Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಐದು — ಕ್ರಿಯಾಪದಗಳ ಪದರೂಪಗಳು
5.1 ಪೀಠಿಕೆ
ವಾಕ್ಯವೊಂದರ ಕೊನೆಯಲ್ಲಿ ಅದರ ಕೇಂದ್ರವಾಗಿ ಬರುವ ಕ್ರಿಯಾಪದವನ್ನು ಸಂದಭ್ರಕ್ಕನುಸಾರವಾಗಿ ಹಲವಾರು ರೂಪಗಳಲ್ಲಿ ಬಳಸಬೇಕಾಗುತ್ತದೆ. ಇಂತಹ ರೂಪಗಳಲ್ಲಿ ಹೆಚ್ಚಿನವುಗಳಲ್ಲೂ ಅವು ಸೂಚಿಸುವ ಘಟನೆಯ ಸಮಯ ಮತ್ತು ಆ ಘಟನೆಯಲ್ಲಿ ತೊಡಗಿರುವ ಘಟಕಗಳಲ್ಲಿ ಒಂದು (ಮಾಡುಗ, ಆಗುಗ, ಇಲ್ಲವೇ ಪ್ರೇರಕ) ಎಂಬುದಾಗಿ ಎರಡು ವಿಷಯಗಳನ್ನು ಚುಟುಕಾಗಿ ತಿಳಿಸಲು ಎರಡು ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ನನ್ನ ಅಣ್ಣ ನಾಳೆ ಬೆಳಿಗ್ಗೆ ನಿಮಗೆ ಹತ್ತು ಸಾವಿರ ಕೊಡುತ್ತಾನೆ. ಮೇಲಿನ ವಾಕ್ಯದಲ್ಲಿ ಕೊಡು ಕ್ರಿಯಾಪದ ಅದರ ಕೊಡುತ್ತಾನೆ ಎಂಬ ಕ್ರಿಯಾರೂಪದಲ್ಲಿ ವಾಕ್ಯದ ಕೇಂದ್ರವಾಗಿ ಬಂದಿದೆ. ಈ ಕ್ರಿಯಾರೂಪದಲ್ಲಿ ಕೊಡು ಕ್ರಿಯಾಪದ ತ್್ತ ಮತ್ತು ಆನೆ ಎಂಬ ಎರಡು ಪ್ರತ್ಯಯಗಳೊಂದಿಗೆ ಬಂದಿರುವುದನ್ನು ಕಾಣಬಹುದು. ಈ ಎರಡು ಪ್ರತ್ಯಯಗಳಲ್ಲಿ ತ್್ತ ಎಂಬುದು ಕೊಡು ಕ್ರಿಯಾಪದ ಸೂಚಿಸುವ ಘಟನೆಯ ಸಮಯ (1ಕ) ವಾಕ್ಯವನ್ನಾಡಿರುವ ಸಮಯಕ್ಕಿಂತ ಮುಂದಿನದು ಎಂಬುದನ್ನು ತಿಳಿಸುತ್ತದೆ, ಮತ್ತು ಅದರ ಅನಂತರ ಬಂದಿರುವ ಆನೆ ಪ್ರತ್ಯಯ ಈ ಘಟನೆಯನ್ನು ನಡೆಸುವ ವ್ಯಕ್ತಿ (ಎಂದರೆ ಅದರ ‘ಮಾಡುಗ’ ಘಟಕ) ಒಬ್ಬ ಗಂಡಸು ಎಂಬುದನ್ನು ತಿಳಿಸುತ್ತದೆ.
ಈ ಪ್ರತ್ಯಯಗಳು ಮೇಲಿನ ಎರಡು ವಿಷಯಗಳನ್ನು ಬಹಳ ಚುಟುಕಾಗಿ ತಿಳಿಸುತ್ತವೆ. ಅವನ್ನೇ ಹೆಚ್ಚು ವಿವರವಾಗಿ ತಿಳಿಸಲು ಅದೇ ವಾಕ್ಯದಲ್ಲಿ ನಾಳೆ ಬೆಳಿಗ್ಗೆ ಮತ್ತು ನನ್ನ ಅಣ್ಣ ಎಂಬ ಘಟಕಗಳು ಬಂದಿವೆ.
ಈ ಎರಡು ರೀತಿಯ ಪ್ರತ್ಯಯಗಳು ಮಾತ್ರವಲ್ಲದೆ, ವಾಕ್ಯವನ್ನು ಎಂತಹ ಮಾತಿನ ಕೆಲಸದಲ್ಲಿ ತೊಡಗಿಸಲಾಗಿದೆ ಎಂಬುದನ್ನು ಸೂಚಿಸುವ ಬೇರೆ ಕೆಲವು ಪ್ರತ್ಯಯಗಳೂ ಕ್ರಿಯಾರೂಪಗಳಲ್ಲಿ ಬರಬಲ್ಲುವು. ಉದಾಹರಣೆಗಾಗಿ, ಕೊಡಲಿ ಎಂಬ ಕ್ರಿಯಾರೂಪದಲ್ಲಿ ಮೇಲಿನ ಎರಡು ಪ್ರತ್ಯಯಗಳ ಬದಲು ಅಲ್ ಮತ್ತು ಇ ಎಂಬ ಪ್ರತ್ಯಯಗಳು ಬಂದಿವೆ. ಇವುಗಳಲ್ಲಿ ಮೊದಲನೆಯದು ಸಮಯವನ್ನೂ ಮತ್ತು ಎರಡನೆಯದು ಒಂದು ‘ಮಾತಿನ ಕೆಲಸ’ವನ್ನೂ ಸೂಚಿಸುತ್ತವೆ (10.5.4 ನೋಡಿ).
ಕೆಳಗೆ ಕೊಟ್ಟಿರುವ (1ಖ) ವಾಕ್ಯದಲ್ಲಿ ಕೊಡಲಿ ಎಂಬ ಈ ಕ್ರಿಯಾರೂಪ ವನ್ನು ಬಳಸಲಾಗಿದೆ, ಮತ್ತು ಆ ವಾಕ್ಯದ ಆಡುಗನಿಗೆ ಅದನ್ನು ಬಳಸಿ ಬೇರೊಬ್ಬ ವ್ಯಕ್ತಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಿದೆ. (1ಖ) ರಾಜು ನಾಳೆ ಬೆಳಿಗ್ಗೆ ನಿಮಗೆ ಹತ್ತು ಸಾವಿರ ಕೊಡಲಿ. ಇದಲ್ಲದೆ, ವಾಕ್ಯಗಳನ್ನು ಬೇರೆ ವಾಕ್ಯಗಳ ಇಲ್ಲವೇ ಬೇರೆ ವಾಕ್ಯಗಳಲ್ಲಿ ಬರುವ ಪದಕಂತೆಗಳ ಒಳವಾಕ್ಯಗಳನ್ನಾಗಿ ಮಾಡಿ ಬಳಸಬೇಕಾಗಿರುವ ಸಂದಭ್ರ ಗಳಲ್ಲೂ ಅವಕ್ಕೆ ಬೇರೆಯೇ ಕೆಲವು ಪ್ರತ್ಯಯಗಳನ್ನು ಸೇರಿಸಬೇಕಾಗಿದ್ದು, ಇಂತಹ ಪ್ರತ್ಯಯಗಳ ಬಳಕೆಯಿಂದಲೂ ಮೇಲಿನವಕ್ಕಿಂತ ಭಿನ್ನವಾಗಿರುವ ಕೆಲವು ಕ್ರಿಯಾ ರೂಪಗಳು ಸಿದ್ಧವಾಗುತ್ತವೆ.
ಉದಾಹರಣೆಗಾಗಿ, ವಾಕ್ಯಗಳನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿಕೊಳ್ಳಲು ಅವುಗಳ ಕೇಂದ್ರವಾಗಿ ಬಂದಿರುವ ಕ್ರಿಯಾಪದಕ್ಕೆ ಅ ಎಂಬ ‘ಸಂಬಂಧಿಸುವ’ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಈ ಪ್ರತ್ಯಯವನ್ನು ಸೇರಿಸಿದಾಗ, ಅಂತಹ ಕ್ರಿಯಾಪದಗಳ ಕೊನೆಯಲ್ಲಿ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಬಂದಿರುವ ಪ್ರತ್ಯಯ ಬಿದ್ದುಹೋಗುತ್ತದೆ, ಮತ್ತು ಅವುಗಳಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ಬಂದಿರುವ ಪ್ರತ್ಯಯ ದಲ್ಲೂ ಕೆಲವು ಬದಲಾವಣೆಗಳು ನಡೆಯುತ್ತವೆ. (2ಕ) ಆ ಹುಡುಗಿ ಮಂಗಳೂರಿಗೆ ನಾಳೆ ಹೋಗುತ್ತಾಳೆ. (2ಖ) ಮಂಗಳೂರಿಗೆ ನಾಳೆ ಹೋಗುವ ಹುಡುಗಿ ಅಳುತ್ತಿದ್ದಾಳೆ. (2ಕ) ವಾಕ್ಯದ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ, ಅದನ್ನು (2ಖ) ವಾಕ್ಯದಲ್ಲಿ ಒಂದು ಪದಕಂತೆಯ ಅಂಗವನ್ನಾಗಿ ಮಾಡಲಾಗಿದೆ. ಹೀಗೆ ಮಾಡುವ ಸಮಯದಲ್ಲಿ ಅದರ ಕೊನೆಯಲ್ಲಿ ಬರುವ ಅಳು ಪ್ರತ್ಯಯವನ್ನು ತೆಗೆದು ಹಾಕಲಾಗಿದೆ, ಮತ್ತು ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಅದರಲ್ಲಿ ಉತ್್ತ ಪ್ರತ್ಯಯದ ಬದಲು ಉವ್ ಪ್ರತ್ಯಯವನ್ನು ಬಳಸಲಾಗಿದೆ. ವಾಕ್ಯಗಳಲ್ಲಿ ಈ ರೀತಿ ಬೇರೆ ಬೇರೆ ಕೆಲಸಗಳಿಗಾಗಿ ಎಂತಹ ಕ್ರಿಯಾರೂಪ ಗಳೆಲ್ಲ ಬರಬಲ್ಲುವು ಮತ್ತು ಅವುಗಳ ಒಳರಚನೆಯೇನು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
5.2 ಸಮಯವನ್ನು ಸೂಚಿಸುವ ಪ್ರತ್ಯಯಗಳು
ವಾಕ್ಯದ ಮುಖ್ಯ ಅಂಗವಾಗಿ ಬರುವ ಕ್ರಿಯಾಪದಗಳಲ್ಲಿ ‘ಹಿಂದಿನ ಸಮಯ’ ಮತ್ತು ‘ಮುಂದಿನ ಸಮಯ’ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸಬಲ್ಲ ಪ್ರತ್ಯಯಗಳು ಬಳಕೆಯಾಗುತ್ತವೆ. ಇವು ಆ ಕ್ರಿಯಾಪದಗಳಿರುವ ವಾಕ್ಯವನ್ನು ಯಾವ ಸಮಯದಲ್ಲಿ ಆಡಲಾಗಿತ್ತೋ ಆ ಸಮಯದ ಹಿಂದೆ ನಡೆದಿರುವ ಮತ್ತು ಮುಂದೆ ನಡೆಯಲಿರುವ ಘಟನೆಗಳನ್ನು ಸೂಚಿಸುತ್ತವೆ. (3ಕ) ಆತ ಇವತ್ತು ಸಂಜೆ ಮೂರು ಗಂಟೆಗೆ ಹಾಡುತ್ತಾನೆ. (3ಖ) ಆತ ಇವತ್ತು ಸಂಜೆ ಮೂರು ಗಂಟೆಗೆ ಹಾಡಿದ. ಮೇಲಿನ ಎರಡು ವಾಕ್ಯಗಳೂ ಒಂದೇ ಘಟನೆಯನ್ನು (ಎಂದರೆ ಆತನು ಹಾಡುವ ಘಟನೆಯನ್ನು) ತಿಳಿಸುತ್ತವೆ. ಇದಲ್ಲದೆ, ಈ ಘಟನೆಯ ಸಮಯ ಈ ಎರಡು ವಾಕ್ಯಗಳಲ್ಲೂ ಒಂದೇ (ಇವತ್ತು ಸಂಜೆ ಮೂರು ಗಂಟೆಗೆ). ಹೀಗಿದ್ದರೂ, ಅದನ್ನು ಸೂಚಿಸುವ ಹಾಡು ಕ್ರಿಯಾಪದವನ್ನು (3ಕ)ದಲ್ಲಿ ಉತ್್ತ ಪ್ರತ್ಯಯದೊಂದಿಗೆ ಬಳಸಲಾಗಿದೆ, ಮತ್ತು (3ಖ)ದಲ್ಲಿ ಅದನ್ನೇ ಇದ್ ಪ್ರತ್ಯಯ ದೊಂದಿಗೆ ಬಳಸಲಾಗಿದೆ.
ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಈ ಎರಡು ಪ್ರತ್ಯಯಗಳು ಘಟನೆಯ ಸಮಯವನ್ನಷ್ಟೇ ಸೂಚಿಸುವ ಬದಲು ಆ ಸಮಯಕ್ಕೂ ಮತ್ತು ಅದನ್ನು ತಿಳಿಸುವ ವಾಕ್ಯದ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುತ್ತವೆ. (3ಕ) ವಾಕ್ಯವನ್ನು ಆಡುವ ಸಮಯದಲ್ಲಿ ಆ ಘಟನೆ ನಡೆದಿಲ್ಲವೆಂಬುದನ್ನು (ಎಂದರೆ ಆ ಘಟನೆ ಅನಂತರ ನಡೆಯುತ್ತದೆ ಎಂಬುದನ್ನು) ಅದರಲ್ಲಿ ಬಂದಿರುವ ಉತ್್ತ ಎಂಬ ‘ಮುಂದಿನ’ ಸಮಯದ ಪ್ರತ್ಯಯ ಸೂಚಿಸುತ್ತದೆ, ಮತ್ತು (3ಖ) ವಾಕ್ಯ ವನ್ನು ಆಡಿರುವ ಸಮಯದಲ್ಲಿ ಆ ಘಟನೆ ನಡೆದಾಗಿತ್ತು ಎಂಬುದನ್ನು ಅದರಲ್ಲಿ ಬಂದಿರುವ ಇದ್ ಎಂಬ ‘ಹಿಂದಿನ’ ಸಮಯದ ಪ್ರತ್ಯಯ ಸೂಚಿಸುತ್ತದೆ.
5.2.1 ಮುಂದಿನ ಸಮಯ
ಮೇಲೆ ಕೊಟ್ಟಿರುವ ಎರಡು ಸಮಯ ಪ್ರತ್ಯಯಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯಕ್ಕೆ ಎಲ್ಲಾ ಸಂದಭ್ರಗಳಲ್ಲೂ ಒಂದೇ ರೂಪವಿದೆ. ಆದರೆ, ಈ ಪ್ರತ್ಯಯದೊಂದಿಗೆ ಬರುವ ಕ್ರಿಯಾಪದಗಳಲ್ಲಿ ಮಾತ್ರ ಕೆಳಗೆ ಸೂಚಿಸಿದ ಹಾಗೆ ಎರಡು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.
(ಕ) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಂದಾಗ ಅವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ನಡುಗು
ತೂಗು
ನಂಬು
ನಡುಗುತ್ತಾನೆ ತೂಗುತ್ತಾನೆ ನಂಬುತ್ತಾನೆ ಕಟ್ಟುತ್ತಾನೆ ಬಿಡುತ್ತಾನೆ (ಖ) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಂದಾಗ ಅವುಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳುತ್ತದೆ. ಹೊಲಿ
ಬರೆಯುತ್ತಾನೆ ನಡೆಯುತ್ತಾನೆ ಕುಡಿಯುತ್ತಾನೆ ಹೊಲಿಯುತ್ತಾನೆ ಉತ್್ತ ಪ್ರತ್ಯಯದ ಮೂಲಕ ಸಿದ್ಧವಾದ ಈ ಕ್ರಿಯಾರೂಪಗಳಿಗೆ ಮುಂದಿನ ಸಮಯದಲ್ಲಿ ಜರಗುವ ಘಟನೆಗಳನ್ನು ಸೂಚಿಸುವ ಅರ್ಥ ಮಾತ್ರವಲ್ಲದೆ ರೂಢಿಯಲ್ಲಿ ಜರಗುವ ಘಟನೆಗಳನ್ನು ಸೂಚಿಸುವ ಅರ್ಥವೂ ಇದೆ ಎಂಬುದನ್ನು ಕೆಳಗಿನ ವಾಕ್ಯಗಳ ಬಳಕೆಯಲ್ಲಿ ಕಾಣಬಹುದು. (4ಕ) ಅವರು ಇವತ್ತು ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ. (4ಖ) ಅವರು ದಿನಾಲೂ ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ. (5ಕ) ಮೂರಕ್ಕೆ ನಾಲ್ಕು ಸೇರಿಸಿದರೆ ಏಳಾಗುತ್ತದೆ. (5ಖ) ಅಪರಿಚಿತರನ್ನು ಕಂಡಾಗ ನಾಯಿಗಳು ಬೊಗಳುತ್ತವೆ. (5ಗ) ಆತ ರೇಡಿಯೋ ರಿಪೇರಿ ಮಾಡುತ್ತಾನೆ. ಪ್ರತ್ಯಯವಿರುವ (4ಕ)ದಲ್ಲಿ ಉತ್್ತ ತೆರೆಯುತ್ತಾರೆ ಎಂಬ ಮೇಲೆ ಕ್ರಿಯಾರೂಪ ಮುಂದಿನ ಸಮಯದಲ್ಲಿ ಜರಗಲಿರುವ ಘಟನೆಯೊಂದನ್ನು ಸೂಚಿಸುತ್ತಿದೆ. ಆದರೆ (4ಖ)ದಲ್ಲಿ ಅದೇ ಕ್ರಿಯಾರೂಪ ರೂಢಿಯಲ್ಲಿ ಜರಗುವ ಘಟನೆಯೊಂದನ್ನು ಸೂಚಿಸುತ್ತಿದೆ. ಇದಕ್ಕೆ ಬದಲು (5ಕ-ಖ)ಗಳಲ್ಲಿ ಬಂದಿರುವ ಕ್ರಿಯಾರೂಪಗಳು ರೂಢಿಯ ಘಟನೆಗಳನ್ನು ಮಾತ್ರವೇ ಸೂಚಿಸಬಲ್ಲುವು, ಮತ್ತು (5ಗ)ದಲ್ಲಿ ಬಂದಿರುವ ಕ್ರಿಯಾರೂಪ ಈ ಎರಡು ರೀತಿಯ ಅರ್ಥಗಳನ್ನೂ ಕೊಡಬಲ್ಲುದು.
5.2.2 ಹಿಂದಿನ ಸಮಯ
ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಎಡಕ್ಕೆ ಬರುವ ಕ್ರಿಯಾಪದ ಮತ್ತು ಬಲಕ್ಕೆ ಬರುವ ಘಟಕ ಪ್ರತ್ಯಯ - ಇವುಗಳನ್ನವಲಂಬಿಸಿ ಹಲವು ರೂಪಗಳಿವೆ. ಅದರೊಂದಿಗೆ ಬರುವ ಕ್ರಿಯಾಪದಗಳಲ್ಲೂ ಕೆಳಗೆ ಸೂಚಿಸಿರುವ ಹಾಗೆ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.
(1) ಈ ಪ್ರತ್ಯಯಕ್ಕೆ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೆದುರು ಇದ್ ಎಂಬ ರೂಪವಿದೆ, ಮತ್ತು ಇದರೊಂದಿಗೆ ಬರುವ ಕ್ರಿಯಾಪದಗಳ ಕೊನೆಯಲ್ಲಿರುವ ಉಕಾರ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗುತ್ತದೆ.
