← Ch 7  ·  Contents  ·  Ch 9 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11

English → | Eke →

ಅಧ್ಯಾಯ ಎಂಟು — ವಾಕ್ಯಗಳ ಜೋಡಣೆ

Eke →

8.1 ಪೀಠಿಕೆ

ಒಂದಕ್ಕೊಂದು ಸಂಬಂಧಿಸಿರುವ ಎರಡು ವಾಕ್ಯಗಳನ್ನು ಒಟ್ಟಿಗೆ ಜೋಡಿಸಿ ಹೇಳಲು ಕನ್ನಡದಲ್ಲಿ ಮೂರು ವಿಧಾನಗಳು ಬಳಕೆಯಲ್ಲಿವೆ.
(1) ಮತ್ತು, ಇಲ್ಲವೇ, ಆದರೆ ಮೊದಲಾದ ಪದಗಳಲ್ಲೊಂದನ್ನು ಬಳಸಿ ಜೋಡಿಸುವುದು, (2) ಊ ಇಲ್ಲವೇ ಓ ಪ್ರತ್ಯಯವನ್ನು ಬಳಸಿ ಜೋಡಿಸುವುದು, ಮತ್ತು (3) ವಾಕ್ಯಗಳ ಕೊನೆಯಲ್ಲಿ ಬಂದಿರುವ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಜೋಡಿಸುವುದು. ಈ ಮೂರು ವಿಧಾನಗಳ ಬಳಕೆಯನ್ನು ಕೆಳಗಿನ ಮೂರು ವಾಕ್ಯಗಳಲ್ಲಿ ಕಾಣ ಬಹುದು. (1ಕ) ದೊಡ್ಡ ಕೋತಿ ಮಂಚದ ಮೇಲೆ ಕುಳಿತಿದೆ ಮತ್ತು ಚಿಕ್ಕ ಕೋತಿ ಬಾಗಿಲಿನ ಬಳಿ ಕುಳಿತಿದೆ. (1ಖ) ದೊಡ್ಡ ಕೋತಿ ಮಂಚದ ಮೇಲೂ ಮತ್ತು ಚಿಕ್ಕ ಕೋತಿ ಬಾಗಿಲಿನ ಬಳಿಯೂ ಕುಳಿತಿವೆ. (1ಗ) ದೊಡ್ಡ ಕೋತಿ ಮಂಚದ ಮೇಲೆ ಕುಳಿತು ಚಿಕ್ಕ ಕೋತಿಯನ್ನು ಅಣಕಿಸುತ್ತಿದೆ. (1ಕ) ವಾಕ್ಯದಲ್ಲಿ ಮತ್ತು ಪದವನ್ನು ಬಳಸುವುದರ ಮೂಲಕ ಎರಡು ವಾಕ್ಯ ಗಳನ್ನು ಜೋಡಿಸಲಾಗಿದೆ. ಇವೇ ಎರಡು ವಾಕ್ಯಗಳನ್ನು (1ಖ)ದಲ್ಲಿ ಊ ಪ್ರತ್ಯಯವನ್ನು ಬಳಸುವುದರ ಮೂಲಕ ಜೋಡಿಸಲಾಗಿದೆ. (1ಗ)ದಲ್ಲಿ ಇವಕ್ಕಿಂತ ಸ್ವಲ್ಪ ಭಿನ್ನವಾಗಿರುವ ವಾಕ್ಯಗಳೆರಡನ್ನು ಅವುಗಳಲ್ಲಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಅದರ ‘ಜೋಡಿಸುವ ರೂಪ’ಕ್ಕೆ ಬದಲಾಯಿಸಿ ಜೋಡಿಸ ಮತ್ತು ಪದವನ್ನು ಬಳಸದೆ ಎರಡು ವಾಕ್ಯಗಳನ್ನು ಒಂದರ ಅನಂತರ ಒಂದರಂತೆ ಇರಿಸಿ ಹೇಳಿದರೂ ಅದೇ ಅರ್ಥ ಬರಲು ಸಾಧ್ಯವಿದೆ. (2ಕ) ದೊಡ್ಡ ಕೋತಿ ಮಂಚದ ಮೇಲೆ ಕುಳಿತಿದೆ, ಚಿಕ್ಕದು ಬಾಗಿಲಿನ ಬಳಿ ನಿಂತಿದೆ. (2ಖ) ಅವರ ಮಗ ಮುಂಬಯಿಗೆ ಹೋದ, ಮಗಳು ಚೆನ್ನೈಗೆ ಹೋದಳು.

Eke →

8.1.1 ಜೋಡಣೆಯಲ್ಲಿ ವಾಕ್ಯಗಳು ಮತ್ತು ವಾಕ್ಯಾಂಗಗಳು

ಈ ಮೂರು ವಿಧಾನಗಳ ಮೂಲಕ ವಾಕ್ಯಗಳೆರಡನ್ನು ಜೋಡಿಸುವ ಬದಲು ಒಂದು ವಾಕ್ಯದಲ್ಲೇನೇ ಎರಡು ಪದ ಇಲ್ಲವೇ ಪದಕಂತೆಗಳನ್ನು ಜೋಡಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. ರಮೇಶ ಮತ್ತು ಶ್ರೀಪತಿ ಗೆಳೆಯರು. (3ಖ) ನಾಯಿಯೂ ಬೆಕ್ಕೂ ಜಗಳಾಡಿಕೊಳ್ಳುತ್ತಿವೆ. ರಾಜುವಿನ ತಮ್ಮನೂ ಅವನ ಗೆಳೆಯನೂ ಒಂದೇ ದಿವಸ ಮುಂಬಯಿಗೆ ಹೋದರು. (3ಘ) ತನ್ನಲ್ಲಿದ್ದ ಹಣವನ್ನೆಲ್ಲ ಆತ ರಾಜುವಿಗೂ ಮತ್ತು ಹರಿಗೂ ಮೇಲಿನ ವಾಕ್ಯಗಳಲ್ಲಿ ಮತ್ತು ಮತ್ತು ಊ ಎಂಬವುಗಳ ಬಳಕೆಯಾಗಿದೆ ಯಾದರೂ ಅವುಗಳಲ್ಲಿ ಯಾವುದನ್ನೂ ಎರಡು ವಾಕ್ಯಗಳ ಜೋಡಣೆಯಿಂದ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಾಗದು. ಉದಾಹರಣೆಗಾಗಿ, (3ಕ) ವಾಕ್ಯದಲ್ಲಿ ಮತ್ತು ಪದವನ್ನು ಬಳಸಲಾಗಿದೆ. ಆದರೆ, ಆ ವಾಕ್ಯವನ್ನು ರಮೇಶ ಗೆಳೆಯ ಮತ್ತು ಶ್ರೀಪತಿ ಗೆಳೆಯ ಎಂಬ ಎರಡು ವಾಕ್ಯಗಳ ಜೋಡಣೆಯಿಂದ ತಯಾರಿಸಲಾಗಿದೆಯೆಂದು ಹೇಳಿದಲ್ಲಿ, ಅದಕ್ಕಿರುವ ‘ರಮೇಶ ಶ್ರೀಪತಿಯ ಗೆಳೆಯ’ ಎಂಬ ಅರ್ಥವಾಗಲೀ ಇಲ್ಲವೇ ‘ಶ್ರೀಪತಿ ರಮೇಶನ ಗೆಳೆಯ’ ಎಂಬ ಅರ್ಥವಾಗಲೀ ಬರಲಾರದು. ಇತರ ವಾಕ್ಯಗಳಲ್ಲೂ ಹೀಗೆಯೇ. ಎರಡು ನಾಮಪದಗಳನ್ನು ಈ ರೀತಿ ಮತ್ತು ಪದ ಇಲ್ಲವೇ ಊ ಪ್ರತ್ಯಯ ವನ್ನು ಬಳಸದೆಯೂ ಜೋಡಿಸಲು ಸಾಧ್ಯವಿದೆ. ಆದರೆ ಇಂತಹ ಜೋಡಣೆಗೆ ಮೇಲಿನದಕ್ಕಿಂತ ಸ್ವಲ್ಪ ಭಿನ್ನವಾದ ಅರ್ಥವಿದೆ. ಉದಾಹರಣೆಗಾಗಿ, ತಂದೆ ತಾಯಿ, ಅಣ್ಣ ತಮ್ಮ, ಅತ್ತೆ ಸೊಸೆ ಮೊದಲಾದ ನಂಟಸ್ತಿಕೆಯನ್ನು ಸೂಚಿಸುವ ಪದಗಳ ಜೋಡಣೆಯಲ್ಲಿ ಮತ್ತು ಇಲ್ಲವೇ ಊ ಎಂಬವುಗಳ ಬಳಕೆಯಿಲ್ಲ. ಇದೇ ರೀತಿಯಲ್ಲಿ ಎಲೆ ಅಡಿಕೆ, ಮೇಜು ಕುಚ್ರಿ, ಹಾಲು ಮೊಸರು, ಮೊದಲಾದ ಹತ್ತಿರದ ಸಂಬಂಧಗಳನ್ನು ಸೂಚಿಸುವ ಪದಗಳ ಜೋಡಣೆಯಲ್ಲೂ ಅವುಗಳ ಬಳಕೆಯಿಲ್ಲ.
ಕೆಲವು ಸಂದಭ್ರಗಳಲ್ಲಿ ಒಂದು ವಾಕ್ಯವನ್ನು ಎರಡು ವಾಕ್ಯಗಳ ಜೋಡಣೆ ಯಿಂದ ತಯಾರಿಸಲಾಗಿದೆಯೋ ಅಥವಾ ಎರಡು ಪದ ಇಲ್ಲವೇ ಪದಕಂತೆಗಳ ಜೋಡಣೆಯಿಂದ ತಯಾರಿಸಲಾಗಿದೆಯೋ ಎಂಬ ವಿಷಯದಲ್ಲಿ ಸಂಶಯ ವುಂಟಾಗಲು ಸಾಧ್ಯವಿದೆ. ಇದಲ್ಲದೆ, ಒಂದೇ ವಾಕ್ಯಕ್ಕೆ ಈ ಎರಡು ರೀತಿಯ ಜೋಡಣೆಗಳೂ ಕಾರಣವಾಗಿರಲು ಸಾಧ್ಯವಿದ್ದು ಅದರಿಂದಾಗಿ ಆ ವಾಕ್ಯಕ್ಕೆ ಎರಡು ರೀತಿಯ ಅರ್ಥಗಳು ಬರಲೂ ಸಾಧ್ಯವಿದೆ. (4ಕ) ಬರಹಗಾರರು ಮತ್ತು ಕಾಣಲು ಹೋಗಿದ್ದಾರೆ. ಪ್ರಕಾಶಕರು ಮುಖ್ಯಮಂತ್ರಿಯನ್ನು (4ಖ) ಬರಹಗಾರರು ಮುಖ್ಯಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಗ) ಪ್ರಕಾಶಕರು ಮುಖ್ಯ ಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಘ) ಬರಹಗಾರರು ಮತ್ತು ಪ್ರಕಾಶಕರು ಒಟ್ಟಾಗಿ ಮುಖ್ಯಮಂತ್ರಿಯನ್ನು ಕಾಣಲು ಹೋಗಿದ್ದಾರೆ. (4ಕ) ವಾಕ್ಯವನ್ನು (4ಖ) ಮತ್ತು (4ಗ) ವಾಕ್ಯಗಳ ಜೋಡಣೆಯಿಂದ ತಯಾರಿ ಸಿರಲು ಸಾಧ್ಯವಿದೆಯೇನೋ ನಿಜ. ಆದರೆ, ಅದನ್ನೇ (4ಘ) ವಾಕ್ಯದ ಅರ್ಥ ದಲ್ಲೂ ಬಳಸಿರಲು ಸಾಧ್ಯವಿದೆ, ಮತ್ತು ಈ (4ಘ) ವಾಕ್ಯದ ಅರ್ಥ ಬರ ಬೇಕಿದ್ದಲ್ಲಿ, ಅದನ್ನು ((4ಕ) ವಾಕ್ಯವನ್ನು) ಎರಡು ಪದಗಳ ಜೋಡಣೆಯಿಂದ ಮಾತ್ರವೇ ತಯಾರಿಸಿರಲು ಸಾಧ್ಯ.

