← Ch 9  ·  Contents  ·  Ch 11 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

10. ಸವ್ರನಾಮಗಳು ಮತ್ತು ಎಣಿಕೆಯ ಪದಗಳು

Eke →

10.1 ಮುನ್ನೋಟ

ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬುದಾಗಿ ಎರಡು ಮುಖ್ಯ ಪದ ವಗ್ರಗಳು ಮಾತ್ರವಲ್ಲದೆ ಗುಣಪದಗಳೆಂಬ ಇನ್ನೊಂದು ಪದವಗ್ರವೂ ಇದೆ ಯೆಂಬುದನ್ನು ನಾವು ಮೂರನೇ ಅಧ್ಯಾಯದಲ್ಲಿ ನೋಡಿರುವೆವು. ಸಂಸ್ಕೃತದಲ್ಲಿ ಗುಣಪದಗಳು ನಾಮಪದಗಳ ಹಾಗೆಯೇ ಬಳಕೆಯಾಗುವುವಾದ ಕಾರಣ, ಅದರಲ್ಲಿ ಕನ್ನಡದ ಹಾಗೆ ಗುಣಪದಗಳೆಂಬ ಮೂರನೆಯದೊಂದು ಪದವಗ್ರ ವಿದೆಯೆಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ.
ಈ ಎರಡು ಭಾಷೆಗಳಲ್ಲೂ ಮೇಲಿನ ಪದವಗ್ರಗಳಿಗೆ ಸೇರದ ಬೇರೆ ಕೆಲವು ಪದಗಳಿದ್ದು, ಅವನ್ನು ಅವ್ಯಯಗಳೆಂಬ ಇನ್ನೊಂದು ವಗ್ರದಲ್ಲಿ ಸೇರಿಸಿ ಹೇಳುವುದು ರೂಢಿ. ಸಂಸ್ಕೃತದ ವೈಯಾಕರಣಿಗಳು ಕೆಲವರು ಇವನ್ನೂ ನಾಮ ಪದಗಳ ವಗ್ರದಲ್ಲೇ ಸೇರಿಸಿದ್ದಾರೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಾಗದು.
ಸಂಸ್ಕೃತದಲ್ಲಿ ಸವ್ರನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು) ನಾಮಪದಗಳ ವಗ್ರದಲ್ಲೇನೇ ಸೇರಿಸಿ ಹೇಳುವುದು ರೂಢಿ. ಆದರೆ, ಕನ್ನಡದಲ್ಲಿ ಹೀಗೆ ಮಾಡಲು ಸಾಧ್ಯವಾಗದು. ಕನ್ನಡದ ಸವ್ರನಾಮಗಳು ಎರಡು ಮುಖ್ಯ ಗುಂಪುಗಳಲ್ಲಿ ಬರುತ್ತಿದ್ದು, ಅವು ನಾಮಪದಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿವೆ. ಎಣಿಕೆಯ ಪದಗಳೂ ಕೆಲವು ವಿಷಯಗಳಲ್ಲಿ ನಾಮ ಪದಗಳ ಹಾಗಿಲ್ಲ.

Eke →

10.2 ಸವ್ರನಾಮಗಳು

ಹೆಚ್ಚಿನ ಕನ್ನಡ ವ್ಯಾಕರಣಗಳಲ್ಲೂ ಎರಡು ರೀತಿಯ ಪದಗಳನ್ನು ಒಟ್ಟಾಗಿ ‘ಸವ್ರ ನಾಮ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಆಡುಗ(ಉತ್ತಮಪುರುಷ) ಮತ್ತು ಕೇಳುಗ(ಮಧ್ಯಮಪುರುಷ)ಗಳನ್ನು ಸೂಚಿಸುವ ನಾನು, ನಾವು ಮತ್ತು ನೀನು, ನೀವು ಎಂಬವುಗಳು ಮತ್ತು ವಾಕ್ಯದಲ್ಲೇನೇ ಬೇರೆ ಕಡೆಯಲ್ಲಿ ಗುರುತಿಸಿರುವ ವ್ಯಕ್ತಿಯನ್ನು ಸೂಚಿಸುವ ತಾನು, ತಾವು ಎಂಬವುಗಳು ಒಂದು ರೀತಿಯವುಗಳು.

ಇತರ  (ಪ್ರಥಮಪುರುಷ)  ವ್ಯಕ್ತಿ,  ವಸ್ತು  ಮೊದಲಾದುವನ್ನು  ಸೂಚಿಸುವ  ಅವನು,  ಅವಳು  ಮೊದಲಾದವುಗಳು  ಮತ್ತು  ಮುಖ್ಯವಾಗಿ  ಕೇಳ್ವಿ  (‘ಪ್ರಶ್ನಾ  ರ್ಥಕ’)  ವಾಕ್ಯಗಳಲ್ಲಿ  ಬರುವ  ಯಾವನು,  ಯಾವಳು  ಮೊದಲಾದವುಗಳು  ಇನ್ನೊಂದು ರೀತಿಯವುಗಳು.  
ಈ  ಎರಡು  ರೀತಿಯ  ಸವ್ರನಾಮಗಳ  ನಡುವೆ  ಹಲವು  ವ್ಯತ್ಯಾಸಗಳಿದ್ದು,  ನಿಜಕ್ಕೂ  ಇವನ್ನೆಲ್ಲ  ‘ಸವ್ರನಾಮ’  ಎಂಬ  ಒಂದೇ  ಪದವಗ್ರದಲ್ಲಿ  ಸೇರಿಸಿ  ಹೇಳುವುದು ಸ್ವಲ್ಪ ಕಷ್ಟ. 

Eke →

10.2.1 ಪುರುಷಪದಗಳು ಮತ್ತು ಸವ್ರಪದಗಳು

ಮೇಲೆ ವಿವರಿಸಿದ ಪದಗಳನ್ನೆಲ್ಲ ಸಾಮಾನ್ಯವಾಗಿ ನಾಮಪದಗಳಿಗೆ ಬದಲಾಗಿ ಬರಬಲ್ಲುವೆಂಬ ಒಂದು ವಿಷಯದ ಆಧಾರದ ಮೇಲೆ ‘ಸವ್ರನಾಮ’ ಎಂಬ ಪದವಗ್ರದಲ್ಲಿ ಇರಿಸುವುದು ರೂಢಿ.
ಆದರೆ ನಿಜಕ್ಕೂ ಆಡುಗ ಮತ್ತು ಕೇಳುಗರನ್ನು ಸೂಚಿಸುವ ನಾನು, ನೀನು ಮೊದಲಾದ ಪದಗಳು ಬೇರೆ ನಾಮಪದಗಳಿಗೆ ಬದಲಾಗಿ ಬರುವಂತಹ ಪದ ಗಳಲ್ಲ. ಅವಕ್ಕೆ ತಮ್ಮದೇ ಆದ ಒಂದು ವ್ಯಾಕರಣ ಕಾರ್ಯವಿದೆ. (1ಕ, ಖ) ವಾಕ್ಯಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾದೀತು.

(1R

ನಾನು ನಿಮಗೆ ಹತ್ತು ರುಪಾಯಿ ಕೊಡುತ್ತೇನೆ ರಾಜು ಹರಿಗೆ ಹತ್ತು ರುಪಾಯಿ ಕೊಡುತ್ತಾನೆ

(1ಕ)  ವಾಕ್ಯ  ಒಂದು  ವಾಗ್ದಾನ  ಇಲ್ಲವೇ  ಮಾತು  ಕೊಡುವ  ಕಾರ್ಯವನ್ನು  ನಡೆಸಬಲ್ಲುದು,  ಆದರೆ  (1ಖ)  ವಾಕ್ಯ  ಬರೇ  ಒಂದು  ವಿಷಯವನ್ನು  ಮಾತ್ರ  ತಿಳಿಸಬಲ್ಲುದು. ಯಾಕೆಂದರೆ, ವಾಕ್ಯವೊಂದರಲ್ಲಿ ಅದರ ಆಡುಗನನ್ನು ಸೂಚಿಸುವ  ನಾನು ಪದದ ಬಳಕೆಯಾಗದೆ ಅದು ‘ವಾಗ್ದಾನ’ವಾಗಲಾರದು. 
ಇಂತಹ ನಿಬ್ರಂಧಗಳಿಗೆ ಕಾರಣವೇನೆಂದರೆ, ಒಂದು ವಾಕ್ಯವನ್ನು ಆಡಿರುವ  ವ್ಯಕ್ತಿಯನ್ನು  ಆ  ವಾಕ್ಯದಲ್ಲಿ  ಬಂದಿರುವ  ನಾನು  ಎಂಬ  ಪದ  ಮಾತ್ರವೇ  ಸೂಚಿಸಬಲ್ಲುದು ಮತ್ತು ಯಾರನ್ನುದ್ದೇಶಿಸಿ ಆ ವಾಕ್ಯವನ್ನು ಆಡಲಾಗಿದೆಯೋ ಆ  ವ್ಯಕ್ತಿಯನ್ನು  ನೀನು  ಎಂಬ  ಪದ  ಮಾತ್ರವೇ  ಸೂಚಿಸಬಲ್ಲುದು.  ಈ  ಎರಡು  ಕೆಲಸಗಳನ್ನು ಕನ್ನಡದಲ್ಲಿ ಬೇರೆ ಯಾವ ಪದವೂ ಮಾಡಲಾರದು. 

