← Ch 1  ·  Contents  ·  Ch 3 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11

English → | Eke →

ಅಧ್ಯಾಯ ಎರಡು — ಕ್ರಿಯಾವಾಕ್ಯಗಳ ಒಳರಚನೆ

Eke →

2.1 ಪೀಠಿಕೆ

ಕನ್ನಡದ ಕ್ರಿಯಾವಾಕ್ಯಗಳಲ್ಲೆಲ್ಲ ಒಂದು ಕ್ರಿಯಾಪದ ಬಂದಿದ್ದು, ಅದು ವಾಕ್ಯದ ಮುಖ್ಯ ಅಂಗವಾಗಿರುತ್ತದೆ. ಈ ಕ್ರಿಯಾಪದ ಸಾಮಾನ್ಯವಾಗಿ ವಾಕ್ಯದ ಕೊನೆ ಯಲ್ಲಿ ಬರುತ್ತದೆ. ಉದಾ: ರಾಜು ಕನ್ನಡಕವನ್ನು ಎಲ್ಲಾ ಕಡೆಯಲ್ಲೂ ಹುಡುಕಿದ. (1ಖ) ಸೀತಾಬಾಯಿ ನಾಳೆ ಡಿಲ್ಲಿಗೆ ಹೋಗುತ್ತಾಳೆ. (1ಗ) ಆಕೆಗೆ ಲಾಟರಿಯಲ್ಲಿ ಹತ್ತು ಲಕ್ಷದ ಬಹುಮಾನ ಬಂತು. (1ಘ) ಹುಡುಗರು ಮರಕ್ಕೆ ಹತ್ತಿದರು. ಮೇಲೆ ಕೊಟ್ಟಿರುವ (1ಕ-ಘ) ವಾಕ್ಯಗಳೆಲ್ಲ ಕ್ರಿಯಾವಾಕ್ಯಗಳಾಗಿದ್ದು, ಅವುಗಳ ಮುಖ್ಯ ಅಂಗಗಳಾಗಿ ಹುಡುಕು, ಹೋಗು, ಬರು ಮತ್ತು ಹತ್ತು ಎಂಬ ಕ್ರಿಯಾ ಪದಗಳು ಆ ವಾಕ್ಯಗಳ ಕೊನೆಯಲ್ಲಿ ಬಂದಿವೆ. ಇವುಗಳೊಂದಿಗೆ ಈ ವಾಕ್ಯಗಳಲ್ಲಿ ಬೇರೆ ಕೆಲವು ಪದಗಳೂ ಬಂದಿವೆಯಾದರೂ ಅವು ಕ್ರಿಯಾಪದದಷ್ಟು ಪ್ರಾಮುಖ್ಯ ವಾದುವಲ್ಲ. ಈ ಇತರ ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಸಂದಭ್ರ ಕ್ಕನುಸಾರವಾಗಿ ಬಳಸದಿರಲು ಸಾಧ್ಯವಿದೆ. ಆದರೆ ಕ್ರಿಯಾಪದವನ್ನು ಆ ರೀತಿ ಬಳಸದಿರುವುದು ಬಹಳ ಅಪರೂಪ. ರಾಜು ಕನ್ನಡಕ ಹುಡುಕಿದ. (2ಖ) ಸೀತಾಬಾಯಿ ನಾಳೆ ಹೋಗುತ್ತಾಳೆ. (2ಗ) ಸೀತಾಬಾಯಿ ಡೆಲ್ಲಿಗೆ ಹೋಗುತ್ತಾಳೆ. (2ಘ) ಆಕೆಗೆ ಬಹುಮಾನ ಬಂತು. (1ಕ) ವಾಕ್ಯದಲ್ಲಿ ಜಾಗವನ್ನು ಸೂಚಿಸಲು ಬಂದಿರುವ ಎಲ್ಲಾ ಕಡೆಗಳಲ್ಲೂ ಎಂಬುದನ್ನು ಬಳಸದಿರಲು ಸಾಧ್ಯ ಎಂಬುದನ್ನು (2ಕ)ದಲ್ಲಿ ಕಾಣಬಹುದು. ಇದೇ ರೀತಿಯಲ್ಲಿ (1ಖ)ದಲ್ಲಿ ಬಂದಿರುವ ನಾಳೆ ಇಲ್ಲವೇ ಡೆಲ್ಲಿಗೆ ಎಂಬ ಪದ ಗಳನ್ನು ಬಳಸದಿರಲು ಸಾಧ್ಯ ಎಂಬುದನ್ನು (2ಖ-ಗ) ವಾಕ್ಯಗಳಲ್ಲಿ ಕಾಣ ಬಹುದು. ಆದರೆ ಕ್ರಿಯಾಪದವನ್ನು ಈ ರೀತಿ ಬಳಸಲಿಲ್ಲವಾದರೆ ಆ ವಾಕ್ಯವಿನ್ನೂ ಕೊನೆಗೊಂಡಿಲ್ಲವೇನೋ ಎಂದೆನಿಸುತ್ತದೆ, ಇಲ್ಲವೇ ಅದೊಂದು ವಿಷಯವಾಕ್ಯ ವಾಗಿಬಿಡುತ್ತದೆ. (3ಕ) ಸೀತಾಬಾಯಿ ನಾಳೆ ಡೆಲ್ಲಿಗೆ. (3ಖ) ಹುಡುಗರು ಮರದಲ್ಲಿ. (3ಕ)ದಲ್ಲಿ ಹೋಗುತ್ತಾಳೆ ಎಂಬ ಕ್ರಿಯಾಪದವನ್ನು ಬಿಡಲಾಗಿದೆ. ಆದರೆ ಇದು ನಿಜಕ್ಕೂ ಒಂದು ಘಟನೆಯನ್ನು ತಿಳಿಸುವ ಕ್ರಿಯಾವಾಕ್ಯವಾಗಿ ಕಾಣಿಸುವ ಬದಲು ಸೀತಾಬಾಯಿಯ ಕಾರ್ಯಕ್ರಮಗಳನ್ನು ಸೂಚಿಸುವ ಪಟ್ಟಿಯ ಒಂದು ಅಂಗವಾಗಿ ಕಾಣಿಸುತ್ತದೆ. (3ಖ)ದಲ್ಲಿ ಕುಳಿತಿದ್ದಾರೆ ಎಂಬ ಕ್ರಿಯಾಪದ ಬಿದ್ದುಹೋಗಿದೆ ಎಂದು ಹೇಳುವುದಕ್ಕಿಂತಲೂ ಇದ್ದಾರೆ ಎಂಬ ಬೇರೊಂದು ಕ್ರಿಯಾಪದ ಬಿದ್ದು ಹೋಗಿದೆ (ಎಂದರೆ ಅದೊಂದು ವಿಷಯವಾಕ್ಯ) ಎಂದು ಹೇಳುವುದೇ ಸರಿ ಯೆಂದು ತೋರುತ್ತದೆ (3.2.3 ನೋಡಿ).

Eke →

2.1.1 ಕ್ರಿಯಾಪದದ ಪ್ರತ್ಯಯಗಳು

ಇಂತಹ ವಾಕ್ಯಗಳಲ್ಲಿ ಬರುವ ಕ್ರಿಯಾಪದ ಈ ರೀತಿ ಒಂದು ಘಟನೆಯನ್ನು ತಿಳಿಸುವುದು ಮಾತ್ರವಲ್ಲದೆ, ಆಡುಗನ ಸಮಯಕ್ಕೆ ಸಂಬಂಧಿಸಿದಂತೆ ಆ ಘಟನೆಯ ಸಮಯವನ್ನೂ ಸೂಚಿಸುತ್ತದೆ, ಮತ್ತು ಆ ಘಟನೆಯಲ್ಲಿ ನಿರತ ರಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನೂ ಸೂಚಿಸುತ್ತದೆ. ಈ ಎರಡು ಕೆಲಸಗಳನ್ನು ನಡೆಸುವುದಕ್ಕಾಗಿ ಅದರೊಂದಿಗೆ ಎರಡು ಪ್ರತ್ಯಯಗಳು ಬರುತ್ತವೆ.
ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (2ಕ) ವಾಕ್ಯದ ಹುಡುಕಿದ ಎಂಬ ಕ್ರಿಯಾರೂಪದಲ್ಲಿ ಹುಡುಕು ಕ್ರಿಯಾಪದದೊಂದಿಗೆ ಅದು ತಿಳಿಸುವ ಘಟನೆ ಯಾವಾಗ ನಡೆದುದು (ಎಂದರೆ (2ಕ) ವಾಕ್ಯವನ್ನು ಯಾವ ಸಮಯದಲ್ಲಿ ಆಡಲಾಗಿತ್ತೋ ಅದಕ್ಕಿಂತ ಮೊದಲೇ ಆ ಘಟನೆ ನಡೆದಿತ್ತು) ಎಂಬುದನ್ನು ತಿಳಿಸಲು ಅದರೊಂದಿಗೆ ಇದ್ ಪ್ರತ್ಯಯ ಬಂದಿದೆ, ಮತ್ತು ಆ ಘಟನೆಯನ್ನು
ನಡೆಸಿರುವ ವ್ಯಕ್ತಿ ಯಾರು (ಒಬ್ಬ ಗಂಡಸು) ಎಂಬುದನ್ನು ತಿಳಿಸಲು ಅ ಪ್ರತ್ಯಯ (2ಖ) ವಾಕ್ಯದ ಹೋಗುತ್ತಾಳೆ ಎಂಬ ಕ್ರಿಯಾರೂಪದಲ್ಲಿ ಹೋಗು ಕ್ರಿಯಾಪದದೊಂದಿಗೆ ಈ ಇದ್ ಪ್ರತ್ಯಯದ ಬದಲು ಉತ್್ತ ಪ್ರತ್ಯಯ ಬಂದಿದ್ದು, ಅದು ಆ ಕ್ರಿಯಾಪದ ತಿಳಿಸುವ ಘಟನೆ (2ಖ)ನೇ ವಾಕ್ಯವನ್ನಾಡಿರುವ ಸಮಯಕ್ಕಿಂತ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸುತ್ತದೆ, ಮತ್ತು ಅದರ ಅನಂತರ ಅ ಪ್ರತ್ಯಯದ ಬದಲು ಆಳೆ ಪ್ರತ್ಯಯ ಬಂದಿದ್ದು, ಅದು ಆ ಘಟನೆಯನ್ನು ನಡೆಸಲಿರುವ ವ್ಯಕ್ತಿ ಒಬ್ಬ ಹೆಂಗಸು ಎಂಬುದನ್ನು ಸೂಚಿಸುತ್ತದೆ.
ಇದೇ ವಿಷಯವನ್ನೇ ಕ್ರಿಯಾಪದದೊಂದಿಗೆ ಬರುವ ಬೇರೆ ಪದ ಇಲ್ಲವೇ ಪದಕಂತೆಗಳ ಮೂಲಕ ಹೆಚ್ಚು ವಿವರವಾಗಿ ತಿಳಿಸಲು ಸಾಧ್ಯ ಎಂಬುದನ್ನು ಮುಂದೆ ನೋಡಲಿರುವೆವು. (ಉದಾಹರಣೆಗಾಗಿ (2ಖ) ವಾಕ್ಯದಲ್ಲಿ ಬಂದಿರುವ ನಾಳೆ ಎಂಬ ಪದ ಘಟನೆಯ ಸಮಯವನ್ನೂ ಮತ್ತು ಸೀತಾಬಾಯಿ ಎಂಬ ಪದ ಆ ಘಟನೆಯನ್ನು ನಡೆಸಲಿರುವ ವ್ಯಕ್ತಿಯನ್ನೂ ಹೆಚ್ಚು ವಿವರವಾಗಿ ಪರಿಚಯಿಸುತ್ತವೆ.) ಕ್ರಿಯಾಪದಗಳೊಂದಿಗೆ ಈ ರೀತಿ ಘಟನೆಯಲ್ಲಿ ತೊಡಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವುದಕ್ಕಾಗಿ ಮತ್ತು ಘಟನೆಯ ಸಮಯವನ್ನು ಸೂಚಿಸುವು ದಕ್ಕಾಗಿ ಮಾತ್ರವಲ್ಲದೆ ಬೇರೆಯೂ ಕೆಲವು ಕಾರ್ಯಗಳನ್ನು ಸಾಧಿಸುವುದಕ್ಕಾಗಿ ಇನ್ನೂ ಕೆಲವು ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ. ಇಂತಹ ಪ್ರತ್ಯಯಗಳನ್ನು ಪಡೆದಿರುವ ಕ್ರಿಯಾಪದಗಳ ಪದರೂಪಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ ಐದನೇ ಅಧ್ಯಾಯದಲ್ಲಿ ಕೊಡಲಾಗುವುದು.

Eke →

2.1.2 ವಾಕ್ಯಘಟಕಗಳು ಮತ್ತು ಗುಣಪದಗಳು

ಮೇಲೆ ಸೂಚಿಸಿದ ಹಾಗೆ, ಕ್ರಿಯಾವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಬರುವ ಪದ ಇಲ್ಲವೇ ಪದಕಂತೆಗಳಿಗೆಲ್ಲ ಕ್ರಿಯಾವಾಕ್ಯವು ತಿಳಿಸುವ ಘಟನೆಯ ವಿಷಯವಾಗಿ ಹೆಚ್ಚಿನ ವಿವರಗಳನ್ನು ಒದಗಿಸುವ ಕೆಲಸವಿದೆ. ಇವನ್ನು (ಕ) ಆ ಘಟನೆಯಲ್ಲಿ ಸಮಯ ವ್ಯಕ್ತಿ, ಮೊದಲಾದವುಗಳನ್ನು ಹೆಸರಿಸುವ ಇಲ್ಲವೇ ವರ್ಣಿಸುವ ‘ಘಟಕ’ಗಳು ಮತ್ತು (ಖ) ಆ ಘಟನೆ ಯಾವಾಗ, ಎಲ್ಲಿ ಮತ್ತು ಹೇಗೆ ನಡೆದಿದೆಯೆಂಬುದನ್ನು ತಿಳಿಸುವ ‘ಗುಣಪದ’ಗಳು (ಇಲ್ಲವೇ ಕ್ರಿಯಾವಿಶೇಷಣಗಳು) ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ತೊಡಗಿರುವ ವಸ್ತು, ಶಾಮರಾಯರ ಮಗಳು ನಿನ್ನೆ ಪುರಭವನದಲ್ಲಿ ಪುರಂದರದಾಸರ ಕೀತ್ರನೆಯೊಂದನ್ನು ಬಹಳ ಸೊಗಸಾಗಿ ಹಾಡಿದಳು. (4)ನೇ ವಾಕ್ಯದಲ್ಲಿ ಬಂದಿರುವ ಶಾಮರಾಯರ ಮಗಳು ಎಂಬ ಘಟಕ ಆ ವಾಕ್ಯ ತಿಳಿಸುವ ಘಟನೆಯನ್ನು (ಹಾಡುವುದನ್ನು) ನಡೆಸಿರುವುದು ಯಾರು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವಂತೆ ಮಾಡುತ್ತದೆ; (ಇದನ್ನೇ ಕ್ರಿಯಾಪದದ ಕೊನೆಯಲ್ಲಿ ಬಂದಿರುವ ಅಳು ಪ್ರತ್ಯಯ ಬಹಳ ಚುಟುಕಾಗಿ ತಿಳಿಸುತ್ತದೆ); ಪುರಭವನದಲ್ಲಿ ಎಂಬ ಇನ್ನೊಂದು ಪದ ಆ ಘಟನೆ ನಡೆದದ್ದು ಎಲ್ಲಿ ಎಂಬುದನ್ನು ತಿಳಿಸುತ್ತದೆ; ಮತ್ತು, ಪುರಂದರ ದಾಸರ ಕೀತ್ರನೆಯೊಂದನ್ನು ಎಂಬ ಪದಕಂತೆ ಹಾಡಿದ್ದು ಏನನ್ನು ಎಂಬುದನ್ನು ತಿಳಿಸು ತ್ತದೆ. ಈ ಮೂರು ಪದಕಂತೆಗಳು ಘಟನೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಅಂಗಗಳು. ಇದಲ್ಲದೆ, (4)ನೇ ವಾಕ್ಯದಲ್ಲಿ ಬೇರೆಯೂ ಕೆಲವು ಪದಗಳು ಬಂದಿದ್ದು ಅವು ಆ ವಾಕ್ಯದಲ್ಲಿ ಕ್ರಿಯಾವಿಶೇಷಣಗಳಾಗಿ ಬಳಕೆಯಲ್ಲಿವೆ ಎಂಬುದನ್ನು ಗಮನಿಸಬಹುದು. ಇವುಗಳಲ್ಲಿ ನಿನ್ನೆ ಎಂಬುದು ಹಾಡಿರುವ ಸಮಯವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸುತ್ತವೆ. (ಇದನ್ನೇ ಕ್ರಿಯಾಪದದೊಂದಿಗೆ ಬಂದಿರುವ ಇದ್ ಪ್ರತ್ಯಯ ಬಹಳ ಚುಟುಕಾಗಿ ತಿಳಿಸುತ್ತದೆ); ಮತ್ತು ಬಹಳ ಹಾಗೂ ಸೊಗಸಾಗಿ ಎಂಬ ಇನ್ನೆರಡು ಪದಗಳು ಹಾಡಿರುವುದು ಹೇಗೆ ಎಂಬುದನ್ನು ತಿಳಿಸುತ್ತವೆ.
ಘಟಕಗಳು ಮತ್ತು ಕ್ರಿಯಾವಿಶೇಷಣಗಳು (ಗುಣಪದಗಳು) ಎಂಬುದಾಗಿ ವಾಕ್ಯದ ಅಂಗಗಳನ್ನು ಮೇಲೆ ಸೂಚಿಸಿದ ಹಾಗೆ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆಯಾದರೂ ಅವುಗಳೊಳಗೆ ಹಲವು ಸಾಮ್ಯಗಳಿವೆ ಎಂಬುದನ್ನು ನಾವು ಮೇಲೆ 1.3.3ರಲ್ಲಿ ನೋಡಿರುವೆವು. ಅವು ಎರಡೂ ಕ್ರಿಯಾಪದಗಳು ತಿಳಿಸುವ ಘಟನೆಯ ಕುರಿತಾಗಿ ಹೆಚ್ಚಿನ ತಿಳುವಳಿಕೆಯನ್ನು ಕೊಡುವ ವಾಕ್ಯಾಂಗಗಳಾಗಿರುವುದೇ ಇದಕ್ಕೆ ಕಾರಣ.
ಕ್ರಿಯಾಪದದೊಂದಿಗೆ ಬರಬಲ್ಲ ಗುಣಪದಗಳ ಕುರಿತಾಗಿ ಹೆಚ್ಚಿನ ವಿವರ ವನ್ನು ಮುಂದೆ ಆರನೇ ಅಧ್ಯಾಯದಲ್ಲಿ ಕೊಡಲಾಗುವುದು. ಕ್ರಿಯಾಪದದೊಂದಿಗೆ ಬರಬಲ್ಲ ಘಟಕಗಳು ಎಂತಹವು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸ

Eke →

2.2 ಘಟಕಗಳಲ್ಲಿ ವೈವಿಧ್ಯ

ವಾಕ್ಯವೊಂದರಲ್ಲಿ ಕ್ರಿಯಾಪದದೊಂದಿಗೆ ಬೇರೆ ಬೇರೆ ರೀತಿಯ ಘಟಕಗಳು ಬರಲು ಸಾಧ್ಯವಿದ್ದು, ಅವು ಎಂತಹವು ಎಂಬುದು ಆ ಕ್ರಿಯಾಪದವು ಸೂಚಿಸುವ ಘಟನೆಯ ಸ್ವರೂಪವನ್ನವಲಂಬಿಸಿದೆ. ಉದಾಹರಣೆಗಾಗಿ, ಸಾಯು ಕ್ರಿಯಾಪದ ದೊಂದಿಗೆ ‘ಸತ್ತವರು ಯಾರು (ಅಥವಾ ಯಾವುದು)’ ಎಂಬುದನ್ನು ತಿಳಿಸುವ ಒಂದು ಘಟಕ ಬಂದರೆ ಸಾಕು, ಆದರೆ ಕೊಲ್ಲು ಕ್ರಿಯಾಪದದೊಂದಿಗೆ ‘ಕೊಂದವರು ಯಾರು’ ಎಂಬುದನ್ನು ತಿಳಿಸುವ ಘಟಕ ಮಾತ್ರವಲ್ಲದೆ ‘ಕೊಂದದ್ದು ಯಾರನ್ನು (ಅಥವಾ ಯಾವುದನ್ನು)’ ಎಂಬುದನ್ನು ತಿಳಿಸುವ ಇನ್ನೊಂದು ಘಟಕವೂ ಬರುವ ಅವಶ್ಯಕತೆಯಿದೆ. (5ಕ) ದೊಡ್ಡ ಬೆಕ್ಕು ಸತ್ತಿದೆ. (5ಖ) ರಾಜು ದೊಡ್ಡ ಬೆಕ್ಕನ್ನು ಕೊಂದಿದ್ದಾನೆ. ಇದೇ ರೀತಿಯಲ್ಲಿ ಅರಳು ಕ್ರಿಯಾಪದದೊಂದಿಗೆ ‘ಅರಳುವುದು (ಅಥವಾ ಅರಳಿರುವುದು) ಯಾವುದು’ ಎಂಬುದನ್ನು ತಿಳಿಸುವ ಒಂದು ಘಟಕ ಬಂದರೆ ಸಾಕು, ಆದರೆ ಎಟಕು ಕ್ರಿಯಾಪದದೊಂದಿಗೆ ‘ಎಟಕುವುದು ಯಾವುದು’ ಎಂಬುದನ್ನು ತಿಳಿಸುವ ಘಟಕ ಮಾತ್ರವಲ್ಲದೆ ‘ಎಟಕುವುದು ಯಾರಿಗೆ’ ಎಂಬುದನ್ನು ತಿಳಿಸುವ ಘಟಕವೂ ಬರಬೇಕಾಗುತ್ತದೆ. ಗುಲಾಬಿ ಹೂ ಅರಳಿದೆ. (6ಖ) ಗುಲಾಬಿ ಹೂ ಅವಳಿಗೆ ಎಟಕುತ್ತದೆ. ಎರಡಕ್ಕಿಂತ ಜಾಸ್ತಿ ಘಟಕಗಳು ಬರಬೇಕಾಗುವ ಕ್ರಿಯಾಪದಗಳೂ ಕನ್ನಡ ದಲ್ಲಿ ಕೆಲವಿವೆ. ಉದಾಹರಣೆಗಾಗಿ ಕೊಡು ಕ್ರಿಯಾಪದದೊಂದಿಗೆ ‘ಕೊಟ್ಟವರು ಯಾರು’, ‘ಕೊಟ್ಟುದು ಯಾರಿಗೆ’ ಮತ್ತು ‘ಕೊಟ್ಟುದು ಯಾವುದನ್ನು’ ಎಂಬುದನ್ನು ತಿಳಿಸುವ ಮೂರು ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ಇದೇ ರೀತಿಯಲ್ಲಿ ಹೇಳು ಕ್ರಿಯಾಪದದೊಂದಿಗೆ ‘ಹೇಳಿದ್ದು ಯಾರು’, ‘ಹೇಳಿದ್ದು ಏನು’ ಮತ್ತು ‘ಹೇಳಿದ್ದು ಯಾರಿಗೆ’ ಎಂಬ ಮೂರು ಕೇಳ್ವಿಗಳಿಗೆ ಉತ್ತರಗಳನ್ನು ಕೊಡಬಲ್ಲ ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ರಾಜು ಹರಿಗೆ ಎರಡು ಸಾವಿರ ರುಪಾಯಿ ಕೊಟ್ಟ. (7ಖ) ಅಜ್ಜಿ ಮಕ್ಕಳಿಗೆ ಒಂದು ಕತೆ ಹೇಳಿದಳು. ಈ ರೀತಿ ಕ್ರಿಯಾಪದಗಳು ಸೂಚಿಸುವ ಘಟನೆಯನ್ನವಲಂಬಿಸಿ ಬರುವ ಘಟಕಗಳು ಮಾತ್ರವಲ್ಲದೆ ಬೇರೆಯೂ ಕೆಲವು ಘಟಕಗಳು ವಾಕ್ಯದಲ್ಲಿ ಬರಲು ಸಾಧ್ಯವಿದೆ. ಇವು ಎಲ್ಲಾ ರೀತಿಯ ಕ್ರಿಯಾಪದಗಳಿಗೂ ಸಮಾನವಾಗಿರುವಂತಹ ಘಟಕಗಳು. ಅವುಗಳ ಬರುವಿಕೆ ಕ್ರಿಯಾಪದದ ಅರ್ಥವನ್ನವಲಂಬಿಸಿಲ್ಲ. ಉದಾ ಹರಣೆಗಾಗಿ, ಮೇಲೆ ಕೊಟ್ಟಿರುವ ಎಲ್ಲಾ ವಾಕ್ಯಗಳಲ್ಲೂ ಅವು ಸೂಚಿಸುವ ಘಟನೆ ‘ಯಾವಾಗ ನಡೆಯಿತು (ಅಥವಾ ನಡೆಯುತ್ತದೆ)’ ಮತ್ತು ‘ಎಲ್ಲಿ ನಡೆಯಿತು (ಅಥವಾ ನಡೆಯುತ್ತದೆ)’ ಎಂಬುದನ್ನು ತಿಳಿಸುವ ಘಟಕಗಳೆರಡನ್ನು ಬಳಸಲು ಸಾಧ್ಯವಿದೆ. ರಾಜುವಿನ ಅಂಗಳದಲ್ಲಿ ಮೂರು ದಿವಸ ಹಿಂದೆ ಒಂದು ಗುಲಾಬಿ ಹೂ ಅರಳಿತ್ತು. ರಾಜು ಹರಿಗೆ ಇವತ್ತು ಬೆಳಿಗ್ಗೆ ಸಂತೆಯಲ್ಲಿ ಎರಡು ಸಾವಿರ ಈ ರೀತಿ ಘಟನೆಯ ಸಮಯ ಮತ್ತು ಜಾಗಗಳನ್ನು ತಿಳಿಸುವ ಘಟಕಗಳು ಮಾತ್ರವಲ್ಲದೆ, ಅದರ ಉದ್ದೇಶ (8ಕ), ಅದನ್ನು ನಡೆಸುವಲ್ಲಿ ಬಳಸಿದ ಸಾಧನ (8ಖ), ಸಹಾಯಕನಾಗಿದ್ದ ವ್ಯಕ್ತಿ (8ಗ), ಮೊದಲಾದ ಬೇರೆಯೂ ಕೆಲವು ವಿಷಯಗಳನ್ನು ತಿಳಿಸುವುದಕ್ಕಾಗಿ ಹೆಚ್ಚಿನ ಘಟಕಗಳನ್ನು ಬಳಸಲು ಸಾಧ್ಯವಿದೆ ಯೆಂಬುದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (8ಕ) ಜಾನಕಿ ರಾತ್ರಿಯ ಪೂಜೆಗೆ ಹೂ ಕೊಯ್ಯುತ್ತಿದ್ದಾಳೆ. (8ಖ) ಆತ ಮಣ್ಣಿನಿಂದ ಒಂದು ಗೊಂಬೆ ಮಾಡಿದ. ರಾಜು ತನ್ನ ತಂದೆಯೊಂದಿಗೆ ಪೇಟೆಗೆ ಹೋಗಿದ್ದಾನೆ. ಕ್ರಿಯಾಪದಗಳು ಸೂಚಿಸುವ ಘಟನೆಯನ್ನು ಅವಲಂಬಿಸಿ ಬರುವ ಘಟಕ ಗಳನ್ನು ವಾಕ್ಯದ ‘ಮುಖ್ಯ ಘಟಕ’ಗಳೆಂದೂ ಮತ್ತು ಘಟನೆಗೆ ಸಂಬಂಧಿಸಿರುವ ಇತರ ವಿಷಯಗಳನ್ನು ತಿಳಿಸುವುದಕ್ಕಾಗಿ ಬರುವ ಘಟಕಗಳನ್ನು ‘ಮುಖ್ಯವಲ್ಲದ ಘಟಕ’ಗಳೆಂದೂ ಕರೆಯಬಹುದು. ಈ ಎರಡು ರೀತಿಯ ಘಟಕಗಳಲ್ಲಿ ಕ್ರಿಯಾ ಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪಗಳ ನ್ನಾಧರಿಸಿ ಕ್ರಿಯಾಪದಗಳನ್ನು ಬೇರೆ ಬೇರೆ ವಗ್ರಗಳಾಗಿ ವಿಂಗಡಿಸಲು ಸಾಧ್ಯವಿದೆ.

Eke →

2.2.1 ಮುಖ್ಯ ಘಟಕಗಳು

ಕನ್ನಡದ ಕ್ರಿಯಾವಾಕ್ಯಗಳನ್ನೆಲ್ಲ ಆಗುವಿಕೆಗಳು ಮತ್ತು ಮಾಡುವಿಕೆಗಳು ಎಂಬು ದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಹತೋಟಿಯಲ್ಲಿರುವ ಘಟನೆಗಳು ಮಾಡುವಿಕೆಗಳು ಮತ್ತು ಹಾಗೆ ಹತೋಟಿಯಲ್ಲಿಲ್ಲದ ಘಟನೆಗಳು ಆಗುವಿಕೆಗಳು. ಮಾಡುವಿಕೆಗಳನ್ನು ಸೂಚಿಸುವ ವಾಕ್ಯಗಳಲ್ಲೆಲ್ಲ ಅವನ್ನು ಹತೋಟಿಯಲ್ಲಿರಿಸಿಕೊಂಡಿರುವ ಘಟಕ ವೊಂದು ಮುಖ್ಯ ಘಟಕವಾಗಿ ಬಂದಿರುತ್ತದೆ. ಇದನ್ನು ‘ಮಾಡುಗ’ ಎಂದು ಕರೆಯಬಹುದು.
ಆಗುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲಿ ಈ ಮಾಡುಗ ಎಂಬ ಘಟಕ ಬರುವುದಿಲ್ಲ. ಆದರೆ ಅದಕ್ಕೆ ಬದಲಾಗಿ, ಘಟನೆಯ ಮೂಲಕ ಯಾವುದಾದರೂ ಒಂದು ಬದಲಾವಣೆಗೊಳಗಾಗುವ ಘಟಕ ಬರುತ್ತದೆ. ಇದನ್ನು ‘ಆಗುಗ’ ಎಂದು ಕರೆಯಬಹುದು.
(ಕ) ಆಗುವಿಕೆಯನ್ನು ಸೂಚಿಸುವ ವಾಕ್ಯಗಳು (9ಕ) ಬಾಗಿಲು ತೆರೆಯಿತು. (9ಖ) ಬಟ್ಟೆ ಒಣಗಿತು. (9ಘ) ಅರಮನೆಯ ಆನೆ ಸಾಯುತ್ತಿದೆ. ರಾಜು ಬಿದ್ದ. (ಖ) ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳು (10ಕ) ರಾಜು ಓಡಿದ. (10ಖ) ಜಾನಕಿ ಹಾಡಿದಳು. (10ಗ) ಚಿಕ್ಕ ಮಗು ನಗುತ್ತಿದೆ. (10ಘ) ಹಕ್ಕಿ ಹಾರಿತು. ಆಗುವಿಕೆಯನ್ನು ಸೂಚಿಸುವ (9ಕ-ಘ) ವಾಕ್ಯಗಳಲ್ಲಿ ಬರುವ ಬಾಗಿಲು, ಬಟ್ಟೆ, ರಾಜು ಮತ್ತು ಅರಮನೆಯ ಆನೆ ಎಂಬ ಘಟಕಗಳಿಗೆ (ಆಗುಗಗಳಿಗೆ) ಆ ವಾಕ್ಯಗಳು ಸೂಚಿಸುವ ತೆರೆ, ಒಣಗು, ಬೀಳು ಮತ್ತು ಸಾಯು ಎಂಬ ಘಟನೆಗಳ ಮೇಲೆ ಹತೋಟಿಯಿಲ್ಲ; ಆದರೆ ಮಾಡುವಿಕೆಯನ್ನು ಸೂಚಿಸುವ (10ಕ-ಘ) ವಾಕ್ಯಗಳಲ್ಲಿ ಬರುವ ರಾಜು, ಜಾನಕಿ, ಚಿಕ್ಕ ಮಗು ಮತ್ತು ಹಕ್ಕಿ ಎಂಬ ಘಟಕಗಳಿಗೆ (ಮಾಡುಗಗಳಿಗೆ) ಆ ವಾಕ್ಯಗಳು ಸೂಚಿಸುವ ಓಡು, ಹಾಡು, ನಗು ಮತ್ತು ಹಾರು ಎಂಬ ಘಟನೆಗಳ ಮೇಲೆ ಹತೋಟಿಯಿದೆ ಎಂಬುದನ್ನು ಗಮನಿಸಬಹುದು.
ಇದಲ್ಲದೆ ಆಗುವಿಕೆಯನ್ನು ಸೂಚಿಸುವ ವಾಕ್ಯಗಳು ಏನಾಯಿತು? ಎಂಬಂತಹ ಆಗು ಕ್ರಿಯಾಪದವಿರುವ ಪ್ರಶ್ನೆಗಳಿಗೆ ಉತ್ತರವಾಗಿ ಬರಬಲ್ಲುವು ಸೂಚಿಸುವ ವಾಕ್ಯಗಳು ಏನು ಮಾಡಿದ? ಮತ್ತು ಮಾಡುವಿಕೆಯನ್ನು ಎಂಬಂತಹ ಮಾಡು ಕ್ರಿಯಾಪದವಿರುವ ಪ್ರಶ್ನೆಗಳಿಗೆ ಉತ್ತರವಾಗಿ ಬರಬಲ್ಲುವು ಎಂಬುದನ್ನೂ ಗಮನಿಸಬಹುದು. ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲಿ ‘ಮಾಡುಗ’ ಘಟಕ ಮಾತ್ರ ವಲ್ಲದೆ, ಬೇರೊಂದು ಆಗುಗ ಘಟಕವೂ ಬರಲು ಸಾಧ್ಯವಿದೆ. ಇಂತಹ ಮಾಡು ವಿಕೆಯನ್ನು ಸೂಚಿಸುವ ವಾಕ್ಯಗಳ ಮೂಲದಲ್ಲಿ ಒಂದು ಆಗುವಿಕೆಯೂ ಸೇರಿ ಕೊಂಡಿರುವುದೇ ಇದಕ್ಕೆ ಕಾರಣ.
(11ಕ) ಬೆಕ್ಕು ಸತ್ತಿದೆ. (11ಖ) ನಾಯಿ ಬೆಕ್ಕನ್ನು ಕೊಂದಿದೆ. (12ಕ) ಮರದ ಗೆಲ್ಲು ಬಗ್ಗಿತು. (12ಖ) ರಾಜು ಮರದ ಗೆಲ್ಲನ್ನು ಬಗ್ಗಿಸಿದ್ದಾನೆ. (11ಕ) ವಾಕ್ಯದಲ್ಲಿ ಸಾಯು ಕ್ರಿಯಾಪದ ಬಂದಿದ್ದು ಅದು ಒಂದು ಆಗುವಿಕೆ ಯನ್ನು ಸೂಚಿಸುತ್ತದೆ ಮತ್ತು ಅದರಲ್ಲಿ ಬೆಕ್ಕು ಎಂಬ ಆಗುಗ ಘಟಕ ಮಾತ್ರ ಬಂದಿದೆ. ಇದಕ್ಕೆ ಬದಲು (11ಖ) ವಾಕ್ಯದಲ್ಲಿ ಕೊಲ್ಲು ಕ್ರಿಯಾಪದ ಬಂದಿದ್ದು ಅದು ಒಂದು ಮಾಡುವಿಕೆಯನ್ನು ಸೂಚಿಸುತ್ತದೆ ಮತ್ತು ಅದರಲ್ಲಿ ನಾಯಿ ಎಂಬ ಒಂದು ಮಾಡುಗ ಘಟಕ ಮಾತ್ರವಲ್ಲದೆ ಬೆಕ್ಕು ಎಂಬ ಒಂದು ಆಗುಗ ಘಟಕವೂ ಬಂದಿದೆ. ಈ (11ಖ) ವಾಕ್ಯ ಅದರ ಮೂಲದಲ್ಲಿ (11ಕ) ವಾಕ್ಯವನ್ನು ಒಳಗೊಂಡಿದೆ ಎಂಬುದನ್ನು ಗಮನಿಸಬಹುದು. (12ಕ-ಖ)ದಲ್ಲೂ ಹೀಗೆಯೇ. ಕನ್ನಡದಲ್ಲಿ ಮಾಡುಗ ಮತ್ತು ಆಡುಗಗಳೆಂಬ ಎರಡು ಘಟಕಗಳೂ ಒಂದೇ ವಾಕ್ಯದಲ್ಲಿ ಬಂದಾಗ ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸುವು ದಕ್ಕಾಗಿ ಆಗುಗದೊಂದಿಗೆ ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮವಿದೆ (2.6 ನೋಡಿ).
ಆಗುವಿಕೆಯನ್ನು ಸೂಚಿಸುವ ವಾಕ್ಯದಲ್ಲಿ ‘ಆಗುಗ’ ಘಟಕದೊಂದಿಗೆ ಕ್ರಿಯಾ ಪದವು ಸೂಚಿಸುವ ಘಟನೆ ಎಲ್ಲಿ ನಡೆಯಿತು, ಯಾವ ಕಡೆಯಿಂದ ನಡೆಯಿತು ಮತ್ತು ಯಾವ ಕಡೆಗಾಗಿ ನಡೆಯಿತು ಎಂಬುದಾಗಿ ಮೂರು ರೀತಿಯ ಜಾಗ ಗಳನ್ನು ಸೂಚಿಸುವುದಕ್ಕಾಗಿ ‘ಜಾಗ’, ‘ಸುರು’ ಮತ್ತು ‘ಕೊನೆ’ ಎಂಬ ಘಟಕಗಳು ಬಂದಿರಲು ಸಾಧ್ಯವಿದೆ. ಈ ಮೂರು ಘಟಕಗಳು ಸೂಚಿಸುವ ಜಾಗಗಳ ನಡುವಿರುವ ವ್ಯತ್ಯಾಸಗಳನ್ನು ಮುಂದೆ (2.4.4ರಲ್ಲಿ) ವಿವರಿಸಲಾಗುವುದು. (13ಕ) ಮಾವಿನ ಮರದಲ್ಲಿ ಹೂ ಬಿಟ್ಟಿದೆ. (13ಖ) ಅಟ್ಟದಿಂದ ಒಂದು ಹಗ್ಗ ನೇಲುತ್ತಿದೆ. (13ಗ) ಹಾಗಲ ಬಳ್ಳಿ ಮಾಡಿಗೆ ಹಬ್ಬಿದೆ. ಮಾಡುವಿಕೆಯನ್ನು ಸೂಚಿಸುವ ವಾಕ್ಯಗಳಲ್ಲೂ ಮಾಡುಗ ಘಟಕದೊಂದಿಗೆ ಈ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳು ಬಂದಿರಲು ಸಾಧ್ಯವಿದೆ, ಮತ್ತು ಇವುಗಳೊಂದಿಗೆ ಬೇರೊಂದು ಆಗುಗ ಘಟಕವೂ ಬಂದಿರಲು ಸಾಧ್ಯವಿದೆ. ಈ ಎರಡು ರೀತಿಯ ಸಾಧ್ಯತೆಗಳನ್ನು (14ಕ-ಗ) ಮತ್ತು (15ಕ- ಗ) ವಾಕ್ಯಗಳಲ್ಲಿ ಕಾಣಬಹುದು. (14ಕ) ಪುಟ್ಟ ಮಗು ಕುಚ್ರಿಯಲ್ಲಿ ಕುಳಿತಿದೆ. (14ಖ) ರಾಜು ಮರದಿಂದ ಇಳಿದ. (14ಗ) ಜಾನಕಿ ಅಟ್ಟಕ್ಕೆ ಹತ್ತಿದಳು. (15ಕ) ರಾಜು ಹಣವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (15ಖ) ಮಗು ಪ್ಲೇಟಿನಿಂದ ಜೇನನ್ನೆಲ್ಲ ನೆಕ್ಕಿತು. (15ಗ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜುತ್ತಿದ್ದಾಳೆ. (14ಕ-ಗ) ವಾಕ್ಯಗಳಲ್ಲಿ ಮಾಡುಗದೊಂದಿಗೆ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳು ಬಂದಿರುವುದನ್ನು ಗಮನಿಸಬಹುದು. (15ಕ-ಗ) ವಾಕ್ಯ ಗಳಲ್ಲಿ ಮಾಡುಗದೊಂದಿಗೆ ಒಂದು ಆಗುಗವೂ ಬಂದಿದ್ದು, ಇವುಗಳೊಂದಿಗೂ ಮೂರು ರೀತಿಯ ಜಾಗಗಳನ್ನು ಸೂಚಿಸುವ ಘಟಕಗಳನ್ನು ಬಳಸಲಾಗಿದೆ. ‘ಪ್ರೇರಕ’ ಎಂಬ ಹೆಸರಿನ ಆರನೆಯ ಘಟಕವು ಸಾಮಾನ್ಯವಾಗಿ ಕ್ರಿಯಾಪದ ದೊಂದಿಗೆ ಇಸು ಎಂಬ ಪ್ರತ್ಯಯವನ್ನು ಬಳಸಿರುವಂತಹ ವಾಕ್ಯಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ.
(16ಕ) ರಾಜು ಬಾಗಿಲು ತೆರೆದ. (16ಖ) ಜಾನಕಿ ರಾಜುವಿನ ಕೈಯಲ್ಲಿ ಬಾಗಿಲು ತೆರೆಸಿದಳು. (17ಕ) ಸೈನಿಕರು ಸೆರೆಯಾಳುಗಳನ್ನೆಲ್ಲ ಕೊಂದರು. (17ಖ) ವೀರಸೇನ ಸೈನಿಕರ ಮೂಲಕ ಸೆರೆಯಾಳುಗಳನ್ನೆಲ್ಲ ಕೊಲ್ಲಿಸಿದ. (16ಖ)ದಲ್ಲಿ ಜಾನಕಿ ಪದವೂ ಮತ್ತು (17ಖ)ದಲ್ಲಿ ವೀರಸೇನ ಪದವೂ ‘ಪ್ರೇರಕ’ ಘಟಕವನ್ನು ಸೂಚಿಸುತ್ತಿವೆ. ಈ ಘಟಕವೂ ಮಾಡುಗ ಘಟಕದ ಹಾಗೆ ತನ್ನ ಬಯಕೆಯಂತೆ ಕೆಲಸ ನಡೆಸುತ್ತದೆ, ಮತ್ತು ಆ ಕೆಲಸವನ್ನು ತನ್ನ ಹತೋಟಿ ಯಲ್ಲಿರಿಸಿಕೊಂಡಿರುತ್ತದೆ. ಆದರೆ, ಮಾಡುಗ ಘಟಕದ ಹಾಗೆ ಪ್ರೇರಕವು ತಾನೇ ಆ ಕೆಲಸವನ್ನು ಮಾಡುವ ಬದಲು ಬೇರೊಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಮೂಲಕ ಅದನ್ನು ಮಾಡಿಸಿಕೊಳ್ಳುತ್ತದೆ. ಘಟನೆಯ ಜಾಗವನ್ನು ಸೂಚಿಸುವ ಘಟಕಗಳು ಮಾತ್ರವಲ್ಲದೆ, ಮೇಲೆ (2.1.2)ರಲ್ಲಿ ಸೂಚಿಸಿರುವ ಹಾಗೆ ಕೆಲವು ಸಂದಭ್ರಗಳಲ್ಲಿ ಸಮಯವನ್ನು ಸೂಚಿಸುವ ಘಟಕಗಳೂ ವಾಕ್ಯದ ಒಂದು ಮುಖ್ಯ ಘಟಕವಾಗಿ ಕಾಣಿಸಿಕೊಳ್ಳ ಬಲ್ಲುವು.

