Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಒಂಬತ್ತು — ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು
9.1 ಪೀಠಿಕೆ
ತಿಳಿಸುವ ವಾಕ್ಯಗಳಲ್ಲಿ ಕ್ರಿಯಾವಾಕ್ಯಗಳು ಮತ್ತು ವಿಷಯವಾಕ್ಯಗಳು ಎಂಬುದಾಗಿ ಎರಡು ರೀತಿಯ ವಾಕ್ಯಗಳಿವೆಯೆಂಬುದನ್ನು ಮೇಲೆ ನೋಡಿರುವೆವು. ಇವುಗಳಲ್ಲಿ ಕ್ರಿಯಾವಾಕ್ಯಗಳು ಒಂದು ಘಟನೆಯನ್ನೂ ಮತ್ತು ವಿಷಯವಾಕ್ಯಗಳು ಒಂದು ಸಂಗತಿಯನ್ನೂ ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಎರಡು ರೀತಿಯ ವಾಕ್ಯಗಳೂ ಈ ರೀತಿ ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವಂತಹ ರೂಪದಲ್ಲಿ ಮಾತ್ರವಲ್ಲದೆ ಬೇರೆ ಎರಡು ರೂಪಗಳಲ್ಲೂ ಬರಬಲ್ಲುವು. ಇವನ್ನು ಸಂಬಂಧಿಸುವ ವಾಕ್ಯಗಳು ಮತ್ತು ಅಲ್ಲಗಳೆಯುವ ವಾಕ್ಯಗಳು ಎಂಬುದಾಗಿ ಕರೆಯಬಹುದು. ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು, ಅದರಲ್ಲಿ ತೊಡಗಿರುವ ಘಟಕಗಳಲ್ಲಿ ಒಂದು ಆ ಘಟನೆ ಇಲ್ಲವೇ ಸಂಗತಿಗೆ ಸಂಬಂಧಿಸಿದೆ ಎಂಬುದಾಗಿ ತಿಳಿಸಲು ಸಾಧ್ಯವಿದೆ. ಇದಕ್ಕಾಗಿ ತಿಳಿಸುವ ವಾಕ್ಯವನ್ನು ಅದರ ಸಂಬಂಧಿಸುವ ರೂಪಕ್ಕೆ ಬದಲಾಯಿಸಿಕೊಳ್ಳಬೇಕು. ಈ ವಿಧಾನದ ಬಳಕೆ ಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (1ಕ) ಮೊಸರಿನ ಗಡಿಗೆ ಒಡೆದಿದೆ. (1ಖ) ಒಡೆದದ್ದು ಮೊಸರಿನ ಗಡಿಗೆ. (2ಕ) ಆ ಡಬ್ಬದೊಳಗೆ ಒಂದು ಇಲಿಯಿದೆ. (2ಖ) ಆ ಡಬ್ಬದೊಳಗಿರುವುದು ಒಂದು ಇಲಿ. (1ಕ)ದಲ್ಲಿ ಮೊಸರಿನ ಗಡಿಗೆ ಒಡೆದಿದೆ ಎಂಬ ಘಟನೆಯನ್ನು ನೇರವಾಗಿ ತಿಳಿಸಲಾಗಿದೆ. ಆದರೆ (1ಖ)ದಲ್ಲಿ ಈ ರೀತಿ ಒಂದು ಘಟನೆ ನಡೆದಿದೆ ಎಂಬುದನ್ನು ನೇರವಾಗಿ ತಿಳಿಸುವ ಬದಲು, ಮೊಸರಿನ ಗಡಿಗೆ ಎಂಬ ಘಟಕಕ್ಕೂ ಮತ್ತು ಆ ಘಟನೆಗೂ ನಡುವೆ ಸಂಬಂಧವಿದೆ ಎಂಬುದನ್ನು ತಿಳಿಸಲಾಗಿದೆ. ಇದೇ ರೀತಿಯಲ್ಲಿ (2ಕ)ದಲ್ಲಿ ಒಂದು ವಿಷಯವನ್ನು ನೇರವಾಗಿ ತಿಳಿಸಲಾಗಿದೆಯಾದರೆ, (2ಖ)ದಲ್ಲಿ ಆ ವಿಷಯಕ್ಕೂ ಮತ್ತು ಒಂದು ಘಟಕಕ್ಕೂ (ಒಂದು ಇಲಿ ಎಂಬುದಕ್ಕೂ) ನಡುವೆ ಸಂಬಂಧವಿದೆ ಎಂಬುದನ್ನು ತಿಳಿಸಲಾಗಿದೆ. ಒಂದು ಘಟನೆ ನಡೆದಿರುವುದನ್ನು (ಅಥವಾ ನಡೆಯಲಿರುವುದನ್ನು) ಮತ್ತು ಒಂದು ಸಂಗತಿ ಇರುವುದನ್ನು ನೇರವಾಗಿ ತಿಳಿಸುವ ಬದಲು, ಒಂದು ಘಟನೆ ನಡೆದಿಲ್ಲ ಎಂಬುದನ್ನು ಇಲ್ಲವೇ ಒಂದು ಸಂಗತಿ ನಿಜವಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ‘ಅಲ್ಲಗಳೆಯುವ’ ವಾಕ್ಯವನ್ನು ಬಳಸಲಾಗುತ್ತದೆ. ಇದಕ್ಕಾಗಿ ತಿಳಿಸುವ ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸಿ ಹೇಳಬೇಕಾಗುತ್ತದೆ. (3ಕ) ಮೊಸರಿನ ಮಡಿಕೆ ಒಡೆಯಿತು. (3ಖ) ಮೊಸರಿನ ಮಡಿಕೆ ಒಡೆಯಲಿಲ್ಲ. (4ಕ) ಆ ಡಬ್ಬದೊಳಗೆ ಇಲಿಯಿದೆ. (4ಖ) ಆ ಡಬ್ಬದೊಳಗೆ ಇಲಿಯಿಲ್ಲ. ಈ ರೀತಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ಅಲ್ಲಗಳೆಯುವ ಬದಲು ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನೂ ಅಲ್ಲಗಳೆಯಲು ಸಂಬಂಧಿಸುವ ವಾಕ್ಯಗಳೂ ಅಲ್ಲಗಳೆಯುವ ರೂಪದಲ್ಲಿ ಬರಬಲ್ಲುವು. ಆದರೆ ಇದಕ್ಕಾಗಿ ಕನ್ನಡದಲ್ಲಿ ಅಲ್ಲ ಎಂಬ ಬೇರೆಯೇ ಒಂದು ಅಲ್ಲಗಳೆಯುವ ಪದವನ್ನು ಬಳಸಲಾಗುತ್ತದೆ. ಸಾಧ್ಯವಿದೆಯಾದ (5ಕ) ಒಡೆದದ್ದು ಮೊಸರಿನ ಗಡಿಗೆ. (5ಖ) ಒಡೆದದ್ದು ಮೊಸರಿನ ಗಡಿಗೆಯಲ್ಲ. (5ಗ) ಮರದ ಮೇಲಿರುವುದು ಒಂದು ಕೋತಿ. (5ಘ) ಮರದ ಮೇಲಿರುವುದು (ಒಂದು) ಕೋತಿಯಲ್ಲ.
ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ತಿಳಿಸಿರುವ ಘಟನೆಗೂ ಮತ್ತು ಅದರ ಘಟಕಕ್ಕೂ ನಡುವಿರುವ ಸಂಬಂಧ ವನ್ನು ಮಾತ್ರವಲ್ಲದೆ, ಅಲ್ಲಗಳೆದಿರುವ ಘಟನೆ(ಇಲ್ಲವೇ ಸಂಗತಿ)ಗೂ ಮತ್ತು ಘಟಕಕ್ಕೂ ನಡುವಿರುವ ಸಂಬಂಧವನ್ನೂ ಇಂತಹ ವಾಕ್ಯದ ಮೂಲಕ ಅಲ್ಲ ಗಳೆಯಲು ಸಾಧ್ಯವಿದೆ. (6ಕ) ಮೊಸರಿನ ಗಡಿಗೆ ಒಡೆಯಲಿಲ್ಲ. (6ಖ) ಒಡೆಯದುದು ಮೊಸರಿನ ಗಡಿಗೆ. (6ಗ) ಮಡಕೆಯಲ್ಲಿ ಬಿಸಿನೀರಿಲ್ಲ. (6ಘ) ಮಡಕೆಯಲ್ಲಿಲ್ಲದಿರುವುದು ಬಿಸಿನೀರಲ್ಲ. ಸಂಬಂಧಿಸುವುದಕ್ಕಾಗಿ ಮತ್ತು ಅಲ್ಲಗಳೆಯುವುದಕ್ಕಾಗಿ ಬಳಕೆಯಾಗುವ ಈ ಎರಡು ರೀತಿಯ ವಾಕ್ಯಗಳ ಒಳರಚನೆ ಹೇಗಿದೆ ಎಂಬುದನ್ನು ಕೆಳಗೆ ಸ್ವಲ್ಪ ವಿವರ ವಾಗಿ ಪರಿಶೀಲಿಸಲಾಗಿದೆ. ವಾಕ್ಯಗಳ ಕೊನೆಯಲ್ಲಿ ಅಂತೆ ಪದವನ್ನು ಸೇರಿಸುವ ಮೂಲಕ ಬೇರೊಬ್ಬನ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಎತ್ತಿಹೇಳಲು ಸಾಧ್ಯ ಎಂಬುದನ್ನು ಏಳನೆಯ ಅಧ್ಯಾಯದಲ್ಲಿ (7.2.1ರಲ್ಲಿ) ನೋಡಿರುವೆವು. ಇವನ್ನು ಮೂರನೇ ರೀತಿಯ ತಿಳಿಸುವ ವಾಕ್ಯಗಳೆಂದು ಪರಿಗಣಿಸಲು ಸಾಧ್ಯವಿದೆ.
