Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೧೨ — ಮುಕ್ತಾಯ
ಮುಕ್ತಾಯ
೧೨.೧ ಹಳೆಗನ್ನಡ ವ್ಯಾಕರಣಗಳ ವಿಮರ್ಶೆಗಳು
ಹಳೆಗನ್ನಡದ ಮೇಲೆ ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಬರೆದಿರುವ ವ್ಯಾಕರಣಗಳು ನಿಜಕ್ಕೂ ಆ ಭಾಷೆಯ ವ್ಯಾಕರಣವೆಂತಹದು ಎಂಬುದನ್ನು ವಿವರಿಸಿ ಹೇಳಲು ಶಕ್ತವಾಗಿವೆಯೇ ಎಂಬುದನ್ನು ಪರಿಶೀಲಿಸುವುದೇ ಈ ಪುಸ್ತಕದ ಉದ್ದೇಶವಾಗಿದೆ. ಹಳೆಗನ್ನಡದ ಈ ಪ್ರಾಚೀನ ವ್ಯಾಕರಣಗಳನ್ನು ಹಿಂದೆಯೂ ಹಲವು ಮಂದಿ ವಿದ್ವಾಂಸರು ಪರಿಶೀಲಿಸಿದ್ದರು (ಕಿಟ್ಟೆಲ್ ೧೯೦೩, ಬಿಳಿಗಿರಿ ೧೯೬೯, ಕುಳ್ಳಿ ೧೯೭೬, ಸೀತಾರಾಮಯ್ಯ ೧೯೭೯, ವೆಂಕಟಾಚಲ ಶಾಸ್ತ್ರಿ ೀ ೧೯೯೪).
ಆದರೆ, ಹಿಂದಿನವರ ಪರಿಶೀಲನೆಗಳಿಗೂ, ಈ ಪುಸ್ತಕದಲ್ಲಿ ನಡೆಸಿರುವ ಪರಿಶೀಲನೆಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ: ಹಿಂದಿನ ಪರಿಶೀಲನೆಗಳನ್ನು ನಡೆಸಿದವರು ಪ್ರಾಚೀನ ವ್ಯಾಕರಣಗಳು, ಅದರಲ್ಲೂ ಕೇಶಿರಾಜನ ಶಬ್ದ ಮಣಿದರ್ಪಣ, ಹಳೆಗನ್ನಡಕ್ಕೆ ತಕ್ಕುದಾದ ವ್ಯಾಕರಣ ಎಂದು ಭಾವಿಸಿದ್ದರು. ಹಾಗಾಗಿ, ಆ ವ್ಯಾಕರಣದ ನಿಯಮಗಳಲ್ಲಿ ಕಾಣಿಸುವ ಅವ್ಯಾಪ್ತಿ, ಅತಿವ್ಯಾಪ್ತಿ ಮೊದಲಾದ ಕೆಲವು ದೋಷಗಳನ್ನು ತೋರಿಸಿಕೊಡುವುದಷ್ಟೇ ಅವರ ಪರಿಶೀಲನೆಯ ಉದ್ದೇಶವಾಗಿತ್ತು.
ಇಂತಹ ಹಲಕೆಲವು ದೋಷಗಳನ್ನು ನಿವಾರಿಸಿದಲ್ಲಿ ಕೇಶಿರಾಜನ ಶಬ್ದ ಮಣಿದರ್ಪಣವೇ ಹಳೆಗನ್ನಡಕ್ಕೆ ಬೇಕಾಗಿರುವ ಒಂದು ಅತ್ಯುತ್ತಮ ವ್ಯಾಕರಣವಾಗಬಲ್ಲುದು ಎಂಬುದು ಆ ವಿದ್ವಾಂಸರ ಅಭಿಪ್ರಾಯವಿದ್ದ ಹಾಗೆ ಕಾಣಿಸುತ್ತದೆ.
ನನ್ನ ಪುಸ್ತಕದ ಉದ್ದೇಶ ಇದಕ್ಕಿಂತ ತೀರ ಭಿನ್ನವಾದುದು. ನಿಜಕ್ಕೂಹಳೆಗನ್ನಡಕ್ಕೆ ಕೇಶಿರಾಜನೇ ಮೊದಲಾದವರು ರಚಿಸಿರುವ ವ್ಯಾಕರಣಗಳು ತಕ್ಕುವಾದವುಗಳಲ್ಲ ಎಂಬ ಅಭಿಪ್ರಾಯ ನನ್ನಲ್ಲಿದೆಯಾದ ಕಾರಣ, ಅವು ಯಾಕೆ ಹಳೆಗನ್ನಡಕ್ಕೆ ತಕ್ಕುವಲ್ಲ ಎಂಬುದನ್ನು ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶವಾಗಿದೆ. ಹಳೆಗನ್ನಡದವಲ್ಲದ ಹಲವಾರು ವ್ಯಾಕರಣದ ಮೂಲತತ್ವಗಳನ್ನು ಈ ವ್ಯಾಕರಣಗಳಲ್ಲಿ ಹಳೆಗನ್ನಡದವೆಂದು ಭ್ರಮಿಸಿ ಬಳಸಲಾಗಿದೆ. ಹಾಗಾಗಿ, ಅವು ನಿಜವಾದ ಹಳೆಗನ್ನಡ ವ್ಯಾಕರಣಗಳಾಗಲಾರವು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ.
ಕೇಶಿರಾಜನೇ ಮೊದಲಾದ ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳಿಗೆ ಸಂಸ್ಕೃತ ವ್ಯಾಕರಣವೇ ಮಾದರಿಯಾಗಿತ್ತು. ಆಗಿನ ಕಾಲದಲ್ಲಿ ವಿದ್ವಾಂಸರೆಲ್ಲರೂ ಸಂಸ್ಕೃತದಲ್ಲಿ ಪರಿಣತರಾಗಿರುವುದು ಅವಶ್ಯವಾಗಿದ್ದುದು ಇದಕ್ಕೆ ಒಂದು ಕಾರಣ; ಯಾವ ಭಾಷೆಗೆ ವ್ಯಾಕರಣ ಬರೆಯುವುದಿದ್ದರೂ ಮೊದಲಿಗೆ ಸಂಸ್ಕೃತ ವ್ಯಾಕರಣವನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದ್ದುದು ಇನ್ನೊಂದು ಕಾರಣ.