Eke →

2.2.2 ಮುಖ್ಯವಲ್ಲದ ಘಟಕಗಳು

ಮೇಲೆ ವಿವರಿಸಿದ ಆರು ಮುಖ್ಯ ಘಟಕಗಳು ಮಾತ್ರವಲ್ಲದೆ ಕ್ರಿಯಾವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಕೆಲವು ಮುಖ್ಯವಲ್ಲದ ಘಟಕಗಳೂ ಬರಬಲ್ಲುವು. ಇವು ಎಲ್ಲಾ ರೀತಿಯ ವಾಕ್ಯಗಳಲ್ಲೂ ಬರಬಲ್ಲುವಾಗಿದ್ದು, ಅವುಗಳ ಬಳಕೆ ಕ್ರಿಯಾ ಪದದ ಅರ್ಥವನ್ನು ಅವಲಂಬಿಸಿರುವುದಿಲ್ಲ. ಉದಾಹರಣೆಗಾಗಿ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಅವುಗಳ ಜಾಗ ಮತ್ತು ಸಮಯಗಳನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳನ್ನು ಬಳಸಲು ಸಾಧ್ಯವಿದೆ. (18ಕ) ಗೌಡರು ತಮ್ಮ ತೋಟದಲ್ಲಿ ಈ ವಷ್ರ ಹತ್ತಿ ಬೆಳೆದಿದ್ದಾರೆ. (18ಖ) ಆತ ದೇವಸ್ಥಾನದ ಕೆರೆಯಲ್ಲಿ ಮೀಯುತ್ತಿದ್ದಾನೆ. (18ಗ) ರಾಜು ಕ್ಲಾಸಿನಲ್ಲಿ ಒಂದು ಕಾದಂಬರಿ ಓದುತ್ತಿದ್ದ. (18ಕ)ದಲ್ಲಿ ಮಾಡುಗ ಘಟಕವಾಗಿರುವ ಗೌಡರು ಮತ್ತು ಆಗುಗ ಘಟಕ ವಾಗಿರುವ ಹತ್ತಿ ಎಂಬಿವೆರಡು ಮಾತ್ರ ಮುಖ್ಯ ಘಟಕಗಳು. ಜಾಗವನ್ನು ಸೂಚಿಸುವ ತಮ್ಮ ತೋಟದಲ್ಲಿ ಎಂಬುದು ಮತ್ತು ಸಮಯವನ್ನು ಸೂಚಿಸುವ ಈ ವಷ್ರ ಎಂಬುದು ಇವೆರಡೂ ಮುಖ್ಯವಲ್ಲದ ಘಟಕಗಳು. ಯಾಕೆಂದರೆ ಬೆಳೆ ಎಂಬ ಕ್ರಿಯಾಪದ ಸೂಚಿಸುವ ಘಟನೆಗೆ ಆಗುಗ ಮತ್ತು ಮಾಡುಗ ಘಟಕಗಳು ಮಾತ್ರ ನೇರವಾಗಿ ಸಂಬಂಧಿಸಿರುತ್ತವೆ. ಈ ರೀತಿಯಾಗಿ, ಘಟನೆ ನಡೆದ ಇಲ್ಲವೇ ನಡೆಯಲಿರುವ ಜಾಗ ಮತ್ತು ಸಮಯಗಳು ಮಾತ್ರವಲ್ಲದೆ, ಅದು ಯಾವ ಕಾರಣದಿಂದ ನಡೆಯಿತು ಮತ್ತು ಯಾವ ಉದ್ದೇಶವನ್ನು ಸಾಧಿಸುವುದಕ್ಕಾಗಿ ನಡೆಯಿತು, ಅದಕ್ಕಾಗಿ ಬಳಸಿದ ಉಪಕರಣ ಯಾವುದು ಮತ್ತು ಅದನ್ನು ನಡೆಸಿದ ಶಕ್ತಿ ಯಾವುದು, ಅದನ್ನು ನಡೆಸುವಲ್ಲಿ ಮಾಡುಗ ಇಲ್ಲವೇ ಆಗುಗನೊಂದಿಗೆ ಜೊತೆಗಾರನೊಬ್ಬನಿದ್ದಲ್ಲಿ ಆತ ಯಾರು, ಮಾಡುಗ ಇಲ್ಲವೇ ಅಗುಗವನ್ನು ಹೋಲುವಂತಹ ‘ಹೋಲುಗ’ ಯಾರು ಇತ್ಯಾದಿಗಳನ್ನು ಸೂಚಿಸುವ ಘಟಕಗಳು ಮುಖ್ಯವಲ್ಲದ ಘಟಕಗಳಾಗಿ ವಾಕ್ಯಗಳಲ್ಲಿ ಬರಬಲ್ಲುವು. ಇಂತಹ ಮುಖ್ಯವಲ್ಲದ ಕೆಲವು ಘಟಕಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
(19ಕ) ಜೋರಾಗಿ ಮಳೆ ಬಂದ ಕಾರಣ ಮೇಷ್ಟು ಶಾಲೆಗೆ ಬರಲಿಲ್ಲ. (19ಖ) ರಾತ್ರಿಯ ಪೂಜೆಗೆ ಆಕೆ ಹೂ ಕೊಯ್ಯುತ್ತಿದ್ದಾಳೆ. (19ಗ) ಆತ ಕತೆಗಳನ್ನು ಕೆಂಪು ಶಾಯಿಯಲ್ಲಿ ಬರೆಯುತ್ತಿದ್ದಾನೆ. (19ಘ) ಬಿಸಿಲಿಗೆ ಹಪ್ಪಳ ಒಣಗಿತು. (19ಙ) ಆಕೆ ಕೊಡದೊಂದಿಗೆ ತಂಬಿಗೆಯಲ್ಲೂ ನೀರು ತುಂಬಿಸಿದ್ದಾಳೆ. (19ಚ) ರಾಜುವಿನಂತೆ ಜಾನಕಿಗೂ ಕಾಲಿಗೆ ಪೆಟ್ಟಾಗಿದೆ. (19ಛ) ಮಗಳ ಮದುವೆಗಾಗಿ ಆತ ಹತ್ತು ಸಾವಿರ ಸಂಗ್ರಹಿಸಿದ್ದಾನೆ. ಬರು ಕ್ರಿಯಾಪದದೊಂದಿಗೆ ಮುಖ್ಯ ಘಟಕವಾಗಿ ಒಂದು ಮಾಡುಗ ಘಟಕ ಮತ್ತು ಒಂದು ಸುರು ಇಲ್ಲವೇ ಕೊನೆ ಘಟಕ ಬಂದರೆ ಸಾಕು. ಆದರೆ (19ಕ)ದಲ್ಲಿ ಇವೆರಡರೊಂದಿಗೆ ಘಟನೆ ನಡೆದುದಕ್ಕೆ ಕಾರಣವೇನೆಂಬುದನ್ನು ತಿಳಿಸುವ ಮಳೆ ಬಂದ ಕಾರಣ ಎಂಬ ಮೂರನೆಯ ಮುಖ್ಯವಲ್ಲದ ಘಟಕವೂ ಇದೇ ರೀತಿಯಲ್ಲಿ (19ಖ)ದಲ್ಲಿ ಬಂದಿರುವ ರಾತ್ರಿಯ ಪೂಜೆಗೆ ಎಂಬ ಘಟಕ, (19ಗ)ದಲ್ಲಿ ಬಂದಿರುವ ಕೆಂಪು ಶಾಯಿಯಲ್ಲಿ ಎಂಬ ಘಟಕ, (19ಘ)ದಲ್ಲಿ ಬಂದಿರುವ ಬಿಸಿಲಿಗೆ ಎಂಬ ಘಟಕ, (19ಙ)ದಲ್ಲಿ ಬಂದಿರುವ ಕೊಡದೊಂದಿಗೆ ಎಂಬ ಘಟಕ, (19ಚ)ದಲ್ಲಿ ಬಂದಿರುವ ರಾಜುವಿನಂತೆ ಎಂಬ ಘಟಕ, ಮತ್ತು (19ಛ)ದಲ್ಲಿ ಬಂದಿರುವ ಮಗಳ ಮದುವೆಗಾಗಿ ಎಂಬ ಘಟಕ ಇವೆಲ್ಲವೂ ಮುಖ್ಯವಲ್ಲದ ಘಟಕಗಳು.

Eke →

2.3 ಘಟಕಗಳ ನಡುವಿನ ವ್ಯತ್ಯಾಸಗಳು

ಆಗುಗ, ಮಾಡುಗ, ಜಾಗ, ಸುರು, ಕೊನೆ, ಸಮಯ ಮತ್ತು ಪ್ರೇರಕಗಳೆಂಬ ಈ ಏಳು ಮುಖ್ಯ ಘಟಕಗಳು ಯಾವ ರೀತಿಯಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂಬುದನ್ನು ಸ್ವಲ್ಪ ವಿವರವಾಗಿ ಕೆಳಗೆ ಪರಿಶೀಲಿಸಲಾಗಿದೆ.

Eke →

2.3.1 ಆಗುಗ ಮತ್ತು ಮಾಡುಗ

ಒಂದು ಘಟನೆಯ ಮೂಲಕ ಬೇರೆ ಬೇರೆ ಬದಲಾವಣೆಗಳಿಗೆ ಒಳಗಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ‘ಆಗುಗ’ ಘಟಕ ಸೂಚಿಸುತ್ತದೆ. ಆದರೆ ಇಂತಹ ಬದಲಾವಣೆಗಳಾವುವೂ ಈ ಘಟಕದ ಹತೋಟಿಯಲ್ಲಿರುವುದಿಲ್ಲ. ಒಂದು ಘಟನೆಯಿಂದಾಗಿ ಅದು ಈ ರೀತಿ ಬದಲಾವಣೆಗಳಿಗೊಳಗಾಗುತ್ತಿರುವ ಬದಲು ಹೊಸದಾಗಿ ಹುಟ್ಟಿಕೊಳ್ಳುತ್ತಿರಬಹುದು ಇಲ್ಲವೇ ತಯಾರಾಗುತ್ತಿರ ಬಹುದು. (20ಕ) ರಂಗರಾಯರು ತಮ್ಮ ಬಾವಿಯನ್ನು ಮುಚ್ಚಿಸಿದರು. (20ಖ) ರಂಗರಾಯರು ಒಂದು ಮನೆಯನ್ನು ಕಟ್ಟಿಸಿದರು. (20ಕ) ವಾಕ್ಯದಲ್ಲಿ ಆಗುಗವಾಗಿ ಬಂದಿರುವ ತಮ್ಮ ಬಾವಿ ಎಂಬ ಘಟಕ ಆ ವಾಕ್ಯವು ಸೂಚಿಸುವ ಘಟನೆಯಿಂದ ಬದಲಾವಣೆಗೊಳಗಾಗಿದೆ (ಅದು ಇಲ್ಲ ವಾಗಿದೆ), ಆದರೆ (20ಖ)ದಲ್ಲಿ ಆಗುಗವಾಗಿ ಬಂದಿರುವ ಒಂದು ಮನೆ ಎಂಬ ಘಟಕ ಆ ವಾಕ್ಯವು ಸೂಚಿಸುವ ಘಟನೆಯಿಂದ ಹೊಸದಾಗಿ ತಯಾರಾಗಿದೆ ಎಂಬುದನ್ನು ಗಮನಿಸಬಹುದು. ‘ಮಾಡುಗ’ ಘಟಕವೂ ಆಗುಗದ ಹಾಗೆಯೇ ಕ್ರಿಯಾಪದವು ಸೂಚಿಸುವ ಘಟನೆಯಿಂದ ಬದಲಾವಣೆಗೊಳಗಾಗುತ್ತಿರಲು ಸಾಧ್ಯವಿದೆ. ಆದರೆ ಅಂತಹ ಬದಲಾವಣೆ ಮಾಡುಗ ಘಟಕದ ಹತೋಟಿಯಲ್ಲಿರುತ್ತದೆಯೆಂಬುದೇ ಆಗುಗ ಘಟಕಕ್ಕೂ ಮತ್ತು ಮಾಡುಗ ಘಟಕಕ್ಕೂ ನಡುವಿರುವ ಮುಖ್ಯ ವ್ಯತ್ಯಾಸ. (21ಕ) ರಾಜು ಮನೆಗೆ ಓಡಿದ. (21ಖ) ರಾಜು ಮಹಡಿಯಿಂದ ಕೆಳಗೆ ಬಿದ್ದ. ರಾಜು ಎಂಬುದು (21ಕ)ದಲ್ಲಿ ಮಾಡುಗ ಘಟಕವಾಗಿಯೂ ಮತ್ತು (21ಖ) ದಲ್ಲಿ ಆಗುಗ ಘಟಕವಾಗಿಯೂ ಬಂದಿರುವುದನ್ನು ಗಮನಿಸಬಹುದು. (21ಕ) ಸೂಚಿಸುವ ಘಟನೆ ರಾಜುವಿನ ಹತೋಟಿಯಲ್ಲಿದೆ, ಆದರೆ (21ಖ) ಸೂಚಿಸುವ ಘಟನೆ ಆತನ ಹತೋಟಿಯಲ್ಲಿಲ್ಲ. ಒಂದು ಘಟನೆಯನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲದಂತಹ ಮನೆ, ಮರ ಮೊದಲಾದುವನ್ನೂ ಕೆಲವೊಮ್ಮೆ ಮಾಡುಗ ಘಟಕವಾಗಿ ವಾಕ್ಯ ಗಳಲ್ಲಿ ಬಳಸಲು ಸಾಧ್ಯವಿದ್ದು, ಹಾಗೆ ಮಾಡಿದಾಗ ಅವಕ್ಕೆ ಘಟನೆಯೊಂದನ್ನು ಹತೋಟಿಯಲ್ಲಿರಿಸಿಕೊಳ್ಳುವ ಶಕ್ತಿ ಬಂದಿರುವ ಹಾಗೆ ಕಾಣಿಸುತ್ತದೆ. (22ಕ) ಆ ಭೂತದ ಮನೆ ಆರು ಜನರನ್ನು ಬಲಿ ತೆಗೆದುಕೊಂಡಿದೆ.
(22ಖ) ಆ ಆಲದಮರ ನೂರಾರು ಹಕ್ಕಿಗಳಿಗೆ ಆಶ್ರಯ ನೀಡಿದೆ. (22ಗ) ಆತನ ಹಾಡುವಿಕೆ ಮರದ ಮೇಲಿದ್ದ ಕಾಗೆಯನ್ನು ಬೆದರಿಸಿತು.

Eke →

2.3.2 ಜಾಗ, ಸುರು ಮತ್ತು ಕೊನೆ

ಜಾಗ, ಸುರು ಮತ್ತು ಕೊನೆ ಎಂಬ ಈ ಮೂರು ಘಟಕಗಳೂ ಮುಖ್ಯವಾಗಿ ಘಟನೆಗೆ ಸಂಬಂಧಿಸಿರುವ ಜಾಗವನ್ನು ಸೂಚಿಸುವ ಘಟಕಗಳು. ಇವುಗಳಲ್ಲಿ ಜಾಗ ಘಟಕವು ಒಂದು ಜಾಗದಲ್ಲಿ ನಡೆಯುವ ಘಟನೆಯನ್ನು ಸೂಚಿಸುವು ದಾದರೆ, ಸುರು ಘಟಕವು ಒಂದು ಜಾಗವನ್ನು ‘ಬಿಟ್ಟು’ ಹೋಗುವಂತಹ ಘಟನೆಯನ್ನೂ ಮತ್ತು ಕೊನೆ ಘಟಕವು ಒಂದು ಜಾಗದ ‘ಕಡೆಗಾಗಿ’ ನಡೆಯುವ ಘಟನೆಯನ್ನೂ ಸೂಚಿಸುತ್ತವೆ. ಈ ಮೂರು ರೀತಿಯ ಘಟಕಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (23ಕ) ರಾಜು ತನ್ನ ಪುಸ್ತಕವನ್ನು ಕಪಾಟಿನಲ್ಲಿ ಇರಿಸಿದ. (23ಖ) ರಾಜು ಕಪಾಟಿನಿಂದ ಒಂದು ಇಲಿಮರಿಯನ್ನು ತೆಗೆದ. (23ಗ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜಿದಳು. (23ಕ)ದಲ್ಲಿ ಇರಿಸು ಕ್ರಿಯಾಪದ ಬಂದಿದ್ದು ಇದು ಒಂದು ಜಾಗದಲ್ಲಿ ನಡೆಯುವ ಘಟನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಜಾಗವನ್ನು ಸೂಚಿಸುವ ಕಪಾಟಿನಲ್ಲಿ ಘಟಕ ಬಂದಿದೆ. ಇದಕ್ಕೆ ಬದಲು (23ಖ)ದಲ್ಲಿ ತೆಗೆ ಕ್ರಿಯಾಪದ ಬಂದಿದ್ದು, ಇದು ಒಂದು ಜಾಗವನ್ನು ಬಿಟ್ಟು ಹೋಗುವ ಘಟನೆ ಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಕಪಾಟಿನಿಂದ ಎಂಬ ಸುರು ಘಟಕ ಬಂದಿದೆ. (23ಗ)ದಲ್ಲಿ ಉಜ್ಜು ಕ್ರಿಯಾಪದ ಬಂದಿದ್ದು ಅದು ಒಂದು ಜಾಗದ ಕಡೆಗಾಗಿ ನಡೆಯುವ ಘಟನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಅಕ್ಕಿಬುಟ್ಟಿಗೆ ಎಂಬ ಕೊನೆ ಘಟಕ ಬಂದಿದೆ. ಕೆಲವು ಕ್ರಿಯಾಪದಗಳನ್ನು ಈ ಮೂರು ರೀತಿಯ ಘಟಕಗಳೊಂದಿಗೂ ಬಳಸಲು ಸಾಧ್ಯವಿದ್ದು ಅವು ತಮ್ಮೊಂದಿಗೆ ಬಂದಿರುವ ಘಟಕದ ಸ್ವರೂಪ ವನ್ನಾಧರಿಸಿ ಒಂದೇ ಘಟನೆಯ ಬೇರೆ ಬೇರೆ ಅಂಶಗಳಿಗೆ ಒತ್ತು ಕೊಡಬಲ್ಲುವು. (24ಕ) ಮಕ್ಕಳೆಲ್ಲ ಟೆರೇಸಿನಲ್ಲಿ ಓಡುತ್ತಿದ್ದಾರೆ. (24ಖ) ಮಕ್ಕಳೆಲ್ಲ ಟೆರೇಸಿನಿಂದ ಓಡುತ್ತಿದ್ದಾರೆ. (24ಗ) ಮಕ್ಕಳೆಲ್ಲ ಟೆರೇಸಿಗೆ ಓಡುತ್ತಿದ್ದಾರೆ. ಮೇಲಿನ ಮೂರು ವಾಕ್ಯಗಳಲ್ಲೂ ಓಡು ಎಂಬ ಒಂದೇ ಕ್ರಿಯಾಪದ ಬಂದಿದೆ. ಆದರೆ (24ಕ)ದಲ್ಲಿ ಅದು ಟೆರೇಸಿನಲ್ಲಿ ಎಂಬ ಜಾಗ ಘಟಕದೊಂದಿಗೆ ಬಂದಿರುವ ಕಾರಣ ಓಡುವ ಘಟನೆ ಒಂದು ಜಾಗದಲ್ಲಿ ನಡೆಯುತ್ತಿರುವುದನ್ನೂ, (24ಖ)ದಲ್ಲಿ ಟೆರೇಸಿಗೆ ಎಂಬ ಸುರು ಘಟಕದೊಂದಿಗೆ ಬಂದಿರುವ ಕಾರಣ ಅದೇ ಘಟನೆ ಒಂದು ಜಾಗವನ್ನು ಬಿಟ್ಟು ನಡೆಯುತ್ತಿರುವುದನ್ನೂ ಮತ್ತು (24ಗ)ದಲ್ಲಿ ಟೆರೇಸಿಗೆ ಎಂಬ ಕೊನೆ ಘಟಕದೊಂದಿಗೆ ಬಂದಿರುವ ಕಾರಣ ಅದೇ ಘಟನೆ ಒಂದು ಜಾಗದ ಕಡೆಗಾಗಿ ನಡೆಯುತ್ತಿರುವುದನ್ನೂ ಸೂಚಿಸುತ್ತದೆ.

