿಸಿ ಹೇಳಬೇಕು. ಅನಂತರ ಅವು ಕನ್ನಡದ ಸೇರಿಕೆಯ ನಿಯಮಗಳಿಗಿಂತ ಯಾವ ರೀತಿಯಲ್ಲಿ ಭಿನ್ನವಾಗಿವೆ ಎಂಬುದನ್ನು ವಿವರಿಸಿ ಹೇಳಬೇಕು. ಈ ರೀತಿ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸುಲಭ ವಾದೀತೆಂದು ನನಗೆ ಅನಿಸುತ್ತದೆ. ಕನ್ನಡ ವ್ಯಾಕರಣದ ಪಠ್ಯಪುಸ್ತಕಗಳಲ್ಲಿ ಕಾಣಿಸುವ ಹಾಗೆ ಗಂಗೋರ್ಮಿ, ಮೇಘೌಘ, ಮಹೌಜ, ನದಡ್ಡಮರುಕ, ಲಸತ್ಷೋಡಷ, ಆಯಷ್ಟಂಕ ಮೊದಲಾದ ಕನ್ನಡ ಬರಹಗಳಲ್ಲೆಲ್ಲೂ (ವ್ಯಾಕರಣದ ಪಠ್ಯಪುಸ್ತಕಗಳನ್ನು ಬಿಟ್ಟು)
ಕಾಣಿಸದಿರುವಂತಹ ಸಂಸ್ಕೃತದ ಪದಗಳನ್ನು ಇಲ್ಲವೇ ಪದಕಂತೆಗಳನ್ನು ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಉದಾಹಣೆಗಳಾಗಿ ಕೊಟ್ಟಲ್ಲಿ ಕನ್ನಡವನ್ನು ಕಲಿಯಬೇಕೆಂದಿರುವ ವಿದ್ಯಾರ್ಥಿಗಳಿಗೆ ಅನವಶ್ಯಕವಾಗಿ ತೊಂದರೆಯುಂಟಾಗ ಬಲ್ಲುದಲ್ಲದೆ ಅದರಿಂದ ಅವರಿಗೆ ಯಾವ ಪ್ರಯೋಜನವೂ ಸಿಗಲಾರದು.
ಈ ಉದಾಹರಣೆಗಳು ಸೂಚಿಸುವ ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಎರವಲಾಗಿ ಬಂದಿರುವ ಪದ ಇಲ್ಲವೇ ಪದಕಂತೆಗಳಲ್ಲಿ ಕಾಣಿಸದಿರುವುದೇ ನಮ್ಮ ವೈಯಾಕರಣಿಗಳು ಹೀಗೆ ಮಾಡಲು ಕಾರಣವಿರಬಹುದು. ಹೀಗಿದ್ದಲ್ಲಿ, ಅಂತಹ ಸಂಸ್ಕೃತದ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ, ಅದರಲ್ಲೂ ಪೌ್ರಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಬರೆದಿರುವ ವ್ಯಾಕರಣ ಪಠ್ಯದಲ್ಲಿ, ವಿವರಿಸುವ ಅವಶ್ಯಕತೆಯೇ ಇಲ್ಲ. ಇದಲ್ಲದೆ, ಕನ್ನಡಕ್ಕೆ ಎರವಲಾಗಿ ಬಂದಿರುವ ಮತ್ತು ಕನ್ನಡದ ಬರಹಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಸಂಸ್ಕೃತದ ಪದ ಮತ್ತು ಪದಕಂತೆಗಳಲ್ಲಿ ಬರುವ ಸೇರಿಕೆಯ ನಿಯಮಗಳನ್ನು ವರ್ಣಿಸುವಾಗ ಅವಕ್ಕೆ ಸಂಸ್ಕೃತದ ವೈಯಾಕರಣಿ ಗಳು ಕೊಡುವ ಪಾರಿಭಾಷಿಕ ಪದಗಳನ್ನು ಹಾಗೆಯೇ ಕನ್ನಡ ವ್ಯಾಕರಣಗಳಲ್ಲೂ ಬಳಸುವ ಅವಶ್ಯಕತೆಯಿಲ್ಲ.
ಕನ್ನಡದ ಶಾಲಾವ್ಯಾಕರಣಗಳಲ್ಲಿ ಸಂಸ್ಕೃತದ ಸೇರಿಕೆಯ ನಿಯಮಗಳನ್ನು
ಪರಿಚಯಿಸುವಾಗ ಶ್ಚುತ್ವ, ಷ್ಟುತ್ವ, ಜಸ್ತ್ವ, ಛತ್ವ, ಯಣ್, ಗುಣ, ವೃದ್ಧಿ, ಮೊದಲಾದ ಪಾರಿಭಾಷಿಕ ಪದಗಳನ್ನು ಹಾಗೆಯೇ ಸಂಸ್ಕೃತ ವ್ಯಾಕರಣದಿಂದ ಎತ್ತಿ ಹಾಕುವ ಸಂಪ್ರದಾಯ ಬೆಳೆದು ಬಂದಿದೆ. ವ್ಯಾಕರಣವೆಂದರೆ ಒಂದು ನಿಷ್ಪ್ರಯೋಜಕವಾದ ಕಗ್ಗಂಟು ಎಂಬ ಅಭಿಪ್ರಾಯ ವಿದ್ಯಾರ್ಥಿಗಳಲ್ಲಿ ಮೂಡಲು ಮಾತ್ರ ಇದು ಸಹಾಯಕವಾಗಬಲ್ಲುದು. ಈ ಪಾರಿಭಾಷಿಕ ಪದಗಳಿಂದ ಕನ್ನಡ ವ್ಯಾಕರಣವನ್ನು ಕಲಿಯುವಲ್ಲಿ ಯಾವ ಪ್ರಯೋಜನವೂ ದೊರಕಲಾರದೆಂದು ನನಗೆ ಅನಿಸುತ್ತದೆ. ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯುತ್ತು ಪದ ಶಕ್ತಿ ಪದದೊಡನೆ ಸೇರಿದಾಗ ವಿದ್ಯುಚ್ಛಕ್ತಿ ಎಂಬ ಜೋಡುಪದ ಸಿದ್ಧವಾಗುತ್ತದೆ. ಇಲ್ಲಿ ವಿದ್ಯುತ್ತು ಎಂಬುದರ ಕೊನೆಯ ಎರಡು ವರ್ಣಗಳು (ತ್ ಮತ್ತು ಉ) ಬಿದ್ದುಹೋಗಿ ವಿದ್ಯುತ್ ಎಂಬುದು ಉಳಿದಿದೆ ಮತ್ತು ಅದರ ಕೊನೆಯ ತಕಾರ ಚಕಾರವಾಗಿದೆ. ಇದಲ್ಲದೆ, ಈ ಪದದ ಅನಂತರ ಬಂದಿರುವ ಶಕ್ತಿ ಪದದ ಮೊದಲನೆಯ ವ್ಯಂಜನ ಶ್ ಎಂದಿದ್ದುದು ಛ್ ಎಂದಾಗಿದೆ.
ವಿದ್ಯುಚ್ಛಕ್ತಿ ಪದದಲ್ಲಿ ಕಾಣಿಸುವ ಸೇರಿಕೆಯ ನಿಯಮವನ್ನು ಈ ರೀತಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ಹಾಗೆ ವಿವರಿಸಿ ಹೇಳುವ ಬದಲು ಆ ಪದದಲ್ಲಿ ಶ್ಚುತ್ವ ಮತ್ತು ಛತ್ವಗಳೆಂಬ ಎರಡು ಸಂಧಿಕಾರ್ಯಗಳು ನಡೆದಿವೆ ಎಂದು ಹೇಳುವುದರಿಂದ ಹೆಚ್ಚಿನ ಪ್ರಯೋಜನವೇನೂ ಸಿಗಲಾರದು. ಇದಲ್ಲದೆ
ಇಂತಹ ಹೇಳಿಕೆಯನ್ನು ವಿವರಿಸಬೇಕಾಗಿರುವ ಹಲವು ಮಂದಿ ಅಧ್ಯಾಪಕರಿಗೂ ಅದು ನಿಜಕ್ಕೂ ಏನು ತಿಳಿಸುತ್ತದೆಯುಂಬುದು ಅರ್ಥವಾಗಿರುವುದಿಲ್ಲ.
2.2 ಸೇರಿಕೆಯ ನಿಯಮಗಳಲ್ಲಿ ವ್ಯತ್ಯಾಸಗಳು
ಮೇಲೆಯೇ ಹೇಳಿದ ಹಾಗೆ, ಸೇರಿಕೆಯ ನಿಯಮಗಳ ಮಟ್ಟಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಪೌ್ರಢಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ತಿಳಿಸುವುದಿದ್ದಲ್ಲಿ ಅವು ಕನ್ನಡದ ನಿಯಮಗಳಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಸಿದಲ್ಲಿ ಹೆಚ್ಚು ಸ್ಪಷ್ಟವಾಗಿ ಅರ್ಥವಾಗಬಲ್ಲುವು. ಇಂತಹ ಕೆಲವು ವ್ಯತ್ಯಾಸಗಳನ್ನು ಕೆಳಗೆ ವಿವರಿಸಲಾಗಿದೆ.
2.2.1 ಸ್ವರಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು
ಸ್ವರಕ್ಕೆ ಸ್ವರ ಸೇರಿದಾಗ, ಸಂಸ್ಕೃತದಲ್ಲಿ ಸಾಮಾನ್ಯವಾಗಿ ಅವೆರಡರ ಬದಲು ಬೇರೊಂದು ಸ್ವರ ಬರುತ್ತದೆ ಇಲ್ಲವೇ ಅವುಗಳಲ್ಲಿ ಮೊದಲನೆಯದರ ಬದಲು ಒಂದು ವ್ಯಂಜನ ಬರುತ್ತದೆ. ಎಂದರೆ, ಸಂಸ್ಕೃದಲ್ಲಿ ‘ಆದೇಶ’ ಎಂಬ ಹೆಸರಿನ ಸೇರಿಕೆಯ ನಿಯಮ ಬರುವುದೇ ಜಾಸ್ತಿ. ಇದಕ್ಕೆ ಬದಲು ಕನ್ನಡದಲ್ಲಿ ಸಾಮಾನ್ಯವಾಗಿ ಎರಡು ಸ್ವರಗಳು ಒಟ್ಟಿಗೆ ಬಂದಾಗ ಅವುಗಳಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುವುದೇ ಜಾಸ್ತಿ. ಕೆಲವೇ ಕೆಲವು ಸಂದಭ್ರಗಳಲ್ಲಿ ಮಾತ್ರ ಈ ಎರಡು ಸ್ವರಗಳ ನಡುವೆ ವ್ಯಂಜನವೊಂದು ಸೇರಿಕೊಳ್ಳುತ್ತದೆ. ಎಂದರೆ, ಕನ್ನಡದಲ್ಲಿ ಲೋಪ ಹಾಗೂ ಆಗಮಗಳೆಂಬ ಸೇರಿಕೆಯ ನಿಯಮಗಳು ಬರುವುದೇ ಜಾಸ್ತಿ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಒಂದೇ ರೀತಿಯ ಎರಡು ಸ್ವರಗಳು ಒಟ್ಟು ಸೇರಿದಾಗ ಅವೆರಡರ ಬದಲು ಒಂದು ಉದ್ದ ಸ್ವರ ಆದೇಶವಾಗಿ ಬರುತ್ತದೆ (ಸವರ್ಣದೀರ್ಘ). ಆದರೆ ಕನ್ನಡದಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯ ಸ್ವರ ಹಾಗೆಯೇ ಬದಲಾಗದೆ ಉಳಿಯುತ್ತದೆ.
ಕನ್ನಡದಲ್ಲಿ ಈ ಸೇರಿಕೆಯ ನಿಯಮಕ್ಕೆ ಮತ್ತು ಕೆಳಗೆ ಕೊಟ್ಟಿರುವ ಬೇರೆ ಕೆಲವು ಸೇರಿಕೆಯ ನಿಯಮಗಳಿಗೆ ಹಲಕೆಲವು ಅಪವಾದಗಳಿವೆಯೆಂಬುದನ್ನು ಮುಂದೆ (2.3)ರಲ್ಲಿ ನೋಡಲಿರುವೆವು.
ಸಂಸ್ಕೃತದ ಬದಲಾವಣೆಗಳು ದೇಶ + ಅಭಿಮಾನ = ದೇಶಾಭಿಮಾನ ಚಿಕ್ಕ + ಅಮ್ಮ = ಚಿಕ್ಕಮ್ಮ ಅಲ್ಲಿ + ಇಲ್ಲ = ಅಲ್ಲಿಲ್ಲ ಕವಿ + ಇಂದ್ರ = ಕವೀಂದ್ರ ಕಲ್ಲು + ಉಪ್ಪು = ಕಲ್ಲುಪ್ಪು ಗುರು + ಉಪದೇಶ = ಗುರೂಪದೇಶ
ಕನ್ನಡದ ಬದಲಾವಣೆಗಳು
ಮೇಲೆ ಕೊಟ್ಟಿರುವ ಸಂಸ್ಕೃತ ಉದಾಹರಣೆಗಳಲ್ಲಿ ಅಕಾರಕ್ಕೆ ಅಕಾರ ಪರವಾದಾಗ ಅವೆರಡರ ಬದಲು ಆಕಾರವೂ, ಇಕಾರಕ್ಕೆ ಇಕಾರ ಪರವಾದಾಗ ಅವೆರಡರ ಬದಲು ಈಕಾರವೂ, ಮತ್ತು ಉಕಾರಕ್ಕೆ ಉಕಾರ ಪರವಾದಾಗ ಅವೆರಡರ ಬದಲು ಊಕಾರವೂ ಆದೇಶವಾಗಿ ಬಂದಿವೆ.