ನಾನು ರೂಪಳನ್ನು ಮೆಚ್ಚಿದ್ದೇನೆ (2ಖ) ನಿನಗೆ ಈ ಪುಸ್ತಕ ಮೆಚ್ಚಿಗೆಯಾಗಿದೆಯೇ?

(2ಕ)  ವಾಕ್ಯದಲ್ಲಿರುವ  ನಾನು  ಪದಕ್ಕೆ  ಆ  ವಾಕ್ಯವನ್ನು  ಆಡಿರುವ  ವ್ಯಕ್ತಿ  ಯನ್ನು ಸೂಚಿಸುವ ಕೆಲಸವಿದೆ. ಆ ವಾಕ್ಯವನ್ನು ರಾಜು ಹೆಸರಿನ ವ್ಯಕ್ತಿ ಆಡಿರುವ  ನಾದರೆ,  ಅದರಲ್ಲಿ  ಬಂದಿರುವ  ನಾನು  ಪದ  ರಾಜುವನ್ನು  ಸೂಚಿಸುತ್ತಿದೆ  ಯುಂದೇನೋ  ಹೇಳಬಹುದು.  ಆದರೆ  (2ಕ)ದಲ್ಲಿ  ನಾನು  ಪದದ  ಬದಲು  ರಾಜು ಪದವನ್ನು ಬಳಸಿದಲ್ಲಿ ಅದು ಆ ವಾಕ್ಯದ ಆಡುಗನನ್ನು ಸೂಚಿಸಲಾರದು. 

ರಾಜು ಜಾನಕಿಯನ್ನು ಮೆಚ್ಚಿದ್ದಾನೆ

ನೀನು ಪದದ ಬಳಕೆಯೂ ಇದೇ ರೀತಿಯಲ್ಲಿ (2ಖ)ದಲ್ಲಿ ಕಾಣಿಸಿದ ಹಾಗೆ  ತನ್ನದೇ ಆದ ಒಂದು ಕೆಲಸವನ್ನು ಕನ್ನಡ ವಾಕ್ಯಗಳಲ್ಲಿ ನಡೆಸುತ್ತದೆ. 
ಆಡುಗ  ಮತ್ತು  ಕೇಳುಗರನ್ನು  ಸೂಚಿಸುವ  ಸವ್ರನಾಮಗಳ  ಇನ್ನೊಂದು  ವೈಶಿಷ್ಟ್ಯವೇನೆಂದರೆ,  ಸಾಮಾನ್ಯವಾಗಿ  ಅವು  ಸೂಚಿಸುವ  ವ್ಯಕ್ತಿ  ಎಂತಹವನು  ಎಂಬುದನ್ನು ಆ ಪದಗಳು ನೇರವಾಗಿ ತಿಳಿಸಲಾರವು. ಇದಕ್ಕಾಗಿ ಅವುಗಳೊಂದಿಗೆ  ಬೇರೆ ನಾಮಪದಗಳನ್ನು ಬಳಸುವ ಅವಶ್ಯಕತೆಯಿದೆ.  
ಉದಾಹರಣೆಗಾಗಿ,  ಒಬ್ಬ  ವ್ಯಕ್ತಿ  ಬಾಗಿಲನ್ನು  ತಟ್ಟಿದಾಗ  ಒಳಗಿದ್ದವನು  ಯಾರು?  ಎಂದು  ಪ್ರಶ್ನಿಸಬಹುದು.  ಆಗ  ಹೊರಗಿದ್ದವನು  ನಾನು  ಎಂದಿಷ್ಟೇ  ಹೇಳಿದಲ್ಲಿ ಅದು ಯಾರೆಂದು ಒಳಗಿದ್ದವನಿಗೆ ಗೊತ್ತಾಗದಿರಲು ಸಾಧ್ಯವಿದೆ.  
ಇಂತಹ  ಸಂದಭ್ರಗಳಲ್ಲಿ  ಆಡುಗ  ಸವ್ರನಾಮಕ್ಕೆ  ನೇರವಾಗಿ  ವಿಶೇಷಣ  ಗಳನ್ನು  ಸೇರಿಸಿ  ಹೇಳಲು  ಸಾಧ್ಯವಾಗದು.  ಅದರೊಂದಿಗೆ  ಹೊರಗಿದ್ದವನು  ತನ್ನ  ಹೆಸರನ್ನೂ  ಸೇರಿಸಿ  ನಾನು  ರಾಜು  ಎಂಬುದಾಗಿ  ಹೇಳುವುದೊಂದೇ  ಇಲ್ಲಿ  ಉಳಿದಿರುವ ದಾರಿ.    
ಆದರೆ  ಇತರ  ಸವ್ರನಾಮಗಳ  ಬಳಕೆಯಲ್ಲಿ  ಇಂತಹ  ತೊಂದರೆಯಿಲ್ಲ.  ಉದಾಹರಣೆಗಾಗಿ,  ಆಡುಗ  ಮತ್ತು  ಕೇಳುಗರನ್ನು  ಹೊರತುಪಡಿಸಿ  ಇತರ  ವ್ಯಕ್ತಿಗಳನ್ನು  ಸೂಚಿಸುವ  ಅವನು  ಸವ್ರನಾಮದೊಂದಿಗೆ  ವಿಶೇಷಣಗಳನ್ನು  ಸೇರಿಸಿ ದೊಡ್ಡವನು, ಮೊದಲಿನವನು, ಮನೆಗೆ ಹೋದವನು ಮೊದಲಾದ  ರೂಪಗಳನ್ನು ತಯಾರಿಸಿ ಬಳಸಲು ಸಾಧ್ಯವಿದೆ.  
ಇನ್ನೊಂದು ವ್ಯತ್ಯಾಸವೇನೆಂದರೆ, ಆಡುಗ ಮತ್ತು ಕೇಳುಗ ಸವ್ರನಾಮಗಳು  ವ್ಯಕ್ತಿಸೂಚಕಗಳಾಗಿ ನಾಮಪದಗಳ ಹಾಗೆ ಮಾತ್ರ ಬರಬಲ್ಲುವು.  ಆದರೆ, ಇತರ  ಸವ್ರನಾಮಗಳು  ಅವನು,  ಅವಳು,  ಅದು  ಮೊದಲಾದ  ರೂಪಗಳಲ್ಲಿ  ನಾಮ  ಪದಗಳ  ಹಾಗೆ  ಮಾತ್ರವಲ್ಲದೆ  ಆ,  ಈ,  ಯಾವ  ಮೊದಲಾದ  ರೂಪಗಳಲ್ಲಿ  ಗುಣಪದಗಳ  ಹಾಗೆಯೂ  ಅಷ್ಟು,  ಎಷ್ಟು,  ಹೇಗೆ  ಮೊದಲಾದ  ರೂಪಗಳಲ್ಲಿ  ಕ್ರಿಯಾಗುಣಪದಗಳ  ಹಾಗೆಯೂ  ಬರಬಲ್ಲುವು  (ಹೆಚ್ಚಿನ  ವಿವರಗಳಿಗೆ  ಭಟ್  2003, 2004 ನೋಡಿ). 