ನಡುಗು
ಮಾಡು
ಹರಸು
ನಡುಗಿದ ಮಾಡಿದ ಹರಸಿದ ಮೇಲೆ ನಡುಗಿದ ಎಂಬ ಕ್ರಿಯಾರೂಪದಲ್ಲಿ ನಡುಗು ಕ್ರಿಯಾಪದಕ್ಕೆ ಇದ್ ಎಂಬ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವೂ ಮತ್ತು ಅ ಎಂಬ ಘಟಕವನ್ನು ಸೂಚಿಸುವ ಪ್ರತ್ಯಯವೂ ಸೇರಿವೆ. ಈ ಕ್ರಿಯಾರೂಪದಲ್ಲಿ ನಡುಗು ಕ್ರಿಯಾಪದದ ಕೊನೆಯ ಅಕಾರ ಬಿದ್ದುಹೋಗಿದೆ. ಇತರ ಕ್ರಿಯಾರೂಪಗಳಲ್ಲೂ ಹೀಗೆಯೇ. (2) ಎಕಾರ ಮತ್ತು ಇಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಮುಂದೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ. ಕುಣಿದ (3) ಈ ಪ್ರತ್ಯಯದ ಮುಂದೆ ಘಟಕವನ್ನು ಸೂಚಿಸುವ ಪ್ರತ್ಯಯಗಳಲ್ಲಿ ತು ಎಂಬುದು ಬಂದಿದೆಯಾದಲ್ಲಿ ಅದಕ್ಕೆ ಇದ್ ಎಂಬುದರ ಬದಲು ಇ ಎಂಬ ರೂಪವಿದೆ. ಉದಾಹರಣೆಗಾಗಿ, ಕೆಳಗಿ ಕೊಟ್ಟಿರುವ ನಡುಗಿತು ಎಂಬ ಕ್ರಿಯಾರೂಪದಲ್ಲಿ ಘಟಕವನ್ನು ಸೂಚಿಸಲು ತು ಪ್ರತ್ಯಯ ಬಂದಿದೆಯಾದ ಕಾರಣ ಅದರೊಂದಿಗೆ ಹಿಂದಿನ ಸಮಯವನ್ನು ಸೂಚಿಸಲು ಇ ಪ್ರತ್ಯಯ ಬಂದಿದೆ (ನಡುಗು-ಇ-ತು). ಇದಲ್ಲದೆ ಅದರೊಂದಿಗೆ ಬರುವ ಕ್ರಿಯಾಪದಗಳಲ್ಲೂ ಕೆಳಗೆ ಸೂಚಿಸಿರುವ ಹಾಗೆ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. (ಕ) ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ನಡುಗು
ತೇಲು
ತುಂಬು
ನಡುಗಿತು ತೇಲಿತು ತುಂಬಿತು ಕಟ್ಟಿತು (ಖ) ಕ್ರಿಯಾಪದಗಳ ಕೊನೆಯ ಎಕಾರ ಮತ್ತು ಇಕಾರಗಳ ಮುಂದೆ ಯಕಾರ ಸೇರಿಕೊಳ್ಳುತ್ತದೆ. ಒಡೆಯಿತು ಎಳೆಯಿತು ಕುಡಿಯಿತು ಕುದಿಯಿತು
5.2.3 ಅಪವಾದಗಳು
ಮೇಲೆ ಸೂಚಿಸಿದ ಬದಲಾವಣೆಗಳು ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಿದಾಗ ಕಾಣಿಸಿಕೊಳ್ಳು ವಂತಹವು. ಈ ಬದಲಾವಣೆಗಳಿಗೆ ಅಪವಾದಗಳಾಗಿ ಉಳಿಯುವ ಸುಮಾರು ಐವತ್ತು-ಅರುವತ್ತು ಕ್ರಿಯಾಪದಗಳು ಕನ್ನಡದಲ್ಲಿವೆ. ಇವುಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆಯುತ್ತವೆ ಮತ್ತು ಇವುಗಳೊಂದಿಗೆ ಬರುವಾಗ ಹಿಂದಿನ ಸಮಯದ ಪ್ರತ್ಯಯಕ್ಕೆ ಎಂತಹ ರೂಪಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕೆಳಗೆ ಸೂಚಿಸಲಾಗಿದೆ (ಜಾಸ್ತಿ ವಿವರಗಳಿಗೆ ಶ್ರೀಧರ್ 1990 ನೋಡಿ). (1) ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಅವಿ, ಅರಿ, ಕಲಿ ಮತ್ತು ಬಲಿ ಕ್ರಿಯಾಪದಗಳು ಇಕಾರದಲ್ಲಿ ಕೊನೆಗೊಳ್ಳುವುವಾದರೂ, ಅವುಗ ಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಮುಂದೆ ತು ಘಟಕವನ್ನು ಸೂಚಿಸುವ ಪ್ರತ್ಯಯ ಬಂದಾಗ ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪವೂ ಇದೆ.
ಕದಿ ಎಂಬ ಇನ್ನೊಂದು ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೆದುರು ಈ ಪ್ರತ್ಯಯಕ್ಕೆ ಅದರ ಮುಂದೆ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ಈ ಎರಡು ಸಂದಭ್ರಗಳಲ್ಲೂ ಈ ಕ್ರಿಯಾಪದದ ಕೊನೆಯ ಇಕಾರ ಬಿದ್ದು ಹೋಗುತ್ತದೆ.
ಕದ್ದಿತು (2) ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಎಕಾರದಲ್ಲಿ ಕೊನೆಗೊಳ್ಳುವ ದೊರೆ, ನೆರೆ, ಬೆರೆ, ಮರೆ, ಕಲೆ, ಕೊಳೆ ಮತ್ತು ಮೊಳೆ ಕ್ರಿಯಾಪದಗಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಮುಂದೆ ತು ಪ್ರತ್ಯಯ ಬಂದಾಗ ಇ ಎಂಬುದರ ಬದಲು ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದ ಬದಲು ತ್ ಎಂಬ ರೂಪವೂ ಇದೆ. ಮರೆ ಮರೆತಿತು ಮರೆತ (3) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು: ಈ ಕ್ರಿಯಾಪದಗಳನ್ನು ಕೆಳಗೆ ಸೂಚಿಸಿದಂತೆ ವಿಂಗಡಿಸಿಕೊಂಡಲ್ಲಿ, ಅವು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಅವುಗಳಲ್ಲಿ ಮತ್ತು ಆ ಪ್ರತ್ಯಯದಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕೆಲಸ ಹೆಚ್ಚು ಸುಲಭವಾಗುತ್ತದೆ. (ಕ) ಎರಡು ಅಕ್ಷರಗಳಿದ್ದು, ಅವುಗಳಲ್ಲಿ ಒತ್ತಕ್ಷರವಾಗಲೀ ಇಲ್ಲವೇ ಉದ್ದ ಸ್ವರವಾಗಲೀ ಇಲ್ಲದಿರುವ ಕ್ರಿಯಾಪದಗಳು: ನಗು, ಮಿಗು, ಉಡು, ಕೊಡು, ಬರು, ಅಳು, ಇರು, ಇತ್ಯಾದಿ. (ಖ) ಎರಡು ಅಕ್ಷರಗಳಿದ್ದು, ಅವುಗಳಲ್ಲಿ ಎರಡನೆಯದು ಒತ್ತಕ್ಷರವಾಗಿರುವ ಕ್ರಿಯಾಪದಗಳು: ಅನ್ನು, ತಿನ್ನು, ನಿಲ್ಲು, ಗೆಲ್ಲು, ಉಣ್ಣು, ಕೊಯ್ಯು, ಬಯ್ಯು, ಇತ್ಯಾದಿ. (ಇವುಗಳ ಎರಡು ಅಕ್ಷರ ಗಳಲ್ಲೂ ಗಿಡ್ಡ ಸ್ವರಗಳು ಬರುತ್ತವೆ). (ಗ) ಎರಡು ಅಕ್ಷರಗಳಿದ್ದು ಮೊದಲನೆಯ ಅಕ್ಷರದಲ್ಲಿ ಉದ್ದ ಸ್ವರವಿರುವ ಕ್ರಿಯಾಪದಗಳು: ಆಗು, ಹೋಗು, ಕಾಣು, ಕಾಯು, ತೇಯು, ಸಾಯು, ಏಳು, ಬೀಳು, ಸೋಲು, ಇತ್ಯಾದಿ. (ಇವು ಗಳಲ್ಲಿ ಒತ್ತಕ್ಷರ ಬರುವುದಿಲ್ಲ) (ಘ) ಮೂರು ಅಕ್ಷರವಿರುವ ಕ್ರಿಯಾಪದಗಳು: ಬೆವರು ಮತ್ತು ಹೊರಡು. ಈ ನಾಲ್ಕು ಗುಂಪುಗಳಲ್ಲಿ ಬರುವ ಕ್ರಿಯಾಪದಗಳು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಮೇಲೆ ಕೊಟ್ಟಿರುವ ನಿಯಮಗಳಿಗೆ ಹೇಗೆ ಅಪವಾದಗಳಾಗುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ. (ಕ) ಎರಡು ಅಕ್ಷರಗಳಿರುವ ಮತ್ತು ಒತ್ತಕ್ಷರವಾಗಲೀ ಉದ್ದ ಸ್ವರವಾಗಲೀ ಇಲ್ಲದಿರುವ ಕ್ರಿಯಾಪದಗಳು: ಇಂತಹ ಕ್ರಿಯಾಪದಗಳ ಎರಡನೆಯ ಅಕ್ಷರದಲ್ಲಿ ಗ್ ಇಲ್ಲವೇ ಡ್ ವ್ಯಂಜನ ಬಂದಿದೆಯಾದಲ್ಲಿ (ನಗು, ಮಿಗು, ಸಿಗು, ಹುಗು ಎಂಬವುಗಳಲ್ಲಿ ಮತ್ತು ಅಡು, ಇಡು, ಉಡು, ಕೆಡು, ಕೊಡು, ತೊಡು, ನಡು, ಪಡು, ಬಿಡು, ಸುಡು ಎಂಬವುಗಳಲ್ಲಿ) ಆ ವ್ಯಂಜನ ಕ್ ಇಲ್ಲವೇ ಟ್ ಎಂಬುದಾಗಿ ಬದಲಾಗುತ್ತದೆ. ಇದಲ್ಲದೆ, ಅವುಗಳೊಂದಿಗೆ ಬರುವ ಹಿಂದಿನ ಸಮಯದ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ಕಿ ಮತ್ತು ಟಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ಕ್ ಮತ್ತು ಟ್ ಎಂಬ ರೂಪವೂ ಇದೆ. ಹುಗು ಕ್ರಿಯಾಪದಕ್ಕೆ ಇಲ್ಲಿ ಹೊಕ್ ಎಂಬ ರೂಪವಿದೆ. ನಗು ನಕ್ಕಿತು
ನಕ್ಕ ಬಿಟ್ಟಿತು ತರು ಕ್ರಿಯಾಪದಗಳಿಗೆ ಹಿಂದಿನ ಎರಡನೆಯ ಅಕ್ಷರದಲ್ಲಿ ರಕಾರ ಇಲ್ಲವೇ ಳಕಾರ ಬಂದಿರುವ ಇಂತಹ ಕ್ರಿಯಾಪದಗಳಲ್ಲಿ ಎರಡು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಬರು ಮತ್ತು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಬಂ ಮತ್ತು ತಂ ಎಂಬ ರೂಪಗಳಿವೆ. ಈ ಕ್ರಿಯಾಪದಗಳೆದುರು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಾಗ ರೂಪಹೀನವಾಗುತ್ತದೆ, ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದಲ್ಲೇ ಬರುತ್ತದೆ. ಸಮಯವನ್ನು ತೆರು ಮತ್ತು ಅಳು ಕ್ರಿಯಾಪದಗಳಿಗೆ ತೆತ್ ಮತ್ತು ಅತ್ ಎಂಬ ರೂಪಗಳಿದ್ದು, ಇವುಗಳೆದುರು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಾಗ ಇ ಎಂಬ ರೂಪದಲ್ಲೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪದಲ್ಲೂ ಬರುತ್ತದೆ. ಇರು ಕ್ರಿಯಾಪದ ಎರಡು ವಿಷಯಗಳಲ್ಲಿ ಮೇಲಿನ ಕ್ರಿಯಾಪದಗಳಿಗಿಂತ ಭಿನ್ನವಾಗಿದೆ. ಮೊದಲನೆಯದಾಗಿ, ಇದರೊಂದಿಗೆ ಬರುವ ಹಿಂದಿನ ಸಮಯ ವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ರೂಪ ಹೀನತೆಯಿದೆ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವಿದೆ. ಎರಡನೆಯದಾಗಿ, ಈ ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ರೂಪಹೀನವಾಗಿರುವಲ್ಲಿ (ಎಂದರೆ, ಅದರ ಅನಂತರ ತು ಪ್ರತ್ಯಯ ಬಂದಿರುವಲ್ಲಿ) ಇತ್ ಎಂಬ ರೂಪವೂ ಮತ್ತು ಇತರ ಸಂದಭ್ರಗಳಲ್ಲಿ ಇದ್ ಎಂಬ ರೂಪವೂ ಇದೆ. (ಖ) ಎರಡು ಅಕ್ಷರಗಳಿರುವ ಮತ್ತು ಎರಡನೆಯದು ಒತ್ತಕ್ಷರವಾಗಿರುವ ಕ್ರಿಯಾಪದಗಳು: ಇವುಗಳಲ್ಲಿ ಅನ್ನು, ತಿನ್ನು, ಕೊಲ್ಲು, ನಿಲ್ಲು ಮತ್ತು ಸಲ್ಲು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಅಂ, ತಿಂ, ಕೊಂ, ನಿಂ ಮತ್ತು ಸಂ ಎಂಬ ರೂಪಗಳಿವೆ, ಮತ್ತು ಆ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ನಿಲ್ಲು ಕ್ರಿಯಾಪದದೊಂದಿಗೆ ಮಾತ್ರ ಅದಕ್ಕೆ ತಿ ಮತ್ತು ತ್ ಎಂಬ ರೂಪಗಳಿವೆ. ತಿನ್ನು ನಿಲ್ಲು ಉಣ್ಣು ಮತ್ತು ಕೊಳ್ಳು ಕ್ರಿಯಾಪದಗಳಿಗೂ ಮೇಲಿನವುಗಳ ಹಾಗೆಯೇ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಉಂ ಮತ್ತು ಕೊಂ ಎಂಬ ರೂಪಗಳಿವೆ, ಆದರೆ ಆ ಪ್ರತ್ಯಯಕ್ಕೆ ಇವುಗಳೆದುರು ಅದರ ಅನಂತರ ತು ಪ್ರತ್ಯಯ ಬಂದಿದೆಯಾದಲ್ಲಿ ಡಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದಲ್ಲಿ ಡ್ ಎಂಬ ರೂಪವೂ ಇದೆ. ಗೆಲ್ಲು ಮತ್ತು ಮೆಲ್ಲು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಗೆದ್ ಮತ್ತು ಮೆದ್ ಎಂಬ ರೂಪಗಳಿವೆ. ಇವುಗಳೆದುರು ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪವೂ ಗೆಲ್ಲು
ಗೆದ್ದಿತು ಇಂತಹ ಕ್ರಿಯಾಪದಗಳಲ್ಲಿ ಬರುವ ಒತ್ತಕ್ಷರ ಯಕಾರದ್ದಾಗಿದೆಯಾದರೆ (ಕೊಯ್ಯು, ಗೆಯ್ಯು, ತೊಯ್ಯು, ಬಯ್ಯು ಮತ್ತು ಹೊಯ್ಯು) ಹಿಂದಿನ ಸಮಯದ ಪ್ರತ್ಯಯದೊಂದಿಗೆ ಬಂದಾಗ ಅವುಗಳ ಕೊನೆಯ ಉಕಾರದೊಂದಿಗೆ ಎರಡನೆಯ ಅಕ್ಷರದ ಎರಡು ಯಕಾರಗಳಲ್ಲಿ ಒಂದು ಬಿದ್ದುಹೋಗಿ ಒಂದು ಯಕಾರ ಮಾತ್ರ ಉಳಿದುಕೊಳ್ಳುತ್ತದೆ (ಬರಹದಲ್ಲಿ ಬಯ್ ಎಂಬುದು ಬೈ ಸೂಚಿಸುವ ಪ್ರತ್ಯಯಕ್ಕೆ ಇವುಗಳೆದುರು ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪವೂ ಇದೆ. ಕಾಣಿಸಿಕೊಳ್ಳುತ್ತದೆ). ಹಿಂದಿನ ಸಮಯವನ್ನು ಬಯ್ಯು
ಬೈದಿತು
ಬೈದ (ಗ) ಎರಡು ಅಕ್ಷರಗಳಿದ್ದು ಅವುಗಳಲ್ಲಿ ಮೊದಲನೆಯದರ ಸ್ವರ ಉದ್ದ ವಾಗಿರುವ ಕ್ರಿಯಾಪದಗಳು: ಇವುಗಳಲ್ಲಿ ಆಗು ಮತ್ತು ಹೋಗು ಕ್ರಿಯಾ ಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೆದುರು ಆ ಮತ್ತು ಹೋ ಎಂಬ ರೂಪಗಳಿವೆ. ಇವುಗಳೊಂದಿಗೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯವಿದೆಯಾದರೆ ಇ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳಿವೆಯಾದರೆ ದ್ ಎಂಬ ರೂಪವೂ ಇದೆ. ಇದಲ್ಲದೆ, ಇ ಪ್ರತ್ಯಯ ಸೇರಿದಾಗ ಈ ಕ್ರಿಯಾರೂಪಗಳಲ್ಲಿ ಯಕಾರ ಕಾಣಿಸಿ ಕೊಳ್ಳುತ್ತದೆ. ಹೋಗು
ಹೋಯಿತು ಹೋದ
ಕಾಣು ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ದೊಂದಿಗೆ ಬಂದಾಗ ಕಂ ಎಂಬ ರೂಪವಿದೆ. ಇದರ ಮುಂದೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆ ಯಾದರೆ ಡಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ಡ್ ಎಂಬ ರೂಪವೂ ಇದೆ. ಎರಡನೆಯ ಅಕ್ಷರದಲ್ಲಿ ಯಕಾರವಿರುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಸೇರಿದಾಗ ಆ ಕ್ರಿಯಾಪದಗಳಲ್ಲಿ ಐದು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಕ್ರಿಯಾಪದಗಳ ಕೊನೆಯ ಉಕಾರ ಮಾತ್ರ ಬಿದ್ದು ಹೋಗುತ್ತದೆ, ಮತ್ತು ಹಿಂದಿನ ಸಮಯದ ಪ್ರತ್ಯಯ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪದಲ್ಲೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ದ್ ಎಂಬ ರೂಪದಲ್ಲೂ ಬರುತ್ತದೆ. ನೇಯು
ನೇಯ್ದಿತು ನೇಯ್ದ ಆಯು, ಕಾಯು (ಬಿಸಿಯಾಗು ಎಂಬರ್ಥದಲ್ಲಿ), ತೇಯು, ತೋಯು, ಮಾಯು, ಮೇಯು ಮತ್ತು ಹಾಯು ಕ್ರಿಯಾಪದಗಳೂ ಇಂತಹವೇ ರೂಪ ಗಳಲ್ಲಿ ಬರಬಲ್ಲುವು. ಆದರೆ ಇವುಗಳಲ್ಲಿ ಕೆಲವು ಉಕಾರದೊಂದಿಗೆ ಯಕಾರವನ್ನೂ ಕಳೆದು ಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ ತೇಯು ಕ್ರಿಯಾಪದಕ್ಕೆ ತೇದ ಎಂಬ ರೂಪವೂ ಇದೆ. ಇದಲ್ಲದೆ, ಈಯು, ಕಾಯು (ಇದಿರು ನೋಡು ಇಲ್ಲವೇ ರಕ್ಷಿಸು ಎಂಬರ್ಥದಲ್ಲಿ) ಮತ್ತು ಮಾಯು ಎಂಬವುಗಳಿಗೆ ಈ ಎರಡನೆಯ ರೂಪ ಮಾತ್ರ ಇರುವಂತೆ ತೋರುತ್ತದೆ. ಈ ಕ್ರಿಯಾಪದಗಳಿಗೆ ಘಟಕವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಕೆಲವನ್ನು ಮಾತ್ರ ಸೇರಿಸಲು ಸಾಧ್ಯವಾಗುವುದಾದ ಕಾರಣ (ಕೆಲವಕ್ಕೆ ಜೋಡಣೆಯ ರೂಪ ಮಾತ್ರ ಕಾಣಿಸುತ್ತದೆ), ಈ ವಿಷಯ ದಲ್ಲಿ ಹೆಚ್ಚು ಕಟ್ಟುನಿಟ್ಟಾದ ನಿಯಮಗಳನ್ನು ಹೇಳುವುದು ಕಷ್ಟ. ಇದಲ್ಲದೆ, ಯಕಾರ ಉಳಿದಿರುವ ರೂಪ ಚಾರಿತ್ರಿಕವಾಗಿ ಸ್ವಲ್ಪ ಮಟ್ಟಿಗೆ ಹಿಂದಿನ ಕಾಲದ ರೂಪವಾಗಿದ್ದು ಅದು ಬಿದ್ದುಹೋಗಿರುವ ರೂಪ ಇತ್ತೀಚೆಗಿನ ದೆಂದು ತೋರುತ್ತದೆ. ಈಯು ಮತ್ತು ಸಾಯು ಕ್ರಿಯಾಪದಗಳ ಎದುರು ಬರುವಾಗ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆ ಯಾದರೆ ತ್ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆಯಾದರೆ ತ್್ತ ಎಂಬ ರೂಪವೂ ಕಾಣಿಸುತ್ತದೆ. ಈ ಪ್ರತ್ಯಯದೊಂದಿಗೆ ಬರುವಾಗ ಮೇಲಿನ ಕ್ರಿಯಾಪದಗಳ ಎರಡನೆಯ ಅಕ್ಷರ ಬಿದ್ದುಹೋಗುತ್ತದೆ ಮಾತ್ರವಲ್ಲ, ಅವುಗಳ ಮೊದಲನೆಯ ಅಕ್ಷರದಲ್ಲಿರುವ ಉದ್ದ ಸ್ವರ ಗಿಡ್ಡವಾಗುತ್ತದೆ. ಸಾಯು
ಸತ್ತಿತು ಸತ್ತ ಬಾಯು ಎಂಬ ಇನ್ನೊಂದು ಕ್ರಿಯಾಪದವೂ ಇದೇ ರೀತಿಯದು, ಆದರೆ ಇದರ ಮೊದಲನೆಯ ಅಕ್ಷರದಲ್ಲಿರುವ ಸ್ವರ ಉದ್ದವಾಗಿಯೇ ಉಳಿಯುತ್ತದೆ, ಮತ್ತು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಇದರೆದುರು ಬರುವಾಗ ತಿ ಮತ್ತು ತ್ ಎಂಬ ರೂಪಗಳಿವೆ. ನೋಯು, ಬೇಯು ಮತ್ತು ಮೀಯು ಕ್ರಿಯಾಪದಗಳೂ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಎರಡನೆಯ ಅಕ್ಷರವನ್ನು ಕಳೆದುಕೊಳ್ಳುತ್ತವೆ ಮತ್ತು ಮೊದಲನೆಯ ಅಕ್ಷರದಲ್ಲಿರುವ ಉದ್ದ ಸ್ವರವನ್ನು ಗಿಡ್ಡ ಸ್ವರವನ್ನಾಗಿ ಮಾಡಿಕೊಳ್ಳುತ್ತವೆ. ಇದಲ್ಲದೆ, ಅವುಗಳ ಕೊನೆಯಲ್ಲಿ ಒಂದು ಅನುಸ್ವಾರವೂ ಸೇರಿಕೊಳ್ಳುತ್ತದೆ. ಈ ಕ್ರಿಯಾಪದಗಳ ಮುಂದೆ ಬರುವ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಿದೆಯಾದರೆ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಿವೆ ಯಾದರೆ ದ್ ಎಂಬ ರೂಪವೂ ಇದೆ. ನೋಯು ನೊಂದಿತು ನೊಂದ ಏಳು ಮತ್ತು ಬೀಳು ಎಂಬೆರಡು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಎದ್ ಮತ್ತು ಬಿದ್ ಎಂಬ ರೂಪ ಗಳಿವೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಇಲ್ಲಿ ಅದರ ಅನಂತರ ತು ಪ್ರತ್ಯಯ ಬಂದಾಗ ದಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪವೂ ಇದೆ. ಬೀಳು
ಎದ್ದಿತು ಬಿದ್ದಿತು ಇದಕ್ಕೆ ಬದಲು ಕೀಳು ಕ್ರಿಯಾಪದಕ್ಕೆ ಕಿತ್ ಎಂಬ ರೂಪವಿದ್ದು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ತಿ ಮತ್ತು ತ್ ಎಂಬ ರೂಪಗಳಿವೆ. ಕೀಳು
ಸೋಲು ಮತ್ತು ಹೂಳು ಕ್ರಿಯಾಪದಗಳಿಗೆ ಸೋ ಮತ್ತು ಹೂ ಎಂಬ ರೂಪಗಳಿದ್ದು, ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ಮೇಲೆ ಮೊದಲಿನ ರೂಪದಲ್ಲಿ ಕಾಣಿಸುವ ಹಾಗೆ ತಿ ಎಂಬ ರೂಪವೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಎಂಬ ರೂಪವೂ ಸೋಲು
ಸೋತಿತು ಸೋತ (ಘ) ಮೂರು ಅಕ್ಷರಗಳಿರುವ ಕ್ರಿಯಾಪದಗಳು: ಬೆವರು ಮತ್ತು ಹೊರಡು ಎಂಬೆರಡು ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ದೊಂದಿಗೆ ಬಂದಾಗ ಬೆವ ಮತ್ತು ಹೊರ ಎಂಬ ರೂಪಗಳಿವೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯ ಬಂದಾಗ ತಿ ಮತ್ತು ಟಿ ಎಂಬ ರೂಪಗಳೂ ಮತ್ತು ಇತರ ಪ್ರತ್ಯಯಗಳು ಬಂದಾಗ ತ್ ಮತ್ತು ಟ್ ಎಂಬ ರೂಪಗಳೂ ಇವೆ. ಬೆವರು
ಬೆವತಿತು ಬೆವತ ಹೊರಡು ಹೊರಟಿತು ಹೊರಟ
5.2.4 ಈಗಿನ ಸಮಯ
ಕನ್ನಡದಲ್ಲಿ ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಹಿಂದಿನ ಮತ್ತು ಮುಂದಿನ ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರವಲ್ಲದೆ, ಈಗಿನ ಸಮಯವನ್ನು ಸೂಚಿಸುವ ಮೂರನೆಯದೊಂದು ರೂಪವೂ ಇದೆ ಎಂಬುದನ್ನು ನಾವು ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು (3.1.1 ನೋಡಿ). ಈ ರೂಪದಲ್ಲಿ ವಾಕ್ಯದ ಘಟಕವೊಂದನ್ನು ಸೂಚಿಸುವ ಪ್ರತ್ಯಯಗಳಿಗೆ ಹೆಚ್ಚುಕಡಿಮೆ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಕಾಣಿಸುವ ರೂಪಗಳೇ ಇವೆ ಎಂಬುದನ್ನು ನಾವು ಮುಂದೆ (5.3)ರಲ್ಲಿ ನೋಡಲಿರುವೆವು.
