Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
4. ಪದಗಳ ಒಳರಚನೆ
4.1 ಮುನ್ನೋಟ
ಕನ್ನಡದಲ್ಲಿ ಮುಖ್ಯವಾಗಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣಪದ ಗಳು ಎಂಬುದಾಗಿ ಮೂರು ಪದವಗ್ರಗಳಿಗೆ ಸೇರುವ ಪದಗಳು ಬಳಕೆಯಲ್ಲಿವೆ ಯುಂಬುದನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ಇವುಗಳಲ್ಲಿ ಎರಡು ವಗ್ರಗಳಿಗೆ ಸೇರುವ ಪದಗಳು, ಎಂದರೆ ನಾಮಪದ ಗಳು ಮತ್ತು ಗುಣಪದಗಳು, ಸಂಸ್ಕೃತದಲ್ಲಿ ಒಂದೇ ಪದವಗ್ರಕ್ಕೆ ಸೇರುತ್ತವೆ. ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಕನ್ನಡದ ವೈಯಾಕರಣಿಗಳು ಈ ವಿಷಯವನ್ನು ಸರಿಯಾಗಿ ಗಮನಿಸದುದ ರಿಂದಾಗಿ ಕನ್ನಡ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಹೇಗೆ ಹಲವಾರು ಕಡೆ ಎಡವಿದ್ದಾರೆ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿದ್ದೇವೆ. ಕನ್ನಡದಲ್ಲಿ ಬರುವ ಈ ಮೂರು ರೀತಿಯ ಪದಗಳಲ್ಲಿ (ನಾಮಪದ, ಕ್ರಿಯಾಪದ ಮತ್ತು ಗುಣಪದಗಳಲ್ಲಿ) ಕೆಲವಕ್ಕೆ ಒಳರಚನೆಯೆಂಬುದಿದೆ, ಆದರೆ ಇನ್ನು ಕೆಲವಕ್ಕೆ ಅಂತಹ ಒಳರಚನೆಯೆಂಬುದಿಲ್ಲ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ನಾಮಪದ, ಗುಣಪದ ಮತ್ತು ಕ್ರಿಯಾಪದಗಳನ್ನು ಗಮನಿಸಬಹುದು.
ಊರು + ಕೋಲು
ತುಂಬು + ಆ ಕುಣಿ + ಇಸು
ಊರುಗೋಲು ತುಂಬಾ
ಕುಣಿಸು
ಗಾಣಿಗ, ಊರುಗೋಲು, ತುಂಬಾ ಮತ್ತು ಕುಣಿಸು ಪದಗಳನ್ನು ಪ್ರತ್ಯಯಗಳ ಇಲ್ಲವೇ ಬೇರೆ ಪದಗಳ ಸೇರಿಕೆಯ ಮೂಲಕ ತಯಾರಿಸಲಾಗಿದೆ. ಹಾಗಾಗಿ, ಅವನ್ನು ಒಳರಚನೆಯುಳ್ಳ ಪದಗಳೆಂದು ಹೇಳಲು ಸಾಧ್ಯವಿದೆ.
ಆದರೆ ಇವುಗಳ ತಯಾರಿಕೆಯಲ್ಲಿ ಬಳಕೆಯಾಗಿರುವ ಗಾಣ, ತುಂಬು, ಊರು, ಕೋಲು ಮತ್ತು ಕುಣಿ ಪದಗಳನ್ನಾಗಲೀ ಇಲ್ಲವೇ ಮರ, ಗಿಡ, ನೀರು, ಕೈ ಮೊದಲಾದ ಅಂತಹವೇ ಬೇರೆ ಹಲವಾರು ಪದಗಳನ್ನಾಗಲೀ ಈ ರೀತಿ
ಪ್ರತ್ಯಯ ಇಲ್ಲವೇ ಪದಗಳ ಸೇರಿಕೆಯಿಂದ ತಯಾರಿಸಿಲ್ಲ. ಹಾಗಾಗಿ, ಅವನ್ನೆಲ್ಲ ಒಳರಚನೆಯಿಲ್ಲದ ಪದಗಳೆಂದು ಹೇಳಬೇಕಾಗುತ್ತದೆ.
ಪದಗಳಿಗಿರಬಲ್ಲ ಈ ಒಳರಚನೆಯ ಮಟ್ಟಿಗೆ ನಾಮಪದ, ಕ್ರಿಯಾಪದ ಮತ್ತು ಗುಣಪದಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ನಾಮಪದಗಳ ಒಳರಚನೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳು ಬಳಕೆಯಾಗುತ್ತವೆ: ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ತಯಾರಿಸುವ ವಿಧಾನವೊಂದು, ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ ಬೇರೊಂದು ಪದವನ್ನಾಗಿ ಮಾಡುವ ವಿಧಾನ (ಸಮಾಸ) ಇನ್ನೊಂದು.
ಇವುಗಳಲ್ಲಿ ಮೊದಲನೆಯ ವಿಧಾನ ಮಾತ್ರ ಕ್ರಿಯಾಪದಗಳ ಮತ್ತು ಗುಣ ಪದಗಳ ಒಳರಚನೆಯಲ್ಲಿ ಬಳಕೆಯಾಗುತ್ತದೆ. ಎರಡನೆಯ ಸಮಾಸವೆಂಬ ವಿಧಾನ ನಾಮಪದಗಳ ಒಳರಚನೆಯಲ್ಲಿ ಬಳಕೆಯಾಗುವುದಲ್ಲದೆ ಕ್ರಿಯಾಪದ ಮತ್ತು ಗುಣಪದಗಳ ಒಳರಚನೆಯಲ್ಲಿ ಬಳಕೆಯಾಗುವುದಿಲ್ಲ.
ಕನ್ನಡದಲ್ಲಿ ಎರಡು ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಬಳಸಲು ಸಾಧ್ಯವಿದೆ ಯಾದರೂ (ಬಂದುಬಿಡು, ತಿಳಿಸಿಹೇಳು, ಮಾಡಿಕೊಡು) ಅದಕ್ಕಾಗಿ ಬಳಕೆ ಯಾಗುವ ವಿಧಾನ ಬೇರೆ ರೀತಿಯದಾಗಿದ್ದು, ಸಾಮಾನ್ಯವಾಗಿ ಅದು ಪದ ರಚನೆಯ ವಿಧಾನವಾಗಿರುವುದಿಲ್ಲ. ಗುಣಪದಗಳ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿದೆ. ಅದರಲ್ಲಿ ಗುಣಪದಗಳು ನಾಮಪದಗಳ ವಗ್ರದಲ್ಲಿ ಸೇರುವ ಕಾರಣ, ನಾಮಪದಗಳ ಹಾಗೆ ಅವನ್ನೂ ಸಮಾಸವೆಂಬ ವಿಧಾನದಿಂದ ಸಾಧಿಸಲು ಸಾಧ್ಯ. ಆದರೆ ಕನ್ನಡದಲ್ಲಿ ಅವು ಬೇರೆಯೇ ಒಂದು ಪದವಗ್ರದಲ್ಲಿ ಸೇರುವುವಾದ ಕಾರಣ ಇದು ಸಾಧ್ಯವಿಲ್ಲ.
4.1.1 ಹೆಸರಿಸುವುದು ಮತ್ತು ವರ್ಣಿಸುವುದು
ನಾಮಪದ, ಕ್ರಿಯಾಪದ ಮತ್ತು ಗುಣಪದಗಳನ್ನು ಮುಖ್ಯವಾಗಿ ಮೂರು ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಕನ್ನಡದ ವಾಕ್ಯಗಳಲ್ಲಿ ಬಳಸುತ್ತೇವೆಂಬುದನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ನಾಮಪದಗಳನ್ನು ಬಳಸಲಾಗುತ್ತದೆ, ಘಟನೆಗಳನ್ನು ನಿರ್ದೇಶಿಸುವುದಕ್ಕಾಗಿ ಕ್ರಿಯಾಪದಗಳನ್ನು ಬಳಸ ಲಾಗುತ್ತದೆ ಮತ್ತು ಗುಣಧರ್ಮಗಳನ್ನು ಸೂಚಿಸುವುದಕ್ಕಾಗಿ ಗುಣಪದಗಳನ್ನು ಬಳಸಲಾಗುತ್ತದೆ ಎಂಬುದಾಗಿ ವಾಕ್ಯಗಳಲ್ಲಿ ಈ ಮೂರು ಪದವಗ್ರಗಳಿಗಿರುವ ಕೆಲಸಗಳನ್ನು ಸೂಕ್ಷ್ಮವಾಗಿ ಸೂಚಿಸಬಹುದು.
ಈ ಮೂರು ಕೆಲಸಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕಾರ್ಯವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳ ಮೂಲಕ ನಡೆಸಲು ಸಾಧ್ಯವಿದೆ. ಆದರೆ ಉಳಿದ ಎರಡು ಕೆಲಸಗಳಲ್ಲಿ (ಎಂದರೆ ಘಟನೆಗಳನ್ನು ನಿರ್ದೇಶಿಸುವ ಮತ್ತು ಗುಣಧರ್ಮಗಳನ್ನು ಸೂಚಿಸುವ ಕೆಲಸ ಗಳಲ್ಲಿ) ಇಂತಹ ವೈವಿಧ್ಯತೆಯಿಲ್ಲ. (ಹೆಚ್ಚಿನ ವಿವರಗಳಿಗೆ ಭಟ್ 2002, 2004 ನೋಡಿ).
ಭಾಷೆಯಲ್ಲಿ ಬರುವ ನಾಮಪದಗಳೆಲ್ಲವೂ ವಿಶಿಷ್ಟವಾದೊಂದು ವ್ಯಕ್ತಿ, ವಸ್ತು ಇಲ್ಲವೇ ವಿಷಯದೊಂದಿಗೆ ರೂಢಿಯಿಂದ ಸಂಬಂಧಿಸಿರುತ್ತವೆ. ಹಾಗಾಗಿ, ಅವು ಹೆಸರಿಸುವ ವಿಧಾನದ ಮೂಲಕ ಮಾತ್ರವೇ ವ್ಯಕ್ತಿ, ವಸ್ತು ಮೊದಲಾದು ವನ್ನು ಗುರುತಿಸಬಲ್ಲುವು.
ಇದು ಒಳರಚನೆಯಿಲ್ಲದ ಮರ, ಕಲ್ಲು ಮೊದಲಾದ ನಾಮಪದಗಳಿಗೆ ಮಾತ್ರವಲ್ಲ, ಕಟ್ಟಡ, ಮೆಟ್ಟಲು, ಹೊದಿಕೆ, ಕಲ್ಲಿದ್ದಲು, ಚಿಕ್ಕಮ್ಮ ಮೊದಲಾದ ಒಳರಚನೆಯಿರುವ ನಾಮಪದಗಳಿಗೂ ಅನ್ವಯಿಸುವಂತಹ ಸಂಗತಿ. ಯಾಕೆಂದರೆ, ಒಳರಚನೆಯಿದ್ದರೂ ಅದರ ಮೂಲಕ ಈ ನಾಮಪದಗಳ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಉದಾಹರಣೆಗಾಗಿ, ಚಿಕ್ಕಮ್ಮ ಪದಕ್ಕೆ ಒಳರಚನೆಯಿದ್ದು, ಚಿಕ್ಕ ಮತ್ತು ಅಮ್ಮ ಎಂಬ ಎರಡು ಪದಗಳು ಅದರ ಅಂಗಗಳಾಗಿ ಬಂದಿವೆ. ಆದರೆ, ಈ ಒಳರಚನೆಯ ಸಹಾಯದಿಂದ ಆ ಪದದ ಅರ್ಥವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗದು.
ಕನ್ನಡದಲ್ಲಿ ಚಿಕ್ಕಮ್ಮ ಪದ ತಾಯಿಯ ತಂಗಿಯನ್ನು ಸೂಚಿಸುತ್ತದೆಯಲ್ಲದೆ, ತಾಯಿಗಿಂತ ಎಲ್ಲಾ ವಿಷಯಗಳಲ್ಲೂ ಚಿಕ್ಕವಳಾಗಿರುವ ಹೆಂಗಸನ್ನು ಸೂಚಿಸುವು ದಿಲ್ಲ. ಆಕೆ ನಂಟಿನಲ್ಲಿ ಮಾತ್ರ ತಾಯಿಗಿಂತ ಚಿಕ್ಕವಳಲ್ಲದೆ ವಯಸ್ಸಿನಲ್ಲಾಗಲೀ ಇಲ್ಲವೇ ಗಾತ್ರದಲ್ಲಾಗಲೀ ಚಿಕ್ಕವಳಾಗಿರಬೇಕಾಗಿಲ್ಲ.
ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸವೆಂತಹದು ಎಂಬುದನ್ನು ತಿಳಿಯಲು ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು.
ರಾಜುವಿಗೆ ಒಂದು ಕೆಂಪು ಟೊಪ್ಪಿ ಸಿಕ್ಕಿದೆ
(1) (2) ಅಗಸ ಕತ್ತೆಗೆ ಹೊಡೆಯುತ್ತಿದ್ದಾನೆ
(1)ನೇ ವಾಕ್ಯದಲ್ಲಿ ಸಿಗು ಕ್ರಿಯಾಪದ ಒಂದು ಘಟನೆಯನ್ನು ಸೂಚಿಸುತ್ತದೆ. ರಾಜು ನಾಮಪದ ಆ ಘಟನೆಯಲ್ಲಿ ತೊಡಗಿರುವ (ಎಂದರೆ ಒಂದು ಟೊಪ್ಪಿ ಯನ್ನು ಪಡೆದಿರುವ) ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಟೊಪ್ಪಿ ನಾಮಪದ
ಅದೇ ಘಟನೆಯಲ್ಲಿ ತೊಡಗಿರುವ (ಎಂದರೆ ರಾಜುವಿಗೆ ದೊರೆತಿರುವ) ಒಂದು ವಸ್ತುವನ್ನು ಗುರುತಿಸುತ್ತದೆ.