ಆದರೆ, ನಿಜಕ್ಕೂ ಹಳೆಗನ್ನಡಕ್ಕೆ ಸಂಸ್ಕೃತ ವ್ಯಾಕರಣ ಉತ್ತಮವಾದ ಮಾದರಿಯಲ್ಲ. ಯಾಕೆಂದರೆ, ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳು ಬೇರೆ ಬೇರೆ ಭಾಷಾಮೂಲಗಳಿಂದ ಬೆಳೆದು ಬಂದಿದ್ದು, ಆ ಮೂಲಗಳಿಂದ ಅವೆರಡೂ ತೀರ ಭಿನ್ನವಾದ ವ್ಯಾಕರಣ ತತ್ವಗಳನ್ನು ಪಡೆದುಕೊಂಡಿವೆ. ಈ ಎರಡು ಭಾಷೆಗಳಲ್ಲಿ ಪದಗಳು, ಪದರೂಪಗಳು, ಪದಕಂತೆಗಳು ಮತ್ತು ವಾಕ್ಯಗಳು ಹೇಗೆ ರಚಿತವಾಗುತ್ತವೆ ಎಂಬುದನ್ನು ಪರಿಶೀಲಿಸಿದಾಗ, ಅವೆರಡರ ನಡುವಿರುವ ವ್ಯತ್ಯಾಸ ಈ ರೀತಿ ಮೂಲಭೂತವಾದುದು ಎಂಬ ವಿಷಯ ಸ್ಪಷ್ಟವಾಗುತ್ತದೆ.
ಉದಾಹರಣೆಗಾಗಿ, ಸಂಸ್ಕೃತಕ್ಕೆ ಅವಶ್ಯವಿರುವ ವರ್ಣಗಳಲ್ಲಿ ಹಲವು (ಮಹಾಪ್ರಾಣಾಕ್ಟರ ಗಳು, ಖಕಾರ, ಶ, ಷ ಮೊದಲಾದವುಗಳು) ಹಳೆಗನ್ನಡಕ್ಕೆ ಬೇಕಾಗಿಲ್ಲ, ಮತ್ತು ಸಂಸ್ಕೃತದಲ್ಲಿ ಇಲ್ಲದಿರುವ ಕೆಲವು ವರ್ಣಗಳು (ಅಕಾರ-ಟಕಾರಗಳು, ಎಕಾರ-ಒಕಾರಗಳು) ಹಳೆಗನ್ನಡಕ್ಕೆ ಬೇಕಾಗುತ್ತವೆ. ಈ ವಿಷಯವನ್ನು ಹಲವರು ವಿದ್ವಾಂಸರು ಗಮನಿಸಿದ್ದಾರೆ. ಕೇಶಿರಾಜನೇ ಮೊದಲಾದವರೂ ಇದನ್ನು ಕಂಡುಕೊಂಡಿದ್ದಾ ರೆ.
ಆದರೆ, ವರ್ಣಗಳ ಬಳಕೆಯಲ್ಲಿ ಇದಕ್ಕಿಂತಲೂ ಮುಖ್ಯವಾದ, ಮತ್ತು ಮೂಲಭೂತವಾದ ವ್ಯತ್ಯಾಸ ಈ ಎರಡು ಭಾಷೆಗಳ ನಡುವೆ ಇದೆ. ಹಾಗಾಗಿ, ಪಾಣಿನಿಗೆ ಶಿವನೇ ತೋರಿಸಿಕೊಟ್ಟವೆಂದು ಹೇಳಲಾಗುವ ಮಾಹೇಶ್ವರ ಸೂತ್ರಗಳು ಸಂಸ್ಕೃತ ವ್ಯಾಕರಣಕ್ಕೆ ತಕ್ಕುವಾಗಿವೆಯಾದರೂ, ಹಳೆಗನ್ನಡ ವ್ಯಾಕರಣಕ್ಕೆ ತಕ್ಕುವಾಗಿಲ್ಲ. ಯಾಕೆಂದರೆ, ಅವುಗಳ ಮೂಲಕ ಸಿದ್ದ ವಾಗುವ ಸ್ವರ ಮತ್ತು ವ್ಯಂಜನಗಳ ಪಾಠಕ್ರಮ ಸಂಸ್ಕೃತ ವ್ಯಾಕರಣಕ್ಕೆ ಅನುಕೂಲವಾಗಿದೆಯಲ್ಲದೆ, ಹಳೆಗನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲ. ಅದು “ಅರ್ಣವವೃತ ಧಾತ್ರಿಯೊಳ್ ಪ್ರಸಿದ್ಧ ‘ವಾದುದಾಗಿ ಇದ್ದರೂ (ಕೇಶಿರಾಜ, ಸೂ. ೧೪) ಹಳೆಗನ್ನಡ ವ್ಯಾಕರಣ ಅದನ್ನು ಬಿಟ್ಟುಕೊಟ್ಟು ತನ್ನದೇ ಆದ ಪಾಠಕ್ರಮವನ್ನು ಸೃಷ್ಟಿಸಿಕೊಳ್ಳುವ ಅವಶ್ಯಕತೆಯಿದೆ.
ಪ್ರಾಚೀನ ವೈಯಾಕರಣಿಗಳು ಕೊಟ್ಟಿರುವ ವಿಭಕ್ತಿಪ್ರತ್ಯಯಗಳ ವರ್ಣನೆಯಲ್ಲಿಯೂ ಇದೇ ರೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿದರೆ ಸಾಕಾಗುವುದಿಲ್ಲ, ಮೂಲಭೂತವಾದ ಬದಲಾವಣೆಗಳನ್ನೇ ಮಾಡಬೇಕಾಗುತ್ತದೆ. ನಾಮಪದ ಮತ್ತು ಕ್ರಿಯಾಪದಗಳ ನಡುವೆ ಹಲವಾರು ರೀತಿಯ ಸಂಬಂಧಗಳಿರಲು ಸಾಧ್ಯವಿದ್ದು, ಪ್ರತ್ಯಯಗಳ ಮೂಲಕ ಸೂಚಿಸುವುದಕ್ಕಾಗಿ ಇವನ್ನು ಕೆಲವೇ ಕೆಲವು ಗುಂಪುಗಳಲ್ಲಿ ವಿಭಜಿಸುವ ಅವಶ್ಯಕತೆಯಿದೆ. ಈ ವಿಭಜನೆ ಎಲ್ಲಾ ಭಾಷೆಗಳಲ್ಲೂ ಒಂದೇ ತೆರನಾಗಿರುವುದಿಲ್ಲ.
ಸಂಸ್ಕೃತದಲ್ಲಿ ಪಾ ಸಂಬಂಧಗಳನ್ನು ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣಗಳೆಂಬ ಆರು ಗುಂಪು(ಕಾರಕ)ಗಳಲ್ಲಿ ವಿಭಜಿಸಲಾಗಿದೆಯಾದರೆ, ಹಳೆಗನ್ನಡದಲ್ಲಿ ಆಗುಗ, ಮಾಡುಗ, ಸುರು, ಕೊನೆ ಮತ್ತು ಜಾಗಗಳೆಂಬ ಐದು ಗುಂಪುಗಳಲ್ಲಿ ವಿಭಜಿಸಲಾಗಿದೆ. ಇವೆರಡು ತೀರ ಭಿನ್ನವಾದ ವಿಭಜನೆಗಳಾದ ಕಾರಣ, ಸಂಸ್ಕೃತದ ಕಾರಕಗಳ ಮೂಲಕ ಹಳೆಗನ್ನಡ ವಾಕ್ಯಗಳನ್ನು ತೃಪ್ತಿಕರವಾಗಿ ವರ್ಣಿಸಲು ಸಾಧ್ಯವಾಗದು.
