Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಆರು — ಗುಣಪದಗಳ ಬಳಕೆ
6.1 ಪೀಠಿಕೆ
ಕನ್ನಡದ ವಾಕ್ಯಗಳಲ್ಲಿ ಮುಖ್ಯವಾಗಿ ಮೂರು ರೀತಿಯ ಗುಣಪದಗಳು ಬಳಕೆ ಯಾಗುತ್ತವೆ.
(1) ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುದಕ್ಕಾಗಿ ಪದಕಂತೆಗಳಲ್ಲಿ ಬರುವ ದೊಡ್ಡ, ಚಿಕ್ಕ, ಹೊಸ, ಹಳೆ, ಅಗಲ, ಸಪುರ, ಕೆಂಪು, ಬಿಳಿ ಮೊದಲಾದ ಗುಣಪದಗಳು,
(2) ಕ್ರಿಯಾಪದಗಳು ತಿಳಿಸುವ ಘಟನೆಯ ಗುಣಧರ್ಮವೊಂದನ್ನು ವಾಕ್ಯಗಳಲ್ಲಿ ಬರುವ ಮೆಲ್ಲಗೆ, ಬೇಗ, ಸೂಚಿಸುವುದಕ್ಕಾಗಿ ದೊಪ್ಪನೆ, ದರದರನೆ, ಬಳಿಕ, ಮುಂಚೆ ಮೊದಲಾದ ಗುಣಪದಗಳು, ಮತ್ತು
(3) ಈ ಎರಡು ರೀತಿಯ ಗುಣಪದಗಳು ಸೂಚಿಸುವ ಗುಣಧರ್ಮದ ಪ್ರಮಾಣವನ್ನು ತಿಳಿಸುವುದಕ್ಕಾಗಿ ಅವುಗಳೊಂದಿಗೆ ಬರುವ ಬಹಳ, ಸ್ವಲ್ಪ, ಒಳ್ಳೆ, ಭಾರೀ ಮೊದಲಾದ ಗುಣಪದಗಳು. ಈ ಮೂರು ರೀತಿಯ ಗುಣಪದಗಳ ಬಳಕೆಯನ್ನೂ ಕೆಳಗಿನ ವಾಕ್ಯಗಳಲ್ಲಿ ಕಾಣ ಬಹುದು. (1ಕ) ಆ ದೊಡ್ಡ ಮನೆಯಲ್ಲಿ ಜನರು ಮೆಲ್ಲಗೆ ಮಾತನಾಡುತ್ತಾರೆ. (1ಖ) ಇವರದು ಬಹಳ ದೊಡ್ಡ ಜಗಳ. (1ಗ) ಅವಳು ಸ್ವಲ್ಪ ಮೆಲ್ಲಗೆ ನಡೆಯುತ್ತಿದ್ದಾಳೆ. ನಾಮಪದಗಳೊಂದಿಗೆ ಪದಕಂತೆಗಳಲ್ಲಿ ಬರುವ ಗುಣಪದಗಳ ಬಳಕೆ ಯೆಂತಹದು ಎಂಬುದನ್ನು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಕ್ರಿಯಾ ಪದಗಳೊಂದಿಗೆ ಮತ್ತು ಗುಣಪದಗಳೊಂದಿಗೆ ಬರುವ ಗುಣಪದಗಳ ಸ್ವರೂಪ ಮತ್ತು ಬಳಕೆಗಳೆಂತಹವು ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿರುವೆವು.
6.2 ಗುಣಪದಗಳ ನಡುವಿರುವ ಸಾಮ್ಯಗಳು
ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರುವ ಎರಡು ರೀತಿಯ ಗುಣಪದ ಗಳ ನಡುವೆ ಒಂದು ಮುಖ್ಯವಾದ ಸಾಮ್ಯವಿದೆ. ಅವೆರಡೂ ಯಾವುದಾದರೂ ಒಂದು ಗುಣಧರ್ಮವನ್ನು ಮಾತ್ರವೇ ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ವಿಷಯದಲ್ಲಿ ಅವು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆ.
ನಾಮಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುತ್ತಿದ್ದು, ಅವುಗಳ ಮೂಲಕ ಹಲವು ಗುಣಧರ್ಮಗಳು ಸೂಚಿತ ವಾಗುತ್ತಿರಲು ಸಾಧ್ಯವಿದೆ. ಇದೇ ರೀತಿಯಲ್ಲಿ ಕ್ರಿಯಾಪದಗಳು ಘಟನೆಯೊಂದನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತಿದ್ದು, ಆ ಘಟನೆಯ ಮೂಲಕವೂ ಹಲವು ಗುಣ ಧರ್ಮಗಳು ಸೂಚಿತವಾಗುತ್ತಿರಲು ಸಾಧ್ಯವಿದೆ. ಈ ಕಾರಣಕ್ಕಾಗಿ, ಯಾವುದಾದರೊಂದು ಗುಣಪದದ ಬಳಕೆ ಅವಶ್ಯವಾ ಗಿರುವಂತಹ ಕೆಲವು ಸಂದಭ್ರಗಳಲ್ಲಿ ಗುಣಪದವೊಂದನ್ನು ಬಳಸದೆ ಬರಿಯ ನಾಮಪದ ಇಲ್ಲವೇ ಕ್ರಿಯಾಪದಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಹಾಗೆ ಬಳಸಿದರೂ ಅಲ್ಲಿ ಗುಣಪದವೊಂದು ಸೂಚಿತವಾಗು ತ್ತಿರುತ್ತದೆ. ಇಂತಹ ಸಂದಭ್ರಗಳಲ್ಲಿ ಮೇಲೆ ವಿವರಿಸಿರುವ ಎರಡು ರೀತಿಯ ಗುಣಪದಗಳೂ (ನಾಮಗುಣಪದಗಳು ಮತ್ತು ಕ್ರಿಯಾಗುಣಪದಗಳು) ಬರ ಬಲ್ಲುವು ಎಂಬುದು ಈ ಎರಡು ರೀತಿಯ ಗುಣಪದಗಳ ನಡುವಿರುವ ಸಾಮ್ಯ ವನ್ನು ಸೂಚಿಸುತ್ತದೆ. ನಾಮಪದ ಇಲ್ಲವೇ ಕ್ರಿಯಾಪದಗಳೊಂದಿಗೆ ಗುಣಪದವೊಂದನ್ನು ಬಳಸಲೇ ಬೇಕಾಗುವ ಇಂತಹ ಸಂದಭ್ರಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಕೊಡ
6.2.1 ಗುಣಧರ್ಮದ ಪ್ರಮಾಣವನ್ನು ಸೂಚಿಸುವ ಪದಗಳು
ಮೇಲೆ ಸೂಚಿಸಿದ ಎರಡು ರೀತಿಯ ಗುಣಪದಗಳೂ ಗುಣಧರ್ಮವೊಂದರ ಪ್ರಮಾಣವನ್ನು ಸೂಚಿಸಬಲ್ಲ ಬಹಳ, ಸ್ವಲ್ಪ, ಭಾರೀ ಮೊದಲಾದ ಗುಣಪದ ಗಳೊಂದಿಗೆ ಬರಬಲ್ಲುವು. (2ಕ) ಇದು ಬಹಳ ದೊಡ್ಡ ಮರ. (2ಖ) ಅವನು ಬಹಳ ಬೇಗ ಮಲಗಿದ. ಪ್ರಮಾಣವನ್ನು ಸೂಚಿಸುವ ಗುಣಪದಗಳು ಸಾಮಾನ್ಯವಾಗಿ ನಾಮಪದ ಇಲ್ಲವೇ ಕ್ರಿಯಾಪದಗಳೊಂದಿಗೆ ನೇರವಾಗಿ ಸೇರಿಕೊಳ್ಳುವುದಿಲ್ಲ. ಕೆಲವು ಸಂದಭ್ರಗಳಲ್ಲಿ ಅವನ್ನು ಆ ರೀತಿ ಸೇರಿಸಲು ಸಾಧ್ಯವಾಗುವುದಾದರೂ ಅಂತಹ ಬಳಕೆಗಳಲ್ಲಿ ಯಾವುದಾದರೂ ಒಂದು ಗುಣಪದ ಸೂಚಿತವಾಗುತ್ತಿರುತ್ತದೆ. (3ಕ) ಅವರು ಭಾರೀ ಮನೆ ಕಟ್ಟಿಸಿದ್ದಾರೆ. (3ಖ) ಅವರು ತಮ್ಮ ಕನ್ನಡಕವನ್ನು ಬಹಳ ಹುಡುಕಿದರು. (3ಕ)ದಲ್ಲಿ ಭಾರೀ ಮನೆ ಎಂಬುದಕ್ಕೆ ಭಾರೀ ದೊಡ್ಡ ಮನೆ ಎಂಬ ಅರ್ಥವೂ ಮತ್ತು (3ಖ)ದಲ್ಲಿ ಬಹಳ ಹುಡುಕಿದರು ಎಂಬುದಕ್ಕೆ ಬಹಳ ಹೊತ್ತು ಹುಡುಕಿದರು ಎಂಬ ಅರ್ಥವೂ ಬರುತ್ತದೆ. ಹಾಗಾಗಿ, ಇಲ್ಲಿ ಮೂರನೆಯ ವಿಭಾಗದ ಭಾರೀ ಮತ್ತು ಬಹಳ ಎಂಬ ಗುಣಪದಗಳು ನೇರವಾಗಿ ಹೇಳ ದಿದ್ದರೂ ಸೂಚ್ಯವಾಗಿರುವ ಗುಣಪದಗಳ ಪ್ರಮಾಣವನ್ನೇ ತಿಳಿಸುತ್ತಿವೆ.