ಇದಲ್ಲದೆ ಅದೇ ವಾಕ್ಯದಲ್ಲಿ ಕೆಂಪು ಗುಣಪದ ಟೊಪ್ಪಿ ನಾಮಪದೊಂದಿಗೆ ಅದರ ವಿಶೇಷಣವಾಗಿ ಬಂದಿದ್ದು, ಒಂದು ಗುಣಧರ್ಮವನ್ನು ಸೂಚಿಸುತ್ತದೆ, ಮತ್ತು ಆ ಗುಣಧರ್ಮದ ಮೂಲಕ ಅದು ಆ ನಾಮಪದದ ಅರ್ಥವನ್ನು ಕಡಿಮೆ ಮಾಡುತ್ತದೆ. ಕೆಂಪು ಟೊಪ್ಪಿ ಎಂಬುದು ಕೆಲವು ಟೊಪ್ಪಿಗಳನ್ನು (ಕೆಂಪು ಬಣ್ಣದವುಗಳನ್ನು) ಮಾತ್ರ ವರ್ಣಿಸಬಲ್ಲುದಾದ ಕಾರಣ ಅದರ ವ್ಯಾಪ್ತಿ ಬರೀ ಟೊಪ್ಪಿ ಪದಕ್ಕಿರುವ ವ್ಯಾಪ್ತಿಗಿಂತ ಕಡಿಮೆ.
ಈ ಮೇಲಿನ ಕಾರಣಗಳಿಗಾಗಿ, (1)ನೇ ವಾಕ್ಯದಲ್ಲಿ ರಾಜು ನಾಮಪದ ಒಬ್ಬ ವ್ಯಕ್ತಿಯನ್ನು ಹೆಸರಿಸುವುದರ ಮೂಲಕ ಗುರುತಿಸುತ್ತದೆ ಮತ್ತು ಕೆಂಪು ಟೊಪ್ಪಿ ನಾಮಪದಕಂತೆ ಒಂದು ವಸ್ತುವನ್ನು ವರ್ಣಿಸುವುದರ ಮೂಲಕ ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಿದೆ.
ರಾಜು ಪದಕ್ಕೆ ಒಳರಚನೆಯೆಂಬುದಿಲ್ಲವಾದ ಕಾರಣ ಅದು ಒಬ್ಬ ವ್ಯಕ್ತಿಯನ್ನು ಹೆಸರಿಸಬಲ್ಲುದಲ್ಲದೆ ವರ್ಣಿಸಲಾರದು. ಆದರೆ ಕೆಂಪು ಟೊಪ್ಪಿ ಎಂಬುದಕ್ಕೆ ಒಳರಚನೆಯಿದ್ದು, ಅಂತಹ ರಚನೆಯ ಆಧಾರದ ಮೇಲೆ ಅದಕ್ಕೆ ಅರ್ಥ ಹೇಳಲು ಸಾಧ್ಯವಿದೆ. ಹಾಗಾಗಿ ಈ ಅರ್ಥದ ಮೂಲಕ ಅದು ಒಂದು ವಸ್ತುವನ್ನು ವರ್ಣಿಸಿ ಗುರುತಿಸಬಲ್ಲುದು.
ರಾಜು, ಹರಿ, ಬೆಂಗಳೂರು, ಅಜಿತ್, ಮೊದಲಾದ ಅಂಕಿತ ನಾಮಗಳು ಮಾತ್ರವಲ್ಲದೆ ಮರ, ಗಿಡ, ಕತ್ತೆ, ಕಲ್ಲು ಮೊದಲಾದ ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಮಾತ್ರವೇ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲುವು. ಯಾಕೆಂದರೆ, ಇಂತಹ ರೂಢನಾಮಗಳಿಗೂ ಒಳರಚನೆ ಯೆಂಬುದಿಲ್ಲವಾದ ಕಾರಣ ಅವುಗಳ ಮೂಲಕ ವರ್ಣನೆಯೊಂದನ್ನು ಪಡೆಯಲು ಸಾಧ್ಯವಾಗದು. ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (2)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಅನು ಕ್ರಮವಾಗಿ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ. ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ಅದಕ್ಕಾಗಿ ಒಳರಚನೆಯಿರುವ ಪದಗಳನ್ನು ಬಳಸುವುದು ಅತ್ಯವಶ್ಯ. ಯಾಕೆಂದರೆ ಒಳರಚನೆಯಿರುವ ಪದಗಳ ಮೂಲಕ ಮಾತ್ರ ವರ್ಣನೆಯೊಂದನ್ನು ಪಡೆಯಲು ಸಾಧ್ಯ.
ಉದಾಹರಣೆಗಾಗಿ, ನಾಮಪದಗಳ ಜಾಗದಲ್ಲಿ ಕೆಲವು ಕ್ರಿಯಾಪದಗಳ ಇಲ್ಲವೇ ಗುಣಪದಗಳ ರೂಪಗಳನ್ನು ಬಳಸಲು ಸಾಧ್ಯವಿದ್ದು ಅವು ವರ್ಣಿಸುವ ವಿಧಾನದ ಮೂಲಕ ಗುರುತಿಸುವ ಕೆಲಸವನ್ನು ನಡೆಸಬಲ್ಲುವು.
(4) ಅವನ ಬರೆಯುವಿಕೆ ಇನ್ನೂ ಮುಗಿದಿಲ್ಲ (5) ಅವನ ದೊಡ್ಡತನವನ್ನು ಎಲ್ಲರೂ ಬಲ್ಲರು
ಗುಣಪದದ
(4-5) ವಾಕ್ಯಗಳಲ್ಲಿ ಬರೆ ಕ್ರಿಯಾಪದದ ನಾಮರೂಪವಾಗಿರುವ ಬರೆಯು ವಿಕೆ ಎಂಬುದು ಮತ್ತು ದೊಡ್ಡ ನಾಮರೂಪವಾಗಿರುವ ದೊಡ್ಡತನ ಎಂಬುದು ವರ್ಣಿಸುವ ವಿಧಾನದ ಮೂಲಕ ಅನುಕ್ರಮವಾಗಿ ಒಂದು ಘಟನೆ ಯನ್ನು ಮತ್ತು ಒಂದು ಗುಣಧರ್ಮವನ್ನು ಗುರುತಿಸಿವೆ. ಈ ಪದಗಳ ಅರ್ಥವನ್ನು ಸಂಪೂರ್ಣವಾಗಿ ಅವುಗಳ ಒಳರಚನೆಯ ಸಹಾಯದಿಂದ ಪಡೆಯಲು ಸಾಧ್ಯ ವಿರುವ ಕಾರಣ, ಅವನ್ನು ಒಂದು ವರ್ಣನೆಯಲ್ಲಿ ತೊಡಗಿಸಲು ಸಾಧ್ಯವಾಗಿದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಪ್ರತ್ಯಯಗಳ ಮೂಲಕ ಇಲ್ಲವೇ ಸಮಾಸದ ಮೂಲಕ ಸಿದ್ಧವಾಗಿರುವ ನಾಮಪದಗಳಿಗೆ ಒಳರಚನೆಯಿದ್ದರೂ ಅವು ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸಲಾರವು. ಇದಕ್ಕೆ ಕಾರಣವೇನೆಂದರೆ, ಅವುಗಳ ಸರಿಯಾದ ಅರ್ಥವನ್ನು ಅವುಗಳ ಒಳರಚನೆಯನ್ನು ಪರಿಶೀಲಿಸುವುದರ ಮೂಲಕ ಮಾತ್ರವೇ ಕಂಡು ಹಿಡಿಯಲು ಸಾಧ್ಯವಾಗದು.
ನಾಮಪದಗಳ ಮೂಲಕ ವರ್ಣಿಸುವ ಕೆಲಸವನ್ನು ನಡೆಸಬೇಕಾಗಿದ್ದಲ್ಲಿ ಅವನ್ನು ಒಂದು ನಾಮಪದಕಂತೆಯ ಅಂಗವನ್ನಾಗಿ ಮಾಡಿ ಬಳಸುವ ಅವಶ್ಯಕತೆ ಯಿದೆ. ಮೇಲೆ (1)ನೇ ವಾಕ್ಯದಲ್ಲಿ ಕೊಟ್ಟಿರುವ ಕೆಂಪು ಟೊಪ್ಪಿ ಎಂಬ ನಾಮ ಪದಕಂತೆ ಈ ರೀತಿ ಒಂದು ವರ್ಣನೆಯನ್ನು ಕೊಟ್ಟು, ಅದರ ಮೂಲಕ ವಸ್ತು ವೊಂದನ್ನು ಗುರುತಿಸುತ್ತಿದೆ.
ನಾಮಪದಗಳ ಬಳಕೆಯಲ್ಲಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು ಗುರುತಿಸುವ ವಿಧಾನಗಳು ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಬೇಕಿದ್ದಲ್ಲಿ ಜೋಡುಪದ (ಸಮಸ್ತಪದ) ಗಳಿಗೂ ಪದಕಂತೆಗಳಿಗೂ ನಡುವಿರುವ ವ್ಯತ್ಯಾಸವೇನು ಎಂಬುದನ್ನು ತಿಳಿಯು ವುದು ಅವಶ್ಯ.
ಇವೆರಡನ್ನೂ ಎರಡು ಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೇನೋ ನಿಜ; ಆದರೆ, ಜೋಡುಪದಗಳನ್ನು ತಯಾರಿಸುವಲ್ಲಿ ಸಮಾಸವೆಂಬ ಪದರಚನೆಯ ವಿಧಾನವನ್ನು ಬಳಸಲಾಗಿದೆ ಮತ್ತು ಪದಕಂತೆ ಗಳನ್ನು ತಯಾರಿಸುವಲ್ಲಿ ಇದಕ್ಕಿಂತ ತೀರ ಭಿನ್ನವಾಗಿರುವ ವಾಕ್ಯರಚನೆಯ ವಿಧಾನವನ್ನು ಬಳಸಲಾಗಿದೆ.
4.1.2 ಜೋಡುಪದಗಳು ಮತ್ತು ಪದಕಂತೆಗಳು
ಕನ್ನಡದಲ್ಲಿ ಜೋಡುಪದಗಳು ಹೆಸರಿಸುವ ವಿಧಾನದಿಂದ ಮತ್ತು ಪದಕಂತೆಗಳು ವರ್ಣಿಸುವ ವಿಧಾನದಿಂದ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ.
ಈ ಎರಡು ವಿಧಾನಗಳ ನಡುವಿರುವ ವ್ಯತ್ಯಾಸವನ್ನು ಗಮನಿಸದ ಕನ್ನಡದ ವೈಯಾಕರಣಿಗಳು ಮಾವಿನ ಮರ, ನೆರೆಮನೆ ಸುದ್ದಿ, ಕೆಟ್ಟ ಬುದ್ಧಿ, ಬಿಳಿಯ ಬಟ್ಟೆ ಮೊದಲಾದವುಗಳನ್ನು ಸಮಸ್ತಪದ(ಜೋಡುಪದ)ಗಳೆಂದು ಕರೆದಿದ್ದಾರೆ. ನಿಜಕ್ಕೂ ಇವೆಲ್ಲ ಪದಕಂತೆಗಳಾಗಿದ್ದು ವರ್ಣಿಸುವ ವಿಧಾನದಲ್ಲಿ ಬಳಕೆಯಾಗು ತ್ತವಲ್ಲದೆ ಹೆಸರಿಸುವ ವಿಧಾನದಲ್ಲಿ ಬಳಕೆಯಾಗುವುದಿಲ್ಲ.
ನಾಮಪದಗಳಿಗಿರುವ ಒಳರಚನೆಯೆಂಬುದು ನಿಜಕ್ಕೂ ಅವುಗಳ ಚರಿತ್ರೆಗೆ ಸಂಬಂಧಿಸಿದ ವಿಷಯ. ಯಾವುದೋ ಒಂದು ಕಾಲದಲ್ಲಿ ಹೊಸ ಪದವೊಂದನ್ನು ಸೃಷ್ಟಿ ಮಾಡುವ ಅವಶ್ಯಕತೆ ಮೂಡಿಬಂದಾಗ ಭಾಷೆಯಲ್ಲಿ ಬಳಕೆಯಲ್ಲಿರುವ ಒಂದು ಪದಕ್ಕೆ ಪ್ರತ್ಯಯವೊಂದನ್ನು ಸೇರಿಸಿ, ಇಲ್ಲವೇ ಬೇರೊಂದು ಪದವನ್ನು ಸೇರಿಸಿ, ಹೊಸ ಪದವೊಂದನ್ನು ಸಿದ್ಧಗೊಳಿಸಿರಬೇಕು. ಅನಂತರ ಅದು ಜನರ ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಬಳಕೆಗೆ ಬಂದು ಭಾಷೆಯ ಪದವಾಗಿರ ಬೇಕು.
ನಿಜಕ್ಕೂ ಇಂತಹ ಒಳರಚನೆಯಿರುವ ಪದಗಳನ್ನು ಬಳಸುವವರಿಗೆ ಅವುಗಳ ಒಳರಚನೆಯೆಂತಹದು ಎಂಬ ವಿಷಯ ತಿಳಿದಿರಬೇಕೆಂದೇನೂ ಇಲ್ಲ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ ಈ ಪದಗಳ ಅರ್ಥವನ್ನು ಇತರ ಒಳರಚನೆಯಿಲ್ಲದ ಪದಗಳ ಹಾಗೆ ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳಬೇಕಾಗುತ್ತದಲ್ಲದೆ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸುವುದು ಕಷ್ಟಸಾಧ್ಯ.