ಈಗಿನ ಸಮಯವನ್ನು ಸೂಚಿಸುವ ಈ ಪ್ರತ್ಯಯ ಅದರ ಅನಂತರ ಎ ಎಂಬ ಘಟಕವನ್ನು ಸೂಚಿಸುವ ಪ್ರತ್ಯಯ ಬಂದಾಗ ರೂಪಹೀನವಾಗುತ್ತದೆ ಮತ್ತು ಇತರ ಪ್ರತ್ಯಯಗಳು ಬಂದಾಗ ದ್ ಎಂಬ ರೂಪದಲ್ಲಿ ಬರುತ್ತದೆ. ಇದರೊಂದಿಗೆ ಬರುವ ಇರು ಕ್ರಿಯಾಪದಕ್ಕೆ ಇದ್ ಎಂಬ ರೂಪವಿದೆ.
ಇದ್ದಾನೆ
5.2.5 ಸಮಯ ಪ್ರತ್ಯಯವಿಲ್ಲದೆ ಬಳಕೆಯಾಗುವ ಕ್ರಿಯಾಪದಗಳು
ಬಲ್್ಲ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳು ಮಾತ್ರ ಮೇಲೆ ಸೂಚಿಸಿದ ಸಮಯ ಪ್ರತ್ಯಯಗಳಲ್ಲಿ ಒಂದನ್ನೂ ಪಡೆಯದೆ ನೇರವಾಗಿ ಘಟಕ ಪ್ರತ್ಯಯ ಗಳೊಂದಿಗೆ ಬಳಕೆಯಾಗುತ್ತವೆ. ಇವು ಮುಂದಿನ ಸಮಯದಲ್ಲಿ ನಡೆಯಬಲ್ಲ ವಸ್ತುವಿಗಿರುವ ಘಟನೆಯಲ್ಲಿ ತೊಡಗಲು ಒಬ್ಬ ವ್ಯಕ್ತಿ ಇಲ್ಲವೇ ‘ಸಾಮರ್ಥ್ಯ’ವನ್ನು ಮಾತ್ರವೇ ಸೂಚಿಸುತ್ತಿರುವುದೇ ಇವುಗಳೊಂದಿಗೆ ಸಮಯ ಪ್ರತ್ಯಯಗಳು ಬಾರ ದಿರುವುದಕ್ಕೆ ಕಾರಣವಿರಬೇಕು. (6ಕ) ಆಕೆ ರಾತ್ರಿ ಹೊತ್ತಿನಲ್ಲಿ ಆಫೀಸಿನಿಂದ ಒಬ್ಬಳೇ ಬರಬಲ್ಲಳು. (6ಖ) ನಾನು ರಾತ್ರಿ ಹೊತ್ತಿನಲ್ಲಿ ಆಫೀಸಿನಿಂದ ಒಬ್ಬನೇ ಬರಬಲ್ಲೆ. (7ಕ) ನೀವು ಹೇಳಿದ ಕೆಲಸವನ್ನು ನಾನು ಮಾಡಲಾರೆ. (7ಖ) ಅವರಲ್ಲಿ ಯಾವ ವಸ್ತುವೂ ಸಿಗಲಾರದು. ಈ ಎರಡು ಕ್ರಿಯಾಪದಗಳೂ ಸಾಮಾನ್ಯವಾಗಿ ಬೇರೊಂದು ಕ್ರಿಯಾಪದದ ಜೋಡಣೆಯ ರೂಪದೊಂದಿಗೆ ಬಳಕೆಯಾಗುತ್ತವೆ. ಬಲ್್ಲ ಕ್ರಿಯಾಪದ ಮಾತ್ರ ಸ್ವತಂತ್ರವಾಗಿಯೂ ಬಳಕೆಯಾಗಬಲ್ಲುದು.
5.3 ಘಟಕವನ್ನು ಸೂಚಿಸುವ ಪ್ರತ್ಯಯಗಳು
ವಾಕ್ಯದಲ್ಲಿ ಬರುವ ಘಟಕಗಳಲ್ಲಿ ಯಾವುದಾದರೂ ಒಂದನ್ನು ಚುಟುಕಾಗಿ ಸೂಚಿಸಲು ಕೆಳಗೆ ಕೊಟ್ಟಿರುವ ಒಂಬತ್ತು ಬೇರೆ ಬೇರೆ ಪ್ರತ್ಯಯಗಳಲ್ಲಿ ಒಂದನ್ನು ಕ್ರಿಯಾಪದದೊಂದಿಗೆ ಬಳಸಬೇಕಾಗುತ್ತದೆ. (ಇಲ್ಲಿ ‘ಹಲವರು’ ಎಂಬುದಕ್ಕೆ ಒಬ್ಬರಿಗಿಂತ (ಇಲ್ಲವೇ ಒಂದಕ್ಕಿಂತ) ಜಾಸ್ತಿ ಎಂಬ ಅರ್ಥವಿದೆ, ಮತ್ತು ಈ ಹಲವರನ್ನು ಸೂಚಿಸುವ ಪ್ರತ್ಯಯ ಗಂಡಸು-ಹೆಂಗಸು ಎಂಬ ವ್ಯತ್ಯಾಸವನ್ನು ತೋರಿಸುವುದಿಲ್ಲ). ಕೇಳುಗ
ಇತರರು: ಗಂಡಸು
ಹೆಂಗಸು
ಹಲವರು ಈ ಪ್ರತ್ಯಯಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಕೊಡು ಕ್ರಿಯಾಪದದ ಮುಂದಿನ ಸಮಯದ ರೂಪಗಳಲ್ಲಿ ಕಾಣಬಹುದು. ಕೇಳುಗ
ಇತರರು: ಗಂಡಸು
ಕೊಡುತ್ತೇನೆ ಕೊಡುತ್ತಿ ಕೊಡುತ್ತಾನೆ ಹಲವರು ಕೊಡುತ್ತೇವೆ ಕೊಡುತ್ತೀರಿ ಕೊಡುತ್ತಾರೆ ಹೆಂಗಸು
ಕೊಡುತ್ತಾಳೆ ಕೊಡುತ್ತದೆ ಕೊಡುತ್ತವೆ ಮೇಲೆ ಕೊಟ್ಟಿರುವ ಪ್ರತ್ಯಯಗಳಿಗೆ ಅವುಗಳೊಂದಿಗೆ ಬರುವ ಸಮಯದ ಪ್ರತ್ಯಯವನ್ನವಲಂಬಿಸಿ ಎರಡು ರೂಪಗಳಿವೆ. ಮೊದಲನೆಯದಾಗಿ, ಕ್ರಿಯಾಪದ ದೊಂದಿಗೆ ಮುಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಬಂದಿದೆಯಾದಲ್ಲಿ ಅದರ ಅನಂತರ ಬರುವ ಈ ಪ್ರತ್ಯಯಗಳಿಗೆ ಮೇಲೆ ಕೊಟ್ಟಿರುವ ರೂಪಗಳಿರು ತ್ತವೆ.
ಆದರೆ, ಇದಕ್ಕೆ ಬದಲು ಕ್ರಿಯಾಪದದೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಬಂದಿದೆಯಾದಲ್ಲಿ ಅವಕ್ಕೆ ಮೇಲೆ ಕೊಟ್ಟುದಕ್ಕಿಂತ ಸ್ವಲ್ಪ ಭಿನ್ನವಾಗಿರುವ ರೂಪಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಕೊಡು ಕ್ರಿಯಾಪದದ ಕೆಳಗಿನ ರೂಪಗಳಲ್ಲಿ ಕಾಣಬಹುದು. ಕೇಳುಗ
ಇತರರು: ಗಂಡಸು
ಹೆಂಗಸು
ಕೊಟ್ಟೆ
ಕೊಟ್ಟಳು ಕೊಟ್ಟಿತು ಹಲವರು ಕೊಟ್ಟೆವು ಕೊಟ್ಟರು ಕೊಟ್ಟುವು ಹಿಂದಿನ ಸಮಯವನ್ನು ಸೂಚಿಸುವ ಈ ಕ್ರಿಯಾರೂಪಗಳಲ್ಲಿ ಘಟಕವನ್ನು ಸೂಚಿಸುವುದಕ್ಕಾಗಿ ಬರುವ ಪ್ರತ್ಯಯಗಳಿಗೆ ಕೆಳಗಿನ ಪಟ್ಟಿಯಲ್ಲಿ ಕಾಣಿಸಿರು ವಂತಹ ರೂಪಗಳಿವೆಯೆಂಬುದನ್ನು ಗಮನಿಸಬಹುದು. ಕೇಳುಗ
ಇತರರು: ಗಂಡಸು
ಹೆಂಗಸು
ಹಲವರು ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಮುಂದಿನ ಮತ್ತು ಹಿಂದಿನ ಸಮಯಗಳನ್ನು ಸೂಚಿಸುವ ರೂಪಾವಳಿಗಳು ಮಾತ್ರವಲ್ಲದೆ ಈಗಿನ ಸಮಯ ವನ್ನು ಸೂಚಿಸುವ ಮೂರನೆಯದೊಂದು ರೂಪಾವಳಿಯೂ ಇದೆ ಎಂಬುದನ್ನು ನಾವು ಮೇಲೆ (5.2.4)ರಲ್ಲಿ ನೋಡಿರುವೆವು. ಈ ರೂಪಾವಳಿಯಲ್ಲಿ ಘಟಕ ವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಹೆಚ್ಚಿನವಕ್ಕೂ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಕಾಣಿಸುವ ರೂಪವೇ ಇದೆ. ಆದರೆ, ಅದೆ ಮತ್ತು ಅವೆ ಪ್ರತ್ಯಯಗಳು ಎ ಮತ್ತು ವೆ ಎಂಬ ರೂಪದಲ್ಲೂ ಮತ್ತು ಇ ಪ್ರತ್ಯಯ ಈಯೆ ಎಂಬ ರೂಪದಲ್ಲೂ ಬರುತ್ತವೆ. ಕೇಳುಗ
ಇತರರು: ಗಂಡಸು
ಹೆಂಗಸು
ಇದ್ದೇನೆ
ಇದ್ದೀಯೆ ಇದ್ದಾನೆ
ಇದ್ದಾಳೆ
ಹಲವರು ಇದ್ದೇವೆ ಬಲ್್ಲ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳೊಂದಿಗೆ ಘಟಕವನ್ನು ಸೂಚಿಸುವ ಈ ಪ್ರತ್ಯಯಗಳು ನೇರವಾಗಿ, ಎಂದರೆ ಸಮಯ ಪ್ರತ್ಯಯಗಳ ಸಹಾಯವಿಲ್ಲದೆ ಬಳಕೆಯಾಗುತ್ತವೆ ಎಂಬುದನ್ನು ನಾವು ಮೇಲೆ 5.2.5ರಲ್ಲಿ ನೋಡಿರುವೆವು.
ಈ ಕ್ರಿಯಾಪದಗಳೆದುರು ಘಟಕವನ್ನು ಸೂಚಿಸುವ ಪ್ರತ್ಯಯಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯದೆದುರು ಕಾಣಿಸುವ ರೂಪಗಳೇ ಇವೆ. ಆದರೆ, ಇ ಮತ್ತು ತು ಪ್ರತ್ಯಯಗಳಿಗೆ ಮಾತ್ರ ಈ ಕ್ರಿಯಾಪದಗಳೆದುರು ಎ ಮತ್ತು ಉದು ಎಂಬ ರೂಪಗಳಿವೆ. ಕೇಳುಗ
ಇತರರು: ಗಂಡಸು
ಹೆಂಗಸು
ಬಲ್ಲೆ ಬಲ್ಲೆ ಬಲ್ಲಳು
ಬಲ್ಲುದು
ಹಲವರು ಬಲ್ಲೆವು ಬಲ್ಲರು ಬಲ್ಲುವು
5.4 ಇಸು ಪ್ರತ್ಯಯದ ಬಳಕೆ
ಕನ್ನಡದ ಹೆಚ್ಚಿನ ಕ್ರಿಯಾಪದಗಳೂ ಮೇಲಿನ ಎರಡು ಪ್ರತ್ಯಯಗಳನ್ನು ಪಡೆಯುವ ಮೊದಲು ಇಸು ಎಂಬ ಇನ್ನೊಂದು ಪ್ರತ್ಯಯವನ್ನು ಪಡೆಯಬಲ್ಲುವು. ಈ ಪ್ರತ್ಯಯಕ್ಕೆ ಸಂದಭ್ರಕ್ಕನುಸಾರವಾಗಿ ಬೇರೆ ಬೇರೆ ಅರ್ಥಗಳು ಬರುತ್ತಿದ್ದು, ಇವುಗಳಲ್ಲಿ ಘಟನೆಯನ್ನು ಮಾಡುವಂತೆ ವ್ಯಕ್ತಿಯೊಬ್ಬನನ್ನು ಪ್ರೇರೇಪಿಸುವಂತಹ ಅರ್ಥ ಪ್ರಾಮುಖ್ಯವಾದುದು. (8ಕ) ಸೀತೆ ಜಾನಕಿಗೊಂದು ಪತ್ರ ಬರೆದಳು. (8ಖ) ಸುಂದರಿ ಸೀತೆಯ ಕೈಯಲ್ಲಿ ಜಾನಕಿಗೊಂದು ಪತ್ರ ಬರೆಸಿದಳು. ಸೈನಿಕರು ಸೆರೆಯಾಳುಗಳನ್ನು ಕೊಂದರು. (9ಖ) ರಾಜ ಸೈನಿಕರ ಮೂಲಕ ಸೆರೆಯಾಳುಗಳನ್ನು ಕೊಲ್ಲಿಸಿದ. (8ಕ)ದಲ್ಲಿ ಬರೆ ಕ್ರಿಯಾಪದ ನೇರವಾಗಿ ಸಮಯವನ್ನು ಸೂಚಿಸುವ ದ್ ಪ್ರತ್ಯಯ ದೊಂದಿಗೆ ಮತ್ತು ಘಟಕವನ್ನು ಸೂಚಿಸುವ ಅಳು ಪ್ರತ್ಯಯದೊಂದಿಗೆ ಬಂದಿದೆ. ಆದರೆ (8ಖ)ದಲ್ಲಿ ಇದೇ ಕ್ರಿಯಾಪದ ಈ ಎರಡು ಪ್ರತ್ಯಯಗಳನ್ನು ಪಡೆಯುವ ಮೊದಲು ಇಸು ಎಂಬ ಬೇರೊಂದು ಪ್ರತ್ಯಯವನ್ನು ಪಡೆದಿದೆ.
(8ಕ)ದಲ್ಲಿ ಬರೆ ಕ್ರಿಯಾಪದ ಸೀತೆ ನಡೆಸಿದ ಒಂದು ಘಟನೆಯನ್ನು ಸೂಚಿಸುತ್ತದೆ; (8ಖ)ದಲ್ಲಿ ಅದೇ ಕ್ರಿಯಾಪದ ಇಸು ಪ್ರತ್ಯಯದೊಂದಿಗೆ ಬಂದಿದೆಯಾದ ಕಾರಣ, ಸೀತೆ ಆ ಘಟನೆಯನ್ನು ನಡೆಸುವಂತೆ ಸುಂದರಿ ಪ್ರೇರೇಪಿಸಿರುವಳೆಂಬುದನ್ನು ಸೂಚಿಸುತ್ತದೆ. ಇಸು ಪ್ರತ್ಯಯಕ್ಕೆ ಈ ರೀತಿ ವಾಕ್ಯಕ್ಕೊಂದು ಪ್ರೇರಕ ಘಟಕವನ್ನು ಸೇರಿಸುವ ಕೆಲಸ ಮಾತ್ರವಲ್ಲದೆ ಬೇರೆಯೂ ಕೆಲವು ಕೆಲಸಗಳಿವೆ. ವಾಕ್ಯದಲ್ಲೊಂದು ಮಾಡುಗ ಘಟಕವಿದೆಯಾದರೆ, ಅಂತಹ ವಾಕ್ಯವನ್ನು ಈ ಪ್ರತ್ಯಯ ಕೆಳಗೆ ಸೂಚಿಸಿರುವ ಹಾಗೆ ಮೂರು ರೀತಿಗಳಲ್ಲಿ ಬದಲಾಯಿಸಬಲ್ಲುದು. (ಕ) ಮೇಲೆ ಸೂಚಿಸಿದ ಹಾಗೆ ಇಸು ಪ್ರತ್ಯಯ ಆ ವಾಕ್ಯಕ್ಕೆ ಒಂದು ಪ್ರೇರಕ ಘಟಕವನ್ನು ಸೇರಿಸಬಲ್ಲುದು. ಇಂತಹ ಸಂದಭ್ರಗಳಲ್ಲಿ ವಾಕ್ಯದ ಮಾಡುಗ ಘಟಕ ಕೈಯಲ್ಲಿ ಇಲ್ಲವೇ ಮೂಲಕ ಎಂಬ ಪದದೊಂದಿಗೆ ಬರುತ್ತದೆ (8ಖ, 9ಖ ನೋಡಿ). (ಖ) ಎರಡನೆಯದಾಗಿ, ಇಸು ಪ್ರತ್ಯಯ ಆ ವಾಕ್ಯಕ್ಕೆ ಒಂದು ಹೊಸ ಮಾಡುಗ ಘಟಕವನ್ನು ಸೇರಿಸಬಲ್ಲುದುದು. ಇಂತಹ ಸಂದಭ್ರಗಳಲ್ಲಿ ವಾಕ್ಯದಲ್ಲಿ ಮೊದಲು ಮಾಡುಗವಾಗಿದ್ದ ಘಟಕ ಆಗುಗವಾಗುತ್ತದೆ; ವಾಕ್ಯದಲ್ಲಿ ಮೊದಲು ಬೇರೊಂದು ಆಗುಗ ಘಟಕವಿತ್ತಾದರೆ, ಇಸು ಪ್ರತ್ಯಯವನ್ನು ಬಳಸಿದಾಗ ಆ ಆಗುಗವನ್ನು ಬಿಟ್ಟುಬಿಡಬೇಕಾಗುತ್ತದೆ.