ಇಂತಹ  ಹಲವು  ಕಾರಣಗಳಿಗಾಗಿ,  ನಾನು,  ನಾವು,  ನೀನು,  ನೀವು,  ತಾನು  ಮತ್ತು  ತಾವು  ಎಂಬವುಗಳನ್ನು  ‘ಪುರುಷಪದ’ಗಳೆಂಬ  ಪದವಗ್ರದಲ್ಲಿ  ಮತ್ತು  ಅವನು,  ಅವಳು,  ಅದು,  ಇವನು,  ಈಕೆ,  ಯಾರು,  ಎಷ್ಟು,  ಎಲ್ಲಿ,  ಯಾವಾಗ  ಮೊದಲಾದುವನ್ನು  ಅದಕ್ಕಿಂತ  ತೀರ  ಭಿನ್ನವಾದ  ‘ಸವ್ರಪದ’ಗಳೆಂಬ  ಪದವಗ್ರದಲ್ಲಿ ಇರಿಸಿ ಹೇಳುವುದೇ ಕನ್ನಡ (ಮತ್ತು ಇತರ ಹಲವು ಭಾಷೆಗಳ)  ವ್ಯಾಕರಣಗಳ ಮಟ್ಟಿಗೆ ಯೋಗ್ಯವಾದ ವಿಧಾನ.  

Eke →

10.2.2 ಸವ್ರಪದಗಳ ಸ್ವರೂಪ

ಮೇಲೆ ಸೂಚಿಸಿದ ಹಾಗೆ, ಪುರುಷಪದ ಮತ್ತು ಸವ್ರಪದಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕನ್ನಡದಲ್ಲಿ ಪುಂ-ಸ್ತ್ರೀ- ನಪುಂಸಕ ಲಿಂಗಭೇದ ಸವ್ರಪದಗಳಲ್ಲಿ ಮಾತ್ರ ಕಾಣಿಸುತ್ತದೆಯಲ್ಲದೆ ಪುರುಷ ಪದಗಳಲ್ಲಿ ಕಾಣಿಸುವುದಿಲ್ಲ.
ನಾನು ಎಂಬುದನ್ನು ಹೆಂಗಸರು ಮಾತನಾಡುವುದಿದ್ದರೂ ಬಳಸಬಹುದು, ಗಂಡಸರು ಮಾತನಾಡುವುದಿದ್ದರೂ ಬಳಸಬಹುದು. ನೀನು ಮತ್ತು ತಾನು ಎಂಬವುಗಳನ್ನೂ ಇದೇ ರೀತಿಯಲ್ಲಿ ಲಿಂಗಭೇದವನ್ನು ಗಮನಕ್ಕೆ ತೆಗೆದುಕೊಳ್ಳದೆ ಬಳಸಲು ಸಾಧ್ಯವಿದೆ.
ಆದರೆ ಅವನು, ಅವಳು ಮೊದಲಾದ ಸವ್ರಪದಗಳು ಮೇಲೆ ವಿವರಿಸಿದ ಪುರುಷಪದಗಳಿಗಿಂತ ಭಿನ್ನವಾಗಿದ್ದು ಲಿಂಗಭೇದವನ್ನು ತೋರಿಸುತ್ತವೆ.
ಇದಲ್ಲದೆ ಬಹುವಚನರೂಪ, ಷಷ್ಠೀರೂಪ ಮೊದಲಾದವುಗಳಲ್ಲೂ ಸವ್ರ ಪದಗಳು ಪುರುಷಪದಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

ಏಕವಚನ ರೂಪ

ಪುರುಷಪದ ನಾನು ನೀನು ತಾನು

ಸವ್ರಪದ ಅವನು

ಬಹುವಚನ ರೂಪ ಷಷ್ಠೀರೂಪ ನಾವು
ನೀವು
ತಾವು
ಅವರು
ಅವು(ಗಳು)

ನನ್ನ 
ನಿನ್ನ 
ತನ್ನ 
ಅವನ 

ಇದಕ್ಕಿಂತಲೂ  ಮುಖ್ಯವಾಗಿ,  ಅವನು,  ಅವಳು,  ಅವರು,  ಅದು  ಮೊದಲಾದ  ಸವ್ರಪದಗಳು  ಇವನು,  ಇವಳು,  ಇವರು,  ಇದು  ಮೊದಲಾದ  ಬೇರೆ ಕೆಲವು ಸವ್ರಪದಗಳೊಂದಿಗೆ ಮತ್ತು ಯಾವನು, ಯಾವಳು, ಯಾರು, 

ಯಾವುದು ಮೊದಲಾದ ‘ಪ್ರಶ್ನಾರ್ಥಕ’ ಸವ್ರಪದಗಳೊಂದಿಗೆ ಒಂದು ರೂಪಾ ವಳಿಯಲ್ಲಿ ಬರುತ್ತವೆ.
ಈ ರೂಪಾವಳಿಯಲ್ಲಿ ನಾಮಪದಗಳಾಗಿ ಬರುವ ಸವ್ರಪದಗಳು ಮಾತ್ರ ವಲ್ಲದೆ ಗುಣಪದಗಳಾಗಿ ಮತ್ತು ಅವ್ಯಯಗಳಾಗಿ ಬರುವ ಸವ್ರಪದಗಳೂ ಇವೆ. ಉದಾಹರಣೆಗಾಗಿ, ಈ ಪಟ್ಟಿಯಲ್ಲಿ ಬರುವ ಪದಗಳಲ್ಲಿ ಅಂತಹ, ಹಾಗೆ, ಎಷ್ಟು, ಯಾವ ಮೊದಲಾದವುಗಳನ್ನು ಕನ್ನಡದ ಮಟ್ಟಿಗೆ ‘ಸವ್ರನಾಮ’ಗಳೆಂದು ಕರೆಯುವುದು ಕಷ್ಟಸಾಧ್ಯ. ಯಾಕೆಂದರೆ ಅವುಗಳಲ್ಲಿ ಎಲ್ಲವೂ ‘ನಾಮ’ಪದ ಗಳಲ್ಲ; ಕೆಲವು ಗುಣಪದಗಳು ಮತ್ತು ಬೇರೆ ಕೆಲವು ಅವ್ಯಯಗಳು. ಹೀಗಿದ್ದರೂ ಈ ಪಟ್ಟಿಯಲ್ಲಿರುವ ಎಲ್ಲಾ ಪದಗಳೂ ಒಂದೇ ವಗ್ರದಲ್ಲಿ ಸೇರುತ್ತವೆಯುಂಬು ದರಲ್ಲಿ ಸಂಶಯವಿಲ್ಲ.

ಅವನು ಇವನು ಅವಳು ಇವಳು ಅವರು ಇವರು D

F

ಯಾವನು
ಯಾವಳು
ಯಾವುದು
ಯಾರು ಯಾವುವು
ಯಾವ

ಇಷ್ಟು ಅಷ್ಟು ಅಂತಹ ಇಂತಹ ಎಂತಹ

ಯಾವಾಗ ಎಷ್ಟು ಹೇಗೆ

ಕನ್ನಡದಲ್ಲಿ  ಮೇಲಿನ  ಪದಗಳು  ಮಾತ್ರವಲ್ಲದೆ,  ಏನು  ಮತ್ತು  ಯಾಕೆ  ಎಂಬ  ಬೇರೆಯೂ  ಎರಡು  ಸವ್ರಪದಗಳಿದ್ದು  ಅವು  ಈ  ರೂಪಾವಳಿಯಿಂದ  ಹೊರಗೆ  ನಿಲ್ಲುತ್ತವೆ.  ಈ  ಎಲ್ಲಾ  ಪದಗಳನ್ನೂ  ಅ,  ಇ  ಮತ್ತು  ಯಾ  ಎಂಬ  ಮೂರು ಧಾತುಗಳನ್ನು ಬಳಸಿ ತಯಾರಿಸಲಾಗಿದೆಯುಂಬುದನ್ನು ಗಮನಿಸಬಹುದು.  
ಹಳೆಗನ್ನಡದಲ್ಲಿ  ಉ  ಧಾತುವಿನಿಂದ  ತಯಾರಿಸಿರುವ  ಉವಂ,  ಉವಳ್,  ಉದು  ಮೊದಲಾದ  ಪದಗಳನ್ನೊಳಗೊಂಡಿರುವ  ಇಂತಹದೇ  ಬೇರೊಂದು  ರೂಪಾವಳಿಯೂ ಬಳಕೆಯಲ್ಲಿತ್ತು. ಆದರೆ ಹೊಸಗನ್ನಡದಲ್ಲಿ ಇದು ನಷ್ಟವಾಗಿದೆ.  ಇವುಗಳಲ್ಲಿ  ಇಕಾರದ  ಪದಗಳು  ಮಾತನಾಡುವವನ  ಹತ್ತಿರದ  ವ್ಯಕ್ತಿ,  ವಸ್ತು  ಮೊದಲಾದುವನ್ನೂ,  ಅಕಾರದವು  ಅವನಿಗಿಂತ  ಮತ್ತು  ಉಕಾರದವು ಇವೆರಡರ ನಡುವಿನವನ್ನೂ ಸೂಚಿಸುತ್ತಿದ್ದುವೆಂದು ತೋರುತ್ತದೆ. ದೂರದವನ್ನೂ