Eke →

2.3.3 ಸುರು ಮತ್ತು ಕೊನೆ ಘಟಕಗಳ ಹೆಚ್ಚಿನ ಬಳಕೆಗಳು

ಸುರು ಮತ್ತು ಕೊನೆ ಘಟಕಗಳು ನೇರವಾಗಿ ಒಬ್ಬ ವ್ಯಕ್ತಿಯ ಇಲ್ಲವೇ ಒಂದು ವಸ್ತುವಿನ ಕದಲುವಿಕೆಗೆ ಸಂಬಂಧಿಸಿರುವ ಜಾಗಗಳನ್ನು ಸೂಚಿಸುವ ಬದಲು ಒಂದು ಅನುಭವದ ‘ಕದಲುವಿಕೆ’ಯನ್ನೂ ಸೂಚಿಸಬಲ್ಲುವು.
(25ಕ) ಜಾನಕಿ ತನ್ನ ತಾಯಿಯಿಂದ ಒಂದು ಹಾಡು ಕಲಿತಳು. (25ಖ) ಜಾನಕಿಗೆ ಅವಳ ತಾಯಿ ಒಂದು ಹಾಡು ಕಲಿಸಿದಳು. ಕಲಿ ಕ್ರಿಯಾಪದ ಸುರು ಘಟಕದೊಂದಿಗೂ ಮತ್ತು ಕಲಿಸು ಕ್ರಿಯಾಪದ ಕೊನೆ ಘಟಕದೊಂದಿಗೂ ಬರಬಲ್ಲುದು ಎಂಬುದನ್ನು (25ಕ-ಖ) ವಾಕ್ಯಗಳಿಂದ ತಿಳಿಯಬಹುದು. ಆದರೆ ಇಲ್ಲಿ ನಿಜಕ್ಕೂ ಒಂದು ವಸ್ತುವಿನ ಕದಲುವಿಕೆ ನಡೆದಿಲ್ಲ. ಜಾನಕಿ ತನ್ನಲ್ಲಿಲ್ಲದ ಅನುಭವವೊಂದನ್ನು ಪಡೆದಿದ್ದು ಅದಕ್ಕೆ ಮೂಲ ಅವಳ ತಾಯಿ ಎಂಬುದಾಗಿ ಕದಲುವಿಕೆಗೆ ಸಂಬಂಧಿಸಿದ ಘಟಕಗಳು ಇಲ್ಲಿ ಅವುಗಳ ಹೆಚ್ಚಿನ ಅರ್ಥದಲ್ಲಿ ಬಳಕೆಯಾಗಿವೆ. ಇಂತಹ ಹೆಚ್ಚಿನ ಅರ್ಥಗಳಲ್ಲಿ ಸುರು ಘಟಕಕ್ಕಿಂತಲೂ ಕೊನೆ ಘಟಕದ ಬಳಕೆ ಕನ್ನಡದಲ್ಲಿ ಹೆಚ್ಚು ರೂಢಿಯಲ್ಲಿದೆ. ಈ ವಿಷಯವನ್ನು ಕೆಳಗಿನ ಉದಾ ಹರಣೆಗಳು ಸ್ಪಷ್ಟಪಡಿಸುತ್ತವೆ. (26ಕ) ಅಜ್ಜ ಮಕ್ಕಳಿಗೊಂದು ಕತೆ ಹೇಳಿದ. (26ಖ) ನರಿಗೆ ದ್ರಾಕ್ಷೆ ಹಣ್ಣು ಎಟಕಿತು. (26ಗ) ಅವಳಿಗೆ ಕೋಪ ಬಂದಿದೆ. (26ಘ) ಅವನಿಗೆ ದಿಕ್ಕು ತಪ್ಪಿತು. ಕೊನೆ ಘಟಕವನ್ನು (26ಕ)ದಲ್ಲಿ ‘ಅಜ್ಜ ಹೇಳಿದ ಕತೆ ಯಾರನ್ನು ತಲಪಿದೆ’ ಎಂಬುದನ್ನು ಸೂಚಿಸುವುದಕ್ಕಾಯೂ, (26ಖ)ದಲ್ಲಿ ‘ದ್ರಾಕ್ಷೆ ಹಣ್ಣು ಎಟಕುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ, (26ಗ)ದಲ್ಲಿ ‘ಕೋಪ ಬರುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ ಮತ್ತು (26ಘ)ದಲ್ಲಿ ‘ದಿಕ್ಕು ತಪ್ಪುವ’ ಅನುಭವ ಯಾರಿಗಾಯಿತು ಎಂಬುದನ್ನು ತಿಳಿಸುವುದಕ್ಕಾಗಿಯೂ ಬಳಸಲಾಗಿದೆ. ವಿಷಯವಾಕ್ಯಗಳಲ್ಲಿ ಒಂದು ಗುಣಧರ್ಮದ ಇರುವಿಕೆಯನ್ನು ಸೂಚಿಸುವು ದಕ್ಕಾಗಿಯೂ ಕೊನೆ ಘಟಕವನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಮುಂದೆ 3.4ರಲ್ಲಿ ನೋಡಲಿರುವೆವು.

Eke →

2.4 ಕ್ರಿಯಾಪದಗಳ ವಿಭಜನೆ

ಕ್ರಿಯಾಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪ ಇವೆರಡೂ ಅವುಗಳ ಅರ್ಥವನ್ನವಲಂಬಿಸಿದೆ. ಉದಾಹರಣೆಗಾಗಿ, ಹೆಚ್ಚಿನ ಕ್ರಿಯಾಪದಗಳಿಗೂ ಇಸು ಪ್ರತ್ಯಯವನ್ನು ಸೇರಿಸಿ, ‘ಅವು ಸೂಚಿಸುವ ಘಟನೆ ಇನ್ನೊಬ್ಬ ವ್ಯಕ್ತಿಯ ಪ್ರೇರಣೆಯಿಂದ ನಡೆದಿದೆ’ ಎಂಬಂತಹ ಹೆಚ್ಚಿನ ಅರ್ಥವನ್ನು ಕ್ರಿಯಾಪದಗಳಿಗೆ ಸೇರಿಸಲು ಸಾಧ್ಯವಿದೆ. ಈ ರೀತಿ ಹೆಚ್ಚಿನ ಅರ್ಥವಿರುವ ಕ್ರಿಯಾಪದಗಳೊಂದಿಗೆ ಸಾಮಾನ್ಯವಾಗಿ ಒಂದು ಹೆಚ್ಚಿನ ಮುಖ್ಯ ಘಟಕವೂ ಬಂದಿರುತ್ತದೆ.
(27ಕ) ನೀರು ಕುದಿಯಿತು. (27ಖ) ಜಾನಕಿ ನೀರು ಕುದಿಸಿದಳು. (28ಕ) ನಮ್ಮ ಊರಿಗೆ ಒಬ್ಬ ಮಾಂತ್ರಿಕ ಬಂದಿದ್ದ. (28ಖ) ನಮ್ಮ ಊರಿಗೆ ಪಟೇಲರು ಒಬ್ಬ ಮಾಂತ್ರಿಕನನ್ನು ಬರಿಸಿದ್ದರು. (27ಕ)ದಲ್ಲಿ ಕುದಿ ಕ್ರಿಯಾಪದದೊಂದಿಗೆ ಕುದಿಯುವ ವಸ್ತುವನ್ನು ಸೂಚಿಸುವ ನೀರು ಎಂಬ ಆಗುಗ ಘಟಕ ಮಾತ್ರ ಬಂದಿದೆ. ಆದರೆ (27ಖ)ದಲ್ಲಿ ಈ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಕುದಿಸು ಕ್ರಿಯಾಪದ ಬಂದಿದೆಯಾದ ಕಾರಣ ಅದರೊಂದಿಗೆ ಜಾನಕಿ ಎಂಬ ಹೆಚ್ಚಿನ ಘಟಕವನ್ನು ಬಳಸಬೇಕಾಗಿದೆ. ಇದು ಕುದಿಯುವ ಘಟನೆಗೆ ಮಾಡುಗನೊಬ್ಬನನ್ನು ಸೇರಿಸು (28ಕ)ದಲ್ಲಿ ಬರು ಕ್ರಿಯಾಪದದೊಂದಿಗೆ ಮಾಡುಗ ಮತ್ತು ಜಾಗಗಳು ಬಂದಿವೆ, ಆದರೆ (28ಖ)ದಲ್ಲಿ ಈ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿದೆಯಾದ ಕಾರಣ ಅದರೊಂದಿಗೆ ಮಾಡುಗ ಮತ್ತು ಜಾಗಗಳು ಮಾತ್ರ ವಲ್ಲದೆ ಒಂದು ‘ಪ್ರೇರಕ’ವೂ ಬಂದಿದೆ. ಈ ರೀತಿ ಕ್ರಿಯಾಪದಗಳೊಂದಿಗೆ ಬರುವ ಮುಖ್ಯ ಘಟಕಗಳ ಸಂಖ್ಯೆ ಮತ್ತು ಸ್ವರೂಪ ಇವೆರಡೂ ಅವುಗಳ ಅರ್ಥವನ್ನವಲಂಬಿಸಿವೆಯಾದ ಕಾರಣ, ಕ್ರಿಯಾ ಪದಗಳನ್ನು ಅವುಗಳೊಂದಿಗೆ ಬರಬಲ್ಲ ಮುಖ್ಯ ಘಟಕಗಳ ಆಧಾರದ ಮೇಲೆ ಬೇರೆ ಬೇರೆ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

Eke →

2.4.1 ಘಟಕವಿಲ್ಲದೆ ಬರುವ ಕ್ರಿಯಾಪದಗಳು

ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಕಡಿಮೆಯೆಂದರೆ ಒಂದಾದರೂ ಮುಖ್ಯ ಘಟಕದ ಅವಶ್ಯಕತೆಯಿರುತ್ತದೆ. ಇದಕ್ಕೆ ಅಪವಾದವಾಗಿ ಗುಡುಗು, ಮಿಂಚು ಎಂಬಂತಹ ಕೆಲವೇ ಕೆಲವು ಕ್ರಿಯಾಪದಗಳು ಮಾತ್ರ ಯಾವ ಮುಖ್ಯ ಘಟಕವೂ ಇಲ್ಲದೆ ಬರಬಲ್ಲುವು. ಉದಾ: (29ಕ) ನಿನ್ನೆ ಜೋರು ಮಿಂಚುತ್ತಿತ್ತು. (29ಖ) ಜೋರು ಗುಡುಗುತ್ತಾ ಇದೆ. ಮೇಲೆ (29ಕ) ವಾಕ್ಯದಲ್ಲಿ ಮಿಂಚು ಕ್ರಿಯಾಪದೊಂದಿಗೆ ನಿನ್ನೆ ಮತ್ತು ಜೋರು ಎಂಬ ಎರಡು ಮಾತ್ರ ಬಂದಿವೆಯಲ್ಲದೆ ಗುಣಪದಗಳು ಘಟಕಗಳಾವುವೂ ಬಂದಿಲ್ಲ. (29ಖ)ದಲ್ಲಿ ಗುಡುಗು ಕ್ರಿಯಾಪದದೊಂದಿಗೆ ಜೋರು ಗುಣಪದ ಮಾತ್ರ ಬಂದಿದೆ. ಆದರೆ ಇಂತಹ ಕ್ರಿಯಾಪದಗಳೊಂದಿಗೆ ಅವುಗಳಿಗೆ ಸಂಬಂಧಿಸಿರುವ ಗುಡುಗು, ಮಿಂಚು ಎಂಬಂತಹ ನಾಮಪದಗಳನ್ನು ಆಗುಗ ಘಟಕಗಳಾಗಿ ಬಳಸಲು ಸಾಧ್ಯವಿದೆಯಾದ ಕಾರಣ (30ಕ-ಖ ನೋಡಿ), ಅವನ್ನೂ ಮೇಲಿನ ನಿಯಮಕ್ಕೆ ಅಪವಾದಗಳೆಂದು ತಿಳಿಯಬೇಕಾಗಿಲ್ಲ. ಇದಲ್ಲದೆ, ಇಂತಹ ಕ್ರಿಯಾ ಪದಗಳೊಂದಿಗೆ ಸಾಮಾನ್ಯವಾಗಿ ಅವು ಸೂಚಿಸುವ ಘಟನೆಯ ಸಮಯ ಇಲ್ಲವೇ ಜಾಗವನ್ನು ಸೂಚಿಸುವ ಘಟಕಗಳೂ ಬರುತ್ತಿದ್ದು (31ಕ-ಖ ನೋಡಿ), ಈ ಘಟಕಗಳು ಹೆಚ್ಚು ಕಡಿಮೆ ಅವುಗಳ ಮುಖ್ಯ ಘಟಕಗಳ ಹಾಗೆಯೇ ವತ್ರಿಸು ತ್ತವೆ. (30ಕ) ಗುಡುಗು ಗುಡುಗಿತು. (30ಖ) ಮಿಂಚು ಮಿಂಚಿತು. (31ಕ) ಆ ಊರಲ್ಲಿ ದಿನಾಲೂ ಬೆಳಿಗ್ಗೆ ಆರು ಗಂಟೆಗೆ ಗುಡುಗುತ್ತಿತ್ತು. (31ಖ) ಆ ಕಡೆ ಜೋರಾಗಿ ಮಿಂಚುತ್ತಿದೆ.

Eke →

2.4.2 ಘಟನೆಯ ಹತೋಟಿ

ಮೇಲೆ ಸೂಚಿಸಿರುವಂತೆ, ಕನ್ನಡದ ಕ್ರಿಯಾಪದಗಳನ್ನು ಅವು ತಿಳಿಸುವ ಘಟನೆ ಹತೋಟಿಯಲ್ಲಿರುವಂತಹದೋ ಅಥವಾ ಅಲ್ಲವೋ ಎಂಬ ವಿಷಯದ ಮೇಲೆ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವ ಕ್ರಿಯಾಪದಗಳು ಆಗುಗ ಘಟಕದೊಂದಿಗೆ ಬರುತ್ತವೆ ಯಾದರೆ ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವ ಕ್ರಿಯಾಪದಗಳು ಮಾಡುಗ ಘಟಕದೊಂದಿಗೆ ಬರುತ್ತವೆ. ಉದಾಹರಣೆಗಾಗಿ, ಕುದಿ, ಬೇಯು, ಒಣಗು, ಸಾಯು, ಅರಳು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿಲ್ಲದಿರುವ ಘಟನೆಗಳನ್ನು ಸೂಚಿಸು ತ್ತಿದ್ದು, ಅವುಗಳೊಂದಿಗೆ ಒಂದು ಆಗುಗ ಘಟಕ ಮಾತ್ರ ಮುಖ್ಯ ಘಟಕವಾಗಿ ಬರಬಲ್ಲುದು, ಮತ್ತು ಓಡು, ಅಳು, ಮಲಗು, ಹಾರು, ಕುಣಿ ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುತ್ತಿದ್ದು ಅವುಗ ಳೊಂದಿಗೆ ಒಂದು ಮಾಡುಗ ಘಟಕ ಮಾತ್ರ ಮುಖ್ಯ ಘಟಕವಾಗಿ ಬರಬಲ್ಲುದು.
(32ಕ) ಗುಲಾಬಿ ಹೂ ಅರಳಿದೆ. (32ಖ) ಬಟ್ಟೆ ಒಣಗಿತು. (32ಗ) ರಾಜುವಿನ ಕಪ್ಪು ನಾಯಿ ಸತ್ತಿದೆ. (33ಕ) ರಾಜು ಓಡಿದ. (33ಖ) ಮಗು ಅಳುತ್ತಿದೆ. (33ಗ) ಅವಳು ಕುಣಿದಳು. ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವ ಕ್ರಿಯಾಪದಗಳಲ್ಲಿ ಕೆಲವು ಒಂದು ಮಾಡುಗ ಘಟಕ ಮಾತ್ರವಲ್ಲದೆ ಅದರೊಂದಿಗೆ ಒಂದು ಆಗುಗ ಘಟಕ ವನ್ನೂ ಪಡೆದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಮಾಡು, ಎಳೆ, ಕರೆ, ತಟ್ಟು, ನೆಡು, ತಿನ್ನು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುತ್ತಿದ್ದು, ಅವುಗಳೊಂದಿಗೆ ಮುಖ್ಯ ಘಟಕವಾಗಿ ಒಂದು ಮಾಡುಗ ಘಟಕ ಮಾತ್ರವಲ್ಲದೆ ಒಂದು ಆಗುಗ ಘಟಕವೂ ಬರಬಲ್ಲುದು.
(34ಕ) ರಾಜು ಒಂದು ಗೊಂಬೆ ಮಾಡಿದ. (34ಖ) ಆನೆ ಒಂದು ಮರವನ್ನು ಎಳೆಯುತ್ತಿದೆ. (34ಗ) ಅವನು ಒಂದು ಗಿಡ ನಟ್ಟಿದ್ದಾನೆ. ಇದಲ್ಲದೆ, ಮೇಲೆ ವಿವರಿಸಿರುವ ಮೂರು ರೀತಿಯ ಕ್ರಿಯಾಪದಗಳಲ್ಲೂ ಕೆಲವು ಜಾಗ, ಸುರು ಇಲ್ಲವೇ ಕೊನೆ ಎಂಬ ಘಟಕಗಳನ್ನು ಪಡೆಯಬಲ್ಲುವು. ಉದಾಹರಣೆಗಾಗಿ, ಕರಗು, ತೇಲು, ತುಂಬು, ತುಳುಕು, ಇಂಗು ಮೊದಲಾದ ಕ್ರಿಯಾಪದಗಳು ಹತೋಟಿಯಲ್ಲಿಲ್ಲದ ಘಟನೆಗಳನ್ನು ಸೂಚಿಸುತ್ತಿದ್ದು ಅವುಗ ಳೊಂದಿಗೆ ಮುಖ್ಯ ಘಟಕವಾಗಿ ಒಂದು ಆಗುಗ ಘಟಕ ಮಾತ್ರವಲ್ಲದೆ ಒಂದು ಜಾಗ ಘಟಕವೂ ಬರಬಲ್ಲುದು. (35ಕ) ಈ ಹಾಲಿನ ಪುಡಿ ಬಿಸಿನೀರಿನಲ್ಲೂ ಕರಗುತ್ತದೆ. (35ಖ) ನೀರಿನಲ್ಲಿ ಕಸ ತೇಲುತ್ತಿದೆ. (35ಗ) ಕೊಡದಲ್ಲಿ ನೀರು ತುಂಬಿತು. ಇದೇ ರೀತಿಯಲ್ಲಿ, ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ತಂಗು, ನೆಲೆಸು, ಅಡಗು, ಅಲೆ, ತೊಡಗು ಮೊದಲಾದ ಕ್ರಿಯಾಪದ ಗಳೊಂದಿಗೆ ಒಂದು ಮಾಡುಗ ಘಟಕ ಮಾತ್ರವಲ್ಲದೆ ಒಂದು ಜಾಗ ಘಟಕವೂ ಮುಖ್ಯ ಘಟಕವಾಗಿ ಬರಬಲ್ಲುದು. (36ಕ) ಕಳ್ಳರು ಒಂದು ಗುಹೆಯಲ್ಲಿ ಅಡಗಿದ್ದರು. (36ಖ) ಹುಡುಗರು ಬಹಳ ಹೊತ್ತು ಕಾಡಿನಲ್ಲಿ ಅಲೆಯುತ್ತಿದ್ದರು. (36ಗ) ಅವರು ಈ ಊರಿನಲ್ಲಿ ನೆಲೆಸಿದ್ದಾರೆ. ಚೆಲ್ಲು, ಬಿತ್ತು, ಇರಿಸು, ತುಂಬು ಮೊದಲಾದ ಹತೋಟಿಯಲ್ಲಿರುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಮಾಡುಗ, ಆಗುಗ ಮತ್ತು ಜಾಗಗಳೆಂಬ ಮೂರು ರೀತಿಯ ಘಟಕಗಳೂ ಮುಖ್ಯ ಘಟಕಗಳಾಗಿ ಬರ ಬಲ್ಲುವು. (37ಕ) ಮಕ್ಕಳು ಈ ಕೋಣೆಯಲ್ಲಿ ನೀರು ಚೆಲ್ಲಿದ್ದಾರೆ. (37ಖ) ರಾಜು ತನ್ನ ಚೀಲವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (37ಗ) ಆಕೆ ಸಿಹಿನೀರನ್ನು ಈ ಕೊಡದಲ್ಲಿ ತುಂಬಿದ್ದಾಳೆ. ಜಾಗ ಘಟಕದ ಬದಲು ಸುರು ಇಲ್ಲವೇ ಕೊನೆ ಘಟಕವನ್ನು ಮುಖ್ಯ ಘಟಕವಾಗಿ ಪಡೆದಿರುವ ಮೇಲೆ ಸೂಚಿಸಿದಂತಹ ಮೂರು ರೀತಿಯ ಕ್ರಿಯಾಪದ ಗಳಿಗೆ ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ. (38ಕ) ಅಟ್ಟದಿಂದ ಒಂದು ಹಗ್ಗ ನೇಲುತ್ತಿದೆ. (38ಖ) ಅವನ ಬೆರಳಿಗೆ ಒಂದು ಮುಳ್ಳು ಚುಚ್ಚಿತು. (39ಕ) ಅವನು ಇಲ್ಲಿಂದ ತೊಲಗಲಿ. (39ಖ) ರಾಜು ಹರಿಗೆ ಹೊಡೆದ. (40ಕ) ಆತ ಬಾವಿಯಿಂದ ನೀರು ಸೇದುತ್ತಿದ್ದಾನೆ. (40ಖ) ಆಕೆ ಗಾಯಕ್ಕೆ ಮುಲಾಮು ಹಚ್ಚುತ್ತಿದ್ದಾಳೆ. ಆಗುಗದೊಂದಿಗೆ (38ಕ)ದಲ್ಲಿ ಸುರು ಘಟಕ ಬಂದಿದೆಯಾದರೆ, (38ಖ)ದಲ್ಲಿ ಕೊನೆ ಘಟಕ ಬಂದಿದೆ. ಇದೇ ರೀತಿಯಲ್ಲಿ ಮಾಡುಗದೊಂದಿಗೆ (39ಕ)ದಲ್ಲಿ ಸುರು ಘಟಕವೂ ಮತ್ತು (39ಖ)ದಲ್ಲಿ ಕೊನೆ ಘಟಕವೂ ಬಂದಿರುವುದನ್ನು ಕಾಣಬಹುದು. ಆಗುಗ ಮತ್ತು ಮಾಡುಗಗಳೆರಡರೊಂದಿಗೆ ಸುರು ಮತ್ತು ಕೊನೆ ಘಟಕಗಳನ್ನು ಪಡೆದಿರುವ ಕ್ರಿಯಾಪದಗಳಿಗೆ ಉದಾಹರಣೆಗಳನ್ನು (40ಕ- ಖ)ಗಳಲ್ಲಿ ಕಾಣಬಹುದು.