ಇದಕ್ಕೆ ಬದಲು, ಅವುಗಳ ಎದುರಿಗೆ ಕೊಟ್ಟಿರುವ ಕನ್ನಡದ ಉದಾಹರಣೆ ಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದುಹೋಗಿದೆ (ಲೋಪ ಗೊಂಡಿದೆ) ಮತ್ತು ಎರಡನೆಯ ಪದದ ಮೊದಲನೆಯ ಸ್ವರ ಬದಲಾಗದೆ ಹಾಗೆಯೇ ಉಳಿದಿದೆ.
ಈ ರೀತಿ ಒಟ್ಟು ಸೇರುವ ಒಂದೇ ರೀತಿಯ ಎರಡು ಸ್ವರಗಳಲ್ಲಿ ಒಂದು ಮೊದಲಿಗೇನೇ ಉದ್ದ (ದೀರ್ಘ) ಸ್ವರವಾಗಿತ್ತಾದರೆ, ಸಂಸ್ಕೃತದಲ್ಲಿ ಅದು ಹಾಗೆಯೇ ಉಳಿಯುತ್ತದೆ ಮತ್ತು ಅದರೊಡನೆ ಬಂದಿರುವ ಇನ್ನೊಂದು ಸ್ವರ ಬಿದ್ದುಹೋಗುತ್ತದೆ. ಎರಡೂ ಉದ್ದ ಸ್ವರಗಳಾಗಿರುವಲ್ಲೂ ಒಂದು ಉದ್ದ ಸ್ವರ ಉಳಿಯುತ್ತದೆ.
ಇಲ್ಲೂ ಕೂಡ ಮೇಲಿನ ಆದೇಶ ಸಂಧಿಯೇ ನಡೆಯುವುದೆಂದೂ (ಎಂದರೆ ಆ ಎರಡು ಸ್ವರಗಳ ಜಾಗದಲ್ಲಿ ಉದ್ದ ಸ್ವರವೊಂದು ಆದೇಶವಾಗಿ ಬರುವು ದೆಂದೂ) ಹೇಳಲು ಸಾಧ್ಯವಿದೆ.
ಕನ್ನಡದಲ್ಲಿ ಇಂತಹ ಸಂದಭ್ರಗಳಲ್ಲೂ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯದು ಉಳಿಯುತ್ತದೆ.
ಸಂಸ್ಕೃತದ ಬದಲಾವಣೆಗಳು ದೇವ + ಆಲಯ = ದೇವಾಲಯ ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ ಗಿರಿ + ಈಶ = ಗಿರೀಶ
ಲಕ್ಶ್ಮೀ + ಈಶ = ಲಕ್ಶ್ಮೀಶ
ಕನ್ನಡದ ಬದಲಾವಣೆಗಳು ಬಂದ + ಆಗ = ಬಂದಾಗ ಹುಡುಗ+ಆಟ = ಹುಡುಗಾಟ ಅಲ್ಲಿ + ಈಗ = ಅಲ್ಲೀಗ
ಸಂಸ್ಕೃತದಲ್ಲಿ ಅ, ಆಗಳ ಅನಂತರ (1) ಇ, ಈಗಳು ಬಂದರೆ ಅವೆರಡರ ಬದಲು ಏಕಾರ ಆದೇಶವಾಗಿ ಬರುತ್ತದೆ, (2) ಉ, ಊಗಳು ಬಂದರೆ ಅವೆರಡರ ಬದಲು ಓಕಾರ ಆದೇಶವಾಗಿ ಬರುತ್ತದೆ, (3) ಏ ಮತ್ತು ಓಗಳು ಬಂದರೆ ಅವೆರಡರ ಬದಲು ಅನುಕ್ರಮವಾಗಿ ಐ ಮತ್ತು ಔಗಳು ಆದೇಶವಾಗಿ ಬರುತ್ತವೆ, (4) ಋಕಾರ ಬಂದರೆ ಅದರ ಬದಲು ಅರ್ ಎಂಬುದು ಆದೇಶವಾಗಿ ಬರುತ್ತದೆ, ಮತ್ತು (5) ಐ ಮತ್ತು ಔಗಳು ಬಂದರೆ ಅವು ಹಾಗೆಯೇ ಉಳಿದು ಅವುಗಳೊಂದಿಗೆ ಬರುವ ಅಕಾರ ಇಲ್ಲವೇ ಆಕಾರ ಬಿದ್ದು ಹೋಗುತ್ತದೆ.
ಆದರೆ ಕನ್ನಡದಲ್ಲಿ ಇಂತಹ ಎಲ್ಲಾ ಸಂದಭ್ರಗಳಲ್ಲೂ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯ ಸ್ವರ ಹಾಗೆಯೇ ಉಳಿಯುತ್ತದೆ (ಮೇಲೆಯೇ ಸೂಚಿಸಿದ ಹಾಗೆ ಕನ್ನಡದಲ್ಲಿ ಈ ನಿಯಮಕ್ಕಿರುವ ಅಪವಾದವೊಂದನ್ನು ಮುಂದೆ ನೋಡಲಿರುವೆವು).
(1)
(2)
(3)
(4)
(5)
ಕನ್ನಡದ ಬದಲಾವಣೆಗಳು
ಸಂಸ್ಕೃತದ ಬದಲಾವಣೆಗಳು
ರಾಜ + ಇಂದ್ರ = ರಾಜೇಂದ್ರ ಅಲ್ಲಿಂದ+ಇಳಿದ = ಅಲ್ಲಿಂದಿಳಿದ ಗಣ + ಈಶ = ಗಣೇಶ ಅಲ್ಲಿಂದ + ಈಚೆ = ಅಲ್ಲಿಂದೀಚೆ ಸೂರ್ಯ+ಉದಯ=ಸೂರ್ಯೋದಯ ಕೊಟ್ಟ + ಉಡುಗೆ = ಕೊಟ್ಟುಡುಗೆ ಗಂಗಾ + ಉದಕ = ಗಂಗೋದಕ ನಮ್ಮ + ಊರು = ನಮ್ಮೂರು ಲೋಕ + ಏಕ = ಲೋಕೈಕ ಜಲ + ಓಘ = ಜಲೌಘ ದೇವ + ಋಷಿ = ದೇವಷ್ರಿ ಮಹಾ + ಋಷಿ = ಮಹಷ್ರಿ
ವಿಶ್ವ + ಐಕ್ಯ = ವಿಶ್ವೈಕ್ಯ ದಿವ್ಯ + ಔಷಧ = ದಿವೌ್ಯಷಧ
ನಮ್ಮ + ಎದುರು = ನಮ್ಮೆದುರು ಬಿದ್ದ + ಒಡನೆ = ಬಿದ್ದೊಡನೆ (ಕನ್ನಡದಲ್ಲಿ ಋಕಾರವಿಲ್ಲ)
ನೂರ + ಐವತ್ತು = ನೂರೈವತ್ತು ದೊಡ್ಡ + ಔತಣ = ದೊಡೌ್ಡತಣ
ಅಕಾರದ ಬದಲು ಬೇರೆ ಸ್ವರ ಮೊದಲಿನದಾದಲ್ಲಿ ಬೇರೆಯೇ ಸೇರಿಕೆಯ ಬದಲಾವಣೆಗಳು ಸಂಸ್ಕೃತದಲ್ಲಿ ನಡೆಯುತ್ತವೆ. (1) ಮೊದಲಿನ ಸ್ವರ ಇಕಾರ ವಾದಲ್ಲಿ ಅದರ ಬದಲು ಯಕಾರ ಬರುತ್ತದೆ, (2) ಉಕಾರವಾದಲ್ಲಿ ವಕಾರ ಬರುತ್ತದೆ ಮತ್ತು (3) ಋಕಾರವಾದಲ್ಲಿ ರಕಾರ ಬರುತ್ತದೆ. ಇವೆಲ್ಲವೂ ಆದೇಶ ಗಳು.
ಇಂತಹ ಸಂದಭ್ರಗಳಲ್ಲೂ ಕನ್ನಡದಲ್ಲಿ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
ಸಂಸ್ಕೃತದ ಬದಲಾವಣೆಗಳು ಅತಿ + ಅಲ್ಪ = ಅತ್ಯಲ್ಪ ಅತಿ + ಆಸೆ = ಅತ್ಯಾಸೆ ಅತಿ + ಉತ್ತಮ = ಅತ್ಯುತ್ತಮ ಪ್ರತಿ + ಏಕ = ಪ್ರತ್ಯೇಕ ಗುರು + ಅಕ್ಷರ = ಗುರ್ವಕ್ಷರ ಗುರು + ಆಜ್ಞೆ = ಗುರ್ವಾಜ್ಞೆ ಲಘು + ಇತಿ = ಲಘ್ವಿತಿ ಪಿತೃ + ಆಜ್ರಿತ = ಪಿತ್ರಾಜ್ರಿತ
(1)
(2)
(3)
ಕನ್ನಡದ ಬದಲಾವಣೆಗಳು ಅಲ್ಲಿ + ಅಲ್ಲಿ = ಅಲ್ಲಲ್ಲಿ ಬಾಯಿ + ಆರಿಕೆ = ಬಾಯಾರಿಕೆ ಅಲ್ಲಿ + ಉಳಿದ = ಅಲ್ಲುಳಿದ
ಬೆನ್ನು + ಅಟ್ಟು = ಬೆನ್ನಟ್ಟು ಕಾಡು + ಆನೆ = ಕಾಡಾನೆ ಕಾಡು + ಇಲ್ಲ = ಕಾಡಿಲ್ಲ
2.2.2 ವ್ಯಂಜನಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು
ಹೊಸಗನ್ನಡದ ಪದಗಳೆಲ್ಲವೂ ಸ್ವರದಲ್ಲಿಯೇ ಕೊನೆಗೊಳ್ಳುವುವಾದ ಕಾರಣ, ವ್ಯಂಜನಕ್ಕೆ ವ್ಯಂಜನ ಸೇರಿ ಆಗುವ ‘ವ್ಯಂಜನಸಂಧಿ’ಗಳಾವುವೂ ಹೊಸಗನ್ನಡ ದಲ್ಲಿಲ್ಲ. ಆದರೆ ಹಳೆಗನ್ನಡದಲ್ಲಿ ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳಿದ್ದು ವಾದ ಕಾರಣ ಹಳೆಗನ್ನಡದ ಕಾಲದಿಂದ ಉಳಿದು ಬಂದ ಕೆಲವು ಜೋಡುಪದ ಗಳಲ್ಲಿ ಮಾತ್ರ ಅಂತಹ ಸೇರಿಕೆಯ ನಿಯಮಗಳನ್ನು ಕಾಣಬಹುದು.
ಬೆನ್ನು (ಬೆನ್) + ಕಾವಲು = ಬೆಂಗಾವಲು
ಕರಿ (ಕರ್) + ಕಲ್ಲು = ಕಗ್ಗಲ್ಲು
ಹಿರಿ (ಹೆರ್) + ಬಾಗಿಲು = ಹೆಬ್ಬಾಗಿಲು
ಬೆಂಗಾವಲು ಎಂಬುದರಲ್ಲಿ ನಕಾರ ಅನುಸ್ವಾರ (ಇಲ್ಲವೇ ಙಕಾರ)ವಾಗಿದೆ ಮತ್ತು ಅದರ ಅನಂತರ ಬರುವ ಕಕಾರ ಗಕಾರವಾಗಿದೆ; ಕಗ್ಗಲ್ಲು ಎಂಬುದರಲ್ಲಿ ರಕಾರ ಗಕಾರವಾಗಿದೆ ಮತ್ತು ಅದರ ಅನಂತರ ಬರುವ ಕಕಾರವೂ ಗಕಾರ ವಾಗಿದೆ; ಹೆಬ್ಬಾಗಿಲು ಎಂಬುದರಲ್ಲಿ ರಕಾರ ಬಕಾರವಾಗಿದೆ.
ಇಂತಹ ಬದಲಾವಣೆಗಳನ್ನು ಬಿಟ್ಟರೆ ಹೊಸಗನ್ನಡದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳೆಂದರೆ ಅವು ಸ್ವರಗಳ ಅನಂತರ ಬಂದಾಗ ಅವುಗಳಲ್ಲಿ ನಡೆಯುವ ಕೆಲವು ಬದಲಾವಣೆಗಳು ಮಾತ್ರ. ಇವೂ ಕನ್ನಡದಲ್ಲಿ ಪದಗಳ ಒಳಗಡೆ ಎಂದರೆ ಪದಗಳ ಒಳರಚನೆಯಲ್ಲಿ ಮಾತ್ರ ಕಾಣಿಸುವ ಬದಲಾವಣೆಗಳು (ಮನೆಗೆಲಸ, ಸುಡುಗಾಡು, ನೆಲದಾವರೆ).
ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಬದಲಾವಣೆಗಳೂ ಸಾಕಷ್ಟು ಕಾಣಿಸಿಕೊಳ್ಳುತ್ತವೆ. ಇಲ್ಲೂ ಕೂಡ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳನ್ನು ಕಾಣಬಹುದು.
ಉದಾಹರಣೆಗಾಗಿ, ಕನ್ನಡದಲ್ಲಿ ಕಕಾರ ಮತ್ತು ತಕಾರಗಳು ಸ್ವರದ ಅನಂತರ ಬಂದಾಗ ಅನುಕ್ರಮವಾಗಿ ಗಕಾರ ಮತ್ತು ದಕಾರಗಳಾಗುವುವಾದರೆ, ಸಂಸ್ಕೃತದಲ್ಲಿ ಕ, ತ, ಟ, ಪಗಳು ಸ್ವರಕ್ಕೆ ಮೊದಲು ಬಂದಾಗ (ಅಥವಾ ಬೇರೆ ಗ, ದ, ಡ, ಬಗಳಂತಹ ‘ಕೊರಳಿಸಿ’ದ (ಘೋಷ) ವ್ಯಂಜನಗಳ ಮೊದಲು ಬಂದಾಗ) ಅನುಕ್ರಮವಾಗಿ ಗ, ದ, ಡ, ಬಗಳಾಗುತ್ತವೆ.
ಎಂದರೆ, ಕನ್ನಡದಲ್ಲಿ ಬದಲಾಗುವ ವ್ಯಂಜನ ಎರಡನೆಯ ಪದದ ಸುರುವಿಗೆ ಬರುವುದಾದರೆ, ಸಂಸ್ಕೃತದಲ್ಲಿ ಬದಲಾಗುವ ವ್ಯಂಜನ ಮೊದಲನೆಯ ಪದದ ಕೊನೆಗೆ ಬರುತ್ತದೆ.
ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳಿಗೆ ಅಪವಾದಗಳಿರುವುದು ಬಹಳ ಕಡಿಮೆ. ಆದರೆ ಕನ್ನಡದಲ್ಲಿ ಬರುವ ವ್ಯಂಜನದ ಬದಲಾವಣೆಗಳಲ್ಲಿ ಕೆಲವು ಜೋಡುಪದಗಳಲ್ಲಿ ಮಾತ್ರ
ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಅಪವಾದ ಇದ್ದೇ ಇರುತ್ತದೆ.
ಸಂಸ್ಕೃತದ ಬದಲಾವಣೆಗಳು ವಾಕ್ + ಈಶ = ವಾಗೀಶ ಚಿತ್ + ಆನಂದ = ಚಿದಾನಂದ
ಷಟ್ + ಆನನ = ಷಡಾನನ ಸತ್ + ಭಕ್ತ = ಸದ್ಭಕ್ತ ವಾಕ್ + ದಾನ = ವಾಗ್ದಾನ
ಕನ್ನಡದ ಬದಲಾವಣೆಗಳು ಮನೆ + ಕೆಲಸ = ಮೆನೆಗೆಲಸ ನೆಲ + ತಾವರೆ = ನೆಲದಾವರೆ ಸುಡು + ಕಾಡು = ಸುಡುಗಾಡು ಆನೆ + ಕಾಲು = ಆನೆಕಾಲು ತಲೆ + ತೆರಿಗೆ = ತಲೆತೆರಿಗೆ
ಕನ್ನಡದಲ್ಲಿ ಈ ಸೇರಿಕೆಯ ನಿಯಮಗಳು ವಿಕಲ್ಪವಾಗಿ ನಡೆಯುತ್ತವೆ ಎಂಬುದನ್ನು (ಎಂದರೆ ಎಲ್ಲಾ ಸಂದಭ್ರಗಳಲ್ಲೂ ನಡೆಯುವುದಿಲ್ಲವೆಂಬುದನ್ನು) ಕೊನೆಯ ಎರಡು ಉದಾಹರಣೆಗಳಿಂದ (ಆನೆಕಾಲು, ತಲೆತೆರಿಗೆ ಎಂಬವು ಗಳಿಂದ) ತಿಳಿಯಬಹುದು.
ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲೂ ‘ಅನುನಾಸಿಕ ಸಂಧಿ’ ಎಂಬು ದೊಂದಿದೆಯುಂದು ಹೇಳಲು ಸಾಧ್ಯವಿದೆಯಾದರೂ ಅವೆರಡರ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆ ಗಳಿಂದ ತಿಳಿಯಬಹುದು.
ಸಂಸ್ಕೃತದ ‘ಅನುನಾಸಿಕ ಸಂಧಿ’
ವಾಕ್ + ಮಯ = ವಾಙ್ಮಯ
ಸತ್ + ಮಾನ = ಸನ್ಮಾನ ಷಟ್ + ಮುಖ = ಷಣ್ಮುಖ ದಿಕ್ + ಮೂಢ = ದಿಙ್ಮೂಢ
ಕನ್ನಡದ ‘ಅನುನಾಸಿಕ ಸಂಧಿ’ ಹಿಂ + ಮೇಳ = ಹಿಮ್ಮೇಳ ಹಿಂ + ನೋಟ = ಹಿನ್ನೋಟ ಮುಂ + ನುಡಿ = ಮುನ್ನುಡಿ ಮುಂ + ನಡೆ = ಮುನ್ನಡೆ
ಮತ್ತು
ಮುಂದೆ
ಪದಗಳಿಗೆ
ಕನ್ನಡದಲ್ಲಿ ಹಿಂದೆ ಕೆಲವು ಜೋಡುಪದಗಳಲ್ಲಿ ಅನುಕ್ರಮವಾಗಿ ಹಿಂ ಮತ್ತು ಮುಂ ರೂಪಗಳಿವೆ. ಇವುಗಳ ಅನಂತರ ಅನು ನಾಸಿಕವೊಂದು ಬಂದಾಗ ಈ ಪದಗಳ ಕೊನೆಯ ಅನುಸ್ವಾರಕ್ಕೆ ಆ ಅನುನಾಸಿಕದ್ದೇ ರೂಪ ಬರುತ್ತದೆ. ಇದನ್ನು ‘ಅನುನಾಸಿಕ ಸಂಧಿ’ ಎಂಬುದಾಗಿ ಕರೆಯಲು ಸಾಧ್ಯವಿದೆ.
ಆದರೆ, ಸಂಸ್ಕೃತದ ಅನುನಾಸಿಕ ಸಂಧಿ ಇದಕ್ಕಿಂತ ತೀರ ಭಿನ್ನವಾದುದು. ಯಾಕೆಂದರೆ, ಸಂಸ್ಕೃತದಲ್ಲಿ ಅನುನಾಸಿಕವಾಗಿ ಬದಲಾಗುವುದು ಕ, ಟ, ತ, ಪ, ಮೊದಲಾದ ಸ್ಪಶ್ರಗಳಲ್ಲದೆ ಅನುಸ್ವಾರವಲ್ಲ. ಇದಲ್ಲದೆ, ಈ ರೀತಿ ಅನುನಾಸಿಕ ಗಳಾಗಿ ಬದಲಾಗಿರುವ ಸ್ಪಶ್ರಗಳು ಸಂಸ್ಕೃತದಲ್ಲಿ ಅವುಗಳ ಅನಂತರ ಬರುವ ಅನುನಾಸಿಕಕ್ಕಿಂತ ಭಿನ್ನವಾಗಿಯೇ ಉಳಿಯುತ್ತವೆ.
2.3 ನಾಮರೂಢಿಯಳಿಯುವ ಹಾಗಿದ್ದರೆ..
ಮೇಲೆ ಸೂಚಿಸಿದ ಹಾಗೆ, ಕನ್ನಡದಲ್ಲಿ ಒಂದು ಪದದೊಂದಿಗೆ ಸ್ವರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಇಲ್ಲವೇ ಅಂತಹದೇ ಒಂದು ಪ್ರತ್ಯಯ ವನ್ನು ಸೇರಿಸಿದಾಗ, ಮೊದಲನೆಯ ಪದದ ಕೊನೆಯ ಸ್ವರ ಬಿದ್ದು ಹೋಗುತ್ತದೆ ಯುಂಬ ಸೇರಿಕೆಯ ನಿಯಮವಿದೆ. ಈ ನಿಯಮಕ್ಕೆ ಹಲಕೆಲವು ಅಪವಾದಗಳೂ ಇವೆ. ಕೆಲವು ಸಂದಭ್ರಗಳಲ್ಲಿ ಈ ರೀತಿ ಸ್ವರ ಬಿದ್ದು ಹೋಗುವ ಬದಲು ಅದರ ಮುಂದೆ ಯಕಾರ ಇಲ್ಲವೇ ವಕಾರ ಹೊಸದಾಗಿ ಸೇರಿಕೊಳ್ಳುತ್ತದೆ.
ಯ ಇಲ್ಲವೇ ವ ಸೇರಿಕೊಳ್ಳುವುದು ನಂಬಿಕೆ + ಇಡು = ನಂಬಿಕೆಯಿಡು ಮನೆ + ಒಂದು = ಮನೆಯೊಂದು ಕಪ್ಪೆ + ಉಂಟು = ಕಪ್ಪೆಯುಂಟು ಮಗು + ಇಗೆ = ಮಗುವಿಗೆ ರಾಜು + ಅಲ್ಲ = ರಾಜುವಲ್ಲ
ಸ್ವರ ಬಿದ್ದು ಹೋಗುವುದು
ಕೆಳಗೆ + ಇಡು = ಕೆಳಗಿಡು ಬೇರೆ + ಒಬ್ಬ = ಬೇರೊಬ್ಬ ಹಿಂದೆ + ಉಳಿ = ಹಿಂದುಳಿ ಕಾಡು + ಇಗೆ = ಕಾಡಿಗೆ ನಾನು + ಅಲ್ಲ = ನಾನಲ್ಲ ಮತ್ತು + ಒಂದು = ಮತ್ತೊಂದು ಮಗು+ ಒಂದು = ಮಗುವೊಂದು ಇತ್ತು + ಎಂದು = ಇತ್ತೆಂದು ಹಣದ + ಆಸೆ = ಹಣದಾಸೆ ಅಲ್ಲಿ + ಇಲ್ಲ = ಅಲ್ಲಿಲ್ಲ ಬಾಯಿ + ಆರು = ಬಾಯಾರು ಅಲ್ಲಿ + ಒಂದು = ಅಲ್ಲೊಂದು ಇದ್ದಾನೆ + ಎಂದು = ಇದ್ದಾನೆಂದು ಇದೆ + ಎಂದು = ಇದೆಯೆಂದು
ಇದೆ + ಎಂದು = ಇದೆಯೆಂದು ಖಂಡಿತ + ಆಗಿ = ಖಂಡಿತವಾಗಿ ಭೀತಿ + ಇಲ್ಲ = ಭೀತಿಯಿಲ್ಲ ಹುರಿ + ಆಗು = ಹುರಿಯಾಗು ನಾಯಿ+ಒಂದು= ನಾಯಿಯೊಂದು
ಕನ್ನಡದಲ್ಲಿ ಈ ರೀತಿ ಪದಗಳ ಅನಂತರ ಸ್ವರದಲ್ಲಿ ಸುರುವಾಗುವ ಪದ ಇಲ್ಲವೇ ಪ್ರತ್ಯಯ ಬಂದಾಗ ಎಂತಹ ಸಂದಭ್ರಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದು ಹೋಗುತ್ತದೆ (ಸ್ವರದ ಲೋಪವಾಗುತ್ತದೆ) ಮತ್ತು ಎಂತಹ ಸಂದಭ್ರಗಳಲ್ಲಿ ಆ ಎರಡು ಸ್ವರಗಳೂ ಬದಲಾಗದೆ ಉಳಿದು ಅವೆರಡರ ನಡುವೆ ಯಕಾರ ಇಲ್ಲವೇ ವಕಾರ ಆಗಮವಾಗಿ ಸೇರಿಕೊಳ್ಳುತ್ತದೆ ಎಂಬುದಕ್ಕೆ ಒಂದು ನಿಶ್ಚಿತವಾದ ನಿಯಮವನ್ನು ತಯಾರಿಸಿ ಕೊಡಲು ಕನ್ನಡದ ವೈಯಾಕರಣಿಗಳಿಗೆ ಸಾಧ್ಯವಾಗಿರಲಿಲ್ಲ.