Eke →

10.2.3 ಸಂಸ್ಕೃತದ ಸವ್ರನಾಮಗಳು

ಸಂಸ್ಕೃತದಲ್ಲಿಯೂ ಕನ್ನಡದ ಹಾಗೆ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರನ್ನು ಸೂಚಿಸುವ (ಪ್ರಥಮಪುರುಷ) ಸವ್ರನಾಮಗಳು ಎರಡನೆಯ ವಿಭಾಗದಲ್ಲಿ (ಸವ್ರಪದಗಳಾಗಿ) ಬರುತ್ತಿದ್ದು, ಅಹಂ ‘ನಾನು’, ತ್ವಂ ‘ನೀನು’ ಮೊದಲಾದ ಪುರುಷಪದಗಳಿಗಿಂತ ಭಿನ್ನವಾಗಿವೆ. ಈ ವಿಷಯದಲ್ಲಿ ಸಂಸ್ಕೃತ

ಕನ್ನಡದ ಹಾಗೆ ಎಂದು ಹೇಳಲು ಸಾಧ್ಯವಿದೆಯಾದರೂ ಸಂಸ್ಕೃತದಲ್ಲಿ ಈ ಪದಗಳು ಕನ್ನಡಕ್ಕಿಂತ ಜಾಸ್ತಿ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಏಷಃ ‘ಇವನು’, ಏಷಾ ‘ಇವಳು’, ಏತತ್ ‘ಇದು’ ಮೊದಲಾದವುಗಳು ಆಡುಗನ ಹತ್ತಿರದವರನ್ನು ಸೂಚಿಸುವುವಾದರೆ, ಅಸೌ ‘ಅವನು, ಅವಳು’, ಅದಃ ‘ಅದು’ ಮೊದಲಾದವುಗಳು ಆಡುಗನಿಂದ ದೂರ ಇರುವವರನ್ನು ಸೂಚಿಸುತ್ತವೆ.
ಇದಲ್ಲದೆ ಎದುರಿಗೆ ಇರುವವರು ಮತ್ತು ಇಲ್ಲದವರು ಎಂಬ ವ್ಯತ್ಯಾಸವನ್ನು ಸೂಚಿಸುವ ಬೇರೆ ಎರಡು ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಅಯಂ ‘ಇವನು’, ಇಯಂ ‘ಇವಳು’, ಇದಂ ‘ಇದು’ ಮೊದಲಾದವುಗಳು ಮಾತನಾಡು ವವನ ಸಾನ್ನಿಧ್ಯದಲ್ಲಿ ಇರುವವರನ್ನು ಸೂಚಿಸುತ್ತವೆ ಮತ್ತು ಸಃ ‘ಅವನು’, ಸಾ ‘ಅವಳು’, ತತ್ ‘ಅದು’ ಮೊದಲಾದವುಗಳು ಸಾನ್ನಿಧ್ಯದಲ್ಲಿ ಇಲ್ಲದವರನ್ನು ಸೂಚಿಸುತ್ತವೆ. (ಸಂಸ್ಕೃತದಲ್ಲಿ ಮೊದಲಿಗೆ ಇದ್ದ ಈ ವ್ಯತ್ಯಾಸ ಅನಂತರ ಇಲ್ಲವಾಗಿದೆ). ಈ ನಾಲ್ಕು ರೂಪಾವಳಿಗಳು ಮಾತ್ರವಲ್ಲದೆ ಕಕಾರದಿಂದ ಸುರುವಾಗುವ ಕಃ ‘ಯಾವನು’, ಕಾ ‘ಯಾವಳು’ ಮೊದಲಾದ ಪ್ರಶ್ನಾರ್ಥಕ ರೂಪಾವಳಿ ಮತ್ತು ಯಕಾರದಿಂದ ಸುರುವಾಗುವ ಯಃ ‘ಯಾವನು’, ಯಾ ‘ಯಾವಳು’ ಮೊದಲಾದ ಸಂಬಂಧಕ ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಆದರೆ ಕನ್ನಡದಲ್ಲಿ ಈ ಎರಡು ರೂಪಾವಳಿಗಳ ಸ್ಥಾನದಲ್ಲಿ ಒಂದೇ ರೂಪಾವಳಿಯಿದೆ.
ಕನ್ನಡದಲ್ಲಿ ವಾಕ್ಯಗಳನ್ನು ಒಂದು ನಾಮಪದದ ವಿಶೇಷಣವನ್ನಾಗಿ ಮಾಡಿ ಬಳಸಬೇಕಿದ್ದಲ್ಲಿ ಪ್ರಶ್ನಾರ್ಥಕ ಸವ್ರಪದಗಳನ್ನು ಹಾಗೆಯೇ ‘ಸಂಬಂಧಕ’ ಸವ್ರ ಪದಗಳನ್ನಾಗಿ ಬಳಸುವ ರೂಢಿಯಿದೆ. ಆದರೆ ಸಂಸ್ಕೃತದಲ್ಲಿ ಇದಕ್ಕಾಗಿ ಬೇರೆಯೇ ಒಂದು ಸವ್ರಪದಗಳ ರೂಪಾವಳಿಯನ್ನು ಬಳಸಬೇಕಾಗುತ್ತದೆ.
ಪ್ರಶ್ನಾರ್ಥಕ ಸವ್ರಪದಗಳು ಸಂಸ್ಕೃತದಲ್ಲಿ ಕಕಾರದಿಂದ ಆರಂಭವಾಗುವು ವಾದರೆ ಈ ‘ಸಂಬಂಧಕ’ ಸವ್ರಪದಗಳು ಯಕಾರದಿಂದ ಪ್ರಾರಂಭಿಸುತ್ತವೆ. ಇದು ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಇನ್ನೊಂದು ವ್ಯತ್ಯಾಸ.

ಕಃ ನೃಪಾಯ ಪತ್ರಂ ಲಿಖತಿ? ‘ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೆ?’ (3ಖ) ಯಃ ನೃಪಾಯ ಪತ್ರಂ ಲಿಖತಿ ಸಃ ತತ್ರ ತಿಷ್ಠತಿ

‘ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೋ ಅವರು ಅಲ್ಲಿ ನಿಂತಿದ್ದಾರೆ’

