Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ
ಪರಿವಿಡಿ
- ಅಧ್ಯಾಯ 1 — ಮುನ್ನೋಟ
- ಅಧ್ಯಾಯ 2 — ಸೇರಿಕೆಯ ನಿಯಮಗಳು
- ಅಧ್ಯಾಯ 3 — ಪದವಗ್ರಗಳು
- ಅಧ್ಯಾಯ 4 — ಪದಗಳ ಒಳರಚನೆ
- ಅಧ್ಯಾಯ 5 — ಸಮಾಸಗಳು
- ಅಧ್ಯಾಯ 6 — ಲಿಂಗ ಮತ್ತು ವಚನಗಳು
- ಅಧ್ಯಾಯ 7 — ವಿಭಕ್ತಿಗಳು ಮತ್ತು ಕಾರಕಗಳು
- ಅಧ್ಯಾಯ 8 — ವಿಭಕ್ತಿಗಳು
- ಅಧ್ಯಾಯ 9 — ವಿಭಕ್ತಿಪಲ್ಲಟ
- ಅಧ್ಯಾಯ 10 — ಸವ್ರನಾಮಗಳು ಮತ್ತು ಎಣಿಕೆಯ ಪದಗಳು
- ಅಧ್ಯಾಯ 11 — ಕ್ರಿಯಾರೂಪಗಳು
- ಅಧ್ಯಾಯ 12 — ಮುಕ್ತಾಯ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಡಿ. ಎನ್. ಶಂಕರ ಬಟ್
VYAAKARANA (Kannada needs its own grammar) by D.N.Shankara Bhat, Mungaravalli, Bhimanakone P.O, Honnesara, Sagara 577 417; Phone: 9449774956;
E-mail: bhatdns@rediffmail.com
ಮೊದಲನೆಯ ಅಚ್ಚು : 2000 ತಿದ್ದಿ ದೊಡ್ಡದು ಮಾಡಿರುವ ಏಳನೆಯ ಅಚ್ಚು : 2013
ಬಿ: ಬರಹಗಾರ
ಹೊರಪಡಿಕೆ : ಡಿ. ಎನ್. ಶಂಕರ ಬಟ್, ಮುಂಗರವಳ್ಳಿ, ಬೀಮನಕೋಣೆ ಅಂಚೆ, ಹೊನ್ನೇಸರ, ಸಾಗರತೀರ್ಥಹಳ್ಳಿ 577 417
ನವಕರ್ನಾಟಕ ಪ್ರಕಾಶನ, 11, ಕ್ರೆಸೆಂಟ್ ರಸ್ತೆ, ಕೆ.ಪಿ.ಈಸ್್ಟ, ಬೆಂಗಳೂರು 560 001.
ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮೈಸೂರು 570 014.
ಈ ಪುಸ್ತಕಕ್ಕೆ ಎರಡು ಮುಖ್ಯವಾದ ಉದ್ದೇಶಗಳಿವೆ. ಪೌ್ರಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಿದ್ದಲ್ಲಿ ಎಂತಹ ವ್ಯಾಕರಣ ವನ್ನು ಕಲಿಸಬೇಕು ಎಂಬುದನ್ನು ಸೂಚಿಸುವುದು ಒಂದು ಉದ್ದೇಶ, ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಸಂಶೋಧನೆ ನಡೆಸುವವರು ಯಾವ ಮಾಗ್ರದಲ್ಲಿ ಹೋದರೆ ಸಫಲರಾಗಬಲ್ಲರು ಎಂಬುದನ್ನು ತಿಳಿಸುವುದು ಇನ್ನೊಂದು ಉದ್ದೇಶ.
ಪೌ್ರಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವ ಅವಶ್ಯಕತೆಯಿದೆಯೇ ಅಥವಾ ಇಲ್ಲವೇ? ಇದೆಯಾದರೆ ಅದನ್ನು ಯಾವ ರೀತಿ ಯಲ್ಲಿ ಕಲಿಸಬೇಕು? ನೇರವಾಗಿ ಕಲಿಸಬೇಕೇ ಅಥವಾ ಪದಗಳ ಮತ್ತು ವಾಕ್ಯ ಗಳ ಬಳಕೆಯನ್ನು ವಿವರಿಸುವುದರ ಮೂಲಕ ಪರೋಕ್ಷವಾಗಿ ಕಲಿಸಬೇಕೆ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಶಿಕ್ಷಣತಜ್ಞರೇ ಕೊಡಬೇಕು. ನಾನು ಶಿಕ್ಷಣ ತಜ್ಞನಲ್ಲ, ವೈಯಾಕರಣಿ ಮಾತ್ರ. ಹಾಗಾಗಿ, ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಹೇಳಲು ನಾನಿಲ್ಲಿ ಪ್ರಯತ್ನಿಸಿಲ್ಲ.
