↑ Contents · Contents · Ch 2 →
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
1. ಮುನ್ನೋಟ
1.1 ವ್ಯಾಕರಣ ಪರಂಪರೆ
ಕನ್ನಡ ವ್ಯಾಕರಣದ ಕಲಿಕೆಗೆ ಒಂದು ಸಾವಿರ ವರ್ಶಗಳಿಗಿಂತಲೂ ಹೆಚ್ಚು ಉದ್ದವಾದ ಚರಿತ್ರೆಯಿದೆ. ಈ ಸಾವಿರ ವರ್ಶಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಬೇರೆ ಬೇರೆ ರೀತಿಯ ಮತ್ತು ಬೇರೆ ಬೇರೆ ಗಾತ್ರದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ಬಿಡಿ ಬರಹಗಳನ್ನು ಹೊರತರಲಾಗಿದೆ. ಇವು ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಶ್, ಸಂಸ್ಕ್ರುತ, ಮರಾಟಿ, ಹಿಂದಿ, ರಶ್ಯನ್ ಮೊದಲಾದ ಬೇರೆ ಕೆಲವು ನುಡಿಗಳಲ್ಲೂ ಬಂದಿವೆ.
ಇದಲ್ಲದೆ, ಈ ವ್ಯಾಕರಣಗಳು ಸೂತ್ರ ರೂಪದಲ್ಲಿ, ಸೂತ್ರದ ವ್ಯಾಕ್ಯಾನ ರೂಪದಲ್ಲಿ, ಪ್ರಶ್ನೋತ್ತರ ರೂಪದಲ್ಲಿ, ಪ್ರಬಂದ ರೂಪದಲ್ಲಿ, ಪಟ್ಯ ರೂಪದಲ್ಲಿ
- ಹೀಗೆ ಬೇರೆ ಬೇರೆ ರೂಪಗಳಲ್ಲಿ ತಯಾರಾಗಿವೆ. ಕನ್ನಡವನ್ನು ಕಲಿಯ ಬಯಸುವವರು, ಕನ್ನಡದ ಒಳಗುಟ್ಟನ್ನು ತಿಳಿಯ ಬಯಸುವವರು, ಕನ್ನಡವನ್ನು ಇತರ ದ್ರಾವಿಡ ಇಲ್ಲವೇ ಆರ್ಯ ನುಡಿಗಳೊಂದಿಗೆ ಹೋಲಿಸ ಬಯಸುವವರು, ಕನ್ನಡದ ಹಿನ್ನಡವಳಿ(ಚರಿತ್ರೆ)ಯನ್ನು ಅರಿಯ ಬಯಸುವವರು - ಹೀಗೆ ಬೇರೆ ಬೇರೆ ರೀತಿಯ ಓದುಗರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬರೆದಿರುವ ವ್ಯಾಕರಣಗಳೂ ಇವುಗಳಲ್ಲಿವೆ. ಕನ್ನಡ ವ್ಯಾಕರಣದ ಮೇಲೆ ಇಶ್ಟೆಲ್ಲಾ ಅರಕೆ ಮತ್ತು ಬರವಣಿಗೆಗಳು ನಡೆದಿವೆಯೆಂಬುದು ನಮಗೆ ಹಿಗ್ಗು ಮತ್ತು ಹೆಮ್ಮೆಗಳನ್ನು ತರಬಲ್ಲುದೇನೋ ನಿಜ. ಆದರೆ, ಈ ಪುಸ್ತಕಗಳು ಮತ್ತು ಬಿಡಿ ಬರಹಗಳು ನಿಜಕ್ಕೂ ಕನ್ನಡ ವ್ಯಾಕರಣದ ಒಳಗುಟ್ಟನ್ನು ತಿಳಿಸಿಕೊಡುವಲ್ಲಿ ಮತ್ತು ಅವನ್ನು ಬಳಸಿ ಬೇಡಿಕೆಗಳನ್ನು ಕೊಳ್ಳುವುದರ ಪೂರಯ್ಸುವುದರಲ್ಲಿ ಎಶ್ಟರ ಸಮರ್ತವಾಗಿವೆ ಎಂಬುದನ್ನು ಮಟ್ಟಿಗೆ ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಈ ಬರಹಗಳನ್ನು ಮೂರು ಮುಕ್ಯ ವ್ಯಾಕರಣಪರಂಪರೆಗಳಲ್ಲಿ ತಯಾರಾದವುಗಳೆಂಬುದಾಗಿ ವಿಂಗಡಿಸಿಕೊಳ್ಳಬಹುದು. ಸಂಸ್ಕ್ರುತದ ವ್ಯಾಕರಣ ಪರಂಪರೆಯಲ್ಲಿ ತಯಾರಾಗಿರುವ ಕೇಶಿರಾಜನ ಶಬ್ದಮಣಿದರ್ಪಣ, ಬಟ್ಟಾಕಳಂಕನ ಶಬ್ದಾನುಶಾಸನ ಮತ್ತು ಇನ್ನಿತರ ಹಲವಾರು ಹಳೆಗನ್ನಡ ವ್ಯಾಕರಣಗಳು ಒಂದು ಗುಂಪಿಗೆ ಸೇರುತ್ತವೆ. ಶಾಲಾಕಾಲೇಜುಗಳಲ್ಲಿ
ಮೂಲಕ ಓದುಗರ
ಬೇರೆ
ಬೇರೆ
ರಚಿಸಿರುವ
ಮುಕ್ಯವಾಗಿ
ಸೊಲ್ಲರಿಗರು
ಶತಮಾನದಿಂದೀಚೆಗೆ
ಪಟ್ಯಗಳಾಗಿ ಬಳಕೆಯಾಗುತ್ತಿರುವ ಹೆಚ್ಚಿನ ವ್ಯಾಕರಣಗಳೂ ಈ ಗುಂಪಿಗೆ ಸೇರುತ್ತವೆ. ಕ್ರಿಶ್ಚಿಯನ್ ಹತ್ತೊಂಬತ್ತನೇ ಮಿಶನರಿಗಳು ಇಂಗ್ಲಿಶ್ನಲ್ಲಿ ಬರೆದಿರುವ ಹೊಸಗನ್ನಡ ವ್ಯಾಕರಣಗಳು ಎರಡನೆಯ ಗುಂಪಿಗೆ ಸೇರುತ್ತವೆ. ಇವನ್ನೆಲ್ಲ ಯುರೋಪಿನ ವ್ಯಾಕರಣ ಪರಂಪರೆಯಲ್ಲಿ ರಚಿಸಲಾಗಿದೆ.
ಅದರಿಂದೀಚೆಗೆ ಇವತ್ತಿನ ಕನ್ನಡದ ವ್ಯಾಕರಣಗಳು ಮತ್ತು ಬಿಡಿ ಬರಹಗಳು ಮೂರನೆಯ ಗುಂಪಿಗೆ ಸೇರುತ್ತವೆ. ಇವನ್ನು ಮುಕ್ಯವಾಗಿ ಅಮೆರಿಕದ ಇಂಗ್ಲಿಶ್ ವ್ಯಾಕರಣ ಪರಂಪರೆಯಲ್ಲಿ ತಯಾರಿಸಲಾಗಿದೆ. ಕನ್ನಡದ ಈ ಮೂರು ಪರಂಪರೆಯ ವ್ಯಾಕರಣಗಳಲ್ಲೂ ನಮಗೆ ಕಂಡುಬರುವ ಒಂದು ಮುಕ್ಯವಾದ ಸಂಗತಿಯೇನೆಂದರೆ, ಇವು ಬೇರಾವುದೋ ಒಂದು ನುಡಿಯ ಎಂದರೆ, ಸಂಸ್ಕ್ರುತ, ಲ್ಯಾಟಿನ್ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣ ಪರಂಪರೆಯನ್ನು ಅನುಸರಿಸಲು ಪ್ರಯತ್ನಿಸಿವೆಯಲ್ಲದೆ ಕನ್ನಡಕ್ಕೆ ಅದರದ್ದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಬೆಳೆಸಿಕೊಡಲು ಪ್ರಯತ್ನಿಸಿಲ್ಲ. ಈ ಎಲ್ಲಾ ವ್ಯಾಕರಣಗಳಲ್ಲೂ ಇದೊಂದು ಎದ್ದು ಕಾಣುವ ಕೊರತೆ. ಸಂಸ್ಕ್ರುತ, ಲ್ಯಾಟಿನ್ ಮತ್ತು ಇಂಗ್ಲಿಶ್ – ಇವು ಮೂರೂ ಇಂಡೋ- ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು. ಇವು ಸ್ವತಂತ್ರವಾದ ನುಡಿಗಳಾಗಿದ್ದು ಒಂದರಿಂದೊಂದು ಸಾಕಶ್ಟು ಬೇರಾಗಿವೆಯಾದರೂ ಇವುಗಳಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ವಗಳು ಹೆಚ್ಚು ಕಡಿಮೆ ಒಂದೇ ರೀತಿಯವುಗಳಾಗಿವೆ. ಹಾಗಾಗಿ, ಈ ಮೂರು ವ್ಯಾಕರಣ ಪರಂಪರೆಗಳೂ ಒಂದೇ ಪರಂಪರೆಯ ಮೂರು ಪ್ರಬೇದಗಳೆಂದು ಹೇಳಲು ಬರುತ್ತದೆ. ಕನ್ನಡ ಇದಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿ. ಇದು ಬಳಸುವ ವ್ಯಾಕರಣದ ಮೂಲತತ್ವಗಳು ಸಂಸ್ಕ್ರುತ, ಲ್ಯಾಟಿನ್, ಇಂಗ್ಲಿಶ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳು ಬಳಸುವ ವ್ಯಾಕರಣದ ಮೂಲತತ್ವಗಳಿಗಿಂತ ತೀರ ಬೇರಾದವುಗಳು.
ಇಂತಹ ತೀರ ಬೇರಾಗಿರುವ ಮೂಲತ್ವಗಳನ್ನು ಬಳಸುವ ಕನ್ನಡ ವ್ಯಾಕರಣದ ವೈಶಿಶ್ಟ್ಯಗಳನ್ನು ವಿವರಿಸಬೇಕಿದ್ದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣ ಪರಂಪರೆಯಲ್ಲಿ ಬರೆದ ಪುಸ್ತಕಗಳು ಮತ್ತು ಬಿಡಿಬರಹಗಳು ಕನ್ನಡದವೇ ಆದ ವೈಶಿಶ್ಟ್ಯಗಳಿಗೆ ಹೆಚ್ಚಿನ ಗಮನ ಕೊಡಲಾರವು ಮತ್ತು ಕೊಟ್ಟಿಲ್ಲ.