(10ಕ) ರಾಮು ನದಿಯನ್ನು ದಾಟಿದ. (10ಖ) ಸೀತಾಪತಿ ರಾಮುವನ್ನು ದಾಟಿಸಿದ. (11ಕ) ದನಗಳು ಹುಲ್ಲು ಮೇಯುತ್ತಿವೆ. (11ಖ) ಕೃಷ್ಣಪ್ಪ ದನಗಳನ್ನು ಮೇಯಿಸುತ್ತಿದ್ದಾನೆ. (10ಖ)ದಲ್ಲಿ ಕ್ರಿಯಾಪದದೊಂದಿಗೆ ಇಸು ಪ್ರತ್ಯಯವನ್ನು ಬಳಸಲಾಗಿದ್ದು, ಸೀತಾಪತಿ ಎಂಬ ಹೊಸದೊಂದು ಘಟಕ ಅದರ ಮಾಡುಗವಾಗಿ ಬಂದಿದೆ. ಅದರಲ್ಲಿ ಮೊದಲಿಗಿದ್ದ (ಎಂದರೆ (10ಕ)ದಲ್ಲಿದ್ದ) ಮಾಡುಗ ಘಟಕ ಆಗುಗ ವಾಗಿದೆ (ರಾಮು ಘಟಕ ಅನ್ನು ಪ್ರತ್ಯಯದೊಂದಿಗೆ ಬಂದಿದೆ) ಮತ್ತು ಮೊದಲಿ ಗಿದ್ದ ಆಗುಗ ಘಟಕವನ್ನು (ನದಿ ಎಂಬುದನ್ನು) ವಾಕ್ಯದಿಂದ ಬಿಟ್ಟು ಕೊಡಲಾಗಿದೆ (11ಖದಲ್ಲೂ ಹೀಗೆಯೇ). ಕನ್ನಡದ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ವಾಕ್ಯಗಳಲ್ಲೂ ಬಳಕೆಯಾಗಬಲ್ಲುವು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (12ಕ-ಗ) ವಾಕ್ಯ ಗಳನ್ನು ಗಮನಿಸಬಹುದು. (12ಕ) ರಾಜು ಮೂರು ಮೈಲು ಓಡಿದ. (12ಖ) ಹರಿ ರಾಜುವಿನ ಕೈಯಲ್ಲಿ ಮೂರು ಮೈಲು ಓಡಿಸಿದ. (12ಗ) ಹರಿ ರಾಜುವನ್ನು ಮೂರು ಮೈಲು ಓಡಿಸಿದ. ಮೇಲೆ (12ಖ)ದಲ್ಲಿ ಹರಿ ಘಟಕ ಪ್ರೇರಕವಾಗಿ ಬಂದಿದ್ದು, ಮೊದಲು ಮಾಡುಗವಾಗಿದ್ದ ರಾಜು ಘಟಕ ಮಾಡುಗವಾಗಿಯೇ ಉಳಿದಿದೆ ಮತ್ತು ಕೈಯಲ್ಲಿ ಎಂಬ ಪದದೊಂದಿಗೆ ಬಂದಿದೆ. ಇದಕ್ಕೆ ಬದಲು (12ಗ)ದಲ್ಲಿ ಹರಿ ಘಟಕ ಮಾಡುಗವಾಗಿ ಬಂದಿದೆ ಮತ್ತು ರಾಜು ಘಟಕ ಆಗುಗವಾಗಿ (ಅನ್ನು ಪ್ರತ್ಯಯದೊಂದಿಗೆ) ಬಂದಿದೆ. ಈ ಮೂರು ವಾಕ್ಯಗಳಲ್ಲೂ ಮೂರು ಮೈಲಿ ಎಂಬುದು ಪರಿಮಾಣವನ್ನು ಸೂಚಿಸುವ ಒಂದು ಅಮುಖ್ಯ ಘಟಕ. (ಗ) ಮೂರನೆಯದಾಗಿ, ಇಸು ಪ್ರತ್ಯಯ ಮಾಡುಗ ಘಟಕವಿರುವ ವಾಕ್ಯಕ್ಕೆ ಒಂದು ಹೊಸ ಮಾಡುಗವನ್ನು ಸೇರಿಸುವುದರೊಂದಿಗೆ ಅದರಲ್ಲಿ ಮೊದಲಿದ್ದ ಮಾಡುಗ ಘಟಕವನ್ನು ಕೊನೆ ಘಟಕವಾಗಿ ಬದಲಾಯಿಸಬಲ್ಲುದು. (13ಕ) ಮಗು ಬಾಳೇಹಣ್ಣು ತಿನ್ನುತ್ತಾ ಇದೆ. (13ಖ) ಮುರಳಿ ಮಗುವಿಗೆ ಬಾಳೇಹಣ್ಣು ತಿನ್ನಿಸುತ್ತಾ ಇದ್ದಾನೆ. (14ಕ) ರಾಘವ ಒಂದು ಕಪ್ ಮಜ್ಜಿಗೆ ಕುಡಿದ. (14ಖ) ಗಂಗಮ್ಮ ರಾಘವನಿಗೆ ಒಂದು ಕಪ್ ಮಜ್ಜಿಗೆ ಕುಡಿಸಿದಳು. (13ಖ)ದಲ್ಲಿ ಮುರಳಿ ಎಂಬ ಒಂದು ಹೊಸತಾಗಿರುವ (ಎಂದರೆ (13ಕ)ದಲ್ಲಿ ಇಲ್ಲದಿದ್ದ) ಮಾಡುಗ ಘಟಕ ಸೇರಿಕೊಂಡಿದೆ ಮತ್ತು ಅದರಲ್ಲಿ ಮೊದಲಿಗೆ ಇದ್ದ ಮಗು ಎಂಬ ಮಾಡುಗ ಘಟಕ ಕೊನೆ ಘಟಕವಾಗಿ ಬದಲಾಗಿದ್ದು ಗೆ ಪ್ರತ್ಯಯ ದೊಂದಿಗೆ ಬಳಕೆಯಾಗಿದೆ. ಇಂತಹ ವಾಕ್ಯಗಳಲ್ಲೂ ಹೊಸದಾಗಿ ಒಂದು ಮಾಡುಗ ಘಟಕದ ಬದಲು ಪ್ರೇರಕ ಘಟಕವನ್ನು ಸೇರಿಸಿಕೊಳ್ಳಲು ಸಾಧ್ಯವಿದೆ; ಹಾಗೆ ಮಾಡಿದಾಗ ಮೊದಲಿದ್ದ ಮಾಡುಗ ಘಟಕ ಮಾಡುಗವಾಗಿಯೇ ಉಳಿಯುತ್ತದಾದರೂ ಕೈಯಲ್ಲಿ ಎಂಬ ಪದದೊಂದಿಗೆ ಬರುತ್ತದೆ. (15ಕ) ಅವನು ಮೂರು ಚಪಾತಿ ತಿಂದ. (15ಖ) ನಾನು ಅವನಿಗೆ ಮೂರು ಚಪಾತಿ ತಿನ್ನಿಸಿದೆ. (15ಗ) ನಾನು ಅವನ ಕೈಯಲ್ಲಿ ಮೂರು ಚಪಾತಿ ತಿನ್ನಿಸಿದೆ. (ಘ) ಮಾಡುಗ ಘಟಕವಿಲ್ಲದ ವಾಕ್ಯಗಳ ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವಕ್ಕೆಲ್ಲ ಹೊಸದಾಗಿ ಮಾಡುಗ ಘಟಕವೊಂದು ಸೇರಿಕೊಳ್ಳುತ್ತದೆ. (16ಕ) ನೀರು ಕುದಿಯಿತು. (16ಖ) ಜಾನಕಿ ನೀರು ಕುದಿಸಿದಳು. (17ಕ) ಸೀತಾಪತಿಗೆ ಪರೀಕ್ಷೆಯ ಸುದ್ದಿ ಮುಟ್ಟಿದೆ. (17ಖ) ರಾಜು ಸೀತಾಪತಿಗೆ ಪರೀಕ್ಷೆಯ ಸುದ್ದಿ ಮುಟ್ಟಿಸಿದ್ದಾನೆ. (16ಕ)ದಲ್ಲಿ ಮಾಡುಗ ಘಟಕವಿಲ್ಲ; ಆದರೆ (16ಖ)ದಲ್ಲಿ ಕುದಿ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಲಾಗಿದೆಯಾದ ಕಾರಣ, ಅದರಲ್ಲಿ ಜಾನಕಿ ಎಂಬ ಮಾಡುಗ ಘಟಕವೊಂದು ಹೊಸತಾಗಿ ಸೇರಿಕೊಂಡಿದೆ. ಇಸು ಪ್ರತ್ಯಯದ ಬಳಕೆಯಾದಾಗ, ವಾಕ್ಯದ ಕ್ರಿಯಾಪದವನ್ನವಲಂಬಿಸಿ ಅದರ ಘಟಕಗಳಲ್ಲಿ ಬೇರೆಯೂ ಕೆಲವು ಬದಲಾವಣೆಗಳು ಕಾಣಿಸುತ್ತವೆ. ಉದಹರಣೆಗಾಗಿ, ಕೆಳಗೆ ಕೊಟ್ಟಿರುವ ನಾಲ್ಕು ಬದಲಾವಣೆಗಳನ್ನು ಗಮನಿಸ ಬಹುದು.
(ಙ) ಮೆಚ್ಚು ಇಲ್ಲವೇ ನಂಬು ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿದಾಗ, ಅದರ ಆಗುಗ ಮಾಡುಗವಾಗುತ್ತದೆ, ಮತ್ತು ಮಾಡುಗ ಆಗುಗವಾಗುತ್ತದೆ. (18ಕ) ರಾಮು ಜಾನಕಿಯನ್ನು ನಂಬಿದ. (18ಖ) ಜಾನಕಿ ರಾಮುವನ್ನು ನಂಬಿಸಿದಳು. (ಚ) ಹೆದರು, ಸೋಲು, ರೇಗು, ಒಪ್ಪು ಮೊದಲಾದ ಬೇರೆ ಕೆಲವು ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವುಗಳ ಕೊನೆ ಘಟಕ ಮಾಡುಗ ಘಟಕವಾಗುತ್ತದೆ. (19ಕ) ರಾವಣ ಹನುಮಂತನಿಗೆ ಸೋತ. (19ಖ) ಹನುಮಂತ ರಾವಣನನ್ನು ಸೋಲಿಸಿದ. (ಛ) ಕಾಣು ಮತ್ತು ಕೇಳು ಕ್ರಿಯಾಪದಗಳಿಗೆ ಇಸು ಪ್ರತ್ಯಯ ಸೇರಿದಾಗ ಅವುಗಳ ಮಾಡುಗ ಘಟಕ ಕೊನೆ ಘಟಕವಾಗುತ್ತದೆ. (20ಕ) ಅವನು ಒಂದು ಹಾಡನ್ನು ಕೇಳಿದ. (20ಖ) ಅವನಿಗೆ ಒಂದು ಹಾಡು ಕೇಳಿಸಿತು.
(ಜ) ತೆರೆ, ಒಡೆ, ಸುಡು ಮೊದಲಾದ ಬೇರೆ ಕೆಲವು ಕ್ರಿಯಾಪದಗಳು ಮಾಡುಗ ಘಟಕದೊಂದಿಗೂ ಬರಬಲ್ಲುವು, ಮಾಡುಗ ಘಟಕವಿಲ್ಲದೆಯೂ ಬರಬಲ್ಲುವು. ಇಂತಹ ಕ್ರಿಯಾಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿದಲ್ಲಿ, ಅವು ಪ್ರೇರಕದೊಂದಿಗೆ ಮಾತ್ರ ಬರಬಲ್ಲುವಲ್ಲದೆ ಪ್ರೇರಕವಿಲ್ಲದೆ ಬರಲಾರವು. (21ಕ) ಬಾಗಿಲು ತೆರೆಯಿತು. (21ಖ) ಹುಡುಗ ಬಾಗಿಲು ತೆರೆದ. (21ಗ) ಆಕೆ ಹುಡುಗನ ಕೈಯಲ್ಲಿ ಬಾಗಿಲು ತೆರೆಸಿದಳು. (21ಕ)ದಲ್ಲಿ ತೆರೆ ಕ್ರಿಯಾಪದದೊಂದಿಗೆ ಆಗುಗ ಘಟಕ (ಬಾಗಿಲು) ಮಾತ್ರ ಬಂದಿದೆ; (21ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಮಾಡುಗ (ಹುಡುಗ) ಮತ್ತು ಆಗುಗ (ಬಾಗಿಲು)ಗಳೆರಡೂ ಬಂದಿವೆ; (21ಗ)ದಲ್ಲಿ ಆ ಕ್ರಿಯಾಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಲಾಗಿದೆಯಾದ ಕಾರಣ ಅದರೊಂದಿಗೆ ಆಗುಗ (ಬಾಗಿಲು) ಮತ್ತು ಮಾಡುಗ (ಹುಡುಗ) ಘಟಕಗಳು ಮಾತ್ರವಲ್ಲದೆ ಪ್ರೇರಕ ಘಟಕವೂ (ಆಕೆ ಎಂಬುದೂ) ಬಂದಿದೆ.
5.5 ವಾಕ್ಯದ ನಡುವೆ ಕಾಣಿಸುವ ಕ್ರಿಯಾರೂಪಗಳು
ನಾವು ಇದುವರೆಗೆ ಪರಿಶೀಲಿಸಿದ ಕ್ರಿಯಾರೂಪಗಳೆಲ್ಲ ವಾಕ್ಯದ ಕೊನೆಯಲ್ಲಿ ಬರುವ ಮುಖ್ಯ ಕ್ರಿಯಾಪದದ ರೂಪಗಳು. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳಬೇಕಾದಾಗ ಇಲ್ಲವೇ ಇನ್ನೊಂದು ವಾಕ್ಯದ ಇಲ್ಲವೇ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಹೇಳಬೇಕಾದಾಗ, ಅಂತಹ ವಾಕ್ಯದಲ್ಲಿ ಬರುವ ಮುಖ್ಯ ಕ್ರಿಯಾಪದ ವಾಕ್ಯದ ನಡುವೆ ಕಾಣಿಸಿಕೊಳ್ಳುತ್ತದೆ. ಈ ರೀತಿ ವಾಕ್ಯದ ನಡುವೆ ಕಾಣಿಸಿಕೊಳ್ಳುವ ಕ್ರಿಯಾಪದಕ್ಕೆ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದಕ್ಕಿಂತ ಭಿನ್ನವಾದ ರೂಪವಿರುತ್ತದೆ. ಉದಾಹರಣೆಗಾಗಿ, ವಾಕ್ಯದ ನಡುವೆ ಬರುವ ಕ್ರಿಯಾಪದದೊಂದಿಗೆ ಘಟಕ ವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲ. ಎಂದು, ಎಂಬ, ಓ ಎಂಬಂತಹ ಎತ್ತಿ ಹೇಳುವ ಪದ ಇಲ್ಲವೇ ಪ್ರತ್ಯಯಗಳೊಂದಿಗೆ ಬರುವ ಕ್ರಿಯಾರೂಪಗಳು ಮಾತ್ರ ಇದಕ್ಕೆ ಅಪವಾದಗಳು. ವಾಕ್ಯದ ನಡುವೆ ಬರುವ ಕ್ರಿಯಾಪದದೊಂದಿಗೆ ಸಮಯ ಪ್ರತ್ಯಯ ಬರಬಲ್ಲುದಾದರೂ ಅದಕ್ಕೆ ಕೆಲವು ಸಂದಭ್ರಗಳಲ್ಲಿ ವಾಕ್ಯದ ಕೊನೆಯಲ್ಲಿ ಬರುವ ಸಮಯ ಪ್ರತ್ಯಯಕ್ಕಿಂತ ಬೇರೆಯೇ ಅರ್ಥವಿರುತ್ತದೆ.
ಈ ರೀತಿ ವಾಕ್ಯದ ನಡುವೆ ಬರುವ ಕ್ರಿಯಾರೂಪಗಳಲ್ಲಿ ಎಂತಹ ಪ್ರತ್ಯಯ ಗಳೆಲ್ಲ ಬರುತ್ತವೆ ಮತ್ತು ಅವುಗಳ ಬಳಕೆ ಹೇಗೆ ಎಂಬುದನ್ನು ಕೆಳಗಿನ ಉಪ ವಿಭಾಗಗಳಲ್ಲಿ ವಿವರಿಸಲಾಗಿದೆ.
5.5.1 ಜೋಡಿಸುವ ರೂಪಗಳು
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳುವುದಕ್ಕಾಗಿ ಮೂರು ವಿಧಾನಗಳು ಬಳಕೆಯಲ್ಲಿದ್ದು, ಆ ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸುವುದು ಇವುಗಳಲ್ಲಿ ಒಂದು ಎಂಬುದನ್ನು ನಾವು ಮುಂದೆ ಎಂಟನೇ ಅಧ್ಯಾಯದಲ್ಲಿ ನೋಡಲಿರುವೆವು. ಈ ವಿಧಾನದಲ್ಲಿ ಬಳಕೆಯಾಗುವ ಜೋಡಿಸುವ ಕ್ರಿಯಾರೂಪದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯ ಬರುತ್ತದೆ, ಆದರೆ ಘಟಕವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲ. (22ಕ) ರಾಜು ಮನೆಗೆ ಹೋಗಿ ನಿದ್ದೆ ಮಾಡಿದ. (22ಖ) ಜಾನಕಿ ಮನೆಗೆ ಹೋಗಿ ಅಡುಗೆ ಮಾಡಿದಳು. (22ಗ) ರಾಜು ಮನೆಗೆ ಹೋಗಲು ರಿಕ್ಷಾ ಹತ್ತಿದ. ಹೋಗುವ ಘಟನೆಯನ್ನು ನಡೆಸಿದ ವ್ಯಕ್ತಿ (22ಕ)ದಲ್ಲಿ ಒಬ್ಬ ಗಂಡಸು ಮತ್ತು (22ಖ)ದಲ್ಲಿ ಒಬ್ಬ ಹೆಂಗಸು; ಹೀಗಿದ್ದರೂ ಇವೆರಡು ವಾಕ್ಯಗಳಲ್ಲೂ ಹೋಗಿ ಎಂಬ ಒಂದೇ ಕ್ರಿಯಾರೂಪ ಜೋಡಿಸುವ ರೂಪವಾಗಿ ಬಂದಿದೆ.
(22ಕ) ಮತ್ತು (22ಖ) ವಾಕ್ಯಗಳಲ್ಲಿ ಮೊದಲನೆಯ ಘಟನೆ ಎರಡನೆ ಯದರ ಮೊದಲೇ ನಡೆದಿರುತ್ತದೆ. ಆದರೆ (22ಗ)ದಲ್ಲಿ ಮೊದಲನೆಯ ಘಟನೆ ನಡೆಯುವಂತಹದಾಗಿದೆ. ಈ ವ್ಯತ್ಯಾಸವನ್ನು ಎರಡನೆಯದರ ಅನಂತರ ಸೂಚಿಸುವುದಕ್ಕಾಗಿ (22ಕ-ಖ)ಗಳಲ್ಲಿ ಹೋಗಿ ಎಂಬ ಕ್ರಿಯಾರೂಪವನ್ನೂ, ಮತ್ತು (22ಗ)ದಲ್ಲಿ ಹೋಗಲು ಎಂಬ ಕ್ರಿಯಾರೂಪವನ್ನೂ ಬಳಸಲಾಗಿದೆ. ಈ ರೀತಿ ಈ ಜೋಡಿಸುವ ಕ್ರಿಯಾರೂಪಗಳು ಘಟನೆಗಳ ಸಮಯದಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಸೂಚಿಸಬಲ್ಲುವು, ಆದರೆ ಅವುಗಳ ಘಟಕಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಸೂಚಿಸಲಾರವು.
5.5.2 ಸಮಯವನ್ನು ಸೂಚಿಸುವ ಪ್ರತ್ಯಯಗಳು
ಸಮಯವನ್ನು ಸೂಚಿಸುವುದಕ್ಕಾಗಿ ಇಂತಹ ಜೋಡಿಸುವ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳಿಗೂ ಮತ್ತು ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ.