ಕೆಲವು ಸಂದಭ್ರಗಳಲ್ಲಿ ಮಾತ್ರ ಇಂತಹ ಒಳರಚನೆಯ ಸಹಾಯದಿಂದ ಒಂದು ಪದದ ಅರ್ಥವನ್ನು ಊಹಿಸಲು ಸಾಧ್ಯವಾಗಬಹುದು. ಉದಾಹರಣೆಗಾಗಿ, ಜಲಜನಕ ಪದಕ್ಕೆ ಒಳರಚನೆಯ ಆಧಾರದ ಮೇಲೆ ‘ನೀರನ್ನು ಉಂಟು ಮಾಡುವಂತಹದು’ ಎಂಬ ಅರ್ಥವನ್ನು ಕೊಡಲು ಸಾಧ್ಯವಿದೆ. ಆದರೆ ಬರಿಯ ಈ ಅರ್ಥದ ಸಹಾಯದಿಂದ ಅದು ಯಾವ ವಸ್ತುವನ್ನು ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಾಗದು.
ಅದು ಒಂದು ರೀತಿಯ ಅನಿಲವನ್ನು ಸೂಚಿಸುತ್ತದೆ ಎಂಬ ವಿಷಯ ತಿಳಿದಿದೆ ಯಾದರೂ ಜಲಜನಕ ಮತ್ತು ಆಮ್ಲಜನಕಗಳೆಂಬ ಎರಡು ರೀತಿಯ ಅನಿಲಗಳು ಈ ‘ನೀರನ್ನು ಉಂಟುಮಾಡುವ’ ಕೆಲಸದಲ್ಲಿ ಬಳಕೆಯಾಗುವುವಾದ ಕಾರಣ, ಜಲಜನಕ ಪದ ಆ ಎರಡು ಅನಿಲಗಳಲ್ಲಿ ಮೊದಲನೆಯದನ್ನು ಗುರುತಿಸುತ್ತದೆ
ಎಂಬುದನ್ನು ಕನ್ನಡದಲ್ಲಿ ಆ ಪದದ ಬಳಕೆಯೆಂತಹದು ಎಂಬುದನ್ನು ತಿಳಿದಿದ್ದರೆ ಮಾತ್ರ ಹೇಳಲು ಸಾಧ್ಯ.
ಪದಕಂತೆಗಳ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಅರ್ಥವನ್ನಾಧರಿಸಿ ಅದರ ಅರ್ಥ ವೇನೆಂಬುದನ್ನು ತಿಳಿಯಲು ಸಾಧ್ಯವಿದೆ ಮತ್ತು ಆ ಅರ್ಥವನ್ನವಲಂಬಿಸಿ ಅದು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿದೆ.
ಉದಾಹರಣೆಗಾಗಿ ಹೊಸಬಟ್ಟೆ ಎಂಬುದು ಕನ್ನಡದಲ್ಲಿ ಒಂದು ಪದಕಂತೆ ಯಾಗಿದ್ದು, ಅದು ವರ್ಣಿಸುವ ಕ್ರಿಯೆಯ ಮೂಲಕ ವಸ್ತುವೊಂದನ್ನು ಗುರುತಿಸು ತ್ತದೆ. ಹೊಸದಾಗಿರುವ ಯಾವ ಬಟ್ಟೆಯನ್ನು ಬೇಕಿದ್ದರೂ ಈ ಪದಕಂತೆಯ ಮೂಲಕ ಗುರುತಿಸಲು ಸಾಧ್ಯವಿದೆ. ಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಿದ್ಧವಾಗಿರುವ ಪದಗಳೂ ಈ ವಿಷಯದಲ್ಲಿ ಜೋಡುಪದಗಳ ಹಾಗೆಯೇ ಎಂದು ಹೇಳ ಬೇಕಾಗುತ್ತದೆ. ಯಾಕೆಂದರೆ, ಅವುಗಳ ಅರ್ಥವನ್ನು ಅವುಗಳ ಒಳರಚನೆಯ ಸಹಾಯದಿಂದ ಸಂಪೂರ್ಣವಾಗಿ ಮತ್ತು ಸರಿಯಾಗಿ ಪಡೆಯಲು ಸಾಧ್ಯವಾಗದು. ಭಾಷೆಯಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ತಿಳಿಯುವುದರ ಮೂಲಕ ಮಾತ್ರವೇ ಅವುಗಳ ಸರಿಯಾದ ಅರ್ಥವನ್ನು ಪಡೆಯಲು ಸಾಧ್ಯ.
ಉದಾಹರಣೆಗಾಗಿ ಮೆಟ್ಟಲು ಪದವನ್ನು ಮೆಟ್ಟು ಕ್ರಿಯಾಪದಕ್ಕೆ ಅಲು ಪ್ರತ್ಯಯವನ್ನು ಸೇರಿಸಿ ರಚಿಸಲಾಗಿದೆಯೆಂದು ನಮಗೆ ತಿಳಿದಿದ್ದರೂ ಅದರಿಂದ ಆ ಪದ ನಿಜಕ್ಕೂ ಸೂಚಿಸುವ ವಸ್ತು ಎಂತಹದು ಎಂಬುದನ್ನು ಸರಿಯಾಗಿ ಊಹಿಸಿ ಹೇಳಲು ಸಾಧ್ಯವಾಗದು. ಯಾಕೆಂದರೆ, ಅಲು ಪ್ರತ್ಯಯಕ್ಕೆ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಕೊಡುವ ಶಕ್ತಿಯಿದೆ. ಮೆಟ್ಟಲು ಪದದಲ್ಲಿ ಈ ಅಲು ಪ್ರತ್ಯಯ ಒಂದು ಜಾಗವನ್ನು ಸೂಚಿಸು ತ್ತದೆ, ಕೆಮ್ಮಲು ಪದದಲ್ಲಿ ಒಂದು ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಬೀಳಲು ಪದದಲ್ಲಿ ಒಂದು ಕ್ರಿಯೆಯ ಮೂಲಕ ಪಡೆದಿರುವ ವಸ್ತುವನ್ನು ಸೂಚಿಸುತ್ತದೆ.
ಸಂಸ್ಕೃತದ ನಾಮಪದಗಳ ಬಳಕೆಯಲ್ಲಿ ಇಂತಹ ಹೆಸರಿಸುವ ಮತ್ತು ವರ್ಣಿಸುವ ವಿಧಾನಗಳ ನಡುವಿರುವ ವ್ಯತ್ಯಾಸ ಬಹಳ ಮಟ್ಟಿಗೆ ನಶಿಸಿಹೋಗಿದೆ. ಸಂಸ್ಕೃತ ಮಾತಿನ ಭಾಷೆಯಾಗಿ ಮುಂದುವರಿಯದೆ ಬರಿಯ ಬರಹದ ಭಾಷೆ ಯಾಗಿ ಉಳಿದಿರುವುದೇ ಇದಕ್ಕೆ ಕಾರಣವಿರಬೇಕು.
ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ಜೋಡುಪದ ಮತ್ತು ಪದಕಂತೆಗಳ ನಡುವೆ ಅರ್ಥದ ಮಟ್ಟಿಗೆ ಹೆಚ್ಚಿನ ಬಳಕೆಗಳಲ್ಲೂ ವ್ಯತ್ಯಾಸವೇನೂ ಕಾಣಿಸುವು ದಿಲ್ಲ. ಅಂಗಗಳಾಗಿ ಬರುವ ಪದಗಳಲ್ಲಿ ಕೊನೆಯದನ್ನು ಬಿಟ್ಟು ಉಳಿದವು
ಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳನ್ನು ಲೋಪಗೊಳಿಸಿ ಬಳಸಿದಾಗಲೆಲ್ಲ ಸಂಸ್ಕೃತದಲ್ಲಿ ಜೋಡುಪದ ಸಿದ್ಧಿಸುತ್ತದೆ.
4.2 ಕೃತ್ ಮತ್ತು ತದ್ಧಿತ ಪ್ರತ್ಯಯಗಳು
ಸಂಸ್ಕೃತ ಭಾಷೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಬಳಕೆ ಯಾಗುವ ಪದಗಳಲ್ಲಿ ಹೆಚ್ಚು ಕಡಿಮೆ ಎಲ್ಲವನ್ನೂ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿದೆ. ಇದಕ್ಕೆ ದಿಶ್ ‘ದಿಕ್ಕು’, ಯುದ್್ಧ ‘ಯುದ್ಧ’, ಪದ್ ‘ಕಾಲು’, ಮಹ್ ‘ದೊಡ್ಡ’ ಮೊದಲಾದ ಕೆಲವೇ ಕೆಲವು ಅಪವಾದಗಳನ್ನು ಮಾತ್ರ ಕಾಣಲು ಸಾಧ್ಯವಿದೆ.
ಎಂದರೆ, ಒಳರಚನೆಯಿಲ್ಲದ ಪದಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಸಂಸ್ಕೃತ ದಲ್ಲಿ ಕ್ರಿಯಾಧಾತುಗಳಾಗಿವೆ. ಅಂತಹ ಪದಗಳಲ್ಲಿ ಕೆಲವು ಮಾತ್ರ (ಮೇಲೆ ಸೂಚಿಸಿದ ಹಾಗೆ) ನಾಮಪದಗಳಾಗಿ ಬಳಕೆಯಾಗುತ್ತವೆಯಾವಾದರೂ ‘ಸೊನ್ನೆ’ ಪ್ರತ್ಯಯವನ್ನು ಬಳಸುವ ಮೂಲಕ ಅವನ್ನೂ ಕ್ರಿಯಾಧಾತುಗಳಿಂದ ಪಡೆಯಲು ಸಾಧ್ಯವಿದೆ. ಹಾಗಾಗಿ ಸಂಸ್ಕೃತದಲ್ಲಿ ಧಾತು ಪದವನ್ನು ಕ್ರಿಯಾಧಾತು ಎಂಬ ಅರ್ಥದಲ್ಲೇನೇ ಬಳಸುವುದು ರೂಢಿ.
ಕನ್ನಡದಲ್ಲೂ ಹಲವಾರು ನಾಮಪದಗಳನ್ನು ಮತ್ತು ಗುಣಪದಗಳನ್ನು ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಪಡೆಯಲು ಸಾಧ್ಯ ವಿದೆಯಾದರೂ, ಆ ರೀತಿ ಪಡೆಯಲು ಸಾಧ್ಯವಿಲ್ಲದಂತಹ ನಾಮಪದಗಳು ಮತ್ತು ಗುಣಪದಗಳು ಕನ್ನಡದಲ್ಲಿ ಹಲವಿವೆ.
ಉದಾಹರಣೆಗಾಗಿ, ಮರ, ಹೂ, ಕಲ್ಲು, ಕರು, ಕಾಲು, ಹಲ್ಲು, ನಾರು, ನೊರೆ ಮೊದಲಾದ ಹಲವಾರು ನಾಮಪದಗಳನ್ನು ಮತ್ತು ಹಿರಿ, ಹಾಳು, ತೆಳು, ನಡು ಮೊದಲಾದ ಹಲವು ಗುಣಪದಗಳನ್ನು ಕನ್ನಡದಲ್ಲಿ ಕ್ರಿಯಾಧಾತುಗಳಿಂದ ಪಡೆಯಲು ಸಾಧ್ಯವಾಗದು.
ಹಾಗಾಗಿ, ಕನ್ನಡದ ಧಾತುಗಳನ್ನೆಲ್ಲ ಸಂಸ್ಕೃತದ ಹಾಗೆ ಕ್ರಿಯಾಧಾತುಗಳೆಂಬ ಒಂದೇ ವಗ್ರದಲ್ಲಿ ಸೇರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲು, ಅವನ್ನು ಸಂದಭ್ರಕ್ಕೆ ತಕ್ಕ ಹಾಗೆ ಕ್ರಿಯಾಧಾತು, ನಾಮಧಾತು, ಮತ್ತು ಗುಣ ಧಾತು ಎಂಬುದಾಗಿ ಮೂರು ವಗ್ರಗಳಲ್ಲಿ ವಿಂಗಡಿಸಬೇಕಾಗುತ್ತದೆ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ನಾಮಪದಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.
ನಾಮಪದಗಳು ಸ್ವಪ್ನ ಕ್ಷೇತ್ರ
‘ಕನಸು’
ಕ್ರಿಯಾಧಾತುಗಳು ಸ್ವಪ್
‘ಕನಸು ಕಾಣು’ ‘ವಾಸವಾಗಿರು’
ದಕ್್ಷ ವೃದ್್ಧ ವೃಹ್
‘ತೆಂಕ, ಬಲ’ ‘ಮುದಿ’ ‘ಬಿಲ್ಲು’ ‘ಮರ’ ‘ಹಳೆ’
‘ಚೂಪು ಮಾಡು’ ‘ಸಮರ್ಥನಾಗಿರು’ ‘ಬೆಳೆ’ ‘ತಯಾರಿಸು’ ‘ಜೋರಾಗಿ ಹೋಗಿಸು’ ‘ಬೆಳೆ’ ‘ಭೇಟಿ ಮಾಡು’ ‘ಹಳೆಯದಾಗು’
ವೃದ್ಧ ಧನು ವೃಕ್ಷ
ಮೇಲೆ ಕೊಟ್ಟಿರುವ ಸಂಸ್ಕೃತದ ನಾಮಪದಗಳನ್ನೆಲ್ಲ ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ರಚಿಸಲಾಗಿದೆ. ಆದರೆ ಅವಕ್ಕೆ ಅರ್ಥಗಳಾಗಿ ಕೊಟ್ಟಿರುವ ಕನ್ನಡದ ನಾಮಪದ ಇಲ್ಲವೇ ಗುಣಪದಗಳಲ್ಲಿ ಒಂದನ್ನೂ ಈ ರೀತಿ ಕ್ರಿಯಾಧಾತುವಿನಿಂದ ತಯಾರಿಸಿಲ್ಲ.