ಮೇಲೆ  ಸಂಸ್ಕೃತದ  ಕೇಳ್ವಿಯಲ್ಲಿ  (3ಕದಲ್ಲಿ)  ಕಃ  ‘ಯಾರು’  ಪ್ರಶ್ನಾರ್ಥಕ  ಪದ  ಬಂದಿದೆಯಾದರೆ,  ಸಂಬಂಧಕ  ವಾಕ್ಯದಲ್ಲಿ  (3ಖದಲ್ಲಿ)  ಯಃ  ‘ಯಾರು’  ಸಂಬಂಧಕ ಪದ ಬಂದಿದೆ. ಆದರೆ ಕನ್ನಡದಲ್ಲಿ ಇವೆರಡು ವಾಕ್ಯಗಳಲ್ಲೂ ಒಂದೇ  ಪದ, ಎಂದರೆ ಯಾರು ಎಂಬುದೇ ಬಂದಿದೆ ಎಂಬುದನ್ನು ಗಮನಿಸಬಹುದು. 
ಸಂಸ್ಕೃತದಲ್ಲಿ  ಆಡುಗ  ಮತ್ತು  ಕೇಳುಗ  ಪುರುಷಪದಗಳಿಗೆ  ದ್ವಿತೀಯಾ,  ಚತುರ್ಥೀ  ಮತ್ತು  ಷಷ್ಠೀ  ವಿಭಕ್ತಿಗಳಲ್ಲಿ  ಸಂಕ್ಷಿಪ್ತ  ರೂಪಗಳಿವೆ.  ಉದಾಹರಣೆ  ಗಾಗಿ,  ಬಹುವಚನದಲ್ಲಿ  ಆಡುಗನನ್ನು  ಸೂಚಿಸುವ  ಅಸ್ಮಾನ್  ‘ನಮ್ಮನ್ನು’,  ಅಸ್ಮಭ್ಯಂ ‘ನಮಗೆ’ ಮತ್ತು ಅಸ್ಮಾಕಂ ‘ನಮ್ಮ’ ಎಂಬ ಮೂರು ರೂಪಗಳಿಗೂ  ನಃ ಎಂಬ ಸಂಕ್ಷಿಪ್ತ ರೂಪವಿದೆ, ಮತ್ತು ಕೇಳುಗನನ್ನು ಸೂಚಿಸುವ ಯುಷ್ಮಾನ್  ‘ನಿಮ್ಮನ್ನು’,  ಯುಷ್ಮಭ್ಯಂ  ‘ನಿಮಗೆ’  ಮತ್ತು  ಯುಷ್ಮಾಕಂ  ‘ನಿಮ್ಮ’  ಎಂಬ  ಮೂರು  ರೂಪಗಳಿಗೂ  ವಃ  ಎಂಬ  ಸಂಕ್ಷಿಪ್ತರೂಪವಿದೆ.  ಈ  ಪದಗಳನ್ನು  ಒತ್ತಿ  ಹೇಳದಿರುವ ಸಂದಭ್ರದಲ್ಲಿ ಈ ಸಂಕ್ಷಿಪ ರೂಪಗಳನ್ನು ಬಳಸಬಹುದು.  
ಆಡುಗ  ಮತ್ತು  ಕೇಳುಗರನ್ನು  ಸೂಚಿಸುವ  ಸವ್ರನಾಮಗಳು  (ಪುರುಷ  ಪದಗಳು)  ಇತರ  ಸವ್ರನಾಮಗಳಿಗಿಂತ  (ಸವ್ರಪದಗಳಿಗಿಂತ)  ಭಿನ್ನವಾದುವು  ಎಂಬುದಕ್ಕೆ ಇದೂ ಒಂದು ಆಧಾರವಾಗಬಲ್ಲುದು. 
ಆದರೆ  ಇಲ್ಲಿ  ಒಂದು  ವಿಷಯವನ್ನು  ಗಮನಿಸುವುದು  ಅವಶ್ಯ.  ಕನ್ನಡದಲ್ಲಿ  ನಾಮಪದ,  ಕ್ರಿಯಾಪದ  ಮತ್ತು  ಗುಣಪದ  ಎಂಬುದಾಗಿ  ಮೂರು  ಪದವಗ್ರ  ಗಳಿವೆಯಾದ  ಕಾರಣ,  ಮತ್ತು  ಅವ್ಯಯವೆಂಬ  ನಾಲ್ಕನೆಯದೊಂದು  ಪದವಗ್ರ  ವನ್ನೂ ಕಂಡುಕೊಳ್ಳಲು ಸಾಧ್ಯವಿದೆಯಾದ ಕಾರಣ, ಮೇಲೆ ವಿವರಿಸಿರುವ ಎಲ್ಲಾ  ರೀತಿಯ ಪದಗಳನ್ನೂ ಸವ್ರನಾಮಗಳೆಂದು ಕರೆಯುವುದರಲ್ಲಿ ತೊಂದರೆಯಿದೆ.  
ಆದರೆ  ಸಂಸ್ಕೃತದಲ್ಲಿ  ಈ  ತೊಂದರೆಯಿಲ್ಲ.  ಯಾಕೆಂದರೆ  ಸಂಸ್ಕೃತದ  ವೈಯಾಕರಣಿಗಳು  ಅದರ  ಪದಗಳನ್ನೆಲ್ಲ  ಕ್ರಿಯಾಪದ  ಮತ್ತು  ನಾಮಪದ  ಎಂಬುದಾಗಿ  ಎರಡೇ  ಎರಡು  ಪದವಗ್ರಗಳಲ್ಲಿ  ವಿಭಜಿಸಲು  ಶಕ್ತರಾಗಿದ್ದಾರೆ.  ಹಾಗಾಗಿ,  ಮೇಲೆ  ಕೊಟ್ಟಿರುವ  ಪದಗಳನ್ನೆಲ್ಲ  ‘ಸವ್ರನಾಮ’ಗಳೆಂದು  ಕರೆಯುವು  ದರಲ್ಲಿ  ಸಂಸ್ಕೃತದ  ಮಟ್ಟಿಗೆ  ತೊಂದರೆಯೇನೂ  ಇಲ್ಲ.  ಇದು  ಕನ್ನಡ  ಮತ್ತು  ಸಂಸ್ಕೃತ  ಭಾಷೆಗಳ  ನಡುವೆ  ಸವ್ರನಾಮಗಳ  ಮಟ್ಟಿಗಿರುವ  ಇನ್ನೊಂದು  ಮುಖ್ಯವಾದ ವ್ಯತ್ಯಾಸ ಎಂಬುದನ್ನು ಗಮನಿಸಬಹುದು. 

Eke →

10.2.4 ಸಂಸ್ಕೃತದ ‘ಸವ್ರಾದಿ’ ಪದಗಳು

ಸಂಸ್ಕೃತ ವ್ಯಾಕರಣಗಳಲ್ಲಿ ಸವ್ರ, ವಿಶ್ವ, ಏಕ, ತದ್, ಏತದ್, ಇದಂ, ಕಿಂ, ಇತರ, ಕತರ, ಉಭಯ, ಅಲ್ಪ ಮೊದಲಾದ ಮೂವತ್ತೈದು ಪದಗಳನ್ನು ಒಟ್ಟಿಗೆ ಸೇರಿಸಿ ‘ಸವ್ರಾದಿ’ ಎಂಬ ಪಟ್ಟಿಯಲ್ಲಿ ಇರಿಸಲಾಗಿದೆ. ಅವುಗಳೊಂದಿಗೆ

ಬರುವ ವಿಭಕ್ತಿ ಪ್ರತ್ಯಯಗಳು ಬೇರೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಂದ ಭಿನ್ನವಾಗಿವೆಯುಂಬುದೇ ಈ ಪಟ್ಟಿಗೆ ಆಧಾರ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸವ್ರ ರೂಪದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ಒಂದಕ್ಕೆ ‘ಎಲ್ಲ’ ಎಂಬ ಅರ್ಥವಿದ್ದು, ಅದು ಒಂದು ಸವ್ರನಾಮ ವಾಗಿ ಬಳಕೆಯಲ್ಲಿದೆ; ಇನ್ನೊಂದಕ್ಕೆ ‘ಶಿವ’ ಎಂಬ ಅರ್ಥವಿದ್ದು, ಅದು ಸವ್ರ ನಾಮವಲ್ಲದ ಒಂದು ನಾಮಪದವಾಗಿ ಬಳಕೆಯಲ್ಲಿದೆ. ಈ ಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳ ರೂಪದಲ್ಲಿ ಹಲವು ವ್ಯತ್ಯಾಸಗಳಿವೆ.

