← Ch 10  ·  Contents  ·  ↑ Contents

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11

English → | Eke →

ಅಧ್ಯಾಯ ಹನ್ನೊಂದು — ಕನ್ನಡದ ಕೆಲವು ವೈಶಿಷ್ಟ್ಯಗಳು

Eke →

11.1 ಪೀಠಿಕೆ

ಪ್ರತಿಯೊಂದು ಭಾಷೆಗೂ ಅದರದೇ ಆದ ವಾಕ್ಯರಚನೆಯ ನಿಯಮಗಳಿರುತ್ತವೆ. ಇವುಗಳಲ್ಲಿ ಹಲವು ಆ ಭಾಷೆ ತನ್ನ ಮೂಲಭಾಷೆಯಿಂದ ಪಡೆದು ಬಂದಿರುವ ನಿಯಮಗಳು ಮತ್ತು ಉಳಿದ ಕೆಲವು ಅವುಗಳಲ್ಲೇ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡುವುದರ ಮೂಲಕ ಸಾಧಿಸಿಕೊಂಡವುಗಳು. ಪ್ರತಿ ಯೊಂದು ಜೀವಂತವಾಗಿರುವ ಭಾಷೆಯೂ ಈ ರೀತಿ ತನ್ನಲ್ಲಿರುವ ನಿಯಮ ಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರುವ ಅವಶ್ಯಕತೆಯಿದೆ. ಅಂತಹ ಬದಲಾವಣೆಗಳ ಮೂಲಕವೇನೇ ಅದಕ್ಕೆ ಹೊಸ ಹೊಸ ಸನ್ನಿವೇಶಗಳಿಗೆ ಹೊಂದಿ ಕೊಳ್ಳಲು ಸಾಧ್ಯವಾಗುತ್ತದೆ. ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಕನ್ನಡಕ್ಕೂ ಮತ್ತು ಅದಕ್ಕಿಂತ ಭಿನ್ನವಾದ ಇಂಡೋ-ಯುರೋಪಿಯನ್, ಸಿನೋ-ಟಿಬೆಟನ್, ಆಫೊ್ರೀ-ಏಶಿ ಯಾಟಿಕ್ ಮೊದಲಾದ ಭಾಷಾಕುಟುಂಬಗಳಿಗೆ ಸೇರಿರುವ ಪ್ರಪಂಚದ ಇತರ ಭಾಷೆಗಳಿಗೂ ನಡುವೆ ವಾಕ್ಯರಚನೆಯ ನಿಯಮಗಳಲ್ಲಿ ಕಾಣಿಸುವ ವ್ಯತ್ಯಾಸ ಗಳಿಗೆಲ್ಲ ಅವು ತಮ್ಮ ಮೂಲ ಭಾಷೆಯಿಂದ ಬೇರೆ ಬೇರೆ ರೀತಿಯ ನಿಯಮಾ ವಳಿಗಳನ್ನು ಪಡೆದಿರುವುದೇ ಮುಖ್ಯ ಕಾರಣ. ಕನ್ನಡಕ್ಕೂ ಮತ್ತು ಸಂಸ್ಕೃತ, ಇಂಗ್ಲಿಷ್, ಚೈನೀಸ್, ಬಂಟು ಮೊದಲಾದ ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸ ಇಂತಹದು.
ಇದಕ್ಕೆ ಬದಲು, ಕನ್ನಡಕ್ಕೂ ಮತ್ತು ತಮಿಳು, ತೆಲುಗು, ಮಲಯಾಳ, ತುಳು ಮೊದಲಾದ ಇತರ ದ್ರಾವಿಡ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ಮೂಲ ಭಾಷೆಯಿಂದ ಪ್ರತ್ಯೇಕಗೊಂಡ ಮೇಲೆ ಅವುಗಳಲ್ಲಿ ನಡೆದಿರುವ ಬದಲಾವಣೆಗಳೇ ಕಾರಣವೆಂದು ಹೇಳಬಹುದು. ಹಳೆಗನ್ನಡ ಮತ್ತು ಹೊಸ ಗನ್ನಡಗಳ ನಡುವೆ ಕಾಣಿಸುವ ವ್ಯತ್ಯಾಸಗಳೂ ಈ ಎರಡನೆಯ ಕಾರಣದಿಂದಾಗಿ ಮೂಡಿಬಂದಿವೆ. ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಈ ರೀತಿ ಎರಡು ಕಾರಣ ಗಳಿರಲು ಸಾಧ್ಯವಿದೆಯಾದ ಕಾರಣ, ಅವನ್ನು ಎರಡು ವಿಧಾನಗಳ ಮೂಲಕ ಪರಿಶೀಲಿಸಲು ಸಾಧ್ಯವಿದೆ. ಒಂದೇ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಕಾಲಕ್ರಮೇಣ ಹೇಗೆ ಬದಲಾಗುತ್ತಾ ಬಂದಿವೆ ಮತ್ತು ಈ ಬದಲಾವಣೆಗಳಿಂದಾಗಿ ಅವುಗಳ ನಡುವೆ ಹೇಗೆ ವ್ಯತ್ಯಾಸಗಳು ಬೆಳೆದುಬಂದಿವೆ ಎಂಬುದಾಗಿ ಅವುಗಳ ಚರಿತ್ರೆಯನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುವುದು ಒಂದು ವಿಧಾನ (ಕನ್ನಡದ ಮಟ್ಟಿಗೆ ಈ ಪ್ರಯತ್ನ ಹೇಗೆ ಸಾಗಬಲ್ಲುದು ಎಂಬುದನ್ನು (ಭಟ್ 1995) ಪುಸ್ತಕದಲ್ಲಿ ನೋಡಬಹುದು).
ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿರುವ ಪ್ರಪಂಚದ ಭಾಷೆಗಳೆಲ್ಲ ವನ್ನೂ ಪರಿಶೀಲಿಸಿ, ಅವುಗಳ ನಡುವೆ ವಾಕ್ಯರಚನೆಯ ಮಟ್ಟಿಗೆ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕಂಡುಹಿಡಿಯುವುದು ಎರಡನೇ ವಿಧಾನ. ಈ ವಿಧಾನದ ಬಳಕೆಯಲ್ಲಿ ಭಾಷೆಗಳ ನಡುವಿರುವ ಸಂಬಂಧಕ್ಕೆ ಜಾಸ್ತಿ ಪ್ರಾಮುಖ್ಯತೆಯಿಲ್ಲ. ಅದಕ್ಕೆ ಬದಲು ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸ ಗಳಲ್ಲಿ ಒಂದು ಇನ್ನೊಂದರೊಡನೆ ಸಂಬಂಧಿಸಿದೆಯೇ ಎಂಬುದಾಗಿ ಈ ವ್ಯತ್ಯಾಸಗಳ ನಡುವಿರುವ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲಾಗು ಉದಾಹರಣೆಗಾಗಿ, ಕನ್ನಡದ ಪದಕಂತೆಗಳಲ್ಲಿ ಗುಣಪದಗಳು ನಾಮಪದದ ಎಡಕ್ಕೆ ಬರುತ್ತವೆ (ದೊಡ್ಡ ಪುಸ್ತಕ), ಆದರೆ ಬೇರೆ ಕೆಲವು ಭಾಷೆಗಳಲ್ಲಿ (ಉದಾ: ಐರಿಷ್ ಭಾಷೆ) ಗುಣಪದಗಳು ನಾಮಪದದ ಬಲಕ್ಕೆ ಬರುತ್ತವೆ. ಈ ಎರಡು ಭಾಷೆಗಳ ನಡುವೆ ಕಾಣಿಸುವ ಈ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಬೇರೆ ವ್ಯತ್ಯಾಸಗಳೇನಾದರೂ ಇವೆಯೇ, ಮತ್ತು ಇದ್ದಲ್ಲಿ ಅಂತಹ ವ್ಯತ್ಯಾಸಗಳನ್ನೆಲ್ಲ ಒಟ್ಟಿಗೆ ಸಂಬಂಧಿಸುವಂತಹ ವಾಕ್ಯರಚನೆಯ ಮೂಲತತ್ವವೇನಾದರೂ ಇದೆಯೇ (ಕೆಳಗೆ 11.3 ನೋಡಿ) ಎಂಬುದಾಗಿ ಈ ವಿಧಾನದಲ್ಲಿ ಭಾಷೆಗಳ ನಡುವೆ ಕಾಣಿಸುವ ವ್ಯತ್ಯಾಸಗಳ ನಡುವಿರುವ ಸಂಬಂಧಗಳ ಪರಿಶೀಲನೆ ನಡೆಸಲಾಗು ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಬಳಕೆಯಲ್ಲಿವೆಯಾದ ಕಾರಣ ಅವಲ್ಲವನ್ನೂ ಹೋಲಿಸಿ ನೋಡುವ ಕೆಲಸ ಒಬ್ಬ ವ್ಯಕ್ತಿಯ ಜೀವಮಾನದಲ್ಲಿ ನಡೆಯುವಂತಹದಲ್ಲ. ಹಾಗಾಗಿ ಈ ಎರಡನೆಯ ವಿಧಾನವನ್ನನುಸರಿಸುವವರು ಸಾಮಾನ್ಯವಾಗಿ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಗೆ ಮತ್ತು ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿರುವ ನೂರೋ ಇನ್ನೂರೋ ಭಾಷೆಗಳನ್ನು ಮಾದರಿ ಭಾಷೆಗಳನ್ನಾಗಿ ಆರಿಸಿಕೊಂಡು, ಅವುಗಳ ನಡುವೆ ವಾಕ್ಯರಚನೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಾರೆ; ಮತ್ತು, ಈ ರೀತಿ ಮಾದರಿ ಭಾಷೆಗಳ ಅಭ್ಯಾಸದ ಮೂಲಕ ಸಿದ್ಧವಾಗುವ ತಿಳುವಳಿಕೆ ಪ್ರಪಂಚದ ಇತರ ಭಾಷೆಗಳಿಗೂ ಅನ್ವಯಿಸುವಂತಹದಾಗಿರಬಹುದು ಎಂಬುದಾಗಿ ಕಲ್ಪಿಸಿಕೊಳ್ಳುತ್ತಾರೆ.
ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಮುಖ್ಯವಾಗಿರುವ ಕೆಲವನ್ನು ಅಂತಹ ವ್ಯತ್ಯಾಸಗಳ ನಡುವಿರುವ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಈ ಅಧ್ಯಾಯದಲ್ಲಿ ಪರಿಶೀಲಿಸಲಾಗಿದೆ.

Eke →

11.2 ಮುಖ್ಯ ಪದವಗ್ರಗಳು

ವಾಕ್ಯರಚನೆಗಾಗಿ ಎಂತಹ ಪದಗಳನ್ನೆಲ್ಲ ಬಳಸಲಾಗುತ್ತದೆ ಎಂಬ ವಿಷಯದಲ್ಲಿ ಪ್ರಪಂಚದ ಭಾಷೆಗಳ ನಡುವೆ ಕೆಲವು ಪ್ರಾಮುಖ್ಯವಾದ ವ್ಯತ್ಯಾಸಗಳನ್ನು ಕಾಣಬಹುದು. ಉದಾಹರಣೆಗಾಗಿ ಕನ್ನಡದಲ್ಲಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣಪದಗಳು ಎಂಬುದಾಗಿ ಮೂರು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಬಳಕೆಯಾಗುತ್ತವೆ. ಇದಕ್ಕೆ ಬದಲು ಸಂಸ್ಕೃತದಲ್ಲಿ ನಾಮಪದಗಳು ಮತ್ತು ಕ್ರಿಯಾಪದಗಳು ಎಂಬುದಾಗಿ ಎರಡು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಮಾತ್ರ ಬಳಕೆಯಾಗುತ್ತವೆ. ಕನ್ನಡದಲ್ಲಿ ಗುಣಪದಗಳಾಗಿ ಬರುವ ಪದ ಗಳಿಗೆ ಸಮನಾಗಿ ಸಂಸ್ಕೃತದಲ್ಲಿ ನಾಮಪದಗಳೇ ಬರುತ್ತವೆ (ಭಟ್ 1994, 2001 ನೋಡಿ). ಟಿಬೆಟೋ-ಬರ್ಮನ್ ಭಾಷಾಕುಟುಂಬಕ್ಕೆ ಸೇರುವ ಮಣಿಪುರಿ ಭಾಷೆ ಯಲ್ಲೂ ಸಂಸ್ಕೃತದ ಹಾಗೆ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವಗ್ರಗಳಿಗೆ ಸೇರಬಲ್ಲ ಪದಗಳು ಮಾತ್ರ ಬಳಕೆಯಲ್ಲಿವೆ. ಆದರೆ, ಕನ್ನಡದ ಗುಣಪದಗಳಿಗೆ ಬದಲಾಗಿ ಈ ಭಾಷೆಯಲ್ಲಿ ಸಂಸ್ಕೃತದ ಹಾಗೆ ನಾಮ ಪದಗಳು ಬರುವ ಬದಲು ಕ್ರಿಯಾಪದಗಳು ಬರುತ್ತವೆ. ಕನ್ನಡದ ಕಪ್ಪು ಎಂಬ ಗುಣಪದಕ್ಕೆ ಬದಲಾಗಿ ಸಂಸ್ಕೃತದಲ್ಲಿ ಕೃಷ್ಣ: ಎಂಬ ನಾಮಪದ ಬರುವುದಾದರೆ, ಮಣಿಪುರಿಯಲ್ಲಿ ಮೂ ಎಂಬ ಕ್ರಿಯಾಪದ ಬರುತ್ತದೆ. ಈ ಮೂರು ಭಾಷಾಕುಟುಂಬಗಳಿಗೆ ಸೇರಿರುವ ಭಾಷೆಗಳು ಪದಕಂತೆಗಳನ್ನು ರಚಿಸುವುದಕ್ಕಾಗಿ ಮೂರು ಭಿನ್ನ ಭಿನ್ನವಾದ ವಿಧಾನಗಳನ್ನು ಬಳಸುತ್ತಿರುವುದೇ ಈ ರೀತಿ ಅವುಗಳಲ್ಲಿ ಬಳಕೆಯಾಗುವ ಪದವಗ್ರಗಳ ಸಂಖ್ಯೆ ಮತ್ತು ಸ್ವರೂಪ ಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲು ಮುಖ್ಯ ಕಾರಣ.
ಕನ್ನಡದಲ್ಲಿ ಪದಕಂತೆಗಳನ್ನು ರಚಿಸುವುದಕ್ಕಾಗಿ ನಾಮಪದಗಳ ಮುಂದೆ ಅವು ಸೂಚಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವನ್ನು ತಿಳಿಸುವ ಗುಣಪದವೊಂದನ್ನು ಇರಿಸಿ ಹೇಳುವ ವಿಧಾನ ಬಳಕೆಯಲ್ಲಿದೆ ಎಂಬುದನ್ನು ನಾವು ನಾಲ್ಕನೇ ಅಧ್ಯಾಯದಲ್ಲಿ ನೋಡಿರುವೆವು. ಕಪ್ಪು ಹಾವು ಎಂಬ ಪದಕಂತೆಯಲ್ಲಿ ಹಾವು ಎಂಬುದು ಒಂದು ಪ್ರಾಣಿಯನ್ನು ಸೂಚಿಸುತ್ತದೆ, ಮತ್ತು ಕಪ್ಪು ಎಂಬುದು ಅದರ ಗುಣಧರ್ಮವೊಂದನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಪದಕಂತೆಗಳನ್ನು ರಚಿಸಲು ಇದಕ್ಕಿಂತ ತೀರ ಭಿನ್ನವಾದ ವಿಧಾನವೊಂದು ಬಳಕೆಯಲ್ಲಿದೆ. ಎರಡು ನಾಮಪದಗಳನ್ನು ಒಂದೇ ಲಿಂಗ- ವಚನ-ವಿಭಕ್ತಿಗಳಲ್ಲಿರಿಸಿ ಹೇಳಿದಾಗ ಅವೆರಡಕ್ಕೂ ಸಮಾನವಾಗಿರುವ ವ್ಯಕ್ತಿ, ವಸ್ತು, ಮೊದಲಾದವುಗಳಲ್ಲಿ ಒಂದನ್ನು ಅವು ಸೂಚಿಸಬಲ್ಲುವೆಂಬುದೇ ಈ ವಿಧಾನದ ಹಿಂದಿರುವ ವ್ಯಾಕರಣ ತತ್ವ.
ಉದಾಹರಣೆಗಾಗಿ, ಕೃಷ್ಣ: ಸಪ್ರ: ಎಂಬ ಪದಕಂತೆಯಲ್ಲಿ ಎರಡು ನಾಮಪದಗಳನ್ನು ಒಂದೇ ಲಿಂಗ-ವಚನ-ವಿಭಕ್ತಿಯಲ್ಲಿರಿಸಿ ಹೇಳಲಾಗಿದೆ. ಈ ಕಾರಣಕ್ಕಾಗಿ ಈ ಪದಕಂತೆ ಕಪ್ಪಾಗಿಯೂ ಮತ್ತು ಸಪ್ರವಾಗಿಯೂ ಇರುವಂತಹ ಒಂದು ಪ್ರಾಣಿಯನ್ನು ಸೂಚಿಸುತ್ತದೆ. ಸಂಸ್ಕೃತ ಬಳಸುವ ಈ ವಿಧಾನಕ್ಕೆ ನಾಮ ಪದಗಳಿಗಿಂತ ಭಿನ್ನವಾದ ಗುಣಪದಗಳ ಅವಶ್ಯಕತೆಯಿಲ್ಲವಾದ ಕಾರಣ ಸಂಸ್ಕೃತ ದಲ್ಲಿ ಕನ್ನಡದ ಹಾಗೆ ಗುಣಪದವೆಂಬ ಪದವಗ್ರವಿಲ್ಲ. ಮಣಿಪುರಿ ಭಾಷೆಯಲ್ಲಿ ಪದಕಂತೆಗಳನ್ನು ರಚಿಸಲು ಬೇರೆಯೇ ಒಂದು ವಿಧಾನ ಬಳಕೆಯಲ್ಲಿದೆ. ಗುಣಧರ್ಮಗಳನ್ನು ಈ ಭಾಷೆಯಲ್ಲಿ ಕ್ರಿಯಾಪದಗಳ ಮೂಲಕ ಸೂಚಿಸಲಾಗುವುದಾದ ಕಾರಣ, ನಾಮಪದಗಳೊಂದಿಗೆ ಕ್ರಿಯಾಪದಗಳ ಸಂಬಂಧಿಸುವ ರೂಪವನ್ನಿರಿಸಿ ನಾಮಪದಕಂತೆಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗಾಗಿ ಅಮೂಬ ಮೀ ‘ಕಪ್ಪು ಮನುಷ್ಯ’ ಎಂಬ ಪದಕಂತೆಯಲ್ಲಿ ಮೀ ‘ಮನುಷ್ಯ’ ಎಂಬ ನಾಮಪದವನ್ನು ಮೂ ‘ಕಪ್ಪು’ ಎಂಬ ಕ್ರಿಯಾಪದದ ಅಮೂಬ ಎಂಬ ಸಂಬಂಧಕ ರೂಪದೊಂದಿಗೆ ಸೇರಿಸಿ ಬಳಸಲಾಗಿದೆ.
ಕನ್ನಡದಲ್ಲಿ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳನ್ನು ನಾಮಪದ ಗಳೊಂದಿಗೆ ಹೇಗೆ ಬಳಸುತ್ತೇವೆಯೋ ಹಾಗೆಯೇ ಮಣಿಪುರಿಯಲ್ಲಿ ಗುಣಧರ್ಮ ವನ್ನು ಸೂಚಿಸುವ ಪದಗಳನ್ನೂ ಬಳಸಲಾಗುತ್ತದೆ. ಉದಾಹರಣೆಗಾಗಿ ಕನ್ನಡದಲ್ಲಿ ಓಡಿದ ಹುಡುಗ ಎಂಬ ಪದಕಂತೆಯಲ್ಲಿ ಓಡು ಕ್ರಿಯಾಪದದ ಸಂಬಂಧಿಸುವ ರೂಪವಾದ ಓಡಿದ ಎಂಬುದನ್ನು ಹುಡುಗ ನಾಮಪದದೊಂದಿಗೆ ಬಳಸಲಾಗಿದೆ. ಮೇಲೆ ಕೊಟ್ಟಿರುವ ಮಣಿಪುರಿಯ ಅಮೂಬ ಮೀ ಎಂಬ ಪದಕಂತೆಯಲ್ಲಿ ಒಂದು ಗುಣಧರ್ಮವನ್ನು ಸೂಚಿಸುವ ಮೂ ‘ಕಪ್ಪು’ ಎಂಬ ಪದವನ್ನೂ ಇದೇ ವಿಧಾನದ ಮೂಲಕ ಬಳಸಲಾಗಿದೆ. ಈ ಕಾರಣಕ್ಕಾಗಿ, ಮಣಿಪುರಿ ಭಾಷೆಗೆ ಕ್ರಿಯಾಪದಗಳಿಗಿಂತ ಭಿನ್ನವಾದ ಗುಣಪದಗಳೆಂಬ ಪದವಗ್ರದ ಅವಶ್ಯಕತೆಯಿಲ್ಲ. ಈ ಮೂರು ರೀತಿಯ ಭಾಷೆಗಳಿಗಿಂತ ಭಿನ್ನವಾದ ಭಾಷೆಗಳೂ ಪ್ರಪಂಚದ ಲ್ಲಿವೆ. ಉದಾಹರಣೆಗಾಗಿ, ಆಸ್ಟ್ರೋ-ಏಶಿಯಾಟಿಕ್ ಭಾಷಾಕುಟುಂಬಕ್ಕೆ ಸೇರಿರುವ ಮುಂಡಾರಿ ಭಾಷೆಯಲ್ಲಿ ಒಂದೇ ಒಂದು ಪದವಗ್ರಕ್ಕೆ ಸೇರುವ ಪದಗಳು ಮಾತ್ರ ಬಳಕೆಯಲ್ಲಿವೆ. ಇವನ್ನು ಕ್ರಿಯಾಪದಗಳೆಂದಾಗಲಿ ಇಲ್ಲವೇ ಆಖ್ಯಾತ ಪದಗ ಳೆಂದಾಗಲಿ ಕರೆಯಬಹುದು.
ವಾಕ್ಯದ ಅರ್ಥವಿದೆ. ಇಲ್ಲಿ ಒಮ್ ಈ ಭಾಷೆಯಲ್ಲಿ ಬರುವ ವಾಕ್ಯಗಳಲ್ಲಿ ಅತ್ಯವಶ್ಯವಾಗಿ ಇರಬೇಕಾದುದು ಒಂದೇ ಒಂದು ಆಖ್ಯಾತಪದ ಮಾತ್ರ. ಅದು ಒಂದು ಘಟನೆಯನ್ನಾಗಲಿ ಇಲ್ಲವೇ ಒಂದು ಸಂಗತಿಯನ್ನಾಗಲಿ ಸೂಚಿಸುತ್ತದೆ. ಈ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ಘಟಕಗಳನ್ನು ಆಖ್ಯಾತ ಪದದೊಂದಿಗೆ ಬರುವ ಪ್ರತ್ಯಯ ಗಳೇ ಸೂಚಿಸುವುವಾದ ಕಾರಣ, ಈ ಭಾಷೆಗೆ ಆಖ್ಯಾತ ಪದಗಳಿಗಿಂತ ಭಿನ್ನವಾದ ನಾಮಪದಗಳ ಅವಶ್ಯಕತೆಯಿಲ್ಲ. ಇದೇ ಕಾರಣಕ್ಕಾಗಿ ಈ ಭಾಷೆಗೆ ನಾಮಪದ ಕಂತೆಗಳ ಅವಶ್ಯಕತೆಯೂ ಇಲ್ಲ, ವಿಭಕ್ತಿ ಪ್ರತ್ಯಯಗಳ ಅವಶ್ಯಕತೆಯೂ ಇಲ್ಲ, ಮತ್ತು ಗುಣಪದಗಳ ಅವಶ್ಯಕತೆಯೂ ಇಲ್ಲ. ಉದಾಹರಣೆಗಾಗಿ, ಒಮದ್ಕೊಅಇಞ್ ಎಂಬ ಮುಂಡಾರಿ ಭಾಷೆಯ ಆಖ್ಯಾತ ರೂಪಕ್ಕೆ ಕನ್ನಡದ ‘ನಾನು ಅವರಿಗೆ ಏನೋ ಕೊಟ್ಟೆ’ ಎಂಬ ಒಂದು ‘ಕೊಡು’ ಎಂಬ ಆಖ್ಯಾತಪದದೊಂದಿಗೆ ‘ಏನೋ’ ಎಂಬ ಅರ್ಥ ಕೊಡುವ ಅ ಪ್ರತ್ಯಯ, ಹಿಂದಿನ ಸಮಯವನ್ನು ಸೂಚಿಸುವ ದ್ ಪ್ರತ್ಯಯ, ‘ಅವರಿಗೆ’ ಎಂಬುದನ್ನು ಸೂಚಿಸುವ ಕೊ ಪ್ರತ್ಯಯ, ಇದೊಂದು ಆಖ್ಯಾತಪದ ಎಂಬುದನ್ನು ಸೂಚಿಸುವ ಅ ಪ್ರತ್ಯಯ (ಎಂದರೆ ಘಟನೆಯ ಮತ್ತು ಮಾಡುಗನನ್ನು) ಸೂಚಿಸುವ ಇಞ್ ಪ್ರತ್ಯಯ ಇವಿಷ್ಟೂ ಬಂದಿವೆ.
ವಾಕ್ಯಕ್ಕೆ ಬೇಕಾಗುವ ಮುಖ್ಯ ಘಟಕಗಳನ್ನು ಈ ರೀತಿ ಆಖ್ಯಾತ ಪದ ದೊಂದಿಗೆ ಬರುವ ಪ್ರತ್ಯಯಗಳೇ ತಿಳಿಸುವುವಾದ ಕಾರಣ ಈ ಭಾಷೆಗೆ ನಾಮ ಪದಗಳ ಮತ್ತು ಗುಣಪದಗಳ ಅವಶ್ಯಕತೆಯಿಲ್ಲ. ಘಟಕಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಸಬೇಕಾದಾಗ ಮಾತ್ರ ಮುಂಡಾರಿ ಭಾಷೆ ಇಂತಹ ಆಖ್ಯಾತ ಪದಗಳೊಂದಿಗೆ ತುಂಡುವಾಕ್ಯಗಳನ್ನು ಬಳಸಿಕೊಳ್ಳುತ್ತದೆ. ಅಮೆರಿಕಾದಲ್ಲಿ ಬಳಕೆ ಯಲ್ಲಿರುವ ಸಾಲಿಶಾನ್ ಮತ್ತು ವಾಕಶಾನ್ ಭಾಷಾಕುಟುಂಬಗಳಿಗೆ ಸೇರಿದ ಒಕನಗನ್, ಲಿಲ್ಲೋಎತ್, ಮಕಾ ಮೊದಲಾದ ಭಾಷೆಗಳೂ ಈ ವಿಷಯದಲ್ಲಿ ಮುಂಡಾರಿ ಭಾಷೆಯನ್ನು ಹೋಲುತ್ತವೆ (ಜಾಸ್ತಿ ವಿವರಗಳಿಗೆ ಭಟ್ 1994 ನೋಡಿ). ‘ನಾನು’ ಎಂಬುದಾಗಿ ಕೊಡುವವನನ್ನು