ವ್ಯಾಕರಣಗಳಲ್ಲೂ
ಹೆಚ್ಚಿನ
ವ್ಯಾಕರಣದ ಸಂಸ್ಕ್ರುತ ಕನ್ನಡದ ಕನ್ನಡ ವ್ಯಾಕರಣಕ್ಕೆ ಅಳವಡಿಸಿಕೊಳ್ಳಲು ಮೂಲತತ್ವಗಳನ್ನು ಹಾಗೆಯೇ ಪ್ರಯತ್ನಿಸಲಾಗಿದೆ. ಇಂತಹ ಪ್ರಯತ್ನ ಕನ್ನಡದ ಅತ್ಯಂತ ಪ್ರಾಚೀನವಾದ ವ್ಯಾಕರಣಗಳ ಕಾಲದಿಂದಲೂ ನಡೆದು ಬಂದಿದೆ.
ಕನ್ನಡದ ಈ ಪ್ರಾಚೀನ ವೈಯಾಕರಣಿಗಳು ಆ ರೀತಿ ಮಾಡಲು ಮುಕ್ಯವಾಗಿ ಎರಡು ಕಾರಣಗಳಿವೆ. ಪ್ರಾಕ್ರುತ, ಅಪಬ್ರಂಶ, ಪಾಲಿ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕ್ರುತದ ಒಂದು (ವಿಕ್ರುತ) ರೂಪವೆಂಬ ಭಾವನೆ ಅವರಲ್ಲಿದ್ದುದು ಒಂದು ಕಾರಣ; ವ್ಯಾಕರಣದ ಮೂಲತತ್ವಗಳ ಮಟ್ಟಿಗೆ ಒಂದು ನುಡಿ ಇನ್ನೊಂದರಿಂದ ತೀರ ಬೇರಾಗಿರಬಲ್ಲುದು ಎಂಬ ವಿಶಯ ಅವರ ಗಮನಕ್ಕೆ ಬಂದಿರಲಿಲ್ಲವೆಂಬುದು ಇನ್ನೊಂದು ಕಾರಣ.
ಕನ್ನಡ ಸಂಸ್ಕ್ರುತದ ವಿಕ್ರುತ ರೂಪವಲ್ಲ, ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಬೇರೆಯೇ ಒಂದು ನುಡಿಕುಟುಂಬಕ್ಕೆ ಸೇರಿರುವ ನುಡಿ ಎಂಬ ವಿಶಯ ವೈಯಾಕರಣಿಗಳ ಅರಿವಿಗೆ ಬಂದುದು ಹತ್ತೊಂಬತ್ತನೆಯ ಶತಮಾನದ ನಡುಭಾಗದಲ್ಲಿ (ಕಾಲ್್ಡವೆಲ್ 1856). ಅನಂತರ ನಡೆದ ನುಡಿಗಳ ಕುರಿತಾದ ಅರಕೆಗಳು, ಅದರಲ್ಲೂ ಎಮೆನೋ ಮತ್ತು ಬರೋ ರಚಿಸಿದ ದ್ರಾವಿಡ ಜ್ನಾತಿಪದಕೋಶ (ಎಮೆನೋ ಮತ್ತು ಬರೋ 1961) ಮತ್ತು ಕ್ರುಶ್ಣಮೂರ್ತಿ ಇತ್ತೀಚೆಗೆ ಪ್ರಕಟಿಸಿದ ದ್ರಾವಿಡ ನುಡಿಗಳ ಹೋಲಿಕೆ (ಕ್ರುಶ್ಣಮೂರ್ತಿ 2003) ಈ ವಿಶಯದಲ್ಲಿ ಸ್ವಲ್ಪವೂ ಸಂದೇಹ ಉಳಿಯದ ಹಾಗೆ ಮಾಡಿವೆ.
ಇದಲ್ಲದೆ, ಬೇರಾಗಿರಬಲ್ಲುದು ಎಂಬ ವಿಶಯವೂ ವೈಯಾಕರಣಿಗಳ ಗಮನಕ್ಕೆ ಬಂದುದು ಇಪ್ಪತ್ತನೆಯ ಶತಮಾನದಲ್ಲಿ. ಪ್ರಪಂಚದಲ್ಲಿ ಬಳಕೆಯಲ್ಲಿರುವ ನೂರಾರು ನುಡಿಗಳಿಗೆ ವ್ಯಾಕರಣಗಳನ್ನು ಬರೆಯಲು ಪ್ರಯತ್ನ ಮಾಡಿದಾಗ ಅವು ಬಹಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಬೇರಾಗಿರಬಲ್ಲುವು ಎಂಬ ವಿಶಯ ಸ್ಪಶ್ಟವಾಯಿತು.
ಹಾಗಾಗಿ, ಈ ಇಪ್ಪತ್ತೊಂದನೆಯ ಶತಮಾನದಲ್ಲೂ ನಮ್ಮ ಪ್ರಾಚೀನ ವೈಯಾಕರಣಿಗಳು ಮಾಡಿದ ತಪ್ಪನ್ನು ತಿದ್ದದೆ ಹಾಗೆಯೇ ಮುಂದುವರಿಸಿಕೊಂಡು ಹೋಗುವುದರಿಂದ ಯಾವ ಪುರುಶಾರ್ತವೂ ಸಿದ್ದಿಸಲಾರದು. ಸೂರ್ಯ ಮೂಡು ದಿಕ್ಕಿನಲ್ಲಿ ಮೂಡಿ ಪಡು ದಿಕ್ಕಿನಲ್ಲಿ ಮುಳುಗುತ್ತಾನೆಂಬ ಹಳೇ ಕಾಲದ ಅನಿಸಿಕೆಯನ್ನು ಸರಿಯುಂಬುದಾಗಿ ಇವತ್ತಿಗೂ ಕಗೋಳ ವಿಜ್ನಾನದ ಕ್ಲಾಸಿನಲ್ಲಿ ಹೇಳಿ ಕೊಡುವುದು ಹೇಗೆ ತಪ್ಪಾಗುತ್ತದೆಯೋ ಹಾಗೆಯೇ ಇದೂ ಕೂಡ. ವ್ಯಾಕರಣವೆಂಬುದು ನುಡಿಯಿಂದ ನುದಿಗೆ
1.2 ವ್ಯಾಕರಣದ ಉದ್ದೇಶ
ಒಂದು ನುಡಿಯಲ್ಲಿ ಬರುವ ಪದಗಳ, ಪದಕಂತೆಗಳ ಮತ್ತು ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ಆ ನುಡಿಯ ಮೇಲೆ ನಾವು ಬರೆಯಬಹುದಾದ ವ್ಯಾಕರಣದ ಮುಕ್ಯ ಉದ್ದೇಶ. ಈ ರಚನೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಹಾಗಾಗಿ ಬೇರೆ ಬೇರೆ ನುಡಿಗಳ ವ್ಯಾಕರಣಗಳೂ ಬೇರೆ ಬೇರೆ ತೆರನಾಗಿರುವುದು ಅತ್ಯವಶ್ಯ.
ನಿಜಕ್ಕೂ ಕನ್ನಡ ನುಡಿಯ ವ್ಯಾಕರಣವನ್ನು ನಾವೆಲ್ಲರೂ ಬಲ್ಲೆವು. ಇಲ್ಲವಾದರೆ ಕನ್ನಡ ನುಡಿಯಲ್ಲಿ ತಪ್ಪಿಲ್ಲದೆ ವಾಕ್ಯಗಳನ್ನು ರಚಿಸಲು ಮತ್ತು ಮನಸ್ಸಿಗೆ ನಮಗೆ ತೋರಿದ್ದನ್ನೆಲ್ಲ ಇನ್ನೊಬ್ಬರಿಗೆ ವಿವರಿಸಿ ಹೇಳಲು ಸಾದ್ಯವಾಗುತ್ತಿರಲಿಲ್ಲ. ಚಿಕ್ಕಂದಿನಲ್ಲಿ ನುಡಿಯನ್ನಾಡಲು ಕಲಿಯುವಾಗಲೇನೇ ಅದರ ವ್ಯಾಕರಣವನ್ನೂ ನಾವು ಈ ರೀತಿ ನಮಗೆ ತಿಳಿಯದಂತೆಯೇ ಕಲಿತುಕೊಂಡಿರುತ್ತೇವೆ.