ಪ್ರಥಮಾ-ಬಹುವಚನ ಚತುರ್ಥೀ-ಏಕವಚನ ಪಂಚಮೀ-ಏಕವಚನ ಸಪ್ತಮೀ-ಏಕವಚನ ಷಷ್ಠೀ-ಬಹುವಚನ

ಸವ್ರ ‘ಎಲ್ಲ’ ಸವ್ರೇ
ಸವ್ರಸ್ಮೈ ಸವ್ರಸ್ಮಾತ್ ಸವ್ರಸ್ಮಿನ್ ಸವ್ರೇಷಾಂ

ಸವ್ರ ‘ಶಿವ’ ಸವ್ರಾಃ ಸವ್ರಾಯ ಸವ್ರಾತ್ ಸವ್ರೇ ಸವ್ರಾಣಾಂ

ಸವ್ರ  ಪಟ್ಟಿಯಲ್ಲಿ  ಬಂದಿರುವ  ಇತರ  ಪದಗಳಿಗೂ  ಮೇಲೆ  ಕೊಟ್ಟಿರುವ  ಸವ್ರ  ‘ಎಲ್ಲ’  ಪದದ  ಹಾಗೆಯೇ  ಇರುವಂತಹ  ವಿಭಕ್ತಿ  ರೂಪಗಳಿವೆ.  ಈ  ವಿಷಯವನ್ನು  ಸಂಕ್ಷಿಪ್ತವಾಗಿ  ಸೂಚಿಸಲು  ಸಂಸ್ಕೃತದ  ವೈಯಾಕರಣಿಗಳು  ಇವನ್ನೆಲ್ಲ ‘ಸವ್ರಾದಿ’ ಪಟ್ಟಿಯಲ್ಲಿ ಸೇರಿಸಿ ಹೇಳಿದ್ದಾರೆ. 
ಕನ್ನಡದಲ್ಲಿ  ನಾನು,  ನೀನು  ಮತ್ತು  ತಾನು  ಎಂಬವುಗಳನ್ನು  ಬಿಟ್ಟು  ಉಳಿದುವಕ್ಕೆ ಈ ರೀತಿ ವಿಶಿಷ್ಟವಾದ ವಿಭಕ್ತಿ ರೂಪಗಳಿಲ್ಲ. ಹಾಗಾಗಿ, ಸಂಸ್ಕೃತದ  ಸವ್ರನಾಮಗಳ  ಹಾಗೆ  ಕನ್ನಡದ  ಎಲ್ಲಾ  ಸವ್ರನಾಮಗಳನ್ನೂ  ಒಟ್ಟಿಗೆ  ಒಂದು  ವಗ್ರದಲ್ಲಿ  ಸೇರಿಸಿ  ಹೇಳಲು  ಅಂತಹ  ವಿಭಕ್ತಿ  ರೂಪದ  ಆಧಾರವೂ  ಸಿಗುವು 

Eke →

10.3 ಎಣಿಕೆಯ ಪದಗಳು

ಕನ್ನಡದ ಎಣಿಕೆಯ ಪದಗಳು ಹಲವು ವಿಷಯಗಳಲ್ಲಿ ಸಂಸ್ಕೃತದ ಎಣಿಕೆಯ (ಸಂಖ್ಯಾವಾಚಕ) ಪದಗಳಿಂದ ಭಿನ್ನವಾಗಿವೆ. ಹಾಗಾಗಿ ಅವನ್ನು ಸಂಸ್ಕೃತದ ಹಾಗೆ ನಾಮಪದಗಳ ಪದವಗ್ರದಲ್ಲಿ ಇರಿಸುವುದು ಸರಿಯಲ್ಲ.
ಸಂಸ್ಕೃತದ ಎಣಿಕೆಯ ಪದಗಳು ನಾಮಪದ ವಗ್ರದಲ್ಲಿ ಬರುತ್ತವೆ. ಆದರೆ ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಬಳಕೆಯಾಗುತ್ತವೆ, ಆದರೆ ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ

ಬಳಕೆಯಾಗುತ್ತವೆ. ಹಾಗಾಗಿ ಅವನ್ನು ಬೇರೆಯೇ ಪದವಗ್ರದಲ್ಲಿ ಇರಿಸುವ ಅವಶ್ಯಕತೆಯಿದೆ.
ಇದಲ್ಲದೆ, ಒಳರಚನೆಯಲ್ಲೂ ಕನ್ನಡದ ಎಣಿಕೆಯ ಪದಗಳು ಸಂಸ್ಕೃತದ ಎಣಿಕೆಯ ಪದಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿವೆ.

Eke →

10.3.1 ಬಳಕೆಯಲ್ಲಿ ವ್ಯತ್ಯಾಸ

ಕನ್ನಡದ ಎಣಿಕೆಯ ಪದಗಳನ್ನು ಒಂದು ನಾಮಪದದ ವಿಶೇಷಣವಾಗಿ ಬಳಸಿ ದಾಗ, ಅವು ಗುಣಪದಗಳ ಹಾಗೆ ಯಾವ ಪ್ರತ್ಯಯವನ್ನೂ ಪಡೆಯದೆ ಬರುತ್ತವೆ. ಆದರೆ ನಾಮಪದಗಳು ಈ ಜಾಗದಲ್ಲಿ ಷಷ್ಠೀ ಪ್ರತ್ಯಯದೊಂದಿಗೆ ಬರುತ್ತವೆ.

ನಾಮಪದ ಮಣ್ಣಿನ ಕೊಡ ಮರದ ಪೆಟ್ಟಿಗೆ
ಕಲ್ಲಿನ ಮನೆ

ಎಣಿಕೆಯ ಪದ ಮೂರು ಕೊಡ ಎಂಟು ಪೆಟ್ಟಿಗೆ ನಾಲ್ಕು ಮನೆ

ಗುಣಪದ ಕಪ್ಪು ಕೊಡ ದೊಡ್ಡ ಪೆಟ್ಟಿಗೆ ಹೊಸ ಮನೆ

(4R)

(4ಕ-ಗ)ದ  ಮೊದಲನೇ  ಕಾಲಂನಲ್ಲಿ  ಕೊಟ್ಟಿರುವ  ನಾಮಪದಗಳು  ಷಷ್ಠೀ  ವಿಭಕ್ತಿಯಲ್ಲಿ  ಬಂದಿವೆ,  ಆದರೆ  ಎರಡನೇ  ಕಾಲಂನಲ್ಲಿ  ಕೊಟ್ಟಿರುವ  ಎಣಿಕೆಯ  ಪದಗಳು  ಮತ್ತು  ಮೂರನೇ  ಕಾಲಂನಲ್ಲಿ  ಕೊಟ್ಟಿರುವ  ಗುಣಪದಗಳು  ವಿಭಕ್ತಿ  ಪ್ರತ್ಯಯವಿಲ್ಲದೆ ಹಾಗೆಯೇ ಬಂದಿವೆ. 
ಈ  ವಿಷಯದಲ್ಲಿ  ಸಂಸ್ಕೃತ  ಕನ್ನಡಕ್ಕಿಂತ  ಭಿನ್ನವಾಗಿದೆ.  ಯಾಕೆಂದರೆ,  ಆ  ಭಾಷೆಯ  ಎಣಿಕೆಯ  ಪದಗಳನ್ನು  ಒಂದು  ನಾಮಪದದ  ವಿಶೇಷಣವಾಗಿ  ಬಳಸಿ  ದಾಗ,  ಅವು  ಆ  ನಾಮಪದದ  ವಿಭಕ್ತಿ  ಪ್ರತ್ಯಯದೊಂದಿಗೆ  ಬರುತ್ತವೆ.  ಇದೇ  ರೀತಿಯಲ್ಲಿ  ಸಂಸ್ಕೃತದ  ನಾಮಪದಗಳನ್ನು  (ಇಲ್ಲವೇ  ಗುಣಪದಗಳನ್ನು)  ಬೇರೊಂದು  ನಾಮಪದದೊಂದಿಗೆ  ವಿಶೇಷಣವಾಗಿ  ಬಳಸಿದಾಗಲೂ  ಅವು  ಆ  ನಾಮಪದದ ವಿಭಕ್ತಿ ಪ್ರತ್ಯಯವನ್ನು ಪಡೆಯುತ್ತವೆ.  