Eke →

11.3 ಮುಖ್ಯವಲ್ಲದ ಪದವಗ್ರಗಳು

ಕನ್ನಡದಲ್ಲಿ ಮೇಲೆ ವಿವರಿಸಿದ ಹಾಗೆ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಮುಖ್ಯ ಪದವಗ್ರಗಳಿಗೆ ಸೇರಿದ ಪದಗಳು ಮಾತ್ರ ವಲ್ಲದೆ, ಪುರುಷವಾಚಕ ಪದಗಳು, ಸವ್ರಪದಗಳು, ಎಣಿಕೆಯ ಪದಗಳು ಮತ್ತು ಅವ್ಯಯಗಳು ಎಂಬುದಾಗಿ ನಾಲ್ಕು ಮುಖ್ಯವಲ್ಲದ ಪದವಗ್ರಗಳಿಗೆ ಸೇರಿದ ಪದ ಗಳೂ ಬಳಕೆಯಲ್ಲಿವೆ. ಇಂತಹ ಪದಗಳ ಬಳಕೆಯಲ್ಲೂ ಪ್ರಪಂಚದ ಭಾಷೆಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿವೆ. ಹೆಚ್ಚಿನ ವ್ಯಾಕರಣಗಳಲ್ಲೂ ಪುರುಷವಾಚಕ ಪದಗಳು ಮತ್ತು ಸವ್ರಪದ ಗಳು ಎಂಬ ಈ ಎರಡು ಪದವಗ್ರಗಳಿಗೆ ಸೇರಿದ ಪದಗಳನ್ನು ‘ಸವ್ರನಾಮ’ ಎಂಬ ಹೆಸರಿನ ಒಂದೇ ಪದವಗ್ರದಲ್ಲಿ ಸೇರಿಸಿ ಹೇಳುವುದು ರೂಢಿ. ಆದರೆ ನಿಜಕ್ಕೂ ಈ ಎರಡು ರೀತಿಯ ಪದಗಳ ನಡುವೆ ಸಾಮ್ಯವೇನೂ ಇಲ್ಲವಾದ ಕಾರಣ ಅವನ್ನು ಒಂದೇ ಪದವಗ್ರದಲ್ಲಿ ಸೇರಿಸಿ ಹೇಳಲು ಯಾವ ಅಧಾರವೂ ಇಲ್ಲ (ಭಟ್ 2003, 2004 ನೋಡಿ). ಒಂದು ವಾಕ್ಯದ ಆಡುಗ ಮತ್ತು ಕೇಳುಗ ಎಂಬ ಎರಡು ಪಾತ್ರಗಳನ್ನು ಆ ವಾಕ್ಯದಲ್ಲೇನೇ ಸೂಚಿಸಬೇಕಾದಾಗ ಕನ್ನಡದಲ್ಲಿ ನಾನು ಮತ್ತು ನೀನು ಎಂಬ ಪುರುಷವಾಚಕ ಪದಗಳನ್ನು ಬಳಸಲಾಗುತ್ತದೆ. ಟಿಬೆಟೋ-ಬರ್ಮನ್ ಭಾಷಾ ಕುಟುಂಬಕ್ಕೆ ಸೇರಿದ ಅಙಾಮಿ, ಮಾವೋ ನಾಗ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ಇವೆರಡು ಪಾತ್ರಗಳಿಗಿಂತ ಭಿನ್ನವಾಗಿರುವ ಮೂರನೆಯದೊಂದು ಪಾತ್ರವನ್ನು ಸೂಚಿಸುವುದಕ್ಕಾಗಿಯೂ ಪುರುಷವಾಚಕ ಪದಗಳ ಬಳಕೆಯಾಗುತ್ತದೆ (ಕನ್ನಡದಲ್ಲಿ ಇದಕ್ಕಾಗಿ ಅವನು, ಅವಳು ಮೊದಲಾದ ಸವ್ರಪದಗಳನ್ನು ಬಳಸ ಲಾಗುತ್ತದೆ).
ಕ್ರಿಯಾಪದದ ಕೊನೆಯಲ್ಲಿ ಬರುವ ಪ್ರತ್ಯಯದ ಮೂಲಕವೂ ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಹೋಗುತ್ತೇನೆ ಮತ್ತು ಹೋಗುತ್ತಿ ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಏನೆ ಮತ್ತು ಇ ಪ್ರತ್ಯಯಗಳು ಆಡುಗ ಮತ್ತು ಕೇಳುಗರನ್ನು ಸೂಚಿಸುತ್ತವೆ. ಆದರೆ, ಕನ್ನಡದಲ್ಲಿ ಇಂತಹ ಪುರುಷವಾಚಕ ಪ್ರತ್ಯಯಗಳಿಗಿಂತ ಪುರುಷವಾಚಕ ಪದಗಳಿಗೇನೇ ಹೆಚ್ಚಿನ ಪ್ರಾಮುಖ್ಯತೆಯಿದೆ.
ಇದಲ್ಲದೆ, ಪುರುಷವಾಚಕ ಪದಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುವ ಮಣಿಪುರಿಯಂತಹ ಬೇರೆ ಹಲವು ಭಾಷೆಗಳಲ್ಲಿ ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದ ಕೊನೆಯಲ್ಲಿ ಪ್ರತ್ಯಯಗಳನ್ನು ಬಳಸುವ ಈ ಎರಡನೆಯ ವಿಧಾನವೇ ಬಳಕೆಯಲ್ಲಿಲ್ಲ.
ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವುದಕ್ಕಾಗಿ ವಿಶಿಷ್ಟವಾದ ಪದಗಳ ಬದಲು ಪ್ರತ್ಯಯಗಳನ್ನೇ ಬಳಸುವ ಭಾಷೆಗಳೂ ಹಲವಿವೆ. ಇಂತಹ ಭಾಷೆಗಳಲ್ಲಿ ಸ್ವತಂತ್ರವಾದ ನಾನು, ನೀನು ಎಂಬಂತಹ ಪದಗಳಿದ್ದರೂ ಅವಕ್ಕೆ ಜಾಸ್ತಿ ಪ್ರಾಮುಖ್ಯತೆಯಿಲ್ಲ. ಅಂತಹ ಪದಗಳೇ ಇಲ್ಲದ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ, ಕಯುವಾವಾ ಎಂಬ ಭಾಷೆಯಲ್ಲಿ ಆಡುಗ ಮತ್ತು ಕೇಳುಗ ರನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಬರಬಲ್ಲ ಪ್ರತ್ಯಯಗಳಿವೆಯಲ್ಲದೆ ಸ್ವತಂತ್ರವಾಗಿ ಬರಬಲ್ಲ ಪದಗಳಿಲ್ಲ. ಸವ್ರಪದಗಳ ಒಂದು ವೈಶಿಷ್ಟ್ಯವೇನೆಂದರೆ, ಅವುಗಳಲ್ಲೆಲ್ಲ ಎರಡೆರಡು ಅಂಗಗಳಿರುತ್ತವೆ. ಇವುಗಳಲ್ಲಿ ಒಂದು ಅಂಗ ಸವ್ರಪದಗಳು ವಾಕ್ಯದಲ್ಲಿ ನಡೆಸ ಬೇಕಾಗಿರುವ ಕೆಲಸ ಏನೆಂಬುದನ್ನೂ ಮತ್ತು ಇನ್ನೊಂದು ಅಂಗ ಅವುಗಳ ವ್ಯಾಪ್ತಿ ಎಂತಹದು ಎಂಬುದನ್ನೂ ಸೂಚಿಸುತ್ತವೆ.
ಉದಾಹರಣೆಗಾಗಿ, ಕನ್ನಡದ ಸವ್ರಪದಗಳಾದ ಇವಳು ಮತ್ತು ಅವಳು ಎಂಬವುಗಳಲ್ಲಿ ಮೊದಲನೆಯ ಅಂಗವಾದ ‘ಇ’ ಮತ್ತು ‘ಅ’ಗಳು ಆ ಪದಕ್ಕೆ ಘಟಕವೊಂದನ್ನು ನಿರ್ದೇಶಿಸುವ ಕೆಲಸವಿದೆಯೆಂದೂ ಮತ್ತು ಎರಡನೆಯ ಅಂಗ ವಾದ ವಳು ಎಂಬುದು ಆ ಪದಕ್ಕೆ ಹೆಂಗಸರಿಗಷ್ಟೇ ಸೀಮಿತವಾಗಿರುವ ವ್ಯಾಪ್ತಿ ಯಿದೆಯೆಂದೂ ತಿಳಿಸುತ್ತವೆ. ಘಟಕ ಆಡುಗನ ಹತ್ತಿರದ್ದು ಎಂಬುದಾಗಿ ‘ಇ’ ಸೂಚಿಸುತ್ತದೆ, ಮತ್ತು ಘಟಕ ಆಡುಗನಿಗಿಂತ ದೂರದ್ದು ಎಂಬುದಾಗಿ ‘ಅ’ ಸೂಚಿಸುತ್ತದೆ. ಕನ್ನಡದಲ್ಲಿ ಈ ರೀತಿ ಸವ್ರಪದದ ಕೆಲಸವನ್ನು ಸೂಚಿಸುವ ಅಂಗ ಮೊದಲು ಬರುತ್ತದೆ ಮತ್ತು ಅದರ ವ್ಯಾಪ್ತಿಯನ್ನು ಸೂಚಿಸುವ ಅಂಗ ಅನಂತರ ಬರುತ್ತದೆ. ಆದರೆ ಹವಾಯಿಯನ್, ಸಮೊವಾ, ತಗಲೋಗ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ವ್ಯಾಪ್ತಿಯನ್ನು ಸೂಚಿಸುವ ಅಂಗ ಮೊದಲು ಬರುತ್ತದೆ, ಮತ್ತು ಕೆಲಸವನ್ನು ಸೂಚಿಸುವ ಅಂಗ ಅನಂತರ ಬರುತ್ತದೆ.
ಸಾಮಾನ್ಯವಾಗಿ ವಾಕ್ಯದಲ್ಲಿ ಕ್ರಿಯಾಪದ ಮೊದಲಿಗೆ ಬರುವ ಭಾಷೆಗಳಲ್ಲಿ ಈ ರೀತಿ ಸವ್ರಪದದ ವ್ಯಾಪ್ತಿಯನ್ನು ಸೂಚಿಸುವ ಅಂಗ ಅದರ ಕೆಲಸವನ್ನು ಸೂಚಿಸುವ ಅಂಗಕ್ಕಿಂತ ಮೊದಲಿಗೆ ಬರುತ್ತದೆ ಮತ್ತು ವಾಕ್ಯದಲ್ಲಿ ಕ್ರಿಯಾಪದ ಕೊನೆಗೆ ಬರುವ ಕನ್ನಡ, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ಅದು ಸವ್ರ ಪದದ ಕೆಲಸವನ್ನು ಸೂಚಿಸುವ ಅಂಗದ ಅನಂತರ ಬರುತ್ತದೆ (11.3 ನೋಡಿ). ಕನ್ನಡದಲ್ಲಿ ಮುಖ್ಯವಾಗಿ ಮೂರು ಕೆಲಸಗಳನ್ನು ನಡೆಸಬಲ್ಲ ಸವ್ರಪದ ಗಳಿವೆ (ಇವನು-ಅವನು-ಯಾವನು, ಇಲ್ಲಿ-ಅಲ್ಲಿ-ಎಲ್ಲಿ, ಇಷ್ಟು-ಅಷ್ಟು- ಎಷ್ಟು, ಇಂತಹ-ಅಂತಹ-ಎಂತಹ, ಇತ್ಯಾದಿ). ಇವುಗಳಲ್ಲಿ ಮೊದಲಿನವೆರಡು ವ್ಯಕ್ತಿ, ವಸ್ತು, ಜಾಗ, ಅಳತೆ ಮೊದಲಾದವುಗಳನ್ನು ನಿರ್ದೇಶಿಸುತ್ತವೆ ಮತ್ತು ಮೂರನೆಯದು (ಯಾರು, ಎಲ್ಲಿ, ಎಷ್ಟು ಇತ್ಯಾದಿ) ಅವುಗಳ ವಿಷಯವಾಗಿ ಅನಿಶ್ಚಿತತೆಯನ್ನು ಸೂಚಿಸುತ್ತದೆ (10.4.1 ನೋಡಿ). ವ್ಯಕ್ತಿ, ವಸ್ತು, ಜಾಗ ಮೊದಲಾದುವನ್ನು ನಿರ್ದೇಶಿಸುವುದಕ್ಕಾಗಿ ಕನ್ನಡದಲ್ಲಿ ಆಡುಗನ ಹತ್ತಿರ ಮತ್ತು ದೂರ ಎಂಬುದಾಗಿ ಎರಡು ಜಾಗಗಳನ್ನು ಸೂಚಿಸಬಲ್ಲ ಸವ್ರಪದಗಳು ಮಾತ್ರ ಇವೆ. ಇದಕ್ಕಿಂತ ಜಾಸ್ತಿ ಜಾಗಗಳನ್ನು ಸೂಚಿಸಬಲ್ಲ ಭಾಷೆಗಳೂ ಹಲವಿವೆ. ಉದಾಹರಣೆಗಾಗಿ ಕೆಲವು ನಾಗಾ ಭಾಷೆಗಳಲ್ಲಿ ಆಡುಗನ ಹತ್ತಿರ, ಕೇಳುಗನ ಹತ್ತಿರ ಮತ್ತು ಇಬ್ಬರಿಗಿಂತಲೂ ದೂರ ಎಂಬುದಾಗಿ ಮೂರು ಜಾಗಗಳನ್ನು ಸೂಚಿಸಬಲ್ಲ ಪದಗಳಿವೆ. ಇದಲ್ಲದೆ, ಕಾಣಿಸುವ, ಕಾಣಿಸದ, ಮೇಲಿನ, ಕೆಳಗಿನ ಮೊದಲಾದ ಬೇರೆಯೂ ಹಲವು ರೀತಿಯ ವ್ಯತ್ಯಾಸಗಳನ್ನು ಇಂತಹ ನಿರ್ದೇಶಿಸುವ ಸವ್ರಪದಗಳಲ್ಲಿ ಕಾಣಿಸಬಲ್ಲ ಭಾಷೆಗಳೂ ಹಲವಿವೆ. ಇದಲ್ಲದೆ, ಸವ್ರಪದಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸದ ವಿಷಯ ದಲ್ಲಾಗಲೀ ಇಲ್ಲವೇ ಅವುಗಳ ವ್ಯಾಪ್ತಿಯ ವಿಷಯದಲ್ಲಾಗಲೀ ಯಾವ ರೀತಿಯ ವ್ಯತ್ಯಾಸವನ್ನೂ ತೋರಿಸದಿರುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ ನೈಜರ್-ಕೋಂಗೋ ಭಾಷಾಕುಟುಂಬಕ್ಕೆ ಸೇರಿದ ಲ್ಯೇಲೇ ಎಂಬ ಭಾಷೆಯಲ್ಲಿ ಒಂದೇ ಸವ್ರಪದವನ್ನು ಎಲ್ಲಾ ರೀತಿಯ ಕೆಲಸಗಳಿಗಾಗಿಯೂ (ವ್ಯಕ್ತಿ, ವಸ್ತು ಮೊದಲಾದುವನ್ನು ನಿರ್ದೇಶಿಸುವುದಕ್ಕಾಗಿ ಮತ್ತು ಅವುಗಳ ಕುರಿತಾಗಿ ಅನಿಶ್ಚಿತತೆ ಯನ್ನು ಸೂಚಿಸುವುದಕ್ಕಾಗಿ) ಒಂದೇ ಸವ್ರಪದದ ಬಳಕೆಯಿದೆ (ಜಾಸ್ತಿ ವಿವರ ಗಳಿಗೆ ಭಟ್ 2004 ನೋಡಿ).