9.2 ಸಂಬಂಧಿಸುವ ವಾಕ್ಯಗಳು
ವಾಕ್ಯದ ಒಂದು ಘಟಕವನ್ನು ಅದರ ಇತರ ಭಾಗಕ್ಕೆ ಸಂಬಂಧಿಸಿರುವಂತೆ ಹೇಳಲು ಆ ಘಟಕವನ್ನು ವಾಕ್ಯದ ಕೊನೆಯಲ್ಲಿ ಇರಿಸಬೇಕು ಮತ್ತು ವಾಕ್ಯದ ಕ್ರಿಯಾಪದವನ್ನು ಅದರ ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕು. ಉದಾ ಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಪರಿಶೀಲಿಸಬಹುದು.
(7ಕ) ಜಾನಕಿಯ ಚಿತ್ರ ಪೇಪರಿನಲ್ಲಿ ಬಂತು. (7ಖ) ಪೇಪರಿನಲ್ಲಿ ಬಂದುದು ಜಾನಕಿಯ ಚಿತ್ರ. (7ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (7ಖ)ದಲ್ಲಿ ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಲಾಗಿದೆ, ಮತ್ತು ಇದಕ್ಕಾಗಿ, ಅದರ ಎರಡು ಘಟಕ ಗಳಲ್ಲಿ ಒಂದನ್ನು (ಜಾನಕಿಯ ಚಿತ್ರ ಎಂಬುದನ್ನು) ವಾಕ್ಯದ ಕೊನೆಯಲ್ಲಿ ಇರಿಸಲಾಗಿದೆ ಮತ್ತು ಬಂತು ಎಂಬ ಅದರ ಕ್ರಿಯಾಪದವನ್ನು ಬಂದುದು ಎಂಬ ನಾಮಪದರೂಪಕ್ಕೆ ಬದಲಾಯಿಸಲಾಗಿದೆ.
9.2.1 ಘಟಕಗಳನ್ನು ಪ್ರತ್ಯೇಕಿಸುವುದು
ಒಂದು ವಾಕ್ಯದಲ್ಲಿ ಬಂದಿರುವ ಬೇರೆ ಬೇರೆ ಘಟಕಗಳನ್ನು ಈ ರೀತಿ ಅದರ ಉಳಿದ ಭಾಗಕ್ಕೆ ಸಂಬಂಧಿಸಿರುವಂತೆ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ.
ರಾಜು ಆ ವ್ಯಾಪಾರಿಗೆ ತನ್ನ ಮನೆಯನ್ನು ಮಾರಿದ್ದಾನೆ. (8ಖ) ರಾಜು ಆ ವ್ಯಾಪಾರಿಗೆ ಮಾರಿರುವುದು ತನ್ನ ಮನೆಯನ್ನು. ರಾಜು ತನ್ನ ಮನೆಯನ್ನು ಮಾರಿರುವುದು ಆ ವ್ಯಾಪಾರಿಗೆ. (8ಘ) ಆ ವ್ಯಾಪಾರಿಗೆ ತನ್ನ ಮನೆಯನ್ನು ಮಾರಿರುವುದು ರಾಜು. ಮೇಲೆ (8ಕ)ದಲ್ಲಿ ಬಂದಿರುವ ವಾಕ್ಯದಲ್ಲಿ ಮೂರು ಘಟಕಗಳಿದ್ದು ಅನಂತರದ ಮೂರು ವಾಕ್ಯಗಳಲ್ಲಿ, ಎಂದರೆ (8ಖ-ಘ)ಗಳಲ್ಲಿ ಆ ಮೂರು ಘಟಕಗಳಲ್ಲಿ ಒಂದೊಂದನ್ನೂ ಪ್ರತ್ಯೇಕಿಸಿ, ಅದು ಆ ವಾಕ್ಯದ ಇತರ ಭಾಗಕ್ಕೆ ಸಂಬಂಧಿಸಿದೆ ಎಂದು ಸೂಚಿಸಲಾಗಿದೆ. ಸಾಮಾನ್ಯವಾಗಿ ವಾಕ್ಯದಲ್ಲಿ ಬರುವ ಘಟಕಗಳಲ್ಲಿ ಒಂದನ್ನು ಮಾತ್ರವೇ ಈ ರೀತಿ ಪ್ರತ್ಯೇಕಿಸಿ ಹೇಳುವುದು ರೂಢಿ. ಆದರೆ ಕೆಲವು ವಿಶಿಷ್ಟವಾದ ಸಂದಭ್ರ ಗಳಲ್ಲಿ ಒಂದಕ್ಕಿಂತ ಜಾಸ್ತಿ ಘಟಕಗಳನ್ನೂ ಈ ರೀತಿ ಪ್ರತ್ಯೇಕಿಸಲು ಸಾಧ್ಯವಿದೆ ಎಂಬುದನ್ನು ಕೆಳಗಿನ ವಾಕ್ಯಗಳಲ್ಲಿ ನೋಡಬಹುದು. ರಾಜು ಕೊಟ್ಟುದು ಹರಿಗೊಂದು ಪುಸ್ತಕ. (9ಖ) ಶಾಮರಾಯರು ವರ್ಣಿಸಿದ ಅಪಘಾತ ನಡೆದುದು ನಿನ್ನೆ ರಾತ್ರಿ ಯರವಾಡದ ಸಕ್ರಲಿನಲ್ಲಿ. (9ಗ) ಜಾಸ್ತಿ ಮಳೆ ಬಂದಿರುವುದು ನಿನ್ನೆ ಬೊಂಬಾಯಿಯಲ್ಲಿ. ಇದಲ್ಲದೆ, ವಾಕ್ಯವು ಸೂಚಿಸುವ ಘಟನೆಯನ್ನೇ ಅದರ ಘಟಕಗಳಿಗೆ ಸಂಬಂಧಿ ಸಿರುವ ಹಾಗೆಯೂ ಇಂತಹ ಸಂಬಂಧಿಸುವ ವಾಕ್ಯದ ಮೂಲಕ ತಿಳಿಸಲು ಸಾಧ್ಯ ವಿದೆ. ಇದಕ್ಕಾಗಿ ಇಂತಹ ವಾಕ್ಯಗಳಲ್ಲಿ ನಾಮಪದರೂಪದಲ್ಲಿರುವ ಕ್ರಿಯಾಪದ ವನ್ನು ವಾಕ್ಯದ ಕೊನೆಯಲ್ಲಿರಿಸಬೇಕು. (10ಕ) ಆಕೆ ರಾಜುವನ್ನು ಹೊಗಳಿದುದು (ತೆಗಳಿದುದಲ್ಲ). (10ಖ) ರಾಜು ಈ ದನವನ್ನು ಮಾರುವುದು (ದಾನ ಕೊಡುವುದಲ್ಲ).