ಮೇಲೆ 5.2ರಲ್ಲಿ ವಿವರಿಸಿರುವ ಹಾಗೆ, ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾರೂಪಗಳು ಘಟನೆಯೊಂದರ ಸಮಯವನ್ನು ವಾಕ್ಯವನ್ನಾಡುವ ಸಮಯಕ್ಕೆ ಸಂಬಂಧಿಸಿದಂತೆ ಸೂಚಿಸುತ್ತವೆ. ಆ ಘಟನೆ ವಾಕ್ಯವನ್ನಾಡುವ ಸಮಯಕ್ಕಿಂತ ಹಿಂದೆ ನಡೆದುದೆಂಬುದನ್ನು ಸೂಚಿಸಲು ಅವುಗಳಲ್ಲಿ ‘ಹಿಂದಿನ ಸಮಯ’ದ ಪ್ರತ್ಯಯವೂ ಮತ್ತು ಅದು ಆ ಸಮಯದ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸಲು ‘ಮುಂದಿನ ಸಮಯ’ದ ಪ್ರತ್ಯಯವೂ ಬಳಕೆಯಾಗು ತ್ತವೆ. ಘಟನೆಯ ಸಮಯಕ್ಕೂ ಮತ್ತು ವಾಕ್ಯದ ಸಮಯಕ್ಕೂ ನಡುವಿರುವ ಸಂಬಂಧವನ್ನು ಈ ರೀತಿ ವಾಕ್ಯದ ಕೊನೆಯ ಕ್ರಿಯಾರೂಪವೇ ತಿಳಿಸುವ ಕಾರಣ ಅದನ್ನೇ ಪುನ: ವಾಕ್ಯದ ನಡುವೆ ಬರುವ ಜೋಡಿಸುವ ಕ್ರಿಯಾರೂಪಗಳು ತಿಳಿಸುವ ಅವಶ್ಯಕತೆಯಿಲ್ಲ. ಹಾಗಾಗಿ, ಜೋಡಿಸಿರುವ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ಸಮಯದ ಮಟ್ಟಿಗೆ ಎಂತಹ ಸಂಬಂಧವಿದೆ ಎಂಬುದನ್ನು ಮಾತ್ರ ಜೋಡಿಸುವ ಕ್ರಿಯಾರೂಪದಲ್ಲಿ ಬರುವ ಸಮಯ ಪ್ರತ್ಯಯಗಳು ತಿಳಿಸುತ್ತವೆ. ಕೆಳಗಿನ ವಾಕ್ಯಗಳಲ್ಲಿ ಈ ಎರಡು ರೀತಿಯ ಪ್ರತ್ಯಯ ಗಳೂ ಬಂದಿದ್ದು, ಅವುಗಳ ನಡುವಿರುವ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ. (23ಕ) ರಾಜು ಮನೆಗೆ ಹೋಗಿ ನಿದ್ದೆ ಮಾಡಿದ. (23ಖ) ರಾಜು ಮನೆಗೆ ಹೋಗಿ ನಿದ್ದೆ ಮಾಡುತ್ತಾನೆ. (23ಕ)ದಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ಹೋಗು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬಂದಿದೆ ಮತ್ತು ಮಾಡು ಕ್ರಿಯಾಪದದೊಂದಿಗೆ ದ್ ಪ್ರತ್ಯಯ ಬಂದಿದೆ. (ಇದಲ್ಲದೆ, ಮಾಡು ಕ್ರಿಯಾಪದದೊಂದಿಗೆ ಘಟಕವನ್ನು ಸೂಚಿಸುವ ಅ ಪ್ರತ್ಯಯವೂ ಬಂದಿದೆ). ಇಲ್ಲಿ ಇ ಪ್ರತ್ಯಯ ಮನೆಗೆ ಹೋಗುವ ಘಟನೆ ನಿದ್ದೆ ಮಾಡುವ ಘಟನೆಗಿಂತ ಮೊದಲೇ ನಡೆದಿದೆ ಎಂಬುದನ್ನು ತಿಳಿಸುತ್ತದೆ, ಮತ್ತು ದ್ ಪ್ರತ್ಯಯ ನಿದ್ದೆ ಮಾಡುವ ಘಟನೆ (23ಕ) ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲೇ ನಡೆದಿದೆ ಎಂಬುದನ್ನು ಸೂಚಿಸುತ್ತದೆ. (23ಕ) ವಾಕ್ಯದಲ್ಲಿ ಮನೆಗೆ ಹೋಗುವ ಘಟನೆ ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲೇ ನಡೆದಿದೆಯೆಂಬ ಅರ್ಥ ಸೂಚಿತವಾಗುವುದಾದರೂ ಅದು ನೇರವಾಗಿ ಹೋಗು ಕ್ರಿಯಾಪದದೊಂದಿಗೆ ಬರುವ ಇ ಪ್ರತ್ಯಯದಿಂದ ಸೂಚಿತವಾಗುವುದಿಲ್ಲ; ಅದಕ್ಕೆ ಬದಲು, ಮಾಡು ಕ್ರಿಯಾಪದದೊಂದಿಗೆ ಬರುವ ದ್ ಪ್ರತ್ಯಯದಿಂದ (ಮತ್ತು ಮನೆಗೆ ಹೋಗುವ ಘಟನೆ ನಿದ್ದೆ ಮಾಡುವ ಘಟನೆಗಿಂತ ಮೊದಲೇ ನಡೆದಿದೆ ಎಂಬುದರಿಂದ) ಸೂಚಿತವಾಗುತ್ತದೆ.
ಇ ಪ್ರತ್ಯಯಕ್ಕೆ ಈ ರೀತಿ ಎರಡನೆಯ ಘಟನೆಗೆ ಸಂಬಂಧಿಸಿದಂತಹ ಸಮಯವನ್ನು ಸೂಚಿಸುವ ಅರ್ಥವಿದೆಯಲ್ಲದೆ ವಾಕ್ಯವನ್ನು ಆಡಿರುವ ಸಮಯಕ್ಕೆ ಸಂಬಂಧಿಸಿದಂತೆ ಸಮಯವನ್ನು ಸೂಚಿಸುವ ಅರ್ಥವಿಲ್ಲ ಎಂಬುದನ್ನು ಮೇಲೆ ಕೊಟ್ಟಿರುವ (23ಖ) ವಾಕ್ಯ ಸ್ಪಷ್ಟಪಡಿಸುತ್ತದೆ. ಈ ವಾಕ್ಯದಲ್ಲೂ ಹೋಗು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬಂದಿದೆ. ಆದರೆ ಮಾಡು ಕ್ರಿಯಾ ಪದದೊಂದಿಗೆ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯ ಬಂದಿದೆಯಾದ ಕಾರಣ, ಇಲ್ಲಿ ಮನೆಗೆ ಹೋಗುವ ಘಟನೆ (23ಖ) ವಾಕ್ಯವನ್ನು ಆಡಿರುವ ಸಮಯದ ಅನಂತರ (ಎಂದರೆ ‘ಮುಂದಿನ’ ಸಮಯದಲ್ಲಿ) ನಡೆ ದಿರಲು ಸಾಧ್ಯವಿದೆ.
ಎರಡು ಘಟನೆಗಳ ನಡುವೆ ಕೆಳಗೆ ಸೂಚಿಸಿದ ಹಾಗೆ ಅವು ನಡೆಯುವ ಸಮಯಕ್ಕೆ ಸಂಬಂಧಿಸಿದಂತೆ ನಾಲ್ಕು ರೀತಿಯ ಸಂಬಂಧಗಳಿರಲು ಸಾಧ್ಯವಿದೆ. (1) ಮೊದಲನೆಯ ವಾಕ್ಯ ಸೂಚಿಸುವ ಘಟನೆ ಎರಡನೆಯ ವಾಕ್ಯ ಸೂಚಿಸುವ ಘಟನೆಗಿಂತ ಮೊದಲು ನಡೆಯುವಂತಹದಿರಬಹುದು,
(2) ಮೊದಲನೆಯ ವಾಕ್ಯ ಸೂಚಿಸುವ ಘಟನೆ ಎರಡನೆಯ ವಾಕ್ಯ ಸೂಚಿಸುವ ಘಟನೆಗಿಂತ ಅನಂತರ ನಡೆಯುವಂತಹದಿರಬಹುದು,
(3) ಎರಡು ವಾಕ್ಯಗಳು ಸೂಚಿಸುವ ಘಟನೆಗಳೂ ಒಂದೇ ಸಮಯ ದಲ್ಲಿ ನಡೆಯುವಂತಹವಿರಬಹುದು, ಇಲ್ಲವೇ
(4) ಮೊದಲನೆಯ ವಾಕ್ಯ ಸೂಚಿಸುವ ಘಟನೆ ನಡೆಯದೆ ಎರಡನೆಯ ವಾಕ್ಯ ಸೂಚಿಸುವ ಘಟನೆ ನಡೆಯುವಂತಿರಬಹುದು.
ಈ ನಾಲ್ಕು ರೀತಿಯ ಸಾಧ್ಯತೆಗಳನ್ನು ಸೂಚಿಸುವುದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದದೊಂದಿಗೆ ನಾಲ್ಕು ರೀತಿಯ ಪ್ರತ್ಯಯಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (24ಕ) ನಾನು ಸೀಬೆಹಣ್ಣನ್ನು ಬೇಯಿಸಿ ಕತ್ತರಿಸಿದೆ. (24ಖ) ನಾನು ಸೀಬೆಹಣ್ಣನ್ನು ಬೇಯಿಸಲು ಕತ್ತರಿಸಿದೆ. (24ಗ) ನಾನು ಸೀಬೆಹಣ್ಣನ್ನು ಬೇಯಿಸುತ್ತಾ ಕತ್ತರಿಸಿದೆ. (24ಘ) ನಾನು ಸೀಬೆಹಣ್ಣನ್ನು ಬೇಯಿಸದೆ ಕತ್ತರಿಸಿದೆ. ಮೇಲಿನ ವಾಕ್ಯಗಳಲ್ಲಿ ಪ್ರತಿಯೊಂದರಲ್ಲೂ ಸೀಬೆಹಣ್ಣನ್ನು ಬೇಯಿಸುವುದು ಮತ್ತು ಸೀಬೆ ಹಣ್ಣನ್ನು ಕತ್ತರಿಸುವುದು ಎಂಬುದಾಗಿ ಎರಡೆರಡು ಘಟನೆ ಗಳನ್ನು ಸೂಚಿಸಲಾಗಿದೆ.
(24ಕ)ದಲ್ಲಿ ಈ ಎರಡು ಘಟನೆಗಳಲ್ಲಿ ಮೊದಲನೆಯದು (ಬೇಯಿಸು ವುದು) ಎರಡನೆಯದಕ್ಕಿಂತ ಮೊದಲು ನಡೆದಿದೆಯೆಂದು ಸೂಚಿಸಲಾಗಿದೆ; (24ಖ)ದಲ್ಲಿ ಮೊದಲನೆಯದು ಎರಡನೆಯದರ ಅನಂತರ ನಡೆಯುವಂತಹದು ಎಂದು ಸೂಚಿಸಲಾಗಿದೆ; (24ಗ)ದಲ್ಲಿ ಇವೆರಡೂ ಒಟ್ಟಿಗೆ ನಡೆದಿವೆ ಎಂದು ಸೂಚಿಸಲಾಗಿದೆ; ಮತ್ತು (24ಘ)ದಲ್ಲಿ ಮೊದಲನೆಯದು ನಡೆಯದೆ ಎರಡನೆ ಯದು ನಡೆದಿದೆಯೆಂದು ಸೂಚಿಸಲಾಗಿದೆ. ಎರಡು ಘಟನೆಗಳ ನಡುವೆ ಅವುಗಳ ಸಮಯದಲ್ಲಿ ಕಾಣಿಸುವ ಈ ನಾಲ್ಕು ರೀತಿಯ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಅವುಗಳಲ್ಲಿ ಮೊದಲನೆಯ ಘಟನೆಯನ್ನು ಸೂಚಿಸುವ ಕ್ರಿಯಾಪದದೊಂದಿಗೆ ಅನುಕ್ರಮವಾಗಿ ಇ, ಅಲು, ಉತ್ತಾ ಮತ್ತು ಅದೆ ಎಂಬ ನಾಲ್ಕು ಪ್ರತ್ಯಯಗಳನ್ನು ಬಳಸಲಾಗಿದೆ.
ಇವುಗಳಲ್ಲಿ ಇ ಪ್ರತ್ಯಯವು ಅದಕ್ಕಿರುವ ಕೆಲವು ರೂಪಗಳಲ್ಲಿ ಹಿಂದಿನ ಸಮಯದ ಪ್ರತ್ಯಯದ ಹಾಗೆಯೇ ಕಾಣಿಸುತ್ತದೆ; ಆದರೆ ಬೇರೆ ಕೆಲವು ರೂಪಗಳಲ್ಲಿ ಅದು ಭಿನ್ನವಾಗಿದೆ. ಉತ್ತಾ ಪ್ರತ್ಯಯವೂ ಮುಂದಿನ ಸಮಯವನ್ನು ಸೂಚಿಸುವ ಉತ್್ತ ಪ್ರತ್ಯಯವನ್ನು ಹೋಲುತ್ತದೆ. ಆದರೆ ಅರ್ಥದಲ್ಲಿ ಈ ಎರಡು ಪ್ರತ್ಯಯಗಳೂ ಮೇಲೆ ವಿವರಿಸಿದ ಪ್ರತ್ಯಯಗಳಿಗಿಂತ ಭಿನ್ನವಾಗಿವೆ (ಜಾಸ್ತಿ ವಿವರಗಳಿಗೆ ಭಟ್ 1999:20-28 ನೋಡಿ). ಅದೆ ಎಂಬ ನಾಲ್ಕನೆಯ ಪ್ರತ್ಯಯವನ್ನು ಮಾತ್ರ ಸಮಯ ಪ್ರತ್ಯಯವೆಂದು ಪರಿಗಣಿಸುವ ಬದಲು ಅಲ್ಲಗಳೆಯುವ ಪ್ರತ್ಯಯವೆಂದು ಪರಿಗಣಿಸಲು ಸಾಧ್ಯ ವಿದೆ. ಯಾಕೆಂದರೆ, ಅದು ಸಮಯದ ಮಟ್ಟಿಗೆ ಎರಡು ಘಟನೆಗಳು ಸಂಬಂಧಿ ಸಿಲ್ಲ ಎಂಬುದಾಗಿ ಸೂಚಿಸುತ್ತಿದೆಯೆಂದು ಹೇಳಲೂ ಸಾಧ್ಯ.
ವಾಕ್ಯಗಳನ್ನು ಪದ ಇಲ್ಲವೇ ಪದಕಂತೆಗಳೊಂದಿಗೆ ಸಂಬಂಧಿಸುವುದಕ್ಕಾಗಿ ಬಳಸುವ ಅ ಪ್ರತ್ಯಯದೆದುರು ಅದ್ ಎಂಬ ಅಲ್ಲಗಳೆಯುವ ಪ್ರತ್ಯಯ ಬರು ತ್ತದೆಯೆಂಬುದನ್ನು ನಾವು ಕೆಳಗೆ 5.6ರಲ್ಲಿ ನೋಡಲಿರುವೆವು. ಜೋಡಿಸುವ ವಾಕ್ಯಗಳಲ್ಲಿ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ ಬರುವ ಅದೆ ಎಂಬ ಪ್ರತ್ಯಯಕ್ಕೂ ಮತ್ತು ಈ ಅದ್ ಪ್ರತ್ಯಯಕ್ಕೂ ನಡುವೆ ಸಂಬಂಧವನ್ನು ಕಲ್ಪಿಸಲು ಸಾಧ್ಯವಿದೆ.
ಬರು ಮತ್ತು ತರು ಎಂಬೆರಡು ಕ್ರಿಯಾಪದಗಳಿಗೆ ಅದ್ ಪ್ರತ್ಯಯದೆದುರು ಇರುವ ಹಾಗೆ ಈ ಅದೆ ಪ್ರತ್ಯಯದೆದುರೂ ಬಾರ್ ಮತ್ತು ತಾರ್ ಎಂಬ ವಿಶಿಷ್ಟವಾದ ರೂಪಗಳಿವೆಯೆಂಬುದನ್ನು ಇಲ್ಲಿ ಗಮನಿಸಬಹುದು. (25ಕ) ಅವನು ಬಾರದೆ ನಾನು ಹೋಗುವುದಿಲ್ಲ. (25ಖ) ಅವನು ಬಾರದೆ ನಮ್ಮ ಕೆಲಸ ಕೆಟ್ಟುಹೋಯಿತು.
5.5.3 ಇ ಪ್ರತ್ಯಯದ ರೂಪಗಳು
ಒಂದು ಘಟನೆ ಇನ್ನೊಂದು ಘಟನೆಗಿಂತ ಮೊದಲೇ ನಡೆದಿದೆ (ಅಥವಾ ನಡೆಯುತ್ತದೆ) ಎಂಬುದನ್ನು ಸೂಚಿಸುವ ಇ ಪ್ರತ್ಯಯಕ್ಕೆ ಕ್ರಿಯಾಪದಗಳ ಸ್ವರೂಪವನ್ನಾಧರಿಸಿ ಬೇರೆ ಬೇರೆ ರೂಪಗಳಿವೆ. ಮೇಲೆ ಸೂಚಿಸಿದ ಹಾಗೆ, ಈ ರೂಪಗಳು ಕೆಲವು ವಿಷಯಗಳಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ವನ್ನು ಹೋಲುವುವಾದರೂ ಬೇರೆ ಕೆಲವು ವಿಷಯಗಳಲ್ಲಿ ಅದಕ್ಕಿಂತ ಭಿನ್ನ ವಾಗಿವೆ. ಉಕಾರದಲ್ಲಿ ಕೊನೆಗೊಳ್ಳುವ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯ ವನ್ನು ಸೂಚಿಸುವುದಕ್ಕಾಗಿ ಇದ್ ಪ್ರತ್ಯಯವನ್ನು ಸೇರಿಸಲಾಗುತ್ತದೆ. ಒಂದು ಘಟನೆ ಇನ್ನೊಂದಕ್ಕಿಂತ ಮೊದಲು ನಡೆಯುವಂತಹದೆಂಬುದಾಗಿ ‘ಮೊದಲಿನ ಸಮಯ’ವನ್ನು ಸೂಚಿಸುವ ಪ್ರತ್ಯಯ ಇಂತಹ ಕ್ರಿಯಾಪದಗಳೊಂದಿಗೆ ಇ ಎಂಬ ರೂಪದಲ್ಲಿ ಬರುತ್ತದೆ. ಕ್ರಿಯಾಪದ ಮಾಡು
ಕೇಳು
ಬದುಕು
ಹಿಂದಿನ ಸಮಯ ಮೊದಲಿನ ಸಮಯ ಮಾಡಿದಳು ಕೇಳಿದಳು ಬದುಕಿದಳು ಮೇಲಿನ ಉದಾಹರಣೆಗಳಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ ಅಳು ಪ್ರತ್ಯಯದೆದುರು ಇದ್ ಎಂಬ ರೂಪದಲ್ಲೂ ಮತ್ತು ಮೊದಲಿನ ಸಮಯ ವನ್ನು ಸೂಚಿಸುವ ಪ್ರತ್ಯಯ ಇ ಎಂಬ ರೂಪದಲ್ಲೂ ಬಂದಿರುವುದನ್ನು ಕಾಣ ಬಹುದು. (26ಕ-ಖ)ಗಳಲ್ಲಿ ಈ ಎರಡು ರೂಪಗಳೂ ಬಂದಿವೆ. (26ಕ) ಜಾನಕಿ ಒಂದು ಚಂದದ ಬುಟ್ಟಿ ಮಾಡಿದಳು. (26ಖ) ಜಾನಕಿ ಒಂದು ಚಂದದ ಬುಟ್ಟಿ ಮಾಡಿ ನನಗೆ ಕೊಟ್ಟಳು. ಮಾಡು ಕ್ರಿಯಾಪದದೊಂದಿಗೆ ಹಿಂದಿನ (26ಕ)ದಲ್ಲಿ ಸಮಯವನ್ನು ಸೂಚಿಸುವು ದಕ್ಕಾಗಿ ಇದ್ ಪ್ರತ್ಯಯ ಬಂದಿದೆ (ಅದರ ಅನಂತರ ಘಟಕವನ್ನು ಸೂಚಿಸುವ ಅಳು ಪ್ರತ್ಯಯವೂ ಬಂದಿದೆ). ಇದಕ್ಕೆ ಬದಲು (26ಖ)ದಲ್ಲಿ ಅದೇ ಕ್ರಿಯಾಪದದೊಂದಿಗೆ ಮೊದಲಿನ ಸಮಯವನ್ನು ಸೂಚಿಸುವ ಇ ಪ್ರತ್ಯಯ ಬಂದಿದೆ. (26ಖ)ದಲ್ಲಿ ಈ ಕ್ರಿಯಾಪದ ವಾಕ್ಯದ ನಡುವೆ ಬಂದಿರುವುದನ್ನು ಗಮನಿಸಬಹುದು.
ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ, ಮತ್ತು ಮೊದಲಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದು ಎಂಬ ರೂಪವಿದೆ. ಕ್ರಿಯಾಪದ ಹೊಲಿ
ಹಿಂದಿನ ಸಮಯ ಮೊದಲಿನ ಸಮಯ ಕುಣಿದಳು ಕುಡಿದಳು ಹೊಲಿದಳು ಕುಣಿದು ಕುಡಿದು ಹೊಲಿದು ಇದೇ ರೀತಿಯಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದ್ ಎಂಬ ರೂಪವಿದೆ ಮತ್ತು ಮೊದಲಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ದು ಎಂಬ ರೂಪವಿದೆ. ಕ್ರಿಯಾಪದ ಹಿಂದಿನ ಸಮಯ ಮೊದಲಿನ ಸಮಯ ಕರೆದಳು
ಬರೆದಳು
ನಡೆದಳು ಕರೆದು ಬರೆದು ನಡೆದು ಮೇಲಿನ ನಿಯಮಗಳಿಗೆ ಅಪವಾದವಾಗಿ ಬರುವ ಕ್ರಿಯಾಪದಗಳಲ್ಲೆಲ್ಲ (ವಿವರಗಳಿಗೆ 5.2.3 ನೋಡಿ) ಮೊದಲಿನ ಸಮಯದ ಪ್ರತ್ಯಯ ಹಿಂದಿನ ಸಮಯದ ಪ್ರತ್ಯಯದ ಹಾಗೆಯೇ (ಎಂದರೆ ಅದಕ್ಕೆ ಅದರ ಅನಂತರ ಅನು, ಅಳು ಮೊದಲಾದ ಘಟಕಗಳನ್ನು ಸೂಚಿಸುವ ಪ್ರತ್ಯಯಗಳು ಬಂದಾಗ ಕಾಣಿಸುವ ರೂಪದ ಹಾಗೆಯೇ) ಇದೆ. ಆದರೆ ಈ ಸನ್ನಿವೇಶಗಳಲ್ಲಿ ಹಿಂದಿನ ಸಮಯದ ಪ್ರತ್ಯಯ ಒಂದು ವ್ಯಂಜನದ ರೂಪದಲ್ಲಿ (ದ್, ಡ್, ಕ್, ಟ್, ತ್ ಇತ್ಯಾದಿಗಳಾಗಿ) ಬರುವುದಾದರೆ ಮೊದಲಿನ ಸಮಯದ ಪ್ರತ್ಯಯ ಆ ವ್ಯಂಜನ ದೊಂದಿಗೆ ಒಂದು ಉಕಾರವೂ ಸೇರಿಕೊಂಡಿರುವ ರೂಪದಲ್ಲಿ (ದು, ಡು, ಕು, ಟು, ತು ಇತ್ಯಾದಿಯಾಗಿ) ಬರುತ್ತದೆ. ಕ್ರಿಯಾಪದ ನಗು ಕೊಡು
ಕೊಯ್ಯು ತಿನ್ನು ಕಲಿತು ನಕ್ಕು ಹಿಂದಿನ ಸಮಯ ಮೊದಲಿನ ಸಮಯ ಕಲಿತಳು
ನಕ್ಕಳು
ಕೊಟ್ಟಳು ಅತ್ತಳು
ಉಂಡಳು ಕೊಯ್ದಳು ತಿಂದಳು
ಕೊಯ್ದು ಕೊಟ್ಟು
5.5.4 ಸಂಬಂಧಿಸುವ ರೂಪಗಳು
ವಾಕ್ಯವೊಂದನ್ನು ಒಂದು ಪದ ಇಲ್ಲವೇ ಪದಕಂತೆಯೊಂದಿಗೆ ಸಂಬಂಧಿಸುವು ದಕ್ಕಾಗಿ ಅದರ ಮುಖ್ಯ ಕ್ರಿಯಾಪದಕ್ಕೆ ಅ ಎಂಬ ಸಂಬಂಧಿಸುವ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ಈ ಪ್ರತ್ಯಯದೆದುರು ಕ್ರಿಯಾಪದದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯ ಕಾಣಿಸಿಕೊಳ್ಳುತ್ತದೆ, ಆದರೆ ಘಟಕವನ್ನು ಸೂಚಿಸುವ ಪ್ರತ್ಯಯ ಕಾಣಿಸಿಕೊಳ್ಳುವುದಿಲ್ಲ.
(27ಕ) ಹುಡುಗಿ ಮರಕ್ಕೆ ಹತ್ತಿದಳು. (27ಖ) ಮರಕ್ಕೆ ಹತ್ತಿದ ಹುಡುಗಿ ಹೂ ಕೊಯ್ಯುತ್ತಿದ್ದಾಳೆ. (27ಕ)ದಲ್ಲಿ ಬಂದಿರುವ ವಾಕ್ಯವನ್ನು ಹುಡುಗಿ ಪದದೊಂದಿಗೆ ಸಂಬಂಧಿಸಿ (27ಖ)ದಲ್ಲಿ ಹೇಳಲಾಗಿದೆ, ಮತ್ತು ಇದಕ್ಕಾಗಿ ಅದರ ಕೊನೆಯಲ್ಲಿ ಬಂದಿರುವ ಹತ್ತಿದಳು ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ. ಈ ಪ್ರತ್ಯಯ ದೆದುರು ಘಟಕವನ್ನು ಸೂಚಿಸುವ ಅಳು ಪ್ರತ್ಯಯ ಬಿದ್ದುಹೋಗಿದೆ, ಆದರೆ ಸಮಯವನ್ನು ಸೂಚಿಸುವ ದ್ ಪ್ರತ್ಯಯ ಉಳಿದುಕೊಂಡಿದೆ. ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯಕ್ಕೆ ಅದರ ಅನಂತರ ತು ಪ್ರತ್ಯಯವನ್ನು ಬಿಟ್ಟು ಇತರ ಘಟಕಗಳನ್ನು ಸೂಚಿಸುವ ಪ್ರತ್ಯಯಗಳು ಬಂದಾಗ ಯಾವ ರೂಪ ಕಾಣಿಸುತ್ತದೆಯೋ ಅದೇ ರೂಪ ಅದರ ಅನಂತರ ಈ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯ ಬಂದಾಗಲೂ ಕಾಣಿಸುತ್ತದೆ. ತಿಳಿಸುವ ರೂಪ ಹುಡುಗಿ ಬಂದಳು
ಮರ ಒಣಗಿತು ಜನರು ಹಾಡಿದರು
ಎಲೆಗಳು ಉದುರಿದುವು ಉದುರಿದ ಎಲೆಗಳು ಸಂಬಂಧಿಸುವ ರೂಪ ಬಂದ ಹುಡುಗಿ ಒಣಗಿದ ಮರ ಹಾಡಿದ ಜನರು ಸಮಯವನ್ನು ಸೂಚಿಸುವ ಪ್ರತ್ಯಯದ ಅನಂತರ ಈ ಮುಂದಿನ ಸಂಬಂಧಿಸುವ ಪ್ರತ್ಯಯ ಬಂದಾಗ ಅದಕ್ಕೆ ಉವ್ ಎಂಬ ಬೇರೆಯೇ ಒಂದು ರೂಪವಿದೆ.
ತಿಳಿಸುವ ರೂಪ ಹುಡುಗಿ ಬರುತ್ತಾಳೆ ಮರ ಒಣಗುತ್ತದೆ
ಜನರು ಹಾಡುತ್ತಾರೆ ಎಲೆಗಳು ಉದುರುತ್ತವೆ ಉದುರುವ ಎಲೆಗಳು ಸಂಬಂಧಿಸುವ ರೂಪ ಬರುವ ಹುಡುಗಿ ಒಣಗುವ ಮರ ಹಾಡುವ ಜನರು ಈ ಉವ್ ಪ್ರತ್ಯಯದೊಂದಿಗೆ ಬರುವ ಕ್ರಿಯಾಪದಗಳ ಕೊನೆಯಲ್ಲಿ ಉಕಾರವಿದೆಯಾದರೆ ಅದು ಬಿದ್ದು ಹೋಗುತ್ತದೆ, ಮತ್ತು ಇಕಾರ ಇಲ್ಲವೇ ಎಕಾರವಿದೆಯಾದರೆ ಅದರ ಅನಂತರ ಯಕಾರ ಬರುತ್ತದೆ. ತಿಳಿಸುವ ರೂಪ ಸಂಬಂಧಿಸುವ ರೂಪ ಗೆಲ್ಲು
ಓಡುವ ಗೆಲ್ಲುವ ಕುಡಿಯುವ ಕರೆಯುವ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡದಲ್ಲಿ ಇಲ್ಲ ಎಂಬ ಕ್ರಿಯಾರೂಪವನ್ನು ಬಳಸಲಾಗುತ್ತದೆ. ಇದನ್ನು ಕ್ರಿಯಾಪದದ ಜೋಡಣೆಯ ರೂಪದೊಂದಿಗೆ (ಮೊದಲಿನ ಸಮಯವನ್ನು ಸೂಚಿಸುವ ರೂಪದೊಂದಿಗೆ) ಬಳಸಿದಲ್ಲಿ ಅದು ಆ ಘಟನೆ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದೆ ನಡೆದಿರ ಲಿಲ್ಲವೆಂಬುದಾಗಿ ಅದನ್ನು ಅಲ್ಲಗಳೆಯುತ್ತದೆ, ಮತ್ತು ಕ್ರಿಯಾಪದದ ನಾಮಪದ ರೂಪಕ್ಕೆ ಸೇರಿಸಿದಲ್ಲಿ ಮುಂದಿನ ಸಮಯದಲ್ಲಿ ಆ ಘಟನೆ ನಡೆಯುವುದಿಲ್ಲ ಎಂಬುದಾಗಿ ಅದನ್ನು ಅಲ್ಲಗಳೆಯುತ್ತದೆ (ಹೆಚ್ಚಿನ ವಿವರಗಳಿಗೆ 9.3.3 ನೋಡಿ).
ವಾಕ್ಯಗಳನ್ನು ಪದ ಇಲ್ಲವೇ ಪದಕಂತೆಗಳೊಂದಿಗೆ ಸಂಬಂಧಿಸುವ ಅ ಪ್ರತ್ಯಯದೊಂದಿಗೆ ಬಳಸಿದಾಗ ಮಾತ್ರ, ಇಂತಹ ಅಲ್ಲಗಳೆಯುವ ವಾಕ್ಯಗಳಲ್ಲಿ ಸಮಯದ ವ್ಯತ್ಯಾಸ ಇಲ್ಲವಾಗುತ್ತದೆ. ಮೇಲೆ ವಿವರಿಸಿದ ಎರಡು ರೀತಿಯ ಅಲ್ಲಗಳೆಯುವ ವಾಕ್ಯಗಳೂ ಒಂದೇ ರೀತಿಯ ಸಂಬಂಧಿಸುವ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
(28ಕ) ಹುಡುಗ ಶಾಲೆಗೆ ಹೋಗಲಿಲ್ಲ. (28ಖ) ಶಾಲೆಗೆ ಹೋಗದ ಹುಡುಗ ಪೆಟ್ಟು ತಿಂದಿದ್ದಾನೆ. (29ಕ) ಹುಡುಗ ಶಾಲೆಗೆ ಹೋಗುವುದಿಲ್ಲ. (29ಖ) ಶಾಲೆಗೆ ಹೋಗದ ಹುಡುಗ ಪೆಟ್ಟು ತಿನ್ನುತ್ತಾನೆ. (28ಖ)ದಲ್ಲಿ ಹೋಗಲಿಲ್ಲ ಎಂಬ ಕ್ರಿಯಾರೂಪಕ್ಕೆ ಬದಲಾಗಿ ಹೋಗದ ಎಂಬ ಸಂಬಂಧಿಸುವ ರೂಪಬಂದಿದೆ, ಮತ್ತು (29ಖ)ದಲ್ಲಿ ಹೋಗುವುದಿಲ್ಲ ಎಂಬ ಕ್ರಿಯಾರೂಪಕ್ಕೆ ಬದಲಾಗಿಯೂ ಅದೇ ಹೋಗದ ರೂಪವೇ ಸಂಬಂಧಿಸುವ ರೂಪವಾಗಿ ಬಳಕೆಯಾಗಿದೆ. ಈ ರೀತಿ ಕ್ರಿಯಾಪದಗಳ ಅಲ್ಲಗಳೆಯುವ ರೂಪಗಳನ್ನು ಸಂಬಂಧಿಸುವ ರೂಪಗಳನ್ನಾಗಿ ಬದಲಾಯಿಸಿದಾಗ ಅವು ಹಿಂದಿನ ಮತ್ತು ಮುಂದಿನ ಸಮಯ ಗಳ ನಡುವಿರುವ ವ್ಯತ್ಯಾಸವನ್ನು ಸೂಚಿಸಲಾರವು ಎಂಬುದನ್ನು ಕೆಳಗಿನ ವಾಕ್ಯ ಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. (30ಕ) ಶಾಲೆಯಲ್ಲಿ ಊಟ ಮಾಡದ ಹುಡುಗರಿಗೆ ಹೊಟ್ಟೆನೋವಾಗಿರ (30ಖ) ಶಾಲೆಯಲ್ಲಿ ಊಟ ಮಾಡದ ಹುಡುಗರಿಗೆ ಐದು ಕೆಜಿ ಅಕ್ಕಿ ಕೊಡುತ್ತಾರೆ. (30ಕ)ದಲ್ಲಿ ಬಂದಿರುವ ಮಾಡದ ಎಂಬ ಸಂಬಂಧಿಸುವ ರೂಪ ಸ್ಪಷ್ಟ ವಾಗಿಯೂ ಮಾಡಲಿಲ್ಲ ಎಂಬುದರಿಂದ ಸಿದ್ಧವಾಗಿದೆ. ಆದರೆ (30ಖ)ದಲ್ಲಿ ಬಂದಿರುವ ಅದೇ ಮಾಡದ ಎಂಬ ರೂಪ ಮಾಡುವುದಿಲ್ಲ ಎಂಬುದರಿಂದಲೂ (ಯಾವ ಹುಡುಗರು ಶಾಲೆಯಲ್ಲಿ ಊಟ ಮಾಡುವುದಿಲ್ಲವೋ ಅವರಿಗೆ) ಸಿದ್ಧವಾಗಿರಲು ಸಾಧ್ಯ ಎಂಬುದನ್ನು ಗಮನಿಸಬಹುದು. ಘಟನೆಗಳನ್ನು ಅಲ್ಲಗಳೆಯುವುದಕ್ಕಾಗಿ ಬರುವ ಈ ಸಂಬಂಧಿಸುವ ಕ್ರಿಯಾರೂಪಗಳಲ್ಲಿ ಕ್ರಿಯಾಪದದೊಂದಿಗೆ ಅದ್ ಪ್ರತ್ಯಯ ಬರುತ್ತದೆ. ಈ ಪ್ರತ್ಯಯಕ್ಕೇನೇ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ, ಅದರೊಂದಿಗೆ ಇಲ್ಲ ಎಂಬ ಪದವನ್ನು ಬಳಸುವ ಅವಶ್ಯಕತೆಯಿಲ್ಲ. ಅದ್ ಪ್ರತ್ಯಯದೆದುರು ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ, ಮತ್ತು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳುತ್ತದೆ. ಮಾಡು
ಮಾಡದ ನಿಲ್ಲು ಮುಗಿ
ನಿಲ್ಲದ ಮುಗಿಯದ ಬರೆಯದ ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಮಾತ್ರ ಈ ಪ್ರತ್ಯಯದೆದುರು ಬಾರ್ ಮತ್ತು ತಾರ್ ಎಂಬ ರೂಪದಲ್ಲಿ ಬರುತ್ತವೆ. (31ಕ) ಹುಡುಗಿ ಮದುವೆಗೆ ಬರಲಿಲ್ಲ. (31ಖ) ಮದುವೆಗೆ ಬಾರದ ಹುಡುಗಿ
5.5.5 ಷರತ್ತನ್ನು ಸೂಚಿಸುವ ರೂಪ
ಒಂದು ವಾಕ್ಯ ತಿಳಿಸುವ ಘಟನೆ ಇನ್ನೊಂದು ವಾಕ್ಯ ತಿಳಿಸುವ ಘಟನೆಗೆ ಷರತ್ತು ಎಂಬುದನ್ನು ಸೂಚಿಸುವುದಕ್ಕಾಗಿ ಮೊದಲನೆಯ ವಾಕ್ಯದ ಮುಖ್ಯ ಕ್ರಿಯಾಪದಕ್ಕೆ ಅರೆ ಪ್ರತ್ಯಯವನ್ನು ಸೇರಿಸಲಾಗುತ್ತದೆ (8.3.3 ನೋಡಿ). ಆದರೆ ಈ ಪ್ರತ್ಯಯ ವನ್ನು ಕ್ರಿಯಾಪದದ ಹಿಂದಿನ ಸಮಯದ ರೂಪಗಳಿಗೆ ಮಾತ್ರವೇ ಸೇರಿಸಿ ಹೇಳಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು. (32ಕ) ರಾಜು ಬಂದರೆ ನನಗೆ ಮನೆಗೆ ಹೋಗಬಹುದು. (32ಖ) ಜಾಸ್ತಿ ಬಿಸ್ಕಿಟ್ ತಿಂದರೆ ಹೊಟ್ಟೆನೋವಾದೀತು. (32ಗ) ನೀವು ಇನ್ನೊಮ್ಮೆ ಈ ಕಡೆ ಬಂದರೆ ನಮ್ಮಲ್ಲಿಗೆ ಬನ್ನಿ. (32ಘ) ಆಕೆ ತನಗೆ ಏನಾದರೂ ಸಿಕ್ಕಿದರೆ ರಾಜುವಿಗೂ ಕೊಡುತ್ತಾಳೆ. (32ಕ)ದಲ್ಲಿ ನಾನು ಮನೆಗೆ ಹೋಗುವುದು ಎಂಬ ಎರಡನೆಯ ಘಟನೆಗೆ ರಾಜು ಬರುವುದು ಎಂಬ ಮೊದಲನೆಯ ಘಟನೆ ಷರತ್ತಾಗಿದೆ; ಇದನ್ನು ಸೂಚಿಸುವುದಕ್ಕಾಗಿ ಮೊದಲನೆಯ ಬರು ಕ್ರಿಯಾಪದಕ್ಕೆ ಅರೆ ಪ್ರತ್ಯಯವನ್ನು ಸೇರಿಸಿ ಅದನ್ನೊಂದು ಜೋಡಿಸುವ ಕ್ರಿಯಾರೂಪವನ್ನಾಗಿ ಮಾಡಲಾಗಿದೆ.
ಇಂತಹ ಷರತ್ತುಗಳೆಲ್ಲ ಸಾಮಾನ್ಯವಾಗಿ ಮುಂದಿನ ಸಮಯದಲ್ಲಿ ನಡೆಯ ಬಹುದಾದ ಘಟನೆಗೆ ಸಂಬಂಧಿಸಿದವುಗಳು. ಹಿಂದಿನ ಸಮಯದಲ್ಲಿ ನಡೆಯ ಬಹುದಾಗಿದ್ದ ಘಟನೆಗೆ ಸಂಬಂಧಿಸಿದಂತೆ ಒಂದು ಷರತ್ತನ್ನು ಹೇಳಬೇಕಿದ್ದಲ್ಲಿ ಅದಕ್ಕಾಗಿ ಎರಡೂ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳೊಂದಿಗೆ ಇರು ಕ್ರಿಯಾ ಪದದ ರೂಪಗಳನ್ನು ಬಳಸಬೇಕಾಗುತ್ತದೆ. (33ಕ) ನೀನು ಕರೆದಿದ್ದರೆ ನಾನು ಬರುತ್ತಿದ್ದೆ. (33ಖ) ಪರೀಕ್ಷೆಗೆ ಕೂತಿದ್ದರೆ ಪಾಸಾಗಬಹುದಿತ್ತು. (33ಗ) ಸ್ಕೂಟರನ್ನು ಮೆಲ್ಲಗೆ ಓಡಿಸಿದ್ದರೆ ಅಪಘಾತವಾಗುತ್ತಿರಲಿಲ್ಲ. (33ಕ)ದಲ್ಲಿ ಷರತ್ತನ್ನು ಸೂಚಿಸುವ ಮೊದಲನೆಯ ಕ್ರಿಯಾಪದದೊಂದಿಗೆ ಇದ್ದರೆ ಎಂಬ ಕ್ರಿಯಾರೂಪವನ್ನೂ ಮತ್ತು ಷರತ್ತಿಗೆ ಹೊಂದಿಕೊಂಡಂತೆ ನಡೆಯುವ ಘಟನೆಯನ್ನು ಸೂಚಿಸುವ ಎರಡನೆಯ ಕ್ರಿಯಾಪದದೊಂದಿಗೆ ಇದ್ದೆ ಎಂಬ ಕ್ರಿಯಾರೂಪವನ್ನೂ ಬಳಸಲಾಗಿದೆ. ಮೊದಲನೆಯ ಕ್ರಿಯಾರೂಪದಲ್ಲಿ ಅರೆ ಪ್ರತ್ಯಯವನ್ನು ಈ ಇರು ಕ್ರಿಯಾಪದದ ಹಿಂದಿನ ಸಮಯದ ರೂಪಕ್ಕೆ ಸೇರಿಸ ಲಾಗಿದೆ. (33ಖ-ಗ)ಗಳಲ್ಲೂ ಹೀಗೆಯೇ.