Eke →

11.4 ಪದಗಳ ಅನುಕ್ರಮ

ಕನ್ನಡ ವಾಕ್ಯಗಳಲ್ಲಿ ಕ್ರಿಯಾಪದಗಳು ಸಾಮಾನ್ಯವಾಗಿ ವಾಕ್ಯದ ಕೊನೆಯಲ್ಲಿ ಬರುತ್ತವೆ, ಮತ್ತು ವಾಕ್ಯದ ಇತರ ಅಂಗಗಳಾಗಿ ಬರುವ ಘಟಕಗಳು ಮತ್ತು ಗುಣಪದಗಳು ಈ ಕ್ರಿಯಾಪದಗಳ ಎಡಕ್ಕೆ ಬರುತ್ತವೆ.
ಇದಕ್ಕೆ ಬದಲು ಐರಿಶ್, ಹವಾಯಿಯನ್, ತಗಲೋಗ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲಿ ಕ್ರಿಯಾಪದಗಳು ವಾಕ್ಯದಲ್ಲಿ ಮೊದಲನೆಯ ಪದವಾಗಿ ಬರುತ್ತವೆ, ಮತ್ತು ಉಳಿದುವು (ಘಟಕಗಳು ಮತ್ತು ಗುಣಪದಗಳು) ಅವುಗಳ ಅನಂತರ ಬರುತ್ತವೆ.
ಇಂಗ್ಲಿಷ್, ಕಾಶ್ಮೀರಿ, ಮೊದಲಾದ ಇನ್ನು ಕೆಲವು ಭಾಷೆಗಳಲ್ಲಿ ಕ್ರಿಯಾ ಪದಗಳು ವಾಕ್ಯದ ನಡುವೆ ಬರುತ್ತವೆ. ವಾಕ್ಯಘಟಕಗಳಲ್ಲಿ ಒಂದು (ವಾಕ್ಯದ ಕತ್ರೃವನ್ನು ಸೂಚಿಸುವ ಘಟಕ) ಈ ಕ್ರಿಯಾಪದದ ಮೊದಲು ಬರುತ್ತದೆ ಮತ್ತು ಉಳಿದುವು ಅದರ ಅನಂತರ ಬರುತ್ತವೆ. ಕನ್ನಡ ವಾಕ್ಯಗಳಲ್ಲಿ ಕ್ರಿಯಾಪದ ಕೊನೆಯಲ್ಲಿ ಬರುವುದಾದ ಕಾರಣ, ಅದರ ಗುಣಪದಗಳು ನಾಮಪದ, ಕ್ರಿಯಾಪದ ಇಲ್ಲವೇ ಬೇರೊಂದು ಗುಣಪದದ ಎಡಕ್ಕೆ ಬರುತ್ತವೆ (ಕೆಳಗೆ ಕೊಟ್ಟಿರುವ (1ಕ-ಗ) ನೋಡಿ), ಸಂಬಂಧಿಸುವ ಪದ ಮತ್ತು ವಾಕ್ಯಗಳು ಅವು ಸಂಬಂಧಿಸುವ ನಾಮಪದದ ಎಡಕ್ಕೆ ಬರುತ್ತವೆ (1ಘ-ಙ), ಹೋಲಿಕೆಯ ಪದಗಳು ಗುಣಪದದ ಎಡಕ್ಕೆ ಬರುತ್ತವೆ (1ಚ) ಮತ್ತು ಮುಖ್ಯ ಕ್ರಿಯಾಪದಗಳು ಉಪಕ್ರಿಯಾಪದದ ಎಡಕ್ಕೆ ಬರುತ್ತವೆ (1ಛ).
(1ಕ) ದೊಡ್ಡ ಪುಸ್ತಕ (1ಖ) ಬೇಗ ಬಂದ (1ಗ) ಬಹಳ ದೊಡ್ಡ ಮನೆ (1ಘ) ರಾಜನ ಪುಸ್ತಕ (1ಙ) ರಾಜನಿಗೆ ಕೊಟ್ಟ ಪುಸ್ತಕ (1ಚ) ರಾಜುವಿಗಿಂತ ದೊಡ್ಡ (ಹುಡುಗ) (1ಛ) ಕುಳಿತಿದ್ದಾನೆ ಇದಕ್ಕೆ ಬದಲು, ವಾಕ್ಯದಲ್ಲಿ ಮೊದಲಿಗೆ ಕ್ರಿಯಾಪದ ಬರುವಂತಹ ಐರಿಷ್, ಹವಾಯಿಯನ್ ಮೊದಲಾದ ಭಾಷೆಗಳಲ್ಲಿ ಈ ವಾಕ್ಯಾಂಗಗಳ ಅನುಕ್ರಮ ಕನ್ನಡದಲ್ಲಿ ಕಾಣಿಸುವ ಅನುಕ್ರಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇವುಗಳಲ್ಲಿ ಗುಣಪದಗಳು ನಾಮಪದ, ಕ್ರಿಯಾಪದ ಮತ್ತು ಬೇರೆ ಗುಣಪದಗಳ ಬಲಕ್ಕೆ ಬರುತ್ತವೆ, ಸಂಬಂಧಿಸುವ ಪದಗಳು ಮತ್ತು ಸಂಬಂಧಿಸುವ ವಾಕ್ಯಗಳು ನಾಮ ಪದದ ಬಲಕ್ಕೆ ಬರುತ್ತವೆ, ಹೋಲಿಕೆಯ ಪದಗಳು ಗುಣಪದದ ಬಲಕ್ಕೆ ಬರು ತ್ತವೆ, ಮತ್ತು ಮುಖ್ಯಕ್ರಿಯಾಪದಗಳು ಉಪಕ್ರಿಯಾಪದದ ಬಲಕ್ಕೆ ಬರುತ್ತವೆ. ಕ್ರಿಯಾಪದ ವಾಕ್ಯದ ನಡುವೆ ಬರುವ ಇಂಗ್ಲಿಷ್ನಂತಹ ಭಾಷೆಗಳಲ್ಲಿ ಮೇಲಿನ ಕೆಲವು ರಚನೆಗಳು ಕ್ರಿಯಾಪದ ವಾಕ್ಯದ ಕೊನೆಯಲ್ಲಿ ಬರುವ ಕನ್ನಡದ ರಚನೆಗಳ ಹಾಗಿವೆ, ಆದರೆ ಬೇರೆ ಕೆಲವು ರಚನೆಗಳು ಕ್ರಿಯಾಪದ ವಾಕ್ಯದಲ್ಲಿ ಮೊದಲಿಗೆ ಬರುವ ಐರಿಷ್, ತಗಲೋಗ್ ಮೊದಲಾದ ಭಾಷೆಗಳಲ್ಲಿರುವ ಹಾಗೆ ಉದಾಹರಣೆಗಾಗಿ, ಇಂಗ್ಲಿಷ್ನ ಗುಣಪದಗಳು ಕನ್ನಡದಲ್ಲಿರುವ ಹಾಗೆ ನಾಮಪದ ಇಲ್ಲವೇ ಗುಣಪದದ ಎಡಕ್ಕೆ ಬರುತ್ತವೆ (gooಜ boಥಿ, veಡಿಥಿ gooಜ), ಆದರೆ ಕ್ರಿಯಾಪದದ ಬಲಕ್ಕೆ ಬರುತ್ತವೆ (ಛಿಚಿme quiಛಿಞಟಥಿ); ಸಂಬಂಧಿಸುವ ಪದಗಳು ನಾಮಪದದ ಎಡಕ್ಕೂ ಬರಬಲ್ಲುವು (ಎohಟಿ’s booಞ), ಬಲಕ್ಕೂ ಬರಬಲ್ಲುವು (booಞ oಜಿ ಎohಟಿ); ಸಂಬಂಧಿಸುವ ವಾಕ್ಯಗಳು ನಾಮಪದದ ಬಲಕ್ಕೆ ಬರುತ್ತವೆ (ಣhe booಞ ಣhಚಿಣ ಎohಟಿ gಚಿve); ಹೋಲಿಕೆಯ ಪದಗಳು ಗುಣಪದದ ಬಲಕ್ಕೆ ಬರುತ್ತವೆ (biggeಡಿ ಣhಚಿಟಿ ಎohಟಿ); ಮತ್ತು ಮುಖ್ಯಕ್ರಿಯಾಪದಗಳು ಉಪಕ್ರಿಯಾಪದದ ಬಲಕ್ಕೆ ಬರುತ್ತವೆ (is siಣಣiಟಿg).
ಇಲ್ಲಿ ಹೆಚ್ಚಿನ ವಿಷಯಗಳಲ್ಲೂ ಇಂಗ್ಲಿಷ್ ಭಾಷೆಯ ವಾಕ್ಯರಚನೆ ಕನ್ನಡದ ವಾಕ್ಯರಚನೆಗಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಇದಕ್ಕೆ ಇಂಗ್ಲಿಷ್ ನಲ್ಲಿ ಬಾಧಿತ ಘಟಕ ಕ್ರಿಯಾಪದದ ಬಲಕ್ಕೆ ಬರುವುದೇ ಮುಖ್ಯ ಕಾರಣ (ಜಾಸ್ತಿ ವಿವರಗಳಿಗೆ ಗ್ರೀನ್ಬಗ್್ರ 1963, ಹಾಕಿನ್್ಸ 1983 ಮತ್ತು ಪ್ರೈಮಸ್ 2001 ನೋಡಿ). ಸವ್ರಪದಗಳಲ್ಲಿ ಬರುವ ಎರಡು ಅಂಗಗಳಲ್ಲಿ ಯಾವುದು ಮೊದಲು ಬರು ತ್ತದೆ ಎಂಬುದೂ ವಾಕ್ಯದಲ್ಲಿ ಕ್ರಿಯಾಪದ ಎಲ್ಲಿ ಬರುತ್ತದೆ (ಸುರುವಿನಲ್ಲೋ ಕೊನೆಯಲ್ಲೋ) ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ನಾವು ಮೇಲೆ (11-2)ರಲ್ಲಿ ನೋಡಿರುವೆವು.

Eke →

11.5 ವ್ಯಾಕರಣ ಸಂಬಂಧ

ವಾಕ್ಯವೊಂದರಲ್ಲಿ ಬರುವ ಘಟಕಗಳ ಮೂಲಕ ಅರ್ಥ ಮತ್ತು ವ್ಯವಹಾರ ಎಂಬುದಾಗಿ ಎರಡು ರೀತಿಯ ಸಂಬಂಧಗಳನ್ನು ಸೂಚಿಸುವ ಅವಶ್ಯಕತೆಯಿದೆ ಎಂಬುದನ್ನು ನಾವು ಎರಡನೇ ಅಧ್ಯಾಯದಲ್ಲಿ ನೋಡಿರುವೆವು. ಕನ್ನಡದಲ್ಲಿ ಅರ್ಥ ಸಂಬಂಧವನ್ನು ವಿಭಕ್ತಿ ಪ್ರತ್ಯಯಗಳ ಮೂಲಕವೂ ಮತ್ತು ವ್ಯವಹಾರ ಸಂಬಂಧವನ್ನು ಇದಕ್ಕಿಂತ ತೀರ ಭಿನ್ನವಾದ ಬೇರೆ ಕೆಲವು ವಿಧಾನಗಳ (ಘಟಕ ಗಳ ಅನುಕ್ರಮ, ಘಟಕವೊಂದನ್ನು ಒತ್ತಿ ಹೇಳುವುದು ಇಲ್ಲವೇ ವಾಕ್ಯದ ಉಳಿದ ಭಾಗದೊಂದಿಗೆ ಸಂಬಂಧಿಸಿ ಹೇಳುವುದು, ಇತ್ಯಾದಿಗಳ) ಮೂಲಕವೂ ಸೂಚಿಸ ಲಾಗುತ್ತದೆ (2.7 ನೋಡಿ). ಕನ್ನಡದಲ್ಲಿ ಈ ಎರಡು ಸಂಬಂಧಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ಇರಿಸ ಲಾಗಿದೆ. ಇದಲ್ಲದೆ, ಕನ್ನಡದ ವಾಕ್ಯರಚನೆಯಲ್ಲಿ ಅರ್ಥಕ್ಕೆ ಸಂಬಂಧಿಸಿದವು ಮತ್ತು ವ್ಯವಹಾರಕ್ಕೆ ಸಂಬಂಧಿಸಿದವು ಎಂಬುದಾಗಿ ಎರಡು ರೀತಿಯ ವಿಧಾನ ಗಳು ಬಳಕೆಯಾಗುತ್ತಿದ್ದು, ಇವುಗಳಲ್ಲಿ ಅರ್ಥಕ್ಕೆ ಸಂಬಂಧಿಸಿದ ವಿಧಾನಗಳನ್ನು ಅರ್ಥವೇ ನಿಯಂತ್ರಿಸುತ್ತದೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಧಾನಗಳನ್ನು ವ್ಯವಹಾರವೇ ನಿಯಂತ್ರಿಸುತ್ತದೆ. ಉದಾಹರಣೆಗಾಗಿ, ಕನ್ನಡದಲ್ಲಿ ಎರಡು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೂರು ವಿಧಾನಗಳು ಬಳಕೆಯಲ್ಲಿವೆಯೆಂಬುದನ್ನು ನಾವು ಎಂಟನೆಯ ಅಧ್ಯಾಯ ದಲ್ಲಿ ನೋಡಿರುವೆವು. ಇವುಗಳಲ್ಲಿ ಮೊದಲನೆಯ ಎರಡು ವಿಧಾನಗಳನ್ನು (ಮತ್ತು ಪದವನ್ನು ಬಳಸಿ ಹಾಗೂ ಊ ಪ್ರತ್ಯಯವನ್ನು ಬಳಸಿ ಎರಡು ವಾಕ್ಯ ಗಳನ್ನು ಜೋಡಿಸುವುದು) ವಾಕ್ಯದ ವ್ಯವಹಾರಕ್ಕೆ ಸಂಬಂಧಿಸಿದ ವಿಧಾನಗಳೆಂದೂ ಮತ್ತು ಮೂರನೆಯ ವಿಧಾನವನ್ನು (ಮೊದಲನೆಯ ವಾಕ್ಯದ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಅದನ್ನು ಎರಡನೆಯ ದರೊಂದಿಗೆ ಜೋಡಿಸುವುದು) ವಾಕ್ಯದ ಅರ್ಥಕ್ಕೆ ಸಂಬಂಧಿಸಿದ ವಿಧಾನವೆಂದೂ ಹೇಳಲು ಸಾಧ್ಯವಿದೆ. ಇವುಗಳಲ್ಲಿ ಮೂರನೆಯ ವಿಧಾನ ಉಳಿದ ಎರಡು ವಿಧಾನಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ ಎಂಬುದನ್ನು ನಾವು 8.2.3ರಲ್ಲಿ ನೋಡಿರುವೆವು. ಈ ವ್ಯತ್ಯಾಸಗಳಲ್ಲಿ ಹೆಚ್ಚಿನವಕ್ಕೂ ಮೂರನೆಯ ವಿಧಾನದ ನಿಯಂತ್ರಣ ವಾಕ್ಯದ ಅರ್ಥದ ಮೇಲೆ ಅವಲಂಬಿಸಿರುವುದೇ ಕಾರಣ. ಉದಾಹರಣೆಗಾಗಿ, ಎರಡು ಘಟನೆಗಳು ಅವನ್ನು ನಡೆಸುವ ಎರಡು ವ್ಯಕ್ತಿ ಗಳ ಹತೋಟಿಯಲ್ಲಿರುವವುಗಳಾದರೆ, ಅವನ್ನು ಮತ್ತು ಪದದ ಮೂಲಕ ಇಲ್ಲವೇ ಊ ಪ್ರತ್ಯಯದ ಮೂಲಕ ಜೋಡಿಸಲು ಸಾಧ್ಯವಿದೆ, ಆದರೆ ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಲು ಸಾಧ್ಯವಾಗದು. ಬೇಯಿಸಿದಳು. ಬೇಯಿಸಿದ ಮತ್ತು ಜಾನಕಿ ಅನ್ನ (2ಖ) ರಾಜು ತರಕಾರಿಯನ್ನೂ ಜಾನಕಿ ಅನ್ನವನ್ನೂ ಬೇಯಿಸಿದರು. ರಾಜು ತರಕಾರಿಯನ್ನು ಬೇಯಿಸಿ ಸಾಂಬಾರ್ ಮಾಡಿದ. ಜೋಡಿಸುವ ಕ್ರಿಯಾರೂಪದ ಮೂಲಕ ನಡೆಸುವವನ ಹತೋಟಿಯಲ್ಲಿರುವ ಎರಡು ಘಟನೆಗಳನ್ನು ಜೋಡಿಸಿ ಹೇಳಬೇಕಿದ್ದಲ್ಲಿ ಅವೆರಡೂ ಒಂದೇ ವ್ಯಕ್ತಿಯ ಹತೋಟಿಯಲ್ಲಿರುವುದು ಅವಶ್ಯ ಎಂಬುದನ್ನು (2ಗ) ಸೂಚಿಸುತ್ತದೆ. ಒಂದು ಘಟನೆ ಹತೋಟಿಯಲ್ಲಿದ್ದು ಇನ್ನೊಂದು ಹತೋಟಿಯಲ್ಲಿಲ್ಲವಾದಲ್ಲಿ ಮಾತ್ರ ಅವೆರಡನ್ನು ಬೇರೆ ಬೇರೆ ವ್ಯಕ್ತಿಗಳು ನಡೆಸುತ್ತಿದ್ದರೂ ಜೋಡಿಸುವ ಕ್ರಿಯಾ ರೂಪದ ಮೂಲಕ ಜೋಡಿಸಲು ಸಾಧ್ಯವಿದೆ. (2ಘ) ರಾಜು ಬೊಬ್ಬೆಹಾಕಿ ಮಗುವಿಗೆ ಎಚ್ಚರವಾಯಿತು. (2ಘ)ದಲ್ಲಿ ಎಚ್ಚರವಾಗುವ ಘಟನೆ ಮಗುವಿನ ಹತೋಟಿಯಲ್ಲಿಲ್ಲವಾದ ಕಾರಣ ಅದನ್ನು ರಾಜು ಬೊಬ್ಬೆಹಾಕುವ ಘಟನೆಯೊಂದಿಗೆ ಜೋಡಿಸುವ ಕ್ರಿಯಾರೂಪದ ಮೂಲಕ ಜೋಡಿಸಿ ಹೇಳಲು ಸಾಧ್ಯವಾಗಿದೆ (4.3.2 ನೋಡಿ).
ಮತ್ತು ಎಂಬುದರ ಮೂಲಕ ಜೋಡಿಸಿದ ವಾಕ್ಯಗಳಲ್ಲಿ ಎರಡು ಬೇರೆ ಬೇರೆ ಸಮಯಗಳನ್ನು ಸೂಚಿಸುವ ಪದಗಳು ಬರಬಲ್ಲುವು, ಆದರೆ ಜೋಡಿಸುವ ಕ್ರಿಯಾರೂಪವನ್ನು ಬಳಸಿ ಜೋಡಿಸಿದ ವಾಕ್ಯಗಳಲ್ಲಿ ಇದು ಸಾಧ್ಯವಾಗಲಾರದು. ರಾಜು ನಿನ್ನೆ ಮೈಸೂರಿಗೆ ಹೋಗಿದ್ದ ಮತ್ತು ಇವತ್ತು ಅಲ್ಲಿಂದ ಒಂದು ಟಿವಿ ತಂದಿದ್ದಾನೆ. (3ಖ) ರಾಜು ಮೈಸೂರಿಗೆ ಹೋಗಿ ಒಂದು ಟಿವಿ ತಂದಿದ್ದಾನೆ. ಮೇಲೆ ವಿವರಿಸಿರುವ ಎರಡು ರೀತಿಯ ಸನ್ನಿವೇಶಗಳಲ್ಲೂ ಜೋಡಿಸುವ ಕ್ರಿಯಾರೂಪಗಳನ್ನು ಬಳಸಿ ಎಂತಹ ವಾಕ್ಯಗಳನ್ನು ಜೋಡಿಸಲು ಸಾಧ್ಯ ಎಂಬುದು ಆ ವಾಕ್ಯಗಳ ಅರ್ಥದ ಮೇಲೆ ಅವಲಂಬಿಸಿದೆ ಎಂಬುದನ್ನು ಗಮನಿಸ ಬಹುದು. ಕನ್ನಡದಲ್ಲಿ ಈ ರೀತಿ ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಬೇರೆ ಬೇರಾಗಿರಿಸಿರುವ ಕಾರಣ, ವಿಭಕ್ತಿ ಪ್ರತ್ಯಯಗಳಿಗೂ ಮತ್ತು ಅವು ಸೂಚಿಸುವ ಅರ್ಥ ಸಂಬಂಧಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ. ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿ ಮಾತ್ರವಲ್ಲದೆ ಮಣಿಪುರಿ, ತಾಂಖುರ್ ನಾಗ ಮೊದಲಾದ ಟಿಬೆಟೋ-ಬರ್ಮನ್ ಭಾಷೆಗಳಲ್ಲೂ ಇದೇ ರೀತಿ ವಿಭಕ್ತಿ ಪ್ರತ್ಯಯಗಳಿಗೂ ಮತ್ತು ಅವು ಸೂಚಿಸುವ ಅರ್ಥ ಸಂಬಂಧಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ. ಇದಕ್ಕೆ ಬದಲು, ಇಂಗ್ಲಿಷ್, ಜರ್ಮನ್, ಹಿಂದಿ ಮೊದಲಾದ ಬೇರೆ ಹಲವು ಭಾಷೆಗಳಲ್ಲಿ ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಸೂಚಿಸುವ ವಿಧಾನಗಳ ಬಳಕೆಯಲ್ಲಿ ನೇರವಾದ ಹೊಂದಾಣಿಕೆಯಿಲ್ಲದೆ ಗೊಂದಲವುಂಟಾಗಿರುವುದನ್ನು ಕಾಣಬಹುದು. ಇಂಗ್ಲಿಷ್ನ ವಾಕ್ಯಗಳಲ್ಲಿ ಘಟಕಗಳ ಅನುಕ್ರಮ ವ್ಯವಹಾರ ಸಂಬಂಧವನ್ನು ಮಾತ್ರವಲ್ಲದೆ ಅರ್ಥಸಂಬಂಧವನ್ನೂ ಸೂಚಿಸಬಲ್ಲುದು.
ಉದಾಹರಣೆಗಾಗಿ, ಣhe boಥಿ sಚಿತಿ ಣhe giಡಿಟ ವಾಕ್ಯದಲ್ಲಿ ಣhe giಡಿಟ ಘಟಕ sಚಿತಿ ಕ್ರಿಯಾಪದದ ಬಲಕ್ಕೆ ಬಂದಿದೆಯಾದ ಕಾರಣ ಅದು ಆ ಕ್ರಿಯಾಪದ ತಿಳಿಸುವ ‘ದೂಡುವ’ ಘಟನೆಯಿಂದ ಬಾಧಿತವಾಗುವ ವ್ಯಕ್ತಿಯನ್ನು ಸೂಚಿಸು ತ್ತದೆ, ಮತ್ತು ಣhe boಥಿ ಘಟಕ ಅದೇ ಕ್ರಿಯಾಪದದ ಎಡಕ್ಕೆ ಬಂದಿದೆಯಾದ ಕಾರಣ ಅದು ಆ ಕ್ರಿಯಾಪದ ತಿಳಿಸುವ ‘ದೂಡುವ’ ಘಟನೆಯನ್ನು ನಡೆಸಿ ಕೊಡುವ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಎರಡು ಅರ್ಥಸಂಬಂಧಗಳನ್ನು ಮಾತ್ರವಲ್ಲದೆ, ವಾಕ್ಯದ ಮೊದಲಿಗೆ ಬಂದಿರುವ ಣhe boಥಿ ಘಟಕ ವಾಕ್ಯದ ವಿಷಯ (ಣoಠಿiಛಿ) ಯಾವುದು ಎಂಬುದನ್ನೂ (ಎಂದರೆ ವ್ಯವಹಾರ ಸಂಬಂಧ ವನ್ನೂ) ಸೂಚಿಸುತ್ತದೆ. ಕನ್ನಡ ವಾಕ್ಯಗಳಲ್ಲಿ ಬರುವ ಘಟಕಗಳಲ್ಲಿ ಒಂದರ ಬದಲು ಇನ್ನೊಂದನ್ನು ವಾಕ್ಯದ ವಿಷಯವನ್ನಾಗಿ ಮಾಡಬೇಕಿದ್ದಲ್ಲಿ ಅದನ್ನು ವಾಕ್ಯದ ಮೊದಲನೆಯ ಘಟಕವಾಗಿ ಬಳಸಿದರೆ ಸಾಕು. ಇದಕ್ಕಾಗಿ ಆ ಘಟಕಗಳ ವಿಭಕ್ತಿ ರೂಪ ದಲ್ಲಾಗಲೀ ಇಲ್ಲವೇ ಕ್ರಿಯಾಪದದ ಕ್ರಿಯಾರೂಪದಲ್ಲಾಗಲೀ ಯಾವ ಬದಲಾ ವಣೆಯನ್ನೂ ಮಾಡಬೇಕಾಗಿಲ್ಲ.
ಆದರೆ ಇಂಗ್ಲಿಷ್ನಲ್ಲಿ ಈ ರೀತಿ ಒಂದು ಘಟಕದ ಬದಲು ಇನ್ನೊಂದು ಘಟಕವನ್ನು ವಾಕ್ಯದ ವಿಷಯವನ್ನಾಗಿ ಮಾಡಬೇಕಿದ್ದಲ್ಲಿ ಅದನ್ನು ವಾಕ್ಯದ ಮೊದಲನೆಯ ಘಟಕವನ್ನಾಗಿ ಮಾಡುವುದರೊಂದಿಗೆ ಬೇರೆಯೂ ಕೆಲವು ಬದಲಾ ವಣೆಗಳನ್ನೂ ಮಾಡಬೇಕಾಗುತ್ತದೆ. ಅದಕ್ಕಾಗಿ ಆ ವಾಕ್ಯವನ್ನು ಕತ್ರರಿ ಪ್ರಯೋಗ ದಿಂದ ಕರ್ಮಣಿ ಪ್ರಯೋಗಕ್ಕೆ ಬದಲಾಯಿಸಬೇಕಾಗುತ್ತದೆ. ‘ಅವಳು ಅವನನ್ನು ದೂಡಿದಳು’ ‘ಅವನನ್ನು ಅವಳು ದೂಡಿದಳು’
(4ಖ)ದಲ್ಲಿ him ಘಟಕವನ್ನು ವಾಕ್ಯದ ವಿಷಯವನ್ನಾಗಿ ಮಾಡಲು ವಾಕ್ಯದ ಮೊದಲನೆಯ ಪದವನ್ನಾಗಿ ಮಾಡಲಾಗಿದೆ, ಮತ್ತು ಇದರೊಂದಿಗೆ ಅದರ ವಿಭಕ್ತಿ ರೂಪವನ್ನೂ ಬದಲಾಯಿಸಲಾಗಿದೆ. ಇಲ್ಲಿ ಅರ್ಥ ವ್ಯತ್ಯಾಸವಿಲ್ಲದಿದ್ದರೂ ವಿಭಕ್ತಿ ವ್ಯತ್ಯಾಸವಿದೆ.
ಅರ್ಥ ಮತ್ತು ವ್ಯವಹಾರ ಸಂಬಂಧಗಳನ್ನು ಸೂಚಿಸುವ ವಿಧಾನಗಳ ನಡುವೆ ನೇರ ಹೊಂದಾಣಿಕೆಯಿಲ್ಲದಿರುವ ಇಂತಹ ಭಾಷೆಗಳ ವಾಕ್ಯರಚನೆಯನ್ನು ವರ್ಣಿ ಸುವುದಕ್ಕಾಗಿ ಅವೆರಡಕ್ಕಿಂತ ಭಿನ್ನವಾಗಿರುವ ‘ವ್ಯಾಕರಣ ಸಂಬಂಧ’ ಎಂಬ ಬೇರೊಂದು ರೀತಿಯ ಸಂಬಂಧವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕಂಡು ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುವ ಕತ್ರೃ, ಕರ್ಮ, ಕರಣ, ಮೊದಲಾದ ‘ಕಾರಕ’ಗಳು ಮತ್ತು ಇಂಗ್ಲಿಷ್ ವ್ಯಾಕರಣದಲ್ಲಿ ಬಳಕೆಯಾಗುವ ಡಿeಟಚಿಣioಟಿ’ಗಳು ಈ ಭಾಷೆಗಳಲ್ಲಿ ಅರ್ಥ ಸಂಬಂಧಕ್ಕೂ ಮತ್ತು ಅದನ್ನು ಸೂಚಿಸುವ ವಿಧಾನಕ್ಕೂ ನಡುವೆ ನೇರವಾದ ಹೊಂದಾಣಿಕೆಯಿಲ್ಲವಾದ ಕಾರಣ ಅವೆರಡರ ನಡುವಿರುವ ಸಂಬಂಧವನ್ನು ವರ್ಣಿಸುವುದಕ್ಕಾಗಿ ಕಲ್ಪಿಸಿರುವಂತಹ ವ್ಯಾಕರಣ ಸಂಬಂಧಗಳಲ್ಲದೆ ಬೇರೇನಲ್ಲ (ಜಾಸ್ತಿ ವಿವರಗಳಿಗೆ ಭಟ್ 1991, 2001 ನೋಡಿ).

Eke →

11.6 ಸಮಯದ ಸೂಚನೆ

ಹೆಚ್ಚಿನ ಭಾಷೆಗಳಲ್ಲೂ ಕ್ರಿಯಾಪದಗಳೊಂದಿಗೆ ಘಟನೆಗಳ ಸಮಯವನ್ನು ಸೂಚಿಸುವುದಕ್ಕಾಗಿ ಒಂದಲ್ಲ ಒಂದು ವಿಧಾನವನ್ನನುಸರಿಸುವ ಕ್ರಮ ಬಳಕೆ ಯಲ್ಲಿದೆ. ಆದರೆ ‘ಘಟನೆಯ ಸಮಯ’ ಎಂಬುದನ್ನು ಮುಖ್ಯವಾಗಿ ಮೂರು ದೃಷ್ಟಿಕೋನಗಳ ಮೂಲಕ ಪರಿಶೀಲಿಸಲು ಸಾಧ್ಯವಿದ್ದು, ಬೇರೆ ಬೇರೆ ಭಾಷೆಗಳು ಬೇರೆ ಬೇರೆ ದೃಷ್ಟಿಕೋನಗಳಿಗೆ ಮಹತ್ವವನ್ನು ಕೊಡುತ್ತವೆ.
ಮೊದಲನೆಯದಾಗಿ, ಘಟನೆಯ ಸಮಯವನ್ನು ಅದನ್ನು ತಿಳಿಸುವ ವಾಕ್ಯದ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಲು ಸಾಧ್ಯವಿದೆ. ವಾಕ್ಯದ ಸಮಯ ಕ್ಕಿಂತ ಅದು ತಿಳಿಸುವ ಘಟನೆಯ ಸಮಯ ಹಿಂದಿನದಿರಬಹುದು ಇಲ್ಲವೇ ಮುಂದಿನದಿರಬಹುದು. ಕನ್ನಡದ ಕ್ರಿಯಾಪದಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವಲ್ಲಿ ಈ ದೃಷ್ಟಿಕೋನಕ್ಕೆ ಹೆಚ್ಚಿನ ಮಹತ್ವವಿದೆ. ವಾಕ್ಯದ ಕೊನೆಯಲ್ಲಿ ಬರುವ ಕನ್ನಡದ ಹೆಚ್ಚಿನ ಕ್ರಿಯಾಪದಗಳಿಗೂ ಹಿಂದಿನ ಸಮಯ ಮತ್ತು ಮುಂದಿನ ಸಮಯ ಎಂಬುದಾಗಿ ಎರಡೆರಡು ಸಮಯವನ್ನು ಸೂಚಿಸುವ ರೂಪಗಳಿವೆಯೆಂಬುದನ್ನು ನಾವು ಮೇಲೆ ಐದನೆಯ ಅಧ್ಯಾಯದಲ್ಲಿ ನೋಡಿರು ವೆವು. ಎರಡನೆಯದಾಗಿ, ಘಟನೆಯ ಸಮಯವನ್ನು ಘಟನೆಯ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿದ ಹಾಗೆ ಸೂಚಿಸಲು ಸಾಧ್ಯವಿದೆ. ಘಟನೆ ಕ್ಷಣಿಕ ವಿರಬಹುದು ಇಲ್ಲವೇ ಜಾಸ್ತಿ ಹೊತ್ತು ನಡೆಯುತ್ತಿರುವಂತಹದಿರಬಹುದು; ಅದು ಪೂರ್ಣಗೊಂಡಿರಬಹುದು ಇಲ್ಲವೇ ಅಪೂರ್ಣವಾಗಿರಬಹುದು. ಒಂದು ಬಾರಿ ಮಾತ್ರ ನಡೆಯುವಂತಹದಿರಬಹುದು ಇಲ್ಲವೇ ಒಟ್ಟಿಗೆ ಹಲವು ಬಾರಿ ನಡೆಯು ವಂತಹದಿರಬಹುದು.
ಕೆಲವು ಭಾಷೆಗಳು ಇಂತಹ ಘಟನೆಯ ಆಂತರಿಕ ಕಾಲವ್ಯವಸ್ಥೆಗೆ ಸಂಬಂಧಿಸಿ ದಂತಹ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತವೆ. ಉದಾಹರಣೆಗಾಗಿ, ಸಂಸ್ಕೃತದ ಕ್ರಿಯಾಪದಗಳಿಗೆ ಪ್ರಾಮುಖ್ಯವಾಗಿ ಲಟ್ ಮತ್ತು ಲಿಟ್ ಎಂಬ ಎರಡು ರೀತಿಯ ರೂಪಗಳಿದ್ದು (ಕರೋತಿ-ಚಕಾರ, ಭವತಿ-ಬಭೂವ, ಪಚತಿ-ಪಪಾಚ, ಇತ್ಯಾದಿ), ಇವು ಅನುಕ್ರಮವಾಗಿ ಅಪೂರ್ಣ ಮತ್ತು ಪೂರ್ಣ ಘಟನೆಗಳನ್ನು ಸೂಚಿಸುತ್ತವೆ. ವಾಕ್ಯದ ಸಮಯಕ್ಕೂ ಮತ್ತು ಘಟನೆಯ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ಮಹತ್ವವಿಲ್ಲ. ಮೂರನೆಯದಾಗಿ, ಘಟನೆಯ ಸಮಯವನ್ನು ಸೂಚಿಸುವಲ್ಲಿ ಅದರ ಯಥಾರ್ಥತೆಗೆ ಹೆಚ್ಚಿನ ಮಹತ್ವವನ್ನು ಕೊಡುವ ಭಾಷೆಗಳೂ ಹಲವಿವೆ. ಇಂತಹ ಭಾಷೆಗಳಲ್ಲಿ ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದ ಕ್ಕಿಂತಲೂ ಘಟನೆಯನ್ನು ವರದಿ ಮಾಡುವಲ್ಲಿ ಆಡುಗನಿಗೆ ಎಂತಹ ಆಧಾರ ಇದೆ ಎಂಬುದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
ಇಂತಹ ಆಧಾರಗಳು ಸಾಕಷ್ಟು ಇವೆಯಾದಲ್ಲಿ ಘಟನೆಯನ್ನು ಕ್ರಿಯಾಪದದ ‘ಯಥಾರ್ಥ’ ರೂಪದ ಮೂಲಕವೂ ಮತ್ತು ಅಷ್ಟೊಂದು ಆಧಾರಗಳಿಲ್ಲದಿದ್ದು ಅದು ನಡೆಯುವ ಇಲ್ಲವೇ ನಡೆದಿರುವ ವಿಷಯದಲ್ಲಿ ಸಂಶಯವಿದೆಯಾದಲ್ಲಿ ‘ಅಯಥಾರ್ಥ’ ರೂಪದ ಮೂಲಕವೂ ಇಂತಹ ಭಾಷೆಗಳಲ್ಲಿ ಘಟನೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗಾಗಿ, ಬರ್ಮೀಸ್ ಭಾಷೆಯ ಕ್ರಿಯಾಪದಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವುದಕ್ಕಾಗಿ ಈ ಮೂರನೆಯ ದೃಷ್ಟಿಕೋನ ಬಳಕೆ ಯಲ್ಲಿದೆ. ನಡೆದ ಮತ್ತು ನಡೆಯುತ್ತಿರುವ ಘಟನೆಗಳನ್ನು ಯಥಾರ್ಥ ರೂಪಗಳ ಮೂಲಕವೂ ಮತ್ತು ನಡೆಯದಿದ್ದ ಮತ್ತು ನಡೆಯಲಿರುವ ಘಟನೆಗಳನ್ನು ಅಯಥಾರ್ಥ ರೂಪಗಳ ಮೂಲಕವೂ ಈ ಭಾಷೆಯಲ್ಲಿ ಸೂಚಿಸಲಾಗುತ್ತದೆ.
ಆಸ್ಟ್ರೇಲಿಯಾದ ಕಯಾದ್ರಿಲ್್ದ, ಇಂಡೋನೇಶಿಯಾದ ಮುನಾ, ಅಮೇರಿಕಾ ಖಂಡದ ಕಡ್ಡೋ ಮೊದಲಾದ ಬೇರೆ ಹಲವು ಭಾಷೆಗಳೂ ಘಟನೆಯ ಸಮಯ ವನ್ನು ಸೂಚಿಸುವುದಕ್ಕಾಗಿ ಈ ವಿಧಾನವನ್ನನುಸರಿಸುತ್ತವೆ (ಜಾಸ್ತಿ ವಿವರಗಳಿಗೆ ಭಟ್ 1999 ನೋಡಿ).
ಕನ್ನಡದಲ್ಲಿ ಘಟನೆಯ ಸಮಯವನ್ನು ಸೂಚಿಸಲು ಮಾತಿನ ಸಮಯಕ್ಕೂ ಮತ್ತು ಘಟನೆಯ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಹೆಚ್ಚಿನ ಒತ್ತು ಕೊಡ ಲಾಗುತ್ತದೆ. ಉಳಿದ ಎರಡು ದೃಷ್ಟಿಕೋನಗಳ ಮೂಲಕವೂ ಘಟನೆಯೊಂದನ್ನು ವರ್ಣಿಸುವ ಸಾಧ್ಯತೆ ಕನ್ನಡದಲ್ಲೂ ಇದೆ. ಆದರೆ ಕನ್ನಡದಲ್ಲಿ ಅವಕ್ಕೆ ಸಮಯ ಸಂಬಂಧದಷ್ಟು ಪ್ರಾಮುಖ್ಯತೆಯಿಲ್ಲ ಎಂಬುದೇ ಕನ್ನಡಕ್ಕೂ ಮತ್ತು ಸಂಸ್ಕೃತ, ಬರ್ಮೀಸ್ ಮೊದಲಾದ ಭಾಷೆಗಳಿಗೂ ನಡುವಿರುವ ವ್ಯತ್ಯಾಸ.
ಉದಾಹರಣೆಗಾಗಿ, ಕನ್ನಡದಲ್ಲಿ ಘಟನೆಯ ಪೂರ್ಣತೆಯನ್ನು ಸೂಚಿಸಲು ಒಂದು ಕ್ರಿಯಾಪದದೊಂದಿಗೆ ಬಿಡು ಎಂಬ ಇನ್ನೊಂದು ಕ್ರಿಯಾಪದವನ್ನು ಬಳಸುವ ವಿಧಾನ ಬಳಕೆಯಲ್ಲಿದೆ (ಬಿದ್ದುಬಿಡುತ್ತಾನೆ, ಬಿದ್ದುಬಿಟ್ಟ). ಆದರೆ ಈ ರೀತಿ ಘಟನೆಯ ಆಂತರಿಕ ವ್ಯವಸ್ಥೆಯನ್ನು ಸೂಚಿಸುವ ವಿಧಾನಕ್ಕೆ ಕನ್ನಡದ ವಾಕ್ಯರಚನೆಯಲ್ಲಿ ಸಮಯ ಸಂಬಂಧವನ್ನು ಸೂಚಿಸುವ ವಿಧಾನಕ್ಕಿರುವಂತಹ ಪ್ರಾಮುಖ್ಯತೆಯಿಲ್ಲ. (ಬಿದ್ದ ಎಂದಷ್ಟೇ ಹೇಳಿದರೂ ಕನ್ನಡದಲ್ಲಿ ಪೂರ್ಣಾರ್ಥ ಬರಬಲ್ಲುದು).
ಇದೇ ರೀತಿಯಲ್ಲಿ (ನೀವು ಹೇಳಿದ್ದರೆ) ಹೋಗುತ್ತಿದ್ದೆ, ಹೋಗಬಹುದು ಎಂಬಂತಹ ಪ್ರಯೋಗಗಳಲ್ಲಿ ಘಟನೆ ಯಥಾರ್ಥವಲ್ಲ ಎಂಬುದನ್ನು ಸೂಚಿಸ ಲಾಗಿದೆ. ಈ ವಿಧಾನಕ್ಕೂ ಕನ್ನಡದ ವಾಕ್ಯರಚನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಯಿಲ್ಲ. ಸಂಸ್ಕೃತದಲ್ಲೂ ಘಟನೆಯ ಸಮಯವನ್ನು ಮಾತಿನ ಸಮಯಕ್ಕೆ ಸಂಬಂಧಿ ಸಿರುವಂತೆ ಸೂಚಿಸಲು ಕೆಲವು ವಿಧಾನಗಳು ಬಳಕೆಯಲ್ಲಿವೆ. ಉದಾಹರಣೆಗಾಗಿ, ಒಂದು ಘಟನೆಯ ಸಮಯ ಅದನ್ನು ವರದಿಮಾಡುವ ವಾಕ್ಯವನ್ನಾಡಿರುವ ಸಮಯಕ್ಕಿಂತ ಹಿಂದಿನದು ಎಂಬುದನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಆ ಘಟನೆಯನ್ನು ಸೂಚಿಸುವ ಕ್ರಿಯಾಪದಕ್ಕೆ ಅ ಎಂಬ ಪೂವ್ರಪ್ರತ್ಯಯವನ್ನು ಸೇರಿಸ ಲಾಗುತ್ತದೆ (ಭವತಿ-ಅಭವತ್, ಭವಿಷ್ಯತಿ-ಅಭವಿಷ್ಯತ್).
ಆದರೆ ಈ ಪ್ರತ್ಯಯವನ್ನು ಬಳಸದಿದ್ದರೂ ಸಂಸ್ಕೃತದ ಕ್ರಿಯಾಪದಗಳಿಗೆ ಹಿಂದಿನ ಸಮಯದ ಅರ್ಥ ಬರಲು ಸಾಧ್ಯವಿದೆ. ಇಂತಹ ಸಮಯ ಸಂಬಂಧ ವನ್ನು ಸೂಚಿಸುವ ವಿಧಾನಗಳಿಗೆ ಸಂಸ್ಕೃತದ ವಾಕ್ಯರಚನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲದಿರುವುದೇ ಇದಕ್ಕೆ ಕಾರಣ. ಸಮಯವನ್ನು ಸೂಚಿಸುವುದಕ್ಕಾಗಿ ಭಾಷೆಯೊಂದರಲ್ಲಿ ಯಾವ ದೃಷ್ಟಿ ಕೋನಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಎಂಬುದರ ಮೇಲೆ ಭಾಷೆಯ ಬೇರೆ ಕೆಲವು ಗುಣಧರ್ಮಗಳೂ ಅವಲಂಬಿಸಿರುವ ಹಾಗೆ ಕಾಣಿಸುತ್ತದೆ. ಉದಾ ಹರಣೆಗಾಗಿ, ಸಮಯ ಸಂಬಂಧಕ್ಕೆ ಪ್ರಾಮುಖ್ಯತೆಯನ್ನು ಕೊಡುವ ಕನ್ನಡದಂತಹ ಭಾಷೆಯಲ್ಲಿ ಹೆಚ್ಚಿನ ಕ್ರಿಯಾಪದಗಳೂ ಘಟನೆಯನ್ನು ಸೂಚಿಸುವಂತಹವು ಗಳಾಗಿರುತ್ತವೆ.
ಇದಕ್ಕೆ ಬದಲು, ಆಂತರಿಕ ಕಾಲವ್ಯವಸ್ಥೆಗೆ ಪ್ರಾಮುಖ್ಯತೆಯನ್ನು ಕೊಡುವ ಭಾಷೆಗಳಲ್ಲಿ ಕ್ರಿಯಾಪದಗಳು ಘಟನೆಯನ್ನಾಗಲೀ ಇಲ್ಲವೇ ಸಂಗತಿಯನ್ನಾಗಲೀ ಸೂಚಿಸಬಲ್ಲುವು. ಕನ್ನಡದಲ್ಲಿ ಸಂಗತಿಯನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವುದು ಇರು ಎಂಬ ಒಂದೇ ಒಂದು ಕ್ರಿಯಾಪದ ಮಾತ್ರ. ಉಳಿದ ಎಲ್ಲಾ ಕ್ರಿಯಾಪದಗಳೂ ಘಟನೆಯನ್ನು ಸೂಚಿಸುವವುಗಳು. ಬಲ್, ಬಾರ್, ಸಾಕು, ಬೇಕು ಮೊದಲಾದ ಸಮಯಭೇದವನ್ನು ತೋರಿಸದ ಬೇರೆ ಕೆಲವು ಕ್ರಿಯಾಪದಗಳೂ ಸಂಗತಿಯನ್ನು ಸೂಚಿಸುವವೆಂದು ಹೇಳಬಹುದೇನೋ.
ಇದಕ್ಕೆ ಬದಲು, ಕಾಲವ್ಯವಸ್ಥೆಗೆ ಪ್ರಾಮುಖ್ಯತೆಯನ್ನು ಕೊಡುವ ಮಾವೋ ನಾಗ, ಮುನಾ, ಮಿಕ್್ಸಟೆಕ್ ಮೊದಲಾದ ಭಾಷೆಗಳಲ್ಲಿ ಸಾಕಷ್ಟು ಕ್ರಿಯಾಪದಗಳು ಸಂಗತಿಯನ್ನು ಸೂಚಿಸುವವುಗಳಾಗಿರುತ್ತವೆ. ಇಂತಹ ಕೆಲವು ಭಾಷೆಗಳಲ್ಲಿ ಎಲ್ಲಾ ಗುಣಪದಗಳೂ ಸಂಗತಿಯನ್ನು ಸೂಚಿಸುವ ಕ್ರಿಯಾಪದಗಳಾಗಿರುತ್ತವೆ.

Eke →

11.7 ಅಲ್ಲಗಳೆಯುವ ವಾಕ್ಯಗಳು

ಕನ್ನಡದಲ್ಲಿ ಒಂದು ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆಯುವುದಕ್ಕಾಗಿ ಇಲ್ಲ ಪದವನ್ನೂ ಮತ್ತು ಒಂದು ಘಟನೆ ಇಲ್ಲವೇ ಸಂಗತಿಗೂ ಮತ್ತು ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಕ್ಕಾಗಿ ಅಲ್ಲ ಪದವನ್ನೂ ಬಳಸಲಾಗುತ್ತದೆಯೆಂಬುದನ್ನು ನಾವು ಮೇಲೆ ಒಂಬತ್ತನೇ ಅಧ್ಯಾಯ ದಲ್ಲಿ ನೋಡಿರುವೆವು. ಅಲ್ಲಗಳೆಯುವ ಕೆಲಸಕ್ಕಾಗಿ ಇದಕ್ಕಿಂತ ಭಿನ್ನವಾದ ವಿಧಾನ ಗಳ ಬಳಕೆಯೂ ಪ್ರಪಂಚದ ಇತರ ಭಾಷೆಗಳಲ್ಲಿ ಕಾಣಿಸುತ್ತದೆ.
ಕನ್ನಡದಲ್ಲಿ ಒಂದು ವಾಕ್ಯಕ್ಕೆ ಇಲ್ಲ ಪದವನ್ನು ಸೇರಿಸುವ ಮೊದಲು ಅದರ ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆ ಕ್ರಿಯಾ ಪದ ಹಿಂದಿನ ಸಮಯವನ್ನು ಸೂಚಿಸುತ್ತಿರುವುದಾದರೆ ಅದರ ಕೊನೆಯಲ್ಲಿ ಬಂದಿರುವ ಸಮಯಪ್ರತ್ಯಯವನ್ನು ಮತ್ತು ಘಟಕಪ್ರತ್ಯಯವನ್ನು ತೆಗೆದುಹಾಕಿ, ಅಲು ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಬಂದರು-ಬರಲಿಲ್ಲ, ಮಾಡಿ ದರು-ಮಾಡಲಿಲ್ಲ).
ಇದಕ್ಕೆ ಬದಲು, ಕ್ರಿಯಾಪದ ಮುಂದಿನ ಸಮಯವನ್ನು ಸೂಚಿಸುತ್ತಿರುವು ದಾದರೆ, ಅದನ್ನು ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ (ಬರು ತ್ತಾರೆ-ಬರುವುದಿಲ್ಲ, (ಹೆಚ್ಚಿನ ವಿವರಗಳಿಗೆ 9.3 ನೋಡಿ). ಆದರೆ ಸಂಸ್ಕೃತದಲ್ಲಿ ನ ‘ಇಲ್ಲ’ ಎಂಬುದನ್ನು ವಾಕ್ಯದಲ್ಲಿ ಯಾವ ಬದಲಾ ವಣೆಯನ್ನೂ ಮಾಡದೆ ಹಾಗೆಯೇ ಬಳಸಲು ಸಾಧ್ಯವಿದೆ. ಮಾಡುತ್ತಾರೆ-ಮಾಡುವುದಿಲ್ಲ). ತೇ ಪುಸ್ತಕಾನಿ ಪಠಂತಿ. ‘ಅವರು ಪುಸ್ತಕಗಳನ್ನು ಓದುತ್ತಾರೆ’ (5ಖ) ತೇ ಪುಸ್ತಕಾನಿ ನ ಪಠಂತಿ. ‘ಅವರು ಪುಸ್ತಕಗಳನ್ನು ಓದುವುದಿಲ್ಲ’ ಇದಲ್ಲದೆ, ಸಂಸ್ಕೃತದಲ್ಲಿ ಒಂದು ವಾಕ್ಯಕ್ಕೂ ಮತ್ತು ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಲು ಮೇಲೆ ಕೊಟ್ಟಿರುವ ನ ಎಂಬ ಪದವೇ ಬಳಕೆಯಾಗುತ್ತದೆ; ಕನ್ನಡದಲ್ಲಿರುವ ಹಾಗೆ ಅದಕ್ಕಿಂತ ಭಿನ್ನವಾದ ಬೇರೊಂದು ಅಲ್ಲಗಳೆಯುವ ಪದ ಸಂಸ್ಕೃತದಲ್ಲಿಲ್ಲ.
(5ಗ) ಸ: ನ ಪಾಚಕ: ‘ಅವನು ಅಡುಗೆಯವನಲ್ಲ’ ಆದರೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಅಲ್ಲಗಳೆಯುವ ಬದಲು ಅದರ ಒಂದು ಪದವನ್ನು ಮಾತ್ರವೇ ಅಲ್ಲಗಳೆಯಲೂ ಸಾಧ್ಯವಿದೆ. ಇದಕ್ಕಾಗಿ ಆ ಪದಕ್ಕೆ ಅ ಇಲ್ಲವೇ ಅನ್ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ (ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಏಕ-ಅನೇಕ, ಆಚಾರ-ಅನಾಚಾರ, ಇತ್ಯಾದಿ). ಕನ್ನಡ ದಲ್ಲಿ ಈ ರೀತಿ ಪದಗಳನ್ನು ನೇರವಾಗಿ ಅಲ್ಲಗಳೆಯಲು ಸಾಧ್ಯವಾಗದು (9.3.2 ನೋಡಿ).
ಕನ್ನಡದಲ್ಲಿ ಇಲ್ಲ ಪದದ ಮೂಲಕ ಹಿಂದಿನ ಘಟನೆಯನ್ನು ಮಾತ್ರವಲ್ಲದೆ ಮುಂದಿನ ಘಟನೆಯನ್ನೂ ಅಲ್ಲಗಳೆಯಲು ಸಾಧ್ಯವಿದೆ. ಆದರೆ ಮಣಿಪುರಿ ಭಾಷೆಯಲ್ಲಿ ಮುಂದಿನ ಘಟನೆಯನ್ನು ಅಲ್ಲಗಳೆಯಲು ಹಿಂದಿನ ಘಟನೆಯನ್ನು ಅಲ್ಲಗಳೆಯುವ ಪದಕ್ಕಿಂತ ಬೇರೆಯೇ ಒಂದು ಪದವನ್ನು ಬಳಸಬೇಕಾಗುತ್ತದೆ. ಅಕೊಮಾ ಭಾಷೆಯಲ್ಲಿ ಒಬ್ಬ ಆಡುಗನಿಗೆ ತಾನು ಸ್ವತ: ನೋಡಿದ ಇಲ್ಲವೇ ಅನುಭವಿಸಿದ ಘಟನೆಯೊಂದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿದೆ. ಇತರ ಘಟನೆಗಳ ಕುರಿತು ತನಗೆ ಸಂಶಯವಿದೆಯೆಂದಷ್ಟೇ ಆತ ಹೇಳಬಲ್ಲನಲ್ಲದೆ ಅವನ್ನು ಅಲ್ಲಗಳೆಯಲಾರ.

Eke →

11.8 ಕೇಳ್ವಿಗಳು

ಭಾಷೆಗಳಲ್ಲಿ ಪ್ರಾಮುಖ್ಯವಾಗಿ ಎರಡು ರೀತಿಯ ಕೇಳ್ವಿಗಳು ಬಳಕೆಯಲ್ಲಿವೆ. ಇವನ್ನು ವಾಕ್ಯಕೇಳ್ವಿ ಮತ್ತು ವಾಕ್ಯಾಂಗ ಕೇಳ್ವಿ ಎಂದು ಕರೆಯಬಹುದು. ವಾಕ್ಯ ಕೇಳ್ವಿಯಲ್ಲಿ ಒಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಸರಿಯೇ ಅಥವಾ ಅಲ್ಲವೇ ಎಂಬುದನ್ನು ಕೇಳಲಾಗುತ್ತದೆ, ಮತ್ತು ವಾಕ್ಯಾಂಗ ಕೇಳ್ವಿಯಲ್ಲಿ ವಾಕ್ಯದ ಒಂದು ಅಂಗದ ಕುರಿತಾಗಿ ಕೇಳುಗನಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ (ವಿವರಗಳಿಗೆ 10.3 ನೋಡಿ). ಕನ್ನಡದಲ್ಲಿ ತಿಳಿಸುವ ವಾಕ್ಯವನ್ನು ವಾಕ್ಯಕೇಳ್ವಿಯಾಗಿ ಬದಲಾಯಿಸಲು ವಾಕ್ಯದ ಕೊನೆಯಲ್ಲಿ ಏ, ಓ ಇಲ್ಲವೇ ಆ ಪ್ರತ್ಯಯವನ್ನು ಸೇರಿಸಬೇಕು ಮತ್ತು ವಾಕ್ಯದ ಶ್ರುತಿವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನೂ ಮಾಡಿಕೊಳ್ಳಬೇಕು. ಇದಕ್ಕೆ ಬದಲು ಈ ಕೆಲಸಕ್ಕಾಗಿ ಶ್ರುತಿವಿನ್ಯಾಸದ ಬದಲಾವಣೆಯೊಂದನ್ನೇ ಬಳಸು ವಂತಹ ಭಾಷೆಗಳೂ (ಆಸ್ಟ್ರೇಲಿಯಾದ ಯಿದಿಞ್ ಭಾಷೆಯಂತಹವು) ಮತ್ತು ಪ್ರತ್ಯಯಗಳನ್ನು ಮಾತ್ರವೇ ಬಳಸುವಂತಹ ಭಾಷೆಗಳೂ ಕೆಲವಿವೆ. ಕೆಲವು ವಾಕ್ಯದ ಭಾಷೆಗಳಲ್ಲಿ ಇಂತಹ ಹಲವಾರು ಪ್ರತ್ಯಯಗಳ ಬಳಕೆಯಾಗುತ್ತಿದ್ದು, ಇವು ಬೇರೆ ಬೇರೆ ರೀತಿಯ ವಾಕ್ಯಕೇಳ್ವಿಗಳನ್ನು ತಯಾರಿಸಲು ಸಹಾಯಕವಾಗುತ್ತವೆ. ಬೇರೆ ಕೆಲವು ಭಾಷೆಗಳಲ್ಲಿ ಇದಕ್ಕಾಗಿ ವಾಕ್ಯದ ಕ್ರಿಯಾಪದದಲ್ಲೇನೇ ಕೆಲವು ಬದಲಾವಣೆಗಳನ್ನು ಉದಾಹರಣೆಗಾಗಿ ಮಾಡಿಕೊಳ್ಳಬೇಕಾಗುತ್ತದೆ. ಇಂಗ್ಲಿಷ್ನಲ್ಲಿ ಕ್ರಿಯಾಪದಕ್ಕೆ ಉಪಕ್ರಿಯಾಪದವೊಂದನ್ನು ಸೇರಿಸಬೇಕಾಗುತ್ತದೆ ಮತ್ತು ಇದನ್ನು ವಾಕ್ಯದ ಮೊದಲನೆಯ ಪದವಾಗಿ ಬಳಸಬೇಕಾಗುತ್ತದೆ (ಊe ತಿeಟಿಣ home – ಆiಜ he go home?).
ವಾಕ್ಯಾಂಗ ಕೇಳ್ವಿಗಳನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಕೇಳಬೇಕಾ ಗಿರುವ ವಾಕ್ಯಾಂಗದ ಬದಲು ಒಂದು ಅನಿಶ್ಚಿತ ಸವ್ರಪದವನ್ನು ಬಳಸ ಬೇಕಾಗುತ್ತದೆ ಮತ್ತು ವಾಕ್ಯದ ಶ್ರುತಿವಿನ್ಯಾಸವನ್ನು ಬದಲಿಸಬೇಕಾಗುತ್ತದೆ (10.4 ನೋಡಿ). ಕೆಲವು ಭಾಷೆಗಳಲ್ಲಿ ಕೇಳ್ವಿಗಳಲ್ಲಿ ಮಾತ್ರವೇ ಬಳಕೆಯಾಗು ವಂತಹ ಸವ್ರಪದಗಳಿವೆ. ಇವು ಅನಿಶ್ಚಿತ ಪದಗಳಿಂದ ಭಿನ್ನವಾಗಿದ್ದು, ಕೇಳ್ವಿಯ ಅರ್ಥವನ್ನು ಮಾತ್ರ ಕೊಡ ಬಲ್ಲುವು. ಉದಾಹರಣೆಗಾಗಿ, ಜಪಾನಿನ ಐನು ಭಾಷೆಯಲ್ಲಿ ಹುನ್ನ ಎಂಬುದಕ್ಕೆ ‘ಯಾರು’ ಎಂಬ ಅರ್ಥವಿದ್ದು, ‘ಯಾರೋ’ ಎಂಬುದನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ನೆನ್ ಎಂಬ ಪದವಿದೆ. ಇದೇ ರೀತಿಯಲ್ಲಿ ‘ಏನು’ ಎಂಬುದನ್ನು ಸೂಚಿಸಲು ಹ್ಂತ ಎಂಬ ಪದವಿದೆಯಾದರೆ, ‘ಏನೋ’ ಎಂಬುದನ್ನು ಸೂಚಿಸು ವುದಕ್ಕಾಗಿ ನೆಪ್ ಎಂಬ ಬೇರೆಯೇ ಒಂದು ಪದವಿದೆ, ಇತ್ಯಾದಿ. ಕನ್ನಡದಲ್ಲಿ ಯಾರು, ಏನು, ಎಲ್ಲಿ, ಯಾವಾಗ, ಯಾಕೆ, ಹೇಗೆ, ಮೊದಲಾದ ಹಲವು ಅನಿಶ್ಚಿತತೆಯನ್ನು ಸೂಚಿಸುವ ಪದಗಳಿದ್ದು, ಇವುಗಳ ಮೂಲಕ ಬೇರೆ ಬೇರೆ ರೀತಿಯ ವಾಕ್ಯಾಂಗ ಕೇಳ್ವಿಗಳನ್ನು ತಯಾರಿಸಲು ಸಾಧ್ಯ ವಿದೆ. ಕನ್ನಡಕ್ಕಿಂತ ಹೆಚ್ಚಿ ಅನಿಶ್ಚಿತ (ಇಲ್ಲವೇ ಕೇಳ್ವಿ) ಪದಗಳಿರುವ ಭಾಷೆಗಳೂ ಕೆಲವಿವೆ, ಆದರೆ ಎಲ್ಲಾ ಕೇಳ್ವಿಗಳಲ್ಲೂ ಒಂದೇ ಅನಿಶ್ಚಿತ ಪದವನ್ನು ಬಳಸುವ ಭಾಷೆಗಳೂ ಇವೆ.

Eke →

11.9 ಮುಕ್ತಾಯ

ಕನ್ನಡ ಭಾಷೆಯಲ್ಲಿ ವಾಕ್ಯರಚನೆಗಾಗಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆ ಮತ್ತು ಆ ನಿಯಮಗಳ ಹಿಂದಿರುವ ವ್ಯಾಕರಣದ ಮೂಲತತ್ವಗಳು ಎಂತಹವು ಎಂಬುದನ್ನು ತಿಳಿದುಕೊಳ್ಳುವ ಒಂದು ಚಿಕ್ಕ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಇಂತಹ ಪ್ರಯತ್ನಕ್ಕೆ ಕನ್ನಡ ಭಾಷೆಯೊಂದನ್ನೇ ಅಭ್ಯಾಸ ಮಾಡಿದರೆ ಸಾಕಾಗುವುದಿಲ್ಲ ಎಂಬ ವಿಷಯ ಈ ಅಧ್ಯಾಯದಿಂದ ಸ್ಪಷ್ಟವಾಗಿರ ಬಹುದು. ಹಲವಾರು ವಿಧಾನಗಳನ್ನು ಬಳಸುವ ಭಾಷೆಗಳ ನಡುವೆ ಕನ್ನಡದ ಸ್ಥಾನವೇನು ಎಂಬುದನ್ನರಿತಾಗ ಮಾತ್ರ ನಿಜಕ್ಕೂ ಕನ್ನಡ ಬಳಸುವ ವ್ಯಾಕರಣ ತತ್ವಗಳೆಂತಹವು ಎಂಬ ವಿಷಯ ಸ್ಪಷ್ಟವಾಗಬಲ್ಲುದು. ಕೆಲವು ಪಾರಿಭಾಷಿಕ ಪದಗಳು ಅಂಕಿತನಾಮ (ಠಿಡಿoಠಿeಡಿ ಟಿಚಿme): ವ್ಯಕ್ತಿ, ವಸ್ತು, ಜಾಗ ಮೊದಲಾದವುಗಳಲ್ಲಿ ಒಂದೊಂದಕ್ಕೂ ಬೇರೆ ಬೇರಾಗಿ ಕೊಟ್ಟಿರುವ ಅವುಗಳದೇ ಆದ ಹೆಸರು; ರಾಜು, ಕಾವೇರಿ, ಮೈಸೂರು ಇತ್ಯಾದಿಗಳು ಇಂತಹವು. ಅಣಕಿಸುವ ಗುಣಪದ (oಟಿomಚಿಣoಠಿoeiಛಿ ತಿoಡಿಜ): ಘಟನೆಯ ಸದ್ದು, ನೋಟ, ಸ್ಪಶ್ರ ಮೊದಲಾದವುಗಳ ವಿಷಯದಲ್ಲಿ ಆಡುಗನ ಅನುಭವವನ್ನು ಸೂಚಿಸುವ ಗುಣಪದಗಳು; ಡಬ್ಬನೆ ಬೀಳು, ಮಿಣಿಮಿಣಿ ಉರಿ, ಪಟಪಟನೆ ಹೇಳು ಇತ್ಯಾದಿಗಳು ಇಂತಹವು. ಅನಿಶ್ಚಿತ ಪದ (iಟಿಜeಜಿiಟಿiಣe ತಿoಡಿಜ): ಆಡುಗನಿಗೆ ನಿಶ್ಚಿತವಾಗಿಯೂ ತಿಳಿಯ ದಿರುವ ವ್ಯಕ್ತಿ, ವಸ್ತು, ಸ್ಥಾನ, ಕಾಲ ಮೊದಲಾದುವನ್ನು ಸೂಚಿಸುವ ಪದ; ಯಾರು, ಏನು, ಯಾಕೆ, ಇತ್ಯಾದಿಗಳು ಇಂತಹವು. ಅರ್ಥ ಸಂಬಂಧ (semಚಿಟಿಣiಛಿ ಡಿeಟಚಿಣioಟಿ): ವಾಕ್ಯದಲ್ಲಿ ಬರುವ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧ; ಆಗುಗ, ಮಾಡುಗ, ಸುರು, ಕೊನೆ, ಜಾಗ, ಪ್ರೇರಕ ಮೊದಲಾದ ಈ ಸಂಬಂಧಗಳನ್ನು ಕನ್ನಡದಲ್ಲಿ ವಿಭಕ್ತಿಪ್ರತ್ಯಯಗಳ ಮೂಲಕ ಸೂಚಿಸಲಾಗುತ್ತದೆ. ಅಲ್ಲಗಳೆ (ನಿಷೇಧಿಸು, ಟಿegಚಿಣe): ಒಂದು ವಾಕ್ಯವು ತಿಳಿಸುವ ಘಟನೆ ನಡೆದಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ, ಮತ್ತು ಒಂದು ಸಂಗತಿ ನಿಜವಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಅಲ್ಲಗಳೆ ಯುವ ವಾಕ್ಯವನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ವಾಕ್ಯದ ಕೊನೆ ಯಲ್ಲಿ ಇಲ್ಲ ಪದವನ್ನು ಸೇರಿಸಬೇಕಾಗುತ್ತದೆ (ರಾಜು ಬರೆಯುವು ದಿಲ್ಲ, ಬರೆಯಲಿಲ್ಲ, ಆ ಪುಸ್ತಕ ನಮ್ಮಲ್ಲಿಲ್ಲ, ಇತ್ಯಾದಿ). ಒಂದು ಘಟನೆ ಇಲ್ಲವೇ ಸಂಗತಿಗೂ ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯಲು ಅಲ್ಲ ಪದದ ಬಳಕೆಯಾಗುತ್ತದೆ (ಅದು ನಮ್ಮ ಮನೆಯಲ್ಲ). ಆಗುಗ (ಠಿಚಿಣieಟಿಣ): ಒಂದು ಘಟನೆಯಿಂದ ಬಾಧಿತವಾಗುವುದಾದರೂ ಆ ಘಟನೆಯ ಮೇಲೆ ಹತೋಟಿಯಿಲ್ಲದಿರುವ ಘಟಕ. ಮಾಡುಗವಿರುವ ವಾಕ್ಯದಲ್ಲಿ ಇದನ್ನು ಅನ್ನು ಪ್ರತ್ಯಯ ಸೂಚಿಸುತ್ತದೆ. ಆಡುಗ (sಠಿeಚಿಞeಡಿ): ಒಂದು ವಾಕ್ಯವನ್ನು ಆಡಿರುವ ವ್ಯಕ್ತಿ; ಇದನ್ನು ವಾಕ್ಯದಲ್ಲಿ ಬರುವ ನಾನು ಪದ ಸೂಚಿಸುತ್ತದೆ. ಈಗಿನ ಸಮಯ (ವತ್ರಮಾನಕಾಲ, ಠಿಡಿeseಟಿಣ ಣeಟಿse): ಕನ್ನಡದಲ್ಲಿ ಇರು ಕ್ರಿಯಾಪದಕ್ಕೆ ಮಾತ್ರ ಈಗಿನ ಸಮಯವನ್ನು ಸೂಚಿಸುವ ರೂಪಗಳಿವೆ. ಈ ರೂಪಗಳು ಸಂಗತಿಯೊಂದು ಅದನ್ನು ತಿಳಿಸುವ ವಾಕ್ಯವನ್ನಾಡುವ ಸಮಯದಲ್ಲಿ ಜಾರಿಯಲ್ಲಿದೆಯೆಂಬುದನ್ನು ಸೂಚಿಸುತ್ತವೆ (ಅವನು ಮನೆಯಲ್ಲಿದ್ದಾನೆ, ಅವರಲ್ಲಿ ಒಂದು ಎಮ್ಮೆ ಇದೆ). ಇತರ ಕ್ರಿಯಾ ಪದಗಳಿಗೆ ಹಿಂದಿನ ಮತ್ತು ಮುಂದಿನ ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆ.
ಉದ್ದ ಸ್ವರ (ದೀರ್ಘ ಸ್ವರ, ಟoಟಿg voತಿeಟ): ಗಿಡ್ಡ ಸ್ವರಕ್ಕಿಂತ ಉಚ್ಚರಿಸಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವ ಆ, ಈ, ಊ, ಏ ಇಲ್ಲವೇ ಓ ಎಂಬ ಸ್ವರ. ಉಪಕ್ರಿಯಾಪದ (ಚಿuxiಟiಚಿಡಿಥಿ veಡಿb): ಕ್ರಿಯಾಪದದ ಅನಂತರ ಅದರ ಸಹಾಯ ಕ್ಕಾಗಿ ಬರುವ ಇನ್ನೊಂದು ಕ್ರಿಯಾಪದ. ಮಾಡಿದ್ದೇನೆ ಎಂಬುದರಲ್ಲಿ ಇದ್ದೇನೆ (ಇರು) ಎಂಬುದು ಉಪಕ್ರಿಯಾಪದ ಮತ್ತು ಮಾಡು ಎಂಬುದು ಮುಖ್ಯ ಕ್ರಿಯಾಪದ.
ಎತ್ತಿ ಹೇಳು (quoಣe): ಒಬ್ಬ ವ್ಯಕ್ತಿ ಆಡುವ ವಾಕ್ಯದಲ್ಲಿ ಇನ್ನೊಬ್ಬ ವ್ಯಕ್ತಿಯ ಮಾತು, ಅಭಿಪ್ರಾಯ ಇಲ್ಲವೇ ಭಾವನೆಯನ್ನು ಒಳವಾಕ್ಯವೊಂದರ ಮೂಲಕ ತಿಳಿಸುವುದು; ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜು ಹೇಳುತ್ತಿದ್ದಾನೆ ಎಂಬುದರಲ್ಲಿ ನಾನು ಎಲ್ಲಿಗೂ ಹೋಗು ವುದಿಲ್ಲ ಎಂಬ ವಾಕ್ಯವನ್ನು ಎತ್ತಿ ಹೇಳಲಾಗಿದೆ. ಒತ್ತು ಕೊಡು (emಠಿhಚಿsize): ಒಂದು ಪದಕ್ಕೆ ಒತ್ತು ಕೊಟ್ಟು (ಇಲ್ಲವೇ ಒತ್ತಿ) ಹೇಳುವುದಕ್ಕಾಗಿ ಏ ಪ್ರತ್ಯಯವನ್ನು ಬಳಸಲಾಗುತ್ತದೆ; ರಾಜು ಬಂದ ಎನ್ನುವ ಬದಲು ರಾಜುವೇ ಬಂದ ಎಂಬುದಾಗಿ ಹೇಳುವಲ್ಲಿ ರಾಜು ಪದದ ಮೇಲೆ ಒತ್ತು ಕೊಡಲಾಗಿದೆ). ಒಳವಾಕ್ಯ (embeಜಜeಜ seಟಿಣeಟಿಛಿe): ಒಂದು ವಾಕ್ಯದ ಒಳಗೆ ಬಂದಿರುವ ಇನ್ನೊಂದು ವಾಕ್ಯ; ಇದು ರಾಜು ಬಂದಿದ್ದಾನೆಂದು ಕಾಣಿಸುತ್ತದೆ ಎಂಬುದರಲ್ಲಿ ಬಂದಿರುವ ರಾಜು ಬಂದಿದ್ದಾನೆ ಎಂಬುದರ ಹಾಗೆ ಒಂದು ಇಡೀ ವಾಕ್ಯದ ರೂಪದಲ್ಲಿರಬಹುದು, ಇಲ್ಲವೇ ರಾಜು ಬಂದ ಸಮಯ ಚನ್ನಾಗಿಲ್ಲ ಎಂಬುದರಲ್ಲಿ ಬಂದಿರುವ ರಾಜು ಬಂದ ಎಂಬುದರ ಹಾಗೆ ಒಂದು ತುಂಡು ವಾಕ್ಯದ ರೂಪದಲ್ಲಿರಬಹುದು. ಕೆಲವು ಪಾರಿಭಾಷಿಕ ಪದಗಳು ಕಾಲವ್ಯವಸ್ಥೆ (ಚಿsಠಿeಛಿಣ): ಘಟನೆ ಮುಗಿದಿದೆಯೇ, ಇನ್ನೂ ನಡೆಯುತ್ತಿದೆಯೇ, ಕ್ಷಣಿಕವೇ, ಒಮ್ಮೆ ಇಲ್ಲವೇ ಹಲವು ಬಾರಿ ನಡೆಯುವಂತಹದೇ ಎಂಬಂತಹ ಘಟನೆಯ ಆಂತರಿಕೆ ಸಮಯವಿನ್ಯಾಸವನ್ನು ಸೂಚಿಸುವ ವಿಧಾನ. ಕೂಡಿಕೆಯ ಅರ್ಥ (ಛಿoಟಿರಿuಟಿಛಿಣioಟಿ): ಮತ್ತು ಪದಕ್ಕಿರುವ ಅರ್ಥ. ಕೂಡುಪದ: ಒಂದು ಕ್ರಿಯಾಪದದ ಜೋಡಿಸುವ ರೂಪದೊಂದಿಗೆ ಇನ್ನೊಂದು ಕ್ರಿಯಾಪದವನ್ನು ಸೇರಿಸಿರುವ ರಚನೆಯ ಒಂದು ವಿಶಿಷ್ಟವಾದ ಬಳಕೆ. ಇದರಲ್ಲಿ ಎರಡನೆಯ ಕ್ರಿಯಾಪದ ತನ್ನ ಮೂಲಾರ್ಥವನ್ನು ಕಳೆದು ಕೊಂಡು ಮೊದಲನೆಯ ಕ್ರಿಯಾಪದ ಸೂಚಿಸುವ ಘಟನೆಯ ಕುರಿತಾಗಿ ಹೆಚ್ಚಿನದನ್ನೇನಾದರೂ ಸೂಚಿಸಲು ಬಳಕೆಯಾಗಿರುತ್ತದೆ; ಕಚ್ಚಿಬಿಡು, ಕತ್ತರಿಸಿಕೊಳ್ಳು, ಹರಿದುಹಾಕು, ಇತ್ಯಾದಿಗಳು ಇಂತಹ ರಚನೆಗಳು.
ಕೆಲಸ ಮಾಡಿಸುವ ವಾಕ್ಯ (iಟಟoಛಿuಣioಟಿಚಿಡಿಥಿ seಟಿಣeಟಿಛಿe): ಕೇಳುಗನ ಮೂಲಕ ಯಾವುದಾದರೊಂದು ಕೆಲಸವನ್ನು ಮಾಡಿಸುವುದಕ್ಕಾಗಿ ಆಡುಗನು ಬಳಸುವ ವಾಕ್ಯ (ಉದಾ: ಇಲ್ಲಿ ಬನ್ನಿ! ಹೊರಗೆ ಹೋಗು!).
ಕೇಳುಗ (heಚಿಡಿeಡಿ, ಚಿಜಜಡಿessee): ಆಡುಗನು ಯಾವ ವ್ಯಕ್ತಿಯನ್ನುದ್ದೇಶಿಸಿ ಒಂದು ಮಾತನ್ನು ಹೇಳಿರುವನೋ ಅಂತಹ ವ್ಯಕ್ತಿ ಆ ಮಾತಿನಲ್ಲಿ (ಅಥವಾ ವಾಕ್ಯದಲ್ಲಿ) ವಹಿಸಿರುವ ಪಾತ್ರ. ಕೇಳ್ವಿ (ಪ್ರಶ್ನೆ, iಟಿಣeಡಿಡಿogಚಿಣioಟಿ): ಕೇಳುಗನಿಂದ ಯಾವುದಾದರೊಂದು ಸಂಗತಿ ಯನ್ನು ತಿಳಿದುಕೊಳ್ಳುವುದಕ್ಕಾಗಿ ಆಡುಗನು ಬಳಸುವ ವಾಕ್ಯ. ಕನ್ನಡ ದಲ್ಲಿ ಮುಖ್ಯವಾಗಿ ವಾಕ್ಯಕೇಳ್ವಿ ಮತ್ತು ವಾಕ್ಯಾಂಗ ಕೇಳ್ವಿ ಎಂಬುದಾಗಿ ಎರಡು ರೀತಿಯ ಕೇಳ್ವಿಗಳಿವೆ. ವಾಕ್ಯಕೇಳ್ವಿಯಲ್ಲಿ ಇಡೀ ವಾಕ್ಯ ತಿಳಿಸುವ ಸಂಗತಿ ಸರಿಯೇ ಅಥವಾ ಅಲ್ಲವೇ ಎಂಬುದನ್ನು ಕೇಳಲಾಗುತ್ತದೆ (ರಾಜು ಬಂದಿದ್ದಾನೋ?) ಮತ್ತು ವಾಕ್ಯಾಂಗ ಕೇಳ್ವಿಯಲ್ಲಿ ಅಂತಹ ಸಂಗತಿಯ ಒಂದು ಅಂಶವನ್ನು ಮಾತ್ರ ಕೇಳಲಾಗುತ್ತದೆ (ಯಾರು ಬಂದಿದ್ದಾರೆ?). ಈ ಕೇಳ್ವಿ ಯಾವ ಅಂಗದ ಮೇಲೆ ಬೀಳುತ್ತದೆ ಎಂಬುದನ್ನು ಸೂಚಿಸಲು ಸಾಮಾನ್ಯವಾಗಿ ವಾಕ್ಯಾಂಗ ಕೇಳ್ವಿಗಳಲ್ಲಿ ಯಾರು, ಏನು, ಯಾಕೆ ಮೊದಲಾದ ಅನಿಶ್ಚಿತ ಪದಗಳನ್ನು ಬಳಸ ಬೇಕಾಗುತ್ತದೆ. ಕೊನೆಘಟಕ (goಚಿಟ): ಒಂದು ಕದಲುವಿಕೆ (ಚಲನೆ) ಯಾವ ಜಾಗಕ್ಕಾಗಿ ನಡೆಯುತ್ತಿದೆ ಎಂಬುದನ್ನು ಸೂಚಿಸುವ ಘಟಕ; ರಾಜು ಮನೆಗೆ ಹೋದ ಎಂಬುದರಲ್ಲಿ ಮನೆಗೆ ಎಂಬ ಘಟಕ. ಕ್ರಿಯಾವಾಕ್ಯ (eveಟಿಣ seಟಿಣeಟಿಛಿe): ಒಂದು ಘಟನೆಯನ್ನು ತಿಳಿಸುವ ವಾಕ್ಯ. ಗಿಡ್ಡ ಸ್ವರ (ಹ್ರಸ್ವಸ್ವರ, shoಡಿಣ voತಿeಟ): ಉಚ್ಚರಿಸಲು ಉದ್ದ ಸ್ವರಕ್ಕಿಂತ ಸ್ವಲ್ಪ ಕಡಿಮೆ ಸಮಯ ಬೇಕಾಗುವ ಅ, ಇ, ಉ, ಎ ಇಲ್ಲವೇ ಒ ಎಂಬ ಸ್ವರ. ಗುರುತಿಸುವಿಕೆ (ಡಿeಜಿeಡಿeಟಿಛಿe): ಘಟನೆಯೊಂದು ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸಬೇಕಾದಾಗ, ಅದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ಮೊದಲಾದವುಗಳು ಯಾವುವು ಎಂಬುದನ್ನೂ ತಿಳಿಸಬೇಕಾಗುತ್ತದೆ. ಇಂತಹ ವ್ಯಕ್ತಿ, ವಸ್ತು ಮೊದಲಾದವುಗಳನ್ನು ನಾಮಪದ ಇಲ್ಲವೇ ನಾಮಪದಕಂತೆಗಳ ಮೂಲಕ ಇಂತಹವೇ ಎಂಬುದಾಗಿ ‘ಗುರುತಿಸಿ’ ತಿಳಿಸಲಾಗುತ್ತದೆ. ಇದಕ್ಕಾಗಿ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸು ವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳನ್ನು ಬಳಸ ಲಾಗುತ್ತದೆ. ಜಾಗಘಟಕ (ಠಿಟಚಿಛಿe, ಟoಛಿಚಿಣioಟಿ): ಒಂದು ಘಟನೆ ಎಲ್ಲಿ ನಡೆಯುತ್ತಿದೆ ಎಂಬು ದನ್ನು ಸೂಚಿಸುವ ಘಟಕ.
ಜೋಡಿಸುವ ರೂಪ: ಎರಡು ವಾಕ್ಯಗಳನ್ನು ಜೋಡಿಸಿ ಒಂದೇ ವಾಕ್ಯವನ್ನಾಗಿ ಮಾಡಬೇಕಾದಾಗ ಅವುಗಳಲ್ಲಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದದಲ್ಲಿ ಕೆಲವೊಮ್ಮೆ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಈ ರೀತಿ ಬದಲಾವಣೆ ಮಾಡಿರುವ ರೂಪವನ್ನು
ಜೋಡಿಸುವ ರೂಪವೆಂದು ಕರೆಯಬಹುದು; ಊಟ ಮಾಡಿ ಹೋದ ಎಂಬುದರಲ್ಲಿ ಮಾಡು ಕ್ರಿಯಾಪದಕ್ಕೆ ಮಾಡಿ ಎಂಬ ಜೋಡಿಸುವ ರೂಪವಿದೆ). ಜೋಡುಪದ (ಸಮಾಸ, ಛಿomಠಿouಟಿಜ): ಎರಡು (ಅಥವಾ ಜಾಸ್ತಿ) ಪದಗಳನ್ನು ಸೇರಿಸಿ ಹೊಸದೊಂದು ಪದವನ್ನು ತಯಾರಿಸಿದಲ್ಲಿ ಅದಕ್ಕೆ ಜೋಡು ಪದವೆಂದು ಹೆಸರು; ನೆಲ ಮತ್ತು ಕಡಲೆ ಎಂಬ ಎರಡು ಪದಗಳನ್ನು ಸೇರಿಸಿ ತಯಾರಿಸಿದ ನೆಲಗಡಲೆ ಎಂಬುದು ಅವೆರಡಕ್ಕಿಂತ ಭಿನ್ನವಾದ ಬೇರೆಯೇ ಒಂದು ಪದವಾದ ಕಾರಣ, ಜೋಡುಪದ. ಕನ್ನಡದಲ್ಲಿ ಬಳಕೆಯಲ್ಲಿರುವ ಜೋಡುಪದಗಳೆಲ್ಲ ನಾಮಪದಗಳೇ (ಪದಕಂತೆ ನೋಡಿ).
ತಿಳಿಸುವ ವಾಕ್ಯ (ಟಿಚಿಡಿಡಿಚಿಣive seಟಿಣeಟಿಛಿe): ಯಾವುದಾದರೊಂದು ಘಟನೆ ಇಲ್ಲವೇ ಸಂಗತಿಯನ್ನು ಇತರರಿಗೆ ತಿಳಿಸಬೇಕೆಂದಿರುವಾಗ ಬಳಸುವ ರಾಜು ಮನೆಗೆ ಹೋಗಿದ್ದಾನೆ ಎಂಬಂತಹ ವಾಕ್ಯ. ನಿರ್ದೇಶಕ ಪದ (ಜemoಟಿsಣಡಿಚಿಣive ತಿoಡಿಜ): ಮಾತಿನ ಸನ್ನಿವೇಶದಲ್ಲಿರುವ ವ್ಯಕ್ತಿ, ವಸ್ತು, ಜಾಗ, ಸಮಯ ಮೊದಲಾದವುಗಳನ್ನು ಆ ಮಾತು ಸೂಚಿಸುವ ಘಟನೆಯೊಂದಿಗೆ ಸಂಬಂಧಿಸುವ ಪದ. ಪುಸ್ತಕ ಇಲ್ಲಿದೆ ಎಂಬ ವಾಕ್ಯದಲ್ಲಿ ಬಂದಿರುವ ಇಲ್ಲಿ ಎಂಬ ಪದ ಪುಸ್ತಕದ ಜಾಗವನ್ನು ಕೆಲವು ಪಾರಿಭಾಷಿಕ ಪದಗಳು ಆ ವಾಕ್ಯವನ್ನಾಡಿರುವ ಸನ್ನಿವೇಶದಲ್ಲಿ ಆಡುಗನ ಹತ್ತಿರದ್ದೆಂಬುದಾಗಿ ತಿಳಿಸುವುದಾದ ಕಾರಣ ಅದು ಒಂದು ನಿರ್ದೇಶಕ ಪದ. ಪದಕಂತೆ (ಠಿhಡಿಚಿse): ಎರಡು ಅಥವಾ ಜಾಸ್ತಿ ಪದಗಳನ್ನು ಸೇರಿಸಿ ಎರಡು ರೀತಿಯ ರಚನೆಗಳನ್ನು ತಯಾರಿಸಲು ಸಾಧ್ಯ. ಇವುಗಳಲ್ಲಿ ಒಂದು ರಚನೆ ಭಾಷೆಯಲ್ಲಿ ಒಂದು ಹೊಸ ಪದವಾಗಿ ಬಳಕೆಯಾಗುತ್ತದೆ; ದೊಡ್ಡಮ್ಮ, ಕರಿಹಲಗೆ, ನೆಲಗಡಲೆ ಮೊದಲಾದ ‘ಜೋಡುಪದ’ ಗಳು ಇಂತಹ ರಚನೆಗಳು; ಇನ್ನೊಂದು ರಚನೆ ಪದಗಳಿಗಿಂತ ಮೇಲಿನ ಮಟ್ಟದಲ್ಲಿ ಬರುತ್ತದೆ; ದೊಡ್ಡ ಮನೆ, ಕೆಂಪು ಹೂ, ಒಡೆದ ಕನ್ನಡಿ ಮೊದಲಾದ ‘ಪದಕಂತೆ’ಗಳು ಇಂತಹ ರಚನೆಗಳು. ವ್ಯಕ್ತಿ, ವಸ್ತು, ವಿಷಯ, ಮೊದಲಾದುವನ್ನು ಹೆಸರಿಸಿ ಗುರುತಿಸುವುದಕ್ಕಾಗಿ ಜೋಡು ಪದಗಳನ್ನೂ ಮತ್ತು ವರ್ಣಿಸಿ ಗುರುತಿಸುವುದಕ್ಕಾಗಿ ಪದಕಂತೆಗಳನ್ನೂ ಬಳಸಲಾಗುತ್ತದೆ. ಪುರುಷವಾಚಕ ಪದ (ಠಿeಡಿsoಟಿಚಿಟ ಠಿಡಿoಟಿouಟಿ): ವಾಕ್ಯದ ಆಡುಗ ಮತ್ತು ಕೇಳುಗ ರನ್ನು ಸೂಚಿಸುವ ಪದಗಳು (ಕನ್ನಡದ ನಾನು ಮತ್ತು ನೀನು). ಪ್ರತಿಧ್ವನಿಸುವ ರಚನೆ (eಛಿho-ಜಿoಡಿmಚಿಣioಟಿ): ಒಂದು ಪದದೊಂದಿಗೆ ಅದರ ಪ್ರತಿಧ್ವನಿಯಂತೆ ತೋರುವ ಇನ್ನೊಂದು ಪದವನ್ನು ಸೇರಿಸಿ ಬಳಸು ವುದು; ಆಟ ಗೀಟ, ಮನೆ ಗಿನೆ, ಕಲ್ಲು ಗಿಲ್ಲು, ಇತ್ಯಾದಿ.
ಪ್ರತಿನಾಮ (ಚಿಟಿಚಿಠಿhoಡಿಚಿ): ಒಮ್ಮೆ ಬಳಸಿದ ಪದವನ್ನು ಪುನ: ಬಳಸುವ ಬದಲು, ಅದನ್ನೇ ಸೂಚಿಸುವುದಕ್ಕಾಗಿ ಬಳಸುವ ಬೇರೊಂದು ಪದ; ತಾನು, ಅವನು ಇತ್ಯಾದಿಗಳಿಗೆ ಕನ್ನಡದಲ್ಲಿ ಇಂತಹ ಬಳಕೆಯಿದೆ. ಪ್ರಶ್ನಾರ್ಥಕ ಪದ (iಟಿಣeಡಿಡಿogಚಿಣive ಠಿಡಿoಟಿouಟಿ): ಯಾರು, ಏನು, ಯಾಕೆ, ಎಲ್ಲಿ ಮೊದಲಾದವುಗಳನ್ನು ಕನ್ನಡ ವ್ಯಾಕರಣಗಳಲ್ಲಿ ‘ಪ್ರಶ್ನಾರ್ಥಕ’ ಪದಗಳೆಂದು ಕರೆಯುವುದು ರೂಢಿ. ಆದರೆ ಕನ್ನಡದಲ್ಲಿ ಇವಕ್ಕೆ ಹೆಚ್ಚಿನ ಬಳಕೆಗಳಲ್ಲೂ ಪ್ರಶ್ನೆಯ (ಎಂದರೆ ಕೇಳ್ವಿಯ) ಅರ್ಥವಿಲ್ಲ. ಇವನ್ನು ಪ್ರಶ್ನಾರ್ಥಕಗಳೆಂದು ಕರೆಯುವ ಬದಲು ಅನಿಶ್ಚಿತಾರ್ಥಕಗಳೆಂದು ಕರೆ ಯುವುದೇ ವಾಸಿ. ಕನ್ನಡದಲ್ಲಿ ಪ್ರಶ್ನಾರ್ಥಕ ವಾಕ್ಯಗಳಲ್ಲಿ ಖಡ್ಡಾಯ ವಾಗಿಯೂ ಬರುವ ಸ್ವರವಿನ್ಯಾಸಕ್ಕೆ ಮಾತ್ರವೇ ಪ್ರಶ್ನಾರ್ಥವಿದೆಯೆಂದು ಹೇಳಲು ಸಾಧ್ಯ. ಪ್ರೇರಕ (ಛಿಚಿuseಡಿ): ಒಂದು ಘಟನೆಯನ್ನು ಮಾಡುಗನ ಮೂಲಕ ಮಾಡಿಸಿ ಕೊಳ್ಳುವ ಘಟಕ; ಜಾನಕಿ ರಾಜುವಿನ ಕೈಯಲ್ಲಿ ತನ್ನ ಪೆಟ್ಟಿಗೆ ಯನ್ನು ಹೊರಿಸಿದಳು ಎಂಬ ವಾಕ್ಯದಲ್ಲಿ ಜಾನಕಿ ಪ್ರೇರಕ ಘಟಕ. ಬದಲಿ ಅರ್ಥ (ಜisರಿuಟಿಛಿಣioಟಿ): ಇಲ್ಲವೇ ಮತ್ತು ಅಥವಾ ಪದಗಳಿಗಿರುವ ಮಾತಿನ ಕೆಲಸ: ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸುವುದರ ಮೂಲಕ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಲು ಇಲ್ಲವೇ ಮಾಡಿಸಿ ಕೊಳ್ಳಲು ಸಾಧ್ಯವಿದೆ. ಒಂದು ಘಟನೆ ಇಲ್ಲವೇ ಸಂಗತಿಯನ್ನು ತಿಳಿಸು ವುದು (ರಾಜು ಬಂದಿದ್ದಾನೆ), ಇನ್ನೊಬ್ಬನಿಂದ ಒಂದು ಸಂಗತಿಯನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯನ್ನು ಸೂಚಿಸುವುದು (ರಾಜು ಬಂದಿ ದ್ದಾನೋ?), ಇನ್ನೊಬ್ಬನಿಂದ ಒಂದು ಕೆಲಸವನ್ನು ಮಾಡಿಸಿಕೊಳ್ಳು ವುದು (ಆ ಪುಸ್ತಕವನ್ನು ಇಲ್ಲಿ ಕೊಡು), ಬೆರಗನ್ನು ಸೂಚಿಸುವುದು (ರಾಜು ಎಷ್ಟು ಬೇಗ ಬಂದಿದ್ದಾನೆ!) ಮೊದಲಾದ ಕೆಲಸಗಳಿಗಾಗಿ ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸಲು ಸಾಧ್ಯವಿದ್ದು, ಇವೆಲ್ಲ ಮಾತಿನ ಕೆಲಸಗಳು. ಮುಖ್ಯ ಅಂಶ (ಜಿoಛಿus): ಒಂದು ವಿಷಯದ ಕುರಿತಾಗಿ ವಾಕ್ಯವೊಂದು ತಿಳಿಸುವ ಸುದ್ದಿಯಲ್ಲಿ ಅತ್ಯಂತ ಪ್ರಾಮುಖ್ಯವಾದ ಅಂಶ; ಕನ್ನಡದಲ್ಲಿ ಇದು ನೇರ ವಾಗಿ ಕ್ರಿಯಾಪದದ ಎಡಕ್ಕೆ ಬರುತ್ತದೆ. ಮುಂದಿನ ಸಮಯ (ಭವಿಷ್ಯತ್ಕಾಲ, ಜಿuಣuಡಿe ಣeಟಿse): ವಾಕ್ಯವೊಂದು ತಿಳಿಸುವ ಘಟನೆ ಆ ವಾಕ್ಯವನ್ನಾಡಿರುವ ಸಮಯದ ಅನಂತರ ನಡೆಯುವಂತಹ ದಾದರೆ ಅದರದು ‘ಮುಂದಿನ’ ಸಮಯ; ರಾಜುವಿನ ಮನೆಗೆ ನಾನು ಹೋಗುತ್ತೇನೆ ಎಂಬ ವಾಕ್ಯದಲ್ಲಿ ಹೋಗುವ ಘಟನೆ ಆ ವಾಕ್ಯವ ನ್ನಾಡಿರುವ ಸಮಯದ ಅನಂತರ ನಡೆಯುವುದಾದ ಕಾರಣ ಹೋಗು ತ್ತೇನೆ ಎಂಬುದು ಮುಂದಿನ ಸಮಯದ ಕ್ರಿಯಾರೂಪ. ಯಥಾರ್ಥತೆ (mooಜ): ಒಂದು ಘಟನೆ ನಡೆದಿರುವ ಇಲ್ಲವೇ ನಡೆಯಲಿರುವ ವಿಷಯದಲ್ಲಿ ಆಡುಗನಿಗೆ ಎಂತಹ ಆಧಾರಗಳಿವೆಯೆಂಬುದನ್ನವಲಂಬಿಸಿ ಅದರ ಸಮಯವನ್ನು ಸೂಚಿಸುವ ವಿಧಾನ. ರೂಢನಾಮ (ಛಿommoಟಿ ಟಿouಟಿ): ಸಮಾನತೆಯಿರುವ ಹಲವು ವ್ಯಕ್ತಿ ಇಲ್ಲವೇ ವಸ್ತುಗಳಿಗೆ ರೂಢಿಯಲ್ಲಿರುವ ಹೆಸರು; ಬಡಗಿ, ಅಕ್ಕ, ಮರ, ಪೆನ್ನು, ಇತ್ಯಾದಿಗಳು ಇಂತಹವು. ವರ್ಣಿಸುವುದು (ಜesಛಿಡಿiಠಿಣioಟಿ): ಘಟನೆಯೊಂದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ವಿಷಯ, ಮೊದಲಾದವುಗಳನ್ನು ಹೆಸರಿಸುವ ಬದಲು ವರ್ಣಿಸಿ ಗುರುತಿಸಲು ಸಾಧ್ಯವಿದೆ; ಸಾಮಾನ್ಯವಾಗಿ ಈ ಕೆಲಸಕ್ಕಾಗಿ ನಾಮಪದ ಕಂತೆಗಳನ್ನು ಬಳಸಲಾಗುತ್ತದೆ. ವಿಭಕ್ತಿ ಪ್ರತ್ಯಯ (ಛಿಚಿse suಜಿಜಿix): ವಾಕ್ಯದಲ್ಲಿ ಬರುವ ನಾಮಪದವನ್ನು ಕ್ರಿಯಾ ಪದದೊಂದಿಗೆ ಸಂಬಂಧಿಸುವ ಪ್ರತ್ಯಯ. ವ್ಯಕ್ತಿ, ವಸ್ತು ಮೊದಲಾ ದವುಗಳು ಒಂದು ಘಟನೆಯಲ್ಲಿ ಎಂತಹ ಕೆಲಸಗಳಲ್ಲಿ ನಿರತವಾಗಿವೆ ಎಂಬುದನ್ನು ಈ ಪ್ರತ್ಯಯಗಳು ಸೂಚಿಸುತ್ತವೆ; ರಾಜು ತನ್ನ ಪೆನ್ನನ್ನು ಹರಿಗೆ ಕೊಟ್ಟ ಎಂಬ ವಾಕ್ಯದಲ್ಲಿ ಕೊಟ್ಟಿರುವ ವಸ್ತು ಪೆನ್ನು ಎಂಬು ಕೆಲವು ಪಾರಿಭಾಷಿಕ ಪದಗಳು ದನ್ನು ತಿಳಿಸುವ ಅನ್ನು ಪ್ರತ್ಯಯ, ಮತ್ತು ಅದನ್ನು ಪಡೆದಿರುವವನು ಹರಿ ಎಂಬುದನ್ನು ತಿಳಿಸುವ ಗೆ ಪ್ರತ್ಯಯ, ಇವು ವಿಭಕ್ತಿ ಪ್ರತ್ಯಯಗಳು. ವಿಷಯ (ಣoಠಿiಛಿ): ಒಂದು ವಾಕ್ಯ ಯಾವ ಘಟಕದ (ಇಲ್ಲವೇ ವಾಕ್ಯಾಂಶದ) ಕುರಿತಾಗಿ ಸುದ್ದಿಯನ್ನು ತಿಳಿಸುತ್ತಿದೆಯೋ ಆ ಘಟಕ. ವಿಷಯ ವಾಕ್ಯ (ಜಿಚಿಛಿಣive seಟಿಣeಟಿಛಿe): ಒಂದು ಸಂಗತಿಯನ್ನು ತಿಳಿಸುವ ವಾಕ್ಯ. ವ್ಯವಹಾರ ಸಂಬಂಧ (ಠಿಡಿಚಿgmಚಿಣiಛಿ ಡಿeಟಚಿಣioಟಿ): ವಾಕ್ಯದ ಒಂದು ಘಟಕಕ್ಕೆ ಹಿಂದಿನ ವಾಕ್ಯದ ಘಟಕವೊಂದರೊಂದಿಗೆ ಇಲ್ಲವೇ ಮಾತಿನ ಸನ್ನಿವೇಶ ದೊಂದಿಗೆ ಇರುವ ಸಂಬಂಧ (ವಿಷಯ, ಸುದ್ದಿ, ಮುಖ್ಯ ಅಂಶ, ಹಿನ್ನೆಣಿಕೆ, ಇತ್ಯಾದಿ). ವ್ಯಾಕರಣ ಸಂಬಂಧ (gಡಿಚಿmmಚಿಣiಛಿಚಿಟ ಡಿeಟಚಿಣioಟಿ): ಅರ್ಥಸಂಬಂಧ ಮತ್ತು ಅದನ್ನು ಸೂಚಿಸುವ ವಿಧಾನಗಳ ನಡುವೆ ನೇರವಾದ ಹೊಂದಾಣಿಕೆ ಯಿಲ್ಲದ ಭಾಷೆಗಳಲ್ಲಿ ಅರ್ಥ ಸಂಬಂಧವನ್ನು ವರ್ಣಿಸಲು ಬಳಸುವ ಕಲ್ಪಿತ ಸಂಬಂಧ; ಇಂತಹ ಭಾಷೆಗಳಲ್ಲಿ ವಾಕ್ಯರಚನೆಯ ನಿಯಮ ಗಳನ್ನು ವರ್ಣಿಸುವುದಕ್ಕೂ ಇಂತಹ ಕಲ್ಪಿತ ಸಂಬಂಧಗಳ ಅವಶ್ಯಕತೆ ಯಿದೆ. ಇಂಗ್ಲಿಷ್ ವ್ಯಾಕರಣದ subರಿeಛಿಣ, obರಿeಛಿಣ ಮೊದಲಾದವು, ಮತ್ತು ಸಂಸ್ಕೃತ ವ್ಯಾಕರಣದ ಕತ್ರೃ, ಕರ್ಮ, ಕರಣ ಮೊದಲಾದವು ಇಂತಹವು. ಕನ್ನಡಕ್ಕೆ ಇಂತಹ ಕಲ್ಪಿತ ಸಂಬಂಧಗಳ ಅವಶ್ಯಕತೆಯಿಲ್ಲ. ಶ್ರುತಿವಿನ್ಯಾಸ (iಟಿಣoಟಿಚಿಣioಟಿ): ಒಂದು ವಾಕ್ಯವನ್ನಾಡುವಾಗ ಅದರ ಉಚ್ಚಾರಣೆ ಗಾಗಿ ಶ್ರುತಿ ವಿನ್ಯಾಸವೊಂದನ್ನು ಆರಿಸಬೇಕಾಗುತ್ತದೆ. ಇದು ಕೇಳ್ವಿ ಗಳಲ್ಲಿ, ತಿಳಿಸುವ ವಾಕ್ಯಗಳಲ್ಲಿ ಮತ್ತು ಬೆರಗನ್ನು ಸೂಚಿಸುವ ವಾಕ್ಯ ಗಳಲ್ಲಿ ಬೇರೆ ಬೇರಾಗಿರುತ್ತದೆ. ಷರತ್ತು (ಛಿoಟಿಜiಣioಟಿ): ಒಂದು ವಾಕ್ಯ ತಿಳಿಸುವ ಘಟನೆ ಇಲ್ಲವೇ ಸಂಗತಿ ಇನ್ನೊಂದು ವಾಕ್ಯ ತಿಳಿಸುವ ಘಟನೆ ಇಲ್ಲವೆ ಸಂಗತಿಗೆ ಷರತ್ತು ಎಂಬು ದಾಗಿ ಸೂಚಿಸುವ ವಾಕ್ಯರಚನೆ; ಮಳೆ ಬಂದರೆ ಕೆರೆ ತುಂಬುತ್ತದೆ ಎಂಬ ವಾಕ್ಯದಲ್ಲಿ ಮಳೆ ಬಂದರೆ ಎಂಬುದು ಷರತ್ತು. ಸಮಯ ಸಂಬಂಧ (ಣeಟಿse): ಘಟನೆಯ ಸಮಯಕ್ಕೂ ಮತ್ತು ಅದನ್ನು ತಿಳಿಸುವ ವಾಕ್ಯವನ್ನಾಡಿರುವ ಸಮಯಕ್ಕೂ ನಡುವಿರುವ ಸಂಬಂಧ; ಹಿಂದಿನ ಸಮಯ, ಮುಂದಿನ ಸಮಯ ಮತ್ತು ಈಗಿನ ಸಮಯ ಎಂಬವುಗಳು ಇಂತಹ ಸಮಯ ಸಂಬಂಧವನ್ನು ಸೂಚಿಸುತ್ತವೆ. ಸಂಬಂಧಿಸುವ ರೂಪ (ಡಿeಟಚಿಣive ಛಿಟಚಿuse, giಟಿiಣive) ಕ್ರಿಯಾಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡಲು ಅವುಗಳ ಸಂಬಂಧಿಸುವ ರೂಪವನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಮಾಡು ಕ್ರಿಯಾ ಪದಕ್ಕೆ ಮಾಡುವ, ಮಾಡಿದ ಮತ್ತು ಮಾಡದ ಎಂಬ ಮೂರು ಸಂಬಂಧಿಸುವ ರೂಪಗಳಿದ್ದು, ಇವನ್ನು ಮಾಡುವ ಕೆಲಸ, ಮಾಡಿದ ಕೆಲಸ ಮತ್ತು ಮಾಡದ ಕೆಲಸ ಎಂಬಂತಹ ಪದಕಂತೆಗಳಲ್ಲಿ ನಾಮ ಪದಗಳ ವಿಶೇಷಣಗಳಾಗಿ ಬಳಸಬಹುದು. ಇದೇ ರೀತಿಯಲ್ಲಿ ಒಂದು ನಾಮಪದವನ್ನು ಬೇರೊಂದು ನಾಮ ಪದದ ವಿಶೇಷಣವನ್ನಾಗಿ ಮಾಡಿ ಬಳಸಲು ಅದರ ಸಂಬಂಧಿಸುವ ರೂಪವನ್ನು ಬಳಸಬಹುದು; ಮರದ ಗೆಲ್ಲು ಎಂಬುದರಲ್ಲಿ ಮರದ ಎಂಬುದು ಮರ ನಾಮಪದದ ಸಂಬಂಧಿಸುವ ರೂಪ. ಕನ್ನಡ ವ್ಯಾಕರಣಗಳಲ್ಲಿ ನಾಮಪದಗಳ ಈ ರೂಪವನ್ನು ಷಷ್ಠೀ ವಿಭಕ್ತಿಯ ರೂಪವೆಂದು ಕರೆಯಲಾಗಿದೆ; ಆದರೆ ನಿಜಕ್ಕೂ ಇದು ನಾಮಪದಗಳ ವಿಭಕ್ತಿ ರೂಪವಲ್ಲ; ಯಾಕೆಂದರೆ, ಕನ್ನಡದಲ್ಲಿ ಇದಕ್ಕೆ ನಾಮಪದ ಗಳನ್ನು ಕ್ರಿಯಾಪದಗಳೊಂದಿಗೆ ಸಂಬಂಧಿಸುವ ಕೆಲಸವಿಲ್ಲ. ಸವ್ರಪದ (ಠಿಡಿoಜಿoಡಿm): ವಾಕ್ಯದಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸು ವುದು, ಅವುಗಳ ಕುರಿತು ಅನಿಶ್ಚಿತತೆಯನ್ನು ತಿಳಿಸುವುದು ಮೊದಲಾದ ಕೆಲಸಗಳಿಗಾಗಿ ಬಳಕೆಯಾಗುವ ಪದಗಳು; ಅದು-ಇದು-ಯಾವುದು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ಪದಗಳು ಇಂತಹವು.
ಸುದ್ದಿ (ಛಿommeಟಿಣ): ಒಂದು ವಿಷಯದ ಕುರಿತಾಗಿ ವಾಕ್ಯ ಏನನ್ನು ತಿಳಿಸು ತ್ತಿದೆಯೋ ಅದು; ರಾಜು ಮನೆಗೆ ಹೋದ ಎಂಬುದರಲ್ಲಿ ರಾಜು ಎಂಬುದು ವಿಷಯ ಮತ್ತು ಮನೆಗೆ ಹೋದ ಎಂಬುದು ಸುದ್ದಿ. ಸುರುಘಟಕ (souಡಿಛಿe): ಒಂದು ಕದಲುವಿಕೆ (ಚಲನೆ) ಯಾವ ಜಾಗದಲ್ಲಿ ಸುರುವಾಗಿದೆಯೆಂಬುದನ್ನು ಸೂಚಿಸುವ ಘಟಕ; ಮನೆಯಿಂದ ಬಂದೆ ಎಂಬುದರಲ್ಲಿ ಮನೆಯಿಂದ ಎಂಬುದು ಸುರುಘಟಕ. ಸೇರಿಕೆಯ ಬದಲಾವಣೆ (ಸಂಧಿಕಾರ್ಯ, moಡಿಠಿhoಠಿhoಟಿemiಛಿs): ಎರಡು ಪದಗಳು ಇಲ್ಲವೇ ಒಂದು ಪದ ಮತ್ತು ಒಂದು ಪ್ರತ್ಯಯ ಸೇರಿದಾಗ ಅವುಗಳಲ್ಲಿರುವ ವರ್ಣ ಗಳಲ್ಲಿ ನಡೆಯುವ ಬದಲಾವಣೆ; ಬಂದ ಪದಕ್ಕೆ ಆಗ ಪದ ಸೇರಿದಾಗ ಮೊದಲನೆಯ ಪದದ ಕೊನೆಯ ಅಕಾರ ಬಿದ್ದು ಹೋಗಿ ಬಂದಾಗ ಎಂದಾಗುವುದು ಇಂತಹ ಒಂದು ಸೇರಿಕೆಯ ಬದಲಾವಣೆ. ಹಿಂದಿನ ಸಮಯ (ಭೂತಕಾಲ, ಠಿಚಿsಣ ಣeಟಿse): ಒಂದು ವಾಕ್ಯವು ತಿಳಿಸುವ ಘಟನೆ ಆ ವಾಕ್ಯವನ್ನು ಆಡಿರುವ ಸಮಯಕ್ಕಿಂತ ಮೊದಲು ನಡೆದಿದೆ ಯಾದಲ್ಲಿ ಅದರದು ‘ಹಿಂದಿನ’ ಸಮಯ; ನಾನು ಊಟ ಮಾಡಿದೆ ಎಂಬ ವಾಕ್ಯದಲ್ಲಿ ಊಟ ಮಾಡುವ ಘಟನೆ ಆ ವಾಕ್ಯವನ್ನಾಡಿರುವ ಕಾರಣ ಮಾಡಿದೆ ನಡೆದಿದೆಯಾದ ಸಮಯಕ್ಕಿಂತ ಮೊದಲು ಎಂಬುದು ಹಿಂದಿನ ಸಮಯದ ಕ್ರಿಯಾರೂಪ. ಕೆಲವು ಪಾರಿಭಾಷಿಕ ಪದಗಳು ಹಿನ್ನೆಣಿಕೆ (ಚಿಜಿಣeಡಿ-ಣhoughಣ): ವಾಕ್ಯದಲ್ಲಿ ಸೂಚಿಸದಿದ್ದ ಘಟಕ ಇಲ್ಲವೇ ವಾಕ್ಯಾಂಶವೊಂದನ್ನು ವಾಕ್ಯದ ಕೊನೆಯಲ್ಲಿ ಸೂಚಿಸುವುದು; ಅವನು ಬಂದಿದ್ದಾನೆ, ಬೆಳಿಗ್ಗೆ ಎಂಬುದರಲ್ಲಿ ಬೆಳಿಗ್ಗೆ ಎಂಬುದು ಹಿನ್ನೆಣಿಕೆ. ಹೆಸರಿಸುವುದು (ಟಿಚಿmiಟಿg): ಘಟನೆಯೊಂದರಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಅವುಗಳ ಹೆಸರೊಂದನ್ನು (ರೂಢನಾಮ ಇಲ್ಲವೇ ಅಂಕಿತನಾಮವನ್ನು) ಬಳಸುವುದು. ಹೊರವಾಕ್ಯ (mಚಿಣಡಿix seಟಿಣeಟಿಛಿe): ಒಳವಾಕ್ಯವೊಂದನ್ನು ಒಳಗೊಂಡಿರುವುದು ರಾಜು ಹೇಳಿದ್ದಾನೆ ಎಂಬುದು ಯಾರೂ ಬರಬಾರದೆಂದು ಹೊರವಾಕ್ಯ; ಒಳಗೆ ಹೇಳಿದ್ದಾನೆ ಎಂಬುದರಲ್ಲಿ ಹೊರವಾಕ್ಯ. ಹೋಲುಗ (sಣಚಿಟಿಜಚಿಡಿಜ oಜಿ ಛಿomಠಿಚಿಡಿisoಟಿ): ಹೋಲಿಕೆಯ ವಾಕ್ಯವೊಂದರಲ್ಲಿ ಯಾವ ವ್ಯಕ್ತಿ, ವಸ್ತು ಮೊದಲಾದವುಗಳೊಂದಿಗೆ ಒಂದು ಘಟಕವನ್ನು ಹೋಲಿಸಲಾಗಿದೆಯೋ ಅದು; ರಾಜುವಿಗಿಂತ ದೊಡ್ಡ ಹುಡುಗ ಎಂಬುದರಲ್ಲಿ ರಾಜು ಹೋಲುಗ). ಆಕರಸೂಚಿ ಗ್ರೀನ್ಬಗ್್ರ, ಜೆ. ಹೆಚ್. (ಸಂ) 1963. Uಟಿiveಡಿsಚಿಟs oಜಿ ತಿರುಮಲೇಶ್, ಕೆ.ವಿ. 1979. ಖeoಡಿಜeಡಿiಟಿg ಡಿuಟes iಟಿ ಏಚಿಟಿಟಿಚಿಜಚಿ ಚಿಟಿಜ ಭಟ್, ಡಿ.ಎನ್.ಎಸ್. 1978. ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ. ಮೈಸೂರು: ಗೀತಾ ಬುಕ್ ಹೌಸ್. ಪ್ರೈಮಸ್, ಬಿ. 2001. ‘Woಡಿಜ oಡಿಜeಡಿ ಣಥಿಠಿoಟogಥಿ’ : ಹಸ್ಪೆಲ್ಮಠ್, ಎಮ್. (ಸಂ), —- 2001. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಮೈಸೂರು: ಭಾಷಾಪ್ರಕಾಶನ. —- 2002. ಕನ್ನಡ ಪದಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ. —- 2003. ಕನ್ನಡದ ಸವ್ರನಾಮಗಳು. ಮೈಸೂರು: ಭಾಷಾಪ್ರಕಾಶನ. ಶ್ರೀಧರ್, ಎಸ್. ಎನ್. 1990. ಏಚಿಟಿಟಿಚಿಜಚಿ. ಐoಟಿಜoಟಿ: ಖouಣಟeಜge. ಷಿಫ್ಮನ್, ಹೆಚ್. 1983. ಂ ಡಿeಜಿeಡಿeಟಿಛಿe gಡಿಚಿmmಚಿಡಿ oಜಿ sಠಿoಞeಟಿ ಏಚಿಟಿಟಿಚಿಜಚಿ.