Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಕನ್ನಡ ವಾಕ್ಯಗಳ ಒಳರಚನೆ
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ
ಪರಿವಿಡಿ
- ಅಧ್ಯಾಯ 1 — ಪೀಠಿಕೆ
- ಅಧ್ಯಾಯ 2 — ಕ್ರಿಯಾವಾಕ್ಯಗಳ ಒಳರಚನೆ
- ಅಧ್ಯಾಯ 3 — ವಿಷಯವಾಕ್ಯಗಳ ಒಳರಚನೆ
- ಅಧ್ಯಾಯ 4 — ನಾಮಪದಗಳ ಕಂತೆಗಳು
- ಅಧ್ಯಾಯ 5 — ಕ್ರಿಯಾಪದಗಳ ಪದರೂಪಗಳು
- ಅಧ್ಯಾಯ 6 — ಗುಣಪದಗಳ ಬಳಕೆ - 6.2.2 ಜಾಗ, ಸುರು ಮತ್ತು ಕೊನೆ
- ಅಧ್ಯಾಯ 7 — ಒಳವಾಕ್ಯಗಳು
- ಅಧ್ಯಾಯ 8 — ವಾಕ್ಯಗಳ ಜೋಡಣೆ
- ಅಧ್ಯಾಯ 9 — ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು
- ಅಧ್ಯಾಯ 10 — ಮಾತಿನ ಕೆಲಸಗಳು
- ಅಧ್ಯಾಯ 11 — ಕನ್ನಡದ ಕೆಲವು ವೈಶಿಷ್ಟ್ಯಗಳು
- 11.1 ಪೀಠಿಕೆ
- 11.2 ಮುಖ್ಯ ಪದವಗ್ರಗಳು
- 11.3 ಮುಖ್ಯವಲ್ಲದ ಪದವಗ್ರಗಳು
- 11.4 ಪದಗಳ ಅನುಕ್ರಮ
- 11.5 ವ್ಯಾಕರಣ ಸಂಬಂಧ
- 11.6 ಸಮಯದ ಸೂಚನೆ
- 11.7 ಅಲ್ಲಗಳೆಯುವ ವಾಕ್ಯಗಳು
- 11.8 ಕೇಳ್ವಿಗಳು
-
11.9 ಮುಕ್ತಾಯ
ಕನ್ನಡ ವಾಕ್ಯಗಳ ಒಳರಚನೆ ಡಿ. ಎನ್. ಶಂಕರ ಭಟ್ ಭಾಷಾ ಪ್ರಕಾಶನ, ಆರಗ, ತೀರ್ಥಹಳ್ಳಿ KANNADA VAAKYAGALA OLARACANE (The structure of Kannada sentences) by D.N.Shankara Bhat, Alilabagilu, Araga P.O., Tirthahalli 577 414; phone:
- E-mail: bhatdns@rediffmail.com ಮೊದಲನೆಯ ಅಚ್ಚು : 2004 ಎರಡನೆಯ ಅಚ್ಚು : 2006 ಮೂರನೆಯ ಅಚ್ಚು: 2012 ಬಿ: ಬರಹಗಾರ ಹೊರಪಡಿಕೆ : ಭಾಷಾ ಪ್ರಕಾಶನ, ಆರಗ, ತೀರ್ಥಹಳ್ಳಿ 577 417 ಹಂಚಿಕೆ : ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು 575 001. ಅಚ್ಚು : ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮೈಸೂರು 570 014. ಮುನ್ನುಡಿ ಇಪ್ಪತ್ತಾರು ವಷ್ರಗಳ ಹಿಂದೆ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ ಎಂಬ ಹೆಸರಿನಲ್ಲಿ ನನ್ನದೊಂದು ಪುಸ್ತಕ ಮೈಸೂರಿನ ಗೀತಾ ಬುಕ್ ಹೌಸ್ ಮೂಲಕ ಪ್ರಕಟವಾಗಿತ್ತು. ಅದರಲ್ಲಿ ಕನ್ನಡ ವಾಕ್ಯಗಳ ಒಳರಚನೆಯನ್ನು ಹೊಸ ಭಾಷಾವಿಜ್ಞಾನದ ದೃಷ್ಟಿ ಕೋನದ ಮೂಲಕ ಪರಿಶೀಲಿಸಲು ಪ್ರಯತ್ನಿಸಿದ್ದೆ. ಅದನ್ನೇ ಆಧಾರವಾಗಿರಿಸಿ ಕೊಂಡು ಈಗ ಈ ಹೊಸದೊಂದು ಪುಸ್ತಕವನ್ನು ಬರೆದಿದ್ದೇನೆ. ಈ ಪುಸ್ತಕದಲ್ಲಿ ಅರ್ಥವ್ಯವಸ್ಥೆಗಿಂತಲೂ ಆಂತರಿಕ ರಚನೆಗೇನೇ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಇದಲ್ಲದೆ, ಕಳೆದ ಇಪ್ಪತ್ತೈದು ವಷ್ರಗಳಲ್ಲಿ ನಡೆಸಿದ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಕನ್ನಡ ವಾಕ್ಯಗಳ ಒಳರಚನೆಯ ಕುರಿತು ಹಲವು ಹೊಸ ವಿಷಯಗಳನ್ನು ಕಂಡುಹಿಡಿದಿದ್ದೇನೆ, ಮತ್ತು ನನ್ನಲ್ಲಿದ್ದ ಕೆಲವು ಹಳೆಯ ವಿಚಾರಗಳು ತಪ್ಪೆಂಬುದನ್ನೂ ಕಂಡುಕೊಂಡಿದ್ದೇನೆ. ಇವನ್ನು ಬಳಸಿದುದರಿಂದಾಗಿ ಈ ಪುಸ್ತಕ ಹಳೆಯದ ರಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿರುವುದನ್ನು ಕಾಣಬಹುದು. ಕನ್ನಡದ ಶಾಸ್ತ್ರೀಯ ಬರಹಗಳಲ್ಲೆಲ್ಲ ಅವಶ್ಯವಿರುವಲ್ಲೂ ಇಲ್ಲದಿರು ವಲ್ಲೂ ಹೆಚ್ಚು ಹೆಚ್ಚು ಸಂಸ್ಕೃತ ಪದಗಳನ್ನು ಬಳಸುವುದರಿಂದಾಗಿ ಅವು ಸಾಮಾನ್ಯರ ಕೈಗೆ ಎಟುಕದಂತಾಗುವುದೇ ಜಾಸ್ತಿ. ಕನ್ನಡದ ವ್ಯಾಕರಣ ಪುಸ್ತಕಗಳು ಕಗ್ಗಂಟುಗಳಾಗಲು ಇದೂ ಒಂದು ಕಾರಣ. ಈ ಪುಸ್ತಕವನ್ನು ಬರೆಯುವಾಗ ಆದಷ್ಟು ಮಟ್ಟಿಗೆ ಕನ್ನಡದ ಪದಗಳನ್ನೇ ಬಳಸುವುದರ ಮೂಲಕ ಹೇಳುವ ವಿಷಯ ಸುಲಭದಲ್ಲಿ ಅರ್ಥವಾಗುವ ಹಾಗೆ ಮಾಡಲು ಪ್ರಯತ್ನಿಸಿದ್ದೇನೆ. ಕನ್ನಡದ ಸವ್ರನಾಮಗಳು ಕನ್ನಡ ವಾಕ್ಯಗಳ ಕುರಿತು ಮುಖ್ಯವೆಂದು ತೋರಿದ ಕೆಲವು ವಿಷಯ ಗಳನ್ನಷ್ಟೇ ಈ ಪುಸ್ತಕದಲ್ಲಿ ವಿವರಿಸಲು ಸಾಧ್ಯವಾಗಿದೆ. ಭಾಷೆಯೆಂಬುದು ಒಂದು ಬಹಳ ಜಟಿಲವಾದ ವ್ಯವಸ್ಥೆಯಾಗಿದ್ದು, ಅದರ ರಚನೆಯ ಕುರಿತು ಎಷ್ಟು ಹೇಳಿದರೂ ಮುಗಿಯದಷ್ಟು ವಿಷಯಗಳಿವೆ. ಈ ಪುಸ್ತಕದ ಪ್ರತಿ ಯೊಂದು ಅಧ್ಯಾಯದ ಪ್ರತಿಯೊಂದು ವಿಭಾಗದ ಮೇಲೂ ಇಂತಹ ಪುಸ್ತಕ ಗಳನ್ನು ಬರೆಯಲು ಸಾಧ್ಯವಿದೆ. ಅಂತಹ ಪುಸ್ತಕಗಳನ್ನು ಬರೆದು ಕನ್ನಡ ಭಾಷೆಗೆ ಒಂದು ಪರಿಪೂರ್ಣವಾದ ವ್ಯಾಕರಣವನ್ನು ಸಿದ್ಧಪಡಿಸುವಲ್ಲಿ ಯುವ ವಿದ್ವಾಂಸರಿಗೆ ಈ ಪುಸ್ತಕ ಪೊ್ರೀತ್ಸಾಹ ಕೊಡುವಂತಾಗಲಿ ಎಂಬುದೇ ನನ್ನ ಹಾರೈಕೆ. ಈ ಪುಸ್ತಕದ ಹಸ್ತಪ್ರತಿಯನ್ನೊಮ್ಮೆ ಓದಿ ನೋಡಿ ತಮ್ಮ ಅಮೂಲ್ಯ ವಾದ ಸಲಹೆಗಳನ್ನು ಕೊಟ್ಟ ಗೆಳೆಯ ಸಿ. ಎಸ್. ರಾಮಚಂದ್ರ ಅವರಿಗೂ, ಇದರ ಪ್ರಕಟಣೆಗಾಗಿ ಅನುದಾನ ಕೊಟ್ಟಿರುವ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೂ, ಇದರ ಮುದ್ರಣದಲ್ಲಿ ‘ಬರಹ’ ಎಂಬ ಹೆಸರಿನ ತಂತ್ರಾಂಶವನ್ನು ಉಚಿತವಾಗಿ ಬಳಸಿಕೊಳ್ಳಲು ಒಪ್ಪಿಗೆ ನೀಡಿರುವ ಶೇಶಾದ್ರಿ ವಾಸು ಚಂದ್ರಶೇಖರನ್ ಅವರಿಗೂ, ಇದನ್ನು ಅಂದವಾಗಿ ಮುದ್ರಿಸಿ ಕೊಟ್ಟಿರುವ ಶ್ರೀ ಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ರಾ. ಶ್ರೀ. ಮೋಹನ ಮೂತ್ರಿ ಅವರಿಗೂ ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಜಿ. ಎನ್. ಅಶೋಕವರ್ಧನ ಅವರಿಗೂ ನಾನು ಆಭಾರಿ. ಮೈಸೂರು ಮಾಚ್್ರ 1, 2004 ಡಿ. ಎನ್. ಶಂಕರ ಭಟ್
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11