ಹಾಗಾಗಿ ‘ನಾಮರೂಢಿ’ ಇಲ್ಲವೇ ‘ನಾಮಭಾಗ’ ಅಳಿಯದೆ ಇರುವ ಹಾಗಿದ್ದಲ್ಲಿ ಮಾತ್ರ ಲೋಪ ಮಾಡಬೇಕು (ಮತ್ತು ಅಳಿಯುವ ಹಾಗಿದ್ದಲ್ಲಿ ಲೋಪ ಮಾಡದೆ ಯಕಾರ ಇಲ್ಲವೇ ವಕಾರವನ್ನು ಸೇರಿಸಿಕೊಳ್ಳಬೇಕು ಅಥವಾ ಸಂಧಿ ಮಾಡದೆ ಇರಬೇಕು) ಎಂಬುದಾಗಿ ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಈ ಸಮಸ್ಯೆಗೆ ಸರಿಯಾದ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸದೆ ಜಾರಿಕೊಂಡಿದ್ದಾರೆ.
ಅನಂತರದ ಕನ್ನಡ ವೈಯಾಕರಣಿಗಳೆಲ್ಲರೂ ಇದನ್ನು ಹಾಗೆಯೇ ಗಿಳಿಪಾಠ ಮಾಡಿದ್ದಾರಲ್ಲದೆ ಈ ಪದಕಂತೆಗಳ ಹಿಂದೆ ಕನ್ನಡದ್ದೇ ಆದ ಸೇರಿಕೆಯ ನಿಯಮ ಗಳೇನಾದರೂ ಅಡಗಿವೆಯೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದಂತಿಲ್ಲ. ಬಿಳಿಗಿರಿಯವರ ‘ಆಲೋಕ’ (ಬಿಳಿಗಿರಿ 1969) ಇದಕ್ಕೊಂದು ಅಪವಾದವೆಂದು ಹೇಳಬಹುದು.
ನಾಮರೂಪ ಅಳಿಯುವುದಿಲ್ಲವಾದಲ್ಲಿ ಮಾತ್ರ ಲೋಪಸಂಧಿಯನ್ನು ಬಳಸ ಬೇಕು ಎಂಬ ಹಳೆಗನ್ನಡ ವೈಯಾಕರಣಿಗಳ ಮಾತು ಅವರ ಜಾಣ್ಮೆಯನ್ನು ತೋರಿಸುತ್ತದೆ ಎಂಬುದಾಗಿ ಇವತ್ತಿನ ವೈಯಾಕರಣಿಗಳು ಕೆಲವರು ಭಾವಿಸಿರುವ ಹಾಗಿದೆ. ನಿಜಕ್ಕೂ ಇದು ಅವರ ಸೋಮಾರಿತನವನ್ನು ತೋರಿಸುತ್ತದಲ್ಲದೆ ಜಾಣ್ಮೆಯನ್ನಲ್ಲ.
ಯಾಕೆಂದರೆ, ವಾಕ್ಯದಲ್ಲಿ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವಾಗ ಎಲ್ಲಿ ಸಂಧಿ ಮಾಡಬೇಕು, ಎಲ್ಲಿ ಸಂಧಿಮಾಡಬಾರದು ಮತ್ತು ಎಲ್ಲಿ ಎಂತಹ ಸಂಧಿಯನ್ನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳುವುದೇ ವೈಯಾಕರಣಿಯ ಕೆಲಸ (ಬಿಳಿಗಿರಿ 1969:173-8 ನೋಡಿ).
ನಾಮರೂಪ ಅಳಿಯುವಲ್ಲಿ ಲೋಪ ಮಾಡಬೇಡ ಎನ್ನಲು ಸಾಧ್ಯವಿದೆ ಯಾದರೆ, ವಾಕ್ಯರೂಪ ಅಳಿಯುವಲ್ಲಿ ಪದಗಳನ್ನು ಪ್ರಯೋಗಿಸಬೇಡ ಎಂದೂ ಹೇಳಲು ಸಾಧ್ಯವಿದೆ. ಹಾಗಿದ್ದರೆ ಈ ಎರಡೇ ವಾಕ್ಯಗಳಲ್ಲಿ ಇಡೀ ವ್ಯಾಕರಣವನ್ನು ಬರೆದು ಮುಗಿಸಿಬಿಡಬಹುದು!
ನಿಜಕ್ಕೂ ಮೇಲಿನ ಅಪವಾದಗಳ ಹಿಂದೆ ಎಂತಹ ನಿಯಮ ಅಡಗಿದೆ ಎಂಬುದನ್ನು ಕೆಳಗೆ (2.4)ರಲ್ಲಿ ಸೂಚಿಸಲಾಗಿದೆ.
2.4 ಸಂದಭ್ರಗಳ ವಿಭಜನೆ
ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ತೆರನಾಗಿರುತ್ತವೆ. ಹಾಗಾಗಿ ಕನ್ನಡಲ್ಲಿ ಎಂತಹ ಸೇರಿಕೆಯ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳ ಬೇಕಾದರೆ ಈ ಸೇರಿಕೆಯ ನಿಯಮಗಳು ಕನ್ನಡದಲ್ಲಿ ಯಾವ ಯಾವ ಸಂದಭ್ರ ಗಳಲ್ಲೆಲ್ಲ ಭಿನ್ನವಾಗಿರುತ್ತವೆ ಎಂಬುದನ್ನು ಕಂಡುಹಿಡಿದು ಅದಕ್ಕನುಸಾರವಾಗಿ ಅವನ್ನು ವಿಭಜಿಸುವುದು ಅವಶ್ಯ.
ಮೊದಲನೆಯದಾಗಿ, ಕನ್ನಡದ ವೈಯಾಕರಣಿಗಳೇ ಹೇಳುವ ಹಾಗೆ, ಪದಮಧ್ಯದಲ್ಲಿ (ಎಂದರೆ ಪದಗಳ ಒಳರಚನೆಯಲ್ಲಿ) ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದಾಂತ್ಯದಲ್ಲಿ (ಎಂದರೆ ಪದಗಳನ್ನು ವಾಕ್ಯವೊಂದರಲ್ಲಿ ಬಳಸಿದಾಗ ಅವುಗಳ ನಡುವೆ) ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲಕೆಲವು ವ್ಯತ್ಯಾಸಗಳಿವೆ.
ಉದಾಹರಣೆಗಾಗಿ, ಕನ್ನಡದಲ್ಲಿ ವ್ಯಂಜನಗಳ ಬದಲಾವಣೆಗಳು ಪದಗಳ ನಡುವೆ ನಡೆಯುವುವಲ್ಲದೆ ಪದಗಳ ಕೊನೆಯಲ್ಲಿ ನಡೆಯುವುದಿಲ್ಲ ಎಂಬುದನ್ನು ನಾವು ಮೇಲೆ (2.2.2)ರಲ್ಲಿ ನೋಡಿರುವೆವು.
ಪದಗಳ ನಡುವೆ ನೆಲ + ಕಡಲೆ = ನೆಲಗಡಲೆ ಕೆಳ + ತುಟಿ = ಕೆಳದುಟಿ ಬೀಸು + ಕಲ್ಲು = ಬೀಸುಗಲ್ಲು ಊರು + ಕೋಲು = ಊರುಗೋಲು ದೊಡ್ಡ+ಕೋಲು=ದೊಡ್ಡ ಕೋಲು
ಪದಗಳ ಕೊನೆಯಲ್ಲಿ ನನ್ನ + ಕಾಲು = ನನ್ನ ಕಾಲು ದೊಡ್ಡ+ತುಂಡು=ದೊಡ್ಡ ತುಂಡು ಕೆಂಪು + ಕಲ್ಲು = ಕೆಂಪು ಕಲ್ಲು
ಪದಗಳ ನಡುವೆಯೂ ಈ ಬದಲಾವಣೆಗಳು ವಿಕಲ್ಪವಾಗಿ ಮಾತ್ರವೇ ನಡೆಯುತ್ತವಲ್ಲದೆ ಎಲ್ಲಾ ಸಂದಭ್ರಗಳಲ್ಲೂ ನಡೆಯುವುದಿಲ್ಲ ಎಂಬುದನ್ನು ಒಳಕೋಣೆ, ಆನೆಕಾಲು, ತಲೆತೆರಿಗೆ, ಕರಿತುಳಸಿ ಮೊದಲಾದ ಉದಾಹರಣೆ ಗಳಲ್ಲಿ ಕಾಣಬಹುದು.
ಸ್ವರಗಳ ಬದಲಾವಣೆಗಳಲ್ಲೂ ಪದಗಳ ನಡುವಿನ ಮತ್ತು ಕೊನೆಯ ಬದಲಾವಣೆಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕೆಲವು ಸಂದಭ್ರಗಳಲ್ಲಿ ಪದಗಳ ನಡುವೆ ಸ್ವರ ಬಿದ್ದು ಹೋಗುವುದಾದರೆ ಪದಗಳ ಕೊನೆಯಲ್ಲಿ ಯಕಾರ ಇಲ್ಲವೇ ವಕಾರ ಆಗಮವಾಗಿ ಬರುತ್ತದೆ.
ಪದಗಳ ನಡುವಿನ ಬದಲಾವಣೆ
ಕುಡಿ + ಇಸು = ಕುಡಿಸು ಬರು + ಇಸು = ಬರಿಸು ಚಿಕ್ಕ + ಅಮ್ಮ = ಚಿಕ್ಕಮ್ಮ ನೆನೆ + ಇಸು = ನೆನೆಸು
ಪದಗಳ ಕೊನೆಯ ಬದಲಾವಣೆ ಗತಿ + ಇಲ್ಲ = ಗತಿಯಿಲ್ಲ ಮಗು + ಇಲ್ಲದೆ = ಮಗುವಿಲ್ಲದೆ ಕಾರಣ + ಇಲ್ಲ = ಕಾರಣವಿಲ್ಲ ನಂಬಿಕೆ + ಇಡು = ನಂಬಿಕೆಯಿಡು
ಎರಡನೆಯದಾಗಿ, ಪದಗಳ ನಡುವಿನ ಬದಲಾವಣೆಯಲ್ಲಿಯೇ ಪದ ಪ್ರತ್ಯಯಗಳ (ಎಂದರೆ ಒಂದು ಪದದಿಂದ ಇನ್ನೊಂದು ಪದವನ್ನು ತಯಾರಿಸಲು ಬಳಸುವ ಪ್ರತ್ಯಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದರೂಪ ಪ್ರತ್ಯಯಗಳ (ಎಂದರೆ ಒಂದು ಪದದಿಂದ ಅದರ ಬೇರೆ ಬೇರೆ ರೂಪಗಳನ್ನು ತಯಾರಿಸಲು ಬಳಸುವ ಪ್ರತ್ಯಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ವ್ಯತ್ಯಾಸಗಳಿವೆ.
ಉದಾಹರಣೆಗಾಗಿ, ಉಕಾರಾಂತ ಕ್ರಿಯಾಪದಗಳಿಗೆ ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿದಾಗ ವಕಾರ ಆಗಮವಾಗಿ ಬರುತ್ತದೆ, ಆದರೆ ಇಕೆ ಎಂಬ ಪದಪ್ರತ್ಯಯವನ್ನು ಸೇರಿಸಿದಾಗ ಉಕಾರ ಬಿದ್ದು ಹೋಗುತ್ತದೆ (4.5 ನೋಡಿ).
ಪದಪ್ರತ್ಯಯ
ಹೇಳು + ಇಕೆ = ಹೇಳಿಕೆ ಹೆದರು + ಇಕೆ = ಹೆದರಿಕೆ ನಂಬು + ಇಕೆ = ನಂಬಿಕೆ
ಪದರೂಪ ಪ್ರತ್ಯಯ ಹೇಳು + ಇಕೆ = ಹೇಳುವಿಕೆ ಹೆದರು + ಇಕೆ = ಹೆದರುವಿಕೆ ನಂಬು + ಇಕೆ = ನಂಬುವಿಕೆ ಅಂಜು + ಇಕೆ = ಅಂಜುವಿಕೆ
ಪದರೂಪ ಪ್ರತ್ಯಯಗಳಲ್ಲೂ ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸಿದಾಗ ಬೇರೆ ಬೇರೆ ರೀತಿಯ ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ, ಕ್ರಿಯಾಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಉಕಾರ ಬಿದ್ದುಹೋಗುತ್ತದೆ; ಆದರೆ ಇಕೆ ಪ್ರತ್ಯಯವನ್ನು ಸೇರಿಸಿದಾಗ ವಕಾರ ಆಗಮವಾಗಿ ಬರುತ್ತದೆ ಮತ್ತು ಉಕಾರ ಬಿದ್ದು ಹೋಗದೆ ಹಾಗೆಯೇ ಉಳಿಯುತ್ತದೆ.