Eke →

8.1.2 ಜೋಡಿಸಿದ ವಾಕ್ಯ ಮತ್ತು ಒಳವಾಕ್ಯ

ಒಂದು ವಾಕ್ಯದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲಾಗಿದೆಯೇ ಅಥವಾ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವಾಗಿ ಬಳಸಲಾಗಿದೆಯೇ ಎಂಬ ವಿಷಯದಲ್ಲೂ ಸಂಶಯವುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸಬಹುದು. (5ಕ) ಅವನು ರಾಜುವನ್ನು ಊಟಕ್ಕೆ ಕರೆಯಲು ಬಂದಿದ್ದಾನೆ. (5ಖ) ಅವನಿಗೆ ರಾಜುವನ್ನು ಊಟಕ್ಕೆ ಕರೆಯಲು ಮರೆತಿದೆ. (5ಕ)ದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲಾಗಿದ್ದು, ಅವು ಸೂಚಿಸುವ ಘಟನೆ ಗಳಲ್ಲಿ ಮೊದಲನೆಯದು ಎರಡನೆಯದರ ಅನಂತರ ಜರಗುವುದೆಂಬುದಾಗಿ ಅಲು ಪ್ರತ್ಯಯದ ಮೂಲಕ ಸೂಚಿಸಲಾಗಿದೆ (8.3.2 ನೋಡಿ). ಆದರೆ (5ಖ)ದಲ್ಲಿ ಮೊದಲನೆಯ ವಾಕ್ಯ ಎರಡನೆಯ ವಾಕ್ಯ ಸೂಚಿಸುವ ಘಟನೆಯ ಒಂದು ಘಟಕವಾಗಿ ಬಂದಿದ್ದು, ಅದು ಆ ವಾಕ್ಯದ ಒಳವಾಕ್ಯವಾಗಿದೆ (7.3.3 ನೋಡಿ). ಈ ರೀತಿ ಅಲು ಪ್ರತ್ಯಯದ ಬಳಕೆಯಲ್ಲಿ ಮಾತ್ರವಲ್ಲದೆ, ಕ್ರಿಯಾಪದಗಳ ಇತರ ಜೋಡಣೆಯ ರೂಪಗಳ ಬಳಕೆಯಲ್ಲೂ ಇಂತಹ ಸಂಶಯಗಳು ಬರಲು ಸಾಧ್ಯವಿದೆ. ಒಟ್ಟಿಗೆ ಬಂದಿರುವ ಎರಡು ವಾಕ್ಯಗಳ ನಡುವೆ ಎಂತಹ ಸಂಬಂಧ ವಿದೆ ಎಂಬುದನ್ನು ಪರಿಶೀಲಿಸುವುದರ ಮೂಲಕ ಇಂತಹ ಸಂಶಯಗಳನ್ನು ಹೋಗಲಾಡಿಸಬಹುದು.

Eke →

8.2 ಜೋಡಣೆಯ ನಿಯಮಗಳು

ಮೇಲೆ ವಿವರಿಸಿರುವ ಮೂರು ವಿಧಾನಗಳಲ್ಲಿ ಯಾವುದನ್ನು ಎಲ್ಲಿ ಬಳಸಬಹುದು ಎಂಬ ವಿಷಯದಲ್ಲಿ, ಮತ್ತು ಆ ವಿಧಾನಗಳನ್ನು ಬಳಸಿದಾಗ ವಾಕ್ಯಗಳಲ್ಲಿ ಎಂತಹ ಬದಲಾವಣೆಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬ ವಿಷಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ನಿಯಮಗಳು ಯಾವುವು ಮತ್ತು ಮೇಲಿನ ಮೂರು ವಿಧಾನಗಳ ಬಳಕೆಯಲ್ಲಿ ಅವು ಹೇಗೆ ಕಾಣಿಸಿ ಕೊಳ್ಳುತ್ತವೆ ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ವಿವರಿಸಲಾಗಿದೆ.