5.5.6 ಕ್ರಿಯಾಪದದ ನಾಮಪದರೂಪಗಳು
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಘಟಕವನ್ನಾಗಿ ಮಾಡಿ ಹೇಳಲು ಮೂರು ವಿಧಾನಗಳಿವೆಯೆಂಬುದನ್ನು ನಾವು ಮುಂದೆ ಏಳನೆಯ ಅಧ್ಯಾಯದಲ್ಲಿ (7.3.2ರಲ್ಲಿ) ನೋಡಲಿರುವೆವು. ಇವುಗಳಲ್ಲಿ ಒಂದು ವಿಧಾನದ ಬಳಕೆಯಲ್ಲಿ (ಎಂಬುದು ಪದದ ಬಳಕೆಯಲ್ಲಿ) ವಾಕ್ಯದ ಕ್ರಿಯಾಪದದಲ್ಲಿ ಯಾವ ಬದಲಾವಣೆಯೂ ನಡೆಯದೆ ಅದು ಹಾಗೆಯೇ ಉಳಿಯುತ್ತದೆ. ಆದರೆ, ಉಳಿದ ಎರಡು ವಿಧಾನಗಳ ಬಳಕೆಯಲ್ಲಿ (ಇಕೆ ಇಲ್ಲವೇ ಉದು ಪ್ರತ್ಯಯಗಳ ಬಳಕೆ ಯಲ್ಲಿ) ಘಟಕವಾಗಿ ಬರುವ ವಾಕ್ಯದ ಕ್ರಿಯಾಪದದಲ್ಲೂ ಕೆಲವು ಬದಲಾ ವಣೆಗಳು ಕಾಣಿಸಿಕೊಳ್ಳುತ್ತವೆ. ಇಕೆ ಪ್ರತ್ಯಯವನ್ನು ಸೇರಿಸಿದಾಗ ಕ್ರಿಯಾಪದದೊಂದಿಗೆ ಬರುವ ಸಮಯ ವನ್ನು ಸೂಚಿಸುವ ಪ್ರತ್ಯಯ ಮತ್ತು ಘಟಕವನ್ನು ಸೂಚಿಸುವ ಪ್ರತ್ಯಯ - ಇವೆರಡೂ ಬಿದ್ದು ಹೋಗುತ್ತವೆ. ಆದರೆ ಉದು ಪ್ರತ್ಯಯವನ್ನು ಸೇರಿಸಿದಾಗ ಘಟಕವನ್ನು ಸೂಚಿಸುವ ಪ್ರತ್ಯಯ ಬಿದ್ದು ಹೋಗುವುದಾದರೂ ಸಮಯವನ್ನು ಸೂಚಿಸುವ ಪ್ರತ್ಯಯ ಹಾಗೆಯೇ ಉಳಿದುಕೊಳ್ಳುತ್ತದೆ. ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (34ಕ) ಅವನು ಕುಣಿಯುವುದು ಚನ್ನಾಗಿದೆ. (34ಖ) ಅವನು ಕುಣಿದುದು ಚನ್ನಾಗಿತ್ತು. (34ಗ) ಅವನ ಕುಣಿಯುವಿಕೆ ಚನ್ನಾಗಿದೆ/ಚನ್ನಾಗಿತ್ತು. ಉದು ಪ್ರತ್ಯಯದೊಂದಿಗೆ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಉವ್ ಪ್ರತ್ಯಯವನ್ನೂ ಮತ್ತು ಹಿಂದಿನ ಸಮಯವನ್ನು ಸೂಚಿಸುವುದಕ್ಕಾಗಿ ದ್ ಪ್ರತ್ಯಯವನ್ನೂ (ಅದರ ಡ್, ಟ್, ಕ್, ಇದ್ ಮೊದಲಾದ ಬೇರೆ ಬೇರೆ ರೂಪಗಳಲ್ಲಿ) ಬಳಸಲು ಸಾಧ್ಯ ಎಂಬುದನ್ನು (34ಕ-ಖ)ದಲ್ಲಿ ಕಾಣಬಹುದು.
ಆದರೆ ಇಕೆ ಪ್ರತ್ಯಯದೊಂದಿಗೆ ಈ ಎರಡು ಸಮಯವನ್ನು ಸೂಚಿಸುವ ಪ್ರತ್ಯಯಗಳಲ್ಲಿ ಯಾವುದನ್ನೂ ಬಳಸಲು ಸಾಧ್ಯವಾಗದೆಂಬುದನ್ನು ಹಿಂದಿನ ಸಮಯದ ಮತ್ತು ಮುಂದಿನ ಸಮಯದ ಘಟನೆಗಳೆರಡನ್ನೂ ಸೂಚಿಸಬಲ್ಲ ಕುಣಿಯುವಿಕೆ ಪದದ ಬಳಕೆಯಲ್ಲಿ (34ಗದಲ್ಲಿ) ಕಾಣಬಹುದು. ಇಲ್ಲಿ ಇಕೆ ಪ್ರತ್ಯಯವನ್ನು ನೇರವಾಗಿ ಕ್ರಿಯಾಪದಕ್ಕೇನೇ ಸೇರಿಸಲಾಗಿದೆ. ಉದು ಪ್ರತ್ಯಯದೊಂದಿಗೆ ಘಟನೆಯನ್ನು ಅಲ್ಲಗಳೆಯುವುದಕ್ಕಾಗಿ ಅದ್ ಪ್ರತ್ಯಯವನ್ನು ಬಳಸಲು ಸಾಧ್ಯವಿದೆ. ಆದರೆ ಆ ಪ್ರತ್ಯಯಕ್ಕೆ ಇಲ್ಲಿ ಹಿಂದಿನ ಘಟನೆಯನ್ನು ಅಲ್ಲಗಳೆಯುವ ಅರ್ಥವಿದೆಯಲ್ಲದೆ ಮುಂದಿನ ಘಟನೆಯನ್ನು ಅಲ್ಲಗಳೆಯುವ ಅರ್ಥವಿಲ್ಲ. ಈ ಎರಡನೆಯ ಅರ್ಥವನ್ನು ಸೂಚಿಸುವುದಕ್ಕಾಗಿ ವಾಕ್ಯದ ಮುಖ್ಯ ಕ್ರಿಯಾಪದದೊಂದಿಗೆ ಇರು ಕ್ರಿಯಾಪದದ ರೂಪಗಳನ್ನು ಬಳಸುವ ಅವಶ್ಯಕತೆಯಿದೆ.
(35ಕ) ಅವಳು ನಿನ್ನೆ ಹಾಡದುದನ್ನು ಯಾರೂ ಗಮನಿಸಿರಲಿಲ್ಲ. (35ಖ) ಅವಳು ನಾಳೆ ಹಾಡದಿರುವುದಕ್ಕೆ ನೀವೇ ಕಾರಣ. (35ಕ)ದಲ್ಲಿ ಅಲ್ಲಗಳೆಯುವ ಅದ್ ಪ್ರತ್ಯಯ ಉದು ಪ್ರತ್ಯಯದೊಂದಿಗೆ ಹಾಡದುದನ್ನು ಎಂಬ ನಾಮಪದರೂಪದಲ್ಲಿ ಬಂದಿರುವುದನ್ನು ಕಾಣಬಹುದು. ಆದರೆ ಈ ರೂಪಕ್ಕೆ ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುವ ಅರ್ಥ ಮಾತ್ರವೇ ಇದೆ. ಮುಂದಿನ ಘಟನೆಯೊಂದನ್ನು ಅಲ್ಲಗಳೆಯುವುದಕ್ಕಾಗಿ (35ಖ) ದಲ್ಲಿ ಅದ್ ಪ್ರತ್ಯಯದೊಂದಿಗೆ ಇರು ಕ್ರಿಯಾಪದದ ಇರುವುದು ಎಂಬ ರೂಪವನ್ನು (ಹಾಡದಿರುವುದಕ್ಕೆ ಎಂಬುದರಲ್ಲಿ) ಬಳಸಬೇಕಾಗಿದೆ.
5.6 ಕೂಡುಪದಗಳು
ಒಂದು ವಾಕ್ಯದ ಕ್ರಿಯಾಪದವನ್ನು ಅದರ ‘ಜೋಡಿಸುವ’ ರೂಪಕ್ಕೆ ಬದಲಾ ಯಿಸುವುದರ ಮೂಲಕ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಿ ಹೇಳಲು ಸಾಧ್ಯ ಎಂಬುದನ್ನು ನಾವು ಮೇಲೆ (5.4.1-3)ರಲ್ಲಿ ನೋಡಿರುವೆವು. ಇಂತಹ ವಾಕ್ಯಗಳಲ್ಲಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಜೋಡಿಸುವ ಕ್ರಿಯಾರೂಪಗಳು ಬಳಕೆಯಾಗುತ್ತವೆ. (36ಕ) ರಾಜು ಮಂಗಳೂರಿಗೆ ಹೋಗಿ ಒಂದು ಪುಸ್ತಕ ತಂದಿದ್ದ. (36ಖ) ರಾಜು ಒಂದು ಪುಸ್ತಕ ತರಲು ಮಂಗಳೂರಿಗೆ ಹೋಗಿದ್ದ. (36ಗ) ರಾಜು ಮಂಗಳೂರಿಗೆ ಹೋಗುತ್ತಾ ಒಂದು ಪುಸ್ತಕ ಮುಗಿಸಿದ. ಮೇಲಿನ ಮೂರು ವಾಕ್ಯಗಳಲ್ಲೂ ಎರಡೆರಡು ವಾಕ್ಯಗಳನ್ನು ಜೋಡಿಸಲಾಗಿದ್ದು, ಅದಕ್ಕಾಗಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಹೋಗಿ, ಹೋಗಲು ಮತ್ತು ಹೋಗುತ್ತಾ ಎಂಬ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಕನ್ನಡದಲ್ಲಿ ಈ ಜೋಡಿಸುವ ವಿಧಾನದ ಮೂಲಕ ಎರಡು ವಾಕ್ಯಗಳನ್ನು ಮಾತ್ರವಲ್ಲದೆ ಎರಡು ಕ್ರಿಯಾಪದಗಳನ್ನೂ ಒಟ್ಟಿಗೆ ಜೋಡಿಸಿ ಹೇಳಲು ಸಾಧ್ಯವಿದೆ, ಮತ್ತು ಇದರ ಮೂಲಕ ‘ಕೂಡುಪದ’ಗಳೆಂಬ ಕೆಲವು ವಿಶಿಷ್ಟವಾದ ಕ್ರಿಯಾರೂಪಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (37ಕ) ಕಪ್ಪುನಾಯಿ ಆ ಹುಡುಗನನ್ನು ಕಚ್ಚಿಬಿಟ್ಟಿತು. (37ಖ) ಪ್ರಕಾಶ ಚೆನ್ನೈಗೆ ಹೋಗಿದ್ದಾನೆ. (37ಗ) ಅವರು ಮಗಳ ಮನೆಗೆ ಹೋಗುತ್ತಿದ್ದಾರೆ. (37ಘ) ಇವತ್ತು ಮಳೆ ಬರಲಾರದು. (37ಕ)ದಲ್ಲಿ ಕಚ್ಚು ಕ್ರಿಯಾಪದದ ಜೋಡಿಸುವ ರೂಪದೊಂದಿಗೆ ಬಿಡು ಕ್ರಿಯಾಪದವನ್ನು ಸೇರಿಸಿ ಹೇಳಲಾಗಿದೆ. ಆದರೆ ಇಲ್ಲಿ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಮಾತ್ರ ಸ್ವಲ್ಪ ಕಷ್ಟ. ಯಾಕೆಂದರೆ, (37ಕ) ವಾಕ್ಯವನ್ನು ಕೆಳಗಿನ ಎರಡು ವಾಕ್ಯಗಳ ಜೋಡಣೆಯಿಂದ ಸಾಧಿಸಲು ಸಾಧ್ಯವಾಗದು. (38ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿತು. (38ಖ) ಕಪ್ಪು ನಾಯಿ ಆ ಹುಡುಗನನ್ನು ಬಿಟ್ಟಿತು. ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಇತರ (37ಖ-ಘ) ವಾಕ್ಯಗಳಲ್ಲೂ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಕಷ್ಟ. ಈ ವಾಕ್ಯಗಳೆಲ್ಲ ಚಾರಿತ್ರಿಕವಾಗಿ ಜೋಡಿಸಿರುವ ವಾಕ್ಯಗಳೇ. ಆದರೆ ರೂಢಿಯಲ್ಲಿ ಈ ಜೋಡಣೆಗಳಿಗೆ ಕೆಲವು ಹೆಚ್ಚಿನ ಅರ್ಥಗಳು ಬಂದಿದ್ದು, ಅದರಿಂದಾಗಿ ಈ ವಾಕ್ಯಗಳ ಎರಡನೆಯ ಕ್ರಿಯಾಪದಗಳು ಅವುಗಳ ಮೂಲಾರ್ಥ ವನ್ನು ಬಹಳ ಮಟ್ಟಿಗೆ ಕಳೆದುಕೊಂಡಿವೆ. ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದನ್ನೇನಾದರೂ ಹೇಳುವ ಅರ್ಥ ಮಾತ್ರವೇ ಅವಕ್ಕಿದ್ದು, ಅದಕ್ಕಿಂತ ಭಿನ್ನವಾದ ಬೇರೊಂದು ಘಟನೆಯನ್ನು ಸೂಚಿಸುವ ಅರ್ಥ ಅವಕ್ಕಿಲ್ಲ. ಹಾಗಾಗಿ, ಇಂತಹ ವಾಕ್ಯಗಳಲ್ಲಿ ಎರಡು ವಾಕ್ಯಗಳು ಜೋಡಿಕೊಂಡಿವೆ ಯೆಂದು ಹೇಳುವ ಬದಲು, ಎರಡು ಕ್ರಿಯಾಪದಗಳನ್ನು ಒಟ್ಟಿಗೆ ಸೇರಿಸಿ ತಯಾರಿಸಲಾಗಿರುವ ಕೆಲವು ವಿಶಿಷ್ಟವಾದ ಕ್ರಿಯಾಪದಗಳು ಬಂದಿವೆಯೆಂದು ತೋರುತ್ತದೆ. ಉದಾಹರಣೆಗಾಗಿ, ಮೇಲೆ ಹೇಳುವುದೇ ಒಳ್ಳೆಯದೆಂದು ಕೊಟ್ಟಿರುವ (36ಕ-ಘ) ವಾಕ್ಯಗಳಲ್ಲಿ ಕಚ್ಚಿಬಿಡು, ಹೋಗಿರು, ಹೋಗುತ್ತಿರು ಮತ್ತು ಬರಲಾರ್- ಎಂಬ ವಿಶಿಷ್ಟವಾದ ಕ್ರಿಯಾಪದಗಳು ಬಂದಿವೆಯೆಂದು ಹೇಳಬಹುದು. ಕೆಲವು ವಿಷಯಗಳಲ್ಲಿ ಈ ವಿಶಿಷ್ಟವಾದ ಕ್ರಿಯಾಪದಗಳು ನಾಮಪದಗಳ ಬಳಕೆಯಲ್ಲಿ ಕಾಣಿಸುವ ‘ಜೋಡುಪದ’ಗಳನ್ನು ಹೋಲುತ್ತವೆಯೆಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ, ಜೋಡುಪದಗಳ ಹಾಗೆ ಇವುಗಳ ಅರ್ಥ ವನ್ನು ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ನೇರವಾಗಿ ಪಡೆಯಲು ಸಾಧ್ಯವಾಗದು. ಆದರೆ ಮೇಲೆ 4.2.1ರಲ್ಲಿ ಸೂಚಿಸಿದ ಹಾಗೆ ನಾಮಪದಗಳ ಬಳಕೆಯಲ್ಲಿ ಜೋಡುಪದಗಳನ್ನು ರಚಿಸಿಕೊಳ್ಳುವ ವಿಧಾನ ಜಾರಿಗೆ ಬರಲು ಅವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ಬೇರೆ ಬೇರೆ ಕೆಲಸ ಗಳಲ್ಲಿ ತೊಡಗಿಸಬೇಕಾಗುತ್ತದೆಯೆಂಬುದೇ ಮುಖ್ಯ ಕಾರಣ. ಆದರೆ, ಕ್ರಿಯಾಪದ ಗಳ ಬಳಕೆಯಲ್ಲಿ ಈ ಎರಡು ರೀತಿಯ ಕೆಲಸಗಳು ಬರುವುದಿಲ್ಲ. ಅವುಗಳ ಬಳಕೆಯಲ್ಲಿ ಕಾಣಿಸುವ ಮೇಲೆ ವಿವರಿಸಿದಂತಹ ವಿಶಿಷ್ಟ ರೂಪಗಳಿಗೆ ಬೇರೆಯೇ ಕಾರಣಗಳಿದ್ದು, ಅವುಗಳಿಂದಾಗಿ ಈ ರೂಪಗಳು ಹಲವು ವಿಷಯಗಳಲ್ಲಿ
ಜೋಡುಪದಗಳಿಗಿಂತ ಭಿನ್ನವಾಗಿವೆ. ಉದಾಹರಣೆಗಾಗಿ, ಈ ವಿಶಿಷ್ಟವಾದ ಕ್ರಿಯಾರೂಪಗಳಲ್ಲಿ ಬರುವ ಮೊದಲನೆಯ ಕ್ರಿಯಾಪದದ ಅರ್ಥದಲ್ಲಿ ಯಾವ ಬದಲಾವಣೆಯೂ ಆಗಿರುವು ದಿಲ್ಲ. ಅದು ಇತರ ಬಳಕೆಗಳಲ್ಲಿ ಕಾಣಿಸುವ ಹಾಗೆ ಒಂದು ಘಟನೆಯನ್ನು ಸೂಚಿಸುತ್ತಿರುತ್ತದೆ. ಎರಡನೆಯ ಕ್ರಿಯಾಪದ ಮಾತ್ರ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದೇನನ್ನಾದರೂ ತಿಳಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಜೋಡುಪದದ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಅಂಗವಾಗಿ ಬರುವ ಎರಡು ನಾಮಪದಗಳೂ ತಮ್ಮ ಮೂಲಾರ್ಥವನ್ನು ಕಳೆದುಕೊಳ್ಳ ಬಲ್ಲುವು (4.3.1 ನೋಡಿ). ಇದಲ್ಲದೆ ಜೋಡುಪದಗಳನ್ನು ತಯಾರಿಸಿ ಬಳಸುವ ಕೆಲಸ ಭಾಷೆಯನ್ನು ಬಳಸುವ ಜನರ ಹತೋಟಿಯಲ್ಲಿರುತ್ತದೆ. ಇದಕ್ಕೆ ಬದಲು, ಮೇಲೆ ವಿವರಿಸಿದಂತಹ ಕ್ರಿಯಾರೂಪಗಳನ್ನು ಯಾರೂ ಪ್ರಜ್ಞಾ ಪೂವ್ರಕವಾಗಿ ತಯಾರಿಸಿ ಬಳಸುವ ಹಾಗೆ ಕಾಣಿಸುವುದಿಲ್ಲ. ಜೋಡುಪದಗಳಿಗೂ ಮತ್ತು ಈ ವಿಶಿಷ್ಟವಾದ ಕ್ರಿಯಾರೂಪಗಳಿಗೂ ನಡುವೆ ಇಂತಹ ಹಲವು ವ್ಯತ್ಯಾಸಗಳಿರುವ ಕಾರಣ, ಈ ಕ್ರಿಯಾರೂಪಗಳಿಗೆ ಬೇರೆಯೇ ಒಂದು ಹೆಸರನ್ನು ಕೊಡುವ ಅವಶ್ಯಕತೆಯಿದೆ. ಇದಕ್ಕಾಗಿ ಇವನ್ನು ಜೋಡುಪದ ಗಳೆಂದು ಕರೆಯುವ ಬದಲು ‘ಕೂಡುಪದ’ ಎಂದು ಕರೆಯಬಹುದು (ಜಾಸ್ತಿ ವಿವರಗಳಿಗೆ ಭಟ್ 2002:179 ನೋಡಿ).