ಸಂಸ್ಕೃತ ನಾಮಪದಗಳ ರಚನೆಯಲ್ಲಿ ಕಾಣಿಸುವ ಈ ಗುಣಧರ್ಮವನ್ನು ಆಧಾರವಾಗಿರಿಸಿ, ಅವನ್ನು ವೈಯಾಕರಣಿಗಳು ಕೃದಂತ, ತದ್ಧಿತಾಂತ ಮತ್ತು ಸಮಾಸ ಎಂಬುದಾಗಿ ಮೂರು ವಗ್ರಗಳಲ್ಲಿ ವಿಂಗಡಿಸುತ್ತಾರೆ. ಕ್ರಿಯಾಧಾತು ಗಳಿಗೆ ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಕೃದಂತಗಳು; ಆ ರೀತಿ ತಯಾರಾಗಿರುವ ನಾಮಪದಗಳಿಗೆ ಬೇರೊಂದು (ತದ್ಧಿತ) ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ತದ್ಧಿತಾಂತ ಗಳು; ಮತ್ತು ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಸಮಾಸಗಳು (ಜೋಡುಪದಗಳು).
ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಹೆಚ್ಚುಕಡಿಮೆ ಎಲ್ಲಾ ಪದಗಳನ್ನೂ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿದೆಯಾದ ಕಾರಣ ಇಂತಹ ವಿಭಜನೆ ಆ ಭಾಷೆಯ ವ್ಯಾಕರಣಕ್ಕೆ ಅನುಕೂಲವಾಗಿದೆ.
ಆದರೆ ಕನ್ನಡದ ನಾಮಪದ ಮತ್ತು ಗುಣಪದಗಳಲ್ಲಿ ಹಲವನ್ನು ಆ ರೀತಿ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿಲ್ಲವಾದ ಕಾರಣ, ಕೃದಂತ, ತದ್ಧಿತಾಂತ ಮತ್ತು ಸಮಾಸಗಳೆಂಬ ನಾಮಪದಗಳ ವಿಭಜನೆ ಕನ್ನಡಕ್ಕೆ ಅನುಕೂಲವಾದು
ಹೀಗಿದ್ದರೂ ಕನ್ನಡದ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಆ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಒಳಗಾಗದಂತಹ ಪದಗಳನ್ನು ಮಾತ್ರ ಕೆಲವರು ವೈಯಾಕರಣಿಗಳು ನಾಮ ಎಂಬ ನಾಲ್ಕನೆಯ ಪದವಗ್ರದಲ್ಲಿ ಸೇರಿಸಿ, ಕನ್ನಡದಲ್ಲಿ ಕೃದಂತ, ತದ್ಧಿತಾಂತ, ಸಮಾಸ ಮತ್ತು ನಾಮ ಎಂಬ ನಾಲ್ಕು ಪದವಗ್ರಗಳಿವೆಯುಂದು ಹೇಳಿದ್ದಾರೆ.
ತದ್ಧಿತ
ಸೇರುವ
ಕ್ರಿಯಾಪದಗಳಿಗೆ ಸೇರುವ ಪ್ರತ್ಯಯಗಳನ್ನೆಲ್ಲ ಕೃತ್ಪ್ರತ್ಯಯಗಳೆಂದು ಮತ್ತು ಪ್ರತ್ಯಯಗಳೆಂದು ಪ್ರತ್ಯಯಗಳನ್ನೆಲ್ಲ ನಾಮಪದಗಳಿಗೆ ಪರಿಗಣಿಸುವ ಇನ್ನೊಂದು ವಿಧಾನವನ್ನೂ ಕೆಲವರು ಕನ್ನಡ ವೈಯಾಕರಣಿಗಳು ಅನುಸರಿಸಿರುವುದು ಕಂಡುಬರುತ್ತದೆ.
ಇದೂ ಒಂದು ಮಟ್ಟಿಗೆ ಸಂಸ್ಕೃತ ವ್ಯಾಕರಣದ ಅನುಕರಣೆಯೇ. ಯಾಕೆಂದರೆ, ಸಂಸ್ಕೃತದಲ್ಲಿ ಹೆಚ್ಚುಕಡಿಮೆ ಎಲ್ಲಾ ನಾಮಪದಗಳನ್ನೂ ಕ್ರಿಯಾ ಧಾತುವಿಗೆ ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಹಾಗಾಗಿ, ಅವುಗಳ (ಎಂದರೆ ನಾಮಪದಗಳ) ಅನಂತರ ಬರುವ ಪ್ರತ್ಯಯಗಳೆಲ್ಲ ಸಂಸ್ಕೃತದಲ್ಲಿ ತದ್ಧಿತ ಪ್ರತ್ಯಯಗಳಾಗುತ್ತವೆ (ಎಂದರೆ ‘ಮೊದಲನೆಯ’ ಪ್ರತ್ಯಯವಾಗಿರುವುದಿಲ್ಲ).
ಆದರೆ ಕನ್ನಡದಲ್ಲಿ ಕ್ರಿಯಾಧಾತುಗಳಿಂದ ತಯಾರಿಸಿಲ್ಲವಾದ ನಾಮಪದ ಗಳೂ ಬೇಕಾದಷ್ಟಿವೆ. ಹಾಗಾಗಿ, ನಾಮಪದಗಳೊಂದಿಗೆ ಬರುವ ಪ್ರತ್ಯಯಗಳಲ್ಲಿ ಹೆಚ್ಚಿನವೂ ಕನ್ನಡದಲ್ಲಿ ಮೊದಲನೆಯ ಪ್ರತ್ಯಯಗಳೇ. ಎಂದರೆ, ಈ ಎರಡನೆಯ ವಿಧಾನವನ್ನು ಬಳಸುವವರು ಸಂಸ್ಕೃತದ ಕೃತ್ ಮತ್ತು ತದ್ಧಿತ ಎಂಬ ಪಾರಿಭಾಷಿಕ ಪದಗಳಿಗೆ ಮೊದಲನೆಯ ಮತ್ತು ಅನಂತರದ ಪ್ರತ್ಯಯಗಳೆಂಬ ಸಂಸ್ಕೃತ ವ್ಯಾಕರಣದಲ್ಲಿರುವ ಅರ್ಥಕ್ಕಿಂತ ಬೇರೆಯೇ ಅರ್ಥವನ್ನು ಕೊಡ ಬೇಕಾಗಿದೆ.
ಆದರೆ ಇಂತಹ ತೇಪೆ ಕೆಲಸ ಕನ್ನಡ ವ್ಯಾಕರಣದ ಮಟ್ಟಿಗೆ ತೀರಾ ಅಸಮಪ್ರಕವಾದುದೆಂಬುದರಲ್ಲಿ ಸಂಶಯವಿಲ್ಲ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸವೂ ಮೇಲಿನ ವಿಭಜನೆ ಕನ್ನಡದ ಮಟ್ಟಿಗೆ ಅನುಕೂಲವಲ್ಲವೆಂಬುದನ್ನು ತೋರಿಸಿ ಕೊಡುತ್ತದೆ. ಕನ್ನಡದಲ್ಲಿ ಸಾಮಾನ್ಯವಾಗಿ ಬಡವ, ಕಳವು, ನೋವು, ಬರಹ, ಬಿರುಕು ಮೊದಲಾದ ಒಂದೇ ಒಂದು ಪ್ರತ್ಯಯವನ್ನೊಳಗೊಂಡಿರುವ ಸಾಧಿತ ಪದಗಳೇ ಜಾಸ್ತಿ. ಎರಡು ಅಥವಾ ಜಾಸ್ತಿ ಪ್ರತ್ಯಯಗಳನ್ನೊಳಗೊಂಡಿರುವ ತಿಳುವಳಿಕೆ, ಬರವಣಿಗೆ, ಬಿಲ್ಲುಗಾರಿಕೆ ಎಂಬಂತಹ ಸಾಧಿತ ಪದಗಳು ಕನ್ನಡದಲ್ಲಿ ಬಹಳ ಕಡಿಮೆ.
ಇದಕ್ಕೆ ವಿರುದ್ಧವಾಗಿ, ಸಂಸ್ಕೃತದಲ್ಲಿ ಎರಡು ಅಥವಾ ಜಾಸ್ತಿ ಪ್ರತ್ಯಯ ಗಳನ್ನೊಳಗೊಂಡಿರುವ ಪದಗಳು ಬೇಕಾದಷ್ಟಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ಪದಗಳನ್ನು ಗಮನಿಸಬಹುದು.
ಮನ್
ಕೃದಂತ
ಕರ್ತೃ
ತದ್ಧಿತಾಂತ ಕರ್ತೃತ್ವ ಮತಿಮತ್
f ಶುಚ್
ಪೃಥ್ ಪೃಥು
ದೇವ
ಬುದ್ಧಿ
ಜ್ಞಾನ
ಪಾರ್ಥಿವ ದೈವ ಬುದ್ಧಿಮತ್ ಜ್ಞಾನಿನ್ ವಾಗ್ಮಿನ್
ಪದಗಳನ್ನು
ಸಂಸ್ಕೃತದಲ್ಲಿ ಬರುವ ಒಳರಚನೆಯಿರುವ ಕೃದಂತ, ತದ್ಧಿತಾಂತ ಮತ್ತು ಸಮಾಸ ಎಂಬುದಾಗಿ ವಿಂಗಡಿಸಿದಾಗ ಹೆಚ್ಚು ಕಡಿಮೆ ಒಂದೇ ಪ್ರಮಾಣದ ಮೂರು ಪದವಗ್ರಗಳು ಸಿದ್ಧವಾಗುತ್ತವೆ.
ಆದರೆ ಕನ್ನಡದಲ್ಲಿ ಪ್ರತ್ಯಯಗಳಿರುವ ಹೆಚ್ಚಿನ ಪದಗಳಲ್ಲೂ ಒಂದೇ ಪ್ರತ್ಯಯ ಕಾಣಿಸುವುದಾದ ಕಾರಣ, ಮೇಲಿನ ಸಂಸ್ಕೃತ ವ್ಯಾಕರಣದ ನಿಯಮ ವನ್ನು ಬಳಸಿದಲ್ಲಿ ಹೆಚ್ಚಿನ ಪದಗಳನ್ನೂ ‘ಕೃದಂತ’ ಎಂಬ ಒಂದೇ ವಗ್ರದಲ್ಲಿ ಸೇರಿಸಬೇಕಾಗುತ್ತದೆ. ತದ್ಧಿತಾಂತ ಎಂಬ ವಗ್ರದಲ್ಲಿ ಸೇರಿಸಲು ಕೆಲವೇ ಕೆಲವು ಪದಗಳು ಮಾತ್ರ ಉಳಿಯುತ್ತವೆ. ಕನ್ನಡದ ನಾಮಪದಗಳನ್ನು ವಿಭಜಿಸಲು ಬೇರೆಯೇ ಆಧಾರವನ್ನು ಬಳಸುವುದು ಒಳ್ಳೆಯದೆನ್ನುವುದಕ್ಕೆ ಇದೂ ಒಂದು
4.3 ಪದದ ಮೊದಲು ಮತ್ತು ಅನಂತರ ಬರುವ ಪ್ರತ್ಯಯಗಳು
ಕನ್ನಡದಲ್ಲಿ ಬರುವ ಪ್ರತ್ಯಯಗಳೆಲ್ಲವೂ ಪದದ ಅನಂತರ ಬರುವವುಗಳು (ಮೆಚ್ಚು-ಗೆ, ನಡ-ತೆ, ಅಳಿ-ವು, ಬಡ-ವ, ಗಾಣ್-ಇಗ). ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಸಂಸ್ಕೃತದಲ್ಲಿ ಪ್ರತ್ಯಯಗಳು ಪದದ ಮೊದಲೂ ಬರಬಲ್ಲುವು (ಪ್ರ-ಕೃತಿ, ಪ್ರ-ಭಾವ, ವಿ-ನಾಶ, ಅ- ಭಾವ, ಅ-ಸತ್ಯ), ಅನಂತರವೂ ಬರಬಲ್ಲುವು (ರಸ-ರಸಿಕ, ನಟ-ನಟಿ, ಪದ-ಪದ್ಯ, ಸನ್ಯಾಸಿ-ಸನ್ಯಾಸಿನಿ).
ಕನ್ನಡದಲ್ಲಿಯೂ ಹೆಜ್ಜೇನು, ಹಿಂಗಾಲು, ಕೆಮ್ಮಣ್ಣು, ಇನ್ನೂರು ಮೊದಲಾದ ಪದಗಳಲ್ಲಿ ಜೇನು, ಕಾಲು, ಮಣ್ಣು, ನೂರು ಮೊದಲಾದ ಪದಗಳ ಮೊದಲು ಬರುವ ಹೆಜ್, ಹಿಂ, ಕೆಂ, ಇನ್ ಎಂಬಂತಹ ‘ಪ್ರತ್ಯಯ’ಗಳಿವೆಯೆಂದು ಕೆಲವರು ವೈಯಾಕರಣಿಗಳು ವಾದಿಸಿದ್ದಾರೆ (ಶ್ರೀಧರ್ 1995 ನೋಡಿ).
