Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೭ — ಲಿಂಗ ಮತ್ತು ವಚನಗಳು
ಲಿಂಗ ಮತ್ತು ವಚನಗಳು
೭.೧ ಪೀಠಿಕೆ
ನಾಮಪದಗಳನ್ನು ವಾಕ್ಯಗಳಲ್ಲಿ ಬಳಸುವ ವಿಧಾನದಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳಿಗೂ ಈ ಎರಡು ಭಾಷೆಗಳು ಬಳಸುವ ವ್ಯಾಕರಣದ ಮೂಲತತ್ವಗಳು ಬೇರೆ ಬೇರೆಯಾಗಿರುವುದೇ ಕಾರಣ ಎಂಬುದನ್ನು ಕೆಳಗಿನ ಸಮೀಕ್ಷೆಯಿಂದ ತಿಳಿಯಬಹುದು.
ನಾಮಪದಗಳ ಬಳಕೆಗೆ ಸಂಬಂಧಿಸಿದಂತೆ ಲಿಂಗ, ವಚನ ಮತ್ತು ವಿಭಕ್ತಿ ಎಂಬುದಾಗಿ ಮೂರು ವ್ಯಾಕರಣ ತತ್ವಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.
(೧) ಲಿಂಗ ಎಂಬುದು ನಾಮಪದಗಳನ್ನು ಹೇಗೆ ಅವುಗಳ ಬಳಕೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಗುಂಪುಗಳಾಗಿ ವಿಂಗಡಿಸಲು ಸಾಧ್ಯ ಎಂಬುದನ್ನು ತಿಳಿಸುತ್ತದೆ;
(೨) ವಚನ ಎಂಬುದು ನಾಮಪದಗಳು ಸೂಚಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯೆಷ್ಟು ಎಂಬುದನ್ನು ತಿಳಿಸುತ್ತದೆ; ಮತ್ತು
(೩) ವಿಭಕ್ತಿ ಎಂಬುದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿಯಲ್ಲಿ ನಾಮಪದಗಳು ಸೂಚಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಕಾರ್ಯವೆಂತಹದು ಎಂಬುದನ್ನು ತಿಳಿಸುತ್ತದೆ.
ಈ ಮೂರು ವಿಷಯಗಳಲ್ಲೂ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಲಿಂಗ ಮತ್ತು ವಚನಗಳ ಬಳಕೆಯನ್ನು ಈ ಅಧ್ಯಾಯದಲ್ಲೂ, ವಿಭಕ್ತಿಯ ಬಳಕೆಯನ್ನು ಮುಂದಿನ (ಎಂಟನೇ) ಅಧ್ಯಾಯದಲ್ಲೂ ವಿವರಿಸಲಾಗಿದೆ.
೭.೨ ವಿಭಜನೆಯಲ್ಲಿ ವ್ಯತ್ಯಾಸ
ನಾಮಪದಗಳನ್ನು ಎರಡು ಅಥವಾ ಹೆಚ್ಚು “ಲಿಂಗ’ಗಳಲ್ಲಿ ವಿಂಗಡಿಸಿ ಹೇಳುವ ಕ್ರಮ ಹಲವು ಭಾಷೆಗಳಲ್ಲಿ ಬಳಕೆಯಲ್ಲಿದೆ. ಅವುಗಳ ಅರ್ಥ, ಅವುಗಳೊಂದಿಗೆ ಬರಬಲ್ಲ ಇತರ ಪದಗಳ ಸ್ವರೂಪ, ಕ್ರಿಯಾಪದದಲ್ಲಿ ಕಾಣಿಸುವ ರೂಪವ್ಯತ್ಯಾಸಗಳು, ಮತ್ತು ನಾಮಪದಗಳ ಜಾಗದಲ್ಲಿ ಬರುವ ಸರ್ವನಾಮಗಳ ಸ್ವರೂಪ ಮೊದಲಾದವು ಇಂತಹ ವಿಭಜನೆಗೆ ಆಧಾರವಾಗುತ್ತವೆ.
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ನಾಮಪದಗಳ ವಿಭಜನೆಯಲ್ಲಿ ಹಲವು ಮುಖ್ಯ ವ್ಯತ್ಯಾಸಗಳಿವೆ. ಹಳೆಗನ್ನಡ ನಾಮಪದಗಳ ಲಿಂಗ ವಿಭಜನೆಗೆ ಅವುಗಳ ಅರ್ಥವೇ ಆಧಾರ; ಆದರೆ, ಸಂಸ್ಕೃತ ನಾಮಪದಗಳ ಲಿಂಗವಿಭಜನೆಗೆ ಅವುಗಳೊಂದಿಗೆ ಬರಬಲ್ಲ ಇತರ ನಾಮಪದಗಳ ಸ್ವರೂಪ ಅಧಾರವಲ್ಲದೆ ಅರ್ಥ ಆಧಾರವಲ್ಲ.
೭.೨.೧ ಹಳೆಗನ್ನಡದ ಲಿಂಗವಿಭಜನೆ
ಹಳೆಗನ್ನಡದಲ್ಲಿ ನಾಮಪದಗಳನ್ನು ಪುಲ್ಲಿ ೦ಗ, ಸ್ತ್ರ “ಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ವಿಭಜಿಸಲಾಗಿದೆ. ಈ ವಿಭಜನೆಗೆ ನಾಮಪದಗಳ ಅರ್ಥವೇ ಮುಖ್ಯ ಆಧಾರ. ಮನುಷ್ಯರನ್ನು ಸೂಚಿಸುವ ಪದಗಳಲ್ಲಿ ಗಂಡಸರನ್ನು ಸೂಚಿಸುವ ಪದಗಳು ಪುಲ್ಲಿ ೦ಗದಲ್ಲೂ ಕ ಹೆಂಗಸರನ್ನು ಸೂಚಿಸುವ ಪದಗಳು ಸ್ತ್ರೀಲಿಂಗದಲ್ಲೂ ಹಂಚಿಕೆಯಾಗುತ್ತವೆ. ಉಳಿದ (ಮನುಷ್ಯರನ್ನು ಸೂಚಿಸದ) ಪದಗಳೆಲ್ಲ ನಪುಂಸಕಲಿಂಗದಲ್ಲಿ ಉಳಿಯುತ್ತ ವೆ.
ಉದಾಹರಣೆಗಾಗಿ, ಗಂಡಸರನ್ನು ಸೂಚಿಸುವ ಅಣ್ಣನ್, ಅರಸನ್, ಆಳ್, ಮಗನ್, ಮೊದಲಾದವು ಪುಲ್ಲಿಂಗದಲ್ಲಿವೆ, ಹೆಂಗಸರನ್ನು ಸೂಚಿಸುವ ಅಕ್ಕನ್, ತಂಗೆ, ಅರಸಿ ಮೊದಲಾದವು ಸ್ತ್ರ ಲಿಂಗದಲ್ಲಿವೆ, ಮತ್ತು ಮನುಷ್ಯರಲ್ಲದ ಪ್ರಾಣಿ, ವಸ್ತು, ಸಂಗತಿ ಮೊದಲಾದುವನ್ನು ಸೂಚಿಸುವ ಎಟ್ಟು, ಮರನ್, ತೋಳ್ ಮೊದಲಾದವು ನಪುಂಸಕಲಿಂಗದಲ್ಲಿವೆ. ಈ ನಾಮಪದಗಳೊಂದಿಗೆ ಬರುವ ಕ್ರಿಯಾಪದಗಳ ಸ್ವರೂಪ ಮತ್ತು ಅವುಗಳ ಬದಲಿಗೆ ಬರುವ ಸರ್ವನಾಮಗಳ ಸ್ವರೂಪ ಈ ವಿಭಜನೆಯ ಮೇಲೆ ಅವಲಂಬಿಸಿರುತ್ತದೆ.
ಅಣ್ಣ ನ್ ಬಂದನ್ ಅವನ್… ಅಕ್ಕನ್ ಬಂದಳ್ ಅವಳ್… ಎಟ್ಟು ಬಂದುದು ಅದು…
ಅಣ್ಣನ್ ಪದ ಒಬ್ಬ ಗಂಡಸನ್ನು ಸೂಚಿಸುವ ಕಾರಣ ಪುಲ್ಲಿಂಗ, ಮತ್ತು ಈ ಕಾರಣಕ್ಕಾಗಿ, ಅದರೊಂದಿಗೆ ಬರುವ ಕ್ರಿಯಾಪದ ಅನ್ ಪ್ರತ್ಯಯದಲ್ಲಿ ಕೊನೆಗೊಳ್ಳುತ್ತ ದೆ. ಅಕ್ಕನ್ ಪದ ಒಬ್ಬ ಹೆಂಗಸನ್ನು ಸೂಚಿಸುವ ಕಾರಣ ಸ್ರಿ ಲಿಂಗ, ಮತ್ತು ಈ ಕಾರಣಕ್ಕಾಗಿ, ಅದರೊಂದಿಗೆ ಬರುವ ಕ್ರಿಯಾಪದ ಅಳ್ ಪ್ರತ್ಯಯದಲ್ಲಿ ಕೊನೆಗೊಳ್ಳುತ್ತದೆ. ಎಟ್ಟು ಎಂಬುದು ಒಂದು ಪ್ರಾಣಿಯನ್ನು (ಎತ್ತನ್ನು ಎಂದರೆ ಮನುಷ್ಯೇತರವನ್ನು) ಸೂಚಿಸುವ ಕಾರಣ ನಪುಂಸಕ ಲಿಂಗ, ಮತ್ತು ಈ ಕಾರಣಕ್ಕಾಗಿ, ಅದರೊಂದಿಗೆ ಬರುವ ಕ್ರಿಯಾಪದ ಉದು ಪ್ರತ್ಯಯದಲ್ಲಿ ಕೊನೆಗೊಳ್ಳುತ್ತದೆ.
ಇದೇ ರೀತಿಯಲ್ಲಿ, ಮೇಲೆ ಅಣ್ಣನ್ ಪದದ ಬದಲಿಗೆ ಅವನ್ ಸರ್ವನಾಮವೂ, ಅಕ್ಕನ್ ಪದದ ಬದಲಿಗೆ ಅವಳ್ ಸರ್ವನಾಮವೂ, ಮತ್ತು ಎಲ್ಲು ಪದದ ಬದಲಿಗೆ ಅದು ಸರ್ವನಾಮವೂ ಬಳಕೆಯಾಗುವುದಕ್ಕೆ ಅವುಗಳ ನಡುವೆ ಅರ್ಥದಲ್ಲಿ ಕಾಣಿಸುವ ವ್ಯತ್ಯಾಸವೇ ಮೂಲ ಕಾರಣ.
ಈ ರೀತಿ, ಹಳೆಗನ್ನಡದಲ್ಲಿ ಪುಲ್ಲಿಂಗ ಮತ್ತು ಸ್ತ್ರ ಲಿಂಗಗಳ ನಡುವಿರುವ ಲಿಂಗಭೇದ ಮನುಷ್ಯರನ್ನು ಸೂಚಿಸುವ ಪದಗಳಲ್ಲಿ ಮಾತ್ರ ಕಾಣಿಸುತ್ತದೆಯಲ್ಲದೆ ಇತರ ಪದಗಳಲ್ಲಿ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಎಟ್ಟು “ಎತ್ತು’ ಪದ ಗಂಡು ಪ್ರಾಣಿಯನ್ನು ಸೂಚಿಸುವುದಾದರೂ ಪುಲ್ಲಿಂಗದಲ್ಲಿರುವ ಬದಲು ನಪುಂಸಕಲಿಂಗದಲ್ಲಿದೆ (ಎಟ್ಟು ಬಂದುದು); ಪೆಣ್ಣುದುರೆ ಪದ ಹೆಣ್ಣು ಪ್ರಾಣಿಯನ್ನು ಸೂಚಿಸುವುದಾದರೂ ಸ್ತ್ರೀಲಿಂಗದಲ್ಲಿಲ್ಲ, ನಪುಂಸಕಲಿಂಗದಲ್ಲೇ. ಇದೆ (ಪೆಣ್ಣುದುರೆ ಬಂದುದು).
ಈ ಮೇಲಿನ ನಿಯಮಗಳಿಗೆ ಹಳೆಗನ್ನಡದ ಬರಹಗಳಲ್ಲಿ ಕೆಲವೇ ಕೆಲವು ಅಪವಾದಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಇಂತಹ ಅಪವಾದಗಳಿಗೆ ಕೆಲವು ಪದಗಳ ಬಳಕೆಯಲ್ಲಿ ಅವು ಸೂಚಿಸುವ ಪ್ರಾಣಿ ಇಲ್ಲವೇ ವಸ್ತುಗಳಿಗೆ ಮನುಷ್ಯತ್ವದ ಆರೋಪ ಇಲ್ಲವೇ ಮನುಷ್ಯರಿಗೆ ಪ್ರಾಣಿತ್ವದ ಆರೋಪವಾಗಿರುವುದೇ ಮುಖ್ಯ ಕಾರಣ.