Eke →

2.4.3 ಆಗು ಕ್ರಿಯಾಪದದ ಘಟಕಗಳು

ಘಟಕಗಳ ಮಟ್ಟಿಗೆ ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವ ಆಗು ಕ್ರಿಯಾಪದ ಅಂತಹ ಇತರ ಕ್ರಿಯಾಪದಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನ ವಾಗಿದೆ. ಮೊದಲನೆಯದಾಗಿ, ಅದರೊಂದಿಗೆ ಎರಡು ಘಟಕಗಳು ಬರಲು ಸಾಧ್ಯವಿದ್ದು, ಅವುಗಳಲ್ಲಿ ಒಂದು ಜಾಗವನ್ನೂ ಮತ್ತು ಇನ್ನೊಂದು ಆ ಜಾಗದಲ್ಲಿ ನಡೆದಿರುವ ಘಟನೆ, ಕಾಣಿಸುವ ವಸ್ತು ಮೊದಲಾದುವನ್ನೂ ಸೂಚಿಸುತ್ತವೆ. (41ಕ) ಆತನ ಕಾಲಿನಲ್ಲಿ ಹುಣ್ಣಾಗಿದೆ. (41ಖ) ಆಕೆ ನೆಟ್ಟ ಗಿಡದಲ್ಲಿ ಹೂವಾಗಿದೆ. (41ಗ) ಅವರ ಮನೆಯಲ್ಲಿ ಏನೋ ಗಲಾಟೆಯಾಗುತ್ತಿದೆ. ಎರಡನೆಯದಾಗಿ, ಈ ಕ್ರಿಯಾಪದದೊಂದಿಗೆ ಬರುವ ಘಟಕಗಳೆರಡೂ ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಲು ಸಾಧ್ಯವಿದ್ದು, ಅವು ಆ ವ್ಯಕ್ತಿ ಇಲ್ಲವೇ ವಸ್ತುವಿಗೆ ಎರಡು ಬೇರೆ ಬೇರೆ ಸಮಯಗಳಲ್ಲಿರುವ ಅವಸ್ಥೆಗಳನ್ನು ಸೂಚಿಸಬಲ್ಲುವು. ಆಗು ಕ್ರಿಯಾಪದ ಈ ಎರಡು ಅವಸ್ಥೆಗಳನ್ನು ಸಂಬಂಧಿಸುವ ಘಟನೆಯನ್ನು ಸೂಚಿಸುತ್ತದೆ. (42ಕ) ರಾಜು ಹಣವಂತನಾದ. (42ಖ) ರಾಜಕುಮಾರ ಕಪ್ಪೆಯಾದ. (42ಗ) ಅವರು ಅಧ್ಯಕ್ಷರಾಗುತ್ತಾರೆ. (42ಘ) ಅವನ ತೋಳು ಆಕೆಯ ತಲೆದಿಂಬಾಗಿದೆ. (42ಕ)ದಲ್ಲಿ ಬಂದಿರುವ ರಾಜು ಮತ್ತು ಹಣವಂತ ಎಂಬ ಎರಡು ಘಟಕಗಳೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿವೆ ಎಂಬುದನ್ನು ಗಮನಿಸಬಹುದು. ಇದೇ ರೀತಿಯಲ್ಲಿ (42ಖ)ದಲ್ಲಿ ಬಂದಿರುವ ರಾಜಕುಮಾರ ಮತ್ತು ಕಪ್ಪೆ ಎಂಬ ಎರಡು ಘಟಕಗಳೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿದ್ದು, ಅವು ಆ ವ್ಯಕ್ತಿಯ ಎರಡು ಅವಸ್ಥೆಗಳನ್ನು ಸೂಚಿಸುತ್ತಿವೆ. ಆಗು ಕ್ರಿಯಾಪದದೊಂದಿಗೆ ಬರುವ ಘಟಕಗಳೆರಡೂ ಈ ರೀತಿ ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಿದ್ದಲ್ಲಿ ಅವು ಒಂದೇ ವಿಭಕ್ತಿ ರೂಪದಲ್ಲಿ ಬಳಕೆಯಾಗುತ್ತವೆ. ಇಂತಹ ವಾಕ್ಯಗಳನ್ನು ಮಾಡು ಕ್ರಿಯಾ ಪದವಿರುವ ಬೇರೊಂದು ವಾಕ್ಯದ ಒಳಗಿರಿಸಿ ಹೇಳಿದಾಗ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ.
(43ಕ) ರಾಜಕುಮಾರ ಕಪ್ಪೆಯಾದ. (43ಖ) ಮಂತ್ರವಾದಿ ರಾಜಕುಮಾರನನ್ನು ಕಪ್ಪೆಯನ್ನಾಗಿ ಮಾಡಿದ. (43ಗ) ಅವನು ಶ್ರೀಮಂತನಾದ.
(43ಘ) ಅವನನ್ನು ಶ್ರೀಮಂತನನ್ನಾಗಿ ಮಾಡಿದ್ದು ಅವನ ಬುದ್ಧಿವಂತಿಕೆ. (43ಕ)ದಲ್ಲಿ ಬಂದಿರುವ ರಾಜಕುಮಾರ ಮತ್ತು ಕಪ್ಪೆ ಎಂಬ ಎರಡು ಘಟಕಗಳೂ ಒಂದೇ ವಿಭಕ್ತಿಯಲ್ಲಿ ಬರುವುವೆಂಬ ವಿಷಯ ಆ ವಾಕ್ಯವನ್ನು ಒಳವಾಕ್ಯವಾಗಿ ಪಡೆದಿರುವ (43ಖ) ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

Eke →

2.4.4 ಕದಲುವ ಮತ್ತು ಕದಲದ ಘಟನೆಗಳು

ಜಾಗವೊಂದನ್ನು ಸೂಚಿಸಬೇಕಾಗಿರುವ ಕ್ರಿಯಾಪದಗಳನ್ನು ಕದಲುವ ಘಟನೆ ಗಳನ್ನು ಸೂಚಿಸುವವುಗಳು ಮತ್ತು ಕದಲದ ಘಟನೆಗಳನ್ನು ಸೂಚಿಸುವವುಗಳು
ಎಂಬುದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇವು ಗಳಲ್ಲಿ ಕದಲದ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಜಾಗ ಘಟಕ ಬರಬಲ್ಲುದಾದರೆ ಕದಲುವ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಸುರು ಇಲ್ಲವೇ ಕೊನೆ ಘಟಕಗಳು (ಅಥವಾ ಅವೆರಡೂ ಒಟ್ಟಾಗಿ) ಬರಬಲ್ಲುವು.
ಕದಲುವ ಘಟನೆಗಳಲ್ಲೆಲ್ಲ ಯಾವುದಾದರೂ ಒಂದು ಜಾಗದಿಂದ ಇಲ್ಲವೇ ಒಂದು ಜಾಗದ ಕಡೆಗಾಗಿ ನಡೆಯುವ ಚಲನೆ ನೇರವಾಗಿ ಇಲ್ಲವೇ ಸೂಕ್ಷ್ಮವಾಗಿ ಸೂಚಿತವಾಗಿರುತ್ತದೆ. ಈ ಚಲನೆ ಸುರುವಾಗುವುದೆಲ್ಲಿ ಎಂಬುದನ್ನು ಸುರು ಘಟಕವೂ ಮತ್ತು ಅದು ಕೊನೆಗೊಳ್ಳುವುದೆಲ್ಲಿ ಎಂಬುದನ್ನು ಕೊನೆ ಘಟಕವೂ ತಿಳಿಸುತ್ತವೆ. ಕೆಲವು ಕ್ರಿಯಾಪದಗಳೊಂದಿಗೆ ಈ ಎರಡು ರೀತಿಯ ಘಟಕಗಳಲ್ಲಿ ಒಂದು ಮಾತ್ರ ಬರಬಲ್ಲುದು, ಆದರೆ ಬೇರೆ ಕೆಲವು ರೀತಿಯ ಕ್ರಿಯಾಪದ ಗಳೊಂದಿಗೆ ಇವೆರಡೂ ಒಟ್ಟಾಗಿ ಬರಬಲ್ಲುವು. (44ಕ) ಜಾನಕಿ ಅಕ್ಕಿಯಿಂದ ಕಲ್ಲು ಹೆಕ್ಕುತ್ತಿದ್ದಾಳೆ. (44ಖ) ಸೀತಾಬಾಯಿ ಅಕ್ಕಿಬುಟ್ಟಿಗೆ ಸೆಗಣಿ ಉಜ್ಜುತ್ತಿದ್ದಾಳೆ. (44ಗ) ಸ್ವಾಮಿಗಳ ಸವಾರಿ ಪುಣೆಯಿಂದ ಬೊಂಬಾಯಿಗೆ ಹೋಗಿದೆ. (44ಕ)ದಲ್ಲಿ ಬಂದಿರುವ ಹೆಕ್ಕು ಕ್ರಿಯಾಪದ ಒಂದು ಜಾಗದಿಂದ ನಡೆಯುವ ಚಲನೆಯನ್ನು ಸೂಚಿಸುವುದಾದ ಕಾರಣ ಅದರೊಂದಿಗೆ ಅಕ್ಕಿಯಿಂದ ಎಂಬ ಸುರು ಘಟಕ ಬಂದಿದೆ. ಇದಕ್ಕೆ ಬದಲು (44ಖ)ದಲ್ಲಿ ಬಂದಿರುವ ಉಜ್ಜು ಕ್ರಿಯಾಪದ ಒಂದು ಜಾಗದ ಕಡೆಗಾಗಿ ನಡೆಯುವ ಚಲನೆಯನ್ನು ಸೂಚಿಸುವು ದಾದ ಕಾರಣ ಅದರೊಂದಿಗೆ ಅಕ್ಕಿ ಬುಟ್ಟಿಗೆ ಎಂಬ ‘ಕೊನೆ’ ಘಟಕ ಬಂದಿದೆ.
(44ಗ)ದಲ್ಲಿ ಬಂದಿರುವ ಹೋಗು ಕ್ರಿಯಾಪದ ಇಂತಹ ಎರಡು ರೀತಿಯ ಚಲನೆಗಳನ್ನೂ (ಎಂದರೆ ಒಂದು ಜಾಗದಿಂದ ನಡೆಯುವ ಚಲನೆಯನ್ನು ಮತ್ತು ಇನ್ನೊಂದು ಜಾಗದ ಕಡೆಗಾಗಿ ನಡೆಯುವ ಚಲನೆಯನ್ನು) ಸೂಚಿಸುವುದಾದ ಕಾರಣ ಅದರೊಂದಿಗೆ ಪುಣೆಯಿಂದ ಎಂಬ ಸುರು ಘಟಕ ಮಾತ್ರವಲ್ಲದೆ ಬೊಂಬಾಯಿಗೆ ಎಂಬ ಕೊನೆ ಘಟಕವೂ ಬಂದಿದೆ.
ಕದಲದ ಘಟನೆಗಳಲ್ಲಿ ಈ ರೀತಿ ಚಲನೆಯ ಅರ್ಥವಿರುವುದಿಲ್ಲ. ಹಾಗಾಗಿ ಅಂತಹ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳೊಂದಿಗೆ ಅವು ಸೂಚಿಸುವ ಘಟನೆ ಎಲ್ಲಿ ನಡೆಯುತ್ತದೆ ಎಂಬುದನ್ನು ತಿಳಿಸುವ ಜಾಗ ಘಟಕ ಮಾತ್ರವೇ ಬರಬಲ್ಲುದು. (45ಕ) ರಾಜು ಹಣವನ್ನು ಕಪಾಟಿನಲ್ಲಿ ಇರಿಸಿದ್ದಾನೆ. (45ಖ) ದರೋಡೆಕೋರರು ಹಣವನ್ನು ಕಾಡಿನಲ್ಲಿ ಅಡಗಿಸಿದ್ದಾರೆ. (45ಗ) ಮುದುಕಿಯ ಶವ ಬಾವಿಯಲ್ಲಿ ತೇಲುತ್ತಿದೆ.

Eke →

2.5 ವಿಭಜನೆಯ ಸಮಸ್ಯೆಗಳು

ಈ ರೀತಿ ಕ್ರಿಯಾಪದಗಳೊಂದಿಗೆ ಎಂತಹ ಘಟಕಗಳು ಮತ್ತು ಎಷ್ಟು ಘಟಕಗಳು ಮುಖ್ಯ ಘಟಕಗಳಾಗಿ ಬರುತ್ತವೆ ಎಂಬ ವಿಷಯದ ಆಧಾರದ ಮೇಲೆ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಿ ಹೇಳುವಲ್ಲಿ ಒಂದು ಮುಖ್ಯವಾದ ತೊಂದರೆಯಿದೆ. ಅದೇನೆಂದರೆ, ಕನ್ನಡದಲ್ಲಿ ಬಳಕೆಯಾಗುವ ಹಲವು ಕ್ರಿಯಾಪದ ಗಳು ಇಂತಹ ಯಾವುದಾದರೂ ಒಂದು ಗುಂಪಿನಲ್ಲಿ ಮಾತ್ರವೇ ಉಳಿಯುವ ಬದಲು ಎರಡು ಅಥವಾ ಜಾಸ್ತಿ ಗುಂಪುಗಳಲ್ಲಿ ಬರುತ್ತವೆ, ಮತ್ತು ಅವು ಯಾವ ಗುಂಪಿನಲ್ಲಿ ಬರುತ್ತವೆ ಎಂಬುದರ ಮೇಲೆ ಅವುಗಳ ಅರ್ಥದಲ್ಲೂ ವ್ಯತ್ಯಾಸ ಕಂಡುಬರುತ್ತದೆ.

Eke →

2.5.1 ಹತೋಟಿಯ ಸೂಚನೆ

ಒಂದು ಘಟನೆಯನ್ನು ವರ್ಣಿಸುವ ಸಮಯದಲ್ಲಿ ಅದು ನಡೆದಿದೆಯೆಂದಿಷ್ಟೇ ಹೇಳಬಹುದು ಇಲ್ಲವೇ ಅದು ಒಬ್ಬ ವ್ಯಕ್ತಿ ಇಲ್ಲವೇ ಪ್ರಾಣಿಯ ಹತೋಟಿಯಲ್ಲಿ ನಡೆದಿದೆಯೆಂದು ಸೂಚಿಸಬಹುದು. ಹೆಚ್ಚಿನ ಕ್ರಿಯಾಪದಗಳನ್ನೂ ಈ ಎರಡನೆಯ ಅರ್ಥದಲ್ಲಿ ಬಳಸಬೇಕಿದ್ದಲ್ಲಿ ಅವಕ್ಕೆ ಇಸು ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ಕೆಳಗೆ (ಕ) ವಾಕ್ಯಗಳಲ್ಲಿ ಹತೋಟಿಯಲ್ಲಿಲ್ಲದ ಘಟನೆಗಳನ್ನೂ ಮತ್ತು (ಖ) ವಾಕ್ಯಗಳಲ್ಲಿ ಹತೋಟಿಯಲ್ಲಿರುವವುಗಳನ್ನೂ ಸೂಚಿಸಲಾಗಿದೆ (46ಕ) ನೀರು ಕುದಿಯಿತು. (46ಖ) ಜಾನಕಿ ನೀರು ಕುದಿಸಿದಳು. (47ಕ) ನೀರು ಮುಗಿಯಿತು. (47ಖ) ಜಾನಕಿ ನೀರು ಮುಗಿಸಿದಳು. ಆದರೆ ಒಡೆ, ಬೆಳೆ, ಕದಡು, ಮಗುಚು, ಸಿಗಿ, ಮುರಿ, ಹರಿ, ಏರು ಮೊದಲಾದ ಕೆಲವು ಕ್ರಿಯಾಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಮೇಲೆ ಸೂಚಿಸಿದ ಎರಡು ಸಂದಭ್ರಗಳಲ್ಲೂ ಬಳಸಲು ಸಾಧ್ಯವಿದೆ.
(48ಕ) ಕೊಡ ಒಡೆಯಿತು. (48ಖ) ಸೀತಾಬಾಯಿ ಕೊಡ ಒಡೆದಳು. (49ಕ) ಗೆಲ್ಲು ಮುರಿಯಿತು. (49ಖ) ರಾಜು ಗೆಲ್ಲು ಮುರಿದ. (48ಕ) ವಾಕ್ಯದಲ್ಲಿ ಒಡೆ ಕ್ರಿಯಾಪದ ಒಂದು ಹತೋಟಿಯಲ್ಲಿಲ್ಲದ ಘಟನೆ ಯನ್ನು ಸೂಚಿಸುತ್ತಿದೆಯಾದರೆ, (48ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆ. (48ಕ)ದಲ್ಲಿ ಈ ಕ್ರಿಯಾ ಪದದೊಂದಿಗೆ ಒಂದು ಆಗುಗ ಘಟಕ (ಕೊಡ) ಮಾತ್ರ ಬಂದಿದೆ, ಆದರೆ (48ಖ)ದಲ್ಲಿ ಅದರೊಂದಿಗೆ ಈ ಆಗುಗ ಘಟಕ ಮಾತ್ರವಲ್ಲದೆ ಒಂದು ಮಾಡುಗ ಘಟಕವೂ (ಸೀತಾಬಾಯಿ ಎಂಬುದೂ) ಬಂದಿದೆ. (49ಕ-ಖ) ವಾಕ್ಯ ಗಳಲ್ಲೂ ಹೀಗೆಯೇ.
ತುರಿಸು, ಮೆಚ್ಚು, ಒಪ್ಪು, ತಪ್ಪು, ಹೋಗು, ಮರೆ ಮೊದಲಾದ ಬೇರೆ ಕೆಲವು ಕ್ರಿಯಾಪದಗಳೂ ಮೇಲಿನವುಗಳ ಹಾಗೆಯೇ ಹತೋಟಿಯಲ್ಲಿರುವ ಇಲ್ಲವೇ ಹತೋಟಿಯಲ್ಲಿ ಇಲ್ಲದಿರುವ ಘಟನೆಗಳನ್ನು ಯಾವ ಪ್ರತ್ಯಯದ ಸಹಾಯವಿಲ್ಲದೆಯೂ ಸೂಚಿಸಬಲ್ಲುವು. ಆದರೆ ಈ ಕ್ರಿಯಾಪದಗಳು ತಿಳಿಸುವ ಘಟನೆ ಹತೋಟಿಯಲ್ಲಿಲ್ಲ ಎಂಬುದನ್ನು ಸೂಚಿಸಬೇಕಿದ್ದಲ್ಲಿ, ಅಂತಹ ಘಟನೆ ಯಲ್ಲಿ ತೊಡಗಿರುವ ವ್ಯಕ್ತಿ, ಪ್ರಾಣಿ ಮೊದಲಾದುವನ್ನು ಮಾಡುಗ ಘಟಕದ ಮೂಲಕ ಸೂಚಿಸುವ ಬದಲು ಕೊನೆ ಘಟಕದ ಮೂಲಕ ಸೂಚಿಸಬೇಕಾಗುತ್ತದೆ. (50ಕ) ಜನಾದ್ರನ ತಲೆ ತುರಿಸಿದ. (50ಖ) ಜನಾದ್ರನನಿಗೆ ತಲೆ ತುರಿಸಿತು. (51ಕ) ಗಿರೀಶ ಪಾಠವನ್ನು ಮರೆತಿದ್ದಾನೆ. (51ಖ) ಗಿರೀಶನಿಗೆ ಪಾಠ ಮರೆತಿದೆ. ಹತೋಟಿಯಲ್ಲಿಲ್ಲದ ಘಟನೆಯನ್ನಾಗಲಿ ಇಲ್ಲವೇ ಹತೋಟಿಯಲ್ಲಿರುವ ಘಟನೆಯನ್ನಾಗಲಿ ಪ್ರತ್ಯಯವನ್ನು ಬಳಸದೇನೇ ಸೂಚಿಸಬಲ್ಲ ಬೀಳು, ತೇಗು, ಆಕಳಿಸು ಮೊದಲಾದ ಬೇರೆಯೂ ಕೆಲವು ಕ್ರಿಯಾಪದಗಳೂ ಕನ್ನಡದಲ್ಲಿವೆ. ಆದರೆ ಈ ಕ್ರಿಯಾಪದಗಳು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವಾಗ ಮೇಲಿನ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸಿದ ಹಾಗೆ ಅವುಗಳೊಂದಿಗೆ ಬರುವ ಘಟಕಗಳ ಸಂಖ್ಯೆಯಲ್ಲಿ ಇಲ್ಲವೇ ಸ್ವರೂಪದಲ್ಲಿ ಬದಲಾವಣೆಯಾಗುವುದಿಲ್ಲ. (52ಕ) ರಾಜು ಬಿದ್ದ. (52ಖ) ಅವನು ಆಕಳಿಸಿದ. ಮೇಲಿನ ಕ್ರಿಯಾಪದಗಳು ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುವು ದಿದ್ದಲ್ಲಿ, ಅವುಗಳೊಂದಿಗೆ ಬರುವ ಘಟಕವನ್ನು ಆಗುಗವೆಂದೂ ಮತ್ತು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುವುದಿದ್ದಲ್ಲಿ ಅದೇ ಘಟಕವನ್ನು ಮಾಡುಗವೆಂದೂ ಪರಿಗಣಿಸಬೇಕಾಗುವುದೆಂಬುದೇ ಇವುಗಳ ಬಳಕೆಯಲ್ಲಿ ಕಾಣಿಸುವ ವೈಶಿಷ್ಟ್ಯ.
ಉದಾಹರಣೆಗಾಗಿ, ಬೀಳು ಕ್ರಿಯಾಪದ ಸಾಮಾನ್ಯವಾಗಿ ಬೀಳುವವನ ಹತೋಟಿಯಲ್ಲಿಲ್ಲದ ಘಟನೆಯನ್ನು ಸೂಚಿಸುತ್ತದೆ. ಆದರೆ, ಕೆಲವು ವಿಶಿಷ್ಟವಾದ ಸಂದಭ್ರಗಳಲ್ಲಿ (ಉದಾಹರಣೆಗಾಗಿ ನಾಟಕದಲ್ಲಿ ಪಾತ್ರ ವಹಿಸುತ್ತಿರುವ ಒಬ್ಬ ವ್ಯಕ್ತಿ ಕೆಳಗೆ ಬೀಳುವಂತೆ ನಟಿಸಬೇಕಾಗಿರುವಾಗ) ಅದು ಒಂದು ಹತೋಟಿ ಯಲ್ಲಿರುವ ಘಟನೆಯನ್ನೂ ಸೂಚಿಸುತ್ತಿರಲು ಸಾಧ್ಯವಿದೆ. ಮೊದಲನೆಯ ಬಳಕೆ ಯಲ್ಲಿ ಅದೊಂದು ಆಗುಗ ಘಟಕದೊಂದಿಗೆ ಬಂದಿದೆಯೆಂದು ಹೇಳಬೇಕಾಗು ತ್ತದೆ ಮತ್ತು ಎರಡನೆಯ ಬಳಕೆಯಲ್ಲಿ ಅದೊಂದು ಮಾಡುಗ ಘಟಕದೊಂದಿಗೆ ಬಂದಿದೆಯೆಂದು ಹೇಳಬೇಕಾಗುತ್ತದೆ.

