Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಏಳು — ಒಳವಾಕ್ಯಗಳು
7.1 ಪೀಠಿಕೆ
ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಒಟ್ಟು ಸೇರಿಸಿ ಒಂದೇ ವಾಕ್ಯವನ್ನಾಗಿ ಮಾಡಿ ಹೇಳಲು ಕನ್ನಡದಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ. ಒಂದು ವಾಕ್ಯವನ್ನು ಇನ್ನೊಂದರೊಳಗೆ ಇರಿಸಿ ಹೇಳುವುದು ಒಂದು ವಿಧಾನ, ಮತ್ತು ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಮತ್ತು, ಅಥವಾ, ಆದರೆ ಮೊದಲಾದ ಪದಗಳ ಮೂಲಕ, ಇಲ್ಲವೇ ಊ, ಏ ಮೊದಲಾದ ಪ್ರತ್ಯಯಗಳ ಮೂಲಕ ಜೋಡಿಸಿ ಹೇಳುವುದು ಇನ್ನೊಂದು ವಿಧಾನ. ಇವುಗಳಲ್ಲಿ ಮೊದಲನೆಯ ವಿಧಾನವನ್ನು ಈ ಅಧ್ಯಾಯದಲ್ಲೂ ಮತ್ತು ಎರಡನೆಯ ವಿಧಾನವನ್ನು ಮುಂದೆ ಎಂಟನೇ ಅಧ್ಯಾಯದಲ್ಲೂ ವಿವರಿಸಲಾಗುವುದು. ಒಂದು ವಾಕ್ಯವನ್ನು ಇನ್ನೊಂದರೊಳಗೆ ಇರಿಸಿ ಹೇಳಿದಾಗ ಅವುಗಳಲ್ಲಿ ಹೊರಗೆ ನಿಲ್ಲುವ ವಾಕ್ಯವನ್ನು ‘ಹೊರವಾಕ್ಯ’ವೆಂದೂ ಮತ್ತು ಒಳಗೆ ನಿಲ್ಲುವ ವಾಕ್ಯವನ್ನು ‘ಒಳವಾಕ್ಯ’ವೆಂದೂ ಕರೆಯಬಹುದು. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಮೂರು ವಾಕ್ಯಗಳನ್ನು ಹೋಲಿಸಿ ನೋಡಬಹುದು. (1ಕ) ಇವತ್ತು ಬೇಗನೆ ಬರಬೇಕು. (1ಖ) ಶಾಮರಾಯರು (ಏನೋ) ಹೇಳಿದ್ದಾರೆ. ಶಾಮರಾಯರು ಇವತ್ತು ಬೇಗನೆ ಬರಬೇಕೆಂದು ಹೇಳಿದ್ದಾರೆ. (1ಕ) ವಾಕ್ಯವನ್ನು (1ಖ) ವಾಕ್ಯದ ‘ಒಳಗೆ’ (ಏನೋ ಎಂಬ ಪದದ ಜಾಗ ದಲ್ಲಿ) ಇರಿಸಿ (1ಗ) ವಾಕ್ಯವನ್ನು ತಯಾರಿಸಲಾಗಿದೆ, ಮತ್ತು ಇದಕ್ಕಾಗಿ (1ಕ) ವಾಕ್ಯದ ಕೊನೆಯಲ್ಲಿ ಎಂದು ಪದವನ್ನು ಸೇರಿಸಲಾಗಿದೆ.
ಬೇರೆ ಬೇರೆ ರೀತಿಯ ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದ್ದು, ಇದಕ್ಕಾಗಿ ಈ ಉದ್ದೇಶಗಳನ್ನನುಸರಿಸಿ ಬೇರೆ ಬೇರೆ ವಿಧಾನಗಳನ್ನೂ ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯು ಏನು ಹೇಳಿರುವನೆಂಬುದನ್ನು ಎತ್ತಿ ಹೇಳ ಬೇಕಿದ್ದಾಗ ಮೇಲೆ ಸೂಚಿಸಿದಂತೆ ಆತ ಬಳಸಿರುವ ವಾಕ್ಯಕ್ಕೆ ಎಂದು ಪದವನ್ನು ಸೇರಿಸಿ ಅದನ್ನು ಒಳವಾಕ್ಯವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ.
ಇದಕ್ಕೆ ಬದಲು, ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸಬೇಕಾಗಿರುವಾಗ, ಅದಕ್ಕಾಗಿ ಒಂದು ವಾಕ್ಯವನ್ನು ಬಳಸಲು ಸಾಧ್ಯವಿದ್ದು, ಅಂತಹ ವಾಕ್ಯವನ್ನೂ ಇನ್ನೊಂದು ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದೆ. ಆದರೆ, ಇದಕ್ಕಾಗಿ ಆ ವಾಕ್ಯದಲ್ಲಿ ಬೇರೆ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ (2ಕ-ಘ) ವಾಕ್ಯಗಳಲ್ಲಿ ಕಾಣಬಹುದು. (2ಕ) ಹಣ್ಣು ಚನ್ನಾಗಿಲ್ಲ. (2ಖ) ರಾಜು ಒಂದು ಹಣ್ಣು ಕೊಟ್ಟಿದ್ದ. (2ಘ) ರಾಜು ಯಾವ ಹಣ್ಣನ್ನು ಕೊಟ್ಟಿದ್ದನೋ ಅದು ಚನ್ನಾಗಿಲ್ಲ. ರಾಜು ಕೊಟ್ಟಿದ್ದ ಹಣ್ಣು ಚನ್ನಾಗಿಲ್ಲ. (2ಕ)ದಲ್ಲಿ ಬಂದಿರುವ ಹಣ್ಣು ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ. ಅದೇ ವಸ್ತುವನ್ನು ಇನ್ನಷ್ಟು ಸ್ಪಷ್ಟವಾಗಿ ವರ್ಣಿಸಲು (2ಖ) ವಾಕ್ಯವನ್ನು (2ಕ) ವಾಕ್ಯದ ಒಳಗೆ ಇರಿಸಿ ಹೇಳಲು ಸಾಧ್ಯವಿದೆ. ಇದಕ್ಕಾಗಿ ಆ ವಾಕ್ಯದಲ್ಲಿ ಬೇರೆ ಎರಡು ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು (2ಗ) ಮತ್ತು (2ಘ) ವಾಕ್ಯಗಳಲ್ಲಿ ಕಾಣಬಹುದು. ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಬಳಸುವ ಮುಖ್ಯ ಸಂದಭ್ರಗಳು ಯಾವುವು ಮತ್ತು ಅಂತಹ ಸಂದಭ್ರಗಳಲ್ಲಿ ಎಂತಹ ಬದಲಾವಣೆಗಳನ್ನೆಲ್ಲ ಆ ವಾಕ್ಯಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕೆಳಗೆ ಸ್ವಲ್ಪ ವಿವರವಾಗಿ ತಿಳಿಸಲಾಗಿದೆ.
7.2 ಎತ್ತಿ ಹೇಳುವುದು
ಇನ್ನೊಬ್ಬನ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಎತ್ತಿ ಹೇಳಲು ಕನ್ನಡದಲ್ಲಿ ಮುಖ್ಯವಾಗಿ ಎರಡು ವಿಧಾನಗಳು ಬಳಕೆಯಲ್ಲಿವೆ. ಆ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಸೂಚಿಸುವ ವಾಕ್ಯವನ್ನು ಅಂತೆ ಪದದೊಂದಿಗೆ ಬಳಸುವುದು ಒಂದು ವಿಧಾನ, ಮತ್ತು ಆ ವಾಕ್ಯಕ್ಕೆ ಎಂದು ಪದವನ್ನು ಸೇರಿಸಿ ಅದನ್ನು ಬೇರೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಬಳಸುವುದು ಇನ್ನೊಂದು ವಿಧಾನ. (3ಕ) ಇವತ್ತೊಂದು ಸಭೆಯಿದೆಯಂತೆ. (3ಖ) ಇವತ್ತೊಂದು ಸಭೆಯಿದೆಯೆಂದು ರಾಜು ತಿಳಿಸಿದ್ದಾನೆ. (3ಕ) ವಾಕ್ಯದಲ್ಲಿ ಇವತ್ತೊಂದು ಸಭೆಯಿದೆ ಎಂಬ ವಾಕ್ಯವನ್ನು ಅಂತೆ ಪದದೊಂದಿಗೆ ಬಳಸಲಾಗಿದೆ ಮತ್ತು (3ಖ)ದಲ್ಲಿ ಅದೇ ವಾಕ್ಯಕ್ಕೆ ಎಂದು ಪದ ವನ್ನು ಸೇರಿಸಿ ಅದನ್ನು ರಾಜು (ಏನನ್ನೋ) ತಿಳಿಸಿದ್ದಾನೆ ಎಂಬ ವಾಕ್ಯದ ಒಳ ವಾಕ್ಯವನ್ನಾಗಿ ಮಾಡಿ ಬಳಸಲಾಗಿದೆ. ಇದಲ್ಲದೆ, ಎತ್ತಿ ಹೇಳಲಿರುವ ವಾಕ್ಯವನ್ನು ಎತ್ತಿಹೇಳುವ ಚಿಹ್ನೆಯ ಒಳಗೆ ಇರಿಸುವ ಇನ್ನೊಂದು ವಿಧಾನವೂ ಬರಹದಲ್ಲಿ ಬಳಕೆಯಲ್ಲಿದೆ. ಈ ಚಿಹ್ನೆಯ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. ‘ಇವತ್ತೊಂದು ಸಭೆಯಿದೆ’ ಎಂದು ರಾಜು ತಿಳಿಸಿದ. (4ಖ) ರಾಜು ತಿಳಿಸಿದ: ‘ಇವತ್ತೊಂದು ಸಭೆಯಿದೆ’.
7.2.1 ಅಂತೆ ಎಂಬುದರ ಬಳಕೆ
ಸಾಮಾನ್ಯವಾಗಿ, ಒಂದು ಸಂಗತಿಯನ್ನು ನಿಶ್ಚಿತವಾಗಿಯೂ ಇಂತಹವರೇ ಹೇಳಿರುವರೆಂಬುದಾಗಿ ತಿಳಿಸಲು ಸಾಧ್ಯವಿಲ್ಲದಂತಹ (ಇಲ್ಲವೇ ಹಾಗೆ ತಿಳಿಸುವ ಅವಶ್ಯಕತೆಯಿಲ್ಲದಂತಹ) ಸಂದಭ್ರದಲ್ಲಿ ಆ ಸಂಗತಿಯನ್ನು ಎತ್ತಿ ಹೇಳುವು ದಕ್ಕಾಗಿ ಅಂತೆ ಪದದ ಬಳಕೆಯಾಗುತ್ತದೆ. ಇದರ ಬಳಕೆಯಾಗುವಲ್ಲಿ ಆ ಹೇಳಿಕೆ ಗಳ ಮೂಲ ಯಾವುದೆಂಬುದನ್ನು (ಅದನ್ನು ಯಾರು ಎಲ್ಲಿ ಯಾವಾಗ ಹೇಳಿದರು ಎಂಬುದನ್ನು) ಸೂಚಿಸುವ ಪದ್ಧತಿಯಿಲ್ಲ.
ಇದಲ್ಲದೆ, ಒಬ್ಬ ವ್ಯಕ್ತಿ ತನ್ನ ವಿಷಯವಾಗಿ ಅಂತೆ ಪದವನ್ನು ಬಳಸಿ ಏನಾದರೂ ಹೇಳುವುದಿದ್ದಲ್ಲಿ, ಅದು ಆತನ ಹತೋಟಿಯಲ್ಲಿಲ್ಲದ ಘಟನೆಯ ಕುರಿತಾಗಿರಬೇಕು ಇಲ್ಲವೇ ಆತ ಬಾಲ್ಯದಲ್ಲಿ ನಡೆಸಿದ (ಮತ್ತು ಇತರರಿಂದ ತಿಳಿದುಕೊಂಡಿರುವ) ಕೆಲಸದ ಕುರಿತಾಗಿರಬೇಕು ಎಂಬ ನಿಯಮವಿದೆ. ನಾನು ಪಾಸಾಗಿದ್ದೇನಂತೆ. (5ಖ) ನಾನು ಬಹಳ ತಂಟೆ ಮಾಡುತ್ತಿದ್ದೆನಂತೆ. ಸಾಮಾನ್ಯವಾಗಿ ಅಂತೆ ಪದ ಎತ್ತಿ ಹೇಳಬೇಕಾಗಿರುವ ವಾಕ್ಯದ ಕೊನೆಯಲ್ಲಿ ಬರುತ್ತದೆ. ಕೆಲವೊಮ್ಮೆ ಅದನ್ನು ವಾಕ್ಯದ ನಡುವೆಯೂ ಬಳಸುವ ಸಾಧ್ಯತೆಯಿದೆ. ಉದಾಹರಣೆಗಾಗಿ, ವಾಕ್ಯದ ಒಂದು ಭಾಗವನ್ನು ಮಾತ್ರ ಒತ್ತಿ ಹೇಳುವುದಿದ್ದಲ್ಲಿ, ಅಂತಹ ಭಾಗದೊಂದಿಗೆ ಅದು ವಾಕ್ಯದ ನಡುವೆಯೂ ಬರಬಲ್ಲುದು. ರಾಮನಾಯಕರಿಗೆ ಸಿಕ್ಕಿದೆಯಂತೆ. (6ಖ) ರಾಮನಾಯಕರಿಗಂತೆ ಮಧುರೆಯಲ್ಲಿ ಒಂದು ಪ್ರಶಸ್ತಿ ಸಿಕ್ಕಿದ್ದು. ರಾಮನಾಯಕರಿಗೆ ಮಧುರೆಯಲ್ಲಂತೆ ಒಂದು ಪ್ರಶಸ್ತಿ ಸಿಕ್ಕಿದ್ದು. ಮಧುರೆಯಲ್ಲಿ ಪ್ರಶಸ್ತಿ (6ಖ)ದಲ್ಲಿ ರಾಮನಾಯಕರಿಗೆ ಎಂಬುದನ್ನು ಮತ್ತು (6ಗ)ದಲ್ಲಿ ಮಧುರೆ ಯಲ್ಲಿ ಎಂಬುದನ್ನು ಒತ್ತಿ ಹೇಳಲಾಗಿದೆಯಾದ ಕಾರಣ, ಅಂತೆ ಪದ ಆ ಪದಗಳೊಂದಿಗೆ ಬಂದಿದೆ. ಅಂತೆ ಎಂಬುದರ ಮೂಲಕ ಎತ್ತಿ ಹೇಳುವ ವಾಕ್ಯವನ್ನು ಒಂದು ಕೇಳ್ವಿಯಾಗಿ ಬದಲಾಯಿಸಲು ಸಾಧ್ಯವಿದೆಯಾದರೂ ಅಲ್ಲಗಳೆಯುವ ವಾಕ್ಯವಾಗಿ ಬದಲಾಯಿಸಲು ಸಾಧ್ಯವಾಗದು. ಇದಕ್ಕೆ ವಿರುದ್ಧವಾಗಿ ಅಲ್ಲಗಳೆಯುವ ವಾಕ್ಯ ವನ್ನು ಅಂತೆ ಎಂಬುದರ ಮೂಲಕ ಎತ್ತಿ ಹೇಳಬಹುದು, ಆದರೆ ಕೇಳ್ವಿ ಯೊಂದನ್ನು ಆ ರೀತಿ ಎತ್ತಿ ಹೇಳಲು ಸಾಧ್ಯವಾಗದು. (7ಕ) ಮದುವೆಗೆ ಹೋಗಬೇಕಂತೆಯೋ? (7ಖ) ಅವನು ಮದುವೆಗೆ ಹೋಗುವುದಿಲ್ಲವಂತೆ. (7ಕ) ವಾಕ್ಯದಲ್ಲಿ ಅಂತೆ ಎಂಬುದರ ಮೂಲಕ ಎತ್ತಿ ಹೇಳಿರುವ ವಾಕ್ಯ ವೊಂದನ್ನು ಕೇಳ್ವಿಯಾಗಿ ಬದಲಾಯಿಸಲಾಗಿದೆ ಮತ್ತು (7ಖ)ದಲ್ಲಿ ಅಂತೆ ಎಂಬುದರ ಮೂಲಕ ಅಲ್ಲಗಳೆದಿರುವ ವಾಕ್ಯವೊಂದನ್ನು ಎತ್ತಿ ಹೇಳಲಾಗಿದೆ ಎಂಬುದನ್ನು ಗಮನಿಸಬಹುದು.
ಕೇಳ್ವಿಗಳ ಹಾಗೆಯೇ ಇತರರ ಮೂಲಕ ಕೆಲಸ ಮಾಡಿಸಲು ಬಳಸುವ ವಾಕ್ಯಗಳನ್ನು ಇಲ್ಲವೇ ಬೆರಗನ್ನು ಸೂಚಿಸುವ ವಾಕ್ಯಗಳನ್ನು ಈ ರೀತಿ ಅಂತೆ ಎಂಬ ಪದವನ್ನು ಬಳಸಿ ಎತ್ತಿ ಹೇಳಲು ಸಾಧ್ಯವಾಗದು. ಆದರೆ, ಕೇಳುಗನು ಬೇರಾರಿಗೋ ಹೇಳಿರುವ ಮಾತೊಂದನ್ನು ಇಲ್ಲವೇ ಕೇಳುಗನ ವಿಷಯವಾಗಿ ಬೇರಾರೋ ಹೇಳಿರುವ ಸಂಗತಿಯೊಂದನ್ನು ಅದು ನಿಜವೇ ಎಂಬುದಾಗಿ ಕೇಳಿ ತಿಳಿಯಲು ಅದನ್ನು ಅಂತೆ ಪದದೊಂದಿಗೆ ಬಳಸಲು ಸಾಧ್ಯವಿದೆ. (8ಕ) ನೀವು ಮೀಟಿಂಗಿಗೆ ಹೋಗಲಿಲ್ಲವಂತೆ? (8ಖ) ನೀವು ನಿನ್ನೆಯೇ ಬಂದಿದ್ದೀರಂತೆ? ವಾಕ್ಯವೊಂದನ್ನು ಅಂತೆ ಪದದೊಂದಿಗೆ ಬಳಸಿದಾಗಲೆಲ್ಲ, ಅದರಲ್ಲಿ ಬರುವ ಪುರುಷವಾಚಕ ಪದಗಳನ್ನು ಮತ್ತು ಸಮಯವನ್ನು ಸೂಚಿಸುವ ಪದಗಳನ್ನು ಎತ್ತಿ ಹೇಳುವ ಸಂದಭ್ರಕ್ಕೆ ಹೊಂದಿಕೊಳ್ಳುವಂತೆ ಬದಲಾಯಿಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ ಮೇಲೆ (8ಖ)ದಲ್ಲಿ ಅಂತೆ ಪದದೊಂದಿಗೆ ಬಂದಿರುವ ವಾಕ್ಯವನ್ನು ಅದರ ಆಡುಗನು ನೀವು ನಿನ್ನೆಯೇ ಬಂದಿದ್ದೀರಿ ಎಂಬುದಾಗಿ ಎತ್ತಿ ಹೇಳಿರುವುದನ್ನು ಗಮನಿಸಬಹುದು. ನಿಜಕ್ಕೂ ಈ ವಾಕ್ಯವನ್ನು ರಮೇಶನೆಂಬ ಬೇರೊಬ್ಬ ವ್ಯಕ್ತಿ ರಾಜು ಇವತ್ತು ಬಂದಿದ್ದಾನೆ ಎಂಬುದಾಗಿ ಹೇಳಿರಬಹುದು. ಆ ವಾಕ್ಯವನ್ನು ಆಡುಗನು ರಾಜುವಿಗೆ ಅಂತೆ ಪದದ ಮೂಲಕ (ಮಾರನೆಯ ದಿವಸ) ಎತ್ತಿಹೇಳ ಬೇಕಾಗಿರುವ ಸಂದಭ್ರದಲ್ಲಿ ಅದರಲ್ಲಿ ಬಂದ ರಾಜು ಪದಕ್ಕೆ ಬದಲಾಗಿ ನೀವು ಎಂಬ ಪುರುಷವಾಚಕ ಪದವನ್ನೂ, ಇವತ್ತು ಪದಕ್ಕೆ ಬದಲಾಗಿ ನಿನ್ನೆ ಪದವನ್ನೂ ಮತ್ತು ಬಂದಿದ್ದಾನೆ ಎಂಬ ಕ್ರಿಯಾರೂಪಕ್ಕೆ ಬದಲಾಗಿ ಬಂದಿದ್ದೀರಿ ಎಂಬ ಕ್ರಿಯಾರೂಪವನ್ನೂ ಬಳಸಬೇಕಾಗಿದೆ ಎಂಬುದನ್ನು ಗಮನಿಸಬಹುದು.
7.2.2 ಒಳವಾಕ್ಯದ ಬಳಕೆ
ಇನ್ನೊಬ್ಬ ವ್ಯಕ್ತಿಯ ಮಾತನ್ನು ಎತ್ತಿ ಹೇಳಬೇಕಾದಾಗ, ಆ ಮಾತಿಗೆ ಎಂದು ಪದವನ್ನು ಸೇರಿಸಿ, ಅದನ್ನು ಬೇರೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಹೇಳುವುದು ಎರಡನೆಯ ವಿಧಾನ. ಇದು ಮೇಲಿನ ವಿಧಾನದಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಉದಾಹರಣೆಗಾಗಿ, ಆ ಮಾತನ್ನು ಯಾರು ಹೇಳಿದ್ದು, ಯಾರೊಂದಿಗೆ ಹೇಳಿದ್ದು, ಎಲ್ಲಿ ಹೇಳಿದ್ದು, ಯಾವಾಗ ಹೇಳಿದ್ದು, ಹೇಗೆ ಹೇಳಿದ್ದು ಎಂಬುದನ್ನೆಲ್ಲ ಈ ವಿಧಾನದಲ್ಲಿ ಬಳಕೆಯಾಗುವ ಹೊರವಾಕ್ಯದ ಮೂಲಕ ತಿಳಿಸಲು ಸಾಧ್ಯವಿದೆ. (9ಕ) ಪಿಕ್ನಿಕ್ಕಿಗೆ ಬರುವುದಿಲ್ಲವೆಂದು ನಿನ್ನೆ ಸಂಜೆ ಪಾಟ್ರಿಯಲ್ಲಿ ಕಾಣಸಿಕ್ಕಿದ್ದಾಗ ರಾಜು ನನ್ನ ಹತ್ತಿರ ಗುಟ್ಟಾಗಿ ತಿಳಿಸಿದ್ದ. (9ಖ) ರಾಜು ಪಿಕ್ನಿಕ್ಕಿಗೆ ಬರುವುದಿಲ್ಲವಂತೆ. ಇಲ್ಲಿ ಪಿಕ್ನಿಕ್ಕಿಗೆ ಬರುವುದಿಲ್ಲ ಎಂಬುದು ಒಳವಾಕ್ಯ. ಅದನ್ನು ಯಾವಾಗ ಹೇಳಿದ್ದು ಎಂಬುದನ್ನು ಹೊರವಾಕ್ಯದಲ್ಲಿರುವ ನಿನ್ನೆ ಸಂಜೆ ಎಂಬ ಘಟಕ, ಎಲ್ಲಿ ಹೇಳಿದ್ದು ಎಂಬುದನ್ನು ಪಾಟ್ರಿಯಲ್ಲಿ ಕಾಣಸಿಕ್ಕಿದಾಗ ಎಂಬ ಘಟಕ (ಇದರಲ್ಲೂ ಒಂದು ಒಳವಾಕ್ಯವಿದೆ), ಯಾರು ಹೇಳಿದ್ದು ಎಂಬುದನ್ನು ರಾಜು ಎಂಬ ಘಟಕ, ಯಾರೊಡನೆ ಹೇಳಿದ್ದು ಎಂಬುದನ್ನು ನನ್ನ ಹತ್ತಿರ ಎಂಬ ಘಟಕ ಮತ್ತು ಹೇಗೆ ಹೇಳಿದ್ದು ಎಂಬುದನ್ನು ಗುಟ್ಟಾಗಿ ಎಂಬ ಗುಣಪದ ತಿಳಿಸುತ್ತವೆ. ಅಂತೆ ಪದದ ಬಳಕೆಯಲ್ಲಿ ಇದಾವುದೂ ಸಾಧ್ಯವಿಲ್ಲವೆಂಬುದನ್ನು (9ಖ) ದಲ್ಲಿ ಕಾಣಬಹುದು. ಇದಲ್ಲದೆ, ಹೊರವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದ ಎತ್ತಿ ಹೇಳುವುದರ ಉದ್ದೇಶವೇನೆಂಬುದನ್ನು ತಿಳಿಸುತ್ತದೆ. ಈ ಹೊರವಾಕ್ಯದಲ್ಲಿ ಬೇರೆ ಬೇರೆ ಕ್ರಿಯಾಪದಗಳು ಬರಲು ಸಾಧ್ಯವಿದ್ದು ಅವು ಇಂತಹ ಬೇರೆ ಬೇರೆ ರೀತಿಯ ಉದ್ದೇಶಗಳಿಗಾಗಿ ಇನ್ನೊಬ್ಬರ ಮಾತನ್ನು ಎತ್ತಿ ಹೇಳಲು ಸಾಧ್ಯವಿದೆ ಎಂಬುದನ್ನು ಸೂಚಿಸುತ್ತವೆ. (10ಕ) ಖಂಡಿತವಾಗಿಯೂ ಬರುತ್ತೇನೆಂದು ಆತ ಮಾತು ಕೊಟ್ಟಿದ್ದ. (10ಖ) ಒಳಗೆ ಕಾಲಿಡಕೂಡದೆಂದು ಆತ ಆಜ್ಞಾಪಿಸಿದ್ದ. (10ಗ) ನಿನ್ನೆ ರಾತ್ರಿ ನಿಮ್ಮಲ್ಲಿಗೆ ಬರಬೇಕೆಂದು ಆಕೆಗೆ ಅನಿಸಿತ್ತು. (10ಘ) ಆಕೆ ಎಲ್ಲಿಗೆ ಹೋಗಿದ್ದಾಳೆಂದು ಆತ ಪ್ರಶ್ನಿಸಿದ. ಅಂತೆ ಪದದ ಬಳಕೆಗೂ ಮತ್ತು ಎಂದು ಪದದ ಬಳಕೆಗೂ ನಡುವೆ ಹಲವು ವ್ಯತ್ಯಾಸಗಳಿವೆ. ಮೇಲೆ ಸೂಚಿಸಿದ ಹಾಗೆ, ಎತ್ತಿ ಹೇಳುವ ವಾಕ್ಯವನ್ನು ಯಾರು ಯಾವಾಗ ಎಲ್ಲಿ ಹೇಳಿರುವರೆಂಬುದನ್ನು ಸ್ಪಷ್ಟವಾಗಿ ತಿಳಿಸಬೇಕಾ ಗಿರುವಾಗ ಅಂತೆ ಎಂಬುದನ್ನು ಬಳಸಲು ಸಾಧ್ಯವಾಗದು. ಅಂತಹ ಸಂದಭ್ರ ಗಳಲ್ಲಿ ಎಂದು ಎಂಬುದನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ, ಎಂದು ಎಂಬುದರೊಂದಿಗೆ ಸೇರಿ ಬರುವ ವಾಕ್ಯ ಒಂದು ಹೊರವಾಕ್ಯದ ಅಂಗವಾಗಿ ಬರುವುದಾದ ಕಾರಣ, ಆ ವಾಕ್ಯದ ಕುರಿತಾಗಿ ಇನ್ನೂ ಏನೇನು ಹೇಳಬೇಕೆಂದಿದೆಯೋ ಅದೆಲ್ಲವನ್ನೂ ಈ ಹೊರವಾಕ್ಯದಲ್ಲಿ ಹೇಳಲು ಸಾಧ್ಯವಿದೆ. ಇನ್ನೊಬ್ಬರ ಮಾತನ್ನು ಇಲ್ಲವೇ ಅಭಿಪ್ರಾಯವನ್ನು ಮಾತ್ರವಲ್ಲದೆ ತನ್ನದೇ ಮಾತನ್ನು ಇಲ್ಲವೇ ಅಭಿಪ್ರಾಯವನ್ನೂ ಎಂದು ಪದದ ಮೂಲಕ ಎತ್ತಿ ಹೇಳಲು ಸಾಧ್ಯವಿದೆ. (11ಕ) ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜುವಿನ ಹತ್ತಿರ ಹೇಳಿದ್ದೆ. (11ಖ) ನನಗೆ ಎಲ್ಲಿಗೂ ಹೋಗಬೇಕೆಂದು ಅನಿಸುವುದಿಲ್ಲ. ಕೆಲಸ ಮಾಡಬೇಕೆಂದು ನಾನಾತನನ್ನು ಚೆನ್ನಾಗಿ ಪೊ್ರೀತ್ಸಾಹಿಸಿದೆ. ಎತ್ತಿ ಹೇಳುವ ಒಳವಾಕ್ಯವೊಂದಕ್ಕೆ ಹೊರವಾಕ್ಯವಾಗಿ ಕ್ರಿಯಾವಾಕ್ಯಗಳು ಮಾತ್ರವಲ್ಲದೆ ವಿಷಯವಾಕ್ಯಗಳೂ ಬರಲು ಸಾಧ್ಯವಿದ್ದು, ಇವೂ ಕೂಡ ಎತ್ತಿ ಹೇಳುವುದಕ್ಕಿರುವ ಉದ್ದೇಶವೇನೆಂಬುದನ್ನು ತಿಳಿಸುತ್ತವೆ. (12ಕ) ಆಕೆಯನ್ನೇ ಮದುವೆಯಾಗುವುದೆಂದು ರಾಜುವಿನ ನಿರ್ಧಾರ. (12ಖ) ನಿಮ್ಮ ಹಣ ಹಿಂದಿರುಗಿಸಿದ್ದೇನೆಂದು ನನ್ನ ನೆನಪು. (12ಗ) ನಿಮಗೆ ಹೊಸ ಸೀರೆ ಸಿಕ್ಕಿದೆಯೆಂದು ಆಕೆಗೆ ಮತ್ಸರ. (12ಘ) ಅವನಿಗೆ ನಿಮ್ಮನ್ನು ಕಾಣಬೇಕೆಂದಿದೆ. ಅಂತೆ ಮತ್ತು ಎಂದು ಎಂಬವುಗಳ ಬಳಕೆಯ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಅಂತೆ ಎಂಬುದನ್ನು ಬಳಸಬೇಕಿದ್ದಲ್ಲಿ ಎತ್ತಿಹೇಳುವ ವಾಕ್ಯ ದಲ್ಲಿ ಎತ್ತಿ ಹೇಳುವ ಸಂದಭ್ರಕ್ಕನುಸಾರವಾಗಿ ಬದಲಾವಣೆಗಳನ್ನು ಅವಶ್ಯ ವಾಗಿಯೂ ಮಾಡಬೇಕಾಗುತ್ತದೆ, ಆದರೆ ಎಂದು ಎಂಬುದರ ಬಳಕೆಯಲ್ಲಿ ಇಂತಹ ಬದಲಾವಣೆಗಳನ್ನು ಮಾಡದೆ ಇರಲೂ ಸಾಧ್ಯವಿದೆ.
(13ಕ) ನಾನು ಇವತ್ತು ಬೇಗನೆ ಹೋಗಬೇಕಂತೆ. (13ಖ) ನಾನು ಇವತ್ತು ಬೇಗನೆ ಹೋಗಬೇಕೆಂದು ರಾಜು ಹೇಳಿದ್ದಾನೆ. (13ಗ) ನೀವು ನಾಳೆ ಬೇಗನೆ ಬರಬೇಕೆಂದು ರಾಜು ಹೇಳಿದ. ನಿಜಕ್ಕೂ ರಾಜು ಹೇಳಿದ್ದು ‘ನೀವು ನಾಳೆ ಬೇಗನೆ ಬರಬೇಕು’ ಎಂದಾ ಗಿದ್ದರೂ, ಅದನ್ನು ಎತ್ತಿ ಹೇಳುವ ಸಂದಭ್ರಕ್ಕೆ ಹೊಂದಿಕೊಳ್ಳುವಂತೆ ‘ನಾನು ಇವತ್ತು ಬೇಗನೆ ಹೋಗಬೇಕು’ ಎಂಬುದಾಗಿ (13ಕ) ಮತ್ತು (13ಖ) ಗಳಲ್ಲಿ ಬದಲಿಸಲಾಗಿದೆ. ಆದರೆ (13ಗ)ದಲ್ಲಿ ಇಂತಹ ಬದಲಾವಣೆಗಳನ್ನು ಮಾಡದೆಯೂ ಆ ವಾಕ್ಯವನ್ನು ಎಂದು ಪದದ ಮೂಲಕ ಎತ್ತಿ ಹೇಳಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಬಹುದು. ಇದು ಅಂತೆ ಎಂಬುದರ ಬಳಕೆ ಯಲ್ಲಿ ಸಾಧ್ಯವಾಗದು. ಎತ್ತಿ ಹೇಳುವ ವಾಕ್ಯದ ಕೊನೆಯಲ್ಲಿ ‘ಇಲ್ಲವೇ’ ಎಂಬ ಅರ್ಥವಿರುವ ಓ ಪ್ರತ್ಯಯ ಬಂದಿದೆಯಾದಲ್ಲಿ, ಎಂಬ ಪದವನ್ನು ಬಳಸದೆಯೂ ಆ ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. (14ಕ) ಅವಳು ಯಾಕೆ ಬಂದಿದ್ದಾಳೋ. (14ಖ) ಅವಳು ಯಾಕೆ ಬಂದಿದ್ದಾಳೋ ನನಗೆ ಗೊತ್ತಿಲ್ಲ. (15ಕ) ಆತ ಹೋಗಿರುವುದು ಪುಣೆಗೋ, ಮುಂಬಯಿಗೋ. (15ಖ) ಆತ ಹೋಗಿರುವುದು ಪುಣೆಗೋ, ಮುಂಬಯಿಗೋ ಯಾರಿಗೂ ಗೊತ್ತಾಗಿಲ್ಲ.
7.3 ವರ್ಣಿಸುವುದು
ಕ್ರಿಯೆಯೊಂದರಲ್ಲಿ ನಿರತರಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳನ್ನು ಬಳಸಲು ಸಾಧ್ಯ ಎಂಬುದನ್ನು ನಾವು ಮೇಲೆ ನಾಲ್ಕನೇ ಅಧ್ಯಾಯ ದಲ್ಲಿ ನೋಡಿರುವೆವು. ಈ ಎರಡು ವಿಧಾನಗಳಲ್ಲೂ ನಾವು ಬಳಸುವುದು ಒಂದು ಪದಕಂತೆಯನ್ನೇ.
ಆದರೆ, ವರ್ಣಿಸುವ ವಿಧಾನದಲ್ಲಿ ಅದಕ್ಕಾಗಿ ಬಳಕೆಯಾಗುವ ಪದಕಂತೆಯ ಅಂಗವಾಗಿ ಒಂದು ಇಡೀ ವಾಕ್ಯವನ್ನೂ ಬಳಸಲು ಸಾಧ್ಯವಿದೆ. ಇದು ಹೆಸರಿಸುವ ವಿಧಾನದಲ್ಲಿ ಸಾಧ್ಯವಾಗದು. ಇಂತಹ ಬಳಕೆಯಲ್ಲಿ ವರ್ಣಿಸುವ ಪದಕಂತೆಯ ಅಂಗವಾಗಿ ಬರುವ ವಾಕ್ಯ ಅದರ ‘ಒಳವಾಕ್ಯ’ವಾಗಿ ಬರುತ್ತದೆ. (16ಕ) ಜಾನಕಿ ಮೈಸೂರಿನಿಂದ ಒಂದು ಸೀರೆ ತಂದಿದ್ದಳು. (16ಖ) ಆ ಸೀರೆ ಈಗ ಹರಿದು ಹೋಗಿದೆ. (16ಗ) ಜಾನಕಿ ಮೈಸೂರಿನಿಂದ ಯಾವ ಸೀರೆಯನ್ನು ತಂದಿದ್ದಳೋ ಆ ಸೀರೆ ಈಗ ಹರಿದು ಹೋಗಿದೆ. (16ಖ)ದಲ್ಲಿ ಆ ಸೀರೆ ಎಂಬ ಪದಕಂತೆ ವರ್ಣಿಸುವ ವಿಧಾನದ ಮೂಲಕ ಒಂದು ವಸ್ತುವನ್ನು ಗುರುತಿಸುತ್ತದೆ. ಈ ವಸ್ತುವಿನ ವಿಷಯವಾಗಿ ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸುವುದಕ್ಕಾಗಿ ಅ ಪದಕಂತೆಯಲ್ಲಿ (16ಕ) ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಿ ಹೇಳಲು ಸಾಧ್ಯವಿದೆ ಎಂಬುದನ್ನು (16ಗ) ವಾಕ್ಯದಲ್ಲಿ ಕಾಣಬಹುದು. ಇದಕ್ಕಾಗಿ (16ಕ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಬಳಸಬೇಕಾಗಿದೆ ಮತ್ತು ಅದು ಗುರುತಿಸಬೇಕಾಗಿರುವ ವಸ್ತುವನ್ನು ಹೆಸರಿಸುವ ಸೀರೆ ಪದದೆದುರು ಯಾವ ಎಂಬ ಅನಿಶ್ಚಿತ ಸವ್ರಪದವನ್ನು ಇರಿಸಬೇಕಾಗಿದೆ.
ಒಂದು ವಾಕ್ಯವನ್ನು ವರ್ಣಿಸುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಹೇಳಲು ಕನ್ನಡದಲ್ಲಿ ಹಲವು ವಿಧಾನಗಳು ಬಳಕೆಯಲ್ಲಿವೆ. ಮೇಲೆ ಸೂಚಿಸಿದ ಹಾಗೆ, ಅನಿಶ್ಚಿತ ಸವ್ರಪದವೊಂದನ್ನು (ಮತ್ತು ಓ ಪ್ರತ್ಯಯವನ್ನು) ಬಳಸಿ ಹೇಳುವುದು ಒಂದು ವಿಧಾನವಾದರೆ, ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ನಾಮಪದದ ದೊಂದಿಗೆ ಬಳಸಲು ಸಾಧ್ಯವಾಗುವಂತೆ ಮಾಡುವುದು ಇನ್ನೊಂದು ವಿಧಾನ. ಈ ಎರಡನೆಯ ವಿಧಾನದ ಬಳಕೆಯನ್ನು ಕೆಳಗೆ (16ಘ)ದಲ್ಲಿ ಕಾಣಬಹುದು. (16ಘ) ಜಾನಕಿ ಮೈಸೂರಿನಿಂದ ತಂದಿದ್ದ ಆ ಸೀರೆ ಈಗ ಹರಿದು ಹೋಗಿದೆ. ಈ ವಿಧಾನದಲ್ಲಿ ಒಳವಾಕ್ಯವಾಗಿ ಬರುವ (16ಕ) ವಾಕ್ಯದ ಕ್ರಿಯಾಪದವನ್ನು (ತಂದಿದ್ದಾಳೆ ಎಂಬುದನ್ನು) ಅದರ ಸಂಬಂಧಿಸುವ ರೂಪಕ್ಕೆ (ತಂದಿದ್ದ ಎಂಬ ರೂಪಕ್ಕೆ) ಬದಲಾಯಿಸಲಾಗಿದೆ ಮಾತ್ರವಲ್ಲ, ಅದರ ಹೊರವಾಕ್ಯದಲ್ಲಿರುವ ((16ಖ)ದಲ್ಲಿರುವ) ಪದಕ್ಕೆ ಸಮನಾಗಿರುವ ಸೀರೆ(ಯನ್ನು) ಎಂಬ ಪದವನ್ನು ಆ ವಾಕ್ಯದಿಂದ ತೆಗೆದುಹಾಕಲಾಗಿದೆ. ವಾಕ್ಯವೊಂದನ್ನು ವರ್ಣಿಸುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ ಬಳಸಲು ಕನ್ನಡದಲ್ಲಿ ಇನ್ನೂ ಒಂದು ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ಆ ವಾಕ್ಯದ ಕೊನೆಯಲ್ಲಿ ಎಂಬ ಇಲ್ಲವೇ ಎನ್ನುವ ಎಂಬ ಪದವನ್ನು ಸೇರಿಸಿ ಹೇಳಬೇಕು. ಈ ವಿಧಾನವನ್ನು ಕೆಲವು ವಿಶಿಷ್ಟವಾದ ಸಂದಭ್ರಗಳಲ್ಲಿ ಮಾತ್ರ ಬಳಸಲು ಸಾಧ್ಯ ಎಂಬುದನ್ನು ಮುಂದೆ (7.4.4)ರಲ್ಲಿ ನೋಡಲಿರುವೆವು.
(17ಕ) ಅವನಿಗೆ ಹಣ ಸಿಕ್ಕಿಲ್ಲ. (17ಖ) ಆ ವಿಷಯ ನನಗೂ ಗೊತ್ತಿದೆ. (17ಗ) ಅವನಿಗೆ ಹಣ ಸಿಕ್ಕಿಲ್ಲವೆಂಬ ಆ ವಿಷಯ ನನಗೂ ಗೊತ್ತಿದೆ. (17ಕ) ವಾಕ್ಯಕ್ಕೆ ಎಂಬ ಪದವನ್ನು ಸೇರಿಸಿ ಅದನ್ನು (17ಖ) ವಾಕ್ಯದಲ್ಲಿ ಬಂದಿರುವ ಆ ವಿಷಯ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ (17ಗ) ವಾಕ್ಯವನ್ನು ತಯಾರಿಸಲಾಗಿದೆ. ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದವನ್ನು ನಾಮಪದವಾಗಿ ಬದಲಾ ಯಿಸುವುದರ ಮೂಲಕ ಅದನ್ನೊಂದು ಪದಕಂತೆಯನ್ನಾಗಿ ಮಾಡಲು ಸಾಧ್ಯವಿದೆ, ಮತ್ತು ಈ ರೀತಿ ಬದಲಾಗಿರುವ ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯ ವನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. ಇದಲ್ಲದೆ, ಒಳವಾಕ್ಯದ ಕೊನೆಯಲ್ಲಿ ಎಂಬುದು ಪದವನ್ನು ಇರಿಸಿ ಅದಕ್ಕೇನೇ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲೂ ಸಾಧ್ಯವಿದೆ. (18ಕ) ಸೀತಾದೇವಿ ಹಾಡಿದ್ದಾಳೆ. (18ಖ) ಸೀತಾದೇವಿ ಹಾಡಿದುದನ್ನು ಎಲ್ಲರೂ ಕೇಳಿದ್ದಾರೆ. (18ಗ) ಸೀತಾದೇವಿಯ ಹಾಡುವಿಕೆಯನ್ನು ಎಲ್ಲರೂ ಕೇಳಿದ್ದಾರೆ. (18ಘ) ಸೀತಾದೇವಿ ಹಾಡಿದ್ದಾಳೆಂಬುದನ್ನು ಎಲ್ಲರೂ ಕೇಳಿದ್ದಾರೆ. (18ಕ) ವಾಕ್ಯವನ್ನು ಒಂದು ಪದಕಂತೆಯನ್ನಾಗಿ ಮಾಡಿ ಅದನ್ನು ಅನ್ನು ಪ್ರತ್ಯಯದೊಂದಿಗೆ (18ಖ) ಮತ್ತು (18ಗ) ವಾಕ್ಯಗಳಲ್ಲಿ ಬಳಸಲಾಗಿದೆ ಮತ್ತು (18ಘ) ವಾಕ್ಯದಲ್ಲಿ ಆ ವಾಕ್ಯವನ್ನು ಹಾಗೆಯೇ ಉಳಿಸಿ ಅದರೆದುರು ಎಂಬುದು ಪದವನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು. ಇದಲ್ಲದೆ ವಾಕ್ಯದ ಕೊನೆಯ ಕ್ರಿಯಾಪದದೆದುರು ಅಲು ಪ್ರತ್ಯಯವನ್ನು ಸೇರಿಸುವುದರ ಮೂಲಕವೂ ಅದನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಬದಲಾಯಿಸಲು ಸಾಧ್ಯವಿದೆ. ಇಂತಹ ಒಳವಾಕ್ಯದ ಮೂಲಕ ಹೊರವಾಕ್ಯವು ಸೂಚಿಸುವ ಘಟನೆಯ ಉದ್ದೇಶವೇನೆಂಬುದನ್ನು ತಿಳಿಸಲು ಸಾಧ್ಯವಾಗುತ್ತದೆ. (19ಕ) ಸೀತಾದೇವಿ ಕಚೇರಿಯಲ್ಲಿ ಹಾಡುತ್ತಾಳೆ. (19ಖ) ಕಚೇರಿಯಲ್ಲಿ ಹಾಡಲು ಸೀತಾದೇವಿಗೆ ಕರೆ ಬಂದಿದೆ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಇಲ್ಲವೇ ಅದರಲ್ಲಿ ಬಂದಿರುವ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲು ಈ ರೀತಿ ಹಲವು ವಿಧಾನಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು, ಇವಕ್ಕೆಲ್ಲ ಬೇರೆ ಬೇರೆ ಉದ್ದೇಶಗಳಿವೆ. ಆದರೆ ಈ ಎಲ್ಲಾ ವಿಧಾನಗಳಿಗೂ ಸಮಾನವಾಗಿರುವಂತಹ ಒಂದು ಉದ್ದೇಶವೂ ಇದೆ. ಅದೇನೆಂದರೆ, ಈ ಎಲ್ಲಾ ವಿಧಾನಗಳೂ ಗುರುತಿಸಬೇಕಾಗಿರುವ ವ್ಯಕ್ತಿ, ವಸ್ತು, ವಿಷಯ ಇಲ್ಲವೇ ಘಟನೆಯನ್ನು ವರ್ಣಿಸಿ ಹೇಳುವುದಕ್ಕಾಗಿ ಬಳಕೆಯಾಗುತ್ತವೆ.
ಒಳವಾಕ್ಯವನ್ನು ಈ ರೀತಿ ವಾಕ್ಯದ ಅಂಗ (ಘಟಕ)ವನ್ನಾಗಿ ಮಾಡಲು ಬಳಸುವ ವಿಧಾನಗಳು ಎಂತಹವು ಎಂಬುದನ್ನು ಕೆಳಗಿನ ಐದು (7.3.1-5) ಉಪವಿಭಾಗಗಳಲ್ಲೂ, ಮತ್ತು ಪದಕಂತೆಯ ಅಂಗವನ್ನಾಗಿ ಮಾಡಲು ಬಳಸುವ ವಿಧಾನಗಳು ಎಂತಹವು ಎಂಬುದನ್ನು ಮುಂದಿನ ವಿಭಾಗದ ನಾಲ್ಕು (7.4.1- 4) ಉಪವಿಭಾಗಗಳಲ್ಲೂ ವಿವರಿಸಲಾಗುವುದು.
7.3.1 ವಾಕ್ಯದ ಅಂಗವಾಗಿ ಬಳಕೆ
ಮೇಲೆ ಸೂಚಿಸಿದಂತೆ, ವಾಕ್ಯವೊಂದನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ನಾಲ್ಕು ವಿಧಾನಗಳನ್ನು ಬಳಸಲು ಸಾಧ್ಯವಿದೆ. ಮಾಡಬೇಕಿದ್ದಲ್ಲಿ ಅದಕ್ಕಾಗಿ ಪದಕಂತೆಯನ್ನಾಗಿ) (1) ಎಂಬುದು ಪದವನ್ನು ಆ ವಾಕ್ಯಕ್ಕೆ ಸೇರಿಸುವುದು,
(2) ಉದು ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾರೂಪಕ್ಕೆ ಸೇರಿಸುವುದು, (3) ಇಕೆ ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾಪದಕ್ಕೆ ಸೇರಿಸುವುದು, ಮತ್ತು (4) ಅಲು ಪ್ರತ್ಯಯವನ್ನು ಆ ವಾಕ್ಯದ ಕ್ರಿಯಾಪದಕ್ಕೆ ಸೇರಿಸುವುದು. ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬ ಸಂಗತಿಯ ಕುರಿತಾಗಿ ಮೊದಲನೆಯ ವಿಧಾನವನ್ನೂ, ಘಟನೆಗೆ ಏನಾದರೂ ಹೇಳಬೇಕಿದ್ದಲ್ಲಿ ಸಂಬಂಧಿಸಿದ ವಸ್ತು, ವಿಷಯ ಮೊದಲಾದವುಗಳ ಕುರಿತಾಗಿ ಏನಾದರೂ ಹೇಳಬೇಕಾಗಿದ್ದಲ್ಲಿ ಎರಡನೆಯ ವಿಧಾನವನ್ನೂ ಮತ್ತು ನೇರವಾಗಿ ಆ ಘಟನೆಯ ಕುರಿತಾಗಿ (ಎಂದರೆ ಅದರಲ್ಲಿ ಬಂದಿರುವ ಕ್ರಿಯೆಯ ಕುರಿತಾಗಿ) ಏನಾದರೂ ಹೇಳಬೇಕಿದ್ದಲ್ಲಿ ಮೂರನೆಯ ವಿಧಾನವನ್ನೂ ಬಳಸಲು ಸಾಧ್ಯವಿದೆ.
ಇದಲ್ಲದೆ, ಒಂದು ಘಟನೆ ಇನ್ನೊಂದು ಘಟನೆಯ ಉದ್ದೇಶ ಎಂಬುದನ್ನು ತಿಳಿಸಬೇಕಿದ್ದಲ್ಲಿ ಇಲ್ಲವೇ ಒಂದು ಗುಣಧರ್ಮ ಇನ್ನೊಂದು ಘಟನೆಯದು ಎಂಬುದನ್ನು ಸೂಚಿಸಬೇಕಾದಲ್ಲಿ ನಾಲ್ಕನೆಯ ವಿಧಾನವನ್ನು ಬಳಸಬಹುದು. ಇದಲ್ಲದೆ ಎರಡನೆಯ ಮತ್ತು ನಾಲ್ಕನೆಯ ವಿಧಾನಗಳನ್ನು ಮೊದಲನೆಯ ಸಂದಭ್ರದಲ್ಲೂ ಬಳಸಲು ಸಾಧ್ಯವಿದೆ. ಈ ಬೇರೆ ಬೇರೆ ಸಾಧ್ಯತೆಗಳನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (20ಕ) ಅವಳು ಹಾಡುತ್ತಾಳೆಂಬುದನ್ನು ನಾನು ಕೇಳಿದ್ದೇನೆ. (20ಖ) ಅವಳು ಹಾಡಿದುದನ್ನು ನಾನು ಕೇಳಿದ್ದೇನೆ. (20ಗ) ಅವಳ ಹಾಡುವಿಕೆ ನನಗೆ ಇಷ್ಟ. (20ಘ) ಅವಳು ಹಾಡುವುದು ನನಗೆ ಇಷ್ಟ. (20ಙ) ಅವಳಿಗೆ ಹಾಡಲು ಬಹಳ ಇಷ್ಟ. (20ಕ) ವಾಕ್ಯದ ಪ್ರಕಾರ, ಅದರ ಆಡುಗನು ಕೇಳಿರುವುದು ಅವಳು ಹಾಡು ತ್ತಾಳೆ ಎಂಬ ಸಂಗತಿಯನ್ನು ಮಾತ್ರ (ಮೊದಲನೆಯ ಉದ್ದೇಶ); ಇದೇ ಅರ್ಥ ದಲ್ಲಿ (20ಖ) ವಾಕ್ಯವೂ ಬಳಕೆಯಾಗಿರಲು ಸಾಧ್ಯವಿದೆ. ಆದರೆ ಅದಕ್ಕೆ ‘ಅವಳು ಹಾಡಿದ್ದಾಳೆ ಎಂಬ ಸಂಗತಿಯನ್ನು ನಾನು ಕೇಳಿದ್ದೇನೆ’ ಎಂಬ ಅರ್ಥ ಮಾತ್ರ ವಲ್ಲದೆ, ‘ಅವಳು ಹಾಡುವ ಘಟನೆಯಲ್ಲಿ ನಾನು ಕೇಳುಗನಾಗಿದ್ದೆ’ ಎಂಬ ಅರ್ಥವೂ (ಎಂದರೆ ಎರಡನೆಯ ಉದ್ದೇಶವೂ) ಬರಬಲ್ಲುದು. (20ಕ) ವಾಕ್ಯಕ್ಕೆ ಈ ಅರ್ಥ ಬರಲಾರದು. (20ಗ) ವಾಕ್ಯಕ್ಕೆ ಈ ಎರಡು ಅರ್ಥಗಳಿಗಿಂತಲೂ ಭಿನ್ನವಾಗಿರುವ ಅರ್ಥ ವಿದೆ. ಇಲ್ಲಿ ಇಷ್ಟವಾಗಿರುವುದು ಹಾಡುವ ಘಟನೆಯಲ್ಲದೆ ಹಾಡುತ್ತಾಳೆ ಎಂಬ ಸಂಗತಿಯಲ್ಲ (ಮೂರನೆಯ ಉದ್ದೇಶ). ಎರಡನೆಯ ವಿಧಾನವನ್ನು ಬಳಸಿರುವ (20ಘ) ವಾಕ್ಯ ಈ (20ಗ) ವಾಕ್ಯಕ್ಕಿಂತ ಅರ್ಥದಲ್ಲಿ ಭಿನ್ನವಾಗಿದೆ ಎಂಬುದನ್ನೂ ಗಮನಿಸಬಹುದು. ಅದಕ್ಕೆ ‘ಅವಳು ಹಾಡುತ್ತಾಳೆ ಎಂಬ ಸಂಗತಿ ನನಗೆ ಇಷ್ಟ’ ಎಂಬ ಅರ್ಥವಾಗಲಿ (ಎಂದರೆ (20ಕ-ಖ) ವಾಕ್ಯಗಳ ಅರ್ಥಕ್ಕೆ ಸಮನಾದ ಅರ್ಥವಾಗಲಿ) ಇಲ್ಲವೇ ‘ಅವಳು ಹಾಡುವ ಹಾಡು ನನಗೆ ಇಷ್ಟ’ ಎಂಬ ಬೇರೊಂದು ಅರ್ಥವಾಗಲಿ ಬರಲು ಸಾಧ್ಯವಿದೆ. ಅಲು ಪ್ರತ್ಯಯದ ಬಳಕೆ ಹಲವು ವಿಷಯಗಳಲ್ಲಿ ಮೇಲಿನ ಮೂರು ವಿಧಾನಗಳಿಗಿಂತ ಭಿನ್ನವಾಗಿದೆ ಎಂಬುದನ್ನು ಮುಂದೆ (7.3.3ರಲ್ಲಿ) ನೋಡ ಲಿರುವೆವು. ಉಳಿದ ವಿಧಾನಗಳ ಮೂಲಕ ತಯಾರಾದ ಪದಕಂತೆ ಒಂದು ನಾಮಪದದ ಹಾಗೆ ಬಳಕೆಯಾಗುವುದಾದರೆ ಇದು ಒಂದು ಕ್ರಿಯಾಗುಣಪದದ ಹಾಗೆ ಬಳಕೆಯಾಗುತ್ತದೆ. ಹಾಗಾಗಿ ಈ ಪ್ರತ್ಯಯದ ಬಳಕೆಯನ್ನು ಬೇರೆಯೇ ಒಂದು ವಿಭಾಗದಲ್ಲಿ ವಿವರಿಸಲಾಗುವುದು.
7.3.2 ನಾಮಪದದ ಜಾಗದಲ್ಲಿ ಬಳಕೆ
ಮೇಲೆ ವಿವರಿಸಿದ ವಿಧಾನಗಳಲ್ಲಿ ಮೊದಲನೆಯ ಮೂರು ವಿಧಾನಗಳನ್ನು ಬಳಸುವುದರ ಮೂಲಕ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ನಾಮಪದ ವೊಂದರ ಜಾಗದಲ್ಲಿ ಇರಿಸಿ ಹೇಳಲು ಸಾಧ್ಯವಾಗುತ್ತದೆ. ಮತ್ತು ಇದಕ್ಕಾಗಿ ಈ ವಾಕ್ಯಗಳ ಕೊನೆಯಲ್ಲಿ ಬರುವ ಎಂಬುದು, ಉದು ಮತ್ತು ಇಕೆ ಎಂಬವುಗಳಿಗೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗುತ್ತದೆ. (21ಕ) ನೀವು ಕಷ್ಟಪಟ್ಟು ಇಲ್ಲಿವರೆಗೆ ಬಂದಿದ್ದೀರೆಂಬುದರಿಂದ ನಿಮಗೆ ಈ ಕೆಲಸದಲ್ಲಿ ಬಹಳ ಶ್ರದ್ಧೆಯಿದೆಯೆಂಬುದು ಸ್ಪಷ್ಟವಾಗುತ್ತದೆ. (21ಖ) ನೀವು ಇಲ್ಲಿಗೆ ಬರುವುದಕ್ಕೆ ಯಾರ ಒಪ್ಪಿಗೆಯೂ ಬೇಕಾಗಿಲ್ಲ. (21ಗ) ಆತನ ಕುಣಿಯುವಿಕೆಯಲ್ಲಿ ಉತ್ಸಾಹವಿದೆ. ಒಂದು ವಾಕ್ಯಕ್ಕೆ ಎಂಬುದು ಪದವನ್ನು ಸೇರಿಸಿ ಅದನ್ನು ಒಳವಾಕ್ಯವನ್ನಾಗಿ ಮಾಡಿ ಬಳಸುವ ಮೊದಲನೆಯ ವಿಧಾನದಲ್ಲಿ ಆ ವಾಕ್ಯದ ಎಲ್ಲಾ ಅಂಶಗಳೂ ಬದಲಾಗದೆ ಹಾಗೆಯೇ ಉಳಿದುಕೊಳ್ಳುತ್ತವೆ. ಆದರೆ ಎರಡು ಮತ್ತು ಮೂರನೆಯ ವಿಧಾನಗಳನ್ನು ಬಳಸುವಾಗ ವಾಕ್ಯದಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಉದು ಪ್ರತ್ಯಯದ ಬಳಕೆ ಯಲ್ಲಿ ಕಾಣಿಸುವುದಕ್ಕಿಂತಲೂ ಇಕೆ ಪ್ರತ್ಯಯದ ಬಳಕೆಯಲ್ಲಿ ಹೆಚ್ಚಿನ ಬದಲಾ ವಣೆಗಳು ಕಾಣಿಸಿಕೊಳ್ಳುತ್ತವೆ.
ಉದು ಪ್ರತ್ಯಯವನ್ನು ಬಳಸುವಾಗ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾ ಪದದಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಿದರೆ ಸಾಕು. ವಾಕ್ಯದ ಉಳಿದ ಭಾಗಗಳನ್ನೆಲ್ಲ ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಿದೆ.
ಕ್ರಿಯಾಪದದ ಕೊನೆಯಲ್ಲಿ ಬರುವ ಘಟಕವನ್ನು ಸೂಚಿಸುವ ಪ್ರತ್ಯಯವನ್ನು ಬಿಟ್ಟುಕೊಡಬೇಕು ಎಂಬುದು ಇಂತಹ ಬದಲಾವಣೆಗಳಲ್ಲಿ ಮುಖ್ಯವಾದುದು. ಈ ಬದಲಾವಣೆಯಿಂದಾಗಿ, ಈ ಪ್ರತ್ಯಯದ ಬಳಕೆಯಲ್ಲಿ ಕ್ರಿಯೆಯನ್ನು ನಡೆಸಿದವರು ಯಾರು ಎಂಬುದನ್ನು ಕ್ರಿಯಾಪದದ ಮೂಲಕ ಸೂಕ್ಷ್ಮವಾಗಿ ತಿಳಿಸಿಹೇಳಲು ಸಾಧ್ಯವಾಗದು. (22ಕ) ಮೂರು ಗಂಟೆ ಹಾಡಿದ್ದಾನೆಂಬುದು ನನಗೆ ಗೊತ್ತಾಗಲಿಲ್ಲ. (22ಖ) ಮೂರು ಗಂಟೆ ಹಾಡಿದ್ದಾಳೆಂಬುದು ನನಗೆ ಗೊತ್ತಾಗಲಿಲ್ಲ. (22ಗ) ಮೂರು ಗಂಟೆ ಹಾಡಿದುದು ನನಗೆ ಗೊತ್ತಾಗಲಿಲ್ಲ. ಎಂಬುದು ಪದದ ಬಳಕೆಯಿರುವ (22ಕ) ಮತ್ತು (22ಖ) ವಾಕ್ಯಗಳ ನಡುವೆ ಕಾಣಿಸಲು ಸಾಧ್ಯವಾಗಿರುವ ವ್ಯತ್ಯಾಸವನ್ನು (ಹಾಡಿದುದು ಗಂಡಸೋ ಅಥವಾ ಹೆಂಗಸೋ ಎಂಬುದನ್ನು) ಉದು ಪ್ರತ್ಯಯದ ಬಳಕೆಯಿರುವ (22ಗ)ದಲ್ಲಿ ಕಾಣಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಬಹುದು. ಅಲ್ಲಗಳೆಯುವ ವಾಕ್ಯವೊಂದರ ಮೂಲಕ ಮಾತನಾಡುವ ಸಮಯಕ್ಕಿಂತ ಮುಂದೆ ನಡೆಯುವ ಘಟನೆಯನ್ನು ಅಲ್ಲಗಳೆಯಲಾಗಿದೆಯೋ ಅಥವಾ ಹಿಂದೆ ನಡೆದ ಘಟನೆಯನ್ನು ಅಲ್ಲಗಳೆಯಲಾಗಿದೆಯೋ ಎಂಬುದನ್ನು ಸೂಚಿಸಲು ಎರಡು ರೀತಿಯ ಕ್ರಿಯಾರೂಪಗಳು ಬಳಕೆಯಾಗುತ್ತವೆ (23ಕ-ಖ ನೋಡಿ). ಇಂತಹ ಕ್ರಿಯಾರೂಪಗಳಿರುವ ವಾಕ್ಯಗಳನ್ನು ಉದು ಪ್ರತ್ಯಯದ ಮೂಲಕ ಒಳವಾಕ್ಯ ಗಳನ್ನಾಗಿ ಬದಲಾಯಿಸಬೇಕಿದ್ದಲ್ಲಿ, ಆ ಪ್ರತ್ಯಯವನ್ನು ಹಿಂದಿನ ಘಟನೆಯನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ನೇರವಾಗಿ ಸೇರಿಸಬಹುದು (ಇದಕ್ಕಾಗಿ ಕನ್ನಡದಲ್ಲಿ ಒಂದು ವಿಶಿಷ್ಟವಾದ ಕ್ರಿಯಾರೂಪ ಬಳಕೆಯಲ್ಲಿದೆ ಎಂಬುದನ್ನು (23ಗ)ದಲ್ಲಿ ಕಾಣಬಹುದು). (23ಕ) ಆತ ನಾಳೆ ಹೋಗುವುದಿಲ್ಲ. (23ಖ) ಆತ ನಿನ್ನೆ ಹೋಗಲಿಲ್ಲ. (23ಗ) ಆತ ನಿನ್ನೆ ಹೋಗದುದು ಯಾರಿಗೂ ಸಮಾಧಾನವಿಲ್ಲ. ಆದರೆ ಮುಂದೆ ನಡೆಯಲಿರುವ ಘಟನೆಯೊಂದನ್ನು ಅಲ್ಲಗಳೆಯುವ ಕ್ರಿಯಾಪದಕ್ಕೆ ಈ ರೀತಿ ಉದು ಪ್ರತ್ಯಯವನ್ನು ನೇರವಾಗಿ ಸೇರಿಸಿ ಹೇಳಲು ಸಾಧ್ಯವಾಗದು. ಅದಕ್ಕೆ ಬದಲು ಅಲ್ಲಗಳೆಯುವ ಕ್ರಿಯಾಪದದ ಮುಂದೆ ಇರು ಕ್ರಿಯಾಪದವನ್ನಿರಿಸಿ ಅದಕ್ಕೆ ಉದು ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. (23ಘ) ಆತ ನಾಳೆ ಹೋಗದಿರುವುದು ಯಾರಿಗೂ ಸಮಾಧಾನವಿಲ್ಲ. ಇದು ಎಂಬುದು ಮತ್ತು ಉದು ಎಂಬೆರಡು ಪದಗಳ ಬಳಕೆಯಲ್ಲಿ ಕಾಣಿಸುವ ಇನ್ನೊಂದು ವ್ಯತ್ಯಾಸ. ಇಕೆ ಪ್ರತ್ಯಯವನ್ನು ಬಳಸಿ ಒಳವಾಕ್ಯವನ್ನು ತಯಾರಿಸುವುದಿದ್ದಲ್ಲಿ ಅಂತಹ ವಾಕ್ಯದ ಕ್ರಿಯಾಪದದೊಂದಿಗೆ ಬರುವ ಘಟಕವನ್ನು ಸೂಚಿಸುವ ಪ್ರತ್ಯಯವನ್ನು ಮಾತ್ರವಲ್ಲದೆ ಸಮಯವನ್ನು ಸೂಚಿಸುವ ಪ್ರತ್ಯಯವನ್ನೂ ಬಿಟ್ಟು ಕೊಡಬೇಕಾಗು (24ಕ) ಅವನು ಹೊಲಿಯುವುದು ಚನ್ನಾಗಿರುತ್ತದೆ. (24ಖ) ಅವನು ಹೊಲಿದುದು ಚನ್ನಾಗಿತ್ತು. (24ಗ) ಅವನ ಹೊಲಿಯುವಿಕೆ ಚನ್ನಾಗಿರುತ್ತದೆ/ಚನ್ನಾಗಿತ್ತು. ಉದು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯಗಳಲ್ಲಿ ಮಾತನಾಡುವ ಸಮಯ ಕ್ಕಿಂತ ಹಿಂದೆ ನಡೆದ ಮತ್ತು ಮುಂದೆ ನಡೆಯುವ ಘಟನೆಗಳ ನಡುವಿರುವ ವ್ಯತ್ಯಾಸವನ್ನು ಉವ್ ಮತ್ತು ದ್ ಎಂಬ ಸಮಯ ಪ್ರತ್ಯಯಗಳ ಮೂಲಕ ಸೂಚಿಸಲು ಸಾಧ್ಯವಿದೆ ಎಂಬುದನ್ನು (24ಕ-ಖ) ವಾಕ್ಯಗಳಲ್ಲಿ ಕಾಣಬಹುದು. ಆದರೆ ಇಕೆ ಪ್ರತ್ಯಯವನ್ನು ಬಳಸಿ ರಚಿಸಿರುವ ಒಳವಾಕ್ಯದಲ್ಲಿ ಇದು ಸಾಧ್ಯ ವಾಗುವುದಿಲ್ಲ ಎಂಬುದನ್ನು (24ಗ)ದಲ್ಲಿ ಕಾಣಬಹುದು. ಎರಡನೆಯದಾಗಿ, ಇಕೆ ಪ್ರತ್ಯಯವನ್ನು ಒಂದು ವಾಕ್ಯದ ಕ್ರಿಯಾಪದಕ್ಕೆ ಇಲ್ಲವೇ ಸೇರಿಸುವಾಗ ನಾಮಪದಕಂತೆಗಳನ್ನು ಅವುಗಳ ಸಂಬಂಧಿಸುವ ರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಮೇಲೆ (24ಗ) ವಾಕ್ಯದಲ್ಲಿ ಅವನು ಪದವನ್ನು ಅವನ ಎಂಬುದಾಗಿ ಬದಲಾ ಯಿಸಿರುವುದಕ್ಕೆ ಇದೇ ಕಾರಣ. ಇದನ್ನೇ ಕೆಳಗಿನ ವಾಕ್ಯಗಳಲ್ಲೂ ಕಾಣಬಹುದು.
ಅದರೊಂದಿಗೆ ನಾಮಪದ ಬರುವ (25ಕ) ರಮೇಶ ಹೆದರಿದ. (25ಖ) ರಮೇಶನ ಕೆಟ್ಟುಹೋಯಿತು. ಹೆದರಿಕೆಯಿಂದಾಗಿ ಇವತ್ತಿನ ಕೆಲಸ (26ಕ) ರಾಜು ಕಂಬಳಿಯನ್ನು ಒಗೆದ. (26ಖ) ರಾಜುವಿನ ಕಂಬಳಿಯ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. ಇಕೆ ಪ್ರತ್ಯಯವನ್ನು ಬಳಸಿರುವ ಒಳವಾಕ್ಯಗಳಲ್ಲಿ ಸಾಮಾನ್ಯವಾಗಿ ಈ ರೀತಿ ಸಂಬಂಧಿಸುವ ಪ್ರತ್ಯಯದೊಂದಿಗೆ ಬರುವ ನಾಮಪದಕಂತೆಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳುವುದು ರೂಢಿ. (26ಖ) ವಾಕ್ಯದಲ್ಲಿ ಎರಡು ಪದಕಂತೆ ಗಳನ್ನೂ ಉಳಿಸಿಕೊಂಡಿರುವ ಕಾರಣ ಅದು ಅಷ್ಟೊಂದು ಒಪ್ಪಿಗೆಯಾಗುವ ವಾಕ್ಯವೆಂದು ಅನಿಸುವುದಿಲ್ಲ. ಅದಕ್ಕಿಂತ ಸಂಬಂಧಿಸುವ ರೂಪಗಳಲ್ಲಿ ಒಂದನ್ನು ಮಾತ್ರವೇ ಉಳಿಸಿಕೊಂಡಿರುವ ಕೆಳಗಿನ ಎರಡು ವಾಕ್ಯಗಳು ಹೆಚ್ಚು ಒಪ್ಪಿಗೆಯಾಗ ಬಲ್ಲುವು. (26ಗ) ರಾಜುವಿನ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. (26ಘ) ಕಂಬಳಿಯ ಒಗೆಯುವಿಕೆ ಅಷ್ಟೊಂದು ಚನ್ನಾಗಿಲ್ಲ. ಇಕೆ ಪ್ರತ್ಯಯವನ್ನು ಬಳಸಿ ಒಳವಾಕ್ಯವೊಂದನ್ನು ತಯಾರಿಸುವಾಗ ಆ ವಾಕ್ಯದ ಕ್ರಿಯಾಪದದೊಂದಿಗೆ ಬರುವ ಕ್ರಿಯಾಗುಣಪದಗಳನ್ನು ನಾಮಗುಣಪದ ಗಳನ್ನಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಆದರೆ ಉದು ಪ್ರತ್ಯಯವನ್ನು ಬಳಸಿ ತಯಾರಿಸುವ ಒಳವಾಕ್ಯಗಳಲ್ಲಿ ಕ್ರಿಯಾಗುಣಪದಗಳು ಬದಲಾಗದೆ ಹಾಗೆಯೇ ಉಳಿದುಕೊಳ್ಳುತ್ತವೆ.
(27ಕ) ಆಕೆ ಚಂದವಾಗಿ ಕುಣಿಯುತ್ತಾಳೆ. (27ಖ) ಆಕೆ ಚಂದವಾಗಿ ಕುಣಿಯುವುದು ಎಲ್ಲರಿಗೂ ಇಷ್ಟವಾಯಿತು. (27ಗ) ಆಕೆಯ ಚಂದವಾದ ಕುಣಿಯುವಿಕೆ ಎಲ್ಲರಿಗೂ ಇಷ್ಟವಾಯಿತು. (28ಕ) ರಾಜು ಮೆಲ್ಲಗೆ ಅತ್ತ. (28ಖ) ರಾಜು ಮೆಲ್ಲಗೆ ಅತ್ತುದು ಯಾರಿಗೂ ಗೊತ್ತಾಗಲಿಲ್ಲ. (28ಗ) ರಾಜುವಿನ ಮೆಲ್ಲಗಿನ ಅಳುವಿಕೆ ಯಾರಿಗೂ ಗೊತ್ತಾಗಲಿಲ್ಲ. ಉದು ಪ್ರತ್ಯಯವನ್ನು ಬಳಸಿ ಅಲ್ಲಗಳೆಯುವ ವಾಕ್ಯವನ್ನು ಒಳವಾಕ್ಯವನ್ನಾಗಿ ಮಾಡಲು ಸಾಧ್ಯವಿದೆಯೆಂಬುದನ್ನು ನಾವು ಮೇಲೆ ನೋಡಿರುವೆವು. ಆದರೆ ಇಕೆ ಪ್ರತ್ಯಯದ ಬಳಕೆಯಲ್ಲಿ ಇದು ಸಾಧ್ಯವಾಗದು.
7.3.3 ಕ್ರಿಯಾಗುಣಪದಗಳ ಜಾಗದಲ್ಲಿ ಬಳಕೆ
ಮೇಲೆ ಸೂಚಿಸಿರುವ ಹಾಗೆ, ವಾಕ್ಯವೊಂದನ್ನು ಅಲು ಪ್ರತ್ಯಯವನ್ನು ಬಳಸಿ ಒಳವಾಕ್ಯವನ್ನಾಗಿ ಮಾಡಿದಲ್ಲಿ ಅದನ್ನು ಇನ್ನೊಂದು ವಾಕ್ಯದ ಕ್ರಿಯಾಗುಣಪದದ ಜಾಗದಲ್ಲಿ ಬಳಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇಂತಹ ಒಳವಾಕ್ಯವನ್ನು ಹೊರವಾಕ್ಯವು ಸೂಚಿಸುವ ಘಟನೆಯ ಉದ್ದೇಶವೊಂದನ್ನು ಸೂಚಿಸಲು ಬಳಸ ಲಾಗುತ್ತದೆ. (29ಕ) ಬಾಗಿಲನ್ನು ತೆರೆಯಲು ಕಾವಲುಗಾರನನ್ನು ಕಳಿಸಿದ್ದಾರೆ. (29ಖ) ಬೆಂಗಳೂರಿಗೆ ಹೋಗಲು ಅವನು ಇವತ್ತು ಬೇಗ ಎದ್ದಿದ್ದಾನೆ. ಅಲು ಪ್ರತ್ಯಯಕ್ಕೆ ಒಂದು ಘಟನೆಯನ್ನು ನೇರವಾಗಿ ಸೂಚಿಸುವ ಅರ್ಥವೂ ಬರಬಲ್ಲುದು ಇಲ್ಲವೇ ಆ ಘಟನೆ ನಡೆದಿದೆ ಅಥವಾ ನಡೆಯಲಿದೆ ಎಂಬ ಸಂಗತಿಯನ್ನು ಸೂಚಿಸುವ ಅರ್ಥವೂ ಬರಬಲ್ಲುದು. ಈ ವಿಷಯದಲ್ಲಿ ಅದು ಉದು ಪ್ರತ್ಯಯದ ಹಾಗೆಯೇ ಬಳಕೆಯಾಗುತ್ತದೆ.
(30ಕ) ಆಕೆಗೆ ಮನೆಗೆ ಹೋಗಲು ಮರೆತಿದೆ. (30ಖ) ಆಕೆಗೆ ಕಾರು ಬಿಡಲು ಮರೆತಿದೆ. (30ಕ) ವಾಕ್ಯದ ಪ್ರಕಾರ ಆಕೆಗೆ ಮರೆತಿರುವುದು ‘ಮನೆಗೆ ಹೋಗಬೇಕು’ ಎಂಬ ಸಂಗತಿ; ಆದರೆ (30ಖ) ವಾಕ್ಯದ ಪ್ರಕಾರ ಆಕೆಗೆ ಮರೆತಿರುವುದು ‘ಕಾರನ್ನು ಹೇಗೆ ಬಿಡುವುದು’ ಎಂಬುದಾಗಿ ಅದನ್ನು ಬಿಡುವ ವಿಧಾನ. ಆದರೆ (30ಖ) ವಾಕ್ಯಕ್ಕೆ ಮೊದಲನೆಯ ವಾಕ್ಯದ ಅರ್ಥಕ್ಕೆ ಸಮನಾಗಿರುವ ಅರ್ಥವೂ ಬರಲು ಸಾಧ್ಯವಿದೆ. ಅಲು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯ ಬೇರೊಂದು ವಾಕ್ಯದ (ಅದರ ಹೊರವಾಕ್ಯದ) ಕ್ರಿಯಾಗುಣಪದದ ಜಾಗದಲ್ಲಿ ( ಎಂದರೆ, ಕ್ರಿಯಾಪದದ ‘ವಿಶೇಷಣ’ವಾಗಿ) ಬರುವುದಲ್ಲದೆ ನಾಮಪದಕಂತೆಯಾಗಿ ಬರುವುದಿಲ್ಲ. ಈ ಕಾರಣಕ್ಕಾಗಿ, ಅಂತಹ ವಾಕ್ಯಕ್ಕೆ ಉದು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯದ ಹಾಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಒಳವಾಕ್ಯ ಮತ್ತು ಹೊರವಾಕ್ಯಗಳೆರಡೂ ಮಾಡುಗನೆಂಬ ಘಟಕವನ್ನೊಳಗೊಂಡಿವೆಯಾದಲ್ಲಿ ಅಂತಹ ಘಟಕ ಎರಡರಲ್ಲೂ ಒಬ್ಬನೇ ವ್ಯಕ್ತಿಯನ್ನು ಸೂಚಿಸುತ್ತಿರಬೇಕೆಂಬ ಇನ್ನೊಂದು ನಿಯಮವೂ ಅಲು ಪ್ರತ್ಯಯದ ಕಾಣಿಸಿಕೊಳ್ಳುತ್ತದೆ. ಉದು ಇಲ್ಲವೇ ಇಕೆ ಪ್ರತ್ಯಯಗಳ ಬಳಕೆಯಲ್ಲಿ ಬಳಕೆಯಲ್ಲಿ ಈ ನಿಯಮವಿಲ್ಲ. ಈ ಕಾರಣಕ್ಕಾಗಿ ರಾಮು ಅಕ್ಕಿ ತರಲು ಸೀತೆ ಅಡುಗೆ ಮಾಡಿದಳು ಎಂಬಂತಹ ವಾಕ್ಯಗಳು ಕನ್ನಡದಲ್ಲಿ ಅಷ್ಟೊಂದು ಒಪ್ಪಿಗೆಯಾಗುವು ದಿಲ್ಲ. ಅಲು ಪ್ರತ್ಯಯವನ್ನು ಬಳಸಿ ತಯಾರಿಸಿದ ಒಳವಾಕ್ಯಗಳು ಇನ್ನೊಂದು ವಿಷಯದಲ್ಲೂ ಇತರ ಒಳವಾಕ್ಯಗಳಿಂದ ಭಿನ್ನವಾಗಿವೆ. ಅವು ಸಾಮಾನ್ಯವಾಗಿ ಹೊರವಾಕ್ಯವು ತಿಳಿಸುವ ಘಟನೆಯ ಅನಂತರ ನಡೆಯುವ (ಇಲ್ಲವೇ ನಡೆಯ ಬೇಕಾಗಿರುವ) ಘಟನೆಯೊಂದನ್ನು ಸೂಚಿಸುತ್ತವೆ. ಈ ಕಾರಣಕ್ಕಾಗಿ ಅವು ತೊಡಗು, ಸುರುಮಾಡು ಎಂಬಂತಹ ಕ್ರಿಯಾಪದಗಳಿರುವ ಹೊರವಾಕ್ಯಗಳಲ್ಲಿ ಬರಬಲ್ಲುವು, ಆದರೆ ಮುಂದುವರಿಸು, ನಿಲ್ಲಿಸು, ಮುಗಿಸು ಎಂಬಂತಹ ಕ್ರಿಯಾಪದಗಳಿರುವ ಹೊರವಾಕ್ಯಗಳಲ್ಲಿ ಬರಲಾರವು. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದೊಂದಿಗೆ ಜೋಡಿಸಬೇಕಾಗಿರುವ ಸಂದಭ್ರದಲ್ಲೂ ಅಲು ಪ್ರತ್ಯಯವನ್ನು ಬಳಸಲು ಸಾಧ್ಯ ಎಂಬುದನ್ನು ನಾವು ಮುಂದಿನ (ಎಂಟನೇ) ಅಧ್ಯಾಯದಲ್ಲಿ ನೋಡಲಿರುವೆವು. ಒಂದು ಘಟನೆ ಇನ್ನೊಂದು ಘಟನೆಯ ಅನಂತರ ನಡೆಯುವಂತಹದು ಎಂಬುದನ್ನು ಸೂಚಿಸುವು ದಕ್ಕಾಗಿ ಈ ಪ್ರತ್ಯಯದ ಬಳಕೆಯಾಗುತ್ತದೆ. ಈ ಬಳಕೆಗೂ ಮತ್ತು ಮೇಲೆ ವಿವರಿಸಿರುವ ಒಳವಾಕ್ಯದ ಬಳಕೆಗೂ ನಡುವೆ ಹತ್ತಿರದ ಸಂಬಂಧವಿದ್ದು ಹಲವು ಸಂದಭ್ರಗಳಲ್ಲಿ ಇವೆರಡು ಬಳಕೆಗಳಲ್ಲಿ ಯಾವುದು ಕಾಣಿಸಿಕೊಳ್ಳುತ್ತಿದೆ ಎಂಬು ದನ್ನು ನಿರ್ಧರಿಸುವುದು ಕಷ್ಟವಾಗಿ ತೋರಲು ಸಾಧ್ಯವಿದೆ.
7.3.4 ಹೊರವಾಕ್ಯದ ಕ್ರಿಯಾಪದಗಳು
ವಾಕ್ಯವೊಂದನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಲು (ಎಂದರೆ ಪದ ಕಂತೆಯನ್ನಾಗಿ ಬಳಸಲು ಇಲ್ಲವೇ ಕ್ರಿಯಾಗುಣಪದದ ಜಾಗದಲ್ಲಿ ಬಳಸಲು) ಕನ್ನದದಲ್ಲಿ ನಾಲ್ಕು ವಿಧಾನಗಳಿವೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಇದಲ್ಲದೆ, ಈ ನಾಲ್ಕು ವಿಧಾನಗಳ ಬಳಕೆ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಸೂಚಿಸುವುದಕ್ಕಾಗಿ ನಡೆಯುವುದೆಂಬುದನ್ನೂ ನೋಡಿರುವೆವು. ಇಂತಹ ವಾಕ್ಯರೂಪದ ವಾಕ್ಯಾಂಗಗಳು ಯಾವ ರೀತಿಯ ಹೊರವಾಕ್ಯಗಳಲ್ಲೆಲ್ಲ ಬರಬಲ್ಲುವು ಎಂಬುದರಲ್ಲೂ ಕೆಲವು ನಿಬ್ರಂಧಗಳಿವೆ. ಮೇಲೆ ಮೂರು ಮತ್ತು ನಾಲ್ಕನೇ ಅಧ್ಯಾಯಗಳಲ್ಲಿ ಪರಿಶೀಲಿಸಿರುವ ಕ್ರಿಯಾ ವಾಕ್ಯ ಮತ್ತು ವಿಷಯವಾಕ್ಯಗಳಿಗೂ ಮತ್ತು ಈ ರೀತಿ ಒಳವಾಕ್ಯವೊಂದನ್ನು ಘಟಕವನ್ನಾಗಿ ಪಡೆದಿರುವ (ಹೊರ)ವಾಕ್ಯಗಳಿಗೂ ನಡುವೆ ಹಲಕೆಲವು ವ್ಯತ್ಯಾಸ ಗಳಿವೆ. ಉದಾಹರಣೆಗಾಗಿ, ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದಗಳಲ್ಲಿ ಕೆಲವೇ ಕೆಲವು ಮಾತ್ರ ಇಂತಹ ಹೊರವಾಕ್ಯಗಳಲ್ಲಿ ಕ್ರಿಯಾಪದಗಳಾಗಿ ಬರ ಬಲ್ಲುವು. ಇದಕ್ಕೆ ಕಾರಣವೇನೆಂದರೆ, ಒಂದು ವಾಕ್ಯವು ತಿಳಿಸುವ ಸಂಗತಿ ಇಲ್ಲವೇ ಘಟನೆಯನ್ನು ಘಟಕವನ್ನಾಗಿ ಪಡೆಯಬಲ್ಲ ಕ್ರಿಯೆಗಳು ಕೆಲವೇ ಕೆಲವು ಮಾತ್ರ. (31ಕ) ಪೇಟೆಯಿಂದ ಬರುವ ಜಾನಕಿಯನ್ನು ರಾಜು ನೋಡಿದ್ದಾನೆ. (31ಖ) ಜಾನಕಿ ಪೇಟೆಯಿಂದ ಬರುವುದನ್ನು ರಾಜು ನೋಡಿದ್ದಾನೆ. (31ಕ) ವಾಕ್ಯದ ಪ್ರಕಾರ ರಾಜು ನೋಡಿರುವುದು ಜಾನಕಿಯನ್ನು, ಎಂದರೆ ಒಬ್ಬ ವ್ಯಕ್ತಿಯನ್ನು; ಆದರೆ (31ಖ) ವಾಕ್ಯದ ಪ್ರಕಾರ ಆತ ನೋಡಿರುವುದು ಜಾನಕಿ ಬರುವುದನ್ನು, ಎಂದರೆ ಒಂದು ಘಟನೆಯನ್ನು. (31ಕ) ವಾಕ್ಯದಲ್ಲಿ ನೋಡು ಕ್ರಿಯಾಪದ ಪೇಟೆ ಎಂಬ ಒಂದು ಜಾಗವನ್ನೂ ಮತ್ತು ಜಾನಕಿ ಮತ್ತು ರಾಜು ಎಂಬ ಎರಡು ವ್ಯಕ್ತಿಗಳನ್ನೂ ಘಟಕಗಳಾಗಿ ಪಡೆದಿದೆ. ಆದರೆ (31ಖ) ವಾಕ್ಯ ದಲ್ಲಿ ಅದೇ ಕ್ರಿಯಾಪದ ಜಾನಕಿ ಪೇಟೆಯಿಂದ ಬರುವುದು ಎಂಬ ಒಳವಾಕ್ಯ ಸೂಚಿಸುವ ಘಟನೆಯನ್ನೂ ಮತ್ತು ರಾಜು ಎಂಬ ವ್ಯಕ್ತಿಯನ್ನೂ ಘಟಕವಾಗಿ ಪಡೆದಿದೆ.
ಕನ್ನಡದಲ್ಲಿ ಕೇಳು, ನೋಡು, ಬಿಡು, ಮರೆ, ಹೊಗಳು, ಕಾಣು, ನಿಲ್ಲು, ನಂಬು, ಹೆದರು, ನೆನೆ, ತೆಗಳು ಮೊದಲಾದ ಕೆಲವೇ ಕೆಲವು ಕ್ರಿಯಾಪದಗಳು ಮಾತ್ರ ಈ ರೀತಿ ವ್ಯಕ್ತಿ, ವಸ್ತು, ಜಾಗ ಮೊದಲಾದವುಗಳನ್ನು ಮಾತ್ರವಲ್ಲದೆ ಘಟನೆ ಇಲ್ಲವೇ ಸಂಗತಿಗಳನ್ನೂ ಘಟಕಗಳನ್ನಾಗಿ ಪಡೆಯಬಲ್ಲುವು. (32ಕ) ಆತ ಸೀತಾಬಾಯಿಯನ್ನು ಹೊಗಳುತ್ತಿದ್ದಾನೆ. (32ಖ) ಆತ ಸೀತಾಬಾಯಿ ಹಾಡುವುದನ್ನು ಹೊಗಳುತ್ತಿದ್ದಾನೆ. (33ಕ) ಆಕೆ ರಮೇಶನನ್ನು ಮರೆತಿದ್ದಾಳೆ. (33ಖ) ಆಕೆ ತನಗೆ ರಮೇಶ ಸಹಾಯ ಮಾಡಿದ್ದನೆಂಬುದನ್ನು ಮರೆತಿ ದ್ದಾಳೆ. (34ಕ) ರಾಜು ಹುಡುಗನನ್ನು ವರಾಂಡದಲ್ಲಿ ನಿಲ್ಲಿಸಿದ್ದಾನೆ. (34ಖ) ರಾಜು ಕತೆ ಬರೆಯುವುದನ್ನು ನಿಲ್ಲಿಸಿದ್ದಾನೆ. (32ಕ) ವಾಕ್ಯದಲ್ಲಿ ಹೊಗಳು ಕ್ರಿಯಾಪದ ಇಬ್ಬರು ವ್ಯಕ್ತಿಗಳನ್ನು ಘಟಕವಾಗಿ ಪಡೆದಿದೆಯಾದರೆ, (32ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಘಟನೆ ಯನ್ನು (ಸೀತಾಬಾಯಿ ಹಾಡುವುದು ಎಂಬುದನ್ನು) ಮತ್ತು ಒಬ್ಬ ವ್ಯಕ್ತಿಯನ್ನು ಘಟಕವಾಗಿ ಪಡೆದಿದೆ. (33ಕ) ವಾಕ್ಯದಲ್ಲಿ ಮರೆ ಕ್ರಿಯಾಪದ ಇಬ್ಬರು ವ್ಯಕ್ತಿ ಗಳನ್ನು ಘಟಕವಾಗಿ ಪಡೆದಿದೆಯಾದರೆ, (33ಖ) ವಾಕ್ಯದಲ್ಲಿ ಅದೇ ಕ್ರಿಯಾಪದ ಒಂದು ಸಂಗತಿಯನ್ನು (ತನಗೆ ರಮೇಶ ಸಹಾಯ ಮಾಡಿದ್ದನೆಂಬ ಸಂಗತಿ ಯನ್ನು) ಮತ್ತು ಒಬ್ಬ ವ್ಯಕ್ತಿಯನ್ನು ಘಟಕವಾಗಿ ಪಡೆದಿದೆ. ಉದು ಪ್ರತ್ಯಯವನ್ನು ಬಳಸಿ ತಯಾರಿಸಿದ ಒಳವಾಕ್ಯ ಮಾತ್ರ ಈ ವಿಷಯ ದಲ್ಲಿ ಇತರ ಒಳವಾಕ್ಯಗಳಿಂದ ಭಿನ್ನವಾಗಿದೆ. ಅದು ಒಂದು ಘಟನೆ ಇಲ್ಲವೇ ಸಂಗತಿಯನ್ನು ಸೂಚಿಸುವ ಬದಲು ಒಂದು ವಸ್ತುವನ್ನೂ ಸೂಚಿಸಲು ಸಾಧ್ಯ ವಿದ್ದು, ಈ ಅರ್ಥದಲ್ಲಿ ಅದು ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಘಟಕ ವಾಗಿ ಬರಬಲ್ಲುದು. (35ಕ) ನೀವು ಕೊಟ್ಟುದನ್ನು ನಾನು ನಿನ್ನೆಯೇ ತಿಂದಿದ್ದೆ. (35ಖ) ಬಹುಮಾನವಾಗಿ ಸಿಕ್ಕಿದುದನ್ನು ರಾಜು ಒಡೆದಿದ್ದಾನೆ. (35ಗ) ಅಟ್ಟದಲ್ಲಿರಿಸಿದುದು ಕೊಳೆತುಹೋಗಿದೆ. (35ಘ) ಟಾಂಕಿಯಲ್ಲಿ ತೇಲುತ್ತಿರುವುದನ್ನು ಶಿವರಾಯರು ಮೇಲಕ್ಕೆ ಎತ್ತಿ ಅಲು ಪ್ರತ್ಯಯವನ್ನು ಬಳಸಿ ರಚಿಸಿದ ಒಳವಾಕ್ಯಗಳೂ ಕೆಲವು ವಿಷಯ ಗಳಲ್ಲಿ ಇತರ ಒಳವಾಕ್ಯಗಳಿಂದ ಭಿನ್ನವಾಗಿವೆ. ಅವು ಸೂಚಿಸುವ ಘಟನೆ ಹೊರ ವಾಕ್ಯವು ಸೂಚಿಸುವ ಘಟನೆಯ ಉದ್ದೇಶವಾಗಿರಲು ಸಾಧ್ಯವಿದೆಯಾದ ಕಾರಣ, ಈ ಅರ್ಥದಲ್ಲಿ ಅದು ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಘಟಕವಾಗಿ ಬರಬಲ್ಲುದು. ಈ ವಿಷಯವನ್ನು ಕೆಳಗಿನ ವಾಕ್ಯಗಳ ಮೂಲಕ ಉದಾಹರಿಸ ಬಹುದು. (36ಕ) ಆಕೆಗೆ ಸಿತಾರ್ ಬಾರಿಸಲು ಮರೆತಿಲ್ಲ. (36ಖ) ಸಿತಾರ್ ಬಾರಿಸಲು ಆಕೆ ನೆರೆಮನೆಗೆ ಹೋಗುತ್ತಿದ್ದಾಳೆ. ಸಿತಾರ್ ಬಾರಿಸುವುದು ಎಂಬ ಘಟನೆ ಇಲ್ಲವೇ ಸಂಗತಿ (36ಕ) ವಾಕ್ಯದಲ್ಲಿ ನೇರವಾಗಿ ಮರೆ ಕ್ರಿಯಾಪದದ ಒಂದು ಘಟಕವಾಗಿ ಬಂದಿದೆ, ಆದರೆ (36ಖ) ವಾಕ್ಯದಲ್ಲಿ ಅದು ಈ ರೀತಿ ನೇರವಾಗಿ ಹೋಗು ಕ್ರಿಯಾಪದದ ಘಟಕವಾಗಿ ಬಂದಿರದೆ ಅದು ಸೂಚಿಸುವ ಘಟನೆಯ ಉದ್ದೇಶವಾಗಿ ಬಂದಿದೆ. ಈ ಎರಡನೆಯ ಅರ್ಥದಲ್ಲಿ ಅಲು ಪ್ರತ್ಯಯದ ಮೂಲಕ ತಯಾರಾದ ಒಳವಾಕ್ಯ ಎಲ್ಲಾ ರೀತಿಯ ಹೊರವಾಕ್ಯಗಳಲ್ಲೂ ಬರಬಲ್ಲುದು. ಯಾವುದಾದರೊಂದು ಘಟನೆ ಇಲ್ಲವೇ ಸಂಗತಿ ಅವಶ್ಯವಾಗಿಯೂ ಘಟಕ ವಾಗಿ ಬರಬೇಕಾಗಿರುವ ಕ್ರಿಯಾಪದಗಳೂ ಕನ್ನಡದಲ್ಲಿ ಕೆಲವಿವೆ. ಇವನ್ನು ಬಳಸಿರುವ ವಾಕ್ಯಗಳಲ್ಲಿ ಒಂದು ಒಳವಾಕ್ಯವನ್ನು ಇಲ್ಲವೇ ಘಟನೆಯನ್ನು ಸೂಚಿಸುವ ಪದಕಂತೆಯನ್ನು ಬಳಸುವುದು ಅವಶ್ಯ. (37ಕ) ಕೀತ್ರನೆ ಹಾಡುವುದನ್ನು ಆಕೆ ಮುಂದುವರಿಸಿದಳು. (37ಖ) ಅವನಿಗೆ ಸ್ವಲ್ಪ ನೀರು ಕುಡಿಯಬೇಕೆಂದು ಅನಿಸಿತು. (37ಗ) ಇವತ್ತೇ ಗೋಡೆಗೆ ಸುಣ್ಣ ಹಚ್ಚಲು ಆತ ಒಪ್ಪಿದ್ದಾನೆ. (37ಕ)ದ ಹೊರವಾಕ್ಯದಲ್ಲಿ ಬಂದಿರುವ ಮುಂದುವರಿಸು ಕ್ರಿಯಾಪದದ ಘಟಕ ವಾಗಿ ಒಂದು ಘಟನೆಯನ್ನು ಬಳಸುವ ಅವಶ್ಯಕತೆಯಿದೆ. ಇದಕ್ಕಾಗಿ ಈ ವಾಕ್ಯ ದಲ್ಲಿ ಕೀತ್ರನೆ ಹಾಡುವುದು ಎಂಬ ಒಳವಾಕ್ಯವನ್ನು ಬಳಸಲಾಗಿದೆ. (37ಖ) ಮತ್ತು (37ಗ) ವಾಕ್ಯಗಳಲ್ಲೂ ಹೀಗೆಯೇ.
ಇಂತಹ ವಾಕ್ಯಗಳಲ್ಲಿ ಘಟನೆಯನ್ನು ಸೂಚಿಸಲು ಈ ರೀತಿ ಒಳವಾಕ್ಯಗಳನ್ನು ಬಳಸುವ ಬದಲು ಘಟನೆಯೊಂದನ್ನು ವರ್ಣಿಸುವ ಪದಕಂತೆಗಳನ್ನು ಬಳಸಲೂ ಸಾಧ್ಯವಿದೆ.
(38ಕ) ಈ ಕಟ್ಟಡದ ಉದ್ಘಾಟನೆ ನಿನ್ನೆ ಬೆಳಿಗ್ಗೆ ಜರಗಿತು. (38ಖ) ಮಳೆ ಮೂರು ಗಂಟೆಗೇನೇ ಸುರುವಾಗಿತ್ತು. (38ಗ) ರಾತ್ರಿ ಹನ್ನೆರಡುಗಂಟೆಗೆ ನಾಟಕ ಮುಗಿಯಿತು. (38ಕ)ದಲ್ಲಿ ಜರಗು ಕ್ರಿಯಾಪದದ ಘಟಕವಾಗಿ ಘಟನೆಯೊಂದನ್ನು ಸೂಚಿಸಲು ಈ ಕಟ್ಟಡದ ಉದ್ಘಾಟನೆ ಎಂಬ ಪದಕಂತೆಯನ್ನು ಬಳಸಲಾಗಿದೆ. (38ಖ-ಗ) ವಾಕ್ಯಗಳಲ್ಲೂ ಹೀಗೆಯೇ.
7.3.5 ಹೊರವಾಕ್ಯವಾಗಿ ವಿಷಯವಾಕ್ಯಗಳ ಬಳಕೆ
ಕ್ರಿಯಾವಾಕ್ಯಗಳ ಹಾಗೆಯೇ ವಿಷಯವಾಕ್ಯಗಳೂ ಒಳವಾಕ್ಯವೊಂದನ್ನು ಘಟಕ ವನ್ನಾಗಿ ಪಡೆದಿರಲು ಸಾಧ್ಯ. ಇಂತಹ ಹೊರವಾಕ್ಯಗಳು ಜಾಗ, ಗುಣಧರ್ಮ ಇಲ್ಲವೇ ಸಂಬಂಧವನ್ನು ಸೂಚಿಸುತ್ತಿರಲು ಸಾಧ್ಯವಿದೆಯೆಂಬುದನ್ನು ಅನುಕ್ರಮ ವಾಗಿ (39ಕ-ಗ) ವಾಕ್ಯಗಳಲ್ಲಿ ಕಾಣಬಹುದು. (39ಕ) ಅವರು ಇವತ್ತು ಭಾಷಣ ಮಾಡುವುದು ಮೈಸೂರಿನಲ್ಲಿ. (39ಖ) ರಾಜು ಇವತ್ತು ಬರುವುದು ಸಂಶಯ. (39ಗ) ಇಲ್ಲಿ ಕುಳಿತರೆ ಯಾರಿಗೂ ಕಾಣಲಿಕ್ಕಿಲ್ಲವೆಂದು ಅವನಿಗೆ ಭ್ರಮೆ. ಗುಣಧರ್ಮವನ್ನು ಸೂಚಿಸುವ ಹೊರವಾಕ್ಯಗಳು ಘಟನೆಯನ್ನು ಇಲ್ಲವೇ ಸಂಗತಿಯನ್ನು ಸೂಚಿಸುವ ಒಳವಾಕ್ಯವೊಂದನ್ನು ಘಟಕವನ್ನಾಗಿ ಪಡೆಯಬಲ್ಲುವು. (40ಕ) ಅವಳು ಬರುವುದು ಬಹಳ ಮೆಲ್ಲಗೆ. (40ಖ) ಅವಳು ಬರುವುದು ನಿಜ. (40ಕ)ದಲ್ಲಿ ಬಂದಿರುವ ಅವಳು ಬರುವುದು ಎಂಬ ಒಳವಾಕ್ಯ ಒಂದು ಘಟನೆ ಯನ್ನು ಸೂಚಿಸುತ್ತಿದೆಯಾದರೆ, (40ಖ)ದಲ್ಲಿ ಅದೇ ಒಳವಾಕ್ಯ ಒಂದು ಸಂಗತಿ ಯನ್ನು ಸೂಚಿಸುತ್ತಿದೆಯೆಂಬುದನ್ನು ಗಮನಿಸಬಹುದು.
7.4 ಪದಕಂತೆಯ ಅಂಗವಾಗಿ ಬಳಕೆ
ವಾಕ್ಯವೊಂದನ್ನು ಇನ್ನೊಂದು ವಾಕ್ಯದಲ್ಲಿ ಬರುವ ಒಂದು ಪದಕಂತೆಯ ಅಂಗ ವನ್ನಾಗಿ ಮಾಡಿ ಬಳಸಲು ಕನ್ನಡದಲ್ಲಿ ನಾಲ್ಕು ವಿಧಾನಗಳಿವೆ.
(1) ಆ ವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸಿ ಬಳಸುವುದು, (2) ಅದಕ್ಕೇನೇ ಓ ಪ್ರತ್ಯಯದ ಬದಲು ಅ ಪ್ರತ್ಯಯವನ್ನು ಸೇರಿಸಿ ಬಳಸುವುದು, ಮತ್ತು (3) ಆ ವಾಕ್ಯದ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸಿ ಬಳಸುವುದು. (4) ವಾಕ್ಯದ ಕೊನೆಯಲ್ಲಿ ಎಂಬ ಇಲ್ಲವೇ ಎನ್ನುವ ಪದವನ್ನು ಸೇರಿಸಿ ಬಳಸುವುದು. ಈ ನಾಲ್ಕು ವಿಧಾನಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (41ಕ) ಜಾನಕಿ ಮೈಸೂರಿನಿಂದ ಒಂದು ಸೀರೆ ತಂದಿದ್ದಳು. (41ಖ) ಆ ಸೀರೆ ಈಗ ಹರಿದು ಹೋಗಿದೆ. (42ಕ) ಯಾವ ಸೀರೆಯನ್ನು ಜಾನಕಿ ಮೈಸೂರಿನಿಂದ ತಂದಿದ್ದಳೋ ಆ ಸೀರೆ ಈಗ ಹರಿದು ಹೋಗಿದೆ. (42ಖ) ಜಾನಕಿ ಮೈಸೂರಿನಿಂದ ತಂದಿದ್ದ ಸೀರೆ ಈಗ ಹರಿದು ಹೋಗಿದೆ. (42ಗ) ಜಾನಕಿಯ ಮೈಸೂರಿನ ಸೀರೆ ಈಗ ಹರಿದು ಹೋಗಿದೆ. (43ಕ) ಅವನಿಗೆ ಹಣ ಸಿಕ್ಕಿಲ್ಲ. (43ಖ) ಆ ವಿಷಯ ನನಗೂ ಗೊತ್ತಿದೆ. (43ಗ) ಅವನಿಗೆ ಹಣ ಸಿಕ್ಕಿಲ್ಲ ಎಂಬ ಆ ವಿಷಯ ನನಗೂ ಗೊತ್ತಿದೆ. (41ಕ) ವಾಕ್ಯವನ್ನು (41ಖ)ದಲ್ಲಿ ಬಂದಿರುವ ಆ ಸೀರೆ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲು ಮೂರು ವಿಧಾನಗಳನ್ನು ಬಳಸಲು ಸಾಧ್ಯವಿದ್ದು ಇವುಗಳ ಬಳಕೆಯನ್ನು (42ಕ-ಗ) ವಾಕ್ಯಗಳಲ್ಲಿ ಕಾಣಬಹುದು. (41ಕ) ವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸುವ ಮೂಲಕ (42ಕ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ, ಅದಕ್ಕೇನೇ ಅ ಪ್ರತ್ಯಯವನ್ನು ಸೇರಿಸುವ ಮೂಲಕ (42ಖ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ, ಮತ್ತು ಆ ವಾಕ್ಯದ ಎರಡು ಘಟಕಗಳಿಗೆ ನೇರವಾಗಿ ಇದೇ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ (42ಗ)ದಲ್ಲಿ ಕಾಣಿಸುವ ಒಳವಾಕ್ಯವನ್ನೂ ತಯಾರಿಸಲಾಗಿದೆ. ನಾಲ್ಕನೆಯ ವಿಧಾನದ ಬಳಕೆಯನ್ನು (43ಕ-ಗ) ವಾಕ್ಯಗಳಲ್ಲಿ ಕಾಣ ಬಹುದು. ಇಲ್ಲಿ ಬಂದಿರುವ (43ಕ) ವಾಕ್ಯಕ್ಕೆ ಎಂಬ ಪದವನ್ನು ಸೇರಿಸುವುದರ ಮೂಲಕ ಅದನ್ನು (43ಖ) ವಾಕ್ಯದಲ್ಲಿ ಬಂದಿರುವ ಆ ವಿಷಯ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಿ (43ಗ) ವಾಕ್ಯವನ್ನು ತಯಾರಿಸಲಾಗಿದೆ.
ಈ ಒಳವಾಕ್ಯಗಳ ರಚನೆಯಲ್ಲಿ ಬೇರೆಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ, ಒಳವಾಕ್ಯದ ಕ್ರಿಯಾಪದಕ್ಕೆ ಓ ಪ್ರತ್ಯಯವನ್ನು ಸೇರಿಸುವುದರೊಂದಿಗೆ ಅದರಲ್ಲಿ ಬರುವ ಒಂದು ಘಟಕಕ್ಕೆ ಯಾವ ಎಂಬ ಪದವನ್ನೂ ಸೇರಿಸಿಕೊಳ್ಳಬೇಕಾಗುತ್ತದೆ ((42ಕ) ನೋಡಿ).
ಇದಕ್ಕೆ ಬದಲು, ಒಳವಾಕ್ಯದ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವು ದಿದ್ದಲ್ಲಿ, ಅದರ ಘಟಕಗಳಲ್ಲೊಂದನ್ನು (ಒಂದು ಸೀರೆ ಎಂಬುದನ್ನು) ಬಿಟ್ಟು ಕೊಡಬೇಕಾಗುತ್ತದೆ ಎಂಬುದನ್ನು (42ಖ)ದಲ್ಲಿ ಕಾಣಬಹುದು. ಅ ಪ್ರತ್ಯಯ ವನ್ನು ನೇರವಾಗಿ ಒಳವಾಕ್ಯದ ಘಟಕಗಳಿಗೆ ಸೇರಿಸುವುದಿದ್ದಲ್ಲೂ ಈ ರೀತಿ ಘಟಕ ಗಳಲ್ಲೊಂದನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ ಇದರೊಂದಿಗೆ ಆ ಎಂಬುದನ್ನೂ) ವಾಕ್ಯದ ಬಿಟ್ಟುಕೊಡಬೇಕಾಗುತ್ತದೆ ಎಂಬುದನ್ನು (42ಗ)ದಲ್ಲಿ ಕಾಣಬಹುದು.
ಎಂಬ ಇಲ್ಲವೇ ಎನ್ನುವ ಪದವನ್ನು ಬಳಸುವಲ್ಲಿ ಮಾತ್ರ ಒಳವಾಕ್ಯವಾಗಿ ಬರುವ ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. ಆದರೆ ಮೇಲೆ ಸೂಚಿಸಿದ ಹಾಗೆ ಈ ವಿಧಾನವನ್ನು ಕೆಲವು ವಿಶಿಷ್ಟವಾದ ಸಂದಭ್ರ ಗಳಲ್ಲಿ ಮಾತ್ರ ಬಳಸಲು ಸಾಧ್ಯ. ಈ ನಾಲ್ಕು ವಿಧಾನಗಳ ಬಳಕೆಯಲ್ಲಿ ಕಾಣಿಸುವ ಬೇರೆ ಬೇರೆ ವೈಶಿಷ್ಟ್ಯಗಳನ್ನು ಕೆಳಗಿನ ವಿಭಾಗಗಳಲ್ಲಿ ವಿವರಿಸ ಕ್ರಿಯಾಪದವನ್ನೂ (ತಂದಿದ್ದಳು
7.4.1 ಓ ಪ್ರತ್ಯಯದ ಬಳಕೆ
ಈ ವಿಧಾನವನ್ನು ಬಳಸುವುದಿದ್ದಲ್ಲಿ ಒಳವಾಕ್ಯವಾಗಿ ಬರುವ ವಾಕ್ಯದ ಎಲ್ಲಾ ಅಂಶಗಳೂ ಬದಲಾಗದೆ ಹೆಚ್ಚುಕಡಿಮೆ ಹಾಗೆಯೇ ಉಳಿದುಕೊಳ್ಳುತ್ತವೆ. ಆ ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಸೇರಿಸುವುದು ಮತ್ತು ಅದರ ಘಟಕ ವೊಂದಕ್ಕೆ ಅನಿಶ್ಚಿತ ಸವ್ರಪದವೊಂದನ್ನು ಸೇರಿಸುವುದು ಎಂಬ ಎರಡು ಬದಲಾವಣೆಗಳು ಮಾತ್ರ ಈ ವಾಕ್ಯದಲ್ಲಿ ನಡೆಯುತ್ತವೆ.
(44ಕ) ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. (44ಖ) ಆ ಹುಡುಗನಿಗೆ ಚಾಕಲೇಟಿಲ್ಲ. (44ಗ) ಯಾವ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲವೋ ಆ ಹುಡುಗನಿಗೆ ಚಾಕಲೇಟಿಲ್ಲ. (44ಕ) ವಾಕ್ಯವನ್ನು (44ಖ)ದಲ್ಲಿ ಬಂದಿರುವ ಆ ಹುಡುಗನಿಗೆ ಎಂಬ ಪದ ಕಂತೆಯ ಒಳವಾಕ್ಯವನ್ನಾಗಿ ಮಾಡಿ (44ಗ) ವಾಕ್ಯವನ್ನು ತಯಾರಿಸಲಾಗಿದೆ. ಇದಕ್ಕಾಗಿ (44ಕ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಹುಡುಗ ಪದದೆದುರು ಯಾವ ಎಂಬ ಅನಿಶ್ಚಿತ ಸವ್ರಪದವನ್ನು ಬಳಸಲಾಗಿದೆ.
ವಾಕ್ಯವೊಂದರ ಮೂಲಕ ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳಲ್ಲಿ ಒಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುವು ದಕ್ಕಾಗಿ ಈ ರೀತಿ ಅಂತಹ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದಕಂತೆಯಲ್ಲಿ ಒಂದು ಒಳವಾಕ್ಯವನ್ನಿರಿಸುತ್ತೇವೆ. ಮೇಲೆ (44ಖ) ವಾಕ್ಯದಲ್ಲಿ ಆ ಹುಡುಗ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಆತನ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುವುದಕ್ಕಾಗಿ (44ಗ) ವಾಕ್ಯದಲ್ಲಿ (44ಕ) ವಾಕ್ಯವನ್ನು ಆ ಹುಡುಗ ಎಂಬ ಪದಕಂತೆಯ ಒಳವಾಕ್ಯವನ್ನಾಗಿ ಮಾಡಲಾಗಿದೆ. ಈ ವಿಧಾನದ ಬಳಕೆಯಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದ ಇಲ್ಲವೇ ಪದಕಂತೆ ಎರಡು ಬಾರಿ ಬರುತ್ತದೆ. ಒಮ್ಮೆ ಒಳವಾಕ್ಯದಲ್ಲಿ ಮತ್ತು ಇನ್ನೊಮ್ಮೆ ಅದನ್ನು ಒಳವಾಕ್ಯವಾಗಿ ಪಡೆದಿರುವ ಪದಕಂತೆಯಲ್ಲಿ. ಮೇಲೆ (44ಗ) ವಾಕ್ಯದಲ್ಲಿ ಆ ಹುಡುಗ ಎಂಬ ಪದಕಂತೆ ಎರಡು ಬಾರಿ ಬಂದಿರುವು ದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ರೀತಿ ಒಂದೇ ಪದ ಇಲ್ಲವೇ ಪದಕಂತೆಯನ್ನು ಎರಡು ಬಾರಿ ಬಳಸುವ ಬದಲು ಎರಡನೆಯ ಸಲಕ್ಕೆ ಸವ್ರ ಪದವೊಂದನ್ನು ಬಳಸುವುದು ರೂಢಿ. (44ಘ) ಯಾವ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲವೋ ಆತನಿಗೆ ಚಾಕಲೇಟಿಲ್ಲ. ಒಂದು ಪದಕಂತೆಯಲ್ಲಿ ಒಂದಕ್ಕಿಂತ ಜಾಸ್ತಿ ಒಳವಾಕ್ಯಗಳನ್ನು ಬಳಸಲು ಸಾಧ್ಯವಿದ್ದು, ಇದಕ್ಕಾಗಿ ಆ ವಾಕ್ಯಗಳನ್ನು ಮತ್ತು, ಇಲ್ಲವೇ, ಅಥವಾ ಮೊದ ಲಾದ ಪದಗಳ ಮೂಲಕ ಬೇಪ್ರಡಿಸುವ ಅವಶ್ಯಕತೆಯಿದೆ. (45ಕ) ಯಾವ ಪುಸ್ತಕ ಬಹಳ ಕಡಿಮೆ ಬೆಲೆಗೆ ದೊರಕುತ್ತದೆಯೋ, ಮತ್ತು ಯಾವುದು ಎಲ್ಲಾ ಸಂದಭ್ರಗಳಲ್ಲೂ ಪ್ರಯೋಜನಕ್ಕೆ ಬರುತ್ತದೆಯೋ, ಅಂತಹ ಈ ಪುಸ್ತಕವನ್ನು ಯಾರೂ ಕೊಂಡು ಕೊಳ್ಳುತ್ತಿಲ್ಲವೆಂಬುದು ವಿಚಿತ್ರ. (45ಖ) ಯಾವ ಪೆಟ್ಟಿಗೆಯನ್ನು ಚೀನಾದಿಂದ ತಂದಿದ್ದಾರೋ, ಯಾವುದು ಕಾಗದದಿಂದ ಕಪ್ಪು ಬಣ್ಣದಲ್ಲಿದೆಯೋ, ಯಾವುದನ್ನು ಮಾಡಲಾ ಚೌಕಾಕಾರದಲ್ಲಿದೆಯೋ ಆ ಪೆಟ್ಟಿಗೆ ಕಪಾಟಿನೊಳಗಿದೆ. ಗಿದೆಯೋ, ಮತ್ತು ಯಾವುದು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಪದಕಂತೆಗಳಲ್ಲಿ ಮಾತ್ರ ವಲ್ಲದೆ, ಪದಕಂತೆಯ ಅಂಗವಾಗಿ ಬರುವ ನಾಮಗುಣಪದಗಳೊಂದಿಗೂ ಮತ್ತು ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದಗಳೊಂದಿಗೂ ಈ ವಿಧಾನದಿಂದ ಸಿದ್ಧವಾಗುವ ಒಳವಾಕ್ಯಗಳನ್ನು ಬಳಸಲು ಸಾಧ್ಯವಿದೆ. (46ಕ) ಯಾವ ದನದ ಕರು ಹುಲಿಯ ಬಾಯಿಗೆ ಬಿದ್ದಿದೆಯೋ ಆ ದನ ರಾಜುವಿನದು. (46ಖ) ಯಾವ ಹುಡುಗನೊಂದಿಗೆ ಜಾನಕಿ ಸಂತೆಗೆ ಹೋಗಿದ್ದಳೋ ಆ ಹುಡುಗ ಈಗ ಕಾಣೆಯಾಗಿದ್ದಾನೆ. ಕೊಡವನ್ನು ಹಾಗೆಯೇ ನೀರಿನ ಹೊರುತ್ತಾಳೋ ಹೊರುತ್ತಾಳೆ. ಜಾಗ್ರತೆಯಿಂದ ಹೇಗೆ ಪುಸ್ತಕದ ಚೀಲವನ್ನೂ
7.4.2 ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದು
ವಾಕ್ಯವೊಂದನ್ನು ಇನ್ನೊಂದು ವಾಕ್ಯದಲ್ಲಿ ಬಂದಿರುವ ಪದಕಂತೆಯ ಅಂಗವನ್ನಾಗಿ ಮಾಡಲು ನಾವು ಬಳಸಬಹುದಾದ ಎರಡನೆಯ ವಿಧಾನವೇನೆಂದರೆ, ಅದರ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸುವುದು. ಕನ್ನಡದ ಕ್ರಿಯಾಪದಗಳು ಈ ಪ್ರತ್ಯಯದೊಂದಿಗೆ ಮೂರು ರೂಪಗಳಲ್ಲಿ ಬರಬಲ್ಲುವು, ಮತ್ತು ಈ ರೂಪಗಳು ಹಿಂದಿನ ಸಮಯದ ಘಟನೆ, ಮುಂದಿನ ಸಮಯದ ಘಟನೆ ಮತ್ತು ಅಲ್ಲಗಳೆ ಯುವ ಘಟನೆಗಳೆಂಬ ಮೂರು ರೀತಿಯ ಘಟನೆಗಳನ್ನು ಸೂಚಿಸಬಲ್ಲುವು. (47ಕ) ಇವತ್ತು ಶಾಲೆಗೆ ಹೋದ ಹುಡುಗರಿಗೆ ಚಾಕಲೇಟ್ ಸಿಕ್ಕಿದೆ. (47ಖ) ನಾಳೆ ಶಾಲೆಗೆ ಹೋಗುವ ಹುಡುಗರಿಗೆ ಚಾಕಲೇಟ್ ಸಿಗುತ್ತದೆ. (47ಗ) ಇವತ್ತು ಶಾಲೆಗೆ ಹೋಗದ ಹುಡುಗರಿಗೆ ಚಾಕಲೇಟ್ ಸಿಗಲಿಲ್ಲ. (47ಕ)ದ ಒಳವಾಕ್ಯದಲ್ಲಿ ಹೋದ ಕ್ರಿಯಾರೂಪ ಬಂದಿದ್ದು ಅದು ಮಾತ ನಾಡುವ ಸಮಯಕ್ಕಿಂತ ಹಿಂದಿನ ಸಮಯದಲ್ಲಿ ನಡೆದ ಘಟನೆಯನ್ನು ಸೂಚಿಸು ತ್ತದೆ. ಇದಕ್ಕೆ ಬದಲು, (47ಖ)ದ ಒಳವಾಕ್ಯದಲ್ಲಿ ಹೋಗುವ ಎಂಬ ಕ್ರಿಯಾ ರೂಪ ಬಂದಿದ್ದು, ಅದು ಮಾತನಾಡುವ ಸಮಯದ ಅನಂತರ ನಡೆಯಲಿರುವ ಮುಂದಿನ ಸಮಯದ ಘಟನೆಯನ್ನು ಸೂಚಿಸುತ್ತದೆ. (47ಗ)ದ ಒಳವಾಕ್ಯದಲ್ಲಿ ಇವೆರಡಕ್ಕಿಂತಲೂ ಭಿನ್ನವಾದ ಹೋಗದ ಎಂಬ ಕ್ರಿಯಾರೂಪ ಬಂದಿದ್ದು, ಇದು ನಡೆಯದ ಘಟನೆಯೊಂದನ್ನು ಸೂಚಿಸುತ್ತದೆ.
ಅಲ್ಲಗಳೆಯುವ ವಾಕ್ಯಗಳನ್ನು ಈ ರೀತಿ ಒಳವಾಕ್ಯಗಳನ್ನಾಗಿ ಮಾಡಿ ಬಳಸುವುದಿದ್ದಲ್ಲಿ, ಅವು ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿವೆಯೇ ಅಥವಾ ಮುಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿವೆಯೇ ಎಂಬ ವಿಷಯ ದಲ್ಲಿ ಸಂಶಯವುಂಟಾಗಲು ಸಾಧ್ಯವಿದೆ. ಈ ಎರಡು ಸಂದಭ್ರಗಳಲ್ಲೂ ಇಂತಹ ಒಳವಾಕ್ಯಗಳಲ್ಲಿ ಕ್ರಿಯಾಪದಕ್ಕಿರುವ ರೂಪ ಒಂದೇ ಎಂಬುದೇ ಈ ರೀತಿ ಸಂಶಯವುಂಟಾಗಲು ಕಾರಣ. ಉದಾಹರಣೆಗಾಗಿ ಮೇಲೆ (47ಗ) ವಾಕ್ಯದಲ್ಲಿ ಬಂದಿರುವ ಶಾಲೆಗೆ ಹೋಗದ ಎಂಬ ಒಳವಾಕ್ಯವನ್ನು ಈ ಹುಡುಗರು ಶಾಲೆಗೆ ಹೋಗಲಿಲ್ಲ ಎಂಬ ವಾಕ್ಯದಿಂದ ತಯಾರಿಸಿರಬೇಕು.
ಆದರೆ ಕೆಳಗೆ ಕೊಟ್ಟಿರುವ (47ಘ) ವಾಕ್ಯದಲ್ಲಿ ಬಂದಿರುವ ಅದೇ ರೂಪದ ಒಳವಾಕ್ಯವನ್ನು ಈ ಹುಡುಗರು (ನಾಳೆ) ಶಾಲೆಗೆ ಹೋಗುವುದಿಲ್ಲ ಎಂಬ ಬೇರೊಂದು ವಾಕ್ಯದಿಂದ ತಯಾರಿಸಿರಲು ಸಾಧ್ಯವಿದೆ. (47ಘ) ನಾಳೆ ಶಾಲೆಗೆ ಹೋಗದ ಹುಡುಗರಿಗೆ ಚಾಕಲೇಟ್ ಸಿಗಲಿಕ್ಕಿಲ್ಲ. ಕೆಳಗೆ ಕೊಟ್ಟಿರುವ (47ಙ) ವಾಕ್ಯಕ್ಕೆ ಈ ಎರಡು ರೀತಿಯ ಅರ್ಥಗಳೂ ಬರಬಲ್ಲುವೆಂಬುದನ್ನು ಗಮನಿಸಬಹುದು.
(47ಙ) ಶಾಲೆಗೆ ಹೋಗದ ಹುಡುಗನಿಗೆ ಚಾಕಲೇಟ್ ಕೊಡಬಾರದು. ಶಾಲೆಗೆ ಹೋಗದ ಹುಡುಗನಿಗೆ ಎಂಬ (47ಙ)ದಲ್ಲಿ ಬಂದಿರುವ ಪದಗುಚ್ಛಕ್ಕೆ ‘ಯಾವ ಹುಡುಗನು ಶಾಲೆಗೆ ಹೋಗಲಿಲ್ಲವೋ ಆತನಿಗೆ’ ಎಂಬ ಅರ್ಥ ಬರಲು ಸಾಧ್ಯವಿದ್ದು ಅದರಲ್ಲಿರುವ ಒಳವಾಕ್ಯ ‘ಹುಡುಗ ಶಾಲೆಗೆ ಹೋಗಲಿಲ್ಲ’ ಎಂಬು ದಾಗಿ ಹಿಂದಿನ ಘಟನೆಯೊಂದನ್ನು ಅಲ್ಲಗಳೆಯುತ್ತಿರಲು ಸಾಧ್ಯವಿದೆ, ಇಲ್ಲವೇ ‘ಯಾವ ಹುಡುಗನು ಶಾಲೆಗೆ ಹೋಗುವುದಿಲ್ಲವೋ ಆತನಿಗೆ’ ಎಂಬ ಅರ್ಥ ವಿರಲು ಸಾಧ್ಯವಿದ್ದು ಅದೇ ಒಳವಾಕ್ಯ ‘ಹುಡುಗ ಶಾಲೆಗೆ ಘಟನೆಯೊಂದನ್ನು ಹೋಗುವುದಿಲ್ಲ’ ಅಲ್ಲಗಳೆಯುತ್ತಿರಲೂ ಸಾಧ್ಯವಿದೆ.
ಆದರೆ ಸಾಮಾನ್ಯವಾಗಿ ವಾಕ್ಯವನ್ನು ಬಳಸುವ ಸಂದಭ್ರವೇ ಒಂದು ಒಳವಾಕ್ಯದ ನಿಜವಾದ ಅರ್ಥ ಯಾವುದು ಎಂಬುದನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ. ಈ ವಿಧಾನದ ಮೂಲಕ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿರುವ ಪದಕಂತೆಯೊಂದರ ಒಳವಾಕ್ಯವನ್ನಾಗಿ ಮಾಡಿ ಬಳಸುವಾಗ, ಆ ಪದಕಂತೆಗೆ ಮುಂದಿನ ಸಮನಾಗಿರುವ ಪದಕಂತೆಯನ್ನು ಒಳವಾಕ್ಯದಿಂದ ತೆಗೆದುಹಾಕಬೇಕಾಗುತ್ತದೆ. ಉದಾಹರಣೆಗಾಗಿ ಮೇಲೆ (47ಕ) ವಾಕ್ಯದಲ್ಲಿ ಬಂದಿರುವ ಇವತ್ತು ಶಾಲೆಗೆ ಹೋದ ಎಂಬ ಒಳವಾಕ್ಯ ಈ ಹುಡುಗರು ಇವತ್ತು ಶಾಲೆಗೆ ಹೋದರು ಎಂಬ ವಾಕ್ಯದ ವಿಶೇಷಣ ರೂಪವೆಂದು ಹೇಳಬಹುದು. ಅದನ್ನು ತಯಾರಿಸುವು ದಕ್ಕಾಗಿ ಈ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ ಅದನ್ನು ಹೋದ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಈ ಹುಡುಗರು ಎಂಬ ಪದಕಂತೆಯನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಬಹುದು. ಈ ರೀತಿ ಮೇಲಿನ ವಿಧಾನವನ್ನು ಬಳಸಿದಾಗ ಒಳವಾಕ್ಯಗಳಲ್ಲಿರುವ ಘಟಕ ಗಳಲ್ಲಿ ಒಂದು ಬಿದ್ದುಹೋಗುವುದಾದರೂ ಆ ಘಟಕ ಹೊರವಾಕ್ಯದಲ್ಲೂ (ಒಳ ವಾಕ್ಯದ ವಿಶೇಷ್ಯವಾಗಿ) ಬರುವುದಾದ ಕಾರಣ ಬಿದ್ದು ಹೋಗಿರುವ ಘಟಕ ಯಾವುದೆಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಆದರೆ, ಒಳವಾಕ್ಯದಲ್ಲಿ ಅದು ಎಂತಹ ಘಟಕವಾಗಿತ್ತು ಎಂಬುದನ್ನು ತಿಳಿಯುವುದು ಕೆಲವು ಸಂದಭ್ರ ಗಳಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸ ಬಹುದು. (48ಕ) ನಿನ್ನೆ ಮಾತನಾಡಿಸಿದ ಮುದುಕ ಇವತ್ತು ಸತ್ತು ಹೋಗಿದ್ದಾನೆ. (48ಖ) ನಿನ್ನೆ (ನಾನೊಬ್ಬ) ಮುದುಕನನ್ನು ಮಾತನಾಡಿಸಿದ್ದೆ. (48ಗ) ನಿನ್ನೆ (ನನ್ನನ್ನೊಬ್ಬ) ಮುದುಕ ಮಾತನಾಡಿಸಿದ್ದ. (48ಕ)ದಲ್ಲಿ ಬಂದಿರುವ ನಿನ್ನೆ ಮಾತನಾಡಿಸಿದ ಎಂಬ ಒಳವಾಕ್ಯ (48ಖ) ದಲ್ಲಿ ಬಂದಿರುವ ವಾಕ್ಯದಿಂದಲೂ ತಯಾರಾಗಿರಲು ಸಾಧ್ಯವಿದೆ ಇಲ್ಲವೇ (48ಗ)ದಲ್ಲಿ ಬಂದಿರುವ ವಾಕ್ಯದಿಂದಲೂ ತಯಾರಾಗಿರಲು ಸಾಧ್ಯವಿದೆ. ಈ ರೀತಿ ಒಳವಾಕ್ಯವನ್ನು ತಯಾರಿಸುವಾಗ ಮುದುಕ ಪದದೊಂದಿಗೆ ಅದರ ಮುಂದಿರುವ ಅನ್ನು ವಿಭಕ್ತಿ ಪ್ರತ್ಯಯವನ್ನೂ ಬಿಟ್ಟುಕೊಡಬೇಕಾಗುವುದರಿಂದ (48ಕ)ದಲ್ಲಿ ಈ ವ್ಯತ್ಯಾಸವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಆದರೆ ನಾನು ಮತ್ತು ನನ್ನನ್ನು ಎಂಬ ಪದಗಳನ್ನೂ ಒಳವಾಕ್ಯದಲ್ಲಿ ಬಳಸಿದೆವಾದರೆ ಈ ಸಮಸ್ಯೆ ಬಗೆಹರಿಯುತ್ತದೆ. (48ಘ) ನಿನ್ನೆ ನಾನು ಮಾತನಾಡಿಸಿದ ಮುದುಕ ಇವತ್ತು ಸತ್ತಿದ್ದಾನೆ. (48ಙ) ನಿನ್ನೆ ನನ್ನನ್ನು ಮಾತನಾಡಿಸಿದ ಮುದುಕ ಇವತ್ತು ಸತ್ತಿದ್ದಾನೆ. ಸಾಮಾನ್ಯವಾಗಿ ಅರ್ಥಸಂದಿಗ್ಧತೆಗಳು ಕಾಣಸಿಕೊಳ್ಳುವುದು ಬಹಳ ಅಪರೂಪ. ಇದಕ್ಕೆ ಒಂದು ವಾಕ್ಯಗಳಲ್ಲಿ ಬಳಸುವ ನಾವು ಕಾರಣವೇನೆಂದರೆ, ಯಾವ ವಿಭಕ್ತಿ ಪ್ರತ್ಯಯವೂ ಇಲ್ಲದಿರುವಂತಹ ಘಟಕವೇ ಜಾಗ್ರತೆ ಇಂತಹ ಒಳವಾಕ್ಯ ವಹಿಸಿಕೊಳ್ಳುತ್ತೇವೆ. ಇದನ್ನು ಕೆಳಗಿನ ಉದಾಹರಣೆಯಲ್ಲಿ ಕಾಣಬಹುದು. ಗಳಲ್ಲಿ ಬಿದ್ದುಹೋಗುವಂತೆ ನಾವು (49ಕ) ರಾಮುವಿಗೆ ಕಾರನ್ನು ಮಾರಿದ ವ್ಯಕ್ತಿ ಈಗ ಜೈಲಿನಲ್ಲಿದ್ದಾನೆ. (49ಖ) ಒಬ್ಬ ವ್ಯಕ್ತಿ ರಾಮುವಿಗೆ ಕಾರನ್ನು ಮಾರಿದ್ದ. (50ಕ) ರಾಮುವಿನಿಂದ ಕಾರನ್ನು ಕೊಂಡುಕೊಂಡ ವ್ಯಕ್ತಿ ಈಗ ಜೈಲಿ ನಲ್ಲಿದ್ದಾನೆ. (50ಖ) ಒಬ್ಬ ವ್ಯಕ್ತಿ ರಾಮುವಿನಿಂದ ಕಾರನ್ನು ಕೊಂಡುಕೊಂಡಿದ್ದ. ವಿಷಯವಾಕ್ಯಗಳನ್ನು ಈ ವಿಧಾನದ ಮೂಲಕ ಒಳವಾಕ್ಯಗಳನ್ನಾಗಿ ಬಳಸ ಬೇಕಿದ್ದಲ್ಲಿ ಅದರಲ್ಲಿ ಬರುವ ಇರು ಕ್ರಿಯಾಪದಕ್ಕೆ ಅ ಪ್ರತ್ಯಯವನ್ನು ಸೇರಿಸಿ ಹೇಳಬೇಕಾಗುತ್ತದೆ.
(51ಕ) ಆ ಮನೆಯಲ್ಲಿ ಒಂದು ದೆವ್ವ ಇದೆ. (51ಖ) ದೆವ್ವ ಇರುವ ಆ ಮನೆಯನ್ನು ರಾಜು ಯಾರಿಗೋ ಮಾರಿದ್ದಾನೆ. ಹಲವು ಸಂದಭ್ರಗಳಲ್ಲಿ ಈ ಇರು ಕ್ರಿಯಾಪದ ಇಂತಹ ವಿಷಯವಾಕ್ಯ ಗಳಲ್ಲಿ ಬಾರದಿರುತ್ತದೆ ಎಂಬುದನ್ನು ನಾವು ಮೇಲೆ ಮೂರನೇ ಅಧ್ಯಾಯದಲ್ಲಿ ನೋಡಿರುವೆವು. ಆದರೆ ಮೇಲಿನ ವಿಧಾನವನ್ನು ಬಳಸಿ ತಯಾರಿಸಿದ ಒಳವಾಕ್ಯ ಗಳಲ್ಲಿ ಆ ರೀತಿ ಇರು ಕ್ರಿಯಾಪದವನ್ನು (ಇಲ್ಲವೇ ಆಗಿರು ಎಂಬುದಾಗಿ ಬರುವ ಎರಡು ಕ್ರಿಯಾಪದಗಳ ಜೋಡಿಯನ್ನು) ಬಳಸದಿರಲು ಸಾಧ್ಯವಾಗದು. (52ಕ) ರಾಜುವಿಗೆ ಮೂವರು ಹುಡುಗಿಯರು. (52ಖ) ರಾಜುವಿಗಿರುವ ಮೂವರು ಹುಡುಗಿಯರಲ್ಲಿ ಇಬ್ಬರಿಗೆ ಮದುವೆ (53ಕ) ಈ ಬುಟ್ಟಿಯ ಹಣ್ಣು ಬಹಳ ಸಿಹಿ. (53ಖ) ಬಹಳ ಸಿಹಿಯಾಗಿರುವ ಈ ಬುಟ್ಟಿಯ ಹಣ್ಣನ್ನು ನಿಮಗೇ ಕೊಡು ತ್ತೇನೆ.
7.4.3 ವಾಕ್ಯದ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸುವುದು
ವಾಕ್ಯವೊಂದರಲ್ಲಿ ಬರುವ ಘಟಕಗಳಲ್ಲಿ ಪ್ರತಿಯೊಂದಕ್ಕೂ ಅ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಪದಕಂತೆಯೊಂದರ ಒಳವಾಕ್ಯವನ್ನಾಗಿ ಮಾಡಿ ಬಳಸುವುದು ಮೂರನೆಯ ವಿಧಾನ. ಈ ವಿಧಾನದಲ್ಲಿ ಒಳವಾಕ್ಯದ ಕ್ರಿಯಾಪದ ಬಿದ್ದುಹೋಗುತ್ತದೆ, ಮತ್ತು ಅದರ ಪದಕಂತೆಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳೂ ಬಿದ್ದುಹೋಗುತ್ತವೆ. (54ಕ) ಕಳೆದ ವಾರ ಅವರು ಮೈಸೂರಿನಲ್ಲಿ ಭಾಷಣ ಮಾಡಿದ್ದರು. (54ಖ) (ಆ) ಭಾಷಣ ಚನ್ನಾಗಿರಲಿಲ್ಲ. (54ಗ) ಕಳೆದ ವಾರದ ಅವರ ಮೈಸೂರಿನ (ಆ) ಭಾಷಣ ಚನ್ನಾಗಿರಲಿಲ್ಲ. (54ಕ) ವಾಕ್ಯವನ್ನು (54ಖ)ದಲ್ಲಿ ಬಂದಿರುವ ಆ ಭಾಷಣ ಎಂಬ ಪದಕಂತೆಗೆ ಒಳವಾಕ್ಯವನ್ನಾಗಿ ಮಾಡಿ (54ಗ) ವಾಕ್ಯವನ್ನು ತಯಾರಿಸಲಾಗಿದೆ. ಮತ್ತು ಇದಕ್ಕಾಗಿ (54ಕ) ವಾಕ್ಯದ ಭಾಷಣ ಎಂಬ ಘಟಕವನ್ನೂ ಮತ್ತು ಮಾಡಿದ್ದರು ಎಂಬ ಕ್ರಿಯಾರೂಪವನ್ನೂ ಬಿಟ್ಟುಕೊಡಲಾಗಿದೆ, ಇದಲ್ಲದೆ (54ಕ) ವಾಕ್ಯದ ಉಳಿದ ಮೂರು ಘಟಕಗಳಿಗೆ (ಕಳೆದ ವಾರ, ಅವರು ಮತ್ತು ಮೈಸೂರಿನಲ್ಲಿ ಎಂಬವುಗಳಿಗೆ) ಅ ಪ್ರತ್ಯಯವನ್ನು ಸೇರಿಸಲಾಗಿದೆ.
ಈ ರೀತಿ ಘಟಕಗಳಿಗೆ ಅ ಪ್ರತ್ಯಯವನ್ನು ಸೇರಿಸುವಾಗ ಅವುಗಳ ಮುಂದೆ ವಿಭಕ್ತಿ ಪ್ರತ್ಯಯಗಳಿದ್ದಲ್ಲಿ ಅವು ಬಿದ್ದುಹೋಗುತ್ತವೆ. ಮೇಲಿನ ಉದಾಹರಣೆ ಯಲ್ಲಿ ಮೈಸೂರು ಪದದ ಮುಂದಿದ್ದ ಅಲ್ಲಿ ಎಂಬ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿರುವುದನ್ನು ಕಾಣಬಹುದು. ಕೆಳಗಿನ ಉದಾಹರಣೆಯಲ್ಲಿ ಇಗೆ ಮತ್ತು ಅಲ್ಲಿ ಎಂಬ ಎರಡು ಪ್ರತ್ಯಯಗಳೂ ಬಿದ್ದುಹೋಗಿವೆ. (55ಕ) ರಾಮುವಿಗೆ ನಾಟಕದಲ್ಲಿ ಒಂದು ಬಹುಮಾನ ಸಿಕ್ಕಿದೆ. (55ಖ) ರಾಮುವಿನ ನಾಟಕದ ಬಹುಮಾನ ಕಳೆದುಹೋಗಿದೆ.
7.4.4 ಎಂಬ ಇಲ್ಲವೇ ಎನ್ನುವ ಪದಗಳ ಬಳಕೆ
ವಾಕ್ಯವೊಂದನ್ನು ಪದಕಂತೆಯ ಅಂಗವನ್ನಾಗಿ ಮಾಡುವುದಕ್ಕಾಗಿ ಬಳಸಿದ ಮೇಲಿನ ಮೂರು ವಿಧಾನಗಳಲ್ಲೂ ಆ ವಾಕ್ಯದಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಬೇಕಾಗಿತ್ತದೆ. ಇದಲ್ಲದೆ ಈ ಎಲ್ಲಾ ವಿಧಾನಗಳಲ್ಲೂ ಒಳವಾಕ್ಯ ಮತ್ತು ಹೊರವಾಕ್ಯಗಳ ನಡುವೆ ಒಂದು ಪದದ ಮಟ್ಟಿಗಾದರೂ ಸಮಾನತೆಯಿದ್ದೇ ಇರಬೇಕೆಂಬ ನಿಯಮವಿದೆ. ಎಂಬ ಇಲ್ಲವೇ ಎನ್ನುವ ಪದವನ್ನು ಬಳಸಿ ನಡೆಸುವ ಈ ನಾಲ್ಕನೆಯ ವಿಧಾನದಲ್ಲಿ ಒಳವಾಕ್ಯವಾಗಿ ಬರುವ ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ. ಆದರೆ ಈ ವಿಧಾನವನ್ನು ಕೆಲವೇ ಕೆಲವು ಸಂದಭ್ರ ಗಳಲ್ಲಿ ಮಾತ್ರ ಬಳಸಲು ಸಾಧ್ಯವಿದೆ. ಇಲ್ಲಿ ವಿಶೇಷ್ಯವಾಗಿ ವಿಷಯ, ಸುದ್ದಿ, ಸಂಗತಿ, ವಿಚಾರ, ಮೊದಲಾದ ಕೆಲವೇ ಕೆಲವು ಪದಗಳು ಮಾತ್ರ ಬರಬಲ್ಲುವು. (56ಕ) ಅವಳು ಬಾವಿಗೆ ಹಾರಿಯಾಳೆಂಬ ಸಂಗತಿಯನ್ನು ಯಾರೂ ಊಹಿ ಸಿರಲಿಲ್ಲ. (56ಖ) ನಾಳೆ ಮಂತ್ರಿಗಳು ಬರುತ್ತಾರೆಂಬ ಸುದ್ದಿ ಎಲ್ಲೆಡೆಗೂ ಹರಡಿದೆ. ವಿಶೇಷ್ಯವಾಗಿ ಒಂದು ನಾಮಪದವನ್ನು ಬಳಸುವ ಬದಲು ಎಂಬ ಪದವನ್ನೇ ಅದಕ್ಕೆ ಉದು ಪ್ರತ್ಯಯವನ್ನು ಸೇರಿಸುವುದರ ಮೂಲಕ ನಾಮಪದವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಈ ಸಾಧ್ಯತೆಯನ್ನು ಮೇಲೆ (7.3.2)ರಲ್ಲಿ ನೋಡಿರುವೆವು. ಇದನ್ನೇ ಕೆಳಗಿನ ವಾಕ್ಯಗಳಲ್ಲೂ ಕಾಣಬಹುದು. ಬಾವಿಗೆ (57ಕ) ಅವಳು ಊಹಿಸಿರಲಿಲ್ಲ. (57ಖ) ಅವನಿಗೆ ಹಣ ಸಿಕ್ಕಿದೆಯೆಂಬುದು ನನಗೂ ಗೊತ್ತಿದೆ. (57ಗ) ನೀವಿಲ್ಲಿಗೆ ಬಂದಿರುವಿರೆಂಬುದು ಬಹಳ ಗುಟ್ಟಿನ ವಿಷಯ. ಹಾರಿಯಾಳೆಂಬುದನ್ನು ಯಾರೂ
7.5 ಸಾರಾಂಶ
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ ಮಾಡಿ ಬಳಸಲು ಬೇರೆ ಬೇರೆ ವಿಧಾನಗಳು ಬಳಕೆಯಲ್ಲಿದ್ದು ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದು ಇವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಇನ್ನೊಬ್ಬನ ಮಾತು ಇಲ್ಲವೇ ಅಭಿಪ್ರಾಯವನ್ನು ಎತ್ತಿ ಹೇಳುವುದು ಇಂತಹ ಉದ್ದೇಶಗಳಲ್ಲಿ ಒಂದು. ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ, ಎಂದು ಪದವನ್ನು (ಇಲ್ಲವೇ ಓ ಪ್ರತ್ಯಯವನ್ನು) ಆ ಮಾತಿಗೆ ಇಲ್ಲವೇ ಆ ಅಭಿಪ್ರಾಯ ವನ್ನು ಸೂಚಿಸುವ ವಾಕ್ಯಕ್ಕೆ ಸೇರಿಸಿ ಅದನ್ನು ಬೇರೊಂದು ವಾಕ್ಯದ ಒಳವಾಕ್ಯ ವನ್ನಾಗಿ ಮಾಡಬಹುದು. ಇದಕ್ಕೆ ಬದಲು, ಆ ವಾಕ್ಯಕ್ಕೆ ಅಂತೆ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಹಾಗೆಯೇ ಬಳಸಲೂ ಸಾಧ್ಯವಿದೆ. ಒಳವಾಕ್ಯವನ್ನು ತಯಾರಿಸುವ ಇತರ ವಿಧಾನಗಳನ್ನೆಲ್ಲ ವ್ಯಕ್ತಿ, ವಸ್ತು, ವಿಷಯ, ಘಟನೆ ಮೊದಲಾದವುಗಳನ್ನು ವರ್ಣಿಸುವುದಕ್ಕಾಗಿ ಬಳಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಎರಡು ರೀತಿಯ ವಿಧಾನಗಳು ಬಳಕೆಯಾಗುತ್ತವೆ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಿ ಬಳಸುವುದು ಇವುಗಳಲ್ಲಿ ಒಂದು ರೀತಿಯ ವಿಧಾನ, ಮತ್ತು ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿ ಬರುವ ಘಟಕದ ಅಂಗವನ್ನಾಗಿ ಮಾಡಿ ಬಳಸುವುದು ಇನ್ನೊಂದು ರೀತಿಯ ವಿಧಾನ. ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡಲು ವಾಕ್ಯಕ್ಕೆ ಎಂಬುದು ಪದವನ್ನು ಸೇರಿಸುವುದು, ಮತ್ತು ವಾಕ್ಯದ ಕೊನೆಯ ಕ್ರಿಯಾಪದಕ್ಕೆ ಉದು, ಇಕೆ ಮತ್ತು ಅಲು ಎಂಬ ಪ್ರತ್ಯಯಗಳಲ್ಲೊಂದನ್ನು ಸೇರಿಸುವುದು ಎಂಬುದಾಗಿ ನಾಲ್ಕು ವಿಧಾನಗಳು ಬಳಕೆಯಲ್ಲಿವೆ.
ಒಂದು ವಾಕ್ಯವನ್ನು ಇನ್ನೊಂದು ವಾಕ್ಯದಲ್ಲಿ ಬಂದಿರುವ ಪದಕಂತೆಯ ಅಂಗವನ್ನಾಗಿ ಮಾಡಲು ಆ ವಾಕ್ಯಕ್ಕೆ ಎಂಬ ಪದವನ್ನು ಸೇರಿಸುವುದು, ಆ ವಾಕ್ಯದ ಕ್ರಿಯಾಪದಕ್ಕೆ ಓ ಮತ್ತು ಅ ಪ್ರತ್ಯಯಗಳಲ್ಲೊಂದನ್ನು ಸೇರಿಸುವುದು ಮತ್ತು ಆ ವಾಕ್ಯದ ಘಟಕಗಳಲ್ಲಿ ಪ್ರತಿಯೊಂದಕ್ಕೂ ಅ ಪ್ರತ್ಯಯವನ್ನು ಸೇರಿಸು ವುದು ಎಂಬುದಾಗಿ ನಾಲ್ಕು ವಿಧಾನಗಳು ಬಳಕೆಯಲ್ಲಿವೆ. ಈ ವಿಧಾನಗಳನ್ನು ಬಳಸಿದಾಗ ವಾಕ್ಯದಲ್ಲಿ ಬೇರೆಯೂ ಹಲವು ಬದಲಾವಣೆಗಳು ನಡೆಯುತ್ತವೆ. ಈ ವಿಧಾನಗಳಿಗೆಲ್ಲ ಬೇರೆ ಬೇರೆ ಉದ್ದೇಶಗಳಿವೆ.