(5)

ನಾಮಪದ
ಮೃತ್ತಿಕಃ ಘಟಃ
‘ಮಣ್ಣಿನ ಕೊಡ’

ಎಣಿಕೆಯ ಪದ ‘ಒಂದು ಕೊಡ’

ಗುಣಪದ ಕೃಷ್ಣಃ ಘಟಃ ‘ಕಪ್ಪು ಕೊಡ’

(5)ರಲ್ಲಿ ಕೊಟ್ಟಿರುವ ಸಂಸ್ಕೃತದ ಪದಕಂತೆಗಳಲ್ಲಿ ಮೃತ್ತಿಕ, ಏಕ ಮತ್ತು  ಕೃಷ್ಣ ಇವು ಮೂರೂ ಅವುಗಳ ಮುಂದಿರುವ ಘಟ ಎಂಬುದರ ಲಿಂಗ-ವಚನ- ವಿಭಕ್ತಿಯನ್ನೇ  ಪಡೆದಿವೆ.  ಈ  ಕಾರಣಕ್ಕಾಗಿ  ಸಂಸ್ಕೃತದ  ನಾಮಪದ,  ಎಣಿಕೆಯ 

ಪದ ಮತ್ತು ಗುಣಪದಗಳನ್ನು ಒಂದೇ ಪದವಗ್ರದಲ್ಲಿ ಇರಿಸುವುದು ಸರಿ. ಆದರೆ ಕನ್ನಡದಲ್ಲಿ ಆ ರೀತಿ ಮಾಡುವುದು ಸರಿಯಲ್ಲ.
ಕನ್ನಡದ ಎಣಿಕೆಯ ಪದಗಳನ್ನು ನಾಮಪದದ ಜಾಗದಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಬಳಸಲು ಸಾಧ್ಯವಿದೆ (6ಕ-ಖ ನೋಡಿ). ಆದರೆ ಗುಣಪದಗಳನ್ನು ಆ ರೀತಿ ಬಳಸಲು ಸಾಧ್ಯವಿಲ್ಲ (3.2.5 ನೋಡಿ).
ಈ ವಿಷಯದಲ್ಲಿ ಕನ್ನಡದ ಎಣಿಕೆಯ ಪದಗಳು ಸಂಸ್ಕೃತದ ಎಣಿಕೆಯ ಪದಗಳನ್ನು ಹೋಲುತ್ತವೆ. ಯಾಕೆಂದರೆ, ಸಂಸ್ಕೃತದಲ್ಲೂ ಎಣಿಕೆಯ ಪದ ಗಳನ್ನು ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ.

(6ಕ) ಅಹಂ ಏಕಂ ಫಲಂ ಖಾದಾಮಿ

‘ನಾನು ಒಂದು ಹಣ್ಣನ್ನು ತಿನ್ನುತ್ತೇನೆ’

(6ಖ) ಅಹಂ ಏಕಂ ಖಾದಾಮಿ

‘ನಾನು ಒಂದನ್ನು ತಿನ್ನುತ್ತೇನೆ’

(6ಖ)ದಲ್ಲಿ  ಸಂಸ್ಕೃತದ  ಏಕಂ  ಎಣಿಕೆಯ  ಪದ  ಮತ್ತು  ಕನ್ನಡದ  ಒಂದನ್ನು  ಎಣಿಕೆಯ  ಪದ  ಇವೆರಡೂ  ದ್ವಿತೀಯಾ  ವಿಭಕ್ತಿ  ಪ್ರತ್ಯಯದೊಂದಿಗೆ  ನಾಮಪದದ  (ಫಲಂ  ಎಂಬುದರ  ಇಲ್ಲವೇ  ಹಣ್ಣನ್ನು  ಎಂಬುದರ)  ಜಾಗದಲ್ಲಿ  ಬಳಕೆಯಾಗಿರುವುದನ್ನು ಕಾಣಬಹುದು.  

Eke →

10.3.2 ಒಳರಚನೆಯಲ್ಲಿ ವ್ಯತ್ಯಾಸ

ಕನ್ನಡದಲ್ಲಿ ಹನ್ನೊಂದು, ಹನ್ನೆರಡು, ಹದಿಮೂರು ಮೊದಲಾದ ಇಪ್ಪತ್ತರ ವರೆಗಿನ ಎಣಿಕೆಯ ಪದಗಳನ್ನು ಹತ್ತು ಪದದ ಷಷ್ಠೀ ರೂಪಕ್ಕೆ ಒಂದು, ಎರಡು, ಮೂರು ಮೊದಲಾದವುಳನ್ನು ಸೇರಿಸಿ ರಚಿಸಲಾಗಿದೆ (ಹತ್ತಿನ + ಒಂದು - ಹನ್ನೊಂದು). ಇದಕ್ಕೆ ಬದಲು ಇಪ್ಪತ್ತು, ಮೂವತ್ತು, ನಲು ವತ್ತು, ಐವತ್ತು ಮೊದಲಾದವುಗಳನ್ನು ಎರಡು, ಮೂರು, ನಾಲ್ಕು, ಐದು ಮೊದಲಾದವುಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ರಚಿಸಲಾಗಿದೆ.
ಈ ರೀತಿ ಕನ್ನಡದಲ್ಲಿ ಈ ಎರಡು ರೀತಿಯ ಎಣಿಕೆಯ ಪದಗಳ ಒಳರಚನೆ ಯಲ್ಲಿ ವ್ಯತ್ಯಾಸವಿದೆ. ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಪದಗಳನ್ನೂ ಒಂದೇ ರೀತಿಯಲ್ಲಿ, ಎಂದರೆ ಏಕ, ದ್ವಾ, ತ್ರಯ, ಚತುರ್ ಮೊದಲಾದುವನ್ನು ‘ಹತ್ತು’ ಎಂಬರ್ಥದ ಪದಕ್ಕೆ ಸೇರಿಸಿ ರಚಿಸಲಾಗಿದೆ.

ಏಕಾದಶ  ‘ಹನ್ನೊಂದು’,  ದ್ವಾದಶ  ‘ಹನ್ನೆರಡು’,  ತ್ರಯೋದಶ  ‘ಹದಿ  ಮೂರು’,  ಚತುದ್ರಶ  ‘ಹದಿನಾಲ್ಕು’  ಮೊದಲಾದವುಗಳಲ್ಲಿ  ಇದಕ್ಕಾಗಿ  ದಶ  ‘ಹತ್ತು’  ಪದ  ಬಂದಿದೆಯಾದರೆ,  ವಿಂಶತಿ  ‘ಇಪ್ಪತ್ತು’,  ತ್ರಿಂಶತ್  ‘ಮೂವತ್ತು’,  ಚತ್ವಾರಿಂಶತ್  ‘ನಲುವತ್ತು’,  ಪಂಚಾಶತ್  ‘ಐವತ್ತು’  ಮೊದಲಾದವುಗಳಲ್ಲಿ  *ದಶತಿ ಎಂಬುದರಿಂದ ಬಂದಿರಬಹುದಾದ ಶತಿ ಇಲ್ಲವೇ ಶತ್ ಪದ ಬಂದಿದೆ. 
ಇನ್ನೊಂದು  ವ್ಯತ್ಯಾಸವೇನೆಂದರೆ,  ಇಪ್ಪತ್ತು,  ಮೂವತ್ತು,  ನಲುವತ್ತು  ಮೊದಲಾದುವಕ್ಕೆ  ಒಂದು,  ಎರಡು,  ಮೂರು  ಮೊದಲಾದವುಗಳನ್ನು  ಸೇರಿಸಿ  ಹೇಳಬೇಕಾದಾಗ  ಕನ್ನಡದಲ್ಲಿ  ಮೊದಲಿನವನ್ನು  ಷಷ್ಠೀ  ರೂಪದಲ್ಲಿ  ಬಳಸುವ  ಕ್ರಮವಿದೆ. ಒಂದು, ಎರಡು ಮೊದಲಾದವುಗಳು ಅವುಗಳ ಅನಂತರ ಬರುತ್ತವೆ.  ಕನ್ನಡದ  ಇಪ್ಪತ್ತಮೂರು,  ನಲುವತ್ತನಾಲ್ಕು,  ಅರುವತ್ತಮೂರು  ಮೊದಲಾ  ದವುಗಳಲ್ಲೂ,  ಮತ್ತು  ನೂರಮೂವತ್ತಾರು,  ಸಾವಿರದ  ಇನ್ನೂರ  ನಲುವತ್ತ  ಮೂರು ಮೊದಲಾದವುಗಳಲ್ಲೂ ಇದೇ ವ್ಯಾಕರಣ ವಿಧಾನ ಬಳಕೆಯಾಗಿದೆ.  
ಆದರೆ  ಸಂಸ್ಕೃತದಲ್ಲಿ  ಒಂದು,  ಎರಡು,  ಮೂರು  ಮೊದಲಾದುವನ್ನು  ಸೂಚಿಸುವ  ಪದಗಳು  ಇಪ್ಪತ್ತು,  ಮೂವತ್ತು,  ನಲುವತ್ತು  ಮೊದಲಾದುವನ್ನು  ಸೂಚಿಸುವ  ಪದಗಳ  ಮೊದಲು  ಬರುತ್ತವೆ.  ಉದಾಹರಣೆಗಾಗಿ,  ಪಂಚಸಪ್ತತಿ  ‘ಎಪ್ಪತ್ತೈದು’  ಪದದಲ್ಲಿ  ಪಂಚ  ‘ಐದು’  ಪದ  ಮೊದಲು  ಬಂದಿದೆ  ಮತ್ತು  ಸಪ್ತತಿ  ‘ಎಪ್ಪತ್ತು’  ಪದ  ಅನಂತರ  ಬಂದಿದೆ.  ಇಲ್ಲಿ  ಪದಗಳ  ಅನುಕ್ರಮದಲ್ಲಿ  ಬದಲಾವಣೆಯಾಗಿದೆಯುಂಬುದನ್ನು ಗಮನಿಸಬಹುದು. 
ಕನ್ನಡದ  ಎಣಿಕೆಯ  ಪದಗಳನ್ನು  ಪದಗಳ  ರೂಪದಲ್ಲಿ  ಬರೆಯಲಿ  ಇಲ್ಲವೇ  ಅಂಕೆಗಳ  ರೂಪದಲ್ಲಿ  ಬರೆಯಲಿ,  ಅವುಗಳ  ಒಳರಚನೆಯಲ್ಲಿ  ಬರುವ  ಅಂಕೆಗಳ  ಅನುಕ್ರಮದಲ್ಲಿ ವ್ಯತ್ಯಾಸವೇನೂ ಕಾಣಿಸುವುದಿಲ್ಲ. 