ಆದರೆ ಈ ವ್ಯಾಕರಣದ ಅರಿವು ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ರೂಪದಲ್ಲಿ ತುಂಬಿಕೊಂಡಿರುತ್ತದೆ. ಅದನ್ನು ಬಳಸುವುದು ಹೇಗೆ ಎಂಬುದನ್ನು ನಾವು ತಿಳಿದಿರುವೆವಲ್ಲದೆ ಅದರ ಸ್ವರೂಪವೆಂತಹದು ಎಂಬುದನ್ನು ನಾವು ತಿಳಿದಿಲ್ಲ. ಎತ್ತುಗೆಗಾಗಿ ಕನ್ನಡದಲ್ಲಿ ಮಾತನಾಡುವಾಗ, ಮರದ ಪೆಟ್ಟಿಗೆ, ಕಲ್ಲಿನ ಗೋಡೆ, ಕೆರೆಯ ನೀರು, ಅದರ ಕಣ್ಣು, ಅಕ್ಕನ ಮನೆ ಎಂಬಂತಹ ಪದಕಂತೆಗಳನ್ನು ಕಶ್ಟವಿಲ್ಲದೆ ಬಳಸುತ್ತೇವೆ. ಆದರೆ ಈ ಪದಕಂತೆಗಳ ರಚನೆಯಲ್ಲಿ (1) ಎರಡು ‘ಹೆಸರುಪದ’ಗಳು ಒಟ್ಟಿಗೆ ಸೇರಿವೆ; (2) ಅವನ್ನು ಈ ರೀತಿ ಒಟ್ಟಿಗೆ ಸೇರಿಸುವುದಕ್ಕಾಗಿ ಮೊದಲನೆಯ ಹೆಸರುಪದದೊಂದಿಗೆ ಅ ಎಂಬ ಒಟ್ಟನ್ನು ಬಳಸಬೇಕಾಗಿದೆ; ಮತ್ತು (3) ಹೀಗೆ ಬಳಸುವಾಗ ಆ ಹೆಸರುಪದದ ಸ್ವರೂಪವನ್ನನುಸರಿಸಿ ಅದರೊಂದಿಗೆ ದ್, ಇನ್, ಯ್, ರ್ ಮತ್ತು ನ್ ಎಂಬ ‘ಆಗಮ’ಗಳನ್ನೂ ಬಳಸಬೇಕಾಗಿದೆ ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಅದು ನಮ್ಮ ಗಮನಕ್ಕೆ ಬಾರದಿದ್ದರೂ ಈ ಕೆಲಸವನ್ನು ನಾವು ಪ್ರತಿಯೊಂದು ಬಾರಿಯೂ ತಪ್ಪಿಲ್ಲದೆ ನಡೆಸಬಲ್ಲೆವು. ಎಲ್ಲಿ ರ್ ಬರಬೇಕು, ಎಲ್ಲಿ ದ್ ಬರಬೇಕು, ಎಲ್ಲಿ ಇನ್ ಇಲ್ಲವೇ ನ್ ಬರಬೇಕು ಎಂಬುದನ್ನು ನಾವು ವಿವರಿಸಲಾರೆವಾದರೂ ಅವನ್ನೆಲ್ಲ ಸರಿಯಾಗಿಯೇ ಬರಬೇಕಾದ ಕಡೆಗಳಲ್ಲಿ ಬಳಸಬಲ್ಲೆವು. ಈ ಬಳಕೆಗಳ ಹಿಂದೆ ವಿಶಿಶ್ಟವಾದೊಂದು ಕಟ್ಟಲೆಯಿದೆಯುಂಬ ವಿಶಯವೂ ನಮ್ಮ ಗಮನಕ್ಕೆ ಬರುವುದಿಲ್ಲ. ಅಂತಹ ಕಟ್ಟಲೆಗಳನ್ನೆಲ್ಲ ನಾವು
ನಮ್ಮ ಅರಿವಿಗೆ ಎಟಕದ ರೂಪದಲ್ಲಿ ಮಾತ್ರ ಪಡೆದುಕೊಂಡಿರುವುದೇ ಇದಕ್ಕೆ ಇಂತಹ ‘ಅರಿವಿಗೆ ಬಾರದ’ ಇಲ್ಲವೇ ‘ಅರಿವಿಗೆ ಎಟಕದ’ ಅರಿವು ನಮ್ಮ ಇತರ ಶಾರೀರಿಕ ಚಟುವಟಿಕೆಗಳಿಗೂ ಅತ್ಯವಶ್ಯ. ಎತ್ತುಗೆಗಾಗಿ ನಮ್ಮ ಕಣ್ಣಿಗೆ ಬೇರೆ ಬೇರೆ ಮಸೂರವನ್ನು ಸಂಬಂಧಿಸಿದಂತಹ ಚಟುವಟಿಕೆಗಳನ್ನು ಗಮನಿಸಬಹುದು. ನಾವು ಹತ್ತಿರದ ವಸ್ತುಗಳನ್ನೂ ಗುರುತಿಸಬಲ್ಲೆವು, ದೂರದ ವಸ್ತುಗಳನ್ನೂ ಗುರುತಿಸಬಲ್ಲೆವು. ನಿಂತಿರುವ ಪ್ರಾಣಿಯನ್ನೂ ಗುರುತಿಸಬಲ್ಲೆವು, ವೇಗದಿಂದ ಚಲಿಸುತ್ತಿರುವ ಪ್ರಾಣಿಯನ್ನೂ ಗುರುತಿಸಬಲ್ಲೆವು. ಇಂತಹ ಹಲವು ಕಣ್ಣಿಗೆ ಸಂಬಂದಿಸಿದ ಚಟುವಟಿಕೆಗಳನ್ನು ನಾವು ನಡೆಸಬಲ್ಲೆವಾಗಿದ್ದು, ಅದಕ್ಕಾಗಿ ನಮ್ಮ ಕಣ್ಣಿನ ಗುಡ್ಡೆಗಳನ್ನು ಬೇರೆ ಬೇರೆ ರೀತಿಯಲ್ಲಿ ಚಲಿಸಬೇಕಾಗುತ್ತದೆ ಮತ್ತು ಆ ಗುಡ್ಡೆಯ ಮುಂಬಾಗದಲ್ಲಿರುವ ಆಕಾರಗಳಿಗೆ ಬದಲಿಸಬೇಕಾಗುತ್ತದೆ.
ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿದ್ದೇವೆ. ಆದರೆ ಆ ತಿಳುವಳಿಕೆ ಎಂತಹದು ಎಂಬುದು ನಮ್ಮ ಅರಿವಿಗೆ ಎಟಕದ ರೂಪದಲ್ಲಿದೆ. ಕಣ್ಣಿನಲ್ಲಿ ಎಂತಹ ಸ್ನಾಯುಗಳೆಲ್ಲ ಇವೆ, ಅವುಗಳಲ್ಲಿ ಕೆಲವನ್ನು ಹಿಗ್ಗಿಸಿ ಮತ್ತು ಇನ್ನು ಕೆಲವನ್ನು ಕುಗ್ಗಿಸಿ ನಮ್ಮ ಕಣ್ಣುಗಳನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತೇವೆ ಎಂಬ ವಿಶಯ ನಮಗೆ ತಿಳಿಯದು. ಕಣ್ಣಿನ ಒಳರಚನೆಯನ್ನು ಕಲಿತಿರುವ ಕಣ್ಣಿನ ಡಾಕ್ಟರರ ಮಿದುಳಿನಲ್ಲಿ ಮಾತ್ರ ಈ ವಿಶಯ ಅರಿವಿಗೆ ಎಟಕುವ ರೂಪದಲ್ಲಿದೆ.
ನುಡಿಯ ವಿಶಯವೂ ಹೀಗೆಯೇ. ಮಾತನಾಡುವುದು ಹೇಗೆಂದು ನಮಗೆ ಗೊತ್ತಿದೆ, ಎಂದರೆ ಮಾತನಾಡಲು ಬೇಕಾಗುವ ವ್ಯಾಕರಣಾಂಶಗಳೆಲ್ಲ ನಮ್ಮ ಮತ್ತು ತಲೆಯಲ್ಲಿ ಮಾತನಾಡುವಾಗ ಅವುಗಳಲ್ಲಿ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ನಾವು ಇನ್ನೊಬ್ಬರಿಗೆ ವಿವರಿಸಿ ಹೇಳಲಾರೆವು. ಆ ಅರಿವು ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ.
ನುಡಿಯರಿಗರು ಇಲ್ಲವೇ ವೈಯಾಕರಣಿಗಳು ಈ ಅರಿವಿಗೆ ಎಟಕದ ಅರಿವು ಎಂತಹದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಆ ಅರಿವನ್ನು ಅರಿವಿಗೆ ಎಟಕಬಲ್ಲ ವ್ಯಾಕರಣ ಕಟ್ಟಲೆಗಳ ಮೂಲಕ ವಿವರಿಸಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಅರಿವಿಗೆ ಎಟಕದ ಅರಿವು ನಮ್ಮ ತಲೆಯೊಳಗೆ ಕಟ್ಟಲೆಗಳ ನರಗಳ ಒಂದು ವಿಶಿಶ್ಟವಾದ ರೂಪದಲ್ಲಿರುವುದಿಲ್ಲ. ಮಿದುಳಿನಲ್ಲಿರುವ ಜೋಡಣೆಯ ರೂಪದಲ್ಲಿ ಇಲ್ಲದಿರುವುದೇ ನಮ್ಮ ಅರಿವಿಗೆ ಎಟಕದಿರಲು ಮುಕ್ಯ ಕಾರಣ. ನುಡಿಯರಿಗರು ಈ ರೀತಿ ಒಂದು ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕಬಲ್ಲ ರೂಪದಲ್ಲಿ ಸಿದ್ದಪಡಿಸುವುದರಿಂದ, ಮತ್ತು ವಿದ್ಯಾರ್ತಿಗಳು ಅದನ್ನು ಕಲಿಯುವುದರಿಂದ ಪ್ರಯೋಜನವೇನಾದರೂ ಇದೆಯೇ ಎಂದು ಯಾರಾದರೂ
ಹುದುಗಿಕೊಂಡಿವೆ. ಆದರೆ ಅವು ಎಂತಹವು ಮತ್ತು
ರೂಪದಲ್ಲಿರುತ್ತದೆ. ಅದು
ಯಾವುದನ್ನು ಎಲ್ಲಿ
ಕಟ್ಟಲೆಗಳ
ಕೇಳಬಹುದು. ಆದರೆ ಈ ಪ್ರಶ್ನೆಯನ್ನು ನುಡಿಯ ವಿಶಯವಾಗಿ ಕೇಳುತ್ತಾರಲ್ಲದೆ, ಕಣ್ಣಿನ ವಿಶಯವಾಗಿ ಯಾರೂ ಕೇಳುವುದಿಲ್ಲ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಣ್ಣಿನಲ್ಲಿ ನೋವಾದಾಗ ಇಲ್ಲವೇ ಬೇರೆ ತೊಂದರೆಗಳುಂಟಾದಾಗ ಅದರ ಕುರಿತಾಗಿ ಅರಿವಿಗೆ ಎಟಕುವ ತಿಳಿವನ್ನು ಪಡೆದಿರುವವರ ಸಹಾಯ ನಮಗೆ ಅತ್ಯವಶ್ಯ. ಹಾಗಾದಾಗ ನಾವು ಕೂಡಲೇ ಕಣ್ಣಿನ ಡಾಕ್ಟರರಲ್ಲಿಗೆ ಓಡುತ್ತೇವೆ. ಆದರೆ ನುಡಿಯ ವಿಶಯವಾಗಿ ನಮಗೆ ಅಂತಹ ತೊಂದರೆ ಬರುವಂತೆ ತೋರುವುದಿಲ್ಲ. ಹಾಗಾಗಿ ವೈಯಾಕರಣಿಗಳ ಇಲ್ಲವೇ ನುಡಿಯರಿಗರ ಅವಶ್ಯಕತೆ ನಮಗೆ ಸಾಮಾನ್ಯವಾಗಿ ಬರುವುದಿಲ್ಲವೆಂದೇ ಹೇಳಬಹುದು.
ಇದು ನಿಜವಾದರೂ, ಹೊಸ ನುಡಿಯೊಂದನ್ನು ಕಲಿಯಬೇಕಿದ್ದಲ್ಲಿ ಇಲ್ಲವೇ ನಮ್ಮ ನುಡಿಯಲ್ಲೇನೇ ಹೊಸ ಬದಲಾವಣೆಗಳನ್ನೇನಾದರೂ ಮಾಡಬೇಕಿದ್ದಲ್ಲಿ (ಎತ್ತುಗೆಗಾಗಿ ವಿಜ್ನಾನದ ಪದಕೋಶವೊಂದನ್ನು ತಯಾರಿಸಬೇಕಿದ್ದಲ್ಲಿ) ನಮಗೆ ಇಂತಹ ಅರಿವಿಗೆ ಎಟಕುವ ವ್ಯಾಕರಣ ತಿಳಿವು ಪ್ರಯೋಜನಕ್ಕೆ ಬರುತ್ತದೆ. ಆದರೆ ಇದು ಕಣ್ಣಿನ ತೊಂದರೆಯ ಹಾಗೆ ಎಲ್ಲರನ್ನೂ ಕಾಡುವ ತೊಂದರೆಯಲ್ಲ, ಮತ್ತು ಪರಿಹಾರಕ್ಕಾಗಿ ಒಡನೆಯೇ ಓಡಬೇಕಾಗುವಂತಹ ತೊಂದರೆಯೂ ಅಲ್ಲ. ವ್ಯಾಕರಣದ ವಿಶಯದಲ್ಲಿ ನಾವು ಹೆಚ್ಚಿನ ಮಟ್ಟಿಗೆ ತಲೆಕೆಡಿಸಿಕೊಳ್ಳದಿರುವುದಕ್ಕೆ ಇದೇ ಕಾರಣವಿರಬೇಕು.