ಆದರೆ ಕನ್ನಡದ ಮಟ್ಟಿಗೆ ಎಂತಹ ವ್ಯಾಕರಣವನ್ನು ಕಲಿಸಬೇಕು? ಸದ್ಯಕ್ಕೆ ಪಠ್ಯಗಳಾಗಿರುವ ವ್ಯಾಕರಣ ಪುಸ್ತಕಗಳು ಈ ಕೆಲಸವನ್ನು ಸಮಪ್ರಕವಾಗಿ ನೆರವೇರಿಸುತ್ತಿವೆಯೇ? ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ಒಬ್ಬ ವೈಯಾ ಕರಣಿ ಮಾತ್ರ ಕೊಡಬಲ್ಲ. ಕನ್ರಾಟಕದಲ್ಲಿ ಶಿಕ್ಷಣ ತಜ್ಞರು ಈ ವಿಷಯದಲ್ಲಿ ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕನ್ನಡ ವ್ಯಾಕರಣವನ್ನು ಹೇಗೆ ಮತ್ತು ಎಷ್ಟು ಕಲಿಸಬೇಕು ಎಂಬುದನ್ನು ಮಾತ್ರವಲ್ಲದೆ, ಆ ಹೆಸರಿನಲ್ಲಿ ಏನು ಕಲಿಸ ಬೇಕು ಎಂಬುದನ್ನೂ ಅವರೇ ನಿರ್ಧರಿಸುತ್ತಿರುವ ಹಾಗೆ ಕಾಣಿಸುತ್ತದೆ.
ಕನ್ನಡ ವ್ಯಾಕರಣ ಎಂಬ ಹೆಸರಿನಲ್ಲಿ ಏನೇನೋ ಅನವಶ್ಯಕವಾದ ಮತ್ತು ತಪ್ಪು ತಪ್ಪಾದ ವಿಷಯಗಳನ್ನು ಕಲಿಸುವುದರ ಮೂಲಕ ಪೌ್ರಢಶಾಲೆಯ ವಿದ್ಯಾರ್ಥಿಗಳ ಅಮೂಲ್ಯವಾದ ಸಮಯವನ್ನು ಈ ಶಿಕ್ಷಣತಜ್ಞರು ಹಾಳು ಮಾಡುತ್ತಿದ್ದಾರೆ. ಇದು ಹೇಗೆ ಎಂಬುದನ್ನು ನಾನು ಈ ಪುಸ್ತಕದಲ್ಲಿ ವಿವರಿಸಿ ತೋರಿಸಿದ್ದೇನೆ. ಇದನ್ನವರು ಒಮ್ಮೆಯಾದರೂ ಓದಿನೋಡಿ ತಾವು ಎಂತಹ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲಿ ಎನ್ನುವುದು ನನ್ನ ಉದ್ದೇಶ. ವ್ಯಾಕರಣ ಶಿಕ್ಷಣದಲ್ಲಿ ಮತ್ತು ಕನ್ನಡ ವ್ಯಾಕರಣದಲ್ಲಿ ಆಸಕ್ತಿಯಿರುವ ಇತರರಿಗೂ ಈ ಪುಸ್ತಕ ರುಚಿಸಬಲ್ಲುದು.
ಕನ್ರಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಡೆಯು ತ್ತಿರುವ ಸಂಶೋಧನೆಗಳು ಹೊಸದೇನನ್ನೂ ಕಂಡುಹಿಡಿಯುವ ಹಾಗೆ ಕಾಣಿಸು ವುದಿಲ್ಲ. ಇದಕ್ಕೆ ಈ ಸಂಶೋಧನೆಗಳು ಹಾದಿ ತಪ್ಪಿರುವುದೇ ಕಾರಣವೆಂದು ನನ್ನ ಅಭಿಪ್ರಾಯ. ಕೇಶಿರಾಜನೇ ಮೊದಲಾದ ಹಿಂದಿನ ವೈಯಾಕರಣಿಗಳು ಕನ್ನಡ ವ್ಯಾಕರಣದ ಕುರಿತು ಏನು ಹೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಸಾಲದು. ಅವರು ಹೇಳಿರುವುದರಲ್ಲಿ ತಪ್ಪು ಇಲ್ಲವೇ ಅಸಾಂಗತ್ಯ ಏನಾದರೂ ಇದೆಯೇ? ಅವರು ಹೇಳದೇ ಇರುವಂತಹ ವಿಷಯಗಳೇನಾದರೂ ಇವೆಯೇ? ಎಂಬುದನ್ನು ಕಂಡುಹಿಡಿದಾಗ ಮಾತ್ರ ಅದು ಸಂಶೋಧನೆಯಾಗಬಲ್ಲುದು.