ಇಸು ಪ್ರತ್ಯಯ ಪರವಾದಾಗ ಹಾಡು + ಇಸು = ಹಾಡಿಸು ನೋಡು + ಇಸು = ನೋಡಿಸು
ತಿನ್ನು + ಇಸು = ತಿನ್ನಿಸು ನುಂಗು + ಇಸು = ನುಂಗಿಸು
ಹೊರಡು + ಇಸು = ಹೊರಡಿಸು
ಇಕೆ ಪ್ರತ್ಯಯ ಪರವಾದಾಗ ಹಾಡು + ಇಕೆ = ಹಾಡುವಿಕೆ ನೋಡು + ಇಕೆ =ನೋಡುವಿಕೆ ತಿನ್ನು + ಇಕೆ = ತಿನ್ನುವಿಕೆ ನುಂಗು + ಇಕೆ = ನುಂಗುವಿಕೆ ಹೊರಡು + ಇಕೆ = ಹೊರಡುವಿಕೆ
ಮೂರನೆಯದಾಗಿ, ಎರಡು ಸ್ವರಗಳು ಒಟ್ಟಿಗೆ ಸೇರಿದಾಗ ಅವುಗಳಲ್ಲಿ ಮೊದಲನೆಯ ಸ್ವರ ಪ್ರಕೃತಿಯದೇ ಅಥವಾ ಪ್ರತ್ಯಯದ್ದೇ ಎಂಬ ಅಂಶದ ಮೇಲೂ ಪದಗಳ ಕೊನೆಯ ಸ್ವರ ಬಿದ್ದು ಹೋಗುವುದೇ ಅಥವಾ ಆಗಮ ಬರುವುದೇ ಎಂಬ ವಿಷಯ ಅವಲಂಬಿಸಿದೆ. ಮೊದಲನೆಯ ಸ್ವರ ಪ್ರಕೃತಿ ಯದ್ದಾದರೆ ಸಾಮಾನ್ಯವಾಗಿ ಅದು ಬಿದ್ದು ಹೋಗುವುದಿಲ್ಲ (ಇದಕ್ಕೆ ಒಂದು ಅಪವಾದವಿದೆಯೆಂಬುದನ್ನು ಕೆಳಗೆ ನೋಡಲಿರುವೆವು), ಆದರೆ ಅದು ಪ್ರತ್ಯಯ ದ್ದಾದರೆ ಬಿದ್ದು ಹೋಗುವುದೇ ಜಾಸ್ತಿ.
ಪ್ರಕೃತಿಯ ಸ್ವರ ದಾರಿ + ಇಲ್ಲ = ದಾರಿಯಿಲ್ಲ ಕೆಲಸ + ಉಂಟು = ಕೆಲಸವುಂಟು ದಪ್ಪ + ಆಗಿ = ದಪ್ಪವಾಗಿ ಮನೆ + ಒಂದು = ಮನೆಯೊಂದು ಅಂಜಿಕೆ + ಇತ್ತು = ಅಂಜಿಕೆಯಿತ್ತು ಮದುವೆ + ಇತ್ತು = ಮದುವೆಯಿತ್ತು ಓದದೆ + ಇದ್ದ = ಓದದಿದ್ದ ಅಡ್ಡ + ಆಗಿ = ಅಡ್ಡವಾಗಿ
ಪ್ರತ್ಯಯದ ಸ್ವರ ನಮ್ಮಲ್ಲಿ + ಇಲ್ಲ = ನಮ್ಮಲ್ಲಿಲ್ಲ ನಮ್ಮ + ಊರು = ನಮ್ಮೂರು ಅಲ್ಲಂದ + ಆಚೆ = ಅಲ್ಲಿಂದಾಚೆ ಅದಕ್ಕೆ + ಒಪ್ಪಿ = ಅದಕ್ಕೊಪ್ಪಿ ಗಂಜಿಗೆ + ಇಲ್ಲ = ಗಂಜಿಗಿಲ್ಲ
ಕಾಡಿನಲ್ಲಿ + ಆಗಿ = ಕಾಡಿನಲ್ಲಾಗಿ
ಮೇಲೆ ದಾರಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರಕೃತಿಯದ್ದಾದ ಕಾರಣ ಅದರ ಕೊನೆಯ ಸ್ವರ ಬಿದ್ದು ಹೋಗಿಲ್ಲ, ಆದರೆ ನಮ್ಮಲ್ಲಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರತ್ಯಯದ್ದಾದ ಕಾರಣ ಅದು ಬಿದ್ದು ಹೋಗಿದೆ. ಇತರ ಪದಗಳಲ್ಲೂ ಹೀಗೆಯೇ.
ನಾಲ್ಕನೆಯದಾಗಿ, ಸ್ವರಕ್ಕೆ ಸ್ವರ ಸೇರಿದಾಗ ಆಗಮವಾಗಿ ಯಕಾರ ಬರುವುದೋ ಇಲ್ಲವೇ ವಕಾರ ಬರುವುದೋ ಎಂಬುದು ಅವುಗಳಲ್ಲಿ ಮೊದಲನೆಯ ಸ್ವರ ಎಂತಹದು ಎಂಬುದನ್ನವಲಂಬಿಸಿದೆ. ಮೊದಲನೆಯ ಸ್ವರ ಎಕಾರ ಇಲ್ಲವೇ ಇಕಾರವಾದರೆ ಆಗಮವಾಗಿ ಯಕಾರ ಬರುತ್ತದೆ, ಅಕಾರ ಇಲ್ಲವೇ ಉಕಾರವಾದರೆ ಆಗಮವಾಗಿ ವಕಾರ ಬರುತ್ತದೆ.
ಆಗಮವಾಗಿ ವಕಾರ ಕೆಲಸ + ಅಲ್ಲ = ಕೆಲಸವಲ್ಲ
ಆಗಮವಾಗಿ ಯಕಾರ ಕುದುರೆ + ಅಲ್ಲ = ಕುದುರೆಯಲ್ಲ ಸಂಜೆ + ಆಯಿತು = ಸಂಜೆಯಾಯಿತು ಇಲ್ಲ+ಆದರೂ = ಇಲ್ಲವಾದರೂ ನಂಬಿಕೆ + ಇಡು = ನಂಬಿಕೆಯಿಡು ನಂಬಿಕೆ + ಉಂಟು = ನಂಬಿಕೆಯುಂಟು ಇದೆ + ಎಂದು = ಇದೆಯೆಂದು ಮನೆ + ಒಂದು = ಮನೆಯೊಂದು
ಕಡಿ + ಅಕ್ಕಿ = ಕಡಿಯಕ್ಕಿ ಗುರಿ + ಆಗು = ಗುರಿಯಾಗು ಇಲಿ + ಇಲ್ಲ = ಇಲಿಯಿಲ್ಲ ನಾಯಿ + ಎಂದು = ನಾಯಿಯೆಂದು ವ್ಯಕ್ತಿ + ಒಬ್ಬ = ವ್ಯಕ್ತಿಯೊಬ್ಬ
ಕೆಲಸ + ಇಲ್ಲ = ಕೆಲಸವಿಲ್ಲ ಕೆಲಸ + ಉಂಟು = ಕೆಲಸವುಂಟು ಇಲ್ಲ + ಎಂದು = ಇಲ್ಲವೆಂದು ಕೆಲಸ + ಒಂದು = ಕೆಲಸವೊಂದು ಮಗು + ಅಲ್ಲ = ಮಗುವಲ್ಲ ಗುರು + ಆಗು = ಗುರುವಾಗು ಕರು + ಇಲ್ಲ = ಕರುವಿಲ್ಲ ಗುರು + ಎಂದು = ಗುರುವೆಂದು ಮಗು+ಒಂದು = ಮಗುವೊಂದು
ಐದನೆಯದಾಗಿ, ಪ್ರಕೃತಿಯ ಕೊನೆಯ ಸ್ವರ ಉಕಾರವಾಗಿದೆಯಾದರೆ ಮತ್ತು ಆ ಪ್ರಕೃತಿಯಲ್ಲಿ ಕಡಿಮೆಯುಂದರೆ ಮೂರಾದರೂ ಛಂದೋಮಾತ್ರೆಗಳಿವೆಯಾದರೆ ಅದರ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಪ್ರಕೃತಿಯಲ್ಲಿ ಮೂರಕ್ಕಿಂತ ಕಡಿಮೆ (ಎಂದರೆ ಎರಡು) ಛಂದೋಮಾತ್ರೆಗಳಿವೆಯಾದರೆ ಉಕಾರ ಬಿದ್ದು ಹೋಗುವುದಿಲ್ಲ.
ಎರಡಕ್ಕಿಂತ ಜಾಸ್ತಿ ಮಾತ್ರೆಗಳು ಕಲ್ಲು + ಒಂದು = ಕಲ್ಲೊಂದು
ಕಾಡು + ಇಗೆ = ಕಾಡಿಗೆ ಬೆನ್ನು + ಅಟ್ಟು = ಬೆನ್ನಟ್ಟು ಹಣ್ಣು + ಆಗಿದೆ = ಹಣ್ಣಾಗಿದೆ
ಎರಡು ಮಾತ್ರೆಗಳು ಮಗು+ ಒಂದು = ಮಗುವೊಂದು ಕರು + ಇಗೆ = ಕರುವಿಗೆ ಗುರು + ಇನ = ಗುರುವಿನ ಕರು + ಆಗಿದೆ = ಕರುವಾಗಿದೆ
ಆರನೆಯದಾಗಿ, ಪ್ರಕೃತಿಯು ನಾಮಪದವೇ ಅಥವಾ ಕ್ರಿಯಾಪದವೇ ಎಂಬ ವಿಷಯವನ್ನಾಧರಿಸಿಯೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ ಪ್ರಕೃತಿಯು ಕ್ರಿಯಾಪದವಾಗಿದೆಯಾದರೆ, ಅದರಲ್ಲಿ ಎರಡೇ ಛಂದೋಮಾತ್ರೆಗಳಿದ್ದರೂ ಕೊನೆಯ ಉಕಾರ ಬಿದ್ದು ಹೋಗುತ್ತದೆ.
ನಾಮಪ್ರಕೃತಿಗಳಲ್ಲಿ ಲೋಪವಿಲ್ಲ
ಮಗು + ಅನ್ನು = ಮಗುವನ್ನು
ಕರು + ಇಗೆ = ಕರುವಿಗೆ ಹಸು + ಇನ = ಹಸುವಿನ
ಕ್ರಿಯಾಪ್ರಕೃತಿಗಳಲ್ಲಿ ಲೋಪ ಬಿಡು + ಅಲಿ = ಬಿಡಲಿ ಕೊಡು + ಇಸು = ಕೊಡಿಸು ಇರು + ಉತ್ತ = ಇರುತ್ತ
ಏಳನೆಯದಾಗಿ ಪ್ರಕೃತಿಯು ಕನ್ನಡದ್ದೇ ಅಥವಾ ಸಂಸ್ಕೃತದಿಂದ ಎರವಲಾಗಿ ಬಂದುದೇ ಎಂಬ ವಿಷಯದ ಮೇಲೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಸಂಸ್ಕೃತದ ಪ್ರಕೃತಿಗಳಲ್ಲಿ ಮೂರು ಅಥವಾ ಜಾಸ್ತಿ ಛಂದೋಮಾತ್ರೆಗಳಿದ್ದರೂ ಉಕಾರ ಬಿದ್ದುಹೋಗುವುದಿಲ್ಲ.
ಕನ್ನಡದ ಪ್ರಕೃತಿ ಮಾತು + ಅನ್ನು = ಮಾತನ್ನು
ಕಾಡು + ಇಗೆ = ಕಾಡಿಗೆ ಕಾಡು + ಇನ = ಕಾಡಿನ
ಸಂಸ್ಕೃತದ ಪ್ರಕೃತಿ ಧಾತು + ಅನ್ನು = ಧಾತುವನ್ನು ಸಾಧು + ಇಗೆ = ಸಾಧುವಿಗೆ ಸಾಧು + ಇನ = ಸಾಧುವಿನ
ಈ ರೀತಿ ಕನ್ನಡದಲ್ಲಿ ಎಲ್ಲಿ ಎಂತಹ ಸೇರಿಕೆಯ ನಿಯಮ ಕಾಣಿಸಿಕೊಳ್ಳು ತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ ಬರೆಯಲು ಹಲವಾರು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳುವ ಅವಶ್ಯಕತೆಯಿದೆ. ಇವನ್ನೆಲ್ಲ ಸರಿಯಾಗಿ ಗಮನಿಸಿ ಸೇರಿಕೆಯ ನಿಯಮಗಳನ್ನು ಬರೆದಲ್ಲಿ ‘ನಾಮರೂಪವಳಿಯದಿದ್ದಲ್ಲಿ’ ಎಂಬಂತಹ ಪ್ರಯೋಗಗಳ ಮೂಲಕ ಜಾರಿಕೊಳ್ಳುವ ಅವಶ್ಯಕತೆಯಿಲ್ಲ.
2.5 ಸೇರಿಕೆಯ ನಿಯಮಗಳ ಅನಿಯಮಿತತೆ
ಕನ್ನಡದಲ್ಲಿ ಸಾಮಾನ್ಯವಾಗಿ ಪದಗಳ ನಡುವೆ ಬರುವ ಸೇರಿಕೆಯ ನಿಯಮಗಳು, ಅದರಲ್ಲೂ ಜೋಡುಪದಗಳಲ್ಲಿ ಮತ್ತು ಪದಪ್ರತ್ಯಯಗಳ ಮೂಲಕ ಸಿದ್ಧ ವಾಗುವ ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಅನಿಯಮಿತ ವಾಗಿರುವುದೇ ಜಾಸ್ತಿ.