ಆದರೆ ಹಲವಾರು ಗಂಟೆಗಳಶ್ಟು ವಿದ್ಯಾರ್ತಿಗಳ ಕಾಲವನ್ನು ಕನ್ನಡ ವ್ಯಾಕರಣದ ಕಲಿಕೆಗಾಗಿ ನಮ್ಮ ಶಾಲೆಗಳಲ್ಲಿ ವೆಚ್ಚಮಾಡುವುದಿದ್ದಲ್ಲಿ, ಅದನ್ನು ಸರಿಯಾಗಿ ಅವರಿಗೆ ಏನಾದರೂ ಪ್ರಯೋಜನವಾಗುವ ಹಾಗೆ ವೆಚ್ಚಮಾಡುವುದು ಒಳ್ಳೆಯದಲ್ಲವೇ? ನುಡಿಯ ಸ್ವರೂಪವೆಂತಹದು ಎಂಬುದನ್ನು ಅವರಿಗೆ ಸ್ಪಶ್ಟವಾಗಿ ತಿಳಿಸುವುದಕ್ಕಾದರೂ ಇದನ್ನು ಬಳಸಬಹುದಲ್ಲವೇ? ಬೇರೇನಿಲ್ಲದಿದ್ದರೂ ನಾವಾಡುವ
1.3 ಕನ್ನಡದವಲ್ಲದ ಕನ್ನಡ ವ್ಯಾಕರಣಗಳು
ಕನ್ನಡ ವ್ಯಾಕರಣಗಳು ಕನ್ನಡ ನುಡಿಯ ಒಳರಚನೆಯನ್ನು, ಎಂದರೆ ಕನ್ನಡವನ್ನು ಬಳಸುವವರ ಮಿದುಳಿನಲ್ಲಿ ಅವರ ಅರಿವಿಗೆ ಎಟಕದ ಸ್ಥಿತಿಯಲ್ಲಿರುವ ವ್ಯಾಕರಣವನ್ನು, ಅರಿವಿಗೆ ಎಟಕುವ ಹಾಗೆ ವರ್ಣಿಸಿ ಹೇಳಲು ಪ್ರಯತ್ನಿಸಬೇಕು. ಕನ್ನಡದಲ್ಲಿ ಇದುವರೆಗೆ ಸಿದ್ದವಾಗಿರುವ ವ್ಯಾಕರಣಗಳು ಎಶ್ಟರ ಮಟ್ಟಿಗೆ ಈ ಕೆಲಸವನ್ನು ಮಾಡಲು ಸಮರ್ತವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ.
ಮೇಲೆ ಹೇಳಿದ ಹಾಗೆ, ಕನ್ನಡದ ಮೇಲೆ ಸಿದ್ದವಾಗಿರುವ ವ್ಯಾಕರಣಗಳೆಲ್ಲ ಸಂಸ್ಕ್ರುತ, ಲ್ಯಾಟಿನ್ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಮಾಡಿರುವ ಪ್ರಯತ್ನಗಳೇ ಹೊರತು ನುಡಿಯಲ್ಲಿ ಬರೆಯಲು ಆ ಕನ್ನಡದವೇ ಆದ ವ್ಯಾಕರಣದ ಕಟ್ಟಲೆಗಳನ್ನು ಕಂಡುಹಿಡಿಯಲು ಮಾಡಿರುವ ಪ್ರಯತ್ನಗಳಲ್ಲ.
ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಎಶ್ಟು ಮಾತ್ರಕ್ಕೂ ಕನ್ನಡಕ್ಕೆ ಅಳವಡಿಸಲು ಸಾದ್ಯವಿಲ್ಲವೆಂದಾದಾಗ ಮಾತ್ರ ಕನ್ನಡದಲ್ಲಿ ಅದರದೇ ಆದ ವ್ಯಾಕರಣದ ಕಟ್ಟಲೆಗಳೇನಾದರೂ ಇವೆಯೇ ಎಂಬುದನ್ನು ಕಂಡು ಹಿಡಿಯಲು ಈ ವ್ಯಾಕರಣಗಳು ಪ್ರಯತ್ನಿಸುತ್ತವೆ. ಹಾಗಾಗಿ, ಹೆಚ್ಚಿನ ಸಂದರ್ಬಗಳಲ್ಲೂ ಇವು ಕನ್ನಡ ನುಡಿಯ ವೈಶಿಶ್ಟ್ಯಗಳನ್ನು ವಿವರಿಸುವಲ್ಲಿ ತೀರಾ ಅಸಮರ್ತವಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಪಟ್ಯಪುಸ್ತಕ ಸಮಿತಿಯ ಆದೇಶದ ಮೇರೆಗೆ ರಚಿತವಾಗಿರುವ ಶಾಲಾ ವ್ಯಾಕರಣಗಳನ್ನು ಪರಿಶೀಲಿಸಿದಾಗ ಈ ವಿಶಯ ಬಹಳ ಸ್ಪಶ್ಟವಾಗಿ ಕಣ್ಣಿಗೆ ಹೊಡೆಯುತ್ತದೆ. ಶಾಲಾ ವಿದ್ಯಾರ್ತಿಗಳು ಬಳಸುವ ಇಲ್ಲವೇ ಅವರು ಓದಬೇಕಾಗಿರುವ ಪಟ್ಯಪುಸ್ತಕಗಳು ಬಳಸುವ ಕನ್ನಡ ನುಡಿಯನ್ನು ಈ ವ್ಯಾಕರಣಗಳು ವರ್ಣಿಸಿ ಹೇಳಿದಲ್ಲಿ ಅದು ವಿದ್ಯಾರ್ತಿಳಿಗೆ ಗೊತ್ತಾದೀತು ಮತ್ತು ಅಂತಹದೇ ವ್ಯಾಕರಣದಿಂದ ಅವರಿಗೆ ಸಹಾಯವಾದೀತು.
ಆದರೆ ಹಾಗೆ ಮಾಡುವ ಬದಲು, ಈ ಶಾಲಾ ವ್ಯಾಕರಣಗಳು ಸಂಸ್ಕ್ರುತ ವ್ಯಾಕರಣಗಳಲ್ಲಿ ಕಾಣಿಸುವ ವ್ಯಾಕರಣದ ಕಟ್ಟಲೆಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಲು ಪ್ರಯತ್ನಿಸುತ್ತವೆ ಮತ್ತು ಅವಕ್ಕೆ ಕನ್ನಡದಲ್ಲಿ ಎತ್ತುಗೆಗಳನ್ನು ಕೊಡಲು ಪ್ರಯತ್ನಿಸುತ್ತವೆ. ಹೀಗೆ ಮಾಡಲು ಕನ್ನಡದಲ್ಲಿ ಎತ್ತುಗೆಗಳು ಸಿಗದಿದ್ದಾಗ, ಕಟ್ಟಲೆಗಳನ್ನು ಬದಲಿಸುವ ಬದಲು, ಅವಕ್ಕೆ ಸಂಸ್ಕ್ರುತದಿಂದ ಎತ್ತುಗೆಗಳನ್ನು ಹೆಕ್ಕಿ ಕೊಡುತ್ತವೆ. ಇದು ಕನ್ನಡ ವ್ಯಾಕರಣ ಹೇಗಾದೀತು? ಎತ್ತುಗೆಗಾಗಿ, ಈ ವ್ಯಾಕರಣಗಳು ಸಮಾಸವೆಂಬ ಅಧ್ಯಾಯದಲ್ಲಿ ಮೊದಲಿಗೆ ಸಂಸ್ಕ್ರುತದಲ್ಲಿ ಆರು ಸಮಾಸಗಳಿವೆಯೆಂದು ಹೇಳಿ, ಅನಂತರ ಅವಕ್ಕಿಂತ ಬೇರಾಗಿರುವ ಎರಡು ಸಮಾಸಗಳೂ ಕನ್ನಡದಲ್ಲಿ ಇವೆಯೆಂದು ಹೇಳುತ್ತವೆ. ಈ ಸಮಾಸಗಳಿಗೆ ಎತ್ತುಗೆಗಳನ್ನು ಕೊಡುವಾಗ ಕೆಲವಕ್ಕೆ ಸಂಸ್ಕ್ರುತದಿಂದ, ಕೆಲವಕ್ಕೆ ಹಳೆಗನ್ನಡದಿಂದ, ಮತ್ತು ಬೇರೆ ಕೆಲವಕ್ಕೆ ಹೊಸಗನ್ನಡದಿಂದ ಎತ್ತುಗೆಗಳನ್ನು ಆರಿಸಿ ಕೊಡುತ್ತವೆ. ಎಲ್ಲವಕ್ಕೂ ಹೊಸಗನ್ನಡದಿಂದ ಎತ್ತುಗೆಗಳನ್ನು ಕೊಡಲು ಸಾದ್ಯವಾಗದಿರುವುದೇ ಇದಕ್ಕೆ ಮುಕ್ಯ ಕಾರಣ.
ಕಲಸುಮೇಲೋಗರದಿಂದ ವಿದ್ಯಾರ್ತಿಗಳಿಗೆ ಏನು ಆದರೆ ಇಂತಹ ಪ್ರಯೋಜನ ದೊರಕೀತು? ಸಮಾಸದ ವಿಶಯ ವಿದ್ಯಾರ್ತಿಗಳಿಗೆ ಸರಿಯಾಗಿ ತಿಳಿಯಬೇಕಾದರೆ ಮೊದಲಿಗೆ ಹೊಸಗನ್ನಡದಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ತಿಳಿಸಿ ಅವಕ್ಕೆ ಹೊಸಗನ್ನಡದಿಂದಲೇ ಎತ್ತುಗೆಗಳನ್ನು ಕೊಟ್ಟು
ವ್ಯಾಕರಣದ
ವಿವರಿಸಬೇಕು. ಅನಂತರ ಅಗತ್ಯವಿದ್ದರೆ ಹಳೆಗನ್ನಡದ ಸಮಾಸಗಳು ಇವಕ್ಕಿಂತ ಬೇರಾಗಿವೆಯೇ, ಇದ್ದರೆ ಹೇಗೆ ಬೇರಾಗಿವೆ ಎಂಬುದನ್ನಾಗಲೀ, ಇಲ್ಲವೇ ಸಂಸ್ಕ್ರುತದ ಸಮಾಸಗಳು ಎಂತಹವು, ಕನ್ನಡದ ಸಮಾಸಗಳಿಗಿಂತ ಅವು ಹೇಗೆ ಬೇರಾಗಿವೆ ಎಂಬುದನ್ನಾಗಲೀ ಎತ್ತುಗೆಗಳ ನೆರವಿನಿಂದ ವಿವರಿಸಬೇಕು. ಇದಲ್ಲವೇ ಸರಿಯಾದ ಕ್ರಮ? ನುಡಿಯನ್ನು
1.4 ಹೊಸಗನ್ನಡಕ್ಕೆ ಅದರದೇ ವ್ಯಾಕರಣ
ನಿಜಕ್ಕೂ ಹೊಸಗನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣವಿದೆ. ಇದು ಹಳೆಗನ್ನಡದ ವ್ಯಾಕರಣಕ್ಕಿಂತ ಸ್ವಲ್ಪಮಟ್ಟಿಗೆ ಬೇರಾಗಿದೆ. ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳ ವ್ಯಾಕರಣಗಳಿಗಿಂತ ಬಹಳಮಟ್ಟಿಗೆ ಬೇರಾಗಿದೆ. ಈ ವ್ಯಾಕರಣ ಹೊಸಗನ್ನಡವನ್ನು ಸರಿಯಾಗಿ ಆಡಬಲ್ಲ ಮತ್ತು ಅದರಲ್ಲಿ ತಪ್ಪಿಲ್ಲದೆ ಬರೆಯಬಲ್ಲ ಎಲ್ಲಾ ವ್ಯಕ್ತಿಗಳ ಮಿದುಳಿನಲ್ಲೂ ಅವರ ಅರಿವಿಗೆ ಎಟಕದ ರೂಪದಲ್ಲಿ ಅಡಗಿರುತ್ತದೆ.
ಹೊಸಗನ್ನಡ ಸರಿಯಾಗಿ ಬಳಸಬಲ್ಲವರು ಹಳೆಗನ್ನಡ ನುಡಿಯನ್ನಾಗಲಿ, ಇಲ್ಲವೇ ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳನ್ನಾಗಲಿ (ಅವನ್ನು ಪ್ರತ್ಯೇಕವಾಗಿ ಕಲಿಯದೆ) ಬಳಸಲಾರರು. ಇದೇ ರೀತಿಯಲ್ಲಿ ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳನ್ನು ಬಳಸಬಲ್ಲವರು ಪ್ರತ್ಯೇಕವಾಗಿ ಕಲಿಯದೆ ಹೊಸಗನ್ನಡ ನುಡಿಯನ್ನು ಬಳಸಲಾರರು ಇಲ್ಲವೇ ತಿಳಿಯಲಾರರು. ಈ ನುಡಿಗಳನ್ನು ಬಳಸಲು ಬೇಕಾಗುವ ಅರಿವಿಗೆ ಎಟಕದ ವ್ಯಾಕರಣಗಳು ಒಂದಕ್ಕಿಂತ ಒಂದು ಬೇರಾಗಿರುವುದೇ ಇದಕ್ಕೆ ಕಾರಣ.
ಹೊಸಗನ್ನಡ ನುಡಿಯ ಈ ಅರಿವಿಗೆ ಎಟಕದ ವ್ಯಾಕರಣದ ತಿಳಿವನ್ನು ಹೊಸಗನ್ನಡ ವೈಯಾಕರಣಿಗಳು ಮಾಡಬೇಕಾಗಿರುವ ಮುಕ್ಯ ಕೆಲಸ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವರು ಪದಕಂತೆಗಳು, ಹೊಸಗನ್ನಡದ ಮತ್ತುವಾಕ್ಯಗಳು ಎಂತಹವು ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸಿ ಅವುಗಳ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಬರೆಯಬೇಕು.
ಎತ್ತುಗೆಗಾಗಿ, ಹೊಸಗನ್ನಡ ಪದಗಳ ಒಳರಚನೆಯನ್ನು ತಿಳಿಯಲು ಆ ಪದಗಳಲ್ಲಿ ಎಂತಹ ಪದಗಳ ಬಳಕೆಯಾಗುತ್ತದೆ, ಎಂತಹ ಒಟ್ಟುಗಳ ಬಳಕೆಯಾಗುತ್ತದೆ, ಮತ್ತು ಈ ಒಟ್ಟುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಹೊಸಗನ್ನಡದಲ್ಲಿ ಬಳಕೆಯಾಗುವ ಸಂಗ್ರಹಿಸಿ ಪರಿಶೀಲಿಸಬೇಕಾಗುತ್ತದೆ. ಬದಲಾಯಿಸುವುದೇ ಎಚ್ಚರಿಕೆಯಿಂದ ಪದಗಳನ್ನೆಲ್ಲ ಪದಗಳು, ಎಟಕುವ ರೂಪಕ್ಕೆ ಮತ್ತು ವಾಕ್ಯಗಳನ್ನು ಪದಕಂತೆಗಳನ್ನು ಸಂಸ್ಕ್ರುತ ವೈಯಾಕರಣಿಗಳು ಸಂಸ್ಕ್ರುತದ ಪದಗಳನ್ನೆಲ್ಲ ಈ ರೀತಿಯಲ್ಲಿ ಸಂಗ್ರಹಿಸಿ ಅವುಗಳ ಒಳರಚನೆಯ ಹಿಂದಿರುವ ಕಟ್ಟಲೆಗಳನ್ನು ಪಟ್ಟಿಮಾಡಿದ್ದಾರೆ. ಇಂಗ್ಲಿಶ್, ಲ್ಯಾಟಿನ್ ಮೊದಲಾದ ನುಡಿಗಳಲ್ಲೂ ಇಂತಹದೇ ಪರಿಶೀಲನೆ ನಡೆದಿದೆ. ಅವರು ಕಂಡುಹಿಡಿದಿರುವ ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳ ರಚನೆಯ ಹಿಂದಿರುವ ಕಟ್ಟಲೆಗಳನ್ನು ಹಾಗೆಯೇ ಹೊಸಗನ್ನಡದ ಪದಗಳಿಗೆ ಅಳವಡಿಸಲು ಸಾದ್ಯವಾಗದು. ಈ ಪದಗಳಿಗೆ ತಮ್ಮವೇ ಆದ ಕಟ್ಟಲೆಗಳಿದ್ದು, ಅವನ್ನು ಕಂಡುಹಿಡಿಯಲು ಬೇರೆಯೇ ಪ್ರಯತ್ನ ನಡೆಸಬೇಕು. ಇದೇ ರೀತಿಯಲ್ಲಿ ಹೊಸಗನ್ನಡದ ಪದಕಂತೆಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ತಿಳಿಯಲು, ಮತ್ತು ಆ ಒಳರಚನೆಯ ಹಿಂದಿರುವ ಕಟ್ಟಲೆಗಳಾವುವು ಎಂಬುದನ್ನು ಕಂಡುಹಿಡಿಯಲು ಹೊಸಗನ್ನಡದಲ್ಲಿ ಬಳಕೆಯಲ್ಲಿರುವ ಕಲೆಹಾಕಿ ಜಾಗ್ರತೆಯಿಂದ ಪರಿಶೀಲಿಸುವುದು ಅವಶ್ಯ.
ಮೇಲೆ ಹೇಳಿದ ಹಾಗೆ, ಈ ಕಟ್ಟಲೆಗಳ ‘ಅರಿವಿಗೆ ಎಟಕದ’ ತಿಳಿವು ನಮ್ಮೆಲ್ಲರಲ್ಲೂ ಇದೆ. ಹೊಸಗನ್ನಡದಲ್ಲಿ ನಾವು ಮಾತನಾಡಬಲ್ಲೆವು ಮತ್ತು ಇತರರು ಮಾತನಾಡಿದಾಗ ಅವರು ಏನು ಹೇಳುತ್ತಾರೆ ಎಂಬುದನ್ನು ಗೊತ್ತುಮಾಡಿಕೊಳ್ಳಬಲ್ಲೆವು ಎಂಬುದರಿಂದ ಈ ವಿಶಯ ಸ್ಪಶ್ಟವಾಗುತ್ತದೆ. ಇಂತಹ ತಿಳಿವು ನಮ್ಮಲ್ಲಿ ಇಲ್ಲವಾದರೆ ಈ ಎರಡು ಕೆಲಸಗಳನ್ನೂ ನಾವು ಮಾಡಲಾರೆವು ಎಂಬುದನ್ನು ಈ ಕೆಳಗಿನ ನಿದರ್ಶನ ನಮಗೆ ಬಹಳ ಸ್ಪಶ್ಟವಾಗಿ ತೋರಿಸಿಕೊಡುತ್ತದೆ.
ಎಣ್ಣುಕ(ಕಂಪ್ಯೂಟರ್)ಗಳು ಒಂದು ನುಡಿಯನ್ನು ಬಳಸಲು ಇಲ್ಲವೇ ಒಂದು ನುಡಿಯಿಂದ ಇನ್ನೊಂದು ನುಡಿಗೆ ವಾಕ್ಯಗಳನ್ನು ಅನುವಾದಿಸಲು ಸಾದ್ಯವಾಗ ಬೇಕಾದರೆ ಅವು ಯಾಂತ್ರಿಕವಾಗಿ ಬಳಸಬಲ್ಲ ವ್ಯಾಕರಣದ ಸಾಪ್್ಟವೇರನ್ನು (ಎಂದರೆ ಕಟ್ಟಲೆಗಳನ್ನು) ಅವುಗಳಲ್ಲಿ ಅಳವಡಿಸುವ ಅವಶ್ಯಕತೆಯಿದೆ. ಆದರೆ ಇಂತಹ ಸಾಫ್್ಟವೇರನ್ನು ತಯಾರಿಸಬೇಕಿದ್ದಲ್ಲಿ ಆ ನುಡಿಯ ವ್ಯಾಕರಣದ ತಿಳಿವನ್ನು ರೂಪಕ್ಕೆ ಬದಲಾಯಿಸಿಕೊಳ್ಳುವುದು ಅವಶ್ಯ.