ಮೊದಲಾದವುಗಳು
ಜೋಡುಪದಗಳೆಂದು
ಆದರೆ ಇವನ್ನು ಪ್ರತ್ಯಯಗಳೆಂದು ಹೇಳುವ ಬದಲು ಪದಗಳೆಂದು ಹೇಳಿ, ಹೆಜ್ಜೇನು ಪರಿಗಣಿಸುವುದೇ ಒಳ್ಳೆಯದೆಂದು ಬೇರೆ ಕೆಲವರು ವಾದಿಸಿದ್ದಾರೆ (ತಿರುಮಲೇಶ್ 1997 ನೋಡಿ). ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳೂ ಹೀಗೆಯೇ ಹೇಳಿದ್ದಾರೆ.
ಇದಲ್ಲದೆ, ಇಂತಹ ಪದಗಳಲ್ಲಿ ಅವುಗಳ ಮೊದಲಿಗೆ ಬರುವ ಅಂಶಗಳು (ಹೆಜ್, ಹಿಂ, ಕೆಂ, ಇನ್ ಮೊದಲಾದವು) ಪ್ರತ್ಯಯಗಳೆಂದು ಹೇಳಿದಲ್ಲಿ ಇಬ್ಬರು ಎಂಬಂತಹ ಕೆಲವು ಪದಗಳು ಎರಡು ಪ್ರತ್ಯಯಗಳ ಸೇರಿಕೆಯಿಂದ (ಎಂದರೆ ಧಾತುವಿಲ್ಲದೆಯೇ) ತಯಾರಾಗಿವೆಯೆಂದು ಹೇಳಬೇಕಾದೀತು.
ಸಾಮಾನ್ಯವಾಗಿ ಪ್ರತ್ಯಯಗಳನ್ನು ಪದಗಳಿಗೆ ಇಲ್ಲವೇ ಧಾತುಗಳಿಗೆ ಸೇರಿಸಿ ಹೊಸ ಪದಗಳನ್ನು ತಯಾರಿಸುತ್ತೇವಲ್ಲದೆ ಎರಡು ಪ್ರತ್ಯಯಗಳನ್ನು ಮಾತ್ರವೇ ಒಂದರೊಡನೊಂದನ್ನು ಸೇರಿಸಿ ಪದಗಳನ್ನು ತಯಾರಿಸುವ ಕ್ರಮವಿಲ್ಲ.
4.4 ನಾಮಪದಗಳ ರಚನೆ
ಕನ್ನಡದ ನಾಮಪದಗಳನ್ನು ಕ್ರಿಯಾಪದಗಳಿಗೆ, ಗುಣಪದಗಳಿಗೆ ಇಲ್ಲವೇ ಇತರ ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ ದಣಿ ಕ್ರಿಯಾಪದಕ್ಕೆ ವು ಪ್ರತ್ಯಯವನ್ನು ಸೇರಿಸಿ ದಣಿವು ನಾಮಪದವನ್ನೂ, ಬಡ ಗುಣಪದಕ್ಕೆ ವ ಪ್ರತ್ಯಯವನ್ನು ಸೇರಿಸಿ ಬಡವ ನಾಮಪದವನ್ನೂ, ಗಾಣ ನಾಮಪದಕ್ಕೆ ಇಗ ಪ್ರತ್ಯಯವನ್ನು ಸೇರಿಸಿ ಗಾಣಿಗ ನಾಮಪದವನ್ನೂ ತಯಾರಿಸಲಾಗಿದೆ. ಈ ರೀತಿ ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿರುವಂತಹ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಮೇಲೆ ಸೂಚಿಸಿರುವ ಹಾಗೆ, ನಾಮಪದಗಳ ಒಳರಚನೆಯೆಂಬುದು ಮುಖ್ಯ ವಾಗಿ ಅವುಗಳ ಚರಿತ್ರೆಯನ್ನವಲಂಬಿಸಿರುತ್ತದೆ. ಪದವೊಂದನ್ನು ಹೊಸದಾಗಿ ತಯಾರಿಸಿ ಬಳಕೆಗೆ ತಂದಾಗ ಎಂತಹ ಪದರಚನೆಯ ನಿಯಮವನ್ನು ಅನುಸರಿಸ ಲಾಗಿತ್ತು ಎಂಬುದೇ ಅದರ ಒಳರಚನೆಗೆ ಆಧಾರವಾಗುತ್ತದೆ.
ಸಾಮಾನ್ಯವಾಗಿ ನಾಮಪದಗಳನ್ನು ವಾಕ್ಯಗಳಲ್ಲಿ ಬಳಸುವಾಗ ಇಲ್ಲವೇ ಅವುಗಳ ಅರ್ಥವೇನೆಂಬುದನ್ನು ತಿಳಿಯಲು ಪ್ರಯತ್ನಿಸುವಾಗ ಅವುಗಳ ಒಳರಚನೆ ಹೆಚ್ಚಿನೆಡೆಗಳಲ್ಲೂ ಜಾಸ್ತಿ ಸಹಾಯಕವಾಗುವುದಿಲ್ಲ. ಪದಗಳಿಗೆ ರೂಢಿಯಲ್ಲಿ ಎಂತಹ ಅರ್ಥವಿದೆ ಎಂಬುದು ಮಾತ್ರವೇ ಅವುಗಳ ಬಳಕೆಗೆ ಮತ್ತು ಅರ್ಥಕ್ಕೆ ಆಧಾರವಾಗಬಲ್ಲುದು. ಉದಾಹರಣೆಗಾಗಿ ಹಾಸು ಕ್ರಿಯಾಪದಕ್ಕೂ ಹಾಸುಗೆ ನಾಮಪದಕ್ಕೂ ನಡು ವಿರುವ ಸಂಬಂಧ, ತೆರು ಕ್ರಿಯಾಪದಕ್ಕೂ ತೆರಿಗೆ ನಾಮಪದಕ್ಕೂ ನಡುವಿರುವ ಸಂಬಂಧ, ಇಲ್ಲವೇ ಮಿಡಿ ಕ್ರಿಯಾಪದಕ್ಕೂ ಮಿಡಿತೆ ನಾಮಪದಕ್ಕೂ ಹೇಳ ಬಹುದು. ನಡುವಿರುವ ಸಂಬಂಧ ಈ ನಾಮಪದಗಳನ್ನು (ಹಾಸುಗೆ, ತೆರಿಗೆ ಮತ್ತು ಮಿಡಿತೆ ಎಂಬವು ಗಳನ್ನು) ಬಳಸುವಾಗ ನಮ್ಮ ಗಮನಕ್ಕೆ ಬರುವುದು ಅಪರೂಪವೆಂದೇ ರೂಢಿಮೂಲವಾದ ಅರ್ಥದ ಸಹಾಯದಿಂದಲೇನೇ ನಾವು ಅವನ್ನು ವಾಕ್ಯಗಳಲ್ಲಿ ಬಳಸುತ್ತೇವೆ ಮತ್ತು ಬೇರೆ ಯಾರಾದರೂ ಅವನ್ನು ಬಳಸಿದಾಗ ಅವಕ್ಕೆ ಅರ್ಥ ಕೊಡುತ್ತೇವೆ. ಈ ರೀತಿ ಪದಗಳ ಒಳರಚನೆ ಅವುಗಳ ದಿನನಿತ್ಯದ ಬಳಕೆಗೆ ಅವಶ್ಯ ವಿಲ್ಲವಾದ ಕಾರಣ, ಸಾಮಾನ್ಯವಾಗಿ ಅದು ಬಹಳ ಅನಿಯಮಿತವಾಗಿರುವುದೇ ಜಾಸ್ತಿ. ಇದಲ್ಲದೆ ನಾಮಪದಗಳಲ್ಲಿ ಬಳಕೆಯಾಗುವ ಪ್ರತ್ಯಯಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು, ಅವುಗಳ ಸ್ವರೂಪ ಮತ್ತು ಅರ್ಥ ಇವೆರಡೂ ಬಹಳ ಮಟ್ಟಿಗೆ ಅನಿಯಮಿತವಾಗಿರುತ್ತವೆ.
ಈ ಕಾರಣಕ್ಕಾಗಿ ಒಳರಚನೆಯಿರುವ ನಾಮಪದಗಳನ್ನು ವ್ಯಾಕರಣಗಳಲ್ಲಿ ವರ್ಣಿಸುವಾಗ ಅವುಗಳಲ್ಲಿ ಬರುವ ಪ್ರತ್ಯಯಗಳ ಪಟ್ಟಿಯನ್ನಷ್ಟೇ ಕೊಡಲು ಸಾಧ್ಯವಾಗುತ್ತದೆ. ಅಂತಹ ಪ್ರತ್ಯಯಗಳೊಂದಿಗೆ ಬರುವ ಪದಗಳು, ಆ ಪದಗಳಲ್ಲಿ ಇಲ್ಲವೇ ಪ್ರತ್ಯಯಗಳಲ್ಲಿ ಉಂಟಾಗುವ ಸೇರಿಕೆಯ ಬದಲಾವಣೆಗಳು, ಮತ್ತು ಅವುಗಳ ಮೂಲಕ ತಯಾರಾಗಬಲ್ಲ ಪದಗಳ ಅರ್ಥ ಇವೆಲ್ಲವನ್ನೂ ಪಟ್ಟಿ ಮಾಡಿಯೇ ಹೇಳಬೇಕಾಗುತ್ತದೆ. ಈ ಕಾರಣಕ್ಕಾಗಿ ಕೆಲವರು ವೈಯಾ ಕರಣಿಗಳು ಪದಗಳ ಒಳರಚನೆಯೆಂಬುದು ಅರ್ಥಕೋಶದ ಅಂಗವಲ್ಲದೆ ವ್ಯಾಕರಣದ ಅಂಗವಲ್ಲ ಎಂಬುದಾಗಿಯೂ ವಾದಿಸಿದ್ದಾರೆ. ಪ್ರತ್ಯಯಗಳ ಮೂಲಕ ಸಾಧಿತವಾಗುವ ನಾಮಪದಗಳ ಒಳರಚನೆ ಈ ರೀತಿ ಅನಿಯಮಿತವಾಗಿರುವುದಾದ ಕಾರಣ ಅದನ್ನು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳುವುದು ಕಷ್ಟಸಾಧ್ಯ. ಅವುಗಳ ಹಿಂದೆ ನಿಯಮಗಳಿರುವ ಬದಲು ಬರೇ ಕೆಲವು ‘ಒಲವು’ಗಳಿವೆಯೆಂದು ಹೇಳಬೇಕಾಗುತ್ತದೆ. ಈ ಒಲವುಗಳನ್ನು ನಿಯಮರೂಪದಲ್ಲಿ ವರ್ಣಿಸಿದರೂ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಅಪವಾದವಿಲ್ಲದೆ ಇರುವುದಿಲ್ಲ.
ವ್ಯಾಕರಣದ ಇತರ ರಚನೆಗಳಿಗಿಂತ ಸಾಧಿತ ಪದಗಳ ರಚನೆ ಈ ಒಂದು ವಿಷಯದಲ್ಲಿ ತೀರಾ ಭಿನ್ನವಾಗಿದೆ. ಸಾಧಿತ ನಾಮಪದಗಳನ್ನು ಮತ್ತು ಅವುಗಳ ಅರ್ಥವನ್ನು ಅರ್ಥಕೋಶಗಳಲ್ಲಿ ಕೊಡಬೇಕಾಗಿರುವುದು ಇದೇ ಕಾರಣಕ್ಕಾಗಿ. ಉದಾಹರಣೆಗಾಗಿ ಕನ್ನಡದ ಪದರಚನೆಯಲ್ಲಿ ಬಳಕೆಯಾಗುವ ಇಕೆ-ಇಗೆ ಪ್ರತ್ಯಯದ ಸ್ವರೂಪವೇನೆಂಬುದನ್ನು ಪರಿಶೀಲಿಸಬಹುದು.
4.5 ಇಕೆ-ಇಗೆ ಪ್ರತ್ಯಯ
ಕನ್ನಡದ ನಾಮಪದಗಳ ರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳಲ್ಲಿ ಇಕೆ-ಇಗೆ ಎಂಬುದು ಮುಖ್ಯವಾದುದು. ಈ ಪ್ರತ್ಯಯದ ಮೂಲಕ ತಯಾರಾಗಬಲ್ಲ
ನಾಮಪದಗಳು ಕನ್ನಡದಲ್ಲಿ ಹಲವಿದ್ದು, ಅವುಗಳ ಒಳರಚನೆಯಲ್ಲಿ ಕಾಣಿಸುವ ಒಲವನ್ನು ಕೆಲವು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳಲು ಸಾಧ್ಯವಿದೆ. ಆದರೆ ಮೇಲೆ ಸೂಚಿಸಿದ ಹಾಗೆ, ಇವು ನಿಜಕ್ಕೂ ನಿಯಮಗಳಲ್ಲ, ಒಲವುಗಳು ಮಾತ್ರ - ಎಂದರೆ ಅವುಗಳಲ್ಲಿ ಪ್ರತಿಯೊಂದಕ್ಕೂ ಸಾಕಷ್ಟು ಅಪವಾದಗಳಿವೆ ಎಂಬುದನ್ನು ಇಲ್ಲಿ ನೆನಪಿನಲ್ಲಿರಿಸಿಕೊಳ್ಳಬೇಕು.