ಇದಕ್ಕೆ ಕಾರಣವೇನೆಂದರೆ, ಈ ಪದಗಳು ಅವುಗಳ ಅವಶ್ಯಕತೆ ತೋರಿ ಬಂದಾಗ ಒಂದೊಂದಾಗಿ ತಯಾರಾಗಿ ಭಾಷೆಯಲ್ಲಿ ಬಳಕೆಗೆ ಬಂದಂತಹವುಗಳು. ಇವು ಈ ರೀತಿ ಬೇರೆ ಬೇರೆ ಸಮಯಗಳಲ್ಲಿ ತಯಾರಾಗಿರಲು ಸಾಧ್ಯವಿದೆಯಾದ
ಪಕಾರ
ನಡೆದಿದ್ದ
ಶತಮಾನದಲ್ಲೇನೇ
ಕಾಣಿಸುವ ಡಕಾರ
ಕಾರಣ, ಅವುಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ ಸಮಯದವಾಗಿರಲು ಸಾಧ್ಯವಿದೆ.
ಉದಾಹರಣೆಗಾಗಿ ಕಾಳ್ಗಿಚ್ಚು (ಕಾಡು + ಕಿಚ್ಚು ‘ಬೆಂಕಿ’) ಜೋಡುಪದ ಳಕಾರವಾಗುವ ಬದಲಾವಣೆ ಹಳೆಗನ್ನಡದ ಸಮಯದ್ದು. ಈ ಜೋಡುಪದ ಅಷ್ಟೊಂದು ಹಿಂದೆಯೇ ತಯಾರಾಗಿದ್ದು, ಇಂದಿಗೂ ಬದಲಾಗದೆ ಬಳಕೆಯಲ್ಲಿ ಉಳಿದುಕೊಂಡಿದೆ. ಇದೇ ರೀತಿಯಲ್ಲಿ, ಕೈಪಿಡಿ ಜೋಡುಪದದಲ್ಲಿ ಹಿಡಿ ಕ್ರಿಯಾಪದ (ಇಲ್ಲವೇ ನಾಮಪದ) ಪಿಡಿ ಎಂಬ ಹಳೆಗನ್ನಡದ ರೂಪದಲ್ಲಿದೆ. ಈ ಪದದಲ್ಲಿ ಬರುವ ಪದ ಹೊಸಗನ್ನಡದಲ್ಲಿ ಹಿಡಿ ರೂಪಕ್ಕೆ ಬದಲಾಗಿದ್ದು, ಇದಕ್ಕೆ ಹತ್ತು- ಹನ್ನೊಂದನೇ ಹಕಾರವಾಗುವ ಬದಲಾವಣೆ ಕಾರಣ (ಭಟ್ 1995:77 ನೋಡಿ). ಎಂದರೆ, ಹಳೆಗನ್ನಡದ ಕಾಲದಿಂದಲೂ ಪಿಡಿ ಎಂಬುದು ಈ ಜೋಡುಪದದಲ್ಲಿ ಬದಲಾವಣೆಯಾಗದೆ ಹಾಗೆಯೇ ಉಳಿದುಕೊಂಡಿದೆ.
ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳು ಹೊಸಗನ್ನಡದಲ್ಲಿ ಬಳಕೆಯಲ್ಲಿಲ್ಲ. ಹೀಗಿದ್ದರೂ ಬೆಂಬತ್ತು, ಕಣ್ಣೀರು, ಹೆದ್ದಾರಿ, ಕಗ್ಗಲ್ಲು, ಬೆಳ್ದಿಂಗಳು ಮೊದಲಾದ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಕಾಣಿಸುವ ಬೆಮ್, ಕಣ್, ಹೆರ್ (ಹೆದ್), ಕರ್ (ಕಗ್), ಬೆಳ್ ಮೊದಲಾದ ಪದಗಳು ವ್ಯಂಜನದಲ್ಲಿ ಕೊನೆಗೊಳ್ಳುತ್ತಿದ್ದು, ಅವುಗಳ ಕೊನೆಯ ವ್ಯಂಜನ ಎರಡನೆಯ ಅಂಗವಾಗಿರುವ ಪದದ ಸುರುವಿನ ವ್ಯಂಜನಕ್ಕೆ ಅನುಗುಣವಾಗಿ ಬದಲಾಗಿದೆ. ಇದೂ ಹಳೆಗನ್ನಡದ ಪಳೆಯಳಿಕೆಯೇ ಎಂಬುದರಲ್ಲಿ ಸಂಶಯವಿಲ್ಲ. ಪದಪ್ರತ್ಯಯಗಳ ಬಳಕೆಯಲ್ಲೂ ಇಂತಹ ಪಳೆಯಳಿಕೆಗಳನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಬೆಚ್ಚಗೆ (ಬಿಸಿ + ಅಗೆ), ಬೆಳ್ಳಗೆ (ಬಿಳಿ + ಅಗೆ) ಮೊದಲಾದ ಕೆಲವು ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳೆಲ್ಲ ಹಳೆಗನ್ನಡದವು.
ಬಿಳಿ ಪದ ಪೂವ್ರದ ಹಳೆಗನ್ನಡದಲ್ಲಿ ಬೆಳಿ ಎಂದಿದ್ದಿರಬೇಕು. ಎರಡನೆಯ ಅಕ್ಷರದಲ್ಲಿ ಇಕಾರ ಇಲ್ಲವೇ ಉಕಾರ ಬಂದಿದ್ದಾಗ ಅದರಲ್ಲಿದ್ದ ಎಕಾರ ಹಳೆಗನ್ನಡದ ಕಾಲದಲ್ಲಿ ಇಕಾರವಾಗಿ ಬದಲಾಗಿತ್ತು (ಬೆಳಿ>ಬಿಳಿ). ಬೆಚ್ಚಗೆ ಮತ್ತು ಬೆಳ್ಳಗೆ ಪದಗಳಲ್ಲಿ ಎರಡನೆಯ ಅಕ್ಷರವಾಗಿ ಇಕಾರ ಇಲ್ಲವೇ ಉಕಾರ ಇರಲಿಲ್ಲವಾದ ಕಾರಣ, ಮೊದಲನೆಯ ಅಕ್ಷರದ ಎಕಾರ ಹಳೆಗನ್ನಡದಲ್ಲಿ ಬದಲಾಗದೆ ಹಾಗೆಯೇ ಉಳಿದಿತ್ತು. ಅದೇ ರೂಪ ಇವತ್ತು ಹೊಸಗನ್ನಡದಲ್ಲೂ ಈ ಜೋಡುಪದಗಳಲ್ಲಿ ಉಳಿದುಕೊಂಡಿದೆ (ಭಟ್ 1995:63 ನೋಡಿ).
ಇದಲ್ಲದೆ, ಆಟ, ಓಟ, ಕೂಟ, ನೋಟ ಮೊದಲಾದ ಪದಗಳಲ್ಲಿ ಕಾಣಿಸುವ ಡಕಾರ ಟಕಾರವಾಗುವ ಸೇರಿಕೆಯ ನಿಯಮವೂ ಹಳೆಗನ್ನಡದಿಂದ
ಅಥವಾ ಅದಕ್ಕೂ ಹಿಂದಿನ ಕನ್ನಡ ಪ್ರಭೇದದಿಂದ ಉಳಿದು ಬಂದ ಪಳೆಯಳಿಕೆ ಯಿರಬೇಕು. ಪದರೂಪ ಪ್ರತ್ಯಯಗಳ ಬಳಕೆಯಲ್ಲೂ ಸೇರಿಕೆಯ ನಿಯಮಗಳ ಮಟ್ಟಿಗೆ ಅನಿಯಮಿತತೆ ಕಾಣಿಸುತ್ತಿದ್ದು ಇದಕ್ಕೂ ಪಳೆಯಳಿಕೆಗಳೇ ಕಾರಣವೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ದ ಪ್ರತ್ಯಯವನ್ನು ಸೇರಿಸಿದಾಗ ಆ ಕ್ರಿಯಾಪದಗಳಲ್ಲಿ ಮತ್ತು ಪ್ರತ್ಯಯದಲ್ಲಿ ಹಲಕೆಲವು ಬದಲಾವಣೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಅನಿಯಮಿತವಾಗಿರುತ್ತವೆ (ಬರು - ಬಂದ, ತೆರು - ತೆತ್ತ, ಇರು - ಇದ್ದ, ಕೊಡು - ಕೊಟ್ಟ, ಕಾಣು - ಕಂಡ, ಹೋಗು - ಹೋದ).
ಪದರೂಪ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಈ ಸೇರಿಕೆಯ ನಿಯಮದ ಅನಿಯಮಿತತೆಯೂ ಪದಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮದ ಅನಿಯಮಿತತೆಯ ಹಾಗೆಯೇ ಪಳೆಯಳಿಕೆಯ ಪರಿಣಾಮವೆಂದು ಹೇಳಬಹುದು.
2.6 ವರ್ಣಗಳ ಪಟ್ಟಿ
ಸಂಸ್ಕೃತ ವೈಯಾಕರಣಿಗಳು ಸಿದ್ಧಪಡಿಸಿರುವ ವರ್ಣಗಳ ಪಟ್ಟಿಯನ್ನು ‘ಅತ್ಯಂತ ವೈಜ್ಞಾನಿಕವಾದ ಪಟ್ಟಿ’ ಎಂಬುದಾಗಿ ಹೆಚ್ಚಿನವರೂ ಹೇಳುತ್ತಾರೆ. ಆದರೆ ಹೇಗೆ ಇದು ವೈಜ್ಞಾನಿಕ ಎಂಬುದನ್ನು ಯಾರೂ ಸರಿಯಾಗಿ ವಿವೇಚಿಸಿದ ಹಾಗಿಲ್ಲ.
ಸಂಸ್ಕೃತದ ವ್ಯಂಜನಗಳಲ್ಲಿ ವಗ್ರೀಯ ವ್ಯಂಜನಗಳನ್ನು (ಸ್ಪಶ್ರ ಮತ್ತು ಅನುನಾಸಿಕಗಳನ್ನು) ಅವುಗಳ ಉಚ್ಚಾರಣೆಯ ಆಧಾರದ ಮೇಲೆ ಪಟ್ಟಿ ಮಾಡ ಲಾಗಿದೆಯಾದ ಕಾರಣ ವೈಜ್ಞಾನಿಕತೆ ಕಾಣಿಸುತ್ತದೆ, ಆದರೆ ಅವಗ್ರೀಯ ವ್ಯಂಜನಗಳನ್ನಾಗಲಿ ಇಲ್ಲವೇ ಸ್ವರಗಳನ್ನಾಗಲಿ ಆ ರೀತಿ ಅವುಗಳ ಉಚ್ಚಾರಣೆಯ ಆಧಾರದ ಮೇಲೆ ಪಟ್ಟಿ ಮಾಡಿಲ್ಲ.
ನಿಜಕ್ಕೂ ಸಂಸ್ಕೃತ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಸೂಚಿಸಲು ಸಾಧ್ಯವಾಗುವ ಹಾಗೆ ತಯಾರಿಸಿಕೊಂಡಿದ್ದಾರೆ.
ಕನ್ನಡದ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದಿಂದ ಹಾಗೆಯೇ ಎತ್ತಿಕೊಂಡಿದ್ದಾರೆ. ಆದರೆ ಅದು ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸು ವಲ್ಲಿ ಸ್ವಲ್ಪವೂ ಅನುಕೂಲವಾಗಿಲ್ಲ. ಹಾಗಾಗಿ, ಕನ್ನಡದ ಮಟ್ಟಿಗಂತೂ ಅದು ನಿಜಕ್ಕೂ ‘ವೈಜ್ಞಾನಿಕ’ವಲ್ಲ.