ಮನುಶ್ಯನ ಮಿದುಳಿನಲ್ಲಿ ಅರಿವಿಗೆ ಎಟಕದ ಬಗೆಯಲ್ಲಿರುವ ವ್ಯಾಕರಣದ ತಿಳಿವು ಅತ್ಯಂತ ಜಟಿಲವಾದುದು. ಇಂಗ್ಲಿಶ್ನ ಮಟ್ಟಿಗೆ ಹೇಳುವುದಾದರೆ, ಸಾವಿರಾರು ವೈಯಾಕರಣಿಗಳ ಅಭ್ಯಾಸದ ನಂತರವೂ ಈ ತಿಳಿವಿನ ಒಂದು ಚಿಕ್ಕ ಅಂಶವನ್ನು ಮಾತ್ರ ಈ ರೀತಿ ಅರಿವಿಗೆ ಎಟಕುವ ರೂಪಕ್ಕೆ ಬದಲಾಯಿಸಲು ಸಾದ್ಯವಾಗಿದೆ ಮತ್ತು ಈ ಚಿಕ್ಕ ಅಂಶವನ್ನಶ್ಟೇ ಎಣ್ಣುಕಗಳಲ್ಲಿ ಅಳವಡಿಸಲು ಸಾದ್ಯವಾಗಿದೆ. ಹಾಗಾಗಿ ಎಣ್ಣುಕಗಳಿನ್ನೂ ಅನುವಾದಿಸುವ ಕೆಲಸದಲ್ಲಿ ಮತ್ತು ನುಡಿಯನ್ನು ಬಳಸುವ ಬೇರೆ ಕೆಲಸಗಳಲ್ಲಿ ಮೊದಲ ಹೆಜ್ಜೆಯನ್ನಶ್ಟೇ ಇಡುತ್ತಿವೆ.
ಮೊದಲಿಗೆ
ಎಟಕುವ
ನಮ್ಮ
ಕಲಿಸುತ್ತಿರುವ
ವ್ಯಾಕರಣದಿಂದ
ಎಣ್ಣುಕದಲ್ಲಿ ಕನ್ನಡವನ್ನು ಅಳವಡಿಸಲು ಯಾರಾದರೂ ಪ್ರಯತ್ನಿಸಿದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣವನ್ನು ತಯಾರಿಸುವ ಅವಶ್ಯಕತೆಯೇನು ಎಂಬ ವಿಶಯ ಇದರಿಂದ ಸ್ಪಶ್ಟವಾದೀತು; ಈ ಕೆಲಸಕ್ಕೆ ಇವತ್ತು ನಮ್ಮ ಶಾಲೆಗಳಲ್ಲಿ ಯಾವ ಪಟ್ಯಪುಸ್ತಕಗಳ ಪ್ರಯೋಜನವೂ ಸಿಗಲಾರದು ಎಂಬ ವಿಶಯವೂ ಸ್ಪಶ್ಟವಾದೀತು.
ಮೇಲೆ ಸೂಚಿಸಿದ ಹಾಗೆ, ಈ ಶಾಲಾ ವ್ಯಾಕರಣಗಳು ಹೊಸಗನ್ನಡದಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆ ಎಂತಹದು ಎಂಬುದನ್ನು ವಿವರಿಸುವ ಬದಲು, ಸಂಸ್ಕ್ರುತ ವ್ಯಾಕರಣಗಳಲ್ಲಿ ಬರುವ ಪದರಚನೆಯ ಮತ್ತು ವಾಕ್ಯರಚನೆಯ ಕಟ್ಟಲೆಗಳನ್ನು ಕನ್ನಡಕ್ಕೆ ಅನ್ವಯಿಸುವುದು ಹೇಗೆ ಎಂಬುದನ್ನು ವರ್ಣಿಸುತ್ತವೆ.
ಆದರೆ ಎಣ್ಣುಕಕ್ಕೆ ಬೇಕಾಗಿರುವುದು ಹೊಸಗನ್ನಡ ಪದಗಳ ಮತ್ತು ವಾಕ್ಯಗಳ ಒಳರಚನೆಯ ಹಿಂದಿರುವ ಕಟ್ಟಲೆಗಳು ಮಾತ್ರ. ಅಂತಹ ಕಟ್ಟಲೆಗಳನ್ನು ಬಳಸಿ ತಯಾರಿಸಿರುವ ಸಾಫ್್ಟವೇರ್ ಮಾತ್ರ ಎಣ್ಣುಕಕ್ಕೆ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಅನುವಾದಿಸುವಲ್ಲಿ ಆದಾರವಾಗಬಲ್ಲುದು.
1.5 ದಾರಿ ಹೇಳುವ ಕ್ರಮ
ಸಂಸ್ಕ್ರುತ ನುಡಿಗೆ ನಮ್ಮ ಜೀವನ, ಸಾಹಿತ್ಯ ಮತ್ತು ಸಂಸ್ಕ್ರುತಿಗಳಲ್ಲಿ ಒಂದು ಮುಕ್ಯವಾದ ಜಾಗವಿದೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬಾರತದ ಎಲ್ಲಾ ನುಡಿಗಳ ಮೇಲೂ ಅದು ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರಬಾವವನ್ನು ಬೀರಿದೆ. ಹಾಗಾಗಿ, ಅದರ ವ್ಯಾಕರಣದ ಸ್ವರೂಪವೆಂತಹದು ಎಂಬುದನ್ನು ತಿಳಿಯುವುದರಿಂದ ನಮಗೆಲ್ಲರಿಗೂ ಪ್ರಯೋಜನವಿದೆ.
ಬಾರತದಲ್ಲಿ ಬಳಕೆಯಲ್ಲಿರುವ ನುಡಿಗಳಲ್ಲಿ ಕೆಲವು ನುಡಿಗಳನ್ನಾಡುವವರಿಗೆ ಸಂಸ್ಕ್ರುತ ವ್ಯಾಕರಣವನ್ನು ತಿಳಿದುಕೊಳ್ಳುವುದರಿಂದ ಹೆಚ್ಚು ಪ್ರಯೋಜನ ಸಿಗಬಹುದು, ಮತ್ತು ಬೇರೆ ಕೆಲವು ನುಡಿಗಳನ್ನಾಡುವವರಿಗೆ ಸ್ವಲ್ಪ ಕಡಿಮೆ ಪ್ರಯೋಜನ ಸಿಗಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಸಂಸ್ಕ್ರುತ ವ್ಯಾಕರಣವನ್ನು ಕಲಿಸುವುದರಿಂದ ಪ್ರಯೋಜನವೇ ಇಲ್ಲವೆಂದೇನೂ ನಾನು ವಾದಿಸುವುದಿಲ್ಲ. ಆದರೆ ಅದನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಎಶ್ಟು ಕಲಿಸಬೇಕು ಎಂಬ ವಿಶಯದಲ್ಲಿ ಚರ್ಚೆಗೆ ಅವಕಾಶವಿದೆ. ಈ ವ್ಯಾಕರಣ ಕಲಿಕೆಯ ಸಮಸ್ಯೆಯನ್ನು ನಿಮ್ಮ ಮನೆಗೆ ದಾರಿ ಹೇಳುವ ಸಮಸ್ಯೆಗೆ ಹೋಲಿಸಿ ನೋಡಬಹುದು. ನಿಮ್ಮ ಮನೆಗೆ ಹೋಗಲು ದಾರಿ ಕೇಳಿದವರಿಗೆ ನಿಮ್ಮೂರಿನ ದೇವಸ್ತಾನಕ್ಕೆ ಹೋಗುವ ದಾರಿಯನ್ನು ಮೊದಲಿಗೆ ಹೇಳಿ, ಅನಂತರ ಅಲ್ಲಿಂದ ನಿಮ್ಮ ಮನೆಗೆ ಹೋಗುವ ದಾರಿಯನ್ನು
ಶಾಸ್ತ್ರ
ಹೋಗುವ
ಸಾದ್ಯವಿದೆ,
ನೆರವಾಗಲೂ
ಗ್ರಂತಗಳು ಅದರಲ್ಲಿವೆ. ಅದನ್ನು
ಹೇಳಿದಿರಾದರೆ, ತೊಂದರೆಯನ್ನುಂಟುಮಾಡಲೂ ಸಾದ್ಯವಿದೆ.
ನಿಮ್ಮ ಮನೆ ದೇವಸ್ತಾನದ ಹತ್ತಿರ ಇದೆಯಾದರೆ, ಅಲ್ಲಿಗೆ ಹೋಗುವ ದಾರಿಯನ್ನು ಹೇಳುವುದರಿಂದ ನಿಮ್ಮ ಮನೆಗೆ ಬರಬೇಕೆಂದಿರುವವರಿಗೆ ಪ್ರಯೋಜನವಾಗಬಹುದು. ಆದರೆ ಅದು ದೇವಸ್ತಾನಕ್ಕಿಂತ ಬೇರೆಯೇ ಆದ ಒಂದು ದಿಕ್ಕಿನಲ್ಲಿ ಇದೆಯಾದರೆ, ಅನವಶ್ಯಕವಾಗಿ ತೊಂದರೆಯಾದೀತು. ಇಂತಹ ಸಂದರ್ಬಗಳಲ್ಲಿ ನಿಮ್ಮ ಮನೆಯ ದಾರಿಯನ್ನು ಮತ್ತು ದೇವಸ್ತಾನಕ್ಕೆ ಹೋಗುವ ದಾರಿಯನ್ನು ಬೇರೆ ಬೇರೆಯಾಗಿ ತಿಳಿಸುವುದೇ ಒಳ್ಳೆಯದಲ್ಲವೆ? ಸಂಸ್ಕ್ರುತ ಬಹಳ ಮುಕ್ಯವಾದ ಒಂದು ನುಡಿ. ಅತ್ಯುತ್ತಮವಾದ ಕಾವ್ಯ ‘ದೇವನುಡಿ’ಯೆಂದೇ ಮತ್ತು ವ್ಯಾಕರಣವನ್ನು ಪರಿಗಣಿಸುವವರೂ ಹಲವರಿದ್ದಾರೆ. ಹಾಗಾಗಿ, ಅದರ ಕಲಿಯುವುದೆಂದರೆ ಯಾವುದೆಂದು ದೇವಸ್ತಾನಕ್ಕೆ ತಿಳಿಯುವಂತೆಯೇ ಎಂದು ಹೇಳಬಹುದು.
