Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಹತ್ತು — ಮಾತಿನ ಕೆಲಸಗಳು
10.1 ಪೀಠಿಕೆ
ಮಾತಿನ ಮೂಲಕ ನಾವು ಹಲವಾರು ಕೆಲಸಗಳನ್ನು ನಡೆಸಬಲ್ಲೆವು. ಯಾವುದಾದ ರೊಂದು ಸಂಗತಿಯನ್ನು ಇನ್ನೊಬ್ಬರಿಗೆ ತಿಳಿಸುವುದು ಇವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಕೆಲಸ. ಇದಲ್ಲದೆ, ತಿಳಿಯದಿರುವ ಸಂಗತಿಯನ್ನು ಬೇರೆಯವ ರಿಂದ ತಿಳಿದುಕೊಳ್ಳುವುದಕ್ಕಾಗಿ ಕೇಳ್ವಿಯೊಂದನ್ನು ಬಳಸುವುದು, ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸಿಕೊಳ್ಳುವುದಕ್ಕಾಗಿ ಅವರನ್ನು ಬೇಡಿಕೊಳ್ಳುವುದು ಇಲ್ಲವೇ ಅವರಿಗೆ ಅಪ್ಪಣೆಮಾಡುವುದು, ಮಾಡಬಾರದ ಕೆಲಸವನ್ನು ಮಾಡದಂತೆ ತಡೆಯುವುದು, ಮೊದಲಾದ ಬೇರೆಯೂ ಹಲವಾರು ರೀತಿಯ ಕೆಲಸಗಳನ್ನು ನಾವು ಮಾತಿನ ಮೂಲಕ ನಡೆಸಬಲ್ಲೆವು.
ಈ ಬೇರೆ ಬೇರೆ ರೀತಿಯ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಕನ್ನಡ ದಲ್ಲಿ ಬೇರೆ ಬೇರೆ ರೀತಿಯ ವಾಕ್ಯರಚನೆಯ ವಿಧಾನಗಳು ಬಳಕೆಯಲ್ಲಿವೆ. ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿಯೇ ಬಳಸಬಹುದಾದಂತಹ ಕೆಲವು ಪದ ಗಳು ಕನ್ನಡದಲ್ಲಿದ್ದು, ಅವನ್ನು ಬಳಸಿ ರಚಿಸಿದ ಹೊರವಾಕ್ಯಗಳೊಳಗೆ ವಾಕ್ಯ ವೊಂದನ್ನಿರಿಸಿ ಹೇಳುವುದು ಇಂತಹ ವಿಧಾನಗಳಲ್ಲೊಂದು.
(1ಕ) ದೇವರು ನಿಮಗೆ ಒಳ್ಳೆಯದು ಮಾಡಲೆಂದು ಹರಸುತ್ತೇನೆ. (1ಖ) ಸಾಲವನ್ನು ತೀರಿಸುತ್ತೇನೆಂದು ನಾಳೆಯೇ ಮಾಡುತ್ತೇನೆ. ಕಡಿಮೆಗೆ ನೂರಾದರೂ ಕೊಡಬೇಕೆಂದು ನನ್ನ ಪ್ರಾರ್ಥನೆ.
(1ಘ) ಈ ಕಾರ್ಯಕ್ರಮದಲ್ಲಿ ಸಹಕರಿಸಿದವರೆಲ್ಲರಿಗೂ ನನ್ನ ಕೃತಜ್ಞತೆ ಗಳು. (1ಙ) ಅಧ್ಯಕ್ಷರು ಬಂದಿದ್ದಾರೇನ್ರಿ? (1ಕ) ವಾಕ್ಯದಲ್ಲಿ ‘ಹರಸುವ’ ಕೆಲಸವನ್ನು ನಡೆಸುವುದಕ್ಕಾಗಿ ಹರಸು ಕ್ರಿಯಾಪದ ಹೊರವಾಕ್ಯದಲ್ಲಿ ಬಂದಿದ್ದು, ‘ಏನೆಂದು ಹರಸಿದ್ದು’ ಎಂಬುದನ್ನು ಅದರ ಒಳ ವಾಕ್ಯವಾಗಿ ಬಂದಿರುವ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂಬುದು ತಿಳಿಸುತ್ತದೆ. ಇದೇ ರೀತಿಯಲ್ಲಿ (1ಖ)ದಲ್ಲಿ ಆಣೆ ಮಾಡಿ ಹೇಳುತ್ತೇನೆ ಎಂಬ ಹೊರವಾಕ್ಯವೂ, (1ಗ)ದಲ್ಲಿ ನನ್ನಪ್ರಾರ್ಥನೆ ಎಂಬ ಹೊರವಾಕ್ಯವೂ, (1ಘ) ದಲ್ಲಿ ನನ್ನ ಕೃತಜ್ಞತೆಗಳು ಎಂಬ ಹೊರವಾಕ್ಯವೂ ಮತ್ತು (1ಙ)ದಲ್ಲಿ ಏನ್ರಿ? ಎಂಬ ಹೊರವಾಕ್ಯವೂ ಅವು ನಡೆಸಬಲ್ಲ ಕೆಲಸಗಳನ್ನು ಸೂಚಿಸುತ್ತವೆ. ವಾಕ್ಯಗಳಲ್ಲೇನೇ ಕೆಲವು ಬದಲಾವಣೆಗಳನ್ನು ಮಾಡಿ ಅಂತಹ ಬದಲಾ ಗಿರುವ ವಾಕ್ಯಗಳ ಮೂಲಕ ಮಾತಿನ ಕೆಲಸಗಳನ್ನು ನಡೆಸುವುದು ಇನ್ನೊಂದು ವಿಧಾನ. (2ಕ) ಮಗು ಕುಚ್ರಿಯಲ್ಲಿ ಕುಳಿತಿದೆ. (2ಖ) ಮಗು ಕುಚ್ರಿಯಲ್ಲಿ ಕುಳಿತಿದೆಯೇ? (2ಗ) ಮಗು ಎಲ್ಲಿ ಕುಳಿತಿದೆ? (2ಘ) ಮಗು ಕುಚ್ರಿಯಲ್ಲಿ ಕುಳಿತಿರಲಿ. (2ಙ) ಮಗೂ, ಕುಚ್ರಿಯಲ್ಲಿ ಕುಳಿತುಕೊ. (2ಕ)ದಲ್ಲಿ ತಿಳಿಸುವ ಕೆಲಸವನ್ನು ನಡೆಸುವ ವಾಕ್ಯವೊಂದು ಬಂದಿದ್ದು, (2ಖ- ಙ)ಗಳಲ್ಲಿ ಆ ವಾಕ್ಯದಲ್ಲೇನೇ ಬದಲಾವಣೆಗಳನ್ನು ಮಾಡುವುದರ ಮೂಲಕ ಅದು ನಿಜವೇ ಎಂದು ಕೇಳುವುದು, ಅದಕ್ಕೆ ಒಪ್ಪಿಗೆ ಕೊಡುವುದು, ಮೊದಲಾದ ಬೇರೆ ಕೆಲವು ಕೆಲಸಗಳಲ್ಲಿ ತೊಡಗಿಸಲು ಸಾಧ್ಯವಾಗುವಂತೆ ಮಾಡಲಾಗಿದೆ. ಇದಲ್ಲದೆ, ವಾಕ್ಯವೊಂದನ್ನು ಯಾವ ರೀತಿಯಲ್ಲಿ ನುಡಿಯಲಾಗಿದೆ ಎಂಬು ದರ ಮೇಲೂ ಅದು ಎಂತಹ ಕಾರ್ಯವನ್ನು ನಡೆಸಬಲ್ಲುದು ಎಂಬ ವಿಷಯ ಅವಲಂಬಿಸಿರುತ್ತದೆ. ಉದಾಹರಣೆಗಾಗಿ, ಒಂದು ವಾಕ್ಯವನ್ನು ಎತ್ತರದ ಧ್ವನಿ ಯಲ್ಲಿ ಹೇಳುವುದಕ್ಕೂ ಮತ್ತು ತಗ್ಗಿನ ಧ್ವನಿಯಲ್ಲಿ ಹೇಳುವುದಕ್ಕೂ ನಡುವೆ ಅವುಗಳ ಮೂಲಕ ನಡೆಸಿಕೊಳ್ಳಬಹುದಾದ ಕೆಲಸಗಳಲ್ಲಿ ವ್ಯತ್ಯಾಸವಿದೆ. ಎತ್ತರದ ಧ್ವನಿಯಲ್ಲಿ ಹೇಳಿ ಕೇಳುಗನನ್ನು ಹೆದರಿಸಬಹುದು ಮತ್ತು ತಗ್ಗಿನ ಧ್ವನಿಯಲ್ಲಿ ಹೇಳಿ ಆತನನ್ನು ಸಂತೈಸಬಹುದು.
ಒಂದು ವಾಕ್ಯವನ್ನು ಯಾರು ಬಳಸಿದ್ದಾರೆ, ಮತ್ತು ಯಾರನ್ನು ಉದ್ದೇಶಿಸಿ ಅದನ್ನು ಬಳಸಲಾಗಿದೆ ಎಂಬುದರ ಮೇಲೂ ವಾಕ್ಯವೊಂದು ಎಂತಹ ಕೆಲಸವನ್ನು ನಡೆಸಬಲ್ಲುದು ಎಂಬುದು ಅವಲಂಬಿಸಿರುತ್ತದೆ. ಉದಾಹರಣೆಗಾಗಿ, ಮಾವಿನ ಮರದ ಹತ್ತಿರ ಹೋಗಬೇಡ ಎಂಬ ವಾಕ್ಯವನ್ನು ಒಬ್ಬ ಹುಡುಗ ಇನ್ನೊಬ್ಬ ಹುಡುಗನ ಹತ್ತಿರ ಹೇಳಿರುವನಾದರೆ, ಅದು ಕಾವಲುಗಾರ ನೋಡುತ್ತಿದ್ದಾನೆ, ಹೊಡೆಯಬಹುದು ಎಂಬುದಾಗಿ ‘ಎಚ್ಚರಿಸುವ’ ಕೆಲಸ ಮಾಡಬಹುದು. ಆದರೆ ಅದೇ ವಾಕ್ಯವನ್ನು ಒಬ್ಬ ಹುಡುಗನ ಹತ್ತಿರ ಒಬ್ಬ ಕಾವಲುಗಾರ ಹೇಳಿರುವ ನಾದರೆ, ಅದು ಮರದ ಹತ್ತಿರ ಆ ಹುಡುಗ ಹೋಗದಂತೆ ‘ತಡೆಹಿಡಿಯುವ’ ಕೆಲಸವನ್ನು ಮಾಡಬಹುದು. ವಾಕ್ಯವೊಂದನ್ನು ಬಳಸಿರುವ ಸಂದಭ್ರಕ್ಕನುಸಾರವಾಗಿಯೂ ಅದು ನಡೆಸ ಬಲ್ಲ ಕೆಲಸಗಳು ಬೇರೆ ಬೇರಾಗಿರಲು ಸಾಧ್ಯವಿದೆ. ಉದಾಹರಣೆಗಾಗಿ, ಕಿಟಿಕೆ ತೆರೆದಿದೆಯೋ ಎಂಬ ವಾಕ್ಯವನ್ನು ಚಳಿಗಾಳಿ ಬೀಸುತ್ತಿರುವ ಸಂದಭ್ರದಲ್ಲಿ ಒಬ್ಬ ವ್ಯಕ್ತಿ ಹೇಳಿರುವನಾದರೆ, ‘ತೆರೆದಿದ್ದರೆ ಅದನ್ನು ಮುಚ್ಚಬೇಕು’ ಎಂಬ ಅರ್ಥ ಬರುತ್ತದೆ, ಆದರೆ ಅದೇ ವಾಕ್ಯವನ್ನು ಜಾಸ್ತಿ ಸೆಖೆಯಿರುವ ಸಂದಭ್ರದಲ್ಲಿ ಹೇಳಿರುವನಾದರೆ, ‘ತೆರೆದಿಲ್ಲವಾದಲ್ಲಿ ತೆರೆಯಬೇಕು’ ಎಂಬ ಅರ್ಥ ಬರುತ್ತದೆ. ಈ ರೀತಿ ವಾಕ್ಯವೊಂದರ ಮೂಲಕ ಎಂತಹ ಕೆಲಸಗಳನ್ನು ನಡೆಸಲು ಸಾಧ್ಯ ಎಂಬುದು ಬೇರೆ ಬೇರೆ ವಿಷಯಗಳನ್ನು ಅವಲಂಬಿಸಿದ್ದು, ಅವುಗಳಲ್ಲಿ ಕೆಲಸ ಗಳನ್ನು ನಡೆಸಿಕೊಡುವ ಹೊರವಾಕ್ಯಗಳ ಬಳಕೆ ಮತ್ತು ವಾಕ್ಯದಲ್ಲೇನೇ ನಡೆಸುವ ಬದಲಾವಣೆಗಳ ಬಳಕೆ ಎಂಬ ಮೊದಲನೆಯ ಎರಡು ವಿಷಯಗಳನ್ನು ಮಾತ್ರ ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಯಾಕೆಂದರೆ, ಈ ಎರಡು ವಿಷಯಗಳಲ್ಲಿ ಮಾತ್ರ ವಾಕ್ಯದ ಒಳರಚನೆಯಲ್ಲಿ ವ್ಯತ್ಯಾಸಗಳು ತೋರಿಬರುತ್ತವೆ.
ಮಾತಿನ ಕೆಲಸಗಳಲ್ಲಿ ಹೆಚ್ಚಿನವೂ ಪ್ರಾಮುಖ್ಯವಾಗಿ ಮಾತಿನಲ್ಲಿ ಬಳಕೆ ಯಾಗುವ ವಾಕ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬರಹದಲ್ಲಿ ಬರುವ ವಾಕ್ಯಗಳಲ್ಲಿ ಇಂತಹ ಕೆಲಸಗಳಲ್ಲಿ ಕೆಲವು ಮಾತ್ರ ಕಾಣಿಸಿಕೊಳ್ಳುತ್ತವೆ. ಈ ಪುಸ್ತಕದಲ್ಲಿ ಪ್ರಾಮುಖ್ಯವಾಗಿ ಬರಹದ ಕನ್ನಡದಲ್ಲಿ ಬರುವ ವಾಕ್ಯಗಳ ಒಳರಚನೆಯನ್ನು ವಿವರಿಸಲಾಗಿದೆಯಾದ ಕಾರಣ, ಮಾತಿನ ಕೆಲಸಗಳಲ್ಲಿ ಕೆಲವನ್ನು ಮಾತ್ರವೇ ಇಲ್ಲಿ ವಿವರಿಸುವ ಅವಶ್ಯಕತೆ ಕಂಡುಬಂದಿದೆ.
10.2 ನಡೆಸಿಕೊಡುವ ಪದಗಳು
ಕನ್ನಡದಲ್ಲಿ ಸೂಚಿಸು, ಕ್ಷಮಿಸು, ಆಶೀವ್ರದಿಸು, ಹಾರೈಸು, ಸ್ವಾಗತಿಸು, ಮಾತುಕೊಡು ಮೊದಲಾದ ಕೆಲವು ಕ್ರಿಯಾಪದಗಳನ್ನಾಗಲಿ ಇಲ್ಲವೇ ಸುಳ್ಳು, ಅಪ್ಪಣೆ, ಕೃತಜ್ಞತೆ, ಸ್ವಾಗತ, ಮೊದಲಾದ ಕೆಲವು ನಾಮಪದಗಳನ್ನಾಗಲಿ ಬಳಸಿ, ಅವುಗಳ ಮೂಲಕ ಕೆಲವು ಮಾತಿನ ಕೆಲಸಗಳನ್ನು ನಡೆಸಲು ಸಾಧ್ಯವಿದೆ. (3ಕ) ಅಧ್ಯಕ್ಷ ಸೂಚಿಸುತ್ತೇನೆ. ಸ್ಥಾನಕ್ಕೆ ನಾನು ವಿಶ್ವೇಶ್ವರನ ಹೆಸರನ್ನು (3ಖ) ಹಣವನ್ನು ಹದಿನೈದು ದಿವಸಗಳೊಳಗೆ ಹಿಂದಿರುಗಿಸುತ್ತೇನೆಂದು ಮಾತುಕೊಡುತ್ತೇನೆ. (4ಕ) ನಿಮಗೆಲ್ಲರಿಗೂ ಸ್ವಾಗತ. (4ಖ) ನೀವು ನಿನ್ನೆ ಇಲ್ಲಿಗೆ ಬಂದಿರುವುದು ಸುಳ್ಳು. (3ಕ)ದಲ್ಲಿ ‘ಸೂಚಿಸುವ’ ಕೆಲಸವನ್ನು ಸೂಚಿಸು ಕ್ರಿಯಾಪದವನ್ನು ಬಳಸುವುದರ ಮೂಲಕವೂ ಮತ್ತು (3ಖ)ದಲ್ಲಿ ಮಾತುಕೊಡುವ ಕೆಲಸವನ್ನು ಮಾತುಕೊಡು ಕ್ರಿಯಾಪದವನ್ನು ಬಳಸುವುದರ ಮೂಲಕವೂ ನಡೆಸಲು ಸಾಧ್ಯವಾಗಿದೆ. ಇದಕ್ಕೆ ಬದಲು (4ಕ-ಖ) ಗಳಲ್ಲಿ ಸ್ವಾಗತ ಮತ್ತು ಸುಳ್ಳು ಎಂಬ ಎರಡು ನಾಮಪದ ಗಳನ್ನು ಬಳಸಿ ಸ್ವಾಗತಿಸುವ ಮತ್ತು ಅಲ್ಲಗಳೆಯುವ ಕೆಲಸಗಳನ್ನು ನಡೆಸಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಕ್ರಿಯಾಪದಗಳ ಮೂಲಕ ಮಾತಿನ ಕೆಲಸಗಳನ್ನು ನಡೆಸ ಬೇಕಿದ್ದಲ್ಲಿ ಅವನ್ನು ಆಡುಗನೇ ನಡೆಸುವ ಹಾಗೆ ಮತ್ತು ಅವು ಮುಂದಿನ ಸಮಯದಲ್ಲಿ ನಡೆಯುವ ಹಾಗೆ ಹೇಳುವುದು ಅವಶ್ಯ. ಇತರರು ನಡೆಸುವ ಹಾಗೆ ಇಲ್ಲವೇ ಹಿಂದಿನ ಸಮಯದಲ್ಲಿ ನಡೆದಿರುವ ಹಾಗೆ ಹೇಳಿದಲ್ಲಿ ಅವು ಮಾತಿನ ಕೆಲಸಗಳನ್ನು ನಡೆಸುವ ಬದಲು ಅಂತಹ ಕೆಲಸಗಳು ನಡೆದಿವೆ ಅಥವಾ ನಡೆಯ ಲಿವೆ ಎಂಬುದಾಗಿ ತಿಳಿಸುವುದನ್ನು ಮಾತ್ರ ಮಾಡುತ್ತವೆ. (5ಕ) ಅಧ್ಯಕ್ಷ ಸ್ಥಾನಕ್ಕೆ ನಾನು ವಿಶ್ವೇಶ್ವರನ ಹೆಸರನ್ನು ಸೂಚಿಸಿದೆ. (5ಖ) ಹಣವನ್ನು ಹದಿನೈದು ದಿವಸಗಳೊಳಗೆ ಹಿಂದಿರುಗಿಸುತ್ತೇನೆಂದು ರಾಜು ಮಾತು ಕೊಡುತ್ತಾನೆ. (5ಕ) ವಾಕ್ಯದಲ್ಲಿ ಸೂಚಿಸು ಕ್ರಿಯಾಪದ ಹಿಂದಿನ ಕಾಲದಲ್ಲಿ ನಡೆದ ಒಂದು ಕ್ರಿಯೆಯನ್ನು ತಿಳಿಸುತ್ತದಲ್ಲದೆ ಸೂಚಿಸುವ ಕೆಲಸವನ್ನು ನಡೆಸುವುದಿಲ್ಲ. ಇದೇ ರೀತಿಯಲ್ಲಿ (5ಖ) ವಾಕ್ಯದಲ್ಲಿ ಮಾತು ಕೊಡುತ್ತೇನೆ ಎಂಬುದು ರಾಜು ಮುಂದಿನ ಕಾಲದಲ್ಲಿ ನಡೆಸಬಹುದಾದ ಕೆಲಸವೆಂತಹದು ಎಂಬುದನ್ನು ತಿಳಿಸುತ್ತ ದಲ್ಲದೆ ಮಾತು ಕೊಡುವ ಕೆಲಸವನ್ನು ನಡೆಸುವುದಿಲ್ಲ.
10.2.1 ಕೆಲವು ಅಪವಾದಗಳು
ಮೇಲಿನ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗಾಗಿ, ಮಾತಿನ ಕೆಲಸವೊಂದನ್ನು ನೇರವಾಗಿ ಸೂಚಿಸುವ ಬದಲು ಅದನ್ನು ನಡೆಸುವ ಬಯಕೆ ಯನ್ನು ಸೂಚಿಸಿದಾಗಲೂ ಅದು ನಡೆದು ಹೋಗುವ ಸಾಧ್ಯತೆಯಿದೆ. (6ಕ) ನಿಮ್ಮೆಲ್ಲರಿಗೂ ನಾನು ಕೃತಜ್ಞತೆಗಳನ್ನು ಅಪ್ರಿಸಬಯಸುತ್ತೇನೆ. (6ಖ) ಈ ಸಮ್ಮೇಳನವನ್ನು ಉದ್ಘಾಟಿಸಲು ನನಗೆ ಬಹಳ ಸಂತೋಷ ವಾಗುತ್ತದೆ. ಮಾತಿನ ಕೆಲಸವೊಂದನ್ನು ನಡೆಸುವ ‘ಬಯಕೆ’ಯನ್ನು ಮಾತ್ರವೇ ಸೂಚಿಸುವ (6ಕ) ವಾಕ್ಯ ಮತ್ತು ಅಂತಹ ಕೆಲಸವನ್ನು ನಡೆಸುವಲ್ಲಿ ದೊರಕುವ ‘ಸಂತೋಷ’ ವನ್ನು ಮಾತ್ರವೇ ಸೂಚಿಸುವ (6ಖ) ವಾಕ್ಯ ಇವೆರಡೂ ಅವು ನಡೆಸಬೇಕಾ ಗಿರುವ ‘ಕೃತಜ್ಞತೆಗಳನ್ನು ಅಪ್ರಿಸುವುದು’ ಮತ್ತು ‘ಉದ್ಘಾಟಿಸುವುದು’ ಎಂಬ ಎರಡು ಮಾತಿನ ಕೆಲಸಗಳನ್ನು ನಡೆಸಿಕೊಡಲು ಶಕ್ತವಾಗಿವೆ ಎಂಬುದನ್ನು ಗಮನಿಸಬಹುದು. ಕೆಲವು ರೀತಿಯ ಕ್ರಿಯಾಪದಗಳನ್ನು ಬಳಸದಿದ್ದರೂ ಅವು ನಡೆಸಬಲ್ಲ ಮಾತಿನ ಕೆಲಸ ಸಂದಭ್ರದ ಬಲದಿಂದ ನಡೆದು ಹೋಗಲು ಸಾಧ್ಯವಿದೆ. ನಾಲ್ಕು ಗಂಟೆಗೆ ಬರುತ್ತೇನೆಂದು ಮಾತುಕೊಡುತ್ತೇನೆ. (7ಖ) ನಾಲ್ಕು ಗಂಟೆಗೆ ಬರುತ್ತೇನೆ. (8ಕ) ದೀರ್ಘಸುಮಂಗಲಿಯಾಗೆಂದು ಆಶೀವ್ರದಿಸುತ್ತೇನೆ. (8ಖ) ದೀರ್ಘಸುಮಂಗಲಿಯಾಗು. ಮಾತುಕೊಡುತ್ತೇನೆ ಕ್ರಿಯಾರೂಪವನ್ನು ಬಳಸಿಲ್ಲವಾದರೂ ಅದಕ್ಕೆ ‘ಮಾತುಕೊಡುವ’ ಕೆಲಸವನ್ನು ನಡೆಸುವ ಶಕ್ತಿಯಿದೆ. (8ಖ) ವಾಕ್ಯದಲ್ಲಿ ಆಶೀವ್ರದಿಸುತ್ತೇನೆ ಎಂಬ ಇದೇ ರೀತಿಯಲ್ಲಿ ಕ್ರಿಯಾರೂಪವನ್ನು ಬಳಸಿಲ್ಲ ವಾದರೂ ಅದಕ್ಕೆ ‘ಆಶೀವ್ರದಿಸುವ’ ಕೆಲಸವನ್ನು ನಡೆಸುವ ಶಕ್ತಿಯಿದೆ. ಆದರೆ (7-8ಕ) ವಾಕ್ಯಗಳಲ್ಲಿ ಕಾಣಿಸಿದ ಹಾಗೆ ಮಾತಿನ ಕೆಲಸವನ್ನು ಸೂಚಿಸುವ ಕ್ರಿಯಾಪದವನ್ನು ಬಳಸಿದಾಗ ಅದು ಸಾಧಿಸಬೇಕಾಗಿರುವ ಕೆಲಸದ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ. ಆದರೆ, ಉದ್ಘಾಟಿಸು, ಆಣೆಯಿಡು, ಕ್ಷಮಿಸು, ಸ್ವಾಗತಿಸು ಮೊದಲಾದ ಬೇರೆ ಕೆಲವು ಕ್ರಿಯಾಪದಗಳನ್ನು (ಇಲ್ಲವೇ ಅವಕ್ಕೆ ಸಮಾನವಾದ ನಾಮಪದ ಗಳನ್ನು) ವಾಕ್ಯದಲ್ಲಿ ಬಳಸಿದರೇನೇ ಅವು ನಡೆಸಬಲ್ಲ ಮಾತಿನ ಕೆಲಸಗಳು ನಡೆಯಬಲ್ಲುವು ಎಂಬ ನಿಯಮವಿರುವಂತೆ ತೋರುತ್ತದೆ.
ಇದಲ್ಲದೆ, ಕೆಲವು ಸಂದಭ್ರಗಳಲ್ಲಿ ಮಾತಿನ ಕೆಲಸಗಳನ್ನು ನಡೆಸಬಲ್ಲ ಈ ಕ್ರಿಯಾಪದಗಳು ಸರಿಯಾದ ಕ್ರಿಯಾರೂಪದಲ್ಲೇ ಬಂದಿವೆಯಾದರೂ, ಅವು ಸೂಚಿಸುವ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಕೆಯಾಗಿರುವ ಬದಲು ಇತರ ಕ್ರಿಯಾಪದಗಳ ಹಾಗೆ ಅಂತಹ ಘಟನೆಯೊಂದು ನಡೆಯಲಿದೆಯೆಂಬುದನ್ನು ತಿಳಿಸುವುದಕ್ಕಾಗಿ ಮಾತ್ರವೇ ಬಳಕೆಯಾಗಿರಲು ಸಾಧ್ಯವಿದೆ. ನಾಲ್ಕು ಗಂಟೆಗೆ ಬರುತ್ತೇನೆಂದು ಮಾತು ಕೊಡುತ್ತೇನೆ. ಈ ವಾಕ್ಯವನ್ನು ಒಬ್ಬ ವ್ಯಕ್ತಿ ಮಾತು ಕೊಡುವ ಕೆಲಸವನ್ನು ನಡೆಸುವುದಕ್ಕಾಗಿ ಬಳಸಿರಬಹುದು, ಇಲ್ಲವೇ ಅಂತಹ ಕೆಲಸವನ್ನು ಮಾಡಲಿರುವೆನೆಂದು ತಿಳಿಸುವು ದಕ್ಕಾಗಿ ಮಾತ್ರವೇ ಬಳಸಿರಲೂ ಬಹುದು. ಎರಡನೆಯ ಬಳಕೆಯಲ್ಲಿ ಅದು ‘ತಿಳಿಸುವ’ ಕೆಲಸವನ್ನು ನಡೆಸುತ್ತಿದೆಯಲ್ಲದೆ ‘ಮಾತುಕೊಡುವ’ ಕೆಲಸವನ್ನು ನಡೆಸುವುದಿಲ್ಲ.
10.3 ಕೇಳುವ ವಾಕ್ಯಗಳು
ತಿಳಿಯದಿರುವ ಸಂಗತಿಯೊಂದನ್ನು ಇನ್ನೊಬ್ಬರಿಂದ ಕೇಳಿ ತಿಳಿದುಕೊಳ್ಳುವುದಕ್ಕಾಗಿ ಬಳಸುವ ವಾಕ್ಯಗಳೇ ‘ಕೇಳುವ’ ವಾಕ್ಯಗಳು. ಕನ್ನಡದಲ್ಲಿ ಈ ಮಾತಿನ ಕೆಲಸಕ್ಕಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಾಗುತ್ತವೆ. ಇವನ್ನು ‘ವಾಕ್ಯಕೇಳ್ವಿಗಳು’ ಮತ್ತು ‘ವಾಕ್ಯಾಂಗ ಕೇಳ್ವಿಗಳು’ ಎಂಬುದಾಗಿ ಹೆಸರಿಸಬಹುದು.
ವಾಕ್ಯಕೇಳ್ವಿಗಳು ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ ನಿಜವೇ ಎಂದು ಕೇಳುತ್ತವೆ. ಆದರೆ ವಾಕ್ಯಾಂಗ ಕೇಳ್ವಿಗಳು ವಾಕ್ಯವು ತಿಳಿಸುವ ಸಂಗತಿಯ ಒಂದು ಅಂಶ ಎಂತಹದು ಎಂದಷ್ಟೇ ಕೇಳುತ್ತವೆ. ಆ ಸಂಗತಿಯ ಉಳಿದ ಅಂಶಗಳೆಲ್ಲ ತನಗೆ ಗೊತ್ತಿವೆಯೆಂದೇ ಇಂತಹ ವಾಕ್ಯಾಂಗ ಕೇಳ್ವಿಗಳನ್ನು ಬಳಸಿರುವ ವ್ಯಕ್ತಿಯ ತೀರ್ಮಾನವಾಗಿರುತ್ತದೆ. (10ಕ) ರಾಜು ಮಂಗಳೂರಿಗೆ ಹೋಗಿದ್ದಾನೋ? (10ಖ) ರಾಜು ಎಲ್ಲಿಗೆ ಹೋಗಿದ್ದಾನೆ? (10ಕ) ಒಂದು ವಾಕ್ಯಕೇಳ್ವಿ, ಮತ್ತು (10ಖ) ಒಂದು ವಾಕ್ಯಾಂಗ ಕೇಳ್ವಿ. (10ಕ) ದಲ್ಲಿ ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ (ಎಂದರೆ ರಾಜು ಮಂಗಳೂರಿಗೆ ಹೋಗಿದ್ದಾನೆ ಎಂಬುದು) ನಿಜವೇ ಎಂದು ಕೇಳಲಾಗಿದೆ.
ಇದಕ್ಕೆ ಬದಲು (10ಖ)ದಲ್ಲಿ ಅಂತಹ ವಾಕ್ಯವು ತಿಳಿಸುವ ಸಂಗತಿಯ ಒಂದು ಅಂಶ ಮಾತ್ರ (ಎಂದರೆ ರಾಜು ಹೋಗಿರುವ ಜಾಗ ಮಾತ್ರ) ಎಂತಹ ದೆಂದು ಕೇಳಲಾಗಿದೆ. ರಾಜು ಎಲ್ಲಿಗೋ ಹೋಗಿದ್ದಾನೆ ಎಂಬ ಆ ವಾಕ್ಯವು ತಿಳಿಸುವ ಸಂಗತಿಯ ಉಳಿದ ಅಂಶ ತನಗೆ ತಿಳಿದಿದೆ ಮತ್ತು ನಿಜ ಎಂಬುದು ಈ ಕೇಳ್ವಿಯನ್ನು ಬಳಸುವ ವ್ಯಕ್ತಿಯ ನಂಬಿಕೆಯಾಗಿದೆ.
ವಾಕ್ಯಕೇಳ್ವಿಯಲ್ಲಿ ಕೇಳ್ವಿಯ ವ್ಯಾಪ್ತಿ ಇಡೀ ವಾಕ್ಯದ ಮೇಲೆ ಬೀಳುವುದಾದ ಕಾರಣ, ಅದೊಂದು ಕೇಳ್ವಿ ಎಂಬುದನ್ನಿಷ್ಟೇ ತಿಳಿಸಿದರೆ ಸಾಕು. ಇದಕ್ಕಾಗಿ ವಾಕ್ಯದ ಕೊನೆಯಲ್ಲಿ ಓ, ಆ ಇಲ್ಲವೇ ಏ ಪ್ರತ್ಯಯವನ್ನು ಬಳಸಲಾಗುತ್ತದೆ. ಇದಲ್ಲದೆ ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುವಂತೆಯೂ ಮಾಡಲಾಗುತ್ತದೆ. ಈ ಎರಡು ವಿಷಯಗಳಲ್ಲೂ ತಿಳಿಸುವ ವಾಕ್ಯಗಳು ವಾಕ್ಯ ಕೇಳ್ವಿಗಳಿಂದ ಭಿನ್ನವಾಗಿವೆಯೆಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣ ಬಹುದು. (11ಕ) ರಘು ಇವತ್ತು ಜಾನಕಿಯ ಮನೆಗೆ ಹೋಗಿದ್ದ. (11ಖ) ರಘು ಇವತ್ತು ಜಾನಕಿಯ ಮನೆಗೆ ಹೋಗಿದ್ದನೋ? (12ಕ) ಸಕ್ರಸ್ಸಿನ ಆನೆಯ ಕಾಲು ಮುರಿದಿದೆ. (12ಖ) ಸಕ್ರಸ್ಸಿನ ಆನೆಯ ಕಾಲು ಮುರಿದಿದೆಯೇ? (11ಕ) ವಾಕ್ಯ ಒಂದು ಸಂಗತಿಯನ್ನು ತಿಳಿಸುತ್ತದೆ, ಮತ್ತು ಅದರ ಶ್ರುತಿ ಆ ವಾಕ್ಯದ ಕೊನೆಯಲ್ಲಿ ಕೆಳಗೆ ಇಳಿಯುತ್ತದೆ. ಇದಕ್ಕೆ ವಿರುದ್ಧವಾಗಿ (11ಖ) ವಾಕ್ಯ ಒಂದು ವಾಕ್ಯಕೇಳ್ವಿ, ಮತ್ತು ಅದರ ಶ್ರುತಿ ಆ ವಾಕ್ಯದ ಕೊನೆಯಲ್ಲಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುತ್ತದೆ (ಅಥವಾ ಸ್ವಲ್ಪ ಮೇಲಕ್ಕೆ ಏರುತ್ತದೆ). ಇದಲ್ಲದೆ, (11ಖ) ವಾಕ್ಯದ ಕೊನೆಯಲ್ಲಿ ಓ ಪ್ರತ್ಯಯವೂ ಬಂದಿದೆ. (12ಕ- ಖ)ಗಳ ನಡುವೆಯೂ ಇಂತಹದೇ ಶ್ರುತಿಯ ವ್ಯತ್ಯಾಸವಿದ್ದು, (12ಖ)ದ ಕೊನೆ ಯಲ್ಲಿ ಏ ಪ್ರತ್ಯಯ ಬಂದಿದೆ. ವಾಕ್ಯದ ಕೊನೆಯಲ್ಲಿ ಈ ರೀತಿ ಅದರ ಶ್ರುತಿ ಕೆಳಗೆ ಇಳಿಯದೆ ಹಾಗೆಯೇ ಉಳಿದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ‘?’ ಎಂಬ ಚಿಹ್ನೆಯನ್ನು ಬಳಸುವ ಅವಶ್ಯಕತೆಯಿದೆ. ಇದಕ್ಕೆ ಬದಲು, ವಾಕ್ಯದ ಕೊನೆಯಲ್ಲಿ ‘.’ ಎಂಬ ಚಿಹ್ನೆಯನ್ನು ಬಳಸಿದಲ್ಲಿ ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗಿಳಿದಿದೆ ಎಂಬುದು ಸೂಚಿತವಾಗುತ್ತದೆ.
ವಾಕ್ಯಾಂಗ ಕೇಳ್ವಿಯಲ್ಲಿ ಈ ರೀತಿ ಅದೊಂದು ಕೇಳ್ವಿಯೆಂಬುದನ್ನು ಮಾತ್ರ ವಲ್ಲ, ಅದನ್ನು ಬಳಸಿದ ಕೇಳುಗನಿಗೆ ವಾಕ್ಯದ ಯಾವ ಅಂಗದ ಕುರಿತಾಗಿ ಮಾಹಿತಿ ಬೇಕಾಗಿದೆ ಎಂಬುದನ್ನೂ ಸೂಚಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಯಾರು, ಏನು, ಯಾಕೆ, ಎಲ್ಲಿ ಮೊದಲಾದ ‘ಅನಿಶ್ಚಿತ’ ಸವ್ರಪದಗಳ ಲ್ಲೊಂದನ್ನು (10.4.1 ನೋಡಿ) ಇಂತಹ ವಾಕ್ಯಗಳಲ್ಲಿ ಬಳಸುವ ಕ್ರಮ ಬಳಕೆಯಲ್ಲಿದೆ. (13ಕ) ರಾಜು ಹರಿಗೆ ಒಂದು ಪುಸ್ತಕ ಕೊಟ್ಟ. (13ಖ) ರಾಜು ಹರಿಗೆ ಏನು ಕೊಟ್ಟ? (13ಗ) ರಾಜು ಒಂದು ಪುಸ್ತಕ ಯಾರಿಗೆ ಕೊಟ್ಟ? (13ಘ) ಹರಿಗೆ ಒಂದು ಪುಸ್ತಕ ಯಾರು ಕೊಟ್ಟರು? (13ಕ) ವಾಕ್ಯ ಒಂದು ಘಟನೆ ನಡೆದಿರುವುದನ್ನು ತಿಳಿಸುತ್ತಿದೆಯಾದ ಕಾರಣ, ಅದೊಂದು ‘ತಿಳಿಸುವ ವಾಕ್ಯ’. (13ಖ-ಘ)ಗಳು ಆ ಘಟನೆಯ ಬೇರೆ ಬೇರೆ ಅಂಶಗಳ ಕುರಿತಾಗಿ ಮಾಹಿತಿಯನ್ನು ಪಡೆಯಲು ಬಳಸಬಹುದಾದ ವಾಕ್ಯಾಂಗ ಕೇಳ್ವಿಗಳು. (13ಕ)ದಲ್ಲಿ ವಾಕ್ಯದ ಶ್ರುತಿ ಅದರ ಕೊನೆಯಲ್ಲಿ ಕೆಳಗೆ ಇಳಿಯುತ್ತದೆ ಮತ್ತು ಇತರ ಮೂರು ವಾಕ್ಯಗಳಲ್ಲಿ ಅದು ಈ ರೀತಿ ಕೆಳಗೆ ಇಳಿಯದೆ ಹಾಗೆಯೇ ಉಳಿಯುತ್ತದೆ.
ಇದಲ್ಲದೆ, (13ಕ) ವಾಕ್ಯದ ಮೂರು ಬೇರೆ ಬೇರೆ ಘಟಕಗಳಿಗೆ ಬದಲಾಗಿ (13ಖ-ಘ) ವಾಕ್ಯಗಳಲ್ಲಿ ಅನುಕ್ರಮವಾಗಿ ಏನು, ಯಾರಿಗೆ ಮತ್ತು ಯಾರು ಎಂಬ ಅನಿಶ್ಚಿತ ಸವ್ರಪದಗಳು ಬಂದಿವೆ. ಇವು ಆ ಘಟನೆಯ ಯಾವ ಘಟಕದ ಕುರಿತಾಗಿ ಕೇಳುವವನಿಗೆ ಹೆಚ್ಚಿನ ಮಾಹಿತಿ ಬೇಕಾಗಿದೆ ಎಂಬುದನ್ನು ಸೂಚಿಸು ತ್ತವೆ.
10.3.1 ವಾಕ್ಯಕೇಳ್ವಿಗಳ ಸ್ವರೂಪ
ವಾಕ್ಯಕೇಳ್ವಿಗಳ ಕೊನೆಯಲ್ಲಿ ಓ, ಆ ಇಲ್ಲವೇ ಏ ಪ್ರತ್ಯಯಗಳಲ್ಲಿ ಯಾವು ದಾದರೂ ಒಂದು ಬಳಕೆಯಾಗುತ್ತದೆ. ಈ ಮೂರು ಪ್ರತ್ಯಯಗಳು ಕನ್ನಡದ ಬೇರೆ ಬೇರೆ ಊರುಗಳಲ್ಲಿ ಕಾಣಿಸಿಕೊಳ್ಳುವ ಮಾತಿನ ಭೇದಗಳಾಗಿದ್ದು ಬರಹದಲ್ಲೂ ಈ ಮೂರು ಪ್ರತ್ಯಯಗಳನ್ನು ಕಾಣಬಹುದು.
ಉದಾಹರಣೆಗಾಗಿ ಮಂಗಳೂರು ಕನ್ನಡದ ವಾಕ್ಯ ಕೇಳ್ವಿಗಳ ಕೊನೆಯಲ್ಲಿ ಓ ಪ್ರತ್ಯಯ ಕಾಣಿಸಿಕೊಳ್ಳುವುದೇ ಜಾಸ್ತಿ. ಇದಕ್ಕೆ ಬದಲು, ಮೈಸೂರು ಕನ್ನಡದ ವಾಕ್ಯಕೇಳ್ವಿಗಳಲ್ಲಿ ಆ ಪ್ರತ್ಯಯವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ವಾಕ್ಯಕೇಳ್ವಿಗಳ ಕೊನೆಯಲ್ಲಿ ಈ ರೀತಿ ಓ, ಆ ಇಲ್ಲವೇ ಏ ಪ್ರತ್ಯಯಗಳ ಲ್ಲೊಂದು (ಅಥವಾ ಏನು ಎಂಬುದು) ಬರುವುದು ಮಾತ್ರವಲ್ಲದೆ, ವಾಕ್ಯ ಮುಗಿದಾಗ ಅವುಗಳ ಕೊನೆಯಲ್ಲಿರುವ ಶ್ರುತಿ ಕೆಳಗಿಳಿಯದೆ ಹಾಗೆಯೇ ಉಳಿಯು ತ್ತದೆ, ಇಲ್ಲವೇ ಸ್ವಲ್ಪ ಮೇಲಕ್ಕೆ ಏರುತ್ತದೆ. ನಿಜಕ್ಕೂ ಕನ್ನಡದ ವಾಕ್ಯ ಕೇಳ್ವಿಗಳಲ್ಲಿ ‘ಅವು ಕೇಳ್ವಿಗಳು’ ಎಂಬುದನ್ನು ಸೂಚಿಸುವುದು ಅವುಗಳ ಕೊನೆಯಲ್ಲಿ ಬರುವ ಈ ಶ್ರುತಿಯ ಸ್ವರೂಪ ಮಾತ್ರ. ಅದರೊಂದಿಗೆ ಬರುವ ಏ, ಓ ಮತ್ತು ಆಗಳಿಗೆ ನೇರವಾಗಿ ಕೇಳುವಿಕೆಯ ಅರ್ಥವಿಲ್ಲ.
ಯಾಕೆಂದರೆ, ತಿಳಿಸುವ ವಾಕ್ಯದ ಕೊನೆಯಲ್ಲಿ ಬರುವ ಶ್ರುತಿಯನ್ನು ಮಾತ್ರವೇ ಬದಲಾಯಿಸಿದಾಗಲೂ ಅದು ಕೇಳ್ವಿಯಾಗಬಲ್ಲುದು.
(14ಕ) ಗಂಟೆ ಮೂರಾದರೂ ಊಟ ಬರಲಿಲ್ಲ. (14ಖ) ಗಂಟೆ ಮೂರಾದರೂ ಊಟ ಬರಲಿಲ್ಲ? (15ಕ) ಇದು ಶ್ರೀನಿವಾಸನ ಮನೆ. (15ಖ) ಇದು ಶ್ರೀನಿವಾಸನ ಮನೆ? ಮೇಲೆ ಕೊಟ್ಟಿರುವ ವಾಕ್ಯಗಳಲ್ಲಿ (ಕ) ವಾಕ್ಯಗಳು ತಿಳಿಸುವ ವಾಕ್ಯಗಳು ಮತ್ತು (ಖ) ವಾಕ್ಯಗಳು ಅವು ತಿಳಿಸುವ ಘಟನೆ ಇಲ್ಲವೇ ಸಂಗತಿ ನಿಜವೇ ಎಂಬುದನ್ನು ಕೇಳುವ ವಾಕ್ಯಗಳು. ಇವುಗಳ ನಡುವೆ ಮಾತಿನಲ್ಲಿ ಅವುಗಳ ಕೊನೆಯಲ್ಲಿ ಬರುವ ಶ್ರುತಿಯಲ್ಲಿ ಮಾತ್ರ (ಮತ್ತು ಬರಹದಲ್ಲಿ ಅವುಗಳ ಕೊನೆಯಲ್ಲಿ ಬರುವ ಚಿಹ್ನೆಯಲ್ಲಿ ಮಾತ್ರ) ವ್ಯತ್ಯಾಸ ಇದೆ ಎಂಬುದನ್ನು ಗಮನಿಸಬಹುದು. ವಾಕ್ಯಕೇಳ್ವಿಗಳ ಕೊನೆಯಲ್ಲಿ ಈ ರೀತಿ ಓ, ಆ ಇಲ್ಲವೇ ಏ ಪ್ರತ್ಯಯಗಳನ್ನು ಬಳಸುವ ಬದಲು ಏನು ಎಂಬ ಅನಿಶ್ಚಯಾರ್ಥವನ್ನು ಸೂಚಿಸುವ ಸವ್ರಪದ ವನ್ನು ಬಳಸಲೂ ಸಾಧ್ಯವಿದೆ. (16ಕ) ಶಾಮರಾಯರು ಮನೆಯಲ್ಲಿದ್ದಾರೋ? (16ಖ) ಶಾಮರಾಯರು ಮನೆಯಲ್ಲಿದ್ದಾರೇನು? (17ಕ) ನಿಮ್ಮೂರಲ್ಲಿ ಅಕ್ಕಿಯ ಬೆಲೆ ಕಡಿಮೆಯೇ? (17ಖ) ನಿಮ್ಮೂರಲ್ಲಿ ಅಕ್ಕಿಯ ಬೆಲೆ ಕಡಿಮೆಯೇನು? ಈ ರೀತಿ ಏನು ಪದವನ್ನು ಬಳಸಿ ತಯಾರಿಸಿದ ವಾಕ್ಯಕೇಳ್ವಿಗಳ ಕೊನೆಯಲ್ಲಿ ಕೇಳುಗನನ್ನು ಕರೆದು ಹೇಳುವ ರೀ, ಏ, ಓ ಮೊದಲಾದ ಪ್ರತ್ಯಯ ಇಲ್ಲವೇ ಪದಗಳನ್ನು ಬಳಸಲು ಸಾಧ್ಯವಿದೆ. ಇವುಗಳಲ್ಲಿ ಏ ಎಂಬುದನ್ನು ಒಬ್ಬ ಹುಡುಗಿ (ಇಲ್ಲವೇ ಕೆಳಗಿನ ಸ್ತರದ ಹೆಂಗಸು) ಕೇಳುಗಳಾಗಿದ್ದಾಗಲೂ ಮತ್ತು ಓ ಎಂಬುದನ್ನು ಒಬ್ಬ ಹುಡುಗ (ಇಲ್ಲವೇ ಕೆಳಗಿನ ಸ್ತರದ ಗಂಡಸು) ಕೇಳುಗ ನಾಗಿದ್ದಾಗಲೂ ಬಳಸಲಾಗುತ್ತದೆ. ಇದಲ್ಲದೆ ಕೇಳುಗನಿಗೆ ಮರ್ಯಾದೆ ಕೊಟ್ಟು ಕರೆಯಬೇಕಾಗಿರುವ ಸಂದಭ್ರದಲ್ಲಿ ರಿ ಪ್ರತ್ಯಯದ ಬಳಕೆಯಾಗುತ್ತದೆ.
(18ಕ) ಆ ಕತೆಯನ್ನು ನಾಳೆ ಬರೆದು ಕೊಡುತ್ತೀರೇನ್ರಿ? (18ಖ) ಸಕ್ಕರೆ ಈ ತಿಂಗಳಿಗೆ ಸಾಕಾದೀತೇನೇ? (18ಗ) ಹಾಲಿನವಳಿಗೆ ಆರು ರೂಪಾಯಿ ಕೊಟ್ಟೆಯೇನೋ? (18ಘ) ಒಂದು ಲೋಟೆ ನೀರು ಕೊಡುತ್ತೀಯೇನಪ್ಪ? ಓ, ಏ ಮತ್ತು ಆ ಪ್ರತ್ಯಯಗಳು ಕನ್ನಡದ ಕೇಳ್ವಿಗಳಲ್ಲಿ ಮಾತ್ರವಲ್ಲದೆ ಬೇರೆ ರೀತಿಯ ವಾಕ್ಯಗಳಲ್ಲೂ ಬರಬಲ್ಲುವು. ಉದಾಹರಣೆಗಾಗಿ, ಓ ಪ್ರತ್ಯಯಕ್ಕೆ ಬೇರೆ ಸಂದಭ್ರಗಳಲ್ಲಿ ‘ಅಥವಾ’ ಎಂಬ ಅರ್ಥವಿದೆ. ವಾಕ್ಯ ಕೇಳ್ವಿಗಳಲ್ಲಿ ಈ ‘ಅಥವಾ’ ಎಂಬ ಅರ್ಥದ ಬದಲು ಇದಕ್ಕೆ ಕೇಳುವವನಲ್ಲಿರುವ ಸಂದೇಹವನ್ನು ಸೂಚಿಸುವ ಅರ್ಥವಿದೆಯೆಂದು ಹೇಳಬಹುದು. ಆ ಪ್ರತ್ಯಯಕ್ಕೂ ‘ಅಥವಾ’ ಎಂಬ ಅರ್ಥವಿದೆ. (19ಕ) ರಾಮುವೋ ಹೋಗಬಹುದು. (19ಖ) ನೀವು ತಂದ ತಿಂಡಿಯನ್ನೆಲ್ಲ ಮಕ್ಕಳು ಸ್ವತಃ ತಿಂದೋ ನಾಯಿಗೆ ಹರಿಯೋ ಬಂದರೆ ಮನೆಗೆ ನಮಗೆ ಕೊಟ್ಟೋ ಮುಗಿಸಿರಬೇಕು. ಇದಕ್ಕೆ ಬದಲು ಏ ಪ್ರತ್ಯಯಕ್ಕೆ ಬೇರೆ ಸಂದಭ್ರಗಳಲ್ಲಿ ಕೇಳುಗನ ಗಮನ ವನ್ನು ಸೆಳೆಯುವ ಇಲ್ಲವೇ ಒಂದು ಘಟಕವನ್ನು ಒತ್ತಿಹೇಳುವ ಕೆಲಸವಿದೆ. ವಾಕ್ಯ ಕೇಳ್ವಿಗಳಲ್ಲೂ ಇದು ಇಂತಹ ಕೆಲಸವನ್ನು ನಡೆಸುವುದಕ್ಕಾಗಿಯೇ ಬಳಕೆಯಾಗು ತ್ತದೆಯೆಂದು ಹೇಳಲು ಸಾಧ್ಯವಿದೆ.
(20ಕ) ಮಗನೇ! ನೀನು ಇಂತಹ ಕೆಲಸವನ್ನು ಯಾಕೆ ಮಾಡಿದೆ? (20ಖ) ಈ ಪುಸ್ತಕವನ್ನು ಅವರೇ ಬರೆದಿರಬೇಕು. ಇದಲ್ಲದೆ, ಕೇಳ್ವಿಯೊಂದನ್ನು ಒಳವಾಕ್ಯವಾಗಿ ಪಡೆದಿರುವ ಕೆಲವು ವಾಕ್ಯಗಳು ನಿಜಕ್ಕೂ ಕೇಳ್ವಿಗಳೇ ಅಥವಾ ತಿಳಿಸುವ ವಾಕ್ಯಗಳೇ ಎಂಬುದನ್ನು ಅವುಗಳ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪದಿಂದ ಮಾತ್ರವೇ ತಿಳಿಯಲು ಸಾಧ್ಯ. (21ಕ) ರಾಜು ಊಟಿಗೆ ಯಾವಾಗ ಹೋಗುವುದೆಂದು ಹೇಳಿದ್ದಾನೆ. (21ಖ) ರಾಜು ಊಟಿಗೆ ಯಾವಾಗ ಹೋಗುವುದೆಂದು ಹೇಳಿದ್ದಾನೆ? (22ಕ) ಎಷ್ಟು ಬೇಕಾದೀತೆಂದು ಅವರು ತಿಳಿಸಿದ್ದಾರೆ. (22ಖ) ಎಷ್ಟು ಬೇಕಾದೀತೆಂದು ಅವರು ತಿಳಿಸಿದ್ದಾರೆ? (21ಕ-22ಕ) ವಾಕ್ಯಗಳು ತಿಳಿಸುವ ವಾಕ್ಯಗಳು ಮತ್ತು (21ಖ-22ಖ)
ವಾಕ್ಯಗಳು ಕೇಳ್ವಿಗಳು. ಆದರೆ, ಈ (ಕ) ಮತ್ತು (ಖ) ವಾಕ್ಯಗಳ ನಡುವೆ ಅವುಗಳ ಕೊನೆಯಲ್ಲಿ ಬರುವ ಶ್ರುತಿಯಲ್ಲಿ (ಇಲ್ಲವೇ ಚಿಹ್ನೆಯಲ್ಲಿ) ಮಾತ್ರ ವ್ಯತ್ಯಾಸ ಕಾಣಿಸುತ್ತದೆ. ಹಾಗಾಗಿ ಇವುಗಳಲ್ಲಿ (ಖ) ವಾಕ್ಯಗಳು ಕೇಳ್ವಿಗಳು ಎಂಬುದನ್ನು ಸೂಚಿಸುವುದು ಅವುಗಳ ಕೊನೆಯಲ್ಲಿ ಕೆಳಗೆ ಇಳಿಯದೆ ಉಳಿಯುವ ಶ್ರುತಿ ಮಾತ್ರ ಎಂದು ಹೇಳಬೇಕಾಗುತ್ತದೆ.
10.3.2 ವಾಕ್ಯಕೇಳ್ವಿಗಳಿಗೆ ಉತ್ತರ
ಸಾಮಾನ್ಯವಾಗಿ ವಾಕ್ಯಕೇಳ್ವಿಯೊಂದನ್ನು ಬಳಸಿರುವ ಆಡುಗನಿಗೆ ಅದು ಸೂಚಿಸುವ ಘಟನೆ ಇಲ್ಲವೇ ಸಂಗತಿ ನಿಜವೋ ಅಥವಾ ಸುಳ್ಳೋ ಎಂಬುದನ್ನು ತಿಳಿದುಕೊಳ್ಳ ಬೇಕೆಂದಿರುತ್ತದೆ. ಹಾಗಾಗಿ ಅಂತಹ ಕೇಳ್ವಿಗಳಿಗೆ ಹೌದು ಅಥವಾ ಇಲ್ಲ ಎಂಬ ಉತ್ತರ ಕೊಟ್ಟರೆ ಸಾಕಾಗುತ್ತದೆ.
ಕೆಲವು ಸಂದಭ್ರಗಳಲ್ಲಿ ಗೊತ್ತಿಲ್ಲ ಎಂಬ ಉತ್ತರವನ್ನೂ ಕೊಡಲು ಸಾಧ್ಯ ವಿದೆಯಾದರೂ ಸಾಮಾನ್ಯವಾಗಿ ಒಂದು ಕೇಳ್ವಿಯನ್ನು ಬಳಸುವವನು ಅಂತಹ ಉತ್ತರವನ್ನು ನಿರೀಕ್ಷಿಸುವುದಿಲ್ಲ. ಯಾಕೆಂದರೆ, ತಾನು ಬಳಸುವ ಕೇಳ್ವಿಗೆ ಕೇಳುಗ ನಿಂದ ಉತ್ತರ ಸಿಗಬಹುದೆಂಬ ಅಭಿಪ್ರಾಯವಿರುವಾಗ ಮಾತ್ರ ತಾನೇ ಆತ ಒಂದು ಕೇಳ್ವಿಯನ್ನು ಬಳಸುತ್ತಾನೆ? ಇಂತಹ ಕೇಳ್ವಿಗಳು ಸೂಚಿಸುವ ಘಟನೆ ಇಲ್ಲವೇ ಸಂಗತಿಯನ್ನು ಅಲ್ಲಗಳೆ ಯುವುದಕ್ಕಾಗಿ ಕನ್ನಡದಲ್ಲಿ ಅಲ್ಲ ಮತ್ತು ಇಲ್ಲ ಎಂಬ ಎರಡು ಪದಗಳ ಬಳಕೆ ಯಾಗುತ್ತದೆ. ಇವುಗಳಲ್ಲಿ ಅಲ್ಲ ಎಂಬುದು ಎರಡು ಘಟಕಗಳ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಕ್ಕಾಗಿ ಬಳಕೆಯಾಗುತ್ತದೆ ಮತ್ತು ಇಲ್ಲ ಎಂಬುದು ಘಟನೆ, ಸಂಗತಿ ಮೊದಲಾದವುಗಳ ಇರುವಿಕೆಯನ್ನು ಅಲ್ಲಗಳೆಯುವು ದಕ್ಕಾಗಿ ಬಳಕೆಯಾಗುತ್ತದೆ (9.1 ಮತ್ತು 9.3.1 ನೋಡಿ). (23ಕ) ಮಂಗಳೂರಿಗೆ ಹೋಗಿರುವುದು ಜಾನಕಿಯೋ? ಅಲ್ಲ. (23ಖ) ಜಾನಕಿ ಮಂಗಳೂರಿಗೆ ಹೋಗಿದ್ದಾಳೋ? ಇಲ್ಲ. (24ಕ) ಆ ಸಾಹುಕಾರರು ಹಣವಂತರಾ? ಅಲ್ಲ. (24ಖ) ಆ ಸಾಹುಕಾರರು ಹಣವಂತರಾಗಿದ್ದಾರಾ? ಇಲ್ಲ. (25ಕ) ಬಸ್ಸಿನಲ್ಲಿ ಬಂದವರು ನೀವಾ? ಅಲ್ಲ. (25ಖ) ನೀವು ಬಸ್ಸಿನಲ್ಲಿ ಬಂದಿರಾ? ಇಲ್ಲ.
(23ಕ)ದಲ್ಲಿ ‘ಜಾನಕಿ’ಗೂ ಮತ್ತು ‘ಮಂಗಳೂರಿಗೆ ಹೋಗಿರುವುದ’ಕ್ಕೂ ನಡುವೆ ಸಂಬಂಧವಿರುವುದು ನಿಜವೋ ಎಂದು ಕೇಳಲಾಗಿದೆ (9.2 ನೋಡಿ), ಮತ್ತು ಈ ರೀತಿ ಸಂಬಂಧವಿರುವುದು ನಿಜವಲ್ಲ ಎಂಬುದಾಗಿ ಆ ಸಂಬಂಧವನ್ನು ಅಲ್ಲಗಳೆ ಯಲು ಅಲ್ಲ ಪದದ ಬಳಕೆಯಾಗಿದೆ. ಆದರೆ (23ಖ)ದಲ್ಲಿ ಜಾನಕಿ ಮಂಗಳೂರಿಗೆ ಹೋಗಿದ್ದಾಳೆ ಎಂಬ ಘಟನೆ ನಡೆದಿದೆಯೇ ಎಂಬುದಾಗಿ ಒಂದು ಘಟನೆಯ ಇರುವಿಕೆಯ ಕುರಿತು ಕೇಳ್ವಿ ಬಂದಿದೆ, ಮತ್ತು ಅದನ್ನು ಅಲ್ಲಗಳೆ ಯುವುದಕ್ಕಾಗಿ ಇಲ್ಲ ಪದದ ಬಳಕೆಯಾಗಿದೆ.
10.3.3 ವಾಕ್ಯಕೇಳ್ವಿಗಳಲ್ಲಿ ವೈವಿಧ್ಯ
ಎಲ್ಲಾ ರೀತಿಯ ತಿಳಿಸುವ ವಾಕ್ಯಗಳನ್ನೂ ವಾಕ್ಯಕೇಳ್ವಿಗಳಾಗಿ ಬದಲಾಯಿಸಲು ಸಾಧ್ಯವಿದೆ. ಹಾಗಾಗಿ ತಿಳಿಸುವ ವಾಕ್ಯಗಳಲ್ಲಿ ಕಾಣಿಸುವ ವೈವಿಧ್ಯ ವಾಕ್ಯಕೇಳ್ವಿ ಗಳಲ್ಲೂ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ತಿಳಿಸುವ ವಾಕ್ಯಗಳಲ್ಲಿ ಒಂದು ಘಟನೆ ನಡೆದುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುವ ವಾಕ್ಯಗಳು ಮತ್ತು ಒಂದು ಸಂಗತಿಯ ಇರುವಿಕೆಯನ್ನು ತಿಳಿಸುವ ವಾಕ್ಯಗಳು ಎಂಬುದಾಗಿ ಎರಡು ರೀತಿಯವುಗಳಿವೆಯೆಂಬುದನ್ನು ನಾವು 1.2ರಲ್ಲಿ ನೋಡಿರುವೆವು.
ಇದಕ್ಕೆ ಅನುಗುಣವಾಗಿ ವಾಕ್ಯಕೇಳ್ವಿಗಳಲ್ಲೂ ಒಂದು ಘಟನೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೇಳುವ ವಾಕ್ಯಗಳು (26ಖ) ಮತ್ತು ಒಂದು ಸಂಗತಿಯ ಇರುವಿಕೆ ನಿಜವೇ ಅಥವಾ ಅಲ್ಲವೇ ಎಂಬುದನ್ನು ಕೇಳುವ ವಾಕ್ಯಗಳು (27ಖ) ಎಂಬುದಾಗಿ ಎರಡು ವಿಭಾಗಗಳನ್ನು ಕಾಣಬಹುದು. (26ಕ) ಅವರು ಬೊಂಬಾಯಿಗೆ ಹೋಗಿದ್ದಾರೆ. (26ಖ) ಅವರು ಬೊಂಬಾಯಿಗೆ ಹೋಗಿದ್ದಾರೋ? (27ಕ) ಇದು ರಾಜುವಿನ ಮನೆ. (27ಖ) ಇದು ರಾಜುವಿನ ಮನೆಯೋ? ತಿಳಿಸುವ ವಾಕ್ಯಗಳು ಒಂದು ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸುವ ಬದಲು ಒಂದು ಘಟನೆ ನಡೆಯಲಿಲ್ಲ ಇಲ್ಲವೇ ನಡೆ ಯುವುದಿಲ್ಲ ಎಂಬುದಾಗಿ ಘಟನೆಯನ್ನು ಅಲ್ಲಗಳೆಯುವ ಕೆಲಸವನ್ನೂ ಮಾಡ ಬಲ್ಲುವು. ಇದೇ ರೀತಿಯಲ್ಲಿ ವಾಕ್ಯಕೇಳ್ವಿಗಳೂ ಈ ರೀತಿ ಅಲ್ಲಗಳೆದಿರುವುದು ನಿಜವೇ ಅಥವಾ ಅಲ್ಲವೇ ಎಂಬುದನ್ನೂ ಕೇಳಬಲ್ಲುವು. (28ಕ) ಶಾಮರಾಯರು ಆಫೀಸಿನಲ್ಲಿಲ್ಲ. (28ಖ) ಶಾಮರಾಯರು ಆಫೀಸಿನಲ್ಲಿಲ್ಲವೇ? (29ಕ) ರಾಜು ಊಟಮಾಡಲಿಲ್ಲ. (29ಖ) ರಾಜು ಊಟಮಾಡಲಿಲ್ಲವೋ? (30ಕ) ಅವರು ಮದುವೆಗೆ ಹೋಗುವುದಿಲ್ಲ. (30ಖ) ಅವರು ಮದುವೆಗೆ ಹೋಗುವುದಿಲ್ಲವೋ? ಆದರೆ, ಈ ರೀತಿ ಒಂದು ಘಟನೆ ನಡೆದಿರುವುದು ಇಲ್ಲವೇ ಒಂದು ಸಂಗತಿ ಇರುವುದು ನಿಜವೇ ಎಂಬುದಾಗಿ ಕೇಳುವ ವಾಕ್ಯಗಳಿಗೂ ಮತ್ತು ಅಂತಹ ಘಟನೆಯನ್ನು ಇಲ್ಲವೇ ಸಂಗತಿಯನ್ನು ಅಲ್ಲಗಳೆದಿರುವುದು ನಿಜವೇ ಎಂಬುದಾಗಿ ಕೇಳುವ ವಾಕ್ಯಗಳಿಗೂ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ.
ಅಲ್ಲಗಳೆದಿರುವುದು ನಿಜವೇ ಎಂಬುದಾಗಿ ಕೇಳುವ ವ್ಯಕ್ತಿಗೆ ಸಾಮಾನ್ಯವಾಗಿ ಅದು ನಿಜವಿರಲಾರದು ಎಂಬ ಅಭಿಪ್ರಾಯವಿರುವಂತೆ ತೋರುತ್ತದೆ. ಘಟನೆ ನಡೆದಿರುವುದು ಇಲ್ಲವೇ ಸಂಗತಿ ಇರುವುದು ನಿಜವೇ ಎಂಬುದಾಗಿ ಕೇಳುವವ ನಲ್ಲಿ ಇಂತಹ ಯಾವ ಅಭಿಪ್ರಾಯವೂ ಇರುವ ಹಾಗೆ ಕಾಣಿಸುವುದಿಲ್ಲ.
(31ಕ) ಶ್ರೀಪತಿ ಮೈಸೂರಿಗೆ ಹೋಗುತ್ತಾನೋ? (31ಖ) ಶ್ರೀಪತಿ ಮೈಸೂರಿಗೆ ಹೋಗುವುದಿಲ್ಲವೋ? (31ಕ) ವಾಕ್ಯವನ್ನು ಬಳಸಿರುವ ವ್ಯಕ್ತಿಯಲ್ಲಿ ಶ್ರೀಪತಿ ಮೈಸೂರಿಗೆ ಹೋಗುವ ವಿಷಯದಲ್ಲಿ ಯಾವ ಅಭಿಪ್ರಾಯವೂ ಇರುವ ಹಾಗೆ ಕಾಣಿಸುವುದಿಲ್ಲ. ಆದರೆ (31ಖ) ವಾಕ್ಯವನ್ನು ಬಳಸಿರುವ ವ್ಯಕ್ತಿಯಲ್ಲಿ ಆತ ಮೈಸೂರಿಗೆ ಹೋಗ ಲಿದ್ದಾನೆ ಎಂಬ ಅಭಿಪ್ರಾಯವಿರುವ ಹಾಗೆ ಕಾಣಿಸುತ್ತದೆ. ಶ್ರೀಪತಿ ಮೈಸೂರಿಗೆ ಹೋಗಬೇಕೆಂಬ ವಿಷಯ ನಿಶ್ಚಿತವಾಗಿತ್ತಾದರೂ ಆತ ಹೊರಡುವ ತಯಾರಿ ಮಾಡುವ ಹಾಗೆ ಕಾಣಿಸುವುದಿಲ್ಲವಾದ ಕಾರಣ ಕೇಳುಗನಲ್ಲಿ ಸಂಶಯ ಹುಟ್ಟಿರ ಬೇಕು. ಅದಕ್ಕೇ ಆತ (31ಖ) ವಾಕ್ಯವನ್ನು ಬಳಸಿದ್ದಾನೆ. ತಿಳಿಸುವ ವಾಕ್ಯಗಳು ಒಂದು ಘಟನೆ ನಡೆದಿರುವುದನ್ನು ಇಲ್ಲವೇ ನಡೆಯ ಲಿರುವುದನ್ನು ಹಾಗೆಯೇ ತಿಳಿಸುವ ಬದಲು ಅದರ ಬೇರೆ ಬೇರೆ ಅಂಶಗಳಲ್ಲಿ ಒಂದನ್ನು ಮಾತ್ರ ಒತ್ತಿ ಹೇಳುತ್ತಿರಲು ಸಾಧ್ಯವಿದೆ. ಇದಕ್ಕಾಗಿ ಆ ಅಂಶದ ಮೇಲೆ ಒತ್ತು ಕೊಟ್ಟು ಹೇಳಬಹುದು ಇಲ್ಲವೇ ಅದರೊಂದಿಗೆ ಏ ಪ್ರತ್ಯಯವನ್ನು ಬಳಸಿ ಹೇಳಬಹುದು. (32ಕ) ರಾಜು ಮಂಗಳೂರಿನಿಂದ ನಿನ್ನೆ ಬಂದಿದ್ದ. (32ಖ) ರಾಜು ಮಂಗಳೂರಿನಿಂದ ನಿನ್ನೆಯೇ ಬಂದಿದ್ದ. ವಾಕ್ಯಕೇಳ್ವಿಗಳಲ್ಲಿಯೂ ಈ ರೀತಿ ಒಂದು ಅಂಶಕ್ಕೆ ಒತ್ತು ಕೊಟ್ಟು, ಇಲ್ಲವೇ ಅದರೊಂದಿಗೆ ಏ ಪ್ರತ್ಯಯವನ್ನು ಬಳಸಿ, ಆ ಒಂದು ಅಂಶದ ಕುರಿತಾಗಿ ಮಾತ್ರ ಮಾಹಿತಿ ಬೇಕಾಗಿದೆಯೆಂದು ಸೂಚಿಸಲು ಸಾಧ್ಯವಿದೆ. (33ಕ) ರಾಜು ಮಂಗಳೂರಿನಿಂದ ನಿನ್ನೆ ಬಂದಿದ್ದನೋ? (33ಖ) ರಾಜು ಮಂಗಳೂರಿನಿಂದ ನಿನ್ನೆಯೇ ಬಂದಿದ್ದನೋ? ತಿಳಿಸುವ ವಾಕ್ಯಗಳಲ್ಲಿ ಬರುವ ಬೇರೆ ಬೇರೆ ಅಂಶಗಳಲ್ಲಿ ಒಂದನ್ನು ಮಾತ್ರ ಪ್ರತ್ಯೇಕಿಸಿ ಅದು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಿದೆ ಎಂಬುದನ್ನು ತಿಳಿಸುವುದಕ್ಕಾಗಿ ಕನ್ನಡದಲ್ಲಿ ಬೇರೆಯೇ ಒಂದು ರೀತಿಯ ವಾಕ್ಯದ ಬಳಕೆ ಯಾಗುತ್ತದೆ. ಇದಕ್ಕಾಗಿ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದವನ್ನು ಅದರ ನಾಮಪದರೂಪಕ್ಕೆ ಬದಲಾಯಿಸಿಕೊಳ್ಳಬೇಕು ಮತ್ತು ಸಂಬಂಧಿಸಬೇಕಾಗಿರುವ ಅಂಶವನ್ನು ಉಳಿದ ಅಂಶದಿಂದ ಪ್ರತ್ಯೇಕಿಸಿ ವಾಕ್ಯದ ಕೊನೆಯಲ್ಲಿ ಇರಿಸಬೇಕು (9.2 ನೋಡಿ). ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟ. (34ಕ) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದು. (34ಖ) ರಾಜು ಇಲ್ಲಿಂದ ಹೊರಟದ್ದು ಹತ್ತು ಗಂಟೆಗೆ. (34ಗ) ರಾಜು ಹತ್ತು ಗಂಟೆಗೆ ಹೊರಟದ್ದು ಇಲ್ಲಿಂದ. (34ಘ) ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದು ರಾಜು. (34)ನೇ ವಾಕ್ಯ ಒಂದು ಘಟನೆಯನ್ನು ನೇರವಾಗಿ ತಿಳಿಸುವುದಾದರೆ, ಉಳಿದ (34ಕ-ಘ) ವಾಕ್ಯಗಳು ಆ ಘಟನೆಯ ಬೇರೆ ಬೇರೆ ಅಂಶಗಳು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಿವೆ ಎಂಬುದನ್ನು ತಿಳಿಸುತ್ತವೆ. ಇಂತಹ ತಿಳಿಸುವ ವಾಕ್ಯಗಳನ್ನೂ ವಾಕ್ಯಕೇಳ್ವಿಗಳನ್ನಾಗಿ ಬದಲಿಸಲು ಸಾಧ್ಯವಿದೆ. ಇದಕ್ಕಾಗಿ ವಾಕ್ಯ ಕೇಳ್ವಿಗಳ ಕೊನೆಯಲ್ಲಿ ಬರುವ ಓ, ಏ, ಆ ಇಲ್ಲವೇ ಏನು ಎಂಬವುಗಳನ್ನು ಸಂಬಂಧಿಸಬೇಕಾಗಿರುವ ಅಂಶದೊಂದಿಗೆ ಸೇರಿಸಿ ಹೇಳಬೇಕು. (35) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟನೋ? (35ಕ) ರಾಜು ಇಲ್ಲಿಂದ ಹತ್ತು ಗಂಟೆಗೆ ಹೊರಟದ್ದೋ? (35ಖ) ರಾಜು ಇಲ್ಲಿಂದ ಹೊರಟದ್ದು ಹತ್ತು ಗಂಟೆಗೋ? (35ಗ) ರಾಜು ಹತ್ತು ಗಂಟೆಗೆ ಹೊರಟದ್ದು ಇಲ್ಲಿಂದಲೋ? ಇಂತಹ ವಾಕ್ಯಕೇಳ್ವಿಗಳಲ್ಲಿ ಸಂಬಂಧಿಸಬೇಕಾದ ಅಂಶವನ್ನು ಓ, ಏ ಮೊದಲಾದ ಪ್ರತ್ಯಯ ಇಲ್ಲವೇ ಪದಗಳ ಮೂಲಕ ಗುರುತಿಸುವ ಕಾರಣ ಅದನ್ನು ವಾಕ್ಯದ ಕೊನೆಗೆ ವಗ್ರಾಯಿಸದಿರಲೂ ಸಾಧ್ಯವಿದೆ. ಉದಾ: (35ಘ) ರಾಜು ಇಲ್ಲಿಂದ ಹತ್ತು ಗಂಟೆಗೋ ಹೊರಟದ್ದು? (35ಙ) ರಾಜು ಇಲ್ಲಿಂದಲೋ ಹತ್ತು ಗಂಟೆಗೆ ಹೊರಟದ್ದು? (35ಘ)ದಲ್ಲಿ ಹತ್ತುಗಂಟೆಗೆ ಎಂಬ ಅಂಶಕ್ಕೆ ವಾಕ್ಯದ ಉಳಿದ ಅಂಶದೊಂದಿ ಗಿರುವ ಸಂಬಂಧವನ್ನು ಪ್ರಶ್ನಿಸಬೇಕಾಗಿದೆ. ಈ ಅಂಶ ಇಂತಹದೇ ಎಂಬುದನ್ನು ಅದರೊಂದಿಗೆ ಬಂದಿರುವ ಓ ಪ್ರತ್ಯಯ ಸೂಚಿಸುತ್ತಿದೆಯಾದ ಕಾರಣ ಅದನ್ನು ವಾಕ್ಯದ ಕೊನೆಗೆ ವಗ್ರಾಯಿಸಬೇಕಾಗಿಲ್ಲ.
10.3.4 ದೃಢೀಕರಿಸುವ ಕೇಳ್ವಿಗಳು
ತಿಳಿಸುವ ವಾಕ್ಯವೊಂದನ್ನು ಒಂದು ವಾಕ್ಯಕೇಳ್ವಿಯಾಗಿ ಬದಲಾಯಿಸುವ ಬದಲು ಆ ವಾಕ್ಯವನ್ನು ಹಾಗೆಯೇ ಉಳಿಸಿ, ಅದು ತಿಳಿಸುವ ಸಂಗತಿ ನಿಜ ಎಂಬುದನ್ನು ಕೇಳುಗನ ಮೂಲಕ ದೃಢೀಕರಿಸುವುದಕ್ಕಾಗಿ ಇಲ್ಲವೇ ಅಥವಾ ತಾನೇ ಎಂಬ ಪದವನ್ನು ಅದಕ್ಕೆ ಸೇರಿಸಿಯೂ ವಾಕ್ಯಕೇಳ್ವಿಗಳನ್ನು ತಯಾರಿಸಲು ಸಾಧ್ಯವಿದೆ. ಒಂದು ವಾಕ್ಯ ತಿಳಿಸುವ ಸಂಗತಿ ನಿಜವಿರಬಹುದು ಎಂಬುದಾಗಿ ಆಡುಗನ ಅಭಿಪ್ರಾಯವಿರುವ ಸಂದಭ್ರಗಳಲ್ಲಿ ಇಂತಹ ವಾಕ್ಯಕೇಳ್ವಿಗಳ ಬಳಕೆಯಾಗುತ್ತದೆ. (36ಕ) ಸೀತೆಗೆ ದಣಿವಾಗಿದೆಯೋ? (36ಖ) ಸೀತೆಗೆ ದಣಿವಾಗಿದೆ, ಅಲ್ಲವೇ? (37ಕ) ಲೆಕ್ಕ ಬರೆದಾಗಿದೆಯೋ? (37ಖ) ಲೆಕ್ಕ ಬರೆದಾಗಿದೆ, ತಾನೆ? (36ಕ)ದಲ್ಲಿ ಒಂದು ಸರಳವಾದ ವಾಕ್ಯಕೇಳ್ವಿ ಬಂದಿದೆ. ಇದಕ್ಕೆ ಬದಲು (36ಖ) ದಲ್ಲಿ ಒಂದು ದೃಢೀಕರಿಸುವ ಕೇಳ್ವಿ ಬಂದಿದೆ. (36ಕ)ದಲ್ಲಿ ಸೀತೆಗೆ ದಣಿವಾ ಗಿದೆಯೋ ಅಥವಾ ಇಲ್ಲವೋ ಎಂಬ ವಿಷಯದಲ್ಲಿ ಆ ಕೇಳ್ವಿಯನ್ನು ಬಳಸಿ ದವನಿಗೆ ಯಾವ ಅಭಿಪ್ರಾಯವೂ ಇಲ್ಲ. ಆದರೆ (36ಖ)ವನ್ನು ಬಳಸಿದವನಿಗೆ ‘ಸೀತೆಗೆ ದಣಿವಾಗಿದೆ’ ಎಂಬ ಅಭಿಪ್ರಾಯವಿದ್ದು, ಅದನ್ನು ದೃಢೀಕರಿಸುವುದಕ್ಕಾಗಿ ಆತ ಆ ವಾಕ್ಯವನ್ನು ಬಳಸಿದ್ದಾನೆ. (37ಕ-ಖ)ದಲ್ಲೂ ಹೀಗೆಯೇ. ಅಲ್ಲವೇ ಮತ್ತು ತಾನೇ ಎಂಬವುಗಳ ಬಳಕೆಯ ನಡುವೆಯೂ ಅರ್ಥದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು. ತಾನೇ ಎಂಬುದನ್ನು ಬಳಸು ವವರಿಗೆ ಅಲ್ಲವೇ ಎಂಬುದನ್ನು ಬಳಸುವವರಿಗಿಂತ ಕೇಳುವ ವಿಷಯದಲ್ಲಿ ಹೆಚ್ಚು ದೃಢವಾದ ಅಭಿಪ್ರಾಯವಿರುವ ಹಾಗೆ ಕಾಣಿಸುತ್ತದೆ. ವಾಕ್ಯಕೇಳ್ವಿಗಳ ಕೊನೆಯಲ್ಲಿ ಬರುವ ಓ, ಏ ಮೊದಲಾದವುಗಳ ಹಾಗೆ ದೃಢೀಕರಿಸುವ ಅಲ್ಲವೇ (38ಕ-ಘ ನೋಡಿ) ಮತ್ತು ತಾನೇ (39ಕ-ಘ ನೋಡಿ) ಎಂಬವುಗಳನ್ನೂ ವಾಕ್ಯದ ಬೇರೆ ಬೇರೆ ಅಂಶಗಳಿಗೆ ಸೇರಿಸಿ ಹೇಳಲು ಸಾಧ್ಯವಿದೆ. ವಾಕ್ಯದ ಒಂದು ಅಂಶಕ್ಕೂ ಮತ್ತು ಉಳಿದ ಅಂಶಕ್ಕೂ ನಡುವಿರುವ ಸಂಬಂಧವನ್ನು ದೃಢೀಕರಿಸುವುದೇ ಇಂತಹ ಕೇಳ್ವಿಗಳ ಉದ್ದೇಶವೆಂದು ಹೇಳ ಬಹುದು. (38ಕ) ನಾಲ್ಕು ಗಂಟೆಗಲ್ಲವೇ ಈ ಗಾಡಿ ಬಿಡುವುದು? (38ಖ) ಈ ಪುಸ್ತಕವನ್ನಲ್ಲವೇ ನೀವು ತರಹೇಳಿದ್ದು? (38ಗ) ನೀವು ನಿನ್ನೆ ಇಂಗ್ಲೀಷಿನಲ್ಲಲ್ಲವೇ ಭಾಷಣ ಕೊಟ್ಟದ್ದು? (38ಘ) ನೀವಲ್ಲವೇ ನಿನ್ನೆ ಇಂಗ್ಲೀಷಿನಲ್ಲಿ ಭಾಷಣ ಕೊಟ್ಟದ್ದು? (39ಕ) ಇಬ್ಬರು ತಾನೇ ಬಂದದ್ದು? (39ಖ) ನೀವು ತಾನೇ ಅಲ್ಲಿಗೆ ನಾಳೆ ಹೋಗೋಣವೆಂದದ್ದು? (39ಗ) ನೀವು ಅಲ್ಲಿಗೆ ತಾನೇ ನಾಳೆ ಹೋಗೋಣವೆಂದದ್ದು? (39ಘ) ನೀವು ಅಲ್ಲಿಗೆ ನಾಳೆ ತಾನೇ ಹೋಗೋಣವೆಂದದ್ದು?
10.3.5 ಬದಲಿ ಕೇಳ್ವಿಗಳು
ಎರಡು ಅಥವಾ ಜಾಸ್ತಿ ವಾಕ್ಯಗಳಲ್ಲಿ ಯಾವುದು ಸರಿ ಎಂಬುದಾಗಿ ಕೇಳುವ ವಾಕ್ಯಗಳು ‘ಬದಲಿ ಕೇಳ್ವಿ’ಗಳು. ಇಂತಹ ಕೇಳ್ವಿಗಳ ಮೂಲಕವೂ ಒಂದು ಇಡೀ ವಾಕ್ಯವು ತಿಳಿಸುವ ಸಂಗತಿ ನಿಜವೇ ಅಥವಾ ಅಲ್ಲವೇ ಎಂದು ತಿಳಿಯ ಬೇಕಾಗಿದೆಯಾದ ಕಾರಣ ಇವನ್ನೂ ವಾಕ್ಯಕೇಳ್ವಿಗಳೆಂದೇ ಪರಿಗಣಿಸಬಹುದು. (40ಕ) ರಘು ಹೋದದ್ದು ಪುಣೆಗೋ, ಬೊಂಬಾಯಿಗೋ? (40ಖ) ಅವನು ಪಾಠ ಓದುವುದೋ, ಕತೆಪುಸ್ತಕ ಓದುವುದೋ? (40ಗ) ಈಗ ನೀವು ಸ್ನಾನ ಮಾಡುತ್ತೀರೋ ಅಥವಾ ನಾನು ಮಾಡ ಬೇಕೋ? (40ಘ) ಆಕೆ ಇಂಟರ್ವ್ಯೂಗೆ ಹೋದದ್ದು ಬೆಂಗಳೂರಿಗೋ, ಚೆನ್ನೈಗೋ ಅಥವಾ ಡಿಲ್ಲಿಗೋ? ಇಂತಹ ಬದಲಿ ಕೇಳ್ವಿಗಳಿಗೂ ಮತ್ತು ಸರಳವಾದ ವಾಕ್ಯಕೇಳ್ವಿಗಳಿಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸರಳವಾದ ವಾಕ್ಯಕೇಳ್ವಿಗಳಿಗೆ ಹೌದು ಎಂದಾಗಲಿ, ಇಲ್ಲವೇ ಇಲ್ಲ ಅಥವಾ ಅಲ್ಲ ಎಂದಾಗಲಿ ಉತ್ತರ ಕೊಟ್ಟರೆ ಸಾಕು, ಆದರೆ ಇಂತಹ ಬದಲಿ ಕೇಳ್ವಿಗಳಿಗೆ ಉತ್ತರವಾಗಿ ಅವು ಸೂಚಿಸುವ ಎರಡು ಅಥವಾ ಜಾಸ್ತಿ ಸಂಗತಿಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಹೇಳ ಬೇಕಾಗುತ್ತದೆ.
ಯಾಕೆಂದರೆ, ತಾನು ಸೂಚಿಸುವ ‘ಬದಲಿ’ ಸಂಗತಿಗಳಲ್ಲಿ ಯಾವುದಾದರೂ ಒಂದು ಸರಿಯಿರಬಹುದು ಎಂಬುದಾಗಿ ಇಂತಹ ಬದಲಿ ಕೇಳ್ವಿಯನ್ನು ಬಳಸುವ ವ್ಯಕ್ತಿಯ ಅಭಿಪ್ರಾಯವಿರುತ್ತದೆ. ಹಾಗಾಗಿ ಇಂತಹ ಕೇಳ್ವಿಗಳಿಗೆ ಹೌದು ಅಥವಾ ಇಲ್ಲ/ಅಲ್ಲ ಎಂದಿಷ್ಟೇ ಉತ್ತರ ಕೊಟ್ಟರೆ ಕೇಳ್ವಿಯನ್ನು ಬಳಸಿದವನಿಗೆ ಸಮಾ ಧಾನವಾಗಲಾರದು. 10.4. ವಾಕ್ಯಾಂಗ ಕೇಳ್ವಿಗಳು ವಾಕ್ಯಾಂಗ ಕೇಳ್ವಿಯೊಂದನ್ನು ಬಳಸುವ ವ್ಯಕ್ತಿಗೆ ಅವನು ಸೂಚಿಸುವ ಘಟನೆಯ ಒಂದು ಅಂಶದ ಕುರಿತಾಗಿ ಮಾತ್ರ ಮಾಹಿತಿ ಬೇಕಾಗಿರುತ್ತದೆ. ಉಳಿದ ಅಂಶ ಗಳೆಲ್ಲ ಆತನಿಗೆ ತಿಳಿದಿರುತ್ತದೆ. ಹಾಗಾಗಿ ಇಂತಹ ಕೇಳ್ವಿಗಳನ್ನು ಬಳಸುವ ವ್ಯಕ್ತಿಗೆ ಯಾವ ಅಂಶವನ್ನು ತಿಳಿಯಬೇಕಾಗಿದೆಯೋ ಅದನ್ನು ಸೂಚಿಸುವುದಕ್ಕಾಗಿ ಈ ಕೇಳ್ವಿಗಳಲ್ಲಿ ಒಂದು ‘ಅನಿಶ್ಚಿತ’ ಪದವನ್ನು ಬಳಸುವ ಅವಶ್ಯಕತೆಯಿದೆ. (41ಕ) ರಾಜು ಇವತ್ತು ಎಲ್ಲಿಗೆ ಹೋಗಿದ್ದಾನೆ? (41ಖ) ನಿಮ್ಮ ಮನೆಗೆ ಇವತ್ತು ಯಾರು ಬಂದಿದ್ದಾರೆ? (41ಗ) ನಾವಿಲ್ಲಿ ಎಷ್ಟು ಗಂಟೆಯ ವರೆಗೆ ಕಾಯುತ್ತಿರಬೇಕು? (41ಘ) ನೀವು ನಿನ್ನೆ ಮದುವೆಗೆ ಯಾಕೆ ಬರಲಿಲ್ಲ? (41ಙ) ನೀವು ಈ ಮನೆಗೆ ಯಾವಾಗ ಬಂದಿರಿ? (41ಚ) ಅವರಿಗೆ ಯಾವ ಪುಸ್ತಕ ಬೇಕಾಗಿದೆ? (41ಕ)ವನ್ನು ಬಳಸಿದ ವ್ಯಕ್ತಿಗೆ ರಾಜು ಇವತ್ತು ಎಲ್ಲಿಗೋ ಹೋಗಿದ್ದಾನೆ ಎಂದು ಗೊತ್ತಿದೆ, ಆದರೆ ಎಲ್ಲಿಗೆ ಎಂದು ತಿಳಿದಿಲ್ಲ; ಇದೇ ರೀತಿಯಲ್ಲಿ (41ಖ) ವನ್ನು ಬಳಸಿದ ವ್ಯಕ್ತಿಗೆ ನಿಮ್ಮ ಮನೆಗೆ ಇವತ್ತು ಯಾರೋ ಬಂದಿದ್ದಾರೆ ಎಂದು ತಿಳಿದಿದೆ, ಆದರೆ ಬಂದವರು ಯಾರು ಎಂದು ತಿಳಿದಿಲ್ಲ. ಈ ರೀತಿ ತಿಳಿಯದಿರುವ ಒಂದು ಅಂಶವನ್ನು ಮಾತ್ರ ತಿಳಿದುಕೊಳ್ಳುವುದಕ್ಕಾಗಿ ಇಂತಹ ವಾಕ್ಯಾಂಗ ಕೇಳ್ವಿಗಳಲ್ಲಿ ಎಲ್ಲಿಗೆ, ಯಾರು, ಎಷ್ಟು, ಯಾಕೆ, ಯಾವಾಗ ಮೊದಲಾದ ಅನಿಶ್ಚಿತ ಪದಗಳ ಬಳಕೆಯಾಗುತ್ತದೆ. ವಾಕ್ಯಾಂಗ ಕೇಳ್ವಿಗಳಿಗೆ ಉತ್ತರ ಕೊಡುವವರು ಅವುಗಳಲ್ಲಿ ಬಂದಿರುವ ಅನಿಶ್ಚಿತ ಪದಗಳಿಗೆ ಸಮನಾಗಿರುವ ನಿಶ್ಚಿತ ಪದಗಳನ್ನು (ಎಂದರೆ, ಜಾಗ, ವ್ಯಕ್ತಿ,
ಮೊತ್ತ, ಕಾರಣ, ಸಮಯ ಮೊದಲಾದುವನ್ನು ತಿಳಿಸುವ ಪದಗಳನ್ನು) ಬಳಸ ಬೇಕಾಗುತ್ತದೆ. ಉದಾಹರಣೆಗಾಗಿ ಒಂದು ವಾಕ್ಯಾಂಗ ಕೇಳ್ವಿಯಲ್ಲಿ ಯಾರು ಎಂಬ ಪದ ಬಂದಿದೆಯಾದರೆ ಅದಕ್ಕೆ ಕೊಡುವ ಉತ್ತರದಲ್ಲಿ ಇಂತಹವರು ಎಂಬುದನ್ನೂ, ಎಷ್ಟು ಎಂಬ ಪದ ಬಂದಿದೆಯಾದರೆ ಇಂತಿಷ್ಟು ಎಂಬುದನ್ನೂ ತಿಳಿಸಬೇಕಾಗುತ್ತದೆ. (42ಕ) ಮದುವೆಗೆ ಯಾರು ಹೋಗುತ್ತಾರೆ? (42ಖ) ರಾಜು ಹೋಗುತ್ತಾನೆ. (43ಕ) ಈ ಮನೆಗೆ ಎಷ್ಟು ಖಚ್ರಾಯಿತು? (43ಖ) ಎಂಟು ಲಕ್ಷ ಖಚ್ರಾಯಿತು.
10.4.1 ಅನಿಶ್ಚಿತ ಪದಗಳು
ವಾಕ್ಯಾಂಗ ಕೇಳ್ವಿಗಳ ಮೂಲಕ ಒಂದು ಸಂಗತಿಯ ಬೇರೆ ಬೇರೆ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸುವುದಕ್ಕಾಗಿ ಅಂತಹ ವಾಕ್ಯಗಳಲ್ಲಿ ಯಾರು, ಏನು, ಯಾಕೆ, ಎಲ್ಲಿ, ಯಾವಾಗ, ಹೇಗೆ, ಎಷ್ಟು, ಎಂತಹ ಮೊದಲಾದ ಅನಿಶ್ಚಿತ ಪದಗಳ ಬಳಕೆಯಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು. ಕನ್ನಡ ವ್ಯಾಕರಣಗಳಲ್ಲಿ ಈ ಪದಗಳನ್ನು ಸಾಮಾನ್ಯವಾಗಿ ‘ಪ್ರಶ್ನಾರ್ಥಕ’ ಪದಗಳೆಂದು ಕರೆಯುವುದು ರೂಢಿ.
ಆದರೆ ಮೇಲೆ (10.3.1ರಲ್ಲಿ) ಸೂಚಿಸಿದ ಹಾಗೆ ನಿಜಕ್ಕೂ ಪ್ರಶ್ನೆಯ ಇಲ್ಲವೇ ಕೇಳ್ವಿಯ ಅರ್ಥವಿರುವುದು ವಾಕ್ಯದ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪಕ್ಕಲ್ಲದೆ ಈ ಅನಿಶ್ಚಿತ ಪದಗಳಿಗಲ್ಲ. ವಾಕ್ಯದ ಶ್ರುತಿ ಕೊನೆಯಲ್ಲಿ ಕೆಳಗೆ ಇಳಿಯುವುದಾದರೆ ಅದೊಂದು ತಿಳಿಸುವ ವಾಕ್ಯ, ಮತ್ತು ಹಾಗೆ ಕೆಳಗೆ ಇಳಿಯದೆ ಉಳಿಯುವುದಾದರೆ ಅದೊಂದು ಕೇಳ್ವಿ. ಬೇರೆ ಹಲವು ಬಳಕೆಗಳಲ್ಲಿ ಇವೇ ಪದಗಳಿಗೆ ಅನಿಶ್ಚಿತಾರ್ಥ ಮಾತ್ರ ಇದೆ ಯಲ್ಲದೆ ಕೇಳ್ವಿಯ ಅರ್ಥವಿಲ್ಲ. ಉದಾಹರಣೆಗಾಗಿ, ‘ಅಥವಾ’ ಎಂಬ ಅರ್ಥ ವಿರುವ ಓ ಪ್ರತ್ಯಯದೊಂದಿಗೆ, ಇಲ್ಲವೇ ‘ಮತ್ತು’ ಎಂಬ ಅರ್ಥವಿರುವ ಊ ಪ್ರತ್ಯಯದೊಂದಿಗೆ ಈ ಪದಗಳನ್ನು ಬಳಸಿದಾಗ ಅವಕ್ಕೆ ಅನಿಶ್ಚಿತಾರ್ಥ ಮಾತ್ರ ಇದೆಯಲ್ಲದೆ ಕೇಳ್ವಿಯ ಅರ್ಥವಿಲ್ಲ.
(44ಕ) ಆತನ ಮನೆಗೆ ಯಾರೋ ಬಂದಿದ್ದಾರೆ. (44ಖ) ಆಕೆ ಇವತ್ತು ಬೆಳಿಗ್ಗೇನೇ ಎಲ್ಲಿಗೋ ಹೋಗಿದ್ದಾಳೆ. (44ಗ) ಸೋಮಶೇಖರನ ಮನೆ ಇಲ್ಲೇ ಎಲ್ಲೋ ಇದೆ. (44ಘ) ಕೋಪ ಬಂದರೆ ಆತ ಏನೂ ಮಾಡಬಹುದು. (44ಕ-ಘ) ವಾಕ್ಯಗಳಲ್ಲಿ ಯಾರು, ಎಲ್ಲಿಗೆ, ಎಲ್ಲಿ ಮತ್ತು ಏನು ಎಂಬ ಪದಗಳಿಗೆ ಕೇಳ್ವಿಯ ಅರ್ಥವಿಲ್ಲ ಎಂಬುದನ್ನು ಗಮನಿಸಬಹುದು. ಅನಿಶ್ಚಿತ ವಾಗಿರುವ ಒಬ್ಬ ವ್ಯಕ್ತಿ, ಒಂದು ಜಾಗ, ಇಲ್ಲವೇ ಒಂದು ಕೆಲಸವನ್ನು ಮಾತ್ರ ಅವು ಸೂಚಿಸುತ್ತವೆ. ಬೇರೆಯೂ ಹಲವು ರೀತಿಯ ವಾಕ್ಯಗಳಲ್ಲಿ ಈ ಪದಗಳನ್ನು ಬಳಸಲು ಸಾಧ್ಯವಿದ್ದು ಅಂತಹ ಬಳಕೆಗಳಲ್ಲೂ ಅವಕ್ಕೆ ಕೇಳ್ವಿಯ ಅರ್ಥವಿಲ್ಲ.
(45ಕ) ಸಂತೆಯಲ್ಲಿ ಇವತ್ತು ಎಷ್ಟು ಜನ ಸೇರಿದ್ದಾರೆ! (45ಖ) ಹಣವನ್ನು ಎಲ್ಲಿ ಅಡಗಿಸಿಟ್ಟಿದ್ದಾರೆಂದು ಅವನು ತನ್ನ ಡೈರಿಯಲ್ಲಿ ಬರೆದಿದ್ದಾನೆ. (45ಗ) ಈ ಕತೆಯನ್ನು ಯಾರು ಬರೆದಿದ್ದಾರೋ ಅವರಿಗೆ ತಲೆ ಸರಿಯಿಲ್ಲ. ಒಟ್ಟು ಸೇರಿರುವ ಜನರ ಮೊತ್ತದ ಕುರಿತಾಗಿ ತನ್ನ ಆಶ್ಚರ್ಯವನ್ನು ಸೂಚಿಸಲು (45ಕ)ವನ್ನು ಬಳಲಾಗಿದೆ. ಇದರಲ್ಲಿ ಬಂದಿರುವ ಎಷ್ಟು ಎಂಬ ಪದಕ್ಕೆ ಆ ಮೊತ್ತದ ಕುರಿತು ಅನಿಶ್ಚಿತತೆಯನ್ನು ಸೂಚಿಸುವ ಅರ್ಥವಿದೆಯಲ್ಲದೆ ಕೇಳ್ವಿಯ ಅರ್ಥವಿಲ್ಲ. (45ಖ)ದಲ್ಲಿ ಬಂದಿರುವ ಎಲ್ಲಿ ಎಂಬ ಪದ ಸೂಚಿಸುವ ಜಾಗ ಆಡುಗನಿಗೆ ತಿಳಿದಿಲ್ಲದಿರಬಹುದು, ಆದರೆ ಅದನ್ನು ತಿಳಿಯುವ ಇಚ್ಛೆ ಆತನಿಗೆ ಇರುವ ಹಾಗೆ ಕಾಣಿಸುವುದಿಲ್ಲ.
(45ಗ)ದಲ್ಲಿ ಯಾರು ಎಂಬ ಅನಿಶ್ಚಿತ ಪದವನ್ನು ಎರಡು ವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಹೇಳುವ ಒಂದು ಸಾಧನವಾಗಿ ಬಳಸಲಾಗಿದೆ. ಇಲ್ಲೂ ಈ ಪದಕ್ಕೆ ಕೇಳ್ವಿಯ ಅರ್ಥವಿಲ್ಲ. ಯಾರು, ಏನು, ಯಾಕೆ ಮೊದಲಾದ ಪದಗಳಿಗೆ ಕನ್ನಡದಲ್ಲಿ ಈ ರೀತಿ ಹಲವು ಬಳಕೆಗಳಿದ್ದು, ಅವುಗಳ ನಡುವೆ ಹೆಚ್ಚಿನವುಗಳಲ್ಲೂ ಕಾಣಿಸಿಕೊಳ್ಳುವ ಅರ್ಥವೆಂದರೆ ಅನಿಶ್ಚಿತಾರ್ಥ ಮಾತ್ರ. ಹಾಗಾಗಿ ಅವನ್ನು ಅನಿಶ್ಚಿತಾರ್ಥದ ಪದಗಳೆಂದು ಕರೆದು, ಅವು ಬರುವ ಕೆಲವು ವಾಕ್ಯಗಳಲ್ಲಿ ಮಾತ್ರ ಕಾಣಿಸುವ ಕೇಳ್ವಿಯ ಅರ್ಥಕ್ಕೆ ಅಂತಹ ವಾಕ್ಯಗಳ ಕೊನೆಯಲ್ಲಿ ಬರುವ ಶ್ರುತಿಯ ಸ್ವರೂಪವೇ ಕಾರಣ ಎಂದು ಹೇಳುವುದೇ ಸರಿಯೆಂದು ತೋರುತ್ತದೆ (ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು (ಭಟ್ 2003 ಮತ್ತು ಭಟ್ 2004) ರಲ್ಲಿ ನೋಡಬಹುದು).
10.4.2 ಕೇಳುವ ಅಂಗಗಳು
ವಾಕ್ಯಾಂಗ ಕೇಳ್ವಿಗಳ ಮೂಲಕ ಒಂದು ವಾಕ್ಯವು ತಿಳಿಸುವ ಘಟನೆ ಇಲ್ಲವೇ ಸಂಗತಿಯ ಬೇರೆ ಬೇರೆ ಅಂಶಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೇಳಿ ತಿಳಿಯಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ (46)ನೇ ವಾಕ್ಯವು ತಿಳಿಸುವ ಘಟನೆಯಲ್ಲಿ ಆರು ಮುಖ್ಯ ಅಂಶಗಳಿದ್ದು, ಈ ಅಂಶಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆರು ರೀತಿಯ ವಾಕ್ಯಾಂಗ ಕೇಳ್ವಿಗಳನ್ನು ಬಳಸಲು ಸಾಧ್ಯವಿದೆ. ರಘು ನಿನ್ನೆ ನಿಮ್ಮನ್ನು ನೋಡುವುದಕ್ಕಾಗಿ ಬೆಂಗಳೂರಿನಿಂದ ಟ್ಯಾಕ್ಸಿಯಲ್ಲಿ ಬಂದಿದ್ದ. (46ಕ) ಯಾರು ಬಂದಿದ್ದರು? (46ಖ) ರಘು ಏನು ಮಾಡಿದ್ದ? (46ಗ) ಯಾವಾಗ ಬಂದಿದ್ದ? (46ಘ) ಎಲ್ಲಿಂದ ಬಂದಿದ್ದ? (46ಙ) ಹೇಗೆ ಬಂದಿದ್ದ?
(46ಚ) ಯಾಕೆ ಬಂದಿದ್ದ?
-ಬಂದಿದ್ದ. -ನಿನ್ನೆ. -ಬೆಂಗಳೂರಿನಿಂದ. -ಟ್ಯಾಕ್ಸಿಯಲ್ಲಿ. -ನಿಮ್ಮನ್ನು ನೋಡುವುದಕ್ಕಾಗಿ. ಈ ರೀತಿ ಕ್ರಿಯೆಯ ಮುಖ್ಯ ಅಂಶಗಳನ್ನು ಮಾತ್ರವಲ್ಲದೆ ಇತರ ಮುಖ್ಯ ವಲ್ಲದ ಅಂಶಗಳನ್ನೂ ಇಂತಹ ವಾಕ್ಯಾಂಗ ಕೇಳ್ವಿಗಳ ಮೂಲಕ ಕೇಳಿ ತಿಳಿದು ಕೊಳ್ಳಲು ಸಾಧ್ಯವಿದೆ. (46ಛ) ರಘು ಯಾರನ್ನು ನೋಡುವುದಕ್ಕಾಗಿ ಬಂದಿದ್ದ? -ನಿಮ್ಮನ್ನು. (46ಜ) ರಘು ಯಾವ ರಾತ್ರಿ ಬಂದಿದ್ದ? -ನಿನ್ನೆ ರಾತ್ರಿ. ಒಂದೇ ಕೇಳ್ವಿಯಲ್ಲಿ ಒಂದಕ್ಕಿಂತ ಜಾಸ್ತಿ ಅನಿಶ್ಚಿತ ಪದಗಳನ್ನು ಬಳಸುವುದರ ಮೂಲಕ ಒಮ್ಮೆಗೇನೇ ಒಂದಕ್ಕಿಂತ ಜಾಸ್ತಿ ಅಂಶಗಳ ಕುರಿತಾಗಿ ತಿಳಿಯ ಬೇಕಾಗಿದೆ ಎಂಬುದನ್ನು ಸೂಚಿಸಲು ಸಾಧ್ಯವಿದೆ. (47ಕ) ನೀವು ಯಾರ ಮನೆಗೆ ಯಾವಾಗ ಹೋದಿರಿ? (47ಖ) ಈ ಪುಸ್ತಕವನ್ನು ಯಾರು ಯಾವಾಗ ಎಲ್ಲಿಂದ ತಂದರು? (47ಗ) ಯಾರು ಯಾರನ್ನು ಯಾವಾಗ ಎಲ್ಲಿ ಹತ್ಯೆ ಮಾಡಿದರು? (47ಘ) ಈ ಮೇಲಿನ ಮಾತನ್ನು ಯಾರು ಯಾವಾಗ ಎಲ್ಲಿ ಮತ್ತು ಯಾಕಾಗಿ ಹೇಳಿದರು? ಆದರೆ ಮಾತಿನಲ್ಲಿ ಇಂತಹ ಒಂದಕ್ಕಿಂತ ಜಾಸ್ತಿ ಅನಿಶ್ಚಿತ ಪದಗಳಿರುವ ವಾಕ್ಯಾಂಗ ಕೇಳ್ವಿಗಳ ಬಳಕೆ ಬಹಳ ಅಪರೂಪವೆಂದೇ ಹೇಳಬಹುದು. ಸಾಮಾನ್ಯ ವಾಗಿ ಪರೀಕ್ಷೆಗಳಲ್ಲಿ ಕೊಡುವ ಪ್ರಶ್ನಪತ್ರಿಕೆಗಳಲ್ಲಿ ಮಾತ್ರವೇ ಇಂತಹ ಬಳಕೆ ಕಂಡುಬರುತ್ತದೆ. ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಇಂತಹ ಕೇಳ್ವಿಗಳನ್ನು ಬೇರೆ ಬೇರಾಗಿ ಒಡೆದು, ಒಂದು ಕೇಳ್ವಿಯಲ್ಲಿ ಒಂದು ಅನಿಶ್ಚಿತ ಪದ ಮಾತ್ರ ಉಳಿ ದಿರುವ ಹಾಗೆ ಬಳಸುವುದೇ ಜಾಸ್ತಿ. (48ಕ) ನೀವು ಎಲ್ಲಿಂದ ಬಂದಿರಿ? ಯಾವಾಗ ಬಂದಿರಿ? ಯಾಕೆ ಬಂದಿರಿ? ಯಾರು ನಿಮ್ಮನ್ನು ಬರಹೇಳಿದರು? (48ಖ) ಅಪಘಾತವನ್ನು ಯಾರು ನೋಡಿದ್ದು? ಯಾವಾಗ ನೋಡಿದ್ದು? ಎಲ್ಲಿಂದ ನೋಡಿದ್ದು? ಹೇಗೆ ನೋಡಿದ್ದು? ಅನಿಶ್ಚಿತ ಪದಗಳು ಒಂದನ್ನೊಂದು ಅವಲಂಬಿಸಿಕೊಂಡಿರುವಂತಹ ಕೇಳ್ವಿ ಗಳಲ್ಲಿ ಮಾತ್ರ ಅವನ್ನು ಈ ರೀತಿ ಒಡೆದು ಹೇಳಲು ಸಾದ್ಯವಾಗದು.
(49ಕ) ಯಾವ ಕಪಾಟಿನಲ್ಲಿ ಯಾವ ವಸ್ತುಗಳನ್ನಿರಿಸಬೇಕು? (49ಖ) ಯಾವ ಬೆಕ್ಕಿಗೆ ಯಾವ ಪಾತ್ರೆಯಲ್ಲಿ ಹಾಲು ಕೊಡಬೇಕು? ಇಂತಹ ಕೇಳ್ವಿಗಳಲ್ಲಿ ಪ್ರತಿಯೊಂದು ಅನಿಶ್ಚಿತ ಪದವೂ ಒಂದಕ್ಕಿಂತ ಜಾಸ್ತಿ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಸೂಚಿಸುತ್ತಿದ್ದು, ಅವುಗಳೊಳಗೆ ಅನುಕ್ರಮವಿದೆ ಯಾದಲ್ಲಿ ಈ ಅನಿಶ್ಚಿತ ಪದಗಳನ್ನು ಎರಡೆರಡು ಬಾರಿ ಬಳಸುವ ಕ್ರಮ ಕನ್ನಡ ದಲ್ಲಿದೆ. ಇಂತಹವನ್ನೂ ಒಡೆದು ಹೇಳಲು ಸಾಧ್ಯವಾಗದು. (50ಕ) ಯಾರು ಯಾರಿಗೆ ಯಾವ ಯಾವ ಪುಸ್ತಕ ಬೇಕು? (50ಖ) ಯಾವ ಯಾವ ಡಬ್ಬದಲ್ಲಿ ಯಾವ ಯಾವ ವಸ್ತುಗಳಿವೆ? ಇದಲ್ಲದೆ, ಇಂತಹ ಕೇಳ್ವಿಗಳಿಗೆ ಉತ್ತರ ಕೊಡುವಾಗಲೂ ಅವನ್ನು ಜೋಡಿ ಜೋಡಿಯಾಗಿ ಒಟ್ಟಿಗೆ ಸೇರಿಸಿಯೇ ಕೊಡಬೇಕೆಂಬ ಆಶಯ ಅಂತಹ ಕೇಳ್ವಿ ಯನ್ನು ಬಳಸಿದವನದಾಗಿರುತ್ತದೆ. (51ಕ) ನನಗೆ ಗಣಿತದ ಪುಸ್ತಕ, ರಂಗನಿಗೆ ಇಂಗ್ಲಿಷ್ ಪುಸ್ತಕ ಮತ್ತು ಜಾನಕಿಗೆ ಸಂಸ್ಕೃತ ಪುಸ್ತಕ. (51ಖ) ಇದರಲ್ಲಿ ಜೀರಿಗೆ, ಇದರಲ್ಲಿ ಮೆಣಸಿನಪುಡಿ, ಇದರಲ್ಲಿ ಉಪ್ಪು, ಮತ್ತು ಇದರಲ್ಲಿ ಸಾಸಿವೆ. (51ಕ-ಖ) ವಾಕ್ಯಗಳು ಅನುಕ್ರಮವಾಗಿ (50ಕ-ಖ)ದಲ್ಲಿ ಕೊಟ್ಟಿರುವ ಕೇಳ್ವಿ ಗಳಿಗೆ ಉತ್ತರಗಳಾಗಬಲ್ಲುವೆಂಬುದನ್ನು ಗಮನಿಸಬಹುದು.
10.4.3 ಪದವಗ್ರದಲ್ಲಿ ವ್ಯತ್ಯಾಸ
ವಾಕ್ಯಾಂಗ ಕೇಳ್ವಿಗಳ ಮೂಲಕ ತಿಳಿದುಕೊಳ್ಳಬೇಕಾಗಿರುವ ವಾಕ್ಯಾಂಶ ಒಂದು ನಾಮಪದದ ಮೂಲಕ ಸೂಚಿಸುವಂತಹದಿರಬಹುದು ಇಲ್ಲವೇ ಒಂದು ಗುಣ ಪದದ ಮೂಲಕ ಸೂಚಿಸುವಂತಹದಿರಬಹುದು. ಉದಾಹರಣೆಗಾಗಿ, ಯಾರು ಇಲ್ಲವೇ ಯಾವುದು ಎಂಬುದನ್ನು ಒಂದು ವಾಕ್ಯಾಂಗ ಕೇಳ್ವಿಯಲ್ಲಿ ಬಳಸಿದಾಗ ಅದಕ್ಕೆ ಉತ್ತರವಾಗಿ ಒಂದು ನಾಮಪದವನ್ನು ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಯಾವ ಇಲ್ಲವೇ ಎಂತಹ ಎಂಬುದನ್ನು ಬಳಸಿದಲ್ಲಿ ಅದಕ್ಕೆ ಉತ್ತರವಾಗಿ ಒಂದು ಗುಣಪದವನ್ನು ಕೊಡಬೇಕಾಗುತ್ತದೆ, ಇಲ್ಲವೇ ಒಂದು ಗುಣಪದದ ಸ್ಥಾನದಲ್ಲಿ ಬರಬಲ್ಲ ನಾಮಪದ ಇಲ್ಲವೇ ಕ್ರಿಯಾಪದದ ಸಂಬಂಧಿಸುವ ರೂಪವನ್ನು ಕೊಡಬೇಕಾಗುತ್ತದೆ. ಎಷ್ಟು ಎಂಬುದನ್ನು ಬಳಸಿ ದಲ್ಲಿ ಅದಕ್ಕೆ ಉತ್ತರವಾಗಿ ಒಂದು ಎಣಿಕೆಯ ಇಲ್ಲವೇ ಅಳತೆಯ ಪದವನ್ನು ಕೊಡಬೇಕಾಗುತ್ತದೆ. (52ಕ) ಯಾವ ಚೆಂಡು ಸಿಕ್ಕಿತು? (52ಖ) ಕೆಂಪು ಚೆಂಡು ಸಿಕ್ಕಿತು. (53ಕ) ಅವಳು ಎಂತಹ ಸೀರೆಯನ್ನು ಉಟ್ಟುಕೊಂಡಿದ್ದಾಳೆ? (53ಖ) ಅವಳು ನೀಲಿಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದಾಳೆ. (54ಕ) ಎಷ್ಟು ರೂಪಾಯಿ ಕೊಟ್ಟರು? (54ಖ) ನೂರ ಐವತ್ತು ರೂಪಾಯಿ ಕೊಟ್ಟರು. (52ಕ) ಕೇಳ್ವಿಯಲ್ಲಿ ಬಂದಿರುವ ಯಾವ ಎಂಬ ಪದಕ್ಕೆ ಉತ್ತರವಾಗಿ (52ಖ)ದಲ್ಲಿ ಕೆಂಪು ಎಂಬ ಗುಣಪದ ಬಂದಿದೆ, (53ಕ)ದಲ್ಲಿ ಬಂದ ಎಂತಹ ಎಂಬುದಕ್ಕೆ ಬದಲಾಗಿ (53ಖ)ದಲ್ಲಿ ನೀಲಿಬಣ್ಣದ ಎಂಬ ಗುಣಪದದ ಸ್ಥಾನ ದಲ್ಲಿ ಬರಬಲ್ಲ ನಾಮಪದದ ಸಂಬಂಧಿಸುವ ರೂಪ ಬಂದಿದೆ, ಮತ್ತು (54ಕ) ದಲ್ಲಿ ಬಂದ ಎಷ್ಟು ಎಂಬುದಕ್ಕೆ ಬದಲಾಗಿ (54ಖ)ದಲ್ಲಿ ಐವತ್ತು ಎಂಬ ಎಣಿಕೆಯ ಪದ ಬಂದಿದೆ. ವಾಕ್ಯಾಂಗ ಕೇಳ್ವಿಗಳಲ್ಲಿ ಬರುವ ಅನಿಶ್ಚಿತ ಪದಗಳು ಘಟನೆಯೊಂದರಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸಲು ಸಾಧ್ಯವಿದ್ದು, ಈ ಕೆಲಸಗಳನ್ನವಲಂಬಿಸಿ ಅವು ಬೇರೆ ಬೇರೆ ವಿಭಕ್ತಿ ರೂಪಗಳಲ್ಲಿ ಬರಬಲ್ಲುವು. ಉದಾಹರಣೆಗಾಗಿ, ಅನಿಶ್ಚಿತವಾಗಿರುವ ವ್ಯಕ್ತಿಯೊಬ್ಬ ನನ್ನು ಸೂಚಿಸುವ ಯಾರು ಎಂಬ ಪದ ಎಲ್ಲಾ ವಿಭಕ್ತಿ ರೂಪಗಳಲ್ಲೂ ಬರ ಬಲ್ಲುದು.
(55ಕ) ಇವತ್ತು ನೀವು ಪೂಜೆಗೆ ಯಾರನ್ನು ಕರೆದಿದ್ದೀರಿ? (55ಖ) ರಾಜು ಲೆಕ್ಕದ ಪುಸ್ತಕವನ್ನು ಯಾರಿಗೆ ಕೊಟ್ಟ? (55ಗ) ಈ ಪುಸ್ತಕವನ್ನು ಯಾರಿಂದ ತಂದಿರಿ? (55ಘ) ಈ ಪುಸ್ತಕ ಯಾರಲ್ಲಿದೆ? ಇದೇ ರೀತಿಯಲ್ಲಿ ಎಷ್ಟು ಎಂಬ ಪದ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆ ಇಲ್ಲವೇ ಪ್ರಮಾಣದ ಅನಿಶ್ಚಿತತೆಯನ್ನು ಸೂಚಿಸುತ್ತಿದೆಯಾದ ಕಾರಣ, ಅದರೊಂದಿಗೆ ಎಲ್ಲಾ ವಿಭಕ್ತಿಪ್ರತ್ಯಯಗಳೂ ಬರಬಲ್ಲುವು. ಅದಕ್ಕೆ ಬದಲಾಗಿ ಉತ್ತರದಲ್ಲಿ ಬರಬಲ್ಲ ಎಣಿಕೆ ಇಲ್ಲವೇ ಪ್ರಮಾಣವನ್ನು ಸೂಚಿಸುವ ಪದಗಳೂ ಈ ರೀತಿ ಎಲ್ಲಾ ವಿಭಕ್ತಿಪ್ರತ್ಯಯಗಳೊಂದಿಗೂ ಬರಬಲ್ಲುವು. (56ಕ) ಎಷ್ಟನ್ನು ಈಗಲೇ ಕೊಡಬೇಕಾಗುತ್ತದೆ? (56ಖ) ಈ ಸಂಖ್ಯೆಯನ್ನು ಎಷ್ಟರಿಂದ ಕಳೆಯಬೇಕಾಗುತ್ತದೆ? (56ಗ) ಇದನ್ನು ಎಷ್ಟಕ್ಕೆ ಕೊಂಡುಕೊಂಡಿರಿ? (56ಘ) ನಿಮ್ಮ ಶೇರು ಎಷ್ಟರಲ್ಲಿ ನಿಂತಿದೆ? ಎಷ್ಟು ಎಂಬ ಪದಕ್ಕೆ (ನೇ ಅಥವಾ ನೆಯ) ಪ್ರತ್ಯಯವನ್ನು ಸೇರಿಸಿ, ಎಣಿಕೆಯಲ್ಲಿ ಯಾವುದಾದರೊಂದು ವ್ಯಕ್ತಿ ಇಲ್ಲವೇ ವಸ್ತುವಿನ ಜಾಗ ಯಾವುದು ಎಂಬುದನ್ನು ಕೇಳಲು ಸಾಧ್ಯವಿದೆ. ಆದರೆ ಈ ಪದ ನೇರವಾಗಿ ವಿಭಕ್ತಿ ಪ್ರತ್ಯಯ ಗಳೊಂದಿಗೆ ಬರಲಾರದು. (56ಙ) ರಾಜು ಎಷ್ಟನೇ ಕ್ಲಾಸಿನಲ್ಲಿ ಕಲಿಯುತ್ತಿದ್ದಾನೆ? ಇದೇ ರೀತಿಯಲ್ಲಿ ಗುಣಪದಗಳ ಜಾಗದಲ್ಲಿ ಬರುವ ಯಾವ ಮತ್ತು ಎಂತಹ ಎಂಬ ಪದಗಳು ಯಾವ ವಿಭಕ್ತಿಪ್ರತ್ಯಯದೊಂದಿಗೂ ಬರಲಾರವು. ಎಂತಹ ಎಂಬುದಕ್ಕೆ ದು ಪ್ರತ್ಯಯವನ್ನು ಸೇರಿಸಿದಾಗ ಮಾತ್ರ ಅದು ನಾಮ ಪದಗಳ ಸ್ಥಾನದಲ್ಲಿ ಬರಬಲ್ಲುದಾಗಿದ್ದು, ಅದಕ್ಕೆ ಬೇರೆ ಬೇರೆ ವಿಭಕ್ತಿಪ್ರತ್ಯಯ ಗಳನ್ನು ಸೇರಿಸಲು ಸಾಧ್ಯವಾಗುತ್ತದೆ.
ಒಂದು ಘಟನೆ ಇಲ್ಲವೇ ಸಂಗತಿಯ ಜಾಗವನ್ನು ತಿಳಿಯುವುದಕ್ಕಾಗಿ ಬಳಸ ಬೇಕಾಗಿರುವ ಎಲ್ಲಿ ಎಂಬ ಪದ ಇಂದ ಮತ್ತು ಗೆ ಎಂಬ ಎರಡು ವಿಭಕ್ತಿ ಪ್ರತ್ಯಯಗಳೊಂದಿಗೆ ಮಾತ್ರ ಬರಬಲ್ಲುದು. ಅಲ್ಲಿ ಪ್ರತ್ಯಯದ ಅರ್ಥ ಅದಕ್ಕೇನೇ ಇದೆ ಮತ್ತು ಅನ್ನು ಪ್ರತ್ಯಯದ ಅವಶ್ಯಕತೆ ಅದಕ್ಕಿಲ್ಲ. (57ಕ) ಇಷ್ಟೆಲ್ಲಾ ಇರುವೆಗಳು ಎಲ್ಲಿಂದ ಬಂದುವು? (57ಖ) ಮೆರವಣಿಗೆ ಎಲ್ಲಿಗೆ ಹೋಗುತ್ತಿದೆ? (57ಗ) ಈ ಮೂರು ಕಾಲಿನ ಎತ್ತು ನಿಮಗೆ ಎಲ್ಲಿ ಸಿಕ್ಕಿತು? ಒಂದು ಘಟನೆ ಇಲ್ಲವೇ ಸಂಗತಿಯ ಸಮಯವನ್ನು ತಿಳಿಯುವುದಕ್ಕಾಗಿ ಬಳಸಬೇಕಾಗಿರುವ ಯಾವಾಗ ಎಂಬ ಪದ ಇಂದ ಪ್ರತ್ಯಯದೊಂದಿಗೆ ಮಾತ್ರ ಬರಬಲ್ಲುದು. ಗೆ ಪ್ರತ್ಯಯದ ಅರ್ಥವನ್ನು ಈ ಪದದ ಮೂಲಕ ನೇರವಾಗಿ ಸೂಚಿಸಲು ಸಾಧ್ಯವಾಗದು. (58ಕ) ಅವರು ಯಾವಾಗಿನಿಂದ ಈ ಊರಲ್ಲಿ ಕೆಲಸ ಮಾಡುತ್ತಿದ್ದಾರೆ? (58ಖ) ನೀವು ಈ ಮನೆಗೆ ಯಾವಾಗ ಬಂದಿರಿ? (58ಗ) ಎಷ್ಟು ದಿವಸಗಳ ವರೆಗೆ ನೀವಿಲ್ಲಿ ಇರುತ್ತೀರಿ? ಏನು ಎಂಬ ಪದ ಒಂದು ನಾಮಪದಕ್ಕೆ ಬದಲಾಗಿ ಬರಬಲ್ಲುದಾದರೂ ಅದನ್ನು ಅನ್ನು ಪ್ರತ್ಯಯದೊಂದಿಗೆ ಮಾತ್ರ ಬಳಸಲು ಸಾಧ್ಯವಿದೆಯಲ್ಲದೆ, ಇಂದ, ಗೆ ಇಲ್ಲವೇ ಅಲ್ಲಿ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಾಗದು. ಈ ಪದ ಸೂಚಿಸುವ ಅನಿಶ್ಚಿತತೆ ಬಹಳ ಸ್ಥೂಲವಾಗಿರುವುದೇ ಇದಕ್ಕೆ ಕಾರಣವಿರ ಬೇಕು.
ಉದಾಹರಣೆಗಾಗಿ ಈ ಪದವನ್ನು ಒಂದು ಕೆಲಸವನ್ನು ನಡೆಸಿರುವ ಇಲ್ಲವೇ ನಡೆಸಲಿರುವ ಪ್ರಾಣಿಯ ಗುರುತು ಕೇಳುವಲ್ಲಿ ಬಳಸಲು ಸಾಧ್ಯವಾಗದು. ಇಂತಹ ಸಂದಭ್ರಗಳಲ್ಲಿ ಯಾವುದು ಎಂಬ ಪದವನ್ನೇ ಬಳಸಬೇಕಾಗುತ್ತದೆ. (59ಕ) ಈ ಚೀಲವನ್ನು ಕಚ್ಚಿಹಾಕಿದ್ದು ಯಾವುದು? (59ಖ) ಬೆಕ್ಕನ್ನು ಹೆದರಿಸಿದ್ದು ಯಾವುದು? ಇದೇ ರೀತಿಯಲ್ಲಿ ಒಂದು ಕದಲುವಿಕೆಯ ಸುರು, ಕೊನೆ ಇಲ್ಲವೇ ಜಾಗ ವನ್ನು ತಿಳಿಯಬೇಕಾಗಿರುವಾಗಲೂ ಯಾವುದು ಎಂಬುದನ್ನು ಬಳಸಲು ಸಾಧ್ಯ ವಿದೆಯಲ್ಲದೆ ಏನು ಎಂಬುದನ್ನು ಬಳಸಲು ಸಾಧ್ಯವಾಗದು. (60ಕ) ಹಾಗಲಬಳ್ಳಿ ಯಾವುದಕ್ಕೆ ಹಬ್ಬಿದೆ? (60ಖ) ಆತ ಯಾವುದರಿಂದ ಎಣ್ಣೆ ಹಿಂಡಿದ? (60ಗ) ಆಕೆ ಕೊತ್ತಂಬರಿಯನ್ನು ಯಾವುದರಲ್ಲಿ ಹಾಕಿದ್ದಾಳೆ? ಇಂತಹ ಸಂದಭ್ರಗಳಲ್ಲಿ ಜಾಗವನ್ನು ಹೆಚ್ಚು ಸ್ಥೂಲವಾಗಿ ಸೂಚಿಸಬೇಕಾದಲ್ಲಿ ಎಲ್ಲಿ ಎಂಬ ಪದವನ್ನು ಬಳಸಲು ಸಾಧ್ಯವಾಗಬಹುದು, ಆದರೆ ಏನು ಎಂಬ ಪದವನ್ನು ಬಳಸಲು ಸಾಧ್ಯವಾಗದು.
ವಾಕ್ಯಾಂಗ ಕೇಳ್ವಿಗಳಲ್ಲಿ ಕ್ರಿಯಾಪದವೊಂದನ್ನು ಬಿಟ್ಟು ವಾಕ್ಯದಲ್ಲಿ ಬರುವ ಇತರ ಯಾವ ಪದಕ್ಕೆ ಬದಲಾಗಿಯೂ ಅನಿಶ್ಚಿತ ಪದವೊಂದನ್ನು ಬಳಸಲು ಸಾಧ್ಯವಿದೆ. ಕ್ರಿಯಾಪದ ವಾಕ್ಯದ ಕೇಂದ್ರವಾಗಿರುವ ಕಾರಣ ಅದನ್ನು ಅನಿಶ್ಚಿತ ಗೊಳಿಸಲು ಕನ್ನಡದಲ್ಲಿ ಸಾಧನವಿಲ್ಲ.
ಇದಕ್ಕೆ ಬದಲು ಮಾಡು ಮತ್ತು ಆಗು ಎಂಬ ಕ್ರಿಯಾಪದಗಳೊಂದಿಗೆ ಏನು ಎಂಬ ಅನಿಶ್ಚಿತ ಪದವನ್ನು ಬಳಸಿ ಎಂತಹ ಘಟನೆ ನಡೆಯಿತು ಎಂಬು ದನ್ನು ತಿಳಿಯಬಯಸುವ ಕೇಳ್ವಿಯನ್ನು ರಚಿಸಲು ಸಾಧ್ಯವಿದೆ. (61ಕ) ಅವನು ಬೆಕ್ಕಿನ ಮರಿಯನ್ನು ಏನು ಮಾಡಿದ? (61ಖ) ಬೆಕ್ಕಿನ ಮರಿಗೆ ಏನಾಯಿತು? (62ಕ) ಅವನು ಬೊಂಬಾಯಿಯಲ್ಲಿ ಏನು ಮಾಡುತ್ತಿದ್ದಾನೆ? (62ಖ) ಅವನಿಗೆ ಬೊಂಬಾಯಿಯಲ್ಲಿ ಏನಾಯಿತು?
10.4.4 ವಚನದ ಅನಿಶ್ಚಿತತೆ
ಯಾರು ಎಂಬ ಬಹುವಚನ ರೂಪ ನಿಜಕ್ಕೂ ಸಂಖ್ಯೆ ಮತ್ತು ಲಿಂಗಗಳ ಮಟ್ಟಿಗೆ ಅನಿಶ್ಚಿತತೆಯನ್ನು ಸೂಚಿಸುವುದಕ್ಕಾಗಿ ಬಂದಿದೆಯಲ್ಲದೆ ‘ಒಂದಕ್ಕಿಂತ ಜಾಸ್ತಿ’ ಎಂಬ ಅರ್ಥದಲ್ಲಿ ಬಂದಿಲ್ಲ. ಉದಾಹರಣೆಗಾಗಿ, ಯಾರೋ ಒಬ್ಬ ಎಂಬ ಪದಕಂತೆಯ ಬಳಕೆಯಲ್ಲಿ ಯಾರು ಎಂಬುದು ಒಬ್ಬ ವ್ಯಕ್ತಿಯನ್ನು ಮಾತ್ರವೇ ಸೂಚಿಸುತ್ತದೆ. ಇಲ್ಲಿ ಯಾರು ಎಂಬ ಬಹುವಚನ ರೂಪ ಗೌರವಾರ್ಥವನ್ನೂ ಕೊಡುವುದಿಲ್ಲ ಎಂಬುದನ್ನು (63)ರಲ್ಲಿ ನೋಡಬಹುದು. (63) ಯಾರೋ ಒಬ್ಬ ಈ ಮಡಕೆಯನ್ನು ಒಡೆದು ಹಾಕಿದ್ದಾನೆ. ಕನ್ನಡದಲ್ಲಿ ವ್ಯಕ್ತಿಯನ್ನು ಸೂಚಿಸುವ ಅನಿಶ್ಚಿತ ಪದಗಳು ಏಕವಚನದಲ್ಲಿ ಬಂದಿವೆಯಾದರೆ ಅವು ಸಂಖ್ಯೆ ಮತ್ತು ಲಿಂಗ ಇವೆರಡು ವಿಷಯಗಳಲ್ಲೂ ನಿಶ್ಚಿತವಾಗಿರುತ್ತವೆಯೆಂಬುದನ್ನು ಯಾವನು ಮತ್ತು ಯಾವಳು ಎಂಬವುಗಳ ಪ್ರಯೋಗದಲ್ಲಿ ಕಾಣಬಹುದು. ಹಾಗಾಗಿ, ಈ ಎರಡು ವಿಷಯಗಳಲ್ಲೂ ಅನಿಶ್ಚಿತತೆಯನ್ನು ಸೂಚಿಸಬೇಕಾದಾಗ ಯಾರು ಎಂಬ ಬಹುವಚನ ರೂಪವನ್ನೇ ಬಳಸಬೇಕಾಗುತ್ತದೆ.
ಇದಲ್ಲದೆ ಯಾವನು ಮತ್ತು ಯಾವಳು ಎಂಬೆರಡು ಪದಗಳಿಗೆ ಸ್ವಲ್ಪ ಮಟ್ಟಿಗೆ ಅಗೌರವವನ್ನು ಸೂಚಿಸುವ ಅರ್ಥವೂ ಇದೆಯಾದ ಕಾರಣ, ಕನ್ನಡ ಬರಹದಲ್ಲಿ ಅವುಗಳ ಬಳಕೆ ಅಪರೂಪ.
ಏನು ಮತ್ತು ಯಾವುದು ಎಂಬವುಗಳ ನಡುವೆ ಇಂತಹ ವ್ಯತ್ಯಾಸವಿಲ್ಲ. ಅವೆರಡೂ ಸಮಾನವಾಗಿ ಬಳಕೆಯಲ್ಲಿದ್ದು, ಅವುಗಳಲ್ಲಿ ಎರಡನೆಯದಕ್ಕೆ ಒಂದು ಗುಂಪಿನಲ್ಲಿರುವ ವಸ್ತುಗಳಲ್ಲಿ ಒಂದನ್ನು ಆರಿಸಿ ಹೇಳಬೇಕೆಂಬ ವಿಶಿಷ್ಟವಾದ ಅರ್ಥವಿದೆ. ಇದೇ ರೀತಿಯಲ್ಲಿ ಯಾವುವು ಎಂಬುದಕ್ಕೂ ಒಂದು ಗುಂಪಿನ ಲ್ಲಿರುವ ವಸ್ತುಗಳಲ್ಲಿ ಕೆಲವನ್ನು ಆರಿಸಿ ಹೇಳಬೇಕೆಂಬ ಅರ್ಥವಿದೆ. (63ಕ) ನಿಮಗೆ ಯಾವುದು ಬೇಕು? (63ಖ) ನಿಮಗೆ ಏನು ಬೇಕು? (63ಗ) ಈ ಪುಸ್ತಕಗಳಲ್ಲಿ ನಿಮ್ಮವು ಯಾವುವು? ಆದರೆ ಒಂದು ಗುಂಪಿನಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬನನ್ನು (ಅಥವಾ ಹಲವರನ್ನು) ಆರಿಸಿ ಹೇಳಬೇಕೆಂದಿರುವಲ್ಲೂ ಯಾರು ಎಂಬುದನ್ನೇ ಬಳಸಲು ಸಾಧ್ಯವಿದೆ. ಯಾವನು ಮತ್ತು ಯಾವಳು ಎಂಬುವಕ್ಕೆ ಅಗೌರವಾರ್ಥವಿರುವ ಕಾರಣ ಇಂತಹ ಸಂದಭ್ರಗಳಲ್ಲಿ ಅವನ್ನೇ ಬಳಸಬೇಕೆಂಬ ನಿಯಮವಿಲ್ಲ. (64ಕ) ಈ ಹುಡುಗರಲ್ಲಿ ಲೇಟಾಗಿ ಬಂದವರು ಯಾರು? (64ಖ) ಈ ನಾಲ್ಕು ಜನರಲ್ಲಿ ಕೊಲೆಗಾರನು ಯಾರು? (64ಗ) ಆ ಹಳೇ ಚಪ್ಪಲಿಯನ್ನು ಯಾರು ಕದ್ದಿರಬಹುದು?
10.4.5 ಒಳವಾಕ್ಯಗಳಾಗಿ ಬಳಕೆ
ವಾಕ್ಯಾಂಗ ಕೇಳ್ವಿಗಳನ್ನು ಒಳವಾಕ್ಯಗಳನ್ನಾಗಿ ಬಳಸಿದಾಗ ಅವು ಕೇಳ್ವಿಗಳಾಗಿ ಉಳಿಯುವ ಬದಲು ಅನಿಶ್ಚಿತ ವಾಕ್ಯಗಳಾಗಲು ಸಾಧ್ಯವಿದೆ. ಹೊರವಾಕ್ಯದ ಕೊನೆಯಲ್ಲಿ ಬರುವ ಶ್ರುತಿವಿನ್ಯಾಸ ಎಂತಹದು ಎಂಬುದರ ಮೇಲೆ ಈ ವ್ಯತ್ಯಾಸ ಅವಲಂಬಿಸಿದೆ. (65ಕ) ಎಲ್ಲಿಗೆ ಹೋಗುವುದೆಂದು ಅವನು ನಿಶ್ಚಯಿಸಿದ್ದಾನೆ? (65ಖ) ಎಲ್ಲಿಗೆ ಹೋಗುವುದೆಂದು ಅವನು ನಿಶ್ಚಯಿಸಿದ್ದಾನೆ. (66ಕ) ಎಷ್ಟು ಹಣ ಬೇಕಾಗಬಹುದೆಂದು ಅವರು ಬರೆದಿದ್ದಾರೆ? (66ಖ) ಎಷ್ಟು ಹಣ ಬೇಕಾಗಬಹುದೆಂದು ಅವರು ಬರೆದಿದ್ದಾರೆ. ಆದರೆ ‘ಇಂತಹ ವಾಕ್ಯಗಳನ್ನು ಬಳಸುತ್ತಿರುವ ವ್ಯಕ್ತಿಗೆ ಅವುಗಳ ಒಳವಾಕ್ಯ ಸೂಚಿಸುವ ಸಂಗತಿ ತಿಳಿದಿದೆ’ ಎಂಬ ಅರ್ಥವನ್ನು ಅವುಗಳ ಹೊರವಾಕ್ಯ ಸೂಚಿಸುತ್ತಿದೆಯಾದಲ್ಲಿ ಮಾತ್ರ ಒಳವಾಕ್ಯ ಒಂದು ಅನಿಶ್ಚಿತ ವಾಕ್ಯವಾಗಬಲ್ಲುದು. ಹಾಗಾಗಿ ಇತರ ಸಂದಭ್ರಗಳಲ್ಲಿ ಇಂತಹ ವಾಕ್ಯಗಳನ್ನು ‘ತಿಳಿಸುವವಾಕ್ಯ’ದ ಶ್ರುತಿ ವಿನ್ಯಾಸದೊಂದಿಗೆ ಬಳಸಲು ಸಾಧ್ಯವಾಗದು. (67ಕ) ಅವರು ಎಲ್ಲಿರಬಹುದೆಂದು ನಿಮಗನಿಸುತ್ತದೆ? (67ಖ) ಎಷ್ಟು ಜನ ಬಂದಿರಬಹುದೆಂದು ಆಕೆಯ ಅಭಿಪ್ರಾಯ? (67ಗ) ಇದನ್ನು ಯಾವಾಗ ಕೊಡುತ್ತೇನೆಂದು ನೀವು ಹೇಳಿದ್ದು? (67ಕ-ಗ)ಗಳಲ್ಲಿ ಬಂದಿರುವ ಒಳವಾಕ್ಯಗಳು ಅವುಗಳ ಆಡುಗನಿಗೆ ತಿಳಿದಿರು ವಂತಹ ಸಂಗತಿಯನ್ನು ಸೂಚಿಸುವುದಿಲ್ಲವಾದ ಕಾರಣ ಅವನ್ನು ಕೇಳ್ವಿಗಳನ್ನಾಗಿ ಮಾತ್ರ ಬಳಸಲು ಸಾಧ್ಯವಿದೆಯಲ್ಲದೆ, ತಿಳಿಸುವ ವಾಕ್ಯಗಳನ್ನಾಗಿ ಬಳಸಲು ಸಾಧ್ಯ ವಾಗದು.
10.4.6 ವಾಕ್ಯಾಂಗ ಕೇಳ್ವಿಗಳಲ್ಲಿ ವೈವಿಧ್ಯ
ತಿಳಿಸುವ ವಾಕ್ಯಗಳಲ್ಲಿ ಬರುವ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿ ಯನ್ನು ಪಡೆಯಲು ವಾಕ್ಯಾಂಗ ಕೇಳ್ವಿಗಳನ್ನು ಬಳಸುವೆವಾದ ಕಾರಣ, ತಿಳಿಸುವ ವಾಕ್ಯಗಳಲ್ಲಿ ಕಾಣಿಸುವ ವೈವಿಧ್ಯ ವಾಕ್ಯಾಂಗ ಕೇಳ್ವಿಗಳಲ್ಲೂ ಕಾಣಿಸಬಲ್ಲುದು.
ಉದಾಹರಣೆಗಾಗಿ, ತಿಳಿಸುವ ವಾಕ್ಯಗಳ ಮೂಲಕ ಒಂದು ಘಟನೆ ನಡೆಯ ಲಿಲ್ಲ ಇಲ್ಲವೇ ನಡೆಯುವುದಿಲ್ಲ ಎಂಬುದನ್ನೂ ತಿಳಿಸಬಲ್ಲೆವು. ಇದಕ್ಕಾಗಿ ನಾವು ‘ಅಲ್ಲಗಳೆ’ಯುವ ವಾಕ್ಯಗಳನ್ನು ಬಳಸಬೇಕಾಗುತ್ತದೆ. ಇಂತಹ ವಾಕ್ಯಗಳ ಮೂಲಕ ಅಲ್ಲಗಳೆದಿರುವ ಘಟನೆಯ ಒಂದು ಘಟಕದ ಕುರಿತಾಗಿ ಮಾತ್ರ ಮಾಹಿತಿಯನ್ನು ಪಡೆಯಬೇಕಾಗಿದ್ದಲ್ಲಿ ಅವನ್ನು ವಾಕ್ಯಾಂಗ ಕೇಳ್ವಿಗಳನ್ನಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. (68ಕ) ರಾಜು ಮದುವೆಗೆ ಯಾಕೆ ಬರಲಿಲ್ಲ? (68ಖ) ಸೀಮೆ ಎಣ್ಣೆ ನಿಮಗೆ ಯಾವ ಅಂಗಡಿಯಲ್ಲಿ ಸಿಗಲಿಲ್ಲ? (68ಗ) ಈ ಕೋಣೆಯಲ್ಲಿ ಯಾರಿಗೆ ಊಟ ಆಗಿಲ್ಲ? (68ಘ) ನಿಮ್ಮಲ್ಲಿ ಟಿಕೇಟನ್ನು ಯಾರು ಕೊಂಡುಕೊಂಡಿಲ್ಲ? (68ಕ) ವಾಕ್ಯವನ್ನು ಬಳಸಿದ ವ್ಯಕ್ತಿಗೆ ‘ರಾಜು ಮದುವೆಗೆ ಬರಲಿಲ್ಲ’ ಎಂಬ ವಿಷಯ ತಿಳಿದಿದೆ, ಆದರೆ ಇದಕ್ಕೆ ಕಾರಣವೇನೆಂದು ಮಾತ್ರ ತಿಳಿದಿಲ್ಲ. ಈ ಒಂದು ವಿಷಯವನ್ನು ತಿಳಿಯುವುದಕ್ಕಾಗಿ (68ಕ)ವನ್ನು ಬಳಸಲಾಗಿದೆ. ಇತರ ವಾಕ್ಯಗಳಲ್ಲೂ ಹೀಗೆಯೇ. ತಿಳಿಸುವ ವಾಕ್ಯಗಳಲ್ಲಿ ಕ್ರಿಯಾವಾಕ್ಯ ಮತ್ತು ವಿಷಯವಾಕ್ಯ ಎಂಬುದಾಗಿ ಎರಡು ವಿಧದವುಗಳಿವೆಯೆಂಬುದನ್ನು (1.2)ರಲ್ಲಿ ನೋಡಿರುವೆವು. ಕ್ರಿಯಾ ವಾಕ್ಯಗಳು ಒಂದು ಘಟನೆ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುತ್ತವೆ ಮತ್ತು ವಿಷಯವಾಕ್ಯಗಳು ಒಂದು ಸಂಗತಿಯ ಇರುವಿಕೆಯನ್ನು ತಿಳಿಸುತ್ತವೆ.
ಮೇಲೆ ಕೊಟ್ಟಿರುವ ವಾಕ್ಯಾಂಗ ಕೇಳ್ವಿಗಳಲ್ಲಿ ಹೆಚ್ಚಿನವೂ ಕ್ರಿಯಾವಾಕ್ಯಗಳನ್ನು ವಾಕ್ಯಾಂಗ ಕೇಳ್ವಿಗಳನ್ನಾಗಿ ಬದಲಾಯಿಸಿದಂತಹವುಗಳು. ಇಂತಹ ವಾಕ್ಯಗಳು ಘಟನೆಗಳ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತವೆ. ಇದಕ್ಕೆ ಬದಲು ಸಂಗತಿಗಳ ಘಟಕವೊಂದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದಾಗ ಅಂತಹ ಸಂಗತಿಗಳನ್ನು ತಿಳಿಸುವಂತಹ ಕೇಳ್ವಿಗಳನ್ನಾಗಿ ವಿಷಯವಾಕ್ಯಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ವಾಕ್ಯಾಂಗ (69ಕ) ಕಂಗಾರೋಗಳು ಆಸ್ಟ್ರೇಲಿಯಾದಲ್ಲಿ ಇರುತ್ತವೆ? (69ಖ) ಕಂಗಾರೋಗಳು ಎಲ್ಲಿ ಇರುತ್ತವೆ? (70ಕ) ಆಕೆಗೆ ಎರಡು ಮಂದಿ ಮಕ್ಕಳಿದ್ದಾರೆ? (70ಖ) ಆಕೆಗೆ ಎಷ್ಟು ಮಂದಿ ಮಕ್ಕಳಿದ್ದಾರೆ? (71ಕ) ಆ ಎಮ್ಮೆಯ ಕೊಂಬು ನೆಟ್ಟಗಿದೆ. (71ಖ) ಆ ಎಮ್ಮೆಯ ಕೊಂಬು ಹೇಗಿದೆ? ತಿಳಿಸುವ ವಾಕ್ಯಗಳು ಒಂದು ಸಂಗತಿಯನ್ನು ನೇರವಾಗಿ ತಿಳಿಸುವ ಬದಲು ಅದಕ್ಕೂ ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವಂತಹ ವಾಕ್ಯಗಳಾಗಿರಲು ಸಾಧ್ಯವಿದೆ. ಇಂತಹ ವಾಕ್ಯಗಳನ್ನೂ ವಾಕ್ಯಾಂಗ ಕೇಳ್ವಿಗಳಾಗಿ ಬದಲಾಯಿಸಬಹುದು. ಆದರೆ ಹೀಗೆ ಬದಲಾಯಿಸುವಾಗ ಅವುಗಳ ಮೂಲಕ ಸಂಬಂಧಿತವಾಗುವ ಘಟಕದ ಕುರಿತಾಗಿ ಮಾತ್ರವೇ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ.
(72ಕ) ಇವತ್ತು ಶಾಲೆಗೆ ಹೋಗದಿದ್ದುದು ರಾಜು. (72ಖ) ಇವತ್ತು ಶಾಲೆಗೆ ಹೋಗದಿದ್ದುದು ಯಾರು? (72ಕ) ವಾಕ್ಯದಲ್ಲಿ ರಾಜು ಘಟಕವನ್ನು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸಲಾಗಿದೆ. ಹಾಗಾಗಿ, ಈ ವಾಕ್ಯವನ್ನು ವಾಕ್ಯಾಂಗ ಕೇಳ್ವಿಯಾಗಿ ಬದಲಾ ಯಿಸುವುದರ ಮೂಲಕ ರಾಜು ಘಟಕದ ಕುರಿತಾಗಿ ಮಾತ್ರ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ. ಹೋಗುವ ಸಮಯ ಇಲ್ಲವೇ ಹೋಗುವ ಜಾಗದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಿದ್ದಲ್ಲಿ ಅಂತಹ ಘಟಕ ಗಳನ್ನು ವಾಕ್ಯದ ಉಳಿದ ಅಂಶದೊಂದಿಗೆ ಸಂಬಂಧಿಸುವ ವಾಕ್ಯಗಳನ್ನೇ ಕೇಳ್ವಿ ಗಳಾಗಿ ಬದಲಾಯಿಸಲು ಬಳಸಬೇಕಾಗುತ್ತದೆ. (73ಕ) ರಾಜು ಶಾಲೆಗೆ ಹೋಗದಿದ್ದುದು ಇವತ್ತು. (73ಖ) ರಾಜು ಶಾಲೆಗೆ ಹೋಗದಿದ್ದುದು ಯಾವಾಗ? (74ಕ) ರಾಜು ಇವತ್ತು ಹೋಗದಿದ್ದುದು ಶಾಲೆಗೆ. (74ಖ) ರಾಜು ಇವತ್ತು ಹೋಗದಿದ್ದುದು ಎಲ್ಲಿಗೆ?
10.5 ಕೆಲಸ ಮಾಡಿಸುವ ವಾಕ್ಯಗಳು
ಮಾತಿನ ಮೂಲಕ ಇತರರಿಂದ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಿಸಿ ಕೊಳ್ಳಲು ಸಾಧ್ಯವಿದೆ, ಮತ್ತು ಇದಕ್ಕಾಗಿಯೇ ಬಳಸಬಹುದಾದಂತಹ ಕೆಲವು ವಿಶಿಷ್ಟವಾದ ‘ಕೆಲಸ ಮಾಡಿಸುವ’ ವಾಕ್ಯಗಳೂ ಕನ್ನಡದಲ್ಲಿವೆ. ಬರಹದಲ್ಲಿ ಕಾಣಿಸುವ ಇಂತಹ ಕೆಲವು ವಾಕ್ಯಗಳನ್ನು ಕೆಳಗಿನ ಉಪವಿಭಾಗಗಳಲ್ಲಿ ವಿವರಿಸ
10.5.1 ಪ್ರತ್ಯಯ ಸೇರಿಸದ ರೂಪ
ಒಬ್ಬ ಕೇಳುಗನಿಂದ ಮಾತ್ರವೇ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾಗಿದ್ದಾಗ, ಕ್ರಿಯಾಪದವನ್ನು ಹಾಗೆಯೇ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸ ಬಹುದು.
(75ಕ) ಒಂದು ಗ್ಲಾಸು ನೀರು ಕೊಡು. (75ಖ) ಮೂರು ಗಂಟೆಗೆ ನೀನು ಮನೆಗೆ ಹೋಗು. (75ಗ) ಮೊದಲು ಕಾಫಿ ಕುಡಿ. (75ಘ) ಈ ಚೀಲವನ್ನು ಕಪಾಟಿನೊಳಗೆ ಇರಿಸು. ಮೇಲೆ ಕೊಟ್ಟಿರುವ (75ಕ-ಘ) ವಾಕ್ಯಗಳನ್ನು ಆಡುಗನು ತನ್ನ ಕೇಳುಗನ ಮೂಲಕ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಬಳಸಲು ಸಾಧ್ಯವಿದ್ದು, ಈ ವಾಕ್ಯಗಳಲ್ಲಿ ಕೊಡು, ಹೋಗು, ಕುಡಿ ಮತ್ತು ಇರಿಸು ಎಂಬ ಮುಖ್ಯ ಕ್ರಿಯಾಪದಗಳು ಅವುಗಳ ಮೂಲ ರೂಪದಲ್ಲಿ, ಎಂದರೆ ಅವಕ್ಕೆ ಯಾವ ಪ್ರತ್ಯಯವೂ ಸೇರದಿರುವ ರೂಪದಲ್ಲಿ ಬಳಕೆಯಾಗಿವೆ. ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಮಾತ್ರ ಈ ನಿಯಮಕ್ಕೆ ಅಪವಾದಗಳಾಗಿವೆ. ಮೇಲೆ ವಿವರಿಸಿದಂತಹ ವಾಕ್ಯಗಳಲ್ಲಿ ಇವಕ್ಕೆ ಬಾ ಮತ್ತು ತಾ ಎಂಬ ವಿಶಿಷ್ಟವಾದ ರೂಪಗಳಿವೆ. (75ಙ) ನೀನು ಈ ಕಡೆ ಬಾ. ಕ್ರಿಯಾಪದಗಳಿಗೆ ಕೊಳ್ಳು ಪದವನ್ನು ಸೇರಿಸಿ ಅವುಗಳ ಮೂಲಕ ಆಡುಗನು ತನ್ನ ಹಿತಕ್ಕಾಗಿ ನಡೆಸುವ ಘಟನೆಯೊಂದನ್ನು ಸೂಚಿಸಲು ಸಾಧ್ಯ ಎಂಬುದನ್ನು ಮೇಲೆ 5.6.3ರಲ್ಲಿ ನೋಡಿರುವೆವು. ಈ ಪ್ರತ್ಯಯಕ್ಕೆ ಕೆಲಸ ಮಾಡಿಸುವ ವಾಕ್ಯ ಗಳಲ್ಲಿ ಕೊ ಎಂಬ ರೂಪವಿದೆ. (76ಕ) ಪುಸ್ತಕವನ್ನು ಕೈಯಲ್ಲೇ ಇಟ್ಟುಕೊ. (76ಖ) ಬೀಳದ ಹಾಗೆ ನನ್ನ ಹೆಗಲನ್ನು ಹಿಡಿದುಕೊ.
10.5.2 ಇ ಇಲ್ಲವೇ ಇರಿ ಪ್ರತ್ಯಯದ ಬಳಕೆ
ಇಬ್ಬರು (ಇಲ್ಲವೇ ಇಬ್ಬರಿಗಿಂತ ಜಾಸ್ತಿ) ಕೇಳುಗರ ಮೂಲಕ ಒಂದು ಕೆಲಸವನ್ನು ಮಾಡಿಸಬೇಕಿದ್ದಲ್ಲಿ ಈ ಕ್ರಿಯಾಪದಗಳಿಗೆ ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿ ಕೊಳ್ಳಬೇಕಾಗುತ್ತದೆ. ಒಬ್ಬ ಕೇಳುಗ ಮತ್ತು ಒಬ್ಬ (ಅಥವಾ ಹಲವು) ಇತರ ಮಂದಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾಗಿದ್ದಾಗಲೂ ಇದೇ ಪ್ರತ್ಯಯದ ಬಳಕೆಯಾಗುತ್ತದೆ. (77ಕ) ಮೂರು ಗಂಟೆಗೆ ನೀವು ಮನೆಗೆ ಹೋಗಿ. (77ಖ) ನೀವು ಮೊದಲು ಕಾಫಿ ಕುಡಿಯಿರಿ. (77ಗ) ಎಲ್ಲರೂ ಒಂದು ಕತೆ ಬರೆಯಿರಿ. ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿದಾಗ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದುಹೊಗುತ್ತದೆ ಮತ್ತು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಕೊನೆಯಲ್ಲಿ ಯಕಾರ ಸೇರಿಕೊಳ್ಳು ತ್ತದೆ ಎಂಬುದನ್ನು ಗಮನಿಸಬಹುದು. ಬರು ಮತ್ತು ತರು ಎಂಬ ಎರಡು ಕ್ರಿಯಾಪದಗಳು ಈ ನಿಯಮಕ್ಕೂ ಅಪ ವಾದಗಳಾಗಿ ಕಾಣಿಸಿಕೊಳ್ಳುತ್ತವೆ. ಇವಕ್ಕೆ ಇ ಇಲ್ಲವೇ ಇರಿ ಪ್ರತ್ಯಯದ ಅನಂತರ ಬನ್್ನ ಮತ್ತು ತನ್್ನ ಎಂಬ ರೂಪಗಳಿವೆ. (78ಕ) ನೀವು ಈ ಕಡೆ ಬನ್ನಿ. (78ಖ) ಎಲ್ಲರೂ ಬಾವಿಯಿಂದ ನೀರು ತನ್ನಿ. ಇರು ಕ್ರಿಯಾಪದದೊಂದಿಗೆ ಇ ಪ್ರತ್ಯಯ ಬರಬಹುದಲ್ಲದೆ ಇರಿ ಪ್ರತ್ಯಯ ಬರ ಲಾರದು. (78ಗ) ನೀವಿಬ್ಬರೂ ಇಲ್ಲೇ ಇರಿ. ಒಬ್ಬನೇ ವ್ಯಕ್ತಿಯ ಮೂಲಕ ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾ ಗಿದ್ದಾಗಲೂ ಆ ವ್ಯಕ್ತಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದೊಂದಿಗೆ ಇ ಇಲ್ಲವೇ ಇರಿ ಪ್ರತ್ಯಯವನ್ನು ಸೇರಿಸಿ ಹೇಳುವ ಕ್ರಮ ಕನ್ನಡದಲ್ಲಿದೆ ಎಂಬು ದನ್ನು ಇಲ್ಲಿ ಗಮನಿಸಬಹುದು.
10.5.3 ಓಣ ಪ್ರತ್ಯಯದ ಬಳಕೆ
ಆಡುಗ ಮತ್ತು ಕೇಳುಗರಿಬ್ಬರೂ ಒಟ್ಟಾಗಿ ಒಂದು ಕೆಲಸವನ್ನು ಮಾಡಬೇಕಿದ್ದಲ್ಲಿ, ಅದನ್ನು ಕೇಳುಗನಿಗೆ ಸೂಚಿಸಬೇಕಿದ್ದಾಗ ಅಂತಹ ವಾಕ್ಯದ ಮುಖ್ಯ ಕ್ರಿಯಾಪದಕ್ಕೆ ಓಣ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. (79ಕ) ನಾವಿಬ್ಬರೂ ಸಂತೆಗೆ ಹೋಗೋಣ. (79ಖ) ಇಲ್ಲೇ ಕುಳಿತುಕೊಳ್ಳೋಣ. (79ಗ) ಈ ಪೆಟ್ಟಿಗೆಯನ್ನು ಮೇಜಿನ ಮೇಲೆ ಇರಿಸೋಣ.
10.5.4 ಇ ಪ್ರತ್ಯಯದ ಬಳಕೆ
ಕೇಳುಗನ ಬದಲು ಬೇರೊಬ್ಬ ವ್ಯಕ್ತಿಯ ಮೂಲಕ (ಇಲ್ಲವೇ ಹಲವು ವ್ಯಕ್ತಿಗಳ ಮೂಲಕ) ಒಂದು ಕೆಲಸವನ್ನು ಮಾಡಿಸಿಕೊಳ್ಳಬೇಕಿದ್ದಲ್ಲಿ ಅನಂತರದ ಘಟನೆ ಯನ್ನು ಸೂಚಿಸುವುದಕ್ಕಾಗಿ ಬಳಸುವ ಕ್ರಿಯಾಪದದ ಜೋಡಿಸುವ ರೂಪಕ್ಕೆ ಇ ಪ್ರತ್ಯಯವನ್ನು ಸೇರಿಸಿಕೊಳ್ಳಬೇಕಾಗುತ್ತದೆ. (80ಕ) ರಾಜು ಈ ಪುಸ್ತಕವನ್ನು ಹರಿಗೆ ಕೊಡಲಿ. (80ಖ) ಈ ಪೆಟ್ಟಿಗೆಯನ್ನು ಅವನು ಮೇಜಿನ ಮೇಲೆ ಇರಿಸಲಿ. (80ಗ) ಹುಡುಗರು ಮನೆಗೆ ಹೋಗಲಿ. (80ಕ)ದಲ್ಲಿ ಕೊಡು ಕ್ರಿಯಾಪದದ ಕೊಡಲು ಎಂಬ ಅನಂತರದ ಘಟನೆಯನ್ನು ಸೂಚಿಸುವ ಕ್ರಿಯಾರೂಪಕ್ಕೆ ಇ ಪ್ರತ್ಯಯವನ್ನು ಸೇರಿಸಲಾಗಿದೆ. ಮುಂದೆ ಯಾವುದಾದರೊಂದು ಘಟನೆ ನಡೆಯಲಿ ಎಂದು ಬಯಸುವು ದಕ್ಕಾಗಿ ಅಥವಾ ಅದೇ ಅರ್ಥದಲ್ಲಿ ಕೇಳುಗನನ್ನು ಹರಸುವುದಕ್ಕಾಗಿಯೂ ಮೇಲಿನ ಕ್ರಿಯಾರೂಪವನ್ನು ಬಳಸಲು ಸಾಧ್ಯವಿದೆ. (80ಘ) ನಿಮಗೆ ಒಳ್ಳೆಯದಾಗಲಿ! (80ಙ) ಕೆಲಸವೆಲ್ಲ ನಿವ್ರಿಘ್ನವಾಗಿ ನೆರವೇರಲಿ!
10.5.5 ಕೆಲವು ವಿಶಿಷ್ಟವಾದ ಪದಗಳ ಬಳಕೆ
ಕೇಳುಗನು ಒಂದು ಕೆಲಸವನ್ನು ಮಾಡದಂತೆ ತಡೆಯುವುದಕ್ಕಾಗಿ ಬೇಡ ಪದದ ಬಳಕೆಯಾಗುತ್ತದೆ. ಇದನ್ನು ಅನಂತರ ನಡೆಯುವ ಘಟನೆಯನ್ನು ಸೂಚಿಸುವ ಕ್ರಿಯಾರೂಪದೊಂದಿಗೆ ಸೇರಿಸಲಾಗುತ್ತದೆ. ಈ ಕ್ರಿಯಾರೂಪದ ಕೊನೆಯ ಲು ಅಕ್ಷರ ಬೇಡ ಪದ ಸೇರಿದಾಗ ಬಿದ್ದು ಹೋಗುತ್ತದೆ. (81ಕ) ನೀನು ಅವರಲ್ಲಿಗೆ ಹೋಗಬೇಡ. (81ಖ) ಅವರ ಹತ್ತಿರ ಯಾವುದನ್ನೂ ಕೇಳಬೇಡ. ಒಬ್ಬನಿಗಿಂತ ಜಾಸ್ತಿ ವ್ಯಕ್ತಿಗಳನ್ನು ತಡೆಯುವುದಕ್ಕಾಗಿ ಇಲ್ಲವೇ ತಡೆಯ ಬೇಕಾದ ವ್ಯಕ್ತಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಬೇಡ ಪದಕ್ಕೆ ಇ ಪ್ರತ್ಯಯ ವನ್ನು ಸೇರಿಸಬೇಕಾಗುತ್ತದೆ. (81ಗ) ನೀವು ಅವರಲ್ಲಿಗೆ ಹೋಗಬೇಡಿ. (81ಘ) ಅವರ ಹತ್ತಿರ ಯಾವುದನ್ನೂ ಕೇಳಬೇಡಿ. ಕೇಳುಗನ ಬದಲು ಇನ್ನೊಬ್ಬ ವ್ಯಕ್ತಿ ಒಂದು ಕೆಲಸವನ್ನು ಮಾಡದಂತೆ ತಡೆಯಬೇಕಾದಾಗ ಬೇಡ ಪದವನ್ನು ಕ್ರಿಯಾಪದದ ನಾಮಪದರೂಪದೊಂದಿಗೆ ಸೇರಿಸಿ ಹೇಳಬೇಕಾಗುತ್ತದೆ. (81ಙ) ಅವನು ಅವರಲ್ಲಿಗೆ ಹೋಗುವುದು ಬೇಡ. (81ಚ) ಅವರ ಹತ್ತಿರ ಅವನು ಯಾವುದನ್ನೂ ಕೇಳುವುದು ಬೇಡ. ಒಂದು ಕೆಲಸವನ್ನು ಮಾಡಲು ಕೇಳುಗನಿಗೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಒಪ್ಪಿಗೆಯನ್ನು ಕೊಡುವುದಕ್ಕಾಗಿ ಮೇಲಿನ ಕ್ರಿಯಾರೂಪಕ್ಕೇನೇ ಬಹುದು ಪದ ವನ್ನು ಸೇರಿಸಲಾಗುತ್ತದೆ. ಈ ಸಂದಭ್ರದಲ್ಲೂ ಆ ಕ್ರಿಯಾರೂಪದದ ಕೊನೆಯ ಲು ಅಕ್ಷರ ಬಿದ್ದುಹೋಗುತ್ತದೆ. (82ಕ) ನೀನು ಅವರಲ್ಲಿಗೆ ಹೋಗಬಹುದು. (82ಖ) ಅವರ ಹತ್ತಿರ ಯಾವುದನ್ನೂ ಕೇಳಬಹುದು. ಬಹುದು ಪದಕ್ಕೆ ಕೆಲಸವೊಂದನ್ನು ನಡೆಸಲು ಒಪ್ಪಿಗೆಯನ್ನು ಸೂಚಿಸುವ ಅರ್ಥಕ್ಕೆ ಬದಲು ಒಂದು ಘಟನೆ ನಡೆಯುವ ಸಾಧ್ಯತೆಯನ್ನು ಸೂಚಿಸುವ ಅರ್ಥವೂ ಬರಬಲ್ಲುದು ಎಂಬುದನ್ನು ಇಲ್ಲಿ ಗಮನಿಸಬಹುದು. ಈ ರೀತಿ ಒಂದು ಕೆಲಸವನ್ನು ನಡೆಸಲು ಒಪ್ಪಿಗೆಯನ್ನು ಕೊಡುವ ಬದಲು ಅದನ್ನು ನಿರಾಕರಿಸುವುದಕ್ಕಾಗಿ ಬಾರದು ಪದದ ಬಳಕೆಯಾಗುತ್ತದೆ. (83ಕ) ನೀನು ಅವರಲ್ಲಿಗೆ ಹೋಗಬಾರದು. (83ಖ) ಅವರ ಹತ್ತಿರ ಯಾವುದನ್ನೂ ಕೇಳಬಾರದು.
10.6 ಬೆರಗನ್ನು ಸೂಚಿಸುವ ವಾಕ್ಯಗಳು
ಕನ್ನಡದಲ್ಲಿ ಬೆರಗನ್ನು ಸೂಚಿಸುವ ವಾಕ್ಯಗಳಿಗೂ ಮತ್ತು ಕೇಳುವ ವಾಕ್ಯ (ವಾಕ್ಯಾಂಗ ಕೇಳ್ವಿ)ಗಳಿಗೂ ನಡುವೆ ಕೆಲವು ಸಾಮ್ಯಗಳು ಕಾಣಿಸುತ್ತವೆ. ಈ ಎರಡು ರೀತಿಯ ವಾಕ್ಯಗಳಲ್ಲೂ ಅನಿಶ್ಚಿತ ಸವ್ರಪದಗಳು ಬರುವುದೇ ಇದಕ್ಕೆ ಮುಖ್ಯ ಕಾರಣ. ವಾಕ್ಯಾಂಗ ಕೇಳ್ವಿಗಳಲ್ಲಿ ಇವು ಕೇಳ್ವಿಯ ವ್ಯಾಪ್ತಿಯನ್ನು ಸೂಚಿಸು ವುದಕ್ಕಾಗಿ ಬರುತ್ತವೆ ಮತ್ತು ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬೆರಗಿನ ವ್ಯಾಪ್ತಿಯನ್ನು ಸೂಚಿಸುವುದಕ್ಕಾಗಿ ಬರುತ್ತವೆ.
(84ಕ) ಮದುವೆಗೆ ಎಷ್ಟು ಜನ ಬಂದಿದ್ದರು? (84ಖ) ಮದುವೆಗೆ ಎಷ್ಟು ಜನ ಬಂದಿದ್ದರು ! (85ಕ) ಆ ಸಾಹುಕಾರರದು ಎಂತಹ ಮನೆ? (85ಖ) ಆ ಸಾಹುಕಾರರದು ಎಂತಹ ಮನೆ ! ಮೇಲೆ ಕೊಟ್ಟಿರುವ (ಕ) ಮತ್ತು (ಖ) ವಾಕ್ಯಗಳೆರಡೂ ಒಂದೇ ರೂಪದಲ್ಲಿದ್ದು, ಅವುಗಳ ಕೊನೆಯಲ್ಲಿ ಬರುವ ಚಿಹ್ನೆ ಮಾತ್ರ ಬೇರೆ ಬೇರೆಯಾಗಿದೆಯೆಂಬುದನ್ನು ಗಮನಿಸಬಹುದು. ಮಾತಿನಲ್ಲಿ ಈ ಎರಡು ರೀತಿಯ ವಾಕ್ಯಗಳ ನಡುವೆ ಅವುಗಳ ಕೊನೆಯಲ್ಲಿ ಬರುವ ಶ್ರುತಿಯ ಮಟ್ಟಿಗೆ ವ್ಯತ್ಯಾಸ ಇದೆ ಎಂಬುದನ್ನು ಬರಹದಲ್ಲಿ ಕಾಣಿಸುವ ಈ ಚಿಹ್ನೆಗಳು ಸೂಚಿಸುತ್ತವೆ. ಆದರೆ ಈ ರೀತಿ ವಾಕ್ಯದ ಕೊನೆಯ ಶ್ರುತಿಯೊಂದನ್ನು ಬಿಟ್ಟು ಬೇರೆಲ್ಲಾ ವಿಷಯಗಳಲ್ಲೂ ಕೇಳುವ ಮತ್ತು ಬೆರಗನ್ನು ಸೂಚಿಸುವ ವಾಕ್ಯಗಳು ಒಂದೇ ರೀತಿ ಇರುವುದು ಕೆಲವೇ ಕೆಲವು ವಾಕ್ಯಗಳಲ್ಲಿ ಮಾತ್ರ. ಉಳಿದ ವಾಕ್ಯಗಳಲ್ಲಿ ಇವೆರಡರೊಳಗೆ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು.
ಉದಾಹರಣೆಗಾಗಿ ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಎಷ್ಟು, ಏನು, ಎಂತಹ (ಇಲ್ಲವೇ ಎಂಥಾ) ಮತ್ತು ಹೇಗೆ ಎಂಬ ನಾಲ್ಕು ಅನಿಶ್ಚಿತ ಸವ್ರ ಪದಗಳು ಮಾತ್ರ ಬರಬಲ್ಲುವು. ಆದರೆ ಕೇಳುವ ವಾಕ್ಯಗಳಲ್ಲಿ ಈ ನಾಲ್ಕು ಅನಿಶ್ಚಿತ ಪದಗಳು ಮಾತ್ರವಲ್ಲದೆ, ಯಾರು, ಎಲ್ಲಿ, ಯಾಕೆ, ಯಾವಾಗ ಮೊದಲಾದ ಬೇರೆಯೂ ಕೆಲವು ಅನಿಶ್ಚಿತ ಪದಗಳು ಬರಬಲ್ಲುವು ಎಂಬುದನ್ನು ನಾವು ಮೇಲೆ (10.4.1)ರಲ್ಲಿ ನೋಡಿರುವೆವು. (86ಕ) ಆ ಹುಡುಗಿ ಎಷ್ಟು ಚನ್ನಾಗಿ ಕುಣಿಯುತ್ತಿದ್ದಾಳೆ ! (86ಕ) ಆತನಿಗೆ ಇಷ್ಟು ಬೇಗ ವಗ್ರವಾದದ್ದು ಏನನ್ಯಾಯ ! (86ಗ) ನಿನ್ನೆ ರಾತ್ರಿ ಎಂತಹ (ಎಂಥಾ) ಮಳೆ ಬಂದಿತ್ತು ! (86ಘ) ಅವರು ಆ ಮನೆಯನ್ನು ಹೇಗೆ ಕಟ್ಟಿದ್ದಾರೆ ! ಬೆರಗನ್ನು ಸೂಚಿಸುವ ವಾಕ್ಯಗಳು ಯಾವುದಾದರೂ ಒಂದು ಗುಣಧರ್ಮದ ಮಟ್ಟಿಗೆ ಆಡುಗನಿಗಿರುವ ಬೆರಗನ್ನು ಸೂಚಿಸಬೇಕಾಗಿದೆಯಾದ ಕಾರಣ, ಗುಣ ಧರ್ಮವೊಂದರ ದಜ್ರೆ ಇಲ್ಲವೇ ಅಂತಸ್ತನ್ನು ಸೂಚಿಸಬಲ್ಲ ಅನಿಶ್ಚಿತ ಸವ್ರಪದ ಗಳು ಮಾತ್ರ ಅವುಗಳಲ್ಲಿ ಬರಬಲ್ಲುವು.
ಎಷ್ಟು, ಏನು, ಹೇಗೆ ಮತ್ತು ಎಂತಹ ಎಂಬವುಗಳು ಈ ರೀತಿ ಗುಣ ಧರ್ಮವೊಂದರ ದಜ್ರೆಯ ಕುರಿತಾಗಿ ಅನಿಶ್ಚಿತತೆಯನ್ನು ಸೂಚಿಸಬಲ್ಲುವು. ಇದಕ್ಕೆ ಬದಲು, ಯಾರು, ಎಲ್ಲಿ, ಯಾವಾಗ ಮೊದಲಾದವುಗಳು ವ್ಯಕ್ತಿ, ವಸ್ತು, ಜಾಗ, ಸಮಯ ಮೊದಲಾದವುಗಳ ಗುರುತಿನ ಕುರಿತಾಗಿ ಅನಿಶ್ಚಿತತೆ ಯನ್ನು ಸೂಚಿಸುತ್ತಿವೆ. ಹಾಗಾಗಿ, ಅವನ್ನು ಬೆರಗನ್ನು ಸೂಚಿಸುವ ವಾಕ್ಯಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.
10.7 ಸಾರಾಂಶ
ವಾಕ್ಯಗಳ ಮೂಲಕ ತಿಳಿಸುವ ಕೆಲಸಕ್ಕಿಂತ ಭಿನ್ನವಾಗಿರುವ ಬೇರೆ ಕೆಲವು ಕೆಲಸ ಗಳನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಕೆಲವು ರೀತಿಯ ವಾಕ್ಯಗಳನ್ನು ಬಳಸಿದೊಡನೆಯೇ ಕೆಲವು ಕೆಲಸಗಳು ನಡೆದು ಹೋಗುತ್ತವೆ. ಇಂತಹ ವಾಕ್ಯಗಳಲ್ಲಿ ಕೆಲವು ವಿಶಿಷ್ಟವಾದ ಹೊರವಾಕ್ಯಗಳು ಬಂದಿರುವುದನ್ನು ಕಾಣಬಹುದು. ಒಂದು ಘಟನೆಯ ಕುರಿತಾಗಿ ಇಲ್ಲವೇ ಒಂದು ಸಂಗತಿಯ ಕುರಿತಾಗಿ ಇನ್ನೊಬ್ಬ ವ್ಯಕ್ತಿಯಿಂದ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ಬೇರೆ ರೀತಿಯ ವಾಕ್ಯಗಳನ್ನು ಬಳಸಬೇಕಿದ್ದು ಇವನ್ನು ಕೇಳ್ವಿಗಳೆಂದು ಕರೆಯಬಹುದು. ಇವು ಗಳಲ್ಲಿ ಒಂದು ಘಟನೆ ನಡೆದಿದೆಯೇ ಅಥವಾ ಒಂದು ಸಂಗತಿ ನಿಜವೇ ಎಂಬು ದನ್ನು ತಿಳಿಯುವುದಕ್ಕಾಗಿ ಬಳಸುವ ವಾಕ್ಯಗಳನ್ನು ವಾಕ್ಯಕೇಳ್ವಿಗಳೆಂದೂ ಮತ್ತು ಅಂತಹ ಒಂದು ಘಟನೆ ಇಲ್ಲವೇ ಸಂಗತಿಯ ಒಂದು ಅಂಗದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ ಬಳಸುವ ವಾಕ್ಯಗಳನ್ನು ವಾಕ್ಯಾಂಗ ಕೇಳ್ವಿ ಗಳೆಂದೂ ಕರೆಯಬಹುದು.
ಇತರರಿಂದ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಮತ್ತು ಬೆರಗನ್ನು ಸೂಚಿಸುವುದಕ್ಕಾಗಿಯೂ ಕೆಲವು ವಿಶಿಷ್ಟವಾದ ವಾಕ್ಯಗಳನ್ನು ಬಳಸಲಾಗುತ್ತದೆ.