ಈ ಪ್ರತ್ಯಯವನ್ನು ಮುಖ್ಯವಾಗಿ ಕ್ರಿಯಾಪದಗಳಿಗೆ ಸೇರಿಸುವುದರ ಮೂಲಕ ನಾಮಪದಗಳನ್ನು ತಯಾರಿಸಬಹುದು (ಬಳಲು-ಬಳಲಿಕೆ, ಒಪ್ಪು-ಒಪ್ಪಿಗೆ, ಹಿಡಿ-ಹಿಡಿಕೆ, ಕೊಡು-ಕೊಡುಗೆ). ಇದಕ್ಕೆ ಇಕೆ, ಇಗೆ, ಕೆ ಮತ್ತು ಗೆ ಎಂಬುದಾಗಿ ನಾಲ್ಕು ರೂಪಗಳಿವೆ. ಇವುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ನಿಯಮ(ಒಲವು)ಗಳ ಮೂಲಕ ವಿವರಿಸಬಹುದು.
- ಸಾಮಾನ್ಯವಾಗಿ ಉಕಾರಾಂತ ಕ್ರಿಯಾಪದಗಳ ಅನಂತರ ಈ ಪ್ರತ್ಯಯಕ್ಕೆ ಇಕೆ ರೂಪವಿದೆ.
ಬಳಲು ಹೇಳು
ಬಳಲಿಕೆ ಹೇಳಿಕೆ
- ಉಕಾರಾಂತ ಕ್ರಿಯಾಪದಗಳಲ್ಲಿ ಎರಡೇ ಅಕ್ಷರಗಳಿದ್ದು ಮೊದಲನೇ ಅಕ್ಷರದಲ್ಲಿ ಬರುವ ಸ್ವರ ಹ್ರಸ್ವವಾಗಿದೆಯಾದರೆ ಅವುಗಳ ಅನಂತರ ಬರುವ ಈ ಪ್ರತ್ಯಯಕ್ಕೆ ಇಗೆ ಇಲ್ಲವೇ ಗೆ ರೂಪವಿದೆ. ಆದರೆ, ಇವುಗಳಲ್ಲಿ ಇಗೆ ಎಂಬುದು ಎಲ್ಲಿ ಬರುತ್ತದೆ ಮತ್ತು ಗೆ ಎಂಬುದು ಎಲ್ಲಿ ಬರುತ್ತದೆ ಎಂಬ ವಿಷಯದಲ್ಲಿ ನಿಯಮವನ್ನು ಮಾಡಲು ಸಾಧ್ಯ ವಾಗುವುದಿಲ್ಲ.
ಮುಚ್ಚು ಮುತ್ತು ಕೊಡು ಮೆಚ್ಚು
ಮುಚ್ಚಿಗೆ ಮುತ್ತಿಗೆ ಕೊಡುಗೆ ಮೆಚ್ಚುಗೆ
ಮೇಲೆ ಕೊಟ್ಟಿರುವ ನಿಯಮಕ್ಕೆ ನಾಚು-ನಾಚುಗೆ, ಏಳು-ಏಳಿಗೆ ಎಂಬಂತಹ ಕೆಲವು ಅಪವಾದಗಳೂ ಇವೆ.
- ಸು ಇಲ್ಲವೇ ಇಸು ಪ್ರತ್ಯಯದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಈ ಪ್ರತ್ಯಯಕ್ಕೆ ಕೆ ರೂಪವಿದೆ. ಈ ಕ್ರಿಯಾಪದಗಳ ಕೊನೆಯ ಸು ಅಕ್ಷರ ಮೇಲಿನ ಪ್ರತ್ಯಯ ಪರವಾದಾಗ ಲೋಪಗೊಳ್ಳುತ್ತದೆ.
ಬಯಸು
ಹರಸು ತುರಿಸು ಗದರಿಸು
ಬಯಕೆ ಹರಕೆ
ಪ್ರತ್ಯಯ
ತಯಾರಿಸಲು
ನಾಮಪದಗಳನ್ನು
ಕೊನೆಯ ಎಕಾರ ಈ
- ಇಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ಗೆ ರೂಪವಿದೆ (ಸುಲಿ-ಸುಲಿಗೆ, ಹೊಲಿ-ಹೊಲಿಗೆ); ಆದರೆ, ಹಿಡಿಕೆ ಎಂಬುದರಲ್ಲಿ ಇದಕ್ಕೆ ಕೆ ರೂಪವಿದೆ.
- ಎಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ಕೆ ರೂಪವಿದ್ದು ಕ್ರಿಯಾಪದದ ಸೇರಿದಾಗ ಅಕಾರವಾಗುತ್ತದೆ (ಮೊಳೆ-ಮೊಳಕೆ); ಈ ನಿಯಮಕ್ಕೂ ಹೊದೆ- ಹೊದಿಕೆ, ನಡೆ-ನಡುಗೆ ಎಂಬಂತಹ ಅಪವಾದಗಳಿವೆ.
- ಈ ಪ್ರತ್ಯಯವನ್ನು ಕನ್ನಡದಲ್ಲಿ ಬರುವ ಎಲ್ಲಾ ಕ್ರಿಯಾಪದಗಳಿಗೂ ಸೇರಿಸಿ ಸಾಧ್ಯವಾಗದು. ಉದಾಹರಣೆಗಾಗಿ ಮಾಡು, ಕುದಿ, ಬರೆ, ದುಡುಕು, ತಿರುಗು ಮೊದಲಾದ ಹಲವಾರು ಕ್ರಿಯಾಪದಗಳಿಗೆ ಇದನ್ನು ಸೇರಿಸಿ ನಾಮ ಪದಗಳನ್ನು ಸಾಧಿಸಲು ಸಾಧ್ಯವಾಗದು. ಯಾವ ಕ್ರಿಯಾಪದಗಳೊಂದಿಗೆಲ್ಲ ಅದು ಈ ರೀತಿ ಸೇರುತ್ತದೆ, ಮತ್ತು ಯಾವ ಕ್ರಿಯಾಪದಗಳೊಂದಿಗೆ ಸೇರುವುದಿಲ್ಲ ಎಂಬುದನ್ನು ತಿಳಿಯಬೇಕಿದ್ದಲ್ಲಿ ಎಂತಹ ಪದಗಳೆಲ್ಲ ಕನ್ನಡದಲ್ಲಿ ಬಳಕೆಯಲ್ಲಿವೆ ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ.
- ಈ ಪ್ರತ್ಯಯದ ಮೂಲಕ ಸಿದ್ಧವಾದ ನಾಮಪದಗಳಿಗೆ ಎಂತಹ ಅರ್ಥವಿದೆ, ಅದಕ್ಕೂ ಕ್ರಿಯಾಪದದ ಅರ್ಥಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನೂ ರೂಢಿಯ ಆಧಾರದ ಮೇಲೆ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.
ಉದಾಹರಣೆಗಾಗಿ, ಅಂಜಿಕೆ ಎಂಬುದು ಒಂದು ಘಟನೆಯನ್ನು ಸೂಚಿಸುವುದಾದರೆ, ಮೊಳಕೆ ಎಂಬುದು ಒಂದು ಘಟನೆಯಿಂದ ಸಿದ್ಧವಾದ ವಸ್ತುವನ್ನು ಸೂಚಿಸುತ್ತದೆ ಮತ್ತು ಹೊದಿಕೆ ಎಂಬುದು
ಒಂದು ಘಟನೆಯನ್ನು ಸಾಧಿಸಲು ಬೇಕಾಗುವ ಕರಣವನ್ನು ಸೂಚಿಸು
- ಹೆಗ್ಗಳಿಕೆ, ತಿಳುವಳಿಕೆ ಮೊದಲಾದ ಕೆಲವು ಪದಗಳಲ್ಲಿ ಈ ಪ್ರತ್ಯಯ ವಳಿ ಎಂಬ ಬೇರೊಂದು ಪ್ರತ್ಯಯದ ಅನಂತರ ಬರುತ್ತದೆ.
-
ಬಿಲ್ಲುಗಾರಿಕೆ, ಶ್ರೀಮಂತಿಕೆ ಮೊದಲಾದವುಗಳಲ್ಲಿ ಕಾಣಿಸುವ ಇಕೆ ಪ್ರತ್ಯಯ ಮೇಲಿನ ಪ್ರತ್ಯಯಕ್ಕಿಂತ ಭಿನ್ನವಾದುದು. ಇದು ನಾಮಪದಗಳ ಅನಂತರ ಬರುತ್ತಿದ್ದು, ಸಂಸ್ಕೃತದ ಇಕ ಪ್ರತ್ಯಯಕ್ಕೆ (ಕ್ಷಣ-ಕ್ಷಣಿಕ, ತಕ್ರ-ತಾಕ್ರಿಕ) ಸಂಬಂಧಿಸಿದುದಿರಬೇಕು.
ಎಲ್ಲಾ ಕ್ರಿಯಾಪದಗಳಿಗೂ ಸೇರಿಸಲು ಸಾಧ್ಯವಿರುವಂತಹ ಇಕೆ ಎಂಬ ಇನ್ನೊಂದು ಪ್ರತ್ಯಯ ಕನ್ನಡದಲ್ಲಿದೆ. ಇದು ಮೇಲಿನ ಪ್ರತ್ಯಯಕ್ಕಿಂತ ಭಿನ್ನ ವಾದುದು. ಈ ಪ್ರತ್ಯಯವನ್ನು ಕ್ರಿಯಾಪದಕ್ಕೆ ಸೇರಿಸುವುದರ ಮೂಲಕ ಒಂದು ನಾಮಪದವನ್ನು ತಯಾರಿಸುವ ಬದಲು, ನಾಮಪದದ ಜಾಗದಲ್ಲಿ ಬರಬಲ್ಲ ಒಂದು ಕ್ರಿಯಾರೂಪವನ್ನು (ಕ್ರಿಯಾಪದದ ನಾಮರೂಪವನ್ನು) ತಯಾರಿಸುತ್ತೇವೆ ಎಂಬುದೇ ಇದಕ್ಕೂ ಮೇಲಿನ ಇಕೆ-ಇಗೆ ಪ್ರತ್ಯಯಕ್ಕೂ ನಡುವಿರುವ ಮುಖ್ಯ ವ್ಯತ್ಯಾಸ.
ಎಂದರೆ, ಈ ಇಕೆ ಎಂಬುದು ಒಂದು ‘ಪದರೂಪ’ ಪ್ರತ್ಯಯ ಮತ್ತು ಮೇಲೆ ವಿವರಿಸಿದ ಇಕೆ-ಇಗೆ ಎಂಬುದು ಒಂದು ‘ಪದಪ್ರತ್ಯಯ’. ಈ ಕಾರಣಕ್ಕಾಗಿ, ಈ ಎರಡು ಪ್ರತ್ಯಯಗಳ ನಡುವೆ ಹಲವಾರು ವ್ಯತ್ಯಾಸಗಳಿವೆಯೆಂಬುದನ್ನು ಗಮನಿಸ ಬಹುದು.
ಕ. ಮೇಲೆ ಸೂಚಿಸಿದ ಹಾಗೆ, ಇಕೆ ಪದರೂಪ ಪ್ರತ್ಯಯವನ್ನು ಯಾವ ಕ್ರಿಯಾಪದದೊಂದಿಗೆ ಬೇಕಿದ್ದರೂ ಸೇರಿಸಿ ಹೇಳಬಹುದು (ಮಾಡು ವಿಕೆ, ಕುದಿಯುವಿಕೆ, ಬರೆಯುವಿಕೆ, ದುಡುಕುವಿಕೆ, ತಿರುಗುವಿಕೆ). ಸಂಸ್ಕೃತದಿಂದ ಎರವಲಾಗಿ ಬಂದಿರುವ ಕ್ರಿಯಾಪದಗಳೊಂದಿಗೂ ಅದನ್ನು ಸೇರಿಸಿ ಹೇಳಬಹುದು (ರಕ್ಷಿಸುವಿಕೆ, ಶಿಕ್ಷಿಸುವಿಕೆ, ಅನು ಮತಿಸುವಿಕೆ, ವಿರೋಧಿಸುವಿಕೆ). ಖ. ಎಲ್ಲಾ ಬಳಕೆಗಳಲ್ಲೂ ಅದಕ್ಕೆ ಇಕೆ ಎಂಬ ಒಂದೇ ರೂಪವಿದೆ. ಆದರೆ ಈ ಪ್ರತ್ಯಯ ಸೇರಿದಾಗ ಉಕಾರಾಂತ ಕ್ರಿಯಾಪದಗಳ ಕೊನೆ ಯಲ್ಲಿ ವಕಾರಾಗಮವೂ ಮತ್ತು ಎಕಾರಾಂತ ಹಾಗೂ ಇಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ಯುವ್ ಎಂಬುದರ ಆಗಮವೂ ಕಾಣಿಸು
ಹೊಗಳುವಿಕೆ
ಹಾಸುವಿಕೆ ಹೇಳುವಿಕೆ
ಹಿಡಿಯುವಿಕೆ
ಇಳಿಯುವಿಕೆ ಕೊಳೆಯುವಿಕೆ
ಹೊಗಳು ಹಾಸು
ಹೇಳು
ಕೊಳೆ
ಗ. ಎಲ್ಲಾ ಬಳಕೆಗಳಲ್ಲೂ ಅದಕ್ಕೆ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಗುರುತಿಸಿ ಹೇಳುವಂತಹ ಒಂದೇ ಅರ್ಥವಿದೆ. ಘ. ಈ ಪ್ರತ್ಯಯದ ಬಳಕೆಯನ್ನು ಒಂದು ವ್ಯಾಕರಣನಿಯಮದ ಮೂಲಕ ವರ್ಣಿಸಲು ಸಾಧ್ಯವಿದೆ. ಪದಪ್ರತ್ಯಯಗಳ ಹಾಗೆ ನಿಯಮದ ಬದಲು ‘ಒಲವ’ನ್ನು ಬಳಸುವ ಅವಶ್ಯಕತೆಯಿಲ್ಲ.