ಉದಾಹರಣೆಗಾಗಿ, ರವಿ ಮೂಡಿದಂ ಎಂಬ ಬಳಕೆಯಲ್ಲಿ ರವಿ ಒಂದು ವಸ್ತು ವನ್ನು ಸೂಚಿಸುವುದಾದರೂ, ಅದಕ್ಕೆ ಮನುಷ್ಯತ್ವದ ಆರೋಪವಾಗಿರುವುದರಿಂದ ಪುಲ್ಲಿಂಗ; ತೊಳ್ತು ಬಂದುದು ಎಂಬ ಬಳಕೆಯಲ್ಲಿ ತೊಳ್ತು ಒಬ್ಬ ಹೆಂಗುಸನ್ನು (ಇಲ್ಲವೇ ಗಂಡುಸನ್ನು) ಸೂಚಿಸುವುದಾದರೂ, ತಿರಸ್ಕಾರದ ಅರ್ಥದಲ್ಲಿ ಪ್ರಾಣಿತ್ವದ ಆರೋಪವಾಗಿದೆಯಾದ ಕಾರಣ, ನಪುಂಸಕ ಲಿಂಗ.
೭.೨.೨ ಸಂಸ್ಕೃತದ ಲಿಂಗವಿಭಜನೆ
ಹಳೆಗನ್ನಡದ ಹಾಗೆ, ಸಂಸ್ಕೃತದಲ್ಲೂ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ವಿಭಜಿಸಲಾಗಿದೆ. ಆದರೆ, ಸಂಸ್ಕೃತದ ಈ ವಿಭಜನೆ ಹಳೆಗನ್ನಡದ ವಿಭಜನೆಗಿಂತ ತೀರ ಭಿನ್ನವಾದುದು. ಯಾಕೆಂದರೆ, ಅದಕ್ಕೆ ಹಳೆಗನ್ನಡದ ವಿಭಜನೆಯ ಹಾಗೆ, ನಾಮಪದಗಳ ಅರ್ಥವನ್ನು ಆಧಾರವಾಗಿ ಕೊಡಲು ಸಾಧ್ಯವಾಗುವುದಿಲ್ಲ. ನಾಮಪದಗಳೊಂದಿಗೆ ಬರಬಲ್ಲ ಬೇರೆ ನಾಮಪದಗಳ ಸ್ವರೂಪದಿಂದಲೇನೇ ಅವುಗಳ ಲಿಂಗವನ್ನು ನಿರ್ಧರಿಸಬೇಕಾಗುತ್ತದೆ.
ಉದಾಹರಣೆಗಾಗಿ, ವರ್ಣ “ಬಣ್ಣ ‘ ಪದ ಸಂಸ್ಕೃತದಲ್ಲಿ ಪುಲ್ಲಿಂಗದಲ್ಲಿದೆ, ನೌ “ದೋಣಿ’ ಪದ ಸ್ತ್ರ ೇಲಿಂಗದಲ್ಲಿದೆ ಮತ್ತು ವಾಸ “ಬಟ್ಟೆ’ ಪದ ನಪುಂಸಕ ಲಿಂಗದಲ್ಲಿದೆ. ಸಂಸ್ಕೃತ ಈ ಪದಗಳ ನಡುವೆ ಈ ರೀತಿ ಲಿಂಗಭೇದವಿದೆಯೆಂದು ಹೇಳಲು ಮೂರು ಲಿಂಗಗಳಲ್ಲೂ ಬರಬಲ್ಲ ಶುಕ್ಲ “ಬಿಳಿ’, ಗುರು “ಭಾರ’ ಮೊದಲಾದ ಬೇರೆ ಕೆಲವು ನಾಮಪದಗಳು ಇವುಗಳೊಂದಿಗೆ ಯಾವ ರೂಪದಲ್ಲಿ ಬರುತ್ತವೆ ಎಂಬುದು ಆಧಾರವಲ್ಲದೆ ಈ ಪದಗಳ ಅರ್ಥ ಇಲ್ಲವೇ ಸ್ವರೂಪ ಅಧಾರವಲ್ಲ.
(೧ಕ) ಶುಕ್ಷಃ ವರ್ಣಃ “ಬಿಳಿ ಬಣ್ಣ’ (೧ಖ) ಶುಕ್ಲಾ ನೌಃ “ಬಿಳಿ ದೋಣಿ’ (೧ಗ) ಶುಕ್ಲಂ ವಾಸಃ “ಬಿಳಿ ಬಟ್ಟೆ’
ಮೇಲೆ ಶುಕ್ಲ ಪದ ಶುಕ್ಲ; ಶುಕ್ಲಾ, ಮತ್ತು ಶುಕ್ಲಂ ಎಂಬ ಮೂರು ಲಿಂಗರೂಪಗಳಲ್ಲಿ ಬಂದಿದ್ದು, ಈ ಕಾರಣಕ್ಕಾಗಿ ಅದರೊಂದಿಗೆ ಬಂದಿರುವ ವರ್ಣ, ನೌ ಮತ್ತು ವಾಸ ನಾಮಪದಗಳು ಮೂರು “ಲಿಂಗ’ಗಳಲ್ಲಿ (ಅನುಕ್ರಮವಾಗಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಲ್ಲಿ) ಇವೆಯೆಂದು ಹೇಳಬೇಕಾಗಿದೆ.
ಇದಲ್ಲದೆ, ನಾಮಪದಗಳ ಲಿಂಗವನ್ನನುಸರಿಸಿ ಅವಕ್ಕೆ ಬೇರೆ ಬೇರೆ ರೀತಿಯ ವಿಭಕ್ತಿ- ವಚನರೂಪಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ತೃತೀಯಾ ಏಕವಚನದಲ್ಲಿ ಪುಲ್ಲಿಂಗದ ಅಗ್ನಿ ಪದಕ್ಕೆ ಅಗ್ನಿನಾ ರೂಪವಿದೆಯಾದರೆ, ಸ್ತ್ರೀ ಲಿಂಗದ ಮತಿ ಪದಕ್ಕೆ ಮತ್ಯಾ ರೂಪವಿದೆ; ಸಪ್ತಮಿ-ಏಕವಚನದಲ್ಲಿ ಪುಲ್ಲಿಂಗದ ಅಗ್ನಿ ಪದಕ್ಕೆ ಅಗ್ನೌ ರೂಪವಿದೆಯಾದರೆ, ನಪುಂಸಕ ಲಿಂಗದ ವಾರಿ ಪದಕ್ಕೆ ವಾರಿಣಿ ರೂಪವಿದೆ.
ಸಂಸ್ಕೃತದಲ್ಲಿ ಹಳೆಗನ್ನಡದ ಹಾಗೆ ನಾಮಪದಗಳ ಲಿಂಗಭೇದವನ್ನು ಕ್ರಿಯಾರೂಪಗಳಲ್ಲಿ ಸೂಚಿಸುವ ಕ್ರಮ ಇಲ್ಲ. ನಾಮಪದಗಳು ಬೇರೆ ಬೇರೆ ಲಿಂಗಗಳಲ್ಲಿ ಬಂದರೂ ಕ್ರಿಯಾಪದ
ಒಂದೇ ರೂಪದಲ್ಲಿರುತ್ತದೆ.
ಸಂಸ್ಕೃತ ಹಳೆಗನ್ನಡ
ತತ್ರ ರಾಮಃ ಅಸ್ತಿ ಅಲ್ಲಿ ರಾಮನ್ ಇರ್ಪನ್ ತತ್ರ ಸೀತಾ ಅಸ್ತಿ ಅಲ್ಲಿ ಸೀತೆ ಇರ್ಪಳ್ ತತ್ರ ಗೃಹಂ ಅಸ್ತಿ ಅಲ್ಲಿ ಮನೆ ಇರ್ಪುದು
ಮೇಲೆ ಕೊಟ್ಟಿರುವ ಉದಾಹರಣೆಯಲ್ಲಿ ಹಳೆಗನ್ನಡದ ಇರು ಕ್ರಿಯಾಪದ ನಾಮಪದದ ಲಿಂಗಭೇದವನ್ನನುಸರಿಸಿ, ಇರ್ಪನ್, ಇರ್ಪಳ್ ಮತ್ತು ಇರ್ಪುದು ಎಂಬ ಮೂರು ರೂಪಗಳಲ್ಲಿ ಬಂದಿದೆ; ಆದರೆ, ಸಂಸ್ಕೃತದ ಅಸ್ ಕ್ರಿಯಾಪದ ಈ ಮೂರು ಸಂದರ್ಭಗಳಲ್ಲೂ ಅಸ್ತಿ ಎಂಬ ಒಂದೇ ರೂಪದಲ್ಲಿ ಬಂದಿದೆ.
ಸರ್ವನಾಮಗಳು ಮಾತ್ರ ಸಂಸ್ಕೃತದಲ್ಲೂ ಲಿಂಗಭೇದವನ್ನು ಸೂಚಿಸುತ್ತವೆ (ಕೆಳಗೆ ಕೊಟ್ಟಿರುವ (೨ಕ) ನೋಡಿ). ಹಳೆಗನ್ನಡದ ಸರ್ವನಾಮಗಳಲ್ಲಿ ಪುಂ-ಸ್ತ್ರೀ ಲಿಂಗಭೇದ ಬಹುವಚನದಲ್ಲಿ ಇಲ್ಲವಾಗುತ್ತದೆ; ಆದರೆ, ಸಂಸ್ಕೃತದಲ್ಲಿ ದ್ವಿವಚನ-ಬಹುವಚನಗಳಲ್ಲೂ ಮೂರು ವಿಧದ ಲಿಂಗಭೇದ (ಕೆಲವು ಅಪವಾದಗಳನ್ನು ಬಿಟ್ಟರೆ) ಉಳಿದಿರುತ್ತದೆ.
(೨ಕ) ಸಂಸ್ಕೃತ:
ಏಕವಚನ ದ್ವಿವಚನ ಬಹುವಚನ “ಅವನು’ ಸಃ ತೌ ತೇ “ಅವಳು’ ಸಾ ತೇ ತಾಃ “ಅದು’ ತತ್ ತೇ ತಾನಿ (೨ಖ) ಹಳೆಗನ್ನಡ: ಏಕವಚನ ಬಹುವಚನ “ಅವನು’ ಅವನ್ ಅವರ್ “ಅವಳು’ ಅವಳ್ ಅವರ್ “ಅದು’ ಅದು ಅವು
ಹೆಚ್ಚಿ ನ ಸಂದರ್ಭಗಳಲ್ಲೂ, ಸಂಸ್ಕೃತದಲ್ಲಿ ನಾಮಪದವೊಂದರ ಲಿಂಗ ಯಾವುದೆಂಬುದನ್ನು ಅದರ ಅರ್ಥದ ಅಧಾರದ ಮೇಲೆ ಗುರುತಿಸಲು ಸಾಧ್ಯವಾಗದು. ಯಾಕೆಂದರೆ, ಒಂದೇ ಅರ್ಥವಿರುವ ಪದಗಳು ಬೇರೆ ಬೇರೆ ಲಿಂಗಗಳಲ್ಲಿ ಬರಬಲ್ಲುವು. ಉದಾಹರಣೆಗಾಗಿ, “ಹೆಂಡತಿ’ ಎಂಬ ಅರ್ಥವಿರುವ ಪದಗಳಲ್ಲಿ ದಾರ ಪದ ಪುಲ್ಲಿಂಗದಲ್ಲಿದೆ (ಈ ಪದ ಯಾವಾಗಲೂ ಬಹುವಚನ ರೂಪದಲ್ಲಿ (ದಾರಾಃ ಎಂಬುದಾಗಿ) ಬರುತ್ತದೆ), ಪತ್ನೀ ಪದ ಸ್ತ್ರ ಲಿಂಗದಲ್ಲಿದೆ, ಮತ್ತು ಕಲತ್ರ ಪದ ನಪುಂಸಕಲಿಂಗದಲ್ಲಿದೆ.
ಪದಗಳ ಕೊನೆಯ ವರ್ಣ ಯಾವುದೆಂಬುದರಿಂದಲೂ ಅವುಗಳ ಲಿಂಗ ಯಾವುದೆಂಬುದನ್ನು ನಿರ್ಧರಿಸಲು ಹೆಚ್ಚಿನೆಡೆಗಳಲ್ಲೂ ಸಾಧ್ಯವಾಗದು. ಈ, ಊ ಮತ್ತು ಆಗಳಲ್ಲಿ ಕೊನೆಗೊಳ್ಳುವ ಪದಗಳಲ್ಲಿ ಹೆಚ್ಚಿನವೂ ಸ್ರ ೇಲಿಂಗದಲ್ಲಿರುತ್ತವೆ, ಮತ್ತು ಅಕಾರದಲ್ಲಿ ಕೊನೆಗೊಳ್ಳುವ ಪದ “ಲಿಂಗವಾಗಲಾರದು ಎಂಬಂತಹ ಕೆಲವೇ ಕೆಲವು ನಿಯಮಗಳು ಮಾತ್ರ ಇದಕ್ಕೆ
(೬
ಅಪವಾದಗಳಾಗಬಲ್ಲುವು (ಆದರೆ, ಇಂತಹ ನಿಯಮಗಳಿಗೂ ಅಪವಾದಗಳಿವೆ. ಉದಾಹರಣೆಗಾಗಿ, ಸೇನಾನೀ ಪದ ಈಕಾರದಲ್ಲಿ ಕೊನೆಗೊಳ್ಳುವುದಾದರೂ ಪುಲ್ಲಿಂಗದಲ್ಲಿದೆ).