ಪ್ರಾಕ್ರುತ, ಪಾಲಿ, ಅಪಬ್ರಂಶ ಮೊದಲಾದ ನುಡಿಗಳು ಸಂಸ್ಕ್ರುತಕ್ಕೆ ತೀರ ಹತ್ತಿರವಾದ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣವನ್ನು ಕಲಿಯುವುದಿದ್ದರೆ ಸಂಸ್ಕ್ರುತ ವ್ಯಾಕರಣವನ್ನು ಮೊದಲು ಕಲಿತು ಅನಂತರ ಅದಕ್ಕಿಂತ ಈ ನುಡಿಗಳ ವ್ಯಾಕರಣಗಳು ಹೇಗೆ ಬೇರಾಗಿವೆ ಎಂಬುದನ್ನು ತಿಳಿಯುವುದರ ಮೂಲಕ ಅವುಗಳ ವ್ಯಾಕರಣವನ್ನು ತಿಳಿದುಕೊಳ್ಳುವುದು ಹೆಚ್ಚು ಸುಲಬವಾಗಬಹುದು. ಇದು ದೇವಸ್ತಾನದ ಹತ್ತಿರವಿರುವ ಮನೆಗಳಿಗೆ ದಾರಿ ಹೇಳುವವರು ಮೊದಲು ಹೇಳಿ ಅನಂತರ ಅವರು ದಾರಿಯನ್ನು ದೇವಸ್ತಾನಕ್ಕೆ ಹೋಗಬೇಕಿರುವ ಮನೆಗೆ ಹೇಗೆ ಹೋಗುವುದೆಂದು ಹೇಳುವ ಹಾಗೆ ಎನ್ನಬಹುದು. ಹಿಂದಿ, ಮರಾಟಿ, ಬಂಗಾಲಿ, ಒಡಿಯಾ ಮೊದಲಾದ ಬಾರತದ ಹಲವು ಇವತ್ತಿನ ನುಡಿಗಳು ‘ಇಂಡೋ-ಆರ್ಯನ್’ ಎಂಬ ನುಡಿಕುಟುಂಬಕ್ಕೆ ಸೇರುತ್ತವೆ. ಅವು ಪ್ರಾಕ್ರುತ, ಅಪಬ್ರಂಶ ಮೊದಲಾದವುಗಳಲ್ಲಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ರೂಪುಗೊಂಡ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣಗಳನ್ನು ತಿಳಿಯುವಲ್ಲೂ ಸಂಸ್ಕ್ರುತದ ವ್ಯಾಕರಣ ಸ್ವಲ್ಪ ಮಟ್ಟಿಗೆ ಸಹಾಯಕ್ಕೆ ಬರಬಲ್ಲುದು.
ಆದರೆ ಅವು ಸಂಸ್ಕ್ರುತಕ್ಕಿಂತ ಸಾಕಶ್ಟು ಬೇರಾಗಿವೆಯಾದ ಕಾರಣ, ಅವುಗಳ ಸಂಸ್ಕ್ರುತ ವ್ಯಾಕರಣಗಳನ್ನು ವಿದ್ಯಾರ್ತಿಗಳಿಗೆ ವ್ಯಾಕರಣದ ಮೂಲಕ ತಿಳಿಸಿಹೇಳುವುದು ಅಶ್ಟೊಂದು ಸಮರ್ಪಕವಾಗಲಾರದು. ಇದು ದೇವಸ್ತಾನಕ್ಕಿಂತ (ಆದರೂ ಅದೇ ದಿಕ್ಕಿನಲ್ಲಿರುವ) ಮನೆಗಳಿಗೆ ದಾರಿ ಹೇಳುವ ಹಾಗೆ. ದಾರಿ ತಪ್ಪಿದರೂ
ಸಾಕಶ್ಟು ದೂರ ಇರುವ
ಕಲಿಸಬೇಕಾದಾಗ ಅವನ್ನು
ಹೋಗುವ
ತಮಿಳು,
ಮಲೆಯಾಳ,
ತೆಲುಗು ಮೊದಲಾದ
ದೇವಸ್ತಾನಕ್ಕೆ ಹೋಗಿ ಅಲ್ಲಿಂದ ಆ ಮನೆಗಳಿಗೆ ಹೋಗಬಹುದು, ಆದರೆ ನಿಜಕ್ಕೂ ನೇರವಾಗಿ, ದೇವಸ್ತಾನಕ್ಕೆ ಹೋಗದೆ ಆ ಮನೆಗಳಿಗೆ ಹೋಗುವುದೇ ಅನುಕೂಲ. ಕನ್ನಡ, ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು ಸಂಸ್ಕ್ರುತಕ್ಕಿಂತ ತೀರ ಬೇರಾಗಿರುವ ನುಡಿಗಳು. ಅವುಗಳ ವ್ಯಾಕರಣದ ಕಟ್ಟಲೆಗಳು ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳಿಗಿಂತ ತೀರ ಬೇರಾದವುಗಳು. ಸಂಸ್ಕ್ರುತಕ್ಕೂ ಅವಕ್ಕೂ ನಡುವಿರುವ ಸಂಬಂದ ದೇವಸ್ತಾನಕ್ಕೂ ಮತ್ತು ಊರಿನ ಬೇರೆಯೇ ಒಂದು ದಿಕ್ಕಿನಲ್ಲಿರುವ ಮನೆಗಳಿಗೂ ನಡುವಿರುವ ಸಂಬಂದದ ಹಾಗೆ ಎನ್ನಬಹುದು. ಹಾಗಾಗಿ, ಅವುಗಳ ವ್ಯಾಕರಣವನ್ನು ಸಂಸ್ಕ್ರುತ ವ್ಯಾಕರಣಕ್ಕೆ ಸಂಬಂದಿಸಲು ಹೋಗದೆ ಬೇರಾಗಿ ಕಲಿಸುವುದೇ ಒಳ್ಳೆಯದು. ಸಂಸ್ಕ್ರುತದ ಪ್ರಬಾವ ಮುಕ್ಯವಾಗಿ ಈ ನುಡಿಗಳ ಪದಕೋಶದಲ್ಲಿ ಕಾಣಿಸುತ್ತದೆ. ಹಾಗಾಗಿ, ಸಂಸ್ಕ್ರುತದಿಂದ ಎರವಲಾಗಿ ಬಂದಿರುವ ಪದಗಳನ್ನು ಪ್ರತ್ಯೇಕಿಸಿ, ಉಳಿದಿರುವ ಪದಗಳ ಮತ್ತು ವಾಕ್ಯಗಳ ಒಳರಚನೆಯನ್ನು ಮೊದಲಿಗೆ ಕಲಿಸಬೇಕು. ಅನಂತರ ಬೇಕಾದರೆ ಸಂಸ್ಕ್ರುತದಿಂದ ಎರವಲಾಗಿ ಬಂದಿರುವ ಪದಗಳ ಒಳರಚನೆಯೆಂತಹದು ಎಂಬುದನ್ನು, ಮತ್ತು ಅದು ಕನ್ನಡದವೇ ಆದ ಪದಗಳ ಒಳರಚನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿದ್ಯಾರ್ತಿಗಳಿಗೆ ಕಲಿಸಬಹುದು.
ಇಂತಹ ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳ ಒಳರಚನೆಯಲ್ಲೂ ಕನ್ನಡ ತನ್ನದೇ ಆದ ಕಟ್ಟಲೆಗಳನ್ನು ಬಳಸುತ್ತಿದ್ದು, ಇವು ಸಂಸ್ಕ್ರುತದಲ್ಲಿ ಬಳಕೆಯಾಗುವ ಪದರಚನೆಯ ಕಟ್ಟಲೆಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆಯುಂಬುದನ್ನು ಮುಂದೆ ನೋಡಲಿರುವೆವು.
1.6 ಈ ಪುಸ್ತಕದ ಉದ್ದೇಶ
ಸಂಸ್ಕ್ರುತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದುದರಿಂದಾಗಿ ಕನ್ನಡದ ಸ್ಪಶ್ಟವಾಗಿ ವ್ಯಾಕರಣದ ವೈಯಾಕರಣಿಗಳು ತಿಳಿಸಿಹೇಳುವಲ್ಲಿ ಹೇಗೆ ಸೋತುಹೋಗಿದ್ದಾರೆ ಎಂಬುದನ್ನು ಎತ್ತುಗೆಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಕ್ಯ ಉದ್ದೇಶ.
ಇತ್ತೀಚೆಗಿನ ಕೆಲವು ಕನ್ನಡ ವ್ಯಾಕರಣಗಳಲ್ಲಿ ಇಂಗ್ಲಿಶ್ ವ್ಯಾಕರಣ ಪರಂಪರೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಲಾಗಿದೆ. ಇದರಿಂದಾಗಿಯೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ವಿವರಿಸಿ ಹೇಳುವಲ್ಲಿ
ಕಟ್ಟಲೆಗಳನ್ನು
ಕನ್ನಡ
ತೊಂದರೆಯುಂಟಾಗಿದೆ. ಈ ತೊಂದರೆಯುಂತಹದು ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಅಂತಹ ಕೆಲವು ವ್ಯತ್ಯಾಸಗಳನ್ನೂ ಇಲ್ಲಿ ವಿವರಿಸಲಾಗಿದೆ.
ಮುಕ್ಯವಾಗಿ ಪುಸ್ತಕದ ಹೆಸರೇ ಸೂಚಿಸುವ ಹಾಗೆ ಕನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಿದ್ದಪಡಿಸುವ ಅವಶ್ಯಕತೆಯೇನು, ಮತ್ತು ಆ ಪರಂಪರೆಯ ಸ್ವರೂಪ ಎಂತಹದು ಎಂಬುದನ್ನು ತಿಳಿಸಿ ಹೇಳುವುದೇ ಈ ಪುಸ್ತಕದ ಉದ್ದೇಶ.
ನುಡಿಗಳಿಗೆ ಇಲ್ಲವೇ ನುಡಿಕುಟುಂಬಗಳಿಗಿರುವ ಅವುಗಳದೇ ಆದ ವ್ಯಾಕರಣ ಪರಂಪರೆಗಳನ್ನು ಈ ರೀತಿ ತಿಳಿದುಕೊಳ್ಳುವುದರಿಂದ ಬೇರೆಯೂ ಹಲವು ಪ್ರಯೋಜನಗಳು ನಮಗೆ ದೊರಕುತ್ತವೆ. ಈ ವ್ಯಾಕರಣ ಪರಂಪರೆಗಳು ಬೇರೆ ಬೇರೆ ನುಡಿಕುಟುಂಬಗಳು ಮಿಲಿಯಗಟ್ಟಲೆ ವರ್ಶಗಳಿಂದ ಬೆಳೆಸಿಕೊಂಡು ಬಂದಿರುವ ನುಡಿಯರಿವನ್ನು ಪ್ರತಿನಿದಿಸುತ್ತವೆಯೆಂಬುದನ್ನು ಗಮನಿಸಬೇಕು. ಅವು ಈ ನುಡಿಗಳನ್ನಾಡುವ ಜನರ ಮಿಲಿಯಗಟ್ಟಲೆ ವರ್ಶಗಳ ಅನುಬವದ ಸಾರ ಮತ್ತು ಒಟ್ಟು ಸಮಾಜಕ್ಕೆ ಅವರ ಕೊಡುಗೆ.