ಇಕೆ ಪದರೂಪ ಪ್ರತ್ಯಯಕ್ಕೂ ಇಕೆ-ಇಗೆ ಪದಪ್ರತ್ಯಯಕ್ಕೂ ನಡುವಿರುವ ಈ ವ್ಯತ್ಯಾಸಗಳನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.
ಕ್ರಿಯಾಪದ ಇಕೆ (ಪದರೂಪಪ್ರತ್ಯಯ) ಕೊಡು ನಾಚು ಹೊಲಿ ಮೊಳೆ ಬಯಸು
ಕೆತ್ತು ಹಾಸು
ಕೊಡುವಿಕೆ ತೆರುವಿಕೆ
ನಾಚುವಿಕೆ
ಹೊಲಿಯುವಿಕೆ ಮೊಳೆಯುವಿಕೆ ಬಯಸುವಿಕೆ ಕೆತ್ತುವಿಕೆ
ಹಾಸುವಿಕೆ
ಹಿಡಿಯುವಿಕೆ
ಇಕೆ-ಇಗೆ (ಪದಪ್ರತ್ಯಯ)
ಕೊಡುಗೆ
ನಾಚುಗೆ ಹೊಲಿಗೆ ಮೊಳಕೆ ಬಯಕೆ ಹಾಸುಗೆ
ಕ್ರಿಯಾಪದಗಳಿಂದ ನಾಮಪದಗಳನ್ನು ಸಾಧಿಸಲು ಇಕೆ-ಇಗೆ ಎಂಬ ಈ ಪ್ರತ್ಯಯದ ಹಾಗೆಯೇ ಕನ್ನಡದಲ್ಲಿ ಬೇರೆಯೂ ಕೆಲವು ಪ್ರತ್ಯಯಗಳು ಬಳಕೆ ಯಾಗುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಕ್ರಿಯಾಪದ ಗಳೊಂದಿಗೆ ಮಾತ್ರಬರಬಲ್ಲುವು. ಇದಲ್ಲದೆ ಅವುಗಳ ಬಳಕೆ ಇಕೆ-ಇಗೆ ಎಂಬು ದಕ್ಕಿಂತಲೂ ಜಾಸ್ತಿ ಅನಿಯಮಿತವಾದುದು.
ಉದಾಹರಣೆಗಾಗಿ ತ ಪ್ರತ್ಯಯವನ್ನು ಇಕಾರಾಂತ ಕ್ರಿಯಾಪದದೊಂದಿಗೆ ಬಳಸಿ ಕುಣಿತ, ಹಿಡಿತ, ದುಡಿತ ಮೊದಲಾದ ನಾಮಪದಗಳನ್ನೂ, ಎಕಾರಾಂತ
ಕ್ರಿಯಾಪದದೊಂದಿಗೆ ಬಳಸಿ ಅಲೆತ, ನೆಗೆತ, ಒದೆತ ಮೊದಲಾದುವನ್ನೂ ತಯಾರಿಸಬಹುದು; ಗು ಇಲ್ಲವೇ ಡು ಅಕ್ಷರದಲ್ಲಿ ಕೊನೆಗೊಳ್ಳುವ ಕ್ರಿಯಾ ಪದಗಳಿಗೆ ಅ ಪ್ರತ್ಯಯವನ್ನು ಸೇರಿಸಿ (ಕ್ರಿಯಾಪದದ ಕೊನೆಯ ಉಕಾರವನ್ನು ಲೋಪಗೊಳಿಸಿ ಮತ್ತು ಗಕಾರ-ಡಕಾರಗಳನ್ನು ಕಕಾರ-ಟಕಾರಗಳನ್ನಾಗಿ ಮಾಡಿ) ನಡುಕ, ತಿರುಕ, ಮರುಕ, ಆಟ, ಓಟ, ನೋಟ, ಹೋರಾಟ ಮೊದಲಾದ ಕೆಲವು ನಾಮಪದಗಳನ್ನು ತಯಾರಿಸಬಹುದು. (ಜಾಸ್ತಿ ವಿವರಗಳಿಗೆ ಭಟ್ 2002 ನೋಡಿ). ನಾಮಪದಗಳನ್ನು ಈ ರೀತಿ ಬೇರೆ ಬೇರೆ ರೀತಿಯ ಪದಪ್ರತ್ಯಯಗಳನ್ನು ಸೇರಿಸಿ ಕ್ರಿಯಾಪದಗಳಿಂದ ಮಾತ್ರವಲ್ಲದೆ ಗುಣಪದಗಳಿಂದ ಮತ್ತು ಇತರ ನಾಮಪದಗಳಿಂದಲೂ ತಯಾರಿಸಲು ಸಾಧ್ಯವಿದೆ (ಹೊಸ-ಹೊಸತು, ಜಾಣ- ಜಾಣ್ಮೆ, ಒಕ್ಕಲು-ಒಕ್ಕಲಿಗ, ಮೂಗು-ಮೂಗುತಿ).
4.6 ಕ್ರಿಯಾಪದಗಳ ರಚನೆ
ಕನ್ನಡದ ನಾಮಪದಗಳ ಹಾಗೆ ಕ್ರಿಯಾಪದಗಳನ್ನೂ ಒಳರಚನೆಯಿರುವವುಗಳು ಮತ್ತು ಇಲ್ಲದವುಗಳು ಎಂಬುದಾಗಿ ಎರಡು ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇವುಗಳಲ್ಲಿ ಒಳರಚನೆಯಿರುವ ಕ್ರಿಯಾಪದಗಳ ಅರ್ಥವನ್ನು ಹೆಚ್ಚಿನ ಸಂದಭ್ರಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ಪಡೆಯಲು ಸಾಧ್ಯವಿದೆ.
ಉದಾಹರಣೆಗಾಗಿ ಹಂಗಿಸು, ಬಿಡಿಸು, ತುಂಡಿಸು, ಹೆಸರಿಸು ಮೊದಲಾದ ಒಳರಚನೆಯಿರುವ ಕ್ರಿಯಾಪದಗಳನ್ನು ಹಂಗು, ಬಿಡು, ತುಂಡು, ಹೆಸರು ಮೊದಲಾದ ನಾಮಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ರಚಿಸಲಾಗಿದ್ದು, ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯಿಂದ ಪಡೆಯಬಹುದು. ಈ ನಿಯಮಕ್ಕೆ ಕೆಲವೇ ಕೆಲವು ಅಪವಾದಗಳಿರುವುದು ನಿಜವಾದರೂ ಅಂತಹ ಅಪವಾದಗಳನ್ನು ‘ನುಡಿಗಟ್ಟು’ಗಳೆಂಬುದಾಗಿ ಪರಿಗಣಿಸಲು ಸಾಧ್ಯವಿದೆ.
ಒಳರಚನೆಯಿರುವ ನಾಮಪದಗಳ ಬಳಕೆಯಲ್ಲಿ ಕಾಣಿಸುವ ಹೆಸರು ಮತ್ತು ವರ್ಣನೆ ಎಂಬ ಭೇದ ಒಳರಚನೆಯಿರುವ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸ ದಿರುವುದೇ ಅವುಗಳ ಬಳಕೆಯಲ್ಲಿ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಅನಿಯಮಿತತೆಯಿಲ್ಲದಿರಲು ಮುಖ್ಯ ಕಾರಣ. ಕನ್ನಡದಲ್ಲಿ ‘ಕ್ರಿಯಾಸಮಾಸ’ವೆಂಬ ಒಂದು ವಿಶಿಷ್ಟವಾದ ಸಮಾಸವಿದೆ ಯೆಂದು ಕನ್ನಡದ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಆಬಿಪ್ರಾಯಕ್ಕೆ ಆಧಾರವಾಗಿ ಅವರು ಕೊಡುವ ಮರವೇರು, ಕೈಮುಗಿ, ಕನಸುಕಾಣು ಮೊದಲಾದ ಉದಾಹರಣೆಗಳು ನಿಜಕ್ಕೂ ಪದಕಂತೆಗಳು ಮಾತ್ರ, ಜೋಡುಪದ(ಸಮಸ್ತಪದ)ಗಳಲ್ಲ.
ಕಪ್ಪುಹಾವು, ಸತ್ತ ಹಾವು ಮೊದಲಾದ ಪದಕಂತೆಗಳಲ್ಲಿ ಮೊದಲನೆಯ ಪದದ ಅನಂತರ ವಿಭಕ್ತಿ ಪ್ರತ್ಯಯ ಬಾರದಿರುವುದನ್ನು ಕಂಡು ಅವನ್ನು ಸಮಾಸ ಗಳೆಂದು ತಪ್ಪಾಗಿ ಹೇಳಿರುವ ಹಾಗೆ ಇಲ್ಲೂ ಮೊದಲನೆಯ ಪದದ ಅನಂತರ (ಮರ, ಕೈ, ಕನಸು ಮೊದಲಾದವುಗಳ ಅನಂತರ) ವಿಭಕ್ತಿ ಪ್ರತ್ಯಯ ಬಾರದಿರುವುದನ್ನು ಕಂಡು ಅವನ್ನೂ ಸಮಾಸಗಳೆಂದು ಕರೆಯುವ ತಪ್ಪಾದ ನಿರ್ಣಯಕ್ಕೆ ಕನ್ನಡದ ವೈಯಾಕರಣಿಗಳು ಬಂದಿದ್ದಾರೆ.
ಕೈಮುಗಿ, ಮರವೇರು ಮೊದಲಾದ ಬಳಕೆಗಳಲ್ಲಿ ಮೊದಲನೆಯ ಪದದ ವಿಭಕ್ತಿ ಲೋಪಗೊಂಡಿರುವುದು ಕನ್ನಡದ ವಾಕ್ಯರಚನೆಯ ನಿಯಮದ ಆಧಾರದ ಮೇಲಲ್ಲದೆ, ವಾಕ್ಯರಚನೆಯ ಆಧಾರದ ಮೇಲಲ್ಲ. ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಜಾಗಗಳಿಗೆ ಕೊಂಡುಹೋದಾಗ (6ನೇ ವಾಕ್ಯ ನೋಡಿ), ಇಲ್ಲವೇ ಅವುಗಳೊಂದಿಗೆ ಒತ್ತಿಹೇಳುವ ಪ್ರತ್ಯಯವೊಂದನ್ನು ಬಳಸಿದಾಗ (7ನೇ ವಾಕ್ಯ ನೋಡಿ), ಆ ರೀತಿ ಲೋಪಗೊಂಡಿರುವ ವಿಭಕ್ತಿ ಪ್ರತ್ಯಯ ತಿರುಗಿ ಕಾಣಿಸಿಕೊಳ್ಳುತ್ತದೆ.
(6) (7)
ಮರವನ್ನು ರಾಜು ನಾಳೆ ಏರುತ್ತಾನೆ. ನಿನ್ನೆ ರಾಜು ಮರವನ್ನೂ ಏರಿದ.
ಕೈಪಿಡಿ, ಬಾನುಲಿ ಮೊದಲಾದ ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಕಡೆಗಳಿಗೆ ಕೊಂಡುಹೋಗಲು ಇಲ್ಲವೇ ಅವುಗಳ ನಡುವೆ ಒತ್ತಿಹೇಳುವ ಪ್ರತ್ಯಯವನ್ನು ಬಳಸಲು ಸಾಧ್ಯವಾಗದೆಂಬು ದನ್ನು ಇಲ್ಲಿ ಗಮನಿಸಬೇಕು.
ಕನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಪ್ರತ್ಯಯಗಳನ್ನು ಬಳಸಿರುವುದು ಬಹಳ ಅಪರೂಪ. ಚಾರಿತ್ರಿಕ ಅವಶೇಷಗಳಾಗಿರುವ ಇಂತಹ ಕೆಲವನ್ನು ಮಾತ್ರ ಕಳೆ-ಕಳಚು, ಎರೆ-ಎರಚು, ನುಣುಪು-ನುಣುಚು ಎಂಬಂತಹ ಕೆಲವು ಪದಯುಗ್ಮಗಳಲ್ಲಿ ಇಲ್ಲವೇ ತುರುಕು, ದೊರಕು, ನಿಲುಕು, ಕುಟುಕು ಎಂಬಂತಹ ಕೆಲವು ಕ್ರಿಯಾಪದಗಳಲ್ಲಿ ಕಾಣಲು ಸಾಧ್ಯವಿದೆ.
ಬೇರೆ ಕೆಲವು ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಪ್ರತ್ಯಯದ ಬಳಕೆ ಯನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ ಹೆಸರಿಸು, ಕನ್ನಡಿಸು, ಒತ್ತಾ ಯಿಸು ಮೊದಲಾದ ಕೆಲವು ಕ್ರಿಯಾಪದಗಳಿಗೂ ಹೆಸರು, ಕನ್ನಡ, ಒತ್ತಾಯ ನಾಮಪದಗಳಿಗೂ ನಡುವೆ ಇಂತಹ ಸಂಬಂಧವನ್ನು ಕಾಣಬಹುದು.