9.2.2 ಕ್ರಿಯಾಪದವನ್ನು ಬದಲಾಯಿಸುವುದು
ತಿಳಿಸುವ ವಾಕ್ಯವೊಂದರಿಂದ ಸಂಬಂಧಿಸುವ ವಾಕ್ಯವನ್ನು ತಯಾರಿಸಬೇಕಿದ್ದಲ್ಲಿ, ಅದರ ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸಬೇಕೆಂಬುದನ್ನು ನಾವು ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಮೇಲೆ ನೋಡಿರುವೆವು. ಈ ಬದಲಾವಣೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಗಳಿವೆಯೆಂಬುದನ್ನು ಈ ವಿಭಾಗದಲ್ಲಿ ನೋಡಲಿರುವೆವು. ವಿಷಯವಾಕ್ಯಗಳನ್ನು ಅವುಗಳ ಕೊನೆಯಲ್ಲಿ ಬರುವ ಇರು ಕ್ರಿಯಾಪದವನ್ನು ತೆಗೆದು ಹಾಕಿಯೂ ಬಳಸಲು ಸಾಧ್ಯ ಎಂಬುದನ್ನು ನಾವು 3.1ರಲ್ಲಿ ನೋಡಿರು ವೆವು. ಆದರೆ ಇಂತಹ ವಾಕ್ಯಗಳನ್ನು ಅವುಗಳ ಸಂಬಂಧಿಸುವ ರೂಪಕ್ಕೆ ಬದಲಾ ಯಿಸಬೇಕಿದ್ದಲ್ಲಿ ಈ ರೀತಿ ತೆಗೆದು ಹಾಕಿದ ಕ್ರಿಯಾಪದವನ್ನು ತಿರುಗಿ ಪಡೆದು ಅದನ್ನು ನಾಮಪದರೂಪದಲ್ಲಿ ಬಳಸಿಕೊಳ್ಳಬೇಕಾಗುತ್ತದೆ. (11ಕ) ಜಾನಕಿಗೆ ಶ್ರೀಹರಿಯ ಮೇಲೆ ಕೋಪವಿದೆ. (11ಖ) ಜಾನಕಿಗೆ ಶ್ರೀಹರಿಯ ಮೇಲೆ ಕೋಪ. (11ಗ) ಜಾನಕಿಗೆ ಕೋಪವಿರುವುದು ಶ್ರೀಹರಿಯ ಮೇಲೆ. (11ಕ)ದಲ್ಲಿ ಬಂದಿರುವ ವಿಷಯವಾಕ್ಯದ ಇದೆ ಕ್ರಿಯಾರೂಪವನ್ನು (11ಖ) ದಲ್ಲಿ ತೆಗೆದು ಹಾಕಲು ಸಾಧ್ಯವಾಗಿದೆ. ಆದರೆ (11ಗ)ದಲ್ಲಿ ಬಂದಿರುವ ಈ ವಾಕ್ಯದ ಸಂಬಂಧಿಸುವ ರೂಪದಿಂದ ಈ ರೀತಿ ಆ ಕ್ರಿಯಾಪದದ ಇರುವುದು ಎಂಬ ನಾಮಪದರೂಪವನ್ನು ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದಕ್ಕೆ ಮೂರು ಕ್ರಿಯಾರೂಪಗ ಳಿದ್ದು (ಉದಾ: ಇದ್ದಾನೆ, ಇರುತ್ತಾನೆ, ಇದ್ದ), ಅವು ಹಿಂದಿನ, ಮುಂದಿನ ಮತ್ತು ಈಗಿನ ಘಟನೆಗಳನ್ನು ತಿಳಿಸಬಲ್ಲುವು ಎಂಬುದನ್ನು ನಾವು ಮೇಲೆ 3.1.1ರಲ್ಲಿ ನೋಡಿರುವೆವು. ಆದರೆ, ಈ ಕ್ರಿಯಾಪದಕ್ಕೆ ಇರುವುದು ಮತ್ತು ಇದ್ದುದು ಎಂಬುದಾಗಿ ಎರಡು ನಾಮಪದರೂಪಗಳು ಮಾತ್ರ ಇವೆ. ಹಾಗಾಗಿ, ಸಂಬಂಧಿಸುವ ವಾಕ್ಯಗಳಲ್ಲಿ ಮುಂದಿನ ಮತ್ತು ಈಗಿನ ಘಟನೆಗಳ ನಡುವಿನ ವ್ಯತ್ಯಾಸವನ್ನು ಸೂಚಿಸಲು ಸಾಧ್ಯವಾಗದು. (12ಕ) ರಾಮಮೂತ್ರಿ ಈ ಮನೆಯಲ್ಲಿರುತ್ತಾನೆ. (12ಖ) ರಾಮಮೂತ್ರಿ ಈ ಮನೆಯಲ್ಲಿದ್ದಾನೆ. (12ಗ) ರಾಮಮೂತ್ರಿ ಈ ಮನೆಯಲ್ಲಿದ್ದ. (13ಕ) ರಾಮಮೂತ್ರಿ ಇರುವುದು ಈ ಮನೆಯಲ್ಲಿ. (13ಖ) ರಾಮಮೂತ್ರಿ ಇದ್ದುದು ಈ ಮನೆಯಲ್ಲಿ. (13ಕ-ಗ)ಗಳಲ್ಲಿರುವ ಮೂರು ಕ್ರಿಯಾವಾಕ್ಯಗಳಿಗೆ ಬದಲಾಗಿ (13ಕ-ಖ) ಗಳಲ್ಲಿ ಕಾಣಿಸಿರುವ ಹಾಗೆ ಎರಡು ಸಂಬಂಧಿಸುವ ವಾಕ್ಯಗಳನ್ನು ಮಾತ್ರ ತಯಾರಿಸಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಬಹುದು. ಇವುಗಳಲ್ಲಿ ಮೊದಲನೆಯದು (12ಕ) ವಾಕ್ಯದಿಂದಲೂ ತಯಾರಾಗಿರಬಹುದು ಇಲ್ಲವೇ (12ಖ)ದಿಂದಲೂ ತಯಾರಾಗಿರಬಹುದು. ಅಲ್ಲಗಳೆಯುವ ಕ್ರಿಯಾವಾಕ್ಯಗಳಲ್ಲಿ ಹಿಂದಿನ ಘಟನೆಯನ್ನು ಅಲ್ಲಗಳೆಯು ವವು ಮತ್ತು ಮುಂದಿನ ಘಟನೆಯನ್ನು ಅಲ್ಲಗಳೆಯುವವು ಎಂಬುದಾಗಿ ಎರಡು ರೀತಿಯ ವಾಕ್ಯಗಳಿವೆಯೆಂಬುದನ್ನು ಮುಂದೆ (9.3ರಲ್ಲಿ) ನೋಡಲಿರುವೆವು. ಇವುಗಳಲ್ಲಿ ಮೊದಲನೆಯದರ ಸಂಬಂಧಿಸುವ ರೂಪವನ್ನು ನೇರವಾಗಿ ಅದರಲ್ಲಿ ಬಂದಿರುವ ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸುವುದರ ಮೂಲಕ ತಯಾರಿಸಲು ಸಾಧ್ಯವಿದೆ. (14ಕ) ಜಾನಕಿ ಶಾಲೆಗೆ ಹೋಗಲಿಲ್ಲ. (14ಖ) ಶಾಲೆಗೆ ಹೋಗದುದು ಜಾನಕಿ. ಮುಂದಿನ ಘಟನೆಯನ್ನು ಅಲ್ಲಗಳೆಯುವ ಎರಡನೆಯ ಕ್ರಿಯಾವಾಕ್ಯದ ಸಂಬಂಧಿಸುವ ರೂಪವನ್ನು ಈ ರೀತಿ ನೇರವಾಗಿ ತಯಾರಿಸಲು ಸಾಧ್ಯವಾಗದು. ಘಟನೆಯನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ನಾಮಪದರೂಪವಿಲ್ಲ. ಹಾಗಾಗಿ ಇಂತಹ ಸಂದಭ್ರಗಳಲ್ಲಿ ಕ್ರಿಯಾಪದದೊಂದಿಗೆ ಇರು ಎಂಬುದರ ನಾಮಪದರೂಪವನ್ನು ಬಳಸಬೇಕಾಗುತ್ತದೆ. ಯಾಕೆಂದರೆ, ಕನ್ನಡದಲ್ಲಿ ಮುಂದಿನ (15ಕ) ಜಾನಕಿ ಶಾಲೆಗೆ ಹೋಗುವುದಿಲ್ಲ. (15ಖ) ಶಾಲೆಗೆ ಹೋಗದಿರುವುದು ಜಾನಕಿ.
9.3 ಅಲ್ಲಗಳೆಯುವ ವಾಕ್ಯಗಳು
ಮೇಲೆ 9.1ರಲ್ಲಿ ಸೂಚಿಸಿರುವ ಹಾಗೆ, ಒಂದು ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡದಲ್ಲಿ ಇಲ್ಲ ಪದದ ಬಳಕೆಯಾಗುತ್ತದೆ. ಈ ಪದ ವನ್ನು ಬಳಸಿದಾಗ, ತಿಳಿಸುವ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಎರಡು ವಾಕ್ಯಗಳನ್ನು ಗಮನಿಸಬಹುದು. (16ಕ) ಜಾನಕಿ ಅಡಿಗೆ ಮಾಡಿದಳು. (16ಖ) ಜಾನಕಿ ಅಡಿಗೆ ಮಾಡಲಿಲ್ಲ. (17ಕ) ರಾಜು ಉಪ್ಪರಿಗೆಯಲ್ಲಿ ಮಲಗುತ್ತಾನೆ. (17ಖ) ರಾಜು ಉಪ್ಪರಿಗೆಯಲ್ಲಿ ಮಲಗುವುದಿಲ್ಲ. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಹಿಂದಿನ ಘಟನೆಯೊಂದನ್ನು ತಿಳಿಸುವ (16ಕ) ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸುವುದರ ಮೂಲಕ (16ಖ) ವಾಕ್ಯದಲ್ಲಿ ಆ ಘಟನೆಯನ್ನು ಅಲ್ಲಗಳೆಯ ಲಾಗಿದೆ, ಮತ್ತು ಇದಕ್ಕಾಗಿ (16ಕ) ವಾಕ್ಯದ ಕೊನೆಯಲ್ಲಿ ಬಂದಿರುವ ಮಾಡಿದಳು ಕ್ರಿಯಾರೂಪವನ್ನು ಮಾಡಲು ಎಂಬುದಾಗಿ ಮೊದಲಿನ ಘಟನೆ ಯನ್ನು ಸೂಚಿಸುವ ರೂಪಕ್ಕೆ ಬದಲಿಸಿಕೊಳ್ಳಲಾಗಿದೆ.