ದ್ರಾವಿಡ ನುಡಿಗಳ ವ್ಯಾಕರಣ ಪರಂಪರೆಯನ್ನು ಈ ನುಡಿಗಳನ್ನಾಡುವ ಜನರು ತಮ್ಮ ಮಿಲಿಯಗಟ್ಟಲೆ ವರ್ಶಗಳ ಅನುಬವದ ಮೂಲಕ ಬೆಳೆಸಿಕೊಂಡು ಬಂದಿದ್ದಾರೆ. ಅದು ದ್ರಾವಿಡ ಸಂಸ್ಕ್ರುತಿಯ ಒಂದು ಅಂಗ. ಹಾಗಾಗಿ ಅದನ್ನು ತಿಳಿಯದಿರುವುದೆಂದರೆ ಸಂಸ್ಕ್ರುತಿಯ ಒಂದು ಅಂಗವನ್ನು ತಿಳಿಯದಿರುವಂತೆಯೇ ಸರಿ. ಜಗತ್ತಿನಲ್ಲಿ ಸಾವಿರಾರು ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಬರುವ ವ್ಯಾಕರಣದ ಕಟ್ಟಲೆಗಳು ಎಶ್ಟರ ಮಟ್ಟಿಗೆ ಒಂದರಿಂದೊಂದು ಬೇರಾಗಿರಬಲ್ಲುವು ಎಂಬುದನ್ನು ವರ್ಶಗಳಿಂದ ನುಡಿಯರಿಗರು ಪ್ರಯತ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮಗುವಿನ ತಂದೆತಾಯಿಗಳು ಯಾವುದೇ ನುಡಿಯನ್ನಾಡುತ್ತಿರಲಿ, ಅದು ಬೆಳೆಯುತ್ತಿರುವ ಸಮಯದಲ್ಲಿ, ಎಂದರೆ ಆರು ತಿಂಗಳಿನಿಂದ ಎರಡೂವರೆ-ಮೂರು ವರ್ಶಗಳ ಒಳಗೆ ಅದರ ಸುತ್ತುಮುತ್ತ ಯಾವ ನುಡಿ ಬಳಕೆಯಲ್ಲಿದೆಯೋ ಅದನ್ನು ಆ ಮಗು ಬಹಳ ಸುಲಬವಾಗಿ ಮತ್ತು ಸಂಪೂರ್ಣವಾಗಿ ಕಲಿತುಕೊಳ್ಳಬಲ್ಲುದು.
ಎತ್ತುಗೆಗಾಗಿ, ಕನ್ನಡ ಮಾತನಾಡುವ ತಾಯಿತಂದೆಯರ ಮಗು ಆ ನುಡಿಗಿಂತ ತೀರಾ ಬೇರಾಗಿರುವ ಚೈನೀಸ್ ನುಡಿಯನ್ನಾಡುವ ಜನರ ಪರಿಸರದಲ್ಲಿ ಬೆಳೆಯುತ್ತಿದೆಯಾದರೆ, ನಮಗೆ ತೀರ ಕ್ಲಿಶ್ಟವಾಗಿ ಕಾಣಿಸುವಂತಹ ಆ ನುಡಿಯನ್ನೂ ತಾನಾಗಿಯೇ ಕಲಿತುಕೊಳ್ಳಬಲ್ಲುದು. ಅದಕ್ಕೆ ಆ ನುಡಿಯನ್ನು ಪ್ರತ್ಯೇಕವಾಗಿ ಕಲಿಸುವ ಅವಶ್ಯಕತೆಯೇ ಇಲ್ಲ. ಎಲ್ಲಾ ಮಕ್ಕಳೂ ಈ ರೀತಿ ಪ್ರಪಂಚದಲ್ಲಿರುವ ಯಾವುದೇ ನುಡಿಯನ್ನು ಬೇಕಿದ್ದರೂ ಸಂದರ್ಬವೊದಗಿ ಬಂದಲ್ಲಿ ತಾವಾಗಿಯೇ ಕಲಿತುಕೊಳ್ಳಬಲ್ಲರು.
ತಿಳಿಯಲು
ದ್ರಾವಿಡ
ಹಲವು
ನುಡಿಯನ್ನು
ತಾವಾಗಿಯೇ
ಮಗು ಒಂದು
ಈ ರೀತಿ ಮಕ್ಕಳು ತಮ್ಮ ಬೆಳವಣೆಗೆಯ ಅಂಗವಾಗಿ ತಮ್ಮ ಪರಿಸರದಲ್ಲಿ ಕಲಿತುಕೊಳ್ಳಲು ಬಳಕೆಯಾಗುತ್ತಿರುವ ಸಾದ್ಯವಾಗುವಂತಹ ‘ನುಡಿಯ ತಿಳಿವು’ ಇಲ್ಲವೇ ‘ವ್ಯಾಕರಣದ ತಿಳಿವೊ’ಂದನ್ನು ಪಡೆದು ಬಂದಿರುತ್ತವೆಯುಂಬುದಾಗಿ ಮಕ್ಕಳೂ ಹುಟ್ಟಿನಿಂದಲೇ ನುಡಿಯರಿಗರು ಒಂದು ತೀರ್ಮಾನಕ್ಕೆ ಬಂದಿದ್ದಾರೆ.
ಈ ವ್ಯಾಕರಣದ ತಿಳಿವು ಎಂತಹದು? ಇದು ಅರಿವಿಗೆ ಎಟಕದ ರೂಪದಲ್ಲಿರುವ ತಿಳಿವೆಂಬುದರಲ್ಲಿ ಸಂಶಯವಿಲ್ಲ. ಇದರ ಬಳಕೆಯೂ ಅರಿವಿಗೆ ಎಟಕದ ರೂಪದಲ್ಲೇ ನಡೆಯುತ್ತದೆ. ಸುತ್ತುಮುತ್ತಲಿನ ಜನರು ಆಡುವ ಮಾತುಗಳನ್ನು ಕೇಳಿ ಮಗು ತಾನಾಗಿಯೇ ಆ ನುಡಿಯಲ್ಲಿ ನಿರರ್ಗಳವಾಗಿ ಮಾತನಾಡಲು ಬಹಳ ಬೇಗ (ಎಂದರೆ ಕೆಲವೇ ಕೆಲವು ತಿಂಗಳುಗಳಲ್ಲಿ) ಕಲಿತುಕೊಳ್ಳುತ್ತದೆ. ಅದಕ್ಕೆ ಯಾರೂ ಏನನ್ನೂ ಕಲಿಸುವ ಅವಶ್ಯಕತೆಯಿಲ್ಲ. ಕಲಿತುಕೊಳ್ಳುವಾಗ, ಅದು ನುಡಿಯನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವ ವ್ಯಾಕರಣದ ತಿಳಿವಿಲ್ಲಿ ಹಲಕೆಲವು ಬದಲಾವಣೆಗಳುಂಟಾಗುತ್ತಿರುತ್ತವೆ. ಈ ಬದಲಾವಣೆಗಳ ಮೂಲಕ ಅದರ ಮಿದುಳಿನಲ್ಲಿ ಅದು ಕಲಿಯುತ್ತಿರುವ ನುಡಿಯದೇ ಆದ ವ್ಯಾಕರಣದ ತಿಳಿವು ತನ್ನಿಂದ ತಾನೇ ಸಿದ್ದಗೊಳ್ಳುತ್ತದೆ. ಇದು ಪ್ರಕ್ರುತಿಯ ವೈಚಿತ್ರ್ಯಗಳಲ್ಲೊಂದು.
ಪ್ರಪಂಚದ ನುಡಿಗಳಿಗೆಲ್ಲ ಸಮಾನವಾಗಿರುವಂತಹ ವ್ಯಾಕರಣ ತತ್ವಗಳು ಯಾವುವು ಎಂಬುದನ್ನು ತಿಳಿಯುವುದರ ಮೂಲಕ ಚಿಕ್ಕ ಮಕ್ಕಳು ಹುಟ್ಟಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವು ಎಂತಹದು ಎಂಬುದನ್ನು ಊಹಿಸಲು ಬರುತ್ತದೆ. ಇದಲ್ಲದೆ, ಪ್ರಪಂಚದ ನುಡಿಗಳು ಒಂದರಿಂದೊಂದು ಯಾವ ಯಾವ ರೀತಿಯಲ್ಲೆಲ್ಲ ಬೇರಾಗಿರಬಲ್ಲುವು ಎಂಬುದನ್ನು ತಿಳಿಯುವುದರ ಮೂಲಕ, ಚಿಕ್ಕ ಮಕ್ಕಳು ಹುಟ್ಟಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವಿನಲ್ಲಿ ಎಂತೆಂತಹ ಬದಲಾವಣೆಗಳನ್ನೆಲ್ಲ ನಡೆಸಬಲ್ಲುವು ಎಂಬುದನ್ನೂ ಊಹಿಸಲು ಬರುತ್ತದೆ.
ಮಾತಿನಲ್ಲಿ ಕೊರತೆ ಕಾಣಿಸುವ ಕೆಲವು ಮಕ್ಕಳಿಗೆ ಮಾತನ್ನು ಕಲಿಸಲು ಇಂತಹ ತಿಳುವಳಿಕೆಯಿಂದ ಪ್ರಯೋಜನವಾಗಬಹುದು. ಆದರೆ ಈ ಮೇಲಿನ ಎರಡು ರೀತಿಯ ಕೆಲಸಗಳನ್ನು ನಡೆಸಬೇಕಿದ್ದರೂ ನುಡಿಗಳಿಗಿರುವ ಅವುಗಳದೇ ಆದ ವ್ಯಾಕರಣ ಎಂತಹದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.
ಈ ರೀತಿ ನಮ್ಮೆಲ್ಲರ ಮಿದುಳಿನಲ್ಲೂ ಅರಿವಿಗೆ ಎಟಕದ ರೂಪದಲ್ಲಿರುವ ನಮ್ಮ ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕಬಲ್ಲ ರೂಪಕ್ಕೆ ಎಂದರೆ ವ್ಯಾಕರಣ ಹಲವಾರು ಪ್ರಯೋಜನಗಳಿವೆ. ಈ ಕೆಲಸವನ್ನು ಸರಿಯಾಗಿ ನಡೆಸಿಕೊಡುವುದೇ ಒಂದು ನುಡಿಯ ವ್ಯಾಕರಣದ ಮುಕ್ಯ ಉದ್ದೇಶ.
ರೂಪಕ್ಕೆ ಬದಲಾಯಿಸುವುದರಿಂದ
ಕಟ್ಟಲೆಗಳ
ಕನ್ನಡದ ಮಟ್ಟಿಗೆ ಈ ಕೆಲಸ ಹೇಗೆ ನಡೆಯಬೇಕು, ಸದ್ಯಕ್ಕೆ ಅದು ಹೇಗೆ ತಪ್ಪುದಾರಿಯಲ್ಲಿ ಸಾಗಿದೆ ಎಂಬುದನ್ನು ತೋರಿಸಿಕೊಡುವ ಒಂದು ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ವ್ಯಂಜನ ಗ್ ಎಂದಾಗುತ್ತದೆ