Eke →

8.2.1 ಒಂದೇ ಕ್ರಿಯಾಪದದ ಬಳಕೆ

ಪ್ರತ್ಯಯಗಳ ಮೂಲಕ ಕ್ರಿಯಾವಾಕ್ಯಗಳನ್ನು ಜೋಡಿಸಬೇಕಿದ್ದಲ್ಲಿ, ಅವುಗಳಲ್ಲಿ ಬರುವ ಕ್ರಿಯಾಪದ ಒಂದೇ ಆಗಿರಬೇಕೆಂಬ ನಿಯಮವಿದೆ. ಆದರೆ ಪದ ಇಲ್ಲವೇ ಕ್ರಿಯಾರೂಪಗಳ ಮೂಲಕ ಜೋಡಿಸಬೇಕಿದ್ದಲ್ಲಿ, ಈ ಕ್ರಿಯಾಪದಗಳು ಬೇರೆ ಬೇರಾಗಿದ್ದರೂ ತೊಂದರೆಯಿಲ್ಲ.
ಪ್ರತ್ಯಯಗಳ ಬಳಕೆಯಲ್ಲಿ ಈ ನಿಯಮ ಕಾಣಿಸಿಕೊಳ್ಳಲು ಮುಖ್ಯ ಕಾರಣ ವೇನೆಂದರೆ, ಅವುಗಳ ಮೂಲಕ ವಾಕ್ಯಗಳೆರಡನ್ನು ಜೋಡಿಸುವಾಗ ಅವುಗಳ ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಜೋಡಣೆಯ ಹೊರಗೆ ಇರಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎರಡು ವಾಕ್ಯಗಳಲ್ಲೂ ಒಂದೇ ಕ್ರಿಯಾಪದ ಬಂದಿರುವುದು ಅವಶ್ಯ. ಎರಡನೆಯ ವಿಧಾನಕ್ಕೂ ಮತ್ತು ಉಳಿದ ಎರಡು ವಿಧಾನಗಳಿಗೂ ನಡು ವಿರುವ ಈ ವ್ಯತ್ಯಾಸವನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ. (6ಖ) ರಾಜು ನಾಡಿದು ಮುಂಬಯಿಗೆ ಹೋಗುತ್ತಾನೆ. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ನಾಡಿದು ಮುಂಬಯಿಗೆ ಹೋಗುತ್ತಾನೆ. (7ಖ) ರಾಜು ನಾಳೆ ಡೆಲ್ಲಿಗೂ ಮತ್ತು ನಾಡಿದು ಮುಂಬಯಿಗೂ ಹೋಗುತ್ತಾನೆ. (7ಕ)ದಲ್ಲಿ ಮತ್ತು ಪದದ ಮೂಲಕ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಮತ್ತು ಪದವನ್ನು ಮೊದಲನೆಯ ವಾಕ್ಯಕ್ಕೆ ಸೇರಿಸಲಾಗಿದೆ. ರಾಜು ಪದ ಈ ಎರಡು ವಾಕ್ಯಗಳಲ್ಲೂ ಬಂದಿದ್ದು, ಅದು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿದೆಯಾದ ಕಾರಣ ಅದನ್ನು ಎರಡನೆಯ ವಾಕ್ಯದಿಂದ ತೆಗೆದುಹಾಕಲಾಗಿದೆ. ಆದರೆ ಹೋಗುತ್ತಾನೆ ಕ್ರಿಯಾಪದವನ್ನು ಎರಡರಲ್ಲೂ ಬೇರೆ ಬೇರಾಗಿ ಉಳಿಸಿಕೊಳ್ಳಲಾಗಿದೆ.
(7ಖ)ದಲ್ಲಿ ಊ ಪ್ರತ್ಯಯದ ಮೂಲಕ ಇವೇ ಎರಡು ವಾಕ್ಯಗಳನ್ನು (ಎಂದರೆ (6ಕ) ಮತ್ತು (6ಖ) ವಾಕ್ಯಗಳನ್ನು) ಜೋಡಿಸಲಾಗಿದೆ ಮತ್ತು ಇದಕ್ಕಾಗಿ ಆ ಪ್ರತ್ಯಯವನ್ನು ಬೇರೆ ಬೇರಾಗಿ ಆ ಎರಡು ವಾಕ್ಯಗಳಿಗೂ ಸೇರಿಸ ಲಾಗಿದೆ. ಇದಲ್ಲದೆ, ಈ ಎರಡು ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾ ಪದಗಳನ್ನು ಒಟ್ಟು ಸೇರಿಸಿ ಒಂದಾಗಿ ಮಾಡಿ ಅದನ್ನು ಜೋಡಣೆಯ ಹೊರಗೆ ನಿಲ್ಲಿಸಲಾಗಿದೆ ಮತ್ತು ಅವೆರಡರಲ್ಲೂ ಒಬ್ಬನೇ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಬರುವ ರಾಜು ಪದವನ್ನು ಎರಡನೆಯ ವಾಕ್ಯದಿಂದ ತೆಗೆದುಹಾಕಲಾಗಿದೆ. (6ಕ) ಮತ್ತು (6ಖ) ವಾಕ್ಯಗಳನ್ನು ಈ ರೀತಿ ಜೋಡಿಸುವಾಗ, ಕ್ರಿಯಾಪದ ಗಳೆರಡನ್ನು ಒಟ್ಟು ಸೇರಿಸಲಾಗಿದೆಯಲ್ಲದೆ ರಾಜು ಪದದ ಹಾಗೆ ಅದನ್ನು ಮೊದಲನೆಯ ವಾಕ್ಯದಿಂದ ತೆಗೆದುಹಾಕಿಲ್ಲ ಎಂಬುದನ್ನು ಕೆಳಗಿನ ವಾಕ್ಯಗಳು ಸ್ಪಷ್ಟಪಡಿಸುತ್ತವೆ. ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ಹರಿ ನಾಡಿದು ಮುಂಬಯಿಗೆ ಹೋಗುತ್ತಾನೆ. (8ಖ) ರಾಜು ನಾಳೆ ಡೆಲ್ಲಿಗೂ ಹರಿ ನಾಡಿದು ಮುಂಬಯಿಗೂ ಹೋಗು (8ಖ)ದಲ್ಲಿ ಹೋಗುತ್ತಾನೆ ಎಂಬ ಕ್ರಿಯಾರೂಪದ ಬದಲು ಹೋಗುತ್ತಾರೆ ಎಂಬುದನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು. ಇದು ಎರಡು ವಾಕ್ಯ ಗಳಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಿದುದರಿಂದಾದ ರೂಪ. ಮತ್ತು ಪದದ ಬಳಕೆಯಲ್ಲೂ ಈ ರೀತಿ ಎರಡು ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಹೇಳಲು ಸಾಧ್ಯವಿದೆ ಎಂಬುದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು. ರಾಜು ನಾಳೆ ಡೆಲ್ಲಿಗೆ ಮತ್ತು ಹರಿ ನಾಡಿದು ಮುಂಬಯಿಗೆ ಹೋಗುತ್ತಾರೆ. ಸಾಮಾನ್ಯವಾಗಿ, ಜೋಡಿಸಬೇಕಾಗಿರುವ ಎರಡು ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳನ್ನು ಈ ರೀತಿ ಒಟ್ಟಿಗೆ ಜೋಡಿಸದೆ ಊ ಪ್ರತ್ಯಯವನ್ನು ಬಳಸಲು ಸಾಧ್ಯವಾಗದು. ಆದರೆ ಕೆಳಗಿನ ವಾಕ್ಯ ಈ ನಿಯಮಕ್ಕೆ ಅಪವಾದವಾಗಿ ಕಾಣಿಸುತ್ತದೆ. ರಾಜು ಮದುವೆಗೂ ಹೋಗಿದ್ದಾನೆ, ಅಲ್ಲಿ ಊಟವನ್ನೂ ಮಾಡಿ ದ್ದಾನೆ. (9ಖ) ಇಲ್ಲಿ ಮಳೆಯೂ ಬರುತ್ತಾ ಇದೆ, ಅದರೊಂದಿಗೆ ಬಿಸಿಲೂ ಕಾಯುತ್ತಾ ಇದೆ. ಆದರೆ ಇಂತಹ ಬಳಕೆಗಳಲ್ಲಿ ಎರಡು ವಾಕ್ಯಗಳನ್ನು ಸುಮ್ಮಗೆ ಜೋಡಿಸಿರುವ ಬದಲು ಘಟನೆ ಇಲ್ಲವೇ ಸಂಗತಿಗಳೆರಡು ಅನಿರೀಕ್ಷಿತವಾದ ರೀತಿಯಲ್ಲಿ ಸೇರಿ ಕೊಂಡಿವೆ ಎಂಬುದನ್ನು ಸೂಚಿಸಲಾಗಿದೆ. ಊ ಪ್ರತ್ಯಯದ ಹಾಗೆ ಓ ಪ್ರತ್ಯಯವನ್ನು ಬಳಸುವುದಿದ್ದರೂ ಸಾಮಾನ್ಯ ವಾಗಿ ಜೋಡಿಸಬೇಕಾಗಿರುವ ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದ ಗಳೆರಡೂ ಒಂದೇ ಆಗಿರಬೇಕು ಮತ್ತು ಅವನ್ನು ಒಟ್ಟಿಗೆ ಜೋಡಿಸಿದ ಮೇಲೆ ಜೋಡಣೆಯ ಹೊರಗಿರಿಸಿ ಹೇಳಬೇಕು ಎಂಬ ನಿಯಮವಿದೆ. (8ಘ) ರಾಜು ನಾಳೆ ಡೆಲ್ಲಿಗೋ ನಾಡಿದ್ದು ಮುಂಬಯಿಗೋ ಹೋಗು ತ್ತಾನೆ. ಮೂರನೆಯ ವಿಧಾನದ ಮೂಲಕ ಮೇಲೆ ಕೊಟ್ಟಿರುವ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸುವುದು ಹೇಗೆಂಬುದನ್ನು ಕೆಳಗಿನ ಉದಾಹರಣೆ ಯಲ್ಲಿ ನೋಡಬಹುದು. (8ಙ) ರಾಜು ನಾಳೆ ಡೆಲ್ಲಿಗೆ ಹೋಗಿ ನಾಡಿದು ಮುಂಬಯಿಗೆ ಹೋಗು ತ್ತಾನೆ. (8ಙ) ವಾಕ್ಯದಲ್ಲಿ ಮೂರನೆಯ ವಿಧಾನವನ್ನು ಬಳಸುವುದರ ಮೂಲಕ (6ಕ) ಮತ್ತು (6ಖ) ವಾಕ್ಯಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ (6ಕ) ವಾಕ್ಯದ ಕೊನೆಯಲ್ಲಿ ಬಂದಿರುವ ಹೋಗುತ್ತಾನೆ ಕ್ರಿಯಾಪದವನ್ನು ಹೋಗಿ ಎಂಬುದಾಗಿ ಅದರ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಇದಲ್ಲದೆ, ಒಬ್ಬನೇ ವ್ಯಕ್ತಿಯನ್ನು ಸೂಚಿಸುವ ರಾಜು ಪದವನ್ನು ಎರಡನೆಯ ವಾಕ್ಯದಿಂದ ತೆಗೆದು ಹಾಕಲಾಗಿದೆ. ಪದಗಳ ಮತ್ತು ಕ್ರಿಯಾರೂಪಗಳ ಬಳಕೆಯಲ್ಲಿ (ಎಂದರೆ ಮೊದಲನೇ ಮತ್ತು ಮೂರನೇ ವಿಧಾನಗಳ ಬಳಕೆಯಲ್ಲಿ) ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳನ್ನು ಒಟ್ಟು ಸೇರಿಸಬೇಕಾಗುವುದಿಲ್ಲವಾದ ಕಾರಣ, ಅವು ಆ ವಾಕ್ಯಗಳಲ್ಲಿ ಒಂದೇ ಆಗಿರಬೇಕಾಗಿಲ್ಲ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. (10ಕ) ರಾಜು ನಾಳೆ ಡೆಲ್ಲಿಗೆ ಹೋಗುತ್ತಾನೆ ಮತ್ತು ಅಲ್ಲೊಂದು ಕೆಲಸಕ್ಕೆ ಸೇರುತ್ತಾನೆ. ನಾಳೆ ಡೆಲ್ಲಿಗೆ ಹೋಗಿ ಅಲ್ಲೊಂದು ಕೆಲಸಕ್ಕೆ ಸೇರುತ್ತಾನೆ,

Eke →

8.2.2 ಜೋಡಿಸುವ ಪದ ಇಲ್ಲವೇ ಪ್ರತ್ಯಯಗಳ ಜಾಗ

ಎರಡನೆಯ ವಿಧಾನಕ್ಕೂ ಮತ್ತು ಉಳಿದ ವಿಧಾನಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವನ್ನೂ ನಾವು ಮೇಲೆಯೇ ನೋಡಿರುವೆವು. ಎರಡನೆಯ ವಿಧಾನದಲ್ಲಿ ಬಳಕೆಯಾಗುವ ಊ, ಓ ಮೊದಲಾದ ಪ್ರತ್ಯಯಗಳನ್ನು ಎರಡು ವಾಕ್ಯಗಳಿಗೂ ಸೇರಿಸಬೇಕಾಗುತ್ತದೆ, ಆದರೆ ಮೊದಲನೆಯ ವಿಧಾನದಲ್ಲಿ ಬಳಕೆಯಾಗುವ ಮತ್ತು, ಇಲ್ಲವೇ ಮೊದಲಾದ ಪದಗಳನ್ನು ಒಂದು ಬಾರಿ ಮಾತ್ರ, ಎರಡು ವಾಕ್ಯಗಳ ನಡುವಿನಲ್ಲಿ ಇರಿಸಿದರೆ ಸಾಕು.
ಮೂರನೆಯ ವಿಧಾನದಲ್ಲಿ ಬಳಕೆಯಾಗುವ ‘ಜೋಡಿಸುವ’ ಕ್ರಿಯಾರೂಪ ವನ್ನೂ ಇದೇ ರೀತಿಯಲ್ಲಿ ಒಂದು ಬಾರಿ ಮಾತ್ರ (ಮೊದಲನೆಯ ವಾಕ್ಯದ ಕೊನೆಯಲ್ಲಿ ಮಾತ್ರ) ಬಳಸಿದರೆ ಸಾಕು. (11ಕ) ಅವಳು ಶಾಲೆಗೆ ಹೋಗಿದ್ದಳು ಮತ್ತು ನಾನು ಪೇಟೆಗೆ ಹೋಗಿದ್ದೆ. (11ಖ) ಅವಳು ಶಾಲೆಗೂ ನಾನು ಪೇಟೆಗೂ ಹೋಗಿದ್ದೆವು. (11ಗ) ಅವಳು ಶಾಲೆಗೆ ಹೋಗಿ (ಅಲ್ಲಿಂದ) ಪೇಟೆಗೆ ಹೋಗಿದ್ದಳು. (11ಕ)ದಲ್ಲಿ ಮತ್ತು ಪದನ್ನು ಒಂದು ಬಾರಿ ಮಾತ್ರ ಬಳಸಲಾಗಿದೆ, ಮತ್ತು ಇದೇ ರೀತಿಯಲ್ಲಿ (11ಗ)ದಲ್ಲಿ ಹೋಗಿ ಎಂಬ ಜೋಡಿಸುವ ಕ್ರಿಯಾರೂಪ ವನ್ನು ಮೊದಲನೆಯ ವಾಕ್ಯದಲ್ಲಿ ಮಾತ್ರ ಬಳಸಲಾಗಿದೆ. ಆದರೆ, (11ಖ)ದಲ್ಲಿ ಊ ಪ್ರತ್ಯಯವನ್ನು ಎರಡು ಬಾರಿ, ಜೋಡಿಸಲಾಗಿರುವ ಎರಡು ವಾಕ್ಯಗ ಳೊಂದಿಗೂ ಸೇರಿಸಿ ಬಳಸಲಾಗಿದೆ. ಎರಡಕ್ಕಿಂತ ಜಾಸ್ತಿ ವಾಕ್ಯಗಳನ್ನು ಜೋಡಿಸುವುದಿದ್ದಲ್ಲಿ, ಮತ್ತು ಪದವನ್ನು ಕೊನೆಯ ವಾಕ್ಯದ ಮೊದಲಿಗೊಮ್ಮೆ ಬಳಸಿದರೆ ಸಾಕು, ಆದರೆ ಜೋಡಿಸುವ ಕ್ರಿಯಾರೂಪವನ್ನು ಕೊನೆಯ ವಾಕ್ಯವೊಂದನ್ನು ಬಿಟ್ಟು ಉಳಿದ ಎಲ್ಲಾ ವಾಕ್ಯಗ ಳೊಂದಿಗೂ ಬಳಸಬೇಕಾಗುತ್ತದೆ. ಊ ಪ್ರತ್ಯಯವನ್ನು ಕೊನೆಯ ವಾಕ್ಯವೂ ಸೇರಿ ದಂತೆ ಪ್ರತಿಯೊಂದು ವಾಕ್ಯದೊಂದಿಗೂ ಬಳಸಬೇಕಾಗುತ್ತದೆ. (12ಕ) ರಾಜು ಮನೆಗೆ ಹೋದ, ಸ್ನಾನ ಮಾಡಿದ, ಮತ್ತು ತರಕಾರಿ ಹಚ್ಚಲು ಸುರುಮಾಡಿದ. (12ಖ) ರಾಜು ಮನೆಗೆ ಹೋಗಿ, ಸ್ನಾನ ಮಾಡಿ, ತರಕಾರಿ ಹಚ್ಚಲು ಸುರು ಮಾಡಿದ. (12ಗ) ರಾಜು ಪುಣೆಗೂ, ಶಶಿ ಮುಂಬಯಿಗೂ, ಸತೀಶ ಬೆಂಗಳೂರಿಗೂ ಹೋಗಿದ್ದಾರೆ. ಜೋಡಿಸುವ (12ಕ)ದಲ್ಲಿ ಮತ್ತು ಪದವನ್ನು ಮೊದಲನೆಯ ವಾಕ್ಯದೊಂದಿಗೆ ಸೇರಿಸಿಲ್ಲ, ಮೊದಲನೇ ವಾಕ್ಯದಲ್ಲೂ ಬಳಸಬೇಕಾಗಿದೆ; ಕೊನೆಯ ವಾಕ್ಯದಲ್ಲಿ ಮಾತ್ರ ಅದನ್ನು ಬಳಸಿಲ್ಲ. (12ಗ)ದಲ್ಲಿ ಊ ಪ್ರತ್ಯಯವನ್ನು ಮೂರು ವಾಕ್ಯಗಳಲ್ಲೂ ಬಳಸಲಾಗಿದೆ. ವಾಕ್ಯಗಳ ಜೋಡಣೆಯಲ್ಲಿ ಮೊದಲನೆಯ ಎರಡು ವಿಧಾನಗಳನ್ನು ಒಟ್ಟಾಗಿ ಬಳಸಲೂ ಸಾಧ್ಯವಿದೆಯೆಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. ಕ್ರಿಯಾರೂಪವನ್ನು (13ಕ) ಅವಳು ಶಾಲೆಗೂ ಮತ್ತು ನಾನು ಪೇಟೆಗೂ ಹೋಗಿದ್ದೆವು. (13ಖ) ರಾಜು ಶಾಲೆಗೋ ಅಥವಾ ಪೇಟೆಗೋ ಹೋಗಿರಬೇಕು. ಎರಡಕ್ಕಿಂತ ಹೆಚ್ಚು ವಾಕ್ಯಗಳನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಲಾಗಿದೆಯಾದರೆ, ಅಂತಹ ಸಂದಭ್ರಗಳಲ್ಲಿ ಮೂರನೆಯ ವಿಧಾನ ದೊಂದಿಗೆ ಮೊದಲನೆಯ ವಿಧಾನವನ್ನು ಬಳಸಲು ಸಾಧ್ಯವಿದೆ. (13ಗ) ರಾಜು ಬೆಲ್ಲ ತಿಂದು ಮತ್ತು ನೀರು ಕುಡಿದು ಹೊಟ್ಟೆ ತುಂಬಿಸಿ (13ಘ) ಈ ಕೆಲಸವನ್ನು ನೀವು ಇಲ್ಲೇ ಕುಳಿತು ಅಥವಾ ಮನೆಗೆ ಹೋಗಿ ಮಾಡಬಹುದು.

Eke →

8.2.3 ಜೋಡಿಸುವ ಕ್ರಿಯಾರೂಪದ ಬಳಕೆ

ಜೋಡಿಸುವ ಕ್ರಿಯಾರೂಪವನ್ನು ಬಳಸುವ ಮೂರನೆಯ ವಿಧಾನ ಇತರ ಎರಡು ವಿಧಾನಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಪ್ರತಿಯೊಂದು ಕ್ರಿಯಾ ಪದಕ್ಕೂ ನಾಲ್ಕು ಜೋಡಿಸುವ ಕ್ರಿಯಾರೂಪಗಳಿದ್ದು ಇವನ್ನು ಬೇರೆ ಬೇರೆ ಸಂದಭ್ರಗಳಲ್ಲಿ ಬಳಸಬೇಕಾಗುತ್ತದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು. (14ಕ) ಅವನು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ. (14ಖ) ಅವನು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ. (14ಗ) ಅವನು ಊಟ ಮಾಡಲು ನಮ್ಮಲ್ಲಿಗೆ ಬಂದ. (14ಘ) ಅವನು ಊಟ ಮಾಡದೆ ನಮ್ಮಲ್ಲಿಗೆ ಬಂದ. ಮಾಡು ಕ್ರಿಯಾಪದಕ್ಕೆ ಮಾಡುತ್ತಾ, ಮಾಡಿ, ಮಾಡಲು ಮತ್ತು ಮಾಡದೆ ಎಂಬುದಾಗಿ ನಾಲ್ಕು ಕ್ರಿಯಾರೂಪಗಳಿದ್ದು, ಅವುಗಳ ಬಳಕೆ ಹೇಗೆ ಎಂಬುದನ್ನು (14ಕ-ಘ) ವಾಕ್ಯಗಳಲ್ಲಿ ತೋರಿಸಲಾಗಿದೆ.
ಎರಡು ಘಟನೆಗಳು ಒಂದೇ ಸಮಯದಲ್ಲಿ ಜರಗುತ್ತಿವೆ ಎಂಬುದನ್ನು ಸೂಚಿಸುವುದಕ್ಕಾಗಿ (14ಕ)ದಲ್ಲಿ ಮಾಡುತ್ತಾ ಎಂಬ ಜೋಡಿಸುವ ರೂಪವನ್ನು ಬಳಸಲಾಗಿದೆ. ಇದಕ್ಕೆ ಬದಲು, (14ಖ)ದಲ್ಲಿ ಮೊದಲನೇ ಘಟನೆ ಎರಡನೇ ಘಟನೆಗಿಂತ ಮೊದಲೇ ನಡೆಯುವುದೆಂಬುದನ್ನು ಸೂಚಿಸಲು ಮಾಡಿ ಎಂಬ ರೂಪವನ್ನು ಬಳಸಲಾಗಿದೆ.
ಮೊದಲನೇ ಘಟನೆ ಎರಡನೇ ಘಟನೆಯ ಅನಂತರ ನಡೆಯುವುದೆಂಬು ದನ್ನು ಸೂಚಿಸಲು (14ಗ)ದಲ್ಲಿ ಮಾಡಲು ಎಂಬುದನ್ನು ಬಳಸಲಾಗಿದೆ ಮತ್ತು ಎರಡನೇ ಘಟನೆ ನಡೆಯುವ ಸಮಯದಲ್ಲಿ ಮೊದಲನೇ ಘಟನೆ ನಡೆದಿರ ಲಿಲ್ಲವೆಂಬುದನ್ನು ಸೂಚಿಸಲು (14ಘ)ದಲ್ಲಿ ಮಾಡದೆ ಎಂಬುದನ್ನು ಬಳಸ ಈ ರೀತಿ, ಜೋಡಿಸುವ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳು ಸಮಯದ ಮಟ್ಟಿಗೆ ಆ ಕ್ರಿಯಾಪದಗಳು ತಿಳಿಸುವ ಘಟನೆಗಳ ನಡುವಿರುವ ಸಂಬಂಧವೇನು ಎಂಬುದನ್ನು ಸೂಚಿಸುತ್ತವೆ (5.4.2 ನೋಡಿ). ಇದು ಮತ್ತು ಪದದ ಬಳಕೆಗಿಂತ ಭಿನ್ನವಾಗಿದೆ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟ ಪಡಿಸುತ್ತವೆ. (15ಕ) ರಾಜು ಮನೆಗೆ ಬಂದ ಮತ್ತು ಸ್ನಾನ ಮಾಡಿದ. (15ಖ) ರಾಜು ಮನೆಗೆ ಬಂದು ಸ್ನಾನ ಮಾಡಿದ. (16ಕ) ರಾಜು ಮನೆಗೆ ಬರುತ್ತಾನೆ ಮತ್ತು ಸ್ನಾನ ಮಾಡುತ್ತಾನೆ. (16ಖ) ರಾಜು ಮನೆಗೆ ಬಂದು ಸ್ನಾನ ಮಾಡುತ್ತಾನೆ. (15ಕ) ವಾಕ್ಯದಲ್ಲಿ ಬಂದ ಮತ್ತು ಮಾಡಿದ ಎಂಬ ಎರಡು ಕ್ರಿಯಾಪದಗಳೂ ಆ ವಾಕ್ಯವನ್ನಾಡಿರುವ ಸಮಯಕ್ಕೆ ಸಂಬಂಧಿಸಿದಂತೆ ಘಟನೆಯ ಸಮಯವನ್ನು ಸೂಚಿಸುತ್ತವೆ. ಆದರೆ, (15ಖ) ವಾಕ್ಯದಲ್ಲಿ ಮಾಡಿದ ಎಂಬ ಎರಡನೆಯ ಕ್ರಿಯಾರೂಪ ಮಾತ್ರ ಆ ವಾಕ್ಯವನ್ನಾಡಿರುವ ಸಮಯಕ್ಕೆ ಸಂಬಂಧಿಸಿದಂತೆ ಘಟನೆಯ ಸಮಯವನ್ನು ಸೂಚಿಸುತ್ತದೆ; ಬಂದು ಎಂಬ ಇನ್ನೊಂದು ಕ್ರಿಯಾ ರೂಪ ಎರಡನೇ ಘಟನೆಯ ಸಮಯಕ್ಕೆ ಸಂಬಂಧಿಸಿದಂತೆ ಮೊದಲನೇ ಘಟನೆಯ ಸಮಯವನ್ನು ಸೂಚಿಸುತ್ತದೆ. ಈ ವ್ಯತ್ಯಾಸ (16ಕ-ಖ) ವಾಕ್ಯಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಘಟನೆಗಳೆರಡೂ ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಅನಂತರ ನಡೆಯು ವಂತಹವುಗಳು. ಇದನ್ನು ಸೂಚಿಸುವುದಕ್ಕಾಗಿ (16ಕ)ದಲ್ಲಿ ಬರುತ್ತಾನೆ ಮತ್ತು ಮಾಡುತ್ತಾನೆ ಎಂಬುದಾಗಿ ಎರಡು ಕ್ರಿಯಾರೂಪಗಳೂ ಮುಂದಿನ ಸಮಯ ವನ್ನು ಸೂಚಿಸುತ್ತಿವೆ. ಸಾಮಾನ್ಯವಾಗಿ ಈ ರೀತಿ ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಿರುವ ವಾಕ್ಯಗಳಲ್ಲೆಲ್ಲ ಮೊದಲು ತಿಳಿಸಿರುವ ಘಟನೆ ಮೊದಲು ನಡೆಯುವಂತಹದು ಎಂಬ ಅರ್ಥ ಧ್ವನಿತವಾಗು ಈ ರೀತಿ (16ಕ)ದಲ್ಲಿ ಧ್ವನಿತವಾಗುವ ಅರ್ಥವನ್ನು (16ಖ)ದಲ್ಲಿ ಬಂದು ಎಂಬ ಜೋಡಿಸುವ ಕ್ರಿಯಾರೂಪದ ಮೂಲಕ ಸ್ಪಷ್ಟವಾಗಿ ಸೂಚಿಸಲಾಗಿದೆ. (16ಕ) ವಾಕ್ಯದ ಹಾಗೆ (16ಖ) ವಾಕ್ಯದಲ್ಲೂ ಮಾತಿನ ಸಮಯದ ಅನಂತರ ನಡೆಯುವ ಎರಡು ಘಟನೆಗಳನ್ನು ತಿಳಿಸಲಾಗಿದೆ. ಆದರೆ ಈ ವಿಷಯವನ್ನು ವಾಕ್ಯದ ಕೊನೆಯಲ್ಲಿ ಬರುವ ಮಾಡುತ್ತಾನೆ ಕ್ರಿಯಾರೂಪ ಮಾತ್ರ ಸೂಚಿಸ ಬಲ್ಲುದು. ಬಂದು ಕ್ರಿಯಾರೂಪಕ್ಕೆ ಘಟನೆಯ ಸಮಯಕ್ಕೂ ಮತ್ತು ಮಾತಿನ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವ ಅರ್ಥವಿಲ್ಲ.
ಘಟನೆಗಳನ್ನು ಸೂಚಿಸುವುದಕ್ಕಾಗಿ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದಗಳಿಗೆಲ್ಲ ಸಮಯವನ್ನು ಸೂಚಿಸುವುದಕ್ಕಾಗಿ ಎರಡು ರೂಪಗಳು ಮಾತ್ರ ಇವೆ ಎಂಬುದನ್ನು ನಾವು ಹಿಂದೆ ಐದನೇ ಅಧ್ಯಾಯದಲ್ಲಿ (5.2ರಲ್ಲಿ) ನೋಡಿರುವೆವು. ಇವು ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲು ಮತ್ತು ಅನಂತರ ನಡೆಯುವ ಘಟನೆಗಳನ್ನು ಸೂಚಿಸುತ್ತವೆ.
ಉದಾಹರಣೆಗಾಗಿ ಹೋಗು ಕ್ರಿಯಾಪದಕ್ಕೆ ಹೋಗುತ್ತಾನೆ ಮತ್ತು ಹೋದ ಎಂಬುದಾಗಿ ಎರಡು ಸಮಯಗಳನ್ನು ಸೂಚಿಸುವ ಕ್ರಿಯಾರೂಪಗಳು ಮಾತ್ರ ಇವೆ (ಕೆಳಗೆ ಕೊಟ್ಟಿರುವ (17ಕ-ಖ) ವಾಕ್ಯಗಳನ್ನು ನೋಡಿ). ಒಂದು ಘಟನೆ ಅದನ್ನು ತಿಳಿಸುವ ವಾಕ್ಯವನ್ನಾಡಿರುವ ಸಮಯದಲ್ಲೇನೇ ನಡೆದಿದೆಯೆಂಬುದಾಗಿ ಘಟನೆಯ ‘ಈಗಿನ ಸಮಯ’ವನ್ನು ಸೂಚಿಸುವ ಅವಶ್ಯಕತೆ ಕೆಲವು ಸಂದಭ್ರಗಳಲ್ಲಿ ಬರುವುದಾದರೂ, ಅದಕ್ಕಾಗಿ ಕನ್ನಡದಲ್ಲಿ ಪ್ರತ್ಯೇಕವಾದ ಕ್ರಿಯಾರೂಪವಿಲ್ಲ. ಇಂತಹ ಘಟನೆಗಳು ಹೆಚ್ಚು ಹೊತ್ತು (ಎಂದರೆ ಅಂತಹ ವರ್ಣನೆಯನ್ನು ತಯಾರಿಸಿಕೊಳ್ಳಲು ಬೇಕಾಗುವಷ್ಟು ಹೊತ್ತಾದರೂ) ನಡೆದಿರ ಬೇಕಾಗುತ್ತದೆ. ಹಾಗಾಗಿ, ಅವನ್ನು ವರ್ಣಿಸುವುದಕ್ಕಾಗಿ ಕ್ರಿಯಾಪದಗಳ ಜೋಡಿಸುವ ರೂಪದೊಂದಿಗೆ ಇರು ಕ್ರಿಯಾಪದದ ಈಗಿನ ಸಮಯದ ರೂಪವನ್ನು ಬಳಸಬೇಕಾಗುತ್ತದೆ ((17ಗ) ನೋಡಿ). (17ಕ) ರಾಜು ಮನೆಗೆ ಹೋಗುತ್ತಾನೆ. (17ಖ) ರಾಜು ಮನೆಗೆ ಹೋದ. (17ಗ) ರಾಜು ಮನೆಗೆ ಹೋಗುತ್ತಾ ಇದ್ದಾನೆ. ಆದರೆ, ಈ ಕ್ರಿಯಾಪದಗಳ ಜೋಡಿಸುವ ರೂಪಗಳು ಎರಡರ ಬದಲು ಮೂರು ಸಮಯಗಳನ್ನು ಸೂಚಿಸುವ ಅವಶ್ಯಕತೆಯಿದೆ. ಯಾಕೆಂದರೆ, ಅವು ಎರಡು ಘಟನೆಗಳ ನಡುವೆ ಕಾಣಿಸಬಹುದಾದ ಮೂರು ರೀತಿಯ ಸಂಬಂಧ ಗಳನ್ನು (ಒಂದು ಘಟನೆ ಇನ್ನೊಂದು ಘಟನೆಯ ಮೊದಲು ನಡೆದಿರಬಹುದು, ಅನಂತರ ನಡೆದಿರಬಹುದು ಇಲ್ಲವೇ ಅವೆರಡೂ ಒಂದೇ ಸಮಯದಲ್ಲಿ ನಡೆದಿರಬಹುದು ಎಂಬುದಾಗಿ) ಸೂಚಿಸುವ ಅವಶ್ಯಕತೆಯಿದೆ.
ಈ ಮೂರು ರೀತಿಯ ಸಂಬಂಧಗಳು ಎಲ್ಲಾ ರೀತಿಯ ಘಟನೆಗಳ ನಡುವೆಯೂ ಕಾಣಿಸಿಕೊಳ್ಳಲು ಸಾಧ್ಯವಿದೆಯಾದ ಕಾರಣ, ಎಲ್ಲಾ ಕ್ರಿಯಾಪದ ಗಳಿಗೂ ಮೊದಲಿನ ಸಮಯ, ಅನಂತರದ ಸಮಯ ಮತ್ತು ಒಂದೇ ಸಮಯ ಎಂಬುದಾಗಿ ಮೂರು ವಿಧವಾದ ಸಮಯಗಳನ್ನು ಸೂಚಿಸಬಲ್ಲ ಜೋಡಿಸುವ ರೂಪಗಳಿವೆ.
ಇದಲ್ಲದೆ, ಎಲ್ಲಾ ಕ್ರಿಯಾಪದಗಳಿಗೂ ನಾಲ್ಕನೆಯ ಅಲ್ಲಗಳೆಯುವ ರೂಪ ವೊಂದಿದ್ದು, ಅದು ಸಮಯದ ಮಟ್ಟಿಗೆ ಘಟನೆಗಳ ನಡುವೆ ಸಂಬಂಧ ಇಲ್ಲದಿರುವುದನ್ನು ಸೂಚಿಸುತ್ತದೆ.

Eke →

8.2.4 ಘಟನೆಯ ಹತೋಟಿ

ಎರಡು ಘಟನೆಗಳು ಅವನ್ನು ನಡೆಸುವ ವ್ಯಕ್ತಿಗಳ ಹತೋಟಿಯಲ್ಲಿರುವವು ಗಳಾದರೆ, ಅವನ್ನು ತಿಳಿಸುವ ವಾಕ್ಯಗಳನ್ನು ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಲು ಸಾಧ್ಯವಿದೆ. ಆದರೆ, ಜೋಡಿಸುವ ಕ್ರಿಯಾರೂಪದ ಮೂಲಕ ಇಂತಹ ವಾಕ್ಯಗಳನ್ನು ಜೋಡಿಸಬೇಕಿದ್ದಲ್ಲಿ, ಆ ಘಟನೆಗಳೆರಡನ್ನೂ ಒಬ್ಬನೇ ವ್ಯಕ್ತಿ ನಡೆಸುತ್ತಿರುವುದು ಅವಶ್ಯ.
ಬೇಯಿಸಿದ ಬೇಯಿಸಿದಳು. (18ಖ) ರಾಜು ತರಕಾರಿಯನ್ನೂ ಜಾನಕಿ ಅನ್ನವನ್ನೂ ಬೇಯಿಸಿದರು. (18ಗ) ರಾಜು ತರಕಾರಿಯನ್ನು ಬೇಯಿಸಿ ಸಾಂಬಾರ್ ಮಾಡಿದ. ಮತ್ತು ಜಾನಕಿ ಅನ್ನ (18ಕ-ಖ)ಗಳಲ್ಲಿ ನಡೆಸುವವರ ಹತೋಟಿಯಲ್ಲಿರುವ ಎರಡು ಘಟನೆಗಳನ್ನು, ಅವನ್ನು ಬೇರೆ ಬೇರೆ ವ್ಯಕ್ತಿಗಳು ನಡೆಸುತ್ತಿರುವರಾದರೂ, ಮತ್ತು ಪದ ಮತ್ತು ಊ ಪ್ರತ್ಯಯಗಳ ಮೂಲಕ ಜೋಡಿಸಲು ಸಾಧ್ಯವಾಗಿದೆ; ಆದರೆ, (19ಗ)ದಲ್ಲಿ ಅಂತಹ ಎರಡು ವಾಕ್ಯಗಳನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಬೇಕಾದ ಕಾರಣ, ಅದಕ್ಕಾಗಿ ಆ ಎರಡು ಘಟನೆಗಳನ್ನೂ ಒಬ್ಬನೇ ವ್ಯಕ್ತಿ (ರಾಜು) ಮಾಡಿದ್ದಾನೆಂದು ಹೇಳಬೇಕಾಗಿದೆ. ಎರಡು ವಾಕ್ಯಗಳು ತಿಳಿಸುವ ಘಟನೆಗಳಲ್ಲಿ ಒಂದು (ಇಲ್ಲವೇ ಎರಡೂ) ನಡೆಸುವವನ ಹತೋಟಿಯಲ್ಲಿ ಇಲ್ಲವಾದಲ್ಲಿ ಅವನ್ನು ನಡೆಸುವ ವ್ಯಕ್ತಿಗಳು ಬೇರೆ ಬೇರಾಗಿದ್ದರೂ ಜೋಡಿಸುವ ಕ್ರಿಯಾರೂಪಗಳ ಮೂಲಕ ಅವನ್ನು ಜೋಡಿಸಲು ಸಾಧ್ಯವಿದೆ. (19ಕ) ನಾವು ಇಷ್ಟು ಬೇಗ ಬಂದು ಅವರಿಗೆ ತೊಂದರೆಯಾಯಿತು. (19ಖ) ಜೋರಾಗಿ ಬಂದುವು. (19ಗ) ಮಡಕೆ ಒಡೆದು ರಾಮುವಿನ ಮುಖಕ್ಕೆ ಮೊಸರು ಚಿಮ್ಮಿತು. ಗಾಳಿ ಬೀಸಿ ತರಗೆಲೆಗಳೆಲ್ಲ ಮನೆಯೊಳಗೆ (19ಕ)ದಲ್ಲಿ ಮೊದಲನೆಯ ಘಟನೆ ನಡೆಸುವವರ ಹತೋಟಿಯಲ್ಲಿದೆ, ಆದರೆ ಎರಡನೆಯದು ಹತೋಟಿಯಲ್ಲಿಲ್ಲ; (19ಖ-ಗ)ಗಳಲ್ಲಿ ಎರಡು ಘಟನೆಗಳೂ ಹತೋಟಿಯಲ್ಲಿಲ್ಲದವು; ಈ ಕಾರಣಕ್ಕಾಗಿ ಇವನ್ನು ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಿ ಹೇಳಲು ಸಾಧ್ಯವಾಗಿದೆ. ಇದಲ್ಲದೆ, ಜೋಡಿಸುವ ಕ್ರಿಯಾರೂಪಗಳು ಎರಡು ಘಟನೆಗಳ ನಡುವಿರುವ ಸಂಬಂಧವನ್ನು ಅಲ್ಲಗಳೆಯುತ್ತಿವೆಯಾದರೆ, ಅಂತಹ ಕ್ರಿಯಾರೂಪಗಳ ಮೂಲಕ ಎರಡು ವಾಕ್ಯಗಳನ್ನು, ಅವು ನಡೆಸುವವನ ಹತೋಟಿಯಲ್ಲಿರುವಂತಹ ಘಟನೆ ಯನ್ನು ಸೂಚಿಸುವುದಿದ್ದರೂ, ಜೋಡಿಸಿ ಹೇಳಲು ಸಾಧ್ಯವಿದೆ. ಘಟನೆ ಹತೋಟಿ ಯಲ್ಲಿರುವಂತಹದಾದರೂ ಅದನ್ನೊಬ್ಬ ವ್ಯಕ್ತಿ ನಡೆಸುತ್ತಿಲ್ಲ ಎಂಬುದೇ ಇದಕ್ಕೆ ಕಾರಣವಿರಬಹುದು. (20ಕ) ಅವರು ಊಟಮಾಡದೆ ನಾನು ಊಟಮಾಡುವುದಿಲ್ಲ. (20ಖ) ಅವರು ಆ ಬಾಗಿಲನ್ನು ತೆರೆಯದೆ ನಾನು ನಿಮಗೆ ಪುಸ್ತಕ ಕೊಡುವುದು ಹೇಗೆ? ಆದರೆ ಇಲ್ಲೂ ಎರಡನೆಯ ವಾಕ್ಯ ಅದನ್ನು ನಡೆಸುವವನ ಹತೋಟಿಯಲ್ಲಿರುವ ಘಟನೆಯನ್ನು ಸೂಚಿಸುತ್ತಿದೆಯಾದರೆ, ಅದೊಂದು ಅಲ್ಲಗಳೆಯುವ ವಾಕ್ಯವಾಗಿರ ಬೇಕು (20ಕ) ಇಲ್ಲವೇ ಕೇಳ್ವಿಯಾಗಿರಬೇಕು (20ಖ) ಎಂಬ ನಿಬ್ರಂಧವಿರುವ ಹಾಗೆ ಕಾಣಿಸುತ್ತದೆ.

Eke →

8.3 ಜೋಡಣೆಯಲ್ಲಿ ಮೂರು ಬಗೆ

ಎರಡು ವಾಕ್ಯಗಳನ್ನು ಮೇಲೆ ವಿವರಿಸಿದ ಹಾಗೆ ಜೋಡಿಸಿ ಹೇಳಲು ಮೂರು ರೀತಿಯ ಉದ್ದೇಶಗಳಿರುತ್ತವೆ. ಇವು ಘಟನೆ ಇಲ್ಲವೇ ಸಂಗತಿಗಳ ನಡುವೆ ಕಾಣಿಸಿಕೊಳ್ಳುವ ಮೂರು ರೀತಿಯ ಸಂಬಂಧಗಳನ್ನು ಸೂಚಿಸುತ್ತವೆ.
ಮೊದಲನೆಯದಾಗಿ, ಎರಡು ಘಟನೆ ಇಲ್ಲವೇ ಸಂಗತಿಗಳ ನಡುವೆ ಒಂದರೊಡನೊಂದು ಕೂಡಿಕೊಳ್ಳುವ ಸಂಬಂಧವಿದೆ ಎಂಬುದನ್ನು ಸೂಚಿಸುವು ದಕ್ಕಾಗಿ ಎರಡು ವಾಕ್ಯಗಳನ್ನು ಜೋಡಿಸಿ ಹೇಳಬಹುದು. ಉದಾಹರಣೆಗಾಗಿ, ಮತ್ತು ಪದದ ಮೂಲಕ, ಊ ಪ್ರತ್ಯಯದ ಮೂಲಕ ಇಲ್ಲವೇ ಜೋಡಿಸುವ ಕ್ರಿಯಾರೂಪದ ಮೂಲಕ ಎರಡು ವಾಕ್ಯಗಳನ್ನು ಒಟ್ಟು ಸೇರಿಸಿದಲ್ಲಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಈ ರೀತಿ ಒಂದರೊಡನೊಂದು ಕೂಡಿಕೊಳ್ಳುವ ಸಂಬಂಧವಿದೆಯೆಂದು ಸೂಚಿತವಾಗುತ್ತದೆ. (21ಕ) ರಾಮು ಪುಣೆಗೆ ಮತ್ತು ಹರಿ ಡೆಲ್ಲಿಗೆ ಹೋಗುತ್ತಾರೆ. (21ಖ) ರಾಮು ಪುಣೆಗೂ ಹರಿ ಡೆಲ್ಲಿಗೂ ಹೋಗುತ್ತಾರೆ. (21ಗ) ರಾಮು ಪುಣೆಗೆ ಹೋಗಿ (ಅಲ್ಲಿಂದ) ಡೆಲ್ಲಿಗೆ ಹೋಗುತ್ತಾನೆ. ಮೇಲಿನ ಮೂರು ವಾಕ್ಯಗಳಲ್ಲೂ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ‘ಕೂಡಿಕೆಯ’ ಸಂಬಂಧವಿದೆಯೆಂಬುದನ್ನು ಗಮನಿಸಬಹುದು. ಎರಡನೆಯದಾಗಿ, ಇಲ್ಲವೇ ಪದದ ಮೂಲಕ ಅಥವಾ ಓ ಪ್ರತ್ಯಯದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಎರಡರಲ್ಲೊಂದು ಎಂಬುದಾಗಿ ‘ಬದಲಿ’ ಸಂಬಂಧವಿದೆ ಎಂದು ಸೂಚಿಸಬಹುದು. (22ಕ) ರಾಜು ಪುಣೆಗೆ ಇಲ್ಲವೇ ಹರಿ ಡೆಲ್ಲಿಗೆ ಹೋಗುತ್ತಾರೆ. (22ಖ) ರಾಜು ಪುಣೆಗೋ ಹರಿ ಡೆಲ್ಲಿಗೋ ಹೋಗುತ್ತಾರೆ. (22ಕ)ದಲ್ಲಿ ಎರಡು ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ಬದಲಿ ಸಂಬಂಧ ವಿದೆಯೆಂಬುದನ್ನು, ಎಂದರೆ ಅವುಗಳಲ್ಲಿ ಒಂದು ನಡೆಯುವುದಾದರೆ ಇನ್ನೊಂದು ನಡೆಯುವುದಿಲ್ಲ ಎಂಬುದನ್ನು, ಅವೆರಡನ್ನು ಇಲ್ಲವೇ ಪದದ ಮೂಲಕ ಜೋಡಿಸಿ ಸೂಚಿಸಲಾಗಿದೆ. ಇದೇ ರೀತಿಯಲ್ಲಿ (22ಖ)ದಲ್ಲಿ ಎರಡು ವಾಕ್ಯ ಗಳನ್ನು ಜೋಡಿಸುವುದಕ್ಕಾಗಿ ಓ ಪ್ರತ್ಯಯವನ್ನು ಬಳಸುವುದರ ಮೂಲಕ ಇದೇ ಅರ್ಥವನ್ನು ಸೂಚಿಸಲು ಸಾಧ್ಯವಾಗಿದೆ. ಮೂರನೆಯದಾಗಿ, ಆದರೆ ಪದದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಿದಲ್ಲಿ, ಅವು ತಿಳಿಸುವ ಘಟನೆ ಇಲ್ಲವೇ ಸಂಗತಿಗಳಲ್ಲಿ ಎರಡನೆಯದು ಮೊದಲನೆಯದಕ್ಕೆ ಪ್ರತಿಕೂಲವಾಗಿದೆಯೆಂಬ ಅರ್ಥ ಸೂಚಿತವಾಗುತ್ತದೆ. (23ಕ) ರಾಜು ಪುಣೆಗೆ ಹೋಗಿದ್ದ, ಆದರೆ ಹರಿ ಡೆಲ್ಲಿಗೆ ಹೋಗಿದ್ದ. (23ಖ) ಆತ ಹರಿಯನ್ನು ಕಂಡಿದ್ದ, ಆದರೆ ಸತೀಶನನ್ನು ಕಂಡಿರಲಿಲ್ಲ. (23ಗ) ಮಳೆ ಬಂದಿದೆ, ಆದರೆ ಟಾಂಕಿ ತುಂಬಲಿಲ್ಲ. ಜೋಡಿಸಿರುವ ಎರಡು ವಾಕ್ಯಗಳಲ್ಲಿ ಎರಡನೆಯದರ ಮುಂದೆ ಆದರೆ ಪದವನ್ನು ಬಳಸುವ ಬದಲು ಮೊದಲನೆಯ ವಾಕ್ಯದ ಕ್ರಿಯಾಪದಕ್ಕೆ ರೆ ಪ್ರತ್ಯಯವನ್ನು ಸೇರಿಸಿದಲ್ಲಿ ಮೊದಲನೆಯ ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಎರಡನೆಯ ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿಗೆ ಷರತ್ತು ಎಂಬ ಅರ್ಥ ಬರುತ್ತದೆ. (24ಕ) ಅವನು ಬಂದರೆ ನಾನು ಹೋಗುತ್ತೇನೆ. (24ಖ) ಮಳೆ ಬಂದರೆ ಟಾಂಕಿಯಲ್ಲಿ ನೀರು ತುಂಬುತ್ತದೆ. (24ಗ) ಬೇಗನೆ ಹೋಗಿದ್ದರೆ ಅವರಿಗೆ ತೊಂದರೆಯಾಗುತ್ತಿತ್ತು.