ಕನ್ನಡ ವ್ಯಾಕರಣದ ಮಟ್ಟಿಗೆ ನಮಗೆ ತಿಳಿಯದಿರುವ ಇಂತಹ ಸಾವಿರಾರು ವಿಷಯಗಳಿವೆ. ಇವು ಎಂತಹವು ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ಹಾಗಾಗಿ ಇದು ಸಂಶೋಧನೆ ಮಾಡ ಬೇಕೆಂದಿರುವವರಿಗೆ ಮಾಗ್ರದಶ್ರಿಯಾಗಬಲ್ಲುದು.
ಈ ಪುಸ್ತಕದ ಹಸ್ತಪ್ರತಿಯನ್ನೊಮ್ಮೆ ಓದಿ ನೋಡಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ಕೊಟ್ಟ ಗೆಳೆಯ ಡಾ. ಭ. ಮಲ್ಲಿಕಾಜ್ರುನ ಅವರಿಗೆ ನಾನು ಆಭಾರಿ. ಇದಲ್ಲದೆ ಈ ಪುಸ್ತಕದ ಪ್ರಕಟಣೆಗೆ ಅನುದಾನ ಕೊಟ್ಟಿರುವ ಭಾರತೀಯ ಭಾಷಾ ಸಂಸ್ಥಾನಕ್ಕೂ, ಇದನ್ನು ಬರೆಯುವುದಕ್ಕೆ ಮತ್ತು ಮುದ್ರಿಸುವುದಕ್ಕೆ ‘ಬರಹ’ ತಂತ್ರಾಶವನ್ನು ಉಚಿತವಾಗಿ ಬಳಸಲು ಒಪ್ಪಿಗೆ ಕೊಟ್ಟಿರುವ ಶ್ರೀ ಶೇಶಾದ್ರಿವಾಸು ಚಂದ್ರಶೇಖರನ್ ಅವರಿಗೂ, ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ಶ್ರೀ ರಾ. ವೆಂ. ಶ್ರೀನಿವಾಸ ಮೂತ್ರಿ ಮತ್ತು ಅವರ ಸುಪುತ್ರ ಶ್ರೀ ರಾ. ಮೋಹನ ಮೂತ್ರಿ ಅವರಿಗೂ ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವರ್ಧನ ಅವರಿಗೂ ನಾನು ಆಭಾರಿ.
ಕನ್ನಡ ವ್ಯಾಕರಣದ ಮೇಲೆ
ಮೈಸೂರು ಜನವರಿ 25, 2000
ಡಿ. ಎನ್. ಶಂಕರ ಭಟ್
ತಿದ್ದಿ ದೊಡ್ಡದು ಮಾಡಿದ ಎರಡನೆಯ ಅಚ್ಚು
ಈ ಪುಸ್ತಕದ ಮೊದಲನೆಯ ಮುದ್ರಣದ ಪ್ರತಿಗಳೆಲ್ಲ ಒಂದೇ ವಷ್ರದಲ್ಲಿ ತೀರಿ ಹೋದುವು. ಈ ಎರಡನೆಯ ಮುದ್ರಣದಲ್ಲಿ ಹಲಕೆಲವು ಬದಲಾವಣೆ ಗಳನ್ನು ಮಾಡಿದ್ದೇನೆ. ಇವು ಸಹೃದಯ ಓದುಗರಿಗೆ ಮೆಚ್ಚುಗೆಯಾಗಬಹುದೆಂದು ಭಾವಿಸುತ್ತೇನೆ.
ಮೈಸೂರು ಜುಲಾಯಿ 15, 2001
ಡಿ. ಎನ್. ಶಂಕರ ಭಟ್
ಇನ್ನೊಮ್ಮೆ ತಿದ್ದಿ ದೊಡ್ಡದು ಮಾಡಿದ ಮೂರನೆಯ ಅಚ್ಚು
ಈ ಮೂರನೆಯ ಮುದ್ರಣದಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಿದ್ದೇನೆ. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಎಂಬ ಹೆಸರಿನ ಪುಸ್ತಕವನ್ನು (ಭಟ್ 2005) ಬರೆಯುವ ಸಮಯದಲ್ಲಿ ಕನ್ನಡ ವ್ಯಾಕರಣದ ಕುರಿತು ನಾನು ಕಂಡುಹಿಡಿದ ಕೆಲವು ಹೊಸ ವಿಷಯಗಳನ್ನೂ ಈ ಪುಸ್ತಕದಲ್ಲಿ ಸೇರಿಸಿ ಕೊಂಡಿದ್ದೇನೆ. ಇದರಿಂದಾಗಿ ಈ ಪುಸ್ತಕದ ಉದ್ದೇಶ ಇನ್ನಷ್ಟು ಸ್ಪಷ್ಟವಾಗಿದೆ ಯುಂದು ನನಗೆ ಅನಿಸುತ್ತದೆ.
ಮೈಸೂರು ಫೆಬ್ರವರಿ 1, 2006
ಡಿ. ಎನ್. ಶಂಕರ ಭಟ್
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12