ಇಪ್ಪತ್ತಮೂರು
ನಲುವತ್ತನಾಲ್ಕು
ನೂರಮೂವತ್ತಾರು
1243 ಸಾವಿರದ ಇನ್ನೂರ
ನಲುವತ್ತಮೂರು

2 (ಹತ್ತು) 3 4 (ಹತ್ತು) 4 1 (ನೂರು) 3 (ಹತ್ತು) 6 1 (ಸಾವಿರ) 2 (ನೂರು)
4 (ಹತ್ತು) 3

ಆದರೆ  ಸಂಸ್ಕೃತದ  ಎಣಿಕೆಯ  ಪದಗಳನ್ನು  ಪದರೂಪದಲ್ಲಿ  ಬರೆದಾಗ  ಅವುಗಳ  ಒಳರಚನೆಯಲ್ಲಿ  ಬರುವ  ಅಂಕೆಗಳ  ಅನುಕ್ರಮ  ಒಂದು  ರೀತಿಯಲ್ಲಿ  ಇರುತ್ತದೆ  ಮತ್ತು  ಅಂಕೆಗಳ  ರೂಪದಲ್ಲಿ  ಬರೆದಾಗ  ಇನ್ನೊಂದು  ರೀತಿಯಲ್ಲಿ  ಇರುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳು ಈ ವಿಷಯವನ್ನು ಸ್ಪಷ್ಟಪಡಿಸು  ತ್ತವೆ. 

ಚತುಸ್ತ್ರಿಂಶತ್ 4-3 (ಹತ್ತು) ಪಂಚಸಪ್ತತಿ 5-7 (ಹತ್ತು) 217 ಸಪ್ತದಶಂ ದ್ವಿಶತಂ

7 (ಹತ್ತು) 2 (ನೂರು)

‘ಮೂವತ್ತನಾಲ್ಕು’ 3 (ಹತ್ತು) 4 ‘ಎಪ್ಪತ್ತೈದು’ 7 (ಹತ್ತು) 5 ‘ಇನ್ನೂರ ಹದಿನೇಳು’ ‘2 (ನೂರು) (1) (ಹತ್ತು) 7’

ಮೇಲೆ  ಮೊದಲನೇ  ಕಾಲಂನಲ್ಲಿ  ಕೊಟ್ಟಿರುವ  ಅಂಕೆಯ  ರೂಪದಲ್ಲಿರುವ  ಸಂಖ್ಯೆಯ ಒಳರಚನೆಗೂ ಮತ್ತು ಎರಡನೇ ಕಾಲಂನಲ್ಲಿ ಕೊಟ್ಟಿರುವ ಪದರೂಪ  ದಲ್ಲಿರುವ  ಅದೇ  ಸಂಖ್ಯೆಯ  ಒಳರಚನೆಗೂ  ನಡುವೆ  ಹಲವು  ವ್ಯತ್ಯಾಸಗಳಿರುವು  ದನ್ನು ಗಮನಿಸಬಹುದು. 
ಉದಾಹರಣೆಗಾಗಿ,  ಮೊದಲನೆಯ  ಕಾಲಂನಲ್ಲಿ  ಅಂಕೆಯ  ರೂಪದಲ್ಲಿರುವ  34 ಸಂಖ್ಯೆಯಲ್ಲಿ 3 ಮೊದಲು ಬಂದಿದೆ ಮತ್ತು 4 ಅನಂತರ ಬಂದಿದೆ; ಆದರೆ,  ಎರಡನೆಯ ಕಾಲಂನಲ್ಲಿ ಪದರೂಪದಲ್ಲಿರುವ ಚತುಸ್ತ್ರಿಂಶತ್ ಸಂಖ್ಯೆಯಲ್ಲಿ 3  (ತ್ರಿಂಶತ್)  ಅನಂತರ  ಬಂದಿದೆ  ಮತ್ತು  4  (ಚತುರ್)  ಅದಕ್ಕಿಂತ  ಮೊದಲು  ಬಂದಿದೆ. ಇತರ ಸಂಖ್ಯೆಗಳಲ್ಲೂ ಹೀಗೆಯೇ.  
ಆದರೆ  ಮೂರನೇ  ಕಾಲಂನಲ್ಲಿ  ಬಂದಿರುವ  ಈ  ಸಂಖ್ಯೆಗಳ  ಕನ್ನಡ  ಪದ  ರೂಪಗಳಿಗೂ  ಮತ್ತು  ಮೊದಲನೆಯ  ಕಾಲಂನಲ್ಲಿ  ಅಂಕೆಯ  ರೂಪದಲ್ಲಿರುವ  ಅವೇ  ಸಂಖ್ಯೆಗಳಿಗೂ  ನಡುವೆ  ಇಂತಹ  ವ್ಯತ್ಯಾಸಗಳಿಲ್ಲ.  ಕನ್ನಡದ  ಮೂವತ್ತ  ನಾಲ್ಕು  ಎಂಬುದರಲ್ಲಿ  34  ಎಂಬುದರಲ್ಲಿರುವ  ಹಾಗೆ  3  (ಮೂವತ್ತ)  ಮೊದಲು ಬಂದಿದೆ ಮತ್ತು 4 (ನಾಲ್ಕು) ಅನಂತರ ಬಂದಿದೆ. 

Eke →

10.4 ತಿರುಳು

ಕನ್ನಡದಲ್ಲಿ ಆಡುಗ (ಉತ್ತಮ) ಮತ್ತು ಕೇಳುಗ (ಮಧ್ಯಮ) ಪುರುಷದ ನಾನು, ನಾವು, ನೀನು, ನೀವು ಎಂಬವುಗಳು ಮತ್ತು ಇತರ (ಪ್ರಥಮ) ಪುರುಷದ ತಾನು, ತಾವು ಎಂಬವುಗಳು ಒಂದು ವಗ್ರದಲ್ಲಿ ಸೇರುವುವಾದರೆ, ಇತರ ಸವ್ರನಾಮಗಳು ಬೇರೊಂದು ವಗ್ರದಲ್ಲಿ ಸೇರುತ್ತವೆ. ಸಂಸ್ಕೃತದ ಹಾಗೆ ಇವೆಲ್ಲವನ್ನೂ ‘ಸವ್ರನಾಮ’ (ಇಲ್ಲವೇ ಸವ್ರಾದಿ) ಎಂಬ ಒಂದೇ ವಗ್ರದಲ್ಲಿ ಸೇರಿಸಿ ಹೇಳಲು ಕನ್ನಡ ವ್ಯಾಕರಣದಲ್ಲಿ ಯಾವ ಆಧಾರವೂ ಇಲ್ಲ.
ಬೇರೆ ಕೆಲವು ವಿಷಯಗಳಲ್ಲೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬರುವ ಸವ್ರನಾಮಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.

ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ  ಬರುವುವಾದರೂ ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬರುತ್ತವೆ.