ಇದೇ ರೀತಿಯಲ್ಲಿ ಎತ್ತರಿಸು, ಬೋಳಿಸು, ತಂಪಿಸು ಕ್ರಿಯಾಪದಗಳಿಗೂ ಎತ್ತರ, ಬೋಳು, ತಂಪು ಗುಣಪದಗಳಿಗೂ ನಡುವೆ ಅಂತಹದೇ ಸಂಬಂಧ ವಿರುವ ಹಾಗೆ ಕಾಣಿಸುತ್ತದೆ. ಇದಲ್ಲದೆ, ಗಹಗಹಿಸು, ಬಡಬಡಿಸು, ಚಪ್ಪರಿಸು,
ಕೇಕರಿಸು ಮೊದಲಾದ ಬೇರೆ ಕೆಲವು ಕ್ರಿಯಾಪದಗಳನ್ನು ಅಣಕಿಸುವ ಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಹಾಗೆ ಕಾಣಿಸುತ್ತದೆ. ಆದರೆ ಚಾರಿತ್ರಿಕವಾಗಿ ಈ ಇಸು ಎಂಬುದು ಒಂದು ಕ್ರಿಯಾಪದದ ರೂಪವೇ. ಆಗು, ಆಡು, ಕೊಡು, ಬರು, ಬಿಡು, ಕಟ್ಟು, ಬೀಳು, ಮಾಡು, ಹಾಕು ಮೊದಲಾದ ಕೆಲವು ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದ (ಅಥವಾ ಕ್ರಿಯಾ ರೂಪ)ಗಳನ್ನಾಗಲೀ (ಕಂಡುಬರು, ಹೊಡೆದಾಡು, ಓಡಾಡು, ಓಡಿಬರು, ಇಲ್ಲವಾಗು) ಇಲ್ಲವೇ ನಾಮಪದ ಅಥವಾ ಗುಣಪದಗಳನ್ನಾಗಲೀ (ಸಿಟ್ಟಾಗು, ಬೇರುಬಿಡು, ಮಾತುಕೊಡು, ಅಡ್ಡಬೀಳು, ಕಪ್ಪಾಗು, ಸುಳ್ಳಾಗು) ಸೇರಿಸಿ ‘ಸಂಯುಕ್ತ ಕ್ರಿಯಾಪದ’ಗಳನ್ನು ರಚಿಸುವ ಕ್ರಮ ಕನ್ನಡದಲ್ಲಿ ಬಳಕೆಯಲ್ಲಿದೆ.
ಇಲ್ಲೂ ಸಾಮಾನ್ಯವಾಗಿ ಈ ರಚನೆಗಳ ಅರ್ಥವನ್ನು ಅವುಗಳ ಒಳರಚನೆಯ ಸಹಾಯದಿಂದಲೇನೇ ತಿಳಿದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಇವನ್ನೂ ಜೋಡು ಪದ(ಸಮಾಸ)ಗಳೆಂದು ಕರೆಯದೆ ‘ಕೂಡುಪದ’ಗಳೆಂಬ ಬೇರೆಯೇ ಒಂದು ರೀತಿಯ ರಚನೆಗಳೆಂದು ಪರಿಗಣಿಸುವುದು ಉತ್ತಮ.
4.7 ಗುಣಪದಗಳ ರಚನೆ
ಕ್ರಿಯಾಪದಗಳ ಬಳಕೆಯ ಹಾಗೆ ಗುಣಪದಗಳ ಬಳಕೆಯಲ್ಲೂ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಪ್ರಯೋಗಭೇದವಿಲ್ಲ. ಆದುದರಿಂದ, ಸಾಮಾನ್ಯ ವಾಗಿ ಒಳರಚನೆಯಿರುವ ಗುಣಪದಗಳ ಅರ್ಥವನ್ನು ನೇರವಾಗಿ ಅವುಗಳ ಅಂಗ ಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿದೆ.
ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವಂತಹ ಒಳರಚನೆಗಳನ್ನು ಪಡೆದಿರುವ ಕೆಲವು ಗುಣಪದಗಳನ್ನು ಮಾತ್ರ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಉದಾ ಹರಿಸಲು ಸಾಧ್ಯವಿದೆ (ಕೆಂಪು, ಕಪ್ಪು, ತಂಪು, ನುಣುಪು).
ಈ ರೀತಿ ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವ ಒಳರಚನೆಗಳನ್ನು ಬಿಟ್ಟರೆ, ಬೇರೆ ನಿಯಮಿತವಾದ ಒಳರಚನೆಯುಳ್ಳ ಗುಣಪದಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಲೂ ಸಾಧ್ಯವಿದೆ.
ಕ್ರಿಯಾಪದಗಳನ್ನು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳಿಗೆ ವಿಶೇಷಣಗಳನ್ನಾಗಿ ಮಾಡಿ) ಬಳಸಲು ಕನ್ನಡದಲ್ಲಿ ಕ್ರಿಯಾಪದಗಳಿಂದ ಗುಣಪದ ಗಳನ್ನು ತಯಾರಿಸಿ ಬಳಸುವ ಬದಲು ಅವುಗಳ ಕೃದಂತರೂಪಗಳನ್ನು ಬಳಸುವ ಕ್ರಮ ರೂಢಿಯಲ್ಲಿದೆ (ಬೇಯಿಸಿದ ಬಟಾಟೆ, ಒಣಗಿದ ಕಟ್ಟಿಗೆ, ಹಸಿದ ಹುಲಿ). ಇದೇ ರೀತಿಯಲ್ಲಿ ನಾಮಪದಗಳನ್ನು ಗುಣಪದಗಳ ಜಾಗದಲ್ಲಿ ಬಳಸಲು ಅವುಗಳ ಸಂಬಂಧ (ಷಷ್ಠೀ) ರೂಪಗಳನ್ನು ಬಳಸುವ ಕ್ರಮವೂ ಕನ್ನಡದಲ್ಲಿದೆ (ಮಣ್ಣಿನ ಕೊಡ, ಹತ್ತಿಯ ಬಟ್ಟೆ, ಕಲ್ಲಿನ ಮೂತ್ರಿ).
ಈ ಕಾರಣಕ್ಕಾಗಿ, ನಿಯಮಿತವಾದ ಒಳರಚನೆಯುಳ್ಳ ಗುಣಪದಗಳನ್ನು ಕನ್ನಡದಲ್ಲಿ ಮುಖ್ಯವಾಗಿ ಸಂಸ್ಕೃತವೇ ಮೊದಲಾದ ಬೇರೆ ಕೆಲವು ಭಾಷೆಗಳಿಂದ ಎರವಲಾಗಿ ಬಂದ ಪದಗಳಲ್ಲಿ ಮಾತ್ರ ಕಾಣಲು ಸಾಧ್ಯ.
ಸಂಸ್ಕೃತದಲ್ಲಿ ನಾಮಪದಗಳು ಮತ್ತು ಗುಣಪದಗಳು ಎಂಬ ಈ ಎರಡು ರೀತಿಯ ಪದಗಳೂ ಒಂದೇ ಪದವಗ್ರಕ್ಕೆ ಸೇರುತ್ತವೆಯೆಂಬುದನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿರುವೆವು. ಆದರೆ, ಸಂಸ್ಕೃತದ ಪದಗಳು ಕನ್ನಡಕ್ಕೆ ಎರವಲಾಗಿ ಬಂದಾಗ ಅವುಗಳಲ್ಲಿ ಕೆಲವು ನಾಮಪದಗಳಾಗಿ ಬಳಕೆಯಾಗುತ್ತವೆ ಮತ್ತು ಬೇರೆ ಕೆಲವು ಗುಣಪದಗಳಾಗಿ ಬಳಕೆಯಾಗುತ್ತವೆ.
ಉದಾಹರಣೆಗಾಗಿ, ನೀಲಿ, ಮುಖ್ಯ, ಉತ್ತಮ, ಯೋಗ್ಯ ಮೊದಲಾದವು ಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಗ್ರಾಮ, ಕವಿ, ಪಾಠ, ವಿದ್ಯೆ, ಸೇವಕ, ಯಂತ್ರ ಮೊದಲಾದವುಗಳು ನಾಮಪದಗಳಾಗಿಯೂ ಬಳಕೆಯಾಗುತ್ತವೆ.
ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಪದ ಪ್ರತ್ಯಯಗಳಲ್ಲೂ ಕೆಲವನ್ನು ಕನ್ನಡದಲ್ಲಿ ನಾಮಪದಗಳ ರಚನೆಯಲ್ಲಿ ಬಳಕೆ ಯಾಗುವ ಪ್ರತ್ಯಯಗಳೆಂದೂ ಮತ್ತು ಇನ್ನು ಕೆಲವನ್ನು ಗುಣಪದಗಳ ರಚನೆ ಯಲ್ಲಿ ಬಳಕೆಯಾಗುವ ಪ್ರತ್ಯಯಗಳೆಂದೂ ವಿಭಜಿಸಲು ಸಾಧ್ಯವಿದೆ. ಇಂತಹ ವ್ಯತ್ಯಾಸ ಸಂಸ್ಕೃತದಲ್ಲಿ ಇಲ್ಲದಿದ್ದರೂ ಅದು ಕನ್ನಡಕ್ಕೆ ಅವಶ್ಯವಾದ ಕಾರಣ, ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ತೆ (ಅಧ್ಯಕ್ಷ-ಅಧ್ಯಕ್ಷತೆ, ಕೃತಜ್ಞ-ಕೃತಜ್ಞತೆ, ಅಹ್ರ-ಅಹ್ರತೆ, ಅಸ್ಪೃಶ್ಯ- ಅಸ್ಪೃಶ್ಯತೆ), ಇ (ಅಧಿಕಾರ-ಅಧಿಕಾರಿ, ಆರೋಪ-ಆರೋಪಿ, ವಿರಹ- ವಿರಹಿ, ವ್ಯಾಪಾರ-ವ್ಯಾಪಾರಿ) ಮೊದಲಾದ ಕೆಲವು ಪ್ರತ್ಯಯಗಳಿರುವ ಸಂಸ್ಕೃತ ನಾಮಪದಗಳಾಗಿ ಬಳಕೆಯಾಗುತ್ತವೆ.
ಇದಕ್ಕೆ ಬದಲು, ಇಕ (ದೇಹ-ದೈಹಿಕ, ಲೋಕ-ಲೌಕಿಕ, ವ್ಯವಹಾರ- ವ್ಯಾವಹಾರಿಕ, ವಷ್ರ-ವಾಷ್ರಿಕ, ಯಂತ್ರ-ಯಾಂತ್ರಿಕ), ಈಯ (ಸ್ಥಳೀಯ, ಪ್ರೇಕ್ಷಣೀಯ, ಶ್ಲಾಘನೀಯ, ರಾಷ್ಟ್ರೀಯ) ಮೊದಲಾದ ಬೇರೆ ಕೆಲವು ಪ್ರತ್ಯಯಗಳಿರುವ ಸಂಸ್ಕೃತ ಪದಗಳು ಕನ್ನಡದಲ್ಲಿ ಗುಣಪದಗಳಾಗಿ ಬಳಕೆ ಯಾಗುವುದೇ ಜಾಸ್ತಿ. ಈ ನಿಯಮಕ್ಕೂ ರಸಿಕ, ಮಾಂತ್ರಿಕ, ವೈದಿಕ, ತಾಕ್ರಿಕ ಮೊದಲಾದ ಕೆಲವು ಅಪವಾದಗಳಿವೆ. ಸಾಮಾನ್ಯವಾಗಿ ಕನ್ನಡದಲ್ಲಿ ಗಳು
4.8 ತಿರುಳು
ಪದಗಳ ಒಳರಚನೆಯಲ್ಲಿ ಸಂಸ್ಕೃತಕ್ಕಿಂತ ಕನ್ನಡ ಹಲವು ವಿಷಯಗಳಲ್ಲಿ ಭಿನ್ನ ವಾಗಿದೆ. ಪ್ರತ್ಯಯಗಳ ಮೂಲಕ ನಾಮಪದ, ಕ್ರಿಯಾಪದ ಮತ್ತು ಗುಣಪದ
ಗಳನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಬೇರೆ ಬೇರೆ ರೀತಿಯ ವಿಧಾನಗಳು ಬಳಕೆಯಲ್ಲಿವೆ.
ಕನ್ನಡ ವ್ಯಾಕರಣಗಳಲ್ಲಿ ಇಂತಹ ಪ್ರತ್ಯಯವಿರುವ ಪದಗಳನ್ನೆಲ್ಲ ಕೃತ್ ಮತ್ತು ತದ್ಧಿತ ಎಂಬ ಎರಡು ವಗ್ರಗಳಲ್ಲಿ ವಿಂಗಡಿಸುವುದು ರೂಢಿ. ಇದು ಸಂಸ್ಕೃತದ ಪದರಚನೆಯ ವಿಧಾನವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿದುದರ ನಿಜಕ್ಕೂ ಕನ್ನಡಕ್ಕೆ ಇದಕ್ಕಿಂತ ತೀರಾ ಭಿನ್ನವಾದ ವಗ್ರೀಕರಣದ ಅವಶ್ಯಕತೆ ಯಿದೆ. ನಾಮಪದಗಳನ್ನು ಮುಖ್ಯವಾಗಿ ಯಾವ ವಗ್ರದ ಪದಗಳಿಂದ ತಯಾರಿಸ ಲಾಗಿದೆ ಎಂಬ ವಿಷಯವನ್ನಾಧರಿಸಿ ವಗ್ರೀಕರಿಸುವುದೇ ಕನ್ನಡಕ್ಕೆ ಅನುಕೂಲ.
ಪದಗಳ ಒಳರಚನೆಯ ಕುರಿತು ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ ಒಳರಚನೆ ಎಂಬ ನನ್ನ ಪುಸ್ತಕವನ್ನು (ಭಟ್ 2002) ನೋಡಬಹುದು.