6.2.2 ಹೋಲಿಕೆಯನ್ನು ಸೂಚಿಸುವ ವಾಕ್ಯಗಳು
ಹೋಲಿಕೆಯನ್ನು ಸೂಚಿಸುವ ವಾಕ್ಯಗಳಲ್ಲೆಲ್ಲ ಯಾವುದಾದರೊಂದು ಗುಣಪದ ಬರಲೇಬೇಕೆಂಬ ನಿಯಮವಿದೆ. ಇದು ನಾಮಗುಣಪದವಿರಬಹುದು ಇಲ್ಲವೇ ಕ್ರಿಯಾಗುಣಪದವಿರಬಹುದು. (4ಕ) ಅದರಷ್ಟು ದೊಡ್ಡ ಕಟ್ಟಡ ಇಲ್ಲಿಲ್ಲ. (4ಖ) ಅವಳಷ್ಟು ಮೆಲ್ಲಗೆ ನಡೆಯುವವರನ್ನು ನಾನು ನೋಡಿಲ್ಲ. (5ಕ) ಅದಕ್ಕಿಂತ ದೊಡ್ಡ ಕಟ್ಟಡ ಇಲ್ಲಿಲ್ಲ. (5ಖ) ಅವಳಿಗಿಂತ ಮೆಲ್ಲಗೆ ನಡೆಯುವವರನ್ನು ನಾನು ನೋಡಿಲ್ಲ. ಇಂತಹ ಹೋಲಿಕೆಯ ವಾಕ್ಯಗಳಲ್ಲಿ ಕೆಲವೊಮ್ಮೆ ಗುಣಪದವೊಂದನ್ನು ಬಳಸ ದಿರಲು ಸಾಧ್ಯವಿದೆ; ಹೀಗಿದ್ದರೂ ಅಂತಹ ವಾಕ್ಯಗಳಲ್ಲಿ ಯಾವುದಾದರೊಂದು ಗುಣಪದ ಸೂಚಿತವಾಗದಿರುವುದಿಲ್ಲ.
(6ಕ) ಅವರಷ್ಟು ಹಣ ನಮ್ಮಲ್ಲಿಲ್ಲ. (6ಖ) ನಾನು ಅವರಷ್ಟು ಓದಲಿಲ್ಲ.
6.2.3 ಬೆರಗನ್ನು ಸೂಚಿಸುವ ವಾಕ್ಯಗಳು
ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬೆರಗಿಗೆ ಆಧಾರವಾಗಿ ಯಾವುದಾದರೊಂದು ಗುಣಪದವಿರುವ ಅವಶ್ಯಕತೆಯಿದೆ. ಆದರೆ ಇದು ನಾಮಗುಣಪದವಿರಬಹುದು ಇಲ್ಲವೇ ಕ್ರಿಯಾಗುಣಪದವಿರಬಹುದು. (7ಕ) ಅವರದು ಎಷ್ಟು ದೊಡ್ಡ ಮನೆ! (7ಖ) ಅವನು ಎಷ್ಟು ಬೇಗ ಓಡಿದ! ಇಂತಹ ವಾಕ್ಯಗಳಲ್ಲೂ ಕೆಲವೊಮ್ಮೆ ಗುಣಪದವೊಂದನ್ನು ಬಳಸದಿರಲು ಸಾಧ್ಯ ವಿದೆ. ಆದರೆ ಅವುಗಳಲ್ಲೂ ಯಾವುದಾದರೊಂದು ಗುಣಪದ ಸೂಚಿತವಾಗ ದಿರುವುದಿಲ್ಲ. (8ಕ) ಅವನ ಹತ್ತಿರ ಎಷ್ಟು (ತುಂಬಾ) ಪುಸ್ತಕಗಳಿವೆ! (8ಖ) ಅವನು ಹೇಗೆ (ಜೋರಾಗಿ) ಓಡಿದ!
6.3 ಕೆಲವು ವ್ಯತ್ಯಾಸಗಳು
ನಾಮಪದಗಳೊಂದಿಗೆ ಪದಕಂತೆಗಳ ಅಂಗವಾಗಿ ಬರುವ ನಾಮಗುಣಪದ ಮತ್ತು ಕ್ರಿಯಾಪದಗಳೊಂದಿಗೆ ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದ ಇವೆರಡರ ನಡುವೆ ಮೇಲೆ ವಿವರಿಸಿದಂತಹ ಸಾಮ್ಯಗಳು ಮಾತ್ರವಲ್ಲದೆ ಕೆಲವು ವ್ಯತ್ಯಾಸ ಗಳೂ ಇವೆ. ಈ ಗುಣಪದಗಳು ಎರಡು ರೀತಿಯ ಪದಗಳೊಂದಿಗೆ (ನಾಮಪದ ಗಳೊಂದಿಗೆ ಮತ್ತು ಕ್ರಿಯಾಪದಗಳೊಂದಿಗೆ) ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಬರಬೇಕಾಗುತ್ತದೆ ಎಂಬುದೇ ಅವುಗಳ ನಡುವೆ ಕಾಣಿಸುವ ಈ ವ್ಯತ್ಯಾಸಗಳಿಗೆ ಮೂಲ ಕಾರಣ.
6.3.1 ನಿಶ್ಚಿತವಾದ ಜಾಗ
ನಾಮಪದಗಳೊಂದಿಗೆ ಬರುವ ಗುಣಪದಗಳಿಗೆ ಪದಕಂತೆಯಲ್ಲಿ ಒಂದು ನಿಶ್ಚಿತವಾದ ಜಾಗವಿದ್ದು ಅದನ್ನು ಬದಲಾಯಿಸುವುದು ಕಷ್ಟಸಾಧ್ಯ. ಇದಲ್ಲದೆ, ಅದು ಒಂದು ನಾಮಪದದ ಅಧೀನವಾಗಿರುವ ಕಾರಣ, ಆ ನಾಮಪದವನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಸ್ವಾತಂತ್ರ್ಯವೂ ಅದಕ್ಕಿಲ್ಲ. ಆದರೆ, ಕ್ರಿಯಾಪದ ಗಳೊಂದಿಗೆ ಬರುವ ಗುಣಪದಗಳಿಗೆ ಈ ರೀತಿ ವಾಕ್ಯದಲ್ಲಿ ಒಂದು ನಿಶ್ಚಿತವಾದ ಜಾಗವೆಂಬುದಿಲ್ಲ. ಸಾಮಾನ್ಯವಾಗಿ ಅವು ಕ್ರಿಯಾಪದದ ಎದುರಿಗೇನೇ ಬರುವು ವಾದರೂ ಬೇರೆ ಬೇರೆ ಕಾರಣಗಳಿಗಾಗಿ ಅವನ್ನು ವಾಕ್ಯದ ಇತರ ಜಾಗಗಳಿಗೆ ವಗ್ರಾಯಿಸಲು ಸಾಧ್ಯವಿದೆ. ಪದಕಂತೆಗಳಲ್ಲಿ ಗುಣಪದಗಳು ನಾಮಪದದ ಮೊದಲು ಬರುತ್ತವೆ. ಅವು ನಾಮಪದದ ಅನಂತರ ಬಂದರೆ ಅದೊಂದು ವಾಕ್ಯವಾಗುತ್ತದಲ್ಲದೆ ಪದಕಂತೆ ಯಾಗಿ ಉಳಿಯುವುದಿಲ್ಲ. ಉದಾಹರಣೆಗಾಗಿ, ಕೆಂಪು ಹೂ ಎಂಬುದು ಒಂದು ಪದಕಂತೆ, ಆದರೆ ಹೂ ಕೆಂಪು ಎಂಬುದು ಒಂದು ವಾಕ್ಯ. (9ಕ) ಆ ಗಿಡದಲ್ಲೊಂದು ಕೆಂಪು ಹೂ ಅರಳಿದೆ. (9ಖ) ಆ ಗಿಡದ ಹೂ ಕೆಂಪು. ಆದರೆ ವಾಕ್ಯದ ಅಂಗವಾಗಿ ಬರುವ ಗುಣಪದಗಳನ್ನು ಕ್ರಿಯಾಪದದ ಅನಂತರವೂ ಬಳಸಲು ಸಾಧ್ಯವಿದೆ. ಇದು ಮೊದಲಿಗೆ ಬಳಸಲು ಮರೆತು ಹೋಗಿದ್ದ ಗುಣಧರ್ಮವೊಂದನ್ನು ಸೂಚಿಸುತ್ತಿರಬಹುದು ಇಲ್ಲವೇ ಆ ಗುಣ ಧರ್ಮದ ಮೇಲೆ ಹೆಚ್ಚಿನ ಒತ್ತು ಕೊಡಲು ಈ ರೀತಿ ಬಳಕೆಯಾಗಿರಬಹುದು. ಈ ವಿಷಯದಲ್ಲಿ ಕ್ರಿಯಾಗುಣಪದ ವಾಕ್ಯದ ಇತರ ಘಟಕಗಳ ಹಾಗೆ ವತ್ರಿಸು ತ್ತದೆ. ಅವನ್ನೂ ಈ ರೀತಿ ವಾಕ್ಯದ ಕೊನೆಗೆ ವಗ್ರಾಯಿಸಲು ಸಾಧ್ಯವಿದೆ. (10ಕ) ಅವನು ಬಹಳ ಮೆಲ್ಲಗೆ ಓದುತ್ತಾನೆ. (10ಖ) ಅವನು ಓದುತ್ತಾನೆ, ಬಹಳ ಮೆಲ್ಲಗೆ. (11ಕ) ಅವನಿಗೆ ಒಂದು ಚಿಕ್ಕ ಬಹುಮಾನ ಸಿಕ್ಕಿದೆ. (11ಖ) ಅವನಿಗೆ ಸಿಕ್ಕಿದೆ, ಒಂದು ಚಿಕ್ಕ ಬಹುಮಾನ. (10ಕ)ದಲ್ಲಿ ಬಂದಿರುವ ಮೆಲ್ಲಗೆ ಎಂಬ ಕ್ರಿಯಾಗುಣಪದವನ್ನು (10ಖ)ದಲ್ಲಿ ವಾಕ್ಯದ ಕೊನೆಗೆ (ಎಂದರೆ ಕ್ರಿಯಾಪದದ ಅನಂತರದ ಜಾಗಕ್ಕೆ) ವಗ್ರಾಯಿಸಲು ಸಾಧ್ಯವಾಗಿದೆ. ಆದರೆ, (11ಕ)ದಲ್ಲಿ ಬಂದಿರುವ ಚಿಕ್ಕ ಎಂಬ ನಾಮಗುಣ ಪದವನ್ನು ಈ ರೀತಿ ವಾಕ್ಯದ ಕೊನೆಗೆ (ಎಂದರೆ ನಾಮಪದದ ಅನಂತರದ ಜಾಗಕ್ಕೆ) ವಗ್ರಾಯಿಸಲು ಸಾಧ್ಯವಾಗದು. (11ಖ)ದಲ್ಲಿ ಅದನ್ನು ಈ ರೀತಿ ವಗ್ರಾಯಿಸಲಾಗಿದೆಯಾದರೂ ಅದರೊಂದಿಗೆ ಬಹುಮಾನ ಎಂಬ ನಾಮಪದ ವನ್ನೂ (ಎಂದರೆ ಇಡೀ ಘಟಕವನ್ನೇ ವಗ್ರಾಯಿಸಬೇಕಾಗಿದೆ) ಎಂಬುದನ್ನು ಗಮನಿಸಬಹುದು. ವಾಕ್ಯದ ಅಂಗವಾಗಿ ಬರುವ ಕ್ರಿಯಾಗುಣಪದಗಳನ್ನು ವಾಕ್ಯದ ಒಳಗೇನೇ ಬೇರೆ ಜಾಗಗಳಿಗೂ ವಗ್ರಾಯಿಸಲು ಸಾಧ್ಯವಿದೆ. ಆದರೆ ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ರೀತಿ ವಾಕ್ಯದ ಬೇರೆ ಜಾಗಗಳಿಗೆ ವಗ್ರಾಯಿಸಲು ಸಾಧ್ಯವಾಗದು. (12ಕ) ಆತ ಸಾಯಿಬಾಬನನ್ನು ಬಹಳ ಚನ್ನಾಗಿ ನಂಬಿದ್ದಾನೆ. (12ಖ) ಆತ ಬಹಳ ಚನ್ನಾಗಿ ಸಾಯಿಬಾಬನನ್ನು ನಂಬಿದ್ದಾನೆ. ಕ್ರಿಯಾವಾಕ್ಯಗಳಲ್ಲಿ ಬರುವ ಘಟಕಗಳಲ್ಲಿ ಒಂದನ್ನು ಪ್ರತ್ಯೇಕಿಸಿ ವಾಕ್ಯದ ಉಳಿದ ಭಾಗದೊಂದಿಗೆ ಅದು ಸಂಬಂಧಿಸಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಅದನ್ನೊಂದು ವಿಷಯವಾಕ್ಯದ ಘಟಕವನ್ನಾಗಿ ಬದಲಾಯಿಸಲು ಸಾಧ್ಯವಿದೆ. (13ಕ) ಅವನು ರಾಜುವಿಗೆ ಹೊಡೆದ. (13ಖ) ಅವನು ಹೊಡೆದದ್ದು ರಾಜುವಿಗೆ. (13ಗ) ರಾಜುವಿಗೆ ಹೊಡೆದದ್ದು ಅವನು. (13ಖ)ದಲ್ಲಿ ರಾಜುವಿಗೆ ಎಂಬ ಘಟಕವನ್ನೂ ಮತ್ತು (13ಗ)ದಲ್ಲಿ ಅವನು ಎಂಬ ಘಟಕವನ್ನೂ (13ಕ)ದಲ್ಲಿ ಬಂದಿರುವ ವಾಕ್ಯದಿಂದ ಪ್ರತ್ಯೇಕಿಸಿ, ಎರಡು ರೀತಿಯ ವಿಷಯವಾಕ್ಯಗಳನ್ನು ತಯಾರಿಸಲಾಗಿದೆ. ವಾಕ್ಯದಲ್ಲಿ ಬರುವ ಕ್ರಿಯಾಗುಣಪದಗಳನ್ನೂ ಈ ರೀತಿ ಪ್ರತ್ಯೇಕಿಸಿ, ಅದು ವಾಕ್ಯದ ಉಳಿದ ಭಾಗಕ್ಕೆ ಸಂಬಂಧಿಸಿದೆಯೆಂಬುದಾಗಿ ಸೂಚಿಸಲು ಸಾಧ್ಯವಿದೆ. ಆದರೆ ಪದಕಂತೆಯಲ್ಲಿ ಬರುವ ನಾಮಗುಣಪದಗಳನ್ನು ಈ ರೀತಿ ಪ್ರತ್ಯೇಕಿಸಿ ಹೇಳಲು ಸಾಧ್ಯವಾಗದು. ಅವನ್ನು ಪದಕಂತೆಯಲ್ಲಿ ಹಾಗೆಯೇ ಉಳಿಸಿಕೊಳ್ಳುವ ಅವಶ್ಯಕತೆಯಿದೆ. (14ಕ) ಅವನು ಬಹಳ ಮೆಲ್ಲಗೆ ನಡೆಯುತ್ತಾನೆ. (14ಖ) ಅವನು ನಡೆಯುವುದು ಬಹಳ ಮೆಲ್ಲಗೆ. (15ಕ) ಅವನಿಗೆ ಒಂದು ಚಿಕ್ಕ ಬಹುಮಾನ ಸಿಕ್ಕಿದೆ. (15ಖ) ಅವನಿಗೆ ಸಿಕ್ಕಿದುದು ಒಂದು ಚಿಕ್ಕ ಬಹುಮಾನ. (14ಖ)ದಲ್ಲಿ ಬಹಳ ಮೆಲ್ಲಗೆ ಎಂಬುದನ್ನು ಕ್ರಿಯಾಪದದಿಂದ ಪ್ರತ್ಯೇಕಿಸಿ ಅದು ಕ್ರಿಯಾಪದಕ್ಕೆ (ಮತ್ತು ವಾಕ್ಯದ ಇತರ ಭಾಗಗಳಿಗೆ) ಸಂಬಂಧಿಸಿದೆ ಎಂದು ಸೂಚಿಸಲು ಸಾಧ್ಯವಾಗಿದೆ. ಆದರೆ, (15ಖ)ದಲ್ಲಿ ಈ ರೀತಿ ಚಿಕ್ಕ (ಇಲ್ಲವೇ ಒಂದು ಚಿಕ್ಕ) ಎಂಬುದನ್ನು ನಾಮಪದದಿಂದ ಪ್ರತ್ಯೇಕಿಸಲು ಸಾಧ್ಯವಾಗಿಲ್ಲ. ಅದನ್ನು ಬಹುಮಾನ ಎಂಬ ನಾಮಪದದೊಂದಿಗೇನೇ ಇರಿಸಿ ಇಡೀ ಘಟಕ ವನ್ನೇ ಆ ರೀತಿ ಸಂಬಂಧಿಸಿರುವಂತಹದು ಎಂಬುದಾಗಿ ಸೂಚಿಸಬೇಕಾಗಿದೆ. ಸೂಚಿಸುವುದಕ್ಕಾಗಿ ಬಳಕೆಯಾಗುವ ಗುಣಪದಗಳ ಬಹಳ, ಸ್ವಲ್ಪ ಮೊದಲಾದ ಮೂರನೆಯ ವಿಭಾಗಕ್ಕೆ (6.1 ನೋಡಿ) ಸೇರುವ ಗುಣಪದಗಳೂ ನಾಮಗುಣಪದಗಳ ಹಾಗೆ ಒಂದು ನಿಶ್ಚಿತವಾದ ಜಾಗದಲ್ಲಿ ಬರುತ್ತವೆ; ಕ್ರಿಯಾಗುಣಪದಗಳ ಹಾಗೆ ಅವನ್ನು ಬೇರೆ ಜಾಗಗಳಿಗೆ ವಗ್ರಾ ಗುಣಧರ್ಮವನ್ನು ಯಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನೂ ಮೇಲೆ ಕೊಟ್ಟಿರುವ ಉದಾಹರಣೆ ಗಳಿಂದ ತಿಳಿಯಬಹುದು.
6.3.2 ಏ ಇಲ್ಲವೇ ಊ ಪ್ರತ್ಯಯಗಳ ಜೊತೆ ಬಳಕೆ
ಕ್ರಿಯಾಗುಣಪದವೊಂದಕ್ಕೆ ಏ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದನ್ನು ಒತ್ತಿ ಹೇಳಲು ಸಾಧ್ಯವಿದೆ, ಮತ್ತು ಊ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅದೊಂದು ಹೆಚ್ಚಿನ ಗುಣಧರ್ಮ ಎಂಬುದಾಗಿ ಸೂಚಿಸಲು ಸಾಧ್ಯವಿದೆ. ಇಂತಹ ಎರಡು ವಿಧಾನಗಳಲ್ಲೂ ನಾಮಗುಣಪದಗಳು ಬಳಕೆಯಾಗಲಾರವು. (16ಕ) ಅವನು ಬಹಳ ಜೋರಾಗಿಯೇ ನಡೆಯುತ್ತಿದ್ದ. (16ಖ) ಅವನು ಮೆಲ್ಲಗೂ ನಡೆಯಬಲ್ಲ. ಈ ವಿಷಯದಲ್ಲೂ ಕ್ರಿಯಾಗುಣಪದಗಳು ವಾಕ್ಯದ ಇತರ ಘಟಕಗಳ ಹಾಗೆ ವತ್ರಿಸುತ್ತವೆ. ವಾಕ್ಯದ ಘಟಕಗಳನ್ನೂ ಅವುಗಳ ಹಾಗೆ ಏ ಇಲ್ಲವೇ ಊ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆ. (17ಕ) ಆ ಮುದುಕನೇ ಬಹಳ ಜೋರಾಗಿ ನಡೆಯುತ್ತಿದ್ದ. (17ಖ) ಆ ಮುದುಕನೂ ಬಹಳ ಜೋರಾಗಿ ನಡೆಯುತ್ತಿದ್ದ.
6.3.3 ಪ್ರತಿಧ್ವನಿಸುವ ರಚನೆಯಲ್ಲಿ ಬಳಕೆ
ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಅಸ್ಪಷ್ಟವಾಗಿ ಗುರುತಿಸಿ ಹೇಳಬೇಕಾದಾಗ ಆ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ನಾಮಪದದೊಂದಿಗೆ ಆ ನಾಮಪದವನ್ನು ಪ್ರತಿಧ್ವನಿಸುವ ಇನ್ನೊಂದು ಪದವನ್ನು ಸೇರಿಸಿ ಹೇಳುವ ವಿಧಾನ ಕನ್ನಡದಲ್ಲಿ ಬಳಕೆಯಲ್ಲಿದೆ. ಕೆಳಗಿನ (18ಕ-ಖ) ವಾಕ್ಯಗಳಲ್ಲಿ ಈ ವಿಧಾನದ ಬಳಕೆಯನ್ನು ಕಾಣಬಹುದು. (18ಕ) ಇದರಲ್ಲಿ ಏನಾದರೂ ಕಲ್ಲುಗಿಲ್ಲು ಇದೆಯೋ ನೋಡು. (18ಖ) ಅಲ್ಲಿಗೆ ಹೋಗಬೇಡ, ಹಾವುಗೀವು ಇದ್ದೀತು. (18ಕ)ದಲ್ಲಿ ಕಲ್ಲು ಪದದ ಅನಂತರ ಆ ಪದದ ‘ಪ್ರತಿಧ್ವನಿ’ಯಂತೆ ಕಾಣಿಸುವ ಗಿಲ್ಲು ಪದ ಸೇರಿದೆ. ಈ ಎರಡು ಪದಗಳ ಜೋಡಿಕೆಗೆ ಕಲ್ಲು ಇತ್ಯಾದಿ ಎಂಬ ಅರ್ಥವಿದ್ದು, ಅದು ಗುರುತಿಸಬೇಕಾಗಿರುವ ವಸ್ತುವನ್ನು ಈ ಜೋಡಿಕೆ ಸ್ವಲ್ಪ ಮಟ್ಟಿಗೆ ಅಸ್ಪಷ್ಟವಾಗಿ ಸೂಚಿಸುತ್ತದೆ.
ಇದೇ ರೀತಿಯಲ್ಲಿ (18ಖ)ದಲ್ಲಿ ಹಾವು ಪದದ ಅನಂತರ ಗೀವು ಎಂಬುದು ಬಂದಿದ್ದು, ಈ ಜೋಡಿಕೆಗೆ ಹಾವು ಇತ್ಯಾದಿ ಎಂಬ ಅಸ್ಪಷ್ಟವಾದ ಅರ್ಥವಿದೆ. ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳನ್ನು ಈ ವಿಧಾನದಲ್ಲಿ ಬಳಸಿ, ಅವು ಸೂಚಿಸುವ ಗುಣಧರ್ಮ ಅಸ್ಪಷ್ಟವಾದುದು ಎಂಬುದಾಗಿ ಸೂಚಿಸಲು ಸಾಧ್ಯ (19ಕ) ಅವನು ಬೇಗಗೀಗ ಎಲ್ಲ ಬರಲಿಕ್ಕಿಲ್ಲ. (19ಖ) ನೀವು ಅದನ್ನು ಬೆಳ್ಳಗೆ ಗಿಳ್ಳಗೆ ಎಲ್ಲ ಮಾಡುತ್ತೇನೆಂದು ಕುಳಿತರೆ ರಾತ್ರಿಯಾದೀತು. ಆದರೆ, ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ವಿಧಾನದಲ್ಲಿ ಬಳಸಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ವ್ಯಕ್ತಿ, ವಸ್ತು ಮೊದಲಾ ದವುಗಳನ್ನು ಗುರುತಿಸುವ ಕೆಲಸ ಹೆಚ್ಚು ಸುಲಭವಾಗುವ ಹಾಗೆ ಮತ್ತು ಹೆಚ್ಚು ಖಚಿತವಾಗುವ ಹಾಗೆ ನಾಮಪದಗಳೊಂದಿಗೆ ಈ ಗುಣಪದಗಳನ್ನು ಬಳಸ ಲಾಗುತ್ತದೆ. ಹಾಗಾಗಿ ಅವುಗಳ ಅರ್ಥವನ್ನು ‘ಅಸ್ಪಷ್ಟ’ವಾಗಿ ಮಾಡುವ ಮೇಲಿನ ವಿಧಾನಕ್ಕೆ ಅವುಗಳ ಬಳಕೆಯಲ್ಲಿ ಯಾವ ಸ್ಥಾನವೂ ಇಲ್ಲ. ಗುಣಪದವಿರುವ ಪದಕಂತೆಗಳನ್ನು (ಎಂದರ ವಾಕ್ಯದ ಘಟಕಗಳನ್ನು) ಮಾತ್ರ ಈ ವಿಧಾನದಲ್ಲಿ ಬಳಸಲು ಸಾಧ್ಯವಿದೆ. ಆದರೆ ಹಾಗೆ ಬಳಸಿದಾಗ, ನಾಮಪದದ ಎದುರಿಗಿರುವ ತನ್ನ ಜಾಗವನ್ನು ಗುಣಪದ ಬಿಟ್ಟುಕೊಡುವುದಿಲ್ಲ. (20) ಎಲ್ಲಾದರೂ ಕೆಂಪುಹೂವು ಗೆಂಪುಹೂವು ಸಿಕ್ಕಿದರೆ ತನ್ನಿ. ಇಲ್ಲಿ ಅಸ್ಪಷ್ಟವಾಗಿರುವುದು ಹೂವಿನ ಬಣ್ಣವಲ್ಲ, ಹೂವೇ ಎಂಬುದನ್ನು ಗಮನಿಸಬಹುದು.
6.3.4 ಪ್ರತ್ಯಯಗಳ ಬಳಕೆ
ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಈ ಎರಡು ರೀತಿಯ ಗುಣಪದಗಳಿಗೂ ಅವುಗಳದೇ ಆದ ಕೆಲಸಗಳಿದ್ದು, ಅದಕ್ಕಿಂತ ಬಿನ್ನವಾದ ಕೆಲಸವೊಂದರಲ್ಲಿ ಅವನ್ನು ಬಳಸಬೇಕಿದ್ದಲ್ಲಿ ಅವಕ್ಕೆ ಯಾವುದಾದರೊಂದು ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ನಾಮಪದಗಳೊಂದಿಗೆ ಬರುವುದು ನಾಮಗುಣಪದಗಳ ಕೆಲಸ. ಇದಕ್ಕೆ ಬದಲು ಅವನ್ನು ಕ್ರಿಯಾಪದಗಳೊಂದಿಗೆ ಅವುಗಳ ಗುಣಧರ್ಮ ವನ್ನು ಸೂಚಿಸುವುದಕ್ಕಾಗಿ ಬಳಸಬೇಕಾಗಿದ್ದಲ್ಲಿ ಅವಕ್ಕೆ ಯಾವುದಾದರೂ ಪ್ರತ್ಯಯ ವನ್ನು ಸೇರಿಸಬೇಕಾಗುತ್ತದೆ.
(21ಕ) ಈ ಕೆಂಪು ಹೂ ಬಹಳ ಚನ್ನಾಗಿದೆ. (21ಖ) ಕಮ್ಮಾರನು ನೇಗಿಲಿನ ತುದಿಯನ್ನು ಕೆಂಪಗೆ ಕಾಯಿಸಿದ. (21ಕ)ದಲ್ಲಿ ಕೆಂಪು ಗುಣಪದ ಹೂ ಎಂಬ ನಾಮಪದದೊಂದಿಗೆ ಬಂದಿದೆ. ಇದನ್ನು ಕಾಯಿಸಿದ ಎಂಬ ಕ್ರಿಯಾಪದದೊಂದಿಗೆ ಬಳಸುವುದಕ್ಕಾಗಿ (21ಖ) ದಲ್ಲಿ ಅದಕ್ಕೆ ಅಗೆ ಪ್ರತ್ಯಯವನ್ನು ಸೇರಿಸಬೇಕಾಗಿದೆ. ಇದೇ ರೀತಿಯಲ್ಲಿ ಒಂದು ಕ್ರಿಯಾಗುಣಪದವನ್ನು ಕ್ರಿಯಾಪದದ ಬದಲು ನಾಮಪದದೊಂದಿಗೆ ಬಳಸಬೇಕಿದ್ದಲ್ಲಿ ಅದರೊಂದಿಗೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. (22ಕ) ಅವನು ಆ ಕೆಲಸವನ್ನು ನಾಳೆ ಮಾಡಲಿ. (22ಖ) ನೀನು ನಾಳಿನ ಕೆಲಸವನ್ನು ಇವತ್ತೇ ಮಾಡು. (23ಕ) ಅವನು ಮೆಲ್ಲಗೆ ಮಾತನಾಡಿದ. (23ಖ) ಅವನ ಮೆಲ್ಲಗಿನ ಮಾತು ನನಗೆ ಕೇಳಿಸಲಿಲ್ಲ. (22ಕ)ದಲ್ಲಿ ಜಾಗವನ್ನು ಸೂಚಿಸುವ ನಾಳೆ ಗುಣಪದ ಒಂದು ಕ್ರಿಯಾಪದ ದೊಂದಿಗೆ (ಮಾಡಲಿ ಎಂಬುದರೊಂದಿಗೆ) ಅದರ ಒಂದು ಘಟಕವಾಗಿ ಬಂದಿದೆ. ಅದನ್ನೇ ಒಂದು ನಾಮಪದದೊಂದಿಗೆ (ಮಾತು ಎಂಬುದರೊಂದಿಗೆ) ಬಳಸುವು ದಕ್ಕಾಗಿ (22ಖ)ದಲ್ಲಿ ಅದಕ್ಕೆ ಅ ಪ್ರತ್ಯಯವನ್ನು ಸೇರಿಸಿ ನಾಳಿನ ಎಂಬುದಾಗಿ ಬದಲಾಯಿಸಲಾಗಿದೆ.
(23ಖ)ದಲ್ಲಿ ಅಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಿರುವ ಮೆಲ್ಲಗೆ ಎಂಬ ಕ್ರಿಯಾಗುಣಪದವೂ ಮಾತು ನಾಮಪದದೊಂದಿಗೆ ಬರುವುದಕ್ಕಾಗಿ ಈ ರೀತಿ ಅ ಪ್ರತ್ಯಯವನ್ನು ಪಡೆಯಬೇಕಾಗಿದೆ. (ಈ ಎರಡು ಸಂದಭ್ರಗಳಲ್ಲೂ ಗುಣಪದ ಗಳ ಕೊನೆಯಲ್ಲಿ ಇನ್ ಎಂಬುದು ಸೇರಿಕೊಂಡಿದ್ದು, ಅದಕ್ಕೆ ಹೆಚ್ಚಿನ ಅರ್ಥ ವೇನೂ ಇಲ್ಲ.) ನಡುವೆ, ಕಡೆಗೆ, ತುದಿ(ಯಲ್ಲಿ) ಮೊದಲಾದ ಬೇರೆ ಕೆಲವು ಕ್ರಿಯಾಗುಣ ಗುಣಪದಗಳನ್ನಾಗಿ ಪದಗಳನ್ನು ಅವುಗಳ ಬದಲಾಯಿಸಲು ಸಾಧ್ಯವಿದೆ. ಇದಕ್ಕಾಗಿಯೂ ಅವಕ್ಕೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ. ಈ ಪ್ರತ್ಯಯದೆದುರು ಅವುಗಳಲ್ಲಿ ಬೇರೆ ಕೆಲವು ಕೂಡಿಕೆಯ ಬದಲಾವಣೆಗಳೂ ನಡೆಯುತ್ತವೆ ಎಂಬುದನ್ನು ಕಟ್ಟ ಪರಿಮಾಣವನ್ನು ಸೂಚಿಸುವ ಕಡೆಗೆ, ಮೊತ್ತ ಮೊದಲು, ತುತ್ತ ತುದಿ(ಯಲ್ಲಿ) ಎಂಬಂತಹ ಉದಾಹರಣೆ ಗಳಲ್ಲಿ ಕಾಣಬಹುದು.
6.3.5 ಗುಣಧರ್ಮದಲ್ಲಿ ವ್ಯತ್ಯಾಸ
ಕ್ರಿಯಾಗುಣಪದ ಮತ್ತು ನಾಮಗುಣಪದಗಳು ಸೂಚಿಸುವ ಗುಣಧರ್ಮಗಳ ನಡುವೆಯೂ ಒಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕ್ರಿಯಾಗುಣಪದಗಳು ಸಾಮಾನ್ಯವಾಗಿ ಕ್ಷಣಿಕವಾದ ಇಲ್ಲವೇ ಬೇಗನೆ ಅಳಿದು ಹೋಗುವಂತಹ ಗುಣಧರ್ಮಗಳನ್ನು ಸೂಚಿಸುತ್ತವೆ. ಆದರೆ ನಾಮಗುಣಪದಗಳು ಹೆಚ್ಚು ಸಮಯ ಉಳಿದುಕೊಳ್ಳಬಲ್ಲಂತಹ ಗುಣಧರ್ಮಗಳನ್ನು ಸೂಚಿಸುತ್ತವೆ. ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಕ್ರಿಯಾಪದಗಳು ಘಟನೆಗಳನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಹೆಚ್ಚಿನವೂ ಒಂದು ಬಾರಿಗೆ ನಡೆದು ಹೋಗು ವಂತಹವುಗಳು. ಹಾಗಾಗಿ ಅವುಗಳೊಂದಿಗೆ ಬರುವ ಕ್ರಿಯಾಗುಣಪದಗಳು ಬೇಗನೆ ಅಳಿದುಹೋಗುವಂತಹ ಗುಣಧರ್ಮಗಳನ್ನು ಸೂಚಿಸುತ್ತಿದ್ದರೆ ಸಾಕು. ಸಾಮಾನ್ಯವಾಗಿ ಇವು ಘಟನೆ ನಡೆಯುವ ಕ್ರಮ, ಘಟನೆಯ ಜಾಗ ಇಲ್ಲವೇ ಘಟನೆಯ ಸಮಯವನ್ನು ಸೂಚಿಸುವ ಗುಣಪದಗಳಾಗಿರುತ್ತವೆ. ಇದಕ್ಕೆ ಬದಲು, ನಾಮಪದಗಳು ಸಾಮಾನ್ಯವಾಗಿ ಹೆಚ್ಚು ಸಮಯ ಬದಲಾಗದೆ ಉಳಿಯುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ. ಹಾಗಾಗಿ, ಅವುಗಳೊಂದಿಗೆ ಬರುವ ನಾಮಗುಣಪದಗಳು ಹೆಚ್ಚು ಸಮಯ ಉಳಿಯುವಂತಹ ಗುಣಧರ್ಮಗಳನ್ನು ಸೂಚಿಸಬೇಕಾಗುತ್ತದೆ. ಈ ಗುಣಪದಗಳು ಸೂಚಿಸುವ ಅಳತೆ, ಬಣ್ಣ, ಭೌತಿಕ ಗುಣಧರ್ಮಗಳು, ಇವೆಲ್ಲ ಇಂತಹ ಸ್ವರೂಪ ದವಾಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು (4.3.2 ನೋಡಿ).
6.3.6 ವಾಕ್ಯರಚನೆಯ ಬೇಡಿಕೆಗಳು
ಕೆಲವೊಮ್ಮೆ ವಾಕ್ಯರಚನೆಯ ಬೇಡಿಕೆಗಳನ್ನು ಪೂತ್ರಿಗೊಳಿಸುವುದಕ್ಕಾಗಿ ಕ್ಷಣಿಕ ಗುಣಧರ್ಮಗಳನ್ನು ನಾಮಗುಣಪದ ಸೂಚಿಸುವ ಕ್ರಿಯಾಗುಣಪದಗಳನ್ನು ಗಳನ್ನಾಗಿ ಬಳಸುವ ಅವಶ್ಯಕತೆ ಕಂಡುಬರುತ್ತದೆ. ಉದಾಹರಣೆಗಾಗಿ ಒಂದು
ವಾಕ್ಯದ ಕೊನೆಯ ಕ್ರಿಯಾಪದಕ್ಕೆ ಇಕೆ ಪ್ರತ್ಯಯವನ್ನು ಸೇರಿಸುವ ಮೂಲಕ ಅದನ್ನು ಇನ್ನೊಂದು ವಾಕ್ಯದ ಒಳವಾಕ್ಯವನ್ನಾಗಿ (ಘಟಕವನ್ನಾಗಿ) ಮಾಡುವು ದಿದ್ದಲ್ಲಿ ಅದರೊಂದಿಗೆ ಬರುವ ಕ್ರಿಯಾಗುಣಪದವನ್ನು ನಾಮಗುಣಪದವಾಗಿ ಬದಲಾಯಿಸುವ ಅವಶ್ಯಕತೆಯಿದೆ (7.3.2 ನೋಡಿ). (24ಕ) ಆಕೆ ಗಟ್ಟಿಯಾಗಿ ಹಾಡುತ್ತಿದ್ದಾಳೆ. (24ಖ) ಆಕೆಯ ಗಟ್ಟಿಯಾದ ಹಾಡುವಿಕೆ ಇಲ್ಲಿವರೆಗೂ ಕೇಳಿಸುತ್ತಿದೆ. ಆದರೆ ಇಂತಹ ಸಂದಭ್ರಗಳಲ್ಲಿ ಬರುವ ನಾಮಗುಣಪದಗಳು ನಿಜಕ್ಕೂ ಕ್ರಿಯಾಗುಣಪದಗಳಾಗಿದ್ದು ಘಟನೆಯೊಂದರ ಗುಣಧರ್ಮವನ್ನು ಸೂಚಿಸುತ್ತಿವೆ ಎಂಬುದನ್ನು ಗಮನಿಸಬಹುದು. (24ಖ)ದಲ್ಲಿ ಹಾಡುವಿಕೆ ಎಂಬ ನಾಮಪದವು ಒಂದು ಘಟನೆಯನ್ನು ಸೂಚಿಸುತ್ತಿದೆ ಮತ್ತು ಈ ಘಟನೆಯ ಗುಣಧರ್ಮ ವೊಂದನ್ನು ಗಟ್ಟಿಯಾದ ಎಂಬ ಗುಣಪದ ಸೂಚಿಸುತ್ತಿದೆ. ಇದೇ ರೀತಿಯಲ್ಲಿ ಶಾಶ್ವತವಾದ ಗುಣಧರ್ಮವೊಂದನ್ನು ಸೂಚಿಸುವ ಗುಣಪದವನ್ನು ಕೆಲವು ಸಂದಭ್ರಗಳಲ್ಲಿ ಕ್ರಿಯಾಗುಣಪದವನ್ನಾಗಿ ಮಾಡಿ ಬಳಸುವ ಅವಶ್ಯಕತೆ ಕಂಡುಬರುತ್ತದೆ. ಇಂತಹ ಸಂದಭ್ರಗಳಲ್ಲಿ ಅವು ನೇರ ವಾಗಿ ಘಟನೆಯ ಗುಣಧರ್ಮವೊಂದನ್ನು ಸೂಚಿಸುವ ಬದಲು ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುತ್ತವೆ. (25ಕ) ಆಕೆ ಬಾಳೆಕಾಯಿಯನ್ನು ತೆಳ್ಳಗೆ ಕತ್ತರಿಸುತ್ತಿದ್ದಾಳೆ. (25ಖ) ಅವನು ಬಾಗಿಲಿನ ಹತ್ತಿರ ನೆಟ್ಟಗೆ ನಿಂತಿದ್ದಾನೆ. (25ಗ) ರಾಜು ರಗ್ಗು ಹೊದೆದುಕೊಂಡು ಬೆಚ್ಚಗೆ ಮಲಗಿದ್ದಾನೆ. ಮೇಲಿನ ವಾಕ್ಯಗಳಲ್ಲಿ ಬಂದಿರುವ ತೆಳ್ಳಗೆ, ನೆಟ್ಟಗೆ ಮತ್ತು ಬೆಚ್ಚಗೆ ಎಂಬ ಗುಣಪದಗಳು ಕತ್ತರಿಸು, ನಿಲ್ಲು ಮತ್ತು ಮಲಗು ಎಂಬ ಕ್ರಿಯಾಪದಗಳ ವಿಶೇಷಣಗಳಾಗಿ ಬಂದಿವೆಯಾದರೂ ಅವು ನೇರವಾಗಿ ಆ ಕ್ರಿಯಾಪದಗಳು ತಿಳಿಸುವ ಘಟನೆಗಳ ಗುಣಧರ್ಮಗಳನ್ನು ಸೂಚಿಸುವುದಕ್ಕಿಂತಲೂ ಅವು ನಡೆ ದುದರಿಂದಾಗಿ ಇಲ್ಲವೇ ನಡೆಯುತ್ತಿರುವಾಗ ಅವುಗಳ ಘಟಕಗಳಲ್ಲಿ ಕಾಣಿಸುವ ಗುಣಧರ್ಮಗಳನ್ನು ಸೂಚಿಸುತ್ತಿವೆ. ಉದಾಹರಣೆಗಾಗಿ, ಕತ್ತರಿಸುವ ಘಟನೆ ಒಂದು ವಿಧವಾಗಿ ಸಾಗುತ್ತಿರುವುದರಿಂದಾಗಿ ಅದರ ಮೂಲಕ ತೆಳ್ಳಗಾಗಿರುವ ವಸ್ತುಗಳು ಸಿದ್ಧವಾಗುತ್ತಿವೆ ಎಂಬ ಅರ್ಥ (25ಕ) ವಾಕ್ಯಕ್ಕಿದೆ. ಗುಣಧರ್ಮವನ್ನು ನೇರವಾಗಿ ಘಟನೆಯ
6.4 ಅಣಕಿಸುವ ಗುಣಪದಗಳು
ಕನ್ನಡದಲ್ಲಿ ಸೂಚಿಸುವಂತಹ ಗುಣಪದಗಳು ಜಾಸ್ತಿಯಿಲ್ಲ. ಆದರೆ, ಘಟನೆಗಳು ನಡೆಯುವಾಗ ಅವುಗಳ ಸದ್ದು, ನೋಟ, ಸ್ಪಶ್ರ ಮೊದಲಾದ ಗುಣಧರ್ಮಗಳ ವಿಷಯದಲ್ಲಿ ಆಡುಗನ ಲ್ಲುಂಟಾಗುವ ಅನುಭವಗಳನ್ನು ಸೂಚಿಸುವುದಕ್ಕಾಗಿ ಅಂತಹ ಅನುಭವಗಳನ್ನು ‘ಅಣಕಿಸು’ವಂತಹ ಹಲವು ಪದಗಳನ್ನು ಗುಣಪದಗಳಾಗಿ ಬಳಸುವ ವಿಧಾನ ಕನ್ನಡದಲ್ಲಿ ಬಳಕೆಯಲ್ಲಿದೆ.
(26ಕ) ಮೇಲಿನಿಂದ ಪೆಟ್ಟಿಗೆ ಡಬ್ಬನೆ ಕೆಳಗೆ ಬಿತ್ತು. (26ಖ) ಅವನು ಉಪ್ಪರಿಗೆಯಿಂದ ದಡದಡನೆ ಕೆಳಗಿಳಿದು ಬಂದ. (26ಗ) ದೀಪ ಮಿಣಿಮಿಣಿ ಉರಿಯುತ್ತಿತ್ತು. (26ಘ) ಅವಳು ಎಲ್ಲವನ್ನೂ ಪಟಪಟನೆ ಹೇಳಿ ಮುಗಿಸಿದಳು. (26ಙ) ಅದರಿಂದ ಗಮ್ಮನೆ ವಾಸನೆ ಹೊರಸೂಸುತ್ತಿತ್ತು. ಕನ್ನಡದಲ್ಲಿ ಇಂತಹ ಗುಣಪದಗಳು ಕೆಳಗಿನ ಉದಾಹರಣೆಗಳಲ್ಲಿ ಕಾಣಿಸುವ ಹಾಗೆ ಮುಖ್ಯವಾಗಿ ಮೂರು ರೂಪಗಳಲ್ಲಿ ಬಳಕೆಯಾಗುತ್ತವೆ.
(1) ಅಕ್ಷರಗಳು ಮೂರಿದ್ದು, ಎರಡನೆಯ ಅಕ್ಷರ ಒತ್ತಕ್ಷರವಾಗಿರುವ ಪದಗಳು: ಸರ್ರನೆ, ಗಿರ್ರನೆ, ಚಟ್ಟನೆ, ದೊಪ್ಪನೆ, ಬುಸ್ಸನೆ, ತಟ್ಟನೆ, (2) ಅಕ್ಷರಗಳು ನಾಲ್ಕಿದ್ದು, ಮೂರನೆಯ ಅಕ್ಷರ ಒತ್ತಕ್ಷರವಾಗಿರುವ ಪದಗಳು: ಗಬಕ್ಕನೆ, ತಟಕ್ಕನೆ, ಕವಕ್ಕನೆ, ಬಡಕ್ಕನೆ, ತಪಕ್ಕನೆ, ಚಟಕ್ಕನೆ, ಪಚಕ್ಕನೆ, ದುಡುಮ್ಮನೆ, ಗುಳುಮ್ಮನೆ, ಇತ್ಯಾದಿ. (3) ಅಕ್ಷರಗಳು ಐದಿದ್ದು, ಯಾವುದೂ ಒತ್ತಕ್ಷರವಾಗಿಲ್ಲದಿರುವ ಕತಕತನೆ, ಚಟಚಟನೆ, ಪದಗಳು: ಗಿರಗಿರನೆ, ಪಕಪಕನೆ, ಕರಕರನೆ, ಕಚಕಚನೆ, ಇತ್ಯಾದಿ. ಗಣಗಣನೆ, ದರದರನೆ, ಕಿಲಕಿಲನೆ, ಗಳಗಳನೆ, ಇವುಗಳಲ್ಲಿ ಮೂರನೆಯ ವಿಭಾಗಕ್ಕೆ ಸೇರಿದ ಪದಗಳಲ್ಲಿ ಕೆಲವು ಅನೆ ಎಂಬ ಪ್ರತ್ಯಯವಿಲ್ಲದೆಯೂ ಬಳಕೆಯಾಗಬಲ್ಲುವು (ಉದಾ: ದರದರ, ಚಟಚಟ, ಇತ್ಯಾದಿ). ಇದಲ್ಲದೆ, ಬೇರೆ ಕೆಲವು ಪದಗಳು ಯಾವಾಗಲೂ ಅನೆ ಎಂಬ ಪ್ರತ್ಯಯವಿಲ್ಲದೆಯೇ ಬರುತ್ತವೆ (ಉದಾ: ಕಿಣಿಕಿಣಿ, ಸುರುಸುರು, ಪಿಳಿಪಿಳಿ, ಇಂತಹ ಅಣಕಿಸುವ ಗುಣಪದಗಳಲ್ಲೆಲ್ಲ ಮೊದಲಿಗೆ ಯಾವುದಾದರೂ ಸುರುವಾಗುವ ಅಣಕಿಸುವ ಪದಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದೇನೋ.
ಇದಲ್ಲದೆ, ಇಂತಹ ಹೆಚ್ಚಿನ ಪದಗಳಲ್ಲೂ ಗಿಡ್ಡ ಸ್ವರಗಳು ಮಾತ್ರ ಬಳಕೆಯಾಗುತ್ತವೆ. ಪಟಾರನೆ ಮತ್ತು ತಟಾರನೆ ಎಂಬಂತಹ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಉದ್ದ ಸ್ವರ ಕಾಣಿಸಿಕೊಳ್ಳುತ್ತದೆ.
ಮೂರನೆಯ ವಿಭಾಗಕ್ಕೆ ಸೇರುವ ಐದಕ್ಷರವಿರುವ ಗುಣಪದಗಳಲ್ಲೆಲ್ಲ ಅಣಕವನ್ನು ಸೂಚಿಸುವ ಒಂದು ಪದ ಎರಡೆರಡು ಬಾರಿ ಬರುತ್ತದೆ. ಇದಲ್ಲದೆ ವ್ಯಂಜನವಿಲ್ಲದಿರುವುದಿಲ್ಲ. ಬಹುಶಃ ಸ್ವರದಲ್ಲಿ ಇಂತಹ ಗುಣಪದಗಳಲ್ಲಿ ಉದ್ದ ಸ್ವರ ಮಾತ್ರವಲ್ಲದೆ ಒತ್ತಕ್ಷರವೂ ಕಾಣಿಸಿ ಕೊಳ್ಳುವುದಿಲ್ಲ (ಭಟ್ 1999:192 ನೋಡಿ).
6.5 ಜಾಗವನ್ನು ಸೂಚಿಸುವ ಗುಣಪದಗಳು
ಒಂದು ಘಟನೆ ನಡೆಯುವುದು ಎಲ್ಲಿ ಎಂಬುದಾಗಿ ಅದರ ಜಾಗವನ್ನು ಸೂಚಿಸಲು ಕನ್ನಡದಲ್ಲಿ ಒಂದು ಗುಣಪದವನ್ನಾಗಲಿ ಇಲ್ಲವೇ ಅದಕ್ಕಿಂತ ಹೆಚ್ಚು ಸ್ವತಂತ್ರ ವಾಗಿರುವ ಒಂದು ಘಟಕವನ್ನಾಗಲಿ ಬಳಸಲು ಸಾಧ್ಯವಿದೆ. ಈ ಎರಡು ರೀತಿಯ ವಾಕ್ಯಾಂಗಗಳ ನಡುವೆ ಜಾಸ್ತಿ ವ್ಯತ್ಯಾಸ ಇಲ್ಲ. ಕೆಲವು ಸಂದಭ್ರಗಳಲ್ಲಿ ನಾವು ಬಳಸಿರುವ ವಾಕ್ಯಾಂಗವನ್ನು ಒಂದು ಗುಣಪದವೆಂದು ಕರೆಯಬೇಕೋ ಅಥವಾ ಒಂದು ಘಟಕವೆಂದು ಕರೆಯಬೇಕೋ ಎಂಬ ವಿಷಯದಲ್ಲಿ ಸಂಶಯವುಂಟಾಗಲು ಇಲ್ಲವೇ ಅಭಿಪ್ರಾಯಭೇದವುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ, ಅಲ್ಲಿ, ಇಲ್ಲಿ, ಆಚೆ, ಈಚೆ, ಮೇಲೆ, ಕೆಳಗೆ, ಒಳಗೆ, ಹೊರಗೆ, ಹತ್ತಿರ, ದೂರ, ಹಿಂದೆ, ಮುಂದೆ ಮೊದಲಾದ ಬೇರೆ ಬೇರೆ ರೀತಿಯ ಜಾಗಗಳನ್ನು ಸೂಚಿಸುವ ಪದಗಳನ್ನು ಗುಣಪದಗಳೆಂದು ಕರೆಯಲು ಸಾಧ್ಯವಿದೆ. ಆದರೆ ಇವನ್ನೇ ಬಳಸಿ ತಯಾರಿಸಿದ ನಮ್ಮ ಮನೆಯಲ್ಲಿ, ಮಾಡಿನ ಮೇಲೆ, ಹಟ್ಟಿಯಿಂದ ದೂರ, ಹಲಸಿನ ಮರದ ಆಚೆ ಮೊದಲಾದ ಪದಕಂತೆಗಳು ವಾಕ್ಯದಲ್ಲಿ ಬಂದಾಗ ಅವು ಮುಖ್ಯವಾದ ಇಲ್ಲವೇ ಮುಖ್ಯವಲ್ಲದ ಘಟಕಗಳಾಗಿ ಕಾಣಿಸಿಕೊಳ್ಳುತ್ತವೆ. (27ಕ) ನಿಮ್ಮ ಪುಸ್ತಕವನ್ನು ಇಲ್ಲಿ ಇರಿಸಿದ್ದೇನೆ. (27ಖ) ಅವರು ಕೊಟ್ಟ ಹಣವನ್ನು ಕಪಾಟಿನಲ್ಲಿ ಇರಿಸಿದ್ದೇನೆ. (28ಕ) ಆತನ ಗಾಳಿಪಟ ಬಹಳ ಮೇಲೆ ಹೋಗಿದೆ. (28ಖ) ಅವನು ಆ ಪುಸ್ತಕವನ್ನು ತನ್ನ ಹೊಸ ಮೇಜಿನ ಮೇಲೆ ಬರೆದ. ಈ ಗುಣಪದಗಳು ಒಂದು ಘಟನೆಯ ಜಾಗವನ್ನು ನೇರವಾಗಿ ಸೂಚಿಸುತ್ತಿರ ಬಹುದು, ಇಲ್ಲವೇ ಆಡುಗನ ಜಾಗಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುತ್ತಿರ ಬಹುದು. ಉದಾಹರಣೆಗಾಗಿ, ಸುತ್ತ, ಒಳಗೆ, ನಡುವೆ ಮೊದಲಾದ ಗುಣಪದ ಗಳು ಘಟನೆಯ ಜಾಗವನ್ನು ನೇರವಾಗಿ ಸೂಚಿಸಬಲ್ಲುವು. ಅವನ್ನು ವಾಕ್ಯದಲ್ಲಿ ಬಳಸಿದಾಗ, ಅವು ಘಟನೆಗೆ ಸಂಬಂಧಿಸಿದಂತೆ ಯಾವ ಜಾಗವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಆದರೆ, ಆಚೆ, ಈಚೆ, ಅಲ್ಲಿ, ಇಲ್ಲಿ, ಮೇಲೆ, ಕೆಳಗೆ ಮೊದಲಾದ ಬೇರೆ ಕೆಲವು ಗುಣಪದಗಳು ಘಟನೆಯ ಜಾಗವನ್ನು ಆಡುಗನ ಜಾಗಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುತ್ತವೆ. ಅವನ್ನು ವಾಕ್ಯದಲ್ಲಿ ಬಳಸಿದಾಗ ಅವು ಯಾವ ಜಾಗವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿ ನಿಂತಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಈ ಎರಡು ರೀತಿಯ ಗುಣಪದಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣ ಬಹುದು. (29ಕ) ರಾಜು ಇಲ್ಲಿ ಹಾಡುತ್ತಿದ್ದಾನೆ. (29ಖ) ರಾಜು ಒಳಗೆ ಹಾಡುತ್ತಿದ್ದಾನೆ. (29ಕ) ವಾಕ್ಯದ ಪ್ರಕಾರ ರಾಜು ಹಾಡುತ್ತಿರುವುದು ಎಲ್ಲಿ ಎಂಬುದನ್ನು ತಿಳಿಯಲು ಆ ವಾಕ್ಯವನ್ನಾಡಿರುವ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಆದರೆ (29ಖ)ದಲ್ಲಿ ಇದು ಅವಶ್ಯವಿಲ್ಲ.
ಈ ಗುಣಪದಗಳು ಸೂಚಿಸುವ ಜಾಗ ಒಂದು ಚಲನೆಗೆ ಸಂಬಂಧಿಸಿರುವು ದಾದಲ್ಲಿ, ಅವು ಬರಿಯ ಜಾಗವನ್ನು ಸೂಚಿಸುವ ಬದಲು ಚಲನೆಯ ಸುರು ಇಲ್ಲವೇ ಕೊನೆಯನ್ನು ಸೂಚಿಸಲು ಸಾಧ್ಯವಿದೆ. ಇದಕ್ಕಾಗಿ ಈ ಗುಣಪದ ಗಳೊಂದಿಗೆ ಇಂದ ಮತ್ತು ಗೆ ಎಂಬ ಪ್ರತ್ಯಯಗಳನ್ನು ಬಳಸಬೇಕಾಗುತ್ತದೆ. (30ಕ) ಅವನು ಇಲ್ಲಿ ಹಾಡುತ್ತಿದ್ದಾನೆ. (30ಖ) ಅವನು ಇಲ್ಲಿಂದ ಹೋಗಿದ್ದಾನೆ. (30ಗ) ಅವನು ಇಲ್ಲಿಗೆ ಬಂದಿದ್ದಾನೆ. (30ಕ)ದಲ್ಲಿ ಇಲ್ಲಿ ಎಂಬ ಪದ ಬರಿಯ ಒಂದು ಜಾಗವನ್ನು ಸೂಚಿಸುತ್ತಿದೆ ಯಾದರೆ, (30ಖ)ದಲ್ಲಿ ಇಲ್ಲಿಂದ ಎಂಬುದು ಒಂದು ಚಲನೆಯ ಸುರುವನ್ನೂ ಮತ್ತು (30ಗ)ದಲ್ಲಿ ಇಲ್ಲಿಗೆ ಎಂಬುದು ಒಂದು ಚಲನೆಯ ಕೊನೆಯನ್ನೂ ಸೂಚಿಸುತ್ತಿವೆ.
6.6 ಸಮಯವನ್ನು ಸೂಚಿಸುವ ಗುಣಪದಗಳು
ಜಾಗವನ್ನು ಸೂಚಿಸುವ ಪದಗಳ ಹಾಗೆ ಸಮಯವನ್ನು ಸೂಚಿಸುವ ಪದಗಳೂ ಒಂದು ಘಟನೆಯ ಇಲ್ಲವೇ ಸಂಗತಿಯ ಸಮಯವನ್ನು ನೇರವಾಗಿ ಸೂಚಿಸ ಬಲ್ಲುವು ಇಲ್ಲವೇ ಅದನ್ನೇ ವಾಕ್ಯದ ಆಡುಗನ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಬಲ್ಲುವು. ಇದಕ್ಕಾಗಿ ವಾಕ್ಯಗಳಲ್ಲಿ ಎರಡು ರೀತಿಯ ಪದಗಳ ಬಳಕೆ ಯಾಗುತ್ತದೆ. ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಬರುವ ಪ್ರತ್ಯಯಗಳು ಘಟನೆಯ ಇಲ್ಲವೇ ಸಂಗತಿಯ ಸಮಯವನ್ನು ವಾಕ್ಯದ ಆಡುಗನ ಸಮಯಕ್ಕೆ ಸಂಬಂಧಿ ಸಿರುವ ಹಾಗೆ ಮಾತ್ರವೇ ಸೂಚಿಸುತ್ತವೆ ಎಂಬುದನ್ನು ನಾವು ಹಿಂದಿನ ಅಧ್ಯಾಯ ಗಳಲ್ಲಿ (2.1.1 ಮತ್ತು 3.1.1ರಲ್ಲಿ) ನೋಡಿರುವೆವು. (ಕ್ರಿಯಾಪದಗಳ ಜೋಡಿಸುವ ರೂಪಗಳು ಮಾತ್ರ ಇದಕ್ಕೆ ಅಪವಾದಗಳಾಗಿವೆ (5.2 ನೋಡಿ)). ಘಟನೆಯ ಸಮಯವನ್ನು ಆಡುಗನ ಸಮಯಕ್ಕೆ ಸಂಬಂಧಿಸಿರುವ ಹಾಗೆ ಸೂಚಿಸುವ ಗುಣಪದಗಳು ಕ್ರಿಯಾಪದದಲ್ಲಿ ಬರುವ ಪ್ರತ್ಯಯವು ಸೂಚಿಸುವ ಸಮಯವನ್ನೇ ಹೆಚ್ಚು ವಿವರವಾಗಿ ತಿಳಿಸುತ್ತವೆ. ಇದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (31ಕ) ಮಾರುತಿ ನಾಳೆ ಆಳಂದಿಗೆ ಹೋಗುತ್ತಾನೆ. (31ಖ) ಸೀತಾಬಾಯಿ ನಿನ್ನೆ ಒಂದು ಸಿನೆಮಾ ನೋಡಿದಳು. (31ಕ) ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಉತ್್ತ ಪ್ರತ್ಯಯ ಬಂದಿರುವ ಕಾರಣ, ಅದು ಆ ವಾಕ್ಯವನ್ನಾಡಿರುವ ಸಮಯದ ಅನಂತರ ನಡೆಯುವ ಘಟನೆ ಯೊಂದನ್ನು ಸೂಚಿಸುತ್ತಿದೆ ಮತ್ತು ಅದೇ ವಾಕ್ಯದಲ್ಲಿ ಬರುವ ನಾಳೆ ಎಂಬ ಪದ ಅದೇ ಸಮಯವನ್ನು ಹೆಚ್ಚು ವಿವರವಾಗಿ ತಿಳಿಸುತ್ತಿದೆ.
ಇದಕ್ಕೆ ಬದಲು (31ಖ) ವಾಕ್ಯದ ಮುಖ್ಯ ಕ್ರಿಯಾಪದದಲ್ಲಿ ಇದ್ ಪ್ರತ್ಯಯ ಬಂದಿರುವ ಕಾರಣ, ಅದು ಆ ವಾಕ್ಯವನ್ನಾಡಿರುವ ಸಮಯಕ್ಕಿಂತ ಮೊದಲು ನಡೆದಿರುವ ಘಟನೆಯನ್ನು ಸೂಚಿಸುತ್ತಿದೆ, ಮತ್ತು ಆ ವಾಕ್ಯದಲ್ಲಿ ಬಂದಿರುವ ನಿನ್ನೆ ಎಂಬ ಪದ ಅದೇ ಸಮಯವನ್ನು ಹೆಚ್ಚು ವಿವರವಾಗಿ ತಿಳಿಸುತ್ತಿದೆ. ಈ ಪದಗಳೊಂದಿಗೆ ಸುರು ಮತ್ತು ಕೊನೆಗಳನ್ನು ಸೂಚಿಸುವ ಇಂದ ಮತ್ತು ಗೆ ಪ್ರತ್ಯಯಗಳು ಬರಲು ಸಾಧ್ಯವಿದ್ದು, ಅವಕ್ಕೆ ಘಟನೆ ಸುರುವಾಗಿರುವ ಮತ್ತು ಕೊನೆಗೊಂಡಿರುವ ಸಮಯಗಳನ್ನು ಸೂಚಿಸುವ ಅರ್ಥವಿದೆ. (32ಕ) ಅವನು ನಿನ್ನೆಯಿಂದ ಉಪವಾಸ ಮಾಡುತ್ತಿದ್ದಾನೆ. (32ಖ) ಅವನ ಉಪವಾಸ ನಿನ್ನೆಗೆ ಮುಗಿಯಿತು.
6.7 ಸಾರಾಂಶ
ಕನ್ನಡ ವಾಕ್ಯಗಳಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ಸೂಚಿಸುವವು, ಘಟನೆಗಳ ಗುಣಧರ್ಮವನ್ನು ಸೂಚಿಸುವವು ಮತ್ತು ಗುಣ ಧರ್ಮಗಳ ಪ್ರಮಾಣವನ್ನು ಸೂಚಿಸುವವು ಎಂಬುದಾಗಿ ಮೂರು ರೀತಿಯ ಗುಣಪದಗಳು ಬಳಕೆಯಲ್ಲಿವೆ. ಇವು ಕೆಲವು ವಿಷಯಗಳಲ್ಲಿ ಸಮಾನವಾಗಿವೆ ಆದರೆ ಬೇರೆ ಕೆಲವು ವಿಷಯಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಇವುಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಇವು ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಕೆಯಾಗುತ್ತವೆ ಎಂಬ ವಿಷಯದ ಮೇಲೆ ಅವಲಂಬಿಸಿವೆ. ಘಟನೆಯ ಸಮಯ, ಜಾಗ ಮತ್ತು ಪ್ರಕಾರಗಳನ್ನು ಸೂಚಿಸುವವುಗ ಳೆಂಬುದಾಗಿ ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳನ್ನು ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಮೂರನೆಯ ಗುಂಪಿಗೆ ಸೇರಿದ ಗುಣಪದಗಳಲ್ಲಿ ಹೆಚ್ಚಿನವೂ ಕನ್ನಡದಲ್ಲಿ ಅಣಕಿಸುವ ಪದಗಳಾಗಿ ಬಳಕೆಯಲ್ಲಿವೆ.