Eke →

2.5.2 ಸಮಗ್ರತೆಯ ಸೂಚನೆ

ಕನ್ನಡದ ಕ್ರಿಯಾಪದಗಳಲ್ಲಿ ಕೆಲವು ಸೂಚಿಸುವ ಘಟನೆಗಳು ಆಗುಗವನ್ನು ಪೂತ್ರಿ ಯಾಗಿ ಬಾಧಿಸುತ್ತವೆ, ಆದರೆ ಬೇರೆ ಕೆಲವು ಆಗುಗದ ಒಂದು ಭಾಗವನ್ನಷ್ಟೇ ಬಾಧಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಗಮನಿಸಬಹುದು. (53ಕ) ರಾಜು ಮೇಜನ್ನು ಮುಟ್ಟಿದ. (53ಖ) ರಾಜು ನದಿಯನ್ನು ದಾಟಿದ. ರಾಜು ಮೇಜಿನ ತುದಿಯನ್ನು ಮಾತ್ರವೇ ಮುಟ್ಟಿರುವನಾದರೂ (53ಕ) ವಾಕ್ಯ ವನ್ನು ಬಳಸಲು ಸಾಧ್ಯವಿದೆ, ಆದರೆ (53ಖ) ವಾಕ್ಯವನ್ನು ಬಳಸಬೇಕಿದ್ದಲ್ಲಿ ಆತ ಪೂತ್ರಿಯಾಗಿ ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಹೋಗಿ ತಲಪಿರುವುದು ಅವಶ್ಯ. ದಾಟು ಕ್ರಿಯಾಪದವು ಸೂಚಿಸುವ ಘಟನೆ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಪೂತ್ರಿಯಾಗಿ ಬಾಧಿಸುತ್ತದೆ, ಆದರೆ ಮುಟ್ಟು ಕ್ರಿಯಾ ಪದವು ಸೂಚಿಸುವ ಘಟನೆ ವ್ಯಕ್ತಿ ಇಲ್ಲವೇ ವಸ್ತುವಿನ ಒಂದು ಭಾಗವನ್ನಷ್ಟೇ ಬಾಧಿಸುತ್ತಿರಲು ಸಾಧ್ಯವಿದೆ. ಹತ್ತು, ಈಜು, ಓದು ಮೊದಲಾದ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ಘಟನೆಗಳನ್ನೂ ಸೂಚಿಸಲು ಸಾಧ್ಯವಿದ್ದು, ಮೊದಲನೆಯ ಅರ್ಥದಲ್ಲಿ ಅವುಗಳೊಂದಿಗೆ ಒಂದು ಆಗುಗ ಘಟಕ ಬರುವುದಾದರೆ, ಎರಡನೆಯ ಅರ್ಥ ದಲ್ಲಿ ಒಂದು ಕೊನೆ ಇಲ್ಲವೇ ಜಾಗ ಘಟಕ ಬರುತ್ತದೆ. (54ಕ) ಆತ ಕಾವೇರಿ ನದಿಯನ್ನು ಈಜಿದ. (54ಖ) ಆತ ಕಾವೇರಿ ನದಿಯಲ್ಲಿ ಈಜಿದ. (55ಕ) ಆತ ಏಣಿಯಿಂದ ಮರವನ್ನು ಹತ್ತಿದ. (55ಖ) ಆತ ಏಣಿಯಿಂದ ಮರಕ್ಕೆ ಹತ್ತಿದ. (54ಕ)ದಲ್ಲಿ ಈಜು ಕ್ರಿಯಾಪದದೊಂದಿಗೆ ಮಾಡುಗ ಮತ್ತು ಆಗುಗ ಘಟಕಗಳು ಬಂದಿದ್ದು, ಅದಕ್ಕೆ ‘ಆತ ಕಾವೇರಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿದ’ ಎಂಬುದಾಗಿ ಸಮಗ್ರಾರ್ಥವಿದೆ. ಆದರೆ, (54ಖ) ದಲ್ಲಿ ಇದೇ ಕ್ರಿಯಾಪದದೊಂದಿಗೆ ಮಾಡುಗ ಮತ್ತು ಜಾಗ ಘಟಕಗಳು ಬಂದಿದ್ದು, ಅದಕ್ಕೆ ‘ಆತ ಕಾವೇರಿ ನದಿಯ ಒಂದು ಭಾಗದಲ್ಲಿ ಈಜಿದ’ ಎಂದಿಷ್ಟೇ ಅರ್ಥವಿದೆ. (55ಕ-ಖ)ದಲ್ಲೂ ಹೀಗೆಯೇ.
ತುಂಬು, ಸುಲಿ, ಹಿಂಡು, ಕೊಯ್ಯು, ಕುಡಿ, ಓದು, ಬರೆ ಮೊದಲಾದ ಬೇರೆ ಕೆಲವು ಕ್ರಿಯಾಪದಗಳೂ ಇದೇ ರೀತಿಯಲ್ಲಿ ವ್ಯಕ್ತಿ, ವಸ್ತು ಮೊದಲಾ ದುವನ್ನು ಪೂತ್ರಿಯಾಗಿ ಇಲ್ಲವೇ ಅವುಗಳ ಒಂದು ಭಾಗವನ್ನಷ್ಟೇ ಬಾಧಿಸು ತ್ತಿರಲು ಸಾಧ್ಯವಿದ್ದು, ಇಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಘಟಕ ಗಳು ಅವುಗಳೊಂದಿಗೆ ಆಗುಗದ ರೂಪದಲ್ಲಾಗಲೀ ಇಲ್ಲವೇ ಸುರು ಅಥವಾ ಜಾಗದ ರೂಪದಲ್ಲಾಗಲೀ ಬರಬಲ್ಲುವು.
(56ಕ) ಅವನು ಆ ಪುಸ್ತಕವನ್ನು ಓದಿದ್ದಾನೆ. (56ಖ) ಅವನು ಆ ಪುಸ್ತಕದಿಂದ ಒಂದು ಕತೆಯನ್ನು ಓದಿದ್ದಾನೆ. (57ಕ) ಆಕೆ ಒಂದು ಪುಸ್ತಕವನ್ನು ಬರೆದಿದ್ದಾಳೆ. (57ಖ) ಆಕೆ ಒಂದು ಪುಸ್ತಕದಲ್ಲಿ ಕವಿತೆಯನ್ನು ಬರೆದಿದ್ದಾಳೆ. (56ಕ)ದಲ್ಲಿ ಓದು ಕ್ರಿಯಾಪದದೊಂದಿಗೆ ಪುಸ್ತಕ ಎಂಬ ಪದ ಒಂದು ಆಗುಗ ಘಟಕವಾಗಿ ಬಂದಿದೆ, ಮತ್ತು ಆ ಕ್ರಿಯಾಪದ ಸೂಚಿಸುವ ಘಟನೆ ಪುಸ್ತಕವನ್ನು ಪೂತ್ರಿಯಾಗಿ ಬಾಧಿಸುತ್ತದೆಯೆಂಬ ಅರ್ಥ ಆ ವಾಕ್ಯಕ್ಕಿದೆ. ಆದರೆ, (56ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಪುಸ್ತಕ ಎಂಬ ಪದ ಒಂದು ಸುರು ಘಟಕವಾಗಿ ಬಂದಿದೆ ಮತ್ತು ಆ ವಾಕ್ಯಕ್ಕೆ ಓದು ಕ್ರಿಯಾಪದ ಸೂಚಿಸುವ ಘಟನೆ ಪುಸ್ತಕದ ಒಂದು ಭಾಗವನ್ನಷ್ಟೇ ಬಾಧಿಸುತ್ತದೆಯೆಂಬ ಅರ್ಥವಿದೆ. (57ಕ-ಖ)ಗಳಲ್ಲಿ ಬಂದಿರುವ ಬರೆ ಕ್ರಿಯಾಪದಕ್ಕೂ ಈ ರೀತಿ ಎರಡು ಬಳಕೆಗಳಿರುವುದನ್ನು ಕಾಣ ಬಹುದು.

Eke →

2.5.3 ಕದಲುವಿಕೆಯ ಸೂಚನೆ

ಕ್ರಿಯಾಪದಗಳನ್ನು ಕದಲುವವು ಮತ್ತು ಕದಲದವು ಎಂಬುದಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದನ್ನು ನಾವು ಮೇಲೆ (2.4.4ರಲ್ಲಿ) ನೋಡಿರುವೆವು. ಕದಲುವ ಕ್ರಿಯಾಪದಗಳೊಂದಿಗೆ ಸುರು ಇಲ್ಲವೇ ಕೊನೆ ಘಟಕ ಬರುವುದಾದರೆ, ಕದಲದ ಕ್ರಿಯಾಪದಗಳೊಂದಿಗೆ ಜಾಗ ಘಟಕ ಬರುತ್ತದೆ. ಆದರೆ, ಅದ್ದು, ಬೀಳು, ಹಾಕು ಮೊದಲಾದ ಕೆಲವು ಕ್ರಿಯಾಪದಗಳು ಒಂದು ಜಾಗ ಘಟಕದೊಂದಿಗಾಗಲೀ ಇಲ್ಲವೇ ಒಂದು ಸುರು ಅಥವಾ ಕೊನೆ ಘಟಕದೊಂದಿಗಾಗಲೀ ಬರಬಲ್ಲುವಾಗಿದ್ದು, ಅವು ಎಂತಹ ಘಟಕದೊಂದಿಗೆ ಬರುತ್ತವೆ ಎಂಬುದನ್ನಾಧರಿಸಿ, ಅವುಗಳ ಬಳಕೆಯಲ್ಲಿ ಈ ಎರಡು ರೀತಿಯ ಘಟನೆಗಳೂ ಸೂಚಿತವಾಗುತ್ತವೆ. (58ಕ) ಪೊೀಲೀಸರು ಆ ಕಳ್ಳನ ಬೆರಳನ್ನು ಕುದಿಯುವ ಎಣ್ಣಿಯಲ್ಲಿ ಅದ್ದಿದರು. (58ಖ) ಪೊೀಲೀಸರು ಆ ಕಳ್ಳನ ಬೆರಳನ್ನು ಕುದಿಯುವ ಎಣ್ಣಿಗೆ ಅದ್ದಿದರು. (59ಕ) ಸುರೇಶನ ಹೊಸ ಚೆಂಡು ನೀರಿನಲ್ಲಿ ಬಿದ್ದಿದೆ. (59ಖ) ಸುರೇಶನ ಹೊಸ ಚೆಂಡು ನೀರಿಗೆ ಬಿದ್ದಿದೆ. ಅದ್ದು ಕ್ರಿಯಾಪದ ಸಾಮಾನ್ಯವಾಗಿ ಒಂದು ಚಲನೆಯನ್ನು ಸೂಚಿಸುತ್ತಿರುತ್ತದೆ. ಆದರೆ, ಅದರೊಂದಿಗೆ (58ಖ)ದಲ್ಲಿ ಕಾಣಿಸಿದ ಹಾಗೆ ಒಂದು ಕೊನೆ ಘಟಕ ವನ್ನು ಬಳಸಿದಾಗ ಈ ಚಲನೆಯ ಮೇಲೆ ಒತ್ತು ಬೀಳುತ್ತದೆ, ಮತ್ತು (58ಕ) ದಲ್ಲಿ ಕಾಣಿಸಿದ ಹಾಗೆ ಜಾಗ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುವುದಿಲ್ಲ. ಇದೇ ರೀತಿಯಲ್ಲಿ ಬೀಳು ಕ್ರಿಯಾಪದದೊಂದಿಗೆ ಜಾಗ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುವುದಿಲ್ಲ (59ಕ), ಆದರೆ ಕೊನೆ ಘಟಕವನ್ನು ಬಳಸಿದಾಗ ಚಲನೆಯ ಮೇಲೆ ಒತ್ತು ಬೀಳುತ್ತದೆ (59ಖ).

Eke →

2.6 ಘಟಕಗಳನ್ನು ಪ್ರತ್ಯೇಕಿಸುವುದು

ಮೇಲೆ ಸೂಚಿಸಿರುವ ಹಾಗೆ, ಕ್ರಿಯಾಪದಗಳೊಂದಿಗೆ ಅವು ತಿಳಿಸುವ ಘಟನೆಯ ಸ್ವರೂಪವನ್ನಾಧರಿಸಿ ಬೇರೆ ಬೇರೆ ರೀತಿಯ ಘಟಕಗಳನ್ನು ಬಳಸುವ ಅವಶ್ಯಕತೆ ಯಿದೆ. ಒಂದು ವಾಕ್ಯದಲ್ಲಿ ಒಂದೇ ಮುಖ್ಯ ಘಟಕ ಬಂದಿದೆಯಾದರೆ ಅದು ಯಾವುದು ಎಂಬುದನ್ನು ಕ್ರಿಯಾಪದದ ಸ್ವರೂಪದ ಆಧಾರದ ಮೇಲೆ ತಿಳಿಯಲು ಕಷ್ಟವಾಗುವುದಿಲ್ಲ. ಉದಾಹರಣೆಗಾಗಿ, ಒಂದು ಕ್ರಿಯಾಪದವು ಹತೋಟಿ ಯಲ್ಲಿಲ್ಲದಿರುವ ಘಟನೆಯನ್ನು ಸೂಚಿಸುತ್ತಿದೆಯಾದರೆ ಅದರೊಂದಿಗೆ ಬಂದಿರುವ ಘಟಕ ಆಗುಗವೆಂದೂ ಮತ್ತು ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆ ಯಾದರೆ ಅದರೊಂದಿಗೆ ಬಂದಿರುವ ಘಟಕ ಮಾಡುಗವೆಂದೂ ಹೇಳಲು ಸಾಧ್ಯ (60ಕ) ರಾಜು ದಣಿದ. (60ಖ) ರಾಜು ಕುಳಿತ. (60ಕ) ವಾಕ್ಯ ಹತೋಟಿಯಲ್ಲಿಲ್ಲದ ಘಟನೆಯೊಂದನ್ನು ಸೂಚಿಸುತ್ತಿರುವ ಕಾರಣ, ಅದರಲ್ಲಿ ಬಂದಿರುವ ರಾಜು ಎಂಬ ಪದ ಆಗುಗ ಘಟಕವನ್ನು ಸೂಚಿಸುತ್ತಿದೆ. ಆದರೆ (60ಖ) ವಾಕ್ಯ ಹತೋಟಿಯಲ್ಲಿರುವ ಘಟನೆಯೊಂದನ್ನು ಸೂಚಿಸುತ್ತಿದ್ದು, ಅದರಲ್ಲಿ ಬಂದಿರುವ ಅದೇ ಪದ ಮಾಡುಗ ಘಟಕವನ್ನು ಸೂಚಿಸುತ್ತಿದೆ. ಒಂದು ವಾಕ್ಯದಲ್ಲಿ ಎರಡು ಅಥವಾ ಜಾಸ್ತಿ ಘಟಕಗಳು ಬಂದಿವೆಯಾದಲ್ಲಿ, ಅವುಗಳಲ್ಲಿ ಯಾವುದು ಯಾವ ಘಟಕ ಎಂಬುದಾಗಿ ಅವನ್ನು ಪ್ರತ್ಯೇಕಿಸಿ ಹೇಳುವ ಅವಶ್ಯಕತೆಯುಂಟಾಗುತ್ತದೆ. ಈ ರೀತಿ ವಾಕ್ಯವೊಂದರಲ್ಲಿ ಬಂದಿರುವ ಘಟಕ ಗಳನ್ನು ಪ್ರತ್ಯೇಕಿಸುವುದಕ್ಕಾಗಿ ವಿಭಕ್ತಿ ಪ್ರತ್ಯಯಗಳನ್ನಾಗಲೀ ಇಲ್ಲವೇ ಬೇರೆ ಯಾವುದಾದರೂ ಪದಗಳನ್ನಾಗಲೀ ಸೇರಿಸುವ ಕ್ರಮ ಬಳಕೆಯಲ್ಲಿದೆ.
ಉದಾಹರಣೆಗಾಗಿ ಒಂದು ವಾಕ್ಯದಲ್ಲಿ ಮಾಡುಗ ಮತ್ತು ಆಗುಗಗಳೆಂಬ ಎರಡು ಘಟಕಗಳೂ ಒಟ್ಟಾಗಿ ಬಂದಿವೆಯಾದಲ್ಲಿ, ಅವೆರಡರಲ್ಲಿ ಯಾವುದು ಮಾಡುಗ ಮತ್ತು ಯಾವುದು ಆಗುಗ ಎಂಬುದನ್ನು ತಿಳಿಸುವುದಕ್ಕಾಗಿ ಅವುಗಳಲ್ಲಿ ಒಂದರೊಂದಿಗೆ (ಆಗುಗದೊಂದಿಗೆ) ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸ ಲಾಗುತ್ತದೆ. (61ಕ) ಹರಿ ಬಿದ್ದ. (61ಖ) ರಾಜು ಹರಿಯನ್ನು ದೂಡಿದ.
(61ಕ) ವಾಕ್ಯದಲ್ಲಿ ಆಗುಗವನ್ನು ಸೂಚಿಸುವ ಒಂದು ಘಟಕ (ಹರಿ ಎಂಬುದು) ಮಾತ್ರ ಬಂದಿದೆ. ಹಾಗಾಗಿ ಅದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧ ವಿದೆ ಎಂಬುದನ್ನು ಸೂಚಿಸುವ ಅವಶ್ಯಕತೆಯಿಲ್ಲ. ಆದರೆ, (61ಖ)ದಲ್ಲಿ ಆಗುಗ ಮತ್ತು ಮಾಡುಗಗಳೆರಡೂ ಒಟ್ಟಾಗಿ ಬಂದಿವೆಯಾದ ಕಾರಣ, ಅವನ್ನು ಗುರುತಿಸುವ ಎರಡು ಪದಗಳಲ್ಲಿ (ಹರಿ ಮತ್ತು ರಾಜು ಎಂಬವುಗಳಲ್ಲಿ) ಯಾವುದು ಆಗುಗ ಮತ್ತು ಯಾವುದು ಮಾಡುಗ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಆಗುಗದೊಂದಿಗೆ ಅನ್ನು ಪ್ರತ್ಯಯವನ್ನು ಬಳಸಬೇಕಾಗಿದೆ ಎಂಬುದನ್ನು (61ಖ)ದಲ್ಲಿ ಕಾಣಬಹುದು.