ಉದಾಹರಣೆಗಾಗಿ, ಹಳೆಗನ್ನಡದಲ್ಲಿ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಬಳಕೆಯಾಗುವ ಮಾಡಿ, ಕಂಡು ಮೊದಲಾದ ಕ್ರಿಯಾರೂಪಗಳ ಬಳಕೆಯನ್ನು “ಏಕಕರ್ತೃಕ’ ಎಂಬ ಕಲ್ಪನೆಯ ಸಹಾಯದಿಂದ ವಿವರಿಸುವ ಹಳೆಗನ್ನಡ ವೈಯಾಕರಣಿಗಳ ಪ್ರಯತ್ನ ಸಫಲವಾಗಿಲ್ಲ. ಅದಕ್ಕೆ ಬದಲು, ಕ್ರಿಯಾಪದಗಳನ್ನು ಐಚ್ಛಿಕ (ಮಾಡುಗ ಇರುವ ಕ್ರಿಯಾಪದ) ಮತ್ತು ಅನೈಚ್ಛಿಕ (ಮಾಡುಗ ಇಲ್ಲದ ಕ್ರಿಯಾಪದ) ಎಂಬುದಾಗಿ ವಿಂಗಡಿಸುವ ಅವಶ್ಯಕತೆಯಿದೆ. ಹೀಗೆ ಮಾಡಿದಲ್ಲಿ, ಅಂತಹ
ವಿಂಗಡಣೆಯ ಆಧಾರದ ಮೇಲೆ, ಜೋಡಿಸುವ ವಾಕ್ಯಗಳಲ್ಲಿ ಈ ಕ್ರಿಯಾಪದಗಳು ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಸುಲಭವಾಗಿ ವಿವರಿಸಲು ಸಾಧ್ಯವಾಗುತ್ತದೆ (೧೦.೪ ನೋಡಿ).
ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದವರ್ಗಗಳು ಮಾತ್ರ ಇವೆ; ಆದರೆ, ಹಳೆಗನ್ನಡದಲ್ಲಿ ನಾಮಪದ, ಗುಣಪದ, ಮತ್ತು ಕ್ರಿಯಾಪದ ಎಂಬುದಾಗಿ ಮೂರು ಮುಖ್ಯ ಪದವರ್ಗಗಳಿವೆ. ಇದು ಈ ಎರಡು ಭಾಷೆಗಳ ನಡುವಿರುವ ಇನ್ನೊಂದು ಮೂಲಭೂತವಾದ ವ್ಯತ್ಯಾಸ. ಈ ವ್ಯತ್ಯಾಸದ ಪರಿಣಾಮವನ್ನು ಸಂಸ್ಕೃತ ಮತ್ತು ಹಳೆಗನ್ನಡ ವ್ಯಾಕರಣಗಳ ಹಲವಾರು ನಿಯಮಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
ಇದೇ ರೀತಿಯಲ್ಲಿ, ಈ ಎರಡು ಭಾಷೆಗಳು ಕ್ರಿಯಾಪದಗಳ ಮೂಲಕ ಘಟನೆಯ ಸಮಯವನ್ನು ಸೂಚಿಸುವುದಕ್ಕಾಗಿ ಯಾವ ದೃಷ್ಟಿಕೋನವನ್ನು ಅವಲಂಬಿಸಿವೆ ಎಂಬುದರಲ್ಲೂ ಮೂಲಭೂತವಾದ ವ್ಯತ್ಯಾಸವಿದೆ. ಹಳೆಗನ್ನಡ ಸಮಯ ಸಂಬಂಧಕ್ಕೆ ಮಹತ್ವವನ್ನು ಕೊಡುವುದಾದರೆ, ಸಂಸ್ಕೃತ ಸಮಯ ವ್ಯವಸ್ಥೆ ಗೆ ಮಹತ್ವವನ್ನು ಕೊಡುತ್ತದೆ. ಈ ವ್ಯತ್ಯಾಸದ ಪರಿಣಾಮವನ್ನೂ ವ್ಯಾಕರಣದ ಹಲವು ಭಾಗಗಳಲ್ಲಿ ಕಾಣಬಹುದು.
ಈ ರೀತಿ, ವ್ಯಾಕರಣದ ಮೂಲ ತತ್ವಗಳಲ್ಲೇನೇ ಹಳೆಗನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆಯಾದ ಕಾರಣ, ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿರುವ ಕೇಶಿರಾಜನೇ ಮೊದಲಾದವರ ವ್ಯಾಕರಣಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡುವುದರ ಮೂಲಕ ಅವನ್ನು ಹಳೆಗನ್ನಡದ ಸರಿಯಾದ ವ್ಯಾಕರಣಗಳನ್ನಾಗಿ ಮಾಡಲು ಸಾಧ್ಯವಾಗದು.
ಈ ವ್ಯಾಕರಣಗಳನ್ನು ಒಂದು ಕಟ್ಟಡಕ್ಕೆ ಹೋಲಿಸಿದೆವಾದರೆ, ಮೇಲೆ ಸೂಚಿಸಿರುವ ದೋಷಗಳು ಅದರ ತಳಪಾಯದಲ್ಲೇನೇ ಕಾಣಿಸುವಂತಹ ದೋಷಗಳು ಎಂದು ಹೇಳಬಹುದು. ಹಾಗಾಗಿ, ಇವನ್ನು ನಿವಾರಿಸಬೇಕಿದ್ದ ಲ್ಲಿ, ಆ ಕಟ್ಟಡವನ್ನು ಸಂಪೂರ್ಣವಾಗಿ ಮುರಿದು, ತಳಪಾಯವನ್ನೇ ಬದಲಾಯಿಸಿ, ಬೇರೊಂದು ಹೊಸ ಕಟ್ಟಡವನ್ನು ಕಟ್ಟುವ ಅವಶ್ಯಕತೆಯಿದೆ.
೧೨.೨ ವ್ಯಾಕರಣದ ಸಂಕೀರ್ಣತೆ
ಒಂದು ಭಾಷೆಯ ವ್ಯಾಕರಣವೆಂಬುದು ಬಹಳ ಸಂಕೀರ್ಣವಾದ ವಿಷಯ. ಅದನ್ನು ಪರಿಶೀಲಿಸಿದಷ್ಟೂ ಅದರ ಕುರಿತಾಗಿ ಹೊಸ ಹೊಸ ಸಂಗತಿಗಳು ಗಮನಕ್ಕೆ ಬರುತ್ತಲೇ ಇರುತ್ತವೆ. ಇದಕ್ಕೆ ಕೊನೆಯೇ ಇಲ್ಲವೆಂದೂ ತೋರುತ್ತದೆ.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯ ವ್ಯಾಕರಣದ ಮೇಲೆ ಸುಮಾರು ಇನ್ನೂರು ವರ್ಷಗಳಿಂದಲೂ ನೂರಾರು ಮಂದಿ ವಿದ್ವಾಂಸರು ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಅದರ ಮೇಲೆ ನೂರಾರು ಗ್ರಂಥಗಳೂ ಪ್ರಕಟವಾಗಿವೆ. ಹೀಗಿದ್ದರೂ, ಅದರ ವ್ಯಾಕರಣದ ವೈಶಿಷ್ಟ್ಯಗಳೆಲ್ಲ ಸಂಪೂರ್ಣವಾಗಿ ಮತ್ತು ಸರಿಯಾಗಿ ನಮ್ಮ ಗಮನಕ್ಕೆ ಬಂದಿವೆಯೆಂದು ಇವತ್ತಿಗೂ ಹೇಳಲು ಸಾಧ್ಯವಾಗದು.
ಯಾಕೆಂದರೆ, ಅದರ ವ್ಯಾಕರಣದ ಕುರಿತಾಗಿ ಇವತ್ತಿಗೂ ಹೊಸ ಹೊಸ ಸಂಗತಿಗಳನ್ನು ಸಂಶೋಧಕರು ಹೊರಗೆಡಹುತ್ತಲೇ ಇದ್ದಾರೆ, ಮತ್ತು ಹಿಂದಿನವರ ವ್ಯಾಕರಣಗಳಲ್ಲಿ ಉಳಿದುಕೊಂಡಿರುವ ತಪ್ಪುಗಳನ್ನೂ ತೋರಿಸಿಕೊಡುತ್ತಿದ್ದಾರೆ. ಇದಕ್ಕೆ ನಾನೇ ನಡೆಸಿರುವ ಸಂಶೋಧನೆಯ ಒಂದು ಉದಾಹರಣೆಯನ್ನು ಕೊಡಬಲ್ಲೆ:
ಸರ್ವನಾಮಗಳ ಕುರಿತಾಗಿ ನಾನು ಇತ್ತೀಚೆಗೆ ಇಂಗ್ಲಿಷ್‌ನಲ್ಲಿ ಒಂದು ಪುಸ್ತಕವನ್ನು ಬರೆದಿದ್ದು, ಅದನ್ನು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ (ಭಟ್ ೨೦೦೪ಕ). ಈ ಪುಸ್ತ ಕವನ್ನು ಬರೆಯುವುದಕ್ಕಾಗಿ, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬಳಕೆಯಲ್ಲಿರುವ ನಾನ್ನೂರಕ್ಕಿಂತಲೂ ಹೆಚ್ಚು ಭಾಷೆಗಳ ವ್ಯಾಕರಣಗಳನ್ನು ಪರಿಶೀಲಿಸಿದ್ದೆ . ಈ ಭಾಷೆಗಳಲ್ಲಿ ಎಂತಹ ಸರ್ವನಾಮಗಳೆಲ್ಲ ಬಳಕೆಯಲ್ಲಿವೆ, ಅವುಗಳ ಮೇಲೆ ಯಾವ ರೀತಿಯ ನಿರ್ಬಂಧಗಳನ್ನೆಲ್ಲ ಹೇರಲಾಗುತ್ತದೆ, ಮತ್ತು ಸರ್ವನಾಮಗಳ ಮಟ್ಟಿಗೆ ಪ್ರಪಂಚದ ಭಾಷೆಗಳು ಯಾವ ರೀತಿಯಲ್ಲೆಲ್ಲ ಭಿನ್ನವಾಗಿರಲು ಸಾಧ್ಯ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಈ ಸಂಶೋಧನೆಯ ಆಧಾರದ ಮೇಲೆ, ಇಂಗ್ಲಿಷ್ ವ್ಯಾಕರಣಗಳಲ್ಲಿ ಕಾಣಿಸುವ ಕೆಲವು ದೋಷಗಳನ್ನು ಮತ್ತು ಸಮಸ್ಯೆಗಳನ್ನೂ ತೋರಿಸಿಕೊಡಲು ನನಗೆ ಸಾಧ್ಯವಾಗಿದೆ. ಉದಾಹರಣೆಗಾಗಿ, ಅನಿರ್ದಿಷ್ಟ ಮತ್ತು ಅನಿಶ್ಚಿತ ಎಂಬ ಎರಡು ತೀರ ಭಿನ್ನವಾದ ಬಳಕೆಗಳನ್ನು ಈ ವ್ಯಾಕರಣಗಳಲ್ಲಿ indefinite ಎಂಬ ಒಂದೇ ತತ್ವದ (ಪಾರಿಭಾಷಿಕ ಪದದ) ಮೂಲಕ ವಿವರಿಸುವ ಪ್ರಯತ್ನ ನಡೆದಿದೆ, ಮತ್ತು ಇದರಿಂದಾಗಿ ಇಂಗ್ಲಿಷ್ ವ್ಯಾಕರಣಗಳಲ್ಲಿ ಹಲವು ಸಮಸ್ಯೆಗಳು ಮತ್ತು ಗೊಂದಲಗಳು ಸೃಷ್ಟಿಯಾಗಿವೆ.
ಇಂಗ್ಲಿಷ್‌ನ ೩ bಂಂk ಎಂಬುದೊಂದು ಅನಿರ್ದಿಷ್ಟ ಪದಕಂತೆ, ಮತ್ತು any book ಎಂಬುದೊಂದು ಅನಿಶ್ಚಿತ ಪದಕಂತೆ. ಈ ಎರಡು ಪದಕಂತೆಗಳ ನಡುವೆ ಬಳಕೆಯಲ್ಲಿ ಹಲವು ವ್ಯತ್ಯಾಸಗಳಿವೆ. ಇಂಗ್ಲಿಷ್ ವೈಯಾಕರಣಿಗಳು ಇವೆರಡನ್ನೂ 17668116 ಪದಕಂತೆಗಳೆಂದು ಪರಿಗಣಿಸಿದುದರಿಂದಾಗಿ ಹಲವು ಸಮಸ್ಯೆಗಳನ್ನೆದುರಿಸಬೇಕಾಗಿದೆ. ಅನಿರ್ದಿಷ್ಟ ಮತ್ತು ಅನಿಶ್ಚಿತ ಪದಕಂತೆಗಳ ನಡುವಿನ ವ್ಯತ್ಯಾಸಗಳನ್ನು ಸರಿಯಾಗಿ ಗಣನೆಗೆ ತೆಗೆದುಕೊಂಡಲ್ಲಿ, ಈ ಸಮಸ್ಯೆಗಳೆಲ್ಲ ಮಾಯವಾಗಿಬಿಡುತ್ತವೆ ಎಂಬುದನ್ನು ನಾನು ಮೇಲಿನ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ.