ಇದೇ ರೀತಿಯಲ್ಲಿ ಮುಂದಿನ ಘಟನೆಯೊಂದನ್ನು ತಿಳಿಸುವ (17ಕ) ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸಿ (17ಖ) ವಾಕ್ಯದಲ್ಲಿ ಆ ಘಟನೆಯನ್ನು ಅಲ್ಲಗಳೆಯ ಲಾಗಿದೆ, ಮತ್ತು ಇದಕ್ಕಾಗಿ (17ಕ) ಕೊನೆಯಲ್ಲಿ ಬಂದಿರುವ ಮಲಗುತ್ತಾನೆ ಕ್ರಿಯಾರೂಪವನ್ನು ಮಲಗುವುದು ಎಂಬುದಾಗಿ ಅದರ ನಾಮಪದರೂಪಕ್ಕೆ ಬದಲಿಸಿಕೊಳ್ಳಲಾಗಿದೆ. ಸಂಗತಿಗಳನ್ನು ತಿಳಿಸುವ ವಿಷಯವಾಕ್ಯಗಳನ್ನು ಅಲ್ಲಗಳೆಯಬೇಕಿದ್ದಲ್ಲಿ, ಅವುಗಳ ಕೊನೆಯಲ್ಲಿ ಬರುವ ಇರು ಕ್ರಿಯಾಪದದ ರೂಪಗಳಲ್ಲೂ ಬದಲಾವಣೆ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಹಿಂದಿನ ಮತ್ತು ಮುಂದಿನ ಸಮಯದ ರೂಪಗಳನ್ನು ಇತರ ಕ್ರಿಯಾಪದಗಳ ರೂಪಗಳ ಹಾಗೆಯೇ ಮೇಲೆ ಸೂಚಿಸಿದಂತೆ ಬದಲಾಯಿಸಿಕೊಳ್ಳಬೇಕಾಗುತ್ತದೆ. (18ಕ) ಶಾಮರಾಯರು ಆಫೀಸಿನಲ್ಲಿ ಇದ್ದರು. (18ಖ) ಶಾಮರಾಯರು ಆಫೀಸಿನಲ್ಲಿ ಇರಲಿಲ್ಲ. (19ಕ) ಶಾಮರಾಯರು ಆಫೀಸಿನಲ್ಲಿ ಇರುತ್ತಾರೆ. (19ಖ) ಶಾಮರಾಯರು ಆಫೀಸಿನಲ್ಲಿ ಇರುವುದಿಲ್ಲ. ಹಿಂದಿನ ಸಂಗತಿಯನ್ನು ಸೂಚಿಸುವ ಇದ್ದರು ಕ್ರಿಯಾಪದಕ್ಕೆ ಬದಲಾಗಿ (18ಖ) ದಲ್ಲಿ ಇರಲು ಎಂಬ ಮುಂದಿನ ಸಮಯವನ್ನು ಸೂಚಿಸುವ ಕ್ರಿಯಾರೂಪವನ್ನೂ ಮತ್ತು ಮುಂದಿನ (ಇಲ್ಲವೇ ರೂಢಿಯ) ಸಂಗತಿಯನ್ನು ಸೂಚಿಸುವ ಇರುತ್ತಾರೆ ಕ್ರಿಯಾಪದಕ್ಕೆ ಬದಲಾಗಿ (19ಖ)ದಲ್ಲಿ ಅದರ ಇರುವುದು ಎಂಬ ನಾಮಪದ ರೂಪವನ್ನೂ ಇಲ್ಲ ಎಂಬ ಪದದೊಂದಿಗೆ ಬಳಸಲಾಗಿದೆ. ಆದರೆ, ಈಗಿನ ಸಮಯವನ್ನು ಸೂಚಿಸುವ ಇದ್ದಾನೆ, ಇದ್ದಾಳೆ, ಇದೆ ಮೊದಲಾದ ರೂಪಗಳು ಅವುಗಳ ಮುಂದೆ ಇಲ್ಲ ಪದವನ್ನು ಬಳಸಿದಾಗ ಈ ರೀತಿ ಬದಲಾಗುವ ಬದಲು ಸುಮ್ಮಗೆ ಬಿದ್ದು ಹೋಗುತ್ತವೆ. (20ಕ) ಶಾಮರಾಯರು ಆಫೀಸಿನಲ್ಲಿ ಇದ್ದಾರೆ. (20ಖ) ಶಾಮರಾಯರು ಆಫೀಸಿನಲ್ಲಿ ಇಲ್ಲ. (21ಕ) ಅವಳಿಗೆ ನಿಮ್ಮ ಮೇಲೆ ಕೋಪ ಇದೆ. (21ಖ) ಅವಳಿಗೆ ನಿಮ್ಮ ಮೇಲೆ ಕೋಪ ಇಲ್ಲ. ತಿಳಿಸುವ ವಾಕ್ಯಗಳು ಒಂದು ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದನ್ನು ಚುಟುಕಾಗಿ ಸೂಚಿಸಬಲ್ಲುವು. ಈ ಕೆಲಸ ವನ್ನು ಅವುಗಳ ಕ್ರಿಯಾಪದಗಳ ಕೊನೆಯಲ್ಲಿ ಬರುವ ಒಂದು ಪ್ರತ್ಯಯ ನಡೆಸು ತ್ತದೆ. ಆದರೆ, ಈ ವಾಕ್ಯಗಳ ಅಲ್ಲಗಳೆಯುವ ರೂಪಗಳು ಈ ರೀತಿ ಘಟನೆಯಲ್ಲಿ ತೊಡಗಿಕೊಂಡಿರುವ (ಇಲ್ಲವೇ ತೊಡಗಿಕೊಂಡಿಲ್ಲವೆಂಬುದಾಗಿ ಅಲ್ಲಗಳೆಯುವ) ವ್ಯಕ್ತಿ ಇಲ್ಲವೇ ವಸ್ತುವೊಂದನ್ನು ಚುಟುಕಾಗಿ ಸೂಚಿಸಲಾರವು. ಅಲ್ಲಗಳೆಯುವ ವಾಕ್ಯಗಳಲ್ಲಿ ಕ್ರಿಯಾಪದದ ನಾಮಪದ ರೂಪವಾಗಲೀ ಇಲ್ಲವೇ ಮುಂದಿನ ಸಮಯವನ್ನು ಸೂಚಿಸುವ ರೂಪವಾಗಲೀ ಬರುವುದೇ ಇದಕ್ಕೆ ಕಾರಣ. (22ಕ) ರಾಜು ಮಕ್ಕಳಿಗೆ ಕಾಫಿ ಕೊಡುತ್ತಾನೆ. (22ಖ) ರಾಜು ಮಕ್ಕಳಿಗೆ ಕಾಫಿ ಕೊಡುವುದಿಲ್ಲ. (23ಕ) ಜಾನಕಿ ಮಕ್ಕಳಿಗೆ ಹಾಲು ಕೊಡುತ್ತಾಳೆ. (23ಖ) ಜಾನಕಿ ಮಕ್ಕಳಿಗೆ ಹಾಲು ಕೊಡುವುದಿಲ್ಲ. (22ಕ)ದಲ್ಲಿ ಘಟನೆಯನ್ನು ನಡೆಸುವ ವ್ಯಕ್ತಿ ಒಬ್ಬ ಗಂಡಸು ಎಂಬುದನ್ನು ಅದರ ಕೊನೆಯಲ್ಲಿ ಬಂದಿರುವ ಕೊಡುತ್ತಾನೆ ಕ್ರಿಯಾರೂಪ (ಆನೆ ಪ್ರತ್ಯಯದ ಮೂಲಕ) ಚುಟುಕಾಗಿ ಸೂಚಿಸುತ್ತದೆ. ಇದೇ ರೀತಿಯಲ್ಲಿ (23ಕ)ದಲ್ಲಿ ಬಂದಿರುವ ಕೊಡುತ್ತಾಳೆ ಕ್ರಿಯಾರೂಪ ಆ ವಾಕ್ಯ ತಿಳಿಸುವ ಘಟನೆಯನ್ನು ನಡೆಸುವ ವ್ಯಕ್ತಿ ಒಬ್ಬ ಹೆಂಗಸು ಎಂಬುದನ್ನು (ಆಳೆ ಪ್ರತ್ಯಯದ ಮೂಲಕ) ಚುಟುಕಾಗಿ ಸೂಚಿಸುತ್ತದೆ.
ಆದರೆ ಈ ಎರಡು ವಾಕ್ಯಗಳ ಅಲ್ಲಗಳೆಯುವ ರೂಪಗಳಲ್ಲಿ ((22ಖ) ಮತ್ತು (23ಖ)ಗಳಲ್ಲಿ) ಈ ಎರಡು ಕ್ರಿಯಾರೂಪಗಳ ನಾಮಪದರೂಪ (ಕೊಡುವುದು) ಬಂದಿದೆಯಾದ ಕಾರಣ, ಮತ್ತು ಈ ರೂಪದಲ್ಲಿ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಪ್ರತ್ಯಯ ಬರುವುದಿಲ್ಲವಾದ ಕಾರಣ, ಅವು ಈ ರೀತಿ (ಘಟನೆಯನ್ನು ನಡೆಸದಿರುವ) ವ್ಯಕ್ತಿಯನ್ನು ಚುಟುಕಾಗಿ ಸೂಚಿಸಲಾರವು. ಹಿಂದಿನ ವಿಭಾಗದಲ್ಲಿ ವಿವರಿಸಿರುವ ‘ಸಂಬಂಧಿಸುವ’ ವಾಕ್ಯಗಳಲ್ಲೂ ಈ ರೀತಿ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಚುಟುಕಾಗಿ ಸೂಚಿಸಲು ಸಾಧ್ಯ ವಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು (22ಗ) ಮಕ್ಕಳಿಗೆ ಕಾಫಿ ಕೊಡುವುದು ರಾಜು. (23ಗ) ಮಕ್ಕಳಿಗೆ ಹಾಲು ಕೊಡುವುದು ಜಾನಕಿ.
9.3.1 ಸಂಬಂಧವನ್ನು ಅಲ್ಲಗಳೆಯುವುದು
ಒಂದು ಘಟನೆ ಇಲ್ಲವೇ ಸಂಗತಿಯನ್ನು ಈ ರೀತಿ ನೇರವಾಗಿ ಅಲ್ಲಗಳೆಯುವ ಬದಲು, ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಬೇಕಿದ್ದಲ್ಲಿ ಇಲ್ಲ ಎಂಬುದರ ಬದಲು ಅಲ್ಲ ಎಂಬ ಬೇರೊಂದು ಪದವನ್ನು ಬಳಸಬೇಕಾಗುತ್ತದೆ. ಇಂತಹ ವಾಕ್ಯಗಳಲ್ಲಿ ಕ್ರಿಯಾಪದ ಅದರ ನಾಮಪದರೂಪದಲ್ಲಿದೆಯಾದ ಕಾರಣ, ಅದರಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. (24ಕ) ಅವರು ಹೋದುದು ಮಂಗಳೂರಿಗೆ. (24ಖ) ಅವರು ಹೋದುದು ಮಂಗಳೂರಿಗಲ್ಲ. (25ಕ) ಅವರು ಹೋಗುವುದು ಮಂಗಳೂರಿಗೆ. (25ಖ) ಅವರು ಹೋಗುವುದು ಮಂಗಳೂರಿಗಲ್ಲ. (26ಕ) ಅವರು ಇರುವುದು ಮಂಗಳೂರಲ್ಲಿ. (26ಖ) ಅವರು ಇರುವುದು ಮಂಗಳೂರಲ್ಲಿ ಅಲ್ಲ. ಸಂಗತಿಯೊಂದನ್ನು ಸೂಚಿಸುವ ವಿಷಯವಾಕ್ಯಗಳನ್ನು ಅಂತಹ ಸಂಗತಿಗೂ ಮತ್ತು ವಾಕ್ಯದ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವು ದಕ್ಕಾಗಿ ‘ಸಂಬಂಧಿಸುವ’ ವಾಕ್ಯಗಳನ್ನಾಗಿ ಬದಲಾಯಿಸಬೇಕಿದ್ದಲ್ಲಿ ಅವುಗಳಲ್ಲಿ ಬರುವ ಇರು ಕ್ರಿಯಾಪದವನ್ನು ನಾಮಪದರೂಪಕ್ಕೆ ಬದಲಾಯಿಸಬೇಕಾಗುವು ದೆಂಬುದನ್ನು ನಾವು ಮೇಲೆ 9.2ರಲ್ಲಿ ನೋಡಿರುವೆವು. ಈ ಇರು ಕ್ರಿಯಾಪದ ವನ್ನು ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಬಳಸದಿರಲೂ ಸಾಧ್ಯವಿದೆ, ಆದರೆ ಸಂಬಂಧಿಸುವ ವಾಕ್ಯಗಳಲ್ಲಿ ಅದರ ನಾಮಪದರೂಪವನ್ನು ಆ ರೀತಿ ಬಳಸ ದಿರಲು ಸಾಧ್ಯವಾಗದು ಎಂಬುದನ್ನೂ ಹಿಂದೆ (9.2.2ರಲ್ಲಿ) ಸೂಚಿಸಲಾಗಿತ್ತು. ಆದರೆ, ಇಂತಹ ವಾಕ್ಯಗಳನ್ನು ಅಲ್ಲಗಳೆಯುವುದಕ್ಕಾಗಿ ಅವುಗಳೊಂದಿಗೆ ಅಲ್ಲ ಪದವನ್ನು ಬಳಸಿದಾಗ, ಇರು ಕ್ರಿಯಾಪದದ ನಾಮಪದರೂಪ ಬಿದ್ದು ಹೋಗಲು ಸಾಧ್ಯವಿದೆ. (27ಕ) ಆ ಹುಡುಗಿ ಕಪ್ಪು (ಇದ್ದಾಳೆ). (27ಖ) ಆ ಹುಡುಗಿಯಿರುವುದು ಕಪ್ಪು. (27ಗ) ಆ ಹುಡುಗಿಯಿರುವುದು ಕಪ್ಪಲ್ಲ. (27ಘ) ಆ ಹುಡುಗಿ ಕಪ್ಪಲ್ಲ. (27ಙ) ಆ ಹುಡುಗಿ ಕಪ್ಪಿಲ್ಲ. (27ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (27ಖ)ದಲ್ಲಿ ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಲಾಗಿದೆ, ಮತ್ತು (27ಗ)ದಲ್ಲಿ ಈ ಸಂಬಂಧಿಸುವ ವಾಕ್ಯವನ್ನು ಅಲ್ಲಗಳೆಯಲಾಗಿದೆ. (27ಘ) ವಾಕ್ಯವೂ ಇದೇ (27ಖ) ವಾಕ್ಯದ ಅಲ್ಲಗಳೆಯುವ ರೂಪವೆಂದು ಹೇಳಲು ಸಾಧ್ಯವಿದೆ. ಯಾಕೆಂದರೆ ಅದಕ್ಕೆ (27ಗ)ದ ಅರ್ಥವೇ ಇದೆ.
ಆದರೆ (27ಙ)ದಲ್ಲಿ ಇಲ್ಲ ಪದದ ಬಳಕೆಯಾಗಿದೆಯಾದ ಕಾರಣ, ಅದನ್ನು ಸಂಗತಿಯೊಂದನ್ನು ತಿಳಿಸುವ (27ಕ) ವಾಕ್ಯದ ಅಲ್ಲಗಳೆಯುವ ರೂಪವೆಂದು ಹೇಳಬೇಕಾಗುತ್ತದೆ. ಯಾಕೆಂದರೆ, ಅದು ನೇರವಾಗಿ ಒಂದು ಸಂಗತಿಯನ್ನೇ ಅಲ್ಲಗಳೆಯುತ್ತಿದೆಯಲ್ಲದೆ ಅದಕ್ಕೂ ಮತ್ತು ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಿಲ್ಲ.