Eke →

2.6.1 ಅನ್ನು ಪ್ರತ್ಯಯದ ಬಳಕೆ

ಒಂದು ವಾಕ್ಯದಲ್ಲಿ ಮಾಡುಗವನ್ನು ಸೂಚಿಸುವ ಪದ ಒಬ್ಬ ವ್ಯಕ್ತಿ ಇಲ್ಲವೇ ಒಂದು ಪ್ರಾಣಿಯನ್ನು ಗುರುತಿಸುತ್ತಿದ್ದು, ಆಗುಗವನ್ನು ಸೂಚಿಸುವ ಪದ ಒಂದು ವಸ್ತುವನ್ನು ಗುರುತಿಸುತ್ತಿದೆಯಾದಲ್ಲಿ, ಅವೆರಡರಲ್ಲಿ ಯಾವುದು ಆಗುಗ ಮತ್ತು ಯಾವುದು ಮಾಡುಗ ಎಂಬ ವಿಷಯದಲ್ಲಿ ಸಂಶಯ ಬರುವ ಸಂಭವ ಕಡಿಮೆ. ಯಾಕೆಂದರೆ, ಅಂತಹ ಸಂದಭ್ರಗಳಲ್ಲೆಲ್ಲ ವ್ಯಕ್ತಿ ಇಲ್ಲವೇ ಪ್ರಾಣಿ ಮಾಡುಗ ವಾಗಿರುತ್ತದೆ ಮತ್ತು ವಸ್ತು ಆಗುಗವಾಗಿರುತ್ತದೆ. ಹಾಗಾಗಿ ಅಂತಹ ವಾಕ್ಯಗಳಲ್ಲಿ ಆಗುಗವನ್ನು ಗುರುತಿಸುವ ಪದದೊಂದಿಗೆ ಅನ್ನು ಪ್ರತ್ಯಯವನ್ನು ಬಳಸದಿರಲು ಸಾಧ್ಯವಿದೆ. (62ಕ) ರಾಜು ಒಂದು ಕಾಗದ(ವನ್ನು) ಬರೆಯುತ್ತಿದ್ದಾನೆ. (62ಖ) ಜಾನಕಿ ಅಡುಗೆ(ಯನ್ನು) ಮಾಡಿದಳು. ಆದರೆ ಸಾಮಾನ್ಯವಾಗಿ ಆಗುಗವನ್ನು ಸೂಚಿಸುವ ಪದ ಕ್ರಿಯಾಪದದ ಹತ್ತಿರ ಬಂದಿರುವಾಗ ಮಾತ್ರ ಈ ರೀತಿ ಅನ್ನು ಪ್ರತ್ಯಯವನ್ನು ಬಳಸದಿರಲು ಸಾಧ್ಯ. ಅದಕ್ಕೂ ಕ್ರಿಯಾಪದಕ್ಕೂ ನಡುವೆ ಯಾವುದಾದರೂ ಬೇರೆ ಪದ ಇಲ್ಲವೇ ಪ್ರತ್ಯಯ ಬಂದಿದೆಯಾದರೆ ಇದು ಸಾಧ್ಯವಾಗದು. (63ಕ) ರಾಜು ಒಂದು ಕಾಗದವನ್ನು ಬೇಗನೆ ಬರೆಯುತ್ತಿದ್ದಾನೆ. (63ಖ) ರಾಜು ಒಂದು ಕಾಗದವನ್ನೂ ಬರೆಯುತ್ತಿದ್ದಾನೆ.

Eke →

6.2.2 ಜಾಗ, ಸುರು ಮತ್ತು ಕೊನೆ

ಘಟನೆಗೆ ಸಂಬಂಧಿಸಿದ ಜಾಗ, ಸುರು ಮತ್ತು ಕೊನೆಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಅಲ್ಲಿ, ಇಂದ ಮತ್ತು ಗೆ ಎಂಬ ಮೂರು ವಿಭಕ್ತಿ ಪ್ರತ್ಯಯಗಳು ಬಳಕೆಯಾಗುತ್ತವೆ. (64ಕ) ಆಕೆ ಕೊಡದಲ್ಲಿ ನೀರು ತುಂಬಿಸಿದಳು. (64ಖ) ಅವರು ಮನೆಯಿಂದ ಹೊರಗೆ ಬಂದರು. (64ಗ) ರಾಜು ಮನೆಗೆ ಹೋದ. ಇವುಗಳಲ್ಲಿ ಗೆ ಪ್ರತ್ಯಯಕ್ಕೆ ಅಕಾರದಲ್ಲಿ ಕೊನೆಗೊಳ್ಳುವ ನಾಮಪದಗಳ ಮುಂದೆ ಕ್ಕೆ ಎಂಬ ರೂಪವಿದೆ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ನಾಮಪದ ಗಳ ಮುಂದೆ ಇಗೆ ಎಂಬ ರೂಪವಿದೆ.
ಮೊಲ ಮೊಲಕ್ಕೆ
ಕಟ್ಟಡ ಕಟ್ಟಡಕ್ಕೆ
ಮನೆ ಮನೆಗೆ ಕಲ್ಲಿಗೆ ಕಲ್ಲು ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಮನುಷ್ಯರನ್ನು ಸೂಚಿಸುತ್ತಿವೆ ಯಾದಲ್ಲಿ ಅವಕ್ಕೆ ಒಂದು ನಕಾರ ಸೇರುತ್ತದೆ ಮತ್ತು ಅವುಗಳ ಮುಂದೆ ಈ ಪ್ರತ್ಯಯಕ್ಕೆ ಕ್ಕೆ ಎಂಬುದರ ಬದಲು ಇಗೆ ಎಂಬ ರೂಪವಿದೆ. ಮನುಷ್ಯ ಅಕ್ಕನಿಗೆ ಮನುಷ್ಯನಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಅಲ್ಲಿ ಮತ್ತು ಇಂದ ಎಂಬ ವಿಭಕ್ತಿ ಪ್ರತ್ಯಯಗಳು ಇತರ ವಿಭಕ್ತಿ ಪ್ರತ್ಯಯಗಳ ಹಾಗೆ ನೇರವಾಗಿ ನಾಮಪದ ಗಳೊಂದಿಗೆ ಸೇರುವ ಬದಲು ಅವುಗಳ ಸಂಬಂಧರೂಪದೊಂದಿಗೆ ಸೇರುತ್ತವೆ.
ನಾಮಪದ ಸಂಬಂಧ ರೂಪ ಮರದ ಮರ ತಲೆಯ ಕಾಡು ಕಾಡಿನ ಮರದಲ್ಲಿ ಮರದಿಂದ ರಾಜನಲ್ಲಿ ರಾಜನಿಂದ ತಲೆಯಲ್ಲಿ ತಲೆಯಿಂದ ಕಾಡಿನಲ್ಲಿ ಕಾಡಿನಿಂದ ಸಾಮಾನ್ಯವಾಗಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಅಲ್ಲಿ ಪ್ರತ್ಯಯ ಬಂದಿದೆಯಾದರೆ ಅದಕ್ಕೆ ಜಾಗವನ್ನು ಸೂಚಿಸುವ ಅರ್ಥಕ್ಕಿಂತಲೂ ಉಳ್ಳವನನ್ನು ಇಲ್ಲವೇ ಒಡೆತನವಿರುವವನನ್ನು ಸೂಚಿಸುವ ಅರ್ಥ ಬರುತ್ತದೆ. (65ಕ) ನಮ್ಮಲ್ಲಿ ಎರಡು ದನಗಳಿವೆ. (65ಖ) ಆ ಪುಸ್ತಕವನ್ನು ರಾಜು ಅವರಲ್ಲಿ ಕೊಟ್ಟಿದ್ದಾನೆ.

Eke →

2.6.3 ಸಂಬಂಧವನ್ನು ಸೂಚಿಸುವ ಪದಗಳು

ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವು ದಕ್ಕಾಗಿ ಮೇಲೆ ವಿವರಿಸಿದಂತೆ ಹೆಚ್ಚಿನ ಸಂದಭ್ರಗಳಲ್ಲೂ ವಿಭಕ್ತಿ ಪ್ರತ್ಯಯ ಗಳನ್ನು ಬಳಸಲಾಗುತ್ತದೆ. ಆದರೆ, ಕನ್ನಡದಲ್ಲಿ ಒಟ್ಟು ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬುದಾಗಿ ಮಾತ್ರ ಬಳಕೆಯಲ್ಲಿವೆಯಾದ ಕಾರಣ, ಕೆಲವು ಸಂದಭ್ರಗಳಲ್ಲಿ ಈ ಕೆಲಸಕ್ಕಾಗಿ ಬೇರೆ ಪದಗಳನ್ನು ಬಳಸುವ ಅವಶ್ಯಕತೆ ಕಂಡುಬರುತ್ತದೆ. ನಾಲ್ಕು ವಿಭಕ್ತಿ ಪ್ರತ್ಯಯಗಳು ಉದಾಹರಣೆಗಾಗಿ ಮಾಡುಗ ಘಟಕದೊಂದಿಗೆ ಒಂದು ವಾಕ್ಯದಲ್ಲಿ ಆಗುಗ ಮತ್ತು ಪ್ರೇರಕಗಳೆರಡೂ ಬಂದಿವೆಯಾದರೆ, ಅವುಗಳಲ್ಲಿ ಆಗುಗವನ್ನು ಉಳಿದ ಎರಡು ಘಟಕಗಳಿಂದ ಪ್ರತ್ಯೇಕಿಸಲು ಅನ್ನು ಪ್ರತ್ಯಯವನ್ನು ಬಳಸಬಹುದು. ಆದರೆ ಮಾಡುಗ ಮತ್ತು ಪ್ರೇರಕಗಳನ್ನು ಪ್ರತ್ಯೇಕಿಸಿ ಹೇಳಲು ಕನ್ನಡದಲ್ಲಿ ಯಾವ ವಿಭಕ್ತಿ ಪ್ರತ್ಯಯವೂ ಇಲ್ಲ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಮಾಡುಗದೊಂದಿಗೆ ಕೈಯಲ್ಲಿ ಇಲ್ಲವೇ ಮೂಲಕ ಎಂಬ ಪದವನ್ನು ಬಳಸಬೇಕಾಗುತ್ತದೆ. (66ಕ) ಬಡದೆ ಕಟ್ಟಿಗೆ ಒಡೆದ. (66ಖ) ಸೀತಾಬಾಯಿ ಬಡದೆಯ ಕೈಯಲ್ಲಿ ಕಟ್ಟಿಗೆ ಒಡೆಸಿದಳು. (67ಕ) ಸೀತೆ ಒಂದು ಗೊಂಬೆ ತಂದಿದ್ದಾಳೆ. (67ಖ) ಜಾನಕಿ ಸೀತೆಯ ಮೂಲಕ ಒಂದು ಗೊಂಬೆ ತರಿಸಿದ್ದಾಳೆ. ಜಾಗವನ್ನು ಸೂಚಿಸುವುದಕ್ಕಾಗಿ ಅಲ್ಲಿ ಪ್ರತ್ಯಯದ ಬಳಕೆಯಾಗುತ್ತದೆ ಎಂಬು ದನ್ನು ನಾವು ಮೇಲೆ ನೋಡಿರುವೆವು. ಆದರೆ ಜಾಗಗಳಲ್ಲಿ ಹಲವು ವಿಧಗಳಿದ್ದು, ಅವುಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳ ಬದಲು ಪದಗಳನ್ನು ಬಳಸಲಾಗುತ್ತದೆ. ಈ ಪದಗಳು ನಾಮಪದ ಗಳ ಸಂಬಂಧ ರೂಪದೊಂದಿಗೆ ಬರುತ್ತವೆ. (68ಕ) ಗೆಲ್ಲಿನ ಮೇಲೆ ಒಂದು ಹಕ್ಕಿ ಕುಳಿತಿದೆ. (68ಖ) ಆ ಹಲಸಿನ ಮರದ ಆಚೆ ಗಂಧಸಾಲೆ ಬಿತ್ತಿದ್ದೇವೆ. (68ಗ) ಅವರು ತಮ್ಮ ಮನೆಯ ಸುತ್ತ ಮುಳ್ಳಿನ ಗಿಡ ನೆಟ್ಟಿದ್ದಾರೆ. (68ಘ) ಅಜ್ಜಮ್ಮನವರು ಅಡುಗೆ ಕೋಣೆಯೊಳಗೆ ಮಲಗಿದ್ದರು. (68ಙ) ಆ ಹುಡುಗ ತನ್ನ ತಂದೆಯ ಹತ್ತಿರ ನಿಂತಿದ್ದಾನೆ. ಮೇಲಿನ ವಾಕ್ಯಗಳಲ್ಲಿ ಮೇಲೆ, ಆಚೆ, ಸುತ್ತ, ಒಳಗೆ ಮತ್ತು ಹತ್ತಿರ ಎಂಬ ಪದಗಳು ಬೇರೆ ಬೇರೆ ರೀತಿಯ ಜಾಗಗಳನ್ನು ಸೂಚಿಸುತ್ತಿವೆ ಎಂಬುದನ್ನು ಗಮನಿಸಬಹುದು. ಇಂತಹ ಪದಗಳು ಸೂಚಿಸುವ ಜಾಗಗಳು ಕದಲುವಿಕೆಯ ಸುರು ಇಲ್ಲವೇ ಕೊನೆಗಳಾಗಿದ್ದಲ್ಲಿ ಈ ವಿಷಯವನ್ನು ಸೂಚಿಸಲು ಅವುಗಳೊಂದಿಗೆ ಇಂದ ಮತ್ತು ಗೆ ಎಂಬ ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ. (69ಕ) ಗೆಲ್ಲಿನ ಮೇಲಿನಿಂದ ಹಕ್ಕಿ ಹಾರಿ ಹೋಯಿತು. (69ಖ) ಆತ ಮರದ ಆಚೆಗೆ ಹೋದ.

Eke →

2.7 ವ್ಯವಹಾರ ಸಂಬಂಧ

ವಾಕ್ಯಗಳಲ್ಲಿ ಬರುವ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳನ್ನು ಸೂಚಿಸುವ ಬಗೆ ಹೇಗೆ ಎಂಬುದನ್ನು ನಾವು ಮೇಲಿನ ವಿಭಾಗಗಳಲ್ಲಿ (2.1-2.6ರಲ್ಲಿ) ನೋಡಿರುವೆವು. ಈ ಎಲ್ಲಾ ಸಂಬಂಧಗಳೂ ವಾಕ್ಯದ ಅರ್ಥಕ್ಕೆ ಸಂಬಂಧಿಸಿವೆಯಾದ ಕಾರಣ ಇವನ್ನೆಲ್ಲ ಒಟ್ಟಾಗಿ ‘ಅರ್ಥ’ ಸಂಬಂಧಗಳೆಂದು ಕರೆಯಬಹುದು. ಇವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಪ್ರಾಮುಖ್ಯವಾಗಿ ವಿಭಕ್ತಿ ಪ್ರತ್ಯಯಗಳ ಬಳಕೆಯಾಗುತ್ತದೆ. ಇಂತಹ ಅರ್ಥ ಸಂಬಂಧಗಳನ್ನು ಮಾತ್ರವಲ್ಲದೆ ವಾಕ್ಯ ಘಟಕಗಳ ಮೂಲಕ ಬೇರೆ ಕೆಲವು ರೀತಿಯ ಸಂಬಂಧಗಳನ್ನೂ ಸೂಚಿಸುವ ಅವಶ್ಯಕತೆಯಿದೆ. ಈ ಸಂಬಂಧಗಳು ವಾಕ್ಯವೊಂದರ ಘಟಕಗಳನ್ನು ಆ ವಾಕ್ಯದ ಹಿಂದಿನ ವಾಕ್ಯಗಳಲ್ಲಿ ಬಂದಿರುವ ಘಟಕಗಳೊಂದಿಗೆ ಮತ್ತು ಮಾತಿನ ಸನ್ನಿವೇಶದೊಂದಿಗೆ ಸಂಬಂಧಿಸು ತ್ತವೆ. ಇವನ್ನು ‘ವ್ಯವಹಾರ’ ಸಂಬಂಧಗಳೆಂದು ಕರೆಯಬಹುದು.

Eke →

2.7.1 ವಿಷಯ ಮತ್ತು ಸುದ್ದಿ

ವಾಕ್ಯಗಳನ್ನೆಲ್ಲ ಒಂದು ವಿಷಯ ಮತ್ತು ಆ ವಿಷಯದ ಕುರಿತಾಗಿ ವಾಕ್ಯ ತಿಳಿಸುವ ಸುದ್ದಿ ಎಂಬುದಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಕನ್ನಡ ವಾಕ್ಯಗಳಲ್ಲಿ ಸಾಮಾನ್ಯವಾಗಿ ಮೊದಲಿಗೆ ಬರುವ ಘಟಕ ವಿಷಯವನ್ನೂ ಮತ್ತು ಅದರ ಅನಂತರ ಬರುವ ಘಟಕಗಳು (ಮತ್ತು ಕ್ರಿಯಾಪದ) ಆ ವಿಷಯದ ಕುರಿತಾಗಿ ಏನಾದರೂ ಒಂದು ಸುದ್ದಿಯನ್ನೂ ತಿಳಿಸುತ್ತವೆ.
(70ಕ) ರಾಜು ಅಂಗಡಿಗೆ ಹೋಗಿದ್ದಾನೆ. (70ಕ)ದಲ್ಲಿ ಮೊದಲಿಗೆ ಬಂದಿರುವ ರಾಜು ಎಂಬ ಘಟಕ ಒಂದು ವಿಷಯ ವನ್ನೂ ಮತ್ತು ಅದರ ಅನಂತರ ಬಂದಿರುವ ಅಂಗಡಿಗೆ ಹೋಗಿದ್ದಾನೆ ಎಂಬ ವಾಕ್ಯದ ಅಂಗ ಆ ವಿಷಯದ ಕುರಿತಾಗಿ ಒಂದು ಸುದ್ದಿಯನ್ನೂ ತಿಳಿಸುತ್ತವೆ. ಇದೇ ವಾಕ್ಯದಲ್ಲಿ ರಾಜು ಎಂಬುದರ ಬದಲು ಅಂಗಡಿಗೆ ಎಂಬುದನ್ನು ಮೊದಲಿಗೆ ಇರಿಸಿ ಹೇಳಿದಲ್ಲಿ ಆ ವಾಕ್ಯದ ವಿಷಯದಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು (70ಖ)ದಲ್ಲಿ ಕಾಣಬಹುದು. (70ಖ) ಅಂಗಡಿಗೆ ರಾಜು ಹೋಗಿದ್ದಾನೆ. (70ಖ)ದಲ್ಲಿ ಮೊದಲು ಬಂದಿರುವ ಅಂಗಡಿಗೆ ಎಂಬುದು ಆ ವಾಕ್ಯದ ವಿಷಯ ಮತ್ತು ಅದರ ಅನಂತರ ಬಂದಿರುವ ರಾಜು ಹೋಗಿದ್ದಾನೆ ಎಂಬುದು ಆ ವಿಷಯದ ಕುರಿತಾಗಿ ವಾಕ್ಯ ತಿಳಿಸುವ ಸುದ್ದಿ ಎಂಬುದನ್ನು ಗಮನಿಸಬಹುದು. ವಾಕ್ಯದಲ್ಲಿ ಈ ರೀತಿ ಬೇರೆ ಬೇರೆ ಘಟಕಗಳನ್ನು ವಾಕ್ಯದ ಮೊದಲನೇ ಸ್ಥಾನದಲ್ಲಿ ಇರಿಸಿ ಅವನ್ನು ಆ ವಾಕ್ಯದ ವಿಷಯಗಳನ್ನಾಗಿ ಮಾಡಿ ಹೇಳಲು ಸಾಧ್ಯ (71ಕ) ರಾಜು ಬಡಗಿಯನ್ನು ಕರೆದಿದ್ದ. (71ಖ) ಬಡಗಿಯನ್ನು ರಾಜು ಕರೆದಿದ್ದ. (72ಕ) ನಾನು ಅವನಿಗೆ ನಿನ್ನೆ ಒಂದು ಪುಸ್ತಕ ಕೊಟ್ಟಿದ್ದೆ. (72ಖ) ಅವನಿಗೆ ನಾನು ನಿನ್ನೆ ಒಂದು ಪುಸ್ತಕ ಕೊಟ್ಟಿದ್ದೆ. (72ಗ) ನಿನ್ನೆ ನಾನು ಅವನಿಗೆ ಒಂದು ಪುಸ್ತಕ ಕೊಟ್ಟಿದ್ದೆ. (72ಘ) ಪುಸ್ತಕವನ್ನು ನಾನು ನಿನ್ನೆ ಅವನಿಗೆ ಕೊಟ್ಟಿದ್ದೆ. ಎರಡು ಅಥವಾ ಜಾಸ್ತಿ ವಾಕ್ಯಗಳನ್ನೊಳಗೊಂಡಿರುವ ವಾಕ್ಯಗಳಲ್ಲಿಯೂ ಈ ರೀತಿ ವಾಕ್ಯದ ಬೇರೆ ಬೇರೆ ಘಟಕಗಳನ್ನು ಮೊದಲನೆಯ ಘಟಕವನ್ನಾಗಿ ಮಾಡಿ ಅದನ್ನು ಇಡೀ ವಾಕ್ಯದ ವಿಷಯವೆಂದು ಸೂಚಿಸಲು ಸಾಧ್ಯವಿದೆ. (73ಕ) ಅವಳು ಹಾಡುತ್ತಾಳೆಂಬುದನ್ನು ನಾನು ಕೇಳಿದ್ದೇನೆ. (73ಖ) ನಾನು ಅವಳು ಹಾಡುತ್ತಾಳೆಂಬುದನ್ನು ಕೇಳಿದ್ದೇನೆ. (74ಕ) ಅವನು ಮೈಸೂರಿಗೆ ಹೋಗಿ ರಾಜುವನ್ನು ಕಂಡ. (74ಖ) ರಾಜುವನ್ನು ಅವನು ಮೈಸೂರಿಗೆ ಹೋಗಿ ಕಂಡ. (74ಗ) ಮೈಸೂರಿಗೆ ಹೋಗಿ ಅವನು ರಾಜುವನ್ನು ಕಂಡ. ಸಾಮಾನ್ಯವಾಗಿ ವಾಕ್ಯಗಳಲ್ಲಿ ವಿಷಯಗಳಾಗಿ ಬಂದಿರುವ ಘಟಕಗಳು ಕೇಳುಗನಿಗೆ ತಿಳಿದಿರುತ್ತವೆ, ಮತ್ತು ಅವುಗಳ ಅನಂತರ ‘ಸುದ್ದಿ’ಯಾಗಿ ಬರುವ ಅಂಶ ಆ ವಿಷಯಗಳ ಕುರಿತಾಗಿ ಕೇಳುಗನಿಗೆ ತಿಳಿದಿಲ್ಲದಂತಹದನ್ನೇನಾದರೂ ತಿಳಿಸುತ್ತದೆ. ಈ ಕಾರಣಕ್ಕಾಗಿ, ಕೇಳುಗನಿಗೆ ತಿಳಿದಿಲ್ಲದಂತಹ ಇಲ್ಲವೇ ಪರಿಚಿತವಾಗಿಲ್ಲದಂತಹ ಘಟಕಗಳು ವಾಕ್ಯದ ವಿಷಯವಾಗಿ ಬರಲಾರವು. ಮೇಲೆ (72ಘ)ದಲ್ಲಿ ಒಂದು ಪುಸ್ತಕ ಎಂಬುದನ್ನು ಪುಸ್ತಕ ಎಂಬುದಾಗಿ ಬದಲಾಯಿ ಸಿರುವುದು ಇದೇ ಕಾರಣಕ್ಕಾಗಿ ಎಂಬುದನ್ನು ಗಮನಿಸಬಹುದು. ಒಂದು ಪುಸ್ತಕ ಎಂಬುದು ಕೇಳುಗನಿಗೆ ಪರಿಚಿತವಾಗಿಲ್ಲದಿರುವ ಪುಸ್ತಕವನ್ನೂ ಮತ್ತು ಪುಸ್ತಕ ಎಂಬುದು ಪರಿಚಿತವಾಗಿರುವ ಪುಸ್ತಕವನ್ನೂ ಸೂಚಿಸುತ್ತವೆ.