5.6.1 ಸಮಯದ ಸೂಚನೆ
ಒಂದು ಘಟನೆಯ ಸಮಯವನ್ನು ಮೂರು ಬೇರೆ ಬೇರೆ ದೃಷ್ಟಿಕೋನಗಳ ಮೂಲಕ ಸೂಚಿಸಲು ಸಾಧ್ಯವಿದೆ ಎಂಬುದನ್ನು ನಾವು ಮುಂದೆ ಹನ್ನೊಂದನೆಂಯ ಅಧ್ಯಾಯದಲ್ಲಿ ನೋಡಲಿರುವೆವು (11.5). ಈ ಮೂರು ದೃಷ್ಟಿಕೋನಗಳನ್ನು ಸಮಯ ಸಂಬಂಧ, ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆ ಎಂಬುದಾಗಿ ಹೆಸರಿಸಬಹುದು. ಹೆಚ್ಚಿನ ಭಾಷೆಗಳೂ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಜಾಸ್ತಿ ಪ್ರಾಮುಖ್ಯತೆಯನ್ನು ಕೊಡುತ್ತವೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಘಟನೆಯ ಸಮಯಕ್ಕೂ ಮತ್ತು ಅದನ್ನು ವರದಿಮಾಡುತ್ತಿರುವ ಆಡುಗನ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಅದರ ಕ್ರಿಯಾರೂಪಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ಕಾರಣಕ್ಕಾಗಿ, ಕನ್ನಡದ ಕ್ರಿಯಾರೂಪಗಳಲ್ಲಿ ಸಮಯ ಪ್ರತ್ಯಯಗಳನ್ನು ಪ್ರಾಮುಖ್ಯವಾಗಿ ಈ ಸಮಯ ಸಂಬಂಧವನ್ನು ಸೂಚಿಸುವುದಕ್ಕಾಗಿಯೇ ಬಳಸಲಾಗುತ್ತದೆ. ಘಟನೆಗಳ ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆಗಳನ್ನು ಕನ್ನಡದ ಕ್ರಿಯಾರೂಪಗಳ ಮೂಲಕ ನೇರವಾಗಿ ಸೂಚಿಸಲು ಸಾಧ್ಯವಾಗದು. ಆದರೆ ಮೇಲೆ ವಿವರಿಸಿದಂತಹ ಕೂಡುಪದಗಳೆಂಬ ವಿಶಿಷ್ಟವಾದ ರಚನೆಗಳ ಮೂಲಕ ಕನ್ನಡದಲ್ಲಿ ಘಟನೆಯ ಸಮಯವನ್ನು ಈ ಎರಡು ದೃಷ್ಟಿಕೋನಗಳ ಮೂಲಕ ವರದಿ ಮಾಡಲು ಸಾಧ್ಯವಿದೆ. ಉದಾಹರಣೆಗಾಗಿ, ಕ್ರಿಯಾಪದಗಳ ಜೋಡಿಸುವ ರೂಪಗಳೊಂದಿಗೆ ಬಿಡು, ಆಡು, ಬಹುದು, ಇರು ಮೊದಲಾದ ಕ್ರಿಯಾಪದಗಳ ಪೂರ್ಣರೂಪಗಳನ್ನು ಸೇರಿಸಿ ರಚಿಸಿದ ಕೂಡುಪದಗಳ ಮೂಲಕ ಘಟನೆಯ ಆಂತರಿಕ ಕಾಲವ್ಯವಸ್ಥೆ ಮತ್ತು ಯಥಾರ್ಥತೆಗಳನ್ನು ಸೂಚಿಸಲು ಸಾಧ್ಯವಿದೆ.
(39ಕ) ಹುಡುಗ ಮಂಚದಿಂದ ಕೆಳಗೆ ಬಿದ್ದ. (39ಖ) ಹುಡುಗ ಮಂಚದಿಂದ ಕೆಳಗೆ ಬಿದ್ದುಬಿಟ್ಟ. (39ಗ) ಹುಡುಗ ಮಂಚದಿಂದ ಕೆಳಗೆ ಬೀಳಬಹುದು.
(39ಖ)ದಲ್ಲಿ ಬೀಳು ಕ್ರಿಯಾಪದದ ಸಾಮಾನ್ಯ ರೂಪಕ್ಕೆ ಬದಲಾಗಿ ಅದನ್ನು ಬಿಡು ಕ್ರಿಯಾಪದದೊಂದಿಗೆ ಸೇರಿಸಿ ತಯಾರಿಸಿದ ಬಿದ್ದುಬಿಡು ಎಂಬ ಕೂಡು ಪದವನ್ನು ಬಳಸಲಾಗಿದೆ. ಬೀಳು ಕ್ರಿಯಾಪದದ ಈ ಎರಡು ಬಳಕೆಗಳ ನಡುವೆ ಘಟನೆಯ ಆಂತರಿಕ ಕಾಲವ್ಯವಸ್ಥೆಯ ಮಟ್ಟಿಗೆ ವ್ಯತ್ಯಾಸವಿದೆಯೆಂದು ಹೇಳ ಬಹುದು. ಬಿದ್ದುಬಿಟ್ಟ ಎಂಬ ಕೂಡುಪದಕ್ಕೆ ಬೀಳುವ ಘಟನೆ ನಡೆದು ಮುಗಿಯಿತು ಎಂಬುದಾಗಿ ಪೂರ್ಣಾರ್ಥವನ್ನು ಕೊಡುವ ಹೆಚ್ಚಿನ ಅರ್ಥವಿದೆ. ಇದೇ ರೀತಿಯಲ್ಲಿ (39ಗ)ದಲ್ಲಿ ಬಂದಿರುವ ಬೀಳಬಹುದು ಎಂಬ ಕೂಡುಪದಕ್ಕೆ ಬೀಳುತ್ತಾನೆ ಎಂಬ ಸಾಮಾನ್ಯ ರೂಪಕ್ಕಿಂತ ಭಿನ್ನವಾದ ಅರ್ಥವಿದೆ. ಇದು ಘಟನೆಯ ಯಥಾರ್ಥತೆಗೆ ಸಂಬಂಧಿಸಿದುದು. ಬೀಳುತ್ತಾನೆ ಎಂಬುದರ ಬಳಕೆಯಲ್ಲಿ ಘಟನೆ ನಡೆಯುವ ವಿಷಯದಲ್ಲಿ ನಿಶ್ಚಿತತೆಯಿದೆ, ಆದರೆ ಬೀಳಬಹುದು ಎಂಬುದರ ಬಳಕೆಯಲ್ಲಿ ಅಂತಹ ನಿಶ್ಚಿತತೆಯಿಲ್ಲ.
ಸಾಮಾನ್ಯವಾಗಿ ಇಂತಹ ಸಮಯದ ಜೋಡಿಸುವ ರೂಪವನ್ನು ಬಳಸಿದೆಯಾದಲ್ಲಿ ಅವು ಘಟನೆಯ ಆಂತರಿಕ ಕಾಲ ವ್ಯವಸ್ಥೆಯನ್ನೂ ಮತ್ತು ಮುಂದಿನ ಸಮಯದ ಜೋಡಿಸುವ ರೂಪವನ್ನು ಬಳಸಿದೆಯಾದಲ್ಲಿ ಅವು ಘಟನೆಯ ಯಥಾರ್ಥತೆಯನ್ನೂ ಸೂಚಿಸುತ್ತವೆ. ಕೂಡುಪದಗಳಲ್ಲಿ ಹಿಂದಿನ
5.6.2 ಇರು ಕ್ರಿಯಾಪದದ ಬಳಕೆ
ಇಂತಹ ಕೂಡುಪದಗಳಲ್ಲಿ ಇರು ಕ್ರಿಯಾಪದವನ್ನು ಮೊದಲು, ಅನಂತರ ಮತ್ತು ಒಂದೇ ಸಮಯದಲ್ಲಿ ಎಂಬುದಾಗಿ ಮೂರು ರೀತಿಯ ಜೋಡಿಸುವ ರೂಪ ಗಳೊಂದಿಗೂ ಬಳಸಲು ಸಾಧ್ಯವಿದೆ.
(40ಕ) ರಾಜು ಚೆನ್ನೈಗೆ ಹೋಗಿದ್ದಾನೆ. (40ಖ) ರಾಜು ಚೆನ್ನೈಗೆ ಹೋಗಲಿದ್ದಾನೆ. (40ಗ) ರಾಜು ಚೆನ್ನೈಗೆ ಹೋಗುತ್ತಿದ್ದಾನೆ. (40ಕ) ವಾಕ್ಯದಲ್ಲಿ ಮೊದಲಿನ ಘಟನೆಯನ್ನು ಸೂಚಿಸುವ ಹೋಗಿ ಎಂಬ ಕ್ರಿಯಾರೂಪದೊಂದಿಗೆ ಇರು ಕ್ರಿಯಾಪದದ ಈಗಿನ ರೂಪ (ಇದ್ದಾನೆ) ಬಂದಿದೆ. ಇದಕ್ಕೆ ಹೋಗುವ ಘಟನೆ ಪೂರ್ಣಗೊಂಡಿದೆಯಾದರೂ ಅದರ ಪ್ರಭಾವ ಪೂತ್ರಿ ಅಳಿದಿಲ್ಲ ಎಂಬ ಘಟನೆಯ ಕಾಲವ್ಯವಸ್ಥೆಗೆ ಸಂಬಂಧಿಸಿದ ಅರ್ಥವಿದೆ.
ಈ ವಾಕ್ಯದಲ್ಲೇ ಇರು ಕ್ರಿಯಾಪದದ ಹಿಂದಿನ ರೂಪವನ್ನು ಬಳಸಿದಲ್ಲಿ ಆ ಘಟನೆ ಪೂತ್ರಿಯಾಗಿರುವುದು ಮಾತ್ರವಲ್ಲದೆ ಅದರ ಪ್ರಭಾವವೂ ಅಳಿದಿದೆ ಎಂಬ ಅರ್ಥ ಬರುತ್ತದೆ. (40ಘ) ರಾಜು ಚೆನ್ನೈಗೆ ಹೋಗಿದ್ದ. ರಾಜು ಚೆನ್ನೈಯಿಂದ ಮರಳಿ ಬಂದಿಲ್ಲ ಎಂಬ ಅರ್ಥ (40ಕ) ವಾಕ್ಯಕ್ಕಿದೆ, ಆದರೆ (40ಘ) ವಾಕ್ಯಕ್ಕಿಲ್ಲ ಎಂಬುದನ್ನು ಗಮನಿಸಬಹುದು.
ಇದೇ ರೀತಿಯಲ್ಲಿ ಇರು ಕ್ರಿಯಾಪದದ ಮುಂದಿನ ರೂಪವನ್ನು ಬಳಸಿ ಮೇಲಿನ ಕೂಡುಪದವನ್ನು ತಯಾರಿಸಿದಲ್ಲಿ ಅದಕ್ಕೆ ಮುಂದಿನ ಒಂದು ಸಮಯದಲ್ಲಿ ಘಟನೆಯ ಪ್ರಭಾವ ಉಳಿದಿರುತ್ತದೆ ಎಂಬ ಅರ್ಥ ಬರುತ್ತದೆ. (40ಙ) ನೀವು ಬರುವಷ್ಟರಲ್ಲಿ ರಾಜು ಚೆನ್ನೈಗೆ ಹೋಗಿರುತ್ತಾನೆ. ಹೋಗಲಿದ್ದಾನೆ ಎಂಬ ಕೂಡುಪದಕ್ಕೆ ಮುಂದೆ ನಡೆಯಲಿರುವ ಒಂದು ಘಟನೆಯನ್ನು ಸೂಚಿಸುವ ಅರ್ಥವಿದೆಯಾದರೆ, ಹೋಗಲಿದ್ದ ಎಂಬುದಕ್ಕೆ ಮುಂದೆ ನಡೆಯಬೇಕಿದ್ದ (ಆದರೆ ನಿಜಕ್ಕೂ ನಡೆಯದಿರುವ) ಘಟನೆಯನ್ನು ಸೂಚಿಸುವ (ಯಥಾರ್ಥತೆಗೆ ಸಂಬಂಧಿಸಿದ) ಅರ್ಥವಿದೆ. ಹೋಗುತ್ತಿದ್ದಾನೆ ಎಂಬುದಕ್ಕೆ ಮಾತನಾಡುವ ಸಮಯದಲ್ಲಿ ನಡೆಯುತ್ತಾ ಇರುವ ಕ್ಷಣಿಕವಲ್ಲದ ಘಟನೆಯೊಂದನ್ನು ಸೂಚಿಸುವ ಅರ್ಥವಿದೆ. ಘಟನೆ ಕ್ಷಣಿಕವಲ್ಲ ಎಂಬ ಅರ್ಥ ಅದರ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿದುದು. ಈ ವಾಕ್ಯದಲ್ಲೂ ಇರು ಕ್ರಿಯಾಪದದ ಹಿಂದಿನ ರೂಪವನ್ನು ಬಳಸಿ ರಚಿಸಿದ ಹೋಗುತ್ತಿದ್ದ ಎಂಬ ರೂಪವನ್ನು ಬಳಸಿದಲ್ಲಿ, ಕ್ಷಣಿಕವಲ್ಲದ ಹೋಗುವ ಘಟನೆ ಮಾತಿನ ಸಮಯಕ್ಕಿಂತ ಹಿಂದೆ ನಡೆದುದೆಂಬ ಆರ್ಥ ಬರುತ್ತದೆ, ಮತ್ತು ಅದೇ ಕ್ರಿಯಾಪದದ ಮುಂದಿನ ರೂಪವನ್ನು ಬಳಸಿ ರಚಿಸಿದ ಹೋಗುತ್ತಿರು ತ್ತೇನೆ ಎಂಬುದನ್ನು ಬಳಸಿದಲ್ಲಿ ಅಂತಹ ಘಟನೆ ಮಾತಿನ ಸಮಯದ ಅನಂತರ ನಡೆಯುವುದೆಂಬ ಅರ್ಥ ಬರುತ್ತದೆ. ಇಂತಹ ಮೂರು ರೀತಿಯ ಕೂಡುಪದಗಳಲ್ಲೂ ಇರು ಕ್ರಿಯಾಪದ ಹಿಂದಿನ, ಮುಂದಿನ ಮತ್ತು ಈಗಿನ ಸಮಯಗಳನ್ನು ಸೂಚಿಸುತ್ತಿರಲು ಸಾಧ್ಯವಿದೆಯಾದ ಕಾರಣ, ಸಮಯದ ಮಟ್ಟಿಗೆ ಒಟ್ಟು ಒಂಬತ್ತು ಕ್ರಿಯಾರೂಪಗಳು ಇಂತಹ ಕೂಡುಪದದ ಮೂಲಕ ಸಿದ್ಧವಾಗುತ್ತವೆ. ಜೋಡಿಸುವ ರೂಪ ಹಿಂದಿನ ಸಮಯ
ಮೊದಲಿನದು ಮಾಡಿದ್ದ
ಅನಂತರದ್ದು ಮಾಡಲಿದ್ದ ಒಂದೇ ಸಮಯದ್ದು ಮಾಡುತ್ತಿದ್ದ ಮುಂದಿನ ಸಮಯ ಈಗಿನ ಸಮಯ ಮಾಡಿರುತ್ತಾನೆ ಮಾಡಿದ್ದಾನೆ ಮಾಡಲಿರುತ್ತಾನೆ ಮಾಡಲಿದ್ದಾನೆ ಮಾಡುತ್ತಿರುತ್ತಾನೆ ಮಾಡುತ್ತಿದ್ದಾನೆ
5.6.3 ಕೊಳ್ಳು ಪದದ ಬಳಕೆ
ಮೊದಲಿನ ಸಮಯದ ಜೋಡಿಸುವ ರೂಪದೊಂದಿಗೆ ಕೊಳ್ಳು ಪದದ ಬೇರೆ ಬೇರೆ ಕ್ರಿಯಾರೂಪಗಳನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಕೊಳ್ಳು ಪದಕ್ಕೆ ಸ್ವತಂತ್ರವಾದ ಬಳಕೆಯಿಲ್ಲ. ಚಾರಿತ್ರಿಕವಾಗಿ ಇದಕ್ಕೆ ಪಡೆ ಇಲ್ಲವೇ ತೆಗೆದುಕೊಳ್ಳು ಎಂಬ ಅರ್ಥವಿದೆ. ಇದರ ಮೂಲಕ ತಯಾರಾಗುವ ಕೂಡುಪದಕ್ಕೆ ಒಂದು ಘಟನೆ ತಾನಾಗಿ ನಡೆದಿದೆ ಇಲ್ಲವೇ ಒಬ್ಬ ವ್ಯಕ್ತಿ ಅದನ್ನು ತನ್ನ ಹಿತಕ್ಕಾಗಿ ನಡೆಸಿದ್ದಾನೆ ಎಂಬ ಅರ್ಥವಿದೆ. (41ಕ) ರಾಜು ಮೂರು ಪುಟ ಬರೆದ. (41ಖ) ರಾಜು ಮೂರು ಪುಟ ಬರೆದುಕೊಂಡ. (41ಕ)ದ ಪ್ರಕಾರ ರಾಜು ಮೂರು ಪುಟ ಬರೆದಿರುವುದು ತನ್ನ ಹಿತಕ್ಕಾಗಿಯೂ ಇರಬಹುದು ಇಲ್ಲವೇ ಬೇರೊಬ್ಬನ ಹಿತಕ್ಕಾಗಿಯೂ ಇರಬಹುದು; ಆದರೆ (41ಖ)ದ ಪ್ರಕಾರ ಆತ ತನ್ನ ಹಿತಕ್ಕಾಗಿ ಮಾತ್ರವೇ ಮೂರು ಪುಟ ಬರೆದಿದ್ದಾನೆ. ಆತ ಬೇರೆಯವರ ಹಿತಕ್ಕಾಗಿ ಬರೆದಿದ್ದಾನೆ ಎಂಬ ವಿಷಯವನ್ನು ಸ್ಪಷ್ಟಪಡಿಸ ಬೇಕಿದ್ದಲ್ಲಿ ಇಂತಹ ವಾಕ್ಯಗಳಲ್ಲಿ ಕೊಡು ಕ್ರಿಯಾಪದವನ್ನು ಬಳಸಿರುವ ಕೂಡು ಪದವನ್ನು ಕೆಳಗೆ (41ಗ)ದಲ್ಲಿ ಕಾಣಿಸಿದಂತೆ ಬಳಸಬೇಕಾಗುತ್ತದೆ. (41ಗ) ರಾಜು ಮೂರು ಪುಟ ಬರೆದುಕೊಟ್ಟಿದ್ದಾನೆ. ಒಂದು ಘಟನೆ ತಾನಾಗಿ ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಈ ಕೂಡುಪದವನ್ನು ಬಳಸುವುದು ಸಾಧ್ಯ ಎಂಬುದಕ್ಕೆ ಕೆಳಗೆ ಕೊಟ್ಟಿರುವ (42ಕ- ಖ) ವಾಕ್ಯಗಳು ಉದಾಹರಣೆಗಳಾಗಬಲ್ಲುವು. (42ಕ) ಬಾಗಿಲು ತೆರೆಯಿತು. (42ಖ) ಬಾಗಿಲು ತೆರೆದುಕೊಂಡಿದೆ. (42ಕ)ದ ಪ್ರಕಾರ ಬಾಗಿಲು ತೆರೆಯಲು ಅದನ್ನು ಯಾರಾದರೂ ತೆರೆದಿರುವುದು ಕಾರಣವಾಗಿರಬಹುದು, ಆದರೆ (42ಖ)ದ ಪ್ರಕಾರ ಅದು ತಾನಾಗಿ (ಇಲ್ಲವೇ ಗಾಳಿಗೆ) ತೆರೆದುಕೊಂಡಿದೆ (ಜಾಸ್ತಿ ವಿವರಗಳಿಗೆ ಭಟ್ 1978, ಶ್ರೀಧರ್ 1990 ನೋಡಿ).
5.7 ಸಾರಾಂಶ
ತಿಳಿಸುವ ವಾಕ್ಯಗಳ ಕೊನೆಯಲ್ಲಿ ಮುಖ್ಯಕ್ರಿಯಾಪದವಾಗಿ ಬರುವ ಕ್ರಿಯಾಪದ ದೊಂದಿಗೆ ಅದು ಸೂಚಿಸುವ ಘಟನೆಯ ಸಮಯವನ್ನು ಮತ್ತು ಅದರಲ್ಲಿ ತೊಡಗಿರುವ ಘಟಕಗಳಲ್ಲೊಂದನ್ನು ಸೂಚಿಸುವುದಕ್ಕಾಗಿ ಎರಡು ಪ್ರತ್ಯಯಗಳು ಬರುತ್ತವೆ. ಈ ಪ್ರತ್ಯಯಗಳಿಗೆ ಬೇರೆ ಬೇರೆ ರೀತಿಯ ಕ್ರಿಯಾಪದಗಳೆದುರು ಬೇರೆ ಬೇರೆ ರೀತಿಯ ರೂಪಗಳಿದ್ದು ಅವು ಎಂತಹವು ಎಂಬುದನ್ನೂ ಮತ್ತು ಈ ಪ್ರತ್ಯಯಗಳೊಂದಿಗೆ ಬಂದಾಗ ಕ್ರಿಯಾಪದಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬುದನ್ನೂ ಮೇಲೆ ವಿವರಿಸಲಾಗಿದೆ. ಇದಲ್ಲದೆ, ವಾಕ್ಯಗಳೆರಡನ್ನು ಜೋಡಿಸಿ ಹೇಳಿದಾಗ ಇಲ್ಲವೇ ಒಂದು ವಾಕ್ಯ ವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಹೇಳಿದಾಗ ಅವುಗಳಲ್ಲಿ ಬರುವ ಕ್ರಿಯಾಪದಗಳ ರೂಪದಲ್ಲಿ ಎಂತಹ ಬದಲಾವಣೆಗಳೆಲ್ಲ ಕಾಣಿಸಿ ಕೊಳ್ಳುತ್ತವೆ ಎಂಬುದನ್ನೂ ಮೇಲೆ ವಿವರಿಸಲಾಗಿದೆ. ಒಂದು ವಾಕ್ಯವನ್ನು ಈ ರೀತಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ತಿಳಿಸುವ ಕೆಲಸದಲ್ಲಿ ಬಳಸುವ ಬದಲು ಅದರ ಮೂಲಕ ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಳ್ಳುವುದಕ್ಕಾಗಿಯೂ ಬಳಸಲು ಸಾಧ್ಯವಿದೆ. ಅಂತಹ ಸಂದಭ್ರಗಳಲ್ಲಿ ಅದರಲ್ಲಿ ಬರುವ ಕ್ರಿಯಾಪದದಲ್ಲಿ ಬೇರೆಯೇ ಕೆಲವು ಬದಲಾ ವಣೆಗಳನ್ನು ನಡೆಸಬೇಕಾಗುತ್ತದೆ. ಈ ಬದಲಾವಣೆಗಳು ಎಂತಹವು ಎಂಬುದನ್ನು ಮುಂದೆ ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗುವುದು.