← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11

English → | Eke →

ಅಧ್ಯಾಯ ನಾಲ್ಕು — ನಾಮಪದಗಳ ಕಂತೆಗಳು

Eke →

4.1 ಪದಗಳು ಮತ್ತು ಪದಕಂತೆಗಳು

ನಾಮಪದಗಳ ಮಟ್ಟಿಗೆ ಪದ ಮತ್ತು ಪದಕಂತೆ ಎಂಬುದಾಗಿ ಎರಡು ಮಟ್ಟಗಳಲ್ಲಿ ಬರುವ ಘಟಕಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ. ಮರ ಎಂಬುದೊಂದು ನಾಮಪದ, ಮತ್ತು ದೊಡ್ಡ ಮರ ಎಂಬುದೊಂದು ನಾಮ ಪದಕಂತೆ. ಈ ಎರಡು ರೀತಿಯ ಘಟಕಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಮತ್ತು ವಾಕ್ಯಗಳಲ್ಲಿ ಅವುಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಶೀಲಿಸಲಿರುವೆವು. ಮರ ಎಂಬ ನಾಮಪದಕ್ಕೆ ಒಳರಚನೆಯೆಂಬುದಿಲ್ಲ. ಅದರ ತಯಾರಿಕೆಯಲ್ಲಿ ಮ್, ಅ, ರ್, ಮತ್ತು ಅ ಎಂಬ ನಾಲ್ಕು ವರ್ಣಗಳನ್ನು ಬಳಸಲಾಗಿದೆಯಾದರೂ ಅದಕ್ಕಿರುವ ಅರ್ಥವನ್ನು ಈ ವರ್ಣಗಳಿಂದ ನೇರವಾಗಿ ಪಡೆಯಲು ಸಾಧ್ಯವಿಲ್ಲ. ಆ ನಾಮಪದಕ್ಕೊಂದು ಸ್ವರೂಪವನ್ನು ಕೊಡುವುದು ಮತ್ತು ಉಳಿದ ನಾಮಪದ ಗಳಿಂದ ಅದು ಬೇರಾಗಿ ನಿಲ್ಲುವಂತೆ ಮಾಡುವುದು ಎಂಬ ಈ ಎರಡು ಕಾರ್ಯ ಗಳನ್ನು ಮಾತ್ರ ಅದರಲ್ಲಿ ಬರುವ ವರ್ಣಗಳು ನಡೆಸಬಲ್ಲುವು. ಅದರ ಅರ್ಥ ಏನು ಎಂಬುದು ಯಾವ ಅರ್ಥದಲ್ಲಿ ಅದು ರೂಢಿಗೆ ಬಂದಿದೆ ಎಂಬ ವಿಷಯದ ಮೇಲೆ ಮಾತ್ರವೇ ಅವಲಂಬಿಸಿದೆ. ಆದರೆ ದೊಡ್ಡ ಮರ ಎಂಬ ನಾಮಪದಕಂತೆ ಇದಕ್ಕಿಂತ ತೀರ ಭಿನ್ನ ವಾದುದು. ಅದಕ್ಕೆ ದೊಡ್ಡ ಮತ್ತು ಮರ ಎಂಬ ಎರಡು ಪದಗಳ ಕೂಡಿಕೆ ಯಿಂದ ತಯಾರಾದ ಅರ್ಥವಿರುವ ಒಳರಚನೆಯಿದೆ. ಅದರ ಅಂಗಗಳಾಗಿ ಬಂದಿರುವ ದೊಡ್ಡ ಮತ್ತು ಮರ ಎಂಬ ಎರಡು ಪದಗಳಿಗೆ ಮಾತ್ರ ಬರಿಯ ವರ್ಣಗಳ ಕೂಡಿಕೆಯಿಂದ ತಯಾರಾದ ಅರ್ಥವಿಲ್ಲದಿರುವ ಒಳರಚನೆಯಿದೆ.
ತಯಾರಿಕೆಗೆ ನಾಮಪದಗಳಲ್ಲೂ ಕೆಲವನ್ನು ಬೇರೆ ಪದಗಳ ಇಲ್ಲವೇ ಬೇರೆ ಪದ ಮತ್ತು ಪ್ರತ್ಯಯಗಳ ಕೂಡಿಕೆಯ ಮೂಲಕ ತಯಾರಿಸಿರುವುದನ್ನು ಕಾಣಬಹುದು. ಆದರೆ, ಅವುಗಳಿಗಿರುವ ಈ ಒಳರಚನೆ ಅವುಗಳ ಮಾತ್ರ ಸಂಬಂಧಿಸಿದ್ದಲ್ಲದೆ ನೇರವಾಗಿ ಅವುಗಳ ಅರ್ಥಕ್ಕೆ ಇಲ್ಲವೇ ಬಳಕೆಗೆ ಸಂಬಂಧಿಸಿದ್ದಲ್ಲ.
ಉದಾಹರಣೆಗಾಗಿ, ಕರಿಹಲಗೆ ಎಂಬ ನಾಮಪದವನ್ನು ಕರಿ ಮತ್ತು ಹಲಗೆ ಎಂಬ ಎರಡು ಪದಗಳ ಕೂಡಿಕೆಯ ಮೂಲಕ ತಯಾರಿಸಲಾಗಿದೆ. ಆದರೆ, ಈ ಪದಗಳಿಗೆ ಮತ್ತು ಅವುಗಳ ಕೂಡಿಕೆಗಿರುವ ಅರ್ಥದ ಮೇಲೆ ಕರಿಹಲಗೆ ಎಂಬ ನಾಮಪದದ ಅರ್ಥ ನಿಂತಿಲ್ಲ ಎಂಬುದನ್ನು ಗಮನಿಸಬಹುದು. ಬಳಕೆಯಲ್ಲಿ ಕರಿಹಲಗೆ ಎಂಬ ಪದ ಕಪ್ಪಲ್ಲದ ವಸ್ತುವನ್ನೂ ಸೂಚಿಸಬಲ್ಲುದು (ಕರಿಹಲಗೆ ಯೊಂದಕ್ಕೆ ನೀಲಿ ಬಣ್ಣ ಕೊಟ್ಟಿರಲು ಸಾಧ್ಯವಿದೆ) ಮತ್ತು ಹಲಗೆಯಲ್ಲದ ವಸ್ತು ವೊಂದನ್ನೂ ಸೂಚಿಸಬಲ್ಲುದು (ಗೋಡೆಯ ಒಂದು ಭಾಗಕ್ಕೆ ಬಣ್ಣ ಕೊಟ್ಟು ಅದನ್ನು ಕರಿಹಲಗೆ ಎಂದು ಕರೆದಿರಲೂ ಸಾಧ್ಯವಿದೆ).
ನಾಮಪದ ಮತ್ತು ನಾಮಪದಕಂತೆಗಳ ನಡುವಿರುವ ಈ ವ್ಯತ್ಯಾಸದ ಆಧಾರದ ಮೇಲೆ ವಾಕ್ಯರಚನೆಯ ಮಟ್ಟಿಗೆ ಅವು ಎರಡು ‘ಮಟ್ಟ’ಗಳಲ್ಲಿ ಬರು ತ್ತವೆ ಎಂದು ಹೇಳಲು ಸಾಧ್ಯವಾಗುತ್ತದೆ. ಆದರೆ ಇಂತಹ ವ್ಯತ್ಯಾಸ ವಾಕ್ಯಗಳಲ್ಲಿ ಬರುವ ಇತರ ಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಕ್ರಿಯಾಪದಗಳ ಬಳಕೆಯಲ್ಲಿ ಇಲ್ಲವೇ ಗುಣಪದಗಳ ಬಳಕೆಯಲ್ಲಿ ಈ ರೀತಿ ಪದಗಳು ಮತ್ತು ಪದಕಂತೆಗಳು ಎಂಬುದಾಗಿ ಎರಡು ರೀತಿಯ ಘಟಕಗಳು ಕಾಣಿಸುವುದಿಲ್ಲ. ಇದಕ್ಕೆ ಕೆಳಗೆ 4.1.1ರಲ್ಲಿ ಸೂಚಿಸಿರುವ ಹಾಗೆ ಒಂದು ಮುಖ್ಯ ವಾದ ಕಾರಣವೂ ಇದೆ.

Eke →

4.1.1 ವ್ಯತ್ಯಾಸದ ಅವಶ್ಯಕತೆ

ವಾಕ್ಯಗಳಲ್ಲಿ ಬರುವ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಬೇರೆ ಬೇರೆ ಕೆಲಸಗಳಿವೆ. ಕ್ರಿಯಾಪದಗಳು ಒಂದು ಘಟನೆಯನ್ನು ಸೂಚಿಸಲು ಬಳಕೆ ಯಾಗುತ್ತವೆ, ಮತ್ತು ನಾಮಪದಗಳು ಅಂತಹ ಘಟನೆಯಲ್ಲಿ ತೊಡಗಿಕೊಂಡಿ ರುವ ವ್ಯಕ್ತಿ, ಪ್ರಾಣಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಲು ಬಳಕೆ ಯಾಗುತ್ತವೆ. ಉದಾಹರಣೆಗಾಗಿ ಕೆಳಗಿನ ವಾಕ್ಯವನ್ನು ಗಮನಿಸಬಹುದು. ಜಾನಕಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿದ್ದಾಳೆ. (1)ನೇ ವಾಕ್ಯದಲ್ಲಿ ಹೋಗು ಎಂಬ ಕ್ರಿಯಾಪದ ಒಂದು ಘಟನೆಯನ್ನು ಸೂಚಿಸು ತ್ತದೆ, ಮತ್ತು ಅದರೊಂದಿಗೆ ಬಂದಿರುವ ಜಾನಕಿ, ಬಸ್ಸು ಮತ್ತು ಮೂರು ಗುರುತಿಸುವ ಘಟನೆಯಲ್ಲಿ ನಾಮಪದಗಳು ಆ ಬೆಂಗಳೂರು ಎಂಬ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮತ್ತು ಜಾಗಗಳನ್ನು ಗುರುತಿಸುತ್ತವೆ.
ಈ ರೀತಿ ಬೇರೆ ಬೇರೆ ಘಟನೆ ಇಲ್ಲವೇ ಸಂಗತಿಗಳನ್ನು ತಿಳಿಸುವಲ್ಲಿ ನಾವು ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳ ಸಂಖ್ಯೆ ನಮ್ಮ ಭಾಷೆಯಲ್ಲಿರುವ ನಾಮಪದಗಳ ಸಂಖ್ಯೆಗಿಂತ ಎಷ್ಟೋ ಪಾಲು ಹೆಚ್ಚಿನದಾಗಿದೆ. ಕೆಲಸದಲ್ಲಿ ಹಾಗಾಗಿ, ವ್ಯಕ್ತಿ, ವಸ್ತು ಮೊದಲಾದುವನ್ನು ‘ಹೆಸರಿಸುವುದು’ ಮತ್ತು ‘ವರ್ಣಿಸುವುದು’ ಎಂಬುದಾಗಿ ಎರಡು ವಿಧಾನಗಳನ್ನು ಬಳಸುವ ಅವಶ್ಯಕತೆಯಿದೆ, ಮತ್ತು ಇದಕ್ಕಾಗಿ ವಾಕ್ಯಗಳಲ್ಲಿ ನಾಮಪದಗಳು ಮತ್ತು ನಾಮಪದಕಂತೆಗಳು ಎಂಬುದಾಗಿ ಎರಡು ರೀತಿಯ ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಒಂದು ಕಾಡಿನಲ್ಲಿ ಲಕ್ಷಗಟ್ಟಲೆ ಮರಗಳಿರಬಹುದು. ಇವುಗಳಲ್ಲಿ ಕೆಲವನ್ನು ಗುರುತಿಸಲು ಮಾವು, ಹಲಸು, ಹುಣಿಸೆ, ಗೇರು, ಮೊದಲಾದ ಹೆಸರಿಸುವ ನಾಮಪದಗಳನ್ನು ಬಳಸಬಲ್ಲೆವು. ಆದರೆ ಬೇರೆ ಹಲವು ಮರಗಳಿಗೆ ಹೆಸರೇ ಇಲ್ಲದಿರಬಹುದು. ಅಥವಾ ಹೆಸರಿದ್ದರೂ ಅದು ನಮಗೆ ತಿಳಿದಿಲ್ಲದಿರಬಹುದು. ಇಂತಹ ಸಂದಭ್ರಗಳಲ್ಲಿ ಅವನ್ನು ಗುರುತಿಸಿ ಅವುಗಳ ವರ್ಣನೆಯೊಂದನ್ನು ಬಳಸುವುದೇ ದಾರಿ. ಮತ್ತು ಇಂತಹ ವರ್ಣನೆಗಳಿಗಾಗಿ ನಾಮಪದಗಳ ಬದಲು ನಾಮಪದಕಂತೆ ಗಳನ್ನು ಬಳಸಬೇಕಾಗುತ್ತದೆ. ಕುರಿತು ಏನಾದರೂ ಹೇಳಬೇಕಿದ್ದಲ್ಲಿ (2) ಈ ಉದ್ದ ಎಲೆಯ ಗಿಡವನ್ನು ಮುಟ್ಟಿದರೆ ಕೈ ತುರಿಸುತ್ತದೆ. (2)ನೇ ವಾಕ್ಯದಲ್ಲಿ ವಿಶಿಷ್ಟವಾದ ಗಿಡವೊಂದನ್ನು ಅದರ ಹೆಸರೇನೆಂದು ತಿಳಿದಿಲ್ಲ ವಾದ ಕಾರಣ ಉದ್ದ ಎಲೆಯ ಗಿಡ ಎಂಬ ನಾಮಪದಕಂತೆಯ ಮೂಲಕ ವರ್ಣಿಸಿ ಗುರುತಿಸಲಾಗಿದೆ.
ಇದಲ್ಲದೆ, ಮರಗಳಲ್ಲಿ ಪ್ರತಿಯೊಂದಕ್ಕೂ ಹಲವು ಉಪಭೇದಗಳಿದ್ದು, ಅವನ್ನೆಲ್ಲ ಬೇರೆ ಬೇರಾಗಿ ಗುರುತಿಸಿ ಹೇಳಲು ಹೆಸರುಗಳಿರುವುದಿಲ್ಲ. ನಮಗೆ ಜಾಸ್ತಿ ಉಪಯೋಗಕ್ಕೆ ಬರುವ ಮಾವು, ಹಲಸು ಮೊದಲಾದ ಕೆಲವು ಜಾತಿ ಯವುಗಳಲ್ಲಿ ಮಾತ್ರ ಈ ರೀತಿ ಉಪಭೇದಗಳಿಗೆ ಅವುಗಳದೇ ಆದ ಹೆಸರುಗ ಳಿವೆ. ಇತರ ಜಾತಿಯ ಮರಗಳಲ್ಲಿ ಉಪಭೇದಗಳನ್ನು ಗುರುತಿಸಬೇಕಿದ್ದಲ್ಲಿ ವರ್ಣನೆಗಳನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ, ಮನುಷ್ಯರಿಗಿರುವ ಹಾಗೆ ಹೆಚ್ಚಿನ ಮರ-ಗಿಡಗಳಿಗೂ ಅಂಕಿತ ನಾಮಗಳಿಲ್ಲವಾದ ಕಾರಣ, ಅವುಗಳಲ್ಲಿ ಯಾವುದಾದರೂ ಒಂದನ್ನು ಉಳಿದವು ಗಳಿಂದ ಪ್ರತ್ಯೇಕಿಸಿ ಗುರುತಿಸಬೇಕಾದಾಗಲೂ ವರ್ಣನೆಗಳನ್ನೇ ಬಳಸಬೇಕಾಗು ನಮ್ಮಲ್ಲಿನ ನೀಲಂ ಗಿಡದಲ್ಲಿ ಮೂರನೆಯ ವಷ್ರಕ್ಕೇ ಹಣ್ಣಾಗಿದೆ. (3)ನೇ ವಾಕ್ಯದಲ್ಲಿ ಒಂದು ನಿರ್ದಿಷ್ಟವಾದ ಗಿಡವನ್ನು, ಅದಕ್ಕೆ ಅಂಕಿತನಾಮ ವಿಲ್ಲವಾದ ಕಾರಣ, ನಮ್ಮಲ್ಲಿನ ನೀಲಂ ಗಿಡ ಎಂಬ ನಾಮಪದಕಂತೆಯ ಮೂಲಕ ವರ್ಣಿಸಿ ಗುರುತಿಸಬೇಕಾಗಿದೆ.

Eke →

4.1.2 ಕ್ರಿಯಾಪದ ಮತ್ತು ಗುಣಪದಗಳು

ನಾಮಪದಗಳು ನಡೆಸಬೇಕಾಗಿರುವ ಈ ‘ಗುರುತಿಸುವ’ ಕೆಲಸಕ್ಕಿಂತ ಕ್ರಿಯಾ ಪದಗಳು ನಡೆಸಬೇಕಾಗಿರುವ ‘ಸೂಚಿಸುವ’ ಕೆಲಸ ತೀರ ಭಿನ್ನವಾದುದು. ಅವು ಘಟನೆಯೊಂದನ್ನು ಸೂಚಿಸುವುದು ಮಾತ್ರವಲ್ಲದೆ ಅದು ಇನ್ನೊಬ್ಬರಿಗೆ ತಿಳಿಯು ವಂತೆ ಮಾಡುವುದು, ಅದರ ವಿಷಯವಾಗಿ ಇನ್ನೊಬ್ಬರಿಂದ ಹೆಚ್ಚಿನ ಸಂಗತಿ ಗಳನ್ನು ಕೇಳಿ ತಿಳಿದುಕೊಳ್ಳುವುದು, ಇನ್ನೊಬ್ಬರ ಮೂಲಕ ಅಂತಹ ಘಟನೆಯನ್ನು ಮಾಡಿಸಿಕೊಳ್ಳುವುದು, ಅದರ ವಿಷಯವಾಗಿ ಬೆರಗನ್ನು ಸೂಚಿಸುವುದು, ಮೊದ ಲಾದ ಬೇರೆ ಬೇರೆ ಮಾತಿನ ಕೆಲಸಗಳಲ್ಲಿ ಆ ಘಟನೆಯನ್ನು ತೊಡಗಿಸಬೇಕಾಗು ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿ ಕ್ರಿಯಾಪದಗಳಲ್ಲಿ ಬೇರೆಯೇ ಕೆಲವು ಗುಣಧರ್ಮಗಳು ಕಾಣಿಸಿಕೊಳ್ಳುತ್ತವೆ. ಘಟನೆಯ ಸಮಯ, ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ಘಟನೆಯ ಸ್ವರೂಪ ಮೊದಲಾದುವನ್ನು ಸೂಚಿಸುವ ಪ್ರತ್ಯಯಗಳು ಅದರೊಂದಿಗೆ ಬರುತ್ತವೆ, ಮತ್ತು ಎಂತಹ ಮಾತಿನ ಕೆಲಸದಲ್ಲಿ ಆ ಘಟನೆಯನ್ನು ತೊಡಗಿಸಲಾಗಿದೆ ಎಂಬುದನ್ನು ಸೂಚಿಸುವ ಪದ ಇಲ್ಲವೇ ಪ್ರತ್ಯಯಗಳೂ ಅದರೊಂದಿಗೆ ಬರುತ್ತವೆ.
ಹುಡುಗನನ್ನು ಶಾಲೆಗೆ ಸೇರಿಸಿದೆ. ಮೇಲಿನ ವಾಕ್ಯದಲ್ಲಿ ಬಂದಿರುವ ಸೇರು ಕ್ರಿಯಾಪದದೊಂದಿಗೆ ಅದು ಸೂಚಿಸುವ ಘಟನೆಯನ್ನು ಇನ್ನೊಬ್ಬ ವ್ಯಕ್ತಿಯ (ಹುಡುಗನ) ಮೂಲಕ ನಡೆಸಲಾಗಿದೆ ಎಂಬುದನ್ನು ಸೂಚಿಸುವ ಇಸು ಪ್ರತ್ಯಯವೂ, ಆ ಘಟನೆ (4)ನೇ ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲೇ ನಡೆದುದೆಂಬುದನ್ನು ಸೂಚಿಸುವ ಇದ್ ಪ್ರತ್ಯಯವೂ ಮತ್ತು ಆ ಘಟನೆಯನ್ನು ಇನ್ನೊಬ್ಬ ವ್ಯಕ್ತಿಯ ಮೂಲಕ ನಡೆಸಿದವನು (4)ನೇ ವಾಕ್ಯದ ಆಡುಗನೆಂಬುದನ್ನು ಸೂಚಿಸುವ ಎ ಪ್ರತ್ಯಯವೂ ಬಂದಿರುವುದನ್ನು ಕಾಣಬಹುದು. ಆದರೆ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳಿಗೆ ಕ್ರಿಯಾಪದಗಳ ಬಳಕೆಯಲ್ಲಿ ಯಾವ ಸ್ಥಾನವೂ ಇಲ್ಲವಾದ ಕಾರಣ, ಪದಗಳ ಮತ್ತು ಪದಕಂತೆಗಳ ನಡು ವಿರುವ ವ್ಯತ್ಯಾಸ ಅವುಗಳ ರಚನೆಯಲ್ಲಿ ಕಾಣಿಸುವುದಿಲ್ಲ.
ವಾಕ್ಯಗಳಲ್ಲಿ ಗುಣಪದಗಳು ನಡೆಸಬೇಕಾಗಿರುವ ಕೆಲಸವೂ ನಾಮಪದ ಮತ್ತು ಕ್ರಿಯಾಪದಗಳು ನಡೆಸಬೇಕಾಗಿರುವ ಕೆಲಸಗಳಿಗಿಂತ ತೀರ ಭಿನ್ನವಾದುದು. ಅವುಗಳಲ್ಲಿ ನಾಮಪದಗಳೊಂದಿಗೆ ಬರುವವುಗಳು, ಕ್ರಿಯಾಪದಗಳೊಂದಿಗೆ ಬರುವವುಗಳು ಮತ್ತು ಗುಣಪದಗಳೊಂದಿಗೆ ಬರುವವುಗಳು ಎಂಬುದಾಗಿ ಮೂರು ವಿಧದವುಗಳಿದ್ದು, ಇವಕ್ಕೆ ಮೂರು ಬೇರೆ ಬೇರೆ ಕೆಲಸಗಳಿವೆ. ನಾಮ ಪದಗಳೊಂದಿಗೆ ಬರುವ ಗುಣಪದಗಳು ನಾಮಪದಕಂತೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ ಮತ್ತು ಹೊಸ ಹೊಸ ನಾಮಪದಗಳ ತಯಾರಿಕೆಯಲ್ಲೂ ಬಳಕೆಯಾಗುತ್ತವೆ. ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳು ಕ್ರಿಯಾಪದಗಳು ಸೂಚಿಸುವ ಘಟನೆಯ ಕುರಿತಾಗಿ ಇಲ್ಲವೇ ಅದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳ ಕುರಿತಾಗಿ ಏನಾದರೂ ತಿಳಿಸಲು ಬಳಕೆಯಾಗುತ್ತಿದ್ದು ಅವು ಸೂಚಿಸುವ ಗುಣಧರ್ಮಗಳು ನಾಮಪದಗಳೊಂದಿಗೆ ಬರುವ ಗುಣ ಪದಗಳು ಸೂಚಿಸುವ ಗುಣಧರ್ಮಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಮುಂದೆ ನೋಡಲಿರುವೆವು.
ಗುಣಪದಗಳೊಂದಿಗೆ ಬರುವ ಗುಣಪದಗಳು ಅವುಗಳ ಪ್ರಮಾಣ, ವ್ಯಾಪ್ತಿ ಮೊದಲಾದುವನ್ನು ಸೂಚಿಸುತ್ತವೆ. ಈ ಮೂರು ರೀತಿಯ ಗುಣಪದಗಳ ಬಳಕೆ ಯಲ್ಲೂ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ವಿಧಾನಗಳ ಅವಶ್ಯಕತೆ ಯಿಲ್ಲವಾದ ಕಾರಣ ಅವುಗಳ ರಚನೆಯಲ್ಲೂ ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ.

Eke →

4.2 ಗುರುತಿಸುವ ವಿಧಾನಗಳು

ವಾಕ್ಯವೊಂದರಲ್ಲಿ ಕ್ರಿಯಾಪದದ ಮೂಲಕ ಘಟನೆಯೊಂದನ್ನು ಸೂಚಿಸುವಾಗ ಲೆಲ್ಲ ಸಾಮಾನ್ಯವಾಗಿ ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಿಕೊಡುವ ಅವಶ್ಯಕತೆಯಿರುತ್ತದೆ. ಉದಾ ಹರಣೆಗಾಗಿ ಕೊಡು ಕ್ರಿಯಾಪದವನ್ನು ಒಂದು ವಾಕ್ಯದಲ್ಲಿ ಬಳಸುವುದಿದ್ದಲ್ಲಿ ಯಾರು ಯಾರಿಗೆ ಏನನ್ನು ಕೊಟ್ಟರು ಎಂಬುದನ್ನು ತಿಳಿಸುವುದಕ್ಕಾಗಿ ಇಬ್ಬರು ವ್ಯಕ್ತಿಗಳನ್ನೂ ಮತ್ತು ಒಂದು ವಸ್ತುವನ್ನೂ ಗುರುತಿಸಿಕೊಡಬೇಕಾಗುತ್ತದೆ. ರಾಜು ಜಾನಕಿಗೆ ಒಂದು ಪುಸ್ತಕ ಕೊಟ್ಟ. ವ್ಯಕ್ತಿ, ವಸ್ತು ಮೊದಲಾದುವನ್ನು ಈ ರೀತಿ ಗುರುತಿಸುವುದಕ್ಕಾಗಿ ನಾವು ವಾಕ್ಯ ಗಳಲ್ಲಿ ನಾಮಪದಗಳನ್ನು ಇಲ್ಲವೇ ನಾಮಪದಕಂತೆಗಳನ್ನು ಬಳಸುತ್ತೇವೆ. ಮೇಲಿನ ವಾಕ್ಯದಲ್ಲಿ ವ್ಯಕ್ತಿಗಳಿಬ್ಬರನ್ನು ಗುರುತಿಸಲು ರಾಜು ಮತ್ತು ಜಾನಕಿ ಎಂಬ ಎರಡು ನಾಮಪದಗಳನ್ನೂ ಮತ್ತು ವಸ್ತುವೊಂದನ್ನು ಗುರುತಿಸಲು ಒಂದು ಪುಸ್ತಕ ಎಂಬ ನಾಮಪದಕಂತೆಯನ್ನೂ ಬಳಸಲಾಗಿದೆ. ಸಾಮಾನ್ಯವಾಗಿ ನಾಮಪದಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದವು ಗಳನ್ನು ಹೆಸರಿಸಿ ಗುರುತಿಸುತ್ತೇವೆ ಮತ್ತು ನಾಮಪದಕಂತೆಗಳ ಮೂಲಕ ವರ್ಣಿಸಿ ಗುರುತಿಸುತ್ತೇವೆ. ಹೆಸರಿಸುವ ನಾಮಪದಗಳು ಮೇಲೆ (5)ನೇ ವಾಕ್ಯ ದಲ್ಲಿ ಕಾಣಿಸುವಂತೆ ಅಂಕಿತನಾಮಗಳಿರಬಹುದು ಇಲ್ಲವೇ ಕೆಳಗೆ (6)ನೇ ವಾಕ್ಯ ದಲ್ಲಿ ಕಾಣಿಸುವಂತೆ ರೂಢನಾಮಗಳಿರಬಹುದು.
ನಾಯಿಗೆ ಬೆದರಿದ ಬೆಕ್ಕು ಮರಕ್ಕೆ ಹತ್ತಿತು. ಈ (6)ನೇ ವಾಕ್ಯದಲ್ಲಿ ನಾಯಿ ಮತ್ತು ಬೆಕ್ಕು ಎಂಬ ಎರಡು ರೂಢನಾಮಗಳು ಎರಡು ಪ್ರಾಣಿಗಳನ್ನೂ ಮತ್ತು ಮರ ಎಂಬ ಇನ್ನೊಂದು ರೂಢನಾಮ ಒಂದು ವಸ್ತುವನ್ನೂ ಹೆಸರಿಸುತ್ತಿವೆ.

Eke →

4.2.1 ಹೆಸರಿಸುವುದು ಮತ್ತು ವರ್ಣಿಸುವುದು

ಮೇಲೆ ಸೂಚಿಸಿದ ಹಾಗೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ರೀತಿಯ ವಿಧಾನ ಗಳನ್ನು ಬಳಸಲು ಸಾಧ್ಯವಿದೆ. ಗುರುತಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತುವಿಗೆ ಅದರದೇ ಆದ ಹೆಸರಿದೆಯಾದಲ್ಲಿ (ಎಂದರೆ ಅಂಕಿತನಾಮ ಇಲ್ಲವೇ ರೂಢ ನಾಮವಿದೆಯಾದಲ್ಲಿ) ಅದನ್ನು ಬಳಸುವುದರ ಮೂಲಕ ನಾವು ಆ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲೆವು.
ಆದರೆ ಮೇಲೆ ವಿವರಿಸಿದಂತೆ ಎಲ್ಲಾ ರೀತಿಯ ವ್ಯಕ್ತಿ ಇಲ್ಲವೇ ವಸ್ತುಗಳಿಗೂ ಅವುಗಳದೇ ಆದ ಹೆಸರುಗಳಿರುವುದಿಲ್ಲ. ಯಾಕೆಂದರೆ, ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿ ನಾವು ಬಳಸಬಹುದಾದ ಮತ್ತು ನೆನಪಿ ನಲ್ಲಿಟ್ಟುಕೊಳ್ಳಬಹುದಾದ ನಾಮಪದಗಳ ಸಂಖ್ಯೆಗೆ ಒಂದು ಪರಿಮಿತಿಯಿದೆ.
ಆದರೆ ಮಾತಿನಲ್ಲಿ ನಾವು ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ಮೊದಲಾ ದವುಗಳಿಗೆ ಮತ್ತು ಅವುಗಳಲ್ಲಿ ಕಾಣಿಸುವ ವೈವಿಧ್ಯತೆಗಳಿಗೆ ಪರಿಮಿತಿಯಿಲ್ಲ. ಹಾಗಾಗಿ, ಎಲ್ಲಾ ಸಂದಭ್ರಗಳಲ್ಲೂ ನಮ್ಮೆದುರಿಗಿರುವ ವ್ಯಕ್ತಿ ಇಲ್ಲವೇ ವಸ್ತು ವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸಲು ಸಾಧ್ಯವಾಗದು.
ಇದಲ್ಲದೆ, ಹಲವು ಸಂದಭ್ರಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಹೆಸರು ನಮಗೆ ತಿಳಿದಿದ್ದರೂ ನಮ್ಮ ಕೇಳುಗರಿಗೆ ಅದು ತಿಳಿದಿಲ್ಲದಿರಲು ಸಾಧ್ಯವಿದೆ. ಬೇರೆ ಕೆಲವು ಸಂದಭ್ರಗಳಲ್ಲಿ ಅದನ್ನು ನಾವೇ ಮರೆತಿರಲು ಸಾಧ್ಯವಿದೆ. ಇಂತಹ ಸಂದಭ್ರಗಳಲ್ಲೂ ಹೆಸರಿಸುವುದು ಎಂಬ ಮೊದಲನೆಯ ವಿಧಾನದ ಬದಲು ವರ್ಣಿಸುವುದು ಎಂಬ ಎರಡನೆಯ ವಿಧಾನವನ್ನು ಬಳಸಬೇಕಾಗುತ್ತದೆ. ಈ ಎರಡು ವಿಧಾನಗಳ ಬಳಕೆಯನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. ರಾಜು ಇವತ್ತು ಶಾಲೆಗೆ ಹೋಗಲಿಲ್ಲ. (7ಖ) ಪಕ್ಕದ ಮನೆಯ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. ಸಪೊೀಟ ಬಹಳ ರುಚಿಯಾಗಿದೆ. (8ಖ) ರಾಜು ಕೊಟ್ಟ ಈ ಹಣ್ಣು ಬಹಳ ರುಚಿಯಾಗಿದೆ. ಹೆಸರಿಸುವ (7ಕ)ದಲ್ಲಿ ಶಾಲೆಗೆ ಹೋಗದ ವ್ಯಕ್ತಿಯನ್ನು ಗುರುತಿಸಲು ಹೆಸರಿಸುವ ವಿಧಾನ ವನ್ನು ಬಳಸಲಾಗಿದೆ ಮತ್ತು (7ಖ)ದಲ್ಲಿ ಅದೇ ವ್ಯಕ್ತಿಯನ್ನು ಗುರುತಿಸಲು ವರ್ಣಿಸುವ ವಿಧಾನವನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ ರುಚಿಯಾಗಿರುವ ಒಂದು ವಸ್ತುವನ್ನು ಗುರುತಿಸಲು (8ಕ)ದಲ್ಲಿ ಹೆಸರಿಸುವ ವಿಧಾನವನ್ನೂ ಮತ್ತು (8ಖ)ದಲ್ಲಿ ವರ್ಣಿಸುವ ವಿಧಾನವನ್ನೂ ಬಳಸಲಾಗಿದೆ. ಹೆಸರಿಸುವ ವಿಧಾನದಲ್ಲಿ ರೂಢನಾಮ ಮತ್ತು ಅಂಕಿತನಾಮ ಎಂಬುದಾಗಿ ಎರಡು ರೀತಿಯ ಹೆಸರುಗಳನ್ನು ಬಳಸಲು ಸಾಧ್ಯವಿದೆ ಎಂಬುದನ್ನೂ ಮೇಲಿನ ಉದಾಹರಣೆಗಳಲ್ಲಿ ಕಾಣಬಹುದು. (7ಕ)ದಲ್ಲಿ ಹೆಸರಿಸುವುದಕ್ಕಾಗಿ ಅಂಕಿತ ನಾಮದ ಬಳಕೆಯಾಗಿದೆಯಾದರೆ, (8ಕ)ದಲ್ಲಿ ರೂಢನಾಮದ ಬಳಕೆಯಾಗಿದೆ.
ಅಂಕಿತನಾಮಗಳು ಅವು ಮೊದಲಾದವುಗಳಿಗೆ ಮತ್ತು ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗುತ್ತವೆ ಎಂಬುದೇ ಈ ಎರಡು ರೀತಿಯ ಹೆಸರುಗಳ ನಡುವಿರುವ ಮುಖ್ಯ ವ್ಯತ್ಯಾಸ. ಉದಾಹರಣೆಗಾಗಿ, ಒಂದೇ ಊರಿನಲ್ಲಿ ಹಲವು ಮಂದಿ ರಾಮು ಎಂಬ ಅಂಕಿತನಾಮವಿರುವ ವ್ಯಕ್ತಿಗಳಿರಲು ಸಾಧ್ಯವಿದೆ. ಆದರೆ ಇವರಲ್ಲಿ ಪ್ರತಿ ಯೊಬ್ಬನಿಗೂ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ಜನರು ಈ ಹೆಸರನ್ನು ಕೊಟ್ಟಿರುತ್ತಾರೆ. ಇದಲ್ಲದೆ, ಹೆಸರು ಒಂದೇ ಆದರೂ ಅದರ ಮೂಲಕ ಗುರುತಿಸ ಲಾಗುವ ಈ ವ್ಯಕ್ತಿಗಳ ನಡುವೆ ಯಾವ ಸಾಮ್ಯತೆಯೂ ಇರಬೇಕಾಗಿಲ್ಲ.
ರೂಢನಾಮದ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಉದಾಹರಣೆಗಾಗಿ, ಬಡಗಿ ಎಂಬ ರೂಢನಾಮವಿರುವ ವ್ಯಕ್ತಿಗಳು ಒಂದು ಊರಲ್ಲಿ ಒಬ್ಬರಿಗಿಂತ ಜಾಸ್ತಿ ಇರಲು ಸಾಧ್ಯವಿದೆ. ಆದರೆ ಇಂತಹ ವ್ಯಕ್ತಿಗಳನ್ನೆಲ್ಲ ಈ ಹೆಸರಿನ ಮೂಲಕ ಗುರುತಿಸುವ ನಿರ್ಧಾರವನ್ನು ಕನ್ನಡ ಭಾಷೆಯನ್ನಾಡುವ ಸಮಾಜದಲ್ಲಿ ಯಾವಾ ಗಲೋ ಒಮ್ಮೆ ಮಾಡಿರಬೇಕು.
ವಸ್ತು, ಸಂಬಂಧಿತವಾಗುತ್ತವೆ, ಬೇರಾಗಿ ವ್ಯಕ್ತಿ, ಬೇರೆ ಆ ನಿರ್ಧಾರದ ಫಲವಾಗಿ ಆವತ್ತು ಜೀವಿಸುತ್ತಿದ್ದ ಕೆಲವು ವಿಶಿಷ್ಟ ವ್ಯಕ್ತಿಗಳು (ತಮ್ಮ ಕಸುಬಾಗಿ ಮರದ ಕೆಲಸ ಮಾಡುವವರು) ಮಾತ್ರವಲ್ಲದೆ ಮುಂದೆ ಜೀವಿಸಲಿರುವ ಮತ್ತು ಅದಕ್ಕಿಂತ ಹಿಂದೆ ಜೀವಿಸುತ್ತಿದ್ದ ಅಂತಹ ಇತರ ಎಲ್ಲಾ ವ್ಯಕ್ತಿಗಳನ್ನೂ ಆ ಪದ ಹೆಸರಿಸುವಂತಾಗಿರಬೇಕು.
ಆ ಪದ ಹೆಸರಿಸುವ ವ್ಯಕ್ತಿಗಳೊಳಗೂ ಅವರೆಲ್ಲ ಒಂದೇ ರೀತಿಯ (ಮರದ ಕೆಲಸ ಮಾಡುವ) ವೃತ್ತಿಯವರೆಂಬುದಾಗಿ ಒಂದು ರೀತಿಯ ಸಾಮ್ಯವೂ ಇದೆ (ಹೆಚ್ಚಿನ ವಿವರಗಳಿಗೆ (ಭಟ್ 2002:80) ನೋಡಿ).

Eke →

4.2.2 ಹೊಸ ಮತ್ತು ಹಳೆ ಗುರುತಿಸುವಿಕೆಗಳು

ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸುವುದಕ್ಕಾಗಿ ರೂಢನಾಮ ವೊಂದನ್ನು ಬಳಸುವುದಿದ್ದಲ್ಲಿ, ಆ ವ್ಯಕ್ತಿ ಇಲ್ಲವೇ ವಸ್ತು ಕೇಳುಗನಿಗೆ ಪರಿಚಿತ ವಾಗಿದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ಹೊಸತು ಮತ್ತು ಹಳೆಯದು ಎಂಬುದಾಗಿ ಎರಡು ರೀತಿಯ ಗುರುತಿಸುವಿಕೆಗಳನ್ನು ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ನೋಡಬಹುದು. (9ಕ) ಆಕೆ ರಾಜುವಿಗೆ ಒಂದು ಪುಸ್ತಕ ಕೊಟ್ಟಿದ್ದಳು, ಮತ್ತು ನಿನ್ನೆ ರಾತ್ರಿ ಯೆಲ್ಲ ಆತ ಆ ಪುಸ್ತಕ ಓದುತ್ತಿದ್ದ. (9ಖ) ಆಕೆ ರಾಜುವಿಗೆ ಒಂದು ಪುಸ್ತಕ ಕೊಟ್ಟಿದ್ದಳು, ಮತ್ತು ನಿನ್ನೆ ರಾತ್ರಿಯೆಲ್ಲ ಆತ ಒಂದು ಪುಸ್ತಕ ಓದುತ್ತಿದ್ದ. (9ಕ) ವಾಕ್ಯದ ಪ್ರಕಾರ, ಆಕೆ ರಾಜುವಿಗೆ ಕೊಟ್ಟಿದ್ದ ಪುಸ್ತಕ ಮತ್ತು ರಾಜು ರಾತ್ರಿಯೆಲ್ಲ ಓದುತ್ತಿದ್ದ ಪುಸ್ತಕ ಇವೆರಡೂ ಒಂದೇ. ಆದರೆ (9ಖ) ವಾಕ್ಯದ ಪ್ರಕಾರ ಅವನು ರಾತ್ರಿಯೆಲ್ಲ ಓದುತ್ತಿದ್ದ ಪುಸ್ತಕ ಆಕೆ ಕೊಟ್ಟಿದ್ದ ಪುಸ್ತಕಕ್ಕಿಂತ ಬೇರಾಗಿರಲು ಸಾಧ್ಯವಿದೆ. ಈ ವ್ಯತ್ಯಾಸಕ್ಕೆ (9ಕ)ದಲ್ಲಿ ಎರಡನೆಯ ಬಾರಿಗೆ ಒಂದು ಪುಸ್ತಕ ಎಂಬುದರ ಬದಲು ಆ ಪುಸ್ತಕ ಎಂಬುದನ್ನು ಬಳಸಿರುವುದು ಮತ್ತು (9ಖ)ದಲ್ಲಿ ಎರಡು ಬಾರಿಯೂ ಒಂದು ಪುಸ್ತಕ ಎಂಬುದನ್ನೇ ಬಳಸಿರುವುದು ಕಾರಣ.
ಈ ವಾಕ್ಯಗಳಲ್ಲಿ ಒಂದು ಪುಸ್ತಕ ಎಂಬುದು ಒಂದು ವಸ್ತುವನ್ನು ಹೊಸ ದಾಗಿ ಗುರುತಿಸಿ ಹೇಳಲು ಬಳಕೆಯಾಗುತ್ತದೆ. ಇದಕ್ಕೆ ಬದಲು ಆ ಪುಸ್ತಕ ಎಂಬುದು ಇದಕ್ಕೆ ಮೊದಲೇ ಗುರುತಿಸಿರುವಂತಹ ವಸ್ತುವನ್ನೇ ಇನ್ನೊಮ್ಮೆ ಗುರುತಿಸಿ ಹೇಳುವುದಕ್ಕಾಗಿ ಬಳಕೆಯಾಗುತ್ತದೆ. ಹಾಗಾಗಿ, ಮೊದಲನೆಯದು ‘ಹೊಸ ಗುರುತಿಸುವಿಕೆ’ಯನ್ನೂ ಮತ್ತು ಎರಡನೆಯದು ‘ಹಳೆ ಗುರುತಿಸುವಿಕೆ’ ಯನ್ನೂ ನಡೆಸುತ್ತವೆ ಎಂದು ಹೇಳಬಹುದು. ಆ ಪುಸ್ತಕ ಎಂಬುದೂ ಕೆಲವು ಸಂದಭ್ರಗಳಲ್ಲಿ ಹೊಸ ಗುರುತಿಸುವಿಕೆ ಯನ್ನೇ ಮಾಡಬಲ್ಲುದು. ಉದಾಹರಣೆಗಾಗಿ ಆಡುಗನು ತನ್ನ ಎದುರಿನಲ್ಲಿರುವ ಒಂದು ಪುಸ್ತಕವನ್ನು ಬೆರಳಿನಿಂದ ತೋರಿಸುತ್ತಾ ಕೆಳಗಿನ ವಾಕ್ಯವನ್ನು ಆಡಿರುವ ನಾದರೆ ಅದರಲ್ಲಿ ಬಂದಿರುವ ಆ ಪುಸ್ತಕ ಎಂಬುದಕ್ಕೆ ಹೊಸ ಗುರುತಿಸುವಿಕೆಯ ಅರ್ಥ ಬರುತ್ತದೆ. (10) ಆ ಪುಸ್ತಕವನ್ನು ನಿಮಗೆ ಯಾರು ಕೊಟ್ಟರು? ಕನ್ನಡದಲ್ಲಿ ಸಾಮಾನ್ಯವಾಗಿ ಹಳೆ ಗುರುತಿಸುವಿಕೆಯನ್ನು ಸೂಚಿಸಲು ವಿಶಿಷ್ಟ ವಾದ ಸಾಧನವೇನೂ ಬೇಕಾಗುವುದಿಲ್ಲ. ನಾಮಪದಗಳನ್ನು ಹಾಗೆಯೇ ಬಳಸಿ ದಾಗಲೆಲ್ಲ ಅವು ಹಳೆ ಗುರುತಿಸುವಿಕೆಯನ್ನೇ ಮಾಡುತ್ತವೆ. ಗುರುತಿಸುವಿಕೆ ಹೊಸ ದೆಂದು ಸೂಚಿಸಬೇಕಾಗಿರುವಾಗ ಮಾತ್ರ ಅದಕ್ಕಾಗಿ ಹೆಸರಿನೊಂದಿಗೆ ಒಂದು ಇಲ್ಲವೇ ಒಬ್ಬ ಎಂಬುದನ್ನು (ಅಥವಾ ಎರಡು, ಮೂರು ಮೊದಲಾದ ಬೇರೆ ಎಣಿಕೆಯ ಪದಗಳನ್ನು) ಬಳಸಬೇಕಾಗುತ್ತದೆ. ಕೆಲವು, ಸ್ವಲ್ಪ ಮೊದಲಾದ ಅಳತೆಯ ಪದಗಳನ್ನೂ ಈ ಕಾರ್ಯಕ್ಕಾಗಿ ಬಳಸಲು ಸಾಧ್ಯವಿದೆ. ಇದಲ್ಲದೆ, ಒಮ್ಮೆ ಗುರುತಿಸಿರುವ ವ್ಯಕ್ತಿ ಇಲ್ಲವೇ ವಸ್ತುವನ್ನೇ ಇನ್ನೊಮ್ಮೆ ಗುರುತಿಸಿ ಹೇಳಬೇಕಾಗಿರುವಾಗ ಅದನ್ನು ಸೂಚಿಸುವ ನಾಮಪದ ಇಲ್ಲವೇ ನಾಮಪದಕಂತೆಯನ್ನು ಹಾಗೆಯೇ ಇನ್ನೊಮ್ಮೆ ಬಳಸುವ ಬದಲು ಪ್ರತಿನಾಮ ಇಲ್ಲವೇ ಸವ್ರಪದವೊಂದನ್ನು ಬಳಸುವ ಸಾಧ್ಯತೆಯೂ ಇದೆ. (11ಕ) ಬಿಳಿ ಹಕ್ಕಿ ಕಪ್ಪು ಹಕ್ಕಿಯನ್ನು ತನ್ನ ಗೂಡಿನಿಂದ ಹೊರಗೆ (11ಖ) ನಾವು ಹರಿಯ ವಿಷಯ ಮಾತನಾಡುತ್ತಿದ್ದಾಗ ಅವನೇ ನಮ್ಮೆದುರು ಬಂದು ನಿಂತ. ವ್ಯಕ್ತಿ (11ಕ)ದಲ್ಲಿ ಬಿಳಿ ಹಕ್ಕಿಯನ್ನು ಪುನ: ಎರಡನೆಯ ಬಾರಿಗೆ ಗುರುತಿಸಲು ತನ್ನ ಎಂಬ ಪ್ರತಿನಾಮವನ್ನೂ ಮತ್ತು (11ಖ)ದಲ್ಲಿ ಹರಿಯನ್ನು ಎರಡನೆಯ ಬಾರಿಗೆ ಗುರುತಿಸಲು ಅವನೇ ಎಂಬ ಸವ್ರಪದವನ್ನೂ ಬಳಸಲಾಗಿದೆ. ಗುರುತಿಸುವಿಕೆ ವಸ್ತುವಿನ ಹಳೆಯದೆಂದೆನಿಸಲು ಅದನ್ನು ಇದಕ್ಕೆ ಮೊದಲೇ ಮಾತಿನಲ್ಲಿ ಗುರುತಿಸಿರುವುದು ಒಂದು ಕಾರಣ. ಮಾತಿನ ಸಂದಭ್ರದಲ್ಲಿ ಕೇಳುಗನಿಗೆ ಬರಿಯ ಹೆಸರಿನ ಬಳಕೆಯಿಂದಲೇ ಯಾರನ್ನು ಇಲ್ಲವೇ ಯಾವುದನ್ನು ಗುರುತಿಸಲಾಗುತ್ತಿದೆಯೆಂದು ಗೊತ್ತಾಗುವಂತೆ ಇದ್ದಲ್ಲೂ ಅದನ್ನು ಹಳೆಯ ಗುರುತಿಸುವಿಕೆಯೆಂದು ಕರೆಯಲು ಸಾಧ್ಯವಿದೆ.
ಇಲ್ಲವೇ ಒಂದು (12ಕ) ನಾವು ಸ್ನಾನಕ್ಕೆ ಕೆರೆಗೆ ಹೋಗೋಣ. (12ಖ) ನಾವು ಸ್ನಾನಕ್ಕೆ ಒಂದು ಕೆರೆಗೆ ಹೋಗೋಣ. ಊರಲ್ಲಿ ಕೆರೆ ಒಂದೇ ಇದೆಯಾದರೆ ಕೆರೆ ಎಂದಿಷ್ಟೇ ಹೇಳಿದರೆ ಸಾಕು, ಆ ಪದ ಯಾವುದನ್ನು ಗುರುತಿಸುತ್ತದೆ ಎಂಬುದು ಕೇಳುಗನಿಗೆ ತಿಳಿಯುತ್ತದೆ. ಆದರೆ ಎರಡು ಅಥವಾ ಜಾಸ್ತಿ ಕೆರೆಗಳಿವೆಯಾದಲ್ಲಿ ಅವುಗಳಲ್ಲೊಂದನ್ನು ಗುರುತಿಸಲು ಒಂದು ಕೆರೆ ಎಂಬುದಾಗಿ ಪದಕಂತೆಯೊದನ್ನು ಬಳಸಬೇಕಾಗುತ್ತದೆ.

Eke →

4.2.3 ತಿಳಿದ ಮತ್ತು ತಿಳಿಯದ ಗುರುತಿಸುವಿಕೆಗಳು

ಗುರುತಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತು ಇಂತಹದೇ ಎಂಬುದಾಗಿ ಆಡುಗನಿಗೆ ತಿಳಿದಿಲ್ಲವಾದಲ್ಲಿ ಅಥವಾ ಅದನ್ನು ತಿಳಿಸುವ ಬಯಕೆ ಅವನಿಗಿಲ್ಲ ವಾದಲ್ಲಿ ಕೆಲವು ವಿಶಿಷ್ಟವಾದ ಸವ್ರಪದಗಳನ್ನು ಬಳಸುವುದರ ಮೂಲಕ ಅವನ್ನು ಆ ರೀತಿ ತಿಳಿಯದ ವ್ಯಕ್ತಿ ಇಲ್ಲವೇ ವಸ್ತುವೆಂಬುದಾಗಿ ಗುರುತಿಸಿ ಹೇಳಲು ಸಾಧ್ಯವಿದೆ. ಕೆಳಗಿನ ವಾಕ್ಯಗಳಲ್ಲಿ ಇಂತಹ ತಿಳಿಯದ ವ್ಯಕ್ತಿ ಇಲ್ಲವೇ ವಸ್ತುವಿನ ಗುರುತಿಸುವಿಕೆಗಳು ಬಂದಿರುವುದನ್ನು ಕಾಣಬಹುದು. (13ಕ) ನಿನ್ನೆ ರಾತ್ರಿ ನಮ್ಮಲ್ಲಿಗೆ ಯಾವನೋ ಒಬ್ಬ ಮುದುಕ ಬಂದಿದ್ದ. (13ಖ) ಅವನು ಆ ಹುಡುಗಿಗೆ ಯಾವುದೋ ಒಂದು ಪುಸ್ತಕ ಕೊಟ್ಟಿದ್ದ. (13ಗ) ಆ ಮುದುಕಿ ಹಣವನ್ನು ಇಲ್ಲೆಲ್ಲೋ ಅಡಗಿಸಿಟ್ಟಿದ್ದಾಳೆ. (13ಘ) ಅವನು ಆ ಹುಡುಗರಿಗೆ ಏನೋ ಕೊಟ್ಟಿದ್ದ. ಹಿಂದಿನ ದಿವಸ ತನ್ನ ಮನೆಗೆ ಬಂದ ಮುದುಕ ಯಾರು ಎಂಬುದು ಸರಿಯಾಗಿ ತಿಳಿಯದಿದ್ದಲ್ಲಿ ಇಲ್ಲವೇ ಅದನ್ನು ತಿಳಿಸುವ ಬಯಕೆಯಿಲ್ಲದಿದ್ದಲ್ಲಿ ಆತನನ್ನು ಗುರುತಿಸಿ ಹೇಳಲು (13ಕ)ದಲ್ಲಿ ಕಾಣಿಸಿದಂತೆ ಯಾವನೋ ಎಂಬ ಸವ್ರ ಪದವನ್ನು ಬಳಸಲು ಸಾಧ್ಯವಿದೆ. ಇದೇ ರೀತಿಯಲ್ಲಿ ಯಾವುದೋ, ಎಲ್ಲೋ ಮತ್ತು ಏನೋ ಎಂಬ ಸವ್ರಪದಗಳ ಬಳಕೆಯನ್ನು (13ಖ-ಘ) ವಾಕ್ಯಗಳಲ್ಲಿ ಕಾಣಬಹುದು (ಇಂತಹ ಸವ್ರಪದಗಳ ಬಳಕೆಯ ಕುರಿತಾಗಿ ಜಾಸ್ತಿ ವಿವರ ಗಳನ್ನು (ಭಟ್ 2003:159)ರಲ್ಲಿ ನೋಡಬಹುದು).

Eke →

4.2.4 ಗುರುತಿಸದ ನಾಮಪದಗಳು

ಕೆಲವು ಸಂದಭ್ರಗಳಲ್ಲಿ ನಾಮಪದಗಳನ್ನು ಇಲ್ಲವೇ ನಾಮಪದಕಂತೆಗಳನ್ನು ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಕ್ಕಾಗಿ ಬಳಸುವ ಬದಲು ಅವು ಸೂಚಿಸುವ ವಿಷಯವನ್ನು ಮಾತ್ರವೇ ತಿಳಿಸುವುದಕ್ಕಾಗಿಯೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (14) ನಾನು ಒಂದು ಎಮ್ಮೆಯನ್ನು ಕೊಂಡುಕೊಳ್ಳಬೇಕೆಂದಿದ್ದೇನೆ. (14)ರಲ್ಲಿ ಒಂದು ಎಮ್ಮೆ ಎಂಬ ನಾಮಪದಕಂತೆ ಎರಡು ಅರ್ಥಗಳಲ್ಲಿ ಬಂದಿರಲು ಸಾಧ್ಯವಿದೆ. ಯಾವ ಎಮ್ಮೆಯನ್ನು ಕೊಂಡುಕೊಳ್ಳುವುದೆಂಬುದನ್ನು (14)ರ ಆಡುಗ ಆಗಲೇ ನಿರ್ಧರಿಸಿರುವನಾದರೆ, ಒಂದು ಎಮ್ಮೆ ಎಂಬುದು ಆ ಎಮ್ಮೆಯನ್ನು ಗುರುತಿಸುತ್ತಿರಬಹುದು. ಆದರೆ ಆತನಿನ್ನೂ ಹಾಗೆ ನಿರ್ಧರಿಸಿಲ್ಲವಾ ದಲ್ಲಿ ಅದು ಯಾವುದೊಂದು ವಿಶಿಷ್ಟವಾದ ಎಮ್ಮೆಯನ್ನೂ ಗುರುತಿಸದಿರಲು ಸಾಧ್ಯವಿದೆ. ಇದಲ್ಲದೆ ಬೇರೆ ಕೆಲವು ಸಾಮಾನ್ಯ ಸಂಗತಿಗಳನ್ನು ತಿಳಿಸುವ ವಾಕ್ಯಗಳಲ್ಲೂ ನಾಮಪದ ಇಲ್ಲವೆ ನಾಮಪದಕಂತೆಗಳು ಗುರುತಿಸುವ ಕೆಲಸವನ್ನು ಮಾಡದಿರಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು. (15ಕ) ತಡವಾಗಿ ಬರುವ ಹುಡುಗರಿಗೆ ತಿಂಡಿಯಿಲ್ಲ. (15ಖ) ಹೊಸ ಅಕ್ಕಿ ಬೇಯಿಸಲು ನೀರು ಸ್ವಲ್ಪ ಕಡಿಮೆ ಹಾಕಬೇಕು. (15ಗ) ಹುಲಿ ಹತ್ತಿರ ಬರುವಾಗ ಕೋತಿ ಎಚ್ಚರಿಕೆ ಕೊಡುತ್ತದೆ. ಮೇಲಿನ ವಾಕ್ಯಗಳಲ್ಲಿ ಹುಡುಗ, ತಿಂಡಿ, ಹೊಸ ಅಕ್ಕಿ, ನೀರು, ಹುಲಿ ಮತ್ತು ಕೋತಿ ಎಂಬ ನಾಮಪದಗಳು ಯಾವುದೇ ಒಂದು ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸದಿರಲು ಸಾಧ್ಯವಿದೆ. ಸಾಮಾನ್ಯವಾಗಿ ಒಂದು ನಾಮಪದ ಇಲ್ಲವೇ ನಾಮಪದಕಂತೆಯನ್ನು ಒಂದು ವಾಕ್ಯದಲ್ಲಿ ಗುರುತಿಸುವುದಕ್ಕಾಗಿ ಬಳಸ ಲಾಗಿದೆಯೇ ಅಥವಾ ಇಲ್ಲವೇ ಎಂಬುದು ಆ ವಾಕ್ಯವನ್ನು ಯಾವ ಉದ್ದೇಶದಲ್ಲಿ ಬಳಸಲಾಗಿದೆ ಎಂಬುದನ್ನು ಅವಲಂಬಿಸಿದೆ.

Eke →

4.3 ವರ್ಣಿಸುವ ನಾಮಪದಕಂತೆಗಳು

ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ವರ್ಣಿಸುವ ವಿಧಾನವನ್ನು ಬಳಸುವುದಿದ್ದಲ್ಲಿ, ಅದಕ್ಕಾಗಿ ಬೇರೆ ಬೇರೆ ರೀತಿಯ ನಾಮಪದಕಂತೆಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಇವು ಕೇಳುಗರಿಗೆ ಗುರುತಿಸಬೇಕಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳ ವರ್ಣನೆಗಳನ್ನು ಕೊಡುತ್ತವೆ.
ಇಂತಹ ನಾಮಪದಕಂತೆಗಳಲ್ಲಿ ನಾಮಪದಕ್ಕೆ ಗುಣಪದವೊಂದನ್ನು ಸೇರಿಸಿ ತಯಾರಿಸಿದಂತಹವುಗಳು ಅತ್ಯಂತ ಪ್ರಾಮುಖ್ಯವಾದವುಗಳು. ಇವುಗಳಲ್ಲಿ ಬರುವ ಗುಣಪದಗಳು ನಾಮಪದಗಳು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣ ಧರ್ಮವೊಂದನ್ನು ಸೂಚಿಸುವ ಮೂಲಕ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸ ಬಹುದು. (16ಕ) ನನಗೆ ಒಂದು ಹೂ ಬೇಕಾಗಿತ್ತು. (16ಖ) ನನಗೆ ಒಂದು ಕೆಂಪು ಹೂ ಬೇಕಾಗಿತ್ತು. ಆಡುಗನಿಗೆ ಬೇಕಾಗಿರುವ ವಸ್ತುವನ್ನು (16ಕ)ದಲ್ಲಿ ಹೂ ಎಂಬ ಒಂದು ನಾಮಪದದ ಮೂಲಕವೂ ಮತ್ತು (16ಖ)ದಲ್ಲಿ ಆ ನಾಮಪದದೊಂದಿಗೆ ಕೆಂಪು ಗುಣಪದವನ್ನು ಸೇರಿಸಿ ತಯಾರಿಸಿದ ಕೆಂಪು ಹೂ ಎಂಬ ನಾಮಪದ ಕಂತೆಯ ಮೂಲಕವೂ ಗುರುತಿಸಲಾಗಿದೆ.
(16ಖ)ದಲ್ಲಿ ಹೂ ನಾಮಪದದೊಂದಿಗೆ ಕೆಂಪು ಗುಣಪದವನ್ನು ಬಳಸಿ ದುದರಿಂದಾಗಿ ಆ ಪದದ ವ್ಯಾಪ್ತಿ (ಎಂದರೆ ಅದು ಹೆಸರಿಸಬಹುದಾದ ವಸ್ತುಗಳ ಸಂಖ್ಯೆ) ಕಡಿಮೆಯಾಗಿದೆ, ಮತ್ತು ಇದರಿಂದಾಗಿ ಆಡುಗನಿಗೆ ಎಂತಹ ವಸ್ತು ಬೇಕಾಗಿದೆ ಎಂಬುದನ್ನು ನಿರ್ಧರಿಸುವ ಕೆಲಸ ಸುಲಭವಾಗಿದೆ. ನಾಮಪದದೊಂದಿಗೆ ಹೊಸದೊಂದು ಸೇರಿಸಿ ಗುಣಪದವೊಂದನ್ನು ನಾಮಪದವನ್ನೇ ತಯಾರಿಸಲೂ ಸಾಧ್ಯವಿದೆ. ಮೇಲೆ (4.1)ರಲ್ಲಿ ಸೂಚಿಸಿದ ಹಾಗೆ ಹಲಗೆ ನಾಮಪದಕ್ಕೆ ಕರಿ ಗುಣಪದವನ್ನು ಸೇರಿಸಿ ತಯಾರಿಸಿದ ಕರಿಹಲಗೆ ಎಂಬುದು ಬರಿಯ ಒಂದು ನಾಮಪದ (ಜೋಡುಪದ)ವಲ್ಲದೆ ನಾಮಪದ ಕಂತೆಯಲ್ಲ. ಈ ರೀತಿ ನಾಮಪದವೊಂದಕ್ಕೆ ಗುಣಪದವನ್ನು ಸೇರಿಸಿ ತಯಾರಿಸಿದ ಜೋಡುಪದಕ್ಕೂ ಮತ್ತು ಅಂತಹದೇ ವಿಧಾನವನ್ನು ಬಳಸಿ ತಯಾರಿಸಿದ ನಾಮಪದಕಂತೆಗೂ ನಡುವೆ ಹಲವು ವ್ಯತ್ಯಾಸಗಳಿವೆಯೆಂಬುದನ್ನು ಮುಂದೆ (4.3.1)ರಲ್ಲಿ ನೋಡಲಿರುವೆವು. ಮಾತ್ರವಲ್ಲದೆ ಎಣಿಕೆಯನ್ನು ನಾಮಪದದೊಂದಿಗೆ ಸೂಚಿಸುವ ಒಂದು, ಎರಡು, ಮೂರು ಮೊದಲಾದ ಪದಗಳನ್ನೂ, ಎಣಿಕೆಯಲ್ಲಿ ಒಬ್ಬ ವ್ಯಕ್ತಿಯ ಇಲ್ಲವೇ ಒಂದು ವಸ್ತುವಿನ ಜಾಗವನ್ನು ಸೂಚಿಸುವ ಮೊದಲ ನೆಯ, ಎರಡನೆಯ, ಮೂರನೆಯ ಮೊದಲಾದ ಪದಗಳನ್ನೂ, ಮತ್ತು ನಾಮಪದವು ಗುರುತಿಸುವ ವಸ್ತುವಿನ ಅಳತೆಯನ್ನು ಸೂಚಿಸುವ ಕಟ್ಟು, ಹೊರೆ, ಕೆ.ಜಿ., ಹಿಡಿ ಮೊದಲಾದ ಪದಗಳನ್ನೂ ಬಳಸಲು ಸಾಧ್ಯವಿದೆ. ಗುಣಪದಗಳನ್ನು (17ಕ) ಮೂರು ವಷ್ರಗಳಲ್ಲಿ ಆತ ಐದು ಪುಸ್ತಕ ಬರೆದ. (17ಖ) ಮೂರನೆಯ ಪುಸ್ತಕವನ್ನು ನಿನ್ನೆ ಬರೆದು ಮುಗಿಸಿದೆ. (17ಗ) ಒಂದು ಹಿಡಿ ಅಕ್ಕಿಗೆ ಎರಡು ಹಿಡಿ ಮರಳು ಸೇರಿಸಿದ್ದಾರೆ. ಒಂದು ನಾಮಪದದೊಂದಿಗೆ ಇನ್ನೊಂದು ನಾಮಪದವನ್ನು ಸೇರಿಸಿಯೂ ನಾಮಪದಕಂತೆಯೊಂದನ್ನು ತಯಾರಿಸಲು ಸಾಧ್ಯವಿದೆ. ಆದರೆ ಇದಕ್ಕಾಗಿ ಅವೆರಡರ ನಡುವೆ ಅವನ್ನು ಸಂಬಂಧಿಸುವ ಅ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ. ಮರದ ಕಾಲು, ಮಣ್ಣಿನ ಕೊಡ, ರಾಜುವಿನ ತಲೆ, ದನದ ಬಾಲ ಮೊದಲಾದ ನಾಮಪದಕಂತೆಗಳನ್ನು ಈ ವಿಧಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಇದಲ್ಲದೆ, ಒಂದು ಇಡೀ ವಾಕ್ಯವನ್ನೇ ನಾಮಪದದೊಂದಿಗೆ ಇರಿಸಿ ಅದನ್ನು ಒಂದು ನಾಮಪದಕಂತೆಯನ್ನಾಗಿ ಮಾಡಿ ಹೇಳಲು ಸಾಧ್ಯವಿದೆ. ಇದಕ್ಕಾಗಿ ಆ ವಾಕ್ಯದೊಂದಿಗೆ ಎಂಬ ಇಲ್ಲವೇ ಎನ್ನುವ ಎಂಬ ಪದವನ್ನು ಬಳಸಬೇಕಾಗ ಬಹುದು, ಇಲ್ಲವೇ ಆ ವಾಕ್ಯದಲ್ಲಿ ಬೇರೆ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು.
(18ಕ) ಅವನು ಇವತ್ತು ಬರುತ್ತಾನೆ ಎಂಬ ಸಂಗತಿ ಯಾರಿಗೂ ತಿಳಿಯದು. (18ಖ) ಅವನು ಇವತ್ತು ಬರುವ ಸಂಗತಿ ಯಾರಿಗೂ ತಿಳಿಯದು. (18ಗ) ಅವನ ಇವತ್ತಿನ ಬರುವಿಕೆ ಯಾರಿಗೂ ತಿಳಿಯದು. ಅವನು ಇವತ್ತು ಬರುತ್ತಾನೆ ಎಂಬ ವಾಕ್ಯಕ್ಕೆ (18ಕ)ದಲ್ಲಿ ಎಂಬ ಎಂಬ ಪದವನ್ನು ಸೇರಿಸಲಾಗಿದೆ ಮತ್ತು (18ಖ-ಗ)ಗಳಲ್ಲಿ ಆ ವಾಕ್ಯವನ್ನು ಅವನು ಇವತ್ತು ಬರುವ ಮತ್ತು ಅವನ ಇವತ್ತಿನ ಬರುವಿಕೆ ಎಂಬುದಾಗಿ ಬದಲಾ ಯಿಸಲಾಗಿದೆ. ಈ ರೀತಿ ವಾಕ್ಯಗಳನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಿ ಹೇಳುವ ವಿಧಾನಗಳು ಯಾವುವು ಎಂಬುದನ್ನು ಮುಂದೆ ಏಳನೆಯ ಅಧ್ಯಾಯ ದಲ್ಲಿ ವಿವರಿಸಲಾಗುವುದು.

Eke →

4.3.1 ಪದಕಂತೆಗಳು ಮತ್ತು ಜೋಡುಪದಗಳು

ಮೇಲೆ ಸೂಚಿಸಿರುವ ಹಾಗೆ, ನಾಮಪದಕ್ಕೆ ಒಂದು ಗುಣಪದವನ್ನು (ಇಲ್ಲವೇ ಎಣಿಕೆಯ ಪದವನ್ನು ಅಥವಾ ಬೇರೊಂದು ನಾಮಪದವನ್ನು) ಸೇರಿಸಿ ನಾಮಪದಕಂತೆಗಳನ್ನೂ ತಯಾರಿಸಬಹುದು ಇಲ್ಲವೇ ಬೇರೊಂದು ಹೊಸತಾದ ನಾಮಪದವನ್ನೂ ತಯಾರಿಸಬಹುದು. ಇವುಗಳಲ್ಲಿ ಎರಡನೆಯ ವಿಧಾನದ ಮೂಲಕ ತಯಾರಾಗುವ ನಾಮಪದಕ್ಕೆ ‘ಜೋಡುಪದ’ ಎಂದು ಹೆಸರು. ಉದಾ ಹರಣೆಗಾಗಿ, ಹುಡುಗಿ ನಾಮಪದಕ್ಕೆ ಚಿಕ್ಕ ಗುಣಪದವನ್ನು ಸೇರಿಸಿ ತಯಾರಿಸಿದ ಚಿಕ್ಕ ಹುಡುಗಿ ಎಂಬುದು ಒಂದು ನಾಮಪದಕಂತೆ, ಮತ್ತು ಅಮ್ಮ ನಾಮ ಪದಕ್ಕೆ ಅದೇ ಗುಣಪದವನ್ನು ಸೇರಿಸಿ ತಯಾರಿಸಿದ ಚಿಕ್ಕಮ್ಮ ಎಂಬುದೊಂದು ಜೋಡುಪದ. ಒಂದು ಪದಕ್ಕೆ ಇನ್ನೊಂದು ಪದವನ್ನು ಸೇರಿಸಿ ಒಂದು ಹೊಸತಾದ ನಾಮಪದ(ಜೋಡುಪದ)ವನ್ನು ತಯಾರಿಸುವುದು ಭಾಷೆಯಲ್ಲಿ ನಡೆಯುವ ಒಂದು ಚಾರಿತ್ರಿಕ ಘಟನೆ. ಇದರ ಮೂಲಕ ಭಾಷೆಯಲ್ಲಿ ಒಂದು ಹೊಸತಾ ಗಿರುವ ಪದವೇ ತಯಾರಾಗುತ್ತದೆ. ಆದರೆ, ಒಂದು ಪದಕ್ಕೆ ಇನ್ನೊಂದು ಪದ ವನ್ನು ಸೇರಿಸಿ ಪದಕಂತೆಯೊಂದನ್ನು ತಯಾರಿಸುವುದು ಅಂತಹ ಚಾರಿತ್ರಿಕ ಘಟನೆಯೇನಲ್ಲ. ಅದು ಆ ಭಾಷೆಯಲ್ಲಿರುವ ಪದಗಳ ಬಳಕೆ ಮಾತ್ರ.
ಈ ಎರಡು ವಿಧಾನಗಳ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ, ಪದಕಂತೆಗಳ ತಯಾರಿಕೆಯಲ್ಲಿ ವಾಕ್ಯರಚನೆಯ ನಿಯಮಗಳು ಬಳಕೆಯಾಗುತ್ತವೆ, ಮತ್ತು ಜೋಡುಪದಗಳ ತಯಾರಿಕೆಯಲ್ಲಿ ಪದರಚನೆಯ ನಿಯಮಗಳು ಬಳಕೆ ಯಾಗುತ್ತವೆ. ಇದಲ್ಲದೆ, ಪದಕಂತೆಗಳ ಅರ್ಥವನ್ನು ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ಪಡೆಯಲು ಸಾಧ್ಯವಿದೆ, ಆದರೆ ಜೋಡುಪದ ಗಳ ಅರ್ಥವನ್ನು ಹೆಚ್ಚಿನ ಸಂದಭ್ರಗಳಲ್ಲೂ ಆ ರೀತಿ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅರ್ಥದಿಂದ ಪಡೆಯಲು ಸಾಧ್ಯವಾಗದು. ಜೋಡುಪದಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವುಗಳ ಅಂಗಗಳು ಸ್ವಲ್ಪ ಸಹಾಯವನ್ನು ಮಾತ್ರವೇ ಒದಗಿಸಬಲ್ಲುವು.
ಉದಾಹರಣೆಗಾಗಿ, ಚಿಕ್ಕ ಹುಡುಗಿ ಎಂಬ ಪದಕಂತೆ ಯಾವ ರೀತಿಯಲ್ಲಿ ಬೇಕಿದ್ದರೂ ಚಿಕ್ಕವಳಾಗಿ ಕಾಣಿಸುವ ಹುಡುಗಿಯೊಬ್ಬಳನ್ನು ಗುರುತಿಸಬಲ್ಲುದು. ಆದರೆ ಚಿಕ್ಕಮ್ಮ ಎಂಬ ಜೋಡುಪದ ತಾಯಿಯ ತಂಗಿಯನ್ನು ಮಾತ್ರ ಗುರುತಿಸ ಬಲ್ಲುದಲ್ಲದೆ ಅದಕ್ಕಿಂತ ಭಿನ್ನವಾಗಿರುವ ವ್ಯಕ್ತಿಯನ್ನು ಗುರುತಿಸಲಾರದು. ಉದಾ ಹರಣೆಗಾಗಿ ವಯಸ್ಸಿನಲ್ಲಿ ಇಲ್ಲವೇ ಗಾತ್ರದಲ್ಲಿ ಚಿಕ್ಕವಳಾಗಿ ಕಾಣಿಸುವ ‘ಅಮ್ಮ’ ನನ್ನಾಗಲೀ ಇಲ್ಲವೇ ಅಮ್ಮನಿಗಿಂತ ವಯಸ್ಸಿನಲ್ಲಿ ಅಥವಾ ಗಾತ್ರದಲ್ಲಿ ಚಿಕ್ಕವಳಾಗಿ ಕಾಣಿಸುವ ಹೆಂಗಸನ್ನಾಗಲೀ (ಆಕೆ ತಾಯಿಯ ತಂಗಿಯಲ್ಲವಾದಲ್ಲಿ) ಆ ಪದ ಗುರುತಿಸಲಾರದು.
ಕರಿಹಲಗೆ ಎಂಬ ಇನ್ನೊಂದು ಜೋಡುಪದದ ಅರ್ಥವನ್ನು ಪಡೆಯುವಲ್ಲಿ ಅದರ ಅಂಗಗಳೆರಡೂ ಸಹಾಯಕವಾಗುವುದಿಲ್ಲ ಎಂಬುದನ್ನು ಮೇಲೆ 4.1ರಲ್ಲಿ ನೋಡಿರುವೆವು. ಜೋಡುಪದಗಳು ನಾಮಪದಗಳಾಗಿರುವ ಕಾರಣ, ಅವು ‘ಹೆಸರಿಸುವ’ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಆದರೆ ಇದಕ್ಕೆ ವಿರುದ್ಧವಾಗಿ, ಪದಕಂತೆಗಳು ಹೆಚ್ಚಿನ ಸಂದಭ್ರಗಳಲ್ಲೂ ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಈ ಎರಡು ರೀತಿಯ ಘಟಕಗಳ ನಡುವೆ ಕಾಣಿಸುವ ಹೆಚ್ಚಿನ ವ್ಯತ್ಯಾಸಗಳಿಗೂ ಭಾಷೆಯಲ್ಲಿ ಅವು ಈ ರೀತಿ ಎರಡು ಬೇರೆ ಬೇರೆ ಕೆಲಸಗಳನ್ನು ನಡೆಸ ಬೇಕಾಗಿದೆಯೆಂಬುದೇ ಮುಖ್ಯ ಕಾರಣ (ಜಾಸ್ತಿ ವಿವರಗಳಿಗೆ (ಭಟ್ 2002:60) ನೋಡಿ).

Eke →

4.3.2 ಗುಣಪದಗಳ ವಿಭಜನೆ

ಕನ್ನಡದಲ್ಲಿ ಗುಣಪದಗಳು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನ ವಾಗಿರುವ ಬೇರೆಯೇ ಒಂದು ಪದವಗ್ರದಲ್ಲಿ ಬರುತ್ತವೆ. ಮೇಲೆ ಸೂಚಿಸಿರುವ ಹಾಗೆ ಅವು ವಾಕ್ಯದಲ್ಲಿ ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿರುವ ಕೆಲಸವೊಂದನ್ನು (ನಾಮಪದ ಇಲ್ಲವೇ ಕ್ರಿಯಾಪದವೊಂದರ ವ್ಯಾಪ್ತಿಯನ್ನು ಕಡಿಮೆ ಮಾಡುವ ಕೆಲಸವನ್ನು) ಮಾಡಬೇಕಾಗಿರುವುದೇ ಇದಕ್ಕೆ ಕಾರಣ. ಗುಣಪದಗಳು ಈ ರೀತಿ ಕನ್ನಡದಲ್ಲಿ ಬೇರೆಯೇ ಒಂದು ಪದವಗ್ರದಲ್ಲಿ ಬರುತ್ತವೆ ಎಂದು ಹೇಳುವುದಕ್ಕೆ ಕನ್ನಡದಲ್ಲಿ ಅವಕ್ಕಿರುವ ಹಲವು ವಿಶಿಷ್ಟವಾದ ಗುಣಧರ್ಮಗಳೂ ಆಧಾರವಾಗಬಲ್ಲುವು. ಈ ಗುಣಧರ್ಮಗಳು ವಾಕ್ಯಗಳಲ್ಲಿ ಗುಣಪದಗಳು ಮಾಡಬೇಕಾಗಿರುವ ವಿಶಿಷ್ಟವಾದ ಕೆಲಸಕ್ಕಾಗಿ ಕಾಣಿಸಿಕೊಳ್ಳುತ್ತವೆ.
ಉದಾಹರಣೆಗಾಗಿ, ಗುಣಪದಗಳನ್ನು ನಾಮಪದಗಳೊಂದಿಗೆ (ಇಲ್ಲವೇ ಕ್ರಿಯಾಪದಗಳೊಂದಿಗೆ) ಅವಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಹಾಗೆಯೇ ಬಳಸಲು ಸಾಧ್ಯವಿದೆ (ಉದಾ: ಕೆಂಪು ಹೂ, ಬೇಗ ಬಂದ). ಆದರೆ ನಾಮಪದ ಇಲ್ಲವೇ ಕ್ರಿಯಾಪದಗಳನ್ನು ಬೇರೊಂದು ನಾಮಪದದೊಂದಿಗೆ ಈ ರೀತಿ ಬಳಸಬೇಕಿದ್ದಲ್ಲಿ ಅವಕ್ಕೆ ಅ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಉದಾ: ಮರದ ಕಾಲು, ಉಳಿದ ಅನ್ನ). (ಜಾಸ್ತಿ ವಿವರಗಳಿಗೆ (ಭಟ್ 1994 ಮತ್ತು 2002 ನೋಡಿ).
ಮೇಲೆ ಸೂಚಿಸಿರುವ ಹಾಗೆ, ಗುಣಪದಗಳಲ್ಲಿ ನಾಮಪದಗಳೊಂದಿಗೆ ಬರುವವು, ಕ್ರಿಯಾಪದಗಳೊಂದಿಗೆ ಬರುವವು ಮತ್ತು ಬೇರೆ ಗುಣಪದ ಗಳೊಂದಿಗೆ ಬರುವವು ಎಂಬುದಾಗಿ ಮೂರು ಉಪವಗ್ರಗಳಿವೆ. ಕಪ್ಪು, ಬಿಳಿ, ದೊಡ್ಡ, ಹಳೆ ಮೊದಲಾದವುಗಳು ನಾಮಪದಗಳೊಂದಿಗೆ ಬರುವವು, ಬೇಗ, ಮೆಲ್ಲಗೆ, ನುಣ್ಣಗೆ ಮೊದಲಾದವುಗಳು ಕ್ರಿಯಾಪದಗಳೊಂದಿಗೆ ಬರುವವು, ಮತ್ತು ಮಹಳ, ಭಾರೀ ಮೊದಲಾದವು ಗುಣಪದಗಳೊಂದಿಗೆ ಬರುವವು. ಈ ಮೂರು ರೀತಿಯ ಗುಣಪದಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಅವೆಲ್ಲ ಈ ಗುಣಪದಗಳು ವಾಕ್ಯಗಳಲ್ಲಿ ಮಾಡಬೇಕಾಗಿರುವ ಭಿನ್ನ ಭಿನ್ನವಾದ ಕೆಲಸಗಳ ಮೇಲೆ ಅವಲಂಬಿಸಿವೆ. ಈ ಮೂರು ರೀತಿಯ ಗುಣಪದಗಳಲ್ಲಿ ಮೊದಲನೆಯ ಉಪವಗ್ರಕ್ಕೆ ಸೇರಿದ ಗುಣಪದಗಳು ಮಾತ್ರ ನಾಮಪದಕಂತೆಗಳ ತಯಾರಿಕೆಯಲ್ಲಿ ಬಳಕೆ ಯಾಗುತ್ತವೆ. ಇವು ಮೇಲೆ ಸೂಚಿಸಿದ ಹಾಗೆ, ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುದರ ಮೂಲಕ ಅವುಗಳ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ. ಈ ಕೆಲಸವನ್ನು ಸಾಧಿಸುವುದಕ್ಕಾಗಿ ಕನ್ನಡದ ನಾಮಪದಕಂತೆಗಳಲ್ಲಿ ಬರುವ ಗುಣಪದಗಳನ್ನು ಐದು ಉಪವಗ್ರಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. (1) ಅಳತೆ: ಈ ಉಪವಗ್ರದ ಗುಣಪದಗಳಲ್ಲಿ ಆಳ ಎಂಬುದೊಂದನ್ನು ಬಿಟ್ಟು ಉಳಿದುವೆಲ್ಲ ವಿರುದ್ಧಾರ್ಥದ ಜೋಡಿಗಳಾಗಿ ಬರುತ್ತವೆ.
ದಪ್ಪ ತಗ್ಗು ಸಪುರ ತೆಳು ಹಗುರ ಈ ಗುಣಪದಗಳ ಒಂದು ವೈಶಿಷ್ಟ್ಯವೇನೆಂದರೆ ಪ್ರತಿಯೊಂದು ಜೋಡಿಯಲ್ಲೂ ಆ ಜೋಡಿ ಸೂಚಿಸುವ ಅಳತೆಯನ್ನು ಹೆಸರಿಸಬೇಕಾದಾಗ, ಅದು ಜಾಸ್ತಿಯಿರಲಿ ಇಲ್ಲವೇ ಕಡಿಮೆಯಿರಲಿ, ಜೋಡಿಯಲ್ಲಿ ಬರುವ ಗುಣಪದಗಳಲ್ಲಿ ಮೊದಲನೆ ಯದನ್ನು ಮಾತ್ರವೇ ಬಳಸಲು ಸಾಧ್ಯ. ಉದಾಹರಣೆಗಾಗಿ, ಒಂದು ಗೋಡೆ ಎತ್ತರವಾಗಿರಲಿ ಇಲ್ಲವೇ ತಗ್ಗಾಗಿರಲಿ, ಅದರ ಈ ಅಳತೆಯನ್ನು ಸೂಚಿಸಲು ಗೋಡೆಯ ಎತ್ತರ ಎಂದೇ ಹೇಳಬೇಕಲ್ಲದೆ *ಗೋಡೆಯ ತಗ್ಗು ಎಂದು ಗೋಡೆಯ ಉದ್ದ ಹೇಳಲು ಸಾಧ್ಯವಾಗದು. ಇದೇ ರೀತಿಯಲ್ಲಿ ಎನ್ನುತ್ತೇವಲ್ಲದೆ *ಗೋಡೆಯ ಗಿಡ್ಡ ಎನ್ನುವುದಿಲ್ಲ. (2) ಭೌತಿಕ ಗುಣಧರ್ಮ: ಈ ಉಪವಗ್ರದಲ್ಲಿ ಬರುವ ಗುಣಪದಗಳಲ್ಲಿ ಕೆಲವು ಅಳತೆಯ ಗುಣಪದಗಳ ಹಾಗೆ ವಿರುದ್ಧಾರ್ಥ ಜೋಡಿಗಳಾಗಿ ಬರುತ್ತವೆ. ದೊಡ್ಡ
ನೇರ ದುಂಡು
ನುಣುಪು
ತಂಪು ಚಪ್ಪಟೆ ದೊರಗು ಮೆದು ಕಕ್ರಶ ಕಲಕು ಮೊಂಡು ಸಡಿಲು ಮೇಲೆ ಕೊಟ್ಟಿರುವ ಗುಣಪದಗಳು ಮಾತ್ರವಲ್ಲದೆ ಬೇರೆಯೂ ಹಲವು ಗುಣಪದಗಳು ಈ ಎರಡನೆಯ ಉಪವಗ್ರದಲ್ಲಿ ಬರಬಲ್ಲುವು. ಆದರೆ ಇವನ್ನು ಮೇಲಿನವುಗಳ ಹಾಗೆ ವಿರುದ್ಧಾರ್ಥ ಜೋಡಿಗಳಾಗಿ ವಿಂಗಡಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಬೇರೆ ಬೇರೆ ರೀತಿಯ ರುಚಿಗಳನ್ನು ಸೂಚಿಸುವ ಸಿಹಿ, ಕಹಿ, ಖಾರ, ಹುಳಿ ಮೊದಲಾದವುಗಳು ಇದೇ ಉಪವಗ್ರಕ್ಕೆ ಸೇರುವುವಾದರೂ ಅವು ಮೇಲಿನವುಗಳ ಹಾಗೆ ಜೋಡಿಗಳಾಗಿ ಬರುವುದಿಲ್ಲ. ಬೇಕಿದ್ದಲ್ಲಿ ಅವನ್ನೆಲ್ಲ ಸಪ್ಪೆ ಎಂಬ ಒಂದೇ ಒಂದು ಗುಣಪದಕ್ಕೆ ವಿರುದ್ಧಾರ್ಥದವುಗಳೆಂದು ಹೇಳಲು ಸಾಧ್ಯ ವಾಗಬಹುದು.
ಇದೇ ರೀತಿಯಲ್ಲಿ ಮೇಲೆ ಕೊಟ್ಟಿರುವ ಗಟ್ಟಿ ಗುಣಪದಕ್ಕೆ ಮೆದು ಗುಣಪದ ಮಾತ್ರವಲ್ಲದೆ ಕುಂಬು, ಜೊಳ್ಳು, ಗೋಳೆ, ಸಡಿಲು ಮೊದಲಾದ ಬೇರೆ ಕೆಲವು ಗುಣಪದಗಳೂ ವಿರುದ್ಧಾರ್ಥದವುಗಳಾಗಿ ಬರುತ್ತವೆಯೆಂದು ಹೇಳಲು ಸಾಧ್ಯ ವಿದೆ. ಬಣ್ಣವನ್ನು ಸೂಚಿಸುವ ಗುಣಪದಗಳಲ್ಲಿ ಕಪ್ಪು ಮತ್ತು ಬಿಳಿ ಎಂಬವುಗಳು ಜೋಡಿಯಾಗಿ ಬರುವುವಾದರೂ ಅವನ್ನು ವಿರುದ್ಧಾರ್ಥದವುಗಳೆಂದು ಹೇಳು ವುದು ಕಷ್ಟ. ಇವಲ್ಲದೆ ಆ ರೀತಿ ಜೋಡಿಗಳಾಗಿ ಬಾರದ ಕೆಂಪು, ಕೆಂಚು, ಕಾವಿ, ಕಂದು, ಬೂದಿ, ಅರಸಿನ, ನೀಲಿ ಮೊದಲಾದವುಗಳೂ ಈ ಉಪ ವಿಭಾಗಕ್ಕೆ ಸೇರುತ್ತವೆ. ಇವುಗಳಲ್ಲಿ ಕೆಲವು ನಾಮಪದಗಳಾಗಿಯೂ ಬಳಕೆಯಲ್ಲಿ ಕೆಲವು ವಿಶಿಷ್ಟವಾದ ನಾಮಪದಗಳೊಂದಿಗೆ ಮಾತ್ರವೇ ಬರಬಲ್ಲ ಗುಣಪದ ಗಳೂ ಈ ಉಪವಿಭಾಗಕ್ಕೆ ಸೇರುತ್ತವೆ. ಬೋಡು (ಬಾಯಿ), ಸೊಟ್ಟ (ಮೋರೆ), ತೇಪೆ (ಕೆಲಸ), ಕೂನು (ಬೆನ್ನು), ಬಕ್ಕ (ತಲೆ), ಕೋಸು (ಕಣ್ಣು), ಮೊಂಡು (ಕತ್ತಿ), ಸವುಳು (ನೆಲ), ಮೊದಲಾದವುಗಳು ಇಂತಹ ಗುಣಪದಗಳು. (3) ಮನುಷ್ಯರ ಗುಣಗಳು: ಕನ್ನಡದಲ್ಲಿ ಈ ಉಪವಗ್ರಕ್ಕೆ ಸೇರುವ ಗುಣಪದಗಳನ್ನು ಎರಡು ಮುಖ್ಯ ಉಪವಿಭಾಗಗಳಲ್ಲಿ ವಿಂಗಡಿಸಬಹುದು. ಕುರುಡು, ಕಿವುಡು, ಕುಂಟು ಮೊದಲಾದ ಕೆಲವು ಗುಣಪದಗಳು ದೈಹಿಕ ಕೊರತೆಗಳನ್ನು ಸೂಚಿಸುತ್ತಿದ್ದು ಮೊದಲನೆಯ ವಿಭಾಗಕ್ಕೂ ಮತ್ತು ಹುಚ್ಚು, ಮೊದ್ದು, ಚುರುಕು, ಪೊೀಲಿ, ಬೆಪ್ಪು ಮೊದಲಾದ ಬೇರೆ ಕೆಲವು ಗುಣಪದ ಗಳು ಮಾನಸಿಕ ಗುಣಗಳನ್ನು ಸೂಚಿಸುತ್ತಿದ್ದು ಎರಡನೆಯ ವಿಭಾಗಕ್ಕೂ ಸೇರು ತ್ತವೆ. (4) ವಯಸ್ಸು: ವ್ಯಕ್ತಿ ಇಲ್ಲವೇ ವಸ್ತುವಿನ ವಯಸ್ಸನ್ನು ಸೂಚಿಸುವ ಹೊಸ, ಹಳೆ, ಎಳೆ, ಮುದಿ, ಹಿರಿ, ಕಿರಿ, ಪುಟ್ಟ ಮೊದಲಾದವುಗಳು ಈ ಉಪವಗ್ರಕ್ಕೆ ಸೇರುತ್ತವೆ. ಇವಲ್ಲದೆ, ಎರಡನೆಯ ಉಪವಗ್ರದಲ್ಲಿ ಬಂದಿರುವ ದೊಡ್ಡ ಮತ್ತು ಚಿಕ್ಕ ಎಂಬೆರಡು ಪದಗಳೂ ವಯಸ್ಸನ್ನು ಸೂಚಿಸಬಲ್ಲುವಾದ ಕಾರಣ ಅವನ್ನೂ ಈ ಉಪವಗ್ರಕ್ಕೂ ಸೇರಿಸಲು ಸಾಧ್ಯವಿದೆ. (5) ಬೆಲೆ: ಈ ಉಪವಗ್ರಕ್ಕೆ ಸೇರುವ ಗುಣಪದಗಳಲ್ಲಿ ಸರಿ-ತಪ್ಪು, ಹೆಚ್ಚು-ಕಡಿಮೆ, ಕೀಳು-ಮೇಲು ಎಂಬ ಕೆಲವು ಪದಗಳು ಜೋಡಿಗಳಾಗಿ ಬಳಕೆಯಾಗುವುವಾದರೆ, ಚಂದ, ಚೊಕ್ಕ, ಬಡ ಮೊದಲಾದ ಬೇರೆ ಕೆಲವು ಪದಗಳು ಒಂದೊಂದಾಗಿ ಬರುತ್ತವೆ. ಒಳ್ಳೆ ಗುಣಪದಕ್ಕೆ ಜೋಡಿಯಾಗಿ ಕೆಡು ಕ್ರಿಯಾಪದದ ರೂಪವಾಗಿರುವ ಕೆಟ್ಟ ಎಂಬುದು ಬಳಕೆಯಲ್ಲಿದೆ.
(6) ದಿಕ್ಕು: ಕನ್ನಡದಲ್ಲಿ ದಿಕ್ಕನ್ನು ಸೂಚಿಸುವ ಮೂಡು, ತೆಂಕ, ಪಡು ಮತ್ತು ಬಡಗ ಎಂಬವುಗಳೂ ಗುಣಪದಗಳಾಗಿ ಬಳಕೆಯಲ್ಲಿವೆ. ಇವುಗಳಲ್ಲಿ ಮೂಡು ಕ್ರಿಯಾಪದವಾಗಿಯೂ ಬಳಕೆಯಾಗುತ್ತದೆ. ಇದಲ್ಲದೆ, ಒಳ-ಹೊರ, ಎಡ-ಬಲ, ಮೇಲೆ-ಕೆಳ-ನಡು ಎಂಬವುಗಳೂ ಬೇರೆ ಬೇರೆ ಜಾಗಗಳನ್ನು ಸೂಚಿಸಬಲ್ಲ ಗುಣಪದಗಳಾಗಿವೆ.

Eke →

4.3.3 ನಾಮಪದಕಂತೆಗಳಲ್ಲಿ ಗುಣಪದಗಳ ಬಳಕೆ

ಮೇಲೆ ಸೂಚಿಸಿದ ಹಾಗೆ, ನಾಮಪದಕಂತೆಗಳಲ್ಲಿ ಒಂದು ನಾಮಪದದೊಂದಿಗೆ ಬರುವ ಈ ಗುಣಪದಗಳು ಆ ನಾಮಪದ ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣಧರ್ಮವೊಂದನ್ನು ಸೂಚಿಸುವುದರ ಮೂಲಕ ಅದರ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ.
ಉದಾಹರಣೆಗಾಗಿ, ಹುಡುಗ ನಾಮಪದಕ್ಕೆ ಚಿಕ್ಕ ಗುಣಪದವನ್ನು ಸೇರಿಸಿ ನೋಡಬಹುದು. ಹುಡುಗ ನಾಮಪದ ಗುರುತಿಸಬಲ್ಲ ವ್ಯಕ್ತಿಗಳಿಗಿಂತ ಚಿಕ್ಕ ಹುಡುಗ ಎಂಬ ನಾಮಪದಕಂತೆ ಗುರುತಿಸಬಲ್ಲ ವ್ಯಕ್ತಿಗಳ ಸಂಖ್ಯೆ ಕಡಿಮೆ. ಯಾಕೆಂದರೆ, ಹುಡುಗ ನಾಮಪದ ಯಾವ ವ್ಯಕ್ತಿಗಳನ್ನೆಲ್ಲ ಹೆಸರಿಸಬಲ್ಲುದೋ ಅವರಲ್ಲಿ ಚಿಕ್ಕ ಎಂಬ ಗುಣಧರ್ಮವಿರುವ ವ್ಯಕ್ತಿಗಳನ್ನು ಮಾತ್ರ ಚಿಕ್ಕ ಹುಡುಗ ಎಂಬ ಪದಕಂತೆ ವರ್ಣಿಸುತ್ತದೆ. ಗುಣಪದಗಳನ್ನು ಬಳಸುವುದಿದ್ದಲ್ಲಿ, ಸಾಮಾನ್ಯವಾಗಿ ಹೆಚ್ಚು ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಮೊದಲು ಬರುತ್ತವೆ ಮತ್ತು ಕಡಿಮೆ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಅನಂತರ ಬರುತ್ತವೆ. ಉದಾಹರಣೆಗಾಗಿ, ಪೊೀಲಿ ಗುಣಪದದೊಂದಿಗೆ ಬರಬಲ್ಲ ನಾಮಪದಗಳು ದೊಡ್ಡ ಗುಣಪದದೊಂದಿಗೆ ಬರಬಲ್ಲ ನಾಮಪದಗಳಿಗಿಂತ ಬಹಳ ಕಡಿಮೆ. ಹಾಗಾಗಿ ಇವೆರಡನ್ನೂ ಒಟ್ಟಾಗಿ ಒಂದೇ ನಾಮಪದಕಂತೆಯಲ್ಲಿ ಬಳಸಬೇಕಾದಾಗ, ದೊಡ್ಡ ಎಂಬುದನ್ನು ಪೊೀಲಿ ಎಂಬುದಕ್ಕಿಂತ ಮೊದಲು ಬಳಸಬೇಕಾಗುತ್ತದೆ (ಉದಾ: ಅವನೊಬ್ಬ ದೊಡ್ಡ ಪೊೀಲಿ ಹುಡುಗ). ನಾಮಪದದೊಂದಿಗೆ ಒಂದಕ್ಕಿಂತ ಜಾಸ್ತಿ ಆದರೆ ಕನ್ನಡದ ನಾಮಪದಕಂತೆಗಳಲ್ಲಿ ಸಾಮಾನ್ಯವಾಗಿ ಒಂದಕ್ಕಿಂತ ಜಾಸ್ತಿ ಗುಣಪದಗಳಿರುವುದು ಅಪರೂಪ. ಕನ್ನಡದವೇ ಆದ ಗುಣಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಬಂದ ಗುಣಪದಗಳು ಈ ರೀತಿ ಪದಕಂತೆಗಳಲ್ಲಿ ಒಟ್ಟೊಟ್ಟಾಗಿ ಬರುವುದು ಜಾಸ್ತಿ (ಉದಾ: ದೈನಿಕ ವಾತ್ರಾ ಪತ್ರಿಕೆ, ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ, ಇತ್ಯಾದಿ). ಈ ರೀತಿ ಒಂದು ನಾಮಪದದೊಂದಿಗೆ ಎರಡಕ್ಕಿಂತ ಜಾಸ್ತಿ ಗುಣಪದಗಳನ್ನು ಬಳಸಿದೆಯಾದಲ್ಲಿ, ಅವನ್ನು ಯಾವ ರೀತಿಯಲ್ಲಿ ಒಟ್ಟು ಸೇರಿಸಲಾಗಿದೆ ಎಂಬುದ ರಲ್ಲಿ ವೈವಿಧ್ಯ ಕಾಣಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ ಹಲವು ದೊಡ್ಡ ಮನೆಗಳು ಎಂಬ ಪದಕಂತೆಯಲ್ಲಿ ಬಂದಿರುವ ಹಲವು ಎಂಬ ಪದ ದೊಡ್ಡ ಎಂಬ ಪದದ ಹಾಗೆ ಮನೆಗಳು ಎಂಬುದಕ್ಕೆ ನೇರವಾಗಿ ಸಂಬಂಧಿಸುತ್ತದೆ. ಆದರೆ, ಬಹಳ ದೊಡ್ಡ ಮನೆಗಳು ಎಂಬ ಪದಕಂತೆಯಲ್ಲಿ ಬಂದಿರುವ ಬಹಳ ಎಂಬ ಪದ ಈ ರೀತಿ ನೇರವಾಗಿ ಮನೆಗಳು ಎಂಬುದಕ್ಕೆ ಸಂಬಂಧಿಸುವುದಿಲ್ಲ. ಇದಕ್ಕೆ ಬದಲು ಅದು ದೊಡ್ಡ ಎಂಬುದಕ್ಕೆ ಸಂಬಂಧಿಸುತ್ತಿದ್ದು, ಅದರ ಮೂಲಕ ಮನೆಗಳು ಎಂಬುದಕ್ಕೆ ಸಂಬಂಧಿಸುತ್ತದೆ.

Eke →

4.3.4 ಎಣಿಕೆಯ ಪದಗಳ ಬಳಕೆ

ನಾಮಪದಗಳೊಂದಿಗೆ ಪದಕಂತೆಗಳಲ್ಲಿ ಬರಬಲ್ಲ ಇನ್ನೊಂದು ರೀತಿಯ ಪದ ಗಳೆಂದರೆ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳು. ಇವು ಗುಣಪದಗಳಿಗಿಂತ ಮೊದಲು ಬರುತ್ತವೆ (ಉದಾ: ಒಂದು ದೊಡ್ಡ ಮನೆ, ನಾಲ್ಕು ಕೆಂಪು ಹೂಗಳು). ಆದರೆ ಈ ಪದಗಳು ಎಣಿಸಲು ಸಾಧ್ಯವಿರುವಂತಹ ಮನೆ, ಮರ, ಹೂ, ಹುಡುಗ, ಕತೆ ಮೊದಲಾದ ನಾಮಪದಗಳೊಂದಿಗೆ ಮಾತ್ರ ಬರುತ್ತವೆ. ಸಾಮಾನ್ಯವಾಗಿ ಎಣಿಸಲು ಸಾಧ್ಯವಿಲ್ಲದಿರುವ ನೀರು, ಎಣ್ಣೆ, ಹಿಟ್ಟು ಮೊದಲಾದವುಗಳೊಂದಿಗೆ ಬರುವುದಿಲ್ಲ. ಕನ್ನಡದಲ್ಲಿ ಒಂದರಿಂದ ಹತ್ತರವರೆಗೆ ಎಣಿಕೆಯನ್ನು ನಡೆಸಲು ಒಂದು, ಎರಡು, ಮೂರು ಮೊದಲಾದ ಬಿಡಿ ಬಿಡಿಯಾದ ಎಣಿಕೆಯ ಪದಗಳು ಬಳಕೆ ಯಾಗುತ್ತವೆ. (ಇವುಗಳಲ್ಲಿ ಒಂಬತ್ತು ಎಂಬುದು ಮಾತ್ರ ಚಾರಿತ್ರಿಕವಾಗಿ ಒಳರಚನೆಯಿರುವ ಎಣಿಕೆಯ ಪದ). ಜನರನ್ನು ಎಣಿಸಬೇಕಾದಲ್ಲಿ ಮೇಲಿನ ಪದಗಳ ಬದಲು ಒಬ್ಬ (ಅಥವಾ ಒಬ್ಬನು, ಒಬ್ಬಳು, ಒಬ್ಬರು), ಇಬ್ಬರು, ಮೂವರು, ನಾಲ್ವರು ಮೊದಲಾದ ವಿಶಿಷ್ಟ ಪದಗಳ ಬಳಕೆಯಿದೆ.
ಹತ್ತಕ್ಕಿಂತ ಜಾಸ್ತಿ ವಸ್ತುಗಳನ್ನು ಇಲ್ಲವೇ ಜನರನ್ನು ಎಣಿಸಬೇಕಾದಾಗ, ಎರಡು ಅಥವಾ ಜಾಸ್ತಿ ಎಣಿಕೆಯ ಪದಗಳನ್ನು ಒಟ್ಟಿಗೆ ಸೇರಿಸಿ ಹೇಳಬೇಕಾಗು ತ್ತದೆ, ಮತ್ತು ಇದಕ್ಕಾಗಿ ಕನ್ನಡದಲ್ಲಿ ಕೆಳಗೆ ಸೂಚಿಸಿರುವ ಹಾಗೆ ಎರಡು ರಚನೆ ಗಳು ಬಳಕೆಯಲ್ಲಿವೆ. ಹತ್ತರಿಂದ ಹತ್ತೊಂಬತ್ತರ ವರೆಗಿನ ಎಣಿಕೆಯನ್ನು ನಡೆಸುವುದಕ್ಕಾಗಿ ಹತ್ತು ಎಂಬುದಕ್ಕೆ ಅ ಎಂಬ ಸಂಬಂಧಿಸುವ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಹತ್ತ- ಎಂಬುದರೊಂದಿಗೆ ಒಂದು, ಎರಡು, ಮೂರು ಮೊದಲಾದ ಪದಗಳಗಳನ್ನು ಬಳಸಲಾಗುತ್ತದೆ. ಆದರೆ ಈ ರಚನೆಗಳಲ್ಲಿ ಹತ್ತ- ಎಂಬುದು ಹನ್್ನ-, ಹದಿ- ಮತ್ತು ಹತ್್ತ- ಎಂಬ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇದೇ ರೀತಿಯಲ್ಲಿ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಎಣಿಕೆಗೆ ಇಪ್ಪತ್ತ ಎಂಬುದಕ್ಕೆ ಒಂದು, ಎರಡು ಮೊದಲಾದುವನ್ನು ಸೇರಿಸಿ ತಯಾರಿಸಿದ ರಚನೆಯನ್ನೂ (ಉದಾ: ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತ ಮೂರು, ಇತ್ಯಾದಿ) ಮತ್ತು ಮೂವತ್ತರಿಂದ ಮೂವತ್ತೊಂಬತ್ತರ ವರೆಗಿನ ಎಣಿಕೆಗೆ ಮೂವತ್ತ ಎಂಬುದಕ್ಕೆ ಒಂದು, ಎರಡು, ಮೂರು ಮೊದಲಾದುವನ್ನು ಸೇರಿಸಿ ತಯಾರಿಸಿದ ರಚನೆಯನ್ನೂ ಬಳಸುವುದನ್ನು ಕಾಣಬಹುದು. ಇದೇ ರೀತಿಯ ರಚನೆಯನ್ನು ನೂರರ ಅನಂತರದ ಎಣಿಕೆಯಲ್ಲೂ ಕಾಣ ಬಹುದು. ನೂರ ಒಂದು ಎಂಬುದರಲ್ಲಿ ನೂರು ಪದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ; ನೂರ ಎಪ್ಪತ್ತೊಂದು ಎಂಬುದರಲ್ಲಿ ನೂರು ಮತ್ತು ಎಪ್ಪತ್ತು ಎಂಬುವೆರಡಕ್ಕೂ ಅದೇ ಅ ಪ್ರತ್ಯಯವನ್ನು ಸೇರಿಸಲಾಗಿದೆ; ಮತ್ತು ಹತ್ತು ಸಾವಿರದ ಎಂಟು ನೂರ ಐವತ್ತ ನಾಲ್ಕು ಎಂಬುದರಲ್ಲಿ ಸಾವಿರ, ನೂರು ಮತ್ತು ಐವತ್ತು ಎಂಬವುಗಳಿಗೆ ಅದೇ ಅ ಪ್ರತ್ಯಯವನ್ನು ಸೇರಿಸಲಾಗಿದೆ. ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದ ಎಣಿಕೆಗಳಲ್ಲಿ ಮಾತ್ರ ಈ ರೀತಿ ಅ ಪ್ರತ್ಯಯವನ್ನು ಬಳಸುವ ಬದಲು ಎರಡು, ಮೂರು, ನಾಲ್ಕು ಮೊದಲಾದ ಎಣಿಕೆಯ ಪದಗಳನ್ನು ನೇರವಾಗಿ ಹತ್ತು ಪದಕ್ಕೆ ಸೇರಿಸಲಾಗಿದೆ. ಇದು ಎಣಿಕೆಯ ಪದಗಳಲ್ಲಿ ಕಾಣಿಸುವ ಎರಡನೆಯ ರಚನೆ.
ಈ ಎರಡನೆಯ ರಚನೆಯಲ್ಲೂ ಕೆಲವು ಸೇರಿಕೆಯ ಬದಲಾವಣೆಗಳು ನಡೆದಿರುವುದನ್ನು ಗಮನಿಸಬಹುದು. ಉದಾಹರಣೆಗಾಗಿ, ಎರಡು ಎಂಬುದಕ್ಕೆ ಇಪ್್ಪ- ಎಂಬ ರೂಪವಿದೆ, ಹತ್ತು ಎಂಬುದಕ್ಕೆ ಅತ್ತು, ಪತ್ತು, ವತ್ತು ಮೊದ ಲಾದ ರೂಪಗಳಿವೆ, ಇತ್ಯಾದಿ.) ಇದೇ ರೀತಿಯಲ್ಲಿ ಇನ್ನೂರು, ಮುನ್ನೂರು, ನಾನ್ನೂರು ಮೊದಲಾದ ಎಣಿಕೆಗಳಲ್ಲೂ ಎರಡು ಎಣಿಕೆಯ ಪದಗಳನ್ನು ನೇರವಾಗಿ ಅ ಪ್ರತ್ಯಯವನ್ನು ಬಳಸದೆ ಸೇರಿಸಿರುವುದನ್ನು ಕಾಣಬಹುದು.
ಈ ಮೇಲಿನ ಎಣಿಕೆಯ ಪದಗಳಲ್ಲಿ ಅ ಪ್ರತ್ಯಯ ಬಂದಲ್ಲಿ ‘ಕೂಡಿಸು’ ಎಂಬ ಅರ್ಥ ಬರುತ್ತದೆ, ಮತ್ತು ಆ ಪ್ರತ್ಯಯ ಬಾರದೆ ಎಣಿಕೆಯ ಪದಗಳೆರಡು ನೇರವಾಗಿ ಸೇರಿಕೊಂಡಿರುವಲ್ಲಿ ‘ಗುಣಿಸು’ ಎಂಬ ಅರ್ಥ ಬರುತ್ತದೆ ಎಂಬುದಾಗಿ ಈ ಎರಡು ರೀತಿಯ ರಚನೆಗಳ ಬಳಕೆಯನ್ನು ವರ್ಣಿಸಬಹುದು. ಎಣಿಕೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಜಾಗವನ್ನು ಸೂಚಿಸು ವುದಕ್ಕಾಗಿ ಎಣಿಕೆಯ ಪದಗಳಿಗೆ ನೇ ಇಲ್ಲವೇ ನೆಯ ಪ್ರತ್ಯಯವನ್ನು ಸೇರಿಸ ಬೇಕಾಗುತ್ತದೆ. ಉದಾಹರಣೆಗಾಗಿ, ನಾಲ್ಕನೇ ಹುಡುಗ ಎಂಬುದರಲ್ಲಿ ನಾಲ್ಕನೇ ಎಂಬುದು ಎಣಿಕೆಯಲ್ಲಿ ಒಬ್ಬ ಹುಡುಗನ ಜಾಗ ಯಾವುದು ಎಂಬು ದನ್ನು ಸೂಚಿಸುವ ಮೂಲಕ ಆತನನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡು ತ್ತದೆ. ಈ ಪ್ರತ್ಯಯದೆದುರು ಒಂದು ಎಂಬುದರ ಬದಲು ಮೊದಲು ಎಂಬು ದನ್ನೂ ಬಳಸಲು ಸಾಧ್ಯವಿದೆ (ಒಂದನೇ ಹುಡುಗ, ಮೊದಲನೇ ಹುಡುಗ).

Eke →

4.3.5 ಅಳತೆಯನ್ನು ಸೂಚಿಸುವ ಪದಗಳು

ನಾಮಪದವು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಅಳತೆಯನ್ನು ಸೂಚಿಸುವು ದಕ್ಕಾಗಿ ಅದರೊಂದಿಗೆ ಬೇರೆ ಕೆಲವು ಪದಗಳನ್ನು ಬಳಸಲು ಸಾಧ್ಯವಿದೆ. ಇವು ಗಳಲ್ಲಿ ಅಳತೆಯನ್ನು ನಿಖರವಾಗಿ ತಿಳಿಸುವವುಗಳು ಮತ್ತು ಒಂದು ಅಂದಾಜಿಗೆ ತಿಳಿಸುವವುಗಳು ಎಂಬುದಾಗಿ ಎರಡು ವಿಧದವುಗಳಿರುವುದನ್ನು ಕಾಣಬಹುದು.
ಉದಾಹರಣೆಗಾಗಿ, ಗೇಣು, ಮೊಳ, ಅಂಗುಲ, ಮೈಲು ಮೊದಲಾ ದವುಗಳು ಅಳತೆಯನ್ನು ನಿಖರವಾಗಿ ತಿಳಿಸುತ್ತವೆ. ಸಾಮಾನ್ಯವಾಗಿ ಇವುಗ ಳೊಂದಿಗೆ ಎಣಿಕೆಯ ಪದಗಳೂ ಬಂದಿರುತ್ತವೆ. (ಉದಾ: ಎರಡು ಮೊಳ ಬಟ್ಟೆ, ಹತ್ತು ಕೆ.ಜಿ. ಅಕ್ಕಿ, ಇತ್ಯಾದಿ). ಹಲವು-ಕೆಲವು, ಬಹಳ-ಸ್ವಲ್ಪ, ಹೇರಳ ಮೊದಲಾದವುಗಳು ಅಳತೆ ಯನ್ನು ಒಂದು ಅಂದಾಜಿಗೆ ಮಾತ್ರ ಸೂಚಿಸಬಲ್ಲುವು. ಹಾಗಾಗಿ ಇವುಗಳೊಂದಿಗೆ ಎಣಿಕೆಯ ಪದಗಳು ಬರುವುದಿಲ್ಲ. (ಉದಾ: ಕೆಲವು ಜನರು, ಸ್ವಲ್ಪ ನೀರು, ಹೇರಳ ಹಣ, ಇತ್ಯಾದಿ).

Eke →

4.4 ಸಾರಾಂಶ

ವಾಕ್ಯಗಳಲ್ಲಿ ಒಂದು ಘಟನೆಯನ್ನು ಇಲ್ಲವೇ ಸಂಗತಿಯನ್ನು ಸೂಚಿಸುವುದಕ್ಕಾಗಿ ಕ್ರಿಯಾಪದಗಳೂ, ಮತ್ತು ಅಂತಹ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿ ಕೊಂಡಿರುವ ವ್ಯಕ್ತಿ, ವಸ್ತು, ಜಾಗ ಮೊದಲಾದುವನ್ನು ಗುರುತಿಸುವುದಕ್ಕಾಗಿ ನಾಮಪದಗಳೂ ಬಳಕೆಯಾಗುತ್ತವೆ. ಇವುಗಳಲ್ಲಿ ಎರಡನೆಯ ಕೆಲಸವನ್ನು ನಡೆಸುವುದಕ್ಕಾಗಿ ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನ ಎಂಬುದಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸಬೇಕಾಗುತ್ತದೆ. ವರ್ಣಿಸುವ ವಿಧಾನವನ್ನು ಬಳಸಬೇಕಿದ್ದಾಗ, ಸಾಮಾನ್ಯವಾಗಿ ನಾಮಪದ ಗಳನ್ನು ಗುಣಪದ, ಎಣಿಕೆಯ ಪದ, ಅಳತೆಯ ಪದ ಮೊದಲಾದವುಗಳೊಂದಿಗೆ ಸೇರಿಸಿ ಒಂದು ‘ಪದಕಂತೆ’ಯ ರೂಪದಲ್ಲಿ ಬಳಸುವ ಅವಶ್ಯಕತೆ ಕಂಡುಬರು ತ್ತದೆ. ಒಂದು ಇಡೀ ವಾಕ್ಯವೂ ಇಂತಹ ಪದಕಂತೆಯ ಅಂಗವಾಗಿರಲು ಸಾಧ್ಯ