ಇದಲ್ಲದೆ, ಪ್ರಶ್ನಾರ್ಥಕಗಳೆಂದು ಹೇಳಲಾಗುವ ೪/8೦, what, when ಮೊದಲಾದ ಸರ್ವನಾಮಗಳು ನಿಜಕ್ಕೂ ಅನಿಶ್ಚಿತಾರ್ಥಗಳು ಮಾತ್ರ; ಅವನ್ನು ಪ್ರಶ್ನಾರ್ಥಕ ಸರ್ವನಾಮಗಳೆಂದು ಪರಿಗಣಿಸಿದಲ್ಲಿ ಹಲವು ಸಮಸ್ಯೆಗಳು ಮೂಡಿಬರುತ್ತವೆ; ಆದರೆ, ಅನಿಶ್ಚಿತ ಪದಗಳೆಂದು ಪರಿಗಣಿಸಿದಲ್ಲಿ ಅಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಇಂತಹ ಬೇರೆಯೂ ಹಲವು ಹೊಸ ವ್ಯಾಕರಣ ವಿಷಯಗಳನ್ನು ನಾನು ಆ ಪುಸ್ತಕದಲ್ಲಿ ಪ್ರಸ್ತಾ ಪಿಸಿದ್ದು , ಅವು ಇಂಗ್ಲಿಷ್ ವ್ಯಾಕರಣಕ್ಕೂ ಸಂಬಂಧಿಸಿದವುಗಳಾಗಿವೆ.
ಇಂಗ್ಲಿಷ್‌ನ ಮೇಲೆ ನಡೆದಿರುವ ವ್ಯಾಕರಣಾಭ್ಯಾಸಗಳಿಗೆ ಹೋಲಿಸಿದೆವಾದರೆ, ಹಳೆಗನ್ನಡದ (ಇಲ್ಲವೇ ಹೊಸಗನ್ನಡದ) ವ್ಯಾಕರಣದ ಮೇಲೆ ಇದುವರೆಗೆ ನಡೆದಿರುವ ಸಂಶೋಧನೆ ಅತ್ಯಲ್ಪ ಎಂದು ಯಾರಿಗೂ ಅನಿಸದಿರದು. ಆ ವ್ಯಾಕರಣದ ನಿಜವಾದ ಸ್ವರೂಪ ಎಂತಹದು ಎಂಬುದನ್ನು ತಿಳಿಯಲು ನಾವು ಇನ್ನೂ ಬಹಳಷ್ಟು ಸಂಶೋಧನೆಗಳನ್ನು ನಡೆಸುವ ಅವಶ್ಯಕತೆಯಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕೇಶಿರಾಜನ ವ್ಯಾಕರಣದಲ್ಲಿ ಹಳೆಗನ್ನಡದ ವ್ಯಾಕರಣವೆಂತಹದು ಎಂಬುದನ್ನು ತಿಳಿಯಲು ನಮಗೆ ಬೇಕಾಗುವ ವಿಷಯಗಳೆಲ್ಲವೂ ಇವೆ; ಆ ವ್ಯಾಕರಣವನ್ನು ಅರ್ಥಮಾಡಿಕೊಳ್ಳುವುದಷ್ಟೇ ಇವತ್ತು (ಅಥವಾ ಇನ್ನು ಮುಂದೆ) ನಾವು ಮಾಡಬೇಕಾಗಿರುವ ಕೆಲಸ ಎಂದು ಯಾರಾದರೂ ಭಾವಿಸುವುದಿದ್ದಲ್ಲಿ ಅದು ಎಂತಹ ಹುಂಬತನವಾಗಬಲ್ಲುದು ಎಂಬುದು ಈ ಮೇಲಿನ ಉದಾಹರಣೆಯಿಂದ ಸ್ಪಷ್ಟವಾಗದಿರದು.
೧೨.೩ ವ್ಯಾಕರಣದ ವೈವಿಧ್ಯ
he ಭಾಷೆಯ ನಾ ಮಾದರಿಯಾಗಿರಿಸಿಕೊಂಡು ಇನ್ನೊಂದು ಭಾಷೆಯ ವ್ಯಾಕರಣವನ್ನು ಬರೆಯ ಹೊಡ ರಲ. ರೂ ಎದುರಿಸಬೇಕಾಗಿರುವ ಸ ಸಮಸ್ಯೆಯೊಂದಿದೆ. ಮಾದರಿಯಾಗಿರುವ ಭಾಷೆಯ ವ್ಯಾಕರಣ ತಾವು ವಿವರಿಸ ಬೇಕಾಗಿರುವ ಭಾಷೆಯ ವ್ಯಾಕರಣಕ್ಕಿಂತ ತೀರ ಭಿನ್ನವಾಗಿದೆಯಾದರೆ, ಆ ಭಿನ್ನತೆಯೆಂತಹದು ಎಂಬುದನ್ನು ಕಂಡುಹಿಡಿಯುವುದೇ ಈ ಸಮಸ್ಯೆ. ಹೆಚಿ ಕ್ಲಿನವರಿಗೂ ಇದು ಬಿಡಿಸಲಾಗದ ಸಮಸ್ಯೆ ಯಾಗಿರುತ್ತದೆ.
ಸಂಸ್ಕೃತಕ್ಕೆ ವ್ಯಾಕರಣವನ್ನು ಬರೆದಿರುವ ಜಾ ತ್ ಮೊದಲಾದ ಸಂಸ್ಕೃತ ವೈಯಾಕರಣಿಗಳಿಗಾಗಲಿ, ಇಲ್ಲವೇ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಗೆ ವ್ಯಾಕರಣಗಳನ್ನು ಬರೆದ ಪಾಶ್ಚಾತ್ಯ ವಿದ್ವಾಂಸರಿಗಾಗಲಿ ಈ ಸಮಸ್ಯೆ ಯಿರಲಿಲ್ಲ. ಯಾಕೆಂದರೆ, ಅವರಿಗೆ ವ್ಯಾಕರಣವನ್ನು ಬರೆಯಲು ಬೇ ಹೊಂದ ಭಾಷೆಯ ಮಾದರಿಯಿರಲಿಲ್ಲ. ಎಲ್ಲವನ್ನೂ ಅವರು ವರ್ಣಿಸಬೇಕಾಗಿರುವ ಭಾಷೆಯ ಸ ರೂಪವನ್ನು ಪರಿಶೀಲಿಸುವುದರ ಮೂಲಕ ಕಾಗಿ ಕಂಡುಹಿಡಿಯಬೇಕಾಗಿತ್ತು.