Eke →

2.7.2 ಮುಖ್ಯ ಅಂಶ

ಸಾಮಾನ್ಯವಾಗಿ ಒಂದು ವಾಕ್ಯದಲ್ಲಿ ‘ಸುದ್ದಿ’ಯಾಗಿ ಬಂದಿರುವ ಭಾಗದಲ್ಲಿ ಯಾವುದಾದರೂ ಒಂದು ಅಂಶ ಮುಖ್ಯವಾದುದಾಗಿರುತ್ತದೆ. ಇದು ವಾಕ್ಯದ ಘಟಕವಾಗಿರಬಹುದು ಇಲ್ಲವೇ ಕ್ರಿಯಾಗುಣಪದವಾಗಿರಬಹುದು. ಕನ್ನಡದಲ್ಲಿ ಈ ಮುಖ್ಯವಾಗಿರುವ ಅಂಶ ಕ್ರಿಯಾಪದದ ಎಡಕ್ಕೆ ಬರುತ್ತದೆ. ಒಂದು ವಾಕ್ಯದ ‘ಸುದ್ದಿ’ ವಿಭಾಗದಲ್ಲಿ ಬಂದಿರುವ ಬೇರೆ ಬೇರೆ ಘಟಕ ಇಲ್ಲವೇ ಕ್ರಿಯಾ ಗುಣಪದಗಳಲ್ಲಿ ಒಂದನ್ನು ಸುದ್ದಿಯ ಮುಖ್ಯ ಅಂಶವನ್ನಾಗಿ ಮಾಡಲು ಈ ರೀತಿ ಕ್ರಿಯಾಪದದ ಎಡಕ್ಕೆ ಇರಿಸಿ ಹೇಳಲು ಸಾಧ್ಯವಿದೆ. (75ಕ) ರಾಜು ನಿಮ್ಮ ಕೊಡೆಯನ್ನು ನನಗೆ ಕೊಟ್ಟ. (75ಖ) ರಾಜು ನನಗೆ ನಿಮ್ಮ ಕೊಡೆ(ಯನ್ನು) ಕೊಟ್ಟ. (75ಗ) ನನಗೆ ನಿಮ್ಮ ಕೊಡೆಯನ್ನು ರಾಜು ಕೊಟ್ಟ. (76ಕ) ರಾಜು ಮೈಸೂರಿನಿಂದ ನಾಳೆ ಬರುತ್ತಾನೆ. (76ಖ) ರಾಜು ನಾಳೆ ಮೈಸೂರಿನಿಂದ ಬರುತ್ತಾನೆ. (76ಗ) ಮೈಸೂರಿನಿಂದ ನಾಳೆ ರಾಜು ಬರುತ್ತಾನೆ. (75ಕ) ವಾಕ್ಯದಲ್ಲಿ ಬಂದಿರುವ ಸುದ್ದಿಯಲ್ಲಿ ನನಗೆ ಎಂಬುದು ಮುಖ್ಯ ಅಂಶ ಮತ್ತು (75ಖ)ದಲ್ಲಿ ಇದಕ್ಕೆ ಬದಲು ಕೊಡೆ ಎಂಬುದು ಮುಖ್ಯ ಅಂಶ; (75ಗ)ದಲ್ಲಿ ರಾಜು ಎಂಬುದು ಮುಖ್ಯ ಅಂಶ. ವಾಕ್ಯದ ಮುಖ್ಯ ಅಂಶವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಬೇರೆಯೂ ಕೆಲವು ವಿಧಾನಗಳು ಬಳಕೆಯಲ್ಲಿವೆ. ಅಂಶವೊಂದನ್ನು ಇದ್ದಲ್ಲೇ ಒತ್ತಿ ಹೇಳುವುದು ಒಂದು ವಿಧಾನ (77ಕ-ಗ); ಮತ್ತು ವಾಕ್ಯವನ್ನು ‘ಸಂಬಂಧಿಸುವ’ ವಾಕ್ಯವನ್ನಾಗಿ (9.2 ನೋಡಿ) ಬದಲಾಯಿಸಿ ಮುಖ್ಯ ಅಂಶ ವಾಕ್ಯದ ಇತರ ಅಂಶಕ್ಕೆ ಸಂಬಂಧಿಸಿರುವಂತಹದು ಎಂಬುದಾಗಿ ಸೂಚಿಸುವುದು ಇನ್ನೊಂದು ವಿಧಾನ (78ಕ-ಗ).
(77ಕ) ಅವನು ಹುಡುಗನನ್ನು ಮರಕ್ಕೆ ಹತ್ತಿಸಿದ. (77ಖ) ಅವನು ಹುಡುಗನನ್ನು ಮರಕ್ಕೆ ಹತ್ತಿಸಿದ. (77ಗ) ಹುಡುಗನನ್ನು ಅವನು ಮರಕ್ಕೆ ಹತ್ತಿಸಿದ. (78ಕ) ಅವನು ಹುಡುಗನನ್ನು ಹತ್ತಿಸಿದ್ದು ಮರಕ್ಕೆ. (78ಖ) ಅವನು ಮರಕ್ಕೆ ಹತ್ತಿಸಿದ್ದು ಹುಡುಗನನ್ನು. (78ಗ) ಹುಡುಗನನ್ನು ಮರಕ್ಕೆ ಹತ್ತಿಸಿದ್ದು ಅವನು. ಮರಕ್ಕೆ ಎಂಬುದನ್ನು (77ಕ)ದಲ್ಲಿ ಹುಡುಗನನ್ನು ಎಂಬ ಅಂಶವನ್ನು ಒತ್ತಿಹೇಳುವ ಮೂಲಕ ಅದನ್ನು ಆ ವಾಕ್ಯದ ಸುದ್ದಿಯ ಮುಖ್ಯ ಅಂಶವನ್ನಾಗಿ ಮಾಡಲಾಗಿದೆ, ಮತ್ತು (77ಖ-ಗ)ಗಳಲ್ಲಿ ಅದಕ್ಕೆ ಬದಲು ಮರಕ್ಕೆ ಮತ್ತು ಅವನು ಎಂಬವುಗಳನ್ನು ಒತ್ತಿಹೇಳುವ ಮೂಲಕ ಸುದ್ದಿಯ ಮುಖ್ಯ ಅಂಶಗಳನ್ನಾಗಿ ಮಾಡಲಾಗಿದೆ. ಭಾಗಕ್ಕೆ (78ಕ)ದಲ್ಲಿ ಸಂಬಂಧಿಸುವಂತೆ ಹೇಳುವ ಮೂಲಕ ಅದು ಆ ವಾಕ್ಯ ತಿಳಿಸುವ ಸುದ್ದಿಯ ಮುಖ್ಯ ಅಂಶವೆಂಬುದಾಗಿ ಸೂಚಿಸಲಾಗಿದೆ. (78ಖ-ಗ)ಗಳಲ್ಲಿ ಹುಡುಗನನ್ನು ಮತ್ತು ಅವನು ಎಂಬವುಗಳು ಇದೇ ಕಾರಣಕ್ಕಾಗಿ ಮುಖ್ಯ ಅಂಶಗಳು. ಕೆಲವು ಪದ ಇಲ್ಲವೇ ಪ್ರತ್ಯಯಗಳನ್ನು ಬಳಸಿಯೂ ವಾಕ್ಯದ ಸುದ್ದಿಯಲ್ಲಿ ಮುಖ್ಯ ಅಂಶ ಯಾವುದು ಎಂಬುದನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆ ಗಾಗಿ, ಒತ್ತಿಹೇಳಲು ಬಳಸುವ ಏ ಪ್ರತ್ಯಯ ಇಲ್ಲವೇ ತಾನೇ ಎಂಬ ಪದ ಈ ಕೆಲಸವನ್ನು ನಡೆಸಬಲ್ಲುದು. ವಾಕ್ಯದ ಇತರ (79ಕ) ಅವನ್ನು ಆ ಹುಡುಗನನ್ನೇ ಮರಕ್ಕೆ ಹತ್ತಿಸಿದ. (79ಖ) ಅವನು ಆ ಹುಡುಗನನ್ನು ತಾನೇ ಮರಕ್ಕೆ ಹತ್ತಿಸಿದ್ದು?

Eke →

2.7.3 ಹಿನ್ನೆಣಿಕೆ

ಒಂದು ವಾಕ್ಯದಲ್ಲಿ ಹೇಳಲು ಬಿಟ್ಟು ಹೋದ ಅಂಶವನ್ನು ವಾಕ್ಯ ಮುಗಿ ದೊಡನೆಯೇ ಅದರ ‘ಹಿನ್ನೆಣಿಕೆ’ಯಾಗಿ ಸೂಚಿಸಲು ಸಾಧ್ಯವಿದೆ. ಉದಾಹರಣೆ ಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (80ಕ) ರಾಜುವನ್ನು ಬಹಳ ಹೊಗಳಿದರು, ಹೆಡ್ಮಾಷ್ಟ್ರು. (80ಖ) ಹೆಡ್ಮಾಷ್ಟ್ರು ಬಹಳ ಹೊಗಳಿದರು, ರಾಜುವನ್ನು. (81ಕ) ನಿನ್ನೆ ಒಂದು ಟಿವಿ ತಂದಿದ್ದ, ರಾಜು. (81ಖ) ರಾಜು ಒಂದು ಟಿವಿ ತಂದಿದ್ದ, ನಿನ್ನೆ. (80ಕ)ದಲ್ಲಿ ಹೆಡ್ಮಾಷ್ಟ್ರು ಎಂಬುದನ್ನು ಹಿನ್ನೆಣಿಕೆಯಾಗಿ ಸೂಚಿಸಲಾಗಿದೆ ಮತ್ತು (80ಖ)ದಲ್ಲಿ ಇದಕ್ಕೆ ಬದಲು ರಾಜುವನ್ನು ಎಂಬುದನ್ನು ಹಿನ್ನೆಣಿಕೆಯಾಗಿ ಮಾಡ ಲಾಗಿದೆ. ಸಾಮಾನ್ಯವಾಗಿ ಎರಡು ಬೇರೆ ಬೇರೆ ರೀತಿಯ ಸಂದಭ್ರಗಳಲ್ಲಿ ಇಂತಹ ಹಿನ್ನೆಣಿಕೆಗಳ ಬಳಕೆಯಾಗುವುದನ್ನು ಕಾಣಬಹುದು. ಮೊದಲನೆಯದಾಗಿ, ಮುಖ್ಯ ಅಂಶವನ್ನು ಹೇಳುವ ಆತುರದಲ್ಲಿ ಒಂದು ಅಂಶ ಬಿಟ್ಟುಹೋಗಿದ್ದು ಅದನ್ನು ಅನಂತರ ಹಿನ್ನೆಣಿಕೆಯಾಗಿ ಹೇಳಿರಲು ಸಾಧ್ಯವಿದೆ; ಮತ್ತು ಎರಡನೆಯದಾಗಿ, ಒಂದು ಅಂಶವನ್ನು ಸೂಚಿಸುವ ಅವಶ್ಯಕತೆಯಿಲ್ಲವೆಂದು ಮೊದಲು ಭಾವಿಸಿದ್ದು, ಸುದ್ದಿಯನ್ನು ತಿಳಿಸುವಾಗ ಅದು ಸ್ಪಷ್ಟವಾಗಲಿಲ್ಲವೆಂದು ಅನಿಸಿದಲ್ಲಿ, ಅನಂತರ ಹೇಳದಿದ್ದ ಅಂಶವನ್ನು ಹಿನ್ನೆಣಿಕೆಯಾಗಿ ತಿಳಿಸಿರಲು ಸಾಧ್ಯವಿದೆ.
ವ್ಯವಹಾರ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಈ ರೀತಿ ಘಟಕಗಳ ಜಾಗವನ್ನು ಬದಲಾಯಿಸುವುದು, ಒತ್ತಿ ಹೇಳುವುದು, ಘಟಕಗಳನ್ನು ವಾಕ್ಯದ ಕೊನೆಗೆ ವಗ್ರಾಯಿಸುವುದು, ಅವಕ್ಕೆ ಕೆಲವು ಪದ ಇಲ್ಲವೇ ಪ್ರತ್ಯಯ ಗಳನ್ನು ಸೇರಿಸುವುದು, ಮೊದಲಾದ ಬೇರೆ ಬೇರೆ ರೀತಿಯ ವಿಧಾನಗಳ ಬಳಕೆಯಾಗುತ್ತಿದ್ದು ಇವು ಅರ್ಥ ಸಂಬಂಧಗಳನ್ನು ಸೂಚಿಸುವ ವಿಧಾನಕ್ಕಿಂತ ತೀರ ಭಿನ್ನವಾಗಿವೆ.
ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ಅರ್ಥ ಸಂಬಂಧಕ್ಕೇನೇ ಹೆಚ್ಚಿನ ಗಮನ ಕೊಡುತ್ತಿದ್ದು, ವ್ಯವಹಾರ ಸಂಬಂಧಕ್ಕೆ ಜಾಸ್ತಿ ಗಮನ ಹರಿಸಿಲ್ಲ. ಹಾಗಾಗಿ, ಇವುಗಳ ಕುರಿತಾಗಿ ನಮಗೆ ತಿಳಿದಿರುವ ಅಂಶಗಳು ಬಹಳ ಕಡಿಮೆ (ಜಾಸ್ತಿ ವಿವರಗಳಿಗೆ ತಿರುಮಲೇಶ್ (1979) ಮತ್ತು ಭಟ್ (1991) ನೋಡಿ).

Eke →

2.8 ಗುಣಪದಗಳ ಬಳಕೆ

ಕ್ರಿಯಾವಾಕ್ಯಗಳಲ್ಲಿ ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು ಮಾತ್ರ ವಲ್ಲದೆ ಒಂದು ಅಥವಾ ಜಾಸ್ತಿ ಗುಣಪದಗಳೂ ಬರಬಲ್ಲುವು. ಇವು ಕ್ರಿಯಾ ಪದವು ತಿಳಿಸುವ ಘಟನೆಯ ಗುಣಧರ್ಮಗಳನ್ನು ಸೂಚಿಸುವುದಕ್ಕಾಗಿ ಬಳಕೆ ಯಾಗುತ್ತವೆ. ಘಟನೆ ಎಂತಹದು ಎಂಬುದನ್ನು ಮಾತ್ರವಲ್ಲದೆ ಘಟನೆಯ ಸಮಯ ಮತ್ತು ಜಾಗಗಳನ್ನೂ ಇಂತಹ ಗುಣಪದಗಳು ಸೂಚಿಸಬಲ್ಲುವು. ಹಾಗಾಗಿ, ವಾಕ್ಯದಲ್ಲಿ ಬರುವ ಈ ಗುಣಪದಗಳಿಗೂ ಮತ್ತು ಘಟನೆಯ ಜಾಗ, ಸಮಯ ಮೊದಲಾದುವನ್ನು ಸೂಚಿಸುವ ಮುಖ್ಯವಲ್ಲದ ಘಟಕಗಳಿಗೂ ನಡುವೆ ಹತ್ತಿರದ ಸಂಬಂಧವಿದೆ. (82ಕ) ರಾಜು ಸುಮತಿಯನ್ನು ಬಹಳ ಹೊಗಳಿದ. (82ಖ) ಅವರು ನಾಳೆ ಆಫೀಸಿಗೆ ಹೋಗುವುದಿಲ್ಲ. (82ಗ) ಅಲ್ಲಿ ನಿಮ್ಮನ್ನು ಯಾರೂ ಮಾತನಾಡಿಸುವುದಿಲ್ಲ. ಗುಣಪದಗಳ ಬಳಕೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಆರನೆಯ ಅಧ್ಯಾಯದಲ್ಲಿ ಕೊಡಲಾಗಿದೆ.

Eke →

2.9 ಸಾರಾಂಶ

ಯಾವುದಾದರೂ ಒಂದು ಘಟನೆ ನಡೆದುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸಬೇಕಾದಾಗ ಕ್ರಿಯಾವಾಕ್ಯಗಳನ್ನು ಬಳಸಬೇಕಾಗುತ್ತದೆ. ಇಂತಹ ಕ್ರಿಯಾ ವಾಕ್ಯಗಳಲ್ಲಿ ಮುಖ್ಯ ಪದವಾಗಿ ಒಂದು ಕ್ರಿಯಾಪದ ಬಂದಿರುತ್ತದೆ. ಈ ಕ್ರಿಯಾ ಪದದೊಂದಿಗೆ ಮುಖ್ಯವಾಗಿ ಎರಡು ಪ್ರತ್ಯಯಗಳು ಬಂದಿರುತ್ತವೆ. ಇವುಗಳಲ್ಲಿ ಒಂದು ಘಟನೆಯ ಸಮಯವನ್ನು ಸೂಚಿಸುತ್ತದೆ ಮತ್ತು ಇನ್ನೊಂದು ಘಟನೆ ಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನು ಚುಟುಕಾಗಿ ಸೂಚಿಸುತ್ತದೆ. ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಚ್ಚು ವಿವರವಾಗಿ ಸೂಚಿಸಲು ಕ್ರಿಯಾವಾಕ್ಯದಲ್ಲಿ ಒಂದು ಅಥವಾ ಜಾಸ್ತಿ ಮುಖ್ಯ ಘಟಕಗಳು ಬರುತ್ತವೆ. ಇದಲ್ಲದೆ, ಘಟನೆಯ ಸಮಯ, ಜಾಗ, ಉದ್ದೇಶ, ಘಟನೆಯಲ್ಲಿ ಬಳಸಿದ ಸೂಚಿಸುವುದಕ್ಕಾಗಿ ಬೇರೆಯೂ ಕೆಲವು (ಮುಖ್ಯವಲ್ಲದ) ಘಟಕಗಳನ್ನು ಕ್ರಿಯಾವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ. ಒಂದು ವಾಕ್ಯದಲ್ಲಿ ಎರಡು ಅಥವಾ ಜಾಸ್ತಿ ಘಟಕಗಳು ಬಂದಿವೆಯಾದಲ್ಲಿ ಅವುಗಳಲ್ಲಿ ಯಾವುದು ಯಾವ ಘಟಕ ಎಂಬುದನ್ನು ಸೂಚಿಸುವುದಕ್ಕಾಗಿ ಅವುಗ ಳೊಂದಿಗೆ ವಿಭಕ್ತಿ ಪ್ರತ್ಯಯಗಳ ಇಲ್ಲವೇ ಇತರ ಪದಗಳ ಬಳಕೆಯಾಗುತ್ತದೆ. ವಾಕ್ಯದಲ್ಲಿ ಬರುವ ಘಟಕಗಳನ್ನು ಮತ್ತು ಕ್ರಿಯಾಗುಣಪದಗಳನ್ನು ಹಿಂದಿನ ವಾಕ್ಯಗಳ ಘಟಕಗಳೊಂದಿಗೆ ಮತ್ತು ಮಾತಿನ ಸನ್ನಿವೇಶದೊಂದಿಗೆ ಸಂಬಂಧಿಸು ಸಾಧನ, ಮೊದಲಾದುವನ್ನು ವುದಕ್ಕಾಗಿ ವಾಕ್ಯದಲ್ಲಿ ಅವು ಬರುವ ಜಾಗ, ಒತ್ತಿ ಹೇಳುವುದು, ಕೆಲವು ಪದ ಇಲ್ಲವೇ ಪ್ರತ್ಯಯಗಳ ಬಳಕೆ ಮೊದಲಾದ ವಿಧಾನಗಳನ್ನು ಬಳಸಲಾಗುತ್ತದೆ. ಕ್ರಿಯಾವಾಕ್ಯಗಳಲ್ಲಿ ಬರುವ ಕೆಲವು ಕ್ರಿಯಾಗುಣಪದಗಳು ಘಟನೆಗಳ ಗುಣಧರ್ಮಗಳನ್ನೂ ಸೂಚಿಸಬಲ್ಲುವು.