ಇಂತಹ ನಿಯಮಗಳಲ್ಲಿ ಕೆಲವಕ್ಕೆ ಸಂಸ್ಕೃತದ ಪದರಚನೆಯಲ್ಲಿ ವಿವರಣೆಯನ್ನು ಕಾಣಬಹುದು. ಉದಾಹರಣೆಗಾಗಿ, ಸಂಸ್ಕೃತದ ಹಲವು ನಾಮಪದಗಳಿಗೆ ಈ ಇಲ್ಲವೇ ಆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವುಗಳ ಸ್ತ್ರೀಲಿಂಗ ರೂಪವನ್ನು ಸಾಧಿಸಲು ಸಾಧ್ಯವಿದೆ (ಬಾಲ-ಬಾಲಾ, ಶಿವ-ಶಿವಾ, ದೇವ-ದೇವೀ, ಇತ್ಯಾದಿ).
ನಿರ್ಜೀವಿಗಳಾದ ವಸ್ತು, ವಿಷಯ ಮೊದಲಾದವುಗಳನ್ನು ಸೂಚಿಸುವ ಪದಗಳಲ್ಲೂ ಸಂಸ್ಕೃತದಲ್ಲಿ ಲಿಂಗಭೇದ ಕಾಣಿಸುತ್ತದೆ. ಉದಾಹರಣೆಗಾಗಿ, ಪವನ, ಪಾದ, ವಾಯು ಮೊದಲಾದ ಪದಗಳು ಪುಲ್ಲಿಂಗದಲ್ಲಿವೆ, ನೌ, ನದೀ, ವಿಭಕ್ತಿ, ಮತಿ, ಮೊದಲಾದ ಪದಗಳು ಸ್ತ್ರ ೇಲಿಂಗದಲ್ಲಿವೆ, ಮತ್ತು ಹೃದಯ, ಮಧು, ಜಗತ್ ಮೊದಲಾದ ಪದಗಳು ನಪುಂಸಕಲಿಂಗದಲ್ಲಿವೆ.
ಈ ರೀತಿ, ಹೆಚ್ಚಿನ ಸಂದರ್ಭಗಳಲ್ಲೂ ಸಂಸ್ಕೃತ ಪದಗಳ ಲಿಂಗ ಯಾವುದೆಂಬುದನ್ನು ಅವುಗಳ ಅರ್ಥದಿಂದ ಇಲ್ಲವೇ ಸ್ವರೂಪದಿಂದ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಆ ಭಾಷೆಯ ಅರ್ಥಕೋಶಗಳಲ್ಲಿ ಪ್ರತಿಯೊಂದು ನಾಮಪದದ ಮುಂದೆಯೂ ಅದರ ಲಿಂಗ ಯಾವುದೆಂಬುದನ್ನು ಸೂಚಿಸುವ ಅವಶ್ಯಕತೆಯಿದೆ.
ಇದಲ್ಲದೆ, ಸಂಸ್ಕೃತದ ನಾಮಪದಗಳನ್ನು (ಕ) ಯಾವಾಗಲೂ ಒಂದೇ ಲಿಂಗದಲ್ಲಿ ಬರಬಲ್ಲ ನಾಮಪದಗಳು ಮತ್ತು (ಖ) ಸಂದರ್ಭಕ್ಕನುಸಾರವಾಗಿ ಎರಡು ಇಲ್ಲವೇ ಮೂರು ಲಿಂಗಗಳಲ್ಲೊಂದನ್ನು ಆರಿಸಿಕೊಳ್ಳಬಲ್ಲ ನಾಮಪದಗಳು ಎಂಬುದಾಗಿಯೂ ವಿಂಗಡಿಸುವ ಅವಶ್ಯಕತೆಯಿದೆ. ಇಲ್ಲೂ ಪದಗಳ ಅರ್ಥಕ್ಕಿಂತಲೂ, ಅವುಗಳೊಂದಿಗೆ ಬರುವ ಇತರ ಪದಗಳ ಲಿಂಗವೇ ಆಧಾರವಾಗಿರುತ್ತದೆ.
ಹಾಗಾಗಿ, ಸಂಸ್ಕೃತದ ಅರ್ಥಕೋಶಗಳಲ್ಲಿ ನಾಮಪದವೊಂದು ಒಂದೇ ಲಿಂಗದಲ್ಲಿ ಬರುವಂತಹದೋ, ಇಲ್ಲವೇ ಎರಡು ಅಥವಾ ಮೂರು ಲಿಂಗಗಳಲ್ಲಿ ಬರುವಂತಹದೋ ಎಂಬುದನ್ನೂ ಸ್ಪಷ್ಟವಾಗಿ ಸೂಚಿಸುವ ಅವಶ್ಯಕತೆಯಿದೆ, ಮತ್ತು ಅರ್ಥಕೋಶಗಳಲ್ಲಿ ಹಾಗೆ ಸೂಚಿಸಲಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ನಾಮಪದಗಳನ್ನು ಗಮನಿಸಬಹುದು:
(ಕ) ಯಾವಾಗಲೂ ಒಂದೇ ಲಿಂಗದಲ್ಲಿ ಬರುವ ಪದಗಳು
(೩ಕ) ಪುಲ್ಲಿಂಗ: ಪಿತೃ, ತಿಲಕ, ಧೀ, ತಡಿ “ಏಟು’, ಚೋಲ “ರವಿಕೆ’, ತರ್ಕ, ತಿಮಿಂಗಿಲ, ತಿರಸ್ಕಾರ, ಆತ್ಮನ್, ನಿಧಿ, ಇತ್ಯಾದಿ.
(೩ಖ) ಸ್ತ್ರೀಲಿಂಗ: ಮಾತೃ, ನದೀ, ನೌ, ಶ್ರೀ, ಲಿಪಿ, ನಿದ್ರಾ, ಮಹಾನವಮೀ, ಚರ್ಚಾ, ಅ ಕಾದಂಬರೀ, ಇತ್ಯಾದಿ.
(೩ಗ) ನಪುಂಸಕಲಿಂಗ: ಹೃದಯ, ಚಿತ್ರ, ತಾಂಬೂಲ, ಮಧು, ಅಸ್ಮಿ, ಯಕೃತ್, ಬ್ರಹ್ಮನ್, ಇತ್ಯಾದಿ.
(ಖ) ಎರಡು ಅಥವಾ ಮೂರು ಲಿಂಗಗಳಲ್ಲಿ ಬರಬಲ್ಲ ಪದಗಳು
(೪ಕ) ಪುಂ-ಸ್ತ್ರೀ: ತಿಥಿ, ವಜ್ರ, ಕೀಲ “ಕೀಲು’, ಕುಟ “ಮನೆ’, ಇತ್ಯಾದಿ.
(೪ಖ) ಪುಂ-ನಪುಂಸಕ: ಕರ್ತೃ, ತಂಡುಲ, ಮೋದಕ, ಮೂಲ, ಕಷಾಯ, ಕಿರೀಟ, ಕುಟುಂಬ, ಅಭ್ರಕ, ಇತ್ಯಾದಿ.
ಶಿ
(೪ಗ) ಸ್ಮೀ-ನಪುಂಸಕ: ಔಚಿ pa ಶಾಲ(ಲಾ), ನೃಸೇನ(ನಾ), ಇತ್ಯಾದಿ. (೪ಘ) ಪುಂ-ಸ್ತ್ರೀ-ನಪುಂಸಕ: ಶುಚಿ, ಗುರು, ನಿತ್ಯ, ನಿದ್ರಿತ, ಪ್ರಕಾಶಕ, ಪ iP: ಯ,
ಹಳೆಗನ್ನಡದಲ್ಲಿ ನಾಮಪದಗಳ ಲಿಂಗಭೇದ ಹೆಚ್ಚಿ ನೆಡೆಗಳಲ್ಲೂ ಅವುಗಳ ಅರ್ಥದ ಮೇಲೆ ಅವಲಂಬಿಸಿದೆಯಾದ ಕಾರಣ, ಆ ಭಾಷೆಯ ಅರ್ಥಕೋಶಗಳಲ್ಲಿ ನಾಮಪದಗಳ ಲಿಂಗವನ್ನು ಸೂಚಿಸುವ ಅವಶ್ಯಕತೆಯಿಲ್ಲ. ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳೂ ಈ ನಿಯಮಕ್ಕೆ ಒಳಪಡುವ Ke ಅವುಗಳ ಲಿಂಗವನ್ನೂ ಹಳೆಗನ್ನಡದ ಅರ್ಥಕೋಶಗಳಲ್ಲಿ ತಿಳಿಸಬೇಕಾಗಿಲ್ಲ. ಹಳೆಗನ್ನಡ ಮತ್ತು ಸಂಸ್ಕೃತಗಳಲ್ಲಿ ಬಳಕೆಯಾಗುವ ಲಿಂಗಭೇದಗಳು ಈ ರೀತಿ ಎರಡು ತೀರ ಭಿನ್ನವಾದ ವ್ಯಾಕರಣ ತತ್ವಗಳನ್ನು ಅವಲಂಬಿಸಿವೆ. ಲಿಂಗಭೇದವನ್ನು ಸೂಚಿಸುವಲ್ಲಿ ಹಳೆಗನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವನ್ನು ಕೆಳಗೆ ೭.೩.೧ರಲ್ಲಿ ವಿವರಿಸಲಾಗಿದೆ: ಸಂಸ್ಕೃತದಲ್ಲಿ ಪುಂ-ಸ್ತ್ರೀ- ನಪುಂಸಕ ಲಿಂಗಭೇದ ಎಲ್ಲಾ ವಚನಗಳಲ್ಲೂ ಕಾಣಿಸಿಕೊಳ್ಳುತ್ತ ದೆ; ಆದರೆ, ಹಳೆಗನ್ನ ಡದಲ್ಲಿ ಇದು ಏಕವಚನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೆ ಚ ಬಹುವಚನದಲ್ಲಿ ಪ ಪುಂ-ಸ್ತ್ರಿ ಟೆ ಅಳಿದು ಹೋಗಿ, ಮನುಷ್ಯ-ಮನುಷ್ಯೇತರ ಭೇದ ಮಾತ್ರ ಉಳಿದುಕೊಳ್ಳುತ್ತ ದೆ.
ಪ೫ ೩ ಹಳೆಗನ್ನಡ ವೈಯಾಕರಣಿಗಳ ಸಮಸ್ಯೆಗಳು
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳು ಈ ರೀತಿ ಲಿಂಗಭೇದವನ್ನು ತೋರಿಸುವಲ್ಲಿ ತೀರ ಭಿನ್ನವಾದ ವ್ಯಾಕರಣ ತತ್ವಗಳನ್ನು ಬಳಸಿರುವ ಕಾರಣ, ಸಂಸ್ಕೃತದ ವೈಯಾಕರಣಿಗಳು ಆ ಭಾಷೆಯ ಲಿಂಗ ವ್ಯವಸ್ಥೆ ಯಕುರಿತು ಹೇಳಿರುವುದನ್ನು ಹಾಗೆಯೇ ಹಳೆಗನ್ನಡಕ್ಕೂ ಅಳವಡಿಸಿಕೊಳ್ಳಲು ಸಾಧ್ಯವಾಗದು. ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಹೀಗೆ ಮಾಡಲು ಹೋಗಿ, ಅನವಶ್ಯಕವಾಗಿ ಹಳೆಗನ್ನಡದ ಲಿಂಗಭೇದ ಬಹಳ ಕ್ಲಿಷ್ಟವಾದುದೆಂದು ಅನಿಸುವ ಹಾಗೆ ಮಾಡಿದ್ದಾ ರೆ.
ಉದಾಹರಣೆಗಾಗಿ, ಕೇಶಿರಾಜನು ಹಳೆಗನ್ನಡದಲ್ಲಿ ಒಂಬತ್ತು ರೀತಿಯ ಲಿಂಗಗಳಿವೆಯೆಂದು ಹೇಳುತ್ತಾನೆ (ಸೂ. ೯೮). ನಿಜಕ್ಕೂ ಮೂರಿರುವುದು ಒಂಬತ್ತು ಹೇಗಾಗುತ್ತದೆ? ಇದಕ್ಕಾಗಿ ಆತ ಹಳೆಗನ್ನಡ ಪದಗಳ ಬಳಕೆಯಲ್ಲಿ ಕಾಣಿಸುವ ಹಲವು ಗುಣಧರ್ಮಗಳನ್ನು ಒಟ್ಟು ಸೇರಿಸಲು ಪ್ರಯತ್ನಿಸಿ ದೊಡ್ಡದೊಂದು ಕಲಸುಮೇಲೋಗರವನ್ನೇ ಮಾಡಿಹಾಕಿದ್ದಾನೆ.
(೧) ಕೆಲವು ಮನುಷ್ಯೇತರ ಪದಗಳಿಗೆ ಮನುಷ್ಯತ್ವವನ್ನು ಆರೋಪಿಸಲು ಸಾಧ್ಯವಿದ್ದು, ಅವು ನಪುಂಸಕ ಲಿಂಗದಲ್ಲಿ ಬಳಕೆಯಾಗುವ ಬದಲು ಪುಲ್ಲಿಂಗದಲ್ಲಿ ಬಳಕೆಯಾಗಬಲ್ಲುವು (ರವಿ ಮೂಡಿದಂ, ರವಿ ಮೂಡಿದುದು; ಕಾಮನೆಚ್ಚಂ, ಕಾಮಂ ಪೆರ್ಚಿದುದು). ಇವನ್ನು “ಪುಂನಪುಂಸಕ’ಗಳೆಂದು ಕರೆಯಲಾಗಿದೆ. ಇದೇ ರೀತಿಯಲ್ಲಿ, ಸಿರಿ ಪದ ಸ್ತ್ರೀಲಿಂಗ ಮತ್ತು ನಪುಂಸಕಲಿಂಗಗಳೆರಡರಲ್ಲೂ ಬಳಕೆಯಾಗಲು ಸಾಧ್ಯವಿದ್ದು (ಸಿರಿಯೊಲ್ವಳೆ, ಸಿರಿಯೊಂದಾಗದೊಡಂ) “ಸ್ತ್ರೀ ನಪುಂಸಕ’ಕ್ಕೆ ಉದಾಹರಣೆಯಾಗಬಲ್ಲುದು.
(೨) ಕೆಲವು ಹೆಂಗಸರನ್ನು ಸೂಚಿಸುವ ಪದಗಳಿಗೆ ವಸ್ತುತ್ವ ಇಲ್ಲವೇ ಪ್ರಾಣಿತ್ವವನ್ನು ಆರೋಪಿಸಲು ಸಾಧ್ಯವಿದ್ದು, ಅವು ನಪುಂಸಕ ಲಿಂಗದಲ್ಲಿ ಬಳಕೆಯಾಗಬಲ್ಲುವಾಗಿದ್ದು,
ಪುಂಸಕಲಿಂಗಕ್ಕೆ ಉದಾಹರಣೆಗಳಾಗುತ್ತವೆ (ಆ ಪೆಣ್ ಜಾಣೆ, ಆ ಪೆಣ್ ಬಂದುದು).
ಇಂತಹ ಪದಗಳು ಗಂಡಸನ್ನಾಗಲಿ ಇಲ್ಲವೇ ಹೆಂಗಸನ್ನಾಗಲಿ ಸೂಚಿಸುವಂತಹವಾದರೆ, ತ್ರಿಲಿಂಗಕ್ಕೆ ಉದಾಹರಣೆಗಳಾಗಬಲ್ಲುವು (ಶಿಶು, ಕೂಸು, ಪಗೆ). ಪುಂನಪುಂಸಕಕ್ಕೂ ಇಂತಹ ಉದಾಹರಣೆಗಳಿರಲು ಸಾಧ್ಯವಿದೆ.
(೩) ಕೆಲವು ಪದಗಳು ಸಂದರ್ಭಕ್ಕನುಸಾರವಾಗಿ (ಯಾವ ಪ್ರತ್ಯಯವನ್ನೂ ಸೇರಿಸದೆ), ಗಂಡಸನ್ನಾಗಲಿ ಇಲ್ಲವೇ ಹೆಂಗಸನ್ನಾಗಲಿ ಸೂಚಿಸಬಲ್ಲುವು (ಇವಂ ದೇವರ ತೊಟ್ಟು, ಇದು ದೇವರ ತೊಲ್ಲು). ಇವು ಪುಂಸ್ತಿ ಲಿಂಗಕ್ಕೆ ಉದಾಹರಣೆಗಳಾಗುತ್ತವೆ.
(೪) ಇವರ್, ಅವರ್ ಮತ್ತು ಉವರ್ ಸರ್ವನಾಮಗಳು ಬಹುವಚನದಲ್ಲಿದ್ದು ಪುಂ- ಸ್ತ್ರೀ ಲಿಂಗಭೇದವನ್ನು ಸೂಚಿಸುವುದಿಲ್ಲ. ಈ ಕಾರಣಕ್ಕಾಗಿ, ಇವನ್ನು ಪುಂಸ್ಟ್ರೀಲಿಂಗಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.
(೫) ಲಿಂಗಭೇದವನ್ನೇ ತೋರಿಸದಿರುವ ಆನ್, ನೀನ್ ಮತ್ತು ತಾನ್ ಸರ್ವನಾಮಗಳನ್ನು ತ್ರಿಲಿಂಗಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.
(೬) ವಾಚ್ಯಲಿಂಗ ಇಲ್ಲವೇ ವಿಶೇಷ್ಯಾಧೀನಲಿಂಗಕ್ಕೆ ಕೊಟ್ಟಿರುವ ಉದಾಹರಣೆಗಳಲ್ಲಿ ಎರಡು ರೀತಿಯ ಪದಗಳನ್ನು, ಕೆಳಗೆ ವಿವರಿಸಿದ ಹಾಗೆ, ಒಟ್ಟಿಗೆ ಸೇರಿಸಿ ಹೇಳಲಾಗಿದೆ:
(ಕ) ನೇರಿದನ್, ನೇರಿದಳ್, ನೇರಿತು, ಅವನ್, ಅವಳ್, ಇನಿಯಂ, ಇನಿಯಳ್ ಮೊದಲಾದವುಗಳು ಅವುಗಳಲ್ಲಿ ಬರುವ ಲಿಂಗಸೂಚಕ ಪ್ರತ್ಯಯಗಳ ಮೂಲಕ ಸ್ಪಷ್ಟವಾಗಿ ಅವುಗಳ ಲಿಂಗವೇನೆಂಬುದನ್ನು ಸೂಚಿಸುತ್ತವೆ.
(ಖ) ಆನ್, ನೀನ್ ಮೊದಲಾದ ಸರ್ವನಾಮಗಳು, ಕೆಲವು ಬಹುವ್ರೀಹಿ ಪದಗಳು (ವಿಮಲಮತಿ), ಕೆಲವು ತದ್ದಿತ ಪದಗಳು (ಓದಾಳಿ) ಮತ್ತು ಸಂಖ್ಯೆಗಳು (ಸಾಸಿರ) ಈ ರೀತಿ ಪ್ರತ್ಯಯಗಳ ಮೂಲಕ ಲಿಂಗಭೇದವನ್ನು ಸೂಚಿಸುವುದಿಲ್ಲ. (ಈ ಎರಡು ರೀತಿಯ ನಾಮಪದಗಳನ್ನೂ ವಿಶೇಷ್ಯಾಧೀನ ಲಿಂಗಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.)
(೭) ಭೋಕನೆ, ಚೆಚ್ಚರಂ, ಮಿಗೆ, ಮತ್ತೆ ಮೊದಲಾದುವನ್ನು ಅವ್ಯಯ ಲಿಂಗಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.
ಕೇಶಿರಾಜನು ಇಲ್ಲಿ ಹಲವು ತಪ್ಪುಗಳನ್ನು ಮಾಡಿದ್ದಾನೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಸೂಚಿಸಲಾಗಿದೆ.
(೧) ಪುಲ್ಲಿಂಗದ ಕಾಮಂ ಪದ ನಪುಂಸಕಲಿಂಗದ ಕಾಮಂ ಪದದ ಹಾಗೆಯೇ ಕಾಣಿಸುವುದರಿಂದ, ಕಾಮಂ ಪದವನ್ನು ಪುಂನಪುಂಸಕ ಪದವೆಂದು ಕರೆದಿದ್ದಾನೆ; ಆದರೆ, ನಿಜಕ್ಕೂ ಅವುಗಳಲ್ಲಿ ಮೊದಲನೆಯದು ನಕಾರದಲ್ಲಿ ಕೊನೆಗೊಳ್ಳುತ್ತ ದೆ, ಮತ್ತು ಎರಡನೆಯದು ಮಕಾರದಲ್ಲಿ ಕೊನೆಗೊಳ್ಳುತ್ತವೆ; ಕೇಶಿರಾಜನೇ ಕೊಟ್ಟಿರುವ ಇವುಗಳ ಚತುರ್ಥೀ ರೂಪಗಳು (ಕಾಮಂಗೆ, ಕಾಮಕ್ಕೆ) ಇದನ್ನು ಸ್ಪಷ್ಟಪಡಿಸುತ್ತವೆ.
(೨) ಅವರ್, ಇವರ್, ಉವರ್ ಎಂಬ ಸರ್ವನಾಮಗಳ ಬಹುವಚನ ರೂಪಗಳನ್ನು ಪುಂಸ್ಟ್ರೀಲಿಂಗಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ. ಹಾಗಿದ್ದರೆ, ಬಹುವಚನ ರೂಪಗಳು ಏಕವಚನ ರೂಪಕ್ಕಿಂತ ಭಿನ್ನವಾದ ಲಿಂಗ (ನಾಮಪ್ರಕೃತಿ)ಗಳೇ? ಈ ಸರ್ವನಾಮಗಳು ಮಾತ್ರವಲ್ಲದೆ,
ಗುಣವಚನ (ಇನಿಯರ್), ಬಹುವ್ರೀಹಿ (ಕುಸಿಕೊರಲರ್), ಕೃದಂತ (ಪಾಡಿದರ್) ಮೊದಲಾದವುಗಳೂ ಈ ರೀತಿ ಬಹುವಚನದಲ್ಲಿ ಪುಂಸ್ಚಿ € ಭೇದವನ್ನು ಕಳೆದುಕೊಳ್ಳುವುವಾದ ಕಾರಣ, ಅವುಗಳ ಬಹುವಚನ ರೂಪಗಳೂ ಏಕವಚನ ರೂಪಕ್ಕಿಂತ ಭಿನ್ನವಾದ ಲಿಂಗ (ನಾಮಪ್ರಕೃತಿ)ಗಳೆಂದು ಹೇಳಬೇಕೇ? (೬.೨.೨.(೬) ನೋಡಿ).
ಆದರೆ, ಪುಂಸ್ಟ್ರೀ ಲಿಂಗಭೇದವನ್ನು ಉಳಿಸಿಕೊಳ್ಳುವ ಪುರುಷರ್, ಸ್ತ್ರೀಯರ್, ಪೆಂಡಿರ್ ಮೊದಲಾದುವನ್ನು ಈ ರೀತಿ ಏಕವಚನರೂಪಕ್ಕಿಂತ ಭಿನ್ನವಾದ ಲಿಂಗಗಳೆಂದು ಪರಿಗಣಿಸಿದ ಹಾಗಿಲ್ಲ. ದೇವತೆ ಪದ ಸ್ತ್ರ € ಲಿಂಗದಲ್ಲಿ ಬರಬಲ್ಲುದೆಂಬುದನ್ನು ಸೂಚಿಸಲು ದೇವತೆಯರ್ ಎಂಬ ಬಹುವಚನ ರೂಪವನ್ನೂ, ನಪುಂಸಕ ಲಿಂಗದಲ್ಲಿ ಬರಬಲ್ಲುದೆಂಬುದನ್ನು ಸೂಚಿಸಲು ದೇವತೆಗಳ್ ಎಂಬ ಬಹುವಚನ ರೂಪವನ್ನೂ ಉದಾಹರಣೆಗಳನ್ನಾಗಿ ಕೊಡಲಾಗಿದೆ.
(೩) ಸರ್ವನಾಮಗಳಾದ ಆನ್, ನೀನ್, ತಾನ್ ಎಂಬವನ್ನು ತ್ರಿಲಿಂಗಕ್ಕೂ ಉದಾಹರಣೆಗಳನ್ನಾಗಿ ಕೊಡಲಾಗಿದೆ, ಮತ್ತು ವಾಚ್ಯ (ವಿಶೇಷ್ಯಾಧೀನ)ಲಿಂಗಕ್ಕೂ ಉದಾಹರಣೆಗಳನ್ನಾಗಿ ಕೊಡಲಾಗಿದೆ. ಇಲ್ಲಿ ವಾಚ್ಯಲಿಂಗಕ್ಕೂ ತ್ರಿಲಿಂಗಕ್ಕೂ ಏನು ವ್ಯತ್ಯಾಸ ಎಂಬುದು ಸ್ಪಷ್ಟವಾಗಿಲ್ಲ.
(೪) ಹಳೆಗನ್ನಡದ ಮಟ್ಟಿಗೆ ವಾಚ್ಯಲಿಂಗ ಮತ್ತು ವಿಶೇಷ್ಯಾಧೀನಲಿಂಗ ಎಂಬವುಗಳು ಬೇರೆ ಬೇರೆ ಎಂದು ಹೇಳಿ ಮೇಲೆ (೬ಕ-ಖ)ಗಳ ನಡುವೆ ಕಾಣಿಸುವ ವ್ಯತ್ಯಾಸವನ್ನು ಈ ವ್ಯತ್ಯಾಸವೆಂದು ಪರಿಗಣಿಸಬಹುದಾಗಿತ್ತು. ಆದರೆ, ಸಂಸ್ಕೃತದಲ್ಲಿ ಇಂತಹ ವ್ಯತ್ಯಾಸವಿಲ್ಲ ಎಂಬುದೇ ಹೀಗೆ ಮಾಡದಿರಲು ಕಾರಣವಿರಬೇಕು.
(೫) ಮೇಲೆ (೭.೨.೨)ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ನಾಮಪದಗಳ ಲಿಂಗವೇನೆಂಬುದು ಹೆಚ್ಚಿ ನೆಡೆಗಳಲ್ಲೂ ಅವುಗಳ ಅರ್ಥದ ಮೇಲೆ ಅವಲಂಬಿಸಿಲ್ಲವಾದ ಕಾರಣ, ಅವನ್ನು ಮೂರಕ್ಕಿಂತ ಜಾಸ್ತಿ ಲಿಂಗಗಳಲ್ಲಿ ವಿಭಜಿಸುವ ಅವಶ್ಯಕತೆಯಿದೆ. ಪುಂಸ್ತಿ ೇ, ಪುಂನಪುಂಸಕ, ಸ್ತ್ರ ನಪುಂಸಕ, ತ್ರಿಲಿಂಗ ಮೊದಲಾದ ಕಲ್ಪನೆಗಳು ಸಂಸ್ಕೃತ ಪದಗಳ ಲಿಂಗವನ್ನು ವಿವರಿಸುವಲ್ಲಿ ಸಹಾಯಕವಾಗಬಲ್ಲುವು. ಆದರೆ, ಕನ್ನಡದಲ್ಲಿ ಲಿಂಗಭೇದ ಪದಗಳ ಅರ್ಥವನ್ನವಲಂಬಿಸಿದೆಯಾದ ಕಾರಣ, ಇಂತಹ ಕಲ್ಪನೆಗಳ ಅವಶ್ಯಕತೆ ಕನ್ನಡಕ್ಕಿಲ್ಲ.
ಬಹುಶಃ ಇದನ್ನು ಗಮನಿಸಿಯೇ ಕೇಶಿರಾಜನು ತನ್ನ ದೀರ್ಫವಾದ ಲಿಂಗವಿವಕ್ಷೆಯ ಕೊನೆಯಲ್ಲಿ (ಸೂ. ೧೦೧) ಪುಲ್ಲಿಂಗ, ಸ್ತ್ರ “ಲಿಂಗ ಮತ್ತು ನಪುಂಸಕ ಲಿಂಗಗಳೆಂಬ ಮೂರನ್ನು ಬಿಟ್ಟು ಉಳಿದ ಆರು ಲಿಂಗಗಳು ಕನ್ನಡದಲ್ಲಿದ್ದರೂ “ಪರಿವರ್ತಿಸುವುದಿಲ್ಲ’ ಎಂದು ಹೇಳಿದ್ದಾನೆ!
೭.೩ ವಚನದ ಸೂಚನೆ
ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸುವುದಕ್ಕಾಗಿ ಅವುಗಳೊಂದಿಗೆ “ವಚನ’ಪ್ರತ್ಯಯವನ್ನು ಸೇರಿಸಲಾಗುತ್ತದೆ. ಉದಾಹರಣೆಗಾಗಿ, ಪುಲ್ಲೆ ಪದ ಒಂದು ಪ್ರಾಣಿ(ಜಿಂಕೆ)ಯನ್ನು ಸೂಚಿಸುತ್ತದೆ, ಮತ್ತು ಆ ಪದಕ್ಕೆ ಗಳ್ ವಚನ ಪ್ರತ್ಯಯವನ್ನು ಸೇರಿಸಿ ರಚಿಸಿರುವ ಪುಲ್ಲೆಗಳ್ ಪದರೂಪ ಒಂದಕ್ಕಿಂತ ಜಾಸ್ತಿ ಪ್ರಾಣಿ(ಜಿಂಕೆ)ಗಳನ್ನು ಸೂಚಿಸುತ್ತದೆ.
ವಚನ ಪ್ರತ್ಯಯ ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಬಹಳ ಚುಟುಕಾಗಿ ಸೂಚಿಸುತ್ತದೆ; ಅದನ್ನೇ ಹೆಚ್ಚು ವಿವರವಾಗಿ ತಿಳಿಸಬೇಕಿದ್ದಲ್ಲಿ, ನಾಮಪದಗಳೊಂದಿಗೆ
ಎಣಿಕೆಯ ಪದಗಳನ್ನು ಬಳಸಬಹುದು. ಉದಾಹರಣೆಗಾಗಿ, ಹಳೆಗನ್ನಡದ ಪುಲ್ಲೆಗಳ್ ಪದರೂಪದಲ್ಲಿ ಬಂದಿರುವ ಗಳ್ ಪ್ರತ್ಯಯ “ಒಂದಕ್ಕಿಂತ ಜಾಸ್ತಿ (ಜಿಂಕೆಗಳು) ಎಂದಿಷ್ಟೇ ಸೂಚಿಸುತ್ತದೆ. ಇದಕ್ಕಿಂತ ಹೆಚ್ಚಿನ ವಿವರ ಬೇಕಿದ್ದಲ್ಲಿ, ಎರಡು ಪುಲ್ಲೆಗಳ್, ಅಯ್ದು ಪುಲ್ಲೆಗಳ್ ಎಂಬಂತಹ ಪದಕಂತೆಗಳನ್ನು ಬಳಸಬೇಕಾಗುತ್ತದೆ.
೭.೩.೧ ವ್ಯತ್ಯಾಸಗಳು
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಚನ ಪ್ರತ್ಯಯಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸುವಲ್ಲಿ ಕಾಣಿಸುವ ಮುಖ್ಯವಾದ ಕೆಲವು ವ್ಯತ್ಯಾಸಗಳನ್ನು ಕೆಳಗೆ ಕೊಡಲಾಗಿದೆ. (೧) ಹಳೆಗನ್ನಡದಲ್ಲಿ ಒಂದು ಮತ್ತು ಒಂದಕ್ಕಿಂತ ಹೆಚ್ಚು ಎಂಬುದಾಗಿ ಏಕವಚನ- ಬಹುವಚನ ಭೇದ ಮಾತ್ರ ಕಾಣಿಸುತ್ತದೆಯಾದರೆ, ಸಂಸ್ಕೃತದಲ್ಲಿ ಒಂದು, ಎರಡು ಮತ್ತು ಎರಡಕ್ಕಿಂತ ಹೆಚ್ಚು ಎಂಬುದಾಗಿ ಏಕವಚನ-ದ್ವಿವಚನ-ಬಹುವಚನ ಭೇದ ಕಾಣಿಸುತ್ತದೆ.
ಹಳೆಗನ್ನಡದ ವಚನ ರೂಪಗಳು (೫5) ಒಂದು ಪುಲ್ಲೆ “ಒಂದು ಜಿಂಕೆ’ (೫ಖ) ಎರಡು ಪುಲ್ಲೆಗಳ್ ಎರಡು ಜಿಂಕೆಗಳು’ (೫ಗ) ಮೂಜು ಪುಲ್ಲೆಗಳ್ “ಮೂರು ಜಿಂಕೆಗಳು’
ಸಂಸ್ಕೃತದ ವಚನ ರೂಪಗಳು
(೬ಕ) ಏಕಃ ಪುಸ್ತಕಃ “ಒಂದು ಪುಸ್ತಕ’ (೬ಖ) ದ್ವೌ ಪುಸ್ತಕೌ “ಎರಡು ಪುಸ್ತಕಗಳು’ (೬ಗ) ತ್ರಯಃ ಪುಸ್ತಕಾಃ “ಮೂರು ಪುಸ್ತಕಗಳು’
ಹಳೆಗನ್ನಡದ (೫ಗ)ದಲ್ಲಿ ಮಾತ್ರವಲ್ಲದೆ (೫ಖ)ದಲ್ಲೂ ಪುಲ್ಲೆಗಳ್ ಎಂಬ ಬಹುವಚನ ರೂಪವೇ ಬಂದಿದೆ; ಆದರೆ, ಸಂಸ್ಕೃತದ (೬ಖ)ದಲ್ಲಿ ದ್ವಿವಚನದ ಪುಸ್ತಕೌ ರೂಪವೂ, (೬ಗ)ದಲ್ಲಿ ಬಹುವಚನದ ಪುಸ್ತಕಾಃ ರೂಪವೂ ಬಂದಿವೆ. ಹಳೆಗನ್ನಡದ ನಾಮಪದಗಳಿಗೆ, ಸಂಸ್ಕೃತದ ನಾಮಪದಗಳ ಹಾಗೆ, ಬಹುವಚನಕ್ಕಿಂತ ಭಿನ್ನವಾದ ದ್ವಿವಚನವೆಂಬ ರೂಪವಿಲ್ಲ.
(೨) ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿ ಇವೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತದೆ; ಆದರೆ, ಹಳೆಗನ್ನಡದಲ್ಲಿ ಇವೆರಡನ್ನು ಸೂಚಿಸಲು ಬೇರೆ ಬೇರೆ ಪ್ರತ್ಯಯಗಳಿವೆ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ನದೀಭಿಃ “ನದಿಗಳಿಂದ’ ಪದರೂಪದಲ್ಲಿ ಬಂದಿರುವ ಭಿಃ ಪ್ರತ್ಯಯ ಬಹುವಚನ ಮತ್ತು ತೃತೀಯಾ ವಿಭಕ್ತಿ ಇವೆರಡನ್ನೂ ಸೂಚಿಸುತ್ತದೆ, ಮತ್ತು ನದೀಷು “ನದಿಗಳಲ್ಲಿ’ ಪದರೂಪದಲ್ಲಿ ಬಂದಿರುವ ಷು ಪ್ರತ್ಯಯ ಬಹುವಚನ ಮತ್ತು ಸಪ್ತಮೀ ವಿಭಕ್ತಿ ಇವೆರಡನ್ನೂ ಸೂಚಿಸುತ್ತದೆ. ಕನ್ನಡದ ನದಿಗಳಿಂದ ಮತ್ತು ನದಿಗಳಲ್ಲಿ ಎಂಬ ನಾಮಪದರೂಪಗಳಲ್ಲಿ ಕಾಣಿಸುವ
ಗೆ] ಇಂದ ಮತ್ತು ಅಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಗಳು ವಚನ ಪ್ರತ್ಯಯದಿಂದ ಪ್ರತ್ಯೇಕಿಸಲು ಸಾಧ್ಯವಿರುವ
ದಂ ₹ೌ
ಹಾಗೆ, ಸಂಸ್ಕೃತದ ನದೀಭಿಃ ಮತ್ತು ನದೀಷು ನಾಮಪದರೂಪಗಳಲ್ಲಿ ಕಾಣಿಸುವ ಭಿಃ ಮತ್ತು ಷು ಪ್ರತ್ಯಯಗಳಲ್ಲಿ ವಿಭಕ್ತಿ ಪ್ರತ್ಯಯಗಳನ್ನು ವಚನ ಪ್ರತ್ಯಯದಿಂದ ಪ್ರತ್ಯೇಕಿಸಲು ಸಾಧ್ಯವಾಗದು.
ಹೊಸಗನ್ನಡದ ಹಾಗೆ, ಹಳೆಗನ್ನಡದಲ್ಲೂ ವಚನ ಮತ್ತು ವಿಭಕ್ತಿ ಪ್ರತ್ಯಯಗಳು ಬೇರೆ ಬೇರಾಗಿವೆ. ಉದಾಹರಣೆಗಾಗಿ, ಅರಸರಿಂ ಪದರೂಪದಲ್ಲಿ ಅರ್ ಪ್ರತ್ಯಯ ಬಹುವಚನವನ್ನು ಸೂಚಿಸುತ್ತದೆ, ಮತ್ತು ಅದಕ್ಕಿಂತ ಭಿನ್ನವಾಗಿರುವ ಇಂ ಪ್ರತ್ಯಯ ತೃತೀಯಾ ವಿಭಕ್ತಿಯನ್ನು ಸೂಚಿಸುತ್ತದೆ. ಇದೇ ರೀತಿಯಲ್ಲಿ, ಅರಸರ್ಗೆ ಪದರೂಪದಲ್ಲಿ ಅದೇ ಅರ್ ಪ್ರತ್ಯಯ ಬಹುವಚನವನ್ನು ಸೂಚಿಸುತ್ತದೆ, ಮತ್ತು ಅದಕ್ಕಿಂತ ಭಿನ್ನವಾಗಿರುವ ಗೆ ಪ್ರತ್ಯಯ ಚತುರ್ಥಿ ವಿಭಕ್ತಿಯನ್ನು ಸೂಚಿಸುತ್ತ ದೆ.
(೩) ಸಂಸ್ಕೃತದಲ್ಲಿ ದ್ವಿವಚನ ಮತ್ತು ಬಹುವಚನಗಳನ್ನು ಮಾತ್ರವಲ್ಲ ದೆ, ಏಕವಚನವನ್ನು ಸೂಚಿಸುವುದಕ್ಕಾಗಿಯೂ ನಾಮಪದಗಳೊಂದಿಗೆ ಪ್ರತ್ಯಯಗಳನ್ನು ಬಳಸಲಾಗುತ್ತ ದೆ. ಆ ಭಾಷೆಯಲ್ಲಿ ವಚನ ಮತ್ತು ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತಿರುವುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಗಿರಾ “ಮಾತಿನಿಂದ’ ಎಂಬ ನಾಮಪದರೂಪದಲ್ಲಿ ಗಿರ್ ನಾಮಪದಕ್ಕೆ ಏಕವಚನ ಮತ್ತು ತೃತೀಯಾ ವಿಭಕ್ತಿಗಳೆರಡನ್ನೂ ಸೂಚಿಸುವ ಆ ಪ್ರತ್ಯಯವನ್ನು ಸೇರಿಸಲಾಗಿದೆ. ಈ ಪ್ರತ್ಯಯಕ್ಕೂ, ಗೀರ್ಭಿಃ “ಮಾತುಗಳಿಂದ’ ಎಂಬ ರೂಪದಲ್ಲಿ ಬಹುವಚನ ಮತ್ತು ತೃತೀಯಾ ವಿಭಕ್ತಿಗಳನ್ನು ಸೂಚಿಸುವ ಭಿಃ (ಭಿಸ್) ಪ್ರತ್ಯಯಕ್ಕೂ ನಡುವೆ ರೂಪದಲ್ಲಿ ಯಾವ ಸಾಮ್ಯವೂ ಇಲ್ಲ. ಹಾಗಾಗಿ, ಇವುಗಳಲ್ಲಿ ವಚನ ಪ್ರತ್ಯಯವನ್ನು ವಿಭಕ್ತಿ ಪ್ರತ್ಯಯಗಳಿಂದ ಬೇರ್ಪಡಿಸಲು ಸಾಧ್ಯವಾಗದು.
ಹಳೆಗನ್ನಡದಲ್ಲಿ ಬಹುವಚನವನ್ನು ಸೂಚಿಸುವುದಕ್ಕಾಗಿ ಒಂದು ವಿಶಿಷ್ಟವಾದ ಪ್ರತ್ಯಯವಿದೆ; ಆದರೆ, ಏಕವಚನವನ್ನು ಸೂಚಿಸುವುದಕ್ಕಾಗಿ ಪ್ರತ್ಯಯವಿಲ್ಲ. ನಾಮಪದವನ್ನು ಹಾಗೆಯೇ ಬಳಸಿದಾಗಲೆಲ್ಲ ಏಕವಚನದ ಅರ್ಥ ಬರುತ್ತದೆ. ಹಳೆಗನ್ನಡದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಬೇರೆ ಬೇರೆ ಪ್ರತ್ಯಯಗಳ ಮೂಲಕ ಸೂಚಿಸುತ್ತಿರುವುದೇ ಈ ರೀತಿ ಎರಡು ವಚನಗಳಲ್ಲಿ ಒಂದನ್ನು ಪ್ರತ್ಯಯದ ಸಹಾಯವಿಲ್ಲದೆಯೇ ಸೂಚಿಸಲು ಸಾಧ್ಯವಾಗುತ್ತಿರುವುದಕ್ಕೆ ಕಾರಣ.
ನವಿಲಿನ್ ಮತ್ತು ನವಿಲ್ಲಳಿನ್ ಎಂಬ ತೃತೀಯಾ ವಿಭಕ್ತಿ ರೂಪಗಳನ್ನು ಮೇಲೆ ಕೊಟ್ಟಿರುವ ಸಂಸ್ಕೃತ ಪದಗಳ ರೂಪಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ. ನವಿಲಿನ್ ಎಂಬುದರಲ್ಲಿ ಇನ್ ವಿಭಕ್ತಿ ಪ್ರತ್ಯಯವಿದೆ, ಆದರೆ ವಚನ ಪ್ರತ್ಯಯವಿಲ್ಲ. ನವಿಲ್ಲಳಿನ್ ಎಂಬುದರಲ್ಲಿ ಇನ್ ವಿಭಕ್ತಿ ಪ್ರತ್ಯಯ ಮಾತ್ರವಲ್ಲದೆ ಗಳ್ ವಚನ ಪ್ರತ್ಯಯವೂ ಇದೆ.
(೪) ಹಳೆಗನ್ನಡದಲ್ಲಿ ಕೆಲವು ನಾಮಪದಗಳೊಂದಿಗೆ ಲಿಂಗ-ವಚನಗಳನ್ನು ಸೂಚಿಸುವುದಕ್ಕಾಗಿ ಪ್ರತ್ಯಯವೊಂದನ್ನು ಸೇರಿಸಲಾಗುತ್ತದೆ; ಮಗನ್, ಅಣ್ಣನ್, ಒರ್ವನ್ ಮೊದಲಾದ ಇಂತಹ ಪದರೂಪಗಳು ಮಾತ್ರ ಮೇಲಿನ ನಿಯಮಕ್ಕೆ ಅಪವಾದಗಳಾಗಿರುತ್ತವೆ. ಯಾಕೆಂದರೆ, ಈ ಪದರೂಪಗಳಲ್ಲಿ ಬಳಕೆಯಾಗುವ ಪ್ರತ್ಯಯಗಳು ವಚನ ಮತ್ತು ಲಿಂಗಗಳೆರಡನ್ನೂ ಸೂಚಿಸುತ್ತಿರುವುದೇ ಇದಕ್ಕೆ ಕಾರಣ. ಉದಾಹರಣೆಗಾಗಿ, ಬಡವನ್ ಮತ್ತು ಬಡವಳ್ ಪದಗಳಲ್ಲಿ ಬಂದಿರುವ ಅನ್ ಮತ್ತು ಆಳ್ ಪ್ರ ತ್ಯಯಗಳು ಪುಂ-ಸ್ತ್ರ ಭೇದವನ್ನು ಮಾತ್ರವಲ್ಲ ಜ್ಯ ಏಕವಚನವನ್ನೂ ಸೂಚಿಸುತ್ತವೆಯೆಂದು ಹೇಳಲು ಸಾಧ್ಯವಿದೆ.
ಆದರೆ, ಇಂತಹ ಸಂದರ್ಭಗಳಲ್ಲೂ ವಚನ ಪ್ರತ್ಯಯ ವಿಭಕ್ತಿ ಪ್ರತ್ಯಯಕ್ಕಿಂತ ಭಿನ್ನವಾಗಿರುತ್ತದೆ. ಅದು ಲಿಂಗದೊಂದಿಗೆ ಸೇರುತ್ತದೆ; ಆದರೆ, ವಿಭಕ್ತಿಗಿಂತ ಭಿನ್ನವಾಗಿ ಉಳಿಯುತ್ತದೆ. ಉದಾಹರಣೆಗಾಗಿ, ಬಡವನ್ನೆ ಎಂಬುದರಲ್ಲಿ ಅನ್ ಪ್ರತ್ಯಯ ಪುಲ್ಲಿಂಗ ಮತ್ತು ಏಕವಚನಗಳನ್ನು
ಸೂಚಿಸುತ್ತದೆ, ಮತ್ತು ಗೆ ಪ್ರತ್ಯಯ ವಿಭಕ್ತಿಯನ್ನು ಸೂಚಿಸುತ್ತದೆ; ಇದೇ ರೀತಿಯಲ್ಲಿ, ಬಡವಳ್ಗೆ ಎಂಬುದರಲ್ಲಿ ಅಳ್ ಪ್ರತ್ಯಯ ಸ್ತ್ರ ಲಿಂಗ ಮತ್ತು ಏಕವಚನಗಳನ್ನು ಸೂಚಿಸುತ್ತದೆ, ಮತ್ತು ಗೆ ಪ್ರತ್ಯಯ ವಿಭಕ್ತಿಯನ್ನು ಸೂಚಿಸುತ್ತದೆ.
(೫) ಹಳೆಗನ್ನಡದಲ್ಲಿ ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳಿರುವ ಪದಗಳು ಬಹುವಚನದಲ್ಲಿ ಪುಂ-ಸ್ತ್ರಿ € ಭೇದವನ್ನು ಸೂಚಿಸುವುದಿಲ್ಲ. ಬಡವನ್ ಮತ್ತು ಬಡವಳ್ ಎಂಬವೆರಡಕ್ಕೂ ಬಹುವಚನದಲ್ಲಿ ಬಡವರ್ ಎಂಬ ಒಂದೇ ರೂಪವಿದೆ. ಇವು ಬಹುವಚನದಲ್ಲಿ ಮನುಷ್ಯ-ಮನುಷ್ಯೇತರ ಭೇದವನ್ನಷ್ಟೇ ಸೂಚಿಸಬಲ್ಲುವು.
ಇತರ ನಾಮಪದಗಳ ಬಳಕೆಯಲ್ಲೂ ಬಹುವಚನದಲ್ಲಿ ಪುಂ-ಸ್ಟ್ರೀ ಭೇದ ಸೂಚಿತವಾಗುವುದಿಲ್ಲವೆಂದು ಹೇಳಲು ಸಾಧ್ಯವಿದೆ. ಯಾಕೆಂದರೆ, ಅವುಗಳೊಂದಿಗೆ ಬರುವ ಕ್ರಿಯಾರೂಪಗಳಲ್ಲಾಗಲಿ, ಇಲ್ಲವೇ ಅವುಗಳ ಬದಲಿಗೆ ಬರುವ ಸರ್ವನಾಮಗಳಲ್ಲಾಗಲಿ ಪುಂ- ಸ್ತ್ರೀ ಭೇದ ಕಾಣಿಸುವುದಿಲ್ಲ.
(೭ಕ) ಮುನಿ ಬಂದನ್ ಮುನಿಗಳ್ ಬಂದರ್ (೭ಖ) ತಾಯ್ ಬಂದಳ್ ತಾಯ್ಗ ಳ್ ಬಂದರ್
ಆದರೆ, ಸಂಸ್ಕೃತದ ಲಿಂಗಭೇದ ಈ ರೀತಿ ನಾಮಪದದ ವಚನಭೇದದ ಮೇಲೆ ಅವಲಂಬಿತವಾಗಿರುವುದಿಲ್ಲ. ಉದಾಹರಣೆಗಾಗಿ, ಕಾಂತ ಪದ ಪುಲ್ಲಿಂಗ-ಏಕವಚನದಲ್ಲಿ ಕಾಂತಃ ಎಂಬ ರೂಪದಲ್ಲೂ, ಸ್ತ್ರೀ €ಲಿಂಗ-ಏಕವಚನದಲ್ಲಿ ಕಾಂತಾ ಎಂಬ ರೂಪದಲ್ಲೂ ಬರುತ್ತಿದ್ದು, ದ್ವಿವಚನದಲ್ಲಿ ಕಾಂತೌ (ಪುಲ್ಲಿಂಗ) ಮತ್ತು ಕಾಂತೇ (ಸ್ತ್ರಿ ಲಿಂಗ) ಎಂಬುದಾಗಿ ರೂಪಭೇದವನ್ನು ತೋರಿಸುತ್ತದೆ.
(೬) ಆದರೆ, ಕೆಳಗೆ ೮.೩ರಲ್ಲಿ ವಿವರಿಸಿರುವ ಹಾಗೆ, ಸಂಸ್ಕೃತದ ನಾಮಪದಗಳಲ್ಲಿ ಕಾಣಿಸುವ ವಿಭಕ್ತಿ-ವಚನರೂಪಗಳು ಹಲವೆಡೆಗಳಲ್ಲಿ ವ್ಯತ್ಯಾಸಗಳನ್ನು ತೋರಿಸದಿರುತ್ತವೆ. ಉದಾಹರಣೆಗಾಗಿ, ಪತಿ ಪದಕ್ಕೆ ತೃತೀಯಾ-ಚತುರ್ಥಿ-ಪಂಚಮಿಗಳಲ್ಲಿ ಪತಿಭ್ಯಾಂ ಎಂಬ ಒಂದೇ ದ್ವಿವಚನದ ರೂಪವಿದೆ. ಇಂತಹ ರೂಪಸಾಮ್ಯ ವಿಭಕ್ತಿಗಳ ನಡುವೆ ಮಾತ್ರವಲ್ಲ ದೆ ಲಿಂಗ ಮತ್ತು ವಚನಗಳ ನಡುವೆಯೂ ಕಾಣಿಸಿಕೊಳ್ಳುತ್ತ ದೆ.
ಉದಾಹರಣೆಗಾಗಿ, ಪುಲ್ಲಿಂಗದ ಅಗ್ನಿ ಮತ್ತು ಸ್ತ್ರ “ಲಿಂಗದ ಮತಿ ಪದಗಳಿಗೆ ತೃತೀಯಾ- ಏಕವಚನದಲ್ಲಿ ಅಗ್ನಿನಾ ಮತ್ತು ಮತ್ಯಾ ಎಂಬ ರೂಪಗಳಿದ್ದು, ಅವುಗಳಲ್ಲಿ ಕಾಣಿಸುವ ವಿಭಕ್ತಿ- ವಚನ ಪ್ರತ್ಯಯಗಳು ನಾ ಮತ್ತು ಯಾ ಎಂಬ ಬೇರೆ ಬೇರೆ ರೂಪಗಳಲ್ಲಿವೆ; ಆದರೆ, ತೃತೀಯಾ- ದ್ವಿವಚನದಲ್ಲಿ ಇವಕ್ಕೆ ಅಗ್ನಿಭ್ಯಾಂ ಮತ್ತು ಮತಿಭ್ಯಾಂ ಎಂಬ ರೂಪಗಳಿದ್ದು, ಅವುಗಳ ಅನಂತರ ಬರುವ ವಿಭಕ್ತಿ-ವಚನ ಪ್ರತ್ಯಯ ಭ್ಯಾಂ ಎಂಬ ಒಂದೇ ರೂಪದಲ್ಲಿದೆ.
ಸಂಸ್ಕೃತದಲ್ಲಿ ಇಂತಹ ರೂಪಸಾಮ್ಯಗಳನ್ನು ಮೇಲೆ ಕೊಟ್ಟಿರುವ ಸಾಮಾನ್ಯ ನಿಯಮಕ್ಕೆ ಅಪವಾದಗಳೆಂದು ಪರಿಗಣಿಸಲು ಸಾಧ್ಯವಿದೆ; ಆದರೆ, ಹಳೆಗನ್ನಡದಲ್ಲಿ ಪುಂ-ಸ್ಟ್ರೀ ಲಿಂಗಭೇದ ಬಹುವಚನದಲ್ಲಿಲ್ಲದಿರುವುದು ಅದರ ವ್ಯಾಕರಣ ನಿಯಮದಲ್ಲೇನೇ ಕಾಣಿಸುವ ಒಂದು ವೈಶಿಷ್ಟ್ಯವಲ್ಲದೆ ಅಪವಾದವಲ್ಲ.
(೭) ವಚನವನ್ನು ಸೂಚಿಸುವ ಪ್ರತ್ಯಯಗಳ ಬಳಕೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ
ಭಾಷೆಗಳ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವೇನೆಂದರೆ, ನಪುಂಸಕಲಿಂಗದಲ್ಲಿರುವ ಒಂದು ನಾಮಪದ ಸೂಚಿಸುವ ವಸ್ತು, ವಿಷಯ ಮೊದಲಾದವುಗಳ ಸಂಖ್ಯೆಯನ್ನು ಅದರೊಂದಿಗೆ ಬಂದಿರುವ ಎಣಿಕೆಯ ಪದ ಸೂಚಿಸುತ್ತಿದೆಯಾದರೆ, ಆ ನಾಮಪದದೊಂದಿಗೆ ಹಳೆಗನ್ನಡದಲ್ಲಿ ವಚನ ಪ್ರತ್ಯಯವನ್ನು ಬಳಸದಿರಲೂ ಸಾಧ್ಯವಿದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು:
(೮ಕ) ಎರಡು ಅಗಮಂ ಇಳಿಪಂತಾದುದು “ಎರಡು ಬೆಟ್ಟಗಳನ್ನು ಇಳಿಸಿದಂತಾಯಿತು’
(೮ಖ) ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಂ ಆಅಂಗದೊಳಂ ಅಯ್ದು ತೆಅದ ಮಂತ್ರಂಗಳೊಳಂ ಆಜುಂ ದರ್ಶನದೊಳಂ…. “ಹದಿನೆಂಟು ಧರ್ಮಶಾಸ್ತ್ರ ಗಳಲ್ಲಿಯೂ, ನಾಲ್ಕು ವೇದಗಳಲ್ಲಿಯೂ, ಆರು ಅಂಗಗಳಲ್ಲಿಂಶೂ, ಐದು ರೀತಿಂಯ ಮಂತ್ರಗಳಲ್ಲಿಂಯೂ, ಆರು ದರ್ಶನಗಳಲ್ಲಿಯೂ…
(೮ಕ)ದಲ್ಲಿ ಬೆಟ್ಟದ ಸಂಖ್ಯೆಯನ್ನು ಎರಡು ಎಂಬ ಎಣಿಕೆಯ ಪದ ಸೂಚಿಸುವ ಕಾರಣ, ಅಗ “ಬೆಟ್ಟ’ ಪದದೊಂದಿಗೆ ಬಹುವಚನ ಪ್ರತ್ಯಯ ಬಳಕೆಯಾಗಿಲ್ಲ.
ಈ ರೀತಿ, ನಪುಂಸಕ ಲಿಂಗದಲ್ಲಿ ವಚನ ಪ್ರತ್ಯಯವನ್ನು ಬಳಸದೆಯೂ ಇರಬಹುದು, ಇಲ್ಲವೇ ಬೇಕಿದ್ದಲ್ಲಿ ಬಳಸಲೂ ಸಾಧ್ಯ ಎಂಬ ವಿಷಯ ಮೇಲೆ (೮ಖ)ದಲ್ಲಿ ಇನ್ನಷ್ಟು ಸ್ಪ ಷ್ಟವಾಗಿದೆ. ಅಲ್ಲಿ ಕೊಟ್ಟಿರುವ ಐದು ನಾಮಪದಗಳೊಂದಿಗೂ ಎಣಿಕೆಯ ಪದಗಳನ್ನು ಬಳಸಲಾಗಿದೆ, ಮತ್ತು ಈ ಕಾರಣಕ್ಕಾಗಿ, ವೇದ, ಅಂಗ ಮತ್ತು ದರ್ಶನ ಪದಗಳೊಂದಿಗೆ ಬಹುವಚನ ಪ್ರತ್ಯಯವನ್ನು ಬಳಸಿಲ್ಲ; ಆದರೆ ಧರ್ಮಶಾಸ್ತ್ರ ಮತ್ತು ಮಂತ್ರ ಪದಗಳೊಂದಿಗೆ ಎಣಿಕೆಯ ಪದ ಮಾತ್ರವಲ್ಲದೆ ವಚನ ಪ್ರತ್ಯಯವೂ ಬಂದಿದೆ.
ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುವುದಾದ ಕಾರಣ (೭.೩.೧ (೨) ನೋಡಿ), ಆ ಭಾಷೆಯಲ್ಲಿ ಈ ರೀತಿ ನಾಮಪದಗಳೊಂದಿಗೆ ವಚನ ಪ್ರತ್ಯಯವನ್ನು ಬಳಸದಿರಲು ಸಾಧ್ಯವಾಗದು. ಅವುಗಳೊಂದಿಗೆ ಎಣಿಕೆಯ ಪದಗಳು ಬಂದಿದ್ದರೂ ಬರದಿದ್ದರೂ ಅವುಗಳ ಕೊನೆಯಲ್ಲಿ ಬರುವ ವಿಭಕ್ತಿ ಪ್ರತ್ಯಯ ಸರಿಯಾದ ವಚನದಲ್ಲೇ ಇರಬೇಕು. ಇದಲ್ಲದೆ, ಸಂಸ್ಕೃತದಲ್ಲಿ ಎಣಿಕೆಯ ಪದಗಳೂ ನಾಮಪದಗಳಾಗಿದ್ದು, ಅವು ಸೂಚಿಸುವ ವಚನವನ್ನು ಆ ಪದಗಳ ಕೊನೆಯಲ್ಲಿ ಬರುವ ವಿಭಕ್ತಿ ಪ್ರತ್ಯಯಗಳ ಮೂಲಕವೂ ಸೂಚಿಸಬೇಕಾಗುತ್ತದೆ.
(೯ಕ) ಏಕಃ ವೃಕ್ಚಃ ಅಪತತ್ “ಒಂದು ಮರ ಬಿತ್ತು’
(೯ಖ) ದ್ವೌ ವೃಕ್ಷೆ ಅಪತತಾಂ “ಎರಡು ಮರಗಳು ಬಿದ್ದುವು’
(೯ಗ) ತ್ರೀಣಿ ವೃಕ್ಷಾನಿ ಅಪತನ್ “ಮೂರು ಮರಗಳು ಬಿದ್ದುವು’
(೯ಕ-ಗ) ವಾಕ್ಯಗಳಲ್ಲಿ ವೃಕ್ಷ ಪದ ಮಾತ್ರವಲ್ಲದೆ, ಅದರೊಂದಿಗೆ ಬಂದಿರುವ ಎಣಿಕೆಯ ಪದಗಳೂ ಆ ಪದದ ವಚನವನ್ನು ಸೂಚಿಸುತ್ತಿವೆ.
೭.೩.೨ ಹಳೆಗನ್ನಡ ವೈಯಾಕರಣಿಗಳ ಸಮಸ್ಯೆಗಳು
ಕೇಶಿರಾಜನೇ ಮೊದಲಾದ ಪ್ರಾಚೀನ ವಿದ್ವಾಂಸರು ಸಂಸ್ಕೃತದ ಹಾಗೆ ಹಳೆಗನ್ನಡದಲ್ಲೂ ಮೂರು ವಚನಗಳಿವೆಯೆಂದು ಹೇಳಿರುವುದು ಸಂಸ್ಕೃತದ ವ್ಯಾಕರಣ ನಿಯಮವನ್ನು ಕನ್ನಡಕ್ಕೆ ಹಾಗೆಯೇ ಅನ್ವಯಿಸುವ ಪ್ರಯತ್ನವಲ್ಲದೆ ಬೇರೇನಲ್ಲ. ನಿಜಕ್ಕೂ ದ್ವಿವಚನವನ್ನು ಸೂಚಿಸಲು ಹಳೆಗನ್ನಡದಲ್ಲಿ ಬಹುವಚನದ ಪ್ರತ್ಯಯಕ್ಕಿಂತ ಭಿನ್ನವಾದ ಬೇರೆ ಪ್ರತ್ಯಯವಿಲ್ಲ. ಇದನ್ನು ಗಮನಿಸಿಯೂ (ಕೇಶಿರಾಜ ಸೂ. ೧೦೫ ನೋಡಿ) ಈ ವಿದ್ವಾಂಸರು ಹಳೆಗನ್ನಡದ ಮೇಲೆ ದ್ವಿವಚನವನ್ನು ಹೇರಲು ಪ್ರಯತ್ನಿಸಿದ್ದಾರೆ. ದ್ವಿವಚನಕ್ಕೆ ಉದಾಹರಣೆಗಳಾಗಿ ಕೇಶಿರಾಜನು ಕೊಡುವ ಭೀಮಾರ್ಜುನರ್, ರಾಮಲಕ್ಷ್ಮಣರ್ ಮೊದಲಾದ ಬಳಕೆಗಳಲ್ಲೂ ಬಹುವಚನದ ಅರ್ ಪ್ರತ್ಯಯವೇ ಕಾಣಿಸುತ್ತದೆ.
ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತಿದೆಯಾದ ಕಾರಣ, ಅದಕ್ಕೆ ಕ್ರಿಯಾಪದ ಮತ್ತು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸದಿರುವಂತಹ “ಪ್ರಥಮಾ’ ವಿಭಕ್ತಿ ಪ್ರತ್ಯಯದ ಅವಶ್ಯಕತೆಯಿದೆ (೮.೨ ನೋಡಿ). ಆದರೆ, ಹಳೆಗನ್ನಡದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಬೇರೆ ಬೇರೆ ಪ್ರತ್ಯಯಗಳು ಸೂಚಿಸುತ್ತಿವೆಯಾದ ಕಾರಣ, ಅದಕ್ಕೆ ಈ ಅವಶ್ಯಕತೆಯಿಲ್ಲ. ಹೀಗಿದ್ದರೂ, ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಪ್ರಥಮೆಯನ್ನು ಸೃಷ್ಟಿಸಿ ಅದಕ್ಕೊಂದು ಪ್ರತ್ಯಯವನ್ನು ಒದಗಿಸಿಕೊಡುವ ಪ್ರಯತ್ನ ನಡೆಸಿದ್ದಾರೆ.
ಉದಾಹರಣೆಗಾಗಿ, ಕೇಶಿರಾಜನ ಮತದಂತೆ, ಅಂ ಎಂಬುದರಲ್ಲಿ ಕೊನೆಗೊಳ್ಳುವ ಪದಗಳನ್ನೆಲ್ಲ ಅಕಾರದಲ್ಲಿ ಕೊನೆಗೊಳ್ಳುವ ಪ್ರಕೃತಿ(ಲಿಂಗ)ಗಳೆಂದು ಪರಿಗಣಿಸಬೇಕು, ಮತ್ತು ಅವುಗಳ ಕೊನೆಯಲ್ಲಿ ಬರುವ ಸೊನ್ನೆಯನ್ನು ಪ್ರಥಮಾ ವಿಭಕ್ತಿ ಪ್ರತ್ಯಯವೆಂದು ಪರಿಗಣಿಸಬೇಕು (ಸೂ. ೧೦೩).
ಸಂಸ್ಕೃತದಲ್ಲಿ ಅಕಾರದಲ್ಲಿ ಕೊನೆಗೊಳ್ಳುವ ಕಾಂತ, ಶಿವ, ದೇವ, ಅಶ್ವ ಮೊದಲಾದ ನಾಮಪದಗಳಿಗೆ ಏಕವಚನದಲ್ಲಿ ಕಾಣಿಸುವ ವಿಸರ್ಗವನ್ನು ಪ್ರಥಮಾ ವಿಭಕ್ತಿ ಯೆಂದು ಕರೆಯಲಾಗಿದೆ. ಇದನ್ನೇ ಅನುಸರಿಸಿ, ಕೇಶಿರಾಜನೇ ಮೊದಲಾದವರು ಹಳೆಗನ್ನಡದಲ್ಲೂ ಅಕಾರಾಂತ ಪದಗಳಿಗೆ ಪ್ರಥಮಾ ವಿಭಕ್ತಿ ಪ್ರತ್ಯಯವಾಗಿ ಸೊನ್ನೆ ಸೇರುತ್ತದೆಯೆಂದು ಹೇಳಿರಬೇಕು.
ಆದರೆ, ಇಲ್ಲಿ ತೊಂದರೆಯೇನೆಂದರೆ, ಸಂಸ್ಕೃತದ ವಿಸರ್ಗ ಅಕಾರಾಂತ ಪದಗಳ ಪ್ರಥಮಾ ವಿಭಕ್ತಿರೂಪದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಇತರ ವಿಭಕ್ತಿ ರೂಪಗಳಲ್ಲಿ ಅದು ಕಾಣಿಸುವುದಿಲ್ಲ. ಉದಾಹರಣೆಗಾಗಿ, ಕಾಂತ ಪದಕ್ಕೆ ಪ್ರಥಮಾ ವಿಭಕ್ತಿಯಲ್ಲಿ ಕಾಂತಃ ಎಂಬ ರೂಪವಿದ್ದು ಇದರಲ್ಲಿ ವಿಸರ್ಗ ಬಂದಿದೆ; ಆದರೆ, ಕಾಂತಂ, ಕಾಂತೇನ, ಕಾಂತಾಯ, ಕಾಂತಸ್ಯ ಮೊದಲಾದ ಇತರ ವಿಭಕ್ತಿ ರೂಪಗಳಲ್ಲಿ ಈ ವಿಸರ್ಗ ಕಾಣಿಸುವುದಿಲ್ಲ.
ಹಳೆಗನ್ನಡದ ಸೊನ್ನೆ ಪ್ರಥಮಾ ವಿಭಕ್ತಿಯಲ್ಲಿ ಮಾತ್ರವಲ್ಲದೆ ವ್ಯಂಜನದಲ್ಲಿ ಸುರುವಾಗುವ ಗೆ ವಿಭಕ್ತಿ ಪ್ರತ್ಯಯದೊಂದಿಗೂ (ಪುಲ್ಲಿಂಗ ಮತ್ತು ಸ್ತ್ರೀಲಿಂಗದ ಪದಗಳಲ್ಲಿ) ಕಾಣಿಸಿಕೊಳ್ಳುತ್ತದೆ (ಅರಸಂ-ಅರಸಂಗೆ, ಅಕ್ಕಂ-ಅಕ್ಕಂಗೆ). ಇತರ ಸ್ವರದಲ್ಲಿ ಸುರುವಾಗುವ ವಿಭಕ್ತಿ ಪ್ರತ್ಯಯಗಳೊಂದಿಗೂ ಇದು ನಕಾರ ಇಲ್ಲವೇ ಮಕಾರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ (ಅರಸಂ-ಅರಸನನ್, ಅಕ್ಕಂ-
ಅಕ್ಕನನ್, ಮರಂ-ಮರನನ್, ಪಳ್ಳಂ-ಪಳ್ಳಮಂ).
“ಪ್ರಥಮಾ ವಿಭಕ್ತಿಯಲ್ಲೂ ಈ ಪದಗಳ ಅನಂತರ “ಮತ್ತು’ ಎಂಬರ್ಥವನ್ನು ಕೊಡುವ (ಮತ್ತು ಸ್ವರದಲ್ಲಿ ಸುರುವಾಗುವ) ಉಂ ಪ್ರತ್ಯಯ ಸೇರಿದಾಗ, ಸೊನ್ನೆಯ ಬದಲು ನಕಾರ ಇಲ್ಲವೇ ಮಕಾರ ಕಾಣಿಸಿಕೊಳ್ಳುತ್ತದೆ (ಅರಸಂ-ಅರಸನುಂ, ಅಕ್ಕಂ-ಅಕ್ಕನುಂ, ಪಳ್ಳಂ-ಪಳ್ಳಮುಂ) ಎಂಬುದರಿಂದ ಈ ನಕಾರ ಮತ್ತು ಮಕಾರಗಳು ಸೊನ್ನೆಗೆ ಸಂಬಂಧಿಸಿದುವೆಂಬ ವಿಷಯ ಸ್ಪಷ್ಟವಾಗುತ್ತದೆ.
ಕಿಟ್ಟೆಲ್ (೧೯೦೩:೪೧) ಅವರ ಅಭಿಪ್ರಾಯದಂತೆ ಮರಂ, ಅಣ್ಣಂ ಮೊದಲಾದವುಗಳ ಕೊನೆಯಲ್ಲಿ ಬರುವ ಸೊನ್ನೆ (ಇಲ್ಲವೇ ನ್ ಅಥವಾ ಮ್) ಎಂಬುದನ್ನು ಮಾತ್ರವಲ್ಲದೆ, ಎಟ್ಟು, ಕೂಸು ಮೊದಲಾದವುಗಳ ಕೊನೆಯಲ್ಲಿ ಬರುವ ಉಕಾರ (ಕಿಟ್ಟೆಲ್ ೧೯೦೩:೫೮), ಪುಲಿ, ಕರಡಿ ಮೊದಲಾದವುಗಳ ಕೊನೆಯಲ್ಲಿ ಬರುವ ಇಕಾರ (ಕಿಟ್ಟೆಲ್ ೧೯೦೩:೬೭) ಇತ್ಯಾದಿಗಳನ್ನೂ ಪ್ರಥಮಾ ವಿಭಕ್ತಿ ಪ್ರತ್ಯಯವೆಂದು ಪರಿಗಣಿಸಲು ಸಾಧ್ಯವಿದೆ. ಇದೇ ರೀತಿಯಲ್ಲಿ, ಈ ನಾಮಪದಗಳ ಬಹುವಚನ ರೂಪದಲ್ಲಿ ಅವುಗಳ ಜಾಗದಲ್ಲಿ (ಅಥವಾ ಅವುಗಳ ಅನಂತರ) ಬರುವ ಗಳ್, ೦ಗಳ್, ಅರ್ ಮೊದಲಾದುವನ್ನೂ ಪ್ರಥಮಾ ವಿಭಕ್ತಿ ಪ್ರತ್ಯಯವೆಂದು ಪರಿಗಣಿಸಲು ಸಾಧ್ಯವಿದೆ (ಕಿಟ್ಟೆಲ್ ೧೯೦೩:೫೧).
ಕಿಟ್ಟೆಲರ ಈ ಅಭಿಪ್ರಾಯಕ್ಕೆ ಬಹುಶಃ ಸಂಸ್ಕೃತದ ಸಂಬಂಧಿಗಳಾದ ಲ್ಯಾಟಿನ್, ಗ್ರೀಕ್ ಮೊದಲಾದ ಭಾಷೆಗಳಲ್ಲಿ ಬಳಕೆಯಲ್ಲಿರುವ ವ್ಯಾಕರಣ ತತ್ವ ಕಾರಣವಿರಬಹುದು. ಈ ಭಾಷೆಗಳಲ್ಲೂ ಸಂಸ್ಕೃತದ ಹಾಗೆ ವಿಭಕ್ತಿ ಮತ್ತು ವಚನಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಲ್ಯಾಟಿನ್ ಭಾಷೆಯ ವಿರ್ “ಮನುಷ್ಯ’ ಮತ್ತು ದೋನುಮ್ “ದಾನ, ಕೊಡುಗೆ’ ಪದಗಳಿಗೆ ದ್ವಿತೀಯಾ ಮತ್ತು ಚತುರ್ಥೀ ವಿಭಕ್ತಿಗಳಲ್ಲಿರುವ ಪದರೂಪಗಳನ್ನು ಗಮನಿಸಬಹುದು:
ಏಕವಚನ ಬಹುವಚನ ವಿರುಮ್ “ಮನುಷ್ಯನನ್ನು’ ವಿರೋಸ್ ಮನುಷ್ಯರನ್ನು’ ವಿರೋ “ಮನುಷ್ಯನಿಗೆ’ ವಿರೀಸ್ “ಮನುಷ್ಯರಿಗೆ’
ದೋನುಮ್ “ದಾನವನ್ನು’ ದೋನ “ದಾನಗಳನ್ನು’ ದೋನೋ “ದಾನಕ್ಕೆ’ ದೋನೀಸ್ “ದಾನಗಳಿಗೆ’
ವಿರ್ “ಮನುಷ್ಯ’ ಪದದ ಅನಂತರ ಏಕವಚನದಲ್ಲಿ ಬರುವ ದ್ವಿತೀಯಾ ವಿಭಕ್ತಿಯ ಉಮ್ ಪ್ರತ್ಯಯಕ್ಕೂ, ಬಹುವಚನದಲ್ಲಿ ಬರುವ ಅದೇ ವಿಭಕ್ತಿಯ ಓಸ್ ಪ್ರತ್ಯಯಕ್ಕೂ ನಡುವೆ ಯಾವ ಸಾಮ್ಯವೂ ಇಲ್ಲ. ಹಾಗಾಗಿ, ಈ ಪದರೂಪಗಳಲ್ಲಿ ವಿಭಕ್ತಿ ಪ್ರತ್ಯಯವನ್ನು ವಚನ ಪ್ರತ್ಯಯದಿಂದ ಪ್ರತ್ಯೇಕಿಸಲು ಸಾಧ್ಯವಾಗದು. ಮೇಲೆ ಕೊಟ್ಟಿರುವ ಇತರ ಪದರೂಪಗಳಲ್ಲೂ ಹೀಗೆಯೇ.
ಲ್ಯಾಟಿನ್ ಮತ್ತು ಸಂಸ್ಕೃತಗಳೆರಡಕ್ಕೂ ಇಂಡೋ-ಯುರೋಪಿಯನ್ ಎಂಬ ಒಂದೇ ಮೂಲವಿರುವುದೇ ಈ ರೀತಿ ಅವೆರಡೂ ವಿಭಕ್ತಿ ಮತ್ತು ವಚನಗಳನ್ನು ಒಂದೇ ರೀತಿಯಲ್ಲಿ (ಒಂದೇ ಪ್ರತ್ಯಯದ ಮೂಲಕ) ಸೂಚಿಸುತ್ತಿರಲು ಕಾರಣ. ಹಳೆಗನ್ನಡಕ್ಕೆ ಇಂಡೋ-
ಯುರೋಪಿಯನ್‌ಗಿಂತ ತೀರ ಭಿನ್ನವಾಗಿರುವ ದ್ರಾವಿಡ ಮೂಲವಿದೆಯಾದ ಕಾರಣ, ಅದರಲ್ಲಿ ವಿಭಕ್ತಿ ಮತ್ತು ವಚನಗಳನ್ನು ಸೂಚಿಸಲು ಇದಕ್ಕಿಂತ ತೀರ ಭಿನ್ನವಾದ, ಎರಡು ಬೇರೆ ಬೇರೆ ಪ್ರತ್ಯಯಗಳನ್ನು ಬಳಸುವ ವಿಧಾನ ಬಳಕೆಯಲ್ಲಿದೆ.
೭.೪ ಸಾರಾಂಶ
ಹಳೆಗನ್ನಡ ನಾಮಪದಗಳ ಲಿಂಗಭೇದ ನೇರವಾಗಿ ಅವುಗಳ ಅರ್ಥದ ಮೇಲೆ ಅವಲಂಬಿಸಿದೆ. ಆದರೆ, ಸಂಸ್ಕೃತ ನಾಮಪದಗಳ ಲಿಂಗಭೇದ ಅರ್ಥಕ್ಕಿಂತಲೂ ರೂಢಿಯಲ್ಲಿ ಈ ನಾಮಪದಗಳಿಗೆ ಎಂತಹ ಬಳಕೆಯಿದೆ ಎಂಬುದನ್ನವಲಂಬಿಸಿದೆ. ಇಂತಹ ಬಳಕೆಗಳಿಗೆ ನಾಮಪದಗಳ ಚರಿತ್ರೆಯಲ್ಲಿ ಮೂಲವನ್ನು ಹುಡುಕಲು ಸಾಧ್ಯವಿದೆಯಾದರೂ, ಸಂಸ್ಕೃತದ ವ್ಯಾಕರಣದಲ್ಲಿ ಅವನ್ನು ವಿವರಿಸುವಂತಹ ನಿಯಮಗಳನ್ನು ಅರ್ಥದ ಆಧಾರದ ಮೇಲೆ ತಯಾರಿಸಲು ಸಾಧ್ಯವಾಗುವುದಿಲ್ಲ.
ಹಳೆಗನ್ನಡದಲ್ಲಿ ವಚನಭೇದವನ್ನು ಸೂಚಿಸುವ ಪ್ರತ್ಯಯ ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಕ್ಕಿಂತ ಭಿನ್ನವಾದುದು. ಆದರೆ, ಸಂಸ್ಕೃತದಲ್ಲಿ ಇವೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತ ದೆ. ಈ ಕಾರಣಕ್ಕಾಗಿ, ಹಳೆಗನ್ನಡದಲ್ಲಿ ವಚನ ಮತ್ತು ವಿಭಕ್ತಿ ಪ್ರತ್ಯಯಗಳನ್ನು ಅವಶ್ಯವಿರುವಲ್ಲಿ ಮಾತ್ರ ಬಳಸಿದರೆ ಸಾಕು. ಆದರೆ, ಸಂಸ್ಕೃತದಲ್ಲಿ ವಿಭಕ್ತಿ-ವಚನ ಪ್ರತ್ಯಯಗಳನ್ನು ಎಲ್ಲಾ ಸಂದರ್ಭಗಳಲ್ಲೂ (ಅವಶ್ಯವಿರುವಲ್ಲೂ ಮತ್ತು ಇಲ್ಲದಲ್ಲೂ) ನಾಮಪದಗಳನ್ನು ಬಳಸುವಾಗಲೆಲ್ಲ ಬಳಸಬೇಕಾಗುತ್ತದೆ.
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಲಿಂಗ ಮತ್ತು ವಚನಗಳನ್ನು ಸೂಚಿಸುವಲ್ಲಿ ಕಂಡುಬರುವ ಈ ಮೂಲಭೂತವಾದ ವ್ಯತ್ಯಾಸಗಳನ್ನು ಗಮನಿಸದುದರಿಂದಾಗಿ, ಹಳೆಗನ್ನಡದ ವೈಯಾಕರಣಿಗಳು ಅನವಶ್ಯಕವಾಗಿ ಹಲವಾರು ಗೊಂದಲಗಳಿಗೆಡೆಯಾಗಿದ್ದಾರೆ.