9.3.2 ಪದಗಳನ್ನು ಅಲ್ಲಗಳೆಯುವುದು
ಸಂಸ್ಕೃತದಲ್ಲಿ ವಾಕ್ಯಗಳು ಸೂಚಿಸುವ ಅರ್ಥದ ಹಾಗೆಯೇ ಪದಗಳು ಸೂಚಿಸುವ ಅರ್ಥವನ್ನೂ ಅಲ್ಲಗಳೆಯಲು ಸಾಧ್ಯವಿದೆ. ಇದಕ್ಕಾಗಿ ಆ ಭಾಷೆಯಲ್ಲಿ ಪದಗಳ ಎದುರಿಗೆ ಅ-ಅನ್, ನ ಇಲ್ಲವೇ ನಿರ್ ಎಂಬ ಪ್ರತ್ಯಯಗಳಲ್ಲೊಂದನ್ನು ಬಳಸ ಬೇಕಾಗುತ್ತದೆ. ಕನ್ನಡದಲ್ಲೂ ಇಂತಹ ಪ್ರತ್ಯಯಗಳ ಬಳಕೆಯನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ಕೆಲವು ಪದಗಳಲ್ಲಿ ಕಾಣಬಹುದು. (ಕ) ಅ ಪ್ರತ್ಯಯ (ಇದು ವ್ಯಂಜನಗಳ ಎದುರು ಬರುತ್ತದೆ). ತೃಪ್ತಿ ಸಾಧ್ಯ
ನ್ಯಾಯ
ಜ್ಞಾನ
ಅತೃಪ್ತಿ ಅಸಾಧ್ಯ ಅನ್ಯಾಯ ಅಜ್ಞಾನ (ಖ) ಅನ್ ಪ್ರತ್ಯಯ (ಇದು ಸ್ವರಗಳ ಎದುರು ಬರುತ್ತದೆ) ಅನಾಚಾರ ಅನರ್ಥ ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಅನಿಷ್ಟ ಅನುತ್ತೀರ್ಣ (ಗ) ನ ಪ್ರತ್ಯಯ ನಾಸ್ತಿಕ
(ಘ) ನಿರ್ ಪ್ರತ್ಯಯ (ಇದಕ್ಕೆ ನಿರ್, ನಿಸ್, ನಿಶ್ ಮೊದಲಾದ ರೂಪಗಳಿವೆ) ಉದ್ಯೋಗ ಉಪಯುಕ್ತ ಪ್ರಯೋಜನ ನಿರಾಧಾರ ನಿರುದ್ಯೋಗ ನಿರುಪಯುಕ್ತ ನಿಜ್ರೀವಿ ನಿಶ್ಚಿಂತೆ
ನಿಷ್ಪ್ರಯೋಜನ ನಿಸ್ಸಾರ ಆದರೆ ಕನ್ನಡದವೇ ಆದ ಪದಗಳ ಅರ್ಥವನ್ನು ಅಲ್ಲಗಳೆಯುವುದಕ್ಕಾಗಿ ಈ ರೀತಿ ಪ್ರತ್ಯಯಗಳ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಅಂತಹ ಪದ ಗಳೊಂದಿಗೆ ಅಲ್ಲದ ಇಲ್ಲವೇ ಇಲ್ಲದ ಎಂಬ ಪದವನ್ನು ಸೇರಿಸಿ ಹೇಳುವುದರ ಮೂಲಕ ಅಂತಹದೇ ಅಲ್ಲಗಳೆಯುವ ಅರ್ಥವನ್ನು ಪಡೆಯಬಹುದು. (28ಕ) ಹಣವಿಲ್ಲದವರನ್ನು ಯಾರೂ ಮಾತನಾಡಿಸುವುದಿಲ್ಲ. (28ಖ) ಬಿಳಿಯಲ್ಲದ ಹೂವನ್ನು ಕೀಳಬೇಡಿ. (28ಗ) ನಮ್ಮದಲ್ಲದ ವಸ್ತು ನಮಗೆ ಬೇಡ.
9.3.3 ಅಲ್ಲಗಳೆಯುವ ಕ್ರಿಯಾರೂಪಗಳು
ತಿಳಿಸುವ ವಾಕ್ಯಗಳನ್ನು ಬೇರೊಂದು ವಾಕ್ಯದ ಇಲ್ಲವೇ ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸುವುದಿದ್ದಲ್ಲಿ, ಅಂತಹ ವಾಕ್ಯದ ಇಲ್ಲವೇ ಪದ ಕಂತೆಯ ಅಂಗಗಳನ್ನು ಅಲ್ಲಗಳೆಯುವುದಕ್ಕಾಗಿ ಕೆಲವು ವಿಶಿಷ್ಟವಾದ ಕ್ರಿಯಾರೂಪ ಗಳನ್ನು ಬಳಸಲಾಗುತ್ತದೆ. (29ಕ) ಜಾನಕಿ ಅಡಿಗೆ ಮಾಡಲಿಲ್ಲ. (29ಖ) ಜಾನಕಿ ಅಡಿಗೆ ಮಾಡದುದನ್ನು ಯಾರೂ ಗಮನಿಸಲಿಲ್ಲ. (29ಗ) ಅಡಿಗೆ ಮಾಡದ ಜಾನಕಿ ಊಟವನ್ನೂ ಮಾಡಲಿಲ್ಲ. (29ಕ)ದಲ್ಲಿ ಬಂದಿರುವ ವಾಕ್ಯವನ್ನು (29ಖ)ದಲ್ಲಿ ಬೇರೊಂದು ವಾಕ್ಯದ ಅಂಗವನ್ನಾಗಿ (ಒಳವಾಕ್ಯವನ್ನಾಗಿ) ಮಾಡಿ ಬಳಸಲಾಗಿದೆ, ಮತ್ತು ಹೀಗೆ ಮಾಡುವಾಗ, ಅದರ ಕೊನೆಯಲ್ಲಿ ಬಂದಿರುವ ಮಾಡಲಿಲ್ಲ ಎಂಬ ಕ್ರಿಯಾ ರೂಪದ ಬದಲು ಮಾಡದುದು ಎಂಬ ಅದೇ ಕ್ರಿಯಾಪದದ ನಾಮಪದ ರೂಪವನ್ನು ಬಳಸಲಾಗಿದೆ. ಈ ಮಾಡದುದು ಎಂಬ ಕ್ರಿಯಾರೂಪಕ್ಕೇನೇ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ ಅದರೊಂದಿಗೆ ಇಲ್ಲ ಪದವನ್ನು ಬಳಸಬೇಕಾಗಿಲ್ಲ ಎಂಬುದನ್ನು ಗಮನಿಸಬಹುದು. ಇದೇ ರೀತಿಯಲ್ಲಿ, (29ಗ) ವಾಕ್ಯದಲ್ಲಿ (29ಕ) ವಾಕ್ಯವನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿ ಬಳಸಲಾಗಿದೆ ಮತ್ತು ಅದಕ್ಕಾಗಿ ಅದರ ಕೊನೆಯಲ್ಲಿ ಬರುವ ಮಾಡಲಿಲ್ಲ ಕ್ರಿಯಾಪದವನ್ನು ಮಾಡದ ಎಂಬುದಾಗಿ ಬದಲಾಯಿಸಲಾಗಿದೆ. ಈ ಕ್ರಿಯಾರೂಪಕ್ಕೂ ಅಲ್ಲಗಳೆಯುವ ಅರ್ಥವಿದೆ.
ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಕೆಲವು ವಿಶಿಷ್ಟವಾದ ಕ್ರಿಯಾರೂಪಗಳ ಮೂಲಕ ಜೋಡಿಸುವಂತಹ ಸಂದಭ್ರಗಳಲ್ಲೂ ಇಲ್ಲ ಇಲ್ಲವೇ ಅಲ್ಲ ಎಂಬ ಪದಗಳ ಬದಲು ವಿಶಿಷ್ಟವಾದ ಕ್ರಿಯಾರೂಪಗಳನ್ನು ಬಳಸುವುದರ ಮೂಲಕ ಅಲ್ಲಗಳೆಯುವ ಅರ್ಥವನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (30ಕ) ಜಾನಕಿ ಊಟ ಮಾಡಲಿಲ್ಲ; ಹಾಗೆಯೇ ಮಲಗಿದ್ದಾಳೆ. (30ಖ) ಜಾನಕಿ ಊಟ ಮಾಡದೆ ಮಲಗಿದ್ದಾಳೆ. (30ಕ)ದಲ್ಲಿ ಬಂದಿರುವ ಎರಡು ವಾಕ್ಯಗಳನ್ನು ಮೊದಲನೆಯ ವಾಕ್ಯದಲ್ಲಿ ಬಂದಿರುವ ಮಾಡಲಿಲ್ಲ ಕ್ರಿಯಾರೂಪದ ಬದಲು ಮಾಡದೆ ಕ್ರಿಯಾರೂಪವನ್ನು ಬಳಸಿ ಜೋಡಿಸಲಾಗಿದೆ (8.2.3 ನೋಡಿ). ಈ ಮಾಡದೆ ಕ್ರಿಯಾರೂಪಕ್ಕೆ ಅಲ್ಲಗಳೆಯುವ ಅರ್ಥವಿದೆಯಾದ ಕಾರಣ (30ಖ)ದಲ್ಲಿ ಇಲ್ಲ ಪದವನ್ನು ಬಳಸ ದಿದ್ದರೂ ಅಲ್ಲಗಳೆಯುವ ಅರ್ಥ ಉಳಿದುಕೊಂಡಿದೆ. ಅಲ್ಲಗಳೆಯುವ ವಾಕ್ಯವನ್ನು ಸಂಬಂಧಿಸುವ ವಾಕ್ಯವನ್ನಾಗಿ ಬದಲಾಯಿಸಿ ದಾಗಲೂ ಅಲ್ಲಗಳೆಯುವ ಅರ್ಥವನ್ನು ಸೂಚಿಸಲು ಇಂತಹ ವಿಶಿಷ್ಟವಾದ ಕ್ರಿಯಾರೂಪದ ಬಳಕೆಯಾಗುತ್ತದೆ. (31ಕ) ಆಕೆ ಮದುವೆಗೆ ಸೀತಾಬಾಯಿಯನ್ನು ಕರೆಯಲಿಲ್ಲ. (31ಖ) ಆಕೆ ಮದುವೆಗೆ ಕರೆಯದುದು ಸೀತಾಬಾಯಿಯನ್ನು. ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಇದಲ್ಲದೆ, ಇನ್ನೊಬ್ಬ ವ್ಯಕ್ತಿಯ ಮೂಲಕ ಕೆಲಸ ಮಾಡಿಸಿಕೊಳ್ಳುವ ವಾಕ್ಯಗಳ ಬಳಕೆಯಲ್ಲೂ (10.5 ನೋಡಿ) ಇಂತಹ ಅಲ್ಲಗಳೆಯುವ ಕ್ರಿಯಾರೂಪದ ಬಳಕೆಯನ್ನು ಕಾಣಬಹುದು. ಉದಾಹರಣೆಗಾಗಿ, ಇನ್ನೊಬ್ಬ ವ್ಯಕ್ತಿಯ ಮೂಲಕ ಕೆಲಸವೊಂದನ್ನು ಮಾಡಿಸಿಕೊಳ್ಳುವ ಬದಲು ಆತ ಆ ಕೆಲಸವನ್ನು ಮಾಡದಂತೆ ತಡೆಗಟ್ಟಬೇಕಿದ್ದಲ್ಲಿ ಬೇಡ ಇಲ್ಲವೇ ಬೇಡಿ ಎಂಬ ಕ್ರಿಯಾರೂಪದ ಬಳಕೆ ಯಾಗುತ್ತದೆ. (32ಕ) ನೀವು ಮೇಲೆ ಹೋಗಿ. (32ಖ) ನೀವು ಮೇಲೆ ಹೋಗಬೇಡಿ. (33ಕ) ರಾಜು ಮನೆಗೆ ಹೋಗಲಿ. (33ಖ) ರಾಜು ಮನೆಗೆ ಹೋಗುವುದು ಬೇಡ. (32ಖ)ದಲ್ಲಿ ಬಂದಿರುವ ಬೇಡಿ ಕ್ರಿಯಾರೂಪಕ್ಕೆ ಮತ್ತು (33ಖ)ದಲ್ಲಿ ಬಂದಿರುವ ಬೇಡ ಕ್ರಿಯಾರೂಪಕ್ಕೆ ಅಲ್ಲಗಳೆಯುವ ಅರ್ಥವಿದೆ.
9.3.4 ಎರಡು ಬಾರಿ ಅಲ್ಲಗಳೆಯುವುದು
ವಾಕ್ಯವೊಂದನ್ನು ಎರಡನೆಯ ಬಾರಿ ಅಲ್ಲಗಳೆಯಬೇಕಿದ್ದಲ್ಲಿ ಅದರ ಕೊನೆಯಲ್ಲಿ ಎಂದು ಪದವನ್ನು ಬಳಸಬೇಕಾಗುತ್ತದೆ. ಎಂದರೆ, ಇಲ್ಲಿ ಒಂದು ಅಲ್ಲಗಳೆಯುವ ವಾಕ್ಯವನ್ನು ‘ಎತ್ತಿಹೇಳಿ’, ಅದನ್ನೇ ಇನ್ನೊಮ್ಮೆ ಅಲ್ಲಗಳೆಯಲಾಗುತ್ತದೆ.
(34ಕ) ಅವನು ಪತ್ತೇದಾರಿ ಕತೆ ಓದುತ್ತಾನೆ. (34ಖ) ಅವನು ಪತ್ತೇದಾರಿ ಕತೆ ಓದುವುದಿಲ್ಲ. (34ಗ) ಅವನು ಪತ್ತೇದಾರಿ ಕತೆ ಓದುವುದಿಲ್ಲವೆಂದಿಲ್ಲ.
(34ಕ)ದಲ್ಲಿ ಬಂದಿರುವ ತಿಳಿಸುವ ವಾಕ್ಯವನ್ನು (34ಖ)ದಲ್ಲಿ ಅಲ್ಲಗಳೆಯ ಲಾಗಿದೆ. ಇದನ್ನೇ (34ಗ)ದಲ್ಲಿ ಮತ್ತೊಮ್ಮೆ ಅಲ್ಲಗಳೆಯಲಾಗಿದೆ. ಈ ರೀತಿ ಎರಡನೆಯ ಬಾರಿ ಅಲ್ಲಗಳೆದಿರುವ ವಾಕ್ಯ ‘ಘಟನೆಯೊಂದು ನಡೆಯುತ್ತದೆ’ ಎಂಬುದಾಗಿ ‘ಅಲ್ಲಗಳೆಯದ’ ಅರ್ಥವನ್ನು ಕೊಡುವುದಾದರೂ, ಅದಕ್ಕೂ ನೇರ ವಾಗಿ ಒಂದು ಘಟನೆ ನಡೆದಿದೆ ಎಂಬುದನ್ನು ತಿಳಿಸುವ ವಾಕ್ಯಕ್ಕೂ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು.
ಮೇಲೆ (34ಗ) ವಾಕ್ಯದಲ್ಲಿ ಎರಡನೆಯ ಬಾರಿಗೆ ಬಂದಿರುವ ಇಲ್ಲ ಪದ ಮೊದಲನೆಯ ಬಾರಿಗೆ ಬಂದಿರುವ ಅದೇ ಪದವನ್ನು ಹೊಡೆದು ಹಾಕಿರುವು ದೇನೋ ನಿಜ. ಆದರೂ ಆ ವಾಕ್ಯಕ್ಕೆ (34ಕ) ವಾಕ್ಯದ ಅರ್ಥಕ್ಕಿಂತ ಸ್ವಲ್ಪ ಮಟ್ಟಿಗೆ ಭಿನ್ನವಾದ ಅರ್ಥವಿದೆ. ಅದು ಸೂಚಿಸುವ ಘಟನೆ ಅಪರೂಪವಾಗಿ ಮಾತ್ರ ನಡೆಯುತ್ತದೆ ಎಂಬುದಾಗಿ ಒಂದು ವಿಶಿಷ್ಟವಾದ ಅರ್ಥ ಆ ವಾಕ್ಯಕ್ಕೆ ಸೇರಿಕೊಳ್ಳುತ್ತದೆ.
9.3.5 ಅಳತೆಯನ್ನು ಅಲ್ಲಗಳೆಯುವುದು
ಒಂದು ವಸ್ತುವಿನ ಅಳತೆ ಇಲ್ಲವೇ ಪರಿಮಾಣವನ್ನು ತಿಳಿಸುವ ವಾಕ್ಯವನ್ನು ಅಲ್ಲಗಳೆದಾಗ, ಸಾಮಾನ್ಯವಾಗಿ ಆ ವಸ್ತುವು ಆ ವಾಕ್ಯದಲ್ಲಿ ಸೂಚಿಸಿದ ಪರಿಮಾಣಕ್ಕಿಂತ ಕಡಿಮೆ ಪರಿಮಾಣದಲ್ಲಿದೆಯೆಂಬ ಅರ್ಥ ಬರುತ್ತದೆ. ಆದರೆ ಇಂತಹ ವಾಕ್ಯಗಳನ್ನು ‘ಸಂಬಂಧಿಸುವ’ ರೂಪದಲ್ಲಿ ಬಳಸಿದೆವಾದರೆ ಈ ರೀತಿ ‘ಕಡಿಮೆ’ ಎಂಬ ಅರ್ಥ ಬರುವುದಿಲ್ಲ. (35ಕ) ಈ ಡಬ್ಬದಲ್ಲಿ ನಾಲ್ಕು ಸೇರು ಅಕ್ಕಿ ಇದೆ. (35ಖ) ಈ ಡಬ್ಬದಲ್ಲಿ ನಾಲ್ಕು ಸೇರು ಅಕ್ಕಿ ಇಲ್ಲ. (36ಕ) ಈ ಡಬ್ಬದಲ್ಲಿ ಅಕ್ಕಿಯಿರುವುದು ನಾಲ್ಕು ಸೇರು. (36ಖ) ಈ ಡಬ್ಬದಲ್ಲಿ ಅಕ್ಕಿಯಿರುವುದು ನಾಲ್ಕು ಸೇರಲ್ಲ. (35ಖ) ವಾಕ್ಯಕ್ಕೆ ಸಾಮಾನ್ಯವಾಗಿ ಈ ಡಬ್ಬಿಯಲ್ಲಿ ನಾಲ್ಕು ಸೇರಿಗಿಂತ ಕಡಿಮೆ ಅಕ್ಕಿ ಇದೆ ಎಂಬ ಅರ್ಥ ಬರುತ್ತದೆ. ಆದರೆ (36ಖ) ವಾಕ್ಯಕ್ಕೆ ಈ ರೀತಿ ಕಡಿಮೆ ಎಂಬ ಅರ್ಥ ಬರುವುದಿಲ್ಲ ಎಂಬುದನ್ನು ಗಮನಿಸಬಹುದು. ಡಬ್ಬಿಯಲ್ಲಿ ನಾಲ್ಕು ಸೇರಿಗಿಂತ ಜಾಸ್ತಿ ಅಕ್ಕಿಯಿದೆಯಾದಲ್ಲಿ (36ಖ)ವನ್ನು ಬಳಸಲು ಸಾಧ್ಯವಿದೆ, ಆದರೆ (35ಖ)ವನ್ನು ಬಳಸಲು ಸಾಧ್ಯವಾಗದು. ಇಂತಹ ಅಲ್ಲಗಳೆಯುವ ವಾಕ್ಯಗಳ ಬಳಕೆಗೆ ಬೇರೆ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ. (37ಕ) ಈ ಗೋಡೆ ಐದಡಿ ಎತ್ತರ ಇಲ್ಲ. (37ಖ) ಈ ಗೋಡೆಯ ಎತ್ತರ ಐದಡಿ ಅಲ್ಲ. (38ಕ) ಆಕೆ ಮೂರು ಮೈಲು ನಡೆಯಲಿಲ್ಲ. (38ಖ) ಆಕೆ ನಡೆದುದು ಮೂರು ಮೈಲಲ್ಲ.
9.3.6 ಕೆಲವು ವಿಶಿಷ್ಟ ಪದಗಳ ಬಳಕೆ
ಅಲ್ಲಗಳೆಯುವ ವಾಕ್ಯಗಳಲ್ಲಿ ಮಾತ್ರವೇ ಬಳಕೆಯಾಗಬಲ್ಲ ಕೆಲವು ವಿಶಿಷ್ಟವಾದ ಪದ ಮತ್ತು ಪದಕಂತೆಗಳು ಕನ್ನಡದಲ್ಲಿವೆ. ಇವುಗಳಲ್ಲಿ ಕೆಲವನ್ನು ಕೇಳ್ವಿಗಳಲ್ಲೂ ಸಂಬಂಧಿಸುವುದು ಮತ್ತು ಅಲ್ಲಗಳೆಯುವುದು ಬಳಸಬಹುದು 10.4.7 ನೋಡಿ). ಉದಾಹರಣೆಗಾಗಿ, ಗೊಡವೆ ಪದವನ್ನು ಅಲ್ಲಗಳೆಯುವ ವಾಕ್ಯಗಳಲ್ಲಿ ಇಲ್ಲವೇ ಕೇಳ್ವಿಗಳಲ್ಲಿ ಬಳಸುತ್ತೇವಲ್ಲದೆ, ಇತರ ವಾಕ್ಯಗಳಲ್ಲಿ ಬಳಸುವುದಿಲ್ಲ. (39ಕ) ಆಕೆ ಯಾರ ಗೊಡವೆಗೂ ಹೋಗುವುದಿಲ್ಲ. (39ಖ) ಆಕೆ ರಾಜುವಿನ ಗೊಡವೆಗೆ ಹೋದುದು ಯಾಕೆ? ಯಾರು, ಏನು, ಎಲ್ಲಿ ಮೊದಲಾದ ಸವ್ರಪದಗಳಿಗೆ ಊ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಯಾರೂ, ಏನೂ, ಎಲ್ಲೂ ಮೊದಲಾದ ಅನಿಶ್ಚಯಾರ್ಥದ ಪದಗಳೂ ಅಲ್ಲಗಳೆಯುವ ವಾಕ್ಯಗಳಲ್ಲಿ ಇಲ್ಲವೇ ಕೇಳ್ವಿಗಳಲ್ಲಿ ಬರಬಲ್ಲುವಲ್ಲದೆ ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಇಲ್ಲವೇ ಸಂಬಂಧಿಸುವ ವಾಕ್ಯಗಳಲ್ಲಿ ಬರ ಲಾರವು. (40ಕ) ರಾಜುವಿನ ಪಾಟ್ರಿಗೆ ಯಾರೂ ಬರಲಿಲ್ಲ. (40ಖ) ರಾಜುವಿನ ಪಾಟ್ರಿಗೆ ಯಾರೂ ಬರಲಿಲ್ಲವೇ? ತಿಳಿಸುವ ವಾಕ್ಯಗಳಲ್ಲಿ ಅನಿಶ್ಚಯತೆಯಿದೆಯಾದರೆ ಮಾತ್ರ ಅಂತಹ ವಾಕ್ಯಗಳಲ್ಲಿ ಈ ಪದಗಳನ್ನು ಬಳಸಲು ಸಾಧ್ಯ. (40ಗ) ರಾಜುವಿನ ಪಾಟ್ರಿಗೆ ಯಾರೂ ಹೋಗಬಹುದು. ಇಂತಹ ಅನಿಶ್ಚಯಾರ್ಥಕ ಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವ ನಿಬ್ರಂಧಗಳ ಕುರಿತಾಗಿ ಜಾಸ್ತಿ ವಿವರಗಳಿಗೆ ಭಟ್ 2003: 167) ನೋಡಿ. ಇದೇ ರೀತಿಯಲ್ಲಿ ಅಲ್ಲಗಳೆಯುವ ವಾಕ್ಯಗಳಲ್ಲಿ ಬಳಕೆಯಾಗದಂತಹ (ಮತ್ತು ನೇರವಾಗಿ ತಿಳಿಸುವ ವಾಕ್ಯಗಳಲ್ಲಿ ಬಳಕೆಯಾಗುವ) ಬೇರೆ ಕೆಲವು ವಿಶಿಷ್ಟವಾದ ಪದ ಮತ್ತು ಪದಕಂತೆಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಆಗಲೇ ಪದವನ್ನು ಬಳಸಿರುವ ಕೆಳಗಿನ ವಾಕ್ಯವನ್ನು ಅಲ್ಲಗಳೆಯಲು ಸಾಧ್ಯ ವಾಗದು. (41) ಅವಳು ಆಗಲೇ ಬಂದಿದ್ದಾಳೆ. ಇದಲ್ಲದೆ, ಅಲ್ಲಗಳೆಯುವ ವಾಕ್ಯಗಳಲ್ಲಿ ಬಹಳ ಪದದ ಬದಲು ಸಾಮಾನ್ಯ ವಾಗಿ ಜಾಸ್ತಿ ಇಲ್ಲವೇ ಅಷ್ಟೊಂದು ಎಂಬುದನ್ನು ಬಳಸುವುದು ರೂಢಿ. (42ಕ) ಅವಳ ಮದುವೆಗೆ ಬಹಳ ಜನ ಬಂದಿದ್ದರು. (42ಖ) ಅವಳ ಮದುವೆಗೆ ಜಾಸ್ತಿ ಜನ ಬಂದಿರಲಿಲ್ಲ. (43ಕ) ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು. (43ಖ) ಚುನಾವಣೆಯ ಸಭೆಯಲ್ಲಿ ಅಷ್ಟೊಂದು ಜನ ಸೇರಿರಲಿಲ್ಲ.
9.4 ಸಾರಾಂಶ
ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದಕ್ಕೂ ಅದರ ಒಂದು ಘಟಕಕ್ಕೂ ನಡುವೆ ಸಂಬಂಧವಿದೆ ಎಂಬುದಾಗಿ ಸೂಚಿಸಲು ಸಾಧ್ಯವಿದೆ. ಇದಕ್ಕಾಗಿ ಸಂಬಂಧಿಸುವ ವಾಕ್ಯಗಳ ಬಳಕೆಯಾಗುತ್ತದೆ. ಇದೇ ರೀತಿಯಲ್ಲಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದರ ನಡೆಯುವಿಕೆ ಇಲ್ಲವೇ ಇರುವಿಕೆಯನ್ನು ಅಲ್ಲಗಳೆಯಲು ಸಾಧ್ಯವಿದೆ. ಇದಕ್ಕಾಗಿ ಅಲ್ಲಗಳೆಯುವ ವಾಕ್ಯಗಳ ಬಳಕೆಯಾಗುತ್ತದೆ. ಈ ಎರಡು ರೀತಿಯ ವಾಕ್ಯಗಳನ್ನೂ ತಿಳಿಸುವ ವಾಕ್ಯಗಳಲ್ಲೇನೇ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ತಯಾರಿಸಿಕೊಳ್ಳಲು ಸಾಧ್ಯವಿದೆ.