2.6.1 ಸಂಸ್ಕೃತ ಸ್ವರಗಳ ಪಟ್ಟಿ
ಸಂಸ್ಕೃತದ ವೈಯಾಕರಣಿಗಳು ಸ್ವರಗಳನ್ನು ಅ, ಇ, ಉ, ಋ, ಲೃ, ಏ, ಓ, ಐ, ಔ ಎಂಬುದಾಗಿ ಪಟ್ಟಿ ಮಾಡಿದ್ದಾರೆ. ಪಾಣಿನಿಯ ವ್ಯಾಕರಣದಲ್ಲಿ ಬಳಕೆಯಾಗುವ ಅಇಉಣ್, ಋಲೃಕ್, ಏಓಙ್, ಐಔಚ್ ಎಂಬ ‘ಮಾಹೇಶ್ವರ ಸೂತ್ರ’ಗಳಲ್ಲಿ ಈ ಪಟ್ಟಿಯ ಮೂಲವನ್ನು ಕಾಣಬಹುದು. ಮೇಲೆ ಸೂಚಿಸಿದ ಹಾಗೆ, ಸ್ವರಗಳ ಈ ಅನುಕ್ರಮಕ್ಕೆ ಸಂಸ್ಕೃತ ವ್ಯಾಕರಣ ದಲ್ಲಿ ಬೇರೆಯೇ ಒಂದು ಉದ್ದೇಶವಿದೆ. ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಹೇಳಲು ಅದು ಸಹಾಯಕವಾಗುತ್ತದೆ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಅ, ಇ ಮತ್ತು ಉ ಸ್ವರಗಳು (ಮತ್ತು ಋ, ಲೃ ಎಂಬವುಗಳು ಕೂಡ) ಗಿಡ್ಡ (ಹ್ರಸ್ವ) ಮತ್ತು ಉದ್ದ (ದೀರ್ಘ) ಎಂಬ ಎರಡು ರೂಪಗಳಲ್ಲಿ ಬರಬಲ್ಲುವು. ಸವರ್ಣದೀರ್ಘ ಎಂಬ ಸೇರಿಕೆಯ ನಿಯಮವೂ ಈ ಸ್ವರಗಳನ್ನು ಮಾತ್ರ ಬಾಧಿಸುತ್ತದೆ (2.2.1 ನೋಡಿ). ಹಾಗಾಗಿ ಅವನ್ನೆಲ್ಲ ಒಟ್ಟಾಗಿ ಪಟ್ಟಿಯಲ್ಲಿ ಮೊದಲಿಗೆ ಕೊಡಲಾಗಿದೆ. ಮೇಲಿನ ಮಾಹೇಶ್ವರ ಸೂತ್ರಗಳಲ್ಲಿ ಮೊದಲನೆಯ ಸೂತ್ರದ ಮೊದಲನೆಯ ಸ್ವರದೊಂದಿಗೆ ಎರಡನೆಯ ಸೂತ್ರದ ಕೊನೆಯ ವ್ಯಂಜನವನ್ನು ಸೇರಿಸಿ ರಚಿಸಿದ ಅಕ್ ಸಂಜ್ಞೆಯ ಮೂಲಕ ಈ ಸ್ವರಗಳನ್ನು ಒಟ್ಟಿಗೆ ಸಂಕ್ಷಿಪ್ತವಾಗಿ ಪಾಣಿನಿಯ ವ್ಯಾಕರಣದಲ್ಲಿ ಸೂಚಿಸಲಾಗುತ್ತದೆ.
ಉಳಿದ ಸ್ವರಗಳು ಸಂಸ್ಕೃತದಲ್ಲಿ ಉದ್ದ ರೂಪದಲ್ಲಿ ಮಾತ್ರ ಬರಬಲ್ಲುವು. ಇವುಗಳಲ್ಲಿ ಏಕಾರ-ಓಕಾರಗಳು ಒಂದು ರೀತಿಯವು, ಮತ್ತು ಐಕಾರ- ಔಕಾರಗಳು ಇನ್ನೊಂದು ರೀತಿಯವು. ಈ ವ್ಯತ್ಯಾಸವನ್ನು ಪಟ್ಟಿಯಲ್ಲಿರುವ ಅವುಗಳ ಜಾಗದ ಮೂಲಕ ಸೂಚಿಸಲಾಗಿದೆ. ಸೇರಿಕೆ(ಸಂಧಿ)ಯ ನಿಯಮಗಳಲ್ಲೂ ಏಕಾರ-ಓಕಾರಗಳು ಮತ್ತು ಐಕಾರ ಔಕಾರಗಳು ಅಕ್ ಸ್ವರಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತವೆ (2.2.1 ನೋಡಿ). ಹಾಗಾಗಿ, ಈ ಸ್ವರಗಳನ್ನು ಪಟ್ಟಿಯಲ್ಲಿ ಉಳಿದವುಗಳಿಗಿಂತ ಬೇರಾಗಿ ಹೇಳಿರುವುದು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಸಹಾಯಕ ವಾಗುತ್ತದೆ.
2.6.2 ಕನ್ನಡ ಸ್ವರಗಳ ಪಟ್ಟಿ
ಕನ್ನಡದ ವೈಯಾಕರಣಿಗಳು ಮೇಲೆ ಕೊಟ್ಟಿರುವ ಸಂಸ್ಕೃತ ಸ್ವರಗಳ ಪಟ್ಟಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ (ಎ ಮತ್ತು ಒ ಸ್ವರಗಳನ್ನು ಅದಕ್ಕೆ ಸೇರಿಸಿ ಮತ್ತು ಐ ಸ್ವರವನ್ನು ಒ ಸ್ವರದ ಮೊದಲು ಇರಿಸಿ) ತಮ್ಮ ವ್ಯಾಕರಣ ಗಳಲ್ಲಿ ಬಳಸಿಕೊಂಡಿದ್ದಾರೆ.
ಆದರೆ ಸಂಸ್ಕೃತ ವೈಯಾಕರಣಿಗಳ ಹಾಗೆ ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮವನ್ನು ಕನ್ನಡ ವ್ಯಾಕರಣದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಬಳಸಿಕೊಳ್ಳಲು ಯಾವ ರೀತಿಯಲ್ಲೂ ಅವರಿಗೆ ಸಾಧ್ಯವಾಗಿಲ್ಲ.
ಎಂದರೆ, ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮ ಕನ್ನಡ ವ್ಯಾಕರಣದ ಮಟ್ಟಿಗೆ ಸಂಪೂರ್ಣವಾಗಿ ಅನುಪಯುಕ್ತವಾಗಿಯೇ ಉಳಿದಿದೆ. ನಿಜಕ್ಕೂ ಈ ಪಟ್ಟಿ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲದಿರುವುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಕನ್ನಡದಲ್ಲಿ ಅ, ಇ, ಉ ಎಂಬವುಗಳು ಮಾತ್ರವಲ್ಲದೆ ಎ, ಒ ಎಂಬವುಗಳೂ ಗಿಡ್ಡ ಮತ್ತು ಉದ್ದ ರೂಪಗಳಲ್ಲಿ ಬರಬಲ್ಲುವು. ಆದರೆ, ಐ ಮತ್ತು ಔ ‘ಸ್ವರ’ಗಳಿಗೆ ಒಂದೇ ರೂಪವಿದೆ. ಹಾಗಾಗಿ, ಐ ಎಂಬುದನ್ನು ಒ ಎಂಬುದರ ಮೊದಲು ಇರಿಸಿರುವುದು ಕನ್ನಡದ ಮಟ್ಟಿಗೆ ಸರಿಯಲ್ಲ.
ಇದಲ್ಲದೆ, ಐ ಮತ್ತು ಔಗಳಿಗೆ ಕನ್ನಡದಲ್ಲಿ ವಿಶಿಷ್ಟವಾದ ಸ್ಥಾನವೇ ಇಲ್ಲ. ಅವು ಅಕಾರದೊಂದಿಗೆ ಯಕಾರ ಮತ್ತು ವಕಾರಗಳು ಸೇರಿದಾಗ ಉಂಟಾಗುವ ಅಯ್ ಮತ್ತು ಅವ್ ಎಂಬ ಅಕ್ಷರಜೋಡಿಗಳಲ್ಲದೆ, ಸಂಸ್ಕೃತದಲ್ಲಿ ಕಾಣಿಸುವ ಹಾಗೆ ವಿಶಿಷ್ಟವಾದ ‘ಸಂಧಿಸ್ವರ’ಗಳಲ್ಲ.
ಸಂಸ್ಕೃತದಲ್ಲಿ ಯಕಾರ ಮತ್ತು ವಕಾರಗಳನ್ನು ಬಳಸಿರುವ ಈ ಎರಡು ಅಕ್ಷರಜೋಡಿಗಳು ಮಾತ್ರ ಬಳಕೆಯಲ್ಲಿವೆ. ಆದರೆ ಕನ್ನಡದಲ್ಲಿ ಇವು ಮಾತ್ರ ವಲ್ಲದೆ ಎಯ್, ಒಯ್, ಆಯ್, ಇವ್ ಮೊದಲಾದ ಬೇರೆಯೂ ಹಲವು ಅಂತಹವೇ ಅಕ್ಷರಜೋಡಿಗಳೂ (ಗೆಯ್ಮು, ಕೊಯ್ಲು, ಆಯ್ಕು, ಕಿವ್ಡು) ಬಳಕೆ ಯಲ್ಲಿವೆ. ಹಾಗಾಗಿ, ಮೇಲಿನ ಎರಡು ಅಕ್ಷರಜೋಡಿಗಳಿಗೆ (ಅಯ್ ಮತ್ತು ಅವ್ಗಳಿಗೆ) ಮಾತ್ರ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಕನ್ನಡದ ಮಟ್ಟಿಗೆ ಯಾವ ಔಚಿತ್ಯವೂ ಇಲ್ಲ.
ಕನ್ನಡದ ಸೇರಿಕೆಯ ನಿಯಮಗಳಲ್ಲಿ ಇಕಾರ ಮತ್ತು ಎಕಾರಗಳು ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವುವಾದರೆ ಉಕಾರ, ಒಕಾರ ಮತ್ತು ಅಕಾರಗಳು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ ಇಕಾರ ಮತ್ತು ಎಕಾರಗಳ ಅನಂತರ ಯಕಾರ ಆಗಮವಾಗಿ ಬರುವುದಾದರೆ, ಉಕಾರ, ಒಕಾರ ಮತ್ತು ಅಕಾರಗಳ ಅನಂತರ ವಕಾರ ಆಗಮವಾಗಿ ಬರುತ್ತದೆ (2.3 ನೋಡಿ). ಈ ವಿಷಯದಲ್ಲೂ ಮೇಲಿನ ಸ್ವರಗಳ ಪಟ್ಟಿ ಕನ್ನಡ ವ್ಯಾಕರಣದ ಮಟ್ಟಿಗೆ ಅನುಕೂಲವಾಗಿಲ್ಲ.
ಸಂಸ್ಕೃತ ಪದಗಳಲ್ಲಿ ಕಾಣಿಸುವ ಏಕಾರ ಮತ್ತು ಓಕಾರಗಳು ನಿಜಕ್ಕೂ ಮೂಲಪದದಲ್ಲಿದ್ದ ಸ್ವರಗಳಲ್ಲ. ಯಾಕೆಂದರೆ, ಸಂಸ್ಕೃತದ ಮೂಲಭಾಷೆಯಾದ ಇಂಡೋ-ಯುರೋಪಿಯನ್ನಲ್ಲಿದ್ದ ಎಕಾರ-ಒಕಾರಗಳು ಸಂಸ್ಕೃತದಲ್ಲಿ ಅಕಾರ ವಾಗಿ ಬದಲಾಗಿವೆ ಮತ್ತು ಏಕಾರ-ಓಕಾರಗಳು ಆಕಾರವಾಗಿ ಬದಲಾಗಿವೆ.
ಅದೇ ಮೂಲಭಾಷೆಯಲ್ಲಿದ್ದ ಅಇ, ಎಇ ಮತ್ತು ಒಇ ಸ್ವರಜೋಡಿಗಳು ಏಕಾರವಾಗಿ ಮತ್ತು ಅಉ, ಎಉ ಮತ್ತು ಒಉ ಸ್ವರ ಜೋಡಿಗಳು ಓಕಾರವಾಗಿ ಬದಲಾದುದರಿಂದಾಗಿ ಇವತ್ತು ಸಂಸ್ಕೃತ ವೇದ, ತೇ, ಓಜಸ್ ಮೊದಲಾದ ಪದಗಳಲ್ಲಿ ಈ ಎರಡು ಸ್ವರಗಳು ಕಾಣಿಸಿಕೊಳ್ಳುತ್ತಿವೆ (ಭಟ್ 2005:54
ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕವೂ ಇವು ಸಂಸ್ಕೃತ ಪದ ಗಳಲ್ಲಿ ಕಾಣಿಸಿಕೊಳ್ಳುವುವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ಈ ಎರಡು ಸ್ವರಗಳನ್ನು ಸಂಧ್ಯಕ್ಷರಗಳೆಂದು ಕರೆಯುತ್ತಾರೆ. ಉದಾಹರಣೆಗಾಗಿ, ಅಕಾರ ಮತ್ತು ಆಕಾರಗಳು ಇಕಾರ ಮತ್ತು ಈಕಾರಗಳೊಂದಿಗೆ ಸೇರಿದಾಗ ಏಕಾರವೂ, ಉಕಾರ ಮತ್ತು ಊಕಾರಗಳೊಂದಿಗೆ ಸೇರಿದಾಗ ಓಕಾರವೂ ಸಂಸ್ಕೃತದಲ್ಲಿ ಆದೇಶಗಳಾಗಿ ಬರುತ್ತವೆಯೆಂಬುದನ್ನು ನಾವು ಮೇಲೆ (2.2.1 ರಲ್ಲಿ) ನೋಡಿರುವೆವು.
ಏಕಾರ ಮತ್ತು ಓಕಾರಗಳನ್ನು ಅಕಾರ, ಇಕಾರ ಮತ್ತು ಉಕಾರಗಳಿಂದ ಪ್ರತ್ಯೇಕಿಸಿ ಪಟ್ಟಿ ಮಾಡುವುದರ ಮೂಲಕ ಸಂಸ್ಕೃತದ ವೈಯಾಕರಣಿಗಳು ಈ ವಿಷಯವನ್ನು ಸೂತ್ರರೂಪದಲ್ಲಿ ವಿವರಿಸಲು ಶಕ್ತರಾಗಿದ್ದಾರೆ.