Eke →

8.4 ಜೋಡಿಸಿದ ವಾಕ್ಯಗಳು ಮತ್ತು ಕೂಡುಪದಗಳು

ಕನ್ನಡದಲ್ಲಿ ‘ಕೂಡುಪದ’ವೆಂಬ ಒಂದು ವಿಶಿಷ್ಟವಾದ ರಚನೆ ಬಳಕೆಯಲ್ಲಿದ್ದು, ಚಾರಿತ್ರಿಕವಾಗಿ ಇದು ಎರಡು ವಾಕ್ಯಗಳ ಜೋಡಣೆಯಿಂದ ಬೆಳೆದು ಬಂದಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು. (25ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿಬಿಟ್ಟಿತು. (25ಖ) ಆಕೆ ತನ್ನ ಕೈಬೆರಳನ್ನು ಕತ್ತರಿಸಿಕೊಂಡಳು. (25ಗ) ಸೀತಾಪತಿ ಚೆನ್ನೈಗೆ ಹೋಗಿದ್ದಾನೆ. (25ಘ) ಯಾರೋ ಈಸಿಚೇರಿನ ಬಟ್ಟೆಯನ್ನು ಹರಿದುಹಾಕಿದ್ದಾರೆ. (25ಙ) ಆತ ಹೊಟ್ಟೆನೋವಿನಿಂದ ನೆಲದ ಮೇಲೆ ಹೊರಳಾಡಿದ. (25ಕ) ವಾಕ್ಯದಲ್ಲಿ ಕಚ್ಚು ಮತ್ತು ಬಿಡು ಎಂಬ ಎರಡು ಕ್ರಿಯಾಪದಗಳು ಬಂದಿದ್ದು, ಅವುಗಳಲ್ಲಿ ಮೊದಲನೆಯದು ಅದರ ಜೋಡಿಸುವ ರೂಪದಲ್ಲೂ ಮತ್ತು ಎರಡನೆಯದು ಅದರ ತಿಳಿಸುವ ರೂಪದಲ್ಲೂ ಬಂದಿವೆ. ಆದರೆ ಈ ವಾಕ್ಯದಲ್ಲಿ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಸ್ವಲ್ಪ ಕಷ್ಟ. ಯಾಕೆಂದರೆ, ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಜೋಡಿಸಿದಲ್ಲಿ (25ಕ) ವಾಕ್ಯದ ಅರ್ಥ ಬರುವುದಿಲ್ಲ. (26ಕ) ಕಪ್ಪು ನಾಯಿ ಆ ಹುಡುಗನನ್ನು ಕಚ್ಚಿತು. (26ಖ) ಕಪ್ಪು ನಾಯಿ ಆ ಹುಡುಗನನ್ನು ಬಿಟ್ಟಿತು. ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಇತರ (25ಖ-ಙ) ವಾಕ್ಯಗಳಲ್ಲೂ ಎರಡು ವಾಕ್ಯಗಳ ಜೋಡಣೆಯಾಗಿದೆಯೆಂದು ಹೇಳುವುದು ಕಷ್ಟ. ಯಾಕೆಂದರೆ, ಇಂತಹ ವಾಕ್ಯಗಳಲ್ಲಿ ಬರುವ ಎರಡನೆಯ ಕ್ರಿಯಾಪದಕ್ಕೆ ತನ್ನದೇ ಆದ ಒಂದು ಘಟನೆಯನ್ನು ಸೂಚಿಸುವ ಅರ್ಥವಿಲ್ಲ.
ಇದಕ್ಕೆ ಬದಲು, ಈ ಕ್ರಿಯಾಪದಗಳು ವಾಕ್ಯದಲ್ಲಿ ಅವಕ್ಕಿಂತ ಮೊದಲು ಬಂದಿರುವ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಏನಾದರೂ ತಿಳಿಸುವ ಕೆಲಸವನ್ನು ನಡೆಸುತ್ತವೆ. ಇಂತಹ ರಚನೆಗಳ ಕುರಿತು ಹೆಚ್ಚಿನ ವಿವರಗಳನ್ನು (5.6)ರಲ್ಲಿ ನೋಡಬಹುದು.

Eke →

8.4 ಸಾರಾಂಶ

ಎರಡು (ಅಥವಾ ಜಾಸ್ತಿ) ವಾಕ್ಯಗಳನ್ನು ಒಟ್ಟು ಸೇರಿಸುವುದಕ್ಕಾಗಿ ಮತ್ತು, ಇಲ್ಲವೇ, ಆದರೆ ಮೊದಲಾದ ಪದಗಳನ್ನಾಗಲಿ, ಇಲ್ಲವೇ ಊ, ಓ, ರೆ ಮೊದಲಾದ ಪ್ರತ್ಯಯಗಳನ್ನಾಗಲಿ ಬಳಸಲು ಸಾಧ್ಯವಿದೆ. ಇದಲ್ಲದೆ, ವಾಕ್ಯ ವೊಂದರ ಕೊನೆಯಲ್ಲಿ ಬರುವ ಕ್ರಿಯಾಪದದ ಜೋಡಣೆಯ ರೂಪವನ್ನು ಬಳಸಿಯೂ ಅದನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಲು ಸಾಧ್ಯವಿದೆ. ಈ ರೀತಿ ವಾಕ್ಯಗಳನ್ನು ಜೋಡಿಸಿ ಹೇಳಲು ಮೂರು ಮುಖ್ಯವಾದ ಉದ್ದೇಶ ಗಳಿರುತ್ತವೆ. ವಾಕ್ಯಗಳು ತಿಳಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಕೂಡಿಕೆಯ ಸಂಬಂಧವಿದೆಯೆಂದಾಗಲೀ, ಬದಲಿ ಸಂಬಂಧವಿದೆಯೆಂದಾಗಲೀ ಇಲ್ಲವೇ ಪ್ರತಿಕೂಲ (ಅಥವಾ ಷರತ್ತಿನ) ಸಂಬಂಧವಿದೆಯೆಂದಾಗಲೀ ಸೂಚಿಸು ವುದೇ ಈ ಮೂರು ಉದ್ದೇಶಗಳು.