ಮೊನ್ನೆ ಮೊನ್ನೆವರೆಗೂ ಈ ಸಮಸ್ಯೆ ್ಯ ಒಂದು ಸಮಸ್ಯೆ ಯೆಂಬುದೇ ವಿದ್ವಾಂಸರ ಅರಿವಿಗೆ ಬಂದಿರಲಿಲ್ಲ. ಔಟ ಯಾಗುವ rR ವ್ಯಾ ಕರಣಕ್ಕಿ ಕ ತಮ್ಮ ಕಲ್ಪ ಥೆ ಮೀರಿದಂತಹ ಭಿನ್ನತೆಯನ್ನು ತೋರಿಸುವ ನವಹೋ, ಹೋಪಿ, ಗಿ ಆಂ ಮೂಲನಿವಾಸಿಗಳ ಭಾಷೆಗಳನ್ನು ವರ್ಣಿಸಹೊರಟಾಗ, ಮತ್ತು ಆಫ್ರಿಕಾದ ಬಂಟು, ದ್ಸುಲು, ಆಸ್ಟ್ರೇಲಿಯಾದ ದ್ಕಿರ್ಬಲ್, ಫಿಲಿಪೈನ್ಸ್‌ನ ತಗಲೋಗ್ ಮೊದಲಾದ ಜಗತ್ತಿನ ಇತರ ರಾಷ್ಟ್ರ ಗಳಲ್ಲಿ ಬಳಕೆಯಲ್ಲಿರುವ ಭಾಷೆಗಳನ್ನು ವರ್ಣಿಸ ನ್ಗ ಈ ಸಮಸ್ಯೆ ಎಷ್ಟು ದೊಡ್ಡದು ಎಂಬ ವಿಷಯ ವಿದ್ವಾಂಸರ ಗಮನಕ್ಕೆ ಬಂತು.
ಬೇರೆ ಬೇರೆ ಭಾಷೆಗಳ ನಡುವೆ ವ್ಯಾಕರಣದಲ್ಲಿ ಎಂತಹ ವೆ ವಿಧ್ಯತೆಗಳೆಲ್ಲ ಇರಲು ಸಾಧ್ಯ ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಭಾಷಾವಿಜ್ಞಾನದಲ್ಲಿ ಈಗ language typology ಎಂಬ ಒಂದು ಹೊಸ ಶಾಖೆಯೇ ಬೆಳೆದು ಬಂದಿದೆ. ಇದು ಇಂತಹ ಒಂದಕ್ಕಿಂತ ಒಂದು ತೀರ ಭಿನ್ನವಾಗಿರುವ ಭಾಷೆಗಳ ಅಭ್ಯಾಸದ ಫಲವಾಗಿ ಹುಟ್ಟಿಕೊಂಡಿದೆ. ಈ ಶಾಖೆಯಲ್ಲಿ ನಾನು ಕಳೆದ ನಲುವತ್ತು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದೇನೆ. ಹಳೆಗನ್ನಡ ವ್ಯಾಕರಣದ ನಿಜವಾದ ಸ್ವರೂಪ ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಹೇಳಿರುವುದಕ್ಕಿಂತ ತೀರ ಭಿನ್ನವಾದುದು ಎಂಬ ವಿಷಯ ನನ್ನ ಗಮನಕ್ಕೆ ಬರಲು ಈ ಸಂಶೋಧನೆಯೇ ಮುಖ್ಯ ಕಾರಣ.
ಹಳೆಗನ್ನಡದಲ್ಲಿ ನಿಜಕ್ಕೂ ಪದಗಳ, ಪದರೂಪಗಳ, ಪದಕಂತೆಗಳ ಮತ್ತು ವಾಕ್ಯಗಳ ರಚನೆ ಹೇಗೆ ನಡೆಯುತ್ತದೆ ಎಂಬುದನ್ನು ಆಳವಾಗಿ ಅಭ್ಯಾಸಮಾಡುವ ಅವಶ್ಯಕತೆಯಿದೆ ಎಂಬ ವಿಷಯ ಈ ಪುಸ್ತಕದಿಂದ ಸ್ಪಷ್ಟವಾಗಿರಬಹುದು. ಇಂತಹ ಅಭ್ಯಾಸಕ್ಕೆ ಕೇಶಿರಾಜನ ವ್ಯಾಕರಣ ಮಾದರಿಯಾಗಲಾರದು. ನೇರವಾಗಿ ಪಂಪ, ರನ್ನ ಮೊದಲಾದವರ ಬರಹಗಳಲ್ಲಿ ಪದ, ಪದರೂಪ, ವಾಕ್ಯ ಮೊದಲಾದುವನ್ನು ಹೇಗೆ ರಚಿಸಲಾಗಿದೆ ಎಂಬುದನ್ನು ಪರಿಶೀಲಿಸುವುದೊಂದೇ ನಮಗಿರುವ ಮಾರ್ಗ.
ಹಳೆಗನ್ನಡ ವ್ಯಾಕರಣದ ಮೇಲೆ ಇಂತಹ ಹಲವಾರು ಆಳವಾದ ಸಂಶೋಧನೆಗಳನ್ನು ನಡೆಸುವ ಅವಶ್ಯ ಕತೆಯಿದೆ. ಇವುಗಳ ಮೂಲಕ ಹಳೆಗನ್ನಡ ವ್ಯಾಕರಣದ ಸ್ವರೂಪವೆಂತಹದು ಎಂಬುದನ್ನು ~~ ಸಾಧ್ಯವಾಗುತ್ತದೆ. ಇದಲ್ಲ ದ್ಯ ಹೊಸ ಗನ್ನಡ ವ್ಯಾ ಕರಣವನ್ನು ಸರಿಯಾಗಿ ತಿಳಿದುಕೊಳ್ಳುವಲ್ಲಿ ಯೂ ಇಂತಹ ಹಳೆಗನ್ನಡ ವ್ಯಾಕರಣದ ಮೇಲೆ ನಡೆ ಕ ಕ ಕೋದನಿಗಳು ಸಹಾಯಕವಾಗಬಲ್ಲುವು. ಯಾಕೆಂದರೆ, ಹೊಸಗನ್ನಡ ವ್ಯಾಕರಣ ನಿಯಮಗಳ ಮೂಲ ಹಳೆಗನ್ನಡ ವ್ಯಾಕರಣದಲ್ಲಿ ಔ.
ಆಕರಸೂಚಿ
ಅನಂತರಂಗಾಚಾರ್, ಎನ್. (ಗದ್ಯಾನುವಾದ). ೧೯೭೭. ಪಂಪಕವಿ ವಿರಚಿತ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ). ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಅಯ್ಯಂಗಾರ್, ಚೆನ್ನಕೇಶವ ಎಚ್. (ಸಂ.). ೧೯೩೮. ಕೇಶಿರಾಜನ ಶಬ್ದಮಣಿದರ್ಪಣ (ಲಿಂಗಣಾರಾಧ್ಯನ ವೃತ್ತಿ ಸಹಿತ). ಚೆನ್ನೈ: ಮದ್ರಾಸ್ ವಿಶ್ವವಿದ್ಯಾನಿಲಯ.