ಕನ್ನಡದ ವ್ಯಾಕರಣಕ್ಕೆ ಅದರ ಸ್ವರಗಳ ಪಟ್ಟಿ ಅನುಕೂಲವಾಗಬೇಕಾದಲ್ಲಿ ಅದರಲ್ಲಿ ಬರುವ ಸ್ವರಗಳ ಸಂಖ್ಯೆಯನ್ನು ಮಾತ್ರವಲ್ಲದೆ ಜಾಗವನ್ನೂ ಬದಲಾಯಿಸಬೇಕು. ಎಂದರೆ, ಇ, ಈ, ಎ, ಏ, ಉ, ಊ, ಒ, ಓ ಮತ್ತು ಅ, ಆ ಎಂಬುದಾಗಿ ಇಕಾರ-ಈಕಾರಗಳನ್ನು ಎಕಾರ-ಏಕಾರಗಳೊಂದಿಗೆ ಮತ್ತು ಉಕಾರ-ಊಕಾರಗಳನ್ನು ಒಕಾರ-ಓಕಾರಗಳೊಂದಿಗೆ ಇರಿಸಿ ಪಟ್ಟಿ ಮಾಡಬೇಕು.
ಇದಲ್ಲದೆ, ಅಕಾರ-ಆಕಾರಗಳನ್ನು ಇಕಾರ ಮತ್ತು ಎಕಾರದೊಂದಿಗೆ ಇರಿಸುವ ಬದಲು ಉಕಾರ ಮತ್ತು ಒಕಾರದೊಂದಿಗೆ ಇರಿಸಬೇಕು.
ಹೀಗೆ ಮಾಡಿದಲ್ಲಿ, ಈ ಸ್ವರಗಳ ಪಟ್ಟಿಯನ್ನು ಬಳಸಿ ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳನ್ನು ಸಂಸ್ಕೃತ ವ್ಯಾಕರಣಗಳಲ್ಲಿರುವ ಹಾಗೆ ಸೂತ್ರರೂಪ ದಲ್ಲಿ ತಿಳಿಸಿಹೇಳಲು ಸಾಧ್ಯವಾದೀತು.
ಕನ್ನಡಕ್ಕೆ ಅವಶ್ಯವಿರುವ ಇಂತಹ ಸ್ವರಗಳ ಪಟ್ಟಿಗೆ ಉಚ್ಚಾರಣೆಯ ಆಧಾರವಿದೆ. ಇಕಾರ-ಎಕಾರಗಳು ನಾಲಿಗೆಯ ಮುಂಭಾಗದಲ್ಲಿ ಹುಟ್ಟುತ್ತವೆ ಮತ್ತು ಉಕಾರ, ಒಕಾರ ಮತ್ತು ಅಕಾರಗಳು ನಾಲಿಗೆಯ ಹಿಂಭಾಗದಲ್ಲಿ ಹುಟ್ಟುತ್ತವೆ (ಅಕಾರದ ಕೆಲವು ಪ್ರಭೇದಗಳು ಮಾತ್ರ ನಾಲಿಗೆಯ ನಡುಭಾಗದಲ್ಲಿ ಹುಟ್ಟುತ್ತವೆ). ಈ ವ್ಯತ್ಯಾಸವನ್ನು ಕೆಳಗೆ ಕಾಣಿಸಿದ ಹಾಗೆ ಚಿತ್ರಿಸಲು ಸಾಧ್ಯವಿದೆ.
ಬಾಯಿಯ ಜಾಗ
ನಾಲಿಗೆಯ ಭಾಗ ಮುಂದೆ
ಮೇಲೆ
ನಡುವೆ
ಕೆಳಗೆ E, F
J, K
G, H M, N C, D
ಈ ರೀತಿ ಸ್ವರಗಳ ಹುಟ್ಟನ್ನಾಧರಿಸಿ ರಚಿಸಿದ ಪಟ್ಟಿಯೇ ಕನ್ನಡದ ಮಟ್ಟಿಗೆ ಹೆಚ್ಚು ‘ವೈಜ್ಞಾನಿಕ’ವಾದುದು. ಇದು ಮೇಲೆ ವಿವರಿಸಿದ ಸಂಸ್ಕೃತ ಸ್ವರಗಳ ಪಟ್ಟಿಯಿಂದ ತೀರ ಭಿನ್ನವಾಗಿದೆಯುಂಬುದನ್ನು ಗಮನಿಸಬಹುದು.
2.6.3 ವ್ಯಂಜನಗಳ ಪಟ್ಟಿ
ಸಂಸ್ಕೃತದ ವ್ಯಂಜನಗಳನ್ನು ವಗ್ರೀಯಗಳು (ಸ್ಪಶ್ರ ಮತ್ತು ಅನುನಾಸಿಕಗಳು) ಮತ್ತು ಅವಗ್ರೀಯಗಳು ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸ ಲಾಗಿದೆ. ಇವುಗಳಲ್ಲಿ ವಗ್ರೀಯಗಳನ್ನು ಅವುಗಳ ಉಚ್ಚಾರಣೆಯ ಜಾಗವನ್ನು ಆಧರಿಸಿ ಐದು ವಗ್ರಗಳಲ್ಲಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಪ್ರತಿಯೊಂದು ವಗ್ರದಲ್ಲೂ ಅಘೋಷ-ಅಲ್ಪಪ್ರಾಣ (ಕಚಟತಪ), ಅಘೋಷ-ಮಹಾಪ್ರಾಣ (ಖಛಠಥಫ), ಘೋಷ-ಅಲ್ಪಪ್ರಾಣ (ಗಜಡದಬ), ಘೋಷ-ಮಹಾಪ್ರಾಣ (ಘಝಢಧಭ) ಮತ್ತು ಅನುನಾಸಿಕ (ಙಞಣನಮ) ಎಂಬುದಾಗಿ ಐದು ರೀತಿಯ ವ್ಯಂಜನಗಳು ಕಾಣಿಸಿಕೊಳ್ಳುತ್ತವೆ. ಅವಗ್ರೀಯಗಳನ್ನು ಅಂತಸ್ಥ (ಯರಲವ) ಮತ್ತು ಊಷ್ಮ (ಸಶಷಹ) ಎಂಬುದಾಗಿ ವಿಂಗಡಿಸಲಾಗಿದೆ. ಕನ್ನಡದ ವ್ಯಂಜನಗಳನ್ನು ಈ ರೀತಿ ವಿಂಗಡಿಸುವ ಬದಲು ಬೇರೆ ರೀತಿಯಲ್ಲಿ ವಿಂಗಡಿಸುವುದರಿಂದ ಅದರ ಸೇರಿಕೆಯ ನಿಯಮಗಳನ್ನು ವಿವರಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲುದು. ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳಿಲ್ಲ. ಇದಲ್ಲದೆ, ಣನಮಗಳೆಂಬ ಮೂರು ಅನುನಾಸಿಕಗಳು ಮತ್ತು ಸಶಹಗಳೆಂಬ ಮೂರು ಊಷ್ಮಗಳು ಮಾತ್ರ ಕನ್ನಡದಲ್ಲಿ ಬಳಕೆಯಲ್ಲಿವೆ. ಈ ವ್ಯಂಜನಗಳನ್ನು ವಗ್ರೀಯ ಮತ್ತು ಅವಗ್ರೀಯಗಳೆಂದು ವಿಂಗಡಿಸುವ ಬದಲು, ಅವುಗಳ ಉಚ್ಚಾರಣೆಯನ್ನವಲಂಬಿಸಿ ಕೆಳಗೆ (47ನೇ ಪುಟದಲ್ಲಿ) ಕೊಟ್ಟಿರುವ ಹಾಗೆ ವಿಂಗಡಿಸುವುದು ಕನ್ನಡದ ಮಟ್ಟಿಗೆ ಹೆಚ್ಚು ಅನುಕೂಲ. ಉದಾಹರಣೆಗಾಗಿ, ಪಬಮವಗಳನ್ನು ಒಟ್ಟಾಗಿ ಒಂದೇ ಕಾಲಂನಲ್ಲಿ ಹೇಳಿರುವುದರಿಂದ ಅವುಗಳ ನಡುವಿರುವ ಹತ್ತಿರದ ಸಂಬಂಧವನ್ನು ಸೂಚಿಸಲು ಸಾಧ್ಯವಾಗುತ್ತದೆ. ಇತರ ಕಾಲಂಗಳಲ್ಲಿ ಬರುವ ವ್ಯಂಜನಗಳ ನಡುವೆ ಮತ್ತು ಬೇರೆ ಬೇರೆ ಸಾಲುಗಳಲ್ಲಿ ಬರುವ ವ್ಯಂಜನಗಳ ನಡುವೆಯೂ ಇಂತಹವೇ ಹತ್ತಿರದ ಸಂಬಂಧಗಳು ಕಂಡುಬರುತ್ತವೆ.
ಈ ಸಂಬಂಧಗಳು ಕನ್ನಡದ ಚರಿತ್ರೆಯಲ್ಲಿ ನಡೆದಿರುವ ಬದಲಾವಣೆಗಳಲ್ಲಿ ಮತ್ತು ಕನ್ನಡ ಪದಗಳ ಒಳರಚನೆಯಲ್ಲಿ ಬಳಕೆಯಾಗುವ ಸೇರಿಕೆಯ ನಿಯಮ ಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಕನ್ನಡ ವ್ಯಂಜನಗಳ ಪಟ್ಟಿ
l t
2.7 ತಿರುಳು
ಕನ್ನಡದಲ್ಲಿ ಕಾಣಿಸುವ ಸೇರಿಕೆಯ (ಸಂಧಿ) ನಿಯಮಗಳಿಗೂ ಸಂಸ್ಕೃತದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲವು ಮುಖ್ಯವಾದ ವ್ಯತ್ಯಾಸ ಗಳಿವೆ. ಕನ್ನಡದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯಲು ಸಂಸ್ಕೃತದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ.
ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತ ದವೇ ಆದ ಕೆಲವು ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳುವುವಾದ ಕಾರಣ ಅವನ್ನು ವಿವರಿಸುವಲ್ಲಿ ಮಾತ್ರ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ ತಿಳಿಸಿಹೇಳುವ ಅವಶ್ಯಕತೆಯಿದೆ. ಕನ್ನಡದ ಸೇರಿಕೆಯ ನಿಯಮಗಳು ಪದಗಳ ನಡುವೆ ಮತ್ತು ಪದಗಳ ಕೊನೆ ಯಲ್ಲಿ ಬೇರೆ ಬೇರೆಯಾಗಿರುತ್ತವೆ. ಇದಲ್ಲದೆ, ಸೇರಿಕೆಯ ನಿಯಮಕ್ಕೆ ಒಳಪಡುವ ವರ್ಣ ಪ್ರಕೃತಿಯದೋ ಪ್ರತ್ಯಯದ್ದೋ, ಪದಪ್ರತ್ಯಯದ್ದೋ ಪದರೂಪ ಪ್ರತ್ಯಯ ದ್ದೋ, ಕ್ರಿಯಾಪ್ರಕೃತಿಯದೋ ನಾಮಪ್ರಕೃತಿಯದೋ, ಕನ್ನಡ ಪದದ್ದೋ ಸಂಸ್ಕೃತದಿಂದ ಎರವಲಾಗಿ ಬಂದ ಪದದ್ದೋ, ಪ್ರಕೃತಿಯಲ್ಲಿ ಛಂದೋ ಮಾತ್ರೆಗಳೆಷ್ಟಿವೆ, ಸೇರಿಕೆಯ ನಿಯಮಕ್ಕೆ ಒಳಪಡುವ ವರ್ಣದ ಸ್ವರೂಪವೇನು ಮೊದಲಾದ ಹಲವಾರು ವಿಷಯಗಳನ್ನು ಗಮನಿಸಿಕೊಳ್ಳದೆ ಕನ್ನಡದ ಸೇರಿಕೆಯ (ಸಂಧಿ)ನಿಯಮಗಳೆಂತಹವು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗದು. ಈ ವಿಷಯದಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಸಂಸ್ಕೃತ ವರ್ಣಗಳ ಪಟ್ಟಿ ಸಂಸ್ಕೃತದ ಮಟ್ಟಿಗೆ ‘ವೈಜ್ಞಾನಿಕ’ವಾಗಿರುವುದು ನಿಜವಾದರೂ ಕನ್ನಡದ ಮಟ್ಟಿಗೆ ವೈಜ್ಞಾನಿಕವಲ್ಲ.
ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸಲು ಅದರದೇ ಆದ ವ್ಯಾಕರಣ ವೊಂದನ್ನು ಸಿದ್ಧಪಡಿಸುವುದು ಎಷ್ಟು ಅವಶ್ಯ ಎಂಬ ವಿಷಯ ಇದರಿಂದ ಸ್ಪಷ್ಟ ವಾಗುತ್ತದೆ.