ಅಯ್ಯಂಗಾರ್. ವಿ. ಕೃಷ್ಣಸ್ವಾಮಿ ೧೯೬೫. “ಸತಿಸಪ್ತಮೀ’. ಕನ್ನಡ ನುಡಿ, ೨೮-೭.
ಕಾಲ್ಡ್‌ವೆಲ್, ಆರ್. ೧೯೧೩. A Comparative grammar of the Dravidian or South Indian languages. London: Kegan, Paul, Trench, Trubner and Co. Ltd.
ಕಿಟ್ಟೆಲ್, ಎಫ್. ೧೯೦೩. A Grammar of the Kannada language (comparing the three dialects of the language). Mangalore: Basel Mission Book and Tract Depository.
ಕೀಲ್‌ಹೋರ್ನ್, ಎಫ್. ೧೯೭೦. A Grammar of the Sanskrit language (6th Edi- tion). Varanasi: The Chowkhamba Sanskrit Series Office.
ಕುಶಾಲಪ್ಪ ಗೌಡ, ಕೆ. ೧೯೭೦. Gowda Kannada. Annamalainagar: Annamalai University.
ಕುಳ್ಳಿ, ಜೆ. ಎಸ್. ೧೯೭೬. Kesiraja’s Sabdamanidarpana. Dharwar: Karnataka University.
ಕೃಷ್ಣಮೂರ್ತಿ, ಭ. ೨೦೦೩. The Dravidian languages. Cambridge: University Press.
ಗಾಯ್, ಜಿ. ಎಸ್. ೧೯೫೫. “Pronouns in Vaddaradhane’. Indian Linguistics 16, 250-1.
ಗೈನ್-ಎಕ್ಲುಂಡ್, ಜಿ. ೧೯೭೮. ೩A study of nominal sentences in the oldest
Upanishads. Sweden: Almqvist and Wiksell International.
ಜೋಶಿ, ಎಸ್. ಡಿ. ೧೯೬೭. “Adjectives and substantives as a single class in the
parts of speech’. Journal of the University of Poona, Humanities section 25, 19-30.
ದೊಡ್ಡ ಸ್ವಾಮಿ ೧೯೮೦. ಹಳೆಗನ್ನಡ ವ್ಯಾಕರಣಗಳ ತೌಲನಿಕ ವಿಶ್ಲೆ “ಷಣೆ. ಮಂಡ್ಯ: ಶ್ರೀಮತಿ ದೊಡ ಸ್ತಾಮಿ. ೧ ಈ ನರಸಿಂಹಾಚಾರ್, ಡಿ. ಎಲ್. ೧೯೭೧. ಪೀಠಿಕೆಗಳು, ಲೇಖನಗಳು. ಮೈಸೂರು: ಡಿ. ವಿ. ಕೆ.
ಆಕರಸೂಚಿ
ಆಕರಸೂಚಿ
ಅನಂತರಂಗಾಚಾರ್, ಎನ್. (ಗದ್ಯಾನುವಾದ). ೧೯೭೭. ಪಂಪಕವಿ ವಿರಚಿತ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ). ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಅಯ್ಯಂಗಾರ್, ಚೆನ್ನಕೇಶವ ಎಚ್. (ಸಂ.). ೧೯೩೮. ಕೇಶಿರಾಜನ ಶಬ್ದಮಣಿದರ್ಪಣ (ಲಿಂಗಣಾರಾಧ್ಯನ ವೃತ್ತಿ ಸಹಿತ). ಚೆನ್ನೈ: ಮದ್ರಾಸ್ ವಿಶ್ವವಿದ್ಯಾನಿಲಯ.
ಅಯ್ಯಂಗಾರ್. ವಿ. ಕೃಷ್ಣಸ್ವಾಮಿ ೧೯೬೫. “ಸತಿಸಪ್ತಮೀ’. ಕನ್ನಡ ನುಡಿ, ೨೮-೭.
ಕಾಲ್ಡ್‌ವೆಲ್, ಆರ್. ೧೯೧೩. A Comparative grammar of the Dravidian or South Indian languages. London: Kegan, Paul, Trench, Trubner and Co. Ltd.
ಕಿಟ್ಟೆಲ್, ಎಫ್. ೧೯೦೩. A Grammar of the Kannada language (comparing the three dialects of the language). Mangalore: Basel Mission Book and Tract Depository.
ಕೀಲ್‌ಹೋರ್ನ್, ಎಫ್. ೧೯೭೦. A Grammar of the Sanskrit language (6th Edi- tion). Varanasi: The Chowkhamba Sanskrit Series Office.
ಕುಶಾಲಪ್ಪ ಗೌಡ, ಕೆ. ೧೯೭೦. Gowda Kannada. Annamalainagar: Annamalai University.
ಕುಳ್ಳಿ, ಜೆ. ಎಸ್. ೧೯೭೬. Kesiraja’s Sabdamanidarpana. Dharwar: Karnataka University.
ಕೃಷ್ಣಮೂರ್ತಿ, ಭ. ೨೦೦೩. The Dravidian languages. Cambridge: University Press.
ಗಾಯ್, ಜಿ. ಎಸ್. ೧೯೫೫. “Pronouns in Vaddaradhane’. Indian Linguistics 16, 250-1.
ಗೈನ್-ಎಕ್ಲುಂಡ್, ಜಿ. ೧೯೭೮. ೩A study of nominal sentences in the oldest
Upanishads. Sweden: Almqvist and Wiksell International.
ಜೋಶಿ, ಎಸ್. ಡಿ. ೧೯೬೭. “Adjectives and substantives as a single class in the
parts of speech’. Journal of the University of Poona, Humanities section 25, 19-30.
೨೧೪ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು)
ದೊಡ್ಡ ಸ್ವಾಮಿ ೧೯೮೦. ಹಳೆಗನ್ನಡ ವ್ಯಾಕರಣಗಳ ತೌಲನಿಕ ವಿಶ್ಲೆ “ಷಣೆ. ಮಂಡ್ಯ: ಶ್ರೀಮತಿ ದೊಡ ಸ್ತಾಮಿ. ೧ ಈ ನರಸಿಂಹಾಚಾರ್, ಡಿ. ಎಲ್. ೧೯೭೧. ಪೀಠಿಕೆಗಳು, ಲೇಖನಗಳು. ಮೈಸೂರು: ಡಿ. ವಿ. ಕೆ.
ಮೂರ್ತಿ.
ನರಸಿಂಹಾಚಾರ್, ಆರ್. ೧೯೬೯. History of Kannada language. (ಎರಡನೇ ಆವೃತ್ತಿ). Mysore: Mysore University.
ನರಸಿಂಹಾಚಾರ್, ಆರ್. (ಸಂ.). ೧೯೦೨. ನಾಗವರ್ಮ ವಿರಚಿತಂ ಕಾವ್ಯಾವಲೋಕನಂ. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
ಪದ್ಮನಾಭಶರ್ಮ, ಡಿ. (ಸಂ.). ೧೯೬೮. ಭಟ್ಟಾಕಲಂಕದೇವಕೃತ ಕರ್ಣಾಟಕ ಶಬ್ದಾನುಶಾಸನಂ (ನಲ್ಲುಡಿಗನ್ನಡಿ ಎಂಬ ವ್ಯಾಖ್ಯಾನದ ಸಹಿತ). ಬೆಂಗಳೂರು: ರಾಜ್‌ಕಮಲ್ ಪ್ರಕಾಶನ.
ಬರೋ, ಟಿ. ೧೯೫೫. The Sanskrit language. London: Faber and Faber.
ಬರೋ, ಟಿ. ಮತ್ತು ಎಮೆನೋ, ಎಮ್. ಬಿ. ೧೯೬೧. The Dravidian etymological dictionary. Oxford: The Clarendon Press.
ಬಿಳಿಗಿರಿ, ಎಚ್. ಎಸ್. ೧೯೬೯. ಆಲೋಕ (ಕೇಶಿರಾಜನ “ಶಬ್ದಮಣಿದರ್ಪಣ’ದ ವ್ಯಾಖ್ಯಾನ), ಭಾಗ ೧ (ಪೀಠಿಕೆ, ಸಂಧಿಪ್ರಕರಣ). ಸಾಗರ: ಅಕ್ಷರ ಪ್ರಕಾಶನ.
ಭಟ್, ಡಿ. ಎನ್. ಎಸ್. ೧೯೭೮. ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ X ಮೈಸೂರು: ಗೀತಾ ಬುಕ್ ಹೌಸ್.
ಎ ೧೯೯೧. Grammatical relations. London: Routledge. -—– ೧೯೯೪೮. The adjectival category. Amsterdam: John Benjamins.
ಎರ ೧೯೯೯. The prominence of tense, aspect and mood. Amsterdam: John Benjamins.
ಎರರ್ ೨೦೦೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಮೈಸೂರು: ಭಾಷಾಪ್ರಕಾಶನ. ಎರರ್ ೨೦೦೨. ಕನ್ನಡ ಪದಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ.
–—-— ೨೦೦೩. ಕನ್ನಡದ ಸರ್ವನಾಮಗಳು. ಮೈಸೂರು: ಭಾಷಾಪ್ರಕಾಶನ.
ಎರಾ ೨೦೦೪ಕ. Pronouns: A cross-linguistic study. Oxford: University Press. ಎರದರ ೨೦೦೪ಖ. ಕನ್ನಡ ವಾಕ್ಯಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ.
ಎರದರ ೨೦೦೭. ಕನ್ನಡ ನುಡಿ ನಡೆದು ಬಂದ ದಾರಿ. ಹೆಗ್ಗೋಡು: ಭಾಷಾಪ್ರಕಾಶನ.
ಭಟ್ಟೋಜಿ ದೀಕ್ಷಿತ, ೧೯೦೬. ಸಿದ್ಧಾಂತ ಕೌಮುದೀ (ಶ್ರೀಶಚಂದ್ರ ವಾಸು ಅವರ ಇಂಗ್ಲಿಷ್ ಅನುವಾದದೊಂದಿಗೆ). ಡೆಲ್ಲಿ: ಮೋತಿಲಾಲ್ ಬನಾರಸೀದಾಸ್.
ಆಕರಸೂಚಿ ೨೧೫
ಮೌರರ್, ವಾಲ್ಟರ್ ಹಾರ್ಡಿಂಗ್ ೧೯೫೫. The Sanskrit language: An introductiory
grammar and reader: Surrey: Curzon.
ರಂಗನಾಥ ಶರ್ಮಾ, ಎನ್. ೨೦೦೨. ವ್ಯಾಕರಣಶಾಸ್ತ್ರ ದ ಪರಿವಾರ (ಕನ್ನಡ ವ್ಯಾಕರಣ ವಿಚಾರಗಳು).
ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ. ಬ್ರ ಅ
ರಾಮಚಂದ್ರರಾವ್, ಬಿ. ೧೯೭೨. A descriptive grammar of Pampa Bharata. Mysore: University of Mysore. ಳ್
ವರದಾಚಾರ್ಯ, ಎಂ. ಆರ್. ೧೯೭೭. “ಭಟ್ಟಾಕಳಂಕನ ಶಬ್ದಾ ನುಶಾಸನ’. ವಿ. ಸೀತಾರಾಮಯ್ಯ (ಸಂಪಾದಿತ)ದಲ್ಲಿ, ಪುಟ ೬೫-೧೧೭. ವಿಟ್ನೀ, ಡಬ್ಲ್ಯು. ಡಿ. ೧೮೮೮. Sanskrit 8701717107. ಹೊಸ ಮುದ್ರಣ: ಡಿಲ್ಲಿ: ಮೋತಿಲಾಲ್
ಬನಾರಸೀದಾಸ್.
ವಿಲ್ಲನ್, ಹೆಚ್. ಹೆಚ್. ೧೮೪೭. 4 Introduction to the grammar of the Sanskrit language. London: J. Madden and Co. (೧೯೬೧ರಲ್ಲಿ Chowkhamba San- skrit Series office, Varanasi ಇವರಿಂದ ಪುನಃ ಪ್ರಕಟಿತವಾಗಿದೆ).
ವೆಂಕಟಾಚಲ ಶಾಸ್ತ್ರೀ, ಟಿ. ವಿ. ೧೯೯೪. “ಉಪೋದ್ಭ್ರಾತ’. ವೆಂಕಟಾಚಲ ಶಾಸ್ತ್ರೀ (ಸಂ.) ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣಂದಲ್ಲಿ ಪುಟ ೧-೧೪೨. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.
ಶಿವಾನಂದ, ವಿ. ೧೯೭೨. ಶಬ್ದಮಣಿದರ್ಪಣ ವಿಳಾಸ (ಹೊಸಗನ್ನಡ ವ್ಯಾಖ್ಯಾನ ಗದ್ಯ). ಗದಗ: ವಿಜಯ ಪುಸ್ತಕ ಭಂಡಾರ ಮತ್ತು ಪ್ರಕಾಶನ.
ಸೀತಾರಾಮಯ್ಯ, ವಿ. ೧೯೭೯. ಪ್ರಾಚೀನ ಕನ್ನಡ ವ್ಯಾಕರಣಗಳು. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
ಸೀತಾರಾಮಯ್ಯ, ವಿ. (ಸಂ.). ೧೯೭೭. ವ್ಯಾಕರಣಗಳು. ಬೆಂಗಳೂರು: ಐಬಿಎಚ್ ಪ್ರಕಾಶನ.
ಸ್ಪೀಜರ್, ಜೆ. ಎಸ್. ೧೮೬೬. Sanskrit Syntax